WPP-47
ಸಂಪುಟ ೧೪೭ ಬೆಂಗಳೂರು, ಗುರುವಾರ,
ಬೆಂಗಳೂರು, ಗುರುವಾರ, ಮಾರ್ಚ್ ೨೯, ೨೦೧೨ (ಚೈತ್ರ ೯, ಶಕ ವರ್ಷ ೧೯೩
, ಶಕ ವರ್ಷ ೧೯೩೪) ಸಂಚಿಕೆ ೧೩
ಭಾಗ - ೫
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
FORM-IV
(See Rule 12)
NOTICE
It is hereby notified that the undersigned has changed his
SHAKARAPPA SHANDAGI undersigned has changed his/her name from RAVINDRA S/O SHAKARAPPA SHANDAGI TO RAVINDRA A/F TIPPANAGOUDA PATIL TO RAVINDRA A/F TIPPANAGOUDA PATIL
PD. c/n.-39
SHAKARAPPA SHANDAGI
RAVINDRA S/O SHAKARAPPA SHANDAGI
FORM-IV
(See Rule 12)
NOTICE
It is hereby notified that the undersigned has changed his
TO D. CHANDRU undersigned has changed his/her name from CHANDRA TO D. CHANDRU
PD. c/n.-37
CHANDRA
CHANDRA
FORM-IV
(See Rule 12)
NOTICE
It is hereby notified that the undersigned has changed his
undersigned has changed his/her name from R.L. ASHWINI TO R.L.
R.L. ASHWINI TO R.L. ABHIGNA
PD. c/n.-38
R.L. ASHWINI
R.L. ASHWINI
FORM-I
(SEE RULE-9)
Department of Education
Office of the Deputy Director, Public Instruction, Haveri, Haveri District
Office of the Deputy Director, Public Instruction, Haveri, Haveri District
Office of the Deputy Director, Public Instruction, Haveri, Haveri District
NOTIFICATION
Shri DYAMANNA.YALLAPPA.HARIJAN
DYAMANNA.YALLAPPA.HARIJAN working as Primary Teacher in the Education Department, Govt. Primary School, Bisettikoppa, is permitted to change his
is permitted to change his name to Shri DYAMANNA YALLAPPA JIGALORE
Signature and Designation of the Appointing Signature and Designation of the Appointing P.D. c/n.-36
Authority
(೩೮೫)
ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ಭಾಗ-೫ ೩೮೬OFFICE OF THE ADVOCATE-GENERAL FOR KARNATAKA,
High Court Buildings, Bangalore-560 001
CORRIGENDUM
No. 214/AG/EST/2011-12, Dated: 19th March 2012
In this office notification No. 187/AG/EST/2011-12, dated 08-02-2012 published in the Official Gazette dated :
16-02-2012 read with this Office Corrigendum dated 22-02-2012 published in the Official Gazette dated 08-03-2012, the last date was fixed for receiving the Applications for the Posts of Stenographers andTypists as 15-03-2012. However, in view of the public interest, the last date has been extended from 15-03-2012 to 16-04-2012 for receiving the Applications for the said Posts. Please visit our website at www.advgen.kar.nic.in for more details.
By order of the Advocate General,
M. Krishnappa,
Administrative Officer
ಅಡ್ವೋಕೇಟ್ ಜನರಲ್ರವರ ಕಛೇರಿ,
ಉಚ್ಛ ನ್ಯಾಯಾಲಯ ಕಟ್ಟಡ, ಬೆಂಗಳೂರು-560 001
ತಿದ್ದುಪಡಿ
ಸಂಖ್ಯೆ : 214/AG/EST/2011-12, ದಿನಾಂಕ: 19-03-2012
ಕರ್ನಾಟಕ ರಾಜ್ಯಪತ್ರದಲ್ಲಿ ದಿನಾಂಕ: 16-02-2012ರಲ್ಲಿ ಪ್ರಕಟವಾದ ಈ ಕಛೇರಿಯ ಅಧಿಸೂಚನೆ ಸಂಖ್ಯೆ : 187/ಎಜಿ/ಇಎಸ್ಟಿ/2011-12, ದಿನಾಂಕ: 08-02-2012 ಮತ್ತು ರಾಜ್ಯ ಪತ್ರದಲ್ಲಿ ದಿನಾಂಕ: 08-03-2012ರಲ್ಲಿ ಪ್ರಕಟವಾದ ಈ ಕಛೇರಿಯ ದಿನಾಂಕ: 22-02-2012ರ ತಿದ್ದುಪಡಿಯಲ್ಲಿ ಶೀಘ್ರಲಿಪಿಗಾರರ ಮತ್ತು ಬೆರಳಚ್ಚುಗಾರರ ಹುದ್ದೆಗಳಿಗೆ ಅರ್ಜಿ ಸ್ವೀಕರಿಸುವ ದಿನಾಂಕವನ್ನು 15-03-2012 ಎಂದು ನಿಗದಿಪಡಿಸಲಾಗಿತ್ತು.
ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಸದರಿ ಹುದ್ದೆಗಳಿಗೆ ಅರ್ಜಿ ಸ್ವೀಕರಿಸುವ ದಿನಾಂಕವನ್ನು 15-03-2012 ರಿಂದ 16-04-2012ರವರೆಗೆ ವಿಸ್ತರಿಸಲಾಗಿದೆ. ವಿವರಗಳಿಗೆ ಈ ಕಛೇರಿಯ ಅಂತರ್ಜಾಲ www.advgen.kar.nic.in ಗೆ ಭೇಟಿ ನೀಡಿ.
ಅಡ್ವೋಕೇಟ್ ಜನರಲ್ರವರ ಆದೇಶದ ಮೇರೆಗೆ
ಎಂ. ಕೃಷ್ಣಪ್ಪ,
ಪಿ.ಆರ್. 59
ಆಡಳಿತಾಧಿಕಾರಿ
EXECUTIVE DIRECTOR
BANNERGHATTA BIOLOGICAL PARK, BANNERGHATTA, BANGALORE –560083
NO. A2/BBP/Feed/CR-1/2011-12 Date : 16/ 03/ 2012
RREE--TTEENNDDEERR NNOOTTIIFFIICCAATTIIOONN
Sub : Tender for Supply chicken, fish and other feeding materials during 2012-13 for the captive carnivore, omnivore wild animals housed in various units of Biological Park, Bannerghatta, Bangalore.
It is hereby notified for the general information of the public that sealed re-tenders are invited and will be received by the Executive Director, Bannerghatta Biological Park, Bannerghatta, Bangalore herein after referred as Tender Inviting Authority from the registered contractors of this office who have registered with by the Bank Guarantee or pledging of FDRs or NSCs for ` 1.00 lakh for supply of chicken, fish and other feeding materials for the captive carnivore, omnivore wild animals housed in various units of Bannerghatta Biological Park for the year 2012-13.
Those who have got the required certificates from the competitive authority for the supply of chicken, fish, egg etc are only eligible to participate in tender. The total procurement value put to tender is as against the each item and which may be provisional and may fluctuate. The procedure of calling, scrutinizing and finalizing this tender is as per the provisions stipulated in Karnatakaಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ೩೮೭ Transparency in Public Procurement Acts, 1999 and all other relevant procedure laid by the government of Karnataka from time to time The details of each items in approximate quantity corresponding with approximate cost, EMD and tender processing fee is as explained in the below schedule
SS CC HH EE DD UU LL EE
| Unit No. | Particulars of commodity | Approximate quantity In kgs/Nos | Approximate cost of the commodities ( `. In lakhs) | EMD to be furnished ( ` In lakhs) |
| 1 | Supply of chicken to Zoo | 4545 kgs | 5.00 | 0.50 |
| 2 | Supply of chicken to Rescue Center | 20000 kgs | 22.00 | 2.20 |
| 3 | Supply of chicken to Safari | 36360 kgs | 40.00 | 4.00 |
| 4 | Supply of fresh water fish to zoo a. Small fish, b. Medium fish | 20000 kgs | 10.00 | 1.00 |
| 5 | a. Supply of Live chicks, | 2500 Nos. | 0.20 | 0.02 |
| b. Supply of Rabbits | 2120 Nos. | 7.00 | 0.70 | |
| 6 | Eggs | 10,000 Nos | 3.50 | 0.35 |
| 7 | Milk | 15,000 Ltr. | 3.00 | 0.30 |
The scheduled dates and time:
1. The tender forms will be available in this office of the undersigned during the office hours from 10/ 04/ 2012 to 12/ 04/ 2012 on payment of Rs. 570.00 (including all taxes) separately for each unit.
2. Last date for receipt of sealed tender forms from 10:00 AM to 3:00 PM on 13/04/2012. No tender forms will be received after 3:00 P.M on 18/04/2012
3. Tenders will be opened by the Executive Director, BBP (Tender Inviting Authority) or an authorised officer by him on 13/04/2012 at 4.00 PM in presence of the available tenderers.
Conditions:
1. The tender accepting authority reserves the right to accept or reject any or all tenders without incurring any liability or obligation to inform the applicants of the reasons for such action.
2. Any tender submitted without the earnest money deposit (EMD) shall summarily rejected unless the any category of tenderers specically exempted by the Government from the payment of earnest money deposit (EMD).
3. Other detailed conditions can be had from the office of the undersigned during the office hours on all working days.
Executive Director,
Bannerghatta Biological Park,
Bannerghatta, Bangalore
ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ಭಾಗ-೫ ೩೮೮ಕಾರ್ಯನಿರ್ವಾಹಕ ನಿರ್ದೇಶಕರು
ಬನ್ನೇರುಘಟ್ಟ ಜೈವಿಕ ಉದ್ಯಾನವನ, ಬನ್ನೇರುಘಟ್ಟ, ಬೆಂಗಳೂರು – 560 083
ಮರು ಟೆಂಡರು ಪ್ರಕಟಣೆ
ಸಂ. ಎ2/ ಬಬಪಾ/ ಫೀಡ್/ ಸಿಆರ್- 1/2011-12, ದಿನಾಂಕ : 16/ 03/ 2012
ವಿಷಯ : 2012-13 ನೇ ಸಾಲಿನಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವಿವಿದ ಘಟಕಗಳಲ್ಲಿರುವ
ವನ್ಯಪ್ರಾಣಿಗಳಿಗೆ ಕೋಳಿ, ಮೀನು ಮತ್ತು ಇತರೆ ಆಹಾರ ಪದಾರ್ಥಗಳನ್ನು ಸರಬರಾಜು
ಮಾಡುವ ಮರು ಟೆಂಡರ್ ಬಗ್ಗೆ
ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, 2012-13 ನೇ ಸಾಲಿನಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿರುವ ವನ್ಯಪ್ರಾಣಿಗಳಿಗೆ ಈ ಕೆಳಕಂಡ ಷೆಡ್ಯೂಲ್ನಲ್ಲಿ ನಮೂದಿಸಿರುವಂತೆ ಕೋಳಿ, ಮೀನು ಮತ್ತು ಇತರೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಬಗ್ಗೆ ಮೊಹರಾದ ಲಕೋಟೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರು, ಬನ್ನೇರುಘಟ್ಟ ಜೈವಿಕ ಉದ್ಯಾನವನ ರವರಿಂದ ಟೆಂಡರನ್ನು ಕರೆಯಲಾಗಿದೆ.
ಟೆಂಡರ್ದಾರರು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ರೂ. 1.00 ಲಕ್ಷ ರೂಗಳ ಬ್ಯಾಂಕ್ ಗ್ಯಾರಂಟಿ/ FDRs/NSCs ಸಲ್ಲಿಸಿ ನೊಂದಣೆ ಮಾಡಿರುವ ಗುತ್ತಿಗೆದಾರರಾಗಿರಬೇಕು ಹಾಗು ಕೋಳಿ, ಮೀನು ಮೊಟ್ಟೆ ಇತ್ಯಾದಿ ಗಳನ್ನು ಸರಬರಾಜು ಮಾಡಲು, ಸಂಬಂದಪಟ್ಟ ಪ್ರಾಧಿಕಾರದಿಂದ ಮಾರಾಟ ದೃಡೀಕರಣ ಪತ್ರವನ್ನು ಹೊಂದಿರಬೇಕು. ಟೆಂಡರಿಗೆ ನಿಗಧಿಪಡಿಸಿದ ಮೊತ್ತ ಮತ್ತು ತೂಕ ಅಂದಾಜು ಆಗಿದ್ದು, ಅವುಗಳು ಬದಲಾವಣೆಗಳಾಗುವ ಸಾಧ್ಯತೆ ಇರಬಹುದಾಗಿರುತ್ತದೆ. ಟೆಂಡರ್ ಷೆಡ್ಯೂಲ್ನ ವಿವರಗಳು ಈ ಕೆಳಗೆ ನಮೂದಿಸಿರುವಂತೆ ಇದೆ.
ಷೆಡ್ಯೂಲ್
| ಘ ಟಕ ಸ ಂಖ್ಯೆ | ವಿವರಗಳು | ಅಂದಾಜು ತೂಕ | ಟ ೆಂಡರಿಗೆ ಇಡಾದ ಆಹಾರ ಪದಾರ್ಥಗಳ ಅಂದಾಜು ಮೊತ್ತ (ರೂ.ಲಕ್ಷಗಳಲ್ಲಿ) | ಸ ಲ್ಲಿಸಬೇಕಾದ ಇ.ಎಂ.ಡಿ ಹಣ (ರೂ. ಲಕ್ಷಗಳಲ್ಲಿ) |
| 1 | ಮೃಗಾಲಯಕ್ಕೆ ಕೋಳಿ ಮಾಂಸ ಸರಬರಾಜು ಮಾಡುವುದು | 4545 ಕೆಜಿ | 5.00 | 0.50 |
| 2 | ಪುನರ್ವಸತಿ ಕೇಂದ್ರಕ್ಕೆ ಕೋಳಿ ಮಾಂಸ ಸರಬರಾಜು ಮಾಡುವುದು | 20000 ಕೆಜಿ | 22.00 | 2.20 |
| 3 | ಸಫಾರಿ ಪ್ರಾಣಿಗಳಿಗೆ ಕೋಳಿ ಮಾಂಸ ಸರಬರಾಜು ಮಾಡುವುದು | 36360 ಕೆಜಿ | 40.00 | 4.00 |
| 4 | ಮೃಗಾಲಯಕ್ಕೆ ಮೀನು ಸರಬರಾಜು ಮಾಡುವುದು | 20000 ಕೆಜಿ | 10.00 | 1.00 |
| 5 | ಅ.) ಕೋಳಿ ಮರಿ ಗಳನ್ನು ಸರಬರಾಜು ಮಾಡುವುದು | 2500 ಸಂಖ್ಯೆ | 0.20 | 0.02 |
| ಆ.) ಮೊಲಗಳನ್ನು ಸರಬರಾಜು ಮಾಡುವುದು | 2120 ಸಂಖ್ಯೆ | 7.00 | 0.70 | |
| 6 | ಮೊಟ್ಟೆ ಸರಬರಾಜು | 10,000 ಸಂಖ್ಯೆ | 3.50 | 0.35 |
| 7 | ಹಾಲು ಸರಬರಾಜು ಮಾಡುವುದು | 15,000 ಲೀಟರ್ | 3.00 | 0.30 |
ಷೆಡ್ಯೂಲ್ ದಿನಾಂಕ ಮತ್ತು ಸಮಯ:
1. ಗುತ್ತಿಗೆದಾರರು ಪ್ರತಿಯೊಂದು ಘಟಕಕ್ಕೆ ಪ್ರತ್ಯೇಕವಾದ ಟೆಂಡರ್ ಫಾರಂಗಳನ್ನು ನಿಗದಿಪಡಿಸಲಾದ ಟೆಂಡರ್ ಫಾರಂ ಶುಲ್ಕ ರೂ. 570/- (ತೆರಿಗೆಗಳು ಸೇರಿ) ಹಣ ಪಾವತಿಸಿ ದಿನಾಂಕ: 10/04/2012 ರಿಂದ 12/04/2012 ರವರೆಗೂ ಈ ಕಛೇರಿಯ ಕೆಲಸದ ವೇಳೆಯಲ್ಲಿ ಪಡೆಯಬಹುದಾಗಿದೆ.
2. ಮೊಹರಾದ ಟೆಂಡರ್ಗಳನ್ನು ದಿನಾಂಕ: 13-04-2012 ರ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 3.00 ವರೆಗೆ ಸ್ವೀಕರಿಸಲಾಗುವುದು ಹಾಗೂ ಸಾಯಂಕಾಲ 3.00 ಘಂಟೆಯ ನಂತರ ಸಲ್ಲಿಸಿದ ಮೋಹರಾದ ಟೆಂಡರ್ ಫಾರಂಗಳನ್ನು ಯಾವುದೇ ಕಾರಣದಿಂದ ಸ್ವೀಕರಿಸಲಾಗುವುದಿಲ್ಲ.
3. ಮೊಹರಾದ ಟೆಂಡರ್ ಲಕೋಟೆಯನ್ನು ದಿನಾಂಕ: 13-04-2012 ರಂದು ಸಾಯಂಕಾಲ 4.00 ಘಂಟೆಗೆ ಟೆಂಡರ್ದಾರರ ಸಮ್ಮುಖದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರು ಅಥವಾ ಅವರಿಂದ ಅಧಿಕೃತವಾಗಿ ನೇಮಿಸಲ್ಪಟ್ಟ ಅಧಿಕಾರಿಗಳು ಟೆಂಡರನ್ನು ತೆರೆಯುವರುಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ೩೮೯
ಷರತ್ತುಗಳು:-
1. ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು ಟೆಂಡರುದಾರರಿಗೆ ಯಾವುದೇ ಸಕಾರಣಗಳನ್ನು ನೀಡದೇ ಟೆಂಡರ್ಗಳನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ಹೊಂದಿರುತ್ತದೆ.
2. ಯಾವುದೇ ಟೆಂಡರಿಗೆ ಇಡಗಂಟು ಸಲ್ಲಿಸದೇ ಇದ್ದರೆ ಅದನ್ನು ತಿರಸ್ಕರಿಸಲಾಗುದು. ಆದರೆ ಟೆಂಡರಿಗೆ ಇಡಗಂಟು ಸಲ್ಲಿಸಲು ಸರ್ಕಾರದಿಂದ ರಿಯಾಯಿತಿ ಪಡೆದಿದ್ದರೆ ಟೆಂಡರನ್ನು ಪರಿಗಣಿಸಲಾಗುವುದು.
3. ಟೆಂಡರ್ ವಿಷಯದಲ್ಲಿ ಯಾವುದೇ ವಿವರಗಳು/ಷರತ್ತುಗಳು/ ಸ್ಪಷ್ಠಿಕರಣವನ್ನು ಈ ಕಛೇರಿಯ ಕೆಲಸದ ವೇಳೆಯಲ್ಲಿ ನೆರವಾಗಿ ಬಂದು ಪಡೆಯಬಹುದು.
ಕಾರ್ಯನಿರ್ವಾಹಕ ನಿರ್ದೇಶಕರು,
ಬನ್ನೇರುಘಟ್ಟ ಜೈವಿಕ ಉದ್ಯಾನವನ, ಪಿ.ಡಿ. 33
ಬನ್ನೇರುಘಟ್ಟ, ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಆನಂದರಾವ್ ವೃತ್ತ, ಬೆಂಗಳೂರು-560 009.
(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಕಿರಿಯ ಆರೋಗ್ಯ ಸಹಾಯಕರು(ಪುರುಷ) & ಫಾರ್ಮಸಿಸ್ಟ್ ಬ್ಯಾಕ್ಲಾಗ್ ಹುದ್ದೆಗಳಿಗೆ
ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡದ ಅಭ್ಯರ್ಥಿಗಳ ಆಯ್ಕೆ/ನೇಮಕಾತಿ
ಅಧಿಸೂಚನೆ
ಸಂಖ್ಯೆ:ಎಸ್ಆರ್ಸಿ/14/2011-12, ದಿನಾಂಕ:29.03.2012
ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಲು ಕೊನೆಯ ದಿನಾಂಕ.30.04.2012
ಬ್ಯಾಂಕ್ನಲ್ಲಿ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ:02.05.2012
ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು
ಸರ್ಕಾರಿ ಅಧಿಸೂಚನೆ ಸಂಖ್ಯೆ:ಡಿಪಿಎಆರ್/13/ಎಸ್ಬಿಸಿ/2001, ದಿನಾಂಕ:21.11.2001ಕ್ಕೆ ಅನುಗುಣವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅರೆ ವೈದ್ಯಕೀಯ ಗ್ರೂಪ್'ಸಿ' ವೃಂದದ ಕಿರಿಯ ಆರೋಗ್ಯ ಸಹಾಯಕರು(ಪುರುಷ) & ಫಾರ್ಮಸಿಸ್ಟ್, ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡಗಳಿಗೆ ಮೀಸಲಿರಿಸಿದ್ದ ಹಾಗೂ ಭರ್ತಿಯಾಗದೆ ಖಾಲಿ ಉಳಿದಿರುವ ಹುದ್ದೆಗಳು (ವಿಶೇಷ ನೇಮಕಾತಿ) ನಿಯಮಗಳು 2001ರಲ್ಲಿ ನಿಗದಿಪಡಿಸಿರುವಂತೆ ಅರ್ಹತೆ ಮತ್ತು ಮೀಸಲಾತಿ ಆಧಾರದ ಮೇಲೆ ಈ ಕೆಳಕಂಡ ಬ್ಯಾಕ್ಲಾಗ್ ಹುದ್ದೆಗಳಿಗೆ ಅರ್ಜಿಯನ್ನು ವೆಬ್ಸೈಟ್ ವಿಳಾಸ www.karhfw.gov.in ನಲ್ಲಿ ON-LINE ಮುಖಾಂತರ ಆಹ್ವಾನಿಸಲಾಗಿದೆ.
| ಪ ್ರವರ್ಗ | ಸಾಮಾನ್ಯ | ವ ುಹಿಳಾ | ಗ್ರಾಮೀಣ | ವ iಾಜಿ ಯೋಧರು | ಕನ್ನಡ ವ iಾಧ್ಯಮ | ಯೋಜನಾ ಸ ಂತ್ರಸ್ಥರು | ಅಂಗವಿಕಲರು | ಒಟ್ಟು |
| ಪ.ಜಾತಿ | 13 | 19 | 16 | 6 | 3 | 3 | 4 | 64 |
| ಪ.ಪಂಗಡ | 9 | 13 | 11 | 4 | 2 | 2 | 2 | 43 |
| ಒಟ್ಟು | 22 | 32 | 27 | 10 | 5 | 5 | 6 | 107 |
| ಪ.ಜಾತಿ | 3 | 5 | 5 | 1 | 1 | 1 | 16 | |
| ಪ.ಪಂಗಡ | ||||||||
| ಒಟ್ಟು | 3 | 5 | 5 | 1 | 1 | . | 1 | 16 |
1. ಪ್ರಕಟಿಸಿರುವ ಹುದ್ದೆಗಳಿಗೆ ನಿಗದಿಪಡಿಸಿರುವ ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ ಇತ್ಯಾದಿ ವಿವರಗಳ ಪ್ರಮಾಣ ಪತ್ರ/ದಾಖಲೆಗಳನ್ನು ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಮೊದಲು ಅಭ್ಯರ್ಥಿಗಳು ಹೊಂದಿರಬೇಕು.
ವಿಶೇಷ ಸೂಚನೆ:- ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದ್ದಲ್ಲಿ, ಅಂತಹ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಶುಲ್ಕವನ್ನು ಪಾವತಿಸತಕ್ಕದ್ದು.
2. ಶುಲ್ಕ: ಶುಲ್ಕ ಪಾವತಿಸಬೇಕಾದ ವಿಧಾನ ಹಾಗೂ ಸ್ಥಳದ ವಿವರ :-
| ಪರಿಶಿ\್ಟ ಜಾತಿ, ಪರಿಶಿ\್ಟ ಪಂಗಡ | ` 100/ |
ಅರ್ಹತಾ ಷರತ್ತುಗಳು:-
ಅ) ಭಾರತೀಯ ನಾಗರೀಕನಾಗಿರತಕ್ಕದ್ದು.
ಆ) ಒಬ್ಬ ಜೀವಂತ ಪತ್ನಿಗಿಂತ ಹೆಚ್ಚು ಮಂದಿ ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಹೆಂಡತಿ ಇರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯು ಸರ್ಕಾರದಿಂದ ಪೂರ್ವಾನುಮತಿಯನ್ನು ಪಡೆಯದೇ ನೇಮಕಾತಿಗೆ ಅರ್ಹರಾಗುವುದಿಲ್ಲ.
ಇ) ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯು ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತರಾಗಿರಬೇಕು.
ಈ) ದೈಹಿಕವಾಗಿ ಅನರ್ಹರಾಗಿದ್ದಾರೆಂಬುದಾಗಿ ವೈದ್ಯಕೀಯ ಮಂಡಳಿಯ ವರದಿಯ ಮೇಲೆ ಅನರ್ಹರೆಂಬುದಾಗಿ ತಿರಸ್ಕರಿಸುವ ಪೂರ್ಣ ವಿವೇಚನೆಯನ್ನು ರಾಜ್ಯ ಸರ್ಕಾರವು ಕಾದಿರಿಸಿಕೊಂಡಿದೆ ಮತ್ತು ಸರ್ಕಾರದ ವಿವೇಚನೆಯು ಯಾವುದೇ ವಿಧದಲ್ಲೂ ಈ ನಿಯಮಗಳ ಮೂಲಕ ಸೀಮಿತವಾಗಿರುವುದಿಲ್ಲ.
ನಿಗದಿತ ಶೈಕ್ಷಣಿಕ ಅರ್ಹತೆಯ ಜೊತೆಗೆ ಈ ಮೇಲ್ಕಂಡ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುತ್ತಾರೆ.
3. ಪದನಾಮ, ವೇತನ ಶ್ರೇಣಿ, ಹುದ್ದೆಗಳ ಸಂಖ್ಯೆ, ನಿಗದಿಪಡಿಸಿರುವ ವಿದ್ಯಾರ್ಹತೆ, ತರಬೇತಿ ಮತ್ತು ವಯೋಮಿತಿ ವಿವರ ಈ ಕೆಳಕಂಡಂತೆ
| ಕ್ರಮ ಸ ಂಖ್ಯೆ | ಹುದ್ದೆಯ ಪದನಾಮ ವ ೕತನ ಶ್ರೇಣಿ ಮತ್ತು ೆ ಒಟ್ಟು ಹುದ್ದೆಗಳು | ನಿಗದಿಪಡಿಸಿರುವ ಕನಿ> ್ಠ ವಿದ್ಯಾರ್ಹತೆ | ವ ಯೋಮಿತಿ & ಆಯ್ಕೆವಿಧಾನ |
| 1 | 2 | 3 | 4 |
| 1 | ಕಿರಿಯ ಆರೋಗ್ಯ ಸಹಾಯಕ (ಪುರು\) (ರೂ. 6250125 65001507100 1757800200 86002259500 25010500300 12000) (ಪ.ಜಾ64 ಹುದ್ದೆಗಳು) (ಪ.ಪಂ.43 ಹುದ್ದೆಗಳು) | 1).ಎಸ್.ಎಸ್.ಎಅ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ವಿವಿದೋದ್ದೇಶ ಮೂಲ ಆರೋಗ್ಯ ಕಾರ್ಯಕರ್ತರ ತರಬೇತಿ ಪಡೆದಿರಬೇಕು. ಅಥವಾ 2).ಎಸ್.ಎಸ್.ಎಅ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಎರಡು ವರ್\ದ ಕರ್ನಾಟಕ ವೊಕೇ\ನಅ್ ಬೋರ್ಡ್ನ ಆರೋಗ್ಯ ನಿರೀಕ್ಷಕರ ಡಿಪ್ಲಮಾ ದಲ್ಲಿ ತರಬೇತಿ ಪಡೆದಿರಬೇಕು. ಅಥವಾ 3).ಎಸ್.ಎಸ್.ಎಅ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ಅರೆ ವೈದ್ಯಕೀಯ ಮಂಡಳಿ ನಡೆಸುವ ಮೂರು ವರ್\ಗಳ ಆರೋಗ್ಯ ನಿರೀಕ್ಷಕರ ಡಿಪ್ಲಮಾ ಹೊಂದಿರಬೇಕು ಅಥವಾ | ಕನಿ\್ಠ :18 ವರ್\ ಗರಿ\್ಠ. ಪಜಾ/ಪ.ಪಂ/40 ವರ್\ ಅ) ಎಸ್.ಎಸ್.ಎಅ್.ಸಿಯಲ್ಲಿ ಒಟ್ಟು ಶೇಕಡವಾರು +ವಿವಿದೋದ್ದೇಶ ಮೂಲ ಆರೋಗ್ಯ ಕಾರ್ಯಕರ್ತರ ತರಬೇತಿಯಲ್ಲಿ ಪಡೆದ ಒಟ್ಟು ಶೇಕಡವಾರು=ಒಟ್ಟು 2 ರಲ್ಲಿ ಭಾಗಿಸಿ=% ಆ) ಎಸ್.ಎಸ್.ಎಅ್.ಸಿಯಲ್ಲಿ ಒಟ್ಟು ಶೇಕಡವಾರು + ಎರಡು ವರ್\ದ ಕರ್ನಾಟಕ ವೊಕೇ\ನಅ್ ಬೋರ್ಡ್ನ ಆರೋಗ್ಯ ನಿರೀಕ್ಷಕರ ಡಿಪ್ಲಮಾದಲ್ಲಿ ಪಡೆದ ಒಟ್ಟು ಶೇಕಡವಾರು=ಒಟ್ಟು 2 ರಲ್ಲಿ ಬ ಾಗಿಸಿ=% ಇ) ಎಸ್.ಎಸ್.ಎಅ್.ಸಿಯಲ್ಲಿ ಒಟ್ಟು ಶೇಕಡವಾರು + ಎರಡು ವರ್\ದ ಕರ್ನಾಟಕ ಅರೆ ವೈದ್ಯಕೀಯ ಮಂಡಳಿ ನಡೆಸುವ ಮೂರು ವರ್\ಗಳ ಆರೋಗ್ಯ ನಿರೀಕ್ಷಕರ ಡಿಪ್ಲಮಾದಲ್ಲಿ ಪಡೆದ ಒಟ್ಟು ಶೇಕಡವಾರು=ಒಟ್ಟು 2 ರಲ್ಲಿ ಭಾಗಿಸಿ=% |
| 4).ಪಿ.ಯು.ಸಿ (ವಿಜ್ಞಾನ)ಯಲ್ಲಿ ತೇರ್ಗಡೆ ಮತ್ತು ಕರ್ನಾಟಕ ಅರೆವೈದ್ಯಕೀಯ ಮಂಡಳಿಯು ನಡೆಸುವ ಎರಡು ವರ್\ದ ಆರೋಗ್ಯ ನಿರೀಕ್ಷಕರ ಡಿಪ್ಲೋಮ ಹೊಂದಿರಬೇಕು. | ಇ) ಪಿ.ಯು.ಸಿ (ವಿಜ್ಞಾನ)ದಲ್ಲಿ ಒಟ್ಟು ಶೇಕಡವಾರು + ಎರಡು ವರ್\ದ ಕರ್ನಾಟಕ ಅರೆ ವೈದ್ಯಕೀಯ ಮಂಡಳಿ ನಡೆಸುವ ಎರಡು ವರ್\ಗಳ ಆರೋಗ್ಯ ನಿರೀಕ್ಷಕರ ಡಿಪ್ಲಮಾದಲ್ಲಿ ಪಡೆದ ಒಟ್ಟು ಶೇಕಡವಾರು=ಒಟ್ಟು 2 ರಲ್ಲಿ ಭಾಗಿಸಿ=% | ||
| 2 | ಫಾರ್ಮಸಿಸ್ಟ್ (ರೂ. 7275175 78002008600 2259500250 1050030012300 35013350) ( ಪ.ಜಾ16 ಹುದ್ದೆಗಳು) | ಎಸ್.ಎಸ್.ಎಅ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಫಾರ್ಮಸಿ ಡಿಪ್ಲಮಾ ಹೊಂದಿರಬೇಕು | ಕನಿ\್ಠ: 18 ವರ್\ ಗರಿ\್ಠ: ಪಜಾ/ಪ.ಪಂ40 ಎ ಸ್.ಎಸ್.ಎಅ್.ಸಿಯಲ್ಲಿ ಒಟ್ಟು ಶೇಕಡವಾರು + ಫಾರ್ಮಸಿ ಡಿಪ್ಲಮಾದಲ್ಲಿ ಪಡೆದ ಒಟ್ಟು ಶೇಕಡವಾರು=ಒಟ್ಟು 2 ರಲ್ಲಿ ಭಾಗಿಸಿ=% |
ವಯೋಮಿತಿ:- ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷಗಳು ಗರಿಷ್ಠ 40 ವರ್ಷಗಳನ್ನು ಮೀರಿರಬಾರದು.
ವಿಶೇಷ ನೇಮಕಾತಿ ನಿಯಮಗಳನ್ವಯ 29 ವರ್ಷ ಪೂರ್ಣಗೊಳಿಸಿರುವ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು. 29 ರಿಂದ 40 ವರ್ಷಗಳ ವಯಸ್ಸಿನ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಾಗ ಮಾತ್ರ 18 ರಿಂದ 29 ವರ್ಷ ವಯಸ್ಸಿನ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.
4. ಶೈಕ್ಷಣಿಕ ವಿದ್ಯಾರ್ಹತೆ: ಅರ್ಜಿಗಳನ್ನು ಭರ್ತಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅನುಸೂಚಿಯಲ್ಲಿ ಅಧಿಸೂಚಿಸಿದ ಹುದ್ದೆಯ ಮುಂದೆ ಸೂಚಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಖಡ್ಡಾಯವಾಗಿ ಹೊಂದಿರಬೇಕು. ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.
(ಅ) ಅಭ್ಯರ್ಥಿಯು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅಥವಾ ಸ್ಥಳೀಯ ಪ್ರಾಧಿಕಾರದಲ್ಲಿ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಯಾದ ಅಥವಾ ರಾಜ್ಯ ಅಧಿನಿಯಮದ ಆಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಗೊಂಡು ಕರ್ನಾಟಕ ರಾಜ್ಯ ಸರ್ಕಾರದ ಸ್ವಾಮ್ಯ ಅಥವಾ ನಿಯಂತ್ರಣದಲ್ಲಿರುವ ನಿಗಮದಲ್ಲಿ ಹುದ್ದೆ ಹೊಂದಿರುವ ಅಥವಾ ಹಿಂದೆ ಹೊಂದಿದ್ದಲ್ಲಿ ಗರಿಷ್ಠ ವಯೋಮಿತಿಯನ್ನು ಅವನು/ಅವಳು ಎಷ್ಟು ವರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವರೋ ಅಥವಾ ಹಿಂದೆ ಸಲ್ಲಿಸಿದ್ದರೋ ಅಷ್ಟು ವರ್ಷಗಳು ಅಥವಾ 10 ವರ್ಷಗಳ ಅವಧಿ ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.
(ಆ) ಅಭ್ಯರ್ಥಿಯು ಮಾಜಿ ಸೈನಿಕನಾಗಿದ್ದಲ್ಲಿ ಅವನು ಕೇಂದ್ರ ಸಶಸ್ತ್ರ ದಳದಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವನೋ ಅಷ್ಟು ವರ್ಷಗಳಿಗೆ ಮೂರು ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳು.
ವಿವರಣೆ:- (1) ಮಾಜಿ ಸೈನಿಕ ಎಂದರೆ ಕೇಂದ್ರ ಸಶಸ್ತ್ರ ದಳಗಳಾದ ನಿಯಮಿತ ಭೂದಳ, ನೌಕಾದಳ ಮತ್ತು ವಾಯು ದಳದಲ್ಲಿ ಯಾವುದೇ ಶ್ರೇಣಿಯಲ್ಲಿ (ಯೋಧ ಅಥವಾ ಯೋಧನಲ್ಲದ) ಸೇವೆ ಸಲ್ಲಿಸಿದ ವ್ಯಕ್ತಿ ಆದರೆ ಡಿಫೆನ್ಸ್ ಸೆಕ್ಯೂರಿಟಿ ಕೋರ್, ಜನರಲ್ ರಿಸರ್ವ್ ಇಂಜಿನಿಯರಿಂಗ್ ಫೋರ್ಸ್, ಲೋಕ ಸಹಾಯಕ ಸೇವೆ ಮತ್ತು ಪ್ಯಾರಾ ಮಿಲಿಟರಿ ದಳದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಸೇರ್ಪಡೆಯಾಗುವುದಿಲ್ಲ. ಮತ್ತು
(2) ಕೇಂದ್ರ ಸಶಸ್ತ್ರ ದಳಗಳಲ್ಲಿ ಸೇವೆ ಸಲ್ಲಿಸುವಾಗ ಕೊಲ್ಲಲ್ಪಟ್ಟ ಅಥವಾ ಶಾಶ್ವತವಾಗಿ ದೈಹಿಕ ವಿಕಲತೆ ಹೊಂದಿದ ವ್ಯಕ್ತಿಗಳ ಕುಟುಂಬದವರು (ಸಂದರ್ಭಾನುಸಾರ ಹೆಂಡತಿ ಅಥವಾ ಗಂಡ ಮತ್ತು ಮಕ್ಕಳು ಮತ್ತು ಮಲ ಮಕ್ಕಳು) ಮಾಜಿ ಸೈನಿಕ ಮೀಸಲಾತಿಗೆ ಅರ್ಹರಾಗಿರುತ್ತಾರೆ. ಆದರೆ ಅಂತಹವರುಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದಿಲ್ಲ.
ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ಭಾಗ-೫ ೩೯೨ಅ) ಅಂತಹ ಸೇವೆಯಿಂದ ನಿವೃತ್ತಿ ಹೊಂದಿದ ನಂತರ ನಿವೃತ್ತಿ ವೇತನ ಪಡೆಯುತ್ತಿರುವ
ಅಥವಾ
ಆ) ವೈದ್ಯಕೀಯ ಕಾರಣಗಳಿಂದ ಮಿಲಿಟರಿ ಸೇವೆಯಿಂದ ಬಿಡುಗಡೆಯಾದ ಅಥವಾ ವ್ಯಕ್ತಿಯ ಹಿಡಿತಕ್ಕೂ ಮೀರಿದ ಪರಿಸ್ಥಿತಿಗಳಿಂದ ಮತ್ತು ವೈದ್ಯಕೀಯ ಅಥವಾ ಅಸಾಮರ್ಥ್ಯದ ಪಿಂಚಣಿ ಪಡೆದು ಅಂತಹ ಸೇವೆಯಿಂದ ಬಿಡುಗಡೆಯಾದವನು.
ಅಥವಾ
ಇ) ಸ್ವಂತ ಕೋರಿಕೆ ಹೊರತುಪಡಿಸಿ ಸಿಬ್ಬಂದಿ ಕಡಿತದ ಪರಿಣಾಮದಿಂದ ಅಂತಹ ಸೇವೆಯಿಂದ ಬಿಡುಗಡೆ ಹೊಂದಿದ ವ್ಯಕ್ತಿ.
ಅಥವಾ
ಈ) ತನ್ನ ಸ್ವಂತ ಕೋರಿಕೆ ಮೇರೆಗೆ ಅಥವಾ ದುರ್ನಡತೆ ಅಥವಾ ಅಸಾಮರ್ಥ್ಯದ ಕಾರಣದಿಂದಾಗಿ ತೆಗೆದುಹಾಕಿರುವ ಅಥವಾ ಕರ್ತವ್ಯದಿಂದ ವಜಾ ಮಾಡಿದ ವ್ಯಕ್ತಿಗಳನ್ನು ಹೊರತುಪಡಿಸಿ, ನಿರ್ದಿಷ್ಟ ಅವಧಿಯನ್ನು ಪೂರೈಸಿದ ತರುವಾಯ ಬಿಡುಗಡೆ ಹೊಂದಿದ ವ್ಯಕ್ತಿ ಮತ್ತು ಗ್ರಾಚ್ಯುಟಿ ಪಡೆಯುತ್ತಿರುವ ವ್ಯಕ್ತಿ ಮತ್ತು ಪ್ರಾಂತೀಯ ಸೇವೆಯ ಈ ಕೆಳಗೆ ಹೆಸರಿಸಿದ ವರ್ಗದ ಸಿಬ್ಬಂದಿಯವರು:-
i) ನಿರಂತರ ಸೇವೆ ಸಲ್ಲಿಸಿದ ನಿವೃತ್ತಿ ಹೊಂದಿದ ಪಿಂಚಿಣಿದಾರರು.
ii) ಮಿಲಿಟರಿ ಸೇವೆಯಿಂದಾಗಿ ಉಂಟಾದ ದೈಹಿಕ ಅಸಾಮರ್ಥ್ಯತೆ ಹೊಂದಿ ಬಿಡುಗಡೆಯಾದ ವ್ಯಕ್ತಿ.
iii) ಗ್ಯಾಲಂಟ್ರಿ ಪ್ರಶಸ್ತಿ ವಿಜೇತರು.
ವಿವರಣೆ:- ಕೇಂದ್ರ ಸಶಸ್ತ್ರ ದಳದಲ್ಲಿ ಸೇವೆಯಲ್ಲಿರುವ ವ್ಯಕ್ತಿಗಳು ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಮಾಜಿ ಸೈನಿಕರ ವರ್ಗದಡಿ ಬರುವ ವ್ಯಕ್ತಿಗೆ ನಿರ್ದಿಷ್ಟ ಒಪ್ಪಂದವು ಪೂರ್ಣವಾಗಲು ಒಂದು ವರ್ಷಕ್ಕೆ ಮುನ್ನ ಪುನರ್ ಉದ್ಯೋಗಕ್ಕೆ ಅರ್ಜಿ ಹಾಕಿಕೊಳ್ಳಲು ಹಾಗೂ ಅವರಿಗೆ ಮಾಜಿ ಸೈನಿಕರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಹೊಂದಲು ಅನುಮತಿ ನೀಡಲಾಗಿದೆ. ಆದರೆ ಸಮವಸ್ತ್ರವನ್ನು ತ್ಯಜಿಸಲು ಅನುಮತಿ ನೀಡುವವರೆಗೆ ರಾಜ್ಯ ನಾಗರೀಕ ಸೇವೆ ಅಥವಾ ಹುದ್ದೆಗೆ ನೇಮಕ ಹೊಂದುವಂತಿಲ್ಲ.
(ಇ)ಅಭ್ಯರ್ಥಿಗಳು ನ್ಯಾಷನಲ್ ಕ್ಯಾಡಿಟ್ ಕೋರ್ನಲ್ಲಿ ಪೂರ್ಣಕಾಲಿಕ ಪರಿವೀಕ್ಷಕರಾಗಿ ಸೇವೆ ಸಲ್ಲಿಸಿ ಬಿಡುಗಡೆಯಾಗಿರುವ
ವ್ಯಕ್ತಿಯಾಗಿದ್ದರೆ ಅಂಥ ಕ್ಯಾಡೆಟ್ ಪರಿವೀಕ್ಷನಾಗಿ ಅವನು ಸೇವೆ ಸಲ್ಲಿಸಿದಷ್ಟು ವರ್ಷಗಳು.
(ಈ) ಅಭ್ಯರ್ಥಿಯು ರಾಜ್ಯ ಸರ್ಕಾರದಿಂದ ಪುರಸ್ಕøತವಾದ ಗ್ರಾಮೀಣ ಔದ್ಯಮೀಕರಣ ಯೋಜನೆಯ ಮೇರೆಗೆ ನೇಮಕಗೊಂಡ ಗ್ರಾಮ ಸಮೂಹ ಪರಿಶೀಲಕರಾಗಿ ಈಗ ಕೆಲಸ ಮಾಡುತ್ತಿದ್ದರೆ ಅಥವಾ ಹಿಂದೆ ಇದ್ದ ಪಕ್ಷದಲ್ಲಿ ಅವನು / ಅವಳು ಅಂತಹ ಗ್ರಾಮ ಪರಿಶೀಲಕರಾಗಿ ಸೇವೆ ಸಲ್ಲಿಸಿದಷ್ಟು ವರ್ಷಗಳು.
(ಉ) ಅಭ್ಯರ್ಥಿಯು ಅಂಗವಿಕಲನಾಗಿದ್ದರೆ 10 ವರ್ಷಗಳು
(ಊ) ಅಭ್ಯರ್ಥಿಯು ಕರ್ನಾಟಕ ರಾಜ್ಯದಲ್ಲಿರುವ ಭಾರತ ಸರ್ಕಾರದ ಜನಗಣತಿ ಸಂಸ್ಥೆಯಲ್ಲಿ ಈಗ ಹುದ್ದೆಯನ್ನು ಹೊಂದಿದ್ದರೆ ಅಥವಾ ಹಿಂದೆ ಹೊಂದಿದ್ದ ಪಕ್ಷದಲ್ಲಿ ಗರಿಷ್ಠ ವಯೋಮಿತಿಯನ್ನು ಅವನು/ಆವಳು ಎಷ್ಟು ವರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವರೋ ಅಥವಾ ಹಿಂದೆ ಸಲ್ಲಿಸಿದ್ದರೋ ಅಷ್ಟು ವರ್ಷಗಳು ಅಥವಾ 5 ವರ್ಷಗಳ ಅವಧಿ ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು
(ಋು) ಅಭ್ಯರ್ಥಿಯು ವಿಧವೆಯಾಗಿದ್ದಲ್ಲಿ 10 ವರ್ಷಗಳು. (ಮರು ಮದುವೆಯಾಗಿಲ್ಲ ಎಂಬುದಾಗಿ ತಹಶೀಲ್ದಾರರಿಂದ ಪ್ರಮಾಣ ಪತ್ರ ಪಡೆದಿರತಕ್ಕದ್ದು.
5. ಜಾತಿ / ಮೀಸಲಾತಿ ಪ್ರಮಾಣ ಪತ್ರಗಳು :-
ಮೀಸಲಾತಿ ಕೋರಬಯಸುವ ಅಭ್ಯರ್ಥಿಗಳು ಈ ಕೆಳಗೆ ನಮೂದಿಸಿರುವ ನಮೂನೆಗಳಲ್ಲಿಯೇ ಮೀಸಲಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದ್ದು:-
ಅ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು:- ನಮೂನೆ `ಡಿ'
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಚಾಲ್ತಿಯಲ್ಲಿರುವ ಮೀಸಲಾತಿ ಪ್ರಮಾಣ ಪತ್ರವನ್ನು ಸಂಬಂಧಿತ ತಹಸೀಲ್ದಾರ್ರವರಿಂದ ಪಡೆದಿಟ್ಟುಕೊಂಡಿರತಕ್ಕದ್ದು. ಮೂಲ ದಾಖಲಾತಿ ಪರಿಶೀಲನಾ ಸಮಯದಲ್ಲಿ ತಪ್ಪದೇ ಹಾಜರುಪಡಿಸತಕ್ಕದ್ದು, ತಪ್ಪಿದಲ್ಲಿ ಅಂತಹ ಅಭ್ಯರ್ಥಿಗಳ ಮೀಸಲಾತಿಯನ್ನು ರದ್ದುಪಡಿಸಲಾಗುವುದು. ಈ ಪ್ರಮಾಣ ಪತ್ರಗಳ ನಮೂನೆಗಳನ್ನು ಈ ಸೂಚನೆಗಳಲ್ಲಿ ತೋರಿಸಲಾಗಿದೆ. ಈ ನಮೂನೆಗಳನ್ನು ಹೊರತುಪಡಿಸಿ ಇತರೆ ಯಾವುದೇ ನಮೂನೆಗಳಲ್ಲಿ ಸಲ್ಲಿಸಲ್ಪಡುವ ಮೀಸಲಾತಿ ಪ್ರಮಾಣ ಪತ್ರಗಳನ್ನು ತಿರಸ್ಕರಿಸಲಾಗುವುದು. ಅರ್ಜಿಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ೩೯೩ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಡೆದಿಟ್ಟುಕೊಂಡಿರತಕ್ಕದ್ದು. ಮೀಸಲಾತಿ ಪ್ರಮಾಣ ಪತ್ರ ಜಾರಿ ಮಾಡಿದ ದಿನಾಂಕವನ್ನು ತಪ್ಪದೇ ಅರ್ಜಿಯ ಸಂಬಂಧಪಟ್ಟ ಅಂಕಣದಲ್ಲಿ ನಮೂದಿಸತಕ್ಕದು ಹಾಗೂ ಅದೇ ಪ್ರಮಾಣ ಪತ್ರವನ್ನು ಮೂಲ ದಾಖಲಾತಿ ಪರಿಶೀಲನಾ ಸಮಯದಲ್ಲಿ ಹಾಜರುಪಡಿಸತಕ್ಕದ್ದು (ಅನುಬಂಧ-1).
6. ಗ್ರಾಮೀಣ ಅಭ್ಯರ್ಥಿ
ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 08 ಸೆನೆನಿ 2001 ದಿನಾಂಕ 13-02-2001 ರನ್ವಯ ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ರೀತ್ಯಾ 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಮೀಸಲಾತಿಗೆ ಒಳಪಡುವ ಪ್ರದೇಶಗಳಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾಗಿರುವವರು ಈ ಮೀಸಲಾತಿಯನ್ನು ಪಡೆಯಲು ಅರ್ಹರು. ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಖಡ್ಡಾಯವಾಗಿ ಮೇಲು ಸಹಿ ಮಾಡಿಸಿರಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಡೆದಿಟ್ಟುಕೊಂಡಿರತಕ್ಕದ್ದು. ಮೂಲ ದಾಖಲಾತಿ ಪರಿಶೀಲನಾ ಸಮಯದಲ್ಲಿ ತಪ್ಪದೇ ಹಾಜರುಪಡಿಸತಕ್ಕದ್ದು, ತಪ್ಪಿದಲ್ಲಿ ಅಂತಹ ಅಭ್ಯರ್ಥಿಗಳ ಮೀಸಲಾತಿಯನ್ನು ರದ್ದುಪಡಿಸಲಾಗುವುದು.
(ಇತರೆ ನಮೂನೆಗಳಲ್ಲಿ ಸಲ್ಲಿಸಲ್ಪಡುವ ಮೀಸಲಾತಿ ಪ್ರಮಾಣ ಪತ್ರಗಳನ್ನು ತಿರಸ್ಕರಿಸಲಾಗುವುದು ಹಾಗೂ ಅಂತಹವರು ಗ್ರಾಮೀಣ ಮೀಸಲಾತಿಗೆ ಸಹ ಅನರ್ಹರಾಗುತ್ತಾರೆ. ಈ ಪ್ರಮಾಣ ಪತ್ರಗಳ ನಮೂನೆಗಳನ್ನು ಈ ಸೂಚನೆಗಳಿಗೆ ಅನುಬಂಧಿಸಲಾಗಿದೆ (ಅನುಬಂಧ-2).
7. ಕನ್ನಡ ಮಾಧ್ಯಮ ಅಭ್ಯರ್ಥಿ
ಸರ್ಕಾರಿ ಅಧಿಸೂಚನೆ ಸಂಖ್ಯೆ ಸಿಆಸುಇ 71 ಸೆನೆನಿ 2001 ದಿನಾಂಕ 24-10-2002 ರನ್ವಯ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆಂದು ಮೀಸಲಿರಿಸಿದ ಹುದ್ದೆಗಳನ್ನು ಕ್ಲೇಮು ಮಾಡುವ ಅಭ್ಯರ್ಥಿಗಳು 1ನೇ ತರಗತಿಯಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಹಾಗೂ ಮೊಹರಿನೊಂದಿಗೆ ಪ್ರಮಾಣ ಪತ್ರವನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಡೆದಿಟ್ಟುಕೊಂಡಿರತಕ್ಕದ್ದು. ಮೂಲ ದಾಖಲಾತಿ ಪರಿಶೀಲನಾ ಸಮಯದಲ್ಲಿ ತಪ್ಪದೇ ಹಾಜರುಪಡಿಸತಕ್ಕದ್ದು, ತಪ್ಪಿದಲ್ಲಿ ಅಂತಹ ಅಭ್ಯರ್ಥಿಗಳ ಮೀಸಲಾತಿಯನ್ನು ರದ್ದುಪಡಿಸಲಾಗುವುದು. (ಈ ಪ್ರಮಾಣ ಪತ್ರದ ನಮೂನೆಯನ್ನು ಈ ಸೂಚನೆಗಳಿಗೆ ಅನುಬಂಧಿಸಲಾಗಿದೆ (ಅನುಬಂಧ-3)
8. ಅಂಗವಿಕಲ ಅಭ್ಯರ್ಥಿ
ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 50 ಎಸ್ಆರ್ಆರ್ 2000 ದಿನಾಂಕ 03-09-2005 ರಲ್ಲಿ ರಾಜ್ಯ ಸಿವಿಲ್ ಸೇವೆಗಳ ಸಮೂಹ - `ಎ' ಮತ್ತು `ಬಿ' ಗುಂಪಿನ ಹುದ್ದೆಗಳಿಗೆ ಶೇಕಡ 3 ರಷ್ಟು (ಸರ್ಕಾರದ ಅಧಿಸೂಚನೆ ಸಂಖ್ಯೆ ಡಿಪಿಎಆರ್ 21 ಎಸ್ಆರ್ಆರ್ 2008 ದಿನಾಂಕ 03-08- 2009ರ ಅನುಸೂಚಿಯಡಿ ಸೇರ್ಪಡೆ ಮಾಡಲಾಗಿರುವ ಇಲಾಖೆಗಳು) ಮತ್ತು ಸಮೂಹ `ಸಿ' ಗುಂಪಿನ ಹುದ್ದೆಗಳಿಗೆ ಶೇಕಡ 5 ರಷ್ಟು (ಸರ್ಕಾರದ ಅಧಿಸೂಚನೆ ಸಂಖ್ಯೆ ಡಿಪಿಎಆರ್ 52 ಎಸ್ಆರ್ಆರ್ 99 ದಿನಾಂಕ 29-11-2002ರ ಅನುಸೂಚಿಯಡಿ ಸೇರ್ಪಡಿಸಲಾಗಿರುವ ಇಲಾಖೆಗಳು) ಹುದ್ದೆಗಳನ್ನು ಅಂಗವಿಕಲರಿಗೆ ಮೀಸಲಾತಿ ಕಲ್ಪಿಸಿದ್ದು, ಇದರನ್ವಯ ಶೇಕಡ 40 ಕ್ಕಿಂತ ಕಡಿಮೆ ಇಲ್ಲದಂತಹ ಅಂಗವಿಕಲತೆಯುಳ್ಳ ಅಭ್ಯರ್ಥಿಗಳು ಮಾತ್ರ ಈ ಮೀಸಲಾತಿಯನ್ನು ಕೋರಲು ಅರ್ಹರು. ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಸಿಆಸುಇ 115 ಸೆನೆನಿ 2005 ದಿನಾಂಕ 19-11-2005ರಲ್ಲಿ ನಿಗದಿಪಡಿಸಿರುವ ನಮೂನೆಯಲ್ಲಿ ಅಂಗವಿಕಲತೆ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಡೆದಿಟ್ಟುಕೊಂಡಿರತಕ್ಕದ್ದು ಮೂಲ ದಾಖಲಾತಿಗಳನ್ನು ಪರಿಶೀಲನೆಗೆ ತಪ್ಪದೇ ಹಾಜರುಪಡಿಸತಕ್ಕದ್ದು, ತಪ್ಪಿದಲ್ಲಿ ಅಂತಹ ಅಭ್ಯರ್ಥಿಗಳ ಮೀಸಲಾತಿಯನ್ನು ರದ್ದುಪಡಿಸಲಾಗುವುದು. ಇತರೆ ಯಾವುದೇ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಪಡೆಯಲಾಗಿರುವ ಪ್ರಮಾಣ ಪತ್ರಗಳನ್ನು / ಗುರುತಿನ ಚೀಟಿಯ ಪ್ರತಿಗಳನ್ನು ಪರಿಗಣಿಸಲು ಬರುವುದಿಲ್ಲ. ಈ ಪ್ರಮಾಣ ಪತ್ರದ ನಮೂನೆಯನ್ನು ಈ ಸೂಚನೆಗಳಿಗೆ ಅನುಬಂಧಿಸಲಾಗಿದೆ (ಅನುಬಂಧ-4).
(ಎ) ಅರ್ಹ ಅಭ್ಯರ್ಥಿಗಳಿಗೆ ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗುವ ಪತ್ರವನ್ನು ಅಂಚೆ ಮೂಲಕ ಕಳುಹಿಸಲಾಗುವುದು. ಸದರಿ ಪತ್ರವು ಸ್ವೀಕರಿಸದೆ ಇದ್ದಲ್ಲಿ ಅಂತರ್ಜಾಲದಲ್ಲಿ ಬಿತರಿಸಲಾಗುವ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ನಿಗದಿತ ದಿನಾಂಕದಂದು ಹಾಜರಾಗತಕ್ಕದ್ದು.
9. ಯೋಜನಾ ನಿರಾಶ್ರಿತ ಅಭ್ಯರ್ಥಿ
ಸರ್ಕಾರಿ ಆದೇಶ ಡಿಪಿಎಆರ್ 23 ಎಸ್.ಆರ್.ಆರ್. 99 ದಿ:23-11-00ರಂತೆ ಯೋಜನೆಗಳಿಂದ ನಿರಾಶ್ರಿತರಾದ ಕುಟುಂಬದ ಅಭ್ಯರ್ಥಿಗಳು ಸರ್ಕಾರಿ ಸುತ್ತೋಲೆ ಸಂಖ್ಯೆ: ಸಿಆಸುಇ 44 ಸೇನೇನಿ ದಿನಾಂಕ 27-07-2001 ರಲ್ಲಿ ನಿಗದಿಪಡಿಲಾದ ನಮೂನೆಯಲ್ಲಿ ಪ್ರಮಾಣ ಪತ್ರವನ್ನು ಸಂಬಂಧಿಸಿದ ತಹಶೀಲ್ದಾರ್ ರವರಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಡೆದಿಟ್ಟುಕೊಂಡಿರತಕ್ಕದ್ದು (ಅನುಬಂಧ-5)ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ಭಾಗ-೫ ೩೯೪
10. ವ್ಯಾಸಂಗ ಪ್ರಮಾಣ ಪತ್ರದ ಬಗ್ಗೆ
ಕರ್ನಾಟಕ ರಾಜ್ಯದಲ್ಲಿ ಹತ್ತು ವರ್ಷಗಳಿಗೆ ಕಡಿಮೆ ಇಲ್ಲದಂತೆ ಅಂದರೆ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡದಿರುವ ಯಾವುದೇ ಅಭ್ಯರ್ಥಿಯು ಈ ನಿಯಮಗಳ ಅಡಿಯಲ್ಲಿ ಆಯ್ಕೆಗೆ ಅರ್ಹರಾಗುವುದಿಲ್ಲ. ಅಭ್ಯರ್ಥಿಗಳು 10 ವರ್ಷ ಕರ್ನಾಟಕ ರಾಜ್ಯದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಭಂದಪಟ್ಟ ಶಾಲೆಗಳ ಮುಖ್ಯೋಪಾಧ್ಯಾಯರಿಂದ ಪ್ರಮಾಣ ಪತ್ರಗಳನ್ನು ಪಡೆದು ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಲಾಗಿರುವ ಕೊನೆಯ ದಿನಾಂಕದೊಳಗೆ ಪಡೆದಿಟ್ಟುಕೊಂಡಿರತಕ್ಕದ್ದು.
11. ಸರ್ಕಾರಿ ಸೇವೆಯಲ್ಲಿರುವ ನೌಕರರಿಗೆ
ಅಭ್ಯರ್ಥಿಯು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅಥವಾ ಸ್ಥಳೀಯ ಪ್ರಾಧಿಕಾರದಲ್ಲಿ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಯಾದ ಅಥವಾ ರಾಜ್ಯ ಅಧಿನಿಯಮದ ಆಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಗೊಂಡು ಕರ್ನಾಟಕ ರಾಜ್ಯ ಸರ್ಕಾರದ ಸ್ವಾಮ್ಯ ಅಥವಾ ನಿಯಂತ್ರಣದಲ್ಲಿರುವ ನಿಗಮದಲ್ಲಿ ಹುದ್ದೆ ಹೊಂದಿರುವ ನೌಕರರು (ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದಿಟ್ಟುಕೊಂಡಿರತಕ್ಕದ್ದು) ಅನುಬಂಧ-6.
12. ವಿಶೇಷ ಸೂಚನೆಗಳು:-
1) ಹುದ್ದೆಗೆ ನಿಗದಿಪಡಿಸಿದ ಶುಲ್ಕ (ಅರ್ಜಿಯನ್ನು ಭರ್ತಿ ಮಾಡಿದ ನಂತರ ಪಾವತಿಸತಕ್ಕದ್ದು) ಪಾವತಿ ರಸೀತಿ.
2) ಹುದ್ದೆಗಳಿಗೆ ನಿಗದಿಪಡಿಸಲಾದ ವಿದ್ಯಾರ್ಹತೆಯ ಎಲ್ಲಾ ವರ್ಷಗಳ ಅಂಕಪಟ್ಟಿಗಳು.
3) ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ / ವರ್ಗಾವಣೆ ಪ್ರಮಾಣ ಪತ್ರ / ಜನನ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉದ್ದøತ ಭಾಗ.
4) ನಿರಾಪೇಕ್ಷಣಾ ಪತ್ರ (No Objection Certificate)(ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ)
5) ಸೈನಿಕ ಸೇವೆಯಿಂದ ಬಿಡುಗಡೆಯಾದ / ಮುಕ್ತಿ ಹೊಂದಿದ ಬಗೆಗಿನ ಪ್ರಮಾಣ ಪತ್ರ / ಮಾಜಿ ಸೈನಿಕ ಅವಲಂಬಿತರಾಗಿದ್ದಲ್ಲಿ, ಮಾಜಿ ಸೈನಿಕರು ಬಿಡುಗಡೆ ಹೊಂದಿರುವ ಕಾರಣಗಳ ಪ್ರಮಾಣ ಪತ್ರ (ಮಾಜಿ ಸೈನಿಕರು ಸೇವೆಯಲ್ಲಿರುವಾಗ ಮೃತಪಟ್ಟಿದ್ದಲ್ಲಿ ಅಥವಾ ಖಾಯಂ ಆಗಿ ಗಾಯಗೊಂಡಿರುವ ಪ್ರಮಾಣ ಪತ್ರ) (ಮಾಜಿ ಸೈನಿಕ ಮೀಸಲಾತಿ ಕೋರಿದ್ದಲ್ಲಿ)
6) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರಸ್ತುತ ಚಾಲ್ತಿಯಲ್ಲಿರುವ ನಮೂನೆಗಳಲ್ಲಿ.
7) ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ ನಮೂನೆ-1 ಮತ್ತು 2ರಲ್ಲಿ (ಮೀಸಲಾತಿ ಕೋರಿದ್ದಲ್ಲಿ)
8) ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ)
9) ಅಂಗವಿಕಲ ಮೀಸಲಾತಿ ಪ್ರಮಾಣ ಪತ್ರ (ವಯೋಮಿತಿ ಸಡಿಲಿಕೆಗಾಗಿ ಮೀಸಲಾತಿ ಕೋರಿದ್ದಲ್ಲಿ)
13. ದುರ್ನಡತೆ:- ಒಬ್ಬ ಅಭ್ಯರ್ಥಿಯು ನಕಲಿ ವ್ಯಕ್ತಿಯಾಗಿರುವನೆಂದು ಅಥವಾ ಖೋಟಾ ದಸ್ತಾವೇಜು ಅಥವಾ ತಿದ್ದಲಾದ ದಸ್ತಾವೇಜುಗಳನ್ನು ಸಲ್ಲಿಸಿರುವನೆಂದು ಅಥವಾ ತಪ್ಪು ಅಥವಾ ಸುಳ್ಳು ಹೇಳಿಕೆ ನೀಡಿರುವನೆಂದು ಅಥವಾ ವಾಸ್ತವಿಕ ಮಾಹಿತಿಯನ್ನು ಮರೆಮಾಚಿರುವನೆಂದು ಅಥವಾ ನೇಮಕಾತಿ ಉದ್ದೇಶಗಳಿಗಾಗಿ ಮೂಲ ದಾಖಲಾತಿ ಪರಿಶೀಲನಾ ಸಮಯದಲ್ಲಿ ಅನುಚಿತ ಮಾರ್ಗವನ್ನು ಅನುಸರಿಸುತ್ತಿರುವನೆಂದು ಅಥವಾ ಅನುಸರಿಸಲು ಪ್ರಯತ್ನಿಸಿರುವನೆಂದು ಅಥವಾ ಅವರ ನೇಮಕಾತಿಯ ಸಂಬಂಧದಲ್ಲಿ ಯಾವುದೇ ಇತರೆ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅವಲಂಬಿಸಿರುವನೆಂದು, ಕಂಡುಬಂದಲ್ಲಿ ಅವನು / ಅವಳು ಸ್ವತ: ಕ್ರಿಮಿನಲ್ ವ್ಯವಹರಣೆಗಳಿಗೆ ಮತ್ತು ಶಿಸ್ತು ಕ್ರಮಕ್ಕೆ ಒಳಪಡುವುದಲ್ಲದೆ; ಹುದ್ದೆಯ ಮೂಲ ದಾಖಲಾತಿ ಪರಿಶೀಲನಾ/ಆಯ್ಕೆಯಿಂದ ಅಭ್ಯರ್ಥಿತ್ವವನ್ನು ರದ್ದುಪಡಿಸಲಾಗುವುದು.
ಸಹಿ/-
ಸದಸ್ಯ ಕಾರ್ಯದರ್ಶಿ,
ವಿಶೇಷ ನೇಮಕಾತಿ ಸಮಿತಿ ಹಾಗೂ
ಮುಖ್ಯ ಆಡಳಿತಾಧಿಕಾರಿಗಳು
ಆರೋಗ್ಯ ಮತ್ತು ಕು.ಕ.ಸೇವೆಗಳುಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ೩೯೫
ಅನುಬಂಧ-1
(ಪ.ಜಾ. / ಪ.ಪಂ.ಕ್ಕೆ ಸೇರಿದ ಆಭ್ಯರ್ಥಿಗಳಿಗೆ ಮಾತ್ರ)
ನಮೂನೆ - ಡಿ
(ನಿಯಮ 3ಎ(2) (3) ನ್ನು ನೋಡಿ)
ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡುವ ಪ್ರಮಾಣ ಪತ್ರಗಳ ನಮೂನೆ.
ಪ್ರಮಾಣ ಪತ್ರ
_________ ರಾಜ್ಯದ / ಕೇಂದ್ರಡಳಿತ ಪ್ರದೇಶದ * __________ ಜಿಲ್ಲೆಯ / ವಿಭಾಗದ _________ಗ್ರಾಮ / ಪಟ್ಟಣ * ನಿವಾಸಿಯಾದ ಶ್ರೀ / ಶ್ರೀಮತಿ ________ ಎಂಬುವವರ ಮಗ / ಮಗಳಾದ ಶ್ರೀ / ಶ್ರೀಮತಿ …_____.ಇವರು ಅನುಸೂಚಿತ ಜಾತಿ / ಅನುಸೂಚಿತ ಬುಡಕಟ್ಟು * ಎಂದು ಮಾನ್ಯ ಮಾಡಲಾಗಿರುವ ಜಾತಿ / ಬುಡಕಟ್ಟಿಗೆ * ಸೇರಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.
• ಸಂವಿಧಾನ (ಅನುಸೂಚಿತ ಜಾತಿಗಳು) ಆದೇಶ, 1950 • ಸಂವಿಧಾನ ( ಅನುಸೂಚಿತ ಬುಡಕಟ್ಟುಗಳು) ಆದೇಶ 1950 • ಸಂವಿಧಾನ (ಅನುಸೂಚಿತ ಜಾತಿ) (ಕೇಂದ್ರಾಡಳಿತ ಪ್ರದೇಶಗಳು) ಆದೇಶ,1950. • ಸಂವಿಧಾನ ( ಅನುಸೂಚಿತ ಬುಡಕಟ್ಟುಗಳು) (ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1951
(ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಪಟ್ಟಿ (ಮಾರ್ಪಾಡು) ಆದೇಶ 1956 , ಮುಂಬಾಯಿ ರಾಜ್ಯ, ಪುನರ್ ರಚನಾ ಅಧಿನಿಯಮ, 1960, ಪಂಜಾಬ್ ರಾಜ್ಯ ಪುನರ್ ರಚನಾ ಅಧಿನಿಯಮ, 1966, ಹಿಮಾಚಲ ಪ್ರದೇಶ ರಾಜ್ಯ ಅಧಿನಿಯಮ 1970 ಮತ್ತು ಈಶಾನ್ಯ ಪ್ರದೇಶಗಳ (ಪುನರ್ ರಚನಾ ಅಧಿನಿಯಮ, 1971 ರ ಮೂಲಕ ತಿದ್ದುಪಡಿಯಾದಂತೆ).
• ಸಂವಿಧಾನ (ಜಮ್ಮು ಮತ್ತು ಕಾಶ್ಮೀರ) ಅನುಸೂಚಿತ ಜಾತಿಗಳ ಆದೇಶ 1956. • ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ತಿದ್ದುಪಡಿ) ಅಧಿನಿಯಮ, 1976 ರ ಮೂಲಕ ತಿದ್ದುಪಡಿಯಾದಂತೆ ಸಂವಿಧಾನ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ) ಅನುಸೂಚಿತ ಬುಡಕಟ್ಟು ಆದೇಶ 1959.
• ಸಂವಿಧಾನ (ದಾದರ್ ಮತ್ತು ನಗರ ಹವೇಲಿ ) ಅನುಸೂಚಿತ ಜಾತಿಗಳ ಆದೇಶ, 1962. • ಸಂವಿಧಾನ (ಪಾಂಡಿಚೆರಿ) ಅನುಸೂಚಿತ ಜಾತಿಗಳ ಆದೇಶ, 1964. • ಸಂವಿಧಾನ ಅನುಸೂಚಿತ ಬುಡಕಟ್ಟುಗಳ (ಉತ್ತರ ಪ್ರದೇಶ) ಅದೇಶ1967. • ಸಂವಿಧಾನ (ಗೋವಾ , ದಮನ್ ಮತ್ತು ದೀವ್) ಅನುಸೂಚಿತ ಜಾತಿ / ಬುಡಕಟ್ಟುಗಳ ಆದೇಶ,1988. • ಸಂವಿಧಾನ (ನಾಗಲ್ಯಾಂಡ್) ಅನುಸೂಚಿತ ಬುಡಕಟ್ಟುಗಳ ಆದೇಶ
1. ಶ್ರೀ/ ಶ್ರೀಮತಿ ಕುಮಾರಿ * …________________ ಮತ್ತು / ಅಥವಾ ಅವನ*/ಅವಳ* ಕುಟುಂಬವು…_______ರಾಜ್ಯ/ಕೇಂದ್ರಾಡಳಿತ ಪ್ರದೇಶದ…________…ಜಿಲ್ಲಾ / ವಿಭಾಗದ * …________.ಗ್ರಾಮ / _________ ಪಟ್ಟಣದ ಸಾಮಾನ್ಯ ನಿವಾಸಿ (ಗಳು).
ಸಹಿ:
ತಹಶೀಲ್ದಾರ್
ಸ್ಥಳ :
ಪದನಾಮ
ದಿನಾಂಕ :
ಕಛೇರಿಯ ಮೊಹರಿನೊಂದಿಗೆ
ರಾಜ್ಯ / ಕೇಂದ್ರಾಡಳಿತ ಪ್ರದೇಶ * ಅನ್ವಯವಾಗದಿರುವ ಪದಗಳನ್ನು ದಯವಿಟ್ಟು ಬಿಟ್ಟುಬಿಡಿ / ಹೊಡೆದು ಹಾಕಿ,
ಸೂಚನೆ: - ಇಲ್ಲಿ ಉಪಯೋಗಿಸಿದ " ಸಾಮಾನ್ಯ ನಿವಾಸಿಗಳು" ಎಂಬ ಪದಾವಳಿಯು ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1950 ರ 20 ನೇ ಪ್ರಕರಣದಲ್ಲಿರುವ ಅರ್ಥವನ್ನೇ ಹೊಂದಿರುತ್ತವೆ.
ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ಭಾಗ-೫ ೩೯೬ಭಾರತ ಸರ್ಕಾರದ ಪತ್ರ ಸಂಖ್ಯೆ : ಬಿಸಿ 12028/2/78 ಎಸ್ ಸಿಟಿ ಗೃಹ ಮಂತ್ರಾಲಯದ ಅನುಸಾರವಾಗಿ, ಅಂಥ ಪ್ರಮಾಣ ಪತ್ರಗಳನ್ನು ನೀಡಲು ಸಕ್ಷಮವಾಗಿರುವುದಕ್ಕಾಗಿ, ಭಾರತ ಸರ್ಕಾರದ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) ಪತ್ರ ಸಂಖ್ಯೆ: 13/02/1974 ಇಎಸ್ ಟಿ) ದಿನಾಂಕ 5ನೇ ಆಗಸ್ಟ್ 1975 ರಲ್ಲಿ ನಮೂದಿಸಿದ ಪ್ರಾಧಿಕಾರಿಯು, ರಾಷ್ಟ್ರಪತಿಗಳು ಸಂಬಂಧಪಟ್ಟ ಆದೇಶದ ಅಧಿಸೂಚನೆಯನ್ನು ಹೊರಡಿಸಿದ ಸಮಯದಲ್ಲಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯು, ತನ್ನ ಖಾಯಂ ವಾಸ ಸ್ಥಳವನ್ನು ಹೊಂದಿದ್ದ ಸ್ಥಳಕ್ಕೆ ಸೇರಿದವರೊಬ್ಬರಾಗಿರತಕ್ಕದ್ದು, ಅದೇ ರೀತಿಯಲ್ಲಿ, ಒಂದು ತಾಲ್ಲೂಕಿನ ರೆವಿನ್ಯೂ ಪ್ರಾಧಿಕಾರಿಯು ಇನ್ನೋಂದು ತಾಲ್ಲೂಕಿಗೆ ಸೇರಿದ ವ್ಯಕ್ತಿಗಳಿಗೆ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ನೀಡಲು ಸಕ್ಷಮ ಪ್ರಾಧಿಕಾರಿಯಾಗುವುದಿಲ್ಲ.
ಅನುಬಂಧ-2
ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 96 ಸೇನನಿ 2005, ದಿನಾಂಕ 10-08-2005
ನಮೂನೆ-2
ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ
ಶ್ರೀ/ಶ್ರೀಮತಿ____________________ರವರ ಮಗ/ಮಗಳು/ಪತಿ/ಪತ್ನಿ ಶ್ರೀ/ಶ್ರೀಮತಿ ಕುಮಾರಿ ____________ ಜಿಲ್ಲೆ ___________________ತಾಲ್ಲೂಕು _______________ಗ್ರಾಮದಲ್ಲಿ ___________ವಾಸವಾಗಿರುವ ಇವರು ಒಂದನೇ ತರಗತಿಯಿಂದ ___________ ತರಗತಿಯವರೆಗೆ ______ ಜಿಲ್ಲೆ _____ ತಾಲ್ಲೂಕು _________ ಪಟ್ಟಣ ಶಾಲೆಯಲ್ಲಿ ವ್ಯಾಸಂಗ ಮಾಡಿ ________ ವರ್ಷ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಈ ಶಾಲೆಯು ಅಭ್ಯರ್ಥಿಯು ವ್ಯಾಸಂಗ ಮಾಡಿದ ಅವಧಿಯಲ್ಲಿ ಕರ್ನಾಟಕದ ಪೌರನಿಗಮಗಳ ಅಧಿನಿಯಮ, 1976 ಅಥವಾ ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಒಂದು ದೊಡ್ಡ ನಗರ ಪ್ರದೇಶ, ಸಣ್ಣ ನಗರ ಪ್ರದೇಶ ಅಥವಾ ಪರಿವರ್ತನೆ ಹಂತದಲ್ಲಿರುವ ಪ್ರದೇಶಗಳ ಹೊರತಾದ ಪ್ರದೇಶದಲ್ಲಿತ್ತು.
ಸಹಿ/-
ಮುಖ್ಯೋಪಾಧ್ಯಾಯರು.
ಮೇಲುರುಜು
ಕ್ಷೇತ್ರ ಶಿಕ್ಷಣ ಅಧಿಕಾರಿ
ಅನುಬಂಧ-3
ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ
ಶ್ರೀ/ಶ್ರೀಮತಿ_________________________________________ ರವರ ಮಗ/ಮಗಳು/ಪತ್ನಿ ಶ್ರೀ/ ಶ್ರೀಮತಿ ಕುಮಾರಿ _______________________ಜಿಲ್ಲೆ _________________ ತಾಲ್ಲೂಕು ______ ಗ್ರಾಮದಲ್ಲಿ _________________ವಾಸವಾಗಿರುವ ಇವರು _________________ತರಗತಿಯಿಂದ _______________ತರಗತಿಯವರೆಗೆ ______________ಶೈಕ್ಷಣಿಕ ವರ್ಷದಿಂದ __________ ಶೈಕ್ಷಣಿಕ ವರ್ಷದವರೆಗೆ _____________________ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುತ್ತಾರೆಂದೂ ಪ್ರಮಾಣೀಕರಿಸಲಾಗಿದೆ.
ಮುಖ್ಯೋಪಾಧ್ಯಾರ ಸಹಿ ಮತ್ತು ಸಂಸ್ಥೆಯ ಮೊಹರು.
ದಿನಾಂಕ: _____________
ಸ್ಥಳ :_______________
ಸೂಚನೆ : - ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದಲ್ಲಿ ಶಾಲಾವಾರು ಪ್ರತ್ಯೇಕ ಕನ್ನಡ ಮಾಧ್ಯಮ ವ್ಯಾಸಂಗ
ಪ್ರಮಾಣ ಪತ್ರ ಸಲ್ಲಿಸಬೇಕು.
ಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ೩೯೭ಅನುಬಂಧ-4
ಕರ್ನಾಟಕ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಸಿಆಸುಇ 115 ಸೆನೆನಿ 2005, ದಿನಾಂಕ 19-11-2005
CERTIFICATE FOR THE PERSONS WITH DISABILITIES
This is to certify that Sri/ Smt / Kum………………………………………… Son / wife/ Daughter of Shri ............................... Age............
old, male / female, Registration No................ is a case of ...................................................... He / She is physically disabled / visual disabled / speech & hearing disabled and has ........ % ......... percent) permanent(Physical impairment/ visual impairment speech & hearing impairment) in relation to his / her....... ..........................
Note:
1. This condition is progressive / non progressive likely to improve / not likely to improve.
2. Re-assessment is not recommended / is recommended after a period of ................ months / years.
* Strike out which is not applicable
Recent attested
Photograph showing
the disability
affixed here)
Sd/
Sd/
Sd/
DOCTOR
DOCTOR
DOCTOR
(Seal)
(Seal)
(Seal)
Countersigned by the
Medical Superintendent CMO Head of
Hospital (with seal)
Signature/Thumb impression
of the disabled person.
Explanation:-As per Notification No. DPAR 50 SRR 2000 dated 03-09-2005 " Physically Handicapped candidates " or " person with disability " means a person suffering from not less than forty percent of any of the following disabilities :- (1) Blindness (2) Low Vision (3) Hearing impairment (4) Locomotor disability (5) Leprosy cured (6) Mental retardation (7) Mental illness.
(1) Blindness refers to a condition where a person suffers from any of the following conditions, namely:- (a)Total absence of sight; or (b) Visual acuity not exceeding 6/60 or 20/200 (Snellen) in the better eye with correcting lenses; or (c) limitation of the field of vision subtending an angle of 20 degree or worse;
(2) Person with low vision means a person with impairment of visual functioning even after treatment or standard refractive correction, but who uses or is potentially capable of using vision for the planning or execution of a task with appropriate assistive device;
(3)" Hearing impairment" means loss of sixty decibels or more in the better ear in the conversational range of frequencies.
(4)" Locomotor disability" means disability of the bones, joints or muscles leading to substantial restriction of the movement of the limbs or any form of cerebral palsy.
(5) Leprosy cured:-means any person who has been cured of Leprosy, but is suffering from, (i) Loss of sensation in hands or feet as wellas loss of sensation & paresis in the eye & eyelid, but with no manifest deformity;(ii)manifest deformity & paresis but having sufficient mobility in their hands & feet to enable them to engage in normal economic activity; (iii) extreme physical deformityಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ಭಾಗ-೫ ೩೯೮ as well as advanced age which prevents him from undertaking any gainful occupation; and the expressesion " Leprosy cured " shall be construed accordingly;
(6) Mental Retardation:-means a condition of arrested or incomplete development of mind of a person who is specially characterised by sub normality of intelligence;
(7) Mental Illness:- means any mental disorder other than mental retardation.
ಅನುಬಂಧ-5
ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 23 ಎಸ್ಆರ್ಆರ್ 99, ದಿನಾಂಕ: 23-11-2000
ನಮೂನೆ
ಯೋಜನೆಗಳಿಂದ ನಿರ್ವಸಿತರಾದ ಕುಟುಂಬದ ಅಭ್ಯರ್ಥಿ
ಪ್ರಮಾಣ ಪತ್ರ
ಶ್ರೀ/ಶ್ರೀಮತಿ -------------- ಎಂಬುವವರ ಮಗ/ಮಗಳು/ಪತಿ/ಪತ್ನಿ ಶ್ರೀ/ಶ್ರೀಮತಿ/ ಕುಮಾರಿ ------ ಜಿಲ್ಲೆ -------------
ತಾಲ್ಲೂಕು --------- ಗ್ರಾಮದಲ್ಲಿ --------- ವಾಸವಾಗಿರುವ ಇವರು : ;ಇವರ ಕುಟುಂಬದವರು ಅವಲಂಬಿತರಾಗಿದ್ದ ಈ ಕೆಳಕಂಡ ಆಸ್ತಿಯನ್ನು --------------- ಯೋಜನೆಗಾಗಿ ----------------ಇಸವಿ----------ಯಂದು ಸ್ವಾಧೀನಪಡಿಸಿಕೊಳ್ಳಲಾಗಿದೆ. ಎಂದು ಈ ಮೂಲಕ ಪ್ರಮಾಣೀಕರಿಸಿದೆ:-
• ವಾಸಿಸುವ ಮನೆ ಮತ್ತು ತಾವು ಅವಲಂಬಿತರಾಗಿದ್ದ ಅವರ ಕೃಷಿ ಭೂಮಿಯ ಅರ್ಧದಷ್ಟು: • ಯೋಜನೆಗೆ ಮೊದಲು ಭೂಮಿಯನ್ನು ಹೊಂದಿರದೆ : ಯೋಜನೆಯಿಂದ ತಾವು ವಾಸಿಸುವ ಮನೆ: • ತಾವು ಅವಲಂಭಿತರಾಗಿದ್ದ ತಮ್ಮ ಕೃಷಿ ಭೂಮಿಯ ಅರ್ಧದಷ್ಟು ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿ: • ಇತರ ಇನ್ನಾವುದೇ ಪ್ರಕರಣದಲ್ಲಿ ಯೋಜನೆಯಿಂದ ನಿರ್ವಸಿತರಾದವರು
ತಹಸೀಲ್ದಾರ್
--------ತಾಲ್ಲೂಕು
(ಅನ್ವಯವಾಗುವ ಐಟಂನ್ನು ಮಾತ್ರ ಪ್ರಮಾಣ ಪತ್ರದಲ್ಲಿ ನಮೂದಿಸತಕ್ಕದ್ದು.)
ಅನುಬಂಧ-6
ರಾಜ್ಯ ಸರ್ಕಾರಿ/ ಕೇಂದ್ರ ಸರ್ಕಾರಿ ನೌಕರರು ಒದಗಿಸಬೇಕಾದ ಪ್ರಮಾಣ ಪತ್ರ
ಶ್ರೀ / ಶ್ರೀಮತಿ.......................................................................... ರವರು ರಾಜ್ಯ / ಕೇಂದ್ರ ಸರ್ಕಾರದಲ್ಲಿ…….......................................... (ಪದನಾಮ) ........................................................................................... ಇಲಾಖೆಯಲ್ಲಿ ಖಾಯಂ / ತಾತ್ಕಾಲಿಕ ಹುದ್ದೆಯನ್ನು ದಿನಾಂಕ ..............................
ರಿಂದ ........................................... ರವರೆಗೆ ಹೊಂದಿರುವರು.. ಈ ಹುದ್ದೆಗೆ ಇವರು ನೇಮಕಾತಿ ನಿಯಮಗಳಡಿ ಆಯ್ಕೆಯಾಗಿದ್ದು, ಸದರಿ ಹುದ್ದೆಗೆ ಅರ್ಜಿ ಸಲ್ಲಿಸಲು ಅವರಿಗೆ ಅನುಮತಿ ನೀಡಲಾಗಿದೆ.
ಸ್ಥಳ : ನೇಮಕಾತಿ ಪ್ರಾಧಿಕಾರದ ಸಹಿ/
ದಿನಾಂಕ: ಇಲಾಖೆಯ ಹೆಸರು ಮತ್ತು ಮೊಹರಿನೊಂದಿಗೆಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ೩೯೯
CERTIFICATE TO BE FURNISHED BY THE STATE/CENTRAL GOVT. SERVANTS
Certified that Sri / Smt …………………………………………………holds a permanent / temporary post under the State/Central Govt. as ……………………… (Designation) in the dept. of ………………………from…………………………having been appointed therein under the rules of recruitment. He /She is permitted to apply for the said post.
Place :
Signature of the appointing authority Date :
of the department / with name and seal.
ರಾಜ್ಯ ಮಟ್ಟದ ಆಯ್ಕೆ ಸಮಿತಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಆನಂದರಾವ್ ವೃತ್ತ, ಬೆಂಗಳೂರು-560 009.
ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿಗಳನ್ನು ಆರೋಗ್ಯ ಮತ್ತು
ಕುಟುಂಬ ಕಲ್ಯಾಣ ಇಲಾಖೆಯಲ್ಲಿ 'ಡಿ' ಗುಂಪಿನ ಹುದ್ದೆಗಳಿಗೆ ನೇಮಕಾತಿಗಾಗಿ ಆಯ್ಕೆ ಮಾಡುವ ಬಗ್ಗೆ.
ಅಧಿಸೂಚನೆ
ಅಧಿಸೂಚನೆ ಸಂಖ್ಯೆ: ಎಸ್ಎಲ್ಆರ್ಸಿ/49/2011-12, ದಿನಾಂಕ:29.03.2012
ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಲು ಕೊನೆಯ ದಿನಾಂಕ.30.04.2012
ಬ್ಯಾಂಕ್ನಲ್ಲಿ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ:02.05.2012
ಸರ್ಕಾರದ ಆದೇಶ ಸಂಖ್ಯೆ:ಆಕುಕ/239/ಹೆಚ್ಎಸ್ಎಂ/2010, ದಿ:12.10.2011 ಮತ್ತು ಸರ್ಕಾರ ಅಧಿಸೂಚನೆ ಸಂಖ್ಯೆ:ಆಕುಕ/278/ಹೆಚ್ಎಸ್ಎಂ/2011, ದಿನಾಂಕ:27.12.2011, ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ:ಡಿಪಿಎಆರ್/24/ಎಸ್ಆರ್ಡಿ/2002, ದಿನಾಂಕ:25.07.2002ರಲ್ಲಿ ಜಾರಿಗೆ ಬಂದ ಕರ್ನಾಟಕ ಜನಾರೋಗ್ಯ ಸೇವೆಗಳು(ನೇಮಕಾತಿ) (ತಿದ್ದುಪಡಿ) ನಿಯಮಗಳು 2002ರ ಪ್ರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಲ್ಲಿ ರೂ.4800-7275ರ ವೇತನ ಶ್ರೇಣಿಯಲ್ಲಿ 100 ಗ್ರೂಪ್'ಡಿ ಹುದ್ದೆಗಳಿಗೆ ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿಗಳಿಂದ ವೆಬ್ಸೈಟ್ ವಿಳಾಸ www.karhfw.gov.in ನಲ್ಲಿ ON-LINE ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
| ಪ ್ರವರ್ಗ | ಸಾಮಾನ್ಯ | ವ ುಹಿಳಾ | ಗ್ರಾಮೀಣ | ವ iಾಜಿ ಸ ೖನಿಕ ೆ | ಕನ್ನಡ ಮಾಧ್ಯಮ | ಅಂಗವಿಕಲ | ಯೋಜನಾ ಸ ಂತ್ರಸ್ತರು | ಒಟ್ಟು |
| ಸಾ.ಅರ್ಹತೆ | 10 | 15 | 13 | 5 | 2 | 3 | 2 | 50 |
| ಪ.ಜಾತಿ | 3 | 5 | 4 | 1 | 1 | 1 | 0 | 15 |
| ಪ.ಪಂ | 1 | 1 | 1 | 0 | 0 | 0 | 0 | 3 |
| ಪ್ರವರ್ಗI | 1 | 1 | 1 | 0 | 0 | 1 | 0 | 4 |
| ಪ್ರವರ್ಗII(ಎ) | 3 | 5 | 4 | 1 | 1 | 1 | 0 | 15 |
| ಪ್ರವರ್ಗII(ಬಿ) | 1 | 1 | 1 | 0 | 0 | 1 | 0 | 4 |
| ಪ್ರವರ್ಗIII(ಎ) | 1 | 1 | 1 | 0 | 0 | 1 | 0 | 4 |
| ಪ್ರವರ್ಗIII(ಬಿ) | 1 | 2 | 1 | 0 | 0 | 1 | 0 | 5 |
| ಒಟ್ಟು | 21 | 31 | 26 | 7 | 4 | 9 | 2 | 100 |
ಟಿಪ್ಪಣಿ: ಪ್ರಕಟಿಸಿರುವ ಹುದ್ದೆಗಳ ಸಂಖ್ಯೆ ಮತ್ತು ವರ್ಗೀಕರಣವು ಅನಿವಾರ್ಯ ಸಂದರ್ಭಗಳಲ್ಲಿ ಸಮಿತಿಯ ನಿರ್ಣಯಕ್ಕೆ ಒಳಪಟ್ಟಿರುತ್ತದೆ.
ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ಭಾಗ-೫ ೪೦೦1. ಶುಲ್ಕ ಪಾವತಿಸಬೇಕಾದ ವಿಧಾನ:-
| ಸಾಮಾನ್ಯ ಅರ್ಹತೆ, ಪ ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ | ರ ೂ. 50/. |
| ಪರಿಶಿ\್ಟ ಜಾತಿ, ಪರಿಶಿ\್ಟ ಪಂಗಡ, ಪ್ರವರ್ಗ1 | ರ ೂ. 25/. |
2. ಅರ್ಹತಾ ಷರತ್ತುಗಳು:-
ಅ) ಭಾರತೀಯ ನಾಗರೀಕನಾಗಿರತಕ್ಕದ್ದು.
ಆ) ಒಬ್ಬ ಜೀವಂತ ಪತ್ನಿಗಿಂತ ಹೆಚ್ಚು ಮಂದಿ ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಹೆಂಡತಿ ಇರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯು ಸರ್ಕಾರದಿಂದ ಪೂರ್ವಾನುಮತಿಯನ್ನು ಪಡೆಯದೇ ನೇಮಕಾತಿಗೆ ಅರ್ಹರಾಗುವುದಿಲ್ಲ.
ಇ) ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯು ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತರಾಗಿರಬೇಕು.
ಈ) ದೈಹಿಕವಾಗಿ ಅನರ್ಹರಾಗಿದ್ದಾರೆಂಬುದಾಗಿ ವೈದ್ಯಕೀಯ ಮಂಡಳಿಯ ವರದಿಯ ಮೇಲೆ ಅನರ್ಹರೆಂಬುದಾಗಿ ತಿರಸ್ಕರಿಸುವ ಪೂರ್ಣ ವಿವೇಚನೆಯನ್ನು ಸಮಿತಿಯು ಕಾದಿರಿಸಿಕೊಂಡಿದೆ ಮತ್ತು ಸರ್ಕಾರದ ವಿವೇಚನೆಯು ಯಾವುದೇ ವಿಧದಲ್ಲೂ ಈ ನಿಯಮಗಳ ಮೂಲಕ ಸೀಮಿತವಾಗಿರುವುದಿಲ್ಲ. ಅಂಗವಿಕಲರು ಯಾವುದೇ ಹುದ್ದೆಗೆ ನಿಗದಿಪಡಿಸಿದ ಕರ್ತವ್ಯ ಜವಾಬ್ದಾರಿಯನ್ನು ನಿರ್ವಹಿಸಲು ದೈಹಿಕವಾಗಿ ಸಮರ್ಥರೇ ಎಂಬುದನ್ನು ನೇಮಕಾತಿ ಸಮಿತಿ ಪರಿಶೀಲಿಸಿ ದೃಡೀಕರಿಸಿದ ನಂತರವೇ ಅಭ್ಯರ್ಥಿಯ ಆಯ್ಕೆಯನ್ನು ಪರಿಗಣಿಸಲಾಗುವುದು.
ಉ) ಅಂಗವಿಕಲತೆ ಪ್ರವರ್ಗದಲ್ಲಿ ಮೀಸಲಾತಿ ಬಯಸುವ ಅಭ್ಯರ್ಥಿಗಳು ಕುಷ್ಠರೋಗದಿಂದ ಬಳಲಿದ ಗ್ರೇಡ್-2 ಅಂಗವಿಕಲತೆ ಬಗ್ಗೆ ಅಭ್ಯರ್ಥಿ ಚಿಕಿತ್ಸೆ ಪಡೆದ ವೈದ್ಯಾಧಿಕಾರಿಗಳಿಂದ ಅಂದರೆ ನಮೂನೆ-6ರಲ್ಲಿ ತಿಳಿಸಿರುವಂತೆ ಆಸ್ಪತ್ರೆ ಅಧೀಕ್ಷಕರು/ಇಲಾಖೆಯ ಮುಖ್ಯಸ್ಥರ /ಜಿಲ್ಲಾ ಕುಷ್ಠರೋಗ ನಿವಾರಣಾ ಅಧಿಕಾರಿ, ಇವರಿಂದ ದೃಡೀಕರಿಸಿ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು, ಇಲ್ಲವಾದಲ್ಲಿ ತತ್ಸಂಬಂಧ ಮೀಸಲಾತಿಗೆ ಅರ್ಹರಾಗುವುದಿಲ್ಲ.(ಅನುಬಂಧ-1).
ಗ್ರೇಡ್-2 ಅಂಗವಿಕಲತೆಯ ನ್ಯೂನತೆಗಳನ್ನು ಈ ಕೆಳಕಂಡಂತೆ ವಿವರಿಸಿದೆ.
Grade 2 means that visible damage or disability in noted
For the eyes, this includes the inability to close the eye fully or obvious redness of the eye (in leprosy, this is typically caused by either a corneal ulcer or by uveitis); visual impairment or blindness also gives a disability grade of 2.
For the hands and feet, visible damage includes wounds and ulcers, as well as deformity due to muscle weakness, such as a foot drop, or a claw hand. Loss of tissue, such as the loss or partial reabsorption of fingers or toes is a late sign in leprosy, but it also gives a disability grade of 2 for that hand or foot.
ಟಿಪ್ಪಣಿ: ಈ ಅಧಿಸೂಚನೆಯಲ್ಲಿ ಹುದ್ದೆಗಳಿಗೆ ಯಾವುದೇ ಶೈಕ್ಷಣಿಕ ವಿದ್ಯಾರ್ಹತೆಯನ್ನು ನಿಗದಿಪಡಿಸಿಲ್ಲ. ಆದರೆ ಯಾವುದೇ/ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವುದಿಲ್ಲ (ಕುಷ್ಠರೋಗದಿಂದ ಬಳಲಿ ಗ್ರೇಡ್-2ರ ಕೊರತೆ ಹೊಂದಿದವರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು).
3. ಆಯ್ಕೆ ವಿಧಾನ:- ಸರ್ಕಾರದ ಅಧಿಸೂಚನೆ ಸಂಖ್ಯೆ:ಡಿಪಿಎಆರ್/24/ಎಸ್ಆರ್ಡಿ/2002, ದಿನಾಂಕ:25.07.2002ರಲ್ಲಿ ಜಾರಿಗೆ ಬಂದ ಕರ್ನಾಟಕ ಜನಾರೋಗ್ಯ ಸೇವೆಗಳು(ನೇಮಕಾತಿ) (ತಿದ್ದುಪಡಿ) ನಿಯಮಗಳು 2002ರಲ್ಲಿ ಸೂಚಿಸಿದಂತೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
4. ವಯೋಮಿತಿ:- ಈ ಕೆಳಕಂಡಂತೆ ಅರ್ಜಿಗಳನ್ನು ಭರ್ತಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ನಿಗದಿತ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
| ಪ ್ರವರ್ಗ | ಕನಿ>್ಠ | ಗ ರಿ> ್ಠ |
| ಸಾ.ಅ | 18 | 35 |
| ಪ್ರ2ಎ | 18 | 38 |
| ಪ್ರ2ಬಿ | 18 | 38 |
| ಪ್ರ3ಎ | 18 | 38 |
| ಪ್ರ3ಬಿ | 18 | 38 |
| ಪ್ರ1 | 18 | 40 |
| ಪ.ಜಾ | 18 | 40 |
| ಪ.ಪಂ | 18 | 40 |
ಈ ಕೆಳಗಿನ ಸಂದರ್ಭಗಳಲ್ಲಿ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಕೆಳಗೆ ತಿಳಿಸಿರುವಷ್ಟರ ಮಟ್ಟಿಗೆ ಹೆಚ್ಚಿಸಲಾಗುವುದು.
(ಅ) ಅಭ್ಯರ್ಥಿಯು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅಥವಾ ಸ್ಥಳೀಯ ಪ್ರಾಧಿಕಾರದಲ್ಲಿ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಯಾದ ಅಥವಾ ರಾಜ್ಯ ಅಧಿನಿಯಮದ ಆಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಗೊಂಡು ಕರ್ನಾಟಕ ರಾಜ್ಯ ಸರ್ಕಾರದ ಸ್ವಾಮ್ಯ ಅಥವಾ ನಿಯಂತ್ರಣದಲ್ಲಿರುವ ನಿಗಮದಲ್ಲಿ ಹುದ್ದೆ ಹೊಂದಿರುವ ಅಥವಾ ಹಿಂದೆ ಹೊಂದಿದ್ದಲ್ಲಿ ಗರಿಷ್ಠ ವಯೋಮಿತಿಯನ್ನು ಅವನು/ಅವಳು ಎಷ್ಟು ವರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವರೋ ಅಥವಾ ಹಿಂದೆ ಸಲ್ಲಿಸಿದ್ದರೋ ಅಷ್ಟು ವರ್ಷಗಳು ಅಥವಾ 10 ವರ್ಷಗಳ ಅವಧಿ ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.
(ಆ) ಅಭ್ಯರ್ಥಿಯು ಮಾಜಿ ಸೈನಿಕನಾಗಿದ್ದಲ್ಲಿ ಅವನು ಕೇಂದ್ರ ಸಶಸ್ತ್ರ ದಳದಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವನೋ ಅಷ್ಟು ವರ್ಷಗಳಿಗೆ ಮೂರು ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳು.
ವಿವರಣೆ:- (1) ಮಾಜಿ ಸೈನಿಕ ಎಂದರೆ ಕೇಂದ್ರ ಸಶಸ್ತ್ರ ದಳಗಳಾದ ನಿಯಮಿತ ಭೂದಳ, ನೌಕಾದಳ ಮತ್ತು ವಾಯು ದಳದಲ್ಲಿ ಯಾವುದೇ ಶ್ರೇಣಿಯಲ್ಲಿ (ಯೋಧ ಅಥವಾ ಯೋಧನಲ್ಲದ) ಸೇವೆ ಸಲ್ಲಿಸಿದ ವ್ಯಕ್ತಿ ಆದರೆ ಡಿಫೆನ್ಸ್ ಸೆಕ್ಯೂರಿಟಿ ಕೋರ್, ಜನರಲ್ ರಿಸರ್ವ್ ಇಂಜಿನಿಯರಿಂಗ್ ಫೋರ್ಸ್, ಲೋಕ ಸಹಾಯಕ ಸೇವೆ ಮತ್ತು ಪ್ಯಾರಾ ಮಿಲಿಟರಿ ದಳದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಸೇರ್ಪಡೆಯಾಗುವುದಿಲ್ಲ. ಮತ್ತು
(2) ಕೇಂದ್ರ ಸಶಸ್ತ್ರ ದಳಗಳಲ್ಲಿ ಸೇವೆ ಸಲ್ಲಿಸುವಾಗ ಕೊಲ್ಲಲ್ಪಟ್ಟ ಅಥವಾ ಶಾಶ್ವತವಾಗಿ ದೈಹಿಕ ವಿಕಲತೆ ಹೊಂದಿದ ವ್ಯಕ್ತಿಗಳ ಕುಟುಂಬದವರು (ಸಂದರ್ಭಾನುಸಾರ ಹೆಂಡತಿ ಅಥವಾ ಗಂಡ ಮತ್ತು ಮಕ್ಕಳು ಮತ್ತು ಮಲ ಮಕ್ಕಳು) ಮಾಜಿ ಸೈನಿಕ ಮೀಸಲಾತಿಗೆ ಅರ್ಹರಾಗಿರುತ್ತಾರೆ. ಆದರೆ ಅಂತಹವರುಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದಿಲ್ಲ.
ಅ) ಅಂತಹ ಸೇವೆಯಿಂದ ನಿವೃತ್ತಿ ಹೊಂದಿದ ನಂತರ ನಿವೃತ್ತಿ ವೇತನ ಪಡೆಯುತ್ತಿರುವ
ಅಥವಾ
ಆ) ವೈದ್ಯಕೀಯ ಕಾರಣಗಳಿಂದ ಮಿಲಿಟರಿ ಸೇವೆಯಿಂದ ಬಿಡುಗಡೆಯಾದ ಅಥವಾ ವ್ಯಕ್ತಿಯ ಹಿಡಿತಕ್ಕೂ ಮೀರಿದ ಪರಿಸ್ಥಿತಿಗಳಿಂದ ಮತ್ತು ವೈದ್ಯಕೀಯ ಅಥವಾ ಅಸಾಮರ್ಥ್ಯದ ಪಿಂಚಣಿ ಪಡೆದು ಅಂತಹ ಸೇವೆಯಿಂದ ಬಿಡುಗಡೆಯಾದ ವ್ಯಕ್ತಿ.
ಅಥವಾ
ಇ) ಸ್ವಂತ ಕೋರಿಕೆ ಹೊರತುಪಡಿಸಿ ಸಿಬ್ಬಂದಿ ಕಡಿತದ ಪರಿಣಾಮದಿಂದ ಅಂತಹ ಸೇವೆಯಿಂದ ಬಿಡುಗಡೆ ಹೊಂದಿದ ವ್ಯಕ್ತಿ.
ಅಥವಾ
ಈ) ತನ್ನ ಸ್ವಂತ ಕೋರಿಕೆ ಮೇರೆಗೆ ಅಥವಾ ದುರ್ನಡತೆ ಅಥವಾ ಅಸಾಮರ್ಥ್ಯದ ಕಾರಣದಿಂದಾಗಿ ತೆಗೆದುಹಾಕಿರುವ ಅಥವಾ ಕರ್ತವ್ಯದಿಂದ ವಜಾ ಮಾಡಿದ ವ್ಯಕ್ತಿಗಳನ್ನು ಹೊರತುಪಡಿಸಿ, ನಿರ್ದಿಷ್ಟ ಅವಧಿಯನ್ನು ಪೂರೈಸಿದ ತರುವಾಯ ಬಿಡುಗಡೆ ಹೊಂದಿದ ವ್ಯಕ್ತಿ ಮತ್ತು ಗ್ರಾಚ್ಯುಟಿ ಪಡೆಯುತ್ತಿರುವ ವ್ಯಕ್ತಿ ಮತ್ತು ಪ್ರಾಂತೀಯ ಸೇವೆಯ ಈ ಕೆಳಗೆ ಹೆಸರಿಸಿದ ವರ್ಗದ ಸಿಬ್ಬಂದಿಯವರು:-
1) ನಿರಂತರ ಸೇವೆ ಸಲ್ಲಿಸಿದ ನಿವೃತ್ತಿ ಹೊಂದಿದ ಪಿಂಚಿಣಿದಾರರು.
2) ಮಿಲಿಟರಿ ಸೇವೆಯಿಂದಾಗಿ ಉಂಟಾದ ದೈಹಿಕ ಅಸಾಮರ್ಥ್ಯತೆ ಹೊಂದಿ ಬಿಡುಗಡೆಯಾದ ವ್ಯಕ್ತಿ.
3) ಗ್ಯಾಲಂಟ್ರಿ ಪ್ರಶಸ್ತಿ ವಿಜೇತರು.
ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ಭಾಗ-೫ ೪೦೨ವಿವರಣೆ:- ಕೇಂದ್ರ ಸಶಸ್ತ್ರ ದಳದಲ್ಲಿ ಸೇವೆಯಲ್ಲಿರುವ ವ್ಯಕ್ತಿಗಳು ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಮಾಜಿ ಸೈನಿಕರ ವರ್ಗದಡಿ ಬರುವ ವ್ಯಕ್ತಿಗೆ ನಿರ್ದಿಷ್ಟ ಒಪ್ಪಂದವು ಪೂರ್ಣವಾಗಲು ಒಂದು ವರ್ಷಕ್ಕೆ ಮುನ್ನ ಪುನರ್ ಉದ್ಯೋಗಕ್ಕೆ ಅರ್ಜಿ ಹಾಕಿಕೊಳ್ಳಲು ಹಾಗೂ ಅವರಿಗೆ ಮಾಜಿ ಸೈನಿಕರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಹೊಂದಲು ಅನುಮತಿ ನೀಡಲಾಗಿದೆ. ಆದರೆ ಸಮವಸ್ತ್ರವನ್ನು ತ್ಯಜಿಸಲು ಅನುಮತಿ ನೀಡುವವರೆಗೆ ರಾಜ್ಯ ನಾಗರೀಕ ಸೇವೆ ಅಥವಾ ಹುದ್ದೆಗೆ ನೇಮಕ ಹೊಂದುವಂತಿಲ್ಲ.
(ಅ) ಅಭ್ಯರ್ಥಿಯು ಅಂಗವಿಕಲನಾಗಿದ್ದರೆ 10 ವರ್ಷಗಳು
(ಆ) ಅಭ್ಯರ್ಥಿಯು ಕರ್ನಾಟಕ ರಾಜ್ಯದಲ್ಲಿರುವ ಭಾರತ ಸರ್ಕಾರದ ಜನಗಣತಿ ಸಂಸ್ಥೆಯಲ್ಲಿ ಈಗ ಹುದ್ದೆಯನ್ನು ಹೊಂದಿದ್ದರೆ ಅಥವಾ ಹಿಂದೆ ಹೊಂದಿದ್ದ ಪಕ್ಷದಲ್ಲಿ ಗರಿಷ್ಠ ವಯೋಮಿತಿಯನ್ನು ಅವನು/ಆವಳು ಎಷ್ಟು ವರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವರೋ ಅಥವಾ ಹಿಂದೆ ಸಲ್ಲಿಸಿದ್ದರೋ ಅಷ್ಟು ವರ್ಷಗಳು ಅಥವಾ 5 ವರ್ಷಗಳ ಅವಧಿ ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು
(ಇ) ಅಭ್ಯರ್ಥಿಯು ವಿಧವೆಯಾಗಿದ್ದಲ್ಲಿ 10 ವರ್ಷಗಳು. (ಪ್ರಮಾಣ ಪತ್ರವನ್ನು ತಹಶೀಲ್ದಾರರಿಂದ ಪಡೆದು ಸಲ್ಲಿಸಬೇಕು.
(ಈ) ಅಭ್ಯರ್ಥಿಯು ಜೀತ ಕಾರ್ಮಿಕನಾಗಿದ್ದ ಪಕ್ಷದಲ್ಲಿ 10 ವರ್ಷಗಳು.
ಉಪ ಕಂಡಿಕೆ 4 (ಈ)ರ ಮೇರೆಗೆ ವಯೋಮಿತಿಯ ಸಡಿಲಿಕೆಯನ್ನು ಕೋರುವ ಅಭ್ಯರ್ಥಿಯು ಜೀತ ಕಾರ್ಮಿಕನಾಗಿದ್ದು, ಸದರಿ ಅಧಿನಿಯಮ ಅಥವಾ 1957ರ ಕರ್ನಾಟಕ ಜೀತ ಕಾರ್ಮಿಕ ಪದ್ಧತಿ (ರದ್ದಿಯಾತಿ) ಆದೇಶದ ಮೇರೆಗೆ ಜೀತ ಸಾಲವನ್ನು ಸಂದಾಯ ಮಾಡುವ ಹೊಣೆಯಿಂದ ಬಿಡುಗಡೆಯಾಗಿದ್ದಾನೆಂದು ಪ್ರಮಾಣ ಪತ್ರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ರಿಂದ ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು.
5. ಜಾತಿ / ಮೀಸಲಾತಿ ಪ್ರಮಾಣ ಪತ್ರಗಳು:-
ಮೀಸಲಾತಿ ಕೋರಬಯಸುವ ಅಭ್ಯರ್ಥಿಗಳು ಈ ಕೆಳಗೆ ನಮೂದಿಸಿರುವ ನಮೂನೆಗಳಲ್ಲಿಯೇ ಮೀಸಲಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದ್ದು:-
ಅ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು:- ನಮೂನೆ `ಡಿ'(ಅನುಬಂಧ-2)
ಆ) ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳು:- ನಮೂನೆ `ಇ'(ಅನುಬಂಧ-3)
ಇ) ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ಮೀಸಲಾತಿಗೆ ಸೇರಿದ ಅಭ್ಯರ್ಥಿಗಳು:-ನಮೂನೆ `ಎಫ್'(ಅನುಬಂಧ-4)
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವ ಮೀಸಲಾತಿ ಪ್ರಮಾಣ ಪತ್ರವನ್ನು ಸಂಬಂಧಿತ ತಹಸೀಲ್ದಾರ್ರವರಿಂದ ಪಡೆದಿಟ್ಟುಕೊಂಡಿರತಕ್ಕದ್ದು. ಅಂದರೆ ಹಿಂದುಳಿದ ವರ್ಗಗಳ ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ ಮತ್ತು ಪ್ರವರ್ಗ-3ಬಿ ವರ್ಗದ ಮೀಸಲಾತಿ ಪ್ರಮಾಣ ಪತ್ರಗಳನ್ನು ಪಡೆದ ದಿನಾಂಕದಿಂದ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೆ ಐದು ವರ್ಷಗಳ ಅವಧಿಯಲ್ಲಿರಬೇಕು. ಮೂಲ ದಾಖಲಾತಿ ಪರಿಶೀಲನಾ ಸಮಯದಲ್ಲಿ ತಪ್ಪದೇ ಹಾಜರುಪಡಿಸತಕ್ಕದ್ದು, ತಪ್ಪಿದಲ್ಲಿ ಅಂತಹ ಅಭ್ಯರ್ಥಿಗಳ ಮೀಸಲಾತಿಯನ್ನು ರದ್ದುಪಡಿಸಿ ಅವರ ಅಭ್ಯರ್ಥಿತನವನ್ನು ಅರ್ಹರಾದಲ್ಲಿ ಮಾತ್ರ ಸಾಮಾನ್ಯ ಅರ್ಹತೆಯಡಿಯಲ್ಲಿ ಪರಿಗಣಿಸಲಾಗುವುದು. ಈ ಪ್ರಮಾಣ ಪತ್ರಗಳ ನಮೂನೆಗಳನ್ನು ಈ ಸೂಚನೆಗಳಲ್ಲಿ ತೋರಿಸಲಾಗಿದೆ. ಮೀಸಲಾತಿ ಪ್ರಮಾಣ ಪತ್ರ ಜಾರಿ ಮಾಡಿದ ದಿನಾಂಕವನ್ನು ತಪ್ಪದೇ ಅರ್ಜಿಯಲ್ಲಿ ಸಂಬಂಧಪಟ್ಟ ಅಂಕಣದಲ್ಲಿ ನಮೂದಿಸತಕ್ಕದ್ದು ಹಾಗೂ ಅದೇ ಪ್ರಮಾಣ ಪತ್ರವನ್ನು ಮೂಲ ದಾಖಲಾತಿ ಪರಿಶೀಲನಾ ಸಮಯದಲ್ಲಿ ಹಾಜರುಪಡಿಸತಕ್ಕದ್ದು. ಈ ನಮೂನೆಗಳನ್ನು ಹೊರತುಪಡಿಸಿ ಇತರೆ ಯಾವುದೇ ನಮೂನೆಗಳಲ್ಲಿ ಸಲ್ಲಿಸಲ್ಪಡುವ ಮೀಸಲಾತಿ ಪ್ರಮಾಣ ಪತ್ರಗಳನ್ನು ತಿರಸ್ಕರಿಸಲಾಗುವುದು.
6. ಗ್ರಾಮೀಣ ಅಭ್ಯರ್ಥಿ
ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 96 ಸೆನೆನಿ 2005 ದಿನಾಂಕ 10.08.2005 ರನ್ವಯ ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ರೀತ್ಯಾ 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಮೀಸಲಾತಿಗೆ ಒಳಪಡುವ ಪ್ರದೇಶಗಳಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾಗಿರುವವರು ಈ ಮೀಸಲಾತಿಯನ್ನು ಪಡೆಯಲು ಅರ್ಹರು. ಗ್ರಾಮೀಣ ಅಭ್ಯರ್ಥಿಗಳಿಗೆಂದು ಮೀಸಲಿರಿಸಿದ ಹುದ್ದೆಗಳನ್ನು ಕ್ಲೇಮ್ ಮಾಡುವ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು ನಮೂನೆ-2ನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಯವರ ಮೇಲು ರುಜುವಿನೊಂದಿಗೆ ಹಾಗೂ ಈ ಪ್ರಮಾಣ ಪತ್ರವಲ್ಲದೇ ಮೇಲುಸ್ಥರಕ್ಕೆ ಸೇರಿಲ್ಲದಿರುವ ಬಗ್ಗೆ ನಮೂನೆ-1 ರಲ್ಲಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಂಬಂಧಿತ ತಹಶೀಲ್ದಾರ್ರವರಿಂದ ಪಡೆದಿಟ್ಟುಕೊಂಡಿರತಕ್ಕದ್ದು. ಅಂತೆಯೇ ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ-2ಎ, 2ಬಿ, 3ಎ,ಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ೪೦೩ 3ಬಿ ಮೀಸಲಾತಿಗೆ ಸೇರಿದ ಅಭ್ಯರ್ಥಿಗಳು ಕಡ್ಡಾಯವಾಗಿ ಗ್ರಾಮೀಣ ಮೀಸಲಾತಿಯ ಪ್ರಮಾಣ ಪತ್ರವನ್ನು ನಮೂನೆ-2ರಲ್ಲಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಯವರ ಮೇಲು ರುಜು ಮಾಡಿಸಿ ಪಡೆದಿಟ್ಟುಕೊಂಡಿರತಕ್ಕದ್ದು. ಮೂಲ ದಾಖಲಾತಿ ಪರಿಶೀಲನೆಗೆ ತಪ್ಪದೇ ಹಾಜರುಪಡಿಸತಕ್ಕದ್ದು, ತಪ್ಪಿದಲ್ಲಿ ಅಂತಹ ಅಭ್ಯರ್ಥಿಗಳ ಮೀಸಲಾತಿಯನ್ನು ರದ್ದುಪಡಿಸಲಾಗುವುದು. (ಇತರೆ ನಮೂನೆಗಳಲ್ಲಿ ಸಲ್ಲಿಸಲ್ಪಡುವ ಮೀಸಲಾತಿ ಪ್ರಮಾಣ ಪತ್ರಗಳನ್ನು ತಿರಸ್ಕರಿಸಲಾಗುವುದು ಹಾಗೂ ಅಂತಹವರು ಗ್ರಾಮೀಣ ಮೀಸಲಾತಿಗೆ ಸಹ ಅನರ್ಹರಾಗುತ್ತಾರೆ. ಈ ಪ್ರಮಾಣ ಪತ್ರಗಳ ನಮೂನೆಗಳನ್ನು ಈ ಸೂಚನೆಗಳಿಗೆ ಅನುಬಂಧಿಸಲಾಗಿದೆ) (ಅನುಬಂಧ-5).
ಜನರಲ್ ಮೆರಿಟ್ ಅಭ್ಯರ್ಥಿಗಳು ಮೇಲುಸ್ಥರಕ್ಕೆ ಸೇರಿಲ್ಲವೆಂದು ದೃಡೀಕರಿಸಲು ಗ್ರಾಮೀಣ ಮೀಸಲಾತಿಯನ್ನು ಕೋರಲು ಸಲ್ಲಿಸಬೇಕಾದ ಪ್ರಮಾಣ ಪತ್ರ ನಮೂನೆ-1
7. ಕನ್ನಡ ಮಾಧ್ಯಮ ಅಭ್ಯರ್ಥಿ
ಸರ್ಕಾರಿ ಅಧಿಸೂಚನೆ ಸಂಖ್ಯೆ ಸಿಆಸುಇ 71 ಸೆನೆನಿ 2001 ದಿನಾಂಕ 24-10-2002 ರನ್ವಯ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆಂದು ಮೀಸಲಿರಿಸಿದ ಹುದ್ದೆಗಳನ್ನು ಕ್ಲೇಮು ಮಾಡುವ ಅಭ್ಯರ್ಥಿಗಳು 1ನೇ ತರಗತಿಯಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಹಾಗೂ ಮೊಹರಿನೊಂದಿಗೆ ಪ್ರಮಾಣ ಪತ್ರವನ್ನು ಪಡೆದಿಟ್ಟುಕೊಂಡಿರತಕ್ಕದ್ದು. ಮೂಲ ದಾಖಲಾತಿ ಪರಿಶೀಲನಾ ಸಮಯದಲ್ಲಿ ತಪ್ಪದೇ ಹಾಜರುಪಡಿಸತಕ್ಕದ್ದು, ತಪ್ಪಿದಲ್ಲಿ ಅಂತಹ ಅಭ್ಯರ್ಥಿಗಳ ಮೀಸಲಾತಿಯನ್ನು ರದ್ದುಪಡಿಸಲಾಗುವುದು. (ಈ ಪ್ರಮಾಣ ಪತ್ರದ ನಮೂನೆಯನ್ನು ಈ ಸೂಚನೆಗಳಿಗೆ ಅನುಬಂಧಿಸಲಾಗಿದೆ) (ಅನುಬಂಧ-6).
8. ಅಂಗವಿಕಲ ಅಭ್ಯರ್ಥಿ
ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 50 ಎಸ್ಆರ್ಆರ್ 2000 ದಿನಾಂಕ 03-09-2005 ರಲ್ಲಿ ರಾಜ್ಯ ಸಿವಿಲ್ ಸೇವೆಗಳ ಸಮೂಹ - `ಎ' ಮತ್ತು `ಬಿ' ಗುಂಪಿನ ಹುದ್ದೆಗಳಿಗೆ ಶೇಕಡ 3 ರಷ್ಟು (ಸರ್ಕಾರದ ಅಧಿಸೂಚನೆ ಸಂಖ್ಯೆ ಡಿಪಿಎಆರ್ 21 ಎಸ್ಆರ್ಆರ್ 2008 ದಿನಾಂಕ 03-08- 2009ರ ಅನುಸೂಚಿಯಡಿ ಸೇರ್ಪಡೆ ಮಾಡಲಾಗಿರುವ ಇಲಾಖೆಗಳು) ಮತ್ತು ಸಮೂಹ `ಸಿ' ಗುಂಪಿನ ಹುದ್ದೆಗಳಿಗೆ ಶೇಕಡ 5 ರಷ್ಟು (ಸರ್ಕಾರದ ಅಧಿಸೂಚನೆ ಸಂಖ್ಯೆ ಡಿಪಿಎಆರ್ 52 ಎಸ್ಆರ್ಆರ್ 99 ದಿನಾಂಕ 29-11-2002ರ ಅನುಸೂಚಿಯಡಿ ಸೇರ್ಪಡಿಸಲಾಗಿರುವ ಇಲಾಖೆಗಳು) ಹುದ್ದೆಗಳನ್ನು ಅಂಗವಿಕಲರಿಗೆ ಮೀಸಲಾತಿ ಕಲ್ಪಿಸಿದ್ದು, ಇದರನ್ವಯ ಶೇಕಡ 40 ಕ್ಕಿಂತ ಕಡಿಮೆ ಇಲ್ಲದಂತಹ ಅಂಗವಿಕಲತೆಯುಳ್ಳ ಅಭ್ಯರ್ಥಿಗಳು ಮಾತ್ರ ಈ ಮೀಸಲಾತಿಯನ್ನು ಕೋರಲು ಅರ್ಹರು. ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಸಿಆಸುಇ 115 ಸೆನೆನಿ 2005 ದಿನಾಂಕ 19-11-2005ರಲ್ಲಿ ನಿಗದಿಪಡಿಸಿರುವ ನಮೂನೆಯಲ್ಲಿ ಅಂಗವಿಕಲತೆ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದಿಟ್ಟುಕೊಂಡಿರತಕ್ಕದ್ದು.
ಮೂಲ ದಾಖಲಾತಿ ಪರಿಶೀಲನೆಗೆ ತಪ್ಪದೇ ಹಾಜರುಪಡಿಸತಕ್ಕದ್ದು, ತಪ್ಪಿದಲ್ಲಿ ಅಂತಹ ಅಭ್ಯರ್ಥಿಗಳ ಮೀಸಲಾತಿಯನ್ನು ರದ್ದುಪಡಿಸಲಾಗುವುದು. ಇತರೆ ಯಾವುದೇ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಪಡೆಯಲಾಗಿರುವ ಪ್ರಮಾಣ ಪತ್ರಗಳನ್ನು / ಗುರುತಿನ ಚೀಟಿಯ ಪ್ರತಿಗಳನ್ನು ಪರಿಗಣಿಸಲು ಬರುವುದಿಲ್ಲ. ಈ ಪ್ರಮಾಣ ಪತ್ರದ ನಮೂನೆಯನ್ನು ಈ ಸೂಚನೆಗಳಿಗೆ ಅನುಬಂಧಿಸಲಾಗಿದೆ. ಮೀಸಲಾತಿ ಪ್ರಮಾಣ ಪತ್ರ ಜಾರಿ ಮಾಡಿದ ದಿನಾಂಕವನ್ನು ತಪ್ಪದೇ ಅರ್ಜಿಯಲ್ಲಿ ಸಂಬಂಧಪಟ್ಟ ಅಂಕಣದಲ್ಲಿ ನಮೂದಿಸತಕ್ಕದ್ದು(ಅನುಬಂಧ-7).
9. ಯೋಜನಾ ನಿರಾಶ್ರಿತ ಅಭ್ಯರ್ಥಿ
ಸರ್ಕಾರಿ ಆದೇಶ ಡಿಪಿಎಆರ್ 23 ಎಸ್.ಆರ್.ಆರ್. 99 ದಿ:23-11-00ರಂತೆ ಯೋಜನೆಗಳಿಂದ ನಿರಾಶ್ರಿತರಾದ ಕುಟುಂಬದ ಅಭ್ಯರ್ಥಿಗಳು ಸರ್ಕಾರಿ ಸುತ್ತೋಲೆ ಸಂಖ್ಯೆ: ಸಿಆಸುಇ 44 ಸೇನೇನಿ ದಿನಾಂಕ 27-07-2001 ರಲ್ಲಿ ನಿಗದಿಪಡಿಸಲಾದ ನಮೂನೆಯಲ್ಲಿ ಪ್ರಮಾಣ ಪತ್ರವನ್ನು ಸಂಬಂಧಿಸಿದ ತಹಶಿಲ್ದಾರ್ ರವರಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಡೆದಿಟ್ಟುಕೊಂಡಿರತಕ್ಕದ್ದು (ಅನುಬಂಧ-8) 10. ವಾಸಸ್ಥಳದ ಪ್ರಮಾಣ ಪತ್ರ:-
ಅಭ್ಯರ್ಥಿಯು ಕರ್ನಾಟಕದಲ್ಲಿ 10 ವರ್ಷಕ್ಕೆ ಕಡಿಮೆ ಇಲ್ಲದಂತೆ ವಾಸವಾಗಿರುವ ಬಗ್ಗೆ ಸಂಬಂಧಪಟ್ಟ ತಹಶೀಲ್ದಾರರಿಂದ/ಪ್ರಾಧಿಕಾರದಿಂದ ದೃಡೀಕರಣ ಪ್ರಮಾಣ ಪತ್ರವನ್ನು ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಲಾಗಿರುವ ಕೊನೆಯ ದಿನಾಂಕದೊಳಗೆ ಪಡೆದಿಟ್ಟುಕೊಂಡಿರತಕ್ಕದ್ದು.
11. ವಿಶೇಷ ಸೂಚನೆಗಳು:-
1) ಹುದ್ದೆಗೆ ನಿಗದಿಪಡಿಸಿದ ಶುಲ್ಕ(ಅರ್ಜಿಯನ್ನು ಭರ್ತಿ ಮಾಡಿದ ನಂತರ ಪಾವತಿಸತಕ್ಕದ್ದು)ಪಾವತಿ ರಸೀತಿ(ಚಲನ್ ಪ್ರತಿ).
2) ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ / ವರ್ಗಾವಣೆ ಪ್ರಮಾಣ ಪತ್ರ / ಜನನ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉದ್ದøತ ಭಾಗ/ ಜನನ ಪ್ರಮಾಣ ಪತ್ರ ಅಥವಾ ಇತರ ದಾಖಲೆಗಳನ್ನು ಹೊಂದಿಲ್ಲದ ಅಭ್ಯರ್ಥಿಗಳು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯ ಮುಂದೆ ಸಲ್ಲಿಸಿ ಅವರ ಆದೇಶ ಹೊಂದಿದ ದಾಖಲೆಯನ್ನುಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ಭಾಗ-೫ ೪೦೪ ಸಲ್ಲಿಸತಕ್ಕದ್ದು(ಜಾತಕವನ್ನು ಜನ್ಮ ದಿನಾಂಕವನ್ನು ದೃಡೀಕರಿಸುವ ದಾಖಲೆಯೆಂದು ಪರಿಗಣಿಸಲಾಗುವುದಿಲ್ಲ). ಮೀಸಲಾತಿಗೆ ನಿಗದಿಪಡಿಸಿರುವ ವಯೋಮಿತಿ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಮೀರಿರಬಾರದು.
3) ನಿರಾಪೇಕ್ಷಣಾ ಪತ್ರ (No Objection Certificate) (ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ)
4) ಸೈನಿಕ ಸೇವೆಯಿಂದ ಬಿಡುಗಡೆಯಾದ / ಮುಕ್ತಿ ಹೊಂದಿದ ಬಗೆಗಿನ ಪ್ರಮಾಣ ಪತ್ರ / ಮಾಜಿ ಸೈನಿಕ ಅವಲಂಬಿತರಾಗಿದ್ದಲ್ಲಿ, ಮಾಜಿ ಸೈನಿಕರು ಬಿಡುಗಡೆ ಹೊಂದಿರುವ ಕಾರಣಗಳ ಪ್ರಮಾಣ ಪತ್ರ (ಮಾಜಿ ಸೈನಿಕರು ಸೇವೆಯಲ್ಲಿರುವಾಗ ಮೃತಪಟ್ಟಿದ್ದಲ್ಲಿ ಅಥವಾ ಖಾಯಂ ಆಗಿ ಗಾಯಗೊಂಡಿರುವ ಪ್ರಮಾಣ ಪತ್ರ) (ಮಾಜಿ ಸೈನಿಕ ಮೀಸಲಾತಿ ಕೋರಿದ್ದಲ್ಲಿ)
5) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ, ಮತ್ತು ಪ್ರವರ್ಗ-3ಬಿ ಮೀಸಲಾತಿ ಪ್ರಮಾಣ ಪತ್ರಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಮೂನೆಗಳಲ್ಲಿ (ಮೀಸಲಾತಿ ಕೋರಿದ್ದಲ್ಲಿ)
6) ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ ನಮೂನೆ-1 ಮತ್ತು 2ರಲ್ಲಿ (ಮೀಸಲಾತಿ ಕೋರಿದ್ದಲ್ಲಿ)
7) ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ)
8) ಅಂಗವಿಕಲ ಮೀಸಲಾತಿ ಪ್ರಮಾಣ ಪತ್ರ (ವಯೋಮಿತಿ ಸಡಿಲಿಕೆಗಾಗಿ ಮೀಸಲಾತಿ ಕೋರಿದ್ದಲ್ಲಿ).
9) ವಿಧವೆಯಾಗಿದ್ದಲ್ಲಿ ತಹಶೀಲ್ದಾರಿಂದ ಮರು ಮದುವೆಯಾಗದಿರುವ ಬಗ್ಗೆ ಪ್ರಮಾಣ ಪತ್ರ (ವಯೋಮಿತಿ ಸಡಿಲಿಕೆಗಾಗಿ).
12. ಸೂಚನೆಗಳು:-
(1) ಈಗಾಗಲೇ ಸೇವೆಯಲ್ಲಿರುವ / ಸೇವೆ ಸಲ್ಲಿಸಿದ ಅಭ್ಯರ್ಥಿಗಳು ಅವರುಗಳ ನೇಮಕಾತಿ ಪ್ರಾಧಿಕಾರಿಗಳಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಅನುಮತಿಯನ್ನು ಪಡೆದಿಟ್ಟುಕೊಂಡಿರತಕ್ಕದ್ದು ಹಾಗೂ ವಿವರಗಳನ್ನು ಅರ್ಜಿಯಲ್ಲಿ ನಮೂದಿಸತಕ್ಕದ್ದು.
(2) ಅರ್ಜಿಗಳನ್ನು ಭರ್ತಿ ಮಾಡಲು ಕೊನೆಯ ದಿನಾಂಕವು ಸಾರ್ವತ್ರಿಕ ರಜಾ ದಿನವಾಗಿ ಘೋಷಿಸಲ್ಪಟ್ಟರೆ ಆ ದಿನಾಂಕದ ಮಾರನೆಯ ಕೆಲಸದ ದಿನವು ಅರ್ಜಿಗಳನ್ನು ಭರ್ತಿ ಮಾಡಲು ಕೊನೆಯ ದಿನಾಂಕವಾಗುವುದು.
13. ದುರ್ನಡತೆ:- ಒಬ್ಬ ಅಭ್ಯರ್ಥಿಯು ನಕಲಿ ವ್ಯಕ್ತಿಯಾಗಿರುವನೆಂದು ಅಥವಾ ಖೋಟಾ ದಸ್ತಾವೇಜು ಅಥವಾ ತಿದ್ದಲಾದ ದಸ್ತಾವೇಜುಗಳನ್ನು ಸಲ್ಲಿಸಿರುವನೆಂದು ಅಥವಾ ತಪ್ಪು ಅಥವಾ ಸುಳ್ಳು ಹೇಳಿಕೆ ನೀಡಿರುವನೆಂದು ಅಥವಾ ವಾಸ್ತವಿಕ ಮಾಹಿತಿಯನ್ನು ಮರೆಮಾಚಿರುವನೆಂದು ಅಥವಾ ನೇಮಕಾತಿ ಉದ್ದೇಶಗಳಿಗಾಗಿ ನಡೆಸಲಾಗುವ ವೈದ್ಯಕೀಯ ಪರೀಕ್ಷೆಯಲ್ಲಿ / ಸಂದರ್ಶನದಲ್ಲಿ ಅನುಚಿತ ಮಾರ್ಗವನ್ನು ಅನುಸರಿಸುತ್ತಿರುವನೆಂದು ಅಥವಾ ಅನುಸರಿಸಲು ಪ್ರಯತ್ನಿಸಿರುವನೆಂದು ಅಥವಾ ಅವರ ನೇಮಕಾತಿಯ ಸಂಬಂಧದಲ್ಲಿ ಯಾವುದೇ ಇತರೆ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅವಲಂಬಿಸಿರುವನೆಂದು, ಕಂಡುಬಂದಲ್ಲಿ ಅವನು/ ಅವಳು ಸ್ವತ: ಕ್ರಿಮಿನಲ್ ವ್ಯವಹರಣೆಗಳಿಗೆ ಮತ್ತು ಶಿಸ್ತು ಕ್ರಮಕ್ಕೆ ಒಳಪಡುವುದಲ್ಲದೆ; ಹುದ್ದೆಯ ಸಂದರ್ಶನದಿಂದ / ಆಯ್ಕೆಯಿಂದ ಅಭ್ಯರ್ಥಿತ್ವವನ್ನು ರದ್ದುಪಡಿಸಲಾಗುವುದು.
ಸಹಿ/-
ಸದಸ್ಯ ಕಾರ್ಯದರ್ಶಿ
ರಾಜ್ಯ ಮಟ್ಟದ ಆಯ್ಕೆ ಸಮಿತಿ ಹಾಗೂ
ಮುಖ್ಯ ಆಡಳಿತಾಧಿಕಾರಿಗಳು
ಆರೋಗ್ಯ ಮತ್ತು ಕು.ಕ.ಸೇವೆಗಳು.
ಅನುಬಂಧ-1
ಕುಷ್ಠರೋಗದಿಂದ ಬಳಲಿದ ಗ್ರೇಡ್-2 ಅಂಗವಿಕಲತೆ ಬಗ್ಗೆ ಚಿಕಿತ್ಸೆ ಪಡೆದಿರುವುದನ್ನು ದೃಡೀಕರಿಸಿರುವ ವೈದ್ಯಕೀಯ ಪ್ರಮಾಣ ಪತ್ರ 1. ಅ) ಅಭ್ಯರ್ಥಿಯು ಚಿಕಿತ್ಸೆ ಪಡೆದ ಸಂಸ್ಥೆಯ ಹೆಸರು :
ಆ) ಅಭ್ಯರ್ಥಿಯು ದಾಖಲಾತಿ ಪುಸ್ತಕದಲ್ಲಿ ನೋಂದಾಯಿಸಿರುವ ಸಂಖ್ಯೆ :
ಇ) ಕುಷ್ಠರೋಗ ಇರುವ ಬಗ್ಗೆ ದೃಡಪಟ್ಟ ದಿನಾಂಕ :
ಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ೪೦೫ಈ) ಅಭ್ಯರ್ಥಿಯು ಚಿಕಿತ್ಸೆ ಪಡೆದ ಅವಧಿ :
ರಿಂದ
ಉ) ಗ್ರೇಡ್-2 ಅಂಗವಿಕಲತೆ ಬಗ್ಗೆ ವಿವರ
1) ಕೈ ಮತ್ತು ಕಾಲುಗಳಲ್ಲಿ ಕಣ್ಣಿಗೆ ಕಾಣುವಂತಹ ಅಂಗವಿಕಲತೆ
ಅಥವಾ ಹಾಳಾಗಿರುವಿಕೆ (Damage)
2) ತೀವ್ರ ದೃಷ್ಠಿಕೊರತೆ (ದೃಷ್ಠಿ 6/60 ಕ್ಕಿಂತ ಕಡಿಮೆ, ಆರು
ಮೀಟರ್ಗಳ ದೂರದಿಂದ ಬೆರಳುಗಳನ್ನು ಎಣಿಸಲು
ಸಾಧ್ಯವಾಗುವುದಿಲ್ಲ) lagopthalmus, iridocyclitis
and corneal opacities.
ಜಿಲ್ಲಾ ಕುಷ್ಠರೋಗ ಅಧಿಕಾರಿಯ ಸಹಿ
ಕುಷ್ಠರೋಗ ಚಿಕಿತ್ಸೆ ನೀಡಿದ ಸಂಸ್ಥೆಯ ಮತ್ತು ಮೊಹರು
ವೈದ್ಯಾಧಿಕಾರಿಯ ಸಹಿ ಮತ್ತು ಮೊಹರು Explanation:- Grade 2 means that visible damage or disability in noted
For the eyes, this includes the inability to close the eye fully or obvious redness of the eye (in leprosy, this is typically caused by either a corneal ulcer or by uveitis); visual impairment or blindness also gives a disability grade of 2.
For the hands and feet, visible damage includes wounds and ulcers, as well as deformity due to muscle weakness, such as a foot drop, or a claw hand. Loss of tissue, such as the loss or partial reabsorption of fingers or toes is a late sign in leprosy, but it also gives a disability grade of 2 for that hand or foot.
ಅನುಬಂಧ-2
(ಪ.ಜಾ. / ಪ.ಪಂ.ಕ್ಕೆ ಸೇರಿದ ಆಭ್ಯರ್ಥಿಗಳಿಗೆ ಮಾತ್ರ)
ನಮೂನೆ - ಡಿ
(ನಿಯಮ 3ಎ(2) (3) ನ್ನು ನೋಡಿ)
ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡುವ ಪ್ರಮಾಣ ಪತ್ರಗಳ ನಮೂನೆ.
ಪ್ರಮಾಣ ಪತ್ರ
____________ ರಾಜ್ಯದ / ಕೇಂದ್ರಡಳಿತ ಪ್ರದೇಶದ *____________ಜಿಲ್ಲೆಯ / ವಿಭಾಗದ _______ಗ್ರಾಮ / ಪಟ್ಟಣ *___________ ನಿವಾಸಿಯಾದ ಶ್ರೀ / ಶ್ರೀಮತಿ________ ಎಂಬುವವರ ಮಗ / ಮಗಳಾದ ಶ್ರೀ / ಶ್ರೀಮತಿ ______.ಇವರು ಅನುಸೂಚಿತ ಜಾತಿ / ಅನುಸೂಚಿತ ಬುಡಕಟ್ಟು * ಎಂದು ಮಾನ್ಯ ಮಾಡಲಾಗಿರುವ ಜಾತಿ / ಬುಡಕಟ್ಟಿಗೆ * ಸೇರಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.
• ಸಂವಿಧಾನ (ಅನುಸೂಚಿತ ಜಾತಿಗಳು) ಆದೇಶ, 1950 • ಸಂವಿಧಾನ ( ಅನುಸೂಚಿತ ಬುಡಕಟ್ಟುಗಳು) ಆದೇಶ 1950 • ಸಂವಿಧಾನ (ಅನುಸೂಚಿತ ಜಾತಿ) (ಕೇಂದ್ರಾಡಳಿತ ಪ್ರದೇಶಗಳು) ಆದೇಶ,1950. • ಸಂವಿಧಾನ ( ಅನುಸೂಚಿತ ಬುಡಕಟ್ಟುಗಳು) (ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1951
(ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಪಟ್ಟಿ (ಮಾರ್ಪಾಡು) ಆದೇಶ 1956 , ಮುಂಬಾಯಿ ರಾಜ್ಯ, ಪುನರ್ ರಚನಾ ಅಧಿನಿಯಮ, 1960, ಪಂಜಾಬ್ ರಾಜ್ಯ ಪುನರ್ ರಚನಾ ಅಧಿನಿಯಮ, 1966, ಹಿಮಾಚಲ ಪ್ರದೇಶ ರಾಜ್ಯ ಅಧಿನಿಯಮ 1970 ಮತ್ತು ಈಶಾನ್ಯ ಪ್ರದೇಶಗಳ (ಪುನರ್ ರಚನಾ ಅಧಿನಿಯಮ, 1971 ರ ಮೂಲಕ ತಿದ್ದುಪಡಿಯಾದಂತೆ).
• ಸಂವಿಧಾನ (ಜಮ್ಮು ಮತ್ತು ಕಾಶ್ಮೀರ) ಅನುಸೂಚಿತ ಜಾತಿಗಳ ಆದೇಶ 1956.
ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ಭಾಗ-೫ ೪೦೬• ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ತಿದ್ದುಪಡಿ) ಅಧಿನಿಯಮ, 1976 ರ ಮೂಲಕ ತಿದ್ದುಪಡಿಯಾದಂತೆ ಸಂವಿಧಾನ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ) ಅನುಸೂಚಿತ ಬುಡಕಟ್ಟು ಆದೇಶ 1959.
• ಸಂವಿಧಾನ (ದಾದರ್ ಮತ್ತು ನಗರ ಹವೇಲಿ ) ಅನುಸೂಚಿತ ಜಾತಿಗಳ ಆದೇಶ, 1962. • ಸಂವಿಧಾನ (ಪಾಂಡಿಚೆರಿ) ಅನುಸೂಚಿತ ಜಾತಿಗಳ ಆದೇಶ, 1964. • ಸಂವಿಧಾನ ಅನುಸೂಚಿತ ಬುಡಕಟ್ಟುಗಳ (ಉತ್ತರ ಪ್ರದೇಶ) ಅದೇಶ1967. • ಸಂವಿಧಾನ (ಗೋವಾ , ದಮನ್ ಮತ್ತು ದೀವ್) ಅನುಸೂಚಿತ ಜಾತಿ / ಬುಡಕಟ್ಟುಗಳ ಆದೇಶ,1988. • ಸಂವಿಧಾನ (ನಾಗಲ್ಯಾಂಡ್) ಅನುಸೂಚಿತ ಬುಡಕಟ್ಟುಗಳ ಆದೇಶ 2. ಶ್ರೀ/ ಶ್ರೀಮತಿ ಕುಮಾರಿ *_______________ಮತ್ತು / ಅಥವಾ ಅವನ*/ಅವಳ* ಕುಟುಂಬವು_________ರಾಜ್ಯ/ಕೇಂದ್ರಾಡಳಿತ ಪ್ರದೇಶದ…_________ ಜಿಲ್ಲಾ / ವಿಭಾಗದ *________ ಗ್ರಾಮ / __________ ಪಟ್ಟಣದ ಸಾಮಾನ್ಯ ನಿವಾಸಿ (ಗಳು).
ಸಹಿ:
ತಹಶೀಲ್ದಾರ್
ಸ್ಥಳ :
ಪದನಾಮ
ದಿನಾಂಕ :
ಕಛೇರಿಯ ಮೊಹರಿನೊಂದಿಗೆ
ರಾಜ್ಯ / ಕೇಂದ್ರಾಡಳಿತ ಪ್ರದೇಶ * ಅನ್ವಯವಾಗದಿರುವ ಪದಗಳನ್ನು ದಯವಿಟ್ಟು ಬಿಟ್ಟುಬಿಡಿ / ಹೊಡೆದು ಹಾಕಿ,
ಸೂಚನೆ: - ಇಲ್ಲಿ ಉಪಯೋಗಿಸಿದ " ಸಾಮಾನ್ಯ ನಿವಾಸಿಗಳು" ಎಂಬ ಪದಾವಳಿಯು ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1950 ರ 20 ನೇ ಪ್ರಕರಣದಲ್ಲಿರುವ ಅರ್ಥವನ್ನೇ ಹೊಂದಿರುತ್ತವೆ.
ಭಾರತ ಸರ್ಕಾರದ ಪತ್ರ ಸಂಖ್ಯೆ : ಬಿಸಿ 12028/2/78 ಎಸ್ ಸಿಟಿ ಗೃಹ ಮಂತ್ರಾಲಯದ ಅನುಸಾರವಾಗಿ, ಅಂಥ ಪ್ರಮಾಣ ಪತ್ರಗಳನ್ನು ನೀಡಲು ಸಕ್ಷಮವಾಗಿರುವುದಕ್ಕಾಗಿ, ಭಾರತ ಸರ್ಕಾರದ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) ಪತ್ರ ಸಂಖ್ಯೆ: 13/02/1974 ಇಎಸ್ ಟಿ) ದಿನಾಂಕ 5ನೇ ಆಗಸ್ಟ್ 1975 ರಲ್ಲಿ ನಮೂದಿಸಿದ ಪ್ರಾಧಿಕಾರಿಯು, ರಾಷ್ಟ್ರಪತಿಗಳು ಸಂಬಂಧಪಟ್ಟ ಆದೇಶದ ಅಧಿಸೂಚನೆಯನ್ನು ಹೊರಡಿಸಿದ ಸಮಯದಲ್ಲಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯು, ತನ್ನ ಖಾಯಂ ವಾಸ ಸ್ಥಳವನ್ನು ಹೊಂದಿದ್ದ ಸ್ಥಳಕ್ಕೆ ಸೇರಿದವರೊಬ್ಬರಾಗಿರತಕ್ಕದ್ದು, ಅದೇ ರೀತಿಯಲ್ಲಿ, ಒಂದು ತಾಲ್ಲೂಕಿನ ರೆವಿನ್ಯೂ ಪ್ರಾಧಿಕಾರಿಯು ಇನ್ನೊಂದು ತಾಲ್ಲೂಕಿಗೆ ಸೇರಿದ ವ್ಯಕ್ತಿಗಳಿಗೆ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ನೀಡಲು ಸಕ್ಷಮ ಪ್ರಾಧಿಕಾರಿಯಾಗುವುದಿಲ್ಲ.
ಅನುಬಂಧ-3
(ಪ್ರವರ್ಗ - 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)
ನಮೂನೆ - ಇ
(ನಿಯಮ 3ಎ (2) (3) ನ್ನು ನೋಡಿ)
ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡುವ ಪ್ರಮಾಣ ಪತ್ರ
_____________ ಗ್ರಾಮ/ಪಟ್ಟಣ/ನಗರದ ನಿವಾಸಿಯಾದ ಶ್ರೀ./ಶ್ರೀಮತಿ _____________________________________ ಇವರ ಮಗ / ಮಗಳು / ಪತಿ / ಪತ್ನಿಯಾದ ಶ್ರೀ/ ಶ್ರೀಮತಿ ________________ ಇವರು ಹಿಂದುಳಿದ ವರ್ಗಗಳ (ಪ್ರವರ್ಗ) ………………………………………
ಜಾತಿಯ ______________ ಉಪ ಜಾತಿಗೆ ಸೇರಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.
ಸ್ಥಳ :
ತಹಸೀಲ್ದಾರರು
ದಿನಾಂಕ :
______________.ತಾಲ್ಲೂಕು
ಕಛೇರಿಯ ಮೊಹರು.
ಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ೪೦೭ಅನುಬಂಧ-4
(ಪ್ರವರ್ಗ -2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)
ನಮೂನೆ - ಎಫ್
(ನಿಯಮ 3ಎ (2) (3) ನ್ನು ನೋಡಿ)
ಪ್ರವರ್ಗ - 1 ರ ಹೊರತಾಗಿ, ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರ
__________________.ರಲ್ಲಿ ವಾಸವಾಗಿರುವ ಶ್ರೀ / ಶ್ರೀಮತಿ__________ಇವರ ಮಗ/ಮಗಳು/ಪತಿ/ಪತ್ನಿಯಾದ, ಶ್ರೀ/ ಶ್ರೀಮತಿ / ಕುಮಾರಿ _________________ ಇವರು ಮತ್ತು ಆತನ / ಅವಳ ತಂದೆ ತಾಯಿ/ಪೋಷಕರು/ ಪತ್ನಿ / ಪತಿಯು, ಸರ್ಕಾರಿ ಆದೇಶಗಳ ಸಂಖ್ಯೆ :
ಎಸ್ ಡಬ್ಲ್ಯೂಡಿ 225 ಬಿಸಿಎ 2000 ದಿನಾಂಕ : 30-03-2002 ರಲ್ಲಿ ನಿರ್ದಿಷ್ಟ ಪಡಿಸಿದ ಮೇಲುಸ್ತರದ (ಕ್ರೀಮಿ ಲೇಯರ್) ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು :
ಅಭ್ಯರ್ಥಿಯಾಗಲಿ ಅಥವಾ ಆತನ / ಆಕೆಯ ತಂದೆ ತಾಯಿ/ ಪೋಷಕರಾಗಲಿ / ಪತ್ನಿ/ಪತಿಯಾಗಲಿ, ಸರ್ಕಾರದ ಸೇವೆಯಲ್ಲಿ 1ನೇ ದರ್ಜೆಯ ಅಥವಾ 2ನೇ ದರ್ಜೆಯ ಅಧಿಕಾರಿಯಾಗಿಲ್ಲವೆಂದು :
ಅಥವಾ
ಸಾರ್ವಜನಿಕ ವಲಯ ಉದ್ಯಮದಲ್ಲಿ ತತ್ಸಮಾನದ ಹುದ್ದೆಯನ್ನು ಹೊಂದಿರುವುದಿಲ್ಲ:
ಅಥವಾ
ಖಾಸಗಿ ನಿಯೋಜಕರ ಕೈಕೆಳಗೆ , 2ನೇ ದರ್ಜೆಯ ಅಧಿಕಾರಿಯ ಸಂಬಳಕ್ಕಿಂತ ( ವೇತನ ಶ್ರೇಣಿ ರೂ 6000-12000/- ಪ್ರಾರಂಭಿಕ ಹಂತ) ಕಡಿಮೆಯಿಲ್ಲದ ಸಂಬಳವನ್ನು ಪಡೆಯುವ ನೌಕರನಾಗಿಲ್ಲವೆಂದು :
ಅಥವಾ
ಆತನ / ಆಕೆಯ ತಂದೆ ತಾಯಿ / ಪೋಷಕರು / ಪತ್ನಿ/ ಪತಿಯ ಆದಾಯವೂ ಎರಡು ಲಕ್ಷ ಮೀರಿರುವುದಿಲ್ಲವೆಂದು :
ಅಥವಾ
ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961 ರಲ್ಲಿ ನಿಗದಿಪಡಿಸಿರುವಂತೆ ಆತನ / ಆಕೆಯ ತಂದೆ ತಾಯಿ / ಪೋಷಕರು / ಪತ್ನಿ / ಪತಿಯು ಮಾರಾಟ ತೆರಿಗೆದಾರನಲ್ಲ ಅಥವಾ ಆತನ / ಆಕೆಯ ತಂದೆ ತಾಯಿ / ಪೋಷಕ/ಪತ್ನಿ/ಪತಿಯು ಅಥವಾ ಇವರಿಬ್ಬರೂ 10 ಯುನಿಟ್ ಗಿಂತ ಹೆಚ್ಚಿನ ಕೃಷಿ ಭೂಮಿ ಅಥವಾ 25 ಎಕರೆಗಳಿಗಿಂತ ಹೆಚ್ಚಿನ ಪ್ಲಾಂಟೇಷನ್ ಭೂಮಿಯನ್ನು ಹೊಂದಿರುವುದಿಲ್ಲವೆಂದು ಪ್ರಮಾಣೀಕರಿಸಲಾಗಿದೆ.
ಕುಮಾರಿ __________________ ಇವರು ____________…..ಜಾತಿಗೆ ________ಸೇರಿದ ಉಪಜಾತಿಯವರಾಗಿದ್ದು, ಸರ್ಕಾರಿ ಆದೇಶ ಸಂಖ್ಯೆ :
ಎಸ್ಡಬ್ಲೂಡಿ 225 ಬಿಸಿಎ 2000 ದಿನಾಂಕ : 30-03-2002 ರ ಅನ್ವಯ ಹಿಂದುಳಿದ ವರ್ಗಗಳ ಪ್ರವರ್ಗ__________ ..(2ಎ, 2ಬಿ, 3ಎ, 3ಬಿ) ಸೇರಿರುತ್ತಾರೆ.
ಸ್ಥಳ :
ತಹಸೀಲ್ದಾರರು
ದಿನಾಂಕ :
______________ ತಾಲ್ಲೂಕು
ಕಛೇರಿಯ ಮೊಹರು.
ಅನುಬಂಧ-5
ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 96 ಸೇನನಿ 2005, ದಿನಾಂಕ 10-08-2005
ನಮೂನೆ-2
ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ
ಶ್ರೀ/ಶ್ರೀಮತಿ____________________ರವರ ಮಗ/ಮಗಳು/ಪತಿ/ಪತ್ನಿ ಶ್ರೀ/ಶ್ರೀಮತಿ ಕುಮಾರಿ ____________ ಜಿಲ್ಲೆ ___________________ತಾಲ್ಲೂಕು _______________ಗ್ರಾಮದಲ್ಲಿ ___________ವಾಸವಾಗಿರುವ ಇವರು ಒಂದನೇ ತರಗತಿಯಿಂದ ___________ ತರಗತಿಯವರೆಗೆ ______ ಜಿಲ್ಲೆ _____ ತಾಲ್ಲೂಕು _________ ಪಟ್ಟಣ ಶಾಲೆಯಲ್ಲಿ ವ್ಯಾಸಂಗ ಮಾಡಿ ________ ವರ್ಷಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ಭಾಗ-೫ ೪೦೮ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಈ ಶಾಲೆಯು ಅಭ್ಯರ್ಥಿಯು ವ್ಯಾಸಂಗ ಮಾಡಿದ ಅವಧಿಯಲ್ಲಿ ಕರ್ನಾಟಕದ ಪೌರನಿಗಮಗಳ ಅಧಿನಿಯಮ, 1976 ಅಥವಾ ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಒಂದು ದೊಡ್ಡ ನಗರ ಪ್ರದೇಶ, ಸಣ್ಣ ನಗರ ಪ್ರದೇಶ ಅಥವಾ ಪರಿವರ್ತನೆ ಹಂತದಲ್ಲಿರುವ ಪ್ರದೇಶಗಳ ಹೊರತಾದ ಪ್ರದೇಶದಲ್ಲಿತ್ತು.
ಸಹಿ
ಮುಖ್ಯೋಪಾಧ್ಯಾಯರು.
ಮೇಲುರುಜು
ಕ್ಷೇತ್ರ ಶಿಕ್ಷಣ ಅಧಿಕಾರಿ
ಅನುಬಂಧ-6
ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ
ಶ್ರೀ/ಶ್ರೀಮತಿ_________________________________________ ರವರ ಮಗ/ಮಗಳು/ಪತ್ನಿ ಶ್ರೀ/ ಶ್ರೀಮತಿ ಕುಮಾರಿ _______________________ಜಿಲ್ಲೆ _________________ ತಾಲ್ಲೂಕು ______ ಗ್ರಾಮದಲ್ಲಿ _________________ವಾಸವಾಗಿರುವ ಇವರು _________________ತರಗತಿಯಿಂದ _______________ತರಗತಿಯವರೆಗೆ ______________ಶೈಕ್ಷಣಿಕ ವರ್ಷದಿಂದ __________ ಶೈಕ್ಷಣಿಕ ವರ್ಷದವರೆಗೆ _____________________ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುತ್ತಾರೆಂದೂ ಪ್ರಮಾಣೀಕರಿಸಲಾಗಿದೆ.
ಮುಖ್ಯೋಪಾಧ್ಯಾರ ಸಹಿ ಮತ್ತು ಸಂಸ್ಥೆಯ ಮೊಹರು.
ದಿನಾಂಕ: _____________
ಸ್ಥಳ :_______________
ಸೂಚನೆ : - ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದಲ್ಲಿ ಶಾಲಾವಾರು ಪ್ರತ್ಯೇಕ ಕನ್ನಡ ಮಾಧ್ಯಮ ವ್ಯಾಸಂಗ
ಪ್ರಮಾಣ ಪತ್ರ ಸಲ್ಲಿಸಬೇಕು.
ಅನುಬಂಧ-7
ಕರ್ನಾಟಕ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಸಿಆಸುಇ 115 ಸೆನೆನಿ 2005, ದಿನಾಂಕ 19-11-2005
CERTIFICATE FOR THE PERSONS WITH DISABILITIES
This is to certify that Sri/ Smt / Kum………………………………………… Son / wife/ Daughter of Shri ............................... Age............
old, male / female, Registration No................ is a case of ...................................................... He / She is physically disabled / visual disabled / speech & hearing disabled and has ........ % ......... percent) permanent(Physical impairment/ visual impairment speech & hearing impairment) in relation to his / her....... ..........................
Note:
1. This condition is progressive / non progressive likely to improve / not likely to improve.
2. Re-assessment is not recommended / is recommended after a period of ................ months / years.
* Strike out which is not applicable
Recent attested
Photograph showing the disability
affixed here)
Sd/ DOCTOR (Seal)
Sd/ DOCTOR (Seal)
Sd/ DOCTOR (Seal)
Countersigned by the
Medical Superintendent CMO Head of
Hospital (with seal)
Signature/Thumb impression
of the disabled person.
ಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ೪೦೯Explanation:-As per Notification No. DPAR 50 SRR 2000 dated 03-09-2005 " Physically Handicapped candidates " or " person with disability " means a person suffering from not less than forty percent of any of the following disabilities :- (1) Blindness (2) Low Vision (3) Hearing impairment (4) Locomotor disability (5) Leprosy cured (6) Mental retardation (7) Mental illness.
(1) Blindness refers to a condition where a person suffers from any of the following conditions, namely:- (a)Total absence of sight; or (b) Visual acuity not exceeding 6/60 or 20/200 (Snellen) in the better eye with correcting lenses; or (c) limitation of the field of vision subtending an angle of 20 degree or worse;
(2) Person with low vision means a person with impairment of visual functioning even after treatment or standard refractive correction, but who uses or is potentially capable of using vision for the planning or execution of a task with appropriate assistive device;
(3)" Hearing impairment" means loss of sixty decibels or more in the better ear in the conversational range of frequencies.
(4) "Locomotor disability" means disability of the bones, joints or muscles leading to substantial restriction of the movement of the limbs or any form of cerebral palsy.
(5) Leprosy cured:-means any person who has been cured of Leprosy, but is suffering from, (i) Loss of sensation in hands or feet as well as loss of sensation & paresis in the eye & eyelid, but with no manifest deformity;(ii)manifest deformity & paresis but having sufficient mobility in their hands & feet to enable them to engage in normal economic activity; (iii) extreme physical deformity as well as advanced age which prevents him from undertaking any gainful occupation; and the expressesion " Leprosy cured " shall be construed accordingly;
(6) Mental Retardation:-means a condition of arrested or incomplete development of mind of a person who is specially characterised by sub normality of intelligence;
(7) Mental Illness:- means any mental disorder other than mental retardation.
ಅನುಬಂಧ-8
ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 23 ಎಸ್ಆರ್ಆರ್ 99, ದಿನಾಂಕ: 23-11-2000
ನಮೂನೆ
ಯೋಜನೆಗಳಿಂದ ನಿರ್ವಸಿತರಾದ ಕುಟುಂಬದ ಅಭ್ಯರ್ಥಿ
ಪ್ರಮಾಣ ಪತ್ರ
ಶ್ರೀ/ಶ್ರೀಮತಿ -------------- ಎಂಬುವವರ ಮಗ/ಮಗಳು/ಪತಿ/ಪತ್ನಿ ಶ್ರೀ/ಶ್ರೀಮತಿ/ ಕುಮಾರಿ ------ ಜಿಲ್ಲೆ -------------
ತಾಲ್ಲೂಕು --------- ಗ್ರಾಮದಲ್ಲಿ --------- ವಾಸವಾಗಿರುವ ಇವರು : ಇವರ ಕುಟುಂಬದವರು ಅವಲಂಬಿತರಾಗಿದ್ದ ಈ ಕೆಳಕಂಡ ಆಸ್ತಿಯನ್ನು --------------- ಯೋಜನೆಗಾಗಿ ----------------ಇಸವಿ----------ಯಂದು ಸ್ವಾಧೀನಪಡಿಸಿಕೊಳ್ಳಲಾಗಿದೆ. ಎಂದು ಈ ಮೂಲಕ ಪ್ರಮಾಣೀಕರಿಸಿದೆ:-
• ವಾಸಿಸುವ ಮನೆ ಮತ್ತು ತಾವು ಅವಲಂಬಿತರಾಗಿದ್ದ ಅವರ ಕೃಷಿ ಭೂಮಿಯ ಅರ್ಧದಷ್ಟು: • ಯೋಜನೆಗೆ ಮೊದಲು ಭೂಮಿಯನ್ನು ಹೊಂದಿರದೆ : ಯೋಜನೆಯಿಂದ ತಾವು ವಾಸಿಸುವ ಮನೆ: • ತಾವು ಅವಲಂಭಿತರಾಗಿದ್ದ ತಮ್ಮ ಕೃಷಿ ಭೂಮಿಯ ಅರ್ಧದಷ್ಟು ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿ: • ಇತರ ಇನ್ನಾವುದೇ ಪ್ರಕರಣದಲ್ಲಿ ಯೋಜನೆಯಿಂದ ನಿರ್ವಸಿತರಾದವರು
ತಹಸೀಲ್ದಾರ್
--------ತಾಲ್ಲೂಕು
(ಅನ್ವಯವಾಗುವ ಐಟಂನ್ನು ಮಾತ್ರ ಪ್ರಮಾಣ ಪತ್ರದಲ್ಲಿ ನಮೂದಿಸತಕ್ಕದ್ದು.)ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ಭಾಗ-೫ ೪೧೦
ನಮೂನೆ - 1
ಜನರಲ್ ಮೆರಿಟ್ ಅಭ್ಯರ್ಥಿಗಳು ಮೇಲುಸ್ತರಕ್ಕೆ ಸೇರಿಲ್ಲವೆಂದು, ದೃಡೀಕರಿಸಿ ಗ್ರಾಮೀಣ ಮೀಸಲಾತಿಯನ್ನು ಕೋರಲು ಸಲ್ಲಿಸಬೇಕಾದ
ಪ್ರಮಾಣ ಪತ್ರ.
(ಜನರಲ್ ಮೆರಿಟ್ ಅಭ್ಯರ್ಥಿಗಳು ಭರ್ತಿ ಮಾಡಬೇಕಾದ ನಮೂನೆ)
ಇವರಿಗೆ:
ತಹಸೀಲ್ದಾರರು
_________ ತಾಲ್ಲೂಕು
_________ ಜಿಲ್ಲೆ.
ಮಾನ್ಯರೆ,
ಶ್ರೀ / ಶ್ರೀಮತಿ ___________________ ಎಂಬುವವರ ಮಗ/ಮಗಳು/ಪತಿ/ಪತ್ನಿ _______ ಆದ ನಾನು ಮೇಲುಸ್ತರದಲ್ಲಿ (creamy layer) ಬರುವುದಿಲ್ಲವೆಂದು ನೇರ ನೇಮಕಾತಿಯಲ್ಲಿ ಗ್ರಾಮೀಣ ಅಭ್ಯರ್ಥಿ ಮೀಸಲಾತಿಯನ್ನು ಪಡೆಯುವುದಕ್ಕಾಗಿ ಪ್ರಮಾಣ ಪತ್ರವನ್ನು ಪಡೆಯಲು ತಮ್ಮಲ್ಲಿ ಈ ಕೆಳಕಂಡ ಮಾಹಿತಿಗಳನ್ನು ಒದಗಿಸುತ್ತಾ ಕೋರುತ್ತೇನೆ.
1. ಅಭ್ಯರ್ಥಿಯ ಹೆಸರು ಮತ್ತು ಉದ್ಯೋಗ :
2. ಅಭ್ಯರ್ಥಿಯ ಸ್ವಂತ ಸ್ಥಳ ಗ್ರಾಮ :
ತಾಲ್ಲೂಕು :
ಜಿಲ್ಲೆ :
3. ಅಭ್ಯರ್ಥಿಯು ಹುಟ್ಟಿದ ದಿನಾಂಕ ವಯಸ್ಸು ಮತ್ತು ಹುಟ್ಟಿದ ಸ್ಥಳ :
1. ಅಭ್ಯರ್ಥಿಯ ತಂದೆ/ತಾಯಿ/ ಪೋಷಕರ ಪತಿಯ/
ಪತ್ನಿಯ ಹೆಸರು ಮತ್ತು ಉದ್ಯೋಗ:
(ಉದ್ಯೋಗವು ಸರ್ಕಾರಿ/ ಅರೆ ಸರ್ಕಾರಿ/ ಸಾರ್ವಜನಿಕ ಉದ್ಯಮ / ಖಾಸಗಿ)
2. ಅಭ್ಯರ್ಥಿಯ ಪ್ರಸ್ತುತ ವಿಳಾಸ
(ಸ್ಪಷ್ಟವಾಗಿ ನಮೂದಿಸುವುದು)
3. ಅಭ್ಯರ್ಥಿಯ ಖಾಯಂ ವಿಳಾಸ
4. ಅಭ್ಯರ್ಥಿಯ ಶಾಲಾ ಶಿಕ್ಷಣದ ವ್ಯಾಸಂಗ ಮಾಡಿದ ಶಾಲೆಗಳ ವಿವರಗಳು
ಪ್ರಾಥಮಿಕ
ಮಾಧ್ಯಮಿಕ
ಪ್ರೌಡ
5. ಅಭ್ಯರ್ಥಿಯ ಹಾಗೂ ಅಭ್ಯರ್ಥಿಯ ತಂದೆ/ತಾಯಿ/
ಪೋಷಕರ (ತಂದೆ/ತಾಯಿ ಜೀವಂತವಿಲ್ಲದಿದ್ದರೆ) ಇವರ
ಒಟ್ಟು ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ:
i) ವೇತನ ಶ್ರೇಣಿ
ii) ಜಮೀನಿನ ವಿವರ
iii) ಇತರ ಮೂಲಗಳು
6. ಆದಾಯ ತೆರಿಗೆ ಪಾವತಿದಾರರೇ?
7. ಸಂಪತ್ತು ತೆರಿಗೆ ಪಾವತಿದಾರರೇ?
8. ಮಾರಾಟ ತೆರಿಗೆ ಪಾವತಿದಾರರೇ?
ಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ೪೧೧ಪ್ರಮಾಣೀಕೃತ ಘೋಷಣೆ
ಈ ಮೇಲೆ ನನ್ನಿಂದ ಒದಗಿಸಿದ ಮಾಹಿತಿ / ವಿವರಣೆಯು ನಾನು ತಿಳಿದಿರುವಷ್ಟರ ಮಟ್ಟಿಗೆ ಸತ್ಯವೆಂದು ಶ್ರದ್ಧಾಪೂರ್ವಕವಾಗಿ ದೃಡೀಕರಿಸುತ್ತೇನೆ ಮತ್ತು ಘೋಷಿಸುತ್ತೇನೆ.
ತಮ್ಮ ವಿಧೇಯ, ಸ್ಥಳ:
ದಿನಾಂಕ: (ಅಭ್ಯರ್ಥಿಯ ಸಹಿ)
ಮೇಲೆ ಒದಗಿಸಲಾದ ಮಾಹಿತಿಗಳು ಸತ್ಯವಾಗಿರುತ್ತದೆ ಎಂದು ಪ್ರಮಾಣೀಕರಿಸುತ್ತಾ, ಈ ಮಾಹಿತಿಗಳು ಅಸತ್ಯವೆಂದು ದೃಡಪಟ್ಟಲ್ಲಿ ಅಪರಾಧ ವಿಚಾರಣೆಗೆ ಬದ್ಧನಾಗಿರುತ್ತೇನೆ.
ತಂದೆ/ತಾಯಿ/ಪೋಷಕರ ಸಹಿ.
(ತಂದೆ/ತಾಯಿ ಜೀವಂತವಿಲ್ಲದಿದ್ದರೆ)
(ಹೆಂಡತಿ/ ಗಂಡ/ ಇವರ ಸಹಿ)
ಸ್ಥಳೀಯ ಇಬ್ಬರು ಸಾಕ್ಷಿದಾರರು :
ಅಭ್ಯರ್ಥಿಯು ಮತ್ತು ತಂದೆ/ತಾಯಿ/ಪೋಷಕರು/ಪತಿ/ಪತ್ನಿ ಇವರನ್ನು ಹಾಗೂ ಇವರ ಸಹಿಯನ್ನು ಗುರುತಿಸುತ್ತೇವೆ.
ಸಾಕ್ಷಿದಾರರ ಸಹಿ:
1)
2)
(ಪೂರ್ಣ ವಿಳಾಸದೊಂದಿಗೆ)
ಪರಿಶೀಲನಾ ಪ್ರಮಾಣ ಪತ್ರ
1. ಶ್ರೀ / ಶ್ರೀಮತಿ ___________________ ಎಂಬುವವರ ಮಗ/ಮಗಳು/ಪತಿ/ಪತ್ನಿ ಶ್ರೀ/ ಶ್ರೀಮತಿ / ಕುಮಾರಿ_______ ಎಂಬುವವರು ಕರ್ನಾಟಕ ರಾಜ್ಯದ __________ ಜಿಲ್ಲೆಯ ವಿಭಾಗ ____________________ ಗ್ರಾಮ/ ಪಟ್ಟಣ / ನಗರದಲ್ಲಿ ಸಾಮಾನ್ಯ ನಿವಾಸಿಯಾಗಿದ್ದಾರೆಂದು ಮತ್ತು ಇವರು ಜನರಲ್ ಮೆರಿಟ್ ವರ್ಗಕ್ಕೆ ಸೇರಿದವರಾಗಿರುತ್ತಾರೆ.
ಶ್ರೀ / ಶ್ರೀಮತಿ / ಕುಮಾರಿ__________ ಇವರ ತಂದೆ /ತಾಯಿ/ಪೋಷಕರು ಸರ್ಕಾರಿ ಆದೇಶ ಸಂಖ್ಯೆ:ಎಸ್ಡಬ್ಲೂಡಿ 251 ಬಿಸಿಎ 94, ಬೆಂಗಳೂರು, ದಿನಾಂಕ: 31-01-1995 ರನ್ವಯ ಜನರಲ್ ಮೆರಿಟ್ ವರ್ಗದ ಮೇಲುಸ್ತರದಲ್ಲಿ (creamy layer) ಬರುವುದಿಲ್ಲವೆಂದು ಪ್ರಮಾಣೀಕರಿಸಲಾಗಿದೆ.
ಸ್ಥಳ : ತಹಸೀಲ್ದಾರರು
ದಿನಾಂಕ: _______ ತಾಲ್ಲೂಕು
ಕಛೇರಿಯ ಮೊಹರು.
ಸೂಚನೆ-1: ಇದರಲ್ಲಿ ಉಪಯೋಗಿಸಲಾದ `` ಸಾಮಾನ್ಯ ನಿವಾಸಿ `` ಎಂಬ ಪದವು 1950 ರ ಜನತಾ ಪ್ರಾತಿನಿದ್ಯ ಕಾಯಿದೆಯ 20ನೇ ಅನುಚ್ಛೇದದಲ್ಲಿನ ಅರ್ಥವನ್ನು ಹೊಂದಿರುತ್ತದೆ.
ಸೂಚನೆ 2: ಪರಿಶೀಲನಾ ಪ್ರಮಾಣ ಪತ್ರ ನೀಡುವ ಅಧಿಕೃತ ಅಧಿಕಾರಿಯು ಸರ್ಕಾರಿ ಆದೇಶ ಸಂಖ್ಯೆ: ಎಸ್ಡಬ್ಲೂಡಿ 251 ಬಿಸಿಎ 94, ಬೆಂಗಳೂರು, ದಿನಾಂಕ:31-01-1995 ರನ್ವಯ ಮೇಲುಸ್ತರ (creamy layer)
ಪಿ.ಡಿ. 36
ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ಭಾಗ-೫ ೪೧೨ಕರ್ನಾಟಕ ಲೋಕಸೇವಾ ಆಯೋಗದ ನಡವಳಿಗಳು
ವಿಷಯ: 2011ರ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯಲ್ಲಿ ನೋಂದಣಿ ಸಂಖ್ಯೆ. 44335ರ ಅಭ್ಯರ್ಥಿ ಶ್ರೀಮತಿ ಮಂಜಮ್ಮ ಆರ್. ಇವರು ಅಕೌಂಟ್ಸ್ ಹೈಯರ್ ಪತ್ರಿಕೆ-2ರ ಓ.ಎಂ.ಆರ್.
ಉತ್ತರಹಾಳೆಯಲ್ಲಿ ಪ್ರಶ್ನೆಪತ್ರಿಕೆ ಶ್ರೇಣಿಯನ್ನು ನಮೂದಿಸದಿರುವ ಕಾರಣ ಈ ಓ.ಎಂ.ಆರ್.
ಉತ್ತರಹಾಳೆಯನ್ನು ತಿರಸ್ಕರಿಸುವ ಬಗ್ಗೆ.
ಓದಲಾಗಿದೆ:-
1. ಶ್ರೀಮತಿ ಮಂಜಮ್ಮ ಆರ್. ಇವರು ಸದರಿ ಪರೀಕ್ಷೆಗೆ ಸಲ್ಲಿಸಿರುವ ಅರ್ಜಿಯ ಪ್ರತಿ.
2. ಸದರಿಯವರು ಪರೀಕ್ಷೆಗೆ ಹಾಜರಾದ ಬಗ್ಗೆ ಅಭ್ಯರ್ಥಿಯ ವಿವರಗಳನ್ನು ಪಡೆದಿರುವ ನಾಮಿನಲ್ ರೋಲ್ ಹಾಗೂ ಹಾಜರಾತಿ ಹಾಳೆಯ ಪ್ರತಿ.
3. ಸದರಿಯವರು ಉತ್ತರಿಸಿರುವ ಅಕೌಂಟ್ಸ್ ಹೈಯರ್ ಪತ್ರಿಕೆ-2ರ ಓ.ಎಂ.ಆರ್. ಉತ್ತರಹಾಳೆಯ ಪ್ರತಿ.
ಪ್ರಸ್ತಾವನೆ:-
ಶ್ರೀಮತಿ ಮಂಜಮ್ಮ ಆರ್. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಡಗೂರು ಗ್ರಾಮ ಪಂಚಾಯಿತಿ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ, ಇವರು 2011ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗೆ ಮೇಲೆ ಓದಲಾದ ಉಲ್ಲೇಖ-1ರಲ್ಲಿ ತಿಳಿಸಿರುವ ಅರ್ಜಿಯನ್ನು ಸಲ್ಲಿಸಿರುತ್ತಾರೆ.
ಸದರಿ ಅರ್ಜಿಯನ್ನು ಪರಿಗಣಿಸಿರುವ ಆಯೋಗವು ಅರ್ಜಿಯಲ್ಲಿ ನಮೂದಿಸಿರುವ ವಿಷಯಗಳ ಪರೀಕ್ಷೆಗಳನ್ನು ತೆಗೆದುಕೊಳ್ಳಲು ನೋಂದಣಿ ಸಂಖ್ಯೆ. 44335ರ ಪ್ರವೇಶ ಪತ್ರವನ್ನು ಜಾರಿ ಮಾಡಿರುತ್ತದೆ. ಸದರಿ ನೋಂದಣಿ ಸಂಖ್ಯೆಯಡಿ ಈ ಅಭ್ಯರ್ಥಿ ಅಕೌಂಟ್ಸ್ ಹೈಯರ್ ಪತ್ರಿಕೆ-2ರ ಪರೀಕ್ಷೆಗೆ ಹಾಜರಾಗಿರುತ್ತಾರೆ. ಈ ಸಂಬಂಧ ಮೇಲೆ ಓದಲಾದ ಉಲ್ಲೇಖ-2ರ ನಾಮಿನಲ್ರೋಲ್ ಹಾಗೂ ಹಾಜರಾತಿ ಹಾಳೆಯಲ್ಲಿ ವಿವರಗಳನ್ನು ಪಡೆಯಲಾಗಿದೆ. ಉಲ್ಲೇಖ-3ರಲ್ಲಿ ತಿಳಿಸಿರುವ ಓ.ಎಂ.ಆರ್. ಉತ್ತರಹಾಳೆಯಲ್ಲಿ ಈ ಅಭ್ಯರ್ಥಿ ಅಕೌಂಟ್ಸ್ ಹೈಯರ್ ಪತ್ರಿಕೆ-2ರ ಪ್ರಶ್ನೆಗಳಿಗೆ ಉತ್ತರಗಳನ್ನು ಗುರುತಿಸಿರುತ್ತಾರೆ. ಸದರಿ ಓ.ಎಂ.ಆರ್. ಉತ್ತರಹಾಳೆಯಲ್ಲಿ ಪ್ರಶ್ನೆ ಪತ್ರಿಕೆಯ ಶ್ರೇಣಿಯನ್ನು ಚೌಕದಲ್ಲಿ ಗುರುತಿಸಿ ಸಂಬಂಧಿತ ವೃತ್ತದಲ್ಲಿ ಗುರುತಿಸಬೇಕು. ಇಲ್ಲವಾದಲ್ಲಿ ಓ.ಎಂ.ಆರ್. ಉತ್ತರ ಹಾಳೆಯನ್ನು ತಿರಸ್ಕರಿಸಲಾಗುವುದೆಂದು ಸ್ಪಷ್ಟವಾಗಿ ಸೂಚನೆಯನ್ನು ನೀಡಲಾಗಿದೆ. ಆದಾಗ್ಯೂ ಈ ಅಭ್ಯರ್ಥಿ ಮೇಲೆ ಉಲ್ಲೇಖಿಸಿರುವ ಓ.ಎಂ.ಆರ್. ಉತ್ತರಹಾಳೆಯಲ್ಲಾಗಲಿ ಇಲ್ಲವೇ ನಾಮಿನಲ್ರೋಲ್- ನಲ್ಲಾಗಲಿ ಪ್ರಶ್ನೆ ಪತ್ರಿಕೆ ಶ್ರೇಣಿಯನ್ನು ನಮೂದಿಸಿರುವುದಿಲ್ಲ ಮತ್ತು ಗುರುತಿಸಿರುವುದಿಲ್ಲ.
ಆದೇಶ ಸಂಖ್ಯೆ. ಇಪ(3)419/2011-12/ಪಿಎಸ್ಸಿ, ದಿನಾಂಕ: 15-03-2012.
ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ 2011ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯಲ್ಲಿ ನೋಂದಣಿ ಸಂಖ್ಯೆ. 44335ರ ಅಭ್ಯರ್ಥಿಯಾದ ಶ್ರೀಮತಿ ಮಂಜಮ್ಮ ಆರ್. ಇವರು ಆಯೋಗದ ಸೂಚನೆಗಳನ್ನು ಉಲ್ಲಂಘಿಸಿ ಓ.ಎಂ.ಆರ್. ಉತ್ತರ ಹಾಳೆಯಲ್ಲಿ ಇಲ್ಲವೇ ನಾಮಿನಲ್ ರೋಲ್ನಲ್ಲಿ ಪ್ರಶ್ನೆ ಪುಸ್ತಿಕೆ ಶ್ರೇಣಿಯನ್ನು ನಮೂದಿಸಿಲ್ಲದಿರುವುದು ಸ್ಪಷ್ಟವಾಗಿರುವ ಕಾರಣ ಸದರಿಯವರ ಅಕೌಂಟ್ಸ್ ಹೈಯರ್ ಪತ್ರಿಕೆ-2ರ ಓ.ಎಂ.ಆರ್.
ಉತ್ತರಹಾಳೆಯನ್ನು ಮೌಲ್ಯಮಾಪನಗೊಳಿಸದೇ ರದ್ದುಪಡಿಸಲಾಗಿದೆ. ಈ ಕಾರಣದಿಂದಾಗಿ ಇವರು ಈ ವಿಷಯದಲ್ಲಿ ಅನುತ್ತೀರ್ಣರಾಗಿರುತ್ತಾರೆಂದು ಪರಿಗಣಿಸಲಾಗಿದೆ.
ವಿ.ಬಿ. ಪಾಟೀಲ್
ಕಾರ್ಯದರ್ಶಿ,
ಪಿ.ಆರ್, 57 ಕರ್ನಾಟಕ ಲೋಕ ಸೇವಾ ಆಯೋಗ.
THE KARNATAKA BOARD OF WAKFS
CERTIFICATE OF REGISTRATION
No. KTW (REG)55 DKD/82-83, Bangalore, Dated:6th, December 1983.
It is hereby certified that the Wakf described here under is registered and brought on to the Register of Wakf in accordance with Section 27 & 28 of the Wakf Act, 1954 (29 of 1954)ಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ೪೧೩
| Name Class & Description of the Wakfs | Particulars of Wakfs properties | Name of the Muthawalli. |
| Syedani Beebi Dargah (Sunni) Nehru Maidan Mangalore, Dakshina Kannada District. | T.S. No. 288/1 of Attavar Village. Area 0-07 acres or 3042 Sq.feet. Boudaries East: A.B. Shetty Circle & Road leading to Post Office. West: District Armed reserve Police office building North: Nehru Maidan South Road & A.B. Shetty Circle. South: Mud Road being the entrance to the District Police Offices. | Managing Committee Syedani Beebi Dargah (Sunni) Nehru Maidan, Mangalore, Dakshina Kannada District represented by its President. |
Secretary,
The Karnataka State Board of Wakfs.
P.D. No.34
THE KARNATAKA BOARD OF WAKFS
CERTIFICATE OF REGISTRATION
No. KSBW//REG/19/RCR/2011-12, Bangalore, Dated:12th, December 2011.
It is hereby Certified that the below mentioned Wakf is registered with the Karnataka State Board of Wakfs Under Section 36 of the Wakf Act 1995.
| Sl.No. of Kitabul Awkaf | Name, Class & Description of the Wakf | Particulars of Wakf properties | Name of the Muthawallis |
| 105 | Addl. Property of Muslim Graveyard Mudgal Town, Lingsugur Taluk, Raichur District. | PROPERTIES: Property No.4-3-59 (Old) 4-3-61(New) Mudgal Town. MEASURING: 120`X460` = 55200 Sq.Feet Muslim Graveyard Land. BOUNDARIES East : Road West : Sy.No.7/1 Saw Mill, North : Sy.No.2/3/ &1/3 South : Bagalkot Road. | THE MANAGING COMMITTEE REPRESENTED BY ITS PRESIDENT |
This certificate is issued under power delegated vide Order No. KBW/110/ADM/05-06 Dated 2-03-2006 of Karnataka State Board of Wakfs., Bangalore.
Addl.Chief Executive Officer [I/c] P.D. No.35
The Karnataka State Board of Wakfs.
ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ಭಾಗ-೫ ೪೧೪ಕಂದಾಯ ಇಲಾಖೆ
ಜಿಲ್ಲಾಧಿಕಾರಿಗಳ ಕಾರ್ಯಾಲಯ, ಮಂಡ್ಯ ಜಿಲ್ಲೆ, ಮಂಡ್ಯ.
ಸಂ:ಸಿಬ್ಬಂದಿ(1)ಸಿಆರ್:205/2010-11 ದಿನಾಂಕ:13-03-2012.
ಅಧಿಕೃತ ಜ್ಞಾಪನ
ವಿಷಯ:- ಮಂಡ್ಯ ಜಿಲ್ಲಾ ಕಂದಾಯ ಘಟಕದಲ್ಲಿ ಗ್ರಾಮ ಲೆಕ್ಕಿಗರ ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಬಗ್ಗೆ.
ಉಲ್ಲೇಖ:- ಸರ್ಕಾರದ ಅಧಿಸೂಚನೆ ಸಂ:ಆರ್ಡಿ 299ಬಿಎಸ್ಸಿ 2006 ದಿನಾಂಕ:3-2-2009
2) ಸರ್ಕಾರದ ಅಧಿಸೂಚನೆ ಸಂ.ಕಂ.ಇ 299 ಬಿಎಸ್ಸಿ 2006 ದಿನಾಂಕ:24-7-2009 ಮತ್ತು 8-9-2009.
3) ಸರ್ಕಾರದ ಪತ್ರ ಸಂ.ಕಂ.ಇ 04 ಬಿಎಸ್ಸಿ 2011. ದಿನಾಂಕ: 25-02-2011.
4) ಈ ಕಾರ್ಯಾಲಯದ ಸಮಸಂಖ್ಯೆಯ ಅಧಿಸೂಚನೆ ದಿನಾಂಕ:20-04-2011.
5) ಈ ಕಾರ್ಯಾಲಯದ ಸಮಸಂಖ್ಯೆಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಣಾ ದಿನಾಂಕ: 22-09-2011.
6) ಈ ಕಾರ್ಯಾಲಯದ ಸಮಸಂಖ್ಯೆಯ ಅಧಿಕೃತ ಜ್ಞಾಪನ ಪತ್ರ ದಿನಾಂಕ:28-01-2012. ಮತ್ತು 05-02-2012.
ಸರ್ಕಾರದ ಉಲ್ಲೇಖ (1)ಮತ್ತು (2)ರ ಅಧಿಸೂಚನೆಯನ್ವಯ ಮಂಡ್ಯ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು 1977ರ ಗ್ರಾಮಲೆಕ್ಕಿಗರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ದಿನಾಂಕ:24-7-2009ರನ್ವಯ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರವು ಉಲ್ಲೇಖ (3) ರ ಪತ್ರದಲ್ಲಿ ಅನುಮೋದನೆ ನೀಡಿದೆ.
ಕರ್ನಾಟಕ ನಾಗರೀಕ ಸೇವೆ (Revenue subordinate branch)(cadre and recruitment)(amendment) ನಿಯಮಗಳು, 2009 ರಲ್ಲಿ ನಿಗಧಿಪಡಿಸಿರುವ ವಿದ್ಯಾರ್ಹತೆ ಅನ್ವಯ ಮಂಡ್ಯ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ 59 ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಭರ್ತಿಗೊಳಿಸಲು ಉಲ್ಲೇಖ(4)ರ ಅಧಿಸೂಚನೆಯ ಮೂಲಕ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ದಿನಾಂಕ:23-05-2011ರವರೆಗೆ ಸ್ವೀಕೃತಿಯಾದ ಅರ್ಜಿಗಳನ್ನು ಅರ್ಹತೆ ಮತ್ತು ಮೀಸಲಾತಿ ಅನ್ವಯ ವಿಂಗಡಿಸಿ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ದಿನಾಂಕ:08-08-2011 ರಂದು ಪ್ರಕಟಿಸಿ ಆಕ್ಷೇಪಣೆ/ತಕರಾರು ಇದ್ದಲ್ಲಿ ಆಕ್ಷೇಪಣೆಗಳನ್ನು ದಿನಾಂಕ: 22-08-2011ರವರೆಗೆ ಸಲ್ಲಿಸಲು ತಿಳಿಸಲಾಗಿತ್ತು.
ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಕ್ರಮವಾಗಿ ದಿನಾಂಕ:06-09-2011 ಮತ್ತು ದಿನಾಂಕ:07-09-2011 ರಂದು ಪರಿಶೀಲಿಸಿ, ಅಂತಿಮ ಆಯ್ಕೆ ಪಟ್ಟಿಯನ್ನು ದಿನಾಂಕ: 22-09-2011 ರಂದು ಪ್ರಕಟಿಸಲಾಗಿದೆ.
ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳು ಈಗಾಗಲೇ ನೀಡಿರುವ ಮೀಸಲಾತಿ ಸಿಂಧುತ್ವ ಪ್ರಮಾಣ ಪತ್ರ ಹಾಗೂ ಗುಣ ನಡತೆ ಪ್ರಮಾಣ ಪತ್ರಗಳನ್ನು ಸಂಬಂದಪಟ್ಟ ಪೋಲೀಸ್ ಹಾಗೂ ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ನೀಡಿರುವ ದೃಡೀಕರಣ ಪತ್ರಗಳನ್ನು ಅನುಸರಿಸಿ,ಈ ಕೆಳಕಂಡ ಅಭ್ಯರ್ಥಿಯನ್ನು ಗ್ರಾಮ ಲೆಕ್ಕಿಗರ ಹುದ್ದೆಗೆ ರೂ 5800-100-6000-125-6500-150-7100-175-7800-200-8600-225-9500-250-10500 ರ ವೇತನ ಶ್ರೇಣಿಯಲ್ಲಿ ಅವರ ಹೆಸರಿನ ಎದುರು ನಮೂದಿಸಲ್ಪಟ್ಟ ಗ್ರಾಮಲೆಕ್ಕಿಗ ವೃತ್ತಕ್ಕೆ ಈ ಕೆಳಕಂಡ ಷರತ್ತುಗಳಿಗೆ ಒಳಪಡಿಸಿ ನೇಮಕಾತಿ ಮಾಡಿ ಆದೇಶ ಹೊರಡಿಸಿದೆ.
| ಕ್ರಮ ಸಂಖ್ಯೆ | ಅಭ್ಯರ್ಥಿಯ ಹೆಸರು ಮತ್ತು ವಿಳಾಸ | ಕರ್ತವ್ಯ ನಿರ್ವಹಿಸಬೇಕಾದ ಕಛೇರಿ /ವೃತ್ತ | ಯಾವ ಕಛೇರಿಯಲ್ಲಿ ಹಾಜರಾಗಬೇಕು. |
| ವ ರ್ಗ:2ಬಿ | |||
| 01 | ಕು:ನಫೀಶಾ ತಾಂಬೂಲಿ ಬಿನ್ ಹುಸೇನ್ಸಾಬ್ ತಾಂಬೂಲಿ, ಕ್ಲೇ ಗ್ರಾಮ, ತ ಬ್ಬೇನೂರ ಪೋಸ್ಟ್ ದ ಾರವಾಡ.581 201. | ಬ್ಯಾಡರಹಳ್ಳಿ ವೃತ್ತ ಕಸಬಾ ಹೋಬಳಿ, ನಾಗಮಂಗಲ ತಾಲ್ಲೂಕು. | ತ ಹಸ್ದೀಾರ್, ನಾಗಮಂಗಲ ತಾಲ್ಲೂಕು. |
ಷರತ್ತುಗಳು :
1) ಮೇಲ್ಕಂಡ ಅಭ್ಯರ್ಥಿಗಳು ಈ ಆದೇಶ ದಿನಾಂಕದಿಂದ 15 ದಿನಗಳೊಳಗಾಗಿ ಸಂಬಂಧಿಸಿದ ತಹಸೀಲ್ದಾರ್ರವರ ಸಮಕ್ಷಮದಲ್ಲಿ ಕರ್ತವ್ಯಕ್ಕೆ ಹಾಜರಾಗುವುದು. ಈ ನೇಮಕವನ್ನು ಒಂದು ವೇಳೆ ತಿರಸ್ಕರಿಸಿದ್ದಲ್ಲಿ 7 ದಿನಗಳೊಳಗಾಗಿ ಲಿಖಿತ ರೂಪದಲ್ಲಿ ತಿಳಿಸತಕ್ಕದ್ದು.
2) ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗುವ ವೇಳೆಯಲ್ಲಿ ಈ ಕೆಳಕಂಡ ಮೂಲ ಪ್ರಮಾಣ ಪತ್ರಗಳನ್ನು ಪರಿಶೀಲನೆಗಾಗಿ ಹಾಜರು ಪಡಿಸಬೇಕು 1) ಪಿ.ಯು.ಸಿ. ಅಂಕಪಟ್ಟಿ 2) ಎಸ್ಎಸ್ಎಲ್ಸಿ ಅಂಕಪಟ್ಟಿ/ಹುಟ್ಟಿದ ದಿನಾಂಕದ ದೃಡೀಕರಣ 3) ನಡತೆ ಪ್ರಮಾಣ ಪತ್ರ 4) ವೈದ್ಯಕೀಯ ಪ್ರಮಾಣ ಪತ್ರ 5) ಸಕ್ಷಮ ಪ್ರಾಧಿಕಾರದಿಂದ ನೀಡಲ್ಪಟ್ಟ ಮೀಸಲಾತಿ ಪ್ರಮಾಣ ಪತ್ರ (ಮೀಸಲಾತಿಯಡಿ ಆಯ್ಕೆಯಾದ ಅಭ್ಯರ್ಥಿಗಳು ಮಾತ್ರ).
3) ಅಭ್ಯರ್ಥಿಯು ತನ್ನ ವಾಸಸ್ಥಳ ಕ್ಷೇತ್ರಕ್ಕೆ ಸಂಬಂಧಿಸಿದ ಕನಿಷ್ಠ ಇಬ್ಬರು ಗಣ್ಯ ವ್ಯಕ್ತಿಗಳಿಂದ ಪಡೆದ ನಡತೆ ಪ್ರಮಾಣ ಪತ್ರಗಳ ಮೂಲ ಪತ್ರಿಗಳನ್ನು ಕರ್ತವ್ಯಕ್ಕೆ ಹಾಜರಾಗುವ ವೇಳೆಯಲ್ಲಿ ಹಾಜರು ಪಡಿಸತಕ್ಕದ್ದು.
4) ಅಭ್ಯರ್ಥಿಗಳು ಕೆಲಸಕ್ಕೆ ಹಾಜರಾದ ದಿನಾಂಕದಿಂದ 2 ವರ್ಷಗಳ ಅವಧಿಗೆ ಪರಿವೀಕ್ಷಣಾ ಅವಧಿಯಲ್ಲಿದ್ದು (ಪ್ರೋಬೇಷನರಿ) ಅವರು ಈ ಅವಧಿಯಲ್ಲಿ ಕೆಳಗೆ ನಮೂದಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗತಕ್ಕದ್ದು 1) ಅಕೌಂಟ್ಸ್ ಲೋಯರ್ 2) ರೆವಿನ್ಯೂ ಲೋಯರ್ 3) ಕನ್ನಡ ಭಾಷಾ ಪರೀಕ್ಷೆ (ಎಸ್ಎಸ್ಎಲ್ಸಿ ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವೀತೀಯ ಭಾಷೆಯಾಗಿ ತೆಗೆದುಕೊಳ್ಳದಿದ್ದಲ್ಲಿ ಕನ್ನಡ ಭಾಷಾ ಪರೀಕ್ಷೆಯನ್ನು ಪಾಸು ಮಾಡತಕ್ಕದ್ದು) ಈ ಅವಧಿಯಲ್ಲಿ ನಿಗಧಿತ ಇಲಾಖಾ ಪರೀಕ್ಷೆಗಳನ್ನು ತೇರ್ಗಡೆಯಾಗದಿದ್ದಲ್ಲಿ ಅಥವಾ ಸೇವೆ ತೃಪ್ತಿಕರವಾಗಿರದಿದ್ದಲ್ಲಿ ಅವರನ್ನು ಸೇವೆಯಿಂದ ತೆಗೆದು ಹಾಕಲಾಗುವುದು.
5) ಈ ನೇಮಕಾತಿಯ ಸಂಪೂರ್ಣ ತಾತ್ಕಾಲಿಕವಾಗಿದ್ದು, ಸರ್ಕಾರವು ಇಚ್ವಿಸಿದಲ್ಲಿ ಅಥವಾ ಹುದ್ದೆಗಳು ರದ್ದಾದಲ್ಲಿ ಅಥವಾ ಸುಳ್ಳು ಮಾಹಿತಿ ನೀಡಿ ಉದ್ಯೋಗ ಪಡೆದಿರುವುದು ಕಂಡು ಬಂದಲ್ಲಿ ಅವರನ್ನು ಯಾವುದೇ ಸಮಯದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೇ ಸೇವೆಯಿಂದ ತೆಗೆದು ಹಾಕಲಾಗುವುದು.
6) ಅಭ್ಯರ್ಥಿಗಳು ಸೇವೆಗೆ ಹಾಜರಾಗುವ ಸಂದರ್ಭದಲ್ಲಿ ಭಾರತದ ಸಂವಿಧಾನಾತ್ಮಕವಾಗಿ ಗೊತ್ತುಪಡಿಸಿದ ನಮೂನೆಯಲ್ಲಿ "ಪ್ರಮಾಣ ವಚನ" ಸ್ವೀಕಾರ ಮಾಡತಕ್ಕದ್ದು.
7) ಅಭ್ಯರ್ಥಿಗಳು ಸರ್ಕಾರದ ಆದೇಶ ಸಂ: ಎಫ್ಡಿ (ಎನ್ಪಿಎಲ್) 04 ಪಿಇಟಿ 2005 ದಿನಾಂಕ: 31-3-2006ರಲ್ಲಿ ಜಾರಿಗೆ ನೀಡಿದ ಹೊಸ ನಿವೃತ್ತಿ ವೇತನ ನೀತಿಗೆ ಒಳಪಟ್ಟಿರುತ್ತಾರೆ.
8) ಸರ್ಕಾರದ ಸುತ್ತೋಲೆ ಸಂ:ಕಂ.ಇ 54 ಬಿಎಸ್ಸಿ 2007 ದಿನಾಂಕ: 27-3-2007 ರನ್ವಯ ಅಂತರ ಜಿಲ್ಲಾ ವರ್ಗಾವಣೆಗೆ ಜಿಲ್ಲೆಯಲ್ಲಿ ಕನಿಷ್ಠ 5 ವರ್ಷಗಳ ಸೇವೆಯನ್ನು ಕಡ್ಡಾಯವಾಗಿ ಪೂರೈಸತಕ್ಕದ್ದು.
9) ಅಭ್ಯರ್ಥಿಗಳು ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೊಂದಾಯಿಸಿದ ಗುರುತಿನ ಚೀಟಿಯನ್ನು ತಹಸೀಲ್ದಾರ್ರಲ್ಲಿ ಹಾಜರುಪಡಿಸತಕ್ಕದ್ದು, ತಹಸೀಲ್ದಾರ್ರು ಅದನ್ನು ಉದ್ಯೋಗ ವಿನಿಮಯ ಕೇಂದ್ರಕ್ಕೆ ಸರೆಂಡರ್ ಮಾಡುವುದು.
10) ಅಭ್ಯರ್ಥಿಗಳು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು 1958: ಕರ್ನಾಟಕ ನಾಗರೀಕ ಸೇವಾ(ಸಿಸಿಎ) ನಿಯಮಾವಳಿ 1957/ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಾವಳಿ 1966 ಹಾಗೂ ಕಾಲಕಾಲಕ್ಕೆ
ಸರ್ಕಾರದಿಂದ ಹೊರಡಿಸಲಾಗುವ ಇತರೆ ನಿಯಮಾವಳಿಗಳಿಗೆ ಬದ್ದರಾಗಿರುತ್ತಾರೆ.
11) ಇದು ನೇರನೇಮಕಾತಿ ಹುದ್ದೆ ಆದ ಕಾರಣ ಅಭ್ಯರ್ಥಿಯು ಸೇವೆಗೆ ಸೇರಿದ ದಿನಾಂಕದಿಂದ ಜೇಷ್ಠತೆಯನ್ನು ಪರಿಗಣಿಸಲಾಗುವುದು.
ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೯, ೨೦೧೨ ಭಾಗ-೫ ೪೧೬12) ಗ್ರಾಮ ಲೆಕ್ಕಿಗ ಹುದ್ದೆಗೆ ನೇಮಕಾತಿ ಹೊಂದಿರುವುದರಿಂದ, ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾಗುವಾಗ ರೂ 1000/- (ರೂಪಾಯಿ ಒಂದು ಸಾವಿರ ಮಾತ್ರ) ಭದ್ರತಾ ಠೇವಣೆಯನ್ನು ನಗದು ರೂಪದಲ್ಲಾಗಲೀ ಅಥವಾ ರಾಷ್ಟ್ರೀಯ ಉಳಿತಾಯ ಪತ್ರದ ಮೂಲಕವಾಗಲೀ ತೊಡಗಿಸಿ,ಮುಚ್ಚಳಿಕೆ ಪತ್ರವನ್ನು ಛಾಪಾ ಕಾಗದದಲ್ಲಿ ಬರೆಯಿಸಿ ಒಬ್ಬರ ಜಾಮೀನು ಕೊಡತಕ್ಕದ್ದು. ತಹಸೀಲ್ದಾರ್ರು ಸದರಿ ರಾಷ್ಟ್ರೀಯ ಉಳಿತಾಯ ಪತ್ರವನ್ನು ಸರ್ಕಾರಕ್ಕೆ ಪ್ಲೆಡ್ಜ್ ಮಾಡಿಕೊಳ್ಳತಕ್ಕದ್ದು.
13) ಅಭ್ಯರ್ಥಿಯು ಇಲಾಖೆಯಿಂದ ಕಾಲಕಾಲಕ್ಕೆ ನಿಗಧಿಪಡಿಸಿದ ಹಾಗೂ ನಿಗಧಿಪಡಿಸಲಾಗುವ ವಿವಿಧ ಪರೀಕ್ಷೆ/ ತರಭೇತಿಗಳನ್ನು ಯಶಸ್ವಿಯಾಗಿ ಮುಗಿಸತಕ್ಕದ್ದು.
14) ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಹಾಗೂ ಇಲಾಖಾ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಯಮಾವಳಿಗಳನ್ನು ಉಲ್ಲಂಘಿಸಿ ಅರ್ಜಿ ಸಲ್ಲಿಸಿರುವುದಿಲ್ಲವೆಂಬ ಬಗ್ಗೆ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು ಹಾಗೂ ಮೇಲೆ ಸೂಚಿಸಿದ ಕಾರ್ಯಸ್ಥಳಗಳಲ್ಲಿ ವರದಿ ಮಾಡಿಕೊಳ್ಳುವ ಮೊದಲು ಮುಂಚಿನ ಸೇವೆಯಿಂದ ಬಿಡುಗಡೆ ಆದೇಶ ಪಡೆದಿರಬೇಕು.
15) ಅಭ್ಯರ್ಥಿಗೆ ಕೆಲಸಕ್ಕೆ ಹಾಜರಾಗುವ ಸಂದರ್ಭದಲ್ಲಿ ಪ್ರಯಾಣ ಭತ್ಯೆ ಅಥವಾ ಇತರೆ ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ.
16) ಆಯ್ಕೆಯಾಗಿರುವ ಅಭ್ಯರ್ಥಿಗಳು ಅವರನ್ನು ನೇಮಿಸಿರುವ ಸ್ಥಳದಲ್ಲಿ ಕಡ್ಡಾಯವಾಗಿ ವಾಸ ಮಾಡಬೇಕು. ಈ ಬಗ್ಗೆ ಒಂದು ಪ್ರಮಾಣ ಪತ್ರವನ್ನು (ನಮೂನೆಯಂತೆ) ನೋಟರಿಯವರಿಂದ ಪ್ರಮಾಣೀಕರಿಸಿ ಹಾಜರುಪಡಿಸಬೇಕು.
17) ತಾಲ್ಲೂಕು ಕಛೇರಿಯ ಭೂಮಿ ಕೇಂದ್ರಕ್ಕೆ ನೇಮಕಾತಿ ಹೊಂದಿರುವ ಅಭ್ಯರ್ಥಿಗಳು ಗ್ರಾಮಲೆಕ್ಕಿಗರ ಹುದ್ದೆಯಿಂದ ಪದೋನ್ನತಿ ಹೊಂದುವ ವರೆಗೂ ತಾಲ್ಲೂಕುಗಳ ಭೂಮಿ ಕೇಂದ್ರದಲ್ಲಿಯೇ ಕಾರ್ಯನಿರ್ವಹಿಸಬೇಕಾಗಿದ್ದು ಯಾವುದೇ ಕಾರಣಕ್ಕೂ ವೃತ್ತಕ್ಕೆ ವರ್ಗಾವಣೆ ಹೊಂದಲು ಅವಕಾಶವಿರುವುದಿಲ್ಲ.
18) ನೇಮಕಾತಿಗೊಳಿಸಲಾದ ಸ್ಥಳ/ ಕಛೇರಿಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲಾಗುವುದಿಲ್ಲ. ಸ್ಥಳ ಬದಲಾವಣೆ ಮಾಡುವಂತೆ ಒತ್ತಡ ತಂದಲ್ಲಿ ಅಂತಹ: ಅಭ್ಯರ್ಥಿಗಳ ನೇಮಕಾತಿ ಆದೇಶವನ್ನು ರದ್ದುಗೊಳಿಸಲಾಗುತ್ತದೆ.
19) ಗ್ರಾಮ ಲೆಕ್ಕಿಗರ ಆಯ್ಕೆ ಮತ್ತು ನೇರನೇಮಕಾತಿ ಪ್ರಾಧಿಕಾರಿಯವರಾದ ಜಿಲ್ಲಾಧಿಕಾರಿ, ಮಂಡ್ಯ ಜಿಲ್ಲೆ, ಮಂಡ್ಯರವರು ಸದರಿ ಆದೇಶವನ್ನು ಮಾರ್ಪಡಿಸುವ ಹಾಗೂ ರದ್ದು ಪಡಿಸುವ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತಾರೆ.
ಡಾ:ಪಿ.ಸಿ.ಜಾಫರ್, ಭಾ.ಆ.ಸೇ
ಅಧ್ಯಕ್ಷರು,
ಪಿ.ಆರ್. 58 ಗ್ರಾಮ ಲೆಕ್ಕಿಗರ ನೇರ ನೇಮಕಾತಿ ಆಯ್ಕೆ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲೆ, ಮಂಡ್ಯ.