Servants of Knowledge
Karnataka Gazette · Government of Karnataka

Karnataka Gazette, Part Part-5, 14 July 2016

Published 14 July 2016

Part
Part-5
Identifier
in.gazette.karnataka_new.2016-07-14.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೫೧

Volume 151

ಬೆಂಗಳೂರು, ಗುರುವಾರ, ಜುಲೈ ೧೪, ೨೦೧೬ (ಆಷಾಡ ೨೩, ಶಕ ವರ್ಷ ೧೯೩೮)

Bengaluru, Thursday, July 14, 2016 ( Ashadha 23, Shaka Varsha 1938)

ಸಂಚಿಕೆ ೨೮

Issue 28

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಪೊಲೀಸ್ ಇಲಾಖೆ

ಅಧಿಸೂಚನೆ

ಪೊಲೀಸ್ ತರಬೇತಿ ಶಾಲೆ. ಐಮಂಗಲ ಚಿತ್ರದುರ್ಗ ಜಿಲ್ಲೆ ಇಲ್ಲಿನ ಅನುಯಾಯಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಸಂಖ್ಯೆ:

12/ಪಿಟಿಎಸ್ಐ/ಸಿಬ್ಬಂದಿ-1/2016-17 ದಿನಾಂಕ:18.05.2016

ವಿಷಯ:- ಅನುಯಾಯಿ( ಪುರುಷ & ಮಹಿಳೆಯ) ಹುದ್ದೆಗಳ ನೇರ ನೇಮಕಾತಿ - 2016.

1. ಪೊಲೀಸ್ ತರಬೇತಿ ಶಾಲೆ. ಐಮಂಗಲ. ಚಿತ್ರದುರ್ಗ ಜಿಲ್ಲೆ. ಇಲ್ಲಿ ಖಾಲಿಯಿರುವ 21 ಅನುಯಾಯಿ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು, ಲಿಪಿಕ ವೃಂದ ಸೇರಿದಂತೆ (ನೇಮಕಾತಿ) ನಿಯಮಗಳು. 2004, ಕರ್ನಾಟಕ ನಾಗರೀಕ ಸೇವೆಗಳು. (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ಪ್ರಕಾರ ಸರ್ಕಾರದ ಆದೇಶ ಸಂಖ್ಯೆ:ಹೆಚ್‌ಡಿ140/ಇಎಫ್ಎಸ್/2014. ದಿನಾಂಕ:28.10.2015 & ಮಾನ್ಯ ಪೊಲೀಸ್ ಮಹಾನಿರ್ದೇಶಕರು. & ಪೊಲೀಸ್ ಮಹಾ ನಿರೀಕ್ಷಕರು. ಕರ್ನಾಟಕ ರಾಜ್ಯ ಬೆಂಗಳೂರು.ರವರ ಆದೇಶ ಸಂಖ್ಯೆ:39/ಸಿಬ್ಬಂದಿ-3/2014-15, ದಿನಾಂಕ:04.03.2016 ಮತ್ತು ಪೊಲೀಸ್ ಮಹಾನಿರ್ದೇಶಕರು, ತರಬೇತಿ ಬೆಂಗಳೂರು ರವರ ಪತ್ರಸಂಖ್ಯೆ: ತ/ಸಿಬ್ಬಂದಿ-1/393/2015-16 ದಿನಾಂಕ:

06.05.2016 ರಲ್ಲಿ ಅನುಮತಿಸಿರುವಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2. ಅರ್ಜಿಗಳನ್ನು ಎಸ್‌ಪಿ & ಪ್ರಾಂಶುಪಾಲರು, ಪೊಲೀಸ್ ತರಬೇತಿ ಶಾಲೆ. ಐಮಂಗಲ. ಹಿರಿಯೂರು ತಾಲ್ಲೂಕು. ಚಿತ್ರದುರ್ಗ ಜಿಲ್ಲೆ. ಪಿನ್.ನಂ 577558.

ರವರ ಕಛೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ತಿಳಿಸಲಾಗಿದೆ.

ಸಾಮಾನ್ಯ ವರ್ಗ, 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ 250.00
ಪರಿಶಿಗ್ಠ ಜಾತಿ ಪರಿಶಿಗ್ಠ ಪಂಗಡ, ಪ್ರವರ್ಗಋ1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ 100.00

ನಿಗದಿತ ಶುಲ್ಕಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕಿನ ಅಧಿಕೃತ ಶಾಖೆಗಳಿಂದ ಡಿ.ಡಿ.ಯನ್ನು "ಎಸ್‌ಪಿ & ಪ್ರಾಂಶುಪಾಲರು. ಪೊಲೀಸ್ ತರಬೇತಿ ಶಾಲೆ. ಐಮಂಗಲ." (Sp & principal, Police Training School. Aimangala.) ರವರ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸುವುದು. ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ ಅದನ್ನು ಯಾವುದೇ ಸಂದರ್ಭದಲ್ಲಿಯೂ ಹಿಂದಿರುಗಿಸಲಾಗುವುದಿಲ್ಲ. ಅಥವಾ ಅದನ್ನು ಇತರೆ ಯಾವುದೇ ಪರೀಕ್ಷೆ/ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ.

4. ಅರ್ಜಿ ಸಲ್ಲಿಸುವ ವಿಧಾನ ಹಾಗೂ ದಿನಾಂಕ:-

ನಿಗದಿತ ನಮೂನೆಯ ಅರ್ಜಿ ಹಾಗೂ ಮಾಹಿತಿ/ ಸೂಚನೆಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ www.ksp.gov.in ನಲ್ಲಿ ಪ್ರಕಟಿಸಲಾಗಿದೆ.

ಹಾಗೂ ಪೊಲೀಸ್ ತರಬೇತಿ ಶಾಲೆ. ಐಮಂಗಲದ ಸೂಚನಾ ಫಲಕದಲ್ಲೂ ಪ್ರಕಟಿಸಲಾಗಿರುತ್ತದೆ. ಅರ್ಜಿಯ ನಮೂನೆಯನ್ನು ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಖರ್ಚಿನಲ್ಲಿ ಬೆರಳಚ್ಚು ಮಾಡಿಸಿ, ಪಾಸ್ ಪೋರ್ಟ್ ಅಳತೆಯ 2 ಬಣ್ಣದ ಭಾವಚಿತ್ರ ಹಾಗೂ ಭಾವಚಿತ್ರದ ಮೇಲೆ ಸಹಿಯೊಂದಿಗೆ ಅರ್ಜಿಯಲ್ಲಿರುವ ಎಲ್ಲಾ ವಿವರಗಳನ್ನು ಸಮರ್ಪಕವಾಗಿ ಭರ್ತಿಮಾಡಿ, ಪೊಲೀಸ್ ತರಬೇತಿ ಶಾಲೆ. ಐಮಂಗಲ ಕಛೇರಿಗೆ ಸಲ್ಲಿಸುವುದು.

(cid:1) ಅರ್ಜಿಸಲ್ಲಿಸಲು ಪ್ರಾರಂಭದ ದಿನಾಂಕ: 20.06.2016 ಬೆಳಿಗ್ಗೆ 10 ಗಂಟೆಯಿಂದ,

(cid:1) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19.07.2016 ಸಂಜೆ 06 ಗಂಟೆಯವರಗೆ.

(೭೭೯)೭೮೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೪, ೨೦೧೬ ಭಾಗ ೫

ಸೂಚನೆ: -

(cid:1) ನಿಗದಿತ ದಿನಾಂಕ ಹಾಗೂ ಸಮಯದೊಳಗೆ ಸಲ್ಲಿಸಲಾಗುವ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. (cid:1) ಅಂಚೆ ಮೂಲಕ ಸಲ್ಲಿಸುವ ಅರ್ಜಿಗಳು ನಿಗಧಿಪಡಿಸುವ ಕೊನೆಯ ದಿನಾಂಕದೊಳಗೆ ಈ ಕಛೇರಿಗೆ ತಲುಪದಿದ್ದಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲವೆಂದು ತಿಳಿಸಲಾಗಿದೆ.

5. ಅನುಯಾಯಿ (ಪುರುಷ & ಮಹಿಳೆ) ಖಾಲಿ ಹುದ್ದೆಗಳ ವರ್ಗೀಕರಣ :-

ವ ರ್ಗ ಒಟ್ಟು ಹುದ್ದೆಗಳ ಸ ಂಖ್ಯೆ ವ ುಹಿಳಾ ಅಭ್ಯರ್ಥಿ ಗ್ರಾಮೀಣಾ ಅಭ್ಯರ್ಥಿ. ವ iಾಜಿ ಸ ೖನಿಕರು ೆ ಯೋಜನೆಗಳಿಂದ ನಿರಾಶ್ರಿತರಾದ ಅಭ್ಯರ್ಥಿ ಕನ್ನಡ ವ iಾಧ್ಯಮ ಇತರೆ
ಸಾಮಾನ್ಯ ವರ್ಗ 10 3 3 1 ಋ ಋ 3
ಪ ರಿಶಿಅ್ಠ ಜಾತಿ 3 1 1 ಋ ಋ ಋ 1
ಪ ರಿಶಿಅ್ಠ ಪಂಗಡ 1 ಋ ಋ ಋ ಋ ಋ 1
ಪ ್ರವರ್ಗ=1 1 ಋ ಋ ಋ ಋ ಋ 1
ಪ ್ರವರ್ಗ=2ಎ 3 1 1 ಋ ಋ ಋ 1
ಪ ್ರವರ್ಗ=2ಬಿ 1 ಋ ಋ ಋ ಋ ಋ 1
ಪ ್ರವರ್ಗ=3ಎ 1 ಋ ಋ ಋ ಋ ಋ 1
ಪ ್ರವರ್ಗ =3ಬಿ 1 ಋ ಋ ಋ ಋ ಋ 1
ಒಟ್ಟು 21 5 5 1 = = 10
ಕ್ರಸಂ. ಅನುಯಾಯಿಯ ಹುದ್ದೆ ಒಟ್ಟು ಸಂಖ್ಯೆ
1. ಡ್ರೈ ಸ್ಪೀಪರ್ 03
2. ವೆಟ್ ಸ್ಪೀಪರ್ 03
3. ಕುಕ್ (ಸಸ್ಯಹಾರಿ ಮತ್ತು ಮಾಂಸಹಾರಿ) 05
4. ದೋಬಿ 02
5. ಬಾರ್‌ಬರ್ 02
6. ತೋಟಮಾಲಿ (Gardner ) 01
7. ದರ್ಜಿ (Tailor) 01
8. ಎೆಕ್ಟ್ರೀಷಿಯನ್ 01
9. ಪ್ಲಂಬರ್ 01
10. ಕಾರ್ಪೆಂಟರ್ 01
11. ಗಾರೆಕೆಲಸ. 01
ಒಟ್ಟು 21

(cid:2) ಮೇಲೆ ನಮೂದಿಸಿರುವ ಖಾಲಿ ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು ಅವಶ್ಯಕತೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಮಾರ್ಪಾಡು ಮಾಡಲಾಗುವುದು.

ಟಿಪ್ಪಣಿ: 1. ಮಾಜೀ ಸೈನಿಕರು, ಗ್ರಾಮೀಣಾ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಅಂತಹ ಖಾಲಿ ಹುದ್ದೆಗಳನ್ನು ಮೇಲೆ ನಮೂದಿಸಿರುವ ಪ್ರವರ್ಗದ ಇತರರು, ಅಭ್ಯರ್ಥಿಗಳಿಂದ ತುಂಬಲಾಗುವುದು.

2. ಅನುಯಾಯಿ ಹುದ್ದೆಗಳಲ್ಲಿ ವೃತ್ತಿವಾರು ಖಾಲಿಯಿರುವ ಹುದ್ದೆಗಳನ್ನು ಭರ್ತಿಮಾಡುವಾಗ, ಮೇಲೆ ಅಧಿಸೂಚನೆ ಹೊರಡಿಸಿರುವ ಪ್ರವರ್ಗ-1, 2(ಎ), 2(ಬಿ), 3(ಎ) ಮತ್ತು 3(ಬಿ) ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ, ಸದರಿ ಖಾಲಿ ಹುದ್ದೆಗಳನ್ನು ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ/08/ಸೆಹಿಮ/95 ದಿನಾಂಕ:20.06.1995 ರನ್ವಯ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂಧ ಭರ್ತಿ ಮಾಡಲಾಗುವುದು ಮತ್ತು ನಷ್ಟಗೊಂಡ ರಿಕ್ತ ಸ್ಥಾನಗಳನ್ನು ಮುಂದಿನ ಕ್ಯಾಲೆಂಡರ್ ವರ್ಷ ಅಥವಾ ತದನಂತರದ ಎರಡು ಕ್ಯಾಲೆಂಡರ್ ವರ್ಷಗಳಲ್ಲಿ ನೇರ ನೇಮಕಾತಿಗಳಲ್ಲಿ ಸರಿದೂಗಿಸಿಕೊಳ್ಳಲಾಗುವುದು.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೪, ೨೦೧೬ ೭೮೧

6. ಅರ್ಹತಾ ಷರತ್ತುಗಳು:-

I. ಭಾರತೀಯನಾಗಿರತಕ್ಕದ್ದು.

II. ಒಬ್ಬ ಜೀವಂತ ಪತ್ನಿಗಿಂತ ಹೆಚ್ಚು ಮಂದಿ ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಹೆಂಡತಿಯಿರುವ ವ್ಯಕ್ತಿಯನ್ನು ಮದುವೆಯಾಗಿರುವ, ಮಹಿಳಾ ಅಭ್ಯರ್ಥಿಯು ಸರ್ಕಾರದಿಂದ ಪೂರ್ವಾನುಮತಿಯನ್ನು ಪಡೆಯದೇ ನೇಮಕಾತಿಗೆ ಅರ್ಹರಾಗುವುದಿಲ್ಲ.

III. ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತನಾಗಿರಬೇಕು ಮತ್ತು ಅವರ ನೇಮಕಾತಿಯ ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ ನ್ಯೂನ್ಯತೆಯಿಂದ ಮುಕ್ತರಾಗಿರಬೇಕು.

7. ವಯೋಮಿತಿ:-

ಅರ್ಜಿಯನ್ನು ಸ್ವೀಕರಿಸಲು ನಿಗಧಿ ಪಡಿಸಿದ ಕೊನೆಯ ದಿನಾಂಕದಂದು ಅಂದರೆ, ದಿನಾಂಕ: 19.07.2016 ಕ್ಕೆ ಅಭ್ಯರ್ಥಿಗೆ ಕನಿಷ್ಠ 19 ವರ್ಷ ವಯಸ್ಸಾಗಿರಬೇಕು.

ಹಾಗೂ ಕೆಳಕಂಡ ವಯಸ್ಸು ಮೀರಿರಬಾರದು.

(ಎ) ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಹಾಗೂ ಹಿಂದುಳಿದವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 30 ವರ್ಷಗಳು.

(ಬಿ) ಇತರೆ ಅಭ್ಯರ್ಥಿಗಳಿಗೆ 25 ವರ್ಷಗಳು.

(ಸಿ) ಮಾಜಿ ಸೈನಿಕ ಅಭ್ಯರ್ಥಿಯು ಸೈನ್ಯ ವಿಯೋಜನೆ, ಸೇವೆಯಿಂದ ತೆಗೆದು ಹಾಕಿದ ಹಾಗೂ ಸೇವಾ ನಿವೃತ್ತಿ ಹೊಂದಿದ ಕಾರಣದಿಂದ

ಬಿಡುಗಡೆಯಾದ, ಮಾಜೀ ಯೋಧರಾಗಿದ್ದಲ್ಲಿ "ಅವರು ಸಲ್ಲಿಸಿದ ಅವಧಿ"ಯ ಜೊತೆಗೆ ಹೆಚ್ಚುವರಿ 03 ವರ್ಷಗಳ ರಿಯಾಯಿತಿಯನ್ನು

ನೀಡಲಾಗುವುದು. ಮಾಜೀ ಸೈನಿಕ ಅಭ್ಯರ್ಥಿಗಳು ಈ ಹಿಂದೆ ಮೀಸಲಾತಿ ಸೌಲಭ್ಯವನ್ನು ಪಡೆದು ಸರ್ಕಾರಿ ಹುದ್ದೆಗೆ ಸೇರಿದವರು ಈ

ನಿಯಮಗಳಡಿ ಪುನಃ ಮೀಸಲಾತಿಗೆ ಅರ್ಹರಾಗುವುದಿಲ್ಲ. ಮಾಜೀ ಯೋಧ ಎಂಬ ಶಬ್ದವು, ಚಾಲ್ತಿಯಲ್ಲಿರುವ ಸಂಬಂಧಿಸಿದ ನಿಯಮಗಳಲ್ಲಿನ

ಪರಿಭಾಷೆಯ ಅರ್ಥಹೊಂದಿದೆ.

8. ವಿದ್ಯಾರ್ಹತೆ:-

ಅನುಯಾಯಿ ಹುದ್ದೆಗೆ 7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಸದರಿ ವಿದ್ಯಾರ್ಹತೆಯನ್ನು ಅರ್ಜಿಸಲ್ಲಿಸಲು ನಿಗಧಿ ಪಡಿಸಿರುವ ಕೊನೆಯ ಅಂದರೆ

ದಿನಾಂಕ: 19.07.2016ಕ್ಕೆ ಹೊಂದಿರಬೇಕು.

ಆದ್ಯತೆ (Preference) :

ಅರ್ಜಿದಾರರು ಅರ್ಜಿ ಸಲ್ಲಿಸುವ ಹುದ್ದೆಗೆ ಸಂಬಂಧಿಸಿದ ವೃತ್ತಿಪರ (Trade) ಶಿಕ್ಷಣದಲ್ಲಿ ನೈಪುಣ್ಯತೆ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.

ಟಿಪ್ಪಣಿ:-

1. ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಹೊಂದದೆಯಿರುವ ಅಭ್ಯರ್ಥಿಗಳ ಅರ್ಜಿಯನ್ನು ತಿರಸ್ಕರಿಸಲಾಗುವುದು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ನಿಗದಿತ ವಿದ್ಯಾರ್ಹತೆ ಪಡೆಯಲು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಹರಾಗಿರುವುದಿಲ್ಲ.

2. ನಿಗಧಿತ ವಿದ್ಯಾರ್ಹತೆಯನ್ನು ಹೊರತುಪಡಿಸಿ, ಬೇರೆ ಯಾವ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಲು ನಿಗಧಿ ಪಡಿಸಿದ, ಕೊನೆಯ ದಿನಾಂಕಕ್ಕೆ ಎಲ್ಲಾ ಅಭ್ಯರ್ಥಿಗಳು 7ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣಹೊಂದಿದ ಅಂಕಪಟ್ಟಿಯನ್ನು ಹೊಂದಿರಬೇಕು.

9. ಖಾಯಂ ಪೂರ್ವ ಅವಧಿ, ವೇತನ ಶ್ರೇಣಿ ಮತ್ತು ಪಿಂಚಣಿ ಸೌಲಭ್ಯ :

ಅ) ನೇಮಕಾತಿಯಾದ ಅಭ್ಯರ್ಥಿಗಳು 2 ವರ್ಷದ ಖಾಯಂಪೂರ್ವ ಅವಧಿಯಲ್ಲಿರುತ್ತಾರೆ.

ಆ) ವೇತನ ಶ್ರೇಣಿ ರೂ. 10400-200-12000-250-13000-300-14200-350-15600-400-16400.

ಇ) ಪಿಂಚಣಿ ಸೌಲಭ್ಯ: ಸರ್ಕಾರದ ಆದೇಶ ಸಂಖ್ಯೆ:ಎಫ್‌ಡಿ(ಎಸ್‌ಪಿಎಲ್)/04/ಪಿಇಟಿ/2005, ದಿ:31.03.2006 ರಂತೆ

ನೂತನ ಅಂಶದಾಯಿ ಪಿಂಚಣಿ ಸೌಲಭ್ಯ ಅನ್ವಯವಾಗುವುದು.

10. ಆಯ್ಕೆ / ಲಿಖಿತ ಪರೀಕ್ಷೆ :

ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು, ಲಿಪಿಕ ವೃಂದ ಸೇರಿದಂತೆ (ನೇಮಕಾತಿ) ನಿಯಮಗಳು 2004ರ ಪ್ರಕಾರ ಅರ್ಜಿಸಲ್ಲಿಸಿದ್ದ ಅಭ್ಯರ್ಥಿಗಳಲ್ಲಿ, ಅರ್ಹ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಪ್ರಬಂಧವನ್ನೊಳಗೊಂಡ 50 ಅಂಕಗಳ ಲಿಖಿತ ಪರೀಕ್ಷೆಯನ್ನು ತರಬೇತಿ ಶಾಲೆ, ಐಮಂಗಲದಲ್ಲಿ ನಡೆಸಲಾಗುವುದು.

ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗುವಾಗ ಕರೆಪತ್ರದ ಜೊತೆಗೆ ಕೆಳಕಂಡ ಯಾವುದಾದರೊಂದು ದೃಡೀಕೃತ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು.

1. ಪಾಸ್‌ಪೋರ್ಟ್.

2. ಚಾಲನಾ ಪರವಾನಗಿ ಪತ್ರ.

3. ಪಾನ್ ಕಾರ್ಡ್.

4. ರಾಜ್ಯ ಸರ್ಕಾರ/ಕೇಂದ್ರ ಸರ್ಕಾರ/ ಸಾರ್ವಜನಿಕ ಸ್ವಾಮ್ಯದ ಅಥವಾ ಸರ್ಕಾರದ ಅಧೀನಕ್ಕೊಳಪಟ್ಟ ಖಾಸಗಿ ಕಂಪನಿಗಳು ವಿತರಿಸಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ.

5. ಬ್ಯಾಂಕ್ ಪಾಸ್ ಪುಸ್ತಕ.

೭೮೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೪, ೨೦೧೬ ಭಾಗ ೫

6. ಭಾವಚಿತ್ರ ಸಮೇತ ನೊಂದಣಿಯಾಗಿರುವ ಸ್ವತ್ತಿನ ದಾಖಲೆ ಪತ್ರ ಅಥವಾ ಪಟ್ಟಾ ಪುಸ್ತಕ.

7. ಜಾತಿ ಪ್ರಮಾಣ ಪತ್ರ.

8. ಚುನಾವಣಾ ಆಯೋಗದ ಫೋಟೋ ಗುರುತಿನ ಚೀಟಿ.

9. ಆಧಾರ್ ಕಾರ್ಡ್.

ಲಿಖಿತ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಅಧಿಸೂಚನೆ ಹೊರಡಿಸಿರುವ ಹುದ್ದೆಗಳ ವರ್ಗೀಕರಣಕ್ಕೆ ಅನುಗುಣವಾಗಿ ಪ್ರತಿಯೊಂದು ಹುದ್ದೆಗೆ 1:5ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳಿಗೆ ನೈಪುಣ್ಯತೆ ಪರೀಕ್ಷೆಯನ್ನು (Proficiency Test) 50 ಅಂಕಗಳಿಗೆ ಮಾಡಲಾಗುವುದು. ನಂತರ ಸದರಿ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ಹಾಗೂ ಮೂಲ ದಾಖಲಾತಿಗಳ ಪರೀಕ್ಷೆ ನಡೆಸಲಾಗುವುದು. ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ನೇಮಕಾತಿ ಸಮಿತಿಯು ರಚಿಸುವ ವೈದ್ಯಕೀಯ ಮಂಡಳಿಯ ಮುಂದೆ ಹಾಜರಾಗತಕ್ಕದ್ದು, ಹಾಜರಾಗುವ ವೇಳೆ, ಸ್ಥಳ ಹಾಗೂ ವೈದ್ಯಕೀಯ ಪರೀಕ್ಷೆಯ ವಿವರಗಳನ್ನು ನೇಮಕಾತಿ ಪ್ರಾಧಿಕಾರವು ನಿಗದಿಪಡಿಸುವುದು. ವೈದ್ಯಕೀಯ ಮಂಡಳಿಯು ದೈಹಿಕವಾಗಿ ಅರ್ಹರೆಂದು ಪ್ರಮಾಣೀಕರಿಸಿದ ಅಭ್ಯರ್ಥಿಗಳು ಮಾತ್ರ ನೇಮಕಾತಿಗೆ ಅರ್ಹರಾಗುವರು.

ತದನಂತರ, ಲಿಖಿತ ಪರೀಕ್ಷೆ ಮತ್ತು ನೈಪುಣ್ಯತೆ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಮೇರಿಟ್ (Merit) ಆಧಾರದ ಮೇಲೆ ಅಧಿಸೂಚನೆ ಹೊರಡಿಸಿರುವ ಖಾಲಿ ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಮೊದಲು ಅಂಕಪಟ್ಟಿ ಪರಿಶೀಲನೆ, ಅಭ್ಯರ್ಥಿಗಳ ಗುಣ ಮತ್ತು ನಡತೆ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ಪರಿಶೀಲನೆಯನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಮಾಡಿಸಿ, ನಂತರ ನಿಯಮಾನುಸಾರ ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗುವುದು.

ನೇಮಕಾತಿಯಾದ ನಂತರ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಾಧಿಕಾರವು ಅವರುಗಳು ಆಯ್ಕೆಯಾದ ವೃತ್ತಿಗನುಗುಣವಾಗಿ ಕರ್ತವ್ಯ ಹಂಚಿಕೆಯನ್ನು ಮಾಡಲಾಗುವುದು. ಅದರಂತೆ ಅಭ್ಯರ್ಥಿಗಳು ಕರ್ತವ್ಯ ನಿರ್ವಹಿಸುವುದು. ತಪ್ಪಿದಲ್ಲಿ ನೇಮಕಾತಿ ಆದೇಶವನ್ನು ರದ್ದುಪಡಿಸಲಾಗುವುದು.

11. ಜಾತಿ ಮೀಸಲಾತಿ ಪ್ರಮಾಣ ಪತ್ರಗಳು :

ಜಾತಿ ಮೀಸಲಾತಿ ಕೋರುವ ಅಭ್ಯರ್ಥಿಗಳು ಕೆಳಕಂಡ ನಮೂನೆಗಳಲ್ಲಿ ಪ್ರಮಾಣ ಪತ್ರವನ್ನು ಅರ್ಜಿ ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಡೆದಿಟ್ಟುಕೊಂಡಿರತಕ್ಕದ್ದು.

ಎ) ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ತಹಶಿಲ್ದಾರ್ ರವರಿಂದ ಪಡೆದ ನಮೂನೆ-ಡಿ ಪ್ರಮಾಣ ಪತ್ರ.

ಬಿ) ಪ್ರವರ್ಗ-1 ವರ್ಗದ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ತಹಶೀಲ್ದಾರ್ ರವರಿಂದ ಪಡೆದ ನಮೂನೆ-ಇ ಪ್ರಮಾಣ ಪತ್ರ.

ಸಿ) ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ, ಪ್ರವರ್ಗ-3ಬಿ ವರ್ಗದ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ತಹಶೀಲ್ದಾರ್ ರವರಿಂದ ಪಡೆದ ನಮೂನೆ-ಎಫ್ ಪ್ರಮಾಣ ಪತ್ರ.

ಸೂಚನೆ : ನಮೂನೆ-ಎಫ್ ಪ್ರಮಾಣ ಪತ್ರವು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ: 05.07.2016ಕ್ಕೆ ಐದು ವರ್ಷಕ್ಕಿಂತ ಹಳೆಯದಾಗಿರಬಾರದು.

12. ಗ್ರಾಮೀಣ ಮೀಸಲಾತಿ:

ಎ) ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಯು 1ನೇ ತರಗತಿಯಿಂದ 7ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಹೊಂದಿರಬೇಕು;

ಬಿ) ಅಭ್ಯರ್ಥಿಯು ವ್ಯಾಸಂಗ ಮಾಡಿದ ಸ್ಥಳವು ವ್ಯಾಸಂಗ ಮಾಡಿದ ಅವಧಿಯಲ್ಲಿ ಅಂದಿನ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976ರ ಅಥವಾ ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಅಡಿಯಲ್ಲಿ ನಿರ್ದಿಷ್ಠಪಡಿಸಿದ ಒಂದು ದೊಡ್ಡ ನಗರ ಪ್ರದೇಶ, ಸಣ್ಣ ನಗರ ಪ್ರದೇಶ ಅಥವಾ ಪರಿವರ್ತನೆಯ ಹಂತದಲ್ಲಿರುವ ಪ್ರದೇಶಗಳ ಹೊರತಾಗಿ ಇತರ ಯಾವುದೇ ಪ್ರದೇಶದಲ್ಲಿರುವ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಯಾಗಿರಬೇಕು;

ಸಿ) ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಯು ಕರ್ನಾಟಕ ಅಧಿಸೂಚನೆ ಸಂಖ್ಯೆ:ಸಿಆಸುಇ /08/ಸೆನೆನಿ/2001, ದಿನಾಂಕ:13.02.2001ರ ಪ್ರಕಾರ ಮೇಲೆ ಪರಿಭಾಷಿಸಿದಂತೆ ತರಗತಿ 1 ರಿಂದ 7ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಹೊಂದಿರುವವರು ಸರ್ಕಾರಿ ಆದೇಶ ಸಂಖ್ಯೆ. ಸಿಆಸುಇ/96/ಸೆನೆನಿ/2005, ದಿನಾಂಕ: 10.08.2005ರಲ್ಲಿ ನಿಗದಿಪಡಿಸಿದ ನಮೂನೆ-2ರ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಶಾಲಾ ಮುಖ್ಯೋಪಾಧ್ಯಾಯರಿಂದ ಸಹಿ ಮಾಡಿಸಿ ಮತ್ತು ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ಸಹಿ ಮಾಡಿಸಿದ ಪ್ರಮಾಣ ಪತ್ರವನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಡೆಯುವುದು. ನಮೂನೆ-1 (ನಾನ್-ಕ್ರೀಮಿ ಲೇಯರ್) ಮತ್ತು ನಮೂನೆ-2 ಇವುಗಳು ಗ್ರಾಮೀಣ ಮೀಸಲಾತಿ ಕೋರುವ ಸಾಮಾನ್ಯ ಅಭ್ಯರ್ಥಿಗಳಿಗೆ ಕಡ್ಡಾಯವಾಗಿರುತ್ತದೆ.

ಡಿ) ಅಂತೆಯೇ ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1,ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ, ಪ್ರವರ್ಗ-3ಬಿ ಸೇರಿದ ಅಭ್ಯರ್ಥಿಗಳು ನಮೂನೆ-2 ರಲ್ಲಿ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಪಾಧಿಕಾರದಿಂದ ಪಡೆದು ಸಲ್ಲಿಸುವುದು.

ಸೂಚನೆ : ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1,ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ, ಪ್ರವರ್ಗ- 3ಬಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರಗಳು ತಿರಸ್ಕøತಗೊಂಡಲ್ಲಿ ಅಂತಹ ಅಭ್ಯರ್ಥಿಗಳು Non-Creamy Layer ಪ್ರಮಾಣ ಪತ್ರವನ್ನು ಹೊಂದಿರದಿದ್ದಲ್ಲಿ ಅವರು ಗ್ರಾಮೀಣ ಮೀಸಲಾತಿಗೂ ಅನರ್ಹರಾಗುತ್ತಾರೆ.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೪, ೨೦೧೬ ೭೮೩

13. ಪ್ರಮುಖವಾದ ಸೂಚನೆಗಳು :

ಅಭ್ಯರ್ಥಿಗಳು ಕೋರುವ ಮೀಸಲಾತಿಗನುಗುಣವಾಗಿ ಕೆಳಕಂಡ ಪ್ರಮಾಣ ಪತ್ರಗಳ ದೃಡೀಕೃತ ನಕಲು ಪ್ರತಿಗಳನ್ನು ಅರ್ಜಿಯೊಂದಿಗೆ ತಪ್ಪದೇ ಲಗತ್ತಿಸತಕ್ಕದ್ದು.

ಎ) ವಿದ್ಯಾರ್ಹತೆಯ ಅಂಕಪಟ್ಟಿ.

ಬಿ) ಹುಟ್ಟಿದ ದಿನಾಂಕದ ಪ್ರಮಾಣ ಪತ್ರ (ಜನನ ಪ್ರಮಾಣ ಪತ್ರ)

ಸಿ) ಸರ್ಕಾರಿ ಇಲಾಖೆಯಲ್ಲಿ / ರಾಜ್ಯ ಸರ್ಕಾರದ / ಕೇಂದ್ರ ಸರ್ಕಾರದ / ಸರ್ಕಾರದ ಯಾವುದೇ ಪ್ರಾಧಿಕಾರದಲ್ಲಿ /ರಾಜ್ಯ ಅಥವಾ ಕೇಂದ್ರ ಸರ್ಕಾರದ ಸಾರ್ವಜನಿಕ ಸ್ವಾಮ್ಯದ ಕಂಪನಿಗಳಲ್ಲಿ ಪ್ರಸ್ತುತ ಉದ್ಯೋಗಿಯಾಗಿದ್ದಲ್ಲಿ ಅಂತಹವರು ಇಲಾಖಾ ವತಿಯಿಂದ ಕರ್ತವ್ಯದಿಂದ ಬಿಡುಗಡೆ ಮಾಡುವ ಬಗ್ಗೆ ಇಚ್ಛಾ ಅನುಮತಿ ಪತ್ರ.

ಡಿ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, 2ಎ, 2ಬಿ, 3ಎ ಮತ್ತು 3ಬಿ ಮೀಸಲಾತಿ ಅಭ್ಯರ್ಥಿಗಳು ನಮೂನೆ-ಡಿ/ಇ/ಎಫ್ ನಲ್ಲಿ ತಹಶೀಲ್ದಾರ್‌ರಿಂದ ಪಡೆದ ಪ್ರಮಾಣ ಪತ್ರ.

ಇ) ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರಿಂದ ಪಡೆದು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಮಾಡಿಸಿರಬೇಕು.

ಟಿಪ್ಪಣಿ:- ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದ ನಂತರ ಮಾಡಿಸುವ ಮೀಸಲಾತಿ ಪ್ರಮಾಣ ಪತ್ರಗಳನ್ನು ಯಾವುದೇ ಹಂತದಲ್ಲಿ ಗಣನೆಗೆ ತೆಗೆದುಕೊಳ್ಳುವುದಿಲ್ಲ.

ಎಫ್) ಅಭ್ಯರ್ಥಿಯು ಅರ್ಜಿಯಲ್ಲಿ ಭರ್ತಿ ಮಾಡಿದ ಮಾಹಿತಿಯು ಅಂತಿಮವಾಗಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವಾಗ ಅರ್ಜಿಯ ಎಲ್ಲಾ ಕಾಲಂಗಳನ್ನು ಸರಿಯಾಗಿ ಭರ್ತಿ ಮಾಡತಕ್ಕದ್ದು.

ಜಿ) ನೇಮಕಾತಿ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ವಿಳಾಸ ಬದಲಾವಣೆಯಾಗಿದ್ದಲ್ಲಿ ತಕ್ಷಣದಲ್ಲಿ ಅಭ್ಯರ್ಥಿಗಳು ಲಿಖಿತ ಮೂಲಕ ಸಂಬಂಧಪಟ್ಟ ಘಟಕಾಧಿಕಾರಿ (ಎಸ್‌ಪಿ & ಪ್ರಾಂಶುಪಾಲರ) ರವರ ನೇಮಕಾತಿ ಸಮಿತಿಯ ಗಮನಕ್ಕೆ ತರತಕ್ಕದ್ದು. ಈ ವಿಳಾಸ ಬದಲಾವಣೆಯನ್ನು ಪರಿಗಣಿಸಲು ನೇಮಕಾತಿ ಸಮಿತಿಯು ಪ್ರಯತ್ನಿಸುವುದು. ಆದಾಗ್ಯೂ ಈವಿಚಾರದಲ್ಲಿ ನೇಮಕಾತಿ ಸಮಿತಿಯು ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ. ಈ ಬಗ್ಗೆ ಅಭ್ಯರ್ಥಿಗಳು ಎಚ್ಚರ ವಹಿಸತಕ್ಕದ್ದು.

ಹೆಚ್) ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವಾಗ ಯಾವುದೇ ಸುಳ್ಳು/ ತಪ್ಪು ಮಾಹಿತಿಗಳನ್ನು ನೀಡಬಾರದು. ಹಾಗೇ ನೀಡಿ ತದನಂತರ ನೇಮಕಾತಿ ಸಮಿತಿಗೆ ಅದು ಪತ್ತೆಯಾದಲ್ಲಿ ಅಂತಹ

ಅಭ್ಯರ್ಥಿಗಳ ಅಭ್ಯರ್ಥಿತನವನ್ನು ರದ್ದು ಪಡಿಸಲಾಗುವುದು.

14. ವಿಶೇಷ ಸೂಚನೆಗಳು :

ಅಭ್ಯರ್ಥಿಗಳು ನೇಮಕಾತಿ ಸಮಿತಿಯು ನಿಗಧಿಪಡಿಸಿದ ಅರ್ಜಿ ನಮೂನೆಯಲ್ಲಿಯೇ ಎಲ್ಲಾ ಅಂಕಣಗಳನ್ನು ಸ್ಪಷ್ಟವಾಗಿ ಭರ್ತಿ ಮಾಡತಕ್ಕದ್ದು.

ಇತರೆ ಯಾವುದೇ ನಮೂನೆಗಳಲ್ಲಿ ಸಲ್ಲಿಸುವ, ಶುಲ್ಕ ಪಾವತಿಸದೆ ಸಲ್ಲಿಸಲ್ಪಡುವ, ಅಪೂರ್ಣವಾಗಿರುವ, ಸಹಿ ಮಾಡದ ಹಾಗೂ ಭಾವಚಿತ್ರ ಇಲ್ಲದೆ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಹಾಗೂ ಕೆಳಕಂಡ ವಿಶೇಷ ಸೂಚನೆಗಳನ್ನು ಗಮನಿಸುವುದು.

ಎ) ಸೇವೆಯಲ್ಲಿರುವ ಅಭ್ಯರ್ಥಿಗಳು ಅವರು ಸೇವೆಯಲ್ಲಿರುವ ಬಗ್ಗೆ ಅರ್ಜಿಯಲ್ಲಿನ ನಿಗದಿತ ಕಾಲಂನ್ನು ತುಂಬತಕ್ಕದ್ದು ಹಾಗೂ ಅವರ ಸೇವಾ ಪ್ರಮಾಣ ಪತ್ರ ಮತ್ತು ಸದರಿ ಹುದ್ದೆಗೆ ಅರ್ಜಿ ಸಲ್ಲಿಸುವ ಬಗ್ಗೆ ನಿರಾಕ್ಷೇಪಣ ಪ್ರಮಾಣ ಪತ್ರವನ್ನು (No Objection Certificate) ಸಂಬಂಧಿತ ಇಲಾಖಾ ಮುಖ್ಯಸ್ಥರಿಂದ ಪಡೆದು, ಸಲ್ಲಿಸತಕ್ಕದ್ದು.

ಬಿ) ಒಂದು ವೇಳೆ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕವು ಸಾರ್ವತ್ರಿಕ ರಜಾ/ ಬಂದ್ ದಿನವಾಗಿ ಘೋಷಿಸಲ್ಪಟ್ಟರೆ ಆ ದಿನಾಂಕದ ಮಾರನೆಯ ಕೆಲಸದ ದಿನದಂದು ಅರ್ಜಿಗಳನ್ನು ಸ್ವೀಕರಿಸಲಾಗುವುದು. ಆದರೆ ವಯೋಮಿತಿ ಹಾಗೂ ಕನಿಷ್ಠ ಶೈಕ್ಷಣಿಕ ವಿದ್ಯಾರ್ಹತೆಯ ಪರಿಗಣನೆಗೆ ದಿನಾಂಕ:05.07.2016 ಮಾತ್ರ ಅನ್ವಯವಾಗುತ್ತದೆ

ಸಿ) ಅಭ್ಯರ್ಥಿಯು ಅರ್ಜಿಯನ್ನು ಸಮರ್ಪಕವಾಗಿ ತುಂಬದೇ ಸದರಿ ಅರ್ಜಿ ತಿರಸ್ಕøತವಾದಲ್ಲಿ ತತ್ಸಂಬಂಧ ಯಾವುದೇ ರೀತಿಯ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ.

ಡಿ) ಕರ್ನಾಟಕ ರಾಜ್ಯದ, ಕೇಂದ್ರ ಸರ್ಕಾರದ ಯಾವುದೇ ಸರ್ಕಾರಿ ಹಾಗೂ ಅರೆ ಸರ್ಕಾರಿ ಸಂಸ್ಥೆಯ ಸೇವೆಯಿಂದ ವಜಾ ಗೊಂಡಿರುವ ನೌಕರರು ನೇಮಕಾತಿಗೆ ಅರ್ಹರಲ್ಲ.

ಇ) ಅಭ್ಯರ್ಥಿಯು ಹುದ್ದೆಗೆ ಅರ್ಜಿ ಸಲ್ಲಿಸಿದ ತಕ್ಷಣ ತಾನು ನಿಯಮ & ವಿನಿಯಮಗಳಿಗೆ (Rules & Regulations) ಬದ್ಧನಾಗಿರುತ್ತಾರೆ ಎಂದು ಭಾವಿಸಲಾಗಿರುತ್ತದೆ. ಒಂದು ವೇಳೆ ತಾನು ಸದರಿ ಹುದ್ದೆಗೆ ಆಯ್ಕೆಯಾಗದ ಪಕ್ಷದಲ್ಲಿ ತದನಂತರ ಅದೇ ನಿಯಮಗಳನ್ನು ಪ್ರಶ್ನಿಸಲು ಬರುವುದಿಲ್ಲ.

ಎಫ್) ದುರ್ನಡತೆ : ಒಬ್ಬ ಅಭ್ಯರ್ಥಿಯು ನಕಲಿ ವ್ಯಕ್ತಿಯಾಗಿರುವನೆಂದು ಅಥವಾ ಖೋಟಾ ದಸ್ತಾವೇಜು ಅಥವಾ ತಿದ್ದಲಾದ ದಸ್ತಾವೇಜುಗಳನ್ನು ಸಲ್ಲಿಸಿರುವನೆಂದು ಅಥವಾ ತಪ್ಪು ಅಥವಾ ಸುಳ್ಳು ಹೇಳಿಕೆ ನೀಡಿರುವನೆಂದು ಅಥವಾ ವಾಸ್ತವಿಕ ಮಾಹಿತಿಯನ್ನು ಮರೆ ಮಾಚಿರುವನೆಂದು ಅಥವಾ ನೇಮಕಾತಿ ಉದ್ದೇಶಗಳಿಗಾಗಿ ನಡೆಸಲಾದ ಪರೀಕ್ಷೆಯಲ್ಲಿ ಅನುಚಿತ ಮಾರ್ಗವನ್ನು೭೮೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೪, ೨೦೧೬ ಭಾಗ ೫ ಅನುಸರಿಸುತ್ತಿರುವನೆಂದು ಅಥವಾ ಪರೀಕ್ಷಾ ಕೊಠಡಿಯಲ್ಲಿ ದುರ್ವರ್ತಿಸುತ್ತಿರುವನೆಂದು, ತಪ್ಪಿತಸ್ಥನೆಂದು ಕಂಡುಬಂದಲ್ಲಿ ಹಾಗೂ ನೇಮಕಾತಿ ಸಮಿತಿಯಿಂದ ನೀಡಲಾದ ಯಾವುದೇ ಸೂಚನೆಗಳ್ನು ಉಲ್ಲಂಘಿಸುತ್ತಿರುವನೆಂದು ಅಥವಾ ಅವನು ನೇಮಕಾತಿಯ ಸಂಬಂಧದಲ್ಲಿ ಯಾವುದೇ ಇತರೆ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅವಲಂಬಿಸಿರುವನೆಂದು, ಕಂಡುಬಂದಲ್ಲಿ ಅಭ್ಯರ್ಥಿಯು ಸ್ವತಃ ಕ್ರಿಮಿನಲ್ ವ್ಯವಹರಣೆಗಳಿಗೆ ಮತ್ತು ಶಿಸ್ತು ಕ್ರಮಕ್ಕೆ ಒಳಪಡುವುದಲ್ಲದೆ, ನೇಮಕಾತಿ ಸಮಿತಿ ನಡೆಸುವ ಯಾವುದೇ ಪರೀಕ್ಷೆಗೆ ಪ್ರವೇಶ ಪಡೆಯುವುದರಿಂದ ಅಥವಾ ಯಾವುದೇ ಹುದ್ದೆಯ ಆಯ್ಕೆಗೆ ಖಾಯಂ ಆಗಿ ಡಿಬಾರ್ ಮಾಡಲಾಗುವುದು.

ಪಿ.ನಾಗರಾಜು

ಎಸ್‌ಪಿ & ಪ್ರಾಂಶುಪಾಲರು

ಪೊಲೀಸ್ ತರಬೇತಿ ಶಾಲೆ.

ಐಮಂಗಲ. ಚಿತ್ರದುರ್ಗ ಜಿಲ್ಲೆ

ಕರ್ನಾಟಕ ರಾಜ್ಯ ಪೊಲೀಸ್

ಪೊಲೀಸ್ ತರಬೇತಿ ಶಾಲೆ. ಐಮಂಗಲ. ಹಿರಿಯೂರು ತಾಲ್ಲೂಕು. ಚಿತ್ರದುರ್ಗ ಜಿಲ್ಲೆ. 577558

ಅನುಯಾಯಿ ಹುದ್ದೆಗಳ ನೇಮಕಾತಿ 2016- ಅರ್ಜಿ ನಮೂನೆ

ಅಧಿಸೂಚನೆ ಸಂಖ್ಯೆ: 12/ಪಿಟಿಎಸ್ಐ/ಸಿಬ್ಬಂದಿ-1/2016-17 ದಿನಾಂಕ: 18.05.2016

ಪಾಸ್ ಪೋರ್ಟ್

ಸೈಜ್ ಭಾವಚಿತ್ರ

ಅಂಟಿಸುವುದು

ಕ್ರ.ಸಂ. ಒದಗಿಸಬೇಕಾದ ಮಾಹಿತಿ ಅಭ್ಯರ್ಥಿಯ ವಿವರ
1. ಅರ್ಜಿದಾರರ ಪೂರ್ಣ ಹೆಸರು
2. ಲಿಂಗ (ಗಂಡುಋಹೆಣ್ಣು)
3. ಜನ್ಮ ದಿನಾಂಕ (ದೃಡೀಕೃತ ಪ್ರಮಾಣ ಪತ್ರದ ಪ್ರತಿ ಲಗತ್ತಿಸುವುದು)
4. ವಿದ್ಯಾರ್ಹತೆ (ದೃಡೀಕೃತ ಪ್ರಮಾಣ ಪತ್ರದ ಪ್ರತಿ ಲಗತ್ತಿಸುವುದು)
5. ಮೊಬೈ್ ಸಂಖ್ಯೆ
6. ತಾಯಿಯ ಹೆಸರು
7. ತಂದೆಯ ಹೆಸರು
8. ಪೂರ್ಣ ವಿಳಾಸ
9. ಪಿನ್ ಕೋಡ್‌ಸಂಖ್ಯೆ
10. ಸ್ವಂತ ಜಿೆ ್ಲ
11. ಅನುಯಾಯಿ ಹುದ್ದೆಗೆ ನೇಮಕಾತಿ ಹೊಂದಲು ಇಚ್ಚಿಸಿರುವ ವೃತ್ತಿ (Trade) (ಇದ್ದಲ್ಲಿ ಅದರ ದೃಡೀಕರಣ ಪತ್ರದ ಪ್ರತಿ.)
12. ಮೀಸಾತಿ ಕೋರುವ ಪ್ರವರ್ಗ (ದೃಡೀಕೃತ ಪ್ರಮಾಣ ಪತ್ರದ ಪ್ರತಿ ಲಗತ್ತಿಸುವುದು)
13. ಉಪಜಾತಿ
14. ಗ್ರಾಮೀಣ ಅಭ್ಯರ್ಥಿಯೇ (ದೃಡೀಕೃತ ಪ್ರಮಾಣ ಪತ್ರದ ಪ್ರತಿ ಲಗತ್ತಿಸುವುದು)
15. ಮಹಿಳಾ ಅಭ್ಯರ್ಥಿಯೇ (ದೃಡೀಕೃತ ಪ್ರಮಾಣ ಪತ್ರದ ಪ್ರತಿ ಲಗತ್ತಿಸುವುದು)
16. ಮಾಜೀ ಸೈನಿಕ ಅಭ ್ಯರ್ಥಿಯೇ. (ದೃಡೀಕೃತ ಪ್ರಮಾಣ ಪತ್ರದ ಪ್ರತಿ ಲಗತ್ತಿಸುವುದು)
17. ಸರ್ಕಾರಿ ನೌಕರನೇ (ಆಗಿದ್ದಲ್ಲಿ ವಿವರ ನೀಡುವುದು)
18. ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದೀರಾ?/ ಅಪರಾಧ ಮೊಕದ್ದಮೆಯಲ್ಲಿ ಶಿಕ್ಷೆಗೆ ಒಳಪಟ್ಟಿರುವುವಿರಾ?
19. ಬ್ಯಾಂಕ್ ಡಿಡಿ ಸಂಖ್ಯೆ. ದಿನಾಂಕ. ಮತ್ತು ಪಾವತಿಸಿದ ಮೊತ ್ತ ದ ವಿವರ.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೪, ೨೦೧೬ ೭೮೫

ದಿನಾಂಕ: ಅಭ್ಯರ್ಥಿಯ ಸಹಿ

ಘೋಷಣೆ

1. ಅರ್ಜಿಯಲ್ಲಿ ತಿಳಿಸಿರುವ ವಿವರಗಳು ನನಗೆ ತಿಳಿದ ಮಟ್ಟಿಗೆ ಮತ್ತು ನಾನು ನಂಬುವಷ್ಟರ ಮಟ್ಟಿಗೆ ನಿಜವೆಂದು ಪೂರ್ಣವೆಂದು ಮತ್ತು ಸರಿಯಿದೆಯೆಂದು ಈ ಮೂಲಕ ಘೋಷಿಸುತ್ತೇನೆ. ನಾನು ನೀಡಲಾದ ಯಾವುದೇ ಮಾಹಿತಿಯು ಪರೀಕ್ಷೆ/ ನೇಮಕಾತಿ ಮುಂಚೆ. ನಡೆಯುವಾಗ ಅಥವಾ ತರುವಾಯ ಸುಳ್ಳು/ತಪ್ಪೆಂದು ಕಂಡು ಬಂದ ಸಂದರ್ಭದಲ್ಲಿ ಅಥವಾ ಅನರ್ಹತೆ ಪತ್ತೆಯಾದ ಸಂದರ್ಭದಲ್ಲಿ ನೇಮಕಾತಿ ಸಮಿತಿಯು ನನ್ನ ವಿರುದ್ದ ನಿಯಮಾನುಸಾರ ಕ್ರಮಕೈಗೊಳ್ಳಬಹುದೆಂದು ನನಗೆ ತಿಳಿದಿರುತ್ತದೆ.

2. ನಾನು ಅಧಿಸೂಚನೆಯಲ್ಲಿ ನಮೂದಿಸಿರುವ ನಿಯಮ ಮತ್ತು ವಿನಿಯಮಗಳನ್ನು ಹಾಗೂ ಎಲ್ಲಾ ಷರತ್ತುಗಳನ್ನು ಜಾಗರೂಕತೆಯಿಂದ ಓದಿರುತ್ತೇನೆ.

ಮತ್ತು ಅವುಗಳಿಗೆ ಬದ್ದನಾಗಿದ್ದು ಕಟ್ಟುನಿಟ್ಟಾಗಿ ಪಾಲಿಸುತ್ತೇನೆಂದು ಘೋಷಿಸುತ್ತೇನೆ. ನಾನು ಅರ್ಜಿ ಸಲ್ಲಿಸಿದ ಹುದ್ದೆಯ ನೇಮಕಾತಿ ನಿಗಧಿಪಡಿಸಿದ ವಯೋಮಿತಿ. ವಿದ್ಯಾರ್ಹತೆ ಮುಂತಾದ ಇತರೆ ಎಲ್ಲಾ ಅರ್ಹತಾ ಷರತ್ತುಗಳನ್ನು ಪೂರೈಸಿರುತ್ತೇನೆ. ನಾನು ಈ ಪ್ರಕ್ರಿಯೆಯಲ್ಲಿ ಹಾಜರಾಗಲು ಈ ಹಿಂದೆ ಉಚ್ಚಾಟಿಸಲ್ಪಟ್ಟಿಲ್ಲವೆಂದು ಈ ಮೂಲಕ ಘೋಷಿಸುತ್ತೇನೆ.

3. ನಾನು ಈ ಹುದ್ದೆಯ ಆಯ್ಕೆಯ ಸಲುವಾಗಿ ಅರ್ಜಿ ಸಲ್ಲಿಸುತ್ತಿರುವುದು ಈ ಹುದ್ದೆಯ ನಿಯಮ ಮತ್ತು ವಿನಿಯಮಗಳನ್ನು ಒಪ್ಪಿಕೊಂಡಂತೆ ಆಗಿರುತ್ತದೆಂದು ನನಗೆ ಸಂಪೂರ್ಣವಾಗಿ ತಿಳಿದಿರುತ್ತದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಆಯ್ಕೆಯಾಗದಿದ್ದಲ್ಲಿ, ಪಾಲ್ಗೊಂಡಿರುವ ಈ ನೇಮಕಾತಿ ನಿಯಮ ಮತ್ತು ವಿನಿಯಮಗಳನ್ನು ಪ್ರಶ್ನಿಸುವುದಿಲ್ಲವೆಂದು ಈ ಮೂಲಕ ಘೋಷಿಸುತ್ತೇನೆ.

ದಿನಾಂಕ: ಅಭ್ಯರ್ಥಿಯ ಸಹಿ.

PR-105

SC-500

IN THE COURT OF THE XXVI ADDITIONAL CIVIL & SESSIONS JUDGE, Mayo Hall, BENGALURU (CCH-20)

P & SC No: 25053/2015

BETWEEN:

1 Pulikottil Chacko Roy

S/o Chacko Roy, aged about 68 years

Occ: Retired from private sector employment

Resident of: Block Inverness, Flat No.1905

Brigade Metropolis, Whitefield Road

Mahadevapura, Bangalore 560048

2 Yuri Jim Roy,

S/o Pulikottil Chacko Roy, aged about 34 years

Occ: Employed in Private Company

Resident of: Block Inverness, Flat No.1905

Brigade Metropolis, Whitefield Road

Mahadevapura, Bangalore 560048 : Petitioners

AND

NONE : Respondent R.N.I. No. KARBIL/2001/47147 POSTAL REGN. No. RNP/KA/BGS/2202/2014-16Licensed to post without prepayment WPP No. 297 ೭೮೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೪, ೨೦೧೬ ಭಾಗ ೫

PUBLIC NOTICE

Notice is hereby given that a Petition has been made to this Court under Section 372 of the Indian Succession Act for grant of Succession Certificate to the Petitioners as to the assets described in the below Schedule of the deceased ANNE ROY (FORMARLY ANN ROY, which was changed through legal process as ANNE ROY by Gazette notification dated August 9, 2001), who died on 20.06.2012.

Be it known that no Caveat has been entered and that the said Petition is posted for hearing on 01.08.2016 and according to Petitioners they are the only legal heirs to succeed the assets and estates of the deceased. Accordingly the Petitioners have filed the Petition as referred to above. However, if any other person/persons claiming to have any interest in the assets of the deceased may come and see the proceedings before the grant of Succession Certificate to the Petitioners.

SCHEDULE

Sr. No Details of Estate Details of Title Value of the property
1 Flat No.1905, at "BLOCK INVERNESS" Brigade Metropolis, Whitefield Road, Mahadevapura, Bangalore 560048: Held in joint ownership by (i) the First Petitioner and (ii) the deceased on equal undivided share of the property. Registered Sale Deed dated: 12.04.2010 Rs.2539750/- The deceased held 50% undivided share in the property
2 Bank Account held by the deceased Name of bank: HDFC Bank, Nariman Point, Mumbai Saving bank A/c No. 00011000008141 Balance in A/c Rs. 11206.51 As on 04.09. 2012 & all accrued credits thereon.
3 Shares held by the deceased Name of the Company 1. AKZO NOBEL INDIA LTD., 2. Challengers Co-operative Housing Society, Kandivali(East),Mumbai 3. INDIAN EXPLOSIVES LTD. Share Certtificate No. 290/T3-2306 Share Certificate No.276937 17 shares of offered price of Rs.920 per share fully paid up & connected benefits thereof. 5 shares of Rs.50/- each fully paid up & connected benefits thereof 1 7 shares of Rs.10/- each fully paid up & connected benefits thereof..

Given under my hand and seal of the Court at Bangalore on this 7th day of June, 2016.

By Order of the Court

P.D. 32

Assistant Registrar

SC - 5

City Civil Court, Mayo Hall Unit, Bengaluru ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 14 July 2016. Indian Gazettes, https://egazette.servantsofknowledge.in/details/in.gazette.karnataka_new.2016-07-14.Part-5/. Archive identifier in.gazette.karnataka_new.2016-07-14.Part-5.