ವಿಶೇಷ ರಾಜ್ಯ ಪತ್ರಿಕೆ
ಬгхಳüџ, ẁΒವỳџ, ೧೫, Λ, ೨೦೨೧ (ವಶỳф, ೨೫, ಶಕವರ್ಷ, ೧೯೪3)
BENGALURU, SATURDAY, 15, MAY, 2021 (VAISHAKHA, 25, SHAKAVARSHA, 1943)
ಭಾಗ – 3
Part – III
ನಂ. 534 No. 534
ಕರ್ನಾಟಕ ಸರ್ಕಾರ
ಕಂದಾಯ ಇಲಾಖೆ
ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಯವರ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ
1ನೇ ಮಹಡಿ, ಜಿಲ್ಲಾಡಳಿತ ಭ
ವನ, ಬೀರಸಂದ
------------------------------------------------------------------- ನಂ:ಇ.ಎಲ್.ಎನ್(ಪಂ)ಸಿಆರ್:26/2020-21 ದಿನಾಂಕ:15.05.2021
ಅಧಿಸೂಚನೆ
ವಿಷಯ: 2021ನೇ ಮೇ ಮಾಹೆಯಲ್ಲಿ ಅವಧಿ ಮುಕ್ತಾಯವಾಗುತ್ತಿರುವ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಬಗ್ಗೆ.
ಉಲ್ಲೇಖ: 1. ಸರ್ಕಾರದ ಪತ್ರ ಸಂ:ಗ್ರಾಪಅ:22:ಗ್ರಾಪಂಅ:2021, ದಿನಾಂಕ:27.04.2021 2. ಸರ್ಕಾರದ ಸುತ್ತೋಲೆ ಸಂ:ಗ್ರಾಅಪ:378:ಗ್ರಾಪಂಅ:2020(ಭಾಗ-1), ದಿನಾಂಕ:19.06.2020
3. ಈ ಕಛೇರಿಯ ಸಮಸಂಖ್ಯೆ ಪತ್ರ ದಿನಾಂಕ:10.05.2021
ಸರ್ಕಾರದ ಉಲ್ಲೇಖ(1)ರ ಪತ್ರದಲ್ಲಿ ರಾಜ್ಯಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆ 2021ರ ಸಂಬಂಧ ಅಧ್ಯಕ್ಷ/ಉಪಾಧ್ಯಕ್ಷ ಹುದ್ದೆಗಳಿಗೆ ಚುನಾವಣೆಯನ್ನು ಮುಂದೂಡುವಂತೆ ನಿರ್ದೇಶಿಸಲಾಗಿರುತ್ತದೆ. ಸಾರ್ವತ್ರಿಕ ಚುನಾವಣೆ ನಡೆದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸಮೇತನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿಗಳ ಪದಾವಧಿಯು ಕ್ರಮವಾಗಿ ದಿನಾಂಕ: 15.05.2021 ಮತ್ತು 18.05.2021ರಂದು ಮುಕ್ತಾಯವಾಗಲಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದು ತುರ್ತು ನಿವಾರಣಾ ಕ್ರಮಗಳನ್ನು ಕೈಗೊಳ್ಳಬೇಕಾಗಿರುವ ಹಿನ್ನಲೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 321 ರಲ್ಲಿ ವಿಹಿತವಾಗಿರುವಂತೆ ಈ ಕಛೇರಿಯ ಉಲ್ಲೇಖ(3)ರ ಪತ್ರಕ್ಕೆ R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨ ಅಧಿನಿಯಮದಡಿ ಕೆಳಕಂಡ ಕೋಷ್ಟಕದ ಅಂಕಣ(4)ರಲ್ಲಿ ತೋರಿಸಿರುವ ಅಧಿಕಾರಿಗಳನ್ನು ಅಂಕಣ(3)ರಲ್ಲಿ ತೋರಿಸಿರುವ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಿದೆ. ಈ ಅಧಿಸೂಚನೆಯ ಮೂಲಕ ನೇಮಕ ಮಾಡಿರುವ ಅಂದರೆ ಅಂಕಣ(4)ರಲ್ಲಿ ನಮೂದಿಸಿರುವ ಅಧಿಕಾರಿಗಳು ಅಂಕಣ(5)ರಲ್ಲಿ ತೋರಿಸಿರುವ ದಿನಾಂಕದಂದು ಅಪರಾಹ್ನ ಆಯಾ ಗ್ರಾಮ ಪಂಚಾಯತಿಯ ಆಡಳಿತಾಧಿಕಾರಿಯಾಗಿ ಪ್ರಭಾರವನ್ನು ವಹಿಸಿಕೊಂಡು, ಮುಂದಿನ ಆದೇಶದವರೆಗೆ ಅಥವಾ ಈ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳಿಗೆ ಚುನಾವಣೆಯು ನಡೆಯುವವರೆಗೆ ಸರ್ಕಾರದ ಉಲ್ಲೇಖ(2)ರ ಸುತ್ತೋಲೆಯಲ್ಲಿ ನೀಡಿರುವ
ನಿರ್ದೇಶನಗಳಂತೆ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಆದೇಶಿಸಿದೆ.
ಆಡಳಿತಾಧಿಕಾರಿಯಾಗಿ ಪ್ರಭಾರ ವಹಿಸಿಕೊಂಡ ದಿನ ಆಯಾ ಗ್ರಾಮ ಪಂಚಾಯತಿಯ ನಡವಳಿ ವಹಿಯಲ್ಲಿ ಪ್ರಭಾರ ವಹಿಸಿಕೊಂಡಿದ್ದನ್ನು ಅಧಿಕೃತವಾಗಿ ದಾಖಲಿಸುವುದು ಮತ್ತು ಆಡಳಿತಾಧಿಕಾರಿಯಾಗಿ ಪ್ರಭಾರ ವಹಿಸಿಕೊಂಡ ಬಗ್ಗೆ ಈ ಕಛೇರಿಗೆ ವರದಿ ಸಲ್ಲಿಸಲು ನಿರ್ದೇಶಿಸಿದೆ.
| ಕ . ್ರ ಸಂ | ತಾಲ್ಲೂಕು | ಗ್ರಾಮ ಪಂಚಾಯತಿ ಹೆಸರು | ನೇಮಕ ಮಾಡಲಾದ ಆಡಳಿತಾಧಿಕಾರಿಯ ಪದನಾಮ | ಪ ಬ ್ರ ಾರ ವ ಹಿಸಿಕೊಳ್ಳಬೇಕಾದ ದಿನಾಂಕ |
| 1 | 2 | 3 | 4 | 5 |
| 1 | ಹೊಸಕೋಟೆ | ಸಮೇತನಹಳ್ಳಿ | ಕಾರ್ಯ ನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಹೊಸಕೋಟೆ | 15.05.2021 ಅಪರಾಹ್ನ |
| 2 | ದೊಡ್ಡಬಳ್ಳಾಪುರ | ಮಜರಾಹೊಸಹಳ್ಳಿ | ಕಾರ್ಯ ನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ದೊಡ್ಡಬಳ್ಳಾಪುರ | 18.05.2021 ಅಪರಾಹ್ನ |
(ಕೆ.ಶ್ರೀನಿವಾಸ, ಭಾ.ಆ.ಸೇ) ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ.