Servants of Knowledge
Karnataka Gazette · Government of Karnataka

Karnataka Gazette, Part Part-1, 30 March 2017

Published 30 March 2017

Part
Part-1
Identifier
in.gazette.karnataka_new.2017-03-30.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೨

Volume 152

ಬೆಂಗಳೂರು, ಗುರುವಾರ, ಮಾರ್ಚ್ ೩೦, ೨೦೧೭ (ಚೈತ್ರ ೯, ಶಕ ವರ್ಷ ೧೯೩೯)

Bengaluru, Thursday, March 30, 2017 (Chaithra 9, Shaka Varsha 1939)

ಸಂಚಿಕೆ ೧೩

Issue 13

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ವಿಷಯ: ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ವಿಜ್ಞಾನಿಗಳಿಗೆ ಯುಜಿಸಿ ವೇತನ ಶ್ರೇಣಿ ಹಾಗೂ ತತ್ಸಂಬಂಧ

ಸವಲತ್ತುಗಳನ್ನು ವಿಶ್ವವಿದ್ಯಾಲಯದ ಭೋದಕರ ಶ್ರೇಣಿಗೆ ಅನುಗುಣವಾಗಿ ವಿಸ್ತರಿಸುವ ಬಗ್ಗೆ.

ಓದಲಾಗಿದೆ: 1) ಸರ್ಕಾರದ ಆದೇಶ ಸಂಖ್ಯೆ: ಪಸಂಮೀ 02 ಪಅಸೇ 2006, ದಿನಾಂಕ: 13.01.2006.

2) ವಿಶ್ವವಿದ್ಯಾಲಯದ ಕುಲಸಚಿವರ ಪತ್ರ ಸಂಖ್ಯೆ: ಆರ್/72ಬಿಓಎಂ:ಎಹೆಚ್ಎಫ್:ಐಎಹೆಚ್ ಅಂಡ್

ವಿಬಿ/ಎಸ್-ಇಕ್ವೆಟ್/15-16/1397ಎ, ದಿ:20.11.2015.

3) ವಿಶ್ವವಿದ್ಯಾಲಯದ ವಿಶೇಷ ವ್ಯವಸ್ಥಾಪಕ ಮಂಡಳಿಯ ದಿನಾಂಕ: 15-03-2014ರ ಸಭೆಯ

ನಡವಳಿಗಳು.

ಪ್ರಸ್ತಾವನೆ

ಮೇಲೆ ಓದಲಾಗಿರುವ (2) ರ ಪತ್ರದಲ್ಲಿ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ವಿಜ್ಞಾನಿಗಳಿಗೆ ಯುಜಿಸಿ ವೇತನ ಶ್ರೇಣಿ ಹಾಗೂ ತತ್ಸಂಬಂಧ ಸವಲತ್ತುಗಳನ್ನು ವಿಶ್ವವಿದ್ಯಾಲಯದ ಭೋದಕರ ಶ್ರೇಣಿಗೆ ಅನುಗುಣವಾಗಿ ವಿಸ್ತರಿಸುವ ಬಗ್ಗೆ ಪ್ರಸ್ತಾಪಿಸಿರುತ್ತಾರೆ.

ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯು ಭಾರತದ ಪ್ರಮುಖ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಾಗಿದ್ದು, ದಕ್ಷಿಣ ಭಾರತದ ರಾಜ್ಯಗಳಿಗೆ Referral Diagnostic Laboratory ಆಗಿದೆ. ಸಂಸ್ಥೆಯು ರಾಜ್ಯದ ರೈತ ಸಮುದಾಯದ ಒಳಿತಿಗಾಗಿ Classical swine fever, Blue tongue & PPR ರೋಗಗಳಿಗೆ ಲಸಿಕೆಗಳನ್ನೊಳಗೊಂಡಂತೆ ಅನೇಕ ಹೊಸ ಲಸಿಕೆಗಳನ್ನು ಅಭಿವೃದ್ಧಿಗೊಳಿಸಿರುತ್ತದೆ.

ಕರ್ನಾಟಕ ಸೊಸೈಟಿಗಳ ನೋಂದಣಿ ನಿಯಮಗಳು, 1960ರ (Karnataka Societies Registration Act, 1960) ಪ್ರಕಾರ 1978 ರಲ್ಲಿ ವೈಜ್ಞಾನಿಕ Society ಯಾಗಿ ನೋಂದಾವಣೆಗೊಂಡು ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯನ್ನು, ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧಿನಿಯಮ 2004 ರನ್ವಯ (KVAFSU Act 2004) ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ (KVAFS ವಿಶ್ವವಿದ್ಯಾಲಯ) ವ್ಯಾಪ್ತಿಗೆ ಒಳಪಡಿಸಿ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯೆಂದು ಘೋಷಿಸಲಾಗಿದ್ದು, ಅದರಂತೆ ಮೇಲೆ (1) ರಲ್ಲಿ ಓದಲಾದ ಆದೇಶದನ್ವಯ ಸಾರ್ವಜನಿಕ ಹಿತದೃಷ್ಟಿಯಿಂದ ಈ ಸಂಸ್ಥೆಯನ್ನು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಲಾಗಿದೆ.

ವಿಶ್ವವಿದ್ಯಾನಿಲಯದ ಪರಿನಿಯಮಗಳ ರಚನೆ ಸಲುವಾಗಿ ಸಿಆಸುಇ ಸೇವಾ ನಿಯಮ, ಆರ್ಥಿಕ ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆಗಳ ಸದಸ್ಯರುಗಳನ್ನು ಒಳಗೊಂಡಂತೆ ರಾಜ್ಯ ಸರ್ಕಾರವು ರಚಿಸಿದ ಸಮಿತಿಯ ಶಿಫಾರಸ್ಸಿನನ್ವಯ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾಗಿರುವ ಘನತೆವೆತ್ತ ರಾಜ್ಯಪಾಲರ ಅನುಮೋದನೆಯೊಂದಿಗೆ ಕರ್ನಾಟಕ ರಾಜ್ಯಪತ್ರದಲ್ಲಿ 2009 ರಲ್ಲಿ ವಿಶ್ವವಿದ್ಯಾಲಯದ ಮೊದಲನೇ ಪರಿನಿಯಮಗಳನ್ನು ಪ್ರಕಟಿಸಲಾಗಿದೆಯೆಂದು ವಿಶ್ವವಿದ್ಯಾಲಯದ ಮೇಲೆ (2) ರಲ್ಲಿ ಓದಲಾದ ಪತ್ರದಲ್ಲಿ ಕುಲಸಚಿವರು ತಿಳಿಸಿರುತ್ತಾರೆ.

KVAFS ವಿಶ್ವವಿದ್ಯಾಲಯದ ಪ್ರಥಮ ಪರಿನಿಯಮ ಅಧ್ಯಾಯ 10 ಪರಿಚ್ಛೇದ 56 (1 ಹಾಗೂ 2) ರನ್ವಯ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯನ್ನು KVAFS ವಿಶ್ವವಿದ್ಯಾಲಯದ ಅಂಗಸಂಸ್ಥೆಯೆಂದು ಘೋಷಿಸಲಾಗಿದ್ದು, ಸಂಸ್ಥೆಯ ಹಾಲಿ ವಿವಿಧ ವೃಂದಗಳನ್ನು ವಿಶ್ವವಿದ್ಯಾಲಯದಲ್ಲಿನ

(೪೦೯)೪೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೦, ೨೦೧೭ ಭಾಗ ೧ ವೃಂದಗಳಿಗೆ ಸಮಾನಾಂತರಗೊಳಿಸಲಾಗಿದೆ. KVAFS ವಿಶ್ವವಿದ್ಯಾಲಯದ ಪ್ರಥಮ ಪರಿನಿಯಮದ ಅಧ್ಯಾಯ 10 ಪರಿಚ್ಛೇದ 56 (2) (V) ರಲ್ಲಿ ಮುಂದುವರಿದಂತೆ, "the present incumbents of the above posts shall be treated as to be on their "own pay and grade" till they are assessed/ recruited as per university guidelines" ಎಂದೂ ಸಹ ಉಲ್ಲೇಖಿಸಲಾಗಿದ್ದು, ಇದು ವಿಶ್ವವಿದ್ಯಾಲಯದ ನಿಯಮಾವಳಿಗಳಂತೆ ಮೌಲ್ಯಮಾಪನ ಮಾಡಿದ ನಂತರ ವಿಜ್ಞಾನಿಗಳ ವೇತನ ಹಾಗೂ ಶ್ರೇಣಿ ಬದಲಾವಣೆಯಾಗುವುದೆಂಬ ಅಂಶವನ್ನು ಪರಿನಿಯಮದಲ್ಲಿ ಸಾಂಕೇತಿಸಲಾಗಿದೆ.

ಅದರಂತೆ, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ವಿಜ್ಞಾನಿಗಳನ್ನು KVAFS ವಿಶ್ವವಿದ್ಯಾಲಯದ ವೃಂದದೊಂದಿಗೆ ಸಮಾನಾಂತರಗೊಳಿಸುವ ಸಲುವಾಗಿ 2009 ರಲ್ಲಿ ಒಂದು ಸಮಿತಿಯನ್ನು ರಚಿಸಲಾಗಿತ್ತು. ಸದರಿ ಸಮಿತಿಯು ಈ ಸಂಸ್ಥೆಯ ವಿಜ್ಞಾನಿಗಳ ಕಾರ್ಯಚಟುವಟಿಕೆಗಳನ್ನು ಮೌಲ್ಯಮಾಪನ ಮಾಡಿ, ಸದರಿ ಸಂಸ್ಥೆಯ ವಿಜ್ಞಾನಿಗಳೂ ಸಹ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಶೋಧನೆಯಲ್ಲಿ ಮಾರ್ಗದರ್ಶನ ಮಾಡುವುದರ ಜೊತೆಗೆ ವಿಸ್ತರಣಾ/ ಸಂಶೋಧನೆ/ ಭೋದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆಂದು ಅಭಿಪ್ರಾಯ ಪಟ್ಟಿರುತ್ತದೆ. ಅದರಂತೆ, ಈ ಸಂಸ್ಥೆಯ ಪ್ರಸ್ತುತ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿಜ್ಞಾನಿಗಳನ್ನು ವಿಶ್ವವಿದ್ಯಾಲಯದ statutes ಹಾಗೂ Regulation ಪ್ರಕಾರ ವಿಶ್ವವಿದ್ಯಾಲಯದ ಆಯಾ ಭೋದಕ ವೃಂದಕ್ಕೆ "ಸ್ವಂತ ವೇತನ ಹಾಗೂ ಶ್ರೇಣಿ (OPG) ಅನ್ವಯ" ಸಮಾನಾಂತರಗೊಳಿಸಲಾಗಿತ್ತದೆಂದು ವಿಶ್ವವಿದ್ಯಾಲಯದ ಮೇಲೆ (2) ರಲ್ಲಿ ಓದಲಾದ ಪತ್ರದಲ್ಲಿ ಕುಲಸಚಿವರು ತಿಳಿಸಿರುತ್ತಾರೆ.

ವಿಶ್ವವಿದ್ಯಾಲಯದ ಪ್ರಥಮ ಪರಿನಿಯಮದ ಅಧ್ಯಾಯ 10 ಪರಿಚ್ಛೇದ 56 (1 ಹಾಗೂ 2) ರಂತೆ ಸಂಸ್ಥೆಯ ವಿಜ್ಞಾನಿಗಳನ್ನು ವಿಶ್ವವಿದ್ಯಾಲಯದ ಭೋದಕ ಹುದ್ದೆಗಳಿಗೆ ಸಮನಾಂತರಗೊಳಿಸುವ ಬಗ್ಗೆ ಕ್ರಮ ಜರುಗಿಸಲು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ 28 ವಿಜ್ಞಾನಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ, ಸದರಿ ಅರ್ಜಿಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಿ, ಸಂಸ್ಥೆಯ ಆರ್ಹ 24 ಮಂದಿ ವಿಜ್ಞಾನಿಗಳನ್ನು ವಿಶ್ವವಿದ್ಯಾಲಯದ ಪ್ರಸ್ತುತ ಭೋದಕ ವೃಂದಗಳಿಗೆ ತತ್ಸಮಾನವಾಗಿ ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕರ ಹುದ್ದೆಗಳಿಗೆ ಅನುಬಂಧ-1ರಲ್ಲಿ ವಿವರಿಸಿರುವಂತೆ ಸಮಾನಾಂತರಗೊಳಿಸಲಾಗಿರುತ್ತದೆ.

ಈ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ವಿಶ್ವವಿದ್ಯಾಲಯವು ವಿಜ್ಞಾನಿಗಳ ಪರಿಶೀಲನಾ ವರದಿಯನ್ನು 15 ನೇ ಮಾರ್ಚ್, 2014 ರಂದು ನಡೆದ ವಿಶ್ವವಿದ್ಯಾಲಯದ ವಿಶೇಷ ವ್ಯವಸ್ಥಾಪಕ ಮಂಡಳಿಯ ಸಭೆಯಲ್ಲಿ ಮಂಡಿಸಿದ್ದು, ವ್ಯವಸ್ಥಾಪಕ ಮಂಡಳಿಯು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ವಿಜ್ಞಾನಿಗಳನ್ನು ವಿಶ್ವವಿದ್ಯಾಲಯದ ಭೋದಕರ ಶ್ರೇಣಿಗೆ ಸಮನಾಂತರಗೊಳಿಸಲು ಕೆಳಕಂಡ ನಿಬಂಧನೆಗಳೊಂದಿಗೆ ತನ್ನ ಒಪ್ಪಿಗೆಯನ್ನು ನೀಡಿರುತ್ತದೆಂದು ಮೇಲೆ (2) ರಲ್ಲಿ ಓದಲಾದ ಪತ್ರದಲ್ಲಿ ಕುಲಸಚಿವರು ತಿಳಿಸಿರುತ್ತಾರೆ.

1. ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಎಲ್ಲಾ ಆಡಳಿತಾತ್ಮಕ ವಿಷಯಗಳನ್ನು ವಿಶ್ವವಿದ್ಯಾಲಯಕ್ಕೆ ವರ್ಗಾಯಿಸುವುದು.

2. ಈ ಸಂಸ್ಥೆಯ ಮೌಲ್ಯಮಾಪನಗೊಂಡು ಸಮನಾಂತರಗೊಂಡ ವಿಜ್ಞಾನಿಗಳನ್ನು ವಿಶ್ವವಿದ್ಯಾಲಯಕ್ಕೆ ಹಾಗೂ ವಿಶ್ವವಿದ್ಯಾಲಯದಲ್ಲಿನ ಭೋದಕ ಸಿಬ್ಬಂದಿಯನ್ನು ಸಂಸ್ಥೆಗೆ ವರ್ಗಾಯಿಸಲು ಅವಕಾಶ ಕಲ್ಪಿಸತಕ್ಕದ್ದು.

3. ಸಂಸ್ಥೆಯಲ್ಲಿರುವ ಖಾಲಿ ಹುದ್ದೆಗಳನ್ನು ಇನ್ನು ಮುಂದೆ ವಿಶ್ವವಿದ್ಯಾಲಯದ ಪರಿನಿಯಮ ಹಾಗೂ ನಿಯಮಾವಳಿಗಳ ಪ್ರಕಾರವೇ ಭರ್ತಿ ಮಾಡಿಸತಕ್ಕದ್ದು.

4. ಈ ಸಮೀಕರಣವು ವಿಜ್ಞಾನಿಗಳನ್ನು ಸ್ವಂತ ವೇತನ ಹಾಗೂ ಶ್ರೇಣಿಯಲ್ಲಿ ಇಟ್ಟ ದಿನಾಂಕದಿಂದ ಜಾರಿಗೆ ಬರುವುದು.

ಈ ಸಂಬಂಧ ದೇಶದಾದ್ಯಂತ ಕೃಷಿ ಹಾಗೂ ಪಶುವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ನಿಯಮಾವಳಿಗಳನ್ನು ನಿರ್ದೇಶಿಸುವ ICAR-model Act- 2009, ನಿಯಮಾವಳಿಗಳನ್ನು ಕುಲಪತಿಗಳು ಉಲ್ಲೇಖಿಸಿ, ಈ ನಿಯಮಗಳನ್ವಯ teacher ಎಂದರೆ "Teacher means a person not below the rank of Assistant Professor appointed or recognized by the University for the purpose of imparting instruction and/or conducting and guiding research and/or extension education programmes, and may include any other person who may be declared by the Statutes to be a teacher" ಎಂದು ಸ್ಪಷ್ಟಪಡಿಸಲಾಗಿದೆಯೆಂದು ತಿಳಿಸಿರುತ್ತಾರೆ. IAH&VB ಸಂಸ್ಥೆಯ ವಿಜ್ಞಾನಿಗಳನ್ನು ವಿಶ್ವವಿದ್ಯಾಲಯದ ಬೋಧಕರೆಂದು ವಿಶ್ವವಿದ್ಯಾನಿಲಯದ ಪರಿನಿಯಮದ ಪ್ರಕಾರ ಪರಿಗಣಿಸಲಾಗಿದ್ದು, ಅವರುಗಳು ICAR ನಿಯಮದಲ್ಲಿ ಸ್ಪಷ್ಟಪಡಿಸಿರುವಂತೆ ಬೋಧನೆ/ಸಂಶೋಧನೆ ಹಾಗೂ ವಿಸ್ತರಣೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆಂದು ತಿಳಿಸಿರುತ್ತಾರೆ.

ಅಲ್ಲದೆ, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ವಿಜ್ಞಾನಿಗಳು ಹಾಗೂ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಬೋಧಕರು ಹುದ್ದೆಯ ಕಾರ್ಯಚಟುವಟಿಕೆಗಳು ಬಹುತೇಕ ಒಂದೇ ಆಗಿದ್ದು, ಬೋಧಕ ಸಿಬ್ಬಂದಿಯ ಚಟುವಟಿಕೆಗಿಂತ ಭಿನ್ನವಾಗಿರುವುದಿಲ್ಲ. ವಿಜ್ಞಾನಿ ಹಾಗೂ ಬೋಧಕರ ವಿದ್ಯಾರ್ಹತೆ ಒಂದೇ ಆಗಿದ್ದರೂ ಸಹ ಬೇರೆ ಬೇರೆ ವೇತನ ಶ್ರೇಣಿಗಳಿರುವುದರಿಂದ ಇಬ್ಬರ ವೇತನಶ್ರೇಣಿಯಲ್ಲಿ ಅಸಮಾನತೆ ಉಂಟಾಗಿದೆ. ವಿಜ್ಞಾನಿಗಳ ವೇತನ ಶ್ರೇಣಿಯನ್ನು ಬೋಧಕರ ಹುದ್ದೆಯ ವೇತನ ಶ್ರೇಣಿಗೆ ಸಮಾನಗೊಳಿಸುವ ಮೂಲಕ ಈ ತಾರತಮ್ಯವನ್ನು ಸರಿಪಡಿಸಬಹುದಾಗಿದೆಯೆಂದು ಹಾಗೂ ವಿಶ್ವವಿದ್ಯಾಲಯದ ಪ್ರಥಮ ಪರಿನಿಯಮದನ್ವಯ ವಿಶ್ವವಿದ್ಯಾಲಯದ ನಿಯಮಾವಳಿಗಳಂತೆ ಮೌಲ್ಯಮಾಪನ ಮಾಡಿದ ನಂತರ ವಿಜ್ಞಾನಿಗಳಿಗೆ UGC ವೇತನ ಶ್ರೇಣಿ ನೀಡಲಾಗುವುದೆಂದು ತಿಳಿಸಲಾಗಿದೆ. ಈ ಪ್ರಕರಣದಲ್ಲಿ ವಿಜ್ಞಾನಿಗಳ ಮೌಲ್ಯಮಾಪನವನ್ನು ಪೂರ್ಣಗೊಳಿಸಲಾಗಿದೆ. ಇವರ ಪ್ರಕರಣವನ್ನು ಅರ್ಹತೆಗನುಸಾರ ಪರಿಶೀಲಿಸಿದ್ದಲ್ಲಿ, ಇವರುಗಳನ್ನು ವಿಶ್ವವಿದ್ಯಾಲಯದಲ್ಲಿ ವಿಲೀನಗೊಳಿಸಲಾಗಿದ್ದು, ಇವರುಗಳು ಪ್ರಸ್ತುತ ವಿಶ್ವವಿದ್ಯಾಲಯದ ಒಂದು ಭಾಗವಾಗಿರುತ್ತಾರೆ ಎಂಬ ಅಭಿಪ್ರಾಯದೊಂದಿಗೆ ವಿಶ್ವವಿದ್ಯಾಲಯವು ಇವರಿಗೆ UGC ಯುಜಿಸಿ ವೇತನ ಶ್ರೇಣಿ ಹಾಗೂ ತತ್ಸಂಬಂಧ ಸವಲತ್ತುಗಳನ್ನು ನೀಡಲು ಶಿಫಾರಸ್ಸು ಮಾಡಿರುತ್ತದೆ.

ಈ ಎಲ್ಲಾ ಮೇಲಿನ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ಸರ್ಕಾರವು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳಿಗೆ ವಿಶ್ವವಿದ್ಯಾಲಯದ ಭೋಧಕ ಹುದ್ದೆಗಳಿಗೆ ಸರಿಸಮಾನವಾಗಿ UGC ವೇತನ ಹಾಗೂ ಇನ್ನಿತರೆ ತತ್ಸಂಬಂಧದ ಸೌಲಭ್ಯಗಳನ್ನು ಈ ಕೆಳಕಂಡ ಷರತ್ತುಗಳೊಂದಿಗೆ ವಿಸ್ತರಿಸಲು ತೀರ್ಮಾನಿಸಿರುತ್ತದೆ, ಅದರಂತೆ ಈ ಆದೇಶ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೦, ೨೦೧೭ ೪೧೧

ಸರ್ಕಾರದ ಆದೇಶ ಸಂಖ್ಯೆ: ಪಸಂಮೀ 276 ಪಅಸೇ 2013, ಬೆಂಗಳೂರು, ದಿನಾಂಕ: 16.12.2016.

ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯನ್ನು, ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧಿನಿಯಮ, 2004 ರನ್ವಯ (KVAFSU Act 2004) ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ (KVAFS ವಿಶ್ವವಿದ್ಯಾಲಯ) ವ್ಯಾಪ್ತಿಗೆ ಒಳಪಡಿಸಿ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯೆಂದು ಘೋಷಿಸಲಾಗಿದ್ದು, ಅದರಂತೆ, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಥಮ ಪರಿನಿಯಮ ಅಧ್ಯಾಯ 10 ಪರಿಚ್ಛೇದ 56 (1 ಹಾಗೂ 2) ರನ್ವಯ ಮೌಲ್ಯಮಾಪನಗೊಂಡು ವಿಶ್ವವಿದ್ಯಾಲಯದ ಭೋಧಕ ಹುದ್ದೆಗಳಿಗೆ ಸಮನಾಂತರಗೊಂಡ ವಿಜ್ಞಾನಿಗಳ ಪೈಕಿ ಅರ್ಹತೆ ಹೊಂದಿರುವ (ಪಿ.ಹೆಚ್.ಡಿ ಹಾಗೂ ಎನ್.ಇ.ಟಿಯಲ್ಲಿ ಉತ್ತೀರ್ಣಗೊಂಡ) ಅನುಭಂದ – 1 ರಲ್ಲಿ ಪಟ್ಟಿ ಮಾಡಿರುವ 24 ಮಂದಿ ವಿಜ್ಞಾನಿಗಳಿಗೆ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಭೋಧಕ ಹುದ್ದೆಗಳಿಗೆ ಸರಿಸಮಾನವಾಗಿ UGC ವೇತನ ಹಾಗೂ ಇನ್ನಿತರೆ ತತ್ಸಂಬಂಧದ ಸೌಲಭ್ಯಗಳನ್ನು ಈ ಕೆಳಕಂಡ ಷರತ್ತುಗಳೊಂದಿಗೆ ವಿಸ್ತರಿಸಿ, ಅದರಂತೆ ಆದೇಶಿಸಲಾಗಿದೆ.

1. ಇವರನ್ನು ವಿಶ್ವವಿದ್ಯಾಲಯವು ಭೋಧಕ ಹುದ್ದೆಗಳಿಗೆ ಸಮಾನಾಂತರಗೊಳಿಸಿದ ದಿನಾಂಕವಾದ 15.3.2014ರಿಂದ ಇವರಿಗೆ ಗಉಅ ವೇತನ ಹಾಗೂ ಇನ್ನಿತರೆ ತತ್ಸಂಬಂದದ ಸೌಲಭ್ಯಗಳನ್ನು ನಿಗಧಿಪಡಿಸಿ, ಆರ್ಥಿಕ ಪ್ರಯೋಜನವನ್ನು ಭವಿಷ್ಯವರ್ತಿಯಾಗಿ ನೀಡತಕ್ಕದ್ದು.

2. ಯುಜಿಸಿ ವೇತನ ಸೌಲಭ್ಯ ಪಡೆಯುವ ವಿಜ್ಞಾನಿಗಳು ಸಂಶೋಧನೆಯ ಜೊತೆಗೆ ಬೋಧಕ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸತಕ್ಕದ್ದು.

3. ಈ ಪ್ರಕರಣವನ್ನು ಯಾವುದೇ ಕಾರಣಕ್ಕೂ ಪೂರ್ವ ನಿರ್ದೇಶನವನ್ನಾಗಿ ಪರಿಗಣಿಸಬಾರದು.

4. ಈ ಸಂಬಂಧ ಉದ್ಭವಿಸುವ ಎಲ್ಲಾ ಹೆಚ್ಚುವರಿ ವೆಚ್ಚಗಳನ್ನು ವಿಶ್ವವಿದ್ಯಾಲಯದ ಸಂಪನ್ಮೂಲದಿಂದ ಭರಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಿ.ಎಸ್.ಸುದರ್ಶನ್ ಕುಮಾರ್

ಸರ್ಕಾರದ ಅಧೀನ ಕಾರ್ಯದರ್ಶಿ,

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ.

ಅನುಬಂಧ – 1

Sl. No. Name of the scientist Designation Position to which the Scientist has been Assessed
1. Dr. C. Renukaprasad Director Dean/Director
2. Dr. M.D Venkatesha Scientist-4 Professor
3. Dr. S.M Byregowda Scientist-4 Professor
4. Dr. K. Sripad Scientist-3 Associate Professor
5. Dr. H.K Muniyellappa Scientist-3 Associate Professor
6. Dr. Srikanth Kowalli Scientist-3 Associate Professor
7. Dr. Ashamayanna Scientist-3 Associate Professor
8. Dr. G.K Chandrakala Scientist-3 Associate Professor
9. Dr. Raveendra Hegde Scientist-3 Associate Professor
10. Dr. Sobha Rani Scientist-3 Associate Professor
11. Dr. Shesha Rao Scientist-2 Assistant Professor
12. Dr. Alamelu M.S Scientist-2 Assistant Professor
13. Dr. B.M Chandranaik Scientist-2 Assistant Professor
14. Dr. B.P. Shivashankar Scientist-2 Assistant Professor
15. Dr. Amitha Reena Gomes Scientist-2 Assistant Professor
16. Dr. Shivaraj Scientist-2 Assistant Professor
17. Dr. Sanjeev kumar Scientist-2 Assistant Professor
18. Dr. Yeshwanth S.L Scientist-1 Assistant Professor
19. Dr. Shankar B.P Scientist-1 Assistant Professor
20. Dr. Sumathi B.R Scientist-1 Assistant Professor
21. Dr. Saritha N.S Scientist-1 Assistant Professor

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೪೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೦, ೨೦೧೭ ಭಾಗ ೧
Sl. No. Name of the scientist Designation Position to which the Scientist has been Assessed
22. Dr. Sudha Rani Scientist-1 Assistant Professor
23. Dr. Kavitha G Scientist-1 Assistant Professor
24. Dr. Dharnesha N.K Scientist-1 Assistant Professor

ಡಿ.ಎಸ್.ಸುದರ್ಶನ್ ಕುಮಾರ್

PR. 86

ಸರ್ಕಾರದ ಅಧೀನ ಕಾರ್ಯದರ್ಶಿ,

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 30 March 2017. Indian Gazettes, https://egazette.servantsofknowledge.in/details/in.gazette.karnataka_new.2017-03-30.Part-1/. Archive identifier in.gazette.karnataka_new.2017-03-30.Part-1.