Servants of Knowledge
Karnataka Gazette · Government of Karnataka

Karnataka Gazette, Part Part-3, 25 April 2013

Published 25 April 2013

Part
Part-3
Identifier
in.gazette.karnataka_new.2013-04-25.Part-3
Languages
English, Kannada
Published at
Original source ↗

click here for IIIF manifest

RNI No. KARBIL/2001/47147

ಬೆಂಗಳೂರು, ಗುರುವಾರ, ಏಪ್ರಿಲ್ ೨೫, ೨೦೧೩ (ವೈಶಾಖ ೫, ಶಕ ವರ್ಷ ೧೯೩

ಬೆಂಗಳೂರು, ಗುರುವಾರ,

Bangalore, Th

ore, Thursday, April 25, 2013 ( Vaishaka 5, Shaka Varsha 193

ಸಂಪುಟ ೧೪೮

Volume 148

ಶಕ ವರ್ಷ ೧೯೩೫)

Shaka Varsha 1935)

ಸಂಚಿಕೆ ೧೭

Issue 17

ಭಾಗ ೩

ಸರ್ಕಾರದ ಆಯಾ ಇಲಾಖೆಗಳ ಮುಖ

ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ

್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ

ಸಂಬಂಧಿಸಿದ ಅಧಿಸೂಚನೆಗಳು

ಸಂಬಂಧಿಸಿದ ಅಧಿಸೂಚನೆಗಳು

COMMERCIAL TAXES DEPARTMENT

COMMERCIAL TAXES DEPARTMENT

PROCEEDINGS OF THE COMMISSIONER OF COMMERCIAL TAXES, (KARNATAKA), BANGALORE-

PROCEEDINGS OF THE COMMISSIONER OF COMMERCIAL TAXES, (KARNATAKA), BANGALORE

PROCEEDINGS OF THE COMMISSIONER OF COMMERCIAL TAXES, (KARNATAKA), BANGALORE

CLARIFICATION UNDER SECTION 59(4) OF THE KARNATAKA VALUE ADDED TAX ACT, 2003.

CLARIFICATION UNDER SECTION 59(4) OF THE KARNATAKA VALUE ADDED TAX ACT, 2003.

CLARIFICATION UNDER SECTION 59(4) OF THE KARNATAKA VALUE ADDED TAX ACT, 2003.

Clarification under Section 59(4) regarding the rate of tax applicable on 'Structural Sub: KVAT Act, 2003 - Clarification under Section 59(4) regarding the rate of tax applicable on 'Structural Clarification under Section 59(4) regarding the rate of tax applicable on 'Structural Insulated Sandwich Panels '-reg. Insulated Sandwich Panels '

Ref: Application dated: 05-12-2012 of

2012 of Humayun Kabeer,Partner, of M/s. Noble Prefab Industries, Bangalore

Kabeer,Partner, of M/s. Noble Prefab Industries, Bangalore.

(TIN 29150685865)

In the application cited aboveof Sri. Humayun Kabeer, Partner of M/s. Noble Prefab Industries, Sy.No.91/6, Sarjapura In the application cited aboveof Sri. Humayun Kabeer, Partner of M/s. Noble Prefab Industries, Sy.No.91/6, Sarjapura Hoskote Road, Mugalur Village, SarjapuraHobli, AnekalTaluk, Bangalore-562 125 has sought Hoskote Road, Mugalur Village, SarjapuraHobli, AnekalTaluk, Bangalore P.O., NH-207, 5 K.M., Sarjapura-Hoskote Road, Mugalur Village, SarjapuraHobli, AnekalTaluk, Bangalore

clarification regarding the rate of tax applicable on 'Structural Insulated Sandwich Panels'. clarification regarding the rate of tax applicable on 'Structural Insulated Sandwich Panels'.

2. Section 59(4) of the Karnataka Value Added Tax Act, 2003 empowers the Commissioner of Commercial Taxes to clarify the rate of 2. Section 59(4) of the Karnataka Value Added Tax Act, 2003 empowers the Commissioner of Commercial Taxes to clarify the ra 2. Section 59(4) of the Karnataka Value Added Tax Act, 2003 empowers the Commissioner of Commercial Taxes to clarify the ra der the Act, if he considers it necessary or expedient so to do, for the purpose of maintaining uniformity in the work of tax payable under the Act, if he considers it necessary or expedient so to do, for the purpose of maintaining uniformity in the work of der the Act, if he considers it necessary or expedient so to do, for the purpose of maintaining uniformity in the work of assessments and collection of revenue. It is examined and found that the clarification requested by the petitioner is within the scope of assessments and collection of revenue. It is examined and found that the clarification requested by the petitioner is within assessments and collection of revenue. It is examined and found that the clarification requested by the petitioner is within the aforesaid provision and it is necessary that the clarification be issued for the purpose of maintaining uniformity in the work of the aforesaid provision and it is necessary that the clarification be issued for the purpose of maintaining uniformity in the the aforesaid provision and it is necessary that the clarification be issued for the purpose of maintaining uniformity in the assessments and collection of revenue.

3. Hence the following clarification is issued. 3. Hence the following clarification is issued.

CLARIFICATION NO.CLR.CR.170/12-13, DATED 15-02-2013

CLARIFICATION NO.CLR.CR.170/

It is clarified that 'Structural Insulated Sandwich Panels' are liable to tax at 14.5% from 01-08- It is clarified that 'Structural Insulated Sandwich Panels' are liable to tax

-2012 under Section 4(1)(b)(iii) Karnataka Value Added Tax Act,2003. of the Karnataka Value Added Tax Act,2003.

YOGENDRA TRIPATHI

YOGENDRA TRIPATHI

PR.227

axes, (Karnataka), Bangalore. Commissioner of Commercial Taxes, (Karnataka), Bangalore.

COMMERCIAL TAXES DEPARTMENT

COMMERCIAL TAXES DEPARTMENT

PROCEEDINGS OF THE COMMISSIONER OF COMMERCIAL TAXES, (KARNATAKA), BANGALORE-

PROCEEDINGS OF THE COMMISSIONER OF COMMERCIAL TAXES, (KARNATAKA), BANGALORE

PROCEEDINGS OF THE COMMISSIONER OF COMMERCIAL TAXES, (KARNATAKA), BANGALORE

CLARIFICATION UNDER SECTION 59(4) OF THE KARNATAKA VALUE ADDED TAX ACT, 2003.

CLARIFICATION UNDER SECTION 59(4) OF THE KARNATAKA VALUE ADDED TAX ACT, 2003.

CLARIFICATION UNDER SECTION 59(4) OF THE KARNATAKA VALUE ADDED TAX ACT, 2003.

n under Section 59(4) regarding the rate of tax applicable on 'Powder Flame spray coating n under Section 59(4) regarding the rate of tax applicable on 'Powder Flame Sub: KVAT Act, 2003 - Clarification under Section 59(4) regarding the rate of tax applicable on 'Powder Flame transactions'-reg.

Ref: Application dated: 24-12-2012 of M/s. Spraymet Surface Technologies Pvt Ltd., Bangalore. (TIN 29300067553) 2012 of M/s. Spraymet Surface Technologies Pvt Ltd., Bangalore. (TIN 29300067553) In the application cited above of M/s. Spraymet Surface Technologies Pvt. Ltd., No.A

cited above of M/s. Spraymet Surface Technologies Pvt. Ltd., No.A-413, 9

413, 9th Main, 2nd stage, Peenya 560058 has sought clarification regarding the rate of tax applicable on 'Powder Flame Spray Coating Industrial Area, Bangalore-560058 has sought clarification regarding the rate of tax applicable on 'Powder Flame Spray Coating 560058 has sought clarification regarding the rate of tax applicable on 'Powder Flame Spray Coating transactions'.

(೮೬೧)

೮೬೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ಭಾಗ ೩

2. Section 59(4) of the Karnataka Value Added Tax Act, 2003 empowers the Commissioner of Commercial Taxes to clarify the rate of tax payable under the Act, if he considers it necessary or expedient so to do, for the purpose of maintaining uniformity in the work of assessments and collection of revenue. It is examined and found that the clarification requested by the petitioner is within the scope of the aforesaid provision and it is necessary that the clarification be issued for the purpose of maintaining uniformity in the work of assessments and collection of revenue.

3. Hence the following clarification is issued.

CLARIFICATION NO.CLR.CR.184/12-13, DATED 25-02-2013

It is clarified that,

(i) The taxable turnover in respect of transfer of property in goods involved in the execution of works contract of powder coating (through powder flame spray coating method) of components supplied by customers, attracts tax at 5.5% under Section 4(1)(c) read with Sl.No.6 of Sixth Schedule to the Karnataka Value Added Tax Act, 2003 and

(ii) sale of unspecified components manufactured and power coated attracts tax at 14.5% under Section (4)(1)(b)(iii) of the Karnataka Value Added Tax Act, 2003.

YOGENDRA TRIPATHI

PR.218

Commissioner of Commercial Taxes, (Karnataka), Bangalore.

ಸಹಕಾರ ಇಲಾಖೆ

ಸಹಕಾರ ಸಂಘಗಳ ಉಪ ನಿಬಂಧಕರು, ಮಿನಿ ವಿಧಾನ ಸೌಧ , ಕೊಠಡಿ ಸಂಖ್ಯೆ:305, 2 ನೇ ಮಹಡಿ, ತುಮಕೂರು ಜಿಲ್ಲೆ, ತುಮಕೂರು ಇವರ

ಕಾರ್ಯಾಲಯದ ನಡವಳಿಕೆಗಳು.

ವಿಷಯ: ಸಮಾಪನೆಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘ ನಿ.,ಬುಕ್ಕಪಟ್ಟಣ ಕೊರಟಗೆರೆ ತಾಲ್ಲೂಕು ಇದರ ನೊಂದಣಿ ರದ್ದತಿ ಬಗ್ಗೆ ಉಲ್ಲೇಖ 1) ಸದರಿ ಸಂಘದ ಸಮಾಪನಾಧಿಕಾರಿ ಹಾಗೂ ಸಹಕಾರ ಅಭಿವೃದ್ದಿ ಅಧಿಕಾರಿ ಕೊರಟಗೆರೆ ಇವರ ಪತ್ರ ಸಂಖೆ.ಸ.ಅ.ಅ.ಕೊ/ಋು.ಸ. ಅಎಂ.ಪಿ.ಸಿಎಸ್ ಬುಕ್ಕಪಟ್ಟಣ/3/2011-12 ದಿನಾಂಕ:9-1-2013.

2) ಈ ಕಛೇರಿ ಸಮಾಪನಾ ಆದೇಶ ಸಂಖ್ಯೆ ಡಿಆರ್‌ಟಿ:ಡಿಎಲ್ಎಸ್:202/ ಸಿಆರ್47/99-2000 ದಿನಾಂಕ:12-3-2004 ಪ್ರಸ್ತಾವನೆ:

ಕೊರಟಗೆರೆ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘ ನಿ., ಬುಕ್ಕಪಟ್ಣ ಈ ಸಂಘವು ಮಧುಗಿರಿ ಉಪವಿಭಾಗ ಸಹಾಯಕ ನಿಬಂಧಕರಿಂದ ನೊಂದಣಿಯಾಗಿದ್ದು, ನೊಂದಣಿ ಸಂಖ್ಯೆ:ಎಆರ್‌ಟಿ/2/ಆರ್‌ಸಿಎಸ್:2971/75-76 ದಿನಾಂಕ:24-9-1975 ಆಗಿರುತ್ತದೆ. ಈ ಸಂಘವು ತನ್ನ ಉದ್ಧೇಶದ ರೀತ್ಯಾ ಕಾರ್ಯನಿರ್ವಹಿಸದೇ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸದರಿ ಸಂಘವನ್ನು ಸಮಾಪನೆಗೊಳಿಸಿ ಸಹಕಾರ ಅಭಿವೃದ್ದಿ ಅಧಿಕಾರಿ ಕೊರಟಗೆರೆ ಇವರನ್ನು ಸಮಾಪನಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸುವಂತೆ ಮಧುಗಿರಿ ಉಪವಿಭಾಗದ ಸಹಾಯಕ ನಿಬಂಧಕರು ಕೋರಿಕೊಂಡ ಮೇರೆಗೆ ಉಲ್ಲೇಖ(2)ರ ಈ ಕಛೇರಿ ಆದೇಶದಂತೆ ಸಂಘವನ್ನು ಸಮಾಪನೆಗೊಳಿಸಿ ಸಹಕಾರ ಅಭಿವೃದ್ದಿ ಅಧಿಕಾರಿ ಕೊರಟಗೆರೆ ಇವರನ್ನು ಸಮಾಪನಾದಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿತ್ತು. ಉಲ್ಲೇಖ(1)ರಲ್ಲಿ ನಮೂದಿಸಿರುವಂತೆ ಋುಣ ಸಮಾಪನಾಧಿಕಾರಿಗಳು ಸಂಘದ ಆಸ್ತಿ ಜವಾಬ್ದಾರಿಗಳನ್ನು ವಿಲೇವಾರಿ ಮಾಡಿ ನೊಂದಣಿ ರದ್ದತಿಗೆ ಉಲ್ಲೇಖ(1)ರಲ್ಲಿ ತಿಳಿಸಿರುವಂತೆ ಪ್ರಸ್ತಾವೆ ಸಲ್ಲಿಸಿದ್ದು ಪ್ರಸ್ತಾವೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

ಆದೇಶ

ಸಂಖ್ಯೆ:ಡಿಆರ್‌ಟಿ:ಎಲ್‌ಕ್ಯೂಡಿ:ಡಿಎಲ್ಎಸ್:ನೊಂರ.202;2012-13 ದಿನಾಂಕ:19-1-2013.

ಹೆಚ್.ಬಾಲಶೇಖರ್ ಸಹಕಾರ ಸಂಘಗಳ ಉಪ ನಿಬಂಧಕರು, ತುಮಕೂರು ಜಿಲ್ಲೆ, ತುಮಕೂರು ಆದ ನಾನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 75 ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ ಸಿಒ39:ಸಿಎಲ್ಎಂ/2010 ದಿನಾಂಕ:17-2-2011ರನ್ವಯ ದತ್ತವಾಗಿರುವ ಅಧಿಕಾರವನ್ನು ಉಪಯೋಗಿಸಿ ಕೊರಟಗೆರೆ ತಾಲ್ಲೂಕು ಬುಕ್ಕಪಟ್ಣ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಇದರ ನೊಂದಣಿ ಸಂಖ್ಯೆ ಎಆರ್‌ಟಿಸಿ/2/ಆರ್‌ಸಿಎಸ್:2971/75-76 ದಿನಾಂಕ:24-9-1975ನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಸಂಘವನ್ನು ವಿಸರ್ಜನೆಗೊಳಿಸಿದೆ ಮತ್ತು ಇಂದಿನಿಂದ ಅಸ್ತಿತ್ವದಲ್ಲಿರುವುದಿಲ್ಲ.

ಈ ಆದೇಶವನ್ನು ಸ್ವಸಹಿ ಹಾಗೂ ಕಛೇರಿ ಮೊಹರಿನೊಂದಿಗೆ ದಿನಾಂಕ:19-1-2013ರಂದು ನೀಡಿರುತ್ತೇನೆ.

ಹೆಚ್.ಬಾಲಶೇಖರ್

ಸಹಕಾರ ಸಂಘಗಳ ಉಪ ನಿಬಂಧಕರು, PR.190

ತುಮಕೂರು ಜಿಲ್ಲೆ, ತುಮಕೂರು.

ಸಹಕಾರ ಇಲಾಖೆ

ಸಹಕಾರ ಸಂಘಗಳ ಉಪ ನಿಬಂಧಕರ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ನಂ, 143, 1ನೇ ಮಹಡಿ, ಮಲ್ಲೇಶ್ವರಂ ಸಹಕಾರ ಸಂಘಗಳ

ಕಟ್ಟಡ, 3ನೇ ಮುಖ್ಯ ರಸ್ತೆ, 8ನೇ ಅಡ್ಡರಸ್ತೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ, ಬೆಂಗಳೂರು.

ವಿಷಯ: ಸಮಾಪನೆಗೊಂಡಿರುವ ಸಣ್ಣ ನೀರಾವರಿ ನೀರು ಬಳಕೆದಾರರ ಸಹಕಾರ ಸಂಘ ಹೊಸಕೋಟೆ, ಹೊಸಕೋಟೆ ತಾಲ್ಲೂಕು ನೋಂದಣಿ ಸಂಖ್ಯೆಯನ್ನು ರದ್ದುಪಡಿಸುವ ಬಗ್ಗೆ.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ೮೬೩

ಉಲ್ಲೇಖ: 1. ಕಛೇರಿ ಆದೇಶ ಸಂಖ್ಯೆ: ಡಿಆರ್‌ಬಿ (ಆರ್) ಸಮಾಪನೆ/47/2010-11 ದಿ:18/2/2011.

2. ಸಹಕಾರ ಸಂಘಗಳ ಸಹಾಯಕ ನಿಬಂಧಕರು ದೊಡ್ಡಬಳ್ಳಾಪುರ ರವರ ಪತ್ರ ಸಂಖ್ಯೆ: ಸನಿ 47/ಸಮಾಪನೆ/4/12-13 ದಿ:01/10/2012.

ಹೊಸಕೋಟೆ ತಾಲ್ಲೂಕಿನ ಸಣ್ಣ ನೀರಾವರಿ ನೀರು ಬಳಕೆದಾರರ ಸಹಕಾರ ಸಂಘ ಹೊಸಕೋಟೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇದರ ಉಪನಿಯಮದಲ್ಲಿರುವ ಉದ್ದೇಶದ ರೀತ್ಯ ಕಾರ್ಯ ಚಟುವಟಿಕೆ ನಡೆಸದೆ ಸ್ಥಗಿತಗೊಂಡಿದ್ದರಿಂದ ಸಂಘದ ಕಾರ್ಯಕಾರಿ ಸಮಿತಿಯವರು ಈ ಸಹಕಾರ ಸಂಘವನ್ನು ಪುನಃಶ್ಚೇತನಗೊಳಿಸಲು ಆಸಕ್ತಿ ಇಲ್ಲದೇ ಇರುವುದರಿಂದ ಹಾಗೂ ಈ ಸಂಘದ ಸದಸ್ಯರಿಗಾಗಲಿ ಸಾರ್ವಜನಿಕರಿಗಾಗಲಿ ಯಾವುದೇ ಪ್ರಯೋಜನವಿಲ್ಲವೆಂದು ವರದಿಯಾಗಿದ್ದರಿಂದ ಉಲ್ಲೇಖ (1) ರಲ್ಲಿ ಸೂಚಿಸಿರುವ ದಿನಾಂಕ:18/2/2011ರ ಆದೇಶದನ್ವಯ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 72ರನುಸಾರ ಸಮಾಪನೆಗೊಳಿಸಿ ಸಮಾಪನಾದಿಕಾರಿಯನ್ನಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಹೊಸಕೋಟೆ ಇವರನ್ನು ನೇಮಕ ಮಾಡಲಾಗಿತ್ತು. ಸದರಿ ಸಮಾಪನಾಧಿಕಾರಿಗಳು ಈ ಸಂಘದ ಪ್ರಭಾರವಹಿಸಿಕೊಂಡು ಕಾಯ್ದೆ ಕಾನೂನು ಪ್ರಕಾರ ಆಸ್ತಿ ಜವಾಬ್ದಾರಿ ವಿಲೇವಾರಿ ಮಾಡಿ ಅವುಗಳ ನೋಂದಣಿ ರದ್ದತಿಗೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಈ ಸಂಘದ ಸಮಾಪನಾ ಕಾರ್ಯವನ್ನು ಮುಕ್ತಾಯಗೊಳಿಸಿದ್ದರಿಂದ ಈ ಸಂಘದ ನೋಂದಣಿ ರದ್ದು ಮಾಡುವಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ದೊಡ್ಡಬಳ್ಳಾಪುರ ಇವರು ಉಲ್ಲೇಖ (2)ರ ಪತ್ರದನ್ವಯ ಶಿಫಾರಸ್ಸು ಮಾಡಿರುತ್ತಾರೆ. ಸದರಿ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ನೋಂದಣಿ ರದ್ದು ಮಾಡುವುದು ಸೂಕ್ತವೆಂದು ಅಭಿಪ್ರಾಯ ಪಟ್ಟು ಈ ಕೆಳಗಿನ ಆದೇಶ ಹೊರಡಿಸಿದೆ.

ಆದೇಶ

ಕ್ರ.ಸಂ. ಡಿಆರ್‌ಬಿ (ಆರ್) ಸಮಾಪನೆ/47/10-11 ದಿನಾಂಕ: 07/02/2013

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 75 ರನುಸಾರ ಹಾಗೂ ಸರ್ಕಾರದ ಅಧಿಸೂಚನೆ ಕ್ರಮಾಂಕ: ಸಿಓ 139 ಸಿಎಲ್ ಎಂ 2010 ದಿನಾಂಕ: 17/2/2011ರನ್ವಯ ದತ್ತವಾಗಿರುವ ಅಧಿಕಾರದಂತೆ ಆರ್. ಲೋಕೇಶ ಸಹಕಾರ ಸಂಘಗಳ ಉಪನಿಬಂಧಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು ಆದ ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಈ ಕೆಳಗೆ ಸೂಚಿಸಿರುವ ಸಹಕಾರ ಸಂಘದ ನೋಂದಣಿ ರದ್ದುಗೊಳಿಸಿ ಆದೇಶಿಸಿರುತ್ತೇನೆ.

ಕ್ರ.ಸಂ. ನೋಂದಣಿ ರದ್ದುಪಡಿಸಿರುವ ಸಹಕಾರ ಸಂಘದ ಹೆಸರು ರ ದ್ದುಪಡಿಸಿದ ನೋಂದಣಿ ಸಂಖ್ಯೆ
1 ಸಣ್ಣ ನೀರಾವರಿ ನೀರು ಬಳಕೆದಾರರ ಸಹಕಾರ ಸಂಘ ನಿ., ಹೊಸಕೋಟೆ, ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಆ್ಲೆ. ಸಂಖ್ಯೆ: ಎಆರ್‌ಡಿ47/ನೋಂದಣಿ ಸಂ/30101/2000901 ದಿನಾಂಕ:25/9/2000

ಈ ಆದೇಶವನ್ನು ನನ್ನ ಸ್ವ ಸಹಿ ಹಾಗೂ ಕಛೇರಿಯ ಮುದ್ರೆಯೊಂದಿಗೆ ದಿನಾಂಕ: 07/02/2013ರಂದು ಹೊರಡಿಸಿರುತ್ತೇನೆ.

ಆರ್. ಲೋಕೇಶ್

PR.192

ಸಹಕಾರ ಸಂಘಗಳ ಉಪನಿಬಂಧಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು.

ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ ಇವರ ನ್ಯಾಯಾಲಯದಲ್ಲಿ

ಬಿ3:ಅಮೊ:ವಾಹನ:ವಿವ:44/11-12, ದಿನಾಂಕ: 23-02-2013

ಉಪಸ್ಥಿತರು : ಆರ್.ರವಿಶಂಕರ್, ಭಾ.ಅ.ಸೇ., ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ.

ಪಿರ್ಯಾಧಿದಾರರು : ವಲಯ ಅರಣ್ಯಾಧಿಕಾರಿ, ಸಾಗರ ವಲಯ, ಸಾಗರ (ಸಹಾಯಕ ಸರ್ಕಾರಿ ಅಭಿಯೋಜಕರು, ಸಾಗರ)

ಬಾಧ್ಯತೆದಾರರು : ಯಾರೂ ಇರುವುದಿಲ್ಲ.

ಪ್ರಸ್ತಾವನೆ:-

ದಿ:17-02-2012ರಂದು ಟಾಟಾ 709-ಕೆಎ-23-7071 ಮತ್ತು ಹೀರೋಹೊಂಡಾ ಬೈಕ್ ಕೆಎ-51-ವೈ-8310ರಲ್ಲಿ ಬೀಟೆ ನಾಟಾವನ್ನು ಅಕ್ರಮ ಸಾಗಾಣಿಕೆ ಮಾಡುತ್ತಿರುವಾಗ ತ್ಯಾಗರ್ತಿ ಶಾಖೆಯ ವನಪಾಲಕರು ಪತ್ತೆಹಚ್ಚಿ ಬರೆದ ಮಹಜರ್ ವಿವರ ಈ ಕೆಳಗಿನಂತಿದೆ.

ದಿ:16-02-2012ರಂದು ಸಾಗರ ವಲಯದ ತ್ಯಾಗರ್ತಿ ಶಾಖೆಯ ವನಪಾಲಕರು ಮತ್ತು ಸಿಬ್ಬಂದಿಯವರಿಗೆ ಸಾಗರ ತಾಲ್ಲೂಕು ಕಸಬಾ ಹೋಬಳಿ ಬರೂರು ಗ್ರಾಮದ ಸ.ನಂ: 137ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಬೀಟೆ ನಾಟಾ ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆಂದು ಬಂದ ಖಚಿತ ವರ್ತಮಾನದ ಮೇರೆಗೆ ಸದರಿ ಸ್ಥಳದಲ್ಲಿ ರಾತ್ರಿ ಕಾಯುತ್ತಿರುವಾಗ ದಿ: 17-02-2012ರ ಬೆಳಗಿನ ಜಾವ ಸುಮಾರು 1 ಗಂಟೆಯ ಸಮಯದಲ್ಲಿ ಕಾನಿನ ಕಡೆಯಿಂದ ಒಂದು ವಾಹನ ಬರುತ್ತಿದ್ದು, ಅದನ್ನು ನಿಲ್ಲಿಸಲು ಸೂಚಿಸಿದಾಗ ವಾಹನವನ್ನು ಶಾಲೆಯ ಕಾಂಪೌಂಡಿಗೆ ಹೊಡೆದು ನಿಲ್ಲಿಸಿದರು. ವಾಹನದಲ್ಲಿದ್ದ 5-6 ಜನ ವಾಹನದಿಂದ ಜಿಗಿದು ಕೈಗೆ ಸಿಗದೆ ಪರಾರಿಯಾದರು. ಓಡಿಹೋದ ಅಸಾಮಿಗಳನ್ನು ಹಿಡಿಯಲು ಇಲಾಖೆಯವರು ಬೆನ್ನಟ್ಟಿದಾಗ ಈ ವಾಹನದ ಹಿಂದೆ ಬರುತ್ತಿದ್ದ ಒಂದು ದ್ವಿಚಕ್ರವಾಹನದಲ್ಲಿದ್ದ ಅಸಾಮಿಗಳು ಬೈಕನ್ನು ಅಲ್ಲೇ ಬಿಟ್ಟು ಅವರ ಜೊತೆಯಲ್ಲಿ ಓಡಿಹೋಗಿರುತ್ತಾರೆ. ನಂತರ ವಾಹನಗಳನ್ನು ಪರಿಶೀಲಿಸಲಾಗಿ ಟಾಟಾ 709 ಕೆಎ-23-7071 ಮತ್ತು ಹೀರೊಹೊಂಡಾ ಬೈಕ್ ಕೆಎ-51-ವೈ-8310 ಆಗಿರುತ್ತದೆ. ಟಾಟಾ 709ರ ಒಳಗಡೆ 2 ಬೀಟೆ ನಾಟಾವಿದ್ದು, ಈ ನಾಟಾಕ್ಕೆ ಇಲಾಖಾ ಛಾಪಾದ ಗುರುತಿರಲಿಲ್ಲ. ಇದು ಅಕ್ರಮ ಸಾಗಾಣಿಕೆ ಎಂದು ಪರಿಗಣಿಸಿ, 2 ವಾಹನಗಳನ್ನು ಮತ್ತು ಅರಣ್ಯ ಉತ್ಪನ್ನವನ್ನು ಪ್ರಥಮ ವರ್ತಮಾನ ವರದಿ, ಜಪ್ತುವರದಿ, ಮಹಜರ್ ವರದಿಯೊಂದಿಗೆ ಇಲಾಖಾ ಪರ ವಶಪಡಿಸಿಕೊಂಡು, ವಾಹನದೊಳಗಿದ್ದ 2 ಬೀಟೆ ತುಂಡಿನ ಅಳತೆ ಮಾಡಲಾಗಿ 1.824 ಎಂ3 ಪ್ರಮಾಣವಿರುತ್ತದೆ. ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷನ್ 24, 62, 71 (ಎ), 104(ಎ) ಮತ್ತು೮೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ಭಾಗ ೩ ಕರ್ನಾಟಕ ಅರಣ್ಯ ಕಾನೂನು 1969 ಉಪನಿಯಮ 144, 165ರ ಪ್ರಕಾರ ತ್ಯಾಗರ್ತಿ ಶಾಖೆಯ ವನಪಾಲಕರು ಅರಣ್ಯ ಮೊಕದ್ದಮೆ ಸಂಖ್ಯೆ:93/11-12ನ್ನು ದಾಖಲಿಸಿರುತ್ತಾರೆ. ನಂತರ ವಾಹನ, ಅರಣ್ಯ ಉತ್ಪನ್ನ ಮತ್ತು ದಾಖಲೆಗಳನ್ನು ಮುಂದಿನ ತನಿಖೆಗಾಗಿ ವಲಯ ಅರಣ್ಯಾಧಿಕಾರಿ, ಸಾಗರ ವಲಯ ಇವರ ಸಮಕ್ಷಮ ಹಾಜರ್ಪಡಿಸಿರುತ್ತಾರೆ.

ವಲಯ ಅರಣ್ಯಾಧಿಕಾರಿ, ಸಾಗರ ಇವರು ಈ ವಾಹನ ಮತ್ತು ದಾಖಲೆಗಳನ್ನು ಈ ನ್ಯಾಯಾಲಯಕ್ಕೆ ಹಾಜರ್ಪಡಿಸಿರುತ್ತಾರೆ. ಈ ವಾಹನವನ್ನು ಸುರಕ್ಷತೆಗಾಗಿಡಲು ವಲಯ ಅರಣ್ಯಾಧಿಕಾರಿ, ಸರ್ಕಾರಿ ನಾಟಾ ಸಂಗ್ರಹಾಲಯ, ಸಾಗರ ಇವರ ಸುಪರ್ಧಿಗೆ ಕೊಡಲು ಈ ನ್ಯಾಯಾಲಯದಿಂದ ಆದೇಶವಾಗಿದೆ.

ಈ ವಾಹನಗಳ 'ಬಿ' ಎಕ್ಸ್‌ಟ್ರ್ಯಾಕ್ಟ್‌ನ್ನು ಈ ನ್ಯಾಯಾಲಯಕ್ಕೆ ಒದಗಿಸಲು ಸಾರಿಗೆ ಅಧಿಕಾರಿ, ಚಿಕ್ಕೋಡಿ ಮತ್ತು ಬೆಂಗಳೂರು ಇವರಿಗೆ ಈ ನ್ಯಾಯಾಲಯದಿಂದ ಬಿ3:ಅಮೊ:ವಾಹನ:ವಿವ-44/11-12 ದಿ: 20-06-2012ರಂದು ಪತ್ರ ಬರೆದು ಕೋರಲಾಗಿದೆ. ಅದರಂತೆ ಟಾಟಾ 709 ಕೆಎ-23- 7071ರ ಬಿ ಪ್ರತಿಯನ್ನು ಸಾರಿಗೆ ಅಧಿಕಾರಿ, ಚಿಕ್ಕೋಡಿ ಇವರು ಇಲ್ಲಿಯವರೆಗೆ ಈ ನ್ಯಾಯಾಲಯಕ್ಕೆ ಒದಗಿಸಿರುವುದಿಲ್ಲ. ಆದ್ದರಿಂದ ಆರ್.ಸಿ. ಮಾಲೀಕರಿಗೆ ಕರ್ನಾಟಕ ಅರಣ್ಯ ಕಾಯ್ದೆ 1963 ಸೆಕ್ಷನ್ 71(ಬಿ) (1)ರ ಪ್ರಕಾರ ನೋಟಿಸ್ ನೀಡಲು ಸಾಧ್ಯವಾಗಿರುವುದಿಲ್ಲ.

ಈ ನಡುವೆ ಈ ವಾಹನದ ಪ್ರಚಾರಕ್ಕಾಗಿ ಈ ನ್ಯಾಯಾಲಯದಿಂದ ಬಿ3-ಅಮೊ-ವಾಹನ-ವಿವ-35/11-12, ದಿ:12-03-2012 ರಂದು ಪ್ರಕಟಣೆ ಹೊರಡಿಸಿರುತ್ತದೆ. ಈ ಪ್ರಕಟಣೆಯ ಪ್ರತಿಯನ್ನು ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯ ಪತ್ರ ವಿಭಾಗ, ಬೆಂಗಳೂರು ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ, ಬೆಂಗಳೂರು ಇವರಿಗೆ ಕಳುಹಿಸಿ ಗೆಜೆಟ್ ಮತ್ತು ದಿನಪ್ರತಿಕೆಯಲ್ಲಿ ಪ್ರಕಟಿಸಲು ಕೋರಲಾಯಿತು. ಅದರಂತೆ, ದಿ:12-04-2012ರಂದು ರಾಜ್ಯ ಗೆಜೆಟ್ ಪತ್ರಿಕೆಯಲ್ಲಿ ಈ ಪ್ರಕಟಣೆಯು ಪ್ರಕಟಗೊಂಡಿರುತ್ತದೆ. ಪತ್ರಿಕೆಯಲ್ಲಿ ಪ್ರಕಟಗೊಂಡು 30 ದಿನಗಳಾದರೂ ವಾಹನ ಮಾಲೀಕರಿರಾಗಲೀ ಅವರ ಪರ ವಕೀಲರಾಗಲೀ ಈ ನ್ಯಾಯಾಲಯಕ್ಕೆ ಕ್ಲೇಮು ಅರ್ಜಿಯನ್ನು ಸಲ್ಲಿಸಿರುವುದಿಲ್ಲ.

ಸಹಾಯಕ ಸರ್ಕಾರಿ ಅಭಿಯೋಜಕರು ದಿ:19-01-2013ರಂದು ವಾದ ಮಂಡಿಸಿ, ಸದರಿ ವಾಹನದಲ್ಲಿ ಅರಣ್ಯ ಉತ್ಪನ್ನವನ್ನು ಸಾಗಿಸುತ್ತಿರುವಾಗ ಮಾಲು ಸಹಿತ ಸಾಗರ ವಲಯದ ತ್ಯಾಗರ್ತಿ ಶಾಖೆಯ ವನಪಾಲಕರು ಮತ್ತು ಸಿಬ್ಬಂದಿಯವರು ಪತ್ತೆಹಚ್ಚಿ ಕ್ರಿಮಿನಲ್ ಕೇಸ್ ದಾಖಲಿಸಿರುತ್ತಾರೆ. ಕೇಸ್ ದಾಖಲಿಸಿದ ಬಗ್ಗೆ ಪ್ರಥಮ ವರ್ತಮಾನ ವರದಿ, ಜಪ್ತಿ ವರದಿಯನ್ನು ವಲಯ ಅರಣ್ಯಾಧಿಕಾರಿ, ಸಾಗರ ಇವರು ಈ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.

ಇದರಿಂದ ಈ ವಾಹನದಲ್ಲಿ ಬೀಟೆ ನಾಟಾಗಳನ್ನು ಅಕ್ರಮವಾಗಿ ಸಾಗಿಸಿರುವುದು ಸಾಬೀತಾಗಿರುತ್ತದೆ. ಆದ್ದರಿಂದ ವಾಹನ ಮತ್ತು ಅರಣ್ಯ ಉತ್ಪನ್ನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಕೋರಿರುತ್ತಾರೆ.

ಈ ಪ್ರಕರಣದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಅಭಿಯೋಜಕರ ವಾದವನ್ನು ಕೇಳಿದೆ. ಹಾಗೂ ಈ ವಾಹನದ ಬಗ್ಗೆ ಹೆಚ್ಚಿನ ಪ್ರಚಾರಕ್ಕಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುತ್ತದೆ. ಈ ಪ್ರಕಟಣೆಯು ರಾಜ್ಯ ಗೆಜೆಟ್‌ನಲ್ಲಿ ಮತ್ತು ದಿನಪತ್ರಿಕೆಯಲ್ಲಿ ಪ್ರಕಟಗೊಂಡು 30 ದಿನಗಳಾದರೂ ಯಾರೂ ಹಕ್ಕು ಬಾಧ್ಯತೆಯ ಅರ್ಜಿಯನ್ನು ಈ ನ್ಯಾಯಾಲಯಕ್ಕೆ ಸಲ್ಲಿಸದೇ ಇದ್ದುದ್ದರಿಂದ ಈ ಪ್ರಕರಣದ ವಿದ್ಯಾಮಾನಗಳನ್ನು ಅರಿತು ಈ ಕೆಳಗಿನಂತೆ ಆದೇಶ ಹೊರಡಿಸಿದೆ.

ಆದೇಶ

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆರ್.ರವಿಶಂಕರ್, ಭಾ.ಅ.ಸೇ., ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ ಆದ ನಾನು, ಅರಣ್ಯ ಮೊಕದ್ದಮೆಯಲ್ಲಿ ಜಪ್ತು ಮಾಡಿದ ವಾಹನವಾದ ಟಾಟಾ 709-ಕೆಎ-23- 7071ನ್ನು ಅಂತಿಮವಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುತ್ತೇನೆ. ಮುಟ್ಟುಗೋಲು ಹಾಕಿಕೊಂಡ ವಾಹನ ಮತ್ತು ಅರಣ್ಯ ಉತ್ಪನ್ನವನ್ನು ಸರ್ಕಾರಕ್ಕೆ ಅನುಕೂಲಕರವಾಗಿ ವಿಲೇ ಮಾಡಲು ಆದೇಶಿಸಿದ್ದೇನೆ. ಈ ಆದೇಶವನ್ನು ಹೇಳಿ ಬರೆಯಿಸಿ, ಗಣಕಯಂತ್ರದಲ್ಲಿ ಮುದ್ರಿಸಿ, ನಂತರ ಸರಿಪಡಿಸಿ ದಿ: 23-02-2013 ರಂದು ನನ್ನ ಸಹಿ ಹಾಗೂ ಮೊಹರಿನೊಂದಿಗೆ ತೆರೆದ ನ್ಯಾಯಾಲಯದಲ್ಲಿ ಆದೇಶಿಸಿದ್ದೇನೆ. ಈ ಆದೇಶ ಹೊರಡಿಸಿದ 30 (ಮೂವತ್ತು) ದಿನಗಳ ಒಳಗಾಗಿ ಯಾರು ಮೇಲ್ಮನವಿ ಸಲ್ಲಿಸದೇ ಹೋದಲ್ಲಿ ಇದೇ ಅಂತಿಮ ಆದೇಶವಾಗಿರುತ್ತದೆ.

ಆರ್.ರವಿಶಂಕರ್

ಅಧಿಕೃತ ಅಧಿಕಾರಿ ಹಾಗೂ PR.203

ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ ಇವರ ನ್ಯಾಯಾಲಯದಲ್ಲಿ ಬಿ3:ಅಮೊ:ವಾಹನ:ವಿವ:12/11-12 ದಿನಾಂಕ: 23-02-2013

ಉಪಸ್ಥಿತರು : ಆರ್. ರವಿಶಂಕರ್, ಭಾ.ಅ.ಸೇ., ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ.

ಪಿರ್ಯಾಧಿದಾರರು : ವಲಯ ಅರಣ್ಯಾಧಿಕಾರಿ, ಆನಂಪುರಂ ವಲಯ, ಚೋರಡಿ (ಸಹಾಯಕ ಸರ್ಕಾರಿ ಅಭಿಯೋಜಕರು, ಸಾಗರ) ಬಾಧ್ಯತೆದಾರರು : ಯಾರೂ ಇರುವುದಿಲ್ಲ

ಪ್ರಸ್ತಾವನೆ:-

ದಿ:12-08-2011ರಂದು ಟಿಪ್ಪರ್ ಲಾರಿ ಕೆಎಲ್-06-ಎ-7277 ಮಾರುತಿ ವ್ಯಾನ್ ಕೆಎ-14-ಎಂ-4990, ಹೀರೋಹೊಂಡಾ ಬೈಕ್ ಕೆಎ-19- ಎಲ್-2199 ಮತ್ತು ಟಿವಿಎಸ್ ವಿಕ್ಟರ್ ಬೈಕ್ ಕೆಎ-18-ಕ್ಯೂ 3463ರಲ್ಲಿ ಸಾಗುವಾನಿ ಮತ್ತು ಬೀಟೆ ನಾಟಾಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಆನಂದಪುರಂ ವಲಯದ ವಲಯ ಅರಣ್ಯಾಧಿಕಾರಿಗಳು ಪತ್ತೆಹಚ್ಚಿ ಬರೆದ ಮಹಜರ್ ಈ ಕೆಳಗಿನಂತಿದೆ.

ದಿ:12-08-2011 ರಂದು ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ, ಚೋರಡಿ ಮತ್ತು ಸಿಬ್ಬಂದಿಯವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಸಾಗರ ತಾಲ್ಲೂಕು ಆನಂದಪುರಂ ಹೋಬಳಿ, ಮಳಲಿ ಗ್ರಾಮದ ಸ.ನಂ: 21ರ ಮಳಲಿ ಮೀಸಲು ಅರಣ್ಯದಲ್ಲಿ ಮರೆಯಲ್ಲಿ ನಿಂತು ಕಾಯುತ್ತಿರುವಾಗ ಕಾಸ್ಪಾಡಿ ಕಡೆಯಿಂದ ಒಂದು ಮಾರುತಿ ವ್ಯಾನ್, ಟಿಪ್ಪರ್ ಲಾರಿ, ಮಳಲಿ ಮಠದ ರಸ್ತೆ ಕಡೆ ಹೋಯಿತು. ನಂತರ 2 ಬೈಕುಗಳು ಆಗಾಗ ಹಿಂದೆ ಮುಂದೆ ಓಡಾಡುತ್ತಿರುವುದು ಕಂಡುಬಂದಿತು. ಸುಮಾರು ಅರ್ಧ ಗಂಟೆ ಕಾದು ನಂತರ ಯಾವುದೇ ವಾಹನ ವಾಪಾಸ್ಸು ಬಾರದಿರುವುದರಿಂದ ಇಲಾಖಾ ವಾಹನದಲ್ಲಿಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ೮೬೫ ಮಳಲಿ ಮಠದ ಕಡೆಗೆ ತೆರಳುತ್ತಿದ್ದಾಗ ದೂರದಲ್ಲಿ ಸುಮಾರು ಎಂಟು, ಹತ್ತು ಜನ ಆಸಾಮಿಗಳು ಟಿಪ್ಪರ್ ಲಾರಿಗೆ ಮಾರುತಿ ಓಮಿನಿ ಹೆಡ್‌ಲೈಟ್ ಬೆಳಕಿನ ಸಹಾಯದಿಂದ ಮರದ ತುಂಡುಗಳನ್ನು ಹಾಕುತ್ತಿರುವು ಕಂಡುಬಂದಿತು. ಇಲಾಖಾ ವಾಹನ ಬರುತ್ತಿರುವುದನ್ನು ಆಸಾಮಿಗಳು ದೂರದಿಂದಲೇ ನೋಡಿ ಓಡಲು ಪ್ರಾರಂಭಿಸಿದರು. ಅವರನ್ನು ಇಲಾಖೆಯವರು ಬೆನ್ನಟ್ಟಿ ಒಟ್ಟು ಆರು ಜನ ಆಸಾಮಿಗಳನ್ನು ಹಿಡಿದರು. ಉಳಿದವರು ಕತ್ತಲಲ್ಲಿ ಓಡಿ ಕೈಗೆ ಸಿಗದೆ ಪರಾರಿಯಾದರು. ಕೈಗೆಸಿಕ್ಕ ಅಸಾಮಿಗಳನ್ನು ನಿಂತಿದ್ದ ವಾಹನಗಳ ಹತ್ತಿರ ಕರೆತಂದು ಪರಿಶೀಲಿಸಿದಾಗ ಟಿಪ್ಪರ್ ಲಾರಿ, ಮಾರುತಿ ಓಮ್ನಿ ಹಾಗೂ ಎರಡು ಬೈಕುಗಳು ಸ್ಥಳದಲ್ಲಿದ್ದ ಟಿಪ್ಪರಿನ ಒಳಗಡೆ ಗರಗಸದಿಂದ ಕೊಯ್ತ ಮಾಡಿದ ಹಸಿಯಾದ 13 ಸಾಗುವಾನಿ ಹಾಗೂ 5 ಬೀಟೆ ತುಂಡುಗಳಿರುವುದು ಕಂಡುಬಂದಿದ್ದು, ಸ್ಥಳದಲ್ಲಿ ಪಂಚಾಯ್ತಿದಾರರು ಯಾರೂ ಸಿಗದ ಕಾರಣ ಇಲಾಖೆಯವರಾದ ನಾವುಗಳೇ ಪಂಚಾಯ್ತುದಾರರಾಗಿ ಸದರಿ ಸ್ಥಳ ಪರಿಶೀಲಿಸಲಾಗಿ, ಸ್ಥಳವು ಮಳಲಿ ಗ್ರಾಮದ ಸ.ನಂ: 21ರ ಮಳಲಿ ಮೀಸಲು ಅರಣ್ಯವಾಗಿದ್ದು, ರಸ್ತೆಯ ಎಡ, ಬಲ ಭಾಗಗಳಲ್ಲಿ ಅಲ್ಲಲ್ಲಿ 13 ಸಾಗುವಾನಿ ಮರಗಳನ್ನು ಗರಗಸದಿಂದ ಕೊಯ್ದು ಬೀಳಿಸಿ, ತುಂಡುಗಳಾಗಿ ಪರಿವರ್ತಿಸಿ, ಕೆಲವು ತುಂಡುಗಳನ್ನು ಟಿಪ್ಪರಿಗೆ ತುಂಬಿದ್ದು, ಇಲಾಖೆಯವರನ್ನು ನೋಡಿ ಉಳಿದ 17 ಸಾಗುವಾನಿ ತುಂಡುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುತ್ತಾರೆ. ಸಿಕ್ಕಿಬಿದ್ದ ಅಸಾಮಿಗಳ ಹೆಸರು ಮತ್ತು ವಿಳಾಸ ಕೇಳಲಾಗಿ (1) ಮಹಮದ್ ಆಲಿ ಬಿನ್ ಅಜತ್ ಉಮರ್, 22 ವರ್ಷ, ಸುಭಾಷ್ ನಗರ, 1ನೇ ಕ್ರಾಸ್, ಅರಮನೆ ಕೇರಿ, ಸಾಗರ (2) ಪ್ರಸಾದ್ ಬಿನ್ ಎನ್. ನಟರಾಜ್, 27 ವರ್ಷ, ಕೊರಡಿ ಹಿತ್ಲು ವಾಸಿ, ಬಪ್ಪುಂಜಿ ಗ್ರಾಮ, ಕೊಪ್ಪ ತಾಲ್ಲೂಕು (3) ವಿಷ್ಣು ಬಿನ್ ಚಂದ್ರು, 22 ವರ್ಷ, ಅಚ್ಚಾಡಿ ರಸ್ತೆ, ಕುವೆಂಪು ನಗರ, ಕೊಪ್ಪ ತಾಲ್ಲೂಕು, (4) ಕೆ.ಎಂ.

ಮಹಮದ್ ಆಸೀಫ್ ಬಿನ್ ಮಹಮದ್ ಸಾಹೇಬ್, 23 ವರ್ಷ, ಕುವೆಂಪು ನಗರ, ಅಚ್ಚಾಡಿ ರಸ್ತೆ, ಕೊಪ್ಪ ತಾಲ್ಲೂಕು (5) ಸುಧಾಕರ ಜಿ, ಬಿನ್ ಗೋಪಾಲ, 27 ವರ್ಷ, ಹುಲಿಮಕ್ಕಿ ವಾಸಿ, ಕೊಪ್ಪ ಗ್ರಾಮ & ತಾಲ್ಲೂಕು (6) ಸೈನುದ್ದೀನ್ ಬಿನ್ ಯೂಸೂಫ್, 23 ವರ್ಷ, ಮಕ್ಕಿಕೊಪ್ಪ ವಾಸಿ, ಕೋಳೂರು ಗ್ರಾಮ, ಕೊಪ್ಪ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಪರಾರಿಯಾದ ಅಸಾಮಿಗಳ ಬಗ್ಗೆ ವಿಚಾರಿಸಲಾಗಿ (7) ಸುರೇಶ ಬಿನ್ ಸಂಜೀವ, 25 ವರ್ಷ, ಅಚ್ಚಾಡಿ ರಸ್ತೆ, ಕುವೆಂಪು ನಗರ, ಕೊಪ್ಪ ತಾಲ್ಲೂಕು (8) ಶಿವು, 26 ವರ್ಷ, ಜೋಗಿಸರವಾಸಿ, ಕೊಪ್ಪ ತಾಲ್ಲೂಕು (9) ಮೈದಿ, 26 ವರ್ಷ, ಜೋಗಿಸರ ವಾಸಿ, ಕೊಪ್ಪ ತಾಲ್ಲೂಕು (10) ಲತೀಫ್ ಬಿನ್ ಖಾದರ್, 24 ವರ್ಷ, ಮೂಡಬಿದರೆ ವಾಸಿ, ಮಂಗಳೂರು ತಾಲ್ಲೂಕು (11) ಶರೀಫ್, 30 ವರ್ಷ, ಮೂಡಬಿದರೆ ವಾಸಿ, ಮಂಗಳೂರು ತಾಲ್ಲೂಕು ಎಂದು ತಿಳಿಸಿದರು.ನಂತರ ವಾಹನವನ್ನು ಪರಿಶೀಲಿಸಿ ನೋಡಲಾಗಿ (1) ಟಿಪ್ಪರ್ ಲಾರಿ ನಂ: ಕೆಎಲ್-06-ಎ-7277 (ಇಂಜಿನ್ ಮತ್ತು ಛಾಸ್ಸಿಸ್ ನಂಬರ್ ಕಂಡುಬಂದಿಲ್ಲ) (2) ಮಾರುತಿ ವ್ಯಾನ್ ನಂ: ಕೆಎ-14-ಎಂ-4990 (ಛಾಸ್ಸಿಸ್ ನಂ:ST-91-IN-552212) (3) ಹೀರೊಹೊಂಡಾ ಸಿಬಿರhುಡ್ ಬೈಕ್ ನಂ: ಕೆಎ-19-ಎಲ್-2199 (ಇಂಜಿನ್ ನಂ: OOR40Mo4029, ಛಾಸ್ಸಿಸ್ ನಂಬರ್ ಕಂಡುಬಂದಿಲ್ಲ) (4) ಟಿ.ವಿ.ಎಸ್. ವಿಕ್ಟರ್ ಬೈಕ್ ಕೆಎ-18-ಕ್ಯೂ-3463 (ಇಂಜಿನ್ ನಂ: OE1K61551846, ಛಾಸ್ಸಿಸ್ ನಂ: MD625AF1261K39125) ಆಗಿರುತ್ತದೆ. ಇದು ಅಕ್ರಮ ಸಾಗಾಣಿಕೆ ಎಂದು ಪರಿಗಣಿಸಿ ವಾಹನ, ಅರಣ್ಯ ಉತ್ಪನ್ನ ಮತ್ತು ಅಸಾಮಿಗಳನ್ನು ಪ್ರಥಮ ವರ್ತಮಾನ ವರದಿ, ಮಹಜರ್ ವರದಿ ಮತ್ತು ಜಫ್ತು ವರದಿಯೊಂದಿಗೆ ಇಲಾಖಾ ಪರ ವಶಪಡಿಸಿಕೊಂಡು ಕರ್ನಾಟಕ ಅರಣ್ಯ ಕಾಯ್ದೆ 1963 ಸೆಕ್ಷನ್ 24, 62, 71(ಎ), 104(ಎ) ಮತ್ತು ಕರ್ನಾಟಕ ಅರಣ್ಯ ಕಾನೂನು 1969ರ ಉಪ ನಿಯಮ 144, 165 ಮತ್ತು ಐಪಿಸಿ ಸೆಕ್ಷನ್ 379ರ ಪ್ರಕಾರ ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ, ಚೋರಡಿ ಇವರು ಅರಣ್ಯ ಮೊಕದ್ದಮೆ ಸಂಖ್ಯೆ:58/11-12ನ್ನು ದಾಖಲಿಸಿರುತ್ತಾರೆ.

ನಂತರ ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ ಇವರು ಆರೋಪಿಯನ್ನು ಜೆ.ಎಂ.ಎಫ್.ಸಿ, ಸಾಗರ ನ್ಯಾಯಾಲಯಕ್ಕೆ ಒಪ್ಪಿಸಿ, ವಾಹನ ಮತ್ತು ದಾಖಲೆಗಳನ್ನು ಈ ನ್ಯಾಯಾಲಯಕ್ಕೆ ಹಾಜರ್ಪಡಿಸಿರುತ್ತಾರೆ. ಸದರಿ ವಾಹನವನ್ನು ಸುರಕ್ಷತೆಗಾಗಿ ಇಡಲು ವಲಯ ಅರಣ್ಯಾಧಿಕಾರಿ, ಸರ್ಕಾರಿ ನಾಟಾ ಸಂಗ್ರಹಾಲಯ, ಸಾಗರ ಇವರ ಸುಪರ್ಧಿಗೆ ಕೊಡಲು ಈ ನ್ಯಾಯಾಲಯದಿಂದ ಆದೇಶವಾಗಿದೆ.

ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ, ಚೋರಡಿ ಇವರು ಈ ಮೊಕದ್ದಮೆಯಲ್ಲಿ ವಿಚಾರಣಾ ವರದಿಯನ್ನು ಈ ನ್ಯಾಯಾಲಯಕ್ಕೆ ಸಲ್ಲಿಸಿ, ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲು ಅನುಮತಿ ಕೋರಿರುತ್ತಾರೆ. ಮತ್ತು ವಾಹನ ಹಾಗೂ ಅರಣ್ಯ ಉತ್ಪನ್ನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಸಹಾ ಕೋರಿರುತ್ತಾರೆ.

ಈ ನಾಲ್ಕು ವಾಹನಗಳ 'ಬಿ' ಎಕ್ಸ್‌ಟ್ರ್ಯಾಕ್ಟ್‌ನ್ನು ಈ ನ್ಯಾಯಾಲಯಕ್ಕೆ ಒದಗಿಸಲು ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳಾದ ಟಿಪ್ಪರ್ ಲಾರಿ ಕೆಎಲ್- 06-ಎ-7277ಕ್ಕೆ Transport Commissioner, Trivendrum, Kerala State, ಮಾರುತಿ ವ್ಯಾನ್ ಕೆಎ-14-ಎಂ-4990ರ ಬಗ್ಗೆ ಶಿವಮೊಗ್ಗ, ಹೀರೊಹೊಂಡಾ ಬೈಕ್ ಕೆಎ-19-ಎಲ್-2199ರ ಬಗ್ಗೆ ಮಂಗಳೂರು ಮತ್ತು ಟಿ.ವಿ.ಎಸ್. ವಿಕ್ಟರ್ ಕೆಎ-18-ಕ್ಯೂ-3463ರ ಬಗ್ಗೆ ಚಿಕ್ಕಮಗಳೂರು ಇವರಿಗೆ ಈ ನ್ಯಾಯಾಲಯದಿಂದ ಬಿ3:ಅಮೊ:ವಾಹನ:ವಿವ-12/11-12 ದಿ: 24-08-2011ರಂದು ಪತ್ರ ಬರೆದು ಕೋರಲಾಯಿತು, ಅದರಂತೆ ಕೆಎ-14-ಎಂ-4990ರ ಬಿ ಪ್ರತಿಯನ್ನು ಸಾರಿಗೆ ಅಧಿಕಾರಿ, ಶಿವಮೊಗ್ಗ ರವರು ದಿ: 06-03-2012ರ ಪತ್ರದಲ್ಲಿ ಈ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ಈ ಬಿ ಪ್ರತಿಯಲ್ಲಿ ಆರ್.ಸಿ.

ಮಾಲೀಕರ ಹೆಸರು ಶ್ರೀ ಹಸನ್ಅಬಾ ಬಿನ್ ಬೊವಾಬ್ಯಾರಿ, ಎಂ.ಕೆ. ರಸ್ತೆ, ಕೋಣಂದೂರು ಅಂಚೆ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಎಂದು ನಮೂದಿಸಿದ್ದು, ಇವರಿಗೆ ಕರ್ನಾಟಕ ಅರಣ್ಯ ಕಾಯ್ದೆ 1963 ಸೆಕ್ಷನ್ 71(ಬಿ) (1)ರ ಪ್ರಕಾರ 30 ದಿನಗಳ ಕಾಲಾವಕಾಶ ನೀಡಿ ದಿ: 21-03-2012ರಂದು ನೋಟಿಸನ್ನು ನೊಂದಣಿ ಅಂಚೆ ಮೂಲಕ ಜಾರಿಮಾಡಿದೆ. ಟಿ.ವಿ.ಎಸ್. ವಿಕ್ಟರ್ ಬೈಕ್ ಕೆಎ-18-ಕ್ಯೂ-3463ರ ಬಿ ಪ್ರತಿಯನ್ನು ಸಾರಿಗೆ ಅಧಿಕಾರಿ, ಚಿತ್ರದುರ್ಗ ಇವರು ದಿ:10-09-2012ರಂದು ಈ ನ್ಯಾಯಾಲಯಕ್ಕೆ ಒದಗಿಸಿರುತ್ತಾರೆ. ಈ ಬಿ ಪ್ರತಿಯಲ್ಲಿ ಆರ್.ಸಿ. ಮಾಲೀಕರ ಹೆಸರು ಬಾಲಕೃಷ್ಣ ಬಿನ್ ಕೆ. ಸುಂದರ್ ರಾವ್, ಕೊಪ್ಪ ಎಸ್ಟೇಟ್, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಎಂದು ನಮೂದಿಸಿದ್ದು, ಇವರಿಗೆ ಕರ್ನಾಟಕ ಅರಣ್ಯ ಕಾಯ್ದೆ 1963 ಸೆಕ್ಷನ್ 71(ಬಿ)(1)ರ ಪ್ರಕಾರ 30 ದಿನಗಳ ಕಾಲಾವಕಾಶ ನೀಡಿ ದಿ: 11-09-2012ರಂದು ನೋಟಿಸನ್ನು ನೋಂದಣಿ ಅಂಚೆ ಮೂಲಕ ಜಾರಿ ಮಾಡಿದೆ. ಹೀರೊಹೊಂಡಾ ಬೈಕ್ ಕೆಎ-19-ಎಲ್-2199ರ ಬಿ ಪ್ರತಿಯನ್ನು ಸಾರಿಗೆ ಅಧಿಕಾರಿ, ಮಂಗಳೂರು ಇವರು ದಿ: 07-11-2012ರಂದು ಈ ನ್ಯಾಯಾಲಯಕ್ಕೆ ಒದಗಿಸಿರುತ್ತಾರೆ. ಶ್ರೀ ಪ್ರತಾಪ್ ಕುಮಾರ್ ಬಿನ್ ಹರಿಣಾಕ್ಷ, ಮನೆ ನಂ: 25-24-1806, ನಾರಾಯಣ ಕಾಂಪೌಂಡ್, ಜಪ್ಪು ಕುಡುಪಾಡಿ, ಮಂಗಳೂರು ಎಂದು ನಮೂದಿಸಿರುತ್ತಾರೆ. ಇವರಿಗೆ ದಿ: 22-11-2012ರಂದು ಕರ್ನಾಟಕ ಅರಣ್ಯ ಕಾಯ್ದೆ 1963 ಸೆಕ್ಷನ್ 71(ಬಿ)(1)ರ ಪ್ರಕಾರ 30 ದಿನಗಳ ಕಾಲಾವಕಾಶ ನೀಡಿ ನೋಟಿಸನ್ನು ನೋಂದಣಿ ಅಂಚೆ ಮೂಲಕ ಜಾರಿ ಮಾಡಿದೆ. ಸ್ವೀಕೃತಿಯನ್ನು ಅಂಚೆ ಇಲಾಖೆಯವರು ಈ ನ್ಯಾಯಾಲಯಕ್ಕೆ ಒದಗಿಸಿರುತ್ತಾರೆ. ಉಳಿದ ಒಂದು ವಾಹನಕ್ಕೆ ಸಾರಿಗೆ ಅಧಿಕಾರಿ ಬಿ ಪ್ರತಿಯನ್ನು ಈ ನ್ಯಾಯಾಲಯಕ್ಕೆ ಒದಗಿಸದ ಕಾರಣ ಆರ್.ಸಿ. ಮಾಲೀಕರಿಗೆ ನೋಟಿಸ್ ನೀಡಲು ಸಾಧ್ಯವಾಗಿರುವುದಿಲ್ಲ.

೮೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ಭಾಗ ೩

ಈ ನಡುವೆ ಈ ವಾಹನಗಳ ಬಗ್ಗೆ ಹೆಚ್ಚಿನ ಪ್ರಚಾರಕ್ಕಾಗಿ ಈ ನ್ಯಾಯಾಲಯದಿಂದ ಬಿ3-ಅಮೊ-ವಾಹನ-ಪ್ರಕಟಣೆ-ಸಿಆರ್-22/11-12 ದಿ:26-09-2011ರಂದು ಪ್ರಕಟಣೆ ಹೊರಡಿಸಿರುತ್ತದೆ. ಈ ಪ್ರಕಟಣೆಯ ಪ್ರತಿಯನ್ನು ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯ ಪತ್ರ ವಿಭಾಗ, ಬೆಂಗಳೂರು ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ, ಬೆಂಗಳೂರು ಇವರಿಗೆ ಕಳುಹಿಸಿ ಗೆಜೆಟ್ ಮತ್ತು ದಿನಪ್ರತಿಕೆಯಲ್ಲಿ ಪ್ರಕಟಿಸಲು ಕೋರಲಾಯಿತು. ಅದರಂತೆ ದಿ:07-10-2011ರಂದು ಕನ್ನಡ ಪ್ರಭ ಹಾಗೂ ದಿ:19-04-2012 ರಂದು ರಾಜ್ಯ ಗೆಜೆಟ್ ಪತ್ರಿಕೆಯಲ್ಲಿ ಈ ಪ್ರಕಟಣೆಯು ಪ್ರಕಟಗೊಂಡಿರುತ್ತದೆ. ಪತ್ರಿಕೆಯಲ್ಲಿ ಪ್ರಕಟಗೊಂಡು 30 ದಿನಗಳಾದರೂ ವಾಹನ ಮಾಲೀಕರಾಗಲೀ ಅವರ ಪರ ವಕೀಲರಾಗಲೀ ಈ ನ್ಯಾಯಾಲಯಕ್ಕೆ ಕ್ಲೇಮು ಅರ್ಜಿಯನ್ನು ಸಲ್ಲಿಸಿರುವುದಿಲ್ಲ.

ಸಹಾಯಕ ಸರ್ಕಾರಿ ಅಭಿಯೋಜಕರು ದಿ:19-01-2013ರಂದು ವಾದ ಮಂಡಿಸಿ, ಸದರಿ ವಾಹನದಲ್ಲಿ ಅರಣ್ಯ ಉತ್ಪನ್ನವನ್ನು ಸಾಗಿಸುತ್ತಿರುವಾಗ ಮಾಲು ಸಹಿತ ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ, ಚೋರಡಿ ಇವರು ಜಪ್ತುಮಾಡಿ ಕ್ರಿಮಿನಲ್ ಕೇಸ್ ದಾಖಲಿಸಿರುತ್ತಾರೆ. ಕೇಸು ದಾಖಲಿಸಿದ ಬಗ್ಗೆ ಪ್ರಥಮ ವರ್ತಮಾನ ವರದಿ, ಜಫ್ತು ವರದಿ, ವಿಚಾರಣಾ ವರದಿಯನ್ನು ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ ಇವರು ಈ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ಇದರಿಂದ ಈ ವಾಹನದಲ್ಲಿ ಅರಣ್ಯ ಉತ್ಪನ್ನಗಳನ್ನು ಅಕ್ರಮವಾಗಿ ಸಾಗಿಸಲು ಉಪಯೋಗಿಸಿರುವುದು ಸಾಬೀತಾಗಿರುತ್ತದೆ.

ಆದ್ದರಿಂದ ವಾಹನ ಮತ್ತು ಅರಣ್ಯ ಉತ್ಪನ್ನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಕೋರಿರುತ್ತಾರೆ.

ಪ್ರಕರಣದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಅಭಿಯೋಜಕರ ವಾದವನ್ನು ಕೇಳಿದೆ. ಹಾಗೂ ಈ ವಾಹನದ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುತ್ತದೆ. ಒಂದು ವಾಹನ ಕೆಎ-18-ಕ್ಯೂ-3463ಕ್ಕೆ ಆರ್.ಸಿ. ಮಾಲೀಕರು ವಕೀಲರ ಮುಖಾಂತರ ದಿ: 28-06-2012ರಂದು ಈ ನ್ಯಾಯಾಲಯಕ್ಕೆ ಕ್ಲೈಮು ಅರ್ಜಿ ಸಲ್ಲಿಸಿರುತ್ತಾರೆ. ಈ ಪ್ರಕಟಣೆಯು ರಾಜ್ಯ ಗೆಜೆಟ್‌ನಲ್ಲಿ ಮತ್ತು ದಿನಪತ್ರಿಕೆಯಲ್ಲಿ ಪ್ರಕಟಗೊಂಡು 30 ದಿನಗಳಾದರೂ 3 ವಾಹನಗಳಿಗೆ ಯಾರೂ ಹಕ್ಕು ಬಾಧ್ಯತೆಯ ಅರ್ಜಿಯನ್ನು ಈ ನ್ಯಾಯಾಲಯಕ್ಕೆ ಸಲ್ಲಿಸದೇ ಇದ್ದುದ್ದರಿಂದ ಈ ಪ್ರಕರಣದ ವಿದ್ಯಾಮಾನಗಳನ್ನು ಅರಿತು ಈ ಕೆಳಗಿನಂತೆ ಆದೇಶ ಹೊರಡಿಸಿದೆ.

-|| ಆದೇಶ ||-

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆರ್.ರವಿಶಂಕರ್, ಭಾ.ಅ.ಸೇ., ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ ಆದ ನಾನು, ಅರಣ್ಯ ಮೊಕದ್ದಮೆಯಲ್ಲಿ ಜಪ್ತು ಮಾಡಿದ ವಾಹನಗಳಾದ (1) ಟಿಪ್ಪರ್ ಲಾರಿ ನಂ:

ಕೆಎಲ್-06-ಎ-7277 (2) ಮಾರುತಿ ವ್ಯಾನ್ ಕೆಎ-14-ಎಂ-4990, (3) ಹೀರೋಹೊಂಡಾ ಬೈಕ್ ಕೆಎ-19-ಎಲ್-2199ನ್ನು ಅಂತಿಮವಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುತ್ತೇನೆ. ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಸರ್ಕಾರಕ್ಕೆ ಅನುಕೂಲಕರವಾಗಿ ವಿಲೇ ಮಾಡಲು ಆದೇಶಿಸಿದ್ದೇನೆ. ಈ ಆದೇಶವನ್ನು ಹೇಳಿ ಬರೆಯಿಸಿ, ಗಣಕಯಂತ್ರದಲ್ಲಿ ಮುದ್ರಿಸಿ, ನಂತರ ಸರಿಪಡಿಸಿ ದಿ: 23-02-2013ರಂದು ನನ್ನ ಸಹಿ ಹಾಗೂ ಮೊಹರಿನೊಂದಿಗೆ ತೆರೆದ ನ್ಯಾಯಾಲಯದಲ್ಲಿ ಆದೇಶಿಸಿದ್ದೇನೆ. ಈ ಆದೇಶ ಹೊರಡಿಸಿದ 30 (ಮೂವತ್ತು) ದಿನಗಳ ಒಳಗಾಗಿ ಯಾರು ಮೇಲ್ಮನವಿ ಸಲ್ಲಿಸದೇ ಹೋದಲ್ಲಿ ಇದೇ ಅಂತಿಮ ಆದೇಶವಾಗಿರುತ್ತದೆ

ಆರ್.ರವಿಶಂಕರ್

ಅಧಿಕೃತ ಅಧಿಕಾರಿ ಹಾಗೂ PR.202

ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ ಇವರ ನ್ಯಾಯಾಲಯದಲ್ಲಿ ಬಿ3:ಅಮೊ:ವಾಹನ:ವಿವ:02/12-13 ದಿನಾಂಕ: 23-03-2013

ಉಪಸ್ಥಿತರು :: ಆರ್.ರವಿಶಂಕರ್, ಭಾ.ಅ.ಸೇ., ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ.

ಪಿರ್ಯಾಧಿದಾರರು :: ವಲಯ ಅರಣ್ಯಾಧಿಕಾರಿ, ಹೊಸನಗರ ವಲಯ, ಹೊಸನಗರ (ಸಹಾಯಕ ಸರ್ಕಾರಿ ಅಭಿಯೋಜಕರು, ಸಾಗರ) ಆರೋಪಿತರು :: ಪತ್ತೆಯಾಗಿಲ್ಲ.

ಬಾಧ್ಯತೆದಾರರು :: ಯಾರೂ ಹಕ್ಕುಬಾಧ್ಯತೆಯ ಅರ್ಜಿ ಸಲ್ಲಿಸಿಲ್ಲ.

ಪ್ರಸ್ತಾವನೆ:-

ದಿ:17-04-2012ರಂದು ಟಾಟಾ 407 ಕೆಎ-17-1311 ರಲ್ಲಿ ಬೀಟೆ ನಾಟಾವನ್ನು ಅಕ್ರಮ ಸಾಗಾಣಿಕೆ ಮಾಡುತ್ತಿರುವುದನ್ನು ಹುಂಚ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಪತ್ತೆಹಚ್ಚಿ ಈ ಕೆಳಗಿನಂತೆ ಮಹಜರ್ ಬರೆದಿದ್ದಾರೆ.

ದಿ:17-04-2012ರಂದು ಹೊಸನಗರ ವಲಯದ ಹುಂಚ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಯವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಹೊಸನಗರ ತಾಲ್ಲೂಕು ಮಳಲಿಕೊಪ್ಪ ಗ್ರಾಮದ ಸ.ನಂ: 25ರ ಹರಿದ್ರಾವತಿ ಮೀಸಲು ಅರಣ್ಯ ಪ್ರದೇಶಕ್ಕೆ ಹೋಗಿ ನೋಡಲಾಗಿ ಟಾಟಾ 407 ವ್ಯಾನನ್ನು ರಸ್ತೆಯಲ್ಲಿ ಚಾಲನಾ ಸ್ಥಿತಿಯಲ್ಲಿ ಬಿಟ್ಟು ಓಡಿಹೋಗಿರುತ್ತಾರೆ. ಆಸಾಮಿಗಳನ್ನು ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಿದರೂ ಯಾರೂ ಕೈಗೆ ಸಿಗದೆ ಪರಾರಿಯಾಗಿರುತ್ತಾರೆ. ಪುನಃ ವಾಹನದ ಹತ್ತಿರ ಹೋಗಿ ಪರಿಶೀಲಿಸಲಾಗಿ ಹಸಿರು ಬಣ್ಣದ ಟಾಟಾ 407 ಕೆಎ-17-1311 ಆಗಿರುತ್ತದೆ.

ವಾಹನದೊಳಗಡೆ ಬೀಟೆ ಜಾತಿಯ 11 ತುಂಡುಗಳಿದ್ದು, ಅವುಗಳಿಗೆ ಇಲಾಖಾ ಛಾಪಾದ ಗುರುತಿರಲಿಲ್ಲ ಹಾಗೂ ಸಾಗಿಸಲು ರಹದಾರಿ ಇಲ್ಲದ ಕಾರಣ ಇದು ಅಕ್ರಮ ಸಾಗಾಣಿಕೆ ಎಂದು ಪರಿಗಣಿಸಿದೆ. ವಾಹನದಲ್ಲಿದ್ದ ತುಂಡುಗಳನ್ನು ಅಳತೆ ಮಾಡಲಾಗಿ 2.096 ಎಂ3 ಪ್ರಮಾಣವಿರುತ್ತದೆ. ವಾಹನ ಮತ್ತು ಅರಣ್ಯ ಉತ್ಪನ್ನವನ್ನು ಪ್ರಥಮ ವರ್ತಮಾನ ವರದಿ, ಜಪ್ತುವರದಿ, ಮಹಜರ್ ವರದಿಯೊಂದಿಗೆ ಇಲಾಖಾ ಪರ ವಶಪಡಿಸಿಕೊಂಡು, ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷನ್ 24, 62, 71 (ಎ), 104(ಎ) ಮತ್ತು ಕರ್ನಾಟಕ ಅರಣ್ಯ ಕಾನೂನು 1969 ಉಪನಿಯಮ 144, 165ರ ಪ್ರಕಾರ ಹುಂಚಾ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಅರಣ್ಯ ಮೊಕದ್ದಮೆ ಸಂಖ್ಯೆ:07/12-13ನ್ನು ದಾಖಲಿಸಿ, ನಂತರ ವಾಹನ, ಅರಣ್ಯ ಉತ್ಪನ್ನ ಮತ್ತು ದಾಖಲೆಗಳನ್ನು ಮುಂದಿನ ತನಿಖೆಗಾಗಿ ವಲಯ ಅರಣ್ಯಾಧಿಕಾರಿ, ಹೊಸನಗರ ವಲಯ ಇವರ ಸಮಕ್ಷಮ ಹಾಜರ್ಪಡಿಸಿರುತ್ತಾರೆ.

ವಲಯ ಅರಣ್ಯಾಧಿಕಾರಿ, ಹೊಸನಗರ ಇವರು ಈ ವಾಹನ ಮತ್ತು ದಾಖಲೆಗಳನ್ನು ಈ ನ್ಯಾಯಾಲಯಕ್ಕೆ ಹಾಜರ್ಪಡಿಸಿ ವಾಹನ ಮತ್ತು ಅರಣ್ಯ ಉತ್ಪನ್ನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಕೋರಿರುತ್ತಾರೆ. ಈ ವಾಹನವನ್ನು ಸುರಕ್ಷತೆಗಾಗಿಡಲು ವಲಯ ಅರಣ್ಯಾಧಿಕಾರಿ, ಸರ್ಕಾರಿ ನಾಟಾ ಸಂಗ್ರಹಾಲಯ, ಸಾಗರ ಇವರ ಸುಪರ್ಧಿಗೆ ಕೊಡಲು ಈ ನ್ಯಾಯಾಲಯದಿಂದ ಆದೇಶವಾಗಿದೆ.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ೮೬೭

ಈ ವಾಹನಗಳ 'ಬಿ' ಎಕ್ಸ್‌ಟ್ರ್ಯಾಕ್ಟ್‌ನ್ನು ಈ ನ್ಯಾಯಾಲಯಕ್ಕೆ ಒದಗಿಸಲು ಸಾರಿಗೆ ಅಧಿಕಾರಿ, ದಾವಣಗೆರೆ ಇವರಿಗೆ ಈ ನ್ಯಾಯಾಲಯದಿಂದ ಬಿ3:ಅಮೊ:ವಾಹನ:ವಿವ-02/12-13 ದಿ:23-04-2012, 14-06-2012ರಂದು ಪತ್ರ ಬರೆದು ಕೋರಲಾಗಿದೆ. ಅದರಂತೆ ಸದರಿಯವರು ಈ ನ್ಯಾಯಾಲಯಕ್ಕೆ ದಿ: 30-06-2012ರಂದು ಬಿ ಎಕ್ಸ್‌ಟ್ರ್ಯಾಕ್ಟನ್ನು ಸಲ್ಲಿಸಿರುತ್ತಾರೆ. ಸದರಿ ಬಿ ಎಕ್ಸ್‌ಟ್ರ್ಯಾಕ್ಟ್ ಟ್ರ್ಯಾಕ್ಟರ್‌ದಾಗಿದ್ದು (ಕೆಎ-17-1311) ಜಪ್ತುಮಾಡಲಾದ ವಾಹನ ಟಾಟಾ 407 (ಕೆಎ-17-1311) ಆಗಿರುತ್ತದೆ. ಆದ್ದರಿಂದ ಸದರಿ ವಾಹನದ ನಂಬರ್ ಪ್ಲೇಟನ್ನು ಬದಲಾಯಿಸಿರುವುದು ಸ್ಪಷ್ಟವಾಗಿ ಕಂಡುಬಂದಿರುತ್ತದೆ. ಇದರಿಂದ ಈ ವಾಹನದ ನಿಜವಾದ ಆರ್.ಸಿ. ಮಾಲೀಕರು ಪತ್ತೆಯಾಗದ ಕಾರಣ ಕರ್ನಾಟಕ ಅರಣ್ಯ ಕಾಯ್ದೆ 1963 ಸೆಕ್ಷನ್ 71(ಬಿ) (1)ರ ಪ್ರಕಾರ ನೋಟಿಸ್ ಜಾರಿಮಾಡಲು ಸಾಧ್ಯವಾಗಿರುವುದಿಲ್ಲ.

ಈ ನಡುವೆ ಈ ವಾಹನದ ಪ್ರಚಾರಕ್ಕಾಗಿ ಈ ನ್ಯಾಯಾಲಯದಿಂದ ಬಿ3-ಅಮೊ-ವಾಹನ-ಪ್ರಕಟಣೆ:ಸಿಆರ್-24/12-13, ದಿ:31-07-2012ರಂದು ಪ್ರಕಟಣೆ ಹೊರಡಿಸಿರುತ್ತದೆ. ಈ ಪ್ರಕಟಣೆಯ ಪ್ರತಿಯನ್ನು ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯ ಪತ್ರ ವಿಭಾಗ, ಬೆಂಗಳೂರು ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ, ಬೆಂಗಳೂರು ಇವರಿಗೆ ಕಳುಹಿಸಿ ಗೆಜೆಟ್ ಮತ್ತು ದಿನಪ್ರತಿಕೆಯಲ್ಲಿ ಪ್ರಕಟಿಸಲು ಕೋರಲಾಯಿತು. ಅದರಂತೆ, ದಿ: 10-08-2012ರಂದು ಹೊಸದಿಗಂತ ಪತ್ರಿಕೆಯಲ್ಲಿ ಹಾಗೂ ದಿ:06-09-2012ರಂದು ರಾಜ್ಯ ಗೆಜೆಟ್ ಪತ್ರಿಕೆಯಲ್ಲಿ ಈ ಪ್ರಕಟಣೆಯು ಪ್ರಕಟಗೊಂಡಿರುತ್ತದೆ. ಪ್ರಕಟಣೆಯು ಪತ್ರಿಕೆಯಲ್ಲಿ ಪ್ರಕಟಗೊಂಡು 30 ದಿನಗಳಾದರೂ ವಾಹನ ಮಾಲೀಕರಿರಾಗಲೀ ಅವರ ಪರ ವಕೀಲರಾಗಲೀ ಈ ನ್ಯಾಯಾಲಯಕ್ಕೆ ಕ್ಲೇಮು ಅರ್ಜಿಯನ್ನು ಸಲ್ಲಿಸಿರುವುದಿಲ್ಲ.

ಸಹಾಯಕ ಸರ್ಕಾರಿ ಅಭಿಯೋಜಕರು ದಿ:23-02-2013ರಂದು ವಾದ ಮಂಡಿಸಿ, ಸದರಿ ವಾಹನದಲ್ಲಿ ಅರಣ್ಯ ಉತ್ಪನ್ನವನ್ನು ಅಕ್ರಮವಾಗಿ ಸಾಗಿಸುತ್ತಿರುವಾಗ ಹುಂಚ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಇವರು ಪತ್ತೆಹಚ್ಚಿ ಕ್ರಿಮಿನಲ್ ಕೇಸು ದಾಖಲಿಸಿ, ದಾಖಲೆಗಳನ್ನು ವಲಯ ಅರಣ್ಯಾಧಿಕಾರಿ, ಹೊಸನಗರ ಇವರು ವಿಚಾರಣಾ ವರದಿಯೊಂದಿಗೆ ಈ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ಇದರಿಂದ ಈ ವಾಹನದಲ್ಲಿ ಅರಣ್ಯ ಉತ್ಪನ್ನವನ್ನು ಅಕ್ರಮವಾಗಿ ಸಾಗಿಸಿರುವುದು ಸಾಬೀತಾಗಿದೆ. ಆದ್ದರಿಂದ ಈ ವಾಹನ ಮತ್ತು ಅರಣ್ಯ ಉತ್ಪನ್ನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಕೋರಿರುತ್ತಾರೆ.

ಈ ಪ್ರಕರಣದ ಎಲ್ಲಾ ದಾಖಲೆಗಳನ್ನು ತರಿಸಿಕೊಂಡು ಪರಿಶೀಲಿಸಲಾಗಿ ಅಭಿಯೋಜಕರ ವಾದ ಕೇಳಿ, ಲಭ್ಯವಿದ್ದ ವಿಷಯ ಸಾಮಗ್ರಿಗಳ ಪ್ರಕಾರ ಮತ್ತು ಈ ಪ್ರಕರಣದ ವಿದ್ಯಾಮಾನಗಳನ್ನು ಅರಿತು ಈ ಕೆಳಗಿನಂತೆ ಆದೇಶ ಹೊರಡಿಸಿದೆ.

-|| ಆದೇಶ ||-

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆರ್.ರವಿಶಂಕರ್, ಭಾ.ಅ.ಸೇ., ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ ಆದ ನಾನು, ಅರಣ್ಯ ಮೊಕದ್ದಮೆಯಲ್ಲಿ ಜಪ್ತು ಮಾಡಿದ ವಾಹನವಾದ ಟಾಟಾ 407-ಕೆಎ-17-1311 (ಛಾಸ್ಸಿಸ್ ನಂ: 957010HT0831068, ಇಂಜಿನ್ ನಂ: HTO791485) ಮತ್ತು ವಾಹನದಲ್ಲಿದ್ದ ಬೀಟೆ ನಾಟಾ 11=2.096 ಎಂ3 ನ್ನು ಅಂತಿಮವಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುತ್ತೇನೆ. ಮುಟ್ಟುಗೋಲು ಹಾಕಿಕೊಂಡ ವಾಹನ ಮತ್ತು ಅರಣ್ಯ ಉತ್ಪನ್ನವನ್ನು ಸರ್ಕಾರಕ್ಕೆ ಅನುಕೂಲಕರವಾಗಿ ವಿಲೇ ಮಾಡಲು ಆದೇಶಿಸಿದ್ದೇನೆ. ಈ ಆದೇಶವನ್ನು ಹೇಳಿ ಬರೆಯಿಸಿ, ಗಣಕಯಂತ್ರದಲ್ಲಿ ಮುದ್ರಿಸಿ, ನಂತರ ಸರಿಪಡಿಸಿ ದಿ: 23-03 -2013 ರಂದು ನನ್ನ ಸಹಿ ಹಾಗೂ ಮೊಹರಿನೊಂದಿಗೆ ತೆರೆದ ನ್ಯಾಯಾಲಯದಲ್ಲಿ ಆದೇಶಿಸಿದ್ದೇನೆ. ಈ ಆದೇಶ ಹೊರಡಿಸಿದ 30 (ಮೂವತ್ತು) ದಿನಗಳ ಒಳಗಾಗಿ ಯಾರು ಮೇಲ್ಮನವಿ ಸಲ್ಲಿಸದೇ ಹೋದಲ್ಲಿ ಇದೇ ಅಂತಿಮ ಆದೇಶವಾಗಿರುತ್ತದೆ.

ಆರ್.ರವಿಶಂಕರ್

PR.260

ಅಧಿಕೃತ ಅಧಿಕಾರಿ ಹಾಗೂ S/C.25

ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ ಇವರ ನ್ಯಾಯಾಲಯದಲ್ಲಿ ಬಿ3:ಅಮೊ:ವಾಹನ:ವಿವ: 03/12-13 ದಿನಾಂಕ: 23-03-2013

ಉಪಸ್ಥಿತರು : ಆರ್.ರವಿಶಂಕರ್, ಭಾ.ಅ.ಸೇ., ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ.

ಪಿರ್ಯಾಧಿದಾರರು : ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ, ಚೋರಡಿ. (ಸಹಾಯಕ ಸರ್ಕಾರಿ ಅಭಿಯೋಜಕರು, ಸಾಗರ) ಆರೋಪಿತರು : ಪತ್ತೆಯಾಗಿಲ್ಲ.

ಬಾಧ್ಯತೆದಾರರು : ಯಾರೂ ಹಕ್ಕುಬಾಧ್ಯತೆಯ ಅರ್ಜಿ ಸಲ್ಲಿಸಿಲ್ಲ.

ಪ್ರಸ್ತಾವನೆ:-

ದಿ:29-04-2012ರಂದು ಬಜಾಜ್ ಟೆಂಪೋ ಟ್ರ್ಯಾಕ್ಸ್ ಕೆಎ-14-9863 ರಲ್ಲಿ ಬೀಟೆ ನಾಟಾ ಅಕ್ರಮ ಸಾಗಾಣಿಕೆಯಲ್ಲಿ ತೊಡಗಿದ್ದ ವಾಹನವನ್ನು ಹಿರೇಹರಕ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಪತ್ತೆಹಚ್ಚಿ ಬರೆದ ಮಹಜರ್ ವಿವರ ಈ ಕೆಳಗಿನಂತಿದೆ.

ದಿ:28-04-2012ರಂದು ಆನಂದಪುರಂ ವಲಯದ ಹಿರೇಹರಕ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಯವರು ಸಾಗರ ತಾಲ್ಲೂಕು ಆನಂದಪುರಂ ಹೋಬಳಿ, ಆನಂದಪುರಂ ನಿಂದ ಶಿಕಾರಿಪುರಕ್ಕೆ ಹೋಗುವ ರಸ್ತೆಯ ಕಣ್ಣೂರಿನ ಹತ್ತಿರ ಗಸ್ತು ಮಾಡುತ್ತಿರುವಾಗ ದಿ: 29-04-2012ರಂದು ಬೆಳಿಗ್ಗೆ 5 ಗಂಟೆ ಸಮಯದಲ್ಲಿ ಒಂದು ವಾಹನ ಶಿಕಾರಿಪುರ ಕಡೆಗೆ ಹೋಗುತ್ತಿರುವುದನ್ನು ಬ್ಯಾಟರಿ ಬೆಳಕಿನ ಸಹಾಯದಿಂದ ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೇ ವೇಗವಾಗಿ ಮುಂದೆ ಚಲಿಸಿರುತ್ತದೆ. ನಂತರ ಇಲಾಖಾ ವಾಹನದಿಂದ ಬೆನ್ನಟ್ಟಿದಾಗ ಅಸಾಮಿಗಳು ಇಲಾಖಾ ವಾಹನದ ಕಡೆ ಕಲ್ಲು, ಇಟ್ಟಗಿ ಚೂರುಗಳಿಂದ ಹೊಡೆಯಲು ಪ್ರಯತ್ನಿಸಿದರು. ಆಗ ಇಲಾಖಾ ಸಿಬ್ಬಂದಿಯವರು 2 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದಾಗ ಅಸಾಮಿಗಳು ಕೈಗೆ ಸಿಗದೆ ಕತ್ತಲೆಯಲ್ಲಿ ಪರಾರಿಯಾದರು. ನಂತರ ವಾಹನವನ್ನು ಪರಿಶೀಲಿಸಲಾಗಿ ಬಿಳಿ ಬಣ್ಣದ ಟೆಂಪೋ ಟ್ರ್ಯಾಕ್ಸ್ ಕೆಎ-14-9863 (ಛಾಸ್ಸಿಸ್ ನಂ: T57020142B04, ಇಂಜಿನ್ ನಂ: D14048936) ಆಗಿದ್ದು, ವಾಹನದೊಳಗೆ 7 ಹಸಿ ಬೀಟೆ ನಾಟಾಗಳಿದ್ದು ಅವುಗಳಿಗೆ ಇಲಾಖಾ ಛಾಪಾದ೮೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ಭಾಗ ೩ ಗುರುತಿರಲಿಲ್ಲ ಹಾಗೂ ಸಾಗಿಸಲು ರಹದಾರಿ ಇಲ್ಲದ ಕಾರಣ ಇದು ಅಕ್ರಮ ಸಾಗಾಣಿಕೆ ಎಂದು ಪರಿಗಣಿಸಿದೆ. ವಾಹನದಲ್ಲಿದ್ದ ತುಂಡುಗಳನ್ನು ಅಳತೆ ಮಾಡಲಾಗಿ 01.325 ಎಂ3 ಪ್ರಮಾಣವಿರುತ್ತದೆ. ವಾಹನ ಮತ್ತು ಅರಣ್ಯ ಉತ್ಪನ್ನವನ್ನು ಪ್ರಥಮ ವರ್ತಮಾನ ವರದಿ, ಜಪ್ತುವರದಿ, ಮಹಜರ್ ವರದಿಯೊಂದಿಗೆ ಇಲಾಖಾ ಪರ ವಶಪಡಿಸಿಕೊಂಡು, ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷನ್ 24, 33, 62, 71 (ಎ), 104(ಎ) ಮತ್ತು ಕರ್ನಾಟಕ ಅರಣ್ಯ ಕಾನೂನು 1969 ಉಪನಿಯಮ 144, 165ರ ಪ್ರಕಾರ ಹಿರೇಹರಕ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಅರಣ್ಯ ಮೊಕದ್ದಮೆ ಸಂಖ್ಯೆ:15/12- 13ನ್ನು ದಾಖಲಿಸಿ, ನಂತರ ವಾಹನ, ಅರಣ್ಯ ಉತ್ಪನ್ನ ಮತ್ತು ದಾಖಲೆಗಳನ್ನು ಮುಂದಿನ ತನಿಖೆಗಾಗಿ ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ, ಚೋರಡಿ ಇವರ ಸಮಕ್ಷಮ ಹಾಜರ್ಪಡಿಸಿರುತ್ತಾರೆ.

ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ, ಚೋರಡಿ ಇವರು ಈ ವಾಹನ ಮತ್ತು ದಾಖಲೆಗಳನ್ನು ಈ ನ್ಯಾಯಾಲಯಕ್ಕೆ ಹಾಜರ್ಪಡಿಸಿರುತ್ತಾರೆ. ಈ ವಾಹನವನ್ನು ಸುರಕ್ಷತೆಗಾಗಿಡಲು ವಲಯ ಅರಣ್ಯಾಧಿಕಾರಿ, ಸರ್ಕಾರಿ ನಾಟಾ ಸಂಗ್ರಹಾಲಯ, ಸಾಗರ ಇವರ ಸುಪರ್ಧಿಗೆ ಕೊಡಲು ಈ ನ್ಯಾಯಾಲಯದಿಂದ ಆದೇಶವಾಗಿದೆ.

ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ, ಚೋರಡಿ ಇವರು ಈ ಪ್ರಕರಣದಲ್ಲಿ ವಿಚಾರಣಾ ವರದಿಯನ್ನು ಈ ನ್ಯಾಯಾಲಯಕ್ಕೆ ಸಲ್ಲಿಸಿ ವಾಹನ ಮತ್ತು ಅರಣ್ಯ ಉತ್ಪನ್ನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಕೋರಿರುತ್ತಾರೆ.

ಈ ವಾಹನಗಳ 'ಬಿ' ಎಕ್ಸ್‌ಟ್ರ್ಯಾಕ್ಟ್‌ನ್ನು ಈ ನ್ಯಾಯಾಲಯಕ್ಕೆ ಒದಗಿಸಲು ಸಾರಿಗೆ ಅಧಿಕಾರಿ, ಶಿವಮೊಗ್ಗ ಇವರಿಗೆ ಈ ನ್ಯಾಯಾಲಯದಿಂದ ಬಿ3:ಅಮೊ:ವಾಹನ:ವಿವ-03/12-13 ದಿ:02-05-2012, ದಿ:10-09-2012ರಂದು ಪತ್ರ ಬರೆದು ಕೋರಲಾಗಿದೆ. ಅದರಂತೆ ಈ ವಾಹನದ ಬಿ ಪ್ರತಿಯನ್ನು ದಿ:26-09-2012ರಂದು ಈ ನ್ಯಾಯಾಲಯಕ್ಕೆ ಒದಗಿಸಿರುತ್ತಾರೆ. ಈ ಬಿ ಎಕ್ಸ್‌ಟ್ರ್ಯಾಕ್ಟ್‌ನಲ್ಲಿ ಶ್ರೀಮತಿ ರಂಗಮ್ಮ ಕೋಂ ನಂಜಪ್ಪ, ಮನೆ ನಂ: 5, ಕೊರಲಹಳ್ಳಿ, ಕಾಚಿನಕಟ್ಟೆ, ಶಿವಮೊಗ್ಗ ಜಿಲ್ಲೆ ಎಂದು ಆರ್.ಸಿ. ಮಾಲಿಕರ ಹೆಸರು ನಮೂದಾಗಿದೆ. ದಿ: 04-12-2012ರಂದು ಕರ್ನಾಟಕ ಅರಣ್ಯ ಕಾಯ್ದೆ 1963 ಸೆಕ್ಷನ್ 71(ಬಿ) (1)ರ ಪ್ರಕಾರ 30 ದಿನಗಳ ಕಾಲಾವಕಾಸ ನೀಡಿ ನೋಟಿಸನ್ನು ಆರ್.ಸಿ. ಮಾಲಿಕರಿಗೆ ನೊಂದಣಿ ಅಂಚೆ ಮೂಲಕ ಜಾರಿಮಾಡಿದೆ. ಅಂಚೆ ಇಲಾಖೆಯವರು ಸ್ವೀಕೃತಿಯನ್ನು ಈ ನ್ಯಾಯಾಲಯಕ್ಕೆ ಒದಗಿಸಿರುತ್ತಾರೆ.

ಈ ನಡುವೆ ಈ ವಾಹನದ ಪ್ರಚಾರಕ್ಕಾಗಿ ಈ ನ್ಯಾಯಾಲಯದಿಂದ ಬಿ3-ಅಮೊ-ವಾಹನ-ಪ್ರಕಟಣೆ:ಸಿಆರ್-24/12-13, ದಿ:31-07-2012ರಂದುಪ್ರಕಟಣೆ ಹೊರಡಿಸಿರುತ್ತದೆ. ಈ ಪ್ರಕಟಣೆಯ ಪ್ರತಿಯನ್ನು ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯ ಪತ್ರ ವಿಭಾಗ, ಬೆಂಗಳೂರು ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ, ಬೆಂಗಳೂರು ಇವರಿಗೆ ಕಳುಹಿಸಿ ಗೆಜೆಟ್ ಮತ್ತು ದಿನಪ್ರತಿಕೆಯಲ್ಲಿ ಪ್ರಕಟಿಸಲು ಕೋರಲಾಯಿತು. ಅದರಂತೆ, ದಿ: 10-08-2012ರಂದು ಹೊಸದಿಗಂತ ಪತ್ರಿಕೆಯಲ್ಲಿ ಹಾಗೂ ದಿ:06-09-2012ರಂದು ರಾಜ್ಯ ಗೆಜೆಟ್ ಪತ್ರಿಕೆಯಲ್ಲಿ ಈ ಪ್ರಕಟಣೆಯು ಪ್ರಕಟಗೊಂಡಿರುತ್ತದೆ.

ಪ್ರಕಟಣೆಯು ಪತ್ರಿಕೆಯಲ್ಲಿ ಪ್ರಕಟಗೊಂಡು 30 ದಿನಗಳಾದರೂ ವಾಹನ ಮಾಲೀಕರಿರಾಗಲೀ ಅವರ ಪರ ವಕೀಲರಾಗಲೀ ಈ ನ್ಯಾಯಾಲಯಕ್ಕೆ ಕ್ಲೇಮು ಅರ್ಜಿಯನ್ನು ಸಲ್ಲಿಸಿರುವುದಿಲ್ಲ.

ಸಹಾಯಕ ಸರ್ಕಾರಿ ಅಭಿಯೋಜಕರು ದಿ:23-02-2013ರಂದು ವಾದ ಮಂಡಿಸಿ, ಸದರಿ ವಾಹನದಲ್ಲಿ ಅರಣ್ಯ ಉತ್ಪನ್ನವನ್ನು ಅಕ್ರಮವಾಗಿ ಸಾಗಿಸುತ್ತಿರುವಾಗ ಹಿರೇಹರಕ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಇವರು ಪತ್ತೆಹಚ್ಚಿ ಕ್ರಿಮಿನಲ್ ಕೇಸು ದಾಖಲಿಸಿ, ದಾಖಲೆಗಳನ್ನು ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ, ಚೋರಡಿ ಇವರು ವಿಚಾರಣಾ ವರದಿಯೊಂದಿಗೆ ಈ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ಇದರಿಂದ ಈ ವಾಹನದಲ್ಲಿ ಅರಣ್ಯ ಉತ್ಪನ್ನವನ್ನು ಅಕ್ರಮವಾಗಿ ಸಾಗಿಸಿರುವುದು ಸಾಬೀತಾಗಿದೆ. ಆದ್ದರಿಂದ ಈ ವಾಹನ ಮತ್ತು ಅರಣ್ಯ ಉತ್ಪನ್ನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಕೋರಿರುತ್ತಾರೆ.

ಈ ಪ್ರಕರಣದ ಎಲ್ಲಾ ದಾಖಲೆಗಳನ್ನು ತರಿಸಿಕೊಂಡು ಪರಿಶೀಲಿಸಲಾಗಿ ಅಭಿಯೋಜಕರ ವಾದ ಕೇಳಿ, ಲಭ್ಯವಿದ್ದ ವಿಷಯ ಸಾಮಗ್ರಿಗಳ ಪ್ರಕಾರ ಮತ್ತು ಈ ಪ್ರಕರಣದ ವಿದ್ಯಾಮಾನಗಳನ್ನು ಅರಿತು ಈ ಕೆಳಗಿನಂತೆ ಆದೇಶ ಹೊರಡಿಸಿದೆ.

-|| ಆದೇಶ ||-

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಶ್ರೀ ಆರ್.ರವಿಶಂಕರ್, ಭಾ.ಅ.ಸೇ., ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ ಆದ ನಾನು, ಅರಣ್ಯ ಮೊಕದ್ದಮೆಯಲ್ಲಿ ಜಪ್ತು ಮಾಡಿದ ವಾಹನವಾದ ಟೆಂಪೋ ಟ್ರ್ಯಾಕ್ಸ್ ಕೆಎ- 14-9863 (ಛಾಸ್ಸಿಸ್ ನಂ: T57020142B04, ಇಂಜಿನ್ ನಂ: ಆ14048936) ಮತ್ತು ವಾಹನದಲ್ಲಿದ್ದ ಬೀಟೆ ನಾಟಾ 07=1.325ಎಂ3 ನ್ನು ಅಂತಿಮವಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುತ್ತೇನೆ. ಮುಟ್ಟುಗೋಲು ಹಾಕಿಕೊಂಡ ವಾಹನ ಮತ್ತು ಅರಣ್ಯ ಉತ್ಪನ್ನವನ್ನು ಸರ್ಕಾರಕ್ಕೆ ಅನುಕೂಲಕರವಾಗಿ ವಿಲೇ ಮಾಡಲು ಆದೇಶಿಸಿದ್ದೇನೆ. ಈ ಆದೇಶವನ್ನು ಹೇಳಿ ಬರೆಯಿಸಿ, ಗಣಕಯಂತ್ರದಲ್ಲಿ ಮುದ್ರಿಸಿ, ನಂತರ ಸರಿಪಡಿಸಿ ದಿ: 23-03 -2013 ರಂದು ನನ್ನ ಸಹಿ ಹಾಗೂ ಮೊಹರಿನೊಂದಿಗೆ ತೆರೆದ ನ್ಯಾಯಾಲಯದಲ್ಲಿ ಆದೇಶಿಸಿದ್ದೇನೆ. ಈ ಆದೇಶ ಹೊರಡಿಸಿದ 30 (ಮೂವತ್ತು) ದಿನಗಳ ಒಳಗಾಗಿ ಯಾರು ಮೇಲ್ಮನವಿ

.

ಸಲ್ಲಿಸದೇ ಹೋದಲ್ಲಿ ಇದೇ ಅಂತಿಮ ಆದೇಶವಾಗಿರುತ್ತದೆ

ಆರ್.ರವಿಶಂಕರ್

PR.261

ಅಧಿಕೃತ ಅಧಿಕಾರಿ ಹಾಗೂ S/C.25

ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ ಇವರ ನ್ಯಾಯಾಲಯದಲ್ಲಿ ಬಿ3:ಅಮೊ:ವಾಹನ:ವಿವ:09/12-13 ದಿನಾಂಕ: 23-03-2013

ಉಪಸ್ಥಿತರು : ಆರ್. ರವಿಶಂಕರ್, ಭಾ.ಅ.ಸೇ., ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ.

ಪಿರ್ಯಾಧಿದಾರರು : ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ, ಚೋರಡಿ (ಸಹಾಯಕ ಸರ್ಕಾರಿ ಅಭಿಯೋಜಕರು, ಸಾಗರ) ಆರೋಪಿತರು : ಪತ್ತೆಯಾಗಿರುವುದಿಲ್ಲ.

ಬಾಧ್ಯತೆದಾರರು : ಯಾರೂ ಅರ್ಜಿ ಸಲ್ಲಿಸಿರುವುದಿಲ್ಲ.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ೮೬೯

ಪ್ರಸ್ತಾವನೆ:-

ದಿ:02-06-2012ರಂದು ಹೀರೊಹೊಂಡಾ ಸ್ಪೆ÷್ಲಂಡರ್ ಬೈಕ್ ಕೆಎ-16-ಎಲ್-5846ರಲ್ಲಿ ಬೀಟೆ ಸೈಜ್ ಅಕ್ರಮವಾಗಿ ಸಾಗಿಸುತ್ತಿರುವುದನ್ನು ಆನಂದಪುರಂ ವಲಯದ ಚೋರಡಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಪತ್ತೆಹಚ್ಚಿ ಬರೆದ ಮಹಜರ್ ಈ ಕೆಳಗಿನಂತಿದೆ.

ದಿ:02-06-2012 ರಂದು ಆನಂದಪುರಂ ವಲಯದ ಚೋರಡಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಯವರು ಚೋರಡಿ ವಲಯ ಅರಣ್ಯಾಧಿಕಾರಿ ಕಛೇರಿಯಿಂದ ಹಾಲ್ಕುಣಿ ಗಸ್ತಿನ ಕಡೆ ರಾತ್ರಿ ಗಸ್ತು ಮಾಡಲು ಸುಮಾರು 8-15ರ ಸಮಯದಲ್ಲಿ ಹೋಗುತ್ತಿರುವಾಗ ಇಬ್ಬರು ಅಸಾಮಿಗಳು ಮಧ್ಯದಲ್ಲಿ ಒಂದು ಚೀಲ ಸುತ್ತಿದ ವಸ್ತುವನ್ನು ಇಟ್ಟುಕೊಂಡು ಒಂದು ಬೈಕಿನಲ್ಲಿ ಹೋಗುತ್ತಿರುವುದನ್ನು ನಿಲ್ಲಿಸಲು ಸೂಚಿಸಿದಾಗ ಬೈಕ್ ನಿಲ್ಲಿಸದೇ ವೇಗವಾಗಿ ಮುಂದೆ ಚಲಿಸಿ, ಶಿವಮೊಗ್ಗ ತಾಲ್ಲೂಕು ಕುಂಸಿ ಹೋಬಳಿ ಚೋರಡಿ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ಹತ್ತಿರ ಇರುವ ಸಾಗರ ಶಿವಮೊಗ್ಗ 206 ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕನ್ನು ನಿಲ್ಲಿಸಿ ಅಸಾಮಿಗಳು ಕತ್ತಲೆಯಲ್ಲಿ ಓಡಿ ಕೈಗೆ ಸಿಗದೆ ಪರಾರಿಯಾದರು. ಓಡಿಹೋದ ಅಸಾಮಿಗಳು ಯಾರೆಂದು ತಿಳಿದುಬಂದಿಲ್ಲ. ನಂತರ ವಾಹನದ ಹತ್ತಿರ ಬಂದು ಪರಿಶೀಲಿಸಲಾಗಿ ಹೀರೊಹೊಂಡ ಸ್ಪೆ÷್ಲಂಡರ್ ಬೈಕ್ ಕೆಎ-16-ಎಲ್-5846, ಛಾಸ್ಸಿಸ್ ನಂ; 05J16C40844 ಆಗಿದ್ದು, ವಾಹನದ ಮೇಲೆ ಒಂದು ಬೀಟೆ ಸೈಜ್ ಇದ್ದು, ಈ ಸೈಜಿನ ಮೇಲೆ ಇಲಾಖಾ ಛಾಪಾದ ಗುರುತಿರಲಿಲ್ಲ. ಇದು ಅಕ್ರಮ ಸಾಗಾಣಿಕೆ ಎಂದು ಪರಿಗಣಿಸಿ, ಬೀಟೆ ಸೈಜ್ ಅಳತೆ ಮಾಡಲಾಗಿ 0.055 ಎಂ3 ಪ್ರಮಾಣವಿರುತ್ತದೆ. ವಾಹನ ಮತ್ತು ಅರಣ್ಯ ಉತ್ಪನ್ನವನ್ನು ಪ್ರಥಮ ವರ್ತಮಾನ ವರದಿ, ಮಹಜರ್ ವರದಿ ಮತ್ತು ಜಫ್ತು ವರದಿಯೊಂದಿಗೆ ಇಲಾಖಾ ಪರ ವಶಪಡಿಸಿಕೊಂಡು ಕರ್ನಾಟಕ ಅರಣ್ಯ ಕಾಯ್ದೆ 1963 ಸೆಕ್ಷನ್ 33, 62, 71(ಎ), 104(ಎ) ಮತ್ತು ಕರ್ನಾಟಕ ಅರಣ್ಯ ಕಾನೂನು 1969ರ ಉಪ ನಿಯಮ 144, 165ರ ಪ್ರಕಾರ ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ, ಚೋರಡಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿಯು ಅರಣ್ಯ ಮೊಕದ್ದಮೆ ಸಂಖ್ಯೆ:26/12-13ನ್ನು ದಾಖಲಿಸಿ, ವಾಹನ, ದಾಖಲೆ ಮತ್ತು ಅರಣ್ಯ ಉತ್ಪನ್ನವನ್ನು ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ, ಚೋರಡಿ ಇವರ ಸಮಕ್ಷಮ ಹಾಜರ್ಪಡಿಸಿರುತ್ತಾರೆ.

ನಂತರ ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ, ಚೋರಡಿ ಇವರು ವಾಹನವನ್ನು ದಾಖಲೆಗಳೊಂದಿಗೆ ಈ ನ್ಯಾಯಾಲಯಕ್ಕೆ ಹಾಜರ್ಪಡಿಸಿರುತ್ತಾರೆ. ಈ ವಾಹನವನ್ನು ಸುರಕ್ಷತೆಗಾಗಿ ಇಡಲು ವಲಯ ಅರಣ್ಯಾಧಿಕಾರಿ, ಸರ್ಕಾರಿ ನಾಟಾ ಸಂಗ್ರಹಾಲಯ, ಸಾಗರ ಇವರ ಸುಪರ್ಧಿಗೆ ಕೊಡಲು ಈ ನ್ಯಾಯಾಲಯದಿಂದ ಆದೇಶವಾಗಿದೆ.

ಈ ವಾಹನದ 'ಬಿ' ಎಕ್ಸ್‌ಟ್ರ್ಯಾಕ್ಟ್‌ನ್ನು ಈ ನ್ಯಾಯಾಲಯಕ್ಕೆ ಒದಗಿಸಲು ಸಾರಿಗೆ ಅಧಿಕಾರಿ, ಚಿತ್ರದುರ್ಗ ಇವರಿಗೆ ಈ ನ್ಯಾಯಾಲಯದಿಂದ ಬಿ3:ಅಮೊ:ವಾಹನ:ವಿವ-09/12-13 ದಿ:16-07-2012ರಂದು ಪತ್ರ ಬರೆದು ಕೋರಲಾಯಿತು, ಆದರೆ ಕೆಎ-16-ಎಲ್-5846 ನಂಬರಿನ ಟಿ.ವಿ.ಎಸ್.

ಮೋಟಾರ್ ಸೈಕಲ್‌ನ ಬಿ ಎಕ್ಸ್‌ಟ್ರ್ಯಾಕ್ಟನ್ನು ಈ ನ್ಯಾಯಾಲಯಕ್ಕೆ ಒದಗಿಸಿರುತ್ತಾರೆ. ಇದರಿಂದ ಈ ವಾಹನದ ನಿಜವಾದ ಆರ್.ಸಿ. ಮಾಲೀಕರು ಪತ್ತೆಯಾಗದ ಕಾರಣ ಕರ್ನಾಟಕ ಅರಣ್ಯ ಕಾಯ್ದೆ 1963 ಸೆಕ್ಷನ್ 71(ಬಿ) (1)ರ ಪ್ರಕಾರ ನೋಟಿಸ್ ಜಾರಿಮಾಡಲು ಸಾಧ್ಯವಾಗಿರುವುದಿಲ್ಲ.

ಈ ನಡುವೆ ಈ ವಾಹನದ ಬಗ್ಗೆ ಹೆಚ್ಚಿನ ಪ್ರಚಾರಕ್ಕಾಗಿ ಈ ನ್ಯಾಯಾಲಯದಿಂದ ಬಿ3-ಅಮೊ-ವಾಹನ-ಪ್ರಕಟಣೆ-ಸಿಆರ್-24/12-13 ದಿ:31-07-2012ರಂದು ಪ್ರಕಟಣೆ ಹೊರಡಿಸಿರುತ್ತದೆ. ಈ ಪ್ರಕಟಣೆಯ ಪ್ರತಿಯನ್ನು ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯ ಪತ್ರ ವಿಭಾಗ, ಬೆಂಗಳೂರು ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ, ಬೆಂಗಳೂರು ಇವರಿಗೆ ಕಳುಹಿಸಿ ಗೆಜೆಟ್ ಮತ್ತು ದಿನಪ್ರತಿಕೆಯಲ್ಲಿ ಪ್ರಕಟಿಸಲು ಕೋರಲಾಯಿತು. ಅದರಂತೆ ದಿ:10-08-2012ರಂದು ಹೊಸದಿಗಂತ ದಿನಪತ್ರಿಕೆಯಲ್ಲಿ ಹಾಗೂ ದಿ:06-09-2012 ರಂದು ರಾಜ್ಯ ಗೆಜೆಟ್ ಪತ್ರಿಕೆಯಲ್ಲಿ ಈ ಪ್ರಕಟಣೆಯು ಪ್ರಕಟಗೊಂಡಿರುತ್ತದೆ. ಪತ್ರಿಕೆಯಲ್ಲಿ ಪ್ರಕಟಗೊಂಡು 30 ದಿನಗಳಾದರೂ ವಾಹನ ಮಾಲೀಕರಾಗಲೀ ಅವರ ಪರ ವಕೀಲರಾಗಲೀ ಈ ನ್ಯಾಯಾಲಯಕ್ಕೆ ಕ್ಲೇಮು ಅರ್ಜಿಯನ್ನು ಸಲ್ಲಿಸಿರುವುದಿಲ್ಲ.

ಸಹಾಯಕ ಸರ್ಕಾರಿ ಅಭಿಯೋಜಕರು ದಿ:23-02-2013ರಂದು ವಾದ ಮಂಡಿಸಿ, ಸದರಿ ವಾಹನದಲ್ಲಿ ಅರಣ್ಯ ಉತ್ಪನ್ನವನ್ನು ಅಕ್ರಮವಾಗಿ ಸಾಗಿಸುತ್ತಿರುವಾಗ ಮಾಲು ಸಹಿತ ಚೋರಡಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿಗಳು ಜಪ್ತುಮಾಡಿ ಕ್ರಿಮಿನಲ್ ಕೇಸ್ ದಾಖಲಿಸಿರುತ್ತಾರೆ. ವಲಯ ಅರಣ್ಯಾಧಿಕಾರಿಗಳು ಈ ವಾಹನದಲ್ಲಿ ಅರಣ್ಯ ಉತ್ಪನ್ನವನ್ನು ಕಳ್ಳಸಾಗಾಣಿಕೆ ಮಾಡಿದ ಬಗ್ಗೆ ವಿಚಾರಣಾ ವರದಿಯನ್ನು ಈ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.

ಇದರಿಂದ ಈ ವಾಹನದಲ್ಲಿ ಅರಣ್ಯ ಉತ್ಪನ್ನಗಳನ್ನು ಅಕ್ರಮವಾಗಿ ಸಾಗಿಸಲು ಉಪಯೋಗಿಸಿರುವುದು ಸಾಬೀತಾಗಿರುತ್ತದೆ. ಆದ್ದರಿಂದ ವಾಹನ ಮತ್ತು ಅರಣ್ಯ ಉತ್ಪನ್ನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಕೋರಿರುತ್ತಾರೆ.

ಪ್ರಕರಣದ ಎಲ್ಲಾ ದಾಖಲೆಗಳು ಮತ್ತು ವಾಹನದ ಬಿ ಪ್ರತಿ ತರಿಸಿ ಪರಿಶೀಲಿಸಿ, ಅಭಿಯೋಜಕರ ವಾದವನ್ನು ಕೇಳಲಾಯಿತು. ಈ ಪ್ರಕರಣದ ವಿದ್ಯಾಮಾನಗಳನ್ನು ಅರಿತು ಈ ಕೆಳಗಿನಂತೆ ಆದೇಶ ಹೊರಡಿಸಿದೆ.

-|| ಆದೇಶ ||-

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆರ್.ರವಿಶಂಕರ್, ಭಾ.ಅ.ಸೇ., ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ ಆದ ನಾನು, ಅರಣ್ಯ ಮೊಕದ್ದಮೆಯಲ್ಲಿ ಜಪ್ತು ಮಾಡಿದ ಹೀರೋಹೊಂಡಾ ಸ್ಪೆ÷್ಲಂಡರ್ ಪ್ಲಸ್ ಬೈಕ್ ಕೆಎ-16-ಎಲ್-5846ನ್ನು (ಇಂಜಿನ್ ನಂ: ಕಂಡುಬಂದಿಲ್ಲ, ಛಾಸ್ಸಿಸ್ ನಂ: 05J16C40844) ಮತ್ತು ಈ ವಾಹನದಲ್ಲಿದ್ದ ಬೀಟೆ ಸೈಜ್ 1=0.055 ಎಂ3 ಅನ್ನು ಅಂತಿಮವಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುತ್ತೇನೆ. ಮುಟ್ಟುಗೋಲು ಹಾಕಿಕೊಂಡ ವಾಹನ ಮತ್ತು ಅರಣ್ಯ ಉತ್ಪನ್ನವನ್ನು ಸರ್ಕಾರಕ್ಕೆ ಅನುಕೂಲಕರವಾಗಿ ವಿಲೇ ಮಾಡಲು ಆದೇಶಿಸಿದ್ದೇನೆ. ಈ ಆದೇಶವನ್ನು ಹೇಳಿ ಬರೆಯಿಸಿ, ಗಣಕಯಂತ್ರದಲ್ಲಿ ಮುದ್ರಿಸಿ, ನಂತರ ಸರಿಪಡಿಸಿ ದಿ: 23-03 -2013ರಂದು ನನ್ನ ಸಹಿ ಹಾಗೂ ಮೊಹರಿನೊಂದಿಗೆ ತೆರೆದ ನ್ಯಾಯಾಲಯದಲ್ಲಿ ಆದೇಶಿಸಿದ್ದೇನೆ. ಈ ಆದೇಶ ಹೊರಡಿಸಿದ 30 (ಮೂವತ್ತು) ದಿನಗಳ ಒಳಗಾಗಿ ಯಾರು ಮೇಲ್ಮನವಿ ಸಲ್ಲಿಸದೇ ಹೋದಲ್ಲಿ ಇದೇ ಅಂತಿಮ ಆದೇಶವಾಗಿರುತ್ತದೆ.

ಆರ್.ರವಿಶಂಕರ್

PR.262

ಅಧಿಕೃತ ಅಧಿಕಾರಿ ಹಾಗೂ S/C.25

ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ೮೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ಭಾಗ ೩

ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ ಇವರ ನ್ಯಾಯಾಲಯದಲ್ಲಿ

ಬಿ3:ಅಮೊ:ವಾಹನ:ವಿವ:13/12-13 ದಿನಾಂಕ: 23 - 03-2013

ಉಪಸ್ಥಿತರು :: ಆರ್.ರವಿಶಂಕರ್, ಭಾ.ಅ.ಸೇ.,ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ.

ಪಿರ್ಯಾಧಿದಾರರು :: ವಲಯ ಅರಣ್ಯಾಧಿಕಾರಿ, ಹೊಸನಗರ ವಲಯ, ಹೊಸನಗರ (ಸಹಾಯಕ ಸರ್ಕಾರಿ ಅಭಿಯೋಜಕರು, ಸಾಗರ) ಆರೋಪಿಗಳು :: ಪತ್ತೆಯಾಗಿಲ್ಲ

ಬಾಧ್ಯತೆದಾರರು :: ಯಾರೂ ಹಕ್ಕುಬಾಧ್ಯತೆಯ ಅರ್ಜಿ ಸಲ್ಲಿಸಿಲ್ಲ.

ಪ್ರಸ್ತಾವನೆ:-

ದಿ:17-06-2012ರಂದು ಟಾಟಾ 407 ಕೆಎ-17-ಎ-5279 ರಲ್ಲಿ ಬೀಟೆ ನಾಟಾವನ್ನು ಅಕ್ರಮ ಸಾಗಾಣಿಕೆ ಮಾಡುತ್ತಿರುವಾಗ ಕೋಡೂರು ಶಾಖೆಯ ಉಪ ವಲಯ ಅರಣ್ಯಾಧಿಕಾರಿಗಳು ಪತ್ತೆಹಚ್ಚಿ ಬರೆದ ಮಹಜರ್ ವಿವರ ಈ ಕೆಳಗಿನಂತಿದೆ.

ದಿ:17-06-2012ರಂದು ಹೊಸನಗರ ವಲಯದ ಕೋಡೂರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಯವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಹೊಸನಗರ ತಾಲ್ಲೂಕು ಕೆರೆಹಳ್ಳಿ ಹೋಬಳಿ ಬಿಳಕಿ ಗ್ರಾಮಕ್ಕೆ ಹೋಗುವ ಜಲ್ಲಿ ರಸ್ತೆಯ ಬದಿ ಕಾಯುತ್ತಿರುವಾಗ ಒಂದು ವಾಹನ ಬೆಳಗಿನ ಜಾವ 4-10ರ ಸಮಯದಲ್ಲಿ ಬರುತ್ತಿರುವುದನ್ನು ನಿಲ್ಲಿಸಲು ಸೂಚಿಸಿದಾಗ ವಾಹನ ನಿಲ್ಲಿಸಿ, ವಾಹನದಲ್ಲಿದ್ದ ಅಸಾಮಿಗಳು ವಾಹನದಿಂದ ಇಳಿದು ಕತ್ತಲೆಯಲ್ಲಿ ಕೈಗೆ ಸಿಗದೆ ಪರಾರಿಯಾದರು. ಓಡಿಹೋದವರು ಯಾರೆಂದು ಗುರುತಿಸಲು ಸಾಧ್ಯವಾಗಿರುವುದಿಲ್ಲ. ನಂತರ ವಾಹನದ ಹತ್ತಿರ ಬಂದು ನೋಡಲಾಗಿ ಟಾಟಾ 407 ನಂ: ಕೆಎ-17-ಎ-5279 ಆಗಿದ್ದು, ವಾಹನದೊಳಗೆ 7 ಬೀಟೆ ನಾಟಾವಿದ್ದು, ಈ ನಾಟಾಗಳ ತುದಿ ಬುಡದಲ್ಲಿ ಇಲಾಖಾ ಛಾಪಾದ ಗುರುತಿರಲಿಲ್ಲ. ಆದ್ದರಿಂದ ಇದು ಅಕ್ರಮ ಸಾಗಾಣಿಕೆ ಎಂದು ಪರಿಗಣಿಸಿ, ಸದರಿ 7 ಬೀಟೆ ನಾಟಾಗಳನ್ನು ಅಳತೆ ಮಾಡಲಾಗಿ 1.157 ಎಂ3 ಪ್ರಮಾಣವಿರುತ್ತದೆ. ಹಾಗೂ ಸದರಿ ತುಂಡುಗಳಿಗೆ ನಂಬರ್ ನೀಡಲಾಯಿತು. ವಾಹನ ಮತ್ತು ಅರಣ್ಯ ಉತ್ಪನ್ನವನ್ನು ಪ್ರಥಮ ವರ್ತಮಾನ ವರದಿ, ಜಪ್ತುವರದಿ, ಮಹಜರ್ ವರದಿಯೊಂದಿಗೆ ಇಲಾಖಾ ಪರ ವಶಪಡಿಸಿಕೊಂಡು, ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷನ್ 24, 62, 71 (ಎ), 104(ಎ) ಮತ್ತು ಕರ್ನಾಟಕ ಅರಣ್ಯ ಕಾನೂನು 1969 ಉಪನಿಯಮ 144, 165ರ ಪ್ರಕಾರ ಹೊಸನಗರ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ:26/12-13ನ್ನು ಕೋಡೂರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ದಾಖಲಿಸಿ, ವಾಹನ, ಅರಣ್ಯ ಉತ್ಪನ್ನ ಮತ್ತು ದಾಖಲೆಗಳನ್ನು ಮುಂದಿನ ತನಿಖೆಗಾಗಿ ವಲಯ ಅರಣ್ಯಾಧಿಕಾರಿ, ಹೊಸನಗರ ವಲಯ ಇವರ ಸಮಕ್ಷಮ ಹಾಜರ್ಪಡಿಸಿರುತ್ತಾರೆ.

ವಲಯ ಅರಣ್ಯಾಧಿಕಾರಿ, ಹೊಸನಗರ ಇವರು ಈ ವಾಹನ ಮತ್ತು ದಾಖಲೆಗಳನ್ನು ಈ ನ್ಯಾಯಾಲಯಕ್ಕೆ ಹಾಜರ್ಪಡಿಸಿರುತ್ತಾರೆ. ಈ ವಾಹನವನ್ನು ಸುರಕ್ಷತೆಗಾಗಿಡಲು ವಲಯ ಅರಣ್ಯಾಧಿಕಾರಿ, ಸರ್ಕಾರಿ ನಾಟಾ ಸಂಗ್ರಹಾಲಯ, ಸಾಗರ ಇವರ ಸುಪರ್ಧಿಗೆ ಕೊಡಲು ಈ ನ್ಯಾಯಾಲಯದಿಂದ ಆದೇಶವಾಗಿದೆ.

ಈ ವಾಹನಗಳ 'ಬಿ' ಎಕ್ಸ್‌ಟ್ರ್ಯಾಕ್ಟ್‌ನ್ನು ಈ ನ್ಯಾಯಾಲಯಕ್ಕೆ ಒದಗಿಸಲು ಸಾರಿಗೆ ಅಧಿಕಾರಿ, ದಾವಣಗೆರೆ ಇವರಿಗೆ ಈ ನ್ಯಾಯಾಲಯದಿಂದ ಬಿ3:ಅಮೊ:ವಾಹನ:ವಿವ-13/12-13 ದಿ:17-06-2012ರಂದು ಪತ್ರ ಬರೆದು ಕೋರಲಾಗಿದೆ. ಅದರಂತೆ ಬಿ ಎಕ್ಸ್‌ಟ್ರ್ಯಾಕ್ಟನ್ನು ಈ ನ್ಯಾಯಾಲಯಕ್ಕೆ ಒದಗಿಸಿದ್ದು ಸದರಿ ಬಿ ಎಕ್ಸ್‌ಟ್ರ್ಯಾಕ್ಟ್‌ನ್ನು ಪರಿಶೀಲಿಸಲಾಗಿ ಟಾಟಾ 407 ಕೆಎ-17-ಎ-5279ರ ಬದಲು ಬಜಾಜ್ ಆಟೋರಿಕ್ಷಾದ (ಕೆಎ-17-ಎ-5279) ಬಿ ಎಕ್ಸ್‌ಟ್ರ್ಯಾಕ್ಟ್ ಆಗಿರುತ್ತದೆ. ಆದ್ದರಿಂದ ಸದರಿ ವಾಹನದ ನಂಬರ್ ಪ್ಲೇಟನ್ನು ಬದಲಾಯಿಸಿರುವುದು ಸ್ಪಷ್ಟವಾಗಿ ಕಂಡುಬಂದಿರುತ್ತದೆ. ಇದರಿಂದ ಈ ವಾಹನದ ನಿಜವಾದ ಆರ್.ಸಿ. ಮಾಲೀಕರು ಪತ್ತೆಯಾಗದ ಕಾರಣ ಕರ್ನಾಟಕ ಅರಣ್ಯ ಕಾಯ್ದೆ 1963 ಸೆಕ್ಷನ್ 71(ಬಿ) (1)ರ ಪ್ರಕಾರ ನೋಟಿಸ್ ಜಾರಿಮಾಡಲು ಸಾಧ್ಯವಾಗಿರುವುದಿಲ್ಲ.

ಈ ನಡುವೆ ಈ ವಾಹನದ ಪ್ರಚಾರಕ್ಕಾಗಿ ಈ ನ್ಯಾಯಾಲಯದಿಂದ ಬಿ3-ಅಮೊ-ವಾಹನ-ಪ್ರಕಟಣೆ:ಸಿಆರ್-24/12-13, ದಿ: 31-07-2012ರಂದು ಪ್ರಕಟಣೆ ಹೊರಡಿಸಿರುತ್ತದೆ. ಈ ಪ್ರಕಟಣೆಯ ಪ್ರತಿಯನ್ನು ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯ ಪತ್ರ ವಿಭಾಗ, ಬೆಂಗಳೂರು ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ, ಬೆಂಗಳೂರು ಇವರಿಗೆ ಕಳುಹಿಸಿ ಗೆಜೆಟ್ ಮತ್ತು ದಿನಪ್ರತಿಕೆಯಲ್ಲಿ ಪ್ರಕಟಿಸಲು ಕೋರಲಾಯಿತು. ಅದರಂತೆ, ದಿ: 10-08-2012ರಂದು ಹೊಸದಿಗಂತ ಪತ್ರಿಕೆಯಲ್ಲಿ ಹಾಗೂ ದಿ:06-09-2012ರಂದು ರಾಜ್ಯ ಗೆಜೆಟ್ ಪತ್ರಿಕೆಯಲ್ಲಿ ಈ ಪ್ರಕಟಣೆಯು ಪ್ರಕಟಗೊಂಡಿರುತ್ತದೆ.

ಪ್ರಕಟಣೆಯು ಪತ್ರಿಕೆಯಲ್ಲಿ ಪ್ರಕಟಗೊಂಡು 30 ದಿನಗಳಾದರೂ ವಾಹನ ಮಾಲೀಕರಿರಾಗಲೀ ಅವರ ಪರ ವಕೀಲರಾಗಲೀ ಈ ನ್ಯಾಯಾಲಯಕ್ಕೆ ಕ್ಲೇಮು ಅರ್ಜಿಯನ್ನು ಸಲ್ಲಿಸಿರುವುದಿಲ್ಲ.

ಸಹಾಯಕ ಸರ್ಕಾರಿ ಅಭಿಯೋಜಕರು ದಿ:23-02-2013ರಂದು ವಾದ ಮಂಡಿಸಿ, ಬೀಟೆ ನಾಟಾವನ್ನು ಅಕ್ರಮವಾಗಿ ಸಾಗಿಸುತ್ತಿರುವಾಗ ಮಾಲು ಸಹಿತ ಹೊಸನಗರ ವಲಯದ ಕೋಡೂರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಪತ್ತೆಹಚ್ಚಿ ಕ್ರಿಮಿನಲ್ ಕೇಸ್ ದಾಖಲಿಸಿರುತ್ತಾರೆ. ಕೇಸ್ ದಾಖಲಿಸಿದ ಬಗ್ಗೆ ಪ್ರಥಮ ವರ್ತಮಾನ ವರದಿ, ಜಪ್ತಿ ವರದಿಯನ್ನು ವಲಯ ಅರಣ್ಯಾಧಿಕಾರಿ, ಹೊಸನಗರ ಇವರು ಈ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ಇದರಿಂದ ಈ ವಾಹನದಲ್ಲಿ ಬೀಟೆ ನಾಟಾಗಳನ್ನು ಅಕ್ರಮವಾಗಿ ಸಾಗಿಸಿರುವುದು ಸಾಬೀತಾಗಿರುತ್ತದೆ. ಆದ್ದರಿಂದ ವಾಹನ ಮತ್ತು ಅರಣ್ಯ ಉತ್ಪನ್ನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಕೋರಿರುತ್ತಾರೆ.

ಈ ಪ್ರಕರಣದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಅಭಿಯೋಜಕರ ವಾದವನ್ನು ಕೇಳಿದೆ. ಹಾಗೂ ಈ ವಾಹನದ ಬಗ್ಗೆ ಹೆಚ್ಚಿನ ಪ್ರಚಾರಕ್ಕಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುತ್ತದೆ. ಈ ಪ್ರಕಟಣೆಯು ರಾಜ್ಯ ಗೆಜೆಟ್‌ನಲ್ಲಿ ಮತ್ತು ದಿನಪತ್ರಿಕೆಯಲ್ಲಿ ಪ್ರಕಟಗೊಂಡು 30 ದಿನಗಳಾದರೂ ಯಾರೂ ಹಕ್ಕು ಬಾಧ್ಯತೆಯ ಅರ್ಜಿಯನ್ನು ಈ ನ್ಯಾಯಾಲಯಕ್ಕೆ ಸಲ್ಲಿಸದೇ ಇದ್ದುದ್ದರಿಂದ ಈ ಪ್ರಕರಣದ ವಿದ್ಯಾಮಾನಗಳನ್ನು ಅರಿತು ಈ ಕೆಳಗಿನಂತೆ ಆದೇಶ ಹೊರಡಿಸಿದೆ.

-|| ಆದೇಶ ||-

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆರ್.ರವಿಶಂಕರ್, ಭಾ.ಅ.ಸೇ., ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ ಆದ ನಾನು, ಅರಣ್ಯ ಮೊಕದ್ದಮೆಯಲ್ಲಿ ಜಪ್ತು ಮಾಡಿದ ವಾಹನ ಟಾಟಾ 407-ಕೆಎ-17-ಎ-5279ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ೮೭೧ (ಛಾಸ್ಸಿಸ್ ನಂ: 357010ಐ00823271, ಇಂಜಿನ್ ನಂ: 2352624981737087) ಮತ್ತು ಬೀಟೆ ನಾಟಾ 7=1.157ಎಂ3 ನ್ನು ಅಂತಿಮವಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುತ್ತೇನೆ. ಮುಟ್ಟುಗೋಲು ಹಾಕಿಕೊಂಡ ವಾಹನ ಮತ್ತು ಅರಣ್ಯ ಉತ್ಪನ್ನವನ್ನು ಸರ್ಕಾರಕ್ಕೆ ಅನುಕೂಲಕರವಾಗಿ ವಿಲೇ ಮಾಡಲು ಆದೇಶಿಸಿದ್ದೇನೆ. ಈ ಆದೇಶವನ್ನು ಹೇಳಿ ಬರೆಯಿಸಿ, ಗಣಕಯಂತ್ರದಲ್ಲಿ ಮುದ್ರಿಸಿ, ನಂತರ ಸರಿಪಡಿಸಿ ದಿ: 23-03-2013 ರಂದು ನನ್ನ ಸಹಿ ಹಾಗೂ ಮೊಹರಿನೊಂದಿಗೆ ತೆರೆದ ನ್ಯಾಯಾಲಯದಲ್ಲಿ ಆದೇಶಿಸಿದ್ದೇನೆ. ಈ ಆದೇಶ ಹೊರಡಿಸಿದ 30 (ಮೂವತ್ತು) ದಿನಗಳ ಒಳಗಾಗಿ ಯಾರು ಮೇಲ್ಮನವಿ ಸಲ್ಲಿಸದೇ ಹೋದಲ್ಲಿ ಇದೇ ಅಂತಿಮ ಆದೇಶವಾಗಿರುತ್ತದೆ.

ಆರ್.ರವಿಶಂಕರ್

PR.263

ಅಧಿಕೃತ ಅಧಿಕಾರಿ ಹಾಗೂ S/C.25

ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ ಕಾರ್ಮಿಕ ಅದಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ದ.ಕ. ಉಪವಿಭಾಗ-1,ಬೆಂದೂರ್‌ವೆಲ್,ಕಂಕನಾಡಿ, ಮಂಗಳೂರು -ಇವರ ನ್ಯಾಯಾಲಯ

ಅಧಿಸೂಚನೆ ಸಂಖ್ಯೆ :ಡಬ್ಲ್ಯೂಸಿಎ/ಸಿಅರ್-3/2013ಎಫ್ ದಿನಾಂಕ: 27-03-2013.

ಅರ್ಜಿದಾರರು: ವಿರುದ್ಧ ಪ್ರತಿವಾದಿಗಳು

ಮೆ: ಇಂಡೋ ಫಿಶರೆಸ್, ಎಲಿಯಾರ್ ಪದವು,

ಹರೇಕಳ ಗ್ರಾಮ, ಮಂಗಳೂರು ತಾಲೂಕು.

1. ಶ್ರೀ ಅಬ್ದುಲ್ ರಹಿಮಾನ್,ದಿ: ಶ್ರೀ ಮಹಮ್ಮದ್ ರಿಯಾರhi್‌ರ ತಂದೆ, 2. ಶ್ರೀಮತಿ ಆಯಿಶಾ, ದಿ: ಶ್ರೀ ಮಹಮ್ಮದ್ ರಿಯಾರhi್‌ರ ತಾಯಿ, 3. ಶ್ರೀ ಇಬ್ರಾಹಿಂ ಕಲೀಲ್, ದಿ: ಶ್ರೀ ಮಹಮ್ಮದ್ ರಿಯಾರhi್‌ರ ಸಹೋದರ,

ವಾಸ: ಎಂ.ಆರ್.ಮಂಜಿಲ್, ಮಡತಡ್ಕ, ಕುನ್ನಿಕಾನ ಅಂಚೆ,

ಕಾಸರಾಗೋಡ್ ಜಿಲ್ಲೆ, ಕೇರಳ ರಾಜ್ಯ, ಪಿನ್-671551.

ಅರ್ಜಿದಾರರಾದ / ಶ್ರೀ ಅಬ್ದುಲ್ ರಹಿಮಾನ್, ದಿ: ಶ್ರೀ ಮಹಮ್ಮದ್ ರಿಯಾರhi್‌ರ ತಂದೆ, ಇವರು ತಮ್ಮ ಮಗನಾದ ದಿವಂಗತ ಶ್ರೀ ಮಹಮ್ಮದ್ ರಿಯಾರhi್ ರವರು ಪ್ರತಿವಾದಿಗಳಾದ ಮೆ: ಇಂಡೋ ಫಿಶರೆಸ್, ಎಲಿಯಾರ್ ಪದವು, ಹರೇಕಳ ಗ್ರಾಮ, ಮಂಗಳೂರು ತಾಲೂಕು., ಇವರಲ್ಲಿ ಕೆಲಸಗಾರರಾಗಿದ್ದು ಕೆಲಸದಲ್ಲಿ ನಿರತರಾಗಿದ್ದ ದಿ: 13-02-2013 ರಂದು ಅಪಘಾತಕ್ಕೀಡಾಗಿ ಮೃತರಾದರೆಂದು ಹೇಳಿ ಆಶ್ರೀತರಾದ ತಮಗೆ ಪ್ರತಿವಾದಿಯವರಿಂದ ಪರಿಹಾರವನ್ನು ಕೊಡಿಸಿ ಕೊಡಬೇಕೆಂದು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ್ದರಿಂದ ಈ ವಿಷಯದಲ್ಲಿ ಈ ಅರ್ಜಿದಾರರಲ್ಲದೆ ಬೇರೆ ಯಾರಾದರೂ ಅರ್ಜಿದಾರರಾಗಿದ್ದು, ಅವರ ಅರ್ಜಿ ಅಥವಾ ತಕರಾರು ಏನಾದರೂ ಇದ್ದಲ್ಲಿ ಮತ್ತು ಈ ಅರ್ಜಿಗೆ ಸಂಬಂಧಿಸಿ ಇನ್ನಿತರ ಯಾವುದೇ ರೀತಿಯ ತಕರಾರು ಇದ್ದರೆ ಈ ಅಧಿಸೂಚನೆ ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟನೆಯಾದಲ್ಲಿನಿಂದ 30 ದಿನಗಳೊಳಗೆ ಈ ನ್ಯಾಯಾಲಯಕ್ಕೆ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ. ಈ ನಿಗದಿತ ಸಮಯದಲ್ಲಿ ಈ ನ್ಯಾಯಾಲಯವು ಯಾವ ಕ್ಲೇಮು ಅರ್ಜಿ/ ತಕರಾರು ಅರ್ಜಿ ಸ್ವೀಕರಿಸದಿದ್ದಲಿ ಈ ನ್ಯಾಯಾಲಯವು ಮುಂದಿನ ಕ್ರಮವನ್ನು ಜರುಗಿಸಲಾಗುವುದೆಂದು ತಿಳಿಸಲಾಗಿದೆ.

ಮಹೇಶ್

PR.248

ಕಾರ್ಮಿಕ ಅಧಿಕಾರಿ ಹಾಗೂ

S/C.5

ಕಾರ್ಮಿಕ ನಷ್ಟಪರಿಹಾರ ಆಯುಕ್ತರು,ದ.ಕ. ಉಪ ವಿಭಾಗ-1, ಮಂಗಳೂರು ಕಾರ್ಮಿಕ ಅದಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ದ.ಕ. ಉಪವಿಭಾಗ-1,ಬೆಂದೂರ್‌ವೆಲ್,ಕಂಕನಾಡಿ, ಮಂಗಳೂರು -ಇವರ ನ್ಯಾಯಾಲಯ

ಅಧಿಸೂಚನೆ ಸಂಖ್ಯೆ :ಡಬ್ಲ್ಯೂಸಿಎ/ಸಿಅರ್-4/2013ಎಫ್ ದಿನಾಂಕ: 27-03-2013.

ಅರ್ಜಿದಾರರು: ವಿರುದ್ಧ ಪ್ರತಿವಾದಿಗಳು

1. ಶ್ರೀ ರಾಜರಾಮ್ ಯಾದವ್, ದಿ: ಶ್ರೀ ಅಲಗು ಕುಮಾರ್ ರವರ ತಂದೆ,

ಮೆ: ಪವರ್ ಮ್ಯಾಕ್ ಪ್ರಾಜೆಕ್ಟ್.ಲಿ., ಫ್ಲಾಟ್ ನಂ.77,

ಜುಬ್ಲಿ ಎನ್‌ಕ್ಲೇವ್, ಹಿಟೆಕ್ಸ್ ಎದುರು, ಮದಪುರ್, 2. ಶ್ರೀಮತಿ ಪಾರ್ವತಿ ದೇವಿ,ದಿ: ಶ್ರೀ ಅಲಗು ಕುಮಾರ್ ರವರ ತಾಯಿ

ಹೈದ್ರಬಾದ್-500081.

3. ಶ್ರೀಮತಿ ಇಂದು ದೇವಿ,ದಿ: ಶ್ರೀ ಅಲಗು ಕುಮಾರ್ ರವರ ಮಡದಿ

ವಾಸ: ಡೋರ್ ನಂ-51, ಸನ್ ಬರ್ಸ ವಿಲೇಜ್, ಸಹಾಪುರ್ ಪೋಲೀಸ್ ಸ್ಟೇಷನ್,

ಭೋಜಪುರ್, ಬಿಹಾರ.

ಅರ್ಜಿದಾರರಾದ / ಶ್ರೀ ರಾಜರಾಮ್ ಯಾದವ್, ದಿ: ಶ್ರೀ ಅಲಗು ಕುಮಾರ್ ರವರ ತಂದೆ, ಇವರು ತಮ್ಮ ಮಗನಾದ ದಿವಂಗತ ಶ್ರೀ ಅಲಗು ಕುಮಾರ್ ರವರು ಪ್ರತಿವಾದಿಗಳಾದ ಮೆ: ಪವರ್ ಮ್ಯಾಕ್, ಎಚ್ಆರ್ಎಸ್‌ಜಿ-2, ಸಿಪಿಪಿ.ಫೇಸ್-III, ಎಂಆರ್‌ಪಿಎಲ್, ಮಂಗಳೂರು-575030., ಇವರಲ್ಲಿ ಕೆಲಸಗಾರರಾಗಿದ್ದು ಕೆಲಸದಲ್ಲಿ ನಿರತರಾಗಿದ್ದ ದಿ: 19-01-2013 ರಂದು ಅಪಘಾತಕ್ಕೀಡಾಗಿ ಮೃತರಾದರೆಂದು ಹೇಳಿ ಆಶ್ರೀತರಾದ ತಮಗೆ ಪ್ರತಿವಾದಿಯವರಿಂದ ಪರಿಹಾರವನ್ನು ಕೊಡಿಸಿ ಕೊಡಬೇಕೆಂದು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

೮೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ಭಾಗ ೩

ಆದ್ದರಿಂದ ಈ ವಿಷಯದಲ್ಲಿ ಈ ಅರ್ಜಿದಾರರಲ್ಲದೆ ಬೇರೆ ಯಾರಾದರೂ ಅರ್ಜಿದಾರರಾಗಿದ್ದು, ಅವರ ಅರ್ಜಿ ಅಥವಾ ತಕರಾರು ಏನಾದರೂ ಇದ್ದಲ್ಲಿ ಮತ್ತು ಈ ಅರ್ಜಿಗೆ ಸಂಬಂಧಿಸಿ ಇನ್ನಿತರ ಯಾವುದೇ ರೀತಿಯ ತಕರಾರು ಇದ್ದರೆ ಈ ಅಧಿಸೂಚನೆ ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟನೆಯಾದಲ್ಲಿನಿಂದ 30 ದಿನಗಳೊಳಗೆ ಈ ನ್ಯಾಯಾಲಯಕ್ಕೆ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ. ಈ ನಿಗದಿತ ಸಮಯದಲ್ಲಿ ಈ ನ್ಯಾಯಾಲಯವು ಯಾವ ಕ್ಲೇಮು ಅರ್ಜಿ/ ತಕರಾರು ಅರ್ಜಿ ಸ್ವೀಕರಿಸದಿದ್ದಲಿ ಈ ನ್ಯಾಯಾಲಯವು ಮುಂದಿನ ಕ್ರಮವನ್ನು ಜರುಗಿಸಲಾಗುವುದೆಂದು ತಿಳಿಸಲಾಗಿದೆ.

ಮಹೇಶ್

PR.247

ಕಾರ್ಮಿಕ ಅಧಿಕಾರಿ ಹಾಗೂ

S/C.5

ಕಾರ್ಮಿಕ ನಷ್ಟಪರಿಹಾರ ಆಯುಕ್ತರು,ದ.ಕ. ಉಪ ವಿಭಾಗ-1, ಮಂಗಳೂರು ಕಾರ್ಮಿಕ ಅದಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ದ.ಕ. ಉಪವಿಭಾಗ-1,ಬೆಂದೂರ್‌ವೆಲ್,ಕಂಕನಾಡಿ, ಮಂಗಳೂರು -ಇವರ ನ್ಯಾಯಾಲಯ

ಅಧಿಸೂಚನೆ ಸಂಖ್ಯೆ :ಡಬ್ಲ್ಯೂಸಿಎ/ಸಿಅರ್-5/2013ಎಫ್ ದಿನಾಂಕ: 27-03-2013.

ಅರ್ಜಿದಾರರು: ವಿರುದ್ಧ ಪ್ರತಿವಾದಿಗಳು

ಶ್ರೀಮತಿ ಎ.ಎ, ಕಾಮವ್ವ, ಶ್ರೀ ದಿ|| ಅಯ್ಯಪ್ಪ ರವರ ಮಡದಿ,

ಮೆ: ಎಂ.ಫಾರ್ ಕನ್‌ಸ್ಟ್ರಕ್ಷನ್ಸ್ ಪ್ರೈ.ಲಿ., ರೆhೂೕನಲ್ ಆಫೀಸ್, ವಾಸ: ದೇವಿ ನಿಲಯ, ಮುಗ್ರೋಡಿ, ಸಂಜಯ ನಗರ, ಪದವಿನಂಗಡಿ,

ಲೈಟ್ ಹೌಸ್ ಕೊಂಟೋನಿಯಂ, ಲೈಟ್ ಹೌಸ್ ಹಿಲ್ ರೋಡ್,

ಮಂಗಳೂರು-575003.

ಮಂಗಳೂರು.

ಅರ್ಜಿದಾರರಾದ / ಶ್ರೀಮತಿ ಎ.ಎ, ಕಾಮವ್ವ, ಶ್ರೀ ದಿ|| ಅಯ್ಯಪ್ಪ ರವರ ಮಡದಿ, ಇವರು ತಮ್ಮ ಮಗನಾದ ದಿವಂಗತ ಶ್ರೀ ಚಿನ್ನಪ್ಪ ರವರು ಪ್ರತಿವಾದಿಗಳಾದ ಮೆ: ಎಂ.ಫಾರ್ ಕನ್‌ಸ್ಟ್ರಕ್ಷನ್ಸ್ ಪ್ರೈ.ಲಿ., ರೆhೂೕನಲ್ ಆಫೀಸ್, ಲೈಟ್ ಹೌಸ್ ಕೊಂಟೋನಿಯಂ, ಲೈಟ್ ಹೌಸ್ ಹಿಲ್ ರೋಡ್, ಮಂಗಳೂರು-575003., ಇವರಲ್ಲಿ ಕೆಲಸಗಾರರಾಗಿದ್ದು ಕೆಲಸದಲ್ಲಿ ನಿರತರಾಗಿದ್ದ ದಿ: 04-01-2013 ರಂದು ಅಪಘಾತಕ್ಕೀಡಾಗಿ ಮೃತರಾದರೆಂದು ಹೇಳಿ ಆಶ್ರೀತರಾದ ತಮಗೆ ಪ್ರತಿವಾದಿಯವರಿಂದ ಪರಿಹಾರವನ್ನು ಕೊಡಿಸಿ ಕೊಡಬೇಕೆಂದು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ್ದರಿಂದ ಈ ವಿಷಯದಲ್ಲಿ ಈ ಅರ್ಜಿದಾರರಲ್ಲದೆ ಬೇರೆ ಯಾರಾದರೂ ಅರ್ಜಿದಾರರಾಗಿದ್ದು, ಅವರ ಅರ್ಜಿ ಅಥವಾ ತಕರಾರು ಏನಾದರೂ ಇದ್ದಲ್ಲಿ ಮತ್ತು ಈ ಅರ್ಜಿಗೆ ಸಂಬಂಧಿಸಿ ಇನ್ನಿತರ ಯಾವುದೇ ರೀತಿಯ ತಕರಾರು ಇದ್ದರೆ ಈ ಅಧಿಸೂಚನೆ ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟನೆಯಾದಲ್ಲಿನಿಂದ 30 ದಿನಗಳೊಳಗೆ ಈ ನ್ಯಾಯಾಲಯಕ್ಕೆ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ. ಈ ನಿಗದಿತ ಸಮಯದಲ್ಲಿ ಈ ನ್ಯಾಯಾಲಯವು ಯಾವ ಕ್ಲೇಮು ಅರ್ಜಿ/ ತಕರಾರು ಅರ್ಜಿ ಸ್ವೀಕರಿಸದಿದ್ದಲಿ ಈ ನ್ಯಾಯಾಲಯವು ಮುಂದಿನ ಕ್ರಮವನ್ನು ಜರುಗಿಸಲಾಗುವುದೆಂದು ತಿಳಿಸಲಾಗಿದೆ.

ಮಹೇಶ್

PR.246

ಕಾರ್ಮಿಕ ಅಧಿಕಾರಿ ಹಾಗೂ

ಕಾರ್ಮಿಕ ನಷ್ಟಪರಿಹಾರ ಆಯುಕ್ತರು,ದ.ಕ. ಉಪ ವಿಭಾಗ-1, ಮಂಗಳೂರು

COMMERCIAL TAXES DEPARTMENT

SL No. Number (Including Code No.) of declaration Forms Lost/ destroyed or stolen. Name & address of the dealer to whom declaration Forms is/are issued by the department with date of C form issue. Registration Certificate No. of the dealer under CST Act 1956 The address of the dealer to whom the declaration is/are sent. Date of issue of Form/s by the dealer. Whether Lost/Stolen destroyed. Remarks
1 'C' Form Nos TCK-R- 4489225 M/s.Larsen & Toubro Limited.. Bangalore. 29060127534 M/s.Chemplast Sanmar Ltd., Chennai. 14/09/2007 Lost Duly Completed Form
ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ೮೭೩

ಸಹಕಾರ ಇಲಾಖೆ

ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ, ಮಧುಗಿರಿ ಉಪವಿಭಾಗ, ಮಧುಗಿರಿ ಇವರ ನ್ಯಾಯಾಲಯದಲ್ಲಿನ ನಡವಳಿಕೆಗಳು

ವಿಷಯ: ಪಾವಗಡ ತಾಲ್ಲೂಕು ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ಗೊಲ್ಲನಕುಂಟೆ ಇದರ ಮಾಜಿ ಕಾರ್ಯದರ್ಶಿ ಶ್ರೀ ಲಕ್ಷ್ಮಿನಾರಾಯಣಪ್ಪ ಇವರ ವಿರುದ್ದ ಸಹಕಾರ ಸಂಘಗಳ ಕಾಯಿದೆ 1959 ರ ಕಲಂ 69 ರಡಿ ದಾಖಲಾದ ಅಧಿಭಾರ ಅರ್ಜಿ ಪ್ರಕರಣ ಸಂಖ್ಯೆ:01/2010-11 ರಲ್ಲಿ 19,26,196=92 ರೂಗಳ ಹಣದುರುಪಯೋಗಕ್ಕೆ ಸಂಬಂಧಿಸಿದಂತೆ ದುರುಪಯೋಗ ಹಣದ ಭದ್ರತೆಗಾಗಿ ಸಹಕಾರ ಸಂಘಗಳ ಕಾಯಿದೆ 1959 ರ ಕಲಂ 103 ರ ಅಡಿಯಲ್ಲಿ ತೀರ್ಪು ಮುನ್ನ ಜಪ್ತಿ ಆದೇಶ ಉಲ್ಲೇಖ: ಕಾರ್ಯದರ್ಶಿ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ಗೊಲ್ಲನಕುಂಟೆ ಪಾವಗಡ ತಾಲ್ಲೂಕು ಇವರ ಅರ್ಜಿ ದಿನಾಂಕ: 14/06/2012

ಪ್ರಸ್ತಾವನೆ:-

ಶ್ರೀ ಲಕ್ಷ್ಮಿನಾರಾಯಣಪ್ಪ, ಮಾಜಿ ಕಾರ್ಯದರ್ಶಿ, ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ಗೊಲ್ಲನಕುಂಟೆ ಪಾವಗಡ ತಾಲ್ಲೂಕು ಇವರು ಸದರಿ ಸಂಘದಲ್ಲಿ 19,26,196=92 ರೂಗಳನ್ನು ದುರುಪಯೋಗ ಮಾಡಿರುವುದಾಗಿ ಸಹಕಾರ ಸಂಘಗಳ ಕಾಯಿದೆ 1959 ರ ಕಲಂ 65 ರ ಪರಿವೀಕ್ಷಣಾ ವರದಿ ಹಾಗೂ 2005-06, 2006-07 ನೇ ಸಾಲಿನ ಲೆಕ್ಕಪರಿಶೋಧನಾ ವರದಿಗಳಲ್ಲಿ ದೃಡಪಟ್ಟಿದ್ದು ಈ ಹಣ ಮತ್ತು ಬಡ್ಡಿ ಹಾಗೂ ಇತರೆ ಖರ್ಚುಗಳ ವಸೂಲಾತಿಗೆ ಸಂಘದ ಹಾಲಿ ಕಾರ್ಯದರ್ಶಿ ದಿನಾಂಕ: 05/10/2010 ರಂದು ಸಹಕಾರ ಸಂಘಗಳ ಕಾಯಿದೆ 1959 ರ ಕಲಂ 69 ರಡಿಯಲ್ಲಿ ಅಧಿಭಾರ ಅರ್ಜಿ ಹೊಡಿರುತ್ತಾರೆ. ಈ ದಾವೆಯನ್ನು ದಿನಾಂಕ: 20/10/2010 ರಂದು ಕಡತದಲ್ಲಿ ದಾಖಲಿಸಿಕೊಂಡು ದಿನಾಂಕ: 29/12/2010 ರಿಂದ ವಿಚಾರಣೆ ಪ್ರಾರಂಭಿಸಲು ಉಭಯತ್ರರಿಗೂ ನೋಟೀಸ್ ಜಾರಿಮಾಡಿಸಿದ್ದು ಪ್ರಕರಣವು ವಿಚಾರಣಾ ಹಂತದಲ್ಲಿರುತ್ತದೆ. ಅರ್ಜಿದಾರರ ಸಂಘದ ಉಲ್ಲೇಖಿತ ಪತ್ರದನ್ವಯ ಶ್ರೀ ಲಕ್ಷ್ಮಿನಾರಾಯಣಪ್ಪ, ಮಾಜಿ ಕಾರ್ಯದರ್ಶಿ ಇವರು ದುರುಪಯೋಗಪಡಿಸಿರುವ ಹಣ 19,26,196=92 ರೂಗಳ ವಸೂಲಾತಿ ಕುರಿತು ಪ್ರತಿವಾದಿಯವರ ಹೆಸರಿನಲ್ಲಿರುವ ಷೆಡ್ಯೂಲ್ ಆಸ್ತಿಯನ್ನು ದುರುದ್ದೇಶದಿಂದ ಬೇರೆಯವರಿಗೆ ವರ್ಗಾವಣೆ ಅಥವಾ ಪರಭಾರೆ ಮಾಡುವುದರ ಮೂಲಕ ದುರುಪಯೋಗದ ಹಣ ಪಾವತಿಸುವಲ್ಲಿ ತನ್ನ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳಬಹುದೆಂದು ಶಂಕಿಸಿ ಸಹಕಾರ ಸಂಘಗಳ ಕಾಯಿದೆ ಕಲಂ 103 ರಡಿಯಲ್ಲಿ ಅರ್ಜಿ ಸಲ್ಲಿಸುತ್ತಾ ಕಲಂ 69 ರ ಅಧಿಭಾರ ಅರ್ಜಿ ವಿಚಾರಣಾ ತೀರ್ಪುಪೂರ್ವ ಜಪ್ತಿ ಆದೇಶ ಹೊರಡಿಸಲು ಕೋರಿರುತ್ತಾರೆ ಸದರಿಯವರ ಉಲ್ಲೇಖದ ಪತ್ರದ ಅನ್ವಯ ಈ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಅಧಿಬಾರ ಅರ್ಜಿ ದಾವೆ ನಂ: 01/2010-11 ರ ಅಂತಿಮ ತೀರ್ಪುಕಾಯ್ದಿರಿಸಿ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959 ರ ಕಲಂ 103 ರ ಅನ್ವಯ ಈ ನ್ಯಾಯಾಲಯದ ದಾವೆಯ ಆದೇಶ ಪೂರ್ವ ಷೆಡ್ಯೂಲ್ ಆಸ್ತಿಯನ್ನು ಜಪ್ತಿಮಾಡಿ ಈ ಕೆಳಗಿನಂತೆ ಆದೇಶ ಹೊರಡಿಸಲಾಗಿದೆ.

ತೀರ್ಪುಮುನ್ನ ಜಪ್ತಿ ಆದೇಶ

ಆದೇಶ ಸಂಖ್ಯೆ: ಸನಿ33/ಕಲಂ103/ಅಧಿ.ಭಾರ ಅರ್ಜಿ:01/2010-11/ /2012-13 ದಿನಾಂಕ:11/01/2013

ಕರ್ನಾಟಕ ಸಹಕಾರ ಸಂಘಗಳ ಕಾಯಿದೆ ಕಲಂ 103 ರನ್ವಯ ಹಾಗೂ ಸರ್ಕಾರದ ಅಧಿಸೂಚನೆ ಕ್ರಮಾಂಕ ಸಿಓ/139/ಸಿಎಲ್ಎಂ2010 ದಿನಾಂಕ: 17/02/2011 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಉಪಯೋಗಿಸಿ ಶ್ರೀ ಜಿ. ತಿಪ್ಪೇಸ್ವಾಮಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮಧುಗಿರಿ ಉಪ ವಿಭಾಗ ಮಧುಗಿರಿ ಆದ ನಾನು ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಶ್ರೀ. ಲಕ್ಷ್ಮಿನಾರಾಯಣಪ್ಪ, ಮಾಜಿ ಕಾರ್ಯದರ್ಶಿ, ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ಗೊಲ್ಲನಕುಂಟೆ ಪಾವಗಡ ತಾಲ್ಲೂಕು ಇವರ ಮತ್ತು ಇವರ ಸಹೊದರರಾದ ಕೆ.ಎನ್. ಜಯರಾಮಪ್ಪ, ಕೆ.ಎನ್. ನರಸಿಂಹಪ್ಪ, ಕೆ.ಎನ್. ರಾಮಚಂದ್ರಪ್ಪ, ಕೆ.ಎನ್. ಮಂಜುನಾಥ, ಕೆ.ಎನ್. ನಾಗಭೂಷಣ ಕೆ. ಟಿ. ಹಳ್ಳಿ ಗ್ರಾಮ ಮತ್ತು ಅಂಚೆ, ಪಾವಗಡ ತಾಲ್ಲೂಕು ನಿಡಗಲ್ಲು ಹೋಬಳಿ ತುಮಕೂರು ಜಿಲ್ಲೆ ಇವರುಗಳ ಹೆಸರಿನಲ್ಲಿರುವ ಸ್ತಿರಾಸ್ತಿ ಪೈಕಿ ಶ್ರೀ ಲಕ್ಷ್ಮಿನಾರಾಯಣಪ್ಪನವರ ಭಾಗಕ್ಕೆ ಬರಬಹುದಾದ ಸ್ಥಿರಾಸ್ತಿಯನ್ನು ಮಾತ್ರ ನ್ಯಾಯಾಲಯದಲ್ಲಿ ವಿಚಾರಣೆ ಇರುವ ದಾವೆಯ ಅಂತಿಮ ತೀರ್ಪಿಗೆ ಒಳಪಟ್ಟು ಆದೇಶ ಪೂರ್ವ ಜಪ್ತಿ ಆದೇಶ ಹೊರಡಿಸಿರುತ್ತೇನೆ.

ಶ್ರೀ ಲಕ್ಷ್ಮಿನಾರಾಯಣಪ್ಪ, ಮಾಜಿ ಕಾರ್ಯದರ್ಶಿ, ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ಗೊಲ್ಲನಕುಂಟೆ ಪಾವಗಡ ತಾಲ್ಲೂಕು ಇವರು ಈ ಕೆಳಗೆ ಷೆಡ್ಯುಲ್‌ನಲ್ಲಿ ವಿವರಿಸಿರುವ ಸ್ತಿರಾಸ್ತಿ ಪೈಕಿ ಶ್ರೀ ಲಕ್ಷ್ಮಿನಾರಾಯಣಪ್ಪನವರ ಭಾಗಕ್ಕೆ ಬರಬಹುದಾದ ಸ್ಥಿರಾಸ್ತಿಯನ್ನು ಈ ನ್ಯಾಯಾಲಯದಿಂದ ಮುಂದಿನ ಆದೇಶ ನೀಡುವವರೆಗೆ ಅಥವ ಸ್ವತ್ತಿಗೆ ತತ್ಸಮಾನವಾದ ನಗದು ಭದ್ರತೆ ನೀಡುವವರೆಗೆ ವಿಲೇವಾರಿ ಮಾಡುವುದೇ ಆಗಲಿ ಪರಭಾರೆ ಮಾಡುವುದಾಗಲಿ ಅಥವಾ ವರ್ಗಾಯಿಸುವುದೇ ಆಗಲಿ ಮಾಡುವಂತಿಲ್ಲ ಒಂದುವೇಳೆ ಈ ಆದೇಶವನ್ನು ನಿರ್ಲಕ್ಷಿಸಿ ಯಾರಾದರು ಈ ಸ್ವತ್ತುಗಳನ್ನು ಖರೀದಿಸಿದಲ್ಲಿ ಪರಭಾರೆ ಮಾಡಿದಲ್ಲಿ ಅಥವ ಇನ್ನೂ ಯಾವುದೇ ವಿಧದಲ್ಲಿ ವರ್ಗಾಯಿಸಿಕೊಂಡಲ್ಲಿ ಅದು ಸಿಂಧುವಾಗುವುದಿಲ್ಲವೆಂದು ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರಲಾಗಿದೆ.

ದುರುಪಯೋಗದಾರರು ಈ ಜಪ್ತಿ ಆದೇಶದ ವ್ಯಾಪ್ತಿಯಿಂದ ಹೊರಬರಲು ಇಚ್ಚಿಸಿದಲ್ಲಿ ಜಪ್ತಿಗೊಳಿಸಲ್ಪಟ್ಟ ಆಸ್ತಿಯ ಮೌಲ್ಯಕ್ಕೆ ತಕ್ಕಷ್ಟು ಮತ್ತು ನ್ಯಾಯಾಲಯವು ಸರಿಯೆಂದು ಭಾವಿಸುವ ನಗದು ಭದ್ರತೆಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮಧುಗಿರಿ ಉಪವಿಭಾಗ ಮಧುಗಿರಿ ಇವರ ಹೆಸರಿನಲ್ಲಿ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಮಧುಗಿರಿ ಶಾಖೆ. ಮಧುಗಿರಿ ಈ ಬ್ಯಾಂಕಿನಲ್ಲಿ ಅಮಾನತ್ ಖಾತೆಯಲ್ಲಿ ತೊಡಗಿಸಿ ಈ ಬಗ್ಗೆ ಮೂಲ ಚಲನ್ ಪ್ರತಿಯನ್ನು ದಿನಾಂಕ: 20/02/2013 ರ ಒಳಗೆ ಈ ನ್ಯಾಯಾಲಯಕ್ಕೆ ಹಾಜರು ಪಡಿಸುವುದರ ಮೂಲಕ ಜಪ್ತಿ ಆದೇಶದಿಂದ ಹೊರಗುಳಿಯಬಹುದೆಂದು ಸಹ ತಿಳಿಸಲಾಗಿದೆ. ಸದರಿ ನಿಗಧಿತ ಅವಧಿಯೊಳಗೆ ನಗದು ಭದ್ರತೆ ನೀಡಲು ವ್ಯಾಜ್ಯದ ಎದುರು ಅರ್ಜಿದಾರರು ವಿಫಲರಾದಲ್ಲಿ ಈ ಷರತ್ತು ಪೂರ್ವ ಜಪ್ತಿ ಆದೇಶ ಸ್ಥಿರಗೊಳ್ಳುವುದಲ್ಲದೆ ಖಾಯಂಗೊಳ್ಳುವುದು ಎಂದು ತಿಳಿಯತಕ್ಕದ್ದು.

೮೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ಭಾಗ ೩

ಸ್ಥಿರಾಸ್ತಿ ಷೆಡ್ಯೂಲ್

ಕ್ರಸಂ ಖಾತೆದಾರರ ಹೆಸರು ಖಾತೆ ನಂ ಸ ರ್ವೆ ನಂ ವಿಸ್ತೀರ್ಣ ತರಹೆ ಚಕ್ಕುಬಂದಿ
1 2 3 4 5 6 7
01 1 ಶ್ರೀ ಲಕ್ಷ್ಮಿನಾರಾಯಣಪ್ಪ 2 ಕೆ.ಎನ್.ಜಯರಾಮಪ್ಪ 3 ಕೆ.ಎನ್ ನರಸಿಂಹಪ್ಪ 4. ಕೆ.ಎನ್ ರಾಮಚಂದ್ರಪ್ಪ 5. ಕೆ.ಎನ್ ಮಂಜುನಾಥ 6. ಕೆ.ಎನ್ ನಾಗಭ ೂ]ಣ ಬಿನ್ ನಾಗಪ್ಪ 155 8/2 4;16 ಎಕರೆ ಖುಷ್ಕಿ ಪೂರ್ವ: ರಂಗಣ್ಣನವರ ಜಮೀನು ಪಶ್ಚಿಮ: ಲಿಂಗಣ್ಣನವರ ಜಮೀನು ಉತ್ತರ: ಚಿಕ್ಕಣ್ಣನವರ ಜಮೀನು ದಕ್ಷಿಣ: ಅಚ್ಚಮ್ಮನವರ ಜಮೀನು

ಈ ಆದೇಶವನ್ನು ನನ್ನ ಸ್ವಹಸ್ತಾಕ್ಷರ ಹಾಗೂ ನ್ಯಾಯಾಲಯದ ಮೊಹರಿನೊಂದಿಗೆ ದಿನಾಂಕ: 11/01/2013 ರಂದು ನೀಡಿರುತ್ತೇನೆ.

ಜಿ ತಿಪ್ಪೇಸ್ವಾಮಿ

ಸಹಕಾರ ಸಂಘಗಳ ಸಹಾಯಕ ನಿಬಂಧಕರು P.R. 210

ಮಧುಗಿರಿ ಉಪವಿಬಾಗ ಮಧುಗಿರಿ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯ, ಕುಂದಾಪುರ ಉಪ ವಿಭಾಗ, ಕುಂದಾಪುರ ಉಡುಪಿ ಜಿಲ್ಲೆ ನಂಬ್ರ ಮಾ.ಹ.ಸಿಆರ್.273/2012-13 ದಿನಾಂಕ 26-12-2012

ಮಾಹಿತಿ ಹಕ್ಕು ಅಧಿನಿಯಮ 2005ರ ಪ್ರಕಾರ ಕಲಂ 4(1) (ಬಿ) ಸಹಾಯಕ ಆಯುಕ್ತರ ಕಛೇರಿ,

ಕುಂದಾಪುರ ಉಪ ವಿಭಾಗ, ಕುಂದಾಪುರ, ಉಡುಪಿ ಜಿಲ್ಲೆ.

ಭಾರತ ಸರ್ಕರವು ಜಾರಿಗೆ ತಂದಿರುವ ಮಾಹಿತಿ ಹಕ್ಕು ಅಧಿನಿಯಮ 2005 ಕಾಯ್ದೆಯ ಕಲಂ 4(1) (ಬಿ)ರನ್ವಯ ಸಹಾಯಕ ಆಯುಕ್ತರು, ಕುಂದಾಪುರ ಕಾರ್ಯಾಕಲಯದ ಸಂಘಟನೆ ಮತ್ತು ಕರ್ತವ್ಯಗಳ ಬಗ್ಗೆ ಕೆಳ ಕಾಣಿಸಿದಂತೆ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಈ ಕೆಳಕಂಡ ವಿಷಯಗಳನ್ನು ದಿನಾಂಕ 30-11-2012ರಲ್ಲಿ ಇದ್ದಂತೆ ಪ್ರಕಟಿಸಲಾಗಿದೆ.

1. ಉಪ ವಿಭಾಗದ ಒಟ್ಟು ತಾಲ್ಲೂಕುಗಳು 3
2. ಉಪ ವಿಭಾಗದ ನಾಡ ಕಛೇರಿಗಳು 4
3. ಕಂದಾಯ ಹೋಬಳಿಗಳು 9
4. ಉಪ ವಿಭಾಗದ ಒಟ್ಟು ಗ್ರಾಮಗಳು 267
5. ಗ್ರಾಮ 0ೆಕ್ಕಿಗರ ವೃತ್ತ 186
6. ನಗರ ಸಭೆಗಳು 1
7. ಪುರ ಸಭೆಗಳು 2
8. ಪಟ್ಟಣ ಪಂಚಾಯತಿಗಳು 1
9. ಗ್ರಾಮ ಪಂಚಾಯತಿಗಳು 146
10. ಉಪ ವಿಭಾಗದ ಭೌಗೋಲಿಕ ವಿಸ್ತೀರ್ಣ 3,56,446.00 ಹೆಕ್ಟೇರ್
11. ಉಪ ವಿಭಾಗದಲ್ಲಿ ಹರಿಯುವ ಪ್ರಮುಖ ನದಿಗಳು 4
12. ಉದ್ಯಮಗಳು ದೊಡ್ಡ ಪ್ರಮಾಣದಲ್ಲಿ 278
1. ಸಹಾಯಕ ಆಯುಕ ್ತ ರು 1
2. ಸಹಾಯಕ ನಿರ್ದೇಶಕರು, ಭ ೂ ದಾಖ0ೆ 1
3. ವ್ಯವಸ್ಥಾಪಕರು 1
4. ಪ್ರ. ದ. ಸಹಾಯಕರು 5
5. ದ್ವಿ. ದ. ಸಹಾಯಕರು 3
6. ದ್ವಿ.ದರ್ಜೆ ಭೂ ಮಾಪಕರು 1
7. ಶೀಘ್ರಲಿಪಿಗಾರರು 1
8. ಬೆರಳಚ್ಚುಗಾರರು 1
9. ವಾಹನ ಚಾಲಕರು 1
10. ಜವಾನ 4
ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ೮೭೫

1. ಸಹಾಯಕ ಆಯಕ್ತರ ಕಾರ್ಯಾಲಯದ ಸಂಘಟನೆ, ರಚನೆ ಕಾರ್ಯಗಳು ಹಾಗೂ ಕರ್ತವ್ಯ ವಿವರಗಳು:

ಕ್ರ. ಸ ಂ. ನೌಕರರ ಹೆಸರು ಪ ದನಾಮ ಪ ಡೆಯುತ್ತಿರುವ ವೇತನ ದ ೂರವಾಣಿ/ಮೊಬೈ ್ ಸ ಂಖ್ಯೆ
1. ಶ್ರೀ ಬಿ. ಸದಾಶಿವ ಪ್ರಭು ಸಹಾಯಕ ಕಮೀ]ನರ್, 33600 + D.A. 9448169434
2. ಶ್ರೀ ಬಿ.ಪಿ. ಪೂಜಾರ (ನಿಯೋಜನೆ ಸ. ಕಮೀ]ನರ್ ಕಛೇರಿ, ಕುಂದಾಪುರ) ವ್ಯವಸ್ತಾಪಕರು, ವಿಶೇ] ತಹಶೀ0್ದಾರರ ಕಛೇರಿ, ಬ್ರಹ್ಮಾವರ 26700 + D.A. 9845904847
3. ಶ್ರೀ ಅಶ್ವತ್ (ತಾಲೂಕು ಕಚೇರಿ ಉಡುಪಿ ನಿಯೋಜನೆಯಲ್ಲಿ) ಪ್ರ.ದ. ಸಹಾಯಕರು 16000 + D.A. 9036278645
4. ಶ್ರೀ ಕೆ. ರಾಮಚಂದ್ರ ರಾವ್ ಪ್ರ.ದ. ಸಹಾಯಕರು 23400 + D.A. 98254;236591
5. ಶ್ರೀ ವಿ ನಾರಾಯಣ ಬಿಲ್ಲವ ಪ್ರ.ದ. ಸಹಾಯಕರು 26700 + D.A. 9986868348
6. ಶ್ರೀ ಕೆ. ಶಂಕರ ಪ್ರ.ದ. ಸಹಾಯಕರು 21600 + D.A. 9483775646
7. ಶ್ರೀ ರಾಜೀವ ಭಂಡಾರಿ ಪ್ರ.ದ. ಸಹಾಯಕರು 29500 + D.A. 9482902965
8. ಶ್ರೀಮತಿ ಬಾಗ್ಯಲಕ್ಷ್ಮಿ ದ್ವಿ.ದ.ಸಹಾಯಕರು 14900 + D.A. 9481144043
9. ಶ್ರೀಮತಿ ವಿಶಾ0ಾಕ್ಷಿ ದ್ವಿ.ದ.ಸಹಾಯಕರು 12500 + D.A. 9448913834
10. ಶ್ರೀ ಮಹಮ್ಮದ್ ಸಿಕಂದರ್ ದ್ವಿ.ದ.ಸಹಾಯಕರು 13000 + D.A. 9591463500
11. ಕು. ಗೀತಾ (ನಿಯೋಜನೆ ಸಹಾಯಕ ಕಮೀ]ನರ್ ಕಛೇರಿ, ಕುಂದಾಪುರ) ಗ್ರಾಮ ಕರಣಿಕರು, ತಾಲೂಕು ಕಛೇರಿ, ಕುಂದಾಪುರ 12000 + D.A. 9449626184
12. ಶ್ರೀಮತಿ ವೀಣಾ (ನಿಯೋಜನೆ ಸಹಾಯಕ ಕಮೀ]ನರ್ ಕಛೇರಿ, ಕುಂದಾಪುರ) ಗ್ರಾಮ ಕರಣಿಕರು, ತಾಲೂಕು ಕಛೇರಿ, ಕುಂದಾಪುರ 12000 + D.A. 0741509195
13. ಶ್ರೀ ಕೆ. ಚಂದ ್ರ ಶೇಖರ (ನಿಯೋಜನೆಯಲ್ಲಿ ತಾಲೂಕು ಕಚೆರಿ, ಕುಂದಾಪುರ) ಡಿ ಗ್ರೂಫ್ ನೌಕರರು 18550 + D.A.
14. ಶ್ರೀ ಹೆಚ್. ರಾಮ ಡಿ ಗ್ರೂಫ್ ನೌಕರರು 19900 + D.A.
15. ಶ್ರೀ ಬಿ. ಸುಬ್ರಹ್ಮಣ್ಯ (ಸಹಾಯಕ ಕಮೀ]ನರ್ ಕಛೇರಿ ಕುಂದಾಪುರ ನಿಯೋಜನೆಯಲ್ಲಿ ಡಿ ಗ್ರೂಫ್ ನೌಕರರು ತಾಲೂಕು ಕಛೇರಿ, ಕುಂದಾಪುರ ವರ್ಗಾವಣೆ

ಅ) ಸಹಾಯಕ ಆಯುಕ್ತರ ಪ್ರಕಾರ್ಯಗಳು:-

ಕಾರ್ಯ ವಿಧಾನ:

ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 10ರ ಅನ್ವಯ ಉಪ ವಿಭಾಗದ ಸಹಾಯಕ ಆಯುಕ್ತರನ್ನು ನೇಮಕ ಮಾಡಲಾಗಿರುತ್ತದೆ.

ಸಹಾಯಕ ಆಯುಕ್ತರು ಉಪ ವಿಭಾಗದಲ್ಲಿನ ತಾಲೂಕು ಕಛೇರಿಗೆ ಆಡಳಿತ ವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆ ಬಗ್ಗೆ ಮೇಲ್ವಿಚಾರಣೆ ಅಧಿಕಾರವುಳ್ಳವರಾಗಿದ್ದಾರೆ. ಅಲ್ಲದೆ, ಉಪ ವಿಭಾಗದ ದಂಡಾಧಿಕಾರಿ ಹಾಗೂ ಆಡಳಿತ ಅಧಿಕಾರಿಯಾಗಿಯೂ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ.

೮೭೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ಭಾಗ ೩
ಕ್ರ. ಸ ಂ. ಸಿಬ್ಬಂಧಿ ಹೆಸರು ಹುದ್ದೆ ವ ಹಿಸಿ ಕೊಟ್ಟ ಪ್ರಕಾರ್ಯಗಳು
1. ಶ್ರೀ ಸದಾಶಿವ ಪ್ರಭು ಸಹಾಯಕ ಆಯುಕ ್ತ ರು ಸಹಾಯಕ ಆಯುಕ ್ತ ರು ಹಾಗೂ ಉಪ ವಿಭಾಗದ ದಂಡಾಧಿಕಾರಿಯಾಗಿ ಕೆಲಸ ನಿರ್ವಹಿಸುವುದು
2. ಶ್ರೀ ಬಿ.ಪಿ. ಪೂಜಾರ (ನಿಯೋಜನೆ ಸ. ಕಮೀ]ನರ್ ಕಛೇರಿ, ಕುಂದಾಪುರ) ವ್ಯವಸ್ತಾಪಕರು, ವಿಶೇ] ತಹಶೀ0್ದಾರರ ಕಛೇರಿ, ಬ್ರಹ್ಮಾವರ 1. ಕಂದಾಯ ಆಡಿಟ್ 2. ಮಹಾ0ೇಖಪಾಲರ ಆಡಿಟ್ 3. ಮಾಹಿತಿ ಹಕ್ಕು 4. ಸಾರ್ವಜನಿಕ ದೂರು ಅರ್ಜಿ
3. ಶ್ರೀ ಕೆ. ರಾಮಚಂದ್ರ ರಾವ್ ಪ್ರ.ದ. ಸಹಾಯಕರು 1. ಎ0್ ಎ ಕ್ಯೂ,.ಸಿಆರ್. 2. ಎ0್ಎಕ್ಯೂ ಎಸ್ ಆರ್. 3. ಸಿಎ0್‌ಡಬ್ಲ್ಯೂ 4. ಆರ್ ಆರ್‌ಟಿ (2)ಎಸ್ ಆರ್.
4. ಶ್ರೀ ವಿ ನಾರಾಯಣ ಬಿಲ್ಲವ ಪ್ರ.ದ. ಸಹಾಯಕರು 1. ಎ0್ಆರ್‌ವೈ.ಸಿಆರ್. 2, ಎ0್ ಎ ಕ್ಯೂ(1)ಸಿಆರ್.
5. ಶ್ರೀ ಕೆ. ಶಂಕರ ಪ್ರ.ದ. ಸಹಾಯಕರು 1. ಎ0್ ಎ ಕ್ಯೂ(2)ಸಿಆರ್. 2. ಆರ್ಆರ್ ಟಿ (1)ಎಸ್ ಆರ್ 3. ಎಫ್ ಓ ಆರ್ (3) ಸಿಆರ್.
6. ಶ್ರೀ ರಾಜೀವ ಭಂಡಾರಿ ಪ್ರ.ದ. ಸಹಾಯಕರು 1. ಎಡಿಎಂ.ಸಿಆರ್. 2. ಎ0್ಎನ್‌ಡಿ.ಸಿಅರ್. 3. .ಎಂಎಜಿ.ಸಿಆರ್, 4.. ವೈಪಿಸಿ.ಸಿಅರ್. 5. ಇಎ0್ಎನ್.ಸಿಆರ್.
7. ಶ್ರೀಮತಿ ಬಾಗ್ಯಲಕ್ಷ್ಮಿ ದ್ವಿ.ದ.ಸಹಾಯಕರು 1. ಆರ್ ಕೆಎ0್.ಸಿಎ., 2. ಸಿಎಎ0್.ಸಿಆರ್. 3.ಎನ್ ಎಫ್ ಬಿಎಸ್., 4. ಇಎಸ್‌ಟಿ.ಸಿಆರ್. 5. ವಿಎಎಸ್.ಸಿಅರ್, 6. ಡಿ ಇ ಸಿ.ಎಸ್ಆರ್. 7. ಡಿಇಸಿ.ಸಿಆರ್, 8. ಪಿ ಎಫ್ಎಸ್. 9. ಸಿಎಸ್ ಡಿ, 10. ಓಎಪಿ/ಪಿಹೆಚ್‌ಪಿ/ಡಿಡ್ಲ್ಯುಪಿ
8. ಶ್ರೀಮತಿ ವಿಶಾ0ಾಕ್ಷಿ ದ್ವಿ.ದ.ಸಹಾಯಕರು 1. ಹೆಚ್ಎಸ್‌ಟಿ.ಸಿಆರ್., 2. ಎಂಎಂಸಿ.ಸಿಆರ್. 3. ಹೆಚ್ಎಸ್‌ಟಿ(2)ಸಿಆರ್, 4.ಎಂಯುಎನ್.ಸಿಅರ್ 5.ಎಎ0್ಎನ್.ಸಿಆರ್., 6. ಎಸ್ಎ0್‌ವೈ
9. ಶ್ರೀ ಮಹಮ್ಮದ್ ಸಿಕಂದರ್ ದ್ವಿ.ದ.ಸಹಾಯಕರು 1. ಅರ್ಅರ್ ಟಿ (3)ಎಸ್ ಆರ್, 2. ಎಂಎಸ್‌ಸಿ.ಸಿಆರ್., 3. ಇಎನ್‌ಟಿ.ಸಿಆರ್ 4. ಎಆರ್ ಎಂ.ಸಿಅರ್,5. ಆರ್ ಕೆ ಎ0್.ಸಿಅರ್. 6. ಎಫ್ ಓ ಆರ್.ಸಿಆರ್ ,7. ಎಸ್‌ಟಿಪಿ.ಸಿಅರ್. 8. ಜೀಪು ಸಿಆರ್, 9. ಯುಡಿಆರ್.
10. ಕು. ಗೀತಾ (ನಿಯೋಜನೆ ಸಹಾಯಕ ಕಮೀ]ನರ್ ಕಛೇರಿ, ಕುಂದಾಪುರ) ಗ್ರಾಮ ಕರಣಿಕರು, ತಾಲೂಕು ಕಛೇರಿ, ಕುಂದಾಪುರ 1. ಆರ್ಆರ್‌ಟಿ.ಸಿಆರ್, 2) ಆರ್ಇವಿ.ಸಿಆರ್ 3. ಟ್ಯಾಕ್ಸ್ ಸಿಅರ್, 4.ಎಸ್‌ಟಿಟಿ.ಸಿಅರ್ 5.ಜನನ ಮತ್ತು ಮರಣ, 6. ಐ ಆರಾರ್
11. ಶ್ರೀಮತಿ ವೀಣಾ (ನಿಯೋಜನೆ ಸಹಾಯಕ ಕಮೀ]ನರ್ ಕಛೇರಿ, ಕುಂದಾಪುರ) ಗ್ರಾಮ ಕರಣಿಕರು, ತಾಲೂಕು ಕಛೇರಿ, ಕುಂದಾಪುರ 1. ಎನ್‌ಸಿಆರ್.ಸಿಅರ್. 2. ಪಿಟಿಸಿಎ0್.ಸಿಅರ್. 3.ಎ0್ಎಕ್ಯೂ.ಎಸ್ಅರ್.

ಸಹಾಯಕ ಆಯಕ್ತರ ಕಾರ್ಯಾಲಯದಲ್ಲಿ ಕೆಳಕಂಡ ಸಾಮಾನ್ಯ ಕಾರ್ಯಗಳನ್ನು ಪ್ರಮುಖವಾಗಿ ನಿರ್ವಹಿಸುತ್ತದೆ.

1) ಉಪ ವಿಭಾಗದ ದಂಡಾಧಿಕಾರತ್ವದ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು

2) ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಬಗ್ಗೆ ಪರಿಶೀಲನೆ ಮಾಡುವದು.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ೮೭೭

3) ಚುನಾವಣಾ ಎಲ್ಲಾ ಪ್ರಕ್ರಿಯೆಗಳ ಮೇಲ್ವಿಚಾರಣೆ ನೋಡಿ ಕೊಳ್ಳುವುದು.

4) ಪ್ರಾಕೃತಿಕ ವಿಕೋಪ ನಿರ್ವಹಣೆ, ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳಿಂದ ಬಾಧಿತರಾದವರಿಗೆ ಪರಿಹಾರ ನೀಡುವ ಬಗ್ಗೆ ತಹಶೀಲ್ದಾರರಿಂದ ಸ್ವೀಕರಿಸಿದ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ ಅರ್ಹ ಪ್ರಕರಣಗಳಲ್ಲಿ ಪರಿಹಾರ ಮಂಜೂರು ಮಾಡುವುದು. ಕೆಲವೊಂದು ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಯವರಿಗೆ ಶಿಪಾರಸ್ಸು ಮಾಡುವದು.'

5) ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಮಂಜೂರಾತಿಗಾಗಿ ಬರುವ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವುದು.

6) ಸರಕಾರ ಮತ್ತು ಸಂಸ್ಥೆಗಳಿಗೆ ವಿವದ ಉದ್ದೇಶಗಳಿಗೆ ಭೂ ಸ್ವಾಧೀನ ಪ್ರಕರಿಯೆ ಕೈಗೊಳ್ಳುವುದು.

7) ಕರ್ನಾಟಕ ಭೂ ಕಂದಾಯ ಕಲಂ 136 (2)ರ ಅಡಿಯಲ್ಲಿ ಮೇಲ್ಮನವಿ ವಿಚಾರಣೆಯಿಂದ ಇತ್ಯರ್ಥ ಪಡಿಸುವುದು.

8) ಗ್ರಾಮ ಲೆಕ್ಕಾಧಿಕಾರಿಗಳ ವೃಂದದ ನೌಕರರಿಗೆ ಶಿಸ್ತು ಪ್ರಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವುದು.

ಉಪ ವಿಭಾಗ ದಂಡಾಧಿಕಾರಿಯಾಗಿ ಸಹಾಯಕ ಆಯಕ್ತರು ಈ ಕೆಳಗಿನ ಕಾಯ್ದೆಗಳಡಿಯಲ್ಲಿ ಅಧಿಕಾರ ಹಾಗೂ ಕರ್ತವ್ಯ ಹೊಂದಿರುತ್ತಾರೆ.

1. ದಂಡ ಪ್ರಕ್ರಿಯೆ ಸಂಹಿತೆ 1974 2. ಕರ್ನಾಟಕ ಪೊಲೀಸ್ ಅಧಿನಿಯಮ 1963 3. ಜೀತದಾಳು ಪದ್ಧತಿ ಅಧಿನಿಯಮ 1976 4. ಭಾರತೀಯ ಮುದ್ರಾಂಕಿತ ಅಧಿನಿಯಮ 1899 5. ನ್ಯಾಯಾಧೀಶರ ಅಧಿನಿಯಮ 1965 6. ಭಾರತ ತಂತಿ ಅಧಿನಿಯಮ 1985 7. ಸಾರ್ವಜನಿಕ ಆರೋಗ್ಯ ಅಧಿನಿಯಮ 1964 8. ಕರ್ನಾಟಕ ಮಾರಾಟಗಾರರ ಅಧಿನಿಯಮ 1957 9. ನ್ಯಾಯವಾದಿಗಳ ಅಧಿನಿಯಮ 1960 10. ಪರಿಶಿಷ್ಠ ಜಾತಿ ಪರಿಶಿಷ್ಠ ವರ್ಗಗಳ ಅಧಿನಿಯಮ 1989 11. ಕರ್ನಾಟಕ ಆಹಾರ ಮತ್ತು ನಾಗರೀಕ ಸೇವಾ ಅಧಿನಿಯಮ 12. ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳ ಜೀರ್ಣೋದ್ಧಾರ

ಉಪ ವಿಭಾಗದ ಮಟ್ಟದ ಸಹಾಯಕ ಆಯುಕ್ತರು ಹೊಂದಿರುವ ಅಧಿಕಾರ, ಕಾಯ್ದೆಗಳ ಮತ್ತು ಕಾನೂನುಗಳ ವಿವರಗಳು:-

1. ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಮತ್ತು ನಿಯಮಗಳು 1966. 2. ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961 ಮತ್ತು ನಿಯಮಗಳ 1974 3. ಕರ್ನಾಟಕ ಹಲವು ಇನಾಂ ರದ್ಧಿ ಅಧಿನಿಯಮ 1977 4. ಭೂ ಸ್ವಾಧೀನ ಕಾಯ್ದೆ 1894 5. ಕರ್ನಾಟಕ ಗ್ರಾಮ ನೌಕರಿಗಳ ರದ್ಧತಿ ಅಧಿನಿಯಮ 1961 6. ಕರ್ನಾಟಕ ಋುಣ ವಿಮೋಚನೆ ಅಧಿನಿಯಮ 1984 7. ಮತದಾರರ ನೊಂದಣಿ ನಿಯಮಾವಳಿ 1960 8. ಕರ್ನಾಟಕ ನೀರಾವರಿ ಅಧಿನಿಯಮ 1974

3. ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಅನುಸರಿಸುವ ಕಾರ್ಯ ವಿಧಾನಗಳು:-

ಈ ಕಾರ್ಯಾಲಯದಲ್ಲಿ ಸರಕಾರದಿಂದ ಮೇಲಾಧಿಕಾರಿಗಳಿಂದ, ವಿವಿಧ ಕಛೇರಿಗಳಿಂದ ಹಾಗೂ ಸಾರ್ವಜನಿಕರಿಂದ ಸ್ವೀಕೃತವಾಗುವ ಎಲ್ಲಾ ಕಾಗದ ಪತ್ರಗಳನ್ನು ಮತ್ತು ಕಡತಗಳನ್ನು ಸಾಮಾನ್ಯ ಸ್ವೀಕೃತಿ ಶಾಖೆಯಲ್ಲಿ ಸ್ವೀಕರಿಸಿ ಕಛೇರಿ ವ್ಯವಸ್ಥಾಪಕರ ಮುಖಾಂತರ ಸಹಾಯಕ ಆಯುಕ್ತರ ಗಮನಕ್ಕೆ ತರಲಾಗುತ್ತದೆ. ನಂತರ ಅವುಗಳನ್ನು ಕೆಳ ಕಾಣಿಸಿರುವ ಸಂಬಂಧಿತ ಸಂಕಲನಕ್ಕೆ ವಿತರಣೆ ಮಾಡಲಾಗುತ್ತದೆ. ಸಂಕಲನಕ್ಕೆ ಸಂಬಂಧಿಸಿದ ಸಿಬ್ಬಂಧಿ ವರ್ಗದವರು ನಿಯಮಾನುಸಾರ ಪರಿಶೀಲಿಸಿ ಕಡತಗಳನ್ನು ವ್ಯವಸ್ಥಾಪಕರ ಮುಖಾಂತರ ಸಹಾಯಕ ಆಯುಕ್ತರಿಗೆ ಮಂಡಿಸುತ್ತಾರೆ. ಸಂಬಂಧಿಸಿದ ಶಾಖೆಗಳ ವಿಷಯಗಳಲ್ಲಿ ಅಂತಿಮ ತೀರ್ಮಾನವನ್ನು ಸಹಾಯಕ ಆಯುಕ್ತರು ಕೈ ಗೊಳ್ಳುತ್ತಾರೆ.

4. ಉಪ ವಿಭಾಗದ ಕಾರ್ಯಾಲಯ ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಗಳ ಮಾರ್ಗಗಳು ಸೇರಿದಂತೆ ತೀರ್ಮಾನ ತೆಗೆದು ಕೊಳ್ಳುವ

ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯ ವಿಧಾನ:-

ಕಂದಾಯ ಆಡಳಿತ

1) ತಾಲೂಕಿನಲ್ಲಿ ಭೂ ದಾಖಲೆಗಳ ನಿರ್ವಹಣೆ ಮತ್ತು ಎಲ್ಲಾ ಜಮೀನುಗಳ ಭೂ ಮಾಪನ ಪ್ರಕ್ರಿಯೆಯ ಮೇಲ್ವಿಚಾರಣೆ ಪ್ರಗತಿ ಪರಿಶೀಲನೆ.

2) ಭೂ ಮಂಜೂರಾತಿ ಪರಿಶೀಲಿಸಿ, ಸೂಕ್ತ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡುವುದು.

3) ಭೂ ಸುಧಾರಣೆ 77(ಎ) ಅಡಿ ನಿಯಮ ಅರ್ಜಿಗಳನ್ನು ಪರಿಶೀಲನೆ ಮಾಡಿ ವಿಲೇ ಗೊಳಿಸುವುದು.

4) ಭೂ ನ್ಯಾಯ ಮಂಡಳಿಗಳ ಅಧ್ಯಕ್ಷರನ್ನಾಗಿ ಕಾರ್ಯ ನಿರ್ವಹಿಸುವುದು.

5) ಭೂ ಸುಧಾರಣಾ ಕಾಯ್ದೆ 1961ರ ಕಲಂ 80ರ ಅಡಿ ಜಮೀನು ಖರೀದಿಸಲು ಅನುಮತಿ ನೀಡುವುದು.

೮೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ಭಾಗ ೩

ಕಾಗದ ಪತ್ರಗಳ ಸ್ವೀಕೃತಿ ವಿಲೇವಾರಿ:

ಸಾರ್ವಜನಿಕರಿಂದ ಅಧೀನ ಕಛೇರಿಗಳಿಗೆ ಮತ್ತು ಸರಕಾರ ಹಾಗೂ ಮೇಲಾಧಿಕಾರಿಗಳಿಂದ ಸಾರ್ವಜನಿಕರ ಮನವಿ ಬಗ್ಗೆ ಸ್ಥಳದಲ್ಲಿ ಸ್ವೀಕೃತಿ ಪತ್ರವನ್ನು ನೀಡಿದ ನಂತರ ಕಛೇರಿ ಸಹಾಯಕರು, ವ್ಯವಸ್ಥಾಪಕರ ಮುಖಾಂತರ ಸಹಾಯಕ ಆಯುಕ್ತರ ಗಮನಕ್ಕೆ ತರಲಾಗುತ್ತದೆ.

(V) ಮತ್ತು (VI) ಸಹಾಯಕ ಆಯುಕ್ತರು ಕಾರ್ಯಲಯದಲ್ಲಿನ ಅಧಿಕಾರಿಗಳ ಮತ್ತು ಸಿಬ್ಬಂಧಿಗಳ ಆಕಾರಾಧಿ (ಡೈರೆಕ್ಟರಿ) ಹಾಗೂ ಅವರು ಪಡೆಯುವ

ಕ್ರ. ಸ ಂ. ನೌಕರರ ಹೆಸರು ಪ ದನಾಮ ವ ೕತನ ಶ್ರೇಣಿ ೆ
1. ಶ್ರೀ ಬಿ. ಸದಾಶಿವ ಪ್ರಭು ಸಹಾಯಕ ಆಯುಕ ್ತ ರು 33600 + D.A.
2. ಶ್ರೀ ಬಿ.ಪಿ. ಪೂಜಾರ (ನಿಯೋಜನೆ ಸ. ಕಮೀ]ನರ್ ಕಛೇರಿ, ಕುಂದಾಪುರ) ವ್ಯವಸ್ತಾಪಕರು, ವಿಶೇ] ತಹಶೀ0್ದಾರರ ಕಛೇರಿ, ಬ್ರಹ್ಮಾವರ 26700 + D.A.
3. ಶ್ರೀ ಕೆ. ರಾಮಚಂದ್ರ ರಾವ್ ಪ್ರ.ದ. ಸಹಾಯಕರು 23400 + D.A.
4. ಶ್ರೀ ವಿ ನಾರಾಯಣ ಬಿಲ್ಲವ ಪ್ರ.ದ. ಸಹಾಯಕರು 26700 + D.A.
5. ಶ್ರೀ ಕೆ. ಶಂಕರ ಪ್ರ.ದ. ಸಹಾಯಕರು 21600 + D.A.
6. ಶ್ರೀ ರಾಜೀವ ಭಂಡಾರಿ ಪ್ರ.ದ. ಸಹಾಯಕರು 29500 + D.A.
7. ಶ್ರೀಮತಿ ಬಾಗ್ಯಲಕ್ಷ್ಮಿ ದ್ವಿ.ದ.ಸಹಾಯಕರು 14900 + D.A.
8. ಶ್ರೀಮತಿ ವಿಶಾ0ಾಕ್ಷಿ ದ್ವಿ.ದ.ಸಹಾಯಕರು 12500 + D.A.
9. ಶ್ರೀ ಮಹಮ್ಮದ್ ಸಿಕಂದರ್ ದ್ವಿ.ದ.ಸಹಾಯಕರು 13000 + D.A.
10. ಕು. ಗೀತಾ (ನಿಯೋಜನೆ ಸಹಾಯಕ ಕಮೀ]ನರ್ ಕಛೇರಿ, ಕುಂದಾಪುರ) ಗ್ರಾಮ ಕರಣಿಕರು, ತಾಲೂಕು ಕಛೇರಿ, ಕುಂದಾಪುರ 12000 + D.A.
11. ಶ್ರೀಮತಿ ವೀಣಾ (ನಿಯೋಜನೆ ಸಹಾಯಕ ಕಮೀ]ನರ್ ಕಛೇರಿ, ಕುಂದಾಪುರ) ಗ್ರಾಮ ಕರಣಿಕರು, ತಾಲೂಕು ಕಛೇರಿ, ಕುಂದಾಪುರ 12000 + D.A.
12. ಶ್ರೀ ಹೆಚ್. ರಾಮ ಡಿ ಗ್ರೂಫ್ ನೌಕರರು 19900 + D.A.
13. ಶ್ರೀ ಬಿ. ಸುಬ್ರಹ್ಮಣ್ಯ(ಸಹಾಯಕ ಕಮೀ]ನರ್ ಕಛೇರಿ ಕುಂದಾಪುರ ನಿಯೋಜನೆಯಲ್ಲಿ ಡಿ ಗ್ರೂಫ್ ನೌಕರರು
14. ಶ್ರೀ ಚಂದ್ರಶೇಖರ, (ನಿಯೋಜನೆಯಲ್ಲಿ ತಾಲೂಕು ಕಛೇರಿ, ಕುಂದಾಪುರ ಡಿ ಗ್ರೂಫ್ ನೌಕರರು 18550 + D.A.

(VII) ನಿಗಧಿ ಪಡಿಸಿರುವ ಆಯವ್ಯಯದ ಪಟ್ಟಿ

2012-13 ಕುಂದಾಪುಇರ ಸಹಾಯಕ ಆಯುಕ್ತರು ಕಾರ್ಯಕ್ರಮಗಳ ಅನುದಾನಹಂಚಿಕೆ ವಿವರ

ಕ್ರ.ಸಂ. ಯೋಜನೆ ರಾಜ್ಯ ಕೇಂದ್ರ ಒಟ್ಟು ಈ0್ಲೆ ತಾಲೂಕು ತಾಲೂಕು ತಾಲೂಕು ್ತ ಜಿ0್ಲಾ ಮತದ ವೇತನಾಂಶ
;: ಯಾವುದು ಇರುವುದಿಲ್ಲ :;

2012-13 ಸಹಾಯಕ ಆಯುಕ್ತರ ಅನುದಾನ ಹಂಚಿಕೆ ವಿವರ

ಕ್ರ. ಸ ಂ. ಇ ಾಖೆಯ ಹೆಸರು ಮತ್ತು ಪ್ರಧಾನ ೆಕ್ಕ ಶೀರ್ಷಿಕೆ ವಾರ್ಷಿಕ ಅವಕಾಶ
ವ ೕತನಾಂಶ ೆ ಇತರೆ ಒಟ್ಟು
1. 2053;00;094;1;01;ಜಿ0್ಲಾಡಳಿತ
ಒಟ್ಟು
ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ೮೭೯

VII. ಸಹಾಯಕ ಆಯುಕ್ತರ ಕಾರ್ಯಾಲಯದಲ್ಲಿ ಲಭ್ಯ ವಿರುವ ಈ ಕೆಳಗಿನ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡಲು ಲಭ್ಯ ವಿರುತ್ತದೆ.

ಉಪ ವಿಭಾಗ ಮಟ್ಟ ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ದಸ್ತಾವೇಜುಗಳ ಪ್ರ ವರ್ಗಗಳ ಪಟ್ಟಿ:-

ಸಹಾಯಕ ಆಯುಕ್ತರ ಕಾರ್ಯಾಲಯದಲ್ಲಿ ಮೇಲೆ ರೂಪಿಸಲಾದ ಕಾಯ್ದೆ ನಿಯಮಗಳ ಅಡಿ ನಿರ್ವಹಿಸುವ ಎಲ್ಲಾ ಕಡತಗಳಲ್ಲಿ ಅಂತಿಮ ಆದೇಶ ನೀಡಿದ ನಂತರ ಮುಕ್ತಾಯವಾದ ಪ್ರತಿ ಕಡತಗಳ ಪ್ರಾಮುಖ್ಯತೆಯನ್ನಾಧರಿಸಿ ಪ್ರವರ್ಗ ಎ.ಬಿ.ಸಿ.ಡಿ. ಮತ್ತು ಇ ಶ್ರೇಣಿಯಡಿ ವರ್ಗೀಕರಿಸಿ

ಎ. ಶ್ರೇಣಿ ಶಾಶ್ವತ ಅವಧಿ
ಬಿ. ಶ್ರೇಣಿ 30 ವರ್]ಗಳ ಅವಧಿ
ಸಿ. ಶ್ರೇಣಿ 10 ವರ್]ಗಳ ಅವಧಿ
ಡಿ. ಶೆ ್ರೕಣಿ 15 ವರ್]ಗಳ ಅವಧಿ
ಇ ಶ್ರೇಣಿ 01 ವರ್]ದ ಅವಧಿ

ಹಾಗೂ 1) ಸಿಬ್ಬಂಧಿ ವಿವರ, 2) ಸಾದಿಲ್ವಾರು, 3) ವಾರ್ಷಿಕ ತಪಾಸೆ, 4) ಶಿಸ್ತು ಕ್ರಮಗಳು, 5) ರಜೆ ಮಂಜೂರಾತಿ, ದಿನಚರಿಗಳು, 6) ಸರಕಾರದ ಆದೇಶಗಳು, ಸುತ್ತೋಲೆಗಳು, 7) ವಾಹನಗಳ ವಿವರಗಳು, 8) ವಾರ್ಷಿಕ ಆಡಳಿತ ವರದಿಗಳು, 9) ಜನ ಸಂಪರ್ಕ ಯೋಜನೆಯ ವರದಿಗಳು ಯೋಜನೆ ಪ್ರತಿಗಳು, 10) ಅಂಕಿ ಅಂಶಗಳ ನಿರ್ವಹಣೆ, ಮೌಲ್ಯ ಮಾಪನಾ ವರದಿ, 11) ಆಡಿಟ್ ವರದಿಗಳು. 12) ಬಿಡುಗಡೆಯಾದ ಅನುದಾನದ ವಿವರ ಮತ್ತು ವೆಚ್ಚಗಳು ಇತ್ಯಾದಿ ವರದಿಗಳು ಸಾರ್ವಜನಿಕರಿಗೆ ಲಭ್ಯವಾಗಿವೆ.

VIII. ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ಇರುವ ಸೌಲಭ್ಯಗಳು, ಮಾಹಿತಿ ಲಭ್ಯತೆ ವಿವರಗಳು

ಸಹಾಯಕ ಆಯುಕ್ತರ ಕಾರ್ಯಾಲಯದಲ್ಲಿ ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದಕ್ಕಾಗಿ ಮಾಹಿತಿ ಹಕ್ಕು ಕೋಶ ತೆರೆಯಲಾಗಿದೆ.

ಸಾರ್ವಜನಿಕರು ಕಛೇರಿ ಸಮಯದಲ್ಲಿ ಮಾಹಿತಿಗಳನ್ನು ಕೋರ ಬಹುದಾಗಿದೆ.

IX. ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಪಡನಾಮ

ಸಾರ್ವಜನಿಕ ಮಾಹಿತಿ ಅಧಿಕಾರಿ ಹೆಸರು, ಪದನಾಮ ಮತ್ತು ಇತರ ವಿವರಗಳನ್ನು ಒಳಗೊಂಡ ಅಧಿಸೂಚನೆ:-

ಮಾಹಿತಿ ಹಕ್ಕು ಅಧಿನಿಯಮ 2005ರ ಪ್ರಕರಣ ಕಲಂ 4(1) (ಬಿ) ಅನುಸಾರ ಪ್ರಕಟಿಸಬೇಕಾದ ವಿವರಗಳು, ಸದ್ರಿ ಕಾಯ್ದೆ ಕಲಂ 5(1), 5(2), 19(1)ರನ್ವಯ ಕಂದಾಯ ಇಲಾಖೆಗೆ ಸೇರಿದ ಸಹಾಯಕ ಆಯುಕ್ತರ ಕಾರ್ಯಾಲಯದಲ್ಲಿ ಮಾಹಿತಿಯನ್ನು ಕೋರುವ ವ್ಯಕ್ತಿಗಳಿಗೆ ಮಾಹಿತಿಯನ್ನು ಒದಗಿಸಲು

ಕ್ರ. ಸ ಂ. ಇ ಾಖೆ ಹೆಸರು ವ iಾಹಿತಿ ಹಕ್ಕು ಅಧಿನಿಯಮ 2005ರ ಕಲಂ 5(1) ಪ್ರಕಾರ ಸಾರ್ವಜನಿಕ ವ iಾಹಿತಿ ಅಧಿಕಾರಿ ವ iಾಹಿತಿ ಹಕ್ಕು ಅಧಿನಿಯಮ 2005ರ ಕಲಂ 5(5)ರ ಪ ್ರಕಾರ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ವ iಾಹಿತಿ ಹಕ್ಕು ಅಧಿನಿಯಮ 2005ರ ಪ ್ರಕರ ಮೇಲ್ಮನವಿ ಪ್ರಾಧಿಕಾರಿ NaN
1 2 3 4 5 NaN
1. ಸಹಾಯಕ ಆಯುಕ ್ತ ರು ಹಾಗೂ ಉಪ ವಿಭಾಗದ ದಂಡಾಧಿಕಾರಿಗಳು ಕಂದಾಯ ಇ0ಾಖೆ, ಕುಂದಾಪುರ ಸಹಾಯಕ ಆಯುಕ ್ತ ರು, ಕುಂದಾಪುರ ವ್ಯವಸ್ಥಾಪಕರು ಸಹಾಯಕ ಆಯುಕ್ತರ ಕಛೇರಿ, ಕುಂದಾಪುರ ಜಿ0್ಲಾಧಿಕಾರಿಗಳು ಉಡುಪಿ NaN
ವ ರ್' ಸ್ವೀಕರಿಸಿದ ಒಟ್ಟು ಅರ್ಜಿಗಳು ವಿ ೇವಾರಿ ಮಾಡಿದ ಒಟ್ಟು ಅರ್ಜಿಗಳು ಉಳಿಕೆ ಅರ್ಜಿಗಳು NaN
2010;11 159 159 ; NaN
2011;12 244 232 12 NaN

ಸ್ವೀಕೃತಿ:- ಕಛೇರಿ ಸರ್ಕಾರ/ಮೇಲಾಧಿಕಾರಿಗಳಿಂದ/ಅಧೀನ ಕಛೇರಿಗಳಿಂದ/ ಸಾರ್ವಜನಿಕರಿಂದ/ ಸ್ವೀಕೃತವಾಗುವ ಕಾಗದ ಪತ್ರಗಳು ಮನವಿಗಳನ್ನು ಸಾಮಾನ್ಯ ಸ್ವೀಕೃತಿ ಪುಸ್ತಕದಲ್ಲಿ ದಾಖಲಿಸಿ ಸಂಬಂಧಿಸಿದ ಸಂಕಲನಗಳ ವಿಷಯ ನಿರ್ವಾಹಕರಿಗೆ ಅಗತ್ಯ ಕ್ರಮಕ್ಕಾಗಿ ನೀಡಲಾಗುವುದು.

ರವಾನೆ:- ಈ ಕಾರ್ಯಾಲಯದಿಂದ ಬಿಡುಗಡೆ ಆಗುವ ವ್ಯವಹಾರಗಳ ಪತ್ರಗಳು, ಆದೇಶಗಳು ಹಾಗೂ ನೋಟೀಸುಗಳನ್ನು ರವಾನೆ ಪುಸ್ತಕದಲ್ಲಿ ನೋಂದಣಿ ಮಾಡಿಕೊಂಡು ಸಂಬಂಧಪಟ್ಟ ಕಛೇರಿ ಹಾಗೂ ಇತರರಿಗೆ ರವಾನೆ ಮಾಡುವುದು. ಇವುಗಳಲ್ಲಿ ಕೆಲವು ಅಂಚೆ ಮೂಲಕ ಹಾಗೂ ಕೆಲವು ಸ್ಥಳೀಯವಾಗಿ ಜ್ಯಾರಿ ಮಾಡುವ ಪತ್ರಗಳನ್ನು ಪ್ರತ್ಯೇಕ ಮುದ್ದಾಂ ವಹಿಯಲ್ಲಿ ನೋಂದಾಯಿಸಿ ರವಾನೆ ಮಾಡಲಾಗುತ್ತಿದೆ. ಹಾಗೂ ಅಂಚೆ ಚೀಟಿಗಳ ಲೆಕ್ಕವನ್ನು ಸಹ ಇಡಲಾಗಿದೆ.

ಉಪ ವಿಭಾಗಾಧಿಕಾರಿ

P.R. 231

S.C - 10

ಕುಂದಾಪುರ ಉಪ ವಿಭಾಗ, ಕುಂದಾಪುರ ಉಡುಪಿ ಜಿಲ್ಲೆ೮೮೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ಭಾಗ ೩

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ದ.ಕ.

ಉಪ ವಿಭಾಗ-1, ಬೆಂದೂರ್‌ವೆಲ್, ಕಂಕನಾಡಿ, ಮಂಗಳೂರು - ಇವರ ನ್ಯಾಯಾಲಯ

ಅಧಿಸೂಚನೆ

ಸಂಖ್ಯೆ : ಡಬ್ಲೂಸಿಎ/ಸಿಆರ್-02/2013 ಎಫ್, ದಿನಾಂಕ 06ನೇ ಮಾರ್ಚ್, 2013.

ಪ್ರತಿವಾದಿಗಳು :

ವಿರುದ್ಧ ಕೆ.ಐ.ಒ.ಸಿ.ಎಲ್ ಲಿಮಿಟೆಡ್,

ಅರ್ಜಿದಾರರು : 1) ಶ್ರೀಮತಿ ಮಮತ ಕೋಂ ದಿ. ಮೋಹನ್ ಕುಮಾರ್. 2) ಕುಮಾರಿ ಶಿವಾನಿ, ಬಿನ್ ದಿ. ಮೋಹನ್ ಕುಮಾರ್.

(ಭಾರತ ಸರ್ಕಾರದ ಉದ್ಯಮಿ)

ಪಣಂಬೂರು, ಮಂಗಳೂರು.

3) ಮಾಸ್ಟರ್ ಕೀರ್ತೇಶ್ ಅಮೀನ್ ಬಿನ್ ದಿ. ಮೋಹನ್ ಕುಮಾರ್.

ವಾಸ: ' ಗುರು ನಿಕೇತನ್ ' ಎಂ.ಎಂ. ಗಾರ್ಡ್‌ನ್, ಓಲ್ಡ್‌ಕೇಂಟ್

ರೋಡ್, ಪಾಂಡೇಶ್ವರ, ಮಂಗಳೂರು-575001.

ಅರ್ಜಿದಾರರಾದ ಶ್ರೀಮತಿ ಮಮತ ಇವರು ತಮ್ಮ ಗಂಡನಾದ ದಿವಂಗತ ಶ್ರೀ ಮೋಹನ್ ಕುಮಾರ್ ಇವರು ಪ್ರತಿವಾದಿಗಳಾದ ಕೆ.ಐ.ಒ.ಸಿ.ಎಲ್ ಲಿಮಿಟೆಡ್, (ಭಾರತ ಸರ್ಕಾರದ ಉದ್ಯಮಿ) ಪಣಂಬೂರು, ಮಂಗಳೂರು ತಾಲ್ಲೂಕು, ಇವರಲ್ಲಿ ಕೆಲಸಗಾರರಾಗಿದ್ದು ಕೆಲಸದಲ್ಲಿ ನಿರತರಾಗಿದ್ದಾಗ ದಿನಾಂಕ:16-12-2012ರಂದು ಅಪಘಾತಕ್ಕೀಡಾಗಿ ಮೃತರಾದರೆಂದು ಹೇಳಿ ಆಶ್ರೀತರಾದ ತಮಗೆ ಪ್ರತಿವಾದಿಯವರಿಂದ ಪರಿಹಾರವನ್ನು ಕೊಡಿಸಿ ಕೊಡಬೇಕೆಂದು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ್ದರಿಂದ ಈ ವಿಷಯದಲ್ಲಿ ಈ ಅರ್ಜಿದಾರರಲ್ಲದೆ ಬೇರೆ ಯಾರಾದರೂ ಅರ್ಜಿದಾರರಾಗಿದ್ದು ಅವರ ಅರ್ಜಿ ಅಥವಾ ತಕರಾರು ಏನಾದರೂ ಇದ್ದಲ್ಲಿ ಮತ್ತು ಈ ಅರ್ಜಿಗೆ ಸಂಬಂಧಿಸಿ ಇನ್ನಿತರ ಯಾವುದೇ ರೀತಿಯ ತಕರಾರು ಇದ್ದರೆ ಈ ಅಧಿಸೂಚನೆ ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದಲ್ಲಿನಿಂದ 30 ದಿನಗಳೊಳಗೆ ಈ ನ್ಯಾಯಾಲಯಕ್ಕೆ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ. ಈ ನಿಗದಿತ ಸಮಯದಲ್ಲಿ ಈ ನ್ಯಾಯಾಲಯವು ಯಾವ ಕ್ಲೇಮು ಅರ್ಜಿ/ ತಕರಾರು ಅರ್ಜಿ ಸ್ವೀಕರಿಸದಿದ್ದಲ್ಲಿ ಈ ನ್ಯಾಯಾಲಯವು ಮುಂದಿನ ಕ್ರಮವನ್ನು ಜರುಗಿಸಲಾಗುವುದೆಂದು ತಿಳಿಸಲಾಗಿದೆ.

ಮಹೇಶ,

P.R. 233

ಕಾರ್ಮಿಕ ಅಧಿಕಾರಿ ಹಾಗೂ

SC - 5

ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ದ.ಕ.ಉಪ ವಿಭಾಗ-1, ಮಂಗಳೂರು.

ಕನ್ನಡ, ಸಂಸ್ಕøತಿ ಮತ್ತು ವಾರ್ತಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಸಂವಾಪ್ರ 11 ರಾಪಸ 2013, ಬೆಂಗಳೂರು, ದಿನಾಂಕ 21 ಮಾರ್ಚ್, 2013

ವಿಷಯ: ದಿನಾಂಕ 01-01-2013 ರಲ್ಲಿದ್ದಂತೆ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ಗ್ರೂಪ್-'ಎ'

ದರ್ಜೆಯ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಣೆ ಕುರಿತು.

ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ದಿನಾಂಕ 01-01-2013ರಲ್ಲಿದಂತೆ ಗ್ರೂಪ್-'ಎ' ದರ್ಜೆಯ ಉಪನಿರ್ದೇಶಕರ ಹಾಗೂ ಪತ್ರಪಾಲಕ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಅನುಬಂಧ-1 ಮತ್ತು 2ರಲ್ಲಿ ನಿಗಧಿಪಡಿಸಲು ಉದ್ದೇಶಿಸಿರುವ ಜೇಷ್ಠತೆ ಹಾಗೂ ಇತರೆ ಸೇವಾ ವಿಷಯಗಳ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಬಾಧಿತ ಅಧಿಕಾರಿಗಳ ತಮ್ಮ ಆಕ್ಷೇಪಣೆಗಳನ್ನು ಲಿಖಿತ ಮೂಲಕ ಈ ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ 30 (ಮೂವತ್ತು) ದಿನಗಳೊಳಗಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕನ್ನಡ, ಸಂಸ್ಕøತಿ ಮತ್ತು ವಾರ್ತಾ ಇಲಾಖೆ, ಕೊಠಡಿ ಸಂಖ್ಯೆ 2, ವಿಕಾಸಸೌಧ, ಬೆಂಗಳೂರು ಇವರಿಗೆ ಸಲ್ಲಿಸತಕ್ಕದ್ದು.

ಕಾಲಮಿತಿ ಅವಧಿಯ ನಂತರ ಸ್ವೀಕರಿಸಿದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಅನುಬಂಧ-1

ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ದಿನಾಂಕ: 01-01-2013 ರಲ್ಲಿದ್ದಂತೆ ಗ್ರೂಪ್-ಎ ದರ್ಜೆಯ ಉಪನಿರ್ದೇಶಕರ ವೃಂದದ

ಕ್ರ.ಸಂ ಹೆಸರು ಜನ್ಮ ದಿನಾಂಕ ಸ ೕವೆಗೆ ಸೇರಿದ ೆ ದಿನಾಂಕ ವ ುುಂಬಡ್ತಿ ಹೊಂದಿದ ದಿನಾಂಕ ' ರಾ
1 2 3 4 5 6
1) ಡಾ||ಜೆ.ವಿ.ಗಾಯತ್ರಿ 20;01;53 03;05;78 13;12;07 _

ಅನುಬಂಧ-2

ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ದಿನಾಂಕ 01-01-2013ರಲ್ಲಿದಂತೆ ಗ್ರೂಪ್-'ಎ' ದರ್ಜೆಯ ಪತ್ರಪಾಲಕರ ವೃಂದದ

ಕ್ರ.ಸಂ ಹೆಸರು ಜನ್ಮ ದಿನಾಂಕ ಸ ೕವೆಗೆ ಸೇರಿದ ೆ ದಿನಾಂಕ ವ ುುಂಬಡ್ತಿ ಹೊಂದಿದ ದಿನಾಂಕ ' ರಾ
1 2 3 4 5 6
1) ಎಂ.ಬಿ.ಮಹದೇವಸ್ವಾಮಿ 21;10;57 01;03;85 30;01;08
2) ಡಾ|| ಎಸ್.ಅಂಬುಜಾಕ್ಷಿ 10;09;59 30;11;84 12;08;08
3) ಸಿ.ಗಂಗಾಧರಯ್ಯ 15;07;60 29;11;84 12;08;08
4) ಶ್ರೀ ಗವಿಸಿದ್ದಯ್ಯ 19;07;66 10;08;93 17;11;2011 ಸರ್ಕಾರದ ಆದೇಶ ಸಂಖ್ಯೆ: ಕಸಂವಾಪ್ರ 10 ರಾಪಸಿ 2009, ದಿನಾಂಕ:16;11;2011ರ ಪ್ರಕಾರ ಸಹಾಯಕ ಪತ ್ರಪಾಲಕರ ಹುದ್ದೆಯಿಂದ ಪತ್ರಪಾಲಕರ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ಹೊಂದಿರುತ್ತಾರೆ.
ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ೮೮೧

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜಿ.ಬಿ.ಹೇಮಣ್ಣ,

PR: 235

ಸರ್ಕಾರದ ಅಧೀನ ಕಾರ್ಯದರ್ಶಿ, SC - 50

ಕನ್ನಡ, ಸಂಸ್ಕøತಿ ಮತ್ತು ವಾರ್ತಾ ಇಲಾಖೆ (ಆಡಳಿತ ಕನ್ನಡ).

ಅಧಿಕಾರಯುತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಹೊನ್ನಾವರ ವಿಭಾಗ, ಹೊನ್ನಾವರ ರವರ ನ್ಯಾಯಾಲಯದ

ಆದೇಶ

ಕ್ರಮ ಸಂಖ್ಯೆ : ಸಿ3/ಎಫ್ಐಆರ್-8/ಅ.ರ./ಮಂಕಿ/2007-08, ಹೊನ್ನಾವರ, ದಿನಾಂಕ:28ನೇ ಫೆಬ್ರವರಿ, 2013.

ಉಪಸ್ಥಿತರು : ಡಾ:ಎಸ್.ರಮೇಶ್, ಕಅಸೇ, ಅಧಿಕಾರಯುತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಾಣಾಧಿಕಾರಿ, ಹೊನ್ನಾವರ ವಿಭಾಗ, ಹೊನ್ನಾವರ.

ಫಿರ್ಯಾದುದಾರರು : ವಲಯ ಅರಣ್ಯಾಧಿಕಾರಿ, ಮಂಕಿ.

ಆರೋಪಿತರು : 1) ಶ್ರೀ ರಾಘವ ನಾರಾಯಣ ನಾಯ್ಕ, ಸಾ:ದೇವಿಕಾನ, ಬಸ್ತಿ, ತಾ:ಭಟ್ಕಳ.

ಅರ್ಜಿದಾರರು : ಶ್ರೀ ರಾಘವ ನಾರಾಯಣ ನಾಯ್ಕ, ಸಾ:ದೇವಿಕಾನ, ಬಸ್ತಿ, ತಾ:ಭಟ್ಕಳ.

ಉಲ್ಲೇಖ: 1) ಅರಣ್ಯ ರಕ್ಷಕ ಮಾವಳ್ಳಿರವರ ಪ್ರಥಮ ಮಾಹಿತಿ ವರದಿ ಸಂ.08/2007-08, ದಿನಾಂಕ: 02-10-2007.

2) ವಲಯ 2) ವಲಯ ಅರಣ್ಯಾಧಿಕಾರಿ, ಮಂಕಿ ರವರ ವರದಿ ಸಂ.336/2007-08, ದಿನಾಂಕ : -10-2007.

3) ಈ ನ್ಯಾಯಾಲಯದ ಆದೇಶ ಸಮ ಸಂಖ್ಯೆ, ದಿನಾಂಕ : 09-10-2007.

4) ಶ್ರೀ ರಾಘವ ನಾರಾಯಣ ನಾಯ್ಕ, ಸಾ:ದೇವಿಕಾನ, ಬಸ್ತಿ, ತಾ:ಭಟ್ಕಳ ರವರ ವಕಾಲತನಾಮೆಯುಕ್ತ ಅರ್ಜಿ ದಿನಾಂಕ : 01-01-2008.

5) ಸಹಾಯಕ ಸರ್ಕಾರಿ ಅಭಿಯೋಜಕರು, ಹೊನ್ನಾವರ ರವರ ಲಿಖಿತ ಅಭಿಪ್ರಾಯ ವರದಿ

ದಿನಾಂಕ: 17-01-2008.

6) ಈ ನ್ಯಾಯಾಲಯದ ವಿಚಾರಣಾ ದಿನಾಂಕ : 14-02-2008, 15-05-2008, 5-6-08.

7) ಈ ನ್ಯಾಯಾಲಯದ ಆದೇಶ ದಿನಾಂಕ : 5-6-2008.

8) ವಲಯ ಅರಣ್ಯಾಧಿಕಾರಿ, ಮಂಕಿ ರವರ ಕ್ರ.ಸಂ:683/ತಪಾಸಣಾ ಪಟ್ಟಿ/2009-10, ದಿನಾಂಕ: 25-1-2011.

9) ಈ ನ್ಯಾಯಾಲಯದ ವಿಚಾರಣಾ ದಿನಾಂಕ : 17-06-2011, 17-01-2013, ಮತ್ತು 28-02-2013.

ಪ್ರಸ್ತಾವನೆ:

ದಿನಾಂಕ : 02-10-2007ರಂದು ಕೊಪ್ಪಾ ಅರಣ್ಯ ಪ್ರದೇಶದಿಂದ ಅನಧಿಕೃತ ಮರಮುಟ್ಟು ಕಳ್ಳ ಸಾಗಾಣಿಕೆಯ ಬಾತ್ಮಿ ಬಂದ ಮೇರೆಗೆ ಮಂಕಿ ವಲಯದ ಅರಣ್ಯ ಸಿಬ್ಬಂದಿಗಳಾದ ಶಾಖಾ ವನಪಾಲಕ, ಮಾವಳ್ಳಿ, ಅರಣ್ಯ ರಕ್ಷಕರು, ಪಂಚರೊಂದಿಗೆ ಕೊಪ್ಪಾ ರಸ್ತೆಯಲ್ಲಿ ಬರುತ್ತಿರುವಾಗ ಕೊಳಕಿ ಬಸ್‌ಸ್ಟಾಂಡ್ ಹತ್ತಿರ ಕೊಪ್ಪಾ ಕಡೆಯಿಂದ ಒಂಧು ಗೂಡ್ಸ್ ರಿಕ್ಷಾ ಬರುತ್ತಿರುವುದನ್ನು ಕಂಡು ತಡೆದು ನಿಲ್ಲಿಸಿ ನೋಡಲಾಗಿ, ಸಾಗವಾನಿ ಜಾತಿಯ ಕೆತ್ತಿದ ಹಾಗೂ ಕೊರೆದ ಕಟ್ಟಿಗೆಯ ತುಂಡುಗಳನ್ನು ಸೊಪ್ಪಿನೊಂದಿಗೆ ತುಂಬಿ ತಂದಿರುವುದನ್ನು ಕಂಡು ಆ ಕುರಿತು ರಿಕ್ಷಾ ಚಾಲಕನನ್ನು ವಿಚಾರಿಸಲಾಗಿ, ಆತನ ಹೆಸರು ರಾಘವ ನಾರಾಯಣ ನಾಯ್ಕ ಎಂತಲೂ, ಸದರಿ ಗೂಡ್ಸ್ ರಿಕ್ಷಾದ ನೋಂದಣಿ ಸಂಖ್ಯೆ: ಕೆಎ-47/1665 ಇರುತ್ತಿದ್ದು, ವಾಹನದಲ್ಲಿದ್ದ ನಾಟುಗಳನ್ನು ಪರಿಶೀಲಿಸಲಾಗಿ ಪಾಸು ವ ಪರ್ಮಿಟ್ ಇಲ್ಲದ ಇಲಾಖಾ ಛಪ್ಪಾ ಹೊಂದಿರದ ಅರಣ್ಯ ಉತ್ಪನ್ನ ಆಗಿರುವುದು ಖಚಿತವಾದ ಮೇರೆಗೆ ಪಂಚರ ಸಮಕ್ಷಮ ವಾಹನ ಸಂಖ್ಯೆ: ಕೆಎ-47/1665ನ್ನು ಅರಣ್ಯ ಉತ್ಪನ್ನ ಸಮೇತ ಪಂಚನಾಮೆಯಿಂದ ವಶಪಡಿಸಿಕೊಂಡು ಅಳತೆ ಮಾಡಲಾಗಿ, ಸಾಗವಾನಿ ತುಂಡು 15=0.381 ಘ.ಮೀ ಇರುತ್ತದೆ. ಕರ್ನಾಟಕ ಅರಣ್ಯ ಕಾಯ್ದೆ 1963, ಸೆಕ್ಷನ್ 24ಇ, 71ಎ ಹಾಗೂ ಕರ್ನಾಟಕ ಅರಣ್ಯ ನಿಯಮ 1969ರ ನಿಯಮ 144, 145ರ ಉಲ್ಲಂಘನೆ ಮೇರೆಗೆ ಅರಣ್ಯ ರಕ್ಷಕ, ಮಾವಳ್ಳಿರವರ ಪ್ರಥಮ ಮಾಹಿತಿ ವರದಿ ಸಂಖ್ಯೆ:8/2007/08, ದಿನಾಂಕ: 2-10-2007ರಂತೆ ಪ್ರಕರಣ ದಾಖಲಿಸಿ೮೮೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ಭಾಗ ೩ ವಲಯ ಅರಣ್ಯಾಧಿಕಾರಿಗಳಲ್ಲಿ ವರದಿ ಸಲ್ಲಿಸಿದ್ದನ್ನು ವಲಯ ಅರಣ್ಯಾಧಿಕಾರಿ, ಮಂಕಿ ರವರು ಜಪ್ತ ಮಾಡಿದ ವಾಹನ ಗೂಡ್ಸ್ ರಿಕ್ಷಾ ನೋಂದಣಿ ಸಂಖ್ಯೆ:

ಕೆಎ-47/1665 ಹಾಗೂ ಅರಣ್ಯ ಉತ್ಪನ್ನವನ್ನು ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 71ಎ ನೇದರಂತೆ ಮುಂದಿನ ಕ್ರಮಕ್ಕಾಗಿ ಈ ನ್ಯಾಯಾಲಯದ ಸಮಕ್ಷಮ ಹಾಜರುಪಡಿಸಿದ್ದನ್ನು ಈ ನ್ಯಾಯಾಲಯದ ಆದೇಶ ದಿನಾಂಕ: 09-10-2007 ರಂತೆ ವಲಯ ಅರಣ್ಯಾಧಿಕಾರಿ, ಮಂಕಿ ರವರ ಸುರಕ್ಷಿತ ತಾಬಾಕ್ಕೆ ನೀಡಿ ಆದೇಶಿಸಲಾಗಿದೆ.

ಪ್ರಸ್ತುತ ಅರ್ಜಿದಾರ ಶ್ರೀ ರಾಘವ ನಾರಾಯಣ ನಾಯ್ಕ, ಸಾ:ದೇವಿಕಾನ, ಬಸ್ತಿ, ತಾ:ಭಟ್ಕಳ ರವರು ದಿನಾಂಕ:01-01-2008ರಂದು ವಕಾಲತನಾಮೆಯುಕ್ತ ಮನವಿಯನ್ನು ಈ ನ್ಯಾಯಾಲಯಕ್ಕೆ ಸಲ್ಲಿಸಿ ತಾನು ಮೇಲಿನ ಗುನ್ನೆಗೊಪ್ಪಿದ ವಾಹನ ನೋಂದಣೆ ಸಂ.ಕೆಎ-47/1665 ನೇದರ ನೋಂದಾಯಿತ ಮಾಲೀಕರಿರುವುದಾಗಿಯೂ ಹಾಗೂ ಸದರಿ ವಾಹನವನ್ನು ಮಧ್ಯಂತರವಾಗಿ ಬಿಡುಗಡೆ ಮಾಡುವಂತೆ ವಿನಂತಿಸಿರುತ್ತಾರೆ.

ಈ ನ್ಯಾಯಾಲಯದಲ್ಲಿ ದಿನಾಂಕ: 14-02-2008 ರಂದು ವಿಚಾರಣೆ ನಡೆಸಿ ಅರ್ಜಿದಾರ ಪರ ವಕೀಲರ ಹಾಗೂ ಸಹಾಯಕ ಸರ್ಕಾರಿ ಅಭಿಯೋಜಕರು, ಹೊನ್ನಾವರ ರವರು ಮಂಡಿಸಿರುವ ವಾದಗಳನ್ನು ಹಾಗೂ ಅರ್ಜಿದಾರರ ಪರ ವಕೀಲರು ಅರ್ಜಿಯಲ್ಲಿ ನಮೂದಿಸಿದ ವಾದಗಳನ್ನು ಪರಿಶೀಲಿಸಲಾಯಿತು.

ಅರ್ಜಿದಾರರ ಪರ ವಕೀಲರು ತಮ್ಮ ವಾದದಲ್ಲಿ ವಾಹನವನ್ನು ಬಿಡುಗಡೆ ಮಾಡಲು ಈ ಕೆಳಕಂಡ ಅಂಶಗಳನ್ನು ಮಂಡಿಸಿದ್ದಾರೆ. 1. ಅರ್ಜಿದಾರರು ಗೂಡ್ಸ್ ರಿಕ್ಷಾ ನಂ.ಕೆಎ-47/1665ರ ಮಾಲೀಕರಿದ್ದು, ಸರಕು ಸಾಗಾಣಿಕೆ ಹಾಗೂ ಬಾಡಿಗೆ ಕೆಲಸಕ್ಕೆ ಮಾತ್ರ ವಾಹನ ಉಪಯೋಗಿಸುತ್ತಾರೆ.

2. ಸದರಿ ವಾಹನವನ್ನು ಸಾಲ ಮಾಡಿ ಖರೀದಿಸಿದ್ದು ಯಾವುದೇ ಕಾನೂನು ಬಾಹಿರ ಕೆಲಸಗಳಿಗೆ ಉಪಯೋಗಿಸಿದ್ದು ಇರುವುದಿಲ್ಲ. 3. ವಲಯ ಅರಣ್ಯಾಧಿಕಾರಿ, ಮಂಕಿ ರವರು ಕರ್ನಾಟಕ ಅರಣ್ಯ ಕಾಯ್ದೆಯಡಿ ಸದ್ರಿ ವಾಹನವನ್ನು ಜಪ್ತಪಡಿಸಿದ್ದು ಇರುತ್ತದೆ. 4. ಸದರಿ ವಾಹನದಿಂದಲೇ ಅರ್ಜಿದಾರರ ಕುಟುಂಬದ ಜೀವನ ನಿರ್ವಹಣೆಯಾಗಬೇಕಾಗಿದ್ದು ಯಾವುದೇ ಗುನ್ನೆ ಮಾಡಿದ್ದು ಇರುವುದಿಲ್ಲ. 5. ವಾಹನವನ್ನು ಬಿಟ್ಟುಕೊಡದೇ ಇದ್ದ ಪಕ್ಷದಲ್ಲಿ ಅದು ಬಿಸಿಲು, ಗಾಳಿ, ಮಳೆಯಿಂದ ಹಾಳಾಗುವ ಸಾಧ್ಯತೆ ಇರುತ್ತದೆ. 6. ವಾಹನವನ್ನು ಯೋಗ್ಯ ಜಾಮೀನು ಪಡೆದು ಮಧ್ಯಂತರವಾಗಿ ಬಿಟ್ಟುಕೊಡಲು ಕೋರಲಾಗಿದೆ.

ಸಹಾಯಕ ಸರ್ಕಾರಿ ಅಭಿಯೋಜಕರು ತಮ್ಮ ವಾದ ಮಂಡಿಸುತ್ತಾ ಕೆಳಗಿನ ಅಂಶಗಳನ್ನು ಮಂಡಿಸಿರುತ್ತಾರೆ. 1. ಅರ್ಜಿದಾರರು ಅರ್ಜಿಯಲ್ಲಿ ನಮೂದಿಸಿದ ವಿಷಯ ವಸ್ತುಸ್ಥಿತಿಗೆ ವಿರುದ್ಧವಾಗಿದ್ದು, ಕಾನೂನು ಬಾಹಿರ ಇರುತ್ತದೆ. 2. ಅರ್ಜಿದಾರರೇ ಗುನ್ನೆಗಾರರಿದ್ದು, ಸದರಿ ವಾಹನ ಸಂಖ್ಯೆ: ಕೆಎ-47/1665 ನೇದನ್ನು ಅರಣ್ಯ ಉತ್ಪನ್ನ ಸಾಗಾಣಿಕೆ ಅರಣ್ಯ ಅಪರಾಧ ಪ್ರಕರಣದಲ್ಲಿ ಆರೋಪಿ ಸಮೇತ ವಾಹನ ಹಾಗೂ ಅರಣ್ಯ ಉತ್ಪನ್ನ ಜಪ್ತಪಡಿಸಲಾಗಿದೆ.

3. ಇದರಲ್ಲಿ ಅರಣ್ಯ ಅಧಿಕಾರಿಗಳು ನಿಯಮಾನುಸಾರ ಪ್ರಥಮ ಗುನ್ನೆ ವರದಿ ದಾಖಲಿಸಿ ವಾಹನವನ್ನು ಸಕ್ಷಮ ಪ್ರಾಧಿಕಾರದ ಸಮಕ್ಷಮ ಹಾಜರುಪಡಿಸಿದ್ದು ಇರುತ್ತದೆ.

4. ಸದ್ರಿ ಅರ್ಜಿಯಲ್ಲಿ ನಮೂದಿಸಿದ ಸಂಗತಿಗಳು ಸತ್ಯಕ್ಕೆ ದೂರವಾಗಿದ್ದು ತನ್ನ ವಾಹನವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಸೃಷ್ಟಿಸಿದ ಕಟ್ಟುಕತೆಯಾಗಿದೆ.

5. ಅಕ್ರಮ ಅರಣ್ಯ ಸಂಪತ್ತು ವಾಹನದಲ್ಲಿ ಸಾಗಾಟಪಡಿಸುವುದು ಅಪರಾಧ ಎಂದು ಗೊತ್ತಿದ್ದು ಅರಣ್ಯ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದು ಇರುತ್ತದೆ.

6. ಈ ವಾಹನವನ್ನು ಬಿಟ್ಟುಕೊಟ್ಟಲ್ಲಿ ಪುನಃ ಇಂತಹದೇ ಕೃತ್ಯಗಳಿಗೆ ಉಪಯೋಗಿಸುವ ಸಾಧ್ಯತೆ ಇದೆ. ಈ ಹಂತದಲ್ಲಿ ಸದ್ರಿ ವಾಹನವನ್ನು ಅರ್ಜಿದಾರನಿಗೆ ಬಿಟ್ಟಲ್ಲಿ ಅವರು ಅದರ ಬಣ್ಣ ಹಾಗೂ ಸದ್ರಿ ವಾಹನದ ಬಿಡಿ ಭಾಗಗಳನ್ನು ಬದಲಾಯಿಸುವ ಸಾಧ್ಯತೆಗಳಿವೆ. ಸದ್ರಿ ವಾಹನವನ್ನು ಪರಭಾರೆ ಮಾಡುವ ಸಾಧ್ಯತೆಯಿದೆ.

7. ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳನ್ನು ಸಹಾಯಕ ಸರ್ಕಾರಿ ಅಭಿಯೋಜಕರು ತಮ್ಮ ವಾದದಲ್ಲಿ ಉಲ್ಲೇಖಿಸಿದ್ದು.

ಎ)ಐಎಲ್ಆರ್ 2000 ಕರ್ನಾಟಕ 3731, ಕರ್ನಾಟಕ ರಾಜ್ಯ ಸರ್ಕಾರ ವಿರುದ್ಧ ಕೆ. ಕೃಷ್ಣನ್

ಅಧಿಕಾರಯುತ ಅಧಿಕಾರಿ ಸಾಮಾನ್ಯವಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾದ ವಾಹನವನ್ನು ಮಧ್ಯಂತರವಾಗಿ ಬಿಡುಗಡೆ ಮಾಡಬಾರದು. ಒಂದು ವೇಳೆ ಬಿಡುಗಡೆ ಮಾಡುವುದಾದಲ್ಲಿ ಅಂಥಹ ಬಿಡುಗಡೆಗೆ ಸಕಾರಣಗಳನ್ನು ನೀಡತಕ್ಕದ್ದು. ಕೇವಲ ವಿಶೇಷ ಸಂದರ್ಭದಲ್ಲಿ ಅಸಾಮಾನ್ಯ ಕಾರಣಗಳಿಗಾಗಿ ಮಾತ್ರ ಬಿಡುಗಡೆ ಮಾಡಬಹುದಾಗಿದೆ.

ಈ ಪ್ರಕರಣದಲ್ಲಿ ಅರ್ಜಿದಾರರು ಇಂತಹ ಯಾವುದೇ ಅಸಾಮಾನ್ಯ ಕಾರಣಗಳನ್ನು ನೀಡಿರುವುದಿಲ್ಲ.

ಬಿ)ಸೆಕ್ಷನ್ ಫಾರೆಸ್ಟರ್ ಮತ್ತು ಇತರರು ವಿರುದ್ದ ಮನ್ಸೂರ ಅಲಿ ಖಾನ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದ ತೀರ್ಪು 2004(1) ಕ್ರೈಮ್ಸ

23 (ಎಸ್.ಸಿ)

ಈ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯ ಅರಣ್ಯ ಅಪರಾಧದಲ್ಲಿ ಸಿಕ್ಕು ಬಿದ್ದ ವಾಹನವನ್ನು ಮುಟ್ಟುಗೋಲು ಪ್ರಕ್ರಿಯೆ ಮುಗಿಯುವವರೆಗೆ ಮಧ್ಯಂತರ ಬಿಡುಗಡೆ ಮಾಡಬಾರದು ಎಂದು ತೀರ್ಪು ನೀಡಿರುತ್ತದೆ.

ಅರ್ಜಿದಾರರ ಪರ ವಕೀಲರ ಮತ್ತು ಸಹಾಯಕ ಸರ್ಕಾರಿ ವಕೀಲರ ವಾದಗಳನ್ನು ಆಲಿಸಿ ಈ ನ್ಯಾಯಾಲಯದಲ್ಲಿ ಲಭ್ಯವಿದ್ದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಯಿತು. ಅರ್ಜಿದಾರರ ಪರ ವಕೀಲರು ವಾಹನ ಬಿಡುಗಡೆಗೆ ಇದೊಂದು ವಿಶೇಷ ಪ್ರಕರಣ ಮತ್ತು ವಾಹನ ಮಧ್ಯಂತರ ಬಿಡುಗಡೆಗೆ ಮಾನ್ಯ ಸರ್ವೋಚ್ಛ ನ್ಯಾಯಾಲಯ ತಿಳಿಸಿದಂತೆ ಅಸಾಧಾರಣ ಕಾರಣಗಳನ್ನು ಒದಗಿಸಲು ವಿಫಲವಾಗಿರುತ್ತಾರೆ. ಮಾನ್ಯ ಸರ್ವೋಚ್ಛ ನ್ಯಾಯಾಲಯವು ತಿಳಿಸಿದಂತೆ ಈ ನ್ಯಾಯಾಲಯಕ್ಕೆ ವಾಹನವನ್ನು ಮಧ್ಯಂತರ ಬಿಡುಗಡೆ ಮಾಡಲು ಯಾವುದೇ ಸಕಾರಣಗಳಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ವಾಹನ ಸಂ. ಕೆಎ-47/1665ನ್ನು ಮಧ್ಯಂತರ ಬಿಡುಗಡೆ ಮಾಡುವುದು ಸೂಕ್ತವಲ್ಲವೆಂದು ಅಭಿಪ್ರಾಯಪಟ್ಟು ವಾಹನ ಮಧ್ಯಂತರ ಬಿಡುಗಡೆಗೆ ಕೋರಿದ ಅರ್ಜಿಯನ್ನು ಈ ನ್ಯಾಯಾಲಯದ ಉಲ್ಲೇಖ (7)ರ ದಿನಾಂಕ: 5-6-2008ರ ಆದೇಶದಂತೆ ತಿರಸ್ಕರಿಸಲಾಗಿದೆ.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ೮೮೩

ಮುಂದುವರೆದು, ದಿನಾಂಕ:17-06-2011ರಂದು ಈ ನ್ಯಾಯಾಲಯದಲ್ಲಿ ಸಮಗ್ರ ವಿಚಾರಣೆಯನ್ನಿಟ್ಟು ವಾಹನ ಮಾಲೀಕರಿಗೆ ಸಮನ್ಸ ಜಾರಿ ಮಾಡಲಾಗಿ ವಾಹನ ಮಾಲೀಕರು ವಿಚಾರಣಾ ದಿನಾಂಕದಂದು ಈ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಿರುವುದಿಲ್ಲ. ಅಲ್ಲದೇ, ವಾಹನ ಮಾಲೀಕರ ಪರ ವಕೀಲರೂ ಸಹ ಈ ನ್ಯಾಯಾಲಯಲ್ಲಿ ಹಾಜರಿರುವುದಿಲ್ಲ. ಆದ್ದರಿಂದ ವಿಚಾರಣೆಯನ್ನು ಮುಂದೂಡಲಾಯಿತು.

ದಿನಾಂಕ:17-01-2013ರಂದು ಈ ನ್ಯಾಯಾಲಯದಲ್ಲಿ ವಿಚಾರಣೆಯನ್ನಿಟ್ಟು ವಾಹನ ಮಾಲೀಕರಿಗೆ ನೋಂದಾಯಿತ ಅಂಚೆ ದ್ವಾರಾ ಸಮನ್ಸ ಜಾರಿ ಮಾಡಲಾಗಿ, ಈ ನ್ಯಾಯಾಲಯದ ಸಮನ್ಸ ಸ್ವೀಕರಿಸಿದರೂ ವಾಹನ ಮಾಲೀಕರು ವಿಚಾರಣಾ ದಿನಾಂಕದಂದು ಈ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಿರುವುದಿಲ್ಲ. ಹಾಗೂ ವಾಹನ ಮಾಲೀಕರ ಪರ ವಕೀಲರೂ ಸಹ ಈ ನ್ಯಾಯಾಲಯಲ್ಲಿ ಹಾಜರಿರುವುದಿಲ್ಲ. ಆದ್ದರಿಂದ ವಿಚಾರಣೆಯನ್ನು ಮುಂದೂಡಲಾಯಿತು.

ದಿನಾಂಕ:28-02-2013ರಂದು ಈ ನ್ಯಾಯಾಲಯದಲ್ಲಿ ವಿಚಾರಣೆಯನ್ನಿಟ್ಟು ವಾಹನ ಮಾಲೀಕರಿಗೆ ನೋಂದಾಯಿತ ಅಂಚೆ ದ್ವಾರಾ ಸಮನ್ಸ ಜಾರಿ ಮಾಡಲಾಗಿ, ಈ ನ್ಯಾಯಾಲಯದ ಸಮನ್ಸ ಸ್ವೀಕರಿಸಿದರೂ ವಾಹನ ಮಾಲೀಕರು ವಿಚಾರಣಾ ದಿನಾಂಕದಂದು ಈ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಿರುವುದಿಲ್ಲ. ಹಾಗೂ ವಾಹನ ಮಾಲೀಕರ ಪರ ವಕೀಲರೂ ಸಹ ಈ ನ್ಯಾಯಾಲಯಲ್ಲಿ ಹಾಜರಿರುವುದಿಲ್ಲ.

ಈ ಮೊಕದ್ದಮೆಗೆ ಸಂಬಂಧಿಸಿ ದಿನಾಂಕ:17-06-2011 ರಿಂದ 28-2-2013ರವರೆಗಿನ ಸುಧೀರ್ಘ ಅವಧಿಯವರೆಗೆ ವಾಹನದ ಮಾಲೀಕರು ನ್ಯಾಯಾಲಯದ ಮುಂದೆ ಬಂದು ತಮ್ಮ ಅರಿವಿಲ್ಲದೇ ವಾಹನವು ಅಕ್ರಮವಾಗಿ ಅರಣ್ಯ ಉತ್ಪನ್ನ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿರುವುದನ್ನು ನ್ಯಾಯಾಲಯದಲ್ಲಿ ಮನವರಿಕೆ ಮಾಡಲು ವಿಫಲರಾಗಿರುತ್ತಾರೆ. ಇದರಿಂದ, ಕಂಡು ಬರುವುದೇನೆಂದರೆ, ಸದ್ರಿ ವಾಹನವು ಅರಣ್ಯ ಉತ್ಪನ್ನ ಕಳ್ಳ ಸಾಗಾಣಿಕೆಯಲ್ಲಿ ಶಾಮೀಲಾಗಿರುವ ವಿಷಯವು ವಾಹನದ ಅಧಿಕೃತ ಮಾಲೀಕರ ಗಮನಕ್ಕೆ ಬಂದೇ ನಡೆದಿರುವುದು ಮೇಲು ನೋಟಕ್ಕೆ ಸಾಬೀತಾಗಿರುತ್ತದೆ.

ಮೇಲಿನ ಗುನ್ನೆ ಪ್ರಕರಣದಲ್ಲಿ ವಾಹನ ಮಾಲೀಕರು ನೇರ ಅಪರಾಧಿಯಾಗಿದ್ದು, ಇವರ ಮೇಲೆ ವಲಯ ಅರಣ್ಯಾಧಿಕಾರಿ, ಮಂಕಿ ರವರು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿರುತ್ತಾರೆ. ಆದ್ದರಿಂದ, ಸದರಿ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲು ತೀರ್ಮಾನಿಸಿ, ಅರಣ್ಯ ಉತ್ಪನ್ನ ಕಳ್ಳಸಾಗಾಣಿಕೆಯಲ್ಲಿ ತೊಡಗಿದ ವಾಹನ ನಂ. ಕೆಎ-47/1665ನೇದನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಅರ್ಹವಾಗಿರುವುದರಿಂದ ಈ ಕೆಳಗಿನಂತೆ ಆದೇಶಿಸಿರುತ್ತೇನೆ.

ಆದೇಶ

ಮೇಲೆ ಪ್ರಸ್ತಾವನೆಯಲ್ಲಿ ವಿವರಿಸಿದ ವಿದ್ಯಮಾನಗಳ ಅನುಸಾರವಾಗಿ ಡಾ:ಎಸ್.ರಮೇಶ್, ಕ.ಅ.ಸೇ., ಅಧಿಕಾರಯುತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಹೊನ್ನಾವರ ವಿಭಾಗ, ಹೊನ್ನಾವರ ಆದ ನಾನು ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 71(ಎ) ರಿಂದ 71(ಜಿ) ರವರೆಗಿನ, 1, 2 ಹಾಗೂ ಈ ದಿನಾಂಕದವರೆಗೆ ಆದ ತಿದ್ದುಪಡಿ ಅನುಸಾರ ವಾಹನ ಗೂಡ್ಸ್ ರಿಕ್ಷಾ ಸಂಖ್ಯೆ: ಕೆಎ-47/1665 ಹಾಗೂ ಸಾಗ ನಗಗಳು 15=0.381 ಘ.ಮೀ. ಸಹಿತವಾಗಿ ಈ ಮೂಲಕ ಕರ್ನಾಟಕ ಸರ್ಕಾರಕ್ಕೆ ಮುಟ್ಟುಗೋಲು ಮಾಡಿ ಆದೇಶ ಹೊರಡಿಸಿರುತ್ತೇನೆ. ಅಲ್ಲದೇ, ಮುಟ್ಟುಗೋಲು ಮಾಡಿದ ವಾಹನವನ್ನು ಬಿಡಿ-ಬಾಗಗಳನ್ನು ಸರ್ಕಾರಕ್ಕೆ ಅನುಕೂಲಕರವಾಗಿ ವಿಲೇವಾರಿ ಮಾಡಲು ಆದೇಶಿಸಿರುತ್ತೇನೆ. ಈ ಆದೇಶಕ್ಕೆ ವಿರುದ್ಧವಾಗಿ 30 ದಿವಸಗಳ ಒಳಗಾಗಿ ಯಾವುದೇ ಮೇಲ್ಮನವಿ ಬರದೇ ಇದ್ದಲ್ಲಿ ಇದೇ ಅಂತಿಮ ಆದೇಶವಾಗಿರುತ್ತದೆ.

ಈ ಆದೇಶವನ್ನು ಇಂದು ದಿನಾಂಕ:28-02-2013ರಂದು ಈ ನ್ಯಾಯಾಲಯದಲ್ಲಿ ಹೇಳಿ ಬರೆಯಿಸಿ, ತಪ್ಪುಗಳನ್ನು ಸರಿಪಡಿಸಿ ನನ್ನ ಸಹಿ ಹಾಗೂ ಮುದ್ರೆಯೊಂದಿಗೆ ತೆರೆದ ನ್ಯಾಯಾಲಯದಲ್ಲಿ ಹೊರಡಿಸಿರುತ್ತೇನೆ.

ಡಾ: ಎಸ್.ರಮೇಶ್, ಕಅಸೇ,

P.R. 236

ಅಧಿಕಾರಯುತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, SC - 5

ಹೊನ್ನಾವರ ವಿಭಾಗ, ಹೊನ್ನಾವರ

ಆರ್ಥಿಕ ಸಚಿವಾಲಯ

ಅಧಿಕೃತ ಜ್ಞಾಪನ

ಸಂಖ್ಯೆ : ಆಇ 4 ಸಉಲಾ 2012, ಬೆಂಗಳೂರು, ದಿನಾಂಕ 07ನೇ ಮಾರ್ಚ್, 2013

ವಿಷಯ: ದಿನಾಂಕ: 01-01-2012 ರಲ್ಲಿದ್ದಂತೆ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋುಣ ನಿರ್ವಹಣೆ ಇಲಾಖೆಯಲ್ಲಿನ ಉಪ ನಿರ್ದೇಶಕರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಚುರಪಡಿಸುವ ಬಗ್ಗೆ.

ಉಲ್ಲೇಖ: 1. ಸರ್ಕಾರದ ಅಧಿಕೃತ ಜ್ಞಾಪನ ಪತ್ರ ಸಂಖ್ಯೆ: ಆಇ 8 ಸಉಲಾ 2011, ದಿನಾಂಕ: 16-06-2011

2. ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋುಣ ನಿರ್ವಹಣೆ ಇಲಾಖೆಯ ನಿರ್ದೇಶಕರ ಪತ್ರ ಸಂಖ್ಯೆ:

ಸಉಸಿ(3)89/ 2008-2009, ದಿನಾಂಕ: 23-01-2012.

ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋುಣ ನಿರ್ವಹಣೆ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಂತೆ ಪ್ರಸ್ತುತ ಉಪ ನಿರ್ದೇಶಕರ ವೃಂದದಲ್ಲಿ 3 ಹುದ್ದೆಗಳಿವೆ. ಉಪ ನಿರ್ದೇಶಕರ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:01-01-2012 ರಲ್ಲಿದಂತೆ ಈ ಕೆಳಕಂಡಂತೆ ಪ್ರಕಟಿಸಲಾಗಿದೆ.

ಕ್ರ.ಸಂ ಅಧಿಕಾರಿಗಳ ಹೆಸರು ಶಿ ೕ/ಶ್ರೀಮತಿ ್ರ ಜನ್ಮ ದಿನಾಂಕ ಸ ರ್ಕಾರಿ ಸೇವೆಗೆ ಸೇರಿದ ದಿನಾಂಕ ಪ ್ರಸ್ತುತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಾಂಕ ಅರ್ಹತಾ ದಿನಾಂಕ
1 ಎ.ಆರ್.ಸತ್ಯನಾರಾಯಣ 04;09;1952 01;10;1981 14;06;2006 01;06;2006
೮೮೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೫, ೨೦೧೩ ಭಾಗ ೩

ಈ ಜೇಷ್ಠತಾ ಪಟ್ಟಿಯ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದರೆ ಅಂತಹ ಅಧಿಕಾರಿಗಳೂ ಈ ಅಧಿಕೃತ ಜ್ಞಾಪನ ಹೊರಡಿಸಿದ ದಿನಾಂಕದಿಂದ 30 ದಿವಸಗಳೊಳಗಾಗಿ ತಮ್ಮ ಆಕ್ಷೇಪಣೆಗಳನ್ನು ಇಲಾಖಾ ನಿರ್ದೇಶಕರ ಮುಖಾಂತರ ಸರ್ಕಾರಕ್ಕೆ ಕಳುಹಿಸಿಕೊಡತಕ್ಕದ್ದು. ಈ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು ಬಾರದಿದಲ್ಲಿ ಈ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಲು ಕ್ರಮ ತೆಗೆದುಕೊಳ್ಳಲಾಗುವುದು.

ಎನ್.ಲಕ್ಷ್ಮಣ,

ಸರ್ಕಾರದ ಅಧೀನ ಕಾರ್ಯದರ್ಶಿ, P.R. 237

ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡಗಳು).

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಕುಕ 47 ಪಿಐಎಂ 2013, ಬೆಂಗಳೂರು, ದಿನಾಂಕ 14ನೇ ಫೆಬ್ರವರಿ, 2013.

ಆಯುಷ್ ಇಲಾಖೆಯಲ್ಲಿನ ವೈಧ್ಯಾಧಿಕಾರಿ ದರ್ಜೆ-1(ಹೋಮಿಯೋಪತಿ) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಅನುಬಂಧದಲ್ಲಿರುವಂತೆ ಪ್ರಕಟಿಸಲಾಗುತ್ತಿದ್ದು, ಈ ಬಗ್ಗೆ ಬಾಧಿತರಿಂದ ಆಕ್ಷೇಪಣೆಗಳೇನಾದರೂ, ಇದ್ದಲ್ಲಿ ಈ ಅಧಿಸೂಚನೆ ಹೊರಡಿಸಿದ ಒಂದು ತಿಂಗಳ ಒಳಗಾಗಿ, ತಮ್ಮ ಆಕ್ಷೇಪಣೆಗಳನ್ನು ಪೂರಕ ದಾಖಲೆಗಳೊಂದಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಕಾಸ ಸೌಧ, ಬೆಂಗಳೂರು ಇವರಿಗೆ ಸಲ್ಲಿಸತಕ್ಕದ್ದು. ನಿಗದಿತ ಅವಧಿಯ ನಂತರ ಬಂದಂತಹ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ದಿನಾಂಕ: 01-01-2013 ರಲ್ಲಿರುವಂತೆ ಆಯುಷ್ ಇಲಾಖೆಯ ವೈದ್ಯಾಧಿಕಾರಿ ದರ್ಜೆ-1 (ಹೋಮಿಯೋಪತಿ) ವೃಂದದ ತಾತ್ಕಾಲಿಕ ಪಟ್ಟಿ

ಕ ್ರ. ಸಂ. ವ ೖದ್ಯಾಧಿಕಾರಿಯವರ ೆ ಹ ೆಸರು ನೇರ ನೇಮಕಾತಿ/ ವ ುುಂಬಡ್ತಿ/ ಇತರೆ ಜನ್ಮ ದಿನಾಂಕ ಸೇವೆಗೆ ಸೇರಿದ ದಿನಾಂಕ ನೈಜವಾಗಿ ವ ುುಂಬಡ್ತಿ ಹ ೂಂದಿದ ೆ ದಿನಾಂಕ ನೇಮಕಾತಿ/ ಜ ೕ' ೆ ್ಠ ತೆಗೆ ನೈಜವಾದ ಅರ್ಹತಾ ದಿನಾಂಕ ' ರಾ
1 2 3 4 5 6 7 8
1 ಡಾ|| ಆರ್.ಶಾಂತಕುಮಾರಿ ನೇರನೇಮಕಾತಿ 20;09;1953 04;07;1986 _ 13;04;1989 ದಿನಾಂಕ:01;12;1975ರಿಂದ ಸ್ಥಳೀಯ ಅಭ್ಯರ್ಥಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ದಿನಾಂಕ: 04;07;1986ರಿಂದ ಇವರ ಸೇವೆಯನ್ನು ವೈದ್ಯರು ದರ್ಜೆ;2 (ಹೋ) ಹುದ್ದೆಯಲ್ಲಿ ಕ್ರಮಬದ್ಧಗೊಳಿಸಿದೆ. ನಂತರ ವೈದ್ಯರು ದರ್ಜೆ;1(ಹೋ) ಹ ುದ್ದೆಗೆ ನೇರನೇಮಕಾತಿ ಮೂಲಕ ನೇಮಕಗೊಂಡಿರುತ್ತಾರೆ.
2 ಡಾ|| ಎಸ್.ರಮೇಶ್ ಮುಂಬಡ್ತಿ 18;12;1954 04;07;1986 11;06;2003 11;06;2003
3 ಡಾ|| ಯಡ್ರಾಮಿ ಜಿ.ಜಿ ಮುಂಬಡ್ತಿ 01;06;1958 04;09;1995 20;05;2003 20;05;2003
4 ಡಾ|| ಸಿ.ಬಿ.ನಂಜರಾಜು ಮುಂಬಡ್ತಿ 21;07;1960 20;10;1986 20;01;2005 20;01;2005
5 ಡಾ||ಹೆಚ್.ಜಿ.ಮಂಜುನಾಥ ಕುಮಾರ್ ಮುಂಬಡ್ತಿ 22;07;1962 19;03;1987 24;01;2005 24;01;2005
6 ಡಾ|| ಭಾರತಿ ಹಿರೇಮಠ ಮುಂಬಡ್ತಿ 15;10;1965 14;12;1990 26;01;2005 26;01;2005
7 ಡಾ||ಸುರೇಶ್ ದುರ್ಗಪ್ಪ ದೊಡ್ಡವಾಡ ಮುಂಬಡ್ತಿ 14;04;1961 10;09;1995 11;02;2005 11;02;2005
8 ಡಾ||ಮೀನಾಕ್ಷಿ ಎಸ್.ರತ್ನ ಹ ೂನ್ನದ ೆ ಮುಂಬಡ್ತಿ 08;01;1961 24;01;1998 14;03;2005 14;03;2005
9 ಡಾ||ಮಹಮ್ಮದ್ ಆಪ್ತಾಬ್ ವಾಸೀಮ್ ಮುಂಬಡ್ತಿ 11;04;1962 11;09;1995 23;05;2012 23;05;2012
10 ಡಾ||ಗಿರಿಜಾ ಎಸ್.ಯು ಮುಂಬಡ್ತಿ 26;09;1965 13;09;1995 23;05;2012 23;05;2012

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎನ್.ಹರಿಣಿಯಮ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ,

P.R. 232

SC - 10

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾರತೀಯ ವೈದ್ಯಪದ್ಧತಿ).

ಸರ್ಕಾರಿ ಕೇಂದ್ರ ಮುದ್ರಣಾಲಯ, ಘಟಕ-2, ಬೆಂಗಳೂರು

Cite this issue. Karnataka Gazette, Government of Karnataka, 25 April 2013. Indian Gazettes, https://egazette.servantsofknowledge.in/details/in.gazette.karnataka_new.2013-04-25.Part-3/. Archive identifier in.gazette.karnataka_new.2013-04-25.Part-3.