Servants of Knowledge
Karnataka ExtraOrdinary Gazette · Government of Karnataka

2026-27 ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ- ವಿಸ್ತರಿಸಿರುವುದನ್ನು ಹಿಂಪಡೆಯುವ ಬಗ್ಗೆ.

Published 16 July 2026

Department
DPAR
Type
Extra Ordinary
Identifier
in.gazette.karnataka_eo.2026-07-16.10681
Languages
English, Kannada
Published at
Original source ↗

ಕರ್ನಾಟಕ ರಾಜ್ಯಪತ್ರ ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರಿಕೆ

ನಂ.೫೩೦ ಭಾಗ -೧

ಬೆಂಗಳೂರು , ಗುರುವಾರ , ೧೬ , ಜುಲೈ , ೨೦೨೬ ( ಆಷಾಢ , ೨೫ , ಶಕವರ್ಷ, ೧೯೪೮)

Part- I

No.530 BENGALURU, THURSDAY, 16, JULY, 2026 ( ASHADHA, 25, SHAKAVARSHA , 1948)

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: 2026-27ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ವಿಸ್ತರಿಸಿರುವುದನ್ನು ಹಿಂಪಡೆಯುವ ಬಗ್ಗೆ .

ಓದಲಾಗಿದೆ:

1 ) ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ 4 ಸೇನೌವ 2026 , ದಿನಾಂಕ : 13.04.2026 .

2 ) ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ 4 ಸೇನೌವ 2026 , ದಿನಾಂಕ : 01.06.2026 .

3 ) ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ 4 ಸೇನೌವ 2026 , ದಿನಾಂಕ : 30.06.2026 .

4 ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ 4 ಸೇನೌವ 2026 , ದಿನಾಂಕ : 15.07.2026 ಪ್ರಸ್ತಾವನೆ :

2026-27ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಯನ್ನು ಕೆಲವೊಂದು ಷರತ್ತು ಮತ್ತು ನಿರ್ಬಂಧಗಳಿಗೆ ಒಳಪಟ್ಟು ದಿನಾಂಕ : 15.04.2026 ರಿಂದ 31.05.2026 ರವರೆಗೆ ಕೈಗೊಳ್ಳಲು ಮೇಲೆ ( 1 ) ರಲ್ಲಿ ಓದಲಾದ ದಿನಾಂಕ : 13.04.2026 ರ ಸರ್ಕಾರಿ ಆದೇಶದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಸದರಿ ವರ್ಗಾವಣೆ ಅವಧಿಯನ್ನು ದಿನಾಂಕ : 31.07.2026 ರ ವರೆವಿಗೆ ಮೇಲೆ ಓದಲಾದ (4 ) ರ ಸರ್ಕಾರಿ ಆದೇಶದಲ್ಲಿ ವಿಸ್ತರಿಸಲಾಗಿರುವುದನ್ನು ಕಾರಣಾಂತರಗಳಿಂದ ಹಿಂಪಡೆಯಲು ಸರ್ಕಾರವು ತೀರ್ಮಾನಿಸಿ , ಕೆಳಕಂಡಂತೆ ಆದೇಶಿಸಿರುತ್ತದೆ .

ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 4 ಸೇನೌವ 2026 , ಬೆಂಗಳೂರು , ದಿನಾಂಕ : 16.07.2026

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ , ದಿನಾಂಕ : 13.04.2026 ರ ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿರುವ ಷರತ್ತು ಹಾಗೂ ನಿರ್ಬಂಧಗಳಿಗೆ ಒಳಪಟ್ಟು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ 2026-27ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ದಿನಾಂಕ : 31.07.2026 ರವರೆಗೆ ವಿಸ್ತರಿಸಿ , ಆದೇಶಿಸಿರುವ ದಿನಾಂಕ : 15.07.2026 ರ ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 4 ಸೇನೌವ 2026 ನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ .

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಹಾಗೂ ಅವರ ಹೆಸರಿನಲ್ಲಿ ,

(ಎಸ್ . ಆರ್ . ಶಿವಶಂಕರ್)

ಸರ್ಕಾರ ಉಪ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು -3 )

ಮುದ್ರಕರು ಹಾಗೂ ಪ್ರಕಾಶಕರು: - ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ , ಬೆಂಗಳೂರು

R.N.I. No. KARBIL / 2001 / 47147 POSTAL REGN . No. RNP / KA/ BGS/ 2202/2017-19 (0)

MADESHWARA NARASIMHA NARASIMHAMURTHY JAYASIMHA

Licensed to post without prepayment WPP No. 297

Cite this issue. Karnataka ExtraOrdinary Gazette, Government of Karnataka, 16 July 2026. Indian Gazettes, https://egazette.servantsofknowledge.in/details/in.gazette.karnataka_eo.2026-07-16.10681/. Archive identifier in.gazette.karnataka_eo.2026-07-16.10681.