ಸಂಪುಟ ೧೫೨
Volume 152
ಬೆಂಗಳೂರು, ಗುರುವಾರ, ಜೂನ್ ೮, ೨೦೧೭ (ಜ್ಯೇಷ್ಠ ೧೮, ಶಕ ವರ್ಷ ೧೯೩೯)
Bengaluru, Thursday, June 8, 2017 (Jyeishta 18, Shaka Varsha 1939)
ಸಂಚಿಕೆ ೨೩
Issue 23
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಕಂದಾಯ ಸಚಿವಾಲಯ
ವಿಷಯ : ಶ್ರೀ ಲಕ್ಷ್ಮೀಸಾಗರ್ ಎನ್.ಕೆ., ಸಹಾಯಕ ನಿಯಂತ್ರಕರು, ರಾಜ್ಯ ಲೆಕ್ಕ ಪತ್ರ ಮತ್ತು ಲೆಕ್ಕ ಪರಿಶೋಧನಾ ಇಲಾಖೆ ಇವರನ್ನು ಖಾಯಂ ವರ್ಗಾವಣೆ ಮೂಲಕ ಕಂದಾಯ ಇಲಾಖೆಯ ತಹಶೀಲ್ದಾರ್ ಗ್ರೇಡ್-1 ಹುದ್ದೆಯಲ್ಲಿ ವಿಲೀನಗೊಳಿಸುವ ಬಗ್ಗೆ.
ಓದಲಾಗಿದೆ : 1. ಶ್ರೀ ಲಕ್ಷ್ಮಿಸಾಗರ್ ಎನ್.ಕೆ., ಸಹಾಯಕ ನಿಯಂತ್ರಕರು, ಕರ್ನಾಟಕ ರಾಜ್ಯ ಲೆಕ್ಕ ಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆ ಇವರ ಮನವಿ ದಿ: 02-01-2017
2. ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ: ಆಇ 353 ರಾಲೆಪ 2016, ದಿನಾಂಕ: 11-04-2017 ಪ್ರಸ್ತಾವನೆ :
ಮೇಲೆ (1)ರಲ್ಲಿ ಓದಲಾದ ದಿನಾಂಕ: 02-01-2017 ರ ಮನವಿಯಲ್ಲಿ ಶ್ರೀ ಲಕ್ಷ್ಮೀಸಾಗರ್ ಎನ್.ಕೆ., ಸಹಾಯಕ ನಿಯಂತ್ರಕರು, ಕರ್ನಾಟಕ ರಾಜ್ಯ ಲೆಕ್ಕ ಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆ ಇವರು ತಮ್ಮ ಸೇವೆಯನ್ನು ಕಂದಾಯ ಇಲಾಖೆಯ ತಹಶೀಲ್ದಾರ್ ಗ್ರೇಡ್-1 ಹುದ್ದೆಯಲ್ಲಿ ವಿಲೀನಗೊಳಿಸಲು ಕೋರಿರುತ್ತಾರೆ.
ರಾಜ್ಯದ ಯಾವುದೇ ಇತರೆ ಸೇವೆಯ ನೌಕರರನ್ನು ಇನ್ನೊಂದು ಸೇವೆಯ ತತ್ಸಮಾನ ಹುದ್ದೆಗೆ ಖಾಯಂ ಆಗಿ ವರ್ಗಾಯಿಸುವ ಮೂಲಕ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ನೇಮಿಸಲು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ನಿಯಮ 16(ಎ)(ii) ರಲ್ಲಿ ಅವಕಾಶ ಕಲ್ಪಿಸಲಾಗಿದೆ.
1. ಸಂಬಂಧಪಟ್ಟ ನೌಕರರು ಸಕ್ರಮವಾಗಿ ನೇಮಕಗೊಂಡಿರಬೇಕು ಹಾಗೂ ಅವರು ತಮ್ಮ ಮಾತೃ ಇಲಾಖೆಯಲ್ಲಿ ಪರಿವೀಕ್ಷಣಾ ಅವಧಿ / ಸ್ಥಾನಪನ್ನ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿರುತ್ತಾರೆ;
2. ಸಂಬಂಧಪಟ್ಟ ನೌಕರರು ಮಾತೃ ಇಲಾಖೆಯಲ್ಲಿ ಹೊಂದಿರುವ ಹುದ್ದೆಯ ವೇತನ ಶ್ರೇಣಿ ಮತ್ತು ವರ್ಗಾವಣೆ ಮೂಲಕ ನೇಮಿಸಲು ಉದ್ದೇಶಿಸಿರುವ ಹುದ್ದೆಯ ವೇತನ ಶ್ರೇಣಿಗಳು ಸಮಾನ ವೇತನ ಶ್ರೇಣಿಗಳಾಗಿರಬೇಕು;
3. ವರ್ಗಾವಣೆ ಮುಖಾಂತರ ನೇಮಕಾತಿ ಹೊಂದುವ ನೌಕರರು ವಗಾವಣೆ ಮುಖಾಂತರ ನೇಮಕಾತಿ ಹೊಂದುವ ಹುದ್ದೆಗೆ ನಿಗಧಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು;
4. ಪ್ರಸ್ತಾಪಿತ ವರ್ಗಾವಣೆ ಮೂಲಕ ನೇಮಕಾತಿಗೆ ನೌಕರರ ಮಾತೃ ಇಲಾಖೆ ಹಾಗೂ ಇವರನ್ನು ವರ್ಗಾವಣೆ ಮೂಲಕ ನೇಮಿಸಲು ಉದ್ದೇಶಿಸಿರುವ ಇಲಾಖೆಗಳು ಒಪ್ಪಿರಬೇಕು;
5. ಪ್ರಸ್ತಾಪಿತ ವರ್ಗಾವಣೆ ಮೂಲಕ ನೇಮಕಾತಿಯನ್ನು ನೌಕರರ ಕೋರಿಕೆಯ ಮೇರೆಗೆ ಮಾಡುವ ಉದ್ದೇಶಿಸಿರುವುದರಿಂದ, ವರ್ಗಾವಣೆ ಮೂಲಕ ನೇಮಿಸಲಾಗುವ ಹುದ್ದೆಯಲ್ಲಿ ಈ ನೌಕರರ ಜೇಷ್ಟತೆಯನ್ನು ಕರ್ನಾಟಕ ಸರ್ಕಾರಿ ನೌಕರರ (ಜೇಷ್ಟತೆ) ನಿಯಮಗಳು, 1957ರ ನಿಯಮ 6ರ ಮೊದಲನೇ ಪರಂತುಕದನುಸಾರ ನಿರ್ಧರಿಸಬೇಕು. ಈ ಬಗ್ಗೆ ನೌಕರರ ಒಪ್ಪಿಗೆಯನ್ನು ಬರವಣಿಗೆ ಮೂಲಕ ಪಡೆಯಬೇಕು;
6. ಕರ್ನಾಟಕ ಸಿವಿಲ್ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 16(ಎ) (ii) ರಡಿ ಮಾಡುವ ವರ್ಗಾವಣೆ ಮೂಲಕ ನೇಮಕಾತಿಯನ್ನು ನೌಕರರ ಸೇವಾವಧಿಯಲ್ಲಿ ಒಮ್ಮೆ ಮಾತ್ರ ಮಾಡಬಹುದು;
7. ನೌಕರರು ವರ್ಗಾವಣೆ ಭತ್ಯೆ ಪಡೆಯಲು ಅರ್ಹರಿರುವುದಿಲ್ಲ; 8. ಕೆ.ಸಿ.ಎಸ್. (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರ ನಿಯಮ 16(ಎ)(ii)ರಡಿ ವರ್ಗಾವಣೆ ಮೂಲಕ ಮಾಡುವ ನೇಮಕಾತಿಗೆ ಸಂಬಂಧಿಸಿದ ಇಲಾಖಾ ಸಚಿವರ ಅನುಮೋದನೆ ಪಡೆಯುವುದು ಅವಶ್ಯಕ.
(೯೪೧)೯೪೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೮, ೨೦೧೭ ಭಾಗ ೧ ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ, ಸಹಮತಿಯನ್ನು ವ್ಯಕ್ತಪಡಿಸಲಾಗಿರುವ ಮೇಲೆ ಓದಲಾದ ಕ್ರಮ ಸಂಖ್ಯೆ: (2)ರ ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿಯಲ್ಲಿ ಶ್ರೀ ಲಕ್ಷೀಸಾಗರ್ ಎನ್.ಕೆ. ಇವರು ನೇರ ನೇಮಕಾತಿ ಮೂಲಕ ಕ್ರಮಬದ್ಧ ರೀತಿಯಲ್ಲಿ ಕರ್ನಾಟಕ ರಾಜ್ಯ ಲೆಕ್ಕ ಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯ ಸಹಾಯಕ ನಿಯಂತ್ರಕರ ಹುದ್ದೆಗೆ ನೇಮಕಗೊಂಡು ತೃಪ್ತಿಕರವಾಗಿ ಪರಿವೀಕ್ಷಣಾವಧಿಯನ್ನು ಪೂರೈಸಿರುವುದಾಗಿ ದೃಡೀಕರಿಸಲಾಗಿರುತ್ತದೆ. ಮುಂದುವರೆದು, ಕರ್ನಾಟಕ ರಾಜ್ಯ ಲೆಕ್ಕ ಪತ್ರ ಮತ್ತು ಲೆಕ್ಕ ಸಂಶೋಧನೆ ಇಲಾಖೆಯ ಸಹಾಯಕ ನಿಯಂತ್ರಕರ ಹುದ್ದೆಯು ಕಂದಾಯ ಇಲಾಖೆಯ ತಹಶೀಲ್ದಾರ್ ಗ್ರೇಡ್-1 ಹುದ್ದೆಯ ವೇತನ ಶ್ರೇಣಿಗೆ ಸಮಾನವಾದ ರೂ. 28100-50100 ರ ವೇತನ ಶ್ರೇಣಿ ಹೊಂದಿರುವುದಾಗಿ ಆರ್ಥಿಕ ಇಲಾಖೆಯಿಂದ ಮಾಹಿತಿ ನೀಡಲಾಗಿರುತ್ತದೆ. ಶ್ರೀ ಲಕ್ಷ್ಮೀಸಾಗರ್ ಎನ್.ಕೆ. ಇವರಿಗೆ ಉಪ ನಿಯಂತ್ರಕರ ಹುದ್ದೆಗೆ ದಿನಾಂಕ: 24-01-2017 ರಂದು ಮುಂಬಡ್ತಿ ನೀಡಲಾಗಿದ್ದರೂ ಸಹ, ಮುಂಬಡ್ತಿ ನೀಡಿದ ಹುದ್ದೆಗೆ ಈವರೆವಿಗೂ ಸದರಿಯವರು ಕಾರ್ಯವರದಿ ಮಾಡಿಕೊಂಡಿರುವುದಿಲ್ಲವೆಂದು ಆರ್ಥಿಕ ಇಲಾಖೆಯಿಂದ ತಿಳಿಸಲಾಗಿದೆ.
ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 23 ರಲ್ಲಿ ಉಪಬಂಧಿಸಿರುವಂತೆ ಕರ್ತವ್ಯ ಬದಲಾವಣೆ ಇರುವ ಪದೋನ್ನತಿಗಳು ಸರ್ಕಾರಿ ನೌಕರರು ಆ ಹುದ್ದೆಯ ಕರ್ತವ್ಯಗಳನ್ನು ವಹಿಸಿಕೊಂಡ ದಿನಾಂಕದಿಂದ ಪರಿಣಾಮಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ, ಶ್ರೀ ಲಕ್ಷ್ಮೀಸಾಗರ್ ಎನ್.ಕೆ., ಇವರು ಪದೋನ್ನತಿ ಹೊಂದಿದ ಉಪ ನಿಯಂತ್ರಕರ ಹುದ್ದೆಯ ಕರ್ತವ್ಯಗಳನ್ನು ಈವರೆವಿಗೂ ವಹಿಸಿಕೊಂಡಿರದ ಕಾರಣ ಸದರಿ ಪದೋನ್ನತಿಯು ಪ್ರವರ್ತನೆಯಲ್ಲಿರುವುದಿಲ್ಲ. ತತ್ಪರಿಣಾಮವಾಗಿ ಕರ್ನಾಟಕ ರಾಜ್ಯ ಲೆಕ್ಕ ಪತ್ರ ಹಾಗೂ ಲೆಕ್ಕ ಪರಿಶೋಧನಾ ಇಲಾಖೆಯ ಸಹಾಯಕ ನಿಯಂತ್ರಕರ ಹುದ್ದೆಯು ಕಂದಾಯ ಇಲಾಖೆಯ ತಹಶೀಲ್ದಾರ್ ಗ್ರೇಡ್-1 ಹುದ್ದೆಗೆ ತತ್ಸಮಾನವಾಗಿರುವುದರಿಂದ ಆರ್ಥಿಕ ಇಲಾಖೆಯ ಸಹಮತಿಯ ಮೇರೆಗೆ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ನಿಯಮ 16(ಎ)(ii) ರ ಉಪಬಂಧಗಳ ಅನುಸಾರ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ : ಕಂಇ 567 ಎಎಸ್ಡಿ 2016, ಬೆಂಗಳೂರು, ದಿನಾಂಕ:05-06-2017.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಲೆಕ್ಕ ಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯ ಸಹಾಯಕ ನಿಯಂತ್ರಕರಾದ ಶ್ರೀ ಲಕ್ಷ್ಮೀಸಾಗರ್ ಎನ್.ಕೆ, ಇವರ ಸೇವೆಯನ್ನು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ನಿಯಮ 16(ಎ)(ii) ರನ್ವಯ ಈ ಕೆಳಕಂಡ ನಿಬಂಧನೆಗಳಿಗೆ ಒಳಪಟ್ಟು, ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್ ಗ್ರೇಡ್-1 ವೃಂದದ ವೇತನ ಶ್ರೇಣಿ ರೂ.28100-50100 ಹುದ್ದೆಯಲ್ಲಿ ಖಾಯಂ ಆಗಿ ವರ್ಗಾವಣೆ ಮೂಲಕ ನೇಮಕಗೊಳಿಸಿ ಇವರನ್ನು ಕಂದಾಯ ಇಲಾಖೆಯಲ್ಲಿ ವಿಲೀನಗೊಳಿಸಿದೆ.
1) ಸದರಿ ಅಧಿಕಾರಿಯು ಕಂದಾಯ ಇಲಾಖೆಯ ತಹಶೀಲ್ದಾರ್ ಗ್ರೇಡ್-1 ಹುದ್ದೆಗೆ ನೇಮಕಾತಿ ಹೊಂದಿದ ಎರಡು ವರ್ಷಗಳ ಒಳಗಾಗಿ ಸದರಿ ಹುದ್ದೆಗೆ ನಿಗಧಿಪಡಿಸಿರುವ ಇಲಾಖಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದತಕ್ಕದ್ದು. ಸದರಿಯವರು ಈ ಅವಧಿಯಲ್ಲಿ ಇಲಾಖಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದದಿದ್ದಲ್ಲಿ ಅವರ ಸೇವೆಯನ್ನು ಮಾತೃ ಇಲಾಖೆಯಾದ ಕರ್ನಾಟಕ ರಾಜ್ಯ ಲೆಕ್ಕ ಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಗೆ ಹಿಂದಿರುಗಿಸಲಾಗುವುದು.
2) ಖಾಯಂ ಆಗಿ ವರ್ಗಾವಣೆ ಹೊಂದಿರುವ ತಹಶೀಲ್ದಾರ್ ಗ್ರೇಡ್-1 ವೃಂದದಲ್ಲಿ ಸದರಿಯವರ ಜೇಷ್ಟತೆಯನ್ನು ಕರ್ನಾಟಕ ಸರ್ಕಾರಿ ನೌಕರರ ಜೇಷ್ಠತಾ ನಿಯಮಾವಳಿಗಳು 1957ರ ನಿಯಮ 6ರ ಮೊದಲನೆ ಪರಂತುಕದನ್ವಯ ಸದರಿಯವರು ಕಂದಾಯ ಇಲಾಖೆಯ ಸೇವೆಗೆ ಸೇರುವ ದಿನಾಂಕದಿಂದ ಪರಿಗಣಿಸತಕದ್ದು.
3) ಸದರಿಯವರ ಖಾಯಂ ವರ್ಗಾವಣೆಯನ್ನು ಕಂದಾಯ ಇಲಾಖೆಯ ತಹಶೀಲ್ದಾರ್ ಗ್ರೇಡ್-1 ವೃಂದದಲ್ಲಿ ಮುಂಬಡ್ತಿಗೆ ಕಾಯ್ದಿರಿಸಿರುವ ರಿಕ್ತಸ್ಥಾನದ ವಿರುದ್ಧ ಪರಿಗಣಿಸತಕ್ಕದ್ದು.
4) ಶ್ರೀ ಲಕ್ಷ್ಮೀಸಾಗರ್ ಎನ್.ಕೆ., ಇವರು ವರ್ಗಾವಣೆಯ ಭತ್ಯೆಗೆ ಅರ್ಹರಾಗಿರುವುದಿಲ್ಲ.
P.R. 165
SC-200
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಕೆ.ಆರ್. ರವಿಕುಮಾರ್ ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ [ಸೇವೆಗಳು-3]
DEPARTMENT OF PERSONNEL AND ADMINISTRATIVE REFORMS SECRETARIAT
CORRIGENDUM
No. DPAR 6 SeVuNya Bengaluru Dated:28th APRIL 2017.
In exercise of the powers conferred under Article 233 of the Constitution of India, the Governor of Karnataka hereby makes the following corrigendum in the Notification issued for appointment of District Judges.
For the words and sentences "Karnataka Judicial Services (Recruitment) Rules, 2004 and Amended Rules, 2011, with immediate effect" appearing in 4th and 5th line of the Notification No. DPAR 6 SeVuNya 2017, dated: 20th April, 2017, the following words and sentences "Karnataka Judicial Services (Recruitment) Rules, 2004 and Amended Rules, 2011, 2015 and 2016, with immediate effect" shall and shall always be deemed to have been substituted.
PR. 146
VAJUBHAI VALA
Governmor of Karnataka
T.K. ANIL KUMAR
Secretary to Government,
Department of Personnel and Administrative Reforms.
ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವಾಲಯ
ವಿಷಯ : ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯೊಳಗಿರುವ ಲೋಕೋಪಯೋಗಿ ಇಲಾಖಾ ರಸ್ತೆಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಬಗ್ಗೆ.
ಓದಲಾಗಿದೆ : ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ), ಬೆಂಗಳೂರು, ಇವರ ಪತ್ರ ಸಂಖ್ಯೆ:
ಮುಅ:ಸಂಕದ:ಸಾಕೋ:ಸಇ-3:2016-17, ದಿನಾಂಕ: 13/02/2017.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೮, ೨೦೧೭ ೯೪೩ಪ್ರಸ್ತಾವನೆ :
ರಾಜ್ಯದಲ್ಲಿರುವ ರಾಜ್ಯ ಹೆದ್ದಾರಿಗಳನ್ನು 5,000 ಜನಸಂಖ್ಯೆಯುಳ್ಳ ಪಟ್ಟಣಗಳನ್ನು, ರಾಷ್ಟ್ರೀಯ ಹೆದ್ದಾರಿಗಳಿಗೆ ಪ್ರಮುಖ ಯಾತ್ರಾ ಸ್ಥಳಗಳಿಗೆ ಸಂಪರ್ಕ ಕಲ್ಪಿಸಿ ಹಾಗೂ ಈ ಜಾಲವು ಸಣ್ಣ ಬಂದರುಗಳು, ಜಿಲ್ಲಾ ಕೇಂದ್ರ್ರ ಸ್ಥಳಗಳು, ಯಾತ್ರಾ ಸ್ಥಳಗಳು, ಮಾರುಕಟ್ಟೆ ಸ್ಥಳಗಳು, ಐತಿಹಾಸಿಕ ಸ್ಥಳಗಳು, ಔದ್ಯೋಗಿಕ ಪ್ರದೇಶಗಳಿಗೆ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸಲು ಅನುವಾಗುವಂತೆ ಈಗಿರುವ ರಸ್ತೆಗಳನ್ನು ಪುನರ್ ನಾಮಕರಣ ಮಾಡಿಕೊಂಡು ರಾಜ್ಯ ಹೆದ್ದಾರಿಗಳನ್ನು ಪುನರ್ ವ್ಯವಸ್ಥೆಗೊಳಿಸಲು ಸರ್ಕಾರದ ಆದೇಶ ಸಂಖ್ಯೆ: ಲೋಇ 15 ಮಾತಂಕೋ 2003, ದಿನಾಂಕ 18/05/2004 ರಲ್ಲಿ ಆದೇಶಿಸಲಾಗಿರುತ್ತದೆ.
ಮುಖ್ಯ ಇಂಜಿನೀಯರ್, ಸಂಪರ್ಕ ಮತ್ತು ಕಟ್ಟಡ (ದಕ್ಷಿಣ) ಬೆಂಗಳೂರು ಇವರು ಮೇಲೆ ಓದಲಾದ ಪತ್ರದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 18.80 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳನ್ನು ಮತ್ತು 38.88 ಕಿ.ಮೀ ಉದ್ದದ 12 ಜಿಲ್ಲಾ ಮುಖ್ಯ ರಸ್ತೆಗಳನ್ನು ಹೀಗೆ ಒಟ್ಟು 57.68 ಕಿ.ಮೀ ಉದ್ದದ ರಸ್ತೆ ನಿರ್ವಹಣೆಯನ್ನು ಮಂಗಳೂರು ಮಹಾನಗರ ಪಾಲಿಕೆಗೆ ದಿನಾಂಕ 07/07/2004 ರಂದು ತಾತ್ಕಾಲಿಕವಾಗಿ ಹಸ್ತಾಂತರಿಸಿರುವುದಾಗಿ ವರದಿಸಿರುತ್ತಾರೆ.
ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ಇವರು ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಗೆ ತಾತ್ಕಾಲಿಕವಾಗಿ ಹಸ್ತಾಂತರಿಸಲಾಗಿದ್ದ ರಸ್ತೆಗಳ ಪೈಕಿ 18.80 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳ ಸಂಪೂರ್ಣ ಅಧಿಕಾರ, ಹಕ್ಕು ಮತ್ತು ಜವಾಬ್ದಾರಿಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳುವಂತೆ ದಿನಾಂಕ 28.12.2016 ರಲ್ಲಿ ಇಲಾಖೆಯನ್ನು ಕೋರಿರುತ್ತಾರೆ.
ಈ ಹಿನ್ನೆಲೆಯಲ್ಲಿ, 2004 ರಲ್ಲಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದ ಎಲ್ಲಾ ರಸ್ತೆಗಳು ಹಾಗೂ ಅದಕ್ಕೆ ಸಂಬಂಧಿಸಿದ ಚಾಚುಗಳನ್ನು ಮಹಾನಗರ ಪಾಲಿಕೆ ವತಿಯಿಂದ ಅಭಿವೃದ್ಧಿಗೊಳಿಸಿ, ಸುಸ್ಥಿತಿಯಲ್ಲಿ ನಿರ್ವಹಿಸಿಕೊಂಡು ಪ್ರಸ್ತುತ ಎಲ್ಲಾ ರಸ್ತೆಗಳನ್ನು ಚತುಷ್ಪಥಗೊಳಿಸಿ ಅಭಿವೃದ್ಧಿಪಡಿಸಲಾಗಿರುವುದಾಗಿ ಅಧೀಕ್ಷಕ ಇಂಜಿನೀಯರ್, ಲೋಕೋಪಯೋಗಿ ವೃತ್ತ, ಮಂಗಳೂರು ಇವರು ವರದಿಸಿರುವುದಾಗಿ ತಿಳಿಸಿರುತ್ತಾರೆ. ಲೋಕೋಪಯೋಗಿ ಇಲಾಖೆಯಿಂದ ತಾತ್ಕಾಲಿಕವಾಗಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾದ ರಸ್ತೆಗಳ ಅಂಕಿ-ಅಂಶಗಳನ್ನು ಪ್ರಸ್ತುತ ಲೋಕೋಪಯೋಗಿ ಇಲಾಖೆಯ ಪುಸ್ತಿಕೆಯಲ್ಲಿ ಪರಿಗಣಿಸಿರುವುದಿಲ್ಲವೆಂದು ತಿಳಿಸಿರುತ್ತಾರೆ. ಆದ್ದರಿಂದ, ಈ ಕೆಳಕಂಡ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 18.80 ಕಿ.ಮೀ ಉದ್ದದ ನಾಲ್ಕು ರಾಜ್ಯ ಹೆದ್ದಾರಿಗಳನ್ನು ಶಾಶ್ವತವಾಗಿ ಮಹಾನಗರ ಪಾಲಿಕೆಗೆ ವರ್ಗಾಯಿಸುವಂತೆ ಕೋರಿರುತ್ತಾರೆ.
| ಕ್ರ. ಸಂ. | ರಸ್ತೆ ಹೆಸರು | ರಸ್ತೆಯ ಸರಪಳಿ | ರಸ್ತೆಯ ಉದ್ದ |
| 1. | ವ ುಂಗಳೂರು ಅತ್ರಾಡಿ ರಾಜ್ಯ ಹೆದ್ದಾರಿ ನಂ.67 | ಕಿ.ಮೀ. 0.00 ರಿಂದ 4.28 ಹಾಗೂ ಕಿ.ಮೀ. 5.38 ರಿಂದ 12.98 ರವರೆಗೆ | 11.88 ಕಿ.ಮೀ. |
| 2. | ಸ ೂರತ್ಕಲ್ ಕಬಕ ರಾಜ್ಯ ಹೆದ್ದಾರಿ ನಂ.101 | ಕಿ.ಮೀ. 0.00 ರಿಂದ 4.80 ರವರೆಗೆ | 4.80 ಕಿ.ಮೀ. |
| 3. | ಬ ಂಗಳೂರು – ಮಂಗಳೂರು ರಸ್ತೆ ೆ | ಕಿ.ಮೀ. 347.80 ರಿಂದ 349.02 ರವರೆಗೆ | 1.22 ಕಿ.ಮೀ. |
| 4. | ಬ ಳ ೆ ್ಮಣ್ ರಸ್ತೆಯಲ್ಲಿ ಮೇರಿಹಿಲ್ ಬೈಪಾಸ್ ರಸ್ತೆ | ಕಿ.ಮೀ. 0.00 ರಿಂದ 0.90 ರವರೆಗೆ | 0.90 ಕಿ.ಮೀ. |
| ಒಟ್ಟು | 18.80 ಕಿ.ಮೀ |
ಆದ್ದರಿಂದ, ಮೇಲ್ಕಂಡ ಮಂಗಳೂರು ಮಹಾನಗರ ಪಾಲಿಕೆಯ ನಾಲ್ಕು ರಾಜ್ಯ ಹೆದ್ದಾರಿಗಳನ್ನು ಲೋಕೋಪಯೋಗಿ ಇಲಾಖೆಯ ನಿಯಮಗಳನುಸಾರ ನಿರ್ವಹಣೆ ಮಾಡಿಕೊಂಡು ರಸ್ತೆಯ ರೈಟ್ ಆಫ್ ವೇ ಅನ್ನು ನಿರ್ವಹಿಸಲು ಸಾಧ್ಯವಾಗದಿರುವ ಪ್ರಯುಕ್ತ ಮಹಾನಗರ ಪಾಲಿಕೆಗೆ ಸದರಿ ರಸ್ತೆಗಳನ್ನು ತಮ್ಮ ವ್ಯಾಪ್ತಿಯಲ್ಲಿ ಹಸ್ತಾಂತರಿಸುವಂತೆ ಕೋರಿರುವ ಪ್ರಯುಕ್ತ ಸದರಿ ರಸ್ತೆಗಳನ್ನು ಶಾಶ್ವತವಾಗಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲು ತೀರ್ಮಾನಿಸಿದೆ. ಆದ್ದರಿಂದ, ಈ ಕೆಳಗಿನಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಲೋಇ 164 ಸಿಆರ್ಎಂ 2017, ಬೆಂಗಳೂರು, ದಿನಾಂಕ: 23/03/2017.
ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಈ ಕೆಳಕಂಡ ನಾಲ್ಕು ರಾಜ್ಯ ಹೆದ್ದಾರಿಗಳನ್ನು ಶಾಶ್ವತವಾಗಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿ ಆದೇಶಿಸಿದೆ.
| ಕ್ರ. ಸಂ. | ರಸ್ತೆ ಹೆಸರು | ರಸ್ತೆಯ ಸರಪಳಿ | ರಸ್ತೆಯ ಉದ್ದ |
| 1. | ವ ುಂಗಳೂರು ಅತ್ರಾಡಿ ರಾಜ್ಯ ಹೆದ್ದಾರಿ ನಂ.67 | ಕಿ.ಮೀ. 0.00 ರಿಂದ 4.28 ಹಾಗೂ ಕಿ.ಮೀ. 5.38 ರಿಂದ 12.98 ರವರೆಗೆ | 11.88 ಕಿ.ಮೀ. |
| 2. | ಸ ೂರತ್ಕಲ್ ಕಬಕ ರಾಜ್ಯ ಹೆದ್ದಾರಿ ನಂ.101 | ಕಿ.ಮೀ. 0.00 ರಿಂದ 4.80 ರವರೆಗೆ | 4.80 ಕಿ.ಮೀ. |
| 3. | ಬ ಂಗಳೂರು – ಮಂಗಳೂರು ರಸ್ತೆ ೆ | ಕಿ.ಮೀ. 347.80 ರಿಂದ 349.02 ರವರೆಗೆ | 1.22 ಕಿ.ಮೀ. |
| 4. | ಬ ಳ ೆ ್ಮಣ್ ರಸ್ತೆಯಲ್ಲಿ ಮೇರಿಹಿಲ್ ಬೈಪಾಸ್ ರಸ್ತೆ | ಕಿ.ಮೀ. 0.00 ರಿಂದ 0.90 ರವರೆಗೆ | 0.90 ಕಿ.ಮೀ. |
| ಒಟ್ಟು | 18.80 ಕಿ.ಮೀ |
ಈ ಆದೇಶದನ್ವಯ ಸದರಿ ರಸ್ತೆಗಳಿಗೆ ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯಲ್ಲಿರುವ ಎಲ್ಲಾ ದಾಖಲೆ, ಅಂಕಿ ಅಂಶಗಳ ವಿವರಗಳನ್ನು ನಿಯಮಾನುಸಾರ ಮಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದೆ.
PR. 147
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಎಂ. ಗುರುಬಸಮ್ಮ ಸರ್ಕಾರದ ಅಧೀನ ಕಾರ್ಯದರ್ಶಿ ಲೋಕೋಪಯೋಗಿ, ಬಂದರುಗಳು ಹಾಗೂ ಒಳನಾಡು ಜಲಸಾರಿಗೆ ಇಲಾಖೆ. (ಸಂಪರ್ಕ)
ಕಂದಾಯ ಸಚಿವಾಲಯ
ವಿಷಯ:- ಕರ್ನಾಟಕ ಇನಾಂ ರದ್ದಿಯಾತಿ ಅಧಿನಿಯಮದನ್ವಯ ಧಾರ್ಮಿಕ ಸಂಸ್ಥೆಗಳಿಗೆ ನಿಗದಿಪಡಿಸಿರುವ ತಸ್ಥೀಕ್ ಮೊತ್ತವನ್ನು ಹೆಚ್ಚಿಸುವ ಕುರಿತು.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೯೪೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೮, ೨೦೧೭ ಭಾಗ ೧ಓದಲಾಗಿದೆ:- (1) ಸರ್ಕಾರದ ಆದೇಶ ಸಂಖ್ಯೆ:ಕಂಇ 03 ಮುತಬ 2006, ದಿನಾಂಕ: 29.06.2006
(2) ಸರ್ಕಾರದ ಆದೇಶ ಸಂಖ್ಯೆ:ಕಂಇ 04 ಮುತಬ 2010, ದಿನಾಂಕ: 14.09.2010 (3) ಸರ್ಕಾರದ ಆದೇಶ ಸಂಖ್ಯೆ:ಕಂಇ 10 ಮುತಬ 2012, ದಿನಾಂಕ: 21.06.2013 (4) ಸರ್ಕಾರದ ಆದೇಶ ಸಂಖ್ಯೆ:ಕಂಇ 02 ಮುತಬ 2011, ದಿನಾಂಕ: 25.08.2015 (5) ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಬೆಂಗಳೂರು ಇವರ ಪತ್ರ ಸಂಖ್ಯೆ:ಎಡಿಎಂ/02/ಐಎನ್ಎ/ ಸಿಆರ್/61/2016-17 ದಿನಾಂಕ:28.03.2017.
ಪ್ರಸ್ತಾವನೆ :-
ಮೇಲೆ ಓದಲಾದ (1)ರ ಆದೇಶದಲ್ಲಿ ಕರ್ನಾಟಕ (ಮತೀಯ ಮತ್ತು ಧರ್ಮಾರ್ಥ) ಇನಾಂ ರದ್ದಿಯಾತಿ ಅಧಿನಿಯಮ 1955 ಮತ್ತು ಕರ್ನಾಟಕ ಹಲವು ಇನಾಂ ರದ್ದಿಯಾತಿ ಅಧಿನಿಯಮ 1977 ರನ್ವಯ ದೇವಸ್ಥಾನಗಳು ಮತ್ತು ಇತರೆ ಧಾರ್ಮಿಕ ಸಂಸ್ಥೆಗಳು ಹೊಂದಿದ್ದ ಇನಾಂ ಜಮೀನುಗಳಿಗೆ ಪರಿಹಾರಾರ್ಥವಾಗಿ ತಸ್ಥೀಕ್ ಮೊತ್ತವನ್ನು ನಿಗದಿಪಡಿಸಿ ಪಾವತಿಸಲಾಗುತ್ತಿದ್ದು, ಅದರಂತೆ ವಾರ್ಷಿಕವಾಗಿ `.5,999/-ಗಳಿಗಿಂತ ಕಡಿಮೆ ತಸ್ಥೀಕ್ ನಿಗದಿಯಾಗಿರುವ ಸಂಸ್ಥೆಗಳಿಗೆ `.6,000/-ಕ್ಕೆ ಹೆಚ್ಚಿಸಲಾಗಿತ್ತು.
ನಂತರ, ಮೇಲೆ ಓದಲಾದ (2)ರ ಆದೇಶದಲ್ಲಿ ರಾಜ್ಯದಲ್ಲಿ ವಾರ್ಷಿಕವಾಗಿ `.6000/-ಗಳ ತಸ್ಥೀಕ್ ಮೊತ್ತ ಪಡೆಯುತ್ತಿರುವ ಧಾರ್ಮಿಕ ಮತ್ತು ಧರ್ಮಾದಾಯ ಸಂಸ್ಥೆಗಳಿಗೆ ತಸ್ಥೀಕ್ ಮೊತ್ತವನ್ನು 2010-11ನೇ ಸಾಲಿನಿಂದ ಜಾರಿಗೆ ಬರುವಂತೆ ವಾರ್ಷಿಕವಾಗಿ `.12,000/-ಕ್ಕೆ ಹೆಚ್ಚಿಸಿ ಆದೇಶಿಸಲಾಗಿತ್ತು. ಮುಂದುವರೆದು, ಮೇಲೆ ಓದಲಾದ (3)ರ ಆದೇಶದಲ್ಲಿ ರಾಜ್ಯದಲ್ಲಿ ಹಾಲಿ `.12,000/- ತಸ್ಥೀಕ್ ಹಣ ಪಡೆಯುತ್ತಿರುವ 26850 ಸಂಸ್ಥೆಗಳು ಹಾಗೂ `.12,000/-ದಿಂದ `.23,999/-ರವರೆಗೆ ತಸ್ಥೀಕ್ ಪಡೆಯುತ್ತಿರುವ 138 ಸಂಸ್ಥೆಗಳು ಸೇರಿದಂತೆ ಒಟ್ಟು 26988 ಸಂಸ್ಥೆಗಳಿಗೆ 2013-14ನೇ ಸಾಲಿನ ಆರ್ಥಿಕ ವರ್ಷದಿಂದ ಜಾರಿಗೆ ಬರುವಂತೆ ವಾರ್ಷಿಕವಾಗಿ `.24,000/-ಗಳಿಗೆ ಹೆಚ್ಚಿಸಿ ಆದೇಶಿಸಲಾಗಿತ್ತು.
ಮುಂದುವರೆದು, ಮೇಲೆ ಓದಲಾದ (4)ರ ಆದೇಶದಲ್ಲಿ ರಾಜ್ಯದಲ್ಲಿ `.24,000/-ರವರೆಗೆ ತಸ್ಥೀಕ್ ಪಡೆಯುತ್ತಿರುವ ಧಾರ್ಮಿಕ ಸಂಸ್ಥೆಗಳಿಗೆ 2015-16ನೇ ಸಾಲಿನ ಆರ್ಥಿಕ ವರ್ಷದಿಂದ ಜಾರಿಗೆ ಬರುವಂತೆ ವಾರ್ಷಿಕವಾಗಿ `.36,000/-ಗಳಿಗೆ ಹೆಚ್ಚಿಸಿ ಆದೇಶಿಸಲಾಗಿತ್ತು.
ಮೇಲೆ ಓದಲಾದ (5)ರ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯಲ್ಲಿ, ಇಂದಿನ ಮಾರುಕಟ್ಟೆ ಧಾರಣೆಗಳು ಬಹಳ ಅಧಿಕವಾಗಿದ್ದು, ದೇವಾಲಯಗಳಲ್ಲಿ ದೈನಂದಿನ ಪೂಜಾ ಕೈಂಕರ್ಯಗಳನ್ನು ನಡೆಸುವುದು ಕಷ್ಟ ಸಾಧ್ಯವಾಗಿರುವುದರಿಂದ ಮತ್ತು ರಾಜ್ಯಾದ್ಯಂತ ತಸ್ಥೀಕ್ ಮೊಬಲಗನ್ನು ಹೆಚ್ಚಿಸಲು ಬೇಡಿಕೆ ಇರುವುದರಿಂದ ಹಾಗೂ 2017-18ನೇ ಸಾಲಿನಿಂದ ಜಾರಿಗೆ ಬರುವಂತೆ ವಾರ್ಷಿಕವಾಗಿ ನೀಡಲಾಗುತ್ತಿರುವ ತಸ್ಥೀಕ್ ಮೊತ್ತವನ್ನು `.36,000/- ಗಳಿಂದ `.48.000/-ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸುವಂತೆ ಶಿಫಾರಸ್ಸು ಮಾಡಿರುತ್ತಾರೆ.
ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ: ಕಂಇ 04 ಮುತಬ 2017; ಬೆಂಗಳೂರು, ದಿನಾಂಕ: 12ನೇ ಏಪ್ರಿಲ್, 2017
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಧಾರ್ಮಿಕ ಸಂಸ್ಥೆಗಳಿಗೆ ಕರ್ನಾಟಕ ಇನಾಂ ರದ್ದಿಯಾತಿ ಅಧಿನಿಯಮದನ್ವಯ ನೀಡಲಾಗುತ್ತಿರುವ ತಸ್ಥೀಕ್ ಮೊತ್ತವನ್ನು 2017-18ನೇ ಸಾಲಿನ ಆರ್ಥಿಕ ವರ್ಷದಿಂದ ಜಾರಿಗೆ ಬರುವಂತೆ ವಾರ್ಷಿಕವಾಗಿ `.36,000/-ಗಳಿಂದ `.48,000/-ಗಳಿಗೆ (ನಲವತ್ತೆಂಟು ಸಾವಿರ ರೂಪಾಯಿಗಳು ಮಾತ್ರ) ಹೆಚ್ಚಿಸಿ ಆದೇಶಿಸಿದೆ.
ಷರತ್ತುಗಳು
(1) ಒಂದು ಧಾರ್ಮಿಕ ಸಂಸ್ಥೆಗೆ ವಿವಿಧ ಆದೇಶಗಳಲ್ಲಿ ತಸ್ಥೀಕ್ ಮೊತ್ತವನ್ನು ನಿಗದಿಪಡಿಸಿ ಆದೇಶಗಳನ್ನು ಹೊರಡಿಸಿದ್ದಲ್ಲಿ, ಪ್ರತಿಯೊಂದು ಆದೇಶದಲ್ಲಿ ನಿಗದಿಪಡಿಸಿರುವ ತಸ್ಥೀಕ್ ಮೊತ್ತವು ವಾರ್ಷಿಕವಾಗಿ `.48,000/- ಗಳನ್ನು ಮೀರತಕ್ಕದ್ದಲ್ಲ; (2) ಎಲ್ಲಾ ವಿವಿಧ ಆದೇಶಗಳಲ್ಲಿನ ಕ್ರೂಡೀಕೃತ ತಸ್ಥೀಕ್ ಮೊತ್ತ `.48,000/ಗಳಿಗೆ ಕಡಿಮೆ ಇದ್ದಲ್ಲಿ ಮಾತ್ರ `.48,000/-ಗಳಿಗೆ ತಸ್ಥೀಕ್ ಮೊತ್ತವನ್ನು ಹೆಚ್ಚಿಸುವ ಷರತ್ತಿಗೆ ಒಳಪಡಿಸಿದೆ.
ಸದರಿ ಮೊತ್ತವನ್ನು ಇನಾಂ ರದ್ದಿಯಾತಿ ಅಧಿನಿಯಮದ ಮೇರೆಗೆ ತಸ್ಥೀಕ್ ಮೊತ್ತ ಲೆಕ್ಕ ಶೀರ್ಷಿಕೆ "2075-00-101-1-01-(100) ಯೋಜನೇತರ" ಅಡಿಯಲ್ಲಿ 2017-18ನೇ ಸಾಲಿನ ಆಯವ್ಯಯದಲ್ಲಿ ಒದಗಿಸಿರುವ ಅನುದಾನದಲ್ಲಿ ಭರಿಸತಕ್ಕದ್ದು.
ಈ ಆದೇಶವನ್ನು ಆರ್ಥಿಕ ಇಲಾಖೆಯು ಟಿಪ್ಪಣಿ ಸಂಖ್ಯೆ:ಆಇ 282 ವೆಚ್ಚ-7 2017, ದಿನಾಂಕ:10.04.2017ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಿದೆ.
PR. 148
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC. 25
ಬಿ.ಎಸ್. ನಾಗರತ್ನಮ್ಮ,
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ. (ಮುಜರಾಯಿ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.