Servants of Knowledge
Karnataka Gazette · Government of Karnataka

Karnataka Gazette, Part Part-5, 13 September 2012

Published 13 September 2012

Part
Part-5
Identifier
in.gazette.karnataka_new.2012-09-13.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೪೭ ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೧೩, ೨೦೧೨ (ಭಾದ್ರಪದ ೨೨, ಶಕ ವರ್ಷ ೧೯೩೪) ಸಂಚಿಕೆ ೩೭

ಭಾಗ - ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-560001.

ಅಧಿಸೂಚನೆ

ಸಂಖ್ಯೆ:ಇಪ(1) 852/2012-13/ಪಿಎಸ್‌ಸಿ. ದಿನಾಂಕ: 30-08-2012.

ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆ ನಡೆಸುವಿಕೆ) ನಿಯಮಗಳು 1965 ಮತ್ತು ಕರ್ನಾಟಕ ನಾಗರಿಕ ಸೇವಾ (ಸೇವೆ ಮತ್ತು ಕನ್ನಡ ಭಾಷಾ ಪರೀಕ್ಷೆ) ನಿಯಮಗಳು 1974ರ ಮೇರೆಗೆ ಆಯೋಗವು 2012ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ನಾಗರಿಕ ಸೇವಾ ನಿಯಮಗಳಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ಬಗ್ಗೆ ಸೂಚನೆಗಳನ್ನು ಆಯೋಗದ ವೆಬ್‌ಸೈಟ್ ``http://kpsc.kar.nic.in'' ನಲ್ಲಿ ಬಿತ್ತರಿಸಲಾಗಿದೆ. ಈ ಪರೀಕ್ಷೆಗಳನ್ನು 2012ರ ಡಿಸೆಂಬರ್ ಮಾಹೆಯಲ್ಲಿ ನಡೆಸಲಾಗುವುದು.

ಈ ಅಧಿಸೂಚನೆಯ ಅನುಬಂಧ-`ಎ' ಯಲ್ಲಿನ ಪರೀಕ್ಷಾ ವೇಳಾಪಟ್ಟಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುವ ಪರೀಕ್ಷೆಗಳ ಬಗ್ಗೆ ವಿವರಗಳನ್ನು ನೀಡಲಾಗಿದೆ. ಅನುಬಂಧ-`ಬಿ' ನಲ್ಲಿ ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಯುವ ಪರೀಕ್ಷೆಗಳ ಬಗ್ಗೆ ವಿವರಗಳನ್ನು ನೀಡಲಾಗಿದೆ.

ಪರೀಕ್ಷೆಗೆ ಹಾಜರಾಗಬಯಸುವ ಅಭ್ಯರ್ಥಿಗಳು ಒಂದು ಅರ್ಜಿಯಲ್ಲಿ ಗರಿಷ್ಠ ಆರು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವಾಗ ವಿಷಯ ಮತ್ತು ವಿಷಯ ಸಂಕೇತಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಲು ಸೂಚಿಸಿದೆ.

ಸೂಚನೆಗಳು:

(1) ಅನುದಾನಿತ/ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಇಲಾಖಾ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

(2) ಇಲಾಖಾ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಯು ಕಡ್ಡಾಯವಾಗಿ ನಿಗದಿಪಡಿಸಿರುವ ಪರೀಕ್ಷಾ ಶುಲ್ಕವನ್ನು ಪಾವತಿಸತಕ್ಕದ್ದು. ತಪ್ಪಿದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

(೧೪೩೭)೧೪೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ಭಾಗ - ೫ (3) ಶುಲ್ಕ ಪಾವತಿಸದ ಹಾಗೂ ಅಪೂರ್ಣ ಅರ್ಜಿಗಳನ್ನು ಮತ್ತು ಕೊನೆಯ ದಿನಾಂಕದ ನಂತರ ಸಲ್ಲಿಸಿದ ಹಾಗೂ ಆನ್‌ಲೈನ್ ವಿಧಾನ ಹೊರತುಪಡಿಸಿ ಇತರ ಯಾವುದೇ ವಿಧಾನದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಯಾವ ಸೂಚನೆಯನ್ನು ನೀಡದೇ ತಿರಸ್ಕರಿಸಲಾಗುವುದು.

(4) ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವ ಮುನ್ನ On-line ನಲ್ಲಿ ನೀಡಿರುವ ಸೂಚನೆಗಳನ್ನು ಗಮನಿಸಿ ಈ ಸೂಚನೆಗಳಿಗೆ ಅನುಸಾರವಾಗಿಯೇ ಭರ್ತಿ ಮಾಡತಕ್ಕದ್ದು.

(5) ತಪ್ಪು ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿದಲ್ಲಿ ಅಂತಹ ಅಭ್ಯರ್ಥಿಗಳ ವಿರುದ್ಧ ಆಯೋಗವು ಕಾನೂನಿನನ್ವಯ ಸೂಕ್ತ ಕ್ರಮಕೈಗೊಳ್ಳುವುದು.

(6) ಶುಲ್ಕವನ್ನು ಸಿಂಡಿಕೇಟ್ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಸಂದಾಯ ಮಾಡಬಹುದಾಗಿದ್ದು, ಈ ಬ್ಯಾಂಕನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಂಕಿನಲ್ಲಿ ಶುಲ್ಕ ಸಂದಾಯ ಮಾಡಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

(7) ಕೊನೆಯ ಕ್ಷಣಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳಿಂದ ಪಾರಾಗಲು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೂ ಕಾಯದೇ ಸಾಕಷ್ಟು ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಸಲು ಪ್ರಯತ್ನಿಸತಕ್ಕದ್ದು. ಒಮ್ಮೆ ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ ಅದನ್ನು ಯಾವುದೇ ಸಂದರ್ಭದಲ್ಲಿಯೂ ಹಿಂದಿರುಗಿಸಲಾಗುವುದಿಲ್ಲ ಅಥವಾ ಅದನ್ನು ಆಯೊಗವು ನಡೆಸುವ ಇತರೆ ಯಾವುದೇ ಪರೀಕ್ಷೆ ಅಥವಾ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ.

(8) ಅಭ್ಯರ್ಥಿಯು ತನ್ನ ಹುದ್ದೆಗೆ ಸಂಬಂಧಿಸಿದಂತೆ 1974ರ ಕ.ನಾ.ಸೇ (ಸೇವಾ ಮತ್ತು ಕನ್ನಡಭಾಷಾ) ನಿಯಮಾವಳಿ ರೀತ್ಯಾ ಷೆಡ್ಯೂಲ್

IIರಲ್ಲಿ ಕಡ್ಡಾಯಗೊಳಿಸಿದ ವಿಷಯಗಳಿಗೆ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು ಹಾಗೂ ತನಗೆ ಸಂಬಂಧಪಡದ ಇತರ ಇಲಾಖೆಗಳ ವಿಷಯಗಳಲ್ಲಿ

ಪರೀಕ್ಷೆ ಬರೆಯಲು ಅರ್ಜಿಯನ್ನು ಯಾವುದೇ ಕಾರಣಕ್ಕೂ ಸಲ್ಲಿಸತಕ್ಕದ್ದಲ್ಲ. ಹಾಗೆಯೇ ಅಭ್ಯರ್ಥಿಯು ತಾನು ಶುಲ್ಕ ಸಂದಾಯ

ಮಾಡಿರುವೆನೆಂದ ಮಾತ್ರಕ್ಕೆ ಪರೀಕ್ಷೆ ಬರೆಯಲು ಹಕ್ಕುಳ್ಳವನಾಗಿರುವನೆಂದು ಭಾವಿಸತಕ್ಕದ್ದಲ್ಲ.

2. ಅಭ್ಯರ್ಥಿಗಳು ಆನ್‌ಲೈನ್ (On-line) ಮುಖಾಂತರ ಇಲಾಖಾ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಹಂತಗಳನ್ನು ಅನುಕ್ರಮವಾಗಿ

ಈ ಕೆಳಕಂಡಂತೆ ವಿವರಿಸಲಾಗಿದೆ.

ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮುನ್ನ 35 x 45mm (ಜೆಪಿಜಿ) ಅಳತೆಯ ಭಾವಚಿತ್ರವನ್ನು ಶುದ್ಧವಾದ ಬಿಳಿಯ ಹಾಳೆಯ ಮೇಲೆ ಅಂಟಿಸಿ ಅದರ ಕೆಳಗೆ ಕಪ್ಪು ಶಾಹಿಯ ಪೆನ್‌ನಲ್ಲಿ ಸಹಿ ಮಾಡಿದ ನಂತರ ಸ್ಕ್ಯಾನ್ ಮಾಡಿ UPLOAD ಮಾಡಲು ಸಿದ್ಧವಾಗಿಟ್ಟುಕೊಂಡಿರಬೇಕು.

ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್ http://kpsc.kar.nic.in ನಲ್ಲಿ ONLINE APPLICATION FOR DEPARTMENTAL EXAM-SECOND SESSION 2012 ಲಿಂಕನ್ನು ಕ್ಲಿಕ್ ಮಾಡಿದ ನಂತರ ಅರ್ಜಿ ಸಲ್ಲಿಸಲು ಬೇಕಾದ ಸೂಚನೆಗಳನ್ನು ವೀಕ್ಷಿಸಲು HOME PAGE ನಲ್ಲಿನ `INSTRUCTIONS TO CANDIDATES' ಎನ್ನುವ ಲಿಂಕನ್ನು ಕ್ಲಿಕ್ ಮಾಡಬೇಕು.

ಅರ್ಜಿಯನ್ನು ಸಲ್ಲಿಸಲು `SUBMIT APPLICATION FORM ' ಎನ್ನುವ ಲಿಂಕನ್ನು ಕ್ಲಿಕ್ ಮಾಡಬೇಕು. ಅರ್ಜಿಯಲ್ಲಿ ವಿವರಗಳನ್ನು ಭರ್ತಿ ಮಾಡಿ ಸ್ಕ್ಯಾನ್ ಮಾಡಿಕೊಂಡಿರುವ ಫೋಟೋವನ್ನು UPLOAD ಮಾಡಿದ ನಂತರ `Preview' ಬಟನ್ ಒತ್ತಿ ಅರ್ಜಿಯಲ್ಲಿ ನಮೂದಿಸಿರುವ ವಿವರಗಳನ್ನು ಮತ್ತೊಮ್ಮೆ ಕೂಲಂಕಷವಾಗಿ ನೋಡಿಕೊಳ್ಳಬೇಕು. ನಮೂದಿಸಿರುವ ವಿವರಗಳಲ್ಲಿ ಏನಾದರೂ ತಪ್ಪುಗಳಾಗಿದ್ದಲ್ಲಿ ಅದನ್ನು ಸರಿಪಡಿಸಲು Edit ಮೇಲೆ ಕ್ಲಿಕ್ ಮಾಡಿ ನಂತರ ಅಗತ್ಯ ತಿದ್ದುಪಡಿಗಳನ್ನು ಮಾಡಬಹುದು. ಆನಂತರ ಅರ್ಜಿಯಲ್ಲಿ ಭರ್ತಿ ಮಾಡಿರುವ ಎಲ್ಲಾ ವಿವರಗಳು ಸರಿಯಾಗಿರುತ್ತವೆಯೆಂದು ಮನದಟ್ಟು ಮಾಡಿಕೊಂಡ ತರುವಾಯ, `Submit' ಬಟನ್ ಅನ್ನು ಒತ್ತಬೇಕು. ಆ ನಂತರ ಪರದೆಯ ಮೇಲೆ ಮೂಡುವ Application Number (ಅರ್ಜಿಯ ಸಂಖ್ಯೆ) ಅನ್ನು ಅಭ್ಯರ್ಥಿಯು ಗುರುತು ಹಾಕಿಕೊಳ್ಳತಕ್ಕದ್ದು. ಮುಂದೆ ಚಲನ್ ಮುದ್ರಿಸಲು ಮತ್ತು ಪ್ರವೇಶ ಪತ್ರವನ್ನು ಪಡೆಯಲು ಈ ಮಾಹಿತಿಗಳು ಅವಶ್ಯವಿರುತ್ತದೆ.

ಅರ್ಜಿಯ ಶುಲ್ಕವನ್ನು ಪಾವತಿಸಲು ಬೇಕಾದ ಬ್ಯಾಂಕ್ ಚಲನ್ ಅನ್ನು ಪಡೆಯಲು `Generate Bank Challan' ಎನ್ನುವ ಲಿಂಕನ್ನು ಕ್ಲಿಕ್ ಮಾಡಿ ಚಲನ್ ಅನ್ನು down load ಮಾಡಿಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಿ ಚಲನ್ ಅನ್ನು down load ಮಾಡಿಕೊಂಡ ದಿನದ ನಂತರದ ಬ್ಯಾಂಕಿನ ಕಾರ್ಯನಿರ್ವಹಣೆಯ ಎರಡು ದಿನಗಳ ತರುವಾಯ ಶುಲ್ಕವನ್ನು ಸಿಂಡಿಕೇಟ್ ಬ್ಯಾಂಕಿನ ಯಾವುದೇ ಶಾಖೆಗಳಲ್ಲಿ ಸಂದಾಯ ಮಾಡಬಹುದಾಗಿರುತ್ತದೆ. ಶುಲ್ಕವನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಶುಲ್ಕವನ್ನು ಸಂದಾಯ ಮಾಡಲು ಅವಕಾಶವಿರುವುದಿಲ್ಲ.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ೧೪೩೯

ಸಿಂಡಿಕೇಟ್ ಬ್ಯಾಂಕ್ ಅನ್ನು ಹೊರತುಪಡಿಸಿ ಇತರೆ ಯಾವುದೇ ಬ್ಯಾಂಕಿನಲ್ಲಿ ಶುಲ್ಕ ಸಂದಾಯ ಮಾಡುವಂತಿಲ್ಲ. ಶುಲ್ಕ ಸಂದಾಯ ಮಾಡದ ಅರ್ಜಿಗಳನ್ನು

ತಿರಸ್ಕøತಗೊಳಿಸಲಾಗುವುದು.

ಅರ್ಜಿಯ ಪ್ರತಿಯನ್ನು ಮುದ್ರಿಸಿಕೊಳ್ಳಲು ಅಭ್ಯರ್ಥಿಯು `Print Application' ಎನ್ನುವ ಲಿಂಕನ್ನು ಕ್ಲಿಕ್ ಮಾಡಬೇಕು. ಅರ್ಜಿಯ ಪ್ರತಿಯನ್ನು ಮತ್ತು ಶುಲ್ಕ ಸಂದಾಯ ಮಾಡಿದ ಚಲನ್ಅನ್ನು ಕಡ್ಡಾಯವಾಗಿ ಅಭ್ಯರ್ಥಿಗಳು ತಮ್ಮೊಂದಿಗೆ ಇಟ್ಟುಕೊಳ್ಳತಕ್ಕದ್ದು. ಆಯೋಗವು ಅಪೇಕ್ಷಿಸಿದಾಗ ಈ ಚಲನ್ ಅನ್ನು ಹಾಜರುಪಡಿಸಬೇಕು.

ಅಭ್ಯರ್ಥಿಗಳು ಅರ್ಜಿ ಸಂಖ್ಯೆಯ ಮಾಹಿತಿಯನ್ನು ಪಡೆಯಬೇಕಾದಲ್ಲಿ ಆಯೋಗದ ವೆಬ್‌ಸೈಟ್‌ನ HOME PAGE ನಲ್ಲಿನ `Search application ID' ಲಿಂಕಿನಲ್ಲಿ ಮಾಹಿತಿಗಳನ್ನು ದಾಖಲಿಸಿ ಅರ್ಜಿ ಸಂಖ್ಯೆಯನ್ನು ಪಡೆಯಬಹುದಾಗಿರುತ್ತದೆ. ಜನ್ಮ ದಿನಾಂಕದ ಮಾಹಿತಿಯನ್ನು ಪಡೆಯಲು `Search Date of Birth' ಲಿಂಕಿನಲ್ಲಿ ಅಗತ್ಯ ಮಾಹಿತಿಗಳನ್ನು ದಾಖಲಿಸಿ ಜನ್ಮ ದಿನಾಂಕದ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: : 03-09-2012

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: : 03-10-2012 ಸಂಜೆ 5.30 ಗಂಟೆ ಆಗಿರುತ್ತದೆ.

ಶುಲ್ಕ ಸಂದಾಯ ಮಾಡಲು ಕೊನೆಯ ದಿನಾಂಕ: : 06-10-2012 ಬ್ಯಾಂಕಿನ ವ್ಯವಹಾರ ವೇಳೆಯೊಳಗೆ.

ವಿಶೇಷ ಸೂಚನೆ:- ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿಮಾಡುವ ಸಂದರ್ಭದಲ್ಲಿ ಯಾವುದಾದರೂ ತಾಂತ್ರಿಕ ತೊಂದರೆ ಅಥವಾ ಸಮಸ್ಯೆಗಳು ಉದ್ಭವಿಸಿದಲ್ಲಿ ಸಹಾಯವಾಣಿ (Help line) 080-30574913, 080-30574944 ಮತ್ತು 080-30574945ಗಳನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.

3. ವಿಷಯ, ಸಂಕೇತಗಳು ಮತ್ತು ನಿಗದಿಪಡಿಸಿದ ಶುಲ್ಕ:

ಇಲಾಖಾ ಪರೀಕ್ಷೆಯ ವಿವಿಧ ವಿಷಯಗಳು, ಅವುಗಳ ಸಂಕೇತಗಳು ಹಾಗೂ ಸರ್ಕಾರದ ಆದೇಶ ಸಂಖ್ಯೆ. ಸಿಆಸುಇ 6 ಸೇಲೋಸೇ 2010, ದಿನಾಂಕ: 06-08-2010ರನ್ವಯ ನಿಗದಿಪಡಿಸಿರುವ ಪರಿಷ್ಕøತ ಶುಲ್ಕಗಳ ವಿವರಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ವಿವರಿಸಲಾಗಿದೆ.

ವಿ ಉ ಯ ವಿಉಯ ಸ ಂಕೇತ ನಿಗದಿಪಡಿಸಾದ ಶ ುಲ್ಕ ರೂ.
(1) (2) (3)
ಅಕೌಂಟ್ಸ್ ೋಯರ್ 1 50ಋ00
ಕಮ್ಯುನಿಟಿ ಡೆವಲಪ್‌ಮೆಂಟ್ ಭಾಗಋ1 2 50ಋ00
ಕಮ್ಯುನಿಟಿ ಡೆವಲಪ್‌ಮೆಂಟ್ ಭಾಗಋ2 3 50ಋ00
ಎಂಪ್ಲಾಯ್‌ಮೆಂಟ್ ಎಕ್ಸ್‌ಚೇಂಜ್ ಪ್ರೊಸೀಜರ್ ಹೈಯರ್ 4 50ಋ00
ಎಂಪ್ಲಾಯ್‌ಮೆಂಟ್ ಎಕ್ಸ್‌ಚೇಂಜ್ ಪ್ರೊಸೀಜರ್ ೋಯರ್ 5 50ಋ00
ಫಾರೆಸ್ಟ್ ಪತ್ರಿಕೆಋ1 (ಫಾರೆಸ್ಟ್‌ಗಾರ್ಡ್‌ಗಳಿಗೆ ಮಾತ್ರ) 6 50ಋ00
ಫಾರೆಸ್ಟ್ ಪತ್ರಿಕೆಋ2 (ಫಾರೆಸ್ಟ್‌ಗಾರ್ಡ್‌ಗಳಿಗೆ ಮಾತ್ರ) 7 50ಋ00
ಜನರ್ ಾ ಭಾಗಋ2 8 50ಋ00
ಹೋಮ್ ಗಾರ್ಡ್ಸ್ ಮ್ಯಾನ್ಯುಯ್ 9 50ಋ00
ಆಕ್ಟ್ ಅಂಡ್ ರ್ಸೂ್ ರಿೇಟಿಂಗ್ ಟು ವಿಮೆನ್ ಅಂಡ್ ಚ ೖ್ಡ್ ಡೆವಲಪ್‌ಮೆಂಟ್ ೆ 10 50ಋ00
ಮೋಟಾರ್ ವೆಹಿಕ್ಸ್ 11 50ಋ00
ಮೈನಿಂಗ್ ಭಾಗಋ1 12 50ಋ00
ಮೈನಿಂಗ್ ಭಾಗಋ2 13 50ಋ00
ಪ್ರಿಸನ್ಸ್ 14 50ಋ00
ಪೋರ್ಟ್ಸ್ ಹೈಯರ್ 15 50ಋ00
ಪೋರ್ಟ್ಸ್ ೋಯರ್ 16 50ಋ00
ಸೋಷಿಯ್ ವೆ್‌ಫೇರ್ ಅಂಡ್ ಬ್ಯಾಕ್‌ವರ್ಡ್ ಕ್ಲಾಸಸ್ ಮ್ಯಾನ್ಯುಯ್ ಭಾಗಋ1 17 50ಋ00
ಸೋಷಿಯ್ ವೆ್‌ಫೇರ್ ಅಂಡ್ ಬ್ಯಾಕ್‌ವರ್ಡ್ ಕ್ಲಾಸಸ್ ಮ್ಯಾನ್ಯುಯ್ ಭಾಗಋ2 18 50ಋ00
ಯೂಥ್ ಸರ್ವೀಸ್ ಮ್ಯಾನ್ಯುಯ್ 19 50ಋ00
ಎಕ್ಸೈಸ್ 20 50ಋ00
ಪೊಲೀಸ್ ಮ್ಯಾನ್ಯುಯ್ 21 50ಋ00
ಅಕೌಂಟ್ಸ್ ಹೈಯರ್ 22 100ಋ00
ಕಮರ್ಷಿಯ್ ಟ್ಯಾಕ್ಸಸ್ ಭಾಗಋ2 (ೋಯರ್) 23 100ಋ00
ಫಾರೆಸ್ಟ್ 24 100ಋ00
ಫ್ಯಾಕ್ಟರೀಸ್ ಅಂಡ್ ಬಾಯ್ಲರ್ಸ್ ಾಸ್ 25 100ಋ00
ೇಬರ್ 26 100ಋ00
ೂೕಕ್ ಾಸ್ ಆಂಡ್ ಕಮರ್ಷಿಯ್ ಬುಕ್ ಕೀಪಿಂಗ್ ೆ 27 100ಋ00
ಪ್ರೆಸ್ ಅಂಡ್ ಅೈಡ್ ಆಫೀಸಸ್ ಮ್ಯಾನ್ಯುಯ್ ಹೈಯರ್ 28 100ಋ00
ಪ್ರೆಸ್ ಅಂಡ್ ಅೈಡ್ ಆಫೀಸಸ್ ಮ್ಯಾನ್ಯುಯ್ ೋಯರ್ 29 100ಋ00
ಪಿ.ಡಬ್ಲ್ಯೂ.ಡಿ ಹೈಯರ್ ಭಾಗಋ1 30 100ಋ00
ಪಿ.ಡಬ್ಲ್ಯೂ.ಡಿ ಹೈಯರ್ ಭಾಗಋ2 31 100ಋ00
ಪಿ.ಡಬ್ಲ್ಯೂ.ಡಿ. ೋಯರ್ 32 100ಋ00
ರಿಜಿಸ್ಟ್ರೇ%ನ್ 33 100ಋ00
ಸಿರಿಕಲ್ಚರ್ 34 100ಋ00
ಕೋಋಆಪರೇ%ನ್ 35 100ಋ00
ಜನರ್ ಾ ಭಾಗಋ1 36 100ಋ00
ಮುನಿಸಿಪ್ ಅಂಡ್ ೋಕ್ ಬೋರ್ಡ್ಸ್ 37 100ಋ00
ಮಾರ್ಕೆಟಿಂಗ್ 38 100ಋ00
ರೆವಿನ್ಯೂ ಹೈಯರ್ ಭಾಗಋ1 39 100ಋ00
ರೆವಿನ್ಯೂ ಹೈಯರ್ ಭಾಗಋ2 40 100ಋ00
ರೆವಿನ್ಯೂ ೋಯರ್ 41 100ಋ00
ಕಮರ್ಷಿಯ್ ಟ್ಯಾಕ್ಸಸ್ ಭಾಗಋ1 ಹೈಯರ್ 42 100ಋ00
ಕೋಋಆಪರೇಟಿವ್ ಆಡಿಟ್ 43 100ಋ00
ಇನ್ಸೂರೆನ್ಸ್ ಅಡ್ವಾನ್ಸ್‌ಡ್ 44 100ಋ00
ಇನ್ಸೂರೆನ್ಸ್ ಹೈಯರ್ 45 100ಋ00
ಇನ್ಸೂರೆನ್ಸ್ ೋಯರ್ 46 100ಋ00
ಕನ್ನಡ ಭಾ%ಾ ಪರೀಕ್ಷೆ 47 100ಋ00
ಫುಡ್ ಅಂಡ್ ಸಿವಿ್ ಸಪ್ಲೈಸ್ ಎಕ್ಸಾಮಿನೇ%ನ್ 48 100ಋ00
ಕರ್ನಾಟಕ ಕನ್ಸ್ಯೂಮರ್ ಪ್ರೊಟಕ ್ಷ ನ್ಸ್ ಸ್ಟೇಟ್ ಕಮಿ%ನ್ ಅಂಡ್ ಡಿಸ್ಟ್ರಿಕ್ ಫೋರಮ್ ಸರ್ವಿಸ್ ಎಕ್ಸಾಮಿನೇ%ನ್ 49 100ಋ00
ಇಂಡಿಯನ್ ಕಾಂಟ್ರಕ್ಟ್ ಆಕ್ಟ್ 51 50ಋ00
ಕೆ.ಪಿ.ಎಸ್.ಸಿ. ಮ್ಯಾನ್ಯುಯ್ 52 50ಋ00
ಕೆ.ಪಿ.ಎಸ್.ಸಿ. ರಿಕ್ರೂಟ್‌ಮೆಂಟ್ ರ್ಸೂ್ 53 50ಋ00
ಸೆಕ್ರೆಟೇರಿಯೆಟ್ ಮ್ಯಾನ್ಯುಯ್ ಭಾಗಋ1 54 100ಋ00
ಸೆಕ್ರೆಟೇರಿಯೆಟ್ ಮ್ಯಾನ್ಯುಯ್ ಭಾಗಋ2 55 50ಋ00
ಸ್ಪೆ%್ ಾಸ್ ಅಂಡ್ ಸರ್ವೀಸ್ ರ್ಸೂ್ 56 50ಋ00
ಟ್ರಾನ್ಸೇ್%ನ್ ಟೆಸ್ಟ್ 58 50ಋ00
ಎಸ್.ಎ.ಎಸ್ ಭಾಗಋ1 61 100ಋ00
ಎಸ್.ಎ.ಎಸ್ ಭಾಗಋ2 62 100ಋ00
ಎಸ್.ಎ.ಎಸ್ ಭಾಗಋ3 63 100ಋ00
ಟ್ರೆಜರಿ ಅಕೌಂಟ್ಸ್ ಭಾಗಋ1 64 100ಋ00
ಟ್ರೆಜರಿ ಅಕೌಂಟ್ಸ್ ಭಾಗಋ2 65 100ಋ00
ಎೆಕ್ಟ್ರಿಸಿಟಿ ಾಸ್ ಎಕ್ಸಾಮಿನೇ%ನ್ 66 100ಋ00
ಎೆಕ್ಟ್ರಿಸಿಟಿ (ಆಡಿಟ್ ಅಂಡ್ ಅಕೌಂಟ್ಸ್) ಾಸ್ (ಹೈಯರ್) ಎಕ್ಸಾಮಿನೇ%ನ್ ಭಾಗಋ1 67 50ಋ00
ಎೆಕ್ಟ್ರಿಸಿಟಿ (ಆಡಿಟ್ ಅಂಡ್ ಅಕೌಂಟ್ಸ್) ಾಸ್ (ಹೈಯರ್) ಭಾಗಋ2 68 50ಋ00
ಎೆಕ್ಟ್ರಿಸಿಟಿ (ಆಡಿಟ್ ಅಂಡ್ ಅಕೌಂಟ್ಸ್) ಾಸ್ (ೋಯರ್) ಎಕ್ಸಾಮಿನೇ%ನ್ 70 50ಋ00
ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನ್ ಎಕ್ಸಾಮಿನೇ%ನ್ 71 50ಋ00
ಕನ್ನಡಭಾ%ೆ (ಐ.ಎ.ಎಸ್, ಐ.ಪಿ.ಎಸ್ ಮತ್ತು ಐ.ಎಫ್.ಎಸ್ ಅಧಿಕಾರಿಗಳಿಗೆ) 72 100ಋ00
ಕನ್ನಡ ಭಾ%ಾ ಮೌಖಿಕ ಪರೀಕ್ಷೆ 73 100ಋ00
೧೪೪೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ಭಾಗ - ೫ ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ೧೪೪೧

ವಿಶೇಷ ಸೂಚನೆಗಳು:

(1) ಸಬಾರ್ಡಿನೇಟ್ ಅಕೌಂಟ್ಸ್ ಸೇವಾ(ಎಸ್.ಎ.ಎಸ್) ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾಗುವ ನೌಕರರು ಪ್ರಥಮ ದರ್ಜೆ/ದ್ವಿತೀಯ ದರ್ಜೆ ಸಹಾಯಕರಾಗಿದ್ದಲ್ಲಿ ಅವರು ಸೇವೆಗೆ ನೇಮಕಗೊಂಡ ದಿನಾಂಕದಿಂದ ಪ್ರಥಮ ದರ್ಜೆ ಸಹಾಯಕರಾಗಿ ಮೂರು ವರ್ಷಗಳಿಗಿಂತ೧೪೪೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ಭಾಗ - ೫ ಕಡಿಮೆ ಇರದ ಅಥವಾ ದ್ವಿತೀಯ ದರ್ಜೆ ಸಹಾಯಕರಾಗಿ ಆರು ವರ್ಷಗಳಿಗಿಂತ ಕಡಿಮೆ ಇರದ ಅವಧಿಯ ಸೇವೆ ಸಲ್ಲಿಸಿದ್ದು ಅಕೌಂಟ್ಸ್ ಹೈಯರ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಿದ್ದಲ್ಲಿ ಮಾತ್ರ ಸದರಿ ಪರೀಕ್ಷೆಗೆ ಕುಳಿತುಕೊಳ್ಳಲು ಅರ್ಹರಾಗಿರುತ್ತಾರೆ. ಅಂತಹ ಅಭ್ಯರ್ಥಿಗಳು ಅವರ ಸೇವಾ ಅವಧಿಯನ್ನು ಮತ್ತು ಅಕೌಂಟ್ಸ್ ಹೈಯರ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಗ್ಗೆ ವಿವರಗಳನ್ನು ಆನ್‌ಲೈನ್ ಅರ್ಜಿಯ ಸಂಬಂಧಿಸಿದ ಅಂಕಣದಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು.

(2) ಆಯೋಗದ ಆದೇಶ ಸಂಖ್ಯೆ ಇ.ಪ(2)3774/94-95/ಪಿಎಸ್‌ಸಿ ದಿನಾಂಕ 18ನೇ, ಫೆಬ್ರವರಿ 1995ರ ಮೇರೆಗೆ ಬ್ಯಾಟರಿ ಚಾಲಿತ ಪ್ರೋಗ್ರಾಮ್ ಮಾಡದೆ ಇರುವಂತಹ ಕ್ಯಾಲುಕ್ಯುಲೇಟರ್‌ಗಳನ್ನು ಮಾತ್ರ ಎಸ್.ಎ.ಎಸ್ ಪರೀಕ್ಷೆಗಳಲ್ಲಿ ಉಪಯೋಗಿಸಲು ಅಭ್ಯರ್ಥಿಗಳಿಗೆ ಅನುಮತಿ ನೀಡಲಾಗಿದೆ.

4. ಪರೀಕ್ಷಾ ವಿಧಾನ:-

(ಅ) ಇಲಾಖಾ ಪರೀಕ್ಷೆಗಳಲ್ಲಿ ಕೆಳಕಂಡ ವಿಷಯಗಳಿಗೆ ವಸ್ತುನಿಷ್ಠ ಬಹುಆಯ್ಕೆ ಮಾದರಿಯಲ್ಲಿ

(OBJECTIVE TYPE MULTIPLE CHOICE ) ಪರೀಕೆ

್ಷ ನಡೆಸ(ಛಿiಜ:17)ಾಗುವುದು.

1. ಅಕೌಂಟ್ಸ್ ಲೋಯರ್

2. ಕಮ್ಯುನಿಟಿ ಡೆವಲಪ್‌ಮೆಂಟ್ ಭಾಗ-1

3. ಕಮ್ಯುನಿಟಿ ಡೆವಲಪ್‌ಮೆಂಟ್ ಭಾಗ-2

4. ಎಂಪ್ಲಾಯ್‌ಮೆಂಟ್ ಎಕ್ಸ್‌ಚೇಂಜ್ ಪ್ರೊಸೀಜರ್ ಹೈಯರ್

5. ಎಂಪ್ಲಾಯ್‌ಮೆಂಟ್ ಎಕ್ಸ್‌ಚೇಂಜ್ ಪ್ರೊಸೀಜರ್ ಲೋಯರ್

6. ಫಾರೆಸ್ಟ್ ಪತ್ರಿಕೆ-1

7. ಫಾರೆಸ್ಟ್ ಪತ್ರಿಕೆ-2

8. ಜನರಲ್ ಲಾ ಭಾಗ-2

9. ಹೋಮ್ ಗಾರ್ಡ್ಸ್ ಮ್ಯಾನ್ಯುಯಲ್

10. ಆಕ್ಟ್ ಅಂಡ್ ರೂಲ್ಸ್ ರಿಲೇಟಿಂಗ್ ಟು ವಿಮೆನ್ ಅಂಡ್ ಚೈಲ್ಡ್ ಡೆವಲಪ್‌ಮೆಂಟ್

11. ಮೋಟಾರ್ ವೆಹಿಕಲ್ಸ್

12. ಮೈನಿಂಗ್ ಭಾಗ-1

13. ಮೈನಿಂಗ್ ಭಾಗ-2

14. ಪ್ರಿಸನ್ಸ್

15. ಪೋರ್ಟ್ಸ್ ಹೈಯರ್

16. ಪೋರ್ಟ್ಸ್ ಲೋಯರ್

17. ಸೋಷಿಯಲ್ ವೆಲ್‌ಫೇರ್ ಅಂಡ್ ಬ್ಯಾಕ್‌ವರ್ಡ್ ಕ್ಲಾಸಸ್ ಮ್ಯಾನ್ಯುಯಲ್ ಭಾಗ-1

18. ಸೋಷಿಯಲ್ ವೆಲ್‌ಫೇರ್ ಅಂಡ್ ಬ್ಯಾಕ್‌ವರ್ಡ್ ಕ್ಲಾಸಸ್ ಮ್ಯಾನ್ಯುಯಲ್ ಭಾಗ-2

19. ಯೂಥ್ ಸರ್ವೀಸ್ ಮ್ಯಾನ್ಯುಯಲ್

20. ಎಕ್ಸೈಸ್

21. ಪೊಲೀಸ್ ಮ್ಯಾನ್ಯುಯಲ್

22. ಅಕೌಂಟ್ಸ್ ಹೈಯರ್

23. ಕಮರ್ಷಿಯಲ್ ಟ್ಯಾಕ್ಸಸ್ ಭಾಗ-2 (ಲೋಯರ್)

24. ಫಾರೆಸ್ಟ್

25. ಫ್ಯಾಕ್ಟರೀಸ್ ಅಂಡ್ ಬಾಯ್ಲರ್ಸ್ ಲಾಸ್

26. ಲೇಬರ್

27. ಲೋಕಲ್ ಲಾಸ್ ಅಂಡ್ ಕಮರ್ಷಿಯಲ್ ಬುಕ್ ಕೀಪಿಂಗ್ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ೧೪೪೩ 28. ಪ್ರೆಸ್ ಅಂಡ್ ಅಲೈಡ್ ಆಫೀಸಸ್ ಮ್ಯಾನ್ಯುಯಲ್ ಹೈಯರ್, ಪತ್ರಿಕೆ-1

29. ಪ್ರೆಸ್ ಅಂಡ್ ಅಲೈಡ್ ಆಫೀಸಸ್ ಮ್ಯಾನ್ಯುಯಲ್ ಲೋಯರ್

30. ಪಿ.ಡಬ್ಲ್ಯೂ.ಡಿ ಹೈಯರ್ ಭಾಗ-1, ಪತ್ರಿಕೆ-2

31. ಪಿ.ಡಬ್ಲ್ಯೂ.ಡಿ ಹೈಯರ್ ಭಾಗ-2

32. ಪಿ.ಡಬ್ಯೂ÷್ಲ.ಡಿ ಲೋಯರ್

33. ರಿಜಿಸ್ಟ್ರೇಷನ್

34. ಸಿರಿಕಲ್ಚರ್

35. ಕೋ-ಆಪರೇಷನ್

36. ಜನರಲ್ ಲಾ ಭಾಗ-1

37. ಮುನಿಸಿಪಲ್ ಅಂಡ್ ಲೋಕಲ್ ಬೋರ್ಡ್ಸ್

38. ಮಾರ್ಕೆಟಿಂಗ್

39. ರೆವಿನ್ಯೂ ಹೈಯರ್ ಭಾಗ-1

40. ರೆವಿನ್ಯೂ ಹೈಯರ್ ಭಾಗ-2

41. ರೆವಿನ್ಯೂ ಲೋಯರ್

42. ಕಮರ್ಷಿಯಲ್ ಟ್ಯಾಕ್ಸಸ್ ಭಾಗ-1 ಹೈಯರ್

43. ಕೋ-ಆಪರೇಟಿವ್ ಆಡಿಟ್

44. ಇನ್ಸೂರೆನ್ಸ್ ಅಡ್ವಾನ್ಸಡ್

45. ಇನ್ಸೂರೆನ್ಸ್ ಹೈಯರ್, ಪತ್ರಿಕೆ-1 ಮತ್ತು 3

46. ಇನ್ಸೂರೆನ್ಸ್ ಲೋಯರ್, ಪತ್ರಿಕೆ-1 ಮತ್ತು 3

47. ಫುಡ್ ಅಂಡ್ ಸಿವಿಲ್ ಸಪ್ಲೈಸ್ ಎಕ್ಸಾಮಿನೇಷನ್

48. ಕರ್ನಾಟಕ ಕನ್ಸ್ಯೂಮರ್ ಪ್ರೊಟಕ್ಷನ್ಸ್ ಸ್ಟೇಟ್ ಕಮಿಷನ್ ಅಂಡ್ ಡಿಸ್ಟ್ರಿಕ್ ಫೋರಮ್ ಸರ್ವಿಸ್ ಎಕ್ಸಾಮಿನೇಷನ್

49. ಇಂಡಿಯನ್ ಕಾಂಟ್ರಕ್ಟ್ ಆಕ್ಟ್

50. ಕೆ.ಪಿ.ಎಸ್.ಸಿ. ಮ್ಯಾನ್ಯುಯಲ್

51. ಕೆ.ಪಿ.ಎಸ್.ಸಿ. ರಿಕ್ರೂಟ್‌ಮೆಂಟ್ ರೂಲ್ಸ್

52. ಸೆಕ್ರೆಟೇರಿಯೆಟ್ ಮ್ಯಾನ್ಯುಯಲ್ ಭಾಗ-1

53. ಸ್ಪೆಷಲ್ ಲಾಸ್ ಅಂಡ್ ಸರ್ವೀಸ್ ರೂಲ್ಸ್

54. ಎಸ್.ಎ.ಎಸ್ ಭಾಗ-1, ಪತ್ರಿಕೆ-2 ಮತ್ತು 3

55. ಎಸ್.ಎ.ಎಸ್ ಭಾಗ-2,

56. ಎಸ್.ಎ.ಎಸ್ ಭಾಗ-3

57. ಟ್ರೆಜರಿ ಅಕೌಂಟ್ಸ್ ಭಾಗ-1, ಪತ್ರಿಕೆ-2 ಮತ್ತು 3

58. ಟ್ರೆಜರಿ ಅಕೌಂಟ್ಸ್ ಭಾಗ-2

59. ಎಲೆಕ್ಟ್ರಿಸಿಟಿ ಲಾಸ್

60. ಎಲೆಕ್ಟ್ರಿಸಿಟಿ (ಆಡಿಟ್ ಅಂಡ್ ಅಕೌಂಟ್ಸ್)ಲಾಸ್ (ಹೈಯರ್)ಎಕ್ಸಾಮಿನೇಷನ್ ಭಾಗ-1

61. ಎಲೆಕ್ಟ್ರಿಸಿಟಿ (ಆಡಿಟ್ ಅಂಡ್ ಅಕೌಂಟ್ಸ್) ಲಾಸ್ (ಲೋಯರ್)ಎಕ್ಸಾಮಿನೇಷನ್

62. ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್ ಎಕ್ಸಾಮಿನೇಷನ್. [ ಪ್ರತಿ ವಿಷಯಗಳಲ್ಲಿನ ಪಠ್ಯಕ್ರಮದಲ್ಲಿರುವ (Syllabus) ಯಾವುದಾದರೂ ನಿಯಮಗಳು/ಅಧಿನಿಯಮಗಳು ನಿರಸನಗೊಂಡಿದ್ದಲ್ಲಿ (Repealed) ಅವುಗಳನ್ನು ಕೈಬಿಟ್ಟು ಹೊಸದಾಗಿ ಸೇರ್ಪಡೆಯಾಗಿರುವ ಹಾಗೂ ಪ್ರಸಕ್ತ ಇಲಾಖೆಗಳಲ್ಲಿ ಚಾಲ್ತಿಯಲ್ಲಿರುವ ನಿಯಮ/ಅಧಿನಿಯಮಗಳನ್ವಯ ಪ್ರಶ್ನೆಪತ್ರಿಕೆಗಳನ್ನು ಸಿದ್ದಪಡಿಸಿ ಪರೀಕ್ಷೆಗಳನ್ನು ನಡೆಸಲಾಗುವುದೆಂದು ಅಭ್ಯರ್ಥಿಗಳ ಗಮನಕ್ಕೆ ತರಲಾಗಿದೆ.

ಈ ವಿಷಯಗಳಲ್ಲಿನ ಪಶ್ನೆಪತ್ರಿಕೆಗಳಲ್ಲಿ ಪ್ರತಿ ಪ್ರಶ್ನೆಗೂ ನಾಲ್ಕು ಸಂಭವನೀಯ ಉತ್ತರಗಳಿರುತ್ತವೆ. ಪ್ರತಿ ಪ್ರಶ್ನೆಗೆ ನೀಡಲಾದ ನಾಲ್ಕು ಉತ್ತರಗಳ ಪೈಕಿ ಒಂದು ಸರಿ ಉತ್ತರವನ್ನು ಆಯ್ಕೆ ಮಾಡಿ ಉತ್ತರಿಸಬೇಕಿರುತ್ತದೆ. ಪ್ರತಿ ಪ್ರಶ್ನೆಗೂ ಆಯ್ಕೆ ಮಾಡಲಾದ ಉತ್ತರವು ಎಲ್ಲಾ ರೀತಿಯಿಂದಲೂ೧೪೪೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ಭಾಗ - ೫ ಸಮರ್ಪಕವಾಗಿರುತ್ತದೆಯೆಂದು ಅರಿತು, ತೃಪ್ತಿಹೊಂದಿದ ನಂತರವೇ ಅಭ್ಯರ್ಥಿಗಳು ನೀಲಿ ಅಥವಾ ಕಪ್ಪು ಬಣ್ಣದ ಬಾಲ್‌ಪಾಯಿಂಟ್ ಪೆನ್ನಿನಿಂದ ಎನ್‌ಕೋಡ್ (ಸಂಕೇತ ಗುರುತು) ಮಾಡಬೇಕು. ತರುವಾಯ ತಪ್ಪು ಉತ್ತರಗಳನ್ನು ಯಾವುದೇ ಸಂದರ್ಭದಲ್ಲಿ ಅಳಿಸಲು ಸಾಧ್ಯವಿರುವುದಿಲ್ಲ.

ಮೇಲ್ಕಂಡ ವಿಷಯಗಳ ಪರೀಕ್ಷೆಯಲ್ಲಿ ನಿಗದಿಪಡಿಸಲಾದ ವಿಷಯಗಳಿಗೆ ಮಾತ್ರ ನಿಯಮದಂತೆ ಪಠ್ಯಪುಸ್ತಕಗಳನ್ನು ಉಪಯೋಗಿಸಬಹುದು. ವಸ್ತುನಿಷ್ಠ

ಬಹುಆಯ್ಕೆ ಮಾದರಿಯ ಪರೀಕ್ಷೆಗೆ ನೀಡಲಾಗುವ ಉತ್ತರಹಾಳೆ (OMR SHEET)ಯಲ್ಲಿ ಮಾತ್ರ ಉತ್ತರಿಸಬೇಕು. ಓ.ಎಂ.ಆರ್. ಉತ್ತರಹಾಳೆ ಮಾದರಿ

ಪ್ರತಿಯನ್ನು ಹಾಗೂ ಅಭ್ಯರ್ಥಿಗಳಿಗೆ ನೀಡಲಾದ ಸೂಚನೆಗಳನ್ನು ಆಯೋಗದ ವೆಬ್‌ಸೈಟ್‌ನಲ್ಲಿ ನೋಡಬಹುದು.

(ಆ) ಈ ಕೆಳಕಂಡ ವಿಷಯಗಳಿಗೆ ವಿವರಣಾತ್ಮಕ ಮಾದರಿಯಲ್ಲಿ

(Descriptive Type) ಪರೀಕ್ಷೆ ನಡೆಸಲಾಗುವುದು.

1. ಎಲೆಕ್ಟ್ರಿಸಿಟಿ (ಆಡಿಟ್ ಅಂಡ್ ಅಕೌಂಟ್ಸ್) ಲಾಸ್ (ಹೈಯರ್)ಎಕ್ಸಾಮಿನೇಷನ್ ಭಾಗ-2,ಪತ್ರಿಕೆ-1

2. ಎಸ್.ಎ.ಎಸ್. ಭಾಗ-1, ಪತ್ರಿಕೆ-1

3. ಟ್ರೆಜರಿ ಅಕೌಂಟ್ಸ್ ಭಾಗ-1, ಪತ್ರಿಕೆ-1

4. ಇನ್ಸೂರೆನ್ಸ್ ಹೈಯರ್, ಪತ್ರಿಕೆ-2

5. ಇನ್ಸೂರೆನ್ಸ್ ಲೋಯರ್, ಪತ್ರಿಕೆ-2

6. ಪಿ.ಡಬ್ಲ್ಯೂ.ಡಿ. ಹೈಯರ್ ಭಾಗ-1, ಪತ್ರಿಕೆ-1

7. ಸೆಕ್ರೆಟೇರಿಯೆಟ್ ಮ್ಯಾನ್ಯುಯಲ್ ಭಾಗ-2

8. ಕನ್ನಡಭಾಷೆ, ಪತ್ರಿಕೆ-1 ಮತ್ತು 2

9. ಕನ್ನಡಭಾಷೆ (ಐ.ಎ.ಎಸ್, ಐ.ಪಿ.ಎಸ್ ಮತ್ತು ಐ.ಎಫ್.ಎಸ್ ಅಧಿಕಾರಿಗಳಿಗೆ)ಪತ್ರಿಕೆ-1 ಮತ್ತು2.

10. ಟ್ರಾನ್ಸ್‌ಲೇಷನ್ ಟೆಸ್ಟ್

11. ಪ್ರೆಸ್ ಅಂಡ್ ಅಲೈಡ್ ಆಫೀಸಸ್ ಮ್ಯಾನ್ಯುಯಲ್ ಹೈಯರ್, ಪತ್ರಿಕೆ-2.

ಎ) ವಿವರಣಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಸೇವಾ ಪರೀಕ್ಷೆಗಳನ್ನು ಆಂಗ್ಲಭಾಷೆಯಲ್ಲಿ ಅಥವಾ ಕನ್ನಡದಲ್ಲಿ ಉತ್ತರಿಸಲು ಅವಕಾಶವಿರುತ್ತದೆ.

ಬಿ) ಅಭ್ಯರ್ಥಿಯು ಯಾವುದೇ ಒಂದು ಪತ್ರಿಕೆಯನ್ನು ಉತ್ತರಿಸುವಾಗ ಪೂರ್ಣವಾಗಿ ಆಂಗ್ಲ ಅಥವಾ ಕನ್ನಡದ ಯಾವುದೇ ಒಂದು ಮಾಧ್ಯಮವನ್ನು ಮಾತ್ರ ಆಯ್ಕೆ ಮಾಡಿಕೊಳ್ಳತಕ್ಕದ್ದು. ಅರ್ಧ ಆಂಗ್ಲಭಾಷೆಯಲ್ಲಿ ಮತ್ತು ಅರ್ಧ ಕನ್ನಡದಲ್ಲಿ ಉತ್ತರಿಸಿದಲ್ಲಿ ಅಂತಹ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುವುದಿಲ್ಲ.

5. ಸೂಚನೆಗಳು:

(ಎ) ಕೇಂದ್ರ ಪರಿಹಾರ ಸಮಿತಿಯು ಸರ್ಕಾರದ ಸ್ವಾಮ್ಯಕ್ಕೊಳಪಟ್ಟಿರುವ ಸಂಸ್ಥೆಯಾಗಿರುವ ಕಾರಣ ಅಲ್ಲಿಯ ಸಿಬ್ಬಂದಿ ವರ್ಗದವರು ಆಯೋಗವು ನಡೆಸುವ ಇಲಾಖಾ ಪರೀಕ್ಷೆಗಳಾದ ಅಕೌಂಟ್ಸ್ ಹೈಯರ್, ಅಕೌಂಟ್ಸ್ ಲೋಯರ್, ಜನರಲ್ ಲಾ ಇತ್ಯಾದಿ ಕಡ್ಡಾಯಗೊಳಿಸಲಾದ ಸೇವಾ ಪರೀಕ್ಷೆಗಳಿಗೆ ಹಾಜರಾಗಲು ಅರ್ಹರಾಗುತ್ತಾರೆ.

(ಬಿ) ಸ್ಥಳೀಯ ಅಭ್ಯರ್ಥಿಗಳು, ಸ್ಟೈಪೆಂಡರಿ ಪದವೀಧರರು, ದೈನಿಕ ಮುಜರಾಯಿ ಮಾಸಿಕ ವೇತನದ ಮೇಲೆ ಕೆಲಸ ಮಾಡುತ್ತಿರುವ ವ್ಯಕ್ತಿಗಳು, ಕರಾರು ಆಧಾರದಲ್ಲಿ ಹಾಗೂ ಅನುದಾನಿತ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಈ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗುವುದಿಲ್ಲ.

(ಸಿ) ಎಂಪ್ಲಾಯ್‌ಮೆಂಟ್ ಎಕ್ಸ್‌ಚೇಂಜ್ ಪ್ರೊಸೀಜರ್ ಹೈಯರ್ ಮತ್ತು ಲೋಯರ್ ವಿಷಯಗಳ ಪರೀಕ್ಷೆಯಲ್ಲಿ ``ಉದ್ಯೋಗ ಮತ್ತು ತರಬೇತಿ ಮಹಾ ನಿರ್ದೇಶನಾಲಯ ನವದೆಹಲಿ ಇವರು ಪ್ರಕಟಿಸಿರುವ ಎಂಪ್ಲಾಯ್‌ಮೆಂಟ್ ಸರ್ವೀಸ್ ಮ್ಯಾನ್ಯುಯಲ್'' ಪುಸ್ತಕವನ್ನು ಉಪಯೋಗಿಸಲು ಅನುಮತಿ ನೀಡಲಾಗಿದೆ.

6. ಪರೀಕ್ಷಾ ಕೇಂದ್ರಗಳು:

(ಅ) ಇಲಾಖಾ ಪರೀಕ್ಷೆಗಳ ವಿಷಯ ಸಂಕೇತ 51 ರಿಂದ 56, 58, 61 ರಿಂದ 68 ಮತ್ತು 70 ರಿಂದ 72ರ ಪತ್ರಿಕೆಗಳ ಪರೀಕ್ಷೆಗಳನ್ನು

ಬೆಂಗಳೂರು ಕೇಂದ್ರದಲ್ಲಿ ಮಾತ್ರವೇ ನಡೆಸಲಾಗುವುದು.

(ಆ) ಉಳಿದಂತೆ ಇತರೆ ಪರೀಕ್ಷೆಗಳು ಈ ಕೆಳಕಂಡ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದ್ದು, ಜಿಲ್ಲಾ ಸಂಕೇತ ಸಂಖ್ಯೆ- ಗಳನ್ನು ಅವುಗಳ ಎದುರಿಗೆ

ನೀಡಿದೆ. ಈ ಸಂಕೇತ ಸಂಖ್ಯೆಗಳನ್ನು ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು:

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ೧೪೪೫
ಜ್ಲಿೆ ಸ ಂಕೇತ ಜ್ಲಿೆ ಸ ಂಕೇತ
ಬೆಂಗಳೂರು 01 ಕಾರವಾರ 17
ಬೆಳಗಾವಿ 02 ಕೋಾರ 18
ಬಳ್ಳಾರಿ 03 ಕೊಪ್ಪಳ 19
ಬೀದರ್ 04 ಮಂಡ್ಯ 20
ಬಿಜಾಪುರ 05 ಮಂಗಳೂರು 21
ಬಾಗಲಕೋಟೆ 06 ಮಡಿಕೇರಿ 22
ಚಾಮರಾಜನಗರ 07 ಮೈಸೂರು 23
ಚಿಕ್ಕಬಳ್ಳಾಪುರ 08 ರಾಮನಗರ 24
ಚಿಕ್ಕಮಗಳೂರು 09 ರಾಯಚೂರು 25
ಚಿತ್ರದುರ್ಗ 10 ಶಿವಮೊಗ್ಗ 26
ಧಾರವಾಡ 11 ತುಮಕೂರು 27
ದಾವಣಗೆರೆ 12 ಉಡುಪಿ 28
ಗುಲ್ಬರ್ಗಾ 13 ನವದೆಹಲಿ 29
ಗದಗ 14 ಮಸ್ಸೂರಿ 30
ಹಾಸನ 15 ಯಾದಗಿರಿ 31
ಹಾವೇರಿ 16

(ಇ) ಸರ್ಕಾರಿ ಅಧಿಸೂಚನೆ ಸಂಖ್ಯೆ ಡಿಪಿಎಆರ್ 69 ಎಸ್ಎಸ್ಆರ್ 76, ದಿನಾಂಕ 16ನೇ ಜುಲೈ 1977ರ ಅನುಸಾರವಾಗಿ ನವದೆಹಲಿಯ ಕರ್ನಾಟಕ ಭವನದಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಇಲಾಖಾ ಪರೀಕ್ಷೆಗಳನ್ನು ಆಯೋಗದಿಂದ ``ಉಪನಿವಾಸ ಆಯುಕ್ತರು, ಕರ್ನಾಟಕ ಭವನದ ನಿವಾಸ ಆಯುಕ್ತರ ಕಛೇರಿ, ನವದೆಹಲಿ'' ಇವರ ನಿಯಂತ್ರಣದಲ್ಲಿ ನಡೆಸಲಾಗುವುದು.

(ಈ) ಸರ್ಕಾರಿ ಅಧಿಸೂಚನೆ ಸಂಖ್ಯೆ ಡಿಪಿಎಆರ್ 3 ಎಸ್ಎಸ್‌ಸಿ 83, ದಿನಾಂಕ 12ನೇ ಅಕ್ಟೋಬರ್ 1983 ಇದರ ಅನುಸಾರವಾಗಿ ಮಸ್ಸೂರಿಯಲ್ಲಿ ತರಬೇತಿ ಪಡೆಯುತ್ತಿರುವ ಕರ್ನಾಟಕ ರಾಜ್ಯದ ಐ.ಎ.ಎಸ್, ಐ.ಪಿ.ಎಸ್, ಮತ್ತು ಐ.ಎಫ್.ಎಸ್ ಪ್ರೊಬೇಷನರುಗಳಿಗೆ ಇಲಾಖಾಪರೀಕ್ಷೆಗಳನ್ನು ಆಯೋಗವು ``ಪರೀಕ್ಷೆಗಳ ನಿಯಂತ್ರಣಾಧಿಕಾರಿ, ಲಾಲ್‌ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಕಾಶನ ಅಕಾಡೆಮಿ, ಮಸ್ಸೂರಿ'' ಇವರ ನಿಯಂತ್ರಣದಲ್ಲಿ ನಡೆಸಲಾಗುವುದು.

ಪರೀಕ್ಷಾ ಕೇಂದ್ರದ ಆಯ್ಕೆ.

(ಉ) ಪ್ರತಿಯೊಬ್ಬ ಅಭ್ಯರ್ಥಿಯು ಪ್ರಸ್ತುತ ಆತನು ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲಾ ಕೇಂದ್ರವನ್ನೇ ಪರೀಕ್ಷಾ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಳ್ಳತಕ್ಕದ್ದು. ಆದರೆ, ಯಾವುದೇ ಒಬ್ಬ ಅಭ್ಯರ್ಥಿಯು ಅನಂತರ ಇತರ ಜಿಲ್ಲೆಗೆ ವರ್ಗಾವಣೆಯಾದಲ್ಲಿ ಅಥವಾ ಅವನು ತನ್ನ ಕೇಂದ್ರ ಕಾರ್ಯಸ್ಥಾನದ ಹೊರಗೆ ಗಳಿಕೆ ರಜೆಯ ಮೇಲಿರುವುದು ಮುಂತಾದ ನಿರ್ಧಿಷ್ಟ ವಿಶೇಷ ಕಾರಣಗಳಿದ್ದಲ್ಲಿ ಅಂತಹ ಅಭ್ಯರ್ಥಿಗಳು ಈ ಬಗ್ಗೆ ಲಿಖಿತ ರೂಪದಲ್ಲಿ ಆಯೋಗದ ಗಮನಕ್ಕೆ ತರತಕ್ಕದ್ದು, ಹಾಗೂ ಸಂಬಂಧಿಸಿದ ಮಾಹಿತಿ/ದಾಖಲೆಗಳನ್ನು ಒದಗಿಸತಕ್ಕದ್ದು. ಆಯೋಗವು ಅಂತಹ ಅಭ್ಯರ್ಥಿಗಳಿಗೆ ಬೇರೆ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಆದಾಗ್ಯೂ ಆಯೋಗದ ನಿರ್ದಿಷ್ಟ ಅನುಮತಿ ಇಲ್ಲದೆ ತಾವು ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಕೇಂದ್ರವನ್ನು ಬಿಟ್ಟು ಬೇರೆ ಜಿಲ್ಲಾ ಕೇಂದ್ರದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳುವಂತಿಲ್ಲ. ಆ ರೀತಿ ಮಾಡಿದ ಅಭ್ಯರ್ಥಿಗಳು ಆಯೋಗ ತೆಗೆದುಕೊಳ್ಳುವ ಶಿಸ್ತು ಕ್ರಮಕ್ಕೆ ಹೊಣೆಯಾಗುವರು.

(ಊ) ಪರೀಕ್ಷಾ ಕೇಂದ್ರದ ಬದಲಾವಣೆ:

ಪರೀಕ್ಷಾ ಕೇಂದ್ರದ ಬದಲಾವಣೆಗೆ ಸಲ್ಲಿಸುವ ಕೋರಿಕೆಗಳನ್ನು ದಿನಾಂಕ:09-11-2012ರ ಒಳಗಾಗಿ ಸಲ್ಲಿಸತಕ್ಕದ್ದು. ಆ ದಿನಾಂಕದ ತರುವಾಯ

ಸಲ್ಲಿಸಲ್ಪಡುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅಲ್ಲದೆ ನಿಗದಿತ ದಿನಾಂಕದ ಒಳಗೆ ಸಲ್ಲಿಸುವ ಮನವಿಗಳನ್ನು ಕೇಂದ್ರ ಬದಲಾವಣೆಗೆ

೧೪೪೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ಭಾಗ - ೫

ಅನುಮತಿಸುವುದು/ನಿರಾಕರಿಸುವುದು ಆಯೋಗದ ವಿವೇಚನೆಗೆ ಒಳಪಟ್ಟಿದೆ ಎಂಬ ಅಂಶವನ್ನು ಗಮನಿಸತಕ್ಕದ್ದು. ಅಧಿಕೃತ ಕಾರಣಗಳ ಮೇಲೆ ಕೇಂದ್ರ ಬದಲಾವಣೆಗೆ ಅರ್ಜಿ ಸಲ್ಲಿಸುವ ನೌಕರರು ವರ್ಗಾವಣೆಯ ಅಥವಾ ಸ್ಥಳ ನಿಯುಕ್ತಿಯ ಆದೇಶಗಳ ದೃಡೀಕೃತ ನಕಲನ್ನು ಅಥವಾ ಸಂದರ್ಭಾನುಸಾರ ಯಾವುದೇ ಅಧಿಕೃತ ರಜೆ ಮಂಜೂರು ಮಾಡಲಾದ ಅಧಿಕೃತಜ್ಞಾಪನ ಪತ್ರದ ದೃಡೀಕೃತ ನಕಲಿನೊಂದಿಗೆ ಆ ಬಗ್ಗೆ ಪಡೆದ ಪ್ರಮಾಣ ಪತ್ರವನ್ನು ಲಗತ್ತಿಸತಕ್ಕದ್ದು. ಸ್ವವಿಳಾಸ ಬರೆದ ಹಾಗೂ ಅವಶ್ಯಕ ಅಂಚೆಚೀಟಿ ಹಚ್ಚಲಾದ ಲಕೋಟೆಯನ್ನು ಪತ್ರ ವ್ಯವಹಾರಕ್ಕಾಗಿ ಲಗತ್ತಿಸತಕ್ಕದ್ದು. (ರಿಜಿಸ್ಟರ್ಡ್ ಅಂಚೆಯಲ್ಲಿ ಕಳುಹಿಸಬೇಕಾದರೆ ಅದಕ್ಕೆ ತಗಲುವ ಸಾಕಷ್ಟು ಅಂಚೆಚೀಟಿ ಅಂಟಿಸಿರಬೇಕು). ಆಯೋಗದಿಂದ ನಿರ್ಧಿಷ್ಟ ಅನುಮತಿ ಪಡೆಯದೆ ಯಾವುದೇ ಕಾರಣಕ್ಕೂ ಬೇರೆ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ಬರೆಯುವಂತಿಲ್ಲ

7. (ಅ) ವಿನಾಯಿತಿಯ ವಿವರ ಹಾಗೂ ಈ ವಿವರಗಳನ್ನು ಅರ್ಜಿಗಳಲ್ಲಿ ನಮೂದಿಸುವ ಬಗ್ಗೆ:

ಯಾವುದೇ ಪರೀಕ್ಷೆಯು ಒಂದಕ್ಕಿಂತ ಹೆಚ್ಚು ಪತ್ರಿಕೆಗಳನ್ನೊಳಗೊಂಡಿದ್ದು ಅಭ್ಯರ್ಥಿಯು ಆ ಪರೀಕ್ಷೆಯಲ್ಲಿ ಅನುತ್ತೀರ್ಣನಾದರೂ ಅದೇ ವಿಷಯದ ಯಾವುದಾದರೂ ಪತ್ರಿಕೆಗಳಲ್ಲಿ ಆ ಪತ್ರಿಕೆಗೆ ನಿರ್ದಿಷ್ಟಪಡಿಸಲಾದ ಗರಿಷ್ಟ ಅಂಕಗಳಲ್ಲಿ ಶೇಕಡಾ 60ಕ್ಕಿಂತ ಕಡಿಮೆ ಇರದಷ್ಟು ಅಂಕಗಳನ್ನು ಪಡೆದಿದ್ದಲ್ಲಿ ಅಂತಹವರನ್ನು ಆ ಪತ್ರಿಕೆಯಲ್ಲಿ ವಿನಾಯಿತಿ ಹೊಂದಿರುವರೆಂದು ಪರಿಗಣಿಸಲಾಗುವುದು. ಅಂತಹವರು ನಿಯಾಮಾನುಸಾರ ಪರೀಕ್ಷೆಗಳ ಫಲಿತಾಂಶ ಘೋಷಿಸಿದ ದಿನಾಂಕದಿಂದ ಎರಡು ವರ್ಷಗಳೊಳಗೆ ಆ ಪರೀಕ್ಷೆಯ ಉಳಿದ ಪತ್ರಿಕೆಗಳಲ್ಲಿ ತೇರ್ಗಡೆಯಾಗಲು ಅವಶ್ಯವಿರುವಷ್ಟು ಅಂಕಗಳನ್ನು ಪಡೆದು ತೇರ್ಗಡೆಯಾಗತಕ್ಕದ್ದು. ಇಲ್ಲದಿದ್ದಲ್ಲಿ ಅಂತಹ ವಿನಾಯ್ತಿಯು ರದ್ದಾಗುವುದು.

ಈ ರೀತಿ ಶೇಕಡ 60ಕ್ಕಿಂತ ಹೆಚ್ಚುಅಂಕಗಳನ್ನು ಪಡೆದು ವಿನಾಯಿತಿ ಹೊಂದಿರುವಂತಹ ಅಭ್ಯರ್ಥಿಗಳು ಅವರು ವಿನಾಯಿತಿ ಪಡೆದ ವಿಷಯ, ವಿಷಯಸಂಕೇತ, ಪತ್ರಿಕೆ, ನೋಂದಣಿ ಸಂಖ್ಯೆ, ಅಧಿವೇಶನ ಮತ್ತು ಪರೀಕ್ಷಾಕೇಂದ್ರ ಇತ್ಯಾದಿ ವಿವರಗಳನ್ನು ಆನ್‌ಲೈನ್ ಅರ್ಜಿಯಲ್ಲಿ ನಿಗದಿಪಡಿಸಿದ ಅಂಕಣದಲ್ಲಿ ನಿರ್ದಿಷ್ಟವಾಗಿ ನಮೂದಿಸಬೇಕು. ಇಲ್ಲವಾದಲ್ಲಿ ಫಲಿತಾಂಶವನ್ನು ಸಿದ್ಧಪಡಿಸುವಾಗ ಹಿಂದೆ ಪಡೆದ ವಿನಾಯಿತಿಯನ್ನು ಪರಿಗಣಿಸಲಾಗುವುದಿಲ್ಲ.

ಕನ್ನಡಭಾಷಾ ಪರೀಕ್ಷೆ ಪತ್ರಿಕೆ-1 ಮತ್ತು ಪತ್ರಿಕೆ-2 ರಲ್ಲಿ ವಿನಾಯಿತಿ ಪಡೆದಿದ್ದಲ್ಲಿ ಮೌಖಿಕ ಸಂದರ್ಶನಕ್ಕೆ ಹಾಜರಾಗಲು, ಸದರಿ ಅಧಿವೇಶನಕ್ಕೆ ಅರ್ಜಿ ಸಲ್ಲಿಸಿ ವಿನಾಯಿತಿ ಪಡೆದ ಬಗ್ಗೆ ವಿವರಗಳನ್ನು ಆನ್‌ಲೈನ್ ಅರ್ಜಿಯ ಸಂಬಂಧಿಸಿದ ಅಂಕಣದಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಹಾಗೂ ನಿಗದಿತ ಪರೀಕ್ಷಾ ಶುಲ್ಕ ರೂ. 100/-ಗಳನ್ನು ಪಾವತಿಸಬೇಕು ಇಲ್ಲದಿದ್ದಲ್ಲಿ ವಿನಾಯಿತಿಯನ್ನು ಪರಿಗಣಿಸುವುದಿಲ್ಲ.

ವಿದ್ಯಾರ್ಹತೆಗೆ ಸಂಬಂಧ ಪಟ್ಟಂತೆ ನೀಡಲಾಗುವ ವಿನಾಯಿತಿ:

ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಎಲ್.ಎಲ್.ಬಿ ಅಥವಾ ಬಿ.ಎಲ್.,ಬಿ.ಕಾಂ/ಬಿ.ಬಿ.ಎಂ/ ಐ.ಕಾಂ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪದವಿ ಹೊಂದಿದವರು ಕೆಳಕಂಡ ವಿಷಯದ ಪತ್ರಿಕೆಗಳಲ್ಲಿ ವಿನಾಯಿತಿ ಕೋರಬಹುದು.

ಕ್ರ..ಸಂ. ಪ ದವಿ ವಿನಾಯಿತಿ ಇರುವ ವಿಉಯ ಹಾಗೂ ಪತ್ರಿಕೆ
1 ಎ್.ಎ್.ಬಿ ಅಥವಾ ಬಿ.ಎ್ ಜನರ್ ಾ ಭಾಗ$1 ಪತ್ರಿಕೆ$1
2 ಪ ೖನಾನ್ಷಿಯ್ ಅಕೌಂಟೆನ್ಸಿ ಅಥವಾ ೆ ಅಡ್ವಾನ್ಸ್‌ಡ್ ಅಕೌಂಟೆನ್ಸಿ ವಿಉಯವನ್ನು ಒಳಗೊಂಡಿರುವ ಬಿ.ಕಾಂ/ಬಿ.ಬಿ.ಎಂ/ಐ.ಕಾಂ. ಅಥವಾ ತ ತ್ಸಮಾನ ಪದವಿ. ಅ) ಕಮರ್ಷಿಯ್ ಟ್ಯಾಕ್ಸ್ ಹೈಯರ್ ಪತ್ರಿಕೆ$3 ಆ) ಕೋ$ಆಪರೇಉನ್ ಪತ್ರಿಕೆ$2 ಇ) ಕೋ$ಆಪರೇಟೆವ್ ಆಡಿಟ್ ಪತ್ರಿಕೆ$2 ಈ) ಎಸ್.ಎ.ಎಸ್. ಭಾಗ$3 ಪತ್ರಿಕೆ$1 ಉ) ಟ್ರೆಜರಿ ಅಕೌಂಟ್ಸ್ ಭಾಗ$2 ಪತ್ರಿಕೆ$1

ಆನ್‌ಲೈನ್ ಅರ್ಜಿಯಲ್ಲಿನ ವಿನಾಯಿತಿಗೆ ಸಂಬಂಧಿಸಿದ ಅಂಕಣದಲ್ಲಿ ಅಭ್ಯರ್ಥಿಯು ಪಡೆದಿರುವ ಪದವಿಯ ಬಗ್ಗೆ ಕಡ್ಡಾಯವಾಗಿ ನಮೂದಿಸತಕ್ಕದ್ದು, ತಪ್ಪಿದಲ್ಲಿ ಅಂತಹ ವಿನಾಯಿತಿಯನ್ನು ಪರಿಗಣಿಸಲಾಗುವುದಿಲ್ಲ.

ವಿನಾಯಿತಿ ಕೋರಿರುವ ಅಭ್ಯರ್ಥಿಗಳು ತತ್ಸಂಬಂಧ ವಿಷಯಗಳನ್ನು ಅಭ್ಯಸಿಸಿರುವ ಬಗ್ಗೆ ಎಲ್.ಎಲ್.ಬಿ./ಬಿ.ಕಾಂ/ಬಿ.ಬಿ.ಎಂ. ಅಥವಾ ತತ್ಸಮಾನ ಪದವಿಯ ದೃಡೀಕೃತ ಅಂಕಪಟ್ಟಿ ಮತ್ತು ಪದವಿ ಪ್ರಮಾಣಪತ್ರಗಳನ್ನು ಆಯೋಗದ ಕಛೇರಿಗೆ ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಪ್ರತಿಯೊಂದಿಗೆ ಮರುದಿನವೇ ರಿಜಿಸ್ಟರ್ಡ್ ಅಂಚೆ ಮೂಲಕ ರವಾನಿಸತಕ್ಕದ್ದು..

ವಿಶೇಷ ಸೂಚನೆ::- ಕಾನೂನು ಪದವಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಜನರಲ್ ಲಾ ಭಾಗ-2 ವಿಷಯದ ಪರೀಕ್ಷೆಯನ್ನು ಬರೆಯುವುದರಿಂದ ಪೂರ್ಣ ವಿನಾಯಿತಿ ಇದ್ದು, ಸದರಿ ಅಭ್ಯರ್ಥಿಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.

ಬದಲಾಗಿ ಅಭ್ಯರ್ಥಿಗಳು ಸಂಬಂಧಿತ ಅಂಕಪಟ್ಟಿ/ ದಾಖಲೆಗಳನ್ನು ತಮ್ಮ ಇಲಾಖಾ ಮುಖ್ಯಸ್ಥರಿಗೆ ಸಲ್ಲಿಸಿ ಅವರಿಂದಲೇ ವಿನಾಯಿತಿ ಪಡೆಯಬಹುದಾಗಿರುತ್ತದೆ.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ೧೪೪೭

8. ಕನ್ನಡಭಾಷಾ ಲಿಖಿತ ಪರೀಕ್ಷೆಗೆ ಮೌಖಿಕ ಪರೀಕ್ಷೆ:

(1) ಕನ್ನಡ ಭಾಷಾ ವಿಷಯದ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಮೌಖಿಕ ಪರೀಕ್ಷೆಯನ್ನು ಆಯೋಗದ ಕೇಂದ್ರ ಕಛೇರಿ, ಉದ್ಯೋಗ ಸೌಧ, ಬೆಂಗಳೂರು-560001, ಇಲ್ಲಿ ಹಾಗೂ ಆಯೋಗದ ಪ್ರಾಂತೀಯ ಕಛೇರಿಗಳಿರುವ ಬೆಳಗಾಂ, ಗುಲ್ಬರ್ಗಾ, ಮೈಸೂರು ಹಾಗೂ ಶಿವಮೊಗ್ಗ ಕೇಂದ್ರಗಳಲ್ಲಿ ನಡೆಸಲಾಗುವುದು. ಆಯೋಗದ ವಿವೇಚನೆಯಂತೆ ಅನಿವಾರ್ಯ ಸಂದರ್ಭಗಳಲ್ಲಿ ರಾಜ್ಯದ ಇತರ ಜಿಲ್ಲಾ ಕೇಂದ್ರಗಳಲ್ಲಿ ಮೌಖಿಕ ಪರೀಕ್ಷೆಯನ್ನು ನಡೆಸಲಾಗುವುದು.

ಸೂಚನೆ: ಯಾವುದೇ ಸರ್ಕಾರಿ ನೌಕರನು/ನೌಕರಳು ಕನ್ನಡಭಾಷಾ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಹೊರತು ಕನ್ನಡ ಮೌಖಿಕ ಪರೀಕ್ಷೆಗೆ ಅರ್ಹರಾಗುವುದಿಲ್ಲ. ಆದರೆ

(1) ಸರ್ಕಾರದ ಅಧಿಸೂಚನೆ ಸಂಖ್ಯೆ ಡಿಪಿಎಆರ್ 81 ಎಸ್ಎಸ್ಆರ್ 81, ದಿನಾಂಕ 6ನೇ ಜೂನ್ 1981ರ ಮೇರೆಗೆ ಗೃಹರಕ್ಷಕ ಸಂಸ್ಥೆಯ ಸೈನಿಕರು ಕನ್ನಡ ಭಾಷಾ, ಮೌಖಿಕ ಪರೀಕ್ಷೆಯಲ್ಲಿ ಮಾತ್ರ ತೇರ್ಗಡೆಯಾಗತಕ್ಕದ್ದು. ವೇತನ ಮುಂಬಡ್ತಿ ಪಡೆಯುವ ಮತ್ತು ಸೇವಾ ಸ್ಥಿರೀಕರಣದ ಉದ್ದೇಶಗಳಿಗೆ ಕನ್ನಡ ಭಾಷಾ ಲಿಖಿತ ಪರೀಕ್ಷೆಯ ಬದಲಾಗಿ ಗರಿಷ್ಠ 50 ಅಂಕಗಳನ್ನು ನಿಗದಿಪಡಿಸಿರುವ ಕನ್ನಡ ಮೌಖಿಕ ಪರೀಕ್ಷೆಯಲ್ಲಿ ಮಾತ್ರ ಅವರು ತೇರ್ಗಡೆ ಹೊಂದಬೇಕಾಗಿರುತ್ತದೆ.

(2) ಸರ್ಕಾರಿ ಅಧಿಸೂಚನೆ ಸಂಖ್ಯೆ ಡಿಪಿಎಆರ್ 3 ಎಸ್ಎಸ್ಆರ್ 82, ದಿನಾಂಕ 30ನೇ ಆಗಸ್ಟ್ 1982ರ ಮೇರೆಗೆ ಅಂಧರಾಗಿರುವ ಮತ್ತು ಕೆಲಸಕ್ಕೆ ಓದುವುದು ಮತ್ತು ಬರೆಯುವುದು ಅವಶ್ಯವಿಲ್ಲದ ಸರ್ಕಾರಿ ನೌಕರರಿಗೆ ಸ್ಥಿರೀಕರಣದ ಮತ್ತು ವಾರ್ಷಿಕ ವೇತನ ಮುಂಬಡ್ತಿಗಳನ್ನು ಪಡೆಯುವ ಉದ್ದೇಶಗಳಿಗಾಗಿ ಕನ್ನಡ ಭಾಷಾ ಲಿಖಿತ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದರಿಂದ ವಿನಾಯಿತಿಸಲಾಗಿದೆ. ಆದರೆ ಅವರು ಕನ್ನಡ ಭಾಷಾ ಮೌಖಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗತಕ್ಕದ್ದು.

(3) ಸರ್ಕಾರದ ಆದೇಶ ಸಂಖ್ಯೆ.ಸಿಆಸುಇ 26 ಸೆಸೆನಿ 94, ಬೆಂಗಳೂರು, ದಿನಾಂಕ:14-07-1994ರಲ್ಲಿ ಸೂಚಿಸಿರುವ ಕಂಪೋಜಿಟರ್, ಸೀನಿಯರ್ ಕಂಪೋಜಿಟರ್, ಸೀನಿಯರ್ ಮಷಿನ್ ಮೈಂಡರ್, ಸೀನಿಯರ್ ಬೈಂಡರ್, ಸಹಾಯಕ ಪ್ರೊಸೆಸ್ ಅಪರೇಟರ್, ಆಫ್‌ಸೆಟ್ ಪ್ರಿಂಟರ್, ಅಫ್‌ಸೆಟ್ ಪ್ಲೇಟ್ ಮೇಕರ್ ಹಾಗೂ ವೈರ್‌ಮನ್ ಈ ಪದನಾಮವನ್ನು ಹೊಂದಿರುವ ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಸಿಬ್ಬಂದಿ ವರ್ಗದವರು ಮುಂಬಡ್ತಿ ಪಡೆಯಲು ಕನ್ನಡಭಾಷಾ ಪರೀಕ್ಷೆಯ ಲಿಖಿತ ಪರೀಕ್ಷೆ (ಪೇಪರ್ 1 ಮತ್ತು 2) ಯಿಂದ ವಿನಾಯಿತಿ ಹೊಂದಿರುತ್ತಾರೆ. ಆದರೆ ಮೌಖಿಕ ಪರೀಕ್ಷೆಯಲ್ಲಿ ಶೇಕಡ 40ರಷ್ಟು ಅಂಕಗಳನ್ನು ಪಡೆದು ತೇರ್ಗಡೆ ಹೊಂದಬೇಕಾಗಿರುತ್ತದೆ.

9. ಕನ್ನಡ ಭಾಷಾ ಪಠ್ಯ ಕ್ರಮ:

ಅಖಿಲ ಭಾರತ ಸೇವಾ ಅಧಿಕಾರಿಗಳಿಗೆ ಕನ್ನಡಭಾಷಾ ವಿಷಯದ (ಸಂಕೇತ-72) ಇಲಾಖಾ ಪರೀಕ್ಷೆಯ ಅಭ್ಯರ್ಥಿಗಳಿಗೆ ಸರ್ಕಾರವು ತನ್ನ ಆದೇಶ ಸಂಖ್ಯೆ:ಡಿಪಿಎಆರ್168 ಎಸ್ಎಂಇ 94, ದಿನಾಂಕ:12-07-1995ರ ಪ್ರಕಾರ 10ನೇ ತರಗತಿಯ ಕನ್ನಡ ದ್ವಿತೀಯ ಹಾಗೂ ತೃತೀಯ ಭಾಷಾಪುಸ್ತಕ ``ತಿಳಿಗನ್ನಡ-6" ಎಂಬ ಪುಸ್ತಕವನ್ನು ನಿಗದಿ ಪಡಿಸಲಾಗಿದೆ.

ಅಖಿಲ ಭಾರತ ಸೇವಾ ಅಧಿಕಾರಿಗಳನ್ನು ಹೊರತು ಪಡಿಸಿ ಕನ್ನಡ ಭಾಷಾ ವಿಷಯದ(ಸಂಕೇತ-47) ಇಲಾಖಾ ಪರೀಕ್ಷೆ ಇತರ ಅಭ್ಯರ್ಥಿಗಳಿಗೆ:

(ಅ) ಕರ್ನಾಟಕ ವಯಸ್ಕರ ಶಿಕ್ಷಣ ಸಮಿತಿ ಇವರಿಂದ ಪ್ರಕಾಶನಗೊಂಡಿರುವ ವಿವಿಧ ಲೇಖಕರಿಂದ ರಚಿತವಾದ ``ಸತ್ಯಕ್ಕೆ ಬೆಲೆಕೊಟ್ಟ ಗೆಳೆಯರು'' ಪಾಠದಿಂದ ಪ್ರಾರಂಭಗೊಳ್ಳುವ ``ಸಣ್ಣ ಕಥೆಗಳು''

ಮತ್ತು

(ಆ) ಆರನೆಯ ತರಗತಿಯ ಪಠ್ಯ ಪುಸ್ತಕವಾದ ``ಕನ್ನಡ ಕಸ್ತೂರಿ''ಯನ್ನು ನಿಗದಿಪಡಿಸಲಾಗಿದೆ.

10. ಪ್ರವೇಶ ಪತ್ರ:

ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಸಲ್ಲಿಸುತ್ತಿರುವುದರಿಂದ ಪ್ರವೇಶಪತ್ರಗಳನ್ನು ಅಂಚೆ ಮೂಲಕ ಕಳುಹಿಸಲಾಗುವುದಿಲ್ಲ.

ವೇಳಾ ಪಟ್ಟಿಯನ್ನೊಳಗೊಂಡ ಪ್ರವೇಶಪತ್ರವನ್ನು ಪರೀಕ್ಷೆಗೆ ಮೊದಲು ಆಯೋಗದ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗುತ್ತದೆ. ಅಭ್ಯರ್ಥಿಗಳು ಪ್ರವೇಶಪತ್ರಗಳನ್ನು Down load ಮಾಡಿಕೊಂಡು ಮೇಲಧಿಕಾರಿಗಳ ದೃಡೀಕರಣದೊಂದಿಗೆ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾವೇಳೆಯಲ್ಲಿ ಪ್ರವೇಶಪತ್ರವನ್ನು ಹಾಜರುಪಡಿಸತಕ್ಕದ್ದು. ಸದರಿ ಪ್ರವೇಶ ಪತ್ರಗಳನ್ನು ಅಭ್ಯರ್ಥಿಗಳು ಜೋಪಾನವಾಗಿಟ್ಟುಕೊಂಡಿರಬೇಕು ಮತ್ತು ಅವುಗಳನ್ನು ತಮ್ಮ ಸೇವಾ ದಾಖಲೆಗಳಲ್ಲಿ ನಮೂದು ಮಾಡುವುದಕ್ಕಾಗಿ ಆಯೋಗದಿಂದ ನೀಡಲಾದ ತೇರ್ಗಡೆ ಪ್ರಮಾಣ ಪತ್ರದೊಂದಿಗೆ ಸಕ್ಷಮ ಪ್ರಾಧಿಕಾರಿಯ ಮುಂದೆ ಹಾಜರುಪಡಿಸತಕ್ಕದ್ದು. ಯಾವುದೇ ಸಂದರ್ಭದಲ್ಲಿ ಪರೀಕ್ಷೆಗಳು ಮುಗಿದ ನಂತರ ಪ್ರವೇಶ ಪತ್ರದ ನಕಲನ್ನು ನೀಡಲಾಗುವುದಿಲ್ಲ.

೧೪೪೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ಭಾಗ - ೫

ಸೂಚನೆ:-ಆಯೋಗದ ವೆಬ್‌ಸೈಟ್‌ನಿಂದ Down load ಮಾಡಿಕೊಂಡ ಪ್ರವೇಶಪತ್ರದಲ್ಲಿ ಹೆಸರು, ಪದನಾಮ, ವಿಳಾಸ ಇತ್ಯಾದಿ ವಿವರಗಳು ತಪ್ಪಾಗಿ ಕಂಡುಬಂದಲ್ಲಿ ತಕ್ಷಣ ಅವುಗಳನ್ನು ತಿದ್ದುಪಡಿ ಮಾಡುವಂತೆ ಕೋರಿ ಪ್ರವೇಶಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ತಿದ್ದುಪಡಿಗೆ ಅಗತ್ಯವಿರುವ ದಾಖಲೆ/ಮಾಹಿತಿಗಳನ್ನು ಮೇಲಧಿಕಾರಿಗಳಿಂದ ದೃಡೀಕರಿಸಿ ಆಯೋಗಕ್ಕೆ ಮನವಿಯನ್ನು ಸಲ್ಲಿಸಿದಲ್ಲಿ ಪ್ರಮಾಣಪತ್ರವನ್ನು ಮುದ್ರಿಸುವ ಮುನ್ನ ತಿದ್ದುಪಡಿಗಳನ್ನು ಅಳವಡಿಸಿಕೊಂಡು ಪ್ರಮಾಣಪತ್ರವನ್ನು ಒದಗಿಸಲಾಗುವುದು.

11. ಪಠ್ಯಪುಸ್ತಕಗಳು:

ಪಠ್ಯಪುಸ್ತಕಗಳನ್ನು ಉಪಯೋಗಿಸಿ ಪರೀಕ್ಷೆ ಬರೆಯಬಹುದಾದ ಪತ್ರಿಕೆಗಳಿಗೆ ಅಭ್ಯರ್ಥಿಗಳು ಸರ್ಕಾರದಿಂದ ಪ್ರಕಾಶಿಸಲ್ಪಟ್ಟ ಪಠ್ಯಪುಸ್ತಕಗಳನ್ನು ಮತ್ತು ಖಾಸಗಿ ಪ್ರಕಾಶಕರಿಂದ ಪ್ರಕಾಶಿಸಲ್ಪಟ್ಟ ಪುಸ್ತಕಗಳನ್ನು ಸರ್ಕಾರಿ ಪ್ರಕಾಶಿತ ಪುಸ್ತಕಗಳ ಮಾದರಿಗೆ ಯಾವುದೇ ರೀತಿಯ ತದ್ವಿರುದ್ಧವಾಗಿಲ್ಲದಿದ್ದರೆ ಮತ್ತು ಕರ್ನಾಟಕ ಉಚ್ಛ ನ್ಯಾಯಾಲಯದ ದಿನಾಂಕ 3ನೇ ಡಿಸೆಂಬರ್ 1991ರ ಆದೇಶಕ್ಕೆ ಅನುಗುಣವಾಗಿದ್ದರೆ ಅಂತಹ ಪಠ್ಯ ಪುಸ್ತಕಗಳನ್ನು ಮಾತ್ರ ಪರೀಕ್ಷಾ ಕೇಂದ್ರಗಳಲ್ಲಿ ಉಪಯೋಗಿಸಬಹುದಾಗಿರುತ್ತದೆ. ಇತರೇ ಯಾವುದೇ ಖಾಸಗಿ ಪ್ರಕಾಶಕರು ಸಿದ್ಧಪಡಿಸಿದ ಗೈಡ್‌ಗಳನ್ನು ನಿಷೇಧಿಸಲಾಗಿದೆ.

12. ತೇರ್ಗಡೆಗೆ ಗಳಿಸಬೇಕಾದ ಅಂಕಗಳು:

ಎ) ಯಾವುದೇ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಒಂದು ಪತ್ರಿಕೆಯನ್ನು ಒಳಗೊಂಡ ವಿಷಯವಾಗಿದ್ದಲ್ಲಿ ಸದರಿ ಪತ್ರಿಕೆಯಲ್ಲಿ ಕನಿಷ್ಠ ಶೇಕಡ 40 ಅಂಕಗಳನ್ನು ಪಡೆದಿರಬೇಕು. ಒಂದಕ್ಕಿಂತ ಹೆಚ್ಚು ಪತ್ರಿಕೆಗಳಿದ್ದಲ್ಲಿ ಪ್ರತಿ ಪತ್ರಿಕೆಯಲ್ಲಿ ಕನಿಷ್ಠ ಶೇಕಡಾ 35 ಮತ್ತು ಒಟ್ಟು ಎಲ್ಲಾ ಪತ್ರಿಕೆಗಳಿಂದ ಕನಿಷ್ಠ ಶೇಕಡಾ 40 ಅಂಕಗಳನ್ನು ಪಡೆದಿರಬೇಕು. ವಿನಾಯಿತಿ ಕೋರಿದ ಬಿ.ಕಾಂ., ಬಿ.ಬಿ.ಎಂ., ಹಾಗೂ ಕಾನೂನು ಪದವೀಧರರು, ಹಾಜರಾಗುವ ವಿಷಯದ ಪ್ರತಿ ಪತ್ರಿಕೆಗಳಲ್ಲಿ ಕನಿಷ್ಠ ಶೇಕಡ 35 ಅಂಕಗಳನ್ನು ಹಾಗೂ ಪ್ರತಿ ವಿಷಯದ ಎಲ್ಲಾ ಪತ್ರಿಕೆಗಳ ಸರಾಸರಿ 40 ಅಂಕಗಳನ್ನು ಗಳಿಸಿರಬೇಕು.

ಬಿ) ಯಾವುದೇ ಪರೀಕ್ಷೆಯಲ್ಲಿ ನಿಗದಿಪಡಿಸಿದ ಗರಿಷ್ಠ ಅಂಕಗಳಲ್ಲಿ ಶೇಕಡ 60ಕ್ಕಿಂತ ಕಡಿಮೆ ಇರದಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾದಂತಹ ಅಭ್ಯರ್ಥಿಗಳನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವುದಾಗಿ ಫಲಿತಾಂಶ ಘೋಷಿಸಲಾಗುವುದು.

13. ಹಾಜರಿ ಪ್ರಮಾಣ ಪತ್ರಗಳು:

ಪರೀಕ್ಷೆಗೆ ಹಾಜರಾದ ಬಗ್ಗೆ ಹಾಜರಾತಿ ಪ್ರಮಾಣಪತ್ರ ಪಡೆಯಬಯಸುವ ಅಭ್ಯರ್ಥಿಗಳು ಸಂಬಂಧಪಟ್ಟ ಪರೀಕ್ಷಾಕೇಂದ್ರದ ಮೇಲ್ವಿಚಾರಕರಿಂದ ಅದನ್ನು ಪರೀಕ್ಷಾ ದಿನದಂದೇ ಪಡೆಯತಕ್ಕದ್ದು. ಹಾಜರಿ ಪ್ರಮಾಣಪತ್ರವನ್ನು ಆಯೋಗದ ಕಛೇರಿಯಿಂದ ಯಾವುದೇ ಸಂದರ್ಭದಲ್ಲೂ ನೀಡಲಾಗುವುದಿಲ್ಲ.

14. ತೇರ್ಗಡೆ ಪ್ರಮಾಣ ಪತ್ರಗಳು:

ಪ್ರತಿಯೊಂದು ವಿಷಯಕ್ಕೆ ತೇರ್ಗಡೆ ಪ್ರಮಾಣಪತ್ರವನ್ನು ಆಯೋಗದಿಂದ ಫಲಿತಾಂಶವು ಅಧಿಕೃತವಾಗಿ ರಾಜ್ಯಪತ್ರದಲ್ಲಿ ಪ್ರಕಟವಾದ ನಂತರ ಅಭ್ಯರ್ಥಿಗಳಿಗೆ ಕಳುಹಿಸಲಾಗುವುದು. ಪ್ರಮಾಣ ಪತ್ರದಲ್ಲಿ ಮುದ್ರಿತವಾದ ಹೆಸರು ಅಥವಾ ಇನ್ನಾವುದೇ ರೀತಿಯ ತಪ್ಪುಗಳು ಕಂಡುಬಂದಲ್ಲಿ ಅಭ್ಯರ್ಥಿಗಳು ಕೂಡಲೇ ತಿದ್ದುಪಡಿಗಾಗಿ ಸೂಕ್ತ ದಾಖಲೆಗಳೊಂದಿಗೆ ಆಯೋಗದ ಕಛೇರಿಯನ್ನು ಸಂಪರ್ಕಿಸುವುದು.

ಇಲಾಖಾ ಪರೀಕ್ಷೆಯ ಎಲ್ಲಾ ಅಭ್ಯರ್ಥಿಗಳ ಅಂಕಗಳನ್ನು ಆಯೋಗದ ವೆಬ್ ಸೈಟ್ http://kpsc.kar.nic.in ನಲ್ಲಿ ಫಲಿತಾಂಶ ಪ್ರಕಟವಾದ ದಿನಾಂಕದಂದೇ

ಪ್ರಕಟಿಸಲಾಗುವುದು ಪ್ರತ್ಯೇಕವಾಗಿ ಅಂಕಪಟ್ಟಿಗಳನ್ನು ನೀಡಲಾಗುವುದಿಲ್ಲ.

15. ಅಂಕಗಳ ಮರು ಎಣಿಕೆ:

(ಎ) ಯಾವುದೇ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಅಭ್ಯರ್ಥಿಯು ಫಲಿತಾಂಶ ಪ್ರಕಟವಾದ ದಿನಾಂಕದಿಂದ 30 ದಿನಗಳೊಳಗಾಗಿ ಸದರಿ ಪರೀಕ್ಷೆಯ ಎಲ್ಲಾ ಪತ್ರಿಕೆಗಳ ಅಥವಾ ಯಾವುದೇ ಪತ್ರಿಕೆಯ ಅಂಕಗಳ ಮರುಎಣಿಕೆಗಾಗಿ ಆಯೋಗಕ್ಕೆ ಅರ್ಜಿ ಸಲ್ಲಿಸಬಹುದು, ಅಂತಹ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಯು ಪ್ರತಿ ವಿಷಯಕ್ಕೆ ರೂ. 100/- ಗಳನ್ನು ``ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು'', ಇವರಿಗೆ ಸಂದಾಯವಾಗುವಂತೆ ಪಡೆದ ಡಿಡಿ/ಐಪಿಓ ಮೂಲಕ ಸಂದಾಯ ಮಾಡತಕ್ಕದ್ದು ಹಾಗೂ ಅದನ್ನು ತನ್ನ ಹೆಸರು, ಪರೀಕ್ಷಾ ಕೇಂದ್ರ, ನೋಂದಣಿ ಸಂಖ್ಯೆ ಮತ್ತು ಮರು ಎಣಿಕೆ ಮಾಡಬೇಕಾದ ವಿಷಯದ ವಿವರಗಳನ್ನು ನಮೂದಿಸಿದ ಅರ್ಜಿಯೊಂದಿಗೆ ಲಗತ್ತಿಸಿ ಒದಗಿಸತಕ್ಕದ್ದು.

(ಬಿ) ಅಭ್ಯರ್ಥಿಯು ಪಡೆದ ಅಂಕಗಳ ಮರು ಎಣಿಕೆಯ ಸಂಬಂಧದಲ್ಲಿ ಆಯೋಗದ ನಿರ್ಣಯವೇ ಅಂತಿಮವಾಗಿರುತ್ತದೆ.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ೧೪೪೯

16. ಅನುಲೇಖನ ಸಹಾಯ:

ಸರ್ಕಾರಿ ಅಧಿಸೂಚನೆ ಸಂಖ್ಯೆ ಡಿಪಿಎಆರ್ 19 ಎಸ್ಎಸ್‌ಸಿ 75, ದಿನಾಂಕ 5ನೇ ಜುಲೈ 1978ರ ಅನುಸಾರವಾಗಿ ಅಂಧರಾಗಿರುವ ಅಥವಾ ತನ್ನ ಸ್ವಂತ ಕೈಯಿಂದ ಬರೆಯಲು ಅಸಮರ್ಥರಾದ ಅಭ್ಯರ್ಥಿಗಳಿಗೆ ಈ ಮುಂದಿನ ಷರತ್ತುಗಳಿಗೊಳಪಟ್ಟು ಒಬ್ಬ ಅನುಲೇಖಕನ ಸಹಾಯವನ್ನು ಪಡೆಯುವುದಕ್ಕೆ ಅನುಮತಿಸಲಾಗಿದೆ:

1. ಅನುಲೇಖಕನ ಸಹಾಯವನ್ನು ಬಯಸುವ ಅಭ್ಯರ್ಥಿಯು ಅರ್ಜಿಯ ಜೊತೆಗೆ ಸರ್ಕಾರಿ ಆಸ್ಪತ್ರೆಯ ವೈದ್ಯರಿಂದ ನೀಡಲಾದ ಒಂದು ಪ್ರಮಾಣ ಪತ್ರದೊಂದಿಗ ಅವನ ಮೇಲಧಿಕಾರಿಯ ಮೂಲಕ ಕಳುಹಿಸತಕ್ಕದ್ದು.

2. ಮೇಲಧಿಕಾರಿಯು ವೈದ್ಯಕೀಯ ಪ್ರಮಾಣಪತ್ರವನ್ನು ಆಯೋಗಕ್ಕೆ ಕಳುಹಿಸುವ ಮೊದಲು ಅಭ್ಯರ್ಥಿಯು ನಿಜವಾಗಿ ಅಸಮರ್ಥನಾಗಿರುವನೆ ಮತ್ತು ಅವನಿಗೆ ಅನುಲೇಖಕನ ಸಹಾಯ ಅವಶ್ಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.

3. ಆಯೋಗವು ಅನುಲೇಖಕನ ಸಹಾಯಕ್ಕೆ ಮಂಜೂರಾತಿ ನೀಡಿದಾಗ ಸಂಬಂಧಪಟ್ಟ ಕೇಂದ್ರದ ಮೇಲ್ವಿಚಾರಕರು ಅಭ್ಯರ್ಥಿಗೆ ಒಬ್ಬ ಅನುಲೇಖಕನನ್ನು ನೇಮಕ ಮಾಡತಕ್ಕದ್ದು ಮತ್ತು ಅದನ್ನು ಕಾರ್ಯದರ್ಶಿ ಮತ್ತು ಇಲಾಖಾ ಪರೀಕ್ಷೆಯ ನಿಯಂತ್ರಣಾಧಿಕಾರಿಗೆ ತಿಳಿಸತಕ್ಕದ್ದು.

4. ಹಾಗೆ ನೇಮಕ ಮಾಡಲಾದ ಅನುಲೇಖಕನು ಅಭ್ಯರ್ಥಿಗಿಂತ ಕೆಳಗಿನ ದರ್ಜೆಯವನು ಅಥವಾ ಕಡಿಮೆ ಶಿಕ್ಷಣ ಪಡೆದವನ ಆಗಿರತಕ್ಕದ್ದು ಮತ್ತು ಅವನು ಅಭ್ಯರ್ಥಿಯ ಸಂಬಂಧಿಕನಾಗಿರಬಾರದು.

5. ಅಭ್ಯರ್ಥಿಗಳು ಪರೀಕ್ಷೆಯ ಪ್ರತಿಯೊಂದು ಪತ್ರಿಕೆಗೆ ರೂ. 5/- (ಐದು ರೂಪಾಯಿಗಳು) ಮೊತ್ತವನ್ನು ಮುಂಗಡವಾಗಿ ಸಂದಾಯ ಮಾಡತಕ್ಕದ್ದು ಮತ್ತು ಸದರಿ ಮೊತ್ತವನ್ನು ಪರೀಕ್ಷೆಯ ಪತ್ರಿಕೆ ಮುಗಿದ ಕೂಡಲೇ ಅನುಲೇಖಕನಿಗೆ ಸಂದಾಯ ಮಾಡತಕ್ಕದ್ದು.

6. ಅನುಲೇಖಕನನ್ನು ನೇಮಕ ಮಾಡಲಾಗಿದ್ದರೆ ಅಂತಹ ಅಭ್ಯರ್ಥಿಗೆ ಹದಿನೈದು ನಿಮಿಷಗಳ ಹೆಚ್ಚಿನ ಕಾಲಾವಕಾಶವನ್ನು ನೀಡಲಾಗುವುದು.

7. ಅನುಲೇಖಕನ ಸಹಾಯ ಬಯಸುವ ಅಭ್ಯರ್ಥಿಗಳು ಅವಶ್ಯಕ ವೈದ್ಯಕೀಯ ಪ್ರಮಾಣ ಪತ್ರ ಮತ್ತು ಮೇಲಧಿಕಾರಿಗಳ ದೃಡೀಕರಣವನ್ನು ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಪ್ರತಿಯೊಂದಿಗೆ ಲಗತ್ತಿಸಿ ನಿಗದಿಪಡಿಸಿದ ಕಡೇ ದಿನಾಂಕದೊಳಗೆ ಆಯೋಗಕ್ಕೆ ಮನವಿಯನ್ನು ಸಲ್ಲಿಸತಕ್ಕದ್ದು. ಅನಿವಾರ್ಯ ಹಾಗೂ ಸಕಾರಣವಿಲ್ಲದ ಹೊರತು ಇತರ ಯಾವುದೇ ಸಂದರ್ಭಗಳಲ್ಲೂ ನಿಗದಿಪಡಿಸಲಾದ ಕಡೆಯ ದಿನಾಂಕದ ನಂತರ ಸಲ್ಲಿಸುವ ಇಂತಹ ಕೋರಿಕೆಗಳನ್ನು ಪರಿಗಣಿಸಲಾಗುವುದಿಲ್ಲ.

8. ಅಭ್ಯರ್ಥಿಗಳು ಅನುಲೇಖಕನ ಸಹಾಯ ಕೋರಿ ಸಲ್ಲಿಸುವ ವೈದ್ಯಕೀಯ ಪ್ರಮಾಣ ಪತ್ರವನ್ನು ಅನುಮಾನಾಸ್ಪದ ಸಂದರ್ಭದಲ್ಲಿ ವೈದ್ಯಕೀಯ ಮಂಡಳಿಗೆ ಪರಿಶೀಲನೆಗಾಗಿ ಕಳುಹಿಸಲಾಗುವುದು, ಹಾಗೂ ಕೆಲವೊಂದು ಸಂದರ್ಭಗಳಲ್ಲಿ ಅವಶ್ಯಕವೆನಿಸಿದರೆ ಅಂತಹವರನ್ನು ವೈದ್ಯಕೀಯ ಪರಿಶೀಲನೆಗೂ ಗುರಿಪಡಿಸಲಾಗುವುದು. ಸುಳ್ಳು ಪ್ರಮಾಣಪತ್ರ ಹಾಜರುಪಡಿಸಿದ್ದು ಸಾಬೀತಾದ ಸಂದರ್ಭಗಳಲ್ಲಿ ಅಂತಹ ಅಭ್ಯರ್ಥಿಗಳ ಮೇಲೆ ನಿಯಮಾನುಸಾರ ಶಿಸ್ತಿನ ಕ್ರಮ ಜರುಗಿಸಲಾಗುವುದಲ್ಲದೆ ಅಂತಹವರ ಇಲಾಖಾ ಪರೀಕ್ಷೆಯ ಅಭ್ಯರ್ಥಿತ್ವವನ್ನು ರದ್ದುಪಡಿಸಲಾಗುವುದು.

17. ನಕಲು ಪ್ರಮಾಣ ಪತ್ರ:

ಅಭ್ಯರ್ಥಿಯು ವಿವಿಧ ವಿಷಯಗಳಲ್ಲಿ ಉತ್ತೀರ್ಣಗೊಂಡ ಬಗ್ಗೆ ಆಯೋಗದಿಂದ ಪಡೆಯಲಾದ ಮೂಲ ಪ್ರಮಾಣಪತ್ರವನ್ನು ಕಳೆದುಕೊಂಡಲ್ಲಿ ಅಂತಹ ಅಭ್ಯರ್ಥಿಗಳು ನಕಲು ಪ್ರಮಾಣಪತ್ರವನ್ನು ಪಡೆದು- ಕೊಳ್ಳಬಹುದಾಗಿದ್ದು, ಸದರಿ ಪ್ರಮಾಣಪತ್ರಕ್ಕಾಗಿ ಈ ಕೆಳಗೆ ಸೂಚಿಸಿರುವ ಮಾಹಿತಿ/ದಾಖಲೆಗಳನ್ನು ಆಯೋಗಕ್ಕೆ ಒದಗಿಸುವ ಅಗತ್ಯವಿರುತ್ತದೆ.

(1) ನಕಲು ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಕಾರಣಗಳನ್ನು ತಿಳಿಸುವ ಹಾಗೂ ಪರೀಕ್ಷಾ ವಿವರಗಳನ್ನೊಳಗೊಂಡ ರೂ. 20/- ಮೌಲ್ಯದ ಛಾಪ ಕಾಗದದ ಮೇಲೆ ನೋಟರಿಯವರ ಮುಂದೆ ಪ್ರಮಾಣೀಕರಿಸಲಾದ ಅಫಿಡೆವಿಟ್‌ನ ಮೂಲ ಪ್ರತಿ ಹಾಗೂ;

(2) ಪ್ರತಿ ವಿಷಯ ಒಂದಕ್ಕೆ 100-00 ರೂ. ನಂತೆ ಶುಲ್ಕವನ್ನು ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು, ಇವರಿಗೆ ಸಂದಾಯವಾಗುವಂತೆ ಬ್ಯಾಂಕ್ ಡಿ.ಡಿ./ಅಂಚೆ ಧನಾದೇಶ.(ಐ.ಪಿ.ಓ)

(3) ಪ್ರವೇಶಪತ್ರದ ನೆರಳಚ್ಚು ಪ್ರತಿ ಮತ್ತು

(4) ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಬಗ್ಗೆ ವಿವರಗಳನ್ನು ನಮೂದಿಸಿರುವ ಸೇವಾ ಪುಸ್ತಕದ ಉಧೃತ ಭಾಗದ ನೆರಳಚ್ಚುಪ್ರತಿ.

೧೪೫೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ಭಾಗ - ೫

18. ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಇತ್ತೀಚೆಗೆ ಜಾರಿಗೊಂಡಿರುವ ಸರ್ಕಾರಿ ಆದೇಶಗಳು:

(1) Karnataka Civil Services (Service and Kannada Language Examinations) Rules, 1974

(1) A Government servant who has passed-

(a) the Secondary School Leaving Certificate Examination or any examination declared as equivalent thereto by the State Government, or any examination higher than the Secondary School Leaving Certificate Examination,

(i) in which the question papers on different subjects are answered in Kannada Language; or

(ii) in which Kannada is the main language, Second Language or an optional subject, but not one of the subject in a composite paper ,or

(aa) Diploma Course/Certificate Course in Kannada conducted by a University established by Law in India, or " Kava", " Jana" or "Rathna" examinations conducted by Kannada Sahitya Parishat.

(ab) Correspondence course in Kannada conducted by the Central Institute of Indian Languages, Mysore.

(2) ಸರ್ಕಾರಿ ಅಧಿಸೂಚನೆ ಸಂಖ್ಯೆ. ಸಿಆಸುಇ 3 ಸೆಸೆನಿ 2010, ಬೆಂಗಳೂರು, ದಿನಾಂಕ:02-02-2011.

``(ಎಸಿ) ಕರ್ನಾಟಕ ಸಿವಿಲ್ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) (ಸಾಮಾನ್ಯ) ನಿಯಮಗಳು, 2006ರಲ್ಲಿ ನಿಗದಿಪಡಿಸಿರುವಂತೆ, ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡುವ ನೇಮಕಾತಿಗೆ, ಆಯ್ಕೆ ಪರೀಕ್ಷೆಯ ಒಂದು ಭಾಗವಾಗಿ ಲೋಕಸೇವಾ ಆಯೋಗ ಅಥವಾ ಇತರೆ ಯಾವುದೇ ಆಯ್ಕೆ ಪ್ರಾಧಿಕಾರ ನಡೆಸುವ ಕನ್ನಡಭಾಷಾ ಪರೀಕ್ಷೆ''.

3) any examination specified in Schedule III as equivalent to the Kannada Language Examination, or who has won a prize in Kannada essay competition conducted by any University established by law, shall on obtaining a certificate of exemption under sub-rule (5) be deemed to have passed the Kannada Language Examination under these rules.

(4) ಸರ್ಕಾರಿ ಅಧಿಸೂಚನೆ ಸಂಖ್ಯೆ ಡಿಪಿಎಆರ್ 76, ದಿನಾಂಕ 10ನೇ ಜನವರಿ 1987ರ ಅನುಸಾರವಾಗಿ ಸರ್ಕಾರಿ ಆದೇಶ ಸಂಖ್ಯೆ 649 ಇಎನ್‌ಟಿ 57, ದಿನಾಂಕ 23ನೇ/25ನೇ ಫೆಬ್ರವರಿ 1959ರ ಅನುಸಾರವಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಿಂದ ನಡೆಸಲಾದ ಅರಣ್ಯ ಇಲಾಖಾ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಅರಣ್ಯ ಪರೀಕ್ಷೆಯ ಪತ್ರಿಕೆ-2 ರಲ್ಲಿ ತೇರ್ಗಡೆಯಾಗುವುದರಿಂದ ವಿನಾಯಿತಿ ನೀಡಲಾಗಿದೆ.

19. ಅಭ್ಯರ್ಥಿಗಳಿಗೆ ವಿಶೇಷ ಸೂಚನೆಗಳು:-

1. ಸೇವಾ ಪರೀಕ್ಷೆಗಳಿಗೆ ಸಂಬಂಧಪಟ್ಟ ಎಲ್ಲಾ ಪತ್ರ ವ್ಯವಹಾರವನ್ನುಕಾರ್ಯದರ್ಶಿ ಹಾಗೂ ನಿಯಂತ್ರಕರು, ಇಲಾಖಾ ಪರೀಕ್ಷೆಗಳು ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-560001 ಈ ವಿಳಾಸಕ್ಕೆ ಮಾಡತಕ್ಕದ್ದು.

2. ಪರೀಕ್ಷೆಗಳ ಸಂಬಂಧದಲ್ಲಿ ಯಾವುದೇ ಮಾಹಿತಿ ಕೋರುವ ಅಭ್ಯರ್ಥಿಗಳು ಮನವಿಯಲ್ಲಿ ಎಲ್ಲಾ ಮಾಹಿತಿ ನೀಡಿ ಅದರೊಂದಿಗೆ ಸಾಕಷ್ಟು ಅಂಚೆ ಚೀಟಿಗಳನ್ನು ಹಚ್ಚಿದ ಸ್ವವಿಳಾಸ ಬರೆದ ಒಂದು ಲಕೋಟೆಯನ್ನು ಲಗತ್ತಿಸಿ ಕಳುಹಿಸಿಕೊಟ್ಟಲ್ಲಿ ಆಯೋಗವು ತುರ್ತಾಗಿ ಉತ್ತರವನ್ನು ನೀಡಲು ಅನುಕೂಲವಾಗುವುದು.

3. ಮಾಹಿತಿಗಾಗಿ ಅಭ್ಯರ್ಥಿಗಳು ಆಯೋಗಕ್ಕೆ ಸಲ್ಲಿಸುವ ಮನವಿಗಳಲ್ಲಿ ನೋಂದಣಿ ಸಂಖ್ಯೆ, ಅಧಿವೇಶನ, ವಿಷಯ ಮತ್ತು ಪರೀಕ್ಷಾ ಕೇಂದ್ರ ಮುಂತಾದ ಸ್ಪಷ್ಟ ವಿವರಗಳನ್ನು ಸೂಚಿಸದಿದ್ದಲ್ಲಿ ಅಂತಹವುಗಳನ್ನು ಪುರಸ್ಕರಿಸಲಾಗುವುದಿಲ್ಲ.

4. ಅಭ್ಯರ್ಥಿಗಳು ಪೊಲೀಸ್ ಅಥವಾ ಇನ್ನಾವುದೇ ಸಮವಸ್ತ್ರವನ್ನು ಧರಿಸಿ ಪರೀಕ್ಷೆ ಬರೆಯುವುದನ್ನು ನಿಷೇಧಿಸಲಾಗಿದೆ.

5. ಅಭ್ಯರ್ಥಿಗಳು ತಮ್ಮೊಂದಿಗೆ ಸಹ ನೌಕರರನ್ನು/ಇತರರನ್ನು ಪರೀಕ್ಷಾ ಕೊಠಡಿಯೊಳಗೆ ಕರೆತರುವುದನ್ನು ಮತ್ತು ಪರೀಕ್ಷೆ ನಡೆಯುತ್ತಿರುವಾಗ ಅವರನ್ನು ಭೇಟಿ ಮಾಡಲು ಕೋರುವುದನ್ನು ನಿಷೇಧಿಸಲಾಗಿದೆ.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ೧೪೫೧

6. ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ಮತ್ತು ಉಪಯೋಗಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

7. ಅಭ್ಯರ್ಥಿಗಳು ತಮಗೆ ಕಾಯ್ದಿರಿಸಿದ ಸ್ಥಳದಲ್ಲಿ ಮಾತ್ರ ಕುಳಿತು ಪರೀಕ್ಷೆ ಬರೆಯತಕ್ಕದ್ದು. ತಪ್ಪಿದಲ್ಲಿ ಅವರ ಅಭ್ಯರ್ಥಿತ್ವವನ್ನು ರದ್ದುಗೊಳಿಸಲಾಗುವುದು.

8. ಯಾವುದೇ ಹುದ್ದೆಗೆ ಕಡ್ಡಾಯಗೊಳಿಸಿದ ವಿಷಯಗಳ ಪೈಕಿ ಈ ಅಧಿಸೂಚನೆಯೊಂದಿಗೆ ಪ್ರಕಟಿಸಿದ ವೇಳಾಪಟ್ಟಿಯಲ್ಲಿ ಒಂದಕ್ಕಿಂತ

ಹೆಚ್ಚು ವಿಷಯಗಳು ಒಂದೇ ದಿನ, ಒಂದೇ ಸಮಯದಲ್ಲಿ ನಡೆಯುವಂತಿದ್ದರೆ, ಅವುಗಳಲ್ಲಿ ಒಂದಕ್ಕೆ ಮಾತ್ರ ಅರ್ಜಿ ಸಲ್ಲಿಸಿ

ಪರೀಕ್ಷೆಗೆ ಹಾಜರಾಗತಕ್ಕದ್ದು.

9. ಪಠ್ಯ ಕ್ರಮಕ್ಕಾಗಿ ಅಭ್ಯರ್ಥಿಗಳು ಕರ್ನಾಟಕ ನಾಗರಿಕ ಸೇವಾ (ಸೇವೆ ಮತ್ತು ಕನ್ನಡಭಾಷಾ ಪರೀಕ್ಷೆಗಳು) ನಿಯಮಗಳು, 1974 ಮತ್ತು ಅದಕ್ಕೆ ಸರ್ಕಾರದಿಂದ ಕಾಲಕಾಲಕ್ಕೆ ಹೊರಡಿಸಲಾಗಿರುವ ತಿದ್ದುಪಡಿಗಳನ್ನು ನೋಡಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು:

ಶಾಖೆಗಳು ದೂರವಾಣಿ ಸಂಖ್ಯೆಗಳು
ಮಾಹಿತಿ ಕೇಂದ್ರ 080$30574957
ಇಾಖಾ ಪರೀಕ್ಷಾ ಶಾಖೆಋ1 080$30574944
ಇಾಖಾ ಪರೀಕ್ಷಾ ಶಾಖೆಋ2 080$30574945
ಪ್ರಾಂತೀಯ ಕಛೇರಿ ಬೆಳಗಾವಿ 0831$2475345
ಪ್ರಾಂತೀಯ ಕಛೇರಿ ಗುಲ್ಬರ್ಗಾ 08472$227944
ಪ್ರಾಂತೀಯ ಕಛೇರಿ ಮೈಸೂರು 0821$2545956
ಪ್ರಾಂತೀಯ ಕಛೇರಿ ಶಿವಮೊಗ್ಗ 08182$228099
ಸಹಾಯವಾಣಿ 080$30574913

20. ದುರ್ವರ್ತನೆ:

ಯಾವುದೇ ಒಬ್ಬ ಅಭ್ಯರ್ಥಿಯು ಸೇವಾ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಕೃತ್ರಿಮ ದಸ್ತಾವೇಜನ್ನು ಅಥವಾ ಅಕ್ರಮವಾಗಿ ತಿದ್ದಿದ ದಸ್ತಾವೇಜುಗಳನ್ನು ಸಲ್ಲಿಸಿದ ಅಥವಾ ಸರಿಯಲ್ಲದ ಅಥವಾ ಸುಳ್ಳು ವಿವರಣೆಯನ್ನು ನೀಡಿದ ಅಥವಾ ವಾಸ್ತವಿಕ ಮಾಹಿತಿಯನ್ನು ಮರೆಮಾಚಿದ ಅಥವಾ ಪರೀಕ್ಷೆಯಲ್ಲಿ ಅಕ್ರಮ ವಿಧಾನವನ್ನು ಅನುಸರಿಸಲು ಪ್ರಯತ್ನಿಸಿದ ಅಥವಾ ಬೇರೆ ರೀತಿಯಲ್ಲಿ ಇತರೆ ಯಾವುದೇ ಅಕ್ರಮ ಅನುಚಿತ ಮಾರ್ಗವನ್ನನುಸರಿಸಿದ ಅಪರಾಧವನ್ನು ಮಾಡಿರುವುದಾಗಿ ಆಯೋಗಕ್ಕೆ ಕಂಡುಬಂದಲ್ಲಿ, ಅಂತಹ ಅಭ್ಯರ್ಥಿಯನ್ನು ಕ್ರಿಮಿನಲ್ ವ್ಯವಹರಣೆಗೆ ಗುರಿಪಡಿಸುವುದಲ್ಲದೆ (ಎ) ಅಭ್ಯರ್ಥಿಯ ಆಯ್ಕೆಗಾಗಿ ಆಯೋಗದಿಂದ ನಡೆಸಲಾಗುವ ಯಾವುದೇ ಪರೀಕ್ಷೆಗೆ ಪ್ರವೇಶ ನೀಡುವುದಕ್ಕೆ ಅಥವಾ ಯಾವುದೇ ಸಂದರ್ಶನಕ್ಕೆ ಹಾಜರಾಗುವುದಕ್ಕೆ ಖಾಯಂ ಆಗಿ ಅಥವಾ ಒಂದು ನಿರ್ಧಿಷ್ಟ ಅವಧಿಗೆ ಅನರ್ಹಗೊಳಿಸಲಾಗುವುದು ಮತ್ತು (ಬಿ) ಶಿಸ್ತಿನ ಕ್ರಮಕ್ಕೆ ಒಳಪಡಿಸಲಾಗುವುದು.

ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಸಂವೀಕ್ಷಕರು/ಮೇಲ್ವಿಚಾರಕರು ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸುವುದು ತಪ್ಪಿದಲ್ಲಿ ಅದನ್ನು ದುರ್ವರ್ತನೆಯನ್ನಾಗಿ ಪರಿಗಣಿಸಲಾಗುವುದು ಮತ್ತು ಈ ಬಗ್ಗೆ ಶಿಸ್ತಿನ ಕಾರ್ಯವಿಧಾನಗಳಿಗೆ ಒಳಪಡಿಸಲಾಗುವುದು.

ವಿ. ಬಿ. ಪಾಟೀಲ್

ಕಾರ್ಯದರ್ಶಿ ಹಾಗೂ ನಿಯಂತ್ರಕರು,

ಇಲಾಖಾ ಪರೀಕ್ಷೆಗಳು,

ಕರ್ನಾಟಕ ಲೋಕಸೇವಾ ಆಯೋಗ.

೧೪೫೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ಭಾಗ - ೫

ಕರ್ನಾಟಕ ಲೋಕಸೇವಾ ಆಯೋಗ,`` ಉದ್ಯೋಗ ಸೌಧ``, ಬೆಂಗಳೂರು-560001.

ಅಧಿಸೂಚನೆ ಸಂಖ್ಯೆ ಇಪ(1)852/2012-13/ಪಿಎಸ್‌ಸಿ, ದಿನಾಂಕ: 30-08-2012

ಅನುಬಂಧ `` ಎ ''

2012ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳು

ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿರುವ ಪರೀಕ್ಷೆಗಳ ವೇಳಾಪಟ್ಟಿ.

ಕ್ರ. ಸ ಂ. ವಾರ ದಿನಾಂಕ ವ ೕಳೆ ೆ ವಿಉಯ
1 2 3 4 5
1 . ಶ ನಿವಾರ 0 8$12$2012 ಬೆಳಿಗ್ಗೆ 10.00 ರಿಂದ 12ಋ00 ಗಂಟೆ ಮಧ್ಯಾಹ್ನ 2.00 ರಿಂದ ಸಂಜೆ 4.00 ಗಂಟೆ ಅಕೌಂಟ್ಸ್ ೋಯರ್ ಜನರ್ ಾ ಭಾಗಋ II
2 ಭಾ ನುವಾರ 0 9$12$2012 ಬೆಳಿಗ್ಗೆ 10.00 ರಿಂದ 12.00 ಗಂಟೆ ಮಧ್ಯಾಹ್ನ 2.00 ರಿಂದ ಸಂಜೆ 4.00 ಗಂಟೆ ಅಕೌಂಟ್ಸ್ ಹೈಯರ್ ಪತ್ರಿಕೆಋ1 ಅಕೌಂಟ್ಸ್ ಹೈಯರ್ ಪತ್ರಿಕೆಋ2
3 . ಸ ೂೕಮವಾರ ೆ 1 0$12$2012 ಬೆಳಿಗ್ಗೆ 10.00 ರಿಂದ 12.00 ಗಂಟೆ ಮಧ್ಯಾಹ್ನ 2.00 ರಿಂದ ಸಂಜೆ 4.00 ಗಂಟೆ ಜನರ್ ಾ ಭಾಗಋ I ಪತ್ರಿಕೆಋ 1 ಜನರ್ ಾ ಭಾಗಋ I ಪತ್ರಿಕೆಋ 2
4 . ವ ುಂಗಳವಾರ 1 1$12$2012 ಬೆಳಿಗ್ಗೆ 10.00 ರಿಂದ 12.00 ಗಂಟೆ ಮಧ್ಯಾಹ್ನ 2.00 ರಿಂದ ಸಂಜೆ 3.00 ಗಂಟೆ ಕನ್ನಡ ಪತ್ರಿಕೆಋ1 (ಪುಸ ್ತ ಕಗಳಿಲ್ಲದೆ) ಕನ್ನಡ ಪತ್ರಿಕೆಋ2 (ಪುಸ್ತಕಗಳಿಲ್ಲದೆ)
5 . ಬ ುಧವಾರ 1 2$12$2012 ಬೆಳಿಗ್ಗೆ 10.00 ರಿಂದ 1.00 ಗಂಟೆ ಮೇಲಿನಂತೆ ಮಧ್ಯಾಹ್ನ 2.00 ರಿಂದ ಸಂಜೆ 5.00 ಗಂಟೆ ಮೇಲಿನಂತೆ ಇನ್ಸೂರೆನ್ಸ್ ಹೈಯರ್ ಪತ್ರಿಕೆಋ2 (ಪುಸ್ತಕಗಳಿಲ್ಲದೆ) ಪಿ.ಡಬ್ಲ್ಯೂ.ಡಿ ಹೈಯರ್ ಭಾಗಋ I ಪತ್ರಿಕೆಋ1, (ಪುಸ್ತಕಗಳಿಲ್ಲದೆ) ಇನ್ಸೂರೆನ್ಸ್ ೋಯರ್ ಪತ್ರಿಕೆಋ2 {ಪುಸ್ತಕಗಳಿಲ್ಲದೆ} ಪ್ರೆಸ್ ಮ್ಯಾನ್ಯುಯ್ ಹೈಯರ್ ಪತ್ರಿಕೆಋ2,
6 ಗ ುರುವಾರ 1 3$12$2012 ಬೆಳಿಗ್ಗೆ 10.00 ರಿಂದ 12.00 ಗಂಟೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮಧ್ಯಾಹ್ನ 2.00 ರಿಂದ ಸಂಜೆ 4.00ಗಂಟೆ ಮೇಲಿನಂತೆ ಮೇಲಿನಂತೆ ೆ ೕಬರ್ ಪತ್ರಿಕೆಋ1 ಪ್ರಿಸನ್ಸ್ ಎಕ್ಸೈಸ್ ಮೋಟಾರ್ ವೆಹಿಕ್ಸ್ ರೆವಿನ್ಯೂ ಹೈಯರ್ ಭಾಗಋ I ಪತ್ರಿಕೆಋ1 ಇನ್ಸೂರೆನ್ಸ್ ಅಡ್ವಾನ ್ಸ ಡ್ ಪತ್ರಿಕೆಋ1 ೇ ಬರ್ ಪತ್ರಿಕೆಋ2 ಇನ್ಸೂರೆನ್ಸ್ ಅಡ್ವಾನ ್ಸ ಡ್ ಪತ್ರಿಕೆಋ2 ರೆವಿನ್ಯೂ ಹೈಯರ್ ಭಾಗಋ I ಪತ್ರಿಕೆಋ2.
7 . ಶ ುಕ್ರವಾರ 1 4$12$2012 ಬೆಳಿಗ್ಗೆ 10.00 ರಿಂದ 12.00 ಗಂಟೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮಧ್ಯಾಹ್ನ 2.00 ರಿಂದ ಸಂಜೆ 4.00 ಗಂಟೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ರೆವಿನ್ಯೂ ಹೈಯರ್ ಭಾಗಋ II ಪತ್ರಿಕೆಋ1 ರಿಜಿಸ್ಟ್ರೇ%ನ್ ಪತ್ರಿಕೆಋ1 ಕಮರ್ಷಿಯ್‌ಟ್ಯಾಕ್ಸ್ ಭಾಗಋ I ಪತ್ರಿಕೆಋ1 ಇನ್ಸೂರೆನ್ಸ್ ಅಡ್ವಾನ ್ಸ ಡ್ ಪತ್ರಿಕೆಋ3 ರ ೆವಿನ್ಯೂ ಹೈಯರ್ ಭಾಗಋ II ಪತ್ರಿಕೆಋ2 ರಿಜಿಸ್ಟ್ರೇ%ನ್ ಪತ್ರಿಕೆಋ2 ಕಮರ್ಷಿಯ್‌ಟ್ಯಾಕ್ಸ್ ಭಾಗಋ I, ಪತ್ರಿಕೆಋ2 ಇನ್ಸೂರೆನ್ಸ್ ಹೈಯರ್ ಪತ್ರಿಕೆಋ1
8. ಶನಿವಾರ 15$12$2012 ಬೆಳಿಗ್ಗೆ 10.00 ರಿಂದ 12.00 ಗಂಟೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮಧ್ಯಾಹ್ನ 2.00 ರಿಂದ ಸಂಜೆ 4.00 ಗಂಟೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಪೊಲೀಸ್ ಮ್ಯಾನ್ಯುಯ್ ಕೋಋಆಪರೇ%ನ್ ಪತ್ರಿಕೆಋ1 ಎಂಪ್ಲಾಯ್‌ಮೆಂಟ್ ಎಕ್ಸ್‌ಚೇಂಜ್ ಪ್ರೊಸೀಜರ್ ಹೈಯರ್ ಮಾರ್ಕೆಟಿಂಗ್ ಪತ್ರಿಕೆಋ1 ಮೈನಿಂಗ್ ಭಾಗಋ I ರೆವಿನ್ಯೂ ೋಯರ್ ಪತ್ರಿಕೆಋ1 ಕ ಮರ್ಷಿಯ್ ಟ್ಯಾಕ್ಸ್ ಭಾಗಋ I, ಪತ್ರಿಕೆಋ3 ಮತ್ತು ಋ ಕೋಋಆಪರೇ%ನ್ ಪತ್ರಿಕೆಋ2 (ಎರಡಕ್ಕೂ ಒಂದೇ ಪ್ರಶ್ನೆ ಪತ್ರಿಕೆ) ಇನ್ಸೂರೆನ್ಸ್ ಹೈಯರ್ ಪತ್ರಿಕೆಋ3 ಎಂಪ್ಲಾಯ್‌ಮೆಂಟ್ ಎಕ್ಸ್‌ಚೇಂಜ್ ಪ್ರೊಸೀಜರ್ ೋಯರ್ ಮಾರ್ಕೆಟಿಂಗ್ ಪತ್ರಿಕೆಋ2 ಮೈನಿಂಗ್ ಭಾಗಋ II ರೆವಿನ್ಯೂ ೋಯರ್ ಪತ್ರಿಕೆಋ2
9. ಬ ಾನುವಾರ 16$12$2012 ಬೆಳಿಗ್ಗೆ 10.00 ರಿಂದ 12.00 ಗಂಟೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮಧ್ಯಾಹ್ನ 2.00ರ ರಿಂದ ಸಂಜೆ 4.00 ಗಂಟೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಸಿರಿಕಲ್ಚರ್ ಪತ್ರಿಕೆಋ1 ಕಮ್ಯೂನಿಟಿ ಡೆವಲಪ್‌ಮೆಂಟ್ ಭಾಗಋ I ರೆವಿನ್ಯೂ ೋಯರ್ ಪತ್ರಿಕೆಋ3 ಕಮರ್ಷಿಯ್ ಟ್ಯಾಕ್ಸ್ ಭಾಗಋII ಪತ್ರಿಕೆಋ1 ಪ್ರೆಸ್ ಮ್ಯಾನ್ಯುಯ್ ಹೈಯರ್ ಪತ್ರಿಕೆಋ1 ೂೕಕ್ ಾಸ್ ಅಂಡ್ ಕಮರ್ಷಿಯ್ ೆ ಬುಕ್ ಕೀಪಿಂಗ್ ಪತ್ರಿಕೆಋ1 ಪೋರ್ಟ್÷್ಸ ಹೈಯರ್ ಇನ್ಸೂರೆನ್ಸ್ ೋಯರ್ ಪತ್ರಿಕೆಋ1 ಯೂಥ್ ಸರ್ವೀಸಸ್ ಮ್ಯಾನ್ಯುಯ್ ಸಿ ರಿಕಲ್ಚರ್ ಪತ್ರಿಕೆಋ2 ಪಿ.ಡಬ್ಲ್ಯೂ.ಡಿ ಹೈಯರ್ ಭಾಗಋI,ಪತ್ರಿಕೆಋ2 ೂೕಕ್ ಾಸ್ ಅಂಡ್ ಕಮರ್ಷಿಯ್ ೆ ಬುಕ್ ಕೀಪಿಂಗ್ ಪತ್ರಿಕೆಋ2 ಕಮ್ಯುನಿಟಿ ಡೆವಲಪ್‌ಮೆಂಟ್ ಭಾಗಋII ಕಮರ್ಷಿಯ್ ಟ್ಯಾಕ್ಸ್ ಭಾಗಋII ಪತ್ರಿಕೆಋ2 ಪೋರ್ಟ್÷್ಸ ೋಯರ್
10 ಸೋಮವಾರ 17$12$2012 ಬೆಳಿಗ್ಗೆ 10.00 ರಿಂದ 12.00 ಗಂಟೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮಧ್ಯಾಹ್ನ 2.00 ರಿಂದ ಸಂಜೆ 4.00 ಗಂಟೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಫ್ಯಾಕ್ಟರೀಸ್ ಅಂಡ್ ಬಾಯ್ಲರ್ಸ್ ಾಸ್ ಪತ್ರಿಕೆಋ1 ಇನ್ಸೂರೆನ್ಸ್ ೋಯರ್ ಪತ್ರಿಕೆಋ3 ಪಿ.ಡಬ್ಲ್ಯೂ.ಡಿ ಹೈಯರ್ ಭಾಗಋII,ಪತ್ರಿಕೆಋ1 ಪ್ರೆಸ್ ಮ್ಯಾನ್ಯುಯ್ ೋಯರ್ ಪತ್ರಿಕೆಋ1 ಆಕ್ಟ್÷್ಸ ಅಂಡ್ ರ್ಸೂ್ ರಿೇಟಿಂಗ್ ಟು ವಿಮೆನ್ ಅಂಡ್ ಚ್ಡೈ್ ಡೆವೆಲಪ್‌ಮೆಂಟ್ ಪ ಾ್ಯಕ್ಟರೀಸ್ ಅಂಡ್ ಬಾಯ್ಲರ್ಸ್ ಾಸ್ ಪತ್ರಿಕೆಋ2 ಪಿ.ಡಬ್ಲ್ಯೂ.ಡಿ ಹೈಯರ್ ಭಾಗಋII, ಪತ್ರಿಕೆಋ2 ಪ್ರೆಸ್ ಮ್ಯಾನ್ಯುಯ್ ೋಯರ್ ಪತ್ರಿಕೆಋ2 ಕೋಋಆಪರೇಟಿವ್ ಆಡಿಟ್ ಎಕ್ಸಾಮಿನೇ%ನ್ ಪತ್ರಿಕೆಋ1
1 1 ವ ುಂಗಳವಾರ 1 8$12$2012 ಬೆಳಿಗ್ಗೆ 10.00 ರಿಂದ 12.00 ಗಂಟೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮಧ್ಯಾಹ್ನ 2.00 ರಿಂದ ಸಂಜೆ 4.00 ಗಂಟೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಪಿ .ಡಬ್ಲ್ಯೂ.ಡಿ. ೋಯರ್ ಪತ್ರಿಕೆಋ1 ಸೋಶಿಯ್ ವೆ್‌ಫೇರ್ ಅಂಡ್ ಬ್ಯಾಕ್ ವರ್ಡ್‌ಕ್ಲಾಸಸ್ ಮ್ಯಾನ್ಯುಯ್ ಅಂಡ್ ಕ್ಲಾಸಿಫಿಕೇಶನ್ ರಿಜರ್‌ವೇಶನ್ ಫಾರ್ ಬ್ಯಾಕ್‌ವರ್ಡ್ ಕ್ಲಾಸಸ್ ಭಾಗಋ I ಫಾರೆಸ್ಟ್ ಪತ್ರಿಕೆಋ1 ಕೋಋಆಪರೇಟಿವ್ ಆಡಿಟ್ ಎಕ್ಸಾಮಿನೇಶನ್ ಪತ್ರಿಕೆಋ2 ಫುಡ್ ಅಂಡ್ ಸಿವಿ್ ಸಪ್ಲೈಸ್ ಪತ್ರಿಕೆಋ1 ಹ ೂೕಂ ಗಾರ್ಡ್ಸ್ ಮ್ಯಾನ್ಯುಯ್ ೆ ಸೋಶಿಯ್ ವೆ್‌ಫೇರ್ ಅಂಡ್ ಬ್ಯಾಕ್ ವರ್ಡ್‌ಕ್ಲಾಸಸ್ ಮ್ಯಾನ್ಯುಯ್ ಅಂಡ್ ಕ್ಲಾಸಿಫಿಕೇಶನ್ ರಿಜರ್‌ವೇಶನ್ ಫಾರ್ ಬ್ಯಾಕ್‌ವರ್ಡ್ ಕ್ಲಾಸಸ್ ಭಾಗ$ II ಪಿ.ಡಬ್ಲ್ಯೂ.ಡಿ. ೋಯರ್ ಪತ್ರಿಕೆಋ2 ಫಾರೆಸ್ಟ್ ಪತ್ರಿಕೆಋ2 ಕೋಋಆಪರೇಟಿವ್ ಆಡಿಟ್ ಎಕ್ಸಾಮಿನೇ%ನ್ ಪತ್ರಿಕೆಋ3 ಫುಡ್ ಅಂಡ್ ಸಿವಿ್ ಸಪ್ಲೈಸ್ ಪತ್ರಿಕೆಋ2
12 ಬುಧವಾರ 19$12$2012 ಬೆಳಿಗ್ಗೆ 10.00 ರಿಂದ 12.00 ಗಂಟೆ ಮೇಲಿನಂತೆ ಮುನಿಸಿಪ್ ಅಂಡ್ ೋಕ್ ಬೋರ್ಡ್ಸ್ ಪತ್ರಿಕೆಋ1 ಕರ್ನಾಟಕ ಕನ್‌ಸ್ಯೂಮರ್ ಪ್ರೋಟಕ್ಷನ್ಸ್ ಸ್ಟೇಟ್ ಕಮಿ%ನ್ ಅಂಡ್ ಡಿಸ್ಟ್ರಿಕ್ ಫೋರಮ್ ಸರ್ವಿಸ್ ಎಕ್ಸಾಮಿನೇ%ನ್, ಪತ್ರಿಕೆಋ1
ಮಧ್ಯಾಹ್ನ 2.00 ರಿಂದ ಸಂಜೆ 4.00 ಗಂಟೆ ಮೇಲಿನಂತೆ ಮುನಿಸಿಪ್ ಅಂಡ್ ೋಕ್ ಬೋರ್ಡ್ಸ್ ಪತ್ರಿಕೆಋ2 ಕ ರ್ನಾಟಕ ಕನ್‌ಸ್ಯೂಮರ್ ಪ್ರೋಟಕ್ಷನ್ಸ್ ಸ್ಟೇಟ್ ಕಮಿ%ನ್ ಅಂಡ್ ಡಿಸ್ಟ್ರಿಕ್ ಫೋರಮ್ ಸರ್ವಿಸ್ ಎಕ್ಸಾಮಿನೇ%ನ್, ಪತ್ರಿಕೆಋ2
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ೧೪೫೩ ೧೪೫೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ಭಾಗ - ೫ ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ೧೪೫೫

ವಿ. ಬಿ. ಪಾಟೀಲ್

ಕಾರ್ಯದರ್ಶಿ ಹಾಗೂ ನಿಯಂತ್ರಕರು,

ಇಲಾಖಾ ಪರೀಕ್ಷೆಗಳು,

ಕರ್ನಾಟಕ ಲೋಕಸೇವಾ ಆಯೋಗ.

ಕರ್ನಾಟಕ ಲೋಕಸೇವಾ ಆಯೋಗ,``ಉದ್ಯೋಗ ಸೌಧ``, ಬೆಂಗಳೂರು-560001.

ಅಧಿಸೂಚನೆ ಸಂಖ್ಯೆ ಇ.ಪ.(1)852/2012-13/ಪಿಎಸ್‌ಸಿ, ದಿನಾಂಕ: 30-08-2012

ಅನುಬಂಧ- `` ಬಿ ''

2012ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳು

ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಯಲಿರುವ ಪರೀಕ್ಷೆಗಳ ವೇಳಾಪಟ್ಟಿ.

ಕ್ರ.ಸಂ ವಾರ ದಿನಾಂಕ ವ ೕಳೆ ೆ ವಿಉಯ
1 2 3 4 5
1. ಬ ಾನುವಾರ 23$12$2012 ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ಗಂಟೆ ಮೇಲಿನಂತೆ ಮೇಲಿನಂತೆ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 12.00 ಗಂಟೆ ಮೇಲಿನಂತೆ ಮಧ್ಯಾಹ್ನ 2.00 ರಿಂದ ಸಂಜೆ 4.00 ಗಂಟೆ ಮೇಲಿನಂತೆ ಎಸ್.ಎ.ಎಸ್.ಭಾಗಋ I, ಪತ್ರಿಕೆಋ1 ಮತ್ತು ಎೆಕ್ಟ್ರಿಸಿಟಿ ಆಡಿಟ್ ಅಂಡ್ ಅಕೌಂಟ್ಸಾ್‌ಸ್ (ಹೈಯರ್) ಬ ಾಗಋ II (ಎರಡಕ್ಕೂ ಒಂದೇ ಪ್ರಶ್ನೆ ಪತ್ರಿಕೆ) (ಪುಸ್ತಕಗಳಿಲ್ಲದೆ) ಟ್ರೆಜರಿ ಅಕೌಂಟ್ಸ್ ಭಾಗಋ I ಪತ್ರಿಕೆಋ1 (ಪುಸ್ತಕಗಳಿಲ್ಲದೆ) ಕನ್ನಡ ಪತ್ರಿಕೆಋ1 (ಐಎಎಸ್,ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಿಗೆ ಮಾತ್ರ) (ಪುಸ್ತಕಗಳಿಲ್ಲದೆ) ಸ್ಪೆ%್ ಾಸ್ ಅಂಡ್ ಸರ್ವೀಸ್ ರ್ಸೂ್ ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನ್ ಎಕ್ಸಾಮಿನೇ%ನ್ ಎಸ್.ಎ.ಎಸ್.ಭಾಗಋ I ಪತ್ರಿಕೆಋ2 (ಪುಸ್ತಕಗಳಿಲ್ಲದೆ) ಟ್ರೆಜರಿ ಅಕೌಂಟ್ಸ್ ಭಾಗಋ I ಪತ್ರಿಕೆಋ2 (ಪುಸ್ತಕಗಳಿಲ್ಲದೆ)
ಮಧ್ಯಾಹ್ನ 2.00 ರಿಂದ ಸಂಜೆ 5.00 ಗಂಟೆ ಮೇಲಿನಂತೆ ಮೇಲಿನಂತೆ ಸೆಕ್ರೆಟೇರಿಯಟ್ ಮ್ಯಾನುಯ್ ಭಾಗಋ II ಟ ಾ ್ರನ್ಸೇ್‌ಶನ್ ಟೆಸ್ಟ್ (ಪುಸ್ತಕಗಳಿಲ್ಲದೆ) ಕ ನ್ನಡ ಪತ್ರಿಕೆಋ2 (ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಿಗೆ ಮಾತ್ರ) (ಪುಸ್ತಕಗಳಿಲ್ಲದೆ)
2 . ಸ ೂೕಮವಾರ ೆ 2 4$12$2012 ಬೆಳಿಗ್ಗೆ 10.00 ರಿಂದ 12.00 ಗಂಟೆ ಮೇಲಿನಂತೆ ಮಧ್ಯಾಹ್ನ 2ಋ00 ರಿಂದ ಸಂಜೆ 4ಋ00ಗಂಟೆ ಮೇಲಿನಂತೆ ಎ ಸ್.ಎ.ಎಸ್. ಭಾಗಋ I ಪತ್ರಿಕೆಋ3 ಟ್ರೆಜರಿ ಅಕೌಂಟ್ಸ್ ಭಾಗಋ I ಪತ್ರಿಕೆಋ3 ಎಸ್.ಎ.ಎಸ್. ಭಾಗಋ II ಪತ್ರಿಕೆಋ1 (ಪುಸ್ತಕಗಳಿಲ್ಲದೆ) ಟ್ರೆಜರಿ ಅಕೌಂಟ್ಸ್ ಭಾಗಋ II ಪತ್ರಿಕೆಋ1 (ಎಲಿಮೆಂಟರಿ ಬುಕ್ ಕೀಪಿಂಗ್)
3 ಬ ುಧವಾರ 2 6$12$2012 ಬೆಳಿಗ್ಗೆ 10.00 ರಿಂದ 12.00 ಗಂಟೆ ಮೇಲಿನಂತೆ ಮೇಲಿನಂತೆ ಮಧ್ಯಾಹ್ನ 2ಋ00 ರಿಂದ ಸಂಜೆ 4ಋ00ಗಂಟೆ ಮೇಲಿನಂತೆ ಮೇಲಿನಂತೆ ಎ ಸ್.ಎ.ಎಸ್. ಭಾಗಋ II ಪತ್ರಿಕೆಋ2 ಎೆಕ್ಟ್ರಿಸಿಟಿ ಾಸ್ ಪರೀಕ್ಷೆ ಪತ್ರಿಕೆಋ1 ಟ್ರೆಜರಿ ಅಕೌಂಟ್ಸ್ ಭಾಗಋ II ಪತ್ರಿಕೆಋ2 (ಪುಸ್ತಕಗಳಿಲ್ಲದೆ) ಎೆಕ್ಟ್ರಿಸಿಟಿ ಾಸ್ ಪರೀಕ್ಷೆ ಪತ್ರಿಕೆಋ2 ಎಸ್.ಎ.ಎಸ್ ಭಾಗಋ II ಪತ್ರಿಕೆಋ3 ಟ್ರೆಜರಿ ಅಕೌಂಟ್ಸ್ ಭಾಗಋ II ಪತ್ರಿಕೆಋ3
4 . ಗ ುರುವಾರ 2 7$12$2012 ಬೆಳಿಗ್ಗೆ 10.00 ರಿಂದ 12.00 ಗಂಟೆ ಮಧ್ಯಾಹ್ನ 2ಋ00 ರಿಂದ ಸಂಜೆ 4ಋ00ಗಂಟೆ ಎ ಸ್.ಎ.ಎಸ್. ಭಾಗಋ III ಪತ್ರಿಕೆಋ1 ಎಸ್.ಎ.ಎಸ್. ಭಾಗಋ III ಪತ್ರಿಕೆಋ2 (ಪುಸ್ತಕಗಳಿಲ್ಲದೆ)
5 . ಶ ುಕ್ರವಾರ 2 8$12$2012 ಬೆಳಿಗ್ಗೆ 10.00 ರಿಂದ 12.00 ಗಂಟೆ ಮಧ್ಯಾಹ್ನ 2ಋ00 ರಿಂದ ಸಂಜೆ 4ಋ00ಗಂಟೆ ಮೇಲಿನಂತೆ ಎ ಸ್.ಎ.ಎಸ್. ಭಾಗಋ III ಪತ್ರಿಕೆಋ3 ಎ ಸ್.ಎ.ಎಸ್. ಭಾಗಋ III ಪತ್ರಿಕೆಋ4 (ಪುಸ್ತಕಗಳಿಲ್ಲದೆ) ಎ ೆಕ್ಟ್ರಿಸಿಟಿ(ಆಡಿಟ್ ಅಂಡ್ ಅಕೌಂಟ್ಸ್) ಾಸ್ ೋಯರ್ ಪರೀಕೆ ್ಷ
6 . ಶ ನಿವಾರ 2 9$12$2012 ಬೆಳಿಗ್ಗೆ 10.00 ರಿಂದ 12.00 ಗಂಟೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮೇಲಿನಂತೆ ಮಧ್ಯಾಹ್ನ 2ಋ00 ರಿಂದ ಸಂಜೆ 4ಋ00ಗಂಟೆ ಮೇಲಿನಂತೆ ಎ ೆಕ್ಟ್ರಿಸಿಟಿ (ಆಡಿಟ್ ಅಂಡ್ ಅಕೌಂಟ್ಸ್) ಾಸ್ ಹೈಯರ್ ಪರೀಕೆ ್ಷ ಭಾಗಋ I ಎಸ್.ಎ.ಎಸ್ ಭಾಗಋ III ಪತ್ರಿಕೆಋ5 ಸೆಕ್ರೆಟೇರಿಯೆಟ್ ಮ್ಯಾನ್ಯುಯ್ ಬ ಾಗಋ I ಪತ್ರಿಕೆಋ1 ಇಂಡಿಯನ್ ಕಾಂಟ್ರಾಕ್ಟ್ ಆಕ್ಟ್ ಕರ್ನಾಟಕ ೋಕಸೇವಾ ಆಯೋಗ ಮ್ಯಾನ್ಯುಯ್ ಸ ೆಕ್ರೆಟೇರಿಯೆಟ್ ಮ್ಯಾನ್ಯುಯ್ ಬ ಾಗ$ I ಪತ್ರಿಕೆಋ2 ಕ ರ್ನಾಟಕ ೋಕಸೇವಾ ಆಯೋಗ ರಿಕ್ರೂಟ್‌ಮೆಂಟ್ ರ್ಸೂ್
೧೪೫೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ಭಾಗ - ೫ ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ೧೪೫೭

ವಿ. ಬಿ. ಪಾಟೀಲ್

ಕಾರ್ಯದರ್ಶಿ ಹಾಗೂ ನಿಯಂತ್ರಕರು, ಪಿ.ಆರ್. 138

ಇಲಾಖಾ ಪರೀಕ್ಷೆಗಳು,

ಕರ್ನಾಟಕ ಲೋಕಸೇವಾ ಆಯೋಗ.

FORM-IV

(SEE RULE-12)

NOTICE

It is hereby notified that the undersigned has changed his/her name from VENKATAMMA H.M. to VINUTHA. M.

P.D. 110

VENKATAMMA H.M.

FORM-IV

(SEE RULE-12)

NOTICE

It is hereby notified that the undersigned has changed his/her name from BASAPPA YAMUNAPPA CHALWADI. to BASAPPA YAMANAPPA HOSAMANI.

P.D. 111

BASAPPA YAMUNAPPA CHALWADI.

೧೪೫೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ಭಾಗ - ೫

FORM-IV

(SEE RULE-12)

NOTICE

It is hereby notified that the undersigned has changed his/her name from SUBANSAB S/O MALIKASAB PINJAR to SUBANSAB S/O MALIKASAB SASARAWAD.

P.D. 112

SUBANSAB S/O MALIKASAB PINJAR

FORM-1

(See Rule 9)

Department of Education

Office of the Deputy Director, Department of Public Instruction, Gadag

NOTIFICATION

Sri /Smt. SIDDAPPA FAKKIRAVVA MADAR Working as Primary School Assistant Teacher, H.P.S. Hesarur Tq.

Mundragi, Dist. Gadag in the Education Department of/Office of Block Education Office, Mundaragi Dist, Gadag is permitted to change his/ her name to SIDDAPPA FAKKIRAVVA HOSAMANI.

Signature and Designation of the PD-113

Appointing Authority

FORM-IV

(SEE RULE-12)

NOTICE

It is hereby notified that the undersigned has changed his/her name from H.K. KALA to H.J. KALAPPA.

P.D. 114

H.K. KALA

FORM-1

(See Rule 9)

Department of Police

Office of the Commandant, IInd Bn, K.S.R.P. Belgaum

NOTIFICATION

Sri/Smt. DEVENDRAPPA DEVAPPA Working as Police Constable in the Police Department of/Office of the Commandant IInd BN K.S.R.P. Belgaum is permitted to change his/ her name to DEVENDRAPPA DEVAPPA BADIGER.

Signature and Designation of the PD-115

Appointing Authorityಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ೧೪೫೯

FORM-1

(See Rule 9)

Department of Education

Office of the Deputy Director, Department of Public Instruction, Gadag

NOTIFICATION

Sri/Smt. MALLAPPA DURAGAVVA HARIJAN Working as Primary School Assistant Teacher L.P.S. Adavisomapur Sanna Tanda, Tq. Gadag, Dist. in the Education Department of/Office of Block Education Office, Rural Range, Gadag Dist, Gadag is permitted to change his/ her name to MALLAPPA DURAGAVVA HARIWAN.

Signature and Designation of the PD-116

Appointing Authority

ನಮೂನೆ-1

(ನಿಯಮ-9)

ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಛೇರಿ, ಆನಂದರಾವ್ ಸರ್ಕಲ್, ಬೆಂಗಳೂರು-09

ಕ್ರ.ಸಂ. ಎನ್ಆರ್ಎಸ್ (4) 35/11-12, ದಿನಾಂಕ 02-12-2011

ಅಧಿಸೂಚನೆ

ಶ್ರೀಮತಿ ಕಮಲಾ ಸುಭಾಸ ಪ್ಯಾಟಿ ಶುಶ್ರೂಷಕಿ, ತಾಲ್ಲೂಕು ಆಸ್ಪತ್ರೆ, ಮುದ್ದೇಬಿಹಾಳ, ಬಿಜಾಪುರ ಜಿಲ್ಲೆ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇವರ ಹೆಸರನ್ನು ಶ್ರೀಮತಿ ಕಮಲಾ ಗಂ. ಅಮೀತ ಚಮ್ಮಲಗಿ ಎಂದು ಬದಲಾವಣೆ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

ನಿರ್ದೇಶಕರು,

ಪಿ.ಡಿ.117

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಛೇರಿ,

ಆನಂದರಾವ್ ಸರ್ಕಲ್, ಬೆಂಗಳೂರು-09 ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಗ್ರಾಮಲೆಕ್ಕಿಗರ ಆಯ್ಕೆ ಪ್ರಾಧಿಕಾರ ರವರ ಕಾರ್ಯಾಲಯ, ಕೋಲಾರ ಜಿಲ್ಲೆ, ಕೋಲಾರ.

ತಿದ್ದುಪಡಿ

ಸಂಖ್ಯೆ: ಸಿಬ್ಬಂದಿ(2)ಸಿಆರ್:15/2012-13, ದಿನಾಂಕ: 16ನೇ ಜುಲೈ, 2012.

ಈ ಕಛೇರಿಯಿಂದ ಹೊರಡಿಸಿದ ಇದೇ ಸಮಸಂಖ್ಯೆಯ ಅಧಿಸೂಚನೆ

ದಿನಾಂಕ : 29-06-2012ಕ್ಕೆ ಈ ಕೆಳಕಂಡಂತೆ ತಿದ್ದುಪಡಿ ಮಾಡಲಾಗಿದೆ.

ಈ ಕಛೇರಿ ಸಮಸಂಖ್ಯೆಯ ಅಧಿಸೂಚನೆ ದಿನಾಂಕ 29-06-2012 ರ ಪುಟಸಂಖ್ಯೆ 3ರ ಕಂಡಿಕೆ-1 ರಲ್ಲಿ ಅರ್ಜಿಗಳನ್ನು ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ತುಂಬತಕ್ಕ ಅಧಿಕೃತ ವೆಬ್‌ಸೈಟ್ ವಿಳಾಸ http://recruitment.kar.nic.in ಎಂಬುದಾಗಿ ತಿಳಿಸಲಾಗಿತ್ತು.

ತಾಂತ್ರಿಕ ಕಾರಣಗಳಿಂದ ಎನ್.ಐ.ಸಿ. ರವರು ಈಗ ಅಧಿಕೃತ ವೆಬ್‌ಸೈಟ್ ವಿಳಾಸವನ್ನು http://kolar-va.kar.nic.in ಎಂಬುದಾಗಿ ಮಾರ್ಪಡಿಸಿದ್ದು, ಅದರಂತೆ ಅರ್ಜಿಗಳನ್ನು ಸದರಿ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ತುಂಬತಕ್ಕದ್ದು.

ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು

ಗ್ರಾಮಲೆಕ್ಕಿಗರ ಆಯ್ಕೆ ಪ್ರಾಧಿಕಾರ ಪಿ.ಆರ್. 139

ಕೋಲಾರ ಜಿಲ್ಲೆ, ಕೋಲಾರ.

೧೪೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೨ ಭಾಗ - ೫

ಕರ್ನಾಟಕ ಲೋಕಸೇವಾ ಆಯೋಗ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ: ಇಪ(2)250/2012-13/ಪಿಎಸ್‌ಸಿ, ಬೆಂಗಳೂರು, ದಿನಾಂಕ: 10ನೇ ಆಗಸ್ಟ್, 2012.

2011ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ: 12-04-2012ರ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಅಭ್ಯರ್ಥಿಯು ಗಳಿಸಿರುವ ಅಂಕಗಳು ಹಾಗೂ ಹಿಂದಿನ ಅಧಿವೇಶನದಲ್ಲಿ ಗಳಿಸಿರುವ ವಿನಾಯಿತಿಯನ್ನು ಪರಿಗಣಿಸಿ ತತ್ಸಂಬಂಧ ಸದರಿ ಅಭ್ಯರ್ಥಿಯ ಫಲಿತಾಂಶವನ್ನು ತಿದ್ದುಪಡಿಯ ಮೂಲಕ ಸಂಬಂಧಿತರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಅಪೆಂಡಿಕ್ಸ್ "ಎ"

ಚಿಕ್ಕಬಳ್ಳಾಪುರ ಕೇಂದ್ರ

ಅಕೌಂಟ್ಸ್ ಹೈಯರ್

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದರಡಿ ನೋಂದಣಿ ಸಂಖ್ಯೆ .36124ನ್ನು ಸೇರಿಸಿ ಓದಿಕೊಳ್ಳುವುದು.

ವಿ.ಬಿ. ಪಾಟೀಲ್,

ಕಾರ್ಯದರ್ಶಿ ಹಾಗೂ ನಿಯಂತ್ರಕರು,

ಇಲಾಖಾ ಪರೀಕ್ಷೆಗಳು,

ಪಿ.ಆರ್. 140

ಕರ್ನಾಟಕ ಲೋಕ ಸೇವಾ ಆಯೋಗ.

Cite this issue. Karnataka Gazette, Government of Karnataka, 13 September 2012. Indian Gazettes, https://egazette.servantsofknowledge.in/details/in.gazette.karnataka_new.2012-09-13.Part-5/. Archive identifier in.gazette.karnataka_new.2012-09-13.Part-5.