(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ
30 2024 ಪ 08 1946)
¨sÁUÀ – 1 Part – I
BENGALURU, FRIDAY, 30, AUGUST, 2024(BHADRAPADA, 08, SHAKAVARSHA, 1946)
. 420 No. 420 ವಾಣಿಜ್ಯ ತೆರಿಗೆಗಳ ಆಯುಕ್ತರು (ಕರ್ನಾಟಕ), ಬೆಂಗಳೂರು ಇವರ ನಡಾವಳಿಗಳು
ವಿಷಯ: ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರ ಕಛೇರಿಯಲ್ಲಿರುವ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಸೇವೆಗಳ ವಿಶ್ಲೇಷಣಾ ವಿಭಾಗ) ಮತ್ತು (ಲೆಕ್ಕಪರಿಶೋಧನೆ, ಗುಪ್ತವಾರ್ತೆ ಮತ್ತು ಸಮನ್ವಯ) ಈ ಹುದ್ದೆಗಳ ಮರುಪದನಾಮೀಕರಣ ಮಾಡುವ ಬಗ್ಗೆ.
ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಆಇ 106 ವಾತೆಇ 2018, ಬೆಂಗಳೂರು ದಿನಾಂಕ: 26.10.2018.
2. ಸರ್ಕಾರದ ಆದೇಶ ಸಂಖ್ಯೆ: ಆಇ 121 ವಾತೆಸಿ 94, ಬೆಂಗಳೂರು ದಿನಾಂಕ: 04.02.1995
ಪ ್ರಸ್ತಾವನೆ:
ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಲೆಕ್ಕ ಪರಿಶೋಧನೆ, ಗುಪ್ತವಾರ್ತೆ ಮತ್ತು ಸಮನ್ವಯ) ಈ ಹುದ್ದೆಯ ವ್ಯಾಪ್ತಿಯಲ್ಲಿ ಲೆಕ್ಕಪರಿಶೋಧನೆ, ಜಾರಿ ಹಾಗೂ ಜಾಗೃತಿ ವಿಭಾಗಗಳಿಗೆ ಸಂಬಂಧಿಸಿದಂತೆ, ಸಮನ್ವಯ ಹಾಗೂ ಮೇಲ್ವಿಚಾರಣೆ ಕಾರ್ಯವನ್ನು ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಲೆಕ್ಕ ಪರಿಶೋಧನೆ, ಗುಪ್ತವಾರ್ತೆ ಮತ್ತು ಸಮನ್ವಯ) ಇವರು ನಿರ್ವಹಿಸುತ್ತಿದ್ದರು. ಪ್ರಸ್ತುತ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017ರಡಿಯಲ್ಲಿ ರಾಜ್ಯದ ಆಡಳಿತ ಹಾಗೂ ಜಾರಿ ವಿಭಾಗಗಳು, ಕೇಂದ್ರೀಯ ತೆರಿಗೆ ಇಲಾಖೆ ಹಾಗೂ ಹೊರ ರಾಜ್ಯದ ಇತರೆ ಇಲಾಖೆಗಳೊಂದಿಗೆ ಸಮನ್ವಯವನ್ನು ಮಾಡಲಾಗುತ್ತಿತ್ತು. ಸರಕು ಮತ್ತು ಸೇವಾ ತೆರಿಗೆ ಕಾಯ್ದೆಗಳಡಿಯಲ್ಲಿ ಅಂತರರಾಜ್ಯಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಅವುಗಳನ್ನು ವಿಶ್ಲೇಷಣೆ ಮಾಡಿ ಈ ಮಾಹಿತಿಯನ್ನು ರಾಜ್ಯದ ಆಡಳಿತ, ಜಾರಿ ಹಾಗೂ ಜಾಗೃತಿ ವಿಭಾಗಗಳಿಗೆ ಹಂಚಿಕೆ ಮಾಡಿ ಅವುಗಳ ಮೇಲ್ವಿಚಾರಣೆಯನ್ನು ಸಹ ಕೈಗೊಳ್ಳಲಾಗುತ್ತಿತ್ತು.
ಈ ಕೆಲಸಗಳ ಜೊತೆಯಲ್ಲಿ ರಾಜ್ಯದ ಎಲ್ಲಾ ವಿಭಾಗಗಳ ಲೆಕ್ಕಪರಿಶೋಧನೆಯ ಅಧಿಕಾರಿಗಳಿಗೆ ಲೆಕ್ಕಪರಿಶೀಲನೆ, ಲೆಕ್ಕಪರಿಶೋಧನೆ ಹಾಗೂ ನ್ಯಾಯನಿರ್ಣಯಗಳಿಗೆ ವಿವಿಧ ಪ್ರಕರಣಗಳಲ್ಲಿ ಕಾರ್ಯ ನಿಯೋಜನೆಯನ್ನು ನೀಡುವುದು, ವಸ್ತುನಿಷ್ಟ ಲೆಕ್ಕಪರಿಶೋಧನೆ, ಲೆಕ್ಕಪರಿಶೋಧನಾ ಮೇಲ್ವಿಚಾರಣಾ ಸಮಿತಿ, ರಾಜ್ಯ ಮತ್ತು ಅಂತರರಾಜ್ಯಗಳಿಂದ ಬರುವ ಶಾಸನ ಬದ್ಧ ನಮೂನೆಗಳ ಅಡ್ಡ ಪರಿಶೀಲನೆ ಹಾಗೂ ಇದಕ್ಕೆ ಸಂಬಂಧಿಸಿದ ಮಾಹತಿಗಳ ಕೃಡೀಕರಣಗಳನ್ನು ಮಾಡಲಾಗುತ್ತಿದ್ದು. ಈ ಕಾರ್ಯಗಳ ಜೊತೆಯಲ್ಲಿ ಅಖಿಲ ಭಾರತ ಸಮನ್ವಯ ವಸ್ತುನಿಷ್ಟ ಸಮಿತಿಯ ನಿರ್ವಹಣೆ, ರಾಜ್ಯ ಹಾಗೂ ಕೇಂದ್ರ ಸರಕು ಮತ್ತು ಸೇವಾ ತೆರಿಗೆಯ ಸಮನ್ವಯ ಸಮಿತಿಯ ನಿರ್ವಹಣೆಯನ್ನು ನಿರ್ವಹಿಸಲಾಗುತ್ತಿತ್ತು.
ಜಾರಿ ಮತ್ತು ಜಾಗೃತಿ ಹಾಗೂ ಲೆಕ್ಕಪರಿಶೋಧನೆಯ ಕಾರ್ಯಗಳ ಮೇಲ್ವಿಚಾರಣೆಯ ಕಾರ್ಯವನ್ನು ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಲೆಕ್ಕ ಪರಿಶೋಧನೆ, ಗುಪ್ತವಾರ್ತೆ ಮತ್ತು ಸಮನ್ವಯ) ಏಕಕಾಲದಲ್ಲಿ ಇವರ ಕಾರ್ಯ ವ್ಯಾಪ್ತಿಯಲ್ಲಿ ಮಾಡಲಾಗುತ್ತಿದ್ದು, ರಾಜ್ಯದ ತೆರಿಗೆ ಸಂಗ್ರಹಿಸುವ ಹಿನ್ನೆಲೆ ಹಾಗೂ ತ್ವರಿತವಾಗಿ ವಿಲೇವಾರಿಯಾಗ ಬೇಕಾದ ಕಡತಗಳು, ನಿರ್ವಹಣೆಯ (1)2 ಹಾಗೂ ಆಡಳಿತಾತ್ಮಕ ದೃಷ್ಠಿಯಿಂದ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಲೆಕ್ಕ ಪರಿಶೋಧನೆ, ಗುಪ್ತವಾರ್ತೆ ಮತ್ತು ಸಮನ್ವಯ) ಇವರ ಕಛೇರಿಗೆ ಹಂಚಿಕೆ ಮಾಡಿದ ಕಾರ್ಯವ್ಯಾಪ್ತಿಯನ್ನು ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಸೇವೆಗಳ ವಿಶ್ಲೇಷಣಾ ವಿಭಾಗ), ಇವರಿಗೆ ವರ್ಗಾವಣೆ ಮಾಡಿ ಮರುಪದನಾಮೀಕರಣಗೊಳಿಸುವ ಉದ್ದೇಶದಿಂದ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಸೇವೆಗಳ ವಿಶ್ಲೇಷಣಾ ವಿಭಾಗ) (Services Analysis Wing), ಈ ಹುದ್ದೆಯನ್ನು ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಸೇವೆಗಳ ವಿಶ್ಲೇಷಣೆ ಮತ್ತು ಗುಪ್ತವಾರ್ತೆ) (Services Analysis & Intelligence), ಎಂದು ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಲೆಕ್ಕ ಪರಿಶೋಧ ನೆ, ಗುಪ್ತವಾರ್ತೆ ಮತ್ತು ಸಮನ್ವಯ) (Audit, Intelligence & Co-ordination) ಈ ಹುದ್ದೆಯನ್ನು ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಲೆಕ್ಕಪರಿಶೋಧ ನೆ) (Audit), ಎಂದು ಮರು ಪದನಾಮೀಕರಣಗೊಳಿಸಲು ಹಾಗೂ ಈ ಕಛೇರಿಯಲ್ಲಿರುವ ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು ಹಾಗೂ ವಾಣಿಜ್ಯ ತೆರಿಗೆ ಅಧಿಕಾರಿ ವೃಂದದ ಹುದ್ದೆಗಳ ಪದನಾಮಗಳನ್ನು ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರ ಹಾಗೂ ಆ ಶಾಖೆಯ ಪದನಾಮಕ್ಕೆ ಪೂರಕವಾಗಿ ಆಡಳಿತಾತ್ಮಕ ದೃಷ್ಠಿಯಿಂದ ಅಗತ್ಯವಾಗಿದ್ದು, ಮರುಪದನಾಮೀಕರಣ ಹಾಗೂ ಕರ್ತವ್ಯ ಹಂಚಿಕೆಯ ಕಾರ್ಯ ಸೂಚಿಯನ್ನು ನೀಡಲು ಪ್ರಸ್ತಾಪಿಸಲಾಗಿದೆ.
ಉಲ್ಲೇಖ (1) ರ ಸರ್ಕಾರದ ಆದೇಶದಂತೆ ಒಂದೇ ಕೇಂದ್ರಸ್ಥಾನದಲ್ಲಿರುವ ವಿವಿಧ ವೃಂದದ ಹುದ್ದೆಗಳನ್ನು ಅದೇ ಕೇಂದ್ರಸ್ಥಾನದಲ್ಲಿ ಸ್ಥಳಾಂತರಿಸುವ ಅಥವಾ ಮರುನಾಮಕರಣಗೊಳಿಸುವ ಅಧಿಕಾರವನ್ನು ಸರ್ಕಾರವು ವಾಣಿಜ್ಯ ತೆರಿಗಗಳ ಆಯುಕ್ತರಿಗೆ ಪ್ರತ್ಯಾಯೋಜಿಸಿರುವುದರಿಂದ, ಮೇಲೆ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಕಛೇರಿಯ ಹುದ್ದೆಗಳ ಪದನಾಮಗಳನ್ನು ಮರುನಾಮೀಕರಣಗೊಳಿಸಿ ಪ್ರತ್ಯೇಕವಾಗಿ ಕಛೇರಿ ಕಾರ್ಯದ ಹಂಚಿಕೆಯ ವಿವರಗಳನ್ನು ಜಾರಿ ಮಾಡಲು ಆದೇಶ ಹೊರಡಿಸಲಾಗಿದೆ.
ಆದೇಶ ಸಂಖ್ಯೆ: ಸಿಬ್ಬಂದಿ-3/3ಎಫ್/ಸಿಆರ್-1/2024-25, ದಿನಾಂಕ: 30.08.2024
ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲಯಲ್ಲಿ, ಸಿ.ಶಿಖಾ, ಭಾ.ಆ.ಸೇ., ವಾಣಿಜ್ಯ ತೆರಿಗೆಗಳ ಆಯುಕ್ತರು (ಕರ್ನಾಟಕ), ಬೆಂಗಳೂರು ಆದ ನಾನು ಉಲ್ಲೇಖದ ಸರ್ಕಾರದ ಆದೇಶದಲ್ಲಿ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಈ ಆದೇಶದ ಅನುಬಂಧದಲ್ಲಿ ಕಾಣಿಸಿರುವ ಕೋಷ್ಠಕದ ಅಂಕಣ (3) ರಲ್ಲಿನ ಹುದ್ದೆಗಳ ಪದನಾಮಗಳನ್ನು ಅದೇ ಕೋಷ್ಠಕದ ಅಂಕಣ (4) ರಂತೆ ಮರುಪದನಾಮೀಕರಣಗೊಳಿಸಿ ಆದೇಶಿಸಿರುತ್ತೇನೆ. ಈ ರೀತಿ ಮರುನಾಮಕರಣಗೊಳಿಸಿದ ಹುದ್ದೆಗಳ ಹೊಸ ಪದನಾಮಗಳನ್ನು ಆಂಗ್ಲ ಭಾಷೆಯಲ್ಲಿ ಅಂಕಣ (5) ರಂತೆ ತೋರಿಸಲಾಗಿದೆ. ಸದರಿ ಹುದ್ದೆಗಳು ಈ ಹಿಂದಿನಂತೆ ವಾಣಿಜ್ಯ ತೆರಿಗೆಗಳ ಆಯುಕ್ತರ ಕಛೇರಿಯಲ್ಲಿಯೇ ಮುಂದುವರೆಯಲಿದ್ದು, ವಾಣಿಜ್ಯ ತೆರಿಗೆಗಳ ಆಯುಕ್ತರು ವೇತನ ಬಟವಾಡೆ ಅಧಿಕಾರಿಯಾಗಿ ಹಾಗೂ ನಿಯಂತ್ರಣಾಧಿಕಾರಿಯಾಗಿ ಮುಂದುವರೆಯುತ್ತಾರೆ.
ಈ ಆದೇಶವು ತಕ್ಷಣದಿಂದ ಜಾರಿಗೆ ಬಂದಿದ್ದು, ಮುಂದಿನ ಆದೇಶದವರೆಗೆ ಚಾಲ್ತಿಯಲ್ಲಿರುತ್ತದೆ.
(ಸಿ. ಶಿಖಾ)
ವಾಣಿಜ್ಯ ತೆರಿಗೆಗಳ ಆಯುಕ್ತರು
(ಕರ್ನಾಟಕ), ಬೆಂಗಳೂರು3
| ಅನುಬಂಧ | ||||
| ವಾಣಿಜ್ಯ ತೆರಿಗೆಗಳ ಆಯುಕ್ತರು , ಕರ್ನಾಟಕ, ಬೆಂಗಳೂರು ಈ ಕಛೇರಿಯಲ್ಲಿರುವ ವೃಂದದ ಹುದ್ದೆಗಳ ಮರುಪದನಾಮೀಕರಣ | ||||
| ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರ ವೃಂದ | ||||
| ಕ ್ರ.ಸಂ. | ಕ ಛೇರಿ | ವ ುಂಜೂರಾಗಿರುವ ಹುದ್ದೆಯ ಪ ್ರಸ್ತುತ ಪದನಾಮ | ವ ುರುಪದನಾಮೀಕರಣದ ನಂತರ ಹುದ್ದೆಯ ಪದನಾಮ | ಆಂಗ್ಲ ಭಾಷೆಯಲ್ಲಿ ವ ುರುಪದನಾಮೀಕರಣ ನಂತರ ಪ ದನಾಮ |
| 1 | 2 | 3 | 4 | 5 |
| 1 | ವಾಣಿಜ್ಯ ತೆರಿಗೆಗಳ ಆಯುಕ್ತರು, ಕರ್ನಾಟಕ, ಬ ಂಗಳೂರು ೆ | ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಸೇವೆಗಳ ವಿಶ್ಲೇಷಣಾ ವಿಭಾಗ) | ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಸೇವೆಗಳ ವಿಶ್ಲೇಷಣೆ ಮತ್ತು ಗ ುಪ್ತವಾರ್ತೆ) | Additional Commissioner of Commercial Taxes (Services Analysis & Intelligence), Bengaluru. |
| 2 | ವಾಣಿಜ್ಯ ತೆರಿಗೆಗಳ ಆಯುಕ್ತರು, ಕರ್ನಾಟಕ, ಬ ಂಗಳೂರು ೆ | ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಲೆಕ್ಕ ಪರಿಶೋಧನೆ, ಗ ುಪ್ತವಾರ್ತೆ ಮತ್ತು ಸಮನ್ವಯ) | ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಲೆಕ್ಕಪರಿಶೋಧನೆ) | Additional Commissioner of Commercial Taxes (Audit), Bengaluru. |
| ವಾಣಿಜ್ಯ ತೆರಿಗೆಗಳ ಉಪ ಆಯುಕ್ತರ ವೃಂದ | ||||
| 1 | 2 | 3 | 4 | 5 |
| 1 | ವಾಣಿಜ್ಯ ತೆರಿಗೆಗಳ ಆಯುಕ್ತರು, ಕರ್ನಾಟಕ, ಬ ಂಗಳೂರು ೆ | ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು (ಸೇವೆಗಳ ವಿಶ್ಲೇಷಣಾ ವಿಭಾಗ-1) | ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು (ಸೇವೆಗಳ ವಿಶ್ಲೇಷಣೆ ಮತ್ತು ಗ ುಪ್ತವಾರ್ತೆ-1) | Deputy Commissioner of Commercial Taxes (Services Analysis & Intelligence-1), Bengaluru. |
| 2 | ವಾಣಿಜ್ಯ ತೆರಿಗೆಗಳ ಆಯುಕ್ತರು, ಕರ್ನಾಟಕ, ಬ ಂಗಳೂರು ೆ | ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು (ಸೇವೆಗಳ ವಿಶ್ಲೇಷಣಾ ವಿಭಾಗ-2) | ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು (ಸೇವೆಗಳ ವಿಶ್ಲೇಷಣೆ ಮತ್ತು ಗ ುಪ್ತವಾರ್ತೆ-2) | Deputy Commissioner of Commercial Taxes (Services Analysis & Intelligence-2), Bengaluru. |
| 3 | ವಾಣಿಜ್ಯ ತೆರಿಗೆಗಳ ಆಯುಕ್ತರು, ಕರ್ನಾಟಕ, ಬ ಂಗಳೂರು ೆ | ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು (ಲೆಕ್ಕ ಪರಿಶೋಧನೆ, ಗ ುಪ್ತವಾರ್ತೆ ಮತ್ತು ಸಮನ್ವಯ) | ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು (ಲೆಕ್ಕಪರಿಶೋಧನೆ) | Deputy Commissioner of Commercial Taxes (Audit), Bengaluru. |
| ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರ ವೃಂದ | ||||
| 1 | 2 | 3 | 4 | 5 |
| 1 | ವಾಣಿಜ್ಯ ತೆರಿಗೆಗಳ ಆಯುಕ್ತರು, ಕರ್ನಾಟಕ, ಬ ಂಗಳೂರು ೆ | ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಸೇವೆಗಳ ವಿಶ್ಲೇಷಣಾ ವಿಭಾಗ-1) | ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಸೇವೆಗಳ ವಿಶ್ಲೇಷಣೆ ವ ುತ್ತು ಗುಪ್ತವಾರ್ತೆ-1) | Assisstant Commissioner of Commercial Taxes (Services Analysis & Intelligence-1), Bengaluru. |
| 2 | ವಾಣಿಜ್ಯ ತೆರಿಗೆಗಳ ಆಯುಕ್ತರು, ಕರ್ನಾಟಕ, ಬ ಂಗಳೂರು ೆ | ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಸೇವೆಗಳ ವಿಶ್ಲೇಷಣಾ ವಿಭಾಗ-2) | ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಸೇವೆಗಳ ವಿಶ್ಲೇಷಣೆ ವ ುತ್ತು ಗುಪ್ತವಾರ್ತೆ-2) | Assisstant Commissioner of Commercial Taxes (Services Analysis & Intelligence-2), Bengaluru. |
| 3 | ವಾಣಿಜ್ಯ ತೆರಿಗೆಗಳ ಆಯುಕ್ತರು, ಕರ್ನಾಟಕ, ಬ ಂಗಳೂರು ೆ | ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಸೇವೆಗಳ ವಿಶ್ಲೇಷಣಾ ವಿಭಾಗ-3) | ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಸೇವೆಗಳ ವಿಶ್ಲೇಷಣೆ ವ ುತ್ತು ಗುಪ್ತವಾರ್ತೆ-3) | Assisstant Commissioner of Commercial Taxes (Services Analysis & Intelligence-3), Bengaluru. |
| 4 | ವಾಣಿಜ್ಯ ತೆರಿಗೆಗಳ ಆಯುಕ್ತರು, ಕರ್ನಾಟಕ, ಬ ಂಗಳೂರು ೆ | ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಸೇವೆಗಳ ವಿಶ್ಲೇಷಣಾ ವಿಭಾಗ-4) | ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು (ಸೇವೆಗಳ ವಿಶ್ಲೇಷಣೆ ಮತ್ತು ಗ ುಪ್ತವಾರ್ತೆ-4) | Assisstant Commissioner of Commercial Taxes (Services Analysis & Intelligence-4), Bengaluru. |
| 5 | ವಾಣಿಜ್ಯ ತೆರಿಗೆಗಳ ಆಯುಕ್ತರು, ಕರ್ನಾಟಕ, ಬ ಂಗಳೂರು ೆ | ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಲೆಕ್ಕ ಪರಿಶೋಧನೆ, ಗ ುಪ್ತವಾರ್ತೆ ಮತ್ತು ಸಮನ್ವಯ) | ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಲೆಕ್ಕಪರಿಶೋಧನೆ) | Assisstant Commissioner of Commercial Taxes (Audit), Bengaluru. |
R.N.I. No. KARBIL/2001/47147 POSTAL REGN. No. RNP/KA/BGS/2202/2017-19Licensed to post without prepayment WPP No. 297 6
| ವಾಣಿಜ್ಯ ತೆರಿಗೆ ಅಧಿಕಾರಿ ವೃಂದ | ||||
| 1 | 2 | 3 | 4 | 5 |
| 1 | ವಾಣಿಜ್ಯ ತೆರಿಗೆಗಳ ಆಯುಕ್ತರು, ಕರ್ನಾಟಕ, ಬ ಂಗಳೂರು ೆ | ವಾಣಿಜ್ಯ ತೆರಿಗೆ ಅಧಿಕಾರಿ ಆಯುಕ್ತರು (ಸೇವೆಗಳ ವಿಶ್ಲೇಷಣಾ ವಿಭಾಗ-1) | ವಾಣಿಜ್ಯ ತೆರಿಗೆ ಅಧಿಕಾರಿ (ಸೇವೆಗಳ ವಿಶ್ಲೇಷಣೆ ಮತ್ತು ಗುಪ್ತವಾರ್ತೆ-1) | Commercial Tax Officer (Services Analysis & Intelligence-1), Bengaluru. |
| 2 | ವಾಣಿಜ್ಯ ತೆರಿಗೆಗಳ ಆಯುಕ್ತರು, ಕರ್ನಾಟಕ, ಬ ಂಗಳೂರು ೆ | ವಾಣಿಜ್ಯ ತೆರಿಗೆ ಅಧಿಕಾರಿ ಆಯುಕ್ತರು (ಸೇವೆಗಳ ವಿಶ್ಲೇಷಣಾ ವಿಭಾಗ-2) | ವಾಣಿಜ್ಯ ತೆರಿಗೆ ಅಧಿಕಾರಿ (ಸೇವೆಗಳ ವಿಶ್ಲೇಷಣೆ ಮತ್ತು ಗ ುಪ್ತವಾರ್ತೆ-2) | Commercial Tax Officer (Services Analysis & Intelligence-2), Bengaluru. |
| 3 | ವಾಣಿಜ್ಯ ತೆರಿಗೆಗಳ ಆಯುಕ್ತರು, ಕರ್ನಾಟಕ, ಬ ಂಗಳೂರು ೆ | ವಾಣಿಜ್ಯ ತೆರಿಗೆ ಅಧಿಕಾರಿ ಆಯುಕ್ತರು (ಲೆಕ್ಕ ಪರಿಶೋಧನೆ, ಗ ುಪ್ತವಾರ್ತೆ ಮತ್ತು ಸಮನ್ವಯ-1) | ವಾಣಿಜ್ಯ ತೆರಿಗೆ ಅಧಿಕಾರಿ (ಲೆಕ್ಕಪರಿಶೋಧನೆ-1) | Commercial Tax Officer (Audit-1), Bengaluru. |
| 4 | ವಾಣಿಜ್ಯ ತೆರಿಗೆಗಳ ಆಯುಕ್ತರು, ಕರ್ನಾಟಕ, ಬ ಂಗಳೂರು ೆ | ವಾಣಿಜ್ಯ ತೆರಿಗೆ ಅಧಿಕಾರಿ ಆಯುಕ್ತರು (ಲೆಕ್ಕ ಪರಿಶೋಧನೆ, ಗ ುಪ್ತವಾರ್ತೆ ಮತ್ತು ಸಮನ್ವಯ-2) | ವಾಣಿಜ್ಯ ತೆರಿಗೆ ಅಧಿಕಾರಿ (ಲೆಕ್ಕಪರಿಶೋಧನೆ-2) | Commercial Tax Officer (Audit-2), Bengaluru. |
(ಸಿ. ಶಿಖಾ) ವಾಣಿಜ್ಯ ತೆರಿಗೆಗಳ ಆಯುಕ್ತರು (ಕರ್ನಾಟಕ), ಬೆಂಗಳೂರು ಮುದ(cid:206)ಕರು (cid:178)ಾಗೂ ಪ(cid:206)(cid:144)ಾಶಕರು:- ಸಂಕಲ(cid:163)ಾ(cid:297)(cid:144)ಾ(cid:312)ಗಳ(cid:133), ಕ(cid:163)ಾ(cid:143)ಟಕ (cid:170)ಾಜ(cid:205)ಪತ(cid:206), ಸ(cid:144)ಾ(cid:143)(cid:312) (cid:144)ೇಂದ(cid:206) ಮುದ(cid:206)(cid:158)ಾಲಯ, (cid:166)ೆಂಗಳ(cid:136)ರು