ಕರ್ನಾಟಕ ರಾಜ್ಯಪತ್ರ
ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ
ನಂ .೫೩೨ ಭಾಗ -೪ ಎ
ಬೆಂಗಳೂರು , ಗುರುವಾರ , ೧೬ , ಜುಲೈ , ೨೦೨೬ ( ಆಷಾಢ , ೨೫ , ಶಕವರ್ಷ , ೧೯೪೮)
No.532 Part- IVA
BENGALURU, THURSDAY, 16, JULY, 2026 ( ASHADHA, 25, SHAKAVARSHA , 1948)
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಂವ್ಯಶಾಇ 17 ಶಾಸನ 2026 , ಬೆಂಗಳೂರು , ದಿನಾಂಕ : 16.07.2026 .
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ( ತಿದ್ದುಪಡಿ ) ಅಧ್ಯಾದೇಶ , 2026 ರ ಜುಲೈ ತಿಂಗಳ 14 ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು , ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2026 ರ ಕರ್ನಾಟಕ ಅಧ್ಯಾದೇಶ ಸಂಖ್ಯೆ: 01 ಎಂಬುದಾಗಿ ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ( ಭಾಗ- IVA) ಪ್ರಕಟಿಸಬೇಕೆಂದು ಆದೇಶಿಸಲಾಗಿದೆ, -
2026 ರ ಕರ್ನಾಟಕ ಅಧ್ಯಾದೇಶ ಸಂಖ್ಯೆ : 01
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ( ತಿದ್ದುಪಡಿ ) ಅಧ್ಯಾದೇಶ , 2026 (ಭಾರತ ಗಣರಾಜ್ಯದ ಎಪ್ಪತ್ತೇಳನೇ ವರ್ಷದಲ್ಲಿ ಕರ್ನಾಟಕ ರಾಜ್ಯಪಾಲರಿಂದ ಪ್ರಖ್ಯಾಪಿತವಾಗಿ 2026 ರ ಜುಲೈ ತಿಂಗಳ 16 ನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ , 1993 ( 1993 ರ ಕರ್ನಾಟಕ ಅಧಿನಿಯಮ 14) ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧ್ಯಾದೇಶ .
ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತು ಅಧಿವೇಶನದಲ್ಲಿ ಇಲ್ಲದಿರುವುದರಿಂದ ಮತ್ತು ಇಲ್ಲಿ ಇನ್ನುಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಅಧ್ಯಾದೇಶವನ್ನು ಪ್ರಖ್ಯಾಪಿಸುವುದಕ್ಕೆ ಶ್ರೀಘ್ರ ಕ್ರಮವನ್ನು ತೆಗೆದುಕೊಳ್ಳಲು ಅವಶ್ಯಗೊಳಿಸುವಂಥ ವಿದ್ಯಮಾನಗಳು ಉಂಟಾಗಿವೆಯೆಂದು ಕರ್ನಾಟಕದ ಮಾನ್ಯ ರಾಜ್ಯಪಾಲರಿಗೆ ಮನದಟ್ಟಾಗಿರುವುದರಿಂದ;
ಆದ್ದರಿಂದ , ಈಗ ಭಾರತ ಸಂವಿಧಾನದ 213 ನೇ ಅನುಚ್ಛೇದದ ( 1 ) ನೇ ಖಂಡದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ , ಕರ್ನಾಟಕದ ಮಾನ್ಯ ರಾಜ್ಯಪಾಲರು ಈ ಮುಂದಿನ ಅಧ್ಯಾದೇಶವನ್ನು ಪ್ರಖ್ಯಾಪಿಸಿರುತ್ತಾರೆ , ಎಂದರೆ : -
1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- ( 1 ) ಈ ಅಧ್ಯಾದೇಶವನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ( ತಿದ್ದುಪಡಿ ) ಅಧ್ಯಾದೇಶ , 2026 ಎಂದು ಕರೆಯತಕ್ಕದ್ದು.
(2 ) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
(0) و
2. ಪ್ರಕರಣ 2 ರ ತಿದ್ದುಪಡಿ.- ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ , 1993 ( 1993 ರ ಕರ್ನಾಟಕ ಅಧಿನಿಯಮ 14 ) ರ 2 ನೇ ಪ್ರಕರಣದ ( 33 ) ನೇ ಖಂಡಕ್ಕೆ ಬದಲಾಗಿ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ : -
" ( 33 ) " ಸಾರ್ವಜನಿಕ ಬೀದಿ " ಎಂದರೆ , ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಅಥವಾ ಸರ್ಕಾರಿ ಅಥವಾ ಯಾವುದೇ ಸಾರ್ವಜನಿಕ ಪ್ರಾಧಿಕಾರಗಳ ಮೂಲಕ ನಿರ್ವಹಿಸಲಾಗುತ್ತಿರುವ , ಸಾರ್ವಜನಿಕರು ದಾರಿಯ ಹಕ್ಕನ್ನು ಹೊಂದಿರುವ , ಮುಖ್ಯ ರಸ್ತೆಯಾಗಿರುವ ಅಥವಾ ಅಲ್ಲದಿರುವ ಯಾವುದೇ ಬೀದಿ , ರಸ್ತೆ , ಚೌಕ , ತುಂಡು - ಬೀದಿ , ಓಣಿ , ಮಾರ್ಗ ಅಥವಾ ಸವಾರಿ ದಾರಿ ಮತ್ತು ಅದು , - ( ಎ ) ಯಾವುದೇ ಸಾರ್ವಜನಿಕ ಸೇತುವೆಯ ಮೇಲಿನ ಸಂಚಾರ ಮಾರ್ಗವನ್ನು ಅಥವಾ ಒಡ್ಡುದಾರಿಯನ್ನು ;
(ಬಿ ) ಯಾವುದೇ ಅಂಥ ಬೀದಿ , ಸಾರ್ವಜನಿಕ ಸೇತುವೆಗೆ ಅಥವಾ ಒಡ್ಡುದಾರಿಗೆ ಲಗತ್ತಾಗಿರುವ ಕಾಲುದಾರಿಯನ್ನು ; ಮತ್ತು
(ಸಿ ) ಯಾವುದೇ ಅಂಥ ಬೀದಿ , ಸಾರ್ವಜನಿಕ ಸೇತುವೆ ಅಥವಾ ಒಡ್ಡುದಾರಿಗೆ ಲಗತ್ತಾಗಿರುವ ಚರಂಡಿಗಳು ಮತ್ತು ಅದಕ್ಕೆ ಹೊಂದಿಕೊಂಡಿರುವ ಸ್ವತ್ತು ಖಾಸಗಿ ಸ್ವತ್ತಾಗಿರಲಿ ಅಥವಾ ಸರ್ಕಾರಕ್ಕೆ ಅಥವಾ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಸೇರಿದ ಸ್ವತ್ತಾಗಿರಲಿ , ಅದರ ಎಲ್ಲೆಗಳವರೆಗೆ ಸಂಚಾರ ಮಾರ್ಗದ ಎರಡೂ ಬದಿಗಳಲ್ಲಿ ಇರುವ , ಯಾವುದೇ ನೆಲಗಟ್ಟಿನ ಕಾಲುದಾರಿ , ವರಾಂಡ ಅಥವಾ ಇತರ ರಚನೆಯಿಂದ ಆವೃತವಾಗಿರುವ ಅಥವಾ ಆವೃತವಾಗಿಲ್ಲದಿರುವ ಭೂಮಿಯನ್ನು,
- ಒಳಗೊಳ್ಳುತ್ತದೆ; "
3. ಹೊಸ ಪ್ರಕರಣ 63 ಎ ಸೇರ್ಪಡೆ.- ಮೂಲ ಅಧಿನಿಯಮದ 63 ನೇ ಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ : -
" 63 ಎ . ಯಾವುದೇ ಬೀದಿಯನ್ನು ಸಾರ್ವಜನಿಕ ಬೀದಿಯನ್ನಾಗಿ ಘೋಷಿಸುವ ಅಧಿಕಾರ.- ( 1 ) ಚರಂಡಿಗಳನ್ನೂ ಸೇರಿದಂತೆ ಯಾವುದೇ ಖಾಸಗಿ ಬೀದಿಯು ಸಾರ್ವಜನಿಕರ ಸುರಕ್ಷತೆ ಮತ್ತು ಆರೋಗ್ಯಕ್ಕೆ ಅಪಾಯವಾಗುವಂಥ ಸ್ಥಿತಿಯಲ್ಲಿದ್ದರೆ , ಸರ್ಕಾರವು ಅಧಿಕೃತಗೊಳಿಸಿದ ಪ್ರಾಧಿಕಾರಿಯು ಆ ಖಾಸಗಿ ಬೀದಿಗೆ ಸಂಬಂಧಿಸಿದಂತೆ ತಾನೇ ಸ್ವತಃ ಅಥವಾ ಸದರಿ ಖಾಸಗಿ ಬೀದಿಯ ಮಾಲೀಕರ ಅಥವಾ ಅಂಥ ಬೀದಿಯ ಮುಂಭಾಗದಲ್ಲಿರುವ ಅಥವಾ ಹೊಂದಿಕೊಂಡಿರುವ ಕಟ್ಟಡದ ಅಥವಾ ಭೂಮಿಗಳ ಮಾಲೀಕರ ಕೋರಿಕೆಯ ಮೇರೆಗೆ ಸಾರ್ವಜನಿಕ ನೋಟೀಸನ್ನು ಮತ್ತು ಅಂಥ ಮಾಲೀಕರಿಗೆ ನೋಟಿಸನ್ನು ನೀಡುವ ಮೂಲಕ ಸದರಿ ಖಾಸಗಿ ಬೀದಿ ಅಥವಾ ಅದರ ಭಾಗವನ್ನು ಸಾರ್ವಜನಿಕ ಬೀದಿಯನ್ನಾಗಿ ಘೋಷಿಸುವ ತನ್ನ ಉದ್ದೇಶವನ್ನು ತಿಳಿಸತಕ್ಕದ್ದು. ಆನಂತರ , ಅಂಥ ಮಾಲೀಕರು ಅಥವಾ ಯಾರೇ ಹಿತಾಸಕ್ತಿಯುಳ್ಳ ವ್ಯಕ್ತಿಯು ಸದರಿ ಉದ್ದೇಶದ ವಿರುದ್ಧ ಆಕ್ಷೇಪಣೆಗಳೇನಾದರೂ ಇದ್ದರೆ , ಅಂಟಿಸಲಾದ ಸಾರ್ವಜನಿಕ ನೋಟೀಸಿನಲ್ಲಿ ನಿರ್ದಿಷ್ಟಪಡಿಸುವ ಮೂಲಕ ನಿಗದಿತ ಸಮಯದೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು . ಅಧಿಕೃತಗೊಳಿಸಿದ ಪ್ರಾಧಿಕಾರಿಯು ಆಕ್ಷೇಪಣೆಗಳೇನಾದರೂ ಇದ್ದರೆ , ಅವುಗಳನ್ನು ಪರಿಶೀಲಿಸಿದ ತರುವಾಯ ಅಂಥ ಬೀದಿ ಅಥವಾ ಅದರ ಭಾಗವನ್ನು ಸಾರ್ವಜನಿಕ ಬೀದಿ ಎಂಬುದಾಗಿ ಘೋಷಿಸಬಹುದು:
ಪರಂತು, ಖಾಸಗಿ ಬೀದಿಯು ಒಂದಕ್ಕಿಂತ ಹೆಚ್ಚಿನ ಗ್ರಾಮ ಪಂಚಾಯತಿಗಳಿಗೆ ಬರುವ ಸಂದರ್ಭದಲ್ಲಿ , ಸರ್ಕಾರದಿಂದ ಅಧಿಕೃತಗೊಳಿಸಲಾದ ಸಂಬಂಧಪಟ್ಟ ಪ್ರಾಧಿಕಾರವು ನೋಟಿಸನ್ನು ನೀಡತಕ್ಕದ್ದು ಮತ್ತು ಆನಂತರ ತನ್ನ ಅಧಿಕಾರ ವ್ಯಾಪ್ತಿಯನ್ವಯ ಆ ಬೀದಿ ಅಥವಾ ಅದರ ಭಾಗವನ್ನು ಸಾರ್ವಜನಿಕ ಬೀದಿ ಎಂಬುದಾಗಿ ಘೋಷಿಸತಕ್ಕದ್ದು.
ಇದು ಸರ್ಕಾರವು ಕಾಲಕಾಲಕ್ಕೆ ಅಧಿಸೂಚಿಸಬಹುದಾದ ಅಂಥ ಪ್ರಕರಣ ಮತ್ತು ಅಂಥ ಅವಧಿಗಾಗಿ ಅನ್ವಯವಾಗತಕ್ಕದ್ದು:
2
ಪರಂತು , ಸಾರ್ವಜನಿಕ ಬೀದಿಯೆಂದು ಘೋಷಿಸುವ ಖಾಸಗಿ ಬೀದಿಯು ಸಾರ್ವಜನಿಕ ರಸ್ತೆ ಅಥವಾ ಸಾರ್ವಜನಿಕ ಬೀದಿಯೊಂದಿಗೆ ಸಂಪರ್ಕವನ್ನು ಹೊಂದಿರತಕ್ಕದ್ದು :
ಮತ್ತು ಪರಂತು, ಸಾರ್ವಜನಿಕ ಬೊಕ್ಕಸದಿಂದ ನಿಧಿಯನ್ನು ಬಳಸಿಕೊಂಡು ಮಾಡಲಾದ ಮತ್ತು ನಿರ್ಮಿಸಲಾದ ರಸ್ತೆಯ ಸಂಬಂಧದಲ್ಲಿಯೂ ಸಹ ಅಂಥ ಘೋಷಣೆಯನ್ನು ಮಾಡಬಹುದು .
(2 ) ಬೀದಿ ಅಥವಾ ಅಂಥ ಬೀದಿಯ ಭಾಗವನ್ನು ಹಿಂದಿನ ಭೂ ಮಾಲೀಕನು ವರ್ಗಾವಣೆ ಅಥವಾ ಹಸ್ತಾಂತರಣದ ಮೂಲಕ ನೋಂದಾಯಿತ ಕ್ರಯಪತ್ರದಲ್ಲಿ ರಸ್ತೆಯನ್ನಾಗಿ ತೋರಿಸಿದ್ದಲ್ಲಿ ಮತ್ತು ಅದನ್ನಾಧರಿಸಿ ಕಟ್ಟಡದ ನಿವೇಶನಕ್ಕೆ ಹೊಂದಿಕೊಂಡಿರುವಂತೆ , ಭೂ ಮಾಲೀಕನು ಹೊಂದಿಕೊಂಡಂತ ಕಟ್ಟಡ ನಿವೇಶನಗಳನ್ನು ಮಾರಾಟ ಅಥವಾ ವರ್ಗಾವಣೆ ಮಾಡುವ ಮೂಲಕ ಅಂಥ ರಸ್ತೆ ಅಥವಾ ಬೀದಿಯ ಪ್ರಯೋಜನವನ್ನು ಪಡೆದುಕೊಂಡಿರುವಲ್ಲಿ ಮತ್ತು ( 1 ) ನೇ ಉಪ ಪ್ರಕರಣದ ಮೇರೆಗೆ ಅಂಥ ರಸ್ತೆಯನ್ನು ಸಾರ್ವಜನಿಕ ಬೀದಿಯನ್ನಾಗಿ ಘೋಷಿಸಿದ್ದಲ್ಲಿ, ಭೂ ಮಾಲೀಕನು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ , 1961 ( 1963 ರ ಕರ್ನಾಟಕ ಅಧಿನಿಯಮ 11 ) ರ 14 ಬಿ ಪ್ರಕರಣದ ಮೇರೆಗೆ ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರವನ್ನು ಸೇರಿದಂತೆ , ಭೂಸ್ವಾಧೀನ , ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯೋಚಿತ ಪರಿಹಾರದ ಹಕ್ಕು ಅಧಿನಿಯಮ , 2013 (2013 ರ ಕೇಂದ್ರ ಅಧಿನಿಯಮ 30 ) ಅಥವಾ ಯಾವುದೇ ಇತರೆ ಕಾನೂನಿನಡಿ ಯಾವುದೇ ರೀತಿಯ ಪರಿಹಾರಕ್ಕೆ ಅರ್ಹನಾಗತಕ್ಕದ್ದಲ್ಲ .
4. ತೊಂದರೆಗಳ ನಿವಾರಣೆ.- ( 1 ) ಈ ಅಧ್ಯಾದೇಶದ ಉಪಬಂಧಗಳನ್ನು ಜಾರಿಗೆ ತರುವಲ್ಲಿ , ಯಾವುದೇ ತೊಂದರೆ ಉದ್ಭವಿಸಿದರೆ , S ತೊಂದರೆಯ ನಿವಾರಣೆಗಾಗಿ , ಸಂದರ್ಭವು ಅಗತ್ಯಪಡಿಸಬಹುದಾದಂತೆ ಅವಶ್ಯಕವೆಂದು ಕಂಡುಬರುವ ಏನನ್ನಾದರೂ ಸರ್ಕಾರವು , ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಲಾದ ಆದೇಶದ ಮೂಲಕ ಮಾಡಬಹುದು .
(2 ) ಈ ಪ್ರಕರಣದಡಿ ಹೊರಡಿಸಲಾದ ಪ್ರತಿಯೊಂದು ಆದೇಶವನ್ನು, ಅದನ್ನು ರಚಿಸಿದ ತರುವಾಯ ಆದಷ್ಟು ಬೇಗನೇ ರಾಜ್ಯ ವಿಧಾನ ಮಂಡಲದ ಉಭಯ ಸದನದ ಮುಂದೆ ಮಂಡಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ,
ಜಿ . ಶ್ರೀಧರ್
ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ .
DEPARTMENT OF PARLIAMENTARY AFFAIRS AND LEGISLATION SECRETARIAT NOTIFICATION
NO : DPAL 17 SHASAΝΑ 2026 , BENGALURU , DATED : 16.07.2026 ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ ) ಅಧ್ಯಾದೇಶ , 2026ರ ಜುಲೈ ತಿಂಗಳ 14 ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು , ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2026 ರ ಕರ್ನಾಟಕ ಅಧ್ಯಾದೇಶ ಸಂಖ್ಯೆ: 01 ಎಂಬುದಾಗಿ ಪ್ರಕಟಿಸಲು ಹಾಗೂ ಭಾರತ ಸಂವಿಧಾನದ ಅನುಚ್ಛೇದ 348 ರಡಿಯಲ್ಲಿ ರಾಜ್ಯಪಾಲರಿಂದ ಅಧಿಕೃತಗೊಳಿಸಿದ ಸದರಿ ಅಧ್ಯಾದೇಶದ ಆಂಗ್ಲ ಭಾಷಾಂತರವನ್ನು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ( ಭಾಗ IV - A ) ಪ್ರಕಟಿಸಬೇಕೆಂದು ಆದೇಶಿಸಲಾಗಿದೆ , -
KARNATAKA ORDINANCE NO . 01 OF 2026
THE KARNATAKA GRAM SWARAJ AND PANCHAYAT RAJ ( AMENDMENT )
ORDINANCE , 2026
(Promulgated by the Governor of Karnataka in the seventy seventh year of the Republic of India and first published in the Karnataka Gazette Extra- ordinary on the 16th day of July, 2026)
AnOrdinance further to amend the Karnataka Gram Swaraj and Panchayat Raj Act , 1993 ( Karnataka Act 14 of 1993 ) .
Whereas the Karnataka Legislative Assembly and the Karnataka Legislative Council are not in session and the Honorable Governor of Karnataka is satisfied that the circumstances exist which render it necessary for him to take immediate action to promulgate the Ordinance for the purposes hereinafter appearing ; Now , therefore , in exercise of the powers conferred by clause ( 1 ) of Article 213 of the Constitution of India , the Honorable Governor of Karnataka is pleased to promulgate the following Ordinance , namely: -
1. Short title and commencement.- ( 1 ) This Ordinance may be called the Karnataka Gram Swaraj and Panchayat Raj (Amendment ) Ordinance , 2026 .
(2) It shall come into force at once .
2. Amendment of section 2.- In the Karnataka Gram Swaraj and Panchayat Raj Act , 1993 ( Karnataka Act 14 of 1993 ) ( hereinafter referred to as the principal Act) in section 2 , for clause ( 33 ) , the following shall be substituted , namely: - " ( 33 ) " Public Street " means any street , road , square , court , alley , passage or riding path over which the public have a right of way maintained by the Rural Local Bodies or Government or by any public authorities , whether a thoroughfare or not and includes , -
(a) the roadway over any public bridge or causeway;
(b) the footway attached to any such street public bridge or causeway ; and
( c) the drains attached to any such street , public bridge or causeway and the land , whether covered or not by any pavement verandah or other structure which lies on either side of the roadway upto the boundaries of the adjacent property , whether that property is private property or property belonging to the Government or the Rural Local Bodies ."
3. Insertion of new section 63A.- In the Principal Act , after section 63 , the following shall be inserted , namely: -
" 63A. Power to declare any street as public street.- ( 1 ) If a private street including the drains are in such a poor condition that endangers public safety and health , an authority authorized by the Government may , with respect to a private street , on his own accord or upon a request by the owners of the said private street or the owners of the buildings and lands fronting or abutting on such a street , by a public notice and notice to such owners , inform the intention to declare the said private street or part thereof, as a public street . Thereupon , such owners or anyone else interested , may give objections , if any , against the said intention within stipulated time specified in public notice by affixture . Upon considering the objections if any , an authority authorized by the Government may , declare such street or part thereof to be a public street :
Provided that , in case the private street falls in more than one Gram Panchayat then the concerned authority authorized by the Government shall issue the notice and thereupon declare the street or part thereof as a public street in respect to his jurisdiction :
This shall be applicable in such case and for such duration as notified by the Government from time to time .
Provided that , the private street to be declared as public street shall have connectivity from the public road or public street .
R.N.I. No. KARBIL / 2001 /47147 POSTAL REGN . No. RNP / KA/ BGS / 2202/2017-19
Licensed to post without prepayment WPP No. 297
Provided further that , such a declaration may also be made with respect to a road which has been laid and constructed using funds from the public exchequer .
(2) Where , street or part of such street which was shown by the erstwhile land owner as road in the registered deed of transfer or conveyance made by the land owner and based upon which the abutting building sites were carved out by the land owner , who has obtained the benefit of such road or street by making the sale or transfer of abutting building sites and such a road is declared as public street under sub - section ( 1) , in that event the land owner , shall not be eligible for any type of compensation under Right to Fair Compensation and Transparency in Land Acquisition , Rehabilitation and Resettlement Act , 2013 ( Central Act 30 of 2013 ) or any other law , including Development Rights Certificates under section 14 - B of the Karnataka Town and Country Planning Act , 1961 (Karnataka Act 11 of 1963 ) .
4. Power to remove difficulties.- ( 1 ) If any difficulty arises in giving effect to the provisions of this Ordinance , the Government may by order , published in the official Gazette , as the occasion may require , do anything which appears to it to be necessary to remove the difficulty .
(2) Every order made under this section shall , as soon as may be after it is so made , be laid before the both House of the State Legislature .
The above translation of ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ ) ಅಧ್ಯಾದೇಶ , 2026 ( 2026 ರ ಕರ್ನಾಟಕ ಅಧ್ಯಾದೇಶ ಸಂಖ್ಯೆ : 01 ) be published in the official Gazette under Article 348 of the Constitution of India .
THAAWARCHAND GEHLOT GOVERNOR OF KARNATAKA
By Order and in the name of the Governor of Karnataka
G. Sridhar
Secretary to Government Department of Parliamentary Affairs and Legislation
ಮುದ್ರಕರು ಹಾಗೂ ಪ್ರಕಾಶಕರು : - ಸಂಕಲನಾಧಿಕಾರಿಗಳು , ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ , ಬೆಂಗಳೂರು
MADESHWARA NARASIMHAMURTHY JAYASIMHA