Servants of Knowledge
Karnataka Gazette · Government of Karnataka

Karnataka Gazette, Part Part-4A, 16 August 2012

Published 16 August 2012

Part
Part-4A
Identifier
in.gazette.karnataka_new.2012-08-16.Part-4A
Languages
English, Kannada
Published at
Original source ↗

click here for IIIF manifest

WPP-47

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೭ ಬೆಂಗಳೂರು, ಗುರುವಾರ, ಆಗಸ್ಟ್ ೧೬, ೨೦೧೨ (ಶ್ರಾವಣ ೨೫, ಶಕ ವರ್ಷ ೧೯೩೪) ಸಂಚಿಕೆ ೩೩

ಭಾಗ - ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ

ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ

ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ

ರಾಜ್ಯಪಾಲರು ಮಾಡಿದ ನಿಯಮಗಳು, ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ

ನಿಯಮಗಳು

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 32 ಎಲ್‌ಜಿಜಿ 2011, ಬೆಂಗಳೂರು, ದಿನಾಂಕ: 19ನೇ ಜುಲೈ, 2012.

ಈ ಹಿಂದೆ ಇದೇ ಸಮ ಸಂಖ್ಯೆಯ ದಿನಾಂಕ : 10-11-2011ರ ಅಧಿಸೂಚನೆ ಮುಖಾಂತರ ಮಾಡಲಾದ ನಾಮ ನಿರ್ದೇಶನ ರದ್ದುಗೊಳಿಸಿ ಕರ್ನಾಟಕ ಭೂ ಕಂದಾಯ ಅಧಿನಿಯಮ (1964)ರ ಉಪ ಕಲಂ (1) ಕಲಂ 94-ಎರ ಅಡಿ ಪ್ರದತ್ತವಾದ ಅಧಿಕಾರ ಅಡಿ ಚಲಾಯಿಸಿ ಗುಲ್ಬರ್ಗಾ ಜಿಲ್ಲೆ, ಚಿಂಚೋಳಿ ತಾಲ್ಲೂಕಿನ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕೆಳಗಿನಂತೆ ಪುನರ್ ರಚಿಸಲಾಗಿದೆ.

ಹೆಸರು : ಪದನಾಮ ಪ ್ರವರ್ಗ
1) ಶ್ರೀ ಸುನಿ ್ ವ ್ಲ್ಯಾಪುರ, ಶಾಸಕರು ಚಿಂಚೋಳಿ ತಾಲ್ಲೂಕು. ಅಧ್ಯಕ್ಷರು
2) ಶ್ರೀ ಮಂಗಳಮೂರ್ತಿ ಶಿವನಾಗಪ್ಪ ಕರ್ಚಖೇಡ, ಮು.ಪೋ. ಗಡಿಕೇಶ್ವರ, ಚಿಂಚೋಳಿ ತಾಲ್ಲೂಕು, ಗುಲ್ಬರ್ಗಾ ಜಿ ್ಲೆ. ಸದಸ್ಯರು (ಸಾಮಾನ್ಯ)
3) ಡಾ|| ಆಂಜನಯ್ಯಾ ಬಿನ್ ರಾಮಯ್ಯ ಮೋಗತಂ ಪೋ. ಕೊಂಚಾವರಂ ಚಿಂಚೋಳಿ ತಾಲ್ಲೂಕು, ಗುಲ್ಬರ್ಗಾ ಜಿ ೆ ್ಲ . ಸದಸ್ಯರು (ಪ.ಜಾತಿ)
4) ಶ್ರೀಮತಿ ಶಿವಲೀ ಾ ಕೋಂ ತೇವಣಸಿದ್ದಪ್ಪಾ ಏರಿ ಮು. ಗಡಿಕೇಶ್ವರ ಚಿಂಚೋಳಿ ತಾಲ್ಲೂಕು, ಗುಲ್ಬರ್ಗಾ ಜಿ ್ಲೆ. ಸದಸ್ಯರು (ಮಹಿಳೆ)
5) ತಹಶೀ ್ದಾರ್, ಚಿಂಚೋಳಿ ತಾಲ್ಲೂಕು. ಸದಸ್ಯ ಕಾರ್ಯದರ್ಶಿ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಹೆಚ್. ಜೆ. ಲಕ್ಷ್ಮೀನಾರಾಯಣ,

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂ ಮಂಜೂರಾತಿ-3) ಪಿ.ಆರ್. 565

(೧೧೯೩)೧೧೯೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ಭಾಗ - ೪ಎ

KARNATAKA GOVERNOR'S SECRETARIAT

NOTIFICATION

NO. GS 4 VUM 2012, Bangalore, Dated: 024th July, 2012

WHEREAS, the tenure of Prof Suresh S. Honnappagol, Vice-Chancellor, Karnataka Veterinary, Animal and Fisheries Sciences University, Bidar expires on the afternoon of 25th July 2012.

AND WHEREAS, the selection of a suitable candidate for filling this position on regular basis has not been completed.

NOW, THEREFORE, I, H.R. BHARDWAJ, Governor of Karnataka and Chancellor of Universities in Karnataka, in exercise of the powers conferred on me by Section 15 of the Karnataka Veterinary, Animal and Fisheries Sciences University Act, 2004, hereby appoint Dr. S. Mallikarjunappa, the Senior-most Professor of the University to act as Vice-Chancellor with effect from 26-07-2012, in terms of Section 13(2) of the Karnataka Veterinary, Animal and Fisheries Sciences University Act, 2004 for a period of two months.

H.R. BHARDWAJ,

Governor of Karnataka & Chancellor of Universities.

R. KALPANA,

Under Secretary to Governor

P.R. 564

ಜಲಸಂಪನ್ಮೂಲ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಜಸಂಇ 224 ಕೆಬಿಎನ್ 2012, ಬೆಂಗಳೂರು, ದಿನಾಂಕ: 25ನೇ ಜುಲೈ, 2012.

ಶ್ರೀ ಪ್ರದೀಪ್ ಸಿಂಗ್ ಕರೋಲಾ, ಭಾ.ಆ.ಸೇ. ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ-1 ಇವರನ್ನು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಮೆಮೊರಾಂಡಮ್ ಅಂಡ್ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್147 (ಸಿ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ನಿರ್ದೇಶಕರಾಗಿ ಶ್ರೀ ಐ.ಎಸ್.ಎನ್. ಪ್ರಸಾದ್, ಭಾ.ಆ.ಸೇ. ಅವರ ಸ್ಥಾನದಲ್ಲಿ ನಾಮನಿರ್ದೇಶನ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಐ. ಡಿ. ಧಮನ್,

ವಿಶೇಷ ಕರ್ತವ್ಯಾಧಿಕಾರಿ,

ಜಲಸಂಪನ್ಮೂಲ ಇಲಾಖೆ (ಕೃಭಾಜನಿ) ಪಿ.ಆರ್. 566

ಜಲಸಂಪನ್ಮೂಲ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಜಸಂಇ 224 ಕೆಬಿಎನ್ 2012, ಬೆಂಗಳೂರು, ದಿನಾಂಕ: 25ನೇ ಜುಲೈ, 2012.

ಶ್ರೀ ಜಗದೀಶ್ ಶೆಟ್ಟರ್, ಮುಖ್ಯಮಂತ್ರಿಗಳು ಇವರನ್ನು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಮೆಮೊರಾಂಡಮ್ ಅಂಡ್ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 147 (ಸಿ)ರಲ್ಲಿ ಪ್ರದತ್ತವದ ಅಧಿಕಾರವನ್ನು ಚಲಾಯಿಸಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಿ, ಆರ್ಟಿಕಲ್ 149(1)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿದ್ದ ಶ್ರೀ ಡಿ. ವಿ. ಸದಾನಂದಗೌಡ ರವರ ಸ್ಥಾನದಲ್ಲಿ ದಿನಾಂಕ : 12-07-2012 ರಿಂದ ಜಾರಿಗೆ ಬರುವಂತೆ ಅಧ್ಯಕ್ಷರಾಗಿ ನೇಮಕಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಐ. ಡಿ. ಧಮನ್,

ವಿಶೇಷ ಕರ್ತವ್ಯಾಧಿಕಾರಿ,

ಜಲಸಂಪನ್ಮೂಲ ಇಲಾಖೆ (ಕೃಭಾಜನಿ).

ಪಿ.ಆರ್. 567

ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ೧೧೯೫

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 149 ಮುನೋಮು 2010, ಬೆಂಗಳೂರು, ದಿನಾಂಕ: 21ನೇ ಜುಲೈ, 2012.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಲಿಯಿಂದ ಎಲೆಕ್ಟ್ರಾನಿಕ್ ಸಿಟಿ ಫೇಸ್-II ರಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಕೆ.ಐ.ಎ.ಡಿ.ಬಿ.ಯಿಂದ ಹಂಚಿಕೆಯಾಗಿದ್ದ ಸರ್ವೆ ನಂ 36(ಪಿ)ರಲ್ಲಿನ ನಿವೇಶನದ ನೋಂದಣಿಗೆ ತಗಲುವ ಮುದ್ರಾಂಕ ಶುಲ್ಕದಲ್ಲಿ ಶೇ. 50 ರಷ್ಟು ವಿನಾಯ್ತಿಯನ್ನು ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಕಲಂ 9(1)ರಡಿ ನೀಡಿ ಸರ್ಕಾರವು ಆದೇಶಿಸಿದೆ.

ಈ ಅಧಿಸೂಚನೆಯನ್ನು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ : ಆಇ 554 ವೆಚ್ಚ-7/2012 ದಿನಾಂಕ : 09-07-2012ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ. ಕೆ. ರಾಮಚಂದ್ರ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ನೋಂದಣಿ ಮತ್ತು ಮುದ್ರಾಂಕ).

ಪಿ.ಆರ್. 568

ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಇಡಿ 605 ಎಲ್ಐಬಿ 2011, ಬೆಂಗಳೂರು, ದಿನಾಂಕ: 19ನೇ ಜುಲೈ, 2012.

ಇದೇ ಸಮಸಂಖ್ಯೆಯ ದಿನಾಂಕ : 05-01-2012ರ ಸರ್ಕಾರದ ಅಧಿಸೂಚನೆಯ ಕ್ರಮ ಸಂಖ್ಯೆ : 17(1)(ಹೆಚ್)-2ರಲ್ಲಿನ ಶ್ರೀ ಎಸ್. ಗಣೇಶ ಬಿನ್ ಎ. ಸುಬ್ರಮಣಿ, ನಂ. 2624, 2ನೇ ಕ್ರಾಸ್, ಗಾಂಧಿನಗರ, ಮಂಡ್ಯ ಇವರು ದಿನಾಂಕ : 01-02-2012ರಂದು ನಿಧನರಾಗಿರುವುದರಿಂದ ಸದರಿಯವರ ಬದಲಾಗಿ ಶ್ರೀ ಎಂ. ಅರ್. ಗಿರೀಶ್ ಬಿನ್ ಲೇಟ್ ಎಂ. ವಿ. ರಾಮಸ್ವಾಮಿ, ನಂ. 1552, 2ನೇ ಕ್ರಾಸ್, ವಿದ್ಯಾನಗರ, ಮಂಡ್ಯ ಇವರನ್ನು ನಾಮಕರಣ ಮಾಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ಬಿ. ಪಟಗಾರ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 569

ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆ (ಸಾಮಾನ್ಯ)

ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಸಂವಾಪ್ರ/48/ವಾಪ್ರಸಿ/2012, ಬೆಂಗಳೂರು, ದಿನಾಂಕ: 24ನೇ ಜುಲೈ, 2012.

ಶ್ರೀ ಎಂ. ರವಿಕುಮಾರ್, ಜಂಟಿ ನಿರ್ದೇಶಕರು, ವಾರ್ತಾ ಇಲಾಖೆ ಹಾಗೂ ವ್ಯವಸ್ಥಾಪಕ ನಿರ್ದೇಶಕರು (ಅಧಿಕ ಪ್ರಭಾರ) ಶ್ರೀ ಕಂpೕರವ ಸ್ಟುಡಿಯೋಸ್ ನಿಯಮಿತ, ಬೆಂಗಳೂರು ಇವರನ್ನು ಆರ್ಟಿಕಲ್ ಆಫ್ ಅಸೋಸಿಯೇಷನ್ಸ್ 75(ಎ)ರ ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಶ್ರೀ ಕಂpೕರವ ಸ್ಟುಡಿಯೋದ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ. ಮಂಜುಳ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 570

ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಇಲಾಖೆ (ವಾರ್ತಾ ಶಾಖೆ)೧೧೯೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ಭಾಗ - ೪ಎ

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 143 ಎಲ್ಆರ್ಎ 2012, ಬೆಂಗಳೂರು, ದಿನಾಂಕ: 18ನೇ ಜುಲೈ, 2012.

ಕರ್ನಾಟಕ ಭೂ ಸುಧಾರಣೆ ಅಧಿನಿಯಮ (1961)ರ ಕಲಂ 48ರ ಉಪ ಕಲಂ (1) ರಿಂದ (3)ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಧಾರವಾಡ ಜಿಲ್ಲೆ, ಧಾರವಾಡ ತಾಲ್ಲೂಕಿನ ಭೂ ನ್ಯಾಯ ಮಂಡಳಿಗೆ ಸಂಬಂಧಿಸಿದಂತೆ ಹೊರಡಿಸಲಾದ ಅಧಿಸೂಚನೆ ಸಂಖ್ಯೆ : ಕಂಇ 149 ಎಲ್ಆರ್ಎ 2008 ದಿನಾಂಕ : 21-01-2009ನ್ನು ಭಾಗಶಃ ಮಾರ್ಪಡಿಸಿ ``ಶ್ರೀ ಯಲ್ಲಪ್ಪ ಭೀಮಪ್ಪ ಕಾಟಕರ ಹಾಗೂ ಶ್ರೀ ರವಿ ಹನುಮಂತಪ್ಪ ಎಲಿಗಾರ'' ಇವರ ನಾಮ ನಿರ್ದೇಶನ ರದ್ದುಪಡಿಸಿ ಅವರ ಬದಲಿಗೆ ಕ್ರಮವಾಗಿ ``ಶ್ರೀ ಕಲ್ಮೇಶ ಡಿ, ಹಾವೇರಿ ಪೇಟೆ ಹಾಗೂ ಮಡಿವಾಳಪ್ಪ ಚೆನ್ನಪ್ಪ ಉಳವಣ್ಣವರ'' ಇವರನ್ನು ನಾಮನಿರ್ದೇಶನ ಮಾಡಿ ಸದರಿ ಭೂ ನ್ಯಾಯ ಮಂಡಳಿಯನ್ನು ಪುನರ್ ರಚಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ಎನ್. ಶ್ರೀನಿವಾಸ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಸುಧಾರಣೆ)

ಪಿ.ಆರ್. 571

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ : 38 : ಎಲ್‌ಜಿಹೆಚ್ : 2011, ಬೆಂಗಳೂರು, ದಿನಾಂಕ: 12ನೇ ಜುಲೈ, 2012.

ಕರ್ನಾಟಕ ಭೂ ಕಂದಾಯ ಅಧಿನಿಯಮ (1964) 5 ಕಲಂ 94 (ಎ)(1)ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕು, ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಈ ಕೆಳಕಂಡ ವ್ಯಕ್ತಿಗಳೊಂದಿಗೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ರಚಿಸಲಾಗಿದೆ.

ಕ್ರಮ ಸಂಖ್ಯೆ ಹೆಸರು ಮತ್ತು ವಿಳಾಸ ಪ ್ರವರ್ಗ
1. ಶ್ರೀ ಹೆಚ್. ಕೆ. ಕುಮಾರಸ್ವಾಮಿ, ವಿಧಾನಸಭಾ ಸದಸ್ಯರು, ಸಕ ೇಶಪುರ ವಿಧಾನಸಭಾಕ್ಷೇತ ್ರ ಅಧ್ಯಕ್ಷರು
2. ಶ್ರೀ ಇ. ಆರ್. ದೊಡ್ಡೇಗೌಡ ಬಿನ್ ರಾಮೇಗೌಡ, ರಿಟೈಡ್ ಡೆಪ್ಯೂಟಿ ತಹಶೀ ್ದಾರ್ ರವರು, ಈಚಲಬೀಡು ಗ್ರಾಮ ಮತ್ತು ಅಂಚೆ, ಯಸಳೂರು ಹೋಬಳಿ, ಸಕ ೇಶಪುರ ತಾಲ್ಲೂಕು, ಹಾಸನ ಜಿ ೆ ್ಲ . ಸದಸ್ಯರು (ಸಾಮಾನ್ಯ)
3. ಶ್ರೀ ಮಂಜಪ್ಪ ಬಿನ್ ತಿಮ್ಮಯ್ಯ ಸಿದ್ದಾಪುರ, ಹಾ ೇಬೇಲೂರು ಅಂಚೆ, ಕಸಬಾ ಹೋಬಳಿ, ಸಕ ೇಶಪುರ ತಾಲ್ಲೂಕು, ಹಾಸನ ಜಿ ್ಲೆ. ಸದಸ್ಯರು (ಪರಿಶಿಙ್ಟ ಜಾತಿ)
4. ಶ್ರೀಮತಿ ಬೃಂದಾ ಮಹೇಶ್ ಕೋಂ ಮಹೇಶ್ ಗುಡಾಣಕೆರೆ ಗ್ರಾಮ, ಹೆಗ್ಗದ್ದೆ ಅಂಚೆ, ಹಾನುಬಾಳು ಹೋಬಳಿ, ಸಕ ೇಶಪುರ ತಾಲ್ಲೂಕು, ಹಾಸನ ಜಿ ೆ ್ಲ . ಸದಸ್ಯರು (ಮಹಿಳೆ)
5. ತಹಶೀ ್ದಾರರು, ಸಕ ೇಶಪುರ ತಾಲ್ಲೂಕು, ಹಾಸನ ಜಿ ್ಲೆ. ಕಾರ್ಯದರ್ಶಿ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ಕೆ. ರಾಮಸ್ವಾಮಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ. (ಭೂ ಮಂಜೂರಾತಿ-1) ಪಿ.ಆರ್. 572ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ೧೧೯೭

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಇ 140 ಎಂಆರ್ಇ 2012, ಬೆಂಗಳೂರು, ದಿನಾಂಕ: 11ನೇ ಜುಲೈ, 2012.

ಸರ್ಕಾರದ ಅಧಿಸೂಚನೆ ಸಂಖ್ಯೆ : ಸಇ 66 ಎಂಆರ್ಇ 2012 ದಿನಾಂಕ : 02/03/2012 ಕ್ರಮ ಸಂಖ್ಯೆ : (02) ರಲ್ಲಿ ಶ್ರೀಮತಿ ಕೋಮಲಾ ಕೋಂ ಜಗದೀಶ್, ದೇಖ್ಲ ಗ್ರಾಮ, ಕುಂಬರಡಿ ಅಂಚೆ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು, ಹಾಸನ ಜಿಲ್ಲೆ ಇವರನ್ನು ಸಕಲೇಶಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮ ನಿರ್ದೇಶನ ಸದಸ್ಯರನ್ನಾಗಿ ನೇಮಿಸಿದ್ದು, ಸದರಿಯವರು ಪ್ರಸ್ತುತ ಸಮಿತಿಯ ಸಭೆಯಲ್ಲಿ ಹಾಜರಾಗಲು ಸಾಧ್ಯವಾಗದ ಕಾರಣ ಸದಸ್ಯತ್ವವನ್ನು ರದ್ದುಪಡಿಸುವಂತೆ ಕೋರಿರುವ ಹಿನ್ನೆಲೆಯಲ್ಲಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 11(1) (ix)ರನ್ವಯ ಶ್ರೀಮತಿ ಕೋಮಲಾ ಕೋಂ ಜಗದೀಶ್, ದೇಖ್ಲ ಗ್ರಾಮ, ಕುಂಬರಡಿ ಅಂಚೆ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು, ಹಾಸನ ಜಿಲ್ಲೆ ಇವರ ನಾಮ ನಿರ್ದೇಶನವನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ. ಕೆ. ವಾಸುದೇವ ಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ-1

ಸಹಕಾರ ಇಲಾಖೆ.

ಪಿ.ಆರ್. 573

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 98 ಎಲ್‌ಡಬ್ಲ್ಯೂಎ 2012, ಬೆಂಗಳೂರು, ದಿನಾಂಕ: 24ನೇ ಜುಲೈ, 2012.

ಕೈಗಾರಿಕಾ ವಿವಾದಗಳ ಅಧಿನಿಯಮ 1947 (ಕೇಂದ್ರಾಧಿನಿಯಮ 1947ರ ಸಂಖ್ಯೆ : 14) ಕಲಂ 2 ಖಂಡ (ಎನ್) ಉಪಖಂಡ (6)ರ ಮೇರೆಗೆ ``ಇಂಡಸ್ಟ್ರಿ ಜನರೇಟಿಂಗ್ ಪವರ್'' ಉದ್ಯಮವನ್ನು ಅಧಿಸೂಚನೆ ಸಂಖ್ಯೆ : ಕಾಇ 130 ಎಲ್‌ಡಬ್ಲ್ಯೂಎ 2011, ದಿನಾಂಕ : 24-02-2012ರಲ್ಲಿ ಸಾರ್ವಜನಿಕ ಉಪಯುಕ್ತ ಸೇವೆ ಎಂಬುದಾಗಿ ದಿನಾಂಕ : 03-01-2012 ರಿಂದ ಮುಂದಿನ 6 ತಿಂಗಳ ಅವಧಿಯವರೆಗೆ ಜಾರಿಯಲ್ಲಿರುವಂತೆ ಘೋಷಿಸಲಾಗಿತ್ತು.

ಸಾರ್ವಜನಿಕ ಹಿತದೃಷ್ಟಿಯಿಂದ ಸದರಿ ಅವಧಿಯನ್ನು ಮುಂದಿನ 6 ತಿಂಗಳ ಅವಧಿಗೆ ವಿಸ್ತರಿಸಲು ಸರ್ಕಾರವು ಪರಿಗಣಿಸಿದೆ. ಆದುದರಿಂದ, ಕೈಗಾರಿಕಾ ವಿವಾದಗಳ ಅಧಿನಿಯಮ 1947 (ಕೇಂದ್ರಾಧಿನಿಯಮ 1947ರ ಸಂಖ್ಯೆ : 14) ಕಲಂ 2 ಖಂಡ (ಎನ್) ಉಪಖಂಡ (6)ರ ಮೇರೆಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ``ಇಂಡಸ್ಟ್ರಿ ಜನರೇಟಿಂಗ್ ಪವರ್'' ಉದ್ಯಮವನ್ನು ಸಾರ್ವಜನಿಕ ಉಪಯುಕ್ತ ಸೇವೆ ಎಂಬುದಾಗಿ ದಿನಾಂಕ :

03-07-2012 ರಿಂದ ಮುಂದಿನ 6 ತಿಂಗಳ ಅವಧಿಯವರೆಗೆ ಜಾರಿಯಲ್ಲಿರುವಂತೆ ವಿಸ್ತರಿಸಿ ಘೋಷಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಪ್ರಭುದೇವ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಾರ್ಮಿಕ ಇಲಾಖೆ.

ಪಿ.ಆರ್. 575

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಾರಿಇ 25 ಸಾಸಂಸೇ 2012, ಬೆಂಗಳೂರು, ದಿನಾಂಕ: 02ನೇ ಆಗಸ್ಟ್, 2012.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿಯಮಾವಳಿಗಳು, 1961ರ ನಿಯಮ 3ರ ಉಪನಿಯಮ (2)ರಂತೆ ಶ್ರೀ ಆರ್. ಅಶೋಕ, ಉಪ ಮುಖ್ಯಮಂತ್ರಿಗಳು ಗೃಹ ಮತ್ತು ಸಾರಿಗೆ ಇವರನ್ನು (1) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (2) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳ ನಿರ್ದೇಶಕ ಮಂಡಳಿಯಲ್ಲಿ ಅಧಿಕಾರಯುತ ನಿರ್ದೇಶಕರನ್ನಾಗಿ ಹಾಗೂ ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ 1950ರ (1950ರ ಕೇಂದ್ರ ಅಧಿನಿಯಮ 64) ಕಲಂ 5ರ ಉಪಕಲಂ 2 ರಂತೆ (1) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, (2) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳ ಮಂಡಳಿ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ರಾಮಚಂದ್ರ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 576

ಸಾರಿಗೆ ಇಲಾಖೆ೧೧೯೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ಭಾಗ - ೪ಎ

TRANSPORT SECRETARIAT

NOTIFICATION

NO. SARIE 11 SAENI 2012, Bangalore, Dated: 03rd August, 2012.

In exercise of the powers conferred by sub-clause (1) of section-16 of the Karnataka Motor Vehicle Taxation Act, 1957 (Karnataka Act 35 of 1957) the Government of Karnataka, hereby exempt from payment of Road Tax and also payment of Registration fee to the following Personal vehicle of Dr. Silvia Hostettler, Counsellor of Consulate General of Switzerland.

Name of the Foreign

Representation : Dr. Silvia Hostettler, Counsellor of Consulate General

Personal Vehicle : 05 CC 4A (Toyota, Innova)

(*Vehicle No. to be assigned by the jurisdictional R.T.O.)

By Order and in the Name of the Governor of Karnataka,

RAMACHANDRA,

Under Secretary to Government,

Transport Department.

P.R : 577

HOME SECRETARIAT

NOTIFICATION

NO. HD 301 SST 2012, Bangalore, Dated : 12th July, 2012.

In exercise of the powers conferred by sub-clause (a) of clause (8) of Section 2 of the Official Secrets Act, 1923 (Central Act XIX of 1923) read with Notification No. 21/20/62 Poll (1), dated 4th May, 1963 of the Government of India, Ministry of Home Affairs, New Delhi, the Government of Karnataka hereby declares that the place specified in column (2) of the Schedule below with the area boundaries and survey no. specified in columns (3), (4) and (6) of the respective villages specified in column (5) shall be prohibited place for the purpose of the said Act.

SCHEDULE

Sl. No. Name of the Place Total Area Boundaries Village Survey No.
(1) (2) (3) (4) (5) (6)
1 Indian Strategic Petroleum Reserves Ltd., Chandrahas Nagar, Permude Post, Mangalore-574509 100.02 Acres North : Land belonging to OMPL South : MSEZ land East : MSEZ land West : Corridar Road Bajpe 68/1A, 68/1BP, 68/1 CP, 68/1 DP, 68/1 E1 AP
Permude 115/1 P, 115/2, 115/3, 117/1P, 117/2, 118/P, 157/1D1AP, 157/1D1B, 157/1D1C, 195/3A, 195/3BP, 195/4P, 195/5, 195/6, 195/7, 210/1P, 222/2AP, 222/2BP, 223/4P.
Kalavaru 1/P, 20/1P, 20/2, 21/1P, 21/2, 21/3P, 21/4P, 21/5, 21/6, 21/7P, 21/8, 21/9, 21/10AP, 21/10B, 21/13P, 21/14, 21/16P, 76/1AP, 76/1B, 76/2, 76/3, 80/1, 80/2AP, 81/2, 81/1, 83/1, 83/2, 85/1, 85/2, 85/3, 85/4, 85/5, 85/6, 89/1P, 89/2P, 89/4P, 21/15, 102/1, 102/2, 102/3, 102/4.

By Order and in the Name of the Governor of Karnataka,

PRAKASH Y.K,

Under Secretary to Government,

Home Department [Law & Order] P.R. 538

ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ೧೧೯೯

ಕನ್ನಡ, ಸಂಸ್ಕøತಿ ಮತ್ತು ವಾರ್ತಾ ಸಚಿವಾಲಯ

ಸಂಖ್ಯೆ: ಕಸಂವಾಪ್ರ 149 ಕೆಎಂಯು 2011 ಬೆಂಗಳೂರು, ದಿನಾಂಕ: 05-04-2012

ಅಧಿಸೂಚನೆ

ಕರ್ನಾಟಕ ಸರ್ಕಾರವು ಪರಿವಿಡಿಯಲ್ಲಿ ವಿವರಿಸಿರುವ ವಿಜಾಪುರ ನಗರದಲ್ಲಿರುವ ಚಬುಕ್ ಸವಾರನ ದರ್ಗಾವನ್ನು ರಾಜ್ಯ ಸಂರಕ್ಷಿತ ಸ್ಮಾರಕವೆಂದು ಘೋಷಿಸುವ ಬಗ್ಗೆ. ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ನಿವೇಶನಗಳು ಮತ್ತು ಅವಶೇಷಗಳು ಅಧಿನಿಯಮ, 1961ರ ಕಲಂ 4(1)ರ (ಕರ್ನಾಟಕ ಆಕ್ಟ್ ಆಫ್ 1962) ಅಡಿಯಲ್ಲಿ ರಾಜ್ಯ ಸಂರಕ್ಷಿತ ಸ್ಮಾರಕವನ್ನಾಗಿ ಘೋಷಿಸಲು ಅಭಿಪ್ರಾಯಪಟ್ಟಿದೆ. ಈ ಉದ್ದೇಶದಿಂದ ಸದರಿ ದೇವಸ್ಥಾನವನ್ನು ರಾಜ್ಯ ಸಂರಕ್ಷಿತ ಸ್ಮಾರಕವನ್ನಾಗಿ ಘೋಷಿಸಲು 60 ದಿನಗಳ ಅವಧಿಯೊಳಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಈ ಸಂಬಂಧ ಕುರಿತಾದ ಆಕ್ಷೇಪಣೆಗಳನ್ನು ಸರ್ಕಾರದ ಕಾರ್ಯದರ್ಶಿಗಳು, ಕನ್ನಡ, ಸಂಸ್ಕøತಿ ಮತ್ತು ವಾರ್ತಾ ಇಲಾಖೆ ವಿಕಾಸ ಸೌಧ, ಬೆಂಗಳೂರು-560 001 ಇವರಿಗೆ ಸಲ್ಲಿಸಬಹುದು.

ಈ ಸ್ಮಾರಕವನ್ನು ರಾಜ್ಯ ಸಂರಕ್ಷಿತ ಸ್ಮಾರಕವೆಂದು ಘೋಷಿಸುವ ಬಗ್ಗೆ ಯಾವುದೇ ರೀತಿಯ ಆಕ್ಷೇಪಣೆಗಳು ಬಾದಿತದಾರರಿಂದ ಮೇಲ್ಕಾಣಿಸಿದ ಅವಧಿಯೊಳಗೆ ರಾಜ್ಯ ಸರ್ಕಾರವು ಸ್ವೀಕರಿಸಿದಲ್ಲಿ ಸರ್ಕಾರವು ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದು. ತಡವಾಗಿ ಸ್ವೀಕರಿಸಲಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎನ್,ಗೀತಾಕುಮಾರಿ

ಸರ್ಕಾರದ ಅಧೀನ ಕಾರ್ಯದರ್ಶಿ

ಕನ್ನಡ, ಸಂಸ್ಕøತಿ ಮತ್ತು ವಾರ್ತಾ ಇಲಾಖೆ (ಆಡಳಿತ ಕನ್ನಡ)

ಪ ರಿ ವಿ ಡಿ

(ಅಧಿಸೂಚನೆ ಸಂಖ್ಯೆ; ಕಸಂವಾಪ್ರ 149 ಕೆಎಂಯು 2011 ದಿನಾಂಕ: 05-04-2012)

್ಲ ಜಿಲೆ ತಾಲ್ಲೂಕು ಇರುವ ಸ ಇರುವ ಸ ಇರುವ ಸ ಇರುವ ಸ ್ಥಳ ಸ್ಮಾರಕ/ಕಟ್ಟಡದ ಹ ಹ ಹ ಹ ೆಸರು ಸ ಸ ಂರಕ ್ಷಣೆಗೆ ್ಷಣೆಗೆ ಸ ಸ ್ಷಣೆಗೆ ್ಷಣೆಗೆ ಒಳಪಡಬಹುದಾದ ಒಳಪಡಬಹುದಾದ ಒಳಪಡಬಹುದಾದ ಒಳಪಡಬಹುದಾದ ರೆವಿನ್ಯೂ ನಿವೇಶನ ವಿಸ್ತೀರ್ಣ ಮೇರೆಗಳು (ಚಕ್ಕುಬಂದಿ) ಒಡೆತನ ಷರಾಷರಾಷರಾಷರಾ
1 2 3 4 5 6 7 8 9
ವಿಜಾಪೂರ ಜಿಲೆ ್ಲ ವಿಜಾಪೂರ ತಾಲ್ಲೂಕು ಮಹಾಲ ಬಾಗಾಯತ ಗ್ರಾಮ ಚ ಬುಕ್ ಸ ವಾರನ ದರ್ಗಾ ಈ ದರ್ಗಾ ರೆವಿನ್ಯೂ ಸ ರ್ವೆ ನಂ.36 ಕೆ ್ಷೕತ ್ರ 24ಎ 25 ಗುಂಟೆಯಲ್ಲಿದೆ ಚ ಬುಕ್ ಸವಾರನ ದರ್ಗಾದ ರೆವಿನ್ಯೂ ಸ ರ್ವೆ ನಂ.36 ಕೆ ್ಷೕತ ್ರ 24ಎ 25 ಗುಂಟೆಯಲ್ಲಿದೆ ಒಟ್ಟು ಒಟ್ಟು 5 345 ಚ .ಅ. ಪೂರ್ವಕೆ ಪೂರ್ವಕೆ ಪೂರ್ವಕೆ ಪೂರ್ವಕೆ ್ಕ : ಸ ರ್ವೆ ನಂ. 36ರ ಉಳಿದ ಭಾಗ ಈ ಸ್ಮಾರಕವು ಕರ್ನಾಟಕ ವಕ್ಪ್ ಮಂಡಳಿ, ಬ ೆಂಗಳೂರು, ಇವರ ಆಡಳಿತಕೆ ್ಕ ಒಳಪಟ್ಟಿರುತ ್ತದೆ. 17ನೇ ಶತಮಾನದ ಐತಿಹಾಸಿಕವಾಗಿ ಮಹತ ್ವವುಳ ್ಳ ದರ್ಗಾ ಆಗಿರುತ ್ತದೆ.
ಪಶ್ಚಿಮಕೆ ಪಶ್ಚಿಮಕೆ ಪಶ್ಚಿಮಕೆ ಪಶ್ಚಿಮಕೆ ್ಕ ಸ ರ್ವೆ ನಂ. 31
ಉತ ಉತ ್ತರಕೆ ್ತರಕೆ ಉತ ಉತ ್ತರಕೆ ್ತರಕೆ ್ಕ: ಸ ರ್ವೆ ನಂ. 37
ದಕ್ಷಿಣಕೆ ದಕ್ಷಿಣಕೆ ದಕ್ಷಿಣಕೆ ದಕ್ಷಿಣಕೆ ್ಕ : ಸ ರ್ವೆ ನಂ. 34
5345 ಚ ಚ .ಅ. ಚ ಚ

ಪಿ.ಆರ್. 554

ಎನ್,ಗೀತಾಕುಮಾರಿ ಸರ್ಕಾರದ ಅಧೀನ ಕಾರ್ಯದರ್ಶಿ ಕನ್ನಡ, ಸಂಸ್ಕøತಿ ಮತ್ತು ವಾರ್ತಾ ಇಲಾಖೆ (ಆಡಳಿತ ಕನ್ನಡ)೧೨೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ಭಾಗ - ೪ಎ

ಕನ್ನಡ, ಸಂಸ್ಕøತಿ ಮತ್ತು ವಾರ್ತಾ ಸಚಿವಾಲಯ

ಸಂಖ್ಯೆ: ಕಸಂವಾಪ್ರ 66 ಕೆಎಂಯು 2009 ಬೆಂಗಳೂರು, ದಿನಾಂಕ: 21.05.2011

ಅಧಿಸೂಚನೆ

ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ನಿಯಮಗಳು 2010ರ ಕರಡನ್ನು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಅಧಿನಿಯಮ, 2002ರ (2003ರ ಕರ್ನಾಟಕ ಅಧಿನಿಯಮ ಸಂಖ್ಯೆ 18) 33ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಅಗತ್ಯಪಡಿಸಿದಂತೆ ದಿನಾಂಕ 06.01.2011ರ ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯ ಭಾಗ-4ಎ ರಲ್ಲಿ ಅಧಿಸೂಚನೆ ಸಂಖ್ಯೆ ಕಸಂವಾಪ್ರ 66 ಕೆಎಂಯು 2009, ದಿನಾಂಕ 09.12.2010 ರಲ್ಲಿ ಪ್ರಕಟಿಸಿ, ಅದರಿಂದ ಬಾಧಿತರಾಗುವ ಸಂಭವವಿರುವ ಎಲ್ಲಾ ವ್ಯಕ್ತಿಗಳಿಂದ ಅಧಿಕೃತ ರಾಜ್ಯಪತ್ರದಲ್ಲಿ ಆ ಕರಡು ನಿಯಮಗಳು ಪ್ರಕಟವಾದ ದಿನಾಂಕದಿಂದ 15 ದಿನಗಳ ಒಳಗಾಗಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಿದ್ದರಿಂದ;

ಮತ್ತು ಸದರಿ ರಾಜ್ಯ ಪತ್ರವನ್ನು ದಿನಾಂಕ 06.01.2011 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದುದರಿಂದ;

ಮತ್ತು ಆ ಬಗ್ಗೆ ಯಾವುದೇ ಆಕ್ಷೇಪಣೆ ಮತ್ತು ಸಲಹೆಗಳು ಸ್ವೀಕೃತವಾಗಿಲ್ಲದಿರುವುದರಿಂದ;

ಈಗ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಅಧಿನಿಯಮ 2002ರ (2003 ರ ಕರ್ನಾಟಕ ಅಧಿನಿಯಮ ಸಂಖ್ಯೆ 18) 33ನೇ ಪ್ರಕರಣದ (1) ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಮುಂದಿನ ನಿಯಮಗಳನ್ನು ರಚಿಸುತ್ತದೆ ಎಂದರೆ:-

ನಿಯಮಗಳು

ಅಧ್ಯಾಯ -I

ಪ್ರಾರಂಭಿಕ

1. ಶೀರ್ಷಿಕೆ ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ನಿಯಮಗಳು, 2010 ಎಂದು ಕರೆಯತಕ್ಕದ್ದು.

(2) ಅವು, ರಾಜ್ಯಪತ್ರದಲ್ಲಿ ಅವುಗಳನ್ನು ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ಪರಿಭಾಷೆಗಳು.- ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-

(i) "ಅಧಿನಿಯಮ" ಎಂದರೆ, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಅಧಿನಿಯಮ, 2002 (2003ರ ಕರ್ನಾಟಕ ಅಧಿನಿಯಮ ಸಂಖ್ಯೆ 18);

(ii) "ನಮೂನೆ" ಎಂದರೆ, ಈ ನಿಯಮಗಳಿಗೆ ಅನುಬಂಧಿಸಲಾದ ನಮೂನೆ;

(iii) "ಸರ್ಕಾರ" ಎಂದರೆ, ಕರ್ನಾಟಕ ರಾಜ್ಯ ಸರ್ಕಾರ;

(iv) "ಪ್ರಕರಣ" ಎಂದರೆ, ಅಧಿನಿಯಮದ ಪ್ರಕರಣ;

(v) "ಭಾ.ಪು.ಸ" ಎಂದರೆ, ಭಾರತ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ);

(vi) "ಪು.ಮ.ವ.ಸಂ" ಎಂದರೆ, ಪುರಾತತ್ವ ಮತ್ತು ವಸ್ತು ಸಂಗ್ರಹಾಲಯಗಳ ಇಲಾಖೆ, (ಡಿಎಎಂ) ಕರ್ನಾಟಕ ಸರ್ಕಾರ.

ಅಧ್ಯಾಯ -II

ಪ್ರಾಧಿಕಾರದ ಭದ್ರತಾ ದಳ

3. ಪ್ರಾಧಿಕಾರದ ಭದ್ರತಾ ದಳ.- ಪ್ರಾಧಿಕಾರದ ಭದ್ರತಾ ದಳವು, ಅಧ್ಯಕ್ಷರ ಅಧೀಕ್ಷಣೆ ಮತ್ತು ನಿಯಂತ್ರಣದ ಅಡಿಯಲ್ಲಿ ಅಧಿನಿಯಮದಲ್ಲಿ ಮತ್ತು ಈ ನಿಯಮಗಳಲ್ಲಿ ಹೇಳಿರುವ ಭದ್ರತಾ ವಿಷಯಗಳಿಗೆ ಸಂಬಂಧಪಡುವಷ್ಟರಮಟ್ಟಿಗೆ ಪ್ರಾಧಿಕಾರಕ್ಕೆ ನೆರವು ನೀಡತಕ್ಕದ್ದು.

4. ಪ್ರಾಧಿಕಾರದ ಭದ್ರತಾ ದಳದ ಮುಖ್ಯಸ್ಥನ ಕರ್ತವ್ಯಗಳು.- ಅಧಿನಿಯಮದ ಅಥವಾ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮದ (1963ರ ಕರ್ನಾಟಕ ಅಧಿನಿಯಮ ಸಂಖ್ಯೆ 11) ಉಪಬಂಧಗಳನ್ನು ಅಥವಾ ಅದರ ಮೇರೆಗೆ ರಚಿಸಿದ ಯಾವುವೇ ನಿಯಮಗಳನ್ನು ಅಥವಾ ಉಪ-ವಿಧಿಗಳನ್ನು ಉಲ್ಲಂಘಿಸಿ ಯಾವುದೇ ಅಪರಾಧ ಎಸಗಲು ಮಾಡಿದ ಪ್ರಯತ್ನಗಳ ಬಗ್ಗೆ ಅಧ್ಯಕ್ಷರಿಗೆ ಕೂಡಲೇ ಮಾಹಿತಿ ನೀಡಿ ವರದಿಗಳನ್ನು ಕಳುಹಿಸುವುದು ಪ್ರಾಧಿಕಾರ ಭದ್ರತಾ ದಳದ ಮುಖ್ಯಸ್ಥನ ಕರ್ತವ್ಯವಾಗಿರತಕ್ಕದ್ದು.

5. ಪ್ರಾಧಿಕಾರದ ಭದ್ರತಾ ದಳದ ಅಧಿಕಾರಗಳು ಮತ್ತು ಪ್ರಕಾರ್ಯಗಳು.- ಈ ಮುಂದಿನವುಗಳು ಪ್ರಾಧಿಕಾರದ ಭದ್ರತಾ ದಳದ ಕರ್ತವ್ಯಗಳಾಗಿರತಕ್ಕದ್ದು,-ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ೧೨೦೧ (1) (ಎ) ಅತಿಕ್ರಮಣವನ್ನು ತಡೆಗಟ್ಟುವುದನ್ನೂ ಒಳಗೊಂಡಂತೆ ಪ್ರಾಧಿಕಾರಕ್ಕೆ ಸೇರಿದ ಯಾವುದೇ ಭೂಮಿಯ ಮೇಲಿನ ಅನಧಿಕೃತ ಅಧಿಭೋಗಕ್ಕೆ;

(ಬಿ) ಪ್ರಾಧಿಕಾರಕ್ಕೆ ಸೇರಿದ ಭೂಮಿಯಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಮತ್ತು ಲೇಔಟ್‌ಗಳ ನಿರ್ಮಾಣಕ್ಕೆ;

(ಸಿ) ವಿಭಾಗೀಯ ವಿನಿಯಮಗಳ ಉಪಬಂಧಗಳನ್ನು ಅಥವಾ ಪ್ರಾಧಿಕಾರವು ಅನುಮೋದಿಸಿದ ನಕ್ಷೆಯನ್ನು ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳಿಗೆ;

(ಡಿ) ಸ್ಥಳೀಯ ಯೋಜನಾ ಪ್ರದೇಶದೊಳಗೆ ಪ್ರಾಧಿಕಾರದ ಪೂರ್ವಾನುಮೋದನೆ ಪಡೆಯದೆ, ಈ ಅಧಿನಿಯಮದ ಮತ್ತು ಈ ಮುಂದಿನ ಅಧಿನಿಯಮಗಳ, ಎಂದರೆ:-

(i) ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ ಸಂಖ್ಯೆ 11)

(ii) ಕರ್ನಾಟಕ ಪೌರಸಭೆಗಳ ಅಧಿನಿಯಮ, 1964 (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 22) (iii) ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14) (iv) ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) - ಇವುಗಳ ಮೇರೆಗೆ ಅಪರಾಧವೆನಿಸುವ ಭೂ ಬಳಕೆಯ ಬದಲಾವಣೆ ಎಂದು ಪರಿಗಣಿತವಾಗುವ ನಿರ್ಮಾಣಗಳಿಗೆ, - ಸಂಬಂಧಪಟ್ಟಂಥ ಯಾವುದೇ ಅಪರಾಧ ಮಾಡುವುದನ್ನು ಅಥವಾ ಮಾಡಲು ಪ್ರಯತ್ನಿಸುವುದನ್ನು ಅಥವಾ ಅಪರಾಧ ಮಾಡಲು ಒಳಸಂಚು ಮಾಡುವುದನ್ನು ಪತ್ತೆಹಚ್ಚುವುದು ಮತ್ತು ಅಪರಾಧದಲ್ಲಿ ತೊಡಗಿರುವ ವ್ಯಕ್ತಿಗಳನ್ನು ಗುರುತಿಸುವುದು ಅವರ ಬಗ್ಗೆ ತನಿಖೆ ನಡೆಸುವುದು ಮತ್ತು ಕ್ರಮ ಜರುಗಿಸುವುದು.

(2) ಪ್ರಾಧಿಕಾರದ ಭದ್ರತಾ ದಳವು, ಪ್ರಾಧಿಕಾರವು ನಿರ್ಧರಿಸಿದಂತೆ ಅವಶ್ಯವಿರುವೆಡೆಗಳಲ್ಲೆಲ್ಲಾ ಸ್ಮಾರಕಗಳ ಸುತ್ತಮುತ್ತಲೂ ರಾತ್ರಿ ಗಸ್ತಿಗೆ ವ್ಯವಸ್ಥೆ ಮಾಡತಕ್ಕದ್ದು.

(3) ಭದ್ರತಾ ದಳವು, ಭಾರತ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಭದ್ರತಾ ವಿಭಾಗದೊಂದಿಗೆ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯಗಳ ಇಲಾಖೆಯೊಂದಿಗೆ, ಸ್ಥಳೀಯ ಪ್ರಾಧಿಕಾರದೊಂದಿಗೆ ಮತ್ತು ಸಂಬಂಧಪಟ್ಟ ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸತಕ್ಕದ್ದು ಮತ್ತು ಸಹಕರಿಸತಕ್ಕದ್ದು.

(4) ಭದ್ರತಾ ದಳದ ಮುಖ್ಯಸ್ಥನು, ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ) ಅಧಿನಿಯಮ, 1974ರ ಮೇರೆಗೆ ಕ್ರಮ ಕೈಗೊಳ್ಳುವುದಕ್ಕಾಗಿ ಅಧಿನಿಯಮದ 37ನೇ ಪ್ರಕರಣದ (2)ನೇ ಉಪ-ಪ್ರಕರಣದ (ಎ) ಖಂಡದ ಮೇರೆಗೆ ಸಕ್ಷಮ ಅಧಿಕಾರಿಯೆಂದು ಘೋಷಿಸಲಾದ ಅಧಿಕಾರಿಯಾಗಿರತಕ್ಕದ್ದು.

(5) ಪ್ರಾಧಿಕಾರ ಭದ್ರತಾ ದಳವು, ಭದ್ರತಾ ವಿಷಯಗಳ ಮೇಲೆ ಕಾಲಕಾಲಕ್ಕೆ ತೆಗೆದುಕೊಳ್ಳುವ ತೀರ್ಮಾನಗಳನ್ನು ಜಾರಿಗೆ ತರಲು ಪ್ರಾಧಿಕಾರಕ್ಕೆ ನೆರವಾಗತಕ್ಕದ್ದು.

(6) ಪ್ರಾಧಿಕಾರ ಭದ್ರತಾ ದಳವು, ಸ್ಥಳೀಯ ಯೋಜನಾ ಪ್ರದೇಶದ ಗಡಿಗಳನ್ನು ಕಾಪಾಡಿಕೊಂಡು ಬರುವಲ್ಲಿ ಪ್ರಾಧಿಕಾರಕ್ಕೆ ನೆರವಾಗತಕ್ಕದ್ದು.

(7) ಪ್ರಾಧಿಕಾರಕ್ಕೆ ನಿಯತಕಾಲಿಕ ವಿವರ ಪತ್ರಗಳು ಅಥವಾ ಪ್ರಗತಿ ವರದಿಗಳನ್ನು ಕಳುಹಿಸುವುದು ಪ್ರಾಧಿಕಾರ ಭದ್ರತಾ ದಳದ ಮುಖ್ಯಸ್ಥನ ಕರ್ತವ್ಯವಾಗಿರತಕ್ಕದ್ದು.

(8) ಅಧಿನಿಯಮದ ಮತ್ತು ಈ ನಿಯಮಗಳ ಉದ್ದೇಶಗಳನ್ನು ಸಾಧಿಸುವ ದೃಷ್ಟಿಯಿಂದ ಪ್ರಾಧಿಕಾರದ ಭದ್ರತಾ ದಳದ ಮುಖ್ಯಸ್ಥನು, ಭದ್ರತಾ ದಳವು ಸದಾ ಜಾಗೃತವಾಗಿದೆಯೇ ಮತ್ತು ಅದರ ಆರಕ್ಷಕರ ಮತ್ತು ಸಾಧನ ಸಾಮಗ್ರಿಗಳ ಸ್ಥಿತಿ ಉತ್ತಮವಾಗಿದೆಯೇ ಎಂಬುದನ್ನು ಗಮನಿಸತಕ್ಕದ್ದು.

ಅಧ್ಯಾಯ -III

ರಾಜ್ಯಮಟ್ಟದ ಸಲಹಾ ಸಮಿತಿ

6. ಸಭೆಯ ನೋಟೀಸು.- (1) ರಾಜ್ಯಮಟ್ಟದ ಸಲಹಾ ಸಮಿತಿಯ ಕಾರ್ಯಕಲಾಪ ನಿರ್ವಹಣೆಗಾಗಿ ಸಭೆಯನ್ನು, ಅಧ್ಯಕ್ಷನು ಅಥವಾ ಅಧ್ಯಕ್ಷನ ವ್ಯಕ್ತ ಅನುಮೋದನೆ ಪಡೆದು ಸದಸ್ಯ ಕಾರ್ಯದರ್ಶಿಯು ಕರೆಯತಕ್ಕದ್ದು.

೧೨೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ಭಾಗ - ೪ಎ

(2) ಅಂಥ ಸಭೆಯ ದಿನಾಂಕ, ಸಮಯ ಮತ್ತು ಸ್ಥಳವನ್ನು ನಿರ್ದಿಷ್ಟಪಡಿಸುವ ಪೂರ್ಣ ಏಳು ದಿನಗಳ ಸೂಚನೆಯನ್ನು ಮತ್ತು ಅಲ್ಲಿ ನಡೆಸಬೇಕಾಗಿರುವ ಕಾರ್ಯಕಲಾಪಗಳ ಕಾರ್ಯಸೂಚಿಯನ್ನು, ಸದಸ್ಯ ಕಾರ್ಯದರ್ಶಿಯು ಸಂಬಂಧಪಟ್ಟವರಿಗೆ ನೀಡತಕ್ಕದ್ದು.

7. ಕೋರಂ.- ಕೋರಂನ ಪಾಲನೆಗಾಗಿ, ಸಭೆಯಲ್ಲಿ ಹಾಜರಿರುವ ಸದಸ್ಯರ ಸಂಖ್ಯೆಯು, ಒಟ್ಟು ಸಂಖ್ಯೆಯ ಮೂರನೇ ಒಂದಕ್ಕಿಂತ (1/3) ಕಡಿಮೆ ಇದ್ದರೆ, ಪೀಠಾಸೀನ ಅಧಿಕಾರಿಯು, 15 ನಿಮಿಷಗಳ ಕಾಲ ಕಾದುನೋಡಿ ಆ ತರುವಾಯ, ಆತನು ಯುಕ್ತವಾಗಿ ನಿಗದಿಪಡಿಸಬಹುದಾದಂಥ ಮುಂದಿನ ಸಮಯಕ್ಕೆ ಅಥವಾ ಇನ್ನಾವುದೇ ಮುಂದಿನ ದಿನಕ್ಕೆ ಸಭೆಯನ್ನು ಮುಂದೂಡತಕ್ಕದ್ದು ಮತ್ತು ಹಾಗೆ ಸಭೆಯನ್ನು ಮುಂದೂಡಿದ ಬಗ್ಗೆ ನೋಟೀಸನ್ನು ಆದಷ್ಟು ಬೇಗ ಸಂಬಂಧಪಟ್ಟ ಸದಸ್ಯರಿಗೆ ನೀಡತಕ್ಕದ್ದು ಮತ್ತು ಮೂಲ ಸಭೆಯಲ್ಲಿ ಕೋರಂ ಇದ್ದಿದ್ದರೆ, ಅದರ ಮುಂದೆ ಯಾವ ಕಾರ್ಯಕಲಾಪವನ್ನು ತರಬೇಕಾಗಿತ್ತೋ ಆ ಕಾರ್ಯಕಲಾಪವನ್ನು ಮುಂದೂಡಿದ ಸಭೆಯ ಮುಂದೆ ತರತಕ್ಕದ್ದು ಮತ್ತು ಅಂಥ ಸಭೆಯಲ್ಲಿ ಕೋರಂ ಇಲ್ಲದಿದ್ದಾಗ್ಯೂ ವಿಲೆ ಮಾಡಬಹುದು.

8. ಪೀಠಾಸೀನ ಅಧಿಕಾರಿ.- ಅಧ್ಯಕ್ಷನು ಪ್ರತಿಯೊಂದು ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು. ಯಾವುದೇ ಕಾರಣಕ್ಕಾಗಿ ಅಧ್ಯಕ್ಷನು ಸಭೆಗೆ ಹಾಜರಾಗಲು ಸಾಧ್ಯವಾಗದಿದ್ದರೆ, ಸಭೆಯಲ್ಲಿ ಹಾಜರಿರುವ ಸಹ-ಅಧ್ಯಕ್ಷನು ರಾಜ್ಯಮಟ್ಟದ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು.

9. ಭಾಗವಹಿಸುವುದು.- ಸಲಹಾ ಸಮಿತಿಯ ಯಾರೇ ಸದಸ್ಯನು, ತಾನೇ ಸ್ವತಃ ಅಥವಾ ಆತನ ಪಾಲುದಾರನು ಅಥವಾ ಸಂಬಂಧಿಕರು ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಷೇರು ಅಥವಾ ಹಿತಾಸಕ್ತಿಯನ್ನು ಹೊಂದಿರುವ ವಿಷಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸತಕ್ಕದ್ದಲ್ಲ ಅಥವಾ ಮತ ನೀಡತಕ್ಕದ್ದಲ್ಲ.

10. ವ್ಯವಹರಣೆಗಳ ದಾಖಲೆ.- (1) ರಾಜ್ಯಮಟ್ಟದ ಸಲಹಾ ಸಮಿತಿಯ ಸಭೆಯ ವ್ಯವಹರಣೆಗಳನ್ನು ದಾಖಲು ಮಾಡತಕ್ಕದ್ದು ಮತ್ತು ಅಧ್ಯಕ್ಷನ ಅನುಮೋದನೆ ಪಡೆದ ತರುವಾಯ, ಹದಿನೈದು ದಿನಗಳ ಅವಧಿಯೊಳಗೆ ಸದಸ್ಯ-ಕಾರ್ಯದರ್ಶಿಯು ಅದನ್ನು ಸಂಬಂಧಪಟ್ಟ ಸದಸ್ಯರಿಗೆ ಕಳುಹಿಸುವ ವ್ಯವಸ್ಥೆ ಮಾಡತಕ್ಕದ್ದು.

(2) ಯಾರೇ ಸದಸ್ಯನು, ವ್ಯವಹರಣೆಗಳ ದಾಖಲೆಯ ಬಗ್ಗೆ ಅಥವಾ ಅದರ ಯಾವುದೇ ಭಾಗದ ಬಗ್ಗೆ ಸಹಮತ ಹೊಂದಿರದಿದ್ದರೆ, ಆತನು, ಅದನ್ನು ಅಧ್ಯಕ್ಷರ ಗಮನಕ್ಕೆ ತರುವುದಕ್ಕಾಗಿ ಸದಸ್ಯ-ಕಾರ್ಯದರ್ಶಿಗೆ ಏಳು ದಿನಗಳ ಒಳಗಾಗಿ ಅದನ್ನು ತಿಳಿಸತಕ್ಕದ್ದು ಮತ್ತು ಅದರ ಮೇಲಿನ ಅಧ್ಯಕ್ಷರ ತೀರ್ಮಾನವು ಅಂತಿಮವಾದುದಾಗಿರತಕ್ಕದ್ದು.

11. ವಿಶೇಷ ಸಭೆ.- ಅಧ್ಯಕ್ಷರು, ರಾಜ್ಯಮಟ್ಟದ ಸಲಹಾ ಸಮಿತಿಯ ವಿಶೇಷ ಅಥವಾ ತುರ್ತು ಸಭೆಯನ್ನು ಕರೆಯುವುದು ಅವಶ್ಯಕವೆಂದು ಭಾವಿಸಿದರೆ, ಅವರು ಮೂರು ದಿನಗಳ ನೋಟೀಸನ್ನು ನೀಡುವ ಮೂಲಕ ಹಾಗೆ ಅಂಥ ಸಭೆಯನ್ನು ಕರೆಯಬಹುದು. ವಿಶೇಷ ಅಥವಾ ತುರ್ತು ಸಭೆಯನ್ನು ಕರೆದಾಗ 6 ರಿಂದ 10ರವರೆಗಿನ ನಿಯಮಗಳ ಉಪಬಂಧಗಳನ್ನು ಅನುಸರಿಸತಕ್ಕದ್ದು.

12. ಸರ್ಕಾರಕ್ಕೆ ಮಾಹಿತಿ.- ಸದಸ್ಯ-ಕಾರ್ಯದರ್ಶಿಯು ವ್ಯವಹರಣೆಗಳ ದಾಖಲೆಗಳನ್ನು ಮತ್ತು ಆ ಸಂಬಂಧದಲ್ಲಿನ ತೀರ್ಮಾನಗಳನ್ನು ಆದಷ್ಟು ಬೇಗ ಸರ್ಕಾರದ ಮುಂದೆ ಮಂಡಿಸತಕ್ಕದ್ದು.

13. ಪ್ರಯಾಣ ಭತ್ಯೆ ಮತ್ತು ದಿನಭತ್ಯೆ.- ಅನುಕ್ರಮವಾಗಿ 6ನೇ ಪ್ರಕರಣದ (2) ಮತ್ತು (3)ನೇ ಉಪ ಪ್ರಕರಣಗಳ ಮೇರೆಗಿನ ಸಭೆಗಾಗಿ ಆಹ್ವಾನಿಸಲಾದ ಸಹಯೋಜಿತ ಸದಸ್ಯರು ಮತ್ತು ತಜ್ಞರು ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಅನುಬಂಧ-ಎ ಪ್ರಕಾರ ಚಾಲ್ತಿ ದರಗಳಲ್ಲಿ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ಪಡೆಯಲು ಅರ್ಹರಾಗಿರತಕ್ಕದ್ದು.

ಅಧ್ಯಾಯ -IV

ಆಯುಕ್ತರ ಇತರ ಪ್ರಕಾರ್ಯಗಳು

14. ಆಯುಕ್ತರ ಇತರ ಪ್ರಕಾರ್ಯಗಳು.- ಅಧಿನಿಯಮದ 8ನೇ ಪ್ರಕರಣದ (2)ನೇ ಉಪ ಪ್ರಕರಣದ ಮೇರೆಗೆ ಗೊತ್ತುಪಡಿಸಿದ ಪ್ರಕಾರ್ಯಗಳ ಜೊತೆಗೆ ಈ ಮುಂದಿನ ಪ್ರಕಾರ್ಯಗಳನ್ನು ನೆರವೇರಿಸುವುದು ಆಯುಕ್ತರ ಕರ್ತವ್ಯವಾಗಿರತಕ್ಕದ್ದು, ಎಂದರೆ:-

(i) ಪ್ರಾಧಿಕಾರದ ಸಭೆಗಳನ್ನು ಕರೆಯುವುದು ಮತ್ತು ಅವುಗಳನ್ನು ನಡೆಸುವುದು ಮತ್ತು ಸಭೆಗಳ ನಡವಳಿಗಳನ್ನು ಸಿದ್ಧಪಡಿಸುವುದು ಮತ್ತು ಪ್ರಾಧಿಕಾರದ ನಿರ್ಣಯಗಳನ್ನು ಕಾರ್ಯಗತಗೊಳಿಸುವುದು:

ಪರಂತು, ಪ್ರಾಧಿಕಾರದ ಯಾವುದೇ ನಿರ್ಣಯವು ಅಧಿನಿಯಮದ ಅಥವಾ ಯಾವುದೇ ಇತರ ಕಾನೂನಿನ ಯಾವುದೇ ಉಪಬಂಧವನ್ನು ಅಥವಾ ಅಧಿನಿಯಮದ ಅಥವಾ ಇತರ ಯಾವುದೇ ಕಾನೂನ ಮೇರೆಗೆ ರಚಿಸಿದ ಅಥವಾ ಹೊರಡಿಸಿದ ಯಾವುದೇ ನಿಯಮ, ಅಧಿಸೂಚನೆ, ವಿನಿಯಮನ ಅಥವಾ ಉಪ-ವಿಧಿಯನ್ನು ಅಥವಾ ಸರ್ಕಾರವು ಹೊರಡಿಸಿದ ಯಾವುದೇ ಆದೇಶವನ್ನು ಉಲ್ಲಂಘಿಸುತ್ತದೆಯೆಂದು ಅಥವಾ ಪ್ರಾಧಿಕಾರದ ಹಾಗೂ ಪರಂಪರೆಯ ಹಿತಾಸಕ್ತಿಗೆ ಪ್ರತಿಕೂಲವಾಗಿದೆಯೆಂದು ಅಥವಾ ಬಾಧಕ ಉಂಟು ಮಾಡುತ್ತಿದೆಯೆಂದು ಆಯುಕ್ತರು ಅಭಿಪ್ರಾಯಪಟ್ಟರೆ, ಅವರು ನಿರ್ಣಯವನ್ನು ಅಂಗೀಕರಿಸಿದ ಹದಿನೈದು ದಿನಗಳ ಒಳಗಾಗಿ, ವಿಷಯವನ್ನು ಆದೇಶಗಳಿಗಾಗಿ ಸರ್ಕಾರಕ್ಕೆ ಉಲ್ಲೇಖಿಸತಕ್ಕದ್ದು ಮತ್ತು ತಾನು ತೆಗೆದುಕೊಂಡ ಕ್ರಮದ ಬಗ್ಗೆ ಪ್ರಾಧಿಕಾರದ ಮುಂದಿನ ಸಭೆಯಲ್ಲಿ ತಿಳಿಸತಕ್ಕದ್ದು ಮತ್ತು ಅಂಥ ಉಲ್ಲೇಖದ ಮೇಲೆ ಸರ್ಕಾರದ ಆದೇಶಗಳನ್ನು ಸ್ವೀಕರಿಸುವವರೆಗೆ, ಆಯುಕ್ತರು ನಿರ್ಣಯವನ್ನು ಕಾರ್ಯಗತಗೊಳಿಸಲು ಬದ್ಧರಾಗಿರತಕ್ಕದ್ದಲ್ಲ;

ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ೧೨೦೩

(ii) ಪ್ರಾಧಿಕಾರದ ಸಭೆಗಳ ನಡವಳಿಕೆಗಳ ಅಥವಾ ವ್ಯವಹರಣೆಗಳ ಒಂದು ಪ್ರತಿಯನ್ನು ಮತ್ತು ಸರ್ಕಾರವು ಕಾಲಕಾಲಕ್ಕೆ ಕೇಳಬಹುದಾದ ಯಾವುದೇ ವಿವರಪಟ್ಟಿಕೆಯನ್ನು ಅಥವಾ ಇತರ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸುವುದು;

(iii) ಸರ್ಕಾರವು ನಿರ್ದೇಶಿಸಬಹುದಾದಂಥ ಯೋಜನೆಗಳು ಮತ್ತು ಕಾಮಗಾರಿಗಳನ್ನು ಕಾರ್ಯರೂಪಕ್ಕೆ ತರುವುದು ಮತ್ತು ಅನುಷ್ಠಾನಗೊಳಿಸುವುದು ಮತ್ತು ಅದರ ಅವಶ್ಯಕ ವೆಚ್ಚಗಳನ್ನು ಭರಿಸುವುದು;

(iv) ಕಾರ್ಯನಿರ್ವಾಹಕ ಆಡಳಿತದ ವಿಷಯಗಳಲ್ಲಿ ಪ್ರಾಧಿಕಾರ ಭದ್ರತಾ ದಳವನ್ನು ಹೊರತುಪಡಿಸಿ, ಪ್ರಾಧಿಕಾರದ ಎಲ್ಲ ಅಧಿಕಾರಿಗಳು ಮತ್ತು ಉದ್ಯೋಗಿಗಳ ಮೇಲೆ ಮೇಲ್ವಿಚಾರಣೆ ನಡೆಸುವುದು ಮತ್ತು ನಿಯಂತ್ರಣ ಸಾಧಿಸುವುದು ಮತ್ತು ಅಂಥ ಅಧಿಕಾರಿಗಳ ಮತ್ತು ನೌಕರರ ಸೇವೆಗಳು ಮತ್ತು ಅವರ ವೇತನ, ವಿಶೇಷಾಧಿಕಾರಗಳು ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳನ್ನು ಪರಿಹರಿಸುವುದು;

(v) ಪ್ರಾಧಿಕಾರದ ಪತ್ರವ್ಯವಹಾರಗಳನ್ನು ನಡೆಸುವುದು ಮತ್ತು ನಿರ್ವಹಿಸುವುದು;

(vi) ಪ್ರಾಧಿಕಾರದ ಎಲ್ಲ ಅನುಮತಿಗಳು, ಆದೇಶಗಳು, ತೀರ್ಮಾನಗಳು, ನೋಟೀಸುಗಳು ಮತ್ತು ಇತರ ದಸ್ತಾವೇಜುಗಳಿಗೆ ಮತ್ತು ಪ್ರಾಧಿಕಾರದ ಆದೇಶಗಳಿಗೆ ತನ್ನ ಸಹಿ ಹಾಕುವ ಮೂಲಕ ಅಧಿಪ್ರಮಾಣೀಕರಿಸುವುದು;

(vii) ಪ್ರಾಧಿಕಾರದ ಲೆಕ್ಕಪತ್ರಗಳು ಮತ್ತು ದಾಖಲೆಗಳ ಮೇಲ್ವಿಚಾರಣೆ ಮಾಡುವುದು ಮತ್ತು ಅವುಗಳ ಮೇಲೆ ನಿಯಂತ್ರಣ ಹೊಂದಿರುವುದು.

ಅಧ್ಯಾಯ -V

ಯೋಜನಾ ಅಧಿಕಾರಿಯ ಕರ್ತವ್ಯಗಳು

15. ಯೋಜನಾ ಅಧಿಕಾರಿಯ ಕರ್ತವ್ಯಗಳು.- 9ನೇ ಪ್ರಕರಣದ (2)ನೇ ಉಪ ಪ್ರಕರಣದ ಉಪಬಂಧಗಳಿಗೆ ಒಳಪಟ್ಟು, ಅಧಿನಿಯಮದ ಮತ್ತು ನಿಯಮಗಳ ಉಪಬಂಧಗಳಿಗನುಸಾರವಾಗಿ ಯೋಜನಾ ಅಧಿಕಾರಿಯ ಕರ್ತವ್ಯಗಳು ಈ ಮುಂದಿನಂತಿರತಕ್ಕದ್ದು,- (i) ಪರಂಪರೆ ಪ್ರದೇಶದ ಅಭಿವೃದ್ಧಿ ಯೋಜನೆಯನ್ನು ಮತ್ತು ಸ್ಥಳ ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಪ್ರಾಧಿಕಾರಕ್ಕೆ ನೆರವಾಗುವುದು;

(ii) ಪರಂಪರೆ ಪ್ರದೇಶ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನಗೊಳಿಸಲು ಅವಶ್ಯವಾಗಬಹುದಾದ ಕಾರ್ಯಯೋಜನೆಗಳನ್ನು ರೂಪಿಸಲು ಪ್ರಾಧಿಕಾರಕ್ಕೆ ನೆರವಾಗುವುದು;

(iii) ಪ್ರಾಧಿಕಾರವು ಮತ್ತು ಸರ್ಕಾರವು ಅನುಮೋದಿಸಿದ ಸದರಿ ಯೋಜನೆಗೆ ಮತ್ತು ಕಾರ್ಯಯೋಜನೆಗಳಿಗೆ ಅನುಸಾರವಾಗಿ ಅಭಿವೃದ್ಧಿ ಯೋಜನೆಯನ್ನು, ,ಇತರ ಯೋಜನಾ ಕಾರ್ಯಯೋಜನೆಗಳನ್ನು ಮತ್ತು ಪರಂಪರೆ ಪ್ರದೇಶದ ಅಭಿವೃದ್ಧಿಯನ್ನು ಕಾರ್ಯಗತಗೊಳಿಸುವುದನ್ನು ಸುನಿಶ್ಚಿತಪಡಿಸಿಕೊಳ್ಳವಲ್ಲಿ ಮತ್ತು ಸಮನ್ವಯಗೊಳಿಸುವಲ್ಲಿ ಪ್ರಾಧಿಕಾರಕ್ಕೆ ನೆರವಾಗುವುದು;

(iv) ಯೋಜನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಾಧಿಕಾರವು ವಹಿಸಿಕೊಡಬಹುದಾದಂಥ ಇತರ ಕೆಲಸಗಳನ್ನು ಮತ್ತು ಕಾರ್ಯಗಳನ್ನು ಮಾಡುವುದು.

ಅಧ್ಯಾಯ -VI

ಲೆಕ್ಕಪತ್ರಾಧಿಕಾರಿಯ ಕರ್ತವ್ಯಗಳು

16. ಲೆಕ್ಕಪತ್ರಾಧಿಕಾರಿಯ ಕರ್ತವ್ಯಗಳು.- ಈ ಮುಂದಿನವು ಪ್ರಾಧಿಕಾರದ ಲೆಕ್ಕಪತ್ರಾಧಿಕಾರಿಯ ಕರ್ತವ್ಯವಾಗಿರತಕ್ಕದ್ದು,- (i) ಪ್ರಾಧಿಕಾರದ ಲೆಕ್ಕಪತ್ರಗಳನ್ನು ನಿರ್ವಹಿಸುವುದು;

(ii) ಆಯುಕ್ತರಿಗೆ ಸಲ್ಲಿಸುವುದಕ್ಕಾಗಿ ಲೆಕ್ಕಪತ್ರಗಳ ವಾರ್ಷಿಕ ವಿವರ ಪತ್ರವನ್ನು ಮತ್ತು ಜಮಾ-ಖರ್ಚು ಪಟ್ಟಿಯನ್ನು ಸಿದ್ಧಪಡಿಸುವುದು;

(iii) ಪ್ರಾಧಿಕಾರದ ಲೆಕ್ಕಪತ್ರಗಳನ್ನು ನಿರ್ವಹಿಸುವುದಕ್ಕೆ ಮತ್ತು ಆಯವ್ಯಯ ಪತ್ರವನ್ನು ಸಿದ್ಧಪಡಿಸುವುದಕ್ಕೆ ಸಂಬಂಧಿಸಿದಂತೆ ಆಯುಕ್ತರು ವಹಿಸಿಕೊಡಬಹುದಾದಂಥ ಹಣಕಾಸಿಗೆ ಸಂಬಂಧಪಟ್ಟ ಇತರ ಕರ್ತವ್ಯಗಳನ್ನು ನೆರವೇರಿಸುವುದು.

೧೨೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ಭಾಗ - ೪ಎ

ಅಧ್ಯಾಯ -VII

ಪ್ರಾಧಿಕಾರದ ಇತರ ಪ್ರಕಾರ್ಯಗಳು

17. ಪ್ರಾಧಿಕಾರದ ಇತರ ಪ್ರಕಾರ್ಯಗಳು.- ಅಧಿನಿಯಮದ ಉಪಬಂಧಗಳಿಗೆ ಒಳಪಟ್ಟು, ಪ್ರಾಧಿಕಾರವು ಈ ಮುಂದಿನ ಪ್ರಕಾರ್ಯಗಳನ್ನು ನೆರವೇರಿಸತಕ್ಕದ್ದು, ಎಂದರೆ:-

(1) ಪ್ರಾಧಿಕಾರವು, ಎಲ್ಲ ಪುರಾತತ್ವ ಸ್ಥಳಗಳು ಮತ್ತು ಸ್ಮಾರಕಗಳು, ಪ್ರಾಚೀನ ವಸ್ತುಗಳು ಮತ್ತು ಕುಶಲ ನಿರ್ಮಿತಿಗಳು, ಬಂಡೆಗಳು ಮತ್ತು ಜಲ ನಿಕಾಯಗಳು, ವನ್ಯಜೀವಿ, ಸಸ್ಯಸಂಕುಲ ಮತ್ತು ಪರಂಪರೆ ಪ್ರದೇಶದೊಳಗಿನ ಇತರ ಪರಿಸರದ ಸಮಗ್ರ ನಿರ್ವಹಣೆಗಾಗಿ ಉಪಬಂಧಕಲ್ಪಿಸುವ ಎಲ್ಲ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡ ನಂತರ ಸ್ಥಳ ನಿರ್ವಹಣಾ ಯೋಜನೆಯನ್ನು ಅಥವಾ ಪರಂಪರೆ ಪ್ರದೇಶದ ಸಂರಕ್ಷಣೆಯ ಮಹಾ ಯೋಜನೆಯನ್ನು ಸಿದ್ಧಪಡಿಸತಕ್ಕದ್ದು; ಮತ್ತು ಹಾಗೆ ಸಿದ್ಧಪಡಿಸಿದ ಯೋಜನೆಯನ್ನು ಕಾರ್ಯಗತಗೊಳಿಸುವುದಕ್ಕಾಗಿ ಹಾಗೂ ಕಾಲದಿಂದ ಕಾಲಕ್ಕೆ ಅದರ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವುದಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು ಹಾಗೂ ಅದರ ರೀತಿ ಮತ್ತು ಪ್ರಕ್ರಿಯಗಳ ಸ್ಥೂಲ ರೂಪರೇಷೆಗಳನ್ನು ಸಿದ್ಧಪಡಿಸತಕ್ಕದ್ದು;

(2) ಪ್ರಾಧಿಕಾರವು ಆ ಇಡೀ ಭೂವಿಸ್ತಾರವನ್ನು ಆ ಸ್ಥಳದ ಎಲ್ಲಾ ನೈಸರ್ಗಿಕ, ಪುರಾತತ್ವ ಮತ್ತು ಸಾಂಸ್ಕøತಿಕ ಸಂಪನ್ಮೂಲಗಳು ಹಾಗೂ ಇನ್ನಿತರ ಪರಿಸರಗಳೊಂದಿಗೆ ಅದರ ನಿಸರ್ಗದತ್ತ ಸೌಂದರ್ಯವನ್ನು ಪುರಾತತ್ವ ಗಣನಾಂಶಗಳ ವ್ಯಾಪ್ತಿಯೊಳಗೆ ಹೆಚ್ಚಿಸುವ ಹಾಗೂ ಕಾಪಾಡಿಕೊಂಡು ಬರುವ ಉದ್ದೇಶದಿಂದ ಸಂರಕ್ಷಿಸುವುದಕ್ಕಾಗಿ ಕ್ರಮಗಳನ್ನು ಕೈಗೊಳ್ಳತಕ್ಕದ್ದು;

(3) ಪ್ರಾಧಿಕಾರವು ಪರಂಪರಾ ಪ್ರದೇಶವನ್ನು ನೋಡಲು ಬರುವವರು ಹಾಗೂ ಪ್ರವಾಸಿಗರಿಗೆ ಅಗತ್ಯವಾದ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿ ಸಾಕಷ್ಟು ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಪ್ರವಾಸೋದ್ಯಮವನ್ನು ಪೋಷಿಸುವ ದೃಷ್ಟಿಯಿಂದ ಹಾಗೆಯೇ ಪುರಾತತ್ವ ಗಣನಾಂಶಗಳ ಬಗ್ಗೆ ಗಮನ ನೀಡಿ ಆ ಪರಂಪರೆಯ ಪ್ರದೇಶದಲ್ಲಿರುವ ಸ್ಥಳೀಯರಿಗೆ ಅವರ ಮೂಲಭೂತ ನಾಗರಿಕ ಸೌಕರ್ಯಗಳನ್ನು ಒದಗಿಸಿ ಅವರ ಸಮಂಜಸ ಅಗತ್ಯತೆಗಳನ್ನು ಪೂರೈಸುವ ಮೂಲಕ ಅವರ ಕ್ಷೇಮಾಭಿವೃದ್ಧಿ ಮಾಡುವ ದೃಷ್ಟಿಯಿಂದ ಆ ಪರಂಪರಾ ಪ್ರದೇಶದ ಭೂವಿಸ್ತಾರದ ಅಭಿವೃದ್ಧಿಯನ್ನು ಮಾಡಿಸತಕ್ಕದ್ದು;

(4) ಭಾರತ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯಗಳ ಇಲಾಖೆಯು ತಮ್ಮ ತಮ್ಮ ಅಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿ ನಡೆಸುವ ಚುಟುವಟಿಕೆಗಳಿಗೆ ಹಾಗೂ ಪುರಾತತ್ವ ಸ್ಥಳದ ನಿರ್ವಹಣೆ ಮತ್ತು ಕಾಪಾಡಿಕೊಂಡು ಬರುವ ಕೆಲಸಗಳಿಗೆ ಪ್ರಾಧಿಕಾರವು ಸಮನ್ವಯ ಸಹಕಾರವನ್ನು ನೀಡತಕ್ಕದ್ದು.

ಅಧ್ಯಾಯ -VIII

ವಾರ್ಷಿಕ ಆಯವ್ಯಯ

18. ಪ್ರಾಧಿಕಾರದ ಆಯುಕ್ತರು ವಾರ್ಷಿಕ ಆಯವ್ಯಯವನ್ನು ಸಿದ್ಧಪಡಿಸುವುದು.- ಪ್ರಾಧಿಕಾರದ ಆಯುಕ್ತರು ಪ್ರತಿವರ್ಷದ ಡಿಸೆಂಬರ್ ತಿಂಗಳಿನಲ್ಲಿ, ಸರ್ಕಾರವು ಅಗತ್ಯಪಡಿಸುವಂಥ ನಮೂನೆಯಲ್ಲಿ ಇತರ ವಿವರಗಳೊಂದಿಗೆ ಮುಂದಿನ ಮಾರ್ಚ್ ತಿಂಗಳಿನ 31ನೇ ದಿನಾಂಕದಂದು ಕೊನೆಗೊಳ್ಳುವ ಹಣಕಾಸು ವರ್ಷಕ್ಕಾಗಿ ವಾಸ್ತವಿಕ ಮತ್ತು ನಿರೀಕ್ಷಿತ ಸ್ವೀಕೃತಿಗಳ ಮತ್ತು ವೆಚ್ಚಗಳ ಪೂರ್ಣ ಲೆಕ್ಕದೊಂದಿಗೆ ಮುಂದಿನ ಏಪ್ರಿಲ್ ಮೊದಲ ದಿನದಂದು ಪ್ರಾರಂಭವಾಗುವ ಮುಂಬರುವ ಹಣಕಾಸು ವರ್ಷಕ್ಕಾಗಿ ಪ್ರಾಧಿಕಾರದ ಆದಾಯ ಮತ್ತು ವೆಚ್ಚವನ್ನು ತೋರಿಸುವ ಸವಿವರ ಅಂದಾಜುಗಳನ್ನು ಒಳಗೊಂಡ ಒಂದು ಆಯವ್ಯಯ ಪತ್ರವನ್ನು ಸಿದ್ಧಪಡಿಸತಕ್ಕದ್ದು ಮತ್ತು ಅದನ್ನು ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು.

19. ವಾರ್ಷಿಕ ಆಯವ್ಯಯ ವ್ಯವಹರಣೆಗಳು.- (1) ಪ್ರಾಧಿಕಾರವು, ಮುಂದಿನ ವರ್ಷಕ್ಕಾಗಿ ಏಪ್ರಿಲ್ ಮೊದಲ ದಿನದಂದು ಪ್ರಾರಂಭವಾಗುವ ವರ್ಷದ ಆಯವ್ಯಯದಲ್ಲಿ ಒಳಗೊಂಡಿರುವ ವಿನಿಯೋಜನೆಗಳ ಮತ್ತು ಅರ್ಥೋಪಾಯಗಳ ಮೇಲೆ ತೀರ್ಮಾನ ಕೈಗೊಳ್ಳತಕ್ಕದ್ದು.

ಪ್ರಾಧಿಕಾರವು ಅನುಮೋದಿಸಿದ ಆಯವ್ಯಯ ಪತ್ರದ ಮೂರು ಪ್ರತಿಗಳನ್ನು ಸರ್ಕಾರಕ್ಕೆ ಕಳುಹಿಸತಕ್ಕದ್ದು.

(2) ಅಂಥ ಆಯವ್ಯಯ ಅಂದಾಜಿನಲ್ಲಿ, ಪ್ರಾಧಿಕಾರವು, ಇತರ ವಿಷಯಗಳ ಜೊತೆಗೆ,-

(ಎ) ಅಧಿನಿಯಮದ ಮತ್ತು ಈ ನಿಯಮಗಳ ಮೂಲಕ ಪ್ರಾಧಿಕಾರಕ್ಕೆ ವಹಿಸಿದ ಹಲವು ಕರ್ತವ್ಯಗಳನ್ನು ನೆರವೇರಿಸಲು ಅಗತ್ಯವಾಗಬಹುದಾದಂಥ ಸೇವೆಗಾಗಿ ಸಾಕಷ್ಟು ಮತ್ತು ಸೂಕ್ತ ಉಪಬಂಧಗಳನ್ನು ಕಲ್ಪಿಸತಕ್ಕದ್ದು;

(ಬಿ) ಪ್ರಾಧಿಕಾರವು ಒಪ್ಪಂದ ಮಾಡಿಕೊಂಡು ತಾನು ತೆಗೆದುಕೊಂಡ ಸಾಲಗಳ ಸಂಬಂಧದಲ್ಲಿ ಯಾವ ಅಸಲು ಮತ್ತು ಬಡ್ಡಿಯನ್ನು ಸಂದಾಯ ಮಾಡಲು ಹೊಣೆಯಾಗಿರುವುದೋ ಆ ಎಲ್ಲ ಕಂತುಗಳನ್ನು ಗಡುವಿನ ದಿನಾಂಕದಂದು ಸಂದಾಯ ಮಾಡಲು ಉಪಬಂಧ ಕಲ್ಪಿಸತಕ್ಕದ್ದು;

ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ೧೨೦೫

(ಸಿ) ಸರ್ಕಾರಕ್ಕೆ ಮತ್ತು ಇತರೆ ಸರ್ಕಾರಿ ಏಜನ್ಸಿಗಳಿಗೆ ಸಂದಾಯ ಮಾಡಬೇಕಾದ ಎಲ್ಲ ಮೊತ್ತಗಳನ್ನು ಸಂದಾಯಮಾಡಲು ಉಪಬಂಧ ಕಲ್ಪಿಸತಕ್ಕದ್ದು;

(ಡಿ) ಮೂರು ತಿಂಗಳುಗಳ ಅವಧಿಯ ಸಿಬ್ಬಂದಿ ವೆಚ್ಚವನ್ನು ಭರಿಸಲು ಬೇಕಾಗಬಹುದಾದ ಮೊತ್ತಕ್ಕಿಂತ ಕಡಿಮೆ ಇಲ್ಲದಷ್ಟು ಮೊತ್ತವನ್ನು ಸದರಿ ವರ್ಷದ ಕೊನೆಯಲ್ಲಿ ಬಾಕಿ ಉಳಿಸಿಕೊಳ್ಳಲು ಅವಕಾಶ ನೀಡತಕ್ಕದ್ದು.

ಅಧ್ಯಾಯ -IX

ವಾರ್ಷಿಕ ವರದಿ

20. ಪ್ರಾಧಿಕಾರದ ವಾರ್ಷಿಕ ವರದಿ.- (1) ಪ್ರಾಧಿಕಾರವು, ಪ್ರತಿಯೊಂದು ಹಣಕಾಸು ವರ್ಷದ ತನ್ನ ವಾರ್ಷಿಕ ವರದಿಯನ್ನು, ತರುವಾಯದ ವರ್ಷದ ಜೂನ್ 30ನೇ ದಿನಾಂಕಕ್ಕೆ ಮುಂಚೆ, ನಮೂನೆ-1ರಲ್ಲಿ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.

(2) ವರದಿಯು, ಹಣಕಾಸು ವರ್ಷದ ಅವಧಿಯಲ್ಲಿನ ಪ್ರಾಧಿಕಾರದ ಕಾರ್ಯಚಟುವಟಿಕೆಗಳನ್ನು, ಹಣಕಾಸು ಪರಿಸ್ಥಿತಿಯನ್ನು, ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದ ವಿವರಗಳನ್ನು, ರಾಜ್ಯ ಸರ್ಕಾರವು ಉಲ್ಲೇಖಿಸಿದ ವಿಷಯಗಳ ಮೇಲೆ ತೆಗೆದುಕೊಂಡ ಕ್ರಮವನ್ನು ಒಳಗೊಂಡಿರತಕ್ಕದ್ದು.

(3) ವರದಿಯು, ರಾಜ್ಯಮಟ್ಟದ ಸಲಹಾ ಸಮಿತಿಯ ವ್ಯವಹರಣೆಗಳ ಸಾರಾಂಶವನ್ನು ಸಹ ಒಳಗೊಂಡಿರತಕ್ಕದ್ದು.

ಅಧ್ಯಾಯ -X

ಸಾಲಗಳು

21. ಸಾಲ ಪಡೆಯಲು ಪ್ರಾಧಿಕಾರದ ಅಧಿಕಾರ.- (1) ಪ್ರಾಧಿಕಾರವು ತನ್ನ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯಗಳಿಗೆ ಅನುಸಾರವಾಗಿ,-

(ಎ) ನಿರ್ಮಾಣ ಕಾಮಗಾರಿಗಳಿಗಾಗಿ,

(ಬಿ) ಭೂಮಿಗಳು ಮತ್ತು ಕಟ್ಟಡಗಳನ್ನು ಅರ್ಜಿಸುವುದಕ್ಕಾಗಿ, ಅಥವಾ

(ಸಿ) ಸರ್ಕಾರಕ್ಕೆ ಕೊಡಬೇಕಾದ ಯಾವುದೇ ಸಾಲವನ್ನು ಸಂದಾಯ ಮಾಡಲು, ಅಥವಾ

(ಡಿ) ಅಧಿನಿಯಮದ ಅಥವಾ ಈ ಹಿಂದೆ ಜಾರಿಯಲ್ಲಿದ್ದ ಯಾವುದೇ ಇತರ ಕಾನೂನಿನ ಅಡಿಯಲ್ಲಿ ಎತ್ತಿದ ಸಾಲವನ್ನು ಮರುಪಾವತಿ ಮಾಡಲು:

ಎಲ್ಲ ಅಥವಾ ಈ ಅಧಿನಿಯಮದ ಮೂಲಕ ಅಥವಾ ಮೇರೆಗೆ ಅಧಿಕೃತಗೊಳಿಸಲಾದ ಯಾವುದೇ ಶುಲ್ಕಗಳ ಮತ್ತು ಬಾಕಿಗಳ ಭದ್ರತೆಗಳ ಮೇಲೆ ಸಾಲ, ಡಿಬೆಂಚರು ಅಥವಾ ಇತರ ರೂಪದಲ್ಲಿ ಅವಶ್ಯವಾಗಬಹುದಾದಷ್ಟು ಮೊತ್ತದ ಸಾಲವನ್ನು ಪಡೆಯಬಹುದು:

ಪರಂತು,-

(i) ಸರ್ಕಾರದ ಪೂರ್ವಮಂಜೂರಾತಿ ಇಲ್ಲದೆ ಯಾವುದೇ ಸಾಲವನ್ನು ಪಡೆಯತಕ್ಕದಲ್ಲ, ಮತ್ತು

(ii) ಸಾಲದ ಮೊತ್ತ, ಬಡ್ಡಿದರ ಮತ್ತು ಸಾಲಗಳನ್ನು ಪಡೆದ ದಿನಾಂಕ, ಮರುಪಾವತಿಯ ಕಾಲ ಮತ್ತು ವಿಧಾನ ಮತ್ತು ಇತರ ವಿಷಯಗಳೂ ಸೇರಿದಂತೆ ನಿಬಂಧನೆಗಳು ಸರ್ಕಾರದ ಅನುಮೋದನೆಗೆ ಒಳಪಟ್ಟರತಕ್ಕದ್ದು.

(2) (1)ನೇ ಉಪನಿಯಮದ ಅಡಿಯಲ್ಲಿ ಯಾವುದೇ ಹಣದ ಮೊತ್ತವನ್ನು ಸಾಲ ಪಡೆದಾಗ,-

(ಎ) ಸರ್ಕಾರದ ಪೂರ್ವ ಮಂಜೂರಾತಿ ಪಡೆಯದೆ, ಸಾಲದ ಮೊತ್ತದ ಯಾವುದೇ ಭಾಗವನ್ನು, ಸಾಲವನ್ನು ಯಾವ ಉದ್ದೇಶಕ್ಕಾಗಿ ಪಡೆಯಲಾಗಿದೆಯೋ ಆ ಉದ್ದೇಶಕ್ಕಲ್ಲದೆ ಇತರ ಯಾವುದೇ ಉದ್ದೇಶಕ್ಕಾಗಿ ವಿನಿಯೋಗಿಸತಕ್ಕದ್ದಲ್ಲ.

(ಬಿ) (1)ನೇ ಉಪ ನಿಯಮದ (ಎ) ಖಂಡದ ಅಡಿಯಲ್ಲಿ ಪಡೆಯಲಾದ ಸಾಲದ ಮೊತ್ತದ ಯಾವುದೇ ಭಾಗವನ್ನು ಯಾವ ಕಾಮಗಾರಿಗಳ ನಿರ್ಮಾಣಕ್ಕಾಗಿ ಅಂಥ ಹಣವನ್ನು ಸಾಲಪಡೆಯಲಾಗಿದೆಯೋ ಆ ಕಾಮಗಾರಿಗಳ ನಿರ್ಮಾಣಕ್ಕಾಗಿ ವಿಶೇಷವಾಗಿ ನಿಯೋಜಿಸಿಕೊಂಡಿರುವವರನ್ನು ಹೊರತುಪಡಿಸಿ ಪ್ರಾಧಿಕಾರದ ಇತರ ಅಧಿಕಾರಿಗಳು ಅಥವಾ ನೌಕರರಿಗೆ ಸಂಬಳ ಅಥವಾ ಭತ್ಯೆಗಳನ್ನು ಸಂದಾಯಮಾಡಲು ವಿನಿಯೋಗಿಸತಕ್ಕದ್ದಲ್ಲ;

(ಸಿ) ಲೆಕ್ಕಪತ್ರಗಳಲ್ಲಿನ ಪ್ರತಿಯೊಂದು ತಿದ್ದುಪಾಟು ಅಥವಾ ಬದಲಾವಣೆಯನ್ನು ಕೆಂಪುಶಾಯಿನಲ್ಲಿ (ಮೂಲ ನಮೂದನೆಯಲ್ಲಿ ಒಂದು ಗೆರೆಯನ್ನು ಎಳೆಯುವ ಮೂಲಕ) ಸ್ಪಷ್ಟವಾಗಿ ಮಾಡಬೇಕು ಮತ್ತು ಅದನ್ನು ಸರಿಪಡಿಸಬೇಕು ಮತ್ತು ಅದಕ್ಕೆ ಲೆಕ್ಕಪತ್ರಾಧಿಕಾರಿಯವರು ಚಿಕ್ಕರುಜು ಹಾಕಿ ದೃಡೀಕರಿಸಿರಬೇಕು. ಪುಸ್ತಕಗಳು ಮತ್ತು ವೋಚರುಗಳಲ್ಲಿ೧೨೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ಭಾಗ - ೪ಎ ಮಾಡಿದ ಎಲ್ಲ ತಿದ್ದುಪಾಟುಗಳು ಮತ್ತು ಮಾರ್ಪಾಟುಗಳನ್ನು ಅದೇ ರೀತಿಯಲ್ಲಿ ದೃಡೀಕರಿಸಬೇಕು. ಎರೇಸರುಗಳು, ವೈಟ್ನ್‌ರ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸತಕ್ಕದ್ದು ಮತ್ತು ಸೂಕ್ತವಾಗಿ ದಸ್ತಾವೇಜಿನಲ್ಲಿ ಅಳಿಸಿರುವುದನ್ನು, ವೈಟ್ನರ್ ಹಾಕಿರುವುದನ್ನು ಯುಕ್ತವಾಗಿ ದೃಡೀಕರಿಸಿದ ಹೊರತು ಅದನ್ನು ಅಂಗೀಕರಿಸತಕ್ಕದ್ದಲ್ಲ.

(ಡಿ) ಪ್ರಾಧಿಕಾರದ ಕಚೇರಿಯಲ್ಲಿ ಸ್ವೀಕರಿಸಲಾದ ಎಲ್ಲ ಮೊತ್ತಗಳನ್ನು ಅಥವಾ ಪ್ರಾಧಿಕಾರದ ಲೆಕ್ಕಕ್ಕೆ ಜಮೆ ಮಾಡಲು ಯಾವುದೇ ಬ್ಯಾಂಕಿನಲ್ಲಿ ಸಂದಾಯ ಮಾಡಿದ ಮೊತ್ತಗಳನ್ನು ಯುಕ್ತ ಲೆಕ್ಕಶೀರ್ಷಿಕೆ ಅಡಿಯಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದು ಮತ್ತು ಆ ನಮೂದುಗಳಿಗೆ ಪ್ರಾಧಿಕಾರದ ಲೆಕ್ಕಪತ್ರಾಧಿಕಾರಿಯು ಮತ್ತು ಆಯುಕ್ತರು ಚಿಕ್ಕರುಜು ಹಾಕತಕ್ಕದ್ದು.

(3) ಯಾವುದೇ ಬಿಲ್ಲುಗಳು, ಪ್ರಯಾಣಭತ್ಯೆ ಬಿಲ್ಲುಗಳು ಮತ್ತು ಸಾದಿಲ್ವಾರು ಬಿಲ್ಲುಗಳನ್ನು ಸಿದ್ಧಪಡಿಸುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯ ಆರ್ಥಿಕ ಸಂಹಿತೆಯಲ್ಲಿ ಮತ್ತು ರಾಜ್ಯ ಖಜಾನೆ ಸಂಹಿತೆಯಲ್ಲಿ ಒಳಗೊಂಡಿರುವ ನಿಯಮಗಳು ಅನ್ವಯವಾಗತಕ್ಕದ್ದು.

(4) ಅಂಚೆ ಮುದ್ರಾಂಕಗಳನ್ನು ಖರೀದಿಸಿ ಅವುಗಳನ್ನು ಪ್ರಾಧಿಕಾರದ ಕಚೇರಿಯಲ್ಲಿ ಬಳಕೆಗಾಗಿ ನೀಡತಕ್ಕದ್ದು. ಅಂಚೆ ಮುದ್ರಾಂಕಗಳ ವೆಚ್ಚದ ಸಂಬಂಧದಲ್ಲಿ ಪ್ರತ್ಯೇಕ ಸಾದಿಲ್ವಾರು ಬಿಲ್ಲಿನ ಮೂಲಕ ಹಣ ತೆಗೆಯತಕ್ಕದ್ದು.

(5) ವೆಚ್ಚವನ್ನು ಈ ಮುಂದಿನ ಪ್ರಧಾನ ಶೀರ್ಷಿಕೆ ಮತ್ತು ಉಪಶೀರ್ಷಿಕೆಗಳ ಅಡಿಯಲ್ಲಿ ವರ್ಗೀಕರಿಸತಕ್ಕದ್ದು:-

ಪ ್ರಧಾನ ಶೀರ್ಷಿಕೆ ಉಪಶೀರ್ಷಿಕೆ
(ಎ) ಅಧ್ಯಕ್ಷರು ಮತ್ತು ಸದಸ್ಯರಿಗೆ ಬ ತ್ಯೆಗಳು ಮತ್ತು ಫೀಜುಗಳು (i) ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರಿಗೆ ಭತ್ಯೆಗಳು ಅಥವಾ ಫೀಜುಗಳು
(ಬಿ) ಸಿಬ್ಬಂದಿ ವರ್ಗದ ಸಂಬಳ (i) ಆಯುಕ ್ತ ರ ಸಂಬಳ (ii) ಸಿಬ್ಬಂದಿ ವರ್ಗದ ಸಂಬಳ
(ಸಿ) ಭತ್ಯೆಗಳು (i) ಪ್ರಯಾಣ ಭ ತ್ಯೆ (ii) ಇತರ ಭತ್ಯೆಗಳು
(ಡಿ) ಸಾದಿ ್ವಾರುಗಳು (i) ಬಾಡಿಗೆ ದರಗಳು ಮತ್ತು ತೆರಿಗೆಗಳು (ii) ಅಂಚೆ ಮತ್ತು ಟೆಲಿಗ್ರಾಂ ವೆಚ ್ಚ (iii) ೇಖನ ಸಾಮಗ್ರಿ (iv) ಪುಸ್ತಕಗಳು ಮತ್ತು ನಿಯತಕಾಲಿಕೆಗಳು (v) ವಿದ್ಯುತ್ ಮತ್ತು ೈಟಿಂಗ್ ವೆಚ್ಚಗಳು (vi) ದೂರವಾಣಿ ವೆಚ್ಚಗಳು (vii) ಮುದ್ರಣ ವೆಚ್ಚಗಳು (viii) ಪೀಠೋಪಕರಣಗಳು (ix) ಇತರೆ
(ಇ) ಕಾನೂನು ಸಂಬಂಧೀ ವೆಚ್ಚಗಳು (i) ವಕೀಲರ ಫೀಜುಗಳು (ii) ಮುದ್ರಾಂಕ ವೆಚ ್ಚ ಗಳು (iii) ನ್ಯಾಯಾಲಯ ಫೀಜುಗಳು
(ಎಫ್) ಸಾಲಗಳು ಮತ್ತು ಮುಂಗಡಗಳು (i) ಸಾಲಗಳ ಮರುಪಾವತಿ (ii) ಸಾಲಗಳ ಮೇಲಿನ ಬಡ್ಡಿ (iii) ಸಾಲಗಳು ಮತ್ತು ಮುಂಗಡಗಳು
(ಜಿ) ಇತರ ವೆಚ ್ಚ ಗಳು (i) ಅನುದಾನಗಳು ಮತ್ತು ವಿದ್ಯಾರ್ಥಿವೇತನಗಳು (ii) ಸಾಲಗಳು ಮತ್ತು ಕಟ್ಟಡಗಳ ಮೇಲಿನ ಬಂಡವಾಳ ವೆಚ ್ಚ (iii) ನಿರ್ವಹಣೆ ಮತ್ತು ದುರಸ್ತಿಗಳು
(iv) ಭದ್ರತಾ ಪತ್ರಗಳು, ಡಿಬೆಂಚರುಗಳು, ಸ್ಟಾಕ್‌ಗಳು ಅಥವಾ ಇತರ ಬೆ ೆಯುಳ್ಳ ಭದ್ರತೆಗಳ ಖರೀದಿಗಳು.
ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ೧೨೦೭

ಅಧ್ಯಾಯ -XI

ಲೆಕ್ಕ ಪತ್ರಗಳು ಮತ್ತು ಲೆಕ್ಕ ಪರಿಶೋಧನೆ

22. ಕರ್ನಾಟಕ ಆರ್ಥಿಕ ಸಂಹಿತೆ, 1958ರ ಅಂಗೀಕಾರ.-ಪ್ರಾಧಿಕಾರವು ಕರ್ನಾಟಕ ಆರ್ಥಿಕ ಸಂಹಿತೆ, 1958ರ ಉಪಬಂಧಗಳನ್ನು ಅನುಸರಿಸತಕ್ಕದ್ದು ಮತ್ತು ನಮೂನೆ 2ರಲ್ಲಿ ಹೇಳಿರುವವುಗಳ ಜೊತೆಗೆ ಗೊತ್ತುಪಡಿಸಲಾದಂಥ ಪುಸ್ತಕಗಳು ಮತ್ತು ರಿಜಿಸ್ಟರುಗಳು ಹಾಗೂ ನಮೂನೆಗಳನ್ನು ಅಂಗೀಕರಿಸತಕ್ಕದ್ದು ಮತ್ತು ನಿರ್ವಹಿಸತಕ್ಕದ್ದು.

23. ಲೆಕ್ಕ ಪರಿಶೋಧನೆ.- ಪ್ರಾಧಿಕಾರದ ಲೆಕ್ಕಪತ್ರಗಳನ್ನು, ಕಾಲಕಾಲಕ್ಕೆ, ಕೊನೆಯಪಕ್ಷ ವರ್ಷಕೊಮ್ಮೆ ರಾಜ್ಯ ಲೆಕ್ಕ ಪತ್ರಗಳ ಇಲಾಖೆಯ ನಿಯಂತ್ರಕರು ಮತ್ತು ರಾಜ್ಯ ಸರ್ಕಾರವು ಸೂಕ್ತವೆಂದು ಭಾವಿಸಬಹುದಾದಂಥ ಇತರ ಏಜೆನ್ಸಿಯು ಸಹ ಲೆಕ್ಕಪರಿಶೋಧನೆ ಮಾಡತಕ್ಕದು.

24. ಲೆಕ್ಕಪರಿಶೋಧಕರು ಪ್ರಾಧಿಕಾರಕ್ಕೆ ನೋಟೀಸು ನೀಡುವುದು.- (1) ಲೆಕ್ಕ ಪರಿಶೋಧಕರು ತಾವು ಲೆಕ್ಕಪರಿಶೋಧನೆಯನ್ನು ಪ್ರಾರಂಭಿಸಲು ಉದ್ದೇಶಿಸಿರುವಂಥ ದಿನಾಂಕದ ಬಗ್ಗೆ ಎರಡು ವಾರಗಳಿಗಿಂತ ಕಡಿಮೆ ಇಲ್ಲದಂತೆ ಮುಂಚಿತವಾಗಿ ಪ್ರಾಧಿಕಾರಕ್ಕೆ ಲಿಖಿತ ನೋಟೀಸು ನೀಡತಕ್ಕದು:

ಪರಂತು, ಈ ನಿಯಮದಲ್ಲಿ ಏನೇ ಇದ್ದರೂ, ಲೆಕ್ಕಪರಿಶೋಧಕರು, ವಿಶೇಷ ಕಾರಣಗಳಿಗಾಗಿ, ಅವನ್ನು ಬರೆದು ದಾಖಲಿಸಿ, ಎರಡುವಾರಗಳಿಗಿಂತ ಕಡಿಮೆ ಅವಧಿಯ ನೋಟೀಸು ನೀಡಬಹುದು ಅಥವಾ ಪ್ರಾಧಿಕಾರಕ್ಕೆ ನೋಟೀಸು ನೀಡದೆ ವಿಶೇಷ ಅಥವಾ ಸವಿವರ ಲೆಕ್ಕಪರಿಶೋಧನೆಯನ್ನು ಪ್ರಾರಂಭಿಸಬಹುದು.

(2) ಲೆಕ್ಕಪರಿಶೋಧಕನು ಅಥವಾ ಲೆಕ್ಕಪರಿಶೋಧಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಉದ್ದೇಶಗಳಿಗಾಗಿ, ಪ್ರಾಧಿಕಾರದ ಎಲ್ಲ ಲೆಕ್ಕಪತ್ರಗಳು ಮತ್ತು ಇತರೆ ದಾಖಲೆಗಳನ್ನು ನೋಡಲು ಅವಕಾಶವನ್ನು ಹೊಂದಿರತಕ್ಕದ್ದು.

25. ಲೆಕ್ಕಪರಿಶೋಧಕರ ವರದಿಯ ನಮೂನೆ.- ಪ್ರಾಧಿಕಾರದ ಲೆಕ್ಕಪತ್ರಗಳನ್ನು ಪರಿಶೋಧಿಸುವಂಥ ರೀತಿಯು ಮತ್ತು ಲೆಕ್ಕಪರಿಶೋಧಕರ ವರದಿಯ ಒಳಾಂಶಗಳು ನಮೂನೆ 3ರಲ್ಲಿ ಸೂಚಿಸಿರುವಂತೆ ಇರತಕ್ಕದು.

26. ಪ್ರಾಧಿಕಾರಕ್ಕೆ ಮತ್ತು ಸರ್ಕಾರಕ್ಕೆ ಲೆಕ್ಕಪರಿಶೋಧನಾ ವರದಿ.- ಲೆಕ್ಕಪರಿಶೋಧಕನು, ಲೆಕ್ಕಪರಿಶೋಧನೆಯನ್ನು ಪೂರ್ಣಗೊಳಿಸಿದ ತರುವಾಯ ಮೂರು ತಿಂಗಳ ಒಳಗಾಗಿ ಲೆಕ್ಕಪರಿಶೋಧನಾ ವರದಿಯ ಒಂದು ಪ್ರತಿಯನ್ನು ಪ್ರಾಧಿಕಾರಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡತಕ್ಕದು.

27. ಲೆಕ್ಕಪತ್ರಗಳ ಪ್ರಕಟಣೆ.- ಜಮೆ ಮತ್ತು ಖರ್ಚುಗಳ ಪರಿಶೋಧಿತ ವಾರ್ಷಿಕ ಲೆಕ್ಕಪತ್ರಗಳು ಸಾರ್ವಜನಿಕ ಪರಿಶೀಲನೆಗೆ ಮುಕ್ತವಾಗಿರತಕ್ಕದು ಮತ್ತು ರಾಜ್ಯ ಸರ್ಕಾರದ ಅನುಮೋದನೆ ಪಡೆದು ಅದನ್ನು ಅಧಿಕೃತ ರಾಜ್ಯ ಪತ್ರದಲ್ಲಿ ಪ್ರಕಟಿಸತಕ್ಕದು.

ನಮೂನೆ -1

(20ನೇ ನಿಯಮವನ್ನು ನೋಡಿ)

____________ ವರ್ಷಕ್ಕಾಗಿ ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ವಾರ್ಷಿಕ ಆಡಳಿತ ವರದಿ.

(1) ಆಡಳಿತ,-

(1) ಪ್ರಾಧಿಕಾರದ ರಚನೆ.

(2) ಪ್ರಾಧಿಕಾರದ ಸದಸ್ಯರ ಹೆಸರುಗಳು ಮತ್ತು ಅವರ ಹುದ್ದೆ.

(3) ನಡೆಸಲಾದ ಸಭೆಗಳ ಸಂಖ್ಯೆ ಮತ್ತು ಅಧಿನಿಯಮದ 4ನೇ ಪ್ರಕರಣದಲ್ಲಿ ಗೊತ್ತುಪಡಿಸಲಾದಷ್ಟು ಸಂಖ್ಯೆಯ ಸಭಗಳನ್ನು ನಡೆಸದಿರುವುದಕ್ಕೆ ಕಾರಣಗಳು.

(4) ಸಭೆಗಳಿಗೆ ನಿರಂತರವಾಗಿ ಗೈರುಹಾಜರಾದಂಥ ಸದಸ್ಯರ ಹೆಸರುಗಳು.

(5) ಪ್ರಾಧಿಕಾರದ ಸಮಿತಿ ಮತ್ತು ಉಪ ಸಮಿತಿಗಳ ರಚನೆ.

(6) ಸಮಿತಿಗಳು ಮತ್ತು ಉಪ ಸಮಿತಿಗಳು ನಡೆಸಿದ ಸಭೆಗಳು.

(7) ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ.

(8) ಪ್ರಾಧಿಕಾರ, ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ಇರುವ ಆವರಣಗಳು.

೧೨೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ಭಾಗ - ೪ಎ

(9) ಪೀರೋಪಕರಣಗಳು ಮತ್ತು ಲೇಖನ ಸಾಮಗ್ರಿಗಳು.

(10) ಪ್ರಾಧಿಕಾರದ ಸ್ಥಿರಾಸ್ತಿ.

(11) ಮೋಟಾರು ವಾಹನಗಳು, ಸಾಧನ ಸಾಮಗ್ರಿ, ಜೋಡನೆಗಳು.

(12) ಪುಸ್ತಕಗಳು, ನಮೂನೆಗಳು, ದಾಖಲೆಗಳ ನಿರ್ವಹಣೆ.

(13) ನಗದು, ಅಮೂಲ್ಯ ಸಾಮಗ್ರಿಗಳು, ಮುಖ್ಯ ದಾಖಲೆಗಳು ಮತ್ತು ಕಡತಗಳು, ಅವುಗಳ ಅಭಿರಕ್ಷೆ ಮತ್ತು ಸಂರಕ್ಷಣೆ.

(2) ಬಜೆಟ್ ಮತ್ತು ಸ್ಕೀಂಗಳು,-

(1) ವಾರ್ಷಿಕ ಜಮೆಗಳು ಮತ್ತು ಖರ್ಚುಗಳು

ಕಾಮಗಾರಿಗಳ, ಕಟ್ಟಡಗಳ, ಸ್ಕೀಂಗಳ, ಸೇವೆಯ ಹೆಸರು ಹಿಂದಿನ ವರ್ಜದ ಅಂತ್ಯದವರೆಗೆ ಮಾಡಿದ ವೆಚ್ಚ, ಆಗಿರುವ ವಾಸ್ತವಿಕ ಪ್ರಗತಿ ಪ ್ರಸಕ್ತ ವರ್ಜದ ವೆಚ್ಚ
1 2 3

(2) 1ನೇ ಬಾಬಿನಲ್ಲಿ ಉಲ್ಲೇಖಿಸಲಾದ ಕಾಮಗಾರಿಯ ಪ್ರಗತಿಯಲ್ಲಿ ವಿಳಂಬವೇನಾದರೂ ಆಗಿದ್ದರೆ, ಅದಕ್ಕೆ ಕಾರಣಗಳು.

(3) ಸ್ಕೀಂಗಳನ್ನು, ಪ್ರಾಜೆಕ್ಟ್‌ಗಳನ್ನು ಪರಿಷ್ಕರಣೆ ಏನಾದರೂ ಮಾಡಿದ್ದರೆ, ಆ ಪರಿಷ್ಕರಣೆಗಳಿಗೆ ಕಾರಣಗಳು.

(4) ತಪ್ಪಿತಸ್ಥರಾಗಿರುವ ಏಜೆನ್ಸಿಗಳು ಮತ್ತು ಇಲಾಖೆಗಳು, ಅಂಥ ಏಜೆನ್ಸಿಗಳ ಮತ್ತು ಇಲಾಖೆಗಳ ಮೇಲೆ ತೆಗೆದುಕೊಂಡ ಕ್ರಮ.

(5) ಪ್ರಾಧಿಕಾರ ನಿಧಿಯ ಪ್ರಸ್ತುತ ಸ್ಥಿತಿಗತಿ,-

[i] (ಎ) ಹಣಠೇವಣಿ ಇಟ್ಟಿರುವ ಬ್ಯಾಂಕಿನ ಹೆಸರು.

(ಬಿ) ಖಾತೆಸಂಖ್ಯೆ ಮತ್ತು ಖಾತೆಯ ಸ್ವರೂಪ.

(ಸಿ) ಬಾಕಿ

[ii] ಠೇವಣಿಗಳು ಮತ್ತು ಠೇವಣಿಗಳ ಸ್ವರೂಪ.

[iii] ಎತ್ತಲಾದ ಸಾಲಗಳು ಮತ್ತು ಅವುಗಳ ವೆಚ್ಚ.

[iv] ಅನುದಾನಗಳು, ದನಸಹಾಯಗಳು, ವಂತಿಗೆಗಳು, ದೇಣಿಗೆಗಳು, ಕಾಣಿಕೆಗಳು.

(6) ಲೆಕ್ಕಪತ್ರಗಳ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆ ಮತ್ತು ಅದರ ಹಂತ.

(7) ಹಣಕಾಸು ವರ್ಷದ ಅವಧಿಯಲ್ಲಿ ಹಣ ದುರುಪಯೋಗ ಮತ್ತು ನಷ್ಟ, ಆಸ್ತಿಯ ನಷ್ಟ, ಆಸ್ತಿಯ ಒತ್ತುವರಿ, ಕಳ್ಳತನ ಇವು ಯಾವುದಾದರೂ ಇದ್ದರೆ ಅವು ತೆಗೆದುಕೊಂಡ ಕ್ರಮ ಅಥವಾ ಮಾಡಿದ ಶಿಫಾರಸ್ಸು.

(8) ಆಯುಕ್ತರು, ಅವರ ಅಧಿಕಾರಿಗಳು ಅಥವಾ ಅಧಿಕೃತ ಏಜೆನ್ಸಿಗಳು ಪ್ರಾಜೆಕ್ಟಗಳ ಮತ್ತು ಸ್ಕೀಂಗಳ ಪರಿಶೀಲನೆ ಮಾಡುವುದು, ಅಂಥ ಪರಿಶೀಲನೆಗಳ ಮೇಲಿನ ಟಿಪ್ಪಣಿಗಳು ಮತ್ತು ಜಾರಿ ಏಜೆನ್ಸಿಗಳು ಕೈಗೊಂಡ ಕ್ರಮಗಳು.

(9) ಯಾವುದೇ ಇತರ ಪ್ರಮುಖ ವಿಷಯಗಳು, ಷರಾಗಳೊಂದಿಗೆ.

(3) ರಾಜ್ಯ ಮಟ್ಟದ ಸಲಹಾ ಸಮಿತಿ.-

1) ವರ್ಷದ ಅವಧಿಯಲ್ಲಿ ರಾಜ್ಯಮಟ್ಟದ ಸಲಹಾ ಸಮಿತಿಯು ನಡೆಸಿದ ಸಭೆಗಳ ಸಂಕ್ಷಿಪ್ತ ವರದಿ ಮತ್ತು ಸಭೆಗಳ ದಾಖಲೆ.

2) ವರ್ಷದ ಅವಧಿಯಲ್ಲಿ ಪ್ರಮುಖ ವಿಷಯಗಳ ಮೇಲೆ ಪ್ರಾಧಿಕಾರಕ್ಕೆ ರಾಜ್ಯಮಟ್ಟದ ಸಲಹಾ ಸಮಿತಿಯು ನೀಡಿದ ಸಲಹೆಯ ಸಂಕ್ಷಿಪ್ತ ವರದಿ.

3) ಮೇಲ್ಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಪಾಲನೆಯ ಸಂಕ್ಷಿಪ್ತ ವರದಿ.

ನಮೂನೆ -2

(22ನೇ ನಿಯಮವನ್ನು ನೋಡಿ)

1. ಲೆಕ್ಕ ಪತ್ರ ಪುಸ್ತಕಗಳು, ರಿಜಿಸ್ಟರುಗಳು ಮತ್ತು ಲೆಡ್ಜರುಗಳ ನಿರ್ವಹಣೆ.- (1) ಪ್ರಾಧಿಕಾರದ ನಿಧಿಗೆ ಸಂಬಂಧಪಟ್ಟಂತೆ ಪ್ರಾಧಿಕಾರದ ಕಚೇರಿಯಲ್ಲಿ ಈ ಮುಂದಿನ ರಿಜಿಸ್ಟರುಗಳನ್ನು ನಿರ್ವಹಿಸತಕ್ಕದು,-ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ೧೨೦೯ (ಎ) ವೇತನ ಪುಸ್ತಕ.

(ಬಿ) ಲೆಕ್ಕ ಪತ್ರಗಳ ಲೆಡ್ಜರು.

(ಸಿ) ನಗದು ಪುಸ್ತಕ.

(ಡಿ) ವಂತಿಗೆಗಳ ವಸೂಲಿಗಳನ್ನು ಸೂಚಿಸುವ ಬೇಡಿಕೆ, ಸಂಗ್ರಹಣೆ ಮತ್ತು ಬಾಕಿ ರಿಜಿಸ್ಟರು.

(ಇ) ಮಾಡಬೇಕಾದ ವಸೂಲಿಗಳನ್ನು ತೋರಿಸುವ ರಿಜಿಸ್ಟರು.

(ಎಫ್) ಪ್ರಾಧಿಕಾರದ ಭೂಮಿ ಮತ್ತು ಆಸ್ತಿಗಳಿಗೆ ಸಂಬಂಧಪಟ್ಟಂತೆ ಬಾಡಿಗೆಯ ಅಥವಾ ಭೂಕಂದಾಯದ ಬೇಡಿಕೆ ಮತ್ತು ಸಂಗ್ರಹಣೆಗಳ ರಿಜಿಸ್ಟರು.

(ಜಿ) ರಸೀತಿ ಪುಸ್ತಕಗಳು ಮತ್ತು ಅವುಗಳ ಕೌಂಟರ್ ಫಾಯಿಲ್‌ಗಳೊಂದಿಗೆ ಇತರೆ ಸ್ವೀಕೃತಿಗಳ ರಿಜಿಸ್ಟರುಗಳು.

(ಎಚ್) ಸಾದಿಲ್ವಾರು ವೆಚ್ಚಗಳ ರಿಜಿಸ್ಟರು.

(ಐ) ಮುದ್ರಾಂಕ ರಿಜಿಸ್ಟರು.

(ಜೆ) ಭದ್ರತಾ ಪತ್ರಗಳು, ಸ್ಟಾಕ್‌ಗಳು ಮತ್ತು ಡಿಬೆಂಚರುಗಳ ರಿಜಿಸ್ಟರು.

(ಕೆ) ಸಿಬ್ಬಂದಿ ಮತ್ತು ಲೆಕ್ಕಪರಿಶೋಧನೆ ರಿಜಿಸ್ಟರು.

(ಎಲ್) ಲೇಖನಸಾಮಗ್ರಿ ಮತ್ತು ಮುದ್ರಿತ ನಮೂನೆಗಳು; ಪೀಠೋಪಕರಣಗಳು; ಮತ್ತು ಸೈಕಲ್‌ಗಳು, ಟೈಪ್‌ರೈಟರ್‌ಗಳು, ಕಂಪ್ಯೂಟರ್‌ಗಳು, ವಾಟರ್ ಕೂಲರ್‌ಗಳು,ಹವಾ ನಿಯಂತ್ರಕಗಳು, ಉಪಕರಣಗಳು ಮತ್ತು ಸ್ಥಾವರಗಳು ಮತ್ತು ಇತರ ಸಾಮಗ್ರಿಗಳಿಗೆ

- ಸಂಬಂಧಪಟ್ಟಂತೆ ಸ್ವೀಕೃತಿಗಳು, ನೀಡಿಕೆಗಳು ಮತ್ತು ಬಾಕಿಯನ್ನು ತೋರಿಸುವ ದಾಸ್ತಾನು ಪುಸ್ತಕಗಳು.

(ಎಂ) ಕಾಯಂ ಮುಂಗಡ ಲೆಕ್ಕಪತ್ರಗಳು.

(ಎನ್) ಸ್ಥಿರಾಸ್ತಿಗಳ ರಿಜಿಸ್ಟರು.

(ಓ) ಡೆಡ್ ಸ್ಟಾಕ್ ವಸ್ತುಗಳ ರಿಜಿಸ್ಟರು.

(2) ತನ್ನ ಲೆಕ್ಕಪತ್ರಗಳನ್ನು ನಿರ್ವಹಿಸುವಲ್ಲಿ, ಪ್ರಾಧಿಕಾರವು ಈ ಮುಂದಿನ ಕಾರ್ಯವಿಧಾನಗಳನ್ನು ಪಾಲಿಸತಕ್ಕದು, ಎಂದರೆ:-

(ಎ) ಪ್ರತಿಯೊಂದು ಹಣಕಾಸು ವರ್ಷಕ್ಕಾಗಿ ಲೆಕ್ಕಪತ್ರಗಳನ್ನು ಪ್ರತ್ಯೇಕವಾಗಿ ನಿರ್ವಹಿಸತಕ್ಕದು.

(ಬಿ) ಎಲ್ಲ ಲೆಕ್ಕ ಪುಸ್ತಕಗಳಿಗೆ ಮತ್ತು ರಿಜಿಸ್ಟರುಗಳಿಗೆ ಭದ್ರವಾಗಿ ರಟ್ಟು ಹಾಕಿರತಕ್ಕದು.

(ಸಿ) ಎಲ್ಲ ಲೆಕ್ಕ ಪುಸ್ತಕಗಳ ಪುಟಗಳಿಗೆ ಕ್ರಮ ಸಂಖ್ಯೆ ನೀಡತಕ್ಕದ್ದು ಮತ್ತು ಪ್ರತಿಯೊಂದು ಪುಟಕ್ಕೆ ಪ್ರಾಧಿಕಾರದ ಮೊಹರಿನಿಂದ ಮುದ್ರೆ ಹಾಕತಕ್ಕದು.

(ಡಿ) ರಸೀದಿ ಪುಸ್ತಕಗಳನ್ನು ನೀಡುವುದಕ್ಕಿಂತ ಮುಂಚೆ ಅವುಗಳ ಪುಟಗಳಿಗೆ ಅದೇ ರೀತಿ ಮುದ್ರೆ ಹಾಕತಕ್ಕದು. ಆಯುಕ್ತರು ಪ್ರತಿಯೊಂದು ಪುಸ್ತಕವನ್ನು ನೀಡುವುದಕ್ಕೆ ಮುಂಚೆ ಅವುಗಳ ಮೇಲೆ ಒಳಗೊಂಡಿರುವ ಪುಟಗಳ ಸಂಖ್ಯೆಯ ಬಗ್ಗೆ ಒಂದು ಪ್ರಮಾಣ ಪತ್ರವನ್ನು ದಾಖಲು ಮಾಡತಕ್ಕದ್ದು.

ನಮೂನೆ -3

ಲೆಕ್ಕ ಪರಿಶೋಧಕರ ವರದಿಗಳು

(25ನೇ ನಿಯಮ ನೋಡಿ)

(1) ಪ್ರಾಧಿಕಾರದ ನಿಧಿಯ ಲೆಕ್ಕ ಪತ್ರಗಳ ಪರಿಶೋಧನೆ ಮಾಡುವಾಗ, ಲೆಕ್ಕಪರಿಶೋಧಕನು ನಗದು ಶಿಲ್ಕನ್ನು ಪರಿಶೀಲಿಸತಕ್ಕದ್ದು ಮತ್ತು ನಗದನ್ನು ಪರಿಶೀಲನೆಗಾಗಿ ಕೂಡಲೇ ತೋರಿಸಲಾಯಿತೇ ಎಂಬುದನ್ನು ವರದಿಯಲ್ಲಿ ಹೇಳತಕ್ಕದ್ದು.

(2) ಲೆಕ್ಕಪರಿಶೋಧಕನು ಲೆಕ್ಕಪರಿಶೋಧನೆ ಮಾಡುವಾಗ ಡಿಬೆಂಚರುಗಳು, ಷೇರು ಪ್ರಮಾಣಪತ್ರಗಳು, ಸರ್ಕಾರಿ ಬಾಂಡ್‌ಗಳು ಮತ್ತು ಇತರ ಭದ್ರತಾ ಪತ್ರಗಳನ್ನು ಮತ್ತು ಬ್ಯಾಂಕಿನ ಪಾಸ್ ಪುಸ್ತಕಗಳನ್ನು ಪರಿಶೀಲಿಸತಕ್ಕದ್ದು ಮತ್ತು ಅವುಗಳು ಸರಿಯಾಗಿವೆ ಎಂದು ಕಂಡುಬಂದಿತ್ತೇ ಎಂಬುದನ್ನು ವರದಿ ಮಾಡತಕ್ಕದ್ದು.

೧೨೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ಭಾಗ - ೪ಎ

(3) ಲೆಕ್ಕಪರಿಶೋಧಕನು ಲೆಕ್ಕಪರಿಶೋಧನೆ ಮಾಡುವಾಗ ಉದ್ಭವಿಸುವ ಇತರ ಪ್ರಶ್ನೆಗಳ ಜೊತೆಗೆ,-

(ಎ) ನಿರ್ವಹಿಸಬೇಕೆಂದು ಅಗತ್ಯಪಡಿಸಲಾದ ಲೆಕ್ಕಪತ್ರಗಳನ್ನು ಮತ್ತು ರಿಜಿಸ್ಟರುಗಳನ್ನು ಸರಿಯಾಗಿ ಇಡಲಾಗಿದೆಯೇ;

(ಬಿ) ಪ್ರಾಧಿಕಾರಕ್ಕೆ ಬರಬೇಕಾಗಿರುವ ವಂತಿಗೆಗಳನ್ನು ಮತ್ತು ಇತರ ಜಮೆಗಳನ್ನು ಸಕಾಲದಲ್ಲಿ ವಸೂಲಿ ಮಾಡಲಾಗಿದೆಯೇ ಮತ್ತು ಬಹಳ ದಿನದಿಂದ ಬಾಕಿ ಇದ್ದ ಮೊತ್ತವನ್ನು ವಸೂಲಿ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ, ಕ್ರಮ ತೆಗೆದುಕೊಳ್ಳದಿದ್ದಲ್ಲಿ ಯಾವ ಪ್ರಕರಣಗಳಲ್ಲಿ ಅಂಥ ಕ್ರಮ ತೆಗೆದುಕೊಳ್ಳಲಾಗಿಲ್ಲ;

(ಸಿ) ಎಲ್ಲ ಸಂಗ್ರಹಣೆಗಳನ್ನು ತ್ವರಿತವಾಗಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆಯೇ;

(ಡಿ) ಯಾವುದೇ ವಂತಿಗೆಯನ್ನು ಮನ್ನಾ ಮಾಡಲಾಗಿದೆಯೇ ಅಥವಾ ಅದರ ಮೊತ್ತವನ್ನು ಕಡಿಮೆ ಮಾಡಲಾಗಿದೆಯೇ, ಹಾಗಿದ್ದಲಿ,್ಲ ಯುಕ್ತ ಅಧಿಕಾರ ಪಡೆದು ಅದನ್ನು ಮಾಡಲಾಗಿದೆಯೇ;

(ಇ) ವಹಿಸಲಾದ ವೆಚ್ಚವು ಮಂಜೂರಾದ ಬಜೆಟ್‌ಗೆ ಅನುಸಾರವಾಗಿದೆಯೇ ಮತ್ತು ಅಂಥ ಬಜೆಟ್‌ನಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದ್ದರೆ, ಆ ಬದಲಾವಣೆಗಳು ಯಾವುವು?;

(ಎಫ್) ವೆಚ್ಚದ ಪ್ರತಿಯೊಂದು ಬಾಬಿನ ಬಗ್ಗೆ ಸಕ್ರಮ ಪ್ರಾಧಿಕಾರದಿಂದ ಮಂಜೂರಾತಿ ಪಡೆಯಲಾಗಿದೆಯೇ ಮತ್ತು ಅದಕ್ಕೆ ಸೂಕ್ತ ವೋಚರಿನ ಸಮರ್ಥನೆ ಇದೆಯೇ;

(ಜಿ) ಮೇಲ್ನೋಟಕ್ಕೆ ದುಂದು ವೆಚ್ಚವೆಂದು ಲೆಕ್ಕ ಪರಿಶೋಧಕನು ಅಭಿಪ್ರಾಯ ಪಟ್ಟಿರುವಂಥ ವೆಚ್ಚದ ಯಾವುದೇ ಬಾಬು ಇದೆಯೇ ;

ಮತ್ತು

(ಎಚ್) ತಕ್ಷಣದ ಖರ್ಚಿಗೆ ಅಗತ್ಯವಿಲ್ಲದ ಎಲ್ಲ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿದೆಯೇ ಮತ್ತು ಹೆಚ್ಚುವರಿ ನಿಧಿಗಳನ್ನು ಸಮರ್ಪಕವಾಗಿ ಹೂಡಿಕೆ ಮಾಡಲಾಗಿದೆಯೇ.

- ಎಂಬುದನ್ನು ವರದಿ ಮಾಡತಕ್ಕದ್ದು.

(4) ಲೆಕ್ಕ ಪರಿಶೋಧಕನು ವೆಚ್ಚಗಳಲ್ಲಿ ಪ್ರಾಧಿಕಾರಕ್ಕೆ ಬರಬೇಕಾದ ವಂತಿಗೆಗಳ ಸಂಗ್ರಹಣೆಯಲ್ಲಿ ಅಥವಾ ಲೆಕ್ಕಪತ್ರಗಳಲ್ಲಿ ತನ್ನ ಗಮನಕ್ಕೆ ಬಂದ ಯಾವುದೇ ಮುಖ್ಯ ಅನೌಚಿತ್ಯಗಳು ಅಥವಾ ಅಕ್ರಮದ ಬಗ್ಗೆ, ಮತ್ತು ಹಣವು ನಷ್ಟ ಅಥವಾ ಪೋಲಾಗಿರುವ ಬಗ್ಗೆ ಎಲ್ಲ ಪ್ರಕರಣಗಳನ್ನು, ಆ ನಷ್ಟಕ್ಕೆ ಅಥವಾ ಪೋಲಾದುದಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಜವಾಬ್ದಾರರಾದ ವ್ಯಕ್ತಿಗಳ ಹೆಸರುಗಳ ಸಹಿತ ವರದಿ ಮಾಡತಕ್ಕದ್ದು.

(5) ಲೆಕ್ಕ ಪರಿಶೋಧಕನು ಈ ವರದಿಗೆ ಈ ಮುಂದಿನವುಗಳನ್ನು ಲಗತ್ತಿಸತಕ್ಕದು,-

(ಎ) ಬಜೆಟ್ ಲೆಕ್ಕ ಶೀರ್ಷಿಕೆಗಳ ಅಡಿಯಲ್ಲಿ ಸ್ವೀಕೃತಿ ಮತ್ತು ವೆಚ್ಚಗಳ ವಿವರ ಪತ್ರ;

(ಬಿ) ಆದಾಯ ಮತ್ತು ವೆಚ್ಚದ ವಿವರ ಪತ್ರ;

(ಸಿ) ಆಸ್ತಿ ಮತ್ತು ಹೊಣೆಗಾರಿಕೆಗಳ ಕ್ರೋಡೀಕೃತ ವಿವರ ಪತ್ರ;

(ಡಿ) ಡಿಬೆಂಚರುಗಳು, ಷೇರು ಪ್ರಮಾಣ ಪತ್ರಗಳು, ಸರ್ಕಾರಿ ಬಾಂಡುಗಳು ಮತ್ತು ಇತರೆ ಭದ್ರತಾ ಪತ್ರಗಳ ವಿವರ ಪತ್ರ; ಮತ್ತು (ಇ) ನಗದು ರೂಪದ ಅಥವಾ ವಸ್ತು ರೂಪದ ಹಿಂದಿನ ಬಾಕಿಗಳು ಮತ್ತು ಚಾಲ್ತಿ ಬಾಕಿಗಳನ್ನು, ವಂತಿಕೆಗಳು, ಮೊತ್ತಗಳು ಮುಂತಾದವುಗಳೂ ಸೇರಿದಂತೆ ರಾಜಸ್ಪದ ಎಲ್ಲ ಬಾಬುಗಳ ಬೇಡಿಕೆ, ಸಂಗ್ರಹಣೆಗಳು ಮತ್ತು ಬಾಕಿಗಳ ಒಂದು ಕ್ರೋಡೀಕೃತ ವಿವರ ಪತ್ರ.

(6) ಲೆಕ್ಕಪರಿಶೋಧಕನು ಪರಿಶೋಧನೆ ಮಾಡಿದ ಲೆಕ್ಕ ಪತ್ರಗಳ ಒಂದು ಸಂಕ್ಷಿಪ್ತ ವರದಿಯನ್ನು (ಸ್ವೀಕೃತಿಗಳು, ವೆಚ್ಚಗಳು ಮತ್ತು ಜಮಾ ಖರ್ಚು ಪಟ್ಟಿ) ಸಿದ್ಧಪಡಿಸತಕ್ಕದ್ದು ಮತ್ತು ಲೆಕ್ಕಪರಿಶೋಧನಾ ವರದಿಯ ಜೊತೆಗೆ ಅದರ ಮೂರು ಪ್ರತಿಗಳನ್ನು ಸಲ್ಲಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಸುಧಾಕರ ಶೆಟ್ಟಿ

ಸರ್ಕಾರದ ಉಪ ಕಾರ್ಯದರ್ಶಿ ಪಿ.ಆರ್. 555

ಕನ್ನಡ, ಸಂಸ್ಕøತಿ ಮತ್ತು ವಾರ್ತಾ ಇಲಾಖೆ.

ಆರ್ಥಿಕ ಸಚಿವಾಲಯ

ಸಂಖ್ಯೆ:ಆಇ 639 ವೆಚ್ಚ-12/12 ಬೆಂಗಳೂರು, ದಿನಾಂಕ:30.07.2012

ಅದಿಸೂಚನೆ

ನಿರ್ದೇಶಕರು, ಕಾರ್ಮಿಕ ರಾಜ್ಯ ವಿಮಾ ಯೋಜನೆ (ವೈ) ಸೇವೆಗಳು, ಇವರು ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆ/ಚಿಕಿತ್ಸಾಲಯಗಳಿಗೆ ಅಗತ್ಯವಿರುವ ಔಷದಿಗಳನ್ನು ಇಎಸ್ಐ ಕಾರ್ಪೋರೇಷನ್ ನಿಗದಿಪಡಿಸಿರುವ ದರ ಹಾಗೂ ರೇಟ್ ಕಾಂಟ್ರಾಕ್ಟ್ ಗುತ್ತಿಗೆದಾರರಿಂದ ನೇರವಾಗಿ ಖರೀದಿಸಲುಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ೧೨೧೧ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅದಿನಿಯಮ 1999 ರ ಕಲಂ 4(ಜಿ) ರಡಿ ಪ್ರದತ್ತವಾದ ಅದಿಕಾರ ಚಲಾಯಿಸಿ, ಸರ್ಕಾರವು ಕಾರ್ಮಿಕ ಇಲಾಖೆಗೆ ದಿನಾಂಕ:17.06.2012 ರಿಂದ ಎರಡು ವರ್ಷಗಳ ಅವದಿಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಔಷದಿಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಕಾರ್ಮಿಕ ಇಲಾಖೆಯು ಧೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಕಾಂತ. ಎಸ್

ಸರ್ಕಾರದ ಅದೀನ ಕಾರ್ಯದರ್ಶಿ ಪಿ.ಆರ್. 559

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)

ಆರ್ಥಿಕ ಸಚಿವಾಲಯ

ಸಂಖ್ಯೆ:ಆಇ 628 ವೆಚ್ಚ-12/12 ಬೆಂಗಳೂರು, ದಿನಾಂಕ: 26.07.2012

ಅದಿಸೂಚನೆ

ಬೆಸ್ಕಾಂ ಸಂಸ್ಥೆಯು 2012-13ನೇ ಸಾಲಿನಲ್ಲಿ ಸಾಮಗ್ರಿಗಳ ಹಾಗೂ ಕಾರ್ಯ ಯೋಜನೆಗಳ ತಪಾಸಣಾ ಕಾರ್ಯವನ್ನು ನೇರವಾಗಿ ಸಿ.ಪಿ.ಆರ್.ಐ ಸಂಸ್ಥೆಯಿಂದ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅದಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅದಿಕಾರ ಚಲಾಯಿಸಿ, ಇಂಧನ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ಒಂದು ವರ್ಷದ ಅವದಿಗೆ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಇಂಧನ ಇಲಾಖೆಯು ಧೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಕಾಂತ. ಎಸ್

ಸರ್ಕಾರದ ಅದೀನ ಕಾರ್ಯದರ್ಶಿ ಪಿ.ಆರ್. 560

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)

ಆರ್ಥಿಕ ಸಚಿವಾಲಯ

ಸಂಖ್ಯೆ: ಆಇ 667 ವೆಚ್ಚ-12/2012 ಬೆಂಗಳೂರು, ದಿನಾಂಕ:31.07.2012

ಅದಿಸೂಚನೆ

ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2012-13ನೇ ಸಾಲಿನಲ್ಲಿ ಕಾರ್ಯಗತಗೊಳಿಸುತ್ತಿರುವ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಅಧ್ಯಯನ, ಮೌಲ್ಯಮಾಪನ ಹಾಗೂ ಸುಧಾರಣೆಗಳನ್ನು ಸೂಚಿಸುವ ಕಾರ್ಯವನ್ನು ಈ ಕೆಳಕಂಡ ಸಂಸ್ಥೆಗಳಿಗೆ ನೇರವಾಗಿ ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅದಿನಿಯಮ 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅದಿಕಾರ ಚಲಾಯಿಸಿ, ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ:

a) Indian Institute of Management, Bangalore

b) Institute of Social and Economic Change, Bangalore

c) Institute of Social Sciences, Bangalore

d) Administration Staff College of India, Hyderabad

e) Centre for Economics and Social Studies, Hyderabad

f) Madras Institute of Development Studies, Chennai

g) Hyderabad-Karnataka Centre for Advanced Learning, Gulbarga

h) Pragna Research and Consultancy, Hyderabad

i) Centre for Multi Disciplinary Research and Development, Dharwad.

j) Centre for Development Studies, Tiruvananthapuram, Kerala

k) Grassroot Research and Advocacy Movement, Mysore

l) Centre for Budget and Policy Studies, Bangalore

m) Tata Institute of Social Sciences, Mumbai೧೨೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ಭಾಗ - ೪ಎ n) M.S.Swaminathan Research Foundation, Chennai

o) Institute for Development Studies, Jaipur

p) Centre for Women Development Studies, Delhi

q) Karnataka Institute of Public Auditors, Bangalore

ಈ ವಿನಾಯಿತಿಯನ್ನು ಕೆಳಕಂಡ ಷರತ್ತುಗಳಿಗೊಳಪಟ್ಟು ನೀಡಲಾಗಿರುತ್ತದೆ:

ಅ) ಮೇಲ್ಕಂಡ ಅಧ್ಯಯನ, ಮೌಲ್ಯಮಾಪನ, ಇತ್ಯಾದಿ ಕಾರ್ಯಗಳಿಗಾಗಿ ರೂ. 5.00 ಲಕ್ಷದವರೆವಿಗಿನ ಸಂಗ್ರಹಣೆಗಳನ್ನು ಮೇಲಿನ ಯಾವುದಾದರೂ ಸಂಸ್ಥೆಯಿಂದ ನೇರವಾಗಿ ಪಡೆಯಬಹುದು,

ಆ) ರೂ. 5.00 ಲಕ್ಷದಿಂದ ರೂ. 25.00 ಲಕ್ಷಗಳವರೆವಿಗಿನ ಸಂಗ್ರಹಣೆಗಳಿಗೆ, ಮೇಲೆ ತಿಳಿಸಿರುವ 17 ಸಂಸ್ಥೆಗಳಲ್ಲಿ ಕನಿಷ್ಠ 5 ಸಂಸ್ಥೆಗಳಿಂದ ಕೊಟೇಷನ್ ಪಡೆದು ಕನಿಷ್ಠ ದರ ನೀಡುವ ಸಂಸ್ಥೆಯಿಂದ ಸೇವೆಗಳನ್ನು ಪಡೆಯುವುದು,

ಇ) ರೂ.25.00 ಲಕ್ಷ ಮೀರುವ ಸಂಗ್ರಹಣೆಯನ್ನು ಆರ್.ಎಫ್.ಪಿ. ತಯಾರಿಸಿ, 17 ಸಂಸ್ಥೆಗಳಿಂದ ಟೆಂಡರ್ ಪ್ರಕ್ರಿಯೆ ಮುಖಾಂತರ ಪಡೆಯುವುದು, ಮತ್ತು

ಈ) ಪ್ರತಿ ಸಂಗ್ರಹಣೆಯಲ್ಲಿಯೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಉತ್ತಮ ಗುಣಮಟ್ಟದ ಸೇವೆಯನ್ನು ಸ್ಪರ್ಧಾತ್ಮಕ ದರದಲ್ಲಿ ಸಂಗ್ರಹಿಸುವುದನ್ನು ಖಾತ್ರಿ ಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಕಾಂತ. ಎಸ್

ಸರ್ಕಾರದ ಅದೀನ ಕಾರ್ಯದರ್ಶಿ ಪಿ.ಆರ್. 561

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)

ಆರ್ಥಿಕ ಸಚಿವಾಲಯ

ಸಂಖ್ಯೆ:ಆಇ 718 ವೆಚ್ಚ-12/12 ಬೆಂಗಳೂರು, ದಿನಾಂಕ:31.07.2012.

ಅದಿಸೂಚನೆ

ಶ್ರೀ ಎಮ್.ಎಸ್. ಕೃಷ್ಣಮೂರ್ತಿ, ಸೀನಿಯರ್ ಅಕೌಂಟ್ಸ್ ಆಪೀಸರ್ (ನಿವೃತ್ತ), ಮಹಾಲೇಖಪಾಲರ ಕಛೇರಿ, ಕರ್ನಾಟಕ, ಬೆಂಗಳೂರು, ಇವರ ಸೇವೆಯನ್ನು ಮಾಸಿಕ ರೂ.40.000/- ಗಳ ಸಮಾಲೋಚನಾ ಶುಲ್ಕದೊಂದಿಗೆ ಒಂದು ವರ್ಷದ ಅವದಿಗೆ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅದಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅದಿಕಾರ ಚಲಾಯಿಸಿ ಪಾರದರ್ಶಕತೆ ಕಾಯ್ದೆಯಿಂದ ಆರ್ಥಿಕ ಇಲಾಖೆಗೆ ವಿನಾಯಿತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಕಾಂತ. ಎಸ್

ಸರ್ಕಾರದ ಅದೀನ ಕಾರ್ಯದರ್ಶಿ ಪಿ.ಆರ್. 562

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ಸಂಖ್ಯೆ:ಪಸಂಮೀ 31 ಪಅವಿ 2011, ಬೆಂಗಳೂರು, ದಿನಾಂಕ: 08.08.2012

ಅಧಿಸೂಚನೆ

(ಕನ್ನಡ ತರ್ಜುಮೆ)

ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ಸರ್ಕಾರಿ ಸೇವಾ ಅಧಿನಿಯಮ, 1978 ರ (1990 ರ ಕರ್ನಾಟಕ ಅಧಿನಿಯಮ 14) 8 ನೇ ಪ್ರಕರಣದ (1) ನೇ ಉಪ ಪ್ರಕರಣದೊಂದಿಗೆ ಓದಲಾದ 3 ನೇ ಪ್ರಕರಣದಲ್ಲಿ ವಿಧಿಸಿದಂತೆ 3 ನೇ ಪ್ರಕರಣದ (2) ನೇ ಉಪ ಪ್ರಕರಣ (ಎ) ಖಂಡದಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರಡು ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯ ಸೇವೆಗಳು (ಪಶುವೈದ್ಯಕೀಯ ಸಹಾಯಕರ ನೇಮಕಾತಿ) (ವಿಶೇಷ ನೇಮಕಾತಿ) ನಿಯಮಗಳು, 2012 ನ್ನು ಮಾಡಲು ಉದ್ದೇಶಿಸಿದ್ದು, ಅದನ್ನು ಎಲ್ಲಾ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಅದರಿಂದ ಬಾಧಿತರಾಗುವ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳನ್ನು ಆಹ್ವಾಹಿಸಲಾಗಿದ್ದು, ಈ ಸೂಚನೆ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ 15 ದಿನಗಳ ನಂತರ ಮೇಲ್ಕಂಡ ಕರಡನ್ನು ಪರಿಗಣಿಸಲಾಗುತ್ತದೆ.

ಯಾವುದೇ ಆಕ್ಷೇಪಣೆ ಅಥವಾ ಸೂಚನೆಗಳು ಯಾವುದೇ ವ್ಯಕ್ತಿಯಿಂದ ಮೇಲೆ ತಿಳಿಸಿದ ಅವಧಿಯೊಳಗೆ ಸ್ವೀಕೃತಗೊಂಡಲ್ಲಿ ರಾಜ್ಯ ಸರ್ಕಾರವು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಸಲಹೆ ಮತ್ತು ಸೂಚನೆಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ವಿಕಾಸ ಸೌಧ, ಬೆಂಗಳೂರು-560 001 ಇವರಿಗೆ ಕಳುಹಿಸಬಹುದು.

ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ೧೨೧೩

ಕರಡು ನಿಯಮಗಳು

ಶೀರ್ಷಿಕೆ, ಪ್ರಾರಂಭ ಮತ್ತು ಅನ್ವಯ :- (1) ಈ ನಿಯಮಗಳನ್ನು ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯ ಸೇವೆಗಳು (ಪಶುವೈದ್ಯಕೀಯ ಸಹಾಯಕರ ನೇಮಕಾತಿ) (ವಿಶೇಷ ನೇಮಕಾತಿ) ನಿಯಮಗಳು, 2012 ಎಂದು ಕರೆಯಲಾಗುವುದು.

(2) ಅವು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರುವುದು.

(3) ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ಅಥವಾ ಕರ್ನಾಟಕ ನಾಗರೀಕ ಸೇವಾ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) (ಸಾಮಾನ್ಯ) ನಿಯಮಗಳು, 2006 ಅಥವಾ ಕರ್ನಾಟಕ ಪಶುಸಂಗೋಪನೆ ಮತ್ತು ಪಶುವೈದ್ಯ ಸೇವೆಗಳು (ನೇಮಕಾತಿ) ನಿಯಮಗಳು 2000 ಅಥವಾ ಕರ್ನಾಟಕ ರಾಜ್ಯ ಸರ್ಕಾರಿ ಸೇವಾ ಅಧಿನಿಯಮ 1978 ರ (1990 ರ ಕರ್ನಾಟಕ ಅಧಿನಿಯಮ 14) ಮೇರೆಗೆ ರಚಿಸಲಾದ ಅಥವಾ ರಚಿಸಲಾಗಿದೆ ಎಂದು ಭಾವಿಸಲಾದ ಯಾವುದೇ ಇತರ ನಿಯಮಗಳಲ್ಲಿ ಏನೇ ಒಳಗೊಂಡಿದ್ದಾಗ್ಯೂ ಪಶುವೈದ್ಯಕೀಯ ಸಹಾಯಕರ ನೇಮಕಾತಿ ಕುರಿತಂತೆ ಏನೇ ಇದ್ದರೂ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಆಯುಕ್ತಾಲಯದ ಅನುಸೂಚಿಯಲ್ಲಿ ನಮೂದಿಸಿದ 642 ಪಶುವೈದ್ಯಕೀಯ ಸಹಾಯಕರ (5800-10500) ಪ್ರವರ್ಗದ ನೇರ ನೇಮಕಾತಿ ರಿಕ್ತ ಸ್ಥಾನಗಳಿಗೆ ಈ ನಿಯಮಗಳ ನೇಮಕಾತಿ ವಿಧಾನ ಅನ್ವಯಿಸುತ್ತದೆ.

ಒದಗಿಸಿದ ಒಂದಕ್ಕಿಂತ ಹೆಚ್ಚಿನ ನೇಮಕಾತಿಗೆ ಈ ನಿಯಮಗಳು ಅನ್ವಯವಾಗದು.

2. ಪರಿಭಾಷೆಗಳು: (1) ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು:-

ಅ) "ಸಮಿತಿ" ಎಂದರೆ ನಿಯಮ 3 ರಡಿ ರಚಿಸಲಾದ ರಾಜ್ಯ ಮಟ್ಟದ ಆಯ್ಕೆ ಸಮಿತಿ

ಆ)"ಅರ್ಹತಾ ಪರೀಕ್ಷೆ" ಎಂದರೆ ಕರ್ನಾಟಕ ಪ್ರೌಡಶಿಕ್ಷಣ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ., ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯು ಪಶುವೈದ್ಯಕೀಯ ಪರೀಕ್ಷಕರ ಹುದ್ದೆಯ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆಯಾಗಿದೆ.

ಇ)"ಖಾಲಿ ಸ್ಥಾನ" ಎಂದರೆ ಈ ನಿಯಮಗಳಡಿಯಲ್ಲಿ ಭರ್ತಿ ಮಾಡಲಾಗುವ ಖಾಲಿ ಹುದ್ದೆಗಳು

ಈ) ಈ ನಿಯಮಗಳಲ್ಲಿ ಬಳಸಲಾಗಿರುವ ಆದರೆ ಪರಿಭಾಷಿಸಿಲ್ಲದ ಇತರೆ ಪದಗಳು ಮತ್ತು ವ್ಯಾಖ್ಯಾನಗಳು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರಲ್ಲಿ ಅನುಕ್ರಮವಾಗಿ ಅವುಗಳಿಗೆ ನೀಡಲಾದ ಅರ್ಥಗಳನ್ನು ಹೊಂದಿರತಕ್ಕದ್ದು

3. ಸಮಿತಿ: ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರಲ್ಲಿ ಏನೇ ಸೇರ್ಪಡೆಯಾಗಿದ್ದರೂ ಅಥವಾ ಪಶುವೈದ್ಯಕೀಯ ಸಹಾಯಕರ ಪ್ರವರ್ಗದ ಹುದ್ದೆಗಳಿಗೆ ನೇಮಕಾತಿ ನಿಯಮಾವಳಿಗಳನ್ನು ವಿಶೇಷವಾಗಿ ಮಾಡಿದ್ದರೂ ಈ ನಿಯಮಾವಳಿಗಳ ಅಡಿಯಲ್ಲಿ ಕೆಳಕಂಡ ಸದಸ್ಯರುಗಳನ್ನೊಳಗೊಂಡ ರಾಜ್ಯಮಟ್ಟದ ಆಯ್ಕೆ ಸಮಿತಿ (ಇನ್ನು ಮುಂದೆ ಸಮಿತಿ ಎಂದು ಉಲ್ಲೇಖಿಸುವ) ಆಯ್ಕೆ ಮಾಡತಕ್ಕದ್ದು:-

(1) ಆಯುಕ್ತರು,

: ಅಧ್ಯಕ್ಷರು

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು.

(2) ನಿರ್ದೇಶಕರು,

: ಸದಸ್ಯರು

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಬೆಂಗಳೂರು.

(3) ಆಯುಕ್ತರು,

: ಸದಸ್ಯರು

ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಅಥವಾ ಅವರ ಪ್ರತಿನಿಧಿ.

(4) ನಿರ್ದೇಶಕರು,

: ಸದಸ್ಯರು

ಬುಡಕಟ್ಟು ಕಲ್ಯಾಣ ಇಲಾಖೆ, ಬೆಂಗಳೂರು ಅಥವಾ ಅವರ ಪ್ರತಿನಿಧಿ

(5) ನಿರ್ದೇಶಕರು,

ಹಿಂದುಳಿದ ವರ್ಗಗಳ ಇಲಾಖೆ, ಬೆಂಗಳೂರು.ಅಥವಾ ಅವರ ಪ್ರತಿನಿಧಿ

: ಸದಸ್ಯರು

(6) ನಿರ್ದೇಶಕರು,

: ಸದಸ್ಯರು

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಅಥವಾ ಅವರ ಪ್ರತಿನಿಧಿ

(7) ನಿರ್ದೇಶಕರು,

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಂಗಳೂರು ಅಥವಾ ಅವರ : ಸದಸ್ಯರು

ಪ್ರತಿನಿಧಿ

(8) ಜಂಟಿ ನಿರ್ದೇಶಕರು (ಆಡಳಿತ)

: ಸದಸ್ಯ ಕಾರ್ಯದರ್ಶಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು.

೧೨೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ಭಾಗ - ೪ಎ

(4) ನೇಮಕಾತಿ ವಿಧಾನ:- (1) ಸಮಿತಿಯು ಈ ನಿಯಮದಡಿ ಭರ್ತಿ ಮಾಡಬೇಕಾದ ಖಾಲಿ ಹುದ್ದೆಗಳನ್ನು ಗಮನದಲ್ಲಿರಿಸಿಕೊಂಡು ಅರ್ಹತಾ ಷರತ್ತು, ಆಯ್ಕೆ ಸ್ವರೂಪ, ಭರ್ತಿ ಮಾಡಲಾಗುವ ಹುದ್ದೆಗಳ ಸಂಖ್ಯೆ ಮತ್ತು ಯಾವುದೇ ಕಾನೂನು ಮತ್ತು ಆದೇಶಗಳಡಿ ಒದಗಿಸಲಾದ ಮೀಸಲಾತಿಯಂತೆ ತತ್ಕಾಲಕ್ಕೆ ಜಾರಿಯಲ್ಲಿರುವ ವರ್ಗೀಕರಿಸಿದ ಹುದ್ದೆಗಳನ್ನಾಧರಿಸಿ ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚಿಸಿ ಉದ್ದೇಶಿತ ಅಭ್ಯರ್ಥಿಗಳಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ. 150-00 ಮತ್ತು ಇತರೆ ವರ್ಗದ ಅಭ್ಯರ್ಥಿಗಳಿಗೆ ರೂ. 300-00 ಶುಲ್ಕ ವಿಧಿಸಿ ಅರ್ಜಿಗಳನ್ನು ಆಹ್ವಾನಿಸಬೇಕು. ಆ ಜಾಹೀರಾತಿನ ಸಾರಾಂಶವನ್ನು ರಾಜ್ಯದಲ್ಲಿ ಹೆಚ್ಚು ಪ್ರಸಾರವಾಗುವ ಎರಡು ದಿನಪತ್ರಿಕೆಗಳಲ್ಲಿ ಅಧಿಸೂಚಿಸಬೇಕು. ಅದರಲ್ಲಿ ಒಂದು ಕನ್ನಡ ಪತ್ರಿಕೆಯಾಗಿರಲೇ ಬೇಕು.

(2) ಉಪ ನಿಯಮ (1) ರನ್ವಯ ಅಧಿಸೂಚಿಸಿದಂತೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಅರ್ಹತಾ ಪರೀಕ್ಷೆಯಲ್ಲಿ ಪಡೆದ ಶೇಕಡಾವಾರು ಒಟ್ಟು ಅಂಕಗಳು ಮತ್ತು ತತ್ಕಾಲದಲ್ಲಿ ಜಾರಿಯಲ್ಲಿರುವ ಕಾನೂನಿನಡಿ ಮತ್ತು ಹುದ್ದೆಗಳಿಗೆ ಒದಗಿಸಿದ ಮೀಸಲಾತಿಯಂತೆ ಅರ್ಹತೆ ಅನುಸಾರ ನೇಮಕಾತಿಗೆ ಅರ್ಹರಿರುವ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು.

ಪರಂತು, ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಡೈರಿ ಅಭಿವೃದ್ದಿ ಅಥವಾ ಕುಕ್ಕಟ ವಿಜ್ಞಾನದಲ್ಲಿ ಎರಡು ವರ್ಷಗಳ ಡಿಪ್ಲೋಮಾ ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿಪರ ಕೋರ್ಸ್‌ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಅರ್ಹತಾ ಪರೀಕ್ಷೆಯಲ್ಲಿ ಅವರು ಪಡೆದಿರುವ ಶೇಕಡಾವಾರು ಅಂಕಗಳಿಗೆ ಹೆಚ್ಚುವರಿಯಾಗಿ ಶೇಕಡಾ 10 ಮಾನ್ಯತಾ ಅಂಕಗಳನ್ನು ಸೇರಿಸತಕ್ಕದ್ದು.

(3) ಉಪ ನಿಯಮ (2) ರಂತೆ ಆಯ್ಕೆ ಮಾಡಲಾಗುವ ಆಭ್ಯರ್ಥಿಗಳ ಸಂಖ್ಯೆಯು ಪ್ರಕಟಿಸಿದ ಖಾಲಿ ಹುದ್ದೆಗಳಿಗೆ ಅನುಗುಣವಾಗಿರಬೇಕು.

(4) ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳು ಸಮಾನ ಅಂಕಗಳನ್ನು ಪಡೆದ ಪಕ್ಷದಲ್ಲಿ ಅವರ ವಯಸ್ಸನ್ನು ಆಧರಿಸಿ ಅರ್ಹತೆಯನ್ನು ನಿರ್ಧರಿಸತಕ್ಕದ್ದು. ವಯಸ್ಸಿನಲ್ಲಿ ಹಿರಿಯನಾದವನನ್ನು ಕಿರಿಯನಿಗಿಂತ ಮೇಲಿರಿಸಿ ನಿರ್ಧರಿಸತಕ್ಕದ್ದು. ಅಂತಹ ಅರ್ಜಿ ಅಭ್ಯರ್ಥಿಗಳ ಸಂಖ್ಯೆಯ ಪಟ್ಟಿಗೆ ಸೇರಿಸಬೇಕಾದ ಅಭ್ಯರ್ಥಿಗಳ ಸಂಖ್ಯೆ ಅಧಿಸೂಚಿಸಿದ ರಿಕ್ತ ಸ್ಥಾನಗಳಿಗೆ ಸಮನಾಗಿರತಕ್ಕದ್ದು.

(5) ಸಮಿತಿ ಉಪ ನಿಯಮ (2) ರ ಅಡಿಯಲ್ಲಿ ತಯಾರಿಸಿದ ಅಂತಿಮ ಪಟ್ಟಿಯಲ್ಲಿ ಸೇರ್ಪಡೆಯಾಗದಂತಹ ಅಭ್ಯರ್ಥಿಗಳ ಹೆಚ್ಚುವರಿ ಪಟ್ಟಿಯೊಂದನ್ನು ಕೂಡ ತಯಾರಿಸತಕ್ಕದ್ದು. ಪ್ರತಿ ಮೀಸಲಾತಿ ವೃಂದದ ಸಂಖ್ಯೆಯ (ಸಮತಲ ಮತ್ತು ನೇರ) ಶೇಕಡಾ 10 ರಷ್ಟು ಅಭ್ಯರ್ಥಿಗಳು ಹೆಚ್ಚುವರಿ ಮೀಸಲಾತಿ ಪಟ್ಟಿಯಲ್ಲಿರಸಬೇಕು. ಹೆಚ್ಚುವರಿ ಪಟ್ಟಿಯಲ್ಲಿ ಸೇರಿಸಬೇಕಾದ ಅಭ್ಯರ್ಥಿಗಳ ಸಂಖ್ಯೆಯು ಸಾಧ್ಯವಾದಷ್ಟು ಮಟ್ಟಿಗೆ ಉಪ ನಿಯಮ (2) ರಡಿಯಲ್ಲಿ ತಯಾರಿಸಲಾದ ಅಂತಿಮ ಆಯ್ಕೆ ಪಟ್ಟಿಯ ಒಂದೊಂದು ಮೀಸಲಾತಿ ಪ್ರವರ್ಗಗಳ (ಸಮತಲ ಮತ್ತು ನೇರ) ಶೇ. 10 ರಷ್ಟಿರತಕ್ಕದ್ದು.

ಉಪ ನಿಯಮ (2) ರಂತೆ ಆಯ್ಕೆ ಪಟ್ಟಿಯಲ್ಲಿ ಸೇರಿಸಲಾದ ಅಭ್ಯರ್ಥಿ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಸೇವೆಗೆ ಸೇರಲು ವಿಫಲವಾದಲ್ಲಿ ಅದೇ ಮೀಸಲಾತಿ ವೃಂದಕ್ಕೆ ಸೇರಿದ ಹೆಚ್ಚುವರಿ ಪಟ್ಟಿಯಲ್ಲಿರುವ ಅಂತಹ ಅಭ್ಯರ್ಥಿಯನ್ನು ನೇಮಕಾತಿ ಮಾಡತಕ್ಕದ್ದು.

(6) ಉಪನಿಯಮ (2) ಮತ್ತು (5) ರಂತೆ ಸಿದ್ದಪಡಿಸಿದ ಪಟ್ಟಿಯನ್ನು ಅಧಿಕೃತ ರಾಜ್ಯಪತ್ರದಲ್ಲಿ ಮತ್ತು ಸಮಿತಿಯ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸತಕ್ಕದ್ದು. ಅಭ್ಯರ್ಥಿಗಳು ವರದಿ ಮಾಡಿಕೊಳ್ಳದೆ ಲಭ್ಯವಾಗುವ ರಿಕ್ತ ಸ್ಥಾನಗಳನ್ನು ಉಪ ನಿಯಮ (2) ರಂತೆ ಹೆಚ್ಚುವರಿ ಪಟ್ಟಿಯ ಅದೇ ಮೀಸಲಾತಿ ಪ್ರವರ್ಗಗಳ (ಸಮತಲ ಮತ್ತು ನೇರ) ಅಭ್ಯರ್ಥಿಗಳನ್ನು ನೇಮಕಾತಿ ಮಾಡತಕ್ಕದ್ದು.

(7) ಸಮಿತಿ ಅಯ್ಕೆ ಮಾಡಿದ ಅಭ್ಯರ್ಥಿಗಳ ಪಟ್ಟಿ ಮತ್ತು ನೇಮಕಾತಿ ಪ್ರಾದಿಕಾರಕ್ಕೆ ನೀಡಿದ ಪಟ್ಟಿಯಲ್ಲಿನ ಪ್ರಕಟಿತ ಎಲ್ಲಾ ಹುದ್ದೆಗಳು ಭರ್ತಿಯಾಗುವವರೆಗೆ ಅಥವಾ ಪ್ರಕಟವಾದ ದಿನಾಂಕದಿಂದ ಆರು ತಿಂಗಳು ಮುಗಿಯುವವರೆಗೆ, ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಸಿಂಧುವಾಗಿರತಕ್ಕದ್ದು.

5. ಅಭ್ಯರ್ಥಿಗಳ ನೇಮಕಾತಿ:- (1) ನಿಯಮ 4 ರಡಿಯಲ್ಲಿ ತಯಾರಿಸಲಾದ ಆಯ್ಕೆ ಪಟ್ಟಿಯಲ್ಲಿ ಯಾವ ಅಭ್ಯರ್ಥಿಗಳ ಹೆಸರು ಸೇರ್ಪಡೆಯಾಗುತ್ತದೊ, ಅವರ ಹೆಸರು, ಖಾಲಿ ಹುದ್ದೆಗಳ ರಿಕ್ತ ಸ್ಥಾನದ ಪಟ್ಟಿಯ ಯಾವ ಒಂದು ಕ್ರಮದಲ್ಲಿ ಬರುತ್ತದೊ, ಅದನ್ನು ನೋಡಿಕೊಂಡು, ಅಗತ್ಯವೆನಿಸಿದ ವಿಚಾರಣೆಯ ನಂತರ, ಪ್ರತೀ ಅಭ್ಯರ್ಥಿ ಎಲ್ಲಾ ವಿಧದಲ್ಲೂ ನೇಮಕಾತಿಗೆ ಅರ್ಹನಾಗಿದ್ದಾನೆ ಎಂಬುದನ್ನು ಮನದಟ್ಟು ಮಾಡಿಕೊಂಡ ನಂತರ ನೇಮಕಾತಿ ಪ್ರಾಧಿಕಾರ ಅವರನ್ನು ನೇಮಕಾತಿ ಮಾಡಬಹುದು.

(2) ನಿಯಮ 4 ರ ಉಪ ನಿಯಮ (6) ರಂತೆ ಪ್ರಕಟಿಸಲಾದ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು ಸೇರ್ಪಡಯಾದ ಮಾತ್ರಕ್ಕೆ ನೇಮಕಾತಿ ಹೊಂದಲು ಹಕ್ಕುಳ್ಳವನಾಗಿರುವುದಿಲ್ಲ.

6. ಸಾಮಾನ್ಯ ನೇಮಕಾತಿ ನಿಯಮಗಳ ಅನ್ವಯ:-ಈ ನಿಯಮಗಳಲ್ಲಿ ಅವಕಾಶ ಮಾಡಲಾದ ವಿಷಯಗಳನ್ನು ಹೊರತುಪಡಿಸಿ, ಪ್ರಸ್ತುತ ಚಾಲ್ತಿಯಲ್ಲಿರುವ ಕರ್ನಾಟಕ ರಾಜ್ಯ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರಲ್ಲಿ ಮಾಡಿರುವ ಸಧ್ಯಕ್ಕೆ ಚಾಲ್ತಿಯಲ್ಲಿರುವ ಅವಕಾಶಗಳು ಈ ನಿಯಮದಡಿಯಲ್ಲಿ ಮಾಡುವ ನೇಮಕಾತಿಗಳಿಗೆ ಅನ್ವಯವಾಗತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್.ಪ್ರಸನ್ನ

ಪೀಠಾಧಿಕಾರಿ-2,

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ,

(ಪಶುಸಂಗೋಪನೆ-ಎ)ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ೧೨೧೫

ANIMAL HUSBANDRY AND FISHERIES SECRETARIAT

No. AHF 31 AWF 2011 Bangalore, dated:- 08 .08.2012.

NOTIFICATION

The draft of the Karnataka Animal Husbandry and Veterinary Services (Recruitment of Veterinary Assistants) (Special Recruitment) Rules, 2012, which the Government of Karnataka proposes to make in exercise of the powers conferred by sub- section (1) of section 3 read with section 8 of the Karnataka State Civil Services Act, 1978 (Karnataka Act 14 of 1990), is hereby published as required by clause (a) of sub-section (2) of section 3 of the said Act, for the information of all the persons likely to be affected thereby and notice is hereby given that the said draft will be taken into consideration after fifteen days from the date of its publication in the official Gazette.

Any objection or suggestion which may be received by the State Government from any person with respect to the said draft before the expiry of the period specified above, will be considered by the State Government. Objections and suggestions may be addressed to the Principal Secretary to Government, Animal Husbandry and Fisheries Department, Vikasa Soudha, Bangalore – 560 001.

DRAFT RULES

1. Title, commencement and application:- (1) These rules may be called the Karnataka Animal Husbandry and Veterinary Services (Recruitment of Veterinary Assistants) (Special Recruitment ) Rules, 2012.

(2) They shall come into force from the date of their publication in the Official Gazette.

(3) Notwithstanding anything contained in the Karnataka Civil Services (General Recruitment) Rules, 1977 or the Karnataka Civil Services (Direct Recruitment by Competitive Examination and Selection) (General) Rules, 2006 or in the Karnataka Animal Husbandry and Veterinary Services (Recruitment) Rules, 2000, or in any other rules made or deemed to have been made, under the Karnataka State Civil Services Act, 1978 (Karnataka Act 14 of 1990) pertaining to the method of recruitment to Veterinary Assistants, the provisions of these rules shall apply to recruitment of 642 Direct Recruitment Vacancies in the categories of posts of Veterinary Assistants (Rs.5800-10500) in the Department of Animal Husbandry and Veterinary Services ;

Provided that nothing in these rules shall apply to more than one recruitment.

2. Definitions:- (1) In these rules unless the context otherwise requires,:-

(a) "Committee" means the State Level Selection Committee constituted under rule 3;

(b) "Qualifying Examination" means S.S.L.C examination conducted by the Karnataka Secondary Education Examination Board or equivalent examination which is the minimum qualification for recruitement to the posts of Veterinary Assistant;

(c) "Vacancies" means the number of vacant posts to be filled up under these rules;

(d) Other words and expressions used in these rules, but not defined shall have the same meaning assigned to them in the Karnataka Civil Services (General recruitment) Rules, 1977.

3.Committee: - Notwithstanding anything contained in the Karnataka Civil Services (General Recruitment) Rules, 1977 or rules of recruitment specially made for recruitment to the categories of posts of Veterinary Assistants, selection of candidates shall be made under these rules by the State Level Selection Committee (hereinafter referred to as the Committee) consisting of the

(1) The Commissioner of Animal Husbandry and Veterinary Services Department, Bangalore. : Chairman
(2) The Director of Animal Husbandry and Veterinary Services Department, Bangalore. : Member
(3) The Commissioner of Social Welfare Department, Bangalore or his representative : Member
(4) The Director of Tribal Welfare Department, Bangalore or his representative. : Member
(5) The Director of Backward Classes Department, Bangalore or his representative : Member
(6) The Director of Minority Welfare Department, Bangalore or his representative. : Member
(7) The Director of Women and Children Welfare Department, Bangalore or his representative : Member
(8) The Joint Director (Administration), Commissionerate of Animal Husbandry and Veterinary Services, Bangalore : Member Secretary
೧೨೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೬, ೨೦೧೨ ಭಾಗ - ೪ಎ

4. Method of Recruitment: - (1) The Committee shall, after taking into consideration of the vacancies to be filled up under these rules, notify the vacancies in the Official Gazette specifying the conditions of eligibility, nature of selection, number of vacancies to be filled and classification in accordance with reservation of posts provided by or under any law or any order for the time being in force, invite application from the intending candidates along with a fee of rupees 150 in respect of candidates belonging to schedule Castes and Schedule Tribes and rupees 300 for other candidates. Abstract of such notification shall also be published in two daily newspapers having wide circulation in the State of which one shall be in Kannada.

(2) The Committee shall from among the candidates who have applied in pursuance to the publication made under sub –rule (1), prepare in the order of merit, a select list of candidates eligible for appointment under these rules on the basis of aggregate percentage of marks secured in the qualifying examination and the reservation of posts provided by or under any law or any order for time being in force;

Provided that, additional weightage of 10 percent shall be added to the percentage of marks secured in the qualifying examination to the candidates who have passed two years diploma course or two years Job Oriented Course in Dairy Development or Poultry Science from Institutions recognized by the Government of Karnataka.

(3) The number of candidates to be selected under sub-rule (2) shall be equal to the number of vacancies notified.

(4) If, the marks secured by two or more candidates are equal, then the merit being determined on the basis of their age, the older in age being placed above the younger. The number of candidates to be included in such list of eligible candidates shall be equal to the number of vacancies notified.

(5) The committee shall also prepare an additional list of such candidates not included in the final selection list prepared under sub-rule (2). The number of candidates to be included in the additional list shall be as far as possible ten percent of number of candidates in each of the reservation categories (horizontal and vertical) in the final selection list prepared under sub-rule(2). There shall at least be one candidate in the additional list belonging to each of the reservation categories (horizontal and vertical) represented in the list under sub-rule (2). If a candidate whose name is included in the selection list under sub-rule (2) fails to report for duty within period, specified, then a candidate belonging to the same category shall be appointed from the additional list.

(6) The lists so prepared under sub-rule (2) and (5) shall be published in the official Gazette and also on the notice board of the office of the committee. The candidates in the additional list belonging to the same category of reservation (Vertical and Horizontal) may be appointed to the extent of vacancies occurred due to non reporting of candidates whose names are included in the list prepared under sub-rule (2) and not reported to duty with in the stipulated time.

(7) The list of candidates selected by the committee and assigned to the appointing authority shall be valid till all the notified vacancies are filled or till the completion of six months from the date of publication of the selected list whichever is earlier.

5. Appointment of candidates: - (1) Candidates whose names are included in the selection list prepared under rule 4 may be appointed by the appointing authority in the vacancies in the order in which their names are found in the list after satisfying itself with such enquiry as it may consider necessary that each of the candidates is suitable in all respects for appointment.

(2) The inclusion of name of a candidate in the list published under sub- rule (6) of rule 4 shall not confer any right of appointment.

6. Application of general recruitment rules:- Except in respect of matters for which provision is made in these rules, the provisions of the Karnataka State Civil Services (General Recruitment) Rules, 1977 for the time being in force, shall be applicable for purpose of recruitment under these rules.

By Order and in the Name of the Governer of Karnataka

H.PRASANNA

Desk Officer-2 PR-580

Animal Husbandry and Fisheries Department,

(Animal Husbandry-A)

Cite this issue. Karnataka Gazette, Government of Karnataka, 16 August 2012. Indian Gazettes, https://egazette.servantsofknowledge.in/details/in.gazette.karnataka_new.2012-08-16.Part-4A/. Archive identifier in.gazette.karnataka_new.2012-08-16.Part-4A.