Servants of Knowledge
Karnataka Gazette · Government of Karnataka

Karnataka Gazette, Part Part-1, 04 May 2017

Published 04 May 2017

Part
Part-1
Identifier
in.gazette.karnataka_new.2017-05-04.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೨

Volume 152

ಬೆಂಗಳೂರು, ಗುರುವಾರ, ಮೇ ೪, ೨೦೧೭ (ವೈಶಾಖ ೧೪, ಶಕ ವರ್ಷ ೧೯೩೯)

Bengaluru, Thursday, May 4, 2017 (Vaishakha 14, Shaka Varsha 1939)

ಸಂಚಿಕೆ ೧೮

Issue 18

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಸುತ್ತೋಲೆ

ಸಂಖ್ಯೆ : ಅಪಜೀ : 201 ಎಫ್ಎಪಿ 2016, ಬೆಂಗಳೂರು, ದಿನಾಂಕ: 18.11.2016.

ವಿಷಯ : ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ತಲೆದೋರಿರುವುದರಿಂದ ಅರಣ್ಯ ಇಲಾಖೆಯ ಸಸ್ಯಕ್ಷೇತ್ರಗಳಲ್ಲಿ ಮೇವು

ಬೆಳೆಯುವ ಮತ್ತು ಜಾನುವಾರುಗಳಿಗೆ ಅರಣ್ಯ ಪ್ರದೇಶಗಳಲ್ಲಿ ಮೇಯಿಸಲು ಅವಕಾಶ ನೀಡುವ ಬಗ್ಗೆ.

1. ಸನ್ಮಾನ್ಯ ಮುಖ್ಯ ಮಂತ್ರಿಗಳು ಇತ್ತೀಚಿಗೆ ಕೋಲಾರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಬರಪರಿಸ್ಥಿತಿಯ ಪರಿಶೀಲನೆ ನಡೆಸುವಾಗ ಮಳೆಯ ಅಭಾವದಿಂದ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆಯಾದ್ದರಿಂದ ಮುಂಬರುವ ದಿನಗಳಲ್ಲಿ ಜಾನುವಾರುಗಳಿಗೆ ತೀವ್ರ ಮೇವಿನ ಅಭಾವ ತಲೆದೋರಬಹುದಾಗಿದೆ ಎಂದು ತಿಳಿಸಿದ್ದಾರೆ.

2. ಮೇವಿನ ಅಭಾವದರಿಂದ ರೈತರು ಸಂಕಷ್ಟಗಳನ್ನು ಎದುರಿಸುವ ಮೊದಲೇ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅವಶ್ಯವೆಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಈ ಕೆಳಕಾಣಿಸಿದ ಅಂಶಗಳ ಮೇಲೆ ಅವಶ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ:

(ಅ) ವನ್ಯಜೀವಿ ಮತ್ತು ಸಾಕುಪ್ರಾಣಿ ಸಂಘರ್ಷದ ಪ್ರದೇಶಗಳು ಜಾನುವಾರುಗಳ ದಾಳಿಗೆ ಸುಲಭವಾಗಿ ನಾಶವಾಗಬಹುದಾದ ಹಾಗೂ ನಿರ್ವಹಣೆಯಲ್ಲಿರುವ ಮತ್ತು ಇತ್ತೀಚೆಗೆ ಬೆಳೆಸಿದ ಆದರೆ ಸುರಕ್ಷಿತ ಮಟ್ಟವನ್ನು ತಲುಪಿರದ ನೆಡುತೋಪುಗಳು, ಔಷಧಿ ಸಸ್ಯಗಳ ಸಂರಕ್ಷಣಾ ಪ್ರದೇಶಗಳನ್ನು ಹೊರತುಪಡಿಸಿ ಬಾಕಿ ಎಲ್ಲಾ ಅರಣ್ಯಗಳಲ್ಲಿ ಸಾಕು ಜಾನುವಾರುಗಳನ್ನು ಮೇಯಿಸಲು ಅವಕಾಶ ಮಾಡಿಕೊಡುವುದು.

(ಆ) (i) ಅರಣ್ಯ ಇಲಾಖೆಯ ಸಸ್ಯಕ್ಷೇತ್ರಗಳಲ್ಲಿ ಸಸಿಗಳನ್ನು ಬೆಳೆಸಿದ ನಂತರ ಖಾಲಿ ಉಳಿಯುವ ಇಡೀ ಪ್ರದೇಶದಲ್ಲಿ ಸ್ಥಳೀಯವಾಗಿ ಬೆಳೆಯುವ ಮೇವಿನ ಜಾತಿಯ ಬೆಳೆಗಳನ್ನು/ತಳಿಗಳನ್ನು ಬೆಳೆಸಲು ಕ್ರಮ ಕೈಗೊಳ್ಳುವುದು.

(ii) ಜಿಲ್ಲಾಡಳಿತದಿಂದ/ಎಸ್‌ಡಿಆರ್ಎಫ್‌ನಿಂದ ಅವಶ್ಯ ಅನುದಾನವನ್ನು ಪಡೆದು ಅರಣ್ಯ ಇಲಾಖೆಯ ಸುಪರ್ದಿನಲ್ಲಿರುವ ಎಲ್ಲಾ ಬಾವಿಗಳನ್ನು ಮತ್ತು ಕೊಳವೆ ಬಾವಿಗಳನ್ನು ಆಳ ಮಾಡಿಸಲು, ಸ್ವಚ್ಛಗೊಳಿಸಲು ಮತ್ತು ಅವಶ್ಯವಿದ್ದಲ್ಲಿ ಹೈಡ್ರೋಫ್ರ್ಯಾಕ್ಚರ್ ಮಾಡಿಸಲು ಕ್ರಮ ಕೈಗೊಳ್ಳುವುದು. ಈ ರೀತಿಯ ಕ್ರಮವನ್ನು ಕಡಿಮೆ ಇಳುವರಿ ಹೊಂದಿದ ಬಾವಿಗಳಿಗೆ ಅವಶ್ಯವಾಗಿ ಮಾಡಿಸಿ ನೀರಿನ ಇಳುವರಿ ಹೆಚ್ಚಾಗುವಂತೆ ನೋಡಿಕೊಳ್ಳುವುದು.

(iii) ಲಭ್ಯ ನೀರಿನ ಸಂಪನ್ಮೂಲಗಳನ್ನು ಬಳಸಿಕೊಂಡು ಮೇವನ್ನು ಬೆಳೆಯಲು ಭೂಮಿಯನ್ನು ಸಿದ್ಧಪಡಿಸಲು ಲಭ್ಯ ಅನುದಾನ ಬಳಸುವುದು ಅಥವಾ ಜಿಲ್ಲಾಡಳಿತದಿಂದ ಸೂಕ್ತ ಅನುದಾನವನ್ನು ಪಡೆದು ಭೂಮಿಯನ್ನು ಸಿದ್ದಗೊಳಿಸುವುದು.

(iv) ಕೃಷಿ ಮತ್ತು ಪಶುಸಂಗೋಪನಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸ್ಥಳೀಯ ಮೇವಿನ ಜಾತಿಗಳ ಬೀಜಗಳನ್ನು ಪಡೆದು ಸಿದ್ಧಗೊಳಿಸಿದ ಭೂಮಿಯಲ್ಲಿ ಮೇವು ಬೆಳೆಯಲು ಕ್ರಮ ಕೈಗೊಳ್ಳುವುದು.

(v) ಕಡಿಮೆ ಅವಧಿಯಲ್ಲಿ ಬೆಳೆಯುವ ತಳಿಗಳನ್ನು ಹಾಗೂ ಕೂಳೆಯಿಂದ ಪುನರುತ್ಪತ್ತಿಯಾಗುವ ತಳಿಗಳನ್ನು ಬೆಳೆದು ಮುಂದಿನ ಮಳೆಗಾಲ ಪ್ರಾರಂಭವಾಗುವ ಮೊದಲು ಎರಡರಿಂದ ಮೂರು ಬಾರಿ ಮೇವಿನ ಕಟಾವಣೆ ಮತ್ತು ವಿತರಣೆಗೆ ಸಾಧ್ಯವಾಗುವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುವುದು.

(೪೬೫)೪೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೪, ೨೦೧೭ ಭಾಗ ೧ 3. ಈ ಎಲ್ಲಾ ಕಾರ್ಯಗಳನ್ನು ಪ್ರತಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ವೃತ್ತದ ಮೇಲ್ವಿಚಾರಣೆಗೆ ನೇಮಿಸಲಾದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರತೀ ಪಕ್ಷಕ್ಕೊಮ್ಮೆ (ಎರಡುವಾರಗಳಿಗೊಮ್ಮೆ) ಪರಿಶೀಲನೆ ನಡೆಸಿ, ಮಾರ್ಗದರ್ಶನ ನೀಡುವುದಲ್ಲದೆ ಅವಶ್ಯ ಸಮನ್ವಯ ಸಾಧಿಸಲು ಸೂಚಿಸಿದೆ.

PR.99

SC.500

ಟಿ.ಎಂ.ವಿಜಯಭಾಸ್ಕರ್ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಸುತ್ತೋಲೆ

ಸಂಖ್ಯೆ: ಅಪಜೀ:137 ಎಫ್ಎಪಿ 2015(ಭಾಗ) ಬೆಂಗಳೂರು, ದಿನಾಂಕ: 15.11.2016.

ವಿಷಯ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೀಲಗಿರಿ ಬೆಳೆಯುವುದನ್ನು ನಿಯಂತ್ರಿಸುವ ಬಗ್ಗೆ

1. ಸನ್ಮಾನ್ಯ ಮುಖ್ಯಮಂತ್ರಿಗಳು ಕೋಲಾರ ಜಿಲ್ಲೆಯ ಪ್ರಗತಿ ಪರಿಶೀಲನೆಯನ್ನು ದಿನಾಂಕ:14.11.2016ರಂದು ಕೈಗೊಂಡಾಗ, ಸಭೆಯಲ್ಲಿ ಕೋಲಾರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಂತರ್‌ಜಲದ ಮಟ್ಟವು ಕುಸಿದಿರುವ ವಿಷಯ ವಿಸ್ತøತವಾಗಿ ಚರ್ಚೆಯಾಗಿದೆ. ಈ ರೀತಿಯ ಅಂತರ್‌ಜಲದ ಮಟ್ಟದ ಕುಸಿತಕ್ಕೆ ಈ ಎರಡೂ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆದಿರುವ ನೀಲಗಿರಿ ನೆಡುತೋಪುಗಳು ಒಂದು ಕಾರಣವೆಂದು ಮನಗಾಣಲಾಗಿದೆ.

2. ಆದ್ದರಿಂದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಬೆಳೆಸಿರುವ ನೀಲಗಿರಿ ನೆಡುತೋಪುಗಳನ್ನು ಹೊರತುಪಡಿಸಿ, ಬಾಕಿ ಅರಣ್ಯ ಪ್ರದೇಶಗಳಲ್ಲಿ ಹಾಗೂ ಸರ್ಕಾರಿ ಭೂಮಿಗಳಲ್ಲಿ ಬೆಳೆದಿರುವ ನೀಲಗಿರಿ ನೆಡುತೋಪುಗಳನ್ನು ಕಟಾವು ಮಾಡಿ ಅವುಗಳ ಬದಲಿಗೆ ಬೇರೆ ಉಪಯುಕ್ತ ಸ್ಥಳೀಯ ಜಾತಿಯ ನೆಡುತೋಪುಗಳನ್ನು ಬೆಳೆಸುವುದು ಅವಶ್ಯವೆಂದು ತೀರ್ಮಾನಿಸಲಾಗಿದೆ. ಆದ್ದರಿಂದ ಅರಣ್ಯ ಇಲಾಖೆಯು ಅಂತಹ ಎಲ್ಲಾ ನೆಡುತೋಪುಗಳ ಕಟಾವಣೆಗೆ ಹಾಗೂ ಬೇರೆ ಉಪಯುಕ್ತ ಸ್ಥಳೀಯ ಜಾತಿಯ ನೆಡುತೋಪುಗಳ ಪುನರ್ಅಭಿವೃದ್ಧಿಗೆ ಯೋಜನೆಯನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲು ಈ ಮೂಲಕ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯಪಡೆ ಮುಖ್ಯಸ್ಥರು) ಇವರಿಗೆ ಸೂಚಿಸಿದೆ.

3. ಈಗಾಗಲೇ ಅರಣ್ಯ ಪ್ರದೇಶಗಳಲ್ಲಿ ನೆಡುತೋಪು ನಿರ್ಮಾಣ ಮಾಡಲು ಅಭಿವೃದ್ಧಿಪಡಿಸಿದ ಅರಣ್ಯ ಇಲಾಖೆಯ ಸಸ್ಯಕ್ಷೇತ್ರಗಳಲ್ಲಿ ನೀಲಗಿರಿ ಸಸಿಗಳನ್ನು ಬೆಳೆಸಬಾರದೆಂದು ಈ ಹಿಂದೆ ಹೊರಡಿಸಲಾದ ಸುತ್ತೋಲೆ ಸಂಖ್ಯೆ:ಅಪಜೀ 29 ಎಫ್ಎಪಿ 2011 ದಿನಾಂಕ:19.03.2011ರಲ್ಲಿ ಸೂಚಿಸಿರುವುದನ್ನು ಮತ್ತೆ ಈ ಮೂಲಕ ಪುನರುಚ್ಛರಿಸಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಸರ್ಕಾರಿ ಸಸ್ಯಕ್ಷೇತ್ರಗಳಲ್ಲಿ ನೀಲಗಿರಿ ಸಸಿಗಳನ್ನು ಬೆಳೆಸಿದ್ದಲ್ಲಿ ಅಂಥ ಸಸಿಗಳನ್ನು ಕೂಡಲೇ ನಾಶಪಡಿಸಲು ಸೂಚಿಸಿದೆ.

4. ಈ ಜಿಲ್ಲೆಗಳಲ್ಲಿ ಅರಣ್ಯ ಇಲಾಖೆಯು ನೀಲಗಿರಿ ಬೆಳೆಯಲು ರೈತರಿಗೆ, ಸಾರ್ವಜನಿಕರಿಗೆ ಅಥವಾ ಖಾಸಗಿ ಸಂಸ್ಥೆಗಳಿಗೆ ಯಾವುದೇ ಪ್ರೋತ್ಸಾಹ ಹಾಗೂ ತಾಂತ್ರಿಕತೆಯನ್ನು ಒದಗಿಸಬಾರದೆಂದು ಕೂಡ ಈ ಮೂಲಕ ಸೂಚಿಸಿದೆ.

PR.100

SC.500

ಎಸ್.ಪಿ.ಪಾಟೀಲ, ಸರ್ಕಾರದ ಅಧೀನ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ವಿಷಯ : ಹುಲಿ ಸಂರಕ್ಷಿತ ಪ್ರದೇಶ ಮತ್ತು ವನ್ಯಜೀವಿಧಾಮಗಳಲ್ಲಿನ ಕುಟುಂಬಗಳ ಪುನರ್ವಸತಿ ಪ್ರಕ್ರಿಯೆಯಲ್ಲಿ 18 ವರ್ಷ ತುಂಬಿದ ಅವಿವಾಹಿತ ಹೆಣ್ಣುಮಕ್ಕಳನ್ನೂ ಸಹ ಪ್ರತ್ಯೇಕ ಕುಟುಂಬವೆಂದು ಪರಿಗಣಿಸುವ ಬಗ್ಗೆ.

ಉಲ್ಲೇಖ : 1. ಸರ್ಕಾರಿ ಆದೇಶ ಸಂಖ್ಯೆ: ಆರ್‌ಡಿ 26 ಆರ್ಇಹೆಚ್ 2003, ದಿನಾಂಕ: 18.04.2005. 2. ಎನ್‌ಟಿಸಿಎ ಮಾರ್ಗಸೂಚಿ ಪತ್ರ ಸಂಖ್ಯೆ: 3-1/2003-ಪಿಟಿ, ದಿನಾಂಕ: 25.02.2008.

ಪ್ರಸ್ತಾವನೆ :

ಮೇಲೆ (1)ರಲ್ಲಿ ಓದಲಾದ ಸರ್ಕಾರಿ ಆದೇಶದನ್ವಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿನ ಕುಟುಂಬಗಳ ಪುನರ್ವಸತಿ ಪರಿಹಾರವನ್ನು ಪಾವತಿಸಲಾಗುತ್ತಿದೆ.

ಮೇಲೆ (2)ರಲ್ಲಿ ಓದಲಾದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯನ್ವಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ವನ್ಯಜೀವಿಧಾಮಗಳ ಘೋಷಣೆ ಪೂರ್ವ ಈ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ಸ್ವಯಂ ಪ್ರೇರಿತರಾಗಿ ಪುನರ್ವಸತಿಗೊಳ್ಳಲು ಬಯಸುವ ಕುಟುಂಬಗಳಿಗೆ ಪರಿಹಾರವನ್ನು ನೀಡಲಾಗುತ್ತಿದೆ. ಈ ಮಾರ್ಗ ಸೂಚಿಗಳಲ್ಲಿ "ಕುಟುಂಬ"ದ ಪರಿಭಾಷೆ ಈ ಕೆಳಕಂಡಂತಿದೆ.

"A family" includes a person, his or her spouse, minor sons, unmarried daughters, minor brothers, unmarried sisters, father, mother and other relatives residing with him or her and dependent on him or her for their livelihood; includes "nuclear family" consisting of a person, his or her spouse and minor children.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಗಳಲ್ಲಿ ಕುಟುಂಬದ ಪರಿಭಾಷೆಯನ್ನು ಸಡಿಲಿಸಿ, ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಅವಕಾಶವಿರುವುದರಿಂದ ಹಾಗೂ ಈ ಪುನರ್‌ವಸತಿ ಪ್ರಕ್ರಿಯೆಯನ್ನು ಹೆಚ್ಚು ಆಕರ್ಷಕವಾಗಿ ಮಾಡಲು ಪ್ರಸ್ತುತದಲ್ಲಿರುವ "ಕುಟುಂಬ" ಪರಿಭಾಷೆಯಲ್ಲಿ "minor sons, unmarried daughters" ಎಂಬುದರ ಬದಲಾಗಿ "minor sons, minor daughters ಎಂದು ಹಾಗೂ "minor brothers, unmarried sisters" ಎಂಬುದರ ಬದಲಾಗಿ "minor brothers , minor sisters" ಎಂದು ತಿದ್ದುಪಡಿ ಮಾಡಲು ಸರ್ಕಾರವು ನಿರ್ಣಯಿಸಿದೆ.

ಆದ್ದರಿಂದ, ಈ ಕೆಳಗಿನಂತೆ ಆದೇಶ ಹೊರಡಿಸಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೪, ೨೦೧೭ ೪೬೭

ಸರ್ಕಾರದ ಆದೇಶ ಸಂಖ್ಯೆ: ಅಪಜೀ 65 ಎಫ್ಎಪಿ 2016, ಬೆಂಗಳೂರು, ದಿನಾಂಕ: 16.08.2016.

ಪ್ರಸ್ತುತ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾದಿಕಾರದ ಮಾರ್ಗಸೂಚಿಯನ್ವಯ ಕೇಂದ್ರ ಪುರಸ್ಕøತ ಹುಲಿ ಯೋಜನೆಯಡಿ ಹುಲಿ ಸಂರಕ್ಷಿತ ಪ್ರದೇಶಗಳಿಂದ ಸ್ವಯಂ ಪ್ರೇರಿತರಾಗಿ ಪುನರ್ವಸತಿಗೊಳ್ಳುವ ಕುಟುಂಬಗಳಿಗೆ ನೀಡುವ ಪುನರ್ವಸತಿ ಪ್ಯಾಕೇಜನ್ನು ಮಂಜೂರು ಮಾಡಲು ಪ್ರಸ್ತುತದಲ್ಲಿರುವ

Existing Provision Revised Provisions
"A family" includes a person, his or her spouse, minor sons, unmarried daughters, minor brothers, unmarried sisters, father, mother and other relatives residing with him or her and dependent on him or her for their livelihood; includes "nuclear family" consisting of a person, his or her spouse and minor children. "A family" includes a person, his or her spouse, minor sons, minor daughters, minor brothers, minor sisters, father, mother and other relatives residing with him or her and dependent on him or her for their livelihood; includes "nuclear family" consisting of a person, his or her spouse and minor children.

ಈ ಆದೇಶವನ್ನು ಆರ್ಥಿಕ ಇಲಾಖೆಯು ಟಿಪ್ಪಣಿ ಸಂಖ್ಯೆ: ಆಇ 603 ವೆಚ್ಚ-5/2016, ದಿನಾಂಕ: 19.07.2016ರಲ್ಲಿ ನೀಡಿದ ಸಹಮತಿಯನ್ವಯ ಹೊರಡಿಸಲಾಗಿದೆ.

PR.101

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC.500

ಯು.ಹೆಚ್.ನಾರಾಯಣಸ್ವಾಮಿ ಸರ್ಕಾರದ ಉಪ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಷಯ : ಆಯುಷ್ ನಿರ್ದೇಶನಾಲಯ ಮತ್ತು ಆಯುಷ್ ಇಲಾಖೆಯ ಅಧೀನದಲ್ಲಿನ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಿಗೆ ಮತ್ತು ಕೇಂದ್ರ ಪುರಸ್ಕøತ ಯೋಜನೆಯಡಿ ಜಿಲ್ಲಾ ಆಸ್ಪತ್ರೆ ಮತ್ತು ಪಿ.ಹೆಚ್.ಸಿ.ಗಳಲ್ಲಿನ ಆಯುಷ್ ವಿಭಾಗಗಳಿಗೆ ಕೆ.ಟಿ.ಪಿ.ಪಿ. ನಿಯಮ 1999-2000 2(ಬಿ) ಮತ್ತು (ಎಫ್) ಅನ್ವಯ ಅವಶ್ಯವಿರುವ ವಸ್ತು ಮತ್ತು ಸಾಮಗ್ರಿಗಳನ್ನು ಖರೀದಿಸಲು ಸಂಗ್ರಹಣಾ ವಿಭಾಗ (Procurement Cell) ರಚಿಸಿ ಖರೀದಿಸಲು ಮಂಜೂರಾತಿ ನೀಡುವ ಬಗ್ಗೆ.

ಓದಲಾಗಿದೆ : 4. ನಿರ್ದೇಶಕರು, ಆಯುಷ್ ಇಲಾಖೆ ಇವರ ಪತ್ರ ಸಂಖ್ಯೆ : ಆಯುಷ್/61/ಲೆಕ್ಕ (3)/ಆ.ಯು.ಔ.ಖ/2015-16, ದಿನಾಂಕ: 14.09.2016.

5. ಸರ್ಕಾರದ ಆದೇಶ ಸಂಖ್ಯೆ: ಆಕುಕ 460 ಪಿಐಎಂ 2016, ಬೆಂಗಳೂರು, ದಿನಾಂಕ:21.11.2016. 6. ನಿರ್ದೇಶಕರು, ಆಯುಷ್ ಇಲಾಖೆ ಇವರ ಪತ್ರ ಸಂಖ್ಯೆ:ಆಯುಷ್/61/ಲೆಕ್ಕ (3)/ಆ.ಯು.ಔ.ಖ/2015-16, ದಿನಾಂಕ : 14.09.2016.

ಪ್ರಸ್ತಾವನೆ:-

ಮೇಲೆ ಓದಲಾದ ಕ್ರ.ಸಂ.(1) ರ ಆಯುಷ್ ನಿರ್ದೇಶಕರ ಪತ್ರದಲ್ಲಿ ಆಯುಷ್ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಿಗೆ ಹಾಗೂ ಕೇಂದ್ರ ಪುರಸ್ಕøತ ಯೋಜನೆಯಡಿ ಜಿಲ್ಲಾ ಆಸ್ಪತ್ರೆಗಳು ಮತ್ತು ಪಿ.ಹೆಚ್.ಸಿ.ಗಳಲ್ಲಿನ ಆಯುಷ್ ವಿಭಾಗಗಳಿಗೆ ಕೆ.ಟಿ.ಪಿ.ಪಿ., ನಿಯಮ 1999-2000ರ 2(ಬಿ) ಮತ್ತು (ಎಫ್) ಅನ್ವಯ ಅವಶ್ಯವಿರುವ ವಸ್ತು ಮತ್ತು ಸಾಮಗ್ರಿಗಳನ್ನು (ಆಯುಷ್ ಔಷಧಿಗಳು, ಪೀಠೋಪಕರಣ, ವೈದ್ಯಕೀಯ ಉಪಕರಣ, ಲೇಖನ ಸಾಮಗ್ರಿ, ಪಥ್ಯಾಹಾರ ಇತ್ಯಾದಿ) ನಿಗದಿತ ಅವಧಿಯಲ್ಲಿ ವಿಳಂಬವಿಲ್ಲದಂತೆ ಖರೀದಿಸಲು ವಿವಿಧ ಪದ್ಧತಿವಾರು ತಾಂತ್ರಿಕ ಸಲಹಾ ಸಮಿತಿಗಳನ್ನೊಳಗೊಂಡ "ಸಂಗ್ರಹಣಾ ವಿಭಾಗ" (Procurement Cell) ರಚಿಸುವ ಬಗ್ಗೆ ಮತ್ತು ಆಯುಷ್ ನಿರ್ದೇಶಕರನ್ನು "ಸಂಗ್ರಹಣಾ ಸಂಸ್ಥೆ"(Procurement Entity) ಎಂದು ಘೋಷಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರ.ಸಂ.(2) ರ ಸರ್ಕಾರಿ ಆದೇಶದಲ್ಲ್ಲಿ ಆಯುಷ್ ನಿರ್ದೇಶಕರ ಪ್ರಸ್ತಾವನೆಯಂತೆ ವಿವಿಧ ಪದ್ಧತಿವಾರು ತಾಂತ್ರಿಕ ಸಲಹಾ ಸಮಿತಿಗಳನ್ನೊಳಗೊಂಡ "ಸಂಗ್ರಹಣಾ ವಿಭಾಗ" (Procurement Cell) ವನ್ನು ಮತ್ತು ಆಯುಷ್ ನಿರ್ದೇಶಕರನ್ನು "ಸಂಗ್ರಹಣಾ ಸಂಸ್ಥೆ" (Procurement Entity) ಎಂದು ಘೋಷಿಸಿ ಮಂಜೂರಾತಿ ನೀಡಲಾಗಿರುತ್ತದೆ.

ಮೇಲೆ ಓದಲಾದ ಕ್ರ.ಸಂ.(3) ರಲ್ಲಿ ಆಯುಷ್ ನಿರ್ದೇಶಕರು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಕೆಲವು ಪದಗಳನ್ನು ಸೇರ್ಪಡೆಗೊಳಿಸಿ, ರಚಿಸಿರುವ ಸಮಿತಿಗಳ ಕ್ರಮಾಂಕದಲ್ಲಿ ಬದಲಾವಣೆ ಮಾಡಿ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಆಕುಕ 313 ಪಿಐಎಂ 2008, ದಿನಾಂಕ:10.07.2008 ರಲ್ಲಿ ಆಯುಷ್ ಇಲಾಖೆಯಲ್ಲಿ ಔಷಧಗಳನ್ನು ಖರೀದಿಸಲು ಹಾಗೂ ತಾಂತ್ರಿಕ ಸಲಹಾ ಸಮಿತಿಯನ್ನು ಈ ಆದೇಶದೊಂದಿಗೆ ಸೇರ್ಪಡಿಸಿ ಮುಂದುವರೆಸಿದ ಬಗ್ಗೆ ಸೇರ್ಪಡೆ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಪ್ರಸ್ತಾವನೆಯನ್ನು ಪರಿಶೀಲಿಸಿದ್ದು, ಮೇಲೆ ಓದಲಾದ ಕ್ರ.ಸಂ.(2)ರ ಆದೇಶವನ್ನು ಹಿಂಪಡೆದು ಪರಿಷ್ಕøತ ಆದೇಶ ಹೊರಡಿಸಲು ನಿರ್ಧರಿಸಿದೆ. ಅದರಂತೆ ಈ ಪರಿಷ್ಕøತ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಆಕುಕ 460 ಪಿಐಎಂ 2016, ಬೆಂಗಳೂರು, ದಿನಾಂಕ:27.02.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಆಯುಷ್ ನಿರ್ದೇಶನಾಲಯ ಮತ್ತು ಆಯುಷ್ ಇಲಾಖೆಯ ಬೋಧಕ ಆಸ್ಪತ್ರೆ, ಆಯುಷ್ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಿಗೆ ಹಾಗೂ ರಾಜ್ಯವಲಯ, ಜಿಲ್ಲಾ ಪಂಚಾಯತ್‌ದ ಆಯವ್ಯಯಗಳು, ಕೇಂದ್ರ ಪುರಸ್ಕøತ ಯೋಜನೆಯಡಿ ಜಿಲ್ಲಾ ಆಸ್ಪತ್ರೆಗಳು ಮತ್ತು ಪಿ.ಹೆಚ್.ಸಿ.ಗಳಲ್ಲಿನ ಆಯುಷ್ ವಿಭಾಗಗಳಿಗೆ ಕೆ.ಟಿ.ಪಿ.ಪಿ., ನಿಯಮ 1999-2000ರ 2(ಬಿ) ಮತ್ತು (ಎಫ್) ಅನ್ವಯ ಅವಶ್ಯವಿರುವ ವಸ್ತು ಮತ್ತು ಸಾಮಗ್ರಿಗಳನ್ನು (ಆಯುಷ್ ಔಷಧಿಗಳು, ಪೀಠೋಪಕರಣ, ವೈದ್ಯಕೀಯ ಉಪಕರಣ, ಲೇಖನ ಸಾಮಗ್ರಿ, ಪಥ್ಯಾಹಾರ ಇತ್ಯಾದಿ) ನಿಗದಿತ ಅವಧಿಯಲ್ಲಿ೪೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೪, ೨೦೧೭ ಭಾಗ ೧ ವಿಳಂಬವಿಲ್ಲದಂತೆ ಖರೀದಿಸಲು ಆಯುಷ್ ಇಲಾಖೆಯಲ್ಲಿ "ಸಂಗ್ರಹಣಾ ವಿಭಾಗ" (Procurement Cell) ರಚಿಸಿ, ಆಯುಷ್ ನಿರ್ದೇಶಕರನ್ನು "ಸಂಗ್ರಹಣಾ ಸಂಸ್ಥೆ" (Procurement Entity) ಎಂದು ಘೋಷಿಸಿ ಈ ಕೆಳಕಂಡಂತೆ ಪದ್ಧತಿವಾರು ತಾಂತ್ರಿಕ ಸಲಹಾ ಸಮಿತಿಗಳನ್ನು ರಚಿಸಲು ಮಂಜೂರಾತಿ ನೀಡಿದೆ.

ಕ್ರ.ಸಂ. ಅವಶ್ಯಕತೆ ನಿರ್ಧರಿಸುವ ಸಮಿತಿ
1. ಜಂಟಿ ನಿರ್ದೇಶಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು ಅಧ್ಯಕ್ಷರು
2. ಉಪ ನಿರ್ದೇಶಕರು (ಆಯುರ್ವೇದ), ಆಯುಷ್ ನಿರ್ದೇಶನಾಲಯ, ಬೆಂಗಳೂರು ಸ ದ ಸ ್ಯರು
3. ಉಪನಿರ್ದೇಶಕರು (ಯುನಾನಿ), ಆಯುಷ್ ನಿರ್ದೇಶನಾಲಯ, ಬೆಂಗಳೂರು ಸ ದ ಸ ್ಯರು
4. ಉಪನಿರ್ದೇಶಕರು (ಹೋಮಿಯೋಪತಿ), ಆಯುಷ್ ನಿರ್ದೇಶನಾಲಯ, ಬೆಂಗಳೂರು ಸ ದ ಸ ್ಯರು
5. ಉಪನಿರ್ದೇಶಕರು (ಪ್ರ. ಮತ್ತು ಯೋ), ಆಯುಷ್ ನಿರ್ದೇಶನಾಲಯ, ಬೆಂಗಳೂರು ಸ ದ ಸ ್ಯರು
6. ಆಡಳಿತಾಧಿಕಾರಿ, ಆಯುಷ್ ನಿರ್ದೇಶನಾಲಯ, ಬೆಂಗಳೂರು ಸ ದ ಸ ್ಯರು
7. ಅವಶ್ಯಕ ವಸ್ತು & ಸೇವೆಗಳ ಸರಬರಾಜಿಗೆ ಬೇಡಿಕೆ ಸಲ್ಲಿಸಿರುವ ಸಂಸ್ಥೆಯ ಮುಖ್ಯಸ್ಥರುಗಳು ಸ ದ ಸ ್ಯರು
8. ಲ ಕ್ಕಾಧಿಕಾರಿಗಳು, ಆಯುಷ್ ನಿರ್ದೇಶನಾಲಯ, ಬೆಂಗಳೂರು. ೆ ಸ ದ ಸ ್ಯ ಕಾರ್ಯದರ್ಶಿ
ಟ ಂಡರ್ ಆಹ್ವಾನಿಸುವ/ತೆರೆಯುವ ಸಮಿತಿ ೆ
1. ಜಂಟಿ ನಿರ್ದೇಶಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು. ಅಧ್ಯಕ್ಷರು
2. ಉಪನಿರ್ದೇಶಕರು (ಆಯುರ್ವೇದ), ಆಯುಷ್ ನಿರ್ದೇಶನಾಲಯ, ಬೆಂಗಳೂರು. ಸ ದ ಸ ್ಯರು
3. ಉಪನಿರ್ದೇಶಕರು (ಯುನಾನಿ), ಆಯುಷ್ ನಿರ್ದೇಶನಾಲಯ, ಬೆಂಗಳೂರು. ಸ ದ ಸ ್ಯರು
4. ಉಪನಿರ್ದೇಶಕರು (ಹೋಮಿಯೋಪತಿ), ಆಯುಷ್ ನಿರ್ದೇಶನಾಲಯ, ಬೆಂಗಳೂರು. ಸ ದ ಸ ್ಯರು
5. ಉಪನಿರ್ದೇಶಕರು (ಪ್ರ. ಮತ್ತು ಯೋ), ಆಯುಷ್ ನಿರ್ದೇಶನಾಲಯ, ಬೆಂಗಳೂರು. ಸ ದ ಸ ್ಯರು
6. ಆಡಳಿತಾಧಿಕಾರಿ, ಆಯುಷ್ ನಿರ್ದೇಶನಾಲಯ, ಬೆಂಗಳೂರು. ಸ ದ ಸ ್ಯರು
7. ಅವಶ್ಯಕ ವಸ್ತು & ಸೇವೆಗಳ ಸರಬರಾಜಿಗೆ ಬೇಡಿಕೆ ಸಲ್ಲಿಸಿರುವ ಸಂಸ್ಥೆಯ ಮುಖ್ಯಸ್ಥರುಗಳು ಸ ದ ಸ ್ಯರು
8. ಲ ಕ್ಕಾಧಿಕಾರಿ, ಆಯುಷ್ ನಿರ್ದೇಶನಾಲಯ, ಬೆಂಗಳೂರು. ೆ ಸ ದ ಸ ್ಯ ಕಾರ್ಯದರ್ಶಿ
ತಾಂತ್ರಿಕ ಸಲಹಾ ಸಮಿತಿ ಮತ್ತು ಔಷಧಗಳ ಮಾದರಿ ಪರಿಶೀಲನಾ ಸಮಿತಿ
1. ಜಂಟಿ ನಿರ್ದೇಶಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು. ಅಧ್ಯಕ್ಷರು
2. ಪ್ರಾಚಾರ್ಯರು, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು. ಸ ದ ಸ ್ಯರು
3. ಪ್ರಾಚಾರ್ಯರು, ಸರ್ಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು. ಸ ದ ಸ ್ಯರು
4. ಪ್ರಾಚಾರ್ಯರು, ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು. ಸ ದ ಸ ್ಯರು
5. ಪ್ರಾಚಾರ್ಯರು, ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ, ಬೆಂಗಳೂರು. ಸ ದ ಸ ್ಯರು
6. ವ ೖಜ್ಞಾನಿಕಾಧಿಕಾರಿಗಳು, ಔಷಧ ಪರೀಕ್ಷಾ ಪ್ರಯೋಗಾಲಯ, ಬೆಂಗಳೂರು. ೆ ಸ ದ ಸ ್ಯರು
7. ಬ ಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಇಲ್ಲಿನ ಸಂಬಂಧಿಸಿದ ವಿಭಾಗದ ಪ್ರಾಧ್ಯಾಪಕರು ೆ (ವಿಶೇಷ ಆಹ್ವಾನಿತ ಸದಸ್ಯರು) ವಿಶೇಷ ವೈದ್ಯಕೀಯ ಉಪಕರಣ ಖರೀದಿ ಸಂಬಂಧಿಸಿದಂತೆ ಸ ದ ಸ ್ಯರು
8. ಉಪ ಔಷಧ ನಿಯಂತ್ರಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು. ಸ ದ ಸ ್ಯರು
ಟ ಂಡರ್ ಪರಿಶೀಲನಾ ಸಮಿತಿ ೆ
1. ಜಂಟಿ ನಿರ್ದೇಶಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು. ಅಧ್ಯಕ್ಷರು
2. ಉಪನಿರ್ದೇಶಕರು (ಆಯುರ್ವೇದ), ಆಯುಷ್ ನಿರ್ದೇಶನಾಲಯ, ಬೆಂಗಳೂರು. ಸ ದ ಸ ್ಯರು
3. ಉಪನಿರ್ದೇಶಕರು (ಯುನಾನಿ), ಆಯುಷ್ ನಿರ್ದೇಶನಾಲಯ, ಬೆಂಗಳೂರು. ಸ ದ ಸ ್ಯರು
4. ಉಪನಿರ್ದೇಶಕರು (ಹೋಮಿಯೋಪತಿ), ಆಯುಷ್ ನಿರ್ದೇಶನಾಲಯ, ಬೆಂಗಳೂರು. ಸ ದ ಸ ್ಯರು
5. ಉಪನಿರ್ದೇಶಕರು (ಪ್ರ. ಮತ್ತು ಯೋ), ಆಯುಷ್ ನಿರ್ದೇಶನಾಲಯ, ಬೆಂಗಳೂರು. ಸ ದ ಸ ್ಯರು
6. ಆಡಳಿತಾಧಿಕಾರಿಗಳು, ಆಯುಷ್ ನಿರ್ದೇಶನಾಲಯ, ಬೆಂಗಳೂರು. ಸ ದ ಸ ್ಯರು
7. ಅವಶ್ಯಕ ವಸ್ತು & ಸೇವೆಗಳ ಸರಬರಾಜಿಗೆ ಬೇಡಿಕೆ ಸಲ್ಲಿಸಿರುವ ಸಂಸ್ಥೆಯ ಮುಖ್ಯಸ್ಥರುಗಳು ಸ ದ ಸ ್ಯರು
8. ಲ ಕ್ಕಾಧಿಕಾರಿ, ಆಯುಷ್ ನಿರ್ದೇಶನಾಲಯ, ಬೆಂಗಳೂರು. ೆ ಸ ದ ಸ ್ಯ ಕಾರ್ಯದರ್ಶಿ
ಟ ಂಡರ್ ಅಂಗೀಕಾರ ಸಮಿತಿ ೆ
1. ನಿರ್ದೇಶಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು. ಅಧ್ಯಕ್ಷರು.
2. ಜಂಟಿ ನಿರ್ದೇಶಕರು, ಆಯುಷ್ ನಿರ್ದೇಶನಾಲಯ, ಬೆಂಗಳೂರು ಸ ದ ಸ ್ಯ ಕಾರ್ಯದರ್ಶಿ
3. ಉಪ ನಿರ್ದೇಶಕರು (ಆಯುರ್ವೇದ), ಆಯುಷ್ ನಿರ್ದೇಶನಾಲಯ, ಬೆಂಗಳೂರು ಸ ದ ಸ ್ಯರು
4. ಉಪನಿರ್ದೇಶಕರು (ಯುನಾನಿ), ಆಯುಷ್ ನಿರ್ದೇಶನಾಲಯ, ಬೆಂಗಳೂರು ಸ ದ ಸ ್ಯರು
5. ಉಪನಿರ್ದೇಶಕರು (ಹೋಮಿಯೋಪತಿ), ಆಯುಷ್ ನಿರ್ದೇಶನಾಲಯ, ಬೆಂಗಳೂರು ಸ ದ ಸ ್ಯರು
6. ಉಪನಿರ್ದೇಶಕರು (ಪ್ರ ಮತ್ತು ಯೋ), ಆಯುಷ್ ನಿರ್ದೇಶನಾಲಯ, ಬೆಂಗಳೂರು ಸ ದ ಸ ್ಯರು
7. ಆಡಳಿತಾಧಿಕಾರಿ, ಆಯುಷ್ ನಿರ್ದೇಶನಾಲಯ, ಬೆಂಗಳೂರು ಸ ದ ಸ ್ಯರು
8. ಲ ಕ್ಕಾಧಿಕಾರಿಗಳು, ಆಯುಷ್ ನಿರ್ದೇಶನಾಲಯ, ಬೆಂಗಳೂರು. ೆ ಸ ದ ಸ ್ಯರು
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೪, ೨೦೧೭ ೪೬೯

ಮುಂದುವರೆದು, ಪ್ರಸ್ತಾವನೆಯ ಕ್ರ,ಸಂ.(2) ರ ಸರ್ಕಾರದ ಆದೇಶ ಸಂಖ್ಯೆ: ಆಕುಕ 460 ಪಿಐಎಂ 2016, ದಿನಾಂಕ:21.11.2016ನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಆಕುಕ 313 ಪಿಐಎಂ 2008, ದಿನಾಂಕ:10.07.2008ರಲ್ಲಿ ಆಯುಷ್ ಇಲಾಖೆಯಲ್ಲಿ ಔಷಧಗಳನ್ನು ಖರೀದಿಸಲು ಹಾಗೂ ತಾಂತ್ರಿಕ ಸಲಹಾ ಸಮಿತಿಗಳನ್ನು ರಚಿಸಿ ಹೊರಡಿಸಲಾಗಿದ್ದ ಆದೇಶವನ್ನು ಮುಂದುವರೆಸಿ ಆದೇಶಿಸಿದೆ.

PR. 83

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 100

ಬಿ.ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. (ಭಾರತೀಯ ವೈದ್ಯ ಪದ್ಧತಿ)

ಕಂದಾಯ ಸಚಿವಾಲಯ

ವಿಷಯ : ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕು, ಸುತ್ತೂರು ಗ್ರಾಮದ ಶ್ರೀ ಸೋಮೇಶ್ವರ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 77 ಮುಸೇವಿ 2003, ದಿನಾಂಕ: 30-04-2003.

2. ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ: ಆರ್‌ಡಿಪಿ ಟಿಆರ್ಐ 89/2012-13, ದಿನಾಂಕ: 17-10-2016.

ಪ್ರಸ್ತಾವನೆ:-

ಮೇಲೆ (1)ರಲ್ಲಿ ಓದಲಾದ ಸರ್ಕಾರದ ದಿನಾಂಕ:30-04-2003ರ ಅಧಿಸೂಚನೆಯಲ್ಲಿ ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕು, ಸುತ್ತೂರು ಗ್ರಾಮದಲ್ಲಿರುವ ಶ್ರೀ ಸೊಮೇಶ್ವರಸ್ವಾಮಿ ದೇವಸ್ಥಾನವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ, 1997ರನ್ವಯ ಪುಟ ಸಂಖ್ಯೆ:618, ಕ್ರಮ ಸಂಖ್ಯೆ:128ರಲ್ಲಿ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಪ್ರಕಟಿಸಲಾಗಿರುತ್ತದೆ. ಪ್ರಸ್ತುತ ಹೊಸ ಅಧಿಸೂಚನೆ ಸಂಖ್ಯೆ:ಕಂಇ 87 ಮುಆಬಿ 2012, ದಿನಾಂಕ: 29-09-2012ರಲ್ಲಿ ಪುಟ ಸಂಖ್ಯೆ:642, ಕ್ರಮ ಸಂಖ್ಯೆ:128 ರಲ್ಲಿ ಪ್ರಸ್ತಾಪಿತ ದೇವಾಲಯವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಪ್ರಕಟಿಸಲಾಗಿರುತ್ತದೆ.

ಮೇಲೆ (2)ರಲ್ಲಿ ಓದಲಾದ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ದಿನಾಂಕ:17-10-2016ರ ಪತ್ರದಲ್ಲಿ ಪ್ರಸ್ತಾಪಿತ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವಂತೆ ವ್ಯವಸ್ಥಾಪಕರು, ಜಗದ್ಗುರು ಶ್ರೀ ವೀರಸಿಂಹಾಸನ ಸಂಸ್ಥಾನ ಮಠ ಇವರು ಮನವಿಯನ್ನು ಸಲ್ಲಿಸಿರುತ್ತಾರೆ. ಸದರಿ ಮನವಿಯ ಮೇರೆಗೆ ಜಿಲ್ಲಾಧಿಕಾರಿ, ಮೈಸೂರು ಇವರು ಸುತ್ತೂರು ಶ್ರೀ ಸೋಮೇಶ್ವರಸ್ವಾಮಿ ದೇವಸ್ಥಾನವು ಪ್ರಾಚೀನ ಕಾಲದಿಂದಲೂ ಜಗದ್ಗುರು ಶ್ರೀ ವೀರ ಸಿಂಹಾಸನ ಮಹಾಸಂಸ್ಥಾನ ಮಠದ ವತಿಯಿಂದ ನಿರ್ವಹಿಸಲ್ಪಡುತ್ತಿದ್ದು, ಸದರಿ ದೇವಸ್ಥಾನವನ್ನು 1933 ರಲ್ಲಿ ಶ್ರೀ ಮಠದ ವತಿಯಿಂದ ದುರಸ್ಥಿ ಮಾಡಲಾಗಿರುತ್ತದೆ. ಆದುದರಿಂದ ಸುತ್ತೂರು ಗ್ರಾಮದ ಶ್ರೀ ಸೋಮೇಶ್ವರಸ್ವಾಮಿ ದೇವಸ್ಥಾನವು ಜಗದ್ಗುರು ಶ್ರೀ ವೀರಸಿಂಹಾಸನ ಮಹಾ ಸಂಸ್ಥಾನ ಮಠಕ್ಕೆ ಸೇರಿದ ದೇವಸ್ಥಾನವೆಂದು ವ್ಯಕ್ತವಾಗುತ್ತದೆ ಎಂದು ನೀಡಿದ ವರದಿಯನ್ವಯ ಪ್ರಸ್ತಾವನೆಯನ್ನು ದಿನಾಂಕ:10-01-2013ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಮುಂದೆ ಮಂಡಿಸಲಾಗಿ ಪ್ರಕರಣವನ್ನು ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಾಧೀಕರಣಕ್ಕೆ ವಹಿಸಲಾಗಿರುತ್ತದೆ.

ಅದರಂತೆ ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಧೀಕರಣವು ವಿಚಾರಣೆಯನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿ ದಿ:07-12-2013ರಂದು ನೀಡಿರುವ ಅಭಿಪ್ರಾಯ/ವರದಿಯಲ್ಲಿ ಸದರಿ ಸುತ್ತೂರು ಶ್ರೀ ಸೊಮೇಶ್ವರಸ್ವಾಮಿ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವುದು ಸೂಕ್ತವಾಗಿದೆ ಎಂದು ಅಭಿಪ್ರಾಯ ನೀಡಿರುತ್ತದೆ.

ಆದರೆ, ಮಾನ್ಯ ಉಚ್ಛ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ 18870/2006 C/W ರಿಟ್ ಅರ್ಜಿ ಸಂಖ್ಯೆ:17145/2006ರಲ್ಲಿ ದಿ:11-11-2011 ರಂದು ನೀಡಿರುವ ತೀರ್ಪಿನಲ್ಲಿ ಯಾವುದೇ ಒಂದು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿರುವ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ೪೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೪, ೨೦೧೭ ಭಾಗ ೧ ಹೊರತುಪಡಿಸುವ ಬಗ್ಗೆ ಸಾರ್ವಜನಿಕರಿಂದ ಸಲಹೆ/ಸೂಚನೆ/ಆಕ್ಷೇಪಣೆಗಳನ್ನು ಪಡೆದು ನಂತರ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿರುತ್ತದೆ. ಸದರಿ ತೀರ್ಪಿನನ್ವಯ ಸ್ಥಳೀಯ ಸಕ್ಷಮ ಪ್ರಾಧಿಕಾರವಾದ ಜಿಲ್ಲಾಧಿಕಾರಿಗಳ ಕಛೇರಿಯಿಂದ ದಿನಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಿ ಸಾರ್ವಜನಿಕರಿಂದ ಸಲಹೆ/ಸೂಚನೆ/ಆಕ್ಷೇಪಣೆಗಳನ್ನು ಪಡೆಯುವಂತೆ ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಿಕ ಸದಸ್ಯರು ನೀಡಿದ ಅಭಿಪ್ರಾಯದಂತೆ ಜಿಲ್ಲಾಧಿಕಾರಿ, ಮೈಸೂರು ಜಿಲ್ಲೆ ಇವರು ಕ್ರಮ ಕೈಗೊಂಡಿರುತ್ತಾರೆ. ಈ ವಿಚಾರದ ಬಗ್ಗೆ ಸಾರ್ವಜನಿಕರಿಂದ ಯಾವುದೇ ಸಲಹೆ/ಸೂಚನೆ/ಆಕ್ಷೇಪಣೆಗಳು ಸ್ವೀಕೃತವಾಗಿರುವುದಿಲ್ಲ.

ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಾಧೀಕರಣ ಮತ್ತು ಜಿಲ್ಲಾಧಿಕಾರಿ, ಮೈಸೂರು ಜಿಲ್ಲೆ ಇವರ ವರದಿಯನ್ವಯ ದಿನಾಂಕ:27-09-2016ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಮುಂದೆ ಪ್ರಸ್ತಾವನೆಯನ್ನು ಮಂಡಿಸಲಾಗಿ, ಪ್ರಸ್ತಾಪಿತ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಲು ನಿರ್ಣಯಿಸಲಾಗಿರುತ್ತದೆ. ಆದುದರಿಂದ ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕು, ಸುತ್ತೂರು ಗ್ರಾಮದಲ್ಲಿರುವ ಶ್ರೀ ಸೋಮೇಶ್ವರಸ್ವಾಮಿ ದೇವಸ್ಥಾನವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 1997 ರ ಕಲಂ 1(4)ರನ್ವಯ ಒಂದು ಮಠಕ್ಕೆ ಸೇರಿದ ದೇವಸ್ಥಾನವಾಗಿರುವುದರಿಂದ ಸದರಿ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವಂತೆ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರು ಕೋರಿರುತ್ತಾರೆ.

ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 64 ಮುಆಬಿ 2016, ಬೆಂಗಳೂರು, ದಿನಾಂಕ:28ನೇ ಫೆಬ್ರವರಿ, 2017

ಮೇಲೆ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಿನಾಂಕ:27-09-2016ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ನಿರ್ಣಯದಂತೆ ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕು, ಸುತ್ತೂರು ಗ್ರಾಮದಲ್ಲಿರುವ ಶ್ರೀ ಸೋಮೇಶ್ವರಸ್ವಾಮಿ ದೇವಸ್ಥಾನವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 1997ರ ಕಲಂ 1(4)ರನ್ವಯ ಒಂದು ಮಠಕ್ಕೆ ಸೇರಿದ ದೇವಸ್ಥಾನವಾಗಿರುವುದರಿಂದ ಸದರಿ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯ ಪುಟ ಸಂಖ್ಯೆ:642, ಕ್ರಮ ಸಂಖ್ಯೆ:128ರಿಂದ ಹೊರತುಪಡಿಸಿ ಆದೇಶಿಸಿದೆ.

PR. 84

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 50

ಬಿ.ಎಸ್. ನಾಗರತ್ನಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ. (ಮುಜರಾಯಿ)

ಒಳಾಡಳಿತ ಸಚಿವಾಲಯ

ವಿಷಯ : ಸುಧಾರಿತ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಜಾರಿಗೊಳಿಸುವ ಬಗ್ಗೆ. ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 217 ಎಸ್ಎಸ್‌ಟಿ 2010, ದಿನಾಂಕ: 21.06.2010.

2. ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕ ರವರ ಪತ್ರ ಸಂ:ಕಾನೂನು(1)/35/2016-17, ದಿನಾಂಕ: 03.03.2017.

ಪ್ರಸ್ತಾವನೆ:-

ಮೇಲೆ ಓದಲಾದ ಕ್ರಮ ಸಂಖ್ಯೆ(1)ರ ಸರ್ಕಾರದ ಆದೇಶದಲ್ಲಿ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಮತ್ತು ಜನಸ್ನೇಹಿಯಾಗಿ ಹಾಗೂ ದಕ್ಷ ರೀತಿಯಿಂದ ನಿರ್ವಹಿಸಲು ಅನುಕೂಲವಾಗುವಂತೆ ಹಲವಾರು ಮಾರ್ಗದರ್ಶನಗಳನ್ನು ನೀಡಲಾಗಿದೆ.

ಪೊಲೀಸ್ ಬೀಟ್ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ಜನಸ್ನೇಹಿಯಾಗಿ ವ್ಯವಸ್ಥೆಗೊಳಿಸಲು ಮೇಲೆ ಓದಲಾದ ಕ್ರಮ ಸಂಖ್ಯೆ(2)ರಲ್ಲಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕ ರವರು ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಪೊಲೀಸ್ ಆಯುಕ್ತರುಗಳು/ ಜಿಲ್ಲಾ ಪೊಲೀಸ್ ಅಧೀಕ್ಷಕರುಗಳಿಂದ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಪೊಲೀಸ್ ಸಬ್-ಇನ್ಸ್‌ಪೆಕ್ಟರ್‌ವರೆಗಿನ ಅಧಿಕಾರಿಗಳ ಪೊಲೀಸ್ ಕಾರ್ಯಕ್ಷೇತ್ರ ಮತ್ತು ಕಾರ್ಯವ್ಯಾಪ್ತಿಯನ್ನು ಭೌಗೋಳಿಕವಾಗಿ ಜವಾಬ್ದಾರಿಯನ್ನು ನಿಗದಿಪಡಿಸಲಾಗಿದೆ. ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಮತ್ತು ಪೊಲೀಸ್ ಕಾನ್ಸ್‌ಟೇಬಲ್ ರವರುಗಳ ಸಂಖ್ಯೆ ಶೇಕಡ 90% ರಷ್ಟಿದ್ದರೂ ಸಹ ಅವರುಗಳಿಗೆ ಯಾವುದೇ ನಿರ್ಧಿಷ್ಟವಾದ ಸರಹದ್ದನ್ನು ನಿಗದಿಗೊಳಿಸಲಾಗಿಲ್ಲ. ಆದ್ದರಿಂದ ಎಲ್ಲಾ ಪೊಲೀಸ್ ಠಾಣೆಗಳ ಹೆಡ್‌ಕಾನ್ಸ್‌ಟೇಬಲ್‌ಗಳು ಮತ್ತು ಪೊಲೀಸ್ ಕಾನ್ಸ್‌ಟೇಬಲ್ ರವರುಗಳಿಗೆ ಅವರ ಠಾಣಾ ವ್ಯಾಪ್ತಿಯಲ್ಲಿ ಒಂದು ನಿರ್ಧಿಷ್ಟವಾದ ಭೌಗೋಳಿಕ ಸರಹದ್ದನ್ನು ನಿಗದಿಗೊಳಿಸುವುದು ತುರ್ತು ಅಗತ್ಯವೆಂದು ಭಾವಿಸಲಾಗಿದೆ. ಅಧಿಕಾರ ಮತ್ತು ಜವಾಬ್ದಾರಿ ಒಂದಕ್ಕೊಂದು ಪೂರಕವಾಗಿರುವುದರಿಂದ ಈ ರೀತಿ ಒಂದು ಭೌಗೋಳಿಕ ಸರಹದ್ದನ್ನು ನಿಗದಿಪಡಿಸುವುದರಿಂದ ಅವರುಗಳು ತಮ್ಮ ಕಾರ್ಯವ್ಯಾಪ್ತಿಯ ಸರಹದ್ದಿನಲ್ಲಿ ಅಧಿಕಾರ ಮತ್ತು ಜವಾಬ್ದಾರಿಯನ್ನು ಹೊಂದುವುದು ಸೂಕ್ತವಾಗಿರುತ್ತದೆ.

ಪ್ರಸ್ತುತ ರಾಜ್ಯ ಪೊಲೀಸ್ ವ್ಯವಸ್ಥೆಯಲ್ಲಿ ಎಲ್ಲಾ ನಗರ/ಗ್ರಾಮೀಣ ಪೊಲೀಸ್ ಠಾಣೆಗಳನ್ನು "ಬೀಟ್" ವ್ಯವಸ್ಥೆಯಲ್ಲಿ ವಿಂಗಡಿಸಲಾಗಿದ್ದರೂ ಸಹ ಎಲ್ಲಾ ಪೊಲೀಸ್ ಹೆಡ್‌ಕಾನ್ಸ್‌ಟೇಬಲ್ ಮತ್ತು ಕಾನ್ಸ್‌ಟೇಬಲ್ ರವರುಗಳನ್ನು ಈ ಬೀಟ್ ಸೇವೆಗಾಗಿ ಭೌಗೋಳಿಕ ಪ್ರದೇಶವನ್ನು ನಿರ್ಧಿಷ್ಟಪಡಿಸಿ ಹಂಚಿಕೆ ಮಾಡಲಾಗಿಲ್ಲ. ಆದ್ದರಿಂದ ಆಯಾ ಪೊಲೀಸ್ ಠಾಣೆಯ ಪೊಲೀಸ್ ಹೆಡ್‌ಕಾನ್ಸ್‌ಟೇಬಲ್ ಮತ್ತು ಕಾನ್ಸ್‌ಟೇಬಲ್‌ಗಳ ಸಂಖ್ಯೆ ಮತ್ತು ಬೀಟ್ ಸಂಖ್ಯೆಗಳು ಸಮನಾಗಿರುವ ಒಂದು ಬೀಟ್ ಅನ್ನು ಹಂಚಿಕೆ ಮಾಡಿ ಅವರುಗಳು ಸಹ ಜವಾಬ್ದಾರಿಯುತ ಪೊಲೀಸ್ ಕಾರ್ಯನಿರ್ವಹಿಸುವ ಅಗತ್ಯವಿದೆ. ಅಂತಹ ಸಿಬ್ಬಂದಿಯವರು ತಾವು ಮಾಡುತ್ತಿರುವ ಕೆಲಸದೊಂದಿಗೆ ಹೆಚ್ಚುವರಿಯಾಗಿ ತಮಗೆ ಹಂಚಿಕೆಯಾದ 'ಬೀಟ್' ಕರ್ತವ್ಯವನ್ನು ಸಹ ನಿರ್ವಹಿಸಬೇಕಾಗುತ್ತದೆ.

ಪೊಲೀಸ್ ಠಾಣೆಯನ್ನು ವಿವಿಧ ಬೀಟ್‌ಗಳೆಂದು ವಿಭಜಿಸಿ, ಪ್ರತಿ ಹೆಡ್‌ಕಾನ್ಸ್‌ಟೇಬಲ್ ಮತ್ತು ಪೊಲೀಸ್ ಕಾನ್ಸ್‌ಟೇಬಲ್ ರವರುಗಳಿಗೆ ಹಂಚಿಕೆ ಮಾಡುವುದರಿಂದ ಸಮುದಾಯ ಪೊಲೀಸ್ ಕಾರ್ಯನಿರ್ವಹಣೆಯ ಅಂಶವನ್ನು ವಿಸ್ತರಿಸಲು ಮತ್ತು ಸಾರ್ವಜನಿಕರು ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಭಾಗವಹಿಸಲು / ಉತ್ತಮ ಬಾಂಧವ್ಯ ಏರ್ಪಡಿಸಲು ಸಹಕಾರಿಯಾಗುತ್ತದೆ. ಪ್ರತಿ ಬೀಟ್ ವ್ಯವಸ್ಥೆಯು ಸಾರ್ವಜನಿಕರಿಗೆ "ಒಂದು ಸಂಪರ್ಕ ಬಿಂದು" ವನ್ನು ಒದಗಿಸುವುದರಿಂದ ಸಂಬಂಧಿಸಿದ ಸಾರ್ವಜನಿಕರು ಆ ಬೀಟ್‌ನ ಹೆಡ್‌ಕಾನ್ಸ್‌ಟೇಬಲ್ ಅಥವಾ ಪೊಲೀಸ್ ಕಾನ್ಸ್‌ಟೇಬಲ್ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೪, ೨೦೧೭ ೪೭೧ ರವರನ್ನು ಅಗತ್ಯ ಸಂದರ್ಭದಲ್ಲಿ ಸಂಪರ್ಕಿಸಲು ಅನುಕೂಲವಾಗುತ್ತದೆ ಎಂದು ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು ರವರು ಸಲ್ಲಿಸಿರುವ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 109 ಎಸ್ಎಸ್‌ಟಿ 2017, ದಿನಾಂಕ : 21.03.2017.

i. ಪ್ರತಿ ಪೊಲೀಸ್ ಠಾಣೆಯಲ್ಲಿ ಲಭ್ಯವಿರುವ ಹೆಡ್‌ಕಾನ್ಸ್‌ಟೇಬಲ್ ಮತ್ತು ಪೊಲೀಸ್ ಕಾನ್ಸ್‌ಟೇಬಲ್ ರವರುಗಳ ಸಂಖ್ಯೆಗನುಗುಣವಾಗಿ ಬೀಟ್ ಸಂಖ್ಯೆಗಳನ್ನು ನಿರ್ಧಿಷ್ಟಪಡಿಸುವುದು ಮತ್ತು ಪ್ರತಿ ಬೀಟ್‌ಗೆ ಒಬ್ಬ ಹೆಡ್‌ಕಾನ್ಸ್‌ಟೇಬಲ್ ಅಥವಾ ಪೊಲೀಸ್ ಕಾನ್ಸ್‌ಟೇಬಲ್ ಅನ್ನು ನಿಗದಿಪಡಿಸುವುದು.

ii. ಈ ರೀತಿ ಬೀಟ್‌ಗೆ ಹಂಚಿಕೆ ಮಾಡಲ್ಪಟ್ಟ ಹೆಡ್‌ಕಾನ್ಸ್‌ಟೇಬಲ್ ಅಥವಾ ಪೊಲೀಸ್ ಕಾನ್ಸ್‌ಟೇಬಲ್ ಬೀಟ್ ಕಾರ್ಯದೊಂದಿಗೆ ಇತರೆ ಪೊಲೀಸ್ ಕಾರ್ಯಗಳಾದ ಜಾರಿ ಕಾರ್ಯ, ದೂರು ಅರ್ಜಿಗಳ ವಿಚಾರಣೆ, ಗುಪ್ತ ಮಾಹಿತಿ ಸಂಗ್ರಹಣೆ, ಬರಹಗಾರರ ಕೆಲಸ, ನ್ಯಾಯಾಲಯದ ಕಾರ್ಯ, ಅಪರಾಧ ತನಿಖೆ ಕಾರ್ಯ ಮುಂತಾದ ಕಾರ್ಯಗಳನ್ನು ನಿರ್ವಹಿಸುವುದು.

iii. ಪ್ರತಿ ಬೀಟ್‌ಗೆ ಹೆಡ್‌ಕಾನ್ಸ್‌ಟೇಬಲ್ ಅಥವಾ ಪೊಲೀಸ್ ಕಾನ್ಸ್‌ಟೇಬಲ್‌ರವರುಗಳನ್ನು ಕನಿಷ್ಠ ಒಂದು ವರ್ಷದ ಅವಧಿಗೆ ನಿಯೋಜಿಸಲು ಕ್ರಮ ತೆಗೆದುಕೊಳ್ಳುವುದು.

iv. ಎಲ್ಲಾ ಬೀಟ್‌ಗಳು ಒಂದು ತಿಂಗಳಲ್ಲಿ ಕನಿಷ್ಠ ಎರಡು ಬಾರಿ ನಿಗದಿತ ಕಾರ್ಯನಿರ್ವಹಿಸುವುದು.

v. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಮಯದಲ್ಲಿ, ರಕ್ಷಣಾ ಕಾರ್ಯನಿರ್ವಹಣೆಯ ಸಂದರ್ಭದಲ್ಲಿ, ರಾತ್ರಿ ವೇಳೆಯಲ್ಲಿ, ಬೀಟ್ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ, ದಕ್ಷತೆಯಿಂದ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸ್ಥಳೀಯ ಪೊಲೀಸ್ ಠಾಣೆಯ ಠಾಣಾಧಿಕಾರಿಯು ಕನಿಷ್ಠ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಬೀಟ್ ವ್ಯವಸ್ಥೆಯನ್ನು ಮಾಡುವುದು.

vi. ಉಳಿದಂತೆ ಪೊಲೀಸ್ ಮ್ಯಾನ್ಯುಯಲ್ ಅಧ್ಯಾಯ XII ಮತ್ತು XIII ರಲ್ಲಿನ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 217 ಎಸ್ಎಸ್‌ಟಿ 2010, ದಿನಾಂಕ: 21.06.2010 ರಲ್ಲಿರುವ ಮಾರ್ಗಸೂಚಿಗಳು ಯಥಾವತ್ತಾಗಿ ಮುಂದುವರೆಯುತ್ತವೆ.

vii. ಈ ಸುಧಾರಿತ ವ್ಯವಸ್ಥೆಯು ದಿನಾಂಕ 01.04.2017 ರಿಂದ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಅಸ್ತಿತ್ವಕ್ಕೆ ಬರುವುದು.

viii. ಎಲ್ಲಾ ಪೊಲೀಸ್ ಆಯುಕ್ತರುಗಳು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರುಗಳು ಮೇಲಿನಂತೆ ಸುಧಾರಿತ ಬೀಟ್ ವ್ಯವಸ್ಥೆಯನ್ನು ದಿನಾಂಕ:01.04.2017 ಕ್ಕಿಂತ ಪೂರ್ವದಲ್ಲಿಯೇ ಪುನರ್ ರಚಿಸಲು ಕ್ರಮ ತೆಗೆದುಕೊಳ್ಳುವುದು.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತೀ ಚಿಕ್ಕ ಕಾರ್ಯನಿರ್ವಹಣಾ ಘಟಕವಾಗಿ ಹೆಡ್‌ಕಾನ್ಸ್‌ಟೇಬಲ್ ಅಥವಾ ಪೊಲೀಸ್ ಕಾನ್ಸ್‌ಟೇಬಲ್ ರವರ ಉಸ್ತುವಾರಿಯಲ್ಲಿರುವ "ಬೀಟ್" ವ್ಯವಸ್ಥೆಯು ಕಾರ್ಯನಿರ್ವಹಿಸುತ್ತದೆ.

PR. 87

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 50

ಕೆ. ಪದ್ಮಿನಿದೇವಿ

ಸರ್ಕಾರದ ಅಧೀನ ಕಾರ್ಯದರ್ಶಿ

ಒಳಾಡಳಿತ ಇಲಾಖೆ. (ಕಾನೂನು ಮತ್ತು ಸುವ್ಯವಸ್ಥೆ)

ಇಂಧನ ಸಚಿವಾಲಯ

ವಿಷಯ : ಸರ್ಕಾರದ ಕಾರ್ಯಕ್ರಮಗಳು/ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಕಾರಣರಾದ ಅಧಿಕಾರಿಗಳು, ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳನ್ನು ಗುರುತಿಸುವ ಬಗ್ಗೆ.

ಓದಲಾಗಿದೆ : ಮಾನ್ಯ ಇಂಧನ ಸಚಿವರ ಟಿಪ್ಪಣಿ ಸಂಖ್ಯೆ: ಇಂಸ/ಕ/1465/2016-17, ದಿನಾಂಕ: 18-02-2017.

ಪ್ರಸ್ತಾವನೆ:-

ಸರ್ಕಾರವು ಇಂಧನ ಕ್ಷೇತ್ರದ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ, ಅನೇಕ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತಂದಿರುತ್ತದೆ.

ಇಂಧನ ಕ್ಷೇತ್ರದಲ್ಲಿ ಇಲಾಖೆಯ ಸಂಸ್ಥೆಗಳಾದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ವಿದ್ಯುತ್ ವಿತರಣಾ ಕಂಪನಿಗಳು, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಂಸ್ಥೆರವರು ಇಲಾಖೆಯ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಪೂರ್ಣಗೊಳಿಸುತ್ತಿವೆ.

ಸರ್ಕಾರದ ಅಭಿವೃದ್ಧಿ ಯೋಜನೆಗಳು/ಕಾರ್ಯಕ್ರಮಗಳನ್ನು ಸರ್ಕಾರಿ ಇಲಾಖೆಯ ಅಧಿಕಾರಿಗಳನ್ನೊಳಗೊಂಡಂತೆ, ಖಾಸಗಿ ವ್ಯಕ್ತಿ ಮತ್ತು ಸಂಘ ಸಂಸ್ಥೆಗಳೂ ಸಹ ಭಾಗಿಯಾಗಿ, ಇವರೆಲ್ಲರ ಪ್ರಯತ್ನದಿಂದ ಯಶಸ್ವಿಯಾಗಿವೆ. ಸರ್ಕಾರದ ಅಭಿವೃದ್ಧಿ ಯೋಜನೆಗಳು/ಕಾರ್ಯಕ್ರಮಗಳಾದ ಸೌರ ಮೇಲ್ಛಾವಣಿ ವಿದ್ಯುತ್ ಉತ್ಪಾದನೆ, Energy Efficiency, IPP, ಹೊಸಬೆಳಕು, ಭೂ ಮಾಲೀಕತ್ವವುಳ್ಳ ರೈತರ ಮೂಲಕ ವಿಕೇಂದ್ರಿಕೃತ ವಿದ್ಯುತ್ ಉತ್ಪಾದನೆಯಡಿಯಲ್ಲಿ 1 ರಿಂದ 3 ಮೆ.ವ್ಯಾ. ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನೆ, ಇತ್ಯಾದಿ ಆಗಿರುತ್ತವೆ. ಈ ರೀತಿಯ ಯೋಜನೆ / ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಕಾರಣರಾದ ಅಧಿಕಾರಿ/ನೌಕರರು, ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳನ್ನು ಗುರುತಿಸುವುದು ಸರ್ಕಾರದ ಕರ್ತವ್ಯವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ, ಸರ್ಕಾರದ ಅಭಿವೃದ್ಧಿ ಯೋಜನೆ/ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಕಾರಣರಾದ ಅಧಿಕಾರಿ/ನೌಕರರು, ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳನ್ನು ಗುರುತಿಸಿ ಪುರಸ್ಕರಿಸುವ ಸಲುವಾಗಿ ಒಂದು ಸಮಿತಿಯನ್ನು ರಚಿಸುವ ಅವಶ್ಯಕತೆ ಇರುತ್ತದೆ. ಈ ಸಮಿತಿಯು ಇಂಧನ ಕ್ಷೇತ್ರದ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಅಭಿವೃದ್ಧಿ ಯೋಜನೆ/ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಕಾರಣರಾದವರನ್ನು ಆಯ್ಕೆ ಮಾಡಿ, ಸರ್ಕಾರಕ್ಕೆ ಶಿಫಾರಸ್ಸು ಮಾಡಲು, ಈ ಕೆಳಕಂಡ ಆದೇಶ ಹೊರಡಿಸಲಾಗಿದೆ.

ಸರ್ಕಾರಿ ಆದೇಶ ಸಂಖ್ಯೆ ಇಎನ್ 29 ವಿಎಸ್‌ಸಿ 2017, ಬೆಂಗಳೂರು, ದಿನಾಂಕ:03-03-2017.

ಇಂಧನ ಕ್ಷೇತ್ರದಲ್ಲಿ ಇಲಾಖೆಯ ಸಂಸ್ಥೆಗಳಾದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ವಿದ್ಯುತ್ ವಿತರಣಾ ಕಂಪನಿಗಳು, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಂಸ್ಥೆರವರು ಇಲಾಖೆಯ ಅಭಿವೃದ್ಧಿ ಯೋಜನೆ/೪೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೪, ೨೦೧೭ ಭಾಗ ೧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಕಾರಣರಾದ ಅಧಿಕಾರಿ/ನೌಕರರು, ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳನ್ನು ಗುರುತಿಸಲು ಹಾಗೂ

1 ವ ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಅಧ್ಯಕ್ಷರು
2 ವ ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸ ದ ಸ ್ಯರು
3 ವ ್ಯವಸ್ಥಾಪಕ ನಿರ್ದೇಶಕರು, ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ, ನವದೆಹಲಿ ಸ ದ ಸ ್ಯರು
4 ಡ ೖರೆಕ್ಟರ್ ಜನರಲ್, ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ವಿಂಡ್ ಎನರ್ಜಿ, ಚೆನೈ ೆ ಸ ದ ಸ ್ಯರು
5 ಎಕ್ಸಿಕ್ಯೂಟಿವ್ ಡೈರೆಕ್ಟರ್, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಬೆಂಗಳೂರು ಸ ದ ಸ ್ಯರು
6 ನಿರ್ದೇಶಕರು(ತಾ), ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಸ ದ ಸ ್ಯರು
7 ನಿರ್ದೇಶಕರು(ತಾ), ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸ ದ ಸ ್ಯರು
8 ನಿರ್ದೇಶಕರು(ತಾ), ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸ ದ ಸ ್ಯರು
9 ನಿರ್ದೇಶಕರು(ತಾ), ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಸ ದ ಸ ್ಯರು
10 ನಿರ್ದೇಶಕರು(ತಾ), ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸ ದ ಸ ್ಯರು
11 ನಿರ್ದೇಶಕರು(ತಾ), ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸ ದ ಸ ್ಯರು
12 ವ ುುಖ್ಯ ಇಂಜಿನಿಯರ್(ವಿ), ಆರ್.ಟಿ. ಮತ್ತು ಆರ್. & ಡಿ., ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಸ ಂಚಾಲಕರು

ನಿಬಂಧನೆಗಳು :

1. ಸಮಿತಿಯು ಯೋಜನೆಯ ಯಶಸ್ಸಿಗೆ ಕಾರಣರಾದ ಅಧಿಕಾರಿ/ನೌಕರರು, ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳ ಆಯ್ಕೆ ಪ್ರಕ್ರಿಯೆಗೆ ಮಾನದಂಡಗಳನ್ನು ರಚಿಸಿ, ಸರ್ಕಾರದ ಅನುಮೋದನೆಯನ್ನು ಪಡೆಯುವುದು.

2. ಯೋಜನೆಯ ಯಶಸ್ಸಿಗೆ ಕಾರಣರಾದ ಅಧಿಕಾರಿ/ನೌಕರರು, ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳನ್ನು ಸೂಕ್ತ ಕಾರಣಗಳೊಂದಿಗೆ ಶಿಫಾರಸ್ಸು ಮಾಡುವುದು.

3. ಸಮಿತಿಯು ಶಿಫಾರಸ್ಸು ವರದಿಯನ್ನು ಒಂದು ತಿಂಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸುವುದು.

PR. 88

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 10

ಬಿ.ವಿ. ಶ್ರೀನಿವಾಸಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ

ಇಂಧನ ಇಲಾಖೆ.

ತೋಟಗಾರಿಕೆ ಸಚಿವಾಲಯ

ಸೇರ್ಪಡೆ ಆದೇಶ

ಸಂಖ್ಯೆ: ತೋಇ 42 ತೋಇವಿ 2017, ಬೆಂಗಳೂರು, ದಿನಾಂಕ: 20-03-2017.

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ವಿಶೇಷವಾಗಿ ಭೋದನೆ, ಸಂಶೋಧನೆ, ವಿಸ್ತರಣಾ ಶಿಕ್ಷಣ, ಆಡಳಿತ ಮತ್ತು ಸಾಮಾನ್ಯ ಆಸಕ್ತಿಗಳ ಇತರೆ ವಿಷಯಗಳ ಸಂಬಂಧದಲ್ಲಿ ಪರಿಣಾಮಕಾರಿ ಸಮನ್ವಯದ ಉದ್ದೇಶಕ್ಕಾಗಿ, ತೋಟಗಾರಿಕೆ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಗಾಗಿ, ಸರ್ಕಾರದ ಆದೇಶ ಸಂಖ್ಯೆ:ತೋಇ 436 ತೋಇವಿ 2016, ದಿನಾಂಕ: 03-01-2017 ರಲ್ಲಿ ರಚಿಸಲಾದ ರಾಜ್ಯ ಸಮನ್ವಯ ಸಮಿತಿಯಲ್ಲಿ ಈ ಕೆಳಕಂಡ ಪ್ರತಿನಿದಿಗಳನ್ನು ಸೇರ್ಪಡೆಗೊಳಿಸಿ ಆದೇಶಿಸಿದೆ. ಮುಂದುವರೆದು ತೋಇ 436 ತೋಇವಿ 2016, ಬೆಂಗಳೂರು, ದಿನಾಂಕ:03-01-2017 ರ

(1) ಕುಲಪತಿಗಳು, ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ. ಸ ದ ಸ ್ಯರು
(2) ಕುಲಸಚಿವರು, ತ ೂೕಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ. ೆ ಸ ದ ಸ ್ಯರು
(3) ಕುಲಸಚಿವರು, ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ. ಸ ದ ಸ ್ಯರು
(4) ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ, ಶಿವವೊಗ್ಗದ ಶಿಕ್ಷಣ ನಿರ್ದೇಶಕರು, ಸಂಶೋಧನೆ ನಿರ್ದೇಶಕರು ಮತ್ತು ವಿಸ್ತರಣಾ ನಿರ್ದೇಶಕರು. ಸ ದ ಸ ್ಯರು

PR. 89

SC. 50

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಆರ್. ರಾಮಕೃಷ್ಣ ಸರ್ಕಾರದ ಅಧೀನ ಕಾರ್ಯದರ್ಶಿ ತೋಟಗಾರಿಕೆ ಇಲಾಖೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೪, ೨೦೧೭ ೪೭೩

ಸಹಕಾರ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಸಿಒ 248 ಸಿಎಲ್ಎಸ್ 2016, ಬೆಂಗಳೂರು, ದಿನಾಂಕ: 22-03-2017.

ಸಹಕಾರ ಇಲಾಖೆಯ ಸರ್ಕಾರದ ಆದೇಶ ಸಂಖ್ಯೆ: ಸಿಒ 248 ಸಿಎಲ್ಎಸ್ 2016. ದಿನಾಂಕ:17.03.2017ರ ಆದೇಶ ಭಾಗದ ನಾಲ್ಕನೇ ಸಾಲಿನಲ್ಲಿ "`.2,07,890.00(ರೂಪಾಯಿ ಎರಡು ಲಕ್ಷದ ಏಳು ಸಾವಿರದ ಎಂಟು ನೂರು ತೊಂಭತ್ತು ಮಾತ್ರ) ಗಳ" ಬದಲಾಗಿ "`.2,07,830.00 (ರೂಪಾಯಿ ಎರಡು ಲಕ್ಷದ ಏಳು ಸಾವಿರದ ಎಂಟು ನೂರು ಮೂವತ್ತು ಮಾತ್ರ) ಗಳ" ಎಂದು ಸೇರಿಸಿ ಓದಿಕೊಳ್ಳತಕ್ಕದ್ದು. ಉಳಿದಂತೆ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. PR. 90

SC. 100

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಎಂ. ವೆಂಕಟಸ್ವಾಮಿ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ, ಸಹಕಾರ ಇಲಾಖೆ.

ಸಹಕಾರ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಸಿಒ 212 ಸಿಎಲ್ಎಸ್ 2013, ಬೆಂಗಳೂರು, ದಿನಾಂಕ: 02-03-2017.

ಸರ್ಕಾರದ ಆದೇಶ ಸಂಖ್ಯೆ:ಸಿಒ 212 ಸಿಎಲ್ಎಸ್ 2013, ದಿನಾಂಕ: 30-03-2016 ರಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಕೆಳದಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಖಂಡಿಕಾ, ಸಾಗರ ತಾಲ್ಲೂಕು ಇವುಗಳಿಗೆ ಗೋದಾಮು ನಿರ್ಮಾಣಕ್ಕೆ ಬಿಡುಗಡೆಗೊಳಿಸಲಾದ ಅನುದಾನವನ್ನು ಕಛೇರಿ ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸಿಕೊಳ್ಳಲು ಈ ಕೆಳಕಂಡ ವಿವರಗಳಂತೆ ತಿದ್ದುಪಡಿ ಆದೇಶ ಹೊರಡಿಸಿದೆ. ಉಳಿದಂತೆ ಸದರಿ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಕ್ರಮ ಸ ಂಖ್ಯೆ ಸ ಹ ಕಾರ ಸಂಘದ ಹೆಸರು ಉದ್ದೇಶ ಬಿಡುಗಡೆ ಮಾಡಲಾದ ಮೊತ್ತ (`. ಲಕ್ಷಗಳಲ್ಲಿ)
01 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಕೆಳದಿ, ಸಾಗರ ತಾಲ್ಲೂಕು ಕಛೇರಿ ಕಟ್ಟಡ ನಿರ್ಮಾಣಕ್ಕೆ 7.00
02 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಖಂಡಿಕಾ, ಸಾಗರ ತಾಲ್ಲೂಕು ಕಛೇರಿ ಕಟ್ಟಡ ನಿರ್ಮಾಣಕ್ಕೆ 8.00

PR. 91

SC. 100

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಕೆ.ರಾಧಾಕೃಷ್ಣ ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.

ಜಲಸಂಪನ್ಮೂಲ ಸಚಿವಾಲಯ

ವಿಷಯ : ವಿಶ್ವೇಶ್ವರಯ್ಯ ಜಲ ನಿಗಮ ರಚನೆ ಮಾಡುವ ಬಗ್ಗೆ. ಓದಲಾಗಿದೆ : 1. 2016-17ನೇ ಸಾಲಿನ ಆಯವ್ಯಯ ಭಾಷಣ.

2. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಸಮಗ್ರ ನೀರಾವರಿ ಯೋಜನೆ(ಎತ್ತಿನಹೊಳೆ ಯೋಜನೆ ಸೇರಿದಂತೆ) ಕುರಿತಂತೆ ಚರ್ಚಿಸಲು ದಿ:06/03/2016ರಂದು ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿ 3. ಸರ್ಕಾರದ ಆದೇಶ ಸಂಖ್ಯೆ: ಜಸಂಇ 89 ಸೇಎಸು 2016, ದಿನಾಂಕ:15.06.2016. 4. ಸರ್ಕಾರದ ಅಧಿಸೂಚನೆ ಸಂಖ್ಯೆ: ಜಸಂಇ 89 ಸೇಎಸು 2016, ದಿನಾಂಕ:15.06.2016. 5. ವಿಶೇಷಾಧಿಕಾರಿರವರ ಅರೆ ಸರ್ಕಾರಿ ಪತ್ರ ಸಂಖ್ಯೆ: ಕೆಎನ್ಎನ್(ಆರ್): 12: ಎಜಿಎನ್:2016:

ದಿನಾಂಕ:16/06/2016.

ಪ್ರಸ್ತಾವನೆ :-

ಮೇಲೆ ಓದಲಾದ (1)ರಲ್ಲಿಯ 2016-17ನೇ ಸಾಲಿನ ಆಯವ್ಯಯ ಭಾಷಣದಲ್ಲಿ, ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳಿಗಾಗಿಯೆ ಪ್ರತ್ಯೇಕ ನಿಗಮ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.

ಮೇಲೆ ಓದಲಾದ (2)ರಲ್ಲಿಯ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಸಮಗ್ರ ನೀರಾವರಿ ಯೋಜನೆ (ಎತ್ತಿನಹೊಳೆ ಯೋಜನೆ ಸೇರಿದಂತೆ) ಕುರಿತಂತೆ ಚರ್ಚಿಸಲು ದಿ:06/03/2016ರಂದು ಮಾನ್ಯ ಮುಖ್ಯಮಂತ್ರಿಯವರ ನಡೆದ ಸಭೆಯ ನಡವಳಿಯಲ್ಲಿ, ಬರಗಾಲ ಪೀಡಿತ ಹಾಗೂ ಮಧ್ಯ ಕರ್ನಾಟಕ ಪ್ರದೇಶಗಳಲ್ಲಿ ಬರುವ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಒಂದು ಪ್ರತ್ಯೇಕ ನಿಗಮ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.

ಮೇಲೆ ಓದಲಾದ (3)ರ ಆದೇಶದಲ್ಲಿ, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಾಗಿ ಸ್ಥಾಪಿಸಲಾಗುವ ಹೊಸ ನಿಗಮದ ಕೆಲಸ ಕಾರ್ಯಗಳ ಮೇಲ್ವಿಚಾರಣೆ ಮಾಡಲು ವಿಶೇಷಾಧಿಕಾರಿ ಹುದ್ದೆಯನ್ನು ಸೃಜಿಸಲಾಗಿದೆ.

ಮೇಲೆ ಓದಲಾದ (4)ರ ಅಧಿಸೂಚನೆಯಲ್ಲಿ, ಶ್ರೀ ಆರ್ ರುದ್ರಯ್ಯ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರುರವರನ್ನು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಾಗಿ ಸ್ಥಾಪಿಸಲಾಗುವ ಹೊಸ ನಿಗಮದ ಕೆಲಸ ಕಾರ್ಯಗಳ ಮೇಲ್ವಿಚಾರಣೆ ಮಾಡಲು ಹೊಸದಾಗಿ ಸೃಜಿಸಲಾಗಿರುವ ವಿಶೇಷಾಧಿಕಾರಿ ಹುದ್ದೆಗೆ ಹೆಚ್ಚಿನ ಪ್ರಭಾರದಲ್ಲಿರಿಸಲಾಗಿದೆ.

೪೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೪, ೨೦೧೭ ಭಾಗ ೧

ಮೇಲೆ ಓದಲಾದ (5)ರ ಅರೆ ಸರ್ಕಾರಿ ಪತ್ರದಲ್ಲಿ ವಿಶೇಷಾಧಿಕಾರಿರವರು ಈ ಕುರಿತಂತೆ ಮುಂದುವರೆಯಲು ಹೊಸ ನಿಗಮ ರಚನೆಗಾಗಿ ಹಾಗೂ ಇದಕ್ಕೆ ಸಂಬಂಧಿಸಿದ ಈ ಕೆಳಕಂಡ ವಿಷಯಗಳ ಬಗ್ಗೆ ಸೂಕ್ತ ಸರ್ಕಾರಿ ಆದೇಶವನ್ನು ಹೊರಡಿಸುವಂತೆ ಕೋರಿರುತ್ತಾರೆ.

1. ಪ್ರಸ್ತಾವಿತ ಹೊಸ ನಿಗಮಕ್ಕೆ ಎತ್ತಿನಹೊಳೆ ಭದ್ರಾ ಮೇಲ್ದಂಡೆ ಜಲ ನಿಗಮ ನಿಯಮಿತ ಎಂದು ಹೆಸರಿಸುವುದು.

2. ಮೆಮೋರಂಡಮ್ ಆಫ್ ಅಸೋಸಿಯೇಷನ್‌ನ ಆಬ್ಜೆಕ್ಟ್ ಕ್ಲಾಸನಲ್ಲಿ (Object clause of Memorandum of Association) ನಮೂದಿಸಬೇಕಾಗಿರುವ ಹೊಸ ನಿಗಮದ ವ್ಯಾಪ್ತಿ ಮತ್ತು ಚಟುವಟಿಕೆಗಳ ವಿವರ;

3. ಹೊಸ ನಿಗಮಕ್ಕೆ ವರ್ಗಾಯಿಸಬೇಕಾಗಿರುವ ನಿರ್ಧಿಷ್ಠ ಯೋಜನೆಗಳು;

4. ಮೆಮೋರಂಡಮ್ ಅಂಡ್ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಷೇರುದಾರರಾಗಿ ಚಂದಾದಾರರಾಗಬಹುದಾದ

(Subscribe to the Memorandum and Articles of Association as the Share Holder) 7 ಜನ ಅಧಿಕಾರಿಗಳ ಹೆಸರು;

5. ನಿರ್ದೇಶಕ ಮಂಡಳಿಯ ಸಂಯೋಜನೆ;

6. ಅಧಿಕೃತ ಕ್ಯಾಪಿಟಲ್‌ನ ಗಾತ್ರ (Quantum of Authorised Capital);

7. ಕರ್ನಾಟಕ ನೀರಾವರಿ ನಿಗಮದಿಂದ ಹೊಸ ನಿಗಮದ ರಚನಾಪೂರ್ವ ವೆಚ್ಚವನ್ನು ಭರಿಸಿ ನಂತರ ಆ ವೆಚ್ಚದ ಮೊತ್ತವನ್ನು ಹೊಸ ನಿಗಮದಿಂದ ಮರುಪಾವತಿ ಪಡೆಯುವುದು;

8. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಇವುಗಳಿಗೆ ಸಂಬಂಧಿಸಿದ ವಲಯ, ವೃತ್ತ, ವಿಭಾಗ ಮತ್ತು ಉಪ ವಿಭಾಗ ಕಛೇರಿಗಳು/ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಹೊಸ ನಿಗಮಕ್ಕೆ ವರ್ಗಾಯಿಸುವುದು;

ಈ ಹಿನ್ನೆಲೆಯಲ್ಲಿ ಈ ಕೆಳಗಿನಂತೆ ಆದೇಶವನ್ನು ಹೊರಡಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ : ಜಸಂಇ 35 ವಿಬ್ಯಾಇ 2016, ಬೆಂಗಳೂರು, ದಿನಾಂಕ: 20-08-2016.

ಮೇಲ್ಕಂಡ ಅಂಶಗಳನ್ನು ವಿವರವಾಗಿ ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ;

ಅ) ವಿಶ್ವೇಶ್ವರಯ್ಯ ಜಲ ನಿಗಮ ಎಂಬ ಹೆಸರಿನಲ್ಲಿ ಕಂಪನಿಗಳ ಕಾಯಿದೆ 2013ರ ನಿಬಂದನೆಗಳ (Provision) ಅನುಸಾರ ಹೊಸ ನಿಗಮವನ್ನು ರಚಿಸಲು ಅನುಮೋದಿಸಿದೆ;

ಆ) ಅನುಬಂದ-1ರಲ್ಲಿ ಇರುವಂತೆ ಮೆಮೋರಂಡಮ್ ಆಫ್ ಅಸೋಸಿಯೇಷನ್‌ನ ಆಬ್ಜೆಕ್ಟ್ ಕ್ಲಾಸನಲ್ಲಿ (Object clause of Memorandum of Association) ನಮೂದಿಸಬೇಕಾಗಿರುವ ವಿಶ್ವೇಶ್ವರಯ್ಯ ಜಲ ನಿಗಮದ ವ್ಯಾಪ್ತಿ ಮತ್ತು ಚಟುವಟಿಕೆಗಳನ್ನು ನಿಗದಿಪಡಿಸಲಾಗಿದೆ;

ಇ) ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಈ ಯೋಜನೆಗಳಿಗೆ ಸಂಬಂಧಿಸಿದ ಮತ್ತು ಉದ್ದೇಶಿತ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ ಉಪಯುಕ್ತವಾಗುವಂತಹ/ಪೂರಕವಾಗಿರುವಂತಹ ಮತ್ತು ಚಾಲ್ತಿಯಲ್ಲಿರುವಂತಹ ಇತರೇ ಯೋಜನಾ ಕಾಮಗಾರಿಗಳನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ವರ್ಗಾಯಿಸುವುದು;

ಈ) ವಿಶ್ವೇಶ್ವರಯ್ಯ ಜಲ ನಿಗಮವು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಇತರೆ ಬರಪೀಡಿತ ಪ್ರದೇಶಗಳ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ಬಗ್ಗೆ ತಜ್ಞರ ಸಮಿತಿ ನೀಡುವ ವರದಿ ಆಧರಿಸಿ ಪ್ರಸ್ತಾಪಿಸುವ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆ ಕೂಡ ಮಾಡುವುದು;

ಉ) ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಪ್ರಸ್ತುತದಲ್ಲಿ ಕರ್ನಾಟಕ ನೀರಾವರಿ ನಿಗಮ / ಸರ್ಕಾರದ ವ್ಯಾಪ್ತಿ ಮತ್ತು ಆಡಳಿತ ನಿಯಂತ್ರಣದಲ್ಲಿರುವ (ಇ) ನಲ್ಲಿ ಪ್ರಸ್ತಾಪಿಸಲಾಗಿರುವ ಯೋಜನೆ / ಕಾಮಗಾರಿಗಳ ಆಸ್ತಿ ಮತ್ತು ಹೊಣೆಗಾರಿಕೆಯನ್ನು ಕರ್ನಾಟಕ ನೀರಾವರಿ ನಿಗಮ / ಸರ್ಕಾರದಿಂದ ವರ್ಗಾಯಿಸಲು ಸದ್ಯಕ್ಕೆ ತಾತ್ವಿಕ ಅನುಮೋದನೆ ನೀಡಿದೆ, ಅಂತಿಮವಾಗಿ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಕಾನೂನಿನ್ವಯ ವರ್ಗಾಯಿಸಲು ಪರಿಶೀಲಿಸಿ, ಕರ್ನಾಟಕ ನೀರಾವರಿ ನಿಗಮ/ ವಿಶ್ವೇಶ್ವರಯ್ಯ ಜಲ ನಿಗಮವು ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸತಕ್ಕದ್ದು. ಏತನ್ಮಧ್ಯೆ, ಈ ರೀತಿ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಅಂತಿಮವಾಗಿ ವರ್ಗಾಯಿಸುವುದನ್ನು ಕಾಯ್ದಿರಿಸಿ, (ಇ) ನಲ್ಲಿ ಪ್ರಸ್ತಾಪಿಸಿರುವ ಯೋಜನೆಗಳು / ಕಾಮಗಾರಿಗಳನ್ನು ವಿಶ್ವೇಶ್ವರಯ್ಯ ಜಲ ನಿಗಮದ ಆಡಳಿತದ ವ್ಯಾಪ್ತಿಗೆ ಒಳಪಡಿಸಲಾಗಿದೆ;

ಊ) ಅನುಬಂದ-2 ರಲ್ಲಿ ಕಾಣಿಸಿರುವ ಅಧಿಕಾರಿಗಳನ್ನು ಮೆಮೋರಂಡಮ್ ಅಂಡ್ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಷೇರುದಾರರಾಗಿ ಚಂದದಾರರಾಗಿ (Subscribe to the Memorandum and Articles of Association as the Share Holders) ನೇಮಿಸುವುದು;

ಋು) ವಿಶ್ವೇಶ್ವರಯ್ಯ ಜಲ ನಿಗಮದ ನಿರ್ದೇಶಕರ ಮಂಡಳಿಯಲ್ಲಿ 15 ಸದಸ್ಯರ ನೇಮಕಾತಿಗೆ ಅವಕಾಶ ಕಲ್ಪಿಸಿ, ಅನುಬಂಧ-3ರಲ್ಲಿ ಕಾಣಿಸಿರುವಂತೆ 12 ಸದಸ್ಯರನ್ನು ಹೊಂದಿರುವ ನಿರ್ದೇಶಕರ ಮಂಡಳಿಯನ್ನು ರಚಿಸುವುದು;

ಋುು) ಸಧ್ಯಕ್ಕೆ ಪ್ರತಿ ಷೇರಿಗೆ `.1000.00 ರಂತೆ `.5000 ಕೋಟಿ ಮೊತ್ತದ 5,00,00,000 ಈಕ್ವಿಟಿ ಷೇರುಗಳ ಅಧಿಕೃತ ಬಂಡವಾಳವನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ನಿಗಧಿಪಡಿಸಲಾಗಿದೆ;

ಎ) ಕರ್ನಾಟಕ ನೀರಾವರಿ ನಿಗಮದಿಂದ ವಿಶ್ವೇಶ್ವರಯ್ಯ ಜಲ ನಿಗಮ ರಚನಾಪೂರ್ವ ವೆಚ್ಚವನ್ನು ಭರಿಸಿ ನಂತರ ಆ ವೆಚ್ಚದ ಮೊತ್ತವನ್ನು ವಿಶ್ವೇಶ್ವರಯ್ಯ ಜಲ ನಿಗಮದಿಂದ ಮರುಪಾವತಿ ಪಡೆಯತಕ್ಕದ್ದು;

ಏ) ಈಗಾಗಲೇ ಸೃಜಿಸಲಾಗಿರುವ ವಿಶೇಷಾಧಿಕಾರಿ ಹುದ್ದೆಯನ್ನು, ವಿಶ್ವೇಶ್ವರಯ್ಯ ಜಲ ನಿಗಮ ಸ್ಥಾಪನೆಗೊಂಡ ನಂತರ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯೆಂದು ಪರಿವರ್ತಿಸುವುದು. ವಿಶ್ವೇಶ್ವರಯ್ಯ ಜಲ ನಿಗಮದ ಕಂಪನಿ ವ್ಯವಹಾರಗಳು, ಆಡಳಿತ / ಕಾನೂನು, ಹಣಕಾಸು ಮತ್ತು ಲೆಕ್ಕಪತ್ರ ಇವುಗಳ ನಿರ್ವಹಣೆಗೆ ಸಂಬಂಧಿಸಿದ ಹುದ್ದೆಗಳನ್ನು ವಿಶ್ವೇಶ್ವರಯ್ಯ ಜಲ ನಿಗಮದ ನಿರ್ದೇಶಕರ ಮಂಡಳಿಯ ಅನುಮೋದನೆಯೊಂದಿಗೆ ಸೃಜಿಸಿ, ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜನೆ / ನೇಮಕಾತಿ / ಗುತ್ತಿಗೆ ಮೂಲಕ ಪಡೆದುಕೊಳ್ಳುವುದು. ಮುಂದುವರೆದು, ಕರ್ನಾಟಕ ನೀರಾವರಿ ನಿಗಮದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಇವುಗಳಿಗೆ ಸಂಬಂಧಿಸಿದ ವಲಯ, ವೃತ್ತ, ವಿಭಾಗ ಮತ್ತು ಉಪ ವಿಭಾಗ ಹಾಗೂ ನೋಂದಾಯಿತ ಕಛೇರಿಯಲ್ಲಿರುವ ಸದರಿ ಯೋಜನೆಗೆ ಸಂಬಂಧಿಸಿದ ಕಛೇರಿಗಳು/ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ವರ್ಗಾಯಿಸುವುದು;

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೪, ೨೦೧೭ ೪೭೫

ಐ) ಸರ್ಕಾರದ 2016-17ನೇ ಸಾಲಿನ ಆಯವ್ಯಯದ ಅನುದಾನದಲ್ಲಿ ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಹೊಸ ನಿಗಮದ ವ್ಯಾಪ್ತಿಗೆ ಒಳಪಡಿಸಲಾಗುವಂತಹ ಯೋಜನೆ/ಕಾಮಗಾರಿಗಳಿಗೆ ಪ್ರಸ್ತುತದಲ್ಲಿ ಹಂಚಿಕೆಯಾಗಿರುವ ಅನುದಾನವನ್ನು ಯಥಾವತ್ತಾಗಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ವರ್ಗಾಯಿಸುವುದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 288 ಆಕೋ-1/2016, ದಿನಾಂಕ: 18/07/2016ರಲ್ಲಿ ನೀಡಿರುವ ಸಹಮತಿ ಅನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಕೆ.ಎಸ್. ನಾಗರಾಜ ಸರ್ಕಾರದ ಅಧೀನ ಕಾರ್ಯದರ್ಶಿ ಜಲಸಂಪನ್ಮೂಲ ಇಲಾಖೆ.(ತಾಂತ್ರಿಕ-4)

ಅನುಬಂಧ-1

The Main objects to be pursued by the Company on its incorporation are ;

1. To take-up and implement the projects being proposed based on the study report to be submitted by the Expert committee for formulation of permanent irrigation facilities to Kolar and chikkabalpur districts and to take-over the implementation and management of the Yettinahole Integrated Drinking Water Project and the Upper Bhadra Irrigation Project and allied projects from the Karnataka Neeravari Nigam Limited and also other projects that the Government of Karnataka may entrust from time to time for catering to the water needs of the drought prone areas of Chikkaballapur, Kolar, Bengaluru Rural, Chitradurga, Chickamagalur, Hassan, Davanagere and Tumakuru Districts of Karnataka.

2. To Plan, investigate, estimate, build, operate and maintain all kinds of infrastructures like Dams, Reservoirs, Barrages, Weirs, Canals, Lift Irrigation Schemes, pipelines, Road works etc., required for the projects for supply of water for irrigation, drinking, power generation and other purposes including the works of Command Area Development Authority (CADA).

3. To plan, promote, build, operate and adopt modern irrigation systems/methods like sprinkler, drip and any other method or system for effective utilization of water and build, construct, operate, maintain irrigation projects entrusted by the Government of Karnataka including providing rehabilitation of people and place affected by the building of water utilization projects and promote suitable scheme for afforestation and control flood by adopting suitable standards and also provide navigation, leisure activities, fisheries, etc., in the rivers / water bodies.

Note: These are the broad objectives for the proposed Company and any minor changes required at the time of registration of the Company will be carried-out as may be advised by the consultants engaged for registration of the Company.

ಕೆ.ಎಸ್. ನಾಗರಾಜ ಸರ್ಕಾರದ ಅಧೀನ ಕಾರ್ಯದರ್ಶಿ ಜಲಸಂಪನ್ಮೂಲ ಇಲಾಖೆ.(ತಾಂತ್ರಿಕ-4)

ಅನುಬಂಧ-2

The Promoters of the Company and the number of Shares Subscribed to by them.

1. Shri. Aravind Jadav, One Share.

Chief Secretary, GOK.

2. Smt.K. Ratna Prabha, One Share.

ACS, GOK

3. Shri. I.S.N.Prasad One Share.

Additional Chief Secretary,

Finance Department GOK.

4. Shri. Rakesh Singh, One Share.

Principal Secretary,

WRD, GOK

5. Shri. L.K.Atiq, One Share.

Principal Secretary to CM, GOK.

6. Shri. R.Rudraiah, One Share.

MD, KNNL.

7. Shri. R.Rudhraiah, Four Shares.

Special Officer,

ಕೆ.ಎಸ್. ನಾಗರಾಜ ಸರ್ಕಾರದ ಅಧೀನ ಕಾರ್ಯದರ್ಶಿ ಜಲಸಂಪನ್ಮೂಲ ಇಲಾಖೆ. (ತಾಂತ್ರಿಕ-4)

ಅನುಬಂಧ-3

The Board of Directors of the Company will consist of;

1. Shri. Siddaramaiah Chairman

Chief Minister, GOK.

2. Shri. M.B.Patil, Vice-Chairman

Minister for Water Resources, GOK.

೪೭೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೪, ೨೦೧೭ ಭಾಗ ೧ 3. Shri. Aravind Jadav, Director.

Chief Secretary, GOK.

4. Smt.K. Ratna Prabha, Director.

Additional Chief Secretary, GOK.

5. Shri. I.S.N.Prasad, Director.

Additional Chief Secretary to

Finance Department, GOK.

6. Shri. L.K.Atiq, Director.

Principal Secretary to CM, GOK.

7. Shri. Rakesh Singh, Director,

Principal Secretary, WRD, GOK.

8. Shri B.G.Gurupadswamy, Director,

Secretary, WRD, GOK.

9. Shri. R.Rudraiah, Director,

Special Officer,

10. Shri D.N.Desai, Director,

PWD Secretary (Retd.)

11. J.R.K.Karadi, Director,

Retd. Engineer-In-Chief

12. Dr.V.P.Huggi, Director,

PR. 92

ಕೆ.ಎಸ್. ನಾಗರಾಜ ಸರ್ಕಾರದ ಅಧೀನ ಕಾರ್ಯದರ್ಶಿ ಜಲಸಂಪನ್ಮೂಲ ಇಲಾಖೆ.(ತಾಂತ್ರಿಕ-4)

ಜಲಸಂಪನ್ಮೂಲ ಸಚಿವಾಲಯ

ವಿಷಯ : ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಭೂಮಾಲೀಕರಿಂದ ಜಮೀನುಗಳನ್ನು

ನೇರವಾಗಿ ಖರೀದಿಸುವ ಕುರಿತು.

ಓದಲಾಗಿದೆ : 1. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಹಾಗೂ ಕೆ.ಸಿ ವ್ಯಾಲಿ ಯೋಜನೆಗೆ ಸಂಬಂಧಿಸಿದ ವಿಷಯದ ಕುರಿತಂತೆ ಚರ್ಚಿಸಲು ದಿ:01.09.2016ರಂದು ಸನ್ಮಾನ್ಯ ಮುಖ್ಯಮಂತ್ರಿರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿ.

2. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಂತೆ ದಿ:01.09.2016ರಂದು ಮಾನ್ಯ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿ.

3. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರು ರವರ ಪತ್ರ ಸಂಖ್ಯೆ:ಕನೀನಿನಿ:ಎಹೊ:ನೇರ ಖರೀದಿ:2016-17:4985:ದಿನಾಂಕ:02.09.2016. 4. ಸರ್ಕಾರದ ಆದೇಶ ಸಂಖ್ಯೆ: ಕಂಇ 54 ಭೂಸ್ವಾಹಾ 2014, ದಿನಾಂಕ: 31.05.2016.

ಪ್ರಸ್ತಾವನೆ :-

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಮತ್ತು ತುಮಕೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಆಯ್ದ ತಾಲ್ಲೂಕುಗಳಲ್ಲಿನ ಜನರಿಗೆ ಕುಡಿಯುವ ನೀರನ್ನು ಶೀಘ್ರವಾಗಿ ಒದಗಿಸುವ ದೃಷ್ಟಿಯಿಂದ ಪಶ್ಚಿಮಘಟ್ಟದ ಮೇಲ್ಭಾಗದ ಹಳ್ಳಗಳ/ನದಿಗಳ ಪ್ರವಾಹದ ಸುಮಾರು 24.01 ಟಿಎಂಸಿ ನೀರನ್ನು ಮೇಲೆ ಹೇಳಿದ ಭಾಗದ ಪ್ರದೇಶಗಳಿಗೆ ಪೂರೈಸಲು ನಿರ್ಧರಿಸಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಹಾಗೂ ಕೆ.ಸಿ ವ್ಯಾಲಿ ಯೋಜನೆಗೆ ಸಂಬಂಧಿಸಿದ ವಿಷಯದ ಕುರಿತಂತೆ ಚರ್ಚಿಸಲು ದಿ:01.09.2016ರಂದು ಸನ್ಮಾನ್ಯ ಮುಖ್ಯಮಂತ್ರಿರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ, ಮೇಲೆ ಓದಲಾದ ಕ್ರ.ಸಂ.(1) ರಲ್ಲಿಯ ನಡವಳಿಯಲ್ಲಿ, ಭೂಸ್ವಾಧೀನಕಾಯ್ದೆ/ನಿಯಮ/ಆದೇಶದಲ್ಲಿ ನೇರ ಖರೀದಿಗೆ ಅವಕಾಶ ಕಲ್ಪಿಸಲಾಗಿರುವ ಯೋಜನೆಗಳಲ್ಲಿ ನೀರಾವರಿ ಯೋಜನೆಯನ್ನು ಸೇರಿಸುವ ಬಗ್ಗೆ ಮತ್ತು ಈಗಾಗಲೇ ಹೊರಡಿಸಲಾಗಿರುವ ಆದೇಶ/ ನಿಯಮದಲ್ಲಿ ನೇರ ಖರೀದಿಗೆ ನಿಗದಿ ಪಡಿಸಿರುವ ಗರಿಷ್ಠ ಮಿತಿಯನ್ನು ಹೆಚ್ಚಿಸುವ ಬಗ್ಗೆ ನಿಯಮಾನುಸಾರ ಕ್ರಮ ಜರುಗಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ ವಿಷಯದ ಕುರಿತಂತೆ ಚರ್ಚಿಸಲು ದಿ:01.09.2016ರಂದು ಮಾನ್ಯ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ, ಮೇಲೆ ಓದಲಾದ ಕ್ರ.ಸಂ.(2) ರಲ್ಲಿಯ ನಡವಳಿಯಲ್ಲಿ, ಅತೀ ಅಗತ್ಯವಿರುವ ಕಾಮಗಾರಿಗಳಿಗೆ ಹೆಚ್ಚಿನ ಜಮೀನು ಬೇಕಾದಲ್ಲಿ ಅಂತಹ ಜಮೀನನ್ನು ನೇರ ಖರೀದಿಯ ಮೂಲಕ ಪಡೆಯಲು ಕಂದಾಯ ಇಲಾಖೆ ಆಭಿಪ್ರಾಯದೊಂದಿಗೆ ಕ್ರಮವಹಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಈ ಸಂಬಂಧ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಇವರ ಮೇಲೆ ಓದಲಾದ ಕ್ರ.ಸಂ.(3)ರ ಪತ್ರ ದಿನಾಂಕ: 02.09.2016 ರಲ್ಲಿ, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೊದಲನೇ ಹಂತದ ಕಾಮಗಾರಿಗಳಿಗೆ ಅತ್ಯಾವಶ್ಯಕವಾಗಿ ಬೇಕಾಗಿರುವ ತರಿ-81.53ಹೆ, ಖುಷ್ಕಿ-2.29 ಹೆ ಮತ್ತು ಪ್ಲಾಂಟೇಶನ್-171.23ಹೆ ಒಟ್ಟು 255.05ಹೆ ವಿಸ್ತೀರ್ಣದ ಭೂಮಿಯನ್ನು ನೇರವಾಗಿ ಖರೀದಿಸಲು ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಮುಂದುವರೆದು, ಎತ್ತಿನಹೊಳೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ ಪ್ರಾರಂಭಿಕಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೪, ೨೦೧೭ ೪೭೭ ಕಾಮಗಾರಿಗಳಿಗೆ ಹೆಚ್ಚಿನದಾಗಿ ಪ್ಲಾಂಟೇಷನ್ ಜಮೀನುಗಳೇ ಬೇಕಾಗಿರುವುದರಿಂದ ಮತ್ತು ಪ್ಲಾಂಟೇಷನ್ ಜಮೀನುಗಳ ಖರೀದಿ ಬಗ್ಗೆ The Right to Fair Compensation and Transparency in Land Acquisition, Rehabilitation and Resettlement Rules 2015ರ ನಿಯಮ 31 ಹಾಗೂ ಮೇಲೆ ಓದಲಾದ ಕ್ರ.ಸಂ (4)ರ ಆದೇಶದಲ್ಲಿ ಯಾವುದೇ ಉಲ್ಲೇಖ/ಪ್ರಸ್ತಾಪ ಇರುವುದಿಲ್ಲ; ಅಲ್ಲದೆ, ಸದರಿ ಸರ್ಕಾರದ ಆದೇಶದಲ್ಲಿ ಕೇವಲ 100 ಎಕರೆ ಗರಿಷ್ಟ ಮಿತಿಯೆಂದು ಮಾತ್ರ ತಿಳಿಸಲಾಗಿದೆ ಹಾಗೂ ಯಾವ ರೀತಿಯ ಜಮೀನುಗಳು ಎಂಬ ಬಗ್ಗೆ ಸ್ಪಷ್ಟತೆ ಇರುವುದಿಲ್ಲ; ಆದರೂ, ಇದನ್ನು ಖುಷ್ಕಿ ಎಂದು ಪರಿಗಣಿಸಿದಲ್ಲಿ, ತರಿ, ಬಾಗಾಯ್ತು / ಪ್ಲಾಂಟೇಷನ್ ಜಮೀನುಗಳನ್ನು ಖರೀದಿಸುವ ಕುರಿತು ಉಲ್ಲೇಖ ಇರುವುದಿಲ್ಲ; ಅಲ್ಲದೆ ಈ ಆದೇಶದಲ್ಲಿ "ಉದ್ದೇಶಿತ ಯೋಜನೆಗಳಿಗೆ ಅವಶ್ಯವಿರುವಷ್ಟು ಜಮೀನನ್ನು ಫಲಾನುಭವಿ ಸಂಸ್ಥೆ / ಇಲಾಖೆ ಒಂದೇ ಬಾರಿಗೆ ಮಾತ್ರ ಖರೀದಿಸುವುದು" ಎಂದು ನಮೂದಿಸಿದ್ದು. ಈ ಅಂಶವನ್ನು ಎತ್ತಿನಹೊಳೆಯಂತಹ ಬೃಹತ್ ಯೋಜನೆಗಳಿಗೆ ಅನ್ವಯಿಸುವುದು ಕಷ್ಟ ಸಾದ್ಯವಾಗಿದೆ; ಆದುದರಿಂದ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸಹಕಾರಿಯಾಗುವಂತೆ ಈ ಕೆಳ ಕಾಣಿಸಿರುವಂತೆ ಜಮೀನುಗಳ ನೇರ ಖರೀದಿಯ ಗರಿಷ್ಟ ಮಿತಿಯನ್ನು ಪರಿಷ್ಕರಿಸುವುದು ಹಾಗೂ ಸಂಬಂಧಿತ ಇತರೆ ಅಂಶಗಳನ್ನು ಅಳವಡಿಸುವುದು ಅವಶ್ಯವಾಗಿರುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ನೀರಾವರಿ ನಿಗಮರವರು ತಿಳಿಸಿರುತ್ತಾರೆ.

ಅ) The Right to Fair Compensation and Transparency in Land Acquisition, Rehabilitation and Resettlement Rules, 2015 ರ ನಿಯಮ 31ರಲ್ಲಿ ನಿಗದಿಪಡಿಸಿರುವ ಗರಿಷ್ಟ ಮಿತಿಯು ಮತ್ತು ಸರ್ಕಾರದ ಆದೇಶ ಸಂಖ್ಯೆ:ಕಂಇ 54 ಭೂಸ್ವಾಹಾ 2014, ದಿನಾಂಕ;31.05.2016 ರಲ್ಲಿ ನಿಗದಿ ಪಡಿಸಿರುವ ಗರಿಷ್ಟ ಮಿತಿಯು ಈ ಯೋಜನೆಗೆ ಪೂರಕವಾಗಿರುವುದಿಲ್ಲವಾದ್ದರಿಂದ, ತುರ್ತಾಗಿ ಅವಶ್ಯಕವಿರುವ ತರಿ-81.53ಹೆ, ಖುಷ್ಕಿ-2.29 ಹೆ ಮತ್ತು ಪ್ಲಾಂಟೇಶನ್-171.23ಹೆ ಒಟ್ಟು 255.05ಹೆ ವಿಸ್ತೀರ್ಣದ ಜಮೀನುಗಳನ್ನು ನೇರವಾಗಿ ಖರೀದಿಸುವುದು;

ಆ) ಸರ್ಕಾರ ಆದೇಶ ಸಂಖ್ಯೆ: ಕಂಇ 54 ಭೂಸ್ವಾಹಾ 2014, ದಿನಾಂಕ: 31.05.2016ರ ಪ್ಯಾರಾ 4ರಲ್ಲಿ ವಿಧಿಸಿರುವ "ಉದ್ದೇಶಿತ ಯೋಜನೆಗಳಿಗೆ ಅವಶ್ಯವಿರುವಷ್ಟು ಜಮೀನನ್ನು ಫಲಾನುಭವಿ ಸಂಸ್ಥೆ / ಇಲಾಖೆ ಒಂದೇ ಬಾರಿಗೆ ಮಾತ್ರ ಖರೀದಿಸುವುದು" ಎಂಬ ಷರತ್ತನ್ನು ಕೈಬಿಟ್ಟು, ಹಂತ ಹಂತವಾಗಿ ಜಮೀನುಗಳನ್ನು ಖರೀದಿಸಲು ಸಹಕಾರಿಯಾಗುವ ರೀತಿಯಲ್ಲಿ ಆದೇಶ ಹೊರಡಿಸುವುದು;

ಇ) ಈ ಯೋಜನೆಯು ಸಮಗ್ರ ಕುಡಿಯುವ ನೀರಿನ ಯೋಜನೆಯಾಗಿದ್ದು ಸಾರ್ವಜನಿಕ ಉದ್ದೇಶ ಹೊಂದಿರುವುದರಿಂದ ಮೇಲ್ಕಂಡ ಜಮೀನುಗಳನ್ನು ಖರೀದಿಸುವಾಗ ಪಾವತಿಸಬೇಕಾಗುವ ನೋಂದಣಿ ಮತ್ತು ಸ್ಟ್ಯಾಂಪ್ ಫೀ ಅನ್ನು ಕರ್ನಾಟಕ ಮುದ್ರಾಂಕ ಕಾಯ್ದೆ 1957 ರ ಕಲಂ 9(1) ಹಾಗೂ ನೋಂದಣಿ ಕಾಯ್ದೆ 1908 ಕಲಂ 78 ರ ಅನ್ವಯ ಪ್ರದತ್ತವಾದ ಅಧಿಕಾರ ಪ್ರಕಾರ ಮನ್ನಾ ಮಾಡುವುದು.

ಈ ಹಿನ್ನೆಲೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರು ರವರು ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದ್ದು, ಈ ಕೆಳಗಿನಂತೆ ಆದೇಶವನ್ನು ಹೊರಡಿಸಲಾಗಿದೆ.

ಸರ್ಕಾರಿ ಆದೇಶ ಸಂ: ಜಸಂಇ 95 ವಿಬ್ಯಾಇ 2016, ಬೆಂಗಳೂರು, ದಿನಾಂಕ: 18.11.2016

ಅ) ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ವಿಶೇಷ ಯೋಜನೆಯೆಂದು ಪರಿಗಣಿಸಿ The Right to Fair Compensation and Transparency in Land Acquisition, Rehabilitation and Resettlement Rules, 2015 ರ ನಿಯಮ 31 ರಲ್ಲಿ ಮತ್ತು ಸರ್ಕಾರದ ಆದೇಶ ಸಂಖ್ಯೆ:ಕಂಇ 54 ಭೂಸ್ವಾಹಾ 2014, ದಿನಾಂಕ;31.05.2016 ರಲ್ಲಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ತುರ್ತಾಗಿ ಅವಶ್ಯಕವಿರುವ ತರಿ-81.53ಹೆ, ಖುಷ್ಕಿ-2.29 ಹೆ ಮತ್ತು ಪ್ಲಾಂಟೇಶನ್-171.23ಹೆ ಒಟ್ಟು 255.05ಹೆ ವಿಸ್ತೀರ್ಣದ ಜಮೀನುಗಳನ್ನು ನೇರವಾಗಿ ಖರೀದಿಸುವ ಅವಕಾಶ ಕಲ್ಪಿಸಲು, ಭೂಮಿ ಖರೀದಿಗಾಗಿ ನೀಡುವ ಮೊತ್ತವನ್ನು The Right to Fair Compensation and Transparency in Land Acquisition, Rehabilitation and Resettlement Act, 2013ರ ಕಲಂ 26 ರಿಂದ 30ರ ಅಡಿಯಲ್ಲಿ ನಿಗದಿಪಡಿಸಲಾದ ಪರಿಹಾರ ಮೊತ್ತವನ್ನು ಮೀರತಕ್ಕದ್ದಲ್ಲ ಎಂಬ ಷರತ್ತನ್ನು ವಿಧಿಸಿ ಅನುಮತಿ ನೀಡಿ ಆದೇಶಿಸಿದೆ.

ಆ) ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ, ಸರ್ಕಾರ ಆದೇಶ ಸಂಖ್ಯೆ:ಕಂಇ 54 ಭೂಸ್ವಾಹಾ 2014, ದಿನಾಂಕ: 31.05.2016ರ ಪ್ಯಾರಾ 4ರಲ್ಲಿ ವಿಧಿಸಿರುವ "ಉದ್ದೇಶಿತ ಯೋಜನೆಗಳಿಗೆ ಅವಶ್ಯವಿರುವಷ್ಟು ಜಮೀನನ್ನು ಫಲಾನುಭವಿ ಸಂಸ್ಥೆ / ಇಲಾಖೆ ಒಂದೇ ಬಾರಿಗೆ ಮಾತ್ರ ಖರೀದಿಸುವುದು" ಎಂಬ ಷರತ್ತನ್ನು ಕೈಬಿಟ್ಟು, ಹಂತ ಹಂತವಾಗಿ ಜಮೀನುಗಳನ್ನು ಖರೀದಿಸಲು ಅನುಮತಿ ನೀಡಿ ಆದೇಶಿಸಿದೆ.

ಇ) ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯು ಸಮಗ್ರ ಕುಡಿಯುವ ನೀರಿನ ಯೋಜನೆಯಾಗಿ, ಸಾರ್ವಜನಿಕ ಉದ್ದೇಶ ಹೊಂದಿರುವುದರಿಂದ ಮೇಲ್ಕಂಡ ಜಮೀನುಗಳನ್ನು ಖರೀದಿಸುವಾಗ ಪಾವತಿಸಬೇಕಾಗುವ ನೋಂದಣಿ ಮತ್ತು ಸ್ಟ್ಯಾಂಪ್ ಫೀ ಅನ್ನು ಕರ್ನಾಟಕ ಮುದ್ರಾಂಕ ಕಾಯ್ದೆ 1957 ರ ಕಲಂ 9(1) ಹಾಗೂ ನೋಂದಣಿ ಕಾಯ್ದೆ 1908 ಕಲಂ 78 ರ ಅನ್ವಯ ಪ್ರದತ್ತವಾದ ಅಧಿಕಾರ ಪ್ರಕಾರ ಮನ್ನಾ ಮಾಡಲು ಅನುಮತಿ ನೀಡಿ ಆದೇಶಿಸಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: FD 452 FC-1/16, ದಿನಾಂಕ 26.10.2016 ರಲ್ಲಿ ಹಾಗೂ ಕಂದಾಯ ಇಲಾಖೆಯ ಟಿಪ್ಪಣಿ ಸಂಖ್ಯೆ: ಕಂಇ 32 ಭೂಸ್ವಾಹಾ 2016 ದಿನಾಂಕ: 25.10.2016, ರಲ್ಲಿ ನೀಡಿರುವ ಸಹಮತಿ ಅನ್ವಯ ಹೊರಡಿಸಲಾಗಿದೆ.

PR. 93

SC. 100

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಕೆ.ಎಸ್. ನಾಗರಾಜ ಸರ್ಕಾರದ ಅಧೀನ ಕಾರ್ಯದರ್ಶಿ ಜಲಸಂಪನ್ಮೂಲ ಇಲಾಖೆ.(ತಾಂತ್ರಿಕ-4)

ಜಲಸಂಪನ್ಮೂಲ ಸಚಿವಾಲಯ

ವಿಷಯ : ಕರ್ನಾಟಕ ನೀರಾವರಿ ನಿಗಮ/ಸರ್ಕಾರದ ವ್ಯಾಪ್ತಿಗಳಲ್ಲಿರುವ ಕೆಲವು ಯೋಜನೆಗಳನ್ನು ಮತ್ತು ಕಛೇರಿಗಳನ್ನು ವಿಶ್ವೇಶ್ವರಯ್ಯ ಜಲ ನಿಗಮದ ಆಡಳಿತ ವ್ಯಾಪ್ತಿಗೆ ಒಳಪಡಿಸಲು ವರ್ಗಾಯಿಸುವ ಕುರಿತು.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಜಸಂಇ 35 ವಿಬ್ಯಾಇ 2016, ದಿನಾಂಕ:20.08.2016.

2. ವಿಶೇಷಾಧಿಕಾರಿ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತರವರ ಪತ್ರ ಸಂಖ್ಯೆ: ಕನೀನಿ(ನೋ) 12 ಎಜಿಎನ್ (ವಿಜೆಎನ್ಎಲ್) 2016: 5966:ದಿನಾಂಕ:20.10.2016.


  1. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ ನಿಯಮಿತ ಹಾಗೂ ವಿಶೇಷಾಧಿಕಾರಿಗಳು, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತರವರ ಪತ್ರ ಸಂಖ್ಯೆ: ವಿಜನಿ (ನೋ):1:ಎಎಸ್ ಟಿ:2016-17:0005:ದಿನಾಂಕ:24.10.2016. ↩
೪೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೪, ೨೦೧೭ ಭಾಗ ೧

ಪ್ರಸ್ತಾವನೆ :-

ಮೇಲೆ ಓದಲಾದ ಕ್ರಮಸಂಖ್ಯೆ (1)ರ ಆದೇಶದಲ್ಲಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಈ ಯೋಜನೆಗಳಿಗೆ ಸಂಬಂಧಿಸಿದ ಮತ್ತು ಉದ್ದೇಶಿತ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ ಉಪಯುಕ್ತವಾಗುವಂತಹ/ ಪೂರಕವಾಗಿರುವಂತಹ ಮತ್ತು ಚಾಲ್ತಿಯಲ್ಲಿರುವಂತಹ ಇತರೇ ಯೋಜನಾ ಕಾಮಗಾರಿಗಳ ಅನುಷ್ಠಾನಕ್ಕಾಗಿ ವಿಶ್ವೇಶ್ವರಯ್ಯ ಜಲ ನಿಗಮವನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.

ಸದರಿ ಆದೇಶದಲ್ಲಿ ಮೇಲ್ಕಂಡ ಉದ್ದೇಶಕ್ಕಾಗಿ ಅನುಮೋದನೆ ನೀಡಲಾದ ಹಲವು ಅಂಶಗಳ ಪೈಕಿ ಈ ಕೆಳಕಂಡ ಅಂಶಗಳಿಗೆ ಆದೇಶ ಹೊರಡಿಸಲಾಗಿದೆ.

1) ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಪ್ರಸುತ್ತ ಕರ್ನಾಟಕ ನೀರಾವರಿ ನಿಗಮ / ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿರುವ, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಈ ಯೋಜನೆಗಳಿಗೆ ಸಂಬಂಧಿಸಿದ ಮತ್ತು ಉದ್ದೇಶಿತ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ ಉಪಯುಕ್ತವಾಗುವಂತಹ / ಪೂರಕವಾಗಿರುವಂತಹ ಮತ್ತು ಚಾಲ್ತಿಯಲ್ಲಿರುವಂತಹ ಇತರೇ ಯೋಜನಾ ಕಾಮಗಾರಿಗಳ ಆಸ್ತಿ ಮತ್ತು ಹೊಣೆಗಾರಿಕೆಯನ್ನು ಕರ್ನಾಟಕ ನೀರಾವರಿ ನಿಗಮ / ಸರ್ಕಾರದ ವ್ಯಾಪ್ತಿಯಿಂದ ವರ್ಗಾಯಿಸಲು ಸದ್ಯಕ್ಕೆ ತಾತ್ವಿಕ ಅನುಮೋದನೆ ನೀಡಿದೆ, ಅಂತಿಮವಾಗಿ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಕಾನೂನಿನನ್ವಯ ವರ್ಗಾಯಿಸಲು ಪರಿಶೀಲಿಸಿ, ಕರ್ನಾಟಕ ನೀರಾವರಿ ನಿಗಮ / ವಿಶ್ವೇಶ್ವರಯ್ಯ ಜಲ ನಿಗಮಗಳು ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಮತ್ತು ಏತನ್ಮದ್ಯೆ ಈ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಅಂತಿಮವಾಗಿ ವರ್ಗಾಯಿಸುವುದನ್ನು ಕಾಯ್ದಿರಿಸಿ, ಮೇಲೆ ಪ್ರಸ್ತಾಪಿಸಿರುವ ಯೋಜನೆಗಳು / ಕಾಮಗಾರಿಗಳನ್ನು ವಿಶ್ವೇಶ್ವರಯ್ಯ ಜಲ ನಿಗಮದ ಆಡಳಿತದ ವ್ಯಾಪ್ತಿಗೆ ಒಳಪಡಿಸಲಾಗಿದೆ.

2) ಈಗಾಗಲೇ ಸೃಜಿಸಲಾಗಿರುವ ವಿಶೇಷಾಧಿಕಾರಿ ಹುದ್ದೆಯನ್ನು, ವಿಶ್ವೇಶ್ವರಯ್ಯ ಜಲ ನಿಗಮ ಸ್ಥಾಪನೆಗೊಂಡ ನಂತರ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯೆಂದು ಪರಿವರ್ತಿಸುವುದು. ವಿಶ್ವೇಶ್ವರಯ್ಯ ಜಲ ನಿಗಮದ ಕಂಪನಿ ವ್ಯವಹಾರಗಳು, ಆಡಳಿತ, ಕಾನೂನು, ಹಣಕಾಸು ಮತ್ತು ಲೆಕ್ಕಪತ್ರ ಇವುಗಳ ನಿರ್ವಹಣೆಗೆ ಸಂಬಂಧಿಸಿದ ಹುದ್ದೆಗಳನ್ನು ವಿಶ್ವೇಶ್ವರಯ್ಯ ಜಲ ನಿಗಮದ ನಿರ್ದೇಶಕರ ಮಂಡಳಿಯ ಅನುಮೋದನೆಯೊಂದಿಗೆ ಸೃಜಿಸಿ, ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜನೆ / ನೇರ ನೇಮಕಾತಿ / ಗುತ್ತಿಗೆ ಮೂಲಕ ಭರ್ತಿ ಮಾಡುವುದು. ಮುಂದುವರೆದು, ಕರ್ನಾಟಕ ನೀರಾವರಿ ನಿಗಮದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಇವುಗಳಿಗೆ ಸಂಬಂಧಿಸಿದ ವಲಯ, ವೃತ್ತ, ವಿಭಾಗ ಮತ್ತು ಉಪ ವಿಭಾಗ ಹಾಗೂ ನೋಂದಾಯಿತ ಕಛೇರಿಯಲ್ಲಿರುವ ಸದರಿ ಯೋಜನೆಗೆ ಸಂಬಂಧಿಸಿದ ಕಛೇರಿಗಳು/ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ವಿಶ್ವೇಶ್ವರಯ್ಯ ಜಲ ನಿಗಮದ ವ್ಯಾಪ್ತಿಗೆ ವರ್ಗಾಯಿಸುವುದು.

ಮೇಲೆ ಓದಲಾದ ಕ್ರಮಸಂಖ್ಯೆ (2)ರ ಪತ್ರದಲ್ಲಿ ವಿಶೇಷಾಧಿಕಾರಿಗಳು, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತರವರು ಕಂಪನಿ ಕಾಯ್ದೆ 2013ರಡಿ ವಿಶ್ವೇಶ್ವರಯ್ಯ ಜಲ ನಿಗಮವನ್ನು ದಿ:20.10.2016ರಂದು ನೋಂದಾಯಿಸಿಕೊಳ್ಳಲಾಗಿದೆ ಎಂದು ವರದಿ ಮಾಡಿರುತ್ತಾರೆ.

ಮೇಲೆ ಓದಲಾದ ಕ್ರಮಸಂಖ್ಯೆ (3)ರ ಪತ್ರದಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ ನಿಯಮಿತ ಹಾಗೂ ವಿಶೇಷಾಧಿಕಾರಿಗಳು, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತರವರು ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಯೋಜನೆಗಳನ್ನು ಅಧಿಕೃತವಾಗಿ ವರ್ಗಾಯಿಸುವ ಅವಶ್ಯಕತೆ ಇರುವುದರಿಂದ ಈ ಕೆಳಗಿನ ಯೋಜನೆಗಳನ್ನು ಅವುಗಳಿಗೆ ಸಂಬಂಧಿಸಿದ ವಲಯ/ವೃತ್ತ/ವಿಭಾಗ/ಉಪವಿಭಾಗ ಮತ್ತು ಭೂಸ್ವಾಧೀನಾಧಿಕಾರಿಗಳ ಕಛೇರಿಗಳನ್ನು ಆಸ್ತಿ ಮತ್ತು ಹೊಣೆಗಾರಿಕೆಯನ್ನು ಒಳಗೊಂಡಂತೆ ಕರ್ನಾಟಕ ನೀರಾವರಿ ನಿಗಮದಿಂದ ಅಂತಿಮವಾಗಿ ಹೊಸ ನಿಗಮಕ್ಕೆ ವರ್ಗಾಯಿಸುವುದನ್ನು ಕಾಯ್ದಿರಿಸಿ, ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಪ್ರಾರಂಭದಲ್ಲಿ ವರ್ಗಾಯಿಸುವ ಕುರಿತು ಸೂಕ್ತ ಸರ್ಕಾರಿ ಆದೇಶವನ್ನು ಹೊರಡಿಸಲು ಕೋರಿರುತ್ತಾರೆ.

Sl No Name of the Project Details Jurisdictional Offices
1 Upper Bhadra project CE, UBP Zone Chitradurga and its jurisdictional offices
2 Yettinahole project CE,Yettinahole Zone Tumakuru and its jurisdictional offices
3 Vani Vilasa Sagar project CE, UBP Zone Chitradurga and its jurisdictional offices( Related to Upper Bhadra Project)
4 Gayathri Reservoir Project CE, UBP Zone Chitradurga and its jurisdictional offices( Related to Upper Bhadra Project)

ಕರ್ನಾಟಕ ನೀರಾವರಿ ನಿಗಮದ ಆರ್ಟಿಕಲ್ ಆಫ್ ಅಸೋಸಿಯೇಷನ್ 87 (ಬಿ) ರಲ್ಲಿ ಸರ್ಕಾರವು ನಿಗಮದ ಕಾರ್ಯಚಟುವಟಿಕೆ, ವ್ಯವಹಾರ ಮತ್ತು ಹಣಕಾಸಿನ ವಿಷಯಗಳಿಗೆ ಕುರಿತಂತೆ ಯಾವುದೆ ನಿರ್ದೇಶನವನ್ನು ನೀಡುವ ಅಧಿಕಾರ ಹೊಂದಿರುತ್ತದೆ

ಸರ್ಕಾರದ ಆದೇಶ ಸಂಖ್ಯೆ : ಜಸಂಇ 130 ವಿಬ್ಯಾಇ 2016, ಬೆಂಗಳೂರು, ದಿನಾಂಕ: 18-11-2016.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಕರ್ನಾಟಕ ನೀರಾವರಿ ನಿಗಮದ ಆರ್ಟಿಕಲ್ ಆಫ್ ಸರ್ಕಾರವು ಅಸೋಸಿಯೇಷನ್ 87 (ಬಿ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೂಡಲೆ ಜಾರಿಗೆ ಬರುವಂತೆ ಈ ಕೆಳಕಂಡಂತೆ ಆದೇಶಿಸಿದೆ;

1) ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಪ್ರಸುತ್ತ ಕರ್ನಾಟಕ ನೀರಾವರಿ ನಿಗಮ / ಸರ್ಕಾರದ ವ್ಯಾಪ್ತಿಯಲ್ಲಿರುವ, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಈ ಯೋಜನೆಗಳಿಗೆ ಸಂಬಂಧಿಸಿದ ಮತ್ತು ಉದ್ದೇಶಿತ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ ಉಪಯುಕ್ತವಾಗುವಂತಹ/ಪೂರಕವಾಗಿರುವಂತಹ ಮತ್ತು ಪ್ರಸುತ್ತ ಚಾಲ್ತಿಯಲ್ಲಿರುವಂತಹ ಇತರೇ ಯೋಜನಾ ಕಾಮಗಾರಿಗಳ ಆಸ್ತಿ ಮತ್ತು ಹೊಣೆಗಾರಿಕೆಯನ್ನು ಕರ್ನಾಟಕ ನೀರಾವರಿ ನಿಗಮ / ಸರ್ಕಾರದಿಂದ ವರ್ಗಾಯಿಸಲು ಸದ್ಯಕ್ಕೆ ತಾತ್ವಿಕ ಅನುಮೋದನೆ ನೀಡಿದೆ, ಅಂತಿಮವಾಗಿ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಕಾನೂನಿನ್ವಯ ವರ್ಗಾಯಿಸಲು ಪರಿಶೀಲಿಸಿ, ಕರ್ನಾಟಕ ನೀರಾವರಿ ನಿಗಮ/ ವಿಶ್ವೇಶ್ವರಯ್ಯ ಜಲ ನಿಗಮವು ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸುವ ಷರತ್ತಿನ ಮೇಲೆ, ಈ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಅಂತಿಮವಾಗಿಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೪, ೨೦೧೭ ೪೭೯ ವರ್ಗಾಯಿಸುವುದನ್ನು ಕಾಯ್ದಿರಿಸಿ, ಅನುಬಂಧ 1 ರಲ್ಲಿ ವಿವರಿಸಿರುವ ಯೋಜನೆಗಳು/ ಕಾಮಗಾರಿಗಳನ್ನು ವಿಶ್ವೇಶ್ವರಯ್ಯ ಜಲ ನಿಗಮದ ಆಡಳಿತದ ವ್ಯಾಪ್ತಿಗೆ ಒಳಪಡಿಸಿ ಆದೇಶಿಸಲಾಗಿದೆ.

2) ಕರ್ನಾಟಕ ನೀರಾವರಿ ನಿಗಮ ನಿಯಮಿತ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಬಂಧ-2ರಲ್ಲಿ ವಿವರಿಸಿರುವ ಕಛೇರಿಗಳನ್ನು, ಆ ಕಛೇರಿಗಳಿಗೆ ಹೊಂದಿಕೊಂಡಿರುವ ಎಲ್ಲಾ ಹುದ್ದೆಗಳು ಮತ್ತು ಆ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳ ಸಮೇತ ಈ ಕೂಡಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ವಿಶ್ವೇಶ್ವರಯ್ಯ ಜಲನಿಗಮ ನಿಯಮಿತದ ಆಡಳಿತ ವ್ಯಾಪ್ತಿಗೆ ಒಳಪಡಿಸಲು ವರ್ಗಾಹಿಸಿ ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಸ್. ನಾಗರಾಜ

ಸರ್ಕಾರದ ಅಧೀನ ಕಾರ್ಯದರ್ಶಿ

ಜಲಸಂಪನ್ಮೂಲ ಇಲಾಖೆ.(ತಾಂತ್ರಿಕ-4)

ಅನುಬಂಧ-1

ವಿಶ್ವೇಶ್ವರಯ್ಯ ಜಲ ನಿಗಮದ ಆಡಳಿತದ ವ್ಯಾಪ್ತಿಗೆ ಒಳಪಡಿಸಲಾಗಿರುವ ಯೋಜನೆಗಳು.

ಕ್ರ.ಸಂ. ಯೋಜನೆಯ ಹೆಸರು
1 ಬ ದ್ರಾ ಮೇಲ್ಡಂಡೆ ಯೋಜನೆ
2 ಎತ್ತಿಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ
3 ವಾಣಿ ವಿಲಾಸ ಸಾಗರ ಯೋಜನೆ
4 ಗಾಯತ್ರಿ ಜಲಾಶಯ ಯೋಜನೆ

ಕೆ.ಎಸ್. ನಾಗರಾಜ

ಸರ್ಕಾರದ ಅಧೀನ ಕಾರ್ಯದರ್ಶಿ

ಜಲಸಂಪನ್ಮೂಲ ಇಲಾಖೆ.(ತಾಂತ್ರಿಕ-4)

ಅನುಬಂಧ-2

ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ ವ್ಯಾಪ್ತಿಗೆ ಹಸ್ತಾಂತರಿಸಲಾಗಿರುವ ಕಛೇರಿಗಳು.

ಕ್ರ.ಸಂ. ಕಛೇರಿಯ ಹೆಸರು
I CE, UBP Zone, Chitradurga
II SE, UBP Circle No.1, BR Project
1 EE, UBP Dn. 1, Muthinakoppa
a AEE, UBP Sub Dn. 1, Muthinakoppa
b AEE, UBP Sub Dn. 2, Muthinakoppa
2 EE, UBP Dn. 2, B. R. Project
a AEE, UBP Sub Dn. 3, B. R. Project
b AEE, UBP Sub Dn. 4, Tarikere
c AEE, UBP Sub Dn. 5, Tarikere
3 EE, UBP Dn. 3, Ajjampura
a AEE, UBP Sub Dn. 7, Ajjampura
b AEE, UBP Sub Dn. 8, Ajjampura
III SE, UBP Circle No.2 Chitradurga
1 EE, UBP Dn. 4, Hosadurga
a AEE, UBP Sub Dn. 9, Ajjampura
b AEE, UBP Sub Dn. 10, Hosadurga
c AEE, UBP Sub Dn. 11, Madadakere, Camp @ Hosadurga
2 EE, UBP Dn. 5, Chitradurga
a AEE, UBP Sub Dn. 12, Chitradurga
b AEE, UBP Sub Dn. 13, Burujanaroppa, Camp @ Chitradurga
c AEE, UBP Sub Dn. 14, Imangala, Camp @ Chitradurga

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೪೮೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೪, ೨೦೧೭ ಭಾಗ ೧
ಕ್ರ.ಸಂ. ಕಛೇರಿಯ ಹೆಸರು
3 EE, UBP Dn. 6, Challekere
a AEE, UBP Sub Dn. 15, Challekere
b AEE, UBP Sub Dn. 16, Sanekere, Camp @ Challkere
4 EE, UBP Dn. 7, Hiriyur, Camp @ Chitradurga
a AEE, UBP Sub Dn.18, Hiriyur, Camp @ Chitradurga
b AEE, UBP Sub Dn. 20, Adiwala, Camp @ Chitradurga
c AEE, VV Sagara Sub Dn. Hiriyur (Transferred from UTP Zone)
5 EE, UBP Dn. 9, Sira
a AEE, UBP Sub Dn. 23, Sira
b AEE, UBP Sub Dn. 23, Kallambella, Camp @ Sira
IV Spl. DC, UTP, UBP & Yettinahole Projects, Chitradurga
V SLAO Chitradurga
I CE, Yettinahole Project Zone, Tumakuru
II SE, Yettinahole Project Circle, Tumakuru
1 EE, Yettinahole Project Dn. 1, Sakaleshpura
a AEE, Yettinahole Project Sub Dn.1, Sakaleshpura
b AEE, Yettinahole Project Sub Dn.8, Sakaleshpura
c AEE, Yettinahole Project Electrical Sub Dn. Sakaleshpura
d AEE, Yettinahole Sub Dn.13, Sakaleshpura
2 EE, Yettinahole Project Dn. 2, Tumakuru
a AEE, Yettinahole Project Sub Dn. 2, Tumakuru
b AEE, Yettinahole Project Sub Dn. 3, K.B. Cross, Camp @ Tumakuru
c AEE, Yettinahole Project Sub Dn. 12, Tiptur, Camp @ Tumakuru
3 EE, Yettinahole Project Dn. 3, Arasikere
a AEE, Yettinahole Project Sub Dn. 9, Aluru
b AEE, Yettinahole Project Sub Dn. 10, Belur
c AEE, Yettinahole Project Sub Dn. 11, Arasikere
4 EE, Yettinahole Project Dn. 4, Madhugiri
a AEE, Yettinahole Project Sub Dn. 4, Madhugiri
b AEE, Yettinahole Project Sub Dn. 5, Koratagere
c AEE, Yettinahole Project Sub Dn. 6, Chikkaballapura
d AEE, Yettinahole Project Sub Dn. 7, Kolar
III SLAO Yettinahole Project, Sakleshapura
IV SLAO Yettinahole Project, Tumakuru

PR. 94

ಕೆ.ಎಸ್. ನಾಗರಾಜ

ಸರ್ಕಾರದ ಅಧೀನ ಕಾರ್ಯದರ್ಶಿ

ಜಲಸಂಪನ್ಮೂಲ ಇಲಾಖೆ.(ತಾಂತ್ರಿಕ-4) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 04 May 2017. Indian Gazettes, https://egazette.servantsofknowledge.in/details/in.gazette.karnataka_new.2017-05-04.Part-1/. Archive identifier in.gazette.karnataka_new.2017-05-04.Part-1.