Servants of Knowledge
Karnataka ExtraOrdinary Gazette · Government of Karnataka

Property Attachment notification of Guru Sarvabhauma

Published 18 December 2020

Ministry
Revenue Department
Department
Revenue Department
Office
Special Cell
Type
Extra Ordinary
Part
Part III
Reference
Rd29Grc2020
Identifier
in.gazette.karnataka_eo.2020-12-18.Rd29Grc2020
Languages
English, Kannada
Published at
Original source ↗

click here for IIIF manifest

ವಿಶೇμ ರಾಜ್ಯ ಪತ್ರಿಕೆ

ನಂ.709

ಬೆಂಗಳೂರು, ಶುಕ್ರವಾರ,೧೮, ಡಿಸೆಂಬ್ರ , 2020(ಮಾಗ್ರಶಿರ, 27, ಶಕವರ್ಷ ೧೯೪2)

Bengaluru, FRIDAY,18,DECEMBER,2020( MARGASHIRA,27, ShakaVarsha 1942)

ಭಾಗ– III

Part– III

No. 709

ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರದ ಸಚಿವಾಲಯ, ಸಂಖ್ಯೆ: ಆರ್ಡಿ 29 ಜಿಆರ್ಸಿ 2020

ಬಹುಮಹಡಿ ಕಟ್ಟಡ,

ಬೆಂಗಳೂರು, ದಿನಾಂಕ:17-12-2020

ಅಧಿಸೂಚನೆ

ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತ, ಬೆಂಗಳೂರು ಜಿಲ್ಲೆ ಇವರ ವರದಿಯನ್ನು ಪರಿಗಣಿಸಿದ ತರುವಾಯ ಹಾಗೂ ಠೇವಣಿದಾರರ ದೂರುಗಳ ಬಗ್ಗೆ ಯುಕ್ತ ತನಿಖೆಯ ತರುವಾಯ ಮೆ|| ಶ್ರೀ ಗುರುಸಾರ್ವಭೌಮ ಸೌಹಾದ್ರ ರ್ಕೆಡ್ಟಿ ಕೋ-ಆಪರೇಟೀವ್ ಲಿಮಿಟ್ಡೆ ಇವರು ಠೇವಣಿದಾರರಿಂದ ಗುಟ್ಟಾಗಿ ಹಾಗೂ ಕಾನೂನುಬಾಹಿರವಾಗಿ ಠೇವಣಿಗಳನ್ನು ಅಥವಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುವ ūೕಸದ ವ್ಯವಹಾರಗಳಲ್ಲಿ ತೊಡಗಿರುವುದು ಹಾಗೂ ಆ ತರುವಾಯ ಅವಧಿ ಮುಗಿದ ಮೇಲೆ ಅಥವಾ ಠೇವಣಿದಾರರು ಅಥವಾ ಫಿರ್ಯಾದುದಾರು ಸಲ್ಲಿಸಿದ ಬೇಡಿಕೆ ಮೇಲಾಗಲಿ ಆಶ್ವಾಸನೆ ನೀಡಿದ ಬಡ್ಡಿ ಹಾಗೂ ಇತರೆ ಖಾತರಿ ಪ್ರಯೋಜನಗಳನ್ನು ನೀಡಲು ವಿಫಲವಾಗಿರುವುದು ಹಾಗೂ ಅವರಿಗೆ ಆಶ್ವಾಸನೆ ನೀಡಿದ ಸೇವೆಗಳನ್ನು ಒದಗಿಸಲು ವಿಫಲವಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

2

ಮೆ|| ಶ್ರೀ ಗುರುಸಾರ್ವಭೌಮ ಸೌಹಾದ್ರ ರ್ಕೆಡ್ಟಿ ಕೋ-ಆಪರೇಟೀವ್ ಲಿಮಿಟ್ಡೆ ಹಾಗೂ ಅವರ ಸಹವತ್ರಿ ಜನರು ಠೇವಣಿದಾರರಿಂದ ಅಥವಾ ಫಿರ್ಯಾದುದಾರರಿಂದ ಸಂಗ್ರಹಿಸಲಾದ ಹಣದಿಂದ ಜಮೀನು, ಚರ ಹಾಗೂ ಸ್ಥಿರಾಸ್ತಿಗಳನ್ನು, ನಗದು ಹಾಗೂ ಇತರೆ ವಸ್ತುವನ್ನು ಅರ್ಜಿಸಿರುವುದು ಹಾಗೂ ಆ ಮೂಲಕ ಠೇವಣಿ ಹಾಗೂ ಹಣವನ್ನು ಪಡೆದಿರುವ ಉದ್ದೇಶಿತ ಉದ್ದೇಶಗಳಿಗೆ ಬಳಸದೆ ಬೇರೆ ಕಡೆ ವಗ್ರಾಯಿಸಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಮೆ|| ಶ್ರೀ ಗುರುಸಾರ್ವಭೌಮ ಸೌಹಾದ್ರ ರ್ಕೆಡ್ಟಿ ಕೋ-ಆಪರೇಟೀವ್ ಲಿಮಿಟ್ಡೆ ಹಾಗೂ ಅವರ ಸಹವತ್ರಿ ಜನರು ಇವರ ಕೃತ್ಯಗಳು ಮುಗ್ದ ಜನರಿಗೆ ವಂಚಿಸುವ ಉದ್ದೇಶದಿಂದ ಠೇವಣಿದಾರರ ಅಥವಾ ಫಿರ್ಯಾದುದಾರರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನಂಬಲು ಸರ್ಕಾರವು ಕಾರಣಗಳನ್ನು ಹೊಂದಿದ್ದು, ಮೆ|| ಶ್ರೀ ಗುರುಸಾರ್ವಭೌಮ ಸೌಹಾದ್ರ ರ್ಕೆಡ್ಟಿ ಕೋ-ಆಪರೇಟೀವ್ ಲಿಮಿಟ್ಡೆನ ಠೇವಣಿದಾರರ ಹಿತಾಸಕ್ತಿಯನ್ನು ಸಂರŀಸುವುದು ಅಗತ್ಯವಾಗಿರುತ್ತದೆ.

ಆದ್ದರಿಂದ, ಸರ್ಕಾರವು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತ ಇವರ ವರದಿಯನ್ನು ಪರಿಗಣಿಸಿ ಹಾಗೂ ಠೇವಣಿದಾರರ ಹಿತಾಸಕ್ತಿಯನ್ನು ಸಂರ(cid:320)ಸುವುದು ತುತ್ರು ಅಗತ್ಯವಿದೆ ಎಂದು ಸ್ವಯಂ ಮನವರಿಕೆ ಮಾಡಿಕೊಂಡು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿಯ ಸಂರಕ್ಷಣಾ ಅಧಿನಿಯಮ, 2004(2005ರ ಕರ್ನಾಟಕ ಅಧಿನಿಯಮ, 30)ರ 3ನೇ ಪ್ರಕರಣದ (2)ನೇ ಉಪ-ಪ್ರಕರಣದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕೆಳಕಂಡಂತೆ ಆದೇಶವನ್ನು ಮಾಡುತ್ತದೆ:

"ಆದೇಶ"

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿಯ ಸಂರಕ್ಷಣಾ ಅಧಿನಿಯಮ, 2004 (2005ರ ಕರ್ನಾಟಕ ಅಧಿನಿಯಮ, 30)ರ 3ನೇ ಪ್ರಕರಣದ (2)ನೇ ಉಪ-ಪ್ರಕರಣದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರವು ಈ ಮೇಲ್ಕಂಡ ಸನ್ನಿವೇಶಗಳ ಹಿನ್ನಲೆಯಲ್ಲಿ ಠೇವಣಿದಾರರ ಹಿತಾಸಕ್ತಿಯನ್ನು ಸಂರŀಸುವ ಸಲುವಾಗಿ ಮೆ|| ಶ್ರೀ ಗುರುಸಾರ್ವಭೌಮ ಸೌಹಾದ್ರ ರ್ಕೆಡ್ಟಿ ಕೋ-ಆಪರೇಟೀವ್ ಲಿಮಿಟ್ಡೆಗೆ ಸೇರಿದೆ ಎನ್ನಲಾದ ಸ್ಥಿರಾಸ್ತಿಗಳನ್ನು ಮುಟ್ಟುಗೊಲು ಹಾಕಿಕೊಳ್ಳುವುದು ಅವಶ್ಯಕವಾಗಿದೆ ಎಂದು ಮನಗಂಡಿರುವುದರಿಂದ, ಸದರಿ ಹಣಕಾಸು ಸಂಸ್ಥೆಯ ಅಂಥ ಹಣ ಅಥವಾ ಅಂಥ ಇತರೆ ಸ್ವತ್ತುಗಳು ಅಥವಾ ಸಂಸ್ಥೆಯ ಪ್ರವತ್ರಕರ, ಪಾಲುದಾರರ, ನಿರ್ದೇಶಕರ, ವ್ಯವಸ್ಥಾಪಕರ ಅಥವಾ ಸದಸ್ಯರ ಅಥವಾ ಯಾರೇ ಇತರೆ ವ್ಯಕ್ತಿಯ ವೈಯಕ್ತಿಕ ಆಸ್ತಿಗಳು ಠೇವಣಿಗಳನ್ನು, ಬಡ್ಡಿ ಅಥವಾ ಇತರೆ ಖಾತ್ರಿ ಪ್ರಯೋಜನಗಳನ್ನು ಠೇವಣಿದಾರರಿಗೆ ಮರುಸಂದಾಯ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಯಾಪ್ತವಾಗಿಲ್ಲವೆಂದು ಗೊತ್ತಾದಲ್ಲಿ ಮೆ|| ಶ್ರೀ ಗುರುಸಾರ್ವಭೌಮ ಸೌಹಾದ್ರ ರ್ಕೆಡ್ಟಿ ಕೋ-ಆಪರೇಟೀವ್ ಲಿಮಿಟ್ಡೆ ಸಂಗ್ರಹಿಸಲಾದ ಠೇವಣಿಗಳಿಂದ ತನ್ನ ಹೆಸರಿನಲ್ಲಾಗಲಿ ಅಥವಾ ಯಾರೇ ಇತರೆ ವ್ಯಕ್ತಿಗಳ ಹೆಸರಿನಲ್ಲಿ ಅರ್ಜಿಸಿದೆ ಎನ್ನಲಾದ ಈ ಆದೇಶದ ಅನುಬಂಧದಲ್ಲಿ ನಿದ್ರಿಷ್ಟಪಡಿಸಲಾದಂತೆ ಸ್ಥಿರಾಸ್ತಿಯನ್ನು ಸರ್ಕಾರವು ಈ ಮೂಲಕ ಜಪ್ತಿ ಮಾಡಿಕೊಳ್ಳುತ್ತದೆ.

ಟಿಪ್ಪಣಿ: ವಿಶೇಷ ನ್ಯಾಯಾಲಯದ ಮುಂದಿನ ಆದೇಶದವರೆಗೆ ಬಾಕಿ ಇರಿಸಿ, ಮೇಲೆ ಹೇಳಿದ ಸ್ಥಿರ ಸ್ವತ್ತನ್ನು ಅಧಿಕೃತ ರಾಜ್ಯಪತ್ರದಲ್ಲಿ ಈ ಆದೇಶವು ಪ್ರಕಟಣೆಗೊಂಡ ದಿನಾಂಕದಿಂದ ಸರ್ಕಾರವು ನೇಮಕ ಮಾಡಿರುವ ಸಕ್ಷಮ ಪ್ರಾಧಿಕಾರದಲ್ಲಿ ಕೂಡಲೇ ನಿಯುತವಾಗತಕ್ಕದ್ದು.

ಕರ್ನಾಟಕ ರಾಜ್ಯಪಾಲರ

ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

(ವಿಜ್ಯ ಡಿ.ಎಸ್)

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ವಿಶೇಷ ಕೋಶ) R.N.I. No. KARBIL/2001/47147 POSTAL REGN. No. RNP/KA/BGS/2202/2017-19Licensed to post without prepayment WPP No. 297 3

ಅನುಬಂಧ

ಶ್ರೀ ಗುರುಸಾರ್ವಭೌಮ ಸೌಹಾದ್ರ ರ್ಕೆಡ್ಟಿ ಕೊ-ಅಪರೇಟ್ವಿ ಲಿಮಿಟ್ಡೆ,ಸಂಸ್ಥೆಯ ನಿರ್ದೇಶಕರಾದ ಕೆ. ರಾಮಕೃಷ್ಣ ಇವರ ಪತಿನ್

ಶ್ರೀಮತಿ ಚಂದ್ರಮತಿ ಇವರ ಹೆಸರಿನಲ್ಲಿರುವ ಸ್ಥಿರಾಸ್ತಿ ವಿವರ

ಕ್ರ. ಸಂ ಸ್ವತ್ತಿನವಿವರ ದಾಖಲೆಗಳಪ್ರಕಾರಸ್ವ ತಿ ತ್ನಮಾಲೀಕರು ದಾಖಲಾತಿವಿವರ ಮಾಗ್ರಸೂಚಿ ದರ (ರೂ.ಗಳಲ್ಲಿ) ಖರೀದಿದರ (ರೂ.ಗಳಲ್ಲಿ) ಷರಾ
1 ಬೆಂಗಳೂರು ಮಹಾನರ ಪಾಲಿಕೆ ಸ್ವತ್ತಿನ ಸಂಖ್ಯೆ 32, (ಹಳೇ ನಂ.70/ಎ) ಮಾಡಲ್ ಹೌಸ್ 3ನೇ ಬೀದಿ, ವ್ಡಾ ರ್ ಸಂಖ್ಯೆ154- ಬಸವನಗುಡಿ, ಬೆಂಗಳೂರು ಪಿ.ಐ.ಡಿ ಸಂಖ್ಯೆ 51-74-32, ಸ್ವತ್ತಿನ ನಿವೇಶನದ ಅಳತೆ 800 ಚದರ ಅಡಿಗಳು, ಕಟ್ಟಡದಅಳತೆ 2500 ಚದರ ಅಡಿಗಳು. ದ ಾಖಲೆಗಳ ಪ್ರಕಾರ ಚಕ್ಕು ಬಂದಿ ಪ ೂರ್ವಕ್ಕೆ ಮನೆ ನಂ. 33(ಹಳೆ ನಂ.69) ಪಶ್ಚಿಮಕ್ಕೆ ಮನೆ ನಂ.369(ಹಳೆ ನಂ. 70/1) ಉತ್ತರಕ್ಕೆ ಕರ್ನ್ಸ ವೆನ್ಸಿರಸ್ತೆ ದŀಣಕ್ಕೆ ಮಾಡೆಲ್ ಹೌಸ್ 3ನೇ ಸ್ಟ್ರೀಟ್. ಶ್ರೀಮತಿಚಂದ್ರಮತಿ ಕೋಂ ಕೆ. ರಾಮಕೃಷ್ಣ ಕ್ರಯಕ್ಕೆ ಪಡೆದವರು: ಶ್ರೀಮತಿಚಂದ್ರಮತಿ ಕೋಂ ಕೆ. ರಾಮಕೃಷ್ಣ ಮಾರಾಟಗಾರರು: 1) ಶ್ರೀ ಎ.ಬಿ ಅಚ್ಯುತರ್ವಾ ಬಿನ್ ಲೇಟ್. ಎ.ಬಾಲಕೃಷ್ಣರ್ವಾ ದಸ್ತಾವೇಜು ಸಂಖ್ಯೆ:3120/10-11, ದಿನಾಂಕ: 25-03-2011 2) ಶ್ರೀ ಜಗನ್ನಾಥ ಹೆಗಡೆ ಬಿನ್ ಲೇಟ್ ಹರಿಹರ ಹೆಗಡೆ. ದಸ್ತಾವೇಜು ಸಂಖ್ಯೆ:5048/15-16, ದಿನಾಂಕ:18-11-2015 ಈ ಎರಡು ಶುದ್ದ ಕ್ರಯ ಪತ್ರಗಳು ಬಸವನಗುಡಿ ಹಿರಿಯ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ನೋಂದಣಿಯಾಗಿರುತ್ತದೆ. 1,06,09,900/- (ನಿವೇಶನ ಮತ್ತು ಕಟ್ಟಡದ ಒಟ್ಟು ಮೌಲ್ಯ) 59,20,000/ (ಎರಡು ಕ್ರಯ ಪತ್ರಗಳು ಸೇರಿ) ಕ್ರಯ ಪತ್ರಗಳ ಪ್ರಕಾರ ನಿವೇಶನದ ಅಳತೆ 700 ಚದರ ಅಡಿಗಳು, ಬಿಬಿಎಂಪಿ ಖಾತಾ ಪ್ರಕಾರ 800 ಚದರ ಅಡಿಗಳು. ಈ ಸ್ವತ್ತಿನಲ್ಲಿ ನೆಲ ಮಹಡಿ, 1ನೇ, 2ನೇ, 3ನೇ ಮತ್ತು 4ನೇ ಮಹಡಿ, ಆರ್.ಸಿ.ಸಿ ಕಟ್ಟಡವಿರುತ್ತದೆ.

ಸಂಖ್ಯೆ: ಕಂಇ 29 ಜಿಆರ್ ಸಿ 2020

(ವಿಜ್ಯ ಡಿ.ಎಸ್)

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ವಿಶೇಷ ಕೋಶ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು

Cite this issue. Karnataka ExtraOrdinary Gazette, Government of Karnataka, 18 December 2020. Indian Gazettes, https://egazette.servantsofknowledge.in/details/in.gazette.karnataka_eo.2020-12-18.Rd29Grc2020/. Archive identifier in.gazette.karnataka_eo.2020-12-18.Rd29Grc2020.