(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ
, , 14, 2020 ( , 23, 1942)
¨sÁUÀ – 3 Part –III Bengaluru, MONDAY,14,SEPTEMBER,2020 (BHADRAPADA, 23, ShakaVarsha,1942)
. 401 No. 401 ರಾಜ್ಯ ಚುನಾವಣಾ ಆಯೋಗ, ಕರ್ನಾಟಕ ಕೆ.ಎಸ್.ಸಿ.ಎಂ.ಎಫ್. ಕಟ್ಟಡ (ಹಿಂಭಾಗ), ನಂ.8, 1ನೇ ಮಹಡಿ, ಕನ್ನಿಂಗ್‌ಹ್ಯಾಂ ರಸ್ತೆ, ಬೆಂಗಳೂರು-52
ತಿದ್ದುಪಡಿ ಅಧಿಸೂಚನೆ
ಸಂಖ್ಯೆ: ರಾಚುಆ/40/ಇಜಿಪಿ/2020, ದಿನಾಂಕ: 14.09.2020
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 5ರ ಉಪ ಪ್ರಕರಣ (1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮೈಸೂರು ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ 2011ರ ಜನಗಣತಿಯ ಜನಸಂಖ್ಯೆಯಂತೆ ಸದಸ್ಯರ ಸಂಖ್ಯೆಯನ್ನು ನಿರ್ದಿಷ್ಟಪಡಿಸಿ ಅಧಿಸೂಚನೆ ಸಂಖ್ಯೆ:ರಾಚುಆ/40/ ಇಜಿಪಿ/2020, ದಿನಾಂಕ: 26.06.2020 ರಂದು ಅಧಿಸೂಚಿಸಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.
ಮೈಸೂರು ಜಿಲ್ಲಾಧಿಕಾರಿಗಳ ಪತ್ರ ಸಂಖ್ಯೆ: ಇಎಲ್ಎನ್(2)ಸಿಆರ್/13/2020-21 ದಿನಾಂಕ: 20.08.2020 ಮತ್ತು 07.09.2020 ರಲ್ಲಿ, ಮಾನ್ಯ ಉಚ್ಛ ನ್ಯಾಯಾಲಯದ ಆದೇಶ ಸಂಖ್ಯೆ: ಡಬ್ಲ್ಯೂಪಿ 19856/2015 ದಿನಾಂಕ:27.08.2020 ಹಾಗೂ ಜಿಲ್ಲಾಧಿಕಾರಿಗಳ ಅಧಿಸೂಚನೆ ಸಂಖ್ಯೆ :ಇಎಲ್ಎನ್ (2)167/2014-15 ದಿನಾಂಕ:13.11.2015 ರಂತೆ ಹುಣಸೂರು ತಾಲ್ಲೂಕಿನ ಹಳೇಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ದೇವರಹಳ್ಳಿ ಗ್ರಾಮವನ್ನು ಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿರುತ್ತದೆ. ಸದರಿ ಆದೇಶ ಮತ್ತು ಅಧಿಸೂಚನೆಯನ್ವಯ ಹುಣಸೂರು ತಾಲ್ಲೂಕಿನ ಹಳೇಬೀಡು ಮತ್ತು ಮನುಗನಹಳ್ಳಿ ಗ್ರಾಮ ಪಂಚಾಯಿತಿಗಳ ಜನಸಂಖ್ಯೆಯಲ್ಲಿ ವ್ಯತ್ಯಾಸವಾಗುವುದರಿಂದ ಸದರಿ ಗ್ರಾಮ ಪಂಚಾಯಿತಿಗಳ ಒಟ್ಟು ಸದಸ್ಯರ ಸಂಖ್ಯೆಯನ್ನು ತಿದ್ದುಪಡಿ ಮಾಡಿಕೊಡುವಂತೆ ಕೋರಿ ಪರಿಷ್ಕøತ ಜನಸಂಖ್ಯೆ ಅಂಕಿ ಅಂಶಗಳೊಂದಿಗೆ ವರದಿ ಮಾಡಿರುತ್ತಾರೆ. ಅದರಂತೆ ಆಯೋಗವು ದಿನಾಂಕ 26.06.2020 ರಂದು ಹೊರಡಿಸಿರುವ ಅಧಿಸೂಚನೆಗೆ ಈ ಕೆಳಕಂಡಂತೆ ತಿದ್ದುಪಡಿ ಮಾಡಿ ಅಧಿಸೂಚಿಸಿದೆ.
ಕೋಷ್ಟಕ
ತಾಲ್ಲೂಕು: ಹುಣಸೂರು
| ದಿನಾಂಕ: 26.06.2020ರ ಅಧಿಸೂಚನೆಯಲ್ಲಿದ್ದಂತೆ | ತಿದ್ದುಪಡಿಯಂತೆ ಒಟ್ಟು ಸದಸ್ಯರ ಸಂಖ್ಯೆ | ||
| ಕ ್ರಮ ಸಂಖ್ಯೆ | ಗ್ರಾಮ ಪಂಚಾಯತಿ | ಒಟ್ಟು ಸದಸ್ಯರ ಸಂಖ್ಯೆ | |
| 1 | 2 | 3 | 4 |
| 8 | ಹ ಳೇಬೀಡು | 14 | 12 |
| 10 | ಮನುಗನಹಳ್ಳಿ | 15 | 16 |
ಆಯೋಗದಿಂದ ಹೊರಡಿಸಿರುವ ದಿನಾಂಕ: 26.06.2020 ರ ಅಧಿಸೂಚನೆ ಸಂಖ್ಯೆ: ರಾಚುಆ/40/ಇಜಿಪಿ.2020 ರಲ್ಲಿ ಹುಣಸೂರು ತಾಲ್ಲೂಕಿನ ಒಟ್ಟು ಸದಸ್ಯ ಸ್ಥಾನಗಳ ಸಂಖ್ಯೆಯನ್ನು 596ರ ಬದಲಿಗೆ 595 ಎಂದೂ, ಘೋಷ್ವಾರೆಯಲ್ಲಿನ ಕ್ರಮ ಸಂಖ್ಯೆ 4 ರಲ್ಲಿನ ಹುಣಸೂರು ತಾಲ್ಲೂಕಿನ ಒಟ್ಟು ಸದಸ್ಯ ಸ್ಥಾನಗಳ ಸಂಖ್ಯೆಯನ್ನು 596ರ ಬದಲಿಗೆ 595 ಎಂದೂ ಮತ್ತು ಘೋಷ್ವಾರೆಯಲ್ಲಿನ ಅಂತೂ ಒಟ್ಟು ಇರುವ 4716ರ ಬದಲಿಗೆ 4715 ಎಂದು ತಿದ್ದುಪಡಿ ಮಾಡಿಕೊಂಡು ಓದಿಕೊಳ್ಳತಕ್ಕದ್ದು.
ಆದೇಶಾನುಸಾರ
(ರಾಘವೇಂದ್ರ ಆರ್ ಮಣ್ಣೂರ್) ಅಧೀನ ಕಾರ್ಯದರ್ಶಿ ರಾಜ್ಯ ಚುನಾವಣಾ ಆಯೋಗ