Servants of Knowledge
Karnataka Gazette · Government of Karnataka

Karnataka Gazette, Part Part-1, 06 July 2017

Published 06 July 2017

Part
Part-1
Identifier
in.gazette.karnataka_new.2017-07-06.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೨

Volume 152

ಬೆಂಗಳೂರು, ಗುರುವಾರ, ಜುಲೈ ೬, ೨೦೧೭ (ಆಷಾಡ ೧೫, ಶಕ ವರ್ಷ ೧೯೩೯)

Bengaluru, Thursday, July 6, 2017 (Ashadha 15, Shaka Varsha 1939)

ಸಂಚಿಕೆ ೨೭

Issue 27

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ನಗರಾಭಿವೃದ್ಧಿ ಸಚಿವಾಲಯ

ವಿಷಯ : ಉತ್ತರ ಕನ್ನಡ ಜಿಲ್ಲೆಯ, ಭಟ್ಕಳ ಪಟ್ಟಣದ ಸಮಗ್ರ ಒಳಚರಂಡಿ ಯೋಜನೆಯ `. 20000 ಲಕ್ಷ ಮೊತ್ತದ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಓದಲಾಗಿದೆ : (1) ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ಇವರ ಪತ್ರ ಸಂಖ್ಯೆ: ಕಜಮಂ/ಮುಅ(ಉ)/ತಾಂತ್ರಿಕ/ಆಶ್ರೇಕಾಅ(ಬೆ)/ಉಮುಅ-1/ ತಾಸ-3/ಸಅ-5/1369/2015-16 ದಿನಾಂಕ 28/10/2015.

(2) ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ಇವರ ಪತ್ರ ಸಂಖ್ಯೆ: ಕಜಮಂ/ಮುಅ(ಉ)/ತಾಂತ್ರಿಕ/ಆಶ್ರೇಕಾಅ(ಬೆ)/ಉಮುಅ-2/ ತಾಸ-3/ಸಅ-5/451/2016-17 ದಿನಾಂಕ 27/05/2016.

(3) ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ಇವರ ಪತ್ರ ಸಂಖ್ಯೆ:ಕಜಮಂ/ಮುಅ(ಧಾ)/ತಾಂತ್ರಿಕ/ ಆಶ್ರೇಕಾಅ(ಬೆ)/ಉಮುಅ-2/ ತಾಸ-3/ಸಅ-5/34/2017-18 ದಿನಾಂಕ 04/04/2017.

(4) ಸರ್ಕಾರದ ಆದೇಶ ಸಂಖ್ಯೆ:ನಅಇ 07 ಯುಡಬ್ಲ್ಯೂಎಸ್ 2011, ದಿನಾಂಕ20/07/2011.

ಪ್ರಸ್ತಾವನೆ :

1) ಮೇಲೆ (1), (2) ಮತ್ತು (3) ರಲ್ಲಿ ಓದಲಾದ ಪತ್ರಗಳಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ, ಭಟ್ಕಳ ಪಟ್ಟಣದ ಸಮಗ್ರ ಒಳಚರಂಡಿ ಯೋಜನೆಯ `. 200 ಕೋಟಿ ಮೊತ್ತದ ಕಾಮಗಾರಿಯ ಅಂದಾಜು ಪಟ್ಟಿಗೆ ಈ ಕೆಳಕಂಡ ವಿವರಗಳೊಂದಿಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಿರುತ್ತಾರೆ.

(1) ಭಟ್ಕಳ ಪಟ್ಟಣವು ರಾಷ್ಟ್ರೀಯ ಹೆದ್ದಾರಿ-66ರಲ್ಲಿದ್ದು, ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಕರಾವಳಿ ಪಟ್ಟಣವಾಗಿದೆ. ಮಂಗಳೂರು ಹಾಗೂ ಪಣಜಿ ನಗರಗಳಿಗೆ ಸಂಪರ್ಕ ಹೊಂದಿರುತ್ತದೆ. ಪಟ್ಟಣವು ವ್ಯಾಪಾರಕ್ಕೆ ಪ್ರಸಿದ್ಧವಾಗಿದ್ದು, ಮೀನುಗಾರಿಕೆ, ಕೃಷಿ ಇತ್ಯಾದಿ ಪ್ರಮುಖ ವೃತ್ತಿಯಾಗಿರುತ್ತವೆ. ಪಟ್ಟಣದ ಜನಸಂಖ್ಯೆಯು 2011ರ ಜನಗಣತಿಯಂತೆ 48545 ಇದ್ದು, ಹಾಲಿ ಜನಸಂಖ್ಯೆಯು ಸುಮಾರು 52763 ಇರುತ್ತದೆ. ಪಟ್ಟಣದ 2030 ರ ಜನಸಂಖ್ಯೆಯು 72117 ಮತ್ತು 2045 ರ ಜನಸಂಖ್ಯೆಯು 98570 ಆಗಬಹುದೆಂದು ಅಂದಾಜಿಸಲಾಗಿದೆ.

(2) ಭಟ್ಕಳ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ವೆಂಕಟಾಪುರ ನದಿಯಿಂದ ದಿನಂಪ್ರತಿ ತಲಾ 135 ಲೀಟರ್‌ನಂತೆ ಮಾಡಲಾಗುತ್ತಿದೆ. ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು. ಈ ಪೈಕಿ 8 ವಾರ್ಡ್‌ಗಳಲ್ಲಿ ಕುಡ್ಸೆಮ್ ಯೋಜನೆಯಡಿ ಒಳಚರಂಡಿ ವ್ಯವಸ್ಥೆಯನ್ನು 2008ರಲ್ಲಿ ಚಾಲನೆಗೊಳಿಸಲಾಗಿದೆ. ಹಾಲಿ ಇರುವ ಒಳಚರಂಡಿ ವ್ಯವಸ್ಥೆಯು 22.5 ಕಿ. ಮೀ. ಉದ್ದದ ಸೀವರ್ ನೆಟ್‌ವರ್ಕ್ ಹಾಗೂ 1.5 ದಶಲಕ್ಷ ಲೀಟರ್ ಸಾಮಥ್ಯದ ಮಲಿನ ನೀರು ಶುದ್ಧೀಕರಣ ಘಟಕವನ್ನು ಹೊಂದಿರುತ್ತದೆ. ಪಟ್ಟಣದಲ್ಲಿ ಉಳಿದ ಪ್ರದೇಶಗಳಲ್ಲಿನ ಕೊಳಚೆ ನೀರನ್ನು ನೇರವಾಗಿ ಹಳ್ಳಕ್ಕೆ, ನದಿಗೆ ಬಿಡಲಾಗುತ್ತಿದ್ದು, ಇದರಿಂದ ಪಟ್ಟಣದಲ್ಲಿ ಅಂತರ್ಜಲ ಕಲುಷಿತಗೊಂಡು, ಜನರ ಆರೋಗ್ಯದ ಮೇಲೆ ದುಶ್ಪರಿಣಾಮ ಬೀರುತ್ತಿದೆ. ಪಟ್ಟಣದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಹಾಗೂ ಸುತ್ತಮುತ್ತಲಿನ ಜಲಮೂಲಗಳು ಮಾಲಿನ್ಯಗೊಳ್ಳದಂತೆ ತಡೆಯಲು ಒಳಚರಂಡಿ ಯೋಜನೆಯನ್ನು ಕೈಗೊಳ್ಳುವಂತೆ ನಾಗರೀಕರು ಮತ್ತು ಜನಪ್ರತಿನಿಧಿಗಳಿಂದ ಕೋರಿಕೆಗಳು ಸ್ವೀಕೃತಗೊಂಡಿರುತ್ತವೆ. ಹಾಲಿ ಪರಿಸ್ಥಿತಿಯನ್ನು ಪರಿಗಣಿಸಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಭಟ್ಕಳ ಪಟ್ಟಣದ ಉಳಿದ ಪ್ರದೇಶಗಳಿಗೆ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲು ಯೋಜನೆಯನ್ನು ರೂಪಿಸಿರುತ್ತದೆ.

(೯೭೩)೯೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ಭಾಗ ೧ (3) ಪಟ್ಟಣದ ಉಳಿದ ಪ್ರದೇಶಗಳಿಗೆ ಒಳಚರಂಡಿ ವ್ಯವಸ್ಥೆಗಾಗಿ, ಪಟ್ಟಣದಲ್ಲಿ ವಿವರವಾದ ಸರ್ವೆ ಕಾರ್ಯವನ್ನು ಕೈಗೊಳ್ಳಲಾಗಿರುತ್ತದೆ. ಭೌಗೋಳಿಕವಾಗಿ ಪಟ್ಟಣದ ಉಳಿದ ಪ್ರದೇಶಗಳನ್ನು 11 ಒಳಚರಂಡಿ ವಲಯವನ್ನಾಗಿ ವಿಂಗಡಿಸಲಾಗಿರುತ್ತದೆ. ವಲಯ 1 ರಿಂದ 11 ವರೆಗಿನ ವಲಯಗಳ ಗ್ರಾಮಸಾರವನ್ನು ಗ್ರಾಮಸಾರ ಶುದ್ಧೀಕರಣ ಘಟಕಕ್ಕೆ ವೆಟ್‌ವೆಲ್‌ಗಳಿಂದ ಪಂಪಿಂಗ್ ಕೊಳವೆ ಮಾರ್ಗದ ಮುಖಾಂತರ ಸಾಗಿಸಲಾಗುತ್ತದೆ. ಪಟ್ಟಣದ ಒಳಚರಂಡಿ ವ್ಯವಸ್ಥೆಯನ್ನು ಅಂತಿಮ ಹಂತದ ವರ್ಷ 2048ರ ಜನಸಂಖ್ಯೆ 98700ಗಳಿಗೆ ವಿನ್ಯಾಸಿಸಲಾಗಿರುತ್ತದೆ. ಹಾಲಿ ಇರುವ 1.40 ದಶಲಕ್ಷ ಲೀಟರ್ ಸಾಮರ್ಥ್ಯದ ಗ್ರಾಮಸಾರ ಶುದ್ಧೀಕರಣ ಘಟಕದ ಜೊತೆಗೆ ಹೆಚ್ಚುವರಿಯಾಗಿ 9.50 ದಶಲಕ್ಷ ಲೀಟರ್ ಸಾಮರ್ಥ್ಯದ ಗ್ರಾಮಸಾರ ಶುದ್ಧೀಕರಣ ಘಟಕ ನಿರ್ಮಿಸಲು ಯೋಜಿಸಲಾಗಿರುತ್ತದೆ.

(4) ಸದರಿ ಯೋಜನೆಯ ಅಂದಾಜು ಪಟ್ಟಿಯನ್ನು ಮಂಡಳಿಯ 2015-16 ನೇ ಸಾಲಿನ ದರಪಟ್ಟಿ, ಲೋಕೋಪಯೋಗಿ ಇಲಾಖೆಯ 2014- 15 ನೇ ಸಾಲಿನ ದರಪಟ್ಟಿ (2015-16ನೇ ಸಾಲಿಗೆ ಮುಂದುವರೆದುದು) ಹಾಗೂ ದರಪಟ್ಟಿಯಲ್ಲಿ ಇಲ್ಲದ ಐಟಂಗಳಿಗೆ ಮಾರುಕಟ್ಟೆ ದರಗಳನ್ನು ಅಳವಡಿಸಲಾಗಿದೆ. ಉದ್ದೇಶಿತ ಯೋಜನೆಯಲ್ಲಿ ಕೆಳಕಂಡ ಕಾಮಗಾರಿಗಳಿಗೆ ಅನುವು ಮಾಡಲಾಗಿದೆ.

Sl No Description of work Amount (`.in lakhs)
1 Providing sewer network, construction of Manholes and House Service Connections 9343.10
2 Construction of 9 Nos of wetwell, providing rising main, providing Electrical work and pumping Machinery work 2215.27
3 Construction of 9.50 MLD capacity Sewage Treatment Plant with SBR Technology. 1588.88
4 Restoration of roads damaged during execution of work 2323.00
Sub Total 15470.25
12% ETP charges 1856.43
3% Contingencies 464.11
Price Adjustment at 5% per Year for 2 Years 1547.02
1% towards Building and construction workers welfare cess 154.70
1.5% towards 3rd party inspection, training and capacity Building charges 232.05
Deposits to NH authority, PWD department 50.00
Land Acquisition charges 225.00
Total 20000.00

2) ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರು ಈ ಹಿಂದೆ ಸಲಿಸಿದ್ದ `. 232.07 ಕೋಟಿ ಅಂದಾಜು ಪಟ್ಟಿಯನ್ನು ಪರಿಷ್ಕರಿಸಿ, ಈ ಕೆಳಕಂಡ ಆರ್ಥಿಕ ಮಾದರಿಯಂತೆ `. 200 ಕೋಟಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಿರುತ್ತಾರೆ.

ಕರ್ನಾಟಕ ಸರ್ಕಾರದ ಅನುದಾನ 75% `. 150 ಕೋಟಿ
ಆರ್ಥಿಕ ಸಂಸ್ಥೆಯ ಸಾಲ 20% `. 40 ಕೋಟಿ
ಸ ್ಥಳೀಯ ಸಂಸ್ಥೆಯ ಪಾಲು 5% `. 10 ಕೋಟಿ
ಒಟ್ಟು `. 200 ಕೋಟಿ

3) ಸರ್ಕಾರವು ಪ್ರಸ್ತಾವನೆಯನ್ನು ಪರಿಗಣಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ನಅಇ 38 ಯುಡಿಎಸ್ 2015, ಬೆಂಗಳೂರು, ದಿನಾಂಕ 22 ನೇ ಏಪ್ರಿಲ್ 2017.

1. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯ, ಭಟ್ಕಳ ಪಟ್ಟಣದ ಸಮಗ್ರ ಒಳಚರಂಡಿ ಯೋಜನೆಯ `. 200 ಕೋಟಿ (ರೂಪಾಯಿ ಇನ್ನೂರು ಕೋಟಿ ಮಾತ್ರ) ಮೊತ್ತದ ಅಂದಾಜು ಪಟ್ಟಿಗೆ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಸರ್ಕಾರದ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.

1. ಈ ಕಾಮಗಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಿಯಮಾನುಸಾರ ಕೈಗೊಳ್ಳುವುದು.

2. ಕಾಮಗಾರಿಗೆ ಅಗತ್ಯವಿರುವ ಜಮೀನು ಲಭ್ಯವಿರಬೇಕು.

3. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು 2000 ಮತ್ತು ತತ್ಸಂಬಧ ಸರ್ಕಾರವು ಹೊರಡಿಸಿರುವ ಸುತ್ತೋಲೆ ಮತ್ತು ಆದೇಶಗಳಲ್ಲಿನ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸತಕ್ಕದ್ದು.

4. ಕಾಮಗಾರಿಯನ್ನು ನಿಗಧಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು.

5. ಕಾಮಗಾರಿಯ ವೆಚ್ಚ ಅನುಮೋದಿತ ಅಂದಾಜು ಪಟ್ಟಿಯ ವೆಚ್ಚಕ್ಕಿಂತ ಹೆಚ್ಚಾಗುವಂತಿಲ್ಲ ಮತ್ತು ಪರಿಷ್ಕರಣೆಗೆ ಅವಕಾಶ ನೀಡುವಂತಿಲ್ಲ.

6. ನೀರಿನ ಕರವನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮಾದರಿಯಲ್ಲಿ ನಿಗಧಿ ಪಡಿಸತಕ್ಕದ್ದು. 7. ಒಂದು ವೇಳೆ ಮೇಲಿನ ಸಾಲದ ವೆಚ್ಚವನ್ನು ಭರಿಸಲು ಭಟ್ಕಳ ಪುರಸಭೆಯು ವಿಫಲವಾದಲ್ಲಿ ಸರ್ಕಾರದಿಂದ ಭಟ್ಕಳ ಪುರಸಭೆಗೆ ನೀಡಲಾಗುವ ಎಸ್.ಎಫ್.ಸಿ ಅನುದಾನದಲ್ಲಿ ನೇರವಾಗಿ ಕಡಿತಗೊಳಿಸಲಾಗುವುದು.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ೯೭೫

2) ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಳ್ಳಬೇಕಾದ ಕಾಮಗಾರಿಯ ವಿವರಗಳನ್ನು ಅನುಭಂಧ-1 ರಲ್ಲಿ ನೀಡಿದೆ.

3) ಈ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ: ಆಇ 387 ವೆಚ್ಚ-9/2016, ದಿನಾಂಕ 21/03/2017 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಈ ಶಿವರುದ್ರಪ್ಪ

ಸರ್ಕಾರದ ಅಧೀನ ಕಾರ್ಯದರ್ಶಿ

ನಗರಾಭಿವೃದ್ಧಿ ಇಲಾಖೆ. (ಮಂಡಳಿ) ಸರ್ಕಾರದ ಆದೇಶ ಸಂಖ್ಯೆ : ನಅಇ 38 ಯುಡಿಎಸ್ 2015, ಬೆಂಗಳೂರು, ದಿನಾಂಕ : 22ನೇ ಏಪ್ರಿಲ್ 2017ಕ್ಕೆ

ಅನುಬಂಧ-1

ಉತ್ತರ ಕನ್ನಡ ಜಿಲ್ಲೆಯ, ಭಟ್ಕಳ ಪಟ್ಟಣದ ಸಮಗ್ರ ಒಳಚರಂಡಿ ಯೋಜನೆಯ `. 20000.00 ಲಕ್ಷ (ರೂಪಾಯಿ ಇನ್ನೂರು ಕೋಟಿ ಮಾತ್ರ) ಮೊತ್ತದ

Sl. No. Description Cost in Lakhs
1. Total Cost of Sewer Network & House connection 9343.10
Road Restoration 2323.00
2. Construction of Primery Treatment Unit (Total-9 Nos)
Construction of Primery Treatment Unit Z-1 23.47
Construction of Primery Treatment Unit Z-2 26.58
Construction of Primery Treatment Unit Z-4 14.44
Construction of Primery Treatment Unit Z-5 9.70
Construction of Primery Treatment Unit Z-6 11.41
Construction of Primery Treatment Unit Z-8 8.75
Construction of Primery Treatment Unit Z-9 24.00
Construction of Primery Treatment Unit Z-10 26.55
Construction of Primery Treatment Unit Z-11 29.18
Total 173.78
3. Construction of Wet well (Total-9 Nos)
Construction of Wet well cum Pumphouse Z-1 34.20
Construction of Wet well cum Pumphouse Z-2 32.10
Construction of Wet well cum Pumphouse Z-4 29.25
Construction of Wet well cum Pumphouse Z-5 27.55
Construction of Wet well cum Pumphouse Z-6 29.30
Construction of Wet well cum Pumphouse Z-8 26.30
Construction of Wet well cum Pumphouse Z-9 31.50
Construction of Wet well cum Pumphouse Z-10 34.35
Construction of Wet well cum Pumphouse Z-11 32.20
Total 276.75
4 Service Road & Fenching for Wet Wells (9 Nos)
Construction of Barbed Wire Fencing (L+130 m/WW) 33.40
Providing Service Road (L+60 m/WW) 75.83
5 Rising Main & Gravity Main
Providing and laying of D.I. Pipe rising main & gravity main from proposed WW to STP 554.46
Providing and laying of D.I. Pipe rising main from proposed WW (Mundalli) to STP 167.73
6 Electrical & Mechanical Works
Supply, Erection, Electrification & Commissioning of 4 Nos. of Different capacities of Non-Clog Sewage Pumpsets at As Below for Lean flow, Avaerage flow & peak flow including all other Accessories & DG sets, (Total -9 Nos)
WW-1 50.82
WW-2 70.14
WW-4 65.72
WW-5 63.22
WW-6 90.46
WW-8 46.95
WW-9 48.16
WW-10 52.31
WW-11 52.31
Total 549.09
7. Estimate for Providing Express feader main for arranging Power supply to Wet wells & STP at various locations 227.00
8. Construction of D.G. Room 9 Nos. At Wetwell 105.93
9. Construction of "D" type twin quarters 51.30
10. STP of cap 9.5MLD with SBR Process
11. Civil Work & Electromechanical Equipments 1588.88
Sub Total 15470.25
Add 12% ETP Charges 1856.43
Add 3 % Contigencies 464.11
Add 10% towrds Price Adjestment for two years @5% per annum 1547.02
Add 1% Building & Construction workers welfare Cess 154.70
Add 1.5% Third party inspection charges and Training & Capacity Building Charges 232.05
Sub Total 19725.00
Road cutting charges for PWD and NH Department 50.00
Land Acquisition Charges for Wetwell – 0.5 Acres/wetwell Total=9Nos at `. 50 lakhs/acre. X 4.5 Acre 225.00
Total `. 20000.00
೯೭೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ಭಾಗ ೧

P.R. 164

ಈ ಶಿವರುದ್ರಪ್ಪ

ಸರ್ಕಾರದ ಅಧೀನ ಕಾರ್ಯದರ್ಶಿ

SC-50

ನಗರಾಭಿವೃದ್ಧಿ ಇಲಾಖೆ. (ಮಂಡಳಿ)

ನಗರಾಭಿವೃದ್ಧಿ ಸಚಿವಾಲಯ ವಿಷಯ : Transaction of Development Rights ಟಿ.ಡಿ.ಆರ್.ನ್ನು ಆನ್‌ಲೈನ್ ಮೂಲಕ ನಿರ್ವಹಿಸುವ ಸಂಬಂಧ Electronic format for automated development rights transfer system ನ್ನು ತಯಾರಿಸಲು NeML ಸಂಸ್ಥೆಗೆ ನೀಡುವ ಬಗ್ಗೆ.

ಓದಲಾಗಿದೆ : 1) ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಪತ್ರ ಸಂಖ್ಯೆ: DTCP/1/TDR/2016-17, ದಿ: 17.09.2016.

2) ಆರ್ಥಿಕ ಇಲಾಖೆಯ ಆಧಿಸೂಚನೆ ಸಂಖ್ಯೆ: ಆಇ 1032 ವೆಚ್ಚ-12/2016 ದಿ: 09.02.2017.

ಪ್ರಸ್ತಾವನೆ :

ಮೇಲೆ ಓದಲಾದ (1)ರ ಪತ್ರದಲ್ಲಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ರವರು Transaction of Development Rights ಟಿ.ಡಿ.ಆರ್.ನ್ನು ಆನ್‌ಲೈನ್ ಮೂಲಕ ನಿರ್ವಹಿಸುವ ಸಂಬಂಧ Electronic format for Automated Development Rights Transfer System ಅನ್ನು ತಯಾರಿಸಲು NCDEX ಪರವಾಗಿ ಅನುಷ್ಟಾನಗೊಳಿಸುವ ಸಂಸ್ಥೆಯಾದ NeML ಇವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಟಿ.ಡಿ.ಆರ್.ನ್ನು ಜಾರಿಗೊಳಿಸುವ ಸಂಬಂಧವಾಗಿ ಕಾಯ್ದೆ ಮತ್ತು ನಿಯಮಗಳೊಂದಿಗೆ ಈ ಕೆಳಕಂಡ ಅಂಶಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

1) Develop an end to end computerized system for creation and issuing of the TDRs

2) Set up a TDR market on the models of stock exchanges.

3) Create an electronic repository for TDR

4) Computerised system for utilization of the TDRs ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ೯೭೭ Transaction of Development Rights ಟಿ.ಡಿ.ಆರ್.ನ್ನು ಆನ್‌ಲೈನ್ ಮೂಲಕ ನಿರ್ವಹಿಸಲು NCDEX ಅಂಗ ಸಂಸ್ಥೆಯಾದ NeML ಸಂಸ್ಥೆಯೊಂದಿಗೆ ಈ ಕೆಳಕಂಡ 3 ಮಾಡೆಲ್‌ಗಳನ್ನು ಆಧರಿಸಿ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999ರ ಕಲಂ 4(ಜಿ) ಯಿಂದ ವಿನಾಯಿತಿ ನೀಡಲು ಆರ್ಥಿಕ ಇಲಾಖೆಯ ಅಭಿಪ್ರಾಯ ಕೋರಲಾಗಿರುತ್ತದೆ.

1) Revenue sharing model. 2) Individual fee structure model. 3) Fixed fee model.

ಅದರಂತೆ ಆರ್ಥಿಕ ಇಲಾಖೆಯು ನಗರಾಭಿವೃದ್ದಿ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿ ಮೇಲೆ ಓದಲಾದ(2)ರ ಆದೇಶದಲ್ಲಿ Transaction of Development Rights ಟಿ.ಡಿ.ಆರ್.ನ್ನು ಆನ್‌ಲೈನ್ ಮೂಲಕ ನಿರ್ವಹಿಸುವ ಸಂಬಂಧ Electronic format for Automated Development Rights Transfer System ಅನ್ನು ತಯಾರಿಸಲು Subsidiary of NCDEX i.e. NeML ಸಂಸ್ಥೆಯ ಸೇವೆಯನ್ನು ಪಡೆಯಲು ಕೆಲವು ಷರತ್ತುಗಳನ್ನು ವಿಧಿಸಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-199ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ನಗರಾಭಿವೃದ್ದಿ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ ಹಾಗೂ ಕೆ.ಯು.ಐ.ಡಿ.ಎಫ್.ಸಿ ಮತ್ತು ಏಜೆನ್ಸಿಯ ಒಪ್ಪಂದದಂತೆ ಅನುಷ್ಟಾನಗೊಳಿಸುವ ಸದರಿ ಯೋಜನೆಯ ಕಾರ್ಯವೈಖರಿಯನ್ನು ಮೇಲ್ವಿಚಾರಣೆ ಮಾಡಲು ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ, ನಗರಾಭಿವೃದ್ದಿ ಇಲಾಖೆ, ಆಯುಕ್ತರು, ಬಿ.ಬಿ.ಎಂ.ಪಿ, ನಿರ್ದೇಶಕರು, ಪೌರಾಡಳಿತ ಇಲಾಖೆ ಮತ್ತು ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಇವರನ್ನೊಳಗೊಂಡ ಸಮಿತಿಯನ್ನು ರಚಿಸಲು ಸೂಚಿಸಿರುತ್ತದೆ. ಅದರಂತೆ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ; ನಅಇ 26 ಟಿಟಿಪಿ 2016, ಬೆಂಗಳೂರು, ದಿನಾಂಕ: 30.05.2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರದ ಅಧಿಸೂಚನೆ ಸಂಖ್ಯೆ: ಆಇ 1032 ವೆಚ್ಚ-12/16 ದಿ: 09.02.2017 ರಲ್ಲಿ Transaction of Development Rights ಟಿ.ಡಿ.ಆರ್.ನ್ನು ಆನ್‌ಲೈನ್ ಮೂಲಕ ನಿರ್ವಹಿಸುವ ಸಂಬಂಧ Electronic format for Automated Development Rights Transfer System ಅನ್ನು ತಯಾರಿಸಲು Subsidiary of NCDEX i.e. NeML ಸಂಸ್ಥೆಯ ಸೇವೆಯನ್ನು ಪಡೆಯಲು ಕೆಲವು ಷರತ್ತುಗಳನ್ನು ವಿಧಿಸಿ, ನಗರಾಭಿವೃಧ್ದಿ ಇಲಾಖೆಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-199ರ ಕಲಂ 4(ಜಿ) ರಡಿ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ. ಅದರನ್ವಯ Electronic format for Automated Development Rights Transfer System ಅನ್ನು ತಯಾರಿಸುವ ಸಂಬಂಧ NCDEX ಅಂಗ ಸಂಸ್ಥೆಯಾದ NeML ಸಂಸ್ಥೆಯ ಸೇವೆಯನ್ನು ಪಡೆಯಲು ಕೆ.ಯು.ಐ.ಡಿ.ಎಫ್.ಸಿ ಸಂಸ್ಥೆಗೆ ಸರ್ಕಾರದ ಅನುಮೋದನೆ ನೀಡಿ ಆದೇಶಿಸಿದೆ.

ಮುಂದುವರೆದು, ಕೆ.ಯು.ಐ.ಡಿ.ಎಫ್.ಸಿ ಮತ್ತು NCDEX ಅಂಗಸಂಸ್ಥೆಯಾದ NeML ಒಪ್ಪಂದದಂತೆ ಅನುಷ್ಟಾನಗೊಳಿಸುವ Transaction of Development Rights ಟಿ.ಡಿ.ಆರ್.ನ್ನು ಆನ್‌ಲೈನ್ ಮೂಲಕ ನಿರ್ವಹಿಸುವ ಸಂಬಂಧ Electronic format for Automated Development Rights Transfer System ಯೋಜನೆಯ ಕಾರ್ಯವೈಖರಿಯನ್ನು ಮೇಲ್ವಿಚಾರಣೆ ಮಾಡಲು ಸರ್ಕಾರವು ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಈ ಕೆಳಕಂಡ ಸಮಿತಿಯನ್ನು ರಚಿಸಿ ಆದೇಶಿಸಿದೆ.

ಕ್ರಮ ಸಂಖ್ಯೆ ಹ ಸ ೆ ರು ಮತ್ತು ಹುದ್ದೆ ಪ ದ ನಾಮ
1 ಸ ರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ದಿ ಇಲಾಖೆ, ವಿಕಾಸಸೌಧ, ಬೆಂಗಳೂರು. ಅಧ್ಯಕ್ಷರು
2 ಸ ರ್ಕಾರದ ಕಾರ್ಯದರ್ಶಿ, ನಗರಾಭಿವೃದ್ದಿ ಇಲಾಖೆ (ನಗರ ಸಭೆಗಳು ಮತ್ತು ಅಭಿವೃದ್ದಿ ಪ್ರಾಧಿಕಾರಗಳು) ವಿಕಾಸಸೌಧ, ಬೆಂಗಳೂರು. ಸ ದ ಸ ್ಯರು
3 ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು. ಸ ದ ಸ ್ಯರು
4 ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ವಿ.ವಿ.ಟವರ್, ಬೆಂಗಳೂರು. ಸ ದ ಸ ್ಯರು
5 ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಬೆಂಗಳೂರು. ಸ ದ ಸ ್ಯ ಕಾರ್ಯದರ್ಶಿ

PR. 169

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 100

ನಾಗರಾಜ,

ಸರ್ಕಾರದ ಅಧೀನ ಕಾರ್ಯದರ್ಶಿ.

ನಗರಾಭಿವೃದ್ಧಿ ಇಲಾಖೆ.

ಕಂದಾಯ ಸಚಿವಾಲಯ

ವಿಷಯ :- ಚಾಮರಾಜನಗರ ಜಿಲ್ಲೆ, ಕೊಳ್ಳೆಗಾಲ ತಾಲ್ಲೂಕು, ರಾಮಾಪುರ ಹೋಬಳಿ, ಶ್ರೀ ಮಲೈ ಮಹದೇಶ್ವರ ಸ್ವಾಮಿ ಅಭಿವೃದ್ದಿ ಪ್ರಾಧಿಕಾರದ ಅಭಿವೃದ್ದಿ ಕಾಮಗಾರಿಗಳಿಗೆ ಮಹದೇಶ್ವರ ಬೆಟ್ಟದ ಸ.ನಂ. 124ರ ಪೈಕಿ 20-00 ಎಕರೆ ಜಮೀನನ್ನು ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ :- ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ರವರ ಪತ್ರ ಸಂಖ್ಯೆ:ಎಲ್ಎನ್‌ಡಿ(1)ಸಿಆರ್:

28/2012-13 ದಿನಾಂಕ: 08.09.2016೯೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ಭಾಗ ೧

ಪ್ರಸ್ತಾವನೆ :-

ಮೇಲೆ ಓದಲಾದ ಪತ್ರದಲ್ಲಿ ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲ್ಲೂಕು, ರಾಮಾಪುರ ಹೋಬಳಿ, ಶ್ರೀ ಮಲೈ ಮಹದೇಶ್ವರ ಸ್ವಾಮಿ ಅಭಿವೃಧ್ಧಿ ಪ್ರಾಧಿಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ, ಮಹದೇಶ್ವರ ಬೆಟ್ಟದ ಸ.ನಂ. 124ರ ಪೈಕಿ 20.00 ಎಕರೆ ಪ್ರದೇಶವನ್ನು ಮಂಜೂರು ಮಾಡಿ, ಹಸ್ತಾಂತರಿಸುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಪ್ರಸ್ತಾಪಿತ ಜಮೀನು ಆಕಾರ್‌ಬಂದ್‌ನಂತೆ ಖುಷ್ಕಿ ತರಹೆಯಲ್ಲಿದ್ದು, ಆರ್.ಟಿ.ಸಿ. ಕಲಂ 9 ರಲ್ಲಿ ಸ.ತರಸು (ಸರ್ಕಾರಿ ಜಮೀನು) ಎಂದಿರುತ್ತದೆ. ಸದರಿ ಜಮೀನಿನ ಮಂಜೂರಾತಿ ಕೋರಿ ನಮೂನೆ 50, 53 ರಲ್ಲಿ ಅರ್ಜಿಗಳು ದಾಖಲಾಗಿರುವುದಿಲ್ಲ. ಸದರಿ ಪ್ರದೇಶವು ಹಾಲಿ ಪಾಳು ಬಿದ್ದಿರುತ್ತದೆ. ಈ ಜಮೀನಿನಲ್ಲಿ ಯಾವುದೇ ಸರ್ಕಾರಿ, ಖಾಸಗಿ ಕಟ್ಟಡಗಳು, ದೇವಸ್ಥಾನ, ಮಠ-ಮಂದಿರ ಹಾಗೂ ಯಾವುದೇ ಮಾಲ್ಕಿಗಳು ಇರುವುದಿಲ್ಲ. ಪ್ರಸ್ಥಾಪಿತ ಜಮೀನು ಕಂದಾಯ ಇಲಾಖೆಗೆ ಸೇರಿದ ಜಮೀನಾಗಿರುವುದರಿಂದ ಅರಣ್ಯ ಇಲಾಖೆಯ ಅಭಿಪ್ರಾಯದ ಅವಶ್ಯಕತೆ ಇರುವುದಿಲ್ಲವೆಂದು ಜಿಲ್ಲಾಧಿಕಾರಿಗಳು ವರದಿ ಮಾಡಿರುತ್ತಾರೆ.

ಪ್ರಾಧಿಕಾರದ ವತಿಯಿಂದ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೊಂಡು ಬೆಟ್ಟಕ್ಕೆ ಆಗಮಿಸುವ ಸಾರ್ವಜನಿಕರು ಹಾಗೂ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಪ್ರಸ್ತಾಪಿತ ಜಮೀನಿನಲ್ಲಿ ಶ್ರೀ ಮಲೈ ಮಹದೇಶ್ವರಸ್ವಾಮಿ ರವರ ಬೃಹತ್ ಪ್ರತಿಮೆ ಹಾಗೂ ಹಸಿರು ವನ ಸ್ಥಾಪಿಸಲು ಪ್ರಾಧಿಕಾರದ ವತಿಯಿಂದ ತೀರ್ಮಾನವಾಗಿರುವುದರಿಂದ ಕೊಳ್ಳೇಗಾಲ ತಾಲ್ಲೂಕು, ಮಹದೇಶ್ವರ ಬೆಟ್ಟದ ಸ.ನಂ. 124ರ ಪೈಕಿ 20.00 ಎಕರೆ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 20(ಸಿ) ಪ್ರಕಾರ ಮಾರುಕಟ್ಟೆ ಬೆಲೆಯ ಶೇ. 50 ರಷ್ಟು ದರ ವಿಧಿಸಿ ಮಂಜೂರು ಮಾಡುವುದಕ್ಕೆ ಜಿಲ್ಲಾಧಿಕಾರಿ, ಚಾಮರಾಜನಗರ ರವರ ಶಿಫಾರಸ್ಸಿನಂತೆ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರು ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಮೇಲ್ಕಂಡ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ:-

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 72 ಎಲ್‌ಜಿಎಂ 2016, ದಿನಾಂಕ: 06-06-2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕಾರ್ಯದರ್ಶಿ, ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಮಹದೇಶ್ವರ ಬೆಟ್ಟ, ಕೊಳ್ಳೇಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ ಇವರಿಗೆ ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಅಭಿವೃದ್ದಿ ಕಾರ್ಯಗಳಿಗೆ ಮತ್ತು ಹಸಿರು ವನ ನಿರ್ಮಿಸಲು ಚಾಮರಾಜನಗರ ಜಿಲ್ಲೆ, ಕೊಳ್ಳೆಗಾಲ ತಾಲ್ಲೂಕು, ರಾಮಾಪುರ ಹೋಬಳಿ, ಮಹದೇಶ್ವರ ಬೆಟ್ಟದ ಸ.ನಂ. 124ರ ಪೈಕಿ 20-00 ಎಕರೆ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 20(ಸಿ) ಮತ್ತು 22(ಎ)(1)(4) ರನ್ವಯ ಮಾರ್ಗಸೂಚಿ ಬೆಲೆಯ ಶೇಕಡಾ 50 ರಷ್ಟು ದರ ವಿಧಿಸಿ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರು ಮಾಡಿ ಆದೇಶಿಸಿದೆ.

ಷರತ್ತುಗಳು :-

1) ಸದರಿ ಭೂಮಿಯನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಈ ಆದೇಶದ ದಿನಾಂಕದಿಂದ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು. ಒಂದು ವೇಳೆ ಈ ಅವಧಿಯಲ್ಲಿ ಬಳಕೆ ಮಾಡಿಕೊಳ್ಳದಿದ್ದಲ್ಲಿ, ಮಂಜೂರಾತಿಯನ್ನು ರದ್ದುಪಡಿಸಿ ಸರ್ಕಾರಕ್ಕೆ ವಾಪಸ್ಸು ಪಡೆಯಲಾಗುವುದು.

2) ಸದರಿ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ. 3) ಸದರಿ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.

4) ಸದರಿ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ದಾವೆಗಳು ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.

5) ಸದರಿ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ ಉಪಗುತ್ತಿಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು.

6) ಸದರಿ ಜಮೀನಿನ ಯಾವುದೇ ಭಾಗವು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಾಗಿದ್ದಲ್ಲಿ ಸರ್ಕಾರವು ಸದರಿ ಜಮೀನನ್ನು ಪರಿಹಾರ ನೀಡದೇ ಹಿಂತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತದೆ.

7) ಸದರಿ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು.

8) ಸದರಿ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

9) ಸದರಿ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ಈ ಮಂಜೂರಾತಿ ಆದೇಶ ತನ್ನಷ್ಟಕ್ಕೆ ತಾನೇ ರದ್ದಾಗುವುದು ಹಾಗೂ ಯಾವುದೇ ಪರಿಹಾರ ನೀಡದೇ ಮಂಜೂರಾದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು.

10) ಜಿಲ್ಲಾಧಿಕಾರಿಗಳು ಮಂಜೂರಾದ ಜಮೀನನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

P.R. 186

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಉದಯ ಆರ್. ನಾಯಕ್

ಪೀಠಾಧಿಕಾರಿ

ಕಂದಾಯ ಇಲಾಖೆ. (ಭೂ.ಮಜೂರಾತಿ.-2)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ೯೭೯

ಕಂದಾಯ ಸಚಿವಾಲಯ

ವಿಷಯ :- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ರಾಮನಗರ ಗ್ರಾಮದ ಸರಕಾರಿ ಪಡ ರಿ.ಸ. ನಂ.54 ರಲ್ಲಿ ಕ್ಷೇತ್ರ 0-04 ಗುಂಟೆ 08 ಆಣೆ ಜಮೀನನ್ನು ಶ್ರೀ ನಂದೀಶ್ವರ ದೇವಸ್ಥಾನಕ್ಕೆ ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ :- ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರ ಪತ್ರ ಸಂ: ಪ್ರಾಆಬೆ:ಭೂಮಿ:4:

ಎಲ್ಎನ್‌ಡಿ:ಸಿಆರ್: 101/2013-14 ದಿನಾಂಕ 29-09-2014 ಮತ್ತು 19-12-2016

ಪ್ರಸ್ತಾವನೆ :-

ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರ ಮೇಲೆ ಓದಲಾದ ಪತ್ರಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ರಾಮನಗರ ಗ್ರಾಮದ ಸರಕಾರಿ ಪಡ ರಿ.ಸ. ನಂ.54 ರಲ್ಲಿ ಕ್ಷೇತ್ರ 0-04 ಗುಂಟೆ 08 ಆಣೆ ಜಮೀನನ್ನು ಶ್ರೀ ನಂದೀಶ್ವರ ದೇವಸ್ಥಾನದ ಸಲುವಾಗಿ ಶ್ರೀ ನಂದೀಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ (ಜಾಮಗಾಳಿ) ರಾಮನಗರ ಇವರಿಗೆ ಮಂಜೂರು ಮಾಡುವ ಬಗ್ಗೆ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಪ್ರಾದೇಶಿಕ ಆಯುಕ್ತರು ಬೆಳಗಾವಿ ವಿಭಾಗ ಇವರು ತಮ್ಮ ಪತ್ರದಲ್ಲಿ ಕೋರಿರುವ ಜಮೀನು ಸೂಪಾ (ಜೋಯಿಡಾ) ತಾಲ್ಲೂಕಿನ ರಾಮನಗರ (ಶೀತಾವಾಡ) ಗ್ರಾಮದ ರಿ.ಸ. ನಂ54 ರ ಒಟ್ಟು ಕ್ಷೇತ್ರ 10-32 ಗುಂಟೆ ಜಮೀನು ಇದ್ದು, ಮೂಲತ ಅರಣ್ಯ ಜಮೀನಾಗಿದ್ದು ನಂತರ ಸರ್ಕಾರದ ಆದೇಶ ನಂ. ಎಫ್ಎಫ್‌ಡಿ-79/ಎಫ್‌ಜಿಎಲ್-79 ದಿನಾಂಕ:01-05-1980 ರನ್ವಯ ಅರಣ್ಯ ಜಮೀನು ನಿರ್ವನೀಕರಣ ಅಧಿಸೂಚನೆಯಿಂದ 10-32 ಎಕರೆ ಜಮೀನು ಸರಕಾರಿ ಪಡವೆಂದು ಪರಿವರ್ತನೆ ಹೊಂದಿರುತ್ತದೆ. ಸರ್ಕಾರಿ ಪಡಾ ಎಂದು ಆರ್.ಟಿ.ಸಿ. ಕಾಲಂ.9 ರಲ್ಲಿ ದಾಖಲಾಗಿರುತ್ತದೆ.

ಮುಖ್ಯ ಅಭಿಯಂತರು ಕೆ.ಪಿ.ಸಿ ಗಣೇಶಗುಡಿ ಇವರು ಲೇಔಟ್ ನಕ್ಷೆ ತಯಾರಿಸಿದ್ದು ಅದರಂತೆ ನಿರಾಶ್ರಿತರಿಗೆ 1135 ಫ್ಲಾಟ್‌ಗಳನ್ನು ನಿರ್ಮಿಸಿ ಪುರ್ನವಸತಿ ಕಲ್ಪಸಿ ಕೊಡಲಾಗಿ ಈ ಲೇಔಟ್ ನಕ್ಷೆ ಪ್ರಕಾರ ರಾಮಲಿಂಗ ದೇವಸ್ಥಾನ, ಮಸೀದಿ ಹಾಗೂ ಚರ್ಚಗಳಿಗೆ ಪ್ಲಾಟ್ ಮೀಸಲಿಟ್ಟಿದ್ದು ಪುರ್ನವಸತಿ ಕೇಂದ್ರಗಳಲ್ಲಿ ಮಂಜೂರಿಸಿದ ಪ್ಲಾಟ್‌ಗಳನ್ನು ಹೊರತುಪಡಿಸಿ ಉಳಿದ ಖುಲ್ಲಾ ಜಾಗದಲ್ಲಿ ಹಲವಾರು ವರ್ಷಗಳ ಹಿಂದೆಯೇ ದೇವಸ್ಥಾನಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿದ್ದು ಎಲ್ಲಾ ದೇವಸ್ಥಾನಗಳನ್ನು ನೋಂದಣಿ ಹಾಗೂ ಮುದ್ರಾಂಕ ಇಲಾಖೆಯಲ್ಲಿ ಟ್ರಸ್ಟ್ ಡೀಡ್ ಮೂಲಕ ನೋಂದಾಯಿಸಿರುವುದಾಗಿ ತಿಳಿಸಿರುತ್ತಾರೆ. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 21 ರನ್ವಯ ಮಾರುಕಟ್ಟೆ ಬೆಲೆಯ ಶೇಕಡಾ 50 ರಷ್ಟು ಮೌಲ್ಯವನ್ನು ವಿಧಿಸಿ ಶ್ರೀ ನಂದೀಶ್ವರ ದೇವಸ್ಥಾನಕ್ಕೆ 0-04 ಗುಂಟೆ 08 ಆಣೆ ಜಮೀನು ಮಂಜೂರು ಮಾಡುವ ಕುರಿತು ಸರ್ಕಾರದ ಪೂರ್ವಾನುಮೋದನೆ ನೀಡುವ ಕುರಿತು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರು ಮಾಡುವಂತೆ ಶಿಫಾರಸ್ಸು ಮಾಡಿರುತ್ತಾರೆ. 1. ಉದ್ದೇಶಿತ ಜಮಿನನ್ನು ಯಾವ ಉದ್ದೇಶಕ್ಕಾಗಿ ಮಂಜೂರಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು. 2. ಸದರಿ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ನೋಡಿಕೊಳ್ಳತಕ್ಕದು. 3. ಮಾರುಕಟ್ಟೆ ಬೆಲೆ ಶೇಕಡಾ 50 ರಷ್ಟು ಮೌಲ್ಯ ಹಾಗೂ ಇನ್ನಿತರ ಶುಲ್ಕಗಳ ಸಹಿತ ಸರ್ಕಾರಕ್ಕೆ ಭರಿಸುವ ಷರತ್ತಿಗೊಳಪಟ್ಟು. 4. ಮೇಲ್ಕಂಡ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಸದರಿ ಜಮೀನನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು.

ಪ್ರಸ್ತಾವನೆಯಲ್ಲಿನ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ:-

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 12 ಎಲ್‌ಜಿಎನ್ 2017, ದಿನಾಂಕ : 07.06.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಶ್ರೀ ನಂದೀಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ (ಜಾಮಗಾಳಿ) ರಾಮನಗರ ಇವರಿಗೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ರಾಮನಗರ(ಶೀತವಾಡ) ಗ್ರಾಮದ ಸ.ನಂ. 54 ರಲ್ಲಿ 0-04 ಗುಂಟೆ 08 ಆಣೆ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ(1)(i)(4) ರನ್ವಯ ಮಾರ್ಗಸೂಚಿ ಬೆಲೆಯ ಶೇಕಡಾ 50% ಮೌಲ್ಯ ಹಾಗೂ ಇನ್ನಿತರ ಶುಲ್ಕಗಳನ್ನು ಪಾವತಿಸಿಕೊಂಡು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಶ್ರೀ ನಂದೀಶ್ವರ ದೇವಸ್ಥಾನಕ್ಕೆ ಮಂಜೂರು ಮಾಡಲು ಅನುಮೋದನೆ ನೀಡಲಾಗಿದೆ. 1. ಉದ್ದೇಶಿತ ಜಮಿನನ್ನು ಯಾವ ಉದ್ದೇಶಕ್ಕಾಗಿ ಮಂಜೂರಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು ಹಾಗೂ ಯಾವುದೇ ಕಾರಣಕ್ಕೂ ಪರಭಾರೆ ಮಾಡತಕ್ಕದ್ದಲ್ಲ.

2. ಸದರಿ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ನೋಡಿಕೊಳ್ಳತಕ್ಕದ್ದು. 3. ಪ್ರಚಲಿತ ಮಾರ್ಗಸೂಚಿ ಬೆಲೆಯ ಶೇಕಡಾ 50 ರಷ್ಟು ಹಾಗೂ ಇನ್ನಿತರ ಶುಲ್ಕಗಳ ಸಹಿತ ಸರ್ಕಾರಕ್ಕೆ ಭರಿಸುವ ಷರತ್ತಿಗೊಳಪಟ್ಟು. 4. ಮೇಲ್ಕಂಡ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಸದರಿ ಜಮೀನನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು.

P.R. 187

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಉದಯ ಆರ್. ನಾಯಕ್

ಪೀಠಾಧಿಕಾರಿ

ಕಂದಾಯ ಇಲಾಖೆ. (ಭೂ.ಮಂಜೂರಾತಿ.-2)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ತಿದ್ದುಪಡಿ

ಸಂಖ್ಯೆ : ಸಿಆಸುಇ 97 ಸೇಮುಇ 2016, ಬೆಂಗಳೂರು, 09-06-2017.

ದಿನಾಂಕ : 10-01-2017ರ ಸಮ ಸಂಖ್ಯೆಯ ಅಧಿಸೂಚನೆಯಲ್ಲಿ 2017ರಲಿ ವಯೋನಿವೃತ್ತಿ ಹೊಂದುತ್ತಿರುವ ಇಲಾಖಾ ಮುಖ್ಯಸ್ಥರ ಮತ್ತು ಮುಖ್ಯ ಇಂಜಿನಿಯರುಗಳ (ಸ್ವತಂತ್ರ ಪ್ರಭಾರ) ವಯೋನಿವೃತ್ತಿ ಹೊಂದಲು ಅನುಮತಿ ನೀಡಲಾಗಿದೆ. ಈ ಅಧಿಸೂಚನೆಯ ಕ್ರಮ ಸಂಖ್ಯೆ : 09ರಲ್ಲಿ ನಮೂದಿಸಲಾಗಿರುವ "ಕೆ.ವಿ. ಸುಬ್ರಹ್ಮಣ್ಯಂ" ಮತ್ತು ಸದರಿ ಹೆಸರಿನ ಸಾಲಿನ ನಿವೃತ್ತಿ ದಿನಾಂಕದ ಅಂಕಣದಲ್ಲಿ ನಮೂದಿಸಿರುವ "30-09-1957" ಎಂಬ ಪದಗಳು ಮತ್ತು ಅಂಕಿಗಳ ಬದಲಾಗಿ, ಕ್ರಮವಾಗಿ "ಕೆ.ವಿ. ಸುಬ್ರಮಣ್ಯಂ" ಮತ್ತು 30-09-2017: ಎಂದು ತಿದ್ದುಕೊಂಡು ಓದಿಕೊಳ್ಳತಕ್ಕದ್ದು.

P.R. 188

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಶ್ರ.ದೇ. ಸುನಂದ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ. (ಸೇವೆಗಳು-3) R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೯೮೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ಭಾಗ ೧

ಇಂಧನ ಸಚಿವಾಲಯ

ವಿಷಯ: 2017-18ನೇ ಸಾಲಿನಲ್ಲಿ ಸೌರಶಕ್ತಿ ಯೋಜನೆಗಳನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ(ಕೆ.ಆರ್.ಇ.ಡಿ.ಎಲ್) ವತಿಯಿಂದ ಅನುಷ್ಠಾನಗೊಳಿಸುವ ಕುರಿತು. ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಇಎನ್ 54 ವಿಎಸ್‌ಸಿ 2014, ದಿನಾಂಕ : 28.02.2015.

2. ಸರ್ಕಾರದ ತಿದ್ದುಪಡಿಆದೇಶ ಸಂಖ್ಯೆ: ಇಎನ್ 54 ವಿಎಸ್‌ಸಿ 2014, ದಿನಾಂಕ : 12.08.2015. 3. ಸರ್ಕಾರದ ಆದೇಶ ಸಂಖ್ಯೆ: ಇಎನ್ 17 ವಿಎಸ್‌ಸಿ 2016, ದಿನಾಂಕ : 22.01.2016. 4. ಸರ್ಕಾರದ ಆದೇಶ ಸಂಖ್ಯೆ: ಇಎನ್ 17 ವಿಎಸ್‌ಸಿ 2016, ದಿನಾಂಕ : 23.04.2016. 5. ಆಯವ್ಯಯ 2017-18ರಲ್ಲಿ ಕಂಡಿಕೆ 374ರಂತೆ ಇಂಧನ ಇಲಾಖೆಗೆ ಒದಗಿಸಿರುವ ಅನುದಾನದಡಿ. 6. ಕೆ.ಆರ್.ಇ.ಡಿ.ಎಲ್‌ರವರ ಪತ್ರ ಸಂಖ್ಯೆ: KREDL/07/SOG-2/F19/2016/2748-49, ದಿನಾಂಕ: 21.04.2017.

ಪ್ರಸ್ತಾವನೆ :

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಮುಖಾಂತರ ಮೇಲೆ ಓದಲಾದ (1) ಮತ್ತು (2)ರಂತೆ 5 ಹೆಚ್.ಪಿ ಸಾಮರ್ಥ್ಯದ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ವಿತರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಡಿ ಪ್ರಾಯೋಗಿಕವಾಗಿ 11 ತಾಲ್ಲೂಕುಗಳಲ್ಲಿ ಒಟ್ಟು 1009 ಸಂಖ್ಯೆಯ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಸದರಿ ಯೋಜನೆಯಡಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ರೂ.1 (ಒಂದು) ಲಕ್ಷ ವಂತಿಗೆಯೊಂದಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಯಾವುದೇ ವಂತಿಗೆ ಇಲ್ಲದೆ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ವಿತರಿಸಲಾಗುತ್ತಿದೆ. ಕೆಆರ್ಇಡಿಎಲ್ ಸಂಸ್ಥೆಯಿಂದ

ಏಪ್ರಿಲ್-2017ರ ಅಂತ್ಯಕ್ಕೆ ಒಟ್ಟು 700 ಸಂಖ್ಯೆಯ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸಿ ಚಾಲನೆಗೊಳಿಸಲಾಗಿದೆ.

ಮೇಲೆ ಓದಲಾದ (3) ಮತ್ತು (4)ರಂತೆ2015-16 ಮತ್ತು 2016-17 ನೇ ಸಾಲಿನಲ್ಲಿ ಕೆಆರ್ಇಡಿಎಲ್ ಸಂಸ್ಥೆಗೆ ಮುಂದುವರೆದ ಯೋಜನೆಯಾಗಿ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ರೈತರಿಗೆ ವಿತರಿಸಲು ಕ್ರಮವಾಗಿ `. 15 (ಹದಿನೈದು) ಕೋಟಿ ಮತ್ತು `. 20 (ಇಪ್ಪತ್ತು) ಕೋಟಿಗಳನ್ನು ನೀಡಲಾಗಿದ್ದು, ಇದರ ಜೊತೆಗೆ 2013-14 ಮತ್ತು 2014-15ರಲ್ಲಿ ಉಳಿಕೆಯಾದ ರೂ.4.44 ಕೋಟಿ ಅನುದಾನವನ್ನು ಸೇರಿಸಿ ಒಟ್ಟು `. 39.44 ಕೋಟಿಗಳ ಮೊತ್ತದಲ್ಲಿ ಎರಡನೇ ಹಂತದಲ್ಲಿ 1530 ಸಂಖ್ಯೆ ಹಾಗೂ ಮೂರನೇ ಹಂತದಲ್ಲಿ 901 ಸಂಖ್ಯೆಯ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ಒದಗಿಸುವ ಯೋಜನೆಗೆ ಅನುಮೋದನೆ ನೀಡಲಾಗಿರುತ್ತದೆ. ಎರಡು ಮತ್ತು ಮೂರನೇ ಹಂತದ ಯೋಜನೆಯ ಅನುಷ್ಠಾನಕ್ಕಾಗಿ ಈಗಾಗಲೇ, ಕೆಆರ್ಇಡಿಎಲ್ ಸಂಸ್ಥೆಯಿಂದ ಕಾರ್ಯಾದೇಶ ನೀಡಲಾಗಿರುತ್ತದೆ.

`. 25.42 (SCSP-`. 4.36, TSP-`. 1.77 ಮತ್ತು General- `. 19.29) ಕೋಟಿಗಳನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ

P.R. 182

SC-10

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 06 July 2017. Indian Gazettes, https://egazette.servantsofknowledge.in/details/in.gazette.karnataka_new.2017-07-06.Part-1/. Archive identifier in.gazette.karnataka_new.2017-07-06.Part-1.