(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ
07 2023( , 15 1945)
BENGALURU, SATURDAY, 07, OCTOBER, 2023( AASHWAYUJA , 15, SHAKAVARSHA, 1945)
. 491 No. 491 ¨sÁUÀ – 1 Part – I
ಕರ್ನಾಟಕ ಸರ್ಕಾರದ ನಡವಳಿಗಳು ವಿಷಯ: ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF i.e., CRPF, CISF, ITBP and SSB) ನಿವೃತ್ತ ಸಿಬ್ಬಂದಿಗಳನ್ನು ಕರ್ನಾಟಕ ರಾಜ್ಯದಲ್ಲಿ ಮಾಜಿ-ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಗಳು (Ex-CAPF personnel) ಎಂದು ಪದನಾಮೀಕರಿಸುವ ಹಾಗೂ ಮಾಜಿ ಕೇಂದ್ರ ಸಶಸ್ತ್ರ, ಪೊಲೀಸ್ ಪಡೆ ಸಿಬ್ಬಂದಿಗಳಿಗೆ (Ex-CAPF) ನೀಡಲಾಗುತ್ತಿರುವ ಅರ್ಹ ಸೌಲಭ್ಯಗಳನ್ನು ಪರಿಗಣಿಸುವ ಕುರಿತು.
ಓದಲಾಗಿದೆ: 1) ಕೇಂದ್ರ ಗೃಹ ಮಂತ್ರಾಲಯದ ಅಧಿಕೃತ ಜ್ಞಾಪನ ಸಂಖ್ಯೆ:27011/100/2012- ಆರ್& ಡಬ್ಯೂ÷್ಲ, ದಿನಾಂಕ:23/11/2012.
2) ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂಖ್ಯೆ: 7027/2021 (S-KSAT), ದಿನಾಂಕ:21/06/2021ರ ದಿನಂಪ್ರತಿ ಆದೇಶ.
3) ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಜರುಗಿದ ದಿನಾಂಕ:19/09/2022ರ ಸಭಾ ನಡವಳಿ.
* * * * *
ಪ ್ರಸ್ತಾವನೆ:
ಮೇಲೆ ಕ್ರಮಸಂಖ್ಯೆ: 01ರಲ್ಲಿ ಓದಲಾದ ಕೇಂದ್ರ ಗೃಹ ಮಂತ್ರಾಲಯದ ಅಧಿಕೃತ ಜ್ಞಾಪನದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ Central Reserve Police (CAPF), Border Security Force (BSF), Central Industrial Security Foce (CISF), Indo Tibetan Border Police (ITBP) and Sashastra Seema Bal (SSB) ನಿವೃತ್ತ ಸಿಬ್ಬಂದಿಗಳನ್ನು ಮಾಜಿ-ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಗಳು (Ex Central Armed Police Force Personnel) ಎಂದು ಪದನಾಮೀಕರಿಸಲು ಕೇಂದ್ರ ಸರ್ಕಾರದ Cabinet Committee on Securityಯು ಅನುಮೋದಿಸಿದ್ದು, ಇದರನ್ವಯ ಅಂತಹ ಪದನಾಮಗಳನ್ನು ಆಧರಿಸಿ, ಕೇಂದ್ರಾಡಳಿತ / ರಾಜ್ಯ ಸರ್ಕಾರಗಳು ರಕ್ಷಣಾ ಪಡೆಗಳ ಮಾಜಿ ಸೈನಿಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳಂತೆಯೇ ಸೂಕ್ತ ಸೌಲಭ್ಯಗಳನ್ನು ಇಂತಹ ನಿವೃತ್ತ ಸಿಬ್ಬಂದಿಗಳಿಗೂ ವಿಸ್ತರಿಸಲು ಕೇಂದ್ರಾಡಳಿತ/ರಾಜ್ಯ ಸರ್ಕಾರಗಳು ಕ್ರಮವಹಿಸಬಹುದು ಎಂದು ಪ್ರಸ್ತಾಪಿಸಿರುತ್ತದೆ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 2ಶ್ರೀ ಅಪ್ಪ್ಬಾಸಿ ಧರ್ಮಣ್ಣ ಗುರವ ಇವರು ಸಲ್ಲಿಸಿದ್ದ ರಿಟ್ ಅರ್ಜಿ ಸಂಖ್ಯೆ: 7027/2021 (S-KSAT) ರಲ್ಲಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ದಿನಾಂಕ: 21/6/2021ರಂದು ನೀಡಿದ ದಿನದ ಆದೇಶದ ಉದೃತ ಭಾಗ ಕೆಳಕಂಡಂತಿರುತ್ತದೆ. 5. The large number of States in the country are treating the retired CRPF personnel under the category of Ex- servicemen, on account of the aforesaid Official Memorandum. However, the rules of 1977 have not been amended by the State of karnataka so far, nor any decision has been taken by it.
6. Resultantly, the learned Government Advocate is directed to seek instructions in the matter and to inform this Court as to what policy decision has been taken by the State Government in respect of the Official Memorandum dated: 23/11/2012.
ಈ ಸಂಬಂಧ ದಿನಾಂಕ: 19/09/2022 ರಂದು ಸರ್ಕಾರದ ಮುಖ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಕೇಂದ್ರ ಗೃಹ ಮಂತ್ರಾಲಯದ ದಿನಾಂಕ: 23/11/2012ರ ಅಧಿಕೃತ ಜ್ಞಾಪನ ಸಂಖ್ಯೆ: 27011/100/2012 ಆರ್ & ಡಬ್ಲ್ಯೂ ರನ್ವಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF ie, CRPF, BSF, CISF, ITBP and SSB) ಸಿಬ್ಬಂದಿಗಳನ್ನು ಮಾಜಿ-ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಗಳು (Ex-CAPF personnel) ಎಂದು ಪದನಾಮೀಕರಿಸಿರುವಂತೆ, ಕರ್ನಾಟಕ ರಾಜ್ಯ ಸರ್ಕಾರದಲ್ಲಿಯೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗಳನ್ನು ಮಾಜಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಗಳು (Ex-CAPF personnel) ಎಂದು ಪದನಾಮೀಕರಿಸಬಹುದಾಗಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ.
ಮೇಲ್ಕಂಡ ಅಂಶಗಳನ್ನು ಪರಿಗಣಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 232 ಪಿಪಿಎಸ್ 2022,ಬೆಂಗಳೂರು, ದಿನಾಂಕ: 04/11/2022 ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ Central Reserve Police (CAPF), Border Security Force (BSF), Central Industrial Security Force (CISF), Indo Tibetan Border Police (ITBP) and Sashastra Seema Bal (SSB) ನಿವೃತ್ತ ಸಿಬ್ಬಂದಿಗಳನ್ನು ಕರ್ನಾಟಕ ರಾಜ್ಯದಲ್ಲಿ ಮಾಜಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಗಳು (Ex-Central Armed Police Force Personnel) ಎಂದು ಪದನಾಮೀಕರಿಸಿ ಮತ್ತು ಇವರಿಗೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ಹಾಗೂ ಸಮಾಲೋಚನೆಗೊಳಪಟ್ಟು ಮಾಜಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿ (Ex- Central Armed Police Force Personnel) ಗಳಿಗೆ ನೀಡಲಾಗುತ್ತಿರುವ ಅರ್ಹ ಸೌಲಭ್ಯಗಳನ್ನು ಪರಿಗಣಿಸಲು ಆದೇಶಿಸಿದೆ.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 436 ವೆಚ್ಚ-11/2022, ದಿನಾಂಕ:12/10/2022ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,