Servants of Knowledge
Karnataka ExtraOrdinary Gazette · Government of Karnataka

KARNATAKA STATE LEGAL SERVICES AUTHORITY, BENGALURU INVITES ONLINE APPLICATIONS FOR DIRECT RECRUITMENT TO 02 POSTS OF SECTION OFFICER UNDER KALYANA KARNATAKA REGION

Published 16 April 2026

Department
Judiciary
Type
Extra Ordinary
Identifier
in.gazette.karnataka_eo.2026-04-16.10180
Languages
English, Kannada
Published at
Original source ↗

click here for IIIF manifest

(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ

, 16 , 2026 26 1948)

ಭಾಗ – 5 Part – V

. 285 No. 285 ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು. ಅಧಿಸೂಚನೆ

ಸಂಖ್ಯೆ: ಕರಾಕಾಸೇಪ್ರಾ:03/ಎಡಿಎಮ್/ಎಸ್ಒ/2026 ದಿನಾಂಕ 16ನೇ ಏಪ್ರಿಲ್ 2026

ಶಾಖಾಧಿಕಾರಿ ಹುದ್ದೆಗಳಿಗಾಗಿ

ಅಭ್ಯರ್ಥಿಗಳ ನೇರ ನೇಮಕಾತಿ

ಕಲ್ಯಾಣ ಕರ್ನಾಟಕ ಪ

್ರದೇಶ

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.05.2026

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಇಲ್ಲಿ 02 ಶಾಖಾಧಿಕಾರಿ ಹುದ್ದೆಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶದ ಮೀಸಲಾತಿ ಅಡಿಯಲ್ಲಿ ನೇರ ನೇಮಕಾತಿಗಾಗಿ ಅರ್ಜಿಯನ್ನು ಸಲ್ಲಿಸಲು ಈ ಕೆಳಕಂಡಂತೆ ನಿಗದಿಪಡಿಸಿರುವ ಅಗತ್ಯ ಮತ್ತು ಇತರೆ ಅರ್ಹತಾ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬಹುದೆಂದು ಅಧಿಸೂಚಿಸಲಾಗಿದೆ.

ಈ ಅಧಿಸೂಚನೆಯು ಅಥವಾ ನೇಮಕಾತಿಯು ರಿಟ್ ಅರ್ಜಿ ಸಂಖ್ಯೆ 200448/2025 c/w ್ರಕಾರ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಅಂತಿಮ ತೀರ್ಪಿಗೆ 17968/2025 ಮತ್ತು 3145/2023 ಪ ಒಳಪಟ್ಟಿರುತ್ತದೆ.

ಭಾಗ - ಎ

1. ಖಾಲಿ ಹುದ್ದೆಗಳ ವರ್ಗೀಕರಣ:

ಕಲ್ಯಾಣ ಕರ್ನಾಟಕ ಪ ್ರದೇಶದ 02 ಹುದ್ದೆಗಳು

(1)2

ಪ ್ರವರ್ಗ ಮೀಸಲು ರಹಿತ ್ಯರ್ಥಿ ಮಹಿಳಾ ಅಭ ್ಯರ್ಥಿ ಅಭ ಗ್ರಾಮೀಣ ್ಯಮ ್ಯರ್ಥಿ ಅಭ ಕನ್ನಡ ಮಾಧ ್ಯರ್ಥಿ ವಿಶೇಷ ಅಭ ವಿಕಲಚೇತನ iಾಜೀ ಸೈನಿಕ ವ ೃತೀಯ ಲಿಂಗ ತ ಒಟ್ಟು
ಸಾಮಾನ್ಯ ಅಭ್ಯರ್ಥಿ 01 - - - - - - 01
ಪರಿಶಿಷ್ಠ ಜಾತಿ 01 - - - - - - 01
ಪರಿಶಿಷ್ಠ ಪಂಗಡ - - - - - - - -
ಪ್ರವರ್ಗ- 1 - - - - - - - -
ಪ್ರವರ್ಗ- 2(ಎ) - - - - - - - -
ಪ್ರವರ್ಗ- 2(ಬಿ) - - - - - - - -
ಪ್ರವರ್ಗ - 3(ಎ) - - - - - - - -
ಪ್ರವರ್ಗ - 3(ಬಿ) - - - - - - - -
ಒಟ್ಟು 02 - - - - - - 02

ಟಿಪ್ಪಣಿ:

1. ಮೇಲಿನ ವರ್ಗೀಕರಣವನ್ನು ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 01 ಸೆಹಿಮ 2026 ದಿನಾಂಕ 27.02.2026 ರ ಪ್ರಕಾರ ಮಾಡಲಾಗಿದೆ.

2. ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆ : ಸಿಆಸುಇ 03 ಹೈಕಕೊ 2019 ದಿನಾಂಕ 15.06.2022.

2. ವೇತನ ಶೆ ್ರೕಣಿ:

69250-1650-74200-1900-85600-2300-99400-2700-115600-3100- 134200

3. ನೇಮಕಾತಿಯ ವಿಧಾನ:

ಅಭ್ಯರ್ಥಿಗಳ ಆಯ್ಕೆಯನ್ನು ಈ ಕೆಳಗಿನ ನಿಯಮಗಳ ಅನುಸಾರ ಮಾಡಲಾಗುತ್ತದೆ ;

ಎ) ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ, 1987

ಬಿ) ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿಯಮಗಳು, 1996, ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದಂತೆ

ಸಿ) ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿಬಂದನೆಗಳು, 1997

ಡಿ) ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977

ಇ) ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳು (ನೇಮಕಾತಿ ಮೀಸಲಾತಿ ಇತ್ಯಾದಿ) ಕಾಯಿದೆ, 1990

ಎಫ್) ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳು (ನೇಮಕಾತಿ ಮೀಸಲಾತಿ ಇತ್ಯಾದಿ) ನಿಯಮಗಳು, 19923 ಜಿ) ಈ ಕೆಳಗಿನ ಸರ್ಕಾರದ ಸುತ್ತೋಲೆಗಳು / ಅಧಿಸೂಚನೆಗಳ ಪ್ರಕಾರ :-

ಕ ್ರಮ ಸಂಖ್ಯೆ ಸರ್ಕಾರದ ಸುತ್ತೋಲೆಗಳು / ಅಧಿಸೂಚನೆಗಳು ದಿನಾಂಕ ವಿಷಯ
1. ಸಿಆಸುಇ 262 ಸೆನೆನಿ 2025 29.01.2026 ವಯೋಮಿತಿಯಲ್ಲಿ 5 ವ ರ್ಷಗಳ ಸಡಿಲಿಕೆಯನ್ನು ನೀಡುವ ಬಗ್ಗೆ (ಒಂದು ಬಾರಿಯ ಕ್ರಮವಾಗಿ)
2. ಸಿಆಸುಇ 19 ಸೆನೆನಿ 2020 12.10.2020 ಸೇವಾನಿರತ ಅಭ್ಯರ್ಥಿಯ ನಿರಾಪೇಕ್ಷಣಾ ಪ ್ರಮಾಣಪತ್ರದ ಬಗ್ಗೆ.

4. (ಎ) ವಿದ್ಯಾರ್ಹತೆ :

ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ (ಎಲ್ಎಲ್.ಬಿ) ಪಡೆದಿರಬೇಕು.

(ಬಿ) ವಯೋಮಿತಿ :

ಶಾಖಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳು (ದಿನಾಂಕ 16.04.2026 ರಂತೆ), ಕನಿಷ್ಠ 18 ವರ್ಷಗಳಿಗಿಂತ ಕಡಿಮೆಯಿಲ್ಲದ ಮತ್ತು ಈ ಕೆಳಕಂಡಂತೆ ನಿಗದಿಪಡಿಸಿರುವ ಗರಿಷ್ಟ ವಯೋಮಿತಿಯನ್ನು ಮೀರಿರಬಾರದು :

ಅಭ ್ಯರ್ಥಿಯು ಸೇರಿದ ವರ್ಗ ಗರಿಷ್ಠ ವಯೋಮಿತಿ
ಸಾಮಾನ್ಯ ಅಭ್ಯರ್ಥಿ 40 ವರ್ಷಗಳು
ಇತರೆ ಹಿಂದುಳಿದ ವರ್ಗಗಳ ಪ್ರವರ್ಗ - ಋಋ(ಎ)/ ಋಋ(ಬಿ)/ ಋಋಋ(ಎ)/ ಋಋಋ(ಬಿ) 43 ವರ್ಷಗಳು
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಪ್ರವರ್ಗ–ಋ 45 ವರ್ಷಗಳು
ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರ ಪ ್ರಕಾರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಹೆಚ್ಚುವರಿ ಸಡಿಲಿಕೆ ನೀಡಲಾಗುವುದು

5. ಅರ್ಜಿ ಶುಲ್ಕ :

ಅಭ್ಯರ್ಥಿಯು ಆನ್‌ಲೈನ್ ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ ಯು.ಪಿ.ಐ./ ನೆಟ್ ಬ್ಯಾಂಕಿಂಗ್/ ಡೆಬಿಟ್ ಕಾರ್ಡ್ ಪಾವತಿ ಗೇಟ್‌ವೇ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಶುಲ್ಕ ಈ ಕೆಳಗಿನಂತಿರುತ್ತದೆ :

ಅಭ ್ಯರ್ಥಿಯು ಸೇರಿದ ವರ್ಗ ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿ/ ಇತರೆ ಹಿಂದುಳಿದ ವರ್ಗಗಳ ಪ ್ರವರ್ಗ - ಋಋ(ಎ)/ ಋಋ(ಬಿ)/ ಋಋಋ(ಎ)/ ಋಋಋ(ಬಿ) ರೂ.1,000/-
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಪ್ರವರ್ಗ–ಋ ಹಾಗೂ ನಿರ್ದಿಷ್ಟ ಅಂಗವೈಕಲ್ಯವುಳ್ಳ (ಕಜಡಿಠಟಿ ತಿiಣh ಃಜಟಿಛಿhಟಚಿಡಿk ಆiಚಿಛiಟiಣಥಿ) ಅಭ್ಯರ್ಥಿಗಳಿಗೆ ರೂ.500/-
4

ಸೂಚನೆಗಳು :

1. ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಅರ್ಜಿಗಳಿಗೆ ಶುಲ್ಕವನ್ನು ಪಾವತಿಸಿದ್ದರೂ ಸಹ, ಒಮ್ಮೆ ಪಾವತಿಸಿದ ಶುಲ್ಕವನ್ನು ಯಾವುದೇ ಸಂದರ್ಭದಲ್ಲೂ ಮರುಪಾವತಿಸಲಾಗುವುದಿಲ್ಲ.

2. ಕೊನೆಯ ಕ್ಷಣದಲ್ಲಿ ಅರ್ಜಿ ಸಲ್ಲಿಸುವಾಗ ಆಗಬಹುದಾದ ಒತ್ತಡಗಳನ್ನು ತಪ್ಪಿಸಲು ಅಭ್ಯರ್ಥಿಯು ಮುಂಚಿತವಾಗಿಯೇ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸುವುದು.

3. ಅಭ್ಯರ್ಥಿಯು ದಿನಾಂಕ 15.05.2026 ರ ರಾತ್ರಿ 11.59 ಘಂಟೆಯ ಒಳಗೆ ಶುಲ್ಕವನ್ನು ಪಾವತಿಸಿ, ಅರ್ಜಿಯನ್ನು ಸಲ್ಲಿಸಬೇಕು.

4. ನಿಗದಿತ ಅವಶ್ಯಕತೆಗಳನ್ನು ಪೂರೈಸದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. 5. ಸಂದರ್ಶನಕ್ಕೆ ಕರೆಯಲ್ಪಡುವ ಅಭ್ಯರ್ಥಿಗಳಿಗೆ ಅರ್ಜಿಯಲ್ಲಿ ನೋಂದಾಯಿಸಿರುವ ಇಮೇಲ್/ಎಸ್.ಎಂ.ಎಸ್./ವಾಟ್ಸ್ಆಪ್ ಮೂಲಕ ಮಾತ್ರ ತಿಳಿಸಲಾಗುವುದು.

6. ಸೇವಾ ಪರಿವೀಕ್ಷಣಾ ಅವಧಿ :

ನೇಮಕಗೊಂಡ ಅಭ್ಯರ್ಥಿಯು ಎರಡು ವರ್ಷಗಳ ಅವಧಿಗೆ ಅಥವಾ ಅಗತ್ಯವಿದ್ದರೆ ವಿಸ್ತರಿಸಬಹುದಾದ ಅವಧಿಗೆ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ.

7. ಆಯ್ಕೆ ವಿಧಾನ:

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ವಿವರಗಳು ಈ ಕೆಳಕಂಡಂತಿವೆ :

(i) ಸ್ಪರ್ಧಾತ್ಮಕ ಪರೀಕ್ಷಾ ವಿಧಾನ:

1. ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಫ್‌ಲೈನ್ ಮೂಲಕ ವಸ್ತುನಿಷ್ಠ ಪ್ರಶ್ನೆಗಳನ್ನೊಳಗೊಂಡ ಪ್ರಶ್ನೆ ಪತ್ರಿಕೆ- 1 ಮತ್ತು ಪ್ರಶ್ನೆ ಪತ್ರಿಕೆ -2ರ ಒಎಂಆರ್ ಮಾದರಿ (Offline-OMR Type) ಯಲ್ಲಿ ನಡೆಸಲಾಗುವುದು.

2. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬೆಂಗಳೂರು ಕೇಂದ್ರದಲ್ಲಿ ನಡೆಸಲಾಗುವುದು. 3. ಅಭ್ಯರ್ಥಿಗಳು ಪರೀಕ್ಷೆಯ ಪ್ರವೇಶ ಪತ್ರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್: hಣಣp://ಛಿಜಣಠಟಿಟiಟಿಜ.kಚಿಡಿಟಿಚಿಣಚಿkಚಿ.ರಠತ.iಟಿ/kಜಚಿ/iಟಿಜಜಥಟಿಜತಿ ರಲ್ಲಿ ಡೌನ್‌ಲೋಡ್ ಮಾಡಿಕೊಳ್ಳತಕ್ಕದ್ದು.

4. ಅಭ್ಯರ್ಥಿಯು ಕಡ್ಡಾಯವಾಗಿ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ಮೂಲ ಗುರುತಿನ ಚೀಟಿ (ವಾಹನ ಚಾಲನಾ ಪರವಾನಗಿ/ ಆದಾರ್ ಕಾರ್ಡ್/ ಪ್ಯಾನ್‌ಕಾರ್ಡ್/ ಪಾಸ್‌ಪೋರ್ಟ್/ ವೋಟರ್ ಐಡಿ) ಯೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕು. ತಪ್ಪಿದ್ದಲ್ಲಿ ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.

5. ಅಭ್ಯರ್ಥಿಯು ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಥವಾ ರಾಜ್ಯ ಸರ್ಕಾರವು ಅದಕ್ಕೆ ತತ್ಸಮಾನವೆಂದು ಘೋಷಿಸಿದ ಯಾವುದೇ ಪರೀಕ್ಷೆಯಲ್ಲಿ ಅಥವಾ ಎಸ್.ಎಸ್.ಎಲ್.ಸಿ ಗಿಂತ ಉನ್ನತ ಮಟ್ಟದ ಪರೀಕ್ಷೆಗಳಲ್ಲಿ ಕನ್ನಡ5 ವಿಷಯವನ್ನು ಪ್ರಥಮ/ದ್ವಿತೀಯ ಭಾಷೆಯಾಗಿ ಅಭ್ಯಸಿಸಿದ್ದರೆ ಅಥವಾ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿ ಇಂತಹ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರೆ ಅಥವಾ ಆಯೋಗ ಅಥವಾ ಇನ್ನಿತರ ಯಾವುದೇ ಆಯ್ಕೆ ಪ್ರಾಧಿಕಾರವು ಈ ಹಿಂದೆ ನಡೆಸಿದ ಕನ್ನಡ ಭಾಷೆಯ ಪರೀಕ್ಷೆ (ಕಡ್ಡಾಯ ಕನ್ನಡ ಪರೀಕ್ಷೆ) ಯಲ್ಲಿ ಉತ್ತೀರ್ಣರಾಗಿದ್ದರೆ, ಅಂತಹ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ. ಇಲ್ಲವಾದಲ್ಲಿ, ಕರ್ನಾಟಕ ಲೋಕ ಸೇವಾ ಆಯೋಗವು ನಡೆಸುವ ಕನ್ನಡ ಭಾಷಾ ಇಲಾಖಾ ಪರೀಕ್ಷೆಗೆ ಹಾಜರಾಗಿ, ಉತ್ತೀರ್ಣರಾದ ಬಗ್ಗೆ ಪ್ರಮಾಣ ಪತ್ರವನ್ನು ಪರಿವೀಕ್ಷಣಾ ಅವಧಿ ಮುಗಿಯುವುದರೊಳಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಛೇರಿಗೆ ಸಲ್ಲಿಸತಕ್ಕದ್ದು.

ಪ ್ರಶ್ನೆ ಪತ್ರಿಕೆ ಹಾಗೂ ಪಠ್ಯಕ ್ರಮ :

ಪ ್ರಶ್ನೆ ಪತ್ರಿಕೆ ವಿಷಯ ಒಟ್ಟು ಪ ್ರಶ್ನೆಗಳು ಅವಧಿ ಗರಿಷ್ಟ ಅಂಕಗಳು ಕನಿಷ್ಟ ಅಂಕಗಳು
ಪತ್ರಿಕೆ-I ಸಾಮಾನ್ಯ ಜ್ಞಾನ : ಪ್ರಚಲಿತ ವಿದ್ಯಾಮಾನಗಳು ಸಾಮಾನ್ಯ ವಿಜ್ಞಾನ ಕರ್ನಾಟಕದ ಇತಿಹಾಸ ಮತ್ತು ಭೂಗೊಳಶಾಸ್ತ್ರ ಸಮಾಜ ವಿಜ್ಞಾನ ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಸಾರ್ವಜನಿಕ ಆಡಳಿತ ಮತ್ತು ಗ್ರಾಮೀಣಾಭಿವೃದ್ದಿ ಪರಿಸರ ವಿಜ್ಞಾನ ವ ುತ್ತು ತಾರ್ಕಿಕ ಚಿಂತನೆ 100 2 ಘಂಟೆ 300 105
ಪತ್ರಿಕೆ- II ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ, 1987 ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿಯಮಗಳು, 1996 ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿಬಂದನೆಗಳು, 1997 ಕರ್ನಾಟಕ ಸೇವಾ ನಾಗರಿಕ ನಿಯಮಗಳು ಕರ್ನಾಟಕ ಆರ್ಥಿಕ ಸಂಹಿತೆ, 1958 ಭಾರತದ ಸಂವಿಧಾನ ಸಿವಿಲ್ ಪ್ರಕ್ರಿಯಾ ಸಂಹಿತೆ, 1908 ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023 ಭಾರತೀಯ ನ್ಯಾಯ ಸಂಹಿತಾ, 2023 ಭಾರತೀಯ ಸಾಕ್ಷ ಅಧಿನಿಯಮ, 2023 ಕನ್ನಡ ಸಾಮಾನ್ಯ ಭಾಷಾ ಜ್ಞಾನ 100 2 ಘಂಟೆ 300 105
6

(ii) ಋುಣಾತ್ಮಕ ಮೌಲ್ಯಮಾಪನ (Negative Valuation) :

ಎ) ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ-1 ಮತ್ತು ಪ್ರಶ್ನೆ ಪತ್ರಿಕೆ - 2 ರಲ್ಲಿ, ಪ್ರತಿ ಪ್ರಶ್ನೆಗೆ ನಾಲ್ಕು ಪರ್ಯಾಯ ಉತ್ತರಗಳಿದ್ದು, ಅಭ್ಯರ್ಥಿಯು ಕೇವಲ ಒಂದು ಉತ್ತರವನ್ನು ಆಯ್ಕೆ ಮಾಡತಕ್ಕದ್ದು. ಪ್ರತಿಯೊಂದು ತಪ್ಪು ಉತ್ತರಕ್ಕೆ 1/4ಣh (0.75) ರಷ್ಟು ಅಂಕವನ್ನು ಕಡಿತಗೊಳಿಸಲಾಗುವುದು.

ಬಿ) ಒ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಪ್ರತಿಯೊಂದು ಪ್ರಶ್ನೆಗೆ 5ನೇ ಆಯ್ಕೆ/ವೃತ್ತವಿರುತ್ತದೆ. ಉತ್ತಿರಿಸದ ಪ್ರಶ್ನೆಗಳಿಗೆ ಅಭ್ಯರ್ಥಿಯು 5ನೇ ಆಯ್ಕೆ / ವೃತ್ತವನ್ನು ಗುರುತು ಮಾಡತಕ್ಕದ್ದು. ಒಂದು ವೇಳೆ ಯಾವುದೇ ಆಯ್ಕೆ/ವೃತ್ತವನ್ನು ಗುರುತು ಮಾಡದೇ ಇದ್ದಲ್ಲಿ 1/4ಣh (0.75) ರಷ್ಟು ಅಂಕವನ್ನು ಕಡಿತಗೊಳಿಸಲಾಗುತ್ತದೆ.

ಸಿ) ಋುಣಾತ್ಮಕ ಮೌಲ್ಯಮಾಪನವನ್ನು ತಪ್ಪಿಸಲು 5ನೇ ಆಯ್ಕೆ/ ವೃತ್ತವನ್ನು ಗುರುತಿಸಲು ಕೊನೆಯ ಬೆಲ್ ಆದ ನಂತರ ಹೆಚ್ಚುವರಿ 05 ನಿಮಿಷಗಳ ಕಾಲಾವಕಾಶವನ್ನು ನೀಡಲಾಗುವುದು.

(iii) ಸಂದರ್ಶನ :

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು, ಪ್ರತಿ ಮೀಸಲಾತಿ ವಿಭಾಗದಲ್ಲಿ 1:5 ರ ಅನುಪಾತದಂತೆ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದ ಅಂಕಗಳು ಈ ಕೆಳಕಂಡಂತಿವೆ :

ವಿವರ ಗ ರಿಷ್ಟ ಅಂಕಗಳು ಕನಿಷ್ಟ ಅಂಕಗಳು
ಸಂದರ್ಶನ (ಗಿiತಚಿ-ಗಿಠಛಿಜ) 20 10

ಭಾಗ - ಬಿ

I. ಸಾಮಾನ್ಯ ಸೂಚನೆಗಳು:

ಅಭ್ಯರ್ಥಿಯು ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಮೊದಲು ಎಲ್ಲಾ ಸೂಚನೆಗಳನ್ನು ಓದಿಕೊಳ್ಳತಕ್ಕದ್ದು.

ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವಾಗ, ಅಭ್ಯರ್ಥಿಯು ಅರ್ಹತಾ ಮತ್ತು ಇತರೆ ಮಾನದಂಡಗಳನ್ನು ಪೂರೈಸಿದ್ದಾರೆಂದು ಹಾಗೂ ಒದಗಿಸಿದ ಎಲ್ಲಾ ವಿವರಗಳು ಸರಿಯಾಗಿವೆಯೆಂದು ಖಚಿತಪಡಿಸಿಕೊಳ್ಳಬೇಕು. ಆನ್‌ಲೈನ್‌ನಲ್ಲಿ ಮಾಹಿತಿಯನ್ನು ಒದಗಿಸುವಾಗ ಅಭ್ಯರ್ಥಿಯು ಸಂಬಂಧಪಟ್ಟ ಅಂಕಪಟ್ಟಿಗಳು ಮತ್ತು ಶೈಕ್ಷಣಿಕ ಅರ್ಹತೆ / ಮೀಸಲಾತಿಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು.

II. ಅರ್ಹತಾ ಷರತ್ತುಗಳು:

(i) ಅಭ್ಯರ್ಥಿಯು ಕಡ್ಡಾಯವಾಗಿ ಭಾರತೀಯ ನಾಗರಿಕನಾಗಿರಬೇಕು.

7

(ii) ಒಬ್ಬ ಜೀವಂತ ಪತ್ನಿಗಿಂತ ಹೆಚ್ಚು ಮಂದಿ ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಹೆಂಡತಿ ಇರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯು ಸರ್ಕಾರದಿಂದ ಪೂರ್ವಾನುಮತಿಯನ್ನು ಪಡೆಯದೇ ನೇಮಕಾತಿಗೆ ಅರ್ಹರಾಗುವುದಿಲ್ಲ.

(iii) ಅಭ್ಯರ್ಥಿಯು ನಿರ್ದಿಷ್ಠ ಅಂಗವೈಕಲ್ಯತೆಯಡಿಯಲ್ಲಿ ವಿಯಾಯಿತಿ ಕೇಳದೇ ಇದ್ದಲ್ಲಿ ಆತನು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತನಾಗಿರಬೇಕು ಹಾಗೂ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವ ಯಾವುದೇ ದೈಹಿಕ ನ್ಯೂನ್ಯತೆ ಇರಬಾರದು. ಒಂದು ವೇಳೆ, ವೈದ್ಯಕೀಯ ಮಂಡಳಿ ಅಭ್ಯರ್ಥಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಡತೆ ಇಲ್ಲ ಎಂದು ಅಭಿಪ್ರಾಯಪಟ್ಟಲ್ಲಿ ಅಂತಹ ಅಭ್ಯರ್ಥಿಯ ನೇಮಕಾತಿಯನ್ನು ರದ್ದುಗೊಳಿಸುವ ಅಧಿಕಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಇರುತ್ತದೆ.

(iತ) ಕೇಂದ್ರ ಅಥವಾ ಕರ್ನಾಟಕ ರಾಜ್ಯ ಅಥವಾ ಇತರೆ ರಾಜ್ಯದ ಲೋಕಸೇವಾ ಆಯೋಗ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ಯಾವುದೇ ವಿಶ್ವವಿದ್ಯಾಲಯಗಳಿಂದ ನಡೆಸಲಾಗುವ ಪರೀಕ್ಷೆಗಳಿಂದ ಅಥವಾ ನೇಮಕಾತಿಗಳಿಂದ ಖಾಯಂ ಆಗಿ ಡಿಬಾರ್ ಆದ ವ್ಯಕ್ತಿಗಳು ನೇಮಕಾತಿಗೆ ಅರ್ಹರಾಗುವುದಿಲ್ಲ.

(ತ) ಯಾವುದೇ ನೈತಿಕ ಪರಿಭಾಷೆಯ ಶಿಕ್ಷೆಗೆ ಒಳಪಟ್ಟ ವ್ಯಕ್ತಿ ಅಥವಾ ಕೇಂದ್ರ ಅಥವಾ ಕರ್ನಾಟಕ ರಾಜ್ಯ ಅಥವಾ ಇತರೆ ರಾಜ್ಯದ ಲೋಕಸೇವಾ ಆಯೋಗ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ಯಾವುದೇ ವಿಶ್ವವಿದ್ಯಾಲಯಗಳಿಂದ ನಡೆಸಲಾಗುವ ಪರೀಕ್ಷೆಗಳಿಂದ ಅಥವಾ ನೇಮಕಾತಿಗಳಿಂದ ತಾತ್ಕಾಲಿಕವಾಗಿ ಡಿಬಾರ್ ಆದ ಅಥವಾ ಅನರ್ಹಗೊಂಡ ವ್ಯಕ್ತಿಯು, ಸರ್ಕಾರವು ಎಲ್ಲಾ ಸಂದರ್ಭಗಳನ್ನು ಮರುಪರಿಶೀಲಿಸಿ ಅವರು ನೇಮಕಾತಿಗೆ ಅರ್ಹರೆಂದು ಪರಿಗಣಿಸುವವರೆಗೂ ನೇಮಕಾತಿಗೆ ಅರ್ಹರಾಗುವುದಿಲ್ಲ.

(ತi) ಅಭ್ಯರ್ಥಿಯ ವಿರುದ್ದ ಯಾವುದೇ ಕ್ರಿಮಿನಲ್ ಪ್ರಕರಣ ಇರಬಾರದು.

III. ಸಂದೇಹ ನಿವಾರಣೆಗಾಗಿ ದೂರವಾಣಿ ಸಂಖ್ಯೆ :

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ : 080-23460460 (ಬೆಳಗ್ಗೆ 09.00 ರಿಂದ ಸಂಜೆ 07.00 ಘಂಟೆವರೆಗೆ - ಕೆಲಸದ ದಿನಗಳಲ್ಲಿ ಮಾತ್ರ)

IV. ಅನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನ :

ಎ) ಅಭ್ಯರ್ಥಿಯು ಆನ್‌ಲೈನ್ ಮೂಲಕ ಅರ್ಜಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ hಣಣp://ಛಿಜಣಠಟಿಟiಟಿಜ.kಚಿಡಿಟಿಚಿಣಚಿkಚಿ.ರಠತ.iಟಿ/kಜಚಿ/iಟಿಜಜಥಟಿಜತಿ ವೆಬ್‌ಸೈಟ್‌ನಲ್ಲಿ ಸಲ್ಲಿಸತಕ್ಕದ್ದು. (ಆನ್‌ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಿಂದ ಕಳುಹಿಸಲಾದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.)

ಬಿ) ಅಭ್ಯರ್ಥಿಯು ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವಾಗ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ, ಉಲ್ಲೇಖಿಸಲಾದ ಸೂಚನೆಗೆ ಅನುಗುಣವಾಗಿ ಶುಲ್ಕವನ್ನು ಪಾವತಿಸತಕ್ಕದ್ದು. ಒಮ್ಮೆ ಸಲ್ಲಿಸಿದ ಅರ್ಜಿಯ ತಿದ್ದುಪಡಿಗೆ ಅವಕಾಶವಿರುವುದಿಲ್ಲ.

ಸಿ) ಅಭ್ಯರ್ಥಿಯು ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವಾಗ ಸಂವಹನಕ್ಕಾಗಿ ಸಂಬಂಧಿತ ಕಾಲಂಗಳಲ್ಲಿ ಕಡ್ಡಾಯವಾಗಿ ಅವನ/ಅವಳ ಚಾಲ್ತಿಯಲ್ಲಿರುವ ಅಂಚೆ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇ- ಮೇಲ್ ಐಡಿಯನ್ನು ಒದಗಿಸಬೇಕು. ತಪ್ಪಾದ ಮಾಹಿತಿಯನ್ನು ಒದಗಿಸಿದಲ್ಲಿ ಎಸ್ಎಂಎಸ್/ಇ- ಮೇಲ್/ವಾಟ್ಸ್ಆಪ್ ಮುಖಾಂತರ ಸೂಚನೆ/ಸಂದೇಶಗಳು ಅಭ್ಯರ್ಥಿಗೆ ತಲುಪದಿದ್ದಲ್ಲಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜವಾಬ್ದಾರರಾಗಿರುವುದಿಲ್ಲ.

8

ಡಿ) ಅಭ್ಯರ್ಥಿಯು ತನ್ನ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಶ್ವೇತ ವರ್ಣದ ಹಿನ್ನಲೆಯುಳ್ಳ ಛಾಯಾಚಿತ್ರವನ್ನು ಸ್ಕ್ಯಾನ್ ಮಾಡಬೇಕು (5 ಸೆ.ಮೀ. ಉದ್ದ ಘಿ 3.5 ಸೆ.ಮೀ. ಅಗಲ ಮತ್ತು ಗರಿಷ್ಠ 50 ಕೆಬಿ ಯಿಂದ 200 ಕೆಬಿ ಗಾತ್ರ) ಮತ್ತು ಕಪ್ಪು ಬಾಲ್ ಪಾಯಿಂಟ್ ಪೆನ್‌ನಲ್ಲಿ ಬಿಳಿ ಕಾಗದದ ಮೇಲೆ ಸಹಿಯನ್ನು (2.5 ಸೆ.ಮೀ. ಉದ್ದ ಘಿ 7.5 ಸೆ.ಮೀ. ಅಗಲ ಮತ್ತು ಗರಿಷ್ಠ 25 ಕೆಬಿ ಯಿಂದ 50 ಕೆ.ಬಿ. ಗಾತ್ರ) ರಿpರ ಸ್ವರೂಪದಲ್ಲಿ ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವಾಗ ಅಪ್‌ಲೋಡ್ ಮಾಡತಕ್ಕದ್ದು. ರಿpರ ಚಿತ್ರಗಳು ಸ್ಪಷ್ಟವಾಗಿ ಕಾಣುವಂತಿರಬೇಕು, ಹಾಗೆ ಇಲ್ಲದಿದ್ದಲ್ಲಿ ಅಂತಹ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.

ಇ) ಅಭ್ಯರ್ಥಿಯು ಈ ಕೆಳಗಿನ ಮಾಹಿತಿಯನ್ನು ಆನ್‌ಲೈನ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಒದಗಿಸಬೇಕು ;

(i) ಆಧಾರ್ ಕಾರ್ಡ್ ಸಂಖ್ಯೆ (ii) ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ನೋಂದಣಿ ಸಂಖ್ಯೆ (iii) ಕಾನೂನು ಪದವಿ ಅಂಕಪಟ್ಟಿಯ ವಿವರ (iತ) ಜಾತಿ ಮತ್ತು ಆದಾಯ ಪ್ರಮಾಣಪತ್ರ, ಅನ್ವಯಿಸಿದರೆ ಮಾತ್ರ (ತ) ಕಲ್ಯಾಣ ಕರ್ನಾಟಕ ಪ್ರದೇಶದ ಮೀಸಲಾತಿ (371-ಜೆ ಸ್ಥಳೀಯ ವೃಂದ) ಪ್ರಮಾಣಪತ್ರ ಎಫ್) ಆನ್‌ಲೈನ್ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸುವ ಮೊದಲು, ಅಭ್ಯರ್ಥಿಯು ಸರಿಯಾಗಿ ಭರ್ತಿ ಮಾಡಿದ ಅರ್ಜಿಯನ್ನು ಪೂರ್ವವೀಕ್ಷಣೆ (ಕಡಿಜತiಜತಿ) ಮಾಡಬಹುದು. ಅಭ್ಯರ್ಥಿಯು ಭರ್ತಿ ಮಾಡಿದ ಅರ್ಜಿಯನ್ನು ತನ್ನ ದಾಖಲೆಗಾಗಿ ಮುದ್ರಿಸಿಟ್ಟುಕೊಳ್ಳತಕ್ಕದ್ದು.

ಜಿ) ಅಭ್ಯರ್ಥಿಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಒದಗಿಸಲಾಗುವ ಲಿಂಕ್‌ನಿಂದ ಸೂಚನಾ / ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ / ಸಂದರ್ಶನಕ್ಕೆ ಅರ್ಹತೆಯ ಕುರಿತು ಮಾಹಿತಿಗಾಗಿ ತಮ್ಮ ಅರ್ಜಿ ಸಂಖ್ಯೆಯನ್ನು ಜಾಗರೂಕತೆಯಿಂದ ಇಟ್ಟುಕೊಳ್ಳತಕ್ಕದ್ದು.

ಹೆಚ್) (i) ಅಭ್ಯರ್ಥಿಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಜಾಲತಾಣದಲ್ಲಿ ನಿಯಮಿತವಾಗಿ ಶಾಖಾಧಿಕಾರಿ ಹುದ್ದೆಗಳ ಕುರಿತಾದ ಮಾಹಿತಿ ಪಡೆಯಬಹುದು.

(ii) ಸ್ಪರ್ದಾತ್ಮಕ ಪರೀಕ್ಷೆಗೆ / ಸಂದರ್ಶನಕ್ಕೆ ಆಯ್ಕೆ ಮಾಡಲಾಗುವ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಈ ಕೆಳಗಿನ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ.

ಎ) hಣಣp://ಛಿಜಣಠಟಿಟiಟಿಜ.kಚಿಡಿಟಿಚಿಣಚಿkಚಿ.ರಠತ.iಟಿ/kಜಚಿ/iಟಿಜಜಥಟಿಜತಿ

ಮತ್ತು ಬಿ) hಣಣp://kಚಿಡಿಟಿಚಿಣಚಿkಚಿ.ಟಿಚಿಟಚಿ.ರಠತ.iಟಿ

(iii) ಅರ್ಹ ಅಭ್ಯರ್ಥಿಗಳಿಗೆ ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ನಮೂದಿಸಿದ ಇ- ಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಗೆ ಇ-ಮೇಲ್/ ಎಸ್ಎಂಎಸ್/ ವಾಟ್ಸ್ಆಪ್ ಮುಖಾಂತರ ಮಾಹಿತಿಯನ್ನು ಕಳುಹಿಸಲಾಗುತ್ತದೆ.

ಐ) ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ, ಅಂತಿಮವಾಗಿ ಸಲ್ಲಿಸಿದ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಕೊನೆಯದಾಗಿ ಸಲ್ಲಿಸಿದ ಅರ್ಜಿಯನ್ನು ಬಿಟ್ಟು ಉಳಿದ ಯಾವುದೇ ಕೋರಿಕೆಯನ್ನು ಪರಿಗಣಿಸುವುದಿಲ್ಲ. ಅರ್ಜಿಗಳು ತಿರಸ್ಕøತವಾಗುತ್ತವೆ ಮತ್ತು ಈ ಸಂಬಂಧ9 ಜೆ) ಅಭ್ಯರ್ಥಿಯು ಸ್ಪರ್ಧಾತ್ಮಕ ಪರೀಕ್ಷೆಗೆ ಮತ್ತು ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಲ್ಲೇ ಹಾಜರಾಗತಕ್ಕದ್ದು.

V. ಮೀಸಲಾತಿ ಕೋರುವ ಅಭ ್ಯರ್ಥಿಗಳು ಹೊಂದಿರಬೇಕಾದ ದಾಖಲೆಗಳು:

ಕಲ್ಯಾಣ ಕರ್ನಾಟಕ ಪ ್ರದೇಶ (ಸ್ಥಳೀಯ ವೃಂದ) ಸಂವಿಧಾನದ ಅನುಚ್ಛೇದ 371-ಜೆ ಅಡಿಯಲ್ಲಿನ ಕಲ್ಯಾಣ ಕ ರ್ನಾಟಕ ಪ್ರದೇಶದಡಿಯಲ್ಲಿ ಮೀಸಲಾತಿಯನ್ನು ಕ ೂೕರುವ ೆ ಅಭ್ಯರ್ಥಿಗಳು, ಕರ್ನಾಟಕ ಸರ್ಕಾರಿ ಉದ್ಯೋಗ (ಹೈದರಾಬಾದ್- ಕರ್ನಾಟಕ ಪ್ರದೇಶ ಅರ್ಹತಾ ಪ್ರಮಾಣ ಪತ್ರಗಳು) ನಿಯಮಗಳು, 2013ರ ಅಡಿಯಲ್ಲಿ ಗೊತ್ತುಪಡಿಸಿದಂತೆ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ ಅಥವಾ ಅದಕ್ಕೂ ಮುಂಚಿತವಾಗಿಯೇ ಸಕ್ಷಮ ಪ್ರಾಧಿಕಾರವು ನೀಡುವ ಅರ್ಹತಾ ಪ್ರಮಾಣ ಪತ್ರವನ್ನು ಹೊಂದಿರತಕ್ಕದ್ದು.
ಜಾತಿ ಮೀಸಲಾತಿ (1) ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕದಂದು ನಿಗದಿತ ನ ಮೂನೆಯಲ್ಲಿ ಪ ್ರಮಾಣಪತ್ರವನ್ನು ಹೊಂದಿರಬೇಕು.
(2) ಜಾತಿ ಪ್ರಮಾಣಪತ್ರದ ನಿಗದಿತ ನಮೂನೆ:
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ನಮೂನೆ – ಡಿ
ಪ್ರವರ್ಗ-ಋ ನಮೂನೆ - ಇ
ಪ್ರವರ್ಗ- ಋಋ(ಂ)/ ಋಋ(ಃ)/ ಋಋಋ(ಂ)/ ಋಋಋ(ಃ) ನಮೂನೆ – ಎಫ್

VI. ಇತರೆ ಮೀಸಲಾತಿ ಕೋರುವ ಅಭ ್ಯರ್ಥಿಗಳು ಹೊಂದಿರಬೇಕಾದ ದಾಖಲೆಗಳು:

ಸೇವಾನಿರತ ಅಭ್ಯರ್ಥಿಗಳು ಆಯ್ಕೆ ಪಟ್ಟಿ ಬಿಡುಗಡೆಯಾದ ತ ಕ್ಷಣ ಸೇವಾನಿರತ ಅಭ್ಯರ್ಥಿಗಳು ನಿರಾಪೇಕ್ಷಣಾ ಪ್ರಮಾಣಪತ್ರ (ಓಔಅ) ವನ್ನು ನೇಮಕಾತಿ ಆದೇಶ ನೀಡುವ ಮೊದಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಗೆ ಸಲ್ಲಿಸಬೇಕು.
ಆನ್‌ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ನಂತರ ಪಡೆದ ಜಾತಿ ಪ್ರಮಾಣಪತ್ರ ಮತ್ತು ಇತರೆ ಮೀಸಲಾತಿಯ ಪ್ರಮಾಣಪತ್ರಗಳನ್ನು ಪರಿಗಣಿಸಲಾಗುವುದಿಲ್ಲ.

(i) ಅಭ್ಯರ್ಥಿಗಳು ಕೋರಿದ ಶೈಕ್ಷಣಿಕ ಅರ್ಹತೆ, ಜಾತಿ ಮತ್ತು ಇತರೆ ಮೀಸಲಾತಿಗಳಿಗೆ ಸಂಬಂಧಿಸಿದ ಮೂಲ ದಾಖಲಾತಿಗಳನ್ನು ಸಂದರ್ಶನ/ಪರಿಶೀಲನೆಯ ಸಮಯದಲ್ಲಿ ಹಾಜರುಪಡಿಸಬೇಕು. ಯಾವುದೇ ಅಭ್ಯರ್ಥಿ, ಸಂದರ್ಶನ / ಪರಿಶೀಲನೆಯ ಸಮಯದಲ್ಲಿ ಮೂಲ ದಾಖಲಾತಿಗಳನ್ನು ಸಲ್ಲಿಸಲು ವಿಫಲರಾದರೆ, ಅಂತಹ ಅಭ್ಯರ್ಥಿಗಳ ಮೀಸಲಾತಿಯನ್ನು ರದ್ದುಗೊಳಿಸಿ, ಅರ್ಹರಿದ್ದಲ್ಲಿ, ಸಾಮಾನ್ಯ ವರ್ಗದ ಅಡಿಯಲ್ಲಿ ಮಾತ್ರ ಪರಿಗಣಿಸಲಾಗುವುದು.

(ii) ನಿಗದಿತವಲ್ಲದ ನಮೂನೆಯಲ್ಲಿ ಮೀಸಲಾತಿ ಪ್ರಮಾಣಪತ್ರಗಳನ್ನು ಸಲ್ಲಿಸಿದರೆ, ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಖ.ಓ.ಋ. ಓಠ. ಏಂಖಃಋಐ/2001/47147 ಕಔಖಖಿಂಐ ಖಇಉಓ. ಓಠ. ಖಓಕ/ಏಂ/ಃಉಖ/2202/2017-19

ಐiಛಿಜಟಿಜಜ ಣಠ pಠಣ ತಿiಣhಠಣಣ pಡಿಜpಚಿಥಿಟಜಟಿಣ WPP No. 29710 VII. ಸ್ಪರ್ದಾತ್ಮಕ ಪರೀಕ್ಷೆಗೆ / ಸಂದರ್ಶನಕ್ಕೆ ಕರೆಯಲಾದ ಅಭ್ಯರ್ಥಿಯು ಸೂಚನಾ ಪತ್ರದೊಂದಿಗೆ, ಮೂಲ ಗುರುತಿನ ಚೀಟಿ (ವಾಹನ ಚಾಲನಾ ಪರವಾನಗಿ/ ಆದಾರ್ ಕಾರ್ಡ್/ ಪ್ಯಾನ್‌ಕಾರ್ಡ್/ ಪಾಸ್‌ಪೋರ್ಟ್/ ವೋಟರ್ ಐಡಿ) ಯನ್ನು ಭಾಗ-ಬಿ-ಋಗಿ(ಇ) ನಲ್ಲಿ ಉಲ್ಲೇಖಿಸಿರುವ ಮೀಸಲಾತಿ ದಾಖಲೆಗಳೊಂದಿಗೆ ಹಾಜರಾಗಬೇಕು.

VIII. ನಡತೆ ಪ ್ರಮಾಣಪತ ್ರಗಳು :

ಎ) ಅಭ್ಯರ್ಥಿಯು ಕಾನೂನು ಪದವಿ ಪೂರ್ಣಗೊಳಿಸಿದ ಸಂಸ್ಥೆಯ ಮುಖ್ಯಸ್ಥರಿಂದ ವಿದ್ಯಾಭ್ಯಾಸದ ವಿವರಗಳೊಂದಿಗೆ ಪಡೆದ ಒಂದು ಪ್ರಮಾಣಪತ್ರ, ಮತ್ತು

ಬಿ) ಸಂಬಂಧಿಕರಲ್ಲದ ಆದರೆ ಅಭ್ಯರ್ಥಿಯೊಂದಿಗೆ ಚಿರಪರಿಚಿತರಾಗಿರುವ ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ಪಡೆದ ಎರಡು ಪ್ರಮಾಣಪತ್ರಗಳು.

IX. ಆನ್‌ಲೈನ್ ಅರ್ಜಿಯಲ್ಲಿ ಮತ್ತು ಪರಿಶೀಲನೆಯ ಸಮಯದಲ್ಲಿ ಸಲ್ಲಿಸಲಾಗುವ ಮೂಲ ದಾಖಲೆಗಳಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬಂದರೆ, ಅಭ್ಯರ್ಥಿಯ ಉಮೇದುವಾರಿಕೆಯನ್ನು ರದ್ದುಗೊಳಿಸಲಾಗುವುದು.

X. ಸ್ಪರ್ದಾತ್ಮಕ ಪರೀಕ್ಷೆಗೆ / ಸಂದರ್ಶನಕ್ಕೆ ಹಾಜರಾದ ಮಾತ್ರಕ್ಕೆ ನೇಮಕಾತಿಗೆ ಯಾವುದೇ ಹಕ್ಕನ್ನು ನೀಡಿದಂತಾಗುವುದಿಲ್ಲ ಮತ್ತು ಅಭ್ಯರ್ಥಿಯು ನೇಮಕಕ್ಕೆ ಎಲ್ಲಾ ರೀತಿಯಲ್ಲಿ ಸೂಕ್ತ ಮತ್ತು ಅಗತ್ಯವೆಂದು ಪರಿಗಣಿಸಬಹುದಾದ ವಿಚಾರಣೆಗಳ ನಂತರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ತೃಪ್ತಿ ಹೊಂದದ ಹೊರತು ಯಾವುದೇ ಅಭ್ಯರ್ಥಿಯನ್ನು ಹುದ್ದೆಗೆ ನೇಮಿಸಲಾಗುವುದಿಲ್ಲ.

XI. ಶಾಖಾಧಿಕಾರಿ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಯನ್ನೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ರಾಜ್ಯದ ಯಾವುದೇ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಛೇರಿಗೆ ನಿಯುಕ್ತಿಗೊಳಿಸಬಹುದಾಗಿರುತ್ತದೆ.

XII. ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಭ್ಯರ್ಥಿಯು ಪ್ರಭಾವ ಬೀರಲು ಪ್ರಯತ್ನಿಸಿದ್ದಲ್ಲಿ, ನೇಮಕಾತಿಗೆ ಅನರ್ಹನಾಗುತ್ತಾನೆ/ಳೆ.

XIII. ಒಂದು ವೇಳೆ ಕನ್ನಡ ಮತ್ತು ಇಂಗ್ಲೀಷ್ ಆವೃತ್ತಿಗಳ ಅಧಿಸೂಚನೆಗಳ ನಡುವೆ ಯಾವುದೇ ಅಸಂಗತತೆ ಉಂಟಾದರೆ, ಇಂಗ್ಲೀಷ್ ಆವೃತ್ತಿಯ ಅಧಿಸೂಚನೆ ಮಾನ್ಯವಾಗುತ್ತದೆ.

XIV. ನೇಮಕಾತಿಯ/ಪರಿಶೀಲನೆ ಹಂತದಲ್ಲಿ ಅಥವಾ ನೇಮಕಾತಿಯ ನಂತರ ಅಭ್ಯರ್ಥಿಯು ಅರ್ಜಿಯಲ್ಲಿ ಒದಗಿಸಿರುವ ಮಾಹಿತಿಯು ಸುಳ್ಳು ಎಂದು ಕಂಡುಬಂದಲ್ಲಿ ಅಥವಾ ಅಭ್ಯರ್ಥಿಯು ಯಾವುದೇ ಅರ್ಹತಾ ಮಾನದಂಡಗಳನ್ನು ಪೂರೈಸದಿದ್ದಲ್ಲಿ ಅಥವಾ ಅಭ್ಯರ್ಥಿಯು ಯಾವುದೇ ವಸ್ತುನಿಷ್ಠ ಸತ್ಯಗಳನ್ನು ತಿರುಚಿದರೆ ಅಥವಾ ಮೊಟಕುಗೊಳಿಸಿದರೆ, ಅಭ್ಯರ್ಥಿಯ ಉಮೇದುವಾರಿಕೆಯು ರದ್ದುಗೊಳ್ಳುತ್ತದೆ.

XV. ಸುಳ್ಳು ಅಥವಾ ತಪ್ಪಾದ ಮಾಹಿತಿಯನ್ನು ಒದಗಿಸಿದಂತಹ ಅಭ್ಯರ್ಥಿಯು ಅನರ್ಹತೆಗೆ ಒಳಪಡುವುದಲ್ಲದೆ ಕ್ರಿಮಿನಲ್ ಮೊಕದ್ದಮೆಗೆ ಹೊಣೆಗಾರನಾಗುತ್ತಾನೆ/ಳೆ.

ಗೌರವಾನಿತ ಕಾರ್ಯನಿರ್ವಾಹಕ ಅಧ್ಯಕ್ಷರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ರವರ ಆದೇಶಾನುಸಾರ ಸಹಿ/-

(ಹೆಚ್. ಶಶಿಧ ರ ಶೆಟ್ಟಿ) ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು

[

ಮುದ(cid:206)ಕರು (cid:178)ಾಗೂ ಪ(cid:206)(cid:144)ಾಶಕರು:- ಸಂಕಲ(cid:163)ಾ(cid:297)(cid:144)ಾ(cid:312)ಗಳ(cid:133), ಕ(cid:163)ಾ(cid:143)ಟಕ (cid:170)ಾಜ(cid:205)ಪತ(cid:206), ಸ(cid:144)ಾ(cid:143)(cid:312) (cid:144)ೇಂದ(cid:206) ಮುದ(cid:206)(cid:158)ಾಲಯ, (cid:166)ೆಂಗಳ(cid:136)ರು

Cite this issue. Karnataka ExtraOrdinary Gazette, Government of Karnataka, 16 April 2026. Indian Gazettes, https://egazette.servantsofknowledge.in/details/in.gazette.karnataka_eo.2026-04-16.10180/. Archive identifier in.gazette.karnataka_eo.2026-04-16.10180.