RNI No. KARBIL/2001/47147
ಕರ್ನಾಟಕ ರಾಜ್ಯಪತ್ರ
ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ
ನಂ.1138 No.1138 ಭಾಗ– IV-A Part– IV-A
ಬೆಂಗಳೂರು, ಶುಕ್ರವಾರ, ಸೆಪ್ಟೆಂಬರ್ 13, 2013 (ಭಾದ್ರಪದ 22, ಶಕ ವರ್ಷ 1935) Bangalore, Friday, September 13, 2013 (Bhadrapada 22, Shaka Varsha 1935)
CO-OPERATION SECRETARIAT
The Karnataka Co-operative Societies (Removal of difficulties) Fourth order - 2013 No: CO 76 CLM 2013(P1), Bengaluru, dated:13.09.2013
Whereas, the Karnataka Co-operative Societies Act 1959 (Karnataka Act 11 of 1959) as amended by the Karnataka Co-operative Societies (Amendment) Act, 2012 (Karnataka Act 03 of 2013) (hereinafter referred to as Amendment Act) Provides,-
(1) That a Co-operative Society shall convene a general meeting of its members once in a year before twenty fifth day of September; and the quorum for a general meeting shall be as specified in the bye-laws, but shall not be less than twenty percent of the members eligible to vote at the meeting; according to sub-section (1) and (4) of Section 27 of the Amendment Act ;
Whereas, many ci-operative societies having large membership have represented, based on their experience, that in most of such large societies required quorum will not be there in the general body meetings of 2013, and require more time to amend the bye-laws for constituting the representative general bodies.
Therefore, a difficulty has arisen to implement certain provisions of the Amendment Act ;
Now therefore, in exercise of the powers conferred by Section 54 of the Karnataka Co-operative Societies (Amendment) Act, 2012 (Karnataka Act 3 of 2013) and Section 132 of the Karnataka Co-operative Societies Act, 1959 (Karnataka Act 11 of 1959). The Government of Karnataka, hereby makes the following order, to remove the difficulties namely :-
1. Title and commencement.- (1) This order may be called the Karnataka Co-operative Societies (Removal of Difficulties) Fourth Order – 2013.
(2) It shall come into force at once.
2. Quorum for the general meeting in 2013.- Notwithstanding anything contained in the Karnataka Co- operative Societies Act 1959 and Karnataka Co-operative Societies Rules 1960, for the annual general meetings of the co- operative society during 2013, the quorum shall be as specified in the bye-laws.
BY ORDER AND IN THE NAME OF THE GOVERNOR OF KARNATAKA,
H.S. NAGARAJAIAH Officer on Special Duty & Ex-officio Joint Secretary to Government Co-operation Department
(೮೪೬೯)
ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೪೭೦ವಿಶೇಷ ರಾಜ್ಯ ಪತ್ರಿಕೆ
ನಂ.1140 No.1140 ಭಾಗ– III Part– III
ಬೆಂಗಳೂರು, ಸೋಮವಾರ, ಸೆಪ್ಟೆಂಬರ್ 16, 2013 (ಭಾದ್ರಪದ 25, ಶಕ ವರ್ಷ 1935) Bangalore, Monday, September 16, 2013 (Bhadrapada 25, Shaka Varsha 1935)
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 4ರ ಮೇರೆಗೆ ಅಧಿಸೂಚನೆ
ಸಂಖ್ಯೆ: ಸಿಐ 335 ಎಸ್ಪಿಕ್ಯೂ 2013, ಬೆಂಗಳೂರು, ದಿನಾಂಕ: 13.09.2013
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 (ಕರ್ನಾಟಕ ಕಾಯ್ದೆ 18 : 1966)ರ ಕಲಂ 28ರ ಉಪ ಕಲಂ 1ರಡಿ ಸರಕಾರದ ಅಧಿಸೂಚನೆ ಸಂಖ್ಯೆ: ಸಿಐ 575 ಎಸ್ಪಿಕ್ಯೂ 2009 ದಿನಾಂಕ: 11.01.2010ರಂದು ಕರ್ನಾಟಕ ರಾಜ್ಯ ಪತ್ರದ ಪುಟ ಸಂಖ್ಯೆ 1ರಿಂದ 36ರವರೆಗೆ ಭಾಗ-3ರಲ್ಲಿ ದಿನಾಂಕ: 25.01.2010ರಂದು ಪ್ರಕಟಗೊಂಡ ಈ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿರುವ ಈ ಜಮೀನುಗಳ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಈ ಜಮೀನುಗಳ ಭೂಸ್ವಾಧೀನಕ್ಕೆ ರೈತರ ವಿರೋಧ ಇರುವದರಿಂದ ಸದರಿ ಜಮೀನುಗಳನ್ನು ಭೂಸ್ವಾಧೀನ ಕ್ರಮದಿಂದ ಕೈಬಿಡಲು ತೀರ್ಮಾನಿಸಿದ್ದು, ಅವುಗಳ ಕ್ಷೇತ್ರವನ್ನು ಅಂಕಣ 4ರಿಂದ 7ರವರೆಗೆ ವಿವರಿಸಿದ ಪರಿಮಿತಿಯೊಂದಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ಕಲಂ 4ರನ್ವಯ ನಿಹಿತವಾಗಿರುವ ಅಧಿಕಾರದ ಮೇರೆಗೆ ಕೈಗಾರಿಕಾ ಪ್ರದೇಶದಿಂದ ಕೈಬಿಡಲಾಗಿದೆ ಅಂತಾ ಕರ್ನಾಟಕ ಸರಕಾರವು ಈ ಮೂಲಕ ಘೋಷಿಸುತ್ತದೆ.
ಅನುಸೂಚಿ
ಗ್ರಾಮ ಃ ಚಳಗೇರಿ ತಾಲೂಕ ಃ ರಾಣೇಬೆನ್ನೂರ ಜಿಲ್ಲೆ ಃ ಹಾವೇರಿ
| ಅ. ನಂ. | ರಿ.ಸ. ನಂ. | ಸಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ | ಚಕ್ಕುಬಂದಿ (ಚತು:ಸೀಮೆ) 28(1) ರ ಅಧಿಸೂಚನೆ ಪ್ರಕಾರ | |||
| ಪ ೂರ್ವ | ಪ ಶ್ಚಿಮ | ಉತ್ತರ | ದ ಕ್ಷಿಣ | |||
| 1 | 2 | 3 | 4 | 5 | 6 | 7 |
| 1 | 167 | 6-35 | 169 | 217 | ರಸ್ತೆ | 166 |
| 2 | 189 | 22-13 0-11ಖ 22-02 | 197 | 228 | ರಸ್ತೆ | 190, 191 |
| 3 | 190/1ಅ | 1-15 0-05ಖ 1-10 | 191 | 228 | 189 | 192 |
| 4 | 190/1ಅ-ಎಕ್ಸ 1 | 1-10 | 191 | 228 | 189 | 192 |
| 5 | 190/1ಅ-ಎಕ್ಸ 2 | 1-10 | 191 | 228 | 189 | 192 |
| 6 | 190/1ಅ-ಎಕ್ಸ 3 | 1-10 | 191 | 228 | 189 | 192 |
| 7 | 190/1ಬ/1 | 3-29 0-07ಖ 3-22 | 191 | 228 | 189 | 192 |
| 8 | 190/1ಬ/2 | 3-21 | 191 | 228 | 189 | 192 |
| 9 | 190/2ಅ | 1-36 | 191 | 228 | 189 | 192 |
| 10 | 190/2ಬ | 1-20 | 191 | 228 | 189 | 192 |
| 11 | 190/2ಬ ಎಕ್ಸ-1 | 1-20 | 191 | 228 | 189 | 192 |
| 12 | 191/1 ಎಕ್ಸ-1 | 2-10 | 196 | 190 | 189 | 192 |
| 13 | 191/1 ಎಕ್ಸ2 | 2-13 | 196 | 190 | 189 | 192 |
| 14 | 191/2+3 | 9-08 | 196 | 190 | 189 | 192 |
| 15 | 192 | 16-15 0-06ಖ 16-09 | 194 | 228 | 190,191 | 193 |
| 16 | 194 ಪೈ | 1-27 | 202 | 191,192 | 195 | ರಸ್ತೆ |
| 17 | 195/1 | 0-25 | 203 | 191,192 | 196 | 194 |
| 18 | 195/2 | 0-28 | 203 | 192 | 196 | 194 |
| 19 | 196 | 1-17 | 204 | 191 | 197 | 195 |
| 20 | 197/1 | 1-06 | 205 | 189,191 | ರಸ್ತೆ | 196 |
| 21 | 197/2 | 1-06 | 205 | 189,191 | ರಸ್ತೆ | 196 |
| 22 | 198 | 1-02 | 206 | 189 | ರಸ್ತೆ | 197 |
| 23 | 199 | 0-36 | 207 | 198 | ರಸ್ತೆ | 206 |
| 24 | 200 ಪೈ | 2-00 | 201 | 194 | ರಸ್ತೆ | ರಸ್ತೆ |
| 25 | 202 | 1-30 | 208 | 194 | 203 | 201 |
| 26 | 203/1+2 | 1-32 | 208 | 195 | 204 | 202 |
| 27 | 204 | 1-11 | 208 | 196 | 205 | 203 |
| 28 | 205 | 1-37 | 207 | 197 | 206 | 204 |
| 29 | 206 | 1-37 | 207 | 197,198 | 199 | 205 |
| 30 | 207 | 3-29 | 211 | 205,206 | ರಸ್ತೆ | 208 |
| 31 | 208 ಪೈ | 6-02 | 210 | 202,203,204 | 207 | ರಸ್ತೆ |
| 32 | 210/1 | 4-21 | 212 | 208 | 211 | 209 |
| 33 | 210/2 | 4-14 | 212 | 208 | 211 | 209 |
| 34 | 210/3ಅ+3ಬ+3ಕ | 4-01 | 212 | 208 | 211 | 209 |
| 35 | 210/4 ಎಕ್ಸ-1 | 2-17 | 212 | 208 | 211 | 209 |
| 36 | 210/4 ಎಕ್ಸ-2 | 2-17 | 212 | 208 | 211 | 209 |
| 37 | 211/1+2ಅ | 0-31 | 212 | 207 | ರಸ್ತೆ | 210 |
| 38 | 211/1+2ಕ | 1-36 | 212 | 207 | ರಸ್ತೆ | 210 |
| 39 | 211/2+4 ಅ | 2-05 | 212 | 207 | ರಸ್ತೆ | 210 |
| 40 | 211/4ಬ+ 5/1 | 0-15 | 212 | 207 | ರಸ್ತೆ | 210 |
| 41 | 211/4ಬ+ 5/2 | 1-39 | 212 | 207 | ರಸ್ತೆ | 210 |
| 42 | 211/1+2ಬ | 2-11 | 212 | 207 | ರಸ್ತೆ | 210 |
| 43 | 212 ಪೈ | 7-00 | 213 | 209,210,211 | ರಸ್ತೆ | ರಸ್ತೆ |
| 44 | 213 ಪೈ | 7-02 | 214 | 212 | ರಸ್ತೆ | ರಸ್ತೆ |
| 45 | 214 ಪೈ | 8-07 | 215 | 213 | ರಸ್ತೆ | ರಸ್ತೆ |
| 46 | 215 ಪೈ | 6-06 | 216, 217 | 214 | ರಸ್ತೆ | ರಸ್ತೆ |
| 47 | 216 | 8-05 0-11ಖ 7-34 | 197 | 215 | ರಸ್ತೆ | 217 |
| 48 | 217 ಪೈ | 9-05 | 197 | 215 | 216 | ರಸ್ತೆ |
| 49 | 228 ಪೈ | 17-25 | 189,190,192 | 231 | ರಸ್ತೆ | ರಸ್ತೆ |
| 50 | 231 ಪೈ | 18-08 | 228 | 233 | ರಸ್ತೆ | ರಸ್ತೆ |
| 51 | 233/2 | 5-00 | 231 | 238 | 234 | 232 |
| 52 | 233/1 | 4-00 | 231 | 238 | 234 | 232 |
| 53 | 233/3 | 4-31 | 231 | 238 | 234 | 232 |
| 54 | 234/1 | 1-20 | 231 | 237 | ರಸ್ತೆ | 233 |
| 55 | 234/2 | 6-20 | 231 | 237 | ರಸ್ತೆ | 233 |
| 56 | 237/1 ಎಕ್ಸ-2 | 1-09 | 234 | 246,247 | ರಸ್ತೆ | 238 |
| 57 | 237/1 ಎಕ್ಸ-3 | 1-00 | 234 | 246,247 | ರಸ್ತೆ | 238 |
| 58 | 237/2 | 3-03 | 234 | 246,247 | ರಸ್ತೆ | 238 |
| 59 | 237/2 | 0-21 | 234 | 246,247 | ರಸ್ತೆ | 238 |
| 60 | 238/1 | 4-14 | 233 | 244 | 237 | 239 |
| 61 | 238/2ಬ | 1-00 | 233 | 244 | 237 | 239 |
| 62 | 238/2ಕ | 2-00 | 233 | 244 | 237 | 239 |
| 63 | 238/2ಅ | 1-23 | 233 | 244 | 237 | 239 |
| 64 | 243 | 1-21 | 238 | 257 | 244 | 242 |
| 65 | 244/1 | 0-31 | 238 | 257 | 245 | 243 |
| 66 | 244/2 | 0-32 | 238 | 257 | 245 | 243 |
| 67 | 245 | 1-19 | 238 | 254,255 | 246 | 244 |
| 68 | 246 | 1-10 | 237 | 253 | 247 | 245 |
| 69 | 247/1 | 0-23 | 237 | 253 | ರಸ್ತೆ | 246 |
| 70 | 247/2 | 0-24 | 237 | 253 | ರಸ್ತೆ | 246 |
| 71 | 252/1 | 0-17 | 253 | 275 | ರಸ್ತೆ | 263 |
| 72 | 252/1 ಎಕ ್ಸ | 0-15 | 253 | 275 | ರಸ್ತೆ | 263 |
| 73 | 252/2 | 0-21 | 253 | 275 | ರಸ್ತೆ | 263 |
| 74 | 253 | 3-18 | 247 | 252 | ರಸ್ತೆ | 254 |
| 75 | 254 | 1-01 | 245 | 256 | 253 | 255 |
| 76 | 255 | 1-06 | 245 | 256 | 254 | 257 |
| 77 | 256/1 | 0-35 | 255 | 266 | 263 | 262 |
| 78 | 256/2ಎ/1 | 1-04 | 255 | 266 | 263 | 262 |
| 79 | 256/2ಎ/2 | 0-20 | 255 | 266 | 263 | 262 |
| 80 | 257/1ಅ | 0-19 | 243,244 | 262 | 255 | 258 |
| 81 | 257/1ಬ | 0-20 | 243,244 | 262 | 255 | 258 |
| 82 | 257/2 | 0-37 | 243,244 | 262 | 255 | 258 |
| 83 | 257/3 | 0-39 | 243,244 | 262 | 255 | 258 |
| 84 | 257/4 | 1-36 | 243,244 | 262 | 255 | 258 |
| 85 | 262 ಪೈ | 10-05 | 257 | 266 | 256 | 263 |
| 86 | 263/1ಅ | 4-01 | 256 | 266 | 252 | 262 |
| 87 | 263/2ಅ | 4-00 | 256 | 266 | 252 | 262 |
| 88 | 263/2ಬ | 4-03 | 256 | 266 | 252 | 262 |
| 89 | 263/1ಬ | 4-02 | 256 | 266 | 252 | 262 |
| 90 | 266 ಪೈ | 5-15 | 263 | 267 | ರಸ್ತೆ | ರಸ್ತೆ |
| 91 | 272/1 | 1-16 | 266 | 268 | ರಸ್ತೆ | 267 |
| 92 | 272/2 | 3-00 | 266 | 268 | ರಸ್ತೆ | 267 |
| 93 | 272/2 | 2-06 | 266 | 268 | ರಸ್ತೆ | 267 |
| 94 | 272/3 | 5-02 | 266 | 268 | ರಸ್ತೆ | 267 |
| 95 | 272/4 ಎಕ್ಸ-1 | 1-03 | 266 | 268 | ರಸ್ತೆ | 267 |
| 96 | 272/4 ಎಕ್ಸ-2 | 1-03 | 266 | 268 | ರಸ್ತೆ | 267 |
| 97 | 273/1+2+3ಅ | 3-09 | 274 | 272 | ರಸ್ತೆ | 270 |
| 98 | 273/1+2+3ಬ | 0-31 | 274 | 272 | ರಸ್ತೆ | 270 |
| 99 | 273/1+2+3ಕ | 0-19 | 274 | 272 | ರಸ್ತೆ | 270 |
| 100 | 273/4 | 2-03 | 274 | 272 | ರಸ್ತೆ | 270 |
| 101 | 274/1 | 0-06 | 275 | 273 | ರಸ್ತೆ | 269 |
| 102 | 274/1 ಎಕ ್ಸ -1 | 0-02 | 275 | 273 | ರಸ್ತೆ | 269 |
| 103 | 274/1 ಎಕ ್ಸ -2 | 0-06 | 275 | 273 | ರಸ್ತೆ | 269 |
| 104 | 274/1 ಎಕ ್ಸ -3 | 0-07 | 275 | 273 | ರಸ್ತೆ | 269 |
| 105 | 274/1 ಎಕ ್ಸ -4 | 0-08 | 275 | 273 | ರಸ್ತೆ | 269 |
| 106 | 274/2 | 2-16 0-03ಖ 2-13 | 275 | 273 | ರಸ್ತೆ | 269 |
| 107 | 274/3ಎ | 0-32 0-01 ಖ 0-31 | 275 | 273 | ರಸ್ತೆ | 269 |
| 108 | 274/3ಬ | 0-32 0-01ಖ 0-31 | 275 | 273 | ರಸ್ತೆ | 269 |
| 109 | 275 | 4-00 0-05 ಖ 3-35 | 276 | 274 | ರಸ್ತೆ | 268 |
| 110 | 275 | 0-05 | 276 | 274 | ರಸ್ತೆ | 268 |
| 111 | 275/ಎಕ್ಸ-1 | 0-05 | 276 | 274 | ರಸ್ತೆ | 268 |
| 112 | 275/ಎಕ್ಸ-2 | 0-10 | 276 | 274 | ರಸ್ತೆ | 268 |
| 113 | 292/ಎಕ್ಸ-1 | 3-28 | 272 | 291 | ರಸ್ತೆ | 293 |
| 114 | 292/ ಎಕ್ಸ-2 | 3-16 | 272 | 291 | ರಸ್ತೆ | 293 |
| 115 | 292/ ಎಕ್ಸ-3 | 1-24 | 272 | 291 | ರಸ್ತೆ | 293 |
| 116 | 293 ಪೈ | 5-19 | 272 | 293 ಪೈ | 291 | 300 |
| 117 | 300 ಪೈ | 9-30 | 272 | 300 ಪೈ | 293 | 301 |
| 357-08 1-10 ಖ 355-38 |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎ.ಪಿ. ರಾಮಕೃಷ್ಣ ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ) ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೪೭೪
ವಿಶೇಷ ರಾಜ್ಯ ಪತ್ರಿಕೆ
ನಂ.1150 No.1150 ಭಾಗ– IV-A Part– IV-A
ಬೆಂಗಳೂರು, ಗುರುವಾರ, ಸೆಪ್ಟೆಂಬರ್ 19, 2013 (ಭಾದ್ರಪದ 28, ಶಕ ವರ್ಷ 1935) Bangalore, Thursday, September 19, 2013 (Bhadrapada 28, Shaka Varsha 1935)
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಒ 15 ಸಿಎಲ್ಎಂ 2013, ಬೆಂಗಳೂರು, ದಿನಾಂಕ: 19.09.2013
ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997 (2000ದ ಕರ್ನಾಟಕ ಅಧಿನಿಯಮ ಸಂಖ್ಯೆ: 17) ಇದರ ಪ್ರಕರಣ 71ರ (1)ನೇ ಉಪಪ್ರಕರಣದಲ್ಲಿ ಅಗತ್ಯಪಡಿಸಲಾದಂತೆ ಕರ್ನಾಟಕ ಸರ್ಕಾರವು ಈ ಕೆಳಕಂಡ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ನಿಯಮಗಳು 2013 ಅನ್ನು ಪ್ರಸ್ತಾಪಿಸಿ ಕರಡನ್ನು ಅಧಿಸೂಚನೆ ಸಂಖ್ಯೆ: ಸಿಒ 15 ಸಿಎಲ್ಎಂ 2013 ದಿನಾಂಕ: 28.05.2013ರ ಮೂಲಕ ಕರ್ನಾಟಕ ರಾಜ್ಯ ಪತ್ರದ ವಿಶೇಷ ಪತ್ರಿಕೆಯ ಭಾಗ-IV-A ಸಂಖ್ಯೆ: 806 ದಿನಾಂಕ 28.05.2013ರಲ್ಲಿ ಪ್ರಕಟಿಸಿದ್ದು, ಆ ಮೂಲಕ ಭಾದಿತವಾಗಬಹುದಾದ ವ್ಯಕ್ತಿಗಳಿಂದ ಮೂವತ್ತು ದಿನಗಳೊಳಗಾಗಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಿರುವುದರಿಂದ;
ಮತ್ತು ದಿನಾಂಕ: 28.05.2013ರ ವಿಶೇಷ ರಾಜ್ಯಪತ್ರವನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;
ಸದರಿ ಕರಡು ನಿಯಮಗಳ ಬಗ್ಗೆ ನಿಗದಿತ ಅವಧಿಯೊಳಗೆ ಸ್ವೀಕೃತವಾದ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಗಣಿಸಿರುವುದರಿಂದ;
ಈಗ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997 (2000ದ ಕರ್ನಾಟಕ ಅಧಿನಿಯಮ ಸಂಖ್ಯೆ: 17) ಇದರ ಪ್ರಕರಣ 71ರ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ.
ನಿಯಮಗಳು
1. ಹೆಸರು ಮತ್ತು ಪ್ರಾರಂಭ:-
(1) ಈ ನಿಯಮಗಳನ್ನು ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ನಿಯಮಗಳು, 2013 ಎಂದು ಕರೆಯತಕ್ಕದ್ದು.
(2) ಇವು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
2. ನಿಯಮ 2ರ ತಿದ್ದುಪಡಿ: ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ನಿಯಮಗಳು, 2004 (ಇನ್ನು ಮುಂದೆ ಸದರಿ ನಿಯಮಗಳು ಎಂದು ಉಲ್ಲೇಖಿಸಲಾಗುತ್ತದೆ) ರ ನಿಯಮ 2ರಲ್ಲಿ,
(i) ಖಂಡ (ಎ) ನಂತರ ಈ ಮುಂದಿನದನ್ನು ಸೇರಿಸತಕ್ಕದ್ದು; ಎಂದರೆ:-
"(ಎಎ) 'ಆಡಳಿತಗಾರ' ಎಂದರೆ ಅಧಿನಿಯಮದ ಪ್ರಕರಣ 38 ಅಥವಾ 57ಎ ಅಡಿ ನೇಮಕವಾದ ಆಡಳಿತಗಾರ.
(ii) ಖಂಡ(ಜಿ) ನಂತರ, ಈ ಮುಂದಿನದನ್ನು ಸೇರಿಸತಕ್ಕದು; ಎಂದರೆ:-
"(ಜಿ-1) 'ವಿಶೇಷಾಧಿಕಾರಿ' ಎಂದರೆ ಅಧಿನಿಯಮದ ಪ್ರಕರಣ 38ಎ ಅಡಿ ನೇಮಕವಾದ ವಿಶೇಷಾಧಿಕಾರಿ.
(ಜಿ-2) 'ಜಿಲ್ಲಾ ಚುನಾವಣಾಧಿಕಾರಿ'- ಎಂದರೆ ಸಹಕಾರ ಚುನಾವಣಾ ಆಯೋಗದಿಂದ ಆ ಜಿಲ್ಲೆಗಾಗಿ ನೇಮಿಸಲ್ಪಟ್ಟ ಒಬ್ಬ ಅಧಿಕಾರಿ.
(ಜಿ-3) 'ರಿಟರ್ನಿಂಗ್ ಅಧಿಕಾರಿ'- ರಿಟರ್ನಿಂಗ್ ಅಧಿಕಾರಿ ಎಂದರೆ ಸಹಕಾರ ಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟ ರಾಜ್ಯ ಸರ್ಕಾರದ ಅಥವಾ ಸ್ಥಳೀಯ ಸಂಸ್ಥೆಯ ಒಬ್ಬ ಅಧಿಕಾರಿ ಮತ್ತು ರಿಟರ್ನಿಂಗ್ ಅಧಿಕಾರಿಯ ಕರ್ತವ್ಯವನ್ನು ನಿರ್ವಹಿಸುವ ಒಬ್ಬ ಸಹಾಯಕ ರಿಟರ್ನಿಂಗ್ ಅಧಿಕಾರಿಯನ್ನು ಒಳಗೊಳ್ಳುತ್ತದೆ.
3. ನಿಯಮ 3ರ ತಿದ್ದುಪಡಿ:- ಸದರಿ ನಿಯಮಗಳ ನಿಯಮ 3ರಲ್ಲಿ, ಉಪನಿಯಮ (1) ಮತ್ತು (2) ನ್ನು ಅನುಕ್ರಮವಾಗಿ ಉಪನಿಯಮ (2) ಮತ್ತು (3) ಎಂದು ಪುನರ್ ಸಾಂಖ್ಯೀಕರಿಸತಕ್ಕದ್ದು; ಮತ್ತು
(i) ಹಾಗೇ ಪುನರ್ ಸಾಂಖ್ಯೀಕರಿಸಿದ ಉಪನಿಯಮ (2)ರ ನಿಕಟ ಪೂರ್ವದಲ್ಲಿ ಈ ಕೆಳಗಿನದನ್ನು ಸೇರಿಸತಕ್ಕದ್ದು; ಎಂದರೆ:-
"(1) ನೋಂದಣಿ ಕಾರ್ಯವಿಧಾನ ಈ ಕೆಳಗಿನಂತಿರತಕ್ಕದ್ದು:-
(i) ಒಂದು ಸಹಕಾರಿಯನ್ನು ಸಂಘಟಿಸಲು ಬಯಸುವ ಆದರೆ ಹತ್ತಕ್ಕೆ ಕಡಿಮೆ ಇಲ್ಲದ ವ್ಯಕ್ತಿಗಳ ಗುಂಪೊಂದು ಒಟ್ಟಿಗೆ ಸೇರಿ ಅವರಲ್ಲಿ ಒಬ್ಬ ಮುಖ್ಯ ಪ್ರವರ್ತಕನನ್ನು ಆಯ್ಕೆ ಮಾಡಿ ಅವನಿಗೆ ಸಹಾಯ ಮಾಡಲು ಕೆಲವು ಪ್ರವರ್ತಕರನ್ನು ನೇಮಿಸಿ ಮುಖ್ಯ ಪ್ರವರ್ತಕನು ಅಂತಹ ಪ್ರಸ್ತಾಪಿತ ಸಹಕಾರಿಯನ್ನು ನೋಂದಾಯಿಸಲು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರ ನೀಡಬಹುದು. ಅಂತಹ ವ್ಯಕ್ತಿಗಳ ಗುಂಪು ಪ್ರಸ್ತಾಪಿತ ಸಹಕಾರಿಯ ಹೆಸರು ಮತ್ತು ಕಾರ್ಯಕ್ಷೇತ್ರವನ್ನು ನಿರ್ಧರಿಸಿ ಪ್ರಸ್ತಾಪಿತ ಸಹಕಾರಿಯ ಉಪವಿಧಿಗಳನ್ನು ಅಳವಡಿಸಿಕೊಂಡು ಮುಖ್ಯ ಪ್ರವರ್ತಕನಿಗೆ ಪ್ರಸ್ತಾಪಿತ ಸಹಕಾರಿಯ ಸದಸ್ಯರಾಗಲು ಬಯಸುವ ವ್ಯಕ್ತಿಗಳಿಂದ ಅಗತ್ಯ ಷೇರು ಬಂಡವಾಳವನ್ನು ಸಂಗ್ರಹಿಸಲು ಅಧಿಕಾರ ನೀಡಲು ನಿರ್ಣಯಿಸತಕ್ಕದ್ದು.
(ii) ಮುಖ್ಯ ಪ್ರವರ್ತಕನು ಪ್ರಸ್ತಾಪಿತ ಸಹಕಾರಿಯನ್ನು ಸ್ಥಾಪಿಸಲು ಒಟ್ಟು ಗೂಡಿರುವ ವ್ಯಕ್ತಿಗಳ ಪಟ್ಟಿ, ಅಂತಹ ಗುಂಪಿನ ವ್ಯಕ್ತಿಗಳ ಹೆಸರು, ವಿಳಾಸ ಮತ್ತು ಸಹಿಗಳನ್ನು ಸಭಾ ನಡೆವಳಿಗಳ ಪ್ರತಿ, ಪ್ರಸ್ತಾಪಿತ ಸಹಕಾರಿಯ ಉಪವಿಧಿಗಳ ದ್ವಿಪ್ರತಿಗಳು ಮತ್ತು ಪ್ರಸ್ತಾಪಿತ ಸಹಕಾರಿಯುವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೪೭೫ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಯುಕ್ತ ಅವಕಾಶಗಳಿರುವ ಮತ್ತು ಅದು ಸದೃಡವಾಗಿ ಬೆಳವಣಿಗೆ ಹೊಂದುವ ಸಾಧ್ಯತೆ ಇದೆ ಎಂಬುದನ್ನು ತೋರಿಸುವ ಪ್ರಾಜೆಕ್ಟ್ ವರದಿಯ ಸಹಿತ ವ್ಯಾಪ್ತಿಯುಳ್ಳ ರಿಜಿಸ್ಟ್ರಾರನನ್ನು ಸಂಪರ್ಕಿಸತಕ್ಕದ್ದು.
(iii) ರಿಜಿಸ್ಟ್ರಾರನು ಪ್ರಸ್ತಾಪಿತ ಸಹಕಾರಿಯು ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಯುಕ್ತ ಅವಕಾಶಗಳಿವೆ ಹಾಗೂ ಅದು ಆರ್ಥಿಕ ಸದೃಡತೆೆಯಿಂದ ಬೆಳವಣಿಗೆ ಹೊಂದುವ ಅವಕಾಶಗಳಿವ ಎಂದು ಮನಗಂಡಲ್ಲಿ, ಪ್ರಸ್ತಾಪಿತ ಸಹಕಾರಿಯ ಸದಸ್ಯರಾಗಲು ಬಯಸುವ ತಾನು ನಿಗದಿಪಡಿಸುವ ಅಂಥ ಸಂಖ್ಯೆಯ ವ್ಯಕ್ತಿಗಳಿಂದ ಅಂಥ ಷೇರು ಬಂಡವಾಳವನ್ನು ಅಂಥ ಅವಧಿಯೊಳಗೆ ಸಂಗ್ರಹಿಸಲು ಮುಖ್ಯ ಪ್ರವರ್ತಕನಿಗೆ ಅನುಮತಿ ನೀಡಬಹುದು.
(iv) ರಿಜಿಸ್ಟ್ರಾರನಿಂದ ಅನುಮತಿ ಪಡೆದ ನಂತರ, ಮುಖ್ಯ ಪ್ರವರ್ತಕನು ಪ್ರಸ್ತಾಪಿತ ಸಹಕಾರಿಯ ಹೆಸರಿನಲ್ಲಿ ರಶೀದಿ ಪುಸ್ತಕಗಳನ್ನು ಮುದ್ರಣ ಮಾಡಿಸತಕ್ಕದ್ದು ಮತ್ತು ಪ್ರಸ್ತಾಪಿತ ಸಹಕಾರಿಯ ಸದಸ್ಯರಾಗ ಬಯಸುವ ವ್ಯಕ್ತಿಗಳಿಂದ ಷೇರು ಬಂಡವಾಳವನ್ನು ಸಂಗ್ರಹಿಸತಕ್ಕದ್ದು.
ಪ್ರಸ್ತಾಪಿತ ಸದಸ್ಯರಿಂದ ಸಂಗ್ರಹಿಸುವ ಮೊಬಲಗಿಗೆ ತನ್ನ ಹೆಸರು, ಪದನಾಮ ಮತ್ತು ಸಹಿಯೊಂದಿಗೆ ರಶೀದಿಗಳನ್ನು ನೀಡತಕ್ಕದ್ದು.
ಆತನು ಸಂಗ್ರಹಿಸಿದ ಹಣವನ್ನು ರಿಜಿಸ್ಟ್ರಾರನು ನಿಗದಿಪಡಿಸುವ ಯಾವುದೇ ಸಹಕಾರ ಬ್ಯಾಂಕಿನಲ್ಲಿ ಏಳು ದಿನಗಳೊಳಗೆ ಠೇವಣಿ ಇಡತಕ್ಕದ್ದು. ಆತನು ಒಂದು ನಗದು ಪುಸ್ತಕ, ರಶೀದಿ ಪುಸ್ತಕ, ಓಚರ್ ಪುಸ್ತಕ ಮತ್ತು ತಾನು ಸಂಗ್ರಹಿಸಿ ಬ್ಯಾಂಕಿಗೆ ಪಾವತಿಸಿದ ಹಣಕ್ಕೆ ಇತರ ಲೆಕ್ಕಗಳನ್ನು ನಿರ್ವಹಿಸತಕ್ಕದ್ದು. ಆದಾಗ್ಯೂ ಆತನು ಮುದ್ರಣ, ಲೇಖನ ಸಾಮಗ್ರಿ, ಬೆರಳಚ್ಚು, ಅಂಚೆ ವೆಚ್ಚ, ಇತ್ಯಾದಿ ಪ್ರಾಸಂಗಿಕ ವೆಚ್ಚಗಳನ್ನು ಭರಿಸಲು ಅಗತ್ಯವಿರುವ ಮತ್ತು ತಕ್ಕಷ್ಟಾದ ಹಣವನ್ನು ಉಳಿಸಿಕೊಳ್ಳಲು ಸಕ್ಷಮನಿರುತ್ತಾನೆ.
(v) ನಿರ್ದಿಷ್ಟಪಡಿಸಿದ ಸಂಖ್ಯೆಯ ವ್ಯಕ್ತಿಗಳಿಂದ ರಿಜಿಸ್ಟ್ರಾರನು ಅನುಮತಿಸಿದ ಪ್ರಮಾಣದ ಷೇರು ಬಂಡವಾಳವನ್ನು ಸಂಗ್ರಹಿಸಿದ ನಂತರ, ಮುಖ್ಯ ಪ್ರವರ್ತಕನು ಪ್ರಸ್ತಾಪಿತ ಸಹಕಾರಿಯ ಪ್ರವರ್ತಕರ ಸಭೆಯನ್ನು ಕರೆದು ಅದರಲ್ಲಿ ಷೇರು ಬಂಡವಾಳವನ್ನು ಸಂಗ್ರಹಿಸಿರುವ ಪ್ರಸ್ತಾಪಿತ ಸದಸ್ಯರುಗಳ ಹೆಸರುಗಳನ್ನು ಮತ್ತು ಜಮಾ ಖರ್ಚುಗಳ ವಿವರಗಳನ್ನು ಮಂಡಿಸತಕ್ಕದ್ದು. ಸದರಿ ಪ್ರವರ್ತಕರ ಸಭೆಯಲ್ಲಿ ನಿರ್ಣಯವಾದ ನಂತರ ಪ್ರಸ್ತಾಪಿತ ಸದಸ್ಯರ ಹೆಸರು ವಿಳಾಸಗಳುಳ್ಳ ಪಟ್ಟಿ ಮತ್ತು ಉಪವಿಧಿಗಳ-5 ಪ್ರತಿಗಳ ಸಹಿತ ಪ್ರಸ್ತಾಪಿತ ಸಹಕಾರಿಯ ನೋಂದಣಿಗಾಗಿ ನಿಗದಿತ ಅರ್ಜಿಯಲ್ಲಿ ಪ್ರಸ್ತಾವವನ್ನು ವ್ಯಾಪ್ತಿಯುಳ್ಳ ರಿಜಿಸ್ಟ್ರಾರನಿಗೆ ಸಲ್ಲಿಸತಕ್ಕದ್ದು. ಬಿಡಿ ವ್ಯಕ್ತಿಯಾಗಿರುವ ಪ್ರತಿಯೊಬ್ಬ ಅರ್ಜಿದಾರನು ಮತ್ತು ಯಾವುದೇ ಸಹಕಾರಿಯು ಅರ್ಜಿದಾರನಾಗಿದ್ದಲ್ಲಿ ಅದರ ಪರವಾಗಿ ಪ್ರಾಧಿಕೃತನಾದ ವ್ಯಕ್ತಿಯು ಸದರಿ ಅರ್ಜಿಗೆ ಸಹಿ ಮಾಡಿರತಕ್ಕದ್ದು ಮತ್ತು ಸದರಿ ಅರ್ಜಿಯು ನಿಗದಿತ ನೋಂದಣಿ ಶುಲ್ಕವನ್ನು ಪಾವತಿಸಿದ ಚಲನ್ ಅನ್ನು ಒಳಗೊಂಡಿರತಕ್ಕದ್ದು.
ii
) ಹಾಗೇ ಪುನರ್ ಸಾಂಖ್ಯೀಕರಿಸಿದ ಉಪನಿಯಮ (3) ರ ನಂತರ, ಈ ಮುಂದಿನದನ್ನು ಸೇರಿಸತಕ್ಕದ್ದು; ಎಂದರೆ:-
"(4) ಉಪವಿಧಿಗಳು:
(ಎ) ಸಂಯುಕ್ತ ಸಹಕಾರಿಯನ್ನು ಒಳಗೊಂಡಂತೆ ಪ್ರತಿ ಸಹಕಾರಿಯು ಈ ಅಧಿನಿಯಮ ಮತ್ತು ಅದರಡಿ ರಚಿಸಲಾದ ನಿಯಮಗಳ ಉಪಬಂಧಗಳಿಗೆ ಅನುಗುಣವಾಗಿ ತನ್ನ ಉಪವಿಧಿಗಳನ್ನು ರೂಪಿಸತಕ್ಕದ್ದು.
(ಬಿ) ಸಂಯುಕ್ತ ಸಹಕಾರಿಯನ್ನು ಒಳಗೊಂಡಂತೆ ಯಾವುದೇ ಸಹಕಾರಿಯು, ಕಾಲಕಾಲಕ್ಕೆ ಅಧಿನಿಯಮ ಮತ್ತು ಈ ನಿಯಮಗಳ ಉಪಬಂಧಗಳಿಗೆ ಅನುಸಾರವಾಗಿ ತನ್ನ ಉಪವಿಧಿಗಳನ್ನು ತಿದ್ದುಪಡಿ ಮಾಡತಕ್ಕದ್ದು.
ಪರಂತು ಸಂಯುಕ್ತ ಸಹಕಾರಿಯನ್ನೊಳಗೊಂಡಂತೆ ಪ್ರತಿ ಸಹಕಾರಿಯು ಅಧಿನಿಯಮ ಮತ್ತು ನಿಯಮಗಳಿಗೆ ಕಾಲಕಾಲಕ್ಕೆ ಮಾಡಲ್ಪಟ್ಟ ತಿದ್ದುಪಡಿಗಳಿಗೆ ಅನುಗುಣವಾಗಿ ತಿದ್ದುಪಡಿಗಳು ಜಾರಿಗೆ ಬರುವ ದಿನಾಂಕದಿಂದ ಮುಂಬರುವ ಮೊದಲನೇ ಸರ್ವ ಸದಸ್ಯರ ಸಭೆಯಲ್ಲಿ ತನ್ನ ಉಪವಿಧಿಗಳಿಗೆ ಅಗತ್ಯವಾದ ತಿದ್ದುಪಡಿಗಳನ್ನು ಮಾಡಿಕೊಳ್ಳಬೇಕಾಗಿರುತ್ತದೆ.
(ಸಿ) ಸಹಕಾರಿ ಪಡೆಯಬಹುದಾದ ಸಾಲ ಮತ್ತು ಠೇವಣಿಗಳ ಪ್ರಮಾಣವು ಸಹಕಾರಿಯ ಸಂದಾಯಿತ ಷೇರು ಬಂಡವಾಳ, ಮೀಸಲು ನಿಧಿ ಮತ್ತು ಕಟ್ಟಡ ನಿಧಿಗಳನ್ನು ಕೂಡಿಸಿದಾಗ ಬರುವ ಮೊತ್ತದ 50ಪಟ್ಟು ಮೊಬಲಗಿನಲ್ಲಿ ಸಂಚಿತ ನಷ್ಟವನ್ನು ಕಳೆದಾಗ ಪ್ರಾಪ್ತವಾಗುವ ಮೊತ್ತವನ್ನು ಮೀರತಕ್ಕದ್ದಲ್ಲ. ಪ್ರತಿ ಸದಸ್ಯನಿಗೆ ಸಹಕಾರಿಯು ಕೊಡಬಹುದಾದ ಸಾಲದ ಪ್ರಮಾಣವು ಸಾಲದ ಉದ್ದೇಶ ಮತ್ತು ಸಹಕಾರಿಯಲ್ಲಿನ ನಿಧಿಗಳ ಲಭ್ಯತೆಯ ಆಧಾರದ ಮೇಲೆ ಉಪವಿಧಿಗಳಲ್ಲಿ ನಿಗದಿಪಡಿಸತಕ್ಕದ್ದು
(ಡಿ) ಸಹಕಾರಿ ಮತ್ತು ಸಂಯುಕ್ತ ಸಹಕಾರಿಗಳಲ್ಲಿ ಸಿಬ್ಬಂದಿಗಳ ನೇಮಕಾತಿ ಮತ್ತು ಸೇವೆಗೆ ಸಂಬಂಧಿಸಿದ ನಿಯಮಗಳಿಗೆ ಉಪವಿಧಿಗಳಲ್ಲಿ ಸೂಕ್ತವಾಗಿ ಅವಕಾಶ ಮಾಡಿಕೊಳ್ಳುವುದು.
4. ನಿಯಮ 5ರ ತಿದ್ದುಪಡಿ:- ಸದರಿ ನಿಯಮಗಳ ನಿಯಮ 5ಕ್ಕೆ, ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು; ಎಂದರೆ :-
"5. ಸಹಕಾರಿಯ ಚುನಾವಣೆ ಆಯೋಗ (ಸಿಇಸಿ): (1) ಸಹಕಾರ ಚುನಾವಣಾ ಆಯೋಗವು (ಸಿಇಸಿ) ರಾಜ್ಯದಲ್ಲಿನ ಸಂಯುಕ್ತ ಸಹಕಾರಿಯೂ ಸೇರಿದಂತೆ ಎಲ್ಲಾ ಸಹಕಾರಿಗಳ ಎಲ್ಲಾ ಚುನಾವಣೆಗಳನ್ನು ನಡೆಸಲು ಮತ್ತು ತತ್ಸಂಬಂಧದ ಮತದಾರರ ಪಟ್ಟಿಗಳನ್ನು ತಯಾರಿಸಲು ಅಗತ್ಯವಾದ ಸಾಮಾನ್ಯ ಅಥವಾ ವಿಶಿಷ್ಟ ಮಾರ್ಗಸೂಚಿಗಳನ್ನು ರೂಪಿಸತಕ್ಕದ್ದು.
(2) ಆಯೋಗವು ಕಾಲಕಾಲಕ್ಕೆ ಅಗತ್ಯಪಡಿಸುವ ಮಾಹಿತಿ ಮತ್ತು ಕಾಗದ ಪತ್ರಗಳನ್ನು ಪ್ರತಿ ಸಹಕಾರಿಯ ಆಡಳಿತ ಮಂಡಳಿಯು ಆಯೋಗಕ್ಕೆ ಒದಗಿಸತಕ್ಕದ್ದು.
5ಎ. ಆಡಳಿತ ಮಂಡಳಿಗಳಿಗೆ ಸಾಮಾನ್ಯ ಚುನಾವಣೆ ನಡೆಸುವುದು: (1) ಸಹಕಾರ ಚುನಾವಣಾ ಆಯೋಗದ ಮೇಲುಸ್ತುವಾರಿ, ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳಪಟ್ಟು ಆಯಾ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿಯು ಆಯಾ ಜಿಲ್ಲೆಯೊಳಗೆ ನೋಂದಾಯಿತ ಕಚೇರಿಗಳನ್ನು ಮತ್ತು ವ್ಯವಹಾರದ ಪ್ರಧಾನ ಸ್ಥಳಗಳನ್ನುಳ್ಳ ಎಲ್ಲಾ ಸಹಕಾರಿಗಳ ಸಾಮಾನ್ಯ ಚುನಾವಣೆಗಳನ್ನು ಒಳಗೊಂಡಂತೆ ಎಲ್ಲಾ ಚುನಾವಣೆಗಳನ್ನು ನಡೆಸುವುದಕ್ಕೆ ಮತ್ತು ತತ್ಸಂಬಂಧ ಮತದಾರರ ಪಟ್ಟಿಗಳನ್ನು ತಯಾರಿಸುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ಕೆಲಸಗಳನ್ನು ಸಮನ್ವಯಗೊಳಿಸತಕ್ಕದ್ದು ಮತ್ತು ಮೇಲ್ವಿಚಾರಣೆ ನಡೆಸತಕ್ಕದ್ದು.
ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೪೭೬ಅಂತಹ ಜಿಲ್ಲಾ ಚುನಾವಣಾಧಿಕಾರಿಯು, ಸದರಿ ಸಾಮಾನ್ಯ ಚುನಾವಣೆಗಳನ್ನು ನಡೆಸುವುದಕ್ಕೆ ಮತ್ತು ಮತದಾರರ ಪಟ್ಟಿಗಳ ತಯಾರಿಸುವುದಕ್ಕೆ ಸಂಬಂಧಿಸಿದಂತೆ, ಸಹಕಾರ ಚುನಾವಣಾ ಆಯೋಗ ತನಗೆ ವಹಿಸಿಕೊಡಬಹುದಾದಂಥ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು.
(2) ಸಹಕಾರ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ ದಿನಾಂಕದಿಂದ ಚುನಾವಣಾ ಪ್ರಕ್ರಿಯೆಯು ಪೂರ್ಣಗೊಂಡು ತತ್ಸಂಬಂಧದ ಫಲಿತಾಂಶ ಘೋಷಣೆಯಾಗುವವರೆಗೆ ಜಿಲ್ಲಾ ಚುನಾವಣಾಧಿಕಾರಿಯು ಒಳಗೊಂಡಂತೆ ಜಿಲ್ಲೆಯಲ್ಲಿ ಚುನಾವಣಾ ಕೆಲಸಕ್ಕೆ ನಿಯೋಜಿಸಲ್ಪಟ್ಟ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಸಹಕಾರ ಚುನಾವಣೆ ಆಯೋಗಕ್ಕೆ ನಿಯೋಜಿಸಲ್ಪಟ್ಟಿದ್ದಾರೆಂದು ಭಾವಿಸತಕ್ಕದ್ದು.
5ಬಿ. ಮತದಾರರ ಪಟ್ಟಿ ತಯಾರಿಕೆ ಮತ್ತು ಚುನಾವಣಾ ಪ್ರಕ್ರಿಯೆ:-
(1) ಪ್ರತಿ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕನು ಇಂದೀಕರಿಸಲ್ಪಟ್ಟ ಸದಸ್ಯತ್ವ ರಿಜಿಸ್ಟರಿನಲ್ಲಿ ದಾಖಲಿಸಲಾದ ನಮೂದುಗಳ ಆಧಾರದ ಮೇಲೆ ಚುನಾವಣೆಯಲ್ಲಿ ಮತನೀಡುವ ಹಕ್ಕುಳ್ಳ ಸದಸ್ಯರ ಹಾಗೂ ಸದಸ್ಯ ಸಹಕಾರಿಗಳ ಮತ ನೀಡುವ ಹಕ್ಕುಳ್ಳ ಡೆಲಿಗೇಟುಗಳ ಕರಡು ಅರ್ಹತಾಪಟ್ಟಿಯನ್ನು, ಸಹಕಾರಿಯ ಸುಸ್ತಿದಾರರ ಕರಡು ಪಟ್ಟಿ ಹಾಗೂ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಹೊಂದಿರದ ಇತರ ಸದಸ್ಯರ / ಪ್ರತಿನಿಧಿ / ಡೆಲಿಗೇಟುಗಳ ಕರಡು ಪಟ್ಟಿಗಳನ್ನು ತಯಾರಿಸತಕ್ಕದ್ದು ಮತ್ತು ಆ ಪಟ್ಟಿಯಲ್ಲಿ,-
(ಎ) ಬಿಡಿ ವ್ಯಕ್ತಿಯ ಸದಸ್ಯನ ಸಂಬಂಧದಲ್ಲಿ, ಸದಸ್ಯನ ಅಥವಾ ಪ್ರತಿನಿಧಿಯ ಹೆಸರು, ಪ್ರವೇಶತ್ವದ ಸಂಖ್ಯೆ, ಹೆತ್ತವರ ಅಥವಾ ಪತಿಯ ಹೆಸರು ಹಾಗೂ ಅಂಥ ಸದಸ್ಯನ ಅಥವಾ ಪ್ರತಿನಿಧಿಯ ವಿಳಾಸ;
(ಬಿ) ಸದಸ್ಯ ಸಹಕಾರಿಯ ಸಂಬಂಧದಲ್ಲಿ, ಪ್ರವೇಶತ್ವ ಸಂಖ್ಯೆ, ಸಹಕಾರಿಯ ಹೆಸರು, ಸಹಕಾರಿಯನ್ನು ಪ್ರತಿನಿಧಿಸಲು ಉದ್ದೇಶಿಸಿರುವ ಡೆಲಿಗೇಟಿನ / ಪ್ರತಿನಿಧಿ ಹೆಸರು ಇರತಕ್ಕದ್ದು.
(ಸಿ) ಮತ್ತು ಅಂಥ ಪಟ್ಟಿಗಳನ್ನು ಅಂಥ ಇಂದೀಕರೀಸಿದ ದಾಖಲೆಗಳ ಮತ್ತು ರಿಜಿಸ್ಟರುಗಳ ಸಹಿತ ಜಿಲ್ಲಾ ಚುನಾವಣಾಧಿಕಾರಿಯ ವಶಕ್ಕೆ ಒಪ್ಪಿಸತಕ್ಕದ್ದು.
(2) ಸಹಕಾರಿಯ ಮುಖ್ಯಕಾರ್ಯನಿರ್ವಾಹಕನು ಸದಸ್ಯ ಸಹಕಾರಿಯ ಅಧಿಕೃತ ಸದಸ್ಯನ ಹೆಸರನ್ನು ಡೆಲಿಗೇಟ್ ಆಗಿ ಸಹಕಾರಿಯ ಮೊಹರನ್ನು ಒಳಗೊಂಡ ಮತ್ತು ಕ್ರಮಬದ್ಧವಾಗಿ ದೃಡೀಕರಿಸಿದ ಅಂಥ ಸಹಕಾರಿಯ ಆಡಳಿತ ಮಂಡಳಿಯ ನಿರ್ಣಯ ಮತ್ತು ಅಧಿಕೃತ ಸದಸ್ಯನ (ಡೆಲಿಗೇಟ್ನ) / ಪ್ರತಿನಿಧಿ ಸದಸ್ಯರ ಮಾದರಿ ಸಹಿ ಮತ್ತು ಹೆಸರನ್ನು ದೃಡೀಕರಿಸಿದ ನಿರ್ಣಯ ಸಹಿತ ಪತ್ರವನ್ನು ನಿಗದಿತ ದಿನಾಂಕದೊಳಗೆ ಹಿಂದಿನ ಉಪನಿಯಮದಂತೆ ಜಿಲ್ಲಾ ಚುನಾವಣಾಧಿಕಾರಿಗೆ ಒಪ್ಪಿಸತಕ್ಕದ್ದು.
(3) ಸಹಕಾರ ಚುನಾವಣಾ ಆಯೋಗಕ್ಕೆ ಜಿಲ್ಲಾ ಚುನಾವಣಾಧಿಕಾರಿ ಕೂಲಂಕುಷ ಪರಿಶೀಲನೆಯ ನಂತರ, ಆಡಳಿತ ಮಂಡಳಿಗಳಿಗೆ ಪದಾವಧಿ ಮುಕ್ತಾಯವಾಗುವ ದಿನಾಂಕದ ಕನಿಷ್ಠ 120 ದಿನಗಳ ಪೂರ್ವದಲ್ಲಿ ಈ ಕೆಳಕಂಡ ವಿವರಗಳನ್ನೊಳಗೊಂಡ, ಸಾಮಾನ್ಯ ಚುನಾವಣೆಗಳು ಸನ್ನಿಹಿತವಾಗಿರುವ ಎಲ್ಲಾ ಸಹಕಾರಿಗಳ ಕ್ರೋಡೀಕೃತ ಪಟ್ಟಿಯೊಂದನ್ನು ಕಳುಹಿಸತಕ್ಕದ್ದು:
(ಎ) ಸಹಕಾರಿಯ ಹೆಸರು ಮತ್ತು ವಿಳಾಸ;
(ಬಿ) ಆಡಳಿತ ಮಂಡಳಿಗೆ ಆಯ್ಕೆಯಾಗಬೇಕಾಗಿರುವ ನಿರ್ದೇಶಕರ ಸಂಖ್ಯೆ;
(ಸಿ) ಆಡಳಿತ ಮಂಡಳಿಯ ಪದಾವಧಿಯು ಮುಕ್ತಾಯವಾಗುವ ದಿನಾಂಕ;
(ಡಿ) ಚುನಾವಣೆಗಳನ್ನು ನಡೆಸಬಹುದಾದ ಸ್ಥಳ ಹಾಗೂ ಚುನಾವಣಾ ಆಯೋಗಕ್ಕೆ ಅವಶ್ಯವಿರುವ ಇತರೆ ಮಾಹಿತಿಗಳು.
(4) ಸಹಕಾರ ಚುನಾವಣಾ ಆಯೋಗವು ಜಿಲ್ಲಾ ಚುನಾವಣಾಧಿಕಾರಿಯಿಂದ ಸಾಮಾನ್ಯ ಚುನಾವಣೆಗಳು ಸನ್ನಿಹಿತವಾಗಿರುವ ಸಹಕಾರಿಗಳ ಪಟ್ಟಿಯನ್ನೊಳಗೊಂಡ ಅಂಥ ವರದಿಗಳು ಸ್ವೀಕೃತವಾದ ನಂತರ, ಜಿಲ್ಲೆಯೊಳಗಿನ ಪ್ರತಿ ಸಹಕಾರಿಯ ಹೆಸರು ಮತ್ತು ವಿಳಾಸ ಹಾಗೂ ಸಾಮಾನ್ಯ ಚುನಾವಣೆಯ ದಿನಾಂಕ ಮತ್ತು ಸ್ಥಳಗಳನ್ನು ತಿಳಿಸುವ, ಆಡಳಿತ ಮಂಡಳಿಗಳ ಸಾಮಾನ್ಯ ಚುನಾವಣೆಗಳನ್ನು ನಡೆಸುವ ಮತ್ತು ಮತದಾರರ ಪಟ್ಟಿಗಳನ್ನು ತಯಾರಿಸುವ ಸಂಬಂಧದಲ್ಲಿ ವೇಳಾಪಟ್ಟಿಗಳನ್ನು ಚುನಾವಣೆ ದಿನಾಂಕಕ್ಕೆ ಹದಿನೈದು ದಿನಗಳ ಪೂರ್ವದಲ್ಲಿ ಪ್ರಕಟಿಸತಕ್ಕದ್ದು.
(5) (ಎ) ಸಹಕಾರ ಚುನಾವಣಾ ಆಯೋಗವು ಜಿಲ್ಲಾ ಚುನಾವಣಾಧಿಕಾರಿಗಳ ಸಹಯೋಗದೊಂದಿಗೆ ಮತ ನೀಡುವ ಹಕ್ಕುಳ್ಳ / ಸುಸ್ತಿದಾರರ ಹಾಗೂ ಸುಸ್ತಿಯಾಗುವವರ ಕರಡು ಪಟ್ಟಿಯನ್ನು ಚುನಾವಣಾ ದಿನಾಂಕಕ್ಕೆ ಕನಿಷ್ಠ ನಲವತ್ತೈದು ದಿನಗಳ ಮುಂಚಿತವಾಗಿ ಪ್ರಕಟಿಸಿ, ಆಕ್ಷೇಪಣೆ ಕರೆಯುವುದು, ಪ್ರತಿ ಸಹಕಾರಿಯು ನೈಜ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗೆ ಒದಗಿಸತಕ್ಕದ್ದು.
(ಬಿ) ಅಂತಿಮ ಅರ್ಹ ಮತದಾರರ ಪಟ್ಟಿಯನ್ನು ಚುನಾವಣಾ ದಿನಾಂಕಕ್ಕೆ ಹದಿನೈದು ದಿನಗಳ ಪೂರ್ವದಲ್ಲಿ ಪ್ರಕಟಿಸತಕ್ಕದ್ದು.
ಪರಂತು, ಪ್ರತಿ ಸಹಕಾರಿಯ ಮತನೀಡುವ ಹಕ್ಕುಳ್ಳ ಸದಸ್ಯರ / ಪ್ರತಿನಿಧಿ / ಡೆಲಿಗೇಟುಗಳ ಕರಡು ಅರ್ಹತಾಪಟ್ಟಿ, ಸಹಕಾರಿಯ ಸುಸ್ತಿದಾರರ ಕರಡು ಪಟ್ಟಿ ಹಾಗೂ ಮತದಾನದ ಹಕ್ಕನ್ನು ಹೊಂದಿರದ ಇತರ ಸದಸ್ಯರ / ಪ್ರತಿನಿಧಿ / ಡೆಲಿಗೇಟುಗಳ ಕರಡು ಪಟ್ಟಿಗಳನ್ನು ಹಾಗೂ ಮತದಾರರ ಅಂತಿಮ ಪಟ್ಟಿ ಮತ್ತು ಚುನಾವಣಾ ವೇಳಾಪಟ್ಟಿಗಳನ್ನು ಸಂಬಂಧಪಟ್ಟ ಸಹಕಾರಿಯ ಸೂಚನಾಫಲಕದಲ್ಲಿ ಹಾಗೂ ಸಹಕಾರ ಇಲಾಖೆಯ ಸ್ಥಳೀಯ ಅಧಿಕಾರಿಯ ಸೂಚನಾಫಲಕದಲ್ಲಿ ಪ್ರಕಟಿಸತಕ್ಕದ್ದು.
(6) ಅಂತಿಮ ಮತದಾರರ ಪಟ್ಟಿಯು ಕೆಳಗಿನವುಗಳನ್ನು ಒಳಗೊಂಡಿರತಕ್ಕದ್ದು:
(ಎ) ಪ್ರಾಥಮಿಕ ಸಹಕಾರಿಯ ಸಂಬಂಧದಲ್ಲಿ, ಮತದಾನದ ಹಕ್ಕುಳ್ಳ ಎಲ್ಲಾ ಬಿಡಿ ಸದಸ್ಯರು; ಅಥವಾ
(ಬಿ) ಮಾಧ್ಯಮಿಕ ಸಹಕಾರಿಯ ಸಂಬಂಧದಲ್ಲಿ, ಮತದಾನದ ಹಕ್ಕುಳ್ಳ ಎಲ್ಲಾ ಬಿಡಿ ಸದಸ್ಯರು ಮತ್ತು ಸದಸ್ಯ ಸಹಕಾರಿಗಳ ಪ್ರತಿನಿಧಿಗಳು;
ಅಥವಾವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೪೭೭ (ಸಿ) ಒಂದು ಒಕ್ಕೂಟ ಮತ್ತು ಅಪೆಕ್ಸ್ಸ್ ಸಹಕಾರಿಯ ಸಂಬಂಧದಲ್ಲಿ, ಮತದಾನದ ಹಕ್ಕುಳ್ಳ ಸದಸ್ಯ ಸಹಕಾರಿಗಳ ಎಲ್ಲ್ಲಾ ಪ್ರತಿನಿಧಿ ಸದಸ್ಯರು.
(7) ಪ್ರತಿ ಸಹಕಾರಿಯು ಅಂಥ ಮತದಾರರ ಪಟ್ಟಿಯ ಪ್ರತಿಯನ್ನು ಅಂಥ ಸಹಕಾರಿಯ ಕಚೇರಿಯಲ್ಲಿ ಮತ್ತು ಜಿಲ್ಲಾ ಚುನಾವಣಾಧಿಕಾರಿಯ ಕಚೇರಿಯಲ್ಲಿ ವೀಕ್ಷಣೆಗೆ ಮುಕ್ತವಾಗಿಟ್ಟಿರತಕ್ಕದ್ದು.
(8) ಆಡಳಿತ ಮಂಡಳಿಯ ನಿರ್ದೇಶಕರನ್ನು ಚುನಾಯಿಸಲು ಚುನಾವಣಾ ವೇಳಾಪಟ್ಟಿ ಕೆಳಕಂಡಂತಿರತಕ್ಕದ್ದು.
(ಎ) ನಾಮಪತ್ರ ಸ್ವೀಕರಿಸಲು ಚುನಾವಣೆ ಅಧಿಸೂಚನೆ ದಿನಾಂಕ
(ಬಿ) ನಾಮಪತ್ರ ಸ್ವೀಕರಿಸಲು ಕೊನೆಯ ದಿನಾಂಕ
(ಸಿ) ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ಸಮಯ
(ಡಿ) ಕ್ರಮಬದ್ಧ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ದಿನಾಂಕ ಮತ್ತು ಸಮಯ
(ಇ) ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ಸಮಯ
(ಎಫ್) ಕ್ರಮಬದ್ಧ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ದಿನಾಂಕ ಮತ್ತು ಸಮಯ
(ಜಿ) ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಹಾಗೂ ಸ್ಪರ್ಧಿಸುವ ಅಭ್ಯರ್ಥಿಗಳ ಚಿಹ್ನೆಗಳ ಸಹಿತ ಪಟ್ಟಿಯ ಪ್ರಕಟಣೆ ದಿನಾಂಕ ಮತ್ತು ಸಮಯ
(ಹೆಚ್) ಮತದಾನದ ಸ್ಥಳ ದಿನಾಂಕ ಮತ್ತು ಸಮಯ
(ಐ) ಮತ ಏಣಿಕೆಯ ಸ್ಥಳ ದಿನಾಂಕ ಮತ್ತು ಸಮಯ
5ಸಿ. ರಿಟರ್ನಿಂಗ್ ಅಧಿಕಾರಿ ಮತ್ತು ಅವರ ಪ್ರಕಾರ್ಯಗಳು : (1) ಸಹಕಾರಿಗಳ ಪ್ರತಿನಿಧಿ ಚುನಾವಣೆ ಅಥವಾ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ಅಥವಾ ಪದಾಧಿಕಾರಿಗಳ ಚುನಾವಣೆ ಅಥವಾ ಪ್ರತಿನಿಧಿ / ನಿರ್ದೇಶಕರ / ಪದಾಧಿಕಾರಿಗಳ ಆಕಸ್ಮಿಕ ರಿಕ್ತ ಸ್ಥಾನಗಳಿಗೆ ಚುನಾವಣೆ ನಡೆಸಲು ಸಹಕಾರ ಚುನಾವಣಾ ಆಯೋಗವು ರಿಟರ್ನಿಂಗ್ ಅಧಿಕಾರಿ ಮತ್ತು ಅವಶ್ಯವಿದ್ದಷ್ಟು ಸಹಾಯಕ ರಿಟರ್ನಿಂಗ್ ಅಧಿಕಾರಿಗಳನ್ನು ನೇಮಿಸತಕ್ಕದ್ದು.
(2) ರಿಟರ್ನಿಂಗ್ ಅಧಿಕಾರಿಯು ಈ ಕೆಳಗಿನ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು:-
(i) ಸಹಕಾರ ಚುನಾವಣಾ ಆಯೋಗದ ಅನುಮೋದನೆಗೆ ಒಳಪಟ್ಟು, ರಿಟರ್ನಿಂಗ್ ಅಧಿಕಾರಿಯ ಸಾಮಾನ್ಯ ಚುನಾವಣೆಯನ್ನು ನಡೆಸಲು ಪೂರ್ಣ ಕಾಲಾವಧಿಯ ಶೆಡ್ಯೂಲನ್ನು ತಯಾರಿಸಿ ಪ್ರಕಟಿಸತಕ್ಕದ್ದು.
(ii) ಸಹಕಾರ ಚುನಾವಣಾ ಆಯೋಗವು ನಿರ್ದೇಶಿಸುವಂತಹ ರೀತಿಯಲ್ಲಿ ರಿಟರ್ನಿಂಗ್ ಅಧಿಕಾರಿಯು ಜಿಲ್ಲಾ ಚುನಾವಣಾಧಿಕಾರಿಯೊಡನೆ ಸಮಾಲೋಚಿಸಿ ಸಾಕಷ್ಟು ಸಂಖ್ಯೆಯ ಮತದಾನ ಕೇಂದ್ರಗಳನ್ನು ಒದಗಿಸಲು ವ್ಯವಸ್ಥೆ ಮಾಡತಕ್ಕದ್ದು.
(iii) ಸಾಮಾನ್ಯ ಚುನಾವಣೆಗಳನ್ನು ನಿಯಮಗಳಲ್ಲಿ ತಿಳಿಸಿರುವ ರೀತಿಯಲ್ಲಿ ಪರಿಣಾಮಕಾರಿಯಾಗಿ ನಡೆಸಲು ಅಗತ್ಯವಾದ ಕೆಳಗಿನ ಕೃತ್ಯಗಳನ್ನು ಮಾಡುವುದು ರಿಟರ್ನಿಂಗ್ ಅಧಿಕಾರಿಯ ಸಾಮಾನ್ಯ ಕರ್ತವ್ಯವಾಗಿರತಕ್ಕದ್ದು, ಎಂದರೆ:-
(ಎ) ನಾಮಪತ್ರಗಳನ್ನು ಆಹ್ವಾನಿಸಿ ನೋಟೀಸು ನೀಡುವುದು;
(ಬಿ) ನಾಮಪತ್ರಗಳನ್ನು ಸ್ವೀಕರಿಸುವುದು ಮತ್ತು ಪರಿಶೀಲಿಸುವುದು;
(ಸಿ) ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಹಂಚಿಕೆ ಮಾಡುವುದು;
(ಡಿ) ಸ್ಪರ್ಧಿಸುವ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವುದು;
(ಇ) ಮತದಾನ ಕೇಂದ್ರಗಳ ವ್ಯವಸ್ಥೆ ಮಾಡುವುದು;
(ಎಫ್) ಮತದಾನ ಕೇಂದ್ರಗಳಿಗೆ ಸಿಬ್ಬಂದಿಯನ್ನು ಕಳುಹಿಸಲು ವ್ಯವಸ್ಥೆ ಮಾಡುವುದು;
(ಜಿ) ಮತಪೆಟ್ಟಿಗೆಗಳನ್ನು ಒದಗಿಸಲು ವ್ಯವಸ್ಥೆ ಮಾಡುವುದು;
(ಹೆಚ್) ಮತಪತ್ರಗಳನ್ನು ಮುದ್ರಿಸಲು ವ್ಯವಸ್ಥೆ ಮಾಡುವುದು;
(ಐ) ಅಗತ್ಯಬಿದ್ದರೆ ವಿವಿಧ ಮತದಾನ ಕೇಂದ್ರಗಳ ಫಲಿತಗಳನ್ನು ಸಂಕಲಿಸುವುದು;
(ಜೆ) ಚುನಾವಣೆಯ ಫಲಿತಾಂಶವನ್ನು ಘೋಷಿಸುವುದು ಮತ್ತು ಚುನಾವಣಾ ಪ್ರಮಾಣ ಪತ್ರವನ್ನು ನೀಡುವುದು.
(3) ಉಪನಿಯಮ (1)ರಡಿ ನೇಮಕವಾದ ರಿಟರ್ನಿಂಗ್ ಅಧಿಕಾರಿಯು ನಿರ್ದೇಶಕರ ಚುನಾವಣೆಯ ಉದ್ದೇಶಕ್ಕಾಗಿ ಚುನಾವಣಾ ವೇಳಾಪಟ್ಟಿಯನ್ನು ಸಾಮಾನ್ಯ ಚುನಾವಣಾ ದಿನಾಂಕದ ಕನಿಷ್ಠ ಹದಿನೈದು ದಿನಗಳ ಪೂರ್ವದಲ್ಲಿ ಪ್ರಕಟಿಸತಕ್ಕದ್ದು. ರಿಟರ್ನಿಂಗ್ ಅಧಿಕಾರಿಯ ಅಥವಾ ಸಹಾಯಕ ರಿಟರ್ನಿಂಗ್ ಅಧಿಕಾರಿಯ ಸಹಿಯಲ್ಲಿ ಸಾಮಾನ್ಯ ಚುನಾವಣೆಯ ನೋಟಿಸನ್ನು ಚುನಾವಣಾ ವೇಳಾಪಟ್ಟಿ ಸಹಿತ ಎಲ್ಲಾ ಅರ್ಹ ಸದಸ್ಯರಿಗೆ ಕೆಳಗಿನ ರೀತಿಯಲ್ಲಿ ಕಳುಹಿಸತಕ್ಕದ್ದು:
(1) (ಎ) ಸಾಮಾನ್ಯ ಅಂಚೆ; ಅಥವಾ
(ಬಿ) ವಿದ್ಯುನ್ಮಾನ ಅಂಚೆ (ಇ-ಮೇಲ್ ); ಅಥವಾ
(ಸಿ) ಸೂಕ್ತ ಸ್ವೀಕೃತಿಯೊಂದಿಗೆ ಸ್ಥಳೀಯವಾಗಿ ತಲುಪಿಸುವ ಮೂಲಕ;
ಮತ್ತುಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೪೭೮ (2) ಕಾರ್ಯಕ್ಷೇತ್ರದಲ್ಲಿ ಹೆಚ್ಚು ಪರಿಚಲನೆಯಲ್ಲಿರುವ ವೃತ್ತ ಪತ್ರಿಕೆಯಲ್ಲಿ ಸಂಕ್ಷಿಪ್ತವಾಗಿ ಪ್ರಕಟಿಸುವ ಮೂಲಕ.
(4) ಚುನಾವಣಾ ವೇಳಾಪಟ್ಟಿಯ ಸಹಿತ ಸಾಮಾನ್ಯ ಚುನಾವಣಾ ನೋಟಿಸನ್ನು ಸಹಕಾರಿಯ ಮತ್ತು ಅದರ ಶಾಖೆಗಳ ಸೂಚನಾಫಲಕಗಳಲ್ಲಿ, ರಿಟರ್ನಿಂಗ್ ಅಧಿಕಾರಿಯ ಕಚೇರಿಯ ಸೂಚನಾಫಲಕದಲ್ಲಿ ಮತ್ತು ಜಿಲ್ಲಾ ಚುನಾವಣಾಧಿಕಾರಿಯ ಸೂಚನಾಫಲಕದಲ್ಲಿ ಪ್ರಕಟಿಸತಕ್ಕದ್ದು. ಸಾಮಾನ್ಯ ಚುನಾವಣಾ ನೋಟೀಸು ಕೆಳಗಿನ ಹೆಚ್ಚುವರಿ ಮಾಹಿತಿಯನ್ನು ಒಳಗೊಂಡಿರತಕ್ಕದ್ದು:-
(ಎ) ಸಾಮಾನ್ಯ ಚುನಾವಣೆಯಲ್ಲಿ ಭರ್ತಿಮಾಡಬೇಕಾದ ಸ್ಥಾನಗಳ ಸಂಖ್ಯೆ;
(ಬಿ) ನಿರ್ದೇಶಕರಗಳನ್ನು ಚುನಾಯಿಸಬೇಕಾದ ಪ್ರದೇಶ ಅಥವಾ ಮತಕ್ಷೇತ್ರ (ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿದಂತೆ);
(ಸಿ) ಅಧಿನಿಯಮದಲ್ಲಿ, ನಿಯಮಗಳಲ್ಲಿ ಮತ್ತು ಉಪವಿಧಿಗಳಲ್ಲಿ ಆಡಳಿತ ಮಂಡಳಿಯ ಸದಸ್ಯನಾಗಿ ಚುನಾಯಿತರಾಗಲು ನಿರ್ದಿಷ್ಟಪಡಿಸಲಾದ ಅರ್ಹತೆಗಳು;
(5) ಪ್ರತಿಸಹಕಾರಿಯ ಮುಖ್ಯಕಾರ್ಯನಿರ್ವಾಹಕನು ಚುನಾವಣೆ ಸಂಬಂಧದಲ್ಲಿ ರಿಟರ್ನಿಂಗ ಅಧಿಕಾರಿ ಅಪೇಕ್ಷಿಸುವ ಸೂಕ್ತವಾದ ಸಹಾಯ ಮತ್ತು ನೆರವನ್ನು ಒದಗಿಸತಕ್ಕದ್ದು.
(6) ರಿಟರ್ನಿಂಗ್ ಅಧಿಕಾರಿಯು ಚುನಾವಣೆಯ ಸಂಬಂಧದಲ್ಲಿ ಚುನಾವಣಾ ಸಿಬ್ಬಂದಿಗಳಿಂದ ಬರುವ ಕಾಗದಪತ್ರಗಳನ್ನು ಸ್ವೀಕರಿಸತಕ್ಕದ್ದು.
(7) ರಿಟರ್ನಿಂಗ್ ಅಧಿಕಾರಿಯು ತನ್ನ ಕರ್ತವ್ಯ ನಿರ್ವಹಣೆಗೆ ಅಗತ್ಯವಾದಲ್ಲಿ ಸಹಾಯಕ ರಿಟರ್ನಿಂಗ್ ಅಧಿಕಾರಿಗಳ ಮತ್ತು ಚುನಾವಣಾ ಸಿಬ್ಬಂದಿಯ (ತನ್ನ ಕಚೇರಿಯ ಸಿಬ್ಬಂದಿಯನ್ನು ಒಳಗೊಂಡಂತೆ) ನೆರವನ್ನು ಚುನಾವಣಾ ಆಯೋಗದ ಅನುಮತಿಗೊಳಪಟ್ಟು ಪಡೆಯಬಹುದು.
(8) ರಿಟರ್ನಿಂಗ್ ಅಧಿಕಾರಿಯು ತನ್ನ ವ್ಯಾಪ್ತಿಯಲ್ಲಿ ಬರುವ ಯಾವುದೇ ಸಹಕಾರಿಯ ಸಾಮಾನ್ಯ ಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಜಿಲ್ಲೆಯ ಆಡಳಿತದೊಡನೆ ಸಂಪರ್ಕವಿಟ್ಟಿರತಕ್ಕದ್ದು.
(9) ಚುನಾವಣಾ ಆಯೋಗವು ಕಾಲಕಾಲಕ್ಕೆ ನಿರ್ದೇಶಿಸಿದಂತೆ ರಿಟರ್ನಿಂಗ್ ಅಧಿಕಾರಿಯು ಸಹಕಾರ ಚುನಾವಣಾ ಆಯೋಗಕ್ಕೆ ವರದಿಗಳನ್ನು ಸಲ್ಲಿಸತಕ್ಕದ್ದು.
(10) ಚುನಾವಣೆಗೆ ಸಂಬಂಧಪಟ್ಟ ಎಲ್ಲ ಸಂಗತವಾದ ಚುನಾವಣಾ ದಾಖಲೆಗಳನ್ನು ಸೂಕ್ತ ಸ್ವೀಕೃತಿಯೊಂದಿಗೆ ಸಂಬಂಧಪಟ್ಟ ಸಹಕಾರಿಯ ಸುಪರ್ದಿನಲ್ಲಿ ಸಂರಕ್ಷಿಸತಕ್ಕದ್ದು, ಆದರೆ ಅಸಾಧಾರಣ ಸಂದರ್ಭಗಳಲ್ಲಿ, ಚುನಾವಣಾ ಆಯೋಗ ಅಥವಾ ರಿಟರ್ನಿಂಗ್ ಅಧಿಕಾರಿ ಅಥವಾ ಸಹಾಯಕ ರಿಟರ್ನಿಂಗ್ ಅಧಿಕಾರಿಯು ಅಂಥ ದಾಖಲೆಗಳನ್ನು ಉಪವಿಭಾಗೀಯ ಕಚೇರಿಯಲ್ಲಿ ಸುರಕ್ಷೆಯಲ್ಲಿಡುವುದು ಅಗತ್ಯವೆಂದು ಭಾವಿಸಿದಲ್ಲಿ, ಅಂಥ ದಾಖಲೆಗಳನ್ನು ಉಪವಿಭಾಗೀಯ ಕಚೇರಿಯಲ್ಲಿ ಸುರಕ್ಷೆಯಲ್ಲಿಡಬಹುದು.
(11) ಸಹಕಾರ ಚುನಾವಣಾ ಆಯೋಗವು ನಿರ್ದೇಶಿಸುವ ಅಂಥ ಅವಧಿಗೆ, ರಿಟರ್ನಿಂಗ್ ಅಧಿಕಾರಿಯು ತನ್ನ ವ್ಯಾಪ್ತಿಯಲ್ಲಿ ಬರುವ ಯಾವುದೇ ಸಹಕಾರಿಯ ಸಾಮಾನ್ಯ ಚುನಾವಣೆಗೆ ಸಂಬಂಧಪಟ್ಟಂತೆ ತಾನು ತಯಾರಿಸಿದ ಅಥವಾ ಸಹಾಯಕ ರಿಟರ್ನಿಂಗ್ ಅಧಿಕಾರಿಯಿಂದ ಸ್ವೀಕರಿಸಿದ ಎಲ್ಲ್ಲಾ ಕಾಗದ ಪತ್ರಗಳನ್ನು, ದಸ್ತಾವೇಜುಗಳನ್ನು ತನ್ನ ಸುಪರ್ದಿನಲ್ಲಿ ಇಟ್ಟಿರತಕ್ಕದ್ದು.
(12) ಕಾಲಕಾಲಕ್ಕೆ ಸಹಕಾರ ಚುನಾವಣಾ ಆಯೋಗವು ವಹಿಸುವ ಅಂಥ ಇತರ ಪ್ರಕಾರ್ಯಗಳನ್ನು ರಿಟರ್ನಿಂಗ್ ಅಧಿಕಾರಿಯು ನಿರ್ವಹಿಸತಕ್ಕದ್ದು.
5ಡಿ. ಪ್ರಿಸೈಡಿಂಗ್ ಅಧಿಕಾರಿಗಳು ಮತ್ತು ಚುನಾವಣಾ ಸಿಬ್ಬಂದಿ ನೇಮಕಾತಿ:- (1) ಜಿಲ್ಲಾ ಚುನಾವಣಾಧಿಕಾರಿಯು ಪ್ರತಿಯೊಂದು ಮತದಾನದ ಕೇಂದ್ರಕ್ಕಾಗಿ ಒಬ್ಬ ಪ್ರಿಸೈಡಿಂಗ್ ಅಧಿಕಾರಿಯನ್ನು ಮತ್ತು ತಾನು ಅವಶ್ಯವೆಂದು ಭಾವಿಸುವಂಥ ಪೋಲಿಂಗ್ ಅಧಿಕಾರಿ ಅಥವಾ ಅಧಿಕಾರಿಗಳನ್ನು ನೇಮಕಮಾಡಬಹುದು.
(2) ಪ್ರಿಸೈಡಿಂಗ್ ಅಧಿಕಾರಿಯು ಹಾಗೆ ನಿರ್ದೇಶಿಸಿದಲ್ಲಿ, ಪೋಲಿಂಗ್ ಅಧಿಕಾರಿಯು ಈ ನಿಯಮಗಳ ಅಡಿಯಲ್ಲಿ ಪ್ರಿಸೈಡಿಂಗ್ ಅಧಿಕಾರಿಯ ಎಲ್ಲ ಅಥವಾ ಯಾವುದೇ ಪ್ರಕಾರ್ಯವನ್ನು ನಿರ್ವಹಿಸತಕ್ಕದ್ದು.
(3) ಪ್ರಿಸೈಡಿಂಗ್ ಅಧಿಕಾರಿಯು ಅನಾರೋಗ್ಯದಿಂದಾಗಿ ಅಥವಾ ಇತರ ಅನಿವಾರ್ಯ ಕಾರಣದಿಂದಾಗಿ ಮತದಾನ ಕೇಂದ್ರದಿಂದ ಗೈರುಹಾಜರಾಗಲೇಬೇಕಾದರೆ, ಯಾವುದೇ ಅಂಥ ಗೈರುಹಾಜರಿಯ ಕಾಲದಲ್ಲಿ ಅಂಥ ಪ್ರಕಾರ್ಯಗಳನ್ನು ನೆರವೇರಿಸಲು ರಿಟರ್ನಿಂಗ್ ಅಧಿಕಾರಿಯು ಈ ಹಿಂದೆಯೇ ಅಧಿಕೃತಗೊಳಿಸಿದಂಥ ಅವನ ಪ್ರಕಾರ್ಯಗಳನ್ನು ಪೋಲಿಂಗ್ ಅಧಿಕಾರಿಯು ನೇರವೇರಿಸಕ್ಕದ್ದು.
(4) ಮತದಾನ ಕೇಂದ್ರದಲ್ಲಿ ಸುವ್ಯವಸ್ಥೆಯನ್ನು ಕಾಪಾಡುವುದು ಮತ್ತು ಮತದಾನವು ನ್ಯಾಯಯುತವಾಗಿ ನಡೆಯುವಂತೆ ನೋಡಿಕೊಳ್ಳುವುದು ಪ್ರಿಸೈಡಿಂಗ್ ಅಧಿಕಾರಿಯ ಸಾಮಾನ್ಯ ಕರ್ತವ್ಯವಾಗಿರತಕ್ಕದ್ದು.
(5) ಮತದಾನ ಕೇಂದ್ರದ ಪ್ರಿಸೈಡಿಂಗ್ ಅಧಿಕಾರಿಗೆ ಅವನ ಪ್ರಕಾರ್ಯಗಳ ನಿರ್ವಹಣೆಯಲ್ಲಿ ಸಹಾಯ ಮಾಡುವುದು ಆ ಮತದಾನ ಕೇಂದ್ರದ ಪೋಲಿಂಗ್ ಅಧಿಕಾರಿಯ ಕರ್ತವ್ಯವಾಗಿರತಕ್ಕದ್ದು.
(6) ಪ್ರತಿ ಸಹಾಯಕ ರಿಟರ್ನಿಂಗ್ ಅಧಿಕಾರಿಯು, ರಿಟರ್ನಿಂಗ್ ಅಧಿಕಾರಿಯ ನಿಯಂತ್ರಣಕ್ಕೊಳಪಟ್ಟು, ರಿಟರ್ನಿಂಗ್ ಅಧಿಕಾರಿಯು ಅಥವಾ ಸಹಕಾರ ಚುನಾವಣಾ ಆಯೋಗವು ವಹಿಸುವಂತೆ ರಿಟರ್ನಿಂಗ್ ಅಧಿಕಾರಿಯ ಎಲ್ಲಾ ಅಥವಾ ಯಾವುದೇ ಪ್ರಕಾರ್ಯಗಳನ್ನು ನಿರ್ವಹಿಸಲು ಸಕ್ಷಮನಾಗಿರತಕ್ಕದ್ದು.
(7) ರಿಟರ್ನಿಂಗ್ ಅಧಿಕಾರಿ ಅಥವಾ ಸಹಾಯಕ ರಿಟರ್ನಿಂಗ್ ಅಧಿಕಾರಿಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣದಲ್ಲಿ ಸಾಮಾನ್ಯ ಚುನಾವಣೆಯ ದಿನದಂದು ಪ್ರಿಸೈಡಿಂಗ್ ಅಧಿಕಾರಿ ಮತ್ತು ಪೋಲಿಂಗ್ ಅಧಿಕಾರಿಗಳು ಮತದಾನವನ್ನು ನಡೆಸತಕ್ಕದ್ದು ಮತ್ತು ಮತದಾನ ಮುಕ್ತಾಯವಾದ ಕೂಡಲೇ ಸದಸ್ಯರು ಅಥವಾ ಪ್ರತಿನಿಧಿಗಳು ಅಥವಾ ಡೆಲಿಗೇಟುಗಳು ಹಾಕಿದ ಮತಗಳನ್ನು ಎಣಿಸತಕ್ಕದ್ದು ಮತ್ತು ನಿರ್ದೇಶಿಸಿದಂತೆ ವರದಿಗಳನ್ನು ತಯಾರಿಸತಕ್ಕದ್ದು. ಅವರು ಸಾಮಾನ್ಯ ಚುನಾವಣೆಗೆ ಸಂಬಂಧಪಟ್ಟ ದಾಖಲೆಗಳನ್ನು ಅಥವಾ ಸಾಮಗ್ರಿಗಳನ್ನು ಸಂಬಂಧಪಟ್ಟ ರಿಟರ್ನಿಂಗ್ ಅಧಿಕಾರಿ ಅಥವಾ ಸಹಾಯಕ ರಿಟರ್ನಿಂಗ್ ಅಧಿಕಾರಿಗೆ ಸಲ್ಲಿಸತಕ್ಕದ್ದು.
ವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೪೭೯5ಇ. ಸಾಮಾನ್ಯ ಚುನಾವಣೆಗಾಗಿ ಅಧಿಸೂಚನೆ: (1) ಪ್ರಕರಣ 26ರಲ್ಲಿ ಉಲ್ಲೇಖಿಸಿದ ಸಾಮಾನ್ಯ ಚುನಾವಣೆಗಾಗಿ ಜಿಲ್ಲಾ ಚುನಾವಣಾಧಿಕಾರಿಯು, ಸಹಕಾರ ಚುನಾವಣಾ ಆಯೋಗದ ಅನುಮೋದನೆ ಪಡೆದನಂತರ, ನಮೂನೆ 1ಎರಲ್ಲಿ ಅಧಿಸೂಚನೆಯನ್ನು ಹೊರಡಿಸತಕ್ಕದ್ದು.
(2) ಜಿಲ್ಲಾ ಚುನಾವಣಾಧಿಕಾರಿಯು, ಅಂಥ ಅಧಿಸೂಚನೆಯನ್ನು ಹೊರಡಿಸುವಾಗ ಈ ಕೆಳಕಂಡ ಅಂಶಗಳನ್ನು ನಮೂದಿಸತಕ್ಕದ್ದು, ಅಂದರೆ:-
(i) ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕವು ಸಾಮಾನ್ಯ ಚುನಾವಣೆ ದಿನಾಂಕದ ಪೂರ್ವದ ಸ್ಪಷ್ಟ ಏಳು ದಿನಗಳಾಗಿರತಕ್ಕದ್ದು.
(ii) ನಾಮಪತ್ರ ಸಲ್ಲಿಕೆಗೆ ನಿಗದಿಯಾದ ಕೊನೆಯ ದಿನದ ಮರುದಿನವು ನಾಮಪತ್ರ ಪರಿಶೀಲನಾ ದಿನಾಂಕವಾಗಿರತಕ್ಕದ್ದು.
(iii) ನಾಮಪತ್ರ ಹಿಂಪಡೆಯುವ ದಿನಾಂಕವು ಸಾಮಾನ್ಯ ಚುನಾವಣೆಯ ದಿನಾಂಕ ಪೂರ್ವದ ಸ್ಪಷ್ಟ ಐದು ದಿನಗಳಾಗಿರತಕ್ಕದ್ದು.
(iv) ಮತದಾನ, ಅಗತ್ಯವಿದ್ದಲ್ಲಿ, ನಡೆಯುವ ದಿನಾಂಕ ಹಾಗೂ ಸಮಯವನ್ನು ನಿಗದಿಪಡಿಸತಕ್ಕದ್ದು.
(v) ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ದಿನಾಂಕವನ್ನು ನಿಗದಿಪಡಿಸತಕ್ಕದ್ದು.
(3) (ಎ) ಉಪನಿಯಮ (1)ರಡಿ ಅಧಿಸೂಚನೆಯನ್ನು ಹೊರಡಿಸಿದ ನಂತರ, ಉದ್ದೇಶಿತ ಸಾಮಾನ್ಯ ಚುನಾವಣೆಗಾಗಿ ರಿಟರ್ನಿಂಗ್ ಅಧಿಕಾರಿಯು ನಮೂನೆ 2ಎರಲ್ಲಿ ಅದನ್ನು ತನ್ನ ಕಚೇರಿಯ ಸೂಚನಾಫಲಕದಲ್ಲಿ, ಸಹಕಾರಿಯ ಕಚೇರಿಯ ಸೂಚನಾಫಲಕದಲ್ಲಿ ಮತ್ತು ತಾನು ಅವಶ್ಯವೆಂದು ಭಾವಿಸುವಂಥ ಇತರ ಸ್ಥಳಗಳಲ್ಲಿ ಪ್ರದರ್ಶಿಸುವ ಮೂಲಕ ನಾಮಪತ್ರಗಳನ್ನು ಆಹ್ವಾನಿಸಿ ಸಾರ್ವಜನಿಕ ನೋಟಿಸನ್ನು ನೀಡತಕ್ಕದ್ದು.
(ಬಿ) ಅಂಥ ನೋಟಿಸಿನಲ್ಲಿ, ರಿಟರ್ನಿಂಗ್ ಅಧಿಕಾರಿಯು ಇತರೆ ವಿಷಯಗಳ ಜೊತೆಗೆ ನಾಮಪತ್ರಗಳನ್ನು ಸ್ವೀಕರಿಸುವುದಕ್ಕಾಗಿ ಇರುವ ಕೊನೆಯ ದಿನಾಂಕ, ನಾಮಪತ್ರಗಳನ್ನು ಸಲ್ಲಿಸಬೇಕಾದ ಸ್ಥಳ, ನಾಮಪತ್ರಗಳ ಪರಿಶೀಲನೆಯ ದಿನಾಂಕ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ, ಮತದಾನವನ್ನು ನಡೆಸುವ ದಿನಾಂಕ ಮತ್ತು ಮತದಾನದ ವೇಳೆ ಮತ್ತು ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಪೂರ್ಣಗೊಳಿಸಬೇಕೋ ಆ ದಿನಾಂಕ ಇವುಗಳನ್ನು ನಿರ್ದಿಷ್ಟಪಡಿಸತಕ್ಕದ್ದು. ಇವು ಜಿಲ್ಲಾ ಚುನಾವಣಾಧಿಕಾರಿಯು ಆ ಬಗ್ಗೆ (2)ನೇ ಉಪನಿಯಮದ ಅಡಿಯಲ್ಲಿ ಅಧಿಸೂಚಿಸಿದ ದಿನಾಂಕಗಳಿಗೆ ಅನುಗುಣವಾಗಿರತಕ್ಕದ್ದು.
5ಎಫ್. ನಾಮಪತ್ರ ಸಲ್ಲಿಕೆ: (1) ನಾಮಪತ್ರ ಸಲ್ಲಿಸುವುದಕ್ಕಾಗಿ ಗೊತ್ತುಪಡಿಸಿದ ದಿನಾಂಕದಂದು ಅಥವಾ ಅದಕ್ಕೆ ಮುಂಚೆ ಪ್ರತಿಯೊಬ್ಬ ಅಭ್ಯರ್ಥಿಯು ಖುದ್ದಾಗಿ ರಿಟರ್ನಿಂಗ್ ಅಧಿಕಾರಿಗೆ ಈ ಬಗ್ಗೆ ನಿರ್ದಿಷ್ಟಪಡಿಸಿದ ಸ್ಥಳದಲ್ಲಿ ನಮೂನೆ 2ಬಿ ರಲ್ಲಿ ಪೂರ್ಣಗೊಳಿಸಿದ ಅಭ್ಯರ್ಥಿಯು ಮತ್ತು ಮತದಾನದ ಹಕ್ಕುಳ್ಳ ಇನ್ನೊಬ್ಬ ಸದಸ್ಯನು ಸೂಚಕನಾಗಿ ಯುಕ್ತವಾಗಿ ರುಜುಮಾಡಿರುವ ನಾಮಪತ್ರವನ್ನು ಸಲ್ಲಿಸತಕ್ಕದ್ದು. ಅಂಥ ನಾಮಪತ್ರವು ಅಭ್ಯರ್ಥಿಯು ಸಹಕಾರಿಯ ಆಡಳಿತ ಮಂಡಳಿಗೆ ಸಾಮಾನ್ಯ ಮತಕ್ಷೇತ್ರದಿಂದ ಅಥವಾ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರಿಗೆ ಅಥವಾ ಮಹಿಳೆಯರಿಗೆ ಅಥವಾ ಹಿಂದುಳಿದ ವರ್ಗದವರಿಗೆ ಮೀಸಲಿರಿಸಿದ ಮತಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುವ ತನ್ನ ಇಚ್ಛೆಯನ್ನು ವ್ಯಕ್ತಪಡಿಸುವ ಮತ್ತು ಆತನು ಸಹಿ ಮಾಡಿರುವ ಘೋಷಣೆಯನ್ನು ಒಳಗೊಂಡಿರತಕ್ಕದ್ದು.
ಪರಂತು, ಸಂದರ್ಭಾನುಸಾರ ಯಾವ ಸದಸ್ಯನೂ ಅಥವಾ ಪ್ರತಿನಿಧಿಯೂ ಅಥವಾ ಡೆಲಿಗೇಟನೂ ಒಂದು ಮತಕ್ಷೇತ್ರಕ್ಕಿಂತ ಹೆಚ್ಚಿನ ಮತಕ್ಷೇತ್ರಗಳಿಗೆ ಅಭ್ಯರ್ಥಿಯಾಗಿರತಕ್ಕದ್ದಲ್ಲ ಹಾಗೂ ಯಾವ ಸದಸ್ಯನೂ ಅಥವಾ ಪ್ರತಿನಿಧಿಯೂ ಅಥವಾ ಡೆಲಿಗೇಟನೂ ಒಂದೇ ಮತಕ್ಷೇತ್ರದಿಂದ ಒಬ್ಬರಿಗಿಂತ ಹೆಚ್ಚಿನ ಅಭ್ಯರ್ಥಿಗಳನ್ನು ಸೂಚಿಸತಕ್ಕದ್ದಲ್ಲ.
ಮತ್ತು ಪರಂತು, ಒಂದು ಸಹಕಾರಿಯ ಪರವಾಗಿ ಸಲ್ಲಿಸಲ್ಪಟ್ಟ ನಾಮಪತ್ರವು ಆ ಸಹಕಾರಿಯ ಆಡಳಿತ ಮಂಡಳಿಯ ನಿರ್ಣಯದೊಂದಿಗೆ ಇರತಕ್ಕದ್ದು ಮತ್ತು ಅದನ್ನು ಅಭ್ಯರ್ಥಿಯೇ ಸ್ವತಃ ಸಹಿ ಮಾಡಿರತಕ್ಕದ್ದು.
(2) ಯಾವುದೇ ಸಹಕಾರಿಯ ಆಡಳಿತ ಮಂಡಳಿಗೆ ನಡೆಯುವ ಸಾಮಾನ್ಯ ಚುನಾವಣೆಯಲ್ಲಿ :-
(i) ಯಾವುದೇ ಸ್ಥಾನವನ್ನು ಹಿಂದುಳಿದ ವರ್ಗಗಳಿಗೆ ಅಥವಾ ಪರಿಶಿಷ್ಟ ಜಾತಿ ಅಥವಾ ಪಂಗಡದವರಿಗೆ ಮೀಸಲಿಟ್ಟಿದ್ದರೆ ಆ ಸ್ಥಾನವನ್ನು ಭರ್ತಿ ಮಾಡುವುದಕ್ಕಾಗಿ ಅಭ್ಯರ್ಥಿಯ ನಾಮಪತ್ರವು ಅವನು ಸದಸ್ಯನಾಗಿರುವಂಥ ನಿರ್ದಿಷ್ಟ ವರ್ಗ, ಜಾತಿ ಅಥವಾ ಪಂಗಡವನ್ನು ನಿರ್ದಿಷ್ಟಪಡಿಸುವ ಮತ್ತು ಅವನ ಘೋಷಣೆಯನ್ನು ಒಳಗೊಂಡಿರದ ಹೊರತು ಆ ಸ್ಥಾನವನ್ನು ಭರ್ತಿಮಾಡಲು ಆಯ್ಕೆಗೊಳ್ಳಲು ಅರ್ಹನಾಗಿರುವುದಾಗಿ ಭಾವಿಸತಕ್ಕದ್ದಲ್ಲ.
(ii) ಯಾವುದೇ ಸ್ಥಾನವನ್ನು ಮಹಿಳೆಯರಿಗಾಗಿ ಮೀಸಲಿಟ್ಟಿದ್ದರೆ, ನಾಮಪತ್ರವು ಅಭ್ಯರ್ಥಿಯು ಮಹಿಳೆಯಾಗಿರುವಳೆಂಬ ಘೋಷಣೆಯನ್ನು ಒಳಗೊಂಡಿರತಕ್ಕದ್ದು.
(3) ಅಂಥ ಪ್ರತಿ ನಾಮಪತ್ರವು ಸಹಕಾರಿ ಹೆಸರಿಗೆ ಕೆಳಗಿನಂತೆ ನಗದುರೂಪದಲ್ಲಿ ಅಥವಾ ಪೇ ಆರ್ಡರ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ಟ್ ರೂಪದಲ್ಲಿ ಠೇವಣಿಸಿದ ರಶೀದಿಯನ್ನು ಒಳಗೊಂಡಿರತಕ್ಕದ್ದು.
(i) ಪ್ರಾಥಮಿಕ ಅಥವಾ ಮಾಧ್ಯಮಿಕ ಸಹಕಾರಿಯಾಗಿದ್ದಲ್ಲಿ, ಒಂದು ಸಾವಿರ ರೂ.ಗಳು
(ii) ಒಕ್ಕೂಟ ಅಥವಾ ಅಪೆಕ್ಸ್ ಸಹಕಾರಿಯಾಗಿದ್ದಲ್ಲಿ, ಐದು ಸಾವಿರ ರೂ.ಗಳು
ಪರಂತು, ಅಭ್ಯರ್ಥಿಯು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಲ್ಲಿ ಅಥವಾ ಹಿಂದುಳಿದ ವರ್ಗಕ್ಕೆ ಸೇರಿದ್ದಲ್ಲಿ ಅಥವಾ ಮಹಿಳೆಯಾಗಿದ್ದಲ್ಲಿ, ಅಂತಹ ಅಭ್ಯರ್ಥಿಯು ಪಾವತಿಸಬೇಕಾದ ಠೇವಣಿಯು ಮೇಲೆ ನಿರ್ದಿಷ್ಟಪಡಿಸಿದ ಮೊಬಲಗಿನ ಶೇಕಡಾ ಐವತ್ತರಷ್ಟು ಇರತಕ್ಕದ್ದು.
(4) ನಾಮಪತ್ರವನ್ನು ಸಲ್ಲಿಸಿದ ಮೇಲೆ, ರಿಟರ್ನಿಂಗ್ ಅಧಿಕಾರಿಯು ನಾಮಪತ್ರದಲ್ಲಿ ನಮೂದಿಸಿದ ಅಭ್ಯರ್ಥಿಯ ಮತ್ತು ಅವನ ಸೂಚಕನ ಹೆಸರುಗಳು ಮತ್ತು ಮತದಾರರ ಪಟ್ಟಿಯ ಸಂಖ್ಯೆಗಳು ಮತದಾರರ ಪಟ್ಟಿಯಲ್ಲಿ ಹೇಗೆ ನಮೂದಿತವಾಗಿವೆಯೋ ಹಾಗೇ ಇವೆ ಎಂಬುದನ್ನು ಮನದಟ್ಟುಮಾಡಿಕೊಳ್ಳತಕ್ಕದ್ದು.
ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೪೮೦(5) ನಾಮಪತ್ರವನ್ನು ಸಲ್ಲಿಸುವಾಗ ರಿಟರ್ನಿಂಗ್ ಅಧಿಕಾರಿಯು ನಾಮಪತ್ರಗಳ ಪರಿಶೀಲನೆಗೆ ನಿಗದಿಪಡಿಸಿದ ಸ್ಥಳ, ದಿನಾಂಕ ಮತ್ತು ಸಮಯವನ್ನು ಅಭ್ಯರ್ಥಿಗೆ ತಿಳಿಸತಕ್ಕದ್ದು ಮತ್ತು ನಾಮಪತ್ರದ ಮೇಲೆ ಅದರ ಕ್ರಮ ಸಂಖ್ಯೆಯನ್ನು ದಾಖಲಿಸಿ ಅದರ ಮೇಲೆ ನಾಮಪತ್ರವನ್ನು ಆತನಿಗೆ ತಲುಪಿಸಿದ ದಿನಾಂಕ ಮತ್ತು ಸಮಯವನ್ನು ನಮೂದಿಸಿ ಸಹಿ ಮಾಡತಕ್ಕದ್ದು ಹಾಗೂ ಅದನ್ನು ಸ್ವೀಕರಿಸಿದ ಬಗ್ಗೆ ಲಿಖಿತ ಸ್ವೀಕೃತಿಯನ್ನು ತಕ್ಷಣ ನೀಡತಕ್ಕದ್ದು. ನಾಮಪತ್ರವನ್ನು ಸ್ವೀಕರಿಸಲು ನಿಗದಿಪಡಿಸಿದ ಸಮಯ ಮುಕ್ತಾಯವಾದ ನಂತರ, ರಿಟರ್ನಿಂಗ್ ಅಧಿಕಾರಿಯು ಸ್ವೀಕೃತವಾದ ನಾಮಪತ್ರದ ಪಟ್ಟಿಯನ್ನು ತಯಾರಿಸಿ ಸಹಕಾರಿಯ ಸೂಚನಾಫಲಕದ ಮೇಲೆ ಮತ್ತು ತನ್ನ ಕಚೇರಿಯ ಸೂಚನಾಫಲಕದ ಮೇಲೆ ಪ್ರದರ್ಶಿಸತಕ್ಕದ್ದು.
5ಜಿ. ನಾಮಪತ್ರಗಳ ಪರಿಶೀಲನೆ: (1) ನಾಮಪತ್ರಗಳ ಪರಿಶೀಲನೆಗೆ ನಿಗದಿಪಡಿಸಿದ ದಿನಾಂಕದಂದು ಅಭ್ಯರ್ಥಿಗಳು ಅಥವಾ ಅವರ ಸೂಚಕರು ರಿಟರ್ನಿಂಗ್ ಅಧಿಕಾರಿಯು ನಿಗದಿಪಡಿಸಬಹುದಾದಂತಹ ವೇಳೆ ಮತ್ತು ಸ್ಥಳದಲ್ಲಿ ಹಾಜರಾಗಬಹುದು ಆದರೆ ಬೇರೆ ಯಾವುದೇ ವ್ಯಕ್ತಿಯು ಹಾಜರಿರತಕ್ಕದ್ದಲ್ಲ. ರಿಟರ್ನಿಂಗ್ ಅಧಿಕಾರಿಯು ಅವರಿಗೆ ನಿಗದಿಪಡಿಸಿದ ಅವಧಿಯೊಳಗೆ ಮತ್ತು ರೀತಿಯಲ್ಲಿ ಸಲ್ಲಿಸಲಾದ ಎಲ್ಲಾ ಅಭ್ಯರ್ಥಿಗಳ ನಾಮಪತ್ರಗಳನ್ನು ಪರೀಕ್ಷಿಸುವುದಕ್ಕಾಗಿ ಮತ್ತು ನಾಮಪತ್ರಗಳು ಸರಿಯಿರುವಿಕೆ, ಅರ್ಹತೆ ಮತ್ತು ಪೂರ್ಣತೆಯನ್ನು ಮನಗಾಣಲು ಎಲ್ಲಾ ಯುಕ್ತ ಸೌಲಭ್ಯಗಳನ್ನು ಕೊಡತಕ್ಕದ್ದು.
(2) ಆಗ ರಿಟರ್ನಿಂಗ್ ಅಧಿಕಾರಿಯು ನಾಮಪತ್ರಗಳನ್ನು ಪರೀಕ್ಷಿಸತಕ್ಕದ್ದು ಮತ್ತು ಯಾವುದೇ ನಾಮಪತ್ರಕ್ಕೆ ಮಾಡಿರಬಹುದಾದಂಥ ಎಲ್ಲಾ ಆಕ್ಷೇಪಣೆಗಳನ್ನು ತೀರ್ಮಾನಿಸತಕ್ಕದ್ದು ಮತ್ತು ಅಂಥ ಆಕ್ಷೇಪಣೆಗಳ ಮೇಲೆ ಆಗಲಿ ಅಥವಾ ಸ್ವಪ್ರೇರಣೆಯಿಂದಾಗಲಿ ತಾನು ಅವಶ್ಯವೆಂದು ಯೋಚಿಸುವಂಥ ಸಂಗ್ರಹವಾದ ವಿಚಾರಣೆ ಯಾವುದಾದರೂ ಇದ್ದರೆ ಅದನ್ನು ಮಾಡಿದ ತರುವಾಯ ಯಾವುದೇ ನಾಮಪತ್ರವನ್ನು ಈ ಕೆಳಕಂಡ ಯಾವುದೇ ಕಾರಣದ ಮೇಲೆ ತಿರಸ್ಕರಿಸಬಹುದು, ಎಂದರೆ:-
(i) ನಾಮಪತ್ರಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಅಧಿನಿಯಮದ, ನಿಯಮಗಳ ಮತ್ತು ಉಪವಿಧಿಗಳ ಉಪಬಂಧಗಳ ಮೇರೆಗೆ ಆಡಳಿತ ಮಂಡಳಿಯ ನಿರ್ದೇಶಕನಾಗಿ ಚುನಾಯಿತನಾಗಲು ಅರ್ಹತೆ ಇಲ್ಲದಿರುವುದು ಅಥವಾ ಅನರ್ಹನಾಗಿರುವುದರ ಕಾರಣದಿಂದ;
(ii) ನಾಮಪತ್ರದ ಮೇಲೆ ಇರುವ ಅಭ್ಯರ್ಥಿಯ ಅಥವಾ ಸೂಚಕನ ರುಜು ನೈಜವಾದುದಲ್ಲವಾಗಿರುವುದರ ಕಾರಣದಿಂದ ಪರಂತು, ಪ್ರಸಂಗಾನುಸಾರ ಅಭ್ಯರ್ಥಿಯ ಅಥವಾ ಆತನ ಸೂಚಕನ ಗುರುತು ಸಾಬೀತಾದಲ್ಲಿ, ಆತನ ಹೆಸರನ್ನು ಹೆಸರಿನ ಅಥವಾ ಆತನ ಸೂಚಕನ ಹೆಸರಿನ ಅಥವಾ ಮತದಾರರ ಪಟ್ಟಿಯಲ್ಲಿ ದಾಖಲಿಸಿರುವಂತೆ ಅಭ್ಯರ್ಥಿಗೆ ಅಥವಾ ಸೂಚಕನಿಗೆ ಸಂಬಂಧಪಟ್ಟ ಇತರ ಮಾಹಿತಿಗಳ ನಿಖರವಲ್ಲದ ವಿವರಣೆ ಇದೆ ಎಂಬ ಕಾರಣದ ಮೇಲೆ ಮಾತ್ರ ಯಾವುದೇ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸತಕ್ಕದ್ದಲ್ಲ.
ಮತ್ತು ಪರಂತು, ರಿಟರ್ನಿಂಗ್ ಅಧಿಕಾರಿಯು ಗಣನಾರ್ಹ ಸ್ವರೂಪವಲ್ಲದ ಯಾವುದೇ ದೋಷದ ಕಾರಣದ ಮೇಲೆ ಯಾವುದೇ ನಾಮಪತ್ರವನ್ನು ತಿರಸ್ಕರಿಸತಕ್ಕದ್ದಲ್ಲ.
(iii) ನಾಮಪತ್ರಗಳನ್ನು ಸ್ವೀಕರಿಸಲು ನಿಗದಿಪಡಿಸಿದ ದಿನಾಂಕ ಮತ್ತು ಸಮಯದ ನಂತರ ನಾಮಪತ್ರವನ್ನು ತಲುಪಿಸಲಾಗಿದೆ ಅಥವಾ ಸ್ವೀಕರಿಸಲಾಗಿದೆಯೆಂಬ ಕಾರಣದಿಂದ
(3) ರಿಟರ್ನಿಂಗ್ ಅಧಿಕಾರಿಯು ಪ್ರತಿಯೊಂದು ನಾಮಪತ್ರದ ಮೇಲೆ ಅದನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ತನ್ನ ತೀರ್ಮಾನವನ್ನು ಹಿಂಬರಹ ಮಾಡತಕ್ಕದ್ದು ಮತ್ತು ನಾಮಪತ್ರವನ್ನು ತಿರಸ್ಕರಿಸಿದರೆ ಅಂಥ ತಿರಸ್ಕರಣೆಯ ಬಗ್ಗೆ ಅವನಿಗೆ ಇರುವ ಕಾರಣಗಳ ಸಂಕ್ಷಿಪ್ತ ಹೇಳಿಕೆಯನ್ನು ಲಿಖಿತದಲ್ಲಿ ದಾಖಲು ಮಾಡತಕ್ಕದ್ದು.
(4) ಎಲ್ಲ ನಾಮಪತ್ರಗಳನ್ನು ಪರಿಶೀಲಿಸಿ ಅವುಗಳನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ತೀರ್ಮಾನವನ್ನು ದಾಖಲು ಮಾಡಿದ ತರುವಾಯ ಕೂಡಲೇ ರಿಟರ್ನಿಂಗ್ ಅಧಿಕಾರಿಯು ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಅಂದರೆ ಯಾರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಕಂಡುಬಂದಿದೆಯೋ ಅಂಥ ಅಭ್ಯರ್ಥಿಗಳ ಪಟ್ಟಿಯನ್ನು ನಮೂನೆ 2ಸಿನಲ್ಲಿ ತಯಾರಿಸತಕ್ಕದ್ದು ಮತ್ತು ಅದನ್ನು ತನ್ನ ಕಛೇರಿಯ ಸೂಚನಾಫಲಕದ ಮೇಲೆ ಪ್ರಕಟಿಸತಕ್ಕದ್ದು. ಅಂಥ ಪಟ್ಟಿಯ ಒಂದು ಪ್ರತಿಯನ್ನು ಅದೇ ದಿನ ಸಹಕಾರಿಯ ಸೂಚನಾಫಲಕದ ಮೇಲೆ ಪ್ರದರ್ಶಿಸತಕ್ಕದ್ದು.
5ಹೆಚ್. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವಿಕೆ: (1) ಯಾವನೇ ಅಭ್ಯರ್ಥಿಯು ನಮೂನೆ 2ಡಿ ನಲ್ಲಿ ಲಿಖಿತದಲ್ಲಿ ನೋಟಿಸು ನೀಡುವ ಮೂಲಕ ಮತ್ತು ಅದನ್ನು ನಾಮಪತ್ರ ಸಲ್ಲಿಸಿದ ನಂತರ ಆದರೆ ನಾಮಪತ್ರ ಪರಿಶೀಲನೆಗೆ ನಿಗದಿಮಾಡಿದ ದಿನಾಂಕದ ಮರುದಿನದ ಮೂರು ಗಂಟೆಯ ಒಳಗೆ ಯಾವುದೇ ಸಮಯದಲ್ಲಾದರೂ ಅಂಥ ಅಭ್ಯರ್ಥಿಯೇ ಖುದ್ದಾಗಿ ರಿಟರ್ನಿಂಗ್ ಅಧಿಕಾರಿಗೆ ನೀಡುವ ಮೂಲಕ ತನ್ನ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಬಹುದು.
(2) (1)ನೇ ಉಪನಿಯಮದ ಮೇರೆಗೆ ಅಂಥ ನೋಟಿಸನ್ನು ಸ್ವೀಕರಿಸಿದ ಮೇಲೆ ರಿಟರ್ನಿಂಗ್ ಅಧಿಕಾರಿಯು ಅದರ ಮೇಲೆ ಅದನ್ನು ನೀಡಿದ ದಿನಾಂಕ ಮತ್ತು ವೇಳೆಯನ್ನು ಬರೆಯತಕ್ಕದ್ದು ಮತ್ತು ತನ್ನ ಸಹಿಯನ್ನು ಹಾಕಿ ಮೊಹರನ್ನು ಹಾಕತಕ್ಕದ್ದು.
(3) (1)ನೇ ಉಪನಿಯಮದ ಮೇರೆಗೆ ತನ್ನ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ನೋಟಿಸನ್ನು ಕೊಟ್ಟಿರುವ ಯಾವನೇ ವ್ಯಕ್ತಿಗೆ ಸದರಿ ನೋಟಿಸನ್ನು ರದ್ದುಪಡಿಸಲು ಅವಕಾಶ ನೀಡತಕ್ಕದ್ದಲ್ಲ. ಒಬ್ಬ ಅಭ್ಯರ್ಥಿಯು ತನ್ನ ಉಮೇದುವಾರಿಕೆಯನ್ನು ಹಿಂತೆದುಕೊಳ್ಳುವ ಬಗ್ಗೆ ಒಮ್ಮೆ ನೀಡಿದ ನೋಟಿಸು ಮಾರ್ಪಡಿಸತಕ್ಕದ್ದಲ್ಲ ಮತ್ತು ಅದು ಅಂತಿಮವಾಗಿರತಕ್ಕದ್ದು.
5ಐ. ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ತಯಾರಿಕೆ: (1) ಉಮೇದುವಾರಿಕೆಗಳನ್ನು ಹಿಂದಕ್ಕೆ ಪಡೆಯಬಹುದಾದ ಅವಧಿಯು ಮುಕ್ತಾಯವಾದ ಕೂಡಲೇ ರಿಟರ್ನಿಂಗ್ ಅಧಿಕಾರಿಯು ಸ್ಪರ್ಧಿಸುವ ಅಭ್ಯರ್ಥಿಗಳ ಅಂದರೆ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿದ ಮತ್ತು ಸದರಿ ಅವಧಿಯೊಳಗೆ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳದ ಅಭ್ಯರ್ಥಿಗಳ ಪಟ್ಟಿಯನ್ನು ನಮೂನೆ 2ಇ ನಲ್ಲಿ ಕನ್ನಡ ಭಾಷೆಯಲ್ಲಿ ತಯಾರಿಸಿ ಪ್ರಕಟಿಸತಕ್ಕದ್ದು. ಅಂತಹ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯ ಪ್ರತಿಯನ್ನು ಸಹಕಾರಿಯ ಸೂಚನಾಫಲಕದ ಮೇಲೆ ಅದೇ ದಿನ ಪ್ರದರ್ಶಿಸತಕ್ಕದ್ದು.
ವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೪೮೧ಪರಂತು, ಸಹಕಾರ ಚುನಾವಣಾ ಆಯೋಗವು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಕನ್ನಡೇತರ ಭಾಷೆಯಲ್ಲಿ ತಯಾರಿಸಬಹುದೆಂದು ನಿರ್ದೇಶಿಸಬಹುದು.
(2) ಸದರಿ ಪಟ್ಟಿಯು ನಾಮಪತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನೀಡಿರುವಂತೆ ಕನ್ನಡ ವರ್ಣಮಾಲೆಯ ಕ್ರಮದಲ್ಲಿ ಅಭ್ಯರ್ಥಿಗಳ ಹೆಸರು ಮತ್ತು ವಿಳಾಸಗಳನ್ನು ಒಳಗೊಂಡಿರತಕ್ಕದ್ದು.
(3) ಮತದಾನವು ಅವಶ್ಯಕವಾದಲ್ಲಿ ರಿಟರ್ನಿಂಗ್ ಅಧಿಕಾರಿಯು ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರದಲ್ಲಿ ವ್ಯಕ್ತಪಡಿಸಿರುವ ಚಿಹ್ನೆಗಳ ಆಯ್ಕೆಯನ್ನು ಪರ್ಯಾಲೋಚಿಸತಕ್ಕದ್ದು ಮತ್ತು ನಿಯಮ 5ಜೆೆ ಅನುಸಾರವಾಗಿ ಚಿಹ್ನೆಗಳನ್ನು ಹಂಚಿಕೆ ಮಾಡತಕ್ಕದ್ದು.
(4) ಅಭ್ಯರ್ಥಿಗೆ ನೀಡಲಾದ ಯಾವುದೇ ಚಿಹ್ನೆಯ ಬಗೆಗಿನ ಹಂಚುವಿಕೆಯು ಅಂತಿಮವಾಗಿರತಕ್ಕದ್ದು.
(5) ಪ್ರತಿಯೊಬ್ಬ ಅಭ್ಯರ್ಥಿಗೆ ಅಥವಾ ಅವನ ಸೂಚಕನಿಗೆ ಅಭ್ಯರ್ಥಿಗೆ ಹಂಚಿಕೆ ಮಾಡಲಾದ ಚಿಹ್ನೆಯನ್ನು ಕೂಡಲೇ ತಿಳಿಸತಕ್ಕದ್ದು ಮತ್ತು ಅವರಿಗೆ ಅದರ ಒಂದು ಮಾದರಿಯನ್ನು ರಿಟರ್ನಿಂಗ್ ಅಧಿಕಾರಿಯು ಒದಗಿಸತಕ್ಕದ್ದು.
5ಜೆ. ಚಿಹ್ನೆಗಳ ಹಂಚಿಕೆ: (1) ಯಾವುದೇ ಅಭ್ಯರ್ಥಿಯು ರಾಜ್ಯದಲ್ಲಿ ಮನ್ನಣೆ ಪಡೆದ ರಾಜಕೀಯ ಪಕ್ಷಗಳಿಗೆ ಹಂಚಿಕೆ ಮಾಡಿದ ಚಿಹ್ನೆಗಳನ್ನು ಹೊರತುಪಡಿಸಿ ಉಳಿದ ಮುಕ್ತ ಚಿಹ್ನೆಗಳ ಪೈಕಿ ಯಾವುದಾದರೂ ಒಂದನ್ನು ಆಯ್ಕೆಮಾಡಿಕೊಳ್ಳತಕ್ಕದ್ದು.
ವಿವರಣೆ: ಈ ಉಪನಿಯಮದ ಉದ್ದೇಶಕ್ಕಾಗಿ, "ಮಾನ್ಯ ಮಾಡಿದ ರಾಜಕೀಯ ಪಕ್ಷ" ಎಂದರೆ ಚುನಾವಣಾ ಚಿಹ್ನೆಗಳ (ಮೀಸಲಾತಿ ಹಾಗೂ ಹಂಚಿಕೆ) ಆದೇಶ 1968ರಡಿ ಭಾರತದ ಚುನಾವಣಾ ಆಯೋಗದಿಂದ ಒಂದು ರಾಷ್ಟ್ರೀಯ ಪಕ್ಷ ಅಥವಾ ಕರ್ನಾಟಕದಲ್ಲಿ ರಾಜ್ಯ ಪಕ್ಷ ಎಂದು ಗುರುತಿಸಲ್ಪಟ್ಟ ಪ್ರತಿಯೊಂದು ರಾಜಕೀಯ ಪಕ್ಷ.
(2) ಯಾವುದೇ ಒಂದು ಮುಕ್ತ ಚಿಹ್ನೆಯನ್ನು ಒಬ್ಬ ಅಭ್ಯರ್ಥಿಯು ಮಾತ್ರ ಆಯ್ಕೆ ಮಾಡಿಕೊಂಡಿದ್ದಲ್ಲಿ, ರಿಟರ್ನಿಂಗ್ ಅಧಿಕಾರಿಯು ಆ ಚಿಹ್ನೆಯನ್ನು ಆ ಅಭ್ಯರ್ಥಿಗೆ ಹಂಚಿಕೆ ಮಾಡತಕ್ಕದ್ದು. ಆದರೆ ಬೇರೆ ಯಾರಿಗೂ ಹಂಚಿಕೆಮಾಡತಕ್ಕದ್ದಲ್ಲ.
(3) ಒಂದೇ ಮುಕ್ತ ಚಿಹ್ನೆಯನ್ನು ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿದ್ದಲ್ಲಿ, ರಿಟರ್ನಿಂಗ್ ಅಧಿಕಾರಿಯು ಸದರಿ ಮುಕ್ತ ಚಿಹ್ನೆಯನ್ನು ಯಾವ ಅಭ್ಯರ್ಥಿಗೆ ಹಂಚಿಕೆ ಮಾಡತಕ್ಕದ್ದು ಎಂಬ ಬಗ್ಗೆ ಚೀಟಿ ಎತ್ತುವ ಮೂಲಕ ನಿರ್ಧರಿಸತಕ್ಕದ್ದು. ಯಾವ ಅಭ್ಯರ್ಥಿಯ ಪರವಾಗಿ ಚೀಟಿ ಬರುತ್ತದೋ ಆ ಅಭ್ಯರ್ಥಿಗೆ ಅಂಥ ಚಿಹ್ನೆಯನ್ನು ಹಂಚಿಕೆ ಮಾಡತಕ್ಕದ್ದು ಮತ್ತು ಬೇರೆ ಯಾರಿಗೂ ಹಂಚಿಕೆ ಮಾಡತಕ್ಕದ್ದಲ್ಲ.
(4) ರಿಟರ್ನಿಂಗ್ ಅಧಿಕಾರಿಯು ನಮೂನೆ 2ಇ ನಲ್ಲಿ ಚಿಹ್ನೆ ಸಹಿತ ಕನ್ನಡ ವರ್ಣಮಾಲೆಯ ಕ್ರಮದಲ್ಲಿ ಹೆಸರುಗಳನ್ನು ಜೋಡಿಸಿ ಕ್ರಮಬದ್ಧವಾಗಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ ಪ್ರಕಟಿಸತಕ್ಕದ್ದು.
5 ಕೆ. ಮತದಾನಕ್ಕೆ ಮುಂಚೆ ಅಭ್ಯರ್ಥಿಯ ಮರಣ: (1) ಯಾವುದೇ ಪ್ರದೇಶ ಅಥವಾ ಮತಕ್ಷೇತ್ರದಿಂದ ಆಡಳಿತ ಮಂಡಲಿಯ ನಿರ್ದೇಶಕರ ಚುನಾವಣೆಯ ಯಾವುದೇ ಅಭ್ಯರ್ಥಿಯು;-
(i) ನಾಮಪತ್ರ ಸಲ್ಲಿಸಲು ಗೊತ್ತುಪಡಿಸಿರುವ ಕೊನೆಯ ದಿನದಂದು ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯದ ನಂತರ ಯಾವುದೇ ಸಮಯದಲ್ಲಿ ಮರಣ ಹೊಂದಿದ್ದು ಮತ್ತು ಆತನ ನಾಮಪತ್ರವು ಪರಿಶೀಲನೆಯ ನಂತರ ಸಕ್ರಮವಾಗಿದೆ ಎಂದು ಕಂಡುಬಂದಲ್ಲಿ; ಅಥವಾ (ii) ಪರಿಶೀಲನೆಯ ನಂತರ ಆತನ ನಾಮಪತ್ರವು ಕ್ರಮಬದ್ಧವಾಗಿ ಇರುವುದು ಕಂಡುಬಂದಿದ್ದು ಆತನು ತನ್ನ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳದೇ ಮೃತನಾದಲ್ಲಿ;
ಅಂಥ ಯಾವುದೇ ಸಂದರ್ಭದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವುದಕ್ಕೆ ಮೊದಲು ಯಾವುದೇ ಕಾಲದಲ್ಲಿ ಆತನ ಮರಣದ ವರದಿಯನ್ನು ಸ್ವೀಕರಿಸಿದ್ದರೆ; ಅಥವಾ
(iii) ಒಬ್ಬ ಸ್ಪರ್ಧಿಸುವ ಅಭ್ಯರ್ಥಿಯಾಗಿ ಮರಣ ಹೊಂದಿದ್ದು ಮತದಾನ ಪ್ರಾರಂಭವಾಗುವುದಕ್ಕೆ ಮೊದಲು ಆತನ ಮರಣದ ವರದಿಯನ್ನು ಸ್ವೀಕರಿಸಿದ್ದರೆ;
ರಿಟರ್ನಿಂಗ್ ಅಧಿಕಾರಿಯು ಅಭ್ಯರ್ಥಿಯ ಮರಣದ ಬಗ್ಗೆ ಮನದಟ್ಟಾದ ಮೇಲೆ ಆ ಮತದಾನವನ್ನು, ಸಹಕಾರ ಚುನಾವಣಾ ಆಯೋಗದ ಪೂರ್ವ ಅನುಮೋದನೆಯ ಮೇರೆಗೆ, ಮುಂದೆ ಪ್ರಕಟಿಸುವ ದಿನಾಂಕಕ್ಕೆ ಮತದಾನವನ್ನು ಮುಂದೂಡುವ ಆದೇಶವನ್ನು ಹೊರಡಿಸಿ ಮುಂದೂಡತಕ್ಕದ್ದು ಮತ್ತು ಅದನ್ನು ಸಹಕಾರ ಚುನಾವಣಾ ಆಯೋಗಕ್ಕೆ ವಾಸ್ತವಾಂಶಗಳ ಬಗ್ಗೆ ವಿವರವಾದ ವರದಿಯನ್ನು ಕಳಿಸತಕ್ಕದ್ದು.
ಪರಂತು, ಮರಣ ಹೊಂದಿದ ಅಭ್ಯರ್ಥಿಯ ನಾಮಪತ್ರವು ಸೇರಿದಂತೆ ಎಲ್ಲ ನಾಮಪತ್ರಗಳ ಪರಿಶೀಲನೆಯ ನಂತರದ ಹೊರತು ಈ ನಿಯಮದಡಿಯಲ್ಲಿ ಮತದಾನ ರದ್ದುಪಡಿಸಲು ಯಾವುದೇ ಆದೇಶ ಹೊರಡಿಸತಕ್ಕದ್ದಲ್ಲ.
(2) (1)ನೇ ಉಪನಿಯಮದಡಿ ರಿಟರ್ನಿಂಗ್ ಅಧಿಕಾರಿಯಿಂದ ವರದಿಯು ಸ್ವೀಕೃತವಾದ ನಂತರ, ಸಹಕಾರ ಚುನಾವಣಾ ಆಯೋಗವು ಅಂಥ ಆದೇಶ ಹೊರಡಿಸಿದ ಏಳು ದಿನಗಳೊಳಗೆ ಅಂಥ ಪ್ರದೇಶ ಅಥವಾ ಮತಕ್ಷೇತ್ರದಿಂದ ಮತದಾನಕ್ಕಾಗಿ ಹೊಸ ನಾಮಪತ್ರವನ್ನು ಆಹ್ವಾನಿಸತಕ್ಕದ್ದು.
ಪರಂತು, ಮತದಾನ ಮುಂದೂಡುವುದಕ್ಕೆ ಮುಂಚೆ ತನ್ನ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ನೋಟೀಸನ್ನು ಕೊಟ್ಟಿರುವ ಯಾವನೇ ವ್ಯಕ್ತಿಯು ಅಂಥ ಮುಂದೂಡಿಕೆಯ ತರುವಾಯ ಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಅನರ್ಹನಾಗಿರತಕ್ಕದ್ದಲ್ಲ.
(3) (1)ನೇ ಉಪನಿಯಮದಡಿ ಮತದಾನವನ್ನು ಮುಂದೂಡುವುದಕ್ಕೆ ಮುಂಚೆ ಸ್ಪರ್ಧಿಸುವ ಅಭ್ಯರ್ಥಿಯ ಪಟ್ಟಯನ್ನು ಪ್ರಕಟಿಸಲಾಗಿದ್ದ ಸಂದರ್ಭದಲ್ಲಿ, ರಿಟರ್ನಿಂಗ್ ಅಧಿಕಾರಿಯು ಆ ಮತಕ್ಷೇತ್ರದಿಂದ ಕ್ರಮಬದ್ಧವಾಗಿ ಸ್ಪರ್ಧಿಸುವ ಅಭ್ಯರ್ಥಿಯ ಹೆಸರನ್ನು ಸೇರಿಸಲು ಅನುವಾಗುವಂತೆ ಆ ಪ್ರದೇಶ ಅಥವಾ ಮತಕ್ಷೇತ್ರದಿಂದ ಕ್ರಮಬದ್ಧವಾಗಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಹೊಸದಾಗಿ ತಯಾರಿಸಿ ಪ್ರಕಟಿಸತಕ್ಕದ್ದು.
ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೪೮೨5ಎಲ್. ಸ್ಪರ್ಧಿಸಿದ ಮತ್ತು ಸ್ಪರ್ಧಿಸದ ಚುನಾವಣೆಯಲ್ಲಿ ಕಾರ್ಯವಿಧಾನ: (1) ಯಾವುದೇ ಪ್ರದೇಶ ಅಥವಾ ಮತಕ್ಷೇತ್ರದಿಂದ ಸ್ಪರ್ಧಿಸಿದ ಅಭ್ಯರ್ಥಿಗಳ ಸಂಖ್ಯೆಯು ಆ ಪ್ರದೇಶ ಅಥವಾ ಮತಕ್ಷೇತ್ರದಿಂದ ಭರ್ತಿಮಾಡಬೇಕಾದ ಸ್ಥಾನಗಳ ಸಂಖ್ಯೆಗಿಂತ ಹೆಚ್ಚಾಗಿದ್ದರೆ, ಮತದಾನವನ್ನು ನಡೆಸತಕ್ಕದ್ದು.
(2) ಯಾವುದೇ ಪ್ರದೇಶ ಅಥವಾ ಮತಕ್ಷೇತ್ರದಿಂದ ಸ್ಪರ್ಧಿಸಿದ ಅಭ್ಯರ್ಥಿಗಳ ಸಂಖ್ಯೆಯು ಆ ಪ್ರದೇಶ ಅಥವಾ ಮತಕ್ಷೇತ್ರದಿಂದ ಭರ್ತಿಮಾಡಬೇಕಾದ ಸ್ಥಾನಗಳ ಸಂಖ್ಯೆಗೆ ಸಮನಾಗಿದ್ದರೆ, ರಿಟರ್ನಿಂಗ್ ಅಧಿಕಾರಿಯು ಕೂಡಲೇ ಅಂಥ ಎಲ್ಲಾ ಅಭ್ಯರ್ಥಿಗಳು ಆ ಸ್ಥಾನಗಳನ್ನು ಭರ್ತಿ ಮಾಡಲು ಕ್ರಮಬದ್ಧವಾಗಿ ಚುನಾಯಿತರಾಗಿದ್ದಾರೆಂದು ಯುಕ್ತವೆನಿಸಬಹುದಾದಂತೆ ನಮೂನೆ 2ಎಫ್ ಅಥವಾ 2ಜಿ ನಲ್ಲಿ ಘೋಷಿಸತಕ್ಕದ್ದು.
(3) ಯಾವುದೇ ಪ್ರದೇಶ ಅಥವಾ ಮತಕ್ಷೇತ್ರದಿಂದ ಸ್ಪರ್ಧಿಸಿದ ಅಭ್ಯರ್ಥಿಗಳ ಸಂಖ್ಯೆಯು ಆ ಪ್ರದೇಶ ಅಥವಾ ಮತಕ್ಷೇತ್ರದಿಂದ ಭರ್ತಿಮಾಡಬೇಕಾದ ಸ್ಥಾನಗಳ ಸಂಖ್ಯೆಗಿಂತ ಕಡಿಮೆಯಾಗಿದ್ದರೆ, ನಾಮಪತ್ರ ಹಿಂತೆಗೆದ ನಂತರದಲ್ಲಿ ರಿಟರ್ನಿಂಗ್ ಅಧಿಕಾರಿಯು ಕೂಡಲೇ ಅಂಥ ಎಲ್ಲ್ಲಾ ಅಭ್ಯರ್ಥಿಗಳು ಕ್ರಮಬದ್ಧವಾಗಿ ಚುನಾಯಿತರಾಗಿದ್ದಾರೆಂದು ಯುಕ್ತವೆನಿಸಬಹುದಾದಂತೆ ನಮೂನೆ 2ಎಫ್ ಅಥವಾ 2ಜಿ ನಲ್ಲಿ ಘೋಷಿಸತಕ್ಕದ್ದು ಮತ್ತು ಜಿಲ್ಲಾ ಚುನಾವಣಾಧಿಕಾರಿಯು ಸಹಕಾರ ಚುನಾವಣಾ ಆಯೋಗದ ಅನುಮೋದನೆಯೊಡನೆ ಉಳಿದ ಸ್ಥಾನ ಅಥವಾ ಸ್ಥಾನಗಳಿಗೆ ಅರ್ಹ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಚುನಾಯಿಸಲು ಸೂಕ್ತ ಪ್ರಕ್ರಿಯೆಯನ್ನು ತೆಗೆದುಕೊಳ್ಳಲು ಆ ಸಹಕಾರಿಯನ್ನು ಕೋರತಕ್ಕದ್ದು. 5ಎಂ. ತುರ್ತುಸ್ಥಿತಿಯಲ್ಲಿ ಮತದಾನ ಮುಂದೂಡಿಕೆ: (1) ಸಾಮಾನ್ಯ ಚುನಾವಣೆಯಲಿ,್ಲ ಯಾವುದೇ ಮತದಾನ ಕೇಂದ್ರ ಅಥವಾ ಸ್ಥಳದಲ್ಲಿನ ವ್ಯವಹಾರಣೆಗಳಿಗೆ ಯಾವುದೇ ದೊಂಬಿ ಅಥವಾ ಬಹಿರಂಗ ಹಿಂಸೆಯಿಂದಾಗಿ ತಡೆ ಅಥವಾ ಅಡ್ಡಿಯುಂಟಾದರೆ ಅಥವಾ ಚುನಾವಣೆಯಲ್ಲಿ ಯಾವುದೇ ಮತದಾನ ಕೇಂದ್ರ ಅಥವಾ ಸ್ಥಳದಲ್ಲಿ ಯಾವುದೇ ನೈಸರ್ಗಿಕ ವಿಪತ್ತಿನಿಂದಾಗಿ ಅಥವಾ ಇತರೆ ಯಾವುದೇ ಸಾಕಷ್ಟು ಕಾರಣದಿಂದಾಗಿ ಮತದಾನವನ್ನು ನಡೆಸುವುದು ಸಾಧ್ಯವಿಲ್ಲವೆಂದು ಸಂಬಂಧಪಟ್ಟ ಪ್ರಿಸೈಡಿಂಗ್ ಅಧಿಕಾರಿಗೆ ಮನದಟ್ಟಾದರೆ ಅಂತಹ ಅಧಿಕಾರಿಯು ಅಂಥ ಮತದಾನ ಕೇಂದ್ರ ಅಥವಾ ಸ್ಥಳದ ಕಾರ್ಯವ್ಯಾಪ್ತಿಯನ್ನು ಹೊಂದಿರುವ ರಿಟರ್ನಿಂಗ್ ಅಧಿಕಾರಿಗೆ ಸೂಕ್ತ ವರದಿ ಸಲ್ಲಿಸಿದ್ದಲ್ಲಿ ಅಂಥ ರಿಟರ್ನಿಂಗ್ ಅಧಿಕಾರಿಯು ಸಹಕಾರ ಚುನಾವಣಾ ಆಯೋಗದ ಪೂರ್ವಾನುಮೋದನೆಯೊಂದಿಗೆ, ಮುಂದೆ ಅಧಿಸೂಚಿಸತಕ್ಕಂಥ ದಿನಾಂಕದವರೆಗೆ ಅಂಥ ಮತದಾನ ಕೇಂದ್ರ ಅಥವಾ ಸ್ಥಳದ ಮತದಾನದ ಮುಂದೂಡುವಿಕೆಯನ್ನು ಪ್ರಕಟಿಸತಕ್ಕದ್ದು ಮತ್ತು ಮತದಾನವನ್ನು ಪ್ರಿಸೈಡಿಂಗ್ ಅಧಿಕಾರಿಯು ಮುಂದಕ್ಕೆ ಹಾಕತಕ್ಕದ್ದು.
ಪರಂತು, ಆ ಮತದಾನ ಕೇಂದ್ರ ಅಥವಾ ಸ್ಥಳದ ಮತದಾನಕ್ಕೆ ದೊಂಬಿ ಅಥವಾ ಬಹಿರಂಗ ಹಿಂಸೆಯಿಂದಾಗಿ ತಡೆ ಅಥವಾ ಅಡ್ಡಿ ಉಂಟಾಗಿದೆ ಎಂಬ ಬಗ್ಗೆ ಸಂಬಂಧಿಸಿದ ಪ್ರಿಸೈಡಿಂಗ್ ಅಧಿಕಾರಿಯು ಸ್ಥಳದ ಕಾರ್ಯವ್ಯಾಪ್ತಿ ಹೊಂದಿರುವ ತಹಶೀಲ್ದಾರನಿಂದ ಅಥವಾ ಪೊಲೀಸರಿಂದ ಒಂದು ವರದಿ ಅಥವಾ ಪ್ರಮಾಣಪತ್ರವನ್ನು ಪಡೆಯತಕ್ಕದ್ದು.
(2) ಮತದಾನವನ್ನು (1)ನೇ ಉಪನಿಯಮದ ಮೇರೆಗೆ ಮುಂದೂಡಿದಾಗ, ರಿಟರ್ನಿಂಗ್ ಅಧಿಕಾರಿಯು ಕೂಡಲೇ ಜಿಲ್ಲಾ ಚುನಾವಣಾಧಿಕಾರಿಗೆ ಮತ್ತು ಸಹಕಾರ ಚುನಾವಣಾ ಆಯೋಗಕ್ಕೆ ಪರಿಸ್ಥಿತಿಗಳ ಬಗ್ಗೆ ವರದಿ ಮಾಡತಕ್ಕದ್ದು ಮತ್ತು ಸಹಕಾರ ಚುನಾವಣಾ ಆಯೋಗದ ಪೂರ್ವಾನುಮೋದನೆ ಪಡೆದು ಸಾಧ್ಯವಾದಷ್ಟು ಬೇಗ ಆ ಮತದಾನ ಕೇಂದ್ರ ಅಥವಾ ಸ್ಥಳದಲ್ಲಿ ಮತದಾನವನ್ನು ಮುಂದೂಡುವುದಕ್ಕೆ ನಿಕಟಪೂರ್ವದಲ್ಲಿದ್ದಂಥ ಹಂತದಿಂದ ಮತದಾನವು ಪುನಃ ಪ್ರಾರಂಭವಾಗತಕ್ಕ ದಿನವನ್ನು ಮತ್ತು ಮತದಾನ ನಡೆಯುವ ಅವಧಿಯನ್ನು ಗೊತ್ತುಪಡಿಸಿ ನೋಟಿಸನ್ನು ಪ್ರಕಟಿಸತಕ್ಕದ್ದು. ರಿಟರ್ನಿಂಗ್ ಅಧಿಕಾರಿಯು ಮುಂದೆ ಹಾಕಿದ ಅಂಥ ಮತದಾನವನ್ನು ಪೂರ್ಣಗೊಳಿಸುವವರೆಗೆ ಆಡಳಿತ ಮಂಡಳಿಯ ಅಂಥ ಚುನಾವಣೆಯಲ್ಲಿ ಚಲಾಯಿಸಲಾದ ಮತಗಳ ಎಣಿಕೆಯನ್ನು ಮಾಡತಕ್ಕದ್ದಲ್ಲ.
(3) ರಿಟರ್ನಿಂಗ್ ಅಧಿಕಾರಿಯು (2)ನೇ ಉಪನಿಯಮದಡಿಯಲ್ಲಿ ನಿಗದಿಪಡಿಸಿದ ಮತದಾನದ ದಿನಾಂಕ, ಸ್ಥಳ ಮತ್ತು ವೇಳೆಯನ್ನು ಸಹಕಾರ ಚುನಾವಣಾ ಆಯೋಗವು ನಿರ್ದೇಶಿಸಬಹುದಾದಂಥ ರೀತಿಯಲ್ಲಿ ಪ್ರಕಟಿಸತಕ್ಕದ್ದು.
(4) ಯಾವುದೇ ಮತದಾನದ ಕೇಂದ್ರದಲ್ಲಿನ ಮತದಾನವನ್ನು (1)ನೇ ಉಪನಿಯಮದ ಮೇರೆಗೆ ಮುಂದೂಡಿದಾಗ, ರಿಟರ್ನಿಂಗ್ ಅಧಿಕಾರಿಯು ಅಂಥ ಮುಂದೂಡಿದ ಮತದಾನವು ನಡೆಯುವಂಥ ಮತದಾನ ಕೇಂದ್ರದ ಪ್ರಿಸೈಡಿಂಗ್ ಅಧಿಕಾರಿಗೆ ಮತದಾರರ ಪಟ್ಟಿಯ ಗುರುತು ಮಾಡಿದ ಪ್ರತಿಯನ್ನು ಮೊಹರು ಮಾಡಿದ ಪ್ಯಾಕೆಟ್ಟಿನಲ್ಲಿ ಮತ್ತು ಒಂದು ಹೊಸ ಮತಪೆಟ್ಟಿಗೆಯನ್ನು ಒದಗಿಸತಕ್ಕದ್ದು.
(5) ಯಾವುದೇ ಮತದಾನ ಕೇಂದ್ರದಲ್ಲಿನ ಮತದಾನವನ್ನು (1)ನೇ ಉಪನಿಯಮದ ಮೇರೆಗೆ ಮುಂದೂಡಿದರೆ, 5ಆರ್ ಯಿಂದ 5ಯು ಮತ್ತು 5ಡಬ್ಲೂ ಯಿಂದ 5 ಎಡಿ ವರೆಗಿನ ನಿಯಮಗಳ ಉಪಬಂಧಗಳು ಅಂಥ ಮುಂದೂಡಿದ ಮತದಾನ ನಡೆಸುವುದಕ್ಕೆ, ಅವು ಹಾಗೆ ಮುಂದೂಡುವ ಮುಂಚಿನ ಮತದಾನದ ಸಂಬಂಧದಲ್ಲಿ ಹೇಗೆ ಅನ್ವಯವಾಗುತ್ತವೋ ಹಾಗೆ ಅನ್ವಯವಾಗತಕ್ಕದ್ದು.
5ಎನ್. ಮತಪೆಟ್ಟಿಗೆಗಳ ನಾಶ ಇತ್ಯಾದಿ ಸಂದರ್ಭಗಳಲ್ಲಿ ಹೊಸ ಮತದಾನ: (1) ಯಾವುದೇ ಚುನಾವಣೆಯಲ್ಲಿ;-
(i) ಮತದಾನ ಕೇಂದ್ರ ಅಥವಾ ಸ್ಥಳದಲ್ಲಿ ಉಪಯೋಗಿಸಿದ ಯಾವುದೇ ಮತಪೆಟ್ಟಿಗೆಯನ್ನು ಪ್ರಿಸೈಡಿಂಗ್ ಅಧಿಕಾರಿ ಅಥವಾ ರಿಟರ್ನಿಂಗ್ ಅಧಿಕಾರಿಯ ಸುರಕ್ಷೆ (Custody) ಯಿಂದ ಕಾನೂನು ಬಾಹಿರವಾಗಿ ತೆಗೆದುಕೊಂಡು ಹೋದರೆ ಅಥವಾ ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ನಾಶಪಡಿಸಿದರೆ ಅಥವಾ ಅದು ಕಳೆದುಹೋದರೆ ಅಥವಾ ಆ ಮತದಾನ ಕೇಂದ್ರ ಅಥವಾ ಸ್ಥಳದಲ್ಲಿನ ಮತದಾನದ ಫಲಿತಾಂಶವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗದಷ್ಟು ಮಟ್ಟಿಗೆ ಅದನ್ನು ನಾಶಗೊಳಿಸಿದ್ದರೆ ಅಥವಾ ಕೆಡಿಸಿದ್ದರೆ;
ಅಥವಾ
(ii) ಮತದಾನ ಕೇಂದ್ರ ಅಥವಾ ಸ್ಥಳದಲ್ಲಿನ ಮತದಾನವನ್ನು ನಿರರ್ಥಗೊಳಿಸಲು ಸಂಭವವಿರುವ ಹಾಗೆ ಪ್ರಕ್ರಿಯೆಯಲ್ಲಿ ಯಾವುದೇ ತಪ್ಪು ಅಥವಾ ಅಕ್ರಮತೆಯನ್ನು ಮಾಡಿದ್ದರೆ, ಪ್ರಿಸೈಡಿಂಗ್ ಅಧಿಕಾರಿ ಅಥವಾ ರಿಟರ್ನಿಂಗ್ ಅಧಿಕಾರಿಯು ಆ ಸಂಗತಿಯನ್ನು ತಕ್ಷಣವೇ ಸಹಕಾರ ಚುನಾವಣಾ ಆಯೋಗಕ್ಕೆ ವರದಿ ಮಾಡತಕ್ಕದ್ದು.
ಪರಂತು, ಆ ಮತದಾನ ಕೇಂದ್ರ ಅಥವಾ ಸ್ಥಳದಲ್ಲಿ ಮತದಾನವನ್ನು ಮುಂದುವರಿಸುವುದು ಸಾಧ್ಯವಿಲ್ಲ ಅಥವಾ ಮತ ಎಣಿಕೆಯು ಅಸಾಧ್ಯವಾಗಿ ಪರಿಣಮಿಸಿದೆ ಎಂಬ ಬಗ್ಗೆ ಪ್ರಿಸೈಡಿಂಗ್ ಅಧಿಕಾರಿ ಅಥವಾ ರಿಟರ್ನಿಂಗ್ ಅಧಿಕಾರಿಯು ತಹಶೀಲ್ದಾರನಿಂದ ಅಥವಾ ಪೋಲಿಸರಿಂದ ಒಂದು ವರದಿ ಅಥವಾ ಪ್ರಮಾಣಪತ್ರವನ್ನು ಪಡೆಯತಕ್ಕದ್ದು.
ವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೪೮೩(2) ಸಹಕಾರ ಚುನಾವಣಾ ಆಯೋಗವು ಉಪಪ್ರಕರಣ (1) ರಲ್ಲಿಯೇ ಎಲ್ಲಾ ಮಹತ್ವದ ಸನ್ನಿವೇಶಗಳನ್ನು ಗಣನೆಗೆ ತೆಗೆದುಕೊಂಡ ತರುವಾಯ:-
(i) ಆ ಮತದಾನ ಕೇಂದ್ರ ಆಥವಾ ಸ್ಥಳದಲ್ಲಿನ ಮತದಾನವನ್ನು ಶೂನ್ಯವೆಂದು ಘೋಷಿಸತಕ್ಕದ್ದು. ಆ ಮತದಾನ ಕೇಂದ್ರ ಆಥವಾ ಸ್ಥಳದಲ್ಲಿ ಹೊಸದಾಗಿ ಮತದಾನವನ್ನು ನಡೆಸಲು ದಿವಸವನ್ನು ಗೊತ್ತುಪಡಿಸತಕ್ಕದ್ದು ಮತ್ತು ವೇಳೆಯನ್ನು ನಿಗದಿಪಡಿಸತಕ್ಕದ್ದು ಮತ್ತು ಹಾಗೆ ಗೊತ್ತು ಮಾಡಿದ ದಿನ ಮತ್ತು ಹಾಗೆ ನಿಗದಿಪಡಿಸಿದ ವೇಳೆಯನ್ನು ರಿಟರ್ನಿಂಗ್ ಅಧಿಕಾರಿಯ ಅಥವಾ ಸಹಾಯಕ ರಿಟರ್ನಿಂಗ್ ಅಧಿಕಾರಿಯ ಕಚೇರಿಯ ಸೂಚನಾ ಫಲಕದಲ್ಲಿ ಮತ್ತು ಸಹಕಾರಿಯ ಸೂಚನಾ ಫಲಕದಲ್ಲಿ ಪ್ರಕಟಿಸತಕ್ಕದ್ದು; ಅಥವಾ (ii) ಆ ಮತದಾನ ಕೇಂದ್ರ ಆಥವಾ ಸ್ಥಳದಲ್ಲಿನ ಹೊಸ ಮತದಾನವು ಯಾವುದೇ ರೀತಿಯಲ್ಲಿ ಸಾಮಾನ್ಯ ಚುನಾವಣೆಯ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲವೆಂದು ಅಥವಾ ಪ್ರಕ್ರಿಯೆಯಲ್ಲಿನ ತಪ್ಪು ಅಥವಾ ಅಕ್ರಮತೆಯು ಮಹತ್ವವಾದುದಲ್ಲವೆಂದು ಅಭಿಪ್ರಾಯಪಟ್ಟರೆ, ಚುನಾವಣೆ ನಡೆಸುವುದನ್ನು ಮುಂದುವರಿಸುವುದಕ್ಕಾಗಿ ಮತ್ತು ಪೂರ್ತಿಗೊಳಿಸುವುದಕ್ಕಾಗಿ ತಾನು ಉಚಿತವೆಂದು ಭಾವಿಸಬಹುದಾದಂಥ ನಿರ್ದೇಶನವನ್ನು ರಿಟರ್ನಿಂಗ್ ಅಧಿಕಾರಿಗೆ ನೀಡತಕ್ಕದ್ದು.
(3) ಅಧಿನಿಯಮದ ಮತ್ತು ನಿಯಮಗಳ ಉಪಬಂಧಗಳು ಮುಂದೂಡುವ ಮುಂಚಿನ ಮತದಾನಕ್ಕೆ ಅನ್ವಯವಾಗುವಂತೆಯೇ, (2)ನೇ ಉಪನಿಯಮದ ಮೇರೆಗಿನ ಪ್ರತಿಯೊಂದು ಮುಂದೂಡಿದ ಮತದಾನಕ್ಕೂ ಅನ್ವಯವಾಗತಕ್ಕದ್ದು.
5ಒ. ಮತಗಟ್ಟೆ ವಶಪಡಿಸುವ ಕಾರಣದ ಮೇಲೆ ಚುನಾವಣೆಯ ರದ್ದುಪಡಿಸುವಿಕೆ ಅಥವಾ ಮತದಾನದ ಮುಂದೂಡುವಿಕೆ: (1) ಯಾವುದೇ ಚುನಾವಣೆಯಲ್ಲಿ;-
(i) ಮತದಾನ ಕೇಂದ್ರದಲ್ಲಿ ಅಥವಾ ಮತದಾನಕ್ಕಾಗಿ ನಿಗದಿಪಡಿಸಿದ ಸ್ಥಳದಲ್ಲಿ ಮತದಾನದ ಫಲಿತಾಂಶವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲದೇ ಇರುವಂಥ ರೀತಿಯಲ್ಲಿ ಮತಗಟ್ಟೆಯನ್ನು ಬಲವಂತವಾಗಿ ವಶಪಡಿಸಿಕೊಂಡರೆ; ಅಥವಾ
(ii) ಮತ ಎಣಿಕೆ ಮಾಡುವ ಯಾವುದೇ ಸ್ಥಳದಲ್ಲಿ ಮತ ಎಣಿಕೆ ಫಲಿತಾಂಶವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲದೆ ಇರುವಂಥ ರೀತಿಯಲ್ಲಿ ಮತಗಟ್ಟೆಯನ್ನು ಬಲವಂತವಾಗಿ ವಶಪಡಿಸಿಕೊಂಡರೆ;
ರಿಟರ್ನಿಂಗ್ ಅಧಿಕಾರಿಯು ಸಂಗತಿಯನ್ನು ಕೂಡಲೇ ಸಹಕಾರ ಚುನಾವಣಾ ಆಯೋಗಕ್ಕೆ ಮತ್ತು ಜಿಲ್ಲಾ ಚುನಾವಣಾಧಿಕಾರಿಗೆ ವರದಿ ಮಾಡತಕ್ಕದ್ದು.
ಪರಂತು, ಆ ಮತದಾನ ಕೇಂದ್ರ ಅಥವಾ ಸ್ಥಳದಲ್ಲಿ ಬಲವಂತವಾಗಿ ಮತಗಟ್ಟೆಯನ್ನು ವಶಪಡಿಸಿಕೊಂಡಿದ್ದರಿಂದ ಮತದಾನದ ಫಲಿತಾಂಶವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಬಗ್ಗೆ ರಿಟರ್ನಿಂಗ್ ಅಧಿಕಾರಿಯು ಕಾರ್ಯವ್ಯಾಪ್ತಿಯ ತಹಶೀಲ್ದಾರನಿಂದ ಅಥವಾ ಪೊಲೀಸರಿಂದ ಒಂದು ವರದಿ ಅಥವಾ ಪ್ರಮಾಣಪತ್ರವನ್ನು ಪಡೆಯತಕ್ಕದ್ದು.
(2) ಸಹಕಾರ ಚುನಾವಣಾ ಆಯೋಗವು (1)ನೇ ಉಪನಿಯದಡಿಯಲ್ಲಿ ರಿಟರ್ನಿಂಗ್ ಅಧಿಕಾರಿಯಿಂದ ವರಿದಿಯನ್ನು ಸ್ವೀಕರಿಸಿದ ಮೇಲೆ ಮತ್ತು ಎಲ್ಲಾ ಮಹತ್ವದ ಸನ್ನಿವೇಶಗಳನ್ನು ಗಣನೆಗೆ ತೆಗೆದುಕೊಂಡ ತರುವಾಯ:
(i) ಆ ಮತದಾನ ಕೇಂದ್ರ ಆಥವಾ ಸ್ಥಳದಲ್ಲಿನ ಮತದಾನವನ್ನು ಶೂನ್ಯವೆಂದು ಘೋಷಿಸತಕ್ಕದ್ದು. ಆ ಮತದಾನ ಕೇಂದ್ರ ಅಥವಾ ಸ್ಥಳದಲ್ಲಿ ಹೊಸದಾಗಿ ಮತದಾನವನ್ನು ನಡೆಸಲು ದಿವಸವನ್ನು ಗೊತ್ತುಪಡಿಸತಕ್ಕದ್ದು ಮತ್ತು ವೇಳೆಯನ್ನು ನಿಗದಿಪಡಿಸತಕ್ಕದ್ದು ಮತ್ತು ಹಾಗೆ ಗೊತ್ತು ಮಾಡಿದ ದಿನ ಮತ್ತು ಹಾಗೆ ನಿಗದಿಪಡಿಸಿದ ವೇಳೆಯನ್ನು ರಿಟರ್ನಿಂಗ್ ಅಧಿಕಾರಿಯ ಅಥವಾ ಸಹಾಯಕ ರಿಟರ್ನಿಂಗ್ ಅಧಿಕಾರಿಯ ಕಚೇರಿಯ ಸೂಚನಾ ಫಲಕದಲ್ಲಿ ಮತ್ತು ಸಹಕಾರಿಯ ಸೂಚನಾ ಫಲಕದಲ್ಲಿ ಪ್ರಕಟಿಸತಕ್ಕದ್ದು; ಅಥವಾ (ii) ಹೆಚ್ಚಿನ ಸಂಖ್ಯೆಯ ಮತದಾನ ಕೇಂದ್ರಗಳಲ್ಲಿ ಅಥವಾ ಸ್ಥಳಗಳಲ್ಲಿ ಮತಗಟ್ಟೆಯನ್ನು ಬಲವಂತವಾಗಿ ವಶಪಡಿಸಿಕೊಂಡಿದ್ದು, ಅದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೆಂದು ಅಥವಾ ಮತಗಟ್ಟೆಯ ಸ್ವಾಧೀನತೆಯು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವಂತಹ ರೀತಿಯಲ್ಲಿ ಮತಗಳ ಎಣಿಕೆಯನ್ನು ಬಾಧಿಸುವುದೆಂದು ಅಭಿಪ್ರಾಯಪಟ್ಟರೆ, ಆ ಚುನಾವಣೆಯನ್ನು ರದ್ದುಪಡಿಸತಕ್ಕದ್ದು.
ವಿವರಣೆ: ಈ ನಿಯಮದ ಉದ್ದೇಶಗಳಿಗಾಗಿ 'ಮತಗಟ್ಟೆಯನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದು' ಎಂಬುದು ಇತರ ವಿಷಯಗಳೊಂದಿಗೆ ಈ ಮುಂದಿನ ಎಲ್ಲಾ ಅಥವಾ ಯಾವುದೇ ಚಟುವಟಿಕೆಗಳನ್ನು ಒಳಗೊಳ್ಳುತ್ತದೆ, ಎಂದರೆ,-
(ಎ) ಯಾವನೇ ವ್ಯಕ್ತಿಯು ಅಥವಾ ವ್ಯಕ್ತಿಗಳು ಮತದಾನ ಕೇಂದ್ರವನ್ನು ಆಥವಾ ಮತದಾನಕ್ಕಾಗಿ ಗೊತ್ತುಪಡಿಸಿರುವ ಸ್ಥಳವನ್ನು ಬಲಾತ್ಕಾರವಾಗಿ ಹಿಡಿದಿಟ್ಟುಕೊಳ್ಳುವುದು, ಮತದಾನ ಪ್ರಾಧಿಕಾರಿಗಳು ಮತಪತ್ರಗಳನ್ನು ಅಥವಾ ಮತಪೆಟ್ಟಿಗೆಗಳನ್ನು ಬಲವಂತವಾಗಿ ವಶಕ್ಕೆ ಒಪ್ಪಿಸುವಂತೆ ಮಾಡುವುದು ಮತ್ತು ಚುನಾವಣೆಗಳು ಶಾಂತಿಯುತವಾಗಿ ನಡೆಯುವುದಕ್ಕೆ ಬಾಧಕವನ್ನು ಉಂಟುಮಾಡುವಂಥ ಇತರ ಯಾವುದೇ ಕೃತ್ಯಗಳನ್ನು ಮಾಡುವುದು;
(ಬಿ) ಯಾವನೇ ವ್ಯಕ್ತಿಯು ಅಥವಾ ವ್ಯಕ್ತಿಗಳು ಒಂದು ಮತದಾನ ಕೇಂದ್ರ ಅಥವಾ ಮತದಾನಕ್ಕೆ ಗೊತ್ತುಪಡಿಸಿರುವ ಸ್ಥಳವನ್ನು ಬಲವಂತವಾಗಿ ವಶಕ್ಕೆ ತೆಗೆದುಕೊಳ್ಳುವುದು ಮತ್ತು ಅವನ ಅಥವಾ ಅವರ ಬೆಂಬಲಿಗರು ಮಾತ್ರ ತಮ್ಮ ಮತದಾನ ಹಕ್ಕನ್ನು ಚಲಾಯಿಸಲು ಅವಕಾಶ ಮಾಡಿಕೊಟ್ಟು ಇತರರು ಮತ ಚಲಾಯಿಸದಂತೆ ತಡೆಯುವುದು;
(ಸಿ) ಯಾವನೇ ಮತದಾರನಿಗೆ ಬೆದರಿಕೆ ಹಾಕಿ ಅಥವಾ ಭಯಹುಟ್ಟಿಸಿ ಅಥವಾ ಬಲಾತ್ಕರಿಸಿ ಅವನು ತನ್ನ ಮತ ಚಲಾಯಿಸಲು ಮತದಾನ ಕೇಂದ್ರಕ್ಕೆ ಅಥವಾ ಮತದಾನಕ್ಕೆ ಗೊತ್ತುಪಡಿಸಿರುವ ಸ್ಥಳಕ್ಕೆ ಹೋಗದಂತೆ ತಡೆಯುವುದು;
(ಡಿ) ಯಾವನೇ ವ್ಯಕ್ತಿ ಅಥವಾ ವ್ಯಕ್ತಿಗಳು ಮತಗಳ ಎಣಿಕೆ ಮಾಡುವ ಸ್ಥಳವನ್ನು ಬಲಾತ್ಕಾರವಾಗಿ ಹಿಡಿದಿಟ್ಟುಕೊಳ್ಳುವುದು, ಎಣಿಕೆ ಮಾಡುವ ಪ್ರಾಧಿಕಾರಿಗಳು ಮತಪತ್ರಗಳನ್ನು ಅಥವಾ ಮತಪೆಟ್ಟಿಗೆಗಳನ್ನು ಬಲವಂತವಾಗಿ ಒಪ್ಪಿಸುವಂತೆ ಮಾಡುವುದು ಮತ್ತು ಮತಗಳನ್ನು ಶಾಂತಿಯುತವಾಗಿ ಎಣಿಸುವ ಕಾರ್ಯಕ್ಕೆ ಬಾಧಕವನ್ನು ಉಂಟುಮಾಡುವಂತೆ ಯಾವುದೇ ಕೃತ್ಯ ಮಾಡುವುದು;
(ಇ) ಯಾವುದೇ ಅಭ್ಯರ್ಥಿಯು ಚುನಾಯಿತನಾಗುವ ಸಾಧ್ಯತೆಗೆ ಪ್ರೋತ್ಸಾಹ ನೀಡುವಲ್ಲಿ, ಸರ್ಕಾರಿ ಸೇವೆಯಲ್ಲಿರುವ ಯಾವನೇ ವ್ಯಕ್ತಿಯು ಮೇಲೆ ಹೇಳಲಾದ ಎಲ್ಲಾ ಅಥವಾ ಯಾವುದೇ ಚಟುವಟಿಕೆಗಳನ್ನು ಮಾಡುವುದು ಅಥವಾ ಅಂಥ ಚಟುವಟಿಕೆಗೆ ಪ್ರೋತ್ಸಾಹ ಒದಗಿಸುವುದು ಅಥವಾ ಅದನ್ನು ಕಂಡೂ ಕಾಣದಂತಿರುವುದು.
ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೪೮೪5ಪಿ. ಮತದಾನ ಮಾಡುವ ರೀತಿ: ಮತದಾನವನ್ನು ನಡೆಸುವ ಪ್ರತಿಯೊಂದು ಚುನಾವಣೆಯಲ್ಲಿ ಮತಗಳನ್ನು ಮತಪತ್ರಗಳ ಮೂಲಕ ನೀಡತಕ್ಕದ್ದು ಮತ್ತು ಚುನಾವಣೆಯಲ್ಲಿ ಮತ ನೀಡುವ ಎಲ್ಲಾ ಮತದಾರರು (ಸದಸ್ಯರು / ಪ್ರತಿನಿಧಿಗಳು / ಡೆಲಿಗೇಟುಗಳು) ಮತದಾನ ಕೇಂದ್ರದಲ್ಲಿ ಖುದ್ದಾಗಿ ಮತ ನೀಡತಕ್ಕದ್ದು ಮತ್ತು ಯಾವ ಮತವನ್ನೂ ಪ್ರಾಕ್ಸಿ ಮೂಲಕ ದಾಖಲಿಸಲು ಅನುಮತಿಸತಕ್ಕದ್ದಲ್ಲ್ಲ.
5ಕ್ಯೂ. ಮತಪತ್ರ ಮತ್ತು ಮತಪೆಟ್ಟಿಗೆ: ಪ್ರತಿಯೊಂದು ಮತಪತ್ರಕ್ಕೆ ಅದಕ್ಕೆ ಲಗತ್ತಿಸಿದ ಒಂದು ಪಕ್ಕಪ್ರತಿ (counterfoil) ಇರತಕ್ಕದ್ದು ಮತ್ತು ಸದರಿ ಮತಪತ್ರವು ಮತ್ತು ಪಕ್ಕಪ್ರತಿಯು ನಮೂನೆ 2 ಹೆಚ್ ನಲ್ಲಿ ಇರತಕ್ಕದ್ದು.
(1) ಮತಪತ್ರಗಳ ಕ್ರಮ ಸಂಖ್ಯೆಯನ್ನು ಮತಪತ್ರದ ಪಕ್ಕಪ್ರತಿಯಲ್ಲಿ ಮುದ್ರಿಸತಕ್ಕದ್ದು.
(2) ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳ ಹೆಸರು ಒಂದೇ ಆಗಿದ್ದರೆ ಅವರ ಉದ್ಯೋಗ ಅಥವಾ ವಾಸಸ್ಥಳವನ್ನು ಸೇರಿಸುವ ಮೂಲಕ ಅಥವಾ ಇತರೆ ಸೂಕ್ತ ರೀತಿಯಲ್ಲಿ ಅವರನ್ನು ರಿಟರ್ನಿಂಗ್ ಅಧಿಕಾರಿ ಗುರುತಿಸತಕ್ಕದ್ದು.
(3) ಮತಪತ್ರವು ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರುಗಳನ್ನು ಕನ್ನಡ ವರ್ಣಮಾಲಾ ಕ್ರಮದಲ್ಲಿ ಜೋಡಿಸಿದಂತೆ ಒಳಗೊಂಡಿರತಕ್ಕದ್ದು ಮತ್ತು ಅದನ್ನು ಬೆರಳಚ್ಚಿಸತಕ್ಕದ್ದು ಅಥವಾ ನಕಲಚ್ಚಿಸತಕ್ಕದ್ದು ಅಥವಾ ಮುದ್ರಿಸತಕ್ಕದ್ದು. ಮತಪತ್ರದ ಹಿಂಭಾಗದಲ್ಲಿ ರಿಟರ್ನಿಂಗ್ ಅಧಿಕಾರಿ ಅಥವಾ ಪ್ರಿಸೈಡಿಂಗ್ ಅಧಿಕಾರಿಯು ತನ್ನ ಮೊಹರು ಮತ್ತು ಕಿರುಸಹಿ ಹಾಕಲು ಅವಕಾಶವಿರತಕ್ಕದ್ದು. ಒಬ್ಬ ಮತದಾರನು ತಾನು ಯಾವ ಅಭ್ಯರ್ಥಿಗೆ ಮತನೀಡಲು ಬಯಸುತ್ತಾನೋ ಅಂಥ ಅಭ್ಯರ್ಥಿಗಳ ಹೆಸರು ಅಥವಾ ಹೆಸರುಗಳ ಮುಂದೆ x ಎಂಬ ಗುರುತನ್ನು ಹಾಕಲು ಮತಪತ್ರವು ಒಂದು ಕಾಲಂನ್ನು ಒಳಗೊಂಡಿರತಕ್ಕದ್ದು.
(4) ರಿಟರ್ನಿಂಗ್ ಅಧಿಕಾರಿ ಅಥವಾ ಸಹಾಯಕ ಅಧಿಕಾರಿಯು ಮತಪತ್ರವನ್ನು ಮುದ್ರಿಸುವ ಉದ್ದೇಶಕ್ಕಾಗಿ ಸೂಕ್ತ ಮುದ್ರಣಾಲಯವನ್ನು ಆಯ್ಕೆಮಾಡಿಕೊಳ್ಳತಕ್ಕದ್ದು.
(5) ರಿಟರ್ನಿಂಗ್ ಅಧಿಕಾರಿ ಅಥವಾ ಸಹಾಯಕ ಅಧಿಕಾರಿಯು ಮತಪೆಟ್ಟಿಗೆ / ಪೆಟ್ಟಿಗೆಗಳನ್ನು ವ್ಯವಸ್ಥೆ ಮಾಡತಕ್ಕದ್ದು.
5ಆರ್. ಮತದಾನ ಕೇಂದ್ರಗಳಲ್ಲಿನ ವ್ಯವಸ್ಥೆ: (1) ಪ್ರತಿಯೊಂದು ಮತದಾನ ಕೇಂದ್ರದ ಹೊರಗೆ-
(ಎ) ಮತದಾನ ಕೇಂದ್ರದಲ್ಲಿ ಮತ ನೀಡಲು ಹಕ್ಕುಳ್ಳ ಮತದಾರರ (ಸದಸ್ಯರ ಅಥವಾ ಪ್ರತಿನಿಧಿಗಳ ಅಥವಾ ಡೆಲಿಗೇಟುಗಳ) ವಿವರಗಳನ್ನು ಮತ್ತು ಮತದಾನ ಪ್ರದೇಶವನ್ನು ನಿರ್ದಿಷ್ಟಪಡಿಸುವ ನೋಟಿಸನ್ನು; ಮತ್ತು
(ಬಿ) ಸ್ಪರ್ಧಿಸಿರುವ ಅಭ್ಯರ್ಥಿಗಳ ಪಟ್ಟಿಯ ಒಂದು ಪ್ರತಿಯನ್ನು ಪ್ರದರ್ಶಿಸತಕ್ಕದ್ದು.
(2) ಪ್ರತಿಯೊಂದು ಮತದಾನ ಕೇಂದ್ರದಲ್ಲಿ ಮತದಾರರು ಇನ್ನಿತರರಿಗೆ ಕಾಣದಂತೆ ತಮ್ಮ ಮತಗಳನ್ನು ಚಲಾಯಿಸಬಹುದಾದಂಥ ಒಂದು ಅಥವಾ ಹೆಚ್ಚು ಮತದಾನದ ಪ್ರತ್ಯೇಕ ವಿಭಾಗಗಳನ್ನು ಸ್ಥಾಪಿಸತಕ್ಕದ್ದು.
(3) ರಿಟರ್ನಿಂಗ್ ಅಧಿಕಾರಿಯು ಪ್ರತಿಯೊಂದು ಮತದಾನ ಕೇಂದ್ರಕ್ಕೆ ಸಾಕಷ್ಟು ಸಂಖ್ಯೆಯ ಮತಪೆಟ್ಟಿಗೆಗಳು, ಮತದಾರರ ಪಟ್ಟಿಯ ಪ್ರತಿಗಳು, ಮತಪತ್ರಗಳು, ಮತಪತ್ರಗಳಿಗೆ ಗುರುತು ಮಾಡುವುದಕ್ಕಾಗಿ ಮತದಾರರಿಗೆ ಅಗತ್ಯ ಇರುವ ವಸ್ತುಗಳು ಮತ್ತು ಮತದಾನ ನಡೆಸುವುದಕ್ಕೆ ಅಗತ್ಯ ಇರುವ ವಸ್ತುಗಳು ಮತ್ತು ಮತದಾನ ನಡೆಸುವುದಕ್ಕೆ ಅಗತ್ಯವಿರುವಂಥ ಇತರೆ ಸಾಮಗ್ರಿಗಳನ್ನು ಒದಗಿಸತಕ್ಕದ್ದು.
(4) ಮತದಾನ ಕೇಂದ್ರ ಅಥವಾ ಸ್ಥಳದ ನೂರು ಮೀಟರ್ ಒಳಗೆ, ಚುನಾವಣೆ ಆರಂಭದಿಂದ ಅಂತ್ಯವಾಗುವವರೆಗೆ ಪ್ರಚಾರ ಮಾಡುವುದನ್ನು ಅಥವಾ ಮತ ಯಾಚಿಸುವುದನ್ನು ಪೂರ್ಣವಾಗಿ ನಿಷೇಧಿಸತಕ್ಕದ್ದು.
5ಎಸ್. ಮತದಾನ ಕೇಂದ್ರಗಳಿಗೆ ಪ್ರವೇಶ: ಪ್ರಿಸೈಡಿಂಗ್ ಅಧಿಕಾರಿಯು ಮತದಾನ ಕೇಂದ್ರದ ಒಳಗಡೆ ಯಾವುದೇ ಒಂದು ಕಾಲದಲ್ಲಿ ಪ್ರವೇಶ ಮಾಡತಕ್ಕ ಮತದಾರರ ಸಂಖ್ಯೆಯನ್ನು ನಿಯಂತ್ರಿಸತಕ್ಕದ್ದು ಮತ್ತು
(ಎ) ಪೋಲಿಂಗ್ ಅಧಿಕಾರಿಗಳನ್ನು;
(ಬಿ) ಚುನಾವಣೆಗೆ ಸಂಬಂಧಿಸಿದಂತೆ ಕರ್ತವ್ಯದ ಮೇಲಿರುವಂಥ ಸಾರ್ವಜನಿಕ ನೌಕರರನ್ನು;
(ಸಿ) ಜಿಲ್ಲಾ ಚುನಾವಣಾಧಿಕಾರಿಯಿಂದ ಮತ್ತು ಸಹಕಾರ ಚುನಾವಣಾ ಆಯೋಗದಿಂದ ಪ್ರಾಧಿಕೃತರಾದ ವ್ಯಕ್ತಿಗಳನ್ನು;
(ಡಿ) ಅಭ್ಯರ್ಥಿಗಳನ್ನು ಅಥವಾ ಅವರ ಅಧಿಕೃತ ಏಜೆಂಟರನ್ನು;
(ಇ) ಮತದಾರರ ಸಂಗಡ ಇರುವ ಕೈಕೂಸನ್ನು;
(ಎಫ್) ಸಹಾಯವಿಲ್ಲದೆ ಚಲಿಸಲು ಸಾಧ್ಯವಿಲ್ಲದಂಥ ಅಂಧ ಅಥವಾ ಅಶಕ್ತ ಮತದಾರರ ಜೊತೆಗೆ ಬರುವ ವ್ಯಕ್ತಿಯನ್ನು;
(ಜಿ) ಚುನಾವಣೆಯ ಉದ್ದೇಶಕ್ಕಾಗಿ ರಿಟರ್ನಿಂಗ್ ಅಧಿಕಾರಿ ಅಥವಾ ಪ್ರಿಸೈಡಿಂಗ್ ಅಧಿಕಾರಿಯು ನಿಯೋಜಿಸಬಹುದಾದಂಥ ಇತರ ವ್ಯಕ್ತಿಗಳನ್ನು - ಹೊರತುಪಡಿಸಿ ಇತರ ಎಲ್ಲ ವ್ಯಕ್ತಿಗಳ ಪ್ರವೇಶವನ್ನು ನಿಷೇಧಿಸತಕ್ಕದ್ದು.
5ಟಿ. ಮತದಾರರ ಗುರುತಿಸುವಿಕೆ: (1) ಮತದಾನ ಮಾಡುವ ಸ್ಥಳದಲ್ಲಿ ಒಂದು ರಿಜಿಸ್ಟರ್ನ್ನು ಇಟ್ಟಿರತಕ್ಕದ್ದು ಮತ್ತು ಪ್ರತಿಯೊಬ್ಬ ಮತದಾರನು ನಿಯಮ 4ರಡಿ ನೀಡಲಾದ ಗುರುತಿನ ಕಾರ್ಡನ್ನು ಹಾಜರುಪಡಿಸಿ ರಿಜಿಸ್ಟರ್ನಲ್ಲಿ ಸಹಿ ಮಾಡತಕ್ಕದ್ದು.
(2) ಪ್ರತಿಯೊಬ್ಬ ಮತದಾರನು ಮತದಾನ ಕೇಂದ್ರವನ್ನು ಪ್ರವೇಶಿಸುತ್ತಿದ್ದಂತೆ ಪ್ರಿಸೈಡಿಂಗ್ ಅಧಿಕಾರಿ ಅಥವಾ ಈ ಬಗ್ಗೆ ಅವನಿಂದ ಅಧಿಕೃತನಾದ ಪೋಲಿಂಗ್ ಅಧಿಕಾರಿಯು ಮತದಾರರ ಪಟ್ಟಿಯಲ್ಲಿ ಸುಸಂಗತ ನಮೂದುಗಳೊಂದಿಗೆ ಮತದಾರನ ಹೆಸರು ಮತ್ತು ಇತರ ವಿವರಗಳು ಇವೆಯೇ ಎಂಬುದನ್ನು ಪರಿಶೀಲಿಸತಕ್ಕದ್ದು ಮತ್ತು ಆಮೇಲೆ ಕ್ರಮಸಂಖ್ಯೆ, ಹೆಸರು ಮತ್ತು ಇತರ ವಿವರಗಳನ್ನು ಘೋಷಿಸತಕ್ಕದ್ದು.
ವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೪೮೫(3) ಮತಪತ್ರವನ್ನು ಪಡೆಯಲು ವ್ಯಕ್ತಿಯ ಹಕ್ಕನ್ನು ತೀರ್ಮಾನಿಸುವಲ್ಲಿ, ಸಂದರ್ಭಾನುಸಾರ ಪ್ರಿಸೈಡಿಂಗ್ ಅಧಿಕಾರಿ ಅಥವಾ ಪೋಲಿಂಗ್ ಅಧಿಕಾರಿಯು ಅಂಥ ವ್ಯಕ್ತಿಯ ಗುರುತು ಅಂಥ ನಮೂದು ಸಂಬಂಧಪಡುವ ಮತದಾರನೊಂದಿಗೆ ಹೋಲುತ್ತದೆಂದು ಅವನಿಗೆ ಮನದಟ್ಟಾದರೆ ಮತದಾರರ ಪಟ್ಟಿಯಲ್ಲಿನ ನಮೂದಿನಲ್ಲಿರುವ ಕೇವಲ ಲಿಪಿಕ ಅಥವಾ ಬೆರಳಚ್ಚಿನ ಅಥವಾ ಮುದ್ರಣ ದೋಷಗಳನ್ನು ಕಡೆಗಣಿಸತಕ್ಕದ್ದು. 5ಯು. ಮತದಾನಕ್ಕಾಗಿ ಮತಪೆಟ್ಟಿಗೆಗಳ ಸಿದ್ಧತೆ: (1) ಮತದಾನವು ಪ್ರಾರಂಭವಾಗುವ ಪೂರ್ವದಲ್ಲಿ, ಪ್ರಸಂಗಾನುಸಾರ ರಿಟರ್ನಿಂಗ್ ಅಧಿಕಾರಿಯು ಅಥವಾ ಪ್ರಿಸೈಡಿಂಗ್ ಅಧಿಕಾರಿಯು, ಮತಪೆಟ್ಟಿಗೆಯು ಖಾಲಿ ಇದೆ ಎಂಬುದನ್ನು ಆ ಸಮಯದಲ್ಲಿ ಹಾಜರಿದ್ದ ಎಲ್ಲಾ ವ್ಯಕ್ತಿಗಳಿಗೆ ತೋರಿಸತಕ್ಕದ್ದು ಮತ್ತು ಅಂಥ ವ್ಯಕ್ತಿಗಳಿಗೆ ಪೂರ್ಣವಾಗಿ ಕಾಣುವಂತೆ ಮತಪೆಟ್ಟಿಗೆಯನ್ನು ಮುಚ್ಚಿ ಮೊಹರು ಮಾಡಿ ಭದ್ರಪಡಿಸತಕ್ಕದ್ದು. ಮತಪೆಟ್ಟಿಗೆಯನ್ನು ಭದ್ರಪಡಿಸುವುದಕ್ಕಾಗಿ ಪ್ರಿಸೈಡಿಂಗ್ ಅಧಿಕಾರಿಯು ಉಪಯೋಗಿಸಿದ ಮೊಹರನ್ನು ಅದನ್ನು ಒಡೆಯದೇ ಆ ಮತಪೆಟ್ಟಿಗೆಯನ್ನು ತರುವಾಯ ತೆರೆಯಲು ಸಾಧ್ಯವಾಗದಂಥ ರೀತಿಯಲ್ಲಿ ಅಂಟಿಸತಕ್ಕದ್ದು.
(2) ಮತದಾನ ಕೇಂದ್ರದಲ್ಲಿ ಉಪಯೋಗಿಸಿದ ಪ್ರತಿಯೊಂದು ಮತಪೆಟ್ಟಿಗೆಯ ಒಳಗೆ ಮತ್ತು ಹೊರಗೆ ಎರಡೂ ಕಡೆಯಲ್ಲಿ:
(i) ಮತಕ್ಷೇತ್ರದ ಹೆಸರು;
(ii) ಮತದಾನ ಕೇಂದ್ರದ ಹೆಸರು;
(iii) ಮತಪೆಟ್ಟಿಗೆಯ ಕ್ರಮಸಂಖ್ಯೆ (ಮತದಾನದ ಕೊನೆಯಲ್ಲಿ ಮತಪೆಟ್ಟಿಗೆಯ ಹೊರಗಡೆ ಮಾತ್ರ ಲೇಬಲ್ಲಿನ ಮೇಲೆ ಭರ್ತಿ ಮಾಡಬೇಕು); ಮತ್ತು
(iv) ಮತದಾನದ ದಿನಾಂಕ -
ಇವುಗಳನ್ನು ಗುರುತು ಮಾಡಿದ ಲೇಬಲ್ಲುಗಳನ್ನು ಹೊಂದಿರತಕ್ಕದ್ದು.
5ವಿ . ಮತದಾರರಿಗೆ ಮತಪತ್ರಗಳನ್ನು ಕೊಡುವುದು: (1) ಮತದಾರನಿಗೆ ಅದನ್ನು ಕೊಡುವುದಕ್ಕೆ ಮುಂಚೆ ಪ್ರತಿಯೊಂದು ಮತಪತ್ರ ಮತ್ತು ಅದಕ್ಕೆ ಲಗತ್ತಾದ ಪಕ್ಕ ಪ್ರತಿಗೆ ಹಿಂಭಾಗದಲ್ಲಿ ಸಹಕಾರ ಚುನಾವಣಾ ಆಯೋಗವು ನಿರ್ದೇಶಿಸಬಹುದಾದಂಥ ವಿಭಿನ್ನತಾ ಗುರುತುಗಳನ್ನು ಮುದ್ರೆ ಹಾಕತಕ್ಕದ್ದು ಮತ್ತು ಪ್ರತಿಯೊಂದು ಮತಪತ್ರಕ್ಕೆ ಅದನ್ನು ಕೊಡುವುದಕ್ಕೆ ಮುಂಚೆ ಅದರ ಹಿಂಭಾಗದಲ್ಲಿ ಪ್ರಿಸೈಡಿಂಗ್ ಅಧಿಕಾರಿಯು ಪೂರ್ಣ ರುಜು ಮಾಡತಕ್ಕದ್ದು.
(2) ಮತದಾರನಿಗೆ ಮತಪತ್ರವನ್ನು ಕೊಡುವ ಕಾಲದಲ್ಲಿ, ಪೋಲಿಂಗ್ ಅಧಿಕಾರಿಯು:
(ಎ) ಮತದಾರರ ಪಟ್ಟಿಯಲ್ಲಿ ನಮೂದಿಸಿರುವಂತೆ ಮತದಾರನ ಸಂಖ್ಯೆಯನ್ನು ಅದರ ಪಕ್ಕಪ್ರತಿಯ ಮೇಲೆ ದಾಖಲು ಮಾಡತಕ್ಕದ್ದು ಮತ್ತು ಮತದಾರನ ರುಜು ಅಥವಾ ಹೆಬ್ಬೆಟ್ಟಿನ ಗುರುತನ್ನು ಪಡೆಯತಕ್ಕದ್ದು.
(ಬಿ) ಆ ಮತದಾರನಿಗೆ ಕೊಟ್ಟ ಮತಪತ್ರದ ಕ್ರಮ ಸಂಖ್ಯೆಯನ್ನು ಅದರಲ್ಲಿ ದಾಖಲು ಮಾಡದೆ, ಅವನಿಗೆ ಮತಪತ್ರವನ್ನು ಕೊಡಲಾಗಿದೆಯೆಂಬುದನ್ನು ತೋರಿಸಲು ಮತದಾರರ ಪಟ್ಟಿಯಲ್ಲಿ ಆ ಮತದಾರನ ಹೆಸರಿಗೆ ಗುರುತು ಮಾಡತಕ್ಕದ್ದು.
ಪರಂತು, ಮತದಾರನಿಗೆ ಅವನು ಪಕ್ಕ ಪ್ರತಿಯ ಮೇಲೆ ತನ್ನ ರುಜು ಮಾಡಿದ ಅಥವಾ ಹೆಬ್ಬೆಟ್ಟಿನ ಗುರುತನ್ನು ಹಾಕಿದ ಹೊರತು ಮತಪತ್ರವನ್ನು ಕೊಡತಕ್ಕದ್ದಲ್ಲ.
ಮತ್ತು ಪರಂತು, ಮತದಾನವನ್ನು ಮುಕ್ತಾಯಗೊಳಿಸಲು ನಿಗದಿಗೊಳಿಸಿದ ವೇಳೆಗೆ ಮುಂಚೆ ಗುರುತಿನ ಚೀಟಿಗಳನ್ನು ಹಾಜರುಪಡಿಸಿ ರಿಜಿಸ್ಟರಿನಲ್ಲಿ ಸಹಿ ಮಾಡಿದವರೆಲ್ಲರಿಗೂ ಮತಪತ್ರವನ್ನು ನೀಡತಕ್ಕದ್ದು ಮತ್ತು ಮತ ನೀಡಲು ಅನುಮತಿಸತಕ್ಕದ್ದು.
5ಡಬ್ಲ್ಯೂ. ಮತದಾನ ಕೇಂದ್ರದೊಳಗೆ ಮತದಾರರು ಮತದಾನದ ಬಗ್ಗೆ ರಹಸ್ಯವನ್ನು ಕಾಪಾಡುವುದು ಮತ್ತು ಮತದಾನ ಪ್ರಕ್ರಿಯೆ: ಮತಪತ್ರವನ್ನು ಕೊಡಲಾದ ಪ್ರತಿಯೊಬ್ಬ ಮತದಾರನು ಮತದಾನ ಕೇಂದ್ರದೊಳಗೆ ಮತದಾನ ಮಾಡಿದ ಬಗ್ಗೆ ರಹಸ್ಯವನ್ನು ಕಾಪಾಡತಕ್ಕದ್ದು ಮತ್ತು ಆ ಉದ್ದೇಶಕ್ಕಾಗಿ ಮತದಾನದ ಪ್ರಕ್ರಿಯೆಯನ್ನು ಅನುಸರಿಸತಕ್ಕದ್ದು.
5ಎಕ್ಸ್ . ದೃಷ್ಟಿಹೀನ ಮತ್ತು ಅಶಕ್ತ ಮತದಾರರ ಮತಗಳನ್ನು ದಾಖಲು ಮಾಡುವುದು: (1) ಕುರುಡುತನ ಅಥವಾ ಇತರ ದೈಹಿಕ ಅಶಕ್ತತೆಯಿಂದಾಗಿ ಮತದಾರನು ಮತಪತ್ರದ ಮೇಲಿನ ಚಿಹ್ನೆಗಳನ್ನು ಗುರುತಿಸಲು ಅಥವಾ ಸಹಾಯವಿಲ್ಲದೆ ಅದರ ಮೇಲೆ ಗುರುತು ಮಾಡಲು ಅಸಮರ್ಥನೆಂದು ಪ್ರಿಸೈಡಿಂಗ್ ಅಧಿಕಾರಿಗೆ ಮನದಟ್ಟಾದರೆ, ಪ್ರಿಸೈಡಿಂಗ್ ಅಧಿಕಾರಿಯು ಅವನ ಪರವಾಗಿ ಮತ್ತು ಅವನ ಇಚ್ಛೆಗನುಸಾರವಾಗಿ ಮತಪತ್ರದ ಮೇಲೆ ಮತವನ್ನು ದಾಖಲು ಮಾಡುವುದಕ್ಕಾಗಿ ಮತ್ತು ಅವಶ್ಯವಾದರೆ ಮತವನ್ನು ಮುಚ್ಚುವ ಹಾಗೆ ಮತಪತ್ರವನ್ನು ಮಡಿಸುವುದಕ್ಕಾಗಿ ಮತ್ತು ಅದನ್ನು ಮತಪೆಟ್ಟಿಗೆಯೊಳಗೆ ಹಾಕುವುದಕ್ಕಾಗಿ ಮತದಾನದ ವಿಭಾಗಕ್ಕೆ ಹದಿನೆಂಟು ವರ್ಷಗಳ ವಯಸ್ಸಿಗೆ ಕಡಿಮೆಯಿಲ್ಲದ ಒಬ್ಬ ಜೊತೆಗಾರನನ್ನು ಅವನೊಂದಿಗೆ ಕರೆದುಕೊಂಡು ಹೋಗಲು ಅನುಮತಿ ನೀಡತಕ್ಕದ್ದು.
(2) ಪ್ರಿಸೈಡಿಂಗ್ ಅಧಿಕಾರಿಯು ಈ ಕೆಳಗಿನಂತೆ ದಾಖಲೆಯಿಡತಕ್ಕದ್ದು:-
ಅನಕ್ಷರಸ್ಥ, ದೃಷ್ಠಿಹೀನ ಮತ್ತು ಅಶಕ್ತ ಮತದಾರರ ಪಟ್ಟಿ
| ಮತದಾರನ ಕ್ರಮ ಸಂಖ್ಯೆ | ಮತದಾರನ ಪೂರ್ಣ ಹೆಸರು | ಜೊತೆಗಾರನ ಪೂರ್ಣ ಹೆಸರು | ಜೊತೆಗಾರನ ವಿಳಾಸ | ಜ ೂತೆಗಾರನ ಸಹಿ ೆ |
ಪ್ರಿಸೈಡಿಂಗ್ ಅಧಿಕಾರಿಯ ಸಹಿಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೪೮೬ 5ವೈ. ಮತದಾನದ ಮುಕ್ತಾಯ: ಮತದಾನವು ಮುಕ್ತಾಯವಾದ ನಂತರ:- (1) ಪ್ರಿಸೈಡಿಂಗ್ ಅಧಿಕಾರಿಯು ಆ ಬಗ್ಗೆ ನಿಗದಿಪಡಿಸಿದ ವೇಳೆಗೆ ಮತದಾನವನ್ನು ಮುಕ್ತಾಯಗೊಳಿಸತಕ್ಕದ್ದು ಮತ್ತು ಆ ತರುವಾಯ ಯಾವನೇ ಮತದಾರನನ್ನು ಮತದಾನ ಕೇಂದ್ರದೊಳಗೆ ಬಿಡತಕ್ಕದ್ದಲ್ಲ.
(2) ಯಾವನೇ ಮತದಾರನು ಮತದಾನದ ಕೇಂದ್ರವನ್ನು ಮುಚ್ಚುವುದಕ್ಕೆ ಮುಂಚೆ ಅಲ್ಲಿ ಹಾಜರಿದ್ದನೇ ಎಂಬ ಬಗ್ಗೆ ಯಾವುದೇ ಪ್ರಶ್ನೆಯು ಉದ್ಭವಿಸಿದರೆ ಅದನ್ನು ಪ್ರಿಸೈಡಿಂಗ್ ಅಧಿಕಾರಿಯು ತೀರ್ಮಾನಿಸತಕ್ಕದ್ದು ಮತ್ತು ಅವನ ತೀರ್ಮಾನವು ಅಂತಿಮವಾಗಿರತಕ್ಕದ್ದು.
5ಜಡ್. ಮತದಾನದ ತರುವಾಯ ಮತಪೆಟ್ಟಿಗೆಗಳನ್ನು ಮೊಹರು ಮಾಡುವುದು: (1) ಮತದಾನವು ಮುಕ್ತಾಯವಾದ ತರುವಾಯ ಸಾಧ್ಯವಾದಷ್ಟು ಬೇಗನೇ ಪ್ರಿಸೈಡಿಂಗ್ ಅಧಿಕಾರಿಯು ಮತಪೆಟ್ಟಿಗೆಯ ಸೀಳು ಜಾಗವನ್ನು ಮುಚ್ಚತಕ್ಕದ್ದು ಮತ್ತು ಸೀಳು ಜಾಗವನ್ನು ಮುಚ್ಚುವುದಕ್ಕಾಗಿ ಮೊಹರು ಮಾಡತಕ್ಕದ್ದು ಮತ್ತು ಆನಂತರ ಮತಪೆಟ್ಟಿಗೆಯನ್ನು ಮೊಹರು ಮಾಡತಕ್ಕದ್ದು ಮತ್ತು ಭದ್ರಪಡಿಸತಕ್ಕದ್ದು.
(2) ಮೊದಲ ಮತಪೆಟ್ಟಿಗೆಯು ಭರ್ತಿಯಾದ ಕಾರಣದಿಂದ ಎರಡನೆಯ ಪೆಟ್ಟಿಗೆಯನ್ನು ಉಪಯೋಗಿಸುವುದು ಅವಶ್ಯವಾಗಿರುವಲ್ಲಿ, ಯಾವುದೇ ಇತರ ಮತಪೆಟ್ಟಿಗೆಯನ್ನು ಉಪಯೋಗಿಸುವುದಕ್ಕೆ ಮುಂಚೆ, ಮೊದಲನೆಯ ಪೆಟ್ಟಿಗೆಯನ್ನು ಮುಚ್ಚತಕ್ಕದ್ದು, ಮೊಹರು ಮಾಡತಕ್ಕದ್ದು ಮತ್ತು ಭದ್ರಪಡಿಸತಕ್ಕದ್ದು.
5ಎಎ. ಮತಪತ್ರಗಳ ಲೆಕ್ಕ: ಪ್ರಿಸೈಡಿಂಗ್ ಅಧಿಕಾರಿಯು ಮತದಾನವು ಮುಕ್ತಾಯವಾದ ಮೇಲೆ ಮತಪತ್ರಗಳ ಲೆಕ್ಕವನ್ನು ಫಾರಂ 2 ಐ ನಲ್ಲಿ ತಯಾರಿಸತಕ್ಕದ್ದು ಮತ್ತು ಅದನ್ನು ಪ್ರತ್ಯೇಕ ಲಕೋಟೆಯಲ್ಲಿ ಅದರ ಮೇಲೆ 'ಮತಪತ್ರಗಳ ಲೆಕ್ಕ' ಎಂಬ ಪದಗಳಿಂದ ಮೇಲ್ಬರಹ ಮಾಡತಕ್ಕದ್ದು.
5ಎಬಿ. ಇತರೆ ಪ್ಯಾಕೆಟ್ಟುಗಳನ್ನು ಮೊಹರು ಮಾಡುವುದು: (1) ಆ ತರುವಾಯ ಪ್ರಿಸೈಡಿಂಗ್ ಅಧಿಕಾರಿಯು:-
(ಎ) ಮತದಾರರ ಪಟ್ಟಿಯ ಗುರುತು ಮಾಡಿದ ಪ್ರತಿ;
(ಬಿ) ಉಪಯೋಗಿಸಿದ ಮತಪತ್ರಗಳ ಪಕ್ಕಪ್ರತಿಗಳು;
(ಸಿ) ಪ್ರಿಸೈಡಿಂಗ್ ಅಧಿಕಾರಿಯು ಪೂರ್ಣವಾಗಿ ರುಜು ಮಾಡಿದ ಆದರೆ ಮತದಾರರಿಗೆ ಕೊಡದಿರುವ ಮತಪತ್ರಗಳು;
(ಡಿ) ಮತದಾರರಿಗೆ ಕೊಡದಿರುವ ಯಾವುದೇ ಇತರ ಮತಪತ್ರಗಳು;
(ಇ) ಮತದಾನ ಪ್ರಕ್ರಿಯೆಯ ಉಲ್ಲಂಘನೆಗಾಗಿ ರದ್ದುಪಡಿಸಿದ ಮತಪತ್ರಗಳು;
(ಎಫ್) ಯಾವುದೇ ಇತರ ರದ್ದುಪಡಿಸಿದ ಮತಪತ್ರಗಳು; ಮತ್ತು
(ಜಿ) ಮೊಹರು ಮಾಡಿದ ಲಕೋಟೆಯಲ್ಲಿಡತಕ್ಕದ್ದೆಂದು ಸಹಕಾರ ಚುನಾವಣಾ ಆಯೋಗವು ನಿರ್ದೇಶಿಸಿದ ಯಾವುದೇ ಕಾಗದ ಪತ್ರಗಳು.
ಇವುಗಳನ್ನು ಪ್ರತ್ಯೇಕ ಪ್ಯಾಕೆಟ್ಟುಗಳನ್ನಾಗಿ ಮಾಡತಕ್ಕದ್ದು.
(2) ಅಂಥ ಪ್ರತಿಯೊಂದು ಪ್ಯಾಕೆಟ್ಟನ್ನು ಪ್ರಿಸೈಡಿಂಗ್ ಅಧಿಕಾರಿಯ ಮೊಹರುಗಳಿಂದ ಮತ್ತು ಅಥವಾ ಅವುಗಳ ಮೇಲೆ ತನ್ನ ಮೊಹರನ್ನು ಹಾಕಲು ಇಚ್ಛಿಸುವ ಮತದಾನ ಕೇಂದ್ರದಲ್ಲಿ ಹಾಜರಿರಬಹುದಾದ ಅಭ್ಯರ್ಥಿಯ ಅಥವಾ ಅವನ ಅಧಿಕೃತ ಏಜೆಂಟನ ಮೊಹರುಗಳಿಂದ ಮೊಹರು ಮಾಡತಕ್ಕದ್ದು.
5ಎಸಿ. ಮತಗಳ ಎಣಿಕೆ: (1) ಮತದಾನ ಮುಕ್ತಾಯವಾದ ತರುವಾಯ, ಪ್ರಿಸೈಡಿಂಗ್ ಅಧಿಕಾರಿ / ಪೋಲಿಂಗ್ ಅಧಿಕಾರಿಯು ಮತದಾನವನ್ನು ಮುಕ್ತಾಯಗೊಳಿಸತಕ್ಕದ್ದು ಮತ್ತು ಮೊಹರು ಮಾಡಿದ ಮತಪೆಟ್ಟಿಗೆಯನ್ನು ರಿಟರ್ನಿಂಗ್ ಅಧಿಕಾರಿಗೆ ಒಪ್ಪಿಸತಕ್ಕದ್ದು ಮತ್ತು ಸದರಿ ಅಧಿಕಾರಿಯು ತಕ್ಷಣ ಮತ ಎಣಿಕೆಗೆ ವ್ಯವಸ್ಥೆ ಮಾಡತಕ್ಕದ್ದು. ಮತ ಎಣಿಕೆಯನ್ನು ರಿಟರ್ನಿಂಗ್ ಅಧಿಕಾರಿ ಅಥವಾ ಸಹಾಯಕ ರಿಟರ್ನಿಂಗ್ ಅಧಿಕಾರಿಯು ಅಥವಾ ಅವರ ಮೇಲ್ವಿಚಾರಣೆಯಲ್ಲಿ ಮಾಡತಕ್ಕದ್ದು. ಪ್ರತಿಯೊಬ್ಬ ಅಭ್ಯರ್ಥಿಯು ಅಥವಾ ಆತನ ಅಧಿಕೃತ ಏಜೆಂಟನು ಮತ ಎಣಿಕೆಯ ವೇಳೆಯಲ್ಲಿ ಹಾಜರಿರುವ ಹಕ್ಕುಳ್ಳವನಾಗಿರತಕ್ಕದ್ದು. ಆದರೆ ಮತ ಎಣಿಕೆಯ ಸಮಯದಲ್ಲಿ ಯಾವುದೇ ಅಭ್ಯರ್ಥಿ ಅಥವಾ ಏಜೆಂಟನ ಗೈರುಹಾಜರಿಯು ಮತ ಎಣಿಕೆಯನ್ನಾಗಲೀ ಅಥವಾ ರಿಟರ್ನಿಂಗ್ ಅಧಿಕಾರಿಯಿಂದ ಚುನಾವಣಾ ಫಲಿತಾಂಶ ಪ್ರಕಟಿಸುವುದನ್ನಾಗಲೀ ಊರ್ಜಿತವಾಗದಂತೆ ಮಾಡತಕ್ಕದ್ದಲ್ಲ. ಈ ಬಗ್ಗೆ ಸಹಕಾರ ಚುನಾವಣಾ ಆಯೋಗವು ಸೂಕ್ತ ಮಾರ್ಗಸೂಚಿಗಳನ್ನು ನೀಡಬಹುದಾಗಿದೆ.
(2) ಯಾವುದೇ ಪ್ರದೇಶ ಅಥವಾ ಮತಕ್ಷೇತ್ರದಲ್ಲಿ ಉಪಯೋಗಿಸಿದ ಎಲ್ಲಾ ಮತಪೆಟ್ಟಿಗೆಗಳಲ್ಲಿ ಇರುವ ಎಲ್ಲಾ ಮತಪತ್ರಗಳ ಎಣಿಕೆಯು ಮುಕ್ತಾಯವಾದ ತರುವಾಯ, ರಿಟರ್ನಿಂಗ್ ಅಧಿಕಾರಿಯು ನಮೂನೆ 2ಜೆ ನಲ್ಲಿನ ಫಲಿತಾಂಶ ಹಾಳೆಯಲ್ಲಿ ನಮೂದುಗಳನ್ನು ಮಾಡತಕ್ಕದ್ದು ಮತ್ತು ವಿವರಗಳನ್ನು ಪ್ರಕಟಿಸತಕ್ಕದ್ದು.
5ಎಡಿ. ಚುನಾವಣಾ ಫಲಿತಾಂಶದ ಘೋಷಣೆ ಮತ್ತು ಚುನಾವಣಾ ವಿವರ ಪಟ್ಟಿಯನ್ನು ಸಹಕಾರ ಚುನಾವಣಾ ಆಯೋಗಕ್ಕೆ ಸಲ್ಲಿಸುವುದು:-
(1) ಮತಗಳ ಎಣಿಕೆಯು ಮುಕ್ತಾಯವಾದ ನಂತರ;
(i) ಚುನಾಯಿಸಬೇಕಾದ ನಿರ್ದೇಶಕರ ಸಂಖ್ಯೆಯ ಪ್ರಮಾಣಕ್ಕನುಗುಣವಾಗಿ ಅತ್ಯಂತ ಹೆಚ್ಚಿನ ಕ್ರಮಬದ್ಧ ಮತಗಳನ್ನು ಪಡೆದಿರುವ ಅಭ್ಯರ್ಥಿಯು ಅಥವಾ ಅಭ್ಯರ್ಥಿಗಳು ಚುನಾಯಿತನಾಗಿದ್ದಾರೆಂದು ಘೋಷಿಸತಕ್ಕದ್ದು.
(ii) ಚುನಾಯಿತರಾಗಿದ್ದಾರೆಂದು ಘೋಷಿಸಬೇಕಾದ ಯಾರೇ ಅಭ್ಯರ್ಥಿಗಳ ನಡುವೆ ಸಮಾನ ಮತಗಳು ಇರುವುದು ಕಂಡು ಬಂದರೆ, ರಿಟರ್ನಿಂಗ್ ಅಧಿಕಾರಿಯು ಚೀಟಿ ಎತ್ತುವ ಮೂಲಕ ಕೂಡಲೇ ಅ ಅಭ್ಯರ್ಥಿಗಳ ನಡುವೆ ಆಯ್ಕೆಯನ್ನು ತೀರ್ಮಾನಿಸತಕ್ಕದ್ದು ಮತ್ತು ಯಾವ ಅಭ್ಯರ್ಥಿಯ ಹೆಸರನಲ್ಲಿ ಚೀಟಿ ಬರುವುದೋ ಅವನು ಒಂದು ಅಧಿಕ ಮತವನ್ನು ಪಡೆದಿದ್ದಾನೆಂದು ಪರಿಗಣಿಸತಕ್ಕದ್ದು.
ವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೪೮೭(2) ಮತಗಳ ಎಣಿಕೆಯು ಮುಕ್ತಾಯವಾದ ತರುವಾಯ, ರಿಟರ್ನಿಂಗ್ ಅಧಿಕಾರಿಯು ಚುನಾವಣೆಗಳ ಫಲಿತಾಂಶಗಳನ್ನು ತಕ್ಷಣ ಘೋಷಿಸತಕ್ಕದ್ದು ಮತ್ತು ಚುನಾಯಿತ ಅಭ್ಯರ್ಥಿಗಳ ಪಟ್ಟಿಯನ್ನು ತನ್ನ ಕಚೇರಿಯ ಸೂಚನಾ ಫಲಕದಲ್ಲಿ ಮತ್ತು ಸಹಕಾರಿಯ ಸೂಚನಾ ಫಲಕದಲ್ಲಿ ಪ್ರಕಟಿಸತಕ್ಕದ್ದು ಹಾಗೂ ಅದರ ಒಂದು ಪ್ರತಿಯನ್ನು ಸಹಕಾರಿಯ ಮುಖ್ಯಕಾರ್ಯನಿರ್ವಾಹಕನಿಗೆ ನಮೂನೆ 2 ಕೆ ಯಲ್ಲಿ ಅದೇ ದಿನ ಕೊಡತಕ್ಕದ್ದು. ರಿಟರ್ನಿಂಗ್ ಅಧಿಕಾರಿಯು ತಕ್ಷಣ ಚುನಾವಣೆಯ ನಡವಳಿಗಳನ್ನು ಒಂದು ಸಮಗ್ರ ವರದಿಯ ರೂಪದಲ್ಲಿ ದಾಖಲಿಸತಕ್ಕದ್ದು ಮತ್ತು ಅದು ಚುನಾವಣೆಯ ದಾಖಲೆಗಳ ಭಾಗವಾಗಿರತಕ್ಕದ್ದು. ಆತನು ಅಂಥ ವರದಿಯ ಒಂದು ಪ್ರತಿಯನ್ನು ಚುನಾವಣಾ ಫಲಿತಾಂಶದ ವರದಿಯ ಸಹಿತ ಮುಖ್ಯಕಾರ್ಯನಿರ್ವಾಹಕನಿಗೆ ಒದಗಿಸತಕ್ಕದ್ದು ಮತ್ತು ಜಿಲ್ಲಾ ಚುನಾವಣಾಧಿಕಾರಿಗೆ ಮತ್ತು ಸಹಕಾರ ಚುನಾವಣಾ ಆಯೋಗಕ್ಕೆ ಸಹಿ ಮಾಡಿದ ಪ್ರತಿಗಳನ್ನು ಸಲ್ಲಿಸತಕ್ಕದ್ದು.
5ಎಇ. ಚುನಾಯಿತ ಉಮೇದುವಾರರಿಗೆ ಚುನಾವಣೆ ಪ್ರಮಾಣ ಪತ್ರವನ್ನು ಕೊಡುವುದು:-
ಯಾವುದೇ ಅಭ್ಯರ್ಥಿಯು ಚುನಾಯಿತನಾಗಿರುವುದಾಗಿ ಘೋಷಿಸಿದ ತರುವಾಯ ತಕ್ಷಣದಲ್ಲಿ ರಿಟರ್ನಿಂಗ್ ಅಧಿಕಾರಿಯು ನಮೂನೆ 2ಎಲ್ ನಲ್ಲಿ ಚುನಾವಣೆಯ ಪ್ರಮಾಣಪತ್ರವನ್ನು ಕೊಡತಕ್ಕದ್ದು ಮತ್ತು ಅದನ್ನು ಸ್ವೀಕರಿಸಿದ ಬಗ್ಗೆ ಅವನು ಕ್ರಮಬದ್ಧವಾಗಿ ರುಜು ಮಾಡಿದ ಸ್ವೀಕೃತಿಯನ್ನು ಆ ಅಭ್ಯರ್ಥಿಯಿಂದ ಪಡೆಯತಕ್ಕದ್ದು ಮತ್ತು ಅದನ್ನು ಜಿಲ್ಲಾ ಚುನಾವಣಾಧಿಕಾರಿಗೆ ಕಳುಹಿಸತಕ್ಕದ್ದು.
5ಎಎಫ್. ಚುನಾವಣಾ ವೆಚ್ಚಗಳು: ಯಾವುದೇ ಸಹಕಾರಿಯ ನಿರ್ದೇಶಕರ ಸಾಮಾನ್ಯ ಚುನಾವಣೆಗೆ ಸಂಬಂಧಪಟ್ಟಂತೆ ತಗಲುವ ಲೇಖನಸಾಮಗ್ರಿ, ಮುದ್ರಣ, ಅಂಚೆ, ಜೆರಾಕ್ಸ್, ಫ್ಯಾಕ್ಸ್, ಮತಪೆಟ್ಟಿಗೆಗಳ ಬಾಡಿಗೆ, ಅಳಿಸಲಾಗದ ಇಂಕು, ಪೋಲಿಸ್ ಭದ್ರತೆ ಮತ್ತು ಅಂಥ ಇತರ ಎಲ್ಲಾ ವೆಚ್ಚಗಳನ್ನು ಆ ಸಹಕಾರಿಯು ಭರಿಸತಕ್ಕದ್ದು. ಸಹಕಾರ ಚುನಾವಣಾ ಆಯೋಗವು ಕಾಲಕಾಲಕ್ಕೆ ನಿಗದಿಪಡಿಸುವ ದರಗಳಲ್ಲಿ ಮತದಾರರ ಪಟ್ಟಿ ತಯಾರಿಕೆಗೆ, ರಿಟರ್ನಿಂಗ್ ಅಧಿಕಾರಿ, ಸಹಾಯಕ ರಿಟರ್ನಿಂಗ್ ಅಧಿಕಾರಿ, ಪ್ರಿಸೈಡಿಂಗ್ ಅಧಿಕಾರಿ ಮತ್ತು ಇತರ ಚುನಾವಣಾ ಸಿಬ್ಬಂದಿಗೆ ಕೊಡಬೇಕಾದ ಪ್ರಯಾಣ ಭತ್ಯೆ ಮತ್ತು ಇತರ ಭತ್ಯೆಗಳನ್ನು ಮತ್ತು ಸಂಭಾವನೆಯನ್ನೂ ಸಹ ಸಹಕಾರಿಯೇ ಭರಿಸತಕ್ಕದ್ದು.
5ಎಜಿ. ಮತಪೆಟ್ಟಿಗೆಗಳ ಮತ್ತು ಚುನಾವಣೆಗೆ ಸಂಬಂಧಪಟ್ಟ ಕಾಗದಪತ್ರಗಳ ಸಂರಕ್ಷಣೆ:-
(1) ಚುನಾವಣೆಯಲ್ಲಿ ಉಪಯೋಗಿಸಿದ ಎಲ್ಲಾ ಮತಪೆಟ್ಟಿಗೆಗಳನ್ನು ಸಹಕಾರ ಚುನಾವಣಾ ಆಯೋಗವು ನಿರ್ದೇಶಿಸಬಹುದಾದಂಥ ಸಂರಕ್ಷಣೆಯಲ್ಲಿ ಇಡತಕ್ಕದ್ದು.
(2) ರಿಟರ್ನಿಂಗ್ ಅಧಿಕಾರಿಯು:-
(ಎ) ಅವುಗಳೊಂದಿಗೆ ಲಗತ್ತಿಸಿದ ಪಕ್ಕಪ್ರತಿಗಳ ಸಹಿತ ಉಪಯೋಗಿಸಲಾಗದ ಮತಪತ್ರಗಳ ಪ್ಯಾಕೆಟುಗಳನ್ನು;
(ಬಿ) ಕ್ರಮಬದ್ಧವಾಗಿರುವ ಅಥವಾ ಅಸಿಂಧುವಾಗಿರುವ ಉಪಯೋಗಿಸಲಾದ ಮತಪತ್ರಗಳ ಪ್ಯಾಕೆಟ್ಟುಗಳನ್ನು;
(ಸಿ) ಉಪಯೋಗಿಸಿದ ಮತಪತ್ರಗಳ ಪಕ್ಕಪ್ರತಿಗಳ ಪ್ಯಾಕೆಟ್ಟುಗಳನ್ನು;
(ಡಿ) ಮತದಾರರ ಪಟ್ಟಿಯ ಗುರುತು ಮಾಡಿದ ಪ್ರತಿಯ ಪ್ಯಾಕೆಟ್ಟುಗಳನ್ನು;
(ಇ) ಅವರ ಅನುಪ್ರಮಾಣಿತ ರುಜುಗಳನ್ನು ಒಳಗೊಂಡ ಮತದಾರರ ಘೋಷಣೆಗಳ ಪ್ಯಾಕೆಟ್ಟುಗಳನ್ನು; ಮತ್ತು (ಎಫ್) ಚುನಾವಣೆಗೆ ಸಂಬಂಧಪಟ್ಟ ಇತರ ಎಲ್ಲಾ ಪತ್ರಗಳನ್ನು
- ಆಯಾ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಸುರಕ್ಷಿತ ಸಂರಕ್ಷಣೆಯಲ್ಲಿಡತಕ್ಕದ್ದು.
5ಎಹೆಚ್. ಚುನಾವಣೆಗೆ ಸಂಬಂಧಪಟ್ಟ ಕಾಗದ ಪತ್ರಗಳ ಪರಿವೀಕ್ಷಣೆ ಮತ್ತು ಹಾಜರುಪಡಿಸುವಿಕೆ: (1) ಆಯಾ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು ತನ್ನ ಸಂರಕ್ಷಣೆಯಲ್ಲಿರುವಾಗ-
(ಎ) ಅವುಗಳೊಂದಿಗೆ ಲಗತ್ತಿಸಿದ ಪಕ್ಕಪ್ರತಿಗಳ ಸಹಿತ ಉಪಯೋಗಿಸಲಾಗದ ಮತಪತ್ರಗಳ ಪ್ಯಾಕೆಟುಗಳನ್ನು;
(ಬಿ) ಕ್ರಮಬದ್ಧವಾಗಿರುವ ಅಥವಾ ಅಸಿಂಧುವಾಗಿರುವ ಉಪಯೋಗಿಸಲಾದ ಮತಪತ್ರಗಳ ಪ್ಯಾಕೆಟ್ಟುಗಳನ್ನು;
(ಸಿ) ಉಪಯೋಗಿಸಿದ ಮತಪತ್ರಗಳ ಪಕ್ಕಪ್ರತಿಗಳ ಪ್ಯಾಕೆಟ್ಟುಗಳನ್ನು;
(ಡಿ) ಮತದಾರರ ಪಟ್ಟಿಯ ಗುರುತು ಮಾಡಿದ ಪ್ರತಿಯ ಪ್ಯಾಕೆಟ್ಟುಗಳನ್ನು; ಮತ್ತು
(ಇ) ಅವರ ಅನುಪ್ರಮಾಣಿತ ರುಜುಗಳನ್ನು ಒಳಗೊಂಡ ಮತದಾರರ ಘೋಷಣೆಗಳ ಪ್ಯಾಕೆಟ್ಟುಗಳನ್ನು;
- ಸಕ್ಷಮ ನ್ಯಾಯಾಲಯದ ಅದೇಶಗಳಿಲ್ಲದೆ ಯಾವನೇ ವ್ಯಕ್ತಿಯು ಅಥವಾ ಪ್ರಾಧಿಕಾರಿಯು ತೆರೆಯತಕ್ಕದ್ದಲ್ಲ ಮತ್ತು ಅವುಗಳ ಒಳಾಂಶಗಳನ್ನು ಪರಿಶೀಲಿಸತಕ್ಕದ್ದಲ್ಲ ಅಥವಾ ಯಾವನೇ ವ್ಯಕ್ತಿಯ ಅಥವಾ ಪ್ರಾಧಿಕಾರಿಯ ಮುಂದೆ ಅವುಗಳನ್ನು ಹಾಜರುಪಡಿಸತಕ್ಕದ್ದಲ್ಲ.
(2) ಉಪನಿಯಮ (1)ರಲ್ಲಿ ನಿರ್ದಿಷ್ಟಪಡಿಸಿದ ದಾಖಲೆಗಳನ್ನು ಹೊರತುಪಡಿಸಿ ಸಹಕಾರ ಚುನಾವಣಾ ಆಯೋಗವು ನಿರ್ದೇಶಿಸಬಹುದಾದಂಥ ಷರತ್ತುಗಳಿಗೆ ಮತ್ತು ಅಂಥ ಶುಲ್ಕದ ಸಂದಾಯಕ್ಕೆ ಒಳಪಟ್ಟು -
(ಎ) ಚುನಾವಣೆಗೆ ಸಂಬಂಧಪಟ್ಟ ಎಲ್ಲ ಇತರ ಕಾಗದ ಪತ್ರಗಳು ಸದಸ್ಯರ ಪರಿಶೀಲನೆಗೆ ಮುಕ್ತವಾಗಿರತಕ್ಕದ್ದು; ಮತ್ತು
(ಬಿ) ಲಿಖಿತ ಕೋರಿಕೆಯ ಮೇರೆಗೆ ಅವುಗಳ ಪ್ರತಿಗಳನ್ನು ಒದಗಿಸತಕ್ಕದ್ದು.
(3) ರಿಟರ್ನಿಂಗ್ ಅಧಿಕಾರಿಯು ಕಳುಹಿಸುವ ಅಧಿಕೃತ ವರದಿಗಳ ಪ್ರತಿಗಳನ್ನು ಸಹಕಾರ ಚುನಾವಣಾ ಆಯೋಗವು ಕಾಲಕಾಲಕ್ಕೆ ನಿರ್ಧರಿಸುವಂಥ ಶುಲ್ಕವನ್ನು ಸಂದಾಯ ಮಾಡಿದ ಮೇಲೆ ರಿಟರ್ನಿಂಗ್ ಅಧಿಕಾರಿಯು ಒದಗಿಸತಕ್ಕದ್ದು.
ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೪೮೮5ಎಐ. ಚುನಾವಣೆೆಗೆ ಸಂಬಂಧಪಟ್ಟ ಕಾಗದಪತ್ರಗಳ ವಿಲೇವಾರಿ: (1) ಸಹಕಾರ ಚುನಾವಣಾ ಆಯೋಗವು ಅಥವಾ ಸಕ್ಷಮ ನ್ಯಾಯಾಲಯವು ಕೊಟ್ಟ ಯಾವುದೇ ನಿರ್ದೇಶನಗಳಿಗೆ ಒಳಪಟ್ಟು-
(ಎ) ಉಪಯೋಗಿಸದ ಮತಪತ್ರಗಳ ಪ್ಯಾಕೆಟ್ಟುಗಳನ್ನು ಆರು ತಿಂಗಳ ಅವಧಿಯವರೆಗೆ ಇಡತಕ್ಕದ್ದು ಮತ್ತು ಆ ತರುವಾಯ ಸಹಕಾರ ಚುನಾವಣಾ ಆಯೋಗವು ನಿರ್ದೇಶಿಸಬಹುದಾದಂಥ ವಿಧಾನದಿಂದ ನಾಶಪಡಿಸತಕ್ಕದ್ದು.
(ಬಿ) ಇತರೆ ಪ್ಯಾಕೆಟ್ಟುಗಳನ್ನು ಒಂದು ವರ್ಷದ ಅವಧಿಯವರೆಗೆ ವಶದಲ್ಲಿಟ್ಟುಕೊಳ್ಳತಕ್ಕದ್ದು ಮತ್ತು ಆ ತರುವಾಯ ಅವುಗಳನ್ನು ನಾಶಪಡಿಸತಕ್ಕದ್ದು.
ಪರಂತು, ಉಪಯೋಗಿಸಿದ ಮತಪತ್ರಗಳ ಪಕ್ಕಪ್ರತಿಗಳನ್ನು ಒಳಗೊಂಡ ಪ್ಯಾಕೆಟ್ಟುಗಳನ್ನು ಸಹಕಾರ ಚುನಾವಣಾ ಆಯೋಗವು ಪೂರ್ವಾನುಮೋದನೆ ಪಡೆಯದೆ ನಾಶಪಡಿಸತಕ್ಕದ್ದಲ್ಲ.
(ಸಿ) ಚುನಾವಣೆಗೆ ಸಂಬಂಧಪಟ್ಟ ಇತರ ಎಲ್ಲ ಕಾಗದ ಪತ್ರಗಳನ್ನು ಸಹಕಾರ ಚುನಾವಣಾ ಆಯೋಗವು ನಿರ್ದೇಶಿಸಬಹುದಾದಂಥ ಅವಧಿಯವರೆಗೆ ವಶದಲ್ಲಿಟ್ಟುಕೊಳ್ಳತಕ್ಕದ್ದು.
5ಎಜೆೆ. ಉಮೇದುವಾರರ ಠೇವಣಿಯನ್ನು ಹಿಂತಿರುಗಿಸುವುದು ಅಥವಾ ಮುಟ್ಟುಗೋಲು ಹಾಕಿಕೊಳ್ಳುವುದು :-
(1) 5ಜಿ ನಿಯಮದ ಮೇರೆಗೆ ಮಾಡಿದ ಠೇವಣಿಯನ್ನು ಅದನ್ನು ಇಟ್ಟ ವ್ಯಕ್ತಿ ಅಥವಾ ಅವನ ಪ್ರತಿನಿಧಿಗೆ ಹಿಂದಿರುಗಿಸತಕ್ಕದ್ದು ಅಥವಾ ಸಹಕಾರಿಗೆ ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು.
(2) ಈ ನಿಯಮದಲ್ಲಿ ನಮೂದಿಸಿದ ಪ್ರಕರಣದಲ್ಲಿರುವುದನ್ನು ಹೊರತುಪಡಿಸಿ ಚುನಾವಣೆಯ ಫಲಿತಾಂಶವನ್ನು ಘೋಷಿಸಿದ ತರುವಾಯದ ಏಳು ದಿನಗಳೊಳಗೆ ಠೇವಣಿಯನ್ನು ಹಿಂತಿರುಗಿಸತಕ್ಕದ್ದು.
(3) ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾವುದೇ ಅಭ್ಯರ್ಥಿಯ ಹೆಸರು ಇಲ್ಲದಿದ್ದರೆ ಅಥವಾ ಅವನು ಮತದಾನವು ಪ್ರಾರಂಭವಾಗುವುದಕ್ಕೆ ಮುಂಚೆ ಮೃತನಾದರೆ, ಸಂದರ್ಭಾನುಸಾರ ಆ ಪಟ್ಟಿಯನ್ನು ಪ್ರಕಟಿಸಿದ ಅಥವಾ ಅವನ ಮರಣದ ತರುವಾಯ ಠೇವಣಿಯನ್ನು ಮರಣ ಪ್ರಮಾಣಪತ್ರದ ಆಧಾರದ ಮೇಲೆ ಹಾಗೂ ಮೃತ ಅಭ್ಯರ್ಥಿಯ ಸಹಕಾರಿಯ ಸದಸ್ಯತ್ವದ ಅರ್ಜಿಯಲ್ಲಿ ಕಾಣಿಸಿದ ನಾಮ ನಿರ್ದೇಶಿತ ವ್ಯಕ್ತಿಗೆ, ಏಳು ದಿವಸಗಳ ಒಳಗಾಗಿ ಹಿಂತಿರುಗಿಸತಕ್ಕದ್ದು.
(4) (3)ನೇ ಉಪನಿಯಮದ ಉಪಬಂಧಗಳಿಗೆ ಒಳಪಟ್ಟು, ಯಾವುದೇ ಸ್ಪರ್ಧಿಸಿದ ಅಭ್ಯರ್ಥಿಯು ಚುನಾಯಿತನಾಗದಿದ್ದರೆ, ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳು ಪಡೆದ ಕ್ರಮಬದ್ಧ ಮತಗಳ ಒಟ್ಟು ಸಂಖ್ಯೆಯನ್ನು ಚುನಾಯಿತವಾಗಬೇಕಾದ ಸದಸ್ಯರ ಸಂಖ್ಯೆಯಿಂದ ಭಾಗಿಸಿದಾಗ ಬರುವಷ್ಟರ ಸಂಖ್ಯೆಯ ಆರನೇ ಒಂದರಷ್ಟು ಕ್ರಮಬದ್ಧ ಮತಗಳನ್ನು ಅವನು ಪಡೆಯದಿದ್ದಲ್ಲಿ, ಆತನ ಠೇವಣಿಯನ್ನು ಸಹಕಾರಿಗೆ ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು.
ಪರಂತು, ಪರಿಶಿಷ್ಟ ಜಾತಿಗಳಿಗೆ ಅಥವಾ ಪರಿಶಿಷ್ಟ ಪಂಗಡದವರಿಗೆ ಅಥವಾ ಹಿಂದುಳಿದ ವರ್ಗಗಳಿಗೆ ಸೇರಿದ ಅಥವಾ ಮಹಿಳಾ ಅಭ್ಯರ್ಥಿಯು ಚುನಾಯಿತನಾಗದಿದ್ದರೆ, ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳು ಪಡೆದ ಕ್ರಮಬದ್ಧ ಮತಗಳ ಒಟ್ಟು ಸಂಖ್ಯೆಯನ್ನು ಚುನಾಯಿತವಾಗಬೇಕಾದ ಸದಸ್ಯರ ಸಂಖ್ಯೆಯಿಂದ ಭಾಗಿಸಿದಾಗ ಬರುವಷ್ಟರ ಸಂಖ್ಯೆಯ ಹತ್ತನೇ ಒಂದರಷ್ಟು ಕ್ರಮಬದ್ಧ ಮತಗಳನ್ನು ಅವನು ಪಡೆಯದಿದ್ದಲ್ಲಿ, ಆತನ ಠೇವಣಿಯನ್ನು ಸಹಕಾರಿಗೆ ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು.
5ಎಕೆ. ಸಹಕಾರಿಯಲ್ಲಿ ಉದ್ಭವಿಸುವ ಆಕಸ್ಮಿಕ ಖಾಲಿ ಸ್ಥಾನವನ್ನು ವರದಿ ಮಾಡುವುದು: ಯಾವುದೇ ಸಹಕಾರಿಯ ನಿರ್ದೇಶಕ/ಪ್ರತಿನಿಧಿಯ ಪದದಲ್ಲಿ ಆಕಸ್ಮಿಕ ರಿಕ್ತತೆ ಉಂಟಾದಲ್ಲಿ, ಆ ಸಹಕಾರಿಯ ಮುಖ್ಯಕಾರ್ಯ ನಿರ್ವಾಹಕನು ಅಂಥ ರಿಕ್ತತೆಯು ಅಧಿಕೃತವಾಗಿ ತಿಳಿಯಲ್ಪಟ್ಟ ಹದಿನೈದು ದಿನಗಳ ಒಳಗಾಗಿ, ಕಡ್ಡಾಯವಾಗಿ ಸಹಕಾರ ಚುನಾವಣಾ ಆಯೋಗಕ್ಕೆ ಅಂತಹ ರಿಕ್ತತೆಯು ಉಂಟಾಗಿರುವ ಮಾಹಿತಿಯನ್ನು ಸಲ್ಲಿಸತಕ್ಕದು. ಒಂದು ವೇಳೆ ಆಡಳಿತ ಮಂಡಳಿಯ ಉಳಿದ ಪದಾವಧಿಯು ತನ್ನ ಮೂಲ ಪದಾವಧಿಯ ಅರ್ಧಕ್ಕಿಂತ ಕಡಿಮೆ ಉಳಿದಿದ್ದಲ್ಲಿ, ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕನು ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ ಅಂತಹ ಆಕಸ್ಮಿಕ ರಿಕ್ತತೆಯನ್ನು ಅಧಿನಿಯಮದಲ್ಲಿನ ಪ್ರಕರಣ 29 ರಡಿಯಲ್ಲಿ ಸಹಮತದ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದೇ ಅಥವಾ ಚುನಾವಣೆ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದೇ ಎಂದು ಸ್ಪಷ್ಟವಾಗಿ, ಅಂತಹ ಆಕಸ್ಮಿಕ ರಿಕ್ತತೆಯು ಅಧಿಕೃತವಾಗಿ ತಿಳಿಯಲ್ಪಟ್ಟ ದಿನಾಂಕದಿಂದ ಮೂವತ್ತು ದಿನಗಳೊಳಗೆ, ಸಹಕಾರ ಚುನಾವಣಾ ಆಯೋಗಕ್ಕೆ ತಿಳಿಸತಕ್ಕದ್ದು. ಸಹಕಾರಿಯು ಅಧಿನಿಯಮದಲ್ಲಿನ ಪ್ರಕರಣ 29 ರಡಿಯಲ್ಲಿ ಆಕಸ್ಮಿಕ ರಿಕ್ತತೆಗಳನ್ನು ಸಹಮತದ ಮೂಲಕ ಭರ್ತಿ ಮಾಡಿಕೊಳ್ಳಲು ತೀರ್ಮಾನಿಸಿದಲ್ಲಿ, ಅಂತಹ ಪ್ರಕ್ರಿಯೆಯನ್ನು ಅಂತಹ ಆಕಸ್ಮಿಕ ರಿಕ್ತತೆಯು ಅಧಿಕೃತವಾಗಿ ತಿಳಿಯಲ್ಪಟ್ಟ ದಿನಾಂಕದಿಂದ ಅರವತ್ತು ದಿನಗಳೊಳಗೆ ಪೂರ್ಣಗೊಳಿಸತಕ್ಕದ್ದು. ಇಲ್ಲದಿದ್ದಲ್ಲಿ, ಮತ್ತು ಉಳಿದ ಎಲ್ಲಾ ಸಂದರ್ಭಗಳಲ್ಲಿ, ಸಹಕಾರ ಚುನಾವಣಾ ಆಯೋಗವು ಖಾಲಿ ಬಿದ್ದ ನಿರ್ದೇಶಕ / ಪ್ರತಿನಿಧಿ ಹುದ್ದೆಗಳಿಗೆ ಖಾಲಿ ಬಿದ್ದ ತೊಂಭತ್ತು ದಿನಗಳ ಒಳಗಾಗಿ ರಿಕ್ತ ಸ್ಥಾನಗಳನ್ನು ಭರ್ತಿ ಮಾಡಲು ಚುನಾವಣೆ ನಡೆಸತಕ್ಕದ್ದು. ನಿಯಮ 5, 5ಎ ಯಿಂದ 5ಎಕೆ ವರೆಗಿನ ಉಪಬಂಧಗಳು ನಿರ್ದೇಶಕನ ಪದದಲ್ಲಿ ಉಂಟಾಗಿರುವ ಆಕಸ್ಮಿಕತೆಯನ್ನು ತುಂಬಲು ನಡೆಸುವ ಚುನಾವಣೆಗೆ, ಯಥೋಚಿತ ವ್ಯತ್ಯಾಸಗಳೊಂದಿಗೆ, ಅನ್ವಯವಾಗತಕ್ಕದ್ದು".
5. ನಿಯಮ 6ರ ತಿದ್ದುಪಡಿ:- ಸದರಿ ನಿಯಮಗಳ ನಿಯಮ 6ಕ್ಕೆ, ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು; ಎಂದರೆ:-
"6. ಪದಾಧಿಕಾರಿಗಳ ಚುನಾವಣೆ: (1) ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಚುನಾವಣೆಯನ್ನು ನಡೆಸಲು ನೇಮಕವಾದ ರಿಟರ್ನಿಂಗ್ ಅಧಿಕಾರಿಯು ಪದಾಧಿಕಾರಿಗಳ ಚುನಾವಣೆಯನ್ನು ನಡೆಸಲು ರಿಟರ್ನಿಂಗ್ ಅಧಿಕಾರಿಯಾಗಿರತಕ್ಕದ್ದು.
(2) ಅಧ್ಯಕ್ಷ ಅಥವಾ ಉಪಾಧ್ಯಕ್ಷ ಅಥವಾ ಇತರ ಯಾವುದೇ ಪದಾಧಿಕಾರಿಯ ಪದದಲ್ಲಿ, ಅನರ್ಹತೆ ಅಥವಾ ಮರಣ ಅಥವಾ ರಾಜೀನಾಮೆ ಅಥವಾ ಇತರ ಯಾವುದೇ ಕಾರಣಗಳಿಂದಾಗಿ, ಆಕಸ್ಮಿಕ ರಿಕ್ತತೆ ಉಂಟಾದಲ್ಲಿ, ಆಡಳಿತ ಮಂಡಳಿ ಮತ್ತು ಮುಖ್ಯಕಾರ್ಯನಿರ್ವಾಹಕನು ಅಂಥ ರಿಕ್ತತೆ ಉಂಟಾದ ಏಳು ದಿನಗಳೊಳಗೆ ಆಕಸ್ಮಿಕ ರಿಕ್ತತೆ ಉಂಟಾಗಿರುವ ಬಗ್ಗೆ ಸಹಕಾರ ಚುನಾವಣಾ ಆಯೋಗಕ್ಕೆ ವರದಿ ಕಳುಹಿಸತಕ್ಕದ್ದು. ಸಹಕಾರ ಚುನಾವಣಾ ಆಯೋಗವು ಪ್ರಸಂಗಾನುಸಾರ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಅಥವಾ ಇತರ ಯಾವುದೇವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೪೮೯ ಪದಾಧಿಕಾರಿಯ ಪದದಲ್ಲಿ ಉಂಟಾಗಿರುವ ಆಕಸ್ಮಿಕ ರಿಕ್ತತೆಯನ್ನು ಭರ್ತಿ ಮಾಡಲು ಚುನಾವಣೆ ನಡೆಸುವ ಉದ್ದೇಶಕ್ಕಾಗಿ ಒಬ್ಬ ರಿಟರ್ನಿಂಗ್ ಅಧಿಕಾರಿಯನ್ನು ನೇಮಿಸತಕ್ಕದ್ದು.
(3) (1)ನೇ ಅಥವಾ (2)ನೇ ಉಪನಿಯಮದಡಿ ನೇಮಕವಾದ ರಿಟರ್ನಿಂಗ್ ಅಧಿಕಾರಿಯು ಸಾಮಾನ್ಯ ಚುನಾವಣೆಯ ನಂತರ ಆಡಳಿತ ಮಂಡಳಿಯು ರಚನೆಯಾದ ಅಥವಾ ರಚನೆಯಾಗಿದೆ ಎಂದು ಭಾವಿಸಲಾದ ಅಥವಾ (2)ನೇ ಉಪನಿಯಮದಡಿ ನೇಮಕವಾದ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಪ್ರಸಂಗಾನುಸಾರ ಅಧ್ಯಕ್ಷ ಅಥವಾ ಸಭಾಪತಿ, ಉಪಾಧ್ಯಕ್ಷ ಅಥವಾ ಉಪಸಭಾಪತಿ ಮತ್ತು ಸಹಕಾರಿಯ ಉಪವಿಧಿಗಳ ಮೇರೆಗೆ ಚುನಾಯಿಸಬೇಕಾದ ಇತರ ಯಾವುದೇ ಪದಾಧಿಕಾರಿಗಳನ್ನು ಚುನಾಯಿಸಲು ಆಡಳಿತ ಮಂಡಳಿಯ ಮತಹಾಕುವ ಅರ್ಹತೆಯಿರುವ ನಿರ್ದೇಶಕರುಗಳ ಸಭೆಯನ್ನು ಕರೆಯತಕ್ಕದ್ದು. ಅಂಥ ಸಭೆಯನ್ನು ಸಭೆಯ ಸ್ಥಳ, ದಿನಾಂಕ ಮತ್ತು ವೇಳೆಯನ್ನುಳ್ಳ ಏಳು ಸ್ಪಷ್ಟ ದಿನಗಳ ನೋಟೀಸನ್ನು ರಿಜಿಸ್ಟರ್ಡ್ ಅಂಚೆಯ ಮೂಲಕ ನೀಡಿ ಕರೆಯತಕ್ಕದ್ದು.
(4) ಅಧ್ಯಕ್ಷ ಅಥವಾ ಉಪಾಧ್ಯಕ್ಷ ಅಥವಾ ಇನ್ನಿತರ ಪದಾಧಿಕಾರಿಗಳ ಚುನಾವಣೆಗೆ ನಿಗದಿ ಪಡಿಸಿದ ಸಮಯದ ಎರಡು ಗಂಟೆಗೆ ಕಡಿಮೆಯಾಗದಂತೆ ಮೊದಲು, ಪ್ರಸಂಗಾನುಸಾರ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಅಥವಾ ಇನ್ನಿತರ ಯಾವುದೇ ಪದಾಧಿಕಾರಿಯಾಗಿ ಚುನಾಯಿತನಾಗಲು ಇಚ್ಛಿಸುವ ಆಡಳಿತ ಮಂಡಳಿಯ ಯಾವುದೇ ಅರ್ಹ ಸದಸ್ಯನು ತನ್ನ ನಾಮಪತ್ರವನ್ನು ನಮೂನೆ 2ಎಂ ನಲ್ಲಿ ರಿಟರ್ನಿಂಗ್ ಅಧಿಕಾರಿಗೆ ಸಲ್ಲಿಸಬಹುದು. ಅಂಥ ನಾಮಪತ್ರವು ಆಡಳಿತ ಮಂಡಳಿಯ ಒಬ್ಬ ಅರ್ಹ ಸದಸ್ಯನಿಂದ ಸೂಚಿತವಾಗಿ ಮತ್ತು ಇನ್ನೊಬ್ಬ ಆಡಳಿತ ಮಂಡಳಿಯ ಅರ್ಹ ಸದಸ್ಯನಿಂದ ಅನುಮೋದಿತವಾಗಿರತಕ್ಕದ್ದು.
(5) ಉಪನಿಯಮ (4)ರ ಮೇರೆಗೆ ಯಾವುದೇ ನಿರ್ದೇಶಕನು, ಸಹಕಾರಿಯ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಅಥವಾ ಇನ್ನಿತರ ಯಾವುದೇ ಪದಾಧಿಕಾರಿಯ ಪದಕ್ಕೆ ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳನ್ನು ಸೂಚಿಸತಕ್ಕದ್ದಲ್ಲ ಅಥವಾ ಅನುಮೋದಿಸತಕ್ಕದ್ದಲ್ಲ.
ಪರಂತು, ಯಾವನೇ ನಿರ್ದೇಶಕನು ಸಹಕಾರಿಯ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಅಥವಾ ಇನ್ನಿತರ ಯಾವುದೇ ಪದಾಧಿಕಾರಿಯ ಪದಕ್ಕೆ ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳನ್ನು ಸೂಚಿಸಿದ್ದಲ್ಲಿ ಅಥವಾ ಅನುಮೋದಿಸಿದ್ದಲ್ಲಿ, ಮೊದಲು ಸ್ವೀಕೃತವಾದ ನಾಮಪತ್ರವನ್ನು ಪರಿಶೀಲನೆಗೆ ಪರಿಗಣಿಸತಕ್ಕದ್ದು.
(6) (1)ನೇ ಅಥವಾ (2)ನೇ ಉಪನಿಯಮದಡಿ ನೇಮಕವಾದ ರಿಟರ್ನಿಂಗ್ ಅಧಿಕಾರಿಯು, ಪದಾಧಿಕಾರಿಗಳನ್ನು ಚುನಾಯಿಸುವ ಅಥವಾ ಪ್ರಸಂಗಾನುಸಾರ ಸಹಕಾರಿಯ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಅಥವಾ ಇನ್ನಿತರ ಯಾವುದೇ ಪದಾಧಿಕಾರಿಯ ಪದದಲ್ಲಿ ಉಂಟಾಗಿರುವ ಆಕಸ್ಮಿಕ ರಿಕ್ತತೆಯನ್ನು ಭರ್ತಿ ಮಾಡುವ ಉದ್ದೇಶಕ್ಕಾಗಿ, ಕರೆದ ಆಡಳಿತ ಮಂಡಳಿಯ ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು.
(7) ಸಭೆಯು ಪ್ರಾರಂಭವಾದ ತರುವಾಯ, ರಿಟರ್ನಿಂಗ್ ಅಧಿಕಾರಿಯು ಅಂಥಹ ಎಲ್ಲಾ ನಾಮನಿರ್ದೇಶನ ಪತ್ರಗಳನ್ನು ಪರಿಶೋಧಿಸತಕ್ಕದ್ದು ಮತ್ತು ಅಂಥ ಸಭೆಯಲ್ಲಿ ಹಾಜರಿದ್ದ ನಿರ್ದೇಶಕರುಗಳಿಗೆೆ ತನ್ನ ಅಭಿಪ್ರಾಯದಲ್ಲಿ ಸೂಕ್ತವಾಗಿ ನಾಮನಿರ್ದೇಶನ ಮಾಡಲ್ಪಟ್ಟ ನಿರ್ದೇಶಕರ ಮತ್ತು ಅವರ ಸೂಚಕರ ಮತ್ತು ಅನುಮೋದಕರ ಹೆಸರುಗಳನ್ನು ಓದಿ ತಿಳಿಸತಕ್ಕದ್ದು.
(8) ನಾಮಪತ್ರಗಳ ಪರಿಶೋಧನೆಯು ಆದ ನಂತರ, ಯಾವುದೇ ಅಭ್ಯರ್ಥಿಯು ಲಿಖಿತ ನೋಟೀಸಿನಲ್ಲಿ ಸೂಕ್ತವಾಗಿ ಸಹಿ ಮಾಡಿ ರಿಟರ್ನಿಂಗ್ ಅಧಿಕಾರಿಗೆ ಮೂವತ್ತು ನಿಮಿಷಗಳೊಳಗೆ ಕೊಟ್ಟು ತನ್ನ ಉಮೇದುವಾರಿಕೆಯನ್ನು ವಾಪಸ್ಸು ತೆಗೆದುಕೊಳ್ಳಬಹುದು.
(9) ಹಿಂದಕ್ಕೆ ಪಡೆಯುವ ನೋಟೀಸನ್ನು ಅಭ್ಯರ್ಥಿಯು ಲಿಖಿತದಲಿ್ಲ ಸಹಿಯೊಂದಿಗೆ ಸ್ವತಃ ಸಲ್ಲಿಸತಕ್ಕದ್ದು.
(10) ಉಪನಿಯಮ (8)ರಡಿ ತನ್ನ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ನೋಟೀಸನ್ನು ಕೊಟ್ಟಿರುವ ಯಾವುದೇ ನಿರ್ದೇಶಕನು ಅಂಥ ಹಿಂತೆಗೆದುಕೊಳ್ಳುವ ನೋಟೀಸನ್ನು ರದ್ದುಮಾಡಲು ಅವಕಾಶ ನೀಡತಕದ್ದಲ್ಲ.
(11) ರಿಟರ್ನಿಂಗ್ ಅಧಿಕಾರಿಯು, ಉಪನಿಯಮ (9)ರಡಿ ಹಿಂತೆಗೆದುಕೊಳ್ಳುವ ನೋಟೀಸಿನ ನೈಜತೆಯು ಮತ್ತು ಅದನ್ನು ಕೊಡುವ ನಿರ್ದೇಶಕನ ಗುರುತು ಮನದಟ್ಟಾದರೆ, ಅವನ/ಅವರ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ವ್ಯಕ್ತಿಯ/ವ್ಯಕ್ತಿಗಳ ಹೆಸರನ್ನು/ಹೆಸರುಗಳನ್ನು ಅಂಥ ಸಭೆಯಲ್ಲಿ ಹಾಜರಿದ್ದ ನಿರ್ದೇಶಕರುಗಳಿಗೆ ಓದಿ ತಿಳಿಸತಕ್ಕದ್ದು.
(12) ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ನಿಗದಿಪಡಿಸಿದ ಸಮಯವು ಮುಗಿದ ತರುವಾಯ, ಚುನಾವಣೆ ನಡೆಸುವ ಯಾವುದೇ ಪದಕ್ಕೆ, ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಮತ್ತು ನಿರ್ದಿಷ್ಟಪಡಿಸಿದ ಸಮಯ ಮತ್ತು ರೀತಿಯಲ್ಲಿ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳದಿರುವ ಅಭ್ಯರ್ಥಿಗಳ ಸಂಖ್ಯೆಯು, ಆ ಪದಕ್ಕೆ ಚುನಾಯಿಸಬೇಕಾದ ಅಭ್ಯರ್ಥಿಗಳ ಸಂಖ್ಯೆಯನ್ನು ಮೀರದಿದ್ದಲ್ಲಿ, ರಿಟರ್ನಿಂಗ್ ಅಧಿಕಾರಿಯು ತಕ್ಷಣ ಆ ಪದಕ್ಕೆ ಕ್ರಮಬದ್ಧವಾಗಿ ನಾಮನಿರ್ದೇಶನ ಸಲ್ಲಿಸಿದ ಅಭ್ಯರ್ಥಿಯು ಚುನಾಯಿತನಾಗಿದ್ದಾನೆಂದು ಭಾವಿಸತಕ್ಕದ್ದು ಎಂಬ ಘೋಷಣೆಯನ್ನು ಮಾಡತಕ್ಕದ್ದು.
(13) ಯಾವುದೇ ಪದಕ್ಕೆ ಕ್ರಮಬದ್ಧವಾಗಿ ನಾಮನಿರ್ದೇಶನ ಸಲ್ಲಿಸಿದ ಅಭ್ಯರ್ಥಿಗಳ ಸಂಖ್ಯೆಯು, ಆ ಪದಕ್ಕೆ ಚುನಾಯಿಸಬೇಕಾದ ಅಭ್ಯರ್ಥಿಗಳ ಸಂಖ್ಯೆಯನ್ನು ಮೀರಿದಲ್ಲಿ, ರಿಟರ್ನಿಂಗ್ ಅಧಿಕಾರಿಯು ಈ ಮುಂದೆ ತಿಳಿಸಿದಂತೆ ರಹಸ್ಯ ಮತಪತ್ರದ ಮೂಲಕ ಮತದಾನವನ್ನು ನಡೆಸುವ ಕ್ರಮ ಜರುಗಿಸತಕ್ಕದ್ದು.
(14) ಮತಗಳನ್ನು ರಹಸ್ಯ ಮತದಾನದಿಂದ ತೆಗೆದುಕೊಳ್ಳತಕ್ಕದ್ದು ಮತ್ತು ಯಾವುದೇ ಅಭ್ಯರ್ಥಿಗೆ ಮತ ನೀಡುವ ನಿರ್ದೇಶಕರುಗಳು ಅವರಿಗೆ ಒದಗಿಸುವ ಮತಪತ್ರಗಳಲ್ಲಿ ಮತಗಳನ್ನು ದಾಖಲಿಸತಕ್ಕದ್ದು.
(15) ಸಭೆಯಲ್ಲಿ ಹಾಜರಿದ್ದ ಯಾವುದೇ ನಿರ್ದೇಶಕನು ತಾನು ಹಾಗೇ ಇಚ್ಛೆಪಟ್ಟಲ್ಲಿ ಮತದಾನ ಮಾಡದಿರಬಹುದು.
(16) ಹಾಜರಿದ್ದ ಮತ್ತು ಮತ ಹಾಕಲು ಇಚ್ಛೆಯುಳ್ಳ ನಿರ್ದೇಶಕರು ಮತದಾನ ಮಾಡಿದ ನಂತರ ರಿಟರ್ನಿಂಗ್ ಅಧಿಕಾರಿಯು ಮತಗಳನ್ನು ಎಣಿಸತಕ್ಕದ್ದು ಮತ್ತು ಅತ್ಯಂತ ಹೆಚ್ಚಿನ ಕ್ರಮಬದ್ಧ ಮತಗಳನ್ನು ಪಡೆದಿರುವ ಅಭ್ಯರ್ಥಿಗಳು ಸೂಕ್ತ ರೀತಿಯಲ್ಲಿ ಚುನಾಯಿತರಾಗಿದ್ದಾರೆ ಎಂದು ಘೋಷಿಸತಕ್ಕದ್ದು.
ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೪೯೦(17) ಎರಡು ಅಥವಾ ಹೆಚ್ಚಿನ ಅಭ್ಯರ್ಥಿಗಳು ಗಳಿಸಿದ ಕ್ರಮಬದ್ಧ ಮತಗಳು ಸಮವಾಗಿದ್ದರೆ ಅಂತಹ ಯಾವುದೇ ಅಭ್ಯರ್ಥಿಗೆ ಒಂದು ಅಧಿಕ ಮತವನ್ನು ಸೇರಿಸುವುದರಿಂದ ಅಂತಹ ಅಭ್ಯರ್ಥಿಯು ಚುನಾಯಿತನಾಗಿದ್ದಾನೆಂದು ಘೋಷಣೆಯಾಗಲು ಅರ್ಹನಾಗಿರುವುದು ಕಂಡು ಬಂದರೆ, ರಿಟರ್ನಿಂಗ್ ಅಧಿಕಾರಿಯು ಚೀಟಿ ಎತ್ತುವ ಮೂಲಕ ಕೂಡಲೇ ಆ ಅಭ್ಯರ್ಥಿಗಳ ನಡುವೆ ಆಯ್ಕೆಯನ್ನು ತೀರ್ಮಾನಿಸತಕ್ಕದ್ದು ಮತ್ತು ಯಾವ ಅಭ್ಯರ್ಥಿಯ ಹೆಸರಿನಲ್ಲಿ ಚೀಟಿ ಬರುವುದೋ ಅವನು ಒಂದು ಅಧಿಕ ಮತವನ್ನು ಪಡೆದಿರುವನೆಂಬಂತೆ ಕ್ರಮಕೈಗೊಳ್ಳತಕ್ಕದ್ದು. ರಿಟರ್ನಿಂಗ್ ಅಧಿಕಾರಿಯು ಆ ತರುವಾಯ ಯಾವ ಅಭ್ಯರ್ಥಿಯ ಹೆಸರಿನಲ್ಲಿ ಚೀಟಿ ಬರುತ್ತದೋ ಅವನು ಸೂಕ್ತ ರೀತಿಯಲ್ಲಿ ಚುನಾಯಿತನಾಗಿದ್ದಾನೆಂದು ಘೋಷಿಸತಕ್ಕದ್ದು.
(18) ರಿಟರ್ನಿಂಗ್ ಅಧಿಕಾರಿಯು ಸಭೆಯಲ್ಲಿ ಹಾಜರಿದ್ದ ಎಲ್ಲ ನಿರ್ದೇಶಕರ ಹೆಸರುಗಳನ್ನು ಒಳಗೊಂಡಿರುವ ಸಭಾ ನಡವಳಿಗಳನ್ನು ದಾಖಲಿಸುವಂತೆ ಮಾಡತಕ್ಕದ್ದು. ಅಂಥ ನಡವಳಿಗಳನ್ನು ರಿಟರ್ನಿಂಗ್ ಅಧಿಕಾರಿ, ಮುಖ್ಯಕಾರ್ಯನಿರ್ವಾಹಕ ಮತ್ತು ಹಾಜರಿದ್ದ ಎಲ್ಲ ನಿರ್ದೇಶಕರು ಸಹಿ ಮಾಡತಕ್ಕದ್ದು. ಸದರಿ ನಡವಳಿಯು ಯಾವುದೇ ಸದಸ್ಯನಿಗೆ ಪರಿಶೀಲನೆಗೆ ಲಭ್ಯವಾಗತಕ್ಕದ್ದು.
(19) ರಿಟರ್ನಿಂಗ್ ಅಧಿಕಾರಿಯು ಚುನಾವಣೆಯ ನಡವಳಿಗಳನ್ನು ದಾಖಲಿಸಿ ಒಂದು ಸಮಗ್ರ ವರದಿಯನ್ನು ತಯಾರಿಸತಕ್ಕದ್ದು ಮತ್ತು ಅಂಥ ವರದಿಯು ಚುನಾವಣೆಯ ದಾಖಲೆಗಳ ಭಾಗವಾಗಿರತಕ್ಕದ್ದು. ರಿಟರ್ನಿಂಗ್ ಅಧಿಕಾರಿಯು ಅಂಥ ವರದಿಯ ಪ್ರತಿಯನ್ನು ಚುನಾವಣೆಯ ಫಲಿತಾಂಶದ ಪ್ರತಿಯ ಸಹಿತ ಸಹಕಾರಿಯ ಮುಖ್ಯಕಾರ್ಯನಿರ್ವಾಹಕನಿಗೆ ಕೊಡತಕ್ಕದ್ದು ಹಾಗೂ ಜಿಲ್ಲಾ ಚುನಾವಣಾಧಿಕಾರಿಗೆ ಮತ್ತು ಸಹಕಾರ ಚುನಾವಣಾ ಆಯೋಗಕ್ಕೆ ವರದಿಯನ್ನು ಕಳುಹಿಸತಕ್ಕದ್ದು.
(20) ಚುನಾವಣೆಯ ಫಲಿತಾಂಶವನ್ನು ಘೋಷಿಸಿದ ತರುವಾಯ, ಪದಾಧಿಕಾರಿಗಳ ಚುನಾವಣೆಗೆ ಸಂಬಂಧಪಟ್ಟ ಮತಪತ್ರಗಳನ್ನು ಮತ್ತು ದಾಖಲೆಗಳನ್ನುಳ್ಳ ಮೊಹರಾದ ಲಕೋಟೆಯನ್ನು ಸಹಕಾರಿಯ ಮುಖ್ಯಕಾರ್ಯನಿರ್ವಾಹಕನಿಗೆ ಅಥವಾ ಸಹಕಾರ ಚುನಾವಣಾ ಆಯೋಗದಿಂದ ಸೂಚಿಸಲ್ಪಟ್ಟವರಿಗೆ ಕೊಡತಕ್ಕದ್ದು. ಚುನಾವಣೆಯ ದಿನಾಂಕದಿಂದ ಆರು ತಿಂಗಳ ಅವಧಿಯವರೆಗೆ ಅಥವಾ ಚುನಾವಣೆಗೆ ಸಂಬಂಧಿಸಿದಂತೆ ಸಲ್ಲಿಸಲಾದ ವ್ಯಾಜ್ಯ ಅಥವಾ ಅಪೀಲು ವಿಲೇವಾರಿ ಆಗುವವರೆಗೆ, ಇವೆರಡರಲ್ಲಿ ಯಾವುದು ಕೊನೆಯದೋ ಅಲ್ಲಿಯವರೆಗೆ ಸಹಕಾರಿಯ ಮುಖ್ಯಕಾರ್ಯನಿರ್ವಾಹಕನು ಅಥವಾ ಸಹಕಾರ ಚುನಾವಣಾ ಆಯೋಗದಿಂದ ಸೂಚಿಸಲ್ಪಟ್ಟವರು ಸದರಿ ದಾಖಲೆಗಳನ್ನುಳ್ಳ ಮೊಹರಾದ ಲಕೋಟೆಯನ್ನು ಸುರಕ್ಷಿತವಾಗಿ ಸಂರಕ್ಷಿಸತಕ್ಕದ್ದು ಮತ್ತು ಆ ನಂತರ ನಾಶಪಡಿಸತಕ್ಕದ್ದು. 6ಎ. ನೋಂದಣಿಯ ನಂತರದ ಪ್ರಥಮ ಆಡಳಿತ ಮಂಡಳಿಗೆೆ ಚುನಾವಣೆ ನಡೆಸುವುದು: ಯಾವುದೇ ಸಹಕಾರಿಯು ನೋಂದಣಿಯಾದ ನಂತರ ಪ್ರಥಮ ಆಡಳಿತ ಮಂಡಳಿಗೆ ನಡೆಸುವ ಚುನಾವಣೆಗೆ ನಿಯಮ 5, 5ಎ ಯಿಂದ 5ಎಕೆ ವರೆಗಿನ ಉಪಬಂಧಗಳು, ಯಥೋಚಿತ ವ್ಯತ್ಯಾಸಗಳೊಂದಿಗೆ, ಅನ್ವಯವಾಗತಕ್ಕದ್ದು.
ಪರಂತು, ನಿಯಮ 5ಸಿ ಮೇರೆಗೆ ಸುಸ್ತಿದಾರರ ಪಟ್ಟಿಯನ್ನು ಪ್ರಕಟಿಸುವ ಅಗತ್ಯವಿರತಕ್ಕದ್ದಲ್ಲ.
ಟಿಪ್ಪಣಿ: ನಿಯಮ 5, 5ಎ ಯಿಂದ 5ಎಕೆ ವರೆಗಿನ ಉಪಬಂಧಗಳು, ಯಥೋಚಿತ ವ್ಯತ್ಯಾಸಗಳೊಂದಿಗೆ, ಸಂಯುಕ್ತ ಸಹಕಾರಿಗೂ ಅನ್ವಯವಾಗತಕ್ಕದ್ದು. 6ಬಿ. ಪ್ರಥಮ ಆಡಳಿತ ಮಂಡಳಿಯ ಪದಾಧಿಕಾರಿಗಳ ಚುನಾವಣೆ: ಸಹಕಾರಿಯ ಪ್ರಥಮ ಆಡಳಿತ ಮಂಡಳಿಯ ಪದಾಧಿಕಾರಿಗಳ ಚುನಾವಣೆಗೆ ನಿಯಮ 6ರ ಉಪಬಂಧಗಳು, ಯಥೋಚಿತ ವ್ಯತ್ಯಾಸಗಳೊಂದಿಗೆ, ಅನ್ವಯವಾಗತಕ್ಕದ್ದು
6ಸಿ. ಸಾಮಾನ್ಯ ಸಭೆಗಳು: (1) ಒಂದು ಸಹಕಾರಿಯ ಆಡಳಿತ ಮಂಡಳಿಯು ಅಧಿನಿಯಮದಲ್ಲಿ ನಿರ್ದಿಷ್ಟಪಡಿಸಲಾದ ಸಂದರ್ಭದಲ್ಲಿ ತನ್ನ ಸದಸ್ಯರ ಸಾಮಾನ್ಯ ಸಭೆಯನ್ನು ಕರೆಯಬಹುದು.
ಪರಂತು ಪ್ರಕರಣ 23ರಲ್ಲಿ ಉಕ್ತವಾದ ಕಲಾಪವನ್ನು ನಿರ್ವಹಿಸಲು ಪ್ರತಿ ವರ್ಷ ಸೆಪ್ಟಂಬರ್ ಇಪ್ಪತ್ತೈದನೇ ದಿನಾಂಕದೊಳಗೆ ವಾರ್ಷಿಕ ಸಾಮಾನ್ಯ ಸಭೆ ಎಂದು ಕರೆಯಲ್ಪಡುವ ಒಂದು ಅಂಥ ಸಭೆಯನ್ನು ಕರೆಯತಕ್ಕದ್ದು.
(2) ಆಡಳಿತ ಮಂಡಳಿಯು ಸಾಮಾನ್ಯ ಸಭೆಯ ದಿನಾಂಕ ಮತ್ತು ಸಮಯವನ್ನು ನಿರ್ಧರಿಸಿದ ನಂತರ, ಮುಖ್ಯ ಕಾರ್ಯನಿರ್ವಾಹಕನು ಉಪವಿಧಿಗಳ ತಿದ್ದುಪಡಿ ಸಂದರ್ಭದಲ್ಲಿ ಕನಿಷ್ಠ ಇಪ್ಪತ್ತು ದಿನಗಳ ಮೊದಲು ಅಥವಾ ಇತರ ಸಂದರ್ಭದಲ್ಲಿ ಕನಿಷ್ಠ ಹದಿನೈದು ಸ್ಪಷ್ಟ ದಿನಗಳ ನೋಟೀಸನ್ನು ನೀಡುವುದರ ಮೂಲಕ ವಾರ್ಷಿಕ ಸಾಮಾನ್ಯ ಸಭೆಯನ್ನು ಕರೆಯತಕ್ಕದ್ದು. ಆದಾಗ್ಯೂ, ತುರ್ತು ಸಂದರ್ಭಗಳಲ್ಲಿ ಕನಿಷ್ಠ ಪಕ್ಷ ಹತ್ತು ಸ್ಪಷ್ಟ ದಿನಗಳ ನೋಟೀಸು ನೀಡುವುದರ ಮೂಲಕ ವಿಶೇಷ ಸಾಮಾನ್ಯ ಸಭೆಯನ್ನು ಕರೆಯಬಹುದು. ಅಂಥ ನೋಟೀಸನ್ನು ಈ ಕೆಳಗಿನ ವಿಧಾನದ ಮೂಲಕ ಕಳುಹಿಸಬಹುದು.
(i) (ಎ) ಸಾಮಾನ್ಯ ಅಂಚೆ; ಅಥವಾ
(ಬಿ) ವಿದ್ಯುನ್ಮಾನ ಅಂಚೆ (ಇ-ಮೇಲ್ ); ಅಥವಾ
(ಸಿ) ಸೂಕ್ತ ಸ್ವೀಕೃತಿಯೊಂದಿಗೆ ಸ್ಥಳೀಯವಾಗಿ ತಲುಪಿಸುವ ಮೂಲಕ;
ಮತ್ತು
(ii) ಕಾರ್ಯಕ್ಷೇತ್ರದಲ್ಲಿ ಹೆಚ್ಚು ಪರಿಚಲನೆಯಲ್ಲಿರುವ ವೃತ್ತ ಪತ್ರಿಕೆಯಲ್ಲಿ ಸಂಕ್ಷಿಪ್ತವಾಗಿ ಪ್ರಕಟಿಸುವ ಮೂಲಕ.
(3) ಪ್ರಕರಣ 30ರ ಉಪಪ್ರಕರಣ (2)ರಡಿ ಸಂಯುಕ್ತ ಸಹಕಾರಿಯು ಒಂದು ವಿಶೇಷ ಸಾಮಾನ್ಯ ಸಭೆಯನ್ನು ಕರೆದಾಗ, ಅದು:-
(i) ಪ್ರಸಂಗಾನುಸಾರ 10 ಸ್ಪಷ್ಟ ದಿನಗಳೊಳಗೆ ಕಡಿಮೆ ಇಲ್ಲದ ಅವಧಿಗೆ ಅಂಥ ಸಭೆಯ ನೋಟೀಸಿನ ಅವಧಿಯನ್ನು;
(ii) ಅಂಥ ಸಭೆಯ ದಿನಾಂಕ, ಸಮಯ ಮತ್ತು ಸ್ಥಳ; ಮತ್ತು
(iii) ಅಂಥ ಸಭೆಯಲ್ಲಿ ಪರಿಗಣಿಸಬೇಕಾದ ವಿಷಯಗಳ
ಬಗ್ಗೆ ನಿರ್ಧರಿಸಬಹುದು. ಸಂಯುಕ್ತ ಸಹಕಾರಿಯಿಂದ ನಿಯೋಜಿತನಾದ ಒಬ್ಬ ಅಧಿಕಾರಿಯು ಅಂಥ ಸಭೆಯ ಅಧ್ಯಕ್ಷತೆಯನ್ನು ವಹಿಸಬಹುದು.
ವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೪೯೧(4) ಪ್ರಕರಣ 30ರ ಉಪಪ್ರಕರಣ (3)ರಡಿ ರಿಜಿಸ್ಟ್ರಾರನು ಒಂದು ವಿಶೇಷ ಸಾಮಾನ್ಯ ಸಭೆಯನ್ನು ಕರೆದಾಗ, ಆತನು:-
(i) ಪ್ರಸಂಗಾನುಸಾರ ಹತ್ತು ಸ್ಪಷ್ಟ ದಿನಗಳೊಳಗೆ ಕಡಿಮೆ ಇಲ್ಲದ ಅವಧಿಗೆ ಅಂಥ ಸಭೆಯ ನೋಟೀಸಿನ ಅವದಿಯನ್ನು ;
(ii) ಅಂಥ ಸಭೆಯ ದಿನಾಂಕ, ಸಮಯ ಮತ್ತು ಸ್ಥಳ; ಮತ್ತು
(iii) ಅಂಥ ಸಭೆಯಲ್ಲಿ ಪರಿಗಣಿಸಬೇಕಾದ ವಿಷಯಗಳ
ಬಗ್ಗೆ ನಿರ್ಧರಿಸಬಹುದು. ರಿಜಿಸ್ಟ್ರಾರನು ಅಥವಾ ಅವನಿಂದ ನಿಯೋಜಿತನಾದ ಒಬ್ಬ ಅಧಿಕಾರಿಯು ಅಂಥ ಸಭೆಯ ಅಧ್ಯಕ್ಷತೆಯನ್ನು ವಹಿಸಬಹುದು.
(5) ಸಾಮಾನ್ಯ ಸಭೆಯ ನೋಟೀಸಿನಲ್ಲಿ ಸಭೆಯ ಸ್ಥಳ, ದಿನಾಂಕ, ಸಮಯ ಮತ್ತು ಅಜೆಂಡಾಗಳನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು. ಮುಖ್ಯ ಕಾರ್ಯನಿರ್ವಾಹಕನು ಅಜೆಂಡಾದಲ್ಲಿ ಪ್ರತಿ ವಿಷಯದ ಮೇಲೆ ಸಂಕ್ಷಿಪ್ತವಾದ ಟಿಪ್ಪಣಿಗಳನ್ನು, ಹಿಂದಿನ ವರ್ಷದ ಲೆಕ್ಕಪರಿಶೋಧಿತ ಆಸ್ತಿ ಹೊಣೆ ಪಟ್ಟಿ, ಲಾಭ-ನಷ್ಟ ತಃಖ್ತೆ ಮತ್ತು ಲೆಕ್ಕ ಪರಿಶೋಧನಾ ವರದಿಯ ಮುಖ್ಯ ಸಾರಾಂಶಗಳನ್ನು, ಅದರ ಮೇಲೆ ಆಡಳಿತ ಮಂಡಳಿಯು ತೆಗೆದುಕೊಂಡ ಕ್ರಮಗಳ ಸಂಕ್ಷಿಪ್ತ ಅನುಸರಣಾ ವರದಿಯ ಸಹಿತ ಸಾಮಾನ್ಯ ಸಭೆಯ ನೋಟೀಸಿನ ಜೊತೆ ಕಳುಹಿಸತಕ್ಕದ್ದು. ಒಂದು ವೇಳೆ ಬೈಲಾ ತಿದ್ದುಪಡಿಯ ಪ್ರಸ್ತಾವವಿದ್ದಲ್ಲಿ, ಅಂತಹ ಪ್ರಸ್ತಾವವನ್ನು ಪ್ರಸ್ತಾಪಿತ ತಿದ್ದುಪಡಿಯ ಪಾಠ ಸಹಿತ ಸಭಾ ನೋಟೀಸಿನ ಜೊತೆ ಕಳುಹಿಸತಕ್ಕದ್ದು. ಆದಾಗ್ಯೂ ಮುಖ್ಯಕಾರ್ಯನಿರ್ವಾಹಕನು ಕಛೇರಿಯಲ್ಲಿಯೂ ಸಹ ಅಜೆಂಡಾದಲ್ಲಿನ ಎಲ್ಲಾ ವಿಷಯಗಳ ಮೇಲೆ ವಿವರವಾದ ಟಿಪ್ಪಣಿಗಳನ್ನು ಮತ್ತು ಹಿಂದಿನ ವರ್ಷದ ಪೂರ್ಣ ಲೆಕ್ಕಪರಿಶೋಧನಾ ವರದಿಯನ್ನು ಅಪೇಕ್ಷೆಯುಳ್ಳ ಸದಸ್ಯರಿಗೆ ಒದಗಿಸತಕ್ಕದ್ದು.
(6) ಸಹಕಾರಿಯ ಮತದಾನದ ಹಕ್ಕುಳ್ಳ ಒಟ್ಟು ಸದಸ್ಯರ ಐದನೇ ಒಂದು ಭಾಗದಷ್ಟು ಸದಸ್ಯರ ಹಾಜರಾತಿಯು ಸಾಮಾನ್ಯ ಸಭೆಯ ಕೋರಂ ಆಗಿರತಕ್ಕದ್ದು.
ಯಾವುದೇ ಸಾಮಾನ್ಯ ಸಭೆಯಲ್ಲಿ ಯಾವುದೇ ಕಲಾಪವನ್ನು ನಿರ್ವಹಿಸುವ ಸಮಯದಲ್ಲಿ ಕೋರಂ ಇಲ್ಲದ ಪಕ್ಷದಲ್ಲಿ ಅಂಥ ಕಲಾಪವನ್ನು ನಡೆಸತಕ್ಕದ್ದಲ್ಲ.
(7) ಸಭೆಗೆ ಗೊತ್ತುಪಡಿಸಿದ ಸಮಯದಿಂದ ಒಂದು ಗಂಟೆಯೊಳಗೆ ಕೋರಂ ಇಲ್ಲದ ಪಕ್ಷದಲ್ಲಿ ಅಂಥ ಸಭೆಯನ್ನು ಮುಂದೂಡತಕ್ಕದ್ದು.
ಪರಂತು, ಅಂಥ ಸಭೆಯನ್ನು ಸದಸ್ಯರುಗಳ ಕೋರಿಕೆ ಮೇರೆಗೆ ಕರೆದಿದ್ದರೆ ಅದನ್ನು ಮುಂದೂಡತಕ್ಕದ್ದಲ್ಲ ಆದರೆ ವಿಸರ್ಜಿಸತಕ್ಕದ್ದು.
(8) ಸಭೆಯಲ್ಲಿ ಕಲಾಪವನ್ನು ನಡೆಸುತ್ತಿರುವಾಗ ಯಾವುದೇ ಸಂದರ್ಭದಲ್ಲಿ ಕೋರಂ ಆಗಲು ಅಗತ್ಯವಿರುವ ಸಾಕಷ್ಟು ಸಂಖ್ಯೆಯ ಸದಸ್ಯರು ಹಾಜರಿಲ್ಲದಿದ್ದಲ್ಲಿ ಅಂಥ ಕಲಾಪವನ್ನು ನಡೆಸತಕ್ಕದ್ದಲ್ಲ. ಅಧ್ಯಕ್ಷನು ಅಥವಾ ಸಭೆಯ ಅಧ್ಯಕ್ಷತೆಯನ್ನು ವಹಿಸುವ ವಹಿಸಿರುವ ಸದಸ್ಯನು, ತಾನಾಗಿಯೇ ಅಥವಾ ಈ ಸಂಗತಿಯನ್ನು ಅವನ ಗಮನಕ್ಕೆ ತಂದಾಗ ಸಭೆಯನ್ನು ಮುಂದೂಡತಕ್ಕದ್ದು ಮತ್ತು ಹಾಗೇ ಮುಂದೂಡಲ್ಪಟ್ಟ ಸಭೆಯಲ್ಲಿ ಇತ್ಯರ್ಥವಾಗಲು ಬಾಕಿ ಉಳಿದ ಕಲಾಪವನ್ನು ಮುಂದುವರೆದ ಸಭೆಯಲ್ಲಿ ಸಾಮಾನ್ಯ ರೀತಿಯಲ್ಲಿ ನಿರ್ವಹಿಸತಕ್ಕದ್ದು.
(9) ಉಪನಿಯಮ (7) ಅಥವಾ ಉಪನಿಯಮ (8)ರಡಿಯಲ್ಲಾಗಲೀ ಸಭೆಯು ಮುಂದೂಡಲ್ಪಟ್ಟಾಗ, ಮುಂದುವರೆದ ಸಭೆಯು ಅದೇ ದಿನಾಂಕದಂದು ಅಥವಾ ಮುಂದೂಡಿದ ದಿನಾಂಕದಿಂದ ಏಳು ದಿನಗಳೊಳಗೆ ಸಭೆಯ ಅಧ್ಯಕ್ಷನು ಗೊತ್ತುಪಡಿಸಿದ ಅಂಥ ಸ್ಥಳದಲ್ಲಿ, ಅಂಥ ದಿನಾಂಕ ಮತ್ತು ಸಮಯದಲ್ಲಿ ನಡೆಯತಕ್ಕದ್ದು.
ಅಂಥ ಮುಂದುವರೆದ ಸಭೆಯಲ್ಲಿ ಮುಂದೂಡಲ್ಪಟ್ಟ ಸಭೆಯ ಅಜೆಂಡಾದಲ್ಲಿ ನಮೂದಿಸಿರುವ ವಿಷಯಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಿಷಯವನ್ನು ಚರ್ಚಿಸತಕ್ಕದ್ದಲ್ಲ ಮತ್ತು ನಿರ್ಣಯ ತೆಗೆದುಕೊಳ್ಳತಕ್ಕದ್ದಲ್ಲ. ಮುಂದುವರೆದ ಸಭೆಗೂ ಸಹ ವಿಷಯಗಳನ್ನು ಪರಿಗಣಿಸಲು ಅಗತ್ಯವಿರುವ ಕೋರಂ ಇರತಕ್ಕದ್ದು.
(10) ಕೋರಂ ಕೊರತೆಯಿಂದ ಹಾಗೆ ಮುಂದೂಡಲ್ಪಟ್ಟ ಸಭೆಯಲ್ಲಿ ಪರಿಗಣಿಸಲಾಗದ ಕಲಾಪವನ್ನು ಕೋರಂವುಳ್ಳ ಮುಂದುವರೆದ ಸಭೆಯಲ್ಲಿ ಅಥವಾ ಯಾವುದೇ ತರುವಾಯದ ಮುಂದುವರೆದ ಸಭೆಯಲ್ಲಿ ಮಂಡಿಸತಕ್ಕದ್ದು ಮತ್ತು ಇತ್ಯರ್ಥಗೊಳಿಸತಕ್ಕದ್ದು.
(11) ಅಧಿನಿಯಮ, ನಿಯಮಗಳು ಅಥವಾ ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸದ ಹೊರತು, ಸಾಮಾನ್ಯ ಸಭೆಯಲ್ಲಿ ಎಲ್ಲಾ ತೀರ್ಮಾನಗಳನ್ನು ಸರಳ ಬಹುಮತದ ಹಾಜರಿರುವ ಸದಸ್ಯರು ತೆಗೆದುಕೊಳ್ಳತಕ್ಕದ್ದು. ಚುನಾವಣೆಯನ್ನು ಹೊರತುಪಡಿಸಿ ಯಾವುದೇ ವಿಷಯದ ಮೇಲೆ ತೀರ್ಮಾನದ ಪರ ಅಥವಾ ವಿರುದ್ಧ ಸಮಾನ ಮತಗಳು ದೊರೆತರೆ ಸಭಾಪತಿಯು ಎರಡನೆಯ ಅಥವಾ ನಿರ್ಣಾಯಕ ಮತ ಚಲಾಯಿಸಲು ಹಕ್ಕುಳ್ಳವನಾಗಿರತಕ್ಕದ್ದು.
(12) ಯಾವುದೇ ಕಾರಣಕ್ಕಾಗಿ ಅಧ್ಯಕ್ಷನು ಸಾಮಾನ್ಯ ಸಭೆಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ, ಉಪಾಧ್ಯಕ್ಷನು ಅಥವಾ ಅವನ ಗೈರು ಹಾಜರಿಯಲ್ಲಿ ಹಾಜರಿದ್ದ ನಿರ್ದೇಶಕರಿಂದ ಚುನಾಯಿತನಾದ ಆಡಳಿತ ಮಂಡಳಿ ಇತರ ಸದಸ್ಯನೊಬ್ಬನು ಅಂಥ ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು.
(13) ಮುಖ್ಯ ಕಾರ್ಯನಿರ್ವಾಹಕನು ಸಭೆಯ ನಡವಳಿಗಳನ್ನು ಚರ್ಚೆಗಳನುಸಾರ ಸ್ಪಷ್ಟವಾಗಿ ಮತ್ತು ನಿಖರವಾಗಿ ಅದೇ ಉದ್ದೇಶಕ್ಕಾಗಿ ಇಡಲ್ಪಟ್ಟ ಮತ್ತು ಅದರ ಪುಟಗಳನ್ನು ಅನುಕ್ರಮವಾಗಿ ಸಂಖ್ಯೀಕರಿಸಿದ ಪುಸ್ತಕದಲ್ಲಿ ದಾಖಲಿಸತಕ್ಕದ್ದು. ಯಾವುದೇ ಸದಸ್ಯನು ಯಾವುದೇ ವಿಷಯದಲ್ಲಿ ಚರ್ಚೆಯಲ್ಲಿ ಭಾಗವಹಿಸಿ ತನ್ನ ಅಸಮ್ಮತಿ ವ್ಯಕ್ತಪಡಿಸಿದಾಗ ಅದನ್ನೂ ಸಹ ಯಥಾವತ್ತಾಗಿ ದಾಖಲಿಸತಕ್ಕದ್ದು. ಸದರಿ ಪುಸ್ತಕದ ಪ್ರತಿ ಪುಟದಲ್ಲಿ ಸಣ್ಣ ರುಜು ಮಾಡತಕ್ಕದ್ದು ಅಥವಾ ಸಹಿ ಮಾಡತಕ್ಕದ್ದು ಮತ್ತು ನಡವಳಿ ಪುಸ್ತಕದಲ್ಲಿ ಪ್ರತಿ ಸಭೆಯ ನಡವಳಿಯನ್ನು ದಾಖಲಿಸಿದ ಕೊನೆಯ ಪುಟದಲ್ಲಿ ದಿನಾಂಕವನ್ನು ನಮೂದಿಸಿ ಮುಖ್ಯ ಕಾರ್ಯನಿರ್ವಾಹಕನು ಮತ್ತು ಸಭಾಪತಿಯು ಸಹಿ ಮಾಡತಕ್ಕದ್ದು. ಸಭೆಯ ನಡವಳಿಗಳು ಸಭೆಯಲ್ಲಿನ ಚರ್ಚೆಗಳ ನಿಖರವಾದ ಮತ್ತು ಯುಕ್ತವಾದ ಸಂಗ್ರಹವನ್ನು ಒಳಗೊಂಡಿರತಕ್ಕದ್ದು.
(14) ಮುಖ್ಯ ಕಾರ್ಯನಿರ್ವಾಹಕನು ಅಂಥ ಸಭೆಯು ನಡೆದ ದಿನಾಂಕದಿಂದ ಮೂವತ್ತು ದಿನಗಳೊಳಗೆ ನಡವಳಿಗಳ ದೃಡೀಕೃತ ಪ್ರತಿಯನ್ನು ರಿಜಿಸ್ಟ್ರಾರನಿಗೆ, ಸಂಯುಕ್ತ ಸಹಕಾರಿಗೆ, ಸಂಬಂಧಪಟ್ಟ ಹಣಕಾಸು ಬ್ಯಾಂಕಿಗೆ, ಸಂಬಂಧಪಟ್ಟ ಕ್ರೆಡಿಟ್ ಏಜೆನ್ಸಿಗೆ ಕಳುಹಿಸತಕ್ಕದ್ದು ಮತ್ತು ಸಹಕಾರಿಯ ಸೂಚನಾ ಫಲಕದಲ್ಲಿ ದೃಡೀಕೃತ ಪ್ರತಿಯನ್ನು ಪ್ರಕಟಿಸತಕ್ಕದ್ದು.
(15) ಯಾವುದೇ ಸಭೆಯ ನಡವಳಿಗಳನ್ನುಳ್ಳ ಪುಸ್ತಕಗಳನ್ನು,-
(ಎ) ಸಹಕಾರಿಯ ನೋಂದಾಯಿತ ಕಛೇರಿಯಲ್ಲಿ ಇಡತಕ್ಕದ್ದು;
(ಬಿ) ಸಹಕಾರಿಯ ಕೆಲಸದ ವೇಳೆಯಲ್ಲಿ ಯಾವುದೇ ಸದಸ್ಯನು ಪರಿಶೀಲಿಸಲು ಅವಕಾಶವಿರತಕ್ಕದ್ದು.
ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೪೯೨6ಡಿ. ವಿಶೇಷ ಸಾಮಾನ್ಯ ಸಭೆಗಳು- (1) ಈ ನಿಯಮಗಳ ನಿಯಮ 6ಸಿ ಯ ಉಪಬಂಧಗಳು, ಯಥೋಚಿತ ವ್ಯತ್ಯಾಸಗಳೊಂದಿಗೆ, ವಿಶೇಷ ಸಾಮಾನ್ಯ ಸಭೆಗಳಿಗೆ ಅನ್ವಯವಾಗುತ್ತವೆ.
(2) ತುರ್ತು ಪರಿಸ್ಥಿತಿ ಇದ್ದಲ್ಲಿ, ಕನಿಷ್ಠ ಹತ್ತು ಸ್ಪಷ್ಟ ದಿನಗಳ ನೋಟೀಸನ್ನು ನೀಡುವ ಮೂಲಕ ವಿಶೇಷ ಸಾಮಾನ್ಯ ಸಭೆಯನ್ನು ಕರೆಯಬಹುದು, ಆದರೆ ಅಂಥ ಸಭೆಯಲ್ಲಿ ಅಜೆಂಡಾದಲ್ಲಿ ನಮೂದಿಸಿರುವ ಕಲಾಪದ ಹೊರತಾಗಿ ಯಾವುದೇ ವಿಷಯಗಳನ್ನು ಚರ್ಚಿಸಿ ನಿರ್ಣಯಿಸತಕ್ಕದ್ದಲ್ಲ.
6ಇ. ಆಡಳಿತ ಮಂಡಳಿಯ ಸಭೆಗಳು : (1) ಅಧಿನಿಯಮದ ಪ್ರಕರಣ 27 ಅಥವಾ ಈ ನಿಯಮಗಳಲ್ಲಿ ಅಥವಾ ಉಪವಿಧಿಗಳಲ್ಲಿ ನಮೂದಿಸಿರುವ ಕಲಾಪವನ್ನು ನಿರ್ವಹಿಸಲು ಯಾವುದೇ ಸಹಕಾರಿಯ ಆಡಳಿತ ಮಂಡಳಿಯು ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿದಂತೆ ಸಭೆ ನಡೆಸತಕ್ಕದ್ದು.
ಪರಂತು, ಒಂದು ಆಡಳಿತ ಮಂಡಳಿ ಸಭೆಗೂ ಮತ್ತು ಮುಂದಿನ ಮತ್ತೊಂದು ಆಡಳಿತ ಮಂಡಳಿ ಸಭೆಯ ಕಾಲಾವಧಿ ಯಾವುದೇ ಕಾರಣಕ್ಕೂ ಎರಡು ತಿಂಗಳು ಮೀರತಕ್ಕದ್ದಲ್ಲ.
(2) ಮುಖ್ಯ ಕಾರ್ಯನಿರ್ವಾಹಕನು, ಸಹಕಾರಿಯ ಅಧ್ಯಕ್ಷ ಅಥವಾ ಸಭಾಪತಿಯೊಡನೆ ಸಮಾಲೋಚಿಸಿ, ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿದಂತೆ ಕನಿಷ್ಠ ಏಳು ಸ್ಪಷ್ಟ ದಿನಗಳ ನೋಟೀಸನ್ನು ನೀಡುವುದರ ಮೂಲಕ ಆಡಳಿತ ಮಂಡಳಿ ಸಭೆಯನ್ನು ಕರೆಯತಕ್ಕದ್ದು. ಆದಾಗ್ಯೂ, ತುರ್ತು ಸಂದರ್ಭಗಳಲ್ಲಿ ಕನಿಷ್ಠ ಪಕ್ಷ ಮೂರು ಸ್ಪಷ್ಟ ದಿನಗಳ ನೋಟೀಸು ನೀಡುವುದರ ಮೂಲಕ ಆಡಳಿತ ಮಂಡಳಿ ಸಭೆಯನ್ನು ಕರೆಯಬಹುದು. ಅಂಥ ನೋಟೀಸನ್ನು ಈ ಕೆಳಗಿನ ವಿಧಾನದ ಮೂಲಕ ಕಳುಹಿಸಬಹುದು.
(ಎ) ಅಂಚೆ ಮತ್ತು ವಿದ್ಯುನ್ಮಾನ ಅಂಚೆ (ಇ-ಮೇಲ್); ಅಥವಾ
(ಬಿ) ತ್ವರಿತ ಅಂಚೆ; ಅಥವಾ
(ಸಿ) ಕೊರಿಯರ್; ಅಥವಾ
(ಸಿ) ಸೂಕ್ತ ಸ್ವೀಕೃತಿಯ ಸಹಿತ ಸ್ಥಳೀಯ ತಲುಪಿಸುವಿಕೆ.
(21) ಸಭಾ ನೋಟೀಸಿನಲ್ಲಿ ಸಭೆಯ ಸ್ಥಳ, ದಿನಾಂಕ, ಸಮಯ ಮತ್ತು ಅಜೆಂಡಾಗಳನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು. ಮುಖ್ಯ ಕಾರ್ಯನಿರ್ವಾಹಕನು ಅಜೆಂಡಾದಲ್ಲಿ ಪ್ರತಿ ವಿಷಯದ ಮೇಲೆ ಅದರ ಸಾಧಕ-ಬಾಧಕ, ಅನ್ವಯವಾಗುವ ಕಾನೂನಿನ ಉಪಬಂಧ ಮತ್ತು ಆರ್ಥಿಕ ಪರಿಣಾಮಗಳನ್ನೊಳಗೊಂಡ ವಿವರವಾದ ಟಿಪ್ಪಣಿಗಳನ್ನು ಅಂಥ ನೋಟೀಸಿನ ಜೊತೆಯಲ್ಲಿ ಕಳುಹಿಸತಕ್ಕದ್ದು.
(22) ಉಪವಿಧಿಗಳಲ್ಲಿ ನಮೂದಿಸಿರುವಂತೆ ಆಡಳಿತ ಮಂಡಳಿಯ ಸಂಖ್ಯಾ ಬಲದ ಶೇಕಡಾ 50ರ ನಂತರದ ಪೂರ್ಣ ಸಂಖ್ಯೆಯು ಆಡಳಿತ ಮಂಡಳಿಯ ಸಭೆಯ ಕೋರಂ ಆಗಿರತಕ್ಕದ್ದು. ಯಾವುದೇ ಆಡಳಿತ ಮಂಡಳಿಯ ಸಭೆಯಲ್ಲಿ ಯಾವುದೇ ಕಲಾಪಗಳ ನಿರ್ವಹಣೆಯ ಸಮಯದಲ್ಲಿ ಕೋರಂ ಇಲ್ಲದಿದ್ದ ಪಕ್ಷದಲ್ಲಿ, ಅಂಥ ಕಲಾಪವನ್ನು ನಿರ್ವಹಿಸತಕ್ಕದ್ದಲ್ಲ.
(23) ನಿಯಮ 6ಸಿ ಯ ಉಪನಿಯಮ (7) ರಿಂದ (10) ಮತ್ತು ಉಪನಿಯಮ (16)ರ ಉಪಬಂಧಗಳು ಆಡಳಿತ ಮಂಡಳಿಯ ಸಭೆಗಳಿಗೆ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕದ್ದು.
(24) ಸಾಮಾನ್ಯವಾಗಿ ಅಜೆಂಡಾದಲ್ಲಿ ನಮೂದಿಸಿರುವ ವಿಷಯಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳತಕ್ಕದ್ದಲ್ಲ. ಆದಾಗ್ಯೂ ಆಡಳಿತ ಮಂಡಳಿಯ ಮುಂದಿನ ಸಭೆಯಲ್ಲಿ ಯಾವುದೇ ವಿಷಯದ ಮೇಲೆ ತೀರ್ಮಾನವನ್ನು ತೆಗೆದುಕೊಳ್ಳಲು ಸಾಕಷ್ಟು ಸಮಯವಿಲ್ಲದಿದ್ದ ಪಕ್ಷದಲ್ಲಿ, ಎಲ್ಲಾ ನಿರ್ದೇಶಕರಿಗೆ ಅಂಥ ವಿಷಯದ ಮೇಲೆ ಅವಶ್ಯವಾದ ಟಿಪ್ಪಣಿಗಳನ್ನು ಒದಗಿಸಿದ ನಂತರ, ಹಾಗೂ ಅಜೆಂಡಾದಲ್ಲಿನ ಎಲ್ಲಾ ವಿಷಯಗಳನ್ನು ಚರ್ಚಿಸಿ ತೀರ್ಮಾನಿಸಿದ ನಂತರ ಸಭಾಪತಿಯ ಅನುಮತಿ ಮೇರೆಗೆ ಅಂಥ ವಿಷಯವನ್ನು ಹೆಚ್ಚುವರಿ ವಿಷಯವನ್ನಾಗಿ ಚರ್ಚೆ ಮತ್ತು ತೀರ್ಮಾನಕ್ಕೆ ತೆಗೆದುಕೊಳ್ಳಬಹುದು.
ಪರಂತು, ಕೆಳಕಂಡ ವಿಷಯಗಳನ್ನು ಹೆಚ್ಚುವರಿ ವಿಷಯವನ್ನಾಗಿ ಚರ್ಚೆಗೆ ಮತ್ತು ತೀರ್ಮಾನಕ್ಕೆ ತೆಗೆದುಕೊಳ್ಳತಕ್ಕದ್ದಲ್ಲ.
(ಎ) ನಿರ್ದೇಶಕರುಗಳ ಚುನಾವಣೆ;
(ಬಿ) ಪದಾಧಿಕಾರಿಗಳ ಚುನಾವಣೆ;
(ಸಿ) ವೃತ್ತಿಪರ ನಿರ್ದೇಶಕನ ಹುದ್ದೆಗೆ ಸಹಮತದಿಂದ ಭರ್ತಿ ಮಾಡಿಕೊಳ್ಳುವುದು;
(ಡಿ) ಆಕಸ್ಮಿಕ ಖಾಲಿ ಸ್ಥಾನದ ನಿರ್ದೇಶಕನ ಹುದ್ದೆಗೆ ಸಹಮತದಿಂದ ಭರ್ತಿ ಮಾಡಿಕೊಳ್ಳುವುದು;
(ಇ) ನೌಕರರುಗಳ ವಿರುದ್ಧ ಶಿಸ್ತಿನ ವಿಚಾರಣಾ ವರದಿ ಮೇಲೆ ಕ್ರಮ; ಮತ್ತು
(ಎಫ್) ಆರ್ಥಿಕ ಪರಿಣಾಮಗಳನ್ನೊಳಗೊಂಡ ಯಾವುದೇ ವಿಷಯ;
ಮತ್ತು ಪರಂತು, ಹೆಚ್ಚುವರಿ ವಿಷಯಗಳಿಗೆ ಸೂಕ್ತ ವಿಷಯವಾರು ಟಿಪ್ಪಣಿ ನೀಡದೆ, ತೀರ್ಮಾನ ಕೈಗೊಳ್ಳಬಾರದು.
(7) ಅಧಿನಿಯಮದ, ನಿಯಮಗಳ ಅಥವಾ ಉಪವಿಧಿಗಳ ಉಪಬಂಧಗಳಿಗೆ ವಿರುದ್ಧವಾಗಿ ಅಥವಾ ಸಹಕಾರಿಯ ಹಿತಕ್ಕೆ ಧಕ್ಕೆ ತರುವಂತಹ ಯಾವುದೇ ತೀರ್ಮಾನವನ್ನು ಆಡಳಿತ ಮಂಡಳಿಯು ತೆಗೆದುಕೊಳ್ಳ್ಳತಕ್ಕದ್ದಲ್ಲ. ಅಧಿನಿಯಮದ, ನಿಯಮಗಳ ಅಥವಾ ಉಪವಿಧಿಗಳ ಉಪಬಂಧಗಳಿಗೆ ವಿರುದ್ಧವಾಗಿ ಅಥವಾ ಸಹಕಾರಿಯ ಹಿತಾಸಕ್ತಿಗೆ ಧಕ್ಕೆ ತರುವಂತಹ ಯಾವುದೇ ತೀರ್ಮಾನವನ್ನು ತೆಗೆದುಕೊಂಡಲ್ಲಿ ಅಂತಹ ತೀರ್ಮಾನಕ್ಕೆ ಆಡಳಿತ ಮಂಡಳಿಯ ನಿರ್ದೇಶಕರುಗಳು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಹೊಣೆಗಾರರಾಗತಕ್ಕದ್ದು.
(8) ಮುಖ್ಯ ಕಾರ್ಯನಿರ್ವಾಹಕನು ಸಭೆಯ ನಡವಳಿಗಳನ್ನು ಚರ್ಚೆಗಳನುಸಾರ ಸ್ಪಷ್ಟವಾಗಿ ಮತ್ತು ನಿಖರವಾಗಿ ಅದೇ ಉದ್ದೇಶಕ್ಕಾಗಿ ಇಡಲ್ಪಟ್ಟ ಮತ್ತು ಅದರ ಪುಟಗಳನ್ನು ಅನುಕ್ರಮವಾಗಿ ಸಂಖ್ಯೀಕರಿಸಿದ ಪುಸ್ತಕದಲ್ಲಿ ದಾಖಲಿಸತಕ್ಕದ್ದು. ಯಾವುದೇ ನಿರ್ದೇಶಕನು ಯಾವುದೇ ವಿಷಯದ ಚರ್ಚೆಯಲ್ಲಿ ಭಾಗವಹಿಸಿ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿದಾಗ, ಮುಖ್ಯ ಕಾರ್ಯನಿರ್ವಾಹಕನು ಅದನ್ನು ಚರ್ಚೆಯನುಸಾರ ಸ್ಪಷ್ಟವಾಗಿ ಮತ್ತು ನಿಖರವಾಗಿವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೪೯೩ ನಡವಳಿಗಳಲ್ಲಿ ದಾಖಲಿಸತಕ್ಕದ್ದು. ಸದರಿ ಪುಸ್ತಕದ ಪ್ರತಿ ಪುಟದಲ್ಲಿ ಸಣ್ಣ ರುಜು ಮಾಡತಕ್ಕದ್ದು ಅಥವಾ ಸಹಿ ಮಾಡತಕ್ಕದ್ದು ಮತ್ತು ನಡವಳಿ ಪುಸ್ತಕದಲ್ಲಿ ಪ್ರತಿ ಸಭೆಯ ನಡವಳಿಯನ್ನು ದಾಖಲಿಸಿದ ಕೊನೆಯ ಪುಟದಲ್ಲಿ ದಿನಾಂಕವನ್ನು ನಮೂದಿಸಿ ಮುಖ್ಯ ಕಾರ್ಯನಿರ್ವಾಹಕನು ಮತ್ತು ಸಭಾಪತಿಯು ಸಹಿ ಮಾಡತಕ್ಕದ್ದು. ಸಭೆಯ ನಡವಳಿಗಳು ಸಭೆಯಲ್ಲಿನ ಚರ್ಚೆಗಳ ನಿಖರವಾದ ಮತ್ತು ಯುಕ್ತವಾದ ಸಂಗ್ರಹವನ್ನು ಒಳಗೊಂಡಿರತಕ್ಕದ್ದು. ಸಭೆಯ ನಡವಳಿಗಳಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ನಿರ್ದೇಶಕರುಗಳ ಹೆಸರುಗಳನ್ನು ಒಳಗೊಂಡಿರತಕ್ಕದ್ದು ಮತ್ತು ಸಭೆಯಲ್ಲಿ ತೆಗೆದುಕೊಂಡ ಪ್ರತಿ ನಿರ್ಣಯಕ್ಕೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿರುವ ನಿರ್ದೇಶಕರುಗಳಿದ್ದಲ್ಲಿ÷ಅವರ ಹೆಸರುಗಳನ್ನು ಒಳಗೊಂಡಿರತಕ್ಕದ್ದು. ಹಾಗೇ ದಾಖಲಿಸಿ ಸಹಿ ಮಾಡಿದ ನಡವಳಿಗಳನ್ನು ಸಭೆಯು ನಡೆದ ಏಳು ದಿನಗಳೊಳಗೆ ಎಲ್ಲಾ ನಿರ್ದೇಶಕರುಗಳಿಗೆ ಕಳುಹಿಸತಕ್ಕದ್ದು.
(9) ಸಭೆಯಲ್ಲಿ ಯಾವುದೇ ವಿಷಯದ ಬಗ್ಗೆ ತೆಗೆದುಕೊಂಡಂತೆ ತೀರ್ಮಾನವನ್ನು ದಾಖಲಿಸಿಲ್ಲವೆಂಬ ಅಥವಾ ಸಭೆಯಲ್ಲಿ ಆ ವಿಷಯವನ್ನು ಚರ್ಚಿಸಿಲ್ಲವೆಂಬ ಕಾರಣದ ಮೇಲೆ ಯಾವುದೇ ನಿರ್ದೇಶಕನಿಗೆ ಯಾವುದೇ ವಿಷಯದ ಮೇಲಿನ ತೀರ್ಮಾನವನ್ನು ದಾಖಲಿಸುವ ಸಂಬಂಧದಲ್ಲಿ ಆಕ್ಷೇಪಣೆ ಇದ್ದಲ್ಲಿ, ಆತನು ಸಭೆಯ ನಡವಳಿಗಳನ್ನು ಸ್ವೀಕರಿಸಿದ ದಿನಾಂಕದಿಂದ ಮೂರು ದಿವಸಗಳೊಳಗೆ ತನ್ನ ಅಭಿಪ್ರಾಯವನ್ನು ತಿಳಿಸತಕ್ಕದ್ದು. ಯಾವುದೇ ತೀರ್ಮಾನದ ಮೇಲೆ ಬಹುಸಂಖ್ಯಾ ಸದಸ್ಯರು ಅಂಥ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಲ್ಲಿ ಅಂಥ ತೀರ್ಮಾನವನ್ನು ಮುಖ್ಯ ಕಾರ್ಯನಿರ್ವಾಹಕನು ಜಾರಿಗೊಳಿಸತಕ್ಕದ್ದಲ್ಲ. ಆದರೆ ಅದನ್ನು ಆಡಳಿತ ಮಂಡಳಿಯ ತರುವಾಯದ ಸಭೆಯಲ್ಲಿ ಇಡತಕ್ಕದ್ದು.
(10) ಯಾವುದೇ ಕಾರಣಕ್ಕಾಗಿ ಅಧ್ಯಕ್ಷನು ಆಡಳಿತ ಮಂಡಳಿ ಸಭೆಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ, ಉಪಾಧ್ಯಕ್ಷನು ಅಥವಾ ಅವನ ಗೈರು ಹಾಜರಿಯಲ್ಲಿ ಹಾಜರಿದ್ದ ನಿರ್ದೇಶಕರಿಂದ ಚುನಾಯಿತನಾದ ಆಡಳಿತ ಮಂಡಳಿ ಇತರ ಸದಸ್ಯನೊಬ್ಬನು ಅಂಥ ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು.
(11) ಯಾವುದೇ ಸಹಕಾರಿಯ ಸಾಮಾನ್ಯ ಸಭೆಯಲ್ಲಿ ಅಥವಾ ಆಡಳಿತ ಮಂಡಳಿಯ ಸಭೆಯಲ್ಲಿ ಇನ್ನೊಂದು ಸಹಕಾರಿಯನ್ನು ಪ್ರತಿನಿಧಿಸುವ ಸಂದರ್ಭದಲ್ಲಿ ಅಂಥ ಇನ್ನೊಂದು ಸಹಕಾರಿಯ ಆಡಳಿತ ಮಂಡಳಿಯ ಪ್ರಾಧಿಕೃತನಾದ ಅದರ ಅಧ್ಯಕ್ಷ ಅಥವಾ ಆಡಳಿತ ಮಂಡಳಿಯ ಸದಸ್ಯನ ಮೂಲಕ ಮಾತ್ರ ಅಂಥ ಸಹಕಾರಿಯು ಪ್ರತಿನಿಧಿಸಲ್ಪಡತಕ್ಕದ್ದು. ಅಂಥ ಇನ್ನೊಂದು ಸಹಕಾರಿಯಲ್ಲಿ ಯಾವುದೇ ಕಾರಣಕ್ಕಾಗಿ ಆಡಳಿತ ಮಂಡಳಿಯು ಇಲ್ಲದಿದ್ದ ಪಕ್ಷದಲ್ಲಿ ಅದರ ಆಡಳಿತಗಾರ ಅಥವಾ ವಿಶೇಷಾಧಿಕಾರಿಯ ಮೂಲಕ ಪ್ರತಿನಿಧಿಸಲ್ಪಡತಕ್ಕದ್ದು.
6ಎಫ್. ಪ್ರತಿನಿಧಿಗಳ ಚುನಾವಣೆ: ಪ್ರಾತಿನಿಧಿಕ ಸಾಮಾನ್ಯ ನಿಕಾಯವನ್ನುಳ್ಳ ಸಹಕಾರಿಯಲ್ಲಿ ಚುನಾವಣಾ ಪ್ರಕ್ರಿಯೆಯು ಮೊದಲ ಹಂತದಲ್ಲಿ ಪ್ರಾತಿನಿಧಿಕ ಸಾಮಾನ್ಯ ನಿಕಾಯಕ್ಕೆ ಪ್ರತಿನಿಧಿಗಳ ಚುನಾವಣೆಯನ್ನು ಮತ್ತು ಮುಂದಿನ ಹಂತದಲ್ಲಿ ಆಡಳಿತ ಮಂಡಳಿಗೆ ನಿರ್ದೇಶಕರನ್ನು ಚುನಾಯಿಸುವ ಸಾಮಾನ್ಯ ಚುನಾವಣೆಯನ್ನು ಒಳಗೊಂಡಿರುತ್ತದೆ. ಸಹಕಾರ ಚುನಾವಣಾ ಆಯೋಗವು ಪ್ರಾತಿನಿಧಿಕ ಸಾಮಾನ್ಯ ನಿಕಾಯವನ್ನುಳ್ಳ ಸಹಕಾರಿಯ ಚುನಾವಣೆಗೆ ಸಂಬಂಧಪಟ್ಟಂತೆ ನಿರ್ದೇಶಕರ ಸಾಮಾನ್ಯ ಚುನಾವಣೆ ನಡೆಸಲು ಒಬ್ಬ ರಿಟರ್ನಿಂಗ್ ಅಧಿಕಾರಿಯನ್ನು ಮತ್ತು ಪ್ರತಿನಿಧಿಗಳ ಚುನಾವಣೆ ನಡೆಸಲು ಅಗತ್ಯವಾದಷ್ಟು ಸಹಾಯಕ ರಿಟರ್ನಿಂಗ್ ಅಧಿಕಾರಿಗಳನ್ನು ನೇಮಿಸತಕ್ಕದ್ದು.
6ಜಿ. ಪ್ರಾತಿನಿಧಿಕ ಸಾಮಾನ್ಯ ನಿಕಾಯದ ಪ್ರತಿನಿಧಿಗಳ ಸಂಖ್ಯೆ: (1) (i) ಪ್ರಾತಿನಿಧಿಕ ಸಾಮಾನ್ಯ ನಿಕಾಯವನ್ನುಳ್ಳ ಸಹಕಾರಿಯ ಕಾರ್ಯಕ್ಷೇತ್ರವು ಗ್ರಾಮೀಣ ಪ್ರದೇಶದಲ್ಲಿ ತಾಲ್ಲೂಕಿಗೆ ಮತ್ತು ನಗರಪಾಲಿಕೆ ಪ್ರದೇಶವಾಗಿದ್ದಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ವಿಸ್ತರಿಸಿದ್ದು ಮತ್ತು ಅದನ್ನು ಮೀರಿ ರಾಜ್ಯಕ್ಕಿಂತ ಕಡಿಮೆ ಇದ್ದಲ್ಲಿ ;
ಅಥವಾ
(ii) ಸದಸ್ಯರ ಸಂಖ್ಯೆಯು ಒಂದು ಸಾವಿರಕ್ಕೆ ಮೀರಿ ಮೇಲ್ಪಟ್ಟಿದ್ದಲ್ಲಿ;
ಚುನಾಯಿಸಬೇಕಾದ ಪ್ರತಿನಿಧಿಗಳ ಕನಿಷ್ಟ ಸಂಖ್ಯೆಯು ಇನ್ನೂರು ಮತ್ತು ಗರಿಷ್ಠ ಪ್ರತಿನಿಧಿಗಳ ಸಂಖ್ಯೆ ಒಂದು ಸಾವಿರ ಇರತಕ್ಕದ್ದು. ಪ್ರತಿ ತಾಲ್ಲೂಕ ಅಥವಾ ವಿಧಾನ ಸಭಾ ಕ್ಷೇತ್ರದಿಂದ ಚುನಾಯಿಸಲ್ಪಡಬೇಕಾದ ಪ್ರತಿನಿಧಿಗಳ ಸಂಖ್ಯೆಯನ್ನು ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸತಕ್ಕದ್ದು.
(2) ಪ್ರಾತಿನಿಧಿಕ ಸಾಮಾನ್ಯ ನಿಕಾಯವನ್ನುಳ್ಳ ಸಹಕಾರಿಯ ಕಾರ್ಯಕ್ಷೇತ್ರವು ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದ್ದಲ್ಲಿ, ನಗರ ಪಾಲಿಕೆಯನ್ನು ಹೊರತುಪಡಿಸಿ, ಪ್ರತಿ ತಾಲ್ಲೂಕಿನಿಂದ ಚುನಾಯಿಸಬೇಕಾದ ಪ್ರತಿನಿಧಿಗಳ ಸಂಖ್ಯೆಯು ಕನಿಷ್ಠ ಎರಡು ಇರತಕ್ಕುದು. ನಗರ ಪಾಲಿಕೆ ಸಂಬಂಧದಲ್ಲಿ ನಗರ ಪಾಲಿಕೆ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ ಎರಡು ಪ್ರತಿನಿಧಿ ಇರತಕ್ಕದು. ಯಾವುದೇ ತಾಲ್ಲೂಕಿನಲ್ಲಿ ಅಥವಾ ನಗರ ಪಾಲಿಕೆ ಒಳಗಿನ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಸದಸ್ಯರ ಸಂಖ್ಯೆಯು 50ಕ್ಕಿಂತ ಕಡಿಮೆ ಇದ್ದಲ್ಲಿ ಪಕ್ಕದ ತಾಲ್ಲೂಕು ಅಥವಾ ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ಸದಸ್ಯರುಳ್ಳ ಕ್ಷೇತ್ರಕ್ಕೆ ಕೂಡಿಸಲು ಉಪವಿಧಿಯಲ್ಲಿ ಅವಕಾಶ ಕಲ್ಪಿಸತಕ್ಕದ್ದು.
6ಹೆಚ್. ಸಹಕಾರಿಯ ಸಾಮಾನ್ಯ ಚುನಾವಣೆಯಲ್ಲಿ ಮತದಾರರಗಣ : (1) ಯಾವುದೇ ಸಹಕಾರಿಯು ತನ್ನ ಮಂಡಳಿಯ ನಿರ್ದೇಶಕರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡುವ ಉದ್ದೇಶಕ್ಕಾಗಿ ಸದಸ್ಯರನ್ನು ಪ್ರಾದೇಶಿಕತೆ ಅಥವಾ ಇತರೆ ಆಧಾರದ ಮೇಲೆ ವಿಭಾಗಿಸಬಹುದು.
(2) ಅಂತಹ ಸಹಕಾರ ಸಂಘದ ಉಪವಿಧಿಗಳಲ್ಲಿ ಸಹಕಾರ ಸಂಘದ ಪ್ರತಿ ಸಮೂಹವನ್ನು ಪ್ರತಿನಿಧಿಸುವ ಆಡಳಿತ ಮಂಡಳಿ ನಿರ್ದೇಶಕರ ಸಂಖ್ಯೆ ಅಥವಾ ಅನುಪಾತ ಪ್ರಮಾಣವನ್ನು ನಿಗದಿಪಡಿಸತಕ್ಕದ್ದು ಮತ್ತು ಅಂತಹ ನಿರ್ದೇಶಕರುಗಳು ಕೆಳಕಂಡಂತೆ ಆಯ್ಕೆ ಹೊಂದಬಹುದೆಂದು ನಿಗದಿಪಡಿಸತಕ್ಕದ್ದು.
(ಎ) ಸಹಕಾರಿಯ ಎಲ್ಲಾ ಸದಸ್ಯರುಗಳನ್ನೊಳಗೊಂಡ ಒಂದೇ ಮತದಾರರಗಣದಿಂದ; ಅಥವಾ
(ಬಿ) ಸಹಕಾರಿಯ ವಿವಿಧ ಸಣ್ಣ ಗುಂಪುಗಳಿಗೆ ಸೇರಿದ ನಿರ್ದೇಶಕರುಗಳು ಆಯಾ ಗುಂಪಿನ ಸದಸ್ಯರನ್ನೊಳಗೊಂಡ ಒಂದಕ್ಕಿಂತ ಹೆಚ್ಚಿನ ಮತದಾರಗಣಗಳಿಂದ.
ಪರಂತು, ಪ್ರತಿ ಮತದಾರರಗಣದಿಂದ ಮಂಡಳಿಯ ಸಾಮಾನ್ಯ ಚುನಾವಣೆಯಲ್ಲಿ ಆಯ್ಕೆ ಹೊಂದಬೇಕಾದ ನಿರ್ದೇಶಕರ ಸಂಖ್ಯೆಯು ಆಯಾ ಮತದಾರರಗಣದ ಸದಸ್ಯರ ಅನುಪಾತಕ್ಕೆ ಹತ್ತಿರವಾಗಿರತಕ್ಕದ್ದು.
(3) ಆದಾಗ್ಯೂ, ಉಪನಿಯಮ (2)ರ ಖಂಡ (ಬಿ) ನಲ್ಲಿ ತಿಳಿಸಿದಂತೆ ಯಾವುದೇ ಸಂಘದ ಮಂಡಲಿಯ ನಿರ್ದೇಶಕರ ಚುನಾವಣೆಯ ಸಮಯದಲ್ಲಿ, ಅಂಥ ಸಂಘದ ಉಪವಿಧಿಗಳಲ್ಲಿ ಅಂಥ ಮತದಾರರಗಣಗಳಿಂದ ರಚನೆಗೆ ಅವಕಾಶವಿಲ್ಲದಿದ್ದರೆ, ಸಹಕಾರ ಚುನಾವಣಾ ಆಯೋಗವು ಅಂಥಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೪೯೪ ಮತದಾರರಗಣಗಳನ್ನು ನಿರ್ಧರಿಸಲು, ಅಧಿಸೂಚಿಸಲು ಮತ್ತು ಹಾಗೆ ಹೊರಡಿಸಿದ ಅಧಿಸೂಚನೆಯಂತೆ ಸಂಘದ ಚುನಾವಣೆಗಳನ್ನು ನಡೆಸಲು ಸಕ್ಷಮವಾಗಿರತಕ್ಕದ್ದು.
6ಐ. ಆಡಳಿತ ಮಂಡಳಿಯಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಮಹಿಳೆಯರಿಗೆ ಮತ್ತು ಹಿಂದುಳಿದವರ ವರ್ಗದವರಿಗೆ ಮೀಸಲಾತಿ:- ಯಾವುದೇ
ಸಹಕಾರಿಯ ಆಡಳಿತ ಮಂಡಳಿಯು ಮತದಾರರಗಣದ ಆಧಾರದ ಮೇಲೆ ಚುನಾಯಿತವಾದಾಗ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದವರಿಗೆ, ಮಹಿಳೆಯರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಕಾಯ್ದಿರಿಸಬೇಕಾದ ಮತದಾರರಗಣಗಳನ್ನು ನಿರ್ದೇಶಕರ ಸಾಮಾನ್ಯ ಚುನಾವಣಾ ದಿನಾಂಕದ ಪೂರ್ವದಲ್ಲಿ ನಡೆಯುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಧರಿಸತಕ್ಕದ್ದು ಮತ್ತು ಈ ಸಂಬಂಧದಲ್ಲಿ ಚುನಾವಣಾ ಆಯೋಗವು ನೀಡುವ ಮಾರ್ಗಸೂಚಿಗಳಿಗೆ ಒಳಪಡತಕ್ಕದ್ದು.
ಹಂತಹಂತವಾಗಿ ಒಂದಾದ ಮೇಲೆ ಒಂದರಂತೆ ಸಹಕಾರಿಯ ಎಲ್ಲಾ ಮತದಾರರಗಣಗಳು ಮೀಸಲಾತಿಗೆ ಒಳಪಡುವಂತೆ ಸ್ಥಾನಗಳ ಮೀಸಲಾತಿಯು ಕ್ರಮಬದ್ಧವಾಗಿ ಆವರ್ತಿಸುವುದನ್ನು ಖಾತರಿಪಡಿಸತಕ್ಕದ್ದು.
ಪರಂತು, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಮಹಿಳೆ ಮತ್ತು ಹಿಂದುಳಿದ ವರ್ಗದವರಿಗೆ ಮೀಸಲಿರಿಸಿದ ಮತದಾರರಗಣದಲ್ಲಿ ಅಂಥ ವರ್ಗದ ಸದಸ್ಯರು ವಾಸವಿಲ್ಲದೆ ಲಭ್ಯವಿಲ್ಲದಿದ್ದಲ್ಲಿ, ಸಹಕಾರಿಯ ಕ್ಷೇತ್ರದಲ್ಲಿನ ಆ ವರ್ಗದ ಬೇರೆ ಮತದಾರರಗಣದ ಸದಸ್ಯರು ಸ್ಪರ್ಧಿಸಬಹುದಾಗಿದೆ. 6ಜೆ. ಮುಖ್ಯ ಕಾರ್ಯನಿರ್ವಾಹಕನ ಅಧಿಕಾರಗಳು ಮತ್ತು ಪ್ರಕಾರ್ಯಗಳು:- ಅಧಿನಿಯಮದ ಪ್ರಕರಣ 31 ಮತ್ತು 61ರ ಉಪಪ್ರಕರಣಗಳಲ್ಲಿ ಉಕ್ತವಾದ ಅಧಿಕಾರಗಳ ಜೊತೆಗೆ, ಮುಖ್ಯ ಕಾರ್ಯನಿರ್ವಾಹಕನು ಈ ಕೆಳಗಿನ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು ಹೊಂದಿರತಕ್ಕದ್ದು.
(1) ಸಹಕಾರಿಯ ಅಧಿಕೃತ ಮತ್ತು ಸಾಮಾನ್ಯ ವ್ಯವಹಾರಗಳನ್ನು ನಡೆಸತಕ್ಕದ್ದು;
(2) ಸಹಕಾರಿಯ ಎಲ್ಲಾ ದಾಖಲೆಗಳನ್ನು ಮತ್ತು ದಾಸ್ತಾವೇಜುಗಳ ಅಭಿರಕ್ಷಕನಾಗಿರತಕ್ಕದ್ದು ಮತ್ತು ಸಹಕಾರಿಯ ಲೆಕ್ಕಪತ್ರಗಳ, ವಿವಿಧ ಪುಸ್ತಕಗಳ ಮತ್ತು ದಾಖಲೆಗಳ ನಿಖರವಾದ ನಿರ್ವಹಣೆಗೆ ವ್ಯವಸ್ಥೆ ಮಾಡತಕ್ಕದ್ದು, ಅಧಿನಿಯಮದ, ನಿಯಮಗಳ, ಮತ್ತು ಉಪವಿಧಿಗಳ ಉಪಬಂಧಗಳಿಗೆ ಅನುಸಾರವಾಗಿ ಹಾಗೂ ರಿಜಿಸ್ಟ್ರಾರನು ಅಥವಾ ಸಂಯುಕ್ತ ಸಹಕಾರಿಯು ಅಥವಾ ಸಹಕಾರ ಲೆಕ್ಕಪರಿಶೋಧನಾ ನಿರ್ದೇಶಕನು ನಿರ್ದೇಶಿಸಿದಂತೆ ಸಲ್ಲಿಸಬೇಕಾದ ನಿಯತಕಾಲಿಕ ತಃಖ್ತೆಗಳನ್ನು ಮತ್ತು ಅಧಿಕೃತ ವರದಿಗಳನ್ನು ಸರಿಯಾಗಿ ತಯಾರಿಸಿ ಸಕಾಲದಲ್ಲಿ ಸಲ್ಲಿಸತಕ್ಕದ್ದು.
(3) ಸಹಕಾರಿಯ ಕಾರ್ಯನಿರ್ವಹಣೆ ಮತ್ತು ವ್ಯವಹಾರಗಳ ಗುಣಮಟ್ಟವನ್ನು ನಿರ್ಧರಿಸಲು ಅಗತ್ಯವಾದ ನಿಯತಕಾಲಿಕ ಮಾಹಿತಿಯನ್ನು ಆಡಳಿತ ಮಂಡಳಿಗೆ ಒದಗಿಸತಕ್ಕದ್ದು.
(4) ಸಹಕಾರಿಯ ದಿನನಿತ್ಯದ ನಿರ್ವಹಣೆ ಮತ್ತು ವ್ಯವಹಾರದ ಮೇಲೆ ಸಾಮಾನ್ಯ ಮೇಲ್ವಿಚಾರಣೆ ಮತ್ತು ನಿಯಂತ್ರಣ ಹೊಂದಿರತಕ್ಕದ್ದು;
(5) ರಜೆ ಮಂಜೂರಾತಿ ಮಾಡುವುದು ಮತ್ತು ಯಾವುದೇ ಶಿಕ್ಷೆ ವಿಧಿಸುವುದು ಅಥವಾ ಅಮಾನತ್ತಿನಲ್ಲಿಡುವುದು ಸೇರಿದಂತೆ ಸಹಕಾರಿಯ ಎಲ್ಲಾ ನೌಕರರ ಮೇಲೆ ಸಾಮಾನ್ಯ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಜವಾಬ್ದಾರನಾಗಿರತಕ್ಕದ್ದು;
ಪರಂತು ಸಹಕಾರಿಯ ಉಪವಿಧಿಗಳಲ್ಲಿ ಅಥವಾ ಸೇವಾ ನಿಬಂಧನೆಗಳಲ್ಲಿ ಒಬ್ಬ ನೌಕರನನ್ನು ವಿಚಾರಣೆ ಕಾಯ್ದಿರಿಸಿ ಅಮಾನತ್ತಿನಲ್ಲಿಡುವ ಅಥವಾ ಯಾವುದೇ ಶಿಕ್ಷೆ ವಿಧಿಸುವ ಅಧಿಕಾರವನ್ನು ಸ್ಪಷ್ಟವಾಗಿ ಕೊಡಮಾಡದಿರುವಲ್ಲಿ, ಅಂಥ ಅಮಾನತ್ತು ಅಥವಾ ಶಿಕ್ಷೆಯನ್ನು ಆಡಳಿತ ಮಂಡಳಿಯ ಅನುಮೋದನೆ ಪಡೆದು ವಿಧಿಸಲು ಜವಾಬ್ದಾರನಾಗಿರತಕ್ಕದ್ದು.
(6) ಸಹಕಾರಿಯ ನಗದು, ದಾಸ್ತಾನು ಮತ್ತು ಇತರ ಆಸ್ತಿಗಳ ಸರಿಯಾದ ನಿರ್ವಹಣೆ ಮತ್ತು ಅಭಿರಕ್ಷೆಗೆ ವ್ಯವಸ್ಥೆ ಮಾಡತಕ್ಕದ್ದು;
(7) ಸಹಕಾರಿಯ ನಿಧಿಗಳಿಂದ ವ್ಯವಸ್ಥಾಪನಾ ಮತ್ತು ಕಾರ್ಯನಿರ್ವಹಣಾ ವೆಚ್ಚಗಳನ್ನು ಪಾವತಿಸತಕ್ಕದ್ದು;
(8) ಅಜೆಂಡಾ ಮತ್ತು ಅದರಲ್ಲಿನ ಪ್ರತಿಯೊಂದು ವಿಷಯದಲ್ಲಿನ ಟಿಪ್ಪಣಿ ಸಹಿತ ಸಾಮಾನ್ಯ ಸಭೆ, ಆಡಳಿತ ಮಂಡಳಿ ಮತ್ತು ಉಪಸಮಿತಿಗಳ ಸಭೆಗಳಿಗೆ ನೋಟೀಸು ನೀಡತಕ್ಕದ್ದು;
(9) ಸಾಮಾನ್ಯ ಸಭೆ, ಆಡಳಿತ ಮಂಡಳಿ ಮತ್ತು ಉಪಸಮಿತಿಗಳ ಸಭೆಗಳಲ್ಲಿ ಹಾಜರಿದ್ದು ಸದರಿ ಸಭೆಗಳಲ್ಲಿ ಅಗತ್ಯಪಡಿಸುವ ಕಾಗದಪತ್ರಗಳನ್ನು ಹಾಜರುಪಡಿಸತಕ್ಕದ್ದು ಹಾಗೂ ಸಭಾಪತಿಯೊಡನೆ ಅಂಥ ಸಭೆಗಳ ನಡವಳಿಗಳಿಗೆ ಸಹಿ ಮಾಡತಕ್ಕದ್ದು.
(10) ಸಹಕಾರ ವರ್ಷ ಮುಕ್ತಾಯವಾದ ಮೂವತ್ತು ದಿನಗಳೊಳಗೆ ಹಿಂದಿನ ವರ್ಷದ ವಾರ್ಷಿಕ ಆರ್ಥಿಕ ತಃಖ್ತೆಗಳನ್ನು, ತತ್ಸಂಬಂಧದ ಷೆಡ್ಯೂಲುಗಳನ್ನು ಅಧಿಕೃತ ವರದಿಗಳನ್ನು ಮತ್ತು ಇತರ ತಃಖ್ತೆಗಳ ಸಹಿತ, ತಯಾರಿಸಿ ಆಡಳಿತ ಮಂಡಳಿಯ ಅನುಮೋದನೆ ಪಡೆದು ಲೆಕ್ಕಪರಿಶೋಧಕ ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಯ ಮುಂದೆ ಮಂಡಿಸತಕ್ಕದ್ದು;
(11) ಅಧಿನಿಯಮದ ಪ್ರಕರಣ 33 ಅಥವಾ 64ರ ಲೆಕ್ಕಪರಿಶೋಧನಾ ವರದಿಗಳನ್ನು ಪ್ರಕರಣ 35 ಅಥವಾ 65ರ ವಿಚಾರಣಾ ವರದಿಗಳನ್ನು ಅವುಗಳಲ್ಲಿ ಉಕ್ತವಾದ ಲೋಪದೋಷಗಳನ್ನು ಸರಿಪಡಿಸಲು ಅಥವಾ ಅಕ್ರಮಗಳನ್ನು ನೇರ್ಪಡಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಸಹಿತ ಆಡಳಿತ ಮಂಡಳಿಯ ಮುಂದೆ ಮಂಡಿಸತಕ್ಕದ್ದು;
(12) ಲೆಕ್ಕಪರಿಶೋಧನಾ ಅಥವಾ ವಿಚಾರಣಾ ವರದಿಗಳಲ್ಲಿ ತಿಳಿಸಲಾದ ಲೋಪದೋಷಗಳನ್ನು ಸರಿಪಡಿಸಲು ಅಥವಾ ಅಕ್ರಮಗಳನ್ನು ನೇರ್ಪಡಿಸಲು ತೆಗೆದುಕೊಂಡ ಕ್ರಮಗಳನ್ನುಳ್ಳ ಅನುಪಾಲನಾ ವರದಿಗೆ ಆಡಳಿತ ಮಂಡಳಿಯ ಅನುಮೋದನೆ ಪಡೆದು ಪಾಲನಾ ವರದಿ ಕಳುಹಿಸತಕ್ಕದ್ದು. ಸದರಿ ಲೋಪದೋಷಗಳು ಸರಿಪಡಿಸಲ್ಪಡುವವರೆಗೆ ಮತ್ತು ಅಂಥಾ ಅಕ್ರಮಗಳು ನೇರ್ಪಡಿಸಲ್ಪಡುವವರೆಗೆ, ಅಂಥಾ ಪಾಲನಾ ವರದಿಗಳನ್ನು ನಿಯತಕಾಲಿಕವಾಗಿ, ಪ್ರಸಂಗಾನುಸಾರ ರಿಜಿಸ್ಟ್ರಾರನಿಗೆ ಅಥವಾ ಸಂಯುಕ್ತ ಸಹಕಾರಿಗೆ ಅಥವಾ ಲೆಕ್ಕಪರಿಶೋಧನಾ ನಿರ್ದೇಶಕನಿಗೆ ಸಲ್ಲಿಸುವುದನ್ನು ಮುಂದುವರಿಸತಕ್ಕದ್ದು;
(13) ಆಡಳಿತ ಮಂಡಳಿಯ ಅನುಮೋದನೆಗೆ ಒಳಪಟ್ಟು ಸಹಕಾರಿ ವತಿಯಿಂದ ಅಥವಾ ಸಹಕಾರಿಗೆ ವಿರುದ್ಧವಾಗಿ ಹಾಕಲ್ಪಟ್ಟ ದಾವಾ ಮತ್ತು ಇತರೆ ಕಾನೂನು ಕ್ರಮಗಳನ್ನು ಜರುಗಿಸುವುದು, ಸಮರ್ಥಿಸಿಕೊಳ್ಳುವುದು, ನಡೆಸುವುದು, ಬಗೆಹರಿಸುವುದು ಅಥವಾ ಕೈಬಿಡುವುದು;
ವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೪೯೫(14) ಸಹಕಾರಿಯ ಯಾವುದೇ ನಿರ್ದೇಶಕನು ಕಾಯ್ದೆ, ನಿಯಮ ಅಥವಾ ಉಪವಿಧಿಯನ್ವಯ ತಮ್ಮ ಪದದಲ್ಲಿ ಮುಂದುವರೆಯಲು ಅನರ್ಹರಾದರೆ ಸದರಿ ಮಾಹಿತಿಯನ್ನು ಸಂಯುಕ್ತ ಸಹಕಾರಿಗೆ ವರದಿಸುವುದು.
(15) ಕಾಲಕಾಲಕ್ಕೆ ರಿಜಿಸ್ಟ್ರಾರನು ಅಥವಾ ಸಂಯುಕ್ತ ಸಹಕಾರಿಯು ಅಗತ್ಯಪಡಿಸುವಂತೆ ಸಹಕಾರಿಯ ವ್ಯವಹಾರಕ್ಕೆ ಸಂಬಂಧಪಟ್ಟ ಅಧಿಕೃತ ವರದಿಗಳನ್ನು, ತಃಖ್ತೆಗಳನ್ನು ಮತ್ತು ಮಾಹಿತಿಗಳನ್ನು ಸಲ್ಲಿಸುವುದು;
(16) ಅಪೆಕ್ಸ್ ಸಹಕಾರಿಯ ಸಂಬಂಧದಲ್ಲಿ, ಮುಖ್ಯ ಕಾರ್ಯನಿರ್ವಾಹಕನು:-
(i) ಅಧ್ಯಕ್ಷನೊಡನೆ ಸಮಾಲೋಚಿಸಿ ನೌಕರರನ್ನು ವರ್ಗಾಯಿಸುವ ಅಧಿಕಾರ ಹೊಂದಿರತಕ್ಕದ್ದು;
(ii) ಆತನ ವಿರುದ್ಧ ಶಿಸ್ತಿನ ವಿಚಾರಣೆಯನ್ನು ನಡೆಸಲು ಉದ್ದೇಶಿಸಿರುವ ಅಥವಾ ವಿಚಾರಣೆ ನಡೆಯುತ್ತಿರುವಾಗ, ಅಂಥಾ ನೌಕರನನ್ನು ಅಮಾನತ್ತಿನಲ್ಲಿಡಬಹುದು;
(iii) ಅಧಿನಿಯಮ, ನಿಯಮಗಳ ಮತ್ತು ಉಪವಿಧಿಗಳ ಉಪಬಂಧಗಳಿಗೆ ಒಳಪಟ್ಟು ಆದರೆ ಆಡಳಿತ ಮಂಡಳಿಯ ಅನುಮೋದನೆ ಪಡೆದು ಅಗತ್ಯವಾದ ಸಿಬ್ಬಂದಿಯನ್ನು ನೇಮಕ ಮಾಡಲು ಅಧಿಕಾರ ಹೊಂದಿರತಕ್ಕದ್ದು;
(iv) ಆಡಳಿತ ಮಂಡಳಿಯು ನೀಡುವ ಮಾರ್ಗಸೂಚಿಗಳಿಗೊಳಪಟ್ಟು ಮಾತುಕತೆ ನಡೆಸಬಹುದು ಮತ್ತು ಒಪ್ಪಂದಗಳನ್ನು ಜಾರಿಗೊಳಿಸಬಹುದು;
(v) ಸಹಕಾರಿಯ ನೌಕರರ ಅಧಿಕಾರ, ಪ್ರಕಾರ್ಯ ಮತ್ತು ಕರ್ತವ್ಯಗಳನ್ನು ನಿರ್ದಿಷ್ಟಪಡಿಸತಕ್ಕದ್ದು;
(vi) ತನ್ನ ಯಾವುದೇ ಅಧಿಕಾರವನ್ನು ಬೇರೆ ನೌಕರನಿಗೆ ಪ್ರತ್ಯಾಯೋಜಿಸಬಹುದು;
6ಕೆ. ಆಡಳಿತಗಾರ ಅಥವಾ ವಿಶೇಷಾಧಿಕಾರಿಗೆ ಕೊಡಬಹುದಾದ ಸಂಭಾವನೆ:- ಸರ್ಕಾರದ ಅಥವಾ ಒಂದು ಸಹಕಾರಿ ಸಂಸ್ಥೆಯ ಯಾವುದೇ ಅಧಿಕಾರಿ ಅಥವಾ ನೌಕರನನ್ನು ಅಧಿನಿಯಮದ ಪ್ರಕರಣ 38 ಅಥವಾ 57ಎ ಅಡಿ ನೇಮಕ ಮಾಡಲ್ಪಟ್ಟ ಆಡಳಿತಗಾರ ಅಥವಾ ಪ್ರಕರಣ 38ಎ ಅಡಿಯಲ್ಲಿ ನೇಮಕವಾದ ವಿಶೇಷಾಧಿಕಾರಿಗೆ ಕೊಡಬಹುದಾದ ಸಂಭಾವನೆಯನ್ನು ಕೆಳಗಿನಂತೆ ನಿರ್ದಿಷ್ಟಪಡಿಸತಕ್ಕದ್ದು.
(i) ಆತನನ್ನು ಪೂರ್ಣಕಾಲಿಕವಾಗಿ ನೇಮಿಸಿದಲ್ಲಿ ಆತನ ಸಂಬಳ ಮತ್ತು ಭತ್ಯೆಗಳನ್ನು ಸಹಕಾರಿಯು ಭರಿಸತಕ್ಕದ್ದು. ಆತನಿಗೆ ಇಲಾಖೆಯಲ್ಲಿ ಅಥವಾ ಸಂಸ್ಥೆಯಲ್ಲಿ ಅನ್ವಯವಾಗುವ ಸೇವಾ ನಿಯಮಗಳು, ಸಹಕಾರಿಯ ಆಡಳಿತಗಾರ ಅಥವಾ ವಿಶೇಷಾಧಿಕಾರಿಯಾಗಿ ಕೆಲಸ ನಿರ್ವಹಿಸುವಾಗಲೂ ಅನ್ವಯಿಸತಕ್ಕದ್ದು;
(ii) ಆತನನ್ನು ಆತನ ನಿಯತ ಹುದ್ದೆಗೆ ಹೆಚ್ಚುವರಿಯಾಗಿ ಆಡಳಿತಗಾರ ಅಥವಾ ವಿಶೇಷಾಧಿಕಾರಿಯಾಗಿ ನೇಮಿಸಿದ್ದಲ್ಲಿ, ಆತನಿಗೆ, ಆತನು ಧಾರಣಮಾಡಿದ ಹುದ್ದೆಯ ಮೂಲ ವೇತನದ ಶೇಕಡಾ ಹತ್ತರಷ್ಟನ್ನು ಸಂಭಾವನೆ ಎಂದು ಸಹಕಾರಿಯ ನಿಧಿಗಳಿಂದ ಕೊಡತಕ್ಕದ್ದು. ಆತನಿಗೆ ಇಲಾಖೆಯಲ್ಲಿ ಅಥವಾ ಸಂಸ್ಥೆಯಲ್ಲಿ ಅನ್ವಯವಾಗುವ ಸೇವಾ ನಿಯಮಗಳು, ಸಹಕಾರಿಯ ಆಡಳಿತಗಾರ ಅಥವಾ ವಿಶೇಷಾಧಿಕಾರಿಯಾಗಿ ಕೆಲಸ ನಿರ್ವಹಿಸುವಾಗಲೂ ಅನ್ವಯಿಸತಕ್ಕದ್ದು.
ಟಿಪ್ಪಣಿ:- ನಿಯಮ6, 6ಬಿ ಯಿಂದ 6ಇ ಮತ್ತು 6ಜೆ ಮತ್ತು 6ಕೆ ನಿಯಮಗಳು ಸೌಹಾರ್ದ ಸಂಯುಕ್ತ ಸಹಕಾರಿಗೆ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯಿಸುತ್ತದೆ.
6. ನಿಯಮ 7ರ ತಿದ್ದುಪಡಿ:- ಸದರಿ ನಿಯಮಗಳ ನಿಯಮ 7ರಲ್ಲಿ, ಉಪನಿಯಮ (1)ರಲ್ಲಿ, ಖಂಡ (ಬಿ)ನಲ್ಲಿ, "ರಿಜಿಸ್ಟ್ರಾರನ" ಎಂಬ ಪದಕ್ಕೆ, 'ಸಾಮಾನ್ಯ ನಿಕಾಯವು ಅದರ ಸಾಮಾನ್ಯ ಸಭೆಯಲ್ಲಿ ಹಾಜರಿದ್ದು ಮತ ನೀಡಿದ ಮತದಾನದ ಹಕ್ಕುಳ್ಳ ಸದಸ್ಯರ ಬಹುಮತದಿಂದ ಅಂಗೀಕರಿಸಲ್ಪಟ್ಟ ನಿರ್ಣಯದ ಮೂಲಕ ಸಾಮಾನ್ಯ ನಿಕಾಯದ' ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
7. ನಿಯಮ 8 ರ ತಿದ್ದುಪಡಿ:- ಸದರಿ ನಿಯಮಗಳ ನಿಯಮ 8ಕ್ಕೆ, ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು; ಎಂದರೆ:-
'8. ಲೆಕ್ಕಪರಿಶೋಧನೆ:-
(1) ಅಧಿನಿಯಮದ ಪ್ರಕರಣ 33 ಅಥವಾ ಪ್ರಕರಣ 64ರ ಉಪಪ್ರಕರಣ (1)ರಡಿಯ ಲೆಕ್ಕಪರಿಶೋಧನೆಯು, ಪ್ರಕರಣ 33ರ ಉಪಪ್ರಕರಣ (4) ಮತ್ತು (14) ರಿಂದ (18)ಗಳಲ್ಲಿ ನಿರ್ದಿಷ್ಟಪಡಿಸಿರುವ ವಿಷಯಗಳ ಜೊತೆಗೆ, ಕೆಳಗಿನ ವಿವರಗಳನ್ನು ಒಳಗೊಳ್ಳತಕ್ಕದ್ದು:
(ಎ) ಸಹಕಾರಿಯ ಉಪವಿಧಿಗಳಲ್ಲಿ ತಿಳಿಸಿರುವ ಉದ್ದೇಶಗಳಿಗೆ ಸಂಬಂಧಿಸಿದಂತೆ ಸಹಕಾರಿಯು ತೆಗೆದುಕೊಂಡ ಕಾರ್ಯಕ್ರಮಗಳ ಮತ್ತು ಚಟುವಟಿಕೆಗಳ ಪರೀಕ್ಷಣೆ;
(ಬಿ) ಮೂಲ ರಶೀದಿ ಮತ್ತು ವೋಚರ್ಗಳೊಡನೆ ಜಮಾ ಮತ್ತು ಖರ್ಚುಗಳ/ಆದಾಯ ವ್ಯಯಗಳ ನೈಜತೆ ಮತ್ತು ಔಚಿತ್ಯದ ಬಗ್ಗೆ ಪರಿಶೀಲನೆ;
(ಸಿ) ಪ್ರಸಂಗಾನುಸಾರ ರಿಸರ್ವ್ ಬ್ಯಾಂಕ್ ಅಥವಾ ನಬಾರ್ಡ್ ನಿರ್ಧರಿಸಿದಂಥ ಪ್ರಮಾಣದ ಸಹಕಾರಿಯ ಸಾಲಗಾರರಿಂದ ಬರಬೇಕಾದ ಬಾಕಿಗಳ ಹಾಗೂ ಠೇವಣಿದಾರರ ಮತ್ತು ಲೇಣಿದಾರರ ಜಮೆಯಲ್ಲಿರುವ ಉಳಿಕೆ ಮೊತ್ತಗಳ ಪರಿಶೀಲನೆ;
(ಡಿ) ಆಡಳಿತ ಮಂಡಳಿಯ ನಿರ್ದೇಶಕರ ವ್ಯವಹಾರಗಳ ಪರೀಕ್ಷಣೆ;
(ಇ) ನೌಕರರ ನೇಮಕ ಮತ್ತು ಪದೋನ್ನತಿ, ಸೇವಾ ಷರತ್ತುಗಳ ಹಾಗೂ ಅವರ ವಿರುದ್ಧ ತೆಗೆದುಕೊಳ್ಳಲಾದ ಶಿಸ್ತಿನ ಕ್ರಮಗಳ ಪರೀಕ್ಷಣೆ;
(ಎಫ್) ಸದಸ್ಯರುಗಳಿಗೆ ಒದಗಿಸಲಾದ ಸೇವೆಗಳ ಹಾಗೂ ಸದಸ್ಯರುಗಳು ಮತ್ತು ನಿರ್ದೇಶಕರು ಸದರಿ ಸೇವೆಗಳನ್ನು ಬಳಕೆ ಮಾಡಿಕೊಂಡ ಪ್ರಮಾಣದ ಪರೀಕ್ಷಣೆ;
(ಜಿ) ಸಹಕಾರಿಯ ಲೆಕ್ಕಪತ್ರಗಳ ನಿರ್ವಹಣೆ – ಇಂದೀಕರಣ ಮತ್ತು ಸಮರ್ಪಕತೆ – ವ್ಯವಹಾರಗಳ ಗಣಕೀಕರಣ;
ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೪೯೬(ಹೆಚ್) ಸಹಕಾರಿ ಸಂಸ್ಥೆಗಳಿಗೆ ಅನ್ವಯವಾಗುವಷ್ಟರಮಟ್ಟಿಗೆ ಸಹಕಾರಿಯ ವಿವಿಧ ವ್ಯವಹಾರ ಮತ್ತು ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಇತರ ಸಂಬಂಧಿತ ಕಾನೂನುಗಳ ಪಾಲನೆ;
(ಐ) ಪ್ರಸಂಗಾನುಸಾರ ರಿಸರ್ವ್ ಬ್ಯಾಂಕ್ ಅಥವಾ ನಬಾರ್ಡ್ ನಿಗದಿಪಡಿಸಿದಂಥ ನಮೂನೆಯಲ್ಲಿ ಆಡಳಿತ ಮಂಡಳಿಯು ತಯಾರಿಸುವ ಆರ್ಥಿಕ/ಲೆಕ್ಕ ತಃಖ್ತೆಗಳ ಪರೀಕ್ಷಣೆ;
(ಜೆ) ವಾಸ್ತವಾಗಿ ಗಳಿಸಿದ ಲಾಭ ಅಥವಾ ಅನುಭವಿಸಿದ ನಷ್ಟದ ದೃಡೀಕರಣ;
(ಕೆ) ಸಹಕಾರಿ ಬ್ಯಾಂಕಿಗೆ ಸಂಬಂಧಪಟ್ಟಂತೆ ರಿಸರ್ವ್ ಬ್ಯಾಂಕ್ ಮತ್ತು ನಬಾರ್ಡ್ ನೀಡಿರುವ ನಿರ್ದೇಶನ, ಮಾರ್ಗದರ್ಶನ ಇತ್ಯಾದಿಗಳ ಪಾಲನೆಯಾಗಿದೆಯೇ ಎಂಬ ಬಗ್ಗೆ ಪರಿಶೀಲನೆ;
(ಎಲ್) ಪ್ರಸಂಗಾನುಸಾರ ರಿಜಿಸ್ಟ್ರಾರನು ಅಥವಾ ರಿಸರ್ವ್ ಬ್ಯಾಂಕ್ ಅಥವಾ ನಬಾರ್ಡ್ ಸೂಚಿಸುವ ಇತರ ಯಾವುದೇ ವಿಷಯ.
ಪರಂತು, ಲೆಕ್ಕಪರಿಶೋಧನೆಯು ಆರ್ಥಿಕ ಲೆಕ್ಕಪರಿಶೋಧನೆಯ ಜೊತೆಗೆ ಔಚಿತ್ಯತೆಯ ಲೆಕ್ಕಪರಿಶೋಧನೆೆಯನ್ನು ಒಳಗೊಂಡಿರತಕ್ಕದ್ದು.
(2) ಪ್ರತಿ ಸಹಕಾರಿಯ ಆಡಳಿತ ಮಂಡಳಿಯ ಸಹಕಾರ ವರ್ಷ ಮುಕ್ತಾಯವಾದ ಮೂವತ್ತು ದಿನಗಳೊಳಗೆ ಜಮಾ ಖರ್ಚು ತಃಖ್ತೆಗಳು, ಆದಾಯ ವ್ಯಯ ತಃಖ್ತೆಗಳು, ಲಾಭ ನಷ್ಟ ತಃಖ್ತೆಗಳು, ಅದಕ್ಕೆ ಸಂಬಂಧಪಟ್ಟ ಷೆಡ್ಯೂಲುಗಳು ಮತ್ತು ಇತರ ತಃಖ್ತೆಗಳ ಸಹಿತ ಆಸ್ತಿ ಹೊಣೆ ಪಟ್ಟಿ ಇತ್ಯಾದಿ ವಾರ್ಷಿಕ ಆರ್ಥಿಕ ತಃಖ್ತೆಗಳನ್ನು ತಯಾರಿಸಿ ಲೆಕ್ಕಪರಿಶೋಧಕನಿಗೆ ಅಥವಾ ಲೆಕ್ಕಪರಿಶೋಧನಾ ಸಂಸ್ಥೆಗೆ ಹಾಜರುಪಡಿಸುವಂತೆ ಖಾತರಿಪಡಿಸತಕ್ಕದ್ದು.
ಪರಂತು, ಲೆಕ್ಕಪರಿಶೋಧಕ ಅಥವಾ ಲೆಕ್ಕಪರಿಶೋಧನಾ ಸಂಸ್ಥೆಗೆ ಒದಗಿಸಬೇಕಾದ ಷೆಡ್ಯೂಲುಗಳು ಮತ್ತು ರಿಟರ್ನ್ಗಳು ಕೆಳಗಿನವುಗಳನ್ನು ಒಳಗೊಂಡಿರತಕ್ಕದ್ದು:
(ಎ) ಸಹಕಾರಿಯ ಕಾರ್ಯನಿರ್ವಹಣೆ ಮತ್ತು ಸಾಮಾನ್ಯ ಮಾಹಿತಿಯ ತಃಖ್ತೆ;
(ಬಿ) ಸಹಕಾರಿ ವರ್ಷಾಂತ್ಯಕ್ಕೆ ಆಡಳಿತ ಮಂಡಳಿಯು ನಗದು ಮತ್ತು ದಾಸ್ತಾನು ಪರಿಶೀಲನೆ ಮಾಡಿದ ತಃಖ್ತೆ;
(ಸಿ) ಬ್ಯಾಂಕ್ ತಾಳೆ ಮತ್ತು ಉಳಿಕೆ ಮೊಬಲಗು ದೃಡೀಕರಣ ತಃಖ್ತೆ;
(ಡಿ) ಸದಸ್ಯತ್ವ ಮತ್ತು ಷೇರು ಷೆಡ್ಯೂಲು;
(ಇ) ಆಡಳಿತ ಮಂಡಳಿಯ ಸದಸ್ಯರ ಮತ್ತು ನೌಕರರ ಪಟ್ಟಿ;
(ಎಫ್) ಸದಸ್ಯರಿಗೆ ಮತ್ತು ನಿರ್ದೇಶಕರಿಗೆ ನೀಡಿರುವ ಸಾಲ ಮತ್ತು ಮುಂಗಡಗಳು;
(ಜಿ) ನೌಕರರಿಗೆ ನೀಡಿರುವ ಸಾಲ ಮತ್ತು ಮುಂಗಡಗಳು;
(ಹೆಚ್) ತಗಾದೆ ವಸೂಲಿ ಮತ್ತು ಉಳಿಕೆ ತಃಖ್ತೆ;
(ಐ) ಸುಸ್ತಿದಾರರ ಸದಸ್ಯರ ಪಟ್ಟಿ;
(ಜೆ) ಮತದಾನದ ಹಕ್ಕುಳ್ಳ ಸದಸ್ಯರ ಪಟ್ಟಿ;
(ಕೆ) ಹೂಡಿಕೆಗಳ ಮತ್ತು ಅವುಗಳ ದೃಡೀಕರಣ ಷೆಡ್ಯೂಲುಗಳು;
(ಎಲ್) ಕರಡು ಮತ್ತು ಸಂದೇಹಾಸ್ಪದ ಸಾಲಗಳ ಷೆಡ್ಯೂಲುಗಳು;
(ಎಂ) ಸಾಲ ದೃಡೀಕರಣ ತಃಖ್ತೆಗಳು;
(ಎನ್) ವರ್ಷದಲ್ಲಿ ಆಸ್ತಿಗಳಲ್ಲಿ ಹೂಡಿರುವ ಮೊಬಲಗಿನ ತಃಖ್ತೆ;
(ಒ) ಮೂರು ಅಥವಾ ಹೆಚ್ಚು ಆಡಳಿತ ಮಂಡಳಿಯ ಸಭೆಗಳಿಗೆ ಗೈರುಹಾಜರಾದ ನಿರ್ದೇಶಕರುಗಳ ಷೆಡ್ಯೂಲು;
(ಪಿ) ಮೂರು ಅಥವಾ ಹೆಚ್ಚು ಸಾಮಾನ್ಯ ಸಭೆಗಳಿಗೆ ಗೈರುಹಾಜರಾದ ಸದಸ್ಯರ ಷೆಡ್ಯೂಲು;
(ಕ್ಯೂ) ಉಪವಿಧಿಗಳಲ್ಲಿ ಉಕ್ತವಾಗಿರುವ ಸದಸ್ಯರ ಹೊಣೆಗಾರಿಕೆಗಳನ್ನು ಪಾಲಿಸಿದ ಬಗ್ಗೆ ಸದಸ್ಯರ ಷೆಡ್ಯೂಲು;
(ಆರ್) ಹಣ ದುರುಪಯೋಗ ಮತ್ತು ಆರ್ಥಿಕ ಅವ್ಯವಹಾರಗಳ ಪ್ರಕರಣಗಳ ತಃಖ್ತೆ;
(ಎಸ್) ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ವಸೂಲಾಗದೇ ಇರುವ ಸಾಲ ಮುಂಗಡಗಳ ಷೆಡ್ಯೂಲು;
(ಟಿ) ವ್ಯಾಜ್ಯ ಮತ್ತು ಜಾರಿ ಪ್ರಕರಣಗಳ ಷೆಡ್ಯೂಲು;
(ಯು) ಮೀಸಲು ಇತರ ನಿಧಿಗಳ ಷೆಡ್ಯೂಲು;
(ವಿ) ಠೇವಣಿದಾರರ ಷೆಡ್ಯೂಲು;
(ಡಬ್ಲ್ಯೂ) ಆಸ್ತಿ ಮತ್ತು ಸ್ವತ್ತುಗಳ ಷೆಡ್ಯೂಲು;
(ಎಕ್ಸ್) ಆಖೈರು ದಾಸ್ತಾನಿನನ ಷೆಡ್ಯೂಲು;
(ವೈ) ಉಪವಿಧಿಗಳಲ್ಲಿ ತಿಳಿಸಲಾಗಿರುವ ಉದ್ದೇಶಗಳಿಗೆ ಸಂಬಂಧಿಸಿದಂತೆ ಅವುಗಳನ್ನು ಎಷ್ಟರಮಟ್ಟಿಗೆ ಸಾಧಿಸಲಾಗಿದೆ ಎಂಬ ಷೆಡ್ಯೂಲು – ವರ್ಗವಾರು;
(ಜಡ್) ಸದಸ್ಯರಿಗೆ ನೀಡಿರುವ ಸಾಲ ಮತ್ತು ಮುಂಗಡಗಳ ಷೆಡ್ಯೂಲು;
ವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೪೯೭(3) ಪ್ರಕರಣ 33ರ ಉಪಪ್ರಕರಣ (18)ರ ಖಂಡ (ಎ) ಮತ್ತು (ಬಿ)ನಲ್ಲಿ ತಿಳಿಸಿರುವ ಅವ್ಯವಹಾರಗಳನ್ನು ಪರಿಶೀಲಿಸುವಾಗ, ಲೆಕ್ಕಪರಿಶೋಧಕನು ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಯು ಒಬ್ಬ ಸಾಮಾನ್ಯ ಪರಿಜ್ಞಾನವುಳ್ಳ ಪ್ರಾಮಾಣಿಕ, ಬುದ್ಧಿವಂತ ಮತ್ತು ವಿವೇಕಯುತ ವ್ಯವಹಾರ ಜ್ಞಾನವುಳ್ಳ ವ್ಯಕ್ತಿಯು ಸಮಾನವಾದ ಸಂದರ್ಭಗಳಲ್ಲಿ ಚಲಾಯಿಸುವಂಥ ಯುಕ್ತ, ಜಾಗರೂಕತೆ, ಶ್ರದ್ಧೆ ಮತ್ತು ಕೌಶಲ್ಯಗಳನ್ನು ಉಪಯೋಗಿಸತಕ್ಕದ್ದು ಮತ್ತು ಅದರ ಫಲಿತಗಳನ್ನು ಲೆಕ್ಕಪರಿಶೋಧನಾ ವರದಿಯಲ್ಲಿ ಸೇರಿಸತಕ್ಕದ್ದು.
(4) ಒಂದು ಸಹಕಾರಿಯ ಲೆಕ್ಕಪರಿಶೋಧನೆಯನ್ನು ಮಾಡುವಾಗ, ಲೆಕ್ಕಪರಿಶೋಧಕನು ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಯು, ಲೆಕ್ಕಪರಿಶೋಧನೆ ಮಾಡುವ ಅವಧಿಯಲ್ಲಿ ಕಾಲಕಾಲಕ್ಕೆ, ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕನಿಗೆ ಅಥವಾ ಮುಖ್ಯಕಾರ್ಯನಿರ್ವಾಹಕನ ಕರ್ತವ್ಯಗಳನ್ನು ನಿರ್ವಹಿಸುವ ಅಧಿಕಾರಿಗೆ ಮಧ್ಯಂತರ ಆಕ್ಷೇಪಣೆಗಳನ್ನು ಕಳುಹಿಸಿ ಅಂಥ ಆಕ್ಷೇಪಣೆಗಳಲ್ಲಿ ತೋರಿಸಲಾದ ಲೋಪದೋಷಗಳನ್ನು ಮತ್ತು ಅಕ್ರಮಗಳನ್ನು ಐದು ದಿನಗಳ ಅವಧಿಯೊಳಗೆ ವಿವರಿಸುವಂತೆ ತಿಳಿಸಬಹುದು. ಮುಖ್ಯ ಕಾರ್ಯನಿರ್ವಾಹಕನು ಮಧ್ಯಂತರ ಆಕ್ಷೇಪಣಾ ಹಾಳೆಗಳನ್ನು ಅದರಲ್ಲಿ ಉತ್ತರ ಅಥವಾ ಪಾಲನೆ ಅನ್ನು ದಾಖಲಿಸಿ ನಿರ್ದಿಷ್ಠಪಡಿಸಿದ ಅವಧಿಯೊಳಗೆ ಲೆಕ್ಕಪರಿಶೋಧಕನಿಗೆ ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಗೆ ಹಿಂದುರಿಗಿಸತಕ್ಕದ್ದು. ಲೆಕ್ಕಪರಿಶೋಧಕನು ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಯು ಅಂಥ ಪಾಲನಾ ವರದಿಯನ್ನು ಪರಾಮರ್ಶಿಸಿ, ಆತನ ಅಭಿಪ್ರಾಯದಲ್ಲಿ ಯಾವ ಆಕ್ಷೇಪಣೆಗಳಿಗೆ ಸಮರ್ಪಕವಾಗಿ ಉತ್ತರ ನೀಡಲಾಗಿದೆಯೋ ಅಥವಾ ಪಾಲನೆ ಮಾಡಲಾಗಿದೆಯೋ ಅಂತಹ ಆಕ್ಷೇಪಣೆಗಳನ್ನು ಕೈಬಿಡತಕ್ಕದ್ದು. ಮತ್ತು ಉಳಿದ ಆಕ್ಷೇಪಣೆೆಗಳನ್ನು ಲೆಕ್ಕಪರಿಶೋಧನಾ ವರದಿಯಲ್ಲಿ ಸೇರಿಸತಕ್ಕದ್ದು.
(5) ಲೆಕ್ಕಪರಿಶೋಧನೆಗೆ ಸಂಬಂಧಪಟ್ಟಂತೆ ಕೆಲವು ಅರ್ಥವಿವರಣೆಗಳು:-
(1) "ವಾರ್ಷಿಕ ಲೆಕ್ಕಪರಿಶೋಧನೆ" ಎಂದರೆ ಅಧಿನಿಯಮದ ಪ್ರಕರಣ 33 ಮತ್ತು 64ರಡಿ ಯಾವುದೇ ಸಹಕಾರಿಯ ಒಂದು ಸಹಕಾರಿ ವರ್ಷ ಮುಕ್ತಾಯವಾದ ನಂತರ ಮಾಡುವ ಆ ಸಹಕಾರಿ ವರ್ಷದ ಲೆಕ್ಕಪತ್ರಗಳ ಪರಿಶೋಧನೆ. ಅದು ಸಹಕಾರಿಯ ಅಥವಾ ಸಂಯುಕ್ತ ಸಹಕಾರಿಯ ಲೆಕ್ಕಪತ್ರಗಳನ್ನು, ದಾಖಲೆಗಳನ್ನು ಮತ್ತು ದಸ್ತಾವೇಜುಗಳನ್ನು ಪರಿಶೋಧಿಸಿ ಪರಿಶೋಧಿತ ಆರ್ಥಿಕ ತಃಖ್ತೆಗಳ ಸಹಿತ ಲೆಕ್ಕಪರಿಶೋಧನಾ ವರದಿಯನ್ನು ಸಲ್ಲಿಸುವುದರೊಂದಿಗೆ ಅಂತ್ಯಗೊಳ್ಳುತ್ತದೆ.
(2) "ಔಚಿತ್ಯಪೂರ್ಣ ಲೆಕ್ಕಪರಿಶೋಧನೆ" ಎಂದರೆ ಯಾವುದೇ ಒಂದು ವ್ಯಾಪಾರಿ ಸಂಸ್ಥೆಯು ತಾನು ನಡೆಸುವ ವ್ಯಾಪಾರ ಪದ್ಧತಿಗೆ ಅನುಗುಣವಾಗಿ ಹಾಗೂ ಅಂತಹ ವ್ಯವಹಾರದ ಆರ್ಥಿಕ ಹಿತಾಸಕ್ತಿ ಕಾಪಾಡುವ ಲೆಕ್ಕಪರಿಶೋಧನೆ.
8ಎ. ಲೆಕ್ಕಪರಿಶೋಧಕನಾಗಿ ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಯಾಗಿ ನೇಮಕವಾಗಲು ಅರ್ಹತೆ:- (1) ಕಾಯ್ದೆಯಲ್ಲಿನ ಅವಕಾಶದಂತೆ ಲೆಕ್ಕಪರಿಶೋಧಕ ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಗಳು, ಲೆಕ್ಕಪರಿಶೋಧನಾ ತಂಡದಲ್ಲಿ ಸೇರಿಸಲ್ಪಟ್ಟಿರುತ್ತವೆ.
(2) ಕೆಳಗಿನ ಯಾವುದೇ ವ್ಯಕ್ತಿಯು ಯಾವುದೇ ಒಂದು ಸಹಕಾರಿಯಲ್ಲಿ ಈ ಕೆಳಕಂಡ ಸ್ಥಾನಗಳನ್ನು ಹೊಂದಿದ್ದಲ್ಲಿ ಆ ಸಹಕಾರಿಯ ಲೆಕ್ಕಪರಿಶೋಧಕನಾಗಿ
| (i) | ಸಹಕಾರಿಯ ಒಬ್ಬ ಅಧಿಕಾರಿ ಅಥವಾ ನೌಕರ |
| (ii) | ಸಹಕಾರಿಯ ಸದಸ್ಯನಾಗಿರುವ ವ್ಯಕ್ತಿ |
| (iii) | ಸಹಕಾರಿಯಿಂದ ಸಾಲ ಪಡೆದ ವ್ಯಕ್ತಿ ಅಥವಾ ಲೆಕ್ಕಪರಿಶೋಧನಾ ಅವಧಿಯಲ್ಲಿ ಅಥವಾ ಅದಕ್ಕಿಂತ ಪೂರ್ವದಲ್ಲಿ ಸಹಕಾರಿಯಿಂದ ಯಾವುದೇ ವ್ಯಕ್ತಿಯು ಸಾಲಪಡೆಯಲು ಭದ್ರತೆ ಅಥವಾ ಗ್ಯಾರಂಟಿ ನೀಡಿದ ವ್ಯಕ್ತಿ; |
| (iv) | ಸಹಕಾರಿಯ ಚಟುವಟಿಕೆಗಳಲ್ಲಿ ಪ್ರತ್ಯಕ್ಷ ಅಥವಾ ಅಪ್ರತ್ಯಕ್ಷ ಆಸಕ್ತಿಯನ್ನು ಹೊಂದಿರುವ ವ್ಯಕ್ತಿ ಅಥವಾ ಆತನ ಕುಟುಂಬದ ಸದಸ್ಯ; |
| (v) | ಯಾವುದೇ ಸಹಕಾರಿಯ ಹಿಂದಿನ ಸಹಕಾರಿಯ ವರ್ಷದ ಲೆಕ್ಕಪತ್ರಗಳ ಲೆಕ್ಕಪರಿಶೋಧನೆಯಲ್ಲಿ ಅಧಿನಿಯಮದ ಅಥವಾ ನಿಯಮಗಳ ಉಪಬಂಧಗಳನ್ನು ಪಾಲಿಸದಿರುವ ವ್ಯಕ್ತಿ. |
(3) ಪ್ರಕರಣ 33 ಅಥವಾ 64ರಡಿ ಲೆಕ್ಕಪರಿಶೋಧಕನಾಗಿ ನೇಮಕವಾಗಲು ಅರ್ಹತೆ ಮತ್ತು ಅನುಭವ ಇಲ್ಲದ ಯಾವುದೇ ವ್ಯಕ್ತಿಯನ್ನು ಹಾಗೂ ಸಹಕಾರಿ ಲೆಕ್ಕಪರಿಶೋಧನಾ ನಿರ್ದೇಶಕರು ಅನುಮೋದಿಸಿ ನಿರ್ವಹಿಸಿರುವ ಲೆಕ್ಕಪರಿಶೋಧಕರ ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಲ್ಪಡದ ಯಾವುದೇ ವ್ಯಕ್ತಿಯನ್ನು ಯಾವದೇ ಸಹಕಾರಿಯ ಲೆಕ್ಕಪತ್ರಗಳನ್ನು ಪರಿಶೋಧಿಸಲು ಲೆಕ್ಕಪರಿಶೋಧಕನಾಗಿ ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಯಾಗಿ ನೇಮಕಮಾಡತಕ್ಕದ್ದಲ್ಲ.
(4) ಒಬ್ಬ ಲೆಕ್ಕಪರಿಶೋಧಕನು ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಯು:
(ಎ) ರಾಜೀನಾಮೆ ಕೊಟ್ಟಾಗ; ಅಥವಾ
(ಬಿ) ಅವನ/ಅದರ ಪದಾವಧಿ ಮುಕ್ತಾಯವಾದಾಗ
ಅವನು / ಅದು ಅಂಥ ಪದದಲ್ಲಿ ಇರುವುದು ನಿಂತುಹೋಗತಕ್ಕದ್ದು.
(5) ಯಾವುದೇ ಸಹಕಾರಿಯ ಲೆಕ್ಕಪರಿಶೋಧಕನಾಗಿ ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಯಾಗಿ ನೇಮಕವಾದ ವ್ಯಕ್ತಿಯು ಮಾತ್ರ ಲೆಕ್ಕಪರಿಶೋಧನಾ ವರದಿಗೆ ಸಹಿ ಮಾಡತಕ್ಕದ್ದು. ಲೆಕ್ಕಪರಿಶೋಧಕನಿಂದ ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಯಿಂದ ಕಾನೂನು ಪ್ರಕಾರ ಅನುಪ್ರಮಾಣಿಸಬೇಕಾದ ಅಥವಾ ಸಹಿಮಾಡಬೇಕಾದ ಅಗತ್ಯಬಿದ್ದಲ್ಲಿ, ಸಹಕಾರಿಯ ಇತರ ಯಾವುದೇ ದಾಖಲೆಯನ್ನು ಅನುಪ್ರಮಾಣಿಸತಕ್ಕದ್ದು ಅಥವಾ ಸಹಿ ಮಾಡತಕ್ಕದ್ದು.
(6) ಲೆಕ್ಕಪರಿಶೋಧನಾ ವರದಿಯನ್ನು ಸಹಕಾರಿಯ ಸಾಮಾನ್ಯ ಸಭೆಯಲ್ಲಿ ಓದಿ ತಿಳಿಸತಕ್ಕದ್ದು ಮತ್ತು ಅದು ಯಾವುದೇ ಸದಸ್ಯನ ಪರಿಶೀಲಿಸಲು ಮುಕ್ತವಾಗಿರತಕ್ಕದ್ದು.
ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೪೯೮8ಬಿ. ಲೆಕ್ಕಪರಿಶೋಧಕರ ಮತ್ತು ಲೆಕ್ಕಪರಿಶೋಧಿಸುವ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸುವ ಕಾರ್ಯವಿಧಾನ:- (1) ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರು ಹೆಚ್ಚು ಪ್ರಸಾರವಿರುವ ಕನ್ನಡ ವೃತ್ತ ಪತ್ರಿಕೆಯಲ್ಲಿ ಮತ್ತು ಇಲಾಖಾ ಅಂತರ್ಜಾಲ ತಾಣದಲ್ಲಿ ಸಾರ್ವಜನಿಕ ಪ್ರಕಟಣೆಯನ್ನು ನೀಡಿ, ಸೌಹಾರ್ದ ಸಹಕಾರಿಗಳ ಲೆಕ್ಕಪತ್ರಗಳನ್ನು ಪರಿಶೋಧಿಸುವ ಸಲುವಾಗಿ ನಿರ್ವಹಿಸುವ ಚಾರ್ಟರ್ಡ್ ಅಕೌಂಟೆಂಟ್ರಿಂದ ಅಥವಾ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಗಳ ಪಟ್ಟಿಯಲ್ಲಿ ಸೇರಬಯಸುವ, ಅಗತ್ಯ ವಿದ್ಯಾರ್ಹತೆ ಮತ್ತು ಅನುಭವವುಳ್ಳ ಚಾರ್ಟರ್ಡ್ ಅಕೌಂಟೆಂಟ್ / ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸತಕ್ಕದ್ದು.
(2) ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರು ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸತಕ್ಕದ್ದು ಮತ್ತು ಅರ್ಹ ಲೆಕ್ಕಪರಿಶೋಧಕರ ಮತ್ತು ಲೆಕ್ಕಪರಿಶೋಧಿಸುವ ಸಂಸ್ಥೆಗಳ ಪಟ್ಟಿಯನ್ನು ತಯಾರಿಸಿ ಇಲಾಖಾ ಜಾಲತಾಣದಲ್ಲಿ ಪ್ರಚುರಪಡಿಸತಕ್ಕದ್ದು.
(3) ಲೆಕ್ಕಪರಿಶೋಧಕರ ಅಥವಾ ಲೆಕ್ಕ ಪರಿಶೋಧಿಸುವ ಸಂಸ್ಥೆಗಳ ಪಟ್ಟಿಯು, ಅವನು ಹೆಸರನ್ನು ಹಿಂಪಡೆಯುವವರೆಗೆ ಅಥವಾ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯಿಂದ ಅಥವಾ ಲೆಕ್ಕಪರಿಶೋಧನಾ ನಿರ್ದೇಶಕರ ತೀರ್ಮಾನದಲ್ಲಿ ಯಾವುದೇ ತೆರನಾದ ವೃತ್ತಿ ದುರ್ವರ್ತನೆ ಮಾಡಲಾಗಿದೆಯೆಂದು ನಿರ್ಧರಿಸುವ ಅವಧಿಯವರೆಗೆ ಮುಂದುವರೆಯತಕ್ಕದ್ದು. ಮುಂದುವರೆದು, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕನು ಯಾವುದೇ ಲೆಕ್ಕಪರಿಶೋಧಕ ಅಥವಾ ಲೆಕ್ಕಪರಿಶೋಧನಾ ಸಂಸ್ಥೆಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಿದ ಅರ್ಜಿದಾರನು ಅಗತ್ಯ ಷರತ್ತುಗಳನ್ನು ಪೂರೈಸಿದ್ದಲ್ಲಿ ಅಂತಹವರ ಹೆಸರನ್ನು ಅರ್ಹ ಲೆಕ್ಕಪರಿಶೋಧಕರ ಪಟ್ಟಿಯಲ್ಲಿ ಸೇರಿಸತಕ್ಕದ್ದು.
(4) ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕನು ಸಹಕಾರಿಗಳ ದುಡಿಯುವ ಬಂಡವಾಳ ಮತ್ತು ವ್ಯಾಪಾರ ವಹಿವಾಟಿನ ಆಧಾರದ ಮೇಲೆ ಸಹಕಾರಿಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಿ ಆಯಾ ಪ್ರವರ್ಗಗಳ ಸಹಕಾರಿಗಳ ಲೆಕ್ಕಪರಿಶೋಧನೆಗಾಗಿ ಅನುಭವದ
| ಕ್ರಮ ಸ ಂಖ್ಯೆ | ಸ ಹಕಾರಿಗಳ ಪ್ರವರ್ಗಗಳು | ಲ ೆಕ್ಕಪರಿಶೋಧ ನೆ ನಿರ್ವಹಿಸಲು ಅರ್ಹರಿರುವ ಸನ್ನದು ಲೆಕ್ಕಪರಿಶೋಧಕರು ವ ುತ್ತು ಸನ್ನದು ಲೆಕ್ಕಪರಿಶೋಧಕರ ಫರ್ಮ್ಗಳ ಮತ್ತು ಇಲಾಖಾ ಲ ೆಕ್ಕಪರಿಶೋಧ ಕರುಗಳ ಪಟ್ಟಿ |
| 1 | ` 25 ಕೋಟಿಗಿಂತ ಹೆಚ್ಚಿಗೆ ದುಡಿಯುವ ಬಂಡವಾಳ / ವ್ಯಾಪಾರ ವಹಿವಾಟು ಹೊಂದಿರುವ "ಎ" ಗುಂಪಿನ ಸಹಕಾರಿಗಳು | ಕನಿಷ್ಟ 10 ವರ್ಷಗಳ ಅನುಭ ವವುಳ್ಳ ಸನ್ನದು ಲೆಕ್ಕಪರಿಶೋಧಕರು ಮತ್ತು ಸನ್ನದು ಲೆಕ್ಕಪರಿಶೋಧಕರ ಫರ್ಮ್ಗಳು |
| 2 | ` 10 ಕೋಟಿಗಿಂತ ಹೆಚ್ಚಿಗೆ ಮತ್ತು ` 25 ಕೋಟಿಗಿಂತ ಕಡಿಮೆ ದುಡಿಯುವ ಬಂಡವಾಳ /ವ್ಯಾಪಾರ ವಹಿವಾಟು ಹೊಂದಿರುವ "ಬಿ" ಗುಂಪಿನ ಸಹಕಾರಿಗಳು | ಕನಿಷ್ಟ 05 ವರ್ಷಗಳ ಅನುಭವವುಳ್ಳ ಸನ್ನದು ಲೆಕ್ಕಪರಿಶೋಧಕರು ಮತ್ತು ಸನ್ನದು ಲೆಕ್ಕಪರಿಶೋಧಕರ ಫರ್ಮ್ಗಳು |
| 3 | ` 10 ಕೋಟಿಗಿಂತ ಕಡಿಮೆ ದುಡಿಯುವ ಬಂಡವಾಳ /ವ್ಯಾಪಾರ ವಹಿವಾಟುಹೊಂದಿರುವ ಜಿಲ್ಲಾವಾರು ಗುಂಪು ಮಾಡಲಾದ "ಸಿ" ಗುಂಪಿನ ಸಹಕಾರಿಗಳು | ಕನಿಷ್ಟ 03 ವರ್ಷಗಳ ಅನುಭವವುಳ್ಳ ಸನ್ನದು ಲೆಕ್ಕಪರಿಶೋಧಕರು ಮತ್ತು ಸನ್ನದು ಲೆಕ್ಕಪರಿಶೋಧಕರ ಫರ್ಮ್ಗಳು ಮತ್ತು ಜಿಲ್ಲಾವಾರು ಗುಂಪು ಮಾಡಲಾದ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖಾ ಸಿಬ್ಬಂದಿ. |
| "ಎ" ಪ್ರವರ್ಗದ ಸಹಕಾರಿಗಳ ಎದುರಿಗೆ ಪಟ್ಟಿ ಮಾಡಲಾದ ಲೆಕ್ಕಪರಿಶೋಧಕರುಗಳು "ಬಿ" ಮತ್ತು "ಸಿ" ಪ್ರವರ್ಗದ ಸಹಕಾರಿಗಳ ಲ ೆಕ್ಕಪರಿಶೋಧನೆಯನ್ನು ನಿರ್ವಹಿಸ ಬಹುದಾಗಿರುತ ್ತ ದೆ ಮತ್ತು "ಬಿ" ಪ್ರವರ್ಗದ ಎದುರಿಗೆ ಪಟ್ಟಿ ಮಾಡಲಾದ ಲೆಕ್ಕಪರಿಶೋಧಕರುಗಳು "ಸಿ" ಪ್ರವರ್ಗದ ಸಹಕಾರಿಗಳ ಲೆಕ್ಕಪರಿಶೋಧನೆಯನ್ನು ನಿರ್ವಹಿಸಬಹುದಾಗಿರುತ್ತದೆ. |
(5) ಪ್ರತೀ ವರ್ಷ ಆರ್ಥಿಕ ವರ್ಷ ಮುಕ್ತಾಯವಾದ ನಂತರ ಸಹಕಾರಿಗಳ ಗುಂಪು ಹಾಗೂ ಲೆಕ್ಕಪರಿಶೋಧಕರ ವರ್ಗೀಕರಣವನ್ನು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರು ಇಂದೀಕರಿಸತಕ್ಕದ್ದು.
(6) ಪ್ರತೀ ಸಹಕಾರಿಯ ಸಾಮಾನ್ಯ ನಿಕಾಯವು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖಾ ಅಂತರ್ಜಾಲ ತಾಣದಲ್ಲಿ ಸಹಕಾರಿಯ ಲೆಕ್ಕಪತ್ರಗಳನ್ನು ಪರಿಶೋಧಿಸುವ ಸಲುವಾಗಿ ಪ್ರಚುರಪಡಿಸಿರುವ ಅರ್ಹ ಲೆಕ್ಕಪರಿಶೋಧಕರು ಮತ್ತು ಲೆಕ್ಕಪರಿಶೋಧನಾ ಸಂಸ್ಥೆಗಳ ಪಟ್ಟಿಯಲ್ಲಿನ ಆಯಾ ಲೆಕ್ಕಪರಿಶೋಧಕರುಗಳ ಗುಂಪಿನಿಂದ ಲೆಕ್ಕಪರಿಶೋಧನಾ ಸಂಸ್ಥೆ / ಲೆಕ್ಕ ಪರಿಶೋಧಕರನ್ನು (ಚಾರ್ಟರ್ಡ್ ಅಕೌಂಟೆಂಟ್ ಅಥವಾ ಇಲಾಖಾ ಲೆಕ್ಕಪರಿಶೋಧಕರು / ಸಿಬ್ಬಂದಿ) ಆಯ್ಕೆ ಮಾಡಿಕೊಳ್ಳತಕ್ಕದ್ದು. ಆದರೆ ಅದೇ ವ್ಯಕ್ತಿಗಳನ್ನು ಲೆಕ್ಕಪರಿಶೋಧಕರು ಮತ್ತು ಲೆಕ್ಕಪರಿಶೋಧನಾ ಸಂಸ್ಥೆಗಳಾಗಿ ಅನುಕ್ರಮವಾಗಿ ಎರಡು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ನೇಮಕ ಮಾಡಿಕೊಳ್ಳತಕ್ಕದ್ದಲ್ಲ.
(7) ಸಾಮಾನ್ಯ ನಿಕಾಯದಿಂದ ಹಾಗೆ ನೇಮಕವಾದ ಲೆಕ್ಕಪರಿಶೋಧಕನು ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಯು ಅಧಿನಿಯಮ ಮತ್ತು ನಿಯಮಗಳ ಪ್ರಬಂಧಗಳಿಗೆ ಅನುಸಾರವಾಗಿ ಹಿಂದಿನ ಸಹಕಾರಿ ವರ್ಷದ ಲೆಕ್ಕಪತ್ರಗಳ ಪರಿಶೋಧನೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸತಕ್ಕದ್ದು ಮತ್ತು ಪರಿಶೋಧಿತ ಆರ್ಥಿಕ ತಃಖ್ತೆಗಳನ್ನು ಲೆಕ್ಕಪರಿಶೋಧನಾ ವರದಿಯ ಸಹಿತ ಪ್ರತಿವರ್ಷ ಲೆಕ್ಕಪರಿಶೋಧನೆ ಮುಕ್ತಾಯವಾದ ದಿನದಿಂದ ಮುವತ್ತು ದಿನದೊಳಗೆ ಅಥವಾ ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ಒಂದನೇ ದಿನದೊಳಗೆ, ಇವೆರಡರಲ್ಲಿ ಯಾವುದು ಮೊದಲೋ ಆ ದಿನದಂದು, ಸಹಕಾರಿಗೆ, ಸಂಯುಕ್ತ ಸಹಕಾರಿಗೆ, ರಿಜಿಸ್ಟ್ರಾರನಿಗೆ ಮತ್ತು ಲೆಕ್ಕಪರಿಶೋಧನಾ ನಿರ್ದೇಶಕನಿಗೆ ಸಲ್ಲಿಸತಕ್ಕದ್ದು.
ಪರಂತು, 2012-13ನೇ ಸಾಲಿನ ಲೆಕ್ಕಪರಿಶೋಧನೆ ಹಾಗೂ ಬಾಕಿ ಲೆಕ್ಕಪರಿಶೋಧನೆ ಇದ್ದಲ್ಲಿ, ಈಗಾಗಲೇ ಸಹಕಾರಿ / ಸಂಯುಕ್ತ ಸಹಕಾರಿಯ ಸಾಮಾನ್ಯ ಸಭೆಯಲ್ಲಿ ಲೆಕ್ಕಪರಿಶೋಧಕರ ನೇಮಕಾತಿ ಆಗಿರುವ ಪ್ರಕರಣಗಳನ್ನು ಹೊರತುಪಡಿಸಿ, ನೇಮಕಾತಿ ಆಗಿರದ ಪ್ರಕರಣಗಳಲ್ಲಿ ಆಡಳಿತ ಮಂಡಳಿಯು ನೇಮಕಾತಿ ಮಾಡಿಕೊಳ್ಳಲು ಅಧಿಕಾರ ಹೊಂದಿರುತ್ತದೆ ಮತ್ತು ಲೆಕ್ಕಪರಿಶೋಧನಾ ವರದಿಯನ್ನು ಒಂದನೇ ಸೆಪ್ಟೆಂಬರ್ 2013ರೊಳಗೆ ಪಡೆಯತಕ್ಕದ್ದು.
ವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೪೯೯(8) ಯಾವುದೇ ಸಹಕಾರಿಯ ಸಾಮಾನ್ಯ ಸಭೆಯಲ್ಲಿ ನೇಮಕಗೊಂಡ ಲೆಕ್ಕಪರಿಶೋಧಕನು/ಲೆಕ್ಕಪರಿಶೋಧಿತ ಸಂಸ್ಥೆ ಗಳಿಗೆ, ಸಾಮಾನ್ಯ ಸಭೆ ನಡೆಸಿದ ಏಳು ದಿವಸಗಳೊಳಗಾಗಿ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕನು ತಿಳಿಸತಕ್ಕದ್ದು ಹಾಗೂ ಸದರಿ ಮಾಹಿತಿಯನ್ನು ಲೆಕ್ಕಪರಿಶೋಧನಾ ನಿರ್ದೇಶಕರಿಗೂ ಹಾಗೂ ಸಂಯುಕ್ತ ಸಹಕಾರಿಗೂ ಸಹಾ ತಿಳಿಸತಕ್ಕದ್ದು.
(9) ಯಾವುದೇ ಸಹಕಾರಿಯು ಹೊಸದಾಗಿ ನೋಂದಾಯಿಸಿದಾಗ ಆ ಸಹಕಾರಿಯು ಮೊದಲ ಸಾಮಾನ್ಯ ನಿಕಾಯದ ಸಭೆಯಲ್ಲಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖಾ ಅಂತರ್ಜಾಲದಲ್ಲಿ ಪ್ರಚುರ ಪಡಿಸಿರುವ ಅರ್ಹ ಲೆಕ್ಕಪರಿಶೋಧಕರು ಮತ್ತು ಲೆಕ್ಕಪರಿಶೋಧನಾ ಸಂಸ್ಥೆಗಳ ಪಟ್ಟಿಯಲ್ಲಿನ ಆಯಾ ಗುಂಪಿನಲ್ಲಿನ ಲೆಕ್ಕಪರಿಶೋಧನಾ ಸಂಸ್ಥೆ / ಲೆಕ್ಕಪರಿಶೋಧಕರನ್ನು ನೇಮಕ ಮಾಡಿಕೊಳ್ಳತಕ್ಕದ್ದು.
(10) ಸಹಕಾರಿ ಲೆಕ್ಕಪರಿಶೋಧನಾ ನಿರ್ದೇಶಕನು ಸಹಕಾರಿಗಳೊಡನೆ ಮತ್ತು ಲೆಕ್ಕ ಪರಿಶೋಧಕರು ಮತ್ತು ಅಥವಾ ಲೆಕ್ಕ ಪರಿಶೋಧನಾ ಸಂಸ್ಥೆಗಳೊಡನೆ ಸಮನ್ವಯ ಮಾಡತಕ್ಕದ್ದು ಮತ್ತು ನಿಗದಿಪಡಿಸಿದಂತೆ ಲೆಕ್ಕಪರಿಶೋಧನೆಯನ್ನು ಪೂರ್ಣಗೊಳಿಸು ವುದನ್ನು ಖಾತ್ರಿಪಡಿಸಿಕೊಳ್ಳಲು ಅಗತ್ಯವಾದ ಸೂಚನೆಗಳನ್ನು ನೀಡತಕ್ಕದ್ದು. ಸಕಾಲಿಕ ಲೆಕ್ಕಪರಿಶೋಧನೆಯನ್ನು ನಡೆಸುವುದರಲ್ಲಿ ಉದ್ಭವಿಸುವ ಯಾವುದೇ ಸಮಸ್ಯೆಯನ್ನು ಲೆಕ್ಕಪರಿಶೋಧನಾ ನಿರ್ದೇಶಕನಿಗೆ ಕಳುಹಿಸತಕ್ಕದ್ದು ಮತ್ತು ಅವನು ಅಂಥ ಸಮಸ್ಯೆಯ ಪರಿಹಾರಕ್ಕಾಗಿ ವ್ಯವಸ್ಥೆಗೊಳಿಸಿ ಸಂಬಂಧಪಟ್ಟವರಿಗೆ ಸೂಕ್ತ ಸೂಚನೆಗಳನ್ನು ನೀಡತಕ್ಕದ್ದು.
(11) ಲೆಕ್ಕಪರಿಶೋಧನಾ ವರದಿಯು ಕೆಳಗಿನ ವಿವರಗಳನ್ನುಳ್ಳ ಷೆಡ್ಯೂಲುಗಳನ್ನೂ ತಃಖ್ತೆಗಳನ್ನೂ ಸಹ ಒಳಗೊಂಡಿರತಕ್ಕದ್ದು:
(ಎ) ಅಧಿನಿಯಮದ ಅಥವಾ ನಿಯಮಗಳ ಅಥವಾ ಸಹಕಾರಿ ಉಪವಿಧಿಗಳ ಉಪಬಂಧಗಳಿಗೆ ವಿರುದ್ಧವಾಗಿ ಕಂಡುಬರುವ ಎಲ್ಲಾ ವ್ಯವಹಾರಗಳು;
(ಬಿ) ರಿಸರ್ವಬ್ಯಾಂಕ್ ಮತ್ತು ನಬಾರ್ಡು ನೀಡಿರುವ ನಿರ್ದೇಶನಗಳಿಗೆ ಮತ್ತು ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಕಂಡುಬರುವ ಎಲ್ಲಾ ವ್ಯವಹಾರಗಳು;
(ಸಿ) ನಿಯಮ 8(3)ರಲ್ಲಿ ತಿಳಿಸಿರುವ ಕ್ರಮ ಸಂಖ್ಯೆ ಎ, ಬಿ, ಇ, ಎಫ್, ಕೆ, ಎಲ್, ಎನ್, ಆರ್, ಟಿ, ಯು ಮತ್ತು ಡಬ್ಲ್ಯೂ ಇವುಗಳನ್ನು ಯುಕ್ತವಾಗಿ ಪರಿಶೀಲಿಸಿ ದೃಡೀಕರಿಸಿದ ಷೆಡ್ಯೂಲ್ಗಳು ಮತ್ತು ತಃಖ್ತೆಗಳು;
(12) ಸಹಕಾರಿ ಲೆಕ್ಕಪರಿಶೋಧನಾ ನಿರ್ದೇಶಕರು ಸಹಕಾರಿಗಳ ಲೆಕ್ಕಪರಿಶೋಧನೆಯು ಸಕಾಲಿವಾಗಿ ನಡೆಯುವುದನ್ನು ಖಾತ್ರಿಗೊಳಿಸುವ ಉದ್ದೇಶಕ್ಕಾಗಿ ಲೆಕ್ಕಪರಿಶೋಧಕರಿಗೆ ಅಥವಾ ಲೆಕ್ಕಪರಿಶೋಧನಾ ಸಂಸ್ಥೆಗಳಿಗೆ ಸೂಕ್ತ ಮಾರ್ಗಸೂಚಿಗಳನ್ನು ನೀಡಲು ಸಕ್ಷಮರಾಗಿರುತ್ತಾರೆ.
(13) ಸಹಕಾರ ಲೆಕ್ಕಪರಿಶೊಧನಾ ನಿರ್ದೇಶಕನು ಪ್ರತಿ ಜಿಲ್ಲೆಯಲ್ಲಿನ ಸಹಕಾರಿಗಳ ಪಟ್ಟಿಯನ್ನು ಪ್ರತಿ ವರ್ಷ ಏಪ್ರಿಲ್ ತಿಂಗಳ ಮೊದಲನೇ ದಿನದಲ್ಲಿದ್ದಂತೆ ಇಂದೀಕರಿಸತಕ್ಕದ್ದು, ಆ ಜಿಲ್ಲೆಯ ಸಹಕಾರಿಗಳ ರಿಜಿಸ್ಟ್ರಾರನ ಪಟ್ಟಿಯೊಡನೆ ಹೊಂದಾಣಿಕೆ ಮಾಡಿಕೊಳ್ಳತಕ್ಕದ್ದು".
8. ನಿಯಮ 9ರ ತಿದ್ದುಪಡಿ:- ಸದರಿ ನಿಯಮಗಳ, ನಿಯಮ 9ರ ಬದಲಾಗಿ ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು-
"9. ಸಮಾಪನೆಯಲ್ಲಿರುವ ಸಹಕಾರಿಯ ಲೆಕ್ಕಪರಿಶೋಧನೆ:- ಯಾವುದೇ ಸಹಕಾರಿ ಸಮಾಪನೆಯಲ್ಲಿರುವಾಗ ಇಲಾಖೆಯ ಅಂತರ್ಜಾಲ ತಾಣದಲ್ಲಿ ಪ್ರಚುರಪಡಿಸಿರುವ ಅರ್ಹ ಲೆಕ್ಕಪರಿಶೋಧಕರು ಅಥವಾ ಲೆಕ್ಕಪರಿಶೋಧನಾ ಸಂಸ್ಥೆಯ ಪಟ್ಟಿಯಿಂದ ಲೆಕ್ಕಪರಿಶೋಧಕ ಅಥವಾ ಲೆಕ್ಕಪರಿಶೋದನಾ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲು ಸಾಮಾನ್ಯ ನಿಕಾಯ ಸಭೆಯನ್ನು ಆಯೋಜಿಸತಕ್ಕದ್ದು. ಸಾಮಾನ್ಯ ನಿಕಾಯ ಸಭೆಯನ್ನು ಸಮಾಪಕನು ಸಮಾವೇಶಗೊಳಿಸುವುದು ಸಾದ್ಯವಾಗದಿದ್ದಲ್ಲಿ ಸಮಾಪಕನು ಕರ್ನಾಟಕ ಸಹಕಾರಿಗಳ ಅಧಿನಿಯಮದ ಪ್ರಕರಣ 47 ರ ವಿಧಾನವನ್ನು ಅನುಸರಿಸತಕ್ಕದು. 9ಎ. ಅಪೆಕ್ಸ್ ಸಹಕಾರಿಯ ಲೆಕ್ಕಪರಿಶೋಧನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು:- ಪ್ರಕರಣ 33ರ ಉಪಪ್ರಕರಣ (11)ರ ಉದ್ದೇಶಕ್ಕಾಗಿ, ಲೆಕ್ಕಪರಿಶೋಧನಾ ನಿರ್ದೇಶಕನು ಅಪೆಕ್ಸ ಸಹಕಾರಿಯ ಆಡಿಟ್ ವರದಿಯ ಪ್ರತಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವುದರ ಮೂಲಕ ಅದನ್ನು ವಿಧಾನಮಂಡಲದ ಮುಂದೆ ಮಂಡಿಸಲು ಅನುವಾಗುವಂತೆ ಕ್ರಮವಿಡತಕ್ಕದ್ದು.
9ಬಿ. ಸಾಮಾನ್ಯ ಸಭೆಯ ಕೋರಿಕೆ ಮೇರೆಗೆ ಯಾವುದೇ ಲೆಕ್ಕದ ಮರು ಪರಿಶೋಧನೆ:- ಯಾವುದೇ ಸಹಕಾರಿಯ ಸಾಮಾನ್ಯ ನಿಕಾಯವು ಸಹಕಾರಿಯ ಯಾವುದೇ ಲೆಕ್ಕವನ್ನು ಪ್ರಕರಣ 33ರ ಉಪಪ್ರಕರಣ (12)ರಡಿ ಮರು ಲೆಕ್ಕಪರಿಶೋಧಿಸಲು ತೀರ್ಮಾನಿಸಿದಲ್ಲಿ, ಅದು ಅಂಥ ಮರು ಲೆಕ್ಕಪರಿಶೋಧನೆ ನಡೆಸಲು ಬೇರೆಯಾದ ಒಬ್ಬ ಲೆಕ್ಕಪರಿಶೋಧಕ ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಯನ್ನು ನೇಮಿಸತಕ್ಕದ್ದು. ಅಂಥ ಮರುಲೆಕ್ಕಪರಿಶೋಧನೆಯ ವೆಚ್ಚವನ್ನು ಸಹಕಾರಿಯು ಭರಿಸತಕ್ಕದ್ದು.
9ಸಿ. ರಾಜ್ಯ ಸಹಕಾರದ ಆದೇಶದ ಮೇರೆಗೆ ಲೆಕ್ಕಗಳ ಮರು ಪರಿಶೋಧನೆ:- ಯಾವುದೇ ಸಹಕಾರಿಯ ಲೆಕ್ಕಪತ್ರಗಳ ಮರುಲೆಕ್ಕಪರಿಶೋಧನೆಗೆ ರಾಜ್ಯ ಸರ್ಕಾರವು ಆದೇಶಿಸಿದಾಗ, ಸಹಕಾರಿ ಲೆಕ್ಕಪರಿಶೋಧನಾ ನಿರ್ದೇಶಕನು ಬೇರೊಬ್ಬ ಲೆಕ್ಕಪರಿಶೋಧಕನಿಂದ ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಯಿಂದ ಅಂಥ ಮರುಲೆಕ್ಕಪರಿಶೋಧನೆಗೆ ವ್ಯವಸ್ಥೆ ಮಾಡತಕ್ಕದ್ದು. ಅಂಥ ಮರುಲೆಕ್ಕಪರಿಶೋಧನೆಯ ವೆಚ್ಚವನ್ನು ಸಹಕಾರಿಯು ಭರಿಸತಕ್ಕದ್ದು.
9ಡಿ. ಲೆಕ್ಕಪರಿಶೋಧಕ ಅಥವಾ ಲೆಕ್ಕಪರಿಶೋಧಿಸುವ ಸಂಸ್ಥೆಗೆ ಕೊಡಮಾಡುವ ಸಂಭಾವನೆ:- ಒಂದು ಸಹಕಾರಿಯು ಯಾವುದೇ ಸಹಕಾರಿ ವರ್ಷದ ಲೆಕ್ಕ ಪತ್ರಗಳನ್ನು ಪರಿಶೋಧಿಸಲು ಅಥವಾ ಪರಿಶೋಧನೆ ಮಾಡಿದಲ್ಲಿ ಆ ಬಗ್ಗೆ ಲೆಕ್ಕಪರಿಶೋಧಕರಿಗೆ ಅಥವಾ ಲೆಕ್ಕಪರಿಶೋಧನಾ ಸಂಸ್ಥೆಗೆ ಸಂಭಾವನೆಯನ್ನು ಸಹಕಾರಿ ಸಂಸ್ಥೆಯ ಸಾಮಾನ್ಯ ನಿಕಾಯವು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರಿಂದ ದುಡಿಯುವ ಬಂಡವಾಳ ಮತ್ತು ವ್ಯಾಪಾರ ವಹಿವಾಟು ಆಧರಿಸಿ ಕಾಲಕಾಲಕ್ಕೆ ನೀಡುವ ಮಾರ್ಗ ಸೂಚಿಗಳನ್ವಯ ನಿಗದಿಪಡಿಸತಕ್ಕದ್ದು".
9. ಹೊಸ ಅಧ್ಯಾಯ VA ರ ಸೇರ್ಪಡೆ:- ಸದರಿ ನಿಯಮಗಳ ಅಧ್ಯಾಯ V ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳ ನಂತರ, ಈ ಮುಂದಿನದನ್ನು ಸೇರಿಸತಕ್ಕದ್ದು; ಎಂದರೆ:-
ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೫೦೦" ಅಧ್ಯಾಯ VA
ಸಹಕಾರ ಶಿಕ್ಷಣ ಮತ್ತು ತರಬೇತಿ :
10ಎ. ಸಹಕಾರ ಶಿಕ್ಷಣ ನಿದಿಗೆ ಪಾವತಿ: ಪ್ರತಿ ಸಹಕಾರಿಯು ತನ್ನ ಸಹಕಾರ ನಿಧಿ ವಂತಿಕೆಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಬೆಂಗಳೂರು ಇದರ ಖಾತೆಗೆ ತನ್ನ ವಾರ್ಷಿಕ ಸಾಮಾನ್ಯ ಸಭೆ ನಡೆದ ದಿನಾಂಕದಿಂದ ಮೂವತ್ತು ದಿನಗಳೊಳಗೆ ಜಮಾ ಮಾಡತಕ್ಕದ್ದು. 10ಬಿ ಶಿಕ್ಷಣ ನಿಧಿಯ ನಿರ್ವಹಣೆ : (1) ಸಹಕಾರ ಶಿಕ್ಷಣ ನಿಧಿಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ನಿರ್ವಹಿಸತಕ್ಕದ್ದು ಮತ್ತು ಪೋಷಿಸತಕ್ಕದ್ದು. ಅದನ್ನು ಕೆಳಗಿನ ಸದಸ್ಯರುಗಳನ್ನುಳ್ಳ ಒಂದು ಸಲಹಾ ಸಮಿತಿಯ ಸೂಚನೆ ಮೇರೆಗೆ ಬಳಕೆ ಮಾಡತಕ್ಕದ್ದು.
(ಎ) ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಇದರ ಅಧ್ಯಕ್ಷರು ಸಭಾಪತಿ (ಬಿ) ಸಹಕಾರ ಶಿಕ್ಷಣ / ತರಬೇತಿ ಕುರಿತು ಓರ್ವ ತಜ್ಞರನ್ನು ಕರ್ನಾಟಕ ರಾಜ್ಯ ಸೌಹಾರ್ದ
ಸಂಯುಕ್ತ ಸಹಕಾರಿಯಿಂದ ನಾಮನಿರ್ದೇಶನ ಮಾಡತಕ್ಕದ್ದು. ಸದಸ್ಯ (ಸಿ) ನಿರ್ದೇಶಕ, ಪ್ರಾದೇಶಿಕ ಸಹಕಾರ ವ್ಯವಸ್ಥಾಪನ ಸಂಸ್ಥೆ, ಬೆಂಗಳೂರು ಸದಸ್ಯ (ಡಿ) ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಮುಖ್ಯ ಕಾರ್ಯನಿರ್ವಾಹಕ ಸದಸ್ಯ ಕಾರ್ಯದರ್ಶಿ (2) ಸದರಿ ಸಲಹಾ ಸಮಿತಿಯ ಸಭೆಗೆ ಕೋರಂ ಮೂರು ಇರತಕ್ಕದ್ದು. ಅಂತಹ ಸಮಿತಿಯ ನಾಮನಿರ್ದೇಶನ ಸದಸ್ಯನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಇದರ ಆಡಳಿತ ಮಂಡಳಿಯು ನಿಗದಿಪಡಿಸಿದಂತೆ, ಎರಡು ವರ್ಷಗಳಿಗೆ ಹೆಚ್ಚಿಲ್ಲದ ಅವಧಿಗೆ ಪದಗ್ರಹಣ ಹೊಂದಿರತಕ್ಕದ್ದು. ಸಲಹಾ ಸಮಿತಿಯ ಸಭೆಯನ್ನು ಕನಿಷ್ಟ ಮೂರು ತಿಂಗಳಿಗೊಮ್ಮೆ ಕರೆಯತಕ್ಕದ್ದು.
(3) ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಈ ನಿಧಿಯನ್ನು ಒಂದು ಪ್ರತ್ಯೇಕ ಖಾತೆಯನ್ನು ವಾಣಿಜ್ಯ / ಷೆಡ್ಯೂಲ್ಡ್ ಬ್ಯಾಂಕಿನಲ್ಲಿ ನಿರ್ವಹಿಸತಕ್ಕದ್ದು ಮತ್ತು ಸದರಿ ನಿಧಿಯ ಮೇಲಿನ ಬಡ್ಡಿ ಅಥವಾ ಇತರ ಗಳಿಕೆಯಿಂದ ಪ್ರಾಪ್ತವಾಗುವ ಆದಾಯವನ್ನು ಸದರಿ ನಿಧಿಗೆ ಜಮಾಮಾಡತಕ್ಕದ್ದು.
10ಸಿ ಶಿಕ್ಷಣ ನಿಧಿಯನ್ನು ಬಳಕೆ ಮಾಡಬಹುದಾದ ಉದ್ದೇಶಗಳು: (1) ಸಲಹಾ ಸಮಿತಿಯ ಅನುಮೋದನೆ ಇಲ್ಲದೆ ಸಹಕಾರ ಶಿಕ್ಷಣ ನಿಧಿಯಿಂದ ಯಾವುದೇ ವೆಚ್ಚವನ್ನು ಮಾಡತಕ್ಕದ್ದಲ್ಲ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಇದರ ಲೆಕ್ಕ ಪರಿಶೋಧಕರು ಈ ನಿಧಿಯ ಬಳಕೆಯನ್ನು ಪರಿಶೀಲಿಸಿ ದೃಡೀಕರಿಸತಕ್ಕದ್ದು.
(2) ಸಲಹಾ ಸಮಿತಿಯು ಕಾಲಕಾಲಕ್ಕೆ ನೀಡುವ ನಿರ್ದೇಶನಗಳಿಗೆ ಒಳಪಟ್ಟು ಈ ನಿಧಿಯನ್ನು ಸಹಕಾರಿ ಶಿಕ್ಷಣ ತರಬೇತಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಪಟ್ಟ ಕೆಳಗಿನ ಯಾವುದೇ ಉದ್ದೇಶಗಳಿಗೆ ಉಪಯೋಗಿಸಬಹುದು.
(ಎ) ಸಹಕಾರಿಗಳ ನೌಕರರ, ನಿರ್ದೇಶಕರ (ಪದಾಧಿಕಾರಿಗಳನ್ನು ಒಳಗೊಂಡಂತೆ) ಮತ್ತು ಸದಸ್ಯರ ಶಿಕ್ಷಣ ಹಾಗೂ ಸಹಕಾರ ತತ್ವ ಮತ್ತು ಆಚರಣೆಯಲ್ಲಿ ಸಾರ್ವಜನಿಕರಿಗೆ ಶಿಕ್ಷಣ ನೀಡುವುದುದು;
(ಬಿ) ಸಹಕಾರಿಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ;
(ಸಿ) ಸಹಕಾರಿಗಳ ಅಭಿವೃದ್ಧಿ;
(ಡಿ) ಸಾಮಾನ್ಯವಾಗಿ ಸಹಕಾರಿ ಚಳುವಳಿಯ ಅಭಿವೃದ್ಧಿ;
(ಇ) ವೃತ್ತಿ ನೈಪುಣ್ಯತೆ;
(ಎಫ್) ಸಂಶೋಧನೆ ಮತ್ತು ಅಭಿವೃದ್ಧಿ;
(ಜಿ) ತಾಂತ್ರಿಕ ಸೌಲಭ್ಯಗಳನ್ನು ಇಂದೀಕರಿಸುವುದು;
(ಹೆಚ್) ಶಿಕ್ಷಣ, ತರಬೇತಿ, ಸಂಶೋಧನೆ, ಸಿಬ್ಬಂದಿ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ
(ಐ) ಸಹಕಾರಿ ಪ್ರಚಾರ ಮತ್ತು ಪ್ರಸಿದ್ಧಿ;
(ಜೆ) ಸಹಕಾರಿ ಚಳುವಳಿಗೆ ಸಂಬಂಧಪಟ್ಟ ಪುಸ್ತಕ ಮತ್ತು ನಿಯತಕಾಲಿಕೆಗಳ ಪ್ರಕಟಣೆ;
(ಕೆ) ಸಂಶೋಧನೆ, ಸರ್ವೇಕ್ಷಣೆ ಮತ್ತು ಪ್ರಕರಣ ಅಧ್ಯಯನಗಳನ್ನು ನಡೆಸುವುದು;
(ಎಲ್) ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ಪ್ರಶಂಸನೀಯ ಸೇವೆ ಸಲ್ಲಿಸಿದವರಿಗೆ ಬಹುಮಾನ ಅಥವಾ ಗೌರವಧನ ಕೊಡುವುದು;
(3) ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ಸಲಹಾ ಸಮಿತಿಯು ನೀಡುವ ಒಟ್ಟಾರೆ ಮಾರ್ಗಸೂಚಿಗಳನ್ನು ಅನುಸರಿಸಿ ಸಹಕಾರಿ ತತ್ವಗಳು ಮತ್ತು ಮೌಲ್ಯಗಳ ಬಗ್ಗೆ ತಿಳುವಳಿಕೆ ಮೂಡಿಸುವುದು, ಸದಸ್ಯರ ಶಿಕ್ಷಣ, ಸಹಕಾರಿಗಳಲ್ಲಿ ಆರ್ಥಿಕ ಮತ್ತು ವ್ಯವಹಾರ ನಿರ್ವಹಣೆ ಇತ್ಯಾದಿ ವಿಷಯಗಳ ಸಹಕಾರಿ ಚಳುವಳಿ ಮತ್ತು ಸಹಕಾರಿಗಳ ಬೆಳವಣಿಗೆಗೆ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳನ್ನು ರೂಪಿಸತಕ್ಕದ್ದು ಮತ್ತು ವಾರ್ಷಿಕ ಬಜೆಟ್ಗಳನ್ನು ತಯಾರಿಸತಕ್ಕದ್ದು ಹಾಗೂ ಅವುಗಳನ್ನು ಅನುಷ್ಠಾನಗೊಳಿಸತಕ್ಕದ್ದು;
(4) ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ರಿಜಿಸ್ಟ್ರಾರನಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ವಿವರಗಳನ್ನು ತೋರಿಸುವ ಅಧಿಕೃತ ವರದಿಗಳನ್ನು ವರ್ಷಕ್ಕೊಮ್ಮೆ ಸಲ್ಲಿಸತಕ್ಕದ್ದು;
(5) ಪ್ರತಿ ಸಹಕಾರಿ ಆಡಳಿತ ಮಂಡಳಿಯು ಸಹ ತನ್ನ ವಾರ್ಷಿಕ ಆಯವ್ಯಯದಲ್ಲಿ ನೌಕರರ, ನಿರ್ದೇಶಕರ, ಸದಸ್ಯರ ಮತ್ತು ಭಾವಿ ಸದಸ್ಯರ ಶಿಕ್ಷಣದ ಖರ್ಚುಗಳನ್ನು ಅಳವಡಿಸತಕ್ಕದ್ದು. ಸಹಕಾರ ಸಿದ್ಧಾಂತ, ತತ್ವಗಳು ಮತ್ತು ಆಚರಣೆಗಳ ಬಗ್ಗೆ ಸದಸ್ಯರು ನಿರ್ದೇಶಕರು ಮತ್ತು ನೌಕರರು ಸರಿಯಾದವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೫೦೧ ತರಬೇತಿ ನೀಡಿ ಅರಿವು ಮೂಡಿಸುವುದನ್ನು ಖಾತರಿ ಪಡಿಸಿಕೊಳ್ಳತಕ್ಕದ್ದು. ಯಾವುದೇ ಒಂದು ಉತ್ತಮ ಸಹಕಾರಿಯಲ್ಲಿ ಅನುಸರಿಸಬೇಕಾದ ಮಾರ್ಗದರ್ಶಕತೆ ತಿಳುವಳಿಕೆಯ ಮಟ್ಟ, ಸದಸ್ಯರ ಭಾಗವಹಿಸುವಿಕೆ ಮತ್ತು ಸದಸ್ಯರ ನಿಯಂತ್ರಣಗಳು ಸಹಕಾರಿಯ ಎಲ್ಲಾ ನೌಕರರಿಗೆ, ನಿರ್ದೇಶಕರಿಗೆ ಮತ್ತು ಸದಸ್ಯರಿಗೆ ಮುಟ್ಟುವುದನ್ನು ಖಾತರಿ ಪಡಿಸಿಕೊಳ್ಳತಕ್ಕದ್ದು.
10 ನಿಯಮ 11 ರ ತಿದ್ದುಪಡಿ: ಸದರಿ ನಿಯಮಗಳ ನಿಯಮ 11ರಲ್ಲಿ, ಉಪನಿಯಮ (1) ರ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು;
ಎಂದರೆ :-
"(1ಎ) ಯಾವುದೇ ಸಹಕಾರಿಯು ಮತ್ತು ಸಂಯುಕ್ತ ಸಹಕಾರಿಯು ತಾನಾಗಿ ಅದರ ಯಾವುದೇ ಪ್ರತಿನಿಧಿಯ ಅಥವಾ ಆಡಳಿತ ಮಂಡಲಿಯ ಯಾವುದೇ ಸದಸ್ಯನ ಚುನಾವಣೆಗೆ ಸಂಬಂಧಪಟ್ಟಂತೆ ಯಾವುದೇ ಚುನಾವಣಾ ತಕರಾರು ವಿವಾದವನ್ನು ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸತಕ್ಕದ್ದಲ್ಲ ಮತ್ತು ಸಹಕಾರಿಯ ನಿಧಿಗಳಿಂದ ಯಾವುದೇ ಮೊಬಲಗನ್ನು ವೆಚ್ಚ ಮಾಡತಕ್ಕದ್ದಲ್ಲ".
ನಮೂನೆ 1 ಎ
(ನಿಯಮ 5ಇ ಅನ್ನು ನೋಡಿ)
ಅಧಿಸೂಚನೆ
ನಂ. ದಿನಾಂಕ:
ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997 ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳು 2004ರ ಉಪಬಂಧಗಳ ಅಡಿಯಲ್ಲಿ ಜಿಲ್ಲೆಯಲ್ಲಿ ನೋಂದಾಯಿತ ಕಚೇರಿಗಳನ್ನುಳ್ಳ ಸಹಕಾರಿಗಳ ಆಡಳಿತ ಮಂಡಳಿಗಳಿಗೆ ಉಪವಿಧಿಗಳಲ್ಲಿ ನಿರ್ದಿಷ್ಟ ಪಡಿಸಿರುವಂತೆ ವಿವಿಧ ಮತಕ್ಷೇತ್ರಗಳಿಂದ ಚುನಾವಣೆಗಳನ್ನು ನಡೆಸಬೇಕಾಗಿರುವುದರಿಂದ
*(1) ದಿನಾಂಕ __________ ಕ್ಕೆ ಪದಾವಧಿ ಮುಕ್ತಾಯವಾಗಲಿರುವ ____________ ಪ್ರಾಥಮಿಕ / ಮಾಧ್ಯಮಿಕ/ಒಕ್ಕೂಟ/ಅಪೆಕ್ಸ್/ಸಹಕಾರಿಯ ಆಡಳಿತ ಮಂಡಳಿಗೆ ನಿರ್ದೇಶಕರುಗಳ ಸ್ಥಾನಗಳನ್ನು ತುಂಬಲು ಚುನಾವಣೆೆಗಳನ್ನು ನಡೆಸಬೇಕಾಗಿರುವುದರಿಂದ
*(2) __________ ಇವರ ಮರಣ/ರಾಜೀನಾಮೆ/ಅನರ್ಹತೆ/ಅಥವಾ ಇನ್ನಿತರ ಕಾರಣದಿಂದಾಗಿ __________ ಮತಕ್ಷೇತ್ರದ ಸ್ಥಾನವು ಖಾಲಿಯಾಗಿರುವುದರಿಂದ *ಖಾಲಿಯಾಗಿರುವುದಾಗಿ ಘೋಷಿಸಿರುವುದರಿಂದಾಗಿ ಉಂಟಾದ ಚುನಾವಣೆೆಗಳನ್ನು ನಡೆಸಬೇಕಾಗಿರುವುದರಿಂದ ಆದುದರಿಂದ, ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳು 2004ರ ನಿಯಮ 5ಎಫ್ ಗೆ ಅನುಸಾರವಾಗಿ __________ ಜಿಲ್ಲಾ ಚುನಾವಣಾಧಿಕಾರಿಯಾದ __________ ಎಂಬ ಹೆಸರಿನ ನಾನು ಸದರಿ ಚುನಾವಣೆಗೆ ಸಂಬಂಧಿಸಿದ ಈ ಕೆಳಕಂಡ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸುತ್ತೇನೆ.
| ಕ್ರಮ ಸ ಂಖ್ಯೆ | ಸ ಹಕಾರಿಗಳ ವರ್ಗೀಕರಣ | ಚುನಾವಣೆಗಳ ಅವಧಿ |
| 1 | ಪ್ರಾಥಮಿಕ | ರಿಟರ್ನಿಂಗ್ ಅಧಿಕಾರಿಗಳು ಚುನಾವಣೆಗಳ ಸ್ಥಳ, ದಿನ ಮತ್ತು ದಿನಾಂಕ ನಿಗದಿಪಡಿಸಿ ಪ್ರತ್ಯೇಕವಾಗಿ ಚ ುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸತಕ್ಕದ್ದು. |
| 2 | ಮಾಧ್ಯಮಿಕ | |
| 3 | ಒಕ್ಕೂಟ | |
| 4 | ಅಪೆಕ್ಸ್ |
ಜಿಲ್ಲಾ ಚುನಾವಣಾಧಿಕಾರಿ
_________________________________________________________________ * ಅನ್ವಯವಾಗದಿರುವುದನ್ನು ಹೊಡೆದು ಹಾಕಿ
ನಮೂನೆ 2ಎ
(ನಿಯಮ 5ಇ(3) ಅನ್ನು ನೋಡಿ)
ಚುನಾವಣಾ ನೋಟೀಸು
__________ ಸಹಕಾರಿಯ ನಿರ್ದೇಶಕರ ಸಾಮಾನ್ಯ ಚುನಾವಣೆಯನ್ನು __________ (ಸ್ಥಳ) __________ (ದಿನಾಂಕ) __________ ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ __________ ಮತಕ್ಷೇತ್ರ (ಸಾಮಾನ್ಯ / ಹಿಂದುಳಿದ ವರ್ಗ / ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಮಹಿಳೆೆಯರು) ನಡೆಸಲಾಗುವುದೆಂದು ನೋಟೀಸು ನೀಡಲಾಗಿದೆ.
| (ಎ) | ಆಕಾಂಕ್ಷೆವುಳ್ಳ ಅಭ್ಯರ್ಥಿಗಳಿಂದ ನಾಮಪತ್ರಪಡೆಯಲು ಕೊನೆಯ ದಿನಾಂಕ (ನಿಯಮ 5ಇ) | ಚ ುನಾವಣಾ ದಿನಾಂಕ ಪೂರ್ವದ ಏಳನೇ ಸ್ಪಷ್ಟ ದಿನದಂದು (ದಿನಾಂಕ ಮತ್ತು ಸಮಯವನ್ನು ತಿಳಿಸತಕ್ಕದ್ದು) |
| (ಬಿ) | ರಿಟರ್ನಿಂಗ್ ಅಧಿಕಾರಿಯಿಂದ ನಾಮಪತ್ರಗಳ ಪರಿಶೀಲನೆ (ನಿಯಮ 5ಜಿ) | ಚ ುನಾವಣಾ ದಿನಾಂಕ ಪೂರ್ವದ ಆರನೇ ಸ್ಪಷ್ಟ ದಿನದಂದು (ದಿನಾಂಕ ಮತ್ತು ಸಮಯವನ್ನು ತಿಳಿಸತಕ್ಕದ್ದು) |
| (ಸಿ) | ರಿಟರ್ನಿಂಗ್ ಅಧಿಕಾರಿಯಿಂದ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿಯ ಪ್ರಕಟಣೆ (ನಿಯಮ 5ಐ) | ಚ ುನಾವಣಾ ದಿನಾಂಕ ಪೂರ್ವದ ಆರನೇ ಸ್ಪಷ್ಟ ದಿನದಂದು (ದಿನಾಂಕ ಮತ್ತು ಸಮಯವನ್ನು ತಿಳಿಸತಕ್ಕದ್ದು) |
| (ಡಿ) | ಸ್ಪರ್ಧೆಯಲ್ಲಿ ್ಲ ರುವ ಅಭ್ಯರ್ಥಿಗಳಿಂದ ನಾಮಪತ್ರಗಳ ಹಿಂತೆಗೆತಕ್ಕೆ ಕೊನೆಯ ದಿನ. (ನಿಯಮ 5ಹೆಚ್) | ಚ ುನಾವಣಾ ದಿನಾಂಕ ಪೂರ್ವದ ಐದನೇ ಸ್ಪಷ್ಟ ದಿನದಂದು (ದಿನಾಂಕ ಮತ್ತು ಸಮಯವನ್ನು ತಿಳಿಸತಕ್ಕದ್ದು) |
| (ಇ) | ರಿಟರ್ನಿಂಗ್ ಅಧಿಕಾರಿಯಿಂದ ಕ್ರಮಬದ್ಧ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಪಟ್ಟಿಯ ಪ್ರಕಟಣೆ (ನಿಯಮ 5ಐ) | ಚ ುನಾವಣಾ ದಿನಾಂಕ ಪೂರ್ವದ ಐದನೇ ಸ್ಪಷ್ಟ ದಿನದಂದು (ದಿನಾಂಕ ಮತ್ತು ಸಮಯವನ್ನು ತಿಳಿಸತಕ್ಕದ್ದು) |
| (ಎಫ್) | ರಿಟರ್ನಿಂಗ್ ಅಧಿಕಾರಿಯಿಂದ ಅಭ್ಯರ್ಥಿಗಳು ಅಪೇಕ್ಷಿಸಿದಲ್ಲಿ ಚಿಹ್ನೆಗಳ ಹಂಚಿಕೆ (ನಿಯಮ 5ಜೆ) | ಚ ುನಾವಣಾ ದಿನಾಂಕ ಪೂರ್ವದ ಐದನೇ ಸ್ಪಷ್ಟ ದಿನದಂದು (ದಿನಾಂಕ ಮತ್ತು ಸಮಯವನ್ನು ತಿಳಿಸತಕ್ಕದ್ದು) |
| (ಜಿ) | ಚಿಹ್ನೆಯ ಸಹಿತ ಕ್ರಮಬದ್ಧವಾಗಿ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಪಟ್ಟಿ (ನಿಯಮ 5ಜೆ) | ಚ ುನಾವಣಾ ದಿನಾಂಕ ಪೂರ್ವದ ಮೂರನೇ ಸ್ಪಷ್ಟ ದಿನದಂದು (ದಿನಾಂಕ ಮತ್ತು ಸಮಯವನ್ನು ತಿಳಿಸತಕ್ಕದ್ದು) |
| (ಹೆಚ್) | ಮತದಾನದ ದಿನಾಂಕ ಮತ್ತು ಸಮಯ | ದಿನಾಂಕ: ______________ ಸಮಯ: ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ |
| (ಐ) | ಮತ ಎಣಿಕೆಯ ದಿನ ಮತ್ತು ದಿನಾಂಕ | ಮತದಾನದ ದಿನದಂದು ಮತದಾನದ ಅವಧಿ ಮುಗಿದ ತಕ್ಷಣ |
| (ಜೆ) | ರಿಟರ್ನಿಂಗ್ ಅಧಿಕಾರಿಯಿಂದ ಫಲಿತಾಂಶ ಘೋಷಣೆ | ಮತದಾನದ ದಿನದಂದು ಎಣಿಕೆ ಮುಗಿದ ತಕ್ಷಣ |
(a) ಚುನಾಣೆಯಲ್ಲಿ ಭರ್ತಿ ಮಾಡಬೇಕಾಗಿರುವ ಖಾಲಿ ಸ್ಥಾನಗಳ ಸಂಖ್ಯೆ;
(b) ನಿರ್ದೇಶಕರನ್ನು ಚುನಾಯಿಸಬೇಕಾದ ಮತಕ್ಷೇತ್ರ (ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿದಂತೆ);
(c) ಆಡಳಿತ ಮಂಡಳಿಯ ನಿರ್ದೇಶಕರಾಗಿ ಚುನಾಯಿತರಾಗಲು ಅಧಿನಿಯಮ, ನಿಯಮಗಳಲ್ಲಿ ಮತ್ತು ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿದ ಅರ್ಹತೆಗಳು;
(d) ಆಡಳಿತ ಮಂಡಳಿಯ ನಿರ್ದೇಶಕರಾಗಿ ಚುನಾಯಿತರಾಗಲು ಅಧಿನಿಯಮ, ನಿಯಮಗಳಲ್ಲಿ ಮತ್ತು ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿದ ಅನರ್ಹತೆಗಳು.
ಸ್ಥಳ: __________
ದಿನಾಂಕ : __________
ರಿರ್ಟನಿಂಗ್ ಅಧಿಕಾರಿ
ನಮೂನೆ 2ಬಿ
[ನಿಯಮ 5ಎಫ್ ಯನ್ನು ನೋಡಿ]
ನಾಮಪತ್ರ
__________ ಸಹಕಾರಿ __________ ಇದರ ಆಡಳಿತ ಮಂಡಳಿಗೆ ನಿರ್ದೇಶಕರ ಚುನಾವಣೆ __________ * ಸಾಮಾನ್ಯ __________ ಅನುಸೂಚಿತ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಹಿಂದುಳಿದ ವರ್ಗ/ ಮಹಿಳೆಯರು ಮೀಸಲಿರಿಸಿದ __________ ಮತಕ್ಷೇತ್ರದಿಂದ __________ ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಅಭ್ಯರ್ಥಿಯಾಗಿ ಶ್ರೀ / ಶ್ರೀಮತಿ ____________________ ಅವರನ್ನು ನಾನು ನಾಮನಿರ್ದೇಶನ ಮಾಡುತ್ತೇನೆ.
*ಅಭ್ಯರ್ಥಿಯ ಹೆಸರು :
ಅವನ / ಅವಳ ತಂದೆಯ/ ಗಂಡನ ಹೆಸರು :
ಅಂಚೆಯ ವಿಳಾಸ:
ಅವನು ಡೆಲಿಗೇಟ್ ಆಗಿರುವ ಸಹಕಾರಿಯ ಹೆಸರು:
ಅವನ / ಅವಳ ಹೆಸರನ್ನು ಮತದಾರರ ಪಟ್ಟಿಯಲ್ಲಿರುವ __________ **ಭಾಗದಲ್ಲಿ __________ ಕ್ರಮಸಂಖ್ಯೆಯಲ್ಲಿ ನಮೂದಿಸಲಾಗಿದೆ.
ನನ್ನ ಹೆಸರು ___________________ ಮತ್ತು ಅದನ್ನು ಮತದಾರರ ಪಟ್ಟಿಯಲ್ಲಿರುವ __________ **ಭಾಗದಲ್ಲಿ __________ ಕ್ರಮಸಂಖ್ಯೆಯಲ್ಲಿ ನಮೂದಿಸಲಾಗಿದೆ.
ದಿನಾಂಕ :……………………
ಸೂಚಕನ ಸಹಿ
__________________________________________________________________ *ಅಭ್ಯರ್ಥಿಯು (i) ಸಹಕಾರಿಯ ಬಿಡಿವ್ಯಕ್ತಿ ಸದಸ್ಯ; ಅಥವಾ (ii) ಸಹಕಾರಿಯ ಒಂದು ಗುಂಪಿನ ಸದಸ್ಯರ ಪ್ರತಿನಿಧಿ; ಅಥವಾ (iii) ಸದಸ್ಯ ಸಹಕಾರಿಯ ಡೆಲಿಗೇಟ್ವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೫೦೩ **ಭಾಗ 1: - A : ಪ್ರಾಥಮಿಕ ಸಹಕಾರಿಯ ಮತದಾನದ ಹಕ್ಕುಳ್ಳ ಬಿಡಿವ್ಯಕ್ತಿ ಸದಸ್ಯರು
B : ಪ್ರಾಥಮಿಕ ಸಹಕಾರಿಯ ಒಂದು ಗುಂಪಿನ ಸದಸ್ಯರ ಮತದಾನದ ಹಕ್ಕುಳ್ಳ ಪ್ರತಿನಿಧಿಗಳು
**ಭಾಗ II: - A : ಮಾಧ್ಯಮಿಕ ಸಹಕಾರಿಯ ಮತದಾನದ ಹಕ್ಕುಳ್ಳ ಬಿಡಿವ್ಯಕ್ತಿ ಸದಸ್ಯರು ಮತ್ತು ಸದಸ್ಯ ಸಹಕಾರಿಗಳ ಡೆಲಿಗೇಟ್ಗಳು B : ಮಾಧ್ಯಮಿಕ ಸಹಕಾರಿಯ ಒಂದು ಗುಂಪಿನ ಸದಸ್ಯರ ಮತದಾನದ ಹಕ್ಕುಳ್ಳ ಪ್ರತಿನಿಧಿಗಳು ಮತ್ತು ಸದಸ್ಯ ಸಹಕಾರಿಗಳ ಮತದಾನದ ಹಕ್ಕುಳ್ಳ ಡೆಲಿಗೇಟ್ಗಳು
**ಭಾಗ III: - ಒಕ್ಕೂಟ/ಅಪೆಕ್ಸ್ ಸಹಕಾರಿಯ ಸದಸ್ಯ ಸಹಕಾರಿಗಳ ಡೆಲಿಗೇಟ್ಗಳು
ಅಭ್ಯರ್ಥಿಯಿಂದ ಘೋಷಣೆ
ಮೇಲೆ ಹೇಳಿದ ಅಭ್ಯರ್ಥಿಯಾದ ನಾನು, ಈ ನಾಮ ನಿರ್ದೇಶನಕ್ಕೆ ಒಪ್ಪಿದ್ದೇನೆ ಮತ್ತು ಈ ಮೂಲಕ
(ಎ) ನನಗೆ __________ ವರ್ಷ ವಯಸ್ಸು ತುಂಬಿದೆ ಎಂದು:
(ಬಿ) ನಾನೊಬ್ಬ ಮಹಿಳೆಯಾಗಿದ್ದೇನೆಂದು,
(ಸಿ) ಕರ್ನಾಟಕ ರಾಜ್ಯದ ಅನುಸೂಚಿತ ಜಾತಿ/ ಅನುಸೂಚಿತ ಪಂಗಡ, ಹಿಂದುಳಿದ ವರ್ಗವಾಗಿರುವ __________ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ಸದಸ್ಯನಾಗಿದ್ದೇನೆ. ಸಕ್ರಮ ಪ್ರಾಧಿಕಾರಿಯು ಈ ಸಂದರ್ಭದಲ್ಲಿ ನೀಡಿದ ಅನುಸೂಚಿತ ಜಾತಿ / ಅನುಸೂಚಿತ ಪಂಗಡ / ಹಿಂದುಳಿದ ವರ್ಗದ ಪ್ರಮಾಣ ಪತ್ರದ ಪ್ರತಿಯನ್ನು ಇದಕ್ಕೆ ಲಗತ್ತಿಸಲಾಗಿದೆ ಎಂದು:
(ಡಿ) ಅಧಿನಿಯಮದಲ್ಲಿ, ನಿಯಮಗಳಲ್ಲಿ ಅಥವಾ ಉಪವಿಧಿಗಳಲ್ಲಿ ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕನಾಗಿ ಚುನಾಯಿತನಾಗಲು ನಿರ್ದಿಷ್ಟ ಪಡಿಸಿರುವ ಯಾವುದೇ ಅನರ್ಹತೆಗಳನ್ನು ಹೊಂದಿಲ್ಲ ಎಂದು:
(ಇ) ಅಧಿನಿಯಮದಲ್ಲಿ, ನಿಯಮಗಳಲ್ಲಿ ಅಥವಾ ಉಪವಿಧಿಗಳಲ್ಲಿ ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕನಾಗಿ ಚುನಾಯಿತನಾಗಲು ನಿರ್ದಿಷ್ಟ ಪಡಿಸಿರುವ ಯಾವುದೇ ಅಗತ್ಯ ಅರ್ಹತೆಗಳನ್ನು ಹೊಂದಿದ್ದೇನೆ ಎಂದು:
(ಎಫ್) ನಾನು ಆಯ್ಕೆ ಮಾಡಿದ ಚಿಹ್ನೆಗಳು, ಆದ್ಯತೆ ಕ್ರಮದಲ್ಲಿ ಹೀಗಿದೆ :
1. __________ 2. __________ ಮತ್ತು 3. __________ ಎಂದು ಘೋಷಿಸುತ್ತೇನೆ.
ದಿನಾಂಕ ........................ ಅಭ್ಯರ್ಥಿಯ ಸಹಿ
(ರಿಟರ್ನಿಂಗ್ ಅಧಿಕಾರಿಯಿಂದ ಭರ್ತಿ ಮಾಡಬೇಕಾದುದು)
ನಾಮಪತ್ರದ ಕ್ರಮಸಂಖ್ಯೆ __________
ಶ್ರೀ/ಶ್ರೀಮತಿ ____________________ (ಅಭ್ಯರ್ಥಿ) ಅವರು ಈ ನಾಮಪತ್ರವನ್ನು __________ ದಿನಾಂಕದಂದು __________ ಗಂಟೆಗೆ ನನ್ನ ಕಚೇರಿಯಲ್ಲಿ ನನಗೆ ಒಪ್ಪಿಸಲಾಗಿದೆ.
ರಿಟರ್ನಿಂಗ್ ಅಧಿಕಾರಿ
ದಿನಾಂಕ __________
ನಮೂನೆ 2ಸಿ
[ನಿಯಮ 5ಜಿ(4) ಅನ್ನು ನೋಡಿ]
ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ
__________ ಸಹಕಾರಿ __________ ಇದರ ಆಡಳಿತ ಮಂಡಳಿಗೆ ನಿರ್ದೇಶಕರ ಚುನಾವಣೆ __________ * ಸಾಮಾನ್ಯ __________ ಅನುಸೂಚಿತ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಹಿಂದುಳಿದ ವರ್ಗ/ ಮಹಿಳೆಯರು ಮೀಸಲಿರಿಸಿದ __________ ಮತಕ್ಷೇತ್ರದಿಂದ __________ ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಚುನಾವಣೆ.
| ಕ್ರಮ ಸ ಂಖ್ಯೆ | ವ ರ್ಗೀಕರಣ | ಅಭ್ಯರ್ಥಿಯ ಹೆಸರು | ಅಭ್ಯರ್ಥಿಯ ತಂದೆ/ ಗಂಡನ ಹೆಸರು | ಅಭ್ಯರ್ಥಿಯ ವಿಳಾಸ |
| 1 | 2 | 3 | 4 | 5 |
| ಸಾಮಾನ್ಯ | ||||
| ಹಿಂದುಳಿದ ವರ್ಗ | ||||
| ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗ | ||||
| ಮಹಿಳೆೆಯರು | ||||
ಸ್ಥಳ: __________ ದಿನಾಂಕ : __________ ರಿಟರ್ನಿಂಗ್ ಅಧಿಕಾರಿಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೫೦೪
ನಮೂನೆ 2ಡಿ
[ನಿಯಮ 5ಹೆಚ್ ಅನ್ನು ನೋಡಿ]
ನಾಮಪತ್ರವನ್ನು ಹಿಂತೆಗೆದುಕೊಳ್ಳುವ ಬಗ್ಗೆ ನೋಟೀಸು
__________ ಸಹಕಾರಿ __________ ಇದರ ಆಡಳಿತ ಮಂಡಳಿಗೆ ನಿರ್ದೇಶಕರ ಚುನಾವಣೆ __________ * ಸಾಮಾನ್ಯ __________ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಹಿಂದುಳಿದ ವರ್ಗ/ ಮಹಿಳೆಯರು ಮೀಸಲಿರಿಸಿದ __________ ಮತಕ್ಷೇತ್ರದಿಂದ __________ ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಚುನಾವಣೆ.
ಗೆ :
ರಿಟರ್ನಿಂಗ್ ಅಧಿಕಾರಿ, ____________________ ____________________ ____________________
ನಾನು, ಮೇಲಿನ ಚುನಾವಣೆಯಲ್ಲಿ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಯಾಗಿದ್ದು ನನ್ನ ಉಮೇದುವಾರಿಕೆ / ಅಭ್ಯರ್ಥಿತನವನ್ನು ಹಿಂತೆಗೆದುಕೊಳ್ಳುತ್ತೇನೆಂದು ಈ ಮೂಲಕ ನೋಟೀಸು ನೀಡುತ್ತೇನೆ.
ಸ್ಥಳ : ದಿನಾಂಕ : ಅಭ್ಯರ್ಥಿಯ ಸಹಿ __________________________________________________________________
ಹಿಂತೆಗೆತದ ನೋಟೀಸಿನ ಸ್ವೀಕೃತಿ
(ನೋಟೀಸನ್ನು ನೀಡುವ ವ್ಯಕ್ತಿಗೆ ಕೊಡತಕ್ಕುದಾದದ್ದು)
__________ ಸಹಕಾರಿಯ __________ ಸಹಕಾರಿಯ ಆಡಳಿತ ಮಂಡಳಿಯ ಸಾಮಾನ್ಯ ಚುನಾವಣೆಗೆ __________ ಮತಕ್ಷೇತ್ರದಿಂದ ಕ್ರಮಬದ್ಧವಾಗಿ ನಾಮನಿರ್ದೇಶನ ಸಲ್ಲಿಸಿರುವ ಅಭ್ಯರ್ಥಿ ಆದ ಶ್ರೀ / ಶ್ರೀಮತಿ ____________________ ತನ್ನ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ನೋಟೀಸನ್ನು ನನ್ನ ಕಚೇರಿಯಲ್ಲಿ __________ ದಿನಾಂಕಕ್ಕೆ __________ ಗಂಟೆಗೆ ನನಗೆ ಸಲ್ಲಿಸಿದ್ದಾನೆ/ಳೆ.
ಸ್ಥಳ : ____________________ ದಿನಾಂಕ : ____________________ ರಿಟಿರ್ನಿಂಗ್ ಅಧಿಕಾರಿ
ನಮೂನೆ 2ಇ [ನಿಯಮ 5ಐ ಮತ್ತು 5ಜೆೆ ಅನ್ನು ನೋಡಿ] ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ
__________ ಸಹಕಾರಿ __________ ಇದರ ಆಡಳಿತ ಮಂಡಲಿಗೆ ನಿರ್ದೇಶಕರ ಚುನಾವಣೆ __________ * ಸಾಮಾನ್ಯ __________ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಹಿಂದುಳಿದ ವರ್ಗ/ ಮಹಿಳೆಯರು ಮೀಸಲಿರಿಸಿದ __________ ಮತಕ್ಷೇತ್ರದಿಂದ __________ ಸಹಕಾರಿಯ ಆಡಳಿತ ಮಂಡಲಿಯ ನಿರ್ದೇಶಕರ ಸಾಮಾನ್ಯ ಚುನಾವಣೆ.
| ಕ್ರಮ ಸ ಂಖ್ಯೆ | ಅಭ್ಯರ್ಥಿಯ ಹೆಸರು | ಅಭ್ಯರ್ಥಿಯ ವಿಳಾಸ | ಹಂಚಿಕೆ ಮಾಡಿದ ಚಿಹ್ನೆ |
| 1 | 2 | 3 | 4 |
1.
2.
3.
4. ಸ್ಥಳ: _________
ದಿನಾಂಕ : _________ ರಿಟರ್ನಿಂಗ್ ಅಧಿಕಾರಿವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೫೦೫
ನಮೂನೆ 2ಎಫ್
[ನಿಯಮ 5ಎಲ್ ಅನ್ನು ನೋಡಿ]
ಚುನಾವಣಾ ಫಲಿತಾಂಶ ಘೋಷಣೆ
(ಸ್ಥಾನಕ್ಕೆ ಸ್ಪರ್ಧೆಯಿಲ್ಲದಿದ್ದಾಗ ಉಪಯೋಗಿಸಬೇಕಾದುದು)
__________ ಸಹಕಾರಿ __________ ಇದರ ಆಡಳಿತ ಮಂಡಳಿಗೆ ನಿರ್ದೇಶಕರ ಚುನಾವಣೆ __________ * ಸಾಮಾನ್ಯ __________ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಹಿಂದುಳಿದ ವರ್ಗ/ ಮಹಿಳೆಯರು ಮೀಸಲಿರಿಸಿದ __________ ಮತಕ್ಷೇತ್ರದಿಂದ __________ ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಚುನಾವಣೆ.
ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳು 2004ರ ನಿಯಮ 5ಎಲ್ ನಲ್ಲಿನ ಉಪಬಂಧಾನುಸಾರ, ನಾನು
ಹೆಸರು
ವಿಳಾಸ
ಸದರಿ ಸಹಕಾರಿಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಿರ್ದೇಶಕನಾಗಿ __________ ಮತಕ್ಷೇತ್ರದಿಂದ ಕ್ರಮಬದ್ಧವಾಗಿ ಚುನಾಯಿತನಾಗಿದ್ದಾನೆಂದು ಘೋಷಿಸುತ್ತೇನೆ.
ಸ್ಥಳ: _________
ದಿನಾಂಕ : _________ ರಿಟರ್ನಿಂಗ್ ಅಧಿಕಾರಿ
ನಮೂನೆ 2ಜಿ [ನಿಯಮ 5ಎಲ್ ಅನ್ನು ನೋಡಿ] ಚುನಾವಣಾ ಫಲಿತಾಂಶ ಘೋಷಣೆ (ಸ್ಥಾನಕ್ಕೆ ಸ್ಪರ್ಧೆ ಇಲ್ಲದಿರುವಾಗ ಆಕಸ್ಮಿಕ ಖಾಲಿ ಸ್ಥಾನವನ್ನು ಭರ್ತಿ ಮಾಡಲು ಉಪಯೋಗಿಸಬೇಕಾದುದು)
__________ ಸಹಕಾರಿ __________ ಇದರ ಆಡಳಿತ ಮಂಡಳಿಗೆ ನಿರ್ದೇಶಕರ ಚುನಾವಣೆ __________ * ಸಾಮಾನ್ಯ __________ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಹಿಂದುಳಿದ ವರ್ಗ/ ಮಹಿಳೆಯರು ಮೀಸಲಿರಿಸಿದ __________ ಮತಕ್ಷೇತ್ರದಿಂದ __________ ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಚುನಾವಣೆ.
ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳು 2004ರ ನಿಯಮ 5ಎಲ್ ನಲ್ಲಿನ ಉಪಬಂಧಾನುಸಾರ, ನಾನು
ಹೆಸರು ವಿಳಾಸ
ಸದರಿ ಸಹಕಾರಿಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಿರ್ದೇಶಕನಾಗಿ __________ ಮತಕ್ಷೇತ್ರದಿಂದ ಕ್ರಮಬದ್ಧವಾಗಿ ಚುನಾಯಿತನಾಗಿದ್ದಾನೆಂದು ಘೋಷಿಸುತ್ತೇನೆ.
ಶ್ರೀ / ಶ್ರೀಮತಿ _______________ ಅನರ್ಹತೆಯಿಂದ
ಶ್ರೀ / ಶ್ರೀಮತಿ _______________ ರಾಜೀನಾಮೆಯಿಂದ
ಶ್ರೀ / ಶ್ರೀಮತಿ _______________ ಮರಣದಿಂದ
ಶ್ರೀ / ಶ್ರೀಮತಿ _______________ ಚುನಾವಣೆಯನ್ನು ಅಸಿಂಧುಗೊಳಿಸಿರುವುದರಿಂದ
ಶ್ರೀ / ಶ್ರೀಮತಿ _______________ ಮತಕ್ಷೇತ್ರದ ಸ್ಥಾನವು ಖಾಲಿಯಾಗಿರುವುದರಿಂದ / ಖಾಲಿಯಾಗಿದೆಯೆಂದು ಘೋಷಿಸಲಾಗಿರುವುದರಿಂದ ಉಂಟಾದ ಖಾಲಿ ಸ್ಥಾನ.
ಸ್ಥಳ: _________
ದಿನಾಂಕ : _________ ರಿಟರ್ನಿಂಗ್ ಅಧಿಕಾರಿಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೫೦೬
ನಮೂನೆ 2ಹೆಚ್
[ನಿಯಮ 5ಕ್ಯೂ ಅನ್ನು ನೋಡಿ]
| ವ ುತ ಪತ್ರದ ಪಕ್ಕ ಪ್ರತಿ (Counterfoil) ನಿರ್ದೇಶಕ / ಪ್ರತಿನಿಧಿ / ಡೆಲಿಗೇಟ್ ಚುನಾವಣೆಗೆ ಸಹಕಾರಿ ಪ್ರದೇಶ / ಕ್ಷೇತ್ರದ ಹೆಸರು ಸದಸ್ಯ / ಪ ್ರತಿನಿಧಿ / ಡೆಲಿಗೇಟ್ ಇವರ ಕ್ರಮ ಸಂಖ್ಯೆ ಸದಸ್ಯ / ಪ ್ರತಿನಿಧಿ / ಡೆಲಿಗೇಟ್ ರವರ ಸಹಿ ಅಥವಾ ಹೆಬ್ಬಟ್ಟಿನ ಗುರುತು |
| ಪ ರ್ಪೋರೇಷನ್ (perforation) ನಿರ್ದೇಶಕ / ಪ್ರತಿನಿಧಿ / ಡೆಲಿಗೇಟ್ ಪ್ರದೇಶ / ಕ್ಷೇತ್ರದ ಹೆಸರು |
ನಮೂನೆ 2ಐ
[ನಿಯಮ 5ಎಎ ಅನ್ನು ನೋಡಿ]
ಮತಪತ್ರಗಳ ಲೆಕ್ಕ
............................................................ ಸಹಕಾರಿಯ ನಿರ್ದೇಶಕರ / ಪ್ರತಿನಿಧಿ ಚುನಾವಣೆ
ಮತದಾನ ಕೇಂದ್ರ ಹೆಸರು ............................................................
1. ಮತಪತ್ರಗಳು ಸ್ವೀಕೃತ / ಮುದ್ರಿತ ಕ್ರಮಸಂಖ್ಯೆ
ಇಂದ ಗೆ
ಒಟ್ಟು ....................................................
2. ಉಪಯೋಗಿಸದಿರುವ ಮತ ಪತ್ರಗಳು (ಅಂದರೆ ಮತದಾರರಿಗೆ ಕೊಡದಿರುವವು)
(ಎ) ಪ್ರಿಸೈಡಿಂಗ್ ಅಧಿಕಾರಿಯ ಸಹಿ ಸಹಿತ
(ಬಿ) ಪ್ರಿಸೈಡಿಂಗ್ ಅಧಿಕಾರಿಯ ಸಹಿ ರಹಿತ
ಒಟ್ಟು [(ಎ) + (ಬಿ)] ...................
3. ಮತದಾನ ಕೇಂದ್ರದಲ್ಲಿ ಉಪಯೋಗಿಸಿದ ಮತ ಪತ್ರಗಳು
ಒಟ್ಟು (1-2)=3
4. ಉಪಯೋಗಿಸಿದ ಆದರೆ ಮತಪೆಟ್ಟಿಗೆಯೊಳಗೆ ಹಾಕದ ಮತಪತ್ರಗಳು
(ಎ) ಮತದಾನ ಪ್ರಕ್ರಿಯೆಯ ಉಲ್ಲಂಘನೆಗಾಗಿ ರದ್ದುಪಡಿಸಿದ ಮತಪತ್ರಗಳು
(ಬಿ) ಇತರ ಯಾವುದೇ ಕಾರಣಕ್ಕಾಗಿ ರದ್ದುಪಡಿಸಿದ ಮತಪತ್ರಗಳು
ಒಟ್ಟು [(ಎ) + (ಬಿ)] ...................
5. ಮತಪೆಟ್ಟಿಗೆಯಲ್ಲಿರಬೇಕಾದ ಮತಪತ್ರಗಳು
(3-4=5) ..............................
ಪ್ರಿಸೈಡಿಂಗ್ ಅಧಿಕಾರಿಯ ಸಹಿ
ವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೫೦೭ನಮೂನೆ 2ಜೆ
[ನಿಯಮ 5ಎಸಿ(2) ಅನ್ನು ನೋಡಿ]
ಅಂತಿಮ ಫಲಿತಾಂಶದ ಹಾಳೆ
__________ ಸಹಕಾರಿ __________ ಇದರ ಆಡಳಿತ ಮಂಡಳಿಗೆ ನಿರ್ದೇಶಕರ ಚುನಾವಣೆ __________ * ಸಾಮಾನ್ಯ __________ ಅನುಸೂಚಿತ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಹಿಂದುಳಿದ ವರ್ಗ/ ಮಹಿಳೆಯರು ಮೀಸಲಿರಿಸಿದ __________ ಮತಕ್ಷೇತ್ರದಿಂದ __________ ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಚುನಾವಣೆ.
| ವ ುತದಾನ ಕೇಂದ್ರದ ಸ ಂಖ್ಯೆ | ವ ುತಪೆಟ್ಟಿಗೆ / ಪೆಟ್ಟಿಗೆಗಳಲ್ಲಿ ಬಂದ ಒಟ್ಟು ಮತಗಳು |
1.
2. 3.
4.
5. ಒಟ್ಟು
| ಅಭ್ಯರ್ಥಿ | ಸಿಂಧುವಾದ ಒಟ್ಟು ಮತಗಳು | ತಿರಸ್ಕøತವಾದ ಮತಪತ ್ರಗಳು | ಗ ಳಿಸಿದ ಸಿಂಧುವಾದ ಮತಗಳು |
| 1 | 2 | 3 | 4 |
ಸ್ಥಳ: _________ ರಿಟರ್ನಿಂಗ್ ಅಧಿಕಾರಿ ದಿನಾಂಕ : _________
ನಮೂನೆ 2ಕೆ
[ನಿಯಮ 5ಎಡಿ ಅನ್ನು ನೋಡಿ)
ಚುನಾವಣಾ ಫಲಿತಾಂಶದ ಘೋಪಣೆ
(ಸ್ಪರ್ಧೆ ಇದ್ದಾಗ ಉಪಯೋಗಿಸಬೇಕಾದುದು)
__________ ಸಹಕಾರಿ __________ ಇದರ ಆಡಳಿತ ಮಂಡಳಿಗೆ ನಿರ್ದೇಶಕರ ಚುನಾವಣೆ __________ * ಸಾಮಾನ್ಯ __________ ಅನುಸೂಚಿತ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಹಿಂದುಳಿದ ವರ್ಗ/ ಮಹಿಳೆಯರು ಮೀಸಲಿರಿಸಿದ __________ ಮತಕ್ಷೇತ್ರದಿಂದ __________ ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಚುನಾವಣೆ.
ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳು 2004ರ ನಿಯಮ 5ಎಡಿ ನಲ್ಲಿನ ಉಪಬಂಧಾನುಸಾರ, ನಾನು
ಹೆಸರು
ವಿಳಾಸ
ಸದರಿ ಸಹಕಾರಿಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಿರ್ದೇಶಕನಾಗಿ __________ ಮತಕ್ಷೇತ್ರದಿಂದ ಚುನಾಯಿತನಾಗಿದ್ದಾನೆಂದು ಘೋಷಿಸುತ್ತೇನೆ.
ಸ್ಥಳ: _________ ರಿಟರ್ನಿಂಗ್ ಅಧಿಕಾರಿ ದಿನಾಂಕ : _________ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೫೦೮
ನಮೂನೆ 2ಎಲ್
[ನಿಯಮ 5ಎಇ ಅನ್ನು ನೋಡಿ)
ಚುನಾವಣಾ ಪ್ರಮಾಣ ಪತ್ರ
__________ ಸಹಕಾರಿ __________ ಇದರ ಆಡಳಿತ ಮಂಡಳಿಗೆ ನಿರ್ದೇಶಕರ ಚುನಾವಣೆ __________ * ಸಾಮಾನ್ಯ __________ ಅನುಸೂಚಿತ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಹಿಂದುಳಿದ ವರ್ಗ/ ಮಹಿಳೆಯರು ಮೀಸಲಿರಿಸಿದ __________ ಮತಕ್ಷೇತ್ರದಿಂದ ____________________ ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಚುನಾವಣೆಯ ರಿಟಿರ್ನಿಂಗ್ ಅಧಿಕಾರಿ ಆದ ನಾನು ಶ್ರೀ / ಶ್ರೀಮತಿ ____________________ ಇವರು __________ ದಿನಾಂಕದಂದು __________ ಸಹಕಾರಿಯ ಅಡಳಿತ ಮಂಡಳಿಗೆ ನಿರ್ದೇಶಕನಾಗಿ ಕ್ರಮಬದ್ಧವಾಗಿ ಚುನಾಯಿತರಾಗಿದ್ದಾರೆಂದು ಮತ್ತು ಅದರ ಗುರುತಾಗಿ ಅವರಿಗೆ ಈ ಚುನಾವಣಾ ಪ್ರಮಾಣ ಪತ್ರವನ್ನು ನಾನು ಕೊಟ್ಟಿದ್ದೇನೆಂದು ಈ ಮೂಲಕ ಪ್ರಮಾಣೀಕರಿಸುತ್ತೇನೆ.
ಸ್ಥಳ: _________ ರಿಟರ್ನಿಂಗ್ ಅಧಿಕಾರಿ ದಿನಾಂಕ : _________
ನಮೂನೆ 2ಎಂ
[ನಿಯಮ 6(4) ಅನ್ನು ನೋಡಿ)
ಸಹಕಾರಿಯ ಪದಾಧಿಕಾರಿ ಚುನಾವಣೆಗೆ ನಾಮಪತ್ರ
1) ಸ್ಪರ್ಧಿಸಲಾಗುವ ಪದ
2) ಅಭ್ಯರ್ಥಿಯ ಹೆಸರು
3) ಸದಸ್ಯರ ವಹಿಯಲ್ಲಿ ಕ್ರಮ ಸಂಖ್ಯೆ
4) ಅಭ್ಯರ್ಥಿಯ ತಂದೆಯ ಅಥವಾ ಗಂಡನ ಹೆಸರು
5) ಅಭ್ಯರ್ಥಿಯ ವಿಳಾಸ
6) ಸೂಚಕನ ಹೆಸರು
7) ಸದಸ್ಯರ ವಹಿಯಲ್ಲಿ ಸೂಚಕನ ಕ್ರಮ ಸಂಖ್ಯೆ
8) ಸೂಚಕನ ಸಹಿ
9) ಅನುಮೋದಕನ ಹೆಸರು
10) ಸದಸ್ಯರ ವಹಿಯಲ್ಲಿ ಅನುಮೋದಕನ ಕ್ರಮ ಸಂಖ್ಯೆ
11) ಅನುಮೋದಕನ ಸಹಿ
ಅಭ್ಯರ್ಥಿಯ ಘೋಷಣೆ
ನಾನು ಅಧ್ಯಕ್ಷ ಅಥವಾ ಉಪಾಧ್ಯಕ್ಷ ಅಥವಾ ಇತರೆ ಯಾವುದೇ ಪದಾಧಿಕಾರಿ (ನಿರ್ದಿಷ್ಟಪಡಿಸಿ) ಪದಕ್ಕೆ ಚುನಾವಣೆಗಾಗಿ ಅಭ್ಯರ್ಥಿಯಾಗಿ ಇಚ್ಛಿಸುತ್ತೇನೆ ಎಂದು ಮತ್ತು ನನ್ನ ತಿಳಿವಳಿಕೆ ಮತ್ತು ನಂಬಿಕೆ ಇರುವಷ್ಟರಮಟ್ಟಿಗೆ ಕೆಳಗಿನ ಮಾಹಿತಿ ಸತ್ಯವಾಗಿರುತ್ತದೆಂದು ಘೋಷಿಸುತ್ತೇನೆ.
ಎ) ನನ್ನ ವಯಸ್ಸು ............................ ವರ್ಷಗಳು ತುಂಬಿದೆ.
ಬಿ) ನಾನು ಮಹಿಳೆಯಾಗಿದ್ದೇನೆ.
ಸಿ) ನಾನು ....................... ವರ್ಗ/ಜಾತಿ/ಪಂಗಡದ ಸದಸ್ಯನಾಗಿದ್ದು ಅದು ಹಿಂದುಳಿದ ವರ್ಗ/ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಎಂದು ಪರಿಗಣಿಸಲ್ಪಟ್ಟಿದೆ.
ವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೫೦೯ಡಿ) ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕನಾಗಿ ಚುನಾಯಿತನಾಗಲು ಅಧಿನಿಯಮದಲ್ಲಿ, ನಿಯಮಗಳಲ್ಲಿ ಅಥವಾ ಉಪವಿಧಿಗಳಲ್ಲಿ ಉಕ್ತವಾಗಿರುವ ಯಾವುದೇ ಅನರ್ಹತೆಗಳನ್ನು ಹೊಂದಿರುವುದಿಲ್ಲ.
ಇ) ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕನಾಗಿ ಚುನಾಯಿತನಾಗಲು ಅಧಿನಿಯಮದಲ್ಲಿ, ನಿಯಮಗಳಲ್ಲಿ ಅಥವಾ ಉಪವಿಧಿಗಳಲ್ಲಿ ಉಕ್ತವಾಗಿರುವ ಅಗತ್ಯ ಅರ್ಹತೆಗಳನ್ನು ಹೊಂದಿರುತ್ತೇನೆ.
ಸ್ಥಳ: _________ ಅಭ್ಯರ್ಥಿಯ ಸಹಿ
ದಿನಾಂಕ : _________
(ರಿಟರ್ನಿಂಗ್ ಅಧಿಕಾರಿಯು ಭರ್ತಿ ಮಾಡಬೇಕಾದದ್ದು)
ಈ ನಾಮಪತ್ರವನ್ನು ಅಭ್ಯರ್ಥಿಯಾದ ಶ್ರೀ / ಶ್ರೀಮತಿ ................................................... ಅವನು / ಅವಳು ದಿನಾಂಕ ................... ದಂದು ................................... ಘಂಟೆಗೆ ನನಗೆ ಸಲ್ಲಿಸಿದ್ದಾನೆ/ಳೆೆ.
ಸ್ಥಳ: _________ ರಿಟರ್ನಿಂಗ್ ಅಧಿಕಾರಿ ದಿನಾಂಕ : _________
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಎಸ್. ನಾಗರಾಜಯ್ಯ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಸಹಕಾರ ಇಲಾಖೆ
ವಿಶೇಷ ರಾಜ್ಯ ಪತ್ರಿಕೆ
ಬೆಂಗಳೂರು, ಗುರುವಾರ, ಸೆಪ್ಟೆಂಬರ್ 19, 2013 (ಭಾದ್ರಪದ 28, ಶಕ ವರ್ಷ 1935)
ನಂ.1151 No. 1151 Bangalore, Thursday, September 19, 2013 (Bhadrapada 28, Shaka Varsha 1935) ಭಾಗ – IV-A Part – IV-A
PARLIAMENTARY AFFAIRS AND LEGISLATION SECRETARIAT
NOTIFICATION
No. DPAL 06 SAMVYAVI 2013, Bangalore, Dated : 19.09.2013
The following Order made by the Governor is hereby published for general information:-
"ORDER - I
In exercise of the powers conferred upon me by sub-clause (a) of clause (2) of Article 174 of the Constitution of India, I, H.R.Bhardwaj, Governor of Karnataka, do hereby prorogue the Karnataka Legislative Assembly.
H.R. BHARDWAJ GOVERNOR OF KARNATAKA"
By order and in the name of the Governor of Karnataka,
B.B. PATTAR Special Secretary to Government Department of Parliamentary Affairs and Legislation PARLIAMENTARY AFFAIRS AND LEGISLATION SECRETARIAT
NOTIFICATION
No. DPAL 06 SAMVYAVI 2013, Bangalore, Dated : 19.09.2013
The following Order made by the Governor is hereby published for general information:-
"ORDER - II
In exercise of the powers conferred upon me by sub-clause (a) of clause (2) of Article 174 of the Constitution of India, I, H.R.Bhardwaj, Governor of Karnataka, do hereby prorogue the Karnataka Legislative Council.
H.R. BHARDWAJ GOVERNOR OF KARNATAKA"
By order and in the name of the Governor of Karnataka,
B.B. PATTAR Special Secretary to Government Department of Parliamentary Affairs and Legislationಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೫೧೦
ವಿಶೇಷ ರಾಜ್ಯ ಪತ್ರಿಕೆ
ನಂ.1152 No. 1152 ಭಾಗ – IV-A Part – IV-A
ಬೆಂಗಳೂರು, ಶುಕ್ರವಾರ, ಸೆಪ್ಟೆಂಬರ್ 20, 2013 (ಭಾದ್ರಪದ 29, ಶಕ ವರ್ಷ 1935) Bangalore, Friday, September 20, 2013 (Bhadrapada 29, Shaka Varsha 1935)
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ ಸಿಆಸುಇ 73 ಸೇಇವಿ 2012, ಬೆಂಗಳೂರು, ದಿನಾಂಕ: 20.09.2013.
ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ನ್ನು ಮತ್ತಷ್ಟು ತಿದ್ದುಪಡಿ ಮಾಡುವುದಕ್ಕೆ ದಿನಾಂಕ: 19.08.2013ರ ಅಧಿಸೂಚನೆ ಸಂಖ್ಯೆ: ಸಿಆಸುಇ 73 ಸೇಇವಿ 2012 ರಲ್ಲಿ ಪ್ರಕಟಿಸಿರುವ ಈ ಮುಂದಿನ ನಿಯಮಗಳ ಕರಡನ್ನು ಅಧಿಕೃತ ರಾಜ್ಯಪತ್ರದಲ್ಲಿ ಇದರ ಪ್ರಕಟಣೆಯ ದಿನಾಂಕದಿಂದ 15 ದಿನಗಳೊಳಗಾಗಿ ಅದರಿಂದ ಭಾಧಿತರಾಗುವ ಸಂಭವವಿರುವ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಆಹ್ವಾನಿಸಿ ದಿನಾಂಕ: 19.08.2013ರ ಕರ್ನಾಟಕ ವಿಶೇಷ ರಾಜ್ಯ ಪತ್ರದ ಭಾಗ-ivಎ (ಸಂ. 1064)ರಲ್ಲಿ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಅಧಿನಿಯಮ, 1978 (1990 ರ ಕರ್ನಾಟಕ ಅಧಿನಿಯಮ 14)ರ 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ ಪ್ರಕಟಿಸಲಾಗಿರುವುದರಿಂದ;
ಸದರಿ ವಿಶೇಷ ರಾಜ್ಯ ಪತ್ರವನ್ನು ದಿನಾಂಕ: 19.08.2013 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;
ಮತ್ತು, ಸದರಿ ಕರಡಿನ ಬಗ್ಗೆ ಯಾವುದೇ ಆಕ್ಷೇಪಣೆ/ಸಲಹೆಗಳು ಸ್ವೀಕೃತವಾಗದಿರುವುದರಿಂದ;
ಈಗ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ 8ನೇ ಪ್ರಕರಣದೊಂದಿಗೆ ಓದಿಕೊಂಡ 3ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ ಎಂದರೆ:-
ನಿಯಮಗಳು
1. ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) (ತಿದ್ದುಪಡಿ) ನಿಯಮಗಳು, 2013 ಎಂದು ಕರೆಯತಕ್ಕದ್ದು.
(2) ಅವುಗಳು 1ನೇ ಏಪ್ರಿಲ್ 2012, ರಿಂದ ಜಾರಿಗೆ ಬಂದಿವೆ ಎಂದು ಭಾವಿಸತಕ್ಕದ್ದು.
2. 5ನೇ ನಿಯಮದ ತಿದ್ದುಪಡಿ:- ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ (ಇಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) 5ನೇ ನಿಯಮದಲ್ಲಿ, (3)ನೇ ಉಪನಿಯಮದ ಬದಲಾಗಿ ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು:-
"3. ರಾಜ್ಯ ಸಿವಿಲ್ ಸೇವೆಗಳು
(ಎ) ಸಮೂಹ "ಎ" ಯು ರೂ. 28100-700-28800-800-33600-900-39000-1050-45300-1200-50100 ರ ಮತ್ತು ಅದಕ್ಕೂ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಹೊಂದಿರುವ ಹುದ್ದೆಗಳನ್ನು ಒಳಗೊಂಡಿರತಕ್ಕದ್ದು.
(ಬಿ) ಸಮೂಹ "ಬಿ" ಯು ರೂ. 21600-600-24600-700-28800-800-33600-900-39000-1050-40050 ರ ಮತ್ತು ಅದಕ್ಕೂ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಆದರೆ ರೂ. 28100-700-28800-800-33600-900-39000-1050-45300-1200-50100; ಕ್ಕಿಂತ ಕೆಳಗಿನ ವೇತನ ಶ್ರೇಣಿಯನ್ನು ಹೊಂದಿರುವ ಹುದ್ದೆಗಳನ್ನು ಒಳಗೊಂಡಿರತಕ್ಕದ್ದು.
(ಸಿ) ಸಮೂಹ "ಸಿ" ಯು ರೂ. 11600-200-12000-250-13000-300-14200-350-15600-400-17200-450-19000-500-21000 ರ ವೇತನ ಶ್ರೇಣಿಗಿಂತ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಆದರೆ ರೂ 21600-600-24600-700-28800-800-33600-900-39000-1050-40050; ಕ್ಕಿಂತ ಕೆಳಗಿನ ವೇತನ ಶ್ರೇಣಿಯನ್ನು ಹೊಂದಿರುವ, ಆದರೆ ಅನುಸೂಚಿ IV ರಲ್ಲಿ ನಿರ್ದಿಷ್ಟಪಡಿಸಿರುವ ಹುದ್ದೆಗಳನ್ನು ಹೊರತು ಪಡಿಸಿದ ಹುದ್ದೆಗಳನ್ನು ಒಳಗೊಂಡಿರತಕ್ಕದ್ದು.
(ಡಿ) ಸಮೂಹ "ಡಿ" ಯು ಅನುಸೂಚಿ IV ರಲ್ಲಿ ನಿರ್ದಿಷ್ಟಪಡಿಸಿರುವ ಹುದ್ದೆಗಳನ್ನು ಮತ್ತು ರೂ. 9600-200-12000-250-13000-300- 14200-350-14550 ಕ್ಕಿಂತ ಮೇಲ್ಪಟ್ಟು ವೇತನ ಶ್ರೇಣಿಗಳನ್ನು ಆದರೆ, ರೂ. 11600-200-12000-250-13000-300-14200-350-15600-400- 17200-450-19000-500-21000." ಕ್ಕಿಂತ ಕೆಳಗಿನ ವೇತನ ಶ್ರೇಣಿಯನ್ನು ಹೊಂದಿರುವ ಹುದ್ದೆಗಳನ್ನು ಒಳಗೊಂಡಿರತಕ್ಕದ್ದು.
ವಿವರಣೆ:- ಈ ಉಪನಿಯಮದ ಉದ್ದೇಶಗಳಿಗಾಗಿ "ವೇತನ ಶ್ರೇಣಿ" ಎಂದರೆ ಕರ್ನಾಟಕ ಸಿವಿಲ್ ಸೇವಾ (ಪರಿಷ್ಕøತ ವೇತನ) ನಿಯಮಗಳು, 2012 ರಲ್ಲಿ ಮತ್ತು ಅದಕ್ಕೆ ಸಂಬಂಧಿಸಿದ ಆದೇಶಗಳಲ್ಲಿ ಹೇಳಿರುವ ವಿವಿಧ ಹುದ್ದೆಗಳಿಗೆ ಸಂಬಂಧಿಸಿದಂತೆ ನಿಗದಿಪಡಿಸಿದ ಪರಿಷ್ಕøತ ವೇತನ ಶ್ರೇಣಿ.
3. 9ನೇ ನಿಯಮದ ತಿದ್ದುಪಡಿ:- ಸದರಿ ನಿಯಮಗಳ 9ನೇ ನಿಯಮದ (2)ನೇ ಉಪನಿಯಮದಲ್ಲಿ-
(i) (ಬಿಬಿ) ಖಂಡದಲ್ಲಿ "24450-31800" ರೂ. ಗಳಿಗಿಂತ ಕಡಿಮೆಯಿಲ್ಲದ" ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ ರೂ. 48900- 63600'' ಗಳಿಗಿಂತ ಕಡಿಮೆಯಿಲ್ಲದ" ಎಂಬ ಪದಗಳನ್ನು ಮತ್ತು ಅಂಕಿಗಳನ್ನು ಮತ್ತು ರೂ. 15200-25650'' ಗಳಿಗಿಂತ ಹೆಚ್ಚಲ್ಲದ" ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ ರೂ. 30400-51300'' ಗಳಿಗಿಂತ ಹೆಚ್ಚಲ್ಲದ" ಎಂಬ ಪದಗಳನ್ನು ಮತ್ತು ಅಂಕಿಗಳನ್ನು ಪ್ರತಿಸ್ಥಾಪಿಸತಕ್ಕದ್ದು.
ವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೫೧೧(ii) (ಬಿಬಿಬಿ) ಖಂಡದಲ್ಲಿ, " 24450-31800 ರೂ.ಗಳಿಗಿಂತ ಕಡಿಮೆ" ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ ರೂ. 48900- 63600 ಗಳಿಗಿಂತ ಕಡಿಮೆ" ಎಂಬ ಪದಗಳನ್ನು ಮತ್ತು ಅಂಕಿಗಳನ್ನು ಪ್ರತಿಸ್ಥಾಪಿಸತಕ್ಕದ್ದು. (iii) (ಬಿಬಿಬಿ-1) ಖಂಡದಲ್ಲಿ " ರೂ. 20025-28275ರ ವೇತನ ಶ್ರೇಣಿಯಲ್ಲಿರುವ" ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ "ರೂ. 40050-56550ರ ವೇತನ ಶ್ರೇಣಿಯಲ್ಲಿರುವ' ಎಂಬ ಪದಗಳನ್ನು ಮತ್ತು ಅಂಕಿಗಳನ್ನು ಪ್ರತಿಸ್ಥಾಪಿಸತಕ್ಕದ್ದು.
4. 10ನೇ ನಿಯಮದ ತಿದ್ದುಪಡಿ:- ಸದರಿ ನಿಯಮಗಳ 10ನೇ ನಿಯಮದ (8)ನೇ ಉಪನಿಯಮದಲ್ಲಿನ ಕ್ರಮಸಂಖ್ಯೆ(10)ರಲ್ಲಿನ (ಎ)ಖಂಡದಲ್ಲಿ "10620-14960" ಎಂಬ ಅಂಕಿಗಳ ಬದಲಾಗಿ "40050-56550" ಎಂಬ ಅಂಕಿಗಳನ್ನು ಪ್ರತಿಸ್ಥಾಪಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಡಾ|| ಮಂಗಳ ಜಿ.ಎಸ್. ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವಾ ನಿಯಮಗಳು-1)
PERSONNEL AND ADMINISTRATIVE REFORMS SECRETARIAT
NOTIFICATION
No. DPAR 73 SDE 2012, Bangalore, dated: 20.09.2013
Whereas the draft of the following rules further to amend the Karnataka Civil Services (Classification, Control and Appeal) Rules, 1957, was published as required by clause (a), sub-section (2) of section 3 of the Karnataka State Civil Services Act, 1978 (Karnataka Act 14 of 1990) in Notification No. DPAR 73 SDE 2012, Dated: 19.08.2013, in Part IV A (P.R.No. 1064) of the Karnataka Special Gazette dated 19.08.2013 inviting objections and suggestions from all persons likely to be affected thereby within fifteen days from the date of its publication in the Official Gazette.
Whereas, the said Special Gazette was made available to the public on 19.08.2013.
And Whereas, no objections, and suggestions have been received in this behalf by the State Government. Now, therefore, in exercise of the powers conferred by sub-section(1) of section 3 read with section 8 of the Karnataka State Civil Services Act, 1978 (Karnataka Act 14 of 1990) the Government of Karnataka hereby makes the following rules, namely:-
RULES
1. Title and commencement:- (1) These rules may be called the Karnataka Civil Services (Classification, Control and Appeal) (Amendment) Rules, 2013.
(2) They shall be deemed to have come into force with effect from 1st April, 2012.
2. Amendment of rule 5:- In the Karnataka Civil Services (Classification, Control and Appeal) Rules, 1957, (hereinafter referred to as the said rules) in rule 5, for sub-rule (3), and entries relating thereunder the following shall be substituted, namely:-
"(3) In the State Civil Services.-
(a) Group 'A' shall consist of posts carrying the scale of pay of Rs. 28100-700-28800-800-33600-900- 39000-1050-45300-1200-50100 and above;
(b) Group 'B' shall consist of posts carrying the scale of pay of Rs. 21600-600-24600-700-28800-800- 33600-900-39000-1050-40050 and above, but below the scale of pay of Rs. 28100-700-28800-800- 33600-900-39000-1050-45300-1200-50100;
(c) Group 'C' shall consist of posts carrying the scale of pay of Rs. 11600-200-12000-250-13000-300- 14200-350-15600-400-17200-450-19000-500-21000 and above, but below the scale of pay of Rs. 21600-600-24600-700-28800-800-33600-900-39000-1050-40050, but other than the posts specified in Schedule –IV; and
(d) Group 'D' shall consist of posts specified in Schedule-IV and the posts carrying the scale of pay of Rs. 9600-200-12000-250-13000-300-14200-350-14550 and above, but below the scale of pay of Rs. 11600-200-12000-250-13000-300-14200-350-15600-400-17200-450-19000-500-21000." Explanation:- For the purposes of this sub-rule "scale of pay" means the revised scales of pay specified in respect of various posts in the Karnataka Civil Services (Revised Pay) Rules, 2012 and related orders.
ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೫೧೨ 3. Amendment of rule 9:- In the rule 9 of the said rules, in sub-rule (2),-(i) in clause (bb), for the words and figures "not less than Rupees 24450-31800" the words and figures "not less than Rupees 48900-63600" and for the words and figures "not more than Rupees 15200-25650", the words and figures "not more than Rupees 30400-51300" shall be substituted.
(ii) in clause (bbb), for the words and figures "less than Rupees 24450-31800" the words and figures "less than Rupees 48900-63600" shall be substituted.
(iii) in clause (bbb-1), for the words and figures "for the pay scale of Rupees 20025-28275", the words and figures" for the pay scale of Rupees 40050-56550", shall be substituted.
4. Amendment of Rule 10:- Rule 10 of in sub rule (8) in sl.no. (10)
(a) "for the figures "10620-14960" the figures "40050-56550" shall be substituted.
By Order and in the name of the Governor of Karnataka,
Dr. Mangala G.S. Under Secretary to Government Department of Personnel and Administrative Reforms (Service Rules-1)
ವಿಶೇಷ ರಾಜ್ಯ ಪತ್ರಿಕೆ
ನಂ.1153 No. 1153 ಭಾಗ – IV-A Part – IV-A
ಬೆಂಗಳೂರು, ಶುಕ್ರವಾರ, ಸೆಪ್ಟೆಂಬರ್ 20, 2013 (ಭಾದ್ರಪದ 29, ಶಕ ವರ್ಷ 1935) Bangalore, Friday, September 20, 2013 (Bhadrapada 29, Shaka Varsha 1935)
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಇ 153 ಎಂಆರ್ಇ 2013, ಬೆಂಗಳೂರು, ದಿನಾಂಕ: 19/09/2013
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 10 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಹೊಸದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಕೆಳಕಂಡ ಸದಸ್ಯರುಗಳನ್ನು ಸಮಿತಿಯ ಉಳಿದ ಅವಧಿವರೆಗೆ ಅಥವಾ ಸರ್ಕಾರದ ಇಚ್ಛಾನುಸಾರದವರೆಗೆ ನಾಮನಿರ್ದೇಶನ ಮಾಡಿದೆ.
| ಕ್ರ. ಸ ಂ. | ಶಿ ೕಯುತರು / ಶ್ರೀಮತಿ ್ರ | |
| 01 | ಎನ್.ಸುರೇಶ್ ಬಿನ್ ನಂಜುಂಡಪ್ಪ, ಚಿಕ್ಕಯಗಟಿ ಗ್ರಾಮ ಹೊಸದುರ್ಗ ತಾ | ಸದಸ್ಯರು |
| 02 | ರಾಜಪ್ಪ ಬಿನ್ ಕುರಿಯಣ್ಣ, ಮಾಡದಕೆರೆ ಗ್ರಾಮ, ಹೊಸದುರ್ಗ ತಾ | ಸದಸ್ಯರು |
| 03 | ಎಂ.ಮಲ್ಲೇಶಪ್ಪ ಬಿನ್ ಮುದ್ದಪ್ಪ, ಮಳಲಿ ಗ್ರಾಮ, ಹೊಸದುರ್ಗ ತಾ…… | ಸದಸ್ಯರು |
| 04 | ಜಗದೀಶ್ ಬಿನ್ ಅಡವಪ್ಪ, ಹೊಸದುರ್ಗ ರೋಡ್ ಗ್ರಾಮ, ಹೊಸದುರ್ಗ ತಾ | ಸದಸ್ಯರು |
| 05 | ಬಿ.ಆರ್.ಶ್ರೀಧರನಾಯ್ಡು S/O ರಾಮಕೃಷ್ಣ ನಾಯ್ಡು ಬಲ್ಲಾಳ ಸಮುದ್ರ | ಸದಸ್ಯರು |
| 06 | ಟಿ.ಹುಚ್ಚಪ್ಪ ಬಿನ್ ತಿಮ್ಮಪ್ಪ, ದುಗ್ಗಾವರ ಗ್ರಾಮ, ಹೊಸದುರ್ಗ ತಾ | ಸದಸ್ಯರು |
| 07 | ಪಯಾಜ್ ಬಿನ್ ಬಾಕರ್ ಸಾಬ್, ಶ್ರೀರಾಮಪುರ ಗ್ರಾಮ ಹೊಸದುರ್ಗ ತಾ | ಸದಸ್ಯರು |
| 08 | ಸಿದ್ದಪ್ಪ ಬಿನ್ ಭೀಮಣ್ಣ ಕೆಲ್ಲೋಡ್ ಗ್ರಾಮ, ಹೊಸದುರ್ಗ ತಾ | ಸದಸ್ಯರು |
| 09 | ಪ್ರಕಾಶ್ ಬಿನ್ ರಾಮನಾಯಕ.ಎನ್.ಇ.ಎಸ್.ಬಡಾವಣೆ ಹೊಸದುರ್ಗ ಟೌನ್ | ಸದಸ್ಯರು |
| 10 | ವಿಜಯಲಕ್ಮೀ ಕೋಂ ನಾಗರಾಜ ಶೆಟ್ಟಿ, ಚಾಮರಾಜಪೇಟೆ ಹೊಸದುರ್ಗ ಟೌನ್ | ಸದಸ್ಯರು |
| 11 | ದಿನೇಶ್ ಬಿನ್ ಎನ್.ಮಹೇಶ್ವರಪ್ಪ ಜಾನಕಲ್ ಗ್ರಾಮ ಹೊಸದುರ್ಗ ತಾ | ಸದಸ್ಯರು |
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 10(2) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಕಲಂ 10(4)(a) ರನ್ವಯ ಹೊಸದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮೇಲೆ ಹೇಳಿರುವ ನಾಮನಿರ್ದೇಶನಗೊಂಡಿರುವ ಸದಸ್ಯರುಗಳ ಪೈಕಿ ಶ್ರೀ ಎನ್.ಸುರೇಶ್ ಇವರನ್ನು ಅಧ್ಯಕ್ಷರನ್ನಾಗಿ ಮತ್ತು ಶ್ರೀ ರಾಜಪ್ಪ ಬಿನ್ ಕುರಿಯಣ್ಣ ಮಾಡದಕೆರೆ ಗ್ರಾಮ ಹೊಸದುರ್ಗ ಇವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಈ. ಪಾಪಣ್ಣ ಸರ್ಕಾರದ ಅಧೀನ ಕಾರ್ಯದರ್ಶಿ-1, ಸಹಕಾರ ಇಲಾಖೆವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೫೧೩
ವಿಶೇಷ ರಾಜ್ಯ ಪತ್ರಿಕೆ
ನಂ.1154 No. 1154 ಭಾಗ – IV-A Part – IV-A
ಬೆಂಗಳೂರು, ಶುಕ್ರವಾರ, ಸೆಪ್ಟೆಂಬರ್ 20, 2013 (ಭಾದ್ರಪದ 29, ಶಕ ವರ್ಷ 1935) Bangalore, Friday, September 20, 2013 (Bhadrapada 29, Shaka Varsha 1935)
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಇ 237 ಎಂಆರ್ಇ 2013, ಬೆಂಗಳೂರು, ದಿನಾಂಕ: 20/09/2013
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 10 ರಲ್ಲಿ ಪ್ರದತ್ತವಾದ
ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ 12 ಜನರನ್ನು ಬಾಗಲಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರುಗಳನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮ ನಿರ್ದೇಶನ ಮಾಡಿದೆ:
| ಕ್ರ. ಸ ಂ. | ಹೆಸರು ಮತ್ತು ವಿಳಾಸ ಶಿ ೕ/ಶ್ರೀಮತಿ ್ರ | ಹುದ್ದೆ |
| 1. | ಗುರುಸಿದ್ದಪ್ಪ (ಕುಮಾರ್), ಗಂಗಾಧರ ಯಳ್ಳಿಗುತ್ತಿ, ಬಾಗಲಕೋಟೆ | ಅಧ್ಯಕ್ಷರು |
| 2. | ಶರಣಪ್ಪಾ ಶಿವಪ್ಪ ಯಂಡಿಗೇರಿ ಮುತ್ತತ್ತಿ | ಉಪಾಧ್ಯಕ್ಷರು |
| 3. | ಬಸವರಾಜ ತಿಮ್ಮನಗೌಡ ಅರಕೇರಿ, ಬೆನಕಟ್ಟಿ | ಸದಸ್ಯರು |
| 4. | ಶಶಿಕಾಂತ ಬಸವಂತಪ್ಪ ಪೂಜಾರಿ ರಾಮಪುರ | ಸದಸ್ಯರು |
| 5. | ಶ್ರೀಕರ ಪ್ರಲ್ಹಾದ್ರಾವ್ ದೇಸಾಯಿ, ಸುತಗುಂಡಾರ | ಸದಸ್ಯರು |
| 6. | ಸಿದ್ದಪ್ಪ ರಂಗಪ್ಪ ವಾಲಿಕಾರ ಬೆನ್ನೂರು | ಸದಸ್ಯರು |
| 7. | ಸಲೀಮ ಅಲ್ಲಾಬಾಕ್ಷ ಶೇಖ್ ಕಲಾದಗಿ | ಸದಸ್ಯರು |
| 8. | ಗುರುಪಾದಪ್ಪ ಈರಪ್ಪ ಅಂಗಡಿ ಬಾಗಲಕೋಟೆ | ಸದಸ್ಯರು |
| 9. | ಬಂದೇನವಾಜ್ ಚಾಂದ್ಸಾಬ್ ಜಮಖಂಡಿ, ಬಾಗಲಕೋಟೆ | ಸದಸ್ಯರು |
| 10. | ವೆಂಕಪ್ಪ ಹನುಮಪ್ಪ ಹಲಗಲಿ ಖಜ್ಜಿಡೋಣಿ | ಸದಸ್ಯರು |
| 11. | ಸಿದ್ದಪ್ಪ ಬಸಪ್ಪ ಗಾಳಿ ಶಿರೂರು | ಸದಸ್ಯರು |
| 12. | ಗೀತಾ ಸೋಮಪ್ಪ ಮಾದರ್ ಮುರನಾಳ | ಸದಸ್ಯರು |
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 10(2) ರಲ್ಲಿನ ಅಧಿಕಾರವನ್ನು
ಚಲಾಯಿಸಿ, ಕರ್ನಾಟಕ ಸರ್ಕಾರವು ಮೇಲಿನಂತೆ ನಾಮ ನಿರ್ದೇಶನಗೊಂಡಿರುವ ಸದಸ್ಯರುಗಳ ಪೈಕಿ ಶ್ರೀ ಗುರುಸಿದ್ದಪ್ಪ (ಕುಮಾರ್), ಗಂಗಾಧರ ಯಳ್ಳಿಗುತ್ತಿ, ಬಾಗಲಕೋಟೆ ಇವರನ್ನು ಅಧ್ಯಕ್ಷರನ್ನಾಗಿ ಮತ್ತು ಶ್ರೀ ಶರಣಪ್ಪಾ ಶಿವಪ್ಪ ಯಂಡಿಗೇರಿ, ಮುತ್ತತ್ತಿ ಇವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಈ. ಪಾಪಣ್ಣ ಸರ್ಕಾರದ ಅಧೀನ ಕಾರ್ಯದರ್ಶಿ-1 ಸಹಕಾರ ಇಲಾಖೆಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೫೧೪
ವಿಶೇಷ ರಾಜ್ಯ ಪತ್ರಿಕೆ
ನಂ.1155 No. 1155 ಭಾಗ – I Part – I
ಬೆಂಗಳೂರು, ಶನಿವಾರ, ಸೆಪ್ಟೆಂಬರ್ 21, 2013 (ಭಾದ್ರಪದ 30, ಶಕ ವರ್ಷ 1935) Bangalore, Saturday, September 21, 2013 (Bhadrapada 30, Shaka Varsha 1935)
ಸಾರಿಗೆ ಸಚಿವಾಲಯ
ಕರ್ನಾಟಕ ಸರ್ಕಾರದ ನಡವಳಿಗಳು
ವಿಷಯ : ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿನ ಪ್ರಾದೇಶಿಕ ಸಾರಿಗೆ ಕಛೇರಿಗಳ ಕಾರ್ಯವ್ಯಾಪ್ತಿಯನ್ನು ಎರಡೂ ಜಿಲ್ಲೆಗಳಾದ್ಯಂತ ವಿಸ್ತರಿಸುವ ಬಗ್ಗೆ.
ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ: ಹೆಚ್ಡಿ 81 ಟಿಎಂಇ 80, ದಿ:28.04.1982.
2) ಸರ್ಕಾರದ ಆದೇಶ ಸಂಖ್ಯೆ: ಹೆಚ್ಡಿ 272 ಟಿಎಂಇ 83, ದಿ:06.04.1984.
3) ಸರ್ಕಾರದ ಆದೇಶ ದಿನಾಂಕ: ಸಾರಿಇ 39 ಸಾಇಪ 2005, ದಿ:06.06.2005.
4) ಸರ್ಕಾರದ ಆದೇಶ ಸಂಖ್ಯೆ: ಸಾರಿಇ 133 ಸಾಇಪ 2006, ದಿ: 05.06.2006.
5) ಸರ್ಕಾರದ ಆದೇಶ ಸಂಖ್ಯೆ: ಸಾರಿಇ 227 ಸಾಇಪ 2010 ದಿ:20.07.2011.
ಪ್ರಸ್ತಾವನೆ:
ಮೇಲೆ ಓದಲಾದ ಸರ್ಕಾರದ ಆದೇಶಗಳಲ್ಲಿ ಬೆಂಗಳೂರು ನಗರದಲ್ಲಿ ಹೊಸದಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಸೃಜಿಸಿ ಅವುಗಳ ಕಾರ್ಯವ್ಯಾಪ್ತಿಯನ್ನು ಹಂಚಿಕೆ/ಪುನರ್ಹಂಚಿಕೆ ಮಾಡಲಾಗಿದೆ. 2013-14ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯಮಂತ್ರಿಯವರು "ಬೆಂಗಳೂರಿನಲ್ಲಿರುವ ಎಲ್ಲ ಪ್ರಾದೇಶಿಕ ಸಾರಿಗೆ ಕಛೇರಿಗಳನ್ನು ಗಣಕಯಂತ್ರ ಜಾಲಕ್ಕೆ ಒಳಪಡಿಸಲಾಗುವುದು. ಇದರಿಂದ ಸಾರ್ವಜನಿಕರು ಯಾವುದೇ ಪ್ರಾದೇಶಿಕ ಸಾರಿಗೆ ಕಛೇರಿಯಿಂದ ತಮಗೆ ಬೇಕಾದ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ" ಎಂದು ಘೋಷಿಸಲಾಗಿದ್ದು ಅದರಂತೆ ಈ ಬಗ್ಗೆ ಈ ಹಿಂದೆ ಹೊರಡಿಸಲಾದ ಎಲ್ಲ ಆದೇಶಗಳನ್ನು ಭಾಗಶಃ ಮಾರ್ಪಡಿಸಿ, ಚಾಲನಾ ಪರವಾನಗಿ, ವಾಹನಗಳ ನೋಂದಣಿ ಹಾಗೂ ವಾಹನಗಳ ಅರ್ಹತಾ ಪತ್ರ ನೀಡಿಕೆ ಪ್ರಕಾರ್ಯಗಳಿಗಾಗಿ ಮಾತ್ರ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಂದು ಪ್ರಾದೇಶಿಕ ಸಾರಿಗೆ ಅಧಿಕಾರಿ/ ಸಹಾಯಕ ಪ್ರಾದೇಶಿಕ ಅಧಿಕಾರಿಗಳ ಕಛೇರಿಗಳ ಕಾರ್ಯವ್ಯಾಪ್ತಿಯನ್ನು ಪೂರ್ಣವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಾದ್ಯಂತ ವಿಸ್ತರಿಸಿ ಆದೇಶಿಸಿದೆ. ಅದರಂತೆ ಈ ಕೆಳಕಂಡ ಆದೇಶ:
ಸರ್ಕಾರಿ ಆದೇಶ ಸಂಖ್ಯೆ: ಸಾರಿಇ 113 ಸಾಇಪ 2013, ಬೆಂಗಳೂರು, ದಿನಾಂಕ: 21/09/2013
ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನಲೆಯಲ್ಲಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಂದು ಪ್ರಾದೇಶಿಕ ಸಾರಿಗೆ ಅಧಿಕಾರಿ / ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಛೇರಿಗಳ (ಪ್ರಾ.ಸಾ.ಅ, ಆಟೋರಿಕ್ಷಾ ರಹದಾರಿ ಮತ್ತು ರಾಜ್ಯ ಸಾರಿಗೆ ನಿಗಮಗಳು ಹೊರತುಪಡಿಸಿ) ಕಾರ್ಯವ್ಯಾಪ್ತಿಯನ್ನು ಮೋಟಾರು ವಾಹನಗಳ ಕಾಯ್ದೆ, 1988 ರ ಸೆಕ್ಷನ್ 8, 9, 40, 41, 44, 45, 51 ಮತ್ತು 56ರಡಿಯಲ್ಲಿ ಕೈಗೊಳ್ಳಲಾಗುವ ಪ್ರಕಾರ್ಯಗಳಿಗಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಾದ್ಯಂತ ವಿಸ್ತರಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಕೆ. ಬೀರೇಶ್ ಸರ್ಕಾರದ ಅಧೀನ ಕಾರ್ಯದರ್ಶಿ ಸಾರಿಗೆ ಇಲಾಖೆ
ವಿಶೇಷ ರಾಜ್ಯ ಪತ್ರಿಕೆ
ಬೆಂಗಳೂರು, ಶನಿವಾರ, ಸೆಪ್ಟೆಂಬರ್ 21, 2013 (ಭಾದ್ರಪದ 30, ಶಕ ವರ್ಷ 1935)
ನಂ.1156 No. 1156 Bangalore, Saturday, September 21, 2013 (Bhadrapada 30, Shaka Varsha 1935) ಭಾಗ – IV-A Part – IV-A
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಇ 289 ಎಂಆರ್ಇ 2013, ಬೆಂಗಳೂರು, ದಿನಾಂಕ: 21/09/2013
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 11(1)(ix) ರಲ್ಲಿ ಪ್ರದತ್ತವಾದ
ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಮುಂಡಗೋಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಕೆಳಕಂಡ ಮೂವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ :
ವಿಶೇಷ ರಾಜ್ಯ ಪತ್ರಿಕೆ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ೮೫೧೫| ಕ್ರ. ಸ ಂ. | ಹೆಸರು ಮತ್ತು ವಿಳಾಸ |
| 1. | ಶ್ರೀ ಗೋಪಾಲ ಗಂಗಾಧರ ಪಾಟೀಲ, ಸಾ|| ಚೌಡಳ್ಳಿ, ಮುಂಡಗೋಡ ತಾಲ್ಲೂಕು. |
| 2. | ಶ್ರೀ ಹನುಮಂತಪ್ಪ ದುರ್ಗಪ್ಪ ಆರಿಗೊಪ್ಪ, ಕ್ಯಾಸನಕೇರಿ ಗ್ರಾಮ, ಮುಂಡಗೋಡ ತಾಲ್ಲೂಕು. |
| 3. | ಶ್ರೀ ಪರಶುರಾಮ ಹೊಳೆಯಪ್ಪ ಉಪ್ಪಾರ ಸಾ|| ಕಾಳನಕೊಪ್ಪ, ಮುಂಡಗೋಡ ತಾಲ್ಲೂಕು. |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಈ. ಪಾಪಣ್ಣ ಸರ್ಕಾರದ ಅಧೀನ ಕಾರ್ಯದರ್ಶಿ-1 ಸಹಕಾರ ಇಲಾಖೆ
ವಿಶೇಷ ರಾಜ್ಯ ಪತ್ರಿಕೆ
ನಂ.1157 No. 1157 ಭಾಗ – I Part – I
ಬೆಂಗಳೂರು, ಶನಿವಾರ, ಸೆಪ್ಟೆಂಬರ್ 21, 2013 (ಭಾದ್ರಪದ 30, ಶಕ ವರ್ಷ 1935) Bangalore, Saturday, September 21, 2013 (Bhadrapada 30, Shaka Varsha 1935)
ಸಹಕಾರ ಸಚಿವಾಲಯ
ಸೇರ್ಪಡೆ ಆದೇಶ
ಸಂಖ್ಯೆ: ಸಿಒ 21 ಸಿಎಲ್ಎಸ್ 2013, ಬೆಂಗಳೂರು, ದಿನಾಂಕ: 20-09-2013
ಯಶಸ್ವಿನಿ ಯೋಜನೆಯಡಿ 2013-14ನೇ ಸಾಲಿಗೆ ಸದಸ್ಯರನ್ನು ನೋಂದಾಯಿಸುವ ಸಲುವಾಗಿ ಹೊರಡಿಸಿದ್ದ ಸರ್ಕಾರದ ಆದೇಶ ಸಂಖ್ಯೆ: ಸಿಒ 21 ಸಿಎಲ್ಎಸ್ 2013 ದಿನಾಂಕ:05.06.2013ರ ಮಾರ್ಗಸೂಚಿ 2ರಲ್ಲಿ ಯಶಸ್ವಿನಿ ಸದಸ್ಯನಾಗಲು ಗ್ರಾಮೀಣ ಸಹಕಾರ ಸಂಘಗಳಲ್ಲಿ ಸದಸ್ಯನಾಗಿ ದಿ:01.08.2013ಕ್ಕೆ ಕನಿಷ್ಠ ಆರು ತಿಂಗಳಾಗಿರಬೇಕು ಎಂಬುದನ್ನು ಸಮ ಸಂಖ್ಯೆ ಸರ್ಕಾರದ ಆದೇಶ ದಿನಾಂಕ:21.06.2013ರ ಆದೇಶದಲ್ಲಿ ಮಾರ್ಪಾಟು ಮಾಡಿ ದಿ:01.08.2013ಕ್ಕೆ ಕನಿಷ್ಠ ಮೂರು ತಿಂಗಳಾಗಿರಬೇಕು ಎಂದು ಮಾರ್ಪಾಡಿಸಲಾಗಿತ್ತು. ಈ ನಿರ್ಬಂಧದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಸದಸ್ಯರನ್ನು ಯಶಸ್ವಿನಿ ಯೋಜನೆಯಡಿಯಲ್ಲಿ ತರಲು ಕಷ್ಟವಾಗುತ್ತಿರುವುದರಿಂದ ಈ ಕೆಳಕಂಡ ಮಾರ್ಪಾಟುಗಳನ್ನು ಮಾಡಲಾಗಿದೆ. ಈ ಮಾರ್ಪಾಟುಗಳನ್ನು ಸೇರಿಸಿಕೊಂಡು ಓದಿಕೊಳ್ಳತಕ್ಕದ್ದು.
1) ಮಾರ್ಗಸೂಚಿ 2:- ಸಮ ಸಂಖ್ಯೆ ಸರ್ಕಾರದ ಆದೇಶದ ದಿನಾಂಕ:05.06.2013 ಮತ್ತು ದಿ:21.06.2013ರಲ್ಲಿನ ಮಾರ್ಗಸೂಚಿ 2ಕ್ಕೆ:
ಯಾವುದೇ ಗ್ರಾಮೀಣ ಸಹಕಾರ ಸಂಘದಲ್ಲಿ ಸದಸ್ಯತ್ವ ಪಡೆದು ದಿನಾಂಕ:01.08.2013ಕ್ಕೆ ಕನಿಷ್ಠ ಮೂರು ತಿಂಗಳಾಗಿರಬೇಕು ಎಂಬುದರ ಬದಲಾಗಿ ಯಶಸ್ವಿನಿ ಯೋಜನೆಯಡಿ ನೋಂದಾಯಿಸಿಕೊಳ್ಳುವ ಸಮಯದಲ್ಲಿ ಆ ಗ್ರಾಮೀಣ ಸಹಕಾರ ಸಂಘದ ಸದಸ್ಯನಾಗಿರಬೇಕು ಎಂದು ಓದಿಕೊಳ್ಳತಕ್ಕದ್ದು.
ಹೆಚ್.ಎಸ್ ನಾಗರಾಜಯ್ಯ ವಿಶೇಷ ಕರ್ತವ್ಯಾಧಿಕಾರಿ ಮತ್ತು ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಸಹಕಾರ ಇಲಾಖೆ
ವಿಶೇಷ ರಾಜ್ಯ ಪತ್ರಿಕೆ
ಬೆಂಗಳೂರು, ಶನಿವಾರ, ಸೆಪ್ಟೆಂಬರ್ 21, 2013 (ಭಾದ್ರಪದ 30, ಶಕ ವರ್ಷ 1935)
ನಂ.1158 No. 1158 Bangalore, Saturday, September 21, 2013 (Bhadrapada 30, Shaka Varsha 1935) ಭಾಗ – IV-A Part – IV-A
MINORITY WELFARE SECRETARIAT
NOTIFICATION
No. MWD 81 WES 2013, Bangalore, Dated: 21-09-2013
FORM - 23
[See Rule 32]
The Government of Karnataka by virtue of its power conferred under Section 14(9) and 21 of the Wakf Act, 1995 notifies that the person noted hereunder is appointed as Member of Karnataka State Board of Wakfs. He shall hold theಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩, ೨೦೧೩ ವಿಶೇಷ ರಾಜ್ಯ ಪತ್ರಿಕೆ ೮೫೧೬ office as the Member of the Board so long as the Member whose place he fills would have been entitled to hold office, if such vacancy had not occurred.
| Sl. No | Name of the Member | Address | Age | If elected Member, Name of Electoral College | If nominated the name of the category of nomination | Remarks |
| 1 | Sri. Fairoz Nuruddin Saith S/o Nuruddin | No. 4877/36, Race Course Road, Hanuman Nagar, Belgaum-590 001. | 62 | Muslim Member of the Karnataka State Legislature | - | - |
By Order and in the name of the Governor of Karnataka
ABBAS SHARIEFF Under Secretary to Government Minority Welfare Department
ವಿಶೇಷ ರಾಜ್ಯ ಪತ್ರಿಕೆ
ನಂ.1159 No. 1159 ಭಾಗ – IV Part – IV
ಬೆಂಗಳೂರು, ಸೋಮವಾರ, ಸೆಪ್ಟೆಂಬರ್ 23, 2013 (ಆಶ್ವಯುಜ 1, ಶಕ ವರ್ಷ 1935) Bangalore, Monday, September 23, 2013 (Aashwayuja 1, Shaka Varsha 1935)
ರಾಜ್ಯ ಚುನಾವಣಾ ಆಯೋಗ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ಕಟ್ಟಡ (ಹಿಂಭಾಗ) 1ನೇ ಮಹಡಿ, ನಂ.8, ಕನ್ನಿಂಗ್ ಹ್ಯಾಂ ರಸ್ತೆ.
ತಿದ್ದುಪಡಿ ಅಧಿಸೂಚನೆ
ಸಂಖ್ಯೆ : ರಾಚುಆ:19.ಸಿಬ್ಬಂದಿ.2013, ಬೆಂಗಳೂರು, ದಿನಾಂಕ: 23-09-2013
ಆಯೋಗದ ಅಧಿಸೂಚನೆ ಸಂಖ್ಯೆ ರಾಚುಆ.19.ಸಿಬ್ಬಂದಿ.2013 ದಿನಾಂಕ: 29-06-2013 ರಲ್ಲಿ ಶ್ರೀ ಸಿ.ಆರ್. ರೇವಣ್ಣ, ಅಧೀನ ಕಾರ್ಯದರ್ಶಿ ಇವರನ್ನು ರಾಜ್ಯ ಚುನಾವಣಾ ಆಯೋಗದ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಸದರಿಯವರಿಗೆ ಉಪ ಕಾರ್ಯದರ್ಶಿಯಾಗಿ ಪದೋನ್ನತಿ ನೀಡಿರುವುದರಿಂದ ಇವರ ಬದಲಾಗಿ ಶ್ರೀ ವೀರಭದ್ರಯ್ಯ, ಅಧೀನ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ ಇವರನ್ನು ಮಾಹಿತಿ ಹಕ್ಕು ಅಧಿನಿಯಮ 2005 ರ ಪ್ರಕರಣ 5(1) ರ ಅಡಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ನೇಮಿಸಿ ಆದೇಶಿಸಿದೆ.
ಸಿ.ಆರ್. ರೇವಣ್ಣ ಉಪ ಕಾರ್ಯದರ್ಶಿ ರಾಜ್ಯ ಚುನಾವಣಾ ಆಯೋಗ ಸರ್ಕಾರಿ ಕೇಂದ್ರ ಮುದ್ರಣಾಲಯ, ಘಟಕ-2, ಬೆಂಗಳೂರು-59