ಸಂಪುಟ ೧೪೯
Volume 149
ಬೆಂಗಳೂರು, ಗುರುವಾರ, ಆಗಸ್ಟ್ ೧೪, ೨೦೧೪ (ಶ್ರಾವಣ ೨೩, ಶಕ ವರ್ಷ ೧೯೩೬)
Bangalore, Thursday, August 14, 2014 (Shravana 23, Shaka Varsha 1936)
ಸಂಚಿಕೆ ೩೩
Issue 33
ಭಾಗ ೫
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ನಮೂನೆ-1
(9ನೇ ನಿಯಮ ನೋಡಿ)
ಕರ್ನಾಟಕ ಲೋಕಾಯುಕ್ತ, ಬೆಂಗಳೂರು
ಅಧಿಸೂಚನೆ
ಶ್ರೀ ಎಲ್. ರವಿ, ತೀರ್ಪುಬರಹಗಾರರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇಲ್ಲಿ ಕೆಲಸ ಕಾರ್ಯನಿರ್ವಹಿಸುತ್ತಿದ್ದು, ಸದರಿಯವರ ಹೆಸರನ್ನು ``ಎಲ್. ರವಿ" ಬದಲಿಗೆ ``ರವಿ ಭಾರದ್ವಾಜ ಎಲ್" ಎಂಬುದಾಗಿ ಬದಲಾಯಿಸಿಕೊಳ್ಳಲು ಅನುಮತಿ ನೀಡಲಾಗಿದೆ.
PD C/n. 91
ನಿಬಂಧಕರು
SC - 10
ಕರ್ನಾಟಕ ಲೋಕಾಯುಕ್ತ, ಬೆಂಗಳೂರು
FORM-I
(See Rule 9)
OFFICE OF THE DIRECTOR OF HEALTH & FW SERVICES, ANANDARAO CIRCLE, BANGALORE-9
NOTIFICATION No. ಕಿ.ಮ.ಆ.ಸ (4)/92/2011-12, Dated: 13-5-2014
Smt. GIRIYAVA MANAPPA LAMANI , Junior Health Asst., Working as Female Primary Health Center, Koda Haveri District, Department of Health & Family Welfare is permitted to change her Name to Smt. GIRIJA SABAPPA MUKIHALA.
Director
Signature and Designation of the Appointing Authority PD C/n. 90
Office of the Health & F.W Services SC - 10
Ananda Rao Circle, Bangalore-09.
FORM-I
(See Rule 9)
OFFICE OF THE DIRECTOR OF HEALTH & FW SERVICES, ANANDARAO CIRCLE, BANGALORE-9
Smt. LALITHA KRISHNA MALKEKARA, Junior Health Asst., Working as Female Primary Health Center, Belagundi, Belgaum Taluk, Belgaum District, Department of Health & Family Welfare is permitted to change her Name to Smt. LALITHA TUKARAM NAYAK.
Director
Signature and Designation of the Appointing Authority PD C/n. 89
Office of the Health & F.W Services SC - 10
Ananda Rao Circle, Bangalore-09.
(೯೪೫)೯೪೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೪, ೨೦೧೪ ಭಾಗ ೫
FORM-I
(See Rule 9)
Office of the Commandant, IInd Bn, K.S.R.P Belgaum,
NOTIFICATION
Dated: 11-06-2014
Sri MUSHEPPA, MAREPPA PADEWAR Working as POLICE CONSTABLE Office of the Commandant IInd Bn, K.S.R.P. Belgaum, is permitted to change his name to MAHANTESH MAREPPA. PADEWAR
PD C/n. 88
Commandant.
SC - 10
IInd Bn, K.S.R.P. Belgaum-18
ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ
ಸಂ. ಇಎಸ್ಟಿ-3/ಸಿಡಿಎಸ್/ಸಿಆರ್-96/2013-14 ದಿನಾಂಕ: 18-07-2014.
ಬ್ಯಾಕ್ಲಾಗ್ ಹುದ್ದೆಗೆ ಅರ್ಜಿ ಆಹ್ವಾನ
ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಲ್ಲಿರುವ ಒಂದು ನೇರ ನೇಮಕಾತಿ ಬ್ಯಾಕ್ಲಾಗ್ ಹುದ್ದೆಯನ್ನು ತುಂಬಲು ಅರ್ಹ ಪರಿಶಿಷ್ಟ ಜಾತಿ (ಮಹಿಳೆ) ಅಭ್ಯರ್ಥಿಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
1) ಹುದ್ದೆಯ ವಿವರ: ದ್ವಿತೀಯ ದರ್ಜೆ ಸಹಾಯಕರು.
2) ಮೀಸಲಾತಿ ವರ್ಗ: ಪರಿಶಿಷ್ಟ ಜಾತಿ (ಮಹಿಳೆ).
3) ವಿದ್ಯಾರ್ಹತೆ: (ಅ) ಸರ್ಕಾರದಿಂದ ಅಂಗೀಕೃತವಾದ ಪದವಿ ಪೂರ್ವ ಮಂಡಳಿಯ ಯಾವುದಾದರೊಂದು ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
(ಆ) ಅಭ್ಯರ್ಥಿಗಳು ಕರ್ನಾಟಕ ನಾಗರೀಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು, 2012 ರಲ್ಲಿ ನಿಗಧಿ ಪಡಿಸಿರುವ ಪಠ್ಯಕ್ರಮ (Syllabus) ದಂತೆ ಸರ್ಕಾರ ಅಥವಾ ಸರ್ಕಾರವು ಅನುಮೋದಿಸಿದ ಏಜೆನ್ಸಿಯು ನಡೆಸುವ 03 (ಮೂರು) ತಿಂಗಳೊಳಗಾಗಿ ಸದರಿ ಪರೀಕ್ಷೆಯನ್ನು ಪಾಸು ಮಾಡಬೇಕು.
4) ವಯೋಮಿತಿ: ದಿನಾಂಕ: 01/07/2014 ಕ್ಕೆ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 40 ವರ್ಷ ವಯೋಮಿತಿ ಮೀರಿರಬಾರದು.
5) ವೇತನ ಶ್ರೇಣಿ: ರೂ. 11,600-21000 ಹಾಗೂ ಇತರೆ ಭತ್ಯಗಳು.
ಅಭ್ಯರ್ಥಿಗಳು ಮುದ್ರಿತವಾದ ಅರ್ಜಿ ನಮೂನೆ- 1 ಅನ್ನು ನಿಗಧಿತ ದರ ಪಾವತಿ ಮಾಡಿ ಸರ್ಕಾರಿ ಕೇಂದ್ರ ಪುಸ್ತಕ ಮಳಿಗೆ (ಸೆಂಟ್ರಲ್ ಬುಕ್ ಡಿಪೊ) ಇನ್ನಿತರ ಜಿಲ್ಲೆಯ ಸರ್ಕಾರಿ ಮುದ್ರಣಾಲಯದ ಪುಸ್ತಕ ಮಳಿಗೆ, ರಾಜ್ಯದ ಅಂಗೀಕೃತ ಪುಸ್ತಕ ಮಾರಾಟಗಾರರು ಹಾಗೂ ಸರ್ಕಾರಿ ಅಂಗೀಕೃತ ಪುಸ್ತಕ ಮಳಿಗೆಯಿಂದ ಖರೀದಿಸಿ ಭರ್ತಿ ಮಾಡಿ ಈ ಮುಂದಿನ ದಾಖಲಾತಿಗಳೊಂದಿಗೆ ಸಲ್ಲಿಸತಕ್ಕದ್ದು.
(ಅ) ದೃಡೀಕರಿಸಿದ ಜಾತಿ ಪ್ರಮಾಣ ಪತ್ರದ ಪ್ರತಿ.
(ಆ) ಜನ್ಮ ದಿನಾಂಕಕ್ಕೆ ಮತ್ತು ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ದೃಡೀಕರಿಸಿ ಲಗತ್ತಿಸುವುದು.
(ಇ) ಇಬ್ಬರು ಗಣ್ಯ ವ್ಯಕ್ತಿಗಳಿಂದ ಗುಣ ಮತ್ತು ನಡತೆ ಬಗ್ಗೆ ಪ್ರಮಾಣ ಪತ್ರ.
6) ಆಯ್ಕೆ ವಿಧಾನ: ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಅರ್ 13 ಎಸ್ಬಿಸಿ 2001, ದಿನಾಂಕ: 21-11-2001 ರಲ್ಲಿ ವಿವರಿಸಿರುವಂತೆ ವಯಸ್ಸು ಮತ್ತು ಮೌಲ್ಯತೆ (ಮೆರಿಟ್) ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ಅಡಕಗಳೊಂದಿಗೆ ದಿನಾಂಕ: 31/08/2014ರ ಸಂಜೆ 5.30 ಗಂಟೆಯೊಳಗೆ ನಿರ್ದೇಶಕರು, ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, "ಕಾರ್ಮಿಕ ಭವನ", 2ನೇ ಮಹಡಿ, ಬೆಂಗಳೂರು ಡೈರಿ ಸರ್ಕಲ್ ಹತ್ತಿರ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-560029" ಈ ವಿಳಾಸಕ್ಕೆ ಲಕೋಟೆ ಮೇಲೆ "ಪರಿಶಿಷ್ಟ ಜಾತಿ (ಮಹಿಳೆ) ಬ್ಯಾಕ್ಲಾಗ್ ಹುದ್ದೆಗೆ ಅರ್ಜಿ" ಎಂಬ ಮೇಲ್ಬರಹದೊಂದಿಗೆ ತಲುಪುವಂತೆ ಕಳುಹಿಸುವುದು. ಹೆಚ್ಚಿನ ವಿವರಗಳನ್ನು ಆಡಳಿತಾಧಿಕಾರಿಗಳು, ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ
ನಿರ್ದೇಶಕರು,
PR-73
SC 05
ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಬೆಂಗಳೂರುಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೪, ೨೦೧೪ ೯೪೭
ಚಿತ್ರದುರ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ
ಅಧಿಸೂಚನೆ
ಸಂಖ್ಯೆ: 2/2014 ದಿನಾಂಕ: 16-07-2014
ಬರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 28-08-2014 ಸಂಜೆ 5-00 ಗಂಟೆ.
ವಿಷಯಃ-
ಚಿತ್ರದುರ್ಗ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ, ಬೆರಳಚ್ಚುಗಾರರ ಮತ್ತು ಬೆರಳಚ್ಚು-ನಕಲುಗಾರರ ಹುದ್ದೆಗಳ ನೇಮಕಾತಿ ಬಗ್ಗೆಃ-
ಉಲ್ಲೇಖಃ- 1. ಸರ್ಕಾರಿ ಆದೇಶ ಸಂಖ್ಯೆಃLAW/230/LCE/2010, ದಿನಾಂಕಃ 29.03.2011
2. ಗೌರವಾನ್ವಿತ ಉಚ್ಚ ನ್ಯಾಯಾಲಯ, ಬೆಂಗಳುಾರು ರವರ ಪತ್ರ ಸಂಖ್ಯೆಃ ಎಲ್ಸಿಎ/II
164/2009, ದಿನಾಂಕಃ 13.08.2010
3. ಗೌರವಾನ್ವಿತ ಉಚ್ಚ ನ್ಯಾಯಾಲಯ, ಬೆಂಗಳುಾರು ರವರ ಪತ್ರ ಸಂಖ್ಯೆಃ ಎಲ್ಸಿಎ/II-36/2003, ದಿನಾಂಕಃ 23.06.2011
4. ಗೌರವಾನ್ವಿತ ಉಚ್ಚ ನ್ಯಾಯಾಲಯ, ಬೆಂಗಳುಾರು ರವರ ಪತ್ರ ಸಂಖ್ಯೆಃ ಎಲ್ಸಿಎ/II-128/2012, ದಿನಾಂಕಃ 14.09.2012
5. ಈ ನ್ಯಾಯಾಲಯದ ಅಧಿಸೂಚನೆ ಸಂಖ್ಯೆ 2/2010, ದಿನಾಂಕಃ25.05.2010 ಹಾಗೂ 4/2013, ದಿನಾಂಕಃ 24.09.2013
6. ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ ಹಾಗೂ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳ ನೇಮಕಾತಿ) ನಿಯಮ, 1982
7. ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೇ ಹುದ್ದೆಗಳ ನೇಮಕಾತಿ)
(ತಿದ್ದುಪಡಿ) ನಿಯಮ, 2007
8. ಈ ಕಛೇರಿ ಟಿಪ್ಪಣಿ ಹಾಗೂ ದಿನಾಂಕ: 16-07-2014ರ ಟಿಪ್ಪಣಿ ಮೇಲಿನ ಆದೇಶ
ಉಲ್ಲೇಖದಲ್ಲಿ ಓದಲಾದ ಮಾನ್ಯ ಉಚ್ಚ ನ್ಯಾಯಾಲಯ, ಬೆಂಗಳೂರು, ಇವರ ಪತ್ರದ ಮುಖಾಂತರ ನೇರ ನೇಮಕಾತಿಗೆ ಅನುಮತಿಸಲಾಗಿರುವ, ಚಿತ್ರದುರ್ಗ ಹಾಗೂ ಚಿತ್ರದುರ್ಗ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ, ಬೆರಳಚ್ಚುಗಾರರ ಹಾಗೂ ಬೆರಳಚ್ಚು-ನಕಲುಗಾರರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿರುವ ಅಭ್ಯರ್ಥಿಗಳು ಈ ಅಧಿಸೂಚನೆಯ ಜೊತೆಗೆ ಲಗತ್ತಿಸಿರುವ ನಿಗಧಿತ ಅರ್ಜಿ ನಮೂನೆಯಲ್ಲಿ ಬೆರಳಚ್ಚು ಅಥವಾ ಗಣಕೀಕೃತ ಅರ್ಜಿಯನ್ನು ರಚಿಸಿಕೊಂಡು ಅರ್ಜಿಯಲ್ಲಿ ಹುದ್ದೆಗೆ ಸಂಬಂಧಿಸಿದಂತೆ ಎಲ್ಲಾ ಅಂಕಣಗಳಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ದಿನಾಂಕಃ 28.08.2014 ರಂದು ಸಂಜೆ 5.00 ಗಂಟೆ ಸಮಯದೊಳಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿತ್ರದುರ್ಗಕ್ಕೆ ತಲುಪುವಂತೆ ಸಲ್ಲಿಸತಕ್ಕದ್ದು.
1. ಎ) ಸರ್ಕಾರಿ ಆದೇಶ ಸಂಖ್ಯೆಃಸಿಆಸುಇಃ08/ಸೇನೆನಿ/1995, ದಿನಾಂಕಃ 20.06.1995
ಬಿ) ಸರ್ಕಾರಿ ಆದೇಶ ಸಂಖ್ಯೆಃಸಿಆಸುಇಃ53/ಸೇನೆನಿ/2007, ದಿನಾಂಕಃ 04.01.2008
ಸಿ) ಸರ್ಕಾರಿ ಆದೇಶ ಸಂಖ್ಯೆಃಸಿಆಸುಇಃ128/ಸೇನೆನಿ/2008, ದಿನಾಂಕಃ 01.08.2009
| +\,]^ | ಔ | = '&2=_ | ಖ 9+ಖಿಗ | ಖ , ಆ- | ಖ , @- | `% ಗ |
| 0 | ^ | ^ | ಐ | ಐ | ಎ | |
| 4ಕಅಉ | ಐ | ^ | ಐ | ^ | ಎ | |
| ^ | ಐ | ಐ | ^ | ಎ | ||
| 4$+ !25 | ಐ | ^ | ^ | ^ | ಐ | |
| 6: | ಙ | |||||
| &* ಚಿ | ^ | ^ | ಐ | ^ | ಐ | |
| 6: | ಐ | |||||
| &* ಚಿ ಛ | 0 | ^ | ^ | ^ | ಐ | ಐ |
| 4ಕಅಉ | ^ | ^ | ಐ | ^ | ಐ | |
| `% ಗ | ಆ |
ಶೈಕ್ಷಣಿಕ ವಿದ್ಯಾರ್ಹತೆ
1. ಶೀಘ್ರಲಿಪಿಗಾರರ ಹುದ್ದೆಃ
1) ಕರ್ನಾಟಕ ಪ್ರೌಡಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ. 2) ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಕರ್ನಾಟಕ ಸೆಕೆಂಡರಿ ಪ್ರೌಡ ಶಿಕ್ಷಣ ಪರೀಕ್ಷೆಗಳ ಮಂಡಳಿ ವತಿಯಿಂದ ನಡೆಸುವ ಕನ್ನಡ ಹಾಗೂ ಆಂಗ್ಲ ಬೆರಳಚ್ಚು ಪ್ರೌಡದರ್ಜೆ ಹಾಗೂ ಕನ್ನಡ ಹಾಗೂ ಆಂಗ್ಲ ಶೀಘ್ರಲಿಪಿ ಪ್ರೌಡದರ್ಜೆ ಪರೀಕ್ಷೆಗಳಲ್ಲಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣತೆ.
ಅಥವಾ
ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯು ನಡೆಸುವ ಸೆಕ್ರೆಟರಿಯಲ್ ಪ್ರಾಕ್ಟೀಸ್ ಪಠ್ಯಕ್ರಮದ ಡಿಪ್ಲೋಮಾ ಪದವಿಯೊಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಹಾಗೂ ಶೀಘ್ರಲಿಪಿ ವಿಷಯಗಳನ್ನು ಐಚ್ಚಿಕ ವಿಷಯವಾಗಿ ಅಬ್ಯಸಿಸಿ ಉತ್ತೀರ್ಣರಾಗಿರಬೇಕು.
2. ಬೆರಳಚ್ಚುಗಾರರ ಹುದ್ದೆ ಃ
1. ಕರ್ನಾಟಕ ಪ್ರೌಡಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.
2. ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಕರ್ನಾಟಕ ಸೆಕೆಂಡರಿ ಪ್ರೌಡ ಶಿಕ್ಷಣ ಪರೀಕ್ಷೆಗಳ ಮಂಡಳಿ ವತಿಯಿಂದ ನಡೆಸುವ ಕನ್ನಡ ಹಾಗೂ ಆಂಗ್ಲ ಬೆರಳಚ್ಚು ಪ್ರೌಡದರ್ಜೆ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣತೆ.
ಅಥವಾ
ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯು ನಡೆಸುವ ಸೆಕ್ರೆಟರಿಯಲ್ ಪ್ರಾಕ್ಟೀಸ್ ಪಠ್ಯಕ್ರಮದ ಡಿಪ್ಲೋಮಾ ಪದವಿಯೊಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ವಿಷಯಗಳನ್ನು ಐಚ್ಚಿಕ ವಿಷಯವಾಗಿ ಉತ್ತೀರ್ಣರಾಗಿರಬೇಕು.
3. ಬೆರಳಚ್ಚು-ನಕಲುಗಾರರ ಹುದ್ದೆ ಃ
1. ಕರ್ನಾಟಕ ಪ್ರೌಡಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.
2. ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಕರ್ನಾಟಕ ಸೆಕೆಂಡರಿ ಪ್ರೌಡ ಶಿಕ್ಷಣ ಪರೀಕ್ಷೆಗಳ ಮಂಡಳಿ ವತಿಯಿಂದ ನಡೆಸುವ ಕನ್ನಡ ಹಾಗೂ ಆಂಗ್ಲ ಬೆರಳಚ್ಚು ಕಿರಿಯ ದರ್ಜೆ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣತೆ.
ಅಥವಾ
ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯು ನಡೆಸುವ ಸೆಕ್ರೆಟರಿಯಲ್ ಪ್ರಾಕ್ಟೀಸ್ ಪಠ್ಯಕ್ರಮದ ಡಿಪ್ಲೋಮಾ ಪದವಿಯೊಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ವಿಷಯಗಳನ್ನು ಐಚ್ಚಿಕ ವಿಷಯವಾಗಿ ಉತ್ತೀರ್ಣರಾಗಿರಬೇಕು.
ಆಯ್ಕೆ ವಿಧಾನಃ
ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ ಹಾಗೂ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳ ನೇಮಕಾತಿ) ನಿಯಮ, 1982 ಮತ್ತು ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳ ನೇಮಕಾತಿ) (ತಿದ್ದುಪಡಿ) ನಿಯಮ, 2007.
ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಹಾಗೂ ಬೆರಳಚ್ಚು-ನಕಲುಗಾರರ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಈ ಕೆಳಕಂಡಂತೆ ಅರ್ಹತಾ ಪರೀಕ್ಷೆಯನ್ನು ಏರ್ಪಡಿಸಲಾಗುವುದು.
ಶೀಘ್ರಲಿಪಿಗಾರರ ಅರ್ಹತಾ ಪರೀಕ್ಷೆ ಃ
1. ಅಭ್ಯಥಿರ್ಯು ನೇಮಕಾತಿ ಪ್ರಾಧಿಕಾರದಿಂದ ನಾಮ ನಿರ್ದೇಶಿಸಲ್ಪಟ್ಟ ಅಧಿಕಾರಿಯವರಿಂದ ಪ್ರತಿ ನಿಮಿಷಕ್ಕೆ 120 ಪದಗಳ ವೇಗದಂತೆ 05 ನಿಮಿಷಗಳಲ್ಲಿ ನೀಡುವ ಉಕ್ತಲೇಖನವನ್ನು ಸುಮಾರು 45 ನಿಮಿಷದ ಕಾಲಾವಕಾಶದಲ್ಲಿ ಬೆರಳಚ್ಚು ಯಂತ್ರದಲ್ಲಿ ಲಿಪ್ಯಂತರಿಸತಕ್ಕದ್ದು,
2. ಈ ಪರೀಕ್ಷೆಯು ಗರಿಷ್ಟ 100 ಅಂಕಗಳದ್ದಾಗಿದ್ದು ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಕನಿಷ್ಟ 50 ಅಂಕಗಳನ್ನು ಪಡೆಯತಕ್ಕದ್ದು.
ಬೆರಳಚ್ಚುಗಾರರು ಮತ್ತು ಬೆರಳಚ್ಚು-ನಕಲುಗಾರರ ಹುದ್ದೆಗಳಿಗೆ
1. ಅಭ್ಯಥಿರ್ಯು ನೇಮಕಾತಿ ಪ್ರಾಧಿಕಾರದಿಂದ ನಾಮ ನಿರ್ದೇಶಿಸಲ್ಪಟ್ಟ ಅಧಿಕಾರಿಯವರಿಂದ 15 ನಿಮಿಷಗಳ ಕಾಲ ಉಕ್ತಲೇಖನಕ್ಕೆ ಬೆರಳಚ್ಚು ಯಂತ್ರದಲ್ಲಿ ಬೆರಳಚ್ಚುಪಡಿಸತಕ್ಕದ್ದು,
2. ಈ ಪರೀಕ್ಷೆಯು ಗರಿಷ್ಟ 100 ಅಂಕಗಳದ್ದಾಗಿದ್ದು ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಕನಿಷ್ಟ 50 ಅಂಕಗಳನ್ನು ಪಡೆಯತಕ್ಕದ್ದು.
ಮೇಲೆ ಹೇಳಿದ ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡವಾರು ಅಂಕಗಳು ಅರ್ಹತಾ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಹಾಗೂ ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಂi್ಕೆು ವೂಡಲಾಗುವುದು.
ಪರಿವೀಕ್ಷಣಾ ಅವಧಿಃ
ನೇಮಕ ಹೊಂದಿದ ಅಭ್ಯರ್ಥಿಗಳನ್ನು ಕರ್ನಾಟಕ ಸೇವಾ ನಿಯಮ, ಪರಿವೀಕ್ಷಣಾ ನಿಯಮ 1977ರ ಪ್ರಕಾರ 02 ವರ್ಷಗಳ ಪರಿವೀಕ್ಷಣಾ ಅವಧಿಯಲ್ಲಿರತಕ್ಕದ್ದು, ಹಾಗೂ ಸದರಿ ಅವಧಿಯಲ್ಲಿ ತಮ್ಮ ಹುದ್ದೆಗಳಿಗೆ ಯಾವುದಾದರೂ ಇಲಾಖಾ ಪರೀಕ್ಷೆಗಳಲ್ಲಿ ಹಾಗೂ ಕನ್ನಡ ಭಾಷಾ ಪರೀಕ್ಷೆಯಲ್ಲಿ ನಿಯಮದಡಿ ಗೊತ್ತುಪಡಿಸಿದರೆ ಅವುಗಳಲ್ಲಿ ಉತ್ತೀರ್ಣರಾಗತಕ್ಕದ್ದು.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೪, ೨೦೧೪ ೯೪೯ಪಿಂಚಣಿ ಸೌಲಭ್ಯಃ
ಸರ್ಕಾರದ ಆದೇಶ ಸಂಖ್ಯೆಃ ಎಪ್.ಡಿ. (ಎಸ್.ಪಿ.ಎಲ್)/04/ಪಿ.ಇ.ಟಿ/2005, ದಿನಾಂಕಃ 31.03.2006 ರಂತೆ ಅನ್ವಯಿಸುವುದು.
ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ
ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ನೇಮಕಾತಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಪಡೆಯುವುದರ ಮೂಲಕ ಅರ್ಜಿಯನ್ನು ಸಮುಚಿತ ಮಾರ್ಗದ ಮುಖಾಂತರ ಸಲ್ಲಿಸತಕ್ಕದ್ದು.
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ
ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ ಸಿಆಸುಇ 43 ಸೇವನೆ 2008, ದಿನಾಂಕಃ 07.03.2012 ರನ್ವಯ ಆಯ್ಕೆಯಾದ ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ಬೆರಳಚ್ಚು-ನಕಲುಗಾರರು ಕರ್ನಾಟಕ ಸರ್ಕಾರ ನಿಗದಿಪಡಿಸುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಶೇ.60 ಅಂಕಗಳಿಗೆ ಕಡಿಮೆ ಇಲ್ಲದಂತೆ ಪಡೆದು, ಆಯ್ಕೆಯಾದ ಮೂರು ತಿಂಗಳೊಳಗೆ ಪಾಸು ಮಾಡತಕ್ಕದ್ದು. ತಪ್ಪಿದ್ದಲ್ಲಿ ಸದರಿ ನೇಮಕಾತಿಯನ್ನು ಅನರ್ಹಗೊಳಿಸಲಾಗುವುದು.
| 8ಟಿಕh | ,ಐಚkkಏ^ಗಿkಏ^ಐkಖಏಏ^ಚಏಏ^ಐಙಎಏಏ^ಚkಏ^ಐಠಏಏಏ^kಏಏ^ಎಐಏಏಏ^ಖಏಏ^ಎಚಖಏಏ^ಙಏಏ^ಎಖಙಏಏ 00 2 05 |
| ರಡ | ,ಐಐಖಏಏ^ಎಏಏ^ಐಎಏಏಏ^ಎkಏ^ಐಗಿಏಏಏ^ಗಿಏಏ^ಐಚಎಏಏ^ಗಿkಏ^ಐkಖಏಏ^ಚಏಏ^ಐಙಎಏಏ^ಚkಏ^ಐಠಏಏಏ^ kಏಏ^ಎಐಏಏಏ00 2 05 |
| ರಡ^ | ,ಐಐಖಏಏ^ಎಏಏ^ಐಎಏಏಏ^ಎkಏ^ಐಗಿಏಏಏ^ಗಿಏಏ^ಐಚಎಏಏ^ಗಿkಏ^ಐkಖಏಏ^ಚಏಏ^ಐಙಎಏಏ^ಚkಏ^ಐಠಏಏಏ^ kಏಏ^ಎಐಏಏಏ00 2 05 |
ವಯೋಮಿತಿಃ-
ಕನಿಷ್ಟ 18 ವರ್ಷಗಳು
ಗರಿಷ್ಟ :
| 5 | ಗಿk9 |
| #89:;ಘಿ+ಘಿಕಐ | ಚಏ9 |
| ಕಎ% | ಗಿ[9 |
| ಕಎ\ | |
| ಕಗಿ% | |
| ಕಗಿ\ |
1. ಅರ್ಜಿಗಳನ್ನು ಸ್ವೀಕರಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕದಂದು ಅಬ್ಯರ್ಥಿಯು ಕನಿಷ್ಟ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.
2. ಸರ್ಕಾರಿ ಸೇವೆಯಲ್ಲಿರುವವರಿಗೆ/ವಿಧವೆಯರಿಗೆ/ಅಂಗವಿಕಲರಿಗೆ ವಯೋಮಿತಿಯಲ್ಲಿ 10 ವರ್ಷಗಳ ಗರಿಷ್ಠ ಮಿತಿಯಲ್ಲಿ ಸಡಿಲಿಕೆ ಇರುತ್ತದೆ.
3. ಮಾಜಿ ಸೈನಿಕರಿಗೆ ಗರಿಷ್ಟ ವಯೋಮಿತಿ, ಅವನು ಸಶಸ್ತ್ರ ದಳಗಳಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವವನೋ ಆ ವರ್ಷಗಳಿಗೆ ಮೂರು ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳು ಅಗುವುದೋ ಅಷ್ಟು ವರ್ಷಗಳ ಸಡಿಲಿಕೆ.
4. ವಿಧವೆಯಾಗಿದ್ದರೆ ಅವರು ಗರಿಷ್ಟ ವಯೋಮಿತಿ ಸೌಲಭ್ಯವನ್ನು ಕೋರುವವರು ವಿಧವೆಂiೆುಂಬ ಬಗ್ಗೆ ತಹಶೀಲ್ದಾರ್ ದರ್ಜೆಗೆ ಕಡಿಮೆ ಇಲ್ಲದ ಕಂದಾಯ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರಗಳನ್ನು ದ್ವಿಪ್ರತಿಯಲ್ಲಿ ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.
5. ಅಭ್ಯರ್ಥಿಯು ಕರ್ನಾಟಕ ರಾಜ್ಯದಲ್ಲಿರುವ ಭಾರತ ಸರ್ಕಾರದ ಜನಗಣತಿ ಸಂಸ್ಥೆಯಲ್ಲಿ ಈಗ ಹುದ್ದೆಯನ್ನು ಹೊಂದಿದ ಪಕ್ಷದಲ್ಲಿ ಗರಿಷ್ಟ ವಯೋಮಿತಿಯನ್ನು ಅಭ್ಯರ್ಥಿಯು ಎಷ್ಟು ವರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವರೋ ಅಥವಾ ಹಿಂದೆ ಸೇವೆ ಸಲ್ಲಿಸಿದ್ದಾರೋ ಅಷ್ಟು ವರ್ಷಗಳ ಅಥವಾ 05 ವರ್ಷಗಳ ಅವಧಿ, ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು ಅನ್ವಯಿಸುತ್ತದೆ.
ಸಾಮಾನ್ಯ ಸೂಚನೆಗಳು ಃ-
1) ಅಬ್ಯರ್ಥಿಯು ಈ ಅಧಿಸೂಚನೆಯಲ್ಲಿ ಲಗತ್ತಿಸಿದ ನಿಗದಿತ ಅರ್ಜಿ ನಮೂನೆಯಲ್ಲಿ ಬೆರಚಳ್ಚು ಮಾಡಿಸಿದ ಅಥವಾ ಗಣಕೀಕೃತ ಅರ್ಜಿಯನ್ನು ತನ್ನ ಕೈ ಬರವಣಿಗೆಯಲ್ಲಿ ಬರ್ತಿ ಮಾಡಿ ಸಲ್ಲಿಸತಕ್ಕದ್ದು.
2) ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಹಾಗೂ ಮೀಸಲಾತಿಯಡಿಯಲ್ಲಿ ಅರ್ಜಿ ಹಾಕಲು ಬಯಸುವವರು ಆಯಾ ಹುದ್ದೆಗಳಿಗೆ ಪ್ರತ್ಯೇಕವಾಗಿ ನಿಗದಿತ ಅರ್ಜಿ ನಮೂನೆಗಳಲ್ಲಿ ಅರ್ಜಿ ಸಲ್ಲಿಸತಕ್ಕದ್ದು.
೯೫೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೪, ೨೦೧೪ ಭಾಗ ೫3) ಅಬ್ಯರ್ಥಿಯು ಇತ್ತೀಚಿನ ಪಾಸ್ಪೋರ್ಟ್ ಸೈಜ್ ಪೋಟೋವನ್ನು ಅರ್ಜಿ ನಮೂನೆಯಲ್ಲಿ ತೋರಿಸಿರುವ ಜಾಗದಲ್ಲಿ ಅಂಟಿಸಿ ಅದರ ಮೇಲೆ ಸಹಿ ಮಾಡತಕ್ಕದ್ದು.
4) ಅರ್ಜಿ ನಮೂನೆಯೊಂದಿಗೆ ಸಲ್ಲಿಸಬೇಕಾಗಿರುವ ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಹಾಗೂ ಇತರ ಪ್ರಮಾಣ ಪತ್ರಗಳನ್ನು ಸ್ವಯಂ ದೃಡೀಕರಿಸಿ ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು. (ಮೂಲ ಪ್ರತಿಗಳನ್ನು ಲಗತ್ತಿಸುವ ಅವಶ್ಯಕತೆ ಇರುವುದಿಲ್ಲ,) ಲಗತ್ತೀಕರಿಸಿದ ಪ್ರಮಾಣ ಪತ್ರಗಳು ಅರ್ಜಿ ಸಲ್ಲಿಸುವ ದಿನಾಂಕದ ಒಳಗೆ ಪಡೆದಿರಬೇಕು.
5) ಅಬ್ಯರ್ಥಿಗಳು ಅರ್ಜಿಯೊಂದಿಗೆ ತಮ್ಮ ನಡತೆ ಮತ್ತು ಶೀಲದ ಬಗ್ಗೆ ತಮ್ಮ ಸಂಬಂಧಿಯಲ್ಲದ ಸಮಾಜದ ಇಬ್ಬರು ಗಣ್ಯ ವ್ಯಕ್ತಿಗಳಿಂದ ಪಡೆದ ಎರಡು ಪ್ರಮಾಣ ಪತ್ರಗಳನ್ನು ಹಾಗೂ ಕೊನೆಯಲ್ಲಿ ವ್ಯಾಸಂಗ ಮಾಡಿದ ಶಾಲೆ/ವಿದ್ಯಾಲಯದಿಂದ ಪಡೆದ ಒಂದು ಪ್ರಮಾಣ ಪತ್ರವನ್ನು ಲಗತ್ತಿಸತಕ್ಕದ್ದು.
6) ಅಬ್ಯರ್ಥಿಗಳು ನೇಮಕಾತಿ ಸಂಬಂದದಲ್ಲಿ ಯಾವುದೇ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅನುಸರಿಸಿರುವುದು ಕಂಡು ಬಂದಲ್ಲಿ ಅಂತಹವರನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.
7) ಅಪೂರ್ಣವಾಗಿರುವ, ಸಹಿ ಮಾಡದ ಮತ್ತು ವಿದ್ಯಾರ್ಹತೆ, ಜನ್ಮ ದಿನಾಂಕ, ಮೀಸಲಾತಿ ಹಾಗೂ ವಯೋಮಿತಿ ರಿಯಾಯಿತಿ ಬಗ್ಗೆ ಸಂಬಂದಪಟ್ಟ ದಾಖಲೆಗಳನ್ನು ಹೊಂದಿರದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
8) ಸರ್ಕಾರಿ ಮತ್ತು ಅರೆ ಸರ್ಕಾರಿ ಸೇವೆಯಲ್ಲಿರುವ ಅಬ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಮುಚಿತ ಮಾರ್ಗದ ಮುಖಾಂತರ ಸಲ್ಲಿಸಬೇಕು. ಇಲ್ಲವಾದಲ್ಲಿ ಸದರಿ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
9) ಅಬ್ಯರ್ಥಿಗಳು ತಮ್ಮ ಅರ್ಜಿಯ ಜೊತೆ ಸ್ವ ವಿಳಾಸವಿರುವ ಲಕೋಟೆಯನ್ನು ಸಲ್ಲಿಸಬೇಕು ಸದರಿ ಲಕೋಟೆಯ ಮೇಲೆ ನೋಂದಾಯಿತ ಅಂಚೆಗೆ ತಗಲುವ ಅಂಚೆ ಚೀಟಿಯನ್ನು ಲಗತ್ತಿಸಿರಬೇಕು.
10) ಅರ್ಜಿದಾರರು ಯಾವ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆಂಬುದನ್ನು ದಪ್ಪ ಅಕ್ಷರಗಳಲ್ಲಿ ಲಕೋಟೆಯ ಮತ್ತು ಅರ್ಜಿಯ ಮೇಲೆ ತಪ್ಪದೇ ನಮೂದಿಸತಕ್ಕದ್ದು.
11) ಸಂದರ್ಶನಕ್ಕೆ ಅರ್ಹತೆ ಗಳಿಸಿದ ಅಬ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗುವುದು.
12) ಅಬ್ಯರ್ಥಿಗೆ ಸಂದರ್ಶನಕ್ಕೆ ಹಾಜರಾಗಲು ಮಾಹಿತಿ ಸಿಗದಿದ್ದ ಪಕ್ಷದಲ್ಲಿ ಅವರು ಸಂದರ್ಶನಕ್ಕೆ ಹಾಜರಾಗಲು ಅನರ್ಹರೆಂದು ತಿಳಿಯತಕ್ಕದ್ದು. ಈ ಬಗ್ಗೆ ಯಾವುದೇ ಪತ್ರ ವ್ಯವಹಾರಗಳಿಗೆ ಅವಕಾಶವಿರುದಿಲ್ಲ.
13) ವಿವರ ತುಂಬಿರುವ ಅರ್ಜಿಗಳನ್ನು ಈ ಕಚೇರಿಯ ವಿರಾಮದ ವೇಳೆಯನ್ನು ಹೊರತುಪಡಿಸಿ ಕೆಲಸದ ವೇಳೆಯಲ್ಲಿ ಮಾತ್ರ ಸ್ವೀಕರಿಸಲಾಗುವುದು.
14) ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳು ನಮೂನೆ-ಡಿ ಯಲ್ಲಿ ಹಾಗೂ ಪ್ರವರ್ಗ-2-ಎ, 2-ಬಿ, 3-ಎ, 3-ಬಿ, ಗೆ ಸೇರಿದ ಅಭ್ಯರ್ಥಿಗಳು ನಮೂನೆ-ಎಪ್ ನಲ್ಲಿ ಮತ್ತು ಪ್ರವರ್ಗ-1 ಗೆ ಸೇರಿದ ಅಭ್ಯರ್ಥಿಗಳು ನಮೂನೆ-ಇ ನಲ್ಲಿ ಸಂಬಂಧಿಸಿದ ತಹಶೀಲ್ದಾರ್ರವರಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ನೆರಳಚ್ಚು ಪ್ರತಿಯನ್ನು ಸಲ್ಲಿಸತಕ್ಕದ್ದು, 15) ಗ್ರಾಮೀಣ ಮೀಸಲಾತಿ ಕೋರುವ ಅಭ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆಃಸಿಆಸುಇ/98/ಸೇನಿನಿ/2005, ದಿನಾಂಕಃ10.08.2005ರ ಪ್ರಕಾರ ನಿಗಧಿತ ನಮೂನೆ 2 ರಲ್ಲಿ ಅಧಿಕೃತ ಅಧಿಕಾರಿಗಳಿಂದ ಪಡೆದು ಅದನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಮಾಡಿಸಿ ನೆರಳಚ್ಚು ಪ್ರತಿಯನ್ನು ಸಲ್ಲಿಸತಕ್ಕದ್ದು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲು ರುಜು ಮಾಡಿಸದ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ. ವಿವಿಧ ಮೀಸಲಾತಿಯನ್ವಯ ಗ್ರಾಮೀಣ ಅಭ್ಯರ್ಥಿಗಳು ಲಭ್ಯವಿಲ್ಲದಿರುವ ಪಕ್ಷದಲ್ಲಿ ಸದರಿ ಹುದ್ದೆಯ ಆಯ್ಕೆಗೆ ಅದೇ ಮೀಸಲಾತಿ ಹೊಂದಿದ ಗ್ರಾಮೀಣರಹಿತ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.
16) ಗ್ರಾಮೀಣ ಮೀಸಲಾತಿ ಕೋರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ನಮೂನೆ-2 ರ ಮೀಸಲಾತಿ ಪ್ರಮಾಣ ಪತ್ರದ ಜೊತೆ ನಮೂನೆ-1ರಲ್ಲಿ ಮೇಲುಸ್ತರಕ್ಕೆ ಸೇರಿಲ್ಲದಿರುವ ಬಗ್ಗೆ ತಹಶೀಲ್ದಾರ್ರವರಿಂದ ಪಡೆದ ಪ್ರಮಾಣ ಪತ್ರದ ನೆೆರಳಚ್ಚು ಪ್ರತಿಯನ್ನು ಸಲ್ಲಿಸತಕ್ಕದ್ದು.
17) ಕನ್ನಡ ಮಾಧ್ಯಮ ಮೀಸಲಾತಿ ಕೋರುವ ಅಭ್ಯರ್ಥಿಗಳು ನಿಗಧಿತ ನಮೂನೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರಿಂದ ಸಹಿ ಮತ್ತು ಮೊಹರಿನೊಂದಿಗೆ ಪಡೆದು ಅದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಸಹಿ ಮಾಡಿಸಿ ನೆರಳಚ್ಚು ಪ್ರತಿಗಳನ್ನು ಸಲ್ಲಿಸುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲು ರುಜು ಮಾಡಿಸದ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ.
18) ಅಂಗವಿಕಲ ಮೀಸಲಾತಿ ಕೋರುವ ಅಭ್ಯರ್ಥಿಗಳು ದಿನಾಂಕಃ 19.05.2005ರ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆಃಸಿಆಸುಇಃ115/ಸೇನನಿ/2005ರಲ್ಲಿ ನಿಗಧಿಪಡಿಸಿದ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದು ನೆರಳಚ್ಚು ಪ್ರತಿಯನ್ನು ಸಲ್ಲಿಸತಕ್ಕದ್ದು.
19) ಮಾಜೀ ಸೈನಿಕರು ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಸೈನಿಕ ಸೇವೆಯಿಂದ ಬಿಡುಗಡೆಯಾದ ಬಗ್ಗೆ ವಿಮುಕ್ತಿ ಹೊಂದಿದ ಬಗೆಗಿನ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.
ಕೆ.ಸೋಮಶೇಖರ್
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,
ಚಿತ್ರದುರ್ಗ.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೪, ೨೦೧೪ ೯೫೧ಅರ್ಜಿ ನಮೂನೆ
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,
ಭಾವಚಿತ್ರ
ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ -ಇವರಿಗೆ.
ಮಾನ್ಯರೆ,
ಚಿತ್ರದುರ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಅಧಿಸೂಚನೆ ಸಂಖ್ಯೆಃ 2/2014 ದಿನಾಂಕಃ 16.07.2014 ರ ಪ್ರಕಾರ _______________ ಹುದ್ದೆಗೆ ನಾನು ___________ ಮೀಸಲಾತಿಯ ವರ್ಗದಡಿಯಲ್ಲಿ ಆಯ್ಕೆಯನ್ನು ಬಯಸಿ ಈ ಮೂಲಕ ನನ್ನ ವಿವರಗಳೊಂದಿಗೆ
| *25> | |||||
| ಆ | 0!ಘಿ0'ಘಿ+ | ||||
| @ | ಥಉಅ | ||||
| ಈ | ಋ0`ಛಿಂ | ||||
| ಒ | ಇ 9ಘಿ | ||||
| ಅ | h:ದ0ಡಿ 0ಡಿ ;ಘಿಈ;ಡಿ | ||||
| ಋ | ಇ!"*?pಡ( ಇ! ಜಿ ಂಇ! | ||||
| ಊ | ಅಓ *ಜ/ಅ#} | ||||
| ! | ಖ./ಉಣಅ!5 0ಅ ಡಿ^<1!ಃಓಒಃ0ಕಉ0ಕ$0ಖಿ!"= | ||||
| ಈಉ ಂ!#/ | ಈಉ ಂ! 90!ಉಣ -5 | #9: * | +ಂ * | ಖ+ * | |
| - | %7,%7,%7,(ಘಿ00 ಋ 0 #/ | ||||
| i | #!;$+0@8ಟಿಕh #/, | ||||
| ಃ | #!;$+0@ ರಡ #/, | ||||
| ಜ#!;$+ ರಡ#/, | |||||
| ಇ `ಘಿಕಅಉಘಿ? | .ಘಿ*ಅಘಿ4ಅ!2 ಅ i25 + *25> !2: *ಂಒ#ಆ! +! ಕಉ0ಕ | ||||
| ಇಕ0# ಅ < /_ಕಉ0ಕಇ!=} | |||||
| ಆ | 1^ಅ!ರಿ!'0 *ರ0*ರpಣ$ ( } | ||||
| @ | *?ರ ಡ +0 ಇ!! ಅ ಡಿ |
ಸೂಚನೆಃ- ಅಬ್ಯರ್ಥಿಯು ತನಗೆ ಅನ್ವಯವಾಗದ್ದನ್ನು ಹೊಡೆದು ಹಾಕುವುದು.
R.N.I. No. KARBIL/2001/47147 POSTAL REGN. No. RNP/KA/BGS/2202/2014-16
Licensed to post without prepayment WPP No. 297
೯೫೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೪, ೨೦೧೪ ಭಾಗ ೫ಘೋಷಣೆ
ಈ ಮೇಲೆ ನಮೂದಿಸಿರುವ ಮಾಹಿತಿ ಮತ್ತು ವಿವರಗಳು ನನಗೆ ತಿಳಿದ ಮಟ್ಟಿಗೆ ಸತ್ಯವಾಗಿದ್ದು ಹಾಗೂ ಒಂದು ವೇಳೆ ಅವು ಅಸತ್ಯವೆಂದು ಕಂಡು ಬಂದಲ್ಲಿ ನನ್ನ ಅಬ್ಯರ್ಥಿತನವನ್ನು ಬಿಟ್ಟು ಬಿಡಲು ಹಾಗೂ ಅಗತ್ಯ ಶಿಸ್ತಿನ ಕ್ರಮ ಎದುರಿಸಲು ನಾನು ಬದ್ದನಾಗಿರುತ್ತೇನೆ/ ಬದ್ದಳಾಗಿರುತ್ತೇನೆ. ನಾನು ಆಯ್ಕೆಗೊಂಡರೆ ಚಿತ್ರದುರ್ಗ ಜಿಲ್ಲಾ ಘಟಕದ ಯಾವುದೇ ನ್ಯಾಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ದನಿದ್ದೇನೆ/ಸಿದ್ದಳಿದ್ದೇನೆ.
ಸ್ಥಳಃ
ದಿನಾಂಕಃ ಅಬ್ಯರ್ಥಿಯ ಸಹಿ.
ಅಬ್ಯರ್ಥಿಯು ಸರ್ಕಾರಿ ನೌಕರನಾಗಿದ್ದ ಪಕ್ಷದಲ್ಲಿ ನೇಮಕಾತಿ ಪ್ರಾಧಿಕಾರಗಳ ದೃಡೀಕರಣ ಪತ್ರ
ಶ್ರೀ/ಶ್ರೀಮತಿ_______________ಇವರ ನಮ್ಮ ಇಲಾಖೆಯಲ್ಲಿ ದಿನಾಂಕಃ_______ರಿಂದ_________ರವರೆಗೆ ಸೇವೆ ಸಲ್ಲಿಸುತ್ತಿದ್ದು ಅಬ್ಯರ್ಥಿಯ ನಡೆತೆಯು ಉತ್ತಮವಾಗಿದ್ದು__________ಹುದ್ದೆಗೆ ಅರ್ಹರಿರುತ್ತಾರೆ ಮತ್ತು__________ಹುದ್ದೆಗೆ ಅರ್ಜಿ ಸಲ್ಲಿಸಲು ಅನುಮತಿಯನ್ನು ನೀಡಲಾಗಿದೆ.
ಸ್ಥಳಃ ಪ್ರಾಧಿಕಾರದ ಸಹಿ
PR-74
ಕರ್ನಾಟಕ ಲೋಕ ಸೇವಾ ಆಯೋಗ, "ಉದ್ಯೋಗ ಸೌಧ" ಬೆಂಗಳೂರು-560001
ಅಧಿಸೂಚನೆ
ಸಂಖ್ಯೆ: ಆರ್(1) 252/2014-15/ಪಿಎಸ್ಸಿ, ದಿನಾಂಕ: 18-07-2014.
ಆಯೋಗದ ಅಧಿಸೂಚನೆ ಸಂಖ್ಯೆ: ಪಿಎಸ್ಸಿ 01 ಆರ್ಟಿಬಿ-2/2013 ದಿನಾಂಕ: 03-03-2014 ರಲ್ಲಿ ಕರ್ನಾಟಕ ಸಿವಿಲ್ ಸೇವೆಗಳು (ಜಲಸಂಪನ್ಮೂಲ ಸೇವೆ) (ಸಹಾಯಕ ಇಂಜಿನಿಯರುಗಳ ಮತ್ತು ಕಿರಿಯ ಇಂಜಿನಿಯರುಗಳ ವಿಶೇಷ ನೇಮಕಾತಿ) ವಿಧೇಯಕ 2013 ರಂತೆ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದಲ್ಲಿ ಖಾಯಂ ಆಗಿ ಕಾರ್ಯ ನಿರ್ವಹಿಸಲು 365 ಸಹಾಯಕ ಇಂಜಿನಿಯರ್ (ಸಿವಿಲ್); 40 ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್) 131 ಕಿರಿಯ ಇಂಜಿನಿಯರ್ (ಸಿವಿಲ್) ಮತ್ತು 14 ಕಿರಿಯ ಇಂಜಿನಿಯರ್ (ಮೆಕ್ಯಾನಿಕಲ್) ಹುದ್ದೆಗಳ ನೇಮಕಾತಿ ಮಾಡಲು ಅಧಿಸೂಚಿಸಿ ಅರ್ಜಿಗಳನ್ನು ಸಲ್ಲಿಸಲು ದಿನಾಂಕ: 02-04-2014 ರಂದು ಕೊನೆಯ ದಿನಾಂಕವೆಂದು ನಿಗಧಿಪಡಿಸಲಾಗಿತ್ತು.
ಸರ್ಕಾರದ ಪ್ರಧಾನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ, ಇವರು ದಿನಾಂಕ 14-07-2014ರ ಪತ್ರದಲ್ಲಿ KAT Appln. Nos.2506- 2520/2014 ರಲ್ಲಿನ ಮಧ್ಯಂತರ ಆದೇಶದಂತೆ ಸದರಿ ಅಧಿಸೂಚನೆಯ ಅರ್ಜಿ ಸ್ವೀಕೃತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಮಾನ್ಯ ನ್ಯಾಯಾಲಯದ ಆದೇಶದಂತೆ ಅಧಿಸೂಚನೆಯಲ್ಲಿ ಕೆಲವು ಮಾರ್ಪಾಡುಗಳು ಮಾಡಬೇಕಾಗಿರುವುದರಿಂದ ದಿನಾಂಕ: 03-03-2014 ರಂದು ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದಲ್ಲಿ ಖಾಯಂ ಆಗಿ ಕಾರ್ಯ ನಿರ್ವಹಿಸಲು 365 ಸಹಾಯಕ ಇಂಜಿನಿಯರ್ (ಸಿವಿಲ್); 40 ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್); 131 ಕಿರಿಯ ಇಂಜಿನಿಯರ್ (ಸಿವಿಲ್) ಮತ್ತು 14 ಕಿರಿಯ ಇಂಜಿನಿಯರ್ (ಮೆಕ್ಯಾನಿಕಲ್) ಹುದ್ದೆಗಳ ನೇಮಕಾತಿಗಾಗಿ ಹೊರಡಿಸಲಾದ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂದಕ್ಕೆ ಪಡೆದು ಪರಿಷ್ಕøತ ಅಧಿಸೂಚನೆಯನ್ನು ಹೊರಡಿಸಲು ಕ್ರಮ ಕೈಗೊಳ್ಳುವಂತೆ ವಿನಂತಿಸಿರುತ್ತಾರೆ. ಆದಕಾರಣ, ದಿನಾಂಕ: 03-03-2014 ರಂದು ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದಲ್ಲಿ ಖಾಯಂ ಆಗಿ ಕಾರ್ಯ ನಿರ್ವಹಿಸಲು 365 ಸಹಾಯಕ ಇಂಜಿನಿಯರ್ (ಸಿವಿಲ್); 40 ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್); 131 ಕಿರಿಯ ಇಂಜಿನಿಯರ್ (ಸಿವಿಲ್) ಮತ್ತು 14 ಕಿರಿಯ ಇಂಜಿನಿಯರ್ (ಮೆಕ್ಯಾನಿಕಲ್) ಹುದ್ದೆಗಳ ನೇಮಕಾತಿಗಾಗಿ ಹೊರಡಿಸಲಾದ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯಲಾಗಿದೆ.
ಮನೋಜ್ ಕುಮಾರ್ ಮೀನಾ ಭಾ.ಆ.ಸೇ,
PR 76
SC- 30
ಕಾರ್ಯದರ್ಶಿ, ಕರ್ನಾಟಕ ಲೋಕ ಸೇವಾ ಆಯೋಗ, ಬೆಂಗಳೂರು
ನಮೂನೆ-1
(9ನೇ ನಿಯಮ ನೋಡಿ)
ನಿರ್ದೇಶಕರ ಕಛೇರಿ, ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ, ಬೆಂಗಳೂರು-1
ಅಧಿಸೂಚನೆ
ಸಂಖ್ಯೆ: ಡಿಟಿಇ/31/ಇಎಸ್ಟಿ(5)2013, ದಿನಾಂಕ: 13-03-2014
ಶ್ರೀಮತಿ ಕಲಾವತಿ (ಮಾಲತಿ ಅರವಿಂದ ಕುಲಕರ್ಣಿ), ದ್ವಿತೀಯ ದರ್ಜೆ ಸಹಾಯಕರು, ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಹುಬ್ಬಳ್ಳಿ, ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ, ಬೆಂಗಳೂರು ಇವರಿಗೆ ತಮ್ಮ ಹೆಸರನ್ನು ಶ್ರೀಮತಿ ಮಾಲತಿ ಅರವಿಂದ ಕುಲಕರ್ಣಿ ಎಂದು ಬದಲಾವಣೆ ಮಾಡಿಕೊಳ್ಳಲು ಘಟನೋತ್ತರ ಅನುಮತಿ ನೀಡಲಾಗಿದೆ.
ನಿರ್ದೇಶಕರು,
PD C/n 93
ತಾಂತ್ರಿಕ ಶಿಕ್ಷಣ ಇಲಾಖೆ,
SC- 10
ಅರಮನೆ ರಸ್ತೆ, ಬೆಂಗಳೂರು-560 001.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59