ಸಂಪುಟ ೧೪೯
Volume 149
ಬೆಂಗಳೂರು, ಗುರುವಾರ, ಏಪ್ರಿಲ್ ೩, ೨೦೧೪ (ಚೈತ್ರ ೧೩, ಶಕ ವರ್ಷ ೧೯೩೬)
Bangalore, Thursday, April 3, 2014 (Chaithra 13, Shaka Varsha 1936)
ಸಂಚಿಕೆ ೧೪
Issue 14
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಕಂದಾಯ ಸಚಿವಾಲಯ
ವಿಷಯ : ಗುಲ್ಬರ್ಗಾ ತಾಲ್ಲೂಕು, ಕುಸನೂರು ಗ್ರಾಮದ ಸ.ನಂ. 88/1ರಲ್ಲಿ 16-00 ಎಕರೆ ಜಮೀನನ್ನು ಅಂತರಾಷ್ಟ್ರೀಯ ಪಾಳಿ ಸಂಸ್ಕøತ ಮತ್ತು ತುಲನಾತ್ಮಕ ತತ್ವಶಾಸ್ತ್ರ ಟ್ರಸ್ಟ್, ಗುಲ್ಬರ್ಗಾ ಇವರಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡುವ ಬಗ್ಗೆ
ಜಿಲ್ಲಾಧಿಕಾರಿ, ಗುಲ್ಬರ್ಗಾ ಇವರ ಪತ್ರ ಸಂಖ್ಯೆ : ಕಂ/ಭೂ/ಗೃನಿ/91/1990-91, ಓದಲಾಗಿದೆ : 1)
ದಿನಾಂಕ: 04-03-2013 ಹಾಗೂ 14-02-2014
2)
ಸರ್ಕಾರದ ಪತ್ರ ಸಂಖ್ಯೆ: ಆರ್ಡಿ 23 ಎಲ್ಜಿಜಿ 92, ದಿನಾಂಕ: 13-11-1992
ಪ್ರಸ್ತಾವನೆ:
ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಪತ್ರದಲ್ಲಿ ಜಿಲ್ಲಾಧಿಕಾರಿ, ಗುಲ್ಬರ್ಗಾ ಇವರು ಗುಲ್ಬರ್ಗಾ ತಾಲ್ಲೂಕು, ಕುಸನೂರು ಗ್ರಾಮದ ಸ.ನಂ. 88/1ರಲ್ಲಿ 16-00 ಎಕರೆ ಜಮೀನನ್ನು ಅಂತರಾಷ್ಟ್ರೀಯ ಪಾಳಿ ಸಂಸ್ಕøತ ಮತ್ತು ತುಲನಾತ್ಮಕ ತತ್ವಶಾಸ್ತ್ರ ಟ್ರಸ್ಟ್, ಗುಲ್ಬರ್ಗಾ ಇವರಿಗೆ ಮಂಜೂರು ಮಾಡಲು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಜಿಲ್ಲಾಧಿಕಾರಿಗಳ ವರದಿಯಂತೆ, ಅಂತರಾಷ್ಟ್ರೀಯ ಪಾಳಿ ಸಂಸ್ಕøತ ಮತ್ತು ತುಲನಾತ್ಮಕ ಟ್ರಸ್ಟ್, ಗುಲ್ಬರ್ಗಾ ಇವರ ಟ್ರಸ್ಟ್, ಸಂಖ್ಯೆ: 444/2013-14, ದಿನಾಂಕ: 14-02-2014ರಂದು ನೋಂದಣಿಯಾಗಿದ್ದು, ಜಿಲ್ಲಾಧಿಕಾರಿ, ಗುಲ್ಬರ್ಗಾ ಹಾಗೂ ಅಪರ ಶಿಕ್ಷಣ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಗುಲ್ಬರ್ಗಾ ಇವರನ್ನು ಟ್ರಸ್ಟಿಗಳೆಂದು ನಾಮಕರಣ ಮಾಡಲಾಗಿರುತ್ತದೆ. ಪಾಳಿ ಹಾಗೂ ಸಂಸ್ಕøತದಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸುವುದು ಮತ್ತು ಪ್ರಬುದ್ಧತೆಯ ಆಧಾರದ ಮೇಲೆ ವಿಶ್ವದರ್ಜೆಯ ಸ್ವಾಯತ್ತ ವಿಶ್ವವಿದ್ಯಾಲಯವನ್ನು ಅಭಿವೃದ್ಧಿ ಪಡಿಸುವುದು ಈ ಟ್ರಸ್ಟ್ನ ಇತರೆ ಉದ್ದೇಶಗಳಲ್ಲೊಂದಾಗಿರುತ್ತದೆ. ಮುಂದುವರೆದು ಕೇಂದ್ರ ಸರ್ಕಾರದಿಂದ ಗುಲ್ಬರ್ಗಾದಲ್ಲಿ ಪಾಳಿ ಮತ್ತು ಸಂಸ್ಕøತ ಭಾಷೆಗಳ ಸಂಶೋಧನಾ ಕೇಂದ್ರ ಸ್ಥಾಪಿಸಲು ರೂ. 10-00 ಕೋಟಿ ಅನುದಾನ ಮಂಜೂರಾಗಿರುತ್ತದೆ.
ಮೇಲೆ ಕ್ರಮ ಸಂಖ್ಯೆ (2)ರ ಓದಲಾದ ಪತ್ರದಲ್ಲಿ ನೀಡಲಾದ ಸರ್ಕಾರದ ಅನುಮತಿಯಂತೆ ಜಿಲ್ಲಾಧಿಕಾರಿ, ಗುಲ್ಬರ್ಗಾ ಇವರು 1993ನೇ ಸಾಲಿನಲ್ಲಿ ಗುಲ್ಬರ್ಗಾ ತಾಲ್ಲೂಕಿನ ಕುಸನೂರು ಗ್ರಾಮದ ಸ.ನಂ. 88/1ರಲ್ಲಿ 19-30 ಎಕರೆ ಜಮೀನನ್ನು ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾ ಇವರಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ, ಪ್ರತಿ ವರ್ಷಕ್ಕೆ ರೂ. 100-00ಗಳಂತೆ ಗುತ್ತಿಗೆ ಹಣವನ್ನು ನಿಗಧಿಪಡಿಸಿ 2 ವರ್ಷಗಳಲ್ಲಿ ಉದ್ದೇಶಿತ ಜಮೀನು ಉಪಯೋಗಿಸುವ ಷರತ್ತಿಗೆ ಒಳಪಟ್ಟು ಮಂಜೂರಾತಿಯನ್ನು ನೀಡಿರುತ್ತಾರೆ. ಆದರೆ ಈವರೆವಿಗೂ ಗುಲ್ಬರ್ಗಾ ವಿಶ್ವವಿದ್ಯಾಲಯವು ಮಂಜೂರಿಸಿದ ಉದ್ದೇಶಕ್ಕಾಗಿ ಜಮೀನನ್ನು ಉಪಯೋಗಿಸದೆ ಮಂಜೂರಾತಿ ಆದೇಶದಲ್ಲಿನ ಷರತ್ತನ್ನು ಉಲ್ಲಂಘನೆ ಮಾಡಿರುವುದರಿಂದ ಸದರಿ ಜಮೀನಿನಲ್ಲಿ 16-00 ಎಕರೆ ಜಮೀನನ್ನು ಅಂತರಾಷ್ಟ್ರೀಯ ಪಾಳಿ ಸಂಸ್ಕøತ ಮತ್ತು ತುಲನಾತ್ಮಕ ತತ್ವಶಾಸ್ತ್ರ ಟ್ರಸ್ಟ್, ಗುಲ್ಬರ್ಗಾ ಇವರಿಗೆ ಗುತ್ತಿಗೆ ಆಧಾರದ ಮೇಲೆ ಜಮೀನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳು ಶಿಫಾರಸ್ಸು ಮಾಡಿರುತ್ತಾರೆ.
ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 11 ಎಲ್ಜಿಜಿ 2013, ಬೆಂಗಳೂರು, ದಿನಾಂಕ. 04ನೇ ಮಾರ್ಚ್, 2014
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಈಗಾಗಲೇ ಗುತ್ತಿಗೆ ಆಧಾರದ ಮೇಲೆ ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಗುಲ್ಬರ್ಗಾ ಜಿಲ್ಲೆ, ಗುಲ್ಬರ್ಗಾ ತಾಲ್ಲೂಕಿನ ಕುಸನೂರು ಗ್ರಾಮದ ಸ.ನಂ. 88/1ರಲ್ಲಿ 19-30 ಎಕರೆ ಜಮೀನನ್ನು ಮಂಜೂರು ಮಾಡಲಾಗಿದ್ದು, ಗುಲ್ಬರ್ಗಾ ವಿಶ್ವವಿದ್ಯಾಲಯವು
(೫೪೫)
ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ಭಾಗ ೧ ೫೪೬ಮಂಜೂರಿಸಿದ ಉದ್ದೇಶಕ್ಕಾಗಿ ಜಮೀನನ್ನು ಉಪಯೋಗಿಸದೆ ಮಂಜೂರಾತಿ ಆದೇಶದಲ್ಲಿನ ಷರತ್ತನ್ನು ಉಲ್ಲಂಘನೆ ಮಾಡಿರುವುದರಿಂದ ಸದರಿ ಜಮೀನಿನಲ್ಲಿ 16-00 ಎಕರೆ ಜಮೀನನ್ನು ಅಂತರಾಷ್ಟ್ರೀಯ ಪಾಳಿ ಸಂಸ್ಕøತ ಮತ್ತು ತುಲನಾತ್ಮಕ ತತ್ವಶಾಸ್ತ್ರ ಟ್ರಸ್ಟ್, ಗುಲ್ಬರ್ಗಾ ಇವರಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳ (1969) ನಿಯಮ 19ರನ್ವಯ 30 ವರ್ಷಗಳ ಅವಧಿಗೆ ಪ್ರಚಲಿತ ಮಾರುಕಟ್ಟೆ ಬೆಲೆಯ ಶೇ. 10ರಷ್ಟು ಗುತ್ತಿಗೆ ದರ ಹಾಗೂ ನಿಯಮಾನುಸಾರ ಇತರೆ ಶುಲ್ಕಗಳನ್ನು ವಿಧಿಸಿ, ಪ್ರತಿ ಎರಡು ವರ್ಷಗಳಿಗೊಮ್ಮೆ ಶೇ. 10ರಷ್ಟು ಗುತ್ತಿಗೆ ದರ ಹೆಚ್ಚಿಸುವ ಷರತ್ತಿನೊಂದಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿ ಆದೇಶಿಸಿದೆ.
ಷರತ್ತುಗಳು :
1. ಮಂಜೂರಾದ ಜಮೀನಿಗೆ ಸಂಸ್ಥೆಯು ಮೂರು ತಿಂಗಳ ಒಳಗೆ ಹಣವನ್ನು ಪಾವತಿಸಿ ಉದ್ದೇಶಿತ ಕಾರ್ಯಕ್ರಮಕ್ಕೆ ಜಮೀನನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದು.
2. ಮಂಜೂರಾದ ಭೂಮಿಯನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.
3. ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ.
4. ಮಂಜೂರಾದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.
5. ಮಂಜೂರು ಮಾಡಲ್ಪಡುವ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ದಾವೆಗಳು ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.
6. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ / ಉಪಗುತ್ತಿಗೆ ನೀಡುವುದಾಗಲಿ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು.
7. ಮಂಜೂರಾದ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂದಿರುಗಿಸತಕ್ಕದ್ದು.
8. ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ಧವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.
9. ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ಧವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ಈ ಮಂಜೂರಾತಿ ಆದೇಶ ತನ್ನಷ್ಟಕ್ಕೆ ತಾನೇ ರದ್ದಾಗುವುದು ಹಾಗೂ ಯಾವುದೇ ಪರಿಹಾರ ನೀಡದೇ ಮಂಜೂರಾದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು.
10. ಜಿಲ್ಲಾಧಿಕಾರಿಗಳು ಮಂಜೂರಾದ ಜಮೀನನ್ನು ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಹೆಚ್.ಜೆ. ಲಕ್ಷ್ಮೀನಾರಾಯಣ,
P.R. 278
ಸರ್ಕಾರದ ಅಧೀನ ಕಾರ್ಯದರ್ಶಿ,
SC - 25
ಕಂದಾಯ ಇಲಾಖೆ (ಭೂ-ಮಂಜೂರಾತಿ-3)
ಕಂದಾಯ ಸಚಿವಾಲಯ
ವಿಷಯ : ಮೆ|| ಕೆ.ಎನ್.ಕೆ. ಕಾರ್ಪೋರೇಷನ್ ಪ್ರೈ. ಲಿಮಿಟೆಡ್ರವರ ಯೋಜನೆಗಾಗಿ ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲ್ಲೂಕು, ಕೋಟೆಕಲ್ಲು (ಗುಳೇದಗುಡ್ಡ) ಗ್ರಾಮದಲ್ಲಿ 524-00 ಎಕರೆ ಜಮೀನನ್ನು ಕೆ.ಐ.ಎ.ಡಿ.ಬಿ.ಗೆ ಮಂಜೂರು ಮಾಡುವ ಬಗ್ಗೆ
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅದೇಶ ಸಂಖ್ಯೆ: ಸಿಐ 42 ಎಸ್ಪಿಐ 2011, ಓದಲಾಗಿದೆ : 1)
ದಿನಾಂಕ: 23-02-2011
2) ಅದೇಶ ಸಂಖ್ಯೆ: ಸಿಐ 42 ಎಸ್ಪಿಐ 2012, ದಿನಾಂಕ: 18-04-2012
3) ಜಿಲ್ಲಾಧಿಕಾರಿಗಳು, ಬಾಗಲಕೋಟೆ ಜಿಲ್ಲೆ ಇವರ ಪತ್ರ ಸಂಖ್ಯೆ: ಕಂಶಾ:ಕೆಎಲ್ಆರ್/ ಸಿಆರ್-49/13-14, ದಿನಾಂಕ: 01-08-2013
ಪ್ರಸ್ತಾವನೆ:
ಮೇಲೆ ಓದಲಾದ (1)ರ ಆದೇಶದಲ್ಲಿ, ಮೆ|| ಕೆ.ಎನ್.ಕೆ. ಕಾರ್ಪೋರೇಷನ್ ಪ್ರೈ. ಲಿಮಿಟೆಡ್ ಇವರಿಗೆ ಬಿಜಾಪುರ ಜಿಲ್ಲೆ, ಬಸವನಬಾಗೇವಾಡಿ ತಾಲ್ಲೂಕು, ಮುಳವಾಡ ಗ್ರಾಮದಲ್ಲಿ 1.2 MTPA Pellet Plant & Stainless Steel with Co-Generation of Power-35 ಸ್ಥಾಪನೆಗೆ ಅನುಮತಿ ನೀಡಲಾಗಿರುತ್ತದೆ. ತದನಂತರ ಮೇಲೆ ಓದಲಾದ (2)ರಂತೆ ಬಸವನ ಬಾಗೇವಾಡಿಯ ಮುಳವಾಡ ಗ್ರಾಮದಿಂದ ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲ್ಲೂಕು, ಕೋಟೆಕಲ್ಲು (ಗುಳೇದಗುಡ್ಡ) ಗಾಮಕ್ಕೆ ಸ್ಥಳ ಬದಲಾವಣೆಗೆ ಹಾಗೂ ಕೆ.ಐ.ಎ.ಡಿ.ಬಿ. ಮುಖಾಂತರ ರೈತರ ಒಪ್ಪಿಗೆಯೊಂದಿಗೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಪ್ರಸ್ತಾಪಿತ ಯೋಜನೆಯನ್ನು ಉನ್ನತ ಮಟ್ಟದ ಸಮಿತಿಯು ಅನುಮೋದಿಸಿರುತ್ತದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಇವರು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾಯ್ದೆ 1966ರ ಕಲಂ 28(4)ರಡಿ ಕೋಟೆಕಲ್ಲು (ಗುಳೇದಗುಡ್ಡ) ಗ್ರಾಮದಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ೫೪೭ ರಿ.ಸ.ನಂ. 95ರ ಪೈಕಿ 246 ಎಕರೆ ಹಾಗೂ ರಿ.ಸ.ನಂ. 100ಎ ಪೈಕಿ 278 ಎಕರೆ ಒಟ್ಟು 524 ಎಕರೆ ಭೂಸ್ವಾಧೀನತೆ ಕುರಿತು ಅಂತಿಮ ಅಧಿಸೂಚನೆಯನ್ನು ಹೊರಡಿಸಿರುತ್ತದೆ.
ಭೂ ಸ್ವಾಧೀನಕ್ಕೆ ಒಳಪಡಿಸಲು ಪ್ರಸ್ತಾಪಿಸಿರುವ ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲ್ಲೂಕು, ಕೋಟೆಕಲ್ಲು (ಗುಳೇದಗುಡ್ಡ) ಗಾಮದ ಸ.ನಂ. 95ರ ಪೈಕಿ 246-00 ಎಕರೆ ಹಾಗೂ ಸ.ನಂ. 100/ಎ ಪೈಕಿ 278-00 ಎಕರೆ ಒಟ್ಟು 524-00 ಎಕರೆ ಜಮೀನು ಕೇವಲ ಇಬ್ಬರ ಒಡೆತನದಲ್ಲಿರುತ್ತದೆ. ಜಿಲ್ಲಾಧಿಕಾರಿ, ಬಾಗಲಕೋಟೆ ಇವರು ಮೇಲೆ ಓದಲಾದ (3)ರ ಪತ್ರದಲ್ಲಿ ಸದರಿ ಜಮೀನುಗಳು ಮುಂಬಯಿ ಪರಗಣಾ ವತನ ಜಮೀನು ಹಾಗೂ ಖರಾಬ `ಬ' ಜಮೀನುಗಳಾಗಿದ್ದು, ಸದರಿ ಜಮೀನುಗಳಿಗೆ ಭೂ ಕಂದಾಯ ನಿಗದಿಪಡಿಸದಿರುವುದರಿಂದ ಸರ್ಕಾರದ ಜಮೀನುಗಳೆಂದು ವರದಿ ಸಲ್ಲಿಸಿರುತ್ತಾರೆ. ಈ ಮೊದಲು ಕೆ.ಐ.ಎ.ಡಿ.ಬಿ. ಪ್ರಸ್ತಾಪಿತ ಜಮೀನು ಖಾಸಗಿ ಜಮೀನೆಂದು ಒಟ್ಟು ವಿಸ್ತೀರ್ಣವನ್ನು ಸ್ವಾಧೀನಪಡಿಸಿಕೊಂಡಿದ್ದು, ಸದರಿ ಸಂಸ್ಥೆಯು ಸ್ವಾಧೀನಪಡಿಸಿಕೊಂಡ ಜಮೀನಿನ ಮೊತ್ತವನ್ನು ಕೆ.ಐ.ಎ.ಡಿ.ಬಿ.ಯು ಸೂಚಿಸಿದ ಬೆಲೆಯನ್ನು ಪಾವತಿಸಿರುತ್ತದೆ. ಸದರಿ ಜಮೀನುಗಳು ಬಾಂಬೆ ಪರಗಣ ಮತ್ತು ಕುಲಕರ್ಣಿ ವತನ (ನಿರ್ಮೂಲನ) ಕಾಯ್ದೆ 1959ರಡಿ ರೀಗ್ರಾಂಟ್ ಆಗಿರುವ ಜಮೀನೆಂದು ಈಗಾಗಲೇ ಭೂ ನ್ಯಾಯ ಮಂಡಳಿಯಲ್ಲಿ ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿ, ಇತ್ಯರ್ಥಕ್ಕೆ ಬಾಕಿ ಇರುತ್ತದೆ. ಭೂ ನ್ಯಾಯ ಮಂಡಳಿಯು ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಭಾದಿತರಾದ ಭೂ ಮಾಲೀಕರ ಅಥವಾ ಸರ್ಕಾರದ ಪರವಾಗಿ ತೀರ್ಪು ನೀಡಿದ ಸಂದರ್ಭದಲ್ಲಿ ಪರಿಹಾರ ನೀಡುವ ವಿಷಯ ಅಂತಿಮವಾಗಿ ನಿರ್ಣಯವಾಗುತ್ತದೆ.
ಮೇಲೆ ವಿವರಿಸಿದ ಸಂದರ್ಭದಲ್ಲಿ ಪರಿಶೀಲಿಸಲಾಗಿ, ಪ್ರಶ್ನಿತ ಜಮೀನುಗಳಿಗೆ ಸಂಬಂಧಿಸಿದಂತೆ ಈಗಾಗಲೇ ಕೆ.ಐ.ಎ.ಡಿ.ಬಿ.ಯು ಮೆ|| ಕೆ.ಎನ್.ಕೆ. ಕಾರ್ಪೋರೇಷನ್ ಪ್ರೈ. ಲಿ., ಇವರಿಗೆ ನೀಡುವ ಬಗ್ಗೆ ಸಮಗ್ರವಾಗಿ ಪರಿಶೀಲಿಸಲಾಗಿರುತ್ತದೆ. ಅದರಂತೆ ಈ ಕೆಳಕಂಡ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 26 ಎಲ್ಜಿಜೆ 2013, ಬೆಂಗಳೂರು, ದಿನಾಂಕ. 03ನೇ ಮಾರ್ಚ್, 2014
ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕೆ.ಐ.ಎ.ಡಿ.ಬಿ.ಯಿಂದ ಸ್ವಾಧೀನಪಡಿಸಿಕೊಳ್ಳಲಾದ ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲ್ಲೂಕು, ಕೋಟೆಕಲ್ಲು (ಗುಳೇದಗುಡ್ಡ) ಗ್ರಾಮದ ಸ.ನಂ. 95ರ ಪೈಕಿ 246-00 ಎಕರೆ ಹಾಗೂ ಸ.ನಂ. 100/ಎ ಪೈಕಿ 278-00 ಎಕರೆ ಒಟ್ಟು 524-00 ಎಕರೆ ಜಮೀನನ್ನು ಕೆ.ಐ.ಎ.ಡಿ.ಬಿ.ಯು ಮೆ|| ಕೆ.ಎನ್.ಕೆ. ಕಾರ್ಪೋರೇಷನ್ ಪ್ರೈ. ಲಿಮಿಟೆಡ್ ಇವರಿಗೆ ಈ ಕೆಳಕಂಡ ಷರತ್ತಿಗೊಳಪಡಿಸಿ ಹಸ್ತಾಂತರಿಸಲು ಸರ್ಕಾರದ ಮಂಜೂರಾತಿ ನೀಡಿದೆ.
ಷರತ್ತುಗಳು :
1. ಈ ಜಮೀನಿನ ಸಂಬಂಧ ಕೆಲವು ಹಕ್ಕುದಾರರು ಟ್ರಿಬ್ಯುನಲ್ ಮುಂದೆ ಅರ್ಜಿ ಸಲ್ಲಿಸಿದ್ದು, ಜಮೀನಿನ ಒಡೆತನದ ಪ್ರಶ್ನೆಯು ಟ್ರಿಬ್ಯುನಲ್ನಲ್ಲಿ ಅಂತಿಮವಾಗಿ ಇತ್ಯರ್ಥಗೊಳ್ಳಬೇಕಾಗಿದೆ. ಆದಕಾರಣ ಈಗಾಗಲೆ ಸಂಸ್ಥೆಯು ಕೆ.ಐ.ಎ.ಡಿ.ಬಿ.ಗೆ ಪಾವತಿಸಲಾದ ಮೊತ್ತವನ್ನು ಪರಿಗಣಿಸಿ, ಹಾಲಿ ಅನ್ವಯಿಸುವ ಭೂಸ್ವಾಧೀನ ಕಾಯ್ದೆ ಪ್ರಕಾರ ಅವಾರ್ಡ್ ರಚಿಸಿ, ಸದರಿ ಅವಾರ್ಡ್ನಂತೆ ಲಭ್ಯವಾಗುವ ಪರಿಹಾರ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಠೇವಣಿ ಮಾಡಿ, ಟ್ರಿಬ್ಯುನಲ್ ಅಂತಿಮ ಆದೇಶದನ್ವಯ ಸರ್ಕಾರಕ್ಕೆ ಅಥವಾ ಹಕ್ಕುದಾರರಿಗೆ ಪಾವತಿಸುವುದು.
2. ಕೆ.ಐ.ಎ.ಡಿ.ಬಿ.ಯು ಕಂಪನಿಗೆ ಜಮೀನು ಹಸ್ತಾಂತರಿಸುವ ಸಂದರ್ಭದಲ್ಲಿ ಉದ್ದಿಮೆಗೆ ಅವಶ್ಯವಿರುವ ಶಾಸನಬದ್ಧ ಅನುಮೋದನೆಗಳನ್ನು ಪಡೆಯುವಂತೆ ನಿರ್ದೇಶಿಸುವುದು. ಸಂಸ್ಥೆಯು ಸ್ಥಳೀಯ ಗ್ರಾಮಸ್ಥರಿಗೆ ಅಗತ್ಯವಾದ ದಾರಿಯನ್ನು (safe passage) ಒದಗಿಸತಕ್ಕದ್ದು ಹಾಗೂ ಅಸ್ತಿತ್ವದಲ್ಲಿರುವ ಬಂಡಿದಾರಿ, ನೀರಾವರಿ ಕಾಲುವೆ ಇತರೆಗಳನ್ನು ಮುಚ್ಚಬಾರದು.
3. ಮಂಜೂರಾದ ಜಮೀನಿಗೆ ಸಂಸ್ಥೆಯು ಮೂರು ತಿಂಗಳ ಒಳಗೆ ಉಳಿಕೆ ಹಣವಿದ್ದಲ್ಲಿ, ಆ ಹಣವನ್ನು ಪಾವತಿಸಿ ಉದ್ದೇಶಿತ ಕಾರ್ಯಕ್ರಮಕ್ಕೆ ಜಮೀನನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದು.
4. ಮಂಜೂರಾದ ಭೂಮಿಯನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.
5. ಮಂಜೂರು ಮಾಡಲ್ಪಡುವ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ದಾವೆಗಳು ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.
6. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ / ಉಪಗುತ್ತಿಗೆ ನೀಡುವುದಾಗಲಿ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು.
7. ಮಂಜೂರಾದ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂದಿರುಗಿಸತಕ್ಕದ್ದು. 8. ಕೆ.ಐ.ಎ.ಡಿ.ಬಿ.ಯು ಮಂಜೂರಾದ ಜಮೀನನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಹೆಚ್.ಜೆ. ಲಕ್ಷ್ಮೀನಾರಾಯಣ,
P.R. 279
ಸರ್ಕಾರದ ಅಧೀನ ಕಾರ್ಯದರ್ಶಿ,
SC - 25
ಕಂದಾಯ ಇಲಾಖೆ (ಭೂ-ಮಂಜೂರಾತಿ-3)
ಕಂದಾಯ ಸಚಿವಾಲಯ
ವಿಷಯ : ಬಳ್ಳಾರಿ ಜಿಲ್ಲೆ, ಬಳ್ಳಾರಿ ತಾಲ್ಲೂಕಿನ ಕುಡುತಿನಿ ಹಾಗೂ ಹರಗಿಣಡೋಣಿ ಗ್ರಾಮಗಳಲ್ಲಿನ ಸರ್ಕಾರಿ ಜಮೀನನ್ನು ಕೆ.ಐ.ಎ.ಡಿ.ಬಿ. ಮುಖಾಂತರ ಮೆ|| ಅರ್ಸೆಲರ್ ಮಿತ್ತಲ್ ಇಂಡಿಯಾ ಲಿಮಿಟೆಡ್ ಇವರಿಗೆ ಕೈಗಾರಿಕೆ ಉದ್ದೇಶಕ್ಕಾಗಿ ಮಂಜೂರು ಮಾಡುವ ಬಗ್ಗೆಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ಭಾಗ ೧ ೫೪೮ ಪ್ರಧಾನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಇವರ ಅರೆ ಸರ್ಕಾರಿ ಓದಲಾಗಿದೆ : 1)
ಪತ್ರದ ದಿನಾಂಕ: 24-03-2011
2)
ಜಿಲ್ಲಾಧಿಕಾರಿ, ಬಳ್ಳಾರಿ ಇವರ ಪತ್ರ ದಿನಾಂಕ: 06-10-2012 ಮತ್ತು 03-07-2013
ಪ್ರಸ್ತಾವನೆ:
ಮೆ|| ಅರ್ಸೆಲ್ಲಾರ್ ಮಿತ್ತಲ್ ಇಂಡಿಯಾ ಲಿಮಿಟೆಡ್ರವರ ಪ್ರಸ್ತಾಪಿತ ಯೋಜನೆಗಾಗಿ ಕೆ.ಐ.ಎ.ಡಿ.ಬಿಯವರು ಬಳ್ಳಾರಿ ಜಿಲ್ಲೆ, ಬಳ್ಳಾರಿ ತಾಲ್ಲೂಕಿನ ಕುಡುತಿನಿ ಹಾಗೂ ಹರಗಿಣಡೋಣಿ ಗ್ರಾಮಗಳಲ್ಲಿ 4,865-44 ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಂಡಿದ್ದು, ಇದರಲ್ಲಿ ಬಳ್ಳಾರಿ ತಾಲ್ಲೂಕಿನ ಕುಡುತಿನಿ ಗ್ರಾಮದ 194-67 ಎಕರೆ ಹಾಗೂ ಹರಗಿಣಡೋಣಿ ಗ್ರಾಮದ 69-79 ಎಕರೆ ಒಟ್ಟು 264-46 ಎಕರೆ ವಿಸ್ತೀರ್ಣದ ಜಮೀನು ಸರ್ಕಾರಿ ಜಮೀನಾಗಿರುವುದರಿಂದ ಸದರಿ ಜಮೀನುಗಳನ್ನು ಕೆ.ಐ.ಎ.ಡಿ.ಬಿ.ರವರಿಗೆ ಹಸ್ತಾಂತರಿಸುವಂತೆ ಕೋರಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಜಿಲ್ಲಾಧಿಕಾರಿ, ಬಳ್ಳಾರಿ ಇವರ ವರದಿಯನ್ನು ಪರಿಶೀಲಿಸಲಾಗಿ, ಭೂ ಸ್ವಾಧೀನಪಡಿಸಿಕೊಂಡಿರುವ ಜಮೀನಿನಲ್ಲಿ ಕೆಲವು ಅನಧಿಕೃತ ಸಾಗುವಳಿದಾರರಿದ್ದು, ನಮೂನೆ 53ರಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಕೆಲವು ಸರ್ವೆ ನಂಬರುಗಳಿಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಹೊರಡಿಸಿರುವುದಿಲ್ಲ. ಅಂತೆಯೇ ಕೆಲವೊಂದು ಸರ್ವೆ ನಂಬರ್ಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 68ರಂತೆ ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸಲು ಶಿಫಾರಸ್ಸು ಮಾಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸರ್ಕಾರಿ ಜಮೀನುಗಳನ್ನು ಮಂಜೂರಾತಿಗೆ ಪರಿಗಣಿಸಬಹುದಾದ/ಪರಿಗಣಿಸಲು ಸಾಧ್ಯವಿಲ್ಲದ ಜಮೀನುಗಳೆಂದು ವರ್ಗೀಕರಿಸಿರುತ್ತಾರೆ. ಆ ರೀತಿಯ ಜಮೀನುಗಳ ವಿವರಗಳು ಈ ಕೆಳಕಂಡಂತಿರುತ್ತದೆ.
| , | 7ಂ77/7ಃ7 ಅ* ಆ&"? | ಅ%6ಇ&% &"? | #ಈ ಉಊ &"? |
| 84ಇ | <ಠಊ | ಉಉ | |
| ಋಕಿಔ8 !ಔಕ | ಈಠಈ | ಊಊ< | ಊಈಉಠ |
| ಋಎಏ | 2ಐ@7ಒ2 | ಓಓ7ಔ0 | 2237ಔ0 |
ಮಂಜೂರಾತಿಗೆ ಪರಿಗಣಿಸಬಹುದಾದ ಇಂತಹ ಜಮೀನನ್ನು ಎಕರೆಗೆ ರೂ. 8,00,000-00 ವಿಧಿಸಿ ಮಂಜೂರು ಮಾಡಲು ಜಿಲ್ಲಾಧಿಕಾರಿಗಳು ಪ್ರಸ್ತಾಪಿಸಿರುತ್ತಾರೆ.
ಜಿಲ್ಲಾಧಿಕಾರಿಗಳು, ಬಳ್ಳಾರಿ ಇವರ ದಿನಾಂಕ: 03-07-2013ರ ವರದಿಯಲ್ಲಿ ಹೈಲೆವೆಲ್ ಕಮಿಟಿಯ ದಿನಾಂಕ: 26-06-2012 (316ನೇ ಸಭೆ) ರಂದು ನಡೆದ ಸಭೆಯಲ್ಲಿ ಕಂಪನಿಯ ಕೋರಿಕೆಯಂತೆ ಸದರಿ ಕಂಪನಿಯ ಯೋಜನೆಯನ್ನು 3000 ಎಕರೆ ವಿಸ್ತೀರ್ಣಕ್ಕೆ ಮಾತ್ರ ಸೀಮಿತಗೊಳಿಸಲಾಗಿರುತ್ತದೆಂದು ತಿಳಿಸಿರುತ್ತಾರೆ. ಆದಾಗ್ಯೂ ಈ 3000-00 ಎಕರೆ ವಿಸ್ತೀರ್ಣದ ಪೈಕಿ 2659-75 ಎಕರೆ ಜಮೀನಿನ ಸ್ವಾಧೀನತೆಯನ್ನು ನೀಡಿದ್ದು, ಇದರಲ್ಲಿ 136-33 ಎಕರೆ ಸರ್ಕಾರಿ ಜಮೀನೂ ಕೂಡ ಸೇರಿರುತ್ತದೆ. ಅದರಂತೆ 136.33 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಮಾತ್ರ ಕೆ.ಐ.ಎ.ಡಿ.ಬಿ. ಮೂಲಕ ಮೆ|| ಆರ್ಸೆಲ್ಲಾರ್ ಮಿತ್ತಲ್ ಇಂಡಿಯಾ ಲಿಮಿಟೆಡ್ರವರಿಗೆ ಹಸ್ತಾಂತರಿಸಬೇಕಾಗುತ್ತದೆ. ಕೆ.ಐ.ಎ.ಡಿ.ಬಿ.ಯವರು ಭೂಸ್ವಾಧೀನಪಡಿಸಿಕೊಂಡ ಒಟ್ಟಾರೆ ವಿಸ್ತೀರ್ಣದ ಜಮೀನನ್ನು ಕೈಗಾರಿಕಾ ಪ್ರದೇಶವನ್ನು ಘೋಷಿಸಲು ಉದ್ದೇಶಿಸಿರುವುದರಿಂದ ಒಟ್ಟಾರೆ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ಉಳಿಸಿಕೊಳ್ಳಲು ಯೋಜಿಸಿರುವುದಾಗಿ ಜಿಲ್ಲಾಧಿಕಾರಿಯವರು ತಿಳಿಸಿರುತ್ತಾರೆ.
ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 27 ಎಲ್ಜಿಇ 2011, ಬೆಂಗಳೂರು, ದಿನಾಂಕ. 04ನೇ ಮಾರ್ಚ್, 2014
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬಳ್ಳಾರಿ ಜಿಲ್ಲೆ, ಬಳ್ಳಾರಿ ತಾಲ್ಲೂಕು, ಕುಡುತಿನಿ ಗ್ರಾಮದ 181.44 ಎಕರೆ ಹಾಗೂ ಹರಗಿಣಡೋಣಿ ಗ್ರಾಮದ 39.47 ಎಕರೆ ಒಟ್ಟು 220.91 ಎಕರೆ ಸರ್ಕಾರಿ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳ (1966) ನಿಯಮ 97(4)ರಡಿ ಎಲ್ಲಾ ಗಾಯರಾಣ ಜಮೀನುಗಳನ್ನು ಗಾಯರಾಣಾ ಶೀರ್ಷಿಕೆಯಿಂದ ತಗ್ಗಿಸಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ.) ಇವರಿಗೆ ಮಂಜೂರು ಮಾಡಿ, ಈ ಜಮೀನಿನ ಪೈಕಿ 136.33 ಎಕರೆ ಜಮೀನನ್ನು ಕೆ.ಐ.ಎ.ಡಿ.ಬಿ. ಮೂಲಕ ಮೆ|| ಅರ್ಸೆಲರ್ ಮಿತ್ತಲ್ ಇಂಡಿಯಾ ಲಿಮಿಟೆಡ್ ಕಂಪನಿ ಇವರಿಗೆ ಎಕರೆ ಒಂದಕ್ಕೆ ಮಾರುಕಟ್ಟೆ ಬೆಲೆಯಾದ ರೂ. 8,00,000-00 ಹಾಗೂ ಇತರೆ ಅವಶ್ಯಕ ಶುಲ್ಕ ವಿಧಿಸಿ ಈ ಕೆಳಕಂಡ ಷರತ್ತುಗಳನ್ನು ವಿಧಿಸಿ ಮಂಜೂರು ಮಾಡಿ ಆದೇಶಿಸಿದೆ. ಕೆ.ಐ.ಎ.ಡಿ.ಬಿ.ಯು ಸದರಿ ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ಪಾವತಿಸುವುದು. ಹಾಗೂ ಸದರಿ ವಿಸ್ತೀರ್ಣದಲ್ಲಿ ಅವಶ್ಯವಿರುವ ಕಡೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ನಿಯಮ 68ರಂತೆ ಸೂಕ್ತ ವಿಧಾನ ಅನುಸರಿಸಿ ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಲಾಗಿದೆ.
ಷರತ್ತುಗಳು :
1. ಕಂಪನಿಯು ಗ್ರಾಮಸ್ಥರಿಗೆ ಅವಶ್ಯವಿರುವ ಕಡೆ ಪರ್ಯಾಯ ಸಂಪರ್ಕ ರಸ್ತೆಯನ್ನು ಕಲ್ಪಿಸಿಕೊಡತಕ್ಕದ್ದು.
2. ಸ್ವಾಧೀನಪಡಿಸಿಕೊಂಡ ಜಮೀನುಗಳ ಮಧ್ಯೆ ಬರುವ ಕುಂಟೆ ಹಾಗೂ ಹಳ್ಳಗಳನ್ನು ಸಂರಕ್ಷಿಸಿ ನಿರ್ವಹಿಸುವುದು ಹಾಗೂ ಇವುಗಳ ಸ್ವಾಭಾವಿಕ ಹರವಿಗೆ ವ್ಯತ್ಯಯ ಉಂಟಾಗದಂತೆ ಯಾವುದೇ ತಡೆಗೋಡೆಯನ್ನು ನಿರ್ಮಿಸುವಂತಿಲ್ಲ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ೫೪೯ರೂ. 8,00,000/- (ಎಂಟು ಲಕ್ಷ)ಕ್ಕಿಂತ ಹೆಚ್ಚುವರಿ ಪರಿಹಾರ ಕೊಡಬೇಕಾಗಿದ್ದಲ್ಲಿ, ಅಂತಹ ಪರಿಹಾರವನ್ನು ಮೆ|| ಆರ್ಸೆಲರ್ ಮಿತ್ತಲ್ ಇಂಡಿಯಾ ಲಿಮಿಟೆಡ್ರವರೇ ಭರಿಸಬೇಕು.
4. ಮಂಜೂರಾದ ಜಮೀನಿಗೆ ಸಂಸ್ಥೆಯು ಮೂರು ತಿಂಗಳ ಒಳಗೆ ಹಣವನ್ನು ಪಾವತಿಸಿ ಉದ್ದೇಶಿತ ಕಾರ್ಯಕ್ರಮಕ್ಕೆ ಜಮೀನನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದು.
5. ಮಂಜೂರಾದ ಭೂಮಿಯನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.
6. ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ.
7. ಮಂಜೂರಾದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.
8. ಮಂಜೂರು ಮಾಡಲ್ಪಡುವ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ದಾವೆಗಳು ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.
9. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ / ಉಪಗುತ್ತಿಗೆ ನೀಡುವುದಾಗಲಿ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು.
10. ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ಧವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿಸಿದ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.
11. ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ಧವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ಈ ಮಂಜೂರಾತಿ ಆದೇಶ ತನ್ನಷ್ಟಕ್ಕೆ ತಾನೇ ರದ್ದಾಗುವುದು ಹಾಗೂ ಯಾವುದೇ ಪರಿಹಾರ ನೀಡದೇ ಮಂಜೂರಾದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು.
12. ಕೆ.ಐ.ಎ.ಡಿ.ಬಿಯವರು ಜಮೀನನ್ನು ಕಂಪನಿಯವರಿಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.
13. ಜಿಲ್ಲಾಧಿಕಾರಿಗಳು ಜಮೀನನ್ನು ಹಸ್ತಾಂತರಿಸುವಾದ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯ ಷರತ್ತುಗಳೊಂದಿಗೆ ಪೂರಕವಾದ ಇತರೆ ಷರತ್ತುಗಳನ್ನು ವಿಧಿಸಬಹುದಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಹೆಚ್.ಜೆ. ಲಕ್ಷ್ಮೀನಾರಾಯಣ,
P.R. 280
ಸರ್ಕಾರದ ಅಧೀನ ಕಾರ್ಯದರ್ಶಿ,
SC - 100
ಕಂದಾಯ ಇಲಾಖೆ (ಭೂ-ಮಂಜೂರಾತಿ-3)
ಕಂದಾಯ ಸಚಿವಾಲಯ
ವಿಷಯ : ರಾಮನಗರ ತಾಲ್ಲೂಕು, ಬಸವನಪುರ ಗ್ರಾಮದ ಸ.ನಂ. 10ರಲ್ಲಿ 8-00 ಎಕರೆ ಬಿ-ಖರಾಬು ಜಮೀನನ್ನು ರಾಮನಗರ ಜಿಲ್ಲೆಯ ಪೊಲೀಸ್ ಘಟಕ ಸ್ಥಾಪನೆಗಾಗಿ ಮಂಜೂರು ಮಾಡುವ ಬಗ್ಗೆ
ಜಿಲ್ಲಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ ಇವರ ಪತ್ರ ಸಂಖ್ಯೆ: ರಾಜಿಕ/ಎಲ್ಎನ್ಡಿ/ ಓದಲಾಗಿದೆ : 1)
ಸಿಆರ್/780/11-12, ದಿನಾಂಕ: 14-06-2012
2)
ಅಧಿಸೂಚನೆ ಸಂಖ್ಯೆ: ಆರ್ಡಿ 672 ಎಲ್ಜಿಬಿ 2012, ದಿನಾಂಕ: 21-01-2014
ಪ್ರಸ್ತಾವನೆ:
ಮೇಲೆ ಓದಲಾದ ಪತ್ರದಲ್ಲಿ ಜಿಲ್ಲಾಧಿಕಾರಿ, ರಾಮನಗರ ಜಿಲ್ಲೆ, ರಾಮನಗರ ಇವರು ರಾಮನಗರ ತಾಲ್ಲೂಕು, ಕಸಬಾ ಹೋಬಳಿ, ಬಸವನಪುರ ಗ್ರಾಮದ ಸ.ನಂ. 10ರಲ್ಲಿ ಒಟ್ಟು ವಿಸ್ತೀರ್ಣ 47-14 ಎಕರೆ/ಗುಂಟೆ ಜಮೀನಿದ್ದು, ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡ ಸ್ಥಾಪನೆಗೆ 5-00 ಎಕರೆ, ಸ್ಮಶಾನಕ್ಕಾಗಿ 1-00 ಎಕರೆ ಜಮೀನು ಮಂಜೂರು ಮಾಡಲಾಗಿದ್ದು, ಉಳಿದ 41-12 ಎಕರೆ/ಗುಂಟೆ ಜಮೀನು ಕಂದಾಯ ದಾಖಲಾತಿಗಳಲ್ಲಿ ಖರಾಬು ಜಮೀನೆಂದು ನಮೂದಾಗಿರುತ್ತದೆ. ಸದರಿ ಜಮೀನಿನ ಮೇಲೆ ಭೂ ಮಂಜೂರಾತಿ ಕೋರಿ ನಮೂನೆ 50 ಮತ್ತು 53 ರಡಿ ಯಾರೂ ಅರ್ಜಿ ಸಲ್ಲಿಸಿರುವುದಿಲ್ಲ, ಸದರಿ ಪ್ರದೇಶವು ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 68(1)ರಡಿಯಲ್ಲಿ ಹಕ್ಕು ನಿವೃತ್ತಿಗೊಳಿಸಿ ಕಲಂ 68(5)ರಡಿಯಲ್ಲಿ ಕರ್ನಾಟಕ ಸ.ನಂ. 10ರಲ್ಲಿ ಲಭ್ಯವಿರುವ 8-00 ಎಕರೆ ಬಿ-ಖರಾಬು ಜಮೀನನ್ನು ರಾಮನಗರ ಜಿಲ್ಲಾ ಪೊಲೀಸ್ ಘಟಕಕ್ಕೆ ಮಂಜೂರು ಮಾಡಬಹುದೆಂದು ತಹಶೀಲ್ದಾರ್, ರಾಮನಗರ ಜಿಲ್ಲೆ ಇವರು ಶಿಫಾರಸ್ಸು ಮಾಡಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಪ್ರಕರಣ 68(1)ರ ಮೇರೆಗೆ ನಮೂನೆ 27ರಲ್ಲಿ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿ ಸದರಿ ಜಮೀನು ಬಿ-ಖರಾಬು ಜಮೀನಾಗಿರುವುದರಿಂದ ರಾಮನಗರ ಜಿಲ್ಲೆ ಪೊಲೀಸ್ ಘಟಕ ಸ್ಥಾಪನೆಗಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ನಿಯಮ 68(5)ರನ್ವಯ ವಿಹಿತಗೊಳಿಸಿ ಆದೇಶ ಹೊಡರಡಿಸುವಂತೆ ಕೋರಿರುತ್ತಾರೆ.
ಅದರಂತೆ ಉಲ್ಲೇಖ (2)ರನ್ವಯ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಉಲ್ಲೇಖ (2)ರಂತೆ ಅಧಿಸೂಚನೆಯನ್ನು ಹೊರಡಿಸಿರುವುದರಿಂದ, ಸದರಿಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ಭಾಗ ೧ ೫೫೦ ಜಮೀನನ್ನು ರಾಮನಗರ ಜಿಲ್ಲೆ ಪೊಲೀಸ್ ಘಟಕ ಸ್ಥಾಪನೆಗಾಗಿ ಕಾಯ್ದಿರಿಸಿ ಒಳಾಡಳಿತ ಇಲಾಖೆಗೆ ಹಸ್ತಾಂತರಿಸುವ ಸಲುವಾಗಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 672 ಎಲ್ಜಿಬಿ 2012, ಬೆಂಗಳೂರು, ದಿನಾಂಕ. 21ನೇ ಜನವರಿ, 2014
ರಾಮನಗರ ತಾಲ್ಲೂಕು, ಬಸವನಪುರ ಗ್ರಾಮದ ಸ.ನಂ. 10ರಲ್ಲಿ 8-00 ಎಕರೆ ಬಿ-ಖರಾಬು ಜಮೀನನ್ನು ರಾಮನಗರ ಜಿಲ್ಲೆಯ ಪೊಲೀಸ್ ಘಟಕ ಸ್ಥಾಪನೆಗಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 71 ರಡಿಯಲ್ಲಿ ಕಾಯ್ದಿರಿಸಿ ಒಳಾಡಳಿತ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಉಮಾದೇವಿ,
P.R. 281
ಸರ್ಕಾರದ ಅಧೀನ ಕಾರ್ಯದರ್ಶಿ,
SC - 50
ಕಂದಾಯ ಇಲಾಖೆ (ಭೂ-ಮಂಜೂರಾತಿ-1)
ಕಂದಾಯ ಸಚಿವಾಲಯ
ವಿಷಯ : ಶ್ರೀಮತಿ ಸುಭಾಷಿಣಿ ವಸಂತ್ ಕೋಂ ಲೇಟ್ ಲೆಫ್ಟಿನೆಂಟ್ ಕರ್ನಲ್ ವಸಂತ್ ಇವರಿಗೆ ಮಾಜಿ ಸೈನಿಕ ಕೋಟಾದಲ್ಲಿ ಜಮೀನು ಮಂಜೂರು ಮಾಡುವ ಬಗ್ಗೆ
ಓದಲಾಗಿದೆ : ಪ್ರಾದೇಶಿಕ ಆಯುಕ್ತರ ಪತ್ರ ಸಂಖ್ಯೆ: ಎಲ್.ಎನ್.ಡಿ./ಸಿ.ಆರ್./185/12-13, ದಿನಾಂಕ: 13-03-2013
ಪ್ರಸ್ತಾವನೆ:
ಮೇಲೆ ಓದಲಾದ ದಿನಾಂಕ: 13-03-2013ರ ಪ್ರಾದೇಶಿಕ ಆಯುಕ್ತರ ಪ್ರಸ್ತಾವನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ಕುಂದಾಣ ಹೋಬಳಿ, ಕೆಂಪತಿಮ್ಮನಹಳ್ಳಿ ಗ್ರಾಮದ ಸ.ನಂ. 25ರಲ್ಲಿ 5-00 ಎಕರೆ ಜಮೀನನ್ನು ಭಾರತೀಯ ಸೇನೆಯ ಲೆಪ್ಟಿನೆಂಟ್ ಕಮಾಂಡರ್ ವಸಂತ್ ರವರ ಪತ್ನಿ ಶ್ರೀಮತಿ ಸುಭಾಷಿಣಿ ವಸಂತರವರಿಗೆ ಸೈನಿಕ ಕೋಟಾದಡಿ ಜಮೀನು ಮಂಜೂರು ಮಾಡುವ ಬಗ್ಗೆ ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರು ತಮ್ಮ ಪತ್ರ ದಿನಾಂಕ: 30-10-2012 ಹಾಗೂ 05-03-2013 ರಂದು ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿ, ದೇವನಹಳ್ಳಿ ತಾಲ್ಲೂಕು, ಕುಂದಾಣ ಹೋಬಳಿ, ಕೆಂಪತಿಮ್ಮನಹಳ್ಳಿ ಗ್ರಾಮದ ಸ.ನಂ. 25ರಲ್ಲಿ ಒಟ್ಟು 67-09 ಎಕರೆ ಸರ್ಕಾರಿ ಗೋಮಾಳ ಜಮೀನಿದ್ದು, ಈ ಪೈಕಿ 32-20 ಎಕರೆ ಜಮೀನು ಬಗರ್ ಹುಕುಂ ಸಾಗುವಳಿದಾರರಿಗೆ ಮಂಜೂರಾಗಿರುತ್ತದೆ. ಉಳಿದಂತಹ ಜಮೀನಿನಲ್ಲಿ 5-00 ಎಕರೆ ಜಮೀನು ಬಗರ್ ಹುಕುಂ ಸಾಗುವಳಿಯಿಂದ ಮುಕ್ತವಾಗಿದ್ದು, ಈ ಜಮೀನಿನ ಮೇಲೆ ನಮೂನೆ 50 ಮತ್ತು 53ರ ಅರ್ಜಿಗಳು ಸ್ವೀಕೃತವಾಗಿರುವುದಿಲ್ಲ. ಈ ಜಮೀನಿಗೆ ಯಾವುದೇ ಗೇಣಿ ಅರ್ಜಿ ಇರುವುದಿಲ್ಲ. ಈ ಜಮೀನು ದೇವನಹಳ್ಳಿ ಪುರಸಭೆಗೆ 16 ಕಿ.ಮೀ. ದೂರದಲ್ಲಿರುವುದಲ್ಲದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 32 ಕಿ.ಮೀ.
ದೂರದಲ್ಲಿರುತ್ತದೆ. ಬೆಂಗಳೂರು ಮಹಾನಗರ ಪಾಲಿಕೆ ಸರಹದ್ದಿನಿಂದ 45 ಕಿ.ಮೀ. ದೂರದಲ್ಲಿದ್ದು, ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿಗೆ 8 ಕಿ.ಮೀ.
ದೂರದಲ್ಲಿರುತ್ತದೆ. ಈ ಜಮೀನು ಹಾಲಿ ಬಂಜರು ಜಮೀನಾಗಿದ್ದು. ಈ ಜಮೀನಿನಲ್ಲಿ ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ಕಾಯ್ದಿರಿಸಬೇಕಾದ ಮರ ಮಾಲ್ಕಿ ಕಟ್ಟಡಗಳು ಇರುವುದಿಲ್ಲ. ಸದರಿ ಗ್ರಾಮದಲ್ಲಿ 320 ರಾಸುಗಳಿದ್ದು, ಈ ರಾಸುಗಳಿಗೆ ತಕ್ಕಂತೆ ಕಡಿಮೆ ಗೋಮಾಳವಿರುತ್ತದೆ. ಆದರೂ ಈ ರಾಸುಗಳು ಮೇಯಲು ಈ ಜಮೀನಿಗೆ ಹೊಂದಿಕೊಂಡಿರುವಂತೆ ಅರಣ್ಯ ಭೂಮಿ ಇರುತ್ತದೆ. ಶ್ರೀಮತಿ ಸುಭಾಷಿಣಿ ವಸಂತ್ ಕೋಂ ಲೇಟ್ ಕರ್ನಲ್ ವಸಂತ್ ಇವರು ವಿಧವಾ ಪತ್ನಿಯಾಗಿರುವುದರಿಂದ ಭೂ ಮಂಜೂರಾತಿ ನಿಯಮಾವಳಿ, 1969ರ ನಿಯಮ 4(1)ರಂತೆ ಆದಾಯ ಮಿತಿ ಅನ್ವಯಿಸುವುದಿಲ್ಲ. ಇವರಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿ, 1969ರ ನಿಯಮ 5 ರಂತೆ ಮಂಜೂರಾತಿಗೆ ಲಭ್ಯವಿರುವ ವಿಸ್ತೀರ್ಣದಲ್ಲಿ ಶೇಕಡ 10 ರಷ್ಟು ಜಮೀನನ್ನು ಮಂಜೂರು ಮಾಡಲು ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿಗಳು ವರದಿ ಮಾಡಿರುತ್ತಾರೆಂದು ತಿಳಿಸಿರುತ್ತಾರೆ.
ಆದ್ದರಿಂದ, ಶ್ರೀಮತಿ ಸುಭಾಷಿಣಿ ವಸಂತ್ ಕೋಂ ಲೇಟ್ ಲೆಫ್ಟಿನೆಂಟ್ ಕರ್ನಲ್ ವಸಂತ್ ರವರ ಪತ್ನಿಯಾಗಿದ್ದು ಲೇಟ್ ಕರ್ನಲ್ ವಸಂತ್ ರವರು ಅಶೋಕ ಚಕ್ರ ಸನ್ಮಾನಿತರಾಗಿರುವುದರಿಂದ ಬೆಂಗಳೂರು ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ಕುಂದಾಣ ಹೋಬಳಿ, ಕೆಂಪತಿಮ್ಮನಹಳ್ಳಿ ಗ್ರಾಮದ ಸ.ನಂ. 25ರಲ್ಲಿ 5-00 ಎಕರೆ ಜಮೀನು (ಸ್ಕೆಚ್ನಲ್ಲಿ ನಮೂದಿಸಿರುವಂತೆ) ಮಂಜೂರು ಮಾಡಲು ಶಿಫಾರಸ್ಸು ಮಾಡಿರುತ್ತಾರೆ.
ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು, ಈ ಕೆಳಗಿನಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 174 ಎಲ್ಜಿಬಿ 2013, ಬೆಂಗಳೂರು, ದಿನಾಂಕ. 18ನೇ ಫೆಬ್ರವರಿ, 2014
ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರನ್ವಯ ಭೂ ಮಂಜೂರಾತಿಗೆ ಅರ್ಜಿದಾರರು ಅರ್ಹರಾಗಿದ್ದಾರೆಯೇ ಎಂಬ ಅಂಶವನ್ನು ಖಚಿತ ಪಡಿಸಿಕೊಂಡು ಹಾಗೂ ಮಂಜೂರು ಮಾಡಿರುವ ಜಮೀನು ಯಾವ ಕಾರಣಕ್ಕೂ ಪರಭಾರೆ ಮಾಡಬಾರದೆಂಬ ಷರತ್ತಿನೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ಕುಂದಾಣ ಹೋಬಳಿ, ಕೆಂಪತಿಮ್ಮನಹಳ್ಳಿ ಗ್ರಾಮದ ಸರ್ವೆ ನಂ. 25ರಲ್ಲಿನ 2-00 ಎಕರೆ ಗೋಮಾಳ ಜಮೀನನ್ನು ದಿವಂಗತ ಲೆಫ್ಟಿನೆಂಟ್ ಕರ್ನಲ್ ವಸಂತ್ ರವರ ವಿಧವಾ ಪತ್ನಿ ಶ್ರೀಮತಿ ಸುಭಾಷಿಣಿ ವಸಂತ್ ಮತ್ತು ಇವರ ಮಕ್ಕಳಾದ ಕುಮಾರಿ ರುಕ್ಮಿಣಿ ವಸಂತ್ ಹಾಗೂ ಕುಮಾರಿ ಯಶೋಧ ವಸಂತ್ರವರುಗಳಿಗೆ ಈ ಕೆಳಕಂಡ ನಿಬಂಧನೆಗಳಿಗೊಳಪಟ್ಟು ಉಚಿತವಾಗಿ ಮಂಜೂರು ಮಾಡಿದೆ.
ಷರತ್ತುಗಳು :
1. ಮಂಜೂರಾದ ಜಮೀನನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.
2. ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ. 3. ಮಂಜೂರಾದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು. 4. ಮಂಜೂರು ಮಾಡಲ್ಪಡುವ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ದಾವೆಗಳು ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ೫೫೧5. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ / ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು.
6. ಮಂಜೂರಾದ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂದಿರುಗಿಸತಕ್ಕದ್ದು. 7. ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ಧವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು.
8. ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ಧವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ಈ ಮಂಜೂರಾತಿ ಆದೇಶ ತನ್ನಷ್ಟಕ್ಕೆ ತಾನೇ ರದ್ದಾಗುವುದು ಹಾಗೂ ಯಾವುದೇ ಪರಿಹಾರ ನೀಡದೇ ಮಂಜೂರಾದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು.
9. ಜಿಲ್ಲಾಧಿಕಾರಿಗಳು ಮಂಜೂರಾದ ಜಮೀನನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.
P.R. 282
SC - 50
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಉಮಾದೇವಿ, ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂ-ಮಂಜೂರಾತಿ-1) ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ
ವಿಷಯ: 2013-14ನೇ ಸಾಲಿಗೆ ರಾಜ್ಯದಲ್ಲಿರುವ ವಿವಿಧ ನ್ಯಾಯವಾದಿಗಳ ಸಂಘಗಳಿಗೆ ಸಹಾಯಾನುದಾನ ಬಿಡುಗಡೆ
ಮಾಡುವ ಬಗ್ಗೆ ಆದೇಶ.
1. ಸರ್ಕಾರದ ಆದೇಶ ಸಂಖ್ಯೆ : ಲಾ 32 ಎಲ್ಸಿಎಲ್ 1982 ದಿನಾಂಕ 17/18-03-1983 ಮತ್ತು
ಓದಲಾಗಿದೆ:
ತಿದ್ದುಪಡಿ ದಿನಾಂಕ 30-10-1996ರ ಅಧಿಸೂಚನೆ ಸಂಖ್ಯೆ : ಲಾ 112 ಎಲ್ಸಿಎಲ್ 1996.
2. ನಿಯಮಗಳ ತಿದ್ದುಪಡಿ ಅಧಿಸೂಚನೆ ಸಂಖ್ಯೆ : ಲಾ 120 ಎಲ್ಸಿಎಲ್ 2007,
ದಿನಾಂಕ 18.02.2008 ಮತ್ತು ಸೇರ್ಪಡೆ ದಿನಾಂಕ 16-05-2008.
3. ದಿನಾಂಕ 07-01-2014ರ ಸರ್ಕಾರಿ ಆದೇಶ ಸಂಖ್ಯೆ : ಲಾ 104 ಎಲ್ಸಿಎಲ್ 2013.
ಪ್ರಸ್ತಾವನೆ:
ರಾಜ್ಯದಲ್ಲಿರುವ ವಿವಿಧ ವಕೀಲರುಗಳ ಸಂಘಗಳಿಗೆ ಕಾನೂನು ಪುಸ್ತಕ ಮತ್ತು ಪೀಠೋಪಕರಣಗಳನ್ನು ಖರೀದಿಸಲು ದಿ ಕರ್ನಾಟಕ ಗ್ರಾಂಟ್- ಇನ್-ಎಡ್-ಟು-ಬಾರ್ ಅಸೋಸಿಯೇಷನ್ ರೂಲ್ಸ್ 1983 ನ್ನು ಮೇಲೆ ಓದಲಾದ ಕ್ರಮಾಂಕ (1)ರ ದಿನಾಂಕ 17/18-03-1983ರಲ್ಲಿ ರಚಿಸಲಾಗಿದೆ ಮತ್ತು ಇದಕ್ಕೆ ಹಂತ ಹಂತವಾಗಿ ತಿದ್ದುಪಡಿ ತರಲಾಗಿದ್ದು, ದಿನಾಂಕ 30-10-1996 ಅಧಿಸೂಚನೆಯಲ್ಲಿ ಆಯಾ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದೆ.
ಮೇಲೆ (2)ರಲ್ಲಿ ಓದಲಾದ ಅಧಿಸೂಚನೆ ದಿನಾಂಕ 18-02-2008 ಮತ್ತು ಸೇರ್ಪಡೆ ದಿನಾಂಕ 16-05-2008ರನ್ವಯ ಸಹಾಯಾನುದಾನದ ಮೊತ್ತವನ್ನು ಹೆಚ್ಚಿಸಿದ ಕರ್ನಾಟಕ ವಕೀಲರ ಸಂಘಗಳಿಗೆ ಸಹಾಯಾನುದಾನ (ತಿದ್ದುಪಡಿ) ನಿಯಮಗಳು 2007 ದಿನಾಂಕ 18-02-2008 ರಿಂದ ಜಾರಿಗೆ ಬಂದಿದೆ.
ದಿನಾಂಕ 07-01-2014ರ ಆದೇಶದಲ್ಲಿ ಪ್ರಥಮ ಹಂತವಾಗಿ 10.45 ಲಕ್ಷ ರೂ.ಗಳನ್ನು 09 ಜಿಲ್ಲೆಗಳಿಗೆ ಮೇಲೆ ಓದಲಾದ (3)ರ ಆದೇಶದಲ್ಲಿ ಬಿಡುಗಡೆ ಮಾಡಲಾಗಿದೆ.
ಎರಡನೇ ಹಂತದಲ್ಲಿ 11 ಜಿಲ್ಲೆಗಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಜಿಲ್ಲೆಯ ಹಾಗೂ ಅವರ ಅಧಿಕಾರ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕು ಸಂಘಗಳ ಪ್ರಸ್ತಾವನೆ ಹಾಗೂ 2011-12ರ ಹಣ ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸಿರುತ್ತಾರೆ. ಅದನ್ನು ಪರಿಶೀಲಿಸಿ ನಿಗದಿಯಾಗಿರುವ ರೂ. 56.00 ಲಕ್ಷಗಳಲ್ಲಿ ಸದರಿ ಜಿಲ್ಲೆ ಹಾಗೂ ತಾಲ್ಲೂಕು ವಕೀಲರ ಸಂಘಗಳಿಗೆ ಹಂಚಿಕೆ ಮಾಡಲು ಸರ್ಕಾರವು ನಿರ್ಧರಿಸಿದೆ. ಅದರಂತೆ ಕೆಳಕಂಡ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಲಾ 104 ಎಲ್ಸಿಎಲ್ 2013, ಬೆಂಗಳೂರು, ದಿನಾಂಕ: 01-02-2014
ಪ್ರಸ್ತಾವನೆಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ ಕರ್ನಾಟಕ ರಾಜ್ಯದಲ್ಲಿನ ವಕೀಲರ ಸಂಘಗಳಿಗೆ ಸಹಾಯಾನುದಾನ ನಿಯಮಗಳು 1983 ಹಾಗೂ ನಂತರದ ತಿದ್ದುಪಡಿ ನಿಯಮಗಳನ್ವಯ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿರುವ ಈ ಕೆಳಕಂಡ ವಕೀಲರ ಸಂಘಗಳಿಗೆ ರೂ. 15.95 ಲಕ್ಷ (ಹದಿನೈದು ಲಕ್ಷದ ತೊಂಬತ್ತೈದು ಸಾವಿರ ಮಾತ್ರ) ಸಹಾಯಾನುದಾನವನ್ನು 2013-14ನೇ ಸಾಲಿಗೆ ಬಿಡುಗಡೆ ಮಾಡಲು ಸರ್ಕಾರದ ಮಂಜೂರಾತಿ ನೀಡಲಾಗಿದೆ.
| 6.ಖಿ"#'-. | ಃಈಈ#ಈ | |
| ; | ಛಿ!ಜ ಎ!3ಐ 8; | ಠk |
| <; | ಛಿ!ಜ ಋ!3=7 | kk |
| ಊ; | ಛಿ!ಜ \[(=7 | k |
| ಉ; | ಛಿ!ಜ ಅಓ=7 | < ಠ |
| k; | ಛಿ!ಜ ಔ=7 | ಊk |
| ; | ಛಿ!ಜ ಓ =7 | ಊk |
| ಠ; | ಛಿ!ಜ =7 | ಈ |
| ; | ಛಿ!ಜ 9ಓಗಿ3=7 | kk |
| ಈ; | ಛಿ!ಜ ^8ಚಿ=7 | ಠk |
| ಛಿ!ಜ ಅ !ರ=7 | kk | |
| ; | ಛಿ!ಜ h =7 | ಊk |
| ಋಎಏ | 70ಓ5ಔಓ5333ಗಖ |
ಎಲ್ಲಾ ವಿಭಾಗೀಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಕೀಲರ ಸಂಘಗಳಿಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳು ಅಂದರೆ ಆಯಾ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು/ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರುಗಳು ಈ ಆದೇಶದಲ್ಲಿ ಬಿಡುಗಡೆ ಮಾಡಲಾದ ಸಹಾಯಾನುದಾನವನ್ನು ಆಯಾ ವಕೀಲರ ಸಂಘಗಳಿಂದ ವರದಿಯೊಂದಿಗೆ ಅರ್ಜಿಗಳನ್ನು ಪಡೆದು ಪರಿಶೀಲಿಸಿ ಈ ಕೆಳಗೆ ನಿಗದಿಪಡಿಸಲಾಗಿರುವಂತೆ
ತಾಲ್ಲೂಕು ಮಟ್ಟದ ವಕೀಲರ ಸಂಘ - ರೂ. 20,000
ಜಿಲ್ಲಾ ಮಟ್ಟದ ವಕೀಲರ ಸಂಘ - ರೂ. 35,000
ಬೆಂಗಳೂರು ವಕೀಲರ ಸಂಘ - ರೂ. 1,25,000
ಮಂಜೂರು ಮಾಡಬಹುದು ಮತ್ತು ಆರ್ಥಿಕ ಇಲಾಖೆಯು ಆಗಿಂದಾಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ನಿಗದಿತ ಕಾಲಮಿತಿಯೊಳಗೆ ಸಂಬಂಧಪಟ್ಟ ಖಜಾನೆಗಳಿಗೆ ಬಿಲ್ಗಳನ್ನು ಸಲ್ಲಿಸಿ ಹಣ ಪಡೆಯತಕ್ಕದ್ದು.
ಪ್ರಮಾಣ ಪತ್ರವನ್ನು ಸಲ್ಲಿಸದೇ ಇರುವ ವಕೀಲರುಗಳ ಸಂಘಗಳಿಂದ ಉಪಯೋಗಿತ ಪ್ರಮಾಣ ಪತ್ರ ಪಡೆದು, ಪ್ರಸಕ್ತ ಸಾಲಿನ ಸಹಾಯಾನುದಾನ ಬಿಡುಗಡೆ ಮಾಡುವ ಷರತ್ತಿಗೆ ಈ ಆದೇಶ ಒಳಪಟ್ಟಿದೆ.
ಪ್ರಸಕ್ತ ಆರ್ಥಿಕ ವರ್ಷದ ನಂತರ ಆ ಸಾಲಿನ ಅನುದಾನ ಬಿಡುಗಡೆಗಾಗಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗದು. ಆರ್ಥಿಕ ವರ್ಷ ಮುಗಿದ ಕೂಡಲೇ ಈ ಉದ್ದೇಶಕ್ಕಾಗಿ ಸಕ್ಷಮ ಪ್ರಾಧಿಕಾರಿಗಳು ಬಿಡುಗಡೆ ಮಾಡಿದ ಮತ್ತು ಆದ್ಯರ್ಪಣೆ ಮಾಡಿದ ವಿವರಗಳನ್ನು ಸರ್ಕಾರಕ್ಕೆ ತಪ್ಪದೇ ಸಲ್ಲಿಸುವುದು.
ಈ ಸಹಾಯಾನುದಾನವನ್ನು ಅಡ್ವೊಕೇಟ್ ಜನರಲ್ ರವರ ಮೂಲಕ ಲೆಕ್ಕ ಶೀರ್ಷಿಕೆ 2014-00-114-0-01-059 ಇತರೆ ಖರ್ಚು (ಯೋಜನೇತರ) ಅಡಿಯಲ್ಲಿ ಒದಗಿಸಿರುವ 2013-14ನೇ ಸಾಲಿನ ಅನುದಾನದಿಂದ ಭರಿಸತಕ್ಕದ್ದು.
ಈ ಆದೇಶವನ್ನು ಕಾನೂನು ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರರ ಟಿಪ್ಪಣಿ ಸಂಖ್ಯೆ : ವನಇ 56 ಆಂಆಬಿ 2014 ದಿನಾಂಕ 23-01-2014 ರಲ್ಲಿ ನೀಡಲಾಗಿರುವ ಸಹಮತಿಯನ್ವಯ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಎಸ್. ಜಯರಾಮು,
ಸರ್ಕಾರದ ಅಧೀನ ಕಾರ್ಯದರ್ಶಿಗಳು (ಆಡಳಿತ-2), PR. 243
ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ.
SC. 25
ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ
ವಿಷಯ: ಬಳ್ಳಾರಿ ಜಿಲ್ಲೆ ಹೊಸಪೇಟೆ ಕಂದಾಯ ತಾಲ್ಲೂಕಿಗೆ ಒಂದು ನೋಟರಿ ಹುದ್ದೆ ತುಂಬುವ ಬಗ್ಗೆ.
(ಶ್ರೀ ಬಿ.ನಾಗರಾಜಶೆಟ್ಟಿ ಇವರ ರಾಜೀನಾಮೆಯಿಂದ ತೆರವಾದ ಹುದ್ದೆ)
1. ಸರ್ಕಾರದ ಆದೇಶ ಸಂಖ್ಯೆ : ಲಾ 83 ಎಲ್ಸಿಎಲ್ 2012, ದಿನಾಂಕ 24-08-2012.
ಓದಲಾಗಿದೆ:
2. ಸರ್ಕಾರದ ಪತ್ರ ಸಂಖ್ಯೆ : ಲಾ 208 ಎಲ್ಸಿಎಲ್ 2010, ದಿನಾಂಕ 12-10-2012.
3. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬಳ್ಳಾರಿ ಜಿಲ್ಲೆ, ದಿನಾಂಕ 03-07-2013.
4. ನೋಟರಿಗಳ ತಿದ್ದುಪಡಿ ನಿಯಮಗಳು 2009ರ ಅಧಿಸೂಚನೆ ಸಂಖ್ಯೆ : ಜಿಎಸ್ಆರ್ 114(ಎ)
ದಿನಾಂಕ 24-02-2009.
5. ಸಂದರ್ಶನ ಮಂಡಳಿ ರಚನೆ ಅಧಿಸೂಚನೆ ಸಂಖ್ಯೆ : ಲಾ 61 ಎಲ್ಸಿಎಲ್ 2009,
ದಿನಾಂಕ 24-7-2010 ಮತ್ತು ಲಾ 53 ಎಲ್ಸಿಎಲ್ 2013, ದಿನಾಂಕ 23-7-2013.
6. ಸಂದರ್ಶನ ಸೂಚನಾ ಪತ್ರ ಸಂಖ್ಯೆ : ಲಾ 208 ಎಲ್ಸಿಎಲ್ 2012, ದಿನಾಂಕ 28-09-2013.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ೫೫೩ಪ್ರಸ್ತಾವನೆ:
ಮೇಲೆ ಓದಲಾದ (1)ರ ದಿನಾಂಕ 24-8-2012ರ ಸರ್ಕಾರದ ಆದೇಶದಲ್ಲಿ ಶ್ರೀ ಬಿ.ನಾಗರಾಜಶೆಟ್ಟಿ, ನೋಟರಿ ಇವರ ರಾಜೀನಾಮೆಯನ್ನು ಅಂಗೀಕರಿಸಲಾಗಿದ್ದು, ಸದರಿಯವರ ರಾಜೀನಾಮೆಯಿಂದ ತೆರವಾದ ಹುದ್ದೆಯನ್ನು, ಓದಲಾದ (2)ರ ಪತ್ರದಲ್ಲಿ ಸದರಿ ಹುದ್ದೆಯನ್ನು ಭರ್ತಿ ಮಾಡಲು ಸ್ಥಳೀಯರಿಂದ ಅರ್ಜಿಗಳನ್ನು ಆಹ್ವಾನಿಸಿ ನೋಟರಿಗಳ ಅಧಿನಿಯಮ/ನಿಯಮಗಳು ಹಾಗೂ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತು) ನಿಯಮಗಳು 1977ರ ನಿಯಮ 12 ರಡಿಯಲ್ಲಿ ಪರಿಶೀಲಿಸಿ ಸೂಕ್ತ ಪ್ರಸ್ತಾವನೆಯನ್ನು ಕಳುಹಿಸಿಕೊಡುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬಳ್ಳಾರಿ ಜಿಲ್ಲೆ ಇವರನ್ನು ದಿನಾಂಕ 12-10-2012 ರಂದು ಕೋರಲಾಗಿತ್ತು.
ಅದರಂತೆ ಮೇಲೆ ಓದಲಾದ (3)ರಲ್ಲಿ ದಿನಾಂಕ 30-07-2013ರ ಪ್ರಸ್ತಾವನೆಯೊಂದಿಗೆ 27 ಜನರ ಮೆಮೋರಿಯಲ್ಸ್ಗಳನ್ನೊಳಗೊಂಡ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಆ ಪ್ರಸ್ತಾವನೆಯನ್ನು ಮೇಲೆ ಓದಲಾದ (4)ರಲ್ಲಿ ನೋಟರಿಗಳ ತಿದ್ದುಪಡಿ ನಿಯಮಗಳು 2009ರನ್ವಯ ಕರ್ನಾಟಕ ರಾಜ್ಯದಿಂದ ನೋಟರಿಗಳ ನೇಮಕಕ್ಕಾಗಿ ಮೇಲೆ ಓದಲಾದ (5)ರ ಅಧಿಸೂಚನೆಗಳಲ್ಲಿ ರಚಿಸಲಾಗಿರುವ ಸಂದರ್ಶನ ಮಂಡಳಿಯ ಪರಿಶೀಲನೆಗೆ ಕಳುಹಿಸಿ ಎಲ್ಲಾ ಅಭ್ಯರ್ಥಿಗಳನ್ನು ಸಂದರ್ಶನ ಮಂಡಳಿಯ ಮುಂದೆ ಸಂದರ್ಶನಕ್ಕೆ ಹಾಜರಾಗುವಂತೆ ಮೇಲೆ ಓದಲಾದ (6)ರ ದಿನಾಂಕ 28-09-2013 ರಲ್ಲಿ ಸಂದರ್ಶನ ಸೂಚನಾ ಪತ್ರದಲ್ಲಿ ಸೂಚಿಸಲಾಗಿತ್ತು. ಅದರಂತೆ, ಸಂದರ್ಶನ ಮಂಡಳಿಯು ಸಂದರ್ಶನ ನಡೆಸಿ ವರದಿ ಸಲ್ಲಿಸಿದೆ.
ಸಂದರ್ಶನ ಮಂಡಳಿಯ ಶಿಫಾರಸ್ಸನ್ನು ಸರ್ಕಾರವು ಪರಿಗಣಿಸಿದೆ. ಅದರಂತೆ ಈ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಲಾ 208 ಎಲ್ಸಿಎಲ್ 2012, ಬೆಂಗಳೂರು, ದಿನಾಂಕ: 05-02-2014
ನೋಟರಿಗಳ ಅಧಿನಿಯಮ, 1952 ಹಾಗೂ ಇದರ ಅಡಿಯಲ್ಲಿ ರಚಿಸಲಾಗಿರುವ ನೋಟರಿಗಳ ನಿಯಮಗಳು, 1956 ಹಾಗೂ ನಂತರದ ತಿದ್ದುಪಡಿ ನಿಯಮಗಳನ್ವಯ ಪರಿಶೀಲಿಸಿ, ನಿಯಮ 8(1)ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಶ್ರೀ ಚಂದ್ರಶೇಖರ್ ಪಿ. ಯಲಗೋಡ, ವಕೀಲರು, ಸನ್ ಆಫ್ ಲೇಟ್ ಪರಮಾನಂದ ಸಿ. ಯಲಗೋಡ, ನೂರು ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯ ಪಕ್ಕ, ಎಂ.ಜೆ.ನಗರ್, ಹೊಸಪೇಟೆ, ಬಳ್ಳಾರಿ ಜಿಲ್ಲೆ ಇವರನ್ನು ವೃತ್ತಿ ಪ್ರಮಾಣ ಪತ್ರ ನೀಡಲಾದ ದಿನಾಂಕದಿಂದ ಐದು ವರ್ಷಗಳ ಅವಧಿಗೆ ಹೊಸಪೇಟೆ ಕಂದಾಯ ತಾಲ್ಲೂಕಿನ ನೋಟರಿಯನ್ನಾಗಿ ನೇಮಿಸಿದೆ.
ಸದರಿ ವಕೀಲರು ಲೆಕ್ಕ ಶೀರ್ಷಿಕೆ 0070-ಇತರೆ ಆಡಳಿತಾತ್ಮಕ ಸೇವೆಗಳು-01-ನ್ಯಾಯ ಪರಿಪಾಲನೆ-501-0-ಇತರೆ ಸ್ವೀಕೃತಿಗಳು-06 ಇತರೆ ಬಾಬ್ತುಗಳಿಗೆ (0070-01-501-0-06) ನೋಟರಿ ನಿಯಮಗಳಲ್ಲಿ ನಿಗದಿಪಡಿಸಲಾದ ರೂ.1000-00 (ಒಂದು ಸಾವಿರಗಳು ಮಾತ್ರ) ಶುಲ್ಕವನ್ನು ಸರ್ಕಾರಿ ಖಜಾನೆಯಲ್ಲಿ ಜಮಾ ಮಾಡಿ ಆ ಬಗೆಗಿನ ಮೂಲ ಚಲನ್ ಮತ್ತು ಹುಟ್ಟಿದ ದಿನಾಂಕವನ್ನು ದೃಡೀಕರಿಸಬಲ್ಲ ದಾಖಲೆಯನ್ನು ಹಾಜರುಪಡಿಸಿದ ನಂತರ ಅವರಿಗೆ ವೃತ್ತಿ ಪ್ರಮಾಣಪತ್ರ ನೀಡಲಾಗುವುದು.
ವೃತ್ತಿ ಪ್ರಮಾಣ ಪತ್ರ ನೀಡಿದ ನಂತರ ಶ್ರೀಯುತರ ಹೆಸರನ್ನು ನೋಟರಿ ಅಧಿನಿಯಮ, 1952ರ ಕಲಂ 4ನೇ ಪ್ರಕರಣದಡಿ ಸರ್ಕಾರ ನಿರ್ವಹಿಸುತ್ತಿರುವ ಪಟ್ಟಿಯಲ್ಲಿ ನಮೂದಿಸಲಾಗುವುದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಎಸ್. ಜಯರಾಮು,
PR. 244
ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-2), SC. 25
ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ.
ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ
ವಿಷಯ: ಕರ್ನಾಟಕ ರಾಜ್ಯ ವಕೀಲರ ಕಲ್ಯಾಣ ನಿಧಿಗೆ 2013-14ನೇ ಸಾಲಿನಲ್ಲಿ ಅನುದಾನ ಬಿಡುಗಡೆ ಮಾಡುವ
ಕುರಿತು.
ಓದಲಾಗಿದೆ:
1. ಸರ್ಕಾರದ ಆದೇಶ ಸಂಖ್ಯೆ : ಲಾ 35 ಎಲ್ಎಎಂ 2013, ದಿನಾಂಕ 18-03-2013. 2. ಸರ್ಕಾರದ ಆದೇಶ ಸಂಖ್ಯೆ : ಲಾ 83 ಎಲ್ಸಿಎಲ್ 2013, ದಿನಾಂಕ 14-11-2013. 3. ಅಧ್ಯಕ್ಷರು, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಇವರ ಪತ್ರ ದಿನಾಂಕ 31-01-2014.
ಪ್ರಸ್ತಾವನೆ:
ಕರ್ನಾಟಕ ರಾಜ್ಯ ವಕೀಲರ ಕ್ಷೇಮಾಭಿವೃದ್ಧಿ ನಿಧಿಗೆ 2013-14ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 2014-00-114-0-03 (ಯೋಜನೆ)ಯಡಿ ರೂ.200 ಲಕ್ಷ ಆಯವ್ಯಯ ಅವಕಾಶವಿದ್ದು ಮುಂದುವರಿದ ಯೋಜನೆಯಡಿ ಸದರಿ ಯೋಜನೆಯನ್ನು ಮುಂದುವರಿಸಲು ಮೇಲೆ (1)ರಲ್ಲಿ ಓದಲಾದ ದಿನಾಂಕ 18.03.2013ರ ಆದೇಶದಲ್ಲಿ ಮಂಜೂರಾತಿ ನೀಡಿದೆ.
ಮೇಲೆ (2)ರಲ್ಲಿ ಓದಲಾದ ದಿನಾಂಕ 14-11-2013ರ ಆದೇಶದಲ್ಲಿ ಕರ್ನಾಟಕ ರಾಜ್ಯ ವಕೀಲರ ಕ್ಷೇಮಾಭಿವೃದ್ಧಿ ನಿಧಿಗೆ ಪ್ರಥಮ ಕಂತಾಗಿ ರೂ.100.00 ಲಕ್ಷಗಳನ್ನು ಬಿಡುಗಡೆ ಮಾಡಿದೆ.
ಮೇಲೆ (3)ರಲ್ಲಿ ಓದಲಾದ ದಿನಾಂಕ 31-01-2014ರ ಪತ್ರದಲ್ಲಿ ಅಧ್ಯಕ್ಷರು, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಇವರು ವಕೀಲರ ಕ್ಷೇಮಾಭಿವೃದ್ಧಿ ನಿಧಿಗಾಗಿ ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಿರುತ್ತಾರೆ. ಮೇಲ್ಕಂಡ ಯೋಜನೆಯಡಿ ಒದಗಿಸಿರುವ ಅನುದಾನದಲ್ಲಿ ಉಳಿಕೆಯಾದ ರೂ.
100.00 ಲಕ್ಷಗಳನ್ನು ಬಿಡುಗಡೆ ಮಾಡಲು ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ: ಲಾ 83 ಎಲ್ಸಿಎಲ್ 2013, ಬೆಂಗಳೂರು, ದಿನಾಂಕ: 15-02-2014
ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ಭಾಗ ೧ ೫೫೪ಪ್ರಸ್ತಾವನೆಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ ಕರ್ನಾಟಕ ರಾಜ್ಯ ವಕೀಲರ ಕಲ್ಯಾಣ ನಿಧಿಗೆ 2013-14ನೇ ಸಾಲಿನ ಪರಿಷ್ಕøತ ಆಯವ್ಯಯ ಲೆಕ್ಕ ಶೀರ್ಷಿಕೆ 2014-00-114-0-03 (ಯೋಜನೆ) ವಕೀಲರ ಕಲ್ಯಾಣ ನಿಧಿ ಅಡಿಯಲ್ಲಿ ಒದಗಿಸಿರುವ ರೂ. 200.00 ಲಕ್ಷಗಳ ಅನುದಾನದಲ್ಲಿ ಉಳಿದ ಅನುದಾನ ರೂ. 100.00 ಲಕ್ಷಗಳನ್ನು (ರೂಪಾಯಿ ನೂರು ಲಕ್ಷಗಳು ಮಾತ್ರ) ಬಿಡುಗಡೆ ಮಾಡಲು ಸರ್ಕಾರದ ಮಂಜೂರಾತಿ ನೀಡಲಾಗಿದೆ.
ಈ ಹಣವನ್ನು ವಕೀಲರ ಸಂಘಗಳಿಗೆ ಸಹಾಯಾನುದಾನ ನಿಯಮಾವಳಿಯಲ್ಲಿ ಸ್ಪಷ್ಟಪಡಿಸಿರುವಂತೆ ವಕೀಲರ ಪರಿಷತ್ತು, ಅಡ್ವೊಕೇಟ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯರವರಿಗೆ ಬಿಲ್ಲನ್ನು ಸಲ್ಲಿಸಿ ಹಣ ಪಾವತಿಸಿಕೊಳ್ಳಬಹುದಾಗಿರುತ್ತದೆ.
1) ಅನುದಾನವನ್ನು ಯಾವ ಉದ್ದೇಶಕ್ಕಾಗಿ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಬಳಸತಕ್ಕದ್ದು.
2) ಬಿಡುಗಡೆ ಮಾಡಲಾದ ರೂ. 100 ಲಕ್ಷಕ್ಕೆ ಹಣ ಬಳಕೆ ಪ್ರಮಾಣ ಪತ್ರವನ್ನು ಕರ್ನಾಟಕ ರಾಜ್ಯ ವಕೀಲರ
ಪರಿಷತ್ತು ಬೆಂಗಳೂರುರವರು ಅಂಕಿ-ಅಂಶಗಳ ಸಹಿತ ಕಾಲಮಿತಿಯೊಳಗೆ ನಿಯಮಾನುಸಾರ ಅಡ್ವೋಕೇಟ್
ಜನರಲ್ ರವರ ಮೇಲು ರುಜು ಪಡೆದು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
ಈ ಆದೇಶವನ್ನು ಆಂತರಿಕ ಆರ್ಥಿಕ ಸಲಹೆಗಾರರ ಟಿಪ್ಪಣಿ ಸಂಖ್ಯೆ : ವನಇ 83 ಆಂಆಬಿ 2014 ದಿನಾಂಕ 06-02-2014 ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಎಸ್. ಜಯರಾಮು,
ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-2), PR. 245
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ.
SC. 15
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ
ವಿಷಯ: ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡುವ ಬಗ್ಗೆ.
ಓದಲಾಗಿದೆ:
1. ಸರ್ಕಾರಿ ಆದೇಶ ಸಂಖ್ಯೆ : ಯೋಇ 44 ಯೋವಿವಿ 2013, ದಿನಾಂಕ 27-05-2013. 2. ಸರ್ಕಾರಿ ಆದೇಶ ಸಂಖ್ಯೆ : ಯೋಇ 44 ಯೋವಿವಿ 2013, ದಿನಾಂಕ 28-05-2013. 3. ಸರ್ಕಾರಿ ಆದೇಶ ಸಂಖ್ಯೆ : ಯೋಇ 44 ಯೋವಿವಿ 2013, ದಿನಾಂಕ 10-07-2013. 4. ಸರ್ಕಾರಿ ಆದೇಶ ಸಂಖ್ಯೆ : ಯೋಇ 44 ಯೋವಿವಿ 2013, ದಿನಾಂಕ 26-12-2013. 5. ಸರ್ಕಾರಿ ಆದೇಶ ಸಂಖ್ಯೆ : ಯೋಇ 44 ಯೋವಿವಿ 2013, ದಿನಾಂಕ 07-01-2014. 6. ಸರ್ಕಾರಿ ಆದೇಶ ಸಂಖ್ಯೆ : ಯೋಇ 44 ಯೋವಿವಿ 2013, ದಿನಾಂಕ 16-01-2014.
ಪ್ರಸ್ತಾವನೆ:
ಮೇಲೆ ಓದಲಾದ ಕ್ರಮ ಸಂಖ್ಯೆ (1) ರಿಂದ (6)ರ ಸರ್ಕಾರಿ ಆದೇಶಗಳಲ್ಲಿ ಜಿಲ್ಲಾ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಮತ್ತು 20 ಅಂಶಗಳ/15 ಅಂಶಗಳ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಪಡಿಸುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶಿಸಲಾಗಿತ್ತು.
ಪ್ರಸ್ತುತ ಶ್ರೀ ದಿನೇಶ್ ಗುಂಡೂರಾವ್, ಮಾನ್ಯ ಆಹಾರ ಮತ್ತು ನಾಗರೀಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು, ಇವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಹಾಗೂ ಧಾರವಾಡ ಜಿಲ್ಲೆಯ ಹೆಚ್ಚುವರಿ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿತ್ತು.
ಶ್ರೀ ರೋಷನ್ ಬೇಗ್, ಮಾನ್ಯ ಮೂಲಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಹಜ್ ಸಚಿವರು, ಇವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲು ಸರ್ಕಾರವು ನಿರ್ಧರಿಸಿ ಅದರಂತೆ ಕೆಳಕಂಡ ಆದೇಶ ಹೊರಡಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಯೋಇ 44 ಯೋವಿವಿ 2013, ಬೆಂಗಳೂರು, ದಿನಾಂಕ: 25-02-2014
ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಮತ್ತು 20 ಅಂಶಗಳ/15 ಅಂಶಗಳ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರೀ ರೋಷನ್ ಬೇಗ್, ಮಾನ್ಯ ಮೂಲಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಹಜ್ ಸಚಿವರು, ಇವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಸ್. ಉಮಾವತಿ,
ಸರ್ಕಾರದ ಅಧೀನ ಕಾರ್ಯದರ್ಶಿ- 1 ಮತ್ತು 2 PR. 246
ಯೋಜನೆ, ಕಾರ್ಯಕ್ರಮ ಸಂಯೋಜನೆ SC. 100
ಮತ್ತು ಸಾಂಖ್ಯಿಕ ಇಲಾಖೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ೫೫೫ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ
ವಿಷಯ: ಶ್ರೀ ಎ.ಜಿ. ಜೋಷಿ, ಉಪ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ (ಸದ್ಯ
ಅಮಾನತ್ತಿಲ್ಲಿರುತ್ತಾರೆ), ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ಮತ್ತು
ಮಂಡನಾಧಿಕಾರಿಯನ್ನು ನೇಮಿಸುವ ಕುರಿತು.
ಓದಲಾಗಿದೆ:
1. ಸರ್ಕಾರದ ಅಧಿಸೂಚನೆ ಸಂಖ್ಯೆ : ಪಿಡಿ 44 ಎಸ್ಎಸ್ಎಂ 2012, ದಿನಾಂಕ 15-06-2012. 2. ಸರ್ಕಾರದ ಪತ್ರ ಸಂಖ್ಯೆ : ಪಿಡಿ 108 ಎಸ್ಎಸ್ಎಂ 2012, ದಿನಾಂಕ 19-06-2013. 3. ಸರ್ಕಾರದ ಆದೇಶ ಸಂಖ್ಯೆ : ಪಿಡಿ 108 ಎಸ್ಎಸ್ಎಂ 2012, ದಿನಾಂಕ 24-10-2013 ಮತ್ತು 04-12-2013.
4. ಕಾರಣ ಕೇಳುವ ನೋಟೀಸ್ ಸಂಖ್ಯೆ : ಪಿಡಿ 108 ಎಸ್ಎಸ್ಎಂ 2012, ದಿನಾಂಕ 03.12.2013. 5. ಶ್ರೀ ಎ.ಜಿ. ಜೋಷಿ, ಇವರು ಸಲ್ಲಿಸಿರುವ ಲಿಖಿತ ಉತ್ತರ ದಿನಾಂಕ 23-12-2013.
ಪ್ರಸ್ತಾವನೆ:
ಕ್ರಮ ಸಂಖ್ಯೆ (1) ರಲ್ಲಿ ಓದಲಾಗಿರುವ ಅಧಿಸೂಚನೆಯಲ್ಲಿ ಶ್ರೀ ಎ.ಜಿ. ಜೋಷಿ, ಉಪ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ (ಸದ್ಯ ಅಮಾನತ್ತಿಲ್ಲಿರುತ್ತಾರೆ), ಇವರು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಇವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹುದ್ದೆಗೆ ವರ್ಗಾಯಿಸಿ ನೇಮಿಸಲಾಗಿತ್ತು.
2. ಆದರೆ ಶ್ರೀ ಎ.ಜಿ. ಜೋಷಿ, ಉಪ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ (ಸದ್ಯ ಅಮಾನತ್ತಿಲ್ಲಿರುತ್ತಾರೆ), ಇವರು ವರ್ಗಾಯಿಸಿ ನೇಮಿಸಲಾಗಿದ್ದ ಹುದ್ದೆಯ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ಕಾರಣ, ಕ್ರಮ ಸಂಖ್ಯೆ (2) ರಲ್ಲಿ ಓದಲಾಗಿರುವ ಸರ್ಕಾರದ ಪತ್ರದಲ್ಲಿ ಸರ್ಕಾರದ ಆದೇಶವನ್ನು ಪಾಲಿಸದೆ ಇರುವ ಬಗ್ಗೆ ಸಮಜಾಷಿಯನ್ನು ನೀಡುವಂತೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹುದ್ದೆಯ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು.
3. ಕ್ರಮ ಸಂಖ್ಯೆ (3) ರಲ್ಲಿ ಓದಲಾಗಿರುವ ಸರ್ಕಾರದ ಆದೇಶದಲ್ಲಿ, ಸದರಿ ಅಧಿಕಾರಿಯು ವರ್ಗಾವಣೆಗೊಂಡ ಸ್ಥಳದಲ್ಲಿ ಇದೂವರೆಗೆ ಕಾರ್ಯವರದಿ ಮಾಡಿಕೊಳ್ಳದೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿ, ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಾವಳಿಗಳು, 1966ರ ನಿಯಮ 3(ii), 3(iii) ರಂತೆ ಕರ್ತವ್ಯ ಲೋಪ ಪ್ರದರ್ಶಿಸಿರುವುದು, ದುರ್ವರ್ತನೆ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು 1957ರ ನಿಯಮ 11ರನ್ವಯ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ದಿನಾಂಕ 24.10.2013 ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಮಾನತ್ತುಗೊಳಿಸಲಾಗಿದೆ.
4. ಕ್ರಮ ಸಂಖ್ಯೆ (4) ರಲ್ಲಿ ಓದಲಾದ ಕಾರಣ ಕೇಳುವ ನೋಟಿಸ್ನಲ್ಲಿ ಶ್ರೀ ಎ.ಜಿ. ಜೋಷಿ, ಇವರ ವಿರುದ್ಧ ಮಾಡಲಾದ ಆರೋಪಗಳನ್ನು ಕುರಿತು ದೋಷಾರೋಪಣಾ ಪಟ್ಟಿಯನ್ನು ಕಳುಹಿಸಿ, ಈ ಬಗ್ಗೆ ಲಿಖಿತ ಹೇಳಿಕೆಯನ್ನು ಸಲ್ಲಿಸುವಂತೆ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು 1957ರ ನಿಯಮ 11 (3)ರನ್ವಯ ಆದೇಶಿಸಲಾಗಿದೆ.
5. ಕ್ರಮ ಸಂಖ್ಯೆ (5) ರಲ್ಲಿ ಓದಲಾಗಿರುವ ಶ್ರೀ ಎ.ಜಿ. ಜೋಷಿ, ಉಪ ನಿರ್ದೇಶಕರು (ಸದ್ಯ ಅಮಾನತ್ತಿಲ್ಲಿರುತ್ತಾರೆ) ಇವರು ಲಿಖಿತ ಉತ್ತರವನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಇದರಲ್ಲಿ ತಾವು ನಿಯೋಜನೆ ಮೇರೆಗೆ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯಸ್ಥರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ, ವರ್ಗಾವಣೆ ಆದೇಶ ಬಂದ ಮೇಲೆ ಈ ಸಂಸ್ಥೆಯ ಮುಖ್ಯಸ್ಥರಿಂದ ಕರ್ತವ್ಯದಿಂದ ಬಿಡುಗಡೆ ಆದೇಶ ಪಡೆಯದೆ ವರ್ಗಾವಣೆ ಆದ ಸ್ಥಳಕ್ಕೆ ಹಾಜರಾಗಲಿಲ್ಲವೆಂದು ತಿಳಿಸಿದ್ದರೂ ಸಹ ಬಡ್ತಿ ಕೇವಲ ಕೆಲವೇ ಸಮಯವಿರುವಾಗ ಅಮಾನತ್ತುಗೊಳಿಸಲಾಗಿರುವುದಾಗಿ ತಿಳಿಸಿರುತ್ತಾರೆ. ಅಲ್ಲದೆ, ತಾವು ಅತಿ ಶ್ರದ್ಧೆಯಿಂದ ಕೆಲಸ ನಿರ್ವಹಿಸುತ್ತಿರುವುದಾಗಿ ತಿಳಿಸಿ, ಸುಮಾರು 37 ವರ್ಷಗಳ ಸೇವೆ ಸಲ್ಲಿಸಿರುವುದರಿಂದ ಅಮಾನತ್ತು ಆದೇಶವನ್ನು ಹಿಂಪಡೆದು, ಇದೇ 2014ರ ಮಾರ್ಚ್ ಅಂತ್ಯಕ್ಕೆ ವಯೋನಿವೃತ್ತಿ ಹೊಂದುತ್ತಲಿರುವುದರಿಂದ, ಬಡ್ತಿ ನೀಡಬೇಕೆಂದು ವಿನಂತಿಸಿರುತ್ತಾರೆ. ಹೀಗೆ ತಮ್ಮ ಮೇಲೆ ಮಾಡಿರುವ ಆರೋಪವನ್ನು ನಿರಾಕರಿಸಿರುತ್ತಾರೆ.
6. ಸರ್ಕಾರವು ನೀಡಿದ್ದ ನೋಟೀಸ್ಗೆ, ಶ್ರೀ ಎ.ಜಿ. ಜೋಷಿ, ಉಪ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಸರ್ಕಾರದ ಆದೇಶ ಸಂಖ್ಯೆ: ಪಿಡಿ 108 ಎಸ್ಎಸ್ಎಂ 2012, ಬೆಂಗಳೂರು, ದಿನಾಂಕ: 13-02-2014ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ಭಾಗ ೧ ೫೫೬ ಮುಂದುವರೆದು, ಸರ್ಕಾರವು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು 1957ರ ನಿಯಮ 11ರ ಉಪ ನಿಯಮ (5)(ಸಿ) ರಡಿಯಲ್ಲಿ ಪ್ರದತ್ತವಾದ ಅಧಿಕಾರದನ್ವಯ ಪ್ರಕರಣವನ್ನು ಶಿಸ್ತು ಪ್ರಾಧಿಕಾರದ ಪರವಾಗಿ ವಿಚಾರಣಾಧಿಕಾರಿಗಳ ಮುಂದೆ ಮಂಡಿಸಲು ಶ್ರೀ ಎನ್. ಶ್ರೀಧರ್, ಜಂಟಿ ನಿರ್ದೇಶಕರು, ಎ.ಆರ್.ಸಿ. ವಿಭಾಗ, ಕೇಂದ್ರ ಕಛೇರಿ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಬೆಂಗಳೂರು ಇವರನ್ನು ಮಂಡನಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದೆ.
ಸದ್ಯ ಚಾಲ್ತಿಯಲ್ಲಿರುವ ಸರ್ಕಾರದ ಆದೇಶದಂತೆ ವಿಚಾರಣಾಧಿಕಾರಿಗಳಿಗೆ ಕರ್ತವ್ಯ ಭತ್ಯೆಯನ್ನು ಪಾವತಿಸಲು ಆದೇಶಿಸಲಾಗಿದೆ. ಹಾಗೆಯೇ ವಿಚಾರಣಾಧಿಕಾರಿಗಳಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಶೀಘ್ರಲಿಪಿಗಾರರ ಸೇವೆ, ಕಛೇರಿಯ ಸ್ಥಳಾವಕಾಶ ಮತ್ತು ಅಗತ್ಯ ಸಾಮಗ್ರಿಗಳನ್ನು ಒದಗಿಸುವಂತೆ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯಕ್ಕೆ ಆದೇಶಿಸಲಾಗಿದೆ.
ವಿಚಾರಣಾಧಿಕಾರಿಗಳು ಸದರಿ ಅಧಿಕಾರಿಯವರ ವಿರುದ್ಧ ಮಾಡಲಾಗಿರುವ ಆರೋಪಗಳಿಗೆ ಸಂಬಂಧಿಸಿದಂತೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು 1957ರ ನಿಯಮ 11ರಡಿಯಲ್ಲಿನ ಉಪ ನಿಯಮಗಳನ್ವಯ ಇಲಾಖಾ ವಿಚಾರಣೆ ನಡೆಸಿ ವಿಚಾರಣಾ ವರದಿಯನ್ನು 03 ತಿಂಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ರಫೀ ಅಹಮದ್ ಎಂ.ಎಸ್.,
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರಭಾರ),
ಯೋಜನೆ, ಕಾರ್ಯಕ್ರಮ ಸಂಯೋಜನೆ PR. 248
ಮತ್ತು ಸಾಂಖ್ಯಿಕ ಇಲಾಖೆ (ಎಸ್-5).
ಇಂಧನ ಸಚಿವಾಲಯ
ವಿಷಯ : 2013-14ನೇ ಸಾಲಿನಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಗಳಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗೆ ಹಣ ಬಿಡುಗಡೆ ಮಾಡುವ ಬಗ್ಗೆ.
ಓದಲಾಗಿದೆ : 1. ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಎಫ್ಡಿ 01 ಟಿಎಫ್ಪಿ 2013 ದಿನಾಂಕ : 10-05-2013.
2. ಸರ್ಕಾರಿ ಆದೇಶ ಸಂಖ್ಯೆ: ಇಎನ್ 15 ಪಿಎಸ್ಆರ್ 2013 ದಿನಾಂಕ : 24-05-2013.
3. ಸರ್ಕಾರಿ ಆದೇಶ ಸಂಖ್ಯೆ: ಇಎನ್ 15 ಪಿಎಸ್ಆರ್ 2013 ದಿನಾಂಕ : 28-06-2013.
4. ಸರ್ಕಾರಿ ಆದೇಶ ಸಂಖ್ಯೆ: ಇಎನ್ 15 ಪಿಎಸ್ಆರ್ 2013 ದಿನಾಂಕ : 17-09-2013.
5. ಕವಿನಿನಿ ಪತ್ರ ಸಂಖ್ಯೆ ಎ1/ಎಫ್2 ಬಿ/ಎ2 ದಿನಾಂಕ: 17-09-2013.
6. ಕವಿಪ್ರನಿನಿ ಪತ್ರ ಸಂಖ್ಯೆ: ಕೆಪಿಟಿಸಿಎಲ್/ಎಫ್ಎ(ಎ&ಆರ್)/ಕೆಸಿಒ-30/14398/2009-10, ದಿನಾಂಕ: 24-10-2013.
ಪ್ರಸ್ತಾವನೆ :
1. ಜುಲೈ 2013ನೇ ತಿಂಗಳಿನಲ್ಲಿ ಮಂಡಿಸಿದ 2013-14ನೇ ಸಾಲಿನ ಪರಿಷ್ಕøತ ಆಯವ್ಯಯ ಸವಿವರ ವೆಚ್ಚದ ಅಂದಾಜಿನಲ್ಲಿ ವಿದ್ಯುಚ್ಛಕ್ತಿ ಯೋಜನೆಗಳಿಗೆ ಬಂಡವಾಳ ಹೂಡಿಕೆಗೆ ಲೆಕ್ಕ ಶೀರ್ಷಿಕೆ 4801-01-190-0-09-211 Investment in Power Utility ಯಡಿ ರೂ. 577.40 ಕೋಟಿಗಳನ್ನು ಒದಗಿಸಲಾಗಿದೆ. ಮೇಲಿನ ಕ್ರಮಾಂಕ 3 ಮತ್ತು 4ರಲ್ಲಿ ಓದಲಾದ ಆದೇಶದಲ್ಲಿ ಒಟ್ಟು ರೂ. 363.70 (ರೂ.175.00 + ರೂ.
188.70= ರೂ.363.70) ಕೋಟಿಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ.
2. ಮೇಲೆ ಓದಲಾದ ಕ್ರಮಸಂಖ್ಯೆ (5) ಮತ್ತು (6)ರಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಪತ್ರಗಳಲ್ಲಿ, ಸರ್ಕಾರ ಬಂಡವಾಳ ಹೂಡಿಕೆಗಾಗಿ ಈಕ್ವಿಟಿ (Equity) ಹಣ ಒದಗಿಸಲು ಕೋರಿದೆ.
3. ಮೇಲಿನ ಕ್ರಮಸಂಖ್ಯೆ (2) ರಲ್ಲಿ ಓದಲಾದ ಸರ್ಕಾರಿ ಆದೇಶದ ಪ್ರಕಾರ ಕರ್ನಾಟಕ ಆರ್ಥಿಕ ಸಂಹಿತೆ 1957ರ ಕಲಂ1-A ರಲ್ಲಿ ಪ್ರದತ್ತವಾದ ಅಧಿಕಾರದಂತೆ ಆರ್ಥಿಕ ಇಲಾಖೆಯು ಕರ್ನಾಟಕ ಆರ್ಥಿಕ ಸಂಹಿತೆ 1957ರ ಕಲಂ17(ಸಿ) (4)ರ ಪ್ರಕಾರ ಸರ್ಕಾರದ ಬಂಡವಾಳ ಹೂಡಿಕೆಯ ಸಂಬಂಧ ರಾಜ್ಯ ಹುಜೂರು ಖಜಾನೆಯಿಂದ ಹಣ ಬಿಡುಗಡೆಯ ಕುರಿತು ಮಹಾಲೇಖಪಾಲರಿಂದ ಅಧಿಕಾರ ಪತ್ರ ಹೊರಡಿಸುವ ಷರತ್ತಿನಿಂದ ವಿನಾಯಿತಿ ನೀಡಿದೆ.
4. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಬಂಡವಾಳ ಹೂಡಿಕೆಗಾಗಿ ಈಕ್ವಿಟಿ (Equity) ಹಣ ಬಿಡುಗಡೆ ಮಾಡಲು ಪ್ರಸ್ತುತ ಆದೇಶ
ಸರ್ಕಾರಿ ಆದೇಶ ಸಂಖ್ಯೆ: ಇಎನ್ 15 ಪಿಎಸ್ಆರ್ 2013, ಬೆಂಗಳೂರು, ದಿನಾಂಕ: 28-11-2013.
1. 2013-14ನೇ ಸಾಲಿಗೆ ಸರ್ಕಾರವು ಕರ್ನಾಟಕ ವಿದ್ಯುತ್ ನಿಗಮ ನಿಯಮಿತಕ್ಕೆ ರೂ. 25.00 ಕೋಟಿಗಳನ್ನು (ರೂ.ಇಪ್ಪತ್ತೈದು ಕೋಟಿಗಳು ಮಾತ್ರ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ ರೂ. 75.00 ಕೋಟಿಗಳನ್ನು (ರೂ. ಎಪ್ಪತ್ತೈದು ಕೋಟಿಗಳು ಮಾತ್ರ) ವಿದ್ಯುತ್ ವಲಯದಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗಾಗಿ ಲೆಕ್ಕ ಶೀರ್ಷಿಕೆ "4801-01-190-0-09-211 Investment in Power Utility (ಯೋಜನೆ)" ಯಡಿ ಬಿಡುಗಡೆ ಮಾಡಿ ಆದೇಶಿಸಿದೆ.
2. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಗಳು ಸರ್ಕಾರದ ಉಪ ಕಾರ್ಯದರ್ಶಿ, ಇಂಧನ ಇಲಾಖೆರವರ ಮೇಲು ರುಜುವನ್ನು ಹಣ ಸ್ವೀಕೃತಿ ರಸೀದಿ (payee`s receipts)ಯಲ್ಲಿ ಪಡೆದು ಹಣ ಪಡೆಯತಕ್ಕದ್ದು.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ೫೫೭3. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಗಳಿಗೆ ಬಿಡುಗಡೆ ಮಾಡಿರುವ ಮೊಬಲಗನ್ನು ಬಂಡವಾಳ (Equity)ವಾಗಿ ಬಳಸಿಕೊಂಡು, ಈ ಬಗ್ಗೆ ದೃಡೀಕರಣ (Utilization Certificate) ಹಾಗೂ ಅನುಸರಣಾ ವರದಿಯನ್ನು ಸರ್ಕಾರಕ್ಕೆ ಒದಗಿಸತಕ್ಕದ್ದು.
4. ವಿದ್ಯುಚ್ಛಕ್ತಿ ಯೋಜನೆಗಳ ಮೇಲಣ ಬಂಡವಾಳ ಹೂಡಿಕೆಯನ್ನು ಮಹಾ ಲೇಖಪಾಲರಿಂದ ಪರಿಶೀಲಿಸಿ/ಲೆಕ್ಕ ಪರಿಶೋಧನೆಗೆ ಒಳಪಡಿಸತಕ್ಕದ್ದು ಹಾಗೂ ಲೆಕ್ಕ ಪರಿಶೋಧನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
5. ಮಹಾಲೇಖಪಾಲರವರಿಂದ ಪಡೆದುಕೊಳ್ಳಬೇಕಾಗಿರುವ ಸಹಮತಿಗೆ ವಿನಾಯಿತಿಯನ್ನು ಇಂಧನ ಇಲಾಖೆಯ ಸರ್ಕಾರಿ ಆದೇಶ ಸಂಖ್ಯೆ ಇಎನ್ 15 ಪಿಎಸ್ಆರ್ 2013 ದಿನಾಂಕ: 24-05-2013ರಲ್ಲಿ ನೀಡಿದೆ.
6. ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂ. FD 1375 EXP-1/2013, ಬೆಂಗಳೂರು, ದಿನಾಂಕ: 26-11-2013ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎ.ಎ.ಚಪ್ಪರಬಂದ್,
ಸರ್ಕಾರದ ಅಧೀನ ಕಾರ್ಯದರ್ಶಿ, P.R: 73
ಇಂಧನ ಇಲಾಖೆ.
ENERGY SECRETARIAT
Karnataka Electricity-Regulatory Commission – Constitution of Selection
SUBJECT :
Committee for selection of Members of the Commission -reg.
PREAMBLE :
The Karnataka Electricity Regulatory Commission (KERC) constituted as per Sec.3 of Karnataka Electricity Reforms Act, 1999 consists of three Members including the Chairman. Of these Members, Sri Vishwanath Hiremath and Sri K.Srinivasa Rao have completed their tenure as Members of the Karnataka Electricity Regulatory Commission, on 22nd October 2013.
Under Sub-Section (1) of Section 85 of the Electricity Act, 2003, the State Government shall for the purposes of selecting the Members of the State Electricity Commission, constitute a Selection Committee. Hence, this Order.
GOVERNMENT ORDER NO. EN 20 PSR 2013 BANGALORE DATED 8th November 2013
1. In terms of sub section (1) of Sec.85 of the Electricity Act, 2003, the Government of Karnataka constitutes the Selection Committee comprising of the following persons as Members, for selection of the panel of names for appointment as Members of the Karnataka Electricity Regulatory Commission.
.. Chairman
i Mr.Justice A.J.Sadashiva
Former Judge of High Court of Karnataka
ii Chief Secretary to Govt. of Karnataka, Bangalore .. Member
iii Chairman, Central Electricity Authority .. Member
2. The Principal Secretary to Government of Karnataka, Energy Department, Bangalore will Act, as the Convener of the Selection Committee.
3. The Selection Committee shall :
a) Finalise the selection of panel of names for appointment as Members, KERC as expeditiously as possible and within 45 days from the date of this Order.
b) Recommend a panel of two names for each vacant Post to the Government for filling the post of Two Members, KERC.
c) Satisfy itself, before recommending panel of persons for appointment as Members of the Commission that such person does not have any financial or other interest which are likely to affect prejudicially his/her functions as a Member of the Commission, in terms of sub-section (5) of Sec.85 of the Electricity Act, 2003.
4. The Chairman and Members of the Selection Committee are eligible for the following remuneration and allowances:
i. Honorarium of Rs.4,000/- per day as sitting fees for the days of the meeting.
ii.Conveyance charges at the rate of Rs.1,000/- per day for the days of the meeting.
iii. Boarding and Lodging charges up to Rs.5,000/- per day as reimbursement of hotel/Guest House charges to outstation Members, subject to production of bills for the actual expenditure incurred.
iv. Air fare economy class by Air India for outstation Members.
ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ಭಾಗ ೧ ೫೫೮5. This Order issues with the approval of the Competent Authority and shall come into force with immediate effect.
By Order and in the name of the Governor of Karnataka,
A.A.CHAPPARBAND
Under Secretary to Government,
PR: 74
Energy Department.
S.C: 500
ಇಂಧನ ಸಚಿವಾಲಯ
ವಿಷಯ : ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10ಹೆಚ್ಪಿವರೆಗಿನ ನೀರಾವರಿ ಪಂಪ್ಸೆಟ್ ವಿದ್ಯುತ್ ಸ್ಥಾವರಗಳಿಗೆ ಉಚಿತ ವಿದ್ಯುತ್ ಸರಬರಾಜು ಮಾಡುವುದಕ್ಕಾಗಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸಹಾಯಧನ ಬಿಡುಗಡೆ ಬಗ್ಗೆ.
ಓದಲಾಗಿದೆ : 1. ಸರ್ಕಾರಿ ಆದೇಶ ಸಂಖ್ಯೆ: ಇಎನ್ 145 ಪಿಎಸ್ಆರ್ 2004 ದಿನಾಂಕ : 15-03-2005.
2. ಸರ್ಕಾರಿ ಆದೇಶ ಸಂಖ್ಯೆ: ಇಎನ್ 55 ಪಿಎಸ್ಆರ್ 2008 ದಿನಾಂಕ : 04-09-2008.
3. ಸರ್ಕಾರಿ ಆದೇಶ ಸಂಖ್ಯೆ: ಇಎನ್ 13 ಪಿಎಸ್ಆರ್ 2013 ದಿನಾಂಕ : 05-04-2013, 26-04-2013, 02-05-2013, 28-05-2013, 21-06-2013, 03-07-2013, 29-07-2013, 28-08-2013, 08-10-2013, ಮತ್ತು 16-09-2013.
ಪ್ರಸ್ತಾವನೆ :
1. ಮೇಲಿನ ಕ್ರಮಾಂಕ-1ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ "ಭಾಗ್ಯಜ್ಯೋತಿ/ಕುಟೀರಜ್ಯೋತಿ ವಿದ್ಯುತ್ ಸ್ಥಾವರ ಒಂದಕ್ಕೆ ಪ್ರತಿ ತಿಂಗಳು 18 ಯೂನಿಟ್ವರೆಗೆ ಮಾತ್ರ ಉಚಿತ ವಿದ್ಯುತ್ ಒದಗಿಸಲು (ನಿಗದಿಪಡಿಸಿದ ನಿಬಂಧನೆ ಮತ್ತು ಷರತ್ತಿಗೆ ಒಳಪಟ್ಟು) ಅನುಮೋದನೆ ನೀಡಲಾಗಿರುತ್ತದೆ.
2. ಮೇಲಿನ ಕ್ರಮಾಂಕ-2ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ [ಗೊತ್ತುಪಡಿಸಲಾದ ನಿಬಂಧನೆಗಳು ಮತ್ತು ಷರತ್ತಿಗಳಿಗೊಳಪಟ್ಟು] ಮುಂದಿನ ಆದೇಶದವರೆಗೆ ದಿನಾಂಕ: 01-08-2008ರಿಂದ ಜಾರಿಗೆ ಬರುವಂತೆ ರೈತರ 10ಹೆಚ್ಪಿವರೆಗಿನ ನೀರಾವರಿ ಪಂಪ್ಸೆಟ್ ವಿದ್ಯುತ್ ಸ್ಥಾವರಗಳಿಗೆ ಉಚಿತ ವಿದ್ಯುತ್ ಸರಬರಾಜು ಮಾಡುವುದಕ್ಕೆ ಸಂಬಂಧಿಸಿದಂತೆ ವಿದ್ಯುತ್ ಸರಬರಾಜು ಕಂಪನಿಗಳ ಬೇಡಿಕೆ ಮೊಬಲಗು ಸರ್ಕಾರದಿಂದ ಮರುಪಾವತಿಸುವುದಕ್ಕೆ ಅನುಮೋದನೆ ನೀಡಲಾಗಿರುತ್ತದೆ.
3. ವಿದ್ಯುತ್ ಸರಬರಾಜು ಕಂಪನಿಗಳು "ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10 ಹೆಚ್ಪಿವರೆಗಿನ ನೀರಾವರಿ ಪಂಪ್ಸೆಟ್ ವಿದ್ಯುತ್ ಸ್ಥಾವರಗಳಿಗೆ ಉಚಿತ ವಿದ್ಯುತ್ ಸರಬರಾಜು ಮಾಡುವುದಕ್ಕಾಗಿ 2013-14ನೇ ಸಾಲಿನ ಆಯವ್ಯಯ ಸವಿವರ ವೆಚ್ಚದ ಅಂದಾಜುಗಳು ಲೆಕ್ಕಶೀರ್ಷಿಕೆ "2801-80- 101-1-04-106 ಸಹಾಯಧನ (ಯೋಜನೇತರ)"ದ ಅಡಿಯಲ್ಲಿ ರೂ.4750.00 ಕೋಟಿಗಳನ್ನು ಒದಗಿಸಲಾಗಿದೆ. ಮೇಲಿನ ಕ್ರಮಾಂಕ-3ರಲ್ಲಿ ಓದಲಾದ ಆದೇಶಗಳಲ್ಲಿ ರೂ.2700.00 ಕೋಟಿಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ.
4. 2013-14ನೇ ಸಾಲಿನ ನವೆಂಬರ್ ಮಾಹೆಗೆ ಬಿಡುಗಡೆ ಮಾಡಬೇಕಾಗಿರುವ ರು. 375.00 ಕೋಟಿಗಳಲ್ಲಿ ಈಗಾಗಲೇ ರೂ.75.00 ಕೋಟಿಗಳನ್ನು ಮುಂಗಡವಾಗಿ ಅಕ್ಟೋಬರ್ 2013ರ ಆದೇಶದಲ್ಲಿ ಬಿಡುಗಡೆ ಮಾಡಿದೆ. ಹೀಗಾಗಿ ಬಾಕಿ ಉಳಿದಿರುವ ರೂ.300.00 ಕೋಟಿಗಳ ಸಹಾಯಧನವನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ಬಿಡುಗಡೆ ಮಾಡಲು ಪ್ರಸ್ತುತ ಈ ಆದೇಶ.
ಸರ್ಕಾರಿ ಆದೇಶ ಸಂಖ್ಯೆ ಇಎನ್ 13 ಪಿಎಸ್ಆರ್ 2013 ಬೆಂಗಳೂರು, ದಿನಾಂಕ : 07-11-2013
1. ಸರ್ಕಾರವು "ಭಾಗ್ಯಜ್ಯೋತಿ/ಕುಟೀರಜ್ಯೋತಿ ಮತ್ತು 10 ಹೆಚ್ಪಿವರೆಗಿನ ನೀರಾವರಿ ಪಂಪ್ಸೆಟ್ ವಿದ್ಯುತ್ ಸ್ಥಾವರಗಳಿಗೆ ಉಚಿತ ವಿದ್ಯುತ್ ಸರಬರಾಜು ಮಾಡುತ್ತಿರುವುದಕ್ಕಾಗಿ ರೂ.300.00 ಕೋಟಿಗಳ (ರೂ.ಮುನ್ನೂರು ಕೋಟಿಗಳು ಮಾತ್ರ) ಸಹಾಯಧನವನ್ನು ನವೆಂಬರ್ 2013ರ ಮಾಹೆಗೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಲೆಕ್ಕಶೀರ್ಷಿಕೆ "2801-80-101-1-04-106 (ಸಹಾಯಧನ) (ಯೋಜನೇತರ)ಯಡಿ ಈ ಕೆಳಕಂಡಂತೆ ಬಿಡುಗಡೆಗೊಳಿಸಿ ಆದೇಶಿಸಿದೆ.
| & . +ಉ | 039.ಘ*- ಉಆ++.]. & .^ | 6ಇ:ಅಗಚ:ಅ ^ | 2304ಖ08-. #ಃಈಈ |
| ಅ | ಉಈ | k | |
| < | < | ||
| ಋ | < | ಊ | k |
| ಉ | k | ||
| ಜಿ ಇಇ | ಉಉ | ಉk | |
| ಋ*!3 | ಉ | ಉ | |
| ಋಎಏ | 2ಔ4733 | ಐ733 | 433733 |
ಮೇಲಿನ ಕೋಷ್ಟಕದಲ್ಲಿರುವಂತೆ ನವೆಂಬರ್ -2013ನೇ ಮಾಹೆಗಳಿಗೆ ಬಿಡುಗಡೆ ಮಾಡಿ ಆದೇಶಿಸಿರುವ ರೂ.300.00 ಕೋಟಿಗಳನ್ನು ಈ ಕೆಳಕಂಡಂತೆ ಮರು ಹಂಚಿಕೆ ಮಾಡಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ೫೫೯| & . +ಉ | & .+ಉ+*- ಎ& .ಉಉ#&ಕಿ | & . +ಉ- ಃಈಈ | ||
| -ಃಈಈ | ?_#% ಃಈಈಙಖಿಘಿ !! & . ಆ 6\ | ಋಎಏ | ||
| ಅ | ಉ | ಉ | ||
| < | < | ಉ | ||
| ಋ | k | k | ಉಉ | |
| ಉk | ಉk | < | ||
| ಜಿ ಇಇ | k | ಉ | < | |
| ಋಎಏ | 0ಒಐ733 | 0ಓ733 | 232733 | ಔಒ733 |
2. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ ಬಿಡುಗಡೆ ಮಾಡಿರುವ ರೂ.44.00 ಕೋಟಿಗಳಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಬಾಬ್ತು ಸಹಾಯಧನ ರೂ.4.00 ಕೋಟಿಗಳೆಂದು ಲೆಕ್ಕೀಕರಿಸುವುದು.
3. ಮೇಲಿನ ಎಲ್ಲಾ ಹೊಂದಾಣಿಕೆಗಳನ್ನು ಪರಿಗಣಿಸಿ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತಕ್ಕೆ ರೂ. 202.00 ಕೋಟಿಗಳು, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ ರೂ. 10.00 ಕೋಟಿಗಳು, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ ರೂ.4.00 ಕೋಟಿಗಳು, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ ರೂ.44.00 ಕೋಟಿಗಳು, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿಗೆ ರೂ.20.00 ಕೋಟಿಗಳು ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ರೂ.20.00 ಕೋಟಿಗಳನ್ನು ನೇರ ಬಿಡುಗಡೆ ಮಾಡಿದೆ.
4. ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ರೂ.5.00 ಕೋಟಿಗಳನ್ನು ಮತ್ತು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಿಂದ ರೂ.10.00 ಕೋಟಿಗಳನ್ನು, ಅಲ್ಪಾವದಿ ವಿದ್ಯುತ್ ಖರೀದಿ ಬಾಬ್ತು ಹೊಂದಾಣಿಕೆಯ ಮೂಲಕ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತಕ್ಕೆ ಹೊಂದಿಸಿ, ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮಿತದ ಪರವಾಗಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತಕ್ಕೆ ಬಿಡುಗಡೆ ಮಾಡಿ ಆದೇಶಿಸಿದೆ.
5. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ, ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತಗಳು ಹಣ ಸ್ವೀಕೃತ ರಸೀದಿಯ ಮೇಲೆ ಸರ್ಕಾರದ ಉಪ ಕಾರ್ಯದರ್ಶಿ, ಇಂಧನ ಇಲಾಖೆ ಇವರ ಮೇಲು ರುಜು ಪಡೆದು ಹಣ ಪಡೆಯತಕ್ಕದ್ದು. ಈ ಆದೇಶದ ಪ್ರಕಾರ ಹಣ ಸ್ವೀಕೃತಿ ಮಾಡುವ ಸಂಸ್ಥೆಗಳು ಮೂರು ದಿನಗಳೊಳಗೆ ಅನುಸರಣ ವರದಿ ಮತ್ತು ಬಳಕೆಯ ಪ್ರಮಾಣ ಪತ್ರ (Utilization Certificate) ಸಲ್ಲಿಸತಕ್ಕದ್ದು.
6. ವಿದ್ಯುತ್ ಸರಬರಾಜು ಕಂಪನಿಗಳ ಪರವಾಗಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತಕ್ಕೆ ಬಿಡುಗಡೆ ಮಾಡಿದ ಸಹಾಯಧನವನ್ನು ವಿದ್ಯುತ್ ಸರಬರಾಜು ಕಂಪನಿಗಳ ವಿದ್ಯುತ್ ಖರೀದಿ-ಅಸಲು ಬಾಕಿಗೆ ಲೆಕ್ಕೀಕರಿಸುವುದು.
7. ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು, ತಮ್ಮ ವಿದ್ಯುತ್ ಖರೀದಿ ಬಾಕಿಗಳನ್ನು ಪಾವತಿಸಲು ನಿಯತಕ್ರಿಯಾ ಯೋಜನೆಯೊಂದನ್ನು ಹೊಂದಿರತಕ್ಕದ್ದು ಹಾಗೂ ವಿದ್ಯುತ್ ಖರೀದಿ ಬಾಕಿಯನ್ನು ವಿದ್ಯುತ್ ಸರಬರಾಜು ಕಂಪನಿಗಳ ಸ್ವಂತ ಸಂಪನ್ಮೂಲಗಳಿಂದ ಪಾವತಿಸತಕ್ಕದ್ದು.
8. 10 ಹೆಚ್ಪಿವರೆಗಿನ ನೀರಾವರಿ ಪಂಪ್ಸೆಟ್ಗಳಿಗೆ ಮತ್ತು ಭಾಗ್ಯಜ್ಯೋತಿ/ಕುಟೀರಜ್ಯೋತಿ ವಿದ್ಯುತ್ ಸ್ಥಾವರಗಳಿಗೆ ಸಂಬಂಧಿಸಿದ ಎಲ್ಲಾ ಬೇಡಿಕೆಗಳ ಬಗ್ಗೆ ಮಹಾಲೇಖಪಾಲರಿಂದ ಪರಿಶೀಲಿಸಿ/ಲೆಕ್ಕ ಪರಿಶೋಧನೆಗೆ ಒಳಪಡಿಸತಕ್ಕದ್ದು ಹಾಗೂ ಲೆಕ್ಕ ಪರಿಶೋಧನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
9. ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂ. FD 1317 EXP-1/2013, ಬೆಂಗಳೂರು, ದಿನಾಂಕ: 07-11-2013ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎ.ಎ.ಚಪ್ಪರಬಂದ್,
ಸರ್ಕಾರದ ಅಧೀನ ಕಾರ್ಯದರ್ಶಿ, P.R: 75
ಇಂಧನ ಇಲಾಖೆ.
ಆರ್ಥಿಕ ಸಚಿವಾಲಯ
ಸೇರ್ಪಡೆ
ಸಂಖ್ಯೆ: ಆಇ 6 ಸೇನಿಸೇ 2013 ಬೆಂಗಳೂರು, ದಿನಾಂಕ: 04-09-2013
ಸರ್ಕಾರಿ ಆದೇಶ ಸಂಖ್ಯೆ: FD 19 SRS 88, ದಿನಾಂಕ:25-05-1988ರ ಅನುಬಂಧದ ಐಟಂ 8 ರಲ್ಲಿನ "ಸ್ವಗ್ರಾಮ ಪ್ರಯಾಣ ರಿಯಾಯಿತಿ ಸೌಲಭ್ಯ" ಪದಗಳ ನಂತರ "ಮತ್ತು ಭಾರತದಲ್ಲಿನ ಯಾವುದೇ ಸ್ಥಳಕ್ಕೆ ರಜಾ ಪ್ರಯಾಣ ರಿಯಾಯಿತಿ ಸೌಲಭ್ಯ" ಪದಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಭಾವಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಆಲಿಸ್ ಗೊನ್ಸಾಲ್ವಿಸ್, ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಸೇವೆಗಳು-1).
ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ಭಾಗ ೧ ೫೬೦FINANCE SECRETARIAT
ADDENDUM
No. FD 6 SRS 2013 Bangalore, dated: 04-09-2013.
In item No.8 of the Annexure to Government Order No. FD 19 SRS 88, dated 24-05-1988, after the word "Home Travel Concession" the words "and Leave Travel Concession to any place in India" shall be deemed to have been added.
By Order and in the name of the Governor of Karnataka,
Alice Gonsalves,
PR. 260
Under Secretary to Government, PR. 100
Finance Department (Ser-1).
ಆರ್ಥಿಕ ಸಚಿವಾಲಯ
ಸೇರ್ಪಡೆ
ಸಂಖ್ಯೆ: ಆಇ 12 ಎಸ್ಆರ್ಪಿ 2012(IX) ಬೆಂಗಳೂರು, ದಿನಾಂಕ: 11-02-2014
ಸರ್ಕಾರಿ ಆದೇಶ ಸಂಖ್ಯೆ: ಆಇ 12 ಎಸ್ಆರ್ಪಿ 2012(IX) ದಿನಾಂಕ:14-06-2012ರ ಕ್ರಮಸಂಖ್ಯೆ: 21 (d) (iv)ರ ನಂತರ ಈ ಕೆಳಗಿನಂತೆ ಸೇರ್ಪಡೆ ಮಾಡಿ ಓದಿಕೊಳ್ಳತಕ್ಕದ್ದು.
| < | Lokayukta/Upalokayukta | |
| (d) Staff engaged in field investigation | Rs | |
| (iv-a) Assistant Sub Inspector of Police | 2200 |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR. 261
ಸುಂದರ ರಾಜ ಗುಪ್ತ,
ಸರ್ಕಾರದ ಜಂಟಿ ಕಾರ್ಯದರ್ಶಿ,
SC-500
ಆರ್ಥಿಕ ಇಲಾಖೆ (ಸೇವೆಗಳು-2).
ತೋಟಗಾರಿಕಾ ಸಚಿವಾಲಯ
ವಿಷಯ : ಬೀದರ್ ಜಿಲ್ಲೆಯ ಕೋಲಾರ್ .ಕೆ. ಗ್ರಾಮದಲ್ಲಿರುವ ರೇಷ್ಮೆ ಇಲಾಖೆಯ ಜಮೀನು ಮತ್ತು ಕಟ್ಟಡವನ್ನು ಬೀದರ್ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಇವರಿಗೆ ನೀಡುವ ಕುರಿತು.
ಓದಲಾಗಿದೆ : 1. ಉಪ ಕುಲಪತಿಗಳು, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಇವರ ಪತ್ರ ಸಂಖ್ಯೆ:
ವಿಸಿ/ಯುಹೆಚ್ಎಸ್ಬಿ/ 2013-14, ದಿನಾಂಕ: 16-08-2013.
2. ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರು, ಇವರ ಪತ್ರ ಸಂಖ್ಯೆ:
ರೇನಿ.ಸ್ಥರಾಸ್ತಿ/ತೋಕಾ/ಬೀದರ್/01/2013-14, ದಿನಾಂಕ: 14-11-2013.
ಪ್ರಸ್ತಾವನೆ :
ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ದಿನಾಂಕ: 16-08-2013ರ ಪತ್ರದಲ್ಲಿ ಬೀದರ್ ಜಿಲ್ಲೆಯ ಕೋಲಾರ್ .ಕೆ. ಗ್ರಾಮದಲ್ಲಿ ಬೀದರ್- ಹುಮ್ನಾಬಾದ್ ಮುಖ್ಯ ರಸ್ತೆಯಲ್ಲಿನ ಸರ್ವೆ ನಂ.287 ಮತ್ತು 285ರಲ್ಲಿನ 82ಎಕರೆ ಜಮೀನಿನಲ್ಲಿ ರೇಷ್ಮೆ ಇಲಾಖೆಗೆ ಸೇರಿದ ಆಡಳಿತ ಕಛೇರಿ ಕಟ್ಟಡ, 44 ವಸತಿ ಗೃಹಗಳು, ಮೂರು ಶೈತ್ಯಾಗಾರಗಳು, ರೇಷ್ಮೆ ಬಿತ್ತನೆ ಕೋp, ಎರಡು ಡಾರ್ಮಿಟರಿ ಯೂನಿಟ್ಗಳು, ಉಪ ನಿರ್ದೇಶಕರ ವಸತಿ, ಗೃಹ ಹಾಗೂ ಮಹಿಳೆಯ ತರಬೇತಿ ಕೇಂದ್ರವಿರುತ್ತದೆ. ಆದರೆ ಸದರಿ ಕಟ್ಟಡಗಳು ಉಪಯೋಗದಲ್ಲಿರುವುದಿಲ್ಲ ಹಾಗೂ ತರಬೇತಿ ಕೇಂದ್ರದಲ್ಲಿ ತರಬೇತಿಯನ್ನು ನಡೆಸುತ್ತಿಲ್ಲ ಮತ್ತು ಬಹಳಷ್ಟು ವಸತಿ ಗೃಹಗಳು ಖಾಲಿ ಇರುವುದರಿಂದ ಬೀದರ್ ತೋಟಗಾರಿಕೆ ಕಾಲೇಜಿಗೆ ರೇಷ್ಮೆ ಇಲಾಖೆಗೆ ಸೇರಿದ 60 ಎಕರೆ ಜಮೀನನ್ನು ಹಾಗೂ ಕಚೇರಿ ಮತ್ತು ಪ್ರಯೋಗಾಲಯದ ಉಪಯೋಗಕ್ಕಾಗಿ ಆಡಳಿತ ಕಛೇರಿಯ ಮುಖ್ಯಕಟ್ಟಡದಲ್ಲಿ ಒಂದು ಮಹಡಿಯನ್ನು ಮತ್ತು ಕೆಲವೊಂದು ವಸತಿ ಗೃಹಗಳನ್ನು ನೀಡುವಂತೆ ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನು ಉಪ ಕುಲಪತಿಗಳು, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಇವರು ಕೋರಿರುತ್ತಾರೆ. ಈ ಬಗ್ಗೆ ಅಭಿಪ್ರಾಯ ನೀಡುವಂತೆ ತೋಟಗಾರಿಕೆ ಇಲಾಖೆಯು ಕೋರಿರುತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ದಿನಾಂಕ: 14-11-2013ರ ಪತ್ರದಲ್ಲಿ ಬೀದರ್ ಜಿಲ್ಲೆ, ಬೀದರ್ ತಾಲ್ಲೂಕಿನ ಕೋಲಾರ್ .ಕೆ.
ಗ್ರಾಮದಲ್ಲಿರುವ ಸರ್ಕಾರಿ ಮಾದರಿ ಬಿತ್ತನೆಕೋp ಆವರಣದಲ್ಲಿರುವ ಮುಖ್ಯ ಕಟ್ಟಡದ ಒಂದನೇ ಮಹಡಿಯಲ್ಲಿ ಇಲಾಖೆಯ ವಿವಿಧ ನಾಲ್ಕು, ಕಛೇರಿಗಳಿದ್ದು, 2ನೇ ಮಹಡಿಯಲ್ಲಿ ರೇಷ್ಮೆ ಮೊಟ್ಟೆ ಉತ್ಪಾದನೆ ಮಾಡಲಾಗುತ್ತಿದ್ದು, ಆವರಣದಲ್ಲಿರುವ ಜಾಗದಲ್ಲಿ ಹಿಪ್ಪುನೇರಳೆ ತೋಟ, ಗೋಡಂಬಿ ಮತ್ತು ಇತರೆ ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಸದರಿ ಕಟ್ಟಡದ ಆವರಣದಲ್ಲಿ ಒಟ್ಟು 45 ವಸತಿ ಗೃಹಗಳಿದ್ದು ಇವುಗಳ ಪೈಕಿ 25ರಲ್ಲಿ ಇಲಾಖಾ ಸಿಬ್ಬಂದಿ ವಾಸವಾಗಿರುತ್ತಾರೆ ಮತ್ತು 20 ವಸತಿ ಗೃಹಗಳು ಖಾಲಿ ಇರುತ್ತದೆ. ಈ ಪ್ರಯುಕ್ತ ಸರ್ವೆ ನಂ.287/1ರಲ್ಲಿರುವ 40 ಎಕರೆ ಜಮೀನನ್ನು ತೋಟಗಾರಿಕೆ ವಿಶ್ವವಿದ್ಯಾಲಯದ ತಾತ್ಕಾಲಿಕ ಉಪಯೋಗಕ್ಕಾಗಿ ಹಾಗೂ ಸರ್ಕಾರಿ ಮಾದರಿ ಬಿತ್ತನೆ ಕೋpಯ ಮುಖ್ಯ ಕಟ್ಟಡದ ಮೂರನೇ ಮಹಡಿ ಹಾಗೂ ಖಾಲಿ ಇರುವ 20 ವಸತಿಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ೫೬೧ ಗೃಹಗಳನ್ನು ಬೀದರ್ ತೋಟಗಾರಿಕೆ ಕಾಲೇಜಿಗೆ ತಾತ್ಕಾಲಿಕವಾಗಿ ಹಸ್ತಾಂತರಿಸಬಹುದೆಂದು ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರು ತಿಳಿಸಿರುತ್ತಾರೆ.
ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದ್ದು, ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನ ಕೋಲಾರ್ .ಕೆ. ಗ್ರಾಮದಲ್ಲಿರುವ ರೇಷ್ಮೆ ಇಲಾಖೆಗೆ ಸೇರಿದ ಸರ್ವೆ ನಂ.287/1ರಲ್ಲಿ 40-00ಎಕರೆ (ನಲವತ್ತು ಎಕರೆ) ಜಮೀನನ್ನು ಜಿಲ್ಲಾಧಿಕಾರಿಗಳು ನಿಗದಿಪಡಿಸುವ ದರಕ್ಕೆ ಹಾಗೂ 20 (ಇಪ್ಪತ್ತು) ವಸತಿ ಗೃಹಗಳನ್ನು ಲೋಕೋಪಯೋಗಿ ಇಲಾಖೆಯು ನಿಗದಿಪಡಿಸುವ ದರಕ್ಕೆ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲು ಸರ್ಕಾರವು ನಿರ್ಧರಿಸುವ ಕಾರಣ ಈ ಆದೇಶ.
ಸರ್ಕಾರಿ ಆದೇಶ ಸಂ: ತೋಇ 19 ರೇಯೋವಿ 2013, ಬೆಂಗಳೂರು, ದಿನಾಂಕ: 15-02-2014.
ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನಲೆಯಲ್ಲಿ ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನ ಕೋಲಾರ್ .ಕೆ. ಗ್ರಾಮದಲ್ಲಿರುವ ರೇಷ್ಮೆ ಇಲಾಖೆಗೆ ಸೇರಿದ ಸರ್ವೆ ನಂ.287/1ರಲ್ಲಿ 40-00ಎಕರೆ (ನಲವತ್ತು ಎಕರೆ) ಜಮೀನನ್ನು ಜಿಲ್ಲಾಧಿಕಾರಿಗಳು ನಿಗದಿಪಡಿಸುವ ದರಕ್ಕೆ ಹಾಗೂ 20 (ಇಪ್ಪತ್ತು) ವಸತಿ ಗೃಹಗಳನ್ನು ಲೋಕೋಪಯೋಗಿ ಇಲಾಖೆಯು ನಿಗದಿಪಡಿಸುವ ದರಕ್ಕೆ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲು ಸರ್ಕಾರವು ಆದೇಶಿಸಿದೆ.
ಈ ಆದೇಶವನ್ನು ಕಂದಾಯ ಇಲಾಖೆಯ ಟಿಪ್ಪಣಿ ಸಂಖ್ಯೆ: ಆರ್ಡಿ 4 ಎಲ್ಜಿಐ 2014, ದಿನಾಂಕ: 25-01-2014ರ ಸಹಮತಿ ಮೇರೆಗೆ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ಉಮಾವತಿ,
ಪೀಠಾಧಿಕಾರಿ (ಪ್ರಭಾರ),
P.R. 266
ತೋಟಗಾರಿಕೆ ಇಲಾಖೆ (ರೇಷ್ಮೆ).
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಕುಕ 22 ಸಿಜಿಇ 2014 ಬೆಂಗಳೂರು, ದಿನಾಂಕ: 18-02-2014
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಕಾಯ್ದೆಯ ಸೆಕ್ಷನ್ 35ರ ಅಡಿಯಲ್ಲಿ ಐ.ಡಿ.ಎಸ್.ಪಿ. (Integrated Disease Surveillance Programme) ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲಾಮಟ್ಟದಲ್ಲಿ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿ ಜಿಲ್ಲೆಯ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳನ್ನು ಆಯಾ ಜಿಲ್ಲೆಗಳಿಗೆ ಮೂಲ ಕರ್ತವ್ಯದ ಜೊತೆಗೆ "ಅಂಕಿತ ಅಧಿಕಾರಿ" (Designated Officer) ಎಂದು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಖ್ಯ ಆರೋಗ್ಯಾಧಿಕಾರಿಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇವರನ್ನು "ಅಂಕಿತ ಅಧಿಕಾರಿ" (Designated Officer) ಅಧಿಕಾರಿ ಎಂದು ದಿನಾಂಕ: 30-07-2011ರ ಅಧಿಸೂಚನೆ ಸಂಖ್ಯೆ: ಆಕುಕ 70 (iv) ಸಿಜಿಇ 2010ರಲ್ಲಿ ಒಂದು ವರ್ಷದ ಅವಧಿಗೆ ಜಾರಿಗೆ ಬರುವಂತೆ ನೇಮಕ ಮಾಡಲಾಗಿದ್ದು, ಸದರಿ ನೇಮಕಾತಿಯನ್ನು ದಿನಾಂಕ:30-07-2012ರಿಂದ ಇನ್ನೂ ಒಂದು ವರ್ಷದ ಅವಧಿಗೆ ಅಥವಾ ಸದರಿ ಹುದ್ದೆಯನ್ನು ಖಾಯಂ ಆಗಿ ನೇಮಕ ಮಾಡುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮುಂದುವರೆಸಲು ಆದೇಶಿಸಲಾಗಿತ್ತು. ಪುನಃ ಈ ನೇಮಕಾತಿಯನ್ನು ಮುಂದಿನ ಆದೇಶದವರೆಗೆ ಅಥವಾ ಖಾಯಂ ಆಗಿ ನೇಮಕ ಮಾಡುವವರೆಗೆ ಮುಂದುವರೆಸಲು ಆದೇಶಿಸಿದೆ. ಈ ಅಧಿಕಾರಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಅಡಿ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಕರ್ತವ್ಯ ನಿರ್ವಹಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಬಿ.ಎಸ್.ನಾಗರಾಜ್,
ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ), PR. 267
(ಆರೋಗ್ಯ 1 & 2)
SC-250
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
HOME SECRETARIAT
CORRIGENDUM
No. HD 41 POSAEE 2013 Bangalore, dated: 05-09-2013.
In Sl.No.1 in the order portion of the Government order No: HD 41 POSAEE 2013 dated 04-09-2013 appointing members to the State Police Complaints Authority, the words "former Additional Chief Secretary" shall be read as "former Additional Chief Secretary and Development Commissioner, Government of Karnataka".
By Order and in the name of the Governor of Karnataka,
T.N. RAVIPRAKASH,
PR. 274
Under Secretary to Government, PR. 50
Home Department (Police Services-A).
ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ಭಾಗ ೧ ೫೬೨ಕಂದಾಯ ಸಚಿವಾಲಯ
ವಿಷಯ : ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್ ಟ್ರಸ್ಟ್ ಇವರಿಗೆ ಬೆಂಗಳೂರು ಪೂರ್ವ ತಾಲ್ಲೂಕು, ವರ್ತೂರು ಹೋಬಳಿ, ಗುಂಜೂರು ಗ್ರಾಮದ ಸ.ನಂ.109ರಲ್ಲಿ ಮಂಜೂರಾಗಿರುವ 7-00 ಎಕರೆ ಜಮೀನಿಗೆ ಪಾವತಿಸಲಾಗಿದ್ದ ಮೊತ್ತದಲ್ಲಿ ರೂ.1,63,71,255-00ಗಳನ್ನು ಹಿಂದಿರುಗಿಸುವ ಬಗ್ಗೆ.
ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 517ಎಲ್ಜಿಬಿ 2010, ದಿನಾಂಕ: 13-05-2011.
—
2013 ಮತ್ತು 2. ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 1 ಎಲ್ಜಿಬಿ 2013, ದಿನಾಂಕ: 21-11
23-12-2013.
3. ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್ ಟ್ರಸ್ಟ್ನ ಮನವಿ ದಿನಾಂಕ:13-11-2013.
4. ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ರವರ ಪತ್ರ ದಿನಾಂಕ: 21-01-2014.
ಪ್ರಸ್ತಾವನೆ :
ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಸರ್ಕಾರದ ಆದೇಶದಲ್ಲಿ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್ ಟ್ರಸ್ಟ್ ಇವರಿಗೆ ಬೆಂಗಳೂರು ಪೂರ್ವ ತಾಲ್ಲೂಕು, ವರ್ತೂರು ಹೋಬಳಿ, ಗುಂಜೂರು ಗ್ರಾಮದ ಸ.ನಂ.109ರಲ್ಲಿ 7-00 ಎಕರೆ ಜಮೀನನ್ನು ಮಾರ್ಗಸೂಚಿ ಬೆಲೆಯ ಶೇಕಡ 50ರಷ್ಟು ವಿಧಿಸಿ ಮತ್ತು ನಿಯಮಾನುಸಾರ ಇತರೆ ಶುಲ್ಕಗಳನ್ನು ವಿಧಿಸಿ ಮಂಜೂರು ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಸದರಿ ಸಂಸ್ಥೆಯು ಈಗಾಗಲೇ ರೂ.1,87,19,735/-ನ್ನು ಪಾವತಿಸಿದೆ.
ಸದರಿ ಜಮೀನನ್ನು ಅರಣ್ಯ ಇಲಾಖೆಯವರು ಸಂಸ್ಥೆಗೆ ಹಸ್ತಾಂತರಿಸದೇ ಇದ್ದುದರಿಂದ ಸರ್ಕಾರವು ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಆದೇಶದಲ್ಲಿ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್ ಟ್ರಸ್ಟ್ ಇವರಿಗೆ ಆನೇಕಲ್ ತಾಲ್ಲೂಕು, ಸರ್ಜಾಪುರ ಹೋಬಳಿ, ಕೂಡ್ಲು ಗ್ರಾಮದ ಸ.ನಂ.148ರಲ್ಲಿ 2-00 ಎಕರೆ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 19(1)ರನ್ವಯ ಪ್ರಚಲಿತ ಮಾರುಕಟ್ಟೆ ದರ ಎಕರೆ ಒಂದಕ್ಕೆ ರೂ.300.00 ಲಕ್ಷಗಳಂತೆ ಶೇಕಡ 5ರಷ್ಟು ವಿಧಿಸಿ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಶೇ.5ರಂತೆ ಹೆಚ್ಚಿಸುವ ಹಾಗೂ ನಿಯಮಾನುಸಾರ ಇತರೆ ಶುಲ್ಕಗಳನ್ನು ಪಾವತಿಸುವ ಷರತ್ತಿಗೊಳಪಟ್ಟು, 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲಾಗಿತ್ತು.
ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್ ಟ್ರಸ್ಟ್ರವರು ದಿನಾಂಕ:13-11-2013ರಂದು ಮನವಿ ಸಲ್ಲಿಸಿ, ಗುಂಜೂರು ಗ್ರಾಮದಲ್ಲಿ ಮಂಜೂರು ಮಾಡಲಾಗಿದ್ದ 7-00 ಎಕರೆ ಜಮೀನಿಗೆ ತಮ್ಮ ಸಂಸ್ಥೆಯು ರೂ.1,87,19,735/-ಗಳನ್ನು ಪಾವತಿಸಿದ್ದು, ಸದರಿ ಮಂಜೂರಾತಿಯನ್ನು ರದ್ದುಗೊಳಿಸಿರುವುದರಿಂದ ಸಂಸ್ಥೆಯು ಪಾವತಿಸಿದ್ದ ಮೊತ್ತವನ್ನು ಬಡ್ಡಿ ಮೊಬಲಗು ಸಮೇತ ಹಿಂದಿರುಗಿಸುವಂತೆ ಮೇಲೆ ಓದಲಾದ ಕ್ರಮಸಂಖ್ಯೆ (3)ರ ಪತ್ರದಲ್ಲಿ ಕೋರಿರುತ್ತಾರೆ.
ಮೇಲೆ ಓದಲಾದ ಕ್ರಮಸಂಖ್ಯೆ (4)ರ ಪತ್ರದಲ್ಲಿ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ರವರು ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್ ಟ್ರಸ್ಟ್ ಇವರಿಗೆ ಆನೇಕಲ್ ತಾಲ್ಲೂಕು, ಸರ್ಜಾಪುರ ಹೋಬಳಿ, ಕೂಡ್ಲು ಗ್ರಾಮದ ಸ.ನಂ.148 ರಲ್ಲಿ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲಾಗಿರುವ 2-00 ಎಕರೆ ಜಮೀನಿಗೆ ಸಂಸ್ಥೆಯು ಒಟ್ಟು ರೂ.23,48,480/-ಗಳನ್ನು ಪಾವತಿಸಬೇಕಾಗಿದ್ದು. ಈ ಹಿಂದೆ ಪಾವತಿಸಿದ್ದ ರೂ.1,87,19,735/-ಮೊತ್ತದಿಂದಲೇ ಕಡಿತಗೊಳಿಸಿಕೊಂಡು ಬಾಕಿ ಉಳಿದ ರೂ.1,63,71,255/-ಗಳನ್ನು ಹಿಂದಿರುಗಿಸಲು ಅನುಮೋದನೆ ಕೋರಿರುತ್ತಾರೆ.
ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿದೆ. ಅದರಂತೆ ಈ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 1 ಎಲ್ಜಿಬಿ 2013 ಬೆಂಗಳೂರು ದಿನಾಂಕ: 19-02-2014
ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಷನ್ ಟ್ರಸ್ಟ್ಗೆ ಬೆಂಗಳೂರು ಪೂರ್ವ ತಾಲ್ಲೂಕು, ಗುಂಜೂರು ಗ್ರಾಮದ ಸ.ನಂ.109 ರಲ್ಲಿ ಮಂಜೂರು ಮಾಡಲಾಗಿರುವ 7-00 ಎಕರೆ ಜಮೀನನ್ನು ಅವರಿಗೆ ಹಸ್ತಾಂತರಿಸದ ಕಾರಣ ಲೆಕ್ಕಶೀರ್ಷಿಕೆ 4059-80-901-0-00- Deduct Receipt and Capital Account ಅಡಿಯಲ್ಲಿ ಪಾವತಿಸಲಾಗಿದ್ದ ರೂ.1,87,19,735/-(ಒಂದು ಕೋಟಿ ಎಂಬತ್ತೇಳು ಲಕ್ಷದ ಹತ್ತೊಂಬತ್ತು ಸಾವಿರದ ಏಳುನೂರ ಮೂವತ್ತೈದು ಮಾತ್ರ) ಮೊತ್ತದಿಂದ ಸದರಿ ಸಂಸ್ಥೆಗೆ ಆನೇಕಲ್ ತಾಲ್ಲೂಕು, ಸರ್ಜಾಪುರ ಹೋಬಳಿ, ಕೂಡ್ಲು ಗ್ರಾಮದ ಸ.ನಂ.148 ರಲ್ಲಿ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲಾಗಿರುವ 2-00 ಎಕರೆ ಜಮೀನಿಗೆ ಪಾವತಿಸಬೇಕಾಗಿರುವ ಒಟ್ಟು ರೂ.23,48,480/-ಗಳನ್ನು ಕಡಿತಗೊಳಿಸಿಕೊಂಡು, ಬಾಕಿ ಉಳಿದ ರೂ.1,63,71,255/-(ರೂಪಾಯಿ ಒಂದು ಕೋಟಿ ಅರವತ್ಮೂರು ಲಕ್ಷದ ಎಪ್ಪತ್ತೊಂದು ಸಾವಿರದ ಇನ್ನೂರ ಐವತ್ತೈದು ಮಾತ್ರ) ಗಳನ್ನು ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್ ಟ್ರಸ್ಟ್ಗೆ ಹಿಂದಿರುಗಿಸಲು ಆದೇಶಿಸಿದೆ.
ಈ ಆದೇಶವನ್ನು ಆರ್ಥಿಕ ಇಲಾಖೆಯ ಅ.ಟಿ.ಸಂಖ್ಯೆ ಆಇ 111 ವೆಚ್ಚ-7/2014, ದಿನಾಂಕ:10-02-2014ರಲ್ಲಿನ ಸಹಮತಿಯೊಂದಿಗೆ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR. 275
ಉಮಾದೇವಿ,
ಸರ್ಕಾರದ ಅಧೀನ ಕಾರ್ಯದರ್ಶಿ,
SC-100
ಕಂದಾಯ ಇಲಾಖೆ (ಭೂಮಂಜೂರಾತಿ-1).
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ೫೬೩ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯ
ವಿಷಯ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುವ ಕುರಿತು-ಆದೇಶ.
ಓದಲಾಗಿದೆ: 1. ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಪತ್ರ ಸಂಖ್ಯೆ:
ಕರಾಹಿಂವ/ಸಕೋ/ಸಿಆರ್-16/ 2012-13, ದಿ: 16.07.2013.
2. ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಪತ್ರ ಸಂಖ್ಯೆ: ಕರಾಹಿಂವ /ಸಿಬ್ಬಂದಿ/ಸಿಆರ್-41/2011-12, ದಿ:26.07.2013.
3. ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಇವರ ಪತ್ರ ಸಂಖ್ಯೆ:
ಕರಾಹಿಂವ/ಸಕೋ/ಸಿಆರ್-01/2013-14, ದಿ:07.08.2013
4. ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಏಕ ಕಡತ ಟಿಪ್ಪಣಿ ಸಂಖ್ಯೆ:ಕರಾಹಿಂವ/ಸಕೊ/ಸಿಆರ್-13/2013-14, ದಿ:17.08.2013.
5. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ದಿನಾಂಕ: 20.08.2013ರಂದು ನಡೆದ ರಾಜ್ಯ ಮಟ್ಟದ ಸಮನ್ವಯ ಸಮಿತಿ ಸಭೆ ನಡವಳಿ.
6. ಆಯೋಗ ಪತ್ರ ಸಂಖ್ಯೆ:ಕರಾಹಿಂವ/ಸಕೋ/ಸಿಆರ್-14/2012-13, ದಿನಾಂಕ:12.12.2013. 7. ಆಯೋಗ ಪತ್ರ ಸಂಖ್ಯೆ:ಕರಾಹಿಂವ/ಸಕೋ/ಸಿಆರ್-01/2013-14, ದಿನಾಂಕ: 27.12.2013.
ಪ್ರಸ್ತಾವನೆ:
ದಿನಾಂಕ:12-07-2013 ರಂದು ಮಂಡಿಸಿದ 2013-14ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವತಿಯಿಂದ ಎಲ್ಲಾ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳಲು ಘೋಷಣೆ ಮಾಡಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಪತ್ರದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವತಿಯಿಂದ ಎಲ್ಲಾ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಉದ್ದೇಶಕ್ಕಾಗಿ ಒಬ್ಬರು ಕಾನೂನು ತಜ್ಞರನ್ನು ನೇಮಿಸಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವತಿಯಿಂದ ಎಲ್ಲಾ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಉದ್ದೇಶಕ್ಕಾಗಿ ಒಬ್ಬರು ಐ.ಎ.ಎಸ್. ಅಧಿಕಾರಿಯನ್ನು ನೇಮಿಸಲು ತಾತ್ಕಾಲಿಕವಾಗಿ "ವಿಶೇಷಾಧಿಕಾರಿ" ಹುದ್ದೆಯನ್ನು ಸೃಜಿಸುವಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಪತ್ರದಲ್ಲಿ ಕೋರಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (3) ರ ಪತ್ರದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವತಿಯಿಂದ ಎಲ್ಲಾ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಉದ್ದೇಶಕ್ಕಾಗಿ ಆಯವ್ಯಯ ಪಟ್ಟಿಯನ್ನು ಅನುಮೋದಿಸಲು ಹಾಗೂ ಆಯೋಗವು ವಿಚಾರ ಸಂಕಿರಣ/ಕಾರ್ಯಗಾರಗಳನ್ನು ಏರ್ಪಡಿಸುವುದರ ಮೂಲಕ ಹಾಗೂ ತಜ್ಞರ ಸಲಹೆ ಪಡೆದು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯನ್ನು ಗುರುತಿಸಲು ಅಳವಡಿಸಬೇಕಾದ ಮಾನದಂಡಗಳನ್ನು ನಿರ್ಧರಿಸಿ ಅದರ ಆಧಾರದ ಮೇಲೆ ಉದ್ದೇಶಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯವಿಧಾನ ಹಾಗೂ ಈ ಸಮೀಕ್ಷೆಯಲ್ಲಿ ಸಂಗ್ರಹಿಸಬೇಕಾದ ಮಾಹಿತಿ/ಅಂಕಿ-ಅಂಶಗಳ ಬಗ್ಗೆ ಕುಟುಂಬದ ಅನುಸೂಚಿ ಹಾಗೂ ಇನ್ನಿತರ ನಮೂನೆಗಳನ್ನು ಅನುಮೋದಿಸಿದೆ. ಏಪ್ರಿಲ್/ಮೇ ಅಥವಾ ಅಕ್ಟೋಬರ್-2014ರ ಮಾಹೆಯಲ್ಲಿ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ರಜಾ ಅವಧಿಯಲ್ಲಿ ಸಮೀಕ್ಷೆಯನ್ನು ಕೈಗೊಳ್ಳಲು ಪ್ರಸ್ತಾಪಿಸಿದ್ದು, ಸಮೀಕ್ಷೆಯ ಪೂರ್ವಸಿದ್ಧತೆ, ಪ್ರತಿ ಮನೆಯ ಸಮೀಕ್ಷಾ ಕಾರ್ಯಾಚರಣೆ ಹಾಗೂ ಸಮೀಕ್ಷಾ ಮಾಹಿತಿಯ ಗಣಕೀಕರಣ, ವಿಶ್ಲೇಷಣೆ ಹಾಗೂ ಸರ್ಕಾರಕ್ಕೆ ಸಲ್ಲಿಸಬೇಕಾದ ವರದಿಯನ್ನು ಸಿದ್ಧಪಡಿಸುವವರೆಗಿನ ಒಟ್ಟಾರೆ ಸಮೀಕ್ಷಾ ಪೂರ್ವ ಹಾಗೂ ನಂತರದ ಕಾರ್ಯಚಟುವಟಿಕೆಗಳಿಗೆ ತಗಲುವ ಅಂದಾಜು ರೂ.117.00 ಕೋಟಿಗಳಿಗೆ ಸದಸ್ಯ ಕಾರ್ಯದರ್ಶಿ ಸರ್ಕಾರದ ಅನುಮೋದನೆ ಕೋರಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (4) ರ ಪತ್ರದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಕೈಗೊಳ್ಳಲಾಗುವ ಸಮೀಕ್ಷಾ ನಮೂನೆ-3 ರಲ್ಲಿ ಸಂಗ್ರಹಿಸಿದ ಮಾಹಿತಿ ಗೌಪ್ಯವಲ್ಲವೆಂದು ಪರಿಗಣಿಸಲು ಕೋರಿರುತ್ತಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ:20-08-2013 ರಂದು ನಡೆದ ರಾಜ್ಯ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಆಧಾರದ ಮೇರೆಗೆ ಉದ್ದೇಶಿತ ಮನೆ-ಮನೆ ಸಮೀಕ್ಷೆ ಕಾರ್ಯಾಚರಣೆಯು ಶೈಕ್ಷಣಿಕ ರಜಾ ಅವಧಿಯಲ್ಲಿ 25 ರಿಂದ 30 ದಿನಗಳ ಅವಧಿಗೆ ನಡೆಯಲ್ಲಿದ್ದು, ಇದಕ್ಕಾಗಿ ಸುಮಾರು 1.05 ಲಕ್ಷ ಗಣತಿದಾರರು, 17500 ಸಮೀಕ್ಷಾ ಮೇಲ್ವಿಚಾರಕರನ್ನಾಗಿ ಸಾರ್ವಜನಿಕ ಶಿಕ್ಷಣ/ಪದವಿ ಪೂರ್ವ ಶಿಕ್ಷಣ ಇಲಾಖೆಯ ಬೋಧಕ/ಬೋಧಕೇತರ ಸಿಬ್ಬಂದಿ ಹಾಗೂ ಇನ್ನಿತರೆ ಇಲಾಖೆಗಳ ಕ್ಷೇತ್ರ ಸಿಬ್ಬಂದಿಗಳನ್ನು ನೇಮಿಸುವುದು, ಸಮೀಕ್ಷೆಗೆ ನೇಮಿಸಲ್ಪಡುವ ಅಧಿಕಾರಿ/ಸಿಬ್ಬಂದಿಗಳಿಗೆ ಸಮೀಕ್ಷಾ ಕಾರ್ಯಾಚರಣೆ ಕುರಿತ ತರಬೇತಿ, ಸಮೀಕ್ಷಾ ನಮೂನೆಗಳು/ಗಣತಿದಾರರ ಕೈಪಿಡಿಗಳ ಮುದ್ರಣ, ಗಣತಿದಾರರಿಗೆ ಬೇಕಾಗುವ ಲೇಖನ ಸಾಮಗ್ರಿಗಳ ಪೂರೈಕೆ ಇತ್ಯಾದಿ ಪೂರ್ವಬಾವಿ ಸಿದ್ಧತೆಗಳಿಗೆ ಸಮೀಕ್ಷಾ ಕಾರ್ಯಾಚರಣೆ ಪ್ರಾರಂಭವಾಗುವ ದಿನಾಂಕದಿಂದ ಕನಿಷ್ಠ 6 ತಿಂಗಳ ಕಾಲಾವಕಾಶ ಅಗತ್ಯವಿರುತ್ತದೆ ಎಂದು ಮೇಲೆ ಓದಲಾದ ಕ್ರಮ ಸಂಖ್ಯೆ (5) ರ ಪತ್ರದಲ್ಲಿ ತಿಳಿಸಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (6) ರ ಪತ್ರದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಧಿನಿಯಮ 1995 ರ ತಿದ್ದುಪಡಿ ಕುರಿತು ಸೆಕ್ಷನ್ 3(2)(ಡಿ) ಮತ್ತು ಸೆಕ್ಷನ್ 9(1)(2) ಗಳಿಗೆ ತಿದ್ದುಪಡಿ ತರುವ ಸಂಬಂಧ ಹಾಗೂ ಆಯೋಗದಿಂದ ಕೈಗೊಳ್ಳಲು ಉದ್ದೇಶಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು 2014ನೇ ಸಾಲಿನಲ್ಲಿ ಕೈಗೊಳ್ಳುವುದಾದಲ್ಲಿ ಅದರ ಆರ್ಥಿಕ ಹೊರೆ ಪರಿಣಾಮ (Financial Implication) ಬಗ್ಗೆ ಆಯೋಗದಲ್ಲಿ ತೀರ್ಮಾನಿಸಲಾಗಿದೆ.
ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ಭಾಗ ೧ ೫೬೪ಮೇಲೆ ಓದಲಾದ ಕ್ರಮ ಸಂಖ್ಯೆ (7) ರ ಪತ್ರದಲ್ಲಿ ಸಮೀಕ್ಷೆ ವೆಚ್ಚ್ಚಕ್ಕಾಗಿ ಈ ಹಿಂದೆ ಆಯೋಗಕ್ಕೆ ಬಿಡುಗಡೆ ಮಾಡಿರುವುದರಲ್ಲಿ ಉಳಿಕೆಯಾಗಿರುವ ಅನುದಾನ ರೂ.4.75 ಕೋಟಿ ಹಾಗೂ 2013-14ನೇ ಸಾಲಿನ ಆಯವ್ಯಯದಲ್ಲಿ ಒದಗಿಸಿರುವ ರೂ.14.71 ಕೋಟಿಗಳ ಜೊತೆಗೆ 2014-15ನೇ ಸಾಲಿನ ಆಯವ್ಯಯದಲ್ಲಿ ಅಂದಾಜು ರೂ.97.54 ಕೋಟಿಗಳನ್ನು ಒದಗಿಸುವಂತೆ ಕೋರಲಾಗಿದೆ.
ಆಯೋಗವು ಉದ್ದೇಶಿತ ಸಮೀಕ್ಷೆ ಕುರಿತಂತೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮ 1995 ಕ್ಕೆ ತಿದ್ದುಪಡಿ ತರುವ ಪ್ರಕ್ರಿಯೆಗೆ ಪ್ರತ್ಯೇಕವಾಗಿ ಕ್ರಮ ಕೈಗೊಳ್ಳಲಾಗಿದೆ. ಸಮೀಕ್ಷೆ ನಮೂನೆ-3 ರಲ್ಲಿ ಸಂಗ್ರಹಿಸಲಾದ ಕುಟುಂಬದ ಮಾಹಿತಿಯನ್ನು "ಗೌಪ್ಯವಲ್ಲ" ಎಂದು ಪರಿಗಣಿಸುವ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯವನ್ನು ನಿರೀಕ್ಷಿಸಿದೆ. ಈ ಎರಡು ವಿಷಯಗಳನ್ನು ಹೊರತು ಪಡಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದಲ್ಲಿನ ಎಲ್ಲಾ ಜಾತಿಗಳ ಜಾತಿವಾರು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಅಕ್ಟೋಬರ್ 2014 ರಲ್ಲಿ ಕೈಗೊಳ್ಳಲು ಸರ್ಕಾರವು ತೀರ್ಮಾನಿಸಿರುತ್ತದೆ. ಅದರಂತೆ ಈ ಕೆಳಕಂಡ ಆದೇಶ.
ಸರ್ಕಾರಿ ಆದೇಶ ಸಂಖ್ಯೆ:ಹಿಂವಕ 271 ಬಿಸಿಎ 2013(ಭಾಗ-1), ಬೆಂಗಳೂರು, ದಿನಾಂಕ: 23.01.2014
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಆಯೋಗವು ಉದ್ದೇಶಿತ ಸಮೀಕ್ಷೆ ಕುರಿತಂತೆ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮ 1995 ಕ್ಕೆ ತಿದ್ದುಪಡಿ ತರುವ ಪ್ರಕ್ರಿಯೆಗೆ ಪ್ರತ್ಯೇಕವಾಗಿ ಕ್ರಮ ಕೈಗೊಂಡಿದ್ದು, ಸಮೀಕ್ಷೆ ನಮೂನೆ-3 ರಲ್ಲಿ ಸಂಗ್ರಹಿಸಲಾದ ಕುಟುಂಬದ ಮಾಹಿತಿಯನ್ನು "ಗೌಪ್ಯವಲ್ಲ" ಎಂದು ಪರಿಗಣಿಸುವ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯವನ್ನು ನಿರೀಕ್ಷಿಸಲಾಗಿದ್ದು ಈ ಎರಡು ವಿಷಯಗಳನ್ನು ಹೊರತು ಪಡಿಸಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವತಿಯಿಂದ ಕೈಗೊಳ್ಳುವ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದ ಈ ಕೆಳಕಂಡ ಅಂಶಗಳಿಗೆ ಸರ್ಕಾರವು ಮಂಜೂರಾತಿ ನೀಡಿ ಆದೇಶಿಸಿದೆ.
1) 30 ದಿನಗಳ ಮನೆ ಮನೆ ಸಮೀಕ್ಷಾ ಕಾರ್ಯಾಚರಣೆಯನ್ನು ಅಕ್ಟೋಬರ್ 2014 ರ ಶೈಕ್ಷಣಿಕ ರಜಾ ಅವಧಿಯಲ್ಲಿ ತೆಗೆದುಕೊಳ್ಳುವುದು.
2) ಸಮೀಕ್ಷಾ ಕಾರ್ಯವನ್ನು ಭಾರತ ಜನಗಣತಿ ಇಲಾಖೆಯ 2011 ನೇ ಜನಗಣತಿ ಮಾದರಿಯಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಇತರೆ ನಗರ ಪಾಲಿಕೆಗಳ ಆಯುಕ್ತರುಗಳ ಮೂಲಕ ಕೈಗೊಳ್ಳುವುದು.
3) ಈ ಸಮೀಕ್ಷಾ ಕಾರ್ಯಾಚರಣೆಗೆ ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆಗಳ ಅಧಿಕಾರಿಗಳು ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ/ಸಾರ್ವಜನಿಕ ಶಿಕ್ಷಣ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಹಾಗೂ ಖಾಸಗಿ ಅನುದಾನಿತ/ಅನುದಾನೇತರ ಶಿಕ್ಷಣ ಸಂಸ್ಥೆಗಳ ಬೋಧಕ ಸಿಬ್ಬಂದಿ ಮತ್ತು ಬೋಧಕೇತರ ಸಿಬ್ಬಂದಿಗಳ ಸೇವೆಯನ್ನು ಬಳಸಿಕೊಳ್ಳುವುದು.
4) ಸಮೀಕ್ಷೆಯ ವಿಶ್ಲೇಷಣೆಯನ್ನು ಮಾಡಿ ವರದಿಯನ್ನು ಸಿದ್ಧಪಡಿಸಲು ಜಿಲ್ಲಾಧಿಕಾರಿಗಳ ಶ್ರೇಣಿಗೆ ಕಡಿಮೆ ಇಲ್ಲದ ವಿಶೇಷಾಧಿಕಾರಿ ಹುದ್ದೆಯನ್ನು ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಲ್ಲಿ ಸೃಜಿಸಿ ಈ ಹುದ್ದೆಗೆ ಓರ್ವ ಕಾರ್ಯನಿರತ ಅಥವಾ ನಿವೃತ್ತ ಐ.ಎ.ಎಸ್. ಅಧಿಕಾರಿಯನ್ನು ನೇಮಕ ಮಾಡುವುದು.
5) 2013-14ನೇ ಸಾಲಿಗೆ ಬಿಡುಗಡೆಗೊಳಿಸಿರುವ ರೂ.14.71 ಕೋಟಿ ಜೊತೆಗೆ 2014-15ನೇ ಸಾಲಿನಲ್ಲಿ ರೂ.97.54 ಕೋಟಿಗಳ ಅನುದಾನವನ್ನು ಸಮೀಕ್ಷೆಗಾಗಿ ಒದಗಿಸಲಾಗುವುದು.
6) ಈ ಸಮೀಕ್ಷೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮ 1995ರ ಸೆಕ್ಷನ್ 3(2)(ಡಿ) ಹಾಗೂ ಸೆಕ್ಷನ್ 9(1)(2)ಕ್ಕೆ ತಿದ್ದುಪಡಿ ನಿರೀಕ್ಷಣೆ ಮೇರೆಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕುಟುಂಬಗಳೂ ಸೇರಿದಂತೆ ಎಲ್ಲಾ ಜನಾಂಗದವರ ಕುಟುಂಬಗಳನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಆಯೋಗವು ಒಳಪಡಿಸಲು ಈ ಸಮೀಕ್ಷೆಯ ಪ್ರತ್ಯೇಕ ಸರ್ಕಾರಿ ಆದೇಶವನ್ನು ಹೊರಡಿಸಲಾಗುವುದು.
7) ಸಮೀಕ್ಷೆ ಪೂರ್ವದ ಸಿದ್ಧತೆಗಳಿಗಾಗಿ ಹಾಗೂ ಸಮೀಕ್ಷೆ ನಂತರದಲ್ಲಿ ಸಮೀಕ್ಷೆ ಮಾಹಿತಿ/ಅಂಕಿ-ಅಂಶಗಳ ವಿಶ್ಲೇಷಣೆ ಹಾಗೂ ವರದಿಯನ್ನು ಅಂತಿಮಗೊಳಿಸುವಲ್ಲಿ ಕಾನೂನು ಸಲಹೆ ಪಡೆಯುವುದಕ್ಕಾಗಿ ಓರ್ವ ಕಾನೂನು ಸಲಹೆಗಾರರನ್ನು ನೇಮಿಸಿಕೊಳ್ಳುವುದು;
ಈ ಆದೇಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಟಿಪ್ಪಣಿ ಸಂಖ್ಯೆ:ಸಿಆಸುಇ 756 ಸೆಅಸೆ 2013 ದಿನಾಂಕ:24-09-2013, ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಎನ್.ಆರ್.ಎರೆಕುಪ್ಪಿ,
PR 222 ಸರ್ಕಾರದ ಅಧೀನ ಕಾರ್ಯದರ್ಶಿ-1 SC 5000
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ೫೬೫
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ಸುತ್ತೋಲೆ
ಸಂಖ್ಯೆ: ಸಿಆಸುಇ 87 ಇಆಇ 2013, ಬೆಂಗಳೂರು, ದಿನಾಂಕ: 21ನೇ ಡಿಸೆಂಬರ್ 2013
ವಿಷಯ : ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಇ-ವಹಿವಾಟುಗಳನ್ನು (e-Transactions) ಕೇಂದ್ರ ಸರ್ಕಾರದ ಇ-ತಾಲ್ {e-TAAL (Electronic Transaction and Aggregation Layer)} ವೇದಿಕೆ (ಪೋರ್ಟಲ್) ಯಲ್ಲಿ ಪ್ರತಿಬಿಂಬಿಸುವ ಬಗ್ಗೆ.
ಉಲ್ಲೇಖ : ದಿನಾಂಕ: 26.10.2013ರ ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 87 ಇಆಇ 2013.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ದಿನಾಂಕ: 26.10.2013ರ ಸರ್ಕಾರಿ ಆದೇಶದನ್ವಯ, ಇತರೆ ಅಂಶಗಳೊಂದಿಗೆ, ರಾಜ್ಯದ ನಿವಾಸಿಗಳಿಗೆ ವಿವಿಧ ಸೇವೆಗಳನ್ನು ನೀಡುತ್ತಿರುವ ಸರ್ಕಾರದ ವಿವಿಧ ಇಲಾಖೆಗಳು ಇ-ತಾಲ್ ವೇದಿಕೆಯ ಸಂಪರ್ಕವನ್ನು ಹೊಂದಬೇಕೆಂದು ಆದೇಶಿಸಲಾಗಿದೆ. ಇದರಿಂದಾಗಿ ಅವುಗಳ ಇ-ವಹಿವಾಟುಗಳು ರಾಷ್ಟ್ರೀಯ ಪೋರ್ಟಲ್ನಲ್ಲಿ ಪ್ರತಿಬಿಂಬಿಸಲು ಆಸ್ಪದವಾಗುತ್ತದೆ. ಕರ್ನಾಟಕದಲ್ಲಿ ವಿದ್ಯುನ್ಮಾನ ಮೂಲಕ ಸೇವೆಗಳನ್ನು ನೀಡುವ ಹಲವು ಕೇಂದ್ರಗಳು, ವಿವಿಧ ಇಲಾಖೆಗಳ ಅಡಿ ಇದ್ದರೂ ಸಹ, ಅವುಗಳ ಇ-ವಹಿವಾಟುಗಳು 'ಇ-ತಾಲ್' ವೇದಿಕೆಯಲ್ಲಿ ಅಲ್ಪ ಪ್ರಮಾಣದಲ್ಲಿ ಪ್ರತಿಬಿಂಬಿತವಾಗಿರುವುದು ಕಂಡು ಬರುತ್ತದೆ. ಆದುದರಿಂದ, ಇ-ವಹಿವಾಟುಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರದ ಇಲಾಖೆಗಳು ಅಂತಹ ವಹಿವಾಟುಗಳನ್ನು ಇ-ತಾಲ್ ವೇದಿಕೆಯಲ್ಲಿ ಪ್ರತಿಬಿಂಬಿಸಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಈ ಮೂಲಕ ಸೂಚಿಸಿದೆ.
2. ಇ-ತಾಲ್ ರಾಷ್ಟ್ರೀಯ ಪೋರ್ಟಲ್ ಅನ್ನು ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ ಸಂಸ್ಥೆಯ ವತಿಯಿಂದ ಕೇಂದ್ರ ಸರ್ಕಾರಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ನೆರವು ಪಡೆಯಲು ಡೆಪ್ಯೂಟಿ ಡೈರೆಕ್ಟರ್ ಜನರಲ್ ಮತ್ತು ರಾಜ್ಯ ಇನ್ಫರ್ಮ್ಯಾಟಿಕ್ಸ್ ಅಧಿಕಾರಿ, ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ (ಎನ್ಐಸಿ), ವಿ.ವಿ.ಗೋಪುರ, ಬೆಂಗಳೂರು ಇವರನ್ನು ಸಂಪರ್ಕಿಸಬಹುದಾಗಿದೆ.
3. ಸಾಂದರ್ಭಿಕವಾಗಿ ಹೇಳುವುದಾದರೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಯ ವ್ಯಾಪ್ತಿಯಲ್ಲಿ ಬರುವ ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ (ಇಡಿಸಿಎಸ್) ನಿರ್ದೇಶನಾಲಯ ನಿರ್ವಹಿಸುತ್ತಿರುವ ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಯೋಜನೆಗಳಡಿ ಆಗುತ್ತಿರುವ ಇ-ವಹಿವಾಟುಗಳಿಗೆ ಸಂಬಂಧಿಸಿದಂತೆ ಇ-ತಾಲ್ ವೇದಿಕೆಯೊಂದಿಗೆ ಈಗಾಗಲೇ ಸಂಪರ್ಕವನ್ನು ಕಲ್ಪಿಸಲಾಗಿದೆ.
4. ಸರ್ಕಾರದ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಯವರುಗಳು ಮೇಲಿನ ಕಂಡಿಕೆ 1 ಮತ್ತು 2ರಲ್ಲಿನ ಸೂಚನೆಗಳನ್ನು ಆಯಾಯ ಆಡಳಿತ ಇಲಾಖೆಯ ಕಾರ್ಯವ್ಯಾಪ್ತಿಗೆ ಬರುವ ಇಲಾಖೆಗಳ ಗಮನಕ್ಕೆ ತರಬೇಕೆಂದು ಕೋರಿದೆ.
P R 227
SC 200
ಎಸ್.ವೀಣಾ, ಪೀಠಾಧಿಕಾರಿ-1 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ)
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ವಿಷಯ : ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಹೆಚ್ಆರ್ಎಂಎಸ್) ಯೋಜನೆಗಾಗಿ ಉನ್ನತ ಮಟ್ಟದ ಚಾಲನಾ ಸಮಿತಿ (Steering Committee) ಯನ್ನು ಮತ್ತು ತಾಂತ್ರಿಕ ಬದಲಾವಣೆ ನಿರ್ವಹಣಾ ಸಮಿತಿ(Technical Change Management Committee) ಯನ್ನು ರಚಿಸುವ ಬಗ್ಗೆ.
ಓದಲಾಗಿದೆ : ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಇ-ಆಡಳಿತ ಕೇಂದ್ರ, ಇವರ ದಿನಾಂಕ: 09.10.2013ರ ಟಿಪ್ಪಣಿ ಸಂಖ್ಯೆ:
ಸಿಇಜಿ/24/ಹೆಚ್ಆರ್ಎಂಎಸ್/2013.
ಪ್ರಸ್ತಾವನೆ:
1. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಇ-ಆಡಳಿತ ಕೇಂದ್ರ, ಇವರು ಮೇಲೆ ಓದಲಾದ ದಿನಾಂಕ: 9.10.2013ರ ಅವರ ಟಿಪ್ಪಣಿಯನ್ವಯ ತಿಳಿಸಿದಂತೆ, ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಹೆಚ್ಆರ್ಎಂಎಸ್) ಒಂದು ಉದ್ಯಮ ಶೀಲ ವೇದಿಕೆ (Enterprise Level Platform)ಯಾಗಿದ್ದು ಅದನ್ನು ಇ-ಆಡಳಿತ ಕೇಂದ್ರವು ನಿರ್ವಹಣೆ ಮಾಡಿ ಅನುಷ್ಠಾನಗೊಳಿಸುತ್ತಿದೆ. ಈ ವೇದಿಕೆಯು 2006ರಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿದ್ದು ಸಂಪೂರ್ಣವಾಗಿ ಫೆಬ್ರವರಿ 2008ರಿಂದ ಕಾರ್ಯಾಚರಣೆಯಲ್ಲಿದೆ. ಇದರ ನಿರ್ವಹಣೆಯನ್ನು ಟೆಂಡರ್ ಪ್ರಕ್ರಿಯೆ ಮೂಲಕ ಆಯ್ಕೆಯಾದ ಸಿಎಂಸಿ ಸಂಸ್ಥೆಗೆ ವಹಿಸಲಾಗಿದೆ. ಈ ಸಂಸ್ಥೆಗೆ ಪ್ರಾರಂಭದಲ್ಲಿ 2010ರ ವರೆಗೆ ಗುತ್ತಿಗೆ ನೀಡಿದ್ದು ತದ ನಂತರ ಮತ್ತೆ 3 ವರ್ಷಕ್ಕೆ ಗುತ್ತಿಗೆ ಅವಧಿಯನ್ನು ಮುಂದುವರೆಸಿದ್ದು, ಅದು 2013ರ ಮಾರ್ಚ್ಗೆ ಕೊನೆಗೊಂಡಿದೆ. ಪ್ರಸ್ತುತ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯನ್ನು ಹೆಚ್ಆರ್ಎಂಎಸ್ 1.0 ರಿಂದ 2.0 ಗೆ ಉನ್ನತೀಕರಿಸಲು ಉದ್ದೇಶಿಸಿದ್ದು, ಅದರಲ್ಲಿ ಹೆಚ್ಚಿನ ವಿಶೇಷತೆಗಳೊಂದಿಗೆ ಖಜಾನೆ ವ್ಯವಸ್ಥೆಗೆ ಏಕೀಕರಿಸುವ ವ್ಯವಸ್ಥೆ ಜಾರಿಗೆ ತರುವ ಅಂಶವು ಒಳಗೊಂಡಿದೆ.
2. ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯು ಬಹು ಜಟಿಲವಾದ ವ್ಯವಸ್ಥೆಯಾಗಿದೆ. ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಮೇಲ್ವಿಚಾರಣೆಯನ್ನು ಮಾಡಲು ಮತ್ತು ಹೆಚ್.ಆರ್.ಎಂ.ಎಸ್ 2.0ರ ಅನುಷ್ಠಾನದ ಚಾಲನೆ (steering) ಮಾಡಲು ಉನ್ನತ ಮಟ್ಟದ ಚಾಲನಾ ಸಮಿತಿಯನ್ನು ರಚಿಸಲು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಇ-ಆಡಳಿತ ಕೇಂದ್ರ ರವರು, ಮೇಲೆ ಓದಲಾದ ದಿನಾಂಕ: 09.10.2013ರ ಅವರ ಟಿಪ್ಪಣಿಯನ್ವಯ ಪ್ರಸ್ತಾಪಿಸಿರುತ್ತಾರೆ. ಇದಲ್ಲದೇ, ವಿವಿಧ ಕಾರಣಗಳಿಗಾಗಿ ಈ ಯೋಜನೆಗೆ ಸಂಬಂಧಿಸಿದ ತಂತ್ರಾಂಶದಲ್ಲಿ ಮಾಡಬಹುದಾದ ಬದಲಾವಣೆಗಳ ಬಗ್ಗೆ ಪರಿಶೀಲಿಸಿ, ಅನುಮೋದನೆ ನೀಡುವ ಸಲುವಾಗಿ ತಾಂತ್ರಿಕ ಬದಲಾವಣೆ ನಿರ್ವಹಣಾ ಸಮಿತಿ (Technical Change Management Committee) ಯನ್ನು ಸಹ ರಚಿಸಲು ಅವರು ಪ್ರಸ್ತಾಪಿಸಿರುತ್ತಾರೆ. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 95 ಇಆಇ 2013, ಬೆಂಗಳೂರು ದಿನಾಂಕ: 26ನೇ ಅಕ್ಟೋಬರ್ 2013
ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ಭಾಗ ೧ ೫೬೬3. ಪ್ರಸ್ತಾವನೆಯಲ್ಲಿ ವಿವರಿಸಿದ ಹಿನ್ನಲೆಯಲ್ಲಿ, ಈ ಕೆಳಕಂಡ ಸಮಿತಿಗಳನ್ನು ಈ ಮೂಲಕ ರಚಿಸಿದೆ:-
| #(ಟಂ'ಖ' | - #6ಂಖಿ |
| < (6'ಖ' 5ದ27@ | - ಂ |
| ಊ (6'ಖ' ಟ[27@ | - ಂ |
| ಉ (6'ಖ' ಒ9> ,58) 6ಟಿ27@ | - ಂ |
| k 'ಖ' ಖ ಖಿಔ27@ಐ(ರಿ ,(ಥಿ86ಖಖಿಔ; | - ಂ |
| (6'ಖ' ಜಓ8) 27@ | - ಂ |
| ಠ (6'ಖ' 5 !ಂ ,097ಂಔ27@ | - ಂ |
| (6'ಖ' '27@ | - ಂ |
| ಈ 'ಖ' ಒ52ಐ258) ; | - ಂ |
| 'ಖ' 5ದ27@ಐ\51; | - ಂ |
| ಚಿಇಘ(71#ಥಿರರ171ಐ=11; 0 ಅಓ #(4ಇ>? | - ಂ |
| < ಟಂ'ಇಋಟಿ>?3 258) ! | - ಂ |
| ಊ ' !ಇ!/ '( -ಇಋಟಿಂ` | - ಜಿ |
4. ಸದರಿ ಸಮಿತಿಯು ಈ ಕೆಳಕಂಡ ಕಾರ್ಯಗಳನ್ನು ನಿರ್ವಹಿಸತಕ್ಕದ್ದು:-
a. Laying down the data governance framework and policy for the use of HRMS by the Government departments and other entities.
b. Review and monitoring of the adoption of HRMS in Government departments.
c. Approval of the requirements for HRMS 2.0, reviewing the implementation through milestones, ensure co-ordination with all the related stakeholders, namely, Finance Department, Treasury, Accountant General, KGID, etc. and provide guidance as necessary for effective development and implementation of HRMS 2.0.
| ಟಂ'ಇಋಟಿ>?3 258) ! | - #6ಂಖಿ |
| < 5ದ27@'( 4ಇ>? | - ಂ |
| ಊ #ಥಿರರ171(4ಇ>?ಓ | - ಂ |
| ಉ ಒ9> ,58) 6ಟಿ27@ಐ!ಓ;'(4ಇ>? | - ಂ |
| k ಒ9> ,58) 6ಟಿ27@ಐ7*( ;'(4ಇ>? | - ಂ |
| ಒ9> ,58) 6ಟಿ27@ಐ!ಇ'ಓ;'(4ಇ>? | - ಂ |
| ಠ ಒ9> ,58) 6ಟಿ27@ಐ58) ;'(4ಇ>? | - ಂ |
| ಇ!/ ಟ[27@ | - ಂ |
| ಈ 8#ಂ8 1(4ಇ>?ಓ | - ಂ |
| ' !ಇ!/'( -ಇಋಟಿಂ`'ಜಿ | - ಜಿ |
6. ಸದರಿ ಸಮಿತಿಯು ಈ ಕೆಳಕಂಡ ಕಾರ್ಯಗಳನ್ನು ನಿರ್ವಹಿಸತಕ್ಕದ್ದು:-
a. To review and approve any technical changes is HRMS application
b. To monitor the implementation of the change Management process.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ವೈ. ಸುಶೀಲ, ಪೀಠಾಧಿಕಾರಿ-1 (ಪ್ರಭಾರ), ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ೫೬೭
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ವಿಷಯ : ಕೇಂದ್ರ ಸರ್ಕಾರದ ಇ-ತಾಲ್ [e-TAAL (Electronic Transaction and Aggregation Layer)] ಯೋಜನೆಯನ್ನು ಕರ್ನಾಟಕದಲ್ಲಿ ನಿರ್ವಹಿಸುವ ಸಲುವಾಗಿ ರಾಜ್ಯ ಮಟ್ಟದ ಯೋಜನಾ ನಿರ್ವಹಣಾ ಸಮಿತಿಯನ್ನು ರಚಿಸುವ ಬಗ್ಗೆ.
ಓದಲಾಗಿದೆ : 1. ಕಾರ್ಯದರ್ಶಿ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ (Deity), ನವದೆಹಲಿ ಇವರ ದಿನಾಂಕ: 5.08.2013ರ ಅ.ಸ ಪತ್ರದ ಸಂಖ್ಯೆ: 3(8)/2013-EG.II
2. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಇ-ಆಡಳಿತ ಕೇಂದ್ರ, ಇವರ ದಿನಾಂಕ: 17.09.2013ರ ಪತ್ರದ ಸಂಖ್ಯೆ: ಸಿಇಜಿ/2/ಎನ್ಇಜಿಪಿ/2013.
ಪ್ರಸ್ತಾವನೆ:
1. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಷ್ಟ್ರದಾದ್ಯಂತ ಹಮ್ಮಿಕೊಂಡಿರುವ ಇ-ಆಡಳಿತ ಪ್ರಕ್ರಿಯೆಗಳ (e-Governance initiatives) ಒಟ್ಟಾರೆ ಇ-ವಹಿವಾಟಿನ ಮಾಹಿತಿಯನ್ನು ಪಡೆಯಲು ಅನುವಾಗಲು ಎನ್ಐಸಿ ಸಂಸ್ಥೆಯಿಂದ 'ಇ-ತಾಲ್' ರಾಷ್ಟೀಯ ಪೋರ್ಟಲ್ನ್ನು ಕೇಂದ್ರ ಸರ್ಕಾರದ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೇಲೆ (1)ರಲ್ಲಿ ಓದಲಾದ ಕೇಂದ್ರ ಸರ್ಕಾರದ ದಿನಾಂಕ: 05.08.2013ರ ಪತ್ರದ ಸಂಬಂಧಿಸಿದ ಭಾಗವನ್ನು ಈ ಕೆಳಗೆ ಉದ್ಧರಿಸಿದೆ:-
"A national portal on e-TAAL (Electronic Transaction and Aggregation Layer) (http://etaal.gov.in) has been developed by National Informatics Centre (NIC) to provide an aggregated view of e-transactions taking place under various e-Governance initiatives of Central and State Governments across the country. This system captures the real time transaction statistics of various e-Services implemented through these applications, which can be connected to eTAAL effortlessly and securely through web service technology.
2. The following are the benefits for departments connected to e-TAAL:
(a) The features of this portal would give the user departments a very good MIS and monitoring
tools. The real time MIS on e-Transactions gets customized to the State/Department
automatically on enrolment with the portal.
(b) The transparency in the delivery of services would be greatly enhanced.
(c) eTAAL can provide a platform for motivating the departments and agencies to implement e-transaction-oriented and citizen centric e-Governance projects.
(d) Enable each State to get a national level comparative picture of the nature and volume of e-Services being provided by other States.
(e) eTAAL enhances the visibility of e-Governance efforts.
3. Please visit the eTAAL portal at your earliest convenience and advise the departments providing e-services to connect to eTAAL at the earliest. The SIO of the State Unit of NIC may be contacted for technical support."
2. ರಾಜ್ಯದ ನಿವಾಸಿಗಳಿಗೆ ವಿವಿಧ ಸೇವೆಗಳನ್ನು ನೀಡುತ್ತಿರುವ ಇಲಾಖೆಗಳು 'ಇ-ತಾಲ್' ವೇದಿಕೆಯ ಸಂಪರ್ಕವನ್ನು ಹೊಂದಿದಲ್ಲಿ, ಅವುಗಳ ಇ-ವಹಿವಾಟುಗಳು ರಾಷ್ಟ್ರೀಯ ಪೋರ್ಟಲ್ನಲ್ಲಿ ಪ್ರತಿಬಿಂಬಿಸಬಹುದಿದೆ ಎಂದು ಹಾಗೂ ಈ ಕುರಿತಂತೆ ಅಗತ್ಯ ಕ್ರಮತೆಗೆದುಕೊಳ್ಳಲು ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಬಹುದಾಗಿದೆ ಮತ್ತು ರಾಜ್ಯ ಮಟ್ಟದ ಯೋಜನಾ ನಿರ್ವಹಣಾ ಸಮಿತಿ(State Level Project Management Committee)ಯನ್ನು ರಚಿಸಬಹುದಾಗಿದೆಯೆಂದು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಇ-ಆಡಳಿತ ಕೇಂದ್ರ ಇವರು ಮೇಲೆ (2)ರಲ್ಲಿ ಓದಲಾದ ದಿನಾಂಕ: 17.09.2013ರ ಅವರ ಪತ್ರದನ್ವಯ ಪ್ರಸ್ತಾಪಿಸಿರುತ್ತಾರೆ.
ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 87 ಇಆಇ 2013, ಬೆಂಗಳೂರು, ದಿನಾಂಕ: 26ನೇ ಅಕ್ಟೋಬರ್ 2013
3. ಪ್ರಸ್ತಾವನೆಯಲ್ಲಿ ವಿವರಿಸಿದ ಹಿನ್ನೆಲೆಯಲ್ಲಿ, ರಾಜ್ಯದ ನಿವಾಸಿಗಳಿಗೆ ವಿವಿಧ ಸೇವೆಗಳನ್ನು ನೀಡುತ್ತಿರುವ ಇಲಾಖೆಗಳು ಇ-ತಾಲ್ ವೇದಿಕೆಯ ಸಂಪರ್ಕವನ್ನು ಹೊಂದಬೇಕೆಂದು ಈ ಮೂಲಕ ಆದೇಶಿಸಿದೆ. ಇ-ತಾಲ್ ಯೋಜನೆಯನ್ನು ಕರ್ನಾಟಕದಲ್ಲಿ ನಿರ್ವಹಿಸುವ ಸಲುವಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಿಆಸುಇ(ಇ-ಆಡಳಿತ) ಇವರ ಅಧ್ಯಕ್ಷತೆಯಲ್ಲಿ ಈ ಕೆಳಕಂಡ ಸದಸ್ಯರನ್ನೊಳಗೊಂಡ ರಾಜ್ಯ ಮಟ್ಟದ ಯೋಜನಾ ನಿರ್ವಹಣಾ ಸಮಿತಿ (State Level Project Management Committee)ಯನ್ನು ಸರ್ಕಾರ ಈ ಮೂಲಕ ರಚಿಸಿದೆ:-
| 'ಖ' ಒ52ಐ258) ; | - #6ಂಖಿ |
| < (6'ಖ' '27@ | - ಂ |
| ಊ 'ಖ' 5ದ27@ಐ\51; | - ಂ |
| ಉ (6'ಖ' !ಟಿ\?ಆ>ಚ ,(ಜಿ' 1[127@ | - ಂ |
| k 5', ಔಕಂ 327@ | - ಂ |
| 5', 327@ | - ಂ |
| ಠ 5', ಅ6 '( ,ಅ6 ಟ7ಓಐ117151; | - ಂ |
| ಇ!/ (ಥಿ8) 27@ | - ಂ |
| ಈ ( ಂ01' !.''>?3 0^ಜಿ|ಂ''' | - ಂ |
| ಟಂ'ಇಋಟಿ>?3 258) ! | - ಂ |
| ಂ 21(6 1'ಂಛ1ಘ #>?3 ಂ_71 21(61'ಂಛ1 01 ಐ1ಒ; ಅ ಓ | - ಂ |
| < 4'ಇ!ಖ2 #>?3'ಓ | - ಂ |
| ಊ ಇ!/ ಂ-3!! ಟಿಇ!/' | - ಂ'ಖ |
4. ಸದರಿ ಸಮಿತಿಯು ಈ ಕೆಳಕಂಡ ಕಾರ್ಯಗಳನ್ನು ನಿರ್ವಹಿಸತಕ್ಕದ್ದು:-
(1) Identification of e-Services for inclusion in eTAAL as per the criteria specified.
(2) Formulation of policies regarding classification of e-Transactions/ eServices.
(3) Monitor reporting of transactions to eTAAL by various Ministries/Departments of the Central government. (4) Provide guidance to various stakeholders for smooth implementation.
(5) Organise workshops, training and media awareness programmes for promotion of eTAAL.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, P R 229 SC 200
ವೈ. ಸುಶೀಲ, ಪೀಠಾಧಿಕಾರಿ-1 (ಪ್ರಭಾರ), ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) PERSONNEL AND ADMINISTRATIVE REFORMS SECRETARIAT
Subject : Re-appropriation of funds during 2013-14 under the major head 2012-03-Governor's Secretariat - Grant No- 4-reg.
Read : 1) D.O. Letter No. GS 31 ACT 2014, dated 07-02-2014 of the Secretary to Governor of Karnataka. Rajbhavan, Bangalore.
2) G.O. No. FD 11 TFP 2007, dated: 27-11-2007
PREAMBLE :
Secretary to the Governor of Karnataka, in the letter read at (1) above, while indicating the balance amount Rs.33.68 lakhs left in heads of account (over and above the Governor's Allowance and Privileges ceiling limits) and heads of account along with objective code to which funds required to meet the remaining commitments/expenditure in this financial year 2013-14, has requested to issue necessary re-appropriation order for Rs.33.68 lakhs to meet the expenditure, during the remaining part of this financial year 2013-14.
The proposal of the Secretary to Governor has been examined and hence the following order.
GOVERNMENT ORDER NO. DPAR 05 PRB 2014, BANGALORE, DT:24-02-2014.
Sanction is accorded for the re-appropriation of a sum of Rs.33.68 lakhs (Rupees Thirty three lakhs and sixty eight thousand only) under the Major Head of Account 2012-03-Governor's Secretariat - Grant No. 4, during 2013-14, as per the statement appended to this order.
2) This order is issued in accordance with the financial powers delegated to the Administration Department vide G.O. No. FO 11 TFP 2007, dated 27-11-2007.
By Order and in the name of the Governor of Karnataka,
SHAILAJA D. BORKAR,
Under Secretary to Government,
DPAR (Political)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ೫೬೯
K.F.C. FORM 22 __ A (ART. 108)
RE-APPROPRIATION STATEMENT AND ANNEXURE TO GOVERNMENT ORDER NO. DPAR 05 PRB 2014, DATED : 24-02-2014
Grant No. 4
(Rs. in lakhs)
- {{^{{FOOTNOTE 00}}}} {{^{{FOOTNOTE 25}}}}.{{^{{FOOTNOTE 00}}}} {{^{{FOOTNOTE 33}}}}.{{^{{FOOTNOTE 68}}}} {{^{{FOOTNOTE 33}}}}.{{^{{FOOTNOTE 68}}}} Insufficient funds in Other Expenditure heads SHAILAJA D. BORKAR, Under Secretary to Government, PR 226 DPAR (Political) ↩
| Head to estimate proposed to be increased | Head of estimate proposed to be reduced | ||||||||
| Major/Minor Sub and Heads of Budget (The same details must be given as in the printed Budget Estimate) | Amount as in the sanctioned Budget estimate 2013-14 | Actual Expr. during remainder of the year 2013-14 | Probable Expr. expected during remainder of the year 2013-14 | Amount of Addl. allotment required 2013-14 | Amount as in the sanctioned Budget Estimate 2013-14 | Actual Expr. up-to date 2013-14 | Probable Expr. during remainder of the year 2013-14 | Amount Available for re- appro- priation in 2013-14 | Remarks (Here state fully the reasons for exceeding the allotment and for anticipating the savings) |
| 2012-03-800-0-00 (051)- OE | 25.00 | 25.00 | 33.68 | 33.68 | Insufficient funds in Other Expenditure heads | ||||
| 2012-03-103-0-04 (059) Gardens | 4.50 | 4.50 | Re-appropriated vide order No. GS 31 ACT 2013, dt. 31-12-2013 | ||||||
| 2012-03-104-0-00 (051) SA | 0.50 | 0.50 | Re-appropriated vide order No. GS 31 ACT 2013, dt: 31-12-2013 | ||||||
| 2012-03-103-0-01 HHGE (051) | 22.00 | 5.00 | 17.00 | Due to limitations under GAP rules which require approval of expenditure exceeding 5.00 lakhs. Hence proposed for reappropriation | |||||
| 2012-03-103-0-03 MROR (200) | 10.00 | 2.50 | 7.50 | Due to limitations under GAP rules which require approval from Govt. of India exceeding 2.50 lakhs | |||||
| 2012-03-103-0-06 EA (051) | 5.00 | 1.00 | 4.00 | Due to limitations under GAP rules which require approval from Govt. of India exceeding 1.00 lakh | |||||
| 2012-03-107-0-00 CA (059) | 25.18 | 20.00 | 5.18 | Due to limitations under GAP rules which require approval from Govt. of India exceeding 20.00 lakhs | |||||
| Total Rs. | 30.00 | 30.00 | 33.68 | 33.68 | 62.18 | 28.50 | ಖ | 33.68 |
ನಗರಾಭಿವೃದ್ಧಿ ಸಚಿವಾಲಯ
ವಿಷಯಃ-
ಯಾದಗಿರಿ ಸ್ಥಳೀಯ ಯೋಜನಾ ಪ್ರದೇಶದ ಮಹಾ ಯೋಜನೆ (ಪರಿಷ್ಕøತ) ಗೆ ಸರ್ಕಾರದ ತಾತ್ಕಾಲಿಕ ಅನುಮೋದನೆ ನೀಡುವ ಬಗ್ಗೆ ಓದಲಾಗಿದೆ:- 1) ಸರ್ಕಾರದ ಆದೇಶ ಸಂಖ್ಯೆ:ನಅಇ:129:ಎಂಐಬಿ:2000, ದಿ:22-08-2000.
2) ಸದಸ್ಯ ಕಾರ್ಯದರ್ಶಿ, ಯಾದಗಿರಿ ಯೋಜನಾ ಪ್ರಾಧಿಕಾರದ ಪತ್ರ ಸಂಖ್ಯೆ:ನಯೋಪ್ರಾಯಾ:ಮ.ಯೋ:2012-13:991-92, ದಿನಾಂಕ 15-03-2013 ಮತ್ತು ದಿ:11-07-2013.
3) ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಏಕ ಕಡತ ಸಂಖ್ಯೆ:ನಗ್ರಾಯೋ:ಗುವಿ (30):ಮ.ಯೋ (ಪ): ತಾತ್ಕಾಲಿಕ:
2013-14 ರಲ್ಲಿ ನೀಡಿರುವ ಅಭಿಪ್ರಾಯ ದಿನಾಂಕ:27.8.2013.
ಪ್ರಸ್ತಾವನೆ:
ಮೇಲೆ ಓದಲಾದ (1) ರ ಸರ್ಕಾರಿ ಆದೇಶದಲ್ಲಿ ಯಾದಗಿರಿ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶದ ಮಹಾ ಯೋಜನೆಗೆ ಅಂತಿಮ ಅನುಮೋದನೆ ನೀಡಲಾಗಿದೆ.
ಮೇಲೆ ಓದಲಾದ (2)ರ ದಿನಾಂಕ:15-03-2013 ರ ಪತ್ರದಲ್ಲಿ ಯಾದಗಿರಿ ಯೋಜನಾ ಪ್ರಾಧಿಕಾರವು ಯಾದಗಿರಿ ಸ್ಥಳೀಯ ಯೋಜನಾ ಪ್ರದೇಶಕ್ಕೆ ತಯಾರಿಸಿರುವ ಮಹಾ ಯೋಜನೆ (ಪರಿಷ್ಕøತ) ಕುರಿತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 13(ಡಿ) ರನ್ವಯ ನಕ್ಷೆಗಳನ್ನು ಹಾಗೂ ವರದಿಯನ್ನು ತಯಾರಿಸಿ ಸರ್ಕಾರದ ತಾತ್ಕಾಲಿಕ ಅನುಮೋದನೆಗೆ ಸಲ್ಲಿಸಿದೆ.
ಮೇಲೆ ಓದಲಾದ (3)ರ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಕಛೇರಿಯ ಕಡತದಲ್ಲಿ, ಯಾದಗಿರಿ ನಗರದ ಜನಸಂಖ್ಯೆಯು 2031 ರಲ್ಲಿ 2,00,000 ಗಳಷ್ಟು ಬೆಳವಣಿಗೆಯಾಗುವುದಾಗಿ ಅಂದಾಜಿಸಿ ಮಹಾ ಯೋಜನೆಯನ್ನು ತಯಾರಿಸಲಾಗಿದೆ. ಯಾದಗಿರಿ ಸ್ಥಳೀಯ ಯೋಜನಾ ಪ್ರದೇಶದ ಒಟ್ಟು 2173.85 ಹೆಕ್ಟೇರ್ ಪ್ರದೇಶವನ್ನು ನಗರದ ಅಭಿವೃದ್ಧಿಗಾಗಿ ನಗರೀಕರಣದ ಎಲ್ಲೆಯೆಂದು ಪ್ರಸ್ತಾಪಿಸಿ, ಮಹಾಯೋಜನೆ (ಪರಿಷ್ಕøತ) ಯನ್ನು ರೂಪಿಸಲಾಗಿದೆ. ನಗರದ ಮುಂದಿನ ಯೋಜಿತ ಬೆಳವಣಿಗೆಗೆ ಪ್ರಸ್ತಾಪಿಸಿರುವ 2173.85 ಹೆಕ್ಟೇರ್ ಪ್ರದೇಶದಲ್ಲಿ, ವಸತಿಗಾಗಿ 1187.37 ಹೆಕ್ಟೇರ್ (ಶೇ.54.62), ವಾಣಿಜ್ಯಕ್ಕಾಗಿ 99.26 ಹೆಕ್ಟೇರ್ (ಶೇ.4.57), ಕೈಗಾರಿಕೆಗಾಗಿ 69.16 ಹೆಕ್ಟೇರ್ (ಶೇ.3.18), ಸಾರ್ವಜನಿಕಃಅರೆ ಸಾರ್ವಜನಿಕ ಉಪಯೋಗಕ್ಕೆ 146.41 ಹೆಕ್ಟೇರ್(ಶೇ.6.74) ಉದ್ಯಾನವನ ಮತ್ತು ಬಯಲು ಜಾಗಕ್ಕಾಗಿ 232.47 ಹೆಕ್ಟೇರ್ (ಶೇ.10.69) ಹಾಗೂ ಸಾರಿಗೆ/ ಸಂಪರ್ಕ ವಲಯಕ್ಕೆ 422.37 ಹೆಕ್ಟೇರ್ (ಶೇಕಡ 19.43), ನಾಗರೀಕ ಸೌಲಭ್ಯಕ್ಕಾಗಿ 16.81 ಹೆಕ್ಟೇರ್ (ಶೇ.0.77) ಪ್ರದೇಶವನ್ನು ನಿಗಧಿಪಡಿಸಲಾಗಿದೆ. ಮಹಾ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಅಗತ್ಯವಿರುವ ವಲಯ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಸದರಿ ಮಹಾ ಯೋಜನೆ (ಪರಿಷ್ಕøತ) ಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 13(1) ರನ್ವಯ ತಾತ್ಕಾಲಿಕ ಅನುಮೋದನೆ ನೀಡಲು ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.
ಸದರಿ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ:.ನಅಇ 150 ಗುಅಪ್ರಾ 2013 ದಿನಾಂಕ:1.3.2014
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಯಾದಗಿರಿ ಸ್ಥಳೀಯ ಯೋಜನಾ ಪ್ರದೇಶಕ್ಕೆ ರೂಪಿಸಿರುವ ಮಹಾ ಯೋಜನೆ (ಪರಿಷ್ಕøತ) ಈ ಕೆಳಕಂಡ ಷರತ್ತಿಗೊಳಪಟ್ಟು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 13(1)ರನ್ವಯ ಸರ್ಕಾರದ ತಾತ್ಕಾಲಿಕ ಅನುಮೋದನೆಯನ್ನು ನೀಡಲಾಗಿದೆ. ಮಹಾ ಯೋಜನೆ (ಪರಿಷ್ಕøತ) ಗೆ ತಾತ್ಕಾಲಿಕ ಅನುಮೋದನೆ ನೀಡಿದ ಗುರುತಾಗಿ ವರದಿ ಹಾಗೂ ನಕ್ಷೆಗಳ ಮೇಲೆ ಸರ್ಕಾರದ ಮುದ್ರೆಯನ್ನು ಹಾಕಲಾಗಿದೆ.
ಷರತ್ತು: ಮಹಾಯೋಜನೆಯ ನಕ್ಷೆ ಸಂ:3ರಲ್ಲಿ (ಜನಸಂಖ್ಯಾ ಅಧ್ಯಯನ ನಕ್ಷೆ) ಅಂಕಿ ಅಂಶಗಳನ್ನು ಅಗತ್ಯವಿರುವಲ್ಲಿ ಕಾಲೋಚಿತಗೊಳಿಸಿ, ಅಂತಿಮ ಅನುಮೋದನೆಗೆ ಸಲ್ಲಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಟಿ.ಎಂ.ವಾಸುದೇವರಾವ್
PR.284.
SC.50
ಸರ್ಕಾರದ ಅಧೀನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ.
ಒಳಾಡಳಿತ ಸಚಿವಾಲಯ
ವಿಷಯ: ಶ್ರೀ ಆರ್.ಎನ್. ಕಟಗಿ, ಸಿ.ಪಿ.ಸಿ.-2469, ಗೋಕುಲ ರೋಡ ಪೊಲೀಸ್ ಟಾಣೆ, ಹುಬ್ಬಳ್ಳಿ-ಧಾರವಾಡ ನಗರ ಇವರ ಪರಿಷ್ಕರಣ ಮೇಲ್ಮನವಿಯ ಬಗ್ಗೆ ಅಂತಿಮ ಆದೇಶ.
ಓದಲಾಗಿದೆ: 1) ಶಿಸ್ತು ಪ್ರಾಧಿಕಾರ ಹಾಗೂ ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ನಗರ ಇವರ ಆದೇಶ ಸಂಖ್ಯೆ: ಸಿಬ್ಬಂದಿ- 3/ನಿಯಮ-6/09/2009 (ಆದೇಶ ಪುಸ್ತಕ ಸಂಖ್ಯೆ: 675/2012) ದಿನಾಂಕ 12.07.2012
2) ಮೇಲ್ಮನವಿ ಪ್ರಾಧಿಕಾರ ಹಾಗೂ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು, ಬೆಂಗಳೂರು ಇವರ ಆದೇಶ ಸಂಖ್ಯೆ: ಅಪೀಲು(4)/32/2012-13 (ಓ.ಬಿ.ಸಂಖ್ಯೆ: 20/2013-14) ದಿನಾಂಕ __.07.2013
3) ಅರ್ಜಿದಾರರ ಪರಿಷ್ಕರಣ ಮೇಲ್ಮನವಿ ಅರ್ಜಿ ದಿನಾಂಕ: 02.09.2013
4) ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು, ಬೆಂಗಳೂರು, ಇವರ ಪತ್ರ ಸಂಖ್ಯೆ: ಅಪೀಲು(2)51/2013- 14 ದಿನಾಂಕ 28.11.2013
5) ಕರ್ನಾಟಕ ಲೋಕಸೇವಾ ಆಯೋಗದ ಪತ್ರ ಸಂಖ್ಯೆ: ಪಿಎಸ್ಸಿ 225 ಸಿಎನ್ಎಸ್ 2013 ದಿನಾಂಕ: 14.02.2014ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ೫೭೧
ಪ್ರಸ್ತಾವನೆ:
ಶ್ರೀ ಆರ್.ಎನ್. ಕಟಗಿ, ಸಿ.ಪಿ.ಸಿ.-2469, (ಇನ್ನು ಮುಂದೆ ಅರ್ಜಿದಾರರೆಂದು ಕರೆಯಲ್ಪಡುವ) ಇವರು ಗೋಕುಲ ರೋಡ ಪೊಲೀಸ್ ಟಾಣೆ, ಹುಬ್ಬಳ್ಳಿ-ಧಾರವಾಡ ನಗರ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರುಹಾಜರಾದ ಕಾರಣದ ಮೇಲೆ ಇವರ ವಿರುದ್ಧ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿ) ನಿಯಮಗಳು 1965ರ ನಿಯಮ 6ರಡಿ ಇಲಾಖಾ ವಿಚಾರಣೆಗೆ ಆದೇಶಿಸಿ ಈ ಕೆಳಕಂಡಂತೆ ದೋಷಾರೋಪಣೆಯನ್ನು ಹೊರಡಿಸಲಾಗಿದೆ.
ದೋಷಾರೋಪಣೆ:-
"ಶ್ರೀ ಆರ್.ಎನ್. ಕಟಗಿ, ಸಿಪಿಸಿ 2469, ಹುಬ್ಬಳ್ಳಿ ಗೋಕುಲ ರೋಡ ಪೊಲೀಸ್ ಠಾಣೆ ಇವರಿಗೆ ದಿನಾಂಕ: 31.12.2008 ರಂದು ಬೆಳಿಗ್ಗೆ 09.00 ಗಂಟೆಯಿಂದ 12.00 ಗಂಟೆಯವರೆಗೆ ಠಾಣೆಯಲ್ಲಿ ಪಹರೆ ಕರ್ತವ್ಯಕ್ಕೆ ನೇಮಿಸಿದ್ದು ಆದರೆ ಸದರಿಯವರು ದಿನಾಂಕ: 31.12.2008 ರಂದು ಕರ್ತವ್ಯಕ್ಕೆ ಬಾರದೇ ಅವರಿಗೆ ಕರ್ತವ್ಯ ಬದಲಾವಣೆ ಮಾಡಿದ್ದರಿಂದ ಗೈರು ಹಾಜರ ಉಳಿದಿದ್ದು, ಮಾನ್ಯ ಸಿ.ಓ.ಪಿ., ಹು-ಧಾ ರವರ ಕಾರ್ಯಾಲಯದಿಂದ "ಕರ್ತವ್ಯ ಫಲಾಯನ ಸೂಚನಾ ಪತ್ರ." ಹೊರಡಿಸಿರುತ್ತಾರೆ. ಸಿಪಿಸಿ 2469 ಇವರು "ಕರ್ತವ್ಯ ಫಲಾಯನ ಪತ್ರವನ್ನು" ದಿನಾಂಕ: 02.04.2009 ರಂದು ಸ್ವೀಕರಿಸಿಕೊಂಡಿದ್ದರೂ ಸಹ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಇದ್ದುದ್ದರಿಂದ, ಮಾನ್ಯ ಸಿ.ಓ.ಸಿ, ಹು-ಧಾ ರವರ ಕಾರ್ಯಾಲಯದಿಂದ ದಿನಾಂಕ: 07.07.2009 ರಂದು ಜ್ಞಾಪನವನ್ನು ಹೊರಡಿಸಿದ ನಂತರ ದಿನಾಂಕ: 09.07.2009ರಂದು ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಮತ್ತು ಕರ್ತವ್ಯಕ್ಕೆ ಹಾಜರಾಗುವಾಗ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡ ಬಗ್ಗೆ ಪ್ರಮಾಣ ಪತ್ರಗಳನ್ನು ಪೂರೈಸಿದ್ದು, ಸದರಿ ಪ್ರಮಾಣ ಪತ್ರಗಳಲ್ಲಿ ಸಿಪಿಸಿ 2469ನೇದವರು ಸುಧೀರ್ಘ ರಜೆಯ ಮೇಲೆ ಹೋಗಲು ಗಂಭೀರ ಕಾಯಿಲೆಯ ಬಗ್ಗೆ ನಮೂದಿಸಿರುವುದಿಲ್ಲ.
ನೀವು ಸಿಪಿಸಿ 2469 ಆರ್.ಎನ್. ಕಟಗಿ ಲೋಕಸಭಾ ಚುನಾವಣೆ, ವಿಐಪಿ ಬಂದೂಬಸ್ತ ಹಾಗೂ ಇತರ ಪ್ರಮುಖ ಕರ್ತವ್ಯದ ಸಮಯದಲ್ಲಿ ವಿನಾಕಾರಣ ಗೈರುಹಾಜರಾಗುವ ಸ್ವಭಾವದವರಿದ್ದು ದಿನಾಂಕ: 31.12.2008 ರಿಂದ 08.07.2009 ರವರೆಗೆ ಸುಮಾರು 6 ತಿಂಗಳಿಗಿಂತ ಅಧಿಕ ಅವಧಿ ಅನಧೀಕೃವಾಗಿ ಕರ್ತವ್ಯಕ್ಕೆ ಗೈರು ಹಾಜರ ಉಳಿದು ಲೋಕಸಭೆ ಚುನಾವಣೆ-09 ನಂತಹ ಮಹತ್ವದ ಕರ್ತವ್ಯದಲ್ಲಿ ಅನಧೀಕೃತವಾಗಿ ಗೈರಹಾಜರ ಉಳಿದು ಘೋರ ನಿರ್ಲಕ್ಷ್ಯತನ ತೋರಿಸಿರುತ್ತೀರಿ ಹಾಗೂ ಮಾನ್ಯ ಪೊಲೀಸ್ ಆಯುಕ್ತರ ಕಾರ್ಯಾಯಲದಿಂದ ಹೊರಡಿಸಿದ ಕರ್ತವ್ಯ ಫಲಾಯನ ಪತ್ರಕ್ಕೂ ಸಹ ಸ್ಪಂದಿಸದೇ ದುರ್ನಡತೆಯನ್ನು ಪ್ರದರ್ಶಿಸಿರುವದಿಂದ ಈ ದೋಷಾರೋಪಣೆಯನ್ನು ಹೊರಡಿಸಿದ್ದು ಇದೆ"
ಮೇಲ್ಕಂಡ ಆರೋಪದ ಮೇಲೆ ನಡೆಸಲಾದ ಇಲಾಖಾ ವಿಚಾರಣೆಯಲ್ಲಿ ಇವರ ವಿರುದ್ಧದ ಆರೋಪವು ಸಾಬೀತಾಗಿದೆಯೆಂದು ವಿಚಾರಣಾಧಿಕಾರಿಗಳು ಅಭಿಪ್ರಾಯಪಟ್ಟಿದ್ದು ಅದರನ್ವಯ ಅರ್ಜಿದಾರರ ಸಮಜಾಯಿಷಿ ಪಡೆದು ಅದನ್ನೊಪ್ಪದ ಶಿಸ್ತು ಪ್ರಾಧಿಕಾರ ಹಾಗೂ ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ನಗರ ಇವರು ಮೇಲೆ ಕ್ರಮ ಸಂಖ್ಯೆ:(1)ರಲ್ಲಿ ಓದಲಾದ ದಿನಾಂಕ 12.07.2012ರ ಆದೇಶದಲ್ಲಿ ಅರ್ಜಿದಾರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ "ಕಡ್ಡಾಯ ನಿವೃತ್ತಿ"ಗೊಳಿಸಿ, ಇವರು ಕರ್ತವ್ಯಕ್ಕೆ ಗೈರುಹಾಜರಾದ (ದಿನಾಂಕ 31.12.2008ರಿಂದ 08.07.2009 ರವರೆಗೆ) ಒಟ್ಟು 190 ದಿನಗಳ (06 ತಿಂಗಳು 09 ದಿವಸ) ಅವಧಿಯನ್ನು "ಅನಧಿಕೃತ ಗೈರುಹಾಜರಿ" ಎಂದು ಪರಿಗಣಿಸಿ ದಂಡನೆಯನ್ನು ವಿಧಿಸಲಾಗಿದೆ.
ಈ ಆದೇಶದ ವಿರುದ್ಧ ಸಲ್ಲಿಸಿದ ಮೇಲ್ಮನವಿಯನ್ನು ಮೇಲ್ಮನವಿ ಪ್ರಾಧಿಕಾರ ಹಾಗೂ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು, ಬೆಂಗಳೂರು ಇವರು ಮೇಲೆ ಕ್ರಮ ಸಂಖ್ಯೆ: (2)ರಲ್ಲಿ ಓದಲಾದ ದಿನಾಂಕ __.07.2013ರ ಆದೇಶದಲ್ಲಿ ತಿರಸ್ಕರಿಸಿರುತ್ತಾರೆ.
ಈ ಎರಡೂ ಆದೇಶದ ವಿರುದ್ಧ ಸರ್ಕಾರಕ್ಕೆ ಪರಿಷ್ಕರಣ ಮೇಲ್ಮನವಿಯನ್ನು ಸಲ್ಲಿಸಿರುತ್ತಾರೆ. ಪರಿಷ್ಕರಣ ಮೇಲ್ಮನವಿಯಲ್ಲಿನ ವಾದಾಂಶಗಳನ್ನು ಇಲಾಖಾ ವಿಚಾರಣೆ ದಾಖಲೆಗಳೊಂದಿಗೆ ಪರಿಶೀಲಿಸಲಾಗಿದೆ. ಇಲಾಖಾ ವಿಚಾರಣೆಯಲ್ಲಿ ಆರೋಪಿತರು ಕೇಳುವ ಎಲ್ಲಾ ದಾಖಲೆಗಳನ್ನು ಒದಗಿಸುವುದು, ವಿಚಾರಣಾಧಿಕಾರಿಗಳ ಆದ್ಯ ಕರ್ತವ್ಯವಾಗಿದ್ದರೂ ಸಹಾ ಕೆಲವೊಂದು ಮಹತ್ವದ ದಾಖಲೆಗಳನ್ನು ಆ.ಪೊ.ಅ.ರವರಿಗೆ ನೀಡದೇ ಇರುವುದು, ಇವರ ವಿನಂತಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವುದು ಕಂಡುಬಂದಿರುವುದರಿಂದ ಮತ್ತು ಇಲಾಖಾ ವಿಚಾರಣೆ ಸಮಯದಲ್ಲಿ ಆ.ಪೊ.ಅ.ರವರು ಕೆಲವು ಸ್ಪಷ್ಟ ಕಾರಣಗಳಿಗಾಗಿ ವಿಚಾರಣಾಧಿಕಾರಿಯನ್ನು ಬದಲಾಯಿಸಲು ವಿನಂತಿಸಿಕೊಂಡಾಗ, ಅದನ್ನು ಪರಿಗಣಿಸದಿರುವುದರಿಂದ ಹಾಗೂ ಇಲಾಖಾ ವಿಚಾರಣೆಯನ್ನು ಏಕಪಕ್ಷೀಯವಾಗಿ ಕೈಗೊಂಡಿರುವುದು Principles of Natural Justice ಗೆ ವಿರುದ್ಧವಾಗಿದ್ದು, ನ್ಯಾಯ ಸಮ್ಮತವಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ಅರ್ಜಿದಾರರ ಪರಿಷ್ಕರಣ ಮೇಲ್ಮನವಿಯನ್ನು ಪುರಸ್ಕರಿಸುವ ಕುರಿತಂತೆ ಓದಲಾದ ಕ್ರಮ ಸಂಖ್ಯೆ (5)ರ ಪತ್ರದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಸಹಮತಿಯನ್ನು ಪಡೆದು ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ
ಸರ್ಕಾರದ ಆದೇಶ ಸಂಖ್ಯೆ: ಒಇ 135 ಪೊಸಿಅ 2013 ಬೆಂಗಳೂರು, ದಿನಾಂಕ: 28.02.2014
ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಸೆಕ್ಷನ್ 25ರಡಿಯಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಆರ್.ಎನ್. ಕಟಗಿ, ಸಿ.ಪಿ.ಸಿ.-2469, ಗೋಕುಲ ರೋಡ ಪೊಲೀಸ್ ಠಾಣೆ, ಹುಬ್ಬಳ್ಳಿ-ಧಾರವಾಡ ನಗರ ಇವರಿಗೆ ಶಿಸ್ತು ಪ್ರಾಧಿಕಾರವು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿದ ದಿನಾಂಕ 12.07.2012ರ ಆದೇಶವನ್ನು ರದ್ದುಪಡಿಸಿ, ಅರ್ಜಿದಾರರನ್ನು ಸೇವೆಗೆ ಪುನರ್ ಸ್ಥಾಪಿಸಿ, ಅವರ ಮುಂಬರುವ ಎರಡು ವಾರ್ಷಿಕ ವೇತನ ಬಡ್ತಿಗಳನ್ನು ಅವರ ಮುಂದಿನ ವಾರ್ಷಿಕ ವೇತನ ಬಡ್ತಿಗಳಿಗೆ ಪರಿಣಾಮ ಬೀರುವಂತೆ (with cumulative effect) ತಡೆಯಿಡಿಯುವ ದಂಡನೆಯನ್ನು ವಿಧಿಸಲು ಮತ್ತು ಅವರ ಅನಧಿಕೃತ ಗೈರುಹಾಜರಾದ ದಿನಾಂಕ 31.12.2008 ರಿಂದ 08.07.2009ರ ಅವಧಿಗೆ ವೈದ್ಯಕೀಯ ಕಾರಣಗಳ ಮೇಲೆ ಅವರ ಹಕ್ಕಿನಲ್ಲಿರುವ ರಜೆ ಎಂದು ಪರಿಗಣಿಸಲು ಒಂದು ವೇಳೆ ಅವರ ಹಕ್ಕಿನಲ್ಲಿರುವ ರಜೆ ಕಡಿಮೆ ಬಿದ್ದಲ್ಲಿ, ಸದರಿ ಕಡಿಮೆ ಬಿದ್ದ ಅವಧಿಗೆ ವೇತನ ರಹಿತ ರಜೆಯನ್ನು ಮಂಜೂರು ಮಾಡಲು ಹಾಗೂ ಅರ್ಜಿದಾರನ್ನು ಕಡ್ಡಾಯ ನಿವೃತ್ತಿಗೊಳಿಸಿದ ದಿನಾಂಕದಿಂದ ಅವರನ್ನು ಸೇವೆಗೆ ಪುನರ್ ಸ್ಥಾಪಿಸಿದ ನಂತರ ಕರ್ತವ್ಯಕ್ಕೆ ಹಾಜರಾಗುವ ದಿನಾಂಕದವರೆಗಿನ ಅವಧಿಯನ್ನು "ಡೈಸ್-ನಾನ್" ಎಂದು ಪರಿಗಣಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ದೇವೆಂದ್ರಪ್ಪ ಕಟ್ಟಿಮನಿ
PR.298
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ, (ಪೊಲೀಸ್ ಸೇವೆಗಳು-ಬಿ)೫೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ಭಾಗ ೧
ಒಳಾಡಳಿತ ಸಚಿವಾಲಯ
ಅಧಿಸೂಚನೆ ಸಂಖ್ಯೆ:ಒಇ 520 ಪೊಸಿಪ 2013, ಬೆಂಗಳೂರು, ದಿನಾಂಕ:04-03-2014
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೈದ್ರಾಬಾದ್-ಕರ್ನಾಟಕ ಭಾಗದ ವಿವಿಧ ವೃಂದದ ಅಧಿಕಾರಿ / ನೌಕರರುಗಳಿಗೆ ಬಡ್ತಿಯಲ್ಲಿ ಹಾಗೂ ನೇರ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸಲು ಸರ್ಕಾರದ ಅಧಿಸೂಚನೆ ಸಂಖ್ಯೆ ಸಿಆಸುಇ 06 ಪಿಎಲ್ಎಕ್ಸ್ 2012, ದಿನಾಂಕ 06.11.2013ರಲಿ್ಲ "THE KARNATAKA PUBLIC EMPLOYMENT (RESERVATION IN APPOINTMENT FOR HYDERABAD-KARNATAKA REGION) ORDER 2013"
ರ ಅನುಸಾರ ಈ ಕೆಳಕಂಡ ಹುದ್ದೆಗಳಿಗೆ ಮೀಸಲಾತಿಯನ್ನು ಕಲ್ಪಿಸಿ ಆದೇಶಿಸಿದೆ.
| ಎಈಗ | ಋಊ115ಖ& ಗಿಃಋಘಂಖಿಘಿ8ಙಕಿ | ಎ5ಚಕ5ಖ& ಗಿಃಋಘಂಖಿಓಙಕಿ | ||||
| ಗ,&ಖಿಓ9ಙಕಿ | 1ಈ ಖಿ:9ಙಕಿ | @ಚಕ | ಗ,& ಖಿಓ9ಙಕಿ | 1ಈ ಖಿ:9ಙಕಿ | @ಚಕ | |
| 9<@ | %5 | 1@ | ,, | %1 | 19 | %9 |
| ಎಈಗ | ಋಊ115ಖ& ಗಿಃಋಘಂ(ಘಿ8ಙಕಿ | ಎ5ಚಕ5ಖ& ಗಿಃಋಘಂ (ಓಙಕಿ | ||||
| ಗ,&ಖಿಓ9ಙಕಿ | 1ಈ ಖಿ:9ಙಕಿ | @ಚಕ | ಗ,& ಖಿಓ9ಙಕಿ | 1ಈ ಖಿ:9ಙಕಿ | @ಚಕ | |
| :< | 1< | 1@ | %% | 11 | 11 | 11 |
| ಎಈಗ | ಋಊ115ಖ& ಗಿಃಋಘಂ (75%) | ಎ5ಚಕ5ಖ& ಗಿಃಋಘಂ (8%) | ||||
| ಗ,&ಖಿಓ9ಙಕಿ | 1ಈ ಖಿ:9ಙಕಿ | @ಚಕ | ಗ,& ಖಿಓ9ಙಕಿ | 1ಈ ಖಿ:9ಙಕಿ | @ಚಕ | |
| 39 | 04 | 00 | 04 | 01 | 00 | 01 |
| ಎಈಗ | ಋಊ115ಖ& ಗಿಃಋಘಂ(75%) | ಎ5ಚಕ5ಖ& ಗಿಃಋಘಂ (8%) | ||||
| ಗ,& (80%) | 1ಈ (20%) | @ಚಕ | ಗ,& (80%) | 1ಈ (20%) | @ಚಕ | |
| 12 | 01 | 00 | 01 | 00 | 00 | 00 |
| ಎಈಗ | ಋಊ115ಖ& ಗಿಃಋಘಂ (75%) | ಎ5ಚಕ5ಖ& ಗಿಃಋಘಂ (8%) | ||||
| ಗ,& (80%) | 1ಈ (20%) | @ಚಕ | ಗ,& (80%) | 1ಈ (20%) | @ಚಕ | |
| 09 00 | 00 | 00 | 00 | 00 | 00 | |
| ಋಘ | ಎಈಗ | ಋಊ115ಖ& ಗಿಃಋಘಂ ಖಿಘಿ8ಙಕಿ | ಎ5ಚಕ5ಖ& ಗಿಃ ಋಘಂ (8%) | |||
| ಗ,& ಖಿಓ9ಙಕಿ | 1ಈ ಖಿ:9ಙಕಿ | @ಚಕ | ಗ,& ಖಿಓ9ಙಕಿ | 1ಈ ಖಿ:9ಙಕಿ | ||
| AD(Biology Section) | 6 | 01 | 00 | 01 | 00 | 00 |
| AD (Chemical Section) | 1 | 00 | 00 | 00 | 00 | 00 |
| AD(Physics Section) | 1 | 00 | 00 | 00 | 00 | 00 |
| AD(Fire Arm Section) | 1 | 00 | 00 | 00 | 00 | 00 |
| ಋಘ | ಎಈಗ | ಋಊ115ಖ& ಗಿಃಋಘಂ ಖಿಘಿ8ಙಕಿ | ಎ5ಚಕ5ಖ& ಗಿಃ ಋಘಂ (8%) | |||
| ಗ,& ಖಿಓ9ಙಕಿ | 1ಈ ಖಿ:9ಙಕಿ | @ಚಕ | ಗ,& ಖಿಓ9ಙಕಿ | 1ಈ ಖಿ:9ಙಕಿ | ||
| AD(Question document Section) | 1 | 00 | 00 | 00 | 00 | 00 |
| AD(Toxicology Section) | 6 | 01 | 00 | 01 | 00 | 00 |
| AD(Forensic psychology Section) | 1 | 00 | 00 | 00 | 00 | 00 |
| SO(Biology Section) | 09 | 01 | 00 | 01 | 00 | 00 |
| SO (Chemical Section) | 02 | 00 | 00 | 00 | 00 | 00 |
| SO(Physics Section) | 01 | 00 | 00 | 00 | 00 | 00 |
| SO(Fire Arm Section) | 01 | 00 | 00 | 00 | 00 | 00 |
| SO(Question document Section) | 03 | 00 | 00 | 00 | 00 | 00 |
| ಋಘ | ಎಈಗ | ಋಊ115ಖ& ಗಿಃಋಘಂ (75%) | ಎ5ಚಕ5ಖ& ಗಿಃ ಋಘಂ (8%) | |||
| ಗ,& (80%) | 1ಈ (20%) | @ಚಕ | ಗ,್ತ (80%) | 1ಈ (20%) | ||
| SO(Toxicology Section) | 10 | 01 | 00 | 01 | 00 | 00 |
| SO(Forensic psychology Section) | 07 | 01 | 00 | 01 | 00 | 00 |
| SO(PHOTO) | 01 | 00 | 00 | 00 | 00 | 00 |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ದೇವೆಂದ್ರಪ್ಪ ಕಟ್ಟಿಮನಿ
PR.296
ಸರ್ಕಾರದ ಅಧೀನ ಕಾರ್ಯದರ್ಶಿ SC.300
ಒಳಾಡಳಿತ ಇಲಾಖೆ, (ಪೊಲೀಸ್ ಸೇವೆಗಳು-ಎ)
ಒಳಾಡಳಿತ ಸಚಿವಾಲಯ
ವಿಷಯ: ಶ್ರೀ ಟಿ.ಎಸ್. ಜಗದೀಶ್, ಪಿ.ಐ., ಆರಕ್ಷಕ ಮಹಾ ನಿರೀಕ್ಷಕರವರ ಕಛೇರಿ, ಕೇಂದ್ರ ವಲಯ, ಬೆಂಗಳೂರು ಇವರ ಪರಿಷ್ಕರಣ ಮೇಲ್ಮನವಿಯ ಬಗ್ಗೆ ಅಂತಿಮ ಆದೇಶ.
ಓದಲಾಗಿದೆ: 1) ಶಿಸ್ತು ಪ್ರಾಧಿಕಾರ ಹಾಗೂ ಆರಕ್ಷಕ ಮಹಾ ನಿರೀಕ್ಷಕರು, ಕೇಂದ್ರ ವಲಯ, ಬೆಂಗಳೂರು ಇವರ ಆದೇಶ ಸಂಖ್ಯೆ:
ಪನ್ಸಿ/28/ಡಿಇ/10-11, (ಓ.ಬಿ. ಸಂಖ್ಯೆ: 07/2011-12) ದಿನಾಂಕ 08.04.2011೫೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ಭಾಗ ೧ 2) ಮೇಲ್ಮನವಿ ಪ್ರಾಧಿಕಾರ ಹಾಗೂ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು, ಬೆಂಗಳೂರು, ಇವರ ಆದೇಶ ಸಂಖ್ಯೆ: ಸಿಬಿ(8)22/2011-12 ದಿನಾಂಕ 21.09.2011
3) ಅರ್ಜಿದಾರರ ಪರಿಷ್ಕರಣ ಮೇಲ್ಮನವಿ ಅರ್ಜಿ ದಿನಾಂಕ: 11.09.2013
4) ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು, ಬೆಂಗಳೂರು, ಇವರ ಪತ್ರ ಸಂಖ್ಯೆ:
ಸಿಬಿ(8)22/2011-12 ದಿನಾಂಕ 06.01.2014
ಪ್ರಸ್ತಾವನೆ:
ಶ್ರೀ ಟಿ.ಎಸ್. ಜಗದೀಶ್, ಪಿ.ಐ., ಆರಕ್ಷಕ ಮಹಾ ನಿರೀಕ್ಷಕರವರ ಕಛೇರಿ, ಕೇಂದ್ರ ವಲಯ, ಬೆಂಗಳೂರು (ಇನ್ನು ಮುಂದೆ ಅರ್ಜಿದಾರರೆಂದು ಕರೆಯಲ್ಪಡುವ) ಇವರು ಈ ಹಿಂದೆ ಅತ್ತಿಬೆಲೆ ಪೊಲೀಸ್ ಠಾಣೆ, ಬೆಂಗಳೂರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷ್ಯತೆ, ದುರ್ನಡತೆ, ಅಶಿಸ್ತು ಮತ್ತು ಬೇಜವಾಬ್ದಾರಿತನ ಪ್ರದರ್ಶಿಸಿದ ಕಾರಣದ ಮೇಲೆ ಇವರ ವಿರುದ್ದ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿ) ನಿಯಮಗಳು 1965ರ ನಿಯಮ 6ರಡಿ ಈ ಕೆಳಕಂಡಂತೆ ದೋಷಾರೋಪಣೆಯನ್ನು ಹೊರಿಸಲಾಗಿದೆ.
ದೋಷಾರೋಪಣೆ:-
"ಶ್ರೀ ಟಿ.ಎಸ್. ಜಗದೀಶ, ಪಿ.ಎಸ್.ಐ., ಈ ಹಿಂದೆ ಅತ್ತಿಬೆಲೆ ಪೊಲೀಸ್ ಠಾಣೆ, ಹಾಲಿ ಪಿ.ಐ., ಐ.ಜಿ.ಪಿ. ಕೇಂದ್ರ ವಲಯ ಕಛೇರಿ, ಬೆಂಗಳೂರು ಹಾಗೂ ಶ್ರೀ ಬಿ.ಎಂ. ನಾಗರಾಜ, ಸಿಹೆಚ್ಸಿ-437 ಮತ್ತು ಶ್ರೀ ಕೆ.ಎಸ್. ಪ್ರಸಾದ್, ಸಿಪಿಸಿ-859, ಅತ್ತಿಬೆಲೆ ಪೊಲೀಸ್ ಠಾಣೆ ರವರುಗಳಾದ ನೀವುಗಳು ಶ್ರೀ ಮಹಮದ್ ಇಮ್ರಾನ್ ಬಿನ್ ಮಹಮದ್ ಪೀರ್ 27 ವರ್ಷ, ವ್ಯಾಪಾರ (ಇಲಾಯಿನ್ ಸ್ಕ್ರಾಪ್ ಟ್ರೇಡರ್ಸ್, ಸೋಮಯ್ಯ ಎಂಟರ್ ಪ್ರೈಸಸ್ನ ಡೀಲರ್ಸ್, ಹಳೆ ಮೋಟಾರ್ ಪಾರ್ಟ್ಸ್ ಸ್ಕ್ರಾಪ್ ಟ್ರೇಡರ್ಸ್ನ ಮಾಲೀಕರು) ಇವರುಗಳನ್ನು ನೀವುಗಳು ಅತ್ತಿಬೆಲೆ ಠಾಣೆಗೆ ಕರೆತಂದು ರೂ.3,90,000/- ರೂ.ಗಳನ್ನು ಕೊಡುವಂತೆ ಬಲವಂತ ಪಡಿಸಿ ಅದರಲ್ಲಿ 3,70,000/-ರೂ. ಇವುಗಳನ್ನು ಲಂಚವಾಗಿ ಇವರಿಂದ ಪಡೆದು ಉಳಿಕೆ 20,000/-ರೂ.ಗಳನ್ನು ಕೊಡದೆ ಇದ್ದಾಗ ಮತ್ತೆ ಬಲವಂತ ಪಡಿಸಿರುತ್ತಾರೆಂತ ಹಾಗೂ ಮಧ್ಯವರ್ತಿ ಮೂಲಕ ಕಬ್ಬಿಣವನ್ನು ಠಾಣೆಗೆ ತರೆಸಿ ಠಾಣೆಯಲ್ಲಿಟ್ಟು, ಕಳುವಾದ ಮಾಲನ್ನು ನಿಯಮಗಳ ಪ್ರಕಾರ ಭಾರತ ಸಾಕ್ಷತ್ವ ಅಧಿನಿಯಮ ಕಲಂ 27ರ ಅಡಿಯಲ್ಲಿ ಅಪಾದಿತರಿಂದ ವಸೂಲಿಮಾಡದೆ ಫಿರ್ಯಾದುದಾರರನ್ನು ಅಕ್ರಮವಾಗಿ ಬಂಧನದಲ್ಲಿಟ್ಟು ಅಪರಾಧ ಎಸಗಿ ನಾಗರೀಕ ಸೇವಾ ಉಲ್ಲಂಘನೆ ಮಾಡಿ ತಮ್ಮ ಕರ್ತವ್ಯದಲ್ಲಿ ಅತೀವ್ರ ನಿರ್ಲಕ್ಷ್ಯತೆ, ದುರ್ನಡತೆ, ಅಶಿಸ್ತು, ಬೇಜವಾಬ್ದಾರಿತನದಿಂದ ವರ್ತಿಸಿರುತ್ತೀರೆಂತ."
ಇಲಾಖಾ ವಿಚಾರಣೆಯಲ್ಲಿ ಆ.ಪೊ.ಅ.ರವರ ವಿರುದ್ಧ ಆರೋಪವು ಸಾಬೀತಾದ ಕಾರಣ ಶಿಸ್ತು ಪ್ರಾಧಿಕಾರವು ಕಾರಣ ಕೇಳುವ ನೋಟೀಸು ಜಾರಿ ಮಾಡಿ, ಅರ್ಜಿದಾರರು ನೀಡಿದ ಸಮಜಾಯಿಷಿಯನ್ನು ಒಪ್ಪದ ಶಿಸ್ತು ಪ್ರಾಧಿಕಾರ ಹಾಗೂ ಆರಕ್ಷಕ ಮಹಾ ನಿರೀಕ್ಷಕರು, ಕೇಂದ್ರ ವಲಯ, ಬೆಂಗಳೂರು ಇವರು ಮೇಲೆ ಕ್ರಮ ಸಂಖ್ಯೆ:(1)ರಲ್ಲಿ ಓದಲಾದ ದಿನಾಂಕ: 08.04.2011ರ ಆದೇಶದಲ್ಲಿ ಅರ್ಜಿದಾರರ ವಾರ್ಷಿಕ ವೇತನ ಬಡ್ತಿಯನ್ನು ಮುಂದಿನ ವೇತನ ಬಡ್ತಿಗೆ ಧಕ್ಕೆಯಾಗುವಂತೆ ಎರಡು (2) ವರ್ಷಗಳ ಕಾಲ ಮುಂದೂಡಿ, ಆರೋಪದ ಹಿನ್ನಲೆಯಲ್ಲಿ ಅಮಾನತ್ತಿನಲ್ಲಿ ಕಳೆದಿರುವ ಅವಧಿಯನ್ನು ಅಮಾನತ್ತೆಂದೇ ಪರಿಗಣಿಸಲಾದ ದಂಡನೆಯನ್ನು ವಿಧಿಸಿದೆ.
ಈ ಆದೇಶದ ವಿರುದ್ಧ ಸಲ್ಲಿಸಿದ ಮೇಲ್ಮನವಿಯನ್ನು ಪರಿಶೀಲಿಸಿದ ಮೇಲ್ಮನವಿ ಪ್ರಾಧಿಕಾರ ಹಾಗೂ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು, ಬೆಂಗಳೂರು ಇವರು ಮೇಲೆ ಕ್ರಮ ಸಂಖ್ಯೆ: (2)ರಲ್ಲಿ ಓದಲಾದ ದಿನಾಂಕ: 21.09.2011ರ ಆದೇಶದಲ್ಲಿ ಮೇಲ್ಮನವಿಯನ್ನು ತಿರಸ್ಕರಿಸಿರುತ್ತಾರೆ.
ಈ ಎರಡೂ ಆದೇಶಗಳ ವಿರುದ್ಧ ಅರ್ಜಿದಾರರು ಸರ್ಕಾರಕ್ಕೆ ಪರಿಷ್ಕರಣ ಮೇಲ್ಮನವಿಯನ್ನು ಸಲ್ಲಿಸಿರುತ್ತಾರೆ. ಪರಿಷ್ಕರಣ ಮೇಲ್ಮನವಿಯಲ್ಲಿನ ವಾದಾಂಶಗಳನ್ನು ಇಲಾಖಾ ವಿಚಾರಣಾ ದಾಖಲೆಗಳೊಂದಿಗೆ ಪರಿಶೀಲಿಸಲಾಗಿದೆ. ಅರ್ಜಿದಾರರು ಮೊ.ಸಂ.181/2006ರ ಪ್ರಕರಣದಲ್ಲಿ ಫಿರ್ಯಾದುದಾರರನ್ನು ಅಕ್ರಮ ಬಂಧನದಲ್ಲಿಟ್ಟಿರುವ ಆರೋಪ ಸಾಬೀತಾಗಿರುವುದಿಲ್ಲ ಆದರೆ ಕಳುವಾದ ಮಾಲನ್ನು ಅಮಾನತ್ತುಗೊಳಿಸುವುದರಲ್ಲಿ ಹಾಗೂ ವರದಿ ಮಾಡುವಲ್ಲಿ ಕರ್ತವ್ಯಲೋಪ ಎಸಗಿರುವುದು ಸಾಬೀತಾಗಿರುತ್ತದೆ. ಮತ್ತು ಅರ್ಜಿದಾರರ ವಿರುದ್ಧ ಸಾಬೀತಾಗಿರುವ ಆರೋಪವನ್ನು ಅಲ್ಲಗಳೆಯುವ ಸಮರ್ಥನೀಯ ಅಂಶಗಳು ಕಂಡುಬರುತ್ತಿಲ್ಲವಾದ್ದರಿಂದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಒಇ 130 ಪೊಸಿಅ 2013 ಬೆಂಗಳೂರು, ದಿನಾಂಕ: 05.03.2014
ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಸೆಕ್ಷನ್ 25ರಡಿಯಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಟಿ.ಎಸ್. ಜಗದೀಶ್, ಪಿ.ಐ., ಆರಕ್ಷಕ ಮಹಾ ನಿರೀಕ್ಷಕರವರ ಕಛೇರಿ, ಕೇಂದ್ರ ವಲಯ, ಬೆಂಗಳೂರು ಇವರು ಸರ್ಕಾರಕ್ಕೆ ಸಲ್ಲಿಸಿದ್ದ ಪರಿಷ್ಕರಣ ಮೇಲ್ಮನವಿಯನ್ನು ತಿರಸ್ಕರಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ದೇವೆಂದ್ರಪ್ಪ ಕಟ್ಟಿಮನಿ
ಸರ್ಕಾರದ ಅಧೀನ ಕಾರ್ಯದರ್ಶಿ PR.297
ಒಳಾಡಳಿತ ಇಲಾಖೆ, (ಪೊಲೀಸ್ ಸೇವೆಗಳು-ಬಿ)
ಒಳಾಡಳಿತ ಸಚಿವಾಲಯ
ವಿಷಯ: ಶ್ರೀ ಎಂ. ನಂಜಪ್ಪ, ಪಿ.ಎಸ್.ಐ., ಬೆಳಕವಾಡಿ ಪೊಲೀಸ್ ಠಾಣೆ, ಮಂಡ್ಯ ಜಿಲ್ಲೆ ಇವರ ಪರಿಷ್ಕರಣ ಮೇಲ್ಮನವಿಯ ಬಗ್ಗೆ ಅಂತಿಮ ಆದೇಶ.
ಓದಲಾಗಿದೆ: 1) ಶಿಸ್ತು ಪ್ರಾಧಿಕಾರ ಹಾಗೂ ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ ಇವರ ಆದೇಶ ಸಂಖ್ಯೆ:
ಶಿಕ್ಷೆ/64/2012, (ಓ.ಬಿ. ಸಂಖ್ಯೆ 28/2013) ದಿನಾಂಕ 29.01.2013ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ೫೭೫ 2) ಮೇಲ್ಮನವಿ ಪ್ರಾಧಿಕಾರ ಹಾಗೂ ಆರಕ್ಷಕ ಮಹಾ ನಿರೀಕ್ಷಕರು, ದಕ್ಷಿಣ ವಲಯ, ಮೈಸೂರು ಇವರ ಆದೇಶ
ಸಂಖ್ಯೆ: ಅಪೀಲು/65/2012-13 (ಓ.ಬಿ. ಸಂಖ್ಯೆ: 22/2013-14) ದಿನಾಂಕ 31.05.2013
3) ಅರ್ಜಿದಾರರ ಪರಿಷ್ಕರಣ ಮೇಲ್ಮನವಿ ಅರ್ಜಿ ದಿನಾಂಕ: 03.10.2013
4) ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು, ಬೆಂಗಳೂರು, ಇವರ ಪತ್ರ ಸಂಖ್ಯೆ:
ಅಪೀಲು(2)57/2013-14 ದಿನಾಂಕ 20.12.2013
ಪ್ರಸ್ತಾವನೆ:
ಶ್ರೀ ಎಂ. ನಂಜಪ್ಪ, ಪಿ.ಎಸ್.ಐ., ಬೆಳಕವಾಡಿ ಪೊಲೀಸ್ ಠಾಣೆ, ಮಂಡ್ಯ ಜಿಲ್ಲೆ (ಇನ್ನು ಮುಂದೆ ಅರ್ಜಿದಾರರೆಂದು ಕರೆಯಲ್ಪಡುವ) ಇವರು ಈ ಹಿಂದೆ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷ್ಯತೆ ಪ್ರದರ್ಶಿಸಿದ ಕಾರಣದ ಮೇಲೆ ಇವರ ವಿರುದ್ದ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿ) ನಿಯಮಗಳು 1965ರ ನಿಯಮ 7ರಡಿ ಈ ಕೆಳಕಂಡಂತೆ ದೋಷಾರೋಪಣೆಯನ್ನು ಹೊರಿಸಲಾಗಿದೆ.
ದೋಷಾರೋಪಣೆ:-
"ಮೊ.ಸಂ. 140/11 ಕಲಂ 307, ಐ.ಪಿ.ಸಿ. 3 & 27 ಆಫ್ ಆರ್ಮ್ಸ್ ರೆ:ವಿ ಸೆಕ್ಷನ್ 34 ಐ.ಪಿ.ಸಿ ಪ್ರಕರಣದಲ್ಲಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದೆ ಮತ್ತು ದಸ್ತಗಿರಿ ಮಾಡದೆ ಇದ್ದು, ಆರೋಪಿಗಳು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಬಂದ ನಂತರವೂ ಸಹ ದಸ್ತಗಿರಿ ಕ್ರಮವನ್ನು ಜರುಗಿಸದೆ ಕರ್ತವ್ಯದಲ್ಲಿ ಅತೀವವಾದ ನಿರ್ಲಕ್ಷ್ಯತೆ ಪ್ರದರ್ಶಿಸಿರುತ್ತೀರಿ"
ಮೇಲಿನ ಆರೋಪದ ಮೇಲೆ ಅರ್ಜಿದಾರರ ಸಮಜಾಯಿಷಿ ಪಡೆದು ಅದನ್ನೊಪ್ಪದ ಶಿಸ್ತು ಪ್ರಾಧಿಕಾರ ಹಾಗೂ ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ ಇವರು ಮೇಲೆ ಕ್ರಮ ಸಂಖ್ಯೆ:(1)ರಲ್ಲಿ ಓದಲಾದ ದಿನಾಂಕ: 29.01.2013ರ ಆದೇಶದಲ್ಲಿ ಅರ್ಜಿದಾರರ ಮುಂದಿನ ವಾರ್ಷಿಕ ವೇತನ ಬಡ್ತಿಯನ್ನು ತದ ನಂತರದ ವಾರ್ಷಿಕ ವೇತನ ಬಡ್ತಿಯ ಮೇಲೆ ಪರಿಣಾಮ ಬೀರದಂತೆ ಮೂರು ತಿಂಗಳ ಕಾಲ ಮುಂದೂಡಿ, ಇವರ ಅಮಾನತ್ತಿನ ಅವಧಿ ದಿನಾಂಕ 08.02.2012ರಿಂದ 27.02.2012ರವರೆಗೆ ಅಮಾನತ್ತೆಂದೇ ಪರಿಗಣಿಸಲಾದ ದಂಡನೆಯನ್ನು ವಿಧಿಸಿದೆ.
ಈ ಆದೇಶದ ವಿರುದ್ಧ ಸಲ್ಲಿಸಿದ ಮೇಲ್ಮನವಿಯನ್ನು ಪರಿಶೀಲಿಸಿದ ಮೇಲ್ಮನವಿ ಪ್ರಾಧಿಕಾರ ಹಾಗೂ ಆರಕ್ಷಕ ಮಹಾ ನಿರೀಕ್ಷಕರು, ದಕ್ಷಿಣ ವಲಯ, ಮೈಸೂರು ಇವರು ಮೇಲೆ ಕ್ರಮ ಸಂಖ್ಯೆ: (2)ರಲ್ಲಿ ಓದಲಾದ ದಿನಾಂಕ: 31.05.2013ರ ಹಿಂಬರಹದಲ್ಲಿ ಮೇಲ್ಮನವಿಯನ್ನು ತಿರಸ್ಕರಿಸಿರುತ್ತಾರೆ.
ಈ ಎರಡೂ ಆದೇಶಗಳ ವಿರುದ್ಧ ಅರ್ಜಿದಾರರು ಸರ್ಕಾರಕ್ಕೆ ಪರಿಷ್ಕರಣ ಮೇಲ್ಮನವಿಯನ್ನು ಸಲ್ಲಿಸಿರುತ್ತಾರೆ. ಪರಿಷ್ಕರಣ ಮೇಲ್ಮನವಿಯಲ್ಲಿನ ವಾದಾಂಶಗಳನ್ನು ದಾಖಲೆಗಳೊಂದಿಗೆ ಪರಿಶೀಲಿಸಲಾಗಿದೆ. ವನಪಾಲಕರು ಹಾರಿಸಿದ ಗುಂಡಿನಿಂದ ಹಾಡಿಯ ಇಬ್ಬರು ವ್ಯಕ್ತಿಗಳಿಗೆ ಗುಂಡೇಟು ತಗುಲಿದ್ದು, ಅರಣ್ಯ ಸಿಬ್ಬಂದಿಗಳಿಗೆ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿದ್ದು, ಅದರಲ್ಲಿ 10 ದಿನಗಳೊಳಗಾಗಿ ತನಿಖಾಧಿಕಾರಿಗಳ ಮುಂದೆ ಆರೋಪಿಗಳನ್ನು ಹಾಜರಾಗಬೇಕೆಂದು ಷರತ್ತು ನೀಡಿದ್ದಾಗ್ಯೂ ಆರೋಪಿಗಳು ಹಾಜರಾಗದ ಕಾರಣ ಆರೋಪಿತರ ಜಾಮೀನು ರದ್ದುಪಡಿಸುವಂತೆ ನ್ಯಾಯಾಲಯಕ್ಕೆ ತಕರಾರು ಅರ್ಜಿಯನ್ನು ಅರ್ಜಿದಾರರು ಸಲ್ಲಿಸಿರುತ್ತಾರೆ. ಪರಿಷ್ಕರಣ ಮೇಲ್ಮನವಿಯಲ್ಲಿ ಬೇರಾವುದೇ ಸಮರ್ಥನೀಯ ಅಂಶಗಳು ಇರುವುದಿಲ್ಲ. ಅಲ್ಲದೇ ಶಿಸ್ತು ಪ್ರಾಧಿಕಾರವು ವಿಧಿಸಿರುವ ದಂಡನೆಯು ಸೂಕ್ತವಾಗಿದ್ದು ಸದರಿ ದಂಡನೆ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯತೆ ಕಂಡು ಬರುತ್ತಿಲ್ಲವಾದ್ದರಿಂದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಒಇ 144 ಪೊಸಿಅ 2013 ಬೆಂಗಳೂರು, ದಿನಾಂಕ: 05.03.2014
ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಸೆಕ್ಷನ್ 25ರಡಿಯಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಎಂ. ನಂಜಪ್ಪ, ಪಿ.ಎಸ್.ಐ., ಬೆಳಕವಾಡಿ ಪೊಲೀಸ್ ಠಾಣೆ, ಮಂಡ್ಯ ಜಿಲ್ಲೆ ಇವರು ಸರ್ಕಾರಕ್ಕೆ ಸಲ್ಲಿಸಿದ್ದ ಪರಿಷ್ಕರಣ ಮೇಲ್ಮನವಿಯನ್ನು ತಿರಸ್ಕರಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ದೇವೆಂದ್ರಪ್ಪ ಕಟ್ಟಿಮನಿ
ಸರ್ಕಾರದ ಅಧೀನ ಕಾರ್ಯದರ್ಶಿ PR.299
ಒಳಾಡಳಿತ ಇಲಾಖೆ, (ಪೊಲೀಸ್ ಸೇವೆಗಳು-ಬಿ) ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ
ವಿಷಯ: ಕೇಂದ್ರ ಸರ್ಕಾರದ ಗ್ರಾಮೀಣಾಬಿವೃದ್ಧಿ ಮಂತ್ರಾಲಯವು 2013-14ನೇ ಸಾಲಿಗೆ ಡಿಆರ್ಡಿಎ ಆಡಳಿತ ಯೋಜನೆಯಡಿ ರಾಜ್ಯದ ಪಾಲಿನ ಎರಡನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.
ಓದಲಾಗಿದೆ : 1. ಕೇಂದ್ರ ಸರ್ಕಾರದ ಪತ್ರ ಸಂಖ್ಯೆ:ಆರ್-17014/01/2013-14 ಡಿಆರ್ಡಿಎ (ಎಸ್ಎಲ್ ನಂ.10) ದಿನಾಂಕ 29-06-2013.
2. ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 26 ಎಸ್ಜೆವೈ (ಡಿಆರ್ಡಿಎ) 2013 ಬೆಂಗಳೂರು, ದಿನಾಂಕ: 29-07-2013 ಮತ್ತು 07-10-2013.
3. ಕೇಂದ್ರ ಸರ್ಕಾರದ ಪತ್ರ ಸಂಖ್ಯೆ : ಆರ್-17014/11/2013-14 ಡಿಆರ್ಡಿಎ (ಎಸ್ಎಲ್ ನಂ.31) ದಿನಾಂಕ 05-09-2013.
4. ಸರ್ಕಾರದ ಆದೇಶ ಸಂಖ್ಯೆ : ಗ್ರಾಅಪ 55 ಎಸ್ಜೆವೈ (ಡಿಆರ್ಡಿಎ) 2013, ಬೆಂಗಳೂರು ದಿನಾಂಕ 19-11-2013 5. ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ನವದೆಹಲಿ ಇವರ ಪತ್ರ ಸಂಖ್ಯೆ : ಆರ್ 17014/11/2013 ಡಿಆರ್ಡಿಎ (ಎಸ್ಎಲ್ ನಂ.65) ದಿನಾಂಕ 20-11-2013.
೫೭೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ಭಾಗ ೧6. ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ನವದೆಹಲಿ ಇವರ ಪತ್ರ ಸಂಖ್ಯೆ : ಆರ್ 17014/11/2013 ಡಿಆರ್ಡಿಎ (ಎಸ್ಎಲ್ ನಂ.83) ದಿನಾಂಕ 06-12-2013.
7. ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ನವದೆಹಲಿ ಇವರ ಪತ್ರ ಸಂಖ್ಯೆ : ಆರ್ 17014/11/2013 ಡಿಆರ್ಡಿಎ (ಎಸ್ಎಲ್ ನಂ.97) ದಿನಾಂಕ 18-12-2013
ಪ್ರಸ್ತಾವನೆ:
ಡಿಆರ್ಡಿಎ ಆಡಳಿತ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 75:25 ರ ಅನುಪಾತದಲ್ಲಿ ಭರಿಸುತ್ತವೆ. 2013-14ನೇ ಸಾಲಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ರಾಜ್ಯದ 26 ಜಿಲ್ಲಾ ಪಂಚಾಯತಿಗಳಿಗೆ ಒಂದನೇ ಕಂತಿನ ಅನುದಾನವಾಗಿ (ಚಿಕ್ಕಬಳ್ಳಾಪುರ, ದಾವಣಗೆರೆ, ಕೊಪ್ಪಳ ಮತ್ತು ಯಾದಗಿರಿ 4 ಜಿಲ್ಲೆಗಳನ್ನು ಹೊರತುಪಡಿಸಿ) ಡಿಆರ್ಡಿಎ ಆಡಳಿತ ಯೋಜನೆಯಡಿ ಓದಲಾಗಿದೆ (1), (2) ಮತ್ತು (3) ರಲ್ಲಿ ಒಂದನೇ ಕಂತಿನ ಅನುದಾನ `4,52,10,000/- ಲಕ್ಷ ಮತ್ತು `1,50,78,000 ಲಕ್ಷಗಳನ್ನು ಅನುಕ್ರಮವಾಗಿ ಬಿಡುಗಡೆ ಮಾಡಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ನವದೆಹಲಿ ಓದಲಾಗಿದೆ (5), (6) ಮತ್ತು (7) ಪತ್ರಗಳಲ್ಲಿ 2013-14 ನೇ ಸಾಲಿಗೆ ರಾಜ್ಯದ 20 ಜಿಲ್ಲಾ ಪಂಚಾಯತಿಗಳಿಗೆ ಎರಡನೇ ಕಂತಿನ ಅನುದಾನವಾಗಿ (ಓದಲಾಗಿದೆ (5) ಪತ್ರದಲ್ಲಿ ಬೆಂಗಳೂರು ನಗರ (ಶೂನ್ಯ), ಬೆಳಗಾಂ (`12.61), ಬೀದರ್ (`15.44) ಧಾರವಾಡ (`12.89), ಗದಗ್ (ಶೂನ್ಯ), ಕೋಲಾರ (ಶೂನ್ಯ), ಮಂಡ್ಯ (`5.07) ಶಿವಮೊಗ್ಗ (`16.64) ಒಟ್ಟು `62.65 ಲಕ್ಷಗಳನ್ನು ಬಿಡುಗಡೆ ಮಾಡಿದೆ. ಓದಲಾಗಿದೆ (6) ರ ಪತ್ರದಲ್ಲಿ ಬೆಂಗಳೂರು ಗ್ರಾ (`14.21), ಬಳ್ಳಾರಿ (`11.74), ಬಿಜಾಪುರ (`14.12), ಚಾಮರಾಜನಗರ (`3.31), ಹಾವೇರಿ (`9.38), ಕೊಡಗು (`8.05), ಉಡುಪಿ (ಶೂನ್ಯ) ಒಟ್ಟು `60.81 ಲಕ್ಷಗಳನ್ನು ಬಿಡುಗಡೆ ಮಾಡಿದೆ. ಓದಲಾಗಿದೆ (7) ರ ಪತ್ರದಲ್ಲಿ ಚಿತ್ರದುರ್ಗ (`10.86), ದಕ್ಷಿಣ ಕನ್ನಡ (`8.08), ಹಾಸನ (ಶೂನ್ಯ), ಮೈಸೂರು (`19.13), ರಾಮನಗರ (ಶೂನ್ಯ) ಒಟ್ಟು `38.07 ಲಕ್ಷಗಳನ್ನು ಬಿಡುಗಡೆ ಮಾಡಿದೆ.) ಒಟ್ಟು `1,61,53,000/- ಗಳನ್ನು ಬಿಡುಗಡೆ ಮಾಡಿದೆ.
ಯೋಜನೆಯ ಮಾರ್ಗಸೂಚಿಯಂತೆ ಕೇಂದ್ರ ಬಿಡುಗಡೆ ಮಾಡಿದ ಅನುದಾನಕ್ಕನುಗುಣವಾಗಿ ರಾಜ್ಯಸರ್ಕಾರ ತನ್ನ ಪಾಲಿನ ಅನುದಾನ `53,84,000/- ಗಳನ್ನು ಬಿಡುಗಡೆ ಮಾಡಬೇಕಾಗಿದೆ.
ರಾಜ್ಯದ ಕೆಲವು ಜಿಲ್ಲಾ ಪಂಚಾಯತಿಗಳಲ್ಲಿ ಡಿಆರ್ಡಿಎ ಆಡಳಿತ ಯೋಜನೆಯಡಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವೇತನ ವಿತರಣೆಗೆ ಅನುದಾನದ ಕೊರತೆ ಕಂಡುಬಂದಿದ್ದರಿಂದ, ಕೇಂದ್ರದ ಅನುದಾನದ ನಿರೀಕ್ಷೆಯಲ್ಲಿ ರಾಜ್ಯದ 21 ಜಿಲ್ಲಾ ಪಂಚಾಯತಿಗಳಿಗೆ 2013-14 ನೇ ಸಾಲಿಗೆ ಮುಂಗಡವಾಗಿ ರಾಜ್ಯದ ಪಾಲಿನ ಅನುದಾನ `2,55,00,000/-ಗಳನ್ನು ಓದಲಾಗಿದೆ (4) ರ ಸರ್ಕಾರದ ಆದೇಶದಲ್ಲಿ ಬಿಡುಗಡೆ ಮಾಡಲಾಗಿದೆ.
ಆದರೆ, ಈಗ ಬಿಡುಗಡೆಯಾಗಿರುವ ಜಿಲ್ಲಾ ಪಂಚಾಯತಿಗಳ ಪೈಕಿ ಬಳ್ಳಾರಿ, ಹಾಸನ ಮತ್ತು ರಾಮನಗರ ಜಿಲ್ಲೆಗಳಿಗೆ ಮುಂಗಡ ಅನುದಾನ ಬಿಡುಗಡೆ ಮಾಡಿರುವುದಿಲ್ಲ. ಕೇಂದ್ರ ಬಿಡುಗಡೆ ಮಾಡಿರುವ ಎರಡನೇ ಕಂತಿನ ಅನುದಾನಕ್ಕನುಗುಣವಾಗಿ ರಾಜ್ಯ ಸರ್ಕಾರವು ತನ್ನ ಪಾಲಿನ ಎರಡನೇ ಕಂತಿನ ಅನುದಾನವನ್ನು ಹಾಸನ, ಬಳ್ಳಾರಿ ಮತ್ತು ರಾಮನಗರ ಜಿಲ್ಲಾ ಪಂಚಾಯತಿಗಳಿಗೆ ಬಿಡುಗಡೆ ಮಾಡಬೇಕಾಗಿದೆ.
ಹಾಸನ ಮತ್ತು ರಾಮನಗರ ಜಿಲ್ಲೆಗಳಲ್ಲಿ ಆರಂಭಶಿಲ್ಕು ಹೆಚ್ಚಿರುವ ಕಾರಣದಿಂದ ಕೇಂದ್ರ ಅನುದಾನವನ್ನು ಕಡಿತಗೊಳಿಸಿ ಬಿಡುಗಡೆ ಮಾಡಿದ ಪ್ರಯುಕ್ತ ಬಿಡುಗಡೆ ಶೂನ್ಯವಾಗಿದೆ. ಇದರಿಂದಾಗಿ ರಾಜ್ಯದ ಪಾಲಿನ ಅನುದಾನ ಬಿಡುಗಡೆ ಮಾಡುವ ಅವಶ್ಯಕತೆಯಿರುವುದಿಲ್ಲ.
ಬಳ್ಳಾರಿ ಜಿಲ್ಲಾ ಪಂಚಾಯತಿಗೆ `11,74,000 ಗಳನ್ನು ಕೇಂದ್ರ ತನ್ನ ಪಾಲಿನ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡಿದ್ದು, ಇದಕ್ಕನುಗುಣವಾಗಿ ರಾಜ್ಯದ ಪಾಲಿನ ಎರಡನೇ ಕಂತಿನ ಅನುದಾನವಾಗಿ ಬಳ್ಳಾರಿ ಜಿಲ್ಲಾ ಪಂಚಾಯತ್ಗೆ `3,91,000/-ಗಳನ್ನು ಬಿಡುಗಡೆ ಮಾಡಬೇಕಾಗಿದೆ.
ಆದುದರಿಂದ ಈ ಆದೇಶ:
ಸರ್ಕಾರದ ಆದೇಶ ಸಂಖ್ಯೆ : ಗ್ರಾಅಪ 26 ಎಸ್ಜೆವೈ (ಡಿಆರ್ಡಿಎ) 2013, ಬೆಂಗಳೂರು, ದಿನಾಂಕ: 20-01-2014
ರಾಜ್ಯ ಸರ್ಕಾರವು, ಡಿಆರ್ಡಿಎ ಆಡಳಿತ ಯೋಜನೆಯಡಿ 2013-14 ನೇ ಸಾಲಿಗೆ ಎರಡನೇ ಕಂತಿನ ಅನುದಾನವಾಗಿ ಬಳ್ಳಾರಿ, ಹಾಸನ ಮತ್ತು ರಾಮನಗರ ಜಿಲ್ಲಾ ಪಂಚಾಯತಿಗಳಿಗೆ `3,91,000/-ಗಳನ್ನು (`ಮೂರು ಲಕ್ಷದ ತ್ತೊಂಬತ್ತೊಂದು ಸಾವಿರ ಮಾತ್ರ) ಕೆಳಕಂಡ ಷರತ್ತುಗಳಿಗೊಳಪಟ್ಟು ಬಿಡುಗಡೆ ಮಾಡಲು ಮಂಜೂರಾತಿ ನೀಡಿದೆ.
| %1 1 | `!/$ಖಈ ಋ | `1$1 (? | ,1,1 (? | :97:7; /% . ((,>(ಈ | 6ಚಿ"ಎ5 . (((ಈ&>( ಈ |
| % | #ಕk | <7ಓ | 3400ZZ0001 | %%2<@2111 | ;ಒಛ7ಒ999 |
| , | <79 | 1300ZZ0003 | 1 | 9 | |
| 9 | <8: | 0400ZZ0001 | 1 | 9 | |
| ಗಿಇ ಈ` | %%2<@2111 | ;ಒಛ7ಒ999 |
ಷರತ್ತುಗಳು: ಡಿಆರ್ಡಿಎ ಆಡಳಿತ ಯೋಜನೆಯ ಕೈಪಿಡಿಯ ಮಾರ್ಗಸೂಚಿಯಂತೆ ಈ ಆದೇಶದಲ್ಲಿ ಬಿಡುಗಡೆ ಮಾಡಿದ ಅನುದಾನವನ್ನು ಜಿಲ್ಲಾ ಪಂಚಾಯತ್ ಸಿಬ್ಬಂದಿಗಳ ವೇತನ ಹಾಗೂ ಸಾದಿಲ್ವಾರು ವೆಚ್ಚಗಳಿಗೆ ಮಾತ್ರ ಉಪಯೋಗಿಸಲು ಅವಕಾಶವಿದೆ. ಕೇಂದ್ರ ಹಾಗೂ ರಾಜ್ಯದ ಪಾಲಿನ ಅನುದಾನವು ಸೇರಿ ವೆಚ್ಚವನ್ನು ಭರಿಸಬೇಕಾಗಿರುವುದರಿಂದ ರಾಜ್ಯದ ಪಾಲಿನ ಅನುದಾನವನ್ನು ವೇತನ ಮತ್ತು ವೇತನೇತರವೆಂದು ವಿಂಗಡಿಸದೆ ಒಟ್ಟಾರೆ ರಾಜ್ಯದ ಪಾಲಿನ ಅನುದಾನವನ್ನು ಖಜಾನೆಯಿಂದ ಡ್ರಾ ಮಾಡಲು ಖಜನಾದಿಕಾರಿಗಳು ಅನುಮತಿ ನೀಡತಕ್ಕದ್ದು.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ೫೭೭ಯೋಜನೆಯ ವೆಚ್ಚವನ್ನು ಲೆಕ್ಕ ಶೀರ್ಷಿಕೆ :"2515 ಇತರೆ ಗ್ರಾಮೀಣಾಬಿವೃದ್ಧಿ ಕಾರ್ಯಕ್ರಮಗಳು 00-196-ಜಿಲ್ಲಾ ಪಂಚಾಯತ್ಗಳಿಗೆ ಸಹಾಯ- 6-ಜಿಲ್ಲಾ ಪಂಚಾಯತ್-06-ಡಿಆರ್ಡಿಎ ಆಡಳಿತಾತ್ಮಕ ವೆಚ್ಚ- (ಕೇಂದ್ರ ಪುರಸ್ಕೃತ ಯೋಜನೆ) 2013-2014 ಲಿಂಕ್ ಕೋಡ್ 2515-00-196-6- 06 " (ಹೊಸ ಜಿಲ್ಲಾ ಪಂಚಾಯತ್ ಕೋಡ್ 2515-00-101-0-01) ರಡಿ ಸರ್ಕಾರದ ತಿದ್ದುಪಡಿ ಆದೇಶ ಸಂಖ್ಯೆ ಎಫ್ಡಿ 1 ಜಡ್ಪಿಎ 2007 (ಪಿ2) ದಿನಾಂಕ 26-04-2007 ರನ್ವಯ ಜಿಲ್ಲಾ ಪಂಚಾಯತ್ ನಿದಿ-1ಕ್ಕೆ ಜಮೆ ಮಾಡಿಕೊಂಡು ಆರ್ಥಿಕ ಇಲಾಖೆ (ವೆಚ್ಚ-6) ಯ ಸಂಖ್ಯೆ ಆಇ 172 ವೆಚ್ಚ- 6/2011 ದಿನಾಂಕ 30-03-2011 ರ ಸಹಮತಿಯಂತೆ ಪೇಯಿಸ್ ರಸೀದಿಯ ಮೂಲಕ ಜಿಲ್ಲಾ ಪಂಚಾಯತಿ ನಿದಿಯಿಂದ ಅನುದಾನವನ್ನು ಖಜಾನೆಯಿಂದ ಪಡೆದುಕೊಂಡು ಕಾರ್ಯಕ್ರಮದ ಅನುಷ್ಠಾನಕ್ಕಾಗಿ ತೆರೆದಿರುವ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಂಡು ವೆಚ್ಚವನ್ನು ಭರಿಸತಕ್ಕದ್ದು.
ಬಳ್ಳಾರಿ, ಹಾಸನ ಮತ್ತು ರಾಮನಗರ ಜಿಲ್ಲಾ ಪಂಚಾಯತಿಗಳ ಮುಖ್ಯ ಲೆಕ್ಕಾದಿಕಾರಿಗಳಿಗೆ ಅನುದಾನವನ್ನು ಖಜಾನೆಯಿಂದ ಸೆಳೆಯಲು ಕಾನೂನು ರೀತ್ಯ ಅದಿಕಾರ ನೀಡಲಾಗಿದೆ.
ಈ ಆದೇಶದಲ್ಲಿ ಬಿಡುಗಡೆ ಮಾಡಿದ ಅನುದಾನದ ಆಂತರಿಕ ಲೆಕ್ಕ ಪರಿಶೋಧನೆಯನ್ನು ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಾಡುವುದು.
ಬಳ್ಳಾರಿ, ಹಾಸನ ಮತ್ತು ರಾಮನಗರ ಜಿಲ್ಲಾ ಪಂಚಾಯತಿಗಳ ಮುಖ್ಯ ಲೆಕ್ಕಾದಿಕಾರಿಗಳು, ಆಯಾ ತಿಂಗಳ ಪ್ರಗತಿ ವರದಿ ಹಾಗೂ ಹುದ್ದೆವಾರು ವಿವರಗಳನ್ನು ಮುಂದಿನ ತಿಂಗಳ 5 ನೇ ತಾರೀಖಿನೊಳಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಅಂತರ್ಜಾಲದಲ್ಲಿ ನಮೂದಿಸುವುದು.
ಬಳ್ಳಾರಿ, ಹಾಸನ ಮತ್ತು ರಾಮನಗರ ಜಿಲ್ಲಾ ಪಂಚಾಯತಿಗಳ ಮುಖ್ಯ ಲೆಕ್ಕಾದಿಕಾರಿಗಳು ಹಣ ಉಪಯೋಗ ಪ್ರಮಾಣ ಪತ್ರ ಹಾಗೂ ಲೆಕ್ಕ ಪರಿಶೋಧನಾ ವರದಿಗಳನ್ನು, ನಿರ್ದೇಶಕರು {ಸ್ವಉಕಾ} ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿ ಕಟ್ಟಡ, ಕರ್ನಾಟಕ ಸರ್ಕಾರ, ಬೆಂಗಳೂರು ಇವರಿಗೆ ತಪ್ಪದೇ ಕಳುಹಿಸುವುದು.
ಈ ಆದೇಶವನ್ನು ಆಂತರಿಕ ಆರ್ಥಿಕ ಸಲಹೆಗಾರರು, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರ ಇವರ ಸಹಮತಿ ಸಂಖ್ಯೆ: ಗ್ರಾಅಪ 36 ಪಿಬಿಎಸ್ 2014 ದಿನಾಂಕ 20-01-2014 ರಂತೆ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ರೋಹಿಣಿ ಸಿಂಧೂರಿ
ನಿರ್ದೇಶಕರು (ಇ-ಆಡಳಿತ) ಮತ್ತು ಸ್ವಉಕಾ PR.262
ಹಾಗೂ ಪ.ನಿ. ಸರ್ಕಾರದ ಉಪ ಕಾರ್ಯದರ್ಶಿ, SC.10
ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ: ಡಾ: ಟಿ. ವೆಂಕಟೇಶ್, ಹಿಂದಿನ ಹಿರಿಯ ತಜ್ಞರು, (ಆರ್ಥೋ) ಚಿಗಟೇರಿ ಜಿಲ್ಲಾ ಆಸ್ಪತ್ರೆ, ದಾವಣಗೆರೆ ಇವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸುವ ಬಗ್ಗೆ.
ಓದಲಾಗಿದೆ 1 ಅಪರ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಪತ್ರ ಸಂಖ್ಯೆ; ಲೋಕ್ /ಐಎನ್ವಿ (ಜಿ)/ಸಿಟಿಎಲ್-27/ಸಿಆರ್-08/2007, ದಾವಣಗೆರೆ, ದಿನಾಂಕ: 07/12/2007.
2 ಸರ್ಕಾರದ ಆದೇಶ ಸಂಖ್ಯೆ: ಆಕುಕ 334 ಎಂಎಸ್ಎ 2007, ದಿನಾಂಕ: 23/01/2008.
3 ಅಪರ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಪತ್ರ ಸಂಖ್ಯೆ; ಲೋಕ್ /ಐಎನ್ವಿ (ಜಿ)/ಸಿಟಿಎಲ್-27/ಸಿಆರ್-08/2007 ದಾವಣಗೆರೆ, ದಿನಾಂಕ:13/06/2008.
4 ಸರ್ಕಾರದ ಆದೇಶ ಸಂಖ್ಯೆ: ಆಕುಕ 334 ಎಂಎಸ್ಎ 2007, ದಿನಾಂಕ: 14/07/2008 ಮತ್ತು ತಿದ್ದುಪಡಿ ಆದೇಶ ದಿನಾಂಕ:
14/08/2008.
5 ಸರ್ಕಾರದ ಅಧಿಸೂಚನೆ ಸಂಖ್ಯೆ: ಆಕುಕ 334 ಎಂಎಸ್ಎ 2007, ದಿನಾಂಕ: 05/09/2008
6 ಅಪರ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಪತ್ರ ಸಂಖ್ಯೆ; ಲೋಕ್ /ಐಎನ್ವಿ (ಜಿ)/ಸಿಟಿಎಲ್-27/ಸಿಆರ್-08/2007, ದಾವಣಗೆರೆ, ದಿನಾಂಕ: 18/03/2013
7 ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮತ್ತು ವಿಶೇಷ ನ್ಯಾಯಾಧೀಶರ (ಲೋಕಾಯುಕ್ತ) ನ್ಯಾಯಾಲಯ, ದಾವಣಗೆರೆ 8 ಸರ್ಕಾರದ 2ನೇ ಕಾರಣ ಕೇಳುವ ಸೂಚನಾ ಪತ್ರ ಸಂಖ್ಯೆ: ಆಕುಕ 334 ಎಂಎಸ್ಎ 2007, ದಿನಾಂಕ: 10/04/2013.
9 ಡಾ: ವೆಂಕಟೇಶ್ ಹಿರಿಯ ತಜ್ಞರು ರವರ ರಕ್ಷಣಾ ಹೇಳಿಕೆ ದಿನಾಂಕ: 26/04/2013
10 ಕರ್ನಾಟಕ ಉಚ್ಛ ನ್ಯಾಯಾಲಯದ ಪ್ರಧಾನ ಪೀಠ ರವರ ಆದೇಶ ದಿನಾಂಕ: 04/03/2013.
11 ಸರ್ಕಾರದ ಸುತ್ತೋಲೆ ಸಂಖ್ಯೆ; ಸಿ.ಆ.ಸು.ಇ 09 ಸೇಇವಿ 95, ದಿನಾಂಕ: 26/06/1996
12 ಸರ್ಕಾರದ ಪತ್ರ ಸಂಖ್ಯೆ: ಆಕುಕ 334 ಎಂಎಸ್ಎ 2007, ದಿನಾಂಕ: 24/04/2013
13 ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ ರವರ ಪತ್ರ ಸಂಖ್ಯೆ; ಪಿಎಸ್ಸಿ 44 ಸಿಎನ್ಎಸ್ 2013, ದಿನಾಂಕ:12/08/2013೫೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ಭಾಗ ೧
ಪ್ರಸ್ತಾವನೆ:-
ಮೇಲೆ ಕ್ರಮ ಸಂಖ್ಯೆ (1)ರಲ್ಲಿ ಓದಲಾದ ಅಪರ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಪತ್ರದಲ್ಲಿ ಡಾ: ಟಿ. ವೆಂಕಟೇಶ್, ಹಿಂದಿನ ಹಿರಿಯ ತಜ್ಞರು (ಆರ್ಥೋ), ಚಿಗಟೇರಿ ಜಿಲ್ಲಾ ಆಸ್ಪತ್ರೆ, ದಾವಣಗೆರೆ, ಇವರು ಶ್ರೀ ರವಿ, ಬಿನ್, ರಾಜಪ್ಪ, ಎಸ್.ಪಿ.ಎಸ್.
ನಗರ, ದಾವಣಗೆರೆ, ಇವರಿಗೆ ಸುಮಾರು 3 ವರ್ಷಗಳ ಹಿಂದೆ ವಿದ್ಯುತ್ ಅಪಘಾತದಿಂದ ಎಡಗೈ ಮತ್ತು ಎಡಗಾಲಿನ ಬೆರಳುಗಳು ತುಂಡಾಗಿದ್ದು, ಈ ಸಂಬಂಧ ಪರಿಹಾರಕ್ಕಾಗಿ ಲೇಬರ್ ಕೋರ್ಟಿಗೆ ಅರ್ಜಿ ಹಾಕಲು ಅಂಗ ಊನತೆ ದೃಡೀಕರಣ ಪತ್ರ ನೀಡುವ ಸಂಬಂಧ ರೂ 3000/- ಗಳ ಅಕ್ರಮ ಸಂಭಾವನೆಯನ್ನು ದಿನಾಂಕ: 03/12/2007 ರಂದು ಕೇಳಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬೀಸಿದ ಬಲೆಯಲ್ಲಿ ಸಿಲುಕಿರುವುದರಿಂದ ಸದರಿ ವೈದ್ಯಾಧಿಕಾರಿಯವರನ್ನು ಕೂಡಲೇ ಅಮಾನತ್ತುಗೊಳಿಸಿ ಅವರ ಲೀನ್ ಅನ್ನು ಬೇರೆಡೆಗೆ ವರ್ಗಾಯಿಸುವಂತೆ ಕೋರಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಸರ್ಕಾರದ ಆದೇಶದಲ್ಲಿ ಡಾ: ಟಿ. ವೆಂಕಟೇಶ್, ಹಿರಿಯ ತಜ್ಞರು (ಆರ್ಥೋ), ಚಿಗಟೇರಿ ಜಿಲ್ಲಾ ಆಸ್ಪತ್ರೆ, ದಾವಣಗೆರೆ, ಇವರ ವಿರುದ್ಧ ಶಿಸ್ತುಕ್ರಮ/ಕ್ರಿಮಿನಲ್ ಮೊಕದ್ದಮೆ ಬಾಕಿ ಇರಿಸಿ, ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಲಾಗಿತ್ತು.
ಮೇಲೆ ಓದಲಾದ ಕ್ರಮ ಸಂಖ್ಯೆ (3)ರಲ್ಲಿ ಓದಲಾದ ಅಪರ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಪತ್ರದಲ್ಲಿ ಡಾ: ಟಿ. ವೆಂಕಟೇಶ್, ಹಿರಿಯ ತಜ್ಞರು (ಆರ್ಥೋ), ಚಿಗಟೇರಿ ಜಿಲ್ಲಾ ಆಸ್ಪತ್ರೆ, ದಾವಣಗೆರೆ ಇವರು ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988ರ ಕಲಂ 7,13(1)(ಡಿ) ಜೊತೆಗೆ 13(2)ರಡಿಯಲ್ಲಿ ಎಸಗಿರುವ ಅಪರಾಧಕ್ಕಾಗಿ ಸದರಿಯವರನ್ನು ಅಭಿಯೋಜನೆಗೆ ಒಳಪಡಿಸಲು ಸರ್ಕಾರದ ಮಂಜೂರಾತಿಯನ್ನು ನೀಡುವಂತೆ ಕೋರಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (4)ರ ಸರ್ಕಾರದ ಆದೇಶದಲ್ಲಿ ಡಾ: ಟಿ. ವೆಂಕಟೇಶ್, ಹಿರಿಯ ತಜ್ಞರು (ಆರ್ಥೋ), ಚಿಗಟೇರಿ ಜಿಲ್ಲಾ ಆಸ್ಪತ್ರೆ, ದಾವಣಗೆರೆ ಇವರನ್ನು ಸಕ್ಷಮ ನ್ಯಾಯಾಲಯದಲ್ಲಿ ಅಭಿಯೋಜನೆಗೆ ಒಳಪಡಿಸಲು ಸರ್ಕಾರದ ಮಂಜೂರಾತಿಯನ್ನು ನೀಡಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (5)ರ ಸರ್ಕಾರದ ಅಧೀಸೂಚನೆಯಲ್ಲಿ ಡಾ: ಟಿ. ವೆಂಕಟೇಶ್, ಹಿರಿಯ ತಜ್ಞರು (ಆರ್ಥೋ), ಚಿಗಟೇರಿ ಜಿಲ್ಲಾ ಆಸ್ಪತ್ರೆ, ದಾವಣಗೆರೆ ಇವರ ಅಮಾನತ್ತನ್ನು ತೆರವುಗೊಳಿಸಿ, ಸದರಿಯವರ ವಿರುದ್ಧ ಶಿಸ್ತುಕ್ರಮ/ಕ್ರಿಮಿನಲ್ ಮೊಕದ್ದಮೆ ಬಾಕಿ ಇರಿಸಿ, ಸಾರ್ವಜನಿಕ ಆಸ್ಪತ್ರೆ, ಸೊರಬ, ಶಿವಮೊಗ್ಗ ಜಿಲ್ಲೆ ಇಲ್ಲಿ ಖಾಲಿ ಇರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿತ್ತು.
ಮೇಲೆ ಓದಲಾದ ಕ್ರಮ ಸಂಖ್ಯೆ (6)ರ ಅಪರ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಪತ್ರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮತ್ತು ವಿಶೇಷ ನ್ಯಾಯಾಧೀಶರ (ಲೋಕಾಯುಕ್ತ) ನ್ಯಾಯಾಲಯ, ದಾವಣಗೆರೆ ಇಲ್ಲಿನ ವಿಶೇಷ (ಲೋಕ್) ಕೇಸ್ ಸಂಖ್ಯೆ 4/2008ಕ್ಕೆ ಸಂಬಂಧಿಸಿದಂತೆ ದಿನಾಂಕ: 13/02/2013ರ ತೀರ್ಪಿನ ಪ್ರತಿಯನ್ನು ಕಳುಹಿಸಿ ಡಾ: ಟಿ. ವೆಂಕಟೇಶ್ ಇವರಿಗೆ ಸದರಿ ತೀರ್ಪಿನಲ್ಲಿ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿರುವುದರಿಂದ ಸದರಿಯವರನ್ನು ಕೂಡಲೇ ಸರ್ಕಾರಿ ಸೇವೆಯಿಂದ ವಜಾಗೊಳಿಸಲು ಅಗತ್ಯಕ್ರಮ ಕೋರಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (7)ರ ತೀರ್ಪಿನಲ್ಲಿ ಡಾ: ಟಿ. ವೆಂಟೇಶ್ ಇವರ ಲಂಚ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಮಾನ್ಯ ಲೋಕಾಯುಕ್ತರು ಸಲ್ಲಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮತ್ತು ವಿಶೇಷ ನ್ಯಾಯಾಧೀಶರ (ಲೋಕಾಯುಕ್ತ) ನ್ಯಾಯಾಲಯ, ದಾವಣಗೆರೆ ಇಲ್ಲಿನ ವಿಶೇಷ (ಲೋಕ್) ಕೇಸ್ ಸಂಖ್ಯೆ 4/2008ರಲ್ಲಿ ಪ್ರಕರಣವನ್ನು ಸದರಿ ನ್ಯಾಯಾಲಯವು ವಿಚಾರಣೆಗೆ ಒಳಪಡಿಸಿ, ದಿನಾಂಕ: 13/02/2013 ರಂದು ಈ ಕೆಳಕಂಡಂತೆ ತೀರ್ಪನ್ನು ನೀಡಿರುತ್ತದೆ.
"Accused is sentenced to undergo rigorous imprisonment for a period of one year
and to pay fine of Rs.30,000/- for committing the offences Under Sec.7 and Sec.13(2)R/w.
Sec.13(1)(d) of Prevention of Corruption Act.
In default of payment of fine, accused shall undergo simple imprisonment for
further period of six months."
ಮೇಲೆ ಓದಲಾದ ಕ್ರಮ ಸಂಖ್ಯೆ (8)ರಲ್ಲಿ ಡಾ: ಟಿ. ವೆಂಕಟೇಶ್, ಹಿರಿಯ ತಜ್ಞರು (ಆರ್ಥೋ), ಚಿಗಟೇರಿ ಜಿಲ್ಲಾ ಆಸ್ಪತ್ರೆ, ದಾವಣಗೆರೆ ಇವರಿಗೆ ಸರ್ಕಾರದ 2ನೇ ಕಾರಣ ಕೇಳುವ ಸೂಚನಾ ಪತ್ರವನ್ನು ಜಾರಿಗೊಳಿಸಿ, ನ್ಯಾಯಾಲಯದ ತೀರ್ಪಿನ ಬಗ್ಗೆ ಅವರ ಅಭಿಪ್ರಾಯವನ್ನು ಕೋರಲಾಗಿತ್ತು. ಸದರಿ ಕಾರಣ ಕೇಳುವ ಸೂಚನಾ ಪತ್ರಕ್ಕೆ ಡಾ: ಟಿ. ವೆಂಕಟೇಶ್ರವರು ಮೇಲೆ ಕ್ರಮಸಂಖ್ಯೆ (9)ರಲ್ಲಿ ರಕ್ಷಣಾ ಹೇಳಿಕೆಯನ್ನು ಸಲ್ಲಿಸಿ, ಅವರು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಕ್ರಿಮಿನಲ್ ಅಫೀಲ್ ಸಂಖ್ಯೆ; 186/2013ನ್ನು ದಾಖಲಿಸಿದ್ದು, ಸದರಿ ನ್ಯಾಯಾಲಯವು ದಾವಣಗೆರೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಪ್ರಕರಣ ಸಂಖ್ಯೆ; 4/2008ರ ದಿನಾಂಕ: 13/02/2013ರ ಆದೇಶವನ್ನು ನಿಲಂಬನೆಯಲ್ಲಿರಿಸಿ, (Suspended) ಅಪೀಲು ಹೋಗಲು ಅವಕಾಶವನ್ನು ಕಲ್ಪಿಸಿರುವುದರಿಂದ ಉಚ್ಛ ನ್ಯಾಯಾಲಯದಲ್ಲಿ ಸದರಿ ಪ್ರಕರಣ ಮುಗಿಯುವರೆಗೆ ತಮ್ಮನ್ನು ಕರ್ತವ್ಯದಲ್ಲಿ ಮುಂದುವರೆಸುವಂತೆ ಕೋರಿರುತ್ತಾರೆ.
ಮೇಲೆ ಓದಲಾದ ಕ್ರಮಸಂಖ್ಯೆ; (10)ರ ಕರ್ನಾಟಕ ಉಚ್ಛ ನ್ಯಾಯಾಲಯದ ಪ್ರಧಾನ ಪೀಠದ ಆದೇಶ ಈ ಕೆಳಕಂಡಂತಿದೆ.
"I.A No. 1/2013 is allowed. The sentence stands suspended. The applicant shall be
enlarged on bail furnishing a self-bond for a some of Rs. 1 Lakh and a solvent surety for a
like sum".
The appeal is admitted to file.
ಗೌ|| ಸರ್ವೋಚ್ಚ ನ್ಯಾಯಾಲಯವು ಕಾಲೇಜು ಶಿಕ್ಷಣ ಉಪನಿರ್ದೇಶಕರು(ಆಡಳಿತ) ಮದ್ರಾಸ್ ವಿರುದ್ಧ ಎಸ್.ನಾಗೂರ ಮೀರ್ ಪ್ರಕರಣದಲ್ಲಿ (ಎಐಆರ್ 1995 ಎಸ್ಸಿ 1364) ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಇಂತಹ ಪ್ರಕರಣಗಳಲ್ಲಿ ಯಾವ ರೀತಿ ಕ್ರಮವಹಿಸಬೇಕೆಂಬ ಬಗ್ಗೆ ಮೇಲೆ ಓದಲಾದ ಕ್ರಮಸಂಖ್ಯೆ;(11) ರ ಸಿ.ಆ.ಸು. ಇಲಾಖೆಯು ಸುತ್ತೋಲೆ (ಸಂಖ್ಯೆ: ಸಿಆಸುಇ 9 ಸೇಇವಿ 95, ದಿನಾಂಕ:26/06/1996) ಹೊರಡಿಸಿದ್ದು, ಈ ಕೆಳಕಂಡಂತೆ ಸೂಚನೆ ನೀಡಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ೫೭೯"ಸಂವಿಧಾನದ ಅನುಚ್ಛೇದ 311(2)ರ ಅಡಿಯಲ್ಲಿನ ಎರಡನೇ ಪರಂತುಕದ ಖಂಡ (ಎ)ಯು ಕ್ರಿಮಿನಲ್ ಆರೋಪದ ಮೇಲೆ ದೋಷಸಿದ್ಧಿಯಾಗುವಂತೆ ಮಾಡಿದ ನಡತೆಯ ಬಗ್ಗೆ ಹೇಳುತ್ತದೆಯಾದ್ದರಿಂದ ದೋಷಸಿದ್ಧಿಯಾಗಿರುವುದನ್ನು ನಿಲಂಬನದಲ್ಲಿಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಆದ್ದರಿಂದ, ಆಪಾದಿತ ಸರ್ಕಾರಿ ನೌಕರನು ಕ್ರಿಮಿನಲ್ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾನೆ ಅಥವಾ ಇತರೆ ವ್ಯವಹರಣೆ ಹೂಡಿದ್ದಾನೆ, ಅಥವಾ ಮೇಲಿನ ನ್ಯಾಯಾಲಯವು ಕ್ರಿಮಿನಲ್ ನ್ಯಾಯಾಲಯದ ದಂಡನೆ ಆದೇಶವನ್ನು ನಿಲಂಬನದಲ್ಲಿಟ್ಟಿದೆ ಆಥವಾ ಆತನ ಮೇಲ್ಮನವಿ ಇತ್ಯರ್ಥದಲ್ಲಿರುವಾಗ ಜಾಮೀನಿನ ಮೇಲೆ ಬಿಡುಗಡೆ ಪಡೆದಿದ್ದಾನೆ ಎಂಬ ಕಾರಣಕ್ಕಾಗಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು 1957ರ ನಿಯಮ 14(1)ರನುಸಾರ ಕ್ರಮ ಜರುಗಿಸುವುದನ್ನು ತಡೆಹಿಡಿಯಬೇಕಾದ ಅಗತ್ಯವಿಲ್ಲ. ಇಂತಹ ಎಲ್ಲಾ ಸಂದರ್ಭಗಳಲ್ಲಿ ಸೂಕ್ತವಾದ ಕ್ರಮ ಎಂದರೆ, ಒಮ್ಮೆ ಒಬ್ಬ ಸರ್ಕಾರಿ ನೌಕರನು ಕ್ರಿಮಿನಲ್ ನ್ಯಾಯಾಲಯದ ದಂಡನೆಗೆ ಗುರಿಯಾದರೆ, ಆತನು ಸಲ್ಲಿಸಿರಬಹುದಾದ ಮೇಲ್ಮನವಿ ಇತ್ಯರ್ಥವಾಗುವವರೆಗೂ ಕಾಯದೆ ಸಂವಿಧಾನದ ಅನುಚ್ಛೇದ 311(2)ರಡಿಯಲ್ಲಿರುವ ಎರಡನೇ ಪರಂತುಕದ ಸಮರ್ಥನೆ ಪಡೆದಿರುವ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು 1957ರ ನಿಯಮ 14(1)ರನುಸಾರ ಶಿಸ್ತಿನ ಕ್ರಮ ಕೈಗೊಳ್ಳತಕ್ಕದ್ದು, ಇಲ್ಲವಾದಲ್ಲಿ ಕ್ರಿಮಿನಲ್ ನ್ಯಾಯಾಲಯದಲ್ಲಿ ತೀವ್ರ ಆರೋಪಕ್ಕಾಗಿ ದೋಷಸಿದ್ಧಿಯಾಗಿ ದಂಡನೆಗೆ ಗುರಿಯಾದಂತಹ ವ್ಯಕ್ತಿಯು ಸೇವೆಯಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಿದಂತಾಗುತ್ತದೆ.
ಆದ್ದರಿಂದ ಮೇಲ್ಮನವಿ ಆದೇಶವು ಇತ್ಯರ್ಥವಾಗುವುದನ್ನು ಕಾಯುವುದು ಸೂಕ್ತವಲ್ಲ. ಆದರೆ, ಒಂದು ವೇಳೆ ಆಪಾದಿತ ಸರ್ಕಾರಿ ನೌಕರನು ಮೇಲಿನ ನ್ಯಾಯಾಲಯದಲ್ಲಿ ಖುಲಾಸೆ (acquit)ಯಾದರೆ, ಶಿಸ್ತು ಪ್ರಾಧಿಕಾರಿಯು ಆದೇಶವನ್ನು ಪರಿಷ್ಕರಿಸಬಹುದು.
ಒಂದು ವೇಳೆ ಸರ್ಕಾರಿ ನೌಕರರನ್ನು ಪುನ: ಸೇವೆಗೆ ತೆಗೆದುಕೊಂಡಲ್ಲಿ, ಆತನು ಸೇವೆಯಲ್ಲಿ ಮುಂದುವರಿದಿದ್ದರೆ ಅರ್ಹನಾಗಿರುತ್ತಿದ್ದಂಥ ಎಲ್ಲ ಸೌಲಭ್ಯಗಳಿಗೂ ಹಕ್ಕುಳ್ಳವನಾಗುತ್ತಾನೆ."
ಮೇಲೆ ಓದಲಾದ ಕ್ರಮ ಸಂಖ್ಯೆ (12)ರ ದಿನಾಂಕ: 24/04/2013ರ ಪತ್ರದಲ್ಲಿ ಡಾ: ಟಿ. ವೆಂಕಟೇಶ್, ಇವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸುವ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗದ ಸಹಮತಿ ಕೋರಲಾಗಿದ್ದು, ಸದರಿ ಪ್ರಸ್ತಾವನೆಗೆ ಮೇಲೆ ಕ್ರಮಸಂಖ್ಯೆ; (13)ರಲ್ಲಿ ಓದಲಾದ ದಿನಾಂಕ: 03/06/2013ರಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ತನ್ನ ಸಹಮತಿಯನ್ನು ನೀಡಿದೆ.
ಡಾ: ಟಿ. ವೆಂಕಟೇಶ್, ಹಿರಿಯ ತಜ್ಞರು (ಆರ್ಥೋ), ಚಿಗಟೇರಿ ಜಿಲ್ಲಾ ಆಸ್ಪತ್ರೆ, ದಾವಣಗೆರೆ ಇವರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮತ್ತು ವಿಶೇಷ ನ್ಯಾಯಾಧೀಶರ (ಲೋಕಾಯುಕ್ತ) ನ್ಯಾಯಾಲಯ, ದಾವಣಗೆರೆ ಇಲ್ಲಿನ ವಿಶೇಷ (ಲೋಕ್) ಕೇಸ್ ಸಂಖ್ಯೆ 4/2008ರ ತೀರ್ಪಿನ ವಿರುದ್ಧ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿರುವ ಕ್ರಿಮಿನಲ್ ಅಪೀಲ್ ಸಂಖ್ಯೆ: 186/2013ರಲ್ಲಿ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟು, ಸರ್ಕಾರಿ ಸೇವೆಯಿಂದ ವಜಾಗೊಳಿಸಲು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.
ಸರ್ಕಾರಿ ಆದೇಶ ಸಂಖ್ಯೆ: ಆಕುಕ 334 ಎಂಎಸ್ಎ 2007, ಬೆಂಗಳೂರು, ದಿನಾಂಕ: 03/02/2014
ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಡಾ: ಟಿ. ವೆಂಕಟೇಶ್, ಹಿಂದಿನ ಹಿರಿಯ ತಜ್ಞರು (ಆರ್ಥೋ), ಚಿಗಟೇರಿ ಜಿಲ್ಲಾ ಆಸ್ಪತ್ರೆ, ದಾವಣಗೆರೆ (ಪ್ರಸ್ತುತ ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಹಿರಿಯೂರು, ಚಿತ್ರದುರ್ಗ ಜಿಲ್ಲೆ) ಇವರನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮತ್ತು ವಿಶೇಷ ನ್ಯಾಯಾಧೀಶರ (ಲೋಕಾಯುಕ್ತ) ನ್ಯಾಯಾಲಯ, ದಾವಣಗೆರೆ ಇಲ್ಲಿನ ವಿಶೇಷ (ಲೋಕ್) ಕೇಸ್ ಸಂಖ್ಯೆ : 4/2008ರ ತೀರ್ಪಿನ ವಿರುದ್ಧ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿರುವ ಕ್ರಿಮಿನಲ್ ಅಪೀಲ್ ಸಂಖ್ಯೆ: 186/2013ರಲ್ಲಿ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟು, ಸರ್ಕಾರಿ ಸೇವೆಯಿಂದ ವಜಾಗೊಳಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ವಿ. ರಾಮಪ್ಪ
PR.294
ಸರ್ಕಾರದ ಅಧೀನ ಕಾರ್ಯದರ್ಶಿ SC.25
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
ನಗರಾಭಿವೃದ್ಧಿ ಸಚಿವಾಲಯ
ವಿಷಯ: ಬೆಳಗಾವಿ ನಗರದ ಮಹಾ ಯೋಜನೆ (ಪ-2) ಕ್ಕೆ ಸರ್ಕಾರದ ಅಂತಿಮ ಅನುಮೋದನೆ ನೀಡುವ ಬಗ್ಗೆ.
1) ಸರ್ಕಾರದ ಆದೇಶ ಸಂಖ್ಯೆ:ನಅಇ:440:ಬೆಮಪ್ರಾ:2006, ದಿ:30-12-2006.
ಓದಲಾಗಿದೆ:
2) ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಪತ್ರ ಸಂಖ್ಯೆ:ಬೆನಪ್ರಾ:ಯೋ:ಮ.ಯೋ (ಪ-2) :ಅಂ:ಅ:2013-14/2980, ದಿ:26.10.2011.
3) ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಏಕ ಕಡತ ಸಂಖ್ಯೆ:ನಗ್ರಾಯೋ:(7):ಉನಿ (ಮ.ಯೋ-2):ಬೆ. ಮ.ಯೋ:
2013-14 ರಲ್ಲಿ ನೀಡಿರುವ ಅಭಿಪ್ರಾಯ ದಿನಾಂಕ 21-11-2013.
ಪ್ರಸ್ತಾವನೆ:
ಮೇಲೆ ಓದಲಾದ (1)ರ ಸರ್ಕಾರಿ ಆದೇಶದಲ್ಲಿ ಬೆಳಗಾವಿ ನಗರದ ಸ್ಥಳೀಯ ಯೋಜನಾ ಪ್ರದೇಶದ ಮಹಾ ಯೋಜನೆಗೆ ತಾತ್ಕಾಲಿಕ ಅನುಮೋದನೆ ನೀಡಲಾಗಿದೆ.
ಮೇಲೆ ಓದಲಾದ (2)ರ ಪತ್ರದಲ್ಲಿ ಬೆಳಗಾವಿ ಯೋಜನಾ ಪ್ರಾಧಿಕಾರವು, ಬೆಳಗಾವಿ ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ತಯಾರಿಸಿರುವ ಮಹಾ ಯೋಜನೆ (ಪ-2) ಕುರಿತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 13(1)(2) ರನ್ವಯ ಅಗತ್ಯ ಕ್ರಮ ಜರುಗಿಸಿ ಮಹಾ ಯೋಜನೆಯ ನಕ್ಷೆಗಳನ್ನು ಹಾಗೂ ವರದಿಯನ್ನು ತಯಾರಿಸಿ ಸರ್ಕಾರದ ಅಂತಿಮ ಅನುಮೋದನೆಗೆ ಸಲ್ಲಿಸಿದೆ.
ಮೇಲೆ ಓದಲಾದ (3)ರಲ್ಲಿ, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಕಛೇರಿಯ ಕಡತದಲ್ಲಿ, ಬೆಳಗಾವಿ ನಗರದ ಜನಸಂಖ್ಯೆಯು 2021 ರಲ್ಲಿ 800000 ಗಳಷ್ಟು ಬೆಳವಣಿಗೆಯಾಗುವುದಾಗಿ ಅಂದಾಜಿಸಿ ಮಹಾ ಯೋಜನೆಯನ್ನು ತಯಾರಿಸಲಾಗಿದೆ. ಬೆಳಗಾವಿ ನಗರದ ಸ್ಥಳೀಯ೫೮೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ಭಾಗ ೧ ಯೋಜನಾ ಪ್ರದೇಶದ (ಪ-2) ಒಟ್ಟು 8080.71 ಹೆಕ್ಟೇರ್ಸ್ ಪ್ರದೇಶವನ್ನು ನಗರದ ಅಭಿವೃದ್ಧಿಗಾಗಿ ನಗರೀಕರಣದ ಎಲ್ಲೆಯೆಂದು ಪ್ರಸ್ತಾಪಿಸಿ ಮಹಾಯೋಜನೆಯನ್ನು ರೂಪಿಸಲಾಗಿದೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ (12)ರಲ್ಲಿ ನಿಗಧಿಪಡಿಸಿರುವ ಅಂಶಗಳನ್ನು ಪರಿಗಣಿಸಿ ನಗರದ ಮುಂದಿನ ಯೋಜಿತ ಬೆಳವಣಿಗೆಗೆ ಪ್ರಸ್ತಾಪಿಸಿರುವ 8080.71ಹೆಕ್ಟೇರ್ಸ್ ಪ್ರದೇಶದಲ್ಲಿ ವಸತಿಗಾಗಿ 3795.85 ಹೆಕ್ಟೇರ್ (ಶೇ.46.97), ವಾಣಿಜ್ಯಕ್ಕಾಗಿ 241.39 ಹೆಕ್ಟೇರ್ (ಶೇ.3.00), ಕೈಗಾರಿಕೆಗಾಗಿ 839.75 ಹೆಕ್ಟೇರ್ (ಶೇ.10.39), ಸಾರ್ವಜನಿಕಃಅರೆ ಸಾರ್ವಜನಿಕ ಉಪಯೋಗಕ್ಕೆ 549.61 ಹೆಕ್ಟೇರ್(ಶೇ.6.80) ಉದ್ಯಾನವನ ಮತ್ತು ಬಯಲು ಜಾಗಕ್ಕಾಗಿ 800.19 ಹೆಕ್ಟೇರ್ (ಶೇ.9.90) ಹಾಗೂ ಸಾರಿಗೆ / ಸಂಪರ್ಕ ವಲಯಕ್ಕೆ 1696.88 ಹೆಕ್ಟೇರ್ (ಶೇಕಡ 21.00), ನಾಗರೀಕ ಸೌಲಭ್ಯಕ್ಕಾಗಿ 157.04 ಹೆಕ್ಟೇರ್ (ಶೇ.1.94) ಪ್ರದೇಶವನ್ನು ನಿಗಧಿಪಡಿಸಲಾಗಿದೆ. ಮಹಾ ಯೋಜನೆಯನ್ನು (ಪ-2) ಅನುಷ್ಠಾನಕ್ಕೆ ತರಲು ಅಗತ್ಯವಿರುವ ವಲಯ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಸದರಿ ಮಹಾ ಯೋಜನೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 13(3) ರನ್ವಯ ಅಂತಿಮ ಅನುಮೋದನೆ ನೀಡಲು ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಈ ಕೆಳಕಂಡ ಆದೇಶವನ್ನು ಹೊರಡಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ನಅಇ 83 ಬೆಮಪ್ರಾ 2013, ದಿನಾಂಕ:15.02.2014
ಮೇಲೆ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಳಗಾವಿ ನಗರದ ಮಹಾ ಯೋಜನೆ (ಪ-2) ನ್ನು ಈ ಕೆಳಕಂಡ ಷರತ್ತಿಗೊಳಪಟ್ಟು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 13(3)ರನ್ವಯ ಸರ್ಕಾರದ ಅಂತಿಮ ಅನುಮೋದನೆಯನ್ನು ನೀಡಲಾಗಿದೆ. ಮಹಾ ಯೋಜನೆಗೆ (ಪ-2) ಅಂತಿಮ ಅನುಮೋದನೆ ನೀಡಿದ ಗುರುತಾಗಿ ವರದಿ ಹಾಗೂ ನಕ್ಷೆಗಳ ಮೇಲೆ ಸರ್ಕಾರದ ಮುದ್ರೆಯನ್ನು ಹಾಕಲಾಗಿದೆ.
ಷರತ್ತುಗಳು:
1) ಈ ಆದೇಶದ ದಿನಾಂಕದಿಂದ ಎರಡು ವರ್ಷಗಳವರೆಗೆ ಪ್ರಾಧಿಕಾರವು ಯಾವುದೇ ಭೂ ಉಪಯೋಗ ಬದಲಾವಣೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಕೂಡದು.
2) ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಭೂ ಉಪಯೋಗ ಬದಲಾವಣೆಗೆ ಸಂಬಂಧಿಸಿದಂತೆ ಮಾನ್ಯ ಉಚ್ಛನ್ಯಾಯಾಲಯವು ನೀಡಿರುವ ಆದೇಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
3) ಮಹಾಯೋಜನೆಯಲ್ಲಿ ಗುರುತಿಸಲಾಗಿರುವ ಸರ್ವೆ ನಂಬರುಗಳು, ನಾಲೆ/ ಅತಿಹೆಚ್ಚು ವಿದ್ಯುತ್ ವಾಹಕ ತಂತಿಗಳು / ಹಾಲಿ ರಸ್ತೆ / ಕೆರೆ, ಕೊಳಗಳಲ್ಲಿ ಯಾವುದಾದರು ತಪ್ಪಿದ್ದಲ್ಲಿ ಅಂತಹ ತಪ್ಪುಗಳನ್ನು ಸೂಕ್ತ ದಾಖಲೆಗಳೊಂದಿಗೆ ಸ್ಥಳ ಪರಿಶೀಲಿಸಿ, ದೃಡಪಡಿಸಿಕೊಂಡು ವಾಸ್ತವಾಂಶಗಳನ್ನು ಗಣನೆಗೆ ತೆಗೆದುಕೊಂಡು ಪ್ರಾಧಿಕಾರವು ಸರಿಪಡಿಸಿಕೊಳ್ಳತಕ್ಕದ್ದು.
4) ಮಹಾಯೋಜನೆಯಲ್ಲಿ ಗುರುತಿಸಿರುವ ಅಧಿಕ ವಿದ್ಯುತ್ ವಾಹಕ ತಂತಿ, ರಸ್ತೆ, ನಾಲೆಯ ಪಂಕ್ತೀಕರಣದಲ್ಲಿ ಹಾಗೂ ಹಾಲಿ ಭೂಮಿಯ ಮೇಲೆ ಹಾಲಿ ಇರುವ ಪಂಕ್ತೀಕರಣದಲ್ಲಿ ವ್ಯತ್ಯಾಸವಿದ್ದಲ್ಲಿ, ಮಹಾಯೋಜನೆಯಲ್ಲಿ, ಹಾಲಿ ಇರುವ ಪಂಕ್ತೀಕರಣದನ್ವಯ ಗುರುತಿಸಿದ ನಂತರ ಉಳಿಯುವ ಜಾಗವನ್ನು ಜಮೀನಿಗೆ ಹೊಂದಿಕೊಂಡಿರುವ ಭೂ ಉಪಯೋಗವನ್ನು ನಿಗಧಿಪಡಿಸಬಹುದು.
5) ಹಾಲಿ ರಸ್ತೆಯ ಪಂಕ್ತೀಕರಣವನ್ನು ಮಹಾಯೋಜನೆಯಲ್ಲಿ ತಪ್ಪಾಗಿ ಗುರುತಿಸಿದಂತಹ ಪ್ರಕರಣಗಳಲ್ಲಿ, ಸೂಕ್ತ ದಾಖಲೆಗಳೊಂದಿಗೆ (Cadestial Map) ಹಾಲಿ ಭೂಮಿಯಲ್ಲಿರುವ ರಸ್ತೆ ಪಂಕ್ತೀಕರಣವನ್ನು ರಸ್ತೆ ಅಂಗೀಕರಣ ಮಾಡುವಾಗ ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದು. ಹಾಗೂ ಮಹಾಯೋಜನೆಯಲ್ಲಿ ಹಾಲಿ ರಸ್ತೆಯನ್ವಯ ಪಂಕ್ತೀಕರಣ ಅಳವಡಿಸಿಕೊಂಡ ನಂತರ ಉಳಿಯುವ ಜಾಗವನ್ನು ಜಮೀನಿಗೆ ಹೊಂದಿಕೊಂಡಿರುವ ಭೂ ಉಪಯೋಗ (Higher land use) ನಿಗಧಿಪಡಿಸಿಕೊಳ್ಳತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಟಿ.ಎಂ.ವಾಸುದೇವರಾವ್
PR.271
ಸರ್ಕಾರದ ಅಧೀನ ಕಾರ್ಯದರ್ಶಿ, SC.100
ನಗರಾಭಿವೃದ್ಧಿ ಇಲಾಖೆ.
ನಗರಾಭಿವೃದ್ಧಿ. ಸಚಿವಾಲಯ
ವಿಷಯಃ- ಬೀದರ್ ಸ್ಥಳೀಯ ಯೋಜನಾ ಪ್ರದೇಶದ ಮಹಾ ಯೋಜನೆ (ಪ-1) ಗೆ ಸರ್ಕಾರದ ಅಂತಿಮ ಅನುಮೋದನೆ ನೀಡುವ ಬಗ್ಗೆ ಓದಲಾಗಿದೆ:- 1. ಸರ್ಕಾರದ ಆದೇಶ ಸಂಖ್ಯೆ:ನಅಇ:200:ಗುಅಪ್ರಾ:2010, ದಿನಾಂಕ:01-12-2010
2. ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಪತ್ರ ಸಂಖ್ಯೆ: ಬೀನಪ್ರಾ:ಟಿ.ಪಿ.ಎಂ.ಮ.ಯೋ(ಪ1):2011-12/169, ದಿನಾಂಕ: 06-02-2014.
3. ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಏಕ ಕಡತ ಸಂಖ್ಯೆ:ನಗ್ರಾಯೋ (1):ಗುವಿ:ಬೀದರ್: ಮ.ಯೋ (ಪ1):ಅಂತಿಮ:
2013-14 ರಲ್ಲಿ ನೀಡಿರುವ ಅಭಿಪ್ರಾಯ ದಿನಾಂಕ: 12-02-2014.
ಪ್ರಸ್ತಾವನೆ:
ಮೇಲೆ ಓದಲಾದ (1)ರ ಸರ್ಕಾರಿ ಆದೇಶದಲ್ಲಿ ಬೀದರ್ ಸ್ಥಳೀಯ ಯೋಜನಾ ಪ್ರದೇಶದ ಮಹಾ ಯೋಜನೆ (ಪ-1)ಗೆ ಸರ್ಕಾರದ ತಾತ್ಕಾಲಿಕ ಅನುಮೋದನೆ ನೀಡಲಾಗಿದೆ.
ಮೇಲೆ ಓದಲಾದ (2)ರ ಪತ್ರದಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರವು ಬೀದರ್ ಸ್ಥಳೀಯ ಯೋಜನಾ ಪ್ರದೇಶಕ್ಕೆ ತಯಾರಿಸಿರುವ ಮಹಾ ಯೋಜನೆ(ಪ-1) ಕುರಿತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 13(1) ರನ್ವಯ ಅಗತ್ಯ ಕ್ರಮ ಜರುಗಿಸಿ ಮಹಾ ಯೋಜನೆ(ಪ-1)ಯ ನಕ್ಷೆಗಳನ್ನು ಹಾಗೂ ವರದಿಯನ್ನು ತಯಾರಿಸಿ ಸರ್ಕಾರದ ಅಂತಿಮ ಅನುಮೋದನೆಗೆ ಸಲ್ಲಿಸಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ೫೮೧ಮೇಲೆ ಓದಲಾದ (3)ರ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಕಛೇರಿಯ ಕಡತದಲ್ಲಿ ಬೀದರ್ ನಗರದ ಜನಸಂಖ್ಯೆಯು 2021ರಲ್ಲಿ 5,00,000 ಗಳಷ್ಟು ಬೆಳವಣಿಗೆಯಾಗುವುದಾಗಿ ಅಂದಾಜಿಸಿ ಮಹಾ ಯೋಜನೆಯನ್ನು ತಯಾರಿಸಲಾಗಿದೆ. ಬೀದರ್ ಸ್ಥಳೀಯ ಯೋಜನಾ ಪ್ರದೇಶದ ಒಟ್ಟು 4928.88 ಹೆಕ್ಟೇರ್ ಪ್ರದೇಶವನ್ನು ನಗರದ ಅಭಿವೃದ್ಧಿಗಾಗಿ ನಗರೀಕರಣದ ಎಲ್ಲೆಯೆಂದು ಪ್ರಸ್ತಾಪಿಸಿ ಮಹಾ ಯೋಜನೆ(ಪ-1)ಯನ್ನು ರೂಪಿಸಲಾಗಿದೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ (12)ರಲ್ಲಿ ನಿಗದಿಪಡಿಸಿರುವ ಅಂಶಗಳನ್ನು ಪರಿಗಣಿಸಿ ಪಟ್ಟಣದ ಮುಂದಿನ ಯೋಜಿತ ಬೆಳವಣಿಗೆೆಗಾಗಿ ಪ್ರಸ್ತಾಪಿಸಿರುವ 4928.88 ಹೆಕ್ಟೇರ್ ಪ್ರದೇಶದಲ್ಲಿ ವಸತಿಗಾಗಿ 2246.98 ಹೆಕ್ಟೇರ್ (ಶೇ.45.58), ವಾಣಿಜ್ಯಕ್ಕಾಗಿ 224.97 ಹೆಕ್ಟೇರ್ (ಶೇ.4.56), ಕೈಗಾರಿಕೆಗಾಗಿ 334.71 ಹೆಕ್ಟೇರ್, (ಶೇ.6.80), ಸಾರ್ವಜನಿಕಃಅರೆ ಸಾರ್ವಜನಿಕ ಉಪಯೋಗಕ್ಕೆ 421.28 ಹೆಕ್ಟೇರ್, (ಶೇ.8.55) ಉದ್ಯಾನವನ ಮತ್ತು ಬಯಲು ಜಾಗಕ್ಕಾಗಿ 482.26 ಹೆಕ್ಟೇರ್ (ಶೇ.9.78) ಹಾಗೂ ಸಾರಿಗೆ/ ಸಂಪರ್ಕ ವಲಯಕ್ಕೆ 1054.46 ಹೆಕ್ಟೇರ್ (ಶೇಕಡ 21.39), ನಾಗರೀಕ ಸೌಲಭ್ಯಕ್ಕಾಗಿ 32.21 ಹೆಕ್ಟೇರ್ (ಶೇ.0.66), ಸಂರಕ್ಷಿತ ಪ್ರದೇಶ 132.01 ಹೆಕ್ಟೇರ್ (ಶೇ.2.68), ಪ್ರದೇಶವನ್ನು ನಿಗದಿಪಡಿಸಲಾಗಿದೆ. ಮಹಾ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಅಗತ್ಯವಿರುವ ವಲಯ ನಿಯಮಾವಳಿಗಳನ್ನು ಸೂಕ್ತವಾಗಿ ಮಾರ್ಪಡಿಸಿ ರೂಪಿಸಲಾಗಿದ್ದು, ಸದರಿ ಮಹಾ ಯೋಜನೆ(ಪ-1)ಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 13(3) ರನ್ವಯ ಅಂತಿಮ ಅನುಮೋದನೆ ನೀಡಲು ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.
ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶವನ್ನು ಹೊರಡಿಸಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ:ನಅಇ 147 ಗುಅಪ್ರಾ 2013 ದಿನಾಂಕ:21.02.2014
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಬೀದರ್ ಸ್ಥಳೀಯ ಯೋಜನಾ ಪ್ರದೇಶಕ್ಕೆ ರೂಪಿಸಿರುವ ಮಹಾ ಯೋಜನೆ(ಪ-1)ಗೆ ಈ ಕೆಳಕಂಡ ಷರತ್ತಿಗೊಳಪಟ್ಟು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಪ್ರಕರಣ 13(3)ರನ್ವಯ ಸರ್ಕಾರದ ಅಂತಿಮ ಅನುಮೋದನೆಯನ್ನು ನೀಡಿದೆ. ಮಹಾ ಯೋಜನೆ(ಪ-1)ಗೆ ಅಂತಿಮ ಅನುಮೋದನೆ ನೀಡಿದ ಗುರುತಾಗಿ ವರದಿ ಹಾಗೂ ನಕ್ಷೆಗಳ ಮೇಲೆ ಸರ್ಕಾರದ ಮುದ್ರೆಯನ್ನು ಹಾಕಲಾಗಿದೆ.
ಷರತ್ತುಗಳು: 1. ಮಹಾಯೋಜನೆ ಹೊರಡಿಸುವ ದಿನಾಂಕದಿಂದ ಎರಡು ವರ್ಷಗಳವರೆಗೆ ಪ್ರಾಧಿಕಾರವು ಯಾವುದೇ ಭೂ ಉಪಯೋಗ ಬದಲಾವಣೆ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಕೂಡದು.
2. ಮಹಾಯೋಜನೆಯಲ್ಲಿ ಗುರುತಿಸಲಾಗಿರುವ ಸರ್ವೇ ನಂಬರುಗಳು, ನಾಲೆ/ಅತಿ ಹೆಚ್ಚು ವಿದ್ಯುತ್ ವಾಹಕ ತಂತಿಗಳು/ಹಾಲಿ ರಸ್ತೆ/ಕೆರೆ ಕೊಳಗಳಲ್ಲಿ ಯಾವುದಾದರು ತಪ್ಪಿದ್ದಲ್ಲಿ ಅಂತಹ ತಪ್ಪುಗಳನ್ನು ಸೂಕ್ತ ದಾಖಲೆಗಳೊಂದಿಗೆ ಸ್ಥಳ ಪರಿಶೀಲಿಸಿ, ದೃಡಪಡಿಸಿಕೊಂಡು ವಾಸ್ತವಾಂಶಗಳನ್ನು ಗಣನೆಗೆ ತೆಗೆದುಕೊಂಡು ಪ್ರಾಧಿಕಾರವು ಸರಿಪಡಿಸಿಕೊಳ್ಳತಕ್ಕದ್ದು.
3. ಮಹಾಯೋಜನೆಯಲ್ಲಿ ಗುರುತಿಸಿರುವ ಅಧಿಕ ವಿದ್ಯುತ್ ವಾಹಕ ತಂತಿ, ರಸ್ತೆ, ನಾಲೆಯ ಪಂಕ್ತೀಕರಣದಲ್ಲಿ ಹಾಗೂ ಭೂಮಿಯ ಮೇಲೆ ಹಾಲಿ ಇರುವ ಪಂಕ್ತೀಕರಣದಲ್ಲಿ ವ್ಯತ್ಯಾಸವಿದ್ದಲ್ಲಿ, ಮಹಾಯೋಜನೆಯಲ್ಲಿ, ಹಾಲಿ ಇರುವ ಪಂಕ್ತೀಕರಣದನ್ವಯ ಗುರುತಿಸಿದ ನಂತರ ಉಳಿಯುವ ಜಾಗವನ್ನು ಜಮೀನಿಗೆ ಹೊಂದಿಕೊಂಡಿರುವ ಭೂ ಉಪಯೋಗವನ್ನು ನಿಗಧಿಪಡಿಸಬಹುದು.
4. .ಹಾಲಿ ರಸ್ತೆಯ ಪಂಕ್ತೀಕರಣವನ್ನು ಮಹಾಯೋಜನೆಯಲ್ಲಿ ತಪ್ಪಾಗಿ ಗುರುತಿಸಿದಂತಹ ಪ್ರಕರಣಗಳಲ್ಲಿ, ಸೂಕ್ತ ದಾಖಲೆಗಳೊಂದಿಗೆ (Cadestial Map) ಹಾಲಿ ಭೂಮಿಯಲ್ಲಿರುವ ರಸ್ತೆ ಪಂಕ್ತೀಕರಣವನ್ನು ರಸ್ತೆ ಅಲೀಕರಣ ಮಾಡುವಾಗ ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದು. ಹಾಗೂ ಮಹಾಯೋಜನೆಯಲ್ಲಿ ಹಾಲಿ ರಸ್ತೆಯನ್ವಯ ಪಂಕ್ತೀಕರಣ ಅಳವಡಿಸಿಕೊಂಡ ನಂತರ ಉಳಿಯುವ ಜಾಗವನ್ನು ಜಮೀನಿಗೆ ಹೊಂದಿಕೊಂಡಿರುವ ಭೂ ಉಪಯೋಗ (Higher land use)
ನಿಗಧಿಪಡಿಸಿಕೊಳ್ಳತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಟಿ.ಎಂ.ವಾಸುದೇವರಾವ್
PR.272
ಸರ್ಕಾರದ ಅಧೀನ ಕಾರ್ಯದರ್ಶಿ, SC.50
ನಗರಾಭಿವೃದ್ಧಿ ಇಲಾಖೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ: ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿನ ಉಪನ್ಯಾಸಕರ ಪರಿವೀಕ್ಷಣಾ ಅವಧಿಯನ್ನು ಘೋಷಿಸುವ ಬಗ್ಗೆ.
ಓದಲಾಗಿದೆ: (1) ಆಯುಷ್ ನಿರ್ದೇಶಕರ ಪತ್ರ ಸಂಖ್ಯೆ/46/ಸಿಬ್ಬಂದಿ(1)/2013-14 ದಿನಾಂಕ:29.01.2014.
(2) ಅಧಿಸೂಚನೆ ಸಂಖ್ಯೆ:ಆಕುಕ 110 ಪಿಟಿಡಿ 2009, ದಿನಾಂಕ:22.07.2011
ಪ್ರಸ್ತಾವನೆ:
ಮೇಲೆ ಓದಲಾದ ಪತ್ರದಲ್ಲಿ, ನಿರ್ದೇಶಕರು, ಆಯುಷ್ ಇಲಾಖೆ ಇವರು ಆಯುಷ್ನ ವಿವಿಧ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ 56 ಜನ ಉಪನ್ಯಾಸಕರುಗಳ ಸೇವೆಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ:ಆಕುಕ 110 ಪಿಟಿಡಿ 2009, ದಿನಾಂಕ:22.07.2011ರನ್ವಯ ಸಕ್ರಮಗೊಳಿಸಲಾಗಿದ್ದು, ಇದರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 16 ಜನ ಉಪನ್ಯಾಸಕರುಗಳಾದ ಡಾ|| ಧರಣಿ, ಡಾ|| ಶ್ರೀನಿವಾಸ ಮಸಳೇಕರ್, ಡಾ|| ಶೈಲಾ ಬೋರಣ್ಣವರ್, ಡಾ|| ಶಿವಲಿಂಗ ಬೆಂಡಿಕಾಯಿ, ಡಾ|| ವಿ.ಎಂ. ಹೂಗಾರ್, ಡಾ|| ಶಿವಾನಂದ ಗಣಾಚಾರಿ, ಡಾ|| ರಾಜು ಸಿ.ಎಂ.ಎಂ, ಡಾ|| ಎಂ.ಎಸ್. ರಮೇಶ್, ಡಾ|| ಸೈಯದ್ ಮುನಾವರ್ ಪಾಷ, ಡಾ|| ಮೋಹನಕುಮಾರಿ ಕೆ.ಎಂ., ಡಾ|| ನಿಖಿತಾ ಸಿರಿಗೆರೆ, ಡಾ|| ಶಿವಲಿಂಗಪ್ಪ ಜೆ. ಅರಕೇರಿ, ಡಾ|| ಸಂತೋಷ್ ಎಲ್. ಯಡಹಳ್ಳಿ, ಡಾ|| ಸೂರ್ಯಕಾಂತ್ ವಿ.ಘುಳೆ, ಡಾ|| ಶಿಲ್ಪ ಪಿ.ಎನ್. ಮತ್ತು ಡಾ|| ಶ್ರೀನಿವಾಸ ಯಾದವ್ ಇವರುಗಳು ದಿನಾಂಕ:26.07.2011ರಂದು ಅವರುಗಳು ಆಯ್ಕೆಯಾಗಿರುವ ಉಪನ್ಯಾಸಕರ ಹುದ್ದೆಯ ಸೇವೆಗೆ ಹಾಜರಾಗಿದ್ದು, ಅವರ ಪರೀಕ್ಷಾರ್ಥ ಅವಧಿಯು ದಿನಾಂಕ:25.07.2013ರಂದು ಅಪರಾಹ್ನ ಮುಕ್ತಾಯವಾಗಿರುತ್ತದೆಂದು, ಈ ಎಲ್ಲಾ ಉಪನ್ಯಾಸಕರುಗಳು ಹುದ್ದೆಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳನ್ನು ಪಾಸು ಮಾಡಿದ್ದು, ಇವರುಗಳ ಎರಡು ವರ್ಷಗಳ ಕಾರ್ಯನಿರ್ವಹಣಾ೫೮೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ಭಾಗ ೧ ವರದಿಗಳಲ್ಲಿ ಯಾವುದೇ ಪ್ರತಿಕೂಲ ಷರಾಗಳು ಇಲ್ಲವೆಂದು ಹಾಗೂ ಯಾವುದೇ ಇಲಾಖಾ ವಿಚಾರಣೆ ಇರುವುದಿಲ್ಲವೆಂಬುದನ್ನು ದೃಡೀಕರಿಸುತ್ತಾ, ಸದರಿ ಉಪನ್ಯಾಸಕರುಗಳ ಖಾಯಂಪೂರ್ವ ಅವಧಿಯನ್ನು ತೃಪ್ತಿಕರವೆಂದು ಘೋಷಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ನಿರ್ಣಯ ತೆಗೆದುಕೊಳ್ಳುವಂತೆ ಕೋರಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಮೇಲೆ ಕ್ರಮ ಸಂಖ್ಯೆ(2)ರಲ್ಲಿ ಓದಲಾದ ಅಧಿಸೂಚನೆಯಲ್ಲಿ ಆಯುಷ್ನ ವಿವಿಧ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ 56 ಜನ ಉಪನ್ಯಾಸಕರುಗಳ ಸೇವೆಯನ್ನು ಸರ್ಕಾರಿ ಸೇವೆಯಲ್ಲಿ ವಿಲೀನಗೊಳಿಸಲಾಗಿರುತ್ತದೆ.
ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿರುವ ಸರ್ಕಾರವು, ಗುತ್ತಿಗೆ ಆಧಾರದ ನೇಮಕಾತಿಯಿಂದ ಸೇವಾ ಸಕ್ರಮಗೊಂಡು ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 16 ಜನ ಉಪನ್ಯಾಸಕರುಗಳು ಅವರುಗಳ ಪರಿವೀಕ್ಷಾಣಾ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿರುತ್ತಾರೆಂದು ಘೋಷಿಸಲು ನಿರ್ಧರಿಸಿದೆ. ಆದುದರಿಂದ ಈ ಕೆಳಕಂಡ ಆದೇಶ.
ಸರ್ಕಾರದ ಆದೇಶ ಸಂಖ್ಯೆ:ಆಕುಕ 56 ಪಿಟಿಡಿ 2014, ಬೆಂಗಳೂರು, ದಿನಾಂಕ:19.02.2014.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರಿ ಸೇವಾ(ಪರಿವೀಕ್ಷಣೆ) ನಿಯಮಗಳು, 1977ರ ನಿಯಮ 5(1)(ಎ)ರನ್ವಯ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ 16 ಜನ ಉಪನ್ಯಾಸಕರುಗಳು ಅವರುಗಳ ಹೆಸರುಗಳ ಮುಂದೆ ನಮೂದಿಸಿದ ದಿನಾಂಕದಂದು ಪರಿವೀಕ್ಷಣಾ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿರುತ್ತಾರೆಂದು
| %1 | ಜಿ$5 ಋ | ಈ23 45& 1 | ಋಎ | $ ಏರಅ - ಖ&"$ಊ0 |
| % | "ಚಿ ಉಖಿ | & %%1ಚಥಃ,11-23),,61<6,1%% | ,ಐ61<6,1%% | ,:61<6,1%9* ಕಿ |
| , | "7! ಕ ಘ | & %%1ಚಥಃ,11-3),,61<6,1%% | ,ಐ61<6,1%% | ,:61<6,1%9* ಕಿ |
| 9 | "[ಅಖ ಉ ಘ | & %%1ಚಥಃ,11-3),,61<6,1%% | ,ಐ61<6,1%% | ,:61<6,1%9* ಕಿ |
| @ | "7?ಖಃಡಿ | & %%1ಚಥಃ,11-3),,61<6,1%% | ,ಐ61<6,1%% | ,:61<6,1%9* ಕಿ |
| : | ">6.6 ಘ | & %%1ಚಥಃ,11-3),,61<6,1%% | ,ಐ61<6,1%% | ,:61<6,1%9* ಕಿ |
| ಐ | "7iಠ | & %%1ಚಥಃ,11-3),,61<6,1%% | ,ಐ61<6,1%% | ,:61<6,1%9* ಕಿ |
| < | " ಎ6.6. | & %%1ಚಥಃ,11-3),,61<6,1%% | ,ಐ61<6,1%% | ,:61<6,1%9* ಕಿ |
| 5 | ".6. ಘ6 ಘ | & %%1ಚಥಃ,11-3),,61<6,1%% | ,ಐ61<6,1%% | ,:61<6,1%9* ಕಿ |
| - | " [ ಘ ಘ | & %%1ಚಥಃ,11-3),,61<6,1%% | ,ಐ61<6,1%% | ,:61<6,1%9* ಕಿ |
| %1 | " 6.6 | & %%1ಚಥಃ,11-3),,61<6,1%% | ,ಐ61<6,1%% | ,:61<6,1%9* ಕಿ |
| %% | "!ಎ | & %%1ಚಥಃ,11-3),,61<6,1%% | ,ಐ61<6,1%% | ,:61<6,1%9* ಕಿ |
| %, | "7?ಟಿ^6* | & %%1ಚಥಃ,11-3),,61<6,1%% | ,ಐ61<6,1%% | ,:61<6,1%9* ಕಿ |
| %9 | " ಘ.ಅಘ6 "k | & %%1ಚಥಃ,11-3),,61<6,1%% | ,ಐ61<6,1%% | ,:61<6,1%9* ಕಿ |
| %@ | " ಘ>6ಣ ಕ | & %%1ಚಥಃ,11-3),,61<6,1%% | ,ಐ61<6,1%% | ,:61<6,1%9* ಕಿ |
| %: | "7ಒಟಿಚ6.ಘ6 | & %%1ಚಥಃ,11-3),,61<6,1%% | ,ಐ61<6,1%% | ,:61<6,1%9* ಕಿ |
| %ಐ | "7! ಘ | & %%1ಚಥಃ,11-3),,61<6,1%% | ,ಐ61<6,1%% | ,:61<6,1%9* ಕಿ |
ಷರತ್ತು: ಈ ಆದೇಶವು ಕೆ.ಎ.ಟಿ. ಅರ್ಜಿ ಸಂಖ್ಯೆ: 5161-5260/2012 ಹಾಗೂ ಕೆ.ಎ.ಟಿ. ಅರ್ಜಿ ಸಂಖ್ಯೆ:4353-06/ 2013ರಲ್ಲಿ ಘನ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರಮತ್ತು ಅವರ ಹೆಸರಿನಲ್ಲಿ,
ಟಿ.ಎನ್. ನರಸಿಂಹರಾಜು
ಸರ್ಕಾರದ ಅದೀನ ಕಾರ್ಯದರ್ಶಿ(ಪ್ರ),
PR.270
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾ. ವೈ. ಪದ್ಧತಿ ಮತ್ತು ಸಮನ್ವಯ)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ: ಸರ್ಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿನ ಉಪನ್ಯಾಸಕರುಗಳ ಪರಿವೀಕ್ಷಣಾ ಅವಧಿಯನ್ನು ಘೋಷಿಸುವ ಬಗ್ಗೆ.
ಓದಲಾಗಿದೆ: (1) ಆಯುಷ್ ನಿರ್ದೇಶಕರ ಪತ್ರ ಸಂಖ್ಯೆ/61/ಸಿಬ್ಬಂದಿ(1)/2013-14 ದಿನಾಂಕ:27.01.2014.
(2) ಅಧಿಸೂಚನೆ ಸಂಖ್ಯೆ:ಆಕುಕ 110 ಪಿಟಿಡಿ 2009, ದಿನಾಂಕ:22.07.2011ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ೫೮೩
ಪ್ರಸ್ತಾವನೆ:
ಮೇಲೆ ಓದಲಾದ ಪತ್ರದಲ್ಲಿ, ನಿರ್ದೇಶಕರು, ಆಯುಷ್ ಇಲಾಖೆ ಇವರು ಆಯುಷ್ನ ವಿವಿಧ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ 56 ಜನ ಉಪನ್ಯಾಸಕರುಗಳ ಸೇವೆಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ:ಆಕುಕ 110 ಪಿಟಿಡಿ 2009, ದಿನಾಂಕ:22.07.2011ರನ್ವಯ ಸಕ್ರಮಗೊಳಿಸಲಾಗಿದ್ದು, ಇದರಲ್ಲಿ ಬೆಂಗಳೂರಿನ ಸರ್ಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 05 ಜನ ಉಪನ್ಯಾಸಕರುಗಳಾದ ಡಾ|| ಅಮೀನಾ ಯಾಸ್ಮಿನ್, ಡಾ|| ಆಯೀಷಾ ಅಂಜುಂ, ಡಾ|| ಆಯೀಷಾ ತಬಸುಮ್, ಡಾ|| ನವೀದಾ ತಬಸ್ಸುಮ್, ಮತ್ತು ಡಾ|| ಸುಮಾ ನಾಗರಾಜ್ ಇವರುಗಳು ದಿನಾಂಕ:25.07.2011ರಂದು ಅವರುಗಳು ಆಯ್ಕೆಯಾಗಿರುವ ಉಪನ್ಯಾಸಕರ ಹುದ್ದೆಯ ಸೇವೆಗೆ ಹಾಜರಾಗಿದ್ದು, ಅವರ ಪರೀಕ್ಷಾರ್ಥ ಅವಧಿಯು ದಿನಾಂಕ:24.07.2013ರಂದು ಅಪರಾಹ್ನ ಮುಕ್ತಾಯವಾಗಿರುತ್ತದೆಂದು, ಈ ಎಲ್ಲಾ ಉಪನ್ಯಾಸಕರುಗಳು ಹುದ್ದೆಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳನ್ನು ಪಾಸು ಮಾಡಿದ್ದು, ಇವರುಗಳ ಎರಡು ವರ್ಷಗಳ ಕಾರ್ಯನಿರ್ವಹಣಾ ವರದಿಗಳಲ್ಲಿ ಯಾವುದೇ ಪ್ರತಿಕೂಲ ಷರಾಗಳು ಇಲ್ಲವೆಂದು ಹಾಗೂ ಯಾವುದೇ ಇಲಾಖಾ ವಿಚಾರಣೆ ಇರುವುದಿಲ್ಲವೆಂಬುದನ್ನು ದೃಡೀಕರಿಸುತ್ತಾ, ಸದರಿ ಉಪನ್ಯಾಸಕರುಗಳ ಖಾಯಂಪೂರ್ವ ಅವಧಿಯನ್ನು ತೃಪ್ತಿಕರವೆಂದು ಘೋಷಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ನಿರ್ಣಯ ತೆಗೆದುಕೊಳ್ಳುವಂತೆ ಕೋರಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಮೇಲೆ ಕ್ರಮ ಸಂಖ್ಯೆ(2)ರಲ್ಲಿ ಓದಲಾದ ಅಧಿಸೂಚನೆಯಲ್ಲಿ ಆಯುಷ್ನ ವಿವಿಧ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ 56 ಜನ ಉಪನ್ಯಾಸಕರುಗಳ ಸೇವೆಯನ್ನು ಸರ್ಕಾರಿ ಸೇವೆಯಲ್ಲಿ ವಿಲೀನಗೊಳಿಸಲಾಗಿರುತ್ತದೆ.
ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿರುವ ಸರ್ಕಾರವು, ಗುತ್ತಿಗೆ ಆಧಾರದ ನೇಮಕಾತಿಯಿಂದ ಸೇವಾ ಸಕ್ರಮಗೊಂಡು ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 05 ಜನ ಉಪನ್ಯಾಸಕರುಗಳು ಅವರುಗಳ ಪರಿವೀಕ್ಷಾಣಾ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿರುತ್ತಾರೆಂದು ಘೋಷಿಸಲು ನಿರ್ಧರಿಸಿದೆ. ಆದುದರಿಂದ ಈ ಕೆಳಕಂಡ ಆದೇಶ.
ಸರ್ಕಾರದ ಆದೇಶ ಸಂಖ್ಯೆ:ಆಕುಕ 51 ಪಿಟಿಡಿ 2014, ಬೆಂಗಳೂರು, ದಿನಾಂಕ:19.02.2014.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರಿ ಸೇವಾ(ಪರಿವೀಕ್ಷಣೆ) ನಿಯಮಗಳು, 1977ರ ನಿಯಮ 5(1)(ಎ)ರನ್ವಯ ಬೆಂಗಳೂರಿನ ಸರ್ಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ 05 ಜನ ಉಪನ್ಯಾಸಕರುಗಳು ಅವರುಗಳ ಹೆಸರುಗಳ ಮುಂದೆ ನಮೂದಿಸಿದ ದಿನಾಂಕದಂದು ಪರಿವೀಕ್ಷಣಾ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿರುತ್ತಾರೆಂದು
| %1 | ಜಿ$5 ಋ | ಈ23 45& 1 | ಋಎ | $ ಏರಅ - ಖ&"$ಊ0 |
| % | "*> ಎಟಘ | & %%1ಚಥಃ,11-23),,61<6,1%% | ,:61<6,1%% | ,@61<6,1%9* ಕಿ |
| , | "&ಡಿ * | & %%1ಚಥಃ,11-3),,61<6,1%% | ,:61<6,1%% | ,@61<6,1%9* ಕಿ |
| 9 | "&ಡಿ # ಘ & %%1ಚಥಃ,11-3),,61<6,1%% | ,:61<6,1%% | ,@61<6,1%9* ಕಿ | |
| @ | "># ಣಘ | & %%1ಚಥಃ,11-3),,61<6,1%% | ,:61<6,1%% | ,@61<6,1%9* ಕಿ |
| : | " ^ಘ | & %%1ಚಥಃ,11-3),,61<6,1%% | ,:61<6,1%% | ,@61<6,1%9* ಕಿ |
ಷರತ್ತು: ಈ ಆದೇಶವು ಕೆ.ಎ.ಟಿ. ಅರ್ಜಿ ಸಂಖ್ಯೆ: 5161-5260/2012 ಹಾಗೂ ಕೆ.ಎ.ಟಿ. ಅರ್ಜಿ ಸಂಖ್ಯೆ:4353-06/ 2013ರಲ್ಲಿ ಘನ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರಮತ್ತು ಅವರ ಹೆಸರಿನಲ್ಲಿ,
ಟಿ.ಎನ್. ನರಸಿಂಹರಾಜು
ಸರ್ಕಾರದ ಅದೀನ ಕಾರ್ಯದರ್ಶಿ(ಪ್ರ),
PR.269
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾ. ವೈ. ಪದ್ಧತಿ ಮತ್ತು ಸಮನ್ವಯ)
ಕಾರ್ಮಿಕ ಸಚಿವಾಲಯ
ವಿಷಯ:- ಡಾ:ಸಾಗರ್ ಮುಗದೂರ್, ಇವರನ್ನು ವಿಮಾ ವೈದ್ಯಾಧಿಕಾರಿ ಹುದ್ದೆಗೆ ನೇಮಿಸಿರುವುದನ್ನು ರದ್ದುಪಡಿಸುವ ಕುರಿತು.
ಓದಲಾಗಿದೆ:- 1) ಕಾರ್ಯದರ್ಶಿ, ಕರ್ನಾಟಕ ಲೋಕ ಸೇವಾ ಆಯೋಗ, ಬೆಂಗಳೂರು ಇವರ ಪತ್ರ ಸಂಖ್ಯೆ.PSC 26 RTB 2011 PSC ದಿನಾಂಕ:30-01-2012. ಹಾಗೂ ಅಧಿಸೂಚನೆ ಸಂಖ್ಯೆ.PSC 26 RTB 2011, ದಿನಾಂಕ:23-01-2012.
2) ಪೊಲೀಸ್ ಕಮೀಷನರ್, ಬೆಂಗಳೂರು ನಗರ, ಬೆಂಗಳೂರು ಇವರ ಪತ್ರ ಸಂಖ್ಯೆ.ಎಸ್ಬಿವಿಆರ್/ ಎಸ್ಜಿ 829/2012 ಹಾಗೂ ಇತರೆ ದಿನಾಂಕ: 09-03-2012.
3) ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಹಾವೇರಿ ಇವರ ಪತ್ರ ಸಂಖ್ಯೆ.ಜಿಸಕ/ಎಸ್-3/ಸಿಂಧುತ್ವ/ಸಿಆರ್/2013-14/90 ದಿನಾಂಕ:20-05-2013.
4) ಸರ್ಕಾರದ ಅಧಿಸೂಚನೆ ಸಂಖ್ಯೆ.ಕಾಇ 44 ಎಲ್ಎಸ್ಐ 2012, ದಿನಾಂಕ:23-10-2013.
5) ವೈದ್ಯರ ಮನವಿ ದಿನಾಂಕ:10-11-2013.
R.N.I. No. KARBIL/2001/47147 POSTAL REGN. No. RNP/KA/BGS/2202/2014-16
Licensed to post without prepayment WPP No. 297
೫೮೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೩, ೨೦೧೪ ಭಾಗ ೧ಪ್ರಸ್ತಾವನೆ:
ಕಾರ್ಯದರ್ಶಿ, ಕರ್ನಾಟಕ ಲೋಕ ಸೇವಾ ಆಯೋಗ, ಬೆಂಗಳೂರು ಇವರು ಮೇಲೆ ಓದಲಾದ (1)ರ ಪತ್ರದಲ್ಲಿ "ವಿಮಾ ವೈದ್ಯಾಧಿಕಾರಿ''ಗಳ ಹುದ್ದೆಗೆ 95 ಮಂದಿ ವೈದ್ಯ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯ ಅಧಿಸೂಚನೆಯನ್ನು ಕಳುಹಿಸಿ ಆಯ್ಕೆ ಮಾಡಿದ ಅಭ್ಯರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವ ಮುನ್ನ ಅಭ್ಯರ್ಥಿಗಳ ವಯಸ್ಸು, ವಿದ್ಯಾರ್ಹತೆ ಮತ್ತು ಜಾತಿಯ ಬಗ್ಗೆ ಮೂಲ ದಾಖಲೆಗಳನ್ನು ಪರಿಶೀಲಿಸಿ ತಾಳೆ ನೋಡಿ ನಿಯಮಾನುಸಾರ ನೇಮಕಾತಿ ಮಾಡಿಕೊಳ್ಳಲು ಹಾಗೂ ಮೀಸಲಾತಿಯಡಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಮೀಸಲಾತಿ ಬಗ್ಗೆ ಸಿಂಧುತ್ವ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳಿಂದ ಪಡೆದ ನಂತರವೇ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ತಿಳಿಸಿರುತ್ತಾರೆ.
ಕರ್ನಾಟಕ ಲೋಕ ಸೇವಾ ಆಯೋಗದ ಅಧಿಸೂಚನೆಯಲ್ಲಿ 95 ಮಂದಿ ವೈದ್ಯ ಅಭ್ಯರ್ಥಿಗಳ ಪೈಕಿ ಡಾ:ಸಾಗರ್ ಮುಗದೂರ್ ರವರ ಹೆಸರು ಆಯ್ಕೆ ಪಟ್ಟಿಯ ಕ್ರಮ ಸಂಖ್ಯೆ.66ರಲ್ಲಿ ನಮೂದಾಗಿರುತ್ತದೆ.
ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಇವರು ಓದಲಾದ (2)ರ ಪತ್ರದಲ್ಲಿ ಸಂಬಂಧಿಸಿದ ಠಾಣೆಯಲ್ಲಿ ವೈದ್ಯರ ವಿರುದ್ಧ ಮೊಕದ್ದಮೆ, ವಗೈರೆ ದಾಖಲಾಗಿರುವುದಿಲ್ಲವೆಂದು ಅಭ್ಯರ್ಥಿಯ ನಡತೆ ಮತ್ತು ಚಾರಿತ್ರ್ಯಗಳ ಪರಿಶೀಲನಾ ವರದಿಯನ್ನು ಸಲ್ಲಿಸಿರುತ್ತಾರೆ.
ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಹಾವೇರಿ ಜಿಲ್ಲೆ ಇವರು ಓದಲಾದ (3)ರ ಪತ್ರದಲ್ಲಿ ಡಾ:ಸಾಗರ್ ವಸಂತ ಮುಗದೂರ ಇವರು "ಪರಿಶಿಷ್ಟ ಪಂಗಡ''ದ ಹಿಂದೂ "ನಾಯಕ'' ಉಪ ಜಾತಿಗೆ ಸೇರಿರುವುದಾಗಿ ಸಿಂಧುತ್ವ ಪ್ರಮಾಣ ಪತ್ರವನ್ನು ಸಲ್ಲಿಸಿದ್ದಾರೆ.
ಓದಲಾದ (4)ರ ಅಧಿಸೂಚನೆಯಲ್ಲಿ ಡಾ:ಸಾಗರ್ ಮುಗದೂರ್ ಇವರನ್ನು ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ, ಮಂಗಳೂರು ಇಲ್ಲಿಗೆ ವಿಮಾ ವೈದ್ಯಾಧಿಕಾರಿ ಹುದ್ದೆಗೆ ನೇಮಿಸಲಾಗಿದೆ. ಅಧಿಸೂಚನೆಯು ನೋಂದಾಯಿತ ಅಂಚೆಯ ಮೂಲಕ ತಲುಪಿದ 15 ದಿನಗಳ ಒಳಗಾಗಿ ಅಭ್ಯರ್ಥಿಯು ತನ್ನ ಸ್ವಂತ ವೆಚ್ಚದಲ್ಲಿ, ನಿರ್ದೇಶಕರು, ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು, ರಾಜಾಜಿನಗರ 2ನೇ ಹಂತ ಬೆಂಗಳೂರು ಇವರ ಸಮ್ಮುಖದಲ್ಲಿ ಹಾಜರಾಗಿ ವರದಿ ಮಾಡಿಕೊಳ್ಳತಕ್ಕದ್ದೆಂದು, ತಪ್ಪಿದಲ್ಲಿ ನೇಮಕಾತಿ ಆದೇಶವನ್ನು ಯಾವುದೇ ಸೂಚನೆ ಇಲ್ಲದೆ ರದ್ದುಪಡಿಸಲಾಗುವುದೆಂದು ಹಾಗೂ "ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದಲ್ಲಿ, ಸ್ನಾತಕೋತ್ತರ ವ್ಯಾಸಂಗವನ್ನು ಮುಂದುವರಿಸಲು ಅನುಮತಿಯನ್ನು ನೀಡಲಾಗುವುದಿಲ್ಲವೆಂದು'' ಷರತ್ತುಗಳನ್ನು ವಿಧಿಸಲಾಗಿದೆ.
ಡಾ:ಸಾಗರ ಮುಗದೂರ್ (ಡಾ:ಸಾಗರ ವಸಂತ ಮುಗದೂರ್)ರವರು ಓದಲಾದ (5)ರ ಮನವಿಯಲ್ಲಿ ತಾವು ಬಳ್ಳಾರಿಯ ವಿಜಯನಗರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಇಲ್ಲಿ ಎಂ.ಎಸ್.ಜನರಲ್ ಸರ್ಜರಿ ವಿಷಯದಲ್ಲಿ 2ನೇ ವರ್ಷದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವುದಾಗಿ, ಸೇವಾ ವರದಿ ಮಾಡಿಕೊಳ್ಳಲು ಒಂದು ತಿಂಗಳ ಹೆಚ್ಚಿನ ಕಾಲಾವಕಾಶ ನೀಡುವಂತೆ ಕೋರಿರುತ್ತಾರೆ.
ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿದ್ದು, ಅದರಂತೆ ಈ ಕೆಳಕಂಡ ಆದೇಶ:-
ಸರ್ಕಾರದ ಆದೇಶ ಸಂಖ್ಯೆ.ಕಾಇ 44 ಎಲ್ಎಸ್ಐ 2012, ಬೆಂಗಳೂರು, ದಿನಾಂಕ:24-02-2014.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕ ಸೇವಾ ಆಯೋಗದ ಅಧಿಸೂಚನೆ ಸಂಖ್ಯೆ. PSC 26 RTB 2011, ದಿನಾಂಕ:23-01-2012ರನ್ವಯ ಡಾ:ಸಾಗರ ಮುಗದೂರ್ರವರು ವಿಮಾ ವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾಗಿ ನೇಮಕಾತಿ ಆದೇಶ ಸ್ವೀಕೃತವಾದ 15 ದಿನಗಳ ಒಳಗೆ ಸೇವೆಗೆ ಹಾಜರಾಗಿರುವುದಿಲ್ಲ ನೇಮಕಾತಿ ಆದೇಶದ ಷರತ್ತು ಮತ್ತು ನಿಬಂಧನೆಗಳನ್ವಯ ಸೇವೆಗೆ ಹಾಜರಾಗದ ಡಾ:ಸಾಗರ ಮುಗದೂರ್ ಇವರನ್ನು ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ, ಮಂಗಳೂರು ಇಲ್ಲಿ "ವಿಮಾ ವೈದ್ಯಾದಿಕಾರಿ ಹುದ್ದೆ''ಗೆ ನೇಮಕಾತಿ ಮಾಡಿರುವ ಅಧಿಸೂಚನೆ ಸಂಖ್ಯೆ.ಕಾಇ 44 ಎಲ್ಎಸ್ಐ 2012, ದಿನಾಂಕ:23-10-2013ರ ನೇಮಕಾತಿ ಆದೇಶವನ್ನು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 18ರನ್ವಯ ರದ್ದುಪಡಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ವಿ. ನಾಗೇಶ ರಾವ್
ಪೀಠಾಧಿಕಾರಿ,
PR.273
ಕಾರ್ಮಿಕ ಇಲಾಖೆ.
SC.100
(ಕಾರಾವಿ ಯೋ (ವೈ) ಸೇವೆಗಳು) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59