(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ
, 27 , 2021 ( , 05, , ೧೯೪3)
¨sÁUÀ – 3 Part – III
. 758 No. 758 BENGALURU, FRIDAY, 27, AUGUST, 2021 (BHADRAPADA , 05, SHAKAVARSHA, 1943)
ಜಿಲ್ಲಾಧಿಕಾರಿಗಳ ಕಾರ್ಯಾಲಯ, ದಾವಣಗೆರೆ ಜಿಲ್ಲೆ, ದಾವಣಗೆರೆ
[4ನೇ ಪ್ರಕರಣವನ್ನು ನೋಡಿ]
ಸಂಖ್ಯೆ.ರಾಚು ಸಿ.ಆರ್.81/2020-21 ದಿನಾಂಕ:25-08-2021.
ಅಧಿಸೂಚನೆ
ಸರ್ಕಾರವು ಅಧಿಸೂಚನೆ ನಂ.ನಅಇ 93 ಎಂಎಲ್ಆರ್ 2020 ದಿನಾಂಕ:12-03-2021 ರಲ್ಲಿ ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯ ಹೆಚ್.ಕಡದಕಟ್ಟೆ ಗ್ರಾಮ ಪಂಚಾಯತಿಯ ಹಿರೇಮಠ, ದೇವನಾಯ್ಕನಹಳ್ಳಿ ಹಾಗೂ ಅರಬಗಟ್ಟೆ ಗ್ರಾಮ ಪಂಚಾಯತಿಯ ಮಲ್ಲದೇವರಕಟ್ಟೆ(ಬೆ.ಚ) ಗ್ರಾಮವನ್ನು ಹೊನ್ನಾಳಿ ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿ ಅಧಿಸೂಚಿಸಿರುತ್ತದೆ.
ಪ್ರಯುಕ್ತ, ಸರ್ಕಾರದ ಪತ್ರಗಳ ಸಂಖ್ಯೆ.ಕೆ.ಪಿ.ಆರ್.ಸಿ/ಜಿ.ಪಿ.ಎ/102/2021 ದಿನಾಂಕ:19-07-2021 ರಲ್ಲಿನ ನಿರ್ದೇಶನ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ (4)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮಹಾಂತೇಶ ಬೀಳಗಿ ಭಾ.ಆ.ಸೇ., ಜಿಲ್ಲಾಧಿಕಾರಿ, ದಾವಣಗೆರೆ ಜಿಲ್ಲೆ, ದಾವಣಗೆರೆ ಆದ ನಾನು ಹೆಚ್.ಕಡದಕಟ್ಟೆ ಗ್ರಾಮ ಪಂಚಾಯತಿಯ ಹಿರೇಮಠ, ದೇವನಾಯ್ಕನಹಳ್ಳಿ ಹಾಗೂ ಅರಬಗಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲದೇವರಕಟ್ಟೆ(ಬೆ.ಚ) ಗ್ರಾಮಗಳನ್ನು ಹೊರತುಪಡಿಸಿರುವುದಾಗಿ ಗ್ರಾಮಗಳ ಸಮೂಹಗಳನ್ನೊಳಗೊಂಡ ಪ್ರದೇಶವು ಒಂದು ಗ್ರಾಮ ಪಂಚಾಯತಿಯಾಗಿರುತ್ತದೆ ಎಂದು ಕೆಳಕಾಣಿಸಿದ ಕೋಷ್ಟಕದಂತೆ ಘೋಷಿಸುತ್ತೇನೆ.
ಸಾರ್ವಜನಿಕರು ಯಾವುದೇ ಸಲಹೆ ಮತ್ತು ಆಕ್ಷೇಪಣೆಗಳು ಇದ್ದಲ್ಲಿ ಹೆಚ್.ಕಡದಕಟ್ಟೆ ಹಾಗೂ ಅರಬಗಟ್ಟೆ ಗ್ರಾಮ ಪಂಚಾಯತಿಗಳ ಸಂಬಂಧಿಸಿದ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರ ಮುಖಾಂತರ ಈ ಪ್ರಾಧಿಕಾರಕ್ಕೆ ದಿನಾಂಕ:23-09-2021 ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಲಿಖಿತವಾಗಿ ಸಲ್ಲಿಸಲು ತಿಳಿಸಿದೆ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 2ಕೋಷ್ಟಕ ಜಿಲ್ಲೆ:ದಾವಣಗೆರೆ ತಾಲ್ಲೂಕು:ಹೊನ್ನಾಳಿ
| ಕ್ರ ಸಂ | ಗ್ರಾಮ ಪಂಚಾಯತಿ ಸಂಖ್ಯೆ ಮತ್ತು ಹೆಸರು | ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಒಳಪಡುವ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ |
| 1 | 6-ಹೆಚ್. ಕದಡಕಟ್ಟೆ | ಹೆಚ್.ಕದಡಕಟ್ಟೆ |
| ಹೊಳೆಮಾದಪುರ | ||
| ಬಿದರಗಡ್ಡೆ | ||
| 2 | 7-ಅರಬಗಟ್ಟೆ | ಅರಬಗಟ್ಟೆ-1 |
| ಅರಬಗಟ್ಟೆ-2 | ||
| ಸುಂಕದಟ್ಟೆ |
ಸಹಿ/-
(ಮಹಾಂತೇಶ ಬೀಳಗಿ ಭಾ.ಆ.ಸೇ., )
ಜಿಲ್ಲಾಧಿಕಾರಿ,
ದಾವಣಗೆರೆ ಜಿಲ್ಲೆ.