Servants of Knowledge
Karnataka Gazette · Government of Karnataka

Karnataka Gazette, Part Part-1, 23 March 2017

Published 23 March 2017

Part
Part-1
Identifier
in.gazette.karnataka_new.2017-03-23.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೨

Volume 152

ಬೆಂಗಳೂರು, ಗುರುವಾರ, ಮಾರ್ಚ್ ೨೩, ೨೦೧೭ (ಚೈತ್ರ ೨, ಶಕ ವರ್ಷ ೧೯೩೯)

Bengaluru, Thursday, March 23, 2017 (Chaithra 2, Shaka Varsha 1939)

ಸಂಚಿಕೆ ೧೨

Issue 12

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಸಹಕಾರ ಸಚಿವಾಲಯ ವಿಷಯ: ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ 2016-17ನೇ ಸಾಲಿಗೆ ಶಾಸನಬದ್ಧ ಲೆಕ್ಕಪರಿಶೋಧಕರ ನೇಮಕಾತಿ ಬಗ್ಗೆ.

ಓದಲಾಗಿದೆ: 1) ಆದೇಶ ಸಂಖ್ಯೆ:ಸಇ 43 ರಾಉನಿ 2015, ದಿನಾಂಕ: 16.11.2015.

2) ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ಕಛೇರಿಯ ಪತ್ರ ಸಂಖ್ಯೆ: CA.V/FRM/ KARNATAKA,W/65, ದಿನಾಂಕ: 11.07.2016.

3) ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಇವರ ಪತ್ರ ಸಂ:ಕರಾಉನಿ/ಲೆಪ/ ಸೇ.ಸೌ.ಬಿ/3771/2016-17, ದಿನಾಂಕ: 24.10.2016.

ಮೇಲೆ (1)ರಲ್ಲಿ ಓದಲಾದ ಆದೇಶದಲ್ಲಿ 2015-16ನೇ ಸಾಲಿಗೆ ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ ಶಾಸನಬದ್ಧ ಲೆಕ್ಕಪರಿಶೋಧಕರನ್ನಾಗಿ ಮೆ||ಬ್ರಹ್ಮಯ್ಯ ಅಂಡ್ ಕೋ, ಚಾರ್ಟರ್ಡ್ ಅಕೌಂಟೆಂಟ್ಸ್, ಬೆಂಗಳೂರು ಇವರನ್ನು ನೇಮಕ ಮಾಡಲಾಗಿತ್ತು.

ಮೇಲೆ (2)ರಲ್ಲಿ ಓದಲಾದ ಪತ್ರದಲ್ಲಿ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ಮೆ|| ಗುರು & ಜನ (BA 0482) ಇವರನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ 2016-17ನೇ ಸಾಲಿಗೆ ಶಾಸನಬದ್ಧ ಲೆಕ್ಕಪರಿಶೋಧಕರನ್ನಾಗಿ ನೇಮಕ ಮಾಡಿರುತ್ತಾರೆ.

ಮೇಲೆ (3)ರಲ್ಲಿ ಓದಲಾದ ಪತ್ರದಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಇವರು ಮೆ|| ಗುರು & ಜನ (BA 0482) ಇವರನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ 2016-17ನೇ ಸಾಲಿಗೆ ಶಾಸನಬದ್ಧ ಲೆಕ್ಕಪರಿಶೋಧಕರನ್ನಾಗಿ ಮರು ನೇಮಕ ಮಾಡುವಂತೆ ಕೋರಿರುತ್ತಾರೆ.

ಆದ್ದರಿಂದ, 2016-17ನೇ ಸಾಲಿಗೆ ಮೆ|| ಗುರು & ಜನ (BA 0482) ಇವರನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ ಶಾಸನಬದ್ಧ ಲೆಕ್ಕಪರಿಶೋಧಕರನ್ನಾಗಿ ನೇಮಕ ಮಾಡಲು ಸರ್ಕಾರವು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಸಇ 33 ರಾಉನಿ 2016, ಬೆಂಗಳೂರು, ದಿನಾಂಕ : 11.11.2016

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ನವದೆಹಲಿಯ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ಪತ್ರ ದಿನಾಂಕ: 11.07.2016ರಲ್ಲಿ ವಿಧಿಸಿರುವ ಷರತ್ತಿಗೊಳಪಟ್ಟು ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ 2016-17ನೇ ಸಾಲಿಗೆ ಶಾಸನಬದ್ಧ ಲೆಕ್ಕಪರಿಶೋಧಕರನ್ನಾಗಿ ಮೆ|| ಗುರು & ಜನ (BA 0482), ನಂ.41, ಪಟಾಲಮ್ಮ ದೇವಸ್ಥಾನದ ರಸ್ತೆ, ಬಸವನಗುಡಿ, ಸೌತ್ ಎಂಡ್ ವೃತ್ತದ ಹತ್ತಿರ, ಬೆಂಗಳೂರು-50004 ಇವರನ್ನು ನೇಮಕ ಮಾಡಿ ಆದೇಶಿಸಿದೆ.

P.R. 20

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಬಿ.ಪ್ರಕಾಶ್

ಸರ್ಕಾರದ ಅಧೀನ ಕಾರ್ಯದರ್ಶಿ,

ಸಹಕಾರ ಇಲಾಖೆ.

(೩೯೭)೩೯೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೩, ೨೦೧೭ ಭಾಗ ೧

ಸಹಕಾರ ಸಚಿವಾಲಯ

ವಿಷಯ: 2016-17ನೇ ಸಾಲಿಗೆ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಉನ್ನತೀಕರಣ ನಿಧಿ ಯೋಜನೆಯಡಿ ಅನುದಾನ ಬಿಡುಗಡೆ ಆದೇಶ.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ:ಸಇ 115 ರರವಿ 2016, ದಿನಾಂಕ:26.04.2016.

2. ಸರ್ಕಾರದ ಆದೇಶ ಸಂಖ್ಯೆ: ಸಿಒ 247 ಸಿಎಲ್ಎಸ್ 2016, ದಿನಾಂಕ: 28.05.2016. 3. ಸರ್ಕಾರದ ಆದೇಶ ಸಂಖ್ಯೆ: ಸಿಒ 247 ಸಿಎಲ್ಎಸ್ 2016, ದಿನಾಂಕ: 22.08.2016. 4. ಸಹಕಾರ ಸಂಘಗಳ ನಿಬಂಧಕರ ಪತ್ರ ಸಂಖ್ಯೆ:ಸಿಬ್ಬಂದಿ/18/ಇಜಿಪಿ/ಎಂಪಿ/2016-17, ದಿನಾಂಕ: 08.12.2016.

5. ಸರ್ಕಾರದ ಆದೇಶ ಸಂಖ್ಯೆ:ಎಫ್‌ಡಿ 3 ಟಿಎಫ್‌ಪಿ 2016, ದಿನಾಂಕ:02.04.2016.

ಪ್ರಸ್ತಾವನೆ :

ಮೇಲೆ (1) ರಲ್ಲಿ ಓದಲಾದ ಆದೇಶದಲ್ಲಿ ಸಹಕಾರ ಇಲಾಖೆಯಲ್ಲಿ 2016-17ನೇ ಸಾಲಿನ ಮುಂದುವರೆದ ಯೋಜನೆಯಾಗಿ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಉನ್ನತೀಕರಣ ನಿಧಿ ಯೋಜನೆಯನ್ನು ಲೆಕ್ಕ ಶೀರ್ಷಿಕೆ 2425-00-004-0-01-059ರಡಿ ` 10.00ಲಕ್ಷಗಳ ಯೋಜನೆ ಕಾರ್ಯಕ್ರಮವನ್ನು ದಿನಾಂಕ:01.04.2016ರಿಂದ 31.03.2017ರವರೆಗೆ ಮುಂದುವರೆಸಲು ಸರ್ಕಾರದ ಅನುಮೋದನೆ ನೀಡಲಾಗಿದೆ.

ಮೇಲೆ (2) ಮತ್ತು (3)ರಲ್ಲಿ ಓದಲಾದ ಆದೇಶಗಳಲ್ಲಿ 2016-17ನೇ ಸಾಲಿನ ಆಯವ್ಯಯದಲ್ಲಿ ಲೆಕ್ಕ ಶೀರ್ಷಿಕೆ 2425-00-004-0-01-059 ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಉನ್ನತೀಕರಣ ನಿಧಿ ಯೋಜನೆಯಡಿ ಕಲ್ಪಿಸಿರುವ `. 10.00 ಲಕ್ಷಗಳ ಪೈಕಿ ` 5.00ಲಕ್ಷಗಳನ್ನು ಮೊದಲನೇ ಹಾಗೂ ಎರಡನೇ ಕಂತಿನಲ್ಲಿ ಬಿಡುಗಡೆ ಮಾಡಲಾಗಿದೆ.

ಮೇಲೆ (4) ರಲ್ಲಿ ಓದಲಾದ ಪತ್ರದಲ್ಲಿ ಸಹಕಾರ ಸಂಘಗಳ ನಿಬಂಧಕರು 2016-17ನೇ ಸಾಲಿನ ಆಯವ್ಯಯದಲ್ಲಿ ಲೆಕ್ಕ ಶೀರ್ಷಿಕೆ 2425-00- 004-0-01-059 ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಉನ್ನತೀಕರಣ ನಿಧಿ ಯೋಜನೆಯಡಿ ಕಲ್ಪಿಸಿರುವ ` 10.00 ಲಕ್ಷಗಳ ಪೈಕಿ ಮೊದಲನೇ ಹಾಗೂ ಎರಡನೇ ಕಂತುಗಳಲ್ಲಿ ಬಿಡುಗಡೆ ಮಾಡಲಾದ `. 5.00ಲಕ್ಷಗಳಲಿ ಶೇ 85.8ರಷ್ಟು ವೆಚ್ಚ ಮಾಡಿರುವುದಾಗಿ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಿ ಈ ಯೋಜನೆಯಡಿ ` 2.50 ಲಕ್ಷಗಳ ಮೂರನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಮೇಲೆ (5) ರಲ್ಲಿ ಓದಲಾದ ಸರ್ಕಾರದ ಆದೇಶದ ಕಂಡಿಕೆ (8) ರ ಅವಕಾಶದಂತೆ ಆಯವ್ಯಯದ ಅವಕಾಶದ ಶೇ.50 ರಷ್ಟು ಮೊಬಲಗನ್ನು ಬಿಡುಗಡೆ ಮಾಡಲು ಅವಕಾಶವಿರುತ್ತದೆ. ನಿಬಂಧಕರ ಪ್ರಸ್ತಾವೆಯನ್ನು ಪರಿಶೀಲಿಸಿ, ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ:ಸಿಒ 247 ಸಿಎಲ್ಎಸ್ 2016, ಬೆಂಗಳೂರು, ದಿನಾಂಕ:28.12.2016

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2016-17ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 2425-00-004-0-01-059 ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಉನ್ನತೀಕರಣ ನಿಧಿ ಯೋಜನೆಯಡಿ ಒದಗಿಸಿರುವ ` 10.00 ಲಕ್ಷಗಳ ಪೈಕಿ ಮೂರನೇ ಕಂತಿನಲ್ಲಿ ಯೋಜನೆಯ ಶೇ.25 ರಷ್ಟು `. 2.50ಲಕ್ಷ(ಎರಡು ಲಕ್ಷದ ಐವತ್ತು ಸಾವಿರ ರೂಪಾಯಿಗಳು ಮಾತ್ರ)ಗಳನ್ನು ಬಿಡುಗಡೆ ಮಾಡಿ ಆದೇಶಿಸಿದೆ.

ಈ ಹಣವನ್ನು ಸಹಕಾರ ಸಂಘಗಳ ಜಂಟಿ ನಿಬಂಧಕರು (ಆಡಳಿತ ಮತ್ತು ಅಭಿವೃದ್ಧಿ), ನಿಬಂಧಕರ ಕಛೇರಿ, ಬೆಂಗಳೂರು ಇವರು ಸಹಕಾರ ಸಂಘಗಳ ನಿಬಂಧಕರ ಮೇಲು ಸಹಿಯೊಂದಿಗೆ ಡ್ರಾ ಮಾಡಲು ಅಧಿಕಾರ ನೀಡಲಾಗಿದೆ. ಈ ಬಗ್ಗೆ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ:ಎಫ್‌ಡಿ 3 ಟಿಎಫ್‌ಪಿ 2016, ದಿನಾಂಕ:02.04.2016ರಲ್ಲಿ ಸರ್ಕಾರದ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಹಾಗೂ ಆಂತರಿಕ ಆರ್ಥಿಕ ಸಲಹೆಗಾರರ ಟಿಪ್ಪಣಿ ಸಂಖ್ಯೆ:ಸಇ 120 ಆಂಆಸ(ಎ) 2016, ದಿನಾಂಕ:22.12.2016 ರಲ್ಲಿ ನೀಡಲಾದ ಸಹಮತಿಯ ಮೇರೆಗೆ ಹೊರಡಿಸಿದೆ.

P.R. 21

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ. ರಾಧಾಕೃಷ್ಣ,

ಸರ್ಕಾರದ ಅಧೀನ ಕಾರ್ಯದರ್ಶಿ-3,

ಸಹಕಾರ ಇಲಾಖೆ.

ಸಹಕಾರ ಸಚಿವಾಲಯ

ವಿಷಯ : ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳಲ್ಲಿನ

ಸಿಬ್ಬಂದಿ ಬಲವನ್ನು ಮರು ನಿಗಧಿಪಡಿಸುವ ಕುರಿತು ಆದೇಶ.

ಓದಲಾಗಿದೆ : ಸಹಕಾರ ಸಂಘಗಳ ನಿಬಂಧಕರು ಇವರ ಪತ್ರ ಸಂಖ್ಯೆ:ಅನಿ/ಡಿಎವೈ-4/13/ಸಿ.ಬ.ಮರುನಿಗಧಿ/

2015-16, ದಿನಾಂಕ: 18.03.2016.

ಪ್ರಸ್ತಾವನೆ:

ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳಲ್ಲಿನ ಸಿಬ್ಬಂದಿ ಬಲ ಸ್ಟಾಫಿಂಗ್ ಪ್ಯಾಟರ್ನ್ (Staffing Pattern) 2015ಕ್ಕೆ ಅಂತ್ಯಗೊಂಡಿದ್ದು, ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳ ಕಾರ್ಯಚಟುವಟಿಕೆಗಳು, ಹೊಸ ಯೋಜನೆಗಳು, ಇತ್ಯಾದಿ ಹೆಚ್ಚಾಗಿದ್ದು ಪ್ರಸ್ತುತ ಬದಲಾಗುತ್ತಿರುವ ವ್ಯವಹಾರಿಕೆ ನೀತಿ, ಮಾರುಕಟ್ಟೆ ತಾಂತ್ರಿಕತೆ ಇವುಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳ ಸಿಬ್ಬಂದಿಗಳ ವಯೋನಿವೃತ್ತಿ ಕಾರಣಗಳಿಂದ 2020ರ ವೇಳೆಗೆ ಸಿಬ್ಬಂದಿ ಬಲಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೩, ೨೦೧೭ ೩೯೯ ಸ್ಟಾಫಿಂಗ್ ಪ್ಯಾಟರ್ನ್ (Staffing Pattern) ಮರುನಿಗಧಿಪಡಿಸುವ ಅಗತ್ಯತೆ ಇದ್ದು, ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ ರವರು ಸಲ್ಲಿಸಿರುವ ಮನವಿಯ ಮೇರೆಗೆ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳಿಗೆ ಸ್ಟಾಫಿಂಗ್ ಪ್ಯಾಟರ್ನ್ (Staffing Pattern)ನ್ನು ಮರುನಿಗಧಿಗೊಳಿಸಲು ಸಮಿತಿಯನ್ನು ರಚಿಸುವ ಬಗ್ಗೆ ಅನುಮತಿ ನೀಡುವಂತೆ ಕೋರಿ ಸಹಕಾರ ಸಂಘಗಳ ನಿಬಂಧಕರು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಪ್ರಸ್ತಾವೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಿಒ 125 ಸಿಸಿಬಿ 2016, ಬೆಂಗಳೂರು, ದಿನಾಂಕ: 26.12.2016

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ ಹಾಗೂ ರಾಜ್ಯದಲ್ಲಿರುವ 14 ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳಲ್ಲಿನ ಸಿಬ್ಬಂದಿಯ ಅಗತ್ಯತೆಗಳನ್ನು ಅಭ್ಯಸಿಸಿ ಸ್ಟಾಫಿಂಗ್ ಪ್ಯಾಟರ್ನ್ (Staffing Pattern)ನ್ನು ಮರುನಿಗಧಿಗೊಳಿಸಲು ಈ ಕೆಳಕಂಡಂತೆ ಸಮಿತಿಯನ್ನು ರಚಿಸಲಾಗಿದೆ.

1. ಸಹಕಾರ ಸಂಘಗಳ ನಿಬಂಧಕರು - ಅಧ್ಯಕ್ಷರು

2. ಎನ್.ಡಿ.ಡಿ.ಬಿ.ಯ ಪ್ರಾಂತೀಯ ನಿರ್ದೇಶಕರು - ಸದಸ್ಯರು

3. ಸಹಕಾರ ಸಂಘಗಳ ಅಪರ ನಿಬಂಧಕರು

- ಸದಸ್ಯರು

(ಕೈಗಾರಿಕೆ ಮತ್ತು ಹೈನುಗಾರಿಗೆ)

4. ಸಂಬಂಧಪಟ್ಟ ಜಿಲ್ಲಾ ಸಹಕಾರಿ ಹಾಲು

- ಸದಸ್ಯರು

ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು,

5. ಕೆ.ಎಂ.ಎಫ್.ನ ವ್ಯವಸ್ಥಾಪಕ ನಿರ್ದೇಶಕರು - ಸದಸ್ಯ ಕಾರ್ಯದರ್ಶಿ

ಈ ಸಮಿತಿಯು ಅಗತ್ಯವೆನಿಸಿದಲ್ಲಿ ಇತರೆ ಯಾವುದೇ ಅಧಿಕಾರಿಯನ್ನು ಸಹಮತಿಯಿಂದ ಸೇರಿಸಿಕೊಳ್ಳಬಹುದು. ಈ ಸಮಿತಿಯು ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ ಮತ್ತು 14 ಸಹಕಾರ ಹಾಲು ಉತ್ಪಾದಕರ ಒಕ್ಕೂಟಗಳ ಸಿಬ್ಬಂದಿ ಅಗತ್ಯತೆಗಳನ್ನು ಅಭ್ಯಸಿಸಿ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ ಮತ್ತು ಹಾಲು ಒಕ್ಕೂಟವಾರು ಸ್ಟಾಫಿಂಗ್ ಪ್ಯಾಟರ್ನ್ (Staffing Pattern)ನ್ನು ಮರುನಿಗಧಿಗೊಳಿಸಿ ವಿವರವಾದ ವರದಿಯನ್ನು ದಿನಾಂಕ:31.03.2017 ರೊಳಗೆ ಸಲ್ಲಿಸತಕ್ಕದ್ದು.

P.R. 22

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ವೆಂಕಟಸ್ವಾಮಿ,

ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ,

ಸರ್ಕಾರದ ಉಪ ಕಾರ್ಯದರ್ಶಿ,

ಸಹಕಾರ ಇಲಾಖೆ.

ಉನ್ನತ ಶಿಕ್ಷಣ ಸಚಿವಾಲಯ

ವಿಷಯ : ಶ್ರೀ ಟಿ. ಟಿ. ಪೂಜಾರ್, ಹಿಂದಿನ ಆಡಳಿತಾಧಿಕಾರಿ (ಪ್ರಭಾರ), ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು ಹಾಲಿ ಸಹಾಯಕ ಆಡಳಿತಾಧಿಕಾರಿ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ರಾಮನಗರ ಇವರ ವಿರುದ್ದ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ, 1988 ರಡಿ ದಾಖಲಾದ ಪ್ರಕರಣದ ಅಭಿಯೋಜನಾ ಮಂಜೂರಾತಿ ಆದೇಶ.

ಓದಲಾಗಿದೆ : 1) ಅಪರ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಪತ್ರ ಸಂಖ್ಯೆ: ಲೋಕ್/ಐಎನ್‌ವಿ(ಜಿ)/ಸಿಟಿ/ಕ್ರೈಂ. 65/2015, ದಿನಾಂಕ: 14-09-2016.

2) ಕರ್ನಾಟಕ ಲೋಕಾಯುಕ್ತ, ನಗರ ವಿಭಾಗ, ಬೆಂಗಳೂರು ಮೊ.ಸಂ.65/2015, ಕಲಂ 7, 3(1)(ಡಿ) ಜೊತೆಗೆ 13(2) ಲಂಚ ನಿರೋಧಕ ಕಾಯ್ದೆ, 1988 ರ ಅಂತಿಮ ತನಿಖಾ ವರದಿ.

ಪ್ರಸ್ತಾವನೆ:

ಶ್ರೀ ಟಿ. ಟಿ. ಪೂಜಾರ್, ಹಿಂದಿನ ಆಡಳಿತಾಧಿಕಾರಿ (ಪ್ರಭಾರ), ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು ಹಾಲಿ ಸಹಾಯಕ ಆಡಳಿತಾಧಿಕಾರಿ, ಸರ್ಕಾರಿ ಇಂಜನೀಯರಿಂಗ್ ಕಾಲೇಜು, ರಾಮನಗರ ಇವರ ವಿರುದ್ಧ ಮೊಕದ್ದಮೆ ಸಂಖ್ಯೆ: 65/2015 ರಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್-06, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ನಗರ, ಇವರು ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಪ್ರಕರಣದ ತನಿಖಾಧಿಕಾರಿಯ ಅಂತಿಮ ತನಿಖಾ ವರದಿ ಮತ್ತು ತನಿಖಾ ದಾಖಲಾತಿಗಳನ್ನು ಅಪರ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಪತ್ರದೊಂದಿಗೆ ಕಳುಹಿಸುತ್ತಾ, ಆರೋಪಿತ ಅಧಿಕಾರಿ ಶ್ರೀ ಟಿ ಟಿ ಪೂಜಾರ್ ರವರನ್ನು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ, 1988 ರ ಕಲಂ 7, 13(1)(ಡಿ) ಸಹವಾಚನ 13(2) ರಡಿ ಎಸಗಿರುವ ಶಿಕ್ಷಾರ್ಹ ಅಪರಾಧಕ್ಕಾಗಿ ಸಕ್ಷಮ ನ್ಯಾಯಾಲಯದಲ್ಲಿ ಅಭಿಯೋಜನೆಗೆ ಒಳಪಡಿಸಲು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ, 1988 ರ ಕಲಂ 19(1)(ಬಿ) ರಡಿ ಸರ್ಕಾರದ ಮಂಜೂರಾತಿ ನೀಡಲು ಕೋರಿರುತ್ತಾರೆ.

2. ಸಕ್ಷಮ ಪ್ರಾಧಿಕಾರಿಯಾದ ಸರ್ಕಾರವು, ಅಪರ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಪತ್ರದೊಂದಿಗೆ ಕಳುಹಿಸಿಕೊಟ್ಟ ಈ ಕೆಳಕಂಡ ದಾಖಲೆಗಳನ್ನು ಪರಿಶೀಲಿಸಿದೆ.

೪೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೩, ೨೦೧೭ ಭಾಗ ೧

1. ಪ್ರಥಮ ವರ್ತಮಾನ ವರದಿ ಮತ್ತು ದೂರು ದಿನಾಂಕ: 18-09-2015. 2. ಪಂಚರನ್ನು ನಿಯೋಜನೆಗೊಳಿಸಿರುವ ಸಂಬಂಧ ಪತ್ರ ಸಂಖ್ಯೆ: ಮಾಮಇ / ನಿಸಿಕೆ / 35 / 2000-01, ದಿನಾಂಕ: 18-09-2015. 3. ಪ್ರಾಯೋಗಿಕ ಪಂಚನಾಮೆ ದಿನಾಂಕ: 18-09-2015. 4. ನೋಟ್ ನಂಬರುಗಳ ವಿವರದ ಪಟ್ಟಿ ದಿನಾಂಕ: 18-09-2015. 5. ಪಿರ್ಯಾದುದಾರರು ಮತ್ತು ಆರೋಪಿತರ ನಡುವೆ ನಡೆದ ಸಂಭಾಷಣೆಯ ಲಿಪೀಕರಣ ದಿನಾಂಕ: 16-09-2015 ಮತ್ತು 18-09-2015 6. ಟ್ರ್ಯಾಪ್ ಪಂಚನಾಮೆ ದಿನಾಂಕ: 18-09-2015. 7. ಮಾಲು ಪಟ್ಟಿ ಸಂಖ್ಯೆ: ಕೆ. ಎಲ್. ಎ. ಪೋವಿ.138/15, ದಿನಾಂಕ: 18-09-2015. 8. ಆರೋಪಿತ ಶ್ರೀ ಟಿ ಟಿ ಪೂಜಾರಿ ರವರ ಪ್ರತಿರಕ್ಷಣಾ ಹೇಳಿಕೆ ದಿನಾಂಕ: 18-09-2015. 9. ದಸ್ತಗಿರಿ ತಿಳುವಳಿಕೆ ಪತ್ರ ದಿನಾಂಕ: 18-09-2015. 10. ಆರೋಪಿತರ ಮೇಲಾಧಿಕಾರಿಗಳಾದ ಶ್ರೀ ಹೆಚ್. ಯು. ತಳವಾರ್, ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರ ವರದಿ ದಿನಾಂಕ: 18-09-2015.

ಸಂಖ್ಯೆ: ಸಕಾಅ:ನಂ.3.ಕಉವಿ.ಕೃತ್ಯದ ನಕ್ಷೆ. 2015-16 / 473-74, ದಿನಾಂಕ: 20-11-2015.

20. ಎಫ್ ಎಸ್ ಎಲ್, ಮಡಿವಾಳ ರವರ ಸ್ವೀಕೃತಿ ಪತ್ರ ಸಂಖ್ಯೆ: ಎಫ್. ಎಸ್. ಎಲ್ (ಬಿ) /192/2016, ದಿನಾಂಕ: 13-01-2016. 21. ತಾಂತ್ರಿಕ ಶಿಕ್ಷಣ ಇಲಾಖೆಯಿಂದ ನೀಡಿರುವ ಆರೋಪಿತರ ಕರ್ತವ್ಯ ಮತ್ತು ಸೇವಾ ವಿವರಗಳು ದಿನಾಂಕ: 29-02-2016. 22. ಬಿ ಎಸ್ ಎನ್ ಎಲ್ ರವರು ನೀಡಿರುವ ಸಿ ಡಿ ಆರ್ ಮತ್ತು ಕಲಂ 65(ಬ) ಭಾ.ಸಾ.ಅಧಿನಿಯಮ, 1872 ರ ಪ್ರಮಾಣ ಪತ್ರ ದಿನಾಂಕ: 19-08-2016.

ದಿನಾಂಕ: 25-08-2016.

24. ಫಿರ್ಯಾದುದಾರರಾದ ಶ್ರೀಮತಿ ಜನಾಬಾಯಿ ರವರ ಹೇಳಿಕೆ ದಿನಾಂಕ: 19-09-2015. 25. ಫಿರ್ಯಾದುದಾರರ ಸಂಬಂಧಿ ಶ್ರೀ ಸುಧಾಕರ್ ರವರ ಹೇಳಿಕೆ ದಿನಾಂಕ: 19-09-2015. 26. ಸಾಕ್ಷಿ ಶ್ರೀ ಕೆ. ಸಿ. ತಿಮ್ಮಯ್ಯ ರವರ ಹೇಳಿಕೆ ದಿನಾಂಕ: 19-09-2015 ಮತ್ತು 16-11-2015. 27. ಸಾಕ್ಷಿ ಶ್ರೀ ಡಿ. ಸಿ. ನಾಗರಾಜು ರವರ ಹೇಳಿಕೆ ದಿನಾಂಕ: 19-09-2015 ಮತ್ತು 16-11-2015. 28. ಪಿ ಸಿ ಗಳಾದ ಶ್ರೀ ರವೀಂದ್ರ, ಶ್ರೀ ನಂಜುಂಡ, ಶ್ರೀ ಬನ್ನ ರವರ ಹೇಳಿಕೆ ದಿನಾಂಕ: 19-09-2015. 29. ಮಹಿಳಾ ಪಿ ಸಿ ಯಾದ ಶ್ರೀಮತಿ ಕುಸುಮ ರವರು ಹೇಳಿಕೆ ದಿನಾಂಕ: 19-09-2015. 30. ಪಿ ಸಿ ಯಾದ ಶ್ರೀ ನಯಾಜ್ ರವರ ಹೇಳಿಕೆ ದಿನಾಂಕ: 18-12-2015. 31. ಮಹಿಳಾ ಪಿ ಸಿ ಯಾದ ಶ್ರೀಮತಿ ಜೆ ಸವಿತ ರವರ ಹೇಳಿಕೆ ದಿನಾಂಕ: 14-01-2016. 32. ತನಿಖಾಧಿಕಾರಿ ಶ್ರೀ ಆರ್ ಸುಧೀರ್ ರವರು ನೀಡಿರುವ ಕಲಂ 65(ಬಿ) ಭಾ ಸಾ ಅಧಿನಿಯಮ, 1872 ರ ಪ್ರಮಾಣ ಪತ್ರ.

3. ಶ್ರೀ ರಾಜಕುಮಾರ ರವರು ಸಹ ಶಿಕ್ಷಕರಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾದೇಪುರ, ಬಸವಕಲ್ಯಾಣ ತಾಲ್ಲೂಕು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ದಿನಾಂಕ: 11-03-2012 ರಂದು ನಿಧನರಾಗಿರುತ್ತಾರೆ. ಇವರ ಪತ್ನಿ ಶ್ರೀಮತಿ ಜನಾಬಾಯಿ ರವರು ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ನೇಮಕ ಮಾಡುವ ಬಗ್ಗೆ ಅರ್ಜಿ ಸಲ್ಲಿಸಿದ್ದು, ಇವರನ್ನು ಬೀದರ್ ಜಿಲ್ಲೆಯಲ್ಲಿನ ಖಾಲಿ ಇರುವ ಹುದ್ದೆಗೆ ನೇಮಕ ಮಾಡುವ ಪ್ರಸ್ತಾವನೆಯುಳ್ಳ ಕಡತವು ಪ್ರಾದೇಶಿಕ ಆಯುಕ್ತರ ಕಚೇರಿ, ಕಲಬುರಗಿ ಇಲ್ಲಿಂದ ದಿನಾಂಕ: ಏಪ್ರಿಲ್, 2015 ರಂದು ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಇಲ್ಲಿಗೆ ರವಾನಿಸಲಾಗಿರುತ್ತದೆ. ಈ ಸಂಬಂಧವಾಗಿ ಶ್ರೀಮತಿ ಜನಾಬಾಯಿ ಮತ್ತು ಇವರ ಸಂಬಂಧಿ ಶ್ರೀ ಸುಧಾಕರ್ ರವರು ದಿನಾಂಕ: 16-09-2015 ರಂದು ಬೆಳಗ್ಗೆ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಆಡಳಿತಾಧಿಕಾರಿಯಾದ ಶ್ರೀ ಟಿ. ಟಿ. ಪೂಜಾರಿ ರವರನ್ನು ಭೇಟಿ ಮಾಡಿ ಪತಿಯ ಅಕಾಲಿಕ ಮರಣದ ಬಗ್ಗೆ, ಆರ್ಥಿಕ ಸಂಕಷ್ಟದ ಬಗ್ಗೆ, ಪತಿಯ ಚಿಕಿತ್ಸೆಗಾಗಿ ಮಾಡಿದ ಸಾಲದ ಬಗ್ಗೆ, ಇರುವ ಮಕ್ಕಳ ಬಗ್ಗೆ ಹಾಗೂ ಒಡಹುಟ್ಟಿದವರು ಯಾರೂ ಇಲ್ಲದಿರುವ ಬಗ್ಗೆ ವಿವರಿಸುತ್ತಾ, ತಾನು ಕೇವಲ 23 ವರ್ಷದವಳಾಗಿದ್ದು, ಜೀವನದಲ್ಲಿ ಈಗಾಗಲೇ ಬಹಳ ನೊಂದಿರುವ ಕಾರಣ ಅನುಕಂಪದ ನೇಮಕಾತಿಗಾಗೆ ಅರ್ಜಿ ಸಲ್ಲಿಸಿ 3 ವರ್ಷಗಳು ಕಳೆದಿರುವುದರಿಂದ ನನಗೆ ನೇಮಿಸಿರುವ ಜಿಲ್ಲೆಯಲ್ಲಿನ ಖಾಲಿ ಜಾಗಕ್ಕೆ ನೇಮಕಾತಿ ನೀಡಿದಲ್ಲಿ, ನನ್ನ ಬದುಕಿಗೊಂದು ದಾರಿಯಾಗುತ್ತದೆ ಎಂದು ಕೇಳಿಕೊಂಡರೂ, ದುಡ್ಡು ಕೊಟ್ಟರೇನೆ ನೇಮಕಾತಿ ಪತ್ರ ನೀಡುತ್ತೇನೆಂದು ಶ್ರೀ ಪೂಜಾರಿ ರವರು ತಿಳಿಸಿದ ಕಾರಣ,ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೩, ೨೦೧೭ ೪೦೧ ಸಾಲ ಮಾಡಿ ತಂದಿದ್ದ ಐದು ಸಾವಿರ ರೂಪಾಯಿಗಳನ್ನು ಶ್ರೀಮತಿ ಜನಾಬಾಯಿ ರವರು ಶ್ರೀ ಪೂಜಾರಿ ರವರಿಗೆ ನೀಡಿರುತ್ತಾರೆ. ನಂತರ, ಶ್ರೀ ಪೂಜಾರಿ ರವರು ನಿಮ್ಮ ಜಿಲ್ಲೆಗೇ ನೇಮಕಾತಿ ಬೇಕಾದಲ್ಲಿ, ಐವತ್ತು ಸಾವಿರ ರೂಪಾಯಿ ನೀಡಬೇಕೆಂದು, ಈಗ ನೀಡಿರುವ ಐದು ಸಾವಿರಗಳನ್ನು ಹೊರತುಪಡಿಸಿದಲ್ಲಿ, ಉಳಿಕೆ ನಲವತ್ತೈದು ಸಾವಿರ ರೂಪಾಯಿಗಳನ್ನು ದಿನಾಂಕ: 18-09-2015 ರಂದು ಬೆಳಗ್ಗೆ ನೀಡಿದಲ್ಲಿ, ಅಂದೇ ಸಂಜೆ ನೇಮಕಾತಿ ಪತ್ರ ನೀಡುವುದಾಗಿ ಲಂಚದ ಹಣಕ್ಕಾಗಿ ಒತ್ತಾಯಿಸಿರುವ ಸಂಭಾಷಣೆಯನ್ನು ಶ್ರೀ ಸುಧಾಕರ್ ರವರು ತಮ್ಮ ಸ್ಯಾಮಸಂಗ್ ಡ್ಯೂಸ್ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿರುತ್ತಾರೆ. ಆ ನಂತರ ಲಂಚದ ಹಣವನ್ನು ನೀಡಲು ಇಷ್ಟವಿಲ್ಲದ ಶ್ರೀಮತಿ ಜನಾಬಾಯಿ ರವರು ದಿನಾಂಕ: 18-09-2015 ರಂದು ಕರ್ನಾಟಕ ಲೋಕಾಯುಕ್ತ, ಬೆಂಗಳೂರು ನಗರ ವಿಭಾಗದ ಕಛೇರಿಗೆ ಹಾಜರಾಗಿ ಶ್ರೀ ಪೂಜಾರ್ ರವರ ವಿರುದ್ದ ದೂರು ನೀಡಿ, ರೆಕಾರ್ಡ್ ಮಾಡಿಕೊಂಡಿದ್ದ ಮೊಬೈಲನ್ನು ಹಾಜರುಪಡಿಸಿರುತ್ತಾರೆ.

4. ತನಿಖಾಧಿಕಾರಿಯಾದ ಶ್ರೀ ಆರ್ ಸುಧೀರ್ ರವರು ಫಿರ್ಯಾದುದಾರರಾದ ಶ್ರೀಮತಿ ಜನಾಬಾಯಿ ರವರು ಸಲ್ಲಿಸಿದ ದೂರನ್ನು ಪರಾಮರ್ಶಿಸಿ, ದೂರಿನ ಸಂಬಂಧದ ಬಾಕಿ ಇರುವ ಕೆಲಸ, ದಾಖಲಾತಿಗಳ ವಿವರ, ಸರ್ಕಾರಿ ಕೆಲಸ ಎಂದಿನಿಂದ ಬಾಕಿ ಇರುತ್ತದೆ, ಲಂಚ ಅಪೇಕ್ಷಿಸಲು ಕಾರಣ, ಕೆಲಸಕ್ಕಾಗಿ ಫಿರ್ಯಾದುದಾರರು ಎಷ್ಟು ಬಾರಿ ಭೇಟಿ ನೀಡಿರುತ್ತಾರೆ, ಲಂಚಕ್ಕಾಗಿ ಬೇಡಿಕೆಯ ವಿವರಗಳು, ಧ್ವನಿ ಮುದ್ರಣ ಇತ್ಯಾದಿಗಳನ್ನು ಕೂಲಂಕಷವಾಗಿ ಪರಾಮರ್ಶಿಸಿ, ಶ್ರೀಮತಿ ಜನಾಬಾಯಿ ರವರಿಗೆ ಅನುಕಂಪದ ನೇಮಕಾತಿ ಆದೇಶದ ಪ್ರತಿ ನೀಡುವ ಕೆಲಸ ಬಾಕಿ ಇರುವುದು, ಲಂಚದ ಬೇಡಿಕೆಯ ಬಗ್ಗೆ ನಡೆದ ಸಂಭಾಷಣೆಯು ಮೊಬೈಲ್‌ನಲ್ಲಿ ಧ್ವನಿಮುದ್ರಣಗೊಂಡಿರುವುದು, ಏಪ್ರಿಲ್ 2015 ರಿಂದ ಸದರಿ ಕೆಲಸವು ಬಾಕಿ ಇರುವುದು, ಬೀದರ್ ಜಿಲ್ಲೆಯಲ್ಲಿನ ಖಾಲಿ ಮೊಬೈಲ್‌ನಲ್ಲಿ ಮುದ್ರಣಗೊಂಡಿರುವುದು ಇತ್ಯಾದಿಗಳನ್ನು ಪರಿಶೀಲಿಸಿ, ಆರೋಪಿತ ಶ್ರೀ ಪೂಜಾರ್ ರವರು ಲಂಚದ ಹಣಕ್ಕಾಗಿ ಫಿರ್ಯಾದುದಾರರಲ್ಲಿ ಬೇಡಿಕೆ ಇಟ್ಟಿರುವುದು ಸತ್ಯಾಂಶದಿಂದ ಕೂಡಿದ್ದು, ದೃಡಪಟ್ಟ ಹಿನ್ನೆಲೆಯಲ್ಲಿ ಇವರ ವಿರುದ್ದ, ಕರ್ನಾಟಕ ಲೋಕಾಯುಕ್ತ ಮೊಕದ್ದಮೆ ಸಂಖ್ಯೆ: 65/2015 ಕಲಂ 7 ಲಂಚ ನಿರೋಧ ಕಾಯ್ದೆ, 1988 ರಡಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ ಮತ್ತು ಈ ಬಗೆಗಿನ ಅಸಲು ಪ್ರಥಮ ವರ್ತಮಾನ ವರದಿಯನ್ನು ಸಕ್ಷಮ ನ್ಯಾಯಾಲಯಕ್ಕೆ ನಿವೇದಿಸಿಕೊಂಡು, ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ತಿಳಿಸಿ, ಮುಂದಿನ ತನಿಖೆಯನ್ನು ಕೈಗೊಂಡಿರುವುದು ಅಂತಿಮ ತನಿಖಾ ವರದಿಯಿಂದ ಕಂಡುಬರುತ್ತದೆ.

5. ಸದರಿ ಆರೋಪಿತ ಶ್ರೀ ಟಿ. ಟಿ. ಪೂಜಾರ್ ರವರನ್ನು ಟ್ರ್ಯಾಪ್‌ಗೆ ಒಳಪಡಿಸುವ ಮುನ್ನ ತನಿಖಾಧಿಕಾರಿಗಳು, ಶ್ರೀ ತಿಮ್ಮಯ್ಯ ಕೆ. ಸಿ. ಬಿನ್ ಕ.ೆ ಕ.ೆ ಚಂಗಪ್ಪ ಮತ್ತು ಶ್ರೀ ಡಿ ಸಿ ನಾಗರಾಜು ಬಿನ್ ಚೆನ್ನಪ್ಪ, ಬೆಂಗಳೂರು ಇವರುಗಳನ್ನು ನೆರಳು ಸಾಕ್ಷಿದಾರರನ್ನಾಗಿ ಸಿದ್ದಪಡಿಸುವ ಮತ್ತು ಟ್ರ್ಯಾಪ್ ಪೂರ್ವದ ಸಿದ್ದತೆಗಳ ಬಗ್ಗೆ ಪ್ರಾಯೋಗಿಕ ಕ್ರಮಗಳಾದ ಸಾಕ್ಷಿದಾರರನ್ನು ಸಿದ್ದಪಡಿಸುವುದು, ಲಂಚದ ಹಣದ ನೋಟುಗಳ ವಿವರಗಳನ್ನು ದಾಖಲಿಸುವುದು, ಪ್ರಾಯೋಗಿಕ ಪಂಚನಾಮೆಯ ಭಾವಚಿತ್ರ / ರೆಕಾರ್ಡಿಂಗ್ ಮಾಡಿರುವುದು, ಫಿರ್ಯಾದುದಾರರಿಗೆ ಮತ್ತು ಅವರ ಸಂಬಂಧಿಗೆ ಲಂಚದ ಹಣವನ್ನು ಆರೋಪಿತರಿಗೆ ಯಾವ ಸನ್ನಿವೇಶ / ಸಂದರ್ಭದಲ್ಲಿ ನೀಡಬೇಕು, ಲಂಚದ ಹಣವನ್ನು ನೀಡಿದ ನಂತರ ಯಾವ ತರಹದ ಸನ್ನೆಯನ್ನು ತನಿಖಾಧಿಕಾರಿಗೆ ನೀಡಬೇಕು, ಆರೋಪಿತರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನಡೆಯುವ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಳ್ಳುವ ಬಗ್ಗೆ, ನೆರಳು ಸಾಕ್ಷಿದಾರರು ಫಿರ್ಯಾದುದಾರರನ್ನು ಹಿಂಬಾಲಿಸಿ ಆರೋಪಿತರೊಂದಿಗೆ ನಡೆಸುವ ವಿದ್ಯಮಾನವನ್ನು ಗಮನಿಸುವ ಬಗ್ಗೆ, ಆರೋಪಿತರು ಲಂಚದ ಹಣವನ್ನು ಎಲ್ಲಿ ಇರಿಸಿಕೊಳ್ಳುತ್ತಾರೆ ಎಂಬುದನ್ನು ಗಮನಿಸುವ ಬಗ್ಗೆ ಹಾಗೂ ಈ ಎಲ್ಲ ವಿದ್ಯಮಾನಗಳನ್ನು ಪ್ರಕರಣ ಮುಗಿಯುವವರೆಗೆ ಗೋಪ್ಯವಾಗಿಡುವಂತೆ ತನಿಖಾಧಿಕಾರಿಗಳು ಸಲಹೆ ಸೂಚನೆ ನೀಡಿರುವುದು ಅಂತಿಮ ತನಿಖಾ ವರದಿಯಿಂದ ವೇದ್ಯವಾಗುತ್ತದೆ.

6. ದಿನಾಂಕ: 16-09-2015 ರಂದು ಫಿರ್ಯಾದುದಾರರು ಆರೋಪಿತರನ್ನು ಅವರ ಕಛೇರಿಯಲ್ಲಿ ಭೇಟಿ ಮಾಡಿ ಅನುಕಂಪದ ನೇಮಕಾತಿಯ ಸಂಬಂಧವಾಗಿ ಅವರೊಂದಿಗೆ ಮಾತನಾಡಿದ ವಿವರಗಳು, ಲಂಚದ ಹಣಕ್ಕಾಗಿ ಆರೋಪಿತರು ಬೇಡಿಕೆ ಇಟ್ಟಿರುವುದು ಇತ್ಯಾದಿಗಳ ಸಂಭಾಷಣೆಯು ಮೊಬೈಲ್‌ನಲ್ಲಿ ಧ್ವನಿಮುದ್ರಣಗೊಂಡಿರುವುದನ್ನು ಪ್ರಾಯೋಗಿಕ ಪಂಚನಾಮೆಯಲ್ಲಿ ಪಂಚರುಗಳಿಗೆ ಕೇಳಿಸಲಾಗಿರುವುದು ಮತ್ತು ಇದರಿಂದ ಆರೋಪಿತರು ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ದೃಡಪಟ್ಟಿದ್ದು, ನಂತರ ಇದನ್ನು ಸಿಡಿ ಗೆ ವರ್ಗಾಯಿಸಿರುವುದು ಅಂತಿಮ ತನಿಖಾ ವರದಿಯಿಂದ ವೇದ್ಯವಾಗುತ್ತದೆ.

7. ಪ್ರಾಯೋಗಿಕ ಪಂಚನಾಮೆಯು ದಿನಾಂಕ: 18-09-2015 ರಂದು ಸಮಯ ಮದ್ಯಾಹ್ನ 12-15 ರಿಂದ 01-40 ರವರೆಗೆ ನಡೆದಿದ್ದು, ಇದಾದ ನಂತರ, ತನಿಖಾಧಿಕಾರಿಯವರು ತನಿಖಾ ಸಹಾಯಾಧಿಕಾರಿ, ಫಿರ್ಯಾದುದಾರರು ಮತ್ತು ಅವರ ಸಂಬಂಧಿ, ಪಂಚರಾದ ನೆರಳು ಸಾಕ್ಷಿದಾರರು ಮತ್ತು ನಾಲ್ಕು ಜನ ಪೊಲೀಸ್ ಸಿಬ್ಬಂದಿಯೊಂದಿಗೆ ಆರೋಪಿತರು ಕೆಲಸ ನಿರ್ವಹಿಸುವ ಕಛೇರಿಗೆ ಕಾಲ್ನಡಿಗೆಯಲ್ಲಿ ತೆರಳಿದಾಗ ಸಮಯ 2.20 ಶ್ರೀ ಸುಧಾಕರ್ ರವರು ಡಿಜಿಟಲ್ ವಾಯ್ಸ್ ರೆಕಾರ್ಡರನ್ನು ಆನ್ ಮಾಡಿಕೊಂಡಿರುವುದು, ಫಿರ್ಯಾದಿ ಮತ್ತು ಇವರ ಸಂಬಂಧಿ ಆರೋಪಿತರ ಕಛೇರಿಗೆ ಮುಂದೆ ಮುಂದೆ ಹೋದಂತೆ ಸ್ವಲ್ಪ ಅಂತರ ಕಾಯ್ದುಕೊಂಡು ನೆರಳು ಸಾಕ್ಷಿದಾರರು ಇವರನ್ನು ಹಿಂಬಾಲಿಸಿರುವುದು, ಇವರನ್ನು ಹಿಂಬಾಲಿಸಿ ಟ್ರ್ಯಾಪ್ ತಂಡದ ಇತರೇ ಸದಸ್ಯರು ಹೋಗಿರುವ ವಿವರಗಳು ಅಂತಿಮ ತನಿಖಾ ವರದಿಯಲ್ಲಿ ಕಂಡುಬರುತ್ತದೆ. ಇದಾದ ನಂತರ, ಸಮಯ 2.30 ಗಂಟೆಗೆ ಫಿರ್ಯಾದುದಾರರು ಆರೋಪಿತರ ಕಛೇರಿಯ ವರಾಂಡಕ್ಕೆ ಬಂದು ಪ್ರಾಯೋಗಿಕ ಪಂಚನಾಮೆಯಲ್ಲಿ ನೀಡಿದ ಸೂಚನೆಯಂತೆ ತನ್ನ ಕನ್ನಡಕವನ್ನು ತೆಗೆಯುವ ಮೂಲಕ ತನಿಖಾ ತಂಡಕ್ಕೆ ಸೂಚನೆ ನೀಡಿರುತ್ತಾರೆ. ಈ ಸೂಚನೆಯನ್ನು ಗಮನಿಸಿದ ತನಿಖಾಧಿಕಾರಿಯವರು ಮತ್ತು ಟ್ರ್ಯಾಪ್ ತಂಡದ ಇತರೇ ಸದಸ್ಯರು ಫಿರ್ಯಾದುದಾರರು ತಿಳಿಸಿದಂತೆ, ಆರೋಪಿತರ ಕಛೇರಿಯೊಳಗೆ ಪ್ರವೇಶಿಸಿ, ಅಲ್ಲಿದ್ದ ಶ್ರೀ ಟಿ ಟಿ ಪೂಜಾರ್ ರವರನ್ನು ಫಿರ್ಯಾದುದಾರರು ಗುರುತಿಸಿದ್ದು, ಇವರೇ ತನ್ನಿಂದ ಅಂದರೆ ಫಿರ್ಯಾದುದಾರರಿಂದ ಲಂಚದ ಹಣವನ್ನು ಪಡೆದು ತಾನು ಧರಿಸಿದ್ದ ಪ್ಯಾಂಟಿನ ಬಲಭಾಗದಲ್ಲಿ ಇಟ್ಟುಕೊಂಡಿರುವ ಬಗ್ಗೆ ತಿಳಿಸಿದಂತೆ, ತನಿಖಾ ತಂಡವು ಅವರನ್ನು ಸುತ್ತುವರೆದು ತಾವು ಬಂದಿರುವ ಉದ್ದೇಶವನ್ನು ತಿಳಿಸಿ, ಆರೋಪಿತರ ಹೆಸರು, ವಿಳಾಸ ಮತ್ತು ನಿರ್ವಹಿಸುವ ಕೆಲಸದ ವಿವರಗಳನ್ನು ಪಡೆದು ತನಿಖೆ ಮುಂದುವರೆಸಿರುವುದು ಮತ್ತು ಲಂಚದ ಹಣವನ್ನು ಯಾವ ರೀತಿ ಸಂದಾಯ ಮಾಡಲಾಯಿತು ಎಂಬ ವಿವರಗಳ ಬಗ್ಗೆ ಫಿರ್ಯಾದುದಾರರಿಂದ ಹೇಳಿಕೆ ಪಡೆದಿರುವುದು ಅಂತಿಮ ತನಿಖಾ ವರದಿಯಿಂದ ಕಂಡುಬರುತ್ತದೆ.

8. ಟ್ರ್ಯಾಪ್ ತಂಡದ ಸದಸ್ಯರಾದ ಪಿ. ಸಿ. ಶ್ರೀ ನಂಜುಂಡ ರವರು ಶುದ್ದವಾದ ಬಟ್ಟಲುಗಳಲ್ಲಿ ಸಿದ್ದಪಡಿಸಿದ ಸೋಡಿಯಂ ಕಾರ್ಬೋನೇಟ್ ದ್ರಾವಣದಲ್ಲಿ ಲಂಚದ ಹಣವನ್ನು ಸ್ವೀಕರಿಸಿದ ಆರೋಪಿ ಶ್ರೀ ಪೂಜಾರ್ ರವರ ಬಲಗೈ ಮತ್ತು ಎಡಗೈ ಬೆರಳುಗಳನ್ನು ದ್ರಾವಣದಲ್ಲಿ ಅದ್ದಿ ತೊಳೆದಾಗ೪೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೩, ೨೦೧೭ ಭಾಗ ೧ ಬಣ್ಣರಹಿತವಾಗಿದ್ದ ದ್ರಾವಣ ತಿಳಿಗುಲಾಬಿ ಬಣ್ಣಕ್ಕೆ ತಿರುಗಿರುವುದು ಮತ್ತು ಸದರಿ ದ್ರಾವಣವನ್ನು ತನಿಖೆಯ ಸಂಬಂಧವಾಗಿ ಅಮಾನತ್ತುಪಡಿಸಿಕೊಂಡಿರುವ ಸಂಗತಿಯು ಅಂತಿಮ ತನಿಖಾ ವರದಿಯಲ್ಲಿ ಕಂಡುಬರುತ್ತದೆ. ನಂತರ, ಸ್ವೀಕರಿಸಿದ ಲಂಚದ ಹಣವು ಇರುವ ಜಾಗದ ಬಗ್ಗೆ ಆರೋಪಿತರು ತಿಳಿಸಿದಂತೆ, ಅವರ ಪ್ಯಾಂಟಿನ ಮುಂಭಾಗದ ಬಲಭಾಗದ ಜೇಬಿನಿಂದ ಪಂಚರ ಸಮಕ್ಷಮ ತೆಗೆಸಿ ಪರಿಶೀಲಿಸಿದಾಗ, ಪ್ರಾಯೋಗಿಕ ಪಂಚನಾಮೆಯಲ್ಲಿ ಫಿನಾಪ್ತಲಿನ್ ಪುಡಿಯನ್ನು ಹಚ್ಚಿ ನೀಡಿದ ಹಣವಾಗಿದ್ದು, ಇದರಲ್ಲಿ ` 1000 ಮುಖಬೆಲೆಯ 36 ನೋಟುಗಳು ಮತ್ತು ` 500 ಮುಖಬೆಲೆಯ 8 ನೋಟುಗಳು ಇರುತ್ತವೆ ಹಾಗೂ ಈ ನೋಟುಗಳ ಮೇಲಿನ ನಂಬರುಗಳು ಪ್ರಾಯೋಗಿಕ ಪಂಚನಾಮೆಯಲ್ಲಿ ಈ ಮೊದಲೇ ಬರೆದುಕೊಂಡಿದ್ದ ನಂಬರುಗಳಿಗೆ ತಾಳೆಯಾಗಿರುವುದು, ನಂತರ ಇದನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿ ಸೀಲ್ ಮಾಡಿರುವುದು ಅಂತಿಮ ತನಿಖಾ ವರದಿಯಿಂದ ಕಂಡುಬರುತ್ತದೆ.

9. ಫಿರ್ಯಾದುದಾರರು ಮತ್ತು ಅವರ ಸಂಬಂಧಿ ಶ್ರೀ ಸುಧಾಕರ್ ರವರು ಆರೋಪಿತರನ್ನು ಭೇಟಿ ಮಾಡಿದ್ದು, ಪ್ರಾಯೋಗಿಕ ಪಂಚನಾಮೆ ಸಮಯದಲ್ಲಿ ಫಿನಾಪ್ತಲೀನ್ ಪುಡಿಯನ್ನು ಸವರಿದ ಲಂಚದ ಹಣವನ್ನು ಆರೋಪಿತರಿಗೆ ನೀಡಿದ್ದು, ಅದನ್ನು ಅವರು ಬಲಭಾಗದ ಜೇಬಿನಲ್ಲಿ ಇರಿಸಿಕೊಂಡಿದ್ದು, ಇತ್ಯಾದಿ ಘಟನಾವಳಿಗಳನ್ನು ನೆರಳು ಸಾಕ್ಷಿದಾರರಾದ ಶ್ರೀ ತಿಮ್ಮಯ್ಯ ರವರು ತನಿಖಾಧಿಕಾರಿಗೆ ವಿವರಿಸಿ ಹೇಳಿರುವುದು ಅಂತಿಮ ತನಿಖಾ ವರದಿಯಿಂದ ತಿಳಿದುಬರುತ್ತದೆ. ಹಾಗೆಯೇ, ಫಿರ್ಯಾದುದಾರರಿಂದ ಆರೋಪಿತರು ಲಂಚದ ಹಣ ` 40000-00 ಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ಕಛೇರಿಯ 3 ನೇ ಮಹಡಿಯ ಕೊಠಡಿ ಸಂಖ್ಯೆ 304 ರಲ್ಲಿ ಸ್ವೀಕರಿಸಿ ತನ್ನ ಪ್ಯಾಂಟಿನ ಮುಂಭಾಗದ ಬಲಭಾಗದ ಜೇಬಿನಲ್ಲಿ ಇರಿಸಿಕೊಂಡಿರುವ ಮಾಹಿತಿಯು ಸಹ ತನಿಖಾ ವರದಿಯಲ್ಲಿ ಇರುತ್ತದೆ.

10. ಆರೋಪಿತರಿಂದ ಲಂಚದ ಹಣವನ್ನು ಅಮಾನತ್ತುಪಡಿಸಿಕೊಂಡ ನಂತರ, ಅವರ ದೇಹಾರೋಗ್ಯದ ವಿಚಾರದ ಬಗ್ಗೆ ನೀಡಿದ ಮನವಿಯನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡಿರುವುದು, ಲಂಚದ ಹಣವನ್ನು ಪಡೆದ ಕೊಠಡಿಯ ಚಕ್ಕುಬಂದಿಯ ಬಗ್ಗೆ ತನಿಖಾಧಿಕಾರಿಯವರು ಕಚ್ಚಾ ನಕ್ಷೆಯನ್ನು ಸಿದ್ದಪಡಿಸಿ, ಅದಕ್ಕೆ ಪಂಚರ ಸಹಿ ಪಡೆದು, ತಾನೂ ಸಹ ಸಹಿ ಮಾಡಿರುವುದು, ವಾಯ್ಸ್ ರೆಕಾರ್ಡ್ ನಲ್ಲಿ ಆರೋಪಿತರ ಮತ್ತು ಫಿರ್ಯಾದುದಾರರ ನಡುವೆ ನಡೆದ ಸಂಭಾಷಣೆಯ ಧ್ವನಿಮುದ್ರಣವನ್ನು ಪಂಚರ ಸಮಕ್ಷಮ ಕೇಳಿಸಿ ನಂತರ ಲಿಪಿಕರಣ ಮಾಡಿರುವ ವಿವರಗಳು ತನಿಖಾ ವರದಿಯಲ್ಲಿ ಇರುತ್ತದೆ. ಸದರಿ ಸಂಭಾಷಣೆಯ ಲಿಪಿಕರಣವನ್ನು ಅವಲೋಕಿಸಿದಾಗ, ಆರೋಪಿತರು ಮತ್ತು ಫಿರ್ಯಾದುದಾರರ ನಡುವೆ ಲಂಚದ ಹಣದ ಬಗ್ಗೆ ಮಾತುಕತೆ ನಡೆದಿರುವುದು ವೇದ್ಯವಾಗುತ್ತದೆ. ನಂತರ ಸದರಿ ಸಂಭಾಷಣೆಯನ್ನು ಶ್ರೀ ಹೆಚ್. ಯು. ತಳವಾರ್, ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇವರಿಗೆ ಕೇಳಿಸಲಾಗಿ, ಇದರಲ್ಲಿ ಒಬ್ಬರ ಧ್ವನಿಯು ಶ್ರೀ ಟಿ. ಟಿ. ಪೂಜಾರ್, ಸಹಾಯಕ ಆಡಳಿತಾಧಿಕಾರಿಯದ್ದು ಎಂದು ದೃಡೀಕರಿಸಿರುವುದು ಕಂಡುಬರುತ್ತದೆ.

11. ಮೇಲಿನ ಎಲ್ಲ ವಿದ್ಯಮಾನಗಳಿಂದ ಹಾಗೂ ಅಮಾನತ್ತುಪಡಿಸಿಕೊಂಡ ದಾಖಲೆ ಪ್ರತಿಗಳು ಮತ್ತು ರಾಸಾಯನಿಕ ಮಿಶ್ರಣದ ದ್ರಾವಣದಿಂದ ವೇದ್ಯವಾಗುವುದೇನೆಂದರೆ, ಆರೋಪಿತರಾದ ಶ್ರೀ ಟಿ. ಟಿ. ಪೂಜಾರ್ ರವರು ಫಿರ್ಯಾದುದಾರರಿಂದ ಲಂಚದ ಹಣವನ್ನು ತಮ್ಮ ಕಛೇರಿಯಲ್ಲಿ ಸ್ವೀಕರಿಸಿ ಜೇಬಿನಲ್ಲಿ ಇರಿಸಿಕೊಂಡಿರುವುದು, ಲಂಚದ ಹಣವನ್ನು / ನೋಟುಗಳನ್ನು ಸ್ವಹಸ್ತದಿಂದ ಸ್ವೀಕರಿಸಿದ ಕಾರಣದಿಂದಾಗಿ ರಾಸಾಯನಿಕ ದ್ರಾವಣವು ತಿಳಿಗುಲಾಬಿ ಬಣ್ಣಕ್ಕೆ ತಿರುಗಿರುವುದು, ರಾಸಾಯನಿಕ ಪರೀಕ್ಷಕರ ವರದಿಯಂತೆ ಆರೋಪಿತರ ಕೈ ಬೆರಳುಗಳನ್ನು ತೊಳೆಸಿದ ದ್ರಾವಣದಲ್ಲಿ ಫಿನಾಫ್ತಲಿನ್ ಮತ್ತು ಸೋಡಿಯಂ ಕಾರ್ಬೋನೇಟ್ ಅಂಶವಿರುವುದು ದೃಡಪಟ್ಟಿರುವುದು, ವಿಧಿವಿಜ್ಞಾನ ಪ್ರಯೋಗಾಲಯ, ಮಡಿವಾಳ ಇವರ ವರದಿಯಲ್ಲಿ ಆರೋಪಿತರ ಧ್ವನಿಯು ಹೋಲಿಕೆಯಾಗಿರುವುದರಿಂದ, ಆರೋಪಿತ ಶ್ರೀ ಟಿ. ಟಿ. ಪೂಜಾರ್, ಸಹಾಯಕ ಆಡಳಿತಾಧಿಕಾರಿ, ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಫಿರ್ಯಾದುದಾರರಾದ ಶ್ರೀಮತಿ ಜನಾಬಾಯಿ ಮತ್ತು ಅವರ ಸಂಬಂಧಿ ಶ್ರೀ ಸುಧಾಕರ್ ರವರಿಂದ ಅನುಕಂಪದ ನೇಮಕಾತಿಯ ವಿಷಯವಾಗಿ ಲಂಚದ ಹಣವನ್ನು ಪಡೆದಿರುವುದು ದೃಡಪಡುತ್ತದೆ. ಇದಕ್ಕೆ ಪೂರಕವಾಗಿ, ನೆರಳು ಸಾಕ್ಷಿದಾರರ ಹೇಳಿಕೆಗಳು, ಟ್ರ್ಯಾಪ್ ತಂಡದ ಸದಸ್ಯರ ಹೇಳಿಕೆಗಳು, ವಾಯ್ಸ್ ರೆಕಾರ್ಡ್‌ನಲ್ಲಿನ ಸಂಭಾಷಣೆಗಳು ಮತ್ತು ಅದರ ದೃಡೀಕರಣ, ರಾಸಾಯನಿಕ ತಜ್ಞರ ವರದಿ ಇತ್ಯಾದಿಗಳು ಪುಷ್ಟೀಕರಿಸುವುದನ್ನು ಗಮನಿಸಬಹುದಾಗಿದೆ.

12. ಅಂತಿಮ ತನಿಖಾ ವರದಿಯಲ್ಲಿನ ಅಂಶಗಳನ್ನು ಮೇಲ್ಕಂಡಂತೆ ಸಕ್ಷಮ ಪ್ರಾಧಿಕಾರವು ಕೂಲಂಕಶವಾಗಿ ಪರಿಶೀಲಿಸಿ, ಪರಾಮರ್ಶಿಸಿದಾಗ, ಆರೋಪಿತ ಶ್ರೀ ಟಿ. ಟಿ. ಪೂಜಾರ್, ಸಹಾಯಕ ಆಡಳಿತಾಧಿಕಾರಿ, ತಾಂತ್ರಿಕ ಶಿಕ್ಷಣ ಇಲಾಖೆ ಇವರು ಫಿರ್ಯಾದುದಾರರಾದ ಶ್ರೀಮತಿ ಜನಾಬಾಯಿ ರವರಿಂದ ಲಂಚದ ಹಣವನ್ನು ಒತ್ತಾಯಪೂರ್ವಕವಾಗಿ ಪಡೆಯುವ ಮೂಲಕ ದುರ್ವತನೆ ಎಸಗಿ, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ, 1988 ರ ಕಲಂ 7, 13(1)(ಡಿ) ಸಹವಾಚನ 13(2) ರಡಿ ಎಸಗಿರುವ ಶಿಕ್ಷಾರ್ಹ ಅಪರಾಧಕ್ಕಾಗಿ ಸಕ್ಷಮ ನ್ಯಾಯಾಲಯದಲ್ಲಿ ಅಭಿಯೋಜನೆಗೆ ಒಳಪಡಿಸಲು ಅಂತಿಮ ತನಿಖಾ ವರದಿಯಂತೆ ಸಮರ್ಥನೀಯ ಕಾರಣಗಳು ಇರುವುದನ್ನು ಮನಗಂಡು ಸಕ್ಷಮ ಪ್ರಾಧಿಕಾರವಾದ ಸರ್ಕಾರವು, ಆರೋಪಿತ ಶ್ರೀ ಟಿ. ಟಿ. ಪೂಜಾರ್ ರವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಹಾಗೂ ಕೆಲಸದಿಂದ ತೆಗೆದುಹಾಕುವ ಅಧಿಕಾರವನ್ನು ಹೊಂದಿರುವುದರಿಂದ, ಈ ಕೆಳಕಂಡಂತೆ ಆದೇಶ ಹೊರಡಿಸುತ್ತದೆ.

ಸರ್ಕಾರದ ಆದೇಶ ಸಂಖ್ಯೆ: ಇಡಿ 217 ಡಿಟಿಇ 2015, ಬೆಂಗಳೂರು, ದಿನಾಂಕ: 06/12/ 2016.

ಸಕ್ಷಮ ಪ್ರಾಧಿಕಾರವಾದ ಸರ್ಕಾರವು, ಶ್ರೀಟಿ.ಟಿ.ಪೂಜಾರ್, ಸಹಾಯಕ ಆಡಳಿತಾಧಿಕಾರಿ, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು ಇವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಹಾಗೂ ಕೆಲಸದಿಂದ ತೆಗೆದುಹಾಕುವ ಅಧಿಕಾರವನ್ನು ಹೊಂದಿದ್ದು, ಆರೋಪಿಯಾದ ಶ್ರೀ ಟಿ. ಟಿ. ಪೂಜಾರ್, ಹಿಂದಿನ ಆಡಳಿತಾಧಿಕಾರಿ (ಪ್ರಭಾರ), ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು ಇವರ ವಿರುದ್ದದ ಲಂಚ ಸ್ವೀಕಾರದ ಆಪಾದನೆಗಳು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ, 1988ರ ಕಲಂ 7, 13(1)(ಡಿ) ಸಹವಾಚನ 13(2)ರ ಪ್ರಕಾರ ದೃಡಪಟ್ಟಿರುವುದರಿಂದ, ಇವರು ಎಸಗಿರುವ ಶಿಕ್ಷಾರ್ಹ ಅಪರಾಧಕ್ಕಾಗಿ ಇವರನ್ನು ಅಭಿಯೋಜನೆಗೆ ಒಳಪಡಿಸಲು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ, 1988 ರ ಕಲಂ 19(1)(ಬಿ) ರಡಿ ಸರ್ಕಾರದ ಅನುಮೋದನೆಯನ್ನು ನೀಡಿದೆ.

ಕರ್ನಾಟಕ ಸರ್ಕಾರದ (ವ್ಯವಹಾರ) ನಿಯಮಾವಳಿ, 1977 ರ ಪ್ರಕಾರ, ಈ ಮೇಲ್ಕಂಡ ಆದೇಶವನ್ನು ನನ್ನ ಕಛೇರಿಯ ಮೊಹರು ಮತ್ತು ನನ್ನ ಸಹಿ ಅಡಿಯಲ್ಲಿ ದಿನಾಂಕ: 30/11/2016 ರಂದು ಹೊರಡಿಸಿದೆ.

P.R. 29

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC- 25

ಎಸ್. ವೆಂಕಟೇಶ್,

ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ ಶಿಕ್ಷಣ)

ಉನ್ನತ ಶಿಕ್ಷಣ ಇಲಾಖೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೩, ೨೦೧೭ ೪೦೩

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯ

ವಿಷಯ : ಶ್ರೀ ಜಿ.ಎಸ್ ಸೋಮಶೇಖರ್, ಸಹಾಯಕ ನಿರ್ದೇಶಕರು ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ (ಹಾಲಿ ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು) ಇವರ ಸೇವೆಯನ್ನು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಯಂ ಆಗಿ ವಿಲೀನಗೊಳಿಸುವ ಬಗ್ಗೆ.

ಓದಲಾಗಿದೆ : 1) ಮಾನ್ಯ ಮುಖ್ಯಮಂತ್ರಿಯವರ ಟಿಪ್ಪಣಿ ಸಂಖ್ಯೆ:ಸಿಎಂ/51681/ಟಿಆರ್ ಎಫ್-1 ದಿ:29.09.2016.

2) ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು, ಇವರ ಪತ್ರ ಸಂಖ್ಯೆಹಿಂವಕನಿ:ಸಿಬ್ಬಂದಿ-1:ಸಿಆರ್-13:2016-17, ದಿನಾಂಕ:09.11.2016.

3) ಸಮಾಜ ಕಲ್ಯಾಣ ಇಲಾಖೆಯ ಕಡತ ಸಂಖ್ಯೆ:ಸಕಇ 485 ಪಕಸೇ 2016, ದಿನಾಂಕ: 19.01.2017.

ಪ್ರಸ್ತಾವನೆ :-

ಮೇಲೆ (1)ರಲ್ಲಿ ಓದಲಾದ ದಿನಾಂಕ:29.09.2016 ಮತ್ತು 19.01.2017ರ ಪತ್ರಗಳಲ್ಲಿ, ಶ್ರೀ ಜಿ.ಎಸ್. ಸೋಮಶೇಖರ್‌ರವರು ಹಾಲಿ ಜಿಲ್ಲಾ ಅಧಿಕಾರಿ, (ನಿಯೋಜನೆ ಮೇಲೆ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು ಇಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಸದರಿಯವರು ಗ್ರೂಪ್-ಎ ಅಧಿಕಾರಿಯಾಗಿದ್ದು, ಮಾತೃ ಸಮಾಜ ಕಲ್ಯಾಣ ಇಲಾಖೆಯವರಾಗಿರುತ್ತಾರೆ.ಸದರಿ ಅಧಿಕಾರಿಯವರ ಸೇವೆಯು ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅವಶ್ಯಕತೆ ಇರುವುದರಿಂದ, ಮತ್ತು ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆಯಿರುವುದರಿಂದ ಸದರಿ ಅಧಿಕಾರಿಯನ್ನು ಖಾಯಂ ಆಗಿ ವಿಲೀನಗೊಳಿಸಲು ಸೂಚಿಸಿರುತ್ತಾರೆ.

ಮೇಲೆ (2)ರಲ್ಲಿ ಓದಲಾದ ದಿನಾಂಕ:09.11.2016 ಪತ್ರದಲ್ಲಿ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರು ಶ್ರೀ ಜಿ. ಎಸ್ ಸೋಮಶೇಖರ್ ಹಾಲಿ ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೈಸೂರು ಇವರು ಮೂಲತ: ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿದ್ದು, ಸದರಿ ಅಧಿಕಾರಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಯಂ ಆಗಿ ವಿಲೀನಗೊಳಿಸುವ ಬಗ್ಗೆ ಈ ಕೆಳಕಂಡಂತೆ ಅಭಿಪ್ರಾಯವನ್ನು ನೀಡಿರುತ್ತಾರೆ.

➢ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಒಟ್ಟು 36 ಸಹಾಯಕ ನಿರ್ದೇಶಕರು/ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಹುದ್ದೆಗಳು ಮಂಜೂರಾಗಿದ್ದು, ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಸದರಿ ಹುದ್ದೆಗಳನ್ನು ಶೇ.50 ನೇರ ನೇಮಕಾತಿ ಹಾಗೂ ಶೇ.50 ಮುಂಬಡ್ತಿ ಮೂಲಕ ಭರ್ತಿ ಮಾಡಬೇಕಾಗಿರುತ್ತದೆ.

➢ ನೇರ ನೇಮಕಾತಿ ಕೋಟಾದಡಿ ಹಾಲಿ 16 ಹುದ್ದೆಗಳು ಲಭ್ಯವಿದ್ದು, ಸದರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ 04.8.2015ರಲ್ಲಿ ರೋಸ್ಟರ್ ಬಿಂದುವಿನ ಮಾಹಿತಿಯೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ.

➢ ಶ್ರೀ ಜಿ.ಎಸ್. ಸೋಮಶೇಖರ್ ಇವರನ್ನು ನೇರ ನೇಮಕಾತಿ ಕೋಟಾದಡಿಯಲ್ಲಿಯೇ ವಿಲೀನಗೊಳಿಸಬೇಕಾಗಿದೆ. ➢ ಸದರಿ ಅಧಿಕಾರಿಯು ದಿನಾಂಕ: 24.10.2014ರಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ನಿಯೋಜನೆ ಮೇಲೆ ಸೇವೆ ಸಲ್ಲಿಸುತ್ತಿದ್ದು, ಇವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲಾಖೆಯಲ್ಲಿ ಬಹುತೇಕ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಹುದ್ದೆಗಳು ಖಾಲಿ ಇರುವುದರಿಂದ ಸದರಿ ಅಧಿಕಾರಿಯನ್ನು ಸಮಾಜ ಕಲ್ಯಾಣ ಇಲಾಖೆಯ ಅಭಿಪ್ರಾಯ ಪಡೆದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಖಾಯಂ ಆಗಿ ವಿಲೀನಗೊಳಿಸಬಹುದಾಗಿರುತ್ತದೆ.

ಮೇಲೆ (3)ರಲ್ಲಿ ಓದಲಾದ 19.01.2017ರಲ್ಲಿ ಶ್ರೀ ಜಿ.ಎಸ್. ಸೋಮಶೇಖರ್, ಸಹಾಯಕ ನಿರ್ದೇಶಕರು ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ (ಹಾಲಿ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು) ಇವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಯಂ ಆಗಿ ವಿಲೀನಗೊಳಿಸುವ ಕುರಿತು ಮಾನ್ಯ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಅನುಮೋದಿಸಿರುವಂತೆ ಸೂಕ್ತ ಆದೇಶ ಹೊರಡಿಸುವಂತೆ ಕೋರಿ ಶ್ರೀ ಜಿ.ಎಸ್. ಸೋಮಶೇಖರ್, ಸಹಾಯಕ ನಿರ್ದೇಶಕರು ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ (ಹಾಲಿ ನಿಯೋಜನೆ ಮೇಲೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು) ಸೇವೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ನೀಡಿರುತ್ತಾರೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆಯಿದ್ದು ಇಲಾಖೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ತೊಂದರೆ ಯಾಗಿರುವುದರಿಂದ ಖಾಯಂ ಅಧಿಕಾರಿಗಳ ಅವಶ್ಯಕತೆ ಇರುವುದನ್ನು ಮನಗಂಡು ಶ್ರೀ ಜಿ.ಎಸ್ ಸೋಮಶೇಖರ್, ಸಹಾಯಕ ನಿರ್ದೇಶಕರು ಗ್ರೇಡ್-1, (ವೇತನ ಶ್ರೇಣಿ 28100-50100) ಸಮಾಜ ಕಲ್ಯಾಣ ಇಲಾಖೆ (ಹಾಲಿ ನಿಯೋಜನೆ ಮೇಲೆ ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು)ಇವರ ಸೇವೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಯಂ ಆಗಿ ವಿಲೀನಗೊಳಿಸಲು ಕೂಲಂಕಷವಾಗಿ ಪರಿಶೀಲಿಸಿದೆ.

ಆದುದರಿಂದ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಹಿಂವಕ424 ಬಿಇಟಿ 2016, ಬೆಂಗಳೂರು, ದಿನಾಂಕ:01.02.2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದಾಗಿ ಶ್ರೀ ಜಿ.ಎಸ್ ಸೋಮಶೇಖರ್, ಸಹಾಯಕ ನಿರ್ದೇಶಕರು ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ (ಹಾಲಿ ನಿಯೋಜನೆ ಮೇಲೆ ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು)ಇವರ ಸೇವೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಜಿಲ್ಲಾ ಅಧಿಕಾರಿ, ಹುದ್ದೆಗೆ ಕರ್ನಾಟಕ ನಾಗರಿಕ ಸೇವೆಗಳು(ಸಾಮಾನ್ಯ ನೇಮಕಾತಿ) ನಿಯಮಾವಳಿಗಳು 1977 ನಿಯಮ 16(ಎ)(ii) ಮೇರೆಗೆ ಈ ಕೆಳಕಂಡ ಷರತ್ತಿಗೊಳಪಟ್ಟು ನೇರ ನೇಮಕಾತಿ ಹುದ್ದೆಯಲ್ಲಿ ಖಾಯಂ ಆಗಿ ವಿಲೀನಗೊಳಿಸಿ ಆದೇಶಿಸಿದೆ.

ಈ ಸಂಬಂಧದಲ್ಲಿ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರು ಈ ಕೆಳಗೆ ವಿಧಿಸಿರುವ ಷರತ್ತುಗಳನ್ನು ಸದರಿ ಅಧಿಕಾರಿಯಿಂದ ಖಾತ್ರಿ

ಪಡಿಸಿಕೊಳ್ಳತಕ್ಕದ್ದು :

೪೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೩, ೨೦೧೭ ಭಾಗ ೧
1 ಸ ಂಬಂಧಪಟ್ಟ ಅಧಿಕಾರಿಯು ಸಕ್ರಮವಾಗಿ ನೇಮಕ ಮಾಡಿಕೊಂಡಿರಬೇಕು ಹಾಗೂ ಅವರು ತಮ್ಮ ಮಾತೃ ಇಲಾಖೆಯಲ್ಲಿ ಪ ರಿವೀಕ್ಷಣಾವಧಿ/ಸ್ಥಾನಪನ್ನ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿರಬೇಕು;
2 ಸ ಂಬಂಧಪಟ್ಟ ಅಧಿಕಾರಿಯು ವರ್ಗಾವಣೆ ಮೂಲಕ ನೇಮಿಸಲು ಉದ್ದೇಶಿಸಿರುವ ಹುದ್ದೆಗೆ ನಿಗದಿಪಡಿಸಿರಬಹುದಾದ ಇಲಾಖಾ ಪ ರೀಕ್ಷೆಗಳಲ್ಲಿ ತ ೕರ್ಗಡೆಯಾಗಿರಬೇಕು, ೆ ಒಂದು ವ ೕಳೆ ೆ ನಿರ್ದಿಷ್ಟಪಡಿಸಲಾದ ಇಲಾಖಾ ಪ ರೀಕ್ಷೆಗಳಲ್ಲಿ ತ ೕರ್ಗಡೆಯಾಗದಿದ್ದಲ್ಲಿ ಮುಂದಿನ 2 ವರ್ಷಗಳ ಒಳಗೆ ಉತ್ತೀರ್ಣರಾಗತಕ್ಕದ್ದು. ೆ
3 ಪ ಸ್ತಾವನೆ ವರ್ಗಾವಣೆ ಮೂಲಕ ನೇಮಕಾತಿಯನ್ನು ಅಧಿಕಾರಿಯ ಕೋರಿಕೆಯ ಮೇರೆಗೆ ಮಾಡಲು ಉದ್ದೇಶಿಸಿದ್ದಲ್ಲಿ, ್ರ ವ ರ್ಗಾವಣೆ ಮೂಲಕ ನೇಮಿಸಲಾಗಿರುವ ಹುದ್ದೆಯಲ್ಲಿ ಈ ಅಧಿಕಾರಿಯ ಜ್ಯೇಷ್ಠತೆಯನ್ನು ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತೆ) ನಿಯಮಗಳು 1957ರ ನಿಯಮ 6 ರ ಮೊದಲನೇ ಪರಂತುಕದನುಸಾರ ನಿರ್ಧರಿಸಬೇಕು; ಈ ಬಗ್ಗೆ ನೌಕರರ ಒಪ್ಪಿಕೆಯನ್ನು ಬರವಣಿಗೆಯ ಮೂಲಕ ಪಡೆಯಬೇಕು;
4 ಸ ಂಬಂಧಪಟ್ಟ ಅಧಿಕಾರಿಯು ಮಾತೃ ಇಲಾಖೆಯಲ್ಲಿ ಹೊಂದಿರುವ ಹುದ್ದೆಯ ವೇತನ ಶ್ರೇಣಿ ಮತ್ತು ವರ್ಗಾವಣೆ ಮೂಲಕ ನೇಮಿಸಲು ಉದ್ದೇಶಿಸಿರುವ ಹುದ್ದೆಯ ವೇತನ ಶ್ರೇಣಿಗಳು ಸಮಾನ ವೇತನ ಶ್ರೇಣಿಗಳಾಗಿರಬೇಕು;
5 ಪ ಸ್ತಾಪಿತ ವರ್ಗಾವಣೆ ಮೂಲಕ ನೇಮಕಾತಿಗೆ ಅಧಿಕಾರಿ/ನೌಕರರ ಮಾತೃ ಇಲಾಖೆ ಹಾಗೂ ಇವರನ್ನು ವರ್ಗಾವಣೆ ್ರ ವ ುೂಲಕ ನೇಮಿಸಲು ಉದ್ದೇಶಿಸಿರುವ ಇಲಾಖೆಗಳು ಒಪ್ಪಿರಬೇಕು;
6 ವ ರ್ಗಾವಣೆ ಮೂಲಕ ನೇಮಕಾತಿಯನ್ನು ಅಧಿಕಾರಿಯ ಸೇವಾ ಅವಧಿಯಲ್ಲಿ ಒಮ್ಮೆ ಮಾತ್ರ ಮಾಡಿರಬೇಕು;
7 ಅಧಿಕಾರಿಯು ವರ್ಗಾವಣೆ ಭತ್ಯೆ ಪಡೆಯಲು ಅರ್ಹರಿರುವುದಿಲ್ಲ.
8 ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳು 1977ರ ನಿಯಮ 16(ಎ)(ii) ರಡಿ ಮಾಡುವ ವ ರ್ಗಾವಣೆ ಮೂಲಕ ನೇರ ನೇಮಕಾತಿಗೆ ಸಂಬಂಧಿಸಿದ ಇಲಾಖಾ ಸಚಿವರ ಅನುಮೋದನೆ ಪಡೆಯುವುದು ಅವಶ್ಯಕ.

ಮೇಲ್ಕಂಡ ಎಲ್ಲಾ ಷರತ್ತುಗಳನ್ನು ಪೂರೈಸುವ ಮುಚ್ಚಳಿಕೆಯ ಪ್ರಮಾಣ ಪತ್ರವನ್ನು ಛಾಪಾ ಕಾಗದದ ಮೂಲಕ ಪಡೆಯತಕ್ಕದ್ದು.

P.R. 65

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25

ಎನ್.ಆರ್.ಎರೆಕುಪ್ಪಿ,

ಸರ್ಕಾರದ ಅಧೀನ ಕಾರ್ಯದರ್ಶಿ-1

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಇಂಧನ ಸಚಿವಾಲಯ

ವಿಷಯ: ತುಮಕೂರುಜಿಲ್ಲೆಯ ಪಾವಗಡತಾಲ್ಲೂಕಿನಲ್ಲಿ 200 ಮೆ.ವ್ಯಾ.ಸಾಮರ್ಥ್ಯದ ಸೋಲಾರ್ ಘಟಕಗಳನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (ಕ್ರೆಡಲ್) ವತಿಯಿಂದ ಸ್ಥಾಪಿಸುವುದರ ಬಗ್ಗೆ.

ಓದಲಾಗಿದೆ: 1. ಸೌರ ವಿದ್ಯುತ್ ನೀತಿ 2014-21 ಅಧಿಸೂಚನೆ ಸಂಖ್ಯೆ: ಇಎನ್ 21 ವಿಎಸ್‌ಸಿ 2014, ದಿನಾಂಕ: 22.05.2014.

2. ಸರ್ಕಾರಿ ಆದೇಶ ಸಂಖ್ಯೆ:ಇಎನ್26ವಿಎಸ್‌ಸಿ2015 ದಿನಾಂಕ:02.02.2016.

3. ವ್ಯವಸ್ಥಾಪಕ ನಿರ್ದೇಶಕರು, ಕ್ರೆಡಲ್‌ರವರ ಪತ್ರ ಸಂಖ್ಯೆ: ಕೆ.ಆರ್.ಇ.ಡಿ.ಎಲ್/07/ಎಸ್‌ಜಿ-385/2017/367 ದಿನಾಂಕ: 17.01.2017.

ಪ್ರಸ್ತಾವನೆ :

ರಾಜ್ಯದಲ್ಲಿ ಸೋಲಾರ್ ಪಾರ್ಕ್ ಅಭಿವೃದ್ಧಿಗಾಗಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಮತ್ತು ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ M/s. Solar Energy Corporation of India Limited (SECI) ಜಂಟಿ ಸಹಯೋಗದೊಂದಿಗೆ ಕರ್ನಾಟಕ ಸೌರ ಶಕ್ತಿ ಅಭಿವೃದ್ಧಿ ನಿಯಮಿತ (ಕೆ.ಎಸ್.ಪಿ.ಡಿ.ಸಿ.ಎಲ್) ಕಂಪನಿಯನ್ನು ರಚಿಸಲಾಗಿರುತ್ತದೆ. ಸದರಿ ಕಂಪನಿಯು ತುಮಕೂರುಜಿಲ್ಲೆ ಪಾವಗಡ ತಾಲ್ಲೂಕು ನಾಗಲಮಡಿಕೆ ಹೋಬಳಿಯ ವಳ್ಳೂರು, ಕ್ಯಾತಗಾನಚೆರ್ಲು, ಬಳಸಮುದ್ರ, ತಿರುಮಣಿ, ರಾಯಚೆರ್ಲು ಗ್ರಾಮಗಳಲ್ಲಿ ಸುಮಾರು 2000 ಮೆ.ವ್ಯಾ ಸಾಮರ್ಥ್ಯದಸೋಲಾರ್ ಪಾರ್ಕ್ ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ.ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ ನಿಯಮಿತ(ಎನ್.ಟಿ.ಪಿ.ಸಿ) ರವರಿಂದ 1600 ಮೆ.ವ್ಯಾ. ಮತ್ತು M/s.SECI ರವರಿಂದ 200 ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಎನ್.ಟಿ.ಪಿ.ಸಿರವರಿಗೆ ಈಗಾಗಲೇ ಸೋಲಾರ್ ಪಾರ್ಕ್‌ನಲ್ಲಿ ಒಟ್ಟು 900 ಮೆ.ವ್ಯಾ (600 ಮೆ.ವ್ಯಾ. ಸೌರ ವಿದ್ಯುತ್:300 ಮೆ.ವ್ಯಾ ಶಾಖೋತ್ಪನ್ನ ವಿದ್ಯುತ್) ಸಾಮರ್ಥ್ಯದ ಸಂಯೋಜಿತ ವಿದ್ಯುತ್‌ಗೆ ಮೇಲೆ ಓದಲಾದ (2)ರಲ್ಲಿ ವಿದ್ಯುತ್ ಹಂಚಿಕೆಯನ್ನು ನೀಡಲಾಗಿದೆ.

ಪ್ರಸ್ತುತ ಮೇಲೆ ಓದಲಾದ (3)ರಲ್ಲಿ ವ್ಯವಸ್ಥಾಪಕ ನಿರ್ದೇಶಕರು ಕ್ರೆಡಲ್‌ರವರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಒಟ್ಟು ಸಾಮರ್ಥ್ಯದ 2000 ಮೆ.ವ್ಯಾ. ನಲ್ಲಿ ಬಾಕಿ ಉಳಿದಿರುವ 200 ಮೆ.ವ್ಯಾ. ಸಾಮರ್ಥ್ಯಕ್ಕೆ ಸೌರ ವಿದ್ಯುತ್ ಘಟಕವನ್ನು ಕ್ರೆಡಲ್ ವತಿಯಿಂದ ಸ್ಥಾಪಿಸಲು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಮುಂದುವರೆದು, ಘಟಕವನ್ನು ಸ್ಥಾಪಿಸುವ ಸಲುವಾಗಿ ಕ್ರೆಡಲ್ ವತಿಯಿಂದ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳಲು, ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುತ್ ಮಾರಾಟದರವು ಟೆಂಡರ್‌ನಲ್ಲಿ ಸ್ವೀಕೃತವಾಗುವ ಮೊತ್ತವನ್ನು ಅವಲಂಬಿಸಿರುವ ಪ್ರಯುಕ್ತಟೆಂಡರ್ ಪ್ರಕ್ರಿಯೆ ನಂತರ ವಿದ್ಯುತ್ ದರದ ಕುರಿತು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆ.ಇ.ಆರ್.ಸಿ) ಮುಂದೆ ಮಂಡಿಸಿ ನಿರ್ಧಾರಿಸ ಬೇಕಾಗಿರುತ್ತದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಿರುತ್ತಾರೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೩, ೨೦೧೭ ೪೦೫

ಕ್ರೆಡಲ್‌ನ ಪ್ರಸ್ತಾವನೆಯಂತೆ, ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ 200 ಮೆ.ವ್ಯಾ. ಸಾಮರ್ಥ್ಯದ ಸೌರ ವಿದ್ಯುತ್ ಘಟಕವನ್ನು ಕ್ರೆಡಲ್ ವತಿಯಿಂದ ಅನುಷ್ಠಾನಗೊಳಿಸಲು, ಈ ಕೆಳಗಿನ ಆದೇಶ:

ಸರ್ಕಾರಿ ಆದೇಶ ಸಂಖ್ಯೆ : ಇಎನ್ 19 ವಿಎಸ್‌ಸಿ 2017, ಬೆಂಗಳೂರು, ದಿನಾಂಕ : 07.02.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ತುಮಕೂರು ಜಿಲ್ಲೆಯ ಪಾವಗಡ ಸೋಲಾರ್ ಪಾರ್ಕಿನ 2000ಮೆ.ವ್ಯಾ. ಸಾಮರ್ಥ್ಯದಲ್ಲಿ ಉಳಿದಿರುವ 200 ಮೆ.ವ್ಯಾ ಸಾಮರ್ಥ್ಯದ ಸೌರ ವಿದ್ಯುತ್ ಘಟಕಗಳನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (ಕ್ರೆಡಲ್) ವತಿಯಿಂದ ಅನುಷ್ಠಾನಗೊಳಿಸಲು ಆದೇಶಿಸಿದೆ.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು KTPP ಅಧಿನಿಯಮದನ್ವಯ ಮುಂದಿನ ಕ್ರಮ ಜರುಗಿಸುವುದು.

P.R. 66

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-10

ಬಿ.ವಿ. ಶ್ರೀನಿವಾಸಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಇಂಧನ ಇಲಾಖೆ.

ಒಳಾಡಳಿತ ಸಚಿವಾಲಯ

ವಿಷಯ:- ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿರವರಿಗೆ ವೇತನವನ್ನು ಮರು ನಿಗಧಿಪಡಿಸುವ ಬಗ್ಗೆ.

ಓದಲಾಗಿದೆ : 1. ಶ್ರೀ ಬಿ.ಶಿವಲಿಂಗೇಗೌಡ, ಕಾರ್ಯದರ್ಶಿ, ನ್ಯಾಯಮೂರ್ತಿ ಶ್ರೀ ಕೆ.ಎನ್.ಕೇಶವನಾರಾಯಣ ವಿಚಾರಣಾ ಆಯೋಗ ಇವರ ಪತ್ರ ಸಂ: ಕೆಎನ್‌ಕೆಜೆ/15/2016, ದಿನಾಂಕ: 2.11.2016.

2. ಶ್ರೀ ಬಿ.ಶಿವಲಿಂಗೇಗೌಡ, ಕಾರ್ಯದರ್ಶಿ, ನ್ಯಾಯಮೂರ್ತಿ ಶ್ರೀ ಕೆ.ಎನ್.ಕೇಶವನಾರಾಯಣ ವಿಚಾರಣಾ ಆಯೋಗ ಇವರ ಪತ್ರ ಸಂ: ಕೆಎನ್‌ಕೆಜೆ/16/2016, ದಿನಾಂಕ: 2.11.2016.

3. ಆರ್ಥಿಕ ಇಲಾಖೆಯ ಟಿಪ್ಪಣಿ ಸಂ: ಆಇ 1211 ಸೇ-3/2016(ಆರ್ಥಿಕ ಇಲಾಖೆಯ ಸೇವೆಗಳು-3) ದಿನಾಂಕ: 28.11.2016.

4. ಸರ್ಕಾರದ ಸಮ ಸಂಖ್ಯೆ ಆದೇಶ ದಿನಾಂಕ 05.01.2017.

5. ಶ್ರೀ ಬಿ.ಶಿವಲಿಂಗೇಗೌಡ, ಕಾರ್ಯದರ್ಶಿ, ನ್ಯಾಯಮೂರ್ತಿ ಶ್ರೀ ಕೆ.ಎನ್.ಕೇಶವನಾರಾಯಣ ವಿಚಾರಣಾ

ಆಯೋಗ ಇವರ ಪತ್ರ ಸಂ: ಕೆಎನ್‌ಕೆಸಿಐ/72/2016-17, ದಿನಾಂಕ: 12.01.2017.

6. ಶ್ರೀ ಬಿ.ಶಿವಲಿಂಗೇಗೌಡ, ಕಾರ್ಯದರ್ಶಿ, ನ್ಯಾಯಮೂರ್ತಿ ಶ್ರೀ ಕೆ.ಎನ್.ಕೇಶವನಾರಾಯಣ ವಿಚಾರಣಾ

ಆಯೋಗ ಇವರ ಪತ್ರ ಸಂ: ಕೆಎನ್‌ಕೆಸಿಐ/73/2016-17, ದಿನಾಂಕ: 12.01.2017.

ಪ್ರಸ್ತಾವನೆ :

ಮೇಲೆ ಓದಲಾದ (1) & (2)ರ ಪತ್ರಗಳಲ್ಲಿ ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ ವಿಚಾರಣಾ ಆಯೋಗದ ಅಧ್ಯಕ್ಷರಾದ ಶ್ರೀ ಕೆ.ಎನ್.ಕೇಶವನಾರಾಯಣ ಮತ್ತು ಆಯೋಗದ ಕಾರ್ಯದರ್ಶಿಯವರಾದ ಶ್ರೀ ಬಿ.ಶಿವಲಿಂಗೇಗೌಡರವರಿಗೆ ವೇತನ ನಿಗಧಿಪಡಿಸಲು ಸರ್ಕಾರದ ಆದೇಶ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪ್ರಸ್ತಾವನೆಗೆ ಮೇಲೆ ಓದಲಾದ (3)ರ ಟಿಪ್ಪಣಿಯಲ್ಲಿ ಆರ್ಥಿಕ ಇಲಾಖೆಯು ಸಹಮತಿ ನೀಡಿದ್ದು, ಅದರನ್ವಯ ಮೇಲೆೆ ಓದಲಾದ (4)ರ ಆದೇಶದಲ್ಲಿ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿರವರಿಗೆ ವೇತನ ನಿಗಧಿಪಡಿಸಲಾಗಿತ್ತು.

ಆಯೋಗದ ಅಧ್ಯಕ್ಷರು ಮೇಲೆ ಓದಲಾದ (5) & (6)ರ ಪತ್ರಗಳಲ್ಲಿ ಸರ್ಕಾರದ ಆದೇಶ ದಿನಾಂಕ: 5.1.2017ನ್ನು ಮರುಪರಿಶೀಲಿಸಿ ವೇತನ ನಿಗದಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಮೇಲೆ ಓದಲಾದ (5) ಮತ್ತು (6)ರ ಪ್ರಸ್ತಾವನೆಯನ್ನು ಸರ್ಕಾರದಲ್ಲಿ ಕೂಲಂಕಷವಾಗಿ ಪರಿಶೀಲಿಸಿ, ಮೇಲೆ ಓದಲಾದ(4)ರ ಆದೇಶವನ್ನು ಹಿಂಪಡೆದು, ಈ ಕೆಳಕಂಡಂತೆ ಮರು ವೇತನ ಹಾಗೂ ಭತ್ಯೆಗಳನ್ನು ನಿಗಧಿಪಡಿಸಿ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಹೆಚ್‌ಡಿ 10 ಪಿಸಿಇ 2016 (ಭಾಗ-2), ಬೆಂಗಳೂರು, ದಿನಾಂಕ 21/02/2017.

ಮಾನ್ಯ ನ್ಯಾಯಮೂರ್ತಿ ಶ್ರೀ ಕೆ.ಎನ್.ಕೇಶವನಾರಾಯಣರವರಿಗೆ ಆಯೋಗದಲ್ಲಿ ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ನೀಡುವ ಸರಿಸಮವಾದ ಎಲ್ಲಾ (On par with a sitting Judge of High Court of Karnataka) ಸಂಭಾವನೆ ಮತ್ತು ಸವಲತ್ತು ಮತ್ತು ಭತ್ಯೆಗಳನ್ನು ಅವರು ಪಡೆಯುತ್ತಿರುವ ಪಿಂಚಣಿ ಹಣವನ್ನು ಕಡಿತಗೊಳಿಸಿ, ನೀಡತಕ್ಕದ್ದು.

ಮಾನ್ಯ ನ್ಯಾಯಮೂರ್ತಿ ಶ್ರೀ ಕೆ.ಎನ್.ಕೇಶವನಾರಾಯಣ ಆಯೋಗದ ಕಾರ್ಯದರ್ಶಿಯಾದ ಶ್ರೀ ಬಿ.ಶಿವಲಿಂಗೇಗೌಡರವರಿಗೆ ಆಯೋಗದಲ್ಲಿ ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಹಾಲಿ ಜಿಲ್ಲಾ ನ್ಯಾಯಾಧೀಶರಿಗೆ ನೀಡಬಹುದಾದ ಎಲ್ಲಾ ಸಂಭಾವನೆ ಮತ್ತು ಭತ್ಯೆಗಳನ್ನು ಸರಿಸಮನಾಗಿ ಅವರು ಪಡೆಯುತ್ತಿರುವ ಪಿಂಚಣಿ ಹಣವನ್ನು ಕಡಿತಗೊಳಿಸಿ ನೀಡತಕ್ಕದ್ದು.

೪೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೩, ೨೦೧೭ ಭಾಗ ೧

ಈ ಬಗ್ಗೆ ತಗಲುವ ವೆಚ್ಚವನ್ನು ಲೆಕ್ಕಶೀರ್ಷಿಕೆ 2070-00-150-0-02-059 ಇತರ ವಿಚಾರಣಾ ಆಯೋಗ (ಯೋಜನೇತರ) ಅಡಿಯಲ್ಲಿ ಸರ್ಕಾರವು ವಿಚಾರಣಾ ಆಯೋಗಕ್ಕೆ ಕಾಲ ಕಾಲಕ್ಕೆ ಬಿಡುಗಡೆ ಮಾಡುವ ಅನುದಾನದಿಂದ ಭರಿಸತಕ್ಕದ್ದು. ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂ: ಆಇ 111 ಸೇ-3/2017(ಆರ್ಥಿಕ ಇಲಾಖೆಯ ಸೇವೆಗಳು-3) ದಿನಾಂಕ 18.02.2017ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಲಾಗಿದೆ.

P.R. 67

SC-50

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಕೆ. ಪದ್ಮಿನಿ ದೇವಿ,

ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ. (ಕಾನೂನು ಮತ್ತು ಸುವ್ಯವಸ್ಥೆ)

ಒಳಾಡಳಿತ ಸಚಿವಾಲಯ

ವಿಷಯ :- ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿರವರಿಗೆ ವೇತನ ನಿಗಧಿಪಡಿಸಿರುವ ಆದೇಶ ಸಂ:ಹೆಚ್‌ಡಿ 10 ಪಿಸಿಇ 2016(ಭಾಗ-2) ದಿನಾಂಕ 05.01.2017ನ್ನು ಹಿಂಪಡೆಯುವ ಬಗ್ಗೆ.

ಓದಲಾಗಿದೆ : 1. ಶ್ರೀ ಬಿ.ಶಿವಲಿಂಗೇಗೌಡ, ಕಾರ್ಯದರ್ಶಿ, ನ್ಯಾಯಮೂರ್ತಿ ಶ್ರೀ ಕೆ.ಎನ್.ಕೇಶವನಾರಾಯಣ ವಿಚಾರಣಾ ಆಯೋಗ ಇವರ ಪತ್ರ ಸಂ: ಕೆಎನ್‌ಕೆಜೆ/15/2016, ದಿನಾಂಕ: 2.11.2016.

2. ಶ್ರೀ ಬಿ.ಶಿವಲಿಂಗೇಗೌಡ, ಕಾರ್ಯದರ್ಶಿ, ನ್ಯಾಯಮೂರ್ತಿ ಶ್ರೀ ಕೆ.ಎನ್.ಕೇಶವನಾರಾಯಣ ವಿಚಾರಣಾ ಆಯೋಗ ಇವರ ಪತ್ರ ಸಂ: ಕೆಎನ್‌ಕೆಜೆ/16/2016, ದಿನಾಂಕ: 2.11.2016.

3. ಆರ್ಥಿಕ ಇಲಾಖೆಯ ಟಿಪ್ಪಣಿ ಸಂ: ಆಇ 1211 ಸೇ-3/2016(ಆರ್ಥಿಕ ಇಲಾಖೆಯ ಸೇವೆಗಳು-3 ದಿನಾಂಕ:

28.11.2016.

4. ಸರ್ಕಾರದ ಸಮ ಸಂಖ್ಯೆ ಆದೇಶ ದಿನಾಂಕ 05.01.2017.

5. ಶ್ರೀ ಬಿ.ಶಿವಲಿಂಗೇಗೌಡ, ಕಾರ್ಯದರ್ಶಿ, ನ್ಯಾಯಮೂರ್ತಿ ಶ್ರೀ ಕೆ.ಎನ್.ಕೇಶವನಾರಾಯಣ ವಿಚಾರಣಾ ಆಯೋಗ ಇವರ ಪತ್ರ ಸಂ: ಕೆಎನ್‌ಕೆಸಿಐ/72/2016-17, ದಿನಾಂಕ: 12.01.2017.

6. ಶ್ರೀ ಬಿ.ಶಿವಲಿಂಗೇಗೌಡ, ಕಾರ್ಯದರ್ಶಿ, ನ್ಯಾಯಮೂರ್ತಿ ಶ್ರೀ ಕೆ.ಎನ್.ಕೇಶವನಾರಾಯಣ ವಿಚಾರಣಾ ಆಯೋಗ ಇವರ ಪತ್ರ ಸಂ: ಕೆಎನ್‌ಕೆಸಿಐ/73/2016-17, ದಿನಾಂಕ: 12.01.2017.

ಪ್ರಸ್ತಾವನೆ :

ಮೇಲೆ ಓದಲಾದ (1) & (2)ರ ಪತ್ರಗಳಲ್ಲಿ ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ ಆಯೋಗದ ಅಧ್ಯಕ್ಷರಿಗೆ ಮತ್ತು ಕಾರ್ಯದರ್ಶಿರವರಿಗೆ ವೇತನ ನಿಗಧಿಪಡಿಸಲು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿ ಮೇಲೆ ಓದಲಾದ(3)ರಲ್ಲಿ ಆರ್ಥಿಕ ಇಲಾಖೆಯ ಸಹಮತಿ ಪಡೆದು ಮೇಲೆ ಓದಲಾದ (4)ರಲ್ಲಿ ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ ಮತ್ತು ಶ್ರೀ ಬಿ.ಶಿವಲಿಂಗೇಗೌಡ, ವಿಚಾರಣಾ ಆಯೋಗದ ಕಾರ್ಯದರ್ಶಿರವರಿಗೆ ವೇತನ ನಿಗಧಿಪಡಿಸಿ ಆದೇಶ ಹೊರಡಿಸಲಾಗಿರುತ್ತದೆ.

ಮೇಲೆ ಓದಲಾದ (4)ರಲ್ಲಿ ಹೊರಡಿಸಲಾಗಿರುವ ಆದೇಶವನ್ನು ಪರಿಶೀಲಿಸಿ, ನ್ಯಾಯಮೂರ್ತಿ ಶ್ರೀ ಕೆ.ಎನ್.ಕೇಶವನಾರಾಯಣ ಮತ್ತು ಆಯೋಗದ ಕಾರ್ಯದರ್ಶಿಯಾದ ಶ್ರೀ ಬಿ.ಶಿವಲಿಂಗೇಗೌಡರವರು ಮತ್ತೊಮ್ಮೆ ವೇತನವನ್ನು ಮರು ನಿಗಧಿಪಡಿಸಿ ಆದೇಶ ಹೊರಡಿಸುವಂತೆ ಮೇಲೆ ಓದಲಾದ (5) ಮತ್ತು (6)ರಲ್ಲಿ ಕೋರಿರುತ್ತಾರೆ.

ಮೇಲೆ ಓದಲಾದ (5) ಮತ್ತು (6)ರಲ್ಲಿ ಕೋರಿರುವ ಪ್ರಸ್ತಾವನೆಯ ಬಗ್ಗೆ ಸರ್ಕಾರದಲ್ಲಿ ಕೂಲಂಕಷವಾಗಿ ಪರಿಶೀಲಿಸಿ ಮೇಲೆ ಓದಲಾದ(4)ರಲ್ಲಿ ಹೊರಡಿಸಲಾದ ಆದೇಶವನ್ನು ಹಿಂಪಡೆಯಲು ಉದ್ದೇಶಿಸಿದ್ದು, ಅದರಂತೆ, ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ:ಹೆಚ್‌ಡಿ 10 ಪಿಸಿಇ 2016(ಭಾಗ-2), ಬೆಂಗಳೂರು, ದಿನಾಂಕ 21/02/2017.

ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ ಮತ್ತು ಶ್ರೀ ಬಿ.ಶಿವಲಿಂಗೇಗೌಡ, ವಿಚಾರಣಾ ಆಯೋಗದ ಕಾರ್ಯದರ್ಶಿರವರಿಗೆ ವೇತನ ನಿಗದಿಪಡಿಸಿ ಮೇಲೆ ಓದಲಾದ(4)ರಲ್ಲಿ ಹೊರಡಿಸಲಾದ ಆದೇಶವನ್ನು ಹಿಂಪಡೆಯಲಾಗಿದೆ.

P.R. 68

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-50

ಕೆ. ಪದ್ಮಿನಿ ದೇವಿ, ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ. (ಕಾನೂನು ಮತ್ತು ಸುವ್ಯವಸ್ಥೆ)

ಸಮಾಜ ಕಲ್ಯಾಣ ಸಚಿವಾಲಯ

ಸೇರ್ಪಡೆ

ಸಂಖ್ಯೆ : ಸಕಇ 395 ಎಸ್‌ಡಿಸಿ 2015 (ಭಾ), ಬೆಂಗಳೂರು, ದಿನಾಂಕ : 17-02-2017.

ಸರ್ಕಾರದ ಆದೇಶ ಸಂಖ್ಯೆ : ಸಕಇ 395 ಎಸ್‌ಡಿಸಿ 2015, ದಿನಾಂಕ : 19-10-2016 ರ ಆದೇಶ ಭಾಗದಲ್ಲಿ 6ನೇ ಸಾಲಿನ ನಿಯಮ 8 (iii-) ರನ್ವಯ ಇದರ ಮುಂದೆ ಸಂಚಿತ ಸಹಿತ ಎಂಬುದಾಗಿ ಸೇರ್ಪಡೆ ಮಾಡಿದ್ದು, ಅದರಂತೆ ಓದಿಕೊಳ್ಳತಕ್ಕದ್ದು.

P.R. 69

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಬಿ.ಎನ್. ಸುಮತಿ, ಸರ್ಕಾರದ ಅಧೀನ ಕಾರ್ಯದರ್ಶಿ-3, ಸಮಾಜ ಕಲ್ಯಾಣ ಇಲಾಖೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೩, ೨೦೧೭ ೪೦೭

ಕಂದಾಯ ಸಚಿವಾಲಯ

ವಿಷಯ:- ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಪರೀಕ್ಷೆ ಸಮಿತಿಯ ಅವಧಿಯನ್ನು ವಿಸ್ತರಿಸುವ ಕುರಿತು. ಓದಲಾಗಿದೆ:- (1) ಸರ್ಕಾರದ ಆದೇಶ ಸಂಖ್ಯೆ:ಕಂಇ 216 ಮುಸೇವಿ 2007 ದಿನಾಂಕ:06.11.2007, ಮತ್ತು 04.01.2011.

(2) ಸರ್ಕಾರದ ಆದೇಶ ಸಂಖ್ಯೆ:ಕಂಇ 08 ಮುಸೇವಿ 2014, ದಿನಾಂಕ:05.02.2014. (3) ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ:ಎಡಿಎಂ/13/ಸಿಆರ್/42/2010-11 ದಿನಾಂಕ:15.03.2016.

ಪ್ರಸ್ತಾವನೆ :-

ಮೇಲೆ (1)ರಲ್ಲಿ ಓದಲಾದ ಸರ್ಕಾರದ ಆದೇಶ ದಿನಾಂಕ:06.11.2007ರಲ್ಲಿ ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಪರೀಕ್ಷಾ ಸಮಿತಿಯನ್ನು 7 ಜನ ಸದಸ್ಯರುಗಳನ್ನೊಳಗೊಂಡಂತೆ ಮೂರು ವರ್ಷಗಳ ಅವಧಿಗೆ ಕೆಲವು ಷರತ್ತುಗಳನ್ನು ವಿಧಿಸಿ ರಚಿಸಿ ಆದೇಶಿಸಲಾಗಿತ್ತು. ನಂತರ, ಅದೇ ಸಮ ಸಂಖ್ಯೆ ಸರ್ಕಾರದ ಆದೇಶ ದಿನಾಂಕ:04.01.2011ರಲ್ಲಿ ಸದರಿ ಸಮಿತಿಯನ್ನು ದಿನಾಂಕ:06.11.2010 ರಿಂದ ಮುಂದಿನ ಮೂರು ವರ್ಷಗಳ ಅವಧಿಗೆ ವಿಸ್ತರಿಸಿ ಆದೇಶಿಸಲಾಗಿತ್ತು.

ಮೇಲೆ (2)ರಲ್ಲಿ ಓದಲಾದ ಸರ್ಕಾರದ ಆದೇಶ ದಿನಾಂಕ:05.02.2014ರಲ್ಲಿ ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಪರೀಕ್ಷಾ ಸಮಿತಿಯ ಅವಧಿಯನ್ನು ಪುನಃ ದಿನಾಂಕ:07.11.2013 ರಿಂದ ಮುಂದಿನ ಮೂರು ವರ್ಷಗಳ ಅವಧಿಗೆ ವಿಸ್ತರಿಸಿ ಆದೇಶಿಸಲಾಗಿತ್ತು.

ಮೇಲೆ (3)ರಲ್ಲಿ ಓದಲಾದ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ದಿನಾಂಕ:15.03.2016ರ ಪತ್ರದಲ್ಲಿ ಸರ್ಕಾರದ ಆದೇಶಗಳನ್ವಯ, ಕರ್ನಾಟಕ ರಾಜ್ಯ ಆಗಮ ಶಿಕ್ಷಣಾ ಸಮಿತಿಯ ವತಿಯಿಂದ ವಿವಿಧ ಆಗಮ ಪ್ರವರ ಮತ್ತು ಪ್ರವೀಣ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಪ್ರಸ್ತುತ ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಪರೀಕ್ಷಾ ಸಮಿತಿಯ ಅವಧಿಯು ದಿನಾಂಕ:06.11.2016ಕ್ಕೆ ಮುಕ್ತಾಯವಾಗಲಿರುವುದರಿಂದ, ಸದರಿ ಸಮಿತಿಯ ಅವಧಿಯನ್ನು ದಿನಾಂಕ:07.11.2016 ರಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಮುಂದುವರೆಸುವಂತೆ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಕಂಇ 67 ಮುಸೇವಿ 2016, ಬೆಂಗಳೂರು, ದಿನಾಂಕ: 28ನೇ ಸೆಪ್ಟೆಂಬರ್, 2016.

ಮೇಲೆ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಪರೀಕ್ಷಾ ಸಮಿತಿಯನ್ನು ಈ ಕೆಳಕಂಡ

1. ಅಧ್ಯಕ್ಷರು ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ
2. ಸ ದ ಸ ್ಯ-ಕಾರ್ಯದರ್ಶಿ ದ ಾರ್ಮಿಕ ದತ್ತಿ ಆಯುಕ್ತರ ಕೇಂದ್ರ ಸ್ಥಾನಿಕ ಸಹಾಯಕರು-1, ದ ಾರ್ಮಿಕ ದತ್ತಿ ಇಲಾಖೆ, ಬೆಂಗಳೂರು
3. ಸ ದ ಸ ್ಯರು ಪ್ರಾಚಾರ್ಯರು, ಸ ರ್ಕಾರಿ ವ ುಹಾರಾಜ ಸ ಂಸ್ಕøತ ಕಾಲೇಜು, ವ ುೖಸೂರು ೆ
4. ಸ ದ ಸ ್ಯರು ಶ ೖವಾಗಮ ಪಂಡಿತರು, ಧಾರ್ಮಿಕ ದತ್ತಿ ಇಲಾಖೆ, ಬೆಂಗಳೂರು ೆ
5. ಸ ದ ಸ ್ಯರು ವ ೆ ೖಖಾನಾಸಾಗಮ ಪ ಂಡಿತರು, ದ ಾರ್ಮಿಕ ದ ತಿ ್ತ ಇಲಾಖೆ, ಬ ಂಗಳೂರು ೆ
6. ಸ ದ ಸ ್ಯರು ಪಾಂಚರಾತ್ರಾಗಮ ಪ ಂಡಿತರು, ದ ಾರ್ಮಿಕ ದ ತಿ ್ತ ಇಲಾಖೆ, ಬ ಂಗಳೂರು ೆ
7. ವಿಶೇಷ ಆಹ್ವಾನಿತರು ಬ ೕರೆಯವರ ಅವಶ್ಯಕತೆ ಇದ್ದಲ್ಲಿ ಧಾರ್ಮಿಕ ದತ್ತಿ ಆಯುಕ್ತರು ೆ ವಿಶೇಷ ಆಹ್ವಾನಿತರನ್ನು ಆಹ್ವಾನಿಸಬಹುದು.

ವಿಧಾನ, ಆಗಮಿಕ ಶಿಕ್ಷಣ ನೀಡುವ ಬಗ್ಗೆ ಮೇಲುಸ್ತುವಾರಿಯನ್ನು ನೋಡಿಕೊಳ್ಳುವುದು. ಪರೀಕ್ಷೆಗಳ ಅವಶ್ಯಕತೆಗೆ ತಕ್ಕಂತೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವುದು, ಉತ್ತಮ ರೀತಿಯಲ್ಲಿ ಮೌಲ್ಯಮಾಪನ ಮಾಡುವುದು, ಇಡೀ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು / ನ್ಯೂನತೆಗಳು / ದೂರುಗಳು ಬಾರದಂತೆ ಕಟ್ಟುನಿಟ್ಟಾಗಿ ಎಚ್ಚರವಹಿಸಿ ಯಾವುದೇ ರೀತಿಯಲ್ಲೂ ಪರೀಕ್ಷಾ ಪ್ರಕ್ರಿಯೆಗಳು ಬಹಿರಂಗವಾಗದಂತೆ ಗೌಪ್ಯವಾಗಿ ಕರ್ತವ್ಯ ನಿಷ್ಠೆ (integrity) ಇರುವಂತಹ ಸಿಬ್ಬಂದಿಯವರನ್ನು ಮಾತ್ರ ಪರೀಕ್ಷಾ ಪ್ರಕ್ರಿಯೆಗೆ ನೇಮಿಸಿಕೊಂಡು ಇದರ ನಿಯಮಾವಳಿಗಳ ಅಡಿಯಲ್ಲಿ ಪರೀಕ್ಷೆಗಳನ್ನು ನಡೆಸಿ, ಆಗಮ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಹಿತದೃಷ್ಟಿಯಿಂದ ಫಲಿತಾಂಶವನ್ನು ಪ್ರಕಟಿಸುವುದು ಈ ಸಮಿತಿಯ ಮುಖ್ಯ ಜವಾಬ್ದಾರಿಯಾಗಿರುತ್ತದೆ.

ಪರೀಕ್ಷಾ ಪ್ರಕ್ರಿಯೆಗಳಲ್ಲಿ ನಿಯಮಾನುಸಾರ ಸಂಭಾವನೆಯನ್ನು ನೀಡಲು ಹಾಗೂ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಈ ಸಮಿತಿಯು ಕಾರ್ಯನಿರ್ವಹಿಸತಕ್ಕದ್ದು.

P.R. 71

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25

ಬಿ.ಎಸ್. ನಾಗರತ್ನಮ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ. (ಮುಜರಾಯಿ) R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೪೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೩, ೨೦೧೭ ಭಾಗ ೧

ಒಳಾಡಳಿತ ಸಚಿವಾಲಯ

ವಿಷಯ:- ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿರವರಿಗೆ ವೇತನ ನಿಗದಿಪಡಿಸುವ ಬಗ್ಗೆ.

ಓದಲಾಗಿದೆ: 1. ಶ್ರೀ ಬಿ.ಶಿವಲಿಂಗೇಗೌಡ, ಕಾರ್ಯದರ್ಶಿ, ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ ವಿಚಾರಣಾ ಆಯೋಗ ಇವರ ಪತ್ರ ಸಂ: ಕೆಎನ್‌ಕೆಜೆ/15/2016, ದಿನಾಂಕ: 2.11.2016.

2. ಶ್ರೀ ಬಿ.ಶಿವಲಿಂಗೇಗೌಡ, ಕಾರ್ಯದರ್ಶಿ, ನ್ಯಾಯಮೂರ್ತಿ ಶ್ರೀ ಕೆ.ಎನ್.ಕೇಶವನಾರಾಯಣ ವಿಚಾರಣಾ ಆಯೋಗ ಇವರ ಪತ್ರ ಸಂ: ಕೆಎನ್‌ಕೆಜೆ/16/2016, ದಿನಾಂಕ: 2.11.2016.

3. ಆರ್ಥಿಕ ಇಲಾಖೆಯ ಟಿಪ್ಪಣಿ ಸಂ: ಆಇ 1211 ಸೇ-3/2016 (ಆರ್ಥಿಕ ಇಲಾಖೆಯ ಸೇವೆಗಳು-3) ದಿನಾಂಕ: 28.11.2016.

ಪ್ರಸ್ತಾವನೆ :

ಮೇಲೆ ಓದಲಾದ (1) & (2)ರ ಪತ್ರಗಳಲ್ಲಿ ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ ಮತ್ತು ಶ್ರೀ ಬಿ.ಶಿವಲಿಂಗೇಗೌಡ, ವಿಚಾರಣಾ ಆಯೋಗದ ಕಾರ್ಯದರ್ಶಿರವರಿಗೆ ಕ್ರಮವಾಗಿ ಈ ಕೆಳಕಂಡಂತೆ ವೇತನ ನಿಗಧಿಪಡಿಸಿಕೊಂಡಿದ್ದು, ಸರ್ಕಾರದ ಅನುಮತಿಯನ್ನು ಕೋರಿರುತ್ತಾರೆ.

" Basic pay of the sitting High Court Judge minus the pension with admissible DA, HRA and CCA. But not eligible to get DA on pension amount. Sumptuary allowance, petrol and all other allowances, perks and facilities as admissible to a sitting High Court Judge may also be sanctioned.

The above pay and allowance may be sanctioned to Justice Sri K.N.Kashavanarayana, who is appointed as a one man Commission of Inquiry from the date of assumption of charge".

" Last Basic pay drawn minus the pension with admissible DA, HRA and CCA. But not eligible to get DA on pension amount.

Secretary may be given all the admissible allowances, perks and facilities that are available to the present District and Session Judge.

The above pay and allowances may be sanctioned to Sri Shivalingegowda, Secretary to the Justice K.N.Kashavanarayana Commission of Inquiry from the date of his reporting to duty ".

ಮೇಲೆ ಓದಲಾದ(3)ರ ಟಿಪ್ಪಣಿಯಲ್ಲಿ ಆರ್ಥಿಕ ಇಲಾಖೆಯು ಈ ಕೆಳಗಿನಂತೆ ಅಭಿಪ್ರಾಯಪಟ್ಟಿರುತ್ತದೆ.

"ಶ್ರೀ ಕೆ.ಎನ್. ಕೇಶವನಾರಾಯಣ ವಿಚಾರಣಾ ಆಯೋಗದ ಅಧ್ಯಕ್ಷರು, ಇವರು ಮಾನ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಿರುವುದರಿಂದ ನಿವೃತ್ತಿ ಸಮಯದಲ್ಲಿ ಪಡೆಯುತ್ತಿದ್ದ ಮೂಲ ವೇತನದ ಮೇಲೆ ಅವರು ಪಡೆಯುತ್ತಿರುವ ಪಿಂಚಣಿ ಮತ್ತು ಪಿಇಜಿ ಯನ್ನು ಕಳೆದು ಮರುನೇಮಕಾತಿ ವೇತನವನ್ನು ನಿಗಧಿಪಡಿಸಬಹುದಾಗಿದೆ. ಇವರು ನಿವೃತ್ತಿ ಸಮಯದಲ್ಲಿ ಪಡೆಯುತ್ತಿದ್ದ ಮೂಲ ವೇತನಕ್ಕೆ ಅನುಗುಣವಾಗಿ ಕಾಲ ಕಾಲಕ್ಕೆ ಮಾನ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಿಗೆ ಲಭ್ಯವಾಗುವ ತುಟಿಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಯನ್ನು ಪಡೆಯಲು ಅರ್ಹರಿರುವುದಾಗಿದೆ.

ಹಾಗೂ ಶ್ರೀ ಶಿವಲಿಂಗೇಗೌಡ, ವಿಚಾರಣಾ ಆಯೋಗದ ಕಾರ್ಯದರ್ಶಿಗಳು, ಇವರು ಜಿಲ್ಲಾ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಿರುವುದರಿಂದ ನಿವೃತ್ತಿ ಸಮಯದಲ್ಲಿ ಪಡೆಯುತ್ತಿದ್ದ ಮೂಲ ವೇತನದ ಮೇಲೆ ಅವರು ಪಡೆಯುತ್ತಿರುವ ಪಿಂಚಣಿ ಮತ್ತು ಪಿಇಜಿಯನ್ನು ಕಳೆದು ಮರುನೇಮಕಾತಿ ವೇತನವನ್ನು ನಿಗಧಿಪಡಿಸಬಹುದಾಗಿದೆ. ಇವರು ನಿವೃತ್ತಿ ಸಮಯದಲ್ಲಿ ಪಡೆಯುತ್ತಿದ್ದ ಮೂಲ ವೇತನಕ್ಕೆ ಅನುಗುಣವಾಗಿ ಕಾಲ ಕಾಲಕ್ಕೆ ಜಿಲ್ಲಾ ನ್ಯಾಯಾಧೀಶರಿಗೆ ಲಭ್ಯವಾಗುವ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಯನ್ನು ಪಡೆಯಲು ಅರ್ಹರಿರುವುದಾಗಿದೆ. ಆದರೆ, ಮರುನೇಮಕಾತಿ ಅವಧಿಯಲ್ಲಿ ಪಿಂಚಣಿ ಮೇಲಿನ ತುಟ್ಟಿ ಭತ್ಯೆಗೆ ಅರ್ಹರಾಗತಕ್ಕದ್ದಲ್ಲ".

ಮೇಲ್ಕಂಡ ಪ್ರಸ್ತಾವನೆಯ ಬಗ್ಗೆ ಸರ್ಕಾರದಲ್ಲಿ ಕೂಲಂಕಷವಾಗಿ ಪರಿಶೀಲಿಸಿ ಅದರಂತೆ, ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ:ಹೆಚ್‌ಡಿ 10 ಪಿಸಿಇ 2016 (ಭಾಗ-2), ಬೆಂಗಳೂರು, ದಿನಾಂಕ 05/01/2017.

"ಶ್ರೀ ಕೆ.ಎನ್. ಕೇಶವನಾರಾಯಣ ವಿಚಾರಣಾ ಆಯೋಗದ ಅಧ್ಯಕ್ಷರು, ಇವರು ಮಾನ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಿರುವುದರಿಂದ ನಿವೃತ್ತಿ ಸಮಯದಲ್ಲಿ ಪಡೆಯುತ್ತಿದ್ದ ಮೂಲ ವೇತನದ ಮೇಲೆ ಅವರು ಪಡೆಯುತ್ತಿರುವ ಪಿಂಚಣಿ ಮತ್ತು ಪಿಇಜಿ ಯನ್ನು ಕಳೆದು ಮರುನೇಮಕಾತಿ ವೇತನವನ್ನು ನಿಗಧಿಪಡಿಸಬಹುದಾಗಿದೆ. ಇವರು ನಿವೃತ್ತಿ ಸಮಯದಲ್ಲಿ ಪಡೆಯುತ್ತಿದ್ದ ಮೂಲ ವೇತನಕ್ಕೆ ಅನುಗುಣವಾಗಿ ಕಾಲ ಕಾಲಕ್ಕೆ ಮಾನ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಿಗೆ ಲಭ್ಯವಾಗುವ ತುಟಿಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಯನ್ನು ಪಡೆಯಲು ಅರ್ಹರಿರುವುದಾಗಿದೆ.

ಹಾಗೂ ಶ್ರೀ ಶಿವಲಿಂಗೇಗೌಡ, ವಿಚಾರಣಾ ಆಯೋಗದ ಕಾರ್ಯದರ್ಶಿಗಳು, ಇವರು ಜಿಲ್ಲಾ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಿರುವುದರಿಂದ ನಿವೃತ್ತಿ ಸಮಯದಲ್ಲಿ ಪಡೆಯುತ್ತಿದ್ದ ಮೂಲ ವೇತನದ ಮೇಲೆ ಅವರು ಪಡೆಯುತ್ತಿರುವ ಪಿಂಚಣಿ ಮತ್ತು ಪಿಇಜಿಯನ್ನು ಕಳೆದು ಮರುನೇಮಕಾತಿ ವೇತನವನ್ನು ನಿಗಧಿಪಡಿಸಬಹುದಾಗಿದೆ. ಇವರು ನಿವೃತ್ತಿ ಸಮಯದಲ್ಲಿ ಪಡೆಯುತ್ತಿದ್ದ ಮೂಲ ವೇತನಕ್ಕೆ ಅನುಗುಣವಾಗಿ ಕಾಲ ಕಾಲಕ್ಕೆ ಜಿಲ್ಲಾ ನ್ಯಾಯಾಧೀಶರಿಗೆ ಲಭ್ಯವಾಗುವ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಯನ್ನು ಪಡೆಯಲು ಅರ್ಹರಿರುವುದಾಗಿದೆ. ಆದರೆ, ಮರುನೇಮಕಾತಿ ಅವಧಿಯಲ್ಲಿ ಪಿಂಚಣಿ ಮೇಲಿನ ತುಟ್ಟಿ ಭತ್ಯೆಗೆ ಅರ್ಹರಾಗತಕ್ಕದ್ದಲ್ಲ".

ಈ ಬಗ್ಗೆ ತಗಲುವ ವೆಚ್ಚವನ್ನು ಸರ್ಕಾರವು ವಿಚಾರಣಾ ಆಯೋಗಕ್ಕೆ ಕಾಲ ಕಾಲಕ್ಕೆ ಬಿಡುಗಡೆ ಮಾಡುವ ಅನುದಾನದಿಂದ ಭರಿಸತಕ್ಕದ್ದು ಮತ್ತು ಮರುನೇಮಕಾತಿ ವೇತನ ನಿಗದಿಯ ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂ: ಆಇ 1211 ಸೇ-3/2016(ಆರ್ಥಿಕ ಇಲಾಖೆಯ ಸೇವೆಗಳು-3) ದಿನಾಂಕ: 28.11.2016ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಲಾಗಿದೆ.

P.R. 72

SC-50

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಕೆ. ಪದ್ಮಿನಿ ದೇವಿ ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ. (ಕಾನೂನು ಮತ್ತು ಸುವ್ಯವಸ್ಥೆ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 23 March 2017. Indian Gazettes, https://egazette.servantsofknowledge.in/details/in.gazette.karnataka_new.2017-03-23.Part-1/. Archive identifier in.gazette.karnataka_new.2017-03-23.Part-1.