Servants of Knowledge
Karnataka ExtraOrdinary Gazette · Government of Karnataka

ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು W.P No. 35777/2025 ರಲ್ಲಿ ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವ ಬಗ್ಗೆ.

Published 09 July 2026

Department
DPAR
Type
Extra Ordinary
Identifier
in.gazette.karnataka_eo.2026-07-09.10633
Languages
English, Kannada
Published at
Original source ↗

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರಿಕೆ

ನಂ. ೫೧೫ ಭಾಗ -೧

ಬೆಂಗಳೂರು, ಗುರುವಾರ , ೦೯ , ಜುಲೈ, ೨೦೨೬ ( ಆಷಾಢ , ೧೮ , ಶಕವರ್ಷ, ೧೯೪೮)

Part- I

No. 515 BENGALURU, THURSDAY , 09 , JULY, 2026 ( ASHADHA , 18 , SHAKAVARSHA , 1948 )

ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರದ ಸಚಿವಾಲಯ, ಸಂಖ್ಯೆ : ಸಿಆಸುಇ 3 ಸೇನೌವ 2026

ವಿಧಾನ ಸೌಧ ,

ಡಾ|| ಬಿ.ಆರ್ ಅಂಬೇಡ್ಕ‌ರ್ ವೀದಿ , , 2 : 09.07.2026

ಸುತ್ತೋಲೆ

ವಿಷಯ: ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು W.P. No.35777/2025 ರಲ್ಲಿ ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವ ಬಗ್ಗೆ .

ಉಲ್ಲೇಖ : ( 1 ) ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 14 ಸೇನೌವ 2025 ದಿನಾಂಕ : 12.05.2025

(2 ) ಇದೇ ಸಮ ಸಂಖ್ಯೆಯ ಸುತ್ತೋಲೆ ದಿನಾಂಕ : 30.03.2026 .

ಆರ್ಥಿಕ ಇಲಾಖೆಯ ವ್ಯಾಪ್ತಿಗೊಳಪಡುವ ಅಬಕಾರಿ ಇಲಾಖೆಯ ಸೇವೆಗೆ ಸೇರಿದ ಅಬಕಾರಿ ಉಪ ಅಯುಕ್ತರಾದ ಶ್ರೀ ಕೆ . ಅರುಣ್ ಕುಮಾರ್ ಇವರಿಗೆ ಸ್ಥಳನಿಯುಕ್ತಿಗೊಳಿಸದೆ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ, ಸದರಿಯವರು ಮಾನ್ಯ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ರಿಟ್ ಅರ್ಜಿ ಸಂಖ್ಯೆ : 35777/2025 ರ ದಿನಾಂಕ : 30.01.2026 ರಂದು ಮಾನ್ಯ ನ್ಯಾಯಾಲಯವು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ , ಯಾವುದೇ ನೌಕರರು ಸ್ಥಳ ನಿಯುಕ್ತಿಗಾಗಿ ಕಾಯದಂತೆ ಕಡ್ಡಾಯವಾಗಿ ಸ್ಥಳ ನಿಯುಕ್ತಿ ನೀಡತಕ್ಕದ್ದೆಂದು ಹಾಗೂ ಈ ಸೂಚನೆಗಳನ್ನು ಉಲ್ಲಂಘಿಸಿ ವರ್ಗಾವಣೆಗಳಲ್ಲಿ ಸರ್ಕಾರಿ ನೌಕರರಿಗೆ ಸ್ಥಳನಿಯುಕ್ತಿ ನೀಡದೇ ಕಡ್ಡಾಯ ನಿರೀಕ್ಷಣೆಯಲ್ಲಿರಿಸಿದಲ್ಲಿ, ಮಾನ್ಯ ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಆ ಅವಧಿಗೆ ಪಾವತಿಸಲಾದ ವೇತನ ಮತ್ತು ಭತ್ಯೆಯನ್ನು ಸಂಬಂಧಿತ ಸಕ್ಷಮ ಪ್ರಾಧಿಕಾರಗಳಿಂದ ವಸೂಲಿ ಮಾಡಲಾಗುವುದೆಂದು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿ /

(0) R.N.I. No. KARBIL / 2001 / 47147 POSTAL REGN . No. RNP / KA/ BGS / 2202/ 2017-19

Licensed to post without prepayment WPP No. 297

و

ಸರ್ಕಾರದ ಪ್ರಧಾನ ಕಾರ್ಯದರ್ಶಿ / ಸರ್ಕಾರದ ಕಾರ್ಯದರ್ಶಿ ಹಾಗೂ ಇತರೆ ಸಂಬಂಧಿತ ಸಕ್ಷಮ ಪ್ರಾಧಿಕಾರಿಗಳು | ఇలాఖా ಮುಖ್ಯಸ್ಥರುಗಳಿಗೆ ಉಲ್ಲೇಖಿತ (2 ) ರ ಸುತ್ತೋಲೆಯಲ್ಲಿ ಸೂಚಿಸಲಾಗಿರುತ್ತದೆ .

ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಸಂಬಂಧ ರಾಜ್ಯ ಸರ್ಕಾರವು ಪ್ರತಿವರ್ಷವು ಹೊರಡಿಸುವ ಮಾರ್ಗಸೂಚಿಗಳಲ್ಲಿ, ವೃಂದ - ' ಎ' ಮತ್ತು ' ಬಿ ' ಗುಂಪಿಗೆ ಸೇರಿದ ಅಧಿಕಾರಿಗಳ ವರ್ಗಾವಣೆಗಳಿಗಾಗಿ ಸಂಬಂಧಪಟ್ಟ ಇಲಾಖಾ ಸಚಿವರುಗಳಿಗೆ ಹಾಗೂ ವೃಂದ - ' ಸಿ ' ಮತ್ತು ' ಡಿ ' ಗುಂಪಿನ ಸಿಬ್ಬಂದಿಗಳ ವರ್ಗಾವಣೆಗಳಿಗಾಗಿ ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ.

ಕೆಲವೊಂದು ಸಂದರ್ಭಗಳಲ್ಲಿ, ವರ್ಗಾವಣೆಗೊಂಡ ಅಧಿಕಾರಿಗಳಿಗೆ ಆಡಳಿತಾತ್ಮಕ ದೃಷ್ಟಿಯಿಂದ ತಕ್ಷಣ ಸ್ಥಳನಿಯುಕ್ತಿಗೊಳಿಸಲು ಸಾಧ್ಯವಾಗದೇ ಕಡ್ಡಾಯ ನಿರೀಕ್ಷಣೆಯಲ್ಲಿರಿಸುವ ಅನಿವಾರ್ಯ ಸನ್ನಿವೇಶ ಉದ್ಭವವಾಗುವುದನ್ನು ಹಾಗೂ ಆಡಳಿತಾತ್ಮಕ ಅನುಷ್ಠಾನದಲ್ಲಿ ಉಂಟಾಗುವ ತೊಂದರೆಗಳನ್ನು ಅರಿತು ದಿನಾಂಕ : 30.03.2026 ರ ಸುತ್ತೋಲೆಯನ್ನು ಹಿಂಪಡೆದು, ಕೆಳಕಂಡ ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಲಾಗಿದೆ:

1. ಸಾಮಾನ್ಯವಾಗಿ , ಯಾವುದೇ ಅಧಿಕಾರಿ/ನೌಕರರನ್ನು ವರ್ಗಾವಣೆ ಮಾಡುವಾಗ , ಅವರಿಗೆ ಮುಂದಿನ ಹುದ್ದೆ ( Next Posting ) ಸೂಚಿಸದೆ ವರ್ಗಾವಣೆ ಮಾಡತಕ್ಕದ್ದಲ್ಲ .

2. ಕಾನೂನು ಸಂಬಂಧಿತ ಸಮಸ್ಯೆಗಳು , ಅಮಾನತು ( Suspension ) , ಹಣದ ದುರ್ಬಳಕೆ (Misappropriation of funds ) , ថ ៩៩ ( Misuse of powers ) ತೀವ್ರ ಸ್ವರೂಪದ ಇಲಾಖಾ ವಿಚಾರಣೆ /ಗಂಭೀರ ಆರೋಪಗಳು ಬಾಕಿಯಿರುವ ಪ್ರಕರಣಗಳನ್ನು ಹೊರತುಪಡಿಸಿ , ಇತರ ಅನಿವಾರ್ಯ ಆಡಳಿತಾತ್ಮಕ ಕಾರಣಗಳಿಂದ ವರ್ಗಾವಣೆಗೊಂಡ ಅಧಿಕಾರಿ/ನೌಕರರಿಗೆ ತಕ್ಷಣ ಸ್ಥಳನಿಯುಕ್ತಿ ನೀಡಲು ಸಾಧ್ಯವಾಗದಿದ್ದಲ್ಲಿ , ವರ್ಗಾವಣೆಗೊಂಡ ಅಧಿಕಾರಿ/ನೌಕರರನ್ನು ಸಕ್ಷಮ ಪ್ರಾಧಿಕಾರಿಗಳ ಮಟ್ಟದಲ್ಲಿ ಗರಿಷ್ಠ ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಡ್ಡಾಯ ನಿರೀಕ್ಷಣೆಯಲ್ಲಿರಿಸತಕ್ಕದ್ದಲ್ಲ .

3. ವರ್ಗಾವಣೆಗೊಂಡ ಅಧಿಕಾರಿ/ನೌಕರರನ್ನು ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಡ್ಡಾಯ ನಿರೀಕ್ಷಣೆಯಲ್ಲಿ ಮುಂದುವರಿಸುವ ಆಡಳಿತಾತ್ಮಕ ಅನಿವಾರ್ಯತೆ ಇದ್ದಲ್ಲಿ , ಸಕ್ಷಮ ಪ್ರಾಧಿಕಾರಿಗಳು ಸೂಕ್ತ ಕಾರಣಗಳನ್ನು ಲಿಖಿತವಾಗಿ ದಾಖಲಿಸಿ , ಮಾನ್ಯ ಮುಖ್ಯಮಂತ್ರಿಯವರ ಪೂರ್ವಾನುಮೋದನೆ ಪಡೆದು, ಗರಿಷ್ಠ ಮೂರು ತಿಂಗಳವರೆಗೆ ಮಾತ್ರ ಕಡ್ಡಾಯ ನಿರೀಕ್ಷಣೆಯಲ್ಲಿರಿಸಬಹುದು .

( ಪ್ರತಿಭಾ.ಕೆ )

ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತುಆಡಳಿತ ಸುಧಾರಣೆ ಇಲಾಖೆ

( ಸೇವಾ ನಿಯಮಗಳು -3 )

ಮುದ್ರಕರು ಹಾಗೂ ಪ್ರಕಾಶಕರು: - ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ , ಬೆಂಗಳೂರು

MADESHWARA

NARASIMHA MURTHY JAYASIMHA

Cite this issue. Karnataka ExtraOrdinary Gazette, Government of Karnataka, 09 July 2026. Indian Gazettes, https://egazette.servantsofknowledge.in/details/in.gazette.karnataka_eo.2026-07-09.10633/. Archive identifier in.gazette.karnataka_eo.2026-07-09.10633.