Servants of Knowledge
Karnataka ExtraOrdinary Gazette · Government of Karnataka

KLC Notification for Driver and Group 'D' recruitment offline 04.03.2024

Published 04 March 2024

Ministry
KARNATAKA LEGISLATIVE COUNCIL SECRETARAITE
Department
KARNATAKA LEGISLATIVE COUNCIL SECRETARAITE
Office
KARNATAKA LEGISLATIVE COUNCIL SECRETARAITE
Type
Extra Ordinary
Part
Part V
Reference
150
Identifier
in.gazette.karnataka_eo.2024-03-04.150
Languages
English, Kannada
Published at
Original source ↗

click here for IIIF manifest

(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ

04 2024( , 14 1945)

BENGALURU, MONDAY, 04, MARCH, 2024(PHALGUNA, 14, SHAKAVARSHA, 1945)

. 150 No. 150 ¨sÁUÀ – 5 Part – V

ಕರ್ನಾಟಕ ವಿಧಾನ ಪರಿಷತ್ತು

ಸಂಖ್ಯೆ: ಕವಿಪ:ಆ-1:179:ನೇನೇ:2023 ವಿಧಾನ ಪರಿಷತ್ತಿನ ಸಚಿವಾಲಯ,

ಅಂಚೆ ಪೆಟ್ಟಿಗೆ ಸಂಖ್ಯೆ: 5079, ವಿಧಾನಸೌಧ, ಬೆಂಗಳೂರು-560 001, ದಿನಾಂಕ:04.03.2024

ಅಧಿಸೂಚನೆ

ವಿಷಯ: ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಉಳಿಕೆ ಮೂಲ ವೃಂದ ಮತ್ತು

ಸ್ಥಳೀಯ ವೃಂದದಲ್ಲಿನ (ಕಲ್ಯಾಣ-ಕರ್ನಾಟಕ) ವಾಹನ ಚಾಲಕ ಮತ್ತು 'ಡಿ' ಗುಂಪು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ.

****** ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 2021ರ ರೀತ್ಯಾ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಈ ಕೆಳಕಂಡ ವಾಹನ ಚಾಲಕರು ಮತ್ತು 'ಡಿ' ಗುಂಪು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

1. ಹುದ್ದೆಯ ಹೆಸರು: ವಾಹನ ಚಾಲಕರು -03 ಹುದ್ದೆಗಳು

ಹುದ್ದೆಗಳ ಸಂಖ್ಯೆ: ಉಳಿಕೆ ಮೂಲ ವೃಂದ 03 ಹುದ್ದೆಗಳು ವೇತನ ಶ್ರೇಣಿ: 21400-500-22400-550-24600-600-27000-650-29600-750-32600- 850-36000-950-39800-1100-42000.

ಮೀಸಲಾತಿ ವರ್ಗೀಕರಣ

ಕ್ರ ಸಂ. ಮೀಸಲಾತಿ ಇತರೆ ಮಹಿಳೆ ಗ್ರಾಮೀಣ ಮಾಜಿ ಸೈನಿಕರು ಕನ್ನಡ ಮಾಧ್ಯಮ ಯೋಜನಾ ಅಭ್ಯರ್ಥಿ ಅಂಗವಿಕಲರು ತೃತೀಯ ಲಿಂಗ ಒಟ್ಟು
1. ಪರಿಶಿಷ್ಟ ಜಾತಿ 01 - - - - - - - 01
2. ಸಾಮಾನ್ಯ 01 - - - - - - 01
3. ಪರಿಶಿಷ್ಟ ಪಂಗಡ 01 - 01
ಒಟ್ಟು 03 - - - - - - - 03

(1)2 2. ಹುದ್ದೆಯ ಹೆಸರು: ಗ್ರೂಪ್ 'ಡಿ' (ದಲಾಯತ್/ಕಾವಲುಗಾರರು/ಸ್ವೀಪರ್-ಕಮ್-ಸ್ಕ್ಯಾವೆಂಜರ್/ ಸೆಕ್ಯೂರಿಟಿಗಾರ್ಡ್)- 29 ಹುದ್ದೆಗಳು ಹುದ್ದೆಗಳ ಸಂಖ್ಯೆ: ಉಳಿಕೆ ಮೂಲ ವೃಂದ- 26 ಹುದ್ದೆಗಳು ಹಾಗೂ ಕಲ್ಯಾಣ-ಕರ್ನಾಟಕ – 03 ಹುದ್ದೆಗಳು. ವೇತನ ಶ್ರೇಣಿ: 17000-400-18600-450-20400-500-22400-550-24600-600-27000- 650-28950

ಮೀಸಲಾತಿ ವರ್ಗೀಕರಣ (ಉಳಿಕೆ ಮೂಲ ವೃಂದ)-26 ಹುದ್ದೆಗಳು

ಕ್ರ ಸಂ. ಮೀಸಲಾತಿ ಇತರೆ ಮಹಿಳೆ ಗ್ರಾಮೀಣ ಮಾಜಿ ಸೈನಿಕರು ಕನ್ನಡ ಮಾಧ್ಯಮ ಯೋಜನಾ ಅಭ್ಯರ್ಥಿ ಅಂಗವಿಕಲರು ತೃತೀಯ ಲಿಂಗ ಒಟ್ಟು
1. ಪರಿಶಿಷ್ಟ ಜಾತಿ 1 1 1 - - - 1 *B.LV - 04
2. ಸಾಮಾನ್ಯ 2 5 3 1 - - 1 *B.LV - 12
3. ಪರಿಶಿಷ್ಠ ಪಂಗಡ 1 1 - - - - - - 02
4. ಪ್ರವರ್ಗ-1 1 - - - - - - - 01
5. ಪ್ರವರ್ಗ-2ಎ 1 1 1 - - - 1 *B.LV - 04
6. ಪ್ರವರ್ಗ-2ಬಿ 1 - - - - - - - 01
7. ಪ್ರವರ್ಗ-3ಎ 1 - - - - - - - 01
8. ಪ್ರವರ್ಗ-3ಬಿ 1 - - - - - - - 01
ಒಟ್ಟು 09 08 05 01 - - 03 26

*CAUÀ"PÀ® C¨s ÀåyðAiÀÄ CAUÀ"PÀ®vÉAiÀÄ ¸ÀégÀÆ¥À –B.LV (Blindness and low vision)

ಕ್ರ ಸಂ. ಮೀಸಲಾತಿ ಇತರೆ ಮಹಿಳೆ ಗ್ರಾಮೀಣ ಮಾಜಿ ಸೈನಿಕರು ಕನ್ನಡ ಮಾಧ್ಯಮ ಯೋಜನಾ ಅಭ್ಯರ್ಥಿ ಅಂಗವಿಕಲರು ತೃತೀಯ ಲಿಂಗ ಒಟ್ಟು
1. ಪರಿಶಿಷ್ಟ ಜಾತಿ 1 - - - - - - 01
2. ಸಾಮಾನ್ಯ 1 - - - - - - 01
3. ಪರಿಶಿಷ್ಠ ಪಂಗಡ 1
ಒಟ್ಟು 3 - - - - - - 03

01. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05.04.2024 02. ಅರ್ಜಿ ಸಲ್ಲಿಸಬೇಕಾದ ವಿಳಾಸ: ಅರ್ಜಿಗಳನ್ನು ನಮೂನೆ -1ರ ದ್ವಿಪ್ರತಿಯಲ್ಲಿ ಅಗತ್ಯವುಳ್ಳ ದಾಖಲೆಗಳನ್ನು ಲಗತ್ತಿಸಿ, ಕೊನೆಯ ದಿನಾಂಕ:05.04.2024ರಂದು ಸಂಜೆ: 5.00 ಗಂಟೆಯ ಒಳಗಾಗಿ ಅಂಚೆಯ ಮೂಲಕ ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ: 5079, ಮೊದಲನೇ ಮಹಡಿ, ವಿಧಾನಸೌಧ, ಬೆಂಗಳೂರು-560 001.ರ ವಿಳಾಸಕ್ಕೆ ಅಥವಾ ಖುದ್ದಾಗಿ ವಿಧಾನ ಸೌಧದ 2ನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ:216, ಪತ್ರ ಸ್ವೀಕಾರ ಮತ್ತು ರವಾನೆ ಶಾಖೆಗೆ ತಲುಪಿಸತಕ್ಕದ್ದು. ಸದರಿ ದಿನಾಂಕವು ಸಾರ್ವಜನಿಕ ರಜಾ ದಿನವಾದಲ್ಲಿ ಮುಂದಿನ ಕೆಲಸದ ದಿನದಂದು ಅರ್ಜಿಯನ್ನು ಸಲ್ಲಿಸತಕ್ಕದ್ದು.

03. ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 2021ರ ರೀತ್ಯಾ ಮೇಲ್ಕಂಡ ಹುದ್ದೆಗಳ ಭರ್ತಿಗಾಗಿ ಅರ್ಹತೆಯುಳ್ಳ ಅಭ್ಯರ್ಥಿಗಳು ಅರ್ಜಿ ನಮೂನೆ-1ರ ದ್ವಿಪ್ರತಿಯಲ್ಲಿ ಅರ್ಜಿಗಳನ್ನು ಸರ್ಕಾರಿ ಪುಸ್ತಕ ಮಳಿಗೆಯಿಂದ ಪಡೆದು ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯಕ್ಕೆ ನಿಗಧಿಪಡಿಸಿರುವ ಕೊನೆಯ ದಿನಾಂಕದೊಳಗೆ ಸಲ್ಲಿಸಬೇಕು. (ಅರ್ಜಿ ನಮೂನೆಯು ಸರ್ಕಾರಿ ಮುದ್ರಣಾಲಯದಲ್ಲಿ ದೊರೆಯುತ್ತದೆ.)3 04. ಶುಲ್ಕ:

ಸಾಮಾನ್ಯ ಅಭ್ಯರ್ಥಿಗಳಿಗೆ ರೂ.600/-
ಪ್ರವರ್ಗ 2(ಎ),2(ಬಿ),3(ಎ), 3(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ ರೂ.300/-
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ.

ಅ) ಮೇಲ್ಕಂಡ ಶುಲ್ಕವನ್ನು ಡಿ.ಡಿ. ಅಥವಾ ಇಂಡಿಯನ್ ಪೋಸ್ಟಲ್ ಆರ್ಡರ್ ಅನ್ನು ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗಾಗಿ ಖರೀದಿಸಿ ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ:5079, ವಿಧಾನಸೌಧ, ಬೆಂಗಳೂರು – 560 001 ಈ ವಿಳಾಸಕ್ಕೆ ಪಾವತಿ ಮಾಡಬೇಕು. ಅರ್ಜಿ ಶುಲ್ಕವನ್ನು ಒಮ್ಮೆ ಪಾವತಿಸಿದ ನಂತರ ಯಾವುದೇ ಸಂದರ್ಭದಲ್ಲಿಯೂ ಹಿಂದಿರುಗಿಸಲಾಗುವುದಿಲ್ಲ.

05. ವಿದ್ಯಾರ್ಹತೆ:

ಕ್ರ ಸಂ ಹುದ್ದೆಯ ಹೆಸರು ವಿದ್ಯಾರ್ಹತೆ
1. ವಾಹನ ಚಾಲಕರು ಎ) ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿರಬೇಕು. ಬಿ) ಮೋಟಾರು ಕಾರು/ಭಾರಿ ವಾಹನಗಳ ಚಾಲನೆಯ ಅಧಿಕೃತ ಚಾಲನಾ ಪರವಾನಗಿಯನ್ನು ಹೊಂದಿರಬೇಕು. ಸಿ) ಪ್ರಥಮ ಚಿಕಿತ್ಸೆಯ ಪ್ರಮಾಣ ಪತ್ರವನ್ನು ಹೊಂದಿರಬೇಕು. ಡಿ) ಮೋಟಾರು ಕಾರುಗಳ ಚಾಲನೆಯಲ್ಲಿ ಮೂರು ವರ್ಷಗಳಿಗೆ ಕಡಿಮೆಯಿಲ್ಲದಂತೆ ಪ್ರಾಯೋಗಿಕ ಅನುಭವವನ್ನು ಹೊಂದಿರಬೇಕು.
2. ಗ್ರೂಪ್ 'ಡಿ' ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿರಬೇಕು.

6. ಕನಿಷ್ಟ ವಯೋಮಿತಿ: ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಟ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.

ಗರಿಷ್ಟ ವಯೋಮಿತಿ:- ಸಾಮಾನ್ಯ ವರ್ಗ : 35 ವರ್ಷ ಪ್ರವರ್ಗ IIಎ, IIಬಿ, IIIಎ ಮತ್ತು IIIಬಿ : 38 ವರ್ಷ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-I : 40 ವರ್ಷ4 ಸಕ್ಷಮ ನೇಮಕಾತಿ ಪ್ರಾಧಿಕಾರ ಆದೇಶದ ರೀತ್ಯಾ 2020ರಲ್ಲಿ ದೇಶದಾದ್ಯಂತ ಹರಡಿದ ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ಸಾಧ್ಯವಾಗದ ಕಾರಣದಿಂದಾಗಿ 02 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ವಯೋಮಿತಿ ಸಡಿಲಿಕೆಯು ಈ ಒಂದು ಬಾರಿಗೆ ಮಾತ್ರ ಸೀಮಿತವಾಗಿದೆ.

ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿ 1977ರ ನಿಯಮ 6(3)ರಲ್ಲಿ ತಿಳಿಸಲಾಗಿರುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ರಿಯಾಯಿತಿ ನೀಡಲಾಗುವುದು.

07. ಸರ್ಕಾರಿ ಇಲಾಖೆಗಳಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳು ತಮ್ಮ ನೇಮಕಾತಿ ಪ್ರಾಧಿಕಾರದ ಮೂಲಕವೇ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.

08. ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳು 1977ರ ಪ್ರಕಾರ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಹಾಗೂ ಕರ್ನಾಟಕ ಸಾರ್ವಜನಿಕ ಉದ್ಯೋಗ (ಕಲ್ಯಾಣ-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) (ಅರ್ಹತಾ ಪ್ರಮಾಣ ಪತ್ರಗಳ ನೀಡಿಕೆ) ನಿಯಮಗಳು, 2013 (2021ರವರೆಗೆ ತಿದ್ದುಪಡಿಯಂತೆ)ರನ್ವಯ ನೇಮಕಾತಿ ಹೊಂದಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಮಾತ್ರ ನೇಮಕಾತಿಗೆ ಅರ್ಹರಾಗಿರುತ್ತಾರೆ.

09. (1) ನೇಮಕಾತಿ ಪ್ರಾಧಿಕಾರದಿಂದ ಆಯ್ಕೆಯಾದ ಯಾವುದೇ ಅಭ್ಯರ್ಥಿಯು ಆಯ್ಕೆಗೊಂಡ ಹುದ್ದೆಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಯೋಗ್ಯರೆನಿಸದ ಹೊರತು ಅಂತಹವರನ್ನು ಆ ಹುದ್ದೆಗೆ ನೇಮಿಸಲಾಗುವುದಿಲ್ಲ.

(2) ಕಾನೂನಿನ ಪ್ರಕಾರ ಒಬ್ಬ ಜೀವಂತ ಪತಿ/ಪತ್ನಿಗಿಂತ ಹೆಚ್ಚು ಮಂದಿ ಪತಿ/ಪತ್ನಿಯರನ್ನು ಹೊಂದಿರುವ ಪುರುಷ/ಮಹಿಳಾ ಅಭ್ಯರ್ಥಿಯು ನೇಮಕಾತಿಗೆ ಅರ್ಹರಾಗಿರುವುದಿಲ್ಲ.

10. ಯಾವುದೇ ವ್ಯಕ್ತಿಯು ನೇಮಕಾತಿ ಬಗ್ಗೆ ಅಧಿಕಾರಿಗಳು ಮತ್ತು ಅಧಿಕಾರೇತರರುಗಳಿಂದ ಯಾವುದೇ ರೀತಿಯ ಒತ್ತಡ ತಂದಲ್ಲಿ ಅಂತಹ ಅಭ್ಯರ್ಥಿಗಳು ಸದರಿ ಹುದ್ದೆಯ ನೇಮಕಾತಿಗೆ ಅನರ್ಹರಾಗಿರುತ್ತಾರೆ.

11. ಅಭ್ಯರ್ಥಿಗಳು ಅರ್ಜಿಯೊಂದಿಗೆ ಈ ಕೆಳಗೆ ತಿಳಿಸಲಾಗಿರುವ ದಾಖಲೆಗಳನ್ನು ದ್ವಿಪ್ರತಿಗಳಲ್ಲಿ ಲಗತ್ತಿಸಬೇಕು. (ಅ) ಹುಟ್ಟಿದ ತಾರೀಖಿಗೆ ಆಧಾರದ ದಾಖಲೆ ಪ್ರತಿ. (ಆ) ಹುದ್ದೆಗೆ ಸೂಚಿಸಲಾಗಿರುವ ವಿದ್ಯಾರ್ಹತೆಗಳಿಗೆ ಸಂಬಂಧಿಸಿದ ಅಂಕಪಟ್ಟಿಗಳ ಹಾಗೂ ಪ್ರಮಾಣ ಪತ್ರಗಳ ನಕಲು ಪ್ರತಿ. (ಇ) ಜಾತಿ ಪ್ರಮಾಣ ಪತ್ರದ ನಕಲು ಪ್ರತಿಯನ್ನು ಸರ್ಕಾರದಿಂದ ನಿಗದಿಪಡಿಸಿರುವ ನಮೂನೆಯಲ್ಲಿ ಸಲ್ಲಿಸತಕ್ಕದ್ದು. (ಈ) ಗೆಜೆಟೆಡ್ ಅಧಿಕಾರಿಗಳಿಂದ ಪಡೆದ ಇತ್ತೀಚಿನ (06 ತಿಂಗಳೊಳಗಿನ) ನಡತೆ ಪ್ರಮಾಣ ಪತ್ರ ಹಾಗೂ ಅಭ್ಯರ್ಥಿಯು ಅಂತಿಮವಾಗಿ ವ್ಯಾಸಂಗ ಮಾಡಿದ ಒಂದು ಶಿಕ್ಷಣ ಸಂಸ್ಥೆಯ ನಡತೆ ಪ್ರಮಾಣ ಪತ್ರ

(ಉ) 1 ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ/ಗ್ರಾಮಾಂತರ ಪ್ರದೇಶಗಳಲ್ಲಿ ವ್ಯಾಸಂಗ ಮಾಡಿದ್ದಕ್ಕಾಗಿ ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳಿಂದ ಪಡೆದ ದೃಡೀಕರಣ ಪತ್ರ.

(ಊ) ಮಾಜಿ ಸೈನಿಕರು ಮತ್ತು ಕಲ್ಯಾಣ-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿನ ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸುವವರು ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದ ದೃಡೀಕರಣ ಪತ್ರ. (ಋು) ಅಂಗವಿಕಲ ಮೀಸಲಾತಿಯಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ವೈದ್ಯಕೀಯ ಪರಿವೀಕ್ಷಕರು ನೀಡುವ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.

12. DAiÉÄÌ "zsÁ£À: ವಾಹನ ಚಾಲಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ (R.T.O) ಅವರಿಂದ ವಾಹನ ಚಾಲನಾ ಪರೀಕ್ಷೆಯನ್ನು ನಡೆಸಿ, ಅದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು ಹಾಗೂ "ಡಿ" ಗುಂಪು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 2975 ಅಭ್ಯರ್ಥಿಗಳ ಅಂತಿಮ ಆಯ್ಕೆಯು ನೇಮಕಾತಿ ಪ್ರಾಧಿಕಾರದ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ.

13. ಆಯ್ಕೆಯಾಗಲಿರುವ ಅಭ್ಯರ್ಥಿಯ ನೇಮಕಾತಿಯು ಪೊಲೀಸ್ ಪರಿಶೀಲನೆ ದೃಡೀಕರಣ, ಸಿಂಧುತ್ವ(ಜಾತಿ) ಪ್ರಮಾಣ ಪತ್ರ, ಕಲ್ಯಾಣ-ಕರ್ನಾಟಕ ಪ್ರದೇಶದ ಪ್ರಮಾಣ ಪತ್ರದ ಸಿಂಧುತ್ವ ಮತ್ತು ವಿದ್ಯಾರ್ಹತೆಗೆ ಸಂಬಂಧಿಸಿದ ಅಂಕಪಟ್ಟಿಗಳ ನೈಜತೆಗೆ ಒಳಪಟ್ಟಿರುತ್ತದೆ.

14. ದುರ್ನಡತೆ:-

ಒಬ್ಬ ಅಭ್ಯರ್ಥಿಯು ನಕಲಿ ವ್ಯಕ್ತಿಯಾಗಿರುವನೆಂದು ಅಥವಾ ಖೋಟಾ ದಸ್ತಾವೇಜು ಅಥವಾ ತಿದ್ದಲಾದ ದಸ್ತಾವೇಜುಗಳನ್ನು ಸಲ್ಲಿಸಿರುವನೆಂದು ಅಥವಾ ತಪ್ಪು ಅಥವಾ ಸುಳ್ಳು ಹೇಳಿಕೆ ನೀಡಿರುವನೆಂದು ಅಥವಾ ವಾಸ್ತವಿಕ ಮಾಹಿತಿಯನ್ನು ಮರೆಮಾಚಿರುವನೆಂದು ಅಥವಾ ನೇಮಕಾತಿಯ ಸಂಬಂಧದಲ್ಲಿ ಯಾವುದೇ ಇತರೆ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅವಲಂಬಿಸಿರುವನೆಂದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಯು ಸ್ವತ: ಕ್ರ್ರಿಮಿನಲ್ ವ್ಯವಹರಣೆಗಳಿಗೆ ಮತ್ತು ಶಿಸ್ತು ಕ್ರಮಕ್ಕೆ ಒಳಪಡುವುದಲ್ಲದೆ; ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು.

ಸೂಚನೆ:

1. ಅಭ್ಯರ್ಥಿಗಳು ಯಾವುದೇ ಮೂಲ ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದಲ್ಲ. 2. ಅರ್ಜಿಗಳ ಮೇಲೆ ಹುದ್ದೆಯ ಹೆಸರನ್ನು ಹಾಗೂ ಅರ್ಜಿದಾರರ ಹೆಸರು ಮತ್ತು ಅಂಚೆ ವಿಳಾಸವನ್ನು ದಪ್ಪ ಅಕ್ಷರಗಳಲ್ಲಿ ನಮೂದಿಸತಕ್ಕದ್ದು.

3. ಅಭ್ಯರ್ಥಿಗಳು ಲಕೋಟೆ ಹಾಗೂ ಅರ್ಜಿಯ ಮೇಲೆ ಅಧಿಸೂಚನೆ ರೀತ್ಯಾ ಯಾವ ಮೀಸಲಾತಿಯಡಿ ಅರ್ಜಿ ಸಲ್ಲಿಸಲಾಗುತ್ತಿದೆಯೋ ಆ ಮೀಸಲಾತಿ ವರ್ಗೀಕರಣವನ್ನು ಸ್ಪಷ್ಟವಾಗಿ ಮತ್ತು ದಪ್ಪ ಅಕ್ಷರಗಳಲ್ಲಿ ನಮೂದಿಸತಕ್ಕದ್ದು.

4. ಅರ್ಜಿಯನ್ನು ಸಲ್ಲಿಸಲು ನೀಡಿರುವ ಕಾಲಾವಧಿಯು ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಸೇರಿದಂತೆ ಎಲ್ಲಾ ಅಭ್ಯರ್ಥಿಗಳಿಗೂ ಅನ್ವಯವಾಗುವುದು.

5. ಅಗತ್ಯ ಪ್ರಮಾಣ ಪತ್ರಗಳನ್ನು ಲಗತ್ತಿಸದೆ ಇರುವ ಹಾಗೂ ಲೋಪ/ಅಪೂರ್ಣ ಅರ್ಜಿಗಳನ್ನು ಹಾಗೂ ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

6. ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ ನಂತರ ಯಾವುದೇ ಪತ್ರ ವ್ಯವಹಾರಗಳಿಗೆ ಅವಕಾಶವಿರುವುದಿಲ್ಲ. 7. ಅರ್ಜಿದಾರರು, ಮೇಲ್ಕಂಡ ಹುದ್ದೆಗಳ ಅರ್ಹ ಅಭ್ಯರ್ಥಿ ಹಾಗೂ ತಿರಸ್ಕøತ ಅರ್ಜಿಗಳ ವಿವರವನ್ನು ಹಾಗೂ ಅರ್ಹ ಅಭ್ಯರ್ಥಿಗಳ ವಾಹನ ಚಾಲನಾ ಪರೀಕ್ಷೆ ಮತ್ತು ಸಂದರ್ಶನ ದಿನಾಂಕ ಮತ್ತು ಸಮಯವನ್ನು ಕರ್ನಾಟಕ ವಿಧಾನ ಪರಿಷತ್ತಿನ ವೆಬ್ ಸೈಟ್ ವಿಳಾಸ: https://www.kla.kar.nic.in/council/Career.htm ನಲ್ಲಿ ಪ್ರಕಟಿಸಲಾಗುವುದು ಈ ಕುರಿತು ಪ್ರತ್ಯೇಕವಾಗಿ ಯಾವುದೇ ಪತ್ರವನ್ನು ಕಳುಹಿಸುವುದಿಲ್ಲ.

8. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:080-22258569.

ಮಾನ್ಯ ಸಭಾಪತಿಯವರ ಆದೇಶಾನುಸಾರ, (ಕೆ.ಆರ್. ಮಹಾಲಕ್ಷ್ಮಿ) ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತು.

ಮುದ(cid:206)ಕರು (cid:178)ಾಗೂ ಪ(cid:206)(cid:144)ಾಶಕರು:- ಸಂಕಲ(cid:163)ಾ(cid:297)(cid:144)ಾ(cid:312)ಗಳ(cid:133), ಕ(cid:163)ಾ(cid:143)ಟಕ (cid:170)ಾಜ(cid:205)ಪತ(cid:206), ಸ(cid:144)ಾ(cid:143)(cid:312) (cid:144)ೇಂದ(cid:206) ಮುದ(cid:206)(cid:158)ಾಲಯ, (cid:166)ೆಂಗಳ(cid:136)ರು

Cite this issue. Karnataka ExtraOrdinary Gazette, Government of Karnataka, 04 March 2024. Indian Gazettes, https://egazette.servantsofknowledge.in/details/in.gazette.karnataka_eo.2024-03-04.150/. Archive identifier in.gazette.karnataka_eo.2024-03-04.150.