Servants of Knowledge
Karnataka Gazette · Government of Karnataka

Karnataka Gazette, Part Part-2, 12 January 2012

Published 12 January 2012

Part
Part-2
Identifier
in.gazette.karnataka_new.2012-01-12.Part-2
Languages
English, Kannada
Published at
Original source ↗

click here for IIIF manifest

WPP-47 / 2009-2011

ಸಂಪುಟ ೧೪೭ ಬೆಂಗಳೂರು, ಗುರುವಾರ, ಜನವರಿ ೧೨, ೨೦೧೨ (ಪುಷ್ಯ ೨೨, ಶಕ ವರ್ಷ ೧೯೩೩) ಸಂಚಿಕೆ ೨

ಭಾಗ – ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಿಗಳು,

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 235 ಇಟಿಐ 2011, ಬೆಂಗಳೂರು, ದಿನಾಂಕ: 24ನೇ ನವೆಂಬರ್, 2011

ಉದ್ಯೋಗ ಮತ್ತು ತರಬೇತಿ ಇಲಾಖೆಯ ತರಬೇತಿ ವಿಭಾಗದ ಈ ಕೆಳಕಂಡ ಪ್ರಾಚಾರ್ಯರು ದರ್ಜೆ-2/ಸಹಾಯಕ ನಿರ್ದೇಶಕರುಗಳಿಗೆ ಪ್ರಾಚಾರ್ಯರು ದರ್ಜೆ-1/ಉಪ ನಿರ್ದೇಶಕರ ಹುದ್ದೆಗೆ ರೂ. 18,150-26,925ರ ವೇತನ ಶ್ರೇಣಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಪನ್ನ ಮುಂಬಡ್ತಿ ನೀಡಿ ಈ ಕೆಳಗಿನಂತೆ ಅವರ ಹೆಸರಿನ ಮುಂದೆ ಸೂಚಿಸಿರುವ ಸ್ಥಳಗಳಿಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.

ಕ್ರಮ ಸಂಖ್ಯೆ ಅಧಿಕಾರಿಗಳ ಹೆಸರು ಶಿ ೕಯುತರುಗಳು : ್ರ ಸ ್ಥಳ ನಿಯುಕ್ತಿಗೊಳಿಸಿರುವ ಸ್ಥಳ
1 ಹನುಮಂತರಾಜು ಪ್ರಾಚಾರ್ಯರು ದರ್ಜೆ"1, ಕೈಗಾರಿಕಾ ತರಬೇತಿ ಸಂಸ್ಥೆ, ಭಟ್ಕಳ"ಖಾಲಿ ಹುದ್ದೆ.
2 ರವೀಂದ್ರನಾಥ್ ಪಿ. ಶಿಗ್ಗಾಂವಕರ್ ಪ್ರಾಚಾರ್ಯರು ದರ್ಜೆ"1, ಕೈಗಾರಿಕಾ ತರಬೇತಿ ಸಂಸ್ಥೆ, ಹುಬ್ಬಳ್ಳಿ (ಶ್ರೀ ಪಿ. ರಮೇಶ್ಯ ಇವರ ಮುಂಬಡ್ತಿಯಿಂದ ತೆರವಾದ ಜಾಗ)
3 ವೈಜಗೊಂಡ ಪ್ರಾಚಾರ್ಯರು ದರ್ಜೆ"1, ಕೈಗಾರಿಕಾ ತರಬೇತಿ ಸಂಸ್ಥೆ, ಹೊಸೂರು ರಸ್ತೆ, ಬೆಂಗಳೂರು (ಶ್ರೀ ಬಿ. ಎ್. ಚಂದ್ರಶೇಖರ್ ಇವರ ಮುಂಬಡ್ತಿಯಿಂದ ತೆರವಾದ ಜಾಗ)
4 ಏಕಾಂತಸ್ವಾಮಿ ಪ್ರಾಚಾರ್ಯರು ದರ್ಜೆ"1, ಕೈಗಾರಿಕಾ ತರಬೇತಿ ಸಂಸ್ಥೆ, ಸಕೇಶಪುರ"ಖಾಲಿ ಹುದ್ದೆ.
5 ಎನ್. ಏಕನಾಥ್ ಪ್ರಾಚಾರ್ಯರು ದರ್ಜೆ"1, ಕೈಗಾರಿಕಾ ತರಬೇತಿ ಸಂಸ್ಥೆ, ಕಾರವಾರ (ಶ್ರೀ ಎಂ. ಜಿ. ಹುಂಡೇಕರ್ ಇವರ ಮುಂಬಡ್ತಿಯಿಂದ ತೆರವಾದ ಜಾಗ)

ಈ ಮುಂಬಡ್ತಿಯನ್ನು ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮುಂದೆ ಇರುವ ಅರ್ಜಿ ಸಂಖ್ಯೆ : 6840-6849/2011ರಲ್ಲಿನ ತೀರ್ಪಿಗೆ ಬದ್ಧವಾಗುವ ಷರತ್ತಿಗೊಳಪಟ್ಟು ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜೆ. ಎಸ್. ವಿಶ್ವನಾಥಪ್ಪ,

ಪೀಠಾಧಿಕಾರಿ, ಪಿ.ಆರ್. 1655 ಕಾರ್ಮಿಕ ಇಲಾಖೆ, (ಉದ್ಯೋಗ ಮತ್ತು ತರಬೇತಿ)

(೩೩)ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೨, ೨೦೧೨ ಭಾಗ-೨ ೩೪

ಕನ್ನಡ, ಸಂಸ್ಕøತಿ ಮತ್ತು ವಾರ್ತಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಸಂವಾಪ್ರ 10 ರಾಪಸಿ 2009, ಬೆಂಗಳೂರು, ದಿನಾಂಕ: 16ನೇ ನವೆಂಬರ್, 2011.

ಶ್ರೀ ಗವಿಸಿದ್ದಯ್ಯ, ಸಹಾಯಕ ಪತ್ರಪಾಲಕರು, ವಿಭಾಗೀಯ ಪತ್ರಾಗಾರ ಕಛೇರಿ, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ. 14050-25050ರ ಪತ್ರಪಾಲಕರ ಗ್ರೂಪ್-ಎ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ಅವರನ್ನು ಮುಂದಿನ ಆದೇಶದವರೆಗೆ ವಿಭಾಗೀಯ ಪತ್ರಾಗಾರ ಕಛೇರಿ, ಮೈಸೂರು ಇಲ್ಲಿ ಖಾಲಿ ಇರುವ ಪತ್ರಪಾಲಕರ ಹುದ್ದೆಗೆ ನೇಮಕ ಮಾಡಿದೆ.

ಭಾಗ-1

ಶ್ರೀಮತಿ ವಿ.ತಾರಾಸರಸ್ವತಿ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿಯೋಜನೆ ಮೇರೆಗೆ ಪತ್ರಪಾಲಕರು, ವಿಭಾಗೀಯ ಪತ್ರಾಗಾರ ಕಛೇರಿ, ಮೈಸೂರು ಇವರನ್ನು ಅದೇ ಕಛೇರಿಯಲ್ಲಿ ಶ್ರೀ ಗವಿಸಿದ್ಧಯ್ಯ, ಸಹಾಯಕ ಪತ್ರಪಾಲಕರು ಇವರ ಮುಂಬಡ್ತಿಯಿಂದ ತೆರವಾದ ಸಹಾಯಕ ಪತ್ರಪಾಲಕರ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್.ಗೀತಾಕುಮಾರಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 1666

ಕನ್ನಡ, ಸಂಸ್ಕøತಿ ಮತ್ತು ವಾರ್ತಾ ಇಲಾಖೆ. (ಆಡಳಿತ ಕನ್ನಡ).

PERSONNEL AND ADMINISTRATIVE REFORMS SECRETARIAT

NOTIFICATION

No. DPAR 288 SPS 2011, Bangalore, Dated: 22nd November, 2011

Dr. Harshvardhan Raju, IPS, (KN-84), Additional Director General of Police, Recruitment & Training, Bangalore is transferred with immediate effect and posted until further orders as Additional Director General of Police, Internal Security Division, Bangalore in the existing vacancy.

Shri. Kishore Chandra H.C, IPS, (KN-84), Additional Director General of Police, under orders of transfer as Additional Director General of Police, Internal Security Division, Bangalore is posted with immediate effect and until further orders as Additional Director General of Police, Communication, Logistic & Modernisation, Bangalore vice Shri. Ashit Mohan Prasad, IPS, transferred.

The Notification No. DPAR 266 SPS 2011, dated: 05-11-2011 in respect of transfer of Shri. Kishore Chandra H.C, IPS, stands cancelled.

Shri. Ashit Mohan Prasad, IPS, (KN-85) Additional Director General of Police, Communication, Logistic & Modernisation, Bangalore is transferred with immediate effect and posted until further orders as Additional Director General of Police, Crimes & Technical Services, Bangalore in the existing vacancy.

Shri. Nisar Ahmed U, IPS, (KN-89), Inspector General of Police & Additional Commissioner of Police, Administration, Bangalore is transferred with immediate effect and posted until further orders as Inspector General of Police, Forest Cell, Bangalore vice Shri. Narayana Gowda M.C, IPS transferred

Shri. Narayana Gowda M.C, IPS, (KN-90), Inspector General of Police, Forest Cell, Bangalore is transferred with immediate effect and posted until further orders as Inspector General of Police & Additional Commissioner of Police, Administration, Bangalore vice Shri. Nisar Ahmed U, IPS, transferred

By Order and in the Name of the Governor of Karnataka,

A.P. ATRE,

Under Secretary to Government,

DP & AR (Services-IV).

P.R : 1667

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೨, ೨೦೧೨ ೩೫

PERSONNEL AND ADMINISTRATIVE REFORMS SECRETARIAT

NOTIFICATION

No. DPAR 588 SAS 2011, Bangalore, Dated: 22nd November, 2011

Sri.D. Randeep, IAS (KN-2006), Deputy Secretary to Government-3, Finance Department is transferred with immediate effect and posted until further orders as Deputy Secretary to Government (Budget & Resources), Finance Department in the existing vacancy.

Sri. Anurag Tewari, IAS (KN 2007), waiting for posting is posted with immediate effect and until futher orders as Deputy Secretary to Government – 3, Finance Department vice Sri.D. Randeep, IAS transferred.

By Order and in the Name of the Governor of Karnataka,

N. SRINIVASAMURTHY

Under Secretary to Government,

DP & AR (Services-I).

P.R : 1668

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಲಾ 12 ಎಲ್ಎಜಿ 2011, ಬೆಂಗಳೂರು, ದಿನಾಂಕ: 21ನೇ ನವೆಂಬರ್, 2011.

ಶ್ರೀ. ಸಿ.ಜಿ.ರಾಜಶೇಖರ್, ಜಿಲ್ಲಾ ಸರ್ಕಾರಿ ವಕೀಲರು, ದಾವಣಗೆರೆ ಜಿಲ್ಲೆ, ಇವರ ಸೇವಾವಧಿಯು ಮುಕ್ತಾಯವಾಗಿರುವುದರಿಂದ ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1977ರ ನಿಯಮ 26(2)ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸದರಿ ಹುದ್ದೆಯ ಅಧಿಕಾರ ವಹಿಸಿಕೊಳ್ಳುವ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಶ್ರೀ ವೈ.ಮಂಜಪ್ಪ, ವಕೀಲರು, ಇವರನ್ನು ದಾವಣಗೆರೆ ಜಿಲ್ಲೆಯ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಿ.ಎ. ಗೌರೀಶ,

ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-1), ಪಿ.ಆರ್. 1669

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ.

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 334 ಪೊಸಿಪ 2011, ಬೆಂಗಳೂರು, ದಿನಾಂಕ: 19ನೇ ನವೆಂಬರ್, 2011.

ಕೆ.ಎ.ಟಿ. ಅರ್ಜಿ ಸಂಖ್ಯೆ:2039/01 ದಿನಾಂಕ 21-01-2009ರ ಆದೇಶದಂತೆ ಶ್ರೀ ಪುದಕಲಕಟ್ಟಿರವರಿಗೆ ಪಿ.ಐ ವೃಂದದ ಅಂತಿಮ ಜೇಷ್ಠತಾ ಪಟ್ಟಿ ದಿನಾಂಕ 07-05-1993ರಲ್ಲಿ ಪ್ರಕಟಿಸಿ ಪಿ.ಐ ವೃಂದದಲ್ಲಿ ದಿನಾಂಕ 09-10-1980ರಂದು ಪರಿಗಣಿತ ದಿನಾಂಕ ನೀಡಿ ಪರಿಷ್ಕರಿಸಲಾಗಿತ್ತು.

ಅದರಂತೆ ಸರ್ಕಾರದ ಅಧಿಸೂಚನೆ ಸಂಖ್ಯೆ:ಒಇ 154 ಪೊಸಇ 2009 ದಿನಾಂಕ 24-02-2011ರಲ್ಲಿ ದಿನಾಂಕ 18-12-2009ರಲ್ಲಿ ಪ್ರಕಟಿಸಲಾದ ಡಿವೈ.ಎಸ್.ಪಿ (ಸಿವಿಲ್) ವೃಂದದ ಅಂತಿಮ ಜೇಷ್ಠತೆ ಪಟ್ಟಿಯಲ್ಲಿ ಶ್ರೀ ಪುದಕಲಕಟ್ಟಿ ರವರ ಹೆಸರನ್ನು ಶ್ರೀ ಮೊಹಮ್ಮದ್ ಅನ್ವರುದ್ದೀನ್ (34) ಮತ್ತು ಡಾ:ಟಿ.ಡಿ.ಪವಾರ್ (35) ರವರ ಮಧ್ಯದಲ್ಲಿ ಸೇರ್ಪಡಿಸಿ ಕ್ರಮ ಸಂಖ್ಯೆ:34-ಎ ಎಂದು ನಿಗಧಿಪಡಿಸಿ ದಿನಾಂಕ 06-06-1992 ರಿಂದ ಡಿವೈ.ಎಸ್.ಪಿ ವೃಂದದಲ್ಲಿ ಅರ್ಹತೆ ದಿನಾಂಕವನ್ನಾಗಿ ನಿಗಧಿಪಡಿಸಿ ಆದೇಶಿಸಲಾಗಿತ್ತು. ಶ್ರೀ ಪುದಕಲಕಟ್ಟಿ ಇವರಿಗೆ ಡಿವೈ.ಎಸ್.ಪಿ (ಸಿವಿಲ್) ವೃಂದಕ್ಕೆ ಮುಂಬಡ್ತಿ ನೀಡುವ ಬಗ್ಗೆ ಕೆ.ಸಿ.ಎಸ್. (ಆರ್.ಪಿ.ಪಿ.ಪಿ) ಅಧಿನಿಯಮಗಳು, 1973ರ ಕಲಂ 4ರನ್ವಯ ಪರಿಶೀಲಿಸಿ, ಜೇಷ್ಠತೆಯಲ್ಲಿ ಇವರಿಗಿಂತ ಕಿರಿಯ ಅಧಿಕಾರಿಗೆ ಡಿವೈ.ಎಸ್.ಪಿ ವೃಂದಕ್ಕೆ ಮುಂಬಡ್ತಿ ನೀಡಿದ ದಿನಾಂಕದಿಂದ ಅಂದರೆ ದಿನಾಂಕ 06-06-1992 ರಿಂದ ಅನ್ವಯವಾಗುವಂತೆ ಇವರ ವೇತನವನ್ನು ಡಿವೈ.ಎಸ್.ಪಿ ವೃಂದದಲ್ಲಿ ನಿಗಧಿಪಡಿಸಿ ಸದರಿ ಅಧಿನಿಯಮ ದಿನಾಂಕ: 24-02-2011ರನ್ವಯ ಅಧಿಕಾರಿಗಳಿಗೆ ನಿವೃತ್ತಿ ವೇತನ ನಿಗಧಿಪಡಿಸಲು ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್.ರವಿಪ್ರಕಾಶ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1671 ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು). ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೨, ೨೦೧೨ ಭಾಗ-೨ ೩೬

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಹೆಚ್‌ಡಿ 506 ಎಸ್ಎಸ್‌ಟಿ 2011, ಬೆಂಗಳೂರು, ದಿನಾಂಕ: 19ನೇ ನವೆಂಬರ್, 2011.

93-ಬಳ್ಳಾರಿ ವಿಧಾನ ಸಭಾ ಉಪ ಚುನಾವಣೆ-2011ರ ಪ್ರಯುಕ್ತ ಬಳ್ಳಾರಿ ಜಿಲ್ಲೆಯಲ್ಲಿ ನಡೆಯಲಿರುವ ಮತದಾನದ ಸಮಯದಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಲುವಾಗಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973 (ಕೇಂದ್ರ ಕಾಯಿದೆ ಸಂಖ್ಯೆ:2-1974)ರ ಕಲಂ 21ರಲ್ಲಿನ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡ ಅಧಿಕಾರಿಗಳನ್ನು ದಿನಾಂಕ: 30-11-2011 ಮತ್ತು 4-12-2011 ರಂದು ಅವರ ಹೆಸರಿನ ಮುಂದೆ ಸೂಚಿಸಿರುವ ಸ್ಥಳಗಳಿಗೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನಾಗಿ ನೇಮಿಸಿದೆ.

ಕ್ರಮ ಸ ಂಖ್ಯೆ ವಿಶೇಖ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ಹೆಸರು ಮತ್ತು ಇಒಾಖೆ ಅಧಿಕಾರಿಗಳು ಕಾರ್ಯನಿರ್ವಹಿಸುವ ಕ್ಷೇತ್ರ ವ್ಯಾಪ್ತಿ ವಿಧಾನಸಭಾ ಕ್ಷೇತ್ರದ ಹೆಸರು
(1) (2) (3) (4)
1 ಶ್ರೀ. ಡಿ.ಎ್.ನಾರಾಯಣ, ಆಯುಕ್ತರು, ಮಹಾನಗರ ಪಾಲಿಕೆ, ಬಳ್ಳಾರಿ. 9448090766 ನಗರ ಪ್ರದೇಶ ಪೊಲೀಸ್ ಠಾಣೆಗಳ ವ್ಯಾಪ್ತಿ 93"ಬಳ್ಳಾರಿ (ಎಸ್‌ಟಿ)
2 ಶ್ರೀ. ಬಿ.ಟಿ.ಮಂಜುನಾಥ, ಉಪನಿರ್ದೇಶಕರು, ಆಹಾರ ಮತ್ತು ನಾಗರೀಕ ಸರಬರಾಜು ಇಾಖೆ, ಬಳ್ಳಾರಿ. 9448067681 ಗ್ರಾಮೀಣ ಪ್ರದೇಶ ಪೊಲೀಸ್ ಠಾಣೆಗಳ ವ್ಯಾಪ್ತಿ 93"ಬಳ್ಳಾರಿ (ಎಸ್‌ಟಿ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಗೋಪಾಲ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1670

ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ).

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಪಿಡಿ 21 ಎಸ್‌ಡಿಪಿ 2011, ಬೆಂಗಳೂರು, ದಿನಾಂಕ: 23ನೇ ನವೆಂಬರ್, 2011.

ಡಾ: ಡಿ.ಎಂ.ನಂಜುಂಡಪ್ಪ ವರದಿ ಶಿಫಾರಸ್ಸುಗಳ ಅನುಷ್ಠಾನ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರಾಗಿ ಶ್ರೀ ಶಶೀಲ್ ಜಿ.ನಮೋಶಿರವರನ್ನು ಸರ್ಕಾರಿ ಆದೇಶ ಸಂಖ್ಯೆ: ಯೋಇ 77 ಯೋವಿವಿ 2008, ದಿನಾಂಕ: 30-09-2008ರಲ್ಲಿ ನೇಮಕಾತಿ ಮಾಡಲಾಗಿರುತ್ತದೆ. ಅಧ್ಯಕ್ಷರ ಹುದ್ದೆಗೆ ದಿನಾಂಕ:

24-08-2010ರಂದು ಸದರಿಯವರು ರಾಜೀನಾಮೆಯನ್ನು ಸಲ್ಲಿಸಿದ್ದು, ರಾಜೀನಾಮೆಯನ್ನು ಸರ್ಕಾರವು ಸರ್ಕಾರಿ ಆದೇಶ ಸಂಖ್ಯೆ: ಯೋಇ 77 ಯೋವಿವಿ 2008, ದಿನಾಂಕ: 25-8-2010 ರಲ್ಲಿ ಅಂಗೀಕರಿಸಿದೆ.

ಪಿಡಿ 84 ಎಸ್‌ಪಿಬಿ/ಹೆಚ್‌ಪಿಸಿ 2010(ಭಾ), ದಿನಾಂಕ:4-12-2010ರ ಸರ್ಕಾರಿ ಆದೇಶದಲ್ಲಿ ಖಾಲಿಯಾದ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರ ಸ್ಥಾನಕ್ಕೆ ಶ್ರೀ ಸುನೀಲ್ ವಲ್ಹಾಪುರೆ, ಮಾನ್ಯ ಶಾಸಕರು, ಚಿಂಚೋಳಿ ವಿಧಾನ ಸಭಾ ಕ್ಷೇತ್ರ ಇವರನ್ನು ನೇಮಿಸಿ ಆದೇಶ ಹೊರಡಿಸಲಾಗಿರುತ್ತದೆ.

ಆದರೆ ಶ್ರೀ ಸುನೀಲ್ ವಲ್ಹಾಪುರೆರವರು ಸಮಿತಿಯ ಅಧ್ಯಕ್ಷರಾಗಿ ಕಾರ್ಯಭಾರವನ್ನು ಈವರೆಗೆ ವಹಿಸಿಕೊಂಡಿರುವುದಿಲ್ಲ. ಆದುದರಿಂದ ಪಿಡಿ 74 ಯೋವಿವಿ 2008, ದಿನಾಂಕ: 14-10-2008ರ ಸರ್ಕಾರಿ ಆದೇಶದಲ್ಲಿ ಉನ್ನಾತಾಧಿಕಾರ ಸಮಿತಿಯ ಅಧಿಕಾರಿ ಸದಸ್ಯರಾಗಿರುವ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ, ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ ಸುನೀಲ್ ವಲ್ಹಾಪುರೆ ರವರು ಅಧ್ಯಕ್ಷರ ಹುದ್ದೆಯ ಕಾರ್ಯಭಾರ ವಹಿಸಿಕೊಳ್ಳುವವರೆಗೆ ಅಥವಾ ಈ ಸ್ಥಳದಲ್ಲಿ ಬೇರೆಯವರ ನೇಮಕಾತಿ ಮಾಡುವವರೆಗೆ, ಸದರಿ ಸಮಿತಿಯ ಸದಸ್ಯರೊಂದಿಗೆ ಹಾಗೂ ಸಮಿತಿಯ ಪರಿಶೀಲನಾಂಶಗಳಂತೆ (Terms of reference) ಉನ್ನತಾಧಿಕಾರ ಸಮಿತಿಗೆ ಸಂಬಂಧಿಸಿದ ವಿಶೇಷ ಅಭಿವೃದ್ಧಿ ಯೋಜನೆಯ ಪರಿಶೀಲನಾ ಸಭೆಗಳನ್ನು ನಡೆಸಲು ಆದೇಶ ನೀಡಲಾಗಿದೆ.

ಈ ಅಧಿಸೂಚನೆಯನ್ನು ಮಾನ್ಯ ಮುಖ್ಯಮಂತ್ರಿಯವರು ನೀಡಿರುವ ಅನುಮೋದನೆಯನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಉಷಾಬಾಯಿ,

ಸರ್ಕಾರದ ಅಧೀನ ಕಾರ್ಯದರ್ಶಿ-3, ಪಿ.ಆರ್. 1672 ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೨, ೨೦೧೨ ೩೭

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಲಾ 145 ಎಲ್ಎಜಿ 2010, ಬೆಂಗಳೂರು, ದಿನಾಂಕ: 19ನೇ ನವೆಂಬರ್, 2011.

ಶ್ರೀ. ಮಲ್ಲಿಕಾರ್ಜುನಯ್ಯ ಎಸ್.ಹಿರೇಮಠ, ಅಪರ ಸರ್ಕಾರಿ ವಕೀಲರು, ಶೋರಾಪುರ ತಾಲ್ಲೂಕು ಯಾದಗಿರಿ ಜಿಲ್ಲೆ, ಇವರ ಸೇವಾವಧಿಯು ಮುಕ್ತಾಯವಾಗಿರುವುದರಿಂದ ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1977ರ ನಿಯಮ, 26(2)ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸದರಿ ಹುದ್ದೆಯ ಅಧಿಕಾರ ವಹಿಸಿಕೊಳ್ಳುವ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಶ್ರೀ ಜೋಷಿ ವೆಂಕಟಪ್ಪಾಚಾರ್ಯ, ವಕೀಲರು, ಇವರನ್ನು ಯಾದಗಿರಿ ಜಿಲ್ಲೆಯ ಶೋರಾಪುರ ತಾಲ್ಲೂಕಿನ ಅಪರ ಸರ್ಕಾರಿ ವಕೀಲರ ಹುದ್ದೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಿ.ಎ. ಗೌರೀಶ,

ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-1), ಪಿ.ಆರ್. 1673

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 76 ಇಆಸು 2011, ಬೆಂಗಳೂರು, ದಿನಾಂಕ: 23ನೇ ನವೆಂಬರ್, 2011.

ವಿವಿಧ ಪತ್ರಿಕೆಗಳು, ಖಾಸಗಿ ಟಿ.ವಿ. ವಾಹಿನಿಗಳು ಮತ್ತು ದೂರದರ್ಶನ ವಾಹಿನಿಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಲೋಪದೋಷಗಳು, ಯೋಜನೆ ಮತ್ತು ಕಾರ್ಯವೈಖರಿ ಇತ್ಯಾದಿಗಳ ಬಗ್ಗೆ ಬರುವ ಟೀಕೆ-ಟಿಪ್ಪಣಿಗಳಿಗೆ ಸಂಬಂಧಿಸಿದ ಇಲಾಖೆಯ ಸ್ಪಷ್ಟೀಕರಣವನ್ನು ಸಾರ್ವಜನಿಕರಿಗೆ ಅಗತ್ಯವಾಗಿರುತ್ತದೆ. ವಾರ್ತಾ ಇಲಾಖೆಯು ಈ ಬಗ್ಗೆ ಕ್ರಮ ಕೈಗೊಂಡು ದಿನಪತ್ರಿಕೆಗಳಲ್ಲಿ/ಟಿ.ವಿ. ವಾಹಿನಿಗಳಲ್ಲಿ ಬರುವ ಟೀಕೆ-ಟಿಪ್ಪಣಿಗಳ ಬಗೆಗಿನ ವರದಿಯ ಪ್ರತಿಯನ್ನು ಆಯಾ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳಿಗೆ ಇ-ಮೇಲ್ ಮೂಲಕ ಕಳುಹಿಸಿಕೊಡಲಾಗುತ್ತಿದ್ದು, ವರದಿ ಪ್ರಕಟವಾದ ದಿನದಂದೇ ಸ್ಪಷ್ಟೀಕರಣವನ್ನು ಸಂಜೆ 3-00 ಗಂಟೆಯೊಳಗೆ ಮಾನ್ಯ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರ ಕಛೇರಿಗೆ ಕಳುಹಿಸಿಕೊಡಬೇಕಾಗಿದೆ. ಆದಕಾರಣ, ಸಚಿವಾಲಯದ ಎಲ್ಲಾ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಯವರು ಅವರ ಇಲಾಖೆಯ ಉಪ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರನ್ನು ಸದರಿ ವಿಷಯದ ಬಗ್ಗೆ ಕ್ರಮ ವಹಿಸಿ ಸ್ಪಷ್ಟೀಕರಣವನ್ನು ಮಾನ್ಯ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಿಗೆ ಕಳುಹಿಸುವ ವ್ಯವಸ್ಥೆ ಮಾಡಲು ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸುವ ಅಗತ್ಯತೆ ಇರುತ್ತದೆ. ಎಂದು ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರು ಸೂಚಿಸಿರುವ ಹಿನ್ನೆಲೆಯಲ್ಲಿ ಮೇಲೆ ತಿಳಿಸಿರುವ ಕಾರ್ಯಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಆಡಳಿತ ಸುಧಾರಣೆ)ಗೆ ಸಂಬಂಧಿಸಿದಂತೆ ಸಮರ್ಥವಾಗಿ ನಿರ್ವಹಿಸಲು ಶ್ರೀಮತಿ. ಕೆ.ವಿ. ಜಯಲಕ್ಷ್ಮಿ, ಉಪ ಕಾರ್ಯದರ್ಶಿ, 6ನೇ ಮಹಡಿ, 1ನೇ ಹಂತ, ಬಹುಮಹಡಿಗಳ ಕಟ್ಟಡ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಆಡಳಿತ ಸುಧಾರಣೆ) ಇಲಾಖೆ, ದೂರವಾಣಿ ಸಂಖ್ಯೆ: 22032659 ಇವರನ್ನು "ನೋಡಲ್ ಅಧಿಕಾರಿ"ಯನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಭಾರತಿ ಆರ್. ನಾಯಕ್

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1674

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಆಸು-ತರಬೇತಿ).

HIGH COURT OF KARNATAKA

NOTIFICATION

No. GOB(I) 246/ 2007, Bangalore, Dated: 25th November, 2011

It is hereby notified that the venue of the court of the XXXVI Addl. City Civil and Sessions Judge, Bangalore, is re-shifted from the Special Court Hall, situated near Parappana Agrahara, Bangalore to the regular Court Hall situated in the City Civil Court Complex, Bangalore, with immediate effect.

By Order of the High Court,

P.KRISHNA BHAT

REGISTRAR GENERAL

P.R : 1675

ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೨, ೨೦೧೨ ಭಾಗ-೨ ೩೮

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಾರಿಇ 109 ಸಾಸಂಸೇ 2010, ಬೆಂಗಳೂರು, ದಿನಾಂಕ: 23ನೇ ನವೆಂಬರ್, 2011.

ಶ್ರೀ ಬಿಜಯ್ ಕುಮಾರ್ ಸಿಂಗ್, ಐಪಿಎಸ್., ನಿರ್ದೇಶಕರು (ಭದ್ರತೆ ಮತ್ತು ಜಾಗೃತಿ), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇವರನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ನಿರ್ದೇಶಕರು (ಭದ್ರತೆ, ಜಾಗೃತಿ ಮತ್ತು ಪರಿಸರ) ಹುದ್ದೆಗೆ ಪ್ರಭಾರದಲ್ಲಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ರಾಮಚಂದ್ರ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1676

ಸಾರಿಗೆ ಇಲಾಖೆ.

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 112 ಆಖಇ 2011, ಬೆಂಗಳೂರು, ದಿನಾಂಕ: 18ನೇ ನವೆಂಬರ್, 2011.

ಶ್ರೀ ಎಸ್.ವಿ. ಡಿಬ್ಬಿ, ಸಹಾಯಕ ಲೆಕ್ಕಾಧಿಕಾರಿ, ತಾಲ್ಲೂಕು ಪಂಚಾಯತ್, ಕಲಘಟಗಿ, ಧಾರವಾಡ ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಹಾಯಕ ಖಜಾನಾಧಿಕಾರಿ, ಜಿಲ್ಲಾ ಖಜಾನೆ, ಧಾರವಾಡ – ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಎಸ್. ಶಿವರಾಮ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1677

ಆರ್ಥಿಕ ಇಲಾಖೆ(ಆಡಳಿತ & ಮುಂಗಡ).

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 75 ಎಸ್ಐಎಸ್ 2011, ಬೆಂಗಳೂರು, ದಿನಾಂಕ: 19ನೇ ನವೆಂಬರ್, 2011.

ಶ್ರೀಮತಿ ಸಿ.ಶಿಖಾ, ಐ.ಎ.ಎಸ್., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಧಾರವಾಡ ಜಿಲ್ಲೆ, ಧಾರವಾಡ, ಇವರಿಗೆ ದಿನಾಂಕ: 02-11-2011ರಿಂದ 01-02-2012ರವರೆಗೆ ಪ್ರಸೂತಿ ರಜೆಯನ್ನು ಅಖಿಲ ಭಾರತ ಸೇವೆಗಳು (ರಜೆ) ನಿಯಮಗಳ ನಿಯಮ 18(3)ರ ಅಡಿಯಲ್ಲಿ ಮಂಜೂರು ಮಾಡಲಾಗಿದೆ.

ಶ್ರೀಮತಿ ಸಿ.ಶಿಖಾ, ಐ.ಎ.ಎಸ್., ರವರ ರಜಾ ಅವಧಿಯಲ್ಲಿ ಜಿಲ್ಲಾಧಿಕಾರಿ, ಧಾರವಾಡ ಜಿಲ್ಲೆ, ಧಾರವಾಡ, ಇವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಧಾರವಾಡ ಜಿಲ್ಲೆ, ಧಾರವಾಡ, ಈ ಹುದ್ದೆಯ ಅಧಿಕ ಪ್ರಭಾರದಲ್ಲಿಡಲಾಗಿದೆ.

ಶ್ರೀಮತಿ ಸಿ.ಶಿಖಾ, ಐಎಎಸ್, ರವರು ರಜೆಯ ಮೇಲೆ ಹೋಗಿರದಿದ್ದರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಧಾರವಾಡ ಜಿಲ್ಲೆ, ಧಾರವಾಡ, ಹುದ್ದೆಯಲ್ಲಿಯೇ ಸ್ಥಾನಪನ್ನರಾಗುತ್ತಿದ್ದರೆಂದು ದೃಡೀಕರಿಸಿದೆ.

ದಿನಾಂಕ:31-10-2011ರ ಸಮಸಂಖ್ಯೆ ಅಧಿಸೂಚನೆಯಲ್ಲಿ ಮಂಜೂರು ಮಾಡಲಾಗಿದ್ದ ರಜೆಯನ್ನು ಅಧಿಕಾರಿಗಳು ಉಪಯೋಗಿಸಿಕೊಳ್ಳದಿರುವುದರಿಂದ ಸದರಿ ಅಧಿಸೂಚನೆಯನ್ನು ರದ್ದುಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್.ಶ್ರೀನಿವಾಸಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1678 ಸಿ.ಆ.ಸು.ಇ (ಸೇವೆಗಳು-1). ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೨, ೨೦೧೨ ೩೯

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 244 ಪೊಸಿಪ 2011, ಬೆಂಗಳೂರು, ದಿನಾಂಕ: 28ನೇ ನವೆಂಬರ್, 2011.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಈ ಕೆಳಕಂಡ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಸಶಸ್ತ್ರ) ರವರುಗಳಿಗೆ ವೇತನ ಶ್ರೇಣಿ ರೂ.18150-26925ರ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಸಶಸ್ತ್ರ) ಹುದ್ದೆಗೆ ಮುಂಬಡ್ತಿ ನೀಡಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಗಿನಂತೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.

1) ಶ್ರೀ ಎಂ.ಎಸ್. ಇಂದುಶೇಖರ್, ಡಿವೈ.ಎಸ್.ಪಿ (ಸಶಸ್ತ್ರ) ಇವರಿಗೆ ಎಸ್.ಪಿ. (ಸಶಸ್ತ್ರ) ಹುದ್ದೆಗೆ ಮುಂಬಡ್ತಿ ನೀಡಿ ಒಂದು ದಿನದ ಅವಧಿಗೆ ಡಿ.ಸಿ.ಪಿ. (ಸಿಎಆರ್) ಹುಬ್ಬಳ್ಳಿ-ಧಾರವಾಡ ಇಲ್ಲಿಗೆ ಶ್ರೀ ಎಂ.ಎನ್. ಜೋಗಳೇಕರ್ ಇವರ ಸ್ಥಳದಲ್ಲಿ ನೇಮಿಸಲಾಗಿದೆ. ತದನಂತರ ಶ್ರೀ ಎಂ.ಎಸ್. ಇಂದುಶೇಖರ್, ಡಿವೈ.ಎಸ್.ಪಿ (ಸಶಸ್ತ್ರ) ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಭದ್ರತೆ), ಹುಬ್ಬಳ್ಳಿ ಇಲ್ಲಿನ ಖಾಲಿ ಹುದ್ದೆಗೆ ನಿಯೋಜಿಸಲಾಗಿದೆ.

2) ಶ್ರೀ ರಾಮಚಂದ್ರಗೌಡ, ಡಿವೈ.ಎಸ್.ಪಿ (ಸಶಸ್ತ್ರ) ಇವರನ್ನು ಎಸ್.ಪಿ. (ಸಶಸ್ತ್ರ) ಹುದ್ದೆಗೆ ಮುಂಬಡ್ತಿ ನೀಡಿ ಎಸ್.ಪಿ. ಆಂತರಿಕ ಭದ್ರತಾ ವಿಭಾಗ, ಬೆಂಗಳೂರು ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.

ಭಾಗ-2

ಶ್ರೀ ಸಿ. ಕಾಂತರಾಜಪ್ಪ, ಎಸ್.ಪಿ. (ಸಶಸ್ತ್ರ) ಇವರಿಗೆ ದಿನಾಂಕ: 31-10-2011 ರಂದು ಮುಂಬಡ್ತಿ ನೀಡಲಾಗಿದ್ದು, ಪ್ರಸ್ತುತ ಸ್ಥಳ ನೇಮಕಾತಿ ನಿರೀಕ್ಷಣೆಯಲ್ಲಿದ್ದು, ಇವರನ್ನು ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ, ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಗುಲ್ಬರ್ಗಾ ಇಲ್ಲಿನ ಖಾಲಿ ಹುದ್ದೆಗೆ ನಿಯೋಜಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್.ರವಿಪ್ರಕಾಶ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1679

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು).

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 36 ಪೊಸಿಲಿ 2011, ಬೆಂಗಳೂರು, ದಿನಾಂಕ: 26ನೇ ನವೆಂಬರ್, 2011.

ಶ್ರೀ ಪಿ.ಆರ್. ಜಯರಾಮು, ಸಹಾಯಕ ನಿರ್ದೇಶಕರು (ರಸಾಯನ ಶಾಸ್ತ್ರ) ರವರಿಗೆ ಈಗಾಗಲೇ ಸರ್ಕಾರದ ಅಧಿಸೂಚನೆ ಸಂಖ್ಯೆ: ಒಇ 55 ಪೊಸಿಲಿ 2001 ದಿನಾಂಕ 08-03-2006ರಲ್ಲಿ ಸಹಾಯಕ ನಿರ್ದೇಶಕರು (ರಸಾಯನ ಶಾಸ್ತ್ರ) ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಸದರಿಯವರಿಗಿಂತ ಸೇವೆಯಲ್ಲಿ ಕಿರಿಯರಾದ ಶ್ರೀ ಸಿ.ಎಂ.ಮಹದೇವಯ್ಯರವರಿಗೆ ಸಹಾಯಕ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡಿದ ದಿನಾಂಕದಿಂದ ಅನ್ವಯವಾಗುವಂತೆ ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಮುಂಬಡ್ತಿ ವೇತನ ಮತ್ತು ಪಿಂಚಣಿ ಕ್ರಮಬದ್ಧತೆ) ನಿಯಮಗಳು 1978ರ ನಿಯಮ 2(2) ರಡಿಯಲ್ಲಿ ದಿನಾಂಕ 02-12-1999ರಿಂದ ಜಾರಿಗೆ ಬರುವಂತೆ ಪೂರ್ವಾನ್ವಯ ಮುಂಬಡ್ತಿ ನೀಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್.ರವಿಪ್ರಕಾಶ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1680

ಒಳಾಡಳಿತ ಇಲಾಖೆ, (ಪೊಲೀಸ್ ಸೇವೆಗಳು).

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 44 ಎಟಿಎಸ್ 2011, ಬೆಂಗಳೂರು, ದಿನಾಂಕ: 19ನೇ ನವೆಂಬರ್, 2011.

ಕಂದಾಯ ಇಲಾಖೆಯ ತಹಶೀಲ್ದಾರ್ ವೃಂದದ ಈ ಕೆಳಕಂಡ ಅಧಿಕಾರಿಗಳನ್ನು ಕೋರಿಕೆಯ ಮೇರೆಗೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಸ್ಥಳಗಳಿಗೆ ಪರಸ್ಪರ ವರ್ಗಾಯಿಸಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೨, ೨೦೧೨ ಭಾಗ-೨ ೪೦
ಕ್ರ. ಸಂ ತ ಹಶೀಒ್ದಾರರ ಹೆಸರು ಮತ್ತು ಹಾಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳ (ಶ್ರೀ/ಶ್ರೀಮತಿ) ವ ರ್ಗಾಯಿಸಿ ನೇಮಿಸಿದ ಸ್ಥಳ
1 2 3
1 ಎಂ.ಪಿ. ಮಾರುತಿ, ತಹಶ್ದೀಾರ್, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜ್ಲಿೆ. ತಹಶ್ದೀಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಚಿತ್ರದುರ್ಗ (ಶ್ರೀ ಇ.ಬಾಲಕೃ]್ಣ ಇವರ ಸ್ಥಳಕ್ಕೆ)
2 ಇ.ಬಾಲಕೃ]್ಣ, ತಹಶ್ದೀಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಚಿತ್ರದುರ್ಗ ತಹಶ್ದೀಾರ್, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜ್ಲಿೆ. (ಶ್ರೀ ಎಂ.ಪಿ. ಮಾರುತಿ ಇವರ ಸ್ಥಳಕ್ಕೆ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್.ಗೋಪಾಲಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1681

ಕಂದಾಯ ಇಲಾಖೆ, (ಸೇವೆಗಳು-3).

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 62 ಮುಸೇವಿ 2011, ಬೆಂಗಳೂರು, ದಿನಾಂಕ: 23ನೇ ನವೆಂಬರ್, 2011.

ಆಂಧ್ರಪ್ರದೇಶದ ತಿರುಮಲದಲ್ಲಿರುವ ಕರ್ನಾಟಕ ರಾಜ್ಯ ಛತ್ರದಲ್ಲಿ ಪ್ರಸ್ತುತ ಖಾಲಿ ಇರುವ ವಿಶೇಷಾಧಿಕಾರಿ (ಗ್ರೂಪ್-ಎ, ಕಿರಿಯ ಶ್ರೇಣಿ) ಈ ಹುದ್ದೆಯನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ದಿನಾಂಕ:18-06-2011 ರಿಂದ 29-02-2012ರ ವರೆಗಿನ ಅವಧಿಯಲ್ಲಿ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇವರ ಕಛೇರಿಗೆ ಸ್ಥಳಾಂತರಿಸಿ, ಅಪರ ಕೇಂದ್ರಸ್ಥಾನಿಕ ಸಹಾಯಕರು (ಗ್ರೂಪ್-ಎ, ಕಿರಿಯ ಶ್ರೇಣಿ) ಎಂಬುದಾಗಿ ಮರು ಪದನಾಮೀಕರಿಸಲು ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 80 ಮುಸೇವಿ 2010 ದಿನಾಂಕ: 18-06-2011 ರಲ್ಲಿ ಗ್ರೂಪ್-'ಬಿ' ಹುದ್ದೆಯಿಂದ (ಗ್ರೂಪ್-ಎ, ಕಿರಿಯ ಶ್ರೇಣಿ) ಈ ವೃಂದಕ್ಕೆ ಸ್ಥಾನಪನ್ನ ಮುಂಬಡ್ತಿ ಹೊಂದಿದ ಶ್ರೀ ಎಂ. ಸುಬ್ಬಮೂಲ್ಯ ಇವರನ್ನು ದಿನಾಂಕ: 18-06-2011 ರಿಂದ ಪೂರ್ವಾನ್ವಯವಾಗಿ ಅನ್ವಯಿಸುವಂತೆ ಪದನಾಮೀಕರಿಸಿದ ಅಪರ ಕೇಂದ್ರಸ್ಥಾನಿಕ ಸಹಾಯಕರು (ಗ್ರೂಪ್-ಎ, ಕಿರಿಯ ಶ್ರೇಣಿ) ಹುದ್ದೆಗೆ ನೇಮಿಸಿದೆ.

ತಿರುಮಲದಲ್ಲಿರುವ ಕರ್ನಾಟಕ ರಾಜ್ಯ ಛತ್ರದ ಉಪ ವಿಶೇಷಾಧಿಕಾರಿ (ಗ್ರೂಪ್-ಬಿ) ಹುದ್ದೆಯನ್ನು ದಿನಾಂಕ: 18-06-2011 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ವಿಶೇಷಾಧಿಕಾರಿ ಹುದ್ದೆಯನ್ನಾಗಿ ದಿನಾಂಕ:29-02-2012ರ ವರೆಗೆ ಮರು ಪದನಾಮೀಕರಿಸಿ ಆದೇಶಿಸಿದೆ.

ಶ್ರೀ ಎಂ. ಸುಬ್ಬಮೂಲ್ಯ, ಇವರ ವೇತನಕ್ಕೆ ಸಂಬಂಧಿಸಿದ ವೆಚ್ಚವನ್ನು ತಿರುಮಲದ ಕರ್ನಾಟಕ ರಾಜ್ಯ ಛತ್ರದ ನಿಧಿಯಿಂದ ಭರಿಸುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಉಮಾಪತಿ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1682

ಕಂದಾಯ ಇಲಾಖೆ, (ಮುಜರಾಯಿ).

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 424 ಎಎಸ್‌ಡಿ 2011, ಬೆಂಗಳೂರು, ದಿನಾಂಕ: 09ನೇ ನವೆಂಬರ್, 2011.

ಶ್ರೀ ಟಿ.ಸಿ. ಕಾಂತರಾಜ್, ಹಿಂದಿನ ತಹಶೀಲ್ದಾರ್, ಚಿಕ್ಕನಾಯಕನಹಳ್ಳಿ ತಾಲ್ಲೂಕು, ತುಮಕೂರು ಜಿಲ್ಲೆ ಇವರ ಸೇವೆಯನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಸದರಿಯವರ ಮಾತೃ ಇಲಾಖೆಯಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಹಿಂದಿರುಗಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್.ಗೋಪಾಲಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1683 ಕಂದಾಯ ಇಲಾಖೆ, (ಸೇವೆಗಳು-3). ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೨, ೨೦೧೨ ೪೧

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 55 ಎಟಿಎಸ್ 2011 (P), ಬೆಂಗಳೂರು, ದಿನಾಂಕ: 22ನೇ ನವೆಂಬರ್, 2011.

ಕಂದಾಯ ಇಲಾಖೆಯ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಮಹೇಶ್ ಬಾಬು, ತಹಶೀಲ್ದಾರ್ ಇವರನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಕಛೇರಿ, ಹೊಸಪೇಟೆ ತಾಲ್ಲೂಕು ಇಲ್ಲಿ ಖಾಲಿ ಇರುವ ತಹಶೀಲ್ದಾರ್ ಹುದ್ದೆಗೆ ಸಾರ್ವಜನಿಕ/ಆಡಳಿತ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ನೇಮಿಸಿ ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಗೀತಾರಮೇಶ್,

ಸರ್ಕಾರದ ಜಂಟಿ ಕಾರ್ಯದರ್ಶಿ, ಪಿ.ಆರ್. 1684

ಕಂದಾಯ ಇಲಾಖೆ, (ಸೇವೆಗಳು-3).

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 41 ಮುನೋಸೇ 2011 ಬೆಂಗಳೂರು, ದಿನಾಂಕ : 22-11-2011

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ಕೆಳಕಾಣಿಸಿದ ಗ್ರೂಪ್-ಎ ಅಧಿಕಾರಿಗಳನ್ನು 2012ನೇ ಸಾಲಿನಲ್ಲಿ (ದಿನಾಂಕ 31-01-2012 ರಿಂದ 31-12-2012ರವರೆಗೆ) ಅವರ ಹೆಸರಿನ ಮುಂದೆ ನಮೂದಿಸಿರುವ ದಿನಾಂಕದಿಂದ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಲಿದ್ದಾರೆ ಎಂಬ ಮಾಹಿತಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 96(2)ರ ಪ್ರಕಾರ ಪ್ರಕಟಿಸಲಾಗಿದೆ.

ಸದರಿಯವರುಗಳ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇದ್ದಲ್ಲಿ ಹಾಗೂ ಸರ್ಕಾರಕ್ಕೆ ಇವರುಗಳಿಂದ ಯಾವುದೇ ರೀತಿಯ ಲೋಕಾಯುಕ್ತ ವಿಚಾರಣೆ, ಕ್ರಿಮಿನಲ್ ಪ್ರಕರಣ ಬಾಕಿ ಇದ್ದಲ್ಲಿ ಇವರುಗಳೇ ಪೂರ್ಣ ಜವಾಬ್ದಾರರೆಂದು ಹಾಗೂ ಇವರ ಮೇಲೆ ಲೆಕ್ಕ ಪರಿಶೋಧನಾ ವರದಿಯಲ್ಲಿ ಕ್ರಮ ಕೈಗೊಳ್ಳಲು ಆಡಿಟ್ ಪ್ಯಾರಾ ಬಾಕಿ ಇದ್ದಲ್ಲಿ ಇವರುಗಳಿಗೆ ತಾತ್ಕಾಲಿಕ ಪಿಂಚಣಿ ಮಾತ್ರ ಬಿಡುಗಡೆ ಮಾಡುವಂತೆ ಆದೇಶಿಸಲಾಗಿದೆ.

ಕ್ರ.ಸಂ ಅಧಿಕಾರಿ/ನೌಕರರ ಹೆಸರು ಪ ದನಾಮ ಮತ್ತು ಕೆಲಸ ನಿರ್ವಹಿಸುತ್ತಿರುವ ಕಛೇರಿ ಜನ್ಮ ದಿನಾಂಕ ವ ಯೋನಿವೃತ್ತಿ ಹೊಂದುವ ದಿನಾಂಕ
1 2 3 4 5
ನೋಂದಣಿ ಉಪ ಮಹಾಪರಿವೀಕ್ಷಕರು (ಗ್ರೂಪ್ಏಎ)
1 ಶ್ರೀ ಎಂ. ಬಸವರಾಜು ನೋಂದಣಿ ಉಪ ಮಹಾಪರಿವೀಕ್ಷಕರು (ಆಡಳಿತ ಮತ್ತು ಕಾನೂನು) ಕೇಂದ್ರ ಕಛೇರಿ, ಬೆಂಗಳೂರು. 02"03"1952 31"03"2012
2 ಶ್ರೀ ಡಿ. ನಾಗೇಶು ನೋಂದಣಿ ಉಪ ಮಹಾಪರಿವೀಕ್ಷಕರು (ಜಾಗೃತ ದಳ) 03"04"1952 30"04"2012
ಜಿಒ್ಲಾ ನೋಂದಣಾಧಿಕಾರಿಗಳು (ಗ್ರೂಪ್ಏಎ)
1 ಶ್ರೀ ಜಲೀ್ ಸಾಬ್ ಜ್ಲಿಾ ನೋಂದಣಾಧಿಕಾರಿಗಳು, ಜ್ಲಿಾ ನೋಂದಣಿ ಕಛೇರಿ, ಶಿವಮೊಗ್ಗ. 09"01"1952 31"01"2012
2 ಶ್ರೀ ಕೆ.ಆರ್.ಲಕ ್ಷ ್ಮಣರಾವ್ ಜ್ಲಿಾ ನೋಂದಣಾಧಿಕಾರಿಗಳು, ಜ್ಲಿಾ ನೋಂದಣಿ ಕಛೇರಿ, ಚಿಕ್ಕಮಗಳೂರು 10"04"1952 30"04"2012
3 ಶ್ರೀ ಬಿ.ಜಿ.ಅಂಗಡಿ ಜ್ಲಿಾ ನೋಂದಣಾಧಿಕಾರಿಗಳು, ಜ್ಲಿಾ ನೋಂದಣಿ ಕಛೇರಿ, ಬೀದರ್ 01"06"1952 31"05"2012
4 ಶ್ರೀ ಎಸ್.ಕೆ.ಸಿದ್ಧಯ್ಯ ಜ್ಲಿಾ ನೋಂದಣಾಧಿಕಾರಿಗಳು, ಜ್ಲಿಾ ನೋಂದಣಿ ಕಛೇರಿ, ಮಂಗಳೂರು 06"06"1952 30"06"2012
5 ಶ್ರೀ ಡಿ.ಎಸ್.ರಾಜಶೇಖರ್ ಜ್ಲಿಾ ನೋಂದಣಾಧಿಕಾರಿಗಳು, ಜ್ಲಿಾ ನೋಂದಣಿ ಕಛೇರಿ, ರಾಜಾಜಿನಗರ 05"06"1952 30"06"2012
6 ಶ್ರೀ ಎಂ.ಪ್ರಕಾಶ ಜ್ಲಿಾ ನೋಂದಣಾಧಿಕಾರಿಗಳು, ರಾಯಚೂರು (ಹಾಲಿ ಅಮಾನತ್ತು) 16"06"1952 30"06"2012
7 ಶ್ರೀ ಎ.ಜಿ. ಕುಲಕರ್ಣಿ ಜ್ಲಿಾ ನೋಂದಣಾಧಿಕಾರಿಗಳು, ಜ್ಲಿಾ ನೋಂದಣಿ ಕಛೇರಿ, ವಿಜಾಪುರ 16"07"1952 30"07"2012
8 ಶ್ರೀ ಕೆ. ಬೋರಪ್ಪ ಜ್ಲಿಾ ನೋಂದಣಾಧಿಕಾರಿಗಳು, ಜ್ಲಿಾ ನೋಂದಣಿ ಕಛೇರಿ, ಜಯನಗರ 10"07"1952 31"07"2012
9 ಶ್ರೀ ಎನ್.ರೆಡ್ಡಪ್ಪ ಸಹಾಯಕ ನೋಂದಣಿ ಮಹಾಪರಿವೀಕ್ಷಕರು (ಆಡಿಟ್) ಕೇಂದ್ರ ಕಛೇರಿ, ಬೆಂಗಳೂರು 19"08"1952 31"08"2012
10 ಶ್ರೀ ಎಸ್.ಕೇಶವಮೂರ್ತಿ ಜ್ಲಿಾ ನೋಂದಣಾಧಿಕಾರಿಗಳು, ಜ್ಲಿಾ ನೋಂದಣಿ ಕಛೇರಿ, ದಾವಣಗೆರೆ 18"09"1952 30"09"2012
11 ಶ್ರೀ ಮೆಹಬೂಬ್ ಖಾನ್ ಜ್ಲಿಾ ನೋಂದಣಾಧಿಕಾರಿಗಳು, ಜ್ಲಿಾ ನೋಂದಣಿ ಕಛೇರಿ, ಮೈಸೂರು 25"12"1952 31"12"2012
ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೨, ೨೦೧೨ ಭಾಗ-೨ ೪೨

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಕೆ.ರಾಮಚಂದ್ರ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1685

ಕಂದಾಯ ಇಲಾಖೆ, (ನೋಂದಣಿ ಮತ್ತು ಮುದ್ರಾಂಕ).

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 65 ಎಟಿಎಸ್ 2011, ಬೆಂಗಳೂರು, ದಿನಾಂಕ: 18ನೇ ನವೆಂಬರ್, 2011.

ಶ್ರೀ ಪ್ರವೀಣ್ ಬಾಗೇವಾಡಿ, ತಹಶೀಲ್ದಾರ್, ರಾಯಭಾಗ ತಾಲ್ಲೂಕು, ಬೆಳಗಾಂ ಜಿಲ್ಲೆ ಇವರನ್ನು ಸಂಖ್ಯೆ: ಕಂಇ 19 ಎಡಿಎಸ್ 2011 (ಭಾಗ-1) ದಿನಾಂಕ: 18-7-2011 ರ ಸರ್ಕಾರದ ಅಧಿಸೂಚನೆಯಲ್ಲಿನ ಕ್ರಮ ಸಂಖ್ಯೆ: 58 ರಲ್ಲಿ, ತಹಶೀಲ್ದಾರ್, ರೋಣ ತಾಲ್ಲೂಕು, ಗದಗ ಜಿಲ್ಲೆ - ಶ್ರೀ ನಾಗಹನುಮಯ್ಯ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ ವರ್ಗಾಯಿಸಿ ಆದೇಶಿಸಲಾಗಿರುವುದನ್ನು ಮಾರ್ಪಡಿಸಿ, ಇವರನ್ನು ಬೆಳಗಾವಿ ಜಿಲ್ಲೆಯ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆ.ಎಸ್.ಎಫ್.ಸಿ) ಕಛೇರಿ, ಬೆಳಗಾವಿ ಇಲ್ಲಿ ಖಾಲಿ ಇರುವ ವಿಶೇಷ ತಹಶೀಲ್ದಾರ್ ಹುದ್ದೆಗೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್.ಗೋಪಾಲಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1686

ಕಂದಾಯ ಇಲಾಖೆ, (ಸೇವೆಗಳು-3).

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 64 ಎಟಿಎಸ್ 2011, ಬೆಂಗಳೂರು, ದಿನಾಂಕ: 16ನೇ ನವೆಂಬರ್, 2011.

ಶ್ರೀ ವಿ. ಹನುಮಂತರಾಯಪ್ಪ, ತಹಶೀಲ್ದಾರ್, ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ ಇವರನ್ನು ಸಾರ್ವಜನಿಕ/ಆಡಳಿತ ಹಿತದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಛೇರಿಯಲ್ಲಿ ಖಾಲಿ ಇರುವ ತಹಶೀಲ್ದಾರ್ ಹುದ್ದೆಗೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ನೇಮಿಸಲು ಇವರ ಸೇವೆಯನ್ನು ನಗರಾಭಿವೃದ್ಧಿ ಇಲಾಖೆಯ ವಶಕ್ಕೆ ನೀಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್.ಗೋಪಾಲಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1687 ಕಂದಾಯ ಇಲಾಖೆ, (ಸೇವೆಗಳು-3). ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೨, ೨೦೧೨ ೪೩

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 63 ಎಟಿಎಸ್ 2011 ಬೆಂಗಳೂರು, ದಿನಾಂಕ: 25ನೇ ನವೆಂಬರ್, 2011.

ಶ್ರೀ ಡಿ. ಪುಟ್ಟೇಗೌಡ, ತಹಶೀಲ್ದಾರ್ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ, ಬೆಂಗಳೂರು ಇವರನ್ನು ಸಾರ್ವಜನಿಕ/ಆಡಳಿತ ಹಿತದೃಷ್ಟಿಯಿಂದ ಶ್ರೀ ಸಿ. ಮಂಜುನಾಥ್ ತಹಶೀಲ್ದಾರ್, ಬೆಂಗಳೂರು ದಕ್ಷಿಣ ತಾಲ್ಲೂಕು ಇವರ ಜಾಗಕ್ಕೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಗೀತಾರಮೇಶ್,

ಸರ್ಕಾರದ ಜಂಟಿ ಕಾರ್ಯದರ್ಶಿ, ಪಿ.ಆರ್. 1688

ಕಂದಾಯ ಇಲಾಖೆ, (ಸೇವೆಗಳು).

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 209 ಪೊಸಿಪ 2011, ಬೆಂಗಳೂರು, ದಿನಾಂಕ: 24ನೇ ನವೆಂಬರ್, 2011.

ಬಳ್ಳಾರಿ ಜಿಲ್ಲೆ ಸಂಡೂರಿನ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಸಿ.ಸಿ.ನಂ:569/08ರಲ್ಲಿ ಹೊರಡಿಸಿದ ಸಮನ್ಸ್ ಮತ್ತು ಜಾಮೀನುರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲು ವಿಫಲರಾದ ಶ್ರೀ ಅಶೋಕ ಕುರೇರ, ಎ.ಎಸ್.ಪಿ ಬಳ್ಳಾರಿ ಮತ್ತು ಶ್ರೀ ಹೆಚ್.ವೈ.ತುರಾಯಿ, ಡಿವೈ.ಎಸ್.ಪಿ, ಕೂಡ್ಲಗಿ ರವರುಗಳ ವಿರುದ್ಧ ಶಿಸ್ತು ಕ್ರಮ ಬಾಕಿ ಇರಿಸಿ ಸೇವೆಯಿಂದ ಅಮಾನತ್ತಿನಲ್ಲಿರಿಸಿ ದಿನಾಂಕ: 30-08-2011ರಂದು ಆದೇಶ ಹೊರಡಿಸಲಾಗಿತ್ತು ಅಧಿಕಾರಿಗಳ ವಿರುದ್ಧದ ಶಿಸ್ತು ಕ್ರಮ ಬಾಕಿ ಇರಿಸಿ ಸೇವೆಗೆ ಪುನರ್‌ಸ್ಥಾಪಿಸಿ, ಶ್ರೀ ಅಶೋಕ ಕುರೇರ, ಪೊಲೀಸ್ ಅಧೀಕ್ಷಕರು (ಸಿವಿಲ್) (ನಾನ್ ಐಪಿಎಸ್) ರವರನ್ನು ಈ ಕೂಡಲೇ ಜಾರಿಗೆ ಬರುವಂತೆ ಎಸ್.ಪಿ, ಡಿ.ಸಿ.ಆರ್.ಇ, ಬೆಳಗಾಂಗೆ ಇಲ್ಲಿನ ಖಾಲಿ ಹುದ್ದೆಗೆ ಹಾಗೂ ಶ್ರೀ ಹೆಚ್.ವೈ.ತುರಾಯಿ, ಪೊಲೀಸ್ ಉಪಾಧೀಕ್ಷಕರು ರವರನ್ನು ಡಿವೈ.ಎಸ್.ಪಿ, ಡಿ.ಸಿ.ಆರ್.ಇ ಗುಲ್ಬರ್ಗಾ ಖಾಲಿ ಹುದ್ದೆ ಇಲ್ಲಿಗೆ ಸ್ಥಳ ನೇಮಕಾತಿ ಮಾಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್.ರವಿಪ್ರಕಾಶ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1689

ಒಳಾಡಳಿತ ಇಲಾಖೆ, (ಪೊಲೀಸ್ ಸೇವೆಗಳು).

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 467 ಎ.ಎಸ್.ಟಿ 2011 ಬೆಂಗಳೂರು, ದಿನಾಂಕ: 16ನೇ ನವೆಂಬರ್, 2011.

ಶ್ರೀ ಶಂಭು ದಯಾಳ್ ಮೀನಾ, ಐ.ಎ.ಎಸ್. ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಇವರು ದಿನಾಂಕ: 21/11/2011 ರಿಂದ 15/12/2011ರವರೆಗೆ ಗಳಿಕೆ ರಜೆಯ ಮೇಲೆ ತೆರಳುವುದರಿಂದ. ಈ ರಜೆ ಅವಧಿಯಲ್ಲಿ ಶ್ರೀ ಅಯ್ಯಪ್ಪ, ಐ.ಎ.ಎಸ್, ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ, ಇವರನ್ನು ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಈ ಹುದ್ದೆಯಲ್ಲಿ ಪ್ರಭಾರದಲ್ಲಿರಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಗೀತಾರಮೇಶ್,

ಸರ್ಕಾರದ ಜಂಟಿ ಕಾರ್ಯದರ್ಶಿ, ಪಿ.ಆರ್. 1690

ಕಂದಾಯ ಇಲಾಖೆ, (ಭೂ ಮಂ, ಭೂ ಕಂ & ಸೇವೆಗಳು).

ಕಂದಾಯ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಆರ್‌ಡಿ 364 ಎಎಸ್‌ಡಿ 2011, ಬೆಂಗಳೂರು, ದಿನಾಂಕ: 19ನೇ ನವೆಂಬರ್, 2011.

ಸಂಖ್ಯೆ:ಆರ್‌ಡಿ 364 ಎಎಸ್‌ಡಿ 2011, ದಿನಾಂಕ: 04-11-2011 ರ ಸರ್ಕಾರಿ ಆದೇಶದ ಆದೇಶ ಭಾಗದಲ್ಲಿ ಈ ಕೆಳಕಂಡಂತೆ ತಿದ್ದಿಕೊಂಡು ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೨, ೨೦೧೨ ಭಾಗ-೨ ೪೪
ಕ್ರ. ಸಂ ನಮೂದಾಗಿರುವುದು ಸ ರಿಪಡಿಸಿಕೊಂಡು ಓದಿಕೊಳ್ಳಬೇಕಾಗಿರುವುದು
1 ಶ್ರೀ.ಮೊಹಮ್ಮದ್ ಇಸ್ಮಾಯಿ್, ವಾದೇಕ್ಷಕ ಮತ್ತು ಪದನಿಮಿತ್ತ ಉಪಕಾರ್ಯದರ್ಶಿ (ಅಭಿಪ್ರಾಯ"1), ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಾಖೆ. ಸರ್ಕಾರದ ವಾದೇಕ್ಷಕರು ಮತ್ತು ಪದನಿಮಿತ್ತ ಸರ್ಕಾರದ ಉಪಕಾರ್ಯದರ್ಶಿಗಳು, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಾಖೆ.
2 ಶ್ರೀ ಬಾಲಗೋಪಾಲಕೃ]್ಣ, ವಾದೇಕ್ಷಕರು ಮತ್ತು ಪದನಿಮಿತ ್ತ ಸರ್ಕಾರದ ಅಧೀನ ಕಾರ್ಯದರ್ಶಿಗಳು, (ವ್ಯಾಜ್ಯ"6), ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಾಖೆ. ಸರ್ಕಾರದ ಅಧೀನ ಕಾರ್ಯದರ್ಶಿಗಳು, (ವ್ಯಾಜ್ಯ"6), ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಾಖೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್.ಗೋಪಾಲಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1691

ಕಂದಾಯ ಇಲಾಖೆ, (ಸೇವೆಗಳು-3).

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 60 ಎಟಿಎಸ್ 2011, ಬೆಂಗಳೂರು, ದಿನಾಂಕ: 18ನೇ ನವೆಂಬರ್, 2011.

ಕಂದಾಯ ಇಲಾಖೆಯ ತಹಶೀಲ್ದಾರ್ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಆಡಳಿತ ಹಿತದೃಷ್ಟಿಯಿಂದ ಭೂಮಿ ಮತ್ತು ಯು.ಪಿ.ಓ.ಆರ್ ಯೋಜನೆಗಾಗಿ ವರ್ಗಾಯಿಸಿ ನೇಮಿಸಿ ಹೊರಡಿಸಲಾದ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 58 ಎಟಿಎಸ್ 2011, ದಿನಾಂಕ:20-10-2011ರಲ್ಲಿ ಕ್ರಮ ಸಂಖ್ಯೆ:(2) ರಲ್ಲಿನ ಕು:ಜಯಶ್ರೀ ಶಿಂತ್ರಿ, ಕೆ.ಎ.ಎಸ್., ತಹಶೀಲ್ದಾರ್, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ, ಹುಬ್ಬಳ್ಳಿ, ಇವರಿಗೆ ಸಂಬಂಧಿಸಿದ ವರ್ಗಾವಣೆಯನ್ನು ಮಾತ್ರ ಈ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ರದ್ದುಪಡಿಸಿ ಸದರಿಯವರನ್ನು ಕಾರ್ಯದರ್ಶಿ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ, ಇಲ್ಲಿಯೇ ಮುಂದುವರೆಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್.ಗೋಪಾಲಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1692

ಕಂದಾಯ ಇಲಾಖೆ, (ಸೇವೆಗಳು-3).

LAW JUSTICE AND HUMAN RIGHTS SECRETARIAT

NOTIFICATION

No. LAW 58 LAD 2011, Bangalore, Dated 27th December, 2011

In exercise of the powers conferred by clause (b) of sub section (2) of Section 6 of the Legal Services Authorities Act, 1987 (Central Act No. 39 of 1987) read with Rule 3 of the Karnataka State Legal Services Authorities Rules, 1996, I, H.R. Bhardwaj, Governor of Karnataka, hereby nominate Hon'ble justice Shri K. Sreedhar Rao, Judge of the High Court of Karnataka as the Executive Chairman of the Karnataka State Legal Services Authority with effect from 08-11-2011 and until further orders.

H. R. BHARDWAJ,

GOVERNOR OF KARNATAKA,

VIDYAVATHI. S. AKKI,

Principal Secretary to Government I/C P.R. 25

Law Justice and Human Rights Departmentಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೨, ೨೦೧೨ ೪೫

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 56 ಪೊಸಿಲಿ 2011, ಬೆಂಗಳೂರು, ದಿನಾಂಕ: 29ನೇ ನವೆಂಬರ್, 2011.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ನ್ಯಾಯ ವಿಜ್ಞಾನ ಪ್ರಯೋಗಾಲಯದ ಶ್ರೀ ಪುರುಷೋತ್ತಮ್, ವೈಜ್ಞಾನಿಕ ಸಹಾಯಕ, ಜೀವಶಾಸ್ತ್ರ ವಿಭಾಗ ಇವರನ್ನು ವೈಜ್ಞಾನಿಕ ಸಹಾಯಕ ವೃಂದದಿಂದ ವೈಜ್ಞಾನಿಕ ಅಧಿಕಾರಿ ಹುದ್ದೆಗೆ ಅಧಿಸೂಚನೆ ಸಂಖ್ಯೆ ಒಇ 56 ಪೊಸಿಲಿ 2011 ದಿನಾಂಕ 10-10-2011ರಂದು ಮುಂಬಡ್ತಿ ನೀಡಿ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಗುಲ್ಬರ್ಗಾ, ಇಲ್ಲಿಗೆ ಸ್ಥಳ ನಿಯುಕ್ತಗೊಳಿಸಲಾಗಿರುತ್ತದೆ.

ಆದರೆ, ಇವರ ವಿರುದ್ಧ ಸರ್ಕಾರಿ ಪತ್ರ ಸಂಖ್ಯೆ ಒಇ 39 ಪೊಸಿಲಿ 2010 ದಿನಾಂಕ 13-9-2011ರಲ್ಲಿ ದೋಷಾರೋಪಣ ಪಟ್ಟಿಯನ್ನು ಹೊರಡಿಸಲಾಗಿದ್ದು, ಇದನ್ನು ದಿನಾಂಕ 30-9-2011ರಂದು ಶ್ರೀ ಪುರುಷೋತ್ತಮರವರು ಸ್ವೀಕರಿಸಿರುತ್ತಾರೆ ಎಂದು ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು ತಮ್ಮ ಪತ್ರ ದಿನಾಂಕ 15-10-2011ರಲ್ಲಿ ತಿಳಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಅಧಿಕೃತ ಜ್ಞಾಪನ ಸಂಖ್ಯೆ ಡಿಪಿಎಆರ್ 23 ಎಸ್ ಎಸ್ ಆರ್ 98 ದಿನಾಂಕ 14-7-1999ರನ್ವಯ ದಿನಾಂಕ 10-10-2011ರಂದು ಶ್ರೀ ಪುರುಷೋತ್ತಮ, ವೈಜ್ಞಾನಿಕ ಅಧಿಕಾರಿ, ಹುದ್ದೆಗೆ ನೀಡಿರುವ ಮುಂಬಡ್ತಿಯು ಕಾನೂನು ಬಾಹಿರವಾಗಿರುತ್ತದೆ. ಈ ಬಡ್ತಿಯನ್ನು ಏಕೆ ರದ್ದುಪಡಿಸಬಾರದೆಂದು ಸರ್ಕಾರಿ ಪತ್ರ ಸಂಖ್ಯೆ ಒಇ 56 ಪೊಸಿಲಿ 2011 ದಿನಾಂಕ 21-10-2011ರಲ್ಲಿ ನೋಟೀಸು ನೀಡಲಾಗಿದ್ದು, ಸದರಿ ನೋಟೀಸಿಗೆ ಶ್ರೀ ಪುರುಷೋತ್ತಮ,ರವರು ತಮ್ಮ ಹೇಳಿಕೆಯನ್ನು ಸಲ್ಲಿಸಿರುತ್ತಾರೆ. ಸದರಿ ಹೇಳಿಕೆಯನ್ನು ಪರಿಶೀಲಿಸಲಾಗಿ, ಶ್ರೀ ಪುರುಷೋತ್ತಮ, ಇವರಿಗೆ ನೀಡಿರುವ ಬಡ್ತಿ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಡಿಪಿಎಆರ್ 23 ಎಸ್ಎಸ್ಆರ್ 98 ದಿನಾಂಕ 14-7-1999ರ ಸೂಚನೆಗಳಿಗೆ ವಿರುದ್ಧವಾಗಿರುವುದರಿಂದ, ಇವರಿಗೆ ಅಧಿಸೂಚನೆ ಸಂಖ್ಯೆ ಒಇ 56 ಪೊಸಿಲಿ 2011 ದಿನಾಂಕ 10-10- 2011ರಲ್ಲಿ ನೀಡಿರುವ ಮುಂಬಡ್ತಿಯನ್ನು ರದ್ದುಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್.ರವಿಪ್ರಕಾಶ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1693

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು).

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 153 ಕಸೈಸೇ 2011, ಬೆಂಗಳೂರು, ದಿನಾಂಕ: 29ನೇ ನವೆಂಬರ್, 2011.

ಕರ್ನಲ್(ನಿವೃತ್ತ) ಸಿ.ಎಂ.. ಉತ್ತಯ್ಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಇವರು ದಿನಾಂಕ: 30-11-2011 ರಂದು ವಯೋನಿವೃತ್ತಿ ಹೊಂದುವುದರಿಂದ ತೆರವಾಗಲಿರುವ ನಿರ್ದೇಶಕರ ಹುದ್ದೆಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳು, 1958ರ ನಿಯಮ 68 ರನ್ವಯ ಶ್ರೀ ಸಿ.ಹೆಚ್. ಪ್ರತಾಪ್ ರೆಡ್ಡಿ, ಪೊಲೀಸ್ ಮಹಾ ನಿರೀಕ್ಷಕರು ಹಾಗೂ ಹೆಚ್ಚುವರಿ ಮಹಾ ನಿರ್ದೇಶಕರು, ಆಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ, ಬೆಂಗಳೂರು ಇವರನ್ನು ದಿನಾಂಕ: 01-12-2011 ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಹೆಚ್ಚುವರಿ ಪ್ರಭಾರದಲ್ಲಿ ಇಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜಿ.ಆರ್. ಶ್ರೀನಿವಾಸರಾವ್,

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರಭಾರ), ಪಿ.ಆರ್. 1694

ಒಳಾಡಳಿತ ಇಲಾಖೆ (ಪೊಲೀಸ್ ಸಹಾಯಕ ಸೇವೆಗಳು).

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 376 ಪೊಸಿಪ 2011, ಬೆಂಗಳೂರು, ದಿನಾಂಕ: 30ನೇ ನವೆಂಬರ್, 2011.

ಶ್ರೀ ಎಸ್.ಜಿ .ಓತಗೇರಿ, ಎಸ್.ಪಿ. (ಸಶಸ್ತ್ರ) ಮತ್ತು ಪ್ರಾಂಶುಪಾಲರು, ಕೆಪಿಟಿಎಸ್, ಮೀನಹಳ್ಳಿ, ಹಗರಿ, ಬಳ್ಳಾರಿ ರವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ, ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ, ಪ್ರಾಂಶುಪಾಲರು, ಪೊಲೀಸ್ ತರಬೇತಿ ಶಾಲೆ, ಖಾನಪುರ, ಖಾಲಿ ಹುದ್ದೆ, ಇಲ್ಲಿಗೆ ವರ್ಗಾಯಿಸಿ ಸ್ಥಳ ನೇಮಕಾತಿ ಮಾಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್.ರವಿಪ್ರಕಾಶ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1695 ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು). ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೨, ೨೦೧೨ ಭಾಗ-೨ ೪೬

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಮಮಇ 345 ಎಸ್‌ಜೆಡಿ 2011, ಬೆಂಗಳೂರು, ದಿನಾಂಕ: 01ನೇ ನವೆಂಬರ್, 2011.

ಸರ್ಕಾರದ ಆದೇಶ ಸಂಖ್ಯೆ : ಮಮಇ 345 ಎಸ್‌ಜೆಡಿ 2008 ದಿನಾಂಕ:12-01-2011 ರ ಆದೇಶ ಭಾಗದ 2ನೇ ಪ್ಯಾರಾದಲ್ಲಿ ನಮೂದಿಸಿರುವ "ಶ್ರೀ ಎಂ.ಜಿ.ಗೋಪಾಲ್, ನಿರೂಪಣಾಧಿಕಾರಿ ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿಕ್ಕಬಳ್ಳಾಪುರ ರವರನ್ನು ಮಂಡನಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ " ಎಂಬ ಬದಲಿಗೆ " ನಿರೂಪಣಾಧಿಕಾರಿ, ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿಕ್ಕಬಳ್ಳಾಪುರ ರವರನ್ನು ಮಂಡನಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ " ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಕಮಲಮ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ-2, ಪಿ.ಆರ್. 1696

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ಇಂಧನ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಎನ್ 244 ಇಇಬಿ 2011, ಬೆಂಗಳೂರು, ದಿನಾಂಕ: 02ನೇ ಡಿಸೆಂಬರ್, 2011.

ಸರ್ಕಾರಿ ಅಧಿಸೂಚನೆ ಸಂಖ್ಯೆ: ಸಿಆಸುಇ 168 ಅಸೇವೆ 2011 ದಿನಾಂಕ: 01-12-2011ರ ಮೇರೆಗೆ ಶ್ರೀ ಜಿ.ಎಂ.ಗಂಗಾಧರ ಸ್ವಾಮಿ, ಕೆ.ಎ.ಎಸ್, ಹಿರಿಯ ಶ್ರೇಣಿ (ನೇಮಕಾತಿ ನಿರೀಕ್ಷಣೆಯಲ್ಲಿರುವ) ಅಧಿಕಾರಿ ಇವರ ಸೇವೆಯನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಇಲ್ಲಿ ನೇಮಿಸಲು ಇಂಧನ ಇಲಾಖೆಯ ವಶಕ್ಕೆ ನೀಡಿದ್ದು, ಅದರಂತೆ ಶ್ರೀಯುತರನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಜನರಲ್ ಮ್ಯಾನೇಜರ್ (ಆಡಳಿತ ಮತ್ತು ಮಾನವ ಸಂಪನ್ಮೂಲ) ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮರುನೇಮಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸುರೇಶ್ ಬಿ,ಕೃಷ್ಣಪ್ಪನವರ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1697

ಇಂಧನ ಇಲಾಖೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 188 ಎಸ್ಐಎಸ್ 2011, ಬೆಂಗಳೂರು, ದಿನಾಂಕ: 28ನೇ ನವೆಂಬರ್, 2011.

ಡಾ.ಎಂ.ಟಿ.ರೇಜು, ಐ.ಎ.ಎಸ್., ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ, ಉಡುಪಿ ಇವರಿಗೆ ದಿನಾಂಕ: 22-12-2011ರಿಂದ 04-01-2012ರವರೆಗೆ ಗಳಿಕೆ ರಜೆಯನ್ನು ಮಂಜೂರು ಮಾಡಲಾಗಿದೆ.

ಡಾ.ಎಂ.ಟಿ.ರೇಜು, ಐ.ಎ.ಎಸ್., ರವರ ರಜಾ ಅವಧಿಯಲ್ಲಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲೆ, ಉಡುಪಿ ಇವರನ್ನು ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ, ಉಡುಪಿ, ಈ ಹುದ್ದೆಯ ಅಧಿಕ ಪ್ರಭಾರದಲ್ಲಿಡಲಾಗಿದೆ.

ಡಾ.ಎಂ.ಟಿ.ರೇಜು, ಐ.ಎ.ಎಸ್., ರವರು ರಜೆ ಮೇಲೆ ಹೋಗಿರದಿದ್ದರೆ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ, ಉಡುಪಿ ಈ ಹುದ್ದೆಯಲ್ಲಿಯೇ ಸ್ಥಾನಪನ್ನರಾಗಿರುತ್ತಿದ್ದರೆಂದು ದೃಡೀಕರಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್.ಶ್ರೀನಿವಾಸಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ,ಪಿ.ಆರ್. 1698 ಸಿ.ಆ.ಸು.ಇ (ಸೇವೆಗಳು-1). ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೨, ೨೦೧೨ ೪೭

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ತಿದ್ದೋಲೆ

ಸಂಖ್ಯೆ: ಸಿಆಸುಇ 237 ಸಿಶಾಸೇ 2011, ಬೆಂಗಳೂರು, ದಿನಾಂಕ: 26ನೇ ನವೆಂಬರ್, 2011.

ಇದೇ ಸಂಖ್ಯೆಯ ದಿನಾಂಕ: 19-10-2011ರ ಅಧಿಸೂಚನೆಯ ಕ್ರಮಸಂಖ್ಯೆ: 1 ರಲ್ಲಿನ ಶ್ರೀ ಟಿ.ಎಸ್. ಶಿವಕುಮಾರ್, ಉಪಸಮನ್ವಯಾಧಿಕಾರಿ, ನಿವಾಸಿ ಆಯುಕ್ತರ ಕಛೇರಿ, ನವದೆಹಲಿ ಮತ್ತು ಕ್ರಮಸಂಖ್ಯೆ: 8 ರಲ್ಲಿರುವ ಶ್ರೀ ನಾಗರಾಜ್, ಶಾಖಾಧಿಕಾರಿ, ಸಿಆಸು ಇಲಾಖೆ (ಲೆಕ್ಕಪತ್ರ-1) ಇವರುಗಳಿಗೆ 2012ನೇ ಸಾಲಿನಲ್ಲಿ 60 ವರ್ಷ ವಯೋಮಿತಿಯು ಪೂರ್ಣಗೊಳ್ಳಲಿದ್ದು, ಕರ್ನಾಟಕ ಸರ್ಕಾರ ಸಚಿವಾಲಯದ ಈ ಕೆಳಕಂಡ ಶಾಖಾಧಿಕಾರಿಗಳು ಅವರ ಹೆಸರಿನ ಮುಂದೆ ಸೂಚಿಸಿರುವ ದಿನಾಂಕಗಳ ಅಪರಾಹ್ನದಂದು ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ನಿವೃತ್ತರಾಗಲಿರುವರು ಎಂದು ತಿದ್ದಿಕೊಂಡು

ಕ್ರಮ ಸಂಖ್ಯೆ ಶಾಖಾಧಿಕಾರಿಯ ಹೆಸರು ಶ್ರೀ/ಶ್ರೀಮತಿ ಜನ್ಮ ದಿನಾಂಕ ನಿವೃತ್ತರಾಗಲಿರುವ ದಿನಾಂಕ
1 ಟಿ.ಎಸ್. ಶಿವಕುಮಾರ್ 22"02"1952 29"02"2012
2 ನಾಗರಾಜ್ 25"04"1952 30"04"2012

ಕರ್ನಾಟಕ ರಾಜ್ಯಪಾಲರ ಆದೇಶದ ಮೇರೆಗೆ ಮತ್ತು ಅವರ ಹೆಸರಿನಲ್ಲಿ,

ಎಸ್.ಎನ್. ಕೃಷ್ಣಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 1699

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸಿಬ್ಬಂದಿ).

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 197 ಆಸೇವ 2011, ಬೆಂಗಳೂರು, ದಿನಾಂಕ: 29ನೇ ನವೆಂಬರ್, 2011.

ಶ್ರೀ. ಮಾಳಿಗೆ ಶಂಕರ್, ಕೆ.ಎ.ಎಸ್. (ಕಿರಿಯ ಶ್ರೇಣಿ), ವಿಶೇಷ ಭೂಸ್ವಾಧೀನಾಧಿಕಾರಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ಇವರನ್ನು

ವಿಶೇಷ ಭೂಸ್ವಾಧೀನಾಧಿಕಾರಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, (KIADB) ಮೈಸೂರು ಹುದ್ದೆಯ ಹೆಚ್ಚುವರಿ ಪ್ರಭಾರದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆ ಮಾಡಿದೆ. ಹಾಗೂ ಶ್ರೀ. ಹೆಚ್.ಕೆ. ಕೃಷ್ಣಮೂರ್ತಿ, ಕೆ.ಎ.ಎಸ್. (ಕಿರಿಯ ಶ್ರೇಣಿ), ವಿಶೇಷ ಭೂಸ್ವಾಧೀನಾಧಿಕಾರಿ, ಕಬಿನಿ ನೀರಾವರಿ ಯೋಜನೆ-2 ಮೈಸೂರು ಇವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವಿಶೇಷ ಭೂಸ್ವಾಧೀನಾಧಿಕಾರಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, (KIADB) ಮೈಸೂರು ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿರಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ವಡಗಾವೆ ಬಸವರಾಜ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1700

ಸಿ.ಆ.ಸು.ಇ. (ಸೇವೆಗಳು-2).

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 161 ಎಸ್ಐಎಸ್ 2011, ಬೆಂಗಳೂರು, ದಿನಾಂಕ: 26ನೇ ನವೆಂಬರ್, 2011.

ಶ್ರೀ ಹರ್ಷ ಗುಪ್ತ, ಐ.ಎ.ಎಸ್., ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ, ಬೆಂಗಳೂರು ಇವರಿಗೆ ದಿನಾಂಕ: 18-09-2011ರಿಂದ 14-10-2011ರವರೆಗೆ ಗಳಿಕೆ ರಜೆಯನ್ನು ವೈಯಕ್ತಿಕ ನೆಲೆಯಲ್ಲಿ ಘಟನೋತ್ತರವಾಗಿ ಮಂಜೂರು ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್. ಶ್ರೀನಿವಾಸಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1701 ಸಿ.ಆ.ಸು.ಇ. (ಸೇವೆಗಳು-1). ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೨, ೨೦೧೨ ಭಾಗ-೨ ೪೮

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 192 ಎಸ್ಐಎಸ್ 2011, ಬೆಂಗಳೂರು, ದಿನಾಂಕ: 24ನೇ ನವೆಂಬರ್, 2011.

ಶ್ರೀ ಮನೋಜ್ ಜೈನ್, ಐ.ಎ.ಎಸ್., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್ ರಾಯಚೂರು ಇವರಿಗೆ ದಿನಾಂಕ:

12-12-2011ರಿಂದ 17-12-2011ರವರೆಗೆ ಗಳಿಕೆ ರಜೆಯನ್ನು ಮಂಜೂರು ಮಾಡಲಾಗಿದೆ ಹಾಗೂ ರಜೆಯ ಪೂರ್ವ ದಿನಾಂಕ:10-12-2011 ಮತ್ತು 11-12-2011ರಂದು ಹಾಗೂ ರಜೆಯ ನಂತರ ದಿನಾಂಕ:18-12-2011ರಂದು ಇರುವ ಸಾರ್ವತ್ರಿಕ ರಜೆಗಳನ್ನು ಉಪಯೋಗಿಸಲು ಅನುಮತಿ ನೀಡಲಾಗಿದೆ.

ಶ್ರೀ ಮನೋಜ್ ಜೈನ್, ಐ.ಎ.ಎಸ್., ಇವರ ರಜಾ ಅವಧಿಯಲ್ಲಿ, ಜಿಲ್ಲಾಧಿಕಾರಿ, ರಾಯಚೂರು ಜಿಲ್ಲೆ ರಾಯಚೂರು ಇವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್ ರಾಯಚೂರು ಈ ಹುದ್ದೆಯ ಅಧಿಕ ಪ್ರಭಾರದಲ್ಲಿಡಲಾಗಿದೆ.

ಶ್ರೀ ಮನೋಜ್ ಜೈನ್, ಐ.ಎ.ಎಸ್., ಇವರು ರಜೆಯ ಮೇಲೆ ಹೋಗಿರದಿದ್ದರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್ ರಾಯಚೂರು ಈ ಹುದ್ದೆಯಲ್ಲೇ ಸ್ಥಾನಪನ್ನರಾಗಿರುತ್ತಿದ್ದರೆಂದು ಧೃಡೀಕರಿಸಿದೆ.

ಶ್ರೀ ಮನೋಜ್ ಜೈನ್, ಐ.ಎ.ಎಸ್., ಇವರಿಗೆ ಮೇಲ್ಕಂಡ ರಜೆ ಅವಧಿಯಲ್ಲಿ ಅವರ ಕುಟುಂಬದ ಈ ಕೆಳಕಾಣಿಸಿದ ಸದಸ್ಯರೊಂದಿಗೆ 2010-13ನೇ ಬ್ಲಾಕ್ ಅವಧಿಯಲ್ಲಿ ರಜಾ ಪ್ರಯಾಣ ರಿಯಾಯಿತಿ ಸೌಲಭ್ಯವನ್ನು ಉಪಯೋಗಿಸಿಕೊಂಡು ಅಂಡಮಾನ್ ಮತ್ತು ನಿಕೋಬಾರ್‌ಗೆ ಹೋಗಿಬರಲು ಅನುಮತಿ ನೀಡಲಾಗಿದೆ.

ಕ್ರ.ಸಂ ಹೆಸರು ಸ ಂಬಂಧ
1 ಶ್ರೀ ಮನೋಜ್ ಜೈನ್ ಸ್ವತಃ
2 ಶ್ರೀಮತಿ ಶೈಲಜಾ ಪತ್ನಿ

ಸದರಿ ಉದ್ದೇಶಕ್ಕಾಗಿ ತಗಲುವ ವಾಸ್ತವಿಕ ಪ್ರಯಾಣ ವೆಚ್ಚದ ಶೇಕಡ 90ರಷ್ಟು ಹಣವನ್ನು ಅಂತಿಮ ಪ್ರಯಾಣಭತ್ಯೆ ಬಿಲ್ಲಿನಲ್ಲಿ ಹೊಂದಾಣಿಕೆ ಮಾಡುವ ಷರತ್ತಿಗೆ ಒಳಪಟ್ಟು ಮುಂಗಡ ಪ್ರಯಾಣಭತ್ಯೆಯನ್ನು ಪಡೆಯಲು ಮಂಜೂರಾತಿ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಪಿ. ಮೋಹನ್ ರಾಜ್,

ಸರ್ಕಾರದ ಉಪ ಕಾರ್ಯದರ್ಶಿ, ಪಿ.ಆರ್. 1703

ಸಿ.ಆ.ಸು.ಇ. (ಸೇವೆಗಳು).

ಕರ್ನಾಟಕ ವಿಧಾನ ಸಭೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕವಿಸಸ/ಆ-1/34/ಎಫ್ ಪಿಪಿ/2002, ಬೆಂಗಳೂರು, ದಿನಾಂಕ: 02ನೇ ಡಿಸೆಂಬರ್, 2011.

2003ರ ಕರ್ನಾಟಕ ವಿಧಾನ ಸಭೆ ಸಚಿವಾಲಯದ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಾವಳಿಗಳ ನಿಯಮ 6(i) ರ ಪ್ರಕಾರ ಹಾಗೂ 1977ರ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳ ನಿಯಮ 19(3)(ಎ)ನ್ನು ಓದಿಕೊಂಡಂತೆ ಈ ಸಚಿವಾಲಯದಲ್ಲಿ ಕಾರ್ಯದರ್ಶಿ(ಪ್ರ) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪಿ.ಓಂಪ್ರಕಾಶ, ಇವರಿಗೆ ದಿನಾಂಕ: 02-11-2011ರಿಂದ ಅಂದರೆ ಸದರಿ ಅಧಿಕಾರಿಯವರಿಗೆ ಕಾರ್ಯದರ್ಶಿ ಹುದ್ದೆಗೆ ಪ್ರಭಾರದಲ್ಲಿರಿಸಿದ ದಿನಾಂಕದಿಂದಲೇ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ.28275-675- 30300-750-34800-850-39900ರಲ್ಲಿ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಲಾಗಿದೆ.

ವಿಶೇಷ ಮಂಡಳಿಯ ಆದೇಶಾನುಸಾರ,

ಕೆ. ನೂರ್ ಮಹಮದ್,

ಉಪ ಕಾರ್ಯದರ್ಶಿ,ಪಿ.ಆರ್. 1704 ಕರ್ನಾಟಕ ವಿಧಾನ ಸಭೆ ಸಚಿವಾಲಯ.

Cite this issue. Karnataka Gazette, Government of Karnataka, 12 January 2012. Indian Gazettes, https://egazette.servantsofknowledge.in/details/in.gazette.karnataka_new.2012-01-12.Part-2/. Archive identifier in.gazette.karnataka_new.2012-01-12.Part-2.