Servants of Knowledge
Karnataka Gazette · Government of Karnataka

Karnataka Gazette, Part Part-1, 29 June 2017

Published 29 June 2017

Part
Part-1
Identifier
in.gazette.karnataka_new.2017-06-29.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೨

Volume 152

ಬೆಂಗಳೂರು, ಗುರುವಾರ, ಜೂನ್ ೨೯, ೨೦೧೭ (ಆಷಾಡ ೮, ಶಕ ವರ್ಷ ೧೯೩೯)

Bengaluru, Thursday, June 29, 2017 (Ashadha 8, Shaka Varsha 1939)

ಸಂಚಿಕೆ ೨೬

Issue 26

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಷಯ : ಪಾರಂಪರಿಕ ವೈದ್ಯರ ಮಕ್ಕಳಿಗೆ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ವ್ಯಾಸಂಗಕ್ಕೆ ಉಚಿತ ಆಯುರ್ವೇದ ವೈದ್ಯಕೀಯ ಸೀಟುಗಳನ್ನು ಮೀಸಲಿಡುವ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ:ಆಕುಕ 216 ಪಿಟಿಡಿ 2016, ದಿನಾಂಕ: 03.08.2016.

2. ಸರ್ಕಾರದ ತಿದ್ದುಪಡಿ ಸಂಖ್ಯೆ:ಆಕುಕ 216 ಪಿಟಿಡಿ 2016, ದಿನಾಂಕ: 03.08.2016. 3. ಆಯುಷ್ ನಿರ್ದೇಶಕರ ಪ್ರಸ್ತಾವನೆ ಸಂಖ್ಯೆ:ಆಯುಷ್/39/ಅಭಿವೃದ್ಧಿ(3)/ 2016-17, ದಿನಾಂಕ:16.03.2017.

ಪ್ರಸ್ತಾವನೆ :

ಮೇಲೆ ಓದಲಾದ ಕ್ರ.ಸಂ (1)ರ ಸರ್ಕಾರದ ಆದೇಶದಲ್ಲಿ, ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ ಆಯುಷ್ ವೈದ್ಯಕೀಯ ಮಹಾವಿದ್ಯಾಲಯಗಳು ಮತ್ತು ಅನುದಾನಿತ ಆಯುರ್ವೇದ ಮಹಾವಿದ್ಯಾಲಯಗಳಲ್ಲಿರುವ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಹಂಚಲ್ಪಡುವ ಸರ್ಕಾರಿ ಕೋಟಾ ಸೀಟ್‌ಗಳಲ್ಲಿ ಶೇ.2 ರಷ್ಟು ಸೀಟುಗಳನ್ನು ಪಾರಂಪರಿಕ ವೈದ್ಯರ ಮಕ್ಕಗಳಿಗೆ 2017-18ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುವಂತೆ ಮೀಸಲಿಡಲಾಗಿದೆ.

ಮೇಲೆ ಓದಲಾದ ಕ್ರ.ಸಂ. (2)ರ ಸರ್ಕಾರದ ತಿದ್ದುಪಡಿಯಲ್ಲಿ ಸರ್ಕಾರದ ಆದೇಶ ಸಂಖ್ಯೆ:ಆಕುಕ 216 ಪಿಟಿಡಿ 2016, ದಿನಾಂಕ: 03.08.2016ರಲ್ಲಿ ಪಾರಂಪರಿಕ ವೈದ್ಯರ ಮಕ್ಕಳಿಗೆ 2017-18ನೇ ಶೈಕ್ಷಣಿಕ ಸಾಲಿನಿಂದ ಶೇ.2 ರಷ್ಟು ಸೀಟುಗಳನ್ನು ಮೀಸಲಿಟ್ಟಿರುವುದನ್ನು 2016-17ನೇ ಶೈಕ್ಷಣಿಕ ಸಾಲಿನಿಂದ ಎಂದು ತಿದ್ದುಪಡಿ ಮಾಡಲಾಗಿದೆ.

ಮೇಲೆ ಓದಲಾದ ಕ್ರ.ಸಂ. (3)ರ ಪ್ರಸ್ತಾವನೆಯಲ್ಲಿ, ಆಯುಷ್ ನಿರ್ದೇಶಕರು, ಆಯುಷ್ ಇಲಾಖೆ, ಬೆಂಗಳೂರು ಇವರು, ಸರ್ಕಾರದ ಆದೇಶ ಸಂಖ್ಯೆ:ಸಕಇ 225 ಬಿಸಿಎ 2000, ದಿನಾಂಕ: 30.03.2002ರ ಹೊಸ ಕೆನೆಪದರ ಮತ್ತು ಭಾರತದ ಸಂವಿಧಾನದ ಅನುಚ್ಛೇದ 15(4)ರಂತೆ ವಿದ್ಯಾ ಸಂಸ್ಥೆಗಳಲ್ಲಿ ಪ್ರವೇಶ ಮತ್ತು ಅನುಚ್ಛೇದ 16(4)ರ ಮೇರೆಗೆ ನೇಮಕಾತಿಗಳಲ್ಲಿ ಮೀಸಲಾತಿಗಳನ್ನು ವರ್ಗವಾರು ನಿಗದಿಪಡಿಸಿದೆ ಹಾಗೂ ಗೌ.ಸರ್ವೋಚ್ಛ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ;438/1994ರ ಮಧ್ಯಂತರ ಆದೇಶದನ್ವಯ ಯಾವುದೇ ಸಂದರ್ಭದಲ್ಲಿ ಮೀಸಲಾತಿಯು ಶೇ. 50ನ್ನು ಮೀರುವಂತಿಲ್ಲ.

ಹಾಗಾಗಿ ಶೇ.50ರ ಮೀಸಲಾತಿಯನ್ನು ಒಟ್ಟು 07 ವರ್ಗಗಳಿಗೆ ಹಂಚಿಕೆ ಮಾಡಲಾಗಿದೆ. ಪಾರಂಪರಿಕ ವೈದ್ಯರ ಮಕ್ಕಳಿಗೆ ಶೇ.2ರಷ್ಟು ಸೀಟುಗಳನ್ನು ಯಾವ ಪ್ರವರ್ಗದಲ್ಲಿ ಕಡಿತಗೊಳಿಸಿ ಸರಿ ಹೊಂದಿಸಬೇಕೆಂಬ ಬಗ್ಗೆ ಸ್ಪಷ್ಟತೆ ಇರುವುದಿಲ್ಲ ಹಾಗೂ ಕಾನೂನಾತ್ಮಕ ತೊಡಕುಗಳಿರುತ್ತವೆ. 2016-17ನೇ ಸಾಲಿಗೆ ಪಾರಂಪರಿಕ ವೈದ್ಯರ ಮಕ್ಕಳಿಗೆ 02 ಸೀಟುಗಳನ್ನು ನಿಗದಿಪಡಿಸಲಾಗಿದ್ದು, ಅದರಲ್ಲಿ ಕೇವಲ ಒಬ್ಬ ಅರ್ಹ ವಿದ್ಯಾರ್ಥಿ ಮಾತ್ರ ಪ್ರವೇಶ ಪಡೆದಿರುತ್ತಾರೆ ಮತ್ತು ಪಾರಂಪರಿಕ ವೈದ್ಯ ಪರಿಷತ್‌ನಲ್ಲಿ ನೋಂದಾಯಿತ ಪಾರಂಪರಿಕ ವೈದ್ಯ ವೃಂದದವರು ಕೇವಲ 1700 ಜನರಿರುತ್ತಾರೆ ಹಾಗೂ ಭಾರತ ಸರ್ಕಾರದ ಆಯುಷ್ ಮಂತ್ರಾಲಯದ ಪತ್ರ ಸಂಖ್ಯೆ:ಎಲ್-20025/4/2012-ಐಸಿ/ಆಯುಷ್, ದಿನಾಂಕ: 10.04.2012ರಲ್ಲಿ Indian Council for Cultural Relations (ICCR) ಇವರ ಮುಖಾಂತರ ICCR sponsored foreign nationals under AYUSH scholarship ಕೋಟಾ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಕೆಲವು ಆಯುಷ್ ಮಹಾವಿದ್ಯಾಲಯಗಳಲ್ಲಿ ಸರ್ಕಾರಿ ಕೋಟಾ ಸೀಟುಗಳನ್ನು ನಿಗದಿಪಡಿಸಿ ವಿಶೇಷ ಕೋಟಾದಡಿ ಪ್ರವೇಶಾತಿ ನೀಡಲಾಗುತ್ತಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ:ಆಕುಕ 216 ಪಿಟಿಡಿ 2016, ದಿನಾಂಕ: 03.08.2016 ಮತ್ತು ತಿದ್ದುಪಡಿ ದಿನಾಂಕ: 09.08.2016ರಲ್ಲಿ ಪಾರಂಪರಿಕ ವೈದ್ಯರ ಮಕ್ಕಳಿಗೆ ಸರ್ಕಾರಿ/ಅನುದಾನಿತ ಆಯುಷ್ ಮಹಾವಿದ್ಯಾಲಯಗಳಲ್ಲಿ ಶೇ.2 ರಷ್ಟು ಸರ್ಕಾರಿ ಕೋಟಾ ಸೀಟುಗಳಲ್ಲಿ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿದಲ್ಲಿ ಸುಮಾರು 30 ಸೀಟ್‌ಗಳನ್ನು ಕಾಯ್ದಿರಿಸಬೇಕಾಗುತ್ತದೆ. ಇದರಿಂದಾಗಿ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳು ಸರ್ಕಾರಿ ಕೋಟಾ ಸೀಟುಗಳಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ, ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಪರಿಗಣಿಸಿ ಭಾರತ ಸರ್ಕಾರದ ಆಯುಷ್ ಮಂತ್ರಾಲಯ, ನವದೆಹಲಿ ಇವರು ICCR ಕೋಟಾ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಪ್ರಕರಣದಡಿ ಪ್ರವೇಶ ಕಲ್ಪಿಸಿದಂತೆಯೇ ಪಾರಂಪರಿಕ ವೈದ್ಯರ (೯೫೭)೯೫೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೯, ೨೦೧೭ ಭಾಗ ೧ ಮಕ್ಕಳಿಗೂ ಸಹ ವಿಶೇಷ ಪ್ರಕರಣದಡಿ ಪ್ರವೇಶಾತಿ ಪರಿಗಣಿಸಿ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬಳ್ಳಾರಿ ಹಾಗೂ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು ಇಲ್ಲಿ ತಲಾ ಒಂದರಂತೆ ಒಟ್ಟು ಎರಡು ಸೀಟ್‌ಗಳನ್ನು ಮೀಸಲಿರಿಸಿ ಶೇ.2ರಷ್ಟು ಮೀಸಲಾತಿಯನ್ನು ನಿಗದಿಪಡಿಸಿರುವ ಸರ್ಕಾರದ ಆದೇಶವನ್ನು ಮಾರ್ಪಡಿಸುವಂತೆ ಕೋರಿರುತ್ತಾರೆ.

ಆಯುಷ್ ನಿರ್ದೇಶಕರ ಪ್ರಸ್ತಾವನೆ ಮತ್ತು ಲಭ್ಯವಿರುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಪಾರಂಪರಿಕ ವೈದ್ಯರ ಮಕ್ಕಳಿಗೆ ವಿಶೇಷ ಪ್ರಕರಣದಡಿ ಪ್ರವೇಶಾತಿ ಪರಿಗಣಿಸಿ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬಳ್ಳಾರಿ ಹಾಗೂ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು ಇಲ್ಲಿ ತಲಾ ಒಂದರಂತೆ ಒಟ್ಟು ಎರಡು ಸೀಟ್‌ಗಳನ್ನು ಮೀಸಲಿರಿಸಿ, ಈಗಾಗಲೇ ಸರ್ಕಾರಿ/ಅನುದಾನಿತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಶೇ.2ರಷ್ಟು ಸೀಟುಗಳನ್ನು ಮೀಸಲಿರಿಸಿರುವ ಸರ್ಕಾರದ ಆದೇಶ ಸಂಖ್ಯೆ:ಆಕುಕ 216 ಪಿಟಿಡಿ 2016, ದಿನಾಂಕ:03.08.2016 ಮತ್ತು ತಿದ್ದುಪಡಿ ದಿನಾಂಕ: 09.08.2016ನ್ನು ಹಿಂಪಡೆಯಲು ನಿರ್ಧರಿಸಿದೆ. ಆದುದರಿಂದ, ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ಆಕುಕ 257 ಪಿಟಿಡಿ 2016, ಬೆಂಗಳೂರು, ದಿನಾಂಕ:05.04.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಲು ಭಾರತ ಸರ್ಕಾರದ ಆಯುಷ್ ಮಂತ್ರಾಲಯ, ನವದೆಹಲಿ ಇವರು ICCR ಕೋಟಾ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಪ್ರಕರಣದಡಿ ಪ್ರವೇಶ ಕಲ್ಪಿಸಿದಂತೆಯೇ ಪಾರಂಪರಿಕ ವೈದ್ಯರ ಮಕ್ಕಳಿಗೆ ವಿಶೇಷ ಪ್ರಕರಣದಡಿ ಪ್ರವೇಶಾತಿ ಪರಿಗಣಿಸಿ 2017-18ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸಿಇಟಿ ಮುಖಾಂತರ ಹಂಚಲ್ಪಡುವ ಸರ್ಕಾರಿ ಕೋಟಾ ಸೀಟುಗಳಲ್ಲಿ ಒಟ್ಟು 02 (ಎರಡು) ಸೀಟುಗಳನ್ನು ಈ ಕೆಳಗಿನಂತೆ

ಕ್ರ. ಸಂ. ಆ.ವೈ.ಮಹಾವಿದ್ಯಾಲಯಗಳ ಹೆಸರು ಮೀಸಲಾತಿ ಸೀಟ್‌ಗಳ ಸಂಖ್ಯೆ
1. ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬಳ್ಳಾರಿ. 01
2. ಸ ರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು. 01

ಸರ್ಕಾರದ ಆದೇಶ ಸಂಖ್ಯೆ:ಆಕುಕ 216 ಪಿಟಿಡಿ 2016, ದಿನಾಂಕ: 03.08.2016 ಮತ್ತು ತಿದ್ದುಪಡಿ ಸಂಖ್ಯೆ:ಆಕುಕ 216 ಪಿಟಿಡಿ 2016, ದಿನಾಂಕ:

09.08.2016ನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದಿದೆ.

P.R. 156

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ಕಮಲಮ್ಮ

SC-100

ಸರ್ಕಾರದ ಅದೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.

(ಭಾರತೀಯ ವೈದ್ಯ ಪದ್ಧತಿ)

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ : ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ಮುಖ್ಯ ಜಾಗೃತ ಅಧಿಕಾರಿ (Chief Vigilance Officer) ಯನ್ನು ನೇಮಿಸುವ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 14 ಸೇಲೋಯು 2016, ದಿನಾಂಕ:14.03.2016. 2. ಸರ್ಕಾರದ ಆದೇಶ ಸಂಖ್ಯೆ.ಸಿಆಸುಇ 88 ಸೇಲೋಯು 2016, ದಿನಾಂಕ:22.06.2016.

ಪ್ರಸ್ತಾವನೆ :

ಮೇಲೆ ಕ್ರಮ ಸಂಖ್ಯೆ (1)ರಲ್ಲಿ ಓದಲಾದ ದಿನಾಂಕ:14.03.2016ರ ಆದೇಶದನ್ವಯ, ರಾಜ್ಯದಲ್ಲಿ ಭ್ರಷ್ಟಾಚಾರ ತಡೆ ಅಧಿನಿಯಮ, 1988ನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹಾಗೂ ಸ್ವತಂತ್ರವಾಗಿ ತನಿಖೆ ನಡೆಸಲು ಒಂದು ಪ್ರತ್ಯೇಕ ಭ್ರಷ್ಟಾಚಾರ ನಿಗ್ರಹ ದಳವನ್ನು (Anti Corruption Bureau) ಸೃಜಿಸಲಾಗಿದೆ.

ಮೇಲೆ ಕ್ರಮ ಸಂಖ್ಯೆ (2)ರಲ್ಲಿ ಓದಲಾದ ದಿನಾಂಕ:22.06.2016ರ ಆದೇಶದಲ್ಲಿ, ಭ್ರಷ್ಟಾಚಾರ ನಿಗ್ರಹ ದಳವನ್ನು ಸೃಜಿಸಿ ಹೊರಡಿಸಿರುವ ದಿನಾಂಕ:14.03.2016ರ ಸರ್ಕಾರದ ಆದೇಶದಲ್ಲಿನ ಆದೇಶ ಭಾಗದ ಕಂಡಿಕೆ 7ರನ್ವಯ ಸರ್ಕಾರದ ಪ್ರತಿಯೊಂದು ಇಲಾಖೆ ಮತ್ತು ಇಂಜಿನಿಯರಿಂಗ್ ಇಲಾಖೆಯನ್ನೊಳಗೊಂಡಂತೆ ನಿರ್ದೇಶನಾಲಯ/ಆಯುಕ್ತಾಲಯ, ಕ್ಷೇತ್ರ ಇಲಾಖೆ, ಸಾರ್ವಜನಿಕ ಉದ್ದಿಮೆಗಳು, ಸರ್ಕಾರದಿಂದ ಸ್ಥಾಪಿತವಾದ ನಿಗಮ/ಮಂಡಳಿಗಳು ಮತ್ತು ವಿಧಾನ ಮಂಡಲದ ಅಧಿನಿಯಮದಡಿ ಸ್ಥಾಪಿತವಾಗಿರುವ ಸ್ಥಳೀಯ ಸಂಸ್ಥೆಗಳು ಹಾಗು ಎಲ್ಲಾ ಶಾಸನಬದ್ಧ ಸಂಸ್ಥೆಗಳಲ್ಲಿ ಜಾಗೃತ ಕೋಶಗಳನ್ನು ಚಾಲನೆಗೊಳಿಸುವ ನಿಟ್ಟಿನಲ್ಲಿ ಕಾರ್ಯವಿಧಾನ/ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ.

ದಿನಾಂಕ:22.06.2016ರ ಆದೇಶದ ಆದೇಶ ಭಾಗದ ಕಂಡಿಕೆ 1(2)ರಲ್ಲಿ ಸರ್ಕಾರದ ಪ್ರತಿಯೊಂದು ಕ್ಷೇತ್ರ ಇಲಾಖೆ ಮತ್ತು ಇಂಜಿನಿಯರಿಂಗ್ ಇಲಾಖೆಯನ್ನೊಳಗೊಂಡಂತೆ ನಿರ್ದೇಶನಾಲಯ/ಆಯುಕ್ತಾಲಯ, ಸಾರ್ವಜನಿಕ ಉದ್ದಿಮೆಗಳು, ಸರ್ಕಾರದಿಂದ ಸ್ಥಾಪಿತವಾದ ನಿಗಮ/ಮಂಡಳಿಗಳು ಮತ್ತು ವಿಧಾನ ಮಂಡಲದ ಅಧಿನಿಯಮದಡಿ ಸ್ಥಾಪಿತವಾಗಿರುವ ಸ್ಥಳೀಯ ಸಂಸ್ಥೆಗಳು ಹಾಗು ಎಲ್ಲಾ ಶಾಸನಬದ್ಧ ಸಂಸ್ಥೆಗಳ ಕೇಂದ್ರಸ್ಥಾನದ ಕಚೇರಿಗಳಲ್ಲಿ ಒಂದು ಜಾಗೃತ ಕೋಶ ಇರತಕ್ಕದ್ದೆಂದೂ ಹಾಗೂ ಆಯಾ ಇಲಾಖೆ/ಸಂಸ್ಥೆಗಳ ಮುಖ್ಯಸ್ಥರ ನಂತರದ ಅಧಿಕಾರಿಯನ್ನು (officer next in seniority) ಸದರಿ ಜಾಗೃತ ಕೋಶದ ಮುಖ್ಯ ಜಾಗೃತ ಅಧಿಕಾರಿ (Chief Vigilance Officer)ಯನ್ನಾಗಿ ನೇಮಿಸಲು ಆದೇಶಿಸಲಾಗಿರುತ್ತದೆ.

ಅದರಂತೆ ಪರಿಶೀಲಿಸಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಗೆ ಸಂಬಂಧಿಸಿದಂತೆ, ಈ ಕೆಳಕಂಡಂತೆ ಆದೇಶಿಸಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೯, ೨೦೧೭ ೯೫೯

ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 35 ಸೇಆನ್ಯಾ 2016, ಬೆಂಗಳೂರು, ದಿನಾಂಕ: 13.03.2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲಿ,್ಲ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಆಡಳಿತ ವ್ಯಾಪ್ತಿಗೊಳಪಡುವ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಗೆ ಸಂಬಂಧಿಸಿದಂತೆ, ವಿಲೇಖನಾಧಿಕಾರಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಬೆಂಗಳೂರು ಇವರನ್ನು ಮುಖ್ಯ ಜಾಗೃತ ಅಧಿಕಾರಿ (Chief Vigilance Officer)ಯನ್ನಾಗಿ ನೇಮಿಸಿ ಆದೇಶಿಸಲಾಗಿದೆ.

P.R. 157

ಕರ್ನಾಟಕ ರಾಜ್ಯಪಾಲರ ಆದೇಶದ ಮೇರೆಗೆ ಮತ್ತು ಅವರ ಹೆಸರಿನಲ್ಲಿ,

ಎ.ವಿ. ಶೈಲಜ

SC-100

ಸರ್ಕಾರದ ಅದೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ.

(ಸೇವಾನಿಯಮಗಳು-2)

ಕಂದಾಯ ಸಚಿವಾಲಯ

ಸೇರ್ಪಡೆ ಆದೇಶ

ಸಂಖ್ಯೆ : ಕಂಇ 109 ಮುಸೇವಿ 2015 (ಭಾ-1), ಬೆಂಗಳೂರು, ದಿನಾಂಕ: 17-05-2017.

ಸರ್ಕಾರದ ಆದೇಶ ಸಂಖ್ಯೆ:ಕಂಇ 109 ಮುಸೇವಿ 2015 ದಿನಾಂಕ:29-01-2016ರ ಆದೇಶದಲ್ಲಿ ಶ್ರವಣಬೆಳಗೊಳದಲ್ಲಿ 2018ನೇ ಸಾಲಿನಲ್ಲಿ ಜರುಗಲಿರುವ ಮಹಾಮಸ್ತಕಾಭಿಷೇಕದ ಮಹೋತ್ಸವದ ರಾಜ್ಯ ಮಟ್ಟದ ಸಮಿತಿಯಲ್ಲಿ ಕ್ಷೇತ್ರದ ಹಾಗೂ ಸಮಾಜ ಪ್ರತಿನಿಧಿಗಳು ಪಟ್ಟಿಯ ಕ್ರಮ ಸಂಖ್ಯೆ (17)ರಲ್ಲಿ "ಶ್ರೀ ಬ್ರಹ್ಮಕುಮಾರ್, ನಂ.54, ದೇಸಾಯಿ ಪಾರ್ಕ್, ಕೇಶವಪುರ, ಹುಬ್ಬಳ್ಳಿ" ಇವರನ್ನು ಹೆಚ್ಚುವರಿ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶಿಸಿದೆ.

P.R. 158

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಎಸ್. ನಾಗರತ್ನಮ್ಮ

SC-25

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ. (ಮುಜರಾಯಿ)

ಕಂದಾಯ ಸಚಿವಾಲಯ

ವಿಷಯ :- ಶ್ರೀ ವ್ಯಾಸರಾಜ ಮಠದ (ಸೋಸಲೆ) ಆಡಳಿತಾಧಿಕಾರಿಯ ಅವಧಿಯನ್ನು ಮುಂದುವರೆಸುವ ಬಗ್ಗೆ. ಓದಲಾಗಿದೆ :- (1) ಸರ್ಕಾರದ ಆದೇಶ ಸಂಖ್ಯೆ:ಕಂಇ 67 ಮುದಾಪ್ರ 2002 ದಿನಾಂಕ:26.05.2012

(2) ಸರ್ಕಾರದ ಆದೇಶ ಸಂಖ್ಯೆ:ಕಂಇ 34 ಮುಸೇವಿ 2014 ದಿನಾಂಕ:24.05.2014 (3) ಸರ್ಕಾರದ ಆದೇಶ ಸಂಖ್ಯೆ:ಕಂಇ 34 ಮುಸೇವಿ 2014 ದಿನಾಂಕ:21.05.2015 (4) ಸರ್ಕಾರದ ಆದೇಶ ಸಂಖ್ಯೆ:ಕಂಇ 34 ಮುಸೇವಿ 2014(ಭಾ) ದಿನಾಂಕ:17.05.2016 (5) ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಬೆಂಗಳೂರು ಇವರ ಪತ್ರ ಸಂಖ್ಯೆ : ಎಡಿಎಂ/07/ ಡಬ್ಲ್ಯೂಪಿ/07/2017-18 ದಿನಾಂಕ:22.04.2017

ಪ್ರಸ್ತಾವನೆ :-

ಮೇಲೆ ಓದಲಾದ (1)ರ ಸರ್ಕಾರದ ಆದೇಶದಲ್ಲಿ ಶ್ರೀ ವ್ಯಾಸರಾಜ (ಸೋಸಲೆ) ಮಠದ ಸಮಸ್ತ ಆಸ್ತಿಗಳನ್ನು ಹಾಗೂ ದೇಶದ ವಿವಿಧ ಭಾಗಗಳಲ್ಲಿರುವ ಶ್ರೀ ಮಠದ ಶಾಖೆಗಳ ಆಡಳಿತವನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡು ಆಡಳಿತ ನಿರ್ವಹಣೆ ನಡೆಸಲು, ಆಡಳಿತಾಧಿಕಾರಿ ನೇಮಿಸಲು ಸರ್ಕಾರವು ನಿರ್ಧರಿಸಿ ಶ್ರೀ ಕೆ. ಜೈರಾಜ್ ಭಾ.ಆ.ಸೇ., (ನಿವೃತ್ತ) ಅಂದಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಇವರನ್ನು ಆಡಳಿತಾಧಿಕಾರಿಯನ್ನಾಗಿ ದಿನಾಂಕ:26.05.2012ರಿಂದ ಎರಡು ವರ್ಷಗಳ ಅವಧಿಗೆ ನೇಮಕ ಮಾಡಿ ಆದೇಶಿಸಲಾಗಿತ್ತು. ಇದರ ಜೊತೆಗೆ ಸರ್ಕಾರವು ಆಡಳಿತಾಧಿಕಾರಿಗೆ ಸೂಕ್ತ ಮಾರ್ಗದರ್ಶನ ನೀಡಲು ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾದೀಶರಾದ ಶ್ರೀ ಎಂ.ಎನ್. ವೆಂಕಟಾಚಲಯ್ಯ, ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಎಸ್.ಆರ್. ವೆಂಕಟೇಶಮೂರ್ತಿ ಹಾಗೂ ಇತರ ಗಣ್ಯರನ್ನೊಳಗೊಂಡಂತೆ ಒಂದು ಸಲಹಾ ಸಮಿತಿಯನ್ನು ರಚಿಸಲಾಗಿತ್ತು. ತರುವಾಯ ಸದರಿ ಆಡಳಿತಾಧಿಕಾರಿಯ ಅಧಿಕಾರ ಅವಧಿಯನ್ನು ಸರ್ಕಾರವು ಮೇಲೆ ಓದಲಾದ (2)ರ ಸರ್ಕಾರದ ಆದೇಶ ದಿನಾಂಕ:24.05.2014ರಲ್ಲಿ ಒಂದು ವರ್ಷದ ಅವಧಿಗೆ ಮುಂದುವರೆಸಿ, ಆದೇಶಿಸಲಾಗಿತ್ತು. ನಂತರ ಮೇಲೆ ಓದಲಾದ (3) ಮತ್ತು (4)ರ ಸರ್ಕಾರದ ಆದೇಶಗಳಲ್ಲಿ ಕ್ರಮವಾಗಿ ಒಂದು ವರ್ಷದ ಅವಧಿಗೆ ಮುಂದುವರೆಸಿ, ಆದೇಶಿಸಲಾಗಿರುತ್ತದೆ.

ನಂತರ ಮೇಲೆ ಓದಲಾದ (4)ರ ಸರ್ಕಾರದ ಆದೇಶ ದಿನಾಂಕ:17.05.2016ರಲ್ಲಿ ಯಾವ ಉದ್ದೇಶಕ್ಕಾಗಿ ಶ್ರೀಮಠದ ಆಡಳಿತಾಧಿಕಾರವನ್ನು ಸರ್ಕಾರವು ವಹಿಸಿಕೊಂಡಿತ್ತೋ ಆ ಉದ್ದೇಶವನ್ನು ಇನ್ನೂ ಸಾಧಿಸಬೇಕಾಗಿರುವುದರಿಂದ ಆಡಳಿತಗಾರರಿಗೆ ಹೆಚ್ಚಿನ ಕಾಲಾವಕಾಶ ನೀಡುವುದು ಅವಶ್ಯಕವಾಗಿರುವ ಹಿನ್ನೆಲೆಯಲ್ಲಿ ಸದರಿಯವರ ಆಡಳಿತದ ಅವಧಿಯನ್ನು ದಿನಾಂಕ:26.05.2016ರಿಂದ ಒಂದು ವರ್ಷದ ಅವಧಿಗೆ ವಿಸ್ತರಿಸಿ ಆದೇಶಿಸಲಾಗಿತ್ತು.

ಮೇಲೆ ಓದಲಾದ (5)ರಲ್ಲಿ ಧಾರ್ಮಿಕ ದತ್ತಿ ಆಯುಕ್ತರು ಇವರ ಪ್ರಸ್ತಾವನೆಯಲ್ಲಿ, ಸದರಿ ಮಠಕ್ಕೆ ಆಡಳಿತಗಾರರನ್ನು ನೇಮಿಸಿ ಹೊರಡಿಸಿದ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಪೀಠಾಧಿಪತಿಯವರು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ ರಿಟ್ ಅರ್ಜಿಯನ್ನು ಮಾನ್ಯ ನ್ಯಾಯಾಲಯವು ವಜಾಗೊಳಿಸಿರುತ್ತದೆ. ಸದರಿ ತೀರ್ಪಿನ ವಿರುದ್ದ ಪೀಠಾಧಿಪತಿಗಳು ಮಾನ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದಲ್ಲಿ ದಾಖಲಿಸಿರುವ ರಿಟ್ ಅಪೀಲುಗಳು ಹಾಗೂ ಇತರೆ ಕೆಲವು ಪ್ರಕರಣಗಳು ಇನ್ನೂ ಇತ್ಯರ್ಥಕ್ಕೆ ಬಾಕಿ ಇರುವುದರಿಂದ ಹಾಗೂ ಶ್ರೀಮಠದ ಸುಗಮ ಆಡಳಿತ ದೃಷ್ಟಿಯಿಂದ ಮತ್ತು ಭಕ್ತಾದಿಗಳ ಹಿತದೃಷ್ಟಿಯಿಂದ, ಆಡಳಿತಗಾರರ ಅವಧಿಯನ್ನು ದಿನಾಂಕ : 26.05.2017 ರಿಂದ 25.05.2018ರವರೆಗೆ ಒಂದು ವರ್ಷದ ಅವಧಿಗೆ ಮುಂದುವರೆಸುವುದು ಸೂಕ್ತವಾಗಿರುವುದೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ. ಅದರಂತೆ ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

೯೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೯, ೨೦೧೭ ಭಾಗ ೧

ಸರ್ಕಾರದ ಆದೇಶ ಸಂಖ್ಯೆ : ಕಂಇ 34 ಮುಸೇವಿ 2014, ಬೆಂಗಳೂರು; ದಿನಾಂಕ: 17ನೇ ಮೇ, 2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಶ್ರೀ ವ್ಯಾಸರಾಜ ಮಠದ (ಸೋಸಲೆ) ಆಡಳಿತ ನಿರ್ವಹಣೆ, ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥ ಹಾಗೂ ಅಭಿವೃದ್ದಿ ಹಿತದೃಷ್ಟಿಯಿಂದ ಸರ್ಕಾರವು ಶ್ರೀ ಕೆ. ಜೈರಾಜ್, ಭಾ.ಆ.ಸೇ., (ನಿವೃತ್ತ) ಆಡಳಿತಗಾರರ ಆಡಳಿತದ ಅವಧಿಯನ್ನು ದಿನಾಂಕ:26.05.2017ರಿಂದ ಒಂದು ವರ್ಷದ ಅವಧಿಗೆ ವಿಸ್ತಿರಿಸಿ ಆದೇಶಿಸಿದೆ.

P.R. 159

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಎಸ್. ನಾಗರತ್ನಮ್ಮ

SC-25

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ. (ಮುಜರಾಯಿ)

ಕಂದಾಯ ಸಚಿವಾಲಯ

ವಿಷಯ : ಶ್ರೀ ಗಿರೀಶ್ಚಂದ್ರ, ಹಿಂದಿನ ಹಿರಿಯ ಉಪ ನೋಂದಣಾಧಿಕಾರಿ, ರಾಯಚೂರು ಪ್ರಸ್ತುತ ಹಿರಿಯ ಉಪ ನೋಂದಣಾಧಿಕಾರಿ, ಬಿಟಿಎಂ ಲೇಔಟ್, ಬೆಂಗಳೂರು ಇವರ ವಿರುದ್ಧದ ಲೋಕಾಯುಕ್ತ ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದಂಡನೆ ವಿಧಿಸುವ ಕುರಿತು - ಆದೇಶ.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಕಂಇ 15 ಮುನೋಸೇ(1) 2012 ದಿನಾಂಕ: 21-03-2012.

2. ಮಾನ್ಯ ಲೋಕಾಯುಕ್ತ ಕಛೇರಿಯ ಪತ್ರ ಸಂಖ್ಯೆ: ಲೋಕ್/ಎಆರ್ಇ-1/ಇಎನ್‌ಕ್ಯೂ- 141/2012 ದಿನಾಂಕ: 21-10-2014 ಮತ್ತು ಮಾನ್ಯ ಉಪ ಲೋಕಾಯುಕ್ತ ರವರ ಸಮ ಸಂಖ್ಯೆಯ ಶಿಫಾರಸ್ಸು ಪತ್ರ ದಿನಾಂಕ: 21-10-2014.

3. ಸರ್ಕಾರದ ಎರಡನೇ ಕಾರಣ ಕೇಳುವ ನೋಟೀಸು ಸಂಖ್ಯೆ: ಕಂಇ 90 ಮುನೋಸೇ(1) 2014 ದಿನಾಂಕ: 28-11-2014.

4. ಶ್ರೀ ಗಿರೀಶ್ಚಂದ್ರ, ಹಿರಿಯ ಉಪ ನೋಂದಣಾಧಿಕಾರಿ – ಇವರ ಲಿಖಿತ ಹೇಳಿಕೆ ಪತ್ರ ಸಂಖ್ಯೆ: ಕೆ.ಸಿ.ಹೆಚ್.274/14-15 ದಿನಾಂಕ: 17-01-2015.

5. ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗ, ಕಲಬುರಗಿ ಇವರ ಪತ್ರ ಸಂಖ್ಯೆ: ಕಂ/ಪ್ರಾಆಕ/ ಮುದ್ರಾಂಕ/ಮೇಲ್ಮನವಿ/01/2013-14/2442 ದಿನಾಂಕ: 29-09-2015.

6. ಜಿಲ್ಲಾ ನೋಂದಣಾಧಿಕಾರಿಗಳು, ಜಿಲ್ಲಾ ನೋಂದಣಿ ಕಛೇರಿ, ರಾಯಚೂರು ಇವರ ಪತ್ರ ಸಂಖ್ಯೆ: ಜಿನೋರಾ/ನೋಂದಣಿ/23/2016-17/288 ದಿನಾಂಕ: 06-09-2016.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮಾಂಕ (1) ದಿನಾಂಕ: 21-03-2012ರ ಆದೇಶದಲ್ಲಿ, ಶ್ರೀ ಗಿರೀಶ್ಚಂದ್ರ ರವರು ಈ ಹಿಂದೆ ಹಿರಿಯ ಉಪ ನೋಂದಣಾಧಿಕಾರಿ, ರಾಯಚೂರು ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಅವರ ವಿರುದ್ಧ ಶ್ರೀ ಕೆ.ಭೀಮಣ್ಣ, ತಂದೆ ಮುದ್ದರಂಗಪ್ಪ, ರಾಯಚೂರು ಇವರು ಮಾನ್ಯ ಲೋಕಾಯುಕ್ತ ಕಛೇರಿಯಲ್ಲಿ ಸಲ್ಲಿಸಿದ್ದ ದೂರಿನಲ್ಲಿ, ರಾಯಚೂರಿನ ಹಿರಿಯ ಉಪ ನೋಂದಣಾಧಿಕಾರಿ ಕಛೇರಿಯಲ್ಲಿ ರಾಯಚೂರು ಸಿಟಿ, ಯರಗೇರ ರಸ್ತೆಯಲ್ಲಿನ ಸರ್ವೆ ನಂ.1130, 1131, 1136 ಮತ್ತು 1137 ಗಳಲ್ಲಿನ 4 ಎಕರೆ ಕೃಷಿಯೇತರ ಜಮೀನಿಗೆ ಸಂಬಂಧಿಸಿದಂತೆ ದಿನಾಂಕ:21-5-2007ರಂದು ನೋಂದಾಯಿಸಿದ ಸೇಲ್‌ಡೀಡ್ ದಸ್ತಾವೇಜು ಸಂಖ್ಯೆ.1041/07-08ನ್ನು ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ಅಪಮೌಲ್ಯ ಮಾಡಿ, ಸರ್ಕಾರದ ಬೊಕ್ಕಸಕ್ಕೆ ರಾಜಸ್ವ ನಷ್ಟ ಉಂಟು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು, 1957ರ ನಿಯಮ 14(ಎ)ರನ್ವಯ ಸದರಿಯವರ ವಿರುದ್ಧ ವಿಚಾರಣೆ ನಡೆಸಲು ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವಹಿಸಿ ಆದೇಶಿಸಲಾಗಿತ್ತು.

ಅದರಂತೆ, ಮೇಲೆ ಓದಲಾದ ಕ್ರಮಾಂಕ (2) ದಿನಾಂಕ: 21-10-2014ರ ಪತ್ರದಲ್ಲಿ, ಮಾನ್ಯ ಉಪ ಲೋಕಾಯುಕ್ತರವರು ವಿಚಾರಣೆ ನಡೆಸಿ, ಶ್ರೀ ಗಿರೀಶ್ಚಂದ್ರ, ಹಿಂದಿನ ಹಿರಿಯ ಉಪ ನೋಂದಣಾಧಿಕಾರಿ, ರಾಯಚೂರು ಇವರ ವಿರುದ್ಧದ ಆರೋಪಗಳಿಗೆ ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಾವಳಿಗಳ ನಿಯಮ 14(ಎ)ರಡಿಯಲ್ಲಿ ವರದಿಯನ್ನು ಸಲ್ಲಿಸಿರುತ್ತಾರೆ. ಸದರಿ ವರದಿಯಲ್ಲಿ ಆರೋಪಿತ ಅಧಿಕಾರಿಯವರ ವಿರುದ್ಧದ ಆರೋಪವು ಸಾಬೀತಾಗಿರುವುದರಿಂದ, ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಾವಳಿಗಳ ನಿಯಮ 8(vi) ರನ್ವಯ ಸದರಿ ಆಪಾದಿತ ಅಧಿಕಾರಿಯವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವ ದಂಡನೆಯನ್ನು ವಿಧಿಸುವಂತೆ ಮಾನ್ಯ ಉಪ ಲೋಕಾಯುಕ್ತ ರವರು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ.

ಮೇಲೆ ಓದಲಾದ ಕ್ರಮಾಂಕ (3) ದಿನಾಂಕ: 28-11-2014ರ ಕಾರಣ ಕೇಳುವ ನೋಟೀಸ್‌ನಲ್ಲಿ, ಆರೋಪಿತ ಅಧಿಕಾರಿಯಾದ ಶ್ರೀ ಗಿರೀಶ್ಚಂದ್ರ, ಹಿಂದಿನ ಹಿರಿಯ ಉಪ ನೋಂದಣಾಧಿಕಾರಿ, ರಾಯಚೂರು ಇವರಿಗೆ ಮಾನ್ಯ ಉಪ ಲೋಕಾಯುಕ್ತರವರು ಕಳುಹಿಸಿರುವ ದಂಡನಾ ಶಿಫಾರಸ್ಸು ವರದಿ ಮತ್ತು ವಿಚಾರಣಾಧಿಕಾರಿಯವರ ವರದಿಯನ್ನು ಜಾರಿ ಮಾಡಲಾಗಿತ್ತು.

ಸದರಿ ಆರೋಪಿತ ಅಧಿಕಾರಿಯವರು ಮೇಲೆ ಓದಲಾದ ಕ್ರಮಾಂಕ (4) ದಿನಾಂಕ: 17-01-2015ರ ಲಿಖಿತ ಹೇಳಿಕೆಯಲ್ಲಿ, ಕೆಳಕಂಡಂತೆ ಸಮಜಾಯಿಷಿ ನೀಡಿರುತ್ತಾರೆ:-

(1) ಅನುಬಂಧ-ಎ 1, 2, 3, 4, 5ರಲ್ಲಿ ತಿಳಿಸಿರುವಂತೆ, ಕೇಂದ್ರೀಯ ಕಾನೂನು ಪ್ರಕಾರ ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸಲು ನೇಮಕವಾದ ಅವರು ನಿಯಮಾನುಸಾರ ಪ್ರಾಮಾಣಿಕವಾಗಿ ಸರ್ಕಾರ-ಕಾನೂನಿಗೆ ನಿಷ್ಟೆಯುಳ್ಳವರಾಗಿ, ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿದ್ದು, ಯಾವುದೇ ತರಹದ ಅಪರಾದವನ್ನು ಮಾಡಿಲ್ಲವೆಂದು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿಲ್ಲವೆಂದು,ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೯, ೨೦೧೭ ೯೬೧ ಆರೋಪಪಟ್ಟಿಯಲ್ಲಿ ನಮೂದಿಸಲಾದ ಎಲ್ಲಾ ಆಪಾದನೆಗಳನ್ನು ಸಾರಸಾಗಟಾಗಿ ನಿರಾಕರಿಸುತ್ತಾ, ಪಟ್ಟಭದ್ರ ಹಿತಾಸಕ್ತಿಗಳು, ದುರುದ್ದೇಶ ಪೂರ್ವಕವಾಗಿ ಅವರ ಮೇಲೆ ಈ ಆಪಾದನೆ ಮಾಡಿದ್ದು, ವಿಚಾರಣೆಯಲ್ಲಿ ಅವರ ಮತ್ತು ಅವರ ರಕ್ಷಣಾ ಸಹಾಯಕರ ವಾದವನ್ನು ಲೆಕ್ಕಿಸದೇ, ಗಣನೆಗೆ ತೆಗೆದುಕೊಳ್ಳದೇ, ನಿಯಮ ಬದ್ಧವಾದ ದಾಖಲೆಗಳನ್ನು (ಅನುಬಂಧ-ಎ 1,2,3,4,5) ಗಮನಿಸದೇ ಪೂರ್ವ ನಿಗದಿತ ತೀರ್ಮಾನ ಮಾಡಿದಂತೆ ವಿಚಾರಣಾಧಿಕಾರಿಗಳು ಅವರ ಮೇಲೆ ಈ ಪ್ರಕರಣದಲ್ಲಿ ಆರೋಪ ಸಾಬೀತು ಪಡಿಸಲು ಯತ್ನಿಸಿರುವುದರಿಂದ, ವಿಚಾರಣಾಧಿಕಾರಿಗಳು ಅವರ ವರದಿ ಹಾಗೂ ಅವರು ಸಲ್ಲಿಸಿದ ದಾಖಲೆಗಳನ್ನು ಮತ್ತು ಅವರ ಲಿಖಿತ ಮತ್ತು ಮೌಖಿಕ ವಾದವನ್ನು ಯಾಕೆ ಅಂಗೀಕರಿಸಲು ಆಗುವುದಿಲ್ಲವೆಂಬುದರ ಬಗ್ಗೆ ಹೇಳದೇ, ಕೇವಲ not acceptable ಎಂದು ಹೇಳಿರುವುದು ಸರಿಯಾದುದಲ್ಲವೆಂದು ತಿಳಿಸುತ್ತಾ, ವಿಚಾರಣಾಧಿಕಾರಿಗಳ ವರದಿಯನ್ನು ನಿಯಮಾನುಸಾರವಾಗಿ ನಿರಾಕರಿಸುತ್ತಾ, ಅನೇಕ ದಾಖಲೆಗಳು ಮತ್ತು ತೀರ್ಪುಗಳ ಉದೃತ ಭಾಗವನ್ನು ನಿಯಮಗಳ ಸಾರಾಂಶವನ್ನು ಉಲ್ಲೇಖಿಸುತ್ತಾ, ಅವರು ಈ ಪ್ರಕರಣದಲ್ಲಿ ನಿರಪರಾಧಿಯೆಂದು ಘೋಷಿಸಲು ಪ್ರಾರ್ಥಿಸಿರುತ್ತಾರೆ.

(2) ತೆರಿಗೆ ಕಾಯ್ದೆಯ ಒಂದು ಭಾಗವಾದ ಮುದ್ರಾಂಕ ಕಾಯ್ದೆಯು ಸರಳ ಮತ್ತು ನೇರ ಯಾವುದೇ ಕಗ್ಗಂಟು ಇಲ್ಲದ ಅಧಿನಿಯಮವಾಗಿದ್ದು, ಕಾಲ್ಪನಿಕ ನಡವಳಿಕೆಗೆ ಅವಕಾಶವಿಲ್ಲದ ಕಾನೂನು. ಸೆಕ್ಷನ್ -3 –Synopsis Indian Stamp Act:- Instrument is Chargeable not the Transaction ಇದನ್ನು ಗಮನದಲ್ಲಿಟ್ಟುಕೊಂಡು ಉಪ ನೋಂದಣಾಧಿಕಾರಿಯು ಕರ್ನಾಟಕ ನೋಂದಣಿ ನಿಯಮ 1965ರ ನಿಯಮ-41ರಂತೆ ಕಾರ್ಯ ನಿರ್ವಹಿಸಬೇಕಾಗಿದ್ದು, ಉಪ ನೋಂದಣಾಧಿಕಾರಿ ಸಮಕ್ಷಮ ನೋಂದಣಿಗೆ ಹಾಜರುಪಡಿಸಲಾದ ದಸ್ತಾವೇಜುಗಳನ್ನು ಓದಿ ವಿಮರ್ಶೆೆ ಮಾಡಿ ತೀರ್ಮಾನಿಸಬೇಕಾಗಿದ್ದು, ಕಲ್ಪನೆಗೆ ಮತ್ತು ಊಹೆಗೆ ಅವಕಾಶವಿರುವುದಿಲ್ಲ. ಮಾರುಕಟ್ಟೆ ಬೆಲೆಯನ್ನು ದಸ್ತಾವೇಜು ಬರೆದುಕೊಟ್ಟ ದಿನಾಂಕದಂದು ಇರುವ-ಬೆಲೆಯೇ ಸ್ಥಿರಾಸ್ತಿಯ ಬೆಲೆ ಆಗುತ್ತದೆ ಹೊರತು ಅಸ್ತಿತ್ವದಲ್ಲಿರದ ಅಭಿವೃದ್ಧಿ, ಸೌಕರ್ಯಗಳನ್ನು ಪರಿಗಣಿಸಲು ಕಲ್ಪನೆಯಲ್ಲಿ ನಿಗದಿ ಮಾಡುವಂತಿಲ್ಲವೆಂದು ತಿಳಿಸುತ್ತಾ, ಕಲಂ 45ಎ ರಲ್ಲಿ ಅಪಮೌಲ್ಯವಾಗಿದೆ ಎಂದು ನಂಬಲು ಅರ್ಹವಾದ ಕಾರಣಗಳಿದ್ದರೆ, ಕಲಂ 45ಎ ಕ್ಕೆ ಪೂರಕವಾಗಿರುವ Karnataka Stamp (Prevention of Undervaluation of Instrument) Rules 1977 ನಿಯಮ ಜಾರಿಯಲ್ಲಿದ್ದು, ಮಾರುಕಟ್ಟೆ ಮೌಲ್ಯ ನಿರ್ಧರಿಸಲು ಮಾನದಂಡವಾಗಿ ಇದೇ ನಿಯಮಾವಳಿಯ ನಿಯಮ-5 ರಲ್ಲಿ ವಿವರಿಸಲಾಗಿರುವಾಗ – ಉಪ ನೋಂದಣಾಧಿಕಾರಿ ತನ್ನ ಕರ್ತವ್ಯ ವ್ಯಾಪ್ತಿ ಮೀರಿ, ದಾಖಲೆಗಿಂತ ವಿಭಿನ್ನವಾಗಿ ಕ್ರಮ ಜರುಗಿಸಲು ಸಾಧ್ಯವೇ? ದಸ್ತಾವೇಜಿನಲ್ಲಿ ನಮೂದಾದ, ಬರೆಯಲಾದ, ಹೇಳಲಾದ ವಿವರಣೆಗಳನ್ನು ಉಪ ನೋಂದಣಾಧಿಕಾರಿ ಪರಿಶೀಲಿಸಬೇಕೇ ಹೊರತು ದಸ್ತಾವೇಜಿನಲ್ಲಿ ನಮೂದಾಗದ ವಿವರಣೆ ಬಗ್ಗೆ ಕಲ್ಪನೆ ಮಾಡಲು ಅವಕಾಶವಿಲ್ಲವಾದ್ದರಿಂದ, ಈ ಪ್ರಕರಣದಲ್ಲಿ ಸ್ಥಿರಾಸ್ತಿಯ ಕ್ರಯಪತ್ರದಲ್ಲಿ ಸ್ಥಿರಾಸ್ತಿಯನ್ನು ಅಪಮೌಲ್ಯವಾಗಿದೆ, ಕಡಿಮೆ ಬೆಲೆಗೆ ನೋಂದಾಯಿಸಲಾಗಿದೆ ಎಂದು ಹೇಳಿರುವ ಅರ್ಜಿದಾರರು, ನೀಡಿರುವ ಪುರಾವೆಗಳ ವಿವರಗಳನ್ನು ವಿಚಾರಣಾಧಿಕಾರಿಗಳು ಪರಿಶೀಲಿಸಿಯೇ ಇಲ್ಲ.

(3) ಸದರಿ ಕ್ರಯಪತ್ರ ನೋಂದಣಿಯಾದ ದಿನಾಂಕದಂದು ಚಾಲ್ತಿಯಲ್ಲಿದ್ದ, ಮಾರುಕಟ್ಟೆ ಬೆಲೆ ದರಪಟ್ಟಿಯಲ್ಲಿ ಕೆ.ಎಂ.ಲೇಔಟ್ ಎಂಬ ಬಡಾವಣೆ ಇತ್ತಾ ಅಥವಾ ನವೋದಯ ಮೆಡಿಕಲ್ ಕಾಲೇಜು ಎಂದು ಇತ್ತಾ ಎಂಬುದರ ಬಗ್ಗೆ ಗಮನಕ್ಕೆ ತೆಗೆದುಕೊಳ್ಳದೇ, ವಿಚಾರಣಾಧಿಕಾರಿಯವರು ಅರ್ಜಿದಾರರು ನೀಡಿರುವ ದೂರು ಸತ್ಯವೇದ ಎಂಬಂತೆ, ದಿನಾಂಕ ಎಂಬ ಕಾನೂನಿನ ಪರವಿಧಿಯನ್ನು೯೬೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೯, ೨೦೧೭ ಭಾಗ ೧ ಅಂಶಗಳನ್ನು ದಸ್ತುವಿನಲ್ಲಿ ಮರೆಮಾಚಿ ನೈಜ ಸ್ಥಿತಿಯನ್ನು ದಸ್ತುವಿನಲ್ಲಿ ಕಾಣಿಸದೇ ಇರುವುದು ಕಂಡುಬಂದಿದ್ದು ಇದ್ದು, ಈ ಅಂಶಗಳಿಂದ ಪ್ರಕರಣದಲ್ಲಿ ಅಪಮೌಲ್ಯವಾಗಿ ನೋಂದಾಯಿಸಲು ದಸ್ತುವಿಗೆ ಸಂಬಂಧಪಟ್ಟ ಪಕ್ಷಗಾರರೇ ಹೊಣೆಯಾಗಿದ್ದು, ಈ ಸಂಬಂಧ ಸರ್ಕಾರಕ್ಕೆ ಬರಬೇಕಾದ ರಾಜಸ್ವದ ವಸೂಲಾತಿಗಾಗಿ ಮೇಲ್ಕಂಡಂತೆ ಆದೇಶಿಸಿ ಕ್ರಮ ಕೈಗೊಳ್ಳಲಾಗಿದೆ" ಎಂದು ತಿಳಿಸಿರುತ್ತಾರೆ.

(7) ಕಲಂ 45ಬಿ ರನ್ವಯ ರಚನೆಯಾದ ಕೇಂದ್ರೀಯ ಮಾರುಕಟ್ಟೆ ಸಮಿತಿ ಪ್ರಚುರ ಪಡಿಸಿದ ಮಾರುಕಟ್ಟೆ ದರ ಪಟ್ಟಿಯಲ್ಲಿರುವ ದರಗಳು ಖಚಿತವು ಅಲ್ಲ, ಕನಿಷ್ಟವು ಅಲ್ಲ, ಗರಿಷ್ಟವು ಅಲ್ಲ, ಅದು ಕೇವಲ ಮಾರ್ಗಸೂಚಿ ಬೆಲೆಯಾಗಿರುವುದರಿಂದ (ಬೇಸ್ ವ್ಯಾಲ್ಯೂ), ಯಾವುದೇ ಅಪಮೌಲ್ಯವಾಗದೇ ಇದ್ದು, ನಿಯಮಾನುಸಾರ ನಿರ್ವಹಣೆಯಾಗಿರುವುದು ಹಾಗೂ ಮಾನ್ಯ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ಉಲ್ಲೇಖಿಸುತ್ತಾ, ಅವರು ಯಾವುದೇ ತಪ್ಪು ಮಾಡಿಲ್ಲವೆಂದು ತಿಳಿಸಿರುತ್ತಾರೆ.

(8) 2003 ರಿಂದ ಜಾರಿಯಲ್ಲಿರುವ ಕೇಂದ್ರೀಯ ಮಾರುಕಟ್ಟೆ ಸಮಿತಿಯಿಂದ ಮಾರುಕಟ್ಟೆ ದರ ಪಟ್ಟಿ ಪರಿಶೀಲನೆ ಆಗಿ ಅನುಮೋದನೆ ಆಗಿದ್ದು, ಈ ದರ ಪಟ್ಟಿಯಲ್ಲಿ ಸ್ಥಳದ ದರ ಕಡಿಮೆ ಎನಿಸಿದಲ್ಲಿ, ದೂರುದಾರರು ನಿಯಮ-5 ರ ಮೇರೆ ಆಕ್ಷೇಪಣೆ ಹಾಕಿ ಸದರಿ ಬಡಾವಣೆಗೆ (ಲೊಕೇಷನ್‌ಗೆ) ಅಭಿವೃಧ್ಧಿ ಆಗಿರುವ/ಆಗುತ್ತಿರುವ ಎಂಬ ಹೊಸ ದರ ಸೇರಿಸಬಹುದಾಗಿತ್ತು. ಆದರೆ ಈ ರೀತಿ ದೂರುದಾರರು ಮಾಡದೇ ವಿನಾಕಾರಣ ಎಲ್ಲರ ಮೇಲೆ ಅರ್ಜಿ ಹಾಕಿ ತೊಂದರೆ ಉಂಟು ಮಾಡಿದ್ದಾರೆಂದು ತಿಳಿಸಿರುತ್ತಾರೆ.

(9) ದಸ್ತಾವೇಜಿಗೆ ಒಳಪಟ್ಟ ಸ್ಥಿರಾಸ್ತಿಯು ನ್ಯಾಯಾಲಯದ ಪ್ರಕರಣಕ್ಕೆ ಒಳಪಟ್ಟಿರುವುದರಿಂದ ಖಂಡಿತ ಕ್ರಯವಾಗುವುದಿಲ್ಲ. Property is with encumbrance ಎಂದಾಗುತ್ತದೆ. ಅಂತಹ ಸ್ಥಿರಾಸ್ತಿಗಳಿಗೆ ಮಾರುಕಟ್ಟೆ ದರ ಅನ್ವಯಿಸುವುದು ಅಸಹಜ. Conditional Sale ಗೆ Regular Sale (Absolute Sale) ನ ದರ ಅನ್ವಯಿಸುವಂತಿಲ್ಲ. ಈ ಕ್ರಯ ದಸ್ತಾವೇಜು ನೋಂದಣಿಯಾದಾಗ, ಸ್ಥಿರಾಸ್ತಿಯ ಮೇಲೆ ದಾವೆ ಇತ್ತು ಎಂಬುದಕ್ಕೆ (ಉಚ್ಫ ನ್ಯಾಯಾಲಯದ ಆರ್.ಎಫ್.ಎ ಸಂಖ್ಯೆ: 660/2006 ಪಿಎಸಿ) ಸಾಕ್ಷಿಯಾಗಿದ್ದು, ದಸ್ತಾವೇಜಿನ ಪುಟ-6ರಲ್ಲಿ ಮೂಲದಾವೆಯನ್ನು ಉಲ್ಲೇಖಿಸಲಾಗಿದೆ. ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಜಿ.ಎಂ.ಎಫ್.ಸಿ-1 ಎಫ್‌ಡಿಪಿ ಗೆ ಸಂಬಂಧಿಸಿದ ನಕ್ಷೆ ಗಮನಿಸದೆ ಈ ಸ್ಥಿರಾಸ್ತಿ ಯರಗೇರಾ ರಸ್ತೆಗೆ ಹೊಂದಿರುವ ಸ್ಥಿರಾಸ್ತಿ ಎಂಬುವುದು ಸ್ಪಷ್ಟವಾಗುತ್ತದೆ. ಹೀಗಿರುವಾಗ, ಈ ದಸ್ತಾವೇಜು ನೋಂದಣಿಯಾದಾಗ ಈ ಬಡಾವಣೆ ಮತ್ತು ಹೇಳಲಾಗುತ್ತಿರುವ ಮೆಡಿಕಲ್ ಕಾಲೇಜು ಮಾರುಕಟ್ಟೆ ದರ ಪಟ್ಟಿಯಲ್ಲಿ ಇರಲಿಲ್ಲ. ಉಪ ನೋಂದಣಾಧಿಕಾರಿಯವರ ಕಾರ್ಯವ್ಯಾಪ್ತಿಯಲ್ಲಿ ವಿಚಾರಣೆ ಮಾಡುವ ಅಧಿಕಾರವಿಲ್ಲ, ಉಪ ನೋಂದಣಾಧಿಕಾರಿ ಎಕ್ಸಿಕ್ಯುಟೀವ್ ಆಗಿದ್ದಾರೆಯೇ, ಸಂಶಯ ಬಂದರೆ, ಅರ್ಜಿ ಬಂದರೆ, ಮಾನ್ಯ ಜಿಲ್ಲಾ ನೋಂದಣಾಧಿಕಾರಿಯವರು ಕಲಂ 45(ಎ)(3) ಪ್ರಕಾರ ಮತ್ತು ಕಲಂ 61ಕ್ಕೆ ಒಳಪಡಿಸಿ, ದಂಡನೆ ಸಹಿತ, ಕಕ್ಷಿಗಾರ ಸುಳ್ಳು ಪತ್ರ ಬರೆಸಿದ್ದರೆ ಅವರಿಂದ ವಸೂಲು ಮಾಡಲು ಅದನ್ನು ಬಿಟ್ಟು ಸತ್ಯಾಸತ್ಯತೆಯನ್ನು ಪರಿಶೀಲಿಸದೇ ಅರ್ಜಿದಾರನು ಯಾವ ಸರ್ಕಾರಿ ದಾಖಲೆ ಅಂದರೆ ಕಲಂ 45ಬಿ ಪ್ರಕಾರ ಹೊರಡಿಸಲಾದ ಮಾರುಕಟ್ಟೆ ಬೆಲೆ ದರ ಪಟ್ಟಿಯಲ್ಲಿ ರುಜುವಾತು ಪಡಿಸಲಿ, ಕೇಂದ್ರೀಯ ಮಾರುಕಟ್ಟೆ ಸಮಿತಿಯವರು ನಿಗದಿಪಡಿಸಿರುವ ದರವನ್ನು ಅನ್ವಯಿಸಿ ದಸ್ತಾವೇಜನ್ನು ನೋಂದಣಿ ಮಾಡಿದ್ದು, ಸರ್ಕಾರಕ್ಕೆ ಯಾವುದೇ ನಷ್ಟ ಉಂಟು ಮಾಡಿಲ್ಲವೆಂದು ತಿಳಿಸಿರುತ್ತಾರೆ.

(10) ಖರೀದಿ ಪಡೆದವರು ಕೇವಲ ಸೇಲಬಲ್ ಏರಿಯಾ ಮಾರಾಟ ಮಾಡಬೇಕಾಗುತ್ತದೆ. 33% ಸ್ಥಳ ಮಾರಾಟ ಮಾಡಲು ಅಧಿಕಾರ ಇರುವುದಿಲ್ಲ. ಇಂತಹ ಸ್ಥಳಗಳಿಗೆ ನಿವೇಶನ ದರ ಅನ್ವಯಿಸಬೇಕೇ ವಿನಃ ವಿಶಾಲ ವಿಸ್ತೀರ್ಣದ ಮಾರಾಟಕ್ಕೆ ಅಲ್ಲ. ವಿಶಾಲ ವಿಸ್ತೀರ್ಣ ಕ್ರಯಕ್ಕೆ ಪಡೆದವನು ನಿವೇಶನಗಳನ್ನು ಮಾಡಿ ಮಾರಾಟ ಮಾಡಿದರೆ, ಚದರಡಿ ದರ ಅನ್ವಯಿಸಬೇಕೇ ಹೊರತು ವಿಶಾಲ ವಿಸ್ತೀರ್ಣದ ಜಮೀನಿಗೆ ಅಲ್ಲ. ಈ ಬಗ್ಗೆ ಮೂರು ಪ್ರಕರಣಗಳಲ್ಲಿ ಮಾನ್ಯ ಸರ್ವೋಚ್ಫ ನ್ಯಾಯಾಲಯದ ತೀರ್ಪುಗಳನ್ನು ಗಮನಕ್ಕೆ ತರುತ್ತಾ, ವಿಚಾರಣಾಧಿಕಾರಿಯವರು ದೂರುದಾರರು ಯಾವುದೇ ಪೂರಕ ದಾಖಲೆಗಳನ್ನು ಹಾಜರು ಪಡಿಸದೇ ಇದ್ದರೂ ಸಹ ಅವರ ಆಕ್ಷೇಪಣೆಯನ್ನು ಯಾವ ಕಾರಣಕ್ಕಾಗಿ ಅಂಗೀಕರಿಸಿದ್ದಾರೆ ಎಂಬುದು ತಿಳಿದು ಬರುತ್ತಿಲ್ಲವೆಂದು ತಿಳಿಸಿರುತ್ತಾರೆ.

(11) ದೂರುದಾರರು ಕೆ.ಎಂ.ಲೇಔಟ್‌ನ ನಿವೇಶನ ಮಾರಾಟ ಮಾಡಿದ ಬಗ್ಗೆ ದಾಖಲೆ ಹಾಜರು ಪಡಿಸಿದ್ದನ್ನು, ದಿನಾಂಕ : 17-7-2014 ರಂದು ನೀಡಿರುವ ಹೇಳಿಕೆಯನ್ನು ಗಮನಿಸಿ, ಕೆ.ಎಂ.ಲೇಔಟ್ ನಲ್ಲಿ ಮಾರುಕಟ್ಟೆ ಬೆಲೆ ಚದರಡಿ ಒಂದಕ್ಕೆ `. 1,000/- ಇತ್ತು ಎಂದು ಹೇಳಿದಾತ ತಾನು ಕ್ರಯ ಮಾಡಿದ 216 ಚದರ ಮೀಟರ್ ಅಳತೆಯ ನಿವೇಶನವನ್ನು ಕೇವಲ `. 23,24,160/- ಮಾರುಕಟ್ಟೆ ಬೆಲೆ ಆಗುತ್ತದೆ. ಅವರ ಹೇಳಿಕೆಯನ್ನು ಪರಿಗಣಿಸಿದ ವಿಚಾರಣಾಧಿಕಾರಿಯು "Guideline value is only value of reference, it has to be taken as base and is not a market value, but market value may be less or more to that value" ಎಂಬುದನ್ನು ಗಮನಿಸಿಲ್ಲವೆಂದು ತಿಳಿಸುತ್ತಾ, ಕೇಂದ್ರೀಯ ಮಾರುಕಟ್ಟೆ ಸಮಿತಿಯು ಪ್ರಚುರ ಪಡಿಸಿದ ದರವನ್ನು ಮಾರಾಟಗಾರರು ವ್ಯವಹಾರಕ್ಕೆ ಆಧಾರವಾಗಿಟ್ಟುಕೊಳ್ಳಬಹುದು. ಆದರೆ, ಮಾರುಕಟ್ಟೆ ಬೆಲೆ ಗೊತ್ತಿದ್ದಾಗ ಅದಕ್ಕೆ ಶುಲ್ಕ ಪಾವತಿಸಬೇಕು. ಈ ಪ್ರಕರಣದಲ್ಲಿ ದೂರುದಾರರು ಹೇಳಿದಂತೆ ಮಾರುಕಟ್ಟೆ ಬೆಲೆ `. 23,24,160/- ಇದೆ ಎಂದು ತಿಳಿದಿದ್ದು, ಕೇಂದ್ರೀಯ ಮಾರುಕಟ್ಟೆ ಸಮಿತಿಯು ಪ್ರಚುರ ಪಡಿಸಿದ ಬೆಲೆ ದಾಖಲೆಗಳನ್ನು ಪರಿಗಣಿಸಿರುವುದಿಲ್ಲವೆಂದು ತಿಳಿಸಿರುತ್ತಾರೆ.

12) ಕೇಂದ್ರೀಯ ಮಾರುಕಟ್ಟೆ ಸಮಿತಿಯ ದರ ದಾಖಲೆ ಸಹಿತ, ಹೋಲಿಕೆ ಪಟ್ಟಿ ಸಹಿತ ಸಲ್ಲಿಸುತ್ತಾ, ಈ ಪ್ರಕರಣದಲ್ಲಿ ಅವರು ಯಾವುದೇ ವಿಧದಲ್ಲೂ ದಸ್ತಾವೇಜಿನಲ್ಲಿ ನಮೂದಿಸಿದ ಸ್ಥಿರಾಸ್ತಿಯ ಅಪಮೌಲ್ಯ ಮಾಡಿ, ಸರ್ಕಾರಕ್ಕೆ ನಷ್ಟ ಉಂಟು ಮಾಡಿಲ್ಲವೆಂದು, ಇದೊಂದು ಕಲ್ಪೋಕಲ್ಪಿತ ಮತ್ತು ಕಾನೂನಿನ ಬೆಂಬಲವಿಲ್ಲದ ಆಪಾದನೆಯಾಗಿದ್ದು, ದೂರುದಾರರು ತಮ್ಮ ವ್ಯವಹಾರದ ವೈಮನಸ್ಸನ್ನು ನೆಪವಾಗಿಟ್ಟುಕೊಂಡು ಸೇಡು ತೀರಿಸಿಕೊಳ್ಳಲು ಮನಸ್ಸುಳ್ಳವರಾಗಿದ್ದು, ಅವರ ಮೇಲೆ ಸುಳ್ಳು ಆರೋಪ ಮಾಡಿರುತ್ತಾರೆಂದು ತಿಳಿಸುತ್ತಾ, ಮೇಲಿನ ಸತ್ಯಾಂಶವನ್ನು ಮತ್ತು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸುವಂತೆ ಕೋರಿರುತ್ತಾರೆ.

13) ಮುಂದುವರೆದು, ಅವರು ಕೇಂದ್ರೀಯ ಮಾರುಕಟ್ಟೆ ಸಮಿತಿಯ ದರ ದಾಖಲೆ ಸಹಿತ, ಹೋಲಿಕೆ ಪಟ್ಟಿ ಸಹಿತ ಸಲ್ಲಿಸುತ್ತಾ, ಈ ಪ್ರಕರಣದಲಿ ್ಲ ಅವರು ಯಾವುದೇ ವಿಧದಲ್ಲೂ ದಸ್ತಾವೇಜಿನಲ್ಲಿ ನಮೂದಿಸಿದ ಸ್ಥಿರಾಸ್ತಿಯ ಅಪಮೌಲ್ಯ ಮಾಡಿ, ಸರ್ಕಾರಕ್ಕೆ ನಷ್ಟ ಉಂಟು ಮಾಡಿಲ್ಲವೆಂದು, ಹಾಗೂ ರಾಯಚೂರು ಜಿಲ್ಲಾ ನೋಂದಣಾಧಿಕಾರಿಗಳು ಈ ಬಗ್ಗೆ ಮಾನ್ಯ ಲೋಕಾಯುಕ್ತ ಕಛೇರಿಗೆ ಪತ್ರ ಬರೆದಿದ್ದರೂ ಸಹ, ಇದೊಂದು ಕಲ್ಪೋಕಲ್ಪಿತ ಮತ್ತು ಕಾನೂನಿನ ಬೆಂಬಲವಿಲ್ಲದ ಆಪಾದನೆಯಾಗಿದ್ದು, ಅವರ ವಿರುದ್ಧದ ಆಪಾದನೆಯನ್ನು ಸಂಪೂರ್ಣವಾಗಿ ನಿರಾಕರಿಸುತ್ತಾ, ಮಾನ್ಯ ವಿಚಾರಣಾಧಿಕಾರಿಗಳು ಅವರ ಅಹವಾಲು, ಲಿಖಿತ ಹೇಳಿಕೆ, ದಾಖಲೆಗಳನ್ನು ಪರಿಗಣಿಸದೇಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೯, ೨೦೧೭ ೯೬೩ ಉದ್ದೇಶಪೂರ್ವಕವಾಗಿ BIAS ಎನ್ನುವ ರೀತಿಯಲ್ಲಿ ವರದಿ ಸಲ್ಲಿಸಿದ್ದಾಗಿರುವುದರಿಂದ, ಲಿಖಿತ ಹೇಳಿಕೆಯೊಂದಿಗೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ಪ್ರಕರಣವನ್ನು ಕೈಬಿಡಲು ವಿನಂತಿಸಿರುತ್ತಾರೆ.

ಕಡತವನ್ನು ಹಾಗೂ ಆಪಾದಿತರು ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಿದ ಸರ್ಕಾರವು, ಪ್ರಕರಣದಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ, ಗುಲ್ಬರ್ಗಾ ಪ್ರಾದೇಶಿಕ ಆಯುಕ್ತರ ಕಛೇರಿಯಲ್ಲಿನ ಪ್ರಕರಣ ಸಂಖ್ಯೆ: ಕಂ/ಪ್ರಾಆಗು/ಮುದ್ರಾಂಕ/ಮೇಲ್ಮನವಿ/1/2014-15ರ ವರದಿಯನ್ನು ಪಡೆಯಲು ತೀರ್ಮಾನಿಸಿ, ಗುಲ್ಬರ್ಗಾ ಪ್ರಾದೇಶಿಕ ಆಯುಕ್ತರಿಗೆ ಸರ್ಕಾರದ ಪತ್ರ ಸಂಖ್ಯೆ: ಕಂಇ 90 ಮುನೋಸೇ(1) 2014 ದಿನಾಂಕ: 25-08-2015ನ್ನು ಕಳುಹಿಸಲಾಗಿರುತ್ತದೆ. ಮೇಲೆ ಓದಲಾದ ಕ್ರಮಾಂಕ (5) ದಿನಾಂಕ: 29-09-2015ರ ಪತ್ರದಲ್ಲಿ, ಪ್ರಾದೇಶಿಕ ಆಯುಕ್ತರು, ಕಲಬುರ್ಗಿ ಇವರು ತಮ್ಮ ಕಛೇರಿಯಲ್ಲಿ ದಾಖಲಾದ ಜಿಲ್ಲಾ ನೋಂದಣಾಧಿಕಾರಿಗಳು, ರಾಯಚೂರು ರವರು ಸಲ್ಲಿಸಿದ ಮೇಲ್ಮನವಿ ಪ್ರಕರಣದ ಪ್ರಸ್ತುತ ಹಂತವನ್ನು ಕಳುಹಿಸುವಂತೆ ಕೋರಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲಾ ನೋಂದಣಾಧಿಕಾರಿಗಳ ಆದೇಶ ಸಂಖ್ಯೆ: ಎಸ್‌ಟಿಪಿ/45-ಎ(3)/ 1041/2007-08 ದಿನಾಂಕ: 26-03-2013 ರ ಆದೇಶದ ವಿರುದ್ಧ ಶ್ರೀ ರಾಜೇಂದ್ರ ಪಾಟೀಲ ತಂದೆ ವಿಠ್ಠಲರಾವ ಪಾಟೀಲ ರಾಯಚೂರು ರವರು ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಕಲಂ 45-ಎ(5) ರಂತೆ ಪ್ರಾದೇಶಿಕ ಆಯುಕ್ತರ ಕಛೇರಿಯಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಅವರ ಕಛೇರಿಯಿಂದ ದಿನಾಂಕ: 25-7-2015 ರಂತೆ ನೀಡಲಾದ ನೋಟೀಸಿನಂತೆ ಮೇಲ್ಮನವಿದಾರರಾದ ಶ್ರೀ ರಾಜೇಂದ್ರ ಪಾಟೀಲ ರವರು ಚಲನ್ ನಂ. 13 ದಿನಾಂಕ: 31-1-2015 ರಂತೆ `. 91650/- ಬ್ಯಾಂಕ್ ಚಲನ್ ಮುಖಾಂತರ ಮೊತ್ತ ಭರಿಸಿರುತ್ತಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಶ್ರೀ ಕೆ.ಭೀಮಣ್ಣ (ದೂರುದಾರರು) ರವರು ಪ್ರಾದೇಶಿಕ ಆಯುಕ್ತರ ಕಛೇರಿಗೆ ಮೇಲ್ಮನವಿ ಸಲ್ಲಿಸಿರುತ್ತಾರೆ. ಈ ಎರಡು ಮೇಲ್ಮನವಿಗಳು ಕ್ರೋಡೀಕರಿಸಿ ವಿಚಾರಣೆಗೆ ತೆಗೆದುಕೊಳ್ಳಲಾಗಿರುತ್ತದೆ. ಜಿಲ್ಲಾ ನೋಂದಣಾಧಿಕಾರಿಗಳು, ರಾಯಚೂರು ರವರ ದಿನಾಂಕ: 26-03-2013ರ ಆದೇಶದ ವಿರುದ್ಧ ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಕಲಂ 45-ಎ(5) ರಡಿಯಲ್ಲಿ ಶ್ರೀ ರಾಜೇಂದ್ರ ಪಾಟೀಲ್ ಮತ್ತು ಶ್ರೀ ಕೆ.ಭೀಮಣ್ಣ ನವರು ಸಲ್ಲಿಸಿರುವ ಎರಡು ಮೇಲ್ಮನವಿ ಪ್ರಕರಣಗಳನ್ನು ಕ್ರೋಡೀಕರಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿಯನ್ನು ಒದಗಿಸಿರುತ್ತಾರೆ.

ಪ್ರಕರಣದಲ್ಲಿನ ದೂರುದಾರರಾದ ಶ್ರೀ ಕೆ.ಭೀಮಣ್ಣ ರವರು ಸಲ್ಲಿಸಿರುವ ದೂರಿನಲ್ಲಿರುವ ಅಂಶಗಳ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ಹಿಂದಿನ ರಾಯಚೂರು ಹಿರಿಯ ಉಪನೋಂದಣಾಧಿಕಾರಿಗಳಾದ ಶ್ರೀ ಗಿರೀಶ್ಚಂದ್ರ ರವರು ಮೇಲಿನ ದಸ್ತಾವೇಜು ನೋಂದಣಿ ಪ್ರಕರಣದಲ್ಲಿ ಅಪಮೌಲ್ಯ ಮಾಡಿ, ಸರ್ಕಾರದ ಬೊಕ್ಕಸಕ್ಕೆ ರಾಜಸ್ವ ನಷ್ಟ ಉಂಟು ಮಾಡಲಾಗಿದೆಯೇ ಎಂಬ ಬಗ್ಗೆ, ಪರಿಶೀಲಿಸಿ ತಕ್ಷಣವೇ ಸ್ಪಷ್ಟ ಅಭಿಪ್ರಾಯದೊಂದಿಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸರ್ಕಾರದ ಪತ್ರ ಸಂಖ್ಯೆ: ಕಂಇ 90 ಮುನೋಸೇ(1) 2014 ದಿನಾಂಕ: 28-06-2016 ಮತ್ತು 22-08-2016ರ ಪತ್ರಗಳಲ್ಲಿ ರಾಯಚೂರು ಜಿಲ್ಲಾ ನೋಂದಣಾಧಿಕಾರಿಗಳನ್ನು ಕೋರಲಾಗಿತ್ತು.

ರಾಯಚೂರು ಜಿಲ್ಲಾ ನೋಂದಣಾಧಿಕಾರಿಗಳು ಮೇಲೆ ಓದಲಾದ ಕ್ರಮಾಂಕ(6)ರ ದಿನಾಂಕ : 06-09-2016ರ ಪತ್ರದಲ್ಲಿ, ಶ್ರೀ ಗಿರೀಶ್ಚಂದ್ರ ಹಿಂದಿನ ಉಪ ನೋಂದಣಾಧಿಕಾರಿಗಳು ರಾಯಚೂರು ಇವರು ಉಪನೋಂದಣಿ ಕಚೇರಿ, ರಾಯಚೂರು ಇಲ್ಲಿ ದಿನಾಂಕ:21-05-2007 ರಂದು ನೋಂದಣಿ ಮಾಡಿರುವ ದಸ್ತಾವೇಜು ಸಂಖ್ಯೆ1041/2007-08 ರಲ್ಲಿ ಅಪಮೌಲ್ಯಗೊಳಿಸಿ ಸರ್ಕಾರಕ್ಕೆ `. 69,69,600/-ಗಳನ್ನು ರಾಜಸ್ವ ನಷ್ಟ ಉಂಟು ಮಾಡಿರುತ್ತಾರೆ ಎಂದು ಶ್ರೀ ಭೀಮಪ್ಪ ಎಂಬುವವರು ಲೋಕಾಯುಕ್ತದಲ್ಲಿ ದೂರು ಸಲ್ಲಿಸಿದ್ದು, ಸದರಿ ದೂರು ಸಂಬಂಧ ಮೇಲಿನ ದಸ್ತಾವೇಜನ್ನು ಕರ್ನಾಟಕ ಮುದ್ರಾಂಕ ಕಾಯ್ದೆ, 1957 ಅನುಚ್ಚೇದ 2(ಎಮ್ಎಮ್) ರ ಪ್ರಕಾರ ಮತ್ತು ಇದೇ ಕಾಯ್ದೆಯ ಕಲಂ 45ಬಿ ಪ್ರಕಾರ ಕೇಂದ್ರಿಯ ಮೌಲ್ಯ ಮಾಪನ ಸಮಿತಿಯು ಇಡೀ ರಾಜ್ಯಕ್ಕೆ ಸಂಬಂಧಿಸಿದಂತೆ ಸ್ವತ್ತಿನ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸುತ್ತದೆ. ಈ ಬಗ್ಗೆ ಮಾರ್ಗಸೂಚಿ ಮೌಲ್ಯದ ಬಗ್ಗೆ ಸರ್ಕಾರಿ ಪತ್ರದಲ್ಲಿ ಪ್ರಕಟಿಸಲಾಗುತ್ತದೆ.

ಈ ಸಮಿತಿಯು ನಿಶ್ಚಯಿಸುವ ಸ್ವತ್ತಿನ ಮಾರುಕಟ್ಟೆ ದರ ಅಥವಾ ದಸ್ತಾವೇಜಿನಲ್ಲಿ ನಮೂದಿಸುವ ಮಾರುಕಟ್ಟೆ ಮೌಲ್ಯ ಇವೆರಡರಲ್ಲಿ ಯಾವುದು ಹೆಚ್ಚು ಅದಕ್ಕೆ ಶುಲ್ಕವನ್ನು ಆಕರಿಸಲಾಗುತ್ತದೆ. ಅಲ್ಲದೆ, ವಿವಿಧ ರೀತಿಯ ಸ್ವತ್ತುಗಳಿಗೆ ಯಾವ ರೀತಿಯ ಶುಲ್ಕ ಆಕರಿಸಬೇಕು ಎಂಬುದರ ಬಗ್ಗೆ ಈ ಸ್ಥಿರಾಸ್ತಿ ಮಾರ್ಗಸೂಚಿಯಲ್ಲಿ ತಿಳಿಸಲಾಗಿರುತ್ತದೆ. ಉಪ ನೋಂದಣಾಧಿಕಾರಿಗಳು ಈ ಮಾರ್ಗಸೂಚಿಯಲ್ಲಿ ತಿಳಿಸಲಾಗಿರುವ ಆಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಅದರಂತೆ 2005-06ರಲ್ಲಿ ಹೊರಡಿಸಲಾದ ಅಧಿಸೂಚನೆಯು ದಿನಾಂಕ:24-9-2007 ರವರೆಗೆ ಜಾರಿಯಲ್ಲಿದ್ದು, ಸದರಿ ಪ್ರಶ್ನಿತ ದಸ್ತಾವೇಜು ನೋಂದಣಿ ಸಮಯದಲ್ಲಿ ಈ ಅಧಿಸೂಚನೆ ಪ್ರಕಾರವೇ ಕ್ರಮವಹಿಸಲಾಗಿದೆ.

ಕರ್ನಾಟಕ ಮುದ್ರಾಂಕ ಕಾಯ್ದೆ, 1957 ರ ಅನುಚ್ಚೇದ 28 ಮತ್ತು 61ರ ಪ್ರಕಾರ ದಸ್ತಾವೇಜಿನಲ್ಲಿ ನಮೂದಿಸಿರುವ ಪಕ್ಷಕಾರರು ಸ್ವತ್ತಿಗೆ ಸಂಬಂಧಿಸಿದಂತೆ ಮತ್ತು ನೈಜ ಮುದ್ರಾಂಕ ಶುಲ್ಕ ಆಕರಣೆಗೆ ಅನುವಾಗುವಂತೆ ಸತ್ಯಾಂಶ ಮತ್ತು ಸಂದರ್ಭಗಳನ್ನು ದಸ್ತಾವೇಜಿನಲ್ಲಿ ತಿಳಿಸಬೇಕು, ತಪ್ಪಿದಲ್ಲಿ ಶಿಕ್ಷಿಸಲ್ಪಡುತ್ತಾರೆ ಮತ್ತು ಪಕ್ಷಕಾರರೆ ಮುಂದಿನ ಆಗು-ಹೋಗುಗಳಿಗೆ ಸಂಪೂರ್ಣ ಹೊಣೆಗಾರರಾಗಿರುತ್ತಾರೆ.

ಪ್ರಶ್ನಿತ ದಸ್ತಾವೇಜು ಸಂಖ್ಯೆ1041/2007-08ನ್ನು ಪರಿಶೀಲಿಸಿದಾಗ, ಷೆಡ್ಯೂಲ್ ಸ್ವತ್ತು ರಾಯಚೂರು ಗ್ರಾಮದ ಯರಗೇರ ರಸ್ತೆಯಲ್ಲಿನ ಸರ್ವೆ ನಂ.1130, 1131, 1136 ಮತ್ತು 1137 ರಲ್ಲಿ ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತಿತಗೊಂಡಿರುವ, ಅಭಿವೃದ್ಧಿ ಹೊಂದದ ಜಮೀನು ಆಗಿದ್ದು, ಒಟ್ಟು ವಿಸ್ತೀರ್ಣ 04 ಎಕರೆ ಹೊಂದಿರುತ್ತದೆ. ಮಾನ್ಯ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು, ಬೆಂಗಳೂರು ಮತ್ತು ಕೇಂದ್ರ ಮೌಲ್ಯ ಮಾಪನ ಸಮಿತಿ ಇವರಿಂದ ಅನುಮೋದನೆಗೊಂಡಿರುವ ಸ್ಥಿರಾಸ್ತಿ ಮಾರುಕಟ್ಟೆ ಮೌಲ್ಯ ಪಟ್ಟಿಯಲ್ಲಿ ವಾಸೋಪಯೋಗಿ ಉದ್ದೇಶಕ್ಕೆ ಭೂ ಪರಿವರ್ತನೆಗೊಂಡಿರುವ ಅಭಿವೃದ್ಧಿ ಹೊಂದದ ಮತ್ತು ನಿವೇಶನಗಳಿಗಾಗಿ ವಿಂಗಡಿಸಲು ಅಧಿಕೃತವಾಗಿ ಸಂಬಂಧಿಸಿದ ಪ್ರಾಧಿಕಾರದಿಂದ ಅಂಗೀಕರಿಸಲ್ಪಡದ ಜಮೀನುಗಳಿಗೆ ಇತರೆ ಕೃಷಿ ಜಮೀನಿನ ದರದ ಶೇಕಡ 50 ರಷ್ಟು ಹೆಚ್ಚಿಗೆ ದರ ನಿಗದಿಪಡಿಸಬೇಕು ಎಂದು ತಿಳಿಸಲಾಗಿದೆ. ರಾಯಚೂರು ಗ್ರಾಮದ ಯರಗೇರ ರಸ್ತೆಯಲ್ಲಿ ಕೃಷಿ ಭೂಮಿ ದರವನ್ನು ಪ್ರತಿ ಎಕರೆಗೆ `. 54,000/-ಗಳಿಗೆ ನಿಗದಿಪಡಿಸಲಾಗಿದೆ. ಅದರಂತೆ ಈ ಬೆಲೆಗೆ ಶೇಕಡ 50 ರಷ್ಟು ಹೆಚ್ಚು ಅಂದರೆ `. 81,000/-ಗಳಾಗಿದ್ದು, 04 ಎಕರೆಗೆ ಮಾರುಕಟ್ಟೆ ಮೌಲ್ಯ `. 3,24,000/-ಗಳಾಗುತ್ತದೆ. ಸದರಿ ದಸ್ತಾವೇಜಿನಲ್ಲಿ ಪಕ್ಷಗಾರರು ಸ್ವಯಂ ಕ್ರಯದ ಮೊತ್ತ (ಪ್ರತಿಫಲನ) `. 38,00,000/-ಗಳೆಂದು ತೋರಿಸಿರುವುದರಿಂದ, ಈ ಪ್ರತಿಫಲನ ಮೊತ್ತಕ್ಕೆ ಮುದ್ರಾಂಕ ಶುಲ್ಕ `. 3,19,380/- ಮತ್ತು ನೋಂದಣಿ ಶುಲ್ಕ `.38,000/- ಗಳನ್ನು ಪಡೆಯಲಾಗಿರುತ್ತದೆ. ಅಂದರೆ ಮಾರುಕಟ್ಟೆ ಮೌಲ್ಯಕ್ಕಿಂತ ಸುಮಾರು ಹತ್ತರಷ್ಟು ಹೆಚ್ಚಿನ ಮೌಲ್ಯಕ್ಕೆ ಶುಲ್ಕವನ್ನು ಪಡೆಯಲಾಗಿರುತ್ತದೆ.

ಮೇಲ್ಕಂಡ ಅಂಶಗಳ ಆಧಾರದ ಮೇಲೆ ಅಂದಿನ ಹಿರಿಯ ಉಪನೋಂದಣಾಧಿಕಾರಿಗಳಾದ ಶ್ರೀ ಗಿರೀಶ್ಚಂದ್ರ ಇವರು ಯಾವುದೇ ತಪ್ಪು ಮಾಡದೇ ನಿಯಾಮಾನುಸಾರ ಕರ್ತವ್ಯ ನಿರ್ವಹಿಸಿದ್ದು, ಸರ್ಕಾರಕ್ಕೆ ಯಾವುದೇ ಅಪಮೌಲ್ಯ ಮಾಡಿರುವುದಿಲ್ಲ ಹಾಗೂ ಸರ್ಕಾರಕ್ಕೆ ರಾಜಸ್ವ ನಷ್ಟ ಉಂಟು ಮಾಡಿರುವುದಿಲ್ಲ. ಮೇಲೆ ತಿಳಿಸಿದಂತೆ ದಸ್ತಾವೇಜಿನಲ್ಲಿ ಸತ್ಯಾಂಶಗಳನ್ನು ನಮೂದಿಸಬೇಕಾಗಿರುವುದು ಪಕ್ಷಕಾರರ ಕರ್ತವ್ಯವಾಗಿರುತ್ತದೆ. ದಸ್ತಾವೇಜಿನಲ್ಲಿ ನಮೂದಾಗಿರುವ ಅಂಶಗಳ ಆಧಾರದ ಮೇಲೆ ಉಪ ನೋಂದಣಾಧಿಕಾರಿಗಳು ಸರಿಯಾದ ಶುಲ್ಕ ಆಕರಣೆ ಮಾಡಿ ನೋಂದಾಯಿಸುತ್ತಾರೆ. ಹಾಗಾಗಿ೯೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೯, ೨೦೧೭ ಭಾಗ ೧ ಉಪ ನೋಂದಾಣಾಧಿಕಾರಿಗಳಾದ ಶ್ರೀ ಗಿರೀಶ್ಚಂದ್ರ ರವರು ದಸ್ತಾವೇಜಿನಲ್ಲಿ ತಿಳಿಸಲಾಗಿರುವ ಅಂಶಗಳ ಆಧಾರದ ಮೇಲೆ ಮತ್ತು ನೋಂದಣಿ ನಿಯಮ 41ರಂತೆ ನೋಂದಣಿ ಮಾಡಿರುತ್ತಾರೆಂಬ ಅಂಶವನ್ನು ಸರ್ಕಾರದ ಗಮನಕ್ಕೆ ತರುತ್ತಾ, ಪ್ರಸ್ತುತ ಪ್ರಕರಣವನ್ನು ಸರ್ಕಾರದ ಹಂತದಲ್ಲಿಯೇ ಮುಕ್ತಾಯಗೊಳಿಸಬೇಕೆಂದು ಕೋರಿರುತ್ತಾರೆ.

ರಾಯಚೂರು ಜಿಲ್ಲಾ ನೋಂದಣಾಧಿಕಾರಿಗಳ ತಿದ್ದುಪಡಿ ಆದೇಶ ಸಂಖ್ಯೆ: ಎಸ್‌ಟಿಪಿ/45ಎ(3)/ರಾ.ದ.ಪಿ. 1041/2007-08 ದಿನಾಂಕ :

26-03-2013 ರಲ್ಲಿ ದಸ್ತಾವೇಜಿನ ಬಗ್ಗೆ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಕಲಂ 45(ಎ)(3)ರಡಿ ಪ್ರಕರಣ ದಾಖಲಿಸಿಕೊಂಡು ಈ ಕೆಳಕಂಡಂತೆ ಆದೇಶ ನೀಡಿರುತ್ತಾರೆ.

ಆದೇಶ

ಕರ್ನಾಟಕ ಮುದ್ರಾಂಕ ಕಾಯ್ದೆ, 1957 ರ ಕಲಂ 67(2) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಪೀpಕೆಯಲ್ಲಿ ಚರ್ಚಿಸಿದಂತೆ ಶ್ರೀ ಕೆ.ಭೀಮಣ್ಣ ತಂದೆ ಮುದ್ದುರಂಗಪ್ಪ ಸಾ|| ರಾಯಚೂರು ಇವರು ಕರ್ನಾಟಕ ಮುದ್ರಾಂಕ ಕಾಯ್ದೆ, 1957 ರಡಿ ಸಲ್ಲಿಸಿದ ಮೇಲ್ಮನವಿ ಪ್ರಕರಣದಲ್ಲಿ ಈಗಾಗಲೇ ದಿನಾಂಕ:18-01-2008 ರಂದು ಸಕ್ಷಮ ಪ್ರಾಧಿಕಾರವು ಹೊರಡಿಸಿದ ಪ್ರಶ್ನಿಸಿ ಆದೇಶ ಸಂಖ್ಯೆ : STP/45ಎ(3)/ರಾ.ದ.ಪಿ.101/2007-08 ದಿನಾಂಕ:18-01-2008ರ ಆದೇಶವನ್ನು ತಿದ್ದುಪಡಿ ಮಾಡಿ, ಈ ಮೇಲ್ಕಂಡಂತೆ ಪ್ರಸ್ತಾವನೆಯಲ್ಲಿ ಹಾದು ಹೋದ ಅಂಶಗಳಿಂದ ಸದರಿ ಆಸ್ತಿಯ ಮಾರ್ಕೆಟ್ ಮೌಲ್ಯವು `. 57,50,000=00 ಗಳೆಂದು ನಿರ್ಣಯಿಸಿ ಆದೇಶಿಸಿದೆ.

ಅದರಂತೆ ಅವಿಭಕ್ತ 04 ಎಕರೆ ಕ್ಷೇತ್ರ ಭೂಮಿಯ ಮಾರುಕಟ್ಟೆ ಮೌಲ್ಯ `. 57,50,000/-

ದಸ್ತಾವೇಜಿನಲ್ಲಿ ಕಾಣಿಸಿದ ಮೌಲ್ಯ `. 38,00,000/-

ಮಾರುಕಟ್ಟೆ ಮೌಲ್ಯದಲ್ಲಿನ ವ್ಯತ್ಯಾಸ `. 19,50,000/-

ಈ ವ್ಯತ್ಯಾಸದ ಮೌಲ್ಯದ ಮೇಲೆ ಪ್ರತಿವಾದಿಗಳು ಸರ್ಕಾರಕ್ಕೆ ಭರಣಾ ಮಾಡಬೇಕಾದ ಮುದ್ರಾಂಕ ಶುಲ್ಕ ಶೇಕಡ (7.5+12) ರಂತೆ `. 1,63,800=00 ಮತ್ತು ನೋಂದಣಿ ಶುಲ್ಕ ಶೇಕಡ(1%) ರಂತೆ `. 19,500=00 ಒಟ್ಟು ಶುಲ್ಕಗಳು `. 1,83,300=00ಗಳೆಂದು ಆದೇಶಿಸಿದೆ.

ಪ್ರತಿವಾದಿಯು ಈ ಮೊತ್ತವನ್ನು ಈ ಆದೇಶ ಹೊರಡಿಸಿದ 90 ದಿನಗಳೊಳಗಾಗಿ ಸರ್ಕಾರದ ಮುದ್ರಾಂಕ/ ನೋಂದಣಿ ಲೆಕ್ಕ ಶೀರ್ಷಿಕೆ ಬಾಬ್ತಿಗೆ ಚಲನ್ ಮೂಲಕ ಜಮಾ ಮಾಡಿ ಅಸಲು ಚಲನನ್ನು ಮುಂದಿನ ಕ್ರಮಕ್ಕಾಗಿ ಈ ಪ್ರಾಧಿಕಾರದಲ್ಲಿ ಹಾಜರಪಡಿಸತಕ್ಕದ್ದು, ಒಂದು ವೇಳೆ ಪ್ರತಿವಾದಿಯವರು ನಿಗದಿತ ಅವಧಿಯಲ್ಲಿ ಕೊರತೆಯಾದ ಶುಲ್ಕಗಳನ್ನು ಭರಿಸದೇ ಇದ್ದಲ್ಲಿ ಪ್ರತಿಶತ 12% ರಂತೆ ಬಡ್ತಿಯನ್ನು ವಸೂಲು ಮಾಡತಕ್ಕದ್ದು ಎಂದು, ತಪ್ಪಿದಲ್ಲಿ ಸದರಿ ಮೊಬಲಗನ್ನು ಭೂ ಕಂದಾಯ ಬಾಕಿಯೆಂದು ಪರಿಗಣಿಸಿ ವಸೂಲಾತಿಗಾಗಿ ಕ್ರಮ ಜರುಗಿಸಲಾಗುವುದು.

ಈ ಆದೇಶವನ್ನು ಹೇಳಿ ಬರೆಸಿ ಬೆರಳಚ್ಚು ಮಾಡಿ ಮತ್ತು ನೋಡಿ ಇಂದು ದಿನಾಂಕ: 26-03-2013 ರಂದು ಆದೇಶಿಸಲಾಗಿದೆ." ಪ್ರಕರಣ ಸಂಖ್ಯೆ:ಎಸ್‌ಟಿಪಿ/45-ಎ(3)/ರಾ.ದ.ಪಿ1041/2007-08 ದಿನಾಂಕ : 26-03-2013 (ತಿದ್ದುಪಡಿ ಆದೇಶ) ರಂತೆ ಪ್ರಕರಣದ ಸ್ವತ್ತಿನ ಮಾರುಕಟ್ಟೆ ಮೌಲ್ಯವನ್ನು `. 57,50,000/-ಗಳೆಂದು ತೀರ್ಮಾನಿಸಿ ಆದೇಶಿಸಲಾಗಿರುತ್ತದೆ. ದಸ್ತಾವೇಜು `. 38,00,000/-ಮೌಲ್ಯಕ್ಕೆ ನೋಂದಾಯಿಸಲ್ಪಟ್ಟಿರುವುದರಿಂದ, `. 19,50,000/- ಗಳಿಂದ ಅಪಮೌಲ್ಯಗೊಂಡಿರುತ್ತದೆ. ಇದರಿಂದಾಗಿ ಸದರಿ ದಸ್ತಾವೇಜಿಗೆ `. 1,63,800/-(7.5+12) ಮುದ್ರಾಂಕ ಶುಲ್ಕ (ಪ್ರತಿ ಶತ 12 ಬಡ್ಡಿ ಸೇರಿ) ಹಾಗೂ `. 19,500/- ನೋಂದಣಿ ಶುಲ್ಕ (1%) ಒಟ್ಟು `. 1,83,300/- ರಾಜಸ್ವ ನಷ್ಟವಾಗಿರುವುದು ಕಂಡುಬಂದಿರುತ್ತದೆ.

ಮಾನ್ಯ ಉಪ ಲೋಕಾಯುಕ್ತರ ವರದಿಯಲ್ಲಿ, ಆರೋಪಿತ ಅಧಿಕಾರಿಯವರ ವಿರುದ್ಧದ ಆರೋಪಕ್ಕೆ ವಿಚಾರಣಾಧಿಕಾರಿಗಳು ಪೂರಕವಾದ ದಾಖಲೆ/ ಸಾಕ್ಷಿಗಳಡಿಯಲ್ಲಿ ವಿಚಾರಣೆ ನಡೆಸಿ, ಸಲ್ಲಿಸಲಾದ ವರದಿಯಿಂದ ಆರೋಪಿತರ ವಿರುದ್ಧದ ಆರೋಪವು ಸಾಬೀತಾಗಿರುತ್ತದೆ. ವಿಚಾರಣಾಧಿಕಾರಿಗಳು ನೀಡಿರುವ ವರದಿ ಮತ್ತು ಜಿಲ್ಲಾ ನೋಂದಣಾಧಿಕಾರಿ, ರಾಯಚೂರು ಇವರ ದಿನಾಂಕ: 26-03-2013ರ ಆದೇಶದ ಹಿನ್ನೆಲೆಯಲ್ಲಿ, ಆರೋಪಿತರು ಸಲ್ಲಿಸಿರುವ ಲಿಖಿತ ಸಮಜಾಯಿಷಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ಆರೋಪಿತರು ದಸ್ತಾವೇಜು ಸಂಖ್ಯೆ: 1041/2007-08 ಯಲ್ಲಿ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಅಪಮೌಲ್ಯ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದು ವಿಚಾರಣಾಧಿಕಾರಿಗಳ ವರದಿಯಿಂದ ಹಾಗೂ ರಾಯಚೂರು ಜಿಲ್ಲಾ ನೋಂದಣಾಧಿಕಾರಿಗಳ ಆದೇಶದಿಂದ ಸಾಬೀತಾಗಿರುತ್ತದೆ. ಈ ಹಿನ್ನೆಲೆಯಲ್ಲಿ, ಶ್ರೀ ಗಿರೀಶ್ಚಂದ್ರ, ಹಿಂದಿನ ಹಿರಿಯ ಉಪ ನೋಂದಣಾಧಿಕಾರಿ, ರಾಯಚೂರು ಪ್ರಸ್ತುತ ಹಿರಿಯ ಉಪ ನೋಂದಣಾಧಿಕಾರಿ, ಬಿಟಿಎಂ ಲೇಔಟ್, ಬೆಂಗಳೂರು ಇವರಿಗೆ ಮಾನ್ಯ ಉಪ ಲೋಕಾಯುಕ್ತರು ಶಿಫಾರಸ್ಸು ಮಾಡಿರುವ ದಂಡನೆಯನ್ನು ವಿಧಿಸಲು ಸರ್ಕಾರವು ನಿರ್ಣಯಿಸಿ, ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 69 ಮುನೋಸೇ(1) 2016, ಬೆಂಗಳೂರು, ದಿನಾಂಕ: 09-05-2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದಾಗಿ, ಶ್ರೀ ಗಿರೀಶ್ಚಂದ್ರ, ಹಿಂದಿನ ಹಿರಿಯ ಉಪ ನೋಂದಣಾಧಿಕಾರಿ, ರಾಯಚೂರು ಪ್ರಸ್ತುತ ಹಿರಿಯ ಉಪ ನೋಂದಣಾಧಿಕಾರಿ, ಬಿಟಿಎಂ ಲೇಔಟ್, ಬೆಂಗಳೂರು ಇವರ ವಿರುದ್ಧದ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ, ಸದರಿ ಆಪಾದಿತ ಅಧಿಕಾರಿಯವರನ್ನು ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಾವಳಿಗಳು, 1957ರ ನಿಯಮ 8(vi) ರನ್ವಯ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವ ದಂಡನೆಯನ್ನು ವಿಧಿಸಿ ಆದೇಶಿಸಿದೆ.

P.R. 160

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ. ನಾರಾಯಣಪ್ಪ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ. (ನೋಂದಣಿ ಮತ್ತು ಮುದ್ರಾಂಕ)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೯, ೨೦೧೭ ೯೬೫

ಕಂದಾಯ ಸಚಿವಾಲಯ

ವಿಷಯ : ನೋಂದಣಿ ಮತ್ತು ಮುದ್ರಾಂಕ ಇಲಾಖೆಯ 2017-18ನೇ ಸಾಲಿನ ಆಯವ್ಯಯ

ಅನುದಾನವನ್ನು ಖಜಾನೆ-2 ರಲ್ಲಿ ಬಿಡುಗಡೆ ಮಾಡುವ ಬಗ್ಗೆ.

ಓದಲಾಗಿದೆೆ : ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರ ಪತ್ರ ಸಂಖ್ಯೆ:

ಬಿಯುಡಿ/02/2016-17 ದಿನಾಂಕ: 25-04-2017.

ಪ್ರಸ್ತಾವನೆ :

ಮೇಲೆ ಓದಲಾದ ದಿನಾಂಕ:25-04-2017ರ ಪತ್ರದಲ್ಲಿ, 2017-18ನೇ ಸಾಲಿನ ಆಯವ್ಯಯ ಅನುದಾನಗಳನ್ನು ಖಜಾನೆ-2 ರಲ್ಲಿ ಬಿಡುಗಡೆ ಮಾಡುವ ಸಂಬಂಧ, ಸರ್ಕಾರದ ಆದೇಶ ಸಂಖ್ಯೆ: ಆಇ 03 ಬಿಪಿಇ 2017 ದಿನಾಂಕ: 31-3-2017ರಲ್ಲಿ, 2017-18ನೇ ಸಾಲಿನ ಆಯವ್ಯಯಕ್ಕೆ ಕುರಿತಂತೆ ಹೊರಡಿಸಲಾಗಿರುವ ಲೇಖಾನುದಾನ ನಿರೂಪಣೆ ಪಟ್ಟಿಯ ಕ್ರಮ ಸಂಖ್ಯೆ(14)ರಲ್ಲಿ ಕಂದಾಯ ಇಲಾಖೆಗೆ 2017-18ನೇ ಸಾಲಿನ ಅಭಿಯಾಚನೆ ಪುರಸ್ಕøತ ಮೊತ್ತ `. 582585.00 ಲಕ್ಷಗಳಲ್ಲಿ `. 145646.25 ಲಕ್ಷವನ್ನು ಲೇಖಾನುದಾನ ಪುರಸ್ಕøತ ಮೊತ್ತವನ್ನಾಗಿ ನಿಗದಿ ಪಡಿಸಲಾಗಿದೆ.

ಆದರಂತೆ, ಸರ್ಕಾರದ ಆದೇಶ ಸಂಖ್ಯೆ: ಆಇ 01 ಟಿಎಫ್‌ಪಿ 2017, ದಿನಾಂಕ:05-04-2017ರಲ್ಲಿ, ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯಂತೆ ಭಾಗ-5 ಲೇಖಾನುದಾನ ಮಿತಿ ಅಡಿಯಲ್ಲಿ ಆಡಳಿತ ಇಲಾಖೆಯು ಒಟ್ಟು ಆಯವ್ಯಯದ ನಾಲ್ಕನೇ ಒಂದು ಭಾಗವನ್ನು (ಲೇಖಾನುದಾನ ಮಿತಿ) ಬಿಡುಗಡೆ ಮಾಡಬಹುದಾಗಿರುತ್ತದೆ ಎಂದು ಸ್ಪಷ್ಟಪಡಿಸಿದೆ.

ಈಗಾಗಲೇ ಖಜಾನೆ-2ರಲ್ಲಿ ಅನುಷ್ಠಾನಗೊಂಡು ಆರ್ಥಿಕ ವಹಿವಾಟುಗಳನ್ನು ನಡೆಸುತ್ತಿರುವ 91 ಇಲಾಖೆಗಳಿಗೆ ಅವಶ್ಯಕವಾಗಿರುವ ಅನುದಾನಗಳನ್ನು ಸಚಿವಾಲಯದ ಆಡಳಿತ ಇಲಾಖೆಗಳು ಸರ್ಕಾರದ ಮಾರ್ಗಸೂಚಿಯಂತೆ ಅನುದಾನ ಬಿಡುಗಡೆ, ನಿಯಂತ್ರಣ, ಪುನರ್ ವಿನಿಯೋಗ ಮುಂತಾದ ಚಟುವಟಿಕೆಗಳನ್ನು ಖಜಾನೆ-2ರ ಮೂಲಕವೇ ನಿರ್ವಹಿಸುವಂತೆ ಸರ್ಕಾರದ ಸುತ್ತೋಲೆ ಸಂಖ್ಯೆ: ಆಇ 03 ಟಿಎಆರ್ 2016, ದಿನಾಂಕ: 07-04-2017ರಲ್ಲಿ ಸ್ಪಷ್ಟಪಡಿಸಿದೆ.

ಮೇಲ್ಕಂಡ ಸರ್ಕಾರದ ಆದೇಶ/ಸುತ್ತೋಲೆಗಳನ್ವಯ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಈಗಾಗಲೇ ಖಜಾನೆ-2ರಲ್ಲಿ ಆರ್ಥಿಕ ವಹಿವಾಟುಗಳನ್ನು ನಡೆಸುತ್ತ್ತಿದ್ದು, 2017-18ನೇ ಸಾಲಿನ ವರ್ಷದ ಒಟ್ಟಾರೆ ಅಭಿಯಾಚನೆ ಪುರಸ್ಕøತ ಮೊತ್ತ `. 10330.00 ಲಕ್ಷಗಳಾಗಿದ್ದು, ಇದರಲ್ಲಿ `. 2582.50 ಲಕ್ಷವನ್ನು ಲೇಖಾನುದಾನ ಪುರಸ್ಕøತ ಮೊತ್ತವೆಂದು ಪರಿಗಣಿಸಿ, ಪ್ರಸಕ್ತ ಸಾಲಿಗೆ ಮೊದಲ ಕಂತಿನ ಅನುದಾನವಾಗಿ ಖಜಾನೆ-2ರಲ್ಲಿ ಬಿಡುಗಡೆ ಮಾಡುವಂತೆ ಹಾಗೂ ಪ್ರಸ್ತುತ, ಅನುದಾನ ಇಲ್ಲದಿರುವುದರಿಂದ, ಕಛೇರಿ ವಾಹನಗಳ ಇಂಧನ ಖರೀದಿ, ದುರಸ್ಥಿಗೆ ಸಂಬಂಧಿಸಿದ ಬಿಲ್ಲುಗಳು ಪಾವತಿಯಾಗದೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಪಡೆಯಲು ಕಷ್ಟಕರವಾಗಿರುತ್ತದೆ. ಅಲ್ಲದೆ ಕಛೇರಿಗಳ ದೂರವಾಣಿ ಬಿಲ್ಲುಗಳು, ವಿದ್ಯುತ್ ಬಿಲ್ಲುಗಳು ಮತ್ತು ಇನ್ನಿತರೆ ಅತ್ಯವಶ್ಯಕ ವೆಚ್ಚಗಳ ಬಿಲ್ಲುಗಳನ್ನು ಸಕಾಲದಲ್ಲಿ ಪಾವತಿಸಲು ಆಗದಿರುವುದರಿಂದ ಇವುಗಳ ಸಂಪರ್ಕ ಯಾವುದೇ ಸಮಯದಲ್ಲಿ ಸ್ಥಗಿತಗೊಂಡ ಕಛೇರಿ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗುವ ಸಂಭವ ಇರುತ್ತದೆ. ಆದಕಾರಣ ಕಛೇರಿ ಸಾದಿಲ್ವಾರು ವೆಚ್ಚಗಳಿಗಾಗಿ ಕೂಡಲೇ ಅನುದಾನವನ್ನು ಖಜಾನೆ-2ರಲ್ಲಿ ಬಿಡುಗಡೆ ಮಾಡುವಂತೆ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರವರ ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಧಾನ ಲೆಕ್ಕಶೀರ್ಷಿಕೆ "2030" ಯಲ್ಲಿ ಒಟ್ಟು 8 ಲೆಕ್ಕಶೀರ್ಷಿಕೆಗಳಿದ್ದು, ಅವುಗಳ ಪೈಕಿ 2030-01-101-0-00-059, 2030-01- 102-0-00-015, 2030-03-001-2-08-051, 2030-03-911-0-00-261 ಹಾಗೂ 2030-03-001-1-00-034 ಗಳಿಗೆ ಖಜಾನೆ-2 ತಂತ್ರಾಂಶದಲ್ಲಿ ಮ್ಯಾಪಿಂಗ್ ಆಗಿರುವುದಿಲ್ಲ. ಈ ಲೆಕ್ಕಶೀರ್ಷಿಕೆಗಳನ್ನು ಹೊರತುಪಡಿಸಿ, ಉಳಿದ ಲೆಕ್ಕಶೀರ್ಷಿಕೆಗಳಡಿಯಲ್ಲಿ ಒದಗಿಸಲಾದ ಆಯವ್ಯಯದ ನಾಲ್ಕನೇ ಒಂದು ಭಾಗದಷ್ಟು ಅನುದಾನವನ್ನು ಮೊದಲನೇ ಕಂತಿನ ರೂಪದಲ್ಲಿ ಬಿಡುಗಡೆ ಮಾಡಲು ಸರ್ಕಾರವು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 37 ಮುನೋಮು 2017, ಬೆಂಗಳೂರು, ದಿನಾಂಕ: 06-05-2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಧಾನ ಲೆಕ್ಕಶೀರ್ಷಿಕೆ "2030" ಯಲ್ಲಿನ ಒಟ್ಟು 8 ಲೆಕ್ಕಶೀರ್ಷಿಕೆಗಳಾದ 2030-01-101-0-00-059, 2030-01-102-0-00-015, 2030-03-001-2-08-051, 2030-03-911-0-00-261 ಹಾಗೂ 2030-03-001-1-00-034ಗಳ ಉಪ ಲೆಕ್ಕಶೀರ್ಷಿಕೆಗಳು ಖಜಾನೆ-2 ತಂತ್ರಾಂಶದಲ್ಲಿ ಮ್ಯಾಪಿಂಗ್ ಆಗಿರುವುದಿಲ್ಲವಾದ್ದರಿಂದ, ಇವುಗಳನ್ನು ಹೊರತುಪಡಿಸಿ, ಉಳಿದ ಈ ಕೆಳಕಂಡ ಲೆಕ್ಕಶೀರ್ಷಿಕೆಗಳಿಗೆ ನಿಗದಿಯಾಗಿರುವಂತೆ, ಲೇಖಾನುದಾನದ ಮಿತಿಯೊಳಗೆ ಅಂದರೆ ಒಟ್ಟು ಆಯವ್ಯಯದ ನಾಲ್ಕನೇ ಒಂದು ಭಾಗದಷ್ಟು ಅನುದಾನವನ್ನು ಮೊದಲನೇ ಕಂತಿನ ರೂಪದಲ್ಲಿ ಕಾಲಂ-5 ರಲ್ಲಿ ನಮೂದಿಸಿರುವಂತೆ ಬಿಡುಗಡೆ ಮಾಡಿ ಆದೇಶಿಸಿದೆ.

ಕ್ರ. ಸಂ. ಲ ಕ್ಕಶೀರ್ಷಿಕೆ ೆ ವಿವರಣೆ 2017-18ರ ಆಯವ್ಯಯ ವ ೂತ್ತ ೆ 1ನೇ ಕಂತಿನ ಅನುದಾನ
1 2 3 4 5
1 2030-03-001-1-00 021-ವೈದ್ಯಕೀಯ ವೆಚ್ಚ ಮರುಪಾವತಿ 78.00 19.50
041-ಪ್ರಯಾಣ ವೆಚ್ಚಗಳು 3.00 0.75
051-ಸಾಮಾನ್ಯ ವೆಚ್ಚಗಳು 237.00 59.25
071-ಕಟ್ಟಡ ವೆಚ್ಚಗಳು 780.00 195.00
180-ಯಂತ್ರ & ಸಾಮಾಗ್ರಿ ವೆಚ್ಚ 25.00 6.25
195-ಸಾರಿಗೆ ವೆಚ್ಚಗಳು 70.00 17.50
2 2030-03-001-2-04 051-ಸಾಮಾನ್ಯ ವೆಚ್ಚಗಳು 4800.00 950.00
೯೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೯, ೨೦೧೭ ಭಾಗ ೧

ಈ ಆದೇಶವನ್ನು ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 01 ಟಿಎಫ್‌ಪಿ 2017, ದಿನಾಂಕ: 05-04-2017 ರನ್ವಯ ಸರ್ಕಾರದ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿರುವ ಆರ್ಥಿಕ ಅಧಿಕಾರದನ್ವಯ ಹೊರಡಿಸಿದೆ.

P.R. 161

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ. ನಾರಾಯಣಪ್ಪ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ. (ನೋಂದಣಿ ಮತ್ತು ಮುದ್ರಾಂಕ)

ಕಂದಾಯ ಸಚಿವಾಲಯ

ವಿಷಯ : ಬೀದರ್ ಜಿಲ್ಲೆ, ಬೀದರ್ ತಾಲ್ಲೂಕಿನ ಚಿದ್ರಿ ಗ್ರಾಮದಲ್ಲಿ ಏರ್‌ಫೋರ್ಸ್ ಅಥಾರಿಟಿ, ಬೀದರ್ ಇವರ ಅಧೀನದಲ್ಲಿರುವ ಸ.ನಂ. 102/3 ಮತ್ತು 102/6ರಲ್ಲಿನ ಒಟ್ಟು 1-34 ಎ/ಗುಂ ವಿಸ್ತೀರ್ಣದ ಜಮೀನನ್ನು ರೈಲ್ವೆ ಕೆಳ ಸೇತುವೆಯಿಂದ ಸಾರ್ವಜನಿಕರಿಗೆ ರಸ್ತೆ ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಬಿಟ್ಟುಕೊಡುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಚಿದ್ರಿ ಗ್ರಾಮದ ಸರ್ಕಾರಿ ಸ.ನಂ. 200ರಲ್ಲಿ 1-34 ಎ/ಗುಂ ಜಮೀನನ್ನು ಏರ್‌ಫೋರ್ಸ್ ಅಥಾರಿಟಿ, ಬೀದರ್ ಇವರಿಗೆ ಪರಸ್ಪರ ವರ್ಗಾವಣೆ ಮಾಡಿಕೊಳ್ಳುವ ಕುರಿತು.

ಓದಲಾಗಿದೆ : ಜಿಲ್ಲಾಧಿಕಾರಿ, ಬೀದರ್ ಜಿಲ್ಲೆ, ಇವರ ಪತ್ರ ಸಂಖ್ಯೆ: ಆರ್ಇವಿ/ಎಲ್ಎನ್‌ಡಿ/ಸಿಆರ್-444/2015-16, ದಿನಾಂಕ: 09.02.2017.

ಪ್ರಸ್ತಾವನೆ :

ಮೇಲೆ ಓದಲಾದ ಪತ್ರದಲ್ಲಿ, ಜಿಲ್ಲಾಧಿಕಾರಿಗಳು, ಬೀದರ್ ಇವರು ಏರ್‌ಫೋರ್ಸ್ ಅಥಾರಿಟಿ ಬೀದರ್ ಇವರ ಅಧೀನದಲ್ಲಿರುವ ಬೀದರ್ ತಾಲ್ಲೂಕಿನ ಚಿದ್ರಿ ಗ್ರಾಮದ ಸ.ನಂ. 102/3ರಲ್ಲಿ 0-32 ಗುಂಟೆ ಹಾಗೂ ಸ.ನಂ. 102/6ರಲ್ಲಿ 1-02 ಎ/ಗುಂ ಒಟ್ಟು 1-34 ಎ/ಗುಂ ವಿಸ್ತೀರ್ಣದ ಜಮೀನನ್ನು ರೈಲ್ವೆ ಕೆಳ ಸೇತುವೆಯಿಂದ ಸಾರ್ವಜನಿಕರಿಗೆ ಸಮೀಪ ರಸ್ತೆಯನ್ನು ನಿರ್ಮಿಸಲು ಏರ್‌ಫೋರ್ಸ್ ಅಥಾರಿಟಿ ಬೀದರ್ ಇವರು ಬಿಟ್ಟುಕೊಡುತ್ತಿರುವುದರಿಂದ ಅದಕ್ಕೆ ಪರ್ಯಾಯವಾಗಿ ಸರ್ಕಾರಿ ಸ.ನಂ. 200ರಲ್ಲಿ 1-34 ಎ/ಗುಂ ವಿಸ್ತೀರ್ಣದ ಜಮೀನನ್ನು ಏರ್‌ಫೋರ್ಸ್ ಅಥಾರಿಟಿ ಬೀದರ್ ಇವರಿಗೆ ಮಂಜೂರು ಮಾಡುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಚಿದ್ರಿ ಗ್ರಾಮದ ಸ.ನಂ. 102/ಪಿ2ರಲ್ಲಿ ಒಟ್ಟು 8-12 ಎ/ಗುಂ ಜಮೀನು ಆರ್‌ಟಿಸಿಯ ಕಾಲಂ 9ರಲ್ಲಿ ಏರೋಡ್ರಮ್ ಎಂದು ದಾಖಲಾಗಿರುತ್ತದೆ. ಈ ಪೈಕಿ ಸ.ನಂ. 102/3ರಲ್ಲಿನ 0-32 ಗುಂಟೆ ಜಮೀನಿನಲ್ಲಿ ರೈಲ್ವೆ ಕೆಳ ಸೇತುವೆಯಿಂದ ಸಾರ್ವಜನಿಕರ ಉಪಯೋಗಕ್ಕಾಗಿ ರಸ್ತೆ ನಿರ್ಮಿಸುವುದು ಅತ್ಯಂತ ಅವಶ್ಯಕತೆ ಇರುತ್ತದೆ ಹಾಗೂ ಸ.ನಂ. 102/6ರಲ್ಲಿ 1-02 ಎಕರೆ ವಿಸ್ತೀರ್ಣದ ಜಮೀನನ್ನು ಈಗಾಗಲೇ ಸಾರ್ವಜನಿಕ ರಸ್ತೆಗಾಗಿ ಉಪಯೋಗಿಸಲಾಗುತ್ತಿದೆ.

ಆದ್ದರಿಂದ ಸದರಿ ವಿಷಯದ ಕುರಿತು ಏರ್‌ಫೋರ್ಸ್ ಅಥಾರಿಟಿ, ಬೀದರ್ ಮತ್ತು ಇನ್ನಿತರ ಅಧಿಕಾರಿಗಳೊಂದಿಗೆ ದಿನಾಂಕ: 06.09.2016ರಂದು ನಡೆದ ಸಭೆಯಲ್ಲಿ ಪ್ರಸ್ತಾಪಿತ ಸ.ನಂ. 102/3 ಮತ್ತು 102/6ರಲ್ಲಿ ಒಟ್ಟು 1-34 ಎ/ಗುಂ ವಿಸ್ತೀರ್ಣದ ಜಮೀನನ್ನು ಸಾರ್ವಜನಿಕ ರಸ್ತೆಗಾಗಿ ಬಿಟ್ಟುಕೊಡಲು ಒಪ್ಪಿದ್ದು, ಇದಕ್ಕೆ ಪರ್ಯಾಯವಾಗಿ ಚಿದ್ರಿ ಗ್ರಾಮದ ಸ.ನಂ. 200ರಲ್ಲಿ 1-34 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಪರಸ್ಪರ ಒಪ್ಪಂದದ ಮೇರೆಗೆ ವರ್ಗಾವಣೆ ಮಾಡಲು ಒಪ್ಪಿಗೆಯನ್ನು ಸೂಚಿಸಲಾಗಿರುತ್ತದೆ.

ಮುಂದುವರೆದು ಚಿದ್ರಿ ಗ್ರಾಮದ ಸ.ನಂ. 200ರಲ್ಲಿ ಆಕಾರ್‌ಬಂದ್‌ನಂತೆ ಒಟ್ಟು 5-00 ಎಕರೆ ವಿಸ್ತೀರ್ಣವಿದ್ದು, ಈ ಪೈಕಿ 1-11 ಎಕರೆ ವಿಸ್ತೀರ್ಣದ ಜಮೀನು ಏರ್‌ಫೋರ್ಸ್ ಸ್ಟೇಷನ್ ಬೀದರ್ ಇವರಿಗೆ ಸೇರಿದ್ದು, ಸ.ನಂ.200/ಬಿ ಎಂದು ಪ್ರತ್ಯೇಕ ಪಹಣಿ ಪತ್ರಿಕೆಯಲ್ಲಿ ದಾಖಲಾಗಿರುತ್ತದೆ. ಬಾಕಿ ಉಳಿದ 3-29 ಎಕರೆ ವಿಸ್ತೀರ್ಣದ ಜಮೀನು ಸ.ನಂ.200/ಎ ಎಂದು ಪಹಣಿಯಲ್ಲಿ ದಾಖಲಾಗಿದ್ದು, ಪಹಣಿಯ ಕಾಲಂ 9 ರಲ್ಲಿ ಸರ್ಕಾರಿ ಎಂದು ದಾಖಲಾಗಿರುತ್ತದೆ.

ಪ್ರಸ್ತಾಪಿತ ಜಮೀನು ಅನಧಿಕೃತ ಸಾಗುವಳಿಯಿಂದ ಮುಕ್ತವಾಗಿರುತ್ತದೆ. ಅರಣ್ಯ ಇಲಾಖೆ ವತಿಯಿಂದ ಯಾವುದೇ ಗಿಡ-ಮರಗಳನ್ನು ನೆಟ್ಟಿರುವುದಿಲ್ಲ.

ಹಾಗೂ ಸದರಿ ಭೂಮಿ ಭೂ ಸ್ವಾಧೀನಕ್ಕಾಗಿ ಯಾವುದೇ ಪ್ರಾಥಮಿಕ ಅಥವಾ ಅಂತಿಮ ಅಧಿಸೂಚನೆ ಆಗಿರುವುದಿಲ್ಲ.

ಪರಸ್ಪರ ವರ್ಗಾವಣೆ ಮಾಡಿಕೊಳ್ಳುತ್ತಿರುವ ಜಮೀನಿನ ವಿಸ್ತೀರ್ಣ ಒಂದೇ ಆಗಿದ್ದು, ಪ್ರಸ್ತುತ ಬೀದರ್ ನಗರ ಸಭಾ ವ್ಯಾಪ್ತಿಗೆ ಒಳಪಟ್ಟಿರುತ್ತವೆ.

ಮುಂಂದುವರೆದು, ಪರಸ್ಪರ ವರ್ಗಾವಣೆ ಮಾಡಿಕೊಳ್ಳುವ ಜಮೀನಿನ ಬೆಲೆ ಎಕರೆ ಒಂದಕ್ಕೆ ರೂ. 21,50,000/-ಗಳಾಗಿರುತ್ತದೆ ಎಂದು ಉಪನೋಂದಣಾಧಿಕಾರಿಗಳು, ಬೀದರ್ ಇವರು ವರದಿ ಮಾಡಿರುತ್ತಾರೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಸರ್ಕಾರವು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 4 ಎಲ್‌ಜಿಐ 2016, ಬೆಂಗಳೂರು, ದಿನಾಂಕ: 11.05.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಏರ್‌ಫೋರ್ಸ್ ಅಥಾರಿಟಿ, ಬೀದರ್ ಇವರ ಅಧೀನದಲ್ಲಿರುವ ಬೀದರ್ ತಾಲ್ಲೂಕಿನ ಚಿದ್ರಿ ಗ್ರಾಮದ ಸ.ನಂ. 102/3ರಲ್ಲಿ 0-32 ಗುಂಟೆ ಹಾಗೂ ಸ.ನಂ. 102/6ರಲ್ಲಿ 1-02 ಎ/ಗುಂ ಒಟ್ಟು 1-34 ಎ/ಗುಂ ಜಮೀನನ್ನು ಸಾರ್ವಜನಿಕ ರಸ್ತೆಗಾಗಿ ರಾಜ್ಯಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೯, ೨೦೧೭ ೯೬೭ ಸರ್ಕಾರಕ್ಕೆ ಬಿಟ್ಟುಕೊಡಲು ಒಪ್ಪಿರುವುದರಿಂದ ಸದರಿ ಜಮೀನಿಗೆ ಪರ್ಯಾಯವಾಗಿ ಚಿದ್ರಿ ಗ್ರಾಮದ ಸ.ನಂ. 200ರಲ್ಲಿ 1-34 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 28(ಎ) ರನ್ವಯ ಏರ್‌ಫೋರ್ಸ್ ಅಥಾರಿಟಿ, ಬೀದರ್ ಇವರಿಗೆ ಮಂಜೂರು ಮಾಡಿ ಆದೇಶಿಸಿದೆ.

P.R. 162

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಎನ್. ಪುಷ್ಪ

SC-25

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ. (ಭೂ ಮಂಜೂರಾತಿ-3)

REVENUE SECRETARIAT

Subject:- Continuation of the term of the Office of the Administrator, Sri Vyasaraja Mutt (Sosale).

Reference:- (1) Government Order No.RD 67 MUDAPRA 2002, dated:26.05.2012.

(2) Government Order No.RD 34 MUSEVI 2014, dated:24.05.2014.

(3) Government Order No.RD 34 MUSEVI 2014, dated:21.05.2015.

(4) Government Order No.RD 34 MUSEVI 2014 (P), dated:17.05.2016.

(5) The Commissioner, Charitable and Endowment Department, Bengaluru Letter No. ADM/07/ WP/ 07 / 2017-18 dated:22.04.2017.

PREAMBLE :

Government of Karnataka had decided and ordered to take over management and properties with all assets, both moveable and immovable, records, accounts, funds of Sri Vyasaraja Mutt (Sosale) and all its attendant branches and properties located in various parts of the Country, vide order at reference (1) above and had appointed Sri K.Jairaj, IAS., (now Retd.), the then Additional Chief Secretary to Government of Karnataka, as Administrator, to manage the affairs of the Mutt for an initial period of Two years with effect from 26.05.2012. The Government of Karnataka had also appointed an Advisory Committee consisting of eminent personalities namely, Justice M.N.Venkatachalaiah, former Chief Justice of India, Justice S.R.Venkatesha Murthy, former Judge, High Court of Karnataka and others, to guide the Administrator in day to day affairs of the Mutt. The Administrator, accordingly took charge of the affairs of the Mutt on 26.05.2012. Subsequently, the term of the Administrator was extended vide reference (2) & (3) above for a period of One year on 24.05.2014 and on 21.05.2015 respectively.

Again, on 17.05.2016 vide Government Order referred at (4) above, Government upon careful consideration of the matter to fulfil the objectives for which the administration was taken over in 2012 and that, additional time needs to be provided to the Administrator to complete pressing and ongoing tasks mentioned above, had extended the term of Office of the Administrator, for One year from 26.05.2016.

The Endowment Commissioner in his proposal vide reference (5) above, has stated that, the appointment of the Administrator was upheld by the Hon'ble High Court of Karnataka and the Pontiff has challenged the said Order in Writ Appeal before the Divisional Bench, which is pending along with other cases and for smooth administration and also keeping in mind the interest of devotees, has recommended to extend the term of the Administrator for a period of One year from 26.5.2017 to 25.5.2018. The proposal has been examined by the Government and ordered as follows:

Government Order No.RD 34 MUSEVI 2014; Bengaluru, dated 17.05.2017

In view of the circumstances explained above, keeping in mind the management of administration, settlement of pending cases in various Courts and for development of Sri Vyasaraja Mutt (Sosale), the Government hereby extend the term of office of Sri K.Jairaj, IAS. (Retd.) Administrator, for a period of One year from 26.05.2017.

P.R. 166

By Order and in the name of the Governor of Karnataka

B.S. Nagarathnamma

SC-25

Under Secretary to Government

Revenue Department. (Muzarai)

ಸಾರಿಗೆ ಸಚಿವಾಲಯ

ವಿಷಯ: ಸಾರಿಗೆ ಇಲಾಖೆಯ ಅಪರ ಸಾರಿಗೆ ಆಯುಕ್ತರು (ಆಡಳಿತ) ಹುದ್ದೆಯನ್ನು ವಿಶೇಷ ಸಾರಿಗೆ ಆಯುಕ್ತರ ಹುದ್ದೆಯನ್ನಾಗಿ ಉನ್ನತೀಕರಿಸುವ ಬಗ್ಗೆ.

ಓದಲಾಗಿದೆ : ಸಾರಿಗೆ ಆಯುಕ್ತರ ಪತ್ರ ಸಂ: ಸಾಆ/ಸಿಬ್ಬಂದಿ-1/ವೈವ-536/2016-17, ದಿ: 08-11-2016.

ಪ್ರಸ್ತಾವನೆ :

ಮೇಲೆ ಓದಲಾದ ಸಾರಿಗೆ ಆಯುಕ್ತರ ಪತ್ರದಲ್ಲಿ ಸಾರಿಗೆ ಇಲಾಖೆಯು ರಾಜ್ಯ ಸರ್ಕಾರದ ರಾಜಸ್ವ ಸಂಗ್ರಹಣೆಯಲ್ಲಿ ಪ್ರಮುಖವಾಗಿದ್ದು, ಪ್ರತಿ ವರ್ಷವು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ನೋಂದಣಿಯಾಗಿದ್ದು, ಅವುಗಳ ನಿಯಂತ್ರಣ ಹಾಗೂ ಪ್ರವರ್ತನ ಕಾರ್ಯ, ವಾಯು ಮಾಲಿನ್ಯ ನಿಯಂತ್ರಣ, ಶಬ್ದ ಮಾಲಿನ್ಯ ನಿಯಂತ್ರಣ ಮುಂತಾದ ಕಾರ್ಯಗಳ ನಿರ್ವಹಣೆಗಾಗಿ ಸಿಬ್ಬಂದಿ ಸೇವೆ ಒದಗಿಸಬೇಕಾಗಿದ್ದು, ಇಲಾಖೆಯ ಸಿಬ್ಬಂದಿಯು ಸಾರ್ವಜನಿಕರಿಗೆ ಪರಿಣಾಮಕಾರಿ ಸೇವೆಯನ್ನು ನಿರ್ವಹಿಸಲು ಮೇಲುಸ್ತುವಾರಿಯನ್ನು ಹಾಗೂ ಇನ್ನಿತರ ಕೆಲಸಗಳನ್ನು ಅಪರ ಸಾರಿಗೆ ಆಯುಕ್ತರು೯೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೯, ೨೦೧೭ ಭಾಗ ೧ ನಿರ್ವಹಿಸುತ್ತಿದ್ದು, ಅಪರ ಸಾರಿಗೆ ಆಯುಕ್ತರು ಸಾರಿಗೆ ಆಯುಕ್ತರ ಅಧೀನದಲ್ಲಿ ಅವರ ನಿರ್ದೇಶನದಂತೆ ಕೆಲಸ ನಿರ್ವಹಿಸುತ್ತಾರೆ. ಇವರುಗಳ ಮೇಲುಸ್ತುವಾರಿಯನ್ನು ಹಾಗೂ ಇಲಾಖೆಯ ಇನ್ನಿತರ ಸಿಬ್ಬಂದಿಯ ಕಾರ್ಯಚಟುವಟಿಕೆಗಳನ್ನು ಗಮನಿಸಿ ಸೂಕ್ತ ನಿರ್ದೇಶನವನ್ನು ಇಲಾಖಾ ಮುಖ್ಯಸ್ಥರಾದ ಸಾರಿಗೆ ಆಯುಕ್ತರು ನಿರ್ವಹಿಸುತ್ತಿರುವುದರಿಂದ ಸಾರಿಗೆ ಆಯುಕ್ತರಿಗೆ ಕೆಲಸಗಳ ಒತ್ತಡ ಹೆಚ್ಚಾಗುತ್ತಿರುವುದರಿಂದ ಹಾಗೂ ಆಡಳಿತ ಮತ್ತಿತರ ಕೆಲಸಗಳನ್ನು ನಿರ್ವಹಿಸಿಕೊಂಡು ಹೋಗಲು ವಿಶೇಷ ಸಾರಿಗೆ ಆಯುಕ್ತರ ಹುದ್ದೆಯ ಅವಶ್ಯಕತೆ ಇರುತ್ತದೆ. ಹಾಲಿ ಇರುವ ಅಪರ ಸಾರಿಗೆ ಆಯುಕ್ತರ ಹುದ್ದೆಯ ವೇತನ ಶ್ರೇಣಿಯು `. 48900-63600 ಗಳಿದ್ದು, ವೇತನ ಶ್ರೇಣಿ `. 52500-73000 ಗಳ ವಿಶೇಷ ಸಾರಿಗೆ ಆಯುಕ್ತರ ಹುದ್ದೆಗೆ ಉನ್ನತೀಕರಿಸುವುದು ಅವಶ್ಯವೆಂದು ತಿಳಿಸಿರುತ್ತಾರೆ.

ಮುಂದುವರೆದು, ಜಂಟಿ ಸಾರಿಗೆ ಆಯುಕ್ತರು (ಪರಿಸರ ಮತ್ತು ಇ-ಆಡಳಿತ) ಹುದ್ದೆಯನ್ನು ಅಪರ ಸಾರಿಗೆ ಆಯುಕ್ತರು (ಪರಿಸರ ಮತ್ತು ಇ-ಆಡಳಿತ) ಹುದ್ದೆಗೆ ಉನ್ನತೀಕರಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಪ್ರಸ್ತುತ ಜಂಟಿ ಸಾರಿಗೆ ಆಯುಕ್ತರು (ಪರಿಸರ ಮತ್ತು ಇ-ಆಡಳಿತ) ಹುದ್ದೆಯು ಸಂಪೂರ್ಣ ರಾಜ್ಯ ವ್ಯಾಪ್ತಿ ಹೊಂದಿರುವುದಲ್ಲದೆ ಜವಾಬ್ದಾರಿ ಮತ್ತು ಹೊಣೆಗಾರಿಕೆಯಿಂದ ಕೂಡಿದೆ. ವಾಹನಗಳ ನೋಂದಣಿಯು ಗಣನೀಯವಾಗಿ ಏರುತ್ತಿದ್ದು, ಪ್ರತಿದಿನ ಅದಕ್ಕೆ ಸಂಬಂಧಿಸಿದ ಸ್ಮಾರ್ಟ್ ಕಾರ್ಡ್ ಪೂರೈಕೆ, ಕೆ.ಎಂ.ಎಸ್. ರಿಜಾರ್ಜ್ ಇತ್ಯಾದಿಗಳನ್ನು ಸಮಪರ್ಕವಾಗಿ ಪೂರೈಸುವ ಮೇಲ್ವಿಚಾರಣೆಯನ್ನು ಹೊಂದಿರುತ್ತದೆ. ಪ್ರಸ್ತುತ ರಾಜ್ಯದಲ್ಲಿ ಹೊಸ ಸಾರಿಗೆ ಕಛೇರಿಗಳು ಅಸ್ತಿತ್ವಕ್ಕೆ ಬರುತ್ತಿದ್ದು, ಅದಕ್ಕೆ ಸಂಬಂಧಿಸಿದ ಗಣಕೀಕರಣ, ಹೊರಗುತ್ತಿಗೆಯ ಸಿಬ್ಬಂದಿಗಳನ್ನು ನಿಯೋಜಿಸುವುದು, ಸಂಬಂಧಪಟ್ಟ ಸಿಬ್ಬಂದಿಗಳಿಗೆ ತರಬೇತಿಯನ್ನು ಕೊಟ್ಟು ಹೊಸ ಕಛೇರಿಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಈ ಹುದ್ದೆಯು ರಾಜ್ಯ ವ್ಯಾಪ್ತಿ ಹೊಂದಿದ್ದು, ಸಾಕಷ್ಟು ಕಾರ್ಯಬಾಹುಳ್ಯ ಹೊಂದಿರುವುದರಿಂದ ಸದರಿ ಹುದ್ದೆಯನ್ನು ಮೇಲ್ದರ್ಜೆಗೆ ಏರಿಸಿ, ಅಪರ ಸಾರಿಗೆ ಆಯುಕ್ತರು (ಪರಿಸರ ಮತ್ತು ಇ-ಆಡಳಿತ) ಎಂದು ಮರು ನಾಮಕರಣ ಮಾಡಿದಲ್ಲಿ ಸರ್ಕಾರದ ಇಲಾಖೆಯ ಹಿತದೃಷ್ಟಿಯಿಂದ ಸಮರ್ಪಕ ಮತ್ತು ಹೆಚ್ಚಿನ ಹೊಣೆಗಾರಿಕೆಯಿಂದ ಕೆಲಸ ನಿರ್ವಹಿಸಬಹುದೆಂದು ತಿಳಿಸಿ ಅಪರ ಸಾರಿಗೆ ಆಯುಕ್ತರ ಹುದ್ದೆಯನ್ನು ವಿಶೇಷ ಸಾರಿಗೆ ಆಯುಕ್ತರ ಹುದ್ದೆಯನ್ನಾಗಿ ಮತ್ತು ಜಂಟಿ ಸಾರಿಗೆ ಆಯುಕ್ತರು (ಪರಿಸರ ಮತ್ತು ಇ-ಆಡಳಿತ) ಹುದ್ದೆಯನ್ನು ಅಪರ ಸಾರಿಗೆ ಆಯುಕ್ತರು (ಪರಿಸರ ಮತ್ತು ಇ-ಆಡಳಿತ) ಹುದ್ದೆಯನ್ನಾಗಿ ಉನ್ನತೀಕರಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಸಾರಿಗೆ ಆಯುಕ್ತರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಅಪರ ಸಾರಿಗೆ ಆಯುಕ್ತರು (ಆಡಳಿತ) ಹುದ್ದೆಯನ್ನು ಮಾತ್ರ ವಿಶೇಷ ಸಾರಿಗೆ ಆಯುಕ್ತರ ಹುದ್ದೆಗೆ ಉನ್ನತೀಕರಿಸಲು ಸರ್ಕಾರವು ತೀರ್ಮಾನಿಸಿದೆ. ಆದುದರಿಂದ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಸಾರಿಇ 118 ಸಾಇಸೇ 2016, ಬೆಂಗಳೂರು, ದಿನಾಂಕ: 22-05-2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಅಪರ ಸಾರಿಗೆ ಆಯುಕ್ತರು (ಆಡಳಿತ) (ವೇತನ ಶ್ರೇಣಿ `. 48900- 63600) ಹುದ್ದೆಯನ್ನು ವಿಶೇಷ ಸಾರಿಗೆ ಆಯುಕ್ತರು (ವೇತನ ಶ್ರೇಣಿ `. 52500-73000) ಹುದ್ದೆಯನ್ನಾಗಿ ಉನ್ನತೀಕರಿಸಿ ಆದೇಶಿಸಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 1172 ಸೇ-3/2016, ದಿ: 21-12-2016 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಿದೆ.

P.R. 167

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ SC-50

ಕೆ. ಬೀರೇಶ್

ಸರ್ಕಾರದ ಉಪ ಕಾರ್ಯದರ್ಶಿ

ಸಾರಿಗೆ ಇಲಾಖೆ.

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವಾಲಯ

ವಿಷಯ : ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಕಡೆಬಾಗಿಲು-ಬುಕ್ಕಸಾಗರ ರಸ್ತೆಯಲ್ಲಿ ಕಡೇಬಾಗಿಲು ಗ್ರಾಮದ ಹತ್ತಿರ ತುಂಗಭದ್ರ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯ ಪರಿಷ್ಕøತ ಅಂದಾಜು ಅನುಮೋದನೆ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ ಪಿಡಬ್ಲ್ಯೂಡಿ 73 ಆರ್‌ಡಿಎಫ್ 2012, ದಿನಾಂಕ 11-01-2013.

2. ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ಈಶಾನ್ಯ), ಕಲಬುರಗಿ ಇವರ ಪತ್ರ ಸಂಖ್ಯೆ : ಮುಇಂ(ಈ):

ತಾಸ:ಸಇಂ-1:ನಬಾರ್ಡ್:2016-17, 4223 ದಿನಾಂಕ 02-01-2017.

ಪ್ರಸ್ತಾವನೆ :-

ಮೇಲೆ ಓದಲಾದ ಕ್ರಮ ಸಂಖ್ಯೆ-(1)ರಲ್ಲಿ ಸರ್ಕಾರದ ಆದೇಶ ಸಂಖ್ಯೆ: ಪಿಡಬ್ಲ್ಯುಡಿ 73 ಆರ್‌ಡಿಎಫ್ 2012, ದಿನಾಂಕ 11-01-2013ರ ಕ್ರಸಂ-110ರಲ್ಲಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಸಂಪರ್ಕಿಸಲು ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕಿನ ಕಡೇಬಾಗಿಲು-ಬುಕ್ಕಸಾಗರ ರಸ್ತೆಯ ಸರಪಳಿ 1.43 ಕಿಮೀನಲ್ಲಿ ಕಡೆಬಾಗಿಲು ಗ್ರಾಮದ ಹತ್ತಿರ ಸೇತುವೆಯನ್ನು ನಿರ್ಮಿಸಲು ನಬಾರ್ಡ್ ಆರ್ಐಡಿಎಫ್-18ರ (2012-13) ಯೋಜನೆ ಅಡಿಯಲ್ಲಿ `. 32.00 ಕೋಟಿಗಳ ಅಂದಾಜು ಮೊತ್ತಕ್ಕೆ ಶೇಕಡ 80ರಷ್ಟು ಪ್ರತಿಶತದಂತೆ 25.60 ಕೋಟಿ `. ಸಾಲದ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ. ಈ ಕಾಮಗಾರಿಯನ್ನು ಟೆಂಡರ್ ಆಧಾರದ ಮೇಲೆ ಮೆ: ಕೆ.ಎನ್.ಆರ್. ಕನ್‌ಷ್ಟ್ರಕ್ಷನ್ಸ್, ಹೈದರಾಬಾದ್ ಇವರಿಗೆ 2013-14ನೇ ಸಾಲಿನ ದರಪಟ್ಟಿಯ ದರಗಳನ್ವಯ ಗುತ್ತಿಗೆಗೆ ಇಡಲಾದ ಮೊತ್ತ 33.18 ಕೋಟಿ `.ಗಳ ಮೇಲೆ ಶೇಕಡ 6.00ರಷ್ಟು ಹೆಚ್ಚುವರಿ ಪ್ರತಿಶತದಂತೆ ಅಂದರೆ `. 35.17 ಕೋಟಿಗಳ ಮೊತ್ತಕ್ಕೆ ಕಾಮಗಾರಿಯನ್ನು ವಹಿಸಿಕೊಡಲಾಗಿರುತ್ತದೆ. ಹಾಗೂ ಈ ಕಾಮಗಾರಿಗೆ ಇಲ್ಲಿಯವರೆಗೆ 35.17 ಕೋಟಿ `. ವೆಚ್ಚ ಮಾಡಲಾಗಿದೆ.

ಕ್ರಮ ಸಂಖ್ಯೆ (2)ರ ಪತ್ರದಲ್ಲಿ ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ಈಶಾನ್ಯ) ಇವರು ಈ ಕಾಮಗಾರಿಯಲ್ಲಿ ಸ್ಥಳದ ಅವಶ್ಯಕತೆಗೆ ತಕ್ಕಂತೆ ನಿರ್ವಹಿಸಲಾದ ವರ್ಕ್‌ಸ್ಲಿಪ್ ಮತ್ತು ಇಐಆರ್ಎಲ್ ಪ್ರಸ್ತಾವನೆಗಳು, Price Adjustment ಮೊತ್ತ, ಪಿಎಂಸಿ ವೆಚ್ಚ (Project Management Consultancy) ಮುಂತಾದ ಅಂಶಗಳನ್ನು ಒಳಗೊಂಡಂತೆ ಪರಿಷ್ಕøತ ಅಂದಾಜನ್ನು 40.28 ಕೋಟಿ ರೂ. ಮೊತ್ತದಲ್ಲಿ ಅನುಮೋದನೆಗೆ ಸಲ್ಲಿಸಿರುತ್ತಾರೆ. ಈಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೯, ೨೦೧೭ ೯೬೯ ಪರಿಷ್ಕøತ ಅಂದಾಜಿನ ಪ್ರಸ್ತಾವನೆಯನ್ನು ದಿನಾಂಕ 24-08-2015, 21-10-2015, 06/07-01-2016 ಮತ್ತು 20-09-2016ರಂದು ನಡೆದ ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಮತ್ತು ಅಂದಾಜು ಪಟ್ಟಿ ಪರಿಶೀಲನಾ ಸಮಿತಿಯ ಸಭೆಗಳಲ್ಲಿ ವಿವರವಾಗಿ ಚರ್ಚಿಸಿದ್ದು, ಸಮಿತಿಯು ಪ್ರಸ್ತಾವನೆಗೆ ಸಹಮತಿಸಿರುತ್ತದೆ.

ಮೇಲ್ಕಂಡ ಪ್ರಸ್ತಾವನೆಯ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

ಸರ್ಕಾರದ ಆದೇಶ ಸಂಖೈ ಪಿಡಬ್ಲ್ಯೂಡಿ 97 ಆರ್‌ಡಿಎಫ್ 2016, ಬೆಂಗಳೂರು, ದಿನಾಂಕ 24-05-2017.

ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ

(1) ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಕಡೆಬಾಗಿಲು-ಬುಕ್ಕಸಾಗರ ರಸ್ತೆಯಲ್ಲಿ ಕಡೇಬಾಗಿಲು ಗ್ರಾಮದ ಹತ್ತಿರ ತುಂಗಭದ್ರ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯ ಪರಿಷ್ಕøತ ಮೊತ್ತ 4028.30ಲಕ್ಷ `. ಗಳಿಗೆ(ನಲವತ್ತು ಕೋಟಿ ಇಪ್ಪತ್ತೆಂಟು ಲಕ್ಷ ಮುವತ್ತು ಸಾವಿರ) ಅನುಮೋದನೆ ನೀಡಲಾಗಿದೆ. ಈ ವೆಚ್ಚವನ್ನು ಲೆಕ್ಕ ಶೀರ್ಷಿಕೆ 5054-04-337-0-02-436-ನಬಾರ್ಡ್ ಸಹಾಯಿತ ಮುಖ್ಯ ಜಿಲ್ಲಾ ರಸ್ತೆ ಕಾಮಗಾರಿಗಳು-ನಬಾರ್ಡ್ ಕಾಮಗಾರಿಗಳು ಅಡಿಯಲ್ಲಿ ಭರಿಸತಕ್ಕದ್ದು.

(2) ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂ. ಆಇ 60 ಆಕೋ-1/2017 ದಿನಾಂಕ : 13-03-2017ರಲ್ಲಿ ನೀಡಿದ ಸಹಮತಿ ಮೇರೆಗೆ ಹಾಗೂ ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು, 1977ರ ಒಂದನೇ ಅನುಸೂಚಿಯ ಕ್ರಮ ಸಂಖ್ಯೆ 15ರನ್ವಯ ಸಚಿವ ಸಂಪುಟದ ಅನುಮೋದನೆ ಪಡೆದು ಹೊರಡಿಸಲಾಗಿದೆ.

P.R. 170

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-20

ಕೆ.ಎಸ್. ಹರೀಶ್

ವಿಶೇಷಾಧಿಕಾರಿ (ನಬಾರ್ಡ್) (ಪ್ರಭಾರ)

ಲೋಕೋಪಯೋಗಿ, ಬಂದರು ಮತ್ತು

ಒಳನಾಡು ಜಲಸಾರಿಗೆ ಇಲಾಖೆ.

ಆರ್ಥಿಕ ಸಚಿವಾಲಯ

ವಿಷಯ : 6ನೇ ರಾಜ್ಯ ವೇತನ ಆಯೋಗದ ರಚನೆ ಕುರಿತು.

ಓದಲಾಗಿದೆ : 1. ಸ.ಆ.ಸಂ. ಎಫ್‌ಡಿ 11 ಎಸ್ಆರ್‌ಪಿ 2003 ದಿ: 21-06-2005

2. ಸ.ಆ.ಸಂ. ಎಫ್‌ಡಿ 23 ಎಸ್ಆರ್‌ಪಿ 2011 ದಿ: 15-06-2011

ಸರ್ಕಾರಿ ಆದೇಶ ಸಂಖ್ಯೆ: ಆಇ 22 ಎಸ್ಆರ್‌ಪಿ 2017, ಬೆಂಗಳೂರು, ದಿನಾಂಕ 1ನೇ ಜೂನ್ 2017.

ಮಾನ್ಯ ಮುಖ್ಯ ಮಂತ್ರಿಗಳು 2017-18ನೇ ಸಾಲಿನ ಆಯವ್ಯಯ ಭಾಷಣದಲ್ಲಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು ವೇತನ ಆಯೋಗವನ್ನು ರಚಿಸುವ ಸರ್ಕಾರದ ನಿರ್ಧಾರವನ್ನು ಘೋಷಿಸಿರುತ್ತಾರೆ.

2. ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ಒಂದು ವೇತನ ಆಯೋಗವನ್ನು ರಚಿಸಲು ಸರ್ಕಾರವು ತೀರ್ಮಾನ ತೆಗೆದುಕೊಂಡಿರುತ್ತದೆ.

3. ಅದರಂತೆ, ಸರ್ಕಾರವು ಈ ಕೆಳಕಂಡ ಸದಸ್ಯರನ್ನು ಒಳಗೊಂಡ 6ನೇ ರಾಜ್ಯ ವೇತನ ಆಯೋಗವನ್ನು ರಚಿಸಲು ಹರ್ಷಿಸುತ್ತದೆ:-

(1) ಶ್ರೀ ಎಂ.ಆರ್.ಶ್ರೀನಿವಾಸಮೂರ್ತಿ, ಭಾ.ಆ.ಸೇ. (ನಿವೃತ್ತ) ಅಧ್ಯಕ್ಷರು (2) ಶ್ರೀ ಮೊಹಮದ್ ಸನಾವುಲ್ಲಾ, ಭಾ.ಆ.ಸೇ. (ನಿವೃತ್ತ) ಸದಸ್ಯರು

(3) ಶ್ರೀ ಆರ್.ಎಸ್.ಪೋಂಡೆ, ನಿಯಂತ್ರಕರು (ನಿವೃತ್ತ) ಸದಸ್ಯರು

ರಾಜ್ಯ ಲೆಕ್ಕಪತ್ರ ಇಲಾಖೆ

(4) ಶ್ರೀ ಎಂ.ಮಂಜುನಾಥ ನಾಯ್ಕ, ಭಾ.ಆ.ಸೇ. ಕಾರ್ಯದರ್ಶಿ

ಅಬಕಾರಿ ಆಯುಕ್ತರು

4. ವೇತನ ಆಯೋಗದ ಪರಿಶೀಲನಾರ್ಹ ಅಂಶಗಳು ಈ ಕೆಳಕಂಡಂತಿವೆ:-

(ಎ) ರಾಜ್ಯ ಸರ್ಕಾರಿ ನೌಕರರ (ಯುಜಿಸಿ/ಎಐಸಿಟಿಇ/ಐಸಿಎಆರ್/ಎನ್‌ಜೆಪಿಸಿ ವೇತನ ಶ್ರೇಣಿ ಹೊಂದಿರುವವರನ್ನು ಹೊರತುಪಡಿಸಿ) ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳ ಬೋಧಕೇತರ ಸಿಬ್ಬಂದಿಗಳಿಗೆ ಮರಣ ಹಾಗೂ ನಿವೃತ್ತಿ ಉಪದಾನ ಸೌಲಭ್ಯಗಳನ್ನೊಳಗೊಂಡಂತೆ ಲಭ್ಯವಿರುವ ಎಲ್ಲಾ ಕ್ರೋಡೀಕೃತ ಸೌಲಭ್ಯಗಳನ್ನು ಗಣನೆಗೆ ತೆಗೆದುಕೊಂಡು, ಈ ಸಿಬ್ಬಂದಿಗಳ ಪ್ರಸ್ತುತ ವೇತನ ರಚನೆಯನ್ನು ಪರಿಶೀಲಿಸುವುದು ಹಾಗೂ ಅಪೇಕ್ಷಣೀಯವಾದ ಹಾಗೂ ಕಾರ್ಯಸಾಧ್ಯವಿರುವ ನೂತನ ವೇತನ ರಚನೆಯನ್ನು ರೂಪಿಸುವುದು.

(ಬಿ) ರಾಜ್ಯ ಸರ್ಕಾರವು ಅಳವಡಿಸಿಕೊಂಡಿರುವ ತುಟ್ಟಿಭತ್ಯೆಯ ಸೂತ್ರವನ್ನು ಪರಿಶೀಲಿಸುವುದು ಹಾಗೂ ಅಪೇಕ್ಷಣೀಯವಾದ ಹಾಗೂ ಕಾರ್ಯ ಸಾಧ್ಯವಿರುವ ಬದಲಾವಣೆಗಳನ್ನು ನಿರ್ಣಯಿಸಿ ಸಲಹೆ ಮಾಡುವುದು.

(ಸಿ) ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆ, ವಿಶೇಷ ಭತ್ಯೆಗಳು ಇತ್ಯಾದಿ ಮತ್ತು ರಜೆ ಪ್ರಯಾಣ ರಿಯಾಯಿತಿ ಮತ್ತು ವೈದ್ಯಕೀಯ ಮರುಪಾವತಿ ಸೌಲಭ್ಯಗಳನ್ನೊಳಗೊಂಡಂತೆ ವಿವಿಧ ಭತ್ಯೆಗಳ ಪ್ರಮಾಣವನ್ನು ಪರಿಶೀಲಿಸುವುದು ಹಾಗೂ ಅಪೇಕ್ಷಣಿಯವಾದ ಹಾಗೂ ಕಾರ್ಯಸಾಧ್ಯವಿರುವ ಬದಲಾವಣೆಗಳನ್ನು ಸಲಹೆ ಮಾಡುವುದು.

೯೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೯, ೨೦೧೭ ಭಾಗ ೧

(ಡಿ) ಪ್ರಸ್ತುತ ಜಾರಿಯಲ್ಲಿರುವ ನಿವೃತ್ತಿ ಸೌಲಭ್ಯಗಳನ್ನು ಪರಿಶೀಲಿಸುವುದು ಹಾಗೂ ಅಪೇಕ್ಷಣೀಯವಾದ ಹಾಗೂ ಕಾರ್ಯಸಾಧ್ಯವಿರುವ ಬದಲಾವಣೆಗಳನ್ನು ಮಾಡಲು ಸಲಹೆ ಮಾಡುವುದು.

(ಇ) ರಾಜ್ಯ ಸರ್ಕಾರದಿಂದ ವಹಿಸಲ್ಪಡುವ/ಸೂಚಿಸಬಹುದಾದ ಇತರೆ ವಿಷಯಗಳನ್ನು ಪರಿಶೀಲಿಸುವುದು.

5. ಆಯೋಗವು ತನ್ನ ಶಿಫಾರಸ್ಸುಗಳನ್ನು ಮಾಡುವಲ್ಲಿ, ರಾಜ್ಯದ ಸಂಪನ್ಮೂಲಗಳು ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಯೋಜನೆಗಳ ಕುರಿತಾಗಿ ರಾಜ್ಯ ಸರ್ಕಾರದ ಹೊಣೆಗಳು, ಶಾಸನಬದ್ಧ ಹಾಗೂ ಕ್ರಮಬದ್ಧ ಕಾರ್ಯಗಳು, ಋುಣಸೇವಾ ನಿರ್ವಹಣೆಗಳು ಮತ್ತು ಇತರೆ ಅಭಿವೃದ್ಧಿಯೇತರ ಅಗತ್ಯಗಳನ್ನು ಹಾಗೂ ವಿತ್ತೀಯ ಹೊಣೆಗಾರಿಕೆ ನಿರ್ವಹಣೆ ಅಧಿನಿಯಮ, 2002ರ ಅಧ್ಯಾದೇಶದ ಅವಕಾಶಗಳ ಪರಿಮಿತಿಯನ್ನು ಗಮನದಲ್ಲಿರಿಸಿಕೊಳ್ಳುವುದು.

6. ಆಯೋಗವು ತನ್ನದೇ ಆದ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳುವುದು ಹಾಗೂ ಪರಿಶೀಲನಾರ್ಹ ಅಂಶಗಳಿಗೆ ಅಗತ್ಯವೆನಿಸಿದ ಮಾಹಿತಿಗಳನ್ನು ವಿವಿಧ ಇಲಾಖೆಗಳಿಂದ ಪಡೆಯಬಹುದಾಗಿರುತ್ತದೆ.

7. ಸರ್ಕಾರದ ಎಲ್ಲಾ ಇಲಾಖೆಗಳು ಆಯೋಗವು ಅಪೇಕ್ಷಿಸುವ ಎಲ್ಲಾ ಮಾಹಿತಿ, ದಾಖಲೆ ಹಾಗೂ ಇನ್ನಿತರೆ ಸಹಕಾರವನ್ನು ಒದಗಿಸತಕ್ಕದ್ದು.

ಎಲ್ಲಾ ಸೇವಾ ಸಂಘಟನೆಗಳು, ಸ್ಥಳೀಯ ಸಂಸ್ಥೆಗಳು, ಅನುದಾನಿತ ಸಂಸ್ಥೆಗಳು ಮತ್ತು ಇತರೆ ಸಂಬಂಧಪಟ್ಟವರು ಆಯೋಗಕ್ಕೆ ಅವುಗಳ ಸಂಪೂರ್ಣ ಸಹಕಾರ ಮತ್ತು ನೆರವನ್ನು ನೀಡುತ್ತವೆ ಎಂದು ಸರ್ಕಾರವು ಭಾವಿಸುತ್ತದೆ.

8. ವೇತನ ಆಯೋಗವು ತನ್ನ ವರದಿಯನ್ನು ನಾಲ್ಕು ತಿಂಗಳೊಳಗೆ ಸಲ್ಲಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಚ್.ಶಿವಕುಮಾರ್,

ಸರ್ಕಾರದ ಉಪ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಸೇವೆಗಳು-2).

FINANCE SECRETARIAT

Subject: Constitution of 6th State Pay Commission – Orders reg. Read: 1. G.O. No.FD 11 SRP 2003 dated: 21-06-2005

2. G.O. No.FD 23 SRP 2011 dated: 15-06-2011.

GOVERNMENT ORDER NO.FD 22 SRP 2017, BENGALURU, DATED 01ST JUNE 2017

The Hon'ble Chief Minister in the Budget Speech 2017-18 has announced Government's decision to constitute a Pay Commission to examine the request of the State Government Employees.

2. The State Government have taken a decision to constitute a Pay Commission to go in to the revision of pay scales of State Government Employees and to evolve a new pay structure etc.

3. Accordingly, Government are now pleased to constitute 6th State Pay Commission consisting of the following Members :-

(1) Sri M.R.Sreenivasa Murthy, IAS (Retd.) Chairman

(2) Sri Md. Sanaullah, IAS (Retd.) Member

(3) Sri R.S.Phonde, Retired Controller,

State Accounts Department Member

(4) Sri M.Manjunath Naik, IAS

Commissioner of Excise Secretary

4. The Terms of Reference of the Pay Commission will be as follows:-

(a) To examine the present pay structure of employees of the State Government (excluding those who are on the UGC/AICTE/ICAR/ NJPC scales of pay), Aided Educational Institutions, Local Bodies and Non-teaching Staff of the Universities taking into account the total packet of benefits including death-cum-retirement benefits available to the employees and to recommend new pay structure which may be feasible;

(b) To examine and determine the Dearness Allowance formula adopted by the State Government and to suggest changes which may be feasible;

(c) To examine the quantum of various allowances including House Rent allowance, City Compensatory Allowance, etc. and Leave Travel Concession and Medical Attendance facilities and to suggest changes which may be feasible;

(d) To examine the existing pattern of pension benefits and to suggest changes which may be feasible;

(e) To examine such other matters as may be entrusted/referred by the State Government.

5. In making its recommendations, the Pay Commission should keep in view the resources of the State Government and Government's commitments for various development programmes and schemes, statutory and regulatory functions, debt-servicing obligations and other non-development requirements within the overall mandate of the Fiscal Responsibility Act, 2002.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೯, ೨೦೧೭ ೯೭೧

6. The Pay Commission should devise its own procedure, and may call for such information from various Departments as found necessary for its terms of reference.

7. All the Government departments shall furnish such information and documents and other assistance, as may be required by the Pay Commission. Government trust that all the service Associations, Local Bodies, Aided Institutions and other concerned will extend to the Pay Commission their fullest co-operation and assistance.

8. The Pay Commission shall submit its report within four months.

P.R. 189

By Order and in the name of the Governor of Karnataka,

C.H.SHIVAKUMAR

SC - 100

Deputy Secretary to Government,

Finance Department. (Services-2)

FINANCE SECRETARIAT

Subject: Terms of conditions of the Chairman and Members of the 6th State Pay

Commission – grant of remuneration and other allowances - reg.

FINANCE SECRETARIAT

ADDENDUM

NO.FD 22 SRP 2017, BENGALURU, DATED: 15-06-2017

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೯೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೯, ೨೦೧೭ ಭಾಗ ೧

ಸಹಕಾರ ಸಚಿವಾಲಯ

ವಿಷಯ : 2017-18ನೇ ಸಾಲಿನಲ್ಲಿ ಯಶಸ್ವಿನಿ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಮೊದಲ ಕಂತಿನ ಹಣ ಬಿಡುಗಡೆ ಮಾಡುವ ಕುರಿತು.

ಓದಲಾಗಿದೆ : 1. ಸರ್ಕಾರಿ ಆದೇಶ ಸಂಖ್ಯೆ:ಸಇ 98 ರರವಿ 2017, ದಿನಾಂಕ: 05-04-2017

2. ಸರ್ಕಾರದ ಆದೇಶ ಸಂಖ್ಯೆ:ಎಫ್‌ಡಿ 01 ಟಿಎಫ್‌ಪಿ 2017, ದಿನಾಂಕ:05-04-2017 3. ಸಹಕಾರ ಸಂಘಗಳ ನಿಬಂಧಕರ ಪತ್ರ ಸಂಖ್ಯೆ:ಆರ್‌ಸಿಎಸ್ ಯಶಸ್ವಿನಿ/5/2017-18, ದಿನಾಂಕ:25-04-2017 ಪ್ರಸ್ತಾವನೆ:-

2017-18ನೇ ಸಾಲಿನಲ್ಲಿ ಸಹಕಾರ ಇಲಾಖೆಯಲ್ಲಿ ಯಶಸ್ವಿನಿ ಯೋಜನೆಗಳನ್ನು ಮುಂದುವರೆಸಿದ್ದು, ಲೆಕ್ಕಶೀರ್ಷಿಕೆ 2425-00-108-0-57ರಲ್ಲಿ ಸದರಿ ಯೋಜನೆಗೆ ರೂ.21258.00 ಲಕ್ಷಗಳ ಆಯವ್ಯಯ ಅವಕಾಶ ಕಲ್ಪಿಸಿ ಈ ಯೋಜನೆಯನ್ನು ಮುಂದುವರೆಸಲು ಓದಲಾದ (1)ರ ಸರ್ಕಾರದ ಆದೇಶದಲ್ಲಿ ಆಡಳಿತಾತ್ಮಕ ಅನುಮೋದನೆಯಾಗಿದೆ.

ಮೇಲೆ ಓದಲಾದ (2)ರ ಸರ್ಕಾರದ ಆದೇಶದ ಕಂಡಿಕೆ (12)ರನ್ವಯ ರೂ.10.00 ಕೋಟಿ ಮತ್ತು ಮೇಲ್ಪಟ್ಟು ಆಯವ್ಯಯದ ಅವಕಾಶದ ಪೈಕಿ ಶೇ. 25ರಂತೆ ಮೊದಲ ಮೂರು ಕಂತುಗಳನ್ನು ಇಲಾಖೆಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿಗಳಿಗೆ ಬಿಡುಗಡೆ ಮಾಡಲು ವಿತ್ತಾಧಿಕಾರ ಪ್ರತ್ಯಾಯೋಜಿಸಲಾಗಿರುತ್ತದೆ.

ಓದಲಾದ (3)ರ ಪತ್ರದಲ್ಲಿ ಸಹಕಾರ ಸಂಘಗಳ ನಿಬಂಧಕರು 2017-18ನೇ ಸಾಲಿಗೆ ಯಶಸ್ವಿನಿ ಯೋಜನೆಗಳ ಅನುಷ್ಠಾನಕ್ಕಾಗಿ ಆಯವ್ಯಯದಲ್ಲಿ ಕಲ್ಪಿಸಲಾಗಿರುವ ರೂ.21258.00 ಲಕ್ಷಗಳ ಅನುದಾನದ ಪೈಕಿ ಮೊದಲ ಕಂತಿನ ಹಣ ರೂ.4227.75 ಲಕ್ಷಗಳನ್ನು ಬಿಡುಗಡೆ ಮಾಡುವಂತೆ ಕೋರಿದ್ದು, ಹಾಗೂ 2016-17ನೇ ಸಾಲಿನಲ್ಲಿ ಬಿಡುಗಡೆ ಮಾಡಿದ್ದ ನಾಲ್ಕನೇ ಕಂತಿನ ಮೊತ್ತ ಮತ್ತು ಹೆಚ್ಚುವರಿಯಾಗಿ ಬಿಡುಗಡೆ ಮಾಡಿದ್ದ ಮೊತ್ತವು ಪೂರ್ಣವಾಗಿ ಬಳಕೆಯಾಗಿರುವುದಾಗಿ ಸಹಕಾರ ಸಂಘಗಳ ನಿಬಂಧಕರು ದೃಡೀಕೃತ ಬಳಕೆ ಪ್ರಮಾಣ ಪತ್ರವನ್ನು ಒದಗಿಸಿರುತ್ತಾರೆ. ಆದುದರಿಂದ ಮೊದಲ ಕಂತಿನ ಹಣ ರೂ.4227.75 ಲಕ್ಷಗಳನ್ನು ಬಿಡುಗಡೆ ಮಾಡಲು ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಿಒ 181 ಸಿಎಲ್ಎಸ್ 2017, ಬೆಂಗಳೂರು. ದಿನಾಂಕ:24-05-2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2017-18ನೇ ಸಾಲಿಗೆ ಯಶಸ್ವಿನಿ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಮೊದಲ ಕಂತಿನ ಹಣ ರೂ.4227.75 ಲಕ್ಷಗಳನ್ನು (ರೂ. ನಲವತ್ತೆರಡು ಕೋಟಿ ಇಪ್ಪತ್ತೇಳು ಲಕ್ಷದ ಎಪ್ಪತ್ತೈದು ಸಾವಿರಗಳು ಮಾತ್ರ) ಲೆಕ್ಕಶೀರ್ಷಿಕೆ "2425-00-108-0-057" ಯೋಜನೆ ಅಡಿಯಲ್ಲಿ ಬಿಡುಗಡೆ ಮಾಡಲು ಮಂಜೂರಾತಿ ಆದೇಶ ಹೊರಡಿಸಿದೆ.

ಕ್ರ.ಸಂ. ಲ ಕ್ಕ ಶೀರ್ಷಿಕೆ ೆ ವಿವರ ವ ೂದಲ ಕಂತಿನಲ್ಲಿ ಬಿಡುಗಡೆ ೆ ವ iಾಡಬೇಕಾದ ಮೊತ್ತ
1. 2425-00-108-057-059 ಇತರೆ ಖರ್ಚುಗಳು 3879.75
2. 2425-00-108-057-422 ಪ ರಿಶಿಷ್ಟ ಜಾತಿ ಉಪಯೋಜನೆ 210.00
3. 2425-00-108-057-423 ಗಿರಿಜನ ಉಪಯೋಜನೆ 138.00
ಒಟ್ಟು ಮೊತ್ತ 4227.75

ಈ ಮೊತ್ತವನ್ನು ಹಣ ಸ್ವೀಕೃತಿ ರಸೀದಿ ಮೇಲೆ ಸಹಕಾರ ಸಂಘಗಳ ನಿಬಂಧಕರ ಮೇಲು ರುಜುವಿನೊಂದಿಗೆ ಸಹಕಾರ ಸಂಘಗಳ ಅಪರ ನಿಬಂಧಕರು (ಕೈಗಾರಿಕೆ ಮತ್ತು ಹೈನುಗಾರಿಕೆ), ಸಹಕಾರ ಸಂಘಗಳ ನಿಬಂಧಕರ ಕಛೇರಿ ಇವರು ಖಜಾನೆಯಿಂದ ಯಶಸ್ವಿನಿ ಯೋಜನೆಗೆ ಡ್ರಾ ಮಾಡಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನಲ್ಲಿರುವ ಯಶಸ್ವಿನಿ ಟ್ರಸ್ಟ್‌ನ ಉಳಿತಾಯ ಖಾತೆಗೆ ಜಮಾ ಮಾಡಲು ಅಧಿಕಾರ ನೀಡಲಾಗಿದೆ.

ಈ ಆದೇಶವನ್ನು ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 01 ಟಿಎಫ್‌ಪಿ 2017 ದಿನಾಂಕ: 05-04-2017ರಲ್ಲಿ ಸರ್ಕಾರದ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿರವರಿಗೆ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಹಾಗೂ ಆಂತರಿಕ ಆರ್ಥಿಕ ಸಲಹೆಗಾರರ ಟಿಪ್ಪಣಿ ಸಂಖ್ಯೆ: ಸಇ 52 ಆಂಆಸ(ಎ) 2017, ದಿನಾಂಕ:20-05-2017 ರಲ್ಲಿನ ಸಹಮತಿ ಮೇರೆಗೆ ಹೊರಡಿಸಲಾಗಿದೆ.

PR. 163

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 25

ಎಂ. ವೆಂಕಟಸ್ವಾಮಿ,

ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ,

ಸರ್ಕಾರದ ಉಪ ಕಾರ್ಯದರ್ಶಿ.

ಸಹಕಾರ ಇಲಾಖೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 29 June 2017. Indian Gazettes, https://egazette.servantsofknowledge.in/details/in.gazette.karnataka_new.2017-06-29.Part-1/. Archive identifier in.gazette.karnataka_new.2017-06-29.Part-1.