Servants of Knowledge
Karnataka ExtraOrdinary Gazette · Government of Karnataka

ಆನೇಕಲ್‌ ಪುರಸಭೆಯ ಸ್ಥಗಿತಗೊಳಿಸಲಾಗಿದ್ದ ಉಪ ಚುನಾವಣಾ ಪ್ರಕ್ರಿಯೆಯನ್ನು ಮುಂದುವರಿಸುವ ಕುರಿತು

Published 03 June 2022

Ministry
State Election Commission, Karnataka
Department
State Election Commission, Karnataka
Office
State Election Commission, Karnataka
Type
Extra Ordinary
Part
Part III
Reference
321
Identifier
in.gazette.karnataka_eo.2022-06-03.321
Languages
English, Kannada
Published at
Original source ↗

click here for IIIF manifest

(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ

03 2022 ( 13 1944)

. 321 No. 321 ¨sÁUÀ – 3 Part – III

BENGALURU, FRIDAY, 03, JUNE, 2022 ( JYEISHTA, 13, SHAKAVARSHA, 1944)

ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ನಡವಳಿಗಳು

2(cid:3489) ಮ(cid:3425)(cid:3176) 3(cid:3489) ಮಹ(cid:3378), (cid:3494).16, ಬ(cid:3632)(cid:3190) (cid:3588) ರ(cid:3698)(cid:3176) , ಸ(cid:3452)(cid:3663)ವನಗರ, (cid:3533)ಂಗ(cid:3636)(cid:3590)-560080, ಇ(cid:3564)(cid:3631): [email protected]:080-22205189/93

ವಿಷಯ: ಆನೇಕಲ್ ಪುರಸಭೆಯ ಸ್ಥಗಿತಗೊಳಿಸಲಾಗಿದ್ದ ಉಪ ಚುನಾವಣಾ ಪ್ರಕ್ರಿಯೆಯನ್ನು ಮುಂದುವರಿಸುವ ಕುರಿತು.

ಓದಲಾಗಿದೆ: 1. ಆಯೋಗದ ಆದೇಶ ಸಂಖ್ಯೆ: ರಾಚುಆ 90 ಇಯುಬಿ 2022, ದಿನಾಂಕ:

28.04.2022 ಮತ್ತು 01.05.2022

2. ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು, ಪ್ರಕರಣ W.A. No. 408/2022 ರ ಮಧ್ಯಂತರ ಆದೇಶ ದಿನಾಂಕ: 05.05.2022 (ಸ್ವೀಕೃತಿ ದಿನಾಂಕ: 06.05.2022 ಸಂಜೆ 5.00 ಗಂಟೆ)

3. ಆಯೋಗದ ಆದೇಶ ಸಂಖ್ಯೆ: ರಾಚುಆ 90 ಇಯುಬಿ 2022, ದಿನಾಂಕ:

06.05.2022

4. ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು, ಮೇಲ್ಮನವಿ W.A. No. 408/2022 ರ ಅಂತಿಮ ಆದೇಶ ದಿನಾಂಕ: 30.05.2022.

ಪ ್ರಸ್ತಾವನೆ,

ಮೇಲೆ ಓದಲಾದ (1)ರ ಆಯೋಗದ ಆದೇಶದಲ್ಲಿ ವಿವಿಧ ಕಾರಣಗಳಿಂದ ತೆರವಾದ ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು, ಆನೇಕಲ್ ಪುರಸಭೆಯ ವಾರ್ಡ್ ಸಂಖ್ಯೆ- 14, 16 ಮತ್ತು 17ಕ್ಕೆ ಉಪ ಚುನಾವಣೆ ನಡೆಸಲು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ.

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣ ಸಂಖ್ಯೆ W.A. 408/2022 ರಲ್ಲಿ ಮೇಲೆ ಓದಲಾದ (2)ರ ತಡೆಯಾಜ್ಞೆ ಆದೇಶದನ್ವಯ, ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು, ಆನೇಕಲ್ ಪುರಸಭೆಯ ವಾರ್ಡ್ ಸಂಖ್ಯೆ- 14, 16 ಮತ್ತು 17ರ ಉಪ ಚುನಾವಣೆಗೆ ಸಂಬಂಧಿಸಿದಂತೆ, ದಿನಾಂಕ: 06.05.2022 ರ ವರೆಗೆ ನಡೆದಿರುವ ಉಪ ಚುನಾವಣಾ ಪ್ರಕ್ರಿಯೆಯನ್ನು ಉಳಿಸಿಕೊಂಡಂತೆ, ಉಪ ಚುನಾವಣೆಯ ಮುಂದಿನ ಪ್ರಕ್ರಿಯೆಗಳನ್ನು ಆಯೋಗದ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಿ ಮೇಲೆ ಓದಲಾದ (3)ರಲ್ಲಿ ಆದೇಶಿಸಲಾಗಿರುತ್ತದೆ.

(1)2 ದಿನಾಂಕ: 28.04.2022 ರಂದು ಹೊರಡಿಸಿದ ಚುನಾವಣಾ ವೇಳಾಪಟ್ಟಿಯನ್ವಯ ದಿನಾಂಕ: 03.05.2022 ರಿಂದ 06.05.2022 ರವರೆಗಿನ ಚುನಾವಣಾ ಪ್ರಕಿಯೆಗಳಿಗೆ ಯಾವುದೇ ಭಾದಕವಿರುವುದಿಲ್ಲ. ದಿನಾಂಕ: 03.05.2022 ರಿಂದ 06.05.2022ರ ವರೆಗೆ ನಾಮಪತ್ರ ಸ್ವೀಕೃತವಾಗಿರುತ್ತದೆ. ಮುಂದಿನ ಪ್ರಕಿಯೆಗಳು ಸ್ಥಗಿತಗೊಂಡಿರುತ್ತದೆ.

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣ ಸಂಖ್ಯೆ W.A. 408/2022 ರಲ್ಲಿ ದಿನಾಂಕ:

30.05.2022 ರಂದು ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಲಾಗಿರುವುದರಿಂದ, ಮುಂದಿನ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಲು ಈ ಕೆಳಕಂಡಂತೆ ಆದೇಶಿಸಿದೆ.

ರಾಜ್ಯ ಚುನಾವಣಾ ಆಯೋಗದ ಆದೇಶ, ಸಂಖ್ಯೆ: ರಾಚುಅ 90 ಇಯುಬಿ 2022, ಬೆಂಗಳೂರು, ದಿನಾಂಕ: 03.06.2022.

ಭಾರತ ಸಂವಿಧಾನದ ಪರಿಚ್ಛೇದ 243 ಜೆಡ್ಎ ರಲ್ಲಿ ಪ್ರದತ್ತವಾದ ಅಧಿಕಾರದ ಮೇರೆಗೆ ಮತ್ತು ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಪ್ರಕರಣ 19 ರನ್ವಯ ಮತ್ತು ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು, 1977ರ ನಿಯಮ 3(1) ರನ್ವಯ ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು, ಆನೇಕಲ್ ಪುರಸಭೆಯ ವಾರ್ಡ್ ಸಂಖ್ಯೆ- 14, 16 ಮತ್ತು 17 ಕ್ಕೆ ಉಪ ಚುನಾವಣೆಯನ್ನು ನಡೆಸಲು ಈ ಕೆಳಕಂಡಂತೆ ವೇಳಾಪಟ್ಟಿಯನ್ನು ನಿಗದಿಪಡಿಸಿ, ಅದರಂತೆ ಚುನಾವಣೆಯನ್ನು ಮುಂದುವರೆಸಲು ಆದೇಶಿಸಿದೆ. ದಿನಾಂಕ: 03.05.2022 ರಿಂದ 06.05.2022ರ ವರೆಗೆ ನಡೆದಿರುವ ಚುನಾವಣಾ ಪ್ರಕ್ರಿಯೆಯ ಭಾಗವಾಗಿರುತ್ತದೆ.

ಮುಂದುವರೆದ ಚುನಾವಣಾ ವೇಳಾಪಟ್ಟಿ

1 ಜಿಲ್ಲಾಧಿಕಾರಿಗಳು ಮುಂದುವರೆಸಿದ ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಮತ್ತು ದಿನ 06.06.2022 (ಸೋಮವಾರ)
2 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ 07.06.2022 (ಮಂಗಳವಾರ)
3 ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ 08.06.2022 (ಬುಧ ವಾರ)
4 ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ 10.06.2022 (ಶುಕ್ರವಾರ)
5 ಮತದಾನ ಅವಶ್ಯಕವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಗಳ ವರೆಗೆ) 19.06.2022 (ಭಾನುವಾರ )
6 ಮರು ಮತದಾನ ಇದ್ದಲ್ಲಿ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಗಳ ವರೆಗೆ) 20.06.2022 (ಸೋಮವಾರ)
7 ಮತಗಳ ಎಣಿಕೆಯ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ) (ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ) 21.06.2022 (ಮಂಗಳವಾರ)
8 ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ 21.06.2022 (ಮಂಗಳವಾರ)

ಸದಾಚಾರ ಸಂಹಿತೆಯು ದಿನಾಂಕ: 03.06.2022 ರಿಂದ ದಿನಾಂಕ: 21.06.2022ರ ವರೆಗೆ ಉಪ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಯ ವಾರ್ಡುಗಳ ವ್ಯಾಪ್ತಿಯಲ್ಲಿ ಮಾತ ್ರ ಜಾರಿಯಲ್ಲಿರುತ್ತದೆ.

ಜಿಲ್ಲಾಧಿಕಾರಿಗಳು, ಆಯೋಗವು ಆದೇಶಿಸಿದ ಚುನಾವಣಾ ವೇಳಾಪಟ್ಟಿಯನ್ನು ಅನುಸರಿಸಿ ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು, 1977ರ ನಿಯಮ 8ರ ಪ್ರಕಾರ ಚುನಾವಣೆ ನಡೆಯುವ ನಗರ R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 2973 ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಮುಂದುವರೆದ ಚುನಾವಣಾ ಅಧಿಸೂಚನೆಯನ್ನು ಪ್ರಪತ್ರ-1 ರಲ್ಲಿ ಹೊರಡಿಸತಕ್ಕದ್ದು. ಮುಂದುವರೆದ ಚುನಾವಣಾ ಅಧಿಸೂಚನೆಯ ಅನುಬಂಧದಲ್ಲಿ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಯ ಹೆಸರು, ವಾರ್ಡ್‌ನ ಸಂಖ್ಯೆ, ಮೀಸಲಾತಿ ವಿವರಗಳನ್ನು ಸ್ಪಷ್ಟವಾಗಿ ನಮೂದಿಸುವುದು. ಹೊರಡಿಸಲಾದ ಅಧಿಸೂಚನೆಯನ್ನು ಅದೇ ದಿನದಂದು ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸತಕ್ಕದ್ದು. ಅಧಿಸೂಚನೆಯ ಪ್ರತಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿ, ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ಕಚೇರಿ ಮತ್ತು ಇನ್ನಿತರ ಮುಖ್ಯ ಸ್ಥಳಗಳಲ್ಲಿಯೂ ಸಹಾ ಪ್ರದರ್ಶಿಸತಕ್ಕದ್ದು ಹಾಗೂ ಅಂದೇ ಇ-ಮೇಲ್ ಮುಖಾಂತರ ರಾಜ್ಯ ಚುನಾವಣಾ ಆಯೋಗಕ್ಕೂ ಕಳುಹಿಸುವುದು.

ಅಧಿಸೂಚನೆಯ ಪ್ರತಿಯನ್ನು ಸಂಬಂಧಿಸಿದ ಚುನಾವಣಾಧಿಕಾರಿಗಳಿಗೆ ಕಳುಹಿಸಿಕೊಟ್ಟು, ಅದೇ ದಿನದಂದು ಮುಂದುವರೆದ ಪ್ರಪತ್ರ-1ಎ ರಲ್ಲಿ ಚುನಾವಣಾ ನೋಟೀಸನ್ನು ಪ್ರಕಟಿಸುವಂತೆ ಮತ್ತು ಚುನಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಸೂಚಿಸುವುದು. ಚುನಾವಣಾ ವೇಳಾಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ದಿನಪತ್ರಿಕೆಗಳಲ್ಲಿ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ (ವೆಚ್ಚ ಬಾರದಂತೆ) ಪ್ರಕಟಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದು.

ವಿಶೇಷ ಸೂಚನೆ:-

1. ಚುನಾವಣೆ ನಡೆಸಲಾಗುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಕೂಡಲೇ ಮುಂದುವರೆದ ಚುನಾವಣಾ ವೇಳಾಪಟ್ಟಿಯಂತೆ ಚುನಾವಣೆ ನಡೆಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆಗಳನ್ನು ನೀಡುವುದು.

2. ಈಗಾಗಲೇ ನಾಮಪತ್ರ ಸಲ್ಲಿಸಿರುವವರು ಪುನ: ನಾಮಪತ್ರ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. 3. ನಾಮಪತ್ರಗಳ ಪರಿಶೀಲನಾ ಸಂದರ್ಭದಲ್ಲಿ ದಿನಾಂಕ: 03.05.2022 ರಿಂದ 06.05.2022ರ ವರೆಗೆ ಸ್ವೀಕೃತವಾಗಿರುವ ನಾಮಪತ್ರಗಳನ್ನು ಪರಿಶೀಲನೆಗೆ ಒಳಪಡಿಸುವುದು.

4. ಉಳಿದಂತೆ ದಿನಾಂಕ: 28.04.2022ರ ಆದೇಶದಲ್ಲಿ ನೀಡಿರುವ ಸೂಚನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸದಾಚಾರ ಸಂಹಿತೆಯು ಯಾವುದೇ ರೀತಿಯಲ್ಲೂ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು.

ಆದೇಶಾನುಸಾರ

(ಎನ್.ಆರ್. ನಾಗರಾಜು) ಅಧೀನ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ, ಕರ್ನಾಟಕ.

ಮುದ(cid:206)ಕರು (cid:178)ಾಗೂ ಪ(cid:206)(cid:144)ಾಶಕರು:- ಸಂಕಲ(cid:163)ಾ(cid:297)(cid:144)ಾ(cid:312)ಗಳ(cid:133), ಕ(cid:163)ಾ(cid:143)ಟಕ (cid:170)ಾಜ(cid:205)ಪತ(cid:206), ಸ(cid:144)ಾ(cid:143)(cid:312) (cid:144)ೇಂದ(cid:206) ಮುದ(cid:206)(cid:158)ಾಲಯ, (cid:166)ೆಂಗಳ(cid:136)ರು

Cite this issue. Karnataka ExtraOrdinary Gazette, Government of Karnataka, 03 June 2022. Indian Gazettes, https://egazette.servantsofknowledge.in/details/in.gazette.karnataka_eo.2022-06-03.321/. Archive identifier in.gazette.karnataka_eo.2022-06-03.321.