Servants of Knowledge
Karnataka Gazette · Government of Karnataka

Karnataka Gazette, Part Part-5, 30 August 2012

Published 30 August 2012

Part
Part-5
Identifier
in.gazette.karnataka_new.2012-08-30.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೪೭ ಬೆಂಗಳೂರು, ಗುರುವಾರ, ಆಗಸ್ಟ್ ೩೦, ೨೦೧೨ (ಭಾದ್ರಪದ ೮, ಶಕ ವರ್ಷ ೧೯೩೪) ಸಂಚಿಕೆ ೩೫

ಭಾಗ - ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ನಮೂನೆ-1

9ನೇ ನಿಯಮ ನೋಡಿ

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪ-ವಿಭಾಗ, ಬಸವನ ಬಾಗೇವಾಡಿ

ಅಧಿಸೂಚನೆ

ಶ್ರೀ ನಾನಾಸಾಹೇಬ ಬಾಬು ಪಾತ್ರದ, ರವರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ, ಬಸವನ ಬಾಗೇವಾಡಿ ಇಲ್ಲಿ ಸುಶಿಕ್ಷಿತ ಸಹಾಯಕ (ಹೆಚ್ಚುವರಿ)ಕೆಲಸ ನಿರ್ವಹಿಸುತ್ತಿದ್ದು ಇವರ ಹೆಸರನ್ನು ಶ್ರೀ ನಾನಾಸಾಹೇಬ ಬಾಬು ಮನಗೂಳಿ ಎಂದು ಬದಲಾವಣೆ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು,

ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ,

ಬಸವನ ಬಾಗೇವಾಡಿ

ಪಿ.ಡಿ. 106

FORM-IV

(SEE RULE-12)

NOTICE

It is hereby notified that the undersigned has changed his/her name from MALLIKARJUN .S. CHALAWADI to . MALLIKARJUN .S. JAMBAGI.

MALLIKARJUN .S. CHALAWADI

P.D. C/n 107

FORM-IV

(SEE RULE-12)

NOTICE

It is hereby noticed that the undersigned has changed his/her name from MANJULA SHIVAPPA CHAVHAN to MANJULA KIRAN NAIK

MANJULA SHIVAPPA CHAVHAN

P.D. C/n 108

(೧೨೪೫)೧೨೪೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩೦, ೨೦೧೨ ಭಾಗ - ೫

FORM-1

(SEE RULE-9)

DEPARTMENT OF WOMEN & CHILD DEVELOPMENT

Office of the Directorate, 1st Floor, M.S. Building, Dr. Ambedkar Veedhi, Bangalore-560001,

NO.NISIPRA/HE.BA/44/2008-09, DATED: 26-05-2012

NOTIFICATION

Smt. M. Savithribai, working as Senior Typist in the Department of Women & Child Development, Office of the Deputy Director, Dharwad District is permitted to change her name as SUMATHI SHRIKANT BAGALWADI.

Signature and Designation of the

P.D. C/n 109

Appointing Authority

ಕರ್ನಾಟಕ ಲೋಕಸೇವಾ ಆಯೋಗ ಉದ್ಯೋಗ ಸೌಧ ಬೆಂಗಳೂರು.

ವಿಷಯ:- 2011ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಯಲ್ಲಿ ಶ್ರೀ ಪಿ. ಸೀನಪ್ಪ, ಗ್ರಾಮ ಪಂಚಾಯತ್ ಕಾರ್ಯದರ್ಶಿ, ಇವರು ಕಮ್ಯೂನಿಟಿಡೆವಲಪ್‌ಮೆಂಟ್ ಭಾಗ-2ರ ವಿಷಯದ ಪರೀಕ್ಷಾ ಅವಧಿಯಲ್ಲಿ ಮೊಬೈಲ್ ಪೋನ್ ಮೂಲಕ ಸಂಭಾಷಣೆ ನಡೆಸಿರುವ ದುರಾಚಾರ ಪ್ರಕರಣಕ್ಕೆ ದಂಡನೆ ವಿಧಿಸುವ ಕುರಿತು.

ಓದಲಾಗಿದೆ : (1) ಶ್ರೀ ಪಿ. ಸೀನಪ್ಪ, ನೋಂದಣಿ ಸಂಖ್ಯೆ.27412 ಇವರಿಗೆ ಆಯೋಗದ ಕಾರಣ ಕೇಳುವ ನೋಟೀಸು ಜಾರಿ ಮಾಡಿದ ಸಂಖ್ಯೆ. ಇಪ(3)15/2012-13/ಪಿಎಸ್‌ಸಿ/ ದಿನಾಂಕ: 19-04-2012

(2) ಶ್ರೀ ಪಿ.ಸೀನಪ್ಪ ಇವರ ಸಮಜಾಯಿಷಿ ದಿನಾಂಕ:25-04-2012.

(3) ಆಯೋಗದ ವಿಚಾರಣೆ ನೋಟೀಸ್ ಸಂಖ್ಯೆ.ಸಿಓಎನ್.103/2012-13/ಪಿಎಸ್‌ಸಿ, ದಿನಾಂಕ: 04-07-2012.

(4) ವಿಚಾರಣಾಧಿಕಾರಿಯವರ ವಿಚಾರಣಾ ವರದಿ ದಿನಾಂಕ: 18-07-2012.

(5) ದಿನಾಂಕ: 03-08-2012ರ ಆಯೋಗದ ನಡಾವಳಿಗಳು.

ಪ್ರಸ್ತಾವನೆ:-

ಆಯೋಗವು ನಡೆಸಿದ 2011ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳ ಸಂಬಂಧ ದಿನಾಂಕ:12-01-2012ರಂದು ನಡೆಸಲಾದ ಕಮ್ಯೂನಿಟಿಡೆವಲಪ್‌ಮೆಂಟ್ ಭಾಗ-2ರ ವಿಷಯದ ಪರೀಕ್ಷೆ ಸಂದರ್ಭದಲ್ಲಿ ಕೊಠಡಿ ಸಂವೀಕ್ಷಕರು ನೀಡಿರುವ ವರದಿಯಂತೆ ನೋಂದಣಿ ಸಂಖ್ಯೆ. 27412ರ ಅಭ್ಯರ್ಥಿ ಶ್ರೀ ಪಿ. ಸೀನಪ್ಪ, ಗ್ರಾಮ ಪಂಚಾಯತ್ ಕಾರ್ಯದರ್ಶಿ, ಕಾರಹಳ್ಳಿ ಗ್ರಾಮ ಪಂಚಾಯತ್ ಕಛೇರಿ, ಕಾರಹಳ್ಳಿ ಗ್ರಾಮ ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562110, ಇವರು ಪರೀಕ್ಷಾ ಸಮಯದಲ್ಲಿ ಮೊಬೈಲ್ ಫೋನ್ ಹೊಂದಿದ್ದು ಮೊಬೈಲ್‌ನಲ್ಲಿ ಸಂಭಾಷಣೆ ಮಾಡುವ ಮೂಲಕ ದುರಾಚಾರ ಎಸಗಿರುತ್ತಾರೆಂದು ದಿನಾಂಕ:17-03-2012ರಂದು ರಹಸ್ಯ ಶಾಖೆಯವರು ವರದಿ ನೀಡಿರುತ್ತಾರೆ.

ಈ ವರದಿ ಮೇರೆಗೆ ಉಲ್ಲೇಖ-(1)ರಲ್ಲಿ ಓದಲಾದ ದಿನಾಂಕ:19-04-2012ರ ನೋಟೀಸಿನಲ್ಲಿ ಆಪಾದಿತ ಅಭ್ಯರ್ಥಿಯಿಂದ ಲಿಖಿತ ಸಮಜಾಯಿಷಿಯನ್ನು ಕೇಳಲಾಗಿತ್ತು. ಸದರಿ ನೋಟೀಸಿಗೆ ಆಪಾದಿತರು ಉಲ್ಲೇಖ-(2)ರಲ್ಲಿ ಓದಲಾದ ದಿನಾಂಕ: 25-4-2012ರ ಸಮಜಾಯಿಷಿಯಲ್ಲಿ ತಮ್ಮ ವಿರುದ್ಧದ ಆರೋಪವನ್ನು ಅಸ್ಪಷ್ಟ ರೀತಿಯಲ್ಲಿ ಒಪ್ಪಿರುತ್ತಾರೆ. ಕಾರಣ ಸದರಿ ಪ್ರಕರಣದ ಸತ್ಯಾಸತ್ಯೆಯನ್ನು ತಿಳಿಯುವ ಸಲುವಾಗಿ ಶ್ರೀಮತಿ ಕೆ.ಟಿ ಪದ್ಮರೇಖ, ಸಹಾಯಕ ಕಾರ್ಯದರ್ಶಿ. ಕರ್ನಾಟಕ ಲೋಕಸೇವಾ ಆಯೋಗ, ಇವರನ್ನು ವಿಚಾರಾಣಾಧಿಕಾರಿಗಳನ್ನಾಗಿ ಹಾಗೂ ಶ್ರೀಮತಿ ಬಿ. ಮಧುಮಾಲತಿ, ಶಾಖಾಧಿಕಾರಿ, ಕರ್ನಾಟಕ ಲೋಕಸೇವಾ ಆಯೋಗ. ಇವರನ್ನು ಮಂಡನಾಧಿಕಾರಿಯಾಗಿ ನೇಮಿಸಲಾಗಿತ್ತು.

ವಿಚಾರಾಣಾಧಿಕಾರಿಗಳು ಉಲ್ಲೇಖ(4)ರಲ್ಲಿ ಓದಲಾದ ದಿನಾಂಕ:18-07-2012ರ ತಮ್ಮ ವಿಚಾರಣಾ ವರದಿಯಲ್ಲಿ ಶ್ರೀ ಪಿ. ಸೀನಪ್ಪ, ನೋಂದಣಿ ಸಂಖ್ಯೆ.27412 ಇವರ ವಿರುದ್ಧ ಮಾಡಲಾದ ಆರೋಪವು ಸಾಬೀತಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟಿರುತ್ತಾರೆ.

ವಿಚಾರಣಾಧಿಕಾರಿಗಳು ನೀಡಿದ ವರದಿಯನ್ನು ಆಯೋಗದ ಮುಂದೆ ಮಂಡಿಸಲಾಯಿತು. ಆಯೋಗವು ವಿಚಾರಾಣಾಧಿಕಾರಿಗಳ ವರದಿಯನ್ನು ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಒದಗಿಸಲಾದ ದಾಖಲೆ ಸಾಕ್ಷ್ಯ ಇತ್ಯಾದಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅಭ್ಯರ್ಥಿಯ ವಿರುದ್ಧದ ಆರೋಪವು ಸಾಬೀತಾಗಿರುವುದರಿಂದ ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಗಳ ನಿರ್ವಹಣೆ) ನಿಯಮಗಳು 1965ರನ್ವಯ ಹಾಗೂ ತತ್ಸಂಬಂಧದಲ್ಲಿ ಜಾರಿಗೊಳಿಸಲಾದ ಆಯೋಗ ಅಧಿಕೃತ ಜ್ಞಾಪನ ಸಂಖ್ಯೆ ಆಡಳಿತ.398/1993-94/ಪಿಎಸ್‌ಸಿ, ದಿನಾಂಕ:14-07-1993ರನ್ವಯ ಪ್ರದತ್ತವಾದ ಅಧಿಕಾರದ ಮೇರೆಗೆ ಶ್ರೀ ಪಿ.ಸೀನಪ್ಪ, ನೋಂದಣಿ ಸಂಖ್ಯೆ. 27412 ಇವರ 2011ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಯ ಅಭ್ಯರ್ಥಿತ್ವವನ್ನು ರದ್ದುಪಡಿಸುವುದರ ಜೊತೆಗೆ ಆಯೋಗವು ನಡೆಸುವ ಮುಂದಿನ ನಾಲ್ಕು ಅಧಿವೇಶನಗಳ ಇಲಾಖಾ ಪರೀಕ್ಷೆಗಳಿಗೆ ಹಾಜರಾಗದಂತೆ ಡಿಬಾರ್ ಮಾಡುವ ದಂಡನೆಯನ್ನು ವಿಧಿಸುವುದು ಸೂಕ್ತವೆಂದು ಉಲ್ಲೇಖ-(5)ರಲ್ಲಿ ದಿನಾಂಕ:03-08-2012ರಂದು ನಿರ್ಣಯಿಸಿರುವ ಹಿನ್ನೆಲೆಯಲ್ಲಿ ಈ ಕೆಳಕಂಡ ಆದೇಶ.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩೦, ೨೦೧೨ ೧೨೪೭

ಆದೇಶ ಸಂಖೆ.್ಯ. ಇಪ(3)148/2012-13/ಪಿಎಸ್‌ಸಿ, ಬೆಂಗಳೂರು. ದಿನಾಂಕ:17-08-2012.

ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಗಳ ನಿರ್ವಹಣೆ) 1965ರ ನಿಯಮ 14ರ ಹಾಗೂ ತತ್ಸಂಬಂಧದಲ್ಲಿ ಹೊರಡಿಸಲಾದ ಆಯೋಗದ ಅಧಿಕೃತ ಜ್ಞಾಪನ ಸಂಖ್ಯೆ ಆಡಳಿತ.398/1993-94/ಪಿಎಸ್‌ಸಿ, ದಿನಾಂಕ:14-07-1993ರನ್ವಯ ಪ್ರದತ್ತವಾದ ಅಧಿಕಾರದ ಮೇರೆಗೆ ನೋಂದಣಿ ಸಂಖ್ಯೆ. 27412 ಅಭ್ಯರ್ಥಿ ಶ್ರೀ ಪಿ.ಸೀನಪ್ಪ, ಗ್ರಾಮ ಪಂಚಾಯತ್ ಕಾರ್ಯದರ್ಶಿ, ಕಾರಹಳ್ಳಿ ಗ್ರಾಮಪಂಚಾಯತ್ ಕಛೇರಿ, ಕಾರಹಳ್ಳಿ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562110, ಇವರ ವಿರುದ್ಧದ ಆರೋಪವು ಸಾಬೀತಾಗಿರುವುದರಿಂದ ಈ ಅಭ್ಯರ್ಥಿಯ 2011ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಯ ಅಭ್ಯರ್ಥಿತ್ವವನ್ನು ರದ್ದುಪಡಿಸುವುದರ ಜೊತೆಗೆ ಆಯೋಗವು ನಡೆಸುವ ಮುಂದಿನ ನಾಲ್ಕು ಅಧಿವೇಶನಗಳ ಇಲಾಖಾ ಪರೀಕ್ಷೆಗೆ ಹಾಜರಾಗದಂತೆ ಡಿಬಾರ್ ಮಾಡುವ ದಂಡನೆಯನ್ನು ಈ ಮೂಲಕ ವಿಧಿಸಿದೆ.

ವಿ.ಬಿ. ಪಾಟೀಲ್

ಕಾರ್ಯದರ್ಶಿ ಹಾಗೂ ನಿಯಂತ್ರಕರು,

ಇಲಾಖಾ ಪರೀಕ್ಷೆಗಳು, ಪಿ.ಆರ್. 132

ಕರ್ನಾಟಕ ಲೋಕಸೇವಾ ಆಯೋಗ.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರವರ ಕಛೇರಿ, ಕೊಡಗು, ಮಡಿಕೇರಿ

ಅಧಿಸೂಚನೆ ಸಂಖ್ಯೆ ಃ 3/2012 ದಿನಾಂಕಃ 08.08.2012

ವಿಷಯಃ ಕೊಡಗು ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ಖಾಲಿಯಿರುವ ಶೀಘ್ರಲಿಪಿಗಾರರ 5 ಹುದ್ದೆಗಳನ್ನು ಬರ್ತಿ

ಮಾಡುವ ಬಗ್ಗೆ.

ಉಲ್ಲೇಖಃ 1. ಮಾನ್ಯ ಉಚ್ಛ ನ್ಯಾಯಾಲಯದ ಪತ್ರ ಸಂಖ್ಯೆಃ ಎಲ್‌ಸಿಎ-I 220/96 ದಿನಾಂಕಃ 08.03.2010.

2. ಮಾನ್ಯ ಉಚ್ಛ ನ್ಯಾಯಾಲಯದ ಪತ್ರ ಸಂಖ್ಯೆಃ ಎಲ್‌ಸಿಎ- II 36/2003 ¢£ÁAPÀB 23.06.2011 ªÀÄvÀÄÛ ¸ÀPÁðj DzÉñÀ ¸ÀASÉåB ¯Á 230 J¯ï¹E 2010 ¨ÉAUÀ¼ÀÆgÀÄ ¢£ÁAPÀB 29.03.2010.

ಅರ್ಜಿಗಳನ್ನು ಸಲ್ಲಿಸಲು ಕಡೆಯ ದಿನಾಂಕಃ 10.09.2012 ಅಪರಾಹ್ನ 5.00 ಗಂಟೆ.


  1. ಶೀಘ್ರ ಲಿಪಿಗಾರರು (Stenographer) - 5 ಹುದ್ದೆಗಳು ಎ) ವೇತನ ಶ್ರೇಣô ರೂ. 14550-350-15600-400-17200-450-19000-500-21000-600-24600-700-26700 + ಇತರೆ ಬತ್ಯೆಗಳು. ಬಿ) ಹುದ್ದೆಗಳ ವರ್ಗೀಕರಣಃ ↩
  2. ಮಾನ್ಯ ಉಚ್ಛ ನ್ಯಾಯಾಲಯದ ಪತ್ರ ಸಂಖ್ಯೆಃ ಎಲ್‌ಸಿಎ- II {{^{{FOOTNOTE 54}}}}/{{^{{FOOTNOTE 2011}}}} ¢£ÁAPÀB {{^{{FOOTNOTE 01}}}}.{{^{{FOOTNOTE 10}}}}.{{^{{FOOTNOTE 2011}}}}. 4. f¯Áè £ÁåAiÀiÁ®AiÀÄ C¢ü¸ÀÆZÀ£É ¸ÀASÉåB 2/2011 ¢£ÁAPÀ 02.11.2011. ಕೊಡಗು ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ಖಾಲಿಯಿರುವ ಶೀಘ್ರಲಿಪಿಗಾರರ ಹುದ್ದೆಗಳಿಗೆ ಅರ್ಹ ಅಬ್ಯರ್ಥಿಗಳಿಂದ ಈ ಅಧಿಸೂಚನೆಯ ಜೊತೆ ಲಗತ್ತಿಸಿರುವ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಬೇಕಾದ ವಿಳಾಸ ಃ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಡಗು, ಮಡಿಕೇರಿ. ↩
ವರ್ಗೀಕರಣ ಇತರೆ ಗ್ರಾಮೀಣ ಮಾ.ಸೈ ಅಂಗವಿಕಲ ಅಬ್ಯರ್ಥಿ ಒಟ್ಟು
ಪ.ಜಾ # # # 1 1
ಪ್ರವರ್ಗ#2ಎ # 1 # # 1
ಪ್ರವರ್ಗ#3ಬಿ 1 # # # 1
ಸಾ#ವರ್ಗ 1 # 1 # 2
ಒಟ್ಟು 2 1 1 1 5
೧೨೪೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩೦, ೨೦೧೨ ಭಾಗ - ೫

ಶೈಕ್ಷಣôಕ ವಿದ್ಯಾರ್ಹತೆಃ

i ) ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ

ತತ್ಸಮಾನ ವಿದ್ಯಾರ್ಹತೆ.

ii ) ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಆಂಗ್ಲ ಪ್ರೌಡ ದರ್ಜೆ (Senior Grade

Shorthand) ಶೀಘ್ರಲಿಪಿ ಹಾಗೂ ಕನ್ನಡ ಮತ್ತು ಆಂಗ್ಲ ಪ್ರೌಡದರ್ಜೆ ಬೆರಳಚ್ಚು (Senior Grade Typewriting) ಪರೀಕ್ಷೆ ಅಥವಾ

ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಆಯ್ಕೆಯ ವಿಧಾನಃ ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು ನಿಮಿಷ ಒಂದಕ್ಕೆ 120 ಪದಗಳ

ದರದಲ್ಲಿ 5 ನಿಮಿಷಗಳ ಉಕ್ತಲೇಖನವನ್ನು ತೆಗೆದುಕೊಂಡು, ಉಕ್ತಲೇಖನವನ್ನು 45 ನಿಮಿಷಗಳಲ್ಲಿ ಅನುಲಿಪಿ ಮಾಡುವ ಅರ್ಹತಾ

ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳಲ್ಲಿ ಮಾಜಿ ಸೈನಿಕ ಅಬ್ಯರ್ಥಿಗಳು, ಅಂಗವಿಕಲ ಅಬ್ಯರ್ಥಿಗಳು, ಹಾಗೂ ಗ್ರಾಮೀಣ ಅಬ್ಯರ್ಥಿಗಳು ಮೀಸಲಾತಿಗಳಿಗೆ ಅರ್ಹ ಅಬ್ಯರ್ಥಿಗಳು ಲಬ್ಯವಿರದೇ ಇದ್ದ ಪಕ್ಷದಲ್ಲಿ, ಆ ಹುದ್ದೆಗಳನ್ನು ಆಯಾ ಪಂಗಡಗಳ ಇತರೆ ಅಬ್ಯರ್ಥಿಗಳಿಂದ ಬರ್ತಿ ಮಾಡಲಾಗುವುದು. ಆಯಾ ಪಂಗಡಗಳ ಇತರೆ ಅಬ್ಯರ್ಥಿಗಳೂ ಸಹ ಲಬ್ಯವಾಗದಿದ್ದಲ್ಲಿ, ಪರಿಶಿಷ್ಟ ಜಾತಿಗೆ ಮೀಸಲಾದ ಹುದ್ದೆಗಳನ್ನು ಹೊರತುಪಡಿಸಿ ಇನ್ನುಳಿದ ಹಿಂದುಳಿದ ವರ್ಗಗಳ ಹುದ್ದೆಗಳನ್ನು ಸಾಮಾನ್ಯ ವರ್ಗದ ಅಬ್ಯರ್ಥಿಗಳಿಂದ ಬರ್ತಿ ಮಾಡಲಾಗುವುದು.

ಅರ್ಹತಾ ಪರೀಕ್ಷೆಗೆ ಹಾಗೂ ಸಂದರ್ಶನಕ್ಕೆ ಆಯ್ಕೆಯಾಗುವ ಅಬ್ಯರ್ಥಿಗಳು ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿಗೆ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು.

ಆಯ್ಕೆ ವಿಧಾನಃ

ಅಬ್ಯರ್ಥಿಗಳ ಆಯ್ಕೆಯು ಕರ್ನಾಟಕ ಅಧೀನ ನ್ಯಾಯಾಲಯಗಳ ಲಿಪಿಕ ಮತ್ತು ಇತರ ಹುದ್ದೆಗಳ (ನೇಮಕಾತಿ)(ತಿದ್ದುಪಡಿ) ನಿಯಮ 2007ರ ಪ್ರಕಾರ ನಡೆಸಲಾಗುವುದು.

ವಯೋಮಿತಿಃ

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಅಬ್ಯರ್ಥಿಯು

ಅ) ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.

ಆ) ಗರಿಷ್ಠ ವಯೋಮಿತಿ.

ಅಬ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಈ ಕೆಳಕಂಡ ಗರಿಷ್ಟ ವಯಸ್ಸನ್ನು ಮೀರಕೂಡದು.

ಸಾಮಾನ್ಯ ವರ್ಗ 35 ವರ್ಏ
2ಎ, 2ಬಿ, 3ಎ ಮತ್ತು 3 ಬಿ 38 ವರ್ಏ
ಪರಿಶಿಏ್ಟ ಜಾತಿ, ಪರಿಶಿಏ್ಟ ಪಂಗಡ ಹಾಗೂ ಪ್ರವರ್ಗ I 40 ವರ್ಏ

ಇ) ವಯಸ್ಸಿನ ಮಿತಿಯನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ/ಕೇಂದ್ರ ಸರ್ಕಾರಿ ನೌಕರರು/ಮಾಜಿ ಸೈನಿಕರು/ಅಂಗವಿಕಲ

ಅಬ್ಯರ್ಥಿಗಳು ಹಾಗೂ ವಿದವೆಯರ ಬಗ್ಗೆ ಕೆ.ಸಿ.ಎಸ್. ಸಾಮಾನ್ಯ ನೇಮಕಾತಿ ನಿಯಮಗಳು 1977ರ ಪ್ರಕಾರ ಸಡಿಲಿಕೆಯನ್ನು

ಕೊಡಲಾಗುವುದು.

ಪರಿವೀಕ್ಷಣಾ ಅವಧಿ

ಆಯ್ಕೆಯಾದ ಅಬ್ಯರ್ಥಿಗಳು ಕರ್ನಾಟಕ ಸೇವಾ ನಿಯಮ (ಪರಿವೀಕ್ಷಣೆ ನಿಯಮಗಳು) 1977ರ ಪ್ರಕಾರ 02 ವರ್ಷಗಳ

ಕಾಲ ಪರಿವೀಕ್ಷಣಾ ಅವಧಿಯಲ್ಲಿರುತ್ತಾರೆ. ಈ ಅವಧಿಯಲ್ಲಿ ಅಬ್ಯರ್ಥಿಗಳು ಈ ಹುದ್ದೆಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ

ಮತ್ತು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

ಸರ್ಕಾರಿ ಸೇವೆಯಲ್ಲಿರುವ ಅಬ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಧಾನಃ

ಸರ್ಕಾರಿ ಸೇವೆಯಲ್ಲಿರುವ ಅಬ್ಯರ್ಥಿಗಳು ತಮ್ಮ ನೇಮಕಾತಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದು,

ಅರ್ಜಿಗಳನ್ನು ಸಂಬಂಧಿತ ನೇಮಕಾತಿ ಪ್ರಾಧಿಕಾರದ ಮೂಲಕ ಕಳುಹಿಸಬೇಕು.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩೦, ೨೦೧೨ ೧೨೪೯

ಅರ್ಜಿ ಸಲ್ಲಿಸುವ ವಿಧಾನಃ

ಈ ಅಧಿಸೂಚನೆಯಲ್ಲಿ ಲಗತ್ತಿಸಿರುವ ಅರ್ಜಿ ನಮೂನೆಯನ್ನು ಬೆರಳಚ್ಚು ಮಾಡಿ/ ಕಂಪ್ಯೂಟರ್ ಮೂಲಕ ತಯಾರಿಸಿ/

ಅರ್ಜಿಯನ್ನು ತಮ್ಮ ಸ್ವಂತ ಕೈಬರಹದಲ್ಲಿ ತಮಗೆ ಅನ್ವಯಿಸುವ ಎಲ್ಲಾ ಅಂಕಣಗಳನ್ನು ಬರ್ತಿ ಮಾಡುವುದು. ಅಬ್ಯರ್ಥಿಯು ತಮ್ಮ

ಇತ್ತೀಚಿನ ಪಾಸ್‌ಪೊರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿಯ ಮೇಲೆ ಅಂಟಿಸಿ, ಅದರ ಮೆÃಲೂ ಸಹ ಸಹಿ ಮಾಡುವುದು

ಹಾಗೂ ಅರ್ಜಿ ನಮೂನೆಯ ಕೊನೆಯಲ್ಲಿ ಘೋಷಣೆಯ ನಂತರ ಸಹಿ ಮಾಡುವುದು. ಹುದ್ದೆಗೆ ಸಂಬಂಧಿಸಿದ ವಿದ್ಯಾರ್ಹತೆ,

ವಯಸ್ಸು ಮತ್ತು ಕೋರಿರುವ ಮೀಸಲಾತಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರಗಳನ್ನು ಅಧಿಕೃತ ಅಧಿಕಾರಿಗಳಿಂದ ಪಡೆದು, ಅವುಗಳ

ನಕಲುಗಳನ್ನು ಸ್ವಯಂ ದೃಡೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಿ ಅರ್ಜಿಯನ್ನು "ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಮತ್ತು

ಸತ್ರ ನ್ಯಾಯಾಲಯ, ಕೊಡಗು, ಮಡಿಕೇರಿ –571201" ಇವರಿಗೆ ದಿನಾಂಕಃ 10.09.2012 ಅಪರಾಹ್ನ 5.00 ಗಂಟೆಯೊಳಗೆ

ತಲುಪುವಂತೆ ಕಳುಹಿಸುವುದು.

ಅಬ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳುಃ

1. ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.

2. ಜನ್ಮ ದಿನಾಂಕದ ದೃಡೀಕರಣಕ್ಕಾಗಿ ಎಸ್.ಎಸ್.ಎಲ್.ಸಿ ಅಂಕ ಪಟ್ಟಿ/ ಕ್ಯುಮುಲೇಟಿವ್ ರೆಕಾರ್ಡ್/ ಇನ್ನಾವುದೇ ಅಧಿಕೃತ

ದಾಖಲಾತಿಗಳು.

3. ವಿದ್ಯಾರ್ಹತೆಯ ಬಗ್ಗೆ ಅಂಕಪಟ್ಟಿಗಳು.

4. ಪರಿಶಿಷ್ಟ ಜಾತಿ ಅಬ್ಯರ್ಥಿಗಳು ನಮೂನೆ 'ಡಿ' ಯಲ್ಲಿ, ಮತ್ತು 2ಎ, ಮತ್ತು 3ಬಿ ಗೆ ಸೇರಿದ ಅಬ್ಯರ್ಥಿಗಳು ನಮೂನೆ

'ಎಫ್' ನಲ್ಲಿ ಸಂಬಂಧಿಸಿದ ತಹಶೀಲ್ದಾರರಿಂದ ಜಾತಿ ಹಾಗೂ ಆದಾಯ ದೃಡೀಕರಣ ಪ್ರಮಾಣ ಪತ್ರಗಳನ್ನು ಪಡೆದು

ಸಲ್ಲಿಸಬೇಕು.

5. ಗ್ರಾಮೀಣ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆಃ ಸಿಆಸುಇ/96/ಸೆನೆನಿ/2005, ದಿನಾಂಕಃ

10.08.2005ರ ಪ್ರಕಾರ ನಿಗದಿತ ನಮೂನೆ-2 ರಲ್ಲಿ ಅಧಿಕೃತ ಅಧಿಕಾರಿಗಳಿಂದ ಪಡೆದು ಅದನ್ನು ಸಂಬಂಧಿಸಿದ ಕ್ಷೇತ್ರ

ಶಿಕ್ಷಣಾಧಿಕಾರಿಯವರಿಂದ ಮೇಲು ಸಹಿ ಮಾಡಿಸಿ ಸಲ್ಲಿಸಬೇಕು. ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ,

ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಬ್ಯರ್ಥಿಗಳು ಮೀಸಲಾತಿ ಪ್ರಮಾಣ ಪತ್ರಗಳು

ತಿರಸ್ಕøತಗೊಂಡಲ್ಲಿ ಅವರು ಗ್ರಾಮೀಣ ಮೀಸಲಾತಿಗೂ ಅನರ್ಹರಾಗಿರುತ್ತಾರೆ.

6. ಗ್ರಾಮೀಣ ಮೀಸಲಾತಿಯನ್ನು ಕೋರುವ ಸಾಮಾನ್ಯ ವರ್ಗದ ಅಬ್ಯರ್ಥಿಗಳು ಪ್ರಮಾಣ ಪತ್ರವನ್ನು ನಮೂನೆ–2 ರ ಜೊತೆ

ನಮೂನೆ-1 ರಲ್ಲೂ ದೃಡೀಕರಣ ಪತ್ರವನ್ನು ಸಲ್ಲಿಸುವುದು.

7. ಅಂಗವಿಕಲ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ವೈದ್ಯಕೀಯ ಪ್ರಮಾಣ ಪತ್ರವನ್ನು ದಿನಾಂಕಃ 19.11.2005ರ

ಸರ್ಕಾರದ ಅಧಿಕೃತ ಜ್ಞಾಪನಾ ಸಂಖ್ಯೆಃ ಸಿಆಸುಇ/115/ಸೆನೆನಿ/2005ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ

ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸಬೇಕು.

8. ಮಾಜಿ ಸೈನಿಕ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ಸೈನಿಕ ಸೇವೆಯಿಂದ ಬಿಡುಗಡೆಯಾದ/ ವಿಮುಕ್ತಿ ಹೊಂದಿದ

ಬಗೆಗಿನ ಪ್ರಮಾಣ ಪತ್ರವನ್ನು ಸಲ್ಲಿಸುವುದು.

9. ವಿದವೆಯರು, ಜೀತ ಕಾರ್ಮಿಕರು ಹಾಗೂ ವಯೋಮಿತಿ ರಿಯಾಯಿತಿ ಕೋರಲು ಸಕ್ಷಮ ಪ್ರಾಧಿಕಾರದಿಂದ ಪಡೆದ

ಪ್ರಮಾಣ ಪತ್ರವನ್ನು ಸಲ್ಲಿಸುವುದು.

10. ಸ್ವಯಂ ವಿಳಾಸವಿರುವ ರೂ.5/- ಅಂಚೆ ಚೀಟಿ ಅಂಟಿಸಿರುವ ಲಕೋಟೆಯನ್ನು ಅರ್ಜಿಯೊಂದಿಗೆ ಲಗತ್ತಿಸುವುದು.

11. ನೇಮಕಗೊಂಡ ಅಬ್ಯರ್ಥಿಗಳಿಗೆ ಸರ್ಕಾರದ ಅಧಿಸೂಚನೆ ಸಂಖ್ಯೆಃ ಎಫ್.ಡಿ (ಸ್ಪೆಷಲ್) 04ಃಪಿ.ಇ.ಟಿ 2005 ಬೆಂಗಳೂರು,

ದಿನಾಂಕಃ 31.03.2006ರ ಪ್ರಕಾರ ಹೊಸ ಪಿಂಚಣô ಯೋಜನೆ (w.e.f 01.04.2006) ಅನ್ವಯವಾಗುವುದು.

ವಿಶೇಷ ಸೂಚನೆಃ

1. ಅರ್ಜಿಯೊಂದಿಗೆ ಲಗತ್ತಿಸಿರುವ ಎಲ್ಲಾ ಪ್ರಮಾಣ ಪತ್ರಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ

ಲಗತ್ತಿಸಿರಬೇಕು ಇಲ್ಲವೇ ಕೊನೆಯ ದಿನಾಂಕದಂದು ಸಿಂದುವಾಗಿರಬೇಕು ಮತ್ತು ಕಡ್ಡಾಯವಾಗಿ ಸ್ವಯಂ ದೃಡೀಕರಿಸಬೇಕು.

2. ಯಾವುದೇ ಅಬ್ಯರ್ಥಿಯು ಸರ್ಕಾರಿ/ ಸರ್ಕಾರೇತರ ಅಧಿಕಾರಿಗಳಿಂದ ತನ್ನ ಅಬ್ಯರ್ಥಿತ್ವದ ಬಗ್ಗೆ ಪ್ರಭಾವ ಬೀರಿದರೆ ಅಂತಹ

ಅಬ್ಯರ್ಥಿಗಳು ನೇಮಕಾತಿಗೆ ಅರ್ಹರಾಗುವುದಿಲ್ಲ.

೧೨೫೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩೦, ೨೦೧೨ ಭಾಗ - ೫

3. ಯಾವುದೇ ಅಬ್ಯರ್ಥಿಯು ಸಂದರ್ಶನದ ಬಗ್ಗೆ ಮಾಹಿತಿ ಬರದಿದ್ದರೆ, ಅವರು ಸಂದರ್ಶನಕ್ಕೆ ಅರ್ಹರಲ್ಲ ಎಂದು

ತಿಳಿಯುವುದು ಮತ್ತು ಈ ಬಗ್ಗೆ ಯಾವುದೇ ಪತ್ರ ವ್ಯವಹಾರವನ್ನು ಮಾಡಲಾಗುವುದಿಲ್ಲ.

4. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ದಿನಾಂಕದಂದು ಸಾರ್ವಜನಿಕ ರಜೆಯಾಗಿದ್ದರೆ ಮುಂದಿನ ಕಛೇರಿ ಕೆಲಸದ ದಿನ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು ತಿಳಿಯುವುದು.

5. ಅಪೂರ್ಣ ಮತ್ತು ಕಡ್ಡಾಯವಾಗಿ ಲಗತ್ತಿಸಬೇಕಾದ ದಾಖಲಾತಿಗಳನ್ನು ಲಗತ್ತಿಸಿರದ ಹಾಗೂ ಕೊನೆಯ ದಿನಾಂಕದ ನಂತರ

ಬಂದ ಅರ್ಜಿಗಳನ್ನು ಪರಿಗಣôಸಲಾಗುವುದಿಲ್ಲ.

ಎಸ್. ಆರ್. ಸೋಮಶೇಖರ

ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು,

ಕೊಡಗು, ಮಡಿಕೇರಿ.

ಶೀಘ್ರಲಿಪಿಗಾರರ ಹುದ್ದೆಗಾಗಿ ಅರ್ಜಿ ನಮೂನೆ

ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು,

ಇತ್ತೀಚಿನ ಪಾಸ್‌ಪೋರ್ಟ್ ಕೊಡಗು, ಮಡಿಕೇರಿ.

ಅಳತೆಯ ಭಾವಚಿತ್ರ ಅಂಟಿಸಿ

ಸಹಿ ಮಾಡುವುದು.

ಮಾನ್ಯರೇ,

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಅಧಿಸೂಚನೆ ಸಂಖ್ಯೆಃ 3/2012 ದಿನಾಂಕಃ 08.08.2012ರ ಪ್ರಕಾರ ನಾನು ಕೆಳಕಂಡ ಮಾಹಿತಿಗಳೊಂದಿಗೆ

ಶೀಘ್ರಲಿಪಿಗಾರರ ಹುದ್ದೆಗೆ ಈ ಮೂಲಕ ನನ್ನ ವಿವರಗಳೊಂದಿಗೆ ಅರ್ಜಿ ಸಲ್ಲಿಸುತ್ತಿದ್ದೇನೆ.

1. ಅಬ್ಯರ್ಥಿಯ ಹೆಸರು (ದಪ್ಪ ಅಕ್ಷರಗಳಲ್ಲಿ)
2. ತಂದೆ/ ಗಂಡನ ಹೆಸರು
3. ತಾಯಿಯ ಹೆಸರು
4. ಜನ್ಮ ದಿನಾಂಕ
5. ವಯಸ್ಸು (ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಅಬ್ಯರ್ಥಿಯ ವಯಸ್ಸು) ವರ್ಏಗಳು ತಿಂಗಳುಗಳು ದಿನಗಳು
6. ಅಬ್ಯರ್ಥಿಯ ಖಾಯಂ ವಿಳಾಸ ಮತ್ತು ದೂರವಾಣô ಸಂಖ್ಯೆ
7. ಲಿಂಗ ಪುರುಏ/ಮಹಿಳೆ
8. ರಾಷ್ಟ್ರೀಯತೆ ಃ ದರ್ಮ ಃ
9. ಜಾತಿ/ಉಪಜಾತಿ
10. ನೀವು ಯಾವುದಾದರೂ ಕ್ರಿಮಿನ2್ ಮೊಕದ್ದಮೆಯಲ್ಲಿ ಬ ಾಗಿಯಾಗಿದ್ದೀರಾ?
11. ನೀವು ಸರ್ಕಾರಿ ಸೇವೆಯಿಂದ ಅಥವಾ ಇನ್ನಾವುದಾದರೂ ಸೇವೆಯಿಂದ ವಜಾ ಆಗಿದ್ದೀರಾ ಅಥವಾ ತೆಗೆದುಹಾಕಲ್ಪಟ್ಟಿದ್ದೀರಾ?
12. ಶ ೖಕ್ಷಣôಕ ವಿದ್ಯಾರ್ಹತೆ ೆ ಉತ್ತೀರ್ಣ ಹೊಂದಿದ ವರ್ಏ ಗರಿಏ್ಟ ಅಂಕಗಳು ಪಡೆದಿರುವ ಅಂಕಗಳು
ಎ ಎಸ್ಎಸ್ಎ2್‌ಸಿ /ತತ ್ಸ ಮಾನ ವಿದ್ಯಾರ್ಹತೆ
ಬಿ ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ ಪರೀಕ್ಷೆ
ಸಿ ಇಂಗ್ಲೀಏ್ ಶೀಘ್ರಲಿಪಿ ಪ್ರೌಡದರ್ಜೆ ಪರೀಕ್ಷೆ
ಡಿ ಕನ್ನಡ ಬೆರಳಚ್ಚು ಪ್ರೌಡ ದರ್ಜೆ ಪರೀಕೆ ್ಷ
ಇ ಇಂಗ್ಲೀಏ್ ಬೆರಳಚ್ಚು ಪ್ರೌಡ ದರ್ಜೆ ಪರೀಕ್ಷೆ
13. ಕೋರುವ ಮೀಸಾತಿಗಳುಃ (ಕೋರುವ ಮೀಸ2ಾತಿಯನ್ನು ಚಿಹ್ನೆ ಹಾಕುವುದರ ಮೂಲಕ ಗುರುತಿಸಿ ಪ್ರಮಾಣಪತ್ರದ ಸ್ವಯಂ ದೃಡೀಕೃತ ನಕಲನ್ನು ಲಗತ್ತಿಸಬೇಕು) ಸಾಮಾನ್ಯ ಪ.ಜಾತಿ ಪ್ರವರ್ಗ 2ಎ
14. ನೀವು ಈ ಯಾವುದಾದರೂ ಮೀಸಾತಿ ಅಡಿಯಲ್ಲಿ ಬರುತ್ತೀರಾ? (ಸೇರುವ ಮೀಸ2ಾತಿಯನ್ನು ಚಿಹ್ನೆ ಹಾಕುವುದರ ಮೂಲಕ ಗುರುತಿಸಿ ಪ್ರಮಾಣಪತ್ರದ ಸ್ವಯಂ ದೃಡೀಕೃತ ನಕಲನ್ನು ಲಗತ್ತಿಸಬೇಕು) ಗ್ರಾಮೀಣ ಮಾ.ಸೈ ಅಂ.ಅ
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩೦, ೨೦೧೨ ೧೨೫೧

ಸೂಚನೆಃ ಅಬ್ಯರ್ಥಿಗಳು ಎಲ್ಲಾ ಕಾಲಂಗಳನ್ನು ಖಡ್ಡಾಯವಾಗಿ ಬರ್ತಿ ಮಾಡತಕ್ಕದ್ದು.

ಃಘೋಷಣೆಃ

ಈ ಮೇಲೆ ನಮೂದಿಸಿರುವ ಮಾಹಿತಿ ಮತ್ತು ವಿವರಗಳು ಸತ್ಯವಾಗಿದ್ದು ಒಂದು ವೇಳೆ ಅವು ಅಸತ್ಯವೆಂದು ಕಂಡು ಬಂದಲ್ಲಿ ತಾವು ತೆಗೆದುಕೊಳ್ಳುವ ತೀರ್ಮಾನಗಳಿಗೆ ಬದ್ಧನಾಗಿರುತ್ತೇನೆ/ಬದ್ಧಳಾಗಿರುತ್ತೇನೆ. ನಾನು ಆಯ್ಕೆಗೊಂಡ ಪಕ್ಷದಲ್ಲಿ ಕೊಡಗು ಜೆಲ್ಲೆಯ ಯಾವುದೇ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧನಿರುತ್ತೇನೆ/ಸಿದ್ಧಳಿರುತ್ತೇನೆ.

ದಿನಾಂಕಃ ಅಬ್ಯರ್ಥಿಯ ಸಹಿ

ಸ್ಥಳಃ

ಪಿ.ಆರ್. 136

೧೨೫೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩೦, ೨೦೧೨ ಭಾಗ - ೫

ಜಿಲ್ಲಾದಿಕಾರಿಯವರ ಕಛೇರಿ ತುಮಕೂರು ಜಿಲ್ಲೆ ತುಮಕೂರು,

ಸಂಖ್ಯೆಃಗ್ರಾ.ಲೆ.ಸಿಬ್ಬಂದಿ.ಸಿಆರ್. 266/10-11 ದಿನಾಂಕ: 07-08-2012

ತಿದ್ದುಪಡಿ ಅದಿಸೂಚನೆ

ತುಮಕೂರು ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ 101 ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಪತ್ರ ಸಂಖ್ಯೆ ಕಂಇ 04 ಬಿಎಸ್‌ಸಿ 2011 ದಿನಾಂಕ 25.02.2011ರಲ್ಲಿ ತಿಳಿಸಿರುವಂತೆ ಪರಿಷ್ಕøತ ನಿಯಮಗಳಂತೆ ನೇರ ನೇಮಕಾತಿ ಮಾಡಲು ಹಾಲಿ ತುಮಕೂರು ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ 81 ಗ್ರಾಮಲೆಕ್ಕಿಗರ ಹುದ್ದೆಗಳು ಹಾಗೂ ಹೊಸ ನಾಡ ಕಛೇರಿಗಳಲ್ಲಿ ಸೃಜಿಸಲಾಗಿರುವ 20 ಗ್ರಾಮಲೆಕ್ಕಿಗರ ಹುದ್ದೆಗಳಿಗೆ ವರ್ಗೀಕರಣ ಮತ್ತು ಮೀಸಲಾತಿ ಅನ್ವಯ ಕರ್ನಾಟಕ ನಾಗರಿಕ ಸೇವೆಗಳು ( Revenue subordinate Branch) ( Cadre & Recruitment) (Amendment) ನಿಯಮಗಳು 2008ರ ನಿಯಮ 2ರ ಮತ್ತು 2009ರ ಅನ್ವಯ ನೇಮಕಾತಿಯನ್ನು ಮಾಡಲು ಪ್ರಾದಿಕಾರವು ನಿಗದಿಪಡಿಸಿರುವ ನಮೂನೆಯಲ್ಲಿ ಅರ್ಹ ಅಭ್ಯರ್ಥಿಗಳಿಂಧ ಅರ್ಜಿಗಳನ್ನು ಅನ್ ಲೈನ್ ಮೂಲಕ ಆಹ್ವಾನಿಸಲಾಗಿದೆ.

ಜಿಲ್ಲೆಯಲ್ಲಿ ಖಾಲಿ ಇರುವ ಒಟ್ಟು 101 ಗ್ರಾಮಲೆಕ್ಕಿಗರ ಹುದ್ದೆಗಳ ವರ್ಗೀಕರಣ ಈ ಕೆಳಕಾಣಿಸಿದಂತೆ ಮಾಡಲಾಗಿದೆ. ನೇಮಕಾತಿಯಲ್ಲಿ 1ನೇ

ಸೈಕಲ್‌ನ ರೋಸ್ಟರ್ ಬಿಂದು 81 ರಿಂದ 100 ಹಾಗೂ 2ನೇ ಸೈಕಲ್‌ನ ರೋಸ್ಟರ್ ಬಿಂದು 1 ರಿಂದ ಪುನರಾರಂಬಿಸಿ 81ರ ವರೆಗೆ ಒಟ್ಟು 101 ಹುದ್ದೆಗಳಿಗೆ

ವರ್ಗೀಕರಿಸಲಾಗಿದೆ.

2012-13ನೇ ಸಾಲಿಗೆ ಈ ಜಿಲ್ಲೆಯಲ್ಲಿ ಖಾಲಿ ಇರುವ ಒಟ್ಟು 101 ಹುದ್ದೆಗಳಿಗೆ ವರ್ಗೀಕರಣ

ಕ್ರ. ಸ ಂ ಮೀಸಲಾತಿ ಸಾಮಾನ್ಯ ಕನ್ನಡ ವ iಾಧ್ಯಮ ವ ುಹಿಳೆ ಯೋಜನಾ ನಿರಾಶ್ರಿತರು ಗ್ರಾಮೀಣ ವ iಾಜಿ ಸ ೖನಿಕ ೆ ಅಂಗವಿಕಲ ಒಟ್ಟು
1 2 3 4 5 6 7 8 9 10
1 ಪ.ಜಾ 3 1 5 1 4 1 1 16
2 ಪ.ಪಂ 0 0 1 0 1 0 1 3
3 ಪ್ರ.1 1 0 2 0 1 0 0 4
4 ಪ್ರ2(ಎ) 3 1 4 1 4 1 1 15
5 ಪ್ರ2(ಬಿ) 1 0 1 0 1 0 1 4
6 ಪ್ರ3(ಎ) 1 0 1 0 1 0 1 4
7 ಪ್ರ3(ಬಿ) 1 0 2 0 1 0 1 5
8 ಸಾಮಾನ್ಯ 10 2 15 2 13 5 3 50
ಒಟ್ಟು 20 4 31 4 26 7 9 101

1. ಅರ್ಜಿಯನ್ನು ಸಲ್ಲಿಸುವ ವಿಧಾನ :-

ಅರ್ಜಿಯನ್ನು ಅನ್-ಲೈನ್ [online] ಅಂತರ್ಜಾಲ (Internet) ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು. ಅರ್ಜಿಯನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

2. ಅರ್ಜಿ ಶುಲ್ಕ:-

ಸರ್ಕಾರದ ಸುತ್ತೋಲೆ ಸಂ.ಕಂಇ 34 ಪ್ರಕಾ 2009, ದಿನಾಂಕ 26.09.2009ರಂತೆ

ಪರಿಶಿಏ್ಟ ಜಾತಿ / ಪರಿಶಿಏ್ಟ ಪಂಗಡ / ಪ್ರವರ್ಗ1/ಮಹಿಳೆ ರೂ.100=00/
ಸಾಮಾನ್ಯ / ವರ್ಗ 2ಎ/2ಬಿ/3ಎ/3ಬಿ ರೂ.200=00/

3. ಅನ್-ಲೈನ್ ಅರ್ಜಿ ಸಲ್ಲಿಸುವ ವಿಧಾನ :-

ಅಭ್ಯರ್ಥಿಯು ತುಮಕೂರು ಜಿಲ್ಲಾ ಕಂದಾಯ ಘಟಕದ ಅದಿಕೃತ ವೆಬ್-ಸೈಟ್ http://tumkur-va.kar.nic.in ತೆರೆದು ಕಂಪ್ಯೂಟರ್ ಪರದೆಯ ಮೇಲೆ ಅರ್ಜಿಯನ್ನು ತುಂಬಬೇಕು. ಅಭ್ಯರ್ಥಿಯು Submit Button ಅನ್ನು ಒತ್ತಿದರೆ ಅರ್ಜಿ ಸಂಖ್ಯೆ (Reference Number) ನೊಂದಿಗೆ (Acknowledgementಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩೦, ೨೦೧೨ ೧೨೫೩ slip) ಹಾಗೂ ದ್ವಿಪ್ರತಿ ಚಲನ್ ಸೃಷ್ಠಿಯಾಗುತ್ತದೆ. ಹೀಗೆ ಅರ್ಜಿಯನ್ನು ಅನ್ ಲೈನ್ ಮೂಲಕ ಸಲ್ಲಿಸಿದ ನಂತರ ದ್ವಿಪ್ರತಿ ಚಲನ್‌ನಲ್ಲಿ ಅರ್ಜಿ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇದರ ಯಾವುದಾದರೂ ಶಾಖೆಯಲ್ಲಿ ಪಾವತಿಸಬೇಕು. ಅಭ್ಯರ್ಥಿಗಳು ಸ್ವೀಕೃತಿ ಸ್ಲಿಫ್ಅನ್ನು ಮತ್ತು ಶುಲ್ಕ ಪಾವತಿಸಿದ ಚಲನ್ ಒಂದು ಪ್ರತಿಯನ್ನು ಕಡ್ಡಾಯವಾಗಿ ತಮ್ಮ ಬಳಿ ಇರಿಸಿಕೊಳ್ಳತಕ್ಕದ್ದು ಇನ್ನೊಂದು ಚಲನ್ ಪ್ರತಿ ಬ್ಯಾಂಕ್ ಬಳಿ ಇರುತ್ತದೆ. ಈ ದಾಖಲೆಗಳನ್ನು ಪರಿಶೀಲನೆಗೆ ನಿಗದಿ ಪಡಿಸಿದ ದಿನಾಂಕ 04.10.2012ರಂದು ತಾತ್ಕಾಲಿಕ ಪಟ್ಟಿಯಲ್ಲಿ ಪ್ರಕಟಿಸಲಾಗುವ ಅಭ್ಯರ್ಥಿಗಳು ಹಾಜರುಪಡಿಸತಕ್ಕದ್ದು. ಬ್ಯಾಂಕಿನಲ್ಲಿ ನಿಗದಿತ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 12.09.2012 ಆಗಿರುತ್ತದೆ. ನಿಗದಿತ ಅರ್ಜಿ ಶುಲ್ಕ ಹೊರತುಪಡಿಸಿ ಯಾವುದೇ ವಿಧವಾದ ಬ್ಯಾಂಕ್ ಶುಲ್ಕ ಇತ್ಯಾದಿ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ನಗದು, ಡಿ.ಡಿ, ಪೋಸ್ಟಲ್ ಆರ್ಡರ್ ಮತ್ತು ಮನಿ ಆರ್ಡರ್ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ. ಅಲ್ಲದೆ ಒಮ್ಮೆ ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ ಅದನ್ನು ಯಾವುದೇ ಸಂದರ್ಭದಲ್ಲಿಯೂ ಹಿಂದಿರುಗಿಸಲಾಗುವುದಿಲ್ಲ.

ಅಥವಾ ಅದನ್ನು ಇತರ ಯಾವುದೇ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ. ಅಭ್ಯರ್ಥಿಗಳು ಅರ್ಜಿಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕ ಒಳಗೆ ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.

A) ಅರ್ಜಿಗಳನ್ನು ದಿನಾಂಕ 10.08.2012ರಿಂದ 10.09.2012ರ ಒಳಗೆ ಸಲ್ಲಿಸತಕ್ಕದ್ದು.

B) ಅರ್ಜಿ ಶುಲ್ಕವನ್ನು ದಿನಾಂಕ 10.08.2012ರಿಂದ 12.09.2012ರ ವರೆಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್‌ನ ಶಾಖೆಯಲ್ಲಿ ಬ್ಯಾಂಕ್ ವ್ಯವಹಾರದ ವೇಳೆಯಲ್ಲಿ ಪಾವತಿಸತಕ್ಕದ್ದು. ಹಾಗೂ ಶುಲ್ಕ ಪಾವತಿ ನಂತರ ಅನ್‌ಲೈನ್ ಮೂಲಕ ತಂತ್ರಾಂಶದ ಸೂಚನೆಯನ್ನು ಪಾಲಿಸಿ ಸ್ಕ್ಯಾನ್ ಮಾಡಿದ ಚಲನ್ ಅಪ್‌ಲೋಡ್ (Uploading Challan Option) ಮಾಡತಕ್ಕದ್ದು.

C) ಅಭ್ಯರ್ಥಿಗಳು ಅನ್‌ಲೈನ್‌ನಲ್ಲಿ ನಿಗದಿತ ಶುಲ್ಕ ಪಾವತಿಯ ಕುರಿತು ವಸ್ತು ಸ್ಥಿತಿಯನ್ನು http://tumkur-va.kar.nic.in ರಲ್ಲಿ (Status ಅನ್ನು) ಶುಲ್ಕ ಪಾವತಿಸಿದ 5 ದಿನಗಳ ನಂತರ ಪರಿಶೀಲಿಸಿಕೊಳ್ಳಬಹುದು.

4. ಅರ್ಹತಾ ಷರತ್ತುಗಳು:-

A) ಭಾರತೀಯ ನಾಗರೀಕನಾಗಿರತಕ್ಕದ್ದು.

B) ಅಭ್ಯರ್ಥಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯು ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವವಿರುವ ಯಾವದೇ ದೈಹಿಕ / ಮಾನಸಿಕ ನ್ಯೂನತೆಯಿಂದ ಮುಕ್ತರಾಗಿರತಕ್ಕದ್ದು.

C) ಅಭ್ಯರ್ಥಿಯು ಈ ಹಿಂದೆ ಯಾವುದೇ ಸರ್ಕಾರದ ಸೇವೆಯಿಂದ ವಜಾಗೊಂಡಿರಬಾರದು.

5. ಶೈಕ್ಷಣಿಕ ವಿದ್ಯಾರ್ಹತೆ:-

ದ್ವಿತೀಯ ಪಿ.ಯು.ಸಿ ಅಥವಾ ಸಿ.ಬಿ.ಎಸ್.ಸಿ / ಐ.ಸಿ.ಎಸ್.ಸಿ ನಡೆಸುವ 12 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.(ಗ್ರಾಮಲೆಕ್ಕಿಗರ ಹುದ್ದೆಗೆ ಅರ್ಜಿಸಲ್ಲಿಸುವ ದಿನಾಂಕಕ್ಕೆ ಮುಂಚಿತವಾಗಿ ತೇರ್ಗಡೆ ಹೊಂದಿರತಕ್ಕದ್ದು)

6. ವೇತನ ಶ್ರೇಣಿಃ -ರೂ. 11600-200-12000-250-13000-300-14200-350-15600-400-17200-450-19000-500-21000

ವಯೋಮಿತಿಃ- ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 10.09.2012ಕ್ಕೆ ಅಭ್ಯರ್ಥಿಯು ಈ ಕೆಳಕಂಡಂತೆ ವಯೋಮಿತಿ ಹೊಂದಿರತಕ್ಕದ್ದು.

a) ಕನಿಷ್ಟ 18 ವರ್ಷ

b) ಗರಿಷ್ಟ ವಯೋಮಿತಿ.

ಸಾಮಾನ್ಯ ವರ್ಗ 35 ವರ್<
2ಎ, 2ಬಿ, 3ಎ, 3ಬಿ 38 ವರ್<
ಪ .ಜಾತಿ/ಪ.ಪಂಗಡ /ಪ್ರವರ್ಗ1 40 ವರ್<

ಎಸ್.ಎಸ್.ಎಲ್.ಸಿ ಅಥವಾ ವರ್ಗಾವಣೆ ಪ್ರಮಾಣ ಪತ್ರ [ಟಿ.ಸಿ] ಅಥವಾ ಕ್ಯೂಮಿಲೇಟಿವ್ ರೆಕಾರ್ಡ್‌ನಲ್ಲಿ ನಮೂದಿಸಿರುವ ಜನ್ಮ ದಿನಾಂಕವನ್ನು ಆಯ್ಕೆ ಪ್ರಾದಿಕಾರವು ಪರಿಗಣಿಸುವುದು. ಇತರೆ ಯಾವುದೇ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ. ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ)ನಿಯಮಗಳು 1977 ರ ನಿಯಮ 6 ರಂತೆ ವಯೋಮಿತಿಯನ್ನು ಅದರಲ್ಲಿ ತಿಳಿಸಿರುವ ಮಟ್ಟಿಗೆ ಸಂಬಂಧಪಟ್ಟ ದಾಖಲೆ ಒದಗಿಸಿದಲ್ಲಿ ಹೆಚ್ಚಿಸುವ ಬಗ್ಗೆ ಮೂಲ ದಾಖಲೆಗಳ ಪರಿಶೀಲನೆ ವೇಳೆ ಪರಿಶೀಲಿಸಲಾಗುವುದು. ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 6ರಂತೆ ಗರಿಷ್ಠ ವಯೋಮಿತಿಯನ್ನು ಈ ಮುಂದಿನ ಪ್ರಕರಣಗಳಲ್ಲಿ ಮುಂದೆ ಹೇಳಿರುವಷ್ಟರ ಮಟ್ಟಿಗೆ ಹೆಚ್ಚಿಸಲು ಅವಕಾಶವಿದೆ.

೧೨೫೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩೦, ೨೦೧೨ ಭಾಗ - ೫

c) ಸರ್ಕಾರದ ಅಥವಾ ಸ್ಥಳೀಯ ಪ್ರ್ರಾದಿಕಾರ ಅಥವಾ ರಾಜ್ಯ ಅದಿನಿಯಮ ಅಥವಾ ಕೇಂದ್ರ ಅದಿನಿಯಮದ ಮೂಲಕ ಸ್ಥಾಪಿಸಲಾದ ಅಥವಾ ರಾಜ್ಯ ಅದಿನಿಯಮದ ಅಥವಾ ಕೇಂದ್ರ ಅದಿನಿಯಮದ ಅಡಿಯಲ್ಲಿನ ಸರ್ಕಾರದಿಂದ ಸ್ಥಾಪಿತವಾಗಿದ್ದು ಮತ್ತು ಸರ್ಕಾರವು ಒಡೆತನ ಹೊಂದಿರುವ ಅಥವಾ ನಿಯಂತ್ರಣ ಹೊಂದಿರುವ ನಿಗಮದ ಅಡಿಯಲ್ಲಿ ಹುದ್ದೆಯನ್ನು ಧಾರಣ ಮಾಡಿರುವ ಅಥವಾ ಧಾರಣ ಮಾಡಿದ್ದ ಅಭ್ಯರ್ಥಿಯ ಸಂದರ್ಭದಲ್ಲಿ ಆತ ಅಂಥ ಹುದ್ದೆಯನ್ನು ಧಾರಣೆ ಮಾಡಿರುವಷ್ಟು ಅಥವಾ ಧಾರಣೆ ಮಾಡಿದ್ದಷ್ಟು ಅಥವಾ (ಹತ್ತು) ವರ್ಷಗಳು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.

d) ಮಾಜಿ ಸೈನಿಕನಾಗಿರುವ ಅಭ್ಯರ್ಥಿಯ ಸಂದರ್ಭದಲ್ಲಿ ಮೂರು ವರ್ಷಗಳು ಮತ್ತು ಇದಕ್ಕೆ ಕೇಂದ್ರದ ಸಶಸ್ತ್ರ ಪಡೆಗಳಲ್ಲಿ ಅವನು ಸೇವೆ ಸಲ್ಲಿಸಿರುವಷ್ಟು ವರ್ಷಗಳನ್ನು ಸೇರಿಸಬೇಕು.

e) ಪೂರ್ಣಾವದಿ ಕೆಡೆಟ್ ಇನ್ ಸ್ಟ್ರಕ್ಟರ್ ಆಗಿ ಸೇವೆ ಸಲ್ಲಿಸಿದ ತರುವಾಯ, ರಾಷ್ಟ್ರೀಯ ಕೆಡೆಟ್ ದಳದಿಂದ ಬಿಡುಗಡೆ ಮಾಡಿದ ಅಭ್ಯರ್ಥಿಯ ಸಂದರ್ಭದಲ್ಲಿ, ಹಾಗೆ ಕೆಡೆಟ್ ಇನ್‌ಸ್ಟ್ರಕ್ಟರಾಗಿ ಆತನು ಸೇವೆ ಸಲ್ಲಿಸಿರುವಷ್ಟು ವರ್ಷಗಳು.

f) ರಾಜ್ಯ ಸರ್ಕಾರ ಪ್ರಾಯೋಜಿತ ಗ್ರಾಮೀಣ ಕೈಗಾರೀಕರಣ ಯೋಜನೆಯಲ್ಲಿ ನೇಮಕಗೊಂಡ ಗ್ರಾಮ ಸಮೂಹ ಇನ್ಸ್‌ಪೆಕ್ಟರಾಗಿ ಆತ ಸೇವೆ ಸಲ್ಲಿಸಿರುವಷ್ಟು ವರ್ಷಗಳು.

g) ಅಂಗವಿಕಲನಾಗಿರುವ ಸಂದರ್ಭದಲ್ಲಿ ಹತ್ತು ವರ್ಷಗಳು.

h) ಈ ರಾಜ್ಯದಲ್ಲಿರುವ ಭಾರತ ಸರ್ಕಾರದ ಜನಗಣತಿ ಸಂಸ್ಥೆಯಲ್ಲಿ ಹುದ್ದೆಯನ್ನು ಧಾರಣೆ ಮಾಡಿರುವ ಅಥವಾ ಧಾರಣ ಮಾಡಿದ್ದ ಅಭ್ಯರ್ಥಿಯ ಸಂದರ್ಭದಲ್ಲಿ ಅಂಥ ಹುದ್ದೆಯನ್ನು ಆತನು ಧಾರಣೆ ಮಾಡಿರುವಷ್ಟು ಅಥವಾ ಧಾರಣೆ ಮಾಡಿದ್ದಷ್ಟು ವರ್ಷಗಳು ಅಥವಾ ಐದು ವರ್ಷಗಳು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.

i) ಅಭ್ಯರ್ಥಿ ವಿಧವೆಯಾಗಿದ್ದಲ್ಲಿ ಹತ್ತು ವರ್ಷಗಳು.

j) ಜೀತ ಕಾರ್ಮಿಕನಾಗಿದ್ದ ಅಭ್ಯರ್ಥಿಯಾಗಿದ್ದಲ್ಲಿ ಹತ್ತು ವರ್ಷಗಳು.

8. ಜಾತಿ ಮೀಸಲಾತಿ ಪ್ರಮಾಣ ಪತ್ರಗಳು:

ಆ) ಜಾತಿ ಮೀಸಲಾತಿ ಕೋರಬಯಸುವ:

a. ಪ.ಜಾ/ಪ.ಪಂ. ಅಭ್ಯರ್ಥಿಗಳು ನಮೂನೆ `ಡಿ' ರಲ್ಲಿ (ಅನುಬಂಧ-1)

b. ಪ್ರವರ್ಗ-1ರ ಅಭ್ಯರ್ಥಿಗಳು ನಮೂನೆ `ಇ'ನಲ್ಲಿ (ಅನುಬಂಧ-7)

c. 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು ನಮೂನೆ `ಎಫ್'ನಲ್ಲಿ ಸಂಬಂಧಿಸಿದ ತಹಶೀಲ್ದಾರರಿಂದ ಪ್ರಮಾಣ ಪತ್ರವನ್ನು ಪಡೆದಿರಬೇಕು.

(ಅನುಬಂಧ-8) ಈ ಪ್ರಮಾಣ ಪತ್ರಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ (10.09.2012) ರೊಳಗೆ ಪಡೆದಿರಬೇಕು.

ಆ) ಜಾತಿ ಮೀಸಲಾತಿ ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜಾತಿ ಪ್ರಮಾಣಪತ್ರದ ಬಗ್ಗೆ ಜಿಲ್ಲಾಧಿಕಾರಿ, (ಅಧ್ಯಕ್ಷರು, ಜಾತಿ ಆದಾಯ ಪರಿಶೀಲನಾ ಸಮಿತಿ) ರವರಿಂದ ಸಿಂಧುತ್ವ ಪ್ರಮಾಣಪತ್ರ ಪಡೆದ ನಂತರ ನೇಮಕಾತಿ ಆದೇಶ ನೀಡಲಾಗುವುದು.

9. ಗ್ರಾಮೀಣ ಅಭ್ಯರ್ಥಿ:

a) ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳಂತೆ ಗ್ರಾಮೀಣ ಮೀಸಲಾತಿಗೆ ಒಳಪಡುವ ಪ್ರದೇಶಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿ ಉತ್ತೀರ್ಣರಾಗಿರಬೇಕು.

b) ಗ್ರಾಮೀಣ ಮೀಸಲಾತಿಯನ್ನು ಕೋರುವ ಪರಿಶಿಷ್ಠ ಜಾತಿ / ಪರಿಶಿಷ್ಠ ಪಂಗಡ, ಪ್ರವರ್ಗ-1, 2ಎ, 2ಬಿ, 3ಎ, 3ಬಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ನಮೂನೆ 2ರಲ್ಲಿ ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರವನ್ನು ಪಡೆದಿಟ್ಟುಕೊಂಡಿರತಕ್ಕದ್ದು.

c) ಗ್ರಾಮೀಣ ಮೀಸಲಾತಿ ಕೋರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ನಮೂನೆ-2ರ ಮೀಸಲಾತಿ ಪ್ರಮಾಣ ಪತ್ರದ ಜೊತೆಗೆ ನಮೂನೆ-1ರಲ್ಲಿ ಮೇಲುಸ್ತರಕ್ಕೆ ಸೇರಿಲ್ಲದಿರುವ ಬಗ್ಗೆ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ತಹಶೀಲ್ದಾರರಿಂದ ಪಡೆದಿಟ್ಟುಕೊಂಡಿರತಕ್ಕದ್ದು. (ಅನುಬಂಧ-2, ನಮೂನೆ-1 ಮತ್ತು 2)

ಸೂಚನೆ: ಗ್ರಾಮೀಣ ಮೀಸಲಾತಿಗೆ ಸಂಬಂಧಿಸಿದಂತೆ ನಮೂನೆ-2ರಲ್ಲಿಯ ಪ್ರಮಾಣ ಪತ್ರವನ್ನು ಅಭ್ಯರ್ಥಿಗಳು ತಾವು ವ್ಯಾಸಂಗ ಮಾಡಿದ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಮತ್ತು ಮೊಹರಿನೊಂದಿಗೆ ಪ್ರಮಾಣ ಪತ್ರವನ್ನು ಪಡೆದು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲುರುಜು ಪಡೆದಿರತಕ್ಕದ್ದು. (ಈ ಪ್ರಮಾಣ ಪತ್ರಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ (10.09.2012) ರೊಳಗೆ ಪಡೆದಿರಬೇಕು.)ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩೦, ೨೦೧೨ ೧೨೫೫ 10. ಕನ್ನಡ ಮಾಧ್ಯಮ ಅಭ್ಯರ್ಥಿ:- ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು 1ನೇ ತರಗತಿಯಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಯರ ಸಹಿ ಮತ್ತು ಮೊಹರಿನೊಂದಿಗೆ ಪ್ರಮಾಣ ಪತ್ರವನ್ನು ಪಡೆದು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲುರುಜು ಪಡೆದಿರತಕ್ಕದ್ದು. (ಈ ಪ್ರಮಾಣ ಪತ್ರಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ (10.09.2012) ರೊಳಗೆ ಪಡೆದಿರಬೇಕು.) (ಅನುಬಂಧ-3)

11. ಯೋಜನಾ ನಿರ್ವಸಿತ ಅಭ್ಯರ್ಥಿ:- ಯೋಜನೆಗಳಿಂದ ನಿರ್ವಸಿತರಾದ ಕುಟುಂಬದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳನ್ನು ಕೋರುವ ಅಭ್ಯರ್ಥಿಗಳು ಸರ್ಕಾರಿ ಸುತ್ತೋಲೆ ಸಂಖ್ಯೆ. ಸಿಆಸುಇ 44 ಸೇನೇನಿ 2001, ದಿನಾಂಕ.27/07/2001ರಲ್ಲಿ ನಿಗದಿಪಡಿಸಲಾದ ನಮೂನೆಯಲ್ಲಿ ಪ್ರಮಾಣ ಪತ್ರವನ್ನು ಸಂಬಂಧಿಸಿದ ತಹಶೀಲ್ದಾರ್‌ರವರಿಂದ ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರವನ್ನು (ಅನುಬಂಧ-5)ರಲ್ಲಿ ಪಡೆದುಕೊಂಡಿರತಕ್ಕದ್ದು. (ಈ ಪ್ರಮಾಣ ಪತ್ರಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ (10.09.2012) ರೊಳಗೆ ಪಡೆದಿರಬೇಕು.)

12. ಅಂಗವಿಕಲರ ಮೀಸಲಾತಿ ಬಗ್ಗೆ: ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9(1-ಎ) ರ ಅನ್ವಯ ರಾಜ್ಯ ಸಿವಿಲ್ ಸೇವೆಯಲ್ಲಿನ ಗ್ರೂಪ್ ಸಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಂಗವಿಕಲರಿಗೆ ಶೇಕಡ 5 ರಷ್ಟು ಸಮತಳ ಮೀಸಲಾತಿ ಕಲ್ಪಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 128 ಸೆನೆನಿ 2006 ದಿನಾಂಕ:01.08.2009ರಂತೆ ಮೀಸಲಾತಿ ನೀಡಲಾಗುವುದು. ಸರ್ಕಾರದ ಅಧಿಸೂಚನೆ ಸಂಖ್ಯೆ:

DPAR 52 SSR 99 ದಿನಾಂಕ:23.06.2012ರಂತೆ ಗ್ರಾಮಲೆಕ್ಕಿಗರ ಹುದ್ದೆಗಳಲ್ಲಿ ಅಂಗವಿಕಲರ ಮೀಸಲಾತಿಯನ್ನು ಈ ಕಾಣಿಸಿದ ವರ್ಗಗಳಿಗೆ ಮಾತ್ರ ಕಲ್ಪಿಸಲಾಗಿದೆ.

1. ಕುಷ್ಠ ರೋಗದಿಂದ ಗುಣಮುಖರಾದವರು (Leprosy cured) 2. ಶ್ರವಣದೋಷವುಳ್ಳವರು (Hearing impaired)

3. ದೈಹಿಕ ಅಂಗವಿಕಲರು (Loco motor Disability) 4. ಮಾನಸಿಕ ಅಸ್ವಸ್ಥತೆಯಿಂದ ಗುಣಮುಖರಾದವರು (Mentally ill)

ಈ ಮೇಲಿನ ಅಂಗವಿಕಲರು ಹೊರತುಪಡಿಸಿ ಇತರ ದೈಹಿಕ ಅಂಗವಿಕಲತೆಯುಳ್ಳ ಅಭ್ಯರ್ಥಿಗಳು ಗ್ರಾಮಲೆಕ್ಕಿಗರ ಹುದ್ದೆಗೆ ಅರ್ಜಿಸಲ್ಲಿಸಲು ಅರ್ಹರಿರುವುದಿಲ್ಲ. ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಸಿಆಸುಇ 115 ಸೆನೆನಿ 2005, ದಿನಾಂಕ:19.11.2005ರಲ್ಲಿ ನಿಗದಿಪಡಿಸಿರುವ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯು ನೀಡುವ ಪ್ರಮಾಣ ಪತ್ರವನ್ನು ಪಡೆದುಕೊಂಡಿರತಕ್ಕದ್ದು. ಬೇರೆ ಯಾವುದೇ ನಮೂನೆಗಳಲ್ಲಿ ಪಡೆಯಲಾಗಿರುವ ಪ್ರಮಾಣ ಪತ್ರಗಳನ್ನು ಪರಿಗಣಿಸಲು ಬರುವುದಿಲ್ಲ. ಈ ಪ್ರಮಾಣ ಪತ್ರದ ನಮೂನೆಯನ್ನು ಲಗತ್ತಿಸಿದೆ.

(ಅನುಬಂಧ-4)

ಸೂಚನೆ:- ಈ ಮೇಲಿನ ಎಲ್ಲಾ ಪ್ರಮಾಣ ಪತ್ರಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ: 10.09.2012ರೊಳಗೆ ಅರ್ಹತೆಯನ್ನು

ಪಡೆದಿರಬೇಕು. ಪ್ರಮಾಣ ಪತ್ರಗಳ ನಮೂನೆಗಳನ್ನು ಅನುಬಂಧ-1 ರಿಂದ 8ರ ವರೆಗೆ ನೋಡಬಹುದು. ತಾತ್ಕಾಲಿಕ ಪರಿಶೀಲನಾ ಪಟ್ಟಿಯಲ್ಲಿ ಪ್ರಕಟಗೊಂಡ

ಅಭ್ಯರ್ಥಿಗಳು ಮಾತ್ರ ನಿಗದಿತ ದಿನಾಂಕ.04.10.2012ರಂದು ಪೂರ್ವಾಹ್ನ 10.00 ಗಂಟೆಗೆ ನೇಮಕಾತಿ ಪ್ರಾಧಿಕಾರದ ಎದುರು (ಜಿಲ್ಲಾದಿಕಾರಿಯವರ ಕಛೇರಿ

ತುಮಕೂರು ಜಿಲ್ಲೆ ಇಲ್ಲಿ ) ಮೂಲ ಪ್ರಮಾಣ ಪತ್ರಗಳನ್ನು ತಪ್ಪದೆ ಹಾಜರುಪಡಿಸತಕ್ಕದ್ದು. ಮೂಲ ಪ್ರಮಾಣ ಪತ್ರಗಳನ್ನು ಹಾಜರ್ಪಡಿಸದಿರುವ ಅಭ್ಯರ್ಥಿಗಳ

ಗ್ರಾಮಲೆಕ್ಕಿಗರ ಹುದ್ದೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕೃತಗೊಳಿಸಲಾಗುವುದು.

13. ಆಯ್ಕೆ ವಿಧಾನ:- ಕರ್ನಾಟಕ ಜನರಲ್ ಸರ್ವೀಸಸ್ (Revenue Subordinate Branch) (Cadre & Recruitment) (ತಿದ್ದುಪಡಿ) ನಿಯಮಗಳು 2008 ಮತ್ತು 2009 ಹಾಗೂ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ಪ್ರಕಾರ ಅಭ್ಯರ್ಥಿಯನ್ನು ಅವರು ದ್ವಿತೀಯ ಪಿ.ಯು.ಸಿ. ಪರೀಕ್ಷೆ ಅಥವಾ CBSE ಅಥವಾ ICSE ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳ (on merit) ಆಧಾರದ ಮೇಲೆ ಆಯಾಯ ಮೀಸಲಾತಿ ಪ್ರವರ್ಗಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಲಾಗುವುದು. ನಿಯಮಾವಳಿಯಂತೆ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ದಿನಾಂಕ.24.09.2012ರಂದು ಪ್ರಕಟಿಸಲಾಗುವುದು.

14. ಪ್ರಮುಖ ಸೂಚನೆಗಳು:

ದಿನಾಂಕ.24.09.2012ರಂದು ಪ್ರಕಟಗೊಳ್ಳುವ ತಾತ್ಕಾಲಿಕ ಪರಿಶೀಲನಾ ಪಟ್ಟಿಯಲ್ಲಿನ ಅಭ್ಯರ್ಥಿಗಳು ಈ ಕೆಳಕಂಡ ಮೂಲ ಪ್ರಮಾಣ ಪತ್ರಗಳನ್ನು ನಿಗದಿಪಡಿಸಿದ ದಿನಾಂಕ:04.10.2012ರಂದು ಪರಿಶೀಲನೆಗೆ ಹಾಜರುಪಡಿಸತಕ್ಕದ್ದು. ಹಾಗೂ ಮೂಲ ಪ್ರಮಾಣ ಪತ್ರಗಳನ್ನು ಪತ್ರಾಂಕಿತ ಅದಿಕಾರಿಯಿಂದ ದೃಡೀಕೃತ ಜೆರಾಕ್ಸ್ ನಕಲನ್ನು ಜೊತೆಯಲ್ಲಿ ಹಾಜರ್ಪಡಿಸತಕ್ಕದ್ದು.

(cid:2) ಪಿ.ಯು.ಸಿ. ಪರೀಕ್ಷೆ ಅಥವಾ CBSE ಅಥವಾ ICSE ನಡೆಸುವ 12ನೇ ತರಗತಿ ಪರೀಕ್ಷೆಯ ಪ್ರಮಾಣಪತ್ರ.

(cid:2) ಹುಟ್ಟಿದ ದಿನಾಂಕದ ಪ್ರಮಾಣ ಪತ್ರ (ಎಸ್.ಎಸ್.ಎಲ್.ಸಿ.) ಅಥವಾ ಕ್ಯುಮುಲೇಟಿವ್ ದಾಖಲೆ)೧೨೫೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩೦, ೨೦೧೨ ಭಾಗ - ೫ (cid:2) ಸೇವೆಯಲ್ಲಿರುವ ಅಭ್ಯರ್ಥಿಗಳು ಅವರು ಸೇವೆಯಲ್ಲಿರುವ ಬಗ್ಗೆ ಸೇವಾ ಪ್ರಮಾಣ ಪತ್ರ ಮತ್ತು ಸದರಿ ಹುದ್ದೆಗೆ ಅರ್ಜಿ ಸಲ್ಲಿಸುವ ಬಗ್ಗೆ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು (No Objection Certificate) ಸಂಬಂಧಿಸಿದ ನೇಮಕಾತಿ ಪ್ರಾಧಿಕಾರದಿಂದ ಪಡೆದಿಟ್ಟುಕೊಂಡಿರಬೇಕು.

(ಅನುಬಂಧ-6)

(cid:2) ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ (ಅನುಬಂಧ-1, ನಮೂನೆ-ಡಿ) ಮತ್ತು ಪ್ರವರ್ಗ-1 (ಅನುಬಂಧ-7, ನಮೂನೆ-ಇ) ಹಾಗೂ 2ಎ, 2ಬಿ, 3ಎ, 3ಬಿ (ಅನುಬಂಧ-3, ನಮೂನೆ-ಎಫ್) ಮೀಸಲಾತಿ ಅಭ್ಯರ್ಥಿಗಳು ಕ್ರಮವಾಗಿ ನಮೂನೆ ಡಿ/ಇ/ಎಫ್ ನಲ್ಲಿ ತಹಶೀಲ್ದಾರ್‌ರವರಿಂದ ಪಡೆದ ಪ್ರಮಾಣ ಪತ್ರಗಳನ್ನು ಪಡೆದಿಟ್ಟು ಕೊಂಡಿರತಕ್ಕದ್ದು.

(cid:2) ಯೋಜನಾ ನಿರಾಶ್ರಿತ ಅಭ್ಯರ್ಥಿಗಳು, ವಿಧವೆಯರು, ಜೀತ ಕಾರ್ಮಿಕರು, ಗ್ರಾಮ ಸಮೂಹ ಪರಿಶೀಲಕರು ಮತ್ತು ಕ್ಯಾಡೆಟ್ ಪರಿವೀಕ್ಷಕರು ಇವರುಗಳು ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ. (ಅನುಬಂಧ-5)

(cid:2) ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ. (ಅನುಬಂಧ-2)

(cid:2) ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ. (ಅನುಬಂಧ-3)

(cid:2) ಸೈನಿಕ ಸೇವೆಯಿಂದ ಬಿಡುಗಡೆಯಾದ/ ಮುಕ್ತಿಹೊಂದಿದ ಬಗೆಗಿನ ಪ್ರಮಾಣ ಪತ್ರ.

(cid:2) ಅಂಗವಿಕಲ ಅಭ್ಯರ್ಥಿಗಳು ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರ . (ಅನುಬಂಧ-4)

(cid:2) ಕಂಪ್ಯೂಟರ್ ಜ್ಞಾನ (ಬೇಸಿಕ್) ಹೊಂದಿರುವ ಬಗ್ಗೆ ಪ್ರಮಾಣ ಪತ್ರ.

15. ಸಾಮಾನ್ಯ ಸೂಚನೆಗಳು:

1. ನೈತಿಕ ದುರ್ನಡತೆಯಿಂದಾಗಿ/ ನೀತಿ ಬಾಹಿರ ಚಟುವಟಿಕೆಗಳಿಂದಾಗಿ ನ್ಯಾಯಾಲಯದಿಂದ ಶಿಕ್ಷೆಗೊಳಪಟ್ಟಿರುವ ವ್ಯಕ್ತಿ ಅಥವಾ ರಾಜ್ಯ/ಕೇಂದ್ರ/ ಸ್ಥಳೀಯ ಸಂಸ್ಥೆ ಕಛೇರಿಗಳಲ್ಲಿ ನೈತಿಕ ದುರ್ನಡತೆಯಿಂದಾಗಿ ಅಥವಾ ನೀತಿ ಬಾಹಿರ ಚಟುವಟಿಕೆಗಳಲ್ಲಿ ಒಳಗಾಗಿ ಅಥವಾ ಆಯ್ಕೆಯಾದ ಅಭ್ಯರ್ಥಿಯು ಬದಲಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಾನೂನು ಬಾಹಿರ/ ನೀತಿ ಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಸೇವೆಯಿಂದ ತೆಗೆದು ಹಾಕಿದ್ದಲ್ಲಿ/ ವಜಾ ಮಾಡಲ್ಪಟ್ಟಿದ್ದು ಕಂಡು ಬಂದಲ್ಲಿ ನೇಮಕಾತಿಗೆ ಅನರ್ಹರಾಗಿರುತ್ತಾರೆ.

2. ಅರ್ಜಿಯಲ್ಲಿ ತಪ್ಪು/ ಸುಳ್ಳು ಮಾಹಿತಿ ನೀಡಿ ಉದ್ಯೋಗ ಪಡೆಯುವ ಅಭ್ಯರ್ಥಿಗಳನ್ನು ಯಾವುದೇ ಸಮಯದಲ್ಲಾದರೂ ವಜಾ ಮಾಡಲಾಗುತ್ತದೆ ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.

3. ಅರ್ಜಿಯಲ್ಲಿ ನೀಡುವ ವಿಳಾಸವೇ ಅಂತಿಮವಾಗಿದ್ದು ಎಲ್ಲಾ ಪತ್ರ ವ್ಯವಹಾರಗಳನ್ನು ಅದೇ ವಿಳಾಸಕ್ಕೆ ಕಳುಹಿಸಿ ಕೊಡಲಾಗುವುದು. ನಂತರದಲ್ಲಿ ವಿಳಾಸ ಬದಲಾವಣೆ ಬಗ್ಗೆ ಯಾವುದೇ ಪತ್ರ ವ್ಯವಹಾರವನ್ನು ಪರಿಗಣಿಸಲಾಗುವುದಿಲ್ಲ.

5. ತಾತ್ಕಾಲಿಕ ಪಟ್ಟಿ ಪ್ರಕಟಗೊಂಡ ನಂತರದಲ್ಲಿ ಅಭ್ಯರ್ಥಿಗಳಿಂದ ದಿನಾಂಕ-03.10.2012ರವರೆಗೆ ಆಕ್ಷೇಪಣೆ ಸ್ವೀಕರಿಸಲಾಗುವುದು. ನಂತರದಲ್ಲಿ ಬಂದ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು.

6. ಅಭ್ಯರ್ಥಿಗಳ ಅರ್ಹತೆಯ ವಿಷಯದಲ್ಲಿ ಆಯ್ಕೆ ಪ್ರಾಧಿಕಾರದ ನಿರ್ಧಾರವೇ ಅಂತಿಮವಾಗಿರುತ್ತದೆ.

7. ದಿನಾಂಕ-24.09.2012ರಂದು ಪ್ರಕಟಿಸಲಾಗುವ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು http://tumkur.nic.in ಪ್ರಕಟಿಸಲಾಗುವುದು. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಪರಿಶೀಲನೆಗೆ ಹಾಜರಾಗಲು ಪ್ರತ್ಯೇಕವಾಗಿ ಪತ್ರ ವ್ಯವಹಾರ ಈ ಪ್ರಾದಿಕಾರದಿಂದ ಮಾಡಲಾಗುವುದಿಲ್ಲ.

8. ಅಭ್ಯರ್ಥಿಯ ಹೆಸರು ಅಂತಿಮ ಆಯ್ಕೆಪಟ್ಟಿಯಲ್ಲಿ ಬಂದಿದೆ ಎಂಬುದರ ಆಧಾರದ ಮೇಲೆ ಅಭ್ಯರ್ಥಿಗೆ ನೇಮಕಾತಿಯ ಯಾವುದೇ ಹಕ್ಕು ದೊರೆಯುವುದಿಲ್ಲ.

9. ಸರ್ಕಾರದಿಂದ ಆಗಿಂದಾಗ್ಗೆ ನೇರ ನೇಮಕಾತಿಯಲ್ಲಿ ಮೀಸಲಾತಿಗೆ ಸಂಬಂದಿಸಿದಂತೆ ಹೊರಡಿಸಲಾಗುವ ಸುತ್ತೋಲೆ/ಅದಿಸೂಚನೆ ಅಥವಾ ಸ್ಪಷ್ಠೀಕರಣಗಳನ್ವಯ ಕ್ರಮವಹಿಸಲಾಗುತ್ತದೆ.

10. ಆಯ್ಕೆ ಸಂಬಂಧವಾಗಿ ಈ ಕಛೇರಿಯೊಂದಿಗೆ ಯಾವುದೇ ಪತ್ರ ವ್ಯವಹಾರಕ್ಕೆ ಆಸ್ಪದ ಇರುವುದಿಲ್ಲ.

11. ಅರ್ಜಿ ತುಂಬುವ ವಿಧಾನ ಹಾಗೂ ಹೆಚ್ಚಿನ ವಿವರಗಳು ತುಮಕೂರು ಜಿಲ್ಲಾಧಿಕಾರಿ ಕಛೇರಿಯ ಅಧಿಕೃತ ವೆಬ್‌ಸೈಟ್ http://tumkur.nic.in ಮತ್ತು http://tumkur-va.kar.nic.in ರಲ್ಲಿನ ಮಾಹಿತಿ ಸೂಚಿಯಲ್ಲಿ ಲಭ್ಯವಿರುತ್ತದೆ. ಮತ್ತು ಸ್ಪಷ್ಟೀಕರಣ ಅಗತ್ಯವಿದ್ದಲ್ಲಿ ಸಹಾಯವಾಣಿ ಸಂಖ್ಯೆ:0816-2278718ಕ್ಕೆ ಕಛೇರಿಯ ಕೆಲಸದ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.

ಆರ್.ಕೆ.ರಾಜು

ಜಿಲ್ಲಾದಿಕಾರಿ, ಹಾಗೂ ಅಧ್ಯಕ್ಷರು

ಗ್ರಾಮಲೆಕ್ಕಿಗರ ನೇರ ನೇಮಕಾತಿ ಪ್ರಾದಿಕಾರ.

ಪಿ.ಆರ್. 135

ತುಮಕೂರು ಜಿಲ್ಲೆ. ತುಮಕೂರು.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩೦, ೨೦೧೨ ೧೨೫೭

f¯Áí ªÀÄvÀÄÛ ¸ÀvÀæ £ÁåAiÀiÁ¢üñÀgÀªÀgÀ PÁAiÀiÁð®AiÀÄ, AiÀiÁzÀVj.

C¢ü¸ÀÆZÀ£É ¸ÀASÉå B JrJAJ£ï 3 : 2012 ¢£ÁAPÀ: 08 .08.2012

ಃ ಬೆರಳಚ್ಚುಗಾರ ಮತ್ತು ಬೆರಳಚ್ಚು-ನಕಲುಗಾರರ ಹುದ್ದೆಗಳ ನೇರ ನೇಮಕಾತಿ ಬಗ್ಗೆ.

ವಿಷಯ

ಉಲ್ಲೇಖ ಃ 1) ಕರ್ನಾಟಕ ಉಚ್ಛ ನ್ಯಾಯಾಲಯದ ಪತ್ರದ ಸಂಖ್ಯೆ ಃ ಎಲ್‌ಸಿಎ – II 52 ಃ 2010 ದಿನಾಂಕ ಃ 30.04.2010 ವಿವಿದ ಹುದ್ದೆಗಳನ್ನು ತುಂಬುವ ಅನುಮತಿಯ ಬಗ್ಗೆ.

2) ಕರ್ನಾಟಕ ಉಚ್ಛ ನ್ಯಾಯಾಲಯದ ಪತ್ರದ ಸಂಖ್ಯೆ ಃ ಎಲ್‌ಸಿಎ –II 52 ಃ 2010 ದಿನಾಂಕ ಃ 03.02.2011 ವಿವಿದ ಹುದ್ದೆಗಳನ್ನು ತುಂಬುವ ಅನುಮತಿಯ ಬಗ್ಗೆ.

3) ಸರಕಾರಿ ಆದೇಶ ಸಂಖ್ಯೆ ಲಾ 153 ಎಲ್ಎಸಿ-2010 ದಿನಾಂಕಃ24-1-2010 ಖಾಲಿ ಇರುವ 30 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಬರ್ತಿ ಮಾಡಲು ಮಂಜೂರಾತಿ ನೀಡುವ ಕುರಿತು.

4) ಕರ್ನಾಟಕ ಉಚ್ಛ ನ್ಯಾಯಾಲಯದ ಪತ್ರದ ಸಂಖ್ಯೆ ಃ ಎಲ್‌ಸಿಎ – II 54 ಃ 2011 ದಿನಾಂಕ ಃ 01.10.2011 ವಿವಿದ ಹುದ್ದೆಗಳನ್ನು ತುಂಬುವ ಅನುಮತಿಯ ಬಗ್ಗೆ.

5) ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳ) (ನೇಮಕಾತಿ ) ನಿಯಮ 1982.

6) ಕರ್ನಾಟಕ ಅಧೀನ ನ್ಯಾಯಾಲಯಗಳ ( ಲಿಪಿಕ ಮತ್ತು ಇತರ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮ 2007.

7) ಕರ್ನಾಟಕ ನಾಗರಿಕ ಸೇವಾ ಸಾಮಾನ್ಯ ನೇಮಕಾತಿ ನಿಯಮ –1977

ಮೇಲ್ಕಂಡ ಅಧಿಸೂಚನೆಯನ್ವಯ ಯಾದಗಿರಿ ಜಿಲ್ಹಾ ಮತ್ತು ಸತ್ರ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಬೆರಳಚ್ಚುಗಾರರು - 08 ಮತ್ತು ಬೆರಳಚ್ಚು-ನಕಲುಗಾರರು – 04 ಹುದ್ದೆಗಳನ್ನು ತುಂಬಲು ಅರ್ಹ ಅಬ್ಯರ್ಥಿಗಳಿಂದ ಅಧಿಸೂಚನೆಯಲ್ಲಿ ಲಗತ್ತಿಸಿರುವ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಃ 07.09.2012 ಸಂಜೆ 5.00 ಗಂಟೆಯೊಳಗೆ.

I. ಬೆರಳಚ್ಚುಗಾರರು

ಹುದ್ದೆಗಳ ಸಂಖ್ಯೆ ಃ 08

ವೇತನ ಶ್ರೇಣôಃ 11600-200-12000-250-13000-300-14200-350-15600-400-17200-450-19000-500-21000 ಹಾಗೂ ಇತರೆ ಬತ್ಯೆಗಳು.

ಹುದ್ದೆಯ ವರ್ಗೀಕರಣ ಃ

ವ ರ್ಗೀಕರಣ ಇತರರು ವ ುಹಿಳಾ ಅಬ್ಯರ್ಥಿ ಗ್ರಾಮೀಣ ಅಬ್ಯರ್ಥಿ ಅಂಗವಿಕಲ ಅಬ್ಯರ್ಥಿ ಒಟ್ಟು ಹುದ್ದೆಗಳು
ಸಾಮಾನ್ಯ ಅಬ್ಯರ್ಥಿ 1 1 2 4
ಪರಿಶಿಏ್ಟ ಜಾತಿ 1 1 2
ಪ್ರವರ್ಗ 2ಎ 1 1
ಪ್ರವರ್ಗ 2ಬಿ 1 1
ಒಟ್ಟು 2 3 3 8
೧೨೫೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩೦, ೨೦೧೨ ಭಾಗ - ೫

ವಿದ್ಯಾರ್ಹತೆ ಃ

1) ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2) ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಪ್ರೌಡದರ್ಜೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಆಯ್ಕೆಯ ವಿಧಾನ ಃ

ಅಬ್ಯರ್ಥಿಯು ಸುಮಾರು 15 ನಿಮಿಷಗಳ ಕಾಲ ನೀಡುವ ಉಕ್ತಲೇಖನವನ್ನು ಬೆರಳಚ್ಚು ಮಾಡತಕ್ಕದ್ದು ಮತ್ತು ಈ ಪರೀಕ್ಷೆಯಲ್ಲಿ ಗರಿಷ್ಠ 100 ಅಂಕಗಳಿದ್ದು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಟ 50 ಅಂಕಗಳನ್ನು ಪಡೆದಿರಬೇಕು.

V. ಬೆರಳಚ್ಚು-ನಕಲುಗಾರರ ಹುದ್ದೆ

1. ಹುದ್ದೆಗಳ ಸಂಖ್ಯೆ ಃ 04

ವೇತನ ಶ್ರೇಣô ಃ 11600-200-12000-250-13000-300-14200-350-15600-400-17200-450-19000-500-21000 ಹಾಗೂ ಇತರೆ ಬತ್ಯೆಗಳು.

ವ ರ್ಗೀಕರಣ ಇತರರು ವ ುಹಿಳಾ ಅಬ್ಯರ್ಥಿ ಗ್ರಾಮೀಣ ಅಬ್ಯರ್ಥಿ ಅಂಗವಿಕಲ ಅಬ್ಯರ್ಥಿ ಒಟ್ಟು ಹುದ್ದೆಗಳು
ಸಾಮಾನ್ಯ ಅಬ್ಯರ್ಥಿ 1 01
ಪರಿಶಿಏ್ಟ ಜಾತಿ 1 1 2
ಪರಿಶಿಏ್ಟ ಪಂಗಡ 1 1
ಒಟ್ಟು 2 2 4

ವಿದ್ಯಾರ್ಹತೆ ಃ

1) ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2) ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಕಿರಿಯ ದರ್ಜೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಆಯ್ಕೆಯ ವಿಧಾನ ಃ

ಅಬ್ಯರ್ಥಿಯು ಸುಮಾರು 15 ನಿಮಿಷಗಳ ಕಾಲ ನೀಡುವ ಉಕ್ತಲೇಖನವನ್ನು ಬೆರಳಚ್ಚು ಮಾಡತಕ್ಕದ್ದು ಮತ್ತು ಈ ಪರೀಕ್ಷೆಯಲ್ಲಿ ಗರಿಷ್ಠ 100 ಅಂಕಗಳಿದ್ದು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಟ 50 ಅಂಕಗಳನ್ನು ಪಡೆದಿರಬೇಕು.

ಸೂಚನೆಗಳು ಃ

1) ಬರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ ಃ 07.09.2012 ರಂದು ಸಂಜೆ 5-00 ಗಂಟೆಯೊಳಗೆ ಸಲ್ಲಿಸತಕ್ಕದ್ದು. ಒಂದು ವೇಳೆ ಕಡೆಯ ದಿನಾಂಕವು ಸಾರ್ವಜನಿಕ ರಜೆ ದಿನವಾಗಿದ್ದ ಪಕ್ಷದಲ್ಲಿ ಮುಂದಿನ ಕೆಲಸದ ದಿನಾಂಕ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನವಾಗಿರುತ್ತದೆ.

2) ಬರ್ತಿ ಮಾಡಿದ ಅರ್ಜಿಗಳನ್ನು ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬೇಕು.

ಜಿಲ್ಲ್ಹಾ ಮತ್ತು ಸತ್ರ ನ್ಯಾಯಾಧೀಶರವರ

ಕಚೇರಿ, ಯಾದಗಿರಿ, ಜಿಲ್ಹೆ ಃ ಯಾದಗಿರಿ.

I) ವಂiೋಮಿತಿ ಃ

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಅಬ್ಯರ್ಥಿಯು ಕನಿಷ್ಟ 18 ವರ್ಷ ವಯಸ್ಸನ್ನು ಪೂರೈಸಿರಬೇಕು.

1) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ – 1 ಅಬ್ಯರ್ಥಿಗಳು 40 ವರ್ಷಗಳು ಮೀರಿರಬಾರದು.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩೦, ೨೦೧೨ ೧೨೫೯

2) ಪ್ರವರ್ಗ – 2ಎ, 2ಬಿ, 3ಎ ಹಾಗೂ 3ಬಿಗೆ ಸೇರಿದ ಅಬ್ಯರ್ಥಿಗಳು 38 ವರ್ಷಗಳು ಮೀರಿರಬಾರದು.

3) ಸಾಮಾನ್ಯ ಅಬ್ಯರ್ಥಿಗಳು 35 ವರ್ಷಗಳು ಮೀರಿರಬಾರದು.

4) ಅಂಗವಿಕಲರಿಗೆ ಮತ್ತು ವಿದವೆಯರಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ಉಂಟು.

ii) ಮೀಸಲಾತಿ ಹಾಗೂ ವಯೋಮಿತಿ ರಿಯಾಯತಿ ಕೋರಿದಲ್ಲಿ ಹಾಜರುಪಡಿಸಬೇಕಾದ ಸ್ವಯಂ ದೃಡೀಕೃತ ಪ್ರಮಾಣಪತ್ರಗಳು.

1) ಜಾತಿ ಮೀಸಲಾತಿ ಕೋರುವ ಅಬ್ಯರ್ಥಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಮೂನೆಯಲ್ಲಿ ತಹಶೀಲ್ದಾರರಿಂದ ಪಡೆದಿರುವ ಜಾತಿ ಪ್ರಮಾಣಪತ್ರವನ್ನು ಒದಗಿಸತಕ್ಕದ್ದು.

2) ಗ್ರಾಮೀಣ ಮೀಸಲಾತಿ ಕೋರುವ ವರ್ಗದ ಅಬ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆ ಃ ಸಿಅಸುಇ / 96 / ಸೇನನಿ /2005 ದಿನಾಂಕ ಃ 10.08.2005ರ ಪ್ರಕಾರ ನಿಗದಿತ ನಮೂನೆ 2ರಲ್ಲಿ ಅಧಿಕೃತ ಅಧಿಕಾರಿಗಳಿಂದ ಪಡೆದು ಅದನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ರುಜು ಮಾಡಿಸಿ ಸಲ್ಲಿಸಬೇಕು.

3) ಗ್ರಾಮೀಣ ಮೀಸಲಾತಿಯನ್ನು ಕೋರುವ ಸಾಮಾನ್ಯ ವರ್ಗದ ಅಬ್ಯರ್ಥಿಗಳು ಪ್ರಮಾಣಪತ್ರ ನಮೂನೆ - 2ರ ಜೊತೆ ನಮೂನೆ – 1ರಲ್ಲೂ ದೃಡೀಕರಣ ಪತ್ರವನ್ನು ಸಲ್ಲಿಸುವುದು.

ಪರಿವೀಕ್ಷಣಾ ಅವಧಿ ಃ

ಆಯ್ಕೆಯಾದ ಅಬ್ಯರ್ಥಿಗಳು ಕರ್ನಾಟಕ ಸೇವಾ ನಿಯಮ ( ಪರಿವೀಕ್ಷಣಾ ನಿಯಮಗಳು ) – 1977ರ ಪ್ರಕಾರ ಎರಡು ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲ್ಲಿರುತ್ತಾರೆ. ಆ ಅವಧಿಯಲ್ಲಿ ಅಬ್ಯರ್ಥಿಗಳು ಅವರ ಹುದ್ದೆಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳನ್ನು ಮತ್ತು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಉತ್ತೀರ್ಣರಾಗತಕ್ಕದ್ದು.

ಆಯ್ಕೆಯ ವಿಧಾನ ಃ

ಅಬ್ಯರ್ಥಿಗಳ ಆಯ್ಕೆಯು ಕರ್ನಾಟಕ ಅಧೀನ ನ್ಯಾಯಾಲಯಗಳ ( ಲಿಪಿಕ ಮತ್ತು ಇತರ ಹುದ್ದೆಗಳು ) (ನೇಮಕಾತಿ) (ತಿದ್ದುಪಡಿ) ಅಧಿನಿಯಮ 2007ರ ಮತ್ತು ಸಂಬಂದಪಟ್ಟ ಹಾಗೂ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ 1977ರ ಪ್ರಕಾರ ನಡೆಸಲಾಗುವುದು.

ಅಬ್ಯರ್ಥಿಗಳು ಅರ್ಜಿಯೊಂದಿಗೆ ಕೆಳಕಂಡ ದಾಖಲೆಗಳ ದೃಡೀಕೃತ ನಕಲುಗಳನ್ನು ಸಲ್ಲಿಸಬೇಕು. ತಪ್ಪಿದಲ್ಲಿ ಯಾವ ಸೂಚನೆಯನ್ನು ನೀಡದೇ ಅರ್ಜಿಗಳನ್ನು

ತಿರಸ್ಕರಿಸಲಾಗುವುದು.

1) ಅಬ್ಯರ್ಥಿಯು ಈ ಅಧಿಸೂಚನೆಯಲ್ಲಿ ನೀಡಿರುವ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಬೆರಳಚ್ಚು ಮಾಡಿಸಿ ಕಂಪ್ಯೂಟರ್‌ನಲ್ಲಿ ತಯಾರಿಸಿ ಅಥವಾ ಸ್ವತಃ ಕೈಬರಹದಲ್ಲಿ ತಮಗೆ ಅನ್ವಯಿಸುವ ಎಲ್ಲ ಅಂಕಣಗಳನ್ನು ಬರ್ತಿ ಮಾಡಿ ಸಲ್ಲಿಸತಕ್ಕದ್ದು.

2) ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವರು ಆಯಾ ಹುದ್ದೆಗಳಿಗೆ ಪ್ರತ್ಯೇಕವಾಗಿ ನಿಗದಿತ ನಮೂನೆಗಳಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು.

3) ಹುಟ್ಟಿದ ದಿನಾಂಕವನ್ನು ತೋರಿಸುವ ಬಗ್ಗೆ ದೃಡೀಕೃತ ಪ್ರಮಾಣಪತ್ರವನ್ನು ಸಲ್ಲಿಸತಕ್ಕದ್ದು.

4) ಅಬ್ಯರ್ಥಿಯು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋವನ್ನು ಅರ್ಜಿ ನಮೂನೆಯಲ್ಲಿ ತೋರಿಸಿರುವ ಸ್ಥಳದಲ್ಲಿ ಅಂಟಿಸಿ ಅದರ ಮೇಲೆ ಸಹಿ ಮಾಡತಕ್ಕದ್ದು

5) ಅರ್ಜಿ ನಮೂನೆಯೊಂದಿಗೆ ಯಾವುದೇ ಮೂಲ ಪ್ರತಿಗಳನ್ನು ಲಗತ್ತಿಸುವ ಅವಶ್ಯಕತೆ ಇರುವುದಿಲ್ಲ. ಶೈಕ್ಷಣôಕ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಹಾಗೂ ಇತರ ಪ್ರಮಾಣಪತ್ರಗಳನ್ನು ಸ್ವಯಂ ದೃಡೀಕರಿಸಿ ಅರ್ಜಿಗೆ ಲಗತ್ತಿಸತಕ್ಕದ್ದು.

6) ಆಬ್ಯರ್ಥಿಗಳು ಅರ್ಜಿಯೊಂದಿಗೆ ಅವರ ನಡತೆ ಬಗ್ಗೆ ಅವರ ಸಂಬಂಧಿಯಲ್ಲದ ಸಮಾಜದ ಇಬ್ಬರು ಗಣ್ಯ ವ್ಯಕ್ತಿಗಳಿಂದ 6 ತಿಂಗಳೊಳಗೆ ಪಡೆದ ಎರಡು ಪ್ರಮಾಣ ಪತ್ರಗಳನ್ನು ಹಾಗೂ ಕೊನೆಯಲ್ಲಿ ವ್ಯಾಸಂಗ ಮಾಡಿದ ಶಾಲೆ /ಕಾಲೇಜಿನಿಂದ ಪಡೆದ ಒಂದು ನಡತೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸತಕ್ಕದ್ದು.

೧೨೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩೦, ೨೦೧೨ ಭಾಗ - ೫

7) ಜಾತಿ ವಿiೕಸಲಾತಿ ಕೋರುವ ಅಬ್ಯರ್ಥಿಗಳು ನಿಗದಿತ ನಮೂನೆಯಲ್ಲಿ ತಹಶೀಲ್ದಾರರವರಿಂದ ಒಂದು ವರ್ಷದೊಳಗೆ ಪಡೆದಿರುವ ಪ್ರಮಾಣಪತ್ರದ ದೃಡೀಕೃತ ನಕಲನ್ನು ಲಗತ್ತಿಸತಕ್ಕದ್ದು

8) ಅಬ್ಯರ್ಥಿಗಳು ಅರ್ಜಿಯ ಜೊತೆಯಲ್ಲಿ 5-00 ರೂ.ಗಳ ಅಂಚೆ ಚೀಟಿ ಲಗತ್ತಿಸಿರುವ ಸ್ವವಿಳಾಸವಿರುವ ಲಕೋಟೆಯನ್ನು ಲಗತ್ತಿಸತಕ್ಕದ್ದು ಹಾಗೂ ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆಂಬುದನ್ನು ದಪ್ಪ ಅಕ್ಷರದಲ್ಲಿ ಲಕೋಟೆಯ ಮೇಲೆ ನಮೂದಿಸತಕ್ಕದ್ದು.

9) ಯಾವುದೇ ಅಬ್ಯರ್ಥಿಯು ಯಾವುದೇ ಪ್ರವರ್ಗ ಮೀಸಲಾತಿ ಕೋರಿದಲ್ಲಿ ಆಯಾ ಮೀಸಲಾತಿಗೆ ಸಂಬಂಧಿಸಿದ ನಿಗದಿತ ನಮೂನೆಯಲ್ಲಿ ಸಮಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣಪತ್ರದ ದೃಡೀಕೃತ ನಕಲನ್ನು ಲಗತ್ತಿಸತಕ್ಕದ್ದು.

ಸಾಮಾನ್ಯ ಸೂಚನೆಗಳು

1) ಅಬ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಅಕ್ರಮ ಮತ್ತು ಅನುಸೂಚಿತ ಮಾರ್ಗವನ್ನು ಅನುಸರಿಸಿದ್ದಲ್ಲಿ ಅಥವಾ ಪ್ರಭಾರ ಬೀರುವ ಅಂಶ ಕಂಡು ಬಂದಲ್ಲಿ ಅಂತ ಅಬ್ಯರ್ಥಿಗಳನ್ನು ನೇಮಕಾತಿಗೆ ಪರಿಗಣಿಸಲಾಗುವದಿಲ್ಲ.

2) ಅಪೂರ್ಣವಾಗಿರುವ, ಸಹಿ ಮಾಡದ ಮತ್ತು ವಿದ್ಯಾರ್ಹತೆ ಮೀಸಲಾತಿ ಹಾಗೂ ವಯೋಮಿತಿ ರಿಯಾಯಿತಿಯ ಬಗ್ಗೆ ಸಂಬಂದಪಟ್ಟ ದಾಖಲೆಗಳನ್ನು ಹೊಂದಿರದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

3) ಸರ್ಕಾರಿ ಮತ್ತು ಅರೆ ಸರ್ಕಾರಿ ಸೇವೆಯಲ್ಲಿರುವ ಅಬ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಮುಚ್ಚಿತ ಮಾರ್ಗದ ಮುಖಾಂತರ ಸಲ್ಲಿಸತಕ್ಕದ್ದು.

4) ಅಬ್ಯರ್ಥಿಗಳು ತಮ್ಮ ಸ್ವತಃ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗುವುದು ಹಾಗೂ ಸಂಬಂದಪಟ್ಟ ಎಲ್ಲಾ ಅಸಲು ದಾಖಲೆಗಳನ್ನು ಸಂದರ್ಶನದ ಕಾಲಕ್ಕೆ ಹಾಜರುಪಡಿಸತಕ್ಕದ್ದು.

5) ಅಬ್ಯರ್ಥಿಯು ಸಂದರ್ಶನಕ್ಕೆ ಹಾಜರಾಗಲು ಮಾಹಿತಿ ಸಿಗದಿದ್ದ ಪಕ್ಷದಲ್ಲಿ ಅವರು ಸಂದರ್ಶನಕ್ಕೆ ಅನರ್ಹರೆಂದು ತಿಳಿಯತಕ್ಕದ್ದು ಹಾಗೂ ಈ ಬಗ್ಗೆ ಯಾವುದೇ ಪತ್ರ ವ್ಯವಹಾರಗಳನ್ನು ನಡೆಸಲಾಗುವದಿಲ್ಲ.

6) ಎಲ್ಲಾ ವಿವರಗಳನ್ನು ನೀಡದ ಹಾಗೂ ಅಪೂರ್ಣವಾದ ಅರ್ಜಿಗಳನ್ನು ಪ್ರಾರಂಭಿಕ ಹಂತದಲ್ಲೇ ತಿರಸ್ಕರಿಸಲಾಗುವುದು.

ಹಂಚಾಟೆ ಸಂಜೀವಕುಮಾರ

ಜಿಲ್ಹಾ ಮತ್ತು ಸತ್ರ ನ್ಯಾಯಾಧೀಶರು, ಪಿ.ಆರ್. 134

ಯಾದಗಿರಿ.

Cite this issue. Karnataka Gazette, Government of Karnataka, 30 August 2012. Indian Gazettes, https://egazette.servantsofknowledge.in/details/in.gazette.karnataka_new.2012-08-30.Part-5/. Archive identifier in.gazette.karnataka_new.2012-08-30.Part-5.