Servants of Knowledge
Karnataka ExtraOrdinary Gazette · Government of Karnataka

Bangalore Urban Dist, Bangalore South Taluk formation of New Grama panchayat

Published 06 November 2024

Ministry
Revenue Department
Department
Revenue Department
Office
OFFICE OF THE DEPUTY COMMISSIONER, BENGALURU URBAN
Type
Extra Ordinary
Part
Part III
Reference
531
Identifier
in.gazette.karnataka_eo.2024-11-06.531
Languages
English, Kannada
Published at
Original source ↗

click here for IIIF manifest

(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ

06 2024 15 1946)

¨sÁUÀ – 3 Part – III

BENGALURU, WEDNESDAY, 06, NOVEMBER, 2024(KARTHIKA, 15, SHAKAVARSHA, 1946)

. 531 No. 531

ಕರ್ನಾಟಕ ಸರ್ಕಾರ

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ

ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು

ಸ ಂಖ್ಯೆ: ಚುನಾ / ಗ್ರಾ.ಪಂ/ ಸಿ.ಆರ್/ 07// 2023-24 ದಿನಾಂಕ: 30.10.2024

ಪ ್ರಥಮ ಅಧಿಸೂಚನೆ

(ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ

್ರಕರಣ 4ರಡಿ)

ವಿಷಯ : ಬೆಂಗಳೂರು ನಗರ ಜಿಲ್ಲೆಯ, ಬೆಂಗಳೂರು ದಕ್ಷಿಣ ತಾಲ್ಲೂಕಿನ ದೊಡ್ಡತೋಗೂರು ಗ್ರಾಮ ಪಂಚಾಯಿತಿಯು ಭಾಗಶ: ಪರಿವರ್ತನೆಯಾಗಿರುವುದರಿಂದ ಉಳಿದ 03 ಕಂದಾಯ ಗ್ರಾಮಗಳನ್ನು ಸೇರಿಸಿ ಹೊಸ ಗ್ರಾಮ ಪಂಚಾಯಿತಿಯನ್ನಾಗಿ ರಚಿಸುವ ಕುರಿತು. ಉಲ್ಲೇಖ : 1. ಸರ್ಕಾರದ ಅಧಿಸೂಚನೆ ಸಂಖ್ಯೆ: ನಇಇ 64 ಕೆಎಂಆರ್ 2017, ಬೆಂಗಳೂರು, ದಿನಾಂಕ:

26.03.2018.

2. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, ಬೆಂಗಳೂರು ರವರ ಪತ್ರ ಸಂಖ್ಯೆ.RDPR/548/GPA/2023, ದಿನಾಂಕ : 29.08.2024.

3. ತಹಶೀಲ್ದಾರ್, ಬೆಂಗಳೂರು ದಕ್ಷಿಣ ತಾಲ್ಲೂಕು ರವರ ಪತ್ರ ಸಂ.ಚುನಾ/ಗ್ರಾಪಂ/ ಸಿ.ಆರ್-1/2024-25 ದಿನಾಂಕ 30.09.2024

4. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್, ಬೆಂಗಳೂರು ರವರ ಪತ್ರ ಸಂಖ್ಯೆ.ಆಡಳಿತ(1)/ಸಿ.ಆರ್/25/2023-24 ದಿನಾಂಕ 28.10.2024

******

ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ದೊಡ್ಡತೋಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶದೊಂದಿಗೆ ಬೆಟ್ಟದಾಸನಪುರ ಗ್ರಾಮ ಸೇರಿಸಿ ಕರ್ನಾಟಕ ಪುರಸಭೆಗಳ ಕಾಯ್ದೆ 1964ರ ಪ್ರಕರಣ (9)ರಂತೆ ದೊಡ್ಡತೋಗೂರು ಪಟ್ಟಣ ಪಂಚಾಯ್ತಿ ಪ್ರದೇಶವೆಂದು ಭಾಗಶ: ಮೇಲ್ದರ್ಜೆಗೇರಿಸಿ ಉಲ್ಲೇಖ (1)ರಂತೆ ಅಧಿಸೂಚನೆ ಹೊರಡಿಸಲಾಗಿದ್ದು, ಅದರಂತೆ, ದೊಡ್ಡತೋಗೂರು ಗ್ರಾಮ ಪಂಚಾಯಿತಿಯು ಭಾಗಶ: ಪರಿವರ್ತನೆಯಾಗಿರುವುದರಿಂದ(1) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 2 ಉಳಿದ 03 ಕಂದಾಯ ಗ್ರಾಮಗಳಾದ ವಿಟ್ಟಸಂದ್ರ, ಮೈಲಸಂದ್ರ ಮತ್ತು ಹೊಮ್ಮದೇವನಹಳ್ಳಿ ಗ್ರಾಮಗಳ ವಿವರ ಈ ಕೆಳಕಂಡತ್ತಿರುತ್ತದೆ

ಕ ್ರ. ಸಂ. ಗ್ರಾಮದ ಹೆಸರು ಸರ್ವೆ ನಂಬರ್‌ಗಳು
1 ಹೊಮ್ಮದೇವನಹಳ್ಳಿ ಪೂರ್ಣ ಕಂದಾಯ ಗ್ರಾಮ
2 ವಿಟ್ಟಸಂದ್ರ ಪೂರ್ಣ ಕಂದಾಯ ಗ್ರಾಮ
3 ಮೈಲಸಂದ್ರ ಪೂರ್ಣ ಕಂದಾಯ ಗ್ರಾಮ

ಉಲ್ಲೇಖ (1)ರ ಅಧಿಸೂಚನೆಯಿಂದ ದೊಡ್ಡತೋಗೂರು ಗ್ರಾಮ ಪಂಚಾಯಿತಿಯು ಭಾಗಶ: ಪರಿವರ್ತನೆಯಾಗಿರುವುದರಿಂದ ಉಳಿದ 03 ಕಂದಾಯ ಗ್ರಾಮಗಳಾದ ವಿಟ್ಟಸಂದ್ರ, ಮೈಲಸಂದ್ರ ಮತ್ತು ಹೊಮ್ಮದೇವನಹಳ್ಳಿ ಗ್ರಾಮಗಳನ್ನು ಹೊಸದಾಗಿ ಸೃಜಿಸಲು ಉಲ್ಲೇಖ (2)ರಂತೆ ಸರ್ಕಾರದ ಅನುಮತಿ ನೀಡಲಾಗಿದೆ. ಈ ಕುರಿತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ (4)ರಡಿ ನಿಯಮಾನುಸಾರ ಮುಂದಿನ ಕ್ರಮವಹಿಸಬೇಕಾಗಿರುತ್ತದೆ.

ಅದರಂತೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ

್ರಕರಣ (4)ರ ಮೇರೆಗೆ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ತಾಲ್ಲೂಕಿನ ಈ ಕೆಳಕಂಡ ಗ್ರಾಮಪಂಚಾಯತಿಯನ್ನು ಹೊಸದಾಗಿ ಸೃಜಿಸಲು ಉದ್ದೇಶಿಸಿದ್ದು, ಈ ಕೆಳಕಂಡ ಪಟ್ಟಿಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಬದಲಾವಣೆ/ ಸೇರ್ಪಡೆ/ ವರ್ಗಾವಣೆಯಾದ ್ರ ನಮೂದಿಸಲಾಗಿದೆ. ಸದರಿ ಪಟ್ಟಿಯಲ್ಲಿ ದಾಖಲಾಗದ/ ನಮೂದಾಗದ ಗ್ರಾಮ ಗ್ರಾಮಪಂಚಾಯತಿಗಳನ್ನು ಮಾತ ಪಂಚಾಯತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ತಾಲ್ಲೂಕಿನ ಹೆಸರು : ಬೆಂಗಳೂರು ದಕ್ಷಿಣ ತಾಲ್ಲೂಕು

ಕ ್ರ. ಸಂ. ಗ್ರಾಮ ಪಂಚಾಯಿತಿ ಹ ೆಸರು ಗ್ರಾಮದ ಹೆಸರು 2011ರ ಜನಸಂಖ್ಯೆ ಷರಾ
1 2 3 4 5
1. ಹೊಮ್ಮದೇವನಹಳ್ಳಿ ಹೊಮ್ಮದೇವನಹಳ್ಳಿ 4777 ಈ ಮೂರು ಗ್ರಾಮಗಳನ್ನು (ದಾಖಲೆ ಗ್ರಾಮಗಳಾದ ದಿಣ್ಣೆಪಾಳ್ಯ, ವಿಟ್ಟಸಂದ್ರ ಪಾಳ್ಯ, ಮತ್ತು ವಡ್ಡರಪಾಳ್ಯ ಒಳಗೊಂಡಂತೆ) ಸೇರಿಸಿ ಹೊಮ್ಮದೇವನಹಳ್ಳಿಯನ್ನು ಕೇಂದ ್ರ ಸ್ಥಾನವನ್ನಾಗಿರಿಸಿ ಹೊಸ ಗ್ರಾಮ ಪಂಚಾಯ್ತಿಯನ್ನಾಗಿ ಸೃಜಿಸಲು ಉದ್ದೇಶಿಸಲಾಗಿದೆ.
ವಿಟ್ಟಸಂದ್ರ 1184
ಮೈಲಸಂದ್ರ 3015
ಒಟ್ಟು 8976

ಸದರಿ ಸಲಹೆ ಮತ್ತು ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿದ ನಂತರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ (4)(2) ರಡಿ ಅಂತಿಮ ಅಧಿಸೂಚನೆಯನ್ನು ದಿನಾಂಕ 10.12.2024 ರಂದು ಪ್ರಕಟಿಸಲಾಗುವುದು.

(ಜಗದೀಶ.ಜಿ, ಭಾ.ಆ.ಸೇ.,) ಜಿಲ್ಲಾಧಿಕಾರಿ ಬೆಂಗಳೂರು ನಗರ ಜಿಲ್ಲೆ. ಮುದ(cid:206)ಕರು (cid:178)ಾಗೂ ಪ(cid:206)(cid:144)ಾಶಕರು:- ಸಂಕಲ(cid:163)ಾ(cid:297)(cid:144)ಾ(cid:312)ಗಳ(cid:133), ಕ(cid:163)ಾ(cid:143)ಟಕ (cid:170)ಾಜ(cid:205)ಪತ(cid:206), ಸ(cid:144)ಾ(cid:143)(cid:312) (cid:144)ೇಂದ(cid:206) ಮುದ(cid:206)(cid:158)ಾಲಯ, (cid:166)ೆಂಗಳ(cid:136)ರು
Cite this issue. Karnataka ExtraOrdinary Gazette, Government of Karnataka, 06 November 2024. Indian Gazettes, https://egazette.servantsofknowledge.in/details/in.gazette.karnataka_eo.2024-11-06.531/. Archive identifier in.gazette.karnataka_eo.2024-11-06.531.