(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ
20 2025 01 1946)
BENGALURU, THURSDAY, 20, FEBRUARY, 2025 PHALGUNA , 01, SHAKAVARSHA, 1946)
¨sÁUÀ – 3 Part – III
. 112 No. 112
ಕರ್ನಾಟಕ ಸರ್ಕಾರ
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ
ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು
ಸಂಖ್ಯೆ:ಚುನಾ /ಗ್ರಾ.ಪಂ/ಸಿ.ಆರ್/07/2023-24
ದಿನಾಂಕ: 18.02.2025
ಅಂತಿಮ ಅಧಿಸೂಚನೆ
(ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ ್ರಕರಣ 4ರಡಿ)
ವಿಷಯ : ಬೆಂಗಳೂರು ನಗರ ಜಿಲ್ಲೆಯ, ಬೆಂಗಳೂರು ದಕ್ಷಿಣ ತಾಲ್ಲೂಕಿನ ದೊಡ್ಡತೋಗೂರು ಗ್ರಾಮ ಪಂಚಾಯಿತಿಯು ಭಾಗಶ: ಪರಿವರ್ತನೆಯಾಗಿರುವುದರಿಂದ ಉಳಿದ 03 ಕಂದಾಯ ಗ್ರಾಮಗಳನ್ನು ಸೇರಿಸಿ ಹೊಸ ಗ್ರಾಮ ಪಂಚಾಯಿತಿಯನ್ನಾಗಿ ರಚಿಸುವ ಕುರಿತು.
ಉಲ್ಲೇಖ : 1. ಸರ್ಕಾರದ ಅಧಿಸೂಚನೆ ಸಂಖ್ಯೆ:ನಇಇ 64 ಕೆಎಂಆರ್ 2017, ಬೆಂಗಳೂರು, ದಿನಾಂಕ:
26.03.2018.
2. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಪತ್ರ ಸಂಖ್ಯೆ.RDPR/548/ GPA/2023, ದಿನಾಂಕ : 29.08.2024.
3. ಈ ಕಛೇರಿಯ ಪ್ರಥಮ ಅಧಿಸೂಚನೆ ಸಮ ಸಂಖ್ಯೆ.ದಿನಾಂಕ 30.10.2024 4. ಉಪವಿಭಾಗಾಧಿಕಾರಿ, ಬೆಂಗಳೂರು ದಕ್ಷಿಣ ಉಪವಿಭಾಗ ರವರ ಪತ್ರ ಸಂ.ಚುನಾವಣೆ/ಸಿ.ಆರ್.8/2024-25 ದಿನಾಂಕ 08.01.2025
5. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್, ಬೆಂಗಳೂರು ರವರ ಪತ್ರ ಸಂಖ್ಯೆ.ಆಡಳಿತ(1)/ಸಿ.ಆರ್/25/2023-24 ದಿನಾಂಕ 03.02.2025
6. ಈ ಕಛೇರಿಯ (ಜಿಲ್ಲಾ ನಗರಾಭಿವೃದ್ದಿ ಕೋಶ) ಪತ್ರ ಸಂಖ್ಯೆ.ಜಿನಕೋ/ನಸ/ ಸಿ.ಆರ್/35/2017- 18 ದಿನಾಂಕ 06.11.2023
7. ಸರ್ಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಪತ್ರ ಸಂ.ಜಿನಕೋ/ಸಿ/(3)/ಗ್ರಾ.ಮೇ/ಸಿ.ಆರ್/35/2017-18 ದಿನಾಂಕ 08.05.2024
******
ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ದೊಡ್ಡತೋಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶದೊಂದಿಗೆ ಬೆಟ್ಟದಾಸನಪುರ ಗ್ರಾಮ ಸೇರಿಸಿ ಕರ್ನಾಟಕ ಪುರಸಭೆಗಳ ಕಾಯ್ದೆ 1964ರ ಪ್ರಕರಣ (9)ರಂತೆ
(1)2 ದೊಡ್ಡತೋಗೂರು ಪಟ್ಟಣ ಪಂಚಾಯ್ತಿ ಪ್ರದೇಶವೆಂದು ಭಾಗಶ: ಮೇಲ್ದರ್ಜೆಗೇರಿಸಿ ಉಲ್ಲೇಖ (1)ರಂತೆ ಅಧಿಸೂಚನೆ ಹೊರಡಿಸಲಾಗಿದ್ದು, ಅದರಂತೆ, ದೊಡ್ಡತೋಗೂರು ಗ್ರಾಮ ಪಂಚಾಯಿತಿಯು ಭಾಗಶ: ಪರಿವರ್ತನೆಯಾಗಿರುವುದರಿಂದ ಉಳಿದ 03 ಕಂದಾಯ ಗ್ರಾಮಗಳಾದ ವಿಟ್ಟಸಂದ್ರ, ಮೈಲಸಂದ್ರ ಮತ್ತು ಹೊಮ್ಮದೇವನಹಳ್ಳಿ ಗ್ರಾಮಗಳ ವಿವರ ಈ ಕೆಳಕಂಡತ್ತಿರುತ್ತದೆ.
| ಕ ್ರ. ಸಂ. | ಗ್ರಾಮದ ಹೆಸರು | ಸರ್ವೆ ನಂಬರ್‌ಗಳು |
| 1 | ಹ ೂಮ್ಮದೇವನಹಳ್ಳಿ ೆ | ಪೂರ್ಣ ಕಂದಾಯ ಗ್ರಾಮ |
| 2 | ವಿಟ್ಟಸಂದ್ರ | ಪೂರ್ಣ ಕಂದಾಯ ಗ್ರಾಮ |
| 3 | ಮೈಲಸಂದ್ರ | ಪೂರ್ಣ ಕಂದಾಯ ಗ್ರಾಮ |
ಉಲ್ಲೇಖ (1)ರ ಅಧಿಸೂಚನೆಯಿಂದ ದೊಡ್ಡತೋಗೂರು ಗ್ರಾಮ ಪಂಚಾಯಿತಿಯು ಭಾಗಶ:
ಪರಿವರ್ತನೆಯಾಗಿರುವುದರಿಂದ ಉಳಿದ 03 ಕಂದಾಯ ಗ್ರಾಮಗಳಾದ ವಿಟ್ಟಸಂದ್ರ, ಮೈಲಸಂದ್ರ ಮತ್ತು ಹೊಮ್ಮದೇವನಹಳ್ಳಿ ಗ್ರಾಮಗಳನ್ನು ಸೇರ್ಪಡೆ ಮಾಡಿ ಹೊಸ ಗ್ರಾಮ ಪಂಚಾಯ್ತಿಯನ್ನು ಸೃಜಿಸಲು ಉಲ್ಲೇಖ (2)ರಂತೆ ಸರ್ಕಾರದ ಅನುಮತಿ ನೀಡಲಾಗಿದ್ದು, ಅದರಂತೆ, ದೊಡ್ಡತೋಗೂರು ಗ್ರಾಮ ಪಂಚಾಯ್ತಿಯು ಭಾಗಶ: ಪರಿವರ್ತನೆಯಾಗಿರುವುದರಿಂದ ಉಳಿದ 3 ಕಂದಾಯ ಗ್ರಾಮಗಳನ್ನು ಸೇರಿಸಿ ಹೊಸ ಗ್ರಾಮ ಪಂಚಾಯ್ತಿಯನ್ನಾಗಿ ರಚಿಸುವ ಕುರಿತು ಉಲ್ಲೇಖ (3)ರಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ (4)ರಡಿ ಪ್ರಥಮ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಸಾರ್ವಜನಿಕರ ಆಕ್ಷೇಪಣೆ/ಸಲಹೆಗಳನ್ನು ಸಲ್ಲಿಸುವ ಸಲುವಾಗಿ ಪ್ರಚುರಪಡಿಸಲಾಗಿತ್ತು.
ಸದರಿ ಪ್ರಚುರಪಡಿಸಲಾದ ಪ್ರಥಮ ಅಧಿಸೂಚನೆಗೆ ಸಂಬಂಧಿಸಿದಂತೆ, ಸಾರ್ವಜನಿಕರು, ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳಿಂದ 13 ಆಕ್ಷೇಪಣೆಗಳು ಸ್ವೀಕೃತಗೊಂಡಿದ್ದು, ಈ ಎಲ್ಲಾ ಆಕ್ಷೇಪಣೆಗಳ ಕುರಿತು ಉಪವಿಭಾಗಾಧಿಕಾರಿ, ಬೆಂಗಳೂರು ದಕ್ಷಿಣ ಉಪವಿಭಾಗ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ರವರು ಉಲ್ಲೇಖ(4) ಮತ್ತು (5)ರಂತೆ ವರದಿಯನ್ನು ಪಡೆಯಲಾಗಿದೆ.
ಉಪವಿಭಾಗಾಧಿಕಾರಿ, ಬೆಂಗಳೂರು ದಕ್ಷಿಣ ಉಪವಿಭಾಗ ರವರು ಸಲ್ಲಿಸಿರುವ ವರದಿಯಂತೆ ಎಲ್ಲಾ ಆಕ್ಷೇಪಣೆಗಳಲ್ಲಿ ಹೊಮ್ಮದೇವನಹಳ್ಳಿ, ವಿಟ್ಟಸಂದ್ರ ಮತ್ತು ಮೈಲಸಂದ್ರ ಗ್ರಾಮಗಳು 70% ಕ್ಕಿಂತ ಹೆಚ್ಚು ವಸತಿ/ವಾಣಿಜ್ಯ/ಕೈಗಾರಿಕೆ ಪ್ರದೇಶಗಳಲ್ಲಿ ಆರ್ಥಿಕತೆ/ಬೆಳವಣಿಗೆ ಹೊಂದಿದ್ದು, ಈ ಪ್ರದೇಶಗಳಲ್ಲಿ ವಸತಿ ಬಡಾವಣೆ ಅಭಿವೃದ್ದಿ ಹೊಂದಿರುವ ಜೊತೆಗೆ ಐಟಿ/ಬಿಟಿ/ಕೆ.ಐ.ಎ.ಡಿ.ಬಿ. ಪ್ರದೇಶಗಳು 1 ಕಿ.ಮಿ.ಸಮೀಪದಲ್ಲಿರುವುದರಿಂದ ಹಾಗೂ ಆಡಳಿತಾತ್ಮಕ ದೃಷ್ಠಿಯಿಂದ ಪಟ್ಟಣ ಪಂಚಾಯ್ತಿಗೆ ಸೇರ್ಪಡೆಗೊಳಿಸುವುದು ಸೂಕ್ತವಾಗಿರುವುದಾಗಿ ದೊಡ್ಡತೋಗೂರು ಪಟ್ಟಣ ಪಂಚಾಯ್ತಿಯಲ್ಲಿ ದಿನಾಂಕ 27.10.2023 ರಂದು ನಡೆದ ಸಭೆಯ ತೀರ್ಮಾನದಂತೆ ಕ್ರಮ ವಹಿಸುವುದು ಸೂಕ್ತವಾಗಿರುವುದರಿಂದ ಆಕ್ಷೇಪಣೆಗಳನ್ನು ಪರಿಗಣಿಸಬಹುದಾಗಿರುತ್ತದೆಂದು ತಿಳಿಸಿರುತ್ತಾರೆ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ರವರ ಉಲ್ಲೇಖ (5)ರ ವರದಿಯಂತೆ ಈ ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಹಂತದಲ್ಲಿಯೇ ಕ್ರಮ ವಹಿಸಬೇಕಾಗಿರುತ್ತದೆಂದು ತಿಳಿಸಿರುತ್ತಾರೆ.
ದೊಡ್ಡತೋಗೂರು ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸುವ ಸಂದರ್ಭದಲ್ಲಿ ಕೈಬಿಟ್ಟಿರುವ ಬೆಟ್ಟದಾಸನಪುರ, ಹೊಮ್ಮದೇವನಹಳ್ಳಿ, ವಿಟ್ಟಸಂದ್ರ ಮತ್ತು ಮೈಲಸಂದ್ರ ಗ್ರಾಮಗಳು ಬಿ.ಬಿ.ಎಂ.ಪಿ ವ್ಯಾಪ್ತಿಯ ಗಡಿಭಾಗ/ಸರಹದ್ದಿಗೆ ಹೊಂದಿಕೊಂಡಿದ್ದು, ಶೇ.70% ಕ್ಕಿಂತ ಹೆಚ್ಚು ವಸತಿ/ವಾಣಿಜ್ಯ/ಕೈಗಾರಿಕಾ ಪ್ರದೇಶಗಳಾಗಿ ಆರ್ಥಿಕತೆಯಲ್ಲಿ ಬೆಳವಣಿಗೆ/ಅಭಿವೃದ್ದಿ ಹೊಂದಿರುವುದಾಗಿಯೇ ಈ ಪ್ರದೇಶಗಳಲ್ಲಿ ವಸತಿ ಬಡಾವಣೆ ಅಭಿವೃದ್ದಿ ಹೊಂದಿರುವ ಜೊತೆಗೆ ಐ.ಟಿ/ಬಿ.ಟಿ, ಕೆ.ಐ.ಎ.ಡಿ.ಬಿ. ಪ್ರದೇಶಗಳು 1 ಕಿ.ಮೀ.ಸಮೀಪದಲ್ಲಿದ್ದು, ಹಲವಾರು ಪ್ರಸಿದ್ದ ಶಾಲಾ, ಕಾಲೇಜುಗಳು ಈ ಗ್ರಾಮಗಳ ವ್ಯಾಪ್ತಿಯಲ್ಲಿದ್ದು, ನಗರೀಕರಣ/ ಕೈಗಾರಿಕರಣ/ ಅಧುನೀಕರಣಗಳೊಂದಿಗೆ ಅಭಿವೃದ್ದಿ ಹೊಂದಿರುವ ಹಿನ್ನೆಲೆಯಲ್ಲಿ ಈ ಗ್ರಾಮಗಳ ಸಂಪೂರ್ಣ ಕಂದಾಯ ಪ್ರದೇಶಗಳನ್ನು ದೊಡ್ಡತೋಗೂರು ಪಟ್ಟಣ3 ಪಂಚಾಯ್ತಿಗೆ ಸೇರ್ಪಡೆಗೊಳಿಸಿ ಪರಿಷ್ಕøತ ಅಧಿಸೂಚನೆ ಹೊರಡಿಸಲು ಉಲ್ಲೇಖ (6)ರಂತೆ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ ರವರಿಗೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ವಿಚಾರವಾಗಿ ದಿನಾಂಕ 02.05.2024ರಂದು ಅಂದಿನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭಾ ನಡವಳಿಯಂತೆ ದೊಡ್ಡತೋಗೂರು ಗ್ರಾಮ ಪಂಚಾಯ್ತಿಯನ್ನು ಹೊಸದಾಗಿ ಪಟ್ಟಣ ಪಂಚಾಯ್ತಿಯಾಗಿ ಮೇಲ್ದಜೆಗೇರಿಸಿದ್ದು, ಗ್ರಾಮ ಪಂಚಾಯ್ತಿಯಲ್ಲಿ ಉಳಿದಿರುವ ಮೂರು ಗ್ರಾಮಗಳಾದ ವಿಟ್ಟಸಂದ್ರ, ಹೊಮ್ಮದೇವನಹಳ್ಳಿ, ಮೈಲಸಂದ್ರ ಗ್ರಾಮಗಳ ನಿರ್ವಹಣೆ ಕುರಿತು ನಡೆದ ಈ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿದಂತೆ ಹೊಮ್ಮದೇವನಹಳ್ಳಿ, ವಿಟ್ಟಸಂದ ್ರ, ಮೈಲಸಂದ ್ರ ಗ್ರಾಮಗಳನ್ನು ದೊಡ್ಡತೋಗೂರು ಪಟ್ಟಣ ಪಂಚಾಯ್ತಿಗೆ ಸೇರ್ಪಡೆ ಮಾಡಲು ಈಗಾಗಲೇ ಸರ್ಕಾರಕ್ಕೆ ಪ ್ರಸ್ತಾವನೆ ಸಲ್ಲಿಸಿದ್ದರೂ ಸಹ ಈ ತಹಲ್‌ವರೆವಿಗೂ ಸರ್ಕಾರದಿಂದ ಯಾವುದೇ ಆದೇಶವಾಗದೆ ಇರುವ ಕಾರಣ ಸಾರ್ವಜನಿಕ ಹಿತದೃಷ್ಟಿಯಿಂದ ಹೊಮ್ಮದೇವನಹಳ್ಳಿ, ವಿಟ್ಟಸಂದ ್ರ ಮತ್ತು ಮೈಲಸಂದ ್ರ ಗ್ರಾಮಗಳಲ್ಲಿ ಭ ೂಪರಿವರ್ತನೆಗಳ ಆದೇಶದ ಮೇರೆಗೆ ಅನಧಿಕೃತವಾಗಿ ಹೊಸ ಬಡಾವಣೆಗಳನ್ನು ರಚನೆ ಮಾಡುತ್ತಿದ್ದು, ಸಾರ್ವಜನಿಕರಿಂದ ತೆರಿಗೆ ವಸೂಲಿಯಾಗದೆ ಇದ್ದು, ಹೊಮ್ಮದೇವನಹಳ್ಳಿ ಗ್ರಾಮ ಪಂಚಾಯ್ತಿಯನ್ನಾಗಿ ಮುಂದುವರೆಸಿ ಗ್ರಾಮ ಪಂಚಾಯ್ತಿಗೆ ಒಳಪಡುವ ಗ್ರಾಮಗಳಲ್ಲಿ ತ್ಯಾಜ್ಯ ವಿಲೇವಾರಿ, ಕುಡಿಯುವ ನೀರಿನ ವ್ಯವಸ್ಥೆ, ತೆರಿಗೆ ವಸೂಲಾತಿ ಹಾಗೂ ಸಿಬ್ಬಂದಿಗಳ ವೇತನಗಳ ಬಗ್ಗೆ ಯಾವುದೇ ಅನುದಾನ ಸರ್ಕಾರದಿಂದ ಮಂಜೂರಾಗದ ಕಾರಣ ಈ ಪ ್ರದೇಶಗಳನ್ನು ದೊಡ್ಡತೋಗೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಸೇರ್ಪಡೆಯಾಗುವವರೆಗೂ ಕಾರ್ಯನಿರ್ವಹಿಸಲು ಪಂಚಾಯತ್ ರಾಜ್ ಅಧಿನಿಯಮ 1993ರ ಪ ್ರಕರಣ (4)ರಂತೆ ಹೊಮ್ಮದೇವನಹಳ್ಳಿಯನ್ನು ಪೂರ್ಣ ಪ ್ರಮಾಣದ ಗ್ರಾಮ ಪಂಚಾಯ್ತಿಯನ್ನಾಗಿ ಹಾಗೂ ಹಾಲಿ ಇರುವ ಸಿಬ್ಬಂದಿಗಳನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ.
ಈ ಸಭೆಯ ತೀರ್ಮಾನದಂತೆ ಈ ಪಂಚಾಯ್ತಿಯಲ್ಲಿ ಉಳಿದಿರುವ ಕಂದಾಯ ಗ್ರಾಮಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ದೊಡ್ಡತೋಗೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಸೇರ್ಪಡೆ ಮಾಡಲು ಈ ತಹಲ್‌ವರೆವಿಗೂ ಸರ್ಕಾರದಿಂದ ಆದೇಶವಾಗಿಲ್ಲದ ಕಾರಣ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ (4)ರಂತೆ ಹೊಮ್ಮದೇವನಹಳ್ಳಿ ಗ್ರಾಮವನ್ನು ಕೇಂದ್ರ ಸ್ಥಾನವನ್ನಾಗಿರಿಸಿ ಪೂರ್ಣ ಪ್ರಮಾಣದ ಗ್ರಾಮ ಪಂಚಾಯ್ತಿಯನ್ನಾಗಿ ಸೃಜಿಸಬಹುದಾಗಿದೆ ಎಂದು ಉಲ್ಲೇಖ (7)ರಂತೆ ಸರ್ಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಯ ಮೇರೆಗೆ ಸರ್ಕಾರದಿಂದ ಉಲ್ಲೇಖ (2)ರಂತೆ ಹೊಸ ಗ್ರಾಮ ಪಂಚಾಯ್ತಿಯನ್ನು ರಚಿಸಲು ಅನುಮತಿ ನೀಡಲಾಗಿದೆ.
ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ದೊಡ್ಡತೋಗೂರು ಗ್ರಾಮ ಪಂಚಾಯ್ತಿಯು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಿದ್ದು, ಉಳಿದಿರುವ ಹೊಮ್ಮದೇವನಹಳ್ಳಿ, ವಿಟ್ಟಸಂದ್ರ ಮತ್ತು ಮೈಲಸಂದ್ರ ಕಂದಾಯ ಗ್ರಾಮಗಳಲ್ಲಿ ಹೊಸ ಬಡಾವಣೆಗಳು ರಚನೆಯಾಗುತ್ತಿದ್ದು, ಸಾರ್ವಜನಿಕರಿಂದ ತೆರಿಗೆ ವಸೂಲಿಯಾಗದೆ ಇದ್ದು, ಹೊಮ್ಮದೇವನಹಳ್ಳಿ ಗ್ರಾಮ ಪಂಚಾಯ್ತಿಯನ್ನಾಗಿ ಮುಂದುವರೆಸಿ ಗ್ರಾಮ ಪಂಚಾಯ್ತಿಗೆ ಒಳಪಡುವ ಗ್ರಾಮಗಳಲ್ಲಿ ತ್ಯಾಜ್ಯ ವಿಲೇವಾರಿ, ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ತೆರಿಗೆ ವಸೂಲಾತಿ ಹಾಗೂ ಸಿಬ್ಬಂದಿಗಳ ವೇತನಗಳ ಬಗ್ಗೆ ಯಾವುದೇ ಅನುದಾನ ಸರ್ಕಾರದಿಂದ ಮಂಜೂರಾಗದ ಕಾರಣ ಈ ಪ್ರದೇಶಗಳನ್ನು ದೊಡ್ಡತೋಗೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಸೇರ್ಪಡೆ ಮಾಡಲು ಈ ತಹಲ್‌ವರೆವಿಗೂ ಸರ್ಕಾರದ ನಗರಾಭಿವೃದ್ದಿ ಇಲಾಖೆಯಿಂದ ಆದೇಶವಾಗದೆ ಇದ್ದು, ಸರ್ಕಾರದಿಂದ ಆದೇಶವನ್ನು ನಿರೀಕ್ಷಿಸಿ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ (4)ರಂತೆ ಉಳಿದಿರುವ 3 ಗ್ರಾಮಗಳನ್ನು ಒಳಗೊಂಡಂತೆ ಹೊಮ್ಮದೇವನಹಳ್ಳಿ ಗ್ರಾಮವನ್ನು ಕೇಂದ್ರ ಸ್ಥಾನವನ್ನಾಗಿರಿಸಿ ಹೊಸ ಗ್ರಾಮ ಪಂಚಾಯ್ತಿಯನ್ನಾಗಿ ಸೃಜಿಸಿ ಆದೇಶಿಸಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ ್ರಕರಣ (4) (2) (ಎ) ರಿಂದ (ಇ)ರ ಮೇರೆಗೆ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ತಾಲ್ಲೂಕಿಗೆ ಸಂಬಂಧಿಸಿದಂತೆ ಹೊಸದಾಗಿ ಸೃಜಿಸಿರುವ R.N.I. No. KARBIL/2001/47147 POSTAL REGN. No. RNP/KA/BGS/2202/2017-19Licensed to post without prepayment WPP No. 297 4 ಗ್ರಾಮ ಪಂಚಾಯ್ತಿಯನ್ನು ಈ ಕೆಳಕಂಡ ಪಟ್ಟಿಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ ್ರಕಟಿಸಲಾಗಿದೆ. ಸೇರ್ಪಡೆಯಾದ ಕಂದಾಯ ಮತ್ತು ದಾಖಲೆ ಗ್ರಾಮಗಳನ್ನು ಮಾತ ್ರ ನಮೂದಿಸಲಾಗಿದೆ.
ತಾಲ್ಲೂಕಿನ ಹೆಸರು : ಬೆಂಗಳೂರು ದಕ್ಷಿಣ ತಾಲ್ಲೂಕು ಹೊಸದಾಗಿ ಸೃಜಿಸಿರುವ ಗ್ರಾಮ ಪಂಚಾಯ್ತಿಯ ವಿವರ
| ಕ ್ರ. ಸ ಂ. | ಗ್ರಾಮ ಪಂಚಾಯಿತಿ ಹೆಸರು | ಕ ಂದಾಯ ಗ್ರಾಮದ ಹೆಸರು | ದಾಖಲೆ ಗ್ರಾಮದ ಹೆಸರು | 2011ರ ಜನಗಣತಿ ನ ಂತರದ ಜನಸಂಖ್ಯೆ |
| 1 | 2 | 3 | 4 | 5 |
| 1. | ಹೊಮ್ಮದೇವನಹಳ್ಳಿ | ಹ ೂಮ್ಮದೇವನಹಳ್ಳಿ ೆ | ದಿಣ್ಣೆಪಾಳ್ಯ | 4777 |
| ವಿಟ್ಟಸಂದ್ರ | ವಿಟ್ಟಸಂದ್ರ ಪಾಳ್ಯ | 1184 | ||
| ವ ುೖಲಸಂದ್ರ ೆ | ವಡ ್ಡರಪಾಳ್ಯ | 3015 | ||
| ಒಟ್ಟು | - | 8976 |
ಈ ಅಧಿಸೂಚನೆಯಿಂದ ಬಾಧಿತನಾದ ವ್ಯಕ್ತಿ ಅಥವಾ ಸಾರ್ವಜನಿಕರು ಈ ಅಧಿಸೂಚನೆಯ ದಿನಾಂಕದಿಂದ 30 ದಿವಸಗಳೊಳಗಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಕಲಂ 4 (3) ರಡಿಯಲ್ಲಿ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ರವರಿಗೆ ಅಹವಾಲು/ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿರುತ್ತದೆ.
(ಜಗದೀಶ.ಜಿ ಭಾ.ಆ.ಸೇ.,) ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ, ಬೆಂಗಳೂರು ನಗರ ಜಿಲ್ಲೆ.
ಮುದ(cid:206)ಕರು (cid:178)ಾಗೂ ಪ(cid:206)(cid:144)ಾಶಕರು:- ಸಂಕಲ(cid:163)ಾ(cid:297)(cid:144)ಾ(cid:312)ಗಳ(cid:133), ಕ(cid:163)ಾ(cid:143)ಟಕ (cid:170)ಾಜ(cid:205)ಪತ(cid:206), ಸ(cid:144)ಾ(cid:143)(cid:312) (cid:144)ೇಂದ(cid:206) ಮುದ(cid:206)(cid:158)ಾಲಯ, (cid:166)ೆಂಗಳ(cid:136)ರು