(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ
, 21 , 2021 ( , 30, , ೧೯೪3)
¨sÁUÀ – 3 Part – III
BENGALURU, TUESDAY, 21, SEPTEMBER, 2021 (BHADRAPADA, 30, SHAKAVARSHA, 1943)
. 789 No. 789 ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಯವರ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ 1ನೇ ಮಹಡಿ, ಜಿಲ್ಲಾಡಳಿತ ಭ ವನ, ಬೀರಸಂದ ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಇ-ಮೇಲ್:deo.bangalorer3@gmail.com --------------------------------------------------------------- ನಂ:ಇ.ಎಲ್.ಎನ್(ಪಂ)ಸಿಆರ್:02/2020-21 ದಿನಾಂಕ:21.09.2021
ಅಧಿಸೂಚನೆ
ವಿಷಯ: 2021ನೇ ಸೆಪ್ಟೆಂಬರ್ ಮಾಹೆಯಲ್ಲಿ ಅವಧಿ ಮುಕ್ತಾಯವಾಗುತ್ತಿರುವ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಬಗ್ಗೆ.
ಉಲ್ಲೇಖ: ಸರ್ಕಾರದ ಸುತ್ತೋಲೆ ಸಂ:ಗ್ರಾಅಪ:378:ಗ್ರಾಪಂಅ:2020(ಭಾಗ-1), ದಿನಾಂಕ:
19.06.2020
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಮತ್ತು ನಲ್ಲೂರು ಗ್ರಾಮ ಪಂಚಾಯತಿಗಳ ಪದಾವಧಿಯು ಕ್ರಮವಾಗಿ ದಿನಾಂಕ:25.09.2021 ಮತ್ತು 27.09.2021ರಂದು ಮುಕ್ತಾಯವಾಗಲಿದೆ.
ಸದರಿ ಗ್ರಾಮ ಪಂಚಾಯತಿಗಳ ಸದಸ್ಯ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗದಿಂದ ವೇಳಾಪಟ್ಟಿಯು ನಿಗಧಿಯಾಗದಿರುವುದರಿಂದ ಆಡಳಿತಾತ್ಮಕ ಹಿತದೃಷ್ಟಿಯಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 8(1) (ಬಿ) (ii) ರಲ್ಲಿ ವಿಹಿತವಾಗಿರುವ ಅಧಿಕಾರದಡಿಯಲ್ಲಿ ಕೆಳಕಂಡ ಕೋಷ್ಟಕದ ಅಂಕಣ(4)ರಲ್ಲಿ ತೋರಿಸಿರುವ ಅಧಿಕಾರಿಗಳನ್ನು ಅಂಕಣ(3)ರಲ್ಲಿ ತೋರಿಸಿರುವ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಿದೆ. ಈ ಅಧಿಸೂಚನೆಯ ಮೂಲಕ ನೇಮಕ ಮಾಡಿರುವ ಅಂದರೆ ಅಂಕಣ(4)ರಲ್ಲಿ ನಮೂದಿಸಿರುವ ಅಧಿಕಾರಿಗಳು ಅಂಕಣ(5)ರಲ್ಲಿ ತೋರಿಸಿರುವ ದಿನಾಂಕದಂದು ಅಪರಾಹ್ನ ಆಯಾ ಗ್ರಾಮ ಪಂಚಾಯತಿಯ ಆಡಳಿತಾಧಿಕಾರಿಯಾಗಿ ಪ್ರಭಾರವನ್ನು R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 2 ವಹಿಸಿಕೊಂಡು, ಮುಂದಿನ ಆದೇಶದವರೆಗೆ ಅಥವಾ ಈ ಗ್ರಾಮ ಪಂಚಾಯತಿಗಳ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದು ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆಯಾಗುವವರೆಗೆ ಸರ್ಕಾರದ ಉಲ್ಲೇಖಿತ ಸುತ್ತೋಲೆಯಲ್ಲಿ ನೀಡಿರುವ ನಿರ್ದೇಶನಗಳಂತೆ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಆದೇಶಿಸಿದೆ.
ಆಡಳಿತಾಧಿಕಾರಿಯಾಗಿ ಪ್ರಭಾರ ವಹಿಸಿಕೊಂಡ ದಿನ ಆಯಾ ಗ್ರಾಮ ಪಂಚಾಯತಿಯ ನಡಾವಳಿ ವಹಿಯಲ್ಲಿ ಪ್ರಭಾರ ವಹಿಸಿಕೊಂಡಿದ್ದನ್ನು ಅಧಿಕೃತವಾಗಿ ದಾಖಲಿಸುವುದು ಮತ್ತು ಆಡಳಿತಾಧಿಕಾರಿಯಾಗಿ ಪ್ರಭಾರ ವಹಿಸಿಕೊಂಡ ಬಗ್ಗೆ ವರದಿ ಸಲ್ಲಿಸಲು ನಿರ್ದೇಶಿಸಿದೆ.
| ಕ್ರ. ಸಂ | ತಾಲ್ಲೂಕು | ಗ್ರಾಮ ಪಂಚಾಯತಿ ಹೆಸರು | ನೇಮಕ ಮಾಡಲಾದ ಆಡಳಿತಾಧಿಕಾರಿಯ ಪದನಾಮ | ಪ್ರಭಾರ ವಹಿಸಿಕೊಳ್ಳಬೇಕಾದ ದಿನಾಂಕ |
| 1 | 2 | 3 | 4 | 5 |
| 1 | ದೇವನಹಳ್ಳಿ | ಚನ್ನರಾಯಪಟ್ಟಣ | ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದೇವನಹಳ್ಳಿ ತಾಲ್ಲೂಕು ದೇವನಹಳ್ಳಿ | 24.09.2021 ಅಪರಾಹ್ನ |
| 2 ದೇವನಹಳ್ಳಿ | ನಲ್ಲೂರು | ಕ್ಷೇತ್ರ ಶಿಕ್ಷಣಾಧಿಕಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ದೇವನಹಳ್ಳಿ ತಾಲ್ಲೂಕು ದೇವನಹಳ್ಳಿ | 27.09.2021 ಅಪರಾಹ್ನ |
ಸಹಿ/- (ಕೆ.ಶ್ರೀನಿವಾಸ, ಭಾ.ಆ.ಸೇ) ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ.