Servants of Knowledge
Karnataka Gazette · Government of Karnataka

Karnataka Gazette, Part Part-6, 08 June 2017

Published 08 June 2017

Part
Part-6
Identifier
in.gazette.karnataka_new.2017-06-08.Part-6
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಜೂನ್ ೮, ೨೦೧೭ (ಜ್ಯೇಷ್ಠ ೧೮, ಶಕ ವರ್ಷ ೧೯೩೯)

Bengaluru, Thursday, June 8, 2017 (Jyeishta 18, Shaka Varsha 1939)

ಸಂಪುಟ ೧೫೨

Volume 152

ಸಂಚಿಕೆ ೨೩

Issue 23

ಭಾಗ ೬

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,

ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ

ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಜಿಲ್ಲೆ, ಬೆಂಗಳೂರು

ಪ್ರಿಲಿಮಿನರಿ ಅಧಿಸೂಚನೆ

ಸಂಖ್ಯೆ:ಕೆ.ಎಸ್.ಎ/ಸಿಆರ್/36/2016-17, ದಿನಾಂಕ: 04/08-03-2017.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಜಯನಗರ ವಾರ್ಡ್ ನಂ.153ರ ಗುಂಡಪ್ಪ ಕಾಲೋನಿ ಕೊಳಚೆ ಪ್ರದೇಶದ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಪ್ರದೇಶದಲ್ಲಿ 200 ಕುಟುಂಬಗಳು ವಾಸವಾಗಿದ್ದು, ಸದರಿ ಪ್ರದೇಶವು ಮನುಷ್ಯ ವಾಸ ಮಾಡಲು ಯೋಗ್ಯವಲ್ಲದ ಹಾಗೂ ಅನಾರೋಗ್ಯಕರ ಪರಿಸ್ಥಿತಿಯಲ್ಲಿರುತ್ತದೆ, ಕುಡಿಯುವ ನೀರು, ಬೀದಿ ದೀಪ, ಶೌಚಾಲಯ ಮುಂತಾದ ಮೂಲಸೌಲಭ್ಯ ಹಾಗೂ ಪುನರ್-ವಸತಿ ಕಲ್ಪಿಸುವ ಅಗತ್ಯವಿರುವುದರಿಂದ ಈ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973ರ ಸೆಕ್ಷನ್ 3ರ ಅಡಿಯಲ್ಲಿ ಕೊಳಚೆ ಪ್ರದೇಶವೆಂದು ಘೋಷಿಸಲು ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಇವರಿಂದ ಪತ್ರ ಸಂಖ್ಯೆ:ಕಕೊಅಮ/ಕಂ-1/ ಆರ್-1/25/2016-17, ದಿನಾಂಕ: 14-02-2017ರಂತೆ ಪ್ರಸ್ತಾವನೆ ಸಲ್ಲಿಸಲ್ಪಟ್ಟಿರುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) ಕಾಯ್ದೆ 1973ರ ಸೆಕ್ಷನ್ 3ರ ಅಡಿ ಕೊಳಚೆ ಪ್ರದೇಶವೆಂದು ಘೋಷಿಸಿರುವುದು ಅವಶ್ಯವೆಂದು ಕಂಡುಬಂದಿರುತ್ತದೆ.

ಏತನ್ಮಧ್ಯೆ ಸರ್ಕಾರದ ಸುತ್ತೋಲೆ ಸಂಖ್ಯೆ:71/ಕೋಮಂಇ/2009, ದಿನಾಂಕ: 24-02-2010ರಲ್ಲಿ ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) ಕಾಯ್ದೆ 1973ರ ಸೆಕ್ಷನ್ 3 ಮತ್ತು 11 ರಡಿಯಲ್ಲಿ ಜಿಲ್ಲಾಧಿಕಾರಿಗಳು, ಕೊಳಚೆ ಪ್ರದೇಶಗಳನ್ನು ಕೊಳಚೆ ಪ್ರದೇಶವೆಂದು ಘೋಷಿಸಿ ಅಧಿಸೂಚನೆ ಹೊರಡಿಸುವ ಮುನ್ನ ವಸತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರ ಅನುಮೋದನೆ ಪಡೆಯತಕ್ಕದ್ದೆಂದು ಸೂಚನೆಯಿದ್ದು, ಆ ಪ್ರಕಾರವಾಗಿ ಕೊಳಚೆ ಪ್ರದೇಶಗಳೆಂದು ಘೋಷಣೆ ಮಾಡಬೇಕಾದ ಪ್ರಸ್ತಾವನೆಗಳನ್ನು ಈ ಕಛೇರಿಯಿಂದ ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗುತ್ತಿದ್ದು, ತದನಂತರದಲ್ಲಿ ಸರ್ಕಾರದ ಪತ್ರ ಸಂಖ್ಯೆ:ವಇ/71/ಕೊಮಂಇ/2009, ದಿನಾಂಕ: 12-07-2010ರ ಪತ್ರದಲ್ಲಿ ಕೊಳಚೆ ಪ್ರದೇಶಗಳೆಂದು ಘೋಷಿಸುವ ಬಗ್ಗೆ ಇನ್ನು ಮುಂದೆ ಸರ್ಕಾರದ ಪೂರ್ವಾನುಮೋದನೆ ಕೋರಿ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸುವ ಬದಲು ದಿನಾಂಕ: 02-07-2010ರಲ್ಲಿನ ಸೂಚನೆಯಂತೆ ಮತ್ತು ಹಾಲಿ ಅಸ್ತಿತ್ವದಲ್ಲಿರುವ ನಿಯಮಗಳಡಿಯ ಕಾರ್ಯವಿಧಾನವನ್ನು ಅನುಸರಿಸಿದಂತೆ ಕ್ರಮವಹಿಸಿ, ಅಧಿಸೂಚನೆ ಸಂಖ್ಯೆ:ವಇ/73/ಕೊಮಂಇ/2001, ದಿನಾಂಕ: 26-06-2002ರಲ್ಲಿ ಜಿಲ್ಲಾಧಿಕಾರಿಗಳಿಗೆ ಪ್ರದತ್ತ ಮಾಡಲಾಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಘೋಷಣೆಗೆ ಕ್ರಮವಹಿಸುವುದು ಎಂದು ಸರ್ಕಾರದಿಂದ ನಿರ್ದೇಶನ ನೀಡಲಾಗಿದೆ.

ಆದ್ದರಿಂದ, ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) ಕಾಯ್ದೆ 1973ರ ಸೆಕ್ಷನ್ 3ರ ಅಡಿ ಜಿಲ್ಲಾಧಿಕಾರಿಗಳಿಗೆ ದತ್ತವಾಗಿರುವ ಅಧಿಕಾರದಂತೆ "ಕೊಳಚೆ ಪ್ರದೇಶ"ವೆಂದು ಘೋಷಿಸಲು ಉದ್ದೇಶಿಸಲಾಗಿದೆ.

ಮೇಲ್ಕಂಡ ಈ ಕ್ರಮದ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಶೇಷಾದ್ರಿಪುರ, ಬೆಂಗಳೂರು-560 020 ರವರಿಗೆ ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ 15 (ಹದಿನೈದು) ದಿವಸಗಳ ಕಾಲಾವಕಾಶ ನೀಡಲಾಗಿದೆ. ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

(೨೦೧)೨೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೮, ೨೦೧೭ ಭಾಗ ೬

ಷೆಡ್ಯೂಲ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಜಯನಗರ ವಾರ್ಡ್ ನಂ.153ರ ಗುಂಡಪ್ಪ ಕಾಲೋನಿ ಕೊಳಚೆ

ಕ್ರ. ಸ ಂ. ಕೊಳಚೆ ಪ್ರದೇಶದ ಹ ಸ ೆ ರು ಮತ್ತು ಸ್ಥಳ ವ iಾಲೀಕರ ಹ ಸ ೆ ರು ಗ್ರಾಮ/ ಸ ವ ರ್ ನಂ. ೆ ವಿಸ್ತೀರ್ಣ ಚ ಕ್ಕುಬಂದಿಗಳು
ಪ ೂರ್ವ ಪ ಶ್ಚಿಮ ಉತ್ತರ ದ ಕ್ಷಿಣ
1 ಗುಂಡಪ್ಪ ಕಾಲೋನಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ [NIMHANS] ಜಯನಗರ 1 ವ ುತ್ತು 2ನೇ ಬ್ಲಾಕ್, ಸಿಟಿಎಸ್ ನಂ.1516 4724 ಚ .ಮೀ. ಸಿಟಿಎಸ್ ನಂ.1516ರ ಉಳಿಕೆ ಸಿಟಿಎಸ್ ನಂ.1516/1 ಸಿಟಿಎಸ್ ನಂ.1516ರ ಉಳಿಕೆ ಲಾ ಸಿಟಿಎಸ್ ನಂ.1515

ವಿ.ಶಂಕರ್

ಜಿಲ್ಲಾಧಿಕಾರಿಗಳು, P.R. 26 SC-50

ಬೆಂಗಳೂರು ಜಿಲ್ಲೆ, ಬೆಂಗಳೂರು.

ನಗರಸಭಾ ಕಾರ್ಯಾಲಯ, ದೊಡ್ಡಬಳ್ಳಾಪುರ

ಅಧಿಸೂಚನೆ

ಕ್ರ.ಸಂ.ನಸದೊ/ಸಾ.ಸ/03/2015-16, ದಿನಾಂಕ: 16-05-2017.

ಸಾಮಾನ್ಯ ಸಭೆ ನಡವಳಿ

ದಿನಾಂಕ:19/11/2015ರಂದು ಗುರುವಾರ ಬೆಳಿಗ್ಗೆ 11.00ಗಂಟೆಗೆ ನಗರಸಭೆಯ ಸಭಾಂಗಣದಲ್ಲಿ ಮಾನ್ಯ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಶಂಷುನ್ನೀಸಾರವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯನ್ನು ಕರೆಯಲಾಗಿದ್ದು, ಈ ಸಭೆಯಲ್ಲಿ ಸಮಯದ ಅಭಾವದಿಂದ ಚರ್ಚೆಯಾಗದೆ ಉಳಿದ ವಿಷಯಗಳ ಬಗ್ಗೆ ದಿನಾಂಕ:06-01-2016ರಂದು ಬುಧವಾರ ಬೆಳಿಗ್ಗೆ 11.00ಗಂಟೆಗೆ ನಗರಸಭೆಯ ಸಭಾಂಗಣದಲ್ಲಿ ಮಾನ್ಯ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಶಂಷುನ್ನೀಸಾರವರ ಅಧ್ಯಕ್ಷತೆಯಲ್ಲಿ ಮುಂದುವರೆದ ಸಾಮಾನ್ಯ ಸಭೆಯ ನಡವಳಿಗಳು:-

ಸಭೆಯಲ್ಲಿ ಹಾಜರಿದ್ದ ಸದಸ್ಯರುಗಳ ವಿವರ:

ವ iಾನ್ಯ ಸದಸ್ಯರುಗಳು ಹಾಜರಿ ಗೈರು ಹಾಜರಿ ಒಟ್ಟು
25 6 31
ನಾಮ ನಿರ್ದೇಶನ ಸದಸ್ಯರುಗಳು 4 1 05

ವಿಷಯ ಸಂಖ್ಯೆ: 32

ದಿನಾಂಕ:16/06/2003ರಂತೆ ಕರ್ನಾಟಕ ಪೌರಸಭೆಗಳ (ತಿದ್ದುಪಡಿ) ಆಧ್ಯಾದೇಶ ಅನ್ವಯ ಸಕ್ಷನ್ 94(1-ಎ)ರಲ್ಲಿ ವಿನಾಯಿತಿ ನೀಡಲಾಗಿದ್ದು, ವಿನಾಯಿತಿ ಪಡೆದ ಆಸ್ತಿಗಳಿಗೆ ನಾಗರಿಕ ಸೌಲಭ್ಯ ಒದಗಿಸುತ್ತಿರುವುದಕ್ಕಾಗಿ ಸೆಕ್ಷನ್ 94(2)ರ ಅನ್ವಯ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಸೇವಾ ಶುಲ್ಕ ದರ ನಿಗಧಿಪಡಿಸುವ ವಿಚಾರ.

ತೀರ್ಮಾನ ಸಂಖ್ಯೆ: 32

ವಿಷಯವನ್ನು ಸುಧೀರ್ಘವಾಗಿ ಚರ್ಚಿಸಿ ನಗರದಲ್ಲಿ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳು ನಗರಸಭೆಗೆ ತೆರಿಗೆ ಪಾವತಿಸದೇ ಇರುವುದನ್ನು ಚರ್ಚಿಸಿ ನಗರದ ಎಲ್ಲಾ ಖಾಸಗಿ ಶಾಲೆಗಳಿಂದ 2002-03 ರಿಂದ ಅಂದರೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿ ಆದ ವರ್ಷದಿಂದ ಶೇ.30ರಷ್ಟು ಸೇವಾಶುಲ್ಕ ವಸೂಲಿ ಮಾಡಲು ಸಭೆಯು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

P.D. 27

ಪೌರಾಯುಕ್ತರು,

SC-10

ನಗರಸಭೆ, ದೊಡ್ಡಬಳ್ಳಾಪುರ.

ಭಾಗ ೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೮, ೨೦೧೭ ೨೦೩

ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಕಲಂ 133 ರೀತ್ಯಾ

ಸರ್ಕಾರದ ಸುತ್ತೋಲೆ ಸಂಖ್ಯೆ: 17403 ಡಿಎಂಎ31 COTH 2016-17, ದಿನಾಂಕ:17.12.2016

ದಿನಾಂಕ:31.01.2017ರಂದು ನಡೆದ ಸ್ಥಾಯಿ ಸಮಿತಿ ಅಧ್ಯಕ್ಷರ ಸಭೆಯ ವಿಷಯ ಸಂಖ್ಯೆ: 01ರ ತೀರ್ಮಾನ

ದಿನಾಂಕ: 15.02.2017ರಂದು ನಡದ ಸಾಮಾನ್ಯ ಸಭೆಯ ನಿರ್ಣಯದಂತೆ

ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಜಾಹಿರಾತು ಶುಲ್ಕವನ್ನು ಚದುರ ಅಡಿಗಳಿಗೆ ನಿಗಧಿಪಡಿಸಲಾಗಿರುತ್ತದೆ.

ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಕಲಂ 133 ರಲ್ಲಿ ನಮೂದಿಸಿರುವಂತೆ ಯಾವುದೇ ಜಾಹಿರಾತನ್ನು ಮುನ್ಸಿಪಲ್ ಕೌನ್ಸಿಲ್ 94ನೇ ಪ್ರಕರಣದ ಮೇರೆಗೆ ತೆರಿಗೆ ವಿಧಿಸುವಿಕೆಯನ್ನು ನಿರ್ಧರಿಸಿದ ತರುವಾಯ ಯಾವುದೇ ಭೂಮಿ, ಕಟ್ಟಡ ಗೋಡೆ, ಪ್ರಕಟನಾ ಫಲಕ, ಚೌಕಟ್ಟು, ಸ್ತಂಭ ಅಥವಾ ರಚನೆಯ ಮೇಲ್ಬಾಗದಲ್ಲಿ ಅಥವಾ ಯಾವುದೇ ವಾಹನದ ಮೇಲೆ ಅಥವಾ ಅಲ್ಲಿ ಪ್ರದರ್ಶಿಸತಕ್ಕುದಲ್ಲ. ನಿಲ್ಲಿಸತಕ್ಕದಲ್ಲ ಜೋಡಿಸತಕ್ಕದಲ್ಲ ಅಥವಾ ಉಳಿಸಿಕೊಳ್ಳತಕ್ಕದಲ್ಲ ಅಥವಾ ಈ ಅಧಿನಿಯಮದ ಮೇರೆಗೆ ರಚಿಸಿದ ಉಪವಿಧಿಗಳಿಗನುಸಾರವಾಗಿ ಕೊಟ್ಟ ಮುನ್ಸಿಪಲ್ ಕೌನ್ಸಿಲಿನ ಬರಹದಲ್ಲಿನ ಅನುಮತಿಯಿಲ್ಲದೆ [ಪೌರಸಭಾ ಪ್ರದೇಶದೊಳಗೆ] ಯಾವುದೇ ಸ್ಥಳದಲ್ಲಿ, ಯಾವ ರೀತಿಯಲ್ಲಿಯೇ ಆಗಲಿ ಪ್ರದರ್ಶಿಸತಕ್ಕದಲ್ಲ ಎಂದು ನಮೂದಾಗಿರುತ್ತದೆ.

ಸರ್ಕಾರದ ಸುತ್ತೋಲೆ ಸಂಖ್ಯೆ:17403 ಡಿಎಂಎ31 COTH 2016-17 ದಿನಾಂಕ:17.12.2016ರಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಜಾಹೀರಾತುಗಳ ಬಗ್ಗೆ ಸರ್ವೆ ಕಾರ್ಯ ಕೈಗೊಂಡ ಬೇಡಿಕೆ ವಹಿಯನ್ನು ನಿರ್ವಹಿಸಿ ಜಾಹೀರಾತು ಶುಲ್ಕವನ್ನು ವಸೂಲಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿರುತ್ತದೆ.

ದಿನಾಂಕ:31.01.2017ರಂದು ನಡೆದ ಸ್ಥಾಯಿ ಸಮಿತಿ ಅಧ್ಯಕ್ಷರ ಸಭೆಯ ವಿಷಯ ಸಂಖ್ಯೆ:01ರಲ್ಲಿ ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ಜಾಹೀರಾತು ವೆಚ್ಚವನ್ನು ಪ್ರತಿ ಚದುರ ಅಡಿಗೆ ದರವನ್ನು ನಿಗಧಿಪಡಿಸಲಾಗಿರುತ್ತದೆ. ಅದರ ಮಾಹಿತಿಯು ಈ ಕೆಳಕಂಡಂತೆ ನಮೂದಿಸಿರುತ್ತದೆ.

ಕ್ರ ಸ ಂ ಬಳಕೆಯ ಪ್ರಕಾರ ವಿಸ್ತೀರ್ಣ ನಿಗಧಿಪಡಿಸಿರುವ ದರಗಳು (ರೂ.ಗಳು)
01 ವಾಣಿಜ್ಯ ಕಟ್ಟಡಗಳ ಮೇಲೆ ನಿರ್ಮಿಸಿಕೊಂಡಿರುವ ಬೋರ್ಡ್ ಅಥವಾ ಪ ೕಕ್ಸ್‌ಗಳಿಗೆ ್ಲ ೆ ಒಂದು ಚದುರ ಅಡಿಗೆ `.15=00
02 ವ ುಳಿಗೆಗಳಲ್ಲಿನ ವ್ಯಾಪಾರದ ಉದ್ದೇಶಕ್ಕಾಗಿ ಬಾರ್, ಹೋಟೆಲ್, ಅಂಗಡಿ, ಲಾಡ್ಜ್ ಇತರೆ ವರ್ಗದ ಉದ್ದಿಮೆಗಳ ಮುಂದೆ ಹಾಕಲಾದ ಜಾಹಿರಾತು ಹಾಗೂ ಉದ್ದಿಮೆಗೆ ಸ ಂಬಂಧಿಸಿದಂತೆ ಹಾಕಲಾದ ಕಂಪನಿಗಳ ಜಾಹಿರಾತುಗಳ ಫಲಕಗಳಲ್ಲಿನವುಗಳಿಗೆ ಮಾತ್ರ ಒಂದು ಚದುರ ಅಡಿಗೆ `.10=00
03 ರಾಜಕೀಯ ಸಭೆ/ಕಾರ್ಯಕ್ರಮಗಳಿಗೆ ಒಂದು ಚದುರ ಅಡಿಗೆ `.02=00

ಮೇಲ್ಕಂಡಂತೆ ನಿಗಧಿಪಡಿಸಲಾದ ದರಪಟ್ಟಿಯನ್ನು ದಿನಾಂಕ: 15.02.2017ರಂದು ನಡೆದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿ ತೀರ್ಮಾನಿಸಲಾಗಿರುತ್ತದೆ.

ಮೇಲ್ಕಂಡ ಸರ್ಕಾರದ ಆದೇಶ/ ಸುತ್ತೋಲೆಗಳು ಹಾಗೂ ಸಭಾ ನಡಾವಳಿಯಂತೆ ನಿಗಧಿಪಡಿಸಿರುವ ದರಪಟ್ಟಿಯಲ್ಲಿ ಯಾವುದಾದರೂ ಆಕ್ಷೇಪಣೆಗಳಿದ್ದರೆ ಸಾರ್ವಜನಿಕರು/ಉದ್ದಿಮೆದಾರರು ಬಿಡದಿ ಪುರಸಭಾ ಕಾರ್ಯಲಯದ ಕಂದಾಯ ಶಾಖೆಗೆ ಕಛೇರಿ ಸಮಯದಲ್ಲಿ ಸಲ್ಲಿಸತಕ್ಕದ್ದು ಎಂದು ಸಾರ್ವಜನಿಕ ಆಕ್ಷೇಪಣೆಗಾಗಿ 15 ದಿನಗಳ ಕಾಲಾವಕಾಶ ನೀಡಿ ಸಾರ್ವಜನಿಕ ಪ್ರಕಟಣೆಯನ್ನು ದಿನಾಂಕ:07.06.2017ರಂದು ಸ್ಥಳೀಯ ಒಡೆಯರ್ ಪತ್ರಿಕೆಯಲ್ಲಿ ಮತ್ತು ಜಿಲ್ಲಾ ಪತ್ರಿಕೆಯಾದ ರಾಮನಗರ ನ್ಯೂಸ್ ದಿನಪತ್ರಿಕೆಯಲ್ಲಿ ಒಂದು ದಿನದ ಮಟ್ಟಿಗೆ ಪ್ರಚುರಪಡಿಸಲಾಗಿರುತ್ತದೆ. ನಿಗಧಿತ ಅವಧಿಯ ಒಳಗೆ ಯಾವುದೇ ಆಕ್ಷೇಪಣೆಗಳು ಸ್ವೀಕರಿಸದ ಕಾರಣ ಅಂತಿಮ ಕರಡು ಪ್ರತಿಯನ್ನು ಕರ್ನಾಟಕ ರಾಜ್ಯ ಪತ್ರಿಕೆಯಲ್ಲಿ ಪ್ರಚುರಪಡಿಸಲಾಗಿದೆ.

P.D. 28 ಅಧ್ಯಕ್ಷರು ಉಪಾಧ್ಯಕ್ಷರು ಸ್ಥಾಯಿ ಸಮಿತಿ ಅಧ್ಯಕ್ಷರು ಮುಖ್ಯಾಧಿಕಾರಿ

SC-50 ಪುರಸಭೆ, ಬಿಡದಿ ಪುರಸಭೆ, ಬಿಡದಿ ಪುರಸಭೆ, ಬಿಡದಿ ಪುರಸಭೆ, ಬಿಡದಿ೨೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೮, ೨೦೧೭ ಭಾಗ ೬

ಸರ್ಕಾರದ ಸುತ್ತೋಲೆ ಸಂಖ್ಯೆ: ಪೌನಿ/ಎಂ.ಆರ್.ಸಿ/ಸಿ.ಆರ್-201/ 2009-10 ದಿನಾಂಕ: 25.01.2017

ದಿನಾಂಕ:15.02.2017ರಂದು ನಡೆದ ಕೌನ್ಸಿಲ್ ಸಾಮಾನ್ಯ ಸಭೆಯ ತೀರ್ಮಾನದಂತೆ.

ಮೇಲ್ಕಂಡ ಸರ್ಕಾರದ ಸುತ್ತೋಲೆ ಸಂಖ್ಯೆ:ಪೌನಿ/ಎಂ.ಆರ್.ಸಿ/ಸಿ.ಆರ್/201/2009-10, ದಿನಾಂಕ:25-01-2017 ರಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೀರು ಸರಬರಾಜು ನಿರ್ವಹಣೆ ಮತ್ತು ದುರಸ್ಥಿಯ ವೆಚ್ಚಗಳ ನಿರ್ವಹಣೆ ಸಂಬಂಧಪಟ್ಟಂತೆ ನೀರಿನ ದರವನ್ನು ಪರಿಷ್ಕರಿಸಿ ನಿಗಧಿಗೊಳಿಸುವಂತೆ ಸೂಚಿಸಲಾಗಿರುತ್ತದೆ.

ಸರ್ಕಾರದ ಸುತ್ತೋಲೆ ರೀತ್ಯಾ ಬಿಡದಿ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಹಾಗೂ ದಿನಾಂಕ: 15-02-2017ರಂದು ನಡೆದ ಸಾಮಾನ್ಯ ಸಭೆಯ ತೀರ್ಮಾನದಂತೆ ಬಿಡದಿ ಪುರಸಭೆಯ ವಾರ್ಷಿಕ ನೀರು ಸರಬರಾಜು ಮತ್ತು ನಿರ್ವಹಣೆ ತಗಲುವ ವೆಚ್ಚದ ಆಧಾರದ ಮೇರೆಗೆ 2017-18ನೇ ಸಾಲಿನಿಂದ 2019-20ನೇ ಸಾಲಿನವರೆವಿಗೂ ಪ್ರತಿ ತಿಂಗಳಿಗೆ ಬಳಕೆದಾರರ ವರ್ಗಕ್ಕೆ ಸಂಬಂಧಿಸಿದಂತೆ ದರಗಳನ್ನು ಪರಿಷ್ಕರಿಸಲಾಗಿರುತ್ತದೆ. ಅದರ ಮಾಹಿತಿಯು ಈ ಕೆಳಕಂಡಂತೆ ನಮೂದಿಸಿರುತ್ತದೆ.

ಕ್ರ ಸಂ ಬಳಕೆದಾರರ ವರ್ಗ ಹ ಳೆಯ ದರ (ರೂಗಳಲ್ಲಿ) ಪ ರಿಷ್ಕøತ ದರ (ರೂಗಳಲ್ಲಿ)
1 ಗೃಹ ಬಳಕೆ 80=00 100=00
2 ಗೃಹೇತರ ಬಳಕೆ 160=00 200=00
3 ವಾಣಿಜ್ಯ/ಕೈಗಾರಿಕೆ 320=00 350=00

ಮೇಲ್ಕಂಡಂತೆ ಪರಿಷ್ಕರಿಸಿರುವ ದರಗಳ ಬಗ್ಗೆ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ಬಿಡದಿ ಪುರಸಭೆಯ ಕಂದಾಯ ಶಾಖೆಗೆ ಕಛೇರಿ ಕೆಲಸದ ವೇಳೆಯಲ್ಲಿ ಸಲ್ಲಿಸತಕ್ಕದ್ದು ಎಂದು 15 ದಿನಗಳ ಕಾಲಾವಕಾಶ ನೀಡಿ ದಿನಾಂಕ: 01.03.2017ರಂದು ಒಡೆಯರ್ ಸ್ಥಳೀಯ ದಿನ ಪತ್ರಿಕೆಯಲ್ಲಿ ಪ್ರಚುರಪಡಿಸಲಾಯಿತು. ಹಾಗೂ ಈ ಬಿಡದಿ ಪುರಸಭೆ ಕಛೇರಿಯ ಪತ್ರದ ಸಂಖ್ಯೆ: ಪು.ಕಾ/ಬಿಡದಿ/ಕಂ.ಅ/ಸಿ.ಆರ್/02/2016-17, ದಿನಾಂಕ: 16-03-2017 ರೀತ್ಯಾ ಸಾರ್ವಜನಿಕರಿಂದ ಆಕ್ಷೇಪಣೆಗಾಗಿ ಮತ್ತೋಮ್ಮೆ 07 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ನಿಗಧಿತ ಆವಧಿಯಲ್ಲಿ ಯಾವುದೇ ಆಕ್ಷೇಪಣೆಗಳು ಬಾರದ ಕಾರಣ 2017-18ನೇ ಸಾಲಿನಿಂದ 2019-20ರ ಸಾಲಿನವರೆವಿಗೂ ಮೇಲಿನ ನಮೂದಿತ ಪರಿಷ್ಕøತ ದರಗಳನ್ನು ನಿಗಧಿಗೊಳಿಸಲಾಗಿದ್ದು, ಕರ್ನಾಟಕ ರಾಜ್ಯ ಪತ್ರಿಕೆಯಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿರುತ್ತದೆ.

P.D. 29 ಅಧ್ಯಕ್ಷರು ಉಪಾಧ್ಯಕ್ಷರು ಸ್ಥಾಯಿ ಸಮಿತಿ ಅಧ್ಯಕ್ಷರು ಮುಖ್ಯಾಧಿಕಾರಿ

SC-50 ಪುರಸಭೆ, ಬಿಡದಿ ಪುರಸಭೆ, ಬಿಡದಿ ಪುರಸಭೆ, ಬಿಡದಿ ಪುರಸಭೆ, ಬಿಡದಿ

ವಸತಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ:ವಇ 154 ಕೊಮಂಇ 2016, ಬೆಂಗಳೂರು, ದಿನಾಂಕ:30.05.2017.

ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ನಗರದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ರಾಮಣ್ಣ ಡಿಸೋಜಾó ಗಾರ್ಡನ್ ಕೊಳಚೆ ಪ್ರದೇಶವನ್ನು ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಇವರು ಅಧಿಸೂಚನೆ ಸಂಖ್ಯೆ: KSA/CR/28/87-88, ದಿನಾಂಕ:21.03.1989ರಲ್ಲಿ ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಅಧಿನಿಯಮ, 1973 (1974ರ ಕರ್ನಾಟಕ ಕಾಯ್ದೆ, 33ರಂತೆ) ಕಲಂ-3ರನ್ವಯ ಕೊಳಚೆ ಪ್ರದೇಶವೆಂದು ಘೋಷಿಸಿರುತ್ತಾರೆ.

ಸದರಿ ಕೊಳಚೆ ಪ್ರದೇಶವನ್ನು ಅಭಿವೃದ್ಧಿಗೊಳಿಸಿ, ಅಲ್ಲಿ ವಾಸಿಸುವ ಕೊಳಚೆ ನಿವಾಸಿಗಳಿಗೆ ಪುರ್ನವಸತಿ ಕಲ್ಪಿಸಲು ಸರ್ಕಾರವು ಉದ್ದೇಶಿಸಿದ್ದು, ಅದಕ್ಕಾಗಿ ಸದರಿ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ(ಅಭಿವೃದ್ಧಿ ಮತ್ತು ನಿರ್ಮೂಲನೆ) ಅಧಿನಿಯಮ, 1973ರ ಕಲಂ-17 ರಂತೆ ಭೂ-ಸ್ವಾಧೀನ ಪಡಿಸಿಕೊಳ್ಳುವುದು ಅವಶ್ಯಕವಾಗಿದೆ. ಆದ್ದರಿಂದ ಸದರಿ ಪ್ರದೇಶದ ಬಗ್ಗೆ ಆಸಕ್ತಿಯುಳ್ಳವರು/ಸಂಬಂಧಿಸಿದವರು/ಸಾರ್ವಜನಿಕರು ಭೂ-ಸ್ವಾಧೀನ ಮಾಡಬಾರದೆಂಬುದಕ್ಕೆ ಕಾರಣ/ಆಕ್ಷೇಪಣೆ/ಸಲಹೆ ಹಾಗೂ ಮನವಿಗಳಿದ್ದಲ್ಲಿ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವಸತಿ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧ, ಬೆಂಗಳೂರು-01 ಅವರಿಗೆ ಲಿಖಿತ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಕೋರಿ ದಿನಾಂಕ:21.04.2017ರ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಾಥಮಿಕ ಅಧಿಸೂಚನೆಯನ್ನು ಪ್ರಕಟಿಸಲಾಗಿತ್ತು.

ಆದರೆ ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು/ಮನವಿಗಳು ಸ್ವೀಕೃತವಾಗದ ಕಾರಣ ಸದರಿ ಪ್ರದೇಶವನ್ನು ಅಭಿವೃದ್ಧಿಪಡಿಸಲು ಹಾಗೂ ಆ ಪ್ರದೇಶದಲ್ಲಿ ಕೊಳಚೆ ನಿವಾಸಿಗಳಿಗೆ ಪುನರ್‌ವಸತಿ ಕಲ್ಪಿಸಲು, ಷೆಡ್ಯೂಲ್‌ನಲ್ಲಿ ತಿಳಿಸಿರುವ ಕೊಳಚೆ ಪ್ರದೇಶವನ್ನು ಭೂ-ಸ್ವಾಧೀನಪಡಿಸಿಕೊಳ್ಳಲು ಸರ್ಕಾರವು ತೀರ್ಮಾನಿಸಿದೆ. ಅದರಂತೆ, ಕರ್ನಾಟಕ ಕೊಳಚೆ ಪ್ರದೇಶಗಳ(ಅಭಿವೃದ್ಧಿ ಮತ್ತು ನಿರ್ಮೂಲನೆ) ಅಧಿನಿಯಮ, 1973ರ ಕಲಂ 17ರನ್ವಯ ಷೆಡ್ಯೂಲ್‌ನಲ್ಲಿ ತಿಳಿಸಿರುವ ಜಮೀನನ್ನು ಅಂತಿಮವಾಗಿ ಭೂ-ಸ್ವಾಧೀನಪಡಿಸಿಕೊಳ್ಳಲು ಆದೇಶಿಸಿದೆ.

ಭಾಗ ೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೮, ೨೦೧೭ ೨೦೫

ಷೆಡ್ಯೂಲ್

ಕ ೂಳಚೆ ೆ ಪ್ರದೇಶದ ಹೆಸರು ಕ ಮ ್ರ ಸ ಂಖ್ಯೆ ಸಿಟಿ ಸ ರ್ವೆ ನ ಂ. ಬ ೂಮಾಲೀಕರ ಹೆಸರು ಶಿ ೕ/ ಶ್ರೀಮತಿ ್ರ ವಿಸ್ತೀರ್ಣ (ಚ.ಮೀ.) ಒಟ್ಟು ಚ ಕ ೆ ು್ಕಬಂದಿ (ಸರ್ವೆ ನಂ)
(ಪೂರ್ವ) (ಪಶ್ಚಿಮ) (ಉತ್ತರ) (ದಕ್ಷಿಣ)
ರಾಮಣ್ಣ ಡಿಸೋಜಾó ಗಾರ್ಡನ್ 1 1659 - 5059.30 ಲಾ.ಸಿ.ಟಿ.ಎಸ್. ನಂ. 1658, 1687 ಮತ್ತು 1659ರ ಉಳಿಕೆ ಜಾಗ ಲಾ.ಸಿ.ಟಿ.ಎಸ್. ನಂ. 1653, 1697 ಮತ್ತು 1659ರ ಉಳಿಕೆ ಜಾಗ ಲಾ.ಸಿ.ಟಿ.ಎಸ್. ನಂ. 1654, 1655, 1657 ವ ುತ್ತು ಗಲ್ಲಿ ರ ಸ್ತೆ ಲಾ.ಸಿ.ಟಿ.ಎಸ್. ನಂ. 1704, 1705, 1706, 1707, 1708, 1709 ಮತ್ತು 1710
2 1660 -
3 1688 ವಿ.ಪಾಪಣ್ಣ
4 1689 ರ ುಕಿಯ ಬೇಗಂ ಕೋಂ ಎಂ.ಸೈಯದ್ ಯಾಕೂಬ್
5 1690 ವಿ.ಎ. ಫಾತೀಮ ಬೇಗಂ
6 1691 ಎಲ್.ಮಹಮದ್ ಯೂಸುಫ್
7 1692 -
8 1693 ವಿ.ಎ. ಫಾತೀಮ ಬೇಗಂ
9 1694 ಎಸ್.ನಾರಾಯಣಪ್ಪ (ವಿಚಾರಣಾ ವಹಿಯಂತೆ)
10 1695 ಎ. ರಾಮಣ್ಣ (ವಿಚಾರಣಾ ವಹಿಯಂತೆ)
11 1696 -

* ಸಿ.ಟಿ.ಎಸ್. ನಂ. 1659, 1660, 1692 ಮತ್ತು 1696ರ ಮಾಲೀಕತ್ವದ ದಾಖಲೆಯಾದ ಪಿ.ಆರ್. ಕಾರ್ಡ್ ನಕಲುಗಳನ್ನು ವಿತರಿಸಲು ರಹಾ ಇರುವುದಿಲ್ಲ ಎಂದು ನಗರಮಾಪನ ತಂಡ-03 ಅವರು ಹಿಂಬರಹ ನೀಡಿರುವುದರಿಂದ ಸದರಿ ಸಿ.ಟಿ.ಎಸ್. ನಂಬರ್‌ಗಳ ಮಾಲಿಕತ್ವದ ವಿವರ ಲಭ್ಯವಿರುವುದಿಲ್ಲ.

P.R. 27

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50

ಶಿವಕುಮಾರಸ್ವಾಮಿ ಸಿ.ಎಸ್.

ಸರ್ಕಾರದ ಅಧೀನ ಕಾರ್ಯದರ್ಶಿ-2,

ವಸತಿ ಇಲಾಖೆ.

ಉಪವಿಭಾಗಾಧಿಕಾರಿಗಳು ಹಾಗೂ ಭೂಸ್ವಾಧೀನಾಧಿಕಾರಿಗಳವರ ಕಾರ್ಯಾಲಯ, ಮಧುಗಿರಿ ಉಪವಿಭಾಗ, ಮಧುಗಿರಿ

ಭೂಸ್ವಾಧೀನ ಅಧಿನಿಯಮ 1894 ರ ಪ್ರಕರಣ 16(2)ರ ಅನುಸಾರ ಪ್ರಕಟಣೆ

ಕ್ರಮಾಂಕ: ಎಲ್ಎಕ್ಯೂ ಎಸ್ಆರ್ 1/2014-15, ದಿನಾಂಕ: 24-04-2017

ಕರ್ನಾಟಕ ಸರ್ಕಾರದವರು 1961 ನೇ ಸಾಲಿನ ಕರ್ನಾಟಕ ಅಧಿನಿಯಮ ಕ್ರಮಸಂಖ್ಯೆ 16 ರಲ್ಲಿ ತಿದ್ದುಪಡಿಯಾದ 1894 ನೇ ಸಾಲಿನ ಭೂಸಂಗ್ರಹಣಾ ಅಧಿನಿಯಮ, 1894ನೇ ಸಾಲಿನ ಕೇಂದ್ರ ಅಧಿನಿಯಮ (1) ರ ಪ್ರಕರಣ 16(2) ರ ಮೇರೆಗೆ ಈ ಮೂಲಕ ಅನುಸೂಚಿಯಡಿ ಸೂಚಿಸಲಾದ ಜಮೀನನ್ನು ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಘಟಕ ನಿರ್ಮಾಣಕ್ಕಾಗಿ ಅಧಿಕೃತವಾಗಿ ಸದರಿ ಭೂಸ್ವಾಧೀನ ಪ್ರಕರಣ 16(1) ರಂತೆ ವಶಪಡಿಸಿಕೊಳ್ಳಲಾಗಿದೆ ಎಂದು ಈ ಮೂಲಕ ಪ್ರಕಟಿಸಲಾಗಿದೆ.

೨೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೮, ೨೦೧೭ ಭಾಗ ೬

ಅನುಸೂಚಿ

ಜಿಲ್ಲೆ: ತುಮಕೂರು ತಾಲ್ಲೂಕು: ಮಧುಗಿರಿ

ಹೋಬಳಿ: ಕಸಬಾ ಗ್ರಾಮ: ವಡೇರಹಳ್ಳಿ

ಕ್ರ.ಸಂ. ಸ .ನಂ. ತ ರಹೆ ವಿಸ್ತೀರ್ಣ
1. 44/2 ಬ ಾಗಾಯ್ತು 6-35-00
ಒಟ್ಟು 6-35-00

PR-25

ಅನಿತಾಲಕ್ಷ್ಮಿ, ಕೆ.ಎ.ಎಸ್.

SC-25

ಉಪವಿಭಾಗಾಧಿಕಾರಿ ಹಾಗೂ ಭೂಸ್ವಾಧೀನಾಧಿಕಾರಿ, ಮಧುಗಿರಿ ಉಪವಿಭಾಗ, ಮಧುಗಿರಿ

ಚಂದಾಪುರ ಪುರಸಭೆ ಕಾರ್ಯಾಲಯ

ಅತ್ತಿಬೆಲೆ ಹೋಬಳಿ, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ: 560 099.

ಅಂತಿಮ ಅಧಿಸೂಚನೆ

ಸಂಖ್ಯೆ: ಚಂ.ಪು.ಕಾ/ಡಿ.ಸಿ.ಬಿ/ಸಿ.ಆರ್/01/2017-18, ದಿನಾಂಕ: 10/05/2017.

ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ.11.ಎಂ.ಎಲ್.ಆರ್.2015 ದಿನಾಂಕ: 20/06/2015ರಂತೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕು, ಚಂದಾಪುರ ಗ್ರಾಮ ಪಂಚಾಯಿತಿಯನ್ನು ಕರ್ನಾಟಕ ಪುರಸಭಾ ಕಾಯ್ದೆ 1964 ನಿಯಮ 357ರಂತೆ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಆದೇಶಿಸಲಾಗಿರುತ್ತದೆ. ಮೇಲ್ದರ್ಜೆಗೇರಿರುವ ಚಂದಾಪುರ ಪುರಸಭೆ ವ್ಯಾಪ್ತಿಗೆ ಹಿಂದಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದಾಪುರ, ಇಗ್ಗಲೂರು, ರಾಮಸಾಗರ, ಲಕ್ಷ್ಮೀಸಾಗರ, ಹೀಲಲಿಗೆ, ಅಂದಾಪುರ, ಗ್ರಾಮಗಳನ್ನೊಳಗೊಂಡಂತೆ ವಿಂಗಡಿಸಿರುವ 23 ವಾರ್ಡ್‌ಗಳು ಸೇರಿರುತ್ತವೆ.

ಮೇಲ್ದರ್ಜೆಗೇರಿರುವ ಚಂದಾಪುರ ಪುರಸಭೆಗೆ ಸಂಬಂಧಿಸಿದಂತೆ, ದಿನಾಂಕ:19/12/2016 ರಂದು ನಡೆದ ಪುರಸಭೆಯ ಸಾಮಾನ್ಯ ಸಭೆಯ ವಿಷಯ ಸಂಖ್ಯೆ:05ರಲ್ಲಿ, ಚಂದಾಪುರ ಪುರಸಭೆ ವ್ಯಾಪ್ತಿಗೆ ಸೇರಿದ ನಿವೇಶನ/ವಸತಿ ಹಾಗೂ ವಾಣಿಜ್ಯ, ಕೈಗಾರಿಕ ಕಟ್ಟಡ ಆಸ್ತಿಗಳಿಗೆ (ಕಾನೂನಿನಡಿಯಲ್ಲಿ ವಿನಾಯಿತಿಗೊಳಪಟ್ಟ ಆಸ್ತಿಗಳನ್ನು ಹೊರತು ಪಡಿಸಿ) ಮಾನ್ಯ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ರವರ ಸುತ್ತೋಲೆ ಸಂಖ್ಯೆ: 15759/ ಡಿ.ಎಂ.ಎ/03/ಪಿ.ಟಿ.ಐ.ಎಸ್/2016-17, ದಿನಾಂಕ:28/09/2016 ಮತ್ತು ಸುತ್ತೋಲೆ ಸಂಖ್ಯೆ: 17054/ ಡಿ.ಎಂ.ಎ/44/ಪಿಟಿಐಎಸ್/2016-17 ದಿನಾಂಕ: 01/10/2016 ಹಾಗೂ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ನಿಯಮ 94 (1) ಮತ್ತು 102 (ಎ) ರನ್ವಯ 01/04/2017 ರಿಂದ ಅನ್ವಯವಾಗುವಂತೆ ತೆರಿಗೆ ದರ ಮತ್ತು ಶೇಖಡವಾರು ಹೆಚ್ಚಳ ಮಾಡಿಕೊಂಡ ಆಸ್ತಿ ತೆರಿಗೆಯನ್ನು ಈ ಕೆಳಕಂಡಂತೆ ನಿರ್ಧರಿಸಿ 1/04/2017 ರಿಂದ ಅನುಷ್ಟಾನಗೊಳಿಸಲು ಕರಡು ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ದಿನಾಂಕ: 06/04/2017 ರಂದು ಪ್ರಕಟಿಸಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆಗಳು ಬಾರದೇ ಇರುವುದರಿಂದ ಈ ಕರಡು ಅಧಿಸೂಚನೆಯನ್ನು ಅಂತಿಮ ಅಧಿಸೂಚನೆಯನ್ನಾಗಿ ಪ್ರಕಟಿಸಿ, ಈ ಕೆಳಕಂಡಂತೆ ತೆರಿಗೆ ದರ ನಿರ್ಧರಿಸಿ 01/04/2017 ರಿಂದ ಅನುಷ್ಠಾನಗೊಳಿಸಲು ತೀರ್ಮಾನಿಸಲಾಯಿತು.

ಸಾಲು ಖಾಲಿ ನಿವೇಶನ ವ ಸ ತಿ ವಾಣಿಜ್ಯ ಕೈಗಾರಿಕೆ ತ ರೆದ ೆ ಆವರಣದ ವಾಣಿಜ್ಯ/ಇತರೆ ಚ ಟುವಟಿಕೆಗಳು
10764 ಚದರ ಅಡಿಗಳಿಗಿಂತ ಕಡಿಮೆ 10764-43056 ಚ ದ ರ ಅಡಿ 43056 ಚದರ ಅಡಿಗಳಿಗಿಂತ ಹ ಚ ೆ ು್ಚ
2017-18 (2017-18 ರಿಂದ 2019-20 ರವರೆಗೆ) 2014-15 ನೇ ಸಾಲಿನ ಮೂಲ ಆಸ್ತಿ ತೆರಿಗೆ ಮೇಲೆ ಹೆಚ್ಚಿಸಿದ ಶ ೕಕಡವಾರು ಆಸ್ತಿ ತೆರಿಗೆ. ೆ 50% 50% 50% 20% 30% 30% 30%
ಭಾಗ ೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೮, ೨೦೧೭ ೨೦೭

ಈ ಮೇಲ್ಕಂಡ ದರದಂತೆ ತೆರಿಗೆ ನಿರ್ಧರಣೆಯಾದ ನಂತರ ಆಸ್ತಿತೆರಿಗೆಯ ಒಟ್ಟು ಮೊತ್ತಕ್ಕೆ ಶೇಕಡ 26% ರಷ್ಟು ಈ ಕೆಳಕಂಡ ಉಪಕರಗಳನ್ನು ಆಸ್ತಿ ಮಾಲೀಕರು ಪಾವತಿಸಬೇಕಾಗಿರುತ್ತದೆ

ಕ್ರ.ಸಂ ಉಪಕರದ ವಿವರ ಆಸ್ತಿತೆರಿಗೆಯ ಶೇಕಡವಾರು
1. ಆರೋಗ್ಯ ಉಪಕರ ಶ ೕ 15 ರಷ್ಟು ೆ ಆರೋಗ್ಯಕರ ಅಧಿನಿಯಮ 1962ರ ಪ್ರಕರಣ ಸಂಖ್ಯೆ: 3 ರನ್ವಯ
2. ಗ್ರಂಥಾಲಯ ಉಪಕರ ಶ ೕ 6 ರಷ್ಟು ೆ ಗ್ರಂಥಾಲಯ ಕರ ಅಧಿನಿಯಮ 1965ರ ಪ್ರಕರಣ 30(1) ರನ್ವಯ
3. ಬಿ ಕ್ಷುಕರ ಉಪಕರ ಶ ೕ 3 ರಷ್ಟು ೆ ಬಿ ಕ್ಷುಕರ ಅಧಿನಿಯಮ 1975ರ ಪ್ರಕರಣ ಸಂಖ್ಯೆ: 31 ರನ್ವಯ
4. ನಗರ ಸಾರಿಗೆ ಉಪಕರ ಶ ೕ 2 ರಷ್ಟು ೆ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಪ್ರಕರಣ ಸಂಖ್ಯೆ 94ಎ ರನ್ವಯ

ಇದರೊಂದಿಗೆ ಸರ್ಕಾರದ ಆದೇಶ ಸಂಖ್ಯೆ:ನಅಇ/23/ಟಿಸಿಟಿ 2004. ದಿನಾಂಕ: 06.01.2005 ರ ಮೂಲಕ ಘನ ತ್ಯಾಜ್ಯ ನಿರ್ವಹಣೆಯ ಮಾಸಿಕ ಶುಲ್ಕವನ್ನು ಸ್ವತ್ತುಗಳ ವಿಸ್ತೀರ್ಣಗಳಿಗನುಸಾರವಾಗಿ ವಿವಿಧ ಬಳಕೆಯ ಕಟ್ಟಡಗಳಿಗೆ ವಿಧಿಸಿ ವಸೂಲಿ ಮಾಡುವಂತೆ ಆದೇಶವಿರುತ್ತದೆ. ಇದರನ್ವಯ ಚಂದಾಪುರ ಪುರಸಭಾ ವ್ಯಾಪ್ತಿಯಲ್ಲಿರುವ ವಾಸ/ವಾಣಿಜ್ಯ/ಕೈಗಾರಿಕಾ ಕಟ್ಟಡದ ಮಾಲೀಕರು ಆಸ್ತಿ ತೆರಿಗೆಯೊಂದಿಗೆ ಘನತ್ಯಾಜ್ಯ ನಿರ್ವಹಣೆ ವಾರ್ಷಿಕ ಶುಲ್ಕವನ್ನು ಸಹ ಪಾವತಿ ಮಾಡುವುದು

ವಾಸದ ಕಟ್ಟಡಗಳಿಗೆ

1000 ಚ.ಅ.ಗಿಂತ ಕಡಿಮೆಯಿರುವ ಆವರಣಕ್ಕೆ ಪ್ರತಿ ವರ್ಷಕ್ಕೆ = ರೂ. 120.00

1000 ಚ.ಅ.ಗಿಂತ ಹೆಚ್ಚಿರುವ ಆವರಣಕ್ಕೆ ಪ್ರತಿ ವರ್ಷಕ್ಕೆ = ರೂ. 180.00

ವಾಣಿಜ್ಯ ಕಟ್ಟಡಗಳಿಗೆ

1000 ಚ.ಅ.ಗಿಂತ ಕಡಿಮೆಯಿರುವ ಆವರಣಕ್ಕೆ ಪ್ರತಿ ವರ್ಷಕ್ಕೆ = ರೂ. 240.00

1000 ಚ.ಅ.ಗಿಂತ ಹೆಚ್ಚಿರುವ ಆವರಣಕ್ಕೆ ಪ್ರತಿ ವರ್ಷಕ್ಕೆ = ರೂ. 600.00

ಕಾರ್ಖಾನೆ ಕಟ್ಟಡಗಳಿಗೆ

1000 ಚ.ಅ.ಗಿಂತ ಕಡಿಮೆಯಿರುವ ಆವರಣಕ್ಕೆ ಪ್ರತಿ ವರ್ಷಕ್ಕೆ = ರೂ. 600.00

1000 ಚ.ಅ.ಗಿಂತ ಹೆಚ್ಚಿರುವ ಆವರಣಕ್ಕೆ ಪ್ರತಿ ವರ್ಷಕ್ಕೆ = ರೂ. 900.00

ಹೋಟೆಲ್‌ಗಳು, ಕಲ್ಯಾಣ ಮಂಟಪಗಳು ಮತ್ತು ನರ್ಸಿಂಗ್ ಹೋಂಗಳಿಗೆ

1000 ಚ.ಅ.ಗಿಂತ ಕಡಿಮೆಯಿರುವ ಆವರಣಕ್ಕೆ ಪ್ರತಿ ವರ್ಷಕ್ಕೆ = ರೂ. 2400.00

1000 ಚ.ಅ.ಗಿಂತ ಹೆಚ್ಚಿರುವ ಆವರಣಕ್ಕೆ ಪ್ರತಿ ವರ್ಷಕ್ಕೆ = ರೂ. 3000.00

ಇದರ ಜೊತೆಗೆ ಮದುವೆ ಮತ್ತು ಆರತಕ್ಷತೆ ಹಾಗೂ ಇತರೆ ಸಮಾರಂಭಗಳಿಗಾಗಿ ಪ್ರತಿ ಸಮಾರಂಭಕ್ಕೆ ರೂ.1000/- ಪಾವತಿಸತಕ್ಕದ್ದು.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೨೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೮, ೨೦೧೭ ಭಾಗ ೬

ಚಂದಾಪುರ ಪುರಸಭಾ ವ್ಯಾಪ್ತಿಯಲ್ಲಿರುವ ಸ್ವತ್ತುಗಳಿಗೆ ದಿನಾಂಕ: 01/04/2017 ರಿಂದ ಅನ್ವಯವಾಗುವಂತೆ 2017-18 ನೇ ಸಾಲಿನಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ದತಿಯಲ್ಲಿ ತೆರಿಗೆ ದರವನ್ನು ನಿಗಧಿಪಡಿಸಿ ವಿಧಿಸಲು ತೀರ್ಮಾನಿಸಿರುವ ಬಗ್ಗೆ, ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿರುವುದಿಲ್ಲ ಆದ್ದರಿಂದ ಈ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿದೆ.

P.D. 26

ಮುಖ್ಯಾಧಿಕಾರಿ

SC - 50

ಪುರಸಭೆ, ಚಂದಾಪುರ

ಬೆಂಗಳೂರು ಜಿಲ್ಲೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 08 June 2017. Indian Gazettes, https://egazette.servantsofknowledge.in/details/in.gazette.karnataka_new.2017-06-08.Part-6/. Archive identifier in.gazette.karnataka_new.2017-06-08.Part-6.