KA / BG-GPO/2515/WPP-47/2009-2011
ಕರ್ನಾಟಕ ರಾಜ್ಯಪತ್ರ
ಅಧಿಕೃತವಾಗಿ ಪ
್ರಕಟಿಸಲಾದುದು
ಸಂಪುಟ ೧೪೪ ಬೆಂಗಳೂರು, ಗುರುವಾರ, ಆಗಸ್ಟ್ ೧೩, ೨೦೦೯ (ಶ್ರಾವಣ ೨೨, ಶಕ ವರ್ಷ ೧೯೩೧) ಸಂಚಿಕೆ ೩೩
ಭಾಗ - ೪ಎ
ರಾಜ್ಯದ ವಿಧ
ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ
ೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,
್ರದ ಮತ್ತು ರಾಜ್ಯದ ಶಾಸನಗಳ
ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು
ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು, ಹಾಗೂ ಕರ್ನಾಟಕ
ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು.
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ:ಸಿಒ 83 ಸಿಎನ್ಎಸ್ 2009, ಬೆಂಗಳೂರು, ದಿನಾಂಕ:9ನೇ ಜುಲೈ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಜಿಲ್ಲಾ ಸಹಕಾರ ಕೇಂದ್ರ ಸಗಟು ಮಾರಾಟ ಸ್ಟೋರ್ಸ್ ನಿ., ಮೈಸೂರು ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
1. ಶ್ರೀಮತಿ ಪಿ. ನೀಲಮ್ಮ ಕೋಂ ಶಿವಣ್ಣ, ಕುಮಾರನಪುರ ಅಂಚೆ, ಯಳಂದೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ
2. ಶ್ರೀ ವೀರಭದ್ರಾಚಾರ್ ಬಿನ್ ಮಲ್ಲಸೋಮಚಾರ್ ಮುತ್ತೂರು ಗ್ರಾಮ(ಅಂ) ಪಿರಿಯಾಪಟ್ಟಣ ತಾಲ್ಲೂಕು 3. ಶ್ರೀ ದಾಸಯ್ಯ ಬಿನ್ ಮೊಂಡಯ್ಯ, ಸಿದ್ದನಹುಂಡಿ, ಟಿ, ನರಸೀಪುರ ತಾಲ್ಲೂಕು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 435
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
(೬೧೭)
೬೧೮ ಕರ್ನಾಟಕ ರಾಜ್ಯಪತ ್ರ, ಗುರುವಾರ, ಆಗಸ್ಟ್ ೧೩, ೨೦೦೯ ಭಾಗ - ೪ಎಅಧಿಸೂಚನೆ
ಸಂಖ್ಯೆ:ಸಿಒ 85 ಸಿಎನ್ಎಸ್ 2008, ಬೆಂಗಳೂರು, ದಿನಾಂಕ:9ನೇ ಜುಲೈ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ, ಮಂಡ್ಯ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
1. ಶ್ರೀ ಜಿ.ಸಿ. ಮಹೇಂದ್ರ ಬಿನ್ ಚಿಕ್ಕಿಮೋಗಯ್ಯ, ಗೆಜ್ಜಲಗೆರೆ, ಮದ್ದೂರು ತಾಲ್ಲೂಕು
2. ಶ್ರೀ ಎಂ. ಚಿಕ್ಕಣ್ಣ ಬಿನ್ ಮಾದಯ್ಯ, ಕೆನ್ನಾಳು ಗ್ರಾಮ, ಪಾಂಡವಪುರ ತಾಲ್ಲೂಕು
3. ಶ್ರೀಮತಿ ಕೆ.ಎನ್. ನೀನಾ ಪಟೇಲ್ ಕೋಂ ಡಾ. ಬಿ.ಎಸ್. ಸತೀಶಚಂದ್ರ, ನಂ. 1245, 5ನೇ ಕ್ರಾಸ್, ವಿವೇಕಾನಂದ ರಸ್ತೆ, ಅಶೋಕನಗರ, ಮಂಡ್ಯ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 436
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ:ಸಿಒ 14 ಸಿಎನ್ಎಸ್ 2008, ಬೆಂಗಳೂರು, ದಿನಾಂಕ:10ನೇ ಜುಲೈ 2009
ಈ ಹಿಂದೆ ಸರ್ಕಾರದಿಂದ ಮಾಡಿರುವ ಎಲ್ಲಾ ನಾಮನಿರ್ದೇಶನಗಳನ್ನು ರದ್ದುಪಡಿಸಿ, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಶಿವಮೊಗ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರುಗಳ ಒಕ್ಕೂಟ ನಿ., ಮಾಚೇನಹಳ್ಳಿ, ಶಿವಮೊಗ್ಗ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
1. ಶ್ರೀ ಗಂಗಾಧರ್ ಮಂಡೇನಕೊಪ್ಪ, ಮತ್ತೂರು ಅಂಚೆ, ಶಿವಮೊಗ್ಗ ತಾಲ್ಲೂಕು
2. ಶ್ರೀಮತಿ ಜಯಮ್ಮ ಬಿನ್ ಭೀಮನಗೌಡ, ಜಿಗಳೆ, ಹರಿಹರ ತಾಲ್ಲೂಕು, ದಾವಣಗೆರೆ ಜಿಲ್ಲೆ
3. ಶ್ರೀ ಕೆ. ಶಿವಲಿಂಗ ಬಿನ್ ಕರಿಯಪ್ಪ, ಚಿಕ್ಕೂಲಿಕೆರೆ, ಚೆನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 437
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಲಾ 61 ಎಲ್ಸಿಎಲ್ 2009, ಬೆಂಗಳೂರು, ದಿನಾಂಕ: 18ನೇ ಜುಲೈ 2009
ಕೇಂದ್ರ ಅಧಿನಿಯಮ 1952ರ ಸೆಕ್ಷನ್ 15ರಲ್ಲಿ (1952ರ ಅಧಿನಿಯಮ 53) ಓದಲಾದ ನೋಟರಿಗಳ ತಿದ್ದುಪಡಿ ನಿಯಮಗಳು, 2009ರ ನಿಯಮ (7)(ಎ)(2)ರನ್ವಯ ಕರ್ನಾಟಕ ರಾಜ್ಯ ಸರ್ಕಾರದಿಂದ ನೇಮಕಾತಿ ಮಾಡುವ ನೋಟರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡ 3 ಸದಸ್ಯರನ್ನೊಳಗೊಂಡ ಸಂದರ್ಶನ ಮಂಡಳಿಯನ್ನು ರಚಿಸಿ ನೇಮಿಸಲಾಗಿದೆ.
| 1 | ಅಪರ ಕಾರ್ಯದರ್ಶಿಗಳು (ಅಭಿಪ್ರಾಯ) ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ | ಅಧ್ಯಕ್ಷರು |
| 2 | ಜಂಟಿ ಕಾರ್ಯದರ್ಶಿಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ | ಸದಸ್ಯರು |
| 3 | ಉಪ ಕಾರ್ಯದರ್ಶಿ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ (ಕಾನೂನು ಕಾರ್ಯದರ್ಶಿಗಳು ನಿರ್ದೇಶಿಸುವ) | ಸದಸ್ಯರು |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಶಕುಂತಲಾ ಹೆಚ್.ಆರ್.
ಪಿ.ಆರ್. 438
ಸರ್ಕಾರದ ಅಧೀನ ಕಾರ್ಯದರ್ಶಿ(ಆಡಳಿತ-2)
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಒಇ 553 ಪಿಎಂಎಸ್ 2008, ಬೆಂಗಳೂರು, ದಿನಾಂಕ: 16ನೇ ಜುಲೈ 2009
1872 ಇಂಡಿಯನ್ ಕ್ರಿಶ್ಚಿಯನ್ ಮ್ಯಾರೇಜ್ ಕಾಯಿದೆಯ ಕಲಂ 7ರ (ಕೇಂದ್ರ ಕಾಯ್ದೆ ಎಕ್ಸ್ ವಿ-1872) ಅನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಶ್ರೀ ರೋಶನ್ ಡಿಸೋಜ, ನ್ಯಾಯವಾದಿಗಳು, ಸಮಾದಾನ್ ಹೌಸ್, ಪಾಂಡಿಕಟ್ಟ, ಕೈರಂಗಾಲ, ವಿಲೇಜ್, ಕುರ್ನಾಡ್ ಪೋಸ್ಟ್, ಬಂಟ್ವಾಳ, ಇವರಿಗೆ ಮೇಲಿನ ಕಾಯ್ದೆಯಡಿ ಕಾರ್ಯನಿರ್ವಹಿಸಲು ಕ್ರಿಶ್ಚಿಯನ್ ಜನಾಂಗದ ವಿವಾಹ ನೋಂದಣಾಧಿಕಾರಿಯನ್ನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಿ ಸದರಿ ಕಾಯ್ದೆಯಡಿಯಲ್ಲಿ ಸೂಚಿಸಿರುವ ಷರತ್ತುಗಳನ್ನು ಪೂರೈಸುವ ಷರತ್ತಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆಲಿಸ್ ಗೊನ್ಸಾಲ್ವಿಸ್
ಪಿ.ಆರ್. 439
ಸರ್ಕಾರದ ಅಧೀನ ಕಾರ್ಯದರ್ಶಿ
ಒಳಾಡಳಿತ ಇಲಾಖೆ (ರಹದಾರಿ & ವಿದೇಶಿಯರು)
ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ನಅಇ 125 ಎಂಎಲ್ಆರ್ 2008(B-53), ಬೆಂಗಳೂರು, ದಿನಾಂಕ: 20ನೇ ಜುಲೈ 2009
ಕರ್ನಾಟಕ ಪುರಸಭೆ ಕಾಯ್ದೆ 1964 ರ ಪ್ರಕರಣ 11(1)(b)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಕಳ ಪುರಸಭೆಗೆ ಸದಸ್ಯರನ್ನಾಗಿ ಸರ್ಕಾರವು ನಾಮ ನಿರ್ದೇಶನ ಮಾಡಿದೆ.
1. ಶ್ರೀ ಪ್ರಸನ್ನ ಬಿನ್ ಬೋಜ, ಮಾಧವ ಕೃಪಾ, ಜೈನ ಮಠದ ಹತ್ತಿರ, ದಾನಶಾಲೆ, ಕಾರ್ಕಳ
2. ಶ್ರೀಮತಿ ಸದಾವತಿ ಹೆಗ್ಡೆ, ಕಾಬೆಟ್ಟು, ಕಾರ್ಕಳ
3. ಶ್ರೀ ಸುರೇಶ್ ಮಡಿವಾಳ, ಅಯೋಧ್ಯ, ಎಸ್.ಬಿ. ಕಾಲೇಜು ರಸ್ತೆ, ಕಾರ್ಕಳ
4. ಶ್ರೀ ಪ್ರಶಾಂತ್ ಶೆಟ್ಟಿ ಬಿನ್ ರಾಮಚಂದ್ರ ಶೆಟ್ಟಿ, ಶ್ರೀನಿವಾಸ, ಹವಲ್ದಾರ್ ಬೆಟ್ಟು ಕಡೆಮನೆ, ಕಾರ್ಕಳ
5. ಶ್ರೀ ನವೀನ್ ಸುವರ್ಣ ಬಿನ್ ವಿ.ಆರ್. ಸುವರ್ಣ, ಅಪರ್ಣಾ, 4ನೇ ಬ್ಲಾಕ್, ತಳ್ಳಿರು ರಸ್ತೆ, ಕಾರ್ಕಳ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಆರ್. ರವೀಂದ
್ರ
ಪಿ.ಆರ್. 440
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ೬೨೦ ಕರ್ನಾಟಕ ರಾಜ್ಯಪತ ್ರ, ಗುರುವಾರ, ಆಗಸ್ಟ್ ೧೩, ೨೦೦೯ ಭಾಗ - ೪ಎ
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಕಂಇ 94 ಎಲ್ಆರ್ಎಂ 2008, ಬೆಂಗಳೂರು, ದಿನಾಂಕ: 9ನೇ ಜುಲೈ 2009
ಜೆ.ಎಸ್.ಎಸ್. ಮಹಾವಿದ್ಯಾಪೀಠ, ಮೈಸೂರು, ಇವರು ಮೈಸೂರು ತಾಲ್ಲೂಕಿನ ರಮ್ಮನಹಳ್ಳಿ ಗ್ರಾಮದ ಸ.ನಂ. 12/1 ಮತ್ತು ಇತರೆಗಳಲ್ಲಿ 90.25 ಎಕರೆ, ವರುಣ ದಂಡಿಕೆರೆ ಜಂತಗಳ್ಳಿ ಗ್ರಾಮದ ವಿವಿಧ ಸರ್ವೆ ನಂಬರುಗಳಲ್ಲಿ 125.31 ಎಕರೆ ಹೀಗೆ ಒಟ್ಟು 216.16 ಎಕರೆ ಕೃಷಿ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ದಾನ ರೂಪದಲ್ಲಿ ಪಡೆಯಲು ನಮೂನೆ 15-ಎ ಮತ್ತು ನಮೂನೆ 15-ಎಎ, ಗಳಲ್ಲಿನ ಮಾಹಿತಿ ಅನುಸರಿಸಿ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ ಇವರ ಪತ್ರ ಸಂಖ್ಯೆ:ಎಲ್ಆರ್ ಎಫ್ಎಸ್ಪಿಎಲ್. 26/2008-09 ದಿನಾಂಕ:2.12.2008 ರಲ್ಲಿ ಪ್ರಸ್ತಾಪಿತ ಮೇಲ್ಕಂಡ 216.16 ಎಕರೆ ಜಮೀನನ್ನು ದಾನವಾಗಿ ಪಡೆಯಲು ಕರ್ನಾಟಕ ಭೂಸುಧಾರಣೆ ಅಧಿನಿಯಮ, 1961ರ ಕಲಂ 109 ರಡಿ ಅನುಮೋದನೆ/ವಿನಾಯಿತಿ ನೀಡುವ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಪ್ರಸ್ತಾಪಿತ ಜಮೀನು ಖರೀದಿಸಲು ಖಾತೆದಾರರಿಂದ ಕರಾರು ಪತ್ರ ಮಾಡಿಕೊಂಡಿರುತ್ತಾರೆ ಹಾಗೂ ಸದರಿ ಜಮೀನು ಕರ್ನಾಟಕ ಪರಿಶೀಷ್ಟ ಜಾತಿ/ಪರಿಶಿಷ್ಟ ಪಂಗಡ (ಪಿ.ಟಿ.ಸಿ.ಎಲ್) ಅಧಿನಿಯಮ 1978, ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು ಹಾಗೂ ಇನ್ನಿತರ ಪರಭಾರೆ, ನಿಷೇಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ.
ರಾಜ್ಯ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯ ಮೇಲೆ ಕಾರಣಗಳನ್ನು ದಾಖಲಿಸಿ ನಿರ್ದಿಷ್ಟ ಉದ್ದೇಶಕ್ಕಾಗಿ ಎಷ್ಟೇ ವಿಸ್ತೀರ್ಣದ ಭೂಮಿಯನ್ನು ಷರತ್ತು ಮತ್ತು ನಿರ್ಬಂಧನೆಗಳನ್ನು ವಿಧಿಸಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961ರ ಕಲಂ 63, 79ಎ, 79ಬಿ ಅಥವಾ 80ರ ಅವಕಾಶಗಳಿಂದ ವಿನಾಯಿತಿ ನೀಡಲು ಸದರಿ ಅಧಿನಿಯಮದ ಕಲಂ 109(1ಎ) ರಡಿ ಅವಕಾಶ ಕಲ್ಪಿಸಿದೆ.
ಈ ಪ್ರಸ್ತಾವನೆ ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಅಧಿನಿಯಮ 1995ರ ಕಲಂ 109(1ಎ) ಮತ್ತು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ನಿಯಮಗಳು, 1996ರ ನಿಯಮ 38-ಬಿ ಮತ್ತು 38-ಸಿ ರಲ್ಲಿನ ಷರತ್ತುಗಳನ್ನು ಪೂರೈಸಿದ್ದು ಕರ್ನಾಟಕ ಭೂ ಸುಧಾರಣೆ ಅಧಿನಿಯಮ 1961ರ ಕಲಂ 63, 79ಎ, 79ಬಿ ಅಥವಾ 80ಕ್ಕೆ ವಿನಾಯಿತಿ ನೀಡಿ ಜೆ.ಎಸ್.ಎಸ್.
ಮಹಾವಿದ್ಯಾಪೀಠ, ಮೈಸೂರು, ಇವರು ಮೈಸೂರು ತಾಲ್ಲೂಕಿನ ರಮ್ಮನಹಳ್ಳಿ ಗ್ರಾಮದ ಸ.ನಂ. 12/1 ಮತ್ತು ಇತರೆಗಳಲ್ಲಿ 90.25 ಎಕರೆ, ವರುಣ ದಂಡಿಕೆರೆ ಜಂತಗಳ್ಳಿ ಗ್ರಾಮದ ವಿವಿಧ ಸರ್ವೆ ನಂಬರುಗಳಲ್ಲಿ 125.31 ಎಕರೆ ಹೀಗೆ ಒಟ್ಟು 216.16 ಎಕರೆ ಕೃಷಿ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಪಡೆಯಲು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109ರಡಿ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಂತೆ ಸರ್ಕಾರದ ಅನುಮತಿ ನೀಡಲಾಗಿದೆ.
1 ಯಾವ ಉದ್ದೇಶಕ್ಕಾಗಿ ಜಮೀನನ್ನು ಖರೀದಿಸಲು ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸದರಿ ಜಮೀನನ್ನು ಎರಡು ವರ್ಷಗಳೊಳಗಾಗಿ ಉಪಯೋಗಿಸತಕ್ಕದ್ದು ಮತ್ತು ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು.
2. ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ 1956ರ ಕಲಂ 3ರಲ್ಲಿ ಹೇಳಿರುವಂತೆ ಶೇಕಡ 51 ಪೇಯ್ಡ್ ಆಫ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ ಅಥವಾ ಎರಡರ ಹಿಡಿತ ಹೊಂದಿರುವ ಸರ್ಕಾರದ ಸಂಘ/ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ ಸದರಿ ಜಮೀನನ್ನು ನಿಗದಿತ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.
3. ಜಮೀನು ನಗರಾಭಿವೃದ್ಧಿ ಪ್ರಾಧಿಕಾರದ ಸಿ.ಡಿ.ಪಿ/ಒ.ಡಿ.ಪಿ. ವ್ಯಾಪ್ತಿಯೊಳಗೆ ಬಂದರೆ, ಅದರಂತೆ ಅನುಮತಿ ಪಡೆದು ಉಪಯೋಗಿಸತಕ್ಕದ್ದು.
4. ಈ ಅನುಮತಿಯು ಕರ್ನಾಟಕ ಭೂಸುಧಾರಣೆ ಅಧಿನಿಯಮ, 1961ರ ಕಲಂ 109ರನ್ವಯ ವಿನಾಯಿತಿ ಮಾತ್ರವಾಗಿರುತ್ತದೆ. ಬೇರೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಕಾಯ್ದೆಯಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.
ಭಾಗ - ೪ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಆಗಸ್ಟ್ ೧೩, ೨೦೦೯ ೬೨೧5. ಈ ಜಮೀನನ್ನು ವ್ಯವಸಾಯದಿಂದ ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ. 1964ರ ಕಲಂ 95ರಂತೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು.
6. ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತದ ಕಾನೂನುಗಳನ್ನು ಪಾಲಿಸತಕ್ಕದ್ದು.
7. ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ಅಭಿವೃದ್ಧಿ ಪ್ರಾಧಿಕಾರ/ಸ್ಥಳೀಯ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.
8. ಮೇಲಿನ ಷರತ್ತುಗಳು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತ್ಯ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಭೂಮಿಯನ್ನು ಋುಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಟಿ.ಎನ್. ನಾರಾಯಣ ಗೌಡ
ಪಿ.ಆರ್. 441
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ (ಭೂ ಸುಧಾರಣೆ)
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಲಾ 28 ಎಲ್ಎಜಿ 2009, ಬೆಂಗಳೂರು, ದಿನಾಂಕ: 20ನೇ ಜುಲೈ 2009
ಶ್ರೀ ಸಿ.ಬಿ. ದಾವಣಗೇರಿ, ಇವರನ್ನು ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳ 1977ರಲ್ಲಿನ ಷರತ್ತಿಗಳಿಗೊಳಪಟ್ಟು ದಿನಾಂಕ:15.5.2009 ರಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ದಾವಣಗೆರೆ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಅಪರ ಸರ್ಕಾರಿ ವಕೀಲರ ಹುದ್ದೆಯಲ್ಲಿ ಮುಂದುವರೆಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಇ. ಶಿವಾನಂದ
ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-1)
ಪಿ.ಆರ್. 442
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ
ಅಧಿಸೂಚನೆ
ಸಂಖ್ಯೆ: ಲಾ 33 ಎಲ್ಎಜಿ 2009, ಬೆಂಗಳೂರು, ದಿನಾಂಕ: 20ನೇ ಜುಲೈ 2009
ಶ್ರೀ ಎಲ್. ನರಸಿಂಹಮೂರ್ತಿ, ಇವರನ್ನು ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳ 1977ರಲ್ಲಿನ ಷರತ್ತಿಗಳಿಗೊಳಪಟ್ಟು ದಿನಾಂಕ:15.5.2009 ರಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ತುಮಕೂರು ಜಿಲ್ಲೆಯ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಯಲ್ಲಿ ಮುಂದುವರೆಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಇ. ಶಿವಾನಂದ
ಪಿ.ಆರ್. 443
ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-1)
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ
ಅಧಿಸೂಚನೆ
ಸಂಖ್ಯೆ: ಲಾ 136 ಎಲ್ಸಿಇ 2009, ಬೆಂಗಳೂರು, ದಿನಾಂಕ: 20ನೇ ಜುಲೈ 2009
ಕರ್ನಾಟಕ ಕಾನೂನು ಅಧಿಕಾರಿಗಳ ಸೇವೆಗಳ (ನೇಮಕಾತಿ ಮತ್ತು ಷರತ್ತುಗಳು) ನಿಯಮಗಳು 1977ರ ನಿಯಮ 26(3)ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮೈಸೂರಿನ ಒಂದನೇ ಶೀಘ್ರಗತಿ ನ್ಯಾಯಾಲಯದ ವಿಶೇಷ ಸರ್ಕಾರಿ೬೨೨ ಕರ್ನಾಟಕ ರಾಜ್ಯಪತ ್ರ, ಗುರುವಾರ, ಆಗಸ್ಟ್ ೧೩, ೨೦೦೯ ಭಾಗ - ೪ಎ ಅಭಿಯೋಜಕರಾದ ಶ್ರೀ ಎನ್.ಸಿ. ಸಂಜೀವನ್, ಇವರನ್ನು ದಿನಾಂಕ:15.5.2009 ರಿಂದ ಜಾರಿಗೆ ಬರುವಂತೆ ಎರಡು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮುಂದುವರೆಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಇ. ಶಿವಾನಂದ
ಪಿ.ಆರ್. 444
ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-1)
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ COMMERCE & INDUSTRIES SECRETARIAT
NOTIFICATION
No. CI. 179:MMM.2007(P), Bangalore, Dated: 18th July 2009
In pursuance of Section 5 read with Section 8 of the Mines and Minerals (Development and Regulation) Act, 1957, and after obtaining prior approval Government of India, Ministry of Mines, New Delhi vide their letter No.5/164/2007-M.IV dated:14.8.2008, the Government of Karnataka hereby accords sanction for grant of Mining Lease for a period of 20 years (Twenty years only) in favour of Shri Ram Rao M. Poal for Iron ore, over an area of 70-00 acres (Seventy acres only) in R.M. Block, Ramgad Range, Sandur Taluk, Bellary District with the boundaries as mentioned below and as per the sketch furnished by the Director, Department of Mines and Geology, Bangalore subject to compliance of the provisions of the Mines and Minerals (Development and Regulation) Act, 1957 and Mineral Concession Rules, 1960 and other applicable Acts and Rules including Forest (Conservation) Act 1980, Environmental Protection Act, 1986, EIA Notification 2006 etc., as amended from time to time and Rules made there under.
| On the North by | Part of Revenue land | On the South by | Banappanakeri Short Cut |
| On the East by | Part of Revenue land | On the West by | Part of Revenue land and Sy.No.9 |
Sanction of this Mining lease is subject to the necessary clearances like Forest Clearance under Forest (Conservation )Act, 1980, Environmental Clearance under Environmental Protection Act, 1986, Consent for Establishment/Consent for Operation from the KSPCB. Sanction of this Mining lease is also subject to the terms and conditions appended hereto and subject to outcome of writ petition/appeal, if any, pending in respect of the area covered in this Notification.
The Mining lease should be executed only after submission of all the statutory documents/clearances, by the applicant.
By Order and in the name of the Governor of Karnataka
M. VASUDEVAMURTHY
Under Secretary to Government (Mines)
Commerce & Industries Department
TERMS AND CONDITIONS OF THE MINING LEASE SANCTIONED IN GOVERNMENT
NOTIFICATION NO. CI.179 :MMM 2007(P) Dated 18.7.2009
a) Mining lease should be in respect of Iron ore only. If other minerals are found in association with Iron ore, they should be brought to the notice of Government and if the lessee desires to mine these minerals along with Iron ore he/she/it should do so only after the consent of Government is obtained in writing.
ಭಾಗ - ೪ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಆಗಸ್ಟ್ ೧೩, ೨೦೦೯ ೬೨೩b) If beryl or any other substance prescribed U/S 3 of the Atomic Energy Act, XXIX of 1948 is found to occur in the property under the lease, the lessee shall make available such mineral to the Government of India.
c) The lease shall also be subject to the provisions of Rules in Chapter IV of the Minerals Concession Rules, 1960.
d) The lease shall also be subject to the Rules, issued U/S 18 of the Mines & Minerals (D&R) Act, 1957.
e) The lessee shall pay to the Director of Mines and Geology in Karnataka, Bangalore, necessary Security Deposit for due observance of the terms and conditions of the lease in accordance with Rule 32 of the lease issued to him.
f) The lessee shall be governed by all conditions that may be incorporated in the lease deed, to be executed.
g) The lessee shall abide by the rules contained in the Karnataka State Forest Manual, if the lease area covers any forestland.
h) Government shall have the right of purchasing the ore at current market rates.
i) The lease would be determined if the lessee fails to commence execution of the lease deed.
j) The area mentioned above is subject to verification after actual survey and demarcation.
k) The lease shall be for a period of Twenty Years.
l) The lessee/s shall pay dead rent, cesses and royalty as detailed below:-
DEAD RENT PAYABLE PER HECTARE PER ANNUM
Ist year of the lease : Rs. 100/-
2nd year to 5th year of the lease : Rs. 140/-
6th year to 10th year of the lease : Rs. 280/-
11th year of the lease & onwards : Rs.400/-
Surface Rent: Rs.2.50 per hectare per annum on the area used by the lessee/s for mining purposes.
Local & other Cesses: As prevalent in Bellary District.
Royalty: At the rate prescribed in Second Schedule to the Mines & Minerals (D&R) Act, 1957 and as amended from time to time.
m) The total area held by the applicant/s under mining lease including the present one, shall not exceed 10 Sq.Km.
n) Mining operations shall not be commenced/conducted unless a qualified manager and other supervisory staff are appointed as required under the Matalliferous Mines Regulations, 1961 and relevant notices are sent to the Director-General of Mines Safety, Dhanbad with a copy of the same to the concerned Director of Mines Safety.
o) The minerals should be value added and the Lessee should adhere to existing National Mineral Policy and Karnataka Mineral Policy, 2008.
M. VASUDEVAMURTHY
P.R. 445
Under Secretary to Government (Mines)
Commerce & Industries Department೬೨೪ ಕರ್ನಾಟಕ ರಾಜ್ಯಪತ ್ರ, ಗುರುವಾರ, ಆಗಸ್ಟ್ ೧೩, ೨೦೦೯ ಭಾಗ - ೪ಎ
SOCIAL WELFARE SECRETARIAT
NOTIFICATION
No. SWD 231 BCA 2007, Bangalore, Dated: 8th July 2009
In exercise of the Powers conferred by sub-section (7) of section 13 of the Karnataka Scheduled Castes, Scheduled Tribes and other Backward Classes (Reservation of Appointment etc.,) Act, 1990 (Karnataka Act 7 of 1991) the Government of Karnataka hereby makes the following rules further the amend the Karntaka Scheduled Castes, Scheduled Tribes and Other Backward Classes (Reservation of Appointment etc) Rules 1992 namely:
1. Title and Commencement: (1) These rules may be called the Karnataka Scheduled Castes, Scheduled Tribes and Other Backward Classes (Reservation of Appointment etc.,) (Amendment )Rules , 2009.
(2) They shall come into force on the date of the publication in the official Gazette.
2. Substitution of expression: In the Karnataka Scheduled Castes, Scheduled Tribes and Other Backward Classes (Reservation of Appointment etc.,) Rules 1992 for the words ''Director of Social Welfare'', where ever they occur the words ''Commissioner/Director of Social Welafare'' shall be substituted.
SIDDALINGAIAH
P.R. 446
Deputy Secretary to Government
Social Welfare Department
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಒ 42 ಸಿಎನ್ಎಸ್ 2008, ಬೆಂಗಳೂರು, ದಿನಾಂಕ: 24ನೇ ಜುಲೈ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ11)ರ ಪ್ರಕರಣ 29ರ ಉಪ ಪ್ರಕರಣ(1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿ., ಬೆಂಗಳೂರು ಇದರ ಆಡಳಿತ ಸಮಿತಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
1. ಶ್ರೀ ಡಿ.ವಿ. ಸದಾನಂದಗೌಡ ಬಿನ್ ವೆಂಕಪ್ಪಗೌಡ, ನಂ. 15-22-1390/4, ''ಕಮಲ'' ಲೋವರ್ ಬೇಂದೂರು, 2ನೇ ಅಡ್ಡರಸ್ತೆ, ಕಂಕನಾಡಿ, ಮಂಗಳೂರು-575002 ದಕ್ಷಿಣ ಕನ್ನಡ ಜಿಲ್ಲೆ.
2. ಶ್ರೀ ಇ. ಅಶ್ವತ್ಥನಾರಾಯಣ, ನಂ. 103, ಮೀನಾ ನಿಲಯ, ಲಕ್ಷ್ಮೀದೇವಸ್ಥಾನ ರಸ್ತೆ, ಪುಟ್ಟೇನಹಳ್ಳಿ, ಬೆಂಗಳೂರು- 560078.
3. ಶ್ರೀಮತಿ ಮಂಗಳಾದೇವಿ ಬಿರಾದಾರ್, ಮೂರ್ತಿನಗರ, ಮಡಿವಾಳೇಶ್ವರ ದೇವಸ್ಥಾನ ರಸ್ತೆ, ಮುದ್ದೇಬಿಹಾಳ, ಬಿಜಾಪುರ ಜಿಲ್ಲೆ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಪಿ.ಆರ್. 447
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ