ಸಂಪುಟ ೧೫೨
Volume 152
ಬೆಂಗಳೂರು, ಗುರುವಾರ, ಜೂನ್ ೧, ೨೦೧೭ (ಜ್ಯೇಷ್ಠ ೧೧, ಶಕ ವರ್ಷ ೧೯೩೯)
Bengaluru, Thursday, June 1, 2017 (Jyeishta 11, Shaka Varsha 1939)
ಸಂಚಿಕೆ ೨೨
Issue 22
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ನಗರಾಭಿವೃದ್ಧಿ ಸಚಿವಾಲಯ
ವಿಷಯ : ಹಾಸನ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ (ಪರಿಷ್ಕøತ-1)ಕ್ಕೆ ಅಂತಿಮ ಅನುಮೋದನೆ ನೀಡುವ ಬಗ್ಗೆ. ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ: ನಅಇ 874 ಮೈಅಪ್ರಾ 2008, ದಿನಾಂಕ: 04-02-2009.
2) ಆಯುಕ್ತರು, ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಇವರ ಪತ್ರ ಸಂಖ್ಯೆ:ಹಾನಪ್ರಾ/ನಯೋವಿ/ಮ.ಯೋ/77/2012-13, ದಿನಾಂಕ: 10-03-2015, 05-05-2015 ಮತ್ತು 16-03-2016.
3) ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಏಕ ಕಡತ ಸಂಖ್ಯೆ: ನಗ್ರಾಯೋನಿ/ಉನಿ(ಯೋವಿ)/ಮ.ಯೋ/ ಅಂತಿಮ/2014-15 ರಲ್ಲಿ ನೀಡಿರುವ ಅಭಿಪ್ರಾಯ ದಿನಾಂಕ: 24-05-2014.
4) ಸರ್ಕಾರದ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ದಿನಾಂಕ: 05-08-2016 ರಂದು ಹಾಸನ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ (ಪರಿಷ್ಕøತ-1)ಕ್ಕೆ ಅಂತಿಮ ಅನುಮೋದನೆ ನೀಡುವ ಬಗ್ಗೆ ನಡೆದ ಸಭೆ.
5) ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಪತ್ರ ಸಂಖ್ಯೆ: ನಗ್ರಾಯೋನಿ/ಉನಿ(ಯೋವಿ)/ಮ.ಯೋ/ಅಂತಿಮ/ 2014-15, ದಿನಾಂಕ: 16-11-2016.
ಪ್ರಸ್ತಾವನೆ:
ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಆದೇಶದಲ್ಲಿ ಹಾಸನ ಸ್ಥಳೀಯ ಯೋಜನಾ ಪ್ರದೇಶಕ್ಕೆ ರೂಪಿಸಿರುವ ಮಹಾಯೋಜನೆ (ಪರಿಷ್ಕøತ-1)ಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 13(1) ರನ್ವಯ ತಾತ್ಕಾಲಿಕ ಅನುಮೋದನೆ ನೀಡಲಾಗಿದೆ.
ಮೇಲೆ ಓದಲಾದ ಕ್ರಮಸಂಖ್ಯೆ (2)ರ ಪತ್ರದಲ್ಲಿ ಹಾಸನ ನಗರಾಭಿವೃದ್ಧಿ ಪ್ರಾಧಿಕಾರವು ಹಾಸನ ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ತಯಾರಿಸಿರುವ ಮಹಾಯೋಜನೆ (ಪರಿಷ್ಕøತ-1) ಕುರಿತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 13(1) ಮತ್ತು (2) ರನ್ವಯ ಅಗತ್ಯ ಕ್ರಮ ಜರುಗಿಸಿ ಮಹಾಯೋಜನೆಯ ನಕ್ಷೆಗಳನ್ನು ಹಾಗೂ ವರದಿಯನ್ನು ತಯಾರಿಸಿ ಸರ್ಕಾರದ ಅಂತಿಮ ಅನುಮೋದನೆಗೆ ಸಲ್ಲಿಸಲಾಗಿದೆ.
ಮೇಲೆ ಓದಲಾದ ಕ್ರಮಸಂಖ್ಯೆ (3)ರ ಪತ್ರದಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಕಛೇರಿಯ ಕಡತದಲ್ಲಿ ಹಾಸನ ನಗರದ ಜನಸಂಖ್ಯೆಯು 2021 ರಲ್ಲಿ 4.00 ಲಕ್ಷಗಳಷ್ಟು ಬೆಳವಣಿಗೆಯಾಗುವುದಾಗಿ ಅಂದಾಜಿಸಿ ಮಹಾಯೋಜನೆಯನ್ನು ತಯಾರಿಸಲಾಗಿದೆ. ಹಾಸನ ನಗರದ ಸ್ಥಳೀಯ ಯೋಜನಾ ಪ್ರದೇಶದ ಒಟ್ಟು 6747.51 ಹೆಕ್ಟೇರ್ ಪ್ರದೇಶವನ್ನು ನಗರದ ಅಭಿವೃದ್ಧಿಗಾಗಿ ನಗರೀಕರಣದ ಎಲ್ಲೆಯೆಂದು ಪ್ರಸ್ತಾಪಿಸಿ ಮಹಾಯೋಜನೆಯನ್ನು ರೂಪಿಸಲಾಗಿದೆ.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ (12) ರಲ್ಲಿ ನಿಗದಿಪಡಿಸಿರುವ ಅಂಶಗಳನ್ನು ಪರಿಗಣಿಸಿ ನಗರದ ಮುಂದಿನ ಯೋಜಿತ ಬೆಳವಣಿಗೆಗೆ ಪ್ರಸ್ತಾಪಿಸಿರುವ 6747.51 ಹೆಕ್ಟೇರ್ ಪ್ರದೇಶದಲ್ಲಿ ವಸತಿಗಾಗಿ 2943.16 ಹೆಕ್ಟೇರ್ (ಶೇ.43.62) ವಾಣಿಜ್ಯಕ್ಕಾಗಿ 183.14 ಹೆಕ್ಟೇರ್ (ಶೇ.2.71), ಕೈಗಾರಿಕೆಗಾಗಿ 371.95 ಹೆಕ್ಟೇರ್ (ಶೇ.5.51), ಸಾರ್ವಜನಿಕ / ಅರೆ ಸಾರ್ವಜನಿಕ ಉಪಯೋಗಕ್ಕೆ 529.15 ಹೆಕ್ಟೇರ್ (ಶೇ.7.84), ಉದ್ಯಾನವನ ಮತ್ತು ಬಯಲು ಜಾಗಕ್ಕಾಗಿ 583.54 ಹೆಕ್ಟೇರ್ (ಶೇ.8.66) ಸಾರ್ವಜನಿಕ ಉಪಯುಕ್ತತೆಗಾಗಿ 12.02 ಹೆಕ್ಟೇರ್ (ಶೇ.0.18), ಹಾಗೂ ಸಾರಿಗೆ / ಸಂಪರ್ಕ ವಲಯಕ್ಕೆ 2124.55 ಹೆಕ್ಟೇರ್ (ಶೇ.31.48) ಪ್ರದೇಶವನ್ನು ನಿಗದಿಪಡಿಸಲಾಗಿದೆ. ಮಹಾಯೋಜನೆಯನ್ನು ಅನುಷ್ಟಾನಕ್ಕೆ ತರಲು ಅಗತ್ಯವಿರುವ ವಲಯ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಸದರಿ ಮಹಾಯೋಜನೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 13(3) ರನ್ವಯ ಅಂತಿಮ ಅನುಮೋದನೆ ನೀಡುವಂತೆ ಶಿಫಾರಸ್ಸು ಮಾಡಿರುತ್ತಾರೆ.
(೯೩೩)೯೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೧, ೨೦೧೭ ಭಾಗ ೧ ಸದರಿ ಶಿಫಾರಸ್ಸಿನಂತೆ ಹಾಸನ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ (ಪರಿಷ್ಕøತ-1)ಕ್ಕೆ ಅಂತಿಮ ಅನುಮೋದನೆ ನೀಡುವ ಬಗ್ಗೆ ಮೇಲೆ ಓದಲಾದ (4) ರಂತೆ ನಡೆದ ಸಭೆಯಲ್ಲಿ ಹಲವು ತೀರ್ಮಾನಗಳನ್ನು ಕೈಗೊಂಡು, ಸದರಿ ತೀರ್ಮಾನಕ್ಕನುಸಾರವಾಗಿ ಮಹಾಯೋಜನೆ ನಕ್ಷೆ ಮತ್ತು ವರದಿಗಳನ್ನು ಸಲ್ಲಿಸುವಂತೆ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿತ್ತು.
ಅದರಂತೆ, ಮೇಲೆ ಓದಲಾದ (5)ರ ಪತ್ರದಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ಸಭೆಯಲ್ಲಿ ತೀರ್ಮಾನಿಸಿದಂತೆ ಹಲವು ಅಂಶಗಳನ್ನು ವಲಯ ನಿಯಮಾವಳಿಯಲ್ಲಿ ಅಳವಡಿಸಿಕೊಂಡಿದ್ದು, ಉಳಿದ ಅಂಶಗಳ ಬಗ್ಗೆ ಸರ್ಕಾರವು ಹೊರಡಿಸುವ ಆದೇಶದಲ್ಲಿ ನಮೂದಿಸಬಹುದಾಗಿದೆ ಎಂದು ತಿಳಿಸಿ ಹಾಸನ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ (ಪ-1)ಗೆ ಅಂತಿಮ ಅನುಮೋದನೆ ನೀಡುವಂತೆ ಕೋರಿರುತ್ತಾರೆ.
ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ನಅಇ 305 ಮೈಅಪ್ರಾ 2014, ಬೆಂಗಳೂರು, ದಿನಾಂಕ: 13.04.2017.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಹಾಸನ ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ರೂಪಿಸಿರುವ ಮಹಾ ಯೋಜನೆ (ಪರಿಷ್ಕøತ-1)ಕ್ಕೆ ಈ ಕೆಳಕಂಡ ಷರತ್ತಿಗೊಳಪಟ್ಟು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 13(3) ರನ್ವಯ ಸರ್ಕಾರದ ಅಂತಿಮ ಅನುಮೋದನೆಯನ್ನು ನೀಡಲಾಗಿದೆ. ಮಹಾಯೋಜನೆ (ಪರಿಷ್ಕøತ-1)ಕ್ಕೆ ಅಂತಿಮ ಅನುಮೋದನೆ ನೀಡಿದ ಗುರುತಾಗಿ ವರದಿ ಹಾಗೂ ನಕ್ಷೆಗಳ ಮೇಲೆ ಸರ್ಕಾರದ ಮುದ್ರೆಯನ್ನು ಹಾಕಲಾಗಿದೆ.
ಷರತ್ತು:
1) ಈ ಆದೇಶದ ದಿನಾಂಕದಿಂದ ಎರಡು ವರ್ಷಗಳವರೆಗೆ ಪ್ರಾಧಿಕಾರವು ಯಾವುದೇ ಭೂ ಉಪಯೋಗ ಬದಲಾವಣೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಕೂಡದು.
2) ಹರಳಹಳ್ಳಿ ಗ್ರಾಮದ ಸ.ನಂ.59, 60, 61, 12 (ಭಾಗಶಃ), 13 (ಭಾಗಶಃ), 14 (ಭಾಗಶಃ) ಸ.ನಂ.ಗಳಲ್ಲಿನ ಜಾಗವನ್ನು ಕೈಗಾರಿಕ ಉಪಯೋಗದಿಂದ ವಸತಿಗಾಗಿ ಕಾಯ್ದಿರಿಸಲಾಗಿದೆ.
3) ದೊಡ್ಡಪುರ ಗ್ರಾಮದ ಸ.ನಂ.166, 167, 168, 169, 170, 171, 172, 173, 174, 175, 176, 177, 178 (ಭಾಗಶಃ), 179 (ಭಾಗಶಃ), 180, 181 (ಭಾಗಶಃ), 184 (ಭಾಗಶಃ), 185 (ಭಾಗಶಃ), 186, 187, 188, 189, 190, 191, 192, 194, 195, 196, 197, 198, 199, 200 (ಭಾಗಶಃ), 201 (ಭಾಗಶಃ), 202 (ಭಾಗಶಃ), 203 (ಭಾಗಶಃ), 204, 205 (ಭಾಗಶಃ), 206 (ಭಾಗಶಃ), 209 (ಭಾಗಶಃ) ಗಳಲ್ಲಿನ ಜಮೀನುಗಳನ್ನು ಸಾರಿಗೆ ಮತ್ತು ಸಂಪರ್ಕ ವಲಯದ ಭೂ ಉಪಯೋಗದಿಂದ ವಸತಿಗಾಗಿ ಕಾಯ್ದಿರಿಸಲಾಗಿದೆ. ಮುಂದುವರೆದು, ಸದರಿ ಜಮೀನುಗಳಲ್ಲಿನ ಹಾಲಿ / ಪ್ರಸ್ತಾಪಿತ ರಸ್ತೆಗಳನ್ನು ಯಥಾವತ್ತಾಗಿ ಕಾಯ್ದಿರಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR – 136
ನಾಗರಾಜ
SC-100
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.
ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ
ತಿದ್ದುಪಡಿ
ಸಂಖ್ಯೆ: ಸಿಐ 253 ಎಸ್ಪಿಐ 2014, ಬೆಂಗಳೂರು, ದಿನಾಂಕ: 21.04.2017.
ವಿಷಯ : ಮೇ|| ದಿ ಸಂಡೂರ್ ಮ್ಯಾಂಗನೀಸ್ ಮತ್ತು ಐರನ್ ಓರ್ಸ್ ಲಿಮಿಟೆಡ್, ಈ ಕಂಪನಿಯು ಬಳ್ಳಾರಿ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ "1 ಎಂಟಿಪಿಎ ಇಂಟಿಗ್ರೇಟೆಡ್ ಸ್ಟೀಲ್ ಪ್ಲಾಂಟ್ಗೆ" ನೀಡಲಾಗಿರುವ ಅನುಮೋದನೆಯ ಪ್ರಸ್ತಾವನೆ ಕುರಿತು.
ಸರ್ಕಾರಿ ಆದೇಶ ಸಂಖ್ಯೆ: ಸಿಐ 253 ಎಸ್ಪಿಐ 2014, ದಿನಾಂಕ: 13.03.2017 ರಲ್ಲಿ ಆದೇಶದಲ್ಲಿನ "ದಾನಾಪುರ" ಎಂಬುದನ್ನು "ಡಾಣಾಪುರ" ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಹಾಗೂ
ಓದಲಾಗಿದೆ (1) ಮತ್ತು ಪ್ರಸ್ತಾವನೆಯ ಕಂಡಿಕೆ (1)ರಲ್ಲಿನ "ದಿನಾಂಕ: 15.10.2016 ರಂದು ನಡೆದ 36ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆ" ಎಂಬುದನ್ನು "ದಿನಾಂಕ: 15.10.2014 ರಂದು ನಡೆದ 36ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆ" ಎಂದು ತಿದ್ದಿ ಓದಿಕೊಳ್ಳತಕ್ಕದ್ದು."
ಉಳಿದ ಎಲ್ಲಾ ಅಂಶಗಳು ಸರ್ಕಾರಿ ಆದೇಶ ಸಂಖ್ಯೆ: ಸಿಐ 253 ಎಸ್ಪಿಐ 2014, ದಿನಾಂಕ: 25.11.2014, 27.01.2015, 20.05.2015 ಮತ್ತು 24.10.2016 ರಲ್ಲಿರುವಂತೆ ಯಥಾವತ್ ಹಾಗೇ ಇರುತ್ತವೆ. ಯಾವ ಬದಲಾವಣೆಗಳು ಇರುವುದಿಲ್ಲ.
PR. 141
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 20
ಎಸ್. ಉಮಾದೇವಿ,
ಪೀಠಾಧಿಕಾರಿ (ತಾಂತ್ರಿಕ ಕೋಶ),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೧, ೨೦೧೭ ೯೩೫ಒಳಾಡಳಿತ ಸಚಿವಾಲಯ
ವಿಷಯ : ದಿನಾಂಕ: 10/06/2008 ರಂದು ಹಾವೇರಿಯಲ್ಲಿ ನಡೆದ ಗೋಲಿಬಾರ್ನಲ್ಲಿ ಮೃತಪಟ್ಟ ಶ್ರೀ ಸಿದ್ದಲಿಂಗಪ್ಪ ಚೂರಿ ಇವರ ಮಕ್ಕಳ ವಿದ್ಯಾಭಾಸಕ್ಕೆ ತಗಲುವ ವೆಚ್ಚವನ್ನು ಭರಿಸುವ ಕುರಿತು.
ಓದಲಾಗಿದೆ : 1. ದಿನಾಂಕ: 12/06/2008ರ ಸಚಿವ ಸಂಪುಟ ನಿರ್ಣಯದ ಅಂಶ-3.
2. ಸರ್ಕಾರದ ಆದೇಶ ಸಂಖ್ಯೆ: ಹೆಚ್ಡಿ 370 ಎಸ್ಎಸ್ಟಿ 2008, ಬೆಂಗಳೂರು, ದಿನಾಂಕ: 16/06/2008. 3. ಜಿಲ್ಲಾಧಿಕಾರಿಗಳು, ಹಾವೇರಿ ಜಿಲ್ಲೆ ಇವರ ಪತ್ರ ಸಂಖ್ಯೆ: ಡಿಸಿ-ಹೆಚ್ಎವಿ-14014(24)/5/2016-ಹೆಚ್ಎವಿ- ಎಂಎಜಿ-ಹಾವೇರಿ-ಡಿಸಿ, ದಿನಾಂಕ: 04/03/2017.
ಪ್ರಸ್ತಾವನೆ:
ಮೇಲೆ ಓದಲಾದ(1)ರ ದಿನಾಂಕ: 12/06/2008ರ ಸಚಿವ ಸಂಪುಟ ನಿರ್ಣಯದ ಅಂಶ-3 ಮತ್ತು ಮೇಲೆ ಓದಲಾದ (2)ರ ಸರ್ಕಾರದ ಆದೇಶದಲ್ಲಿ ದಿನಾಂಕ:10/06/2008ರಂದು ಹಾವೇರಿಯಲ್ಲಿ ನಡೆದ ಗೋಲಿಬಾರ್ನಲ್ಲಿ ಮೃತಪಟ್ಟ ಶ್ರೀ ಸಿದ್ದಲಿಂಗಪ್ಪ ಚೂರಿ ಇವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸುವುದೆಂದು ಆದೇಶಿಸಲಾಗಿದೆ. ಮೇಲೆ ಓದಲಾದ(3)ರಲ್ಲಿ ಜಿಲ್ಲಾಧಿಕಾರಿಗಳು, ಹಾವೇರಿ ಜಿಲ್ಲೆ ಇವರು ಶ್ರೀ ಸಿದ್ದಲಿಂಗಪ್ಪ ಚೂರಿ ಇವರ ಮಕ್ಕಳ ವಿದ್ಯಾಭ್ಯಾಸಕ್ಕೆ ತಗುಲಿರುವ `.87,868/-(ರೂಪಾಯಿ ಎಂಬತ್ತೇಳು ಸಾವಿರದ ಎಂಟುನೂರು ಅರವತ್ತೆಂಟು ಮಾತ್ರ) ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ:ಹೆಚ್ಡಿ 6 ಸಿಆರ್ಆರ್ 2015. ಬೆಂಗಳೂರು, ದಿನಾಂಕ: 27/04/2017.
ದಿನಾಂಕ: 10/06/2008ರಂದು ಹಾವೇರಿಯಲ್ಲಿ ನಡೆದ ಗೋಲಿಬಾರ್ನಲ್ಲಿ ಮೃತಪಟ್ಟ ಶ್ರೀ ಸಿದ್ದಲಿಂಗಪ್ಪ ಚೂರಿ ಇವರ ಪತ್ನಿಯಾದ ಶ್ರೀಮತಿ ಕುಸುಮಾ ಕೋಂ. ಸಿದ್ದಲಿಂಗಪ್ಪ ಚೂರಿರವರ ಮಕ್ಕಳಾದ ಕು| ಕಾವ್ಯ ಎಸ್. ಚೂರಿ ಇವರ 8ನೇ ತರಗತಿ ವಿದ್ಯಾಭ್ಯಾಸಕ್ಕಾಗಿ 2015-16ರಲ್ಲಿ ಮತ್ತು ಶ್ರೀ ಕಿರಣ ಎಸ್.ಚೂರಿ ಇವರ ಡಿಪ್ಲಾಮೊ 3ನೇ ಸೆಮಿಸ್ಟರ್ ವಿದ್ಯಾಭ್ಯಾಸಕ್ಕಾಗಿ 2014-15ರಲ್ಲಿ ತಗುಲಿರುವ ಒಟ್ಟು ವೆಚ್ಚ `.87,868/-(ರೂಪಾಯಿ ಎಂಬತ್ತೇಳು ಸಾವಿರದ ಎಂಟುನೂರು ಅರವತ್ತೆಂಟು ಮಾತ್ರ)ಗಳನ್ನು ಜಿಲ್ಲಾಧಿಕಾರಿಗಳು, ಹಾವೇರಿ ಜಿಲ್ಲೆ ಇವರ ಮುಖಾಂತರ ಬಿಡುಗಡೆಗೊಳಿಸಲು ಆದೇಶಿಸಿದೆ.
ಈ ಅನುದಾನವನ್ನು ಲೆಕ್ಕ ಶೀರ್ಷಿಕೆ "2235-60-200-3-01-100" ಅಡಿಯಲ್ಲಿ ಭರಿಸತಕ್ಕದ್ದು.
ಈ ಅನುದಾನವನ್ನು ಶ್ರೀ ಸಿದ್ದಲಿಂಗಪ್ಪ ಚೂರಿ ಇವರ ಪತ್ನಿಯಾದ ಶ್ರೀಮತಿ ಕುಸುಮಾ ಕೋಂ. ಸಿದ್ದಲಿಂಗಪ್ಪ ಚೂರಿರವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾತ್ರ ಉಪಯೋಗಿಸಿಕೊಳ್ಳುವುದು.
PR. 142
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 25
ಕೆ. ಪದ್ಮಿನಿದೇವಿ,
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ.(ಕಾನೂನು ಮತ್ತು ಸುವ್ಯವಸ್ಥೆ)
ಇಂಧನ ಸಚಿವಾಲಯ
ವಿಷಯ : ಶ್ರೀ ಕೆ.ವಿ.ಸದಾನಂದ, ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು, ಬೆಂಗಳೂರು ದಕ್ಷಿಣ ಇವರ ವಿರುದ್ದದ ಇಲಾಖಾ ವಿಚಾರಣೆಯನ್ನು ಬಾಕಿ ಇಟ್ಟು ಅಮಾನತ್ತಿನಿಂದ ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ.
ಓದಲಾಗಿದೆ : 1. ಅಪರ ಪೊಲೀಸ್ ಮಹಾನಿರ್ದೇಶಕರು, ಭ್ರಷ್ಠಾಚಾರ ನಿಗ್ರಹ ದಳ ಇವರ ಪತ್ರ ಸಂಖ್ಯೆ: ಎಸಿಬಿ/ಬೆಂ.ನ/ ಮೊ.ಸಂ.23/2016, ದಿನಾಂಕ:12.12.2016.
2. ದಿನಾಂಕ: 22/12/2016ರ ಸರ್ಕಾರಿ ಆದೇಶ ಸಂಖ್ಯೆ:ಇಎನ್ 255 ಇಬಿಎಸ್ 2016. 3. ಶ್ರೀ ಕೆ.ವಿ.ಸದಾನಂದ, ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರ ಮನವಿ ದಿನಾಂಕ: 11.01.2017. 4. ಪೊಲೀಸ್ ಮಹಾ ನಿರೀಕ್ಷಕರು, ಭ್ರಷ್ಠಾಚಾರ ನಿಗ್ರಹದಳ, ಬೆಂಗಳೂರು ಇವರ ಪತ್ರ ಸಂಖ್ಯೆ:ಎಸಿಬಿ/ಬೆಂ.ನ.ಮೊ.ಸಂ/23/2016, ದಿನಾಂಕ: 11.04.2017.
ಪ್ರಸ್ತಾವನೆ:-
ಶ್ರೀ ದಯಾನಂದ ಬಿನ್ ಬಸವರಾಜು, ಕಂದ ಎಲೆಕ್ಟ್ರಿಕಲ್ಸ್, ನಂ.14, 4ನೇ ಅಡ್ಡರಸ್ತೆ, ಪಿ.ಎಫ್. ಕಾಂಪೌಂಡ್, ದೇವಸಂದ್ರ, ಕೆ.ಆರ್.ಪುರಂ, ಬೆಂಗಳೂರು ರವರು ವಿದ್ಯುತ್ ಗುತ್ತಿಗೆದಾರರಾಗಿದ್ದು, ಶ್ರೀ ಬಿ.ಟಿ.ಪ್ರಭಾಕರರೆಡ್ಡಿ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲು ವಿದ್ಯುತ್ ಗುತ್ತಿಗೆಯನ್ನು ಪಡೆದಿದ್ದು, ಈ ಸಂಬಂಧ ಬೆಂಗಳೂರು ದಕ್ಷಿಣ ಕಚೇರಿಗೆ ದಿನಾಂಕ: 29.09.2016 ರಂದು ನಕ್ಷೆ ಅನುಮೋದನೆಗೆ ಅರ್ಜಿ ಸಲ್ಲಿಸಿರುತ್ತಾರೆ. ಸದರಿ ಅರ್ಜಿಯು ಅವರಿಗೆ ಬರದ ಕಾರಣ ಶ್ರೀ ಕೆ.ವಿ. ಸದಾನಂದ ರವರು, ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು, ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕರ ಕಚೇರಿ, ಬೆಂಗಳೂರು ದಕ್ಷಿಣ ರವರು ಕಡತವನ್ನು ಪರಿಶೀಲಿಸಿ ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ತಿಳಿಸಿ, ವಿದ್ಯುತ್ ಪರಿವೀಕ್ಷಕರಾದ ಶ್ರೀ ರವಿಕುಮಾರ್ ರವರಿಗೆ ಕಳುಹಿಸಿಕೊಟ್ಟಿದ್ದು, ಅದರಂತೆ ನಕ್ಷೆಯನ್ನು ಅನುಮೋದಿಸಿರುತ್ತಾರೆ. ಕಟ್ಟಡದ ಎತ್ತರ 18 ಮೀಟರ್ಗಿಂತ ಹೆಚ್ಚಾಗಿದ್ದ ಕಾರಣ ಪುನಃ ಕಡತವನ್ನು ಅನುಮೋದನೆಗೆ ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರಾದ ಆರೋಪಿ ಶ್ರೀ ಸದಾನಂದ ರವರಿಗೆ ಕಡತ ವರ್ಗಾವಣೆಯಾಗಿರುತ್ತದೆ. ಅದರಂತೆ ಸದರಿ ಆರೋಪಿತರು ಕಡತ ಅನುಮೋದನೆಗಾಗಿ `. 25,000/- ಲಂಚದ ಹಣಕ್ಕಾಗಿ ಒತ್ತಾಯಿಸಿರುತ್ತಾರೆ. ಫಿರ್ಯಾದಿಗೆ ಲಂಚ ನೀಡಿ ಸರ್ಕಾರಿ ಕೆಲಸ ಮಾಡಿಸಿಕೊಳ್ಳಲು ಇಷ್ಟವಿರದ ಕಾರಣ ಫಿರ್ಯಾದುದಾರರು೯೩೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೧, ೨೦೧೭ ಭಾಗ ೧ ಆರೋಪಿತರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಬೆಂಗಳೂರು ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸ್ ಇನ್ಸ್ಪೆಕ್ಟರ್ ರವರು ಉಲ್ಲೇಖದಂತೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡು, ಆರೋಪಿತ ಸರ್ಕಾರಿ ಅಧಿಕಾರಿ ಶ್ರೀ ಕೆ.ವಿ.ಸದಾನಂದ ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು, ಬೆಂಗಳೂರು ದಕ್ಷಿಣ, ರವರನ್ನು ಟ್ರ್ಯಾಪ್ ಹಣದೊಂದಿಗೆ ದಸ್ತಗಿರಿ ಮಾಡಿದ್ದು, ಆರೋಪಿತರಾದ ಶ್ರೀ ಕೆ.ವಿ.ಸದಾನಂದ ಬಿನ್ ಕೆ.ಎ.ವಿಶ್ವನಾಥ, 58 ವರ್ಷ, ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು, ಬೆಂಗಳೂರು ದಕ್ಷಿಣ, ಬೆಂಗಳೂರು ರವರನ್ನು ದಿನಾಂಕ: 30.11.2016 ರಂದು ದಸ್ತಗಿರಿ ಮಾಡಿದ್ದು, ಮಾನ್ಯ 23ನೇ ಹೆಚ್ಚುವರಿ ಸಿಟಿ, ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ. ಪ್ರಸ್ತುತ ಆರೋಪಿತರು 48 ಗಂಟೆಗೂ ಹೆಚ್ಚಿನ ಅವಧಿಗೆ ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಎಂದು ಅಪರ ಪೊಲೀಸ್ ಮಹಾನಿರೀಕ್ಷಕರು, ಭ್ರಷ್ಠಾಚಾರ ನಿಗ್ರಹ ದಳ, ಬೆಂಗಳೂರು ಇವರು ಮೇಲೆ ಓದಲಾದ (2)ರ ಪತ್ರದಲ್ಲಿ ವರದಿ ಮಾಡಿದ್ದರು.
ಭ್ರಷ್ಠಾಚಾರ ನಿಗ್ರಹ ದಳ ಪೊಲೀಸರ ಕೋರಿಕೆಯನ್ನು ಸರ್ಕಾರ ಪರಿಶೀಲಿಸಿ, ಆರೋಪಿತರು ಲಂಚದ ಆರೋಪಕ್ಕಾಗಿ 48 ಗಂಟೆಗಳಿಗೂ ಹೆಚ್ಚಿನ ಅವಧಿಗೆ ನ್ಯಾಯಾಂಗ ಬಂದನದಲ್ಲಿರುವುದರಿಂದ, ಪ್ರಕರಣದ ಸುಗಮ ತನಿಖೆಯ ಹಿತದೃಷ್ಠಿಯಿಂದ ಹಾಗೂ ಪ್ರಕರಣದ ಸಾಕ್ಷ್ಯಾಧಾರಗಳನ್ನು ತಿರುಚುವ/ನಾಶಪಡಿಸುವ ಸಂಭವವನ್ನು ತಪ್ಪಿಸುವ ದೃಷ್ಠಿಯಿಂದ ಇವರನ್ನು ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು, ಬೆಂಗಳೂರು ದಕ್ಷಿಣ ಹುದ್ದೆಯಲ್ಲಿ ಮುಂದುವರೆಸಲು ಸಮಂಜಸವಲ್ಲವೆಂದು ನಿರ್ಣಯಿಸಿ, ಸರ್ಕಾರವು ಶ್ರೀ ಕೆ.ವಿ. ಸದಾನಂದ, ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು ಇವರನ್ನು ಮೇಲೆ ಶ್ರೀ ಕೆ.ವಿ.ಸದಾನಂದ, ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು, ಮೇಲೆ (3)ರಲ್ಲಿ ಓದಲಾದ ದಿನಾಂಕ : 11.01.2017 ರ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಅವರನ್ನು ಅಮಾನತ್ತಿನಿಂದ ತೆರವುಗೊಳಿಸಿ, ಸೇವೆಗೆ ಪುನರ್ ಸ್ಥಾಪಿಸುವಂತೆ ಕೋರಿರುತ್ತಾರೆ. ಅಧಿಕಾರಿಯವರು ಸಲ್ಲಿಸಿದ್ದ ಮನವಿಯನ್ನು ಭ್ರಷ್ಠಾಚಾರ ನಿಗ್ರಹ ದಳಕ್ಕೆ ರವಾನಿಸಿ ಅವರನ್ನು ಅಮಾನತ್ತಿನಿಂದ ತೆರವುಗೊಳಿಸಿ, ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ ಅಭಿಪ್ರಾಯ ನೀಡುವಂತೆ ಕೋರಲಾಗಿದ್ದು, ಪೊಲೀಸ್ ಮಹಾನಿರೀಕ್ಷಕರು, ಭ್ರಷ್ಠಾಚಾರ ನಿಗ್ರಹ ದಳ ಇವರು ಅಧಿಕಾರಿಯ ಮನವಿಯನ್ನು ಪರಿಶೀಲಿಸಿ ಮೇಲೆ ಕ್ರಮ ಸಂಖ್ಯೆ (4)ರಲ್ಲಿ ಓದಲಾದ ಪತ್ರದಲ್ಲಿ ಈ ಕೆಳಕಂಡಂತೆ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.
''ಪ್ರಕರಣವು ಇನ್ನೂ ತನಿಖಾ ಹಂತದಲ್ಲಿದ್ದು, ಆರೋಪಿತ ಅಧಿಕಾರಿ ಶ್ರೀ ಕೆ.ವಿ. ಸದಾನಂದ, ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು, ಬೆಂಗಳೂರು ರವರಿಗೆ ಇದ್ದ ಸ್ಥಳದಲ್ಲಿಯೇ ಕರ್ತವ್ಯಕ್ಕೆ ಮುಂದುವರೆಸಿದ್ದೇ ಆದಲ್ಲಿ, ಆರೋಪಿತರು ತಮ್ಮ ಹುದ್ದೆಯ ಪ್ರಭಾವವನ್ನು ಬೀರಿ ಸಾಕ್ಷಾಧಾರಗಳನ್ನು ಹಾಳು ಮಾಡುವ ಸಂಭವವಿರುತ್ತದೆ. ಆದ್ದರಿಂದ, ಈ ಪ್ರಕರಣದ ಆರೋಪಿತ ಶ್ರೀ ಕೆ.ವಿ.ಸದಾನಂದ ರವರ ಲೀನ್ ಅನ್ನು ಪ್ರಸ್ತುತ ಕಾರ್ಯನಿರ್ವಹಣೆ ಸ್ಥಳದಿಂದ ಬೇರೆಡೆಗೆ ಬದಲಾವಣೆ ಮಾಡಿ ಅವರನ್ನು ಕರ್ತವ್ಯಕ್ಕೆ ಪುನರ್ ಸ್ಥಾಪಿಸುವ ಸಂಬಂಧ ಕೆ.ಸಿ.ಎಸ್.ಆರ್ ನಿಯಮ ಅನ್ವಯ ಕ್ರಮ ಜರುಗಿಸಲು ಕೋರಿದೆ"
ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ, ಪೊಲೀಸ್ ಮಹಾನಿರೀಕ್ಷಕರು, ಭ್ರಷ್ಟಾಚಾರ ನಿಗ್ರಹದಳ ಇವರ ಅಭಿಪ್ರಾಯವನ್ನು ಪರಿಗಣಿಸಿ ಸರ್ಕಾರವು ಶ್ರೀ ಕೆ.ವಿ.ಸದಾನಂದ, ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರ ಅಮಾನತ್ತನ್ನು ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸಲು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ: ಇಎನ್ 255 ಇಬಿಎಸ್ 2016 ಬೆಂಗಳೂರು, ದಿನಾಂಕ: 27.04.2017.
ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನಲೆಯಲ್ಲಿ, ಶ್ರೀ ಕೆ.ವಿ.ಸದಾನಂದ, ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು, ಪ್ರಸ್ತುತ ಅಮಾನತ್ತಿನಲ್ಲಿ, ಇವರ ವಿರುದ್ಧ ಭ್ರಷ್ಠಾಚಾರ ನಿಗ್ರಹ ದಳದ ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಕ್ರಿಮಿನಲ್ ಮೊಕದ್ದಮೆ/ಶಿಸ್ತು ಕ್ರಮವನ್ನು ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಅವರ ಅಮಾನತ್ತನ್ನು ತೆರವುಗೊಳಿಸಿ, ಸೇವೆಗೆ ಪುನರ್ ಸ್ತಾಪಿಸಿದೆ ಹಾಗೂ ಸದರಿಯವರನ್ನು ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು, ಕಲಬುರ್ಗಿ ಇಲ್ಲಿ ಖಾಲಿ ಇರುವ ಹುದ್ದೆಗೆ ನೇಮಿಸಿ ಆದೇಶಿಸಿದೆ.
PR. 143
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC. 25
ಬಿ.ವಿ. ಶ್ರೀನಿವಾಸಯ್ಯ,
ಸರ್ಕಾರದ ಅಧೀನ ಕಾರ್ಯದರ್ಶಿ,
ಇಂಧನ ಇಲಾಖೆ.
ಆರ್ಥಿಕ ಸಚಿವಾಲಯ
ವಿಷಯ : 2016-17ನೇ ಸಾಲಿನ ಬೇಡಿಕೆ ಸಂಖ್ಯೆ-3, ಆಯವ್ಯಯ ಲೆಕ್ಕ ಶೀರ್ಷಿಕೆ 2040-00-101-0-10ರಲ್ಲಿ Waiver of Cane purchase tax and Road Cess-(Non-plan), ಅಡಿ `.16.44 ಲಕ್ಷಗಳನ್ನು ಸರ್ಕಾರಕ್ಕೆ ಅಧ್ಯರ್ಪಿಸಿಕೊಳ್ಳುವ ಬಗ್ಗೆ.
ಓದಲಾಗಿದೆ : ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆ, ಇವರ ಪತ್ರ ಸಂಖ್ಯೆ: KSA/CR/147/2013-14, dated 28/07/2016.
ಪ್ರಸ್ತಾವನೆ:-
2016-17ನೇ ಸಾಲಿನ ಬೇಡಿಕೆ ಸಂಖ್ಯೆ-3, ಆಯವ್ಯಯ ಲೆಕ್ಕ ಶೀರ್ಷಿಕೆ 2040-00-101-0-10 Waiver of Cane purchase tax and Road Cess-(Non-plan), ರಡಿ ದಕ್ಷಿಣ ಕರ್ನಾಟಕದ 12 ಸಕ್ಕರೆ ಕಾರ್ಖಾನೆಗಳು ದಿನಾಂಕ:01/04/2013ರಿಂದ ದಿನಾಂಕ:21/11/2013ರವರೆಗೆ ಪಾವತಿಸಿದ ಕಬ್ಬು ಖರೀದಿ ತೆರಿಗೆ ಮತ್ತು ರಸ್ತೆ ಕರಕ್ಕೆ ಸಂಬಂಧಿಸಿದ ಒಟ್ಟು ಮೊತ್ತ ರೂ. 764.18ಲಕ್ಷಗಳನ್ನು ಮರುಳಿಸಲು ಪೂರಕ ಅಂದಾಜು-1 ಅಭಿಯಾಚನೆಯಡಿಯಲ್ಲಿ ಸೇರಿಸಲಾಗಿತ್ತು. ಆದರೆ, ಮೇಲೆ ಓದಲಾದ ಆಯುಕ್ತರು, ವಾಣಿಜ್ಯ ತೆರಿಗೆಗಳ ಇಲಾಖೆ, ಇವರ ಪತ್ರದಲ್ಲಿ 12 ಸಕ್ಕರೆ ಕಾರ್ಖಾನೆಗಳ ಬದಲಿಗೆ 8 ಸಕ್ಕರೆ ಕಾರ್ಖಾನೆಗಳಿಗೆ ಮೊತ್ತವನ್ನು ಮರಳಿಸಲು `.747.74ಲಕ್ಷಗಳನ್ನು ಮಾತ್ರ ಉಪಯೋಗಿಸಿಕೊಳ್ಳಲಾಗಿದೆ ಎಂದು ತಿಳಿಸಿ, ಉಳಿದ `.16.44ಲಕ್ಷಗಳನ್ನು ಅಧ್ಯರ್ಪಿಸಿಕೊಳ್ಳಬೇಕೆಂದು ಕೋರಿರುತ್ತಾರೆ. ಆದ್ದರಿಂದ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಲಾಗಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೧, ೨೦೧೭ ೯೩೭ಆದೇಶ ಸಂಖ್ಯೆ:ಆಇ 216 ಸಿಎಸ್ಎಲ್ 2013, ಬೆಂಗಳೂರು, ದಿನಾಂಕ: 31/03/2017
2016-17ನೇ ಸಾಲಿನ ಬೇಡಿಕೆ ಸಂಖ್ಯೆ-3ರಲ್ಲಿ ಆಯವ್ಯಯ ಲೆಕ್ಕ ಶೀರ್ಷಿಕೆ 2040-00-101-0-10 Waiver of Cane purchase tax and Road Cess-(Non-plan), ರಡಿ `. 16.44ಲಕ್ಷಗಳನ್ನು (ಹದಿನಾರು ಲಕ್ಷದ ನಲವತ್ತನಾಲ್ಕು ಸಾವಿರ ರೂಪಾಯಿಗಳು ಮಾತ್ರ) ಸರ್ಕಾರಕ್ಕೆ ಅಧ್ಯರ್ಪಿಸಿಕೊಳ್ಳಲು ಒಪ್ಪಿದೆ (ವಿವರಗಳನ್ನು ಅನುಬಂಧದಲ್ಲಿ ಲಗತ್ತಿಸಿದೆ).
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ಎಸ್. ಪದ್ಮಾವತಿ, ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ.(ವಾ.ತೆ-1)
| COMMERCIAL TAXES DEPARTMENT | |||
| ANNEXURE | |||
| STATEMENT OF SURRENDER OF GRANTS FOR THE YEAR 2016-17 | |||
| S l.No | HEAD OF ACCOUNT | AMOUNT SURRENDERED (IN LAKHS) | REASONS FOR SAVINGS |
| 2040-00-101-0-10(Non-Plan) | |||
| 1 | 2040-00-101-0-10-100 - Financial Assistance / Relief | 16.44 | |
| TOTAL | 16.44 | Instead of 12 Sugar Factories, Re-imbursement was made to 8 Sugar Factories. |
PR. 144
K.S.PADMAVATHI
Under Secretary to Government,
Finance Department (C.T-1)
ಅಲ್ಪಸಂಖ್ಯಾತರ ಕಲ್ಯಾಣ. ಹಜ್ ಮತ್ತು ವಕ್ಛ್ ಸಚಿವಾಲಯ
ವಿಷಯ : ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳನ್ನು ಸಂರಕ್ಷಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆ ರಚಿಸುವ ಕುರಿತು.
ಓದಲಾಗಿದೆ : ಮುಖ್ಯ ಕಾರ್ಯನಿರ್ವಹಾಧಿಕಾರಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ರವರ ಪತ್ರ ಸಂಖ್ಯೆ:KSBW/SOS/4/2016- 17, ದಿನಾಂಕ: 07-03-2017
ಪೀpಕೆ:
ರಾಜ್ಯದಲ್ಲಿರುವ ವಕ್ಫ್ ಅಸ್ತಿಗಳನ್ನು ಸಂರಕ್ಷಿಸಿ ವಕ್ಫ್ ಸಂಸ್ಥೆಗಳ ಆಡಳಿತವನ್ನು ಬಲಪಡಿಸುವ ಉದ್ದೇಶದಿಂದ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಲು ಮೇಲೆ ಓದಲಾದ ಪತ್ರದಲ್ಲಿ
ಮುಖ್ಯ ಕಾರ್ಯನಿರ್ವಹಾಣಾಧಿಕಾರಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಪ್ರಸ್ತಾಪಿಸಿರುತ್ತಾರೆ. ರಾಜ್ಯದ ವಕ್ಫ್ ಅಸ್ತಿಗಳನ್ನು ಸಂರಕ್ಷಿಸುವುದರೊಂದಿಗೆ ವಕ್ಫ್ ಕಾಯ್ದೆ ಕಲಂ 52 ಮತ್ತು 54 ರಲ್ಲಿ ಹೊರಡಿಸಲಾಗುವ ಆದೇಶಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಹಾಗೂ ವಕ್ಫ್ ಆಸ್ತಿಗಳ 2ನೇ ಸರ್ವೆ ಕಾರ್ಯ ತೀವ್ರಗತಿಯಲ್ಲಿ ಮುಕ್ತಾಯಗೊಳಿಸಿ ಎಲ್ಲಾ ವಕ್ಫ್ ಆಸ್ತಿಗಳ ಖಾತೆ ಬದಲಾವಣೆ ಕಾರ್ಯವನ್ನು ಪೂರ್ಣಗೊಳಿಸುವುದು ಈ ಕಾರ್ಯ ಪಡೆಯ ಉದ್ದೇಶವಾಗಿದೆ. ಈ ಹಿಂದೆ ರಚನೆ ಮಾಡಲಾಗಿದ್ದ ವಕ್ಫ್ ಕಾರ್ಯ ಪಡೆಗಳು ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಹಾಗೂ ಖಾತಾ ಮಾಡಿಸುವ ಕಾರ್ಯಗಳಲ್ಲಿ ಉಪಯುಕ್ತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ ಕಾರ್ಯಪಡೆ ರಚಿಸಲು ತೀರ್ಮಾನಿಸಲಾಗಿದೆ.
ಅದರಂತೆ ಈ ಕೆಳಕಂಡ ಆದೇಶ.
ಸರ್ಕಾರಿ ಆದೇಶ ಸಂಖ್ಯೆ:MWD/32/WES/2017, ದಿನಾಂಕ:20-03-2017
ಪೀpಕೆಯಲ್ಲಿ ವಿವರಿಸಲಾಗಿರುವ ವಾಸ್ತವಾಂಶಗಳ ಹಿನ್ನೆಲೆಯಲ್ಲಿ, ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ ರಾಜ್ಯ ಮಟ್ಟದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು ಇವರ ಅಧ್ಯಕ್ಷತೆಯಲ್ಲಿ ಹಾಗೂ ಕಂದಾಯ ಜಿಲ್ಲಾ ಮಟ್ಟದಲ್ಲಿ ಸಂಬಂಧಿಸಿದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈ ಕೆಳಕಂಡಂತೆ
| ಕ್ರ. ಸ ಂ. | ರಾಜ್ಯ ಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆ | ಕ್ರ. ಸ ಂ. | ಜಿಲ್ಲಾ ಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆ | ||
| 01 | ಸ ರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು | ಅಧ್ಯಕ್ಷರು | 01 | ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ | ಅಧ್ಯಕ್ಷರು |
| 02 | ಸ ರ್ಕಾರದ ಪ್ರಧಾನ ಕಾರ್ಯದರ್ಶಿ ಗೃಹ ವ ುತ್ತು ಸಾರಿಗೆ ಇಲಾಖೆ. | ಸ ದ ಸ ್ಯರು | 02 | ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. | ಸ ದ ಸ ್ಯರು |
| 03 | ಸ ರ್ಕಾರದ ಪ ದ ್ರ ಾನ ಕಾರ್ಯದರ್ಶಿ, ಕಂದಾಯ ಇಲಾಖೆ. | ಸ ದ ಸ ್ಯರು | 03 | ವ ುುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯತ್ | ಸ ದ ಸ ್ಯರು |
| 04 | ಸ ರ್ಕಾರದ ಪ ದ ್ರ ಾನ ಕಾರ್ಯದರ್ಶಿ, ಕಾನೂನು ಮತ್ತು ನ್ಯಾಯಾಂಗ ಇಲಾಖೆ | ಸ ದ ಸ ್ಯರು | 04 | ಸ ಂಬಂಧಿಸಿದ ಜಿಲ್ಲೆಯ ಉಪವಿಭಾಗಗಳ ಉಪ ವಿಭಾಗಾಧಿಕಾರಿಗಳು | ಸ ದ ಸ ್ಯರು |
| 05 | ಸ ರ್ಕಾರದ ಪ್ರಧಾನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ | ಸ ದ ಸ ್ಯರು | 05 | ಜಂಟಿ ನಿರ್ದೇಶಕರು, ಭೂದಾಖಲೆ ಮತ್ತು ಜಿಲ್ಲಾ ಭೂಮಾಪನ ಅಧಿಕಾರಿಗಳು | ಸ ದ ಸ ್ಯರು |
| 06 | ಸ ರ್ಕಾರದ ಪ್ರಧಾನ/ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವ ಕ್ಫ್ ಇಲಾಖೆ. | ಸ ಂಚಾಲಕರು | 06 | ಜಿಲ್ಲೆಯ ಎಲ್ಲಾ ತಹಸೀಲ್ದಾರರುಗಳು | ಸ ದ ಸ ್ಯರುಗಳು |
| 07 | ಆಯುಕ್ತರು, ಬ ೂಮಾಪನ ಮತ್ತು ಬ ೂ ದಾಖಲೆಗಳ ಇಲಾಖೆ. | ಸ ದ ಸ ್ಯರು | 07 | ಆಯುಕ್ತರು, ನಗರಪಾಲಿಕೆ, ನಗರಸಭೆ ವ ುತ್ತು ಪ ುರಸಭೆಗಳ ಮುಖ್ಯಾಧಿಕಾರಿಗಳು | ಸ ದ ಸ ್ಯರುಗಳು |
| 08 | ಪ್ರಾದೇಶಿಕ ಆಯುಕ್ತರು, ಬ ೆ ಂಗಳೂರು, ಬೆಳಗಾವಿ, ಕಲ್ಬುರ್ಗಿ ಮತ್ತು ವ ುೖಸೂರು ವಿಭಾಗಗಳು ೆ | ಸ ದ ಸ ್ಯರುಗಳು | 08 | ಅಧ್ಯಕ್ಷರು, ಜಿಲ್ಲಾ ವಕ್ಫ್ ಸಲಹಾ ಸಮಿತಿ | ಸ ದ ಸ ್ಯರು |
| 09 | ವ ುುಖ್ಯ ಕಾರ್ಯನಿರ್ವಹಾಧಿಕಾರಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ | ಸ ದ ಸ ್ಯ ಕಾರ್ಯದರ್ಶಿ | 09 | ಜಿಲ್ಲೆಯ ಜಿಲ್ಲಾ ವಕ್ಫ್ ಅಧಿಕಾರಿಗಳು | ಸ ದ ಸ ್ಯ ಕಾರ್ಯದರ್ಶಿ |
| 10 | ಕಾರ್ಯದರ್ಶಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ | ಸ ದ ಸ ್ಯರು | 10 | ಜಿಲ್ಲಾ ವಕ್ಫ್ ಭೂ ಮಾಪನಾಧಿಕಾರಿ | ಸ ದ ಸ ್ಯರು |
ಜಿಲ್ಲಾಮಟ್ಟದ ವಕ್ಫ್ ಕಾರ್ಯಪಡೆಗಳ ಪ್ರಕಾರ್ಯಗಳು:
1) ಕಾನೂನು ಬಾಹಿರವಾಗಿ ಮಾರಾಟ, ಅಡಮಾನ, ವಿನಿಮಯ ಮತ್ತು ಮುತವಲ್ಲಿಯ ಕುಟುಂಬದ ಸದಸ್ಯರುಗಳಲ್ಲಿ ವಿಭಾಗದೊಂದಿಗೆ ಖಾತೆ ಬದಲಾವಣೆಯಿಂದಾಗಿ ಬಾಧಿತವಾಗಿರುವ ವಕ್ಫ್ ಆಸ್ತಿಗಳನ್ನು ಗುರ್ತಿಸಿ ವಕ್ಫ್ ಆಸ್ತಿಗಳು ಹಿಂಪಡೆದು ವಾಖಿóಫó್ನ ಉದ್ದೇಶದ ಪ್ರಕಾರ ಉಪಯೋಗಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು.
2) ವಕ್ಫ್ ಕಾಯಿದೆ - ಕಲಂ 52 ಮತ್ತು 54ರ ಅಡಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮತ್ತು ಕರ್ನಾಟಕ ರಾಜ್ಯ ವಕ್ಫ್ ನ್ಯಾಯಾಧಿಕರಣ ಇವರು ನೀಡಿರುವ ತೀರ್ಪುಗಳನ್ನು ಕರ್ನಾಟಕ ಸಾರ್ವಜನಿಕ ಆವರಣ (ಅನಧಿಕೃತ ಅನುಭವದಾರರ ಉಚ್ಛಾಟನೆ) ಕಾಯ್ದೆ, 1974 ಮತ್ತು ಕರ್ನಾಟಕ ಭೂಕಬಳಿಕೆಯ ನಿಯಂತ್ರಣ ಕಾಯ್ದೆ, 2011 ರನ್ವಯ ಅನುಷ್ಠಾನಗೊಳಿಸುವುದು.
3) ವಕ್ಫ್ ಆಸ್ತಿಗಳ 2ನೇ ಹಂತದ ಸರ್ವೆ ಕಾರ್ಯವನ್ನು ಸೆಪ್ಟೆಂಬರ್, 2017ರೊಳಗಾಗಿ ಮುಕ್ತಾಯಗೊಳಿಸುವುದು.
4) ವಕ್ಫ್ ಸಂಸ್ಥೆಗಳ ಅನುಭವ/ಸ್ವಾಧೀನದಲ್ಲಿರುವ ವಕ್ಫ್ ಆಸ್ತಿಗಳನ್ನು ಸಂರಕ್ಷಿಸಲು ಗಡಿಗಳನ್ನು ಗುರ್ತಿಸಿ ಆವರಣ ಗೋಡೆಗಳನ್ನು ನಿರ್ಮಿಸಿ ಸಂಬಂಧಿಸಿದ ವಕ್ಫ್ ಸಂಸ್ಥೆಯ ಸಂಪೂರ್ಣ ವಿವರಗಳುಳ್ಳ ನಾಮಫಲಕವನ್ನು ಅಳವಡಿಸಿ ಒತ್ತುವರಿದಾರರಿಂದ ಸಂರಕ್ಷಿಸುವುದು.
5) ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಥವಾ ಸರ್ಕಾರದ ವತಿಯಿಂದ ಹೊರಡಿಸಲಾಗಿರುವ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಅಧಿಸೂಚನೆ, ವಕ್ಫ್ ಡೀಡ್, ಮತ್ತು ವಕ್ಫ್ ಬೈ ಯೂಸರ್ (ಅಂದರೆ ಕಾಲಾಂತರದಿಂದ ಧಾರ್ಮಿಕ ಉದ್ದೇಶಕ್ಕೆ ಬಳಸಲಾಗುತ್ತಿರುವ) ಅನ್ವಯ ಆಸ್ತಿಗಳನ್ನು ವಕ್ಫ್ ಆಸ್ತಿಗಳೆಂದು ಖಾತೆ ಮಾಡಿ, ಖಾತಾ ಪತ್ರದ ಕಾಲಂ 9ರಲ್ಲಿ "ವಕ್ಫ್ ಆಸ್ತಿ" ಎಂದು ನಮೂದಿಸುವುದು.
6) ಇನಾಂ ರದ್ದಿಯಾತಿ ಕಾಯ್ದೆ-1955, ಕೆಲವು ಇನಾಂ ರದ್ದಿಯಾತಿ ಕಾಯ್ದೆ-1977 ಮತ್ತು ಕರ್ನಾಟಕ ಭೂಸುಧಾರಣೆ ಕಾಯ್ದೆ-1974 ಜಾರಿಯಾದ ನಂತರ ವಿವಿಧ ಕಾರಣಗಳಿಂದ ರಾಜ್ಯದ ವಕ್ಫ್ ಆಸ್ತಿಗಳು ಇತರೆಯವರಿಗೆ ಮಂಜೂರಾತಿಯಾಗಿವೆ. ಸವೋಚ್ಚನ್ಯಾಯಾಲಯದ ತೀರ್ಪಿ ಅನ್ವಯ "ವಕ್ಫ್ ಆಸ್ತಿಗಳು ಎಂದೂ ವಕ್ಫ್ ಆಸ್ತಿಗಳಾಗಿರುವುದರಿಂದ" ಇಂತಹ ಪ್ರಕರಣಗಳಲ್ಲಿ ಮೇಲ್ಮನವಿಗಳನ್ನು ಸಲ್ಲಿಸುವುದು ಹಾಗೂ ಮೇಲ್ಮನವಿಗಳು ಸಲ್ಲಿಕೆಯಾಗಿರುವ ಪ್ರಕರಣಗಳಲ್ಲಿ ವಕ್ಫ್ ಆಸ್ತಿಗಳನ್ನು ಸಂರಕ್ಷಿಸಲು ಕ್ರಮ ವಹಿಸುವುದು.
7) ಸಾರ್ವಜನಿಕ ಉದ್ದೇಶಗಳಿಗೆ ಭೂಸ್ವಾಧೀನವಾಗಿರುವ ವಕ್ಫ್ ಆಸ್ತಿಗಳಿಗೆ ಭೂಪರಿಹಾರ ಅಥವಾ ಪರ್ಯಾಯ ಜಮೀನು ನೀಡಲಾಗಿರುವ ಬಗ್ಗೆ ಪರಿಶೀಲಿಸುವುದು. ಪರಿಹಾರ ನೀಡಲಾಗಿದ್ದರೆ ಈ ಪರಿಹಾರಧನವನ್ನು ವಕ್ಫ್ನ ಮೂಲ ಉದ್ದೇಶಕ್ಕೆ ಬಳಸಿರುವ ಬಗ್ಗೆ ಪರಿಶೀಲಿಸುವುದು.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೧, ೨೦೧೭ ೯೩೯8) ಕಂದಾಯ ಇಲಾಖೆಯ ಸುತ್ತೋಲೆ ಸಂಖ್ಯೆ: ಆರ್.ಡಿ. 48 ಎಲ್ಜಿಪಿ 2016, ದಿನಾಂಕ:28-10-2016 ಮತ್ತು ಗ್ರಾಮೀಣಾಭಿವೃಧ್ದಿ & ಪಂಚಾಯತ್ ರಾಜ್ ಇಲಾಖೆಯ ಸುತ್ತೋಲೆ ಸಂಖ್ಯೆ:ಗ್ರಾಆಪ1122:ಪ್ರಾಪಂಆ2016, ದಿನಾಂಕ:07-12-2016ರಲ್ಲಿ ವಕ್ಪ್ ಆಸ್ತಿಗಳ ಸಂರಕ್ಷಣೆ ಬಗ್ಗೆ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಕ್ರಮ ವಹಿಸುವುದು. ವಕ್ಪ್ ಕಾಯ್ದೆ-1995 ಮತ್ತು ಇದರಡಿಯಲ್ಲಿ ರಚಿಸಲಾಗಿರುವ ನಿಯಮಾವಳಿಗಳನ್ನು ವಕ್ಪ್ ಆಸ್ತಿಗಳ ಸಂರಕ್ಷಣೆಗೆ ಪಾಲಿಸುವುದು.
ಜಿಲ್ಲಾಮಟ್ಟದ ವಕ್ಫ್ ಕಾರ್ಯಪಡೆಯ ಸಭೆಯನ್ನು ಕನಿಷ್ಠ ತಿಂಗಳಿಗೊಮ್ಮೆಯಾದರೂ ನಡೆಸಿ ನಿಗಧಿಪಡಿಸಲಾಗಿರುವ ಪ್ರಕಾರ್ಯಗಳು ಅನುಷ್ಠಾನಗೊಳ್ಳುತ್ತಿರುವ ಬಗ್ಗೆ ಪರಿಶೀಲನೆ ನಡೆಸುವುದು. ಜಿಲ್ಲಾಮಟ್ಟದ ವಕ್ಫ್ ಕಾರ್ಯಪಡೆಯ ಅಧ್ಯಕ್ಷರು ರಾಜ್ಯಮಟ್ಟದ ವಕ್ಫ್ ಕಾರ್ಯಪಡೆಯ ಅಧ್ಯಕ್ಷರಿಗೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ರವರಿಗೆ ಪ್ರತಿ ತಿಂಗಳು 10ನೇ ದಿನಾಂಕದೊಳಗೆ ನಿಗದಿತ ನಮೂನೆಯಲ್ಲಿ ಮಾಹೆಯಾನ ಪ್ರಗತಿ ವರದಿ ಸಲ್ಲಿಸುವುದು.
ರಾಜ್ಯಮಟ್ಟದ ವಕ್ಫ್ ಕಾರ್ಯಪಡೆಯ ಪ್ರಕಾರ್ಯಗಳು: 1) ರಾಜ್ಯಮಟ್ಟದ ವಕ್ಫ್ ಕಾರ್ಯಪಡೆಯು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆಯನ್ನು ಆಯೋಜಿಸಿ ಜಿಲ್ಲಾಮಟ್ಟದ ವಕ್ಫ್ ಕಾರ್ಯಪಡೆಗೆ ನಿಗದಿಪಡಿಸಲಾಗಿರುವ ಪ್ರಕಾರ್ಯಗಳ ಬಗ್ಗೆ ನೀಡಿರುವ ಪ್ರಗತಿ ವರದಿಗಳನ್ನು ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡುವುದು.
2) ರಾಜ್ಯಮಟ್ಟದ ವಕ್ಫ್ ಕಾರ್ಯಪಡೆಯು ಜಿಲ್ಲಾಮಟ್ಟದ ಕಾರ್ಯಪಡೆಗೆ ನಿಗದಿಪಡಿಸಲಾಗಿರುವ ಪ್ರಕಾರ್ಯಗಳನ್ವಯ ನಿಗದಿತ ವೇಳೆಯಲ್ಲಿ ಅನುಷ್ಠಾನಗೊಳಿಸಲು ಸೂಕ್ತ ನಿರ್ದೇಶನಗಳನ್ನು ನೀಡುವುದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಅಕ್ರಂಭಾಷ
ಸರ್ಕಾರದ ಅಧೀನ ಕಾರ್ಯದರ್ಶಿ,ಅಲ್ಪಸಂಖ್ಯಾತರ ಕಲ್ಯಾಣ,
ಹಜ್ ಮತ್ತು ವಕ್ಫ್ ಇಲಾಖೆ.
MINORITY WELFARE. HAJ AND WAQF SECRETARIAT
Sub: Constitution of State & District Level Task Force for the protection of Waqf properties in the State of Karnataka –reg.
Read: Letter No.KSBW/SSO/4/2013-14, Dated: 07-03-2017 of the Chief Executive Officer, Karnataka State Board of Auqaf, Bengaluru.
PREAMBLE:
As per the letter read above, The Chief Executive Officer of Karnataka State Board of Auqaf, Bengaluru has proposed to constitute a State Level & District Level Task Force for protection of Waqf properties and to review the compliance orders issued under Section 52 & 54 of Karnataka State Waqf Act. It is further proposed to complete the 2nd survey of Waqf properties and to effect the Khata of Waqf properties. The Task Force constituted earlier for the protection of the Wakf properties had benefited in the protection and effecting of Khatas in the name of Wakf institutions and measures have been taken to free the encroachment of wakf properties.
Hence, it is decided to constitute the State & District Level Task Force for protection of Waqf properties.
Hence the following order:
GOVERNMENT ORDER NO.MWD/32/WES/2017, DATED:20-03-2017
In view of the facts explained in the preamble, task force for protection of wakf properties under the Chairmanship of Additional Chief Secretary & Development Commissioner, Government of Karnataka at the state level and under the Chairmanship of
| Sl. No. | State Level Taks Force for Waqf properties | Sl. No. | District Level Taks Force for Waqf properties | ||
| 01 | Addl. Chief Secretary to the Govt. & Development Commissioner, | Chairman | 01 | Deputy Commissioner & Dist. Magistarte | Chairman |
| 02 | Principal Secretary to Govt., Home & Transport Dept. | Member | 02 | Superintendent of Police of the District | Member |
| 03 | Principal Secretary to Govt., Revenue Dept. | Member | 03 | Chief Executive Officer, Zilla Panchayath | Member |
| 04 | Principal Secretary to Government, Law & Justice Dept. | Member | 04 | Asst. Commissioners of the concerned Sub-Divisions | Member |
| 05 | Principal Secretary to Government, Urban Development Dept. | Member | 05 | Joint Director of Land Records & City Survey Officers of the District | Member |
| 06 | Secretary to Govt., Minority Welfare, Haj & Waqf Dept. | Member | 06 | Tahsildars of the Taluks in the District | Member |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೯೪೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೧, ೨೦೧೭ ಭಾಗ ೧| Sl. No. | State Level Taks Force for Waqf properties | Sl. No. | District Level Taks Force for Waqf properties | ||
| 07 | Commissioner, Survey Settlement & Land Records | Convener | 07 | Commissioner, Corporation & Chief Officers of CMC's and TMC's | Member |
| 08 | Regional Commissioner, Bengaluru, Belagavi, Kalburgi & Mysuru Division | Member | 08 | Chairman, District Waqf Advisory Committee | Member |
| 09 | Chief Executive Officer, Karnataka State Board of Auqaf, Bengaluru | Member Secretary | 09 | District Waqf Officer | Member Secretary |
| 10 | Secretary, Karnataka State Minority Commission | Member | 10 | District Waqf Survey Officer | Member |
Functions of the District Level Waqf Task Force:
1) Waqf properties which are affected by illegal sale, mortgage, exchange and by inheritance by the family members of the caretaker Mutawallis to be identified and action be taken to retrieve the properties of Wakf and to use the properties as per the declaration of the "Wakhif".
2) The orders issued under Section 52 & 54 of Waqf Act, by the Chief Executive Officer, Karnataka State Board of Aukaf and the Karnataka State Waqf Tribunal has to be implemented as per the provisions contained in the Karnataka Public Premises (Eviction of Unauthorized Occupants) Act, 1974 and Karnataka Land Grabbing (Prohibition) Act, 2011.
3) To expedite and complete the 2nd survey of Waqf properties in the District before September, 2017.
4) To protect the wakf properties which are in peaceful possession of the Waqf Institutions, and to take action to protect them by identifying the boundaries and by construction of compound, putting up of name boards with details of Wakf Property.
5) The Khatas of the Waqf properties in the offices of Revenue, Panchayats, Municipalities and Corporations have to be updated as per the Notifications, Waqf deeds and Waqf by User (means the land used for pious purposes from time immemorial). The entry as "Waqf Property" to be made in the column 9 of record of rights and Khata books to prevent illegal alienations.
6) Consequent upon the implementation of Inam Abolition Act 1955, Certain Inam Abolition Act, 1977 and the Karnataka Land Reforms Act, 1974 in the State, many Waqf lands have been affected. As per the orders of the Hon'ble Supreme Court of India "Once a Waqf always a Waqf", appeals shall be filed in the Competent Courts and steps be taken to retrieve the Waqf properties affected. In the cases where appeals have been filed, further action to be ensured.
7) The Waqf lands acquired for public purpose has to be identified and ensure that the compensation is claimed from the competent authority. It should also be ensured that the institution utilize the compensation amount for the purpose the Waqifs which have been declared in the Waqf deeds.
8) Circulars issued from Revenue department vide no: ಆರ್ಡಿ 48 ಎಲ್ಜಿಪಿ 2016, ದಿನಾಂಕ:28-10-2016, Urban Development department circular no: ನಇ 130 ಸಮನ್ವಯ 2016, ದಿನಾಂಕ:30-01-2017 and Rural Development & Panchayath Raj department vide no: ಗ್ರಾಅಪ 1122 ಗ್ರಾಪಂಅ 2016, ದಿನಾಂಕ:07-12-2016 in respect of protection of Wakf properties must be implemented. All provisions in The Wakf Act-1995 and Rules framed under the Act should be adhered for the protection of Wakf properties.
The District Level Task Force for Waqf properties should meet at least once in a month and review the tasks assigned above. The Chairman of the District Level Task Force should submit the progress report regarding the tasks assigned on or before 10th day of every month to the Chairman of the State Level Waqf Task Force and the Chief Executive Officer, Karnataka State Board of Auqaf, Bengaluru in the prescribed Proforma.
Functions of the State Level Waqf Task Force:
1) The State Level Waqf Task Force should meet at least once in the three months and review the action taken by the District Level Task Force for Waqf properties and monitor the completion of task assigned.
2) The State Level Waqf Task Force may issue necessary directions time-to time, for the completion of the aforesaid task by the District Level Waqf Task Force.
PR. 145
By Order and in the name of the Governor of Karnataka,
AKRAM BASHA,
SC. 500
Under Secretary to Government,
Miniority Welfare, Haj and Waqf Department. ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.