ಸಂಪುಟ ೧೪೯
Volume 149
ಬೆಂಗಳೂರು, ಗುರುವಾರ, ನವೆಂಬರ್ ೨೭, ೨೦೧೪ (ಮಾರ್ಗಶಿರ ೬, ಶಕ ವರ್ಷ ೧೯೩೬)
Bengaluru, Thursday, November 27, 2014 (Margashira 6, Shaka Varsha 1936)
ಸಂಚಿಕೆ ೪೭
Issue 47
ಭಾಗ ೫
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಕಂದಾಯ ಇಲಾಖೆ
ಅಧ್ಯಕ್ಷರು, ಆಯ್ಕೆ ಪ್ರಾಧಿಕಾರ ಮತ್ತು ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳು,
ಜಿಲ್ಲಾಧಿಕಾರಿಗಳ ಕಾರ್ಯಾಲಯ, ಮೈಸೂರು ಜಿಲ್ಲೆ, ಮೈಸೂರು
ಅಧಿಸೂಚನೆ
ಸಂಖ್ಯೆ ವಿಎ ಇಎಸ್ಟಿ ಸಿಆರ್ 12/2014-15, ದಿನಾಂಕಃ 20-10-2014
ವಿಷಯಃ 2014-15 ನೇ ಸಾಲಿನಲ್ಲಿ ಮೈಸೂರು ಜಿಲ್ಲಾ ಕಂದಾಯ ಘಟಕದ ತಾಲ್ಲೂಕು ಕಛೇರಿಗಳಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ
ಉಲ್ಲೇಖಃ 1. ಸರ್ಕಾರದ ಅಧಿಸೂಚನೆ ಸಂಖ್ಯೆ ಕಂಇ 299 ಬಿಎಸ್ಸಿ 2006 ದಿನಾಂಕಃ 03/02/2009 ಮತ್ತು 24/07/2009 2. ಸರ್ಕಾರದ ಪತ್ರ ಸಂಖ್ಯೆ ಕಂಇ 33 ಡಿಎಸ್ಪಿ 2012 ದಿಃ 25/02/2011 3. ಸರ್ಕಾರದ ಆದೇಶ ಸಂಖ್ಯೆ ಕಂಇ 33 ಡಿಎಸ್ಪಿ 2012 ದಿಃ 05/06/2012 4. ಸರ್ಕಾರದ ಆದೇಶ ಸಂಖ್ಯೆ 666 ಎಎಸ್ಡಿ 2012 (ಭಾಗ) ದಿನಾಂಕಃ 04/07/2013 5. ಸರ್ಕಾರದ ಆಧಿಸೂಚನೆ ಸಂಖ್ಯೆ ಡಿಪಿಎಆರ್ 52 ಎಸ್ಆರ್ಆರ್ 99 ದಿನಾಂಕಃ 29/11/2002 6. ಸರ್ಕಾರದ ಸುತ್ತೋಲೆ ಸಂಖ್ಯೆ ಕಂಇ 100 ಡಿಪಿಎಆರ್ 2011 ದಿನಾಂಕಃ 29/06/2012 7. ಸರ್ಕಾರದ ಅಧಿಸೂಚನೆ ಸಂಖ್ಯೆ ಡಿಪಿಎಆರ್ 43 ಹೆಚ್ಕೆಸಿ 2013 ದಿನಾಂಕಃ 29/01/2014 8. ಈ ಕಛೇರಿಯ ಅಧಿಕೃತ ಜ್ಞಾಪನ ಇಎಸ್ಟಿ (1) ಸಿಆರ್ 238/2013-14 ದಿನಾಂಕಃ 13/12/2013 9. ಅಧ್ಯಕ್ಷರು ಹಾಗೂ ಉಪವಿಭಾಗಾಧಿಕಾರಿಗಳು, ಗ್ರಾಮಲೆಕ್ಕಿಗರ ಮೀಸಲಾತಿ ಪರಿಶೀಲನಾ ಸಮಿತಿ, ಮೈಸೂರು ಇವರ ನಡವಳಿ ಪತ್ರ ಸಂಖ್ಯೆ ಸಿಬ್ಬಂಧಿ ಸಿಆರ್ 158/2014-15 ದಿನಾಂಕಃ 20/10/2014
ಮೈಸೂರು ಜಿಲ್ಲಾ ಕಂದಾಯ ಘಟಕದ ವಿವಿಧ ತಾಲ್ಲೂಕು ಕಛೇರಿಗಳಲ್ಲಿ ಗ್ರೂಪ್ ಸಿ ವೃಂದದ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು, ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸದರಿ ಹುದ್ದೆಗಳಿಗೆ ಸಂಬಂಧಪಟ್ಟಂತೆ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೀಸಲಾತಿ ಸಮಿತಿ ರಚಿಸಿ ಮೀಸಲಾತಿಯನ್ನು ಪರಿಶೀಲಿಸಿ ಉಲ್ಲೇಖ (9) ರಂತೆ ವರದಿ ಪಡೆಯಲಾಗಿದೆ.
2014-15 ನೇ ಸಾಲಿನ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳ ನೇಮಕಾತಿ ಸಂಬಂಧ ವಿವರ ಈ ಕೆಳಕಂಡಂತೆ ಇರುತ್ತದೆ.
1. ಹುದ್ದೆಯ ಹೆಸರು : ಗ್ರಾಮಲೆಕ್ಕಿಗರು
2. ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ : 130 ಹುದ್ದೆಗಳು
3. ಬ್ಯಾಕ್ಲಾಗ್ ಹುದ್ದೆಗಳ ಸಂಖ್ಯೆ : 06 ಹುದ್ದೆಗಳು
4. ಒಟ್ಟು ಹೊಸ ಹುದ್ದೆಗಳ ಸಂಖ್ಯೆ : 124 ಹುದ್ದೆಗಳು
(೧೨೫೫)೧೨೫೬ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೭, ೨೦೧೪ ಭಾಗ ೫ 6. ಹುದ್ದೆಯ ಮೀಸಲಾತಿ ವರ್ಗೀಕರಣ: ಮೈಸೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳು
– 124 + 06 = 130 (ಬ್ಯಾಕ್ಲಾಗ್ ಹುದ್ದೆಗಳು ಸೇರಿ)
| ಕ್ರ.ಸ | ವ ರ್ಗೀಕರಣ | ಹಿಂಬಾಕಿ (ಪಜಾ) | ಪ .ಜಾ | ಪ .ಪಂ | ವ -1 | ವ -2ಎ | ವ | -2ಬಿ ವ-3ಎ ವ-3ಬಿ | ಸಾ.ಅ | ಒಟ್ಟು | |
| < | - | 02 | 01 | 02 | 04 | 01 | 01 | 02 | 12 | 25 | |
| ಛ% | 01 | 06 | 02 | 01 | 06 | 01 | 01 | 02 | 19 | 39 | |
| ಅ | $(ಚಿ | 03 | 05 | 02 | 01 | 05 | 02 | 02 | 01 | 16 | 37 |
| [ | 01 | 01 | - | 01 | 01 | 01 | 01 | 01 | 06 | 13 | |
| -2/< | - | 01 | - | - | 01 | - | - | - | 03 | 05 | |
| ಃ | ಛಿ[ಗಿ( | 01 | 01 | - | - | 01 | - | - | - | 03 | 06 |
| ಈ | 8$! | - | 01 | - | - | 01 | - | - | - | 03 | 05 |
| ಒಟ್ಟು | 06 | 17 | 05 | 05 | 19 | 05 | 05 | 06 | 62 | 130 |
* ರೋಸ್ಟರ್ ಬಿಂಧು (Vertical) 35 ರಿಂದ ಪ್ರಾರಂಭಿಸಲಾಗಿದೆ.
08 ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ ಃ 10-11-2014
09 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಃ 09-12-2014 (ಸಂಜೆ 5-30 ಗಂಟೆವರೆಗೆ)
10 ಹುದ್ದೆಗೆ ನಿಗಧಿಪಡಿಸಿರುವ ವಿದ್ಯಾರ್ಹತೆ ಃ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ಸಿಬಿಎಸ್ಇ ಅಥವಾ
ಐಸಿಎಸ್ಇ ಇವರು ನಡೆಸುವ 12 ನೇ ತರಗತಿ ಪರೀಕ್ಷೆಯಲ್ಲಿ
ತೇರ್ಗಡೆಯಾಗಿರತಕ್ಕದ್ದು. ಈ ವಿದ್ಯಾರ್ಹತೆಯನ್ನು ಅಧಿಸೂಚನೆ ಹೊರಡಿಸುವ
ದಿನಾಂಕಕ್ಕೆ ಮುಂಚಿತವಾಗಿ ಹೊಂದಿರತಕ್ಕದ್ದು.
11 ಹುದ್ದೆಗೆ ನಿಗಧಿಪಡಿಸಿರುವ ವೇತನ ಶ್ರೇಣಿ ಃ ` 11600-200-12000-250-13000-300-14200-350-15600-400-
17200-450-19000-500-21000
12 ಹುದ್ದೆಗೆ ನಿಗಧಿಪಡಿಸಿರುವ ವಯೋಮಿತಿ ಃ
| ಕ್ರಮ ಸಂಖ್ಯೆ | ಮೀಸಲಾತಿ ವರ್ಗ | ವ ಯೋಮಿತಿ |
| < | ಓ#ಅ1 | |
| ಉ($1 ?ಗ >ಗಅ?ಗಅ> | ಓ#ಅಓ1 | |
| ಉ($1 ಗಉ7ಕಿಗಉ7ಉ | ಓ# 1 |
13 ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಶುಲ್ಕ ಃ
| ಕ್ರಮ ಸಂಖ್ಯೆ | ಮೀಸಲಾತಿ ವರ್ಗ | ಶ ುಲ್ಕ | ಪಾವತಿಸುವ ವಿಧಾನ |
| ಉ#ಗಿh ಕಿ0 ಆ ಉ#ಗಿh ಉ$2ಆಉ($1 | ` | ; !@ ! ]i@ .<@ ಎಉ/@ ಗ [ಂ1ಖ ಏ&ಗ ' ;ಇ & &< ಃಈಃಃಃ *ಛಿ2 *,7 | |
| ' 8./<ಙ1$% | ` | ||
| ಅ | .<@ಏ!* | `ಅ |
14 ಹುದ್ದೆಯ ಆಯ್ಕೆ ವಿಧಾನ ಃ ಅಭ್ಯರ್ಥಿಯು ದ್ವಿತೀಯ ಪಿಯುಸಿ / ಸಿಬಿಎಸ್ಇ / ಐಸಿಎಸ್ಇ ಪರೀಕ್ಷೆಯಲ್ಲಿ
ಗಳಿಸಿದ ಅಂಕಗಳ ಶೇಕಡಾವಾರು ಮೆರಿಟ್ ಆಧಾರದಲ್ಲಿ ಮೀಸಲಾತಿಗೆ
ಅನುಗುಣವಾಗಿ ಸರ್ಕಾರದ ಅಧಿಸೂಚನೆ ಸಂಖ್ಯೆ ಆರ್ಡಿ 299 ಬಿಎಸ್ಸಿ
2009 ದಿನಾಂಕಃ 03-02-2009 ರನ್ವಯ ಆಯ್ಕೆ ಮಾಡಲಾಗುವುದು.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೭, ೨೦೧೪ ೧೨೫೭15 ಹುದ್ದೆಗೆ ಆಯ್ಕೆ ಮಾಡಲು ನಿಬಂಧನೆಗಳು ಃ
1. ಅರ್ಹ ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಮಾತ್ರ ಅರ್ಜಿ ಸಲ್ಲಿಸುವುದು. ಕಂಪ್ಯೂಟರ್ ವೆಬ್ಸೈಟ್ನಲ್ಲಿ ಲಭ್ಯವಿರುವ ಅರ್ಜಿಯನ್ನು ಭರ್ತಿ ಮಾಡಿದ ತರುವಾಯ ಅಭ್ಯರ್ಥಿಯು ಚಲನ್ ಅನ್ನು ಪಡೆದು ಸಂಬಂಧಿಸಿದ ಬ್ಯಾಂಕಿನಲ್ಲಿ ಪಾವತಿಸಿ ಚಲನ್ ಸಂಖ್ಯೆ ಹಾಗೂ ದಿನಾಂಕವನ್ನು ನಮೂದಿಸಿದ ನಂತರವೇ ಅರ್ಜಿಯು ಸ್ವೀಕೃತವಾಗುವುದು.
2. ಅಭ್ಯರ್ಥಿಯು ಅರ್ಜಿ ಶುಲ್ಕವನ್ನು ಬ್ಯಾಂಕ್ನಲ್ಲಿ ಚಲನ್ ಮೂಲಕ ಪಾವತಿಸಿ ಚಲನ್ ಸಂಖ್ಯೆ ಹಾಗೂ ದಿನಾಂಕವನ್ನು ವೆಬ್ಸೈಟ್ನಲ್ಲಿ ನಮೂದಿಸದಿದ್ದಲ್ಲಿ ಅರ್ಜಿಯು ಸ್ವಯಂಕೃತವಾಗಿ ತಿರಸ್ಕøತಗೊಳ್ಳುತ್ತದೆ. ಅಂತಹ ಅರ್ಜಿಗೆ ನೇಮಕಾತಿ ಪ್ರಾಧಿಕಾರವು ಜವಾಬ್ದಾರರಾಗಿರುವುದಿಲ್ಲ.
3. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಬ್ಯಾಂಕ್ನಲ್ಲಿ ದಿನಾಂಕಃ 11-12-2014 ರಂದು (ಬ್ಯಾಂಕ್ ವೇಳೆಯಲ್ಲಿ) ಪಾವತಿಸಲು ಅಂತಿಮ ದಿನಾಂಕವಾಗಿರುತ್ತದೆ. ತದನಂತರ ಅರ್ಜಿ ಶುಲ್ಕ ಪಾವತಿಸಲು ಅವಕಾಶವಿರುವುದಿಲ್ಲ.
4. ಅರ್ಜಿಯನ್ನು ಆನ್ಲೈನ್ (Online) ಮೂಲಕವೇ ಸಲ್ಲಿಸತಕ್ಕದ್ದು. ಆನ್ಲೈನ್ (Online) ವಿಳಾಸ www.mysore-va.kar.nic.in ಆನ್ಲೈನ್ ಅರ್ಜಿ ದಿನಾಂಕಃ 10-11-2014 ರಿಂದ ಲಭ್ಯವಿರುತ್ತದೆ ಮತ್ತು ದಿನಾಂಕಃ 09-12-2014ರ ಸಂಜೆ 5-30 ಗಂಟೆವರೆಗೆ ಮಾತ್ರ ಲಭ್ಯವಾಗುವುದು. ಆನ್ಲೈನ್ (Online) ಹೊರತುಪಡಿಸಿ ಇತರೆ ಯಾವುದೇ ವಿಧದಲ್ಲಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಯಾವುದೇ ಮುನ್ಸೂಚನೆ ನೀಡದೇ ವಿಲೇ ಇಡಲಾಗುವುದು.
5. ಅಭ್ಯರ್ಥಿಯು ಎಲ್ಲಾ ಪ್ರಮಾಣ ಪತ್ರಗಳನ್ನು ಮತ್ತು ಅಂಕಪಟ್ಟಿಗಳನ್ನು ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ಹೊಂದಿರತಕ್ಕದ್ದು.
6. ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ಇಲಾಖಾ ಮುಖ್ಯಸ್ಥರು ನೀಡಿರುವ ನಿರಾಪೇಕ್ಷಣಾ ಪತ್ರವನ್ನು ಹೊಂದಿರತಕ್ಕದ್ದು. 7. ಅಭ್ಯರ್ಥಿಯ ಜನ್ಮ ದಿನಾಂಕವನ್ನು ಎಸ್ಎಸ್ಎಲ್ಸಿ ಅಂಕಪಟ್ಟಿಯ ಆಧಾರದ ಮೇಲೆ ಸಲ್ಲಿಸತಕ್ಕದ್ದು 8. ಮಾಜಿ ಸೈನಿಕ ಮೀಸಲಾತಿ ಹುದ್ದೆಗೆ ಸಂಬಂಧಿಸಿದಂತೆ, ಸೈನಿಕ ಸೇವೆಯಿಂದ ಬಿಡುಗಡೆ ಹೊಂದಿರುವ ಪ್ರಮಾಣ ಪತ್ರವನ್ನು ಹೊಂದಿರತಕ್ಕದ್ದು.
9. ಅಂಗವಿಕಲ ಮೀಸಲಾತಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 115 ನೇನನಿ 2005 ದಿನಾಂಕಃ 19-11-2005 ರಲ್ಲಿ ನಿಗಧಿಪಡಿಸಿರುವ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯು ನೀಡುವ ಪ್ರಮಾಣ ಪತ್ರವನ್ನು ಹೊಂದಿರತಕ್ಕದ್ದು.
10. ಸರ್ಕಾರದ ಅಧಿಸೂಚನೆ ಸಂಖ್ಯೆ ಡಿಪಿಎಆರ್ 52 ಎಸ್ಆರ್ಆರ್ 99 ದಿನಾಂಕಃ 29-11-2002 ಮತ್ತು ಸರ್ಕಾರದ ಸುತ್ತೋಲೆ ಸಂಖ್ಯೆ ಕಂಇ 100 ಬಿಎಸ್ಸಿ 2011 ದಿನಾಂಕಃ 29-06-2012 ರಲ್ಲಿ ಗ್ರಾಮಲೆಕ್ಕಿಗರ ಹುದ್ದೆಗೆ ಆಯ್ಕೆ ಮಾಡಲು ಗುರುತಿಸಿರುವ ಅಂಗವಿಕಲತೆಯಾದ (1) ಕುಷ್ಠರೋಗದಿಂದ ನಿವಾರಣೆಯಾದವರು (Leprosy Cured) (2) ಶ್ರವಣದೋಷವುಳ್ಳವರು (Hearing Impaired) (3) ದೈಹಿಕ ಅಂಗವಿಕಲತೆ (Loco motor Disability) ಮತ್ತು (4) ಮೆಂಟಲಿ ಇಲ್ (Mentally ill) – ಅಂಗವಿಕಲತೆಗೆ ಮಾತ್ರ ಕಾಯ್ದಿರಿಸಲಾದ ಹುದ್ದೆಗಳಾಗಿರುತ್ತದೆ.
11. ಅಭ್ಯರ್ಥಿಯು ಜಾತಿ ಪ್ರಮಾಣ ಪತ್ರವನ್ನು ಸರ್ಕಾರದ ಆದೇಶ ಸಂಖ್ಯೆ ಸಕಇ 132 ಎಸ್ಎಡಿ 97 ದಿನಾಂಕಃ 08-02-2000 ರಲ್ಲಿ ನಿಗಧಿಪಡಿಸಿರುವಂತೆ ನಮೂನೆಯಲ್ಲಿ ತಾಲ್ಲೂಕು ತಹಶೀಲ್ದಾರ್ರಿಂದ ಪಡೆದಿರತಕ್ಕದ್ದು.
12. ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಮೀಸಲಾತಿಯಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕಃ 13-02-2001 ರ ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 8 ಸೇನನಿ 2001 ರಲ್ಲಿ ನಿಗಧಿಪಡಿಸಿರುವ ನಮೂನೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲು ಸಹಿಯನ್ನು ಪಡೆದು ಪ್ರಮಾಣ ಪತ್ರ ಹೊಂದಿರತಕ್ಕದ್ದು.
13. ಇಬ್ಬರು ಗಣ್ಯ ವ್ಯಕ್ತಿಗಳಿಂದ ಅಥವಾ ಪತ್ರಾಂಕಿತ ಅಧಿಕಾಗಳಿಂದ ಪಡೆದ ನಡತೆ ಪ್ರಮಾಣ ಪತ್ರ ಹೊಂದಿರತಕ್ಕದ್ದು. 14. ಅಭ್ಯರ್ಥಿಯು ಭಾರತೀಯ ನಾಗರೀಕನಾಗಿರತಕ್ಕದ್ದು, 15. ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು. ಅವರ ನೇಮಕಾತಿಯ ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯವುದೇ ದೈಹಿಕ ನ್ಯೂನತೆಯಿಂದ ಮುಕ್ತರಾಗಿಬೇಕು.
16. ಹುದ್ದೆಗೆ ನಿಗಧಿಪಡಿಸಿರುವ ವಿದ್ಯಾರ್ಹತೆಯನ್ನು ಅಧಿಸೂಚನೆ ಹೊರಡಿಸುವ ದಿನಾಂಕಕ್ಕೆ ಮುಂಚಿತವಾಗಿ ಅಭ್ಯರ್ಥಿಯು ಹೊಂದಿರಬೇಕು, ಅಭ್ಯರ್ಥಿಯು ಗಣಕ ಯಂತ್ರಗಳ ಬಗ್ಗೆ ತಿಳುವಳಿಕೆ ಇರುವ ಬಗ್ಗೆ ದೃಡೀಕೃತ ಪ್ರಮಾಣ ಪತ್ರ ಹೊಂದಿರತಕ್ಕದ್ದು ಹಾಗೂ ಬೇಸಿಕ್ ಕಂಪ್ಯೂಟರ್ ಜ್ಞಾನ ಹೊಂದಿರತಕ್ಕದ್ದು.
17. ನೇಮಕಾತಿ ಪ್ರಕ್ರಿಯೆ ಪ್ರಾರಂಭದ ದಿನಾಂಕದಿಂದ ನೇಮಕಾತಿ ಆದೇಶ ಹೊರಡಿಸುವವರೆಗೆ ಅಭ್ಯರ್ಥಿಗಳಿಗೆ ಯಾವುದೇ ಪತ್ರ ವ್ಯವಹಾರವನ್ನು ಮಾಡಲಾಗುವುದಿಲ್ಲ. ಅಭ್ಯರ್ಥಿಗಳು ಆನ್ಲೈನ್ನಲ್ಲಿ (Online) ಮಾಹಿತಿಯನ್ನು ಪಡೆದು ಮೂಲ ದಾಖಲಾತಿಗಳ ಪರಿಶೀಲನೆಗೆ ಹಾಜರಾಗತಕ್ಕದ್ದು.
18. ನಿಗಧಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದಲ್ಲಿ ಮೀಸಲಾತಿಗನುಗುಣವಾಗಿ ಪರಿಶೀಲನಾ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಪರಿಶೀಲನಾ ಪಟ್ಟಿಯಲ್ಲಿನ ಅಭ್ಯರ್ಥಿಗಳು ನಿಗಧಿತ ದಿನಾಂಕದಂದು ಮೂಲ ದಾಖಲಾತಿಗಳ ಪರಿಶೀಲನೆಗಾಗಿ ಹಾಜರಾಗಬೇಕಾಗುತ್ತದೆ.
೧೨೫೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೭, ೨೦೧೪ ಭಾಗ ೫19. ನಿಗದಿತ ದಿನಾಂಕದಂದು ದಾಖಲಾತಿಗಳ ಪರಿಶೀಲನೆಗೆ ಹಾಜರಾಗದೇ ಇರುವ ಅಭ್ಯರ್ಥಿಗಳು ಅನರ್ಹಗೊಳ್ಳುತ್ತಾರೆ ಮತ್ತು ಪರಿಶೀಲನಾ ಪಟ್ಟಿಯ ಅಭ್ಯರ್ಥಿಗಳಿಗೆ ಯಾವುದೇ ಪ್ರತ್ಯೇಕ ಸೂಚನಾ ಪತ್ರವನ್ನು ಕಾರ್ಯಾಲಯದಿಂದ ಕಳುಹಿಸುವುದಿಲ್ಲ. 20. ಪ್ರಕಟಿಸಿರುವ ಹುದ್ದೆಗಳನ್ನು ಹೆಚ್ಚು ಅಥವಾ ಕಡಿಮೆ ಮಾಡುವ ಹಕ್ಕು ನೇಮಕಾತಿ ಪ್ರಾಧಿಕಾರಕ್ಕೆ ದತ್ತವಾಗಿರುತ್ತದೆ. 21. ಅಧಿಸೂಚನೆ ಪ್ರಕಟಿಸಿದ ದಿನಾಂಕದಿಂದ ಡಿಸೆಂಬರ್ 2014 ರ ಅಂತ್ಯದವರೆಗೆ ಗ್ರಾಮಲೆಕ್ಕಿಗರ ಪದೋನ್ನತಿಯಿಂದ, ಸ್ವಯಂ ನಿವೃತ್ತಿಯಿಂದ, ವಯೋ ನಿವೃತ್ತಿಯಿಂದ ಅಥವಾ ಇನ್ನಾವುದೇ ವಿಧದಲ್ಲಿ ಖಾಲಿಯಾಗುವ ಹುದ್ದೆಗಳನ್ನು ಮೆರಿಟ್ ಆಧಾರದ ಮೇಲೆ ಮೀಸಲಾತಿಗನುಗುಣವಾಗಿ ಸದರಿ ಪಟ್ಟಿಯಿಂದ ನೇಮಕಾತಿ ಮಾಡುವ ಷರತ್ತಿಗೊಳಪಟ್ಟಿರುತ್ತದೆ.
22. ತಪ್ಪು ಮಾಹಿತಿ ಒದಗಿಸಿದ ಅಭ್ಯರ್ಥಿಗಳನ್ನು ಅಯ್ಕೆಗೆ ಪರಿಗಣಿಸಲಾಗುವುದಿಲ್ಲ ಹಾಗೂ ಅಂತಹ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೇ ತಿರಸ್ಕರಿಸಲಾಗುವುದು.
23. ಅರ್ಜಿಯನ್ನು ಸ್ವೀಕರಿಸಲು ನಿಗಧಿಪಡಿಸಿರುವ ದಿನಾಂಕವು ಸಾರ್ವಜನಿಕ ರಜಾ ದಿನವಾಗಿ ಘೋಷಿಸಲ್ಪಟ್ಟಿದ್ದರೆ ಅಂತಹ ದಿನಾಂಕದ ಮಾರನೇ ದಿನವನ್ನು ಅರ್ಜಿ ಸ್ವೀಕರಿಸಲು ಕೊನೆ ದಿನಾಂಕವಾಗಿರುತ್ತದೆ.
24. ಈ ಅಧಿಸೂಚನೆ ಅನ್ವಯ ನೇಮಕಾತಿ ಹೊಂದುವ ಅಭ್ಯರ್ಥಿಗಳು ಮೈಸೂರು ಜಿಲ್ಲೆಯ ಯಾವುದೇ ತಾಲ್ಲೂಕುಗಳಲ್ಲಾದರೂ ಸೇವೆ ಸಲ್ಲಿಸಲು ಬದ್ಧರಾಗಿರಬೇಕು.
25. ಅಭ್ಯರ್ಥಿಯು ಯಾವುದೇ ಒತ್ತಡ ತಂದಲ್ಲಿ ಅಂತಹ ಅಭ್ಯರ್ಥಿಯ ಬಗ್ಗೆ ಸರ್ಕಾರದ ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು. 26. ಅರ್ಜಿಯಲ್ಲಿ ಕೇಳಿರುವ ಪೂರ್ಣ ಮಾಹಿತಿಯನ್ನು ಭರ್ತಿ ಮಾಡಿಲ್ಲದೇ ಇರುವ ಅಭ್ಯರ್ಥಿಗಳ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೇ ತಿರಸ್ಕರಿಸಲಾಗುವುದು.
27. ನೇಮಕಾತಿ ಹೊಂದಿದ ಅಭ್ಯರ್ಥಿಗಳು ಎರಡು (02) ವರ್ಷಗಳ ಪರಿವೀಕ್ಷಣಾ ಅವಧಿ ಪೂರೈಸುವುದು ಕಡ್ಡಾಯವಾಗಿರುತ್ತದೆ.
ಸಿ. ಶಿಖಾ
ಅಧ್ಯಕ್ಷರು
ಆಯ್ಕೆ ಪ್ರಾಧಿಕಾರ ಹಾಗೂ ನೇಮಕಾತಿ ಪ್ರಾಧಿಕಾರ, PR. 122
ಮತ್ತು ಜಿಲ್ಲಾಧಿಕಾರಿ, SC - 50
ಮೈಸೂರು ಜಿಲ್ಲೆ, ಮೈಸೂರು.
IN THE COURT OF IV ADDL., CITY CIVIL JUDGE, MAYO HALL BANGALORE (CCH-21)
G & WC No.25004/2014 HG : 6-12-2014
PETITIONERS :
1) Mr. C. ANTHONYSWAMY
Son of late Chowarappa
aged about 54 years, and
2) Master JAMES JASPER. A.
Son of Mr. C. Anthonswamy
aged about 14 years.
Both are residing at No. 324, Byrathi Village,
Bidarahalli Hobli
Doddagubbi post, Bengaluru-562149
V/s
RESPONDENTS : NIL
PUBLIC NOTICE
Notice is hereby given that a petition has been made to this Court under Part IX, Chapter IV, under Section 31 of the Guardian and wards Act 1890, for permission to sell the minor's property bearing vacant site No.2, katha No.311, Property No.59/2, situated at Anagalapura village, Bidarahalli Hobli, Bengaluru East Taluk.
Be it known that no Cavent has been entered and the said petition is posted for hearing on 6-12-2014 at 11 O'clock. Any person/s claiming to have any interest may come and participate in the proceedings before grant of such permission for sale.
Given under my hand and seal of the court this the 7th day of November 2014.
By Order of the Court
Assistant Registrar PD 53
City Civil Court, Mayo Hall Unit, Bengaluru.
SC - 5ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೭, ೨೦೧೪ ೧೨೫೯
ಅರಣ್ಯ ಇಲಾಖೆ
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮುಖ್ಯಸ್ಥರು, ಅರಣ್ಯ ಪಡೆ) ಹಾಗೂ ಆಯ್ಕೆ ಪ್ರಾಧಿಕಾರ
ಇವರ ಕಛೇರಿ, ಅರಣ್ಯ ಭವನ, ಮಲ್ಲೇಶ್ವರಂ, ಬೆಂಗಳೂರು-560003.
ಅಧಿಸೂಚನೆ
ಅಧಿಸೂಚನೆ ಸಂಖ್ಯೆ: ಬಿ9-ವಅಅ-ವಿವ-5/2014-15ದಿನಾಂಕ 29-10-2014
ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆನೇರ ನೇಮಕಾತಿ
ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ)(ತಿದ್ದುಪಡಿ) ನಿಯಮಗಳು, 2012 ಮತ್ತು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ನಿಯಮ, 2013ರ ನಿಯಮಗಳಂತೆ ಅರಣ್ಯ ಇಲಾಖೆಯಲ್ಲಿ ಒಟ್ಟು 110ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲು ಅರ್ಹರಾದ ಬಿ.ಎಸ್ಸಿ.(ಅರಣ್ಯ ಶಾಸ್ತ್ರ)/ವಿಜ್ಞಾನ/ಇಂಜಿನಿಯರಿಂಗ್ ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
1. ಅರ್ಜಿ ಸಲ್ಲಿಸುವ ವಿಧಾನ:
On-lineಅರ್ಜಿ, ಅಧಿಸೂಚನೆ ಮತ್ತು ಪಠ್ಯಕ್ರಮ (Syllabus) ಇವುಗಳನ್ನು ಇಲಾಖಾ ವೆಬ್ಸೈಟ್: www.aranya.gov.in ನಲ್ಲಿ ಪ್ರಕಟಪಡಿಸಲಾಗುವುದು.ಅರ್ಜಿಯನ್ನು On-line ಮುಖಾಂತರ ಅಭ್ಯರ್ಥಿಗಳು ಸಲ್ಲಿಸತಕ್ಕದ್ದು.ಇದನ್ನು ಹೊರತುಪಡಿಸಿ ಯಾವುದೇ ವಿಧದಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.On-lineಅರ್ಜಿಯನ್ನು ತುಂಬಲು ಸಹಾಯಕವಾಗುವ ಸೂಚನೆಗಳನ್ನು ಇಲಾಖಾ ವೆಬ್ಸೈಟ್ನಲ್ಲಿ ನೀಡಲಾಗುವುದು.ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಬಾರದು.ಅಭ್ಯರ್ಥಿಗಳು ತಮ್ಮ ಮಾಹಿತಿಗಾಗಿ ಭರ್ತಿ ಮಾಡಿದ ಆನ್ಲೈನ್ ಅರ್ಜಿಯ ಒಂದು ಪ್ರತಿಯನ್ನು ತೆಗೆದು ತಮ್ಮ ಬಳಿ ಇಟ್ಟುಕೊಳ್ಳತಕ್ಕದ್ದು. On-line ಅರ್ಜಿಯ ಪ್ರತಿಯನ್ನು ಅಂಚೆ ಮುಖಾಂತರ ಅಥವಾ ಮುದ್ದಾಂ ಆಗಿ ಇಲಾಖೆಗೆ ಸಲ್ಲಿಸಬೇಕಾದ ಅವಶ್ಯಕತೆ ಇರುವುದಿಲ್ಲ.
1.1 ಜನ್ಮ ದಿನಾಂಕ ದೃಡೀಕರಿಸುವ ಪ್ರಮಾಣ ಪತ್ರ, ಶೈಕ್ಷಣಿಕ ಪ್ರಮಾಣ ಪತ್ರಗಳು, ಜಾತಿ/ಪ್ರವರ್ಗ ದೃಡೀಕರಿಸುವ ಪ್ರಮಾಣ ಪತ್ರಗಳು, ಸೈನಿಕ ಸೇವೆ ದೃಡೀಕರಣ ಪ್ರಮಾಣ ಪತ್ರ,ಹೈದರಾಬಾದ್-ಕರ್ನಾಟಕ ಮೀಸಲಾತಿ ಕೋರುವ ಪ್ರಮಾಣ ಪತ್ರ ಹಾಗೂ ಇತರೆ ಯಾವುದೇ ಮೂಲ ದಾಖಲೆ ಅಥವಾ ಜೆರಾಕ್ಸ್ ಪ್ರತಿಗಳನ್ನು ಅರ್ಜಿ ಸಲ್ಲಿಸುವಾಗ ಇವುಗಳನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಮುಂದೆ ಇವುಗಳನ್ನು ಇಲಾಖೆ ಅಪೇಕ್ಷಿಸಿದಾಗ ಮಾತ್ರ ಸಲ್ಲಿಸತಕ್ಕದ್ದು.
1.2 On-line ಮುಖಾಂತರ ಅರ್ಜಿಯನ್ನುದಿನಾಂಕ 20-11-2014ರಿಂದ 19-12-2014ರಂದು ಅಪರಾಹ್ನ 4.30 ಗಂಟೆಯವರೆಗೆ ಸಲ್ಲಿಸಬಹುದಾಗಿರುತ್ತದೆ.
1.3 ಮೂಲ ದಾಖಲೆಗಳ ಪರಿಶೀಲನೆ, ಪೂರ್ವಭಾವಿ ಪರೀಕ್ಷೆ ದಿನಾಂಕ, ಪರೀಕ್ಷೆ ನಡೆಯುವ ಸ್ಥಳ ಮತ್ತು ವೇಳೆಯನ್ನು ಇಲಾಖಾ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.ಮೂಲ ದಾಖಲೆಗಳ ಪರೀಕ್ಷೆ ನಡೆಯುವ ದಿನಾಂಕ, ವೇಳಾಪಟ್ಟಿ, ಪರೀಕ್ಷಾ ಕೇಂದ್ರ ವಿವರಗಳುಳ್ಳ ಪ್ರವೇಶ ಪತ್ರವನ್ನು ಅರ್ಹ ಅಭ್ಯರ್ಥಿಗಳು ಇಲಾಖಾ ವೆಬ್ಸೈಟ್ www.aranya.gov.in
ನಿಂದ ಡೌನ್ಲೋಡ್ ಮಾಡಿಕೊಳ್ಳುವುದು.ಪ್ರವೇಶ ಪತ್ರವನ್ನು ಅಂಚೆ ಮುಖಾಂತರ ಕಳುಹಿಸಲಾಗುವುದಿಲ್ಲ.
2. ಅರ್ಜಿ ಶುಲ್ಕ:ಸಾಮಾನ್ಯ ವರ್ಗ, IIA, IIB, IIIA, IIIB ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.100-00+ಸೇವಾ ಶುಲ್ಕ ರೂ.12-00;ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಮತ್ತು ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.50-00 + ಸೇವಾ ಶುಲ್ಕ ರೂ.12-00.On-lineನಲ್ಲಿ ಅರ್ಜಿ ಸಲ್ಲಿಸಿದ ನಂತರ, ಮುದ್ರಿತ ಅರ್ಜಿ ಪ್ರತಿಯನ್ನು ತೆಗೆದುಕೊಂಡು, ಇ-ಪಾವತಿ ಸೌಲಭ್ಯವಿರುವ ಅಂಚೆ ಕಚೇರಿಯಲ್ಲಿ ಮುದ್ರಿತ ಅರ್ಜಿ ಪ್ರತಿಯನ್ನು ತೋರಿಸಿ, ಈ ಮೇಲೆ ಹೇಳಿರುವ ಅರ್ಜಿ ಶುಲ್ಕ ಮತ್ತು ಸೇವಾ ಶುಲ್ಕವನ್ನು ಅಭ್ಯರ್ಥಿಗಳು ಪಾವತಿಸತಕ್ಕದ್ದು.
ಸೂಚನೆ:-On-line ನಲ್ಲಿ ಅರ್ಜಿಯನ್ನು ಸಲ್ಲಿಸದೇ ನೇರವಾಗಿ ಕೊರಿಯರ್, ನೊಂದಾಯಿತ ಅಂಚೆ, ಸಾಧಾರಣ ಅಂಚೆ, ಮುದ್ದಾಂ ಇತ್ಯಾದಿ ವಿಧಾನಗಳ ಮುಖಾಂತರ ಕಳುಹಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
3.1ಹುದ್ದೆಗಳ ವರ್ಗೀಕರಣ:-ವೇತನ ಶ್ರೇಣಿ: ರೂ.21600-600-24600-700-28800-800-33600-900-39000-1050-40050.
ಈ ಕೆಳಕಂಡ ಹುದ್ದೆಗಳ ಸಂಖ್ಯೆಗಳು ತಾತ್ಕಾಲಿಕವಾಗಿದ್ದು, ನೇಮಕಾತಿ ಸಮಯದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಮಾರ್ಪಡಿಸಬಹುದಾಗಿರುತ್ತದೆ.
| # | ಇಈಉ,ಊಈ / ಋ3= ; % | 0; |
| ! | 3ಏಐ$%ಒ;,3= ; | :1 |
| 56ಖಿ | ಇ; |
3.3 ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ನಿಯಮಗಳು, 2013ರ ನಿಯಮದ ಅನ್ವಯ
| # | ಇಈಉ,ಊಈ /%ಋ3= ; | :: |
| ! | 3ಏಐ$%ಒ;,3= ; | ಒ |
| 56ಖಿ | :7 |
| % | % ಂಎಊ | ಕಿ- | " 8( | ಖ% | ಖಈಖಿ | |
| ;ಛh6ಏ | ` | # | ! | ! | - | 7 |
| )$ | #"ಜಿ#p | 4 | ಠ | ಟಿ | # | 21 |
| ;ಛh6ಆ | # | - | # | - | - | : |
| .I | # | - | # | - | - | : |
| .IIಉ | 4 | # | ! | !ಜಿ#p | - | 7 |
| .IIಇ | # | - | # | # | - | 2 |
| .IIIಉ | # | - | # | # | - | 2 |
| .IIIಇ | # | - | # | # | - | 2 |
| ಖಈಖಿ5 | :2 | / | ;ಒ | ;/ | ; | 0; |
*ಷರಾ:-ಈ ಹಿಂದಿನ ನೇಮಕಾತಿಗಳಲ್ಲಿಸಾಮಾನ್ಯ ಅರ್ಹತೆ (ಸಾಮಾನ್ಯ): 1 ಹುದ್ದೆ;2ಎ-ಗ್ರಾಮೀಣ: 1 ಹುದ್ದೆ; ಒಟ್ಟು 2 ಹುದ್ದೆಗಳಲ್ಲಿ ಆಯ್ಕೆಗೊಂಡ ಅಧಿಕಾರಿಗಳು ಹೈದರಾಬಾದ್-ಕರ್ನಾಟಕ ಮೀಸಲಾತಿಯನ್ನು ಕೋರಿರುತ್ತಾರೆ.ಈ ಅಧಿಕಾರಿಗಳನ್ನುಹೈದರಾಬಾದ್-ಕರ್ನಾಟಕಪ್ರದೇಶದ ಜ್ಯೇಷ್ಠತೆಗೆ ಸೇರಿಸಲಾಗಿರುತ್ತದೆ.ಮೂಲ ಮೀಸಲಾತಿ ವರ್ಗೀಕರಣದಲ್ಲಿಸಾಮಾನ್ಯ ಅರ್ಹತೆ (ಸಾಮಾನ್ಯ): 1 ಹುದ್ದೆ ಹಾಗೂ 2ಎ-ಗ್ರಾಮೀಣ: 1 ಹುದ್ದೆ; ಹೀಗೆ2 ರೋಸ್ಟರ್ಬಿಂದುಗಳು ಕಡಿಮೆ ಆದಂತಾಗಿರುತ್ತದೆ. ಇದನ್ನು ಈಗ ಸರಿದೂಗಿಸಬೇಕಾಗಿರುತ್ತದೆ.ಇದನ್ನು ಮೇಲೆ ತೋರಿಸಿರುವ ಮೀಸಲಾತಿ ವರ್ಗೀಕರಣದಲ್ಲಿ ಸೇರ್ಪಡೆ ಮಾಡಿ ಸರಿದೂಗಿಸಲಾಗಿದೆ.
| % | % ಂಎಊ | ಕಿ- | " 8( | ಖ% | ಖಈಖಿ | |
| ;ಛh6ಏ | - | - | # | # | - | ! |
| )$ | 4ಜಿ#p | # | ! | !ಜಿ#p | - | #" |
| ;ಛh6ಆ | - | - | - | # | - | # |
| .I | # | - | #p | - | - | ! |
| .IIಉ | - | - | # | - | # | ! |
| .IIಇ | # | - | - | - | - | # |
| .IIIಇ | #p | - | - | # | - | ! |
| ಖಈಖಿ5 | ಒ | ; | / | 0 | ; | :1 |
*ಷರಾ:-ಈ ಹಿಂದಿನ ನೇಮಕಾತಿಗಳಲ್ಲಿ3ಬಿ-ಸಾಮಾನ್ಯ: 1 ಹುದ್ದೆ; ಸಾಮಾನ್ಯ ಅರ್ಹತೆ-ಗ್ರಾಮೀಣ: 1 ಹುದ್ದೆ; ಸಾಮಾನ್ಯ ಅರ್ಹತೆ-ಸಾಮಾನ್ಯ: 1 ಹುದ್ದೆ;
ಪ್ರವರ್ಗ-1-ಮಹಿಳೆ: 1 ಹುದ್ದೆಯ ಮೀಸಲಾತಿಯಲ್ಲಿ ಒಟ್ಟು 4 ಹುದ್ದೆಗಳಲ್ಲಿ ಆಯ್ಕೆಗೊಂಡ ಅಧಿಕಾರಿಗಳು ಹೈದರಾಬಾದ್-ಕರ್ನಾಟಕ ಮೀಸಲಾತಿಯನ್ನು ಕೋರಿರುತ್ತಾರೆ.ಈ ಅಧಿಕಾರಿಗಳನ್ನುಹೈದರಾಬಾದ್-ಕರ್ನಾಟಕಪ್ರದೇಶದ ಜ್ಯೇಷ್ಠತೆಗೆ ಸೇರಿಸಲಾಗಿರುತ್ತದೆ.ಮೂಲ ವರ್ಗೀಕರಣದಲ್ಲಿ ಈ ಮೇಲ್ಕಂಡ 4 ರೋಸ್ಟರ್ ಬಿಂದುಗಳು ಕಡಿಮೆ ಆದಂತಾಗಿರುತ್ತದೆ.ಇದನ್ನು ಈಗ ಸರಿದೂಗಿಸಬೇಕಾಗಿರುತ್ತದೆ.ಇದನ್ನು ಮೇಲೆ ತೋರಿಸಿರುವ ಮೀಸಲಾತಿ ವರ್ಗೀಕರಣದಲ್ಲಿ ಸೇರ್ಪಡೆ ಮಾಡಿ ಸರಿದೂಗಿಸಲಾಗಿದೆ.
| % | % ಂಎಊ | ಕಿ- | " 8( | ಖ% | ಖಈಖಿ | |
| ;ಛh6ಏ | ! | - | # | # | - | ` |
| )$ | 4p | # | ` | 4 | - | ## |
| ;ಛh6ಆ | # | - | - | - | - | # |
| .I | # | - | - | - | - | # |
| .IIಉ | # | - | # | -p | - | ! |
| .IIಇ | # | - | - | - | - | # |
| .IIIಉ | # | - | - | - | - | # |
| .IIIಇ | # | - | - | - | - | # |
| ಖಈಖಿ5 | ;; | ; | 0 | < | - | :: |
*ಷರಾ:-ಈ ಹಿಂದಿನ ನೇರ ನೇಮಕಾತಿಗಳಲ್ಲಿಸಾಮಾನ್ಯ ಅರ್ಹತೆ (ಸಾಮಾನ್ಯ): 1 ಹುದ್ದೆ ಮತ್ತು2ಎ-ಗ್ರಾಮೀಣ: 1 ಹುದ್ದೆಯಲ್ಲಿ ಆಯ್ಕೆಗೊಂಡ ಅಧಿಕಾರಿಗಳು ಹೈದರಾಬಾದ್-ಕರ್ನಾಟಕ ಪ್ರದೇಶದ ಮೀಸಲಾತಿಯನ್ನು ಕೋರಿರುತ್ತಾರೆ.ಈ ಅಧಿಕಾರಿಗಳನ್ನುಹೈದರಾಬಾದ್- ಕರ್ನಾಟಕಪ್ರದೇಶದ ಜ್ಯೇಷ್ಠತೆಗೆ ಸೇರಿಸಲಾಗಿರುತ್ತದೆ.ಹೀಗಾಗಿ, ಸಾಮಾನ್ಯ ಅರ್ಹತೆ (ಸಾಮಾನ್ಯ): 1 ಹುದ್ದೆಮತ್ತು 2ಎ-ಗ್ರಾಮೀಣ: 1 ಹುದ್ದೆ; ಒಟ್ಟು 2 ಹುದ್ದೆಗಳ ರೋಸ್ಟರ್ ಬಿಂದುಗಳನ್ನು ಮೇಲ್ಕಂಡ ಮೀಸಲಾತಿ ವರ್ಗೀಕರಣದಲ್ಲಿ ಕಡಿತಗೊಳಿಸಿ ಸರಿದೂಗಿಸಬೇಕಾಗಿರುತ್ತದೆ. ಇದನ್ನು ಮೇಲೆ ತೋರಿಸಿರುವ ಮೀಸಲಾತಿ ವರ್ಗೀಕರಣದಲ್ಲಿ ಕಡಿತಗೊಳಿಸಿ ಸರಿದೂಗಿಸಲಾಗಿದೆ.
| % | % ಂಎಊ | ಕಿ- | " 8( | ಖ% | ಖಈಖಿ | |
| ;ಛh6ಏ | # | - | # | - | - | ! |
| )$ | #p | - | # | -p | - | ! |
| ;ಛh6ಆ | # | - | - | - | - | # |
| .I | # | - | - | - | - | # |
| .IIಉ | # | - | - | - | - | # |
| ಖಈಖಿ5 | / | - | : | - | - | ಒ |
*ಷರಾ:-ಈ ಹಿಂದಿನ ನೇಮಕಾತಿಗಳಲ್ಲಿಸಾಮಾನ್ಯ ಅರ್ಹತೆ-ಗ್ರಾಮೀಣ: 1 ಹುದ್ದೆ; ಸಾಮಾನ್ಯ ಅರ್ಹತೆ-ಸಾಮಾನ್ಯ: 1 ಹುದ್ದೆ; ಈ ಹುದ್ದೆಗಳಲ್ಲಿ ಆಯ್ಕೆಗೊಂಡ ಅಧಿಕಾರಿಗಳು ಹೈದರಾಬಾದ್-ಕರ್ನಾಟಕ ಪ್ರದೇಶದ ಮೀಸಲಾತಿಯನ್ನು ಕೋರಿರುತ್ತಾರೆ.ಹೀಗಾಗಿ, ಈ ಅಧಿಕಾರಿಗಳನ್ನುಹೈದರಾಬಾದ್-ಕರ್ನಾಟಕಪ್ರದೇಶದ ಜ್ಯೇಷ್ಠತೆಗೆ ಸೇರಿಸಲಾಗಿರುತ್ತದೆ.ಹೀಗಾಗಿ, ಸಾಮಾನ್ಯ ಅರ್ಹತೆ-ಗ್ರಾಮೀಣ: 1 ಹುದ್ದೆ; ಸಾಮಾನ್ಯ ಅರ್ಹತೆ-ಸಾಮಾನ್ಯ: 1 ಹುದ್ದೆ; ಒಟ್ಟು 2 ರೋಸ್ಟರ್ ಬಿಂದುಗಳನ್ನು ಮೇಲ್ಕಂಡ ಮೀಸಲಾತಿ ವರ್ಗೀಕರಣದಲ್ಲಿ ಕಡಿತಗೊಳಿಸಿ ಸರಿದೂಗಿಸಬೇಕಾಗಿರುತ್ತದೆ. ಇದನ್ನು ಮೇಲೆ ತೋರಿಸಿರುವ ಮೀಸಲಾತಿ ವರ್ಗೀಕರಣದಲ್ಲಿ ಕಡಿತಗೊಳಿಸಿ ಸರಿದೂಗಿಸಲಾಗಿದೆ.ಇದಲ್ಲದೆ, 3ಬಿ-ಸಾಮಾನ್ಯ: 1 ಹುದ್ದೆ ಹಾಗೂ ಪ್ರವರ್ಗ-1-ಮಹಿಳೆ: 1 ಹುದ್ದೆಗಳಲ್ಲಿ ಆಯ್ಕೆಗೊಂಡ ಅಧಿಕಾರಿಗಳು ಹೈದರಾಬಾದ್-ಕರ್ನಾಟಕ ಪ್ರದೇಶದ ಮೀಸಲಾತಿಯನ್ನು ಕೋರಿರುತ್ತಾರೆ. ಇವರುಗಳನ್ನು ಹೈದರಾಬಾದ್-ಕರ್ನಾಟಕ ಜ್ಯೇಷ್ಠತೆಗೆ ಸೇರಿಸಲಾಗಿರುತ್ತದೆ.ಈ ಮೀಸಲಾತಿ ಬಿಂದುಗಳು ಪ್ರಸ್ತುತ ಹಂತದಲ್ಲಿ ತಲುಪಿಲ್ಲದೇ ಇರುವುದರಿಂದ ಮುಂದಿನ ನೇಮಕಾತಿ ಪ್ರಕ್ರಿಯೆಗಳಲ್ಲಿ ಸರಿದೂಗಿಸಲಾಗುವುದು.
ವಿಶೇಷ ಸೂಚನೆ:-(1) ಭಾರತ ಸಂವಿಧಾನದ ಅನುಚ್ಛೇದ 371(ಜೆ) ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಹೊರಡಿಸಲಾದ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013 ಹಾಗೂ ಸದರಿ ಆದೇಶಕ್ಕೆ ಸಂಬಂಧಿಸಿದಂತೆ ಹೊರಡಿಸಲಾದ ತಿದ್ದುಪಡಿಯಂತೆ ಮೀಸಲಾತಿಗೆಂದು ಗುರುತಿಸಿ, ಸ್ಥಳೀಯ ವೃಂದಕ್ಕೆ ಒಳಪಡುವ ಹುದ್ದೆಗಳನ್ನು ಪ್ರತ್ಯೇಕವಾಗಿ ನೀಡಲಾಗಿರುತ್ತದೆ.ಸ್ಥಳೀಯ ವೃಂದದ ಹುದ್ದೆಗಳನ್ನು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013ರ ಕಂಡಿಕೆ 2(1)(ಎಫ್) ಅರ್ಥವಿವರಣೆಯ ಅಡಿಯಲ್ಲಿ ವರ್ಗೀಕರಿಸಲು ಅರ್ಹವಿರುವ ಅಭ್ಯರ್ಥಿಗಳಿಂದ ಮಾತ್ರ ತುಂಬಲಾಗುವುದು. ಈ ಹಿನ್ನೆಲೆಯಲ್ಲಿ ಸ್ಥಳೀಯ ವೃಂದದಲ್ಲಿ ಲಭ್ಯವಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾರ್ವಜನಿಕ ಉದ್ಯೋಗ ಆದೇಶದಂತೆ ಅರ್ಹ ಸ್ಥಳೀಯ ಅಭ್ಯರ್ಥಿಗಳು ಮಾತ್ರ ಅರ್ಹರಿರುತ್ತಾರೆ.ಪರಂತು, ಮಿಕ್ಕುಳಿದ ವೃಂದದಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳಿಗೆ ಇತರರೊಂದಿಗೆ ಸ್ಥಳೀಯ ವ್ಯಕ್ತಿಗಳು ಸಹ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.
(2) ಹೈದರಾಬಾದ್-ಕರ್ನಾಟಕ ಮೀಸಲಾತಿ ಹೊಂದಿರುವ ಸ್ಥಳೀಯ ಅಭ್ಯರ್ಥಿಗಳು ಹೈದರಾಬಾದ್-ಕರ್ನಾಟಕ ಮೀಸಲಾತಿ ಅಡಿಯಲ್ಲಿ ಮೀಸಲಿರಿಸಲಾಗಿರುವ (ಸ್ಥಳೀಯ ವೃಂದದ) ಹುದ್ದೆಗಳು ಹಾಗೂ ಮಿಕ್ಕುಳಿದ (ಸ್ಥಳೀಯೇತರ ವೃಂದದ) ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಎರಡೂ ವೃಂದಗಳಲ್ಲಿಯೂ ಅರ್ಹರಾದರೆ ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿರುವ ಆಧ್ಯತೆ ಅನುಸಾರ ಅರ್ಹತೆಯನ್ನು ಪರಿಗಣಿಸಲಾಗುವುದು. (ಒಂದು ಸಲ ಅರ್ಜಿಯಲ್ಲಿ ನಮೂದಿಸಿರುವ ಆಧ್ಯತೆಯನ್ನು ಯಾವುದೇ ಹಂತದಲ್ಲಿ ಬದಲಾವಣೆ ಮಾಡಲಾಗುವುದಿಲ್ಲ)
3.8ಹೈದರಾಬಾದ್-ಕರ್ನಾಟಕ ಪ್ರದೇಶದ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ನಿಗದಿತ ಅಂಕಣದಲ್ಲಿ ಮೀಸಲಾತಿ ಬಗ್ಗೆ ಮಾಹಿತಿ ನಮೂದಿಸುವುದು.
3.9ಈ ಕಚೇರಿಯ ಅಧಿಸೂಚನೆ ಸಂಖ್ಯೆ: ಬಿ9-ವಅಅ-ವಿವ-1/2012-13 ದಿನಾಂಕ 12-09-2012 ರಲ್ಲಿ 62 ವಲಯ ಅರಣ್ಯಾಧಿಕಾರಿ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಸದರಿ ನೇಮಕಾತಿ ಪ್ರಕ್ರಿಯೆಯು ಪ್ರಸ್ತುತ ಅಂತಿಮ ಹಂತದಲ್ಲಿರುತ್ತದೆ. ಸರ್ಕಾರದ ಪತ್ರ ಸಂಖ್ಯೆ: ಅಪಜೀ 032 ಅಅಸೇ 2014 ದಿನಾಂಕ 26-7-2014ರ ಪತ್ರದಲ್ಲಿ ಸದರಿ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013ರಕಂಡಿಕೆ 12 ರಂತೆ ತಾತ್ಕಾಲಿಕವೆಂದು ಪರಿಗಣಿಸಿ, ಸ್ಥಳೀಯ ವೃಂದ ರಚಿಸಿ, ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯ ವ್ಯಕ್ತಿಗಳನ್ನು ಆಯ್ಕೆಗನುಸಾರ ಸ್ಥಳೀಯ ವೃಂದಕ್ಕೆ ವರ್ಗಾಯಿಸಿ, ಸ್ಥಳೀಯ ವೃಂದದಲ್ಲಿ ರೋಸ್ಟರ್ ಬಿಂದುವನ್ನು ಸರಿದೂಗಿಸಿ, ಅಧಿಸೂಚಿಸಿದ 6 ತಿಂಗಳೊಳಗಾಗಿ ನೇಮಕಾತಿಯನ್ನು ಪರಿಶೀಲಿಸಿ, ಪುನರ್ ವಿಮರ್ಶೆ ಮಾಡಿ ಮರು ಹೊಂದಾಣಿಕೆ ಮಾಡುವ ಷರತ್ತಿಗೊಳಪಟ್ಟು ನೇಮಕಾತಿಯನ್ನು ಮುಂದುವರೆಸಲು ಸಹ೧೨೬೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೭, ೨೦೧೪ ಭಾಗ ೫ ಸಚಿವ ಸಂಪುಟ-ಉಪಸಮಿತಿಯು ನಿರ್ಣಯಿಸಿದೆ ಎಂದು ಸರ್ಕಾರವು ಆದೇಶಿಸಿರುತ್ತದೆ. ಈ ಹಿನ್ನೆಲೆಯಲ್ಲಿ 62 ವಲಯ ಅರಣ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳ ಪೈಕಿ ಯಾರಾದರೂ ಹೈದರಾಬಾದ್-ಕರ್ನಾಟಕ ಪ್ರದೇಶದ ಮೀಸಲಾತಿಯನ್ನು ಕೋರಿದ್ದಲ್ಲಿ ಆ ಅಭ್ಯರ್ಥಿಗಳನ್ನು ಸ್ಥಳೀಯ ವೃಂದಕ್ಕೆ ವರ್ಗಾಯಿಸಿ, ಸ್ಥಳೀಯ ವೃಂದದ ರೋಸ್ಟರ್ ಬಿಂದುವನ್ನು ಸರಿದೂಗಿಸಲಾಗುವುದು.ಹೀಗಾಗಿ ಈ ಮೇಲ್ಕಂಡಂತೆ ನೋಟಿಫೈ ಮಾಡಿರುವ ಹುದ್ದೆಗಳ ವರ್ಗೀಕರಣದಲ್ಲಿ ಹಾಗೂ ಸಂಖ್ಯೆಗಳಲ್ಲಿ ಬದಲಾವಣೆ ಆಗುವ ಸಂಭವವಿರುತ್ತದೆ.ಹೀಗೆ ಬದಲಾವಣೆ ಆದಲ್ಲಿ ಈ ಮಾಹಿತಿಯನ್ನು ಕರ್ನಾಟಕ ಅರಣ್ಯ ಇಲಾಖೆಯ ವೆಬ್ಸೈಟ್ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗುವುದು.
ವಿಶೇಷ ಸೂಚನೆ:- ಈ ಮೇಲ್ಕಂಡ ಖಾಲಿ ಹುದ್ದೆಗಳ ವರ್ಗೀಕರಣದಲ್ಲಿ ಅವಶ್ಯಕತೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಯಾವುದೇ ಸಂದರ್ಭದಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾಗಿರುತ್ತದೆ. ಈ ಮಾಹಿತಿಯನ್ನು ಕರ್ನಾಟಕ ಅರಣ್ಯ ಇಲಾಖೆಯ ವೆಬ್ಸೈಟ್ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗುವುದು.
4. ಶೈಕ್ಷಣಿಕ ವಿದ್ಯಾರ್ಹತೆ:ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಈ ಕೆಳಕಂಡ ವಿದ್ಯಾರ್ಹತೆಯನ್ನು ಅಭ್ಯರ್ಥಿಯು ಹೊಂದಿರಬೇಕು.
4.1 ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ ಅರಣ್ಯವಿಷಯದಲ್ಲಿ ಪದವೀಧರರಾಗಿರಬೇಕು; ಅಥವಾ 4.2 ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ:
ಅ) ಕೃಷಿ, ಅಥವಾ
ಆ) ತೋಟಗಾರಿಕೆ, ಅಥವಾ
ಇ) ಪಶುವಿಜ್ಞಾನ ವಿಷಯದಲ್ಲಿ ಪದವೀಧರರಾಗಿರಬೇಕು.
ಅಥವಾ
ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ ಈ ಕೆಳಗಿನ ವಿಷಯಗಳಲ್ಲಿ ಯಾವುದಾದರು ಎರಡು ಅಥವಾ ಅದಕ್ಕಿಂತ ಹೆಚ್ಚು ವಿಷಯಗಳನ್ನು ಒಳಗೊಂಡಂತೆ ಬಿ.ಎಸ್ಸಿ.ಪದವೀಧರರಾಗಿರಬೇಕು.
ವಿಷಯಗಳು:- ಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಬಯೋ-ಕೆಮೆಸ್ಟ್ರಿ, ಮೈಕ್ರೋ-ಬಯಾಲಜಿ, ಬಯೋ-ಟೆಕ್ನಾಲಜಿ; ಅಥವಾ
ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.
5.ಮೇಲಿನ ಪದವಿ ಪರೀಕ್ಷೆಗಳಲ್ಲಿ ನಿಗದಿಪಡಿಸಿದ ಗರಿಷ್ಠ ಅಂಕಗಳಿಗೆಶೇಕಡ 50 ಕ್ಕಿಂತ ಕಡಿಮೆ ಇಲ್ಲದ ಅಂಕ ಪಡೆದು ತೇರ್ಗಡೆಯಾಗಿರಬೇಕು(ಎಲ್ಲಾ
ವಾರ್ಷಿಕ/ಸೆಮಿಸ್ಟರ್ ಪರೀಕ್ಷೆಗಳು ಕೂಡಿ). ಇಂತಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
6. ವಯೋಮಿತಿ:-
6.1 ಅರ್ಜಿಯನ್ನು ಆಹ್ವಾನಿಸಿ ಜಾರಿ ಮಾಡಲಾಗಿರುವ ಈ ಅಧಿಸೂಚನೆಯ ದಿನಾಂಕಕ್ಕೆ ಅಭ್ಯರ್ಥಿಯು 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು
| #ಈ | ;ಛh6ಏ ;ಛh6ಆ$%.-# | 2:ಗಿಃ |
| !ಈ | .!ಉ !ಇ 4ಉ 4ಇ | 21ಗಿಃ |
| 4ಈ | $ | :ಒಃ |
6.2 ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಯೋಮಿತಿ:-ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿ ನಿಯಮಾನುಸಾರ ನಿವೃತ್ತಿ / ಡಿಮೊಬಿಲೈಸೇಷನ್ (Demobilisation) ಅಥವಾ ರಿಟ್ರೆಂಚ್ಮೆಂಟ್ (Retrenchment) ಹೊಂದಿದ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅವರು ಯಾವ ಪ್ರವರ್ಗಕ್ಕೆ ಸೇರಿರುತ್ತಾರೆಯೊ ಆ ಪ್ರವರ್ಗಕ್ಕೆ ಮೇಲಿನ ಸಂಖ್ಯೆ: 6.1 ರಲ್ಲಿ ನಿಗದಿಪಡಿಸಿದ ಗರಿಷ್ಠ ವಯೋಮಿತಿಗೆ ಅವರು ಎಷ್ಟು ವರ್ಷ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿರುವರೋ ಅಷ್ಟು ವರ್ಷಗಳಿಗೆ ಮೂರು (3) ವರ್ಷ ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳ ಸಡಿಲಿಕೆಯನ್ನು ನೀಡಲಾಗುವುದು.
ವಿವರಣೆ: "ಮಾಜಿ ಸೈನಿಕ"ಎಂದರೆ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರಲ್ಲಿ ಅರ್ಥೈಸಿರುವಂತಾಗಿದೆ.
ಈ ಪದದ ಅರ್ಥ ವಿವರಣೆ ಈ ಕೆಳಕಂಡಂತಿದೆ:-
2(1)(i) "Ex-serviceman" means a person, who has served in any rank (whether as a regular Army, Navy and combatant or as a non-combatant) in the regular Army, Navy and Air Force of the Union but does not include a person who has served in the Defence Security Corps, the General Reserved Engineering Force, the Lok Sahayak Sena and the Para Military Forces; and
(a) who has retired from such service after earning his pension; orಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೭, ೨೦೧೪ ೧೨೬೩ (b) who has been released from such service on medical grounds attributable to military service or circumstances beyond his control and awarded medical or other disability pension; or (c) who has been released otherwise than on his own request from such service as a result of reduction in establishment; or
(d) who has been released from such service after completing the specific period of engagement otherwise than at his own request or by way of dismissal or discharge on account of mis-conduct or inefficiency and has been given a gratuity.
and includes personnel of the Territorial Army of the following categories namely:-
(i) pension holders for continuous embodied service;
(ii) persons with disability attributable to military service; and
(iii) gallantry award winners.
Explanation: The persons serving in the armed forces of the union, who on retirement from service, would come under the category of ex-serviceman may be permitted to apply for re-employment one year before the completion of the specified terms of agreement and avail themselves of all concessions available to ex-servicemen, but shall not be appointed to a State Civil Service or Post until they are permitted to leave the uniform.
7. ಸ್ವೀಕೃತ On-lineಅರ್ಜಿಗಳ ಪರಾಮರ್ಶೆ:
ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ)(ತಿದ್ದುಪಡಿ) ನಿಯಮಗಳು, 2012 ಮತ್ತು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ನಿಯಮ, 2013ರ ಅನ್ವಯ ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ತುಂಬಲು ಪ್ರಸ್ತುತ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಾನುಸಾರ ಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಅಭ್ಯರ್ಥಿಯು ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿ/ವಿವರಗಳ ಆಧಾರದ ಮೇಲೆ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು.ಕ್ರಮಬದ್ಧವಲ್ಲದ, ಅಪೂರ್ಣಮಾಹಿತಿಗಳಿಂದ ಕೂಡಿದ ಅರ್ಜಿಗಳನ್ನು ಪ್ರಾರಂಭಿಕ ಹಂತದಲ್ಲೇ ತಿರಸ್ಕರಿಸಲಾಗುವುದು.
7.1ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆ:
ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿರುವ ಎಲ್ಲಾ ಮಾಹಿತಿ/ವಿವರಗಳಿಗೆ ಪೂರಕವಾಗಿ ವಯಸ್ಸು, (ಜನ್ಮ ದಿನಾಂಕ ತಿಳಿಯಲು ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಶಾಲಾ ದಾಖಲಾತಿ ಪ್ರಮಾಣ ಪತ್ರಗಳು) ಶೈಕ್ಷಣಿಕ ಅರ್ಹತೆ, ಮೀಸಲಾತಿ, ಇತ್ಯಾದಿ ಬಗ್ಗೆ ಮೂಲ ದಾಖಲೆ/ಪ್ರಮಾಣ ಪತ್ರಗಳನ್ನು ಸೂಚಿತ ದಿನಾಂಕದಂದು ಆಯ್ಕೆ ಪ್ರಾಧಿಕಾರ ಅಥವಾ ಮುಖ್ಯ ಪರೀಕ್ಷಕರ ಅಥವಾ ಅವರು ನಿಯಮಿಸಿರುವ ಅಧಿಕಾರಿಗಳ ಎದುರು ಪರಿಶೀಲನೆಗೆ ಕಡ್ಡಾಯವಾಗಿ ಹಾಜರುಪಡಿಸಬೇಕು. ಸದರಿ ಮೂಲ ದಾಖಲೆ/ಪ್ರಮಾಣ ಪತ್ರಗಳನ್ನು ಹಾಜರುಪಡಿಸಲು ಯಾವುದೇ ಕಾರಣಕ್ಕೂ ಮತ್ತು ಯಾವುದೇ ಸನ್ನಿವೇಶದಲ್ಲಿಯೂ ಕಾಲ ವಿಸ್ತರಣೆ ನೀಡಲಾಗುವುದಿಲ್ಲ. ಅಭ್ಯರ್ಥಿಯು ತನ್ನ On-lineಅರ್ಜಿಯಲ್ಲಿ ನಮೂದಿಸಿರುವ ಮಾಹಿತಿ/ವಿವರಗಳನ್ನು ನಿಯಮಾನುಸಾರ ಪರಿಗಣಿಸಲಾಗುವುದು. ಒಂದು ವೇಳೆ,On-lineಅರ್ಜಿಯಲ್ಲಿ ನಮೂದಿಸಿರುವ ಮಾಹಿತಿಗೆ ವ್ಯತಿರಿಕ್ತ ದಾಖಲೆ/ಪ್ರಮಾಣ ಪತ್ರಗಳನ್ನು ಸಲ್ಲಿಸಿದಲ್ಲಿಅಂತಹ ದಾಖಲೆ/ಪ್ರಮಾಣ ಪತ್ರಗಳನ್ನು ಪರಿಗಣನೆಗೆ ತೆಗೆದುಕೊಂಡು ಅರ್ಜಿಯಲ್ಲಿನ ಮಾಹಿತಿಯನ್ನು ಬದಲಾವಣೆ ಮಾಡಲಾಗುವುದಿಲ್ಲ.
ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ಎಲ್ಲಾ ದಾಖಲೆಗಳನ್ನು ಪಡೆದಿಟ್ಟುಕೊಂಡು ಅರ್ಜಿಯನ್ನು ಸಲ್ಲಿಸತಕ್ಕದ್ದು.ಒಂದು ವೇಳೆ, ಅರ್ಜಿಯಲ್ಲಿ ನಮೂದಿಸಿರುವ ದಾಖಲೆಗಳನ್ನು ಸಲ್ಲಿಸಲು ವಿಫಲರಾದಲ್ಲಿ ಅಭ್ಯರ್ಥಿಯ ಅಭ್ಯರ್ಥಿತನವನ್ನು ರದ್ದುಪಡಿಸಲಾಗುವುದು.ಮೂಲ ದಾಖಲೆ/ಪ್ರಮಾಣ ಪತ್ರಗಳನ್ನು ಪರಿಶೀಲನೆಯ ಸಮಯದಲ್ಲಿ ಹಾಜರುಪಡಿಸದ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ರದ್ದುಪಡಿಸಲಾಗುವುದು ಹಾಗೂ ಅವರನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು.ಮೂಲ ದಾಖಲೆಗಳ ಪರಿಶೀಲನೆಯಲ್ಲಿ ಅರ್ಹತೆ ಹೊಂದುವ ಅಭ್ಯರ್ಥಿಗಳಿಗೆ ಮಾತ್ರ ಪೂರ್ವಭಾವಿ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಲಾಗುವುದು.
8.
ಆಯ್ಕೆ ವಿಧಾನ:
ಅ) ಪೂರ್ವಭಾವಿ ಪರೀಕ್ಷೆ - 200 ಅಂಕಗಳು
ಆ) ಮುಖ್ಯ ಪರೀಕ್ಷೆ - 200 ಅಂಕಗಳು
8.1 (ಅ) ಪೂರ್ವಭಾವಿ ಪರೀಕ್ಷೆ:ಮೂಲ ದಾಖಲೆಗಳ ಪರಿಶೀಲನೆಯಲ್ಲಿ ಅರ್ಹತೆ ಹೊಂದಿದ ಅರ್ಹ ಅಭ್ಯರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆ
| 8ಗಿ%"- | "- | 8 |
| #ಈಏಐ | #"" | |
| !ಈಅಡ6(ಆ,;ಃ | #"" |
ಪೂರ್ವಭಾವಿ ಪರೀಕ್ಷಾ ಕೇಂದ್ರಗಳು: (1) ಬೆಂಗಳೂರು (2) ಬೆಳಗಾವಿ (3) ಬಳ್ಳಾರಿ (4) ಧಾರವಾಡ (5) ಗುಲ್ಬರ್ಗ (6) ಮಂಗಳೂರು (7) ಮೈಸೂರು (8) ಶಿವಮೊಗ್ಗ.
8.2 ಆ) ಮುಖ್ಯ ಪರೀಕ್ಷೆ: ಪೂರ್ವಭಾವಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದಂತೆ ಪ್ರತಿ ಹುದ್ದೆಗೆ ಹತ್ತು ಅಭ್ಯರ್ಥಿಗಳಂತೆ (1:10 ಹುದ್ದೆ:ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿ) ಅನುಪಾತದಲ್ಲಿ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಹಾಜರಾಗಲು ಪ್ರಚಲಿತ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಾನುಸಾರ ಆಯ್ಕೆ ಮಾಡಲಾಗುವುದು. ಮುಖ್ಯ ಪರೀಕ್ಷೆಯ ವಿಷಯಗಳ ಮತ್ತು ಅಂಕಗಳ ವಿವರ ಈ ಕೆಳಗಿನಂತಿದೆ:-
| 8ಗಿ%"- | "- | 8 | |
| # | ?ಆ )$;ಃ | #""h64ರಿ?<+ಈk ?;ಖ,97 $(ಚಖ972 | |
| ! | ಔ2h, )$;ಃ | #""h64ರಿ?<+ಈk ?;ಖ,97 $(ಚಖ972 | |
| 8ಗಿ% | "- | 8 | |
| # | 3h-.-# | #"" | |
| ! | 3h-.-! | #"" |
ಸೂಚನೆ:- ಅರಣ್ಯ ವಿಷಯ-ಪತ್ರಿಕೆ-1 ಮತ್ತು ಅರಣ್ಯ ವಿಷಯ-ಪತ್ರಿಕೆ-2, ಈ ವಿಷಯಗಳನ್ನು ಬಿ.ಎಸ್ಸಿ. (ಅರಣ್ಯ ಶಾಸ್ತ್ರ)ಪದವೀಧರರು ಮಾತ್ರ ಆಯ್ಕೆ ಮಾಡುವಂತೆನಿರ್ಬಂಧಿಸಲಾಗಿದೆ. II(ಆ). ಐಚ್ಚಿಕ ವಿಷಯಗಳು (Optional Subjects)ಕ್ರಮ ಸಂಖ್ಯೆ: 4.2 ರಲ್ಲಿ ನಮೂದಿಸಿರುವ ಪದವೀಧರರಿಗೆ:
| 8ಗಿ% | "- | 8 | |
| # | /%ಋ | #"" | |
| ! | . ]/%ಋ | #"" | |
| 4 | ]$/%ಋ | #"" | |
| ` | / ಋ % | #"" | |
| ರಿ | + ಜ$/ = ಋ % | #"" | |
| ಟ | \ಣ | #"" | |
| ಟಿ | ಊ3 ,ಒ;, | #"" |
ಮೇಲೆ ಹೇಳಿದ ಐಚ್ಚಿಕ ವಿಷಯಗಳ ಪೈಕಿ ಅಭ್ಯರ್ಥಿ ಬಯಸುವ ಯಾವುದಾದರೂ ಎರಡು ಐಚ್ಚಿಕ ವಿಷಯಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳಬಹುದು. ಮುಖ್ಯ ಪರೀಕ್ಷೆಗೆ ಆಯ್ದುಕೊಂಡ ಐಚ್ಚಿಕ ವಿಷಯಗಳನ್ನು ಅರ್ಜಿಯಲ್ಲಿ ನಮೂದಿಸಬೇಕು.
ಸೂಚನೆ:-
1. ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿರುವ ಎಲ್ಲಾ ಪರೀಕ್ಷೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಯಾವುದೇ ಒಂದು ಪರೀಕ್ಷೆಗೆ ಗೈರುಹಾಜರಾದರೂ ಸಹ ಉಳಿದ ಪತ್ರಿಕೆಗಳಲ್ಲಿ ಪಡೆದ ಅಂಕಗಳನ್ನು ಪ್ರಕಟಿಸಲಾಗುವುದಿಲ್ಲ ಹಾಗೂ ಉಳಿದ ಪತ್ರಿಕೆಗಳಲ್ಲಿ ಎಷ್ಟು ಅಂಕಗಳನ್ನು ಗಳಿಸಿದರೂ ಸಹ ಇಂತಹ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುವುದಿಲ್ಲ.ಅಭ್ಯರ್ಥಿಗಳು ಉತ್ತರ ಪತ್ರಿಕೆಯಲ್ಲಿ ಪ್ರಶ್ನೆ ಪತ್ರಿಕೆಯ ಸಂಖ್ಯೆ ಅಥವಾ ಕೋಡ್ ಬರೆಯದಿದ್ದಲ್ಲಿ ಅಂತಹ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುವುದಿಲ್ಲ.
2. ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಯಾವುದೇ ಕಾರಣಕ್ಕೂ ಮರುಮೌಲ್ಯಮಾಪನ ಮಾಡಲಾಗುವುದಿಲ್ಲ.
3. ಕಡ್ಡಾಯ ಪತ್ರಿಕೆಗಳಾದ ಕನ್ನಡ ಮತ್ತು ಆಂಗ್ಲ ಭಾಷಾ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುವ ಅಭ್ಯರ್ಥಿಗಳುಉಳಿದ ಪತ್ರಿಕೆಗಳಲ್ಲಿ ಪಡೆದ ಅಂಕಗಳನ್ನು ಪ್ರಕಟಿಸಲಾಗುವುದಿಲ್ಲ.
4. ಭಾಷಾ ವಿಷಯಗಳ ಪ್ರಶ್ನೆ ಪತ್ರಿಕೆಯನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ವಿಷಯಗಳ ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಇರುತ್ತವೆ. ಕನ್ನಡ ಭಾಷೆಯಲ್ಲಿರುವ ಪ್ರಶ್ನೆಗಳ ಭಾಷಾಂತರದಲ್ಲಿ ಏನಾದರೂ ಅಸ್ಪಷ್ಟತೆ ಇದ್ದಲ್ಲಿ ಇಂಗ್ಲೀಷ್ ಭಾಷೆಯಲ್ಲಿರುವ ಪ್ರಶ್ನೆಗಳನ್ನು ನೋಡುವುದು. ಅಭ್ಯರ್ಥಿಯು ತನ್ನ ಪ್ರಶ್ನೆ ಪತ್ರಿಕೆಗಳನ್ನು ಸಂಪೂರ್ಣವಾಗಿ ಕನ್ನಡ ಅಥವಾ ಇಂಗ್ಲೀಷ್ ಮಾಧ್ಯಮದಲ್ಲಿ ಉತ್ತರಿಸತಕ್ಕದ್ದು. ಅರ್ಧ ಕನ್ನಡ ಅಥವಾ ಅರ್ಧ ಇಂಗ್ಲೀಷ್ ಮಾಧ್ಯಮದಲ್ಲಿ ಉತ್ತರಿಸಿದಲ್ಲಿ ಅಂತಹ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಗೊಳಿಸುವುದಿಲ್ಲ.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೭, ೨೦೧೪ ೧೨೬೫8.3ಪರೀಕ್ಷಾ ಪ್ರಶ್ನೆ ಪತ್ರಿಕೆಯನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ನೀಡಲಾಗುವುದು.ಅಭ್ಯರ್ಥಿಗಳು ಯಾವ ಮಾಧ್ಯಮದಲ್ಲಿ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುತ್ತಾರೆಂಬುದನ್ನು ಅರ್ಜಿ ನಮೂನೆಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು.ಒಮ್ಮೆ ಆಯ್ಕೆ ಮಾಡಿಕೊಂಡ ಮಾಧ್ಯಮವನ್ನು ಯಾವುದೇ ಕಾರಣಕ್ಕೆ ಬದಲಾಯಿಸಿಕೊಳ್ಳಲು ಅವಕಾಶವಿರುವುದಿಲ್ಲ.
8.4ಪೂರ್ವಭಾವಿ ಪರೀಕ್ಷೆಗಳಾದ ಸಾಮಾನ್ಯ ಜ್ಞಾನ ಹಾಗೂ ಆಪ್ಟಿಟ್ಯೂಡ್ ಪರೀಕ್ಷೆಗಳಲ್ಲಿ ಪಡೆದ ಅಂಕಗಳುಮತ್ತು ಮುಖ್ಯ ಪರೀಕ್ಷೆಯ ಐಚ್ಛಿಕ ವಿಷಯಗಳಲ್ಲಿಅಭ್ಯರ್ಥಿಯು ಗಳಿಸಿದ ಒಟ್ಟು ಅಂಕಗಳ ಮೆರಿಟ್ ಆಧಾರದ ಮೇಲೆಬಿ.ಎಸ್ಸಿ.(ಅರಣ್ಯ ಶಾಸ್ತ್ರ) ಪದವೀಧರ ಮತ್ತು ವಿಜ್ಞಾನ/ಇಂಜಿನಿಯರಿಂಗ್ ಪದವೀಧರ ಅಭ್ಯರ್ಥಿಗಳನ್ನು ಪ್ರಚಲಿತ ಮೀಸಲಾತಿ ನಿಯಮಾನುಸಾರ 1:2 (ಹುದ್ದೆ:ಅಭ್ಯರ್ಥಿ)ಅನುಪಾತದಲ್ಲಿ ಆಯ್ಕೆ ಮಾಡಿ ಪಟ್ಟಿಯನ್ನು ತಯಾರಿಸಲಾಗುವುದು. ಒಂದುವೇಳೆ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸಮಾನವಾದ ಅಂಕಗಳನ್ನು ಗಳಿಸಿದ ಸಂದರ್ಭದಲ್ಲಿ ವಯಸ್ಸಿನ ಆಧಾರದ ಮೇಲೆ ಅಂದರೆ ವಯಸ್ಸಿನಲ್ಲಿ ಹಿರಿಯರಾದ ಅಭ್ಯರ್ಥಿಗಳನ್ನು ಮೆರಿಟ್ನಲ್ಲಿ ಮೇಲೆತರಲಾಗುವುದು.
9.ಈ ರೀತಿ ಆಯ್ಕೆ ಮಾಡಿದ ಅಭ್ಯರ್ಥಿಗಳು ಇಲಾಖೆ ನಡೆಸುವ ದೇಹದಾಡರ್್ಯತೆ,ವೈದ್ಯಕೀಯ ಪರೀಕ್ಷೆ ಹಾಗೂ ದೈಹಿಕ ತಾಳ್ವಿಕೆ ಪರೀಕ್ಷೆಗಳಿಗೆ ಹಾಜರಾಗಬೇಕು.
10. ದೇಹದಾಡರ್್ಯತೆ ಮತ್ತು ವೈದ್ಯಕೀಯ ಪರೀಕ್ಷೆ:
ದೇಹದಾಡರ್್ಯತೆ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯನ್ನುಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ Civil Surgeon/Chief Medical Officer/Medical Superintendent ರವರ ದರ್ಜೆಗಿಂತ ಕಡಿಮೆ ಇರದ ವೈದ್ಯಾಧಿಕಾರಿಗಳಿಂದ ಈ ಕೆಳಕಂಡ ಮಾನದಂಡಗಳಂತೆ ದೇಹದಾಡರ್್ಯತೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಇಲಾಖಾ ಮುಖಾಂತರ ನಡೆಸಲಾಗುವುದು. ಸೂಚಿತ ದಿನಾಂಕದಂದು ನಡೆಸುವ ದೇಹದಾಡರ್್ಯತೆ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಗೈರುಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲಿಯೂ ಎರಡನೇ ಬಾರಿ ದೇಹದಾಡರ್್ಯತೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಲಾಗುವುದಿಲ್ಲ.ಗೈರುಹಾಜರಾಗುವ ಅಭ್ಯರ್ಥಿಗಳನ್ನು ಅನರ್ಹ ಅಭ್ಯರ್ಥಿಗಳೆಂದು ಪರಿಗಣಿಸಲಾಗುವುದು.ದೇಹದಾಡರ್್ಯತೆ ಮತ್ತು ವೈದ್ಯಕೀಯ ಪರೀಕ್ಷೆಗಳಲ್ಲಿ ಅನರ್ಹಗೊಂಡ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು. ದೇಹದಾಡರ್್ಯತೆ ಮತ್ತು ವೈದ್ಯಕೀಯಪರೀಕ್ಷೆಗಳು ಈ ಕೆಳಕಂಡಂತಿರುತ್ತವೆ.
10.1 ದೇಹದಾಡರ್್ಯತೆ ಪರೀಕ್ಷೆ:
ಶಾರೀರಿಕ ಮಾನದಂಡ: ಅಭ್ಯರ್ಥಿಗಳು ಈ ಕೆಳಗಿನ ಕನಿಷ್ಠ ಶಾರೀರಿಕ ಮಾನದಂಡ ಹೊಂದಿರಬೇಕು.
| # | ಉ$% | ಖಿ | #ಟ4ಈ3ಈ |
| ! | ಉ$ % $ | ಖಿ | ಊಛಿ12ಖಿಟಿಚಿಈ3ಈ hiಙ3ಖಿರಿಈ3ಈ |
| # | ಉ$% | ಖಿ | #ರಿ"ಈ3ಈ |
| ! | ಉ$ % $ | ಖಿ | ಊಛಿ12ಖಿಟಿ`ಈ3ಈ hiಙ3ಖಿರಿಈ3ಈ |
11. ವೈದ್ಯಕೀಯ ಪರೀಕ್ಷೆ:
11.1 ದೃಷ್ಟಿ ಸಾಮರ್ಥ್ಯ:
ಅಭ್ಯರ್ಥಿಗಳು ಈ ಕೆಳಗೆ ನಿಗದಿಪಡಿಸಿರುವ ಅಂತರದ ದೃಷ್ಟಿ ಸಾಮರ್ಥ್ಯವನ್ನು ಕನ್ನಡಕ ಸಹಿತ ಅಥವಾ ಕನ್ನಡಕ ರಹಿತ ಕಡ್ಡಾಯವಾಗಿ
| #ರಜಖಿ | 8(ರಜಖಿ | ||||
| (h ಙ$ { | ಅ[ | (h(;$ { | (h ಙ$ { | ಅ[ | (h(;$ { |
| ಟಎಟ3 , | ಟಎಚಿ3 , | "ಎಟ3 , | "ಎಠ3 , |
ಪ್ರತಿಯೊಂದು ಕಣ್ಣು ಪೂರ್ಣ ದೃಶ್ಯವನ್ನು ನೋಡುವ ಸಾಮರ್ಥ್ಯವನ್ನು ಹೊಂದಿರಬೇಕು.ಬಣ್ಣಕುರುಡು, ಮೆಳ್ಳೆಗಣ್ಣು ಅಥವಾ ಯಾವುದೇ ರೀತಿಯ ಕಣ್ಣಿನ ಅಥವಾ ರೆಪ್ಪೆಯ ವಿಕೃತ ಸ್ಥಿತಿಯನ್ನು ಅನರ್ಹತೆ ಎಂದು ಪರಿಗಣಿಸಲಾಗುವುದು.
11.2 ಶ್ರವಣಶಕ್ತಿ: ಅಭ್ಯರ್ಥಿಗಳ ಶ್ರವಣ ಶಕ್ತಿಯನ್ನು ಪರೀಕ್ಷಿಸಲು ಈ ಕೆಳಕಂಡ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು.
1. ರಿನ್ನರ್ಸ್ ಟೆಸ್ಟ್ 2. ವೆಬ್ಬರ್ಸ್ ಟೆಸ್ಟ್ 3. ಟೆಸ್ಟ್ ಫಾರ್ ವರ್ಟಿಗೋ
ಮೇಲಿನ ಪರೀಕ್ಷೆಗಳಲ್ಲಿ ಯಾವುದಾದರೂ ಶ್ರವಣ ದೋಷವಿದೆಯೆಂದು ಸಾಬೀತಾದಲ್ಲಿ ಅಂತಹ ಅಭ್ಯರ್ಥಿಗಳು ಆಯ್ಕೆಗೆ ಅರ್ಹರಲ್ಲ.
11.3ಕೆಳಕಂಡ ಅಂಗವಿಕಲತೆಯಿರುವವರು ಆಯ್ಕೆಗೆ ಅರ್ಹರಲ್ಲ.
1. ತೊಡರುಗಾಲು(knock knees) 2. ಬಾಗಿದ ಕಾಲು(Bow legs)೧೨೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೭, ೨೦೧೪ ಭಾಗ ೫ 3. ಸಮತಟ್ಟಾದ ಪಾದ(Flat feet) 4. ನರ ಊತವಿರುವವರು(Varicose Veins)
ದೇಹದಾಡರ್್ಯತೆ ಮತ್ತು ವೈದ್ಯಕೀಯ ಪರೀಕ್ಷೆಗಳಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತದ ದೈಹಿಕ ತಾಳ್ವಿಕೆ ಪರೀಕ್ಷೆಗೆ ಹಾಜರಾಗಲು ಅರ್ಹತೆ ಪಡೆಯುತ್ತಾರೆ.
| h+=>< ಖಿ | !ರಿಘಈ3ಈ7;hi`ಖ9:12( *+ |
| ಙ+=>< ಖಿ | #ಟಘಈ3ಈ7;hi`ಖ9:12( *+ಈ |
ದೈಹಿಕ ತಾಳ್ವಿಕೆ ಪರೀಕ್ಷೆಯಲ್ಲಿ ಅನರ್ಹರಾದ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು.
ಸೂಚನೆ:-ಅಭ್ಯರ್ಥಿಗಳು ನೇಮಕಾತಿ ಪರೀಕ್ಷೆಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು.
12.1ದೇಹದಾಡರ್್ಯತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಹಾಗೂ ದೈಹಿಕ ತಾಳ್ವಿಕೆ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳ ಪೈಕಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಗಳಿಸಿದ ಒಟ್ಟು ಅಂಕಗಳ ಮೆರಿಟ್ ಆಧಾರದ ಮೇಲೆ ಮತ್ತು ಪ್ರಚಲಿತ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಾನುಸಾರ ನೇರ ನೇಮಕಾತಿಗಾಗಿ ಹೊರಡಿಸಲಾದ ಅಧಿಸೂಚನೆಯಲ್ಲಿ ಸೂಚಿಸಿರುವ ಖಾಲಿ ಹುದ್ದೆಗಳಿಗೆ ಸಮನಾದ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನುವಲಯ ಅರಣ್ಯಾಧಿಕಾರಿ ಹುದ್ದೆಗೆಆಯ್ಕೆ ಮಾಡಲಾಗುವುದು.
12.2ಆಯ್ಕೆಯಾದಅಭ್ಯರ್ಥಿಗಳನ್ನು ಅರಣ್ಯ ಇಲಾಖೆಯಲ್ಲಿ ರೂ.21600-600-24600-700-28800-800-33600-900-39000-1050-40050ರ ವೇತನ ಶ್ರೇಣಿಯಲ್ಲಿ ಮೂರು ವರ್ಷಗಳ ಪರೀಕ್ಷಾರ್ಥ ಅವಧಿಯ ಮೇಲೆ ವಲಯ ಅರಣ್ಯಾಧಿಕಾರಿಗಳನ್ನಾಗಿ ನೇಮಕಾತಿ ಪ್ರಾಧಿಕಾರದಿಂದ ನೇಮಕ ಮಾಡಲಾಗುವುದು ಮತ್ತು ಅವರನ್ನು ಭಾರತ ಸರ್ಕಾರದ ನಿಯಂತ್ರಣದಲ್ಲಿರುವ ಯಾವುದಾದರೂ ವಲಯ ಅರಣ್ಯಾಧಿಕಾರಿ ಹುದ್ದೆಯ ತರಬೇತಿ ವಿದ್ಯಾಲಯದಲ್ಲಿ ತರಬೇತಿಗೆ ನಿಯೋಜಿಸಲಾಗುವುದು. ತರಬೇತಿಯು 1½ವರ್ಷದ ಅವಧಿಯದ್ದಾಗಿದೆ.
12.3ವಲಯ ಅರಣ್ಯಾಧಿಕಾರಿಯಾಗಿ ನೇಮಕಗೊಂಡ ನಂತರ ಸದರಿ ಅಭ್ಯರ್ಥಿಯು ತರಬೇತಿಗೆ ಹಾಜರಾಗುವ ಮೊದಲು ನೇಮಕಾತಿ ಪ್ರಾಧಿಕಾರದ ಸಮಕ್ಷಮ ರೂಪಾಯಿ 1,00,000-00 ಸಾಲ್ವೆಂಟ್ ಶೂರಿಟಿ ಹೊಂದಿರುವ ಇಬ್ಬರು ಅಥವಾ ರೂ.14,550/- ಗಿಂತ ಹೆಚ್ಚು ಮಾಸಿಕ ವೇತನ ಪಡೆಯುತ್ತಿರುವ ಮತ್ತು ತರಬೇತಿ ಮುಗಿಯುವ ದಿನಾಂಕದಿಂದ ಕನಿಷ್ಠ 6 ವರ್ಷ ಸೇವಾವಧಿ ಉಳಿದಿರುವ ಇಬ್ಬರು ಸರ್ಕಾರಿ ನೌಕರರ ಜಾಮೀನು ಕೊಡಬೇಕು. ಇದು ಸಾಧ್ಯವಾಗದಿದ್ದ ಪಕ್ಷದಲ್ಲಿ ಅಭ್ಯರ್ಥಿಯು ರೂ.50,000-00 ಮೊತ್ತದ ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮುಖ್ಯಸ್ಥರು, ಅರಣ್ಯ ಪಡೆ), ಬೆಂಗಳೂರು ಇವರ ಹೆಸರಿಗೆ ಅಡವು ಇರಿಸಬಹುದು. ಅಭ್ಯರ್ಥಿಯು ಇಲಾಖೆಯಲ್ಲಿ ನೇಮಕಾತಿಯಾದ ದಿನಾಂಕದಿಂದ ಕನಿಷ್ಠ 5 ವರ್ಷ ಸೇವೆ ಸಲ್ಲಿಸುವುದಾಗಿ, ತಪ್ಪಿದಲ್ಲಿ ಸರ್ಕಾರವು ತರಬೇತಿಯ ಬಗ್ಗೆ ಭರಿಸಿದ ಸಂಪೂರ್ಣ ವೆಚ್ಚವನ್ನು ಮತ್ತು ತರಬೇತಿ ಅವಧಿಯಲ್ಲಿ ಪಡೆದ ವೇತನವನ್ನು ಶೇ.8 ರ ದಂಡನೆ ಬಡ್ಡಿಯೊಂದಿಗೆ ಸರ್ಕಾರಕ್ಕೆ ಪಾವತಿ ಮಾಡಲು ಮತ್ತು ಆಯ್ಕೆ ಪ್ರಾಧಿಕಾರ ನಿಗದಿಪಡಿಸುವ ಇತರೆ ಷರತ್ತುಗಳನ್ನು ಪೂರೈಸಲು ಸಿದ್ಧವಿರುವುದಾಗಿ ಛಾಪಾ ಕಾಗದದಲ್ಲಿ ನಿಗದಿತ ನಮೂನೆಯಲ್ಲಿ ಅಭ್ಯರ್ಥಿಯು ಕರಾರು ಪತ್ರವನ್ನು ಬರೆದು ಕೊಡತಕ್ಕದ್ದು.
12.4ಒಂದು ವೇಳೆ ಅಭ್ಯರ್ಥಿಯು ಸೂಕ್ತ ಕಾರಣಗಳನ್ನು ಹೊರತುಪಡಿಸಿ (ಕಾರಣದ ಸೂಕ್ತತೆ ಬಗ್ಗೆ ಇಲಾಖೆಯ ನಿರ್ಣಯವೇ ಅಂತಿಮವಾಗುತ್ತದೆ) ಷರತ್ತುಗಳನ್ನು ಪೂರೈಸಲು ವಿಫಲವಾದಲ್ಲಿ ಅಥವಾ ತರಬೇತಿಯನ್ನು ಪೂರೈಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ವಿಫಲರಾದಲ್ಲಿ ಅಥವಾ ಯಾವುದೇ ಕಾರಣಕ್ಕಾಗಿ ತರಬೇತಿಯಿಂದ ತೆಗೆದು ಹಾಕಲ್ಪಟ್ಟರೆ ಅಥವಾ ಸ್ವಇಚ್ಚೆಯಿಂದ ತರಬೇತಿ ಮಧ್ಯದಲ್ಲಿ ಬಿಟ್ಟುಬಿಟ್ಟರೆ ಅಥವಾ ಪರೀಕ್ಷಾರ್ಥ ಅವಧಿಯನ್ನು ಯಶಸ್ವಿಯಾಗಿ ಪೂರೈಸದಿದ್ದರೆ ಸರ್ಕಾರವು ಅಭ್ಯರ್ಥಿಯ ತರಬೇತಿಗಾಗಿ ಭರಿಸಿದ ವೆಚ್ಚವನ್ನು ಮತ್ತು ತರಬೇತಿ ಅವಧಿಯಲ್ಲಿ ಪಡೆದ ವೇತನವನ್ನು ಮೇಲೆ ನಿಗದಿಪಡಿಸಿದ ದರದಲ್ಲಿ ಬಡ್ಡಿಯೊಂದಿಗೆ ಮರು ಪಾವತಿಸಲು ಅಭ್ಯರ್ಥಿ ಮತ್ತು ಜಾಮೀನುದಾರರು ಒಟ್ಟಾಗಿಯೂ ಮತ್ತು ಪ್ರತ್ಯೇಕವಾಗಿಯೂ ಭರಿಸಲು ಬದ್ಧರಾಗಿರತಕ್ಕದ್ದು. ಅಂತಹ ಹಣವನ್ನು ಕಂದಾಯ ಬಾಕಿಯಾಗಿ ಇವರೆಲ್ಲರಿಂದ ಒಟ್ಟಾರೆಯಾಗಿ ಅಥವಾ ಪ್ರತಿಯೊಬ್ಬರಿಂದ ಪ್ರತ್ಯೇಕವಾಗಿ ವಸೂಲು ಮಾಡುವ ಹಕ್ಕನ್ನು ಇಲಾಖೆಯು ಹೊಂದಿರುತ್ತದೆ.
12.5ಅಭ್ಯರ್ಥಿಗಳ ತರಬೇತಿಯ ಸಂಪೂರ್ಣ ವೆಚ್ಚವನ್ನು ಕರ್ನಾಟಕ ರಾಜ್ಯ ಸರ್ಕಾರವು ಭರಿಸುವುದು. ಆದರೆ ಸಾಧನ ಸಾಮಗ್ರಿಗಳ ಭತ್ಯೆ ರೂ.30,000-00 ದ ಶೇ.50 ಅಂದರೆ ರೂ.15,000-00 ನ್ನು ಅಭ್ಯರ್ಥಿಗಳು ತರಬೇತಿ ಪೂರ್ಣಗೊಳಿಸಿ ಬಂದ ನಂತರ ಇಲಾಖೆಯಲ್ಲಿ ನಿಯುಕ್ತಿಗೊಂಡ ದಿನಾಂಕದಿಂದ ಪಡೆಯುವ ವೇತನದಿಂದ ಆರಂಭಗೊಂಡು ಒಟ್ಟು 10 ಸಮಾನ ಮಾಸಿಕ ಕಂತುಗಳಲ್ಲಿ ವಸೂಲು ಮಾಡಲಾಗುವುದು. ಮೇಲಿನ ಸಾಧನ ಸಾಮಗ್ರಿ ಭತ್ಯೆಯು ತಾತ್ಕಾಲಿಕವಾಗಿದ್ದು ಪರಿಷ್ಕರಿಸಬಹುದು.
12.6ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ನಂತರ ಇವರುಗಳನ್ನು 6 ತಿಂಗಳ ಅವಧಿಗೆ ವೃತ್ತಿ ತರಬೇತಿಗಾಗಿ ನಿಯೋಜಿಸಲಾಗುವುದು. ಉಳಿದ 1 ವರ್ಷದ ಪರೀಕ್ಷಾರ್ಥ ಅವಧಿಯಲ್ಲಿ ಇವರುಗಳು ವಲಯ ಅರಣ್ಯಾಧಿಕಾರಿಗಳಾಗಿ ಸ್ವತಂತ್ರವಾಗಿ ಕೆಲಸ ನಿರ್ವಹಿಸತಕ್ಕದ್ದು.
12.7ತರಬೇತಿಯ ಸಮಯದಲ್ಲಿ ಅಭ್ಯರ್ಥಿಗಳು ವಲಯ ಅರಣ್ಯಾಧಿಕಾರಿ ಹುದ್ದೆಯ ವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.
13. ವಿವಿಧ ಪ್ರವರ್ಗಗಳ ಅಡಿ ಮೀಸಲಾತಿ ಕೋರುವ ಅಭ್ಯರ್ಥಿಗಳು ಸಲ್ಲಿಸಬೇಕಾದ ದಾಖಲೆ/ಪ್ರಮಾಣ ಪತ್ರಗಳ ವಿವರ ಕೆಳಕಂಡಂತಿದೆ:-
ಸರ್ಕಾರಿ ಅಧಿಸೂಚನೆ ಸಂಖ್ಯೆ: ಸಕಇ 132 ಎಸ್ಎಡಿ 97 ದಿನಾಂಕ 8-2-2000 ರನ್ವಯ, ವಿವಿಧ ಪ್ರವರ್ಗಗಳ ಅಡಿ ಮೀಸಲಾತಿ ಕೋರಿ ಅರ್ಜಿ ಸಲ್ಲಿಸುವವರು ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ, ಇತ್ಯಾದಿ ಮೀಸಲಾತಿ ಕುರಿತು ಪ್ರಮಾಣ ಪತ್ರಗಳನ್ನು ಈ ಕೆಳಕಂಡ ನಮೂನೆಗಳಲ್ಲಿ ಹೊಂದಿರಬೇಕು.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೭, ೨೦೧೪ ೧೨೬೭13.1 ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಸಂಬಂಧಪಟ್ಟ ತಹಶೀಲ್ದಾರ್ರವರಿಂದ ನೀಡಲಾದ ಜಾತಿ ಪ್ರಮಾಣ ಪತ್ರವನ್ನು "ನಮೂನೆ- ಡಿ" ರಲ್ಲಿ ಪಡೆದಿರಬೇಕು.
13.2 ಪ್ರವರ್ಗ-I ಕ್ಕೆ ಸೇರಿದ ಅಭ್ಯರ್ಥಿಗಳು ಸಂಬಂಧಪಟ್ಟ ತಹಶೀಲ್ದಾರ್ರವರಿಂದ ನೀಡಲಾದ ಜಾತಿ ಪ್ರಮಾಣ ಪತ್ರವನ್ನು "ನಮೂನೆ-ಇ" ರಲ್ಲಿ ಪಡೆದಿರಬೇಕು.
13.3 ಪ್ರವರ್ಗ-IIಎ, IIಬಿ, IIIಎ ಮತ್ತು IIIಬಿ. ಗೆ ಸೇರಿದ ಅಭ್ಯರ್ಥಿಗಳು ಸಂಬಂಧಪಟ್ಟ ತಹಶೀಲ್ದಾರ್ ರವರಿಂದ ನೀಡಲಾದ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು "ನಮೂನೆ-ಎಫ್" ರಲ್ಲಿ ಪಡೆದಿರಬೇಕು.
ವಿಶೇಷ ಸೂಚನೆ:-"ನಮೂನೆ-ಎಫ್" ಪ್ರಮಾಣ ಪತ್ರವು ಅಧಿಸೂಚನೆಯ ದಿನಾಂಕಕ್ಕೆ ಐದು (5) ವರ್ಷಗಳಿಗಿಂತ ಹೆಚ್ಚು ಹಳೆಯ ಸಮಯದ್ದಾಗಿರಬಾರದು. ಅವಧಿ ಮೀರಿದ ಪ್ರಮಾಣ ಪತ್ರವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
13.4 ಮಾಜಿ ಸೈನಿಕ ಅಭ್ಯರ್ಥಿಗಳು ಸಂಬಂಧಪಟ್ಟ ಘಟಕದಿಂದ ಡಿಸ್ಚಾರ್ಜ್ ಹೊಂದಿದ ಬಗ್ಗೆ ಮೂಲ ಪ್ರಮಾಣ ಪತ್ರ ಮತ್ತು ಪೆನ್ಷನ್ ಪಡೆಯುತ್ತಿರುವ ಬಗ್ಗೆ ದಾಖಲೆ ಪತ್ರ ಪಡೆದಿರಬೇಕು ಹಾಗೂ ಮಾಜಿ ಸೈನಿಕ ಮೀಸಲಾತಿಗೆ ನಿಯಮಾನುಸಾರ ಅರ್ಹರೇ ಎಂಬ ಬಗ್ಗೆ ಪ್ರಮಾಣ ಪತ್ರವನ್ನು ಹತ್ತಿರದ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆಯಿಂದ ಪಡೆದಿರಬೇಕು.
13.5 (ಅ) ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಪ್ರವರ್ಗ-I, IIಎ, IIಬಿ, IIIಎ ಮತ್ತು IIIಬಿ, ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು 1ನೇ ತರಗತಿಯಿಂದ 10ನೇ ತರಗತಿಯವರಿಗೆ (ಎಲ್ಲಾ ವರ್ಷಗಳು) ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಬಗ್ಗೆ ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರಿಂದ ನೀಡಲಾದ "ನಮೂನೆ-2"ನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೇಲುರುಜು ಮಾಡಿದ ಪ್ರಮಾಣ ಪತ್ರವನ್ನು ಪಡೆದಿರಬೇಕು.
(ಆ) ಗ್ರಾಮೀಣ ಮೀಸಲಾತಿ ಕೋರಿರುವ ಸಾಮಾನ್ಯ ಅರ್ಹತೆಯ (General Merit)ಅಭ್ಯರ್ಥಿಗಳು ಮೇಲೆ13.5(ಅ) ರಲ್ಲಿ ತಿಳಿಸಿರುವ "ನಮೂನೆ-2" ರ ಜೊತೆಗೆ ನಿಗದಿತ "ನಮೂನೆ-1" ರಲ್ಲಿ ಸಂಬಂಧಪಟ್ಟ ತಹಶೀಲ್ದಾರರಿಂದ ಅವರು ಮೇಲುಸ್ಥರ (Creamy Layer) ಪರಿಮಿತಿಯಲ್ಲಿ ಬರುವುದಿಲ್ಲವೆಂದು ದೃಡೀಕರಿಸಿರುವ ಪ್ರಮಾಣ ಪತ್ರ ಪಡೆದಿರಬೇಕು.
ವಿಶೇಷ ಸೂಚನೆ:- ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಪ್ರವರ್ಗ-I, IIಎ, IIಬಿ, IIIಎ ಮತ್ತು IIIಬಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳು ತಿರಸ್ಕøತಗೊಂಡಲ್ಲಿ ಅವರು ಗ್ರಾಮೀಣ ಮೀಸಲಾತಿಗೂ ಅನರ್ಹರಾಗುತ್ತಾರೆ.
13.6 ಕನ್ನಡ ಮಾಧ್ಯಮ ವರ್ಗೀಕರಣದಲ್ಲಿ ಮೀಸಲಾತಿ ಕೋರಿರುವ ಅಭ್ಯರ್ಥಿಗಳು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಿಂದ ಸಹಿ ಮಾಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲುರುಜು ಮಾಡಿದ ಪ್ರಮಾಣ ಪತ್ರ ಪಡೆದಿರಬೇಕು.
13.7 ಹೈದರಾಬಾದ್-ಕರ್ನಾಟಕ ಮೀಸಲಾತಿ ಕೋರುವ ಅಭ್ಯರ್ಥಿಗಳು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ನಿಯಮ, 2013ರ ಅನ್ವಯ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೂಕ್ತ ಪ್ರಾಧಿಕಾರದಿಂದ ಪ್ರಮಾಣ ಪತ್ರವನ್ನು ಪಡೆದಿಟ್ಟುಕೊಂಡಿರತಕ್ಕದ್ದು.
14. ಗಮನಿಸಬೇಕಾದ ಮುಖ್ಯ ಅಂಶಗಳು:-
14.1 ಅಭ್ಯರ್ಥಿಗಳು ಅರ್ಜಿಯನ್ನು On-line ನಲ್ಲಿಭರ್ತಿ ಮಾಡುವಾಗ ಅಧಿಸೂಚನೆಯಲ್ಲಿ ತಿಳಿಸಿರುವ ಎಲ್ಲಾ ಅಂಶಗಳನ್ನು ಸರಿಯಾಗಿ ಅರ್ಥೈಸಿಕೊಂಡು, ಅರ್ಜಿಯನ್ನು ಸರಿಯಾಗಿ ಮತ್ತು ಸಮರ್ಪಕವಾಗಿ ಭರ್ತಿ ಮಾಡತಕ್ಕದ್ದು.
14.2 ಅಭ್ಯರ್ಥಿಗಳು ಅರ್ಜಿ ಹಾಕುವ ಮೊದಲು ದೇಹದಾಡರ್್ಯತೆಯ ಕುರಿತು ಸದರಿ ಹುದ್ದೆಗೆ ನಿಗದಿಪಡಿಸಿರುವ ಮಾನದಂಡವು ತಮಗೆ ಇರುವ ಕುರಿತು ಖಚಿತಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಲು ತಿಳಿಸಿದೆ.
14.3 On-line ಮುಖಾಂತರ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಅಭ್ಯರ್ಥಿಯು ಆಯ್ಕೆಗೆ ಅರ್ಹತೆ ಪಡೆಯುವುದಿಲ್ಲ.
14.4 ಅಭ್ಯರ್ಥಿಗಳು ತಮ್ಮ ಮಾಹಿತಿಗಾಗಿ On-line ನಲ್ಲಿ ಸಲ್ಲಿಸಿದ ಅರ್ಜಿಯ ಒಂದು ಪ್ರತಿಯನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಸೂಚಿಸಿದೆ.
14.5 ಮೂಲ ದಾಖಲೆಗಳ ಪರೀಕ್ಷೆ ನಡೆಯುವ ದಿನಾಂಕ, ವೇಳಾಪಟ್ಟಿ, ಪರೀಕ್ಷಾ ಕೇಂದ್ರ ವಿವರಗಳುಳ್ಳ ಪ್ರವೇಶ ಪತ್ರವನ್ನು ಅರ್ಹ ಅಭ್ಯರ್ಥಿಗಳು ಇಲಾಖಾ ವೆಬ್ಸೈಟ್ www.aranya.gov.in
ನಿಂದ ಡೌನ್ಲೋಡ್ ಮಾಡಿಕೊಳ್ಳುವುದು.
14.6 ಪ್ರವರ್ಗದ ಮೀಸಲಾತಿಯಲ್ಲಿ ಆಯ್ಕೆ ಬಯಸುವ ಅಭ್ಯರ್ಥಿಗಳು ಅರ್ಜಿಯಲ್ಲಿ ಪ್ರವರ್ಗದ ಕಾಲಂ ಅನ್ನು ಕಡ್ಡಾಯವಾಗಿ ನಮೂದಿಸಬೇಕು. ಈ ಕಾಲಂ ಅನ್ನು ಭರ್ತಿ ಮಾಡದೆ ಖಾಲಿ ಬಿಟ್ಟಲ್ಲಿ "ಸಾಮಾನ್ಯ ಅರ್ಹತೆ" ಎಂದು ಪರಿಗಣಿಸಲಾಗುವುದು. ಯಾವುದೇ ಹಂತದಲ್ಲಿ ಅಭ್ಯರ್ಥಿಯು ತಾನು ಹೊಂದಿರುವ ಪ್ರವರ್ಗದ ಕುರಿತು ಮಾಹಿತಿಯನ್ನು ಹೊಸದಾಗಿ ಸೇರ್ಪಡೆ ಮಾಡಲು ಅಥವಾ ಬದಲಾವಣೆ ಮಾಡಲು ಅವಕಾಶ ನೀಡಲಾಗುವುದಿಲ್ಲ.
14.7 ಪ್ರಸ್ತುತ ಸರ್ಕಾರಿ (ಕೇಂದ್ರ ಸರ್ಕಾರ/ಕರ್ನಾಟಕ ರಾಜ್ಯ ಸರ್ಕಾರ/ಇತರೆ ರಾಜ್ಯಗಳು) ಹಾಗೂ ಸಂಸ್ಥೆಗಳಲ್ಲಿ ಅಥವಾ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಸಂಬಂಧಿಸಿದ ನೇಮಕಾತಿ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪತ್ರವನ್ನು ಪಡೆದಿಟ್ಟುಕೊಂಡು ಅರಣ್ಯ ಇಲಾಖೆಯು ಆಪೇಕ್ಷಿಸಿದಾಗ ನೀಡತಕ್ಕದ್ದು.
೧೨೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೭, ೨೦೧೪ ಭಾಗ ೫14.8 ಯಾವುದೇ ಅಭ್ಯರ್ಥಿಯು ತನ್ನ ಆಯ್ಕೆಗೆ ಸಂಬಂಧಿಸಿದಂತೆ ಬಾಹ್ಯ ಒತ್ತಡ ತರಲು ಪ್ರಯತ್ನಿಸಿದಲ್ಲಿ ಅಂತಹ ಅಭ್ಯರ್ಥಿಯನ್ನು ಆಯ್ಕೆ ಪ್ರಕ್ರಿಯೆಯಿಂದ ಅನರ್ಹಗೊಳಿಸಲಾಗುವುದು.
14.9 ಕರ್ನಾಟಕ ರಾಜ್ಯದ ಯಾವುದೇ ಸರ್ಕಾರಿ ಇಲಾಖೆ, ಕೇಂದ್ರ ಸರ್ಕಾರಿ ಇಲಾಖೆ ಅಥವಾ ಅರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಸೇವೆಯಿಂದ ವಜಾಗೊಂಡಿರುವ ನೌಕರರು ನೇಮಕಾತಿಗೆ ಅರ್ಹರಲ್ಲ.
14.10 ಕಾನೂನು ಬಾಹಿರವೆಂದು ಘೋಷಿಸಲಾದ ಸಂಸ್ಥೆ/ಸಂಸ್ಥೆಗಳು ಅಥವಾ ಸಂಘದ/ಸಂಘಗಳ ಸದಸ್ಯರಾಗಿದ್ದರೆ ಅಥವಾ ಇನ್ನಾವುದೇ ರೀತಿಯಲ್ಲಿ ಅಂತಹ ಸಂಸ್ಥೆ/ಸಂಸ್ಥೆಗಳು ಅಥವಾ ಸಂಘದ/ಸಂಘಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರೆ ಅಂತಹ ವ್ಯಕ್ತಿ ನೇಮಕಾತಿಗೆ ಅರ್ಹರಾಗುವುದಿಲ್ಲ.
14.11 ಅಭ್ಯರ್ಥಿಯು ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿ ಅಪರಾಧಿಯಾಗಿದ್ದರೆ ಅಂತಹ ವ್ಯಕ್ತಿಗಳು ನೇಮಕಾತಿಗೆ/ತರಬೇತಿಗೆ ಅರ್ಹರಾಗುವುದಿಲ್ಲ.
14.12 ಒಬ್ಬರಿಗಿಂತ ಹೆಚ್ಚು ಜೀವಂತ ಪತ್ನಿಯರನ್ನು / ಪತಿಯರನ್ನು ಹೊಂದಿದ ಪುರುಷ / ಮಹಿಳೆ ಅಭ್ಯರ್ಥಿಗಳು ಸರ್ಕಾರದ ಪೂರ್ವಾನುಮತಿ ಇಲ್ಲದೇ ನೇಮಕಾತಿಗೆ/ತರಬೇತಿಗೆ ಅರ್ಹರಾಗಿರುವುದಿಲ್ಲ.
14.13 ಯಾವುದೇ ಅಭ್ಯರ್ಥಿಯು ಕೇಂದ್ರ ಅಥವಾ ಯಾವುದೇ ರಾಜ್ಯ ಸರ್ಕಾರ / ಸರ್ಕಾರಿ ಸಂಸ್ಥೆಗಳಿಗೆ ನಡೆಸುವ ಯಾವುದೇ ಪರೀಕ್ಷೆಗಳಿಗೆ ಅಥವಾ ಆಯ್ಕೆಗಳಿಗೆ ಹಾಜರಾಗಲು ತಾತ್ಕಾಲಿಕವಾಗಿ ಬಹಿಷ್ಕರಿಸಲ್ಪಟ್ಟಿದ್ದರೆ ಅಥವಾ ಖಾಯಂ ಆಗಿ ಅನರ್ಹಗೊಂಡಿದ್ದರೆ ಅಥವಾ ಬಹಿಷ್ಕರಿಸಲ್ಪಟ್ಟಿದ್ದರೆ, ಅಂತಹ ಅಭ್ಯರ್ಥಿಯು ನೇಮಕಾತಿಗೆ/ತರಬೇತಿಗೆ ಅರ್ಹರಾಗಿರುವುದಿಲ್ಲ.
14.14 ಅಭ್ಯರ್ಥಿಯು ನೇಮಕಾತಿ ಪರೀಕ್ಷೆಗೆ ಬೇರೊಬ್ಬ ವ್ಯಕ್ತಿಯನ್ನು ತನ್ನ ಪರವಾಗಿ ಕಳುಹಿಸಿದಲ್ಲಿ ಅಥವಾ ತಪ್ಪು ಮಾಹಿತಿಗಳನ್ನು ನಮೂದಿಸಿದಲ್ಲಿ ಅಥವಾ ಕೃತ್ರಿಮ ಅಥವಾ ತಿದ್ದಿದ ದಾಖಲಾತಿಗಳನ್ನು ಅಥವಾ ಅಸತ್ಯ ವಿವರಗಳನ್ನು ನೀಡಿದಲ್ಲಿ ಅಥವಾ ಸತ್ಯ ವಿಷಯಗಳನ್ನು ಮರೆಮಾಚಿದ ಅಥವಾ ಅನುಚಿತ ಮಾರ್ಗಗಳನ್ನು ಉಪಯೋಗಿಸಿದಲ್ಲಿ ಅಥವಾ ಪ್ರಯತ್ನಿಸಿದಲ್ಲಿ ಈ ನೇಮಕಾತಿಗೆ ಅವರನ್ನು ಅನರ್ಹರೆಂದು ಪರಿಗಣಿಸಲಾಗುವುದು ಮತ್ತು ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ಉಪ ನಿಯಮ 20 ರಂತೆ ಅಪರಾಧಿ ವ್ಯವಹರಣೆಗೆ ಒಳಪಡುವರು.
14.15 ಸರ್ಕಾರಿ ಆದೇಶ ಸಂಖ್ಯೆ: ಎಫ್ಡಿ-ಎಸ್ಪಿಎಲ್-04-ಪಿಇಟಿ-2005 ದಿನಾಂಕ 31-3-2006 ರಂತೆ ಅಂಶದಾಯಿ ನಿವೃತ್ತಿ ಯೋಜನೆ (Contributory Pension Scheme)ಗೆ ಈ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಬದ್ಧರಾಗಿರತಕ್ಕದ್ದು.
14.16 ಅಧಿಸೂಚನೆಯಲ್ಲಿ ತಿಳಿಸಿರುವ ಅಂಶಗಳ ಕುರಿತು ಹಾಗೂ ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಆಯ್ಕೆಗೆ ಪರಿಗಣಿಸಿರುವ ಅಂಶಗಳ ಬಗ್ಗೆ ವ್ಯತ್ಯಾಸ ಕಂಡು ಬಂದಲ್ಲಿ ಅಥವಾ ಆಕ್ಷೇಪಣೆ ಸಲ್ಲಿಕೆಯಾದಲ್ಲಿ, ಕೋರ್ಟು ತೀರ್ಪುಗಳು, ಸರಕಾರದ ಆದೇಶಗಳು, ನಿರ್ದೇಶನಗಳು, ಸುತ್ತೋಲೆಗಳು ಬಂದಲ್ಲಿ ಅಧಿಸೂಚನೆಯನ್ನು ಮಾರ್ಪಾಡು ಮಾಡುವ ಹಾಗೂ ಪ್ರಕಟಿಸಿರುವ ಆಯ್ಕೆ ಪಟ್ಟಿಯಲ್ಲಿ ಸೂಕ್ತ ಬದಲಾವಣೆ ಮಾಡಿ ಆಯ್ಕೆ ಪಟ್ಟಿ ಪರಿಷ್ಕರಿಸುವ ಅಧಿಕಾರವನ್ನು ಆಯ್ಕೆ ಪ್ರಾಧಿಕಾರವು ಹೊಂದಿರುತ್ತದೆ. ವಿಧಿಸಲಾಗಿರುವ ಯಾವುದೇ ಷರತ್ತನ್ನು ಸಡಿಲಗೊಳಿಸುವ ಅಥವಾ ಹೆಚ್ಚುವರಿ ಷರತ್ತನ್ನು ವಿಧಿಸುವ ಅಧಿಕಾರವನ್ನು ಆಯ್ಕೆ ಪ್ರಾಧಿಕಾರವು ಹೊಂದಿರುತ್ತದೆ.
14.17 ಒಂದು ವೇಳೆ ಅಧಿಸೂಚನೆಯಲ್ಲಿ ನಮೂದಿಸಿರುವ ಹುದ್ದೆಗಳ ಸಂಖ್ಯೆಯಲ್ಲಿ ಕಡಿತ ಅಥವಾ ಹೆಚ್ಚುವರಿ ಆದಲ್ಲಿ ಮತ್ತು ಮೀಸಲಾತಿ ವರ್ಗೀಕರಣದಲ್ಲಿ ಏನಾದರೂ ಬದಲಾವಣೆ ಮಾಡಬೇಕಾದ ಅವಶ್ಯಕತೆ ಕಂಡು ಬಂದಲ್ಲಿ ಯಾವುದೇ ಸಂದರ್ಭದಲ್ಲಿ ಬದಲಾವಣೆ ಮಾಡಲಾಗುವುದು ಮತ್ತು ಬದಲಾದ ವಿವರಗಳನ್ನು ಇಲಾಖಾ ವೆಬ್ಸೈಟ್: www.aranya.gov.in ನಲ್ಲಿ ಪ್ರಕಟಿಸಲಾಗುವುದು. 14.18 ಅಭ್ಯರ್ಥಿಯು ಹುದ್ದೆಗೆ ಅರ್ಜಿ ಸಲ್ಲಿಸಿದ ತಕ್ಷಣ ತಾನು ನಿಯಮ ಮತ್ತು ಅಧಿನಿಯಮಗಳಿಗೆ (Rules & Regulations) ಬದ್ಧನಾಗಿರುತ್ತಾನೆ ಎಂದು ಭಾವಿಸಲಾಗಿರುತ್ತದೆ. ಒಂದು ವೇಳೆ ತಾನು ಸದರಿ ಹುದ್ದೆಗೆ ಆಯ್ಕೆಯಾಗದ ಪಕ್ಷದಲ್ಲಿ ತದನಂತರ ಅದೇ ನಿಯಮಗಳನ್ನು ಪ್ರಶ್ನಿಸಲು ಬರುವುದಿಲ್ಲ.
14.19 ಅಭ್ಯರ್ಥಿಗಳು ನೇಮಕಾತಿ ಪರೀಕ್ಷೆಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು.
14.20 ಅಭ್ಯರ್ಥಿಗಳು ಉತ್ತರ ಪತ್ರಿಕೆಯ ಮಾಹಿತಿಯನ್ನು ಭರ್ತಿ ಮಾಡುವ ಸಲುವಾಗಿ ಪರೀಕ್ಷೆಗೆ ನಿಗದಿಪಡಿಸಿರುವ ಸಮಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೊಠಡಿಗೆ ತಪ್ಪದೇ ಹಾಜರಾಗತಕ್ಕದ್ದು. ಆ ಸಮಯದಲ್ಲಿ ಪರೀಕ್ಷಾ ಮೇಲ್ವಿಚಾರಕರು ಕೆಲವು ಮಾರ್ಗಸೂಚನೆಗಳನ್ನು ನೀಡುತ್ತಾರೆ.
14.21 ಸರ್ಕಾರವು ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದ ನಂತರ ಅವರುಗಳನ್ನು ರಾಷ್ಟ್ರದ ಯಾವುದೇ ತರಬೇತಿ ಸಂಸ್ಥೆಯಲ್ಲಿ ತರಬೇತಿಗೆ ಕಳುಹಿಸುವ ಹಕ್ಕನ್ನು ಹೊಂದಿರುತ್ತದೆ.
14.22 ನೇರ ನೇಮಕಾತಿ ಪ್ರಕ್ರಿಯೆಯ ಯಾವುದೇ ವಿಷಯದಲ್ಲಿ ಯಾವುದೇ ಪತ್ರ ವ್ಯವಹಾರಕ್ಕೆ ಆಸ್ಪದವಿರುವುದಿಲ್ಲ.
14.23 ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟೀಕರಣಕ್ಕೆ ಆಯ್ಕೆ ಪ್ರಾಧಿಕಾರದ ತೀರ್ಮಾನವೇ ಅಂತಿಮವಾಗಿರುತ್ತದೆ. ಎಲ್ಲಾ ಕಾನೂನು ವಿವಾದಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ವ್ಯಾಪ್ತಿಗೆ ಒಳಪಟ್ಟಿರುತ್ತದೆ.
ಬೆಂಗಳೂರು,
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
ದಿನಾಂಕ: 29-10-2014
(ಮುಖ್ಯಸ್ಥರು, ಅರಣ್ಯ ಪಡೆ) ಹಾಗೂ ಆಯ್ಕೆ ಪ್ರಾಧಿಕಾರ.
PR. 124
SC. 100
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೭, ೨೦೧೪ ೧೨೬೯ನಿವಾಸಿ ಆಯುಕ್ತರ ಕಛೇರಿ, ಕರ್ನಾಟಕ ಭವನ, ನವದೆಹಲಿ - 110 021
ಅಧಿಸೂಚನೆ
ಅಧಿಸೂಚನೆ ಸಂಖ್ಯೆ: ಆರ್.ಸಿ.ಕೆ:69:ಎಸ್.ಇ.ಎಸ್:2006-07, ದಿನಾಂಕ 28.10.2014
ವಿಷಯ: ನವದೆಹಲಿಯ ನಿವಾಸಿ ಆಯುಕ್ತರ ಕಛೇರಿಯಲ್ಲಿ ಖಾಲಿಯಿರುವ ಶೀಘ್ರಲಿಪಿಗಾರರು (ಪರಿಶಿಷ್ಟ ಪಂಗಡ) ಒಂದು ಬ್ಯಾಕ್ಲಾಗ್ ಹುದ್ದೆಯನ್ನು ನೇರನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತು.
ಉಲ್ಲೇಖ: (1) ಸರ್ಕಾರದ ಪತ್ರ ಸಂಖ್ಯೆ ಸಿಆಸುಇ 179 ಅಕಿಸೇ 2013 ದಿನಾಂಕ 07.04.2014
(2) ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 131 ಅಕಿಸೇ 2014 ದಿನಾಂಕ 07.07.2014
(3) ಕರ್ನಾಟಕ ರಾಜ್ಯಪತ್ರ ದಿನಾಂಕ 16.10.2014, ಅಧಿಸೂಚನೆ ಸಂ.ಆರ್ಸಿಕೆ 69 ಎಸ್ಇಎಸ್ 2006-07 ದಿನಾಂಕ 19.07.2014
ನವದೆಹಲಿಯ ನಿವಾಸಿ ಆಯುಕ್ತರ ಕಛೇರಿಯಲ್ಲಿ ಖಾಲಿಯಿರುವ ಒಂದು ಶೀಘ್ರಲಿಪಿಗಾರರ (ಪರಿಶಿಷ್ಟ ಪಂಗಡ) ಬ್ಯಾಕ್ ಲಾಗ್ ಹುದ್ದೆಯನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಭರ್ತಿ ಮಾಡದ ಖಾಲಿ ಹುದ್ದೆಗಳ) (ವಿಶೇಷ ನೇಮಕಾತಿ) ನಿಯಮಗಳು 2001ರನ್ವಯ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿಲಾಗಿದೆ.
ಅಭ್ಯರ್ಥಿಗಳು ಕನ್ನಡವನ್ನು ಕಡ್ಡಾಯವಾಗಿ ಓದಲು, ಬರೆಯಲು ಮತ್ತು ಮಾತನಾಡಲು ಸಮರ್ಥರಿರಬೇಕು. ಕರ್ನಾಟಕದಲ್ಲಿ ವಾಸಿಸುವ ಅಭ್ಯರ್ಥಿಗಳು ಸರ್ಕಾರದ ಮುದ್ರಣ ಮಳಿಗೆ, ಬೆಂಗಳೂರು ಅಥವಾ ಜಿಲ್ಲಾ ಕೇಂದ್ರಗಳಲ್ಲಿನ ಸರ್ಕಾರಿ ಪುಸ್ತಕ ಮಳಿಗೆ ಅಥವಾ ಅಧೀಕೃತ ಮಾರಾಟಗಾರರಿಂದ ಅಥವಾ ನವದೆಹಲಿಯಲ್ಲಿನ ನಿವಾಸಿಗಳು ನಿವಾಸಿ ಆಯುಕ್ತರವರ ಕಛೇರಿ, ಆಡಳಿತ ವಿಭಾಗ, ಕರ್ನಾಟಕ ಭವನ-1 (ಕಾವೇರಿ), 10, ಕೌಟಿಲ್ಯ ಮಾರ್ಗ, ಚಾಣಕ್ಯಪುರಿ, ನವದೆಹಲಿ ವಿಳಾಸದಲ್ಲಿ ಖುದ್ದಾಗಿ ಕಛೇರಿಗೆ ಹಾಜರಾಗಿ ಅರ್ಜಿಗಳನ್ನು ಪಡೆಯಬಹುದು. ಅರ್ಜಿ ನಮೂನೆ (ಭಾಗ-1) ದ್ವಿಪ್ರತಿಯಲ್ಲಿ ತಮ್ಮ ಸ್ವಂತ ಕೈಬರಹದಿಂದ ಎಲ್ಲಾ ಅಂಕಣಗಳನ್ನು ಭರ್ತಿ ಮಾಡಿ ನಿಗದಿತ ಅವಧಿಯೊಳಗೆ ಸಲ್ಲಿಸತಕ್ಕದ್ದು. ಲಕೋಟೆಯ ಮೇಲೆ "ಶೀಘ್ರಲಪಿಗಾರ" (ಪರಿಶಿಷ್ಟ ಪಂಗಡ) ಬ್ಯಾಕ್ಲಾಗ್ ಹುದ್ದೆಯ ಹೆಸರನ್ನು ನಮೂದಿಸಿ ದಿನಾಂಕ 01.12.2014 ರಂದು ಸಂಜೆ 5.00 ಗಂಟೆಯೊಳಗಾಗಿ ನಿವಾಸಿ ಆಯುಕ್ತರು, ಕರ್ನಾಟಕ ಭವನ-1, 10, ಕೌಟಿಲ್ಯಮಾರ್ಗ, ಚಾಣಕ್ಯಪುರಿ, ನವದೆಹಲಿ-110021 ಈ ವಿಳಾಸಕ್ಕೆ ನೊಂದಾಯಿತ ಅಂಚೆ/ಕೊರಿಯರ್ ಮೂಲಕ/ನೇರವಾಗಿ ಸಲ್ಲಿಸತಕ್ಕದ್ದು.
ಹುದ್ದೆಯ ವಿವರಗಳು ಈ ಕೆಳಕಂಡಂತಿರುತ್ತದೆ.
ಹುದ್ದೆಯ ಹೆಸರು: ಶೀಘ್ರಲಿಪಿಗಾರ (ಪರಿಶಿಷ್ಟ ಪಂಗಡ)
ವೇತನ ಶ್ರೇಣಿ: 16000-400-17200-450-19000-500-21000-600-24600-700-28800-
800-29600
ಖಾಲಿ ಇರುವ ಹುದ್ದೆಗಳ ಸಂಖ್ಯೆ: ಒಂದು (1) ಬ್ಯಾಕ್ಲಾಗ್
ಶೈಕ್ಷಣಿಕ ವಿದ್ಯಾರ್ಹತೆ: 1. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
2. ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಕನ್ನಡ ಮತ್ತು ಆಂಗ್ಲ
ಹಿರಿಯ ದರ್ಜೆ ಬೆರಳಚ್ಚು ಮತ್ತು ಕನ್ನಡ ಮತ್ತು ಆಂಗ್ಲ ಶೀಘ್ರಲಿಪಿ ಪ್ರೌಡದರ್ಜೆ
ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ತಾಂತ್ರಿಕ ಶಿಕ್ಷಣ ಮಂಡಳಿಯು ನಡೆಸುವ
ಡಿಪ್ಲೊಮಾ ಇನ್ ಸೆಕ್ರಟೆರೀಯಲ್ ಪ್ರಾಕ್ಟೀಸ್ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿಅಥವಾ
ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ: ಕನಿಷ್ಟ: 18 ವರ್ಷ ಮತ್ತು ಗರಿಷ್ಟ 40 ವರ್ಷ (ವಯೋಮಿತಿಯಲ್ಲಿ ಯಾವುದೇ
ಸಡಿಲಿಕೆಯಿರುವುದಿಲ್ಲ)
ವಿಶೇಷ ಸೂಚನೆಗಳು:
1. ಅರ್ಜಿ ಶುಲ್ಕ: ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುವುದಿಲ್ಲ
2. ಅರ್ಜಿಯನ್ನು ಸಲ್ಲಿಸುವಾಗ ಕೆಳಕಂಡ ದೃಡೀಕೃತ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.
ಎ. ಶೈಕ್ಷಣಿಕ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು
ಬಿ. ಜನ್ಮ ದಿನಾಂಕವನ್ನು ವಿವರಿಸುವ ಅಧಿಕೃತ ದಾಖಲೆ.
ಸಿ. ಅಭ್ಯರ್ಥಿಯು ವಿದ್ಯಾಭ್ಯಾಸ ಮಾಡಿದ ಶಾಲಾ ಮುಖ್ಯಸ್ಥರು ನೀಡಿರುವ ನಡತೆ ಪ್ರಮಾಣಪತ್ರ.
ಡಿ. ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ
ಇ. ಇತ್ತೀಚಿನ ಎರಡು ಪಾಸ್ಪೋರ್ಟ ಅಳತೆಯ ಭಾವಚಿತ್ರ
3. ಮೇಲೆ ಸೂಚಿಸಿದ ಪ್ರಮಾಣ ಪತ್ರಗಳನ್ನು ಲಗತ್ತಿಸದಿರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
R.N.I. No. KARBIL/2001/47147 POSTAL REGN. No. RNP/KA/BGS/2202/2014-16
Licensed to post without prepayment WPP No. 297
೧೨೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೭, ೨೦೧೪ ಭಾಗ ೫4. ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣಪತ್ರ/ ವರ್ಗಾವಣೆ ಪ್ರಮಾಣ ಪತ್ರ/ ಜನನ ದಿನಾಂಕ ತೋರಿಸುವ ದಾಖಲೆಯ ಉಧೃತ ಭಾಗದ ಪ್ರತಿ ಸಲ್ಲಿಸಬೇಕು.
5. ಅರ್ಜಿದಾರರೊಡನೆ ಪತ್ರವ್ಯವಹಾರಕ್ಕೆ ಅವಕಾಶವಿರುವುದಿಲ್ಲ
6. ಸರ್ಕಾರಿ / ಸರ್ಕಾರದ ಸ್ವಾಯತ್ತತಾ ಸಂಸ್ಥೆಯಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ತಮ್ಮ ಇಲಾಖಾ ಮುಖ್ಯಸ್ಥರಿಂದ ಅನುಮತಿ ಪಡೆದು, ಕಛೇರಿ ಮುಖಾಂತರ ಅರ್ಜಿಗಳನ್ನು ನಿಗಧಿತ ಸಮಯದೊಳಗೆ ಸಲ್ಲಿಸುವುದು ಹಾಗೂ ಅರ್ಜಿಯೊಂದಿಗೆ ನಿರಪೇಕ್ಷಣಾ ಪ್ರಮಾಣ ಪತ್ರ. ಇಲ್ಲದಿದ್ದಲ್ಲಿ ಇಂತಹ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
7. ಆಯ್ಕೆಯಾದ ಅಭ್ಯರ್ಥಿಗಳು ನವದೆಹಲಿಯಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
8. ಸದರಿ ಆಯ್ಕೆಯು ಕರ್ನಾಟಕ ಸರ್ಕಾರವು ಆಗಿಂದಾಗ್ಗೆ ಹೊರಡಿಸುವ ನೇಮಕಾತಿ / ಆಯ್ಕೆ ನಿಯಮಾವಳಿಗಳಿಗೆ ಒಳಪಟ್ಟಿರುತ್ತದೆ.
9. ಸರ್ಕಾರದ ಆದೇಶ ಸಂಖ್ಯೆ ಎಫ್.ಡಿ.(ಎಸ್.ಪಿ.ಎಲ್) 04 ಪಿಇಟಿ 05, ದಿನಾಂಕ 30.03.2014ರನ್ವಯ ನಿಗಧಿತ ವಂತಿಗೆ ಪಿಂಚಣಿ ಯೋಜನೆಗೆ ಈ ನೇಮಕಾತಿಯು ಒಳಪಟ್ಟಿರುತ್ತದೆ.
10. ಕರ್ನಾಟಕ ನಾಗರೀಕಸೇವಾ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಭರ್ತಿ ಮಾಡದೇ ಇರುವ ಖಾಲಿ ಹುದ್ದೆಗಳ) (ವಿಶೇಷ ನೇಮಕಾತಿ) ನಿಯಮಗಳು 2001ರ ಉಪಬಂಧಗಳನ್ವಯ ಆಯ್ಕೆ ಪಟ್ಟಿಯನ್ನು ತಯಾರಿಸಲಾಗುವುದು.
11. ಶಾಲಾ/ಕಾಲೇಜಿನ ಪಾಂಶುಪಾಲರಿಂದ ಪಡೆದ ಒಂದು ನಡೆತೆ ಪ್ರಮಾಣ ಪತ್ರ ಹಾಗೊ ಸ್ಥಳಿಯ ಇಬ್ಬರು ಗಣ್ಯ ವ್ಯಕ್ತಿಗಳಿಂದ ಪಡೆದ 6 ತಿಂಗಳ ಇತ್ತೀಚಿನ ಎರಡು ನಡತೆ ಪ್ರಮಾಣಪತ್ರಗಳ ಪ್ರತಿ ಸಲ್ಲಿಸಬೇಕು.
12. ಅರ್ಜಿ ಸಲ್ಲಿಸುವ ಹುದ್ದೆಯ ಹೆಸರನ್ನು ಲಕೋಟೆಯ ಮೇಲೆ ಸ್ವಷ್ಟವಾಗಿ ನಮೂದಿಸತಕ್ಕದ್ದು.
13. ವಿವರಗಳನ್ನು ಕಾಲಂಗಳಲ್ಲಿ ಭರ್ತಿ ಮಾಡಿ ಬರೆದ ಅರ್ಜಿಗಳನ್ನು ಅಂಚೆ ಅಥವಾ ಕೊರಿಯರ್ ಮೂಲಕ ಅಥವಾ ಸ್ವಂತವಾಗಿ ತಂದು ಸಲ್ಲಿಸಲು ಇಚ್ಚಿಸಿದ್ದಲ್ಲಿ ಈ ಕಛೇರಿಯ ವೇಳೆಯಲ್ಲಿ ಮಾತ್ರ ಸ್ವೀಕರಿಸಲಾಗುವುದು.
14. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕವು ಸಾರ್ವತ್ರಿಕ ರಜೆಯನ್ನಾಗಿ ಘೋಷಿಸಲ್ಪಟಾಗ ಆ ದಿನಾಂಕದ ಮರು ದಿನವು ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವಾಗುವುದು.
15. ಈ ನೇಮಕಾತಿಯು ನಿವಾಸಿ ಆಯುಕ್ತರವರ ಕಛೇರಿ, ಕರ್ನಾಟಕ ಭವನ, ನವದೆಹಲಿಗೆ ಸೀಮಿತವಾಗಿದ್ದು, ಯಾವುದೇ ಕಾರಣಕ್ಕೂ ದೆಹಲಿಯಿಂದ ವರ್ಗಾವಣೆ/ಪ್ರತಿ ನಿಯೋಜನೆಗೆ ಅವಕಾಶವಿರುವುದಿಲ್ಲ.
16. ಈ ಜಾಹಿರಾತನ್ನು ರದ್ದುಪಡಿಸುವ ಅಥವಾ ಬದಲಾವಣೆ ಮಾಡುವ ಅಧಿಕಾರ ನಿವಾಸಿ ಆಯುಕ್ತರು/ಸರ್ಕಾರಕ್ಕೆ ಇರುತ್ತದೆ.
PR. 123
ನಿವಾಸಿ ಆಯುಕ್ತರು
SC. 15