ವಿಶೇಷ ರಾಜ್ಯ ಪತ್ರಿಕೆ
ಬгхಳüџ, хџವỳџ, ೨೦, Λ, ೨೦೨೧ (ವಶỳф, ೩೦, ಶಕವರ್ಷ, ೧೯೪3)
BENGALURU, THURSDAY, 20, MAY, 2021 (VAISHAKHA, 30, SHAKAVARSHA, 1943)
ಭಾಗ – 3
Part – III
ನಂ. 538 No. 538 1ನೇ ಮಹಡಿ, ಜಿಲ್ಲಾಡಳಿತ ಭ ವನ, ಬೀರಸಂದ
------------------------------------------------------------------- ನಂ:ಇ.ಎಲ್.ಎನ್(ಪಂ)ಸಿಆರ್:26/2020-21 ದಿನಾಂಕ:19.05.2021
ತಿದ್ದುಪಡಿ ಅಧಿಸೂಚನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿಗೆ ಈ ಕಛೇರಿಯ ಸಮಸಂಖ್ಯೆ ಅಧಿಸೂಚನೆ ದಿನಾಂಕ:15.05.2021ರಂತೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದ್ದ ಕಾರ್ಯ ನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ದೊಡ್ಡಬಳ್ಳಾಪುರ ರವರ ಬದಲಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ದೊಡ್ಡಬಳ್ಳಾಪುರ ರವರನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 321 ರಡಿಯಲ್ಲಿ ನೇಮಕ ಮಾಡಿದೆ. ನೇಮಕಗೊಂಡ ಅಧಿಕಾರಿಯು ಆಡಳಿತಾಧಿಕಾರಿಯಾಗಿ ಪ್ರಭಾರವನ್ನು ವಹಿಸಿಕೊಂಡು, ಮುಂದಿನ ಆದೇಶದವರೆಗೆ ಅಥವಾ ಈ ಗ್ರಾಮ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳಿಗೆ ಚುನಾವಣೆಯು ನಡೆಯುವವರೆಗೆ ಸರ್ಕಾರದ ಸುತ್ತೋಲೆ ಸಂ:ಗ್ರಾಅಪ:378:ಗ್ರಾಪಂಅ:2020 (ಭಾಗ-1), ದಿನಾಂಕ:19.06.2020ರಲ್ಲಿ ನೀಡಿರುವ ನಿರ್ದೇಶನಗಳಂತೆ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಆದೇಶಿಸಿದೆ.
ಆಡಳಿತಾಧಿಕಾರಿಯಾಗಿ ಪ್ರಭಾರ ವಹಿಸಿಕೊಂಡ ದಿನ ಆಯಾ ಗ್ರಾಮ ಪಂಚಾಯತಿಯ ನಡವಳಿ ವಹಿಯಲ್ಲಿ ಪ್ರಭಾರ ವಹಿಸಿಕೊಂಡಿದ್ದನ್ನು ಅಧಿಕೃತವಾಗಿ ದಾಖಲಿಸುವುದು ಮತ್ತು ಆಡಳಿತಾಧಿಕಾರಿಯಾಗಿ ಪ್ರಭಾರ ವಹಿಸಿಕೊಂಡ ಬಗ್ಗೆ ಈ ಕಛೇರಿಗೆ ವರದಿ ಸಲ್ಲಿಸಲು ನಿರ್ದೇಶಿಸಿದೆ.
(ಕೆ.ಶ್ರೀನಿವಾಸ, ಭಾ.ಆ.ಸೇ) ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು. (೧)