(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ
, 16 , 2026 26 1948)
¨sÁUÀ – 5 Part – V
. 283 No. 283 ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು
ಅಧಿಸೂಚನೆ
ಸಂಖ್ಯೆ: ಹೆಚ್ಸಿಆರ್ಬಿ/ಸಿಜೆಆರ್-9/2026 ದಿನಾಂಕ: 16ನೇ ಏಪ್ರಿಲ್, 2026
ಸಿವಿಲ್ ನ್ಯಾಯಾಧೀಶರ ಹುದ್ದೆಗೆ ನೇರ ನೇಮಕಾತಿ
ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 15ನೇ ಮೇ, 2026 ಕರ್ನಾಟಕ ನ್ಯಾಯಾಂಗ ಸೇವಾ (ನೇಮಕಾತಿ) ನಿಯಮಗಳು, 2004 (ತಿದ್ದುಪಡಿ) ನಿಯಮಗಳು, 2011, 2015, 2016, 2024 ಮತ್ತು 2025 ರ ಪ್ರಕಾರ ಕರ್ನಾಟಕ ಉಚ್ಚ ನ್ಯಾಯಾಲಯವು ಸಿವಿಲ್ ನ್ಯಾಯಾಧೀಶರ 90 ಹುದ್ದೆಗಳಿಗೆ (15 ಹೊಸ ಮತ್ತು 75 ಉಳಿಕೆ (ಬ್ಯಾಕ್ಲಾಗ್)) ನೇರ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆಯೆಂದು ಈ ಮೂಲಕ ಅಧಿಸೂಚಿಸಿದೆ.
ಈ ಅಧಿಸೂಚನೆಯು ಕರ್ನಾಟಕ ಉಚ್ಚ ನ್ಯಾಯಲಯದ ಮುಂದೆ ಬಾಕಿ ಇರುವ ರಿಟ್ ಅರ್ಜಿ ಸಂಖ್ಯೆ 200448/2025, 17968/2025 ಮತ್ತು 3145/2023 ರ ಅಂತಿಮ ಫ ಲಿತಾಂಶಕ್ಕೆ ಒಳಪಟ್ಟಿರುತ್ತದೆ.
| ಪ ್ರವರ್ಗ | ರಹಿತ ಮೀಸಲು | ್ಯರ್ಥಿ ಮಹಿಳಾ ಅಭ | ್ಯರ್ಥಿ ಅಭ ಗ್ರಾಮೀಣ | ್ಯಮ ಕನ್ನಡ ಮಾಧ | ್ಯರ್ಥಿ ಅಭ ಅಂಗವಿಕಲ | ೈನಿಕ iಾಜಿ ಸ ವ | ಲಿಂಗ ತೃತೀಯ | ಒಟ್ಟು |
| ಸಾಮಾನ್ಯ ಅಭ ್ಯರ್ಥಿ | 1 | 2 | 2+9* | - | 1#+2* | 1 | - | 07+11* |
| ಪರಿಶಿಷ ಜಾತಿ ್ಟ | - | 1 | - | - | 1#+1* | - | - | 02+01* |
| ಪರಿಶಿಷ ಪಂಗಡ ್ಟ | - | 1 | - | - | 1* | - | - | 01+01* |
| ಪ ್ರವರ್ಗ – I | 1* | 7* | 4* | 2* | 2* | 2* | - | 18* |
| ಪ ್ರವರ್ಗ – II(ಎ) | 1+3* | 1+6* | 7* | 2* | 1* | 2* | 1* | 02+22* |
| ಪ ್ರವರ್ಗ – II(ಬಿ) | 1* | 3* | 1+5* | - | 1* | - | - | 01+10* |
- 90 ಹುದ್ದೆಗಳ ವರ್ಗೀಕರಣ (75 ಬ್ಯಾಕ್ಲಾಗ್ ಹುದ್ದೆಗಳು ಒಳಗೊಂಡಂತೆ) ↩
(1)2
| ಪ ್ರವರ್ಗ – III(ಎ) | 1* | 3* | 1+2* | 1* | 1* | - | - | 01+08* |
| ಪ ್ರವರ್ಗ – III(ಬಿ) | 1+1* | - | 2* | - | 1* | - | - | 01+04* |
| ಒಟ್ಟು | 3+7* | 5+19* | 4+29* | 5* | 2#+10* | 1+4* | 1* | 15+75* |
ಟಿಪ್ಪಣಿ: 1. ವರ್ಗೀಕರಣವನ್ನು ಸರ್ಕಾರಿ ಆದೇಶ ಸಂಖ್ಯೆ. ಸಿಆಸುಇ 01 ಸೆಹಿಮ 2026 ದಿನಾಂಕ 27.02.2026 ರಂತೆ ಮಾಡಲಾಗಿದೆ.
2. (*) ಈ ಚಿಹ್ನೆಯು (ಬ್ಯಾಕ್ಲಾಗ್) ಹುದ್ದೆಗಳನ್ನು ಸೂಚಿಸುತ್ತದೆ.
3. (#) ಈ ಗುರುತು ಹೊಸ ಹುದ್ದೆಗಳ ವರ್ಗೀಕರಣವನ್ನು ಸೂಚಿಸುತ್ತದೆ, ಅಂಗವಿಕಲ (Persons with Benchmark Disability) ವ್ಯಕ್ತಿಗಳ ಹಕ್ಕುಗಳ ಅಧಿನಿಯಮ, 2016 (ಕೇಂದ್ರ ಅಧಿನಿಯಮ ನಂ.49/2016) ಅನ್ವಯ ಮಾಡಲಾಗಿದೆ ಹಾಗೂ ಅಂಗವಿಕಲತೆ ಸ್ವರೂಪವನ್ನು ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 149 ಸೆನೆನಿ 2020, ದಿನಾಂಕ 25.09.2020 ರಲ್ಲಿ ಅಂಗವಿಕಲ ವ್ಯಕ್ತಿಗಳ ಮೀಸಲಾತಿಯನ್ನು ಈ ಕೆಳಗಿನಂತೆ ಗುರುತಿಸಲಾಗಿದೆ.
| ಪ ್ರವರ್ಗ | ಹ ುದ್ದೆಗಳ ಸಂಖ್ಯೆ ಮತ್ತು ಸಮತಳ ಬಿಂದುಗಳ ಸಂಖ್ಯೆ | ಷ ಡ್ಯೂಲ್ರನ್ವಯ ಗುರುತಿಸಲಾದ ಅಂಗವಿಕಲತೆ ೆ |
| ಸಾಮಾನ್ಯ ಅಭ ್ಯರ್ಥಿ | P oint No.64 # | Autism, intellectual disability, specific learning disability and mental illness |
| Multiple disabilities from amongst persons under clauses (a) to (d) including deaf- blindness in the posts identified for each disabilities | ||
| Point No.4* | Blindness and low vision | |
| Point No.44* | Deaf and Hard of hearing | |
| ಪರಿಶಿಷ್ಟ ಜಾತಿ | Point No.24# | Locomotor disability including cerebral palsy, leprosy cured, dwarfism, acid attack victim and muscular dystrophy |
| Point No.4* | Blindness and low vision | |
| ಪರಿಶಿಷ್ಟ ಪಂಗಡ | Point No.4* | Blindness and low vision |
| ಪ ್ರವರ್ಗ – I | 1 Post* | One Arm (OA) / One Leg (OL) / Both Legs (BL) |
| Point No.4* | Blindness and low vision | |
| ಪ ್ರವರ್ಗ – II(ಎ) | Point No.4* | Blindness and low vision |
| ಪ ್ರವರ್ಗ – II(ಬಿ) | Point No.4* | Blindness and low vision |
| ಪ ್ರವರ್ಗ – III(ಎ) | Point No.4* | Blindness and low vision |
| ಪ ್ರವರ್ಗ - III(ಬಿ) | Point No.4* | Blindness and low vision |
2. ವೇತನ ಶೆ ್ರೕಣಿ : ರೂ.77,840 - 1,36,520.
3. ನೇಮಕಾತಿ ವಿಧಾನ :-
ಅಭ್ಯರ್ಥಿಗಳ ಆಯ್ಕೆಯನ್ನು3 ಎ) ಕರ್ನಾಟಕ ನ್ಯಾಯಾಂಗ ಸೇವಾ (ನೇಮಕಾತಿ) ನಿಯಮಗಳು, 2004 (ತಿದ್ದುಪಡಿ) ನಿಯಮಗಳು, 2011, 2015, 2016, 2024 ಮತ್ತು 2025 ಮತ್ತು ಸಂಬಂಧಿಸಿದ ಸರ್ಕಾರಿ ಸುತ್ತೋಲೆಗಳು / ಅಧಿಸೂಚನೆಗೆ ಅನುಗುಣವಾಗಿ ಮಾಡಲಾಗುತ್ತದೆ.
ಬಿ) ನೇಮಕಾತಿ ವಿಧಾನ:- ಉಚ್ಚ ನ್ಯಾಯಾಲಯವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ (ಮುಖ್ಯ ಲಿಖಿತ ಮತ್ತು ಮೌಖಿಕ ಸಂದರ್ಶನ) ಪಡೆದ ಒಟ್ಟು ಅಂಕಗಳ ಆಧಾರದ ಮೇಲೆ ನೇರ ನೇಮಕಾತಿ ಮಾಡಲಾಗುತ್ತದೆ.
4. ವಿದ್ಯಾರ್ಹತೆ:
ಎ) ನೇರ ನೇಮಕಾತಿ:
(i) ಭಾರತದಲ್ಲಿ ಕಾನೂನಿನ ಮೂಲಕ ಸ್ಥಾಪಿತವಾಗಿರುವ ವಿಶ್ವವಿದ್ಯಾನಿಲಯವ ನೀಡಿರುವ ಕಾನೂನು ಪದವಿಯನ್ನು ಪಡೆದಿರಬೇಕು.
(ii) ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಲಾಗಿರುವ ಕೊನೆಯ ದಿನಾಂಕದಂದು ಇದ್ದಂತೆ,–
(ಎ) ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಅಥವಾ ದೇಶದ ಉಚ್ಚ ನ್ಯಾಯಾಲಯಗಳಲ್ಲಿ ಅಥವಾ ಜಿಲ್ಲಾ ಮತ್ತು ಅಧಿವಿಚಾರಣಾ ನ್ಯಾಯಾಲಯಗಳಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರಬೇಕು ಮತ್ತು ಮೂರು ವರ್μಗಳಿಗಿಂತ ಕಡಿಮೆಯಲ್ಲದ ಅವಧಿಯವರಗೆ ನಿರಂತರವಾಗಿ ವೃತ್ತಿಯನ್ನು ಮಾಡಿರಬೇಕು ಅಥವಾ ಕೇಂದ್ರ ಸರ್ಕಾರ ಅಥವಾ ದೇಶದ ರಾಜ್ಯ ಸರ್ಕಾರಗಳ ಪೂರ್ಣಾವಧಿಯ ಉದ್ಯೋಗದಲ್ಲಿ ಸರ್ಕಾರಿ ನ್ಯಾಯವಾದಿಯಾಗಿ ಕೆಲಸ ನಿರ್ವಹಿಸಿರಬೇಕು ಮತ್ತು ಮೂರು ವರ್μಗಳಿಗಿಂತ ಕಡಿಮೆಯಲ್ಲದ ಅವಧಿವರೆಗೆ ಕಾರ್ಯನಿರ್ವಹಿಸಿರಬೇಕು.
ಬಿ) ವಯಸ್ಸು:
1) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು :
ಎ) ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡ ಅಥವಾ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ- Iಕ್ಕೆ ಸೇರಿದ ಅಭ್ಯರ್ಥಿಗಳಿಗೆ 45 ವರ್μ ಮೀರಿರಬಾರದು.
ಬಿ) ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-II(ಎ) ಅಥವಾ II(ಬಿ) ಅಥವಾ III(ಎ) ಅಥವಾ III(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ 43 ವರ್μ ಮೀರಿರಬಾರದು.
ಸಿ) ಇತರೆ ಯಾವುದೇ ಅಭ್ಯರ್ಥಿಗಳಿಗೆ 40 ವರ್μ ಮೀರಿರಬಾರದು.
2) ಮಾಜಿ-ಸೈನಿಕ ಅಭ್ಯರ್ಥಿಗಳಿಗಾಗಿ, ಗರಿμ್ಠ ವಯೋಮಿತಿಯಲ್ಲಿ ಮೂರು ವರ್μಗಳ ಸಡಿಲಿಕೆ ಇರುತ್ತದೆ.
ಸೂಚನೆ:- ಸರ್ಕಾರಿ ಆದೇಶ ಸಂಖ್ಯೆ. ಸಿಆಸುಇ 262 ಸೆನೆನಿ 2025 ದಿನಾಂಕ 29.01.2026 ರ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ಒದಗಿಸಲಾಗಿದೆ.
ಸಿ) ಸ್ವರ್ಧಾತ್ಮಕ ಪರೀಕ್ಷೆ
(1) ಸಿವಿಲ್ ನ್ಯಾಯಾಧೀಶರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಯು ಮೂರು ಹಂತಗಳನ್ನು ಒಳಗೊಂಡಿರುತ್ತದೆ, ಅವು ಯಾವುದೆಂದರೆ:
(ಎ) ಪೂರ್ವಭಾವಿ ಪರೀಕ್ಷೆ (ಬಿ) ಮುಖ್ಯ ಪರೀಕ್ಷೆ ಮತ್ತು (ಸಿ) ಮೌಖಿಕ ಸಂದರ್ಶನ4 (ಎ) ಪೂರ್ವಭಾವಿ ಪರೀಕ್ಷೆ:
ಪೂರ್ವಭಾವಿ ಪರೀಕ್ಷೆಯನ್ನು 100 ಅಂಕಗಳಿಗೆ ವಸ್ತುನಿμ್ಠ ಮಾದರಿಯ ಪ್ರಶ್ನೆ ಪತ್ರಿಕೆಯ ರೂಪದಲ್ಲಿ ನಡೆಸಲಾಗುತ್ತದೆ ಮತ್ತು ಸದರಿ ಪರೀಕ್ಷೆಯ ಪಠ್ಯಕ್ರಮವು ಈ ಕೆಳಕಂಡಂತಿರುತ್ತದೆೆ:-
ಭಾಗ – ಎ: ದಿವಾಣಿ ಪ್ರಕ್ರಿಯಾ ಸಂಹಿತೆ, 1908;
ವರ್ಗಾವಣೀಯ ಲಿಖಿತಗಳ ಅಧಿನಿಯಮ, 1881;
ಸ್ವತ್ತು ವರ್ಗಾವಣೆ ಅಧಿನಿಯಮ, 1882;
ಭಾರತೀಯ ಕರಾರು ಅಧಿನಿಯಮ, 1872;
ನಿರ್ದಿμ್ಟ ಪರಿಹಾರ ಅಧಿನಿಯಮ, 1963;
ಭಾರತದ ಸಂವಿಧಾನ; ಮತ್ತು
ಕರ್ನಾಟಕ ಬಾಡಿಗೆ ಅಧಿನಿಯಮ, 1999.
ಭಾಗ - ಬಿ: ದಂಡ ಪ್ರಕ್ರಿಯಾ ಸಂಹಿತೆ, 1973 ಮತ್ತು
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023;
ಭಾರತೀಯ ದಂಡ ಸಂಹಿತೆ, 1860 ಮತ್ತು
ಭಾರತೀಯ ನ್ಯಾಯ ಸಂಹಿತೆ, 2023;
ಭಾರತೀಯ ಸಾಕ್ಷ್ಯ ಅಧಿನಿಯಮ, 1872 ಮತ್ತು
ಭಾರತೀಯ ಸಾಕ್ಷ್ಯ ಅಧಿನಿಯಮ, 2023;
ಭಾಗ - ಸಿ: ಸಾಮಾನ್ಯ ಜ್ಞಾನ – ತಾರ್ಕಿಕ ಮತ್ತು
ಮನೋಸಾಮರ್ಥ್ಯ ಪರೀಕ್ಷೆ.
(ಬಿ) ಮುಖ್ಯ ಪರೀಕ್ಷೆ:-
(i) ಭಾಷಾಂತರ ಪತ್ರಿಕೆ (ಗರಿμ್ಠ ಅಂಕಗಳು 100)
ಒಂದು ಭಾμಾಂತರ ಪತ್ರಿಕೆಯಿದ್ದು, ಅಭ್ಯರ್ಥಿಗಳು ಆಂಗ್ಲಭಾμೆಯಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಆಂಗ್ಲಭಾμೆಗೆ ಕೆಲವು ಉದ್ಧøತ ಭಾಗಗಳನ್ನು ಭಾμಾಂತರಿಸುವ ಅಗತ್ಯವಿರುತ್ತದೆ.
ಉದ್ಧøತ ಭಾಗಗಳನ್ನು (1) ಹೇಳಿಕೆಗಳು (2) ತೀರ್ಪುಗಳು ಮತ್ತು
(3) ದಸ್ತಾವೇಜುಗಳಿಂದ ಆರಿಸಿ ತೆಗೆದುಕೊಳ್ಳಲಾಗಿರುತ್ತದೆ.
(ii) ಕಾನೂನು ಪತ್ರಿಕೆ - I (ಗರಿμ್ಠ ಅಂಕಗಳು 100)
ದಿವಾಣಿ ಪ್ರಕ್ರಿಯಾ ಸಂಹಿತೆ 1908
ದಂಡ ಪ್ರಕ್ರಿಯಾ ಸಂಹಿತೆ, 1973 ಮತ್ತು
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023;
ಭಾರತೀಯ ಸಾಕ್ಷ್ಯ ಅಧಿನಿಯಮ, 1872 ಮತ್ತು
ಭಾರತೀಯ ಸಾಕ್ಷ್ಯ ಅಧಿನಿಯಮ, 2023;
ವಾದ ತತ್ವಗಳು ಮತ್ತು ಭಾರತೀಯ ಸಂವಿಧಾನ
ಕಾನೂನು ಪತ್ರಿಕೆ - II (ಗರಿμ್ಠ ಅಂಕಗಳು 100)
ಸಿವಿಲ್ ಪ್ರಕರಣಗಳಲ್ಲಿ ವಿವಾದಾಂಶಗಳನ್ನು ರೂಪಿಸುವುದು ಮತ್ತು ತೀರ್ಪುಗಳನ್ನು ಬರೆಯುವುದು.
5(iii) ಕಾನೂನು ಪತ್ರಿಕೆ - III (ಗರಿμ್ಠ ಅಂಕಗಳು 100)
ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಣೆಗಳನ್ನು ರೂಪಿಸುವುದು ಮತ್ತು ತೀರ್ಪುಗಳನ್ನು ಬರೆಯುವುದು.
(ಸಿ) ಮೌಖಿಕ ಸಂದರ್ಶನ (ಗರಿμ್ಠ ಅಂಕಗಳು 100)
ಅಭ್ಯರ್ಥಿಗಳ ಸಾಮಾನ್ಯ ಜ್ಞಾನ, ಕಾನೂನು ತತ್ವಗಳ ಗ್ರಹಿಕೆ ಮತ್ತು ಸಿವಿಲ್ ನ್ಯಾಯಾಧೀಶರಾಗಿ ನೇಮಕವಾಗಲು ಅವರಿಗಿರುವ ಅರ್ಹತೆಗಳನ್ನು ಪರೀಕ್ಷಿಸಲಾಗುವುದು.
(ಡಿ) ಕಂಪ್ಯೂಟರ್ ಜ್ಞಾನದ ಪರೀಕ್ಷೆ (ಗರಿಷ್ಠ ಅಂಕಗಳು 25)
ಕಂಪ್ಯೂಟರ್ ಜ್ಞಾನದ ಪರೀಕ್ಷೆಯು 25 ಅಂಕಗಳಿಗೆ ಇರುತ್ತದೆ. ಅಭ್ಯರ್ಥಿಗಳು ಗಳಿಸಿದ ಈ ಅಂಕಗಳನ್ನು ಅವರ ಅರ್ಹತೆಯನ್ನು ನಿಶ್ಚಿತಪಡಿಸಲು ಪರಿಗಣಿಸಲಾಗುತ್ತದೆ ಮತ್ತು ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನದ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು, ಮುಖ್ಯ ಲಿಖಿತ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳಿಗೆ ಸೇರಿಸಲಾಗುವುದಿಲ್ಲ.
ಸೂಚನೆ : ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯನ್ನು ಆಂಗ್ಲ ಭಾμೆಯಲ್ಲಿ ಅಥವಾ ಕನ್ನಡದಲ್ಲಿ
ಬರೆಯಲು ಅವಕಾಶವಿದೆ.
(ಇ) ಪೂರ್ವಭಾವಿ, ಲಿಖಿತ ಪರೀಕ್ಷೆ ಮತ್ತು ಮೌಖಿಕ ಸಂದರ್ಶನಕ್ಕೆ ಅರ್ಹತೆ:
(i) ಪರಿಶಿμ್ಟ ಜಾತಿ, ಪರಿಶಿμ್ಟ ಪಂಗಡ ಹಾಗೂ ಮಾನದಂಡಕ್ಕನುಗುಣವಾಗಿ ಅಂಗವಿಕಲತೆಯುಳ್ಳ ವ್ಯಕ್ತಿಗಳ (Persons with Benchmark Disability) ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಕ್ಕೆ ಕನಿμ್ಠ 50 ಅಂಕಗಳು ಮತ್ತು ಇತರರಿಗೆ 60 ಅಂಕಗಳನ್ನು ನಿಗದಿಪಡಿಸಲಾಗಿದೆ.
(ii) ಮೇಲಿನ ಕಲಂ (i) ರ ಪ್ರಕಾರ ಲಿಖಿತ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ ಪೈಕಿಯಿಂದ, ಅಂಥ ಅಭ್ಯರ್ಥಿಗಳ ಸಂಖ್ಯೆಯು, ಅಧಿಸೂಚಿಸಲಾದ ಖಾಲಿ ಹುದ್ದೆಗಳ ಸಂಖ್ಯೆಯ 10 ಪಟ್ಟು ಸಮನಾಗಿ ಇರಬಹುದಾದμ್ಟರ ಮಟ್ಟಿಗೆ, ಪ್ರತಿಯೊಂದು ಮೀಸಲು ಪ್ರವರ್ಗದಲ್ಲಿನ ಖಾಲಿ ಹುದ್ದೆಗಳ ಸಂಖ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಅರ್ಹತೆಯ ಕ್ರಮದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು.
(iii) ಪರಿಶಿμ್ಟ ಜಾತಿ, ಪರಿಶಿμ್ಟ ಪಂಗಡ ಹಾಗೂ ಮಾನದಂಡಕ್ಕನುಗುಣವಾಗಿ ಅಂಗವಿಕಲತೆಯುಳ್ಳ ವ್ಯಕ್ತಿಗಳ (Persons with Benchmark Disability) ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಪ್ರತಿಯೊಂದು ಪತ್ರಿಕೆಯಲ್ಲೂ ಕನಿμ್ಠ 40 ಅಂಕಗಳು ಮತ್ತು ಇತರರಿಗೆ 50 ಅಂಕಗಳನ್ನು ನಿಗದಿಪಡಿಸಲಾಗಿದೆ.
(iv) ಮೇಲಿನ ಕಲಂ (iii) ರ ಪ್ರಕಾರ ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳ ಪೈಕಿಯಿಂದ, ಅಂಥ ಅಭ್ಯರ್ಥಿಗಳ ಸಂಖ್ಯೆಯು ಅಧಿಸೂಚಿಸಲಾದ ಖಾಲಿ ಹುದ್ದೆಗಳ ಸಂಖ್ಯೆಯ 3 (ಮೂರು) ಪಟ್ಟು ಸಮವಿರಬಹುದಾದμ್ಟರ ಮಟ್ಟಿಗೆ ಪ್ರತಿಯೊಂದು ಮೀಸಲು ಪ್ರವರ್ಗದಲ್ಲಿನ ಖಾಲಿ ಹುದ್ದೆಗಳ ಸಂಖ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು, ಅರ್ಹತೆಯ ಕ್ರಮದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು.
(v) ಪರಿಶಿμ್ಟ ಜಾತಿ, ಪರಿಶಿμ್ಟ ಪಂಗಡ ಹಾಗೂ ಮಾನದಂಡಕ್ಕನುಗುಣವಾಗಿ ಅಂಗವಿಕಲತೆಯುಳ್ಳ ವ್ಯಕ್ತಿಗಳ (Persons with Benchmark Disability) ಅಭ್ಯರ್ಥಿಗಳು ಮೌಖಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಕನಿμ್ಠ 20% ಅಂಕಗಳು ಮತ್ತು ಇತರರಿಗೆ 25% ಅಂಕಗಳನ್ನು ನಿಗದಿಪಡಿಸಲಾಗಿದೆ.
6ಪರಂತು,
(i) ಮುಖ್ಯ ಲಿಖಿತ ಪರೀಕ್ಷೆಯ ಯಾವುದೇ ಪತ್ರಿಕೆಯಲ್ಲಿ ಮೇಲೆ ನಿಗದಿಪಡಿಸಿದ ಕನಿμ್ಠ ಅಂಕಗಳಿಗಿಂತ ಕಡಿಮೆ ಅಂಕಗಳನ್ನು ಗಳಿಸಿದಂತಹ ಯಾವುದೇ ಅಭ್ಯರ್ಥಿಯು ಮೌಖಿಕ ಸಂದರ್ಶನಕ್ಕೆ ಅರ್ಹರಾಗುವುದಿಲ್ಲ.
(ii) ಮುಖ್ಯ ಲಿಖಿತ ಪರೀಕ್ಷೆಯ ಯಾವುದೇ ಪತ್ರಿಕೆಯಲ್ಲಿ ಅಥವಾ ಮೌಖಿಕ ಸಂದರ್ಶನದ ಮೇಲೆ ನಿಗದಿಪಡಿಸಿದ ಕನಿμ್ಠ ಅಂಕಗಳಿಗಿಂತ ಕಡಿಮೆ ಅಂಕಗಳನ್ನು ಗಳಿಸಿದಂತಹ ಯಾವುದೇ ಅಭ್ಯರ್ಥಿಯು ಸಿವಿಲ್ ನ್ಯಾಯಾಧೀಶರಾಗಿ ನೇಮಕವಾಗುವುದಕ್ಕೆ ಅರ್ಹರಾಗುವುದಿಲ್ಲ.
ಪರಿಶಿμ್ಟ ಜಾತಿ, ಪರಿಶಿμ್ಟ ಪಂಗಡ ಹಾಗೂ ಅಂಗವಿಕಲ (Persons with Benchmark Disability) ಅಭ್ಯರ್ಥಿಗಳನ್ನು ಸಾಮಾನ್ಯ ವರ್ಗಕ್ಕೆ ಪರಿಗಣಿಸಬೇಕಾದ್ದಲ್ಲಿ, ಅಂತಹ ಅಭ್ಯರ್ಥಿಯು ಪೂರ್ವಭಾವಿ ಪರೀಕ್ಷೆ, ಮುಖ್ಯ ಲಿಖಿತ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಗಳಲ್ಲಿ ಈ ಕೆಳಗೆ ನಿಗದಿಪಡಿಸಿದ ಕನಿμ್ಠ ಅಂಕಗಳನ್ನು ಗಳಿಸಿರಬೇಕು.
| ಪೂರ್ವಭಾವಿ ಪರೀಕ್ಷೆ | 60 ಅಂಕಗಳು |
| ಮುಖ್ಯ ಲಿಖಿತ ಪರೀಕ್ಷೆ | ಪ ್ರತಿ ಪತ್ರಿಕೆಯಲ್ಲೂ 50 ಅಂಕಗಳು |
| ಮೌಖಿಕ ಸಂದರ್ಶನ | 25 ಅಂಕಗಳು |
5. ಪರಿವೀಕ್ಷಣ ಅವಧಿ ಮತ್ತು ತರಬೇತಿ:-
ಆಯ್ಕೆಯಾಗಿ ಮತ್ತು ನೇಮಕಾತಿಯಾದ ಅಭ್ಯರ್ಥಿಯು, ಪ್ರಾರಂಭದಲ್ಲಿ ಎರಡು ವರ್μಗಳ ಅವಧಿಗೆ ಅಥವಾ ವಿಸ್ತರಿಸಬಹುದಾದ ಅವಧಿಗೆ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ ಮತ್ತು ನೇಮಕಗೊಂಡ ಅಭ್ಯರ್ಥಿಗಳು ನ್ಯಾಯಾಲಯದ ಪೀಠವನ್ನು ವಹಿಸಿಕೊಳ್ಳುವುದಕ್ಕೂ ಮೊದಲು, ಒಂದು ವರ್μಕ್ಕಿಂತ ಕಡಿಮೆಯಲ್ಲದ ಅವಧಿಯ ತರಬೇತಿಯನ್ನು ಕಡ್ಡಾಯವಾಗಿ ಪಡೆಯಬೇಕು.
ಅವನು / ಅವಳು ಕರ್ನಾಟಕ ಸಿವಿಲ್ ಸೇವಾ (ಸೇವೆಗಳು ಹಾಗೂ ಕನ್ನಡ ಭಾμಾ ಪರೀಕ್ಷೆಗಳು) ನಿಯಮಗಳು, 1974 ರ ಅನುಸಾರವಾಗಿ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಕನ್ನಡ ಭಾμಾ ಪರೀಕ್ಷೆಯಲ್ಲಿ ಉತ್ತೀರ್ಣರಾಗತಕ್ಕದ್ದು.
6. ಆನ್ಲೈನ್ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಸಂದಾಯ ಮಾಡಲು ಸೂಚನೆ :-
(ಎ) ಅಭ್ಯರ್ಥಿಯು ಆನ್ಲೈನ್ ಅರ್ಜಿ ಸಲ್ಲಿಸುವ ಮೊದಲು ಸೂಚನೆಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳತಕ್ಕದ್ದು.
ನಂತರ ಕರ್ನಾಟಕ ಉಚ್ಚ ನ್ಯಾಯಾಲಯದ https://judiciary.karnataka.gov.in// ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ, ಆನ್ಲೈನ್ ಅರ್ಜಿಯನ್ನು ಸಲ್ಲಿಸುವ ಮೊದಲು ಎಲ್ಲಾ ವಿವರಗಳು ಎಲ್ಲಾ ರೀತಿಯಲ್ಲೂ ಸರಿಯಾಗಿದೆಯೆಂದು ಖಚಿತಪಡಿಸಿಕೊಂಡ ನಂತರ ಅರ್ಜಿಯನ್ನು ಸಲ್ಲಿಸತಕ್ಕದ್ದು. ಆನ್ಲೈನ್ ಹೊರತುಪಡಿಸಿ ಇತರೆ ಯಾವುದೇ ವಿಧಾನದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
(ಬಿ) ಅಭ್ಯರ್ಥಿಯು ಅಂತಿಮವಾಗಿ ಅರ್ಜಿಯನ್ನು ಸಲ್ಲಿಸುವ ಮೊದಲು, ಒದಗಿಸಿದ ಮಾಹಿತಿಯು ಎಲ್ಲಾ ರೀತಿಯಲ್ಲೂ ಸರಿಯಾಗಿದೆಯೇ ಹಾಗೂ ಅಗತ್ಯ ಶುಲ್ಕವನ್ನು ಪಾವತಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸಂಖ್ಯೆಯು ನಮೂದಾಗುವುದು. ಅದನ್ನು ಮುಂದಿನ ಉಲ್ಲೇಖಕ್ಕಾಗಿ ಸಂರಕ್ಷಿಸಿಕೊಳ್ಳತಕ್ಕದ್ದು. ಅರ್ಜಿಯ ಪ್ರತಿಯನ್ನು ಸಹ ಮುದ್ರಣ ಮಾಡಿಟ್ಟುಕೊಳ್ಳತಕ್ಕದ್ದು.
7(ಸಿ) ಅಭ್ಯರ್ಥಿಯು ಶೈಕ್ಷಣಿಕ ಮತ್ತು ಮೀಸಲಾತಿಗೆ ಸಂಭಂದಿಸಿದ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡತಕ್ಕದ್ದು.
(ಡಿ) ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವಾಗ, ಅಭ್ಯರ್ಥಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ಇ-ಪಾವತಿ ಗೇಟ್ವೇ ಮೂಲಕ ನಿಗದಿತ ಶುಲ್ಕವನ್ನು ಸಂದಾಯ ಮಾಡತಕ್ಕದ್ದು. ಶುಲ್ಕವನ್ನು ಆನ್ಲೈನ್ ಮೂಲಕ ಮಾತ್ರ ಅಂದರೆ ನೆಟ್ ಬ್ಯಾಕಿಂಗ್/ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಯು.ಪಿ.ಐ ಐ.ಡಿ. ಮೂಲಕ ಪಾವತಿಸತಕ್ಕದ್ದು. ಒಮ್ಮೆ ಸಂದಾಯ ಮಾಡಿದ ಶುಲ್ಕವನ್ನು ಯಾವುದೇ ಸಂದರ್ಭಗಳಲ್ಲೂ ಮರುಪಾವತಿಸುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
(ಇ) ನಿಗದಿತ ಶುಲ್ಕವನ್ನು ಪಾವತಿಸದೇ ಹಾಗೂ ನಿಗದಿತ ದಿನಾಂಕದಂದು ಅಂತಿಮವಾಗಿ ಸಲ್ಲಿಸಲಾಗದ ಅರ್ಜಿಗಳನ್ನು ಅಪೂರ್ಣವಾದ ಅರ್ಜಿಗಳು ಎಂದು ಪರಿಗಣಿಸಲಾಗುವುದು ಮತ್ತು ಅಂತಹ ಅರ್ಜಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
ಆನ್ಲೈನ್ ಅರ್ಜಿಯನ್ನು ಸಲ್ಲಿಸಲು ಮತ್ತು ಶುಲ್ಕ ಸಂದಾಯ ಮಾಡಲು ಕೊನೆಯ ದಿನಾಂಕ: 15.05.2026 (ಎಫ್) ಪೂರ್ವಭಾವಿ ಪರೀಕ್ಷೆ ಶುಲ್ಕ:
ಸಾಮಾನ್ಯ ವರ್ಗ ಮತ್ತು ಪ್ರವರ್ಗ-II(ಎ) / II(ಬಿ) / III(ಎ) / III(ಬಿ) ಸೇರಿದ ಅಭ್ಯರ್ಥಿಯು ರೂ. 1000/- (ಒಂದು ಸಾವಿರ ರೂಪಾಯಿಗಳು ಮಾತ ್ರ) ಶುಲ್ಕವನ್ನು ಸಂದಾಯ ಮಾಡತಕ್ಕದ್ದು.
ಪರಿಶಿμ್ಟ ಜಾತಿ/ ಪರಿಶಿμ್ಟ ಪಂಗಡ/ ಪ್ರವರ್ಗ-I ವರ್ಗಕ್ಕೆ ಸೇರಿದ ಅಭ್ಯರ್ಥಿಗಳು / ಮಾನದಂಡಕ್ಕನುಗುಣವಾಗಿ ಅಂಗವಿಕಲತೆಯುಳ್ಳ ವ್ಯಕ್ತಿಗಳಿಗೆ (Persons with Benchmark Disability) ರೂ. 500/- (ಐದು ನೂರು ರೂಪಾಯಿಗಳು ಮಾತ ್ರ) ಶುಲ್ಕವನ್ನು ಸಂದಾಯ ಮಾಡತಕ್ಕದ್ದು.
(ಜಿ) ಮುಖ್ಯ ಲಿಖಿತ ಪರೀಕ್ಷೆ ಶುಲ್ಕ:
ಮುಖ್ಯ ಲಿಖಿತ ಪರೀಕ್ಷೆಗೆ ಹಾಜರಾಗಲು ಅರ್ಹತೆಯುಳ್ಳ ಅಭ್ಯರ್ಥಿಗಳು ಉಚ್ಚ ನ್ಯಾಯಾಲಯದ ಅಧಿಕೃತ ಅಂತರ್ಜಾಲದಲ್ಲಿ ತಿಳಿಸಲಾಗುವ ನಿರ್ದಿμ್ಟ ಸಮಯದೊಳಗೆ ಈ ಕೆಳಗಿನಂತೆ ಮುಖ್ಯ ಲಿಖಿತ ಪರೀಕ್ಷಾ ಶುಲ್ಕವನ್ನು ಪಾವತಿಸತಕ್ಕದ್ದು.
ಸಾಮಾನ್ಯ ವರ್ಗ ಮತ್ತು ಪ್ರವರ್ಗ-II(ಎ)/II(ಬಿ)/III(ಎ)/III(ಬಿ) ಸೇರಿದ ಅಭ್ಯರ್ಥಿಗಳು ರೂ.1500/- (ಒಂದು ಸಾವಿರದ ಐದು ನೂರು ರೂಪಾಯಿಗಳು ಮಾತ ್ರ) ಶುಲ್ಕವನ್ನು ಸಂದಾಯ ಮಾಡತಕ್ಕದ್ದು.
ಪರಿಶಿμ್ಟ ಜಾತಿ/ ಪರಿಶಿμ್ಟ ಪಂಗಡ/ ಪ್ರವರ್ಗ-I / ಮಾನದಂಡಕ್ಕನುಗುಣವಾಗಿ ಅಂಗವಿಕಲತೆಯುಳ್ಳ ಅಭ್ಯರ್ಥಿಗಳು (Persons with Benchmark Disability) ರೂ. 750/- (ಏಳು ನೂರು ಐವತ್ತು ರೂಪಾಯಿಗಳು ಮಾತ ್ರ) ಶುಲ್ಕವನ್ನು ಸಂದಾಯ ಮಾಡತಕ್ಕದ್ದು.
ಅಭ್ಯರ್ಥಿಗಳು ನಿರ್ದಿμ್ಟ ಸಮಯದೊಳಗೆ ಶುಲ್ಕವನ್ನು ಪಾವತಿಸದಿದ್ದಲ್ಲಿ, ಅಂತಹ ಅಭ್ಯರ್ಥಿಯನ್ನು ಮುಖ್ಯ ಲಿಖಿತ ಪರೀಕ್ಷೆಗೆ ಪರಿಗಣಿಸಲಾಗುವುದಿಲ್ಲ.
7. ಅಂಗವಿಕಲತೆಯುಳ್ಳ ಅಭ್ಯರ್ಥಿಗಳಿಗೆ (Persons with Benchmark Disability) ಪರೀಕ್ಷೆಗಳನ್ನು ನಡೆಸಲು ಸಂಬಂಧಿಸಿದ ಮಾರ್ಗಸೂಚಿಗಳನ್ನು ಅನುಬಂಧ – I ರಲ್ಲಿ ಲಗತ್ತಿಸಿದೆ:
88. ಇತರ ಷರತ್ತುಗಳು :
(1) ವೃತ್ತಿಯ ಪ್ರಮಾಣಪತ್ರವನ್ನು:-
ಎ. ಅಭ್ಯರ್ಥಿಗೆ ಪ್ರಮಾಣಪತ್ರವನ್ನು ನೀಡಿದ ದಿನಾಂಕದಂದು ನ್ಯಾಯವಾದಿ ವೃತ್ತಿಯಲ್ಲಿ ತೊಡಗಿದ್ದಾನೆಂದು ತಿಳಿಸುವ ಮತ್ತು ನಿರಂತರವಾದ ವೃತ್ತಿಯ ಅವಧಿಯನ್ನು ಸೂಚಿಸುವಂಥ:
i. ಅಭ್ಯರ್ಥಿಯು ದೇಶದ ಜಿಲ್ಲಾ ಮತ್ತು ಅಧಿವಿಚಾರಣಾ ನ್ಯಾಯಾಲಯಗಳಲ್ಲಿ ವೃತ್ತಿ ನಿರತನಾಗಿದ್ದರೆ, ಆತನು ವಾಸ್ತವವಾಗಿ ವೃತ್ತಿಯಲ್ಲಿ ತೊಡಗಿರುವ ನ್ಯಾಯಾಲಯದ ಪ್ರಧಾನ ನ್ಯಾಯಾಂಗ ಅಧಿಕಾರಿಯು ನೀಡಿದ; ಅಥವಾ ಅಂತಹ ನ್ಯಾಯಾಲಯಲ್ಲಿ ಕನಿμ್ಠ್ಠ ಹತ್ತು ವರ್μಗಳ ವೃತ್ತಿಯಲ್ಲಿರುವ ನ್ಯಾಯವಾದಿಯು ನೀಡಿದ, ಅದಕ್ಕೆ ಜಿಲ್ಲೆಯ ಅಥವಾ ಆ ಸ್ಥಳದ ಪ್ರಧಾನ ನ್ಯಾಯಾಂಗ ಅಧಿಕಾರಿಯಿಂದ ಕ್ರಮಬದ್ಧವಾಗಿ ಹಿಂಬರಹ ಪಡೆದಿರುವ;
ii. ಅಭ್ಯರ್ಥಿಯು ಭಾರತದ ಸರ್ವೋಚ್ಚ ನ್ಯಾಯಾಲಯ/ಉಚ್ಚ ನ್ಯಾಯಾಲಯಗಳಲ್ಲಿ ವೃತ್ತಿಯಲ್ಲಿ ತೊಡಗಿದ್ದರೆ, ಸಂದರ್ಭಾನುಸಾರ, ಕನಿμ್ಠ ಹತ್ತು ವರ್μಗಳ ವೃತ್ತಿಯಲ್ಲಿರುವ ನ್ಯಾಯವಾದಿಯು ನೀಡಿದ, ಅದಕ್ಕೆ ಭಾರತದ ಸರ್ವೋಚ್ಚ ನ್ಯಾಯಾಲಯ/ ಉಚ್ಚ ನ್ಯಾಯಾಲಯಗಳು ಈ ಉದ್ದೇಶಕ್ಕಾಗಿ ಗೊತ್ತುಪಡಿಸಿದ ಅಧಿಕಾರಿಯಿಂದ ಕ್ರಮಬದ್ದವಾಗಿ ಹಿಂಬರಹ ಪಡೆದಿರುವ, ವೃತ್ತಿ ಪ್ರಮಾಣಪತ್ರವನ್ನು ಒದಗಿಸಬೇಕು.
(2) ಅಭ್ಯರ್ಥಿಯು ಪೂರ್ವಭಾವಿ ಪರೀಕ್ಷೆಗಾಗಿ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಬೇಕು i.e., ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ. ಅಭ್ಯರ್ಥಿಗಳು ಒಮ್ಮೆ ಆಯ್ಕೆ ಮಾಡಿದ ಪೂರ್ವಭಾವಿ ಪರೀಕ್ಷಾ ಕೇಂದ್ರವನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಅನುಮತಿಸಲಾಗುವುದಿಲ್ಲ ಎಂಬುದನ್ನು ಗಮನಿಸಬೇಕು
(3) ಪೂರ್ವಭಾವಿ ಪರೀಕ್ಷೆ, ಮುಖ್ಯ ಲಿಖಿತ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಗೆ ಕರೆಯಲ್ಪಡುವ ಅಭ್ಯರ್ಥಿಗಳು, ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು.
(4) ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು, ನಿಗದಿಪಡಿಸಿರುವ ನಮೂನೆಯಲ್ಲಿ ಪ್ರಮಾಣಪತ್ರವನ್ನು ಆನ್ಲೈನ್ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಹೊಂದಿರತಕ್ಕದ್ದು ಮತ್ತು ಆಯ್ಕೆ ಸಮಿತಿಯಿಂದ ನಿರ್ದೇಶಿಸಲ್ಪಟ್ಟಾಗ ತಪ್ಪದೆ ಹಾಜರುಪಡಿಸತಕ್ಕದ್ದು.
i. ಕರ್ನಾಟಕ ಸರ್ಕಾರವು ನಿಗದಿಪಡಿಸಿರುವ ನಮೂನೆಯಲ್ಲಿ ಪರಿಶಿμ್ಟ ಜಾತಿ/ಪರಿಶಿμ್ಟ ಪಂಗಡ/ ಪ್ರವರ್ಗ- I/ II(ಎ)/ II(ಬಿ)/ III(ಎ)/ III(ಬಿ) ಪ್ರಮಾಣ ಪತ್ರ.
ii.ಅಂಗವಿಕಲ ಮೀಸಲಾತಿಯನ್ನು ಕೋರುವ (Persons with Benchmark Disability) ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರವು ನಿಗದಿಪಡಿಸಿರುವ ನಮೂನೆಯಲ್ಲಿ ಪ್ರಮಾಣಪತ್ರವನ್ನು ಹೊಂದಿರತಕ್ಕದ್ದು. ಈ ಅಧಿಸೂಚನೆಯಲ್ಲಿ ನೀಡಲಾದ ಮಾರ್ಗಸೂಚಿಗಳನ್ನು ಓದಿಕೊಳ್ಳತಕ್ಕದ್ದು.
iii. ಮಾಜಿ ಸೈನಿಕ ವರ್ಗದ ಅಡಿಯಲ್ಲಿ ಸಶಸ್ತ್ರ ಪಡೆೆಯಿಂದ ಬಿಡುಗಡೆ ಮಾಡಲಾದ ಅಥವಾ ವಿಮುಕ್ತಿಗೊಳಿಸಿದ ಪ್ರಮಾಣ ಪತ್ರ.
iv.ಗ್ರಾಮೀಣ ಮೀಸಲಾತಿ ಕೋರುವ ಅಭ್ಯರ್ಥಿಗಳು 1 ರಿಂದ 10ನೇ ತರಗತಿಯವರೆಗೆ ಕಡ್ಡಾಯವಾಗಿ ಗ್ರಾಮೀಣ ಮೀಸಲಾತಿಗೆ ಒಳಪಡುವ ಪ್ರದೇಶಗಳಲ್ಲಿ ವ್ಯಾಸಂಗ ಮಾಡಿರತಕ್ಕದ್ದು. ಅಭ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 96 ಸೆನೆನಿ 2005 ದಿನಾಂಕ 10.08.2005 ರನ್ವಯ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯವರ ಮೇಲುರುಜುವಿನೊಂದಿಗೆ ನಿಗದಿಪಡಿಸಿದ ನಮೂನೆಯಲ್ಲಿ ಪ್ರಮಾಣಪತ್ರವನ್ನು ಹೊಂದಿರತಕ್ಕದ್ದು.
v. ಗ್ರಾಮೀಣ ಮೀಸಲಾತಿಯಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು ಮೇಲುಸ್ತರಕ್ಕೆ ಸೇರಿಲ್ಲದಿರುವ ಬಗ್ಗೆ ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 8 ಸೆನೆನಿ 2001 ದಿನಾಂಕ9 13.02.2001 ರನ್ವಯ ನಮೂನೆ-1ರಂತೆ ಸಂಬಂಧಿತ ತಹಶೀಲ್ದಾರ್ರವರಿಂದ ಪಡೆದ ಪ್ರಮಾಣ ಪತ್ರವನ್ನು ಸಹ ಹೊಂದಿರತಕ್ಕದ್ದು.
vi.ಕನ್ನಡ ಮಾಧ್ಯಮದ ಮೀಸಲಾತಿಯಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 1 ರಿಂದ 10ನೇ ತರಗತಿಯವರೆಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಬಗ್ಗೆ ಸರ್ಕಾರಿ ಅಧಿಸೂಚನೆ ಸಂಖ್ಯೆ ಸಿಆಸುಇ 71 ಸೆನೆನಿ 2001 ದಿನಾಂಕ 24.10.2002 ರನ್ವಯ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯವರ ಮೇಲುರುಜು ಹೊಂದಿರುವ ಪ್ರಮಾಣ ಪತ್ರವನ್ನು ಹೊಂದಿರತಕ್ಕದ್ದು.
vii.'ತೃತೀಯಲಿಂಗ' ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು, Transgender Persons (Protection of Rights) Act, 2019 ಕಲಂ 6ರ ಅನ್ವಯ ಸಕ್ಷಮ ಪ್ರಾಧಿಕಾರವು ನೀಡಿರುವ ಪ್ರಮಾಣಪತ್ರವನ್ನು ಹೊಂದಿರತಕ್ಕದ್ದು.
(5) ಅಭ್ಯರ್ಥಿಯು ಮೂರು ನಡತೆ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗಿರುತ್ತದೆ. ಅವುಗಳಲ್ಲಿ, ಒಂದು ವಿದ್ಯಾಭ್ಯಾಸದ ವಿವರಗಳೊಂದಿಗೆ ಎಲ್.ಎಲ್.ಬಿ ಯನ್ನು ವ್ಯಾಸಂಗ ಮಾಡಿದ ಸಂಸ್ಥೆ/ಕಾಲೇಜಿನಿಂದ ಪಡೆದಿರುವ ನಡತೆಯ ಪ್ರಮಾಣ ಪತ್ರ ಮತ್ತು ತನಗೆ ಸಂಬಂಧಿಯಾಗಿರದ ಹಾಗೂ ಚೆನ್ನಾಗಿ ಪರಿಚಯವಿರುವ ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ಪಡೆದಿರುವ ಎರಡು ನಡತೆಯ ಪ್ರಮಾಣಪತ್ರಗಳು ದಾಖಲಾತಿಗಳ ಪರಿಶೀಲನೆ ಸಮಯದಲ್ಲಿ ಹಾಜರುಪಡಿಸತಕ್ಕದ್ದು
(6) ಮೌಖಿಕ ಪರೀಕ್ಷೆಯ ಸಮಯದಲ್ಲಿ ದಾಖಲೆಗಳ ಪರಿಶೀಲನೆಗಾಗಿ ಕರೆಯಲ್ಪಡುವ ಅಭ್ಯರ್ಥಿಗಳು, ಶೈಕ್ಷಣಿಕ ವಿದ್ಯಾರ್ಹತೆ, ಜನ್ಮ ದಿನಾಂಕವನ್ನು ಹಾಗೂ ಮೀಸಲಾತಿಯನ್ನು ದೃಡಪಡಿಸಲು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣಪತ್ರ, ಗುರುತಿನ ಚೀಟಿ, ಪದವಿ ಹಾಗೂ ಕಾನೂನು ಪದವಿಯ ಅಂಕ ಪಟ್ಟಿಗಳು ಮತ್ತು ಘಟಿಕೋತ್ಸವ ಪ್ರಮಾಣಪತ್ರಗಳು, ವೃತ್ತಿ ಪ್ರಮಾಣ (Practicing Certificate), ಜಾತಿ ಪ್ರಮಾಣ ಪತ್ರ, ಗ್ರಾಮೀಣ / ಅಂಗವಿಕಲ ಅಭ್ಯರ್ಥಿಗಳು (Persons with Benchmark Disability) / ಮಾಜಿ ಸೈನಿಕರು / ಕನ್ನಡ ಮಾಧ್ಯಮ ಮತ್ತು ತೃತೀಯ ಲಿಂಗಕ್ಕೆ (Transgender) ಸಂಬಂಧಿಸಿದ ಮೀಸಲಾತಿಗಳ ಪ್ರಮಾಣ ಪತ್ರಗಳನ್ನು ಸ್ವಯಂ ದೃಡೀಕೃತ ಮೂರು ಛಾಯ ಪ ್ರತಿಗಳ ಜೊತೆಗೆ ಅಗತ್ಯ ಮೂಲ ದಾಖಲೆಗಳನ್ನು ಪರಿಶೀಲನೆಗಾಗಿ ಸಲ್ಲಿಸತಕ್ಕದ್ದು 9. ನೇಮಕಾತಿಯ ಅನರ್ಹತೆ:- ಈ ಕೆಳಗಿನ ಯಾವುದೇ ವ್ಯಕ್ತಿಯು ಸೇವೆಯ ನೇಮಕಾತಿಗೆ ಅರ್ಹರಾಗಿರತಕ್ಕದ್ದಲ್ಲ.
(ಎ) ಭಾರತೀಯ ಪೌರನಾಗಿರದ ಹೊರತು;
(ಬಿ) ಆತನು/ಆಕೆಯು ನ್ಯಾಯಾಂಗ ಸೇವೆಯಿಂದ ಅಥವಾ ಸರ್ಕಾರಿ ಅಥವಾ ಶಾಸನಾತ್ಮಕ ಅಥವಾ ಸ್ಥಳೀಯ ಪ್ರಾಧಿಕಾರ ಸೇವೆಯಿಂದ ಕಡ್ಡಾಯ ನಿವೃತ್ತಿ ಹೊಂದಿದ್ದರೆ, ತೆಗೆದು ಹಾಕಿದ್ದರೆ ಅಥವಾ ವಜಾಗೊಳಿಸಿದ್ದರೆ ಅಥವಾ ಅಭ್ಯರ್ಥಿಯು ನ್ಯಾಯಾಂಗ ಅಧಿಕಾರಿಯಾಗಿ ಆಯ್ಕೆಗೊಂಡ ನಂತರ ಪರಿವೀಕ್ಷಣ ಅವಧಿಯಲ್ಲಿ ಸೇವೆಯಿಂದ ವಿಮುಕ್ತಿಗೊಂಡಿದ್ದರೆ;
(ಸಿ) ನೈತಿಕ ಅಧಃಪತನಕ್ಕೆ ಸೇರುವ ಯಾವುದೇ ಅಪರಾಧದಲ್ಲಿ ಅಪರಾಧಿಯೆಂದು ನಿರ್ಣೀತನಾಗಿದ್ದಲ್ಲಿ ಅಥವಾ ಉಚ್ಚ ನ್ಯಾಯಾಲಯ ಅಥವಾ ಕೇಂದ್ರ ಲೋಕಸೇವಾ ಆಯೋಗ ಅಥವಾ ಯಾವುದೇ ರಾಜ್ಯ ಲೋಕಸೇವಾ ಆಯೋಗಗಳು ನಡೆಸುವ ಪರೀಕ್ಷೆಗಳಿಗೆ ಹಾಜರಾಗುವುದರಿಂದ ಅಥವಾ ಇವು ನಡೆಸುವ ನೇಮಕಾತಿಗಳಿಗೆ ಶಾಶ್ವತವಾಗಿ ಅನರ್ಹಗೊಂಡಿರುವ ಅಥವಾ ಅನರ್ಹರಾಗಿರುವ ಅಥವಾ ಯಾವುದೇ ಬಾರ್ ಕೌನ್ಸಿಲ್ನ ನೋಂದಣಿ ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿದ್ದಲ್ಲಿ;
(ಡಿ) ಬಾರ್ ಕೌನ್ಸಿಲ್ ಅಥವಾ ಯಾವುದೇ ಶಿಸ್ತುಪಾಲನಾ ಪ್ರಾಧಿಕಾರ ದಂಡ ಅಥವಾ ಶಿಕ್ಷೆ ವಿಧಿಸಿದ್ದಲ್ಲಿ, ಅರ್ಜಿದಾರ ನ್ಯಾಯಾಂಗ ಹುದ್ದೆಗೆ ಸೂಕ್ತವಲ್ಲವೆಂದು ಆಯ್ಕೆ ಪ್ರಾಧಿಕಾರ ಅಭಿಪ್ರಾಯಪಟ್ಟಲ್ಲಿ;
10(ಇ) ತನ್ನ ಅಭ್ಯರ್ಥಿಕೆಗೆ ಸಂಬಂಧಿಸಿದಂತೆ ಯಾವುದೇ ರೂಪದಲ್ಲಿ ನೇಮಕಾತಿ ಪ್ರಾಧಿಕಾರವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಭಾವಿಸಿದ್ದಲ್ಲಿ;
(ಎಫ್) ಅಭ್ಯರ್ಥಿಯ ವೈವಾಹಿಕ ಸ್ಥಿತಿ ದ್ವಿಪತ್ನಿತ್ವ/ದ್ವಿಪತಿತ್ವ ಇದ್ದಲ್ಲಿ.
10. ಪರಿಶೀಲನೆಯ ಯಾವುದೇ ಸಮಯದಲ್ಲಿ ಅಥವಾ ನೇಮಕಾತಿಯ ಯಾವುದೇ ಹಂತದಲ್ಲಿ, ಅಭ ್ಯರ್ಥಿಯು ಅರ್ಜಿಯಲ್ಲಿ ಒದಗಿಸಿರುವ ಮಾಹಿತಿಯು ಸುಳ್ಳು ಎಂದು ಕಂಡುಬಂದರೆ ಅಥವಾ ಅಭ ್ಯರ್ಥಿಯು ಯಾವುದೇ ಅರ್ಹತಾ ಮಾನದಂಡಗಳನ್ನು ಪೂರೈಸದಿದ್ದಲ್ಲಿ ಅಥವಾ ಅವನು/ಅವಳು ಯಾವುದೇ ವಸ್ತುನಿಷ್ಠ ಸತ್ಯಗಳನ್ನು ತಿರುಚಿದರೆ ಅಥವಾ ಮೊಟಕುಗೊಳಿಸಿದರೆ, ಅವನ/ಅವಳ ಉಮೇದುವಾರಿಕೆಯನ್ನು ರದ್ದುಗೊಳಿಸಲಾಗುತ್ತದೆ. ನೇಮಕಾತಿಯ ನಂತರವೂ ಅಂತಹ ಯಾವುದೇ ನ್ಯೂನತೆಗಳು ಕಂಡುಬಂದರೆ, ಅವನ/ಅವಳ ನೇಮಕಾತಿಯನ್ನು ರದ್ದುಗೊಳಿಸಲಾಗುವುದು. ತಪ್ಪು, ಅಪೂರ್ಣ ಅಥವಾ ತಪ್ಪಾದ ಮಾಹಿತಿಯನ್ನು ಒದಗಿಸುವುದು ಅಭ ್ಯರ್ಥಿಯ ಅನರ್ಹತೆಗೆ ಕಾರಣವಾಗುವುದಲ್ಲದೆ ಅಂತಹ ಮಾಹಿತಿಯನ್ನು ಒದಗಿಸಿದ್ದಕ್ಕಾಗಿ ಕ್ರಿಮಿನಲ್ ಮೊಕದ್ದಮೆಗೆ ಹೊಣೆಗಾರನಾಗುತ್ತಾನೆ/ಳೆ.
ಟಿಪ್ಪಣಿ: ಈ ಅಧಿಸೂಚನೆಯಲ್ಲಿ ಯಾವುದಾದರೂ ವ್ಯತ್ಯಾಸ/ಗೊಂದಲ ಕಂಡುಬಂದಲ್ಲಿ ಆಂಗ್ಲ ಭಾಷೆಯ ಆವೃತ್ತಿಯಲ್ಲಿರುವುದೇ ಅಂತಿಮವೆಂದು ಪರಿಗಣಿಸಬೇಕು/ಆಂಗ್ಲಭಾಷೆಯ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಳ್ಳುವುದು.
ಆದೇಶಾನುಸಾರ,
ಸಹಿ/-
(ಕೆ.ಎಸ್. ಭ ರತ್ ಕುಮಾರ್)
ಮಹಾವಿಲೇಖನಾಧಿಕಾರಿ ಹಾಗೂ ಕಾರ್ಯದರ್ಶಿ, ಸಿವಿಲ್ ನ್ಯಾಯಾಧೀಶರುಗಳ ನೇಮಕಾತಿ ಸಮಿತಿ, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು.
11HCRB/CJR-9/2026
ಅನುಬಂಧ – 1
ನೇರ ನೇಮಕಾತಿ ಮೂಲಕ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅಂಗವಿಕಲ ವ್ಯಕ್ತಿಗಳಿಗೆ ಪೂರ್ವಭಾವಿ ಮತ್ತು ಲಿಖಿತ
ಪರೀಕ್ಷೆಯನ್ನು ನಡೆಸುವ ಬಗ್ಗೆ ಮಾರ್ಗಸೂಚಿಗಳು
ಓದಲಾಗಿದೆ:
1) ಕರ್ನಾಟಕ ಸರ್ಕಾರವು ಹೊರಡಿಸಿದ ದಿನಾಂಕ 11.02.2021ರ ಸರ್ಕಾರಿ
ಆದೇಶ ಸಂಖ್ಯೆ: ಸಿಆಸುಇ 272 ಸೆನೆನಿ 2013.
*****
ಭಾರತ ಸರ್ಕಾರ, ಸಾಮಾಜಿಕ ನ್ಯಾಯ ಮತ್ತು ಸಬಲಿಕರಣ ಸಚಿವಾಲಯ ಅಂಗವಿಕಲ ವ್ಯಕ್ತಿಗಳ ಸಬಲಿಕರಣ ಇಲಾಖೆಯು (ದಿವ್ಯಾಂಗ) ಹೊರಡಿಸಿದ ಕಛೇರಿ ಜ್ಞಾಪನ ಸಂಖ್ಯೆ:ಎಫ್.ನಂ.34-02/2015-ಡಿಡಿ-III ದಿನಾಂಕ:
29.08.2018 ರಂದು ಪರಿಗಣಿಸಿದ ನಂತರ ರಾಜ್ಯ ಸರ್ಕಾರ (1) ರಲ್ಲಿ ಓದಿದ ಸರ್ಕಾರಿ ಆದೇಶವನ್ನು ಹೊರಡಿಸಿದೆ.
ಮೇಲಿನ (1) ರಲ್ಲಿ ಓದಿದ ಕಛೇರಿ ಜ್ಞಾಪನ ಮತ್ತು ಸರ್ಕಾರಿ ಆದೇಶದ ಪ್ರಕಾರ ನೇರ ನೇಮಕಾತಿಯ ಮೂಲಕ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅಂಗವಿಕಲ ವ್ಯಕ್ತಿಗಳಿಗೆ ಪೂರ್ವಭಾವಿ ಮತ್ತು ಮುಖ್ಯ ಲಿಖಿತ ಪರೀಕ್ಷೆಗಳನ್ನು ನಡೆಸಲು ಈ ಕೆಳಗಿನ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.
1. ವೇಗ ಸೇರಿದಂತೆ ಬರವಣಿಗೆಯಲ್ಲಿ ಮಿತಿಯನ್ನು ಹೊಂದಿರುವ ಅಂಧತ್ವ, ಚಲನವಲನ ವೈಕಲ್ಯ, ಮೆದುಳಿನ ಪಾರ್ಶ್ವವಾಯು ಮತ್ತು ಇತರೆ ಅಂಗವಿಕಲತೆ ಹೊಂದಿರುವ ಅಭ್ಯರ್ಥಿಗಳಿಗೆ ನೇರ ನೇಮಕಾತಿ ಮೂಲಕ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಪೂರ್ವಭಾವಿ / ಮುಖ್ಯ ಲಿಖಿತ ಪರೀಕ್ಷೆಯನ್ನು ನಡೆಸಲು ಮಾರ್ಗಸೂಚಿಗಳು.
2. ಅಂಗವಿಕಲ ವ್ಯಕ್ತಿಯ ಹಕ್ಕುಗಳ ಅಧಿನಿಯಮ 2016ರ (ಇನ್ನು ಮುಂದೆ RPwD ಅಧಿನಿಯಮ 2016 ಎಂದು ಉಲ್ಲೇಖಿಸುವುದು) ಕಲಂ 2(r) ರಲ್ಲಿ ಅಂಗವಿಕಲತೆ ಹೊಂದಿರುವ ವ್ಯಕ್ತಿಯನ್ನು ಈ ಕೆಳಗೆ ಉಲ್ಲೇಖಿಸಿದಂತೆ ವ್ಯಾಖ್ಯಾನಿಸಲಾಗಿದೆ.
"(r) "ಮಾನದಂಡಕ್ಕನುಗುಣವಾಗಿರುವ ಅಂಗವಿಕಲತೆಯುಳ್ಳ ವ್ಯಕ್ತಿ" ಎಂದರೆ, ಮಾನದಂಡಗಳ ನಿಬಂಧನೆಗಳ ಪ್ರಕಾರ ನಿರ್ದಿಷ್ಟ ಅಂಗವಿಕಲತೆಯನ್ನು ಪರಿಭಾಷಿಸಿರದಿದ್ದರೆ ಶೇಕಡ ನಲವತ್ತರಷ್ಟಕ್ಕಿಂತ ಕಡಿಮೆ ಇರದ ನಿರ್ದಿಷ್ಟ ಅಂಗವಿಕಲತೆ ಹೊಂದಿರುವ ವ್ಯಕ್ತಿ ಮತ್ತು ಇದರಲ್ಲಿ ಮಾನದಂಡಗಳ ನಿಬಂಧನೆಗಳ ಪ್ರಕಾರ ನಿರ್ದಿಷ್ಟ ಅಂಗವಿಕಲತೆಯನ್ನು ಪರಿಭಾಷಿಸಿದ್ದರೆ ಅಂಥ ಅಂಗವಿಕಲತೆಯನ್ನು ಹೊಂದಿರುವ ಹಾಗೂ ಇದನ್ನು ಪ್ರಮಾಣೀಕೃತ ಪ್ರಾಧಿಕಾರವು ಪ್ರಮಾಣೀಕರಿಸಿದ ವ್ಯಕ್ತಿಯು ಒಳಗೊಳ್ಳುತ್ತಾನೆ;"
ಕಾಯಿದೆ 2016ರ ಕಲಂ 2 (zc) ನ ಜೊತೆಗೆ, "ನಿರ್ದಿμ್ಟಪಡಿಸಿದ ಅಂಗವಿಕಲತೆಯನ್ನು" ಈ ಕೆಳಗೆ ಉಲ್ಲೇಖಿಸಿದಂತೆ ವ್ಯಾಖ್ಯಾನಿಸಲಾಗಿದೆ.
"(zc) "ನಿರ್ದಿಷ್ಟಪಡಿಸಿದ ಅಂಗವಿಕಲತೆ" ಎಂದರೆ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂತಹ ಅಂಗವಿಕಲತೆಗಳ ಬಗೆ;"12 3. ಅಂಗವಿಕಲ ವ್ಯಕ್ತಿಯ ಹಕ್ಕುಗಳ ಅಧಿನಿಯಮ 2016ರ ಕಲಂ 2(r) ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಅಂಗವಿಕಲತೆ ಹೊಂದಿರುವ ಯಾವುದೇ ಅಭ್ಯರ್ಥಿಗೆ ಲಿಪಿಕಾರ/ಓದುಗನ ಸೌಲಭ್ಯವನ್ನು ಅನುಮತಿಸಲಾಗುತ್ತದೆ ಮತ್ತು ವೇಗ ಸೇರಿದಂತೆ ಬರವಣಿಗೆಯಲ್ಲಿ ಮಿತಿಯನ್ನು ಹೊಂದಿರುವ ಮತ್ತು ದೃಷ್ಟಿಹೀನತೆ, ದೈಹಿಕ ಮಿತಿ, ಚಲನವಲನ ವೈಕಲ್ಯ (ಎರಡು ತೋಳುಗಳ ಬಾಧಿತ-ಬಿಎ) ಮೆದುಳಿನ ಪಾರ್ಶ್ವವಾಯು ವರ್ಗದಲ್ಲಿ ಬರುವ ಅಭ್ಯರ್ಥಿಯು ಬಯಸಿದ್ದಲ್ಲಿ ಒದಗಿಸಬೇಕಾಗುತ್ತದೆ.
4. ಇತರೆ ಅಂಗವಿಕಲತೆ ಹೊಂದಿರುವ ಅಭ್ಯರ್ಥಿಗಳು ಇಂತಹ ಸಂದರ್ಭದಲ್ಲಿ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 272 ಸೆನೆನಿ 2013 ದಿನಾಂಕ 11.02.2021 (Annexure-1) ರ ಪ್ರಕಾರ ವೈದ್ಯಕೀಯ ಮಂಡಳಿಯಿಂದ ಬರೆಯಲು ಸಂಬಂಧಿಸಿದ ವ್ಯಕ್ತಿಗೆ ದೈಹಿಕ ಮಿತಿಯನ್ನು ಹೊಂದಿರುವ ಪ್ರಮಾಣ ಪತ್ರವನ್ನು ಒದಗಿಸಿದ ಸಂದರ್ಭದಲ್ಲಿ ಲಿಪಿಕಾರ / ಓದುಗರನ್ನು ಒದಗಿಸುವುದು.
5. ನೇಮಕಾತಿ ಪ್ರಾಧಿಕಾರವು ಕರ್ನಾಟಕ ಉಚ್ಚ ನ್ಯಾಯಾಲಯದ ಉದ್ಯೋಗಿಗಳಲ್ಲಿ ಲಿಪಿಕಾರರ ಪಟ್ಟಿಯನ್ನು ಸಿದ್ಧಪಡಿಸುತ್ತದೆ, ಇದರಿಂದಾಗಿ ಅಭ್ಯರ್ಥಿಗಳು ಲಿಪಿಕಾರರ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.
ಅಭ್ಯರ್ಥಿಗಳು ಪರೀಕ್ಷೆಗೆ ಎರಡು ದಿನಗಳ ಮೊದಲು ಲಿಪಿಕಾರರನ್ನು ಭೇಟಿಯಾಗಲು ಅವಕಾಶ ನೀಡಲಾಗುತ್ತದೆ, ಇದರಿಂದಾಗಿ ಲಿಪಿಕಾರರು ಅಭ್ಯರ್ಥಿಗಳಿಗೆ ಸೂಕ್ತವೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಮತ್ತು ಪರಿಶೀಲಿಸಲು ಅವಕಾಶವನ್ನು ಪಡೆಯುತ್ತಾರೆ.
6. ಲಿಪಿಕಾರರ ವಿದ್ಯಾರ್ಹತೆಯು ಪರೀಕ್ಷೆಯ ಕನಿμ್ಠ ಅರ್ಹತೆಯ ಮಾನದಂಡಕ್ಕಿಂತ ಹೆಚ್ಚಿರಬಾರದು. ಆದಾಗ್ಯೂ, ಲಿಪಿಕಾರ / ಓದುಗನ ವಿದ್ಯಾರ್ಹತೆಯು ಯಾವಾಗಲೂ ಮೆಟ್ರಿಕ್ಯುಲೇμನ್ ಅಥವಾ ಅದಕ್ಕಿಂತ ಹೆಚ್ಚಿನದ್ದಾಗಿರಬೇಕು.
7. ತುರ್ತು ಸಂದರ್ಭದಲ್ಲಿ ಲಿಪಿಕಾರ / ಓದುಗನನ್ನು ಬದಲಾಯಿಸಲು ಅಭ್ಯರ್ಥಿಯನ್ನು ಅನುಮತಿಸಲಾಗುತ್ತದೆ.
ವಿವಿಧ ಪತ್ರಿಕೆಗಳನ್ನು ಬರೆಯಲು ಅಭ್ಯರ್ಥಿಗಳು ಒಬ್ಬರಿಗಿಂತ ಹೆಚ್ಚು ಲಿಪಿಕಾರ / ಓದುಗರನ್ನು ತೆಗೆದುಕೊಳ್ಳಲು ಸಹ ಅನುಮತಿಸಲಾಗುತ್ತದೆ. ಆದಾಗ್ಯೂ, ಪ್ರತಿ ವಿμಯಕ್ಕೆ ಒಬ್ಬ ಲಿಪಿಕಾರ ಮಾತ್ರ ಇರಬಹುದಾಗಿದೆ.
8. ಅಂಗವಿಕಲತೆ ಹೊಂದಿರುವ ವ್ಯಕ್ತಿಗಳಿಗೆ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಸಾಧ್ಯವಾದμ್ಟು ತಾತ್ತಿ÷್ವಕವಾಗಿ ಆಯ್ಕೆ ನೀಡಬೇಕು, ಉದಾಹರಣೆಗೆ, ಬ್ರೈಲ್ನಲ್ಲಿ ಮಾತ್ರ, ಸ್ಕ್ರೀನ್ ರೀಡರ್ನಲ್ಲಿ ಅಥವಾ ದೊಡ್ಡ ಅಕ್ಷರಗಳಲ್ಲಿ ಅಥವಾ ಉತ್ತರಗಳನ್ನು ದಾಖಲಿಸುವ ಮೂಲಕ. ಪರೀಕ್ಷಾ ಸಂಸ್ಥೆಗಳು ಪ್ರಶ್ನೆ ಪತ್ರಿಕೆಯನ್ನು ದೊಡ್ಡ ಅಕ್ಷರಗಳಲ್ಲಿ, ಇ-ಟೆಕ್ಸ್÷್ಟ ಅಥವಾ ಬ್ರೈಲ್ನಲ್ಲಿ ಪರಿವರ್ತಿಸಲು ತಂತ್ರಜ್ಞಾನವನ್ನು ಸುಲಭವಾಗಿ ಉಪಯೋಗಿಸಬಹುದು ಮತ್ತು ಬ್ರೈಲ್ ಪಠ್ಯವನ್ನು ಇಂಗ್ಲೀμ್ ಅಥವಾ ಪ್ರಾದೇಶಿಕ ಭಾμೆಗಳಲ್ಲಿ ಪರಿವರ್ತಿಸಬಹುದು.
9. ಅಂಗವಿಕಲ ಅಥವಾ ನಿರ್ದಿμ್ಟ ಅಂಗವಿಕಲತೆ ಹೊಂದಿರುವ ಅಭ್ಯರ್ಥಿಯು ನೇಮಕಾತಿಗಾಗಿ ಅರ್ಜಿಯನ್ನು ಸಲ್ಲಿಸುವ (ಸಂದರ್ಭದಲ್ಲಿ) ಸಮಯದಲ್ಲಿ ಇತರ ಅಗತ್ಯ ದಾಖಲೆಗಳೊಂದಿಗೆ ಅಂಗವಿಕಲತೆಗೆ ಸಂಬಂಧಿಸಿದಂತೆ ಮೀಸಲಾತಿಯನ್ನು ಪಡೆಯಲು ಅಂಗವಿಕಲತೆಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
10. ಲಿಪಿಕಾರರ ಸೇವೆಯನ್ನು ಪಡೆಯಲು ಅನುಮತಿಸಲಾದ ಅಭ್ಯರ್ಥಿಗಳಿಗೆ ಪ್ರತಿ ಘಂಟೆಗೆೆ 20 ನಿಮಿμಗಳ ಪರಿಹಾರ ಸಮಯವನ್ನು ಒದಗಿಸಲಾಗುತ್ತದೆ. ಲಿಪಿಕಾರರ ಸೌಲಭ್ಯವನ್ನು ಪಡೆಯದಿರುವ ಅಂಗವಿಕಲತೆ ಹೊಂದಿರುವ ಎಲ್ಲಾ13 ಅಭ್ಯರ್ಥಿಗಳಿಗೆ 3 ಘಂಟೆಗಳ ಪರೀಕ್ಷಾ ಅವಧಿಯ ಜೊತೆಗೆ 1 ಘಂಟೆಯ ಹೆಚ್ಚುವರಿ ಸಮಯವನ್ನು ಅನುಮತಿಸಬಹುದು.
11. ಪರೀಕ್ಷೆಯ ದಿನದಂದು ಗೊಂದಲ ಅಥವಾ ವ್ಯಾಕುಲತೆಯನ್ನು ತಪ್ಪಿಸಲು ಪರೀಕ್ಷೆಯ ಪೂರ್ವಾವಧಿಯ ಸಮಯದಲ್ಲಿ ಸರಿಯಾದ ಆಸನದ ವ್ಯವಸ್ಥೆಯನ್ನು ನೆಲಮಹಡಿಯಲ್ಲಿ ಮಾಡಲು ಆದ್ಯತೆಯನ್ನು ನೀಡಲಾಗುತ್ತದೆ.
ಪ್ರಶ್ನೆ ಪತ್ರಿಕೆಗಳನ್ನು ನೀಡುವ ಸಮಯವನ್ನು ನಿಖರವಾಗಿ ದಾಖಲಿಸಬೇಕು ಮತ್ತು ಹೆಚ್ಚುವರಿ ಹಾಳೆಗಳನ್ನು ಸಕಾಲಕ್ಕೆ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು / ನೋಡಿಕೊಳ್ಳತಕ್ಕದ್ದು.
12. ಅಭ್ಯರ್ಥಿಗೆ ಒದಗಿಸಿದ ಲಿಪಿಕಾರರಿಗೆ ನೇಮಕಾತಿ ಪ್ರಾಧಿಕಾರದಿಂದ ಪ್ರವೇಶ ಪತ್ರವನ್ನು ನೀಡಲಾಗುತ್ತದೆ. ಪ್ರವೇಶ ಪತ್ರದಲ್ಲಿ ಲಿಪಿಕಾರರ ವಿವರಗಳು ಮತ್ತು ಭಾವಚಿತ್ರವನ್ನು ಒಳಗೊಂಡಿರುತ್ತದೆ.
13. ಲಿಪಿಕಾರರ ಮತ್ತು ಅಭ್ಯರ್ಥಿಗಳ ನಡುವಿನ ಸಂಭಾμಣೆಯು ಇತರ ಅಭ್ಯರ್ಥಿಗಳಿಗೆ ತೊಂದರೆಯಾಗಬಾರದು ಮತ್ತು ಪರೀಕ್ಷಾ ಕೊಠಡಿಯಲ್ಲಿ ನಿಶ್ಯಬ್ದತೆಯನ್ನು ಕಾಪಾಡಿಕೊಳ್ಳಬೇಕು.
14. μರತ್ತು (5)ರ ಪಟ್ಟಿಯಂತೆ ಅಭ್ಯರ್ಥಿಯು ಆಯ್ಕೆ ಮಾಡಿದ ಲಿಪಿಕಾರರು ಪರೀಕ್ಷಾ ಪ್ರಕ್ರಿಯೆಯ ಉದ್ದಕ್ಕೂ ಅತ್ಯಂತ ಶಿಸ್ತು ಕಾಪಾಡಿಕೊಳ್ಳಬೇಕು.
15. ವೈದ್ಯಕೀಯ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವುದೇ ಪ್ರಯಾಣ ಭತ್ಯೆ / ದೈನಂದಿನ ಭತ್ಯೆಗೆ ಅರ್ಹರಾಗಿರುವುದಿಲ್ಲ.
16. ಅಭ್ಯರ್ಥಿಗಳಿಗೆ ಸಹಾಯ ಸಾಧನ ಅಂದರೆ ಬ್ರೈಲ್ ಸ್ಲೇಟ್ ಉಪಯೋಗಿಸಲು ಅನುಮತಿಸಲಾಗುತ್ತದೆ.
17. 2016ರ ಕಾಯಿದೆಯ ಪ್ರಕಾರ ರಚಿಸಲಾದ ನಿಯಮಗಳ ಅಡಿಯಲ್ಲಿ ದೇಶದ ಯಾವುದೇ ಭಾಗದಲ್ಲಿ ಪ್ರಮಾಣಿಕರಿಸುವ ಅಧಿಕಾರಿಗಳು ಒದಗಿಸಿದ ಅಂಗವಿಕಲತೆಯ ಪ್ರಮಾಣ ಪತ್ರ ಮತ್ತು ಅದರ ದೃಡೀಕರಣವನ್ನು ಪರಿಶೀಲಿಸಿದ ನಂತರ ಅದರ ನಿಬಂಧನೆಗಳನ್ನು ಪರಿಗಣಿಸಬೇಕು.
ಸಹಿ/-
(ಕೆ.ಎಸ್. ಭ ರತ್ ಕುಮಾರ್)
ಮಹಾವಿಲೇಖನಾಧಿಕಾರಿ ಹಾಗೂ ಕಾರ್ಯದರ್ಶಿ, ಸಿವಿಲ್ ನ್ಯಾಯಾಧೀಶರುಗಳ ನೇಮಕಾತಿ ಸಮಿತಿ, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 29714 ಅನುಬಂಧ - 1
(ಸರ್ಕಾರಿ ಆದೇಶ ಸಂಖ್ಯೆ:ಸಿಆಸುಇ-272 ಸೆನೆನಿ 2013 ದಿನಾಂಕ 11/2/2021 ರ ಕಂಡಿಕೆ 5 ರ ಅನ್ವಯ) ಅಭ ್ಯರ್ಥಿಯು ಬರೆಯಲು ದೈಹಿಕ ಅಸಮರ್ಥತೆ ಹೊಂದಿರುವ ಬಗ್ಗೆ ಪ ್ರಮಾಣ ಪತ ್ರ
(ಈ ಕೆಳಗಿನ ಅಂಗವಿಕಲತೆಯನ್ನು ಹೊಂದಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ; ಅಂಧತ್ವ, ಚಲನವಲನ ವೈಕಲ್ಯ, (ಎರಡೂ ತೋಳುಗಳ ಬಾಧಿತ) ಮತ್ತು ಮೆದುಳಿನ ಪಾರ್ಶ್ವವಾಯು).
ಈ ವೈದ್ಯಕೀಯ ಮಂಡಳಿಯು ____________________ (ಅಂಗವಿಕಲತೆಯ ಪ್ರಮಾಣ ಪತ್ರದಲ್ಲಿ ದಾಖಲಿಸಲಾಗಿರುವ ಅಂಗವಿಕಲತೆಯ ಸ್ವರೂಪ ಮತ್ತು ಪ್ರತಿಶತ ಪ್ರಮಾಣ) ಅಂಗವಿಕಲತೆಯನ್ನು ಹೊಂದಿರುವ ಶ್ರೀ/ಶ್ರೀಮತಿ/ಕುಮಾರಿ _________________ (ಅಂಗವಿಕಲ ವ್ಯಕ್ತಿಯ ಹೆಸರು) ___________________ ಮತ್ತು ಇವರ ಮಗ/ಮಗಳು _____________________ (ಗ್ರಾಮ, ತಾಲ್ಲೂಕು, ಜಿಲ್ಲೆ) ಇಲ್ಲಿನ ನಿವಾಸಿ, ಇವರನ್ನು ಪರೀಕ್ಷಿಸಿದ್ದು, ಇವರ ಅಂಗವಿಕಲತೆಯು ಇವರ ಬರವಣಿಗೆ ಸಾಮರ್ಥ್ಯವನ್ನು ಕುಂpತಗೊಳಿಸುವ ದೈಹಿಕ ಅಸಮರ್ಥತೆಯಾಗಿದೆ ಎಂದು ಪ್ರಮಾಣಿಕರಿಸುತ್ತದೆ.
(ಸಹಿ)
ಸ್ಥಳ:
ಅಧ್ಯಕ್ಷರು ಮತ್ತು ಸದಸ್ಯರು ಮತ್ತು ದಿನಾಂಕ:
ವೈದ್ಯಕೀಯ ಮಂಡಳಿ
ಟಿಪ್ಪಣಿ:
1. ವೈದ್ಯಕೀಯ ಮಂಡಳಿಯ ಸ್ಥಳ ವಿವರಗಳೊಂದಿಗೆ, ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರ ಹೆಸರು ಮತ್ತು ಹುದ್ದೆಗಳನ್ನು ಸ್ಪμ್ಟವಾಗಿ ನಮೂದಿಸಬೇಕು.
2. ಅಭ್ಯರ್ಥಿಯು ಹೊಂದಿರುವ ಅಂಗವಿಕಲತೆಗೆ ಸಂಬಂಧಿಸಿದ ತಜ್ಞ ವೈದ್ಯರೊಬ್ಬರು ಆಯಾಯ ಮಂಡಳಿಯ ಸದಸ್ಯರಾಗಿರುವುದನ್ನು ಖಚಿತ ಪಡಿಸಿಕೊಳ್ಳಬೇಕು.
[
ಮುದ(cid:206)ಕರು (cid:178)ಾಗೂ ಪ(cid:206)(cid:144)ಾಶಕರು:- ಸಂಕಲ(cid:163)ಾ(cid:297)(cid:144)ಾ(cid:312)ಗಳ(cid:133), ಕ(cid:163)ಾ(cid:143)ಟಕ (cid:170)ಾಜ(cid:205)ಪತ(cid:206), ಸ(cid:144)ಾ(cid:143)(cid:312) (cid:144)ೇಂದ(cid:206) ಮುದ(cid:206)(cid:158)ಾಲಯ, (cid:166)ೆಂಗಳ(cid:136)ರು