ವಿ¯ೇಷ ªಾಜÍ ಪĦÎೆ
,
, (ಆಷಾಢ
ಬೆಂಗಳ(cid:58)ರು,
,೨೯, ಜೂ(cid:264) 2020 8, ಶಕವರ್ಷ ೧೯೪2)
ಸೋಮವಾರ
ಭಾಗ – ೩
Part – III
ನಂ. 229 No. 229
Bengaluru, MONDAY,29,JUNE,2020(Ashadha,8,ShakaVarsha 1942)
ಕರ್ನಾಟಕ ಸರ್ಕಾರ
ಕಂದಾಯ ಇಲಾಖೆ
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಕಾರ್ಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ,
ಜಿಲ್ಲಾಡಳಿತ ಭ
ವನ, 1 ನೇ ಮಹಡಿ, ಬೀರಸಂದ
್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು - 562110
ದೂರವಾಣಿ ಸಂ.080-29781022 ಇ.ಮೇಲ್: [email protected] ---------------------------------------------------------------------- ಸಂ.ಇಎಲ್ಎನ್(ಪಂ)ಸಿಆರ್:02/20-21 ದಿನಾಂಕ: 26.06.2020
ತಿದ್ದುಪಡಿ ಅಧಿಸೂಚನೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಬೂದಿಹಾಳ್, ಕಣೇಗೌಡನಹಳ್ಳಿ ಮತ್ತು ಸೋಂಪುರ ಗ್ರಾಮ ಪಂಚಾಯತಿಗಳಿಗೆ ಈ ಕಛೇರಿಯ ಸಮಸಂಖ್ಯೆ ಅಧಿಸೂಚನೆ ದಿನಾಂಕ:24.06.2020 ರಂತೆ ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದ್ದ ಅಧಿಕಾರಿಗಳಿಗೆ ಬದಲಾಗಿ ಕೆಳಕಾಣಿಸಿದ ಅಧಿಕಾರಿಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 8(1)(ಬಿ)(ii) ರಲ್ಲಿ ದತ್ತವಾಗಿರುವ ಅಧಿಕಾರದಂತೆ ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಿದೆ. ಸದರಿ ಅಧಿಕಾರಿಗಳು ಆಯಾ ಗ್ರಾಮ ಪಂಚಾಯತಿಯ ಆಡಳಿತಾಧಿಕಾರಿಯಾಗಿ ಅಂಕಣ(5)ರಲ್ಲಿ ತೋರಿಸಿರುವ ದಿನಾಂಕದಂದು ಅಪರಾಹ್ನ ಪ್ರಭಾರವನ್ನು ವಹಿಸಿಕೊಂಡು, ಮುಂದಿನ ಆದೇಶದವರೆಗೆ ಹಾಗೂ ಸರ್ಕಾರದ ದಿನಾಂಕ: 19.06.2020ರ ಸುತ್ತೋಲೆಯಲ್ಲಿ ನೀಡಿರುವ ನಿರ್ದೇಶನಗಳಂತೆ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಆದೇಶಿಸಿದೆ. ಆಡಳಿತಾಧಿಕಾರಿಯಾಗಿ ಪ್ರಭಾರ ವಹಿಸಿಕೊಂಡ ದಿನ ಆಯಾ ಗ್ರಾಮ ಪಂಚಾಯತಿಯ ನಡವಳಿ ವಹಿಯಲ್ಲಿ ಪ್ರಭಾರ ವಹಿಸಿಕೊಂಡಿದ್ದನ್ನು ಅಧಿಕೃತವಾಗಿ ದಾಖಲಿಸುವುದು ಮತ್ತು ಈ ಕಛೇರಿಗೆ ಆಡಳಿತಾಧಿಕಾರಿಯಾಗಿ ಪ್ರಭಾರ ವಹಿಸಿಕೊಂಡ ಬಗ್ಗೆ ವರದಿ ಸಲ್ಲಿಸಲು ನಿರ್ದೇಶಿಸಿದೆ.
| ಕ ್ರ. ಸಂ | ಹಿಂದಿನ ಅಧಿಸೂಚನೆಯಂತೆ ಅಧಿಕಾರಿಗಳ ಪದನಾಮ | ತಿದ್ದುಪಡಿ ಅಧಿಸೂಚನೆಯಂತೆ ಅಧಿಕಾರಿಗಳ ಪದನಾಮ | ಗ್ರಾಮ ಪ ಂಚಾಯತಿಗಳ ಹೆಸರು | ಪ ್ರಭಾರ ವ ಹಿಸಿಕೊಳ್ಳಬೇಕಾದ ದಿನಾಂಕ |
| 1 | 2 | 3 | 4 | 5 |
| 1 | ಸಹಾಯಕ ನಿರ್ದೇಶಕರು, ಉದ್ಯೋಗ ಖಾತ್ರಿ ಯೋಜನೆ, ತಾಲ್ಲೂಕು ಪಂಚಾಯತಿ ಕಾರ್ಯಾಲಯ, ನೆಲಮಂಗಲ | ಸಹಾಯಕ ಕಾರ್ಯಪಾಲಕ ಅಭಿಯಂತರರು, ನಗರಸಭೆ, ನೆಲಮಂಗಲ | ಬೂದಿಹಾಳ್ | 29.06.2020 ಅಪರಾಹ್ನ |
| ಕ ಣೇಗೌಡನಹಳ್ಳಿ | 21.07.2020 ಅಪರಾಹ್ನ | |||
| 2 | ಸಹಾಯಕ ಕಾರ್ಯಪಾಲಕ ಅಭಿಯಂತರರು, ನಗರಸಭೆ, ನೆಲಮಂಗಲ | ಕಾರ್ಯ ನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ನೆಲಮಂಗಲ | ಸೋಂಪುರ | 01.07.2020 ಅಪರಾಹ್ನ |
(ಪಿ.ಎನ್.ರವೀಂದ್ರ, ಭಾ.ಆ.ಸೇ) ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ.