Servants of Knowledge
Karnataka Gazette · Government of Karnataka

Karnataka Gazette, Part Part-1, 13 July 2017

Published 13 July 2017

Part
Part-1
Identifier
in.gazette.karnataka_new.2017-07-13.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೨

Volume 152

ಬೆಂಗಳೂರು, ಗುರುವಾರ, ಜುಲೈ ೧೩, ೨೦೧೭ (ಆಷಾಡ ೨೨, ಶಕ ವರ್ಷ ೧೯೩೯)

Bengaluru, Thursday, July 13, 2017 (Ashadha 22, Shaka Varsha 1939)

ಸಂಚಿಕೆ ೨೮

Issue 28

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಮೂಲಸೌಲಭ್ಯ ಅಭಿವೃದ್ಧಿ ಸಚಿವಾಲಯ

ವಿಷಯ : ಬೆಂಗಳೂರು ಏರ್‌ಪೋರ್ಟ್ ರೈಲ್ ಲಿಂಕ್ ಲಿಮಿಟೆಡ್ (ಬಿಎಆರ್ಎಲ್) ಸಂಸ್ಥೆಯನ್ನು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ನಗರಾಭಿವೃದ್ಧಿ ಇಲಾಖೆಯ ಆಡಳಿತ ವ್ಯಾಪ್ತಿಗೆ ವರ್ಗಾಯಿಸುವ ಕುರಿತು – ಕಾರ್ಯಾದೇಶ.

ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ : ಐಡಿಡಿ 40 ಡಿಐಎ 2002, ದಿನಾಂಕ: 26-12-2007.

2) ಸರ್ಕಾರದ ಪತ್ರ ಸಂಖ್ಯೆ : ಐಡಿಡಿ 154 ಡಿಐಎ 2007, ದಿನಾಂಕ: 31-01-2008.

3) ಸರ್ಕಾರದ ಆದೇಶ ಸಂಖ್ಯೆ : ಯುಡಿಡಿ 320 ಬಿಎಂಆರ್ 2008, ದಿನಾಂಕ: 03-04-2009.

4) ಸರ್ಕಾರದ ಆದೇಶ ಸಂಖ್ಯೆ : ಯುಡಿಡಿ 364 ಎಂಎನ್‌ಜೆ 2016, ದಿನಾಂಕ: 03-09-2016.

ಪ್ರಸ್ತಾವನೆ :

1. ಮೇಲಿನ ಕ್ರಮ ಸಂಖ್ಯೆ (1) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಬೆಂಗಳೂರು ನಗರದಿಂದ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತ್ವರಿತ ಸಾರಿಗೆ ಸಂಪರ್ಕವನ್ನು ಕಲ್ಪಿಸಲು ಹೈಸ್ಪೀಡ್ ರೈಲ್ ಲಿಂಕ್ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಒಂದು ವಿಶೇಷ ಉದ್ದೇಶಿತ ವಾಹನದ (ಎಸ್‌ಪಿವಿ) ಮೂಲಕ ಅನುಷ್ಠಾನಗೊಳಿಸಲು ಹಾಗೂ ಇದಕ್ಕೆ ಸಂಬಂಧಪಟ್ಟ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವನ್ನು (ಕೆಎಸ್ಐಐಡಿಸಿ) ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ನೋಡಲ್ ಸಂಸ್ಥೆಯಾಗಿ ನೇಮಕ ಮಾಡಲಾಗಿದೆ.

2. ಕ್ರಮ ಸಂಖ್ಯೆ (2)ರಲ್ಲಿ ಓದಲಾದ ಸರ್ಕಾರದ ಪತ್ರದಲ್ಲಿ ಬೆಂಗಳೂರು ಏರ್‌ಪೋರ್ಟ್ ರೈಲ್ ಲಿಂಕ್ ಲಿ. (ಬಿಎಆರ್ಎಲ್) ಸಂಸ್ಥೆಯ ರಚನೆಯ ಬಗ್ಗೆ ದಿನಾಂಕ : 05-01-2008 ರಂದು ಘನತವೆತ್ತ ರಾಜ್ಯಪಾಲರ ಸಲಹೆಗಾರರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯ ತೀಮಾನಗಳ (ಮೆಮೊರಾಂಡಂ ಅಂಡ್ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್, ಕಂಪನಿಯ ಪ್ರಾರಂಭಿಕ ನಿರ್ದೇಶಕ ಮಂಡಳಿ, ಕಂಪನಿಯ ಅಧಿಕೃತ ಬಂಡವಾಳ ಇತ್ಯಾದಿ) ಅನುಷ್ಠಾನಕ್ಕೆ ಕ್ರಮ ವಹಿಸಬೇಕೆಂದು ಕೆಎಸ್ಐಐಡಿಸಿಗೆ ತಿಳಿಸಲಾಗಿದೆ. ಅದರಂತೆ, ಬೆಂಗಳೂರು ಏರ್‌ಪೋರ್ಟ್ ರೈಲ್ ಲಿಂಕ್ ಲಿ., (ಬಿಎಆರ್ಎಲ್) ಸಂಸ್ಥೆಯನ್ನು ಕಂಪನಿಯ ಕಾಯಿದೆ, 1956ರಡಿ ದಿನಾಂಕ : 31-03-2008 ರಂದು ನೋಂದಾಯಿಸಲಾಗಿದೆ.

ಸದರೀ ಸಂಸ್ಥೆಯು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಡಿ ಬೆಂಗಳೂರಿನಲ್ಲಿ ಲೈಟ್ ರೈಲ್ ಸಾರಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲು ಕಾರ್ಯನಿರ್ವಹಿಸುತ್ತಿದೆ.

3. ಕ್ರಮ ಸಂಖ್ಯೆ (3)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಬೆಂಗಳೂರಿನಲ್ಲಿ ಅಥವಾ ರಾಜ್ಯದ ಇತರೆ ಯಾವುದೇ ಭಾಗದಲ್ಲಿ ಮಾನೋ ರೈಲು ಯೋಜನೆಯನ್ನು ಕಾರ್ಯಗತಗೊಳಿಸಲು ಬೆಂಗಳೂರು ಏರ್‌ಪೋರ್ಟ್ ರೈಲ್ ಲಿಂಕ್ ಲಿ. (ಬಿಎಆರ್ಎಲ್) ಸಂಸ್ಥೆಯನ್ನು ವಿಶೇಷ ಉದ್ದೇಶಿತ ವಾಹನ (ಎಸ್‌ಪಿವಿ) ಎಂದು ನೇಮಕ ಮಾಡಲಾಗಿದೆ.

4. ಕ್ರಮ ಸಂಖ್ಯೆ (4)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಬೆಂಗಳೂರು ನಗರದಲ್ಲಿ ಸಾರಿಗೆ ವ್ಯವಸ್ಥೆಯನ್ನು (ಲಘು ರೈಲ್ ವ್ಯವಸ್ಥೆ, ಮೆಟ್ರೋ ಯೋಜನೆ ಇತ್ಯಾದಿ) ಕಲ್ಪಿಸಲು ಸಂಪನ್ಮೂಲ ಸಂಗ್ರಹಿಸಲು ಪ್ರತ್ಯೇಕವಾದ ಹಣಕಾಸು ವ್ಯವಸ್ಥೆಯನ್ನು (ಭೂಆಧಾರಿತ ಕಂದಾಯ ವ್ಯವಸ್ಥೆ) ರಚಿಸಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ.

(೯೮೧)೯೮೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ಭಾಗ ೧ 5. ಬೆಂಗಳೂರು ನಗರದ ಹೆಬ್ಬಾಳದಿಂದ ಜೆ.ಪಿ. ನಗರದ ವರೆಗೆ (ಪಶ್ಚಿಮ ಭಾಗದ ವರ್ತುಲ ರಸ್ತೆಯ) ಮತ್ತು ಪೆರಿಫೆರೆಲ್ ವರ್ತುಲ ರಸ್ತೆಯಿಂದ ಮಾಗಡಿ ರಸ್ತೆಯ ಟೋಲ್‌ಗೇಟ್ ವರೆಗೆ ಎರಡು ಕಾರಿಡಾರ್‌ಗಳಲ್ಲಿ ಎಲ್ಆರ್‌ಟಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ವಿವರವಾದ ಯೋಜನಾ ವರದಿಯನ್ನು ತಯಾರಿಸಿ ಬಿಎಆರ್ಎಲ್ ಸಂಸ್ಥೆಯು ಯೋಜನೆಯು ಅನುಷ್ಠಾನದ ಬಗ್ಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿ, ಯೋಜನೆಗೆ ಬೇಕಾದ ಸಂಪನ್ಮೂಲಗಳನ್ನು ಭೂ ಆಧಾರಿತ ನವೀನ ಮಾದರಿಯಲ್ಲಿ ಸಂಗ್ರಹಿಸುವ ಬಗ್ಗೆ ಪರಿಶೀಲಿಸಬೇಕೆಂದು ಅಭಿಪ್ರಾಯ ನೀಡಿದೆ.

ಅದರಂತೆ ಕ್ರಮ ಸಂಖ್ಯೆ (4) ರಲ್ಲಿ ಸರ್ಕಾರದ ಆದೇಶವನ್ನು ಹೊರಡಿಸಲಾಗಿದೆ.

6. ದಿನಾಂಕ : 05-01-2017 ರಂದು ಜರುಗಿದ ಬಿಎಆರ್ಎಲ್ ಸಂಸ್ಥೆಯ ಆಡಳಿತ ಮಂಡಳಿಯ ಸಭೆಯಲ್ಲಿ, ಉದ್ದೇಶಿತ ಎಲ್ಆರ್‌ಟಿ ಸಾರಿಗೆ ವ್ಯವಸ್ಥೆಯನ್ನು ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿ ಪ್ರದೇಶವಾದ ಬೆಂಗಳೂರು ನಗರದಲ್ಲಿ ಅನುಷ್ಠಾನಗೊಳಿಸುತ್ತಿರುವುದರಿಂದ ಯೋಜನೆಯ ಅನುಷ್ಠಾನದಲ್ಲಿ ಹೆಚ್ಚಿನ ಸಮನ್ವಯ ಸಾಧಿಸಲನುವಾಗುವಂತೆ, ಬಿಎಆರ್ಎಲ್ ಸಂಸ್ಥೆಯನ್ನು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ನಗರಾಭಿವೃದ್ಧಿ ಇಲಾಖೆಯ ಆಡಳಿತ ವ್ಯಾಪ್ತಿಗೆ ತರಲು ತೀರ್ಮಾನಿಸಲಾಗಿದೆ. ಈ ಕುರಿತು ಬಿಎಆರ್ಎಲ್ ಸಂಸ್ಥೆಯ ನಿರ್ದೇಶಕರು (ಯೋಜನೆ) ಇವರು ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಗಿನಂತೆ ಆದೇಶವನ್ನು ಹೊರಡಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಐಡಿಡಿ 52 ಐಟಿಎಸ್ 2017, ಬೆಂಗಳೂರು, ದಿನಾಂಕ : 16-05-2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಆಡಳಿತ ಹಿತದೃಷ್ಟಿಯಿಂದ, ಬೆಂಗಳೂರು ಏರ್‌ಪೋರ್ಟ್ ರೈಲ್ ಲಿಂಕ್ ಲಿಮಿಟೆಡ್ (ಬಿಎಆರ್ಎಲ್) ಸಂಸ್ಥೆಯನ್ನು ಮೂಲಸೌಲಭ್ಯ ಅಭಿವೃದ್ದಿ ಇಲಾಖೆಯಿಂದ ನಗರಾಭಿವೃದ್ಧಿ ಇಲಾಖೆಯ ಆಡಳಿತ ವ್ಯಾಪ್ತಿಗೆ ವರ್ಗಾಯಿಸಿದೆ.

ಈ ಬಗ್ಗೆ ಕರ್ನಾಟಕ ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮಗಳು 1997ಗೆ ಸೂಕ್ತವಾದ ತಿದ್ದುಪಡಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR – 155

ವೆಂಕಟೇಶ ಮೂರ್ತಿ ಎಂ.

SC - 200

ಸರ್ಕಾರದ ಅಧೀನ ಕಾರ್ಯದರ್ಶಿ,

ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

ವಿಷಯ : ಬೆಂಗಳೂರು ಮೆಟ್ರೋ ರೈಲು ಯೋಜನೆಯ 2ನೇ ಹಂತದ ಭೂಸ್ವಾಧೀನ ಪ್ರಕ್ರಿಯೆಗಾಗಿ ಕೆ.ಎ.ಎಸ್.

(ಕಿರಿಯ ಶ್ರೇಣಿ) ದರ್ಜೆಯ ವಿಶೇಷ ಭೂಸ್ವಾಧೀನಾಧಿಕಾರಿ (ಮೆಟ್ರೋ) ಹುದ್ದೆಯನ್ನು ಸೃಜಿಸುವ ಕುರಿತು.

ಓದಲಾಗಿದೆ : 1) ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಮೆಟ್ರೋ ರೈಲು ನಿಗಮ ನಿ. ಇವರ ಪತ್ರ ಸಂಖ್ಯೆ :

BMRCL/ Land/ Misc.1/2015-16, 6343 ದಿನಾಂಕ: 28.12.2016.

2) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಸದಸ್ಯರು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಇವರ ಪತ್ರ ಸಂಖ್ಯೆ: ಕೆ.ಐ.ಎ.ಡಿ.ಬಿ/ ಬಿಎಂಐಸಿಪಿ/ ಮೆಟ್ರೋ/ ಎಲ್ಎಕ್ಯೂ/ ಸಿಆರ್/ 158/ 2015-16, ದಿನಾಂಕ: 10.03.2016.

3) ದಿನಾಂಕ: 27.08.2016ರಂದು ನಡೆದ 343ನೇ ಕೆ.ಐ.ಎ.ಡಿ. ಮಂಡಳಿ ಸಭೆಯ ನಡವಳಿ.

ಪ್ರಸ್ತಾವನೆ :

ಬೆಂಗಳೂರು ಮೆಟ್ರೋ ರೈಲು ಯೋಜನೆಯ 2ನೇ ಹಂತಕ್ಕಾಗಿ 200 ಎಕರೆ ಪ್ರದೇಶವು ಅವಶ್ಯವಿದ್ದು, ಇದುವರೆವಿಗೂ 160 ಎಕರೆ ಪ್ರದೇಶವನ್ನು ಭೂಸ್ವಾಧೀನಪಡಿಸಲಾಗಿದೆ. ಇದರಲ್ಲಿ 1,100 ಕಟ್ಟಡಗಳು ಸೇರಿರುತ್ತವೆ. ನಗರ ಪ್ರದೇಶದ ಸ್ವತ್ತಗಳೂ ಸಹ ಭೂಸ್ವಾಧೀನಕ್ಕೆ ಒಳಪಟ್ಟಿದ್ದು, ಈ ಭೂಸ್ವಾಧೀನದ ಕುರಿತು ಭೂ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ, ವಿಚಾರಣೆ ನಡೆಸಿ, ಜಂಟಿ ಅಳತೆ ಕಾರ್ಯವನ್ನು ನಿಗದಿತ ಅವಧಿಯೊಳಗೆ ಕ್ರಮ ಕೈಗೊಳ್ಳಲು ವಿಶೇಷ ಭೂಸ್ವಾಧೀನಾಧಿಕಾರಿ (ಮೆಟ್ರೋ) ಇವರಿಗೆ ಸಾಧ್ಯವಾಗುತ್ತಿಲ್ಲ. ಮುಂದಿನ 1 ವರ್ಷದ ಒಳಗಾಗಿ ಈ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿರುವ ಕಾರಣ, ಹೆಚ್ಚುವರಿಯಾಗಿ ಕೆ.ಎ.ಎಸ್. (ಕಿರಿಯ ಶ್ರೇಣಿ) ದರ್ಜೆಯ ಮತ್ತೊಂದು ವಿಶೇಷ ಭೂಸ್ವಾಧೀನಾಧಿಕಾರಿ (ಮೆಟ್ರೋ) ಹುದ್ದೆಯನ್ನು ಸೃಜಿಸುವಂತೆ ಹಾಗೂ ಇವರ ಅಧೀನದಲ್ಲಿ ಕಾರ್ಯನಿರ್ವಹಿಸಲು 01 ಶಿರಸ್ತೇದಾರ್, 02 ಪ್ರಥಮ ದರ್ಜೆ ಸಹಾಯಕರು, 01 ಡೇಟಾ ಎಂಟ್ರಿ ಆಪರೇಟರ್, 01 ಸರ್ವೇಯರ್, 01 ಪ್ರೋಸೆಸ್ ಸರ್ವರ್, 02 ಡಿ-ದರ್ಜೆಯ ನೌಕರರನ್ನು ನೇಮಿಸುವಂತೆ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಮೆಟ್ರೋ ರೈಲು ನಿಗಮ ನಿ., ಬೆಂಗಳೂರು ಇವರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಸದಸ್ಯರು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಇವರನ್ನು ಮೇಲೆ ಓದಲಾದ (1)ರ ಪತ್ರದಲ್ಲಿ ಕೋರಿರುತ್ತಾರೆ.

ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಮೆಟ್ರೋ ರೈಲು ನಿಗಮ ನಿ. ಇವರ ಮನವಿಯಲ್ಲಿ ನಮೂದಿಸಿರುವ ಹುದ್ದೆಗಳ ಪೈಕಿ ಕೆ.ಎ.ಎಸ್.

(ಕಿರಿಯ ಶ್ರೇಣಿ) ದರ್ಜೆಯ ವಿಶೇಷ ಭೂಸ್ವಾಧೀನಾಧಿಕಾರಿ (ಮೆಟ್ರೋ) ಹುದ್ದೆಯನ್ನು ಹೆಚ್ಚುವರಿಯಾಗಿ ಸೃಜಿಸುವಂತೆ ಮೇಲೆ ಓದಲಾದ (2)ರ ಪತ್ರದಲ್ಲಿ ಸಿ.ಇ.ಓ. ಮತ್ತು ಇ.ಎಂ., ಕೆ.ಐ.ಎ.ಡಿ.ಬಿ. ಇವರು ಕೋರಿರುತ್ತಾರೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ೯೮೩

ದಿನಾಂಕ: 27.08.2016ರಂದು ನಡೆದ 343ನೇ ಮಂಡಳಿ ಸಭೆಯಲ್ಲಿ ಈ ವಿಷಯದ ಕುರಿತು ಸುದೀರ್ಘವಾಗಿ ಚರ್ಚಿಸಿ, ದಿನಾಂಕ:

04.09.1998ರಂದು ನಡೆದ ಕೆ.ಐ.ಎ.ಡಿ. ಮಂಡಳಿ ಸಭೆಯ ನಿರ್ಣಯದಂತೆ ಸೃಜಿಸಲಾದ 3 ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಗಳ ಪೈಕಿ ಪ್ರಸ್ತುತ ಖಾಲಿ ಇರುವ ವಿಶೇಷ ಭೂಸ್ವಾಧೀನಾಧಿಕಾರಿ (ಬಿ.ಎಂ.ಐ.ಸಿ.ಪಿ), ಮಂಡ್ಯ ಹುದ್ದೆಯನ್ನು ವಿಶೇಷ ಭೂಸ್ವಾಧೀನಾಧಿಕಾರಿ (ಮೆಟ್ರೋ), ಬೆಂಗಳೂರು ಹುದ್ದೆಯನ್ನಾಗಿ ಪರಿವರ್ತಿಸುವುದರಿಂದ ಹೆಚ್ಚುವರಿ ಹುದ್ದೆ ಸೃಜಿಸುವ ಅಗತ್ಯವಿರುವುದಿಲ್ಲವಾದ್ದರಿಂದ, ವಿಶೇಷ ಭೂಸ್ವಾಧೀನಾಧಿಕಾರಿ (ಬಿ.ಎಂ.ಐ.ಸಿ.ಪಿ), ಮಂಡ್ಯ ಹುದ್ದೆಯನ್ನು ವಿಶೇಷ ಭೂಸ್ವಾಧೀನಾಧಿಕಾರಿ (ಮೆಟ್ರೋ), ಬೆಂಗಳೂರು ಹುದ್ದೆಯನ್ನಾಗಿ ಪರಿವರ್ತಿಸಲು ಮೇಲೆ ಓದಲಾದ (3)ರ ನಡವಳಿಯಲ್ಲಿ ನಿರ್ಣಯಿಸಲಾಗಿದೆ.

ಪ್ರಸ್ತಾವನೆಯಲ್ಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿ, ಈ ಕೆಳಕಂಡಂತೆ ಆದೇಶಿಸಲಾಗಿದೆ:

ಸರ್ಕಾರದ ಆದೇಶ ಸಂಖ್ಯೆ: ಸಿಐ 10 ಐಎಪಿ 2016, ಬೆಂಗಳೂರು, ದಿನಾಂಕ: 24.05.2017.

ಪ್ರಸ್ತಾವನೆಯಲ್ಲಿನ ಅಂಶಗಳನ್ನು ಪರಿಗಣಿಸಿ, ಕೆ.ಎ.ಎಸ್. (ಕಿರಿಯ ಶ್ರೇಣಿ) ವೃಂದದ ವಿಶೇಷ ಭೂಸ್ವಾಧೀನಾಧಿಕಾರಿ (ಬಿ.ಎಂ.ಐ.ಸಿ.ಪಿ), ಮಂಡ್ಯ ಈ ಹುದ್ದೆಯನ್ನು ವಿಶೇಷ ಭೂಸ್ವಾಧೀನಾಧಿಕಾರಿ (ಮೆಟ್ರೋ), ಬೆಂಗಳೂರು ಹುದ್ದೆಯನ್ನಾಗಿ ಪರಿವರ್ತಿಸಿ ಆದೇಶಿಸಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 468 ವೆಚ್ಚ-1/2016, ದಿನಾಂಕ 11.05.2017ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR – 168

ಬಿ. ವೆಂಕಟೇಶಮೂರ್ತಿ

SC - 100

ಸರ್ಕಾರದ ಅಧೀನ ಕಾರ್ಯದರ್ಶಿ, (ಕೈ.ಅ)

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಇಂಧನ ಸಚಿವಾಲಯ

ವಿಷಯ : ಬೆಳಗಾವಿ, ಗದಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಪ್ರಸ್ಥಾಪಿತ 700 ಮೆ.ವ್ಯಾ. ಸಾಮರ್ಥ್ಯದ ಅನಿಲ ಆಧಾರಿತ ವಿದ್ಯುತ್ ಯೋಜನೆಗಳನ್ನು ಕೇಸ್-2 ಬಿಡ್ ಮಾರ್ಗಸೂಚಿಯಂತೆ ಅನುಷ್ಠಾನಗೊಳಿಸದ ಯೋಜನೆಗಳನ್ನು ರದ್ದುಗೊಳಿಸಿ ಐಡಿಡಿ ವೆಬ್‌ಸೈಟ್ ಪಟ್ಟಿಯಿಂದ ತೆಗೆದು ಹಾಕುವ ಬಗ್ಗೆ.

ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ : ಇಎನ್ 48 ಪಿಪಿಸಿ 2009, ದಿನಾಂಕ: 14-05-2010.

2) ಭಾರತ ಸರ್ಕಾರದ ಅರೆ ಸರ್ಕಾರಿ ಪತ್ರ ಸಂಖ್ಯೆ : L-16012/40/2013/4174, ದಿನಾಂಕ: 09-10-2013.

3) ಪಿ.ಸಿ.ಕೆ.ಎಲ್, ಇವರ ಪತ್ರ ಸಂಖ್ಯೆ : PCKL/ADP-9/132/2009-10/Vol-13/3500-02, ದಿನಾಂಕ: 05-11-2016.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ : 1ರ ಆದೇಶದಲ್ಲಿ ಬೆಳಗಾವಿ, ಗದಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ 700 ಮೆ.ವ್ಯಾ. ಸಾಮರ್ಥ್ಯದ 3 ಅನಿಲ ಆಧಾರಿತ ವಿದ್ಯುತ್ ಘಟಕಗಳನ್ನು ಕೇಸ್ 2 ಮಾರ್ಗಸೂಚಿಗಳಡಿ ಸ್ವಾರ್ಧತ್ಮಕ ಬಿಡ್ ಮೂಲಕ ಸ್ಥಾಪಿಸಲು ಸರ್ಕಾರದ ಅನುಮೋದನೆ ನೀಡಲಾಗಿತ್ತು.

ಅನಿಲ ಆಧಾರಿತ ಯೋಜನೆಗಳಿಗೆ ಸಂಬಂಧಿಸಿದಂತೆ ಮೇಲೆ ಕ್ರಮ ಸಂಖ್ಯೆ : 2ರಲ್ಲಿ ಓದಲಾದ ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವಾಲಯವು ತನ್ನ ಅರೆ ಸರ್ಕಾರಿ ಪತ್ರ ದಿನಾಂಕ : 09-10-2013ರಲ್ಲಿ ದೇಶೀಯ ಅನಿಲ ಮಂಜೂರು ಮಾಡುವ ಸಂಬಂಧ ಈ ಕೆಳಕಂಡಂತೆ ಅಭಿಪ್ರಾಯ/ಸಲಹೆಗಳನ್ನು ನೀಡಿರುತ್ತದೆ.

➢ ಪ್ರಸ್ತುತ, ಯಾವುದೇ ಹೆಚ್ಚುವರಿ ದೇಶಿ ಅನಿಲವು ಹಂಚಿಕೆಗೆ ಲಭ್ಯವಿರುವುದಿಲ್ಲ.

➢ ದೇಶಿಯ ಅನಿಲ ಉತ್ಪಾದನಾ ಇಳಿಕೆಯಿಂದಾಗಿ ಅಸ್ತಿತ್ವದಲ್ಲಿರುವ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳು ಸುಮಾರು 20% PLF (Plant Load Factor) ನಲ್ಲಿ ಚಲಿಸುತ್ತಿವೆ.

➢ ಕೇಂದ್ರ ವಿದ್ಯುತ್ ಮಂತಾಲಯದ ಪತ್ರ ದಿನಾಂಕ : 14, ಮಾರ್ಚ್ 2012ರಲ್ಲಿ ಎಲ್ಲಾ ಅಭಿವರ್ಥಕರು 2015-16ರವರೆಗೆ ಅನಿಲ ಆಧಾರಿತ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ತೆಗೆದುಕೊಳ್ಳಬಾರದೆಂಬ ಸಲಹೆಯನ್ನು ನೀಡಿದೆ.

➢ ದೇಶಿ ಅನಿಲ ಲಭ್ಯತೆಯು ಕಡಿಮೆ ಇರುವುದನ್ನು ದೃಷ್ಟಿಯಲ್ಲಿರಿಸಿಕೊಂಡು, ಹೊಸ ಅನಿಲ ಆಧಾರಿತ ವಿದ್ಯುತ್ ಕೇಂದ್ರಗಳಿಗೆ RLNG (Regasified Liquefied Natural Gas) ಅನ್ನು ಬಳಸುವಂತೆ ಸೂಚಿಸಲಾಗಿದೆ. ಅಗತ್ಯವಿದ್ದಲ್ಲಿ, ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ವಿದ್ಯುತ್ ಘಟಕಗಳಿಗೆ RLNG (Regasified Liquefied Natural Gas) ಯನ್ನು ವಿನಿಮಯ ಮೂಲಕ ಕೊಡುವುದಕ್ಕೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ.

ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವಾಲಯವು ನೀಡಿದ ಅಭಿಪ್ರಾಯ/ಸಲಹೆಗಳ ಹಿನ್ನೆಲೆಯಲ್ಲಿ ಬೆಳಗಾವಿ, ಗದಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಪ್ರಸ್ತಾವಿತ 700 ಮೆ.ವ್ಯಾ. ಅನಿಲ ಆಧಾರಿತ ವಿದ್ಯುತ್ ಯೋಜನೆಗಳ ಬಗ್ಗೆ ಪಿ.ಸಿ.ಕೆ.ಎಲ್. ಸಂಸ್ಥೆಯು ತನ್ನ 43ನೇ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಅಮೂಲಾಗ್ರವಾಗಿ ಚರ್ಚಿಸಿ ಅನಿಲ ಆಧಾರಿತ ವಿದ್ಯುತ್ ಯೋಜನೆಗಳನ್ನು ಕೇಸ್ 2 ಬಿಡ್ ಮಾರ್ಗದಲ್ಲಿ ಅನುಷ್ಠಾನಗೊಳಿಸದ ಯೋಜನೆಗಳನ್ನು ರದ್ದುಗೊಳಿಸುವ ಬಗ್ಗೆ ಸರ್ಕಾರಕ್ಕೆ ಮೇಲೆ ಕ್ರಮ ಸಂಖ್ಯೆ : 3ರಲ್ಲಿ ಓದಲಾದ ಪತ್ರದ ಮೂಲಕ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

೯೮೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ಭಾಗ ೧

ಪಿ.ಸಿ.ಕೆ.ಎಲ್. ಸಂಸ್ಥೆಯ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕುಷವಾಗಿ ಪರಿಶೀಲಿಸಿ ಮುಂಬರುವ ವರ್ಷಗಳಲ್ಲಿ ರಾಜ್ಯದ ವಿದ್ಯುತ್ ಬೇಡಿಕೆಯನ್ನು ಪರಿಗಣಿಸಿ ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್ ಪ್ರಮಾಣಕ್ಕೆ ಯಾವುದೇ ಕೊರತೆಗಳು ಕಂಡುಬರದೇ ಇರುವ ಅಂಶಗಳನ್ನು ಸರ್ಕಾರ ಮನಗಂಡು ಅನಿಲ ಆಧಾರಿತ ವಿದ್ಯುತ್ ಯೋಜನೆಗಳನ್ನು ರದ್ದುಪಡಿಸಲು ತೀರ್ಮಾನಿಸಿದೆ. ಈ ಕುರಿತಂತೆ ಸಚಿವ ಸಂಪುಟದ ಸಭೆ ದಿನಾಂಕ : 22-02-2017ರ ವಿಷಯ ಸಂಖ್ಯೆ : 121/2017ರ ಮೂಲಕ ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿದೆ. ಆದ್ದರಿಂದ ಈ ಆದೇಶ.

ಸರ್ಕಾರಿ ಆದೇಶ ಸಂಖ್ಯೆ: ಇಎನ್ 9 ಪಿಪಿಸಿ 2014, ಬೆಂಗಳೂರು, ದಿನಾಂಕ : 14ನೇ ಮಾರ್ಚ್ 2017

ಮೇಲೆ ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ : ಇಎನ್ 48 ಪಿಪಿಸಿ 2009, ದಿನಾಂಕ : 14-05-2010ರಲ್ಲಿ ಬೆಳಗಾವಿ, ಗದಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಪ್ರಸ್ತಾವಿತ 700 ಮೆ.ವ್ಯಾ. ಸಾಮರ್ಥ್ಯದ ಅನಿಲ ಆಧಾರಿತ ವಿದ್ಯುತ್ ಯೋಜನೆಗಳನ್ನು ಕೇಸ್ 2 ಬಿಡ್ ಮಾರ್ಗದಲ್ಲಿ ಅನುಷ್ಠಾನದ ಯೋಜನೆಗೆ ನೀಡಿದ ಆದೇಶವನ್ನು ರದ್ದುಗೊಳಿಸಿ ಆದೇಶಿಸಿದೆ. ಈ ಯೋಜನೆಗಳನ್ನು ಐ.ಡಿ.ಡಿ. ವೆಬ್‌ಸೈಟ್ ಪಟ್ಟಿಯಿಂದ ತೆಗೆದು ಹಾಕಲು ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ ರವರು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ವಿ. ಶ್ರೀನಿವಾಸಯ್ಯ

PR – 171

ಸರ್ಕಾರದ ಅಧೀನ ಕಾರ್ಯದರ್ಶಿ,

ಇಂಧನ ಇಲಾಖೆ

ಆರ್ಥಿಕ ಸಚಿವಾಲಯ

ವಿಷಯ : ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋುಣ ನಿರ್ವಹಣೆ ಇಲಾಖೆಯಲ್ಲಿನ ಸಹಾಯಕ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪದನಾಮೀಕರಣಗೊಳಿಸುವ ಬಗ್ಗೆ.

ಓದಲಾಗಿದೆ : 1. ನಿರ್ದೇಶಕರು, ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋುಣ ನಿರ್ವಹಣೆ ಇಲಾಖೆಯ ಪತ್ರ ಸಂಖ್ಯೆ:ಪಿಂಸಆಸಿ (2)45/2015-16, ದಿನಾಂಕ:25.11.2015.

2. ಸರ್ಕಾರಿ ಆದೇಶ ಸಂಖ್ಯೆ:ಆಇ 102 ಡಿಎಸ್ಇ 82, ದಿನಾಂಕ:27.02.1984.

3. ಕಾರ್ಯದರ್ಶಿ (ಆ&ಸಂ)ರವರ ಅಧ್ಯಕ್ಷತೆಯಲ್ಲಿ ದಿನಾಂಕ:28.05.2016ರಂದು ನಡೆದ ಸಭೆಯ ನಡೆವಳಿ.

ಪ್ರಸ್ತಾವನೆ:

ಮೇಲೆ ಕ್ರಮ ಸಂಖ್ಯೆ (1)ರಲ್ಲಿ ಓದಲಾದ ಪತ್ರದಲ್ಲಿ ನಿರ್ದೇಶಕರು, ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋುಣ ನಿರ್ವಹಣೆ ಇಲಾಖೆ ಇವರು ಇಲಾಖೆಯಲ್ಲಿರುವ ವಿವಿಧ ವೃಂದದ ಹುದ್ದೆಗಳನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಪ್ರಸ್ತಾಪಿಸುತ್ತಾ, ಇಲಾಖೆಯಲ್ಲಿ ಹಾಲಿ ಇರುವ ಸಹಾಯಕ ಅಭಿವೃದ್ಧಿ ಅಧಿಕಾರಿ ಹುದ್ದೆಗಳು ಇತರೆ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಹುದ್ದೆಯ ತತ್ಸಮಾನ ಹುದ್ದೆಗಳಾಗಿದ್ದು, ವಿವಿಧ ಸಂಘ-ಸಂಸ್ಥೆಗಳನ್ನು ಸಂಪರ್ಕಿಸಿ ಕಛೇರಿಯ ಹೊರಗೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದ ಅವರುಗಳನ್ನು ಸಹಾಯಕ ಅಭಿವೃದ್ಧಿ ಅಧಿಕಾರಿಗಳೆಂದು ಮೇಲೆ ಕ್ರಮ ಸಂಖ್ಯೆ (2)ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ ಪದನಾಮೀಕರಿಸಲಾಗಿತ್ತು.

ಸಹಾಯಕ ಅಭಿವೃದ್ಧಿ ಅಧಿಕಾರಿ ಹುದ್ದೆಯು ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ತತ್ಸಮಾನ ಹುದ್ದೆಯಾಗಿದ್ದರೂ ಸಹ ನೇರ ನೇಮಕಾತಿ ಮಾಡುವಲ್ಲಿ ತಾಂತ್ರಿಕ ತೊಂದರೆ ಉಂಟಾಗುವುದಾಗಿ ಕರ್ನಾಟಕ ಲೋಕಸೇವಾ ಆಯೋಗದವರು ತಿಳಿಸಿರುವುದರಿಂದ ಹಾಗೂ ಸದ್ಯ ಸಣ್ಣ ಉಳಿತಾಯ ಸಂಗ್ರಹಣೆ ಕಾರ್ಯದಲ್ಲಿ ಸಹಾಯಕ ಅಭಿವೃದ್ಧಿ ಅಧಿಕಾರಿಗಳು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸದೇ ಇರುವುದರಿಂದ ಈ ತಾಂತ್ರಿಕ ವ್ಯತ್ಯಾಸವನ್ನು ಸರಿಪಡಿಸಿ ಇಲಾಖೆಯ ಸಹಾಯಕ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಪ್ರಥಮ ದರ್ಜೆ ಸಹಾಯಕ ಹುದ್ದೆಯೆಂದು ಪದನಾಮೀಕರಿಸಲು ನಿರ್ದೇಶಕರು ಪ್ರಸ್ತಾಪಿಸಿರುತ್ತಾರೆ.

ಮೇಲೆ ಕ್ರಮ ಸಂಖ್ಯೆ(3)ರಲ್ಲಿ ಓದಲಾದ ಸರ್ಕಾರದ ಕಾರ್ಯದರ್ಶಿ (ಆ&ಸಂ)ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡೆವಳಿಯಲ್ಲಿ ಇಲಾಖೆಯಲ್ಲಿ ಹಾಲಿ ಇರುವ ಸಹಾಯಕ ಅಭಿವೃದ್ಧಿ ಅಧಿಕಾರಿ ಹುದ್ದೆಗಳು ಇತರೆ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಹುದ್ದೆಯ ತತ್ಸಮಾನ ಹುದ್ದೆಗಳಾಗಿರುವುದರಿಂದ, ತಾಂತ್ರಿಕ ತೊಂದರೆ ನಿವಾರಿಸಲು ಸಹಾಯಕ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಸಹಾಯಕ ಅಭಿವೃದ್ಧಿ ಅಧಿಕಾರಿ/ಪ್ರಥಮ ದರ್ಜೆ ಸಹಾಯಕರು ಎಂದು ಪದನಾಮೀಕರಿಸಲು ನಿರ್ಣಯಿಸಲಾಯಿತು.

ಅದರಂತೆ, ಸರ್ಕಾರವು ಪರಿಶೀಲಿಸಿ ಕೆಳಕಂಡಂತೆ ಆದೇಶಿಸುತ್ತದೆ.

ಸರ್ಕಾರಿ ಆದೇಶ ಸಂಖ್ಯೆ: ಆಇ 54 ಸಉಲಾ 2015, ಬೆಂಗಳೂರು, ದಿನಾಂಕ: 27.05.2017.

ಪ್ರಸ್ತಾವನೆಯಲ್ಲಿ ವಿವರಿಸಲಾದ ಕಾರಣಗಳ ಹಿನ್ನೆಲೆಯಲ್ಲಿ, ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋುಣ ನಿರ್ವಹಣೆ ಇಲಾಖೆಯ ಸಹಾಯಕ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪ್ರಥಮ ದರ್ಜೆ ಸಹಾಯಕರು ಎಂದು ಪದನಾಮೀಕರಿಸಿ ಆದೇಶಿಸಲಾಗಿದೆ.

ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋುಣ ನಿರ್ವಹಣೆ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅಗತ್ಯ ತಿದ್ದುಪಡಿ ಆದೇಶವನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ೯೮೫

ಈ ಆದೇಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-ಡಿ) ಶಾಖೆಯ ಹಿಂಬರಹ ಸಂಖ್ಯೆ: ಸಿಆಸುಇ 04 ಡಿಸೇನಿ 2017, ದಿ: 30.01.2017 ಹಾಗೂ ಆರ್ಥಿಕ ಇಲಾಖೆ (ಸೇವೆಗಳು-3) ಶಾಖೆಯ ಹಿಂಬರಹ ಸಂಖ್ಯೆ: ಆಇ 117 ಸೇ-3 2017, ದಿ:11.5.2017ರನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜಿ. ಶಶಿಧರ್

PR – 174

ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡಗಳು).

ಆರ್ಥಿಕ ಸಚಿವಾಲಯ

ವಿಷಯ : ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋುಣ ನಿರ್ವಹಣೆ ಇಲಾಖೆಯಲ್ಲಿನ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯನ್ನು ಸ್ಥಳಾಂತರಿಸುವ ಬಗ್ಗೆ.

ಓದಲಾಗಿದೆ : 1. ನಿರ್ದೇಶಕರು, ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋುಣ ನಿರ್ವಹಣೆ ಇಲಾಖೆಯ ಪತ್ರ ಸಂಖ್ಯೆ:ಪಿಂಸಆಸಿ (2)45/2015-16, ದಿನಾಂಕ:25.11.2015.

2. ಕಾರ್ಯದರ್ಶಿ (ಆ&ಸಂ) ರವರ ಅಧ್ಯಕ್ಷತೆಯಲ್ಲಿ ದಿನಾಂಕ:28.05.2016ರಂದು ನಡೆದ ಸಭೆಯ ನಡೆವಳಿ.

ಪ್ರಸ್ತಾವನೆ:

ಮೇಲೆ ಕ್ರಮ ಸಂಖ್ಯೆ (1)ರಲ್ಲಿ ಓದಲಾದ ಪತ್ರದಲ್ಲಿ ನಿರ್ದೇಶಕರು, ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋುಣ ನಿರ್ವಹಣೆ ಇಲಾಖೆರವರು ಇಲಾಖೆಯಲ್ಲಿರುವ ವಿವಿಧ ವೃಂದದ ಹುದ್ದೆಗಳನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಪ್ರಸ್ತಾಪಿಸುತ್ತಾ, ಇಲಾಖೆಯಲ್ಲಿನ ಎಲ್ಲಾ ಸಹಾಯಕ ನಿರ್ದೇಶಕರ ಕಛೇರಿಗಳಿಗೆ 1 ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಮಂಜೂರಾಗಿದ್ದು, ಸಹಾಯಕ ನಿರ್ದೇಶಕರು (ಉತ್ತರ) ಇವರ ಕಛೇರಿಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಮಂಜೂರಾಗಿಲ್ಲದಿರುವುದರಿಂದ ನಿರ್ದೇಶನಾಲಯಕ್ಕೆ ಮಂಜೂರಾಗಿರುವ 5 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಲ್ಲಿ 1 ಹುದ್ದೆಯನ್ನು ಸಹಾಯಕ ನಿರ್ದೇಶಕರು (ಉತ್ತರ) ಇವರ ಕಛೇರಿಗೆ ಸ್ಥಳಾಂತರಿಸಲು ಪ್ರಸ್ತಾಪಿಸಿರುತ್ತಾರೆ.

ಮೇಲೆ ಕ್ರಮ ಸಂಖ್ಯೆ(2)ರಲ್ಲಿ ಓದಲಾದ ಸರ್ಕಾರದ ಕಾರ್ಯದರ್ಶಿ (ಆ&ಸಂ)ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡೆವಳಿಯಲ್ಲಿ ಸಹಾಯಕ ನಿರ್ದೇಶಕರು (ಉತ್ತರ) ಇವರ ಕಛೇರಿಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಮಂಜೂರಾಗಿಲ್ಲದ ಕಾರಣ ನಿರ್ದೇಶನಾಲಯಕ್ಕೆ ಮಂಜೂರಾಗಿರುವ 5 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಲ್ಲಿ 1 ಹುದ್ದೆಯನ್ನು ಸಹಾಯಕ ನಿರ್ದೇಶಕರು (ಉತ್ತರ) ಇವರ ಕಛೇರಿಗೆ ಸ್ಥಳಾಂತರಿಸಲು ನಿರ್ಣಯಿಸಲಾಯಿತು.

ಅದರಂತೆ, ಸರ್ಕಾರವು ಪರಿಶೀಲಿಸಿ ಕೆಳಕಂಡಂತೆ ಆದೇಶಿಸುತ್ತದೆ.

ಸರ್ಕಾರಿ ಆದೇಶ ಸಂಖ್ಯೆ: ಆಇ 54 ಸಉಲಾ 2015, ಬೆಂಗಳೂರು, ದಿನಾಂಕ: 27.05.2017

ಪ್ರಸ್ತಾವನೆಯಲ್ಲಿ ವಿವರಿಸಲಾದ ಕಾರಣಗಳ ಹಿನ್ನೆಲೆಯಲ್ಲಿ, ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋುಣ ನಿರ್ವಹಣೆ ಇಲಾಖೆಯಲ್ಲಿ ನಿರ್ದೇಶನಾಲಯಕ್ಕೆ ಮಂಜೂರಾಗಿರುವ 5 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಲ್ಲಿ 1 (ಒಂದು) ದ್ವಿತೀಯ ದರ್ಜೆ ಸಹಾಯಕರ ಹುದ್ದೆಯನ್ನು ಸಹಾಯಕ ನಿರ್ದೇಶಕರು (ಉತ್ತರ) ಇವರ ಕಛೇರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳಾಂತರಿಸಿ ಆದೇಶಿಸಲಾಗಿದೆ.

ಈ ಆದೇಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-ಡಿ) ಶಾಖೆಯ ಹಿಂಬರಹ ಸಂಖ್ಯೆ: ಸಿಆಸುಇ 04 ಡಿಸೇನಿ 2017, ದಿ: 30.01.2017 ಹಾಗೂ ಆರ್ಥಿಕ ಇಲಾಖೆ (ಸೇವೆಗಳು-3) ಶಾಖೆಯ ಹಿಂಬರಹ ಸಂಖ್ಯೆ: ಆಇ 117 ಸೇ-3 2017, ದಿ:11.5.2017ರನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜಿ. ಶಶಿಧರ್

PR – 175

ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡಗಳು).

ಜಲ ಸಂಪನ್ಮೂಲ ಸಚಿವಾಲಯ

ವಿಷಯ : ಸಿಂಗಟಾಲೂರು ಏತ ನೀರಾವರಿ ಯೋಜನೆಯ ವ್ಯಾಪ್ತಿಯಲ್ಲಿ ಮುಳುಗಡೆಯಾಗುವ ಗ್ರಾಮಗಳ ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಸಲುವಾಗಿ ನಿರಾಶ್ರಿತರಾದ ಕುಟುಂಬಗಳ ಪುನರ್ವಸತಿ ಕಾರ್ಯಗಳ ಅನುಷ್ಠಾನಕ್ಕಾಗಿ ಈ ಕೆಳಕಂಡ ಸದಸ್ಯರನ್ನೊಳಗೊಂಡ ಪರಿಷ್ಕøತ ಸಲಹಾ ಸಮಿತಿಯನ್ನು ರಚಿಸುವ ಬಗ್ಗೆ.

ಓದಲಾಗಿದೆ : ವ್ಯವಸ್ಥಾಪಕ ನಿರ್ದೇಶಕರು, ಕನೀನಿನಿ., ಬೆಂಗಳೂರು ಇವರ ಪತ್ರ ಸಂ : ಕನೀನಿ/ತಾಂವಿ/ಸಿಂಗಟಾಲೂರು/232/2016-17/8742, ದಿನಾಂಕ : 28-02-2017.

೯೮೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ಭಾಗ ೧

ಪ್ರಸ್ತಾವನೆ :

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜಿನ ಹಿನ್ನೀರಿನಿಂದ ಗದಗ ಜಿಲ್ಲಾ ಮುಂಡರಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಗುಮ್ಮಗೋಳ, ಬಿದರಹಳ್ಳಿ ಹಾಗೂ ವಿಠಲಾಪುರ ಗ್ರಾಮಗಳು ಮುಳುಗಡೆ ವ್ಯಾಪ್ತಿಯಲ್ಲಿ ಬರುತ್ತಿದ್ದು, ಬಳ್ಳಾರಿ ಜಿಲ್ಲಾ ಹೂವಿನಹಡಗಲಿ ವ್ಯಾಪ್ತಿಯಲ್ಲಿ ಅಲ್ಲಿಪುರ ಗ್ರಾಮವು ಮುಳುಗಡೆ ವ್ಯಾಪ್ತಿಯಲ್ಲಿ ಬರುತ್ತದೆ. ಮುಳುಗಡೆಯಾಗುವ ಗ್ರಾಮಗಳ ನಿರಾಶ್ರಿತರ ಕುಟುಂಬಗಳಿಗೆ ಪುರ್ನವಸತಿ ಹಾಗೂ ಪುನರ್ ನಿರ್ಮಾಣದ ಕೆಲಸಗಳ ಅನುಷ್ಠಾನಕ್ಕಾಗಿ ಸಲಹಾ ಸಮಿತಿಯನ್ನು ಕಂದಾಯ ಇಲಾಖೆಯ ಅಧಿಸೂಚನೆ ಸಂಖ್ಯೆ : ಆರ್‌ಡಿ 46 ಆರ್ಇಹೆಚ್ 2005 ದಿನಾಂಕ : 21-05-2005ರಲ್ಲಿ ರಚಿಸಲಾಗಿತ್ತು.

ಪುನರ್ವಸತಿ ಹಾಗೂ ಪುನರ್ ನಿರ್ಮಾಣದ ಕೆಲಸಗಳನ್ನು ಶೀಘ್ರವಾಗಿ ಆದ್ಯತೆಯ ಮೇರೆಗೆ ಪೂರ್ಣಗೊಳಿಸುವ ಅವಶ್ಯಕತೆ ಇರುವುದರಿಂದ ಪುನರ್ವಸತಿ ಸಮಿತಿಯನ್ನು ಮುಳುಗಡೆ ವ್ಯಾಪ್ತಿಗೆ ಬರುವ ಗ್ರಾಮಗಾಳ ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರುಗಳು, ಲೋಕಸಭಾ ಸದಸ್ಯರುಗಳು, ಗದಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿ ಸದಸ್ಯರುಗಳನ್ನು ಒಳಗೊಂಡಂತೆ ಪರಿಷ್ಕರಿಸಲು ಪ್ರಸ್ತಾವನೆಯನ್ನು ಮೇಲೆ ಓದಲಾದ ಪತ್ರದಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರು ಸಲ್ಲಿಸಿರುತ್ತಾರೆ.

ಈ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಜಸಂಇ 27 ಎಂಟಿಪಿ 2017, ಬೆಂಗಳೂರು, ದಿನಾಂಕ : 01-06-2017

ಮೇಲೆ ಪ್ರಸ್ತಾವನೆಯಲ್ಲಿ ಸಲ್ಲಿಸಿರುವಂತೆ, ಸಿಂಗಟಾಲೂರು ಏತ ನೀರಾವರಿ ಯೋಜನೆಯ ವ್ಯಾಪ್ತಿಯಲ್ಲಿ ಮುಳುಗಡೆಯಾಗುವ ಗ್ರಾಮಗಳ ಪುರ್ನವಸತಿ/ಪುನರ್ ನಿರ್ಮಾಣದ ಸಲುವಾಗಿ ಹಾಗೂ ನಿರಾಶ್ರಿತರಾದ ಕುಟುಂಬಗಳ ಪುರ್ನವಸತಿ ಕಾರ್ಯಗಳ ಅನುಷ್ಠಾನಕ್ಕಾಗಿ ಈ ಕೆಳಕಂಡ ಸದಸ್ಯರನ್ನೊಳಗೊಂಡ ಪರಿಷ್ಕøತ ಸಲಹಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.

1. ವ iಾನ್ಯ ಕಂದಾಯ ಸಚಿವರು ಅಧ್ಯಕ್ಷರು
2. ವ iಾನ್ಯ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಸ ದ ಸ ್ಯರು
3. ವ iಾನ್ಯ ಲೋಕಸಭಾ ಸದಸ್ಯರು, ಹಾವೇರಿ ಕ್ಷೇತ್ರ ಸ ದ ಸ ್ಯರು
4. ವ iಾನ್ಯ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಸ ದ ಸ ್ಯರು
5. ವ iಾನ್ಯ ಲೋಕಸಭಾ ಸದಸ್ಯರು, ಬಳ್ಳಾರಿ ಕ್ಷೇತ್ರ ಸ ದ ಸ ್ಯರು
6. ವ iಾನ್ಯ ವಿಧಾನಸಭಾ ಸದಸ್ಯರು, ಶಿರಹಟ್ಟಿ ಮತಕ್ಷೇತ್ರ ಸ ದ ಸ ್ಯರು
7. ವ iಾನ್ಯ ವಿಧಾನಸಭಾ ಸದಸ್ಯರು, ಹೂವಿನಹಡಗಲಿ ಮತಕ್ಷೇತ್ರ ಸ ದ ಸ ್ಯರು
8. ಸ ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಂದ ಆಯ್ಕೆಯಾದ ವಿಧಾನ ಪರಿಷತ್ತಿನ ಸದಸ್ಯರು ಸ ದ ಸ ್ಯರು
1. ಆಯುಕ್ತರು (ಪುರ್ನವಸತಿ ಮತ್ತು ಪುನರ್ ನಿರ್ಮಾಣ) ಕೃಷ್ಣಾ ಮೇಲ್ದಂಡೆ ಯೋಜನೆ ಸ ದ ಸ ್ಯರು
2. ಸ ರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆ ಸ ದ ಸ ್ಯರು
3. ವ ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರು ಸ ದ ಸ ್ಯರು
4. ಜಿಲ್ಲಾಧಿಕಾರಿಗಳು, ಗದಗ ಜಿಲ್ಲೆ, ಗದಗ ಸ ದ ಸ ್ಯರು
5. ಜಿಲ್ಲಾಧಿಕಾರಿಗಳು, ಬಳ್ಳಾರಿ ಜಿಲ್ಲೆ, ಬಳ್ಳಾರಿ ಸ ದ ಸ ್ಯರು
6. ವ ುುಖ್ಯ ಇಂಜಿನಿಯರ್, ನೀರಾವರಿ ಕೇಂದ್ರ ವಲಯ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಮುನಿರಾಬಾದ್ ಸ ದ ಸ ್ಯರು
7. ಅಧೀಕ್ಷಕ ಅಭಿಯಂತರರು ತುಂಗಭದ್ರಾ ಯೋಜನಾ ವೃತ್ತ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಮುನಿರಾಬಾದ್ ಸ ದ ಸ ್ಯರು
8. ವ ುುಖ್ಯ ಆಡಳಿತಾಧಿಕಾರಿಗಳು, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಧಾರವಾಡ ಸ ದ ಸ ್ಯರು
9. ವಿಶೇಷ ಭೂಸ್ವಾಧೀನ ಅಧಿಕಾರಿಗಳು, ಸಿಂಗಟಾಲೂರು ಏತ ನೀರಾವರಿ ಯೋಜನೆ, ಹೂವಿನಹಡಗಲಿ ಸ ದ ಸ ್ಯರು
10. ವ ುುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಗದಗ ಸ ದ ಸ ್ಯರು
11. ವ ುುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಬಳ್ಳಾರಿ ಸ ದ ಸ ್ಯರು
12. ಕಾರ್ಯಪಾಲಕ ಅಭಿಯಂತರರು, ಸಿಂಗಟಾಲೂರು ಏತ ನೀರಾವರಿ ಯೋಜನೆ, ವಿಭಾಗ ನಂ.1, ಮುಂಡರಗಿ ಸ ದ ಸ ್ಯರು
13. ಕಾರ್ಯಪಾಲಕ ಅಭಿಯಂತರರು, ಸಿಂಗಟಾಲೂರು ಏತ ನೀರಾವರಿ ಯೋಜನೆ, ವಿಭಾಗ ನಂ.1, ಹೂವಿನಹಡಗಲಿ ಸ ದ ಸ ್ಯರು
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ೯೮೭

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR – 178

ಸಿ. ಶ್ರೀನಿವಾಸಲು

SC - 100

ಸರ್ಕಾರದ ಅಧೀನ ಕಾರ್ಯದರ್ಶಿ (ತಾಂತ್ರಿಕ-1)

ಜಲ ಸಂಪನ್ಮೂಲ ಇಲಾಖೆ

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯ

ಸೇರ್ಪಡೆ ಆದೇಶ

ಸರ್ಕಾರದ ಆದೇಶ ಸಂಖ್ಯೆ: ಹಿಂವಕ 125 ಬಿಸಿಎ 2017 ದಿನಾಂಕ:18.05.2017ರ ಆದೇಶದ ಭಾಗದ 04ನೇ ಸಾಲಿನಲ್ಲಿ ಸಮಗ್ರ ಅಭಿವೃದ್ಧಿಗಾಗಿ ಎಂಬ ಪದದ ಮುಂದೆ "ನಿಜಶರಣ" ಎಂದು ಮತ್ತು ಆದೇಶ ಭಾಗದ ಉಪಕಂಡಿಕೆ 1ರ 2ನೇ ಸಾಲಿನಲ್ಲಿ ಸಮಗ್ರ ಅಭಿವೃದ್ಧಿಗಾಗಿ ಎಂಬ ಪದದ ಮುಂದೆ "ನಿಜಶರಣ" ಎಂದು ಹಾಗೂ 3ನೇ ಸಾಲಿನಲ್ಲಿ ನಿಗಮ ನಿಯಮಿತದ ಮುಂದೆ " Nijasharana " ಎಂದು ಸೇರ್ಪಡೆ ಮಾಡಿಕೊಂಡು ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ PR - 197

ಎನ್.ಆರ್. ಎರೆಕುಪ್ಪಿ

SC-500

ಸರ್ಕಾರದ ಅಧೀನ ಕಾರ್ಯದರ್ಶಿ-1,

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಸೇರ್ಪಡೆ ಆದೇಶ

ಸಂಖ್ಯೆ:ಹಿಂವಕ 175 ಬಿಸಿಎ 2017, ಬೆಂಗಳೂರು ದಿನಾಂಕ: 13.06.2017.

ಸರ್ಕಾರದ ಅಧಿಸೂಚನೆ ಸಂಖ್ಯೆ: ಹಿಂವಕ 235 ಬಿಸಿಎ 2013, ಬೆಂಗಳೂರು ದಿನಾಂಕ: 27.06.2014ರ ಆದೇಶದ 06ನೇ ಸಾಲಿನಲ್ಲಿ ಅಧ್ಯಕ್ಷರ ಅವಧಿಯನ್ನು "03 ವರ್ಷದ ಅವಧಿಗೆ ಅಥವಾ" ಎಂದು ಸೇರ್ಪಡೆ ಮಾಡಿಕೊಂಡು ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ PR -198

ಎನ್.ಆರ್. ಎರೆಕುಪ್ಪಿ

SC-200

ಸರ್ಕಾರದ ಅಧೀನ ಕಾರ್ಯದರ್ಶಿ-1,

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಅಧಿಸೂಚನೆ ಸಂಖ್ಯೆ:ಹಿಂವಕ 145 ಬಿಸಿಎ 2017, ಬೆಂಗಳೂರು ದಿನಾಂಕ: 12.06.2017. ಶ್ರೀ ಬಿ.ಎಸ್. ಶೇಖರಪ್ಪ, ಭಾ.ಆ.ಸೇ., ಮಾನ್ಯ ಮುಖ್ಯಮಂತ್ರಿಯವರ ಅಪರ ಕಾರ್ಯದರ್ಶಿ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವಿಶೇಷಾಧಿಕಾರಿಯಾಗಿ ಸಮವರ್ತಿತ ಪ್ರಭಾರದಲ್ಲಿರಿಸಿ ನೇಮಿಸಲಾಗಿದೆ.

(ಮಾನ್ಯ ಮುಖ್ಯಮಂತ್ರಿಯವರಿಂದ

ಅನುಮೋದಿಸಲ್ಪಟ್ಟಿದೆ.)

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ PR - 199

ಎನ್.ಆರ್. ಎರೆಕುಪ್ಪಿ

SC-150

ಸರ್ಕಾರದ ಅಧೀನ ಕಾರ್ಯದರ್ಶಿ-1,

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ವಿಷಯ: ಭಾರತೀಯ ಸೇನೆಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ

ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ನೀಡುವ ಬಗ್ಗೆ.

ಓದಲಾಗಿದೆ: ಏಕಕಡತ ಸಂಖ್ಯೆ:-BCWD-16012/1/2017-BCWD-TRAINING - BCWD Dated:-19.05.2017೯೮೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ಭಾಗ ೧

ಪ್ರಸ್ತಾವನೆ :-

ಮೇಲೆ ಓದಲಾದ ಏಕಕಡತದಲ್ಲಿ 2017-18ನೇ ಸಾಲಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿದ ಆಯವ್ಯಯ ಭಾಷಣದ ಕಂಡಿಕೆ(199)ರಲ್ಲಿ ಈ ಕೆಳಗಿನಂತೆ ಘೋಷಿಸಲಾಗಿದೆ. "ಸೇನೆಗಳಿಗೆ ಆಯ್ಕೆಯಾಗುವ ಅವಕಾಶಗಳನ್ನು ಹೆಚ್ಚಿಸಲು 3000 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು" ಆದರೆ ಸದರಿ ಕಾರ್ಯಕ್ರಮಕ್ಕಾಗಿ ಆಯವ್ಯಯದಲ್ಲಿ ಯಾವುದೇ ಅನುದಾನವನ್ನು ಮೀಸಲಿಟ್ಟಿರುವುದಿಲ್ಲ. ಸನ್ಮಾನ್ಯ ಮುಖ್ಯಮಂತ್ರಿಗಳ ಘೋಷಣೆ ಅನ್ವಯ ಭಾರತೀಯ ಸೇನೆಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ಧತೆಯ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ನೀಡುವ ಅಗತ್ಯವಿರುತ್ತದೆ. ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ದಿ ನಿಗಮ ನಿಯಮಿತದಿಂದ ಈಗಾಗಲೇ "ಭಾರತೀಯ ಸೇನೆಯಲ್ಲಿ ಕನ್ನಡಿಗ" ಎಂಬ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಂಡಿದ್ದು, ಸೇನೆಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಸದರಿ ನಿಗಮದಿಂದ ನೀಡಲು ಪ್ರತಿ ಅಭ್ಯರ್ಥಿಗೆ ತಗಲುವ ಅಂದಾಜು ವೆಚ್ಚ ಹಾಗೂ ತರಬೇತಿಯ ವಿವರಗಳನ್ನು ಸಲ್ಲಿಸುವಂತೆ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತ ಇವರನ್ನು ಕೋರಲಾಗಿದ್ದು, ಈ

ಅವಧಿ ಕಾರ್ಯಕ್ರಮದ ಅವಧಿ ಒಟ್ಟು 572 ಗಂಟೆ 60 ದಿವಸಗಳು
ಕೊಠಡಿ ಮತ್ತು ಹೊರಾಂಗಣ ಆಧಾರಿತ ತ ರಬೇತಿ ಪ ತಿ ದಿನ 11 ಗಂಟೆಗಳು ಪ್ರಾಯೋಗಿಕ ತರಬೇತಿ : ಬೆಳಿಗ್ಗೆ 02 ಗಂಟೆ ಮತ್ತು ಅಪರಾಹ್ನ 02 ಗಂಟೆಗಳು, ್ರ ದ ೖಹಿಕ ಶಿಕ್ಷಣ, ಪಥ ಸಂಚಲನ ಹಾಗೂ ಗುಂಪುಗಳಲ್ಲಿ ಆಟ ಸೇರಿದಂತೆ ಇತರ ಚಟುವಟಿಕೆಗಳು. ೆ ತ ತ ್ವ ಪರೀಕ್ಷೆ: ಪ್ರತಿ ದಿನ 07 ಗಂಟೆಗಳು, ಇದರಲ್ಲಿ ಗಣಿತ, ಸಾಮಾನ್ಯ ಜ್ಞಾನ, ಆಂಗ್ಲ ಭಾಷೆ ಮತ್ತು ಜೀವನ ಕೌಶಲ್ಯ ತರಬೇತಿ ಒಳಗೊಂಡಿರುತ್ತದೆ.

ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ದಿ ನಿಗಮ ನಿಯಮಿತ ರವರು ಸದರಿ ತರಬೇತಿ ನೀಡಲು ತಗಲುವ ಅಂದಾಜು ವೆಚ್ಚದ ವಿವರವನ್ನು ಈ ಕೆಳಗಿನಂತೆ ನೀಡಿರುತ್ತಾರೆ.

ಕ್ರ. ಸ ಂ. ವಿವರಗಳು ವ ಸ ತಿ ಆಧಾರಿತ (ಪ್ರತಿ ಅಭ್ಯರ್ಥಿಗೆ) ಷರಾ
1. 572 ಗಂಟೆಗಳ ಅವಧಿಯ ತರಬೇತಿ ವೆಚ್ಚ (ಪ್ರತಿ ಅಭ್ಯರ್ಥಿಗೆ ಪ್ರತಿ ಗಂಟೆಗೆ ರೂ. 30/-) 17160 ವ ಸ ತಿ ಸೌಲಭ್ಯದೊಂದಿಗೆ 572 ಗಂಟೆಗಳ ಅವಧಿಗೆ ತ ರಬೇತಿ ವೆಚ್ಚ
2. ತ ರಬೇತಿ ಕಿಟ್ ಹಾಗೂ ಸಮವಸ್ತ್ರದ ವೆಚ್ಚ 2000 2 ಜೊತೆ ಸಮವಸ್ತ್ರ ಮತ್ತು ಶೂಗಳು ಮತ್ತು ತರಬೇತಿಗೆ ಸ ಂಬಂಧಿಸಿದ ಪಠ್ಯ ಸಾಮಗ್ರಿಗಳು
3. ಉದ್ಯೋಗ ನೆರವಿನ ವೆಚ್ಚ 1000 ಉದ್ಯೋಗ ಸ ವ iಾಲೋಚನೆ, ಉದ್ಯಮಗಳಿಗೆ ಬ ೕಟಿ, ೆ ಉದ್ಯೋಗಸ್ಥರಾದ ನಂತರದ ಸೇವೆಗಳು
4. ವ iೌಲ್ಯಮಾಪನ ಮತ್ತು ಪ್ರಮಾಣ ಪತ್ರಗಳ ವೆಚ್ಚ 1000 ಬಾಹ್ಯ ಮೌಲ್ಯಮಾಪನ ಹಾಗೂ ಪ್ರಮಾಣ ಪತ್ರವನ್ನು NSDC ಯ Security Sector Skill Councilನ ವ iಾರ್ಗಸೂಚಿಯಂತೆ ನಡೆಸಲಾಗುವುದು.
5. 02 ತಿಂಗಳ ಅವಧಿಗೆ ಊಟ ಮತ್ತು ವಸತಿ ವೆಚ್ಚ 10000 60 ದಿನಗಳ ಊಟ, ವಸತಿ ಉಪಹಾರಗಳನ್ನೊಳಗೊಂಡಂತೆ ಮಾಂಸಾಹಾರ ಬೇಕಿದ್ದಲ್ಲಿ ಹೆಚ್ಚುವರಿ ಪಾವತಿ.
6. ಪ ಯೋಗಾಲಯದಲ್ಲಿ ತರಬೇತಿಗಾಗಿ ್ರ ಉಪಯೋಗಿಸಲಾಗುವ ನಾಶಗೊಳ್ಳುವ ಉಪಕರಣಗಳ ವ ಚ ೆ ್ಚ 7000 ಬ ಂಕಿ ನಂದಿಸುವ, ವೈದ್ಯಕೀಯ EMT ತರಬೇತಿ ೆ ಉಪಕರಣಗಳ ವೆಚ್ಚ
ಒಟ್ಟು ಮೊತ್ತ (ಮೂವತ್ತೆಂಟು ಸಾವಿರದ ನೂರ ಅರವತ್ತು ರೂಪಾಯಿಗಳು ಮಾತ್ರ) 38160
ಪ ತಿ ಅಭ್ಯರ್ಥಿಗೆ ರೂ. 38,160/-ರಂತೆ ಒಟ್ಟು 3000 ್ರ ಅಭ್ಯರ್ಥಿಗಳಿಗೆ ತರಬೇತಿ ನೀಡಲು ತಗಲುವ ಅಂದಾಜು ವ ಚ ೆ (ಹನ್ನೊಂದು ಕೋಟಿ ನಲವತ್ನಾಲ್ಕು ಲಕ್ಷದ ್ಚ ಎಂಬತ್ತು ಸಾವಿರ ರೂಪಾಯಿಗಳು ಮಾತ್ರ) 11,44,80,000

ಭಾರತೀಯ ಸೇನೆಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಯನ್ನು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತ ಇವರ ಮೂಲಕ ನೀಡಲು, 2017-18ನೇ ಸಾಲಿಗೆ ಬೇಕಾಗುವ ಅಂದಾಜು ಅನುದಾನ `.11,44,80,000/- (ಹನ್ನೊಂದು ಕೋಟಿ ನಲವತ್ನಾಲ್ಕು ಲಕ್ಷದ ಎಂಬತ್ತು ಸಾವಿರ ರೂಪಾಯಿಗಳುಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ೯೮೯ ಮಾತ್ರ)ಗಳನ್ನು ತರಬೇತಿ ಅರಿವು ಮತ್ತು ಪ್ರೋತ್ಸಾಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮದ ರಾಜ್ಯವಲಯ ಲೆಕ್ಕಶೀರ್ಷಿಕೆ:2225-03- 277-2-37 ರಡಿ ಹೆಚ್ಚುವರಿಯಾಗಿ ಒದಗಿಸಿಕೊಡಲು ಹಾಗೂ ಅನುಬಂಧದಲ್ಲಿನ ಮಾರ್ಗಸೂಚಿಗಳನ್ನೊಳಗೊಂಡಂತೆ ಸೂಕ್ತ ಆದೇಶ ಹೊರಡಿಸುವಂತೆ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇವರು ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ:ಹಿಂವಕ 167 ಬಿಸಿಎ 2017, ಬೆಂಗಳೂರು ದಿನಾಂಕ:13.06.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2017-18ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-199ನ್ನು ಅನುಷ್ಠಾನಗೊಳಿಸಲು ಭಾರತೀಯ ಸೇನೆಗೆ ಸೇರ ಬಯಸುವ ಹಾಗೂ ಸೇನೆಗಳಿಗೆ ಆಯ್ಕೆಯಾಗುವ ಅವಕಾಶಗಳನ್ನು ಹೆಚ್ಚಿಸಲು 3000 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಸಂಬಂಧ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡಲು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತ ರವರಿಗೆ ಈ ಕೆಳಕಂಡ ಷರತ್ತು ಮತ್ತು ಕೌಶಲ್ಯಾಭಿವೃದ್ದಿ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ವಯ ನಿಯಮಾನುಸಾರ ಹಾಗೂ ಪಾರದರ್ಶಕತೆಯನ್ವಯ ಅನುಷ್ಠಾನಗೊಳಿಸುವ ಷರತ್ತಿನೊಂದಿಗೆ ಇದಕ್ಕಾಗಿ ತಗಲುವ ವೆಚ್ಚವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಒದಗಿಸಿರುವ ಅನುದಾನದ ಮಿತಿಯಲ್ಲಿಯೇ ಭರಿಸತಕ್ಕ ಷರತ್ತಿನೊಂದಿಗೆ ಮಂಜೂರಾತಿ ನೀಡಲಾಗಿದೆ.

ಭಾರತೀಯ ಸೇನೆಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಯ ಮಾರ್ಗಸೂಚಿಗಳು (ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಅಲ್ಪಸಂಖ್ಯಾತ ಅಭ್ಯರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಈ ಸೌಲಭ್ಯವನ್ನು ಪಡೆಯಲು ಅವಕಾಶವಿರುವುದಿಲ್ಲ.)

1. ಯೋಜನೆ ಉದ್ದೇಶ:- ಭಾರತೀಯ ಸೇನೆಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ನೀಡುವ ಮೂಲಕ ಸೇನೆಗಳಿಗೆ ಆಯ್ಕೆಯಾಗುವ ಅವಕಾಶಗಳನ್ನು ಹೆಚ್ಚಿಸುವುದು.

2. ಅಭ್ಯರ್ಥಿಗಳಿಗೆ ನಿಗಧಿಪಡಿಸಬಹುದಾದ ಅರ್ಹತೆಗಳು:-

(a) ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. (b) ಕರ್ನಾಟಕ ಸರ್ಕಾರ ಅಧಿಸೂಚಿಸಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಅಥವಾ 3ಬಿ ಯ ಜಾತಿಗೆ ಸೇರಿರಬೇಕು. (c) ಕುಟುಂಬದ ಒಟ್ಟು ವಾರ್ಷಿಕ ಆದಾಯ ಮಿತಿ

• ಪ್ರವರ್ಗ-1 ರೂ. 2.50 ಲಕ್ಷ. • ಪ್ರವರ್ಗ-2(ಎ), 3(ಎ) ಮತ್ತು 3(ಬಿ)-ರೂ. 1.00 ಲಕ್ಷ.

3. ಪ್ರವರ್ಗವಾರು ಮೀಸಲಾತಿ:-

(a) ಭಾರತೀಯ ಸೇನೆಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಗೆ ಅಭ್ಯರ್ಥಿಗಳನ್ನು ನಿಯೋಜಿಸುವಾಗ ಈ ಕೆಳಗಿನ ಮೀಸಲಾತಿ ಅನುಪಾತವನ್ನು

ಕ್ರ.ಸಂ. ಪ ವರ್ಗ ್ರ ಶೇಕಡ
1 1 15%
2 2ಎ 53%
3 3ಎ 15%
4 3ಬಿ 17%
ಒಟ್ಟು 100%

(b) ಯಾವುದೇ ಪ್ರವರ್ಗದಲ್ಲಿ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಉಳಿಕೆಯಾಗುವ ಸ್ಥಾನಗಳನ್ನು ಮೀಸಲಾತಿಯನ್ವಯ ಉಳಿದ ಪ್ರವರ್ಗಗಳಿಗೆ ಮರು ಹಂಚಿಕೆ ಮಾಡುವುದು.

4. ಕೌಶಲ್ಯಾಭಿವೃದ್ಧಿ ಇಲಾಖೆಯು ಹೊರಡಿಸಿರುವ ಮಾರ್ಗಸೂಚಿಯನ್ನು ಪಾಲಿಸತಕ್ಕದ್ದು.

5. ಇತರೆ ಷರತ್ತುಗಳು:-

a) ಭಾರತೀಯ ಭೂ ಸೇನೆ, ನೌಕಾಸೇನೆ, ವಾಯುಸೇನೆ ಹಾಗೂ ಇತ್ಯಾದಿ ಸೇನೆಗಳಿಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಯನ್ನು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತದ ಮೂಲಕ ನೀಡುವುದು.

b) ಸದರಿ ತರಬೇತಿಗೆ ನಿಗಧಿತ ಶೈಕ್ಷಣಿಕ, ದೈಹಿಕ ಮತ್ತು ಮಾನಸಿಕ ಅರ್ಹತೆಯನ್ನು ಹೊಂದಿರುವ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳನ್ನು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಆಯ್ಕೆ ಮಾಡುವುದು.

c) ಒಬ್ಬ ಅಭ್ಯರ್ಥಿಗೆ ಒಂದು ಬಾರಿ ಮಾತ್ರ ಸದರಿ ತರಬೇತಿಯ ಸೌಲಭ್ಯವನ್ನು ಒದಗಿಸುವುದು.

೯೯೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ಭಾಗ ೧

d) ಪ್ರವರ್ಗವಾರು ಜಾತಿಗಳ ಪಟ್ಟಿ, ಕುಟುಂಬದ ವಾರ್ಷಿಕ ವರಮಾನ, ಅರ್ಹತೆ ಇತ್ಯಾದಿಗಳು ಸರ್ಕಾರವು ಕಾಲ-ಕಾಲಕ್ಕೆ ಹೊರಡಿಸುವ ಆದೇಶಗಳನ್ವಯ ಪರಿಷ್ಕರಣೆಗೆ ಒಳಪಟ್ಟಿರುತ್ತದೆ.

e) ತರಬೇತಿ ನೀಡುವವರು ಬಯೋಮೆಟ್ರಿಕ್ ಹಾಜರಾತಿ ಉಪಕರಣವನ್ನು ಸ್ವಂತ ವೆಚ್ಚದಲ್ಲಿ ಅಳವಡಿಸಿಕೊಂಡು, ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳ ಹಾಜರಾತಿಯನ್ನು ನಿರ್ವಹಿಸುವುದು ಹಾಗೂ ಪ್ರತಿ ತಿಂಗಳು ಮುಕ್ತಾಯಗೊಂಡ ನಂತರ ಮಾಸಿಕ ಹಾಜರಾತಿಯನ್ನು ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇವರಿಗೆ ಸಲ್ಲಿಸುವುದು.

f) ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಶೇ.80ರಷ್ಟು ಹಾಜರಾತಿಯು ಕಡ್ಡಾಯವಾಗಿರುತ್ತದೆ.

g) ತರಬೇತಿಯನ್ನು ಸಕಾರಣವಿಲ್ಲದೆ ಮಧ್ಯಂತರದಲ್ಲಿ ಬಿಟ್ಟು ಹೋಗುವ ಅಭ್ಯರ್ಥಿಗಳಿಂದ, ಅವರ ತರಬೇತಿಗೆ ಆಗಿರುವ ಖರ್ಚು ವೆಚ್ಚವನ್ನು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತದ ಮೂಲಕ ವಸೂಲಾತಿ ಮಾಡತಕ್ಕದ್ದು.

h) ತರಬೇತಿಯನ್ನು ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಸದರಿ ತರಬೇತಿ ಪಡೆದಿರುವ ಬಗ್ಗೆ ಪ್ರಮಾಣ ಪತ್ರವನ್ನು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತದ ಮೂಲಕ ವಿತರಿಸುವುದು.

i) ಸದರಿ ತರಬೇತಿ ಅವಧಿಯು ಮುಕ್ತಾಯಗೊಂಡ ನಂತರ ತರಬೇತಿ ಕಾರ್ಯಕ್ರಮದ ಬಗ್ಗೆ ಅಂತಿಮ ವರದಿಯನ್ನು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತವು ತಯಾರಿಸಿ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರಿಗೆ ಸಲ್ಲಿಸುವುದು.

j) ಸದರಿ ತರಬೇತಿ ಪ್ರಾರಂಭವಾದ ನಂತರ ಅಭ್ಯರ್ಥಿಗಳು ತರಬೇತಿ ಪಡೆಯುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಶೇ.50ರಷ್ಟು ತರಬೇತಿ ಶುಲ್ಕವನ್ನು ಹಾಗೂ ತರಬೇತಿ ಮುಕ್ತಾಯಗೊಂಡ ನಂತರ ಅಂತಿಮ ವರದಿ ಪಡೆದು ಶೇ. 50 ರಷ್ಟು ತರಬೇತಿ ಶುಲ್ಕವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಅನುದಾನ ಬೇಡಿಕೆ ಮತ್ತು ಲಭ್ಯತೆಗೆ ಅನುಗುಣವಾಗಿ ಪಾವತಿಸುವುದು

k) ಸದರಿ ತರಬೇತಿಯನ್ನು ಪಡೆದು, ಸೇನೆಯಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳ ಮಾಹಿತಿಯನ್ನು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತವು ಸಿದ್ದಪಡಿಸಿ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರಿಗೆ ಕಾಲಕಾಲಕ್ಕೆ ಸಲ್ಲಿಸುವುದು.

l) ಈಗಾಗಲೇ ದೈಹಿಕ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಕೇವಲ ಲಿಖಿತ ಪರೀಕ್ಷೆಯನ್ನು ಮಾತ್ರ ನಡೆಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ:ಆಇ 333 ವೆಚ್ಚ-3/2017 ದಿನಾಂಕ : 27.05.2017ರ ಹಾಗೂ ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ:ಪಿಡಿ 110 ಐಎಂಎಂ 2017 ದಿನಾಂಕ: 03.06.2017ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ PR - 200

ಎನ್.ಆರ್. ಎರೆಕುಪ್ಪಿ

SC-200

ಸರ್ಕಾರದ ಅಧೀನ ಕಾರ್ಯದರ್ಶಿ-1,

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯ

ವಿಷಯ: ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಅನುಮೋದನೆ ನೀಡುವ ಬಗ್ಗೆ.

ಓದಲಾಗಿದೆ: ಸಂಖ್ಯೆ:ದೇಹಿನಿ/ಲೆವಿ/ಅ.ಚೌ.ಅ.ನಿ/ಸಿ.ಆರ್-01/2017-18 ದಿನಾಂಕ: 07.04.2017.

ಪ್ರಸ್ತಾವನೆ:

ಸನ್ಮಾನ್ಯ ಮುಖ್ಯಮಂತ್ರಿಯವರು 2017-18ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-203ರಲ್ಲಿ ಬೆಸ್ತ, ಕಬ್ಬಲಿಗ, ಕೋಲಿ, ಗಂಗಮತ, ಮೊಗವೀರ ಮತ್ತು ಇವುಗಳ ಉಪಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿರುತ್ತಾರೆ.

2017-18ನೇ ಸಾಲಿನ ಆಯವ್ಯಯದಲ್ಲಿ ಲೆಕ್ಕಶೀರ್ಷಿಕೆ:4225-03-190-0-07ರಲ್ಲಿ ರೂ. 500.00 ಲಕ್ಷಗಳ ಷೇರು ಬಂಡವಾಳವನ್ನು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಆಯವ್ಯಯ ಅಂದಾಜು ಬೇಡಿಕೆಯ ಸಂಪುಟ-05ರ ಪುಟಸಂಖ್ಯೆ:89ರಲ್ಲಿ ಒದಗಿಸಲಾಗಿರುತ್ತದೆ.

ಸನ್ಮಾನ್ಯ ಮುಖ್ಯಮಂತ್ರಿಯವರು 2017-18ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವಂತೆ

1. ಬೆಸ್ತ, ಕಬ್ಬಲಿಗ, ಕೋಲಿ, ಗಂಗಮತ, ಮೊಗವೀರ ಮತ್ತು ಇವುಗಳ ಉಪಜಾತಿಗಳ ಸಮಗ್ರ ಅಭಿವೃದ್ಧಿಗಾಗಿ "ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತ" Ambigara Chowdaiah Development Corporation Ltd., ಅನ್ನು ಕಂಪನಿ ಕಾಯ್ದೆ 2013ರಡಿ ಸ್ಥಾಪಿಸುವುದು.

2. ಈ ನಿಗಮ ಸ್ಥಾಪನೆಗೆ ತಗಲುವ ಪ್ರಾರಂಭಿಕ ವೆಚ್ಚಗಳನ್ನು ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಭರಿಸಿ ಹಾಗೂ ನಂತರ ಸದರಿ ನಿಗಮದಿಂದ ವಾಪಸ್ಸು ಪಡೆಯುವುದು.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ೯೯೧

3. ವ್ಯವಸ್ಥಾಪಕ ನಿರ್ದೇಶಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಇವರು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಸ್ಥಾಪನೆ ಕಾರ್ಯಗಳನ್ನು ನಿರ್ವಹಿಸಲು ಹಾಗೂ ಸದರಿ ನಿಗಮದ ಹೆಚ್ಚುವರಿ ಕಾರ್ಯಭಾರ ವಹಿಸಲು.

ಅದರಂತೆ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಈ ಮೇಲ್ಕಂಡ ಅಂಶಗಳಿಗೆ ಆದೇಶ ಹೊರಡಿಸಲು ವ್ಯವಸ್ಥಾಪಕ ನಿರ್ದೇಶಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಇವರು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ:ಹಿಂವಕ 125 ಬಿಸಿಎ 2017 ಬೆಂಗಳೂರು ದಿನಾಂಕ: 18.05.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2017-18 ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-203ನ್ನು ಅನುಷ್ಠಾನಗೊಳಿಸಲು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಕುರಿತಂತೆ, ಈ ಕೆಳಕಂಡ ಷರತ್ತುಗಳಿಗೊಳಪಟ್ಟು "ಬೆಸ್ತ, ಕಬ್ಬಲಿಗ, ಕೋಲಿ, ಗಂಗಮತ, ಮೊಗವೀರ ಮತ್ತು ಇವುಗಳ ಉಪಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮ" ವನ್ನು ಸ್ಥಾಪಿಸಲು 2017-18ನೇ ಸಾಲಿನ ಆಯವ್ಯಯದ ಲೆಕ್ಕಶೀರ್ಷಿಕೆ:4225-03-190-0-07ರಡಿಯಲ್ಲಿ ಒದಗಿಸಿರುವ ರೂ. 500.00 ಲಕ್ಷಗಳನ್ನು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಬಿಡುಗಡೆ ಮಾಡಲು ಮಂಜೂರಾತಿ ನೀಡಲಾಗಿದೆ.

1. ಬೆಸ್ತ, ಕಬ್ಬಲಿಗ, ಕೋಲಿ, ಗಂಗಮತ, ಮೊಗವೀರ ಮತ್ತು ಇವುಗಳ ಉಪಜಾತಿಗಳ ಸಮಗ್ರ ಅಭಿವೃದ್ಧಿಗಾಗಿ "ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತ" Ambigara Chowdaiah Development Corporation Ltd., ಅನ್ನು ಕಂಪನಿ ಕಾಯ್ದೆ 2013ರಡಿ ಸ್ಥಾಪಿಸುವುದು.

2. ಈ ನಿಗಮ ಸ್ಥಾಪನೆಗೆ ತಗಲುವ ಪ್ರಾರಂಭಿಕ ವೆಚ್ಚಗಳನ್ನು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಭರಿಸಿ ಹಾಗೂ ನಂತರ ಸದರಿ ನಿಗಮದಿಂದ ವಾಪಸ್ಸು ಪಡೆಯುವುದು.

3. ವ್ಯವಸ್ಥಾಪಕ ನಿರ್ದೇಶಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಇವರು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಸ್ಥಾಪನೆ ಕಾರ್ಯಗಳನ್ನು ಮುಂದಿನ ಆದೇಶದವರೆಗೆ ನಿರ್ವಹಿಸಲು ಹಾಗೂ ಸದರಿ ನಿಗಮದ ಹೆಚ್ಚುವರಿ ಕಾರ್ಯಭಾರ ವಹಿಸಿಕೊಳ್ಳಲು ಆದೇಶಿಸಿದೆ.

4. ಸದರಿ ಮೊತ್ತವನ್ನು ಬಿಡುಗಡೆ ಮಾಡಿರುವ ಉದ್ದೇಶಕ್ಕಾಗಿಯೇ ಉಪಯೋಗಿಸತಕ್ಕದ್ದು.

5. ಅಂಬಿಗರ ಜನಾಂಗದ ಯೋಜನೆಗಳ ಅನುಷ್ಠಾನಕ್ಕಾಗಿ ಸಂಬಂಧಿಸಿದಂತೆ ವ್ಯವಸ್ಥಾಪಕ ನಿರ್ದೇಶಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಇವರು ಸಲ್ಲಿಸುವ ರಶೀದಿ/ಬಿಲ್ಲುಗಳಿಗೆ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇವರ ಮೇಲು ರುಜು ಪಡೆದು ಹಣ ಡ್ರಾ ಮಾಡತಕ್ಕದ್ದು.

6. 2017-18ನೇ ಸಾಲಿನಲ್ಲಿ ಬಿಡುಗಡೆ ಮಾಡಿದ ಅನುದಾನದ ಹಣ ಬಳಕೆ ಪ್ರಮಾಣ ಪತ್ರವನ್ನು ಮುಂದಿನ ಕಂತಿನ ಅನುದಾನ ಕೋರಿಕೆಯ ಪ್ರಸ್ತಾವನೆಯೊಂದಿಗೆ ಕಡ್ಡಾಯವಾಗಿ ಸಲ್ಲಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 261 ವೆಚ್ಚ-3 2017 ದಿನಾಂಕ: 06.05.2017 ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಪಿಡಿ 79 ಐಎಂಎಂ 2017, ದಿನಾಂಕ:28.04.2017ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಎನ್.ಆರ್. ಎರೆಕುಪ್ಪಿ

PR - 201

ಸರ್ಕಾರದ ಅಧೀನ ಕಾರ್ಯದರ್ಶಿ-1,

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕಂದಾಯ ಸಚಿವಾಲಯ

ವಿಷಯ :- ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ (ರಿ), ಮಂಡ್ಯ ರವರಿಗೆ "ಗಾಂಧಿ ಗ್ರಾಮ" ನಿರ್ಮಿಸಲು ಮಂಡ್ಯ ತಾಲ್ಲೂಕು, ದುದ್ದ ಹೋಬಳಿ, ಹೆಚ್.ಮಲ್ಲಿಗೆರೆ ಗ್ರಾಮದ ಸರ್ವೆ ನಂ.49 ರಲ್ಲಿ 10.00 ಎಕರೆ ಸರ್ಕಾರಿ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ನೀಡಿರುವ ಆದೇಶವನ್ನು ಮಾರ್ಪಾಡು ಮಾಡಿ ಗುತ್ತಿಗೆ ಬದಲಾಗಿ 20.00 ಎಕರೆ ಮಂಜೂರು ಮಾಡುವ ಬಗೆ.್ಗ

ಓದಲಾಗಿದೆ :- 1) ಜಿಲ್ಲಾಧಿಕಾರಿ, ಮಂಡ್ಯ ಜಿಲ್ಲೆ, ಮಂಡ್ಯ ಇವರ ಪತ್ರ ಸಂಖ್ಯೆ: ಎಲ್ಎನ್‌ಡಿ(1) 391/2012-13 ದಿನಾಂಕ : 05-05-2016.

2) ಜಿಲ್ಲಾಧಿಕಾರಿ, ಮಂಡ್ಯ ಜಿಲ್ಲೆ, ಮಂಡ್ಯ ಇವರು ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರಿಗೆ ಬರೆದ ಪತ್ರ ಸಂಖ್ಯೆ: ಎಲ್ಎನ್‌ಡಿ(1) 391/2012-13 ದಿನಾಂಕ : 13-01-2017.

3) ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 87 ಎಲ್‌ಜಿವೈ 2013 ದಿನಾಂಕ : 01-01-2016.

೯೯೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ಭಾಗ ೧

ಪ್ರಸ್ತಾವನೆ :-

ಮೇಲೆ (1)ರಲ್ಲಿ ಓದಲಾದ ಪತ್ರದಲ್ಲಿ ಮಂಡ್ಯ ತಾಲ್ಲೂಕು, ದುದ್ದ ಹೋಬಳಿ, ಹೆಚ್.ಮಲ್ಲಿಗೆರೆ ಗ್ರಾಮದ ಸರ್ವೆ ನಂ.49 ರಲ್ಲಿ 10.00 ಎಕರೆ ಸರ್ಕಾರಿ ಜಮೀನನ್ನು ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್ (ರಿ), ಮಂಡ್ಯರವರಿಗೆ "ಗಾಂಧಿ ಗ್ರಾಮ" ನಿರ್ಮಿಸಲು ಸರ್ಕಾರಿ ಆದೇಶ ಸಂಖ್ಯೆ ಆರ್‌ಡಿ 87 ಎಲ್‌ಜಿವೈ 2013 ದಿನಾಂಕ 01-01-2016 ರಲ್ಲಿ 10 ಎಕರೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿದ್ದು, ಅದನ್ನು ಮಾರ್ಪಡಿಸಿ 20.00 ಎಕರೆ ಜಮೀನನ್ನು ಮಂಜೂರು (grant) ಮಾಡುವ ಬಗ್ಗೆ ಪರಿಶೀಲಿಸಿ ವರದಿ ಮಾಡಿರುತ್ತಾರೆ. ಸದರಿ ವರದಿಯಲ್ಲಿ ಸ.ನಂ. 49 ರಲ್ಲಿನ ಉಳಿಕೆ ಜಮೀನು ಸರ್ಕಾರದ ಇತರೆ ಇಲಾಖೆಗೆ ಮಂಜೂರು ಮಾಡುವ ಸಂಬಂಧ ಪರಿಶೀಲನೆಯಲ್ಲಿದ್ದು, ಉಳಿಕೆ 10.00 ಎಕರೆ ಜಮೀನನ್ನು ಗಾಂಧಿ ಗ್ರಾಮ ನಿರ್ಮಿಸಲು ಮಂಜೂರು ಮಾಡಲು ಭೂ ಲಭ್ಯತೆ ಇರುವುದಿಲ್ಲವೆಂದು ವರದಿ ಮಾಡಿರುತ್ತಾರೆ. ಆದರೆ, ಈಗಾಗಲೇ ಸದರಿ ಮಂಜೂರಾಗಿರುವ ಜಮೀನು ರೇಷ್ಮೆ ಇಲಾಖೆಯ ವಶದಲ್ಲಿದ್ದು, 20.00 ಎಕರೆ ಜಮೀನನ್ನು ಮಂಜೂರು ಮಾಡಲು ಕೋರಿತ್ತ್ತು. ಆದುದರಿಂದ, ಈ ಪ್ರಕರಣದಲ್ಲಿ 10.00 ಎಕರೆ ಬದಲಾಗಿ 20.00 ಎಕರೆ ಜಮೀನು ಮಂಜೂರು ಮಾಡಲು ಭೂ ಲಭ್ಯತೆ ಇದೆ.

ಅಧ್ಯಕ್ಷರು, ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್ (ರಿ), ಮಂಡ್ಯ, ಇವರು ಮಂಡ್ಯ ಜಿಲ್ಲೆಯ ಮಂಡ್ಯ ತಾಲ್ಲೂಕು, ದುದ್ದ ಹೋಬಳಿ, ಹೆಚ್.ಮಲ್ಲಿಗೆರೆ ಗ್ರಾಮದ ಸರ್ವೆ ನಂ.49 ರಲ್ಲಿ 20.00 ಎಕರೆ ಸರ್ಕಾರಿ ಜಮೀನನ್ನು ಗಾಂಧಿ ಗ್ರಾಮ ನಿರ್ಮಿಸಿ ನಿರುದ್ಯೋಗಿ ಯುವ ಜನರಿಗೆ ತರಬೇತಿ ನೀಡಿ, ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಮಂಜೂರು ಮಾಡುವಂತೆ ಕೋರಿದ್ದರು. ಸದರಿ ಗ್ರಾಮದಲ್ಲಿನ ಸರ್ವೆ ನಂ.49 ರಲ್ಲಿ 100.00 ಎಕರೆ ಜಮೀನನ್ನು (ಪಹಣಿ ಪ್ರಕಾರ 99 ಎಕರೆ) ಸರ್ಕಾರಿ ಆದೇಶ ಸಂಖ್ಯೆ ಆರ್‌ಡಿ 142 ಎಲ್ಆರ್ಎಂ 78 ದಿನಾಂಕ 01-01-1980 ರಲ್ಲಿ ರೇಷ್ಮೆ ಇಲಾಖೆಯ ಬಳಕೆಗಾಗಿ ಮಂಜೂರು ಮಾಡಲಾಗಿದೆ. ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯು ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಸದರಿ ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್ (ರಿ), ಮಂಡ್ಯ, ರವರಿಗೆ 20.00 ಎಕರೆ ಜಮೀನನ್ನು ಮಂಜೂರು ಮಾಡಲುಕೋರಿತ್ತು. ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿ, ಮಂಡ್ಯರವರು ದಿನಾಂಕ 02-06-2015 ಮತ್ತು 09-06-2015ರ ಪತ್ರಗಳಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿ ಸದರಿ 20.00 ಎಕರೆ ಜಮೀನನ್ನು ಕಲ್ಯಾಣ ಚಟುವಟಿಕೆ ಉದ್ದೇಶ ಎಂದು ಪರಿಗಣಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22-(ಎ)ರ ಕ್ರಮ ಸಂಖ್ಯೆ 03ರ ಪ್ರಕಾರ ಪ್ರಚಲಿತ ಮಾರುಕಟ್ಟೆ ದರದ ಶೇಕಡ 25%ರಷ್ಟನ್ನು ವಿಧಿಸಿ ಮಂಜೂರು ಮಾಡಲು ಆದೇಶ ಕೋರಿ ಸಚಿವ ಸಂಪುಟದ ಮುಂದೆ ಮಂಡಿಸಲಾಗಿತ್ತು. ಸಚಿವ ಸಂಪುಟವು ದಿನಾಂಕ 10-12-2015 ರಂದು ನಡೆದ ಸಭೆಯಲ್ಲಿ [ವಿಷಯ ಸಂಖ್ಯೆ ಸಿ/660/2015 ರಲ್ಲಿ] ಚರ್ಚಿಸಿ ಮಂಡ್ಯ ತಾಲ್ಲೂಕು, ದುದ್ದ ಹೋಬಳಿ, ಹೆಚ್.ಮಲ್ಲಿಗೆರೆ ಗ್ರಾಮದ ಸರ್ವೆ ನಂ.49ರಲ್ಲಿ ರೇಷ್ಮೆ ಇಲಾಖೆಗೆ ಮಂಜೂರಾಗಿರುವ ಜಮೀನಿನ ಪೈಕಿ 10.00 ಎಕರೆ ಜಮೀನನ್ನು ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್ (ರಿ), ಮಂಡ್ಯರವರಿಗೆ 30 ವರ್ಷಗಳ ಅವಧಿಗೆ ಮಾರುಕಟ್ಟೆ ಬೆಲೆಯ ಶೇಕಡ 10 ರಷ್ಟನ್ನು ವಾರ್ಷಿಕ ಗುತ್ತಿಗೆ ದರವನ್ನಾಗಿ ನಿಗದಿಪಡಿಸಿ ನೀಡಲು ನಿರ್ಧರಿಸಿತು. ಅದರಂತೆ, ಸರ್ಕಾರಿ ಆದೇಶ ಸಂಖ್ಯೆ ಆರ್‌ಡಿ 87 ಎಲ್‌ಜಿವೈ 2013 ದಿನಾಂಕ 01-01-2016 ಅನ್ನು ಹೊರಡಿಸಲಾಗಿತ್ತು.

ಅಧ್ಯಕ್ಷರು ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ (ರಿ) ಮಂಡ್ಯ ರವರು ದಿನಾಂಕ: 08-03-2017ರ ಪತ್ರದಲ್ಲಿ ಮಹಾತ್ಮ ಗಾಂಧಿಯವರ ಕಲ್ಪನೆಯ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಲು (ತಮಿಳು ನಾಡಿನ ಮಧುರೈ ಗಾಂಧಿ ಗ್ರಾಮದಂತೆ) ಮಂಡ್ಯ ತಾಲ್ಲೂಕಿನ ಹೆಚ್.ಮಲ್ಲಿಗೆರೆ ಸ.ನಂ. 49 ರಲ್ಲಿ 20.00 ಎಕರೆ ಜಮೀನನ್ನು ಮಂಜೂರಾತಿ ಮಾಡಲು 2013 ರಲ್ಲಿಯೇ ಮಾನ್ಯ ಮುಖ್ಯ ಮಂತ್ರಿಗಳು ಅನುಮೋದಿಸಿದ್ದು, ಆದರೆೆ ಕೇವಲ 10 ಎಕರೆ ಜಮೀನನ್ನು ಅವೈಜ್ಞಾನಿಕ ದರ ವಿಧಿಸಿ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲಾಗಿತ್ತು. 10.00 ಎಕರೆ ಜಮೀನು ಗಾಂಧಿ ಗ್ರಾಮಕ್ಕೆ ಏನೇನೂ ಸಾಲದಾಗಿದ್ದು ಮತ್ತು ಗುತ್ತಿಗೆ ಮಂಜೂರಾತಿಯನ್ನು ಹಿಂಪಡೆದು 20.00 ಎಕರೆ ಜಮೀನನ್ನು ವ್ಯವಸಾಯೇತರ ಉದ್ದೇಶಕ್ಕಾಗಿ ಅಂದರೆ ಗಾಂಧಿ ಕಲ್ಪನೆಯ ಗುಡಿ ಕೈಗಾರಿಕೆ ಸ್ಥಾಪಿಸಲು 25% ರಿಯಾಯಿತಿ ದರದಲ್ಲಿ ಖಾಯಂ ಮಂಜೂರು ಮಾಡುವಂತೆ ಕೋರಿರುತ್ತಾರೆ.

ಮೇಲ್ಕಂಡಂತೆ ಸರ್ಕಾರದ ಆದೇಶ ಸಂ: ಆರ್‌ಡಿ 87 ಎಲ್‌ಜಿವೈ 2013 ದಿನಾಂಕ 01.01.2016ರ ಆದೇಶ ಹೊರಡಿಸಿದ ನಂತರ, ಅಧ್ಯಕ್ಷರು, ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ (ರಿ), ಮಂಡ್ಯ, ಇವರು ಮಾನ್ಯ ಮುಖ್ಯ ಮಂತ್ರಿಯವರಿಗೆ ದಿನಾಂಕ 08-01-2016 ಮತ್ತು 16-05-2016 ರಂದು ಮನವಿಗಳನ್ನು ಸಲ್ಲಿಸಿ ಪ್ರಸ್ತಾವಿತ ಗಾಂಧಿ ಗ್ರಾಮದಲ್ಲಿ ನೂರಾರು ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿಲು ಉದ್ದೇಶಿಸಿದ್ದು, ಈಗ ನೀಡಿರುವ 10.00 ಎಕರೆ ಜಮೀನು ಸಾಕಾಗುವುದಿಲ್ಲವೆಂದು ಹಾಗೂ ಈ ಹಿಂದೆಯೇ ಶಿಫಾರಸ್ಸು ಮಾಡಿದ್ದ ಪ್ರಸ್ತಾವನೆ ಪ್ರಕಾರ 20.00 ಎಕರೆ ಜಮೀನನ್ನು ಮಂಜೂರು (grant) ಮಾಡುವಂತೆ ಕೋರಿದ್ದಾರೆ. ದಿನಾಂಕ : 16-05-2016ರ ಸದರಿ ಮನವಿಯ ಮೇಲೆ ಮಾನ್ಯ ಮುಖ್ಯ ಮಂತ್ರಿಯವರು "ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಿ" ಎಂದು ಆದೇಶಿಸಿದ್ದಾರೆ.

ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22-ಎ(1)ರ ಕ್ರಮ ಸಂಖ್ಯೆ 03 ರನ್ವಯ, ಇತರೆ ವರ್ಗಕ್ಕೆ ಸೇರಿದ ಖಾಸಗಿಯವರಿಗೆ ಸರ್ಕಾರಿ ಜಮೀನನ್ನು ಕಲ್ಯಾಣ ಚಟುವಟಿಕೆಗಳ ಉದ್ದೇಶಕ್ಕಾಗಿ ಪ್ರಚಲಿತ ಮಾರುಕಟ್ಟೆ ಬೆಲೆಯ ಶೇಕಡ 25%ರಷ್ಟು ದರ ವಿಧಿಸಿ ಮಂಜೂರು ಮಾಡಲು ಅವಕಾಶವಿದೆ. ಅದರಂತೆ, ಈ ಪ್ರಕರಣದಲ್ಲಿ 20.00 ಎಕರೆ ಜಮೀನನ್ನು ಮಂಜೂರು ಮಾಡಲು ಈ ಹಿಂದೆ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮಂದೆ ಮಂಡಿಸಿದಾಗ, ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ಗುತ್ತಿಗೆ ಆಧಾರದ ಮೇಲೆ 10.00 ಎಕರೆ ಜಮಿನನ್ನು ನೀಡಲು ತೀರ್ಮಾನಿಸಿದ ಪ್ರಕಾರ ಸರ್ಕಾರಿ ಆದೇಶ ಹೊರಡಿಸಿತ್ತು.

ಅಧ್ಯಕ್ಷರು ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ (ರಿ) ಮಂಡ್ಯ ರವರು ದಿನಾಂಕ: 08-03-2017ರ ಪತ್ರದಲ್ಲಿ ಮಹಾತ್ಮ ಗಾಂಧಿಯವರ ಕಲ್ಪನೆಯ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಲು (ತಮಿಳು ನಾಡಿನ ಮಧುರೈ ಗಾಂಧಿ ಗ್ರಾಮದಂತೆ) ಮಂಡ್ಯ ತಾಲೂಕಿನ ಹೆಚ್.ಮಲ್ಲಿಗೆರೆ ಸ.ನಂ. 49 ರಲ್ಲಿ 20.00 ಎಕರೆ ಜಮೀನನ್ನು ಮಂಜೂರಾತಿ ಮಾಡಲು 2013 ರಲ್ಲಿಯೇ ಮಾನ್ಯ ಮುಖ್ಯ ಮಂತ್ರಿಗಳು ಅನುಮೋದಿಸಿದ್ದು, ಆದರೆೆ ಕೇವಲ 10.00 ಎಕರೆ ಜಮೀನನ್ನು ಅವೈಜ್ಞಾನಿಕ ಧರ ವಿಧಿಸಿ ಗುತ್ತಿಗೆ ಮಂಜೂರು ಮಾಡಲಾಗಿದೆ. 10.00 ಎಕರೆ ಜಮೀನು ಗಾಂಧಿ ಗ್ರಾಮಕ್ಕೆ ಏನೇನೂ ಸಾಲದಾಗಿದ್ದು ಮತ್ತು ಸದರಿ ಗುತ್ತಿಗೆಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ೯೯೩ ಮಂಜೂರಾತಿಯನ್ನು ಹಿಂಪಡೆದು 20.00 ಎಕರೆ ಜಮೀನನ್ನು ವ್ಯವಸಾಯೇತರ ಉದ್ದೇಶಕ್ಕಾಗಿ ಅಂದರೆ ಗಾಂಧಿ ಕಲ್ಪನೆಯ ಗುಡಿ ಕೈಗಾರಿಕೆ ಸ್ಥಾಪಿಸಲು 25% ರಿಯಾಯಿತಿ ದರದಲ್ಲಿ ಖಾಯಂ ಮಂಜೂರು ಮಾಡುವಂತೆ ಕೋರಿರುತ್ತಾರೆ. ದಿನಾಂಕ 20-02-2017 ರಂದು ಅವರು ಸಲ್ಲಿಸಿದ ಮನವಿಯ ಮೇಲೆ ಮಾನ್ಯ ಮುಖ್ಯಮಂತ್ರಿಯವರು ಸದರಿ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟದ ಮುಂದೆ ತರುವುದು ಎಂದು ಟಿಪ್ಪಣಿಸಿರುತ್ತಾರೆ.

ಅದರಂತೆ ದಿನಾಂಕ 05-05-2017 ರಂದು ನಡೆದ ಸಚಿವ ಸಂಪುಟ ಪ್ರಕರಣ ಸಂಖ್ಯೆ : ಸಿ. 285/2017 ರಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ (ರಿ) ಮಂಡ್ಯ ಇವರಿಗೆ 20.00 ಎಕರೆ ಜಮೀನನ್ನು ಗಾಂಧಿ ಗ್ರಾಮ ನಿರ್ಮಿಸಲು ಮಂಜೂರು ಮಾಡಲು ನಿರ್ಣಯಿಸಲಾಗಿದೆ. ಅದರಂತೆ ಈ ಕೆಳಕಂಡ ಆದೇಶ :-

ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 05 ಎಲ್‌ಜಿವೈ 2016, ದಿನಾಂಕ: 16.05.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ಆದೇಶ ಸಂಖ್ಯೆ ಆರ್‌ಡಿ 87 ಎಲ್‌ಜಿವೈ 2013 ದಿನಾಂಕ 01-01-2016ರಲ್ಲಿ ಮಂಡ್ಯ ತಾಲ್ಲೂಕು, ದುದ್ದ ಹೋಬಳಿ, ಹೆಚ್.ಮಲ್ಲಿಗೆರೆ ಗ್ರಾಮದ ಸರ್ವೆ ನಂ.49ರಲ್ಲಿ 10.00 ಎಕರೆ ಸರ್ಕಾರಿ ಜಮೀನನ್ನು ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ (ರಿ), ಮಂಡ್ಯ ರವರಿಗೆ "ಗಾಂಧಿ ಗ್ರಾಮ" ನಿರ್ಮಿಸಲು 30 ವರ್ಷಗಳ ಅವಧಿಗೆ ಮಾರುಕಟ್ಟೆ ಬೆಲೆಯ ಶೇಕಡ 10 ರಷ್ಟು ಗುತ್ತಿಗೆ ಮೊತ್ತ ನಿಗದಿಪಡಿಸಿ ವಾರ್ಷಿಕ ಗುತ್ತಿಗೆಯ ಆಧಾರದ ಮೇಲೆ ನೀಡಿರುವುದನ್ನು ರದ್ದುಪಡಿಸಿ ಆದೇಶಿಸಿದೆ ಹಾಗೂ ಮಂಡ್ಯ ತಾಲ್ಲೂಕು, ದುದ್ದ ಹೋಬಳಿ, ಹೆಚ್.ಮಲ್ಲಿಗೆರೆ ಗ್ರಾಮದ ಸರ್ವೆ ನಂ.49ರಲ್ಲಿ ರೇಷ್ಮೆ ಇಲಾಖೆಗೆ ಮಂಜೂರಾಗಿರುವ ಜಮೀನಿನ ಪೈಕಿ ಖಾಲಿ ಇರುವ 20.00 ಎಕರೆ ಜಮೀನನ್ನು ವ್ಯವಸಾಯೇತರ ಉದ್ದೇಶಕ್ಕಾಗಿ (non agricultural purpose) "ಗಾಂಧಿ ಗ್ರಾಮ" (ಗಾಂಧಿ ಕಲ್ಪನೆಯ ಗಾಂಧಿ ಗ್ರಾಮ ನಿರ್ಮಿಸಿ, ತರಬೇತಿ ನೀಡಲು ಗುಡಿ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ) ನಿರ್ಮಿಸಲು ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ (ರಿ) ಮಂಡ್ಯ ಇವರಿಗೆ ಮಾರ್ಗಸೂಚಿ ಬೆಲೆಯ ಶೇಕಡ 25% ದರ ವಿಧಿಸಿ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರು ಮಾಡಿ ಆದೇಶಿಸಿದೆ.

ಷರತ್ತುಗಳು :

1) ಸದರಿ ಭೂಮಿಯನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಈ ಆದೇಶದ ದಿನಾಂಕದಿಂದ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು. ಈ ಅವಧಿಯಲ್ಲಿ ಬಳಕೆ ಮಾಡಿಕೊಳ್ಳದಿದ್ದಲ್ಲಿ, ಮಂಜೂರಾತಿಯನ್ನು ರದ್ದುಪಡಿಸಿ ಸರ್ಕಾರಕ್ಕೆ ವಾಪಸ್ಸು ಪಡೆಯಲಾಗುವುದು.

2) ಸದರಿ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ ಉಪಗುತ್ತಿಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು.

3) ಸದರಿ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ.

4) ಸದರಿ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.

5) ಸದರಿ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ದಾವೆಗಳು ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.

6) ಸದರಿ ಜಮೀನಿನ ಯಾವುದೇ ಭಾಗವು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಾಗಿದ್ದಲ್ಲಿ ಸರ್ಕಾರವು ಸದರಿ ಜಮೀನನ್ನು ಪರಿಹಾರ ನೀಡದೇ ಹಿಂತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತದೆ.

7) ಸದರಿ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು.

8) ಸದರಿ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

9) ಸದರಿ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ಈ ಮಂಜೂರಾತಿ ಆದೇಶ ತನ್ನಷ್ಟಕ್ಕೆ ತಾನೇ ರದ್ದಾಗುವುದು ಹಾಗೂ ಯಾವುದೇ ಪರಿಹಾರ ನೀಡದೇ ಮಂಜೂರಾದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು.

10) ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 87 ಎಲ್‌ಜಿವೈ 2013 ದಿನಾಂಕ 01-01-2016ರಂತೆ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ (ರಿ) ಮಂಡ್ಯ ಇವರಿಗೆ 30 ವರ್ಷಗಳ ಅವಧಿಗೆ ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ಮಂಜೂರಾಗಿದ್ದ 10.00 ಎಕರೆ ಜಮೀನಿಗೆ ಮಂಡ್ಯ ಎಸ್.ಬಿ.ಎಂ.

ಶಾಖೆಯಲ್ಲಿ ಚಲನ್ ನಂ: Q516, ದಿನಾಂಕ 07-04-2016ರಂದು ಖಜಾನೆಗೆ ಕಟ್ಟಿರುವ `. 3,98,055-00 (ರೂಪಾಯಿ ಮೂರು ಲಕ್ಷದ ತೊಂಭತ್ತೆಂಟು ಸಾವಿರದ ಐವತ್ತೈದು ಮಾತ್ರ) ಗಳನ್ನು ಈಗ ಮಂಜೂರು ಮಾಡಿರುವ 20.00 ಎಕರೆ ಜಮೀನಿನ ಮೌಲ್ಯಕ್ಕೆ ಮರುಹೊಂದಾಣಿಕೆ ಮಾಡಿಕೊಂಡು, ಉಳಿಕೆ ಹಣವನ್ನು ಮಾತ್ರ ಕಟ್ಟಿಸಿಕೊಳ್ಳತಕ್ಕದ್ದು.

P.R. 172

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಉದಯ ಆರ್. ನಾಯಕ್

SC-20

ಪೀಠಾಧಿಕಾರಿ

ಕಂದಾಯ ಇಲಾಖೆ. (ಭೂ.ಮಂ.-2)೯೯೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ಭಾಗ ೧

ಕಂದಾಯ ಸಚಿವಾಲಯ

ವಿಷಯ : ಕಾವೇರಿ ಯೋಜನೆ-II ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೆ: HCL Infosystems Ltd., ಬೆಂಗಳೂರು ಇವರಿಗೆ ಬಿಲ್ಲನ್ನು ಪಾವತಿಸಲು ಅನುಮತಿ ನೀಡುವ ಕುರಿತು.

ಓದಲಾಗಿದೆೆ : 1. ಸರ್ಕಾರದ ಆದೇಶ ಸಂಖ್ಯೆ: ಕಂಇ 194 ಮುನೋಮು 2011 ದಿನಾಂಕ: 21-9-2013.

2. ಮೆ: HCL Infosystems Ltd., ರವರಿಗೆ ನೀಡಿದ ಕಾರ್ಯಾದೇಶ ಸಂಖ್ಯೆ: ಕಂಪ್ಯೂಟರ್/54/2014-15 ದಿನಾಂಕ: 21-9-2013.

3. ಸರ್ಕಾರದ ಆದೇಶ ಸಂಖ್ಯೆ: ಕಂಇ 79 ಮುನೋಮು 2014 ದಿನಾಂಕ: 31-3-2015.

4. ಸರ್ಕಾರದ ಆದೇಶ ಸಂಖ್ಯೆ: ಕಂಇ 79 ಮುನೋಮು 2014 ದಿನಾಂಕ: 13-4-2015.

5. ಸರ್ಕಾರದ ಆದೇಶ ಸಂಖ್ಯೆ: ಕಂಇ 79 ಮುನೋಮು 2014 ದಿನಾಂಕ: 29-8-2015.

6. ಸರ್ಕಾರದ ಆದೇಶ ಸಂಖ್ಯೆ: ಕಂಇ 79 ಮುನೋಮು 2014 ದಿನಾಂಕ: 24-11-2015.

7. ಸರ್ಕಾರದ ಆದೇಶ ಸಂಖ್ಯೆ: ಕಂಇ 79 ಮುನೋಮು 2014 ದಿನಾಂಕ: 17-02-2016.

8. ಸರ್ಕಾರದ ಆದೇಶ ಸಂಖ್ಯೆ: ಕಂಇ 61 ಮುನೋಮು 2016 ದಿನಾಂಕ: 17-06-2016.

9. ಸರ್ಕಾರದ ಆದೇಶ ಸಂಖ್ಯೆ: ಕಂಇ 61 ಮುನೋಮು 2016 ದಿನಾಂಕ: 07-10-2016.

10. ಸರ್ಕಾರದ ಆದೇಶ ಸಂಖ್ಯೆ: ಕಂಇ 61 ಮುನೋಮು 2016 ದಿನಾಂಕ: 20-02-2017.

11. ಸರ್ಕಾರದ ಆದೇಶ ಸಂಖ್ಯೆ: ಕಂಇ 61 ಮುನೋಮು 2016 ದಿನಾಂಕ: 28-02-2017.

12. ಸರ್ಕಾರದ ಆದೇಶ ಸಂಖ್ಯೆ: ಕಂಇ 31 ಮುನೋಮು 2017 ದಿನಾಂಕ: 06-05-2017.

13. ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರ ಪತ್ರ ಸಂಖ್ಯೆ : ಕಾಂಪ್/54/2014-15 ದಿನಾಂಕ: 03-04-2017 ಮತ್ತು 27-04-2017.

ಪ್ರಸ್ತಾವನೆ :

ಮೇಲೆ (1) ರಲ್ಲಿ ಓದಲಾದ ದಿನಾಂಕ: 21-9-2013ರ ಆದೇಶದಲ್ಲಿ, ನೂತನ ಕಾವೇರಿ ಯೋಜನೆಗೆ ಮೆ: HCL Infosystems Ltd., ಬೆಂಗಳೂರು ಇವರಿಗೆ ರಿಟ್ ಅರ್ಜಿ ಸಂಖ್ಯೆ : 13253/2013ರ ಅಂತಿಮ ಆದೇಶಕ್ಕೊಳಪಟ್ಟು ಕಾವೇರಿ ಟೆಂಡರ್ ಸಂಖ್ಯೆ: ಕಂಪ್ಯೂಟರ್/54/2014-15, ದಿನಾಂಕ: 10-12-2012ರ ಬಗ್ಗೆ ಕೆಲಸದ ಕಾರ್ಯಾದೇಶ ನೀಡಿದ್ದು ಹಾಗೂ ಈ ವಿಷಯವಾಗಿ ಮೆ: HCL Infosystems Ltd., ಬೆಂಗಳೂರು ಇವರೊಂದಿಗೆ ಸೂಕ್ತ ಕರಾರು ಪತ್ರ ಮಾಡಿಕೊಳ್ಳುವಂತೆ ನಿರ್ದೇಶಿಸಲಾಗಿತ್ತು.

ಮೇಲೆ (2) ರಲ್ಲಿ ಓದಲಾದ ದಿನಾಂಕ: 21-9-2013ರ ಕಾರ್ಯಾದೇಶದಲ್ಲಿ, ಮೆ: HCL Infosystems Ltd., ಬೆಂಗಳೂರು ಸಂಸ್ಥೆಯೊಂದಿಗೆ ಕರಾರು ಪತ್ರ ಮಾಡಿಕೊಂಡು ಕೆಲಸದ ಕಾರ್ಯಾದೇಶ ನೀಡಲಾಗಿರುತ್ತದೆ.

ಮೆ: HCL Infosystems Ltd., ಬೆಂಗಳೂರು ಸಂಸ್ಥೆಯವರು ಕೆಲಸ ನಿರ್ವಹಿಸಿದ ದಿನಾಂಕ: 01-12-2014 ರಿಂದ 28-02-2015 ರವರೆಗಿನ ಅವಧಿಯ 3 ತಿಂಗಳ ನಿರ್ವಹಣಾ ವೆಚ್ಚದ ಮೊತ್ತ `. 4,65,98,324/-ಗಳ ವೆಚ್ಚವನ್ನು ಆರ್ಥಿಕ ಇಲಾಖೆಯ ಅನುಮೋದನೆ ಪಡೆದು 2014-15ನೇ ಆರ್ಥಿಕ ವರ್ಷದಲ್ಲಿ ಲೆಕ್ಕ ಶೀರ್ಷಿಕೆ "2030-03-001-02-04 Charges for supply of Registered documents – 051 General Expenses (Non- Plan)" ರಡಿಯಲ್ಲಿ ಒದಗಿಸಿರುವ `. 120.00 ಕೋಟಿ ಅನುದಾನದಲ್ಲಿ ವೆಚ್ಚ ಭರಿಸುವಂತೆ ಮೇಲೆ (3) ರಲ್ಲಿ ಓದಲಾದ ದಿನಾಂಕ : 31-03-2015ರ ಆದೇಶದಲ್ಲಿ ಆದೇಶಿಸಲಾಗಿತ್ತು.

ಆದರೆ, ಸರ್ಕಾರದ ಆದೇಶ ಮತ್ತು ಅನುಮತಿಯಂತೆ ದಿನಾಂಕ: 31-03-2015ರಂದು ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರ ಕಛೇರಿಯಿಂದ ಬಿಲ್ಲನ್ನು ತಯಾರಿಸಿ ಸದರಿ ಲೆಕ್ಕ ಶೀರ್ಷಿಕೆಯಡಿಯಲ್ಲಿ ಲಭ್ಯವಿರುವ ಅನುದಾನದಂತೆ ಪಾವತಿಗಾಗಿ ಜಿಲ್ಲಾ ಹುಜೂರ್ ಖಜಾನೆ, ಬೆಂಗಳೂರು, ಇವರಿಗೆ ಬಿಲ್ಲನ್ನು ಸಲ್ಲಿಸಲಾಗಿತ್ತು. ಆದರೆ, ಅಂದು 2014-15ನೇ ಸಾಲಿನ ಕೊನೆಯ ದಿನವಾದ್ದರಿಂದ ಖಜಾನಾಧಿಕಾರಿಯವರು ಸದರಿ ಮೊತ್ತದ ಬಿಲ್ಲನ್ನು ಪಡೆಯಲು ನಿರಾಕರಿಸಿ ಮೇಲ್ಕಂಡ ಬಿಲ್ಲನ್ನು ಮೌಖಿಕವಾಗಿ ಹಿಂದಿರುಗಿಸಿರುತ್ತಾರೆ. ಇದರಿಂದ ಒಟ್ಟು `. 3396.28 ಲಕ್ಷದ ಬಿಲ್ಲುಗಳನ್ನು ಆರ್ಥಿಕ ವರ್ಷದ 2014-15ನೇ ಸಾಲಿನಲ್ಲಿ ವೆಚ್ಚ ಭರಿಸಲಾಗಿರುವುದಿಲ್ಲ. ಆದುದರಿಂದ ಮೇಲೆ (4) ರಲ್ಲಿ ಓದಲಾದ ದಿನಾಂಕ: 13-4-2015ರ ಆದೇಶದಲ್ಲಿ, ಮೆ: HCL Infosystems Ltd., ಬೆಂಗಳೂರು ಸಂಸ್ಥೆಯವರು ಕೆಲಸ ನಿರ್ವಹಿಸಿದ ದಿನಾಂಕ : 01-12-2014 ರಿಂದ 28-2-2015 ರವರೆಗಿನ ಅವಧಿಯ 3 ತಿಂಗಳ ನಿರ್ವಹಣಾ ವೆಚ್ಚದ ಮೊತ್ತ `. 4,65,98,324/- (ನಾಲ್ಕು ಕೋಟಿ ಅರವತ್ತೈದು ಲಕ್ಷದ ಅನುದಾನದಲ್ಲಿ ಭರಿಸಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ೯೯೫

2015-16ನೇ ಆರ್ಥಿಕ ವರ್ಷದಲ್ಲಿ ಲೆಕ್ಕ ಶೀರ್ಷಿಕೆ "2030-03-001-02-04 Charges for supply of Registered documents – 051 General Expenses (Non-Plan)" ಅಡಿ ಒದಗಿಸಿರುವ `. 80.00 ಕೋಟಿ ಅನುದಾನದಲ್ಲಿ ಭರಿಸಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ.

ಮೇಲೆ (6) ರಲ್ಲಿ ಓದಲಾದ ದಿನಾಂಕ: 24-11-2015ರ ಆದೇಶದಲ್ಲಿ, ಮೆ: HCL Infosystems Ltd., ಬೆಂಗಳೂರು ಸಂಸ್ಥೆಯವರು ಕೆಲಸ ನಿರ್ವಹಿಸಿದ ದಿನಾಂಕ: 01-06-2015 ರಿಂದ 31-08-2015 ರವರೆಗಿನ ಅವಧಿಯ 3 ತಿಂಗಳ 6ನೇ ಕಂತಿನ ಕಾರ್ಯ ನಿರ್ವಹಣಾ ವೆಚ್ಚದ ಮೊತ್ತ (ಐದು ಕೋಟಿ ಹತ್ತೊಂಭತ್ತು ಲಕ್ಷದ ಮೂವತ್ತೆರಡು ಸಾವಿರದ ಒಂಭೈನೂರ ಹದಿನೈದು ರೂಪಾಯಿಗಳು ಮಾತ್ರ)ಗಳನ್ನು ಮೆ: HCL Infosystems Ltd., ಬೆಂಗಳೂರು ರವರಿಗೆ 2016-17ನೇ ಆರ್ಥಿಕ ವರ್ಷದಲ್ಲಿ ಲೆಕ್ಕ ಶೀರ್ಷಿಕೆ "2030-03-001-02-04 Charges for supply of Registered documents– 051 General Expenses (Non-Plan)" ಅಡಿ ಒದಗಿಸಿರುವ `. 45.75 ಕೋಟಿ ಅನುದಾನದಲ್ಲಿ ಭರಿಸಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ.

(ಐದು ಕೋಟಿ ಇಪ್ಪತ್ತೊಂಭತ್ತು ಲಕ್ಷದ ಮೂವತ್ತೆಂಟು ಸಾವಿರದ ಹದಿನೈದು ರೂಪಾಯಿ ಮಾತ್ರ) ಗಳನ್ನು ಮೆ: HCL Infosystems Ltd., ಬೆಂಗಳೂರು ರವರಿಗೆ 2016-17ನೇ ಆರ್ಥಿಕ ವರ್ಷದಲ್ಲಿ ಲೆಕ್ಕ ಶೀರ್ಷಿಕೆ "2030-03-001-02-04 Charges for supply of Registered documents – 051 General of Registered documents–051 General Expenses (Non-Plan)" ಅಡಿಯಲ್ಲಿ ಒದಗಿಸಿರುವ `. 45.75 ಕೋಟಿಗಳ ಅನುದಾನದಲ್ಲಿ ಭರಿಸಲು 2016-17ನೇ ಆರ್ಥಿಕ ವರ್ಷದಲ್ಲಿ ಲೆಕ್ಕ ಶೀರ್ಷಿಕೆ "2030-03-001-02-04 Charges for supply of Registered documents–051 General Expenses (Non-Plan)" ಅಡಿಯಲ್ಲಿ ಒದಗಿಸಿರುವ `. 45.75 ಕೋಟಿಗಳ ಅನುದಾನದಲ್ಲಿ ಭರಿಸಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ.

೯೯೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ಭಾಗ ೧

ಸದರಿ ಸಂಸ್ಥೆಯೊಂದಿಗೆ ದಿನಾಂಕ:21-09-2013ರಂದು ಕರಾರು ಪತ್ರ ಮಾಡಿಕೊಂಡು ಕೆಲಸದ ಕಾರ್ಯಾದೇಶ ನೀಡಲಾಗಿರುತ್ತದೆ. ಮೇಲೆ ಓದಲಾದ ಕ್ರಮ ಸಂಖ್ಯೆ: (3) ರಿಂದ ಕ್ರಮ ಸಂಖ್ಯೆ: (10)ರವರೆಗಿನ ಆದೇಶಗಳಲ್ಲಿ, M/s. HCL Infosystems Ltd., ಸಂಸ್ಥೆಯವರು ಕಾರ್ಯ ನಿರ್ವಹಿಸಿದ ದಿನಾಂಕ: 16-02-2014 ರಿಂದ 31-05-2014ರ ಅವಧಿಯ ಪ್ರಥಮ ಬಿಲ್ಲಿನ ಮೊತ್ತ `. 4,25,64,627/-ಗಳನ್ನು, ದಿನಾಂಕ : 01-06-2014 ರಿಂದ 31-08-2014ರ ಅವಧಿಯ ದ್ವಿತೀಯ ಬಿಲ್ಲಿನ ಮೊತ್ತ `. 4,64,02,393/-ಗಳನ್ನು, ದಿನಾಂಕ:01-09-2014 ರಿಂದ 30-11-2014ರ ಅವಧಿಯ ತೃತೀಯ ಬಿಲ್ಲಿನ ಮೊತ್ತ `. 4,70,06,373/-ಗಳನ್ನು, ದಿನಾಂಕ:01-12-2014 ರಿಂದ 28-02-2015ರ ಅವಧಿಯ ನಾಲ್ಕನೇ ತ್ರೈಮಾಸಿಕದ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 4,65,98,324/-ಗಳನ್ನು, ದಿನಾಂಕ: 01-03-2015 ರಿಂದ 31-05-2015 ರ ಅವಧಿಯ ಐದನೇ ಕಂತಿನ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 5,07,69,465/-ಗಳನ್ನು, ದಿನಾಂಕ:01-06-2015 ರಿಂದ 31-08-2015 ರವರೆಗಿನ ಆರನೇ ಕಂತಿನ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 5,16,96,152/-ಗಳನ್ನು, ದಿನಾಂಕ: 01-09-2015 ರಿಂದ 30-11-2015ರ ಅವಧಿಯ ಏಳನೇ ಕಂತಿನ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 5,23,37,448/-ಗಳನ್ನು, ದಿನಾಂಕ: 01-07-2015 ರಿಂದ 29-02-2016ರ ಅವಧಿಯ ಎಂಟನೇ ಕಂತಿನ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 5,19,32,915/-ಗಳನ್ನು, ದಿನಾಂಕ: 01-03-2016 ರಿಂದ 31-05-2016ರ ಅವಧಿಯ ಒಂಭತ್ತನೇ ಕಂತಿನ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 5,29,38,015/- ಗಳನ್ನು, ದಿನಾಂಕ: 01-06-2016 ರಿಂದ 31-08-2016ರ ಅವಧಿಯ ಹತ್ತನೇ ಕಂತಿನ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 5,14,63,941/- ಗಳನ್ನು ಹಾಗೂ ದಿನಾಂಕ: 01-09-2016 ರಿಂದ 30-11-2016ರ ಅವಧಿಯ ಹನ್ನೊಂದನೇ ಕಂತಿನ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 5,15,33,744/- ಗಳನ್ನು ಪಾವತಿಸಲು ಅನುಮತಿ ನೀಡಿ ಆದೇಶಿಸಲಾಗಿರುತ್ತದೆ.

ಸದರಿ ಸಂಸ್ಥೆಯು ಕಾರ್ಯನಿರ್ವಹಿಸಿರುವ ಅವಧಿಯ ದಿನಾಂಕ : 01-12-2016 ರಿಂದ 15-02-2017ರ ಅವಧಿಯ ಹನ್ನೆರಡನೇ ಕಂತಿನ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 4,38,17,866/-ಗಳ ಬಿಲ್ಲನ್ನು ಪಾವತಿಗಾಗಿ ಸಲ್ಲಿಸಿರುತ್ತಾರೆ. ಈ ವೆಚ್ಚವನ್ನು 2017-18ನೇ ಸಾಲಿನ ಆರ್ಥಿಕ ವರ್ಷದ ಲೆಕ್ಕ ಶೀರ್ಷಿಕೆ 2030-03-001-2-04 Charges for Supply of registered documents-051 General Expenses ಅಡಿ `. 48.00 ಕೋಟಿ ಅನುದಾನದಲ್ಲಿ ಭರಿಸಲು ಅನುಮತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ.

ಮುಂದುವರೆದು, ದಿನಾಂಕ: 27-04-2017ರ ಪತ್ರದಲ್ಲಿ, M/s. HCL Infosystems Ltd ರವರು ದಿನಾಂಕ: 01-12-2016 ರಿಂದ 15-02-2017ರ ಅವಧಿಯ ಕಾರ್ಯಕ್ಷಮತೆಯನ್ನು ತೋರಿಸುವ ಚಾರ್ಟ್‌ನ್ನು ಲಗತ್ತಿಸಿ ಕಳುಹಿಸುತ್ತಾ, M/s. HCL Infosystems Ltd ರವರ ಸೇವೆಯು ಸದರಿ ಅವಧಿಗೆ ತೃಪ್ತಿಕರವಾಗಿರುತ್ತದೆ ಎಂದು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರವರು ತಿಳಿಸಿರುತ್ತಾರೆ.

ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 31 ಮುನೋಮು 2017, ಬೆಂಗಳೂರು, ದಿನಾಂಕ: 23-05-2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಮೆ: HCL Infosystems Ltd., ಬೆಂಗಳೂರು ಸಂಸ್ಥೆಯವರು ಕೆಲಸ ನಿರ್ವಹಿಸಿದ ದಿನಾಂಕ: 01-12-2016 ರಿಂದ 15-02-2017 ರವರೆಗಿನ ಅವಧಿಯ 12ನೇ ಕಂತಿನ ಕಾರ್ಯನಿರ್ವಹಣಾ ವೆಚ್ಚದ ಮೊತ್ತ `. 4,38,17,866/- (ನಾಲ್ಕು ಕೋಟಿ ಮೂವತ್ತೆಂಟು ಲಕ್ಷದ ಹದಿನೇಳು ಸಾವಿರದ ಎಂಟು ನೂರ ಅರವತ್ತಾರು ರೂಪಾಯಿಗಳು ಮಾತ್ರ) ಗಳನ್ನು ಮೆ: HCL Infosystems Ltd., ಬೆಂಗಳೂರು ರವರಿಗೆ ಪಾವತಿಸಲು ಮಂಜೂರಾತಿ ನೀಡಿ ಆದೇಶಿಸಿದೆ.

ಈ ವೆಚ್ಚವನ್ನು 2017-18ನೇ ಆರ್ಥಿಕ ವರ್ಷದ ಲೆಕ್ಕ ಶೀರ್ಷಿಕೆ "2030-03-001-02-04 ನೋಂದಾಯಿಸಿದ ಪತ್ರಗಳ ಪೂರೈಕೆಯ ವೆಚ್ಚ-051- ಸಾಮಾನ್ಯ ವೆಚ್ಚಗಳು" ಅಡಿಯಲ್ಲಿ ಒದಗಿಸಿರುವ `. 48.00 ಕೋಟಿಗಳ ಅನುದಾನದಲ್ಲಿ ಭರಿಸತಕ್ಕದ್ದು.

ಈ ಆದೇಶವನ್ನು ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 01 ಟಿಎಫ್‌ಪಿ 2017 ದಿನಾಂಕ : 05-04-2017ರಲ್ಲಿ ಇಲಾಖಾ ಪ್ರಧಾನ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿರುವ ಆರ್ಥಿಕ ಅಧಿಕಾರದನ್ವಯ ಹೊರಡಿಸಿದೆ.

P.R. 173

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಟಿ. ನಾರಾಯಣಪ್ಪ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ. (ನೋಂದಣಿ ಮತ್ತು ಮುದ್ರಾಂಕ)

ಸಹಕಾರ ಸಚಿವಾಲಯ

ವಿಷಯ :

ಬೋಧಿಸತ್ವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಮೈಸೂರು ಇದರ 2010-11 ರಿಂದ 2012-13ನೇ

ಸಾಲಿನವರೆಗಿನ ಲೆಕ್ಕಪರಿಶೋಧನಾ ವರದಿಗಳನ್ನು ಮರುಲೆಕ್ಕಪರಿಶೋಧನೆಗೆ ಒಳಪಡಿಸುವ ಬಗ್ಗೆ.

ಓದಲಾಗಿದೆ : ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರ ಪತ್ರ ಸಂಖ್ಯೆ: ತಪಘ/ ಮೈವಿ/31/2014-15/3129, ದಿ:15-12-2016 ಹಾಗೂ 03-04-2017.

ಪ್ರಸ್ತಾವನೆ :

ಮೇಲೆ ಓದಲಾದ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರ ಪ್ರಸ್ತಾವೆಯಲ್ಲಿ ಬೋಧಿಸತ್ವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಮೈಸೂರು ಇದರ 2011-12 ರಿಂದ 2012-13 ಮತ್ತು 2013-14ನೇ ಸಾಲುಗಳ ಲೆಕ್ಕಪರಿಶೋಧನೆಯನ್ನು ಮೆ:ಬಿ.ಎನ್.ಸಿ ಅಂಡ್ ಕಂಪನಿ., ಸನ್ನದುಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ೯೯೭ ಲೆಕ್ಕಪರಿಶೋಧಕರು,, ಮೈಸೂರು ಇವರು ನಿರ್ವಹಿಸಿ ವರದಿ ಸಲ್ಲಿಸಿದ್ದು, ಸದರಿ ವರದಿಯು ಬಿಡುಗಡೆಯಾಗಿರುತ್ತದೆ. ಸಂಘದ ಕಾರ್ಯದರ್ಶಿಯವರಾದ ಶ್ರೀ ಎಸ್.ವಿ.ಚೆಲುವರಾಜು (ಅಮಾನತ್ತು) ಇವರು ಮನವಿ ಸಲ್ಲಿಸಿ ಸನ್ನದು ಪರಿಶೋಧಕರು ಸಂಘದ 2013-14ನೇ ಸಾಲಿನ ಆಸ್ತಿ–ಜವಬ್ದಾರಿ ತ:ಖ್ತೆಯಲ್ಲಿ `. 15,13,702/-ಗಳನ್ನು ಶಿಲ್ಕು ಬಾಬ್ತು ವಸೂಲಿಗೆ ಎಂದು ಇಟ್ಟಿರುವ ಬಗ್ಗೆ ಯಾವುದೇ ದಾಖಲಾತಿಯನ್ನು ಸೂಚಿಸದೆ, ಸಮಜಾಯಿಷಿಯನ್ನು ಕೇಳದೆ ಹಾಗೂ ಆಡಿಟ್ ಆಕ್ಷೇಪಣೆಗಳು ಯಾವ ರೂಪದಲ್ಲಿದೆ ಎಂಬುದರ ಬಗ್ಗೆ ವಿವರಣೆ ನೀಡದೆ ಇರುವುದರಿಂದ ಆಕ್ಷೇಪಣೆಗಳು ಅನುಮಾನಸ್ಪದವಾಗಿದ್ದು, 2010-11 ರಿಂದ 2013-14ನೇ ಸಾಲಿನವರೆಗಿನ ಮರುಲೆಕ್ಕಪರಿಶೋದನೆ ಮಾಡಿಸಿಕೊಡಬೇಕೆಂದು ಕೋರಿರುವುದಾಗಿ ತಿಳಿಸಿರುತ್ತಾರೆ.

ಈ ಬಗ್ಗೆ ದಾಖಲೆಗಳನ್ನು ಪರಿಶೀಲಿಸಲಾಗಿ, ಸನ್ನದು ಲೆಕ್ಕಪರಿಶೋಧಕರು ದೃಡೀಕರಿಸಿ ಸಲ್ಲಿಸಿರುವ 2011-12, 2012-13 ಮತ್ತು 2013-14ರ ಆರ್ಥಿಕ

ವ ರದಿ ಸಾಲು ಸ ಂಘದ ಶಿಲ್ಕು ವ್ಯತ್ಯಾಸ ಸ ವ ುುದಾಯ ಬ ವ ನದ ಶಿಲ್ಕು ವ ್ಯತ್ಯಾಸ ಸಾಲಾಂತ್ಯಕ್ಕೆ ಆಸ್ತಿ ಜವಾಬ್ದಾರಿ ತ ಃಖ್ತೆಯಲ್ಲಿ ವ ಸ ೂಲಿಗೆ ಸ ೂಚಿಸಿರುವ ಒಟ್ಟು ಶಿಲ್ಕು ವ್ಯತ್ಯಾಸ
2011-12 (*-1) 10,75,057 1,65,830 12,40,887
2012-13 (*-2) 13,64,764 1,94,118 15,58,882
2013-14 (*-3) 13,19,584 1,94,118 15,13,702

ಲೆಕ್ಕಪರಿಶೋಧನಾ ನಿರ್ದೇಶಕರು ಈ ಕೆಳಕಂಡಂತೆ ವರ್ಷಾವಾರು ಶಿಲ್ಕು ವ್ಯತ್ಯಾಸದ ಬಗ್ಗೆ ಸ್ಪಷ್ಟ ಅಭಿಪ್ರಾಯ ಸಲ್ಲಿಸಿರುತ್ತಾರೆ.

• (*-1) ಸನ್ನದು ಲೆಕ್ಕಪರಿಶೋಧಕರು 2011-12ನೇ ಸಾಲಿನಲ್ಲಿ ಸೂಚಿಸಿರುವ ಸಂಘದ ಶಿಲ್ಕು ವ್ಯತ್ಯಾಸದಲ್ಲಿ 2010-11ನೇ ಸಾಲಿನ ದುರುಪಯೋಗದ ಮೊತ್ತ `. 5,74,389ನ್ನು ಸೇರಿಸಿ ವಸೂಲಾತಿಗೆ ಸೂಚಿಸಿರುವುದನ್ನು ಗಮನಿಸಲಾಗಿದೆ. ಇದನ್ನು ಈ ರೀತಿ ಮಾಡದೆ ಪ್ರತ್ಯೇಕವಾಗಿ 2011-12ನೇ ಸಾಲಿನ ಆಸ್ತಿ ಜವಾಬ್ದಾರಿ ತಃಖ್ತೆಯಲ್ಲಿ ತೋರಿಸಬೇಕಾಗಿತ್ತು. ಆಗ 2011-12ನೇ ಸಾಲಿನ ಸಂಘದ ಶಿಲ್ಕು ವ್ಯತ್ಯಾಸ `. 5,00,568 + ಸಮುದಾಯ ಭವನದ ಶಿಲ್ಕು ವ್ಯತ್ಯಾಸ `. 1,65,830 ಸೇರಿ `. 6,66,498 ಗಳಾಗುತ್ತವೆ.

• (*-2) ಸನ್ನದು ಲೆಕ್ಕಪರಿಶೋಧಕರು ದಿನಾಂಕ: 31-03-2013ರ ಅಂತ್ಯಕ್ಕೆ ವಸೂಲಾತಿಗೆ ಸೂಚಿಸಿರುವ `. 13,64,764 ಸಂಘದ ಶಿಲ್ಕು ವ್ಯತ್ಯಾಸದಲ್ಲಿ, 2010-11ನೇ ಸಾಲಿನ ದುರುಪಯೋಗದ ಮೊತ್ತ `. 5,74,389ನ್ನು ಮತ್ತು 2012-13ನೇ ಸಾಲಿನ ಶಿಲ್ಕು ವ್ಯತ್ಯಾಸ `. 6,66,498 ಗಳನ್ನು ಸೇರಿಸಿ ವಸೂಲಾತಿಗೆ ಸೂಚಿಸಿರುವುದನ್ನು ಗಮನಿಸಿಸಲಾಗಿದೆ. ಇದನ್ನು ಈ ರೀತಿ ಮಾಡದೆ ಪ್ರತ್ಯೇಕವಾಗಿ 2012-13ನೇ ಸಾಲಿನ ಆಸ್ತಿ ಜವಾಬ್ದಾರಿ ತಃಖ್ತೆಯಲ್ಲಿ ತೋರಿಸಬೇಕಾಗಿತ್ತು. ಆಗ 2012-13ನೇ ಸಾಲಿನ ಸಂಘದ ನಗದು ಶಿಲ್ಕು ವ್ಯತ್ಯಾಸ `. 2,89,707 ಮತ್ತು ವರದಿ ಸಾಲಿನ ಸಮುದಾಯ ಭವನದ ಶಿಲ್ಕು ವ್ಯತ್ಯಾಸ `. 28,288 ಸೇರಿ 2012-13ನೇ ಸಾಲಿನ ಅಂತ್ಯಕ್ಕೆ `. 3,17,995,ಗಳಾಗುತ್ತದೆ..

• (*-3) ದಿನಾಂಕ: 31-03-2014ರ ಅಂತ್ಯಕ್ಕೆ ವಸೂಲಾತಿಗೆ ಸೂಚಿಸಿರುವ `. 15,13,702ಗಳಲ್ಲಿ 2010-11ನೇ ಸಾಲಿನ ದುರುಪಯೋಗದ ಮೊತ್ತ `. 5,74,389, 2011-12ನೇ ಸಾಲಿನ ಸಂಘದ ಶಿಲ್ಕು ವ್ಯತ್ಯಾಸ `. 6,66,498ಗಳನ್ನು 2012-13ನೇ ಸಾಲಿನ ಶಿಲ್ಕು ವ್ಯತ್ಯಾಸ `. 3,17,995ಗಳನ್ನು ಸೇರಿಸಿ, 2013-14ನೇ ಸಾಲಿನಲ್ಲಿ ಶ್ರೀ ಚೆಲುವರಾಜುರವರಿಂದ ವಸೂಲಿಯಾಗಿರುವ `. 45,180ಗಳನ್ನು ಕಳೆದು ಒಟ್ಟಾರೆಯಾಗಿ ದಿನಾಂಕ: 31-03-2014ರ ಅಂತ್ಯಕ್ಕೆ `. 15,13,702ಗಳನ್ನು ವಸೂಲಾತಿಗೆ ಸೂಚಿಸಿರುತ್ತಾರೆ.

"ಈ ಮೇಲ್ಕಂಡ ಅಂಶಗಳಲ್ಲಿ ಸನ್ನದು ಲೆಕ್ಕಪರಿಶೋಧಕರು ಸೂಚಿಸಿರುವ ಶಿಲ್ಕು ವ್ಯತ್ಯಾಸಕ್ಕೆ ವರದಿಯಲ್ಲಿ ಯಾವುದೇ ವಿವರವನ್ನು ನೀಡಿರುವುದಿಲ್ಲವೆಂದು

ಅಂದರೆ ಯಾವ ದಿನಾಂಕದಂದು ಯಾವ ಸ್ವರೂಪದಲ್ಲಿ ಈ ಶಿಲ್ಕು ವ್ಯತ್ಯಾಸ ಉಂಟಾಗಿದೆ ಎಂಬುದರ ಬಗ್ಗೆ ವಿವರಣೆ ನೀಡುವಲ್ಲಿ ಸದರಿಯವರು ಕರ್ತವ್ಯ

ಲೋಪವೆಸಗಿರುವುದಾಗಿಯೂ ಹಾಗೂ ಈ ವಸೂಲಾತಿಗೆ ವರದಿಯಲ್ಲಿ ವಿಮರ್ಶಿಸದಿರುವುದು ವಸೂಲಾತಿಯನ್ನು ಪುಷ್ಟೀಕರಿಸಲು ಸಾಧ್ಯವಾಗಿರುವುದಿಲ್ಲವೆಂದು

ಅಭಿಪ್ರಾಯ ನೀಡಿರುತ್ತಾರೆ."

ಸನ್ನದು ಲೆಕ್ಕಪರಿಶೋಧಕರು 2011-12 ಮತ್ತು 2012-13ನೇ ಸಾಲುಗಳಲ್ಲಿ ಸಂಘದ ಕಾರ್ಯದರ್ಶಿಯವರಿಂದ ಶಿಲ್ಕು ವ್ಯತ್ಯಾಸದ ಬಾಬ್ತು ವಸೂಲಾತಿಗೆ ಸೂಚಿಸಿದ್ದು, ಸದರಿ ಶಿಲ್ಕು ವ್ಯತ್ಯಾಸವು ಯಾವ ದಿನಾಂಕದಂದು ಯಾವ ಸ್ವರೂಪದಲ್ಲಿ ನಡೆದಿದೆ ಎಂಬುದರ ಬಗ್ಗೆ ಲೆಕ್ಕಪರಿಶೋಧನಾ ವರದಿಯಲ್ಲಿ ದಾಖಲೆ/ವಿಮರ್ಶೆಯನ್ನು ನೀಡಿರುವುದಿಲ್ಲ. ಸನ್ನದು ಲೆಕ್ಕಪರಿಶೋಧಕರು 2011-12ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಸಮುದಾಯ ಭವನದ ವಂತಿಕೆಯನ್ನು ದಿನಾಂಕ: 28-09-2008 ರಿಂದ 31-03-2011ರ ವರೆಗೆ ಪರಿಶೀಲಿಸದೆ ನೇರವಾಗಿ ಆಸ್ತಿ ಜವಬ್ದಾರಿ ತಃಖ್ತೆಯಲ್ಲಿ ಅಳವಡಿಸಿರುವ ಬಗ್ಗೆ ವರದಿಯಲ್ಲಿ ಸ್ಪಷ್ಟವಾಗಿ ವಿಮರ್ಶಿಸಿರುವುದಿಲ್ಲವೆಂದು ತಿಳಿಸಿರುತ್ತಾರೆ.

ಈ ಎಲ್ಲಾ ಅಂಶಗಳಿಂದ ಸಂಘದ 2010-11 ರಿಂದ 2012-13ನೇ ಸಾಲುಗಳ ಲೆಕ್ಕಪರಿಶೋಧನೆಯನ್ನು ದೋಷಪೂರಿತವಾಗಿ ನಿರ್ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವುದರಿಂದ ಬೋದಿಸತ್ವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಇದರ 2010-11 ರಿಂದ 2012-13ನೇ ಸಾಲುಗಳ ಅವಧಿಯ ಸಾಲುಗಳ ಮರುಲೆಕ್ಕಪರಿಶೋಧನೆ ಕೈಗೊಳ್ಳಲು ಶ್ರೀ ಅಲ್‌ಫ್ರಡ್‌ವಾಜ್ó, ಸಹಕಾರ ಸಂಘಗಳ ಹಿರಿಯ ಲೆಕ್ಕಪರಿಶೋಧಕರು, ಪಿರಿಯಾಪಟ್ಟಣ ಇವರನ್ನು ನಿಯೋಜಿಸಬಹುದೆಂಬ ಅಭಿಪ್ರಾಯದೊಂದಿಗೆ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959ರ ಕಲಂ 63(13)ರಂತೆ ಸೂಕ್ತ ಆದೇಶವನ್ನು ಹೊರಡಿಸಲು ಲೆಕ್ಕಪರಿಶೋಧನಾ ನಿರ್ದೇಶಕರು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ.

೯೯೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ಭಾಗ ೧

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಬೋಧಿಸತ್ವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಇದರ 2010-11 ರಿಂದ 2012-13ನೇ ಸಾಲುಗಳ ಲೆಕ್ಕಪರಿಶೋಧನಾ ವರದಿಗಳನ್ನು ಮರುಲೆಕ್ಕಪರಿಶೋಧನೆಗೆ ಒಳಪಡಿಸುವುದು ಸೂಕ್ತವೆಂದು ಭಾವಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಸಿಒ 159 ಸಿಎಲ್ಎಂ 2016, ಬೆಂಗಳೂರು, ದಿನಾಂಕ: 22-05-2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೋಧಿಸತ್ವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಇದರ 2010-11, 2011-12 ಮತ್ತು 2012-13ನೇ ಸಾಲುಗಳ ಪರಿಶೋಧಿತ ಲೆಕ್ಕಪತ್ರಗಳನ್ನು ಮರುಲೆಕ್ಕ ಪರಿಶೋಧನೆ ಮಾಡಲು ಸಹಕಾರ ಸಂಘಗಳ ಹಿರಿಯ ಲೆಕ್ಕಪರಿಶೋಧಕರು, ಪಿರಿಯಾಪಟ್ಟಣ ಇವರನ್ನು ನೇಮಿಸಿ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, 1959ರ, ಕಲಂ 63 (13) ರೀತ್ಯ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ನಿರ್ದೇಶಕರಿಗೆ ಅನುಮತಿ ನೀಡಿ ಆದೇಶಿಸಿದೆ.

P.R. 176

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ. ರಾಧಾಕೃಷ್ಣ

SC-50

ಸರ್ಕಾರದ ಅಧೀನ ಕಾರ್ಯದರ್ಶಿ-3,

ಸಹಕಾರ ಇಲಾಖೆ.

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ

ತಿದ್ದುಪಡಿ

ಸಂಖ್ಯೆ : ಯೋಇ 89 ಯೋವಿವಿ 2016, ಬೆಂಗಳೂರು, ದಿನಾಂಕ : 22-05-2017.

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು (20 ಅಂಶಗಳ ಕಾರ್ಯಕ್ರಮವು ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಸನ ಜಿಲ್ಲೆಯ ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗೆ ಸಮಸಂಖ್ಯೆಯ ದಿನಾಂಕ : 27-01-2017ರ ಅಧಿಸೂಚನೆಯಲ್ಲಿನ ಕ್ರಮ ಸಂಖ್ಯೆ (2)ರಲ್ಲಿ ಹೆಸರನ್ನು ಶ್ರೀಮತಿ ಲಕ್ಷ್ಮೀ ಡಿ.ಆರ್. ಕೋಂ ಜಿ.ಆರ್. ಲೋಕೇಶ್ ಎಂಬುದಾಗಿ ತಿದ್ದಿ ಓದಿಕೊಳ್ಳತಕ್ಕದ್ದು.

P.R. 177

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ರಫೀ ಅಹಮದ್ ಎಂ.ಎಸ್.

ಸರ್ಕಾರದ ಅಧೀನ ಕಾರ್ಯದರ್ಶಿ-1 & 2,

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.

ಕಂದಾಯ ಸಚಿವಾಲಯ

ವಿಷಯ :- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ರಾಮನಗರ ಗ್ರಾಮದ ಸರಕಾರಿ ಪಡ ರಿ.ಸ. ನಂ.1 ರಲ್ಲಿ ಕ್ಷೇತ್ರ 0-10 ಗುಂಟೆ ಜಮೀನನ್ನು ಶ್ರೀ ಬೇತಾಳ ದೇವಸ್ಥಾನಕ್ಕೆ ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ :- ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರ ಪತ್ರ ಸಂ: ಪ್ರಾಆಬೆ:ಭೂಮಿ:4:ಎಲ್ಎನ್‌ಡಿ:ಸಿಆರ್:

95/2013-14 ದಿನಾಂಕ 29-09-2014 ಮತ್ತು 19-12-2016.

ಪ್ರಸ್ತಾವನೆ :-

ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರ ಮೇಲೆ ಓದಲಾದ ಪತ್ರಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ರಾಮನಗರ ಗ್ರಾಮದ ಸರಕಾರಿ ಪಡ ರಿ.ಸ. ನಂ.1 ರಲ್ಲಿ ಕ್ಷೇತ್ರ 0-10 ಗುಂಟೆ ಜಮೀನನ್ನು ಶ್ರೀ ಬೇತಾಳ ದೇವಸ್ಥಾನ ಸಲುವಾಗಿ ಶ್ರೀ ಬೇತಾಳ ದೇವಸ್ಥಾನ ವ್ಯವಸ್ಥಾಪನ ಕಮಿಟಿ ಶೀತಾವಾಡ (ರಾಮನಗರ) ಇವರಿಗೆ ಮಂಜೂರು ಮಾಡುವ ಬಗ್ಗೆ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಪ್ರಾದೇಶಿಕ ಆಯುಕ್ತರು ಬೆಳಗಾವಿ ವಿಭಾಗ ಇವರು ತಮ್ಮ ಪತ್ರದಲ್ಲಿ ಕೋರಿರುವ ಜಮೀನು ಸೂಪಾ(ಜೋಯಿಡಾ) ತಾಲ್ಲೂಕಿನ ರಾಮನಗರ(ಶೀತಾವಾಡ) ಗ್ರಾಮದ ರಿ.ಸ.ನಂ.1 ರ ಒಟ್ಟು ಕ್ಷೇತ್ರ 34-06 ಗುಂಟೆ ಜಮೀನು ಇದ್ದು, ಮೂಲತ ಅರಣ್ಯ ಜಮೀನಾಗಿದ್ದು ನಂತರ ಸರ್ಕಾರದ ಆದೇಶ ನಂ. ಎಫ್ಎಫ್‌ಡಿ-79/ಎಫ್‌ಜಿಎಲ್-79 ದಿನಾಂಕ:01-05-1980 ರನ್ವಯ ಅರಣ್ಯ ಜಮೀನು ನಿರ್ವನೀಕರಣ ಅಧಿಸೂಚನೆಯಿಂದ 24-00 ಎಕರೆ ಜಮೀನು ಸರಕಾರಿ ಪಡವೆಂದು ಪರಿವರ್ತನೆ ಹೊಂದಿರುತ್ತದೆ./ ಇದರಲ್ಲಿ 10-06 ಗುಂಟೆ ಕ್ಷೇತ್ರ ಕಾದಿಟ್ಟ ಫಾರೆಸ್ಟ್ ಅಂತ ಬಾಕಿ ಇದ್ದು, ಉಳಿದ ಕ್ಷೇತ್ರ 24-00 ಎಕರೆ ಸರ್ಕಾರಿ ಪಡಾ ಎಂದು ಕಾಲಂ.9 ರಲ್ಲಿ ದಾಖಲಾಗಿರುತ್ತದೆ. ಈ ಪೈಕಿ 9-20 ಗುಂಟೆ ಜಮೀನನ್ನು ಕಿತ್ತೂರ ರಾಣಿ ಚೆನ್ನಮ್ಮ ಹೆಣ್ಣು ಮಕ್ಕಳ ವಸತಿ ಶಾಲೆಗೆ ನಿರ್ಮಾಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಗೆ ಮಂಜೂರು ಮಾಡಿ ಬಾಕಿ ಉಳಿದ 14-20 ಗುಂಟೆ ಜಮೀನು ಸರ್ಕಾರಿ ಪಡಾ ಎಂದು ದಾಖಯಿರುತ್ತದೆ ಎಂದು ವರದಿ ಮಾಡಿರುತ್ತಾರೆ.

ಮುಖ್ಯ ಅಭಿಯಂತರು ಕೆ.ಪಿ.ಸಿ ಗಣೇಶಗುಡಿ ಇವರು ಲೇಔಟ್ ನಕ್ಷೆ ತಯಾರಿಸಿದ್ದು ಅದರಂತೆ ನಿರಾಶ್ರಿತರಿಗೆ 1135 ಫ್ಲಾಟ್‌ಗಳನ್ನು ನಿರ್ಮಿಸಿ ಪುರ್ನವಸತಿ ಕಲ್ಪಿಸಿ ಕೊಡಲಾಗಿ ಈ ಲೇಔಟ್ ನಕ್ಷೆ ಪ್ರಕಾರ ರಾಮಲಿಂಗ ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ಗಳಿಗೆ ಪ್ಲಾಟ್ ಮೀಸಲಿಟ್ಟಿದ್ದು ಪುರ್ನವಸತಿ ಕೇಂದ್ರಗಳಲ್ಲಿ ಮಂಜೂರಿಸಿದ ಪ್ಲಾಟ್‌ಗಳನ್ನು ಹೊರತುಪಡಿಸಿ ಉಳಿದ ಖುಲ್ಲಾ ಜಾಗದಲ್ಲಿ ಹಲವಾರು ವರ್ಷಗಳ ಹಿಂದೆಯೇ ದೇವಸ್ಥಾನಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿದ್ದು ಎಲ್ಲಾ ದೇವಸ್ಥಾನಗಳನ್ನು ನೋಂದಣಿ ಹಾಗೂ ಮುದ್ರಾಂಕ ಇಲಾಖೆಯಲ್ಲಿ ಟ್ರಸ್ಟ್ ಡೀಡ್ ಮೂಲಕ ನೋಂದಾಯಿಸಿರುವುದಾಗಿ ತಿಳಿಸಿರುತ್ತಾರೆ. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 21 ರನ್ವಯ ಮಾರುಕಟ್ಟೆ ಬೆಲೆಯ ಶೇಕಡಾ 50ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ೯೯೯ ರಷ್ಟು ಮೌಲ್ಯವನ್ನು ವಿಧಿಸಿ ಶ್ರೀ ಬೇತಾಳ ದೇವಸ್ಥಾನಕ್ಕೆ 0-10 ಗುಂಟೆ ಜಮೀನು ಮಂಜೂರು ಮಾಡುವ ಕುರಿತು ಸರ್ಕಾರದ ಪೂರ್ವಾನುಮೋದನೆ ನೀಡುವ ಕುರಿತು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರು ಮಾಡುವಂತೆ ಶಿಫಾರಸ್ಸು ಮಾಡಿರುತ್ತಾರೆ.

1. ಉದ್ದೇಶಿತ ಜಮಿನನ್ನು ಯಾವ ಉದ್ದೇಶಕ್ಕಾಗಿ ಮಂಜೂರಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು.

2. ಸದರಿ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ನೋಡಿಕೊಳ್ಳತಕ್ಕದು.

3. ಮಾರುಕಟ್ಟೆ ಬೆಲೆ ಶೇಕಡಾ 50 ರಷ್ಟು ಮೌಲ್ಯ ಹಾಗೂ ಇನ್ನಿತರ ಶುಲ್ಕಗಳ ಸಹಿತ ಸರ್ಕಾರಕ್ಕೆ ಭರಿಸುವ ಷರತ್ತಿಗೊಳಪಟ್ಟು.

4. ಮೇಲ್ಕಂಡ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಸದರಿ ಜಮೀನನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು.

ಪ್ರಸ್ತಾವನೆಯಲ್ಲಿನ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ:-

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 13 ಎಲ್‌ಜಿಎನ್ 2017, ದಿನಾಂಕ: 27.05.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಶ್ರೀ ಬೇತಾಳ ದೇವಸ್ಥಾನ ವ್ಯವಸ್ಥಾಪನಾ ಕಮಿಟಿ ಶೀತಾವಾಡ (ರಾಮನಗರ) ಇವರಿಗೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ರಾಮನಗರ (ಶೀತವಾಡ) ಗ್ರಾಮದ ಸ.ನಂ. 1 ರಲ್ಲಿ 0-10 ಗುಂಟೆ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ(1)(4) ರನ್ವಯ ಮಾರ್ಗಸೂಚಿ ಬೆಲೆಯ ಶೇಕಡಾ 50% ಮೌಲ್ಯ ಹಾಗೂ ಇನ್ನಿತರ ಶುಲ್ಕಗಳನ್ನು ಪಾವತಿಸಿಕೊಂಡು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಶ್ರೀ ಬೇತಾಳ ದೇವಸ್ಥಾನಕ್ಕೆ ಮಂಜೂರು ಮಾಡಲು ಅನುಮೋದನೆ ನೀಡಲಾಗಿದೆ.

1. ಉದ್ದೇಶಿತ ಜಮಿನನ್ನು ಯಾವ ಉದ್ದೇಶಕ್ಕಾಗಿ ಮಂಜೂರಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು ಹಾಗೂ ಯಾವುದೇ ಕಾರಣಕ್ಕೂ ಪರಭಾರೆ ಮಾಡತಕ್ಕದ್ದಲ್ಲ.

2. ಸದರಿ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ನೋಡಿಕೊಳ್ಳತಕ್ಕದು.

3. ಪ್ರಚಲಿತ ಮಾರ್ಗಸೂಚಿ ಬೆಲೆಯ ಶೇಕಡಾ 50 ರಷ್ಟು ಹಾಗೂ ಇನ್ನಿತರ ಶುಲ್ಕಗಳ ಸಹಿತ ಸರ್ಕಾರಕ್ಕೆ ಭರಿಸುವ ಷರತ್ತಿಗೊಳಪಟ್ಟು.

4. ಮೇಲ್ಕಂಡ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಸದರಿ ಜಮೀನನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು.

P.R. 179

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-25

ಉದಯ ಆರ್. ನಾಯಕ್

ಪೀಠಾಧಿಕಾರಿ

ಕಂದಾಯ ಇಲಾಖೆ. (ಭೂ.ಮಂಜೂರಾತಿ.-2)

ಕಂದಾಯ ಸಚಿವಾಲಯ

ವಿಷಯ :- ಚಾಮರಾಜನಗರ ಜಿಲ್ಲೆ, ಚಾಮರಾಜನಗರ ತಾಲ್ಲೂಕು, ಕಸಬಾ ಹೋಬಳಿ, ಉತ್ತುವಳ್ಳಿ ಗ್ರಾಮದ ಸ.ನಂ: 117ರಲ್ಲಿ 25.00 ಎಕರೆ ಜಮೀನನ್ನು ನಳಂದ ವಿಶ್ವವಿದ್ಯಾನಿಲಯ ಸ್ಥಾಪಿಸಲು ಇಂಟರ್‌ನ್ಯಾಷನಲ್ ಬುದ್ದಿಸ್ಟ್ ಮಾಂಕ್ಸ್ ಚಾರಿಟೆಬಲ್ ಟ್ರಸ್ಟ್(ರಿ) ರವರಿಗೆ ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ :- ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರ ಪತ್ರ ಸಂಖ್ಯೆ: ಎಲ್ಎನ್‌ಡಿ(1)ಸಿಆರ್:

42/2016-17 ದಿನಾಂಕ 22.09.2016

ಪ್ರಸ್ತಾವನೆ :-

ಮೇಲೆ ಓದಲಾದ ಪ್ರಸ್ತಾವನೆಯಲ್ಲಿ ಚಾಮರಾಜನಗರ ಜಿಲ್ಲೆ, ಚಾಮರಾಜನಗರ ತಾಲ್ಲೂಕು, ಕಸಬಾ ಹೋಬಳಿ, ಉತ್ತುವಳ್ಳಿ ಗ್ರಾಮದ ಸ.ನಂ: 117ರಲ್ಲಿ 464.36 ಗೋಮಾಳ ಜಮೀನಿನ ಪೈಕಿ 25.00 ಎಕರೆ ಜಮೀನನ್ನು ನಳಂದ ವಿಶ್ವವಿದ್ಯಾನಿಲಯ ಸ್ಥಾಪಿಸಲು ಇಂಟರ್ ನ್ಯಾಷನಲ್ ಬುದ್ದಿಸ್ಟ್ ಮಾಂಕ್ಸ್ ಚಾರಿಟೆಬಲ್ ಟ್ರಸ್ಟ್(ರಿ) ಚಾಮರಾಜನಗರ ರವರಿಗೆ ಮಂಜೂರು ಮಾಡಲು ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಕೋರಿರುತ್ತಾರೆ. ಸದರಿ ಜಮೀನು ಗೋಮಾಳ ಜಮೀನಾಗಿದ್ದು ಆ ಗ್ರಾಮದಲ್ಲಿ ಅಗತ್ಯಕ್ಕಿಂತ ಹೆಚ್ಚು ಗೋಮಾಳ ಲಭ್ಯವಿದ್ದು, ಪ್ರಸ್ತಾಪಿತ ಪ್ರದೇಶವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುತ್ತದೆ. ಸದರಿ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಾವಳಿ 1966ರ ನಿಯಮ 97(4)ರಂತೆ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ, ನಳಂದ ವಿಶ್ವವಿದ್ಯಾನಿಲಯ ಸ್ಥಾಪಿಸುವ ಉದ್ದೇಶಕ್ಕಾಗಿ ಇಂಟರ್ ನ್ಯಾಷನಲ್ ಬುದ್ದಿಸ್ಟ್ ಮಾಂಕ್ಸ್ ಚಾರಿಟೆಬಲ್ ಟ್ರಸ್ಟ್(ರಿ) ರವರಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿ 1969ರ ನಿಯಮ 21ರಂತೆ ನಿಗದಿತ ಮಾರ್ಗಸೂಚಿ ದರವನ್ನು ಪಾವತಿಸುವ ಷರತ್ತಗೊಳಪಡಿಸಿ ಮಂಜೂರಾತಿ ಮಾಡಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಮೇಲ್ಕಂಡ ಪ್ರಾದೇಶಿಕ ಆಯುಕ್ತರ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ:-

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 73 ಎಲ್‌ಜಿಎಂ 2016, ದಿನಾಂಕ: 20.01.2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆ, ಚಾಮರಾಜನಗರ ತಾಲ್ಲೂಕು, ಕಸಬಾ ಹೋಬಳಿ, ಉತ್ತುವಳ್ಳಿ ಗ್ರಾಮದ ಸ.ನಂ: 117ರಲ್ಲಿ 464.36 ಎಕರೆ ಪೈಕಿ 25.00 ಎಕರೆ ಗೋಮಾಳ ಜಮೀನನ್ನು ಇಂಟರ್ ನ್ಯಾಷನಲ್ ಬುದ್ದಿಸ್ಟ್ ಮಾಂಕ್ಸ್ ಚಾರಿಟೆಬಲ್ ಟ್ರಸ್ಟ್(ರಿ) ಚಾಮರಾಜನಗರ ಇವರಿಗೆ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಕರ್ನಾಟಕ ಭೂ ಕಂದಾಯ ನಿಯಮಾವಳಿ 1966ರ ನಿಯಮ 97(4)ರಂತೆ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ, ಮಾರ್ಗಸೂಚಿ ಬೆಲೆಯ ಶೇಕಡಾ 50 ರಷ್ಟು ಮೌಲ್ಯವನ್ನು ವಿಧಿಸಿ, ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರು ಮಾಡಿ ಆದೇಶಿಸಿದೆ.

೧೦೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ಭಾಗ ೧

1) ಜಿಲ್ಲಾಧಿಕಾರಿಗಳು ಜಮೀನಿನ ಮಂಜೂರಾತಿ ಆದೇಶದಲ್ಲಿ ನಿಯಮಾನುಸಾರ ಪ್ರಸ್ತಾಪಿತ ಭೂಮಿಯ ಮಾರ್ಗಸೂಚಿ ಬೆಲೆಯ ಶೇಕಡಾ 50 ರಷ್ಟು ಮೌಲ್ಯವನ್ನು ವಿಧಿಸಿ ಮತ್ತು ಇತರೆ ಶುಲ್ಕವನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.

2) ಮಂಜೂರಾದ ಜಮೀನಿಗೆ ಸಂಸ್ಥೆಯು ಮೂರು ತಿಂಗಳ ಒಳಗೆ ಹಣವನ್ನು ಪಾವತಿಸಿ ಉದ್ದೇಶಿತ ಕಾರ್ಯಕ್ರಮಕ್ಕೆ ಜಮೀನನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದು.

3) ಮಂಜೂರಾದ ಭೂಮಿಯನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.

4) ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ.

5) ಮಂಜೂರಾದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.

6) ಮಂಜೂರು ಮಾಡಲ್ಪಡುವ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ದಾವೆಗಳು ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.

7) ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ ಉಪಗುತ್ತಿಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು.

8) ಮಂಜೂರಾದ ಜಮೀನಿನ ಯಾವುದೇ ಭಾಗವು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಾಗಿದ್ದಲ್ಲಿ ಸರ್ಕಾರವು ಸದರಿ ಜಮೀನನ್ನು ಪರಿಹಾರ ನೀಡದೇ ಹಿಂತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತದೆ.

9) ಮಂಜೂರಾದ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು.

10) ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

11) ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ಈ ಮಂಜೂರಾತಿ ಆದೇಶ ತನ್ನಷ್ಟಕ್ಕೆ ತಾನೇ ರದ್ದಾಗುವುದು ಹಾಗೂ ಯಾವುದೇ ಪರಿಹಾರ ನೀಡದೇ ಮಂಜೂರಾದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು.

12) ಜಿಲ್ಲಾಧಿಕಾರಿಗಳು ಮಂಜೂರಾದ ಜಮೀನನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

P.R. 180

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ SC-25

ಉದಯ ಆರ್. ನಾಯಕ್

ಪೀಠಾಧಿಕಾರಿ

ಕಂದಾಯ ಇಲಾಖೆ. (ಭೂ.ಮಂಜೂರಾತಿ.-2)

ಕಂದಾಯ ಸಚಿವಾಲಯ

ವಿಷಯ :- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ರಾಮನಗರ ಗ್ರಾಮದ ಸರಕಾರಿ ಪಡ ರಿ.ಸ. ನಂ.74 ರಲ್ಲಿ ಕ್ಷೇತ್ರ 0-08 ಗುಂಟೆ ಜಮೀನನ್ನು ಶ್ರೀ ಮಹಾದೇವ ದೇವಸ್ಥಾನಕ್ಕೆ ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ :- ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರ ಪತ್ರ ಸಂ:

ಪ್ರಾಆಬೆ:ಭೂಮಿ:4:ಎಲ್ಎನ್‌ಡಿ:ಸಿಆರ್: 96/2013-14, ದಿನಾಂಕ 29-09-2014

ಪ್ರಸ್ತಾವನೆ :-

ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರ ಮೇಲೆ ಓದಲಾದ ಪತ್ರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ರಾಮನಗರ ಗ್ರಾಮದ ಸರಕಾರಿ ಪಡ ರಿ.ಸ. ನಂ.74 ರಲ್ಲಿ ಕ್ಷೇತ್ರ 0-08 ಗುಂಟೆ ಜಮೀನನ್ನು ಶ್ರೀ ಮಹಾದೇವ ದೇವಸ್ಥಾನ ಸಲುವಾಗಿ ಶ್ರೀ ಮಹಾದೇವ ದೇವಸ್ಥಾನ ವ್ಯವಸ್ಥಾಪನ ಕಮಿಟಿ ನೀನ್ನುರ (ರಾಮನಗರ) ಇವರಿಗೆ ಮಂಜೂರು ಮಾಡುವ ಬಗ್ಗೆ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಪ್ರಾದೇಶಿಕ ಆಯುಕ್ತರು ಬೆಳಗಾವಿ ವಿಭಾಗ ಇವರು ತಮ್ಮ ಪತ್ರದಲ್ಲಿ ಕೋರಿರುವ ಜಮೀನು ಸೂಪಾ (ಜೋಯಿಡಾ) ತಾಲ್ಲೂಕಿನ ರಾಮನಗರ (ಶೀತಾವಾಡ) ಗ್ರಾಮದ ರಿ.ಸ.ನಂ.74 ರ ಒಟ್ಟು ಕ್ಷೇತ್ರ 92-30 ಗುಂಟೆ ಜಮೀನು ಇದ್ದು, ಮೂಲತ ಅರಣ್ಯ ಜಮೀನಾಗಿದ್ದು ನಂತರ ಸರ್ಕಾರದ ಆದೇಶ ನಂ. ಎಫ್ಎಫ್‌ಡಿ-79/ಎಫ್‌ಜಿಎಲ್-79 ದಿನಾಂಕ:01-05-1980 ರನ್ವಯ ಅರಣ್ಯ ಜಮೀನು ನಿರ್ವನೀಕರಣ ಅಧಿಸೂಚನೆಯಿಂದ 92-30 ಗುಂಟೆ ಜಮೀನು ಸರಕಾರಿ ಪಡವೆಂದು ಪರಿವರ್ತನೆ ಹೊಂದಿರುವುದಾಗಿ ಹಾಗೂ ಕಾಲಂ.9 ರಲ್ಲಿ ದಾಖಲಾಗಿದ್ದು, ಇತರೆ ಕಾಲಂ 11 ರಲ್ಲಿ ಕಾಳಿ ನದಿ ಜಲವಿದ್ಯುತ್ ಯೋಜನೆಯಡಿ ಮುಳುಗಡೆ ಪ್ರದೇಶದ ನಿರಾಶ್ರಿತರಿಗೆ ಮಂಜೂರಾದ ಜಮೀನು ಎಂದು ತಾಳೆಯಿಂದ ಕಂಡುಬರುತ್ತದೆ. ಮುಖ್ಯ ಅಭಿಯಂತರು ಕೆ.ಪಿ.ಸಿ ಗಣೇಶಗುಡಿ ಇವರು ಲೇಔಟ್ ನಕ್ಷೆ ತಯಾರಿಸಿದ್ದು ಅದರಂತೆ ನಿರಾಶ್ರಿತರಿಗೆ 1135 ಫ್ಲಾಟ್‌ಗಳನ್ನು ನಿರ್ಮಿಸಿ ಪುರ್ನವಸತಿ ಕಲ್ಪಸಿ ಕೊಡಲಾಗಿ ಈ ಲೇಔಟ್ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ೧೦೦೧ ನಕ್ಷೆ ಪ್ರಕಾರ ರಾಮಲಿಂಗ ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ಗಳಿಗೆ ಪ್ಲಾಟ್ ಮೀಸಲಿಟ್ಟಿದ್ದು ಪುರ್ನವಸತಿ ಕೇಂದ್ರಗಳಲ್ಲಿ ಮಂಜೂರಿಸಿದ ಪ್ಲಾಟ್‌ಗಳನ್ನು ಹೊರತುಪಡಿಸಿ ಉಳಿದ ಖುಲ್ಲಾ ಜಾಗದಲ್ಲಿ ಹಲವಾರು ವರ್ಷಗಳ ಹಿಂದೆಯೇ ದೇವಸ್ಥಾನಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿದ್ದು ಎಲ್ಲಾ ದೇವಸ್ಥಾನಗಳನ್ನು ನೋಂದಣಿ ಹಾಗೂ ಮುದ್ರಾಂಕ ಇಲಾಖೆಯಲ್ಲಿ ಟ್ರಸ್ಟ್ ಡೀಡ್ ಮೂಲಕ ನೋಂದಾಯಿಸಿರುವುದಾಗಿ ತಿಳಿಸಿರುತ್ತಾರೆ. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 21 ರನ್ವಯ ಮಾರುಕಟ್ಟೆ ಬೆಲೆಯ ಶೇಕಡಾ 50 ರಷ್ಟು ಮೌಲ್ಯವನ್ನು ವಿಧಿಸಿ ಶ್ರೀ ಮಹಾದೇವ ದೇವಸ್ತಾನಕ್ಕೆ 0-08 ಗುಂಟೆ ಜಮೀನು ಮಂಜೂರು ಮಾಡುವ ಕುರಿತು ಸರ್ಕಾರದ ಪೂರ್ವಾನುಮೋದನೆ ನೀಡುವ ಕುರಿತು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರು ಮಾಡುವಂತೆ ಶಿಫಾರಸ್ಸು ಮಾಡಿರುತ್ತಾರೆ.

1. ಉದ್ದೇಶಿತ ಜಮಿನನ್ನು ಯಾವ ಉದ್ದೇಶಕ್ಕಾಗಿ ಮಂಜೂರಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು.

2. ಸದರಿ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ನೋಡಿಕೊಳ್ಳತಕ್ಕದು.

3. ಮಾರುಕಟ್ಟೆ ಬೆಲೆ ಶೇಕಡಾ 50 ರಷ್ಟು ಮೌಲ್ಯ ಹಾಗೂ ಇನ್ನಿತರ ಶುಲ್ಕಗಳ ಸಹಿತ ಸರ್ಕಾರಕ್ಕೆ ಭರಿಸುವ ಷರತ್ತಿಗೊಳಪಟ್ಟು.

4. ಮೇಲ್ಕಂಡ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಸದರಿ ಜಮೀನನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು.

ಪ್ರಸ್ತಾವನೆಯಲ್ಲಿನ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ:-

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 34 ಎಲ್‌ಜಿಎನ್ 2014, ದಿನಾಂಕ: 27.05.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಶ್ರೀ ಮಹಾದೇವ ದೇವಸ್ಥಾನ ವ್ಯವಸ್ಥಾಪನಾ ಕಮಿಟಿ ನೀನ್ನುರ (ರಾಮನಗರ) ಇವರಿಗೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ರಾಮನಗರ(ಶೀತವಾಡ) ಗ್ರಾಮದ ಸ.ನಂ.74 ರಲ್ಲಿ 0-08 ಗುಂಟೆ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ(1)(4) ರನ್ವಯ ಮಾರ್ಗಸೂಚಿ ಬೆಲೆಯ ಶೇಕಡಾ 50% ಮೌಲ್ಯ ಹಾಗೂ ಇನ್ನಿತರ ಶುಲ್ಕಗಳನ್ನು ಪಾವತಿಸಿಕೊಂಡು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಶ್ರೀ ಮಹಾದೇವ ದೇವಸ್ಥಾನಕ್ಕೆ ಮಂಜೂರು ಮಾಡಲು ಅನುಮೋದನೆ ನೀಡಲಾಗಿದೆ.

1. ಉದ್ದೇಶಿತ ಜಮಿನನ್ನು ಯಾವ ಉದ್ದೇಶಕ್ಕಾಗಿ ಮಂಜೂರಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು ಹಾಗೂ ಯಾವುದೇ ಕಾರಣಕ್ಕೂ ಪರಭಾರೆ ಮಾಡತಕ್ಕದ್ದಲ್ಲ.

2. ಸದರಿ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ನೋಡಿಕೊಳ್ಳತಕ್ಕದು.

3. ಪ್ರಚಲಿತ ಮಾರ್ಗಸೂಚಿ ಬೆಲೆಯ ಶೇಕಡಾ 50 ರಷ್ಟು ಹಾಗೂ ಇನ್ನಿತರ ಶುಲ್ಕಗಳ ಸಹಿತ ಸರ್ಕಾರಕ್ಕೆ ಭರಿಸುವ ಷರತ್ತಿಗೊಳಪಟ್ಟು.

4. ಮೇಲ್ಕಂಡ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಸದರಿ ಜಮೀನನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು.

P.R. 181

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-25

ಉದಯ ಆರ್. ನಾಯಕ್

ಪೀಠಾಧಿಕಾರಿ

ಕಂದಾಯ ಇಲಾಖೆ. (ಭೂ.ಮಂಜೂರಾತಿ.-2)

ನಗರಾಭಿವೃದ್ಧಿ ಸಚಿವಾಲಯ

ವಿಷಯ : ಧಾರವಾಡ ಜಿಲ್ಲೆ, ಕುಂದಗೋಳ ಪಟ್ಟಣದ ವ್ಯಾಪ್ತಿಯಲ್ಲಿ `. 4936.00 ಲಕ್ಷಗಳ ಅಂದಾಜು ವೆಚ್ಚದಲ್ಲಿ ನೀರು ಸರಬರಾಜು ಯೋಜನೆಯನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಓದಲಾಗಿದೆ : (1) ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ಇವರ ಪತ್ರ ಸಂಖ್ಯೆ: ಕಜಮ/ ಮುಅ (ಉ)/ತಾಂತ್ರಿಕ/ಆಶ್ರೇಕಾಅ(ಬೆ)/ಉಮುಅ-2/ತಾಸ-3/ಸಅ-2/2015-16 ದಿನಾಂಕ 28/10/2015 ಮತ್ತು 31/03/2016.

(2) ಸರ್ಕಾರದ ಆದೇಶ ಸಂಖ್ಯೆ: ನಅಇ 07 ಯುಡಬ್ಲ್ಯೂಎಸ್ 2011, ದಿನಾಂಕ 20/07/2011.

ಪ್ರಸ್ತಾವನೆ :

1) ಮೇಲೆ (1) ರಲ್ಲಿ ಓದಲಾದ ಪತ್ರಗಳಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಧಾರವಾಡ ಜಿಲ್ಲೆ, ಕುಂದಗೋಳ ಪಟ್ಟಣದ ವ್ಯಾಪ್ತಿಯಲ್ಲಿ `. 4936 ಲಕ್ಷ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಕುಡಿಯುವ ನೀರು ಸರಬರಾಜು ಯೋಜನೆಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಿರುತ್ತಾರೆ.

2) ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ 2011 ರ ಜನಗಣತಿಯನ್ವಯ ಕುಂದಗೋಳ ಪಟ್ಟಣದ ಜನಸಂಖ್ಯೆಯು 18,709 ಇದ್ದು, ಪಟ್ಟಣಕ್ಕೆ ನೀರಸಾಗರ ಜಲಾಶಯ ಮೂಲದಿಂದ 1992ರಲ್ಲಿ ಚಾಲನೆಗೊಳಿಸಲಾದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ನೀರು ಸರಬರಾಜು ಯೋಜನೆಯಿಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಹಾಲಿ ಇರುವ ಎ.ಸಿ. ರೈಸಿಂಗ್ ಮೇನ್ ಕೊಳವೆ ಮಾರ್ಗದಲ್ಲಿ ಪದೇ ಪದೇ ಸೋರಿಕೆ ಉಂಟಾಗಿರುವುದರಿಂದ ನೀರು ಪೋಲಾಗುತ್ತಿದ್ದು ಕುಂದಗೋಳ ಪಟ್ಟಣಕ್ಕೆ ಸರಬರಾಜಾಗುವ ನೀರಿನ ಪ್ರಮಾಣವು ಕಡಿಮೆಯಾಗುತ್ತಿದೆ. ಅಲ್ಲದೇ, ನೀರಸಾಗರ ಜಲಾಶಯದ ನೀರಿನ ಮೂಲ೧೦೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ಭಾಗ ೧ ಶಾಶ್ವತವಾಗಿಲ್ಲದ ಕಾರಣ ವರ್ಷದಲ್ಲಿ ಮೂರರಿಂದ ನಾಲ್ಕು ತಿಂಗಳು ಜಲಾಶಯದಲ್ಲಿ ನೀರಿನ ಅಭಾವವುಂಟಾಗುತ್ತದೆ. ಆದ್ದರಿಂದ ನೀರಿನ ಮೂಲ ಮತ್ತು ಸೊರಿಕೆಯಾಗುತ್ತಿರುವ ಹಳೇ ಕೊಳವೆ ಮಾರ್ಗದಿಂದ ಉಂಟಾಗುತ್ತಿರುವ ತೊಂದರೆಯನ್ನು ನಿವಾರಿಸಲು ಹೊಸ ಯೋಜನೆ ಅವಶ್ಯವಾಗಿರುತ್ತದೆ. ಆದ್ದರಿಂದ, ಕುಂದಗೋಳ ಪಟ್ಟಣದಲ್ಲಿ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆ ಕಲ್ಪಿಸುವ ಅಂದಾಜು ಪಟ್ಟಿಯನ್ನು ಮೊತ್ತ `. 4895 ಲಕ್ಷಗಳಿಗೆ ಸಿದ್ದಪಡಿಸಲಾಗಿದ್ದು, ಯೋಜನೆಯನ್ನು 2048 ರ ಜನಸಂಖ್ಯೆ 33,800 ಕ್ಕೆ ದಿನಂ ಪ್ರತಿ 135 ದಶಲಕ್ಷ ಲೀಟರ್ ನೀರನ್ನು ಸರಬರಾಜು ಮಾಡಲು ಸಿದ್ಧಪಡಿಸಲಾಗಿದೆ.

3) ಯೋಜನೆಗೆ ಲೋಕೋಪಯೋಗಿ ಇಲಾಖೆಯ 2015-16 ನೇ ಸಾಲಿನ ದರಪಟ್ಟಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ 2015-16 ನೇ ದರಪಟ್ಟಿ ಮತ್ತು ದರಪಟ್ಟಿಯಲ್ಲಿ ಇಲ್ಲದ ಐಟಂಗಳಿಗೆ ಮಾರುಕಟ್ಟೆ ದರ ವಿಶ್ಲೇಷಣೆಯಂತೆ ಅಂದಾಜು ಪಟ್ಟಿ ತಯಾರಿಸಲಾಗಿದೆ.

4) ಜಲಸಂಪನ್ಮೂಲ ಇಲಾಖೆಯು ತನ್ನ ದಿನಾಂಕ 18/04/2017 ರ ಅನಧಿಕೃತ ಟಿಪ್ಪಣಿಯಲ್ಲಿ ಪ್ರಸ್ತಾಪಿತ ಯೋಜನೆಗೆ ಅಂತಿಮ ವರ್ಷ 2048ಕ್ಕೆ ಒಟ್ಟಾರೆ ನೀರಿನ ಬೇಡಿಕೆಯು ದಿನಂಪ್ರತಿ 5.24 ದಶಲಕ್ಷ ಲೀಟರ್ ನೀರನ್ನು ಜಲಾಶಯದಲ್ಲಿ ಶೇಖರಣೆಯಾಗುವ ನೀರಿನ ಲಭ್ಯತೆಗನುಗುಣವಾಗಿ ನೀರನ್ನು ಉಪಯೋಗಿಸುವ ಷರತ್ತಿಗೊಳಪಟ್ಟು ಸಹಮತಿಯನ್ನು ನೀಡಿರುತ್ತದೆ.

5) ಹಾಲಿ ಕೋಳವೆ ಮಾರ್ಗದಲ್ಲಿನ ಸೊರಿಕೆಯಿಂದ ಪೋಲಾಗುತ್ತಿರುವ ನೀರನ್ನು ತಡೆಗಟ್ಟಲು ಹಾಗೂ ರೇಣಕಾ ಸಾಗರ ಜಲಾಶಯ ಮೂಲದ ಹುಬ್ಬಳ್ಳಿ ಧಾರವಾಡ ಕೋಳವೆ ಮಾರ್ಗದಿಂದ ನೀರು ಸರಬರಾಜು ಮಾಡಲು ಪ್ರಸ್ತಾಪಿಸಿರುವ ಹೊಸ ಯೋಜನೆ ಅತ್ಯವಶ್ಯಕವಾಗಿರುತ್ತದೆ.

Sl No. Particulars Amount in `.
1 Providing, laying, jointing, testing & commissioning of 406/323.90 MM dia MS Gravity/rising main from Nehru nagar cross. Hubli to existing 5 LL & proposed 10 LL capacity ESR at Killa in Kundgol town 184190000
2 Providing, laying, jointing, testing & commissioning of HDPE water distribution network in water zone-II (ward nos 1,2,3,4,5,11,12&13) from proposed 10 LL cap OHT near Killa for 24x7 water supply system. 83750000
3 Construction of 10.00 lakh litrs capacity RCC shaft type over head tank on 15 mtr staging. 14660000
4 Sub estimate for trenchless technology excavation for laying of 323.90 mm dia(OD) M.S pipe line. 10292000
5 Operation & maintenance for 24x7 distribution system for year for defect liability period of 1 year. 2987000
6 Operation & maintenance for 24x7 distribution system for 2 years 9103000
7 Flow monitoring system for bulk water supply system and 24x7 water supply system and installation and commissioning of SCADA and management improvement system, lumpsum 7% of item 1 to 6. 21348740
Sub total 326330740
8 Add 10% price adjustment/escalation for two years @5% per annum 32633074
9 Add 3% contingencies. 9789922
10 Add 12% ETP charges on Basic cost. 39159689
11 Add 1% labour welfare cess. 3263307
12 Add 0.5% towards third party inspection charges. 1631654
13 Deposits for PWD, NH, HESCOM etc. 3000000
Total 415808386
14 Pro rate cost of Hubli-Dharwad bulk water scheme. 77710000
15 Misc and rounding off. 81614
Grand Total 493600000
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ೧೦೦೩

7) ದಿನಾಂಕ 26/08/2014 ರಂದು ನಡೆದ ಕುಂದಗೋಳ ಪಟ್ಟಣ ಪಂಚಾಯತ್‌ನ ಸಾಮಾನ್ಯ ಸಭೆಯ ನಡವಳಿಯ ಠರಾವು ಸಂಖ್ಯೆ 38 ರಲ್ಲಿ ಸ್ಥಳೀಯ ಸಂಸ್ಥೆಯ ಪಾಲಿನ ಮೊತ್ತವನ್ನು ಭರಿಸಿ, ಮುಂದಿನ ನಿರ್ವಹಣೆ ಕೈಗೊಳ್ಳಲು ಮತ್ತು ಈ ಯೋಜನೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಳ್ಳಲು ಒಪ್ಪಿಗೆ ಸೂಚಿಸಿರುತ್ತದೆ.

ವಿವರ ಯೋಜನಾ ವೆಚ್ಚದ ಪಾಲು (ಶೇಕಡಾವಾರು) ಅಂದಾಜು ಮೊತ್ತ (`. ಲಕ್ಷಗಳಲ್ಲಿ)
ಸ ರ್ಕಾರದ ಅನುದಾನ 95% 4689.20
ಸ ್ಥಳೀಯ ಸಂಸ್ಥೆಯ ಕೊಡುಗೆ 5% 246.80
ಒಟ್ಟು 4936.00

9) ಸರ್ಕಾರವು ಪ್ರಸ್ತಾವನೆಯನ್ನು ಪರಿಗಣಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ನಅಇ 46 ಯುಡಬ್ಲ್ಯೂಎಸ್ 2015, ಬೆಂಗಳೂರು, ದಿನಾಂಕ 23 ನೇ ಮೇ 2017.

10) ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಧಾರವಾಡ ಜಿಲ್ಲೆ, ಕುಂದಗೋಳ ಪಟ್ಟಣದ ವ್ಯಾಪ್ತಿಯಲ್ಲಿ `. 4936.00 ಲಕ್ಷ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಕುಡಿಯುವ ನೀರು ಸರಬರಾಜು ಯೋಜನೆಯ ಅಂದಾಜು ಪಟ್ಟಿಗೆ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಸರ್ಕಾರದ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.

1. ಈ ಕಾಮಗಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಿಯಮಾನುಸಾರ ಕೈಗೊಳ್ಳುವುದು.

2. ಕಾಮಗಾರಿಗೆ ಅಗತ್ಯವಿರುವ ಜಮೀನು ಲಭ್ಯವಿರಬೇಕು.

3. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು 2000 ಮತ್ತು ತತ್ಸಂಬಧ ಸರ್ಕಾರವು ಹೊರಡಿಸಿರುವ ಸುತ್ತೋಲೆ ಮತ್ತು ಆದೇಶಗಳಲ್ಲಿನ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸತಕ್ಕದ್ದು.

4. ಕಾಮಗಾರಿಯನ್ನು ನಿಗಧಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು.

5. ಕಾಮಗಾರಿಯ ವೆಚ್ಚ ಅನುಮೋದಿತ ಅಂದಾಜು ಪಟ್ಟಿಯ ವೆಚ್ಚಕ್ಕಿಂತ ಹೆಚ್ಚಾಗುವಂತಿಲ್ಲ ಮತ್ತು ಪರಿಷ್ಕರಣೆಗೆ ಅವಕಾಶ ನೀಡುವಂತಿಲ್ಲ.

6. ನೀರಿನ ಕರವನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮಾದರಿಯಲ್ಲಿ ನಿಗಧಿ ಪಡಿಸತಕ್ಕದ್ದು.

7. ಒಂದು ವೇಳೆ ಮೇಲಿನ ಸಾಲದ ವೆಚ್ಚವನ್ನು ಭರಿಸಲು ಕುಂದಗೋಳ ಪಟ್ಟಣ ಪಂಚಾಯ್ತಿಯು ವಿಫಲವಾದಲ್ಲಿ ಸರ್ಕಾರದಿಂದ ಕುಂದಗೋಳ ಪಟ್ಟಣ ಪಂಚಾಯ್ತಿಗೆ ನೀಡಲಾಗುವ ಎಸ್.ಎಫ್.ಸಿ. ಅನುದಾನದಲ್ಲಿ ನೇರವಾಗಿ ಕಡಿತಗೊಳಿಸಲಾಗುವುದು.

11) ಈ ಆದೇಶವನ್ನು ಆರ್ಥಿಕ ಇಲಾಖೆಯು ಆಇ 293 ವೆ-9/ 2016 ದಿನಾಂಕ 02.03.2017 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

P.R. 183

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-50

ಈ. ಶಿವರುದ್ರಪ್ಪ

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ. (ಮಂಡಳಿ)

ನಗರಾಭಿವೃದ್ಧಿ ಸಚಿವಾಲಯ

ವಿಷಯ : ರಾಯಚೂರು ಜಿಲ್ಲೆ, ಮಾನ್ವಿ ಪಟ್ಟಣದ ವ್ಯಾಪ್ತಿಯಲ್ಲಿ `. 8800 ಲಕ್ಷ ಅಂದಾಜು ವೆಚ್ಚದಲ್ಲಿ ನೀರು ಸರಬರಾಜು ಯೋಜನೆಯನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಓದಲಾಗಿದೆ : 1. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ಇವರ ಪತ್ರ ಸಂಖ್ಯೆ: ಕಜಮ/ಮುಅ(ಕ)/ ತಾಂತ್ರಿಕ/ಸ.ಅ-3/ಮಾನ್ವಿ/2016-17, ದಿನಾಂಕ : 22/7/2016 ಮತ್ತು 10/3/2017.

2. ಜಲಸಂಪನ್ಮೂಲ ಇಲಾಖೆಯು ಪತ್ರ ಸಂಖ್ಯೆ: ಜಸಂಇ 11 ಎಂಟಿವಿ 2013, ದಿನಾಂಕ 6/3/2013.

3. ಸರ್ಕಾರದ ಆದೇಶ ಸಂಖ್ಯೆ: ನಅಇ 7 ಯುಡಬ್ಲ್ಯೂಎಸ್ 2011, ದಿನಾಂಕ 20/7/2011.

ಪ್ರಸ್ತಾವನೆ :

ಮೇಲೆ (1) ರಲ್ಲಿ ಓದಲಾದ ಪತ್ರಗಳಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ರಾಯಚೂರು ಜಿಲ್ಲೆ, ಮಾನ್ವಿ ಪಟ್ಟಣದ ವ್ಯಾಪ್ತಿಯಲ್ಲಿ `. 8800 ಲಕ್ಷ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಕುಡಿಯುವ ನೀರು ಸರಬರಾಜು ಯೋಜನೆಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಿರುತ್ತಾರೆ.

೧೦೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ಭಾಗ ೧

2) ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ ಮಾನ್ವಿ ಪಟ್ಟಣದ ಜನಸಂಖ್ಯೆಯು 2011 ರ ಜನಗಣತಿಯಂತೆ 46,465 ಇದ್ದು, ತಲಾ 60 ಎಲ್.ಪಿ.ಸಿ.ಡಿ ರಂತೆ ಐದು ದಿನಕ್ಕೊಮ್ಮೆ ತುಂಗಭದ್ರಾ ನದಿಯ ಮೂಲದಿಂದ ನೀರು ಸರಬರಾಜು ಮಾಡಲಾಗುತ್ತಿದೆ. ತುಂಗಭದ್ರಾ ನದಿಯು ಬೇಸಿಗೆ ಸಮಯದಲ್ಲಿ ಬತ್ತುವುದರಿಂದ ಮಾನ್ವಿ ಪಟ್ಟಣದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಆದ್ದರಿಂದ, ಪಟ್ಟಣಕ್ಕೆ ನೀರು ಸರಬರಾಜು ಮಾಡಲು ನೀರು ಜಲ ಸಂಗ್ರಹಾಗಾರವನ್ನು ನಿರ್ಮಾಣ ಮಾಡುವ ಯೋಜನೆಯನ್ನು ರೂಪಿಸಲಾಗಿದೆ.

3) 2046ನೇ ವರ್ಷಕ್ಕೆ ಅಂದಾಜು `. 82,000 ಜನಸಂಖ್ಯೆಯ ನೀರಿನ ಬೇಡಿಕೆಯನ್ನು 13.04 ಎಂ.ಎಲ್.ಡಿ ಎಂದು ಅಂದಾಜಿಸಲಾಗಿದೆ. ಹಾಲಿ ಮಾನ್ವಿ ಪಟ್ಟಣಕ್ಕೆ ದಿನಂಪ್ರತಿ ಸರಬರಾಜು ಮಾಡಬೇಕಾಗಿರುವ ತಲಾ 135 ಲೀಟರ್ ಬದಲಾಗಿ 60 ಲೀಟರ್‌ನಂತೆ 4.54 ಎಂ.ಎಲ್.ಡಿ ನೀರು ಸರಬರಾಜು ಮಾಡಲಾಗುತ್ತಿದೆ. ತುಂಗಭದ್ರಾ ನದಿ ಬತ್ತುವುದರಿಂದ ಮಾನ್ವಿ ಪಟ್ಟಣಕ್ಕೆ 1998 ರಲ್ಲಿ ಚಾಲನೆಗೊಳಿಸಲಾಗಿರುವ ಕಾಟರ್ಕಿ ಗ್ರಾಮದ ಬಳಿಯ ತುಂಗಭದ್ರಾ ನದಿ ಮೂಲದ ಯೋಜನೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ವರ್ಷದಲ್ಲಿ 2-3 ತಿಂಗಳು ತುಂಗಭದ್ರಾ ನದಿ ಬತ್ತುವುದರಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಅಂಶಗಳನ್ನು ಗಮನದಲ್ಲಿಟ್ಟು ಸರ್ಕಾರವು 1225 ಎಂಎಲ್ ಸಾಮರ್ಥ್ಯದ ಜಲ ಸಂಗ್ರಹಾಗಾರ ಮತ್ತು ಇತರೆ ಕಾಮಗಾರಿಗಳ ಒಟ್ಟು `. 815.00 ಲಕ್ಷ ಅಂದಾಜಿನ ಯೋಜನೆಗೆ 2005 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜಲ ಸಂಗ್ರಹಾಗಾರಕ್ಕೆ ಬೇಕಾಗುವ 65 ಎಕರೆ ಜಮೀನನ್ನು 2016 ರಲ್ಲಿ `. 167.00 ಲಕ್ಷಕ್ಕೆ ಖರೀದಿಸಲಾಗಿದ್ದು, ಉಳಿದ ಮೊತ್ತದಲ್ಲಿ ಇನ್ ಟೇಕ್ ಕಾಮಗಾರಿಗಳು, ಇನ್‌ಟೇಕ್ ಪೈಪ್ ಲೈನ್, ಸಂಪು, ಪಂಪ್ ಹೌಸ್, ಉದ್ದೇಶಿತ ಜಲ ಸಂಗ್ರಹಾಗಾರದಿಂದ ಜಲ ಶುದ್ದೀಕರಣಗಾರದವರಗೆ ಡಿ.ಐ. ಕೊಳವೆ ಮಾರ್ಗದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅನುದಾನದ ಕೊರತೆಯಿಂದ ಜಲ ಸಂಗ್ರಹಾಗಾರದ ಕಾಮಗಾರಿಯನ್ನು ಕೈಗೊಂಡಿರುವುದಿಲ್ಲ.

4) ಮಾನ್ವಿ ಪಟ್ಟಣಕ್ಕೆ ವರ್ಷಪೂರ್ತಿ ಕನಿಷ್ಠ ಪ್ರಸಕ್ತ ಸೇವಾ ಮಟ್ಟದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಜಲ ಸಂಗ್ರಹಾಗಾರವನ್ನು ನಿರ್ಮಿಸುವುದು ಅತ್ಯವಶ್ಯಕವಾಗಿರುತ್ತದೆ. ಆದ್ದರಿಂದ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಜಲ ಸಂಗ್ರಹಾಗಾರ, ಜಾಕ್‌ವೆಲ್, ಪಂಪಿಂಗ್ ಮೆಷನರಿ ಹಾಗೂ ಜಲ ಸಂಗ್ರಹಾಗಾರದಿಂದ ಜಲ ಶುದ್ದೀಕರಣಾಗಾರದವರಗೆ ಕೊಳವೆ ಮಾರ್ಗ ಅಳವಡಿಸಿ ವರ್ಷ ಪೂರ್ತಿ ನೀರು ಸರಬರಾಜು ಮಾಡಲು ಉದ್ದೇಶಿಸಿದೆ.

5) ಯೋಜನೆಗೆ ಲೋಕೋಪಯೋಗಿ ಇಲಾಖೆಯ ಕಲ್ಬುರ್ಗಿ ವೃತ್ತದ 2015-16ನೇ ಸಾಲಿನ ದರಪಟ್ಟಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ 2015-16ನೇ ದರಪಟ್ಟಿ ಮತ್ತು ದರಪಟ್ಟಿಯಲ್ಲಿ ಇಲ್ಲದ ಐಟಂಗಳಿಗೆ ಮಾರುಕಟ್ಟೆ ದರ ವಿಶ್ಲೇಷಣೆಯಂತೆ ಅಂದಾಜು ಪಟ್ಟಿ ತಯಾರಿಸಲಾಗಿದೆ.

6) ಮೇಲೆ (2)ರಲ್ಲಿ ಓದಲಾದ ಜಲಸಂಪನ್ಮೂಲ ಇಲಾಖೆಯ ದಿನಾಂಕ 6/3/2013ರ ಪತ್ರದಲ್ಲಿ ಈ ಯೋಜನೆಗೆ ತುಂಗಭದ್ರಾ ಎಡದಂಡೆ ಕಾಲುವೆ ವಿತರಣಾ ಕಾಲುವೆ-85ರ ಚೈ 769ರಲ್ಲಿ 0.043 ಟಿಎಂಸಿ ಪ್ರಮಾಣದ ನೀರನ್ನು ಪಡೆಯಲು ಕೆಲವು ಷರತ್ತುಗಳಿಗೊಳಪಟ್ಟಂತೆ ಜಲಸಂಪನ್ಮೂಲ ಇಲಾಖೆಯ ಸಹಮತಿ ನೀಡಲಾಗಿದೆ.

Sl. No Description Amount (in `.)
1 Construction of impounding reservoir (1280 M.L.) With Earthen Embankment with all necessary arrangements. 53,19,45,555
2 Construction of 8 Mtr. Dia. Jack well cum Pump house and intake Arrangements and RCC Transformer sub-station Platform and Foot Bridge. 1,28,51,996
3 Supply, erection and commissioning of 250 H.P./Suitable HP Centrifugal Pump sets in I.R. Pump house to Pump canal water from Sump to I.R. 1,11,28,008
4 Supply, Erection, Electrification, and Commissioning of 120 H.P or Suitable HP Deep well Turbine Pump sets along with allied accessories at Jack well cum Pump House 78,92,739
5 Construction of 15.00 L.L. ELSR'S with 15 Mtr. Staging near Silver Jubilee Tank at Manvi Town. 2,18,92,866
6 Providing and laying of 450mm dia., 400mm & 350mm D.I. K-9 & K-7 class Pure Water feeder Mains with allied works from Proposed WTP pump house near Rabbanakallu Village to Katarki cross and to Proposed 15 L.L OHT at Silver Jubilee Tank 4,30,43,075
Sub-Total 62,87,54,240
ETP charges @ 12% 7,54,50,509
Price adjustment @ 5% per year for 2 years 6,28,75,424
1.5% for 3rd Party inspection charges 94,31,314
3% towards contingency 188,62,627
1% towards cess 62,87,542
Shifting of 110 KV DC Madlapur line outside IR 7,83,00,000
Miscellaneous 38,344
Grand Total 88,00,00,000
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭ ೧೦೦೫

ದಿನಾಂಕ 25/6/2016 ರಂದು ನಡೆದ ಮಾನ್ವಿ ಪುರಸಭೆಯ ಸಾಮಾನ್ಯ ಸಭೆಯ ನಡವಳಿಯ ಠರಾವು ಸಂಖ್ಯೆ 118ರಲ್ಲಿ ಮಾನ್ವಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಿಗಾಗಿ 1280 ಎಂಎಲ್ ಸಾಮರ್ಥ್ಯದ ಜಲಸಂಗ್ರಹಾಗಾರವನ್ನು ನಿರ್ಮಿಸಲು ಸಿದ್ದಪಡಿಸಿರುವ ಯೋಜನೆಗೆ ಪುರಸಭೆಯ ವಂತಿಗೆ ಮೊತ್ತವನ್ನು ಒದಗಿಸಲು ಹಾಗೂ ಯೋಜನೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಖಾಂತರ ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಲಾಗಿದೆ.

ಮೇಲೆ (3)ರಲ್ಲಿ ಓದಲಾದ ದಿನಾಂಕ 20/07/2011 ರ ಆದೇಶದಂತೆ ಯೋಜನೆಯ ಆರ್ಥಿಕ ಮಾದರಿಯು ಈ ಕೆಳಕಂಡಂತೆ ಇರುತ್ತದೆ.

ವಿವರ ಯೋಜನಾ ವೆಚ್ಚದ ಪಾಲು (ಶೇಕಡಾವಾರು) ಅಂದಾಜು ಮೊತ್ತ (`. ಲಕ್ಷಗಳಲ್ಲಿ)
ಕರ್ನಾಟಕ ಸರ್ಕಾರದ ಅನುದಾನ 75 6600.00
ಆರ್ಥಿಕ ಸಂಸ್ಥೆ ಸಾಲ 20 1760.00
ಸ ್ಥಳೀಯ ಸಂಸ್ಥೆಯ ಪಾಲು 5 440.00
ಒಟ್ಟು 8800.00

ಸರ್ಕಾರವು ಪ್ರಸ್ತಾವನೆಯನ್ನು ಪರಿಗಣಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ನಅಇ 17 ಯುಡಬ್ಲ್ಯೂಎಸ್ 2016, ಬೆಂಗಳೂರು, ದಿನಾಂಕ 22 ನೇ ಮೇ 2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆ, ಮಾನ್ವಿ ಪಟ್ಟಣದ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಕುಡಿಯುವ ನೀರು ಸರಬರಾಜು ಯೋಜನೆಯ `. 8800 ಲಕ್ಷ ಅಂದಾಜು ವೆಚ್ಚದ ಅಂದಾಜು ಪಟ್ಟಿಗೆ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಸರ್ಕಾರದ ಆಡಳಿತಾತ್ಮಕ ಅನುಮೋದನೆ ನೀಡಿದೆ.

1) ಈ ಕಾಮಗಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಿಯಮಾನುಸಾರ ಕೈಗೊಳ್ಳುವುದು.

2) ಕಾಮಗಾರಿಗೆ ಅಗತ್ಯವಿರುವ ಜಮೀನು ಲಭ್ಯವಿರಬೇಕು.

3) ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು 2000 ಮತ್ತು ತತ್ಸಂಬಧ ಸರ್ಕಾರವು ಹೊರಡಿಸಿರುವ ಸುತ್ತೋಲೆ ಮತ್ತು ಆದೇಶಗಳಲ್ಲಿನ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸತಕ್ಕದ್ದು.

4) ಕಾಮಗಾರಿಯನ್ನು ನಿಗಧಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು.

5) ಕಾಮಗಾರಿಯ ವೆಚ್ಚ ಅನುಮೋದಿತ ಅಂದಾಜು ಪಟ್ಟಿಯ ವೆಚ್ಚಕ್ಕಿಂತ ಹೆಚ್ಚಾಗುವಂತಿಲ್ಲ ಮತ್ತು ಪರಿಷ್ಕರಣೆಗೆ ಅವಕಾಶ ನೀಡುವಂತಿಲ್ಲ.

6) ನೀರಿನ ಕರವನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮಾದರಿಯಲ್ಲಿ ನಿಗಧಿ ಪಡಿಸತಕ್ಕದ್ದು.

7) ಒಂದು ವೇಳೆ ಮೇಲಿನ ಸಾಲದ ವೆಚ್ಚವನ್ನು ಭರಿಸಲು ಮಾನ್ವಿ ಪಟ್ಟಣ ಪಂಚಾಯ್ತಿಯು ವಿಫಲವಾದಲ್ಲಿ ಸರ್ಕಾರದಿಂದ ಮಾನ್ವಿ ಪಟ್ಟಣ ಪಂಚಾಯ್ತಿಗೆ ನೀಡಲಾಗುವ ಎಸ್.ಎಫ್.ಸಿ. ಅನುದಾನದಲ್ಲಿ ನೇರವಾಗಿ ಕಡಿತಗೊಳಿಸಲಾಗುವುದು.

2) ಈ ಆದೇಶವನ್ನು ಆರ್ಥಿಕ ಇಲಾಖೆಯು ಅನಧಿಕೃತ ಟಿಪ್ಪಣಿ ಸಂಖ್ಯೆ: ಆಇ/10/ವೆಚ್ಚ-9/2017, ದಿನಾಂಕ 13/4/2017 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

P.R. 184

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ SC-50

ಈ. ಶಿವರುದ್ರಪ್ಪ

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ. (ಮಂಡಳಿ) ೧೦೦೬

ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭

ಭಾಗ ೧

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ

ವಿಷಯ : ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖಾ ವತಿಯಿಂದ ನಡೆಸುತ್ತಿರುವ ಶಿವಮೊಗ್ಗ ವಲಯದ ಕಡವುಗಳ ಹಾಸಲು ದರಗಳನ್ನು ಪರಿಷ್ಕರಣೆ ಮಾಡುವ ಬಗ್ಗೆ.

ಓದಲಾಗಿದೆ : 1) ಸರ್ಕಾರಿ ಆದೇಶ ಸಂಖ್ಯೆ:ಲೋಇ 86 ಬನೌಸೇ 2014, ದಿನಾಂಕ : 12.08.2016

2) ಸರ್ಕಾರಿ ಆದೇಶ ಸಂಖ್ಯೆ:ಲೋಇ 86 ಬನೌಸೇ 2014, ದಿನಾಂಕ : 17.09.2016

3) ನಿರ್ದೇಶಕರು, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕಾರವಾರ, ರವರ ಪತ್ರ ಸಂಖ್ಯೆ: ಬಂಒಜಸಾ-30/ಜಿಎನ್ಎಲ್-II/2014, ದಿನಾಂಕ: 21.12.2016 ಪ್ರಸ್ತಾವನೆ :

ಮೇಲೆ ಓದಲಾದ (1)ರ ಆದೇಶದಲ್ಲಿ ನಿರ್ದೇಶಕರು, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕಾರವಾರ, ಇವರ ಪ್ರಸ್ತಾವನೆಯನ್ವಯ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ವತಿಯಿಂದ ನಡೆಸುತ್ತಿರುವ 19 ಕಡವು ಸೇವೆಗಳ ದರಗಳನ್ನು ಪರಿಷ್ಕರಿಸಿ ಆದೇಶಿಸಲಾಗಿದೆ.

ಶಿವಮೊಗ್ಗ ವಲಯದ ಅಂಬರಗೋಡ್ಲು-ಕಳಸವಳ್ಳಿ ಮತ್ತು ಹಸಿರುಮಕ್ಕಿ-ಕೊಲ್ಲೂರು ಕಡವುಗಳಲ್ಲಿ ಪ್ರಯಾಣಿಸುವ ಸ್ಧಳೀಯ ಗ್ರಾಮಸ್ಥರಿಗೆ ರಿಯಾಯತಿ ದರಗಳನ್ನು ಆಕರಿಸುವ ಬಗ್ಗೆ ಕೋರಿದ್ದು, ಆದರೆ, ಮೇಲೆ (1)ರಲ್ಲಿ ಓದಲಾದ ಆದೇಶದಲ್ಲಿ ಈ ಬಗ್ಗೆ ಯಾವುದೇ ಸೂಚನೆ ನೀಡಿರುವುದಿಲ್ಲವಾದ್ದರಿಂದ ಸ್ಥಳೀಯ ಶಾಸಕರು, ಗ್ರಾಮಸ್ಥರು, ಜನಪ್ರತಿನಿಧಿಗಳ ಕೋರಿಕೆ ಹಿನ್ನೆಲೆಯಲ್ಲಿ ಶಿವಮೊಗ್ಗ ವಲಯದ ಅಂಬರಗೋಡ್ಲು-ಕಳಸವಳ್ಳಿ, ಹಸಿರುಮಕ್ಕಿ-ಕೊಲ್ಲೂರು ಮತ್ತು ತಳಕಳಲೆ-ಕುಡುಗುಂಜಿ ಕಡವುಗಳಲ್ಲಿ ಪ್ರಯಾಣಿಸುವ ಸ್ಥಳೀಯ ಗ್ರಾಮಸ್ಥರಿಗೆ ಮಾತ್ರ ಸರ್ಕಾರದ ಮಟ್ಟದಲ್ಲಿ ರಿಯಾಯಿತಿ ದರಗಳನ್ನು ಆಕರಿಸಲು ಆದೇಶಿಸುವವರೆಗೆ ತಾತ್ಕಲಿಕವಾಗಿ ತಡೆಹಿಡಿಯುವಂತೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ನಿರ್ದೇಶಕರು ಕೋರಿದ ಮೇರೆಗೆ ಮೇಲೆ ಓದಲಾದ (2)ರ ಸರ್ಕಾರಿ ಆದೇಶದಲ್ಲಿ ಸರ್ಕಾರದ ಆದೇಶ ಸಂಖ್ಯೆ: ಲೋಇ 86 ಬನೌಸೇ 2014, ದಿನಾಂಕ: 12.08.2016 ರ ಅನುಬಂಧದಲ್ಲಿರುವ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ 19 ಕಡವು ಸೇವೆಗಳ ಪೈಕಿ ಶಿವಮೊಗ್ಗ ವಲಯಕ್ಕೆ ಸಂಬಂಧಿಸಿದ ಕ್ರಮ ಸಂಖ್ಯೆ: (17), (18) ಮತ್ತು (19) ರಲ್ಲಿರುವ ಈ ಕೆಳಕಂಡ ಕಡವುಗಳ ಹಾಸಲು ದರಗಳ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ/ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ.

ಶಿವಮೊಗ್ಗ ವಲಯ :

17) ಅಂಬರಗೋಡ್ಲು-ಕಳಸವಳ್ಳಿ

18) ಹಸಿರುಮಕ್ಕಿ-ಕೊಲ್ಲೂರು

19) ತಳಕಳಲೆ-ಕುಡುಗುಂಜಿ

ಮೇಲೆ ಓದಲಾದ (3)ರ ಪತ್ರದಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ನಿರ್ದೇಶಕರು ಶಿವಮೊಗ್ಗ ವಲಯದ ಅಂಬರಗೋಡ್ಲು-ಕಳಸವಳ್ಳಿ; ಹಸಿರುಮಕ್ಕಿ-ಕೊಲ್ಲೂರು ಮತ್ತು ತಳಕಳಲೆ-ಕುಡುಗುಂಜಿ ಕಡವುಗಳ ಇಕ್ಕೆಲಗಳ ಪ್ರದೇಶಗಳು ಶರಾವತಿ ನದಿಗೆ ಅಣೆಕಟ್ಟು ನಿರ್ಮಾಣದಿಂದಾಗಿ ತಮ್ಮ ಆಸ್ತಿ ಪಾಸ್ತಿ ಮನೆ ಮಠಗಳನ್ನು ಕಳೆದುಕೊಂಡ ಮುಳುಗಡೆ ಪ್ರದೇಶದ ಸಂತ್ರಸ್ತರನ್ನು ಒಳಗೊಂಡ ಗ್ರಾಮೀಣ ಪ್ರದೇಶಗಳಾಗಿರುತ್ತವೆ. ಈ ಪ್ರದೇಶಗಳು ಅತೀ ಹಿಂದುಳಿದ ಗ್ರಾಮೀಣ ಪ್ರದೇಶಗಳಾಗಿದ್ದು, ಇಲ್ಲಿಯ ಸ್ಥಳೀಯ ನಿವಾಸಿಗಳು / ಸಂತ್ರಸ್ತರು ತಮ್ಮ ದೈನಂದಿನ ಅವಶ್ಯಕತೆಗಳಿಗೆ / ಶಾಲಾ ಕಾಲೇಜುಗಳಿಗೆ ಹೋಗಿ ಬರಲು ಈ ಕಡವು ಲಾಂಚನ್ನು ಅವಲಂಬಿಸಿರುತ್ತಾರೆ. ಈ ಕೆಳಗಿನ ಗ್ರಾಮ ಪಂಚಾಯತ್ / ಪಟ್ಟಣ ಪಂಚಾಯತ್‌ಗಳಿಗೆ ಒಳಪಡುವ ಜನರನ್ನು ಸ್ಥಳೀಯ ಸಂತ್ರಸ್ಥ ಜನರೆಂದು ಪರಿಗಣಿಸಿ ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಈ ಜನರಿಗೆ ರಿಯಾಯಿತಿ ದರದಲ್ಲಿ ಹಾಸಲು ದರಗಳನ್ನು ನೀಡುವುದು

ಅಂಬಾರಗೋಡ್ಲು- ಕಳಸವಳ್ಳಿ ಕಡವು ಹ ಸಿರುಮಕ್ಕಿ –ಕೊಲ್ಲೂರು ಕಡವು ತ ಲಕಳಲೆ–ಕುಡುಗುಂಜಿ ಕಡವು
ಕೋಳೂರು ಗ್ರಾಮ ಪಂಚಾಯತಿ ಸ ಂತೆಕಟ್ಟೆ ಗ್ರಾಮ ಪಂಚಾಯತಿ ಅರ್ಲಗೋಡ್ ಗ್ರಾಮ ಪಂಚಾಯತಿ
ತ ುಮತಿ ಗ್ರಾಮ ಪಂಚಾಯತಿ ನಿಟ್ಟೂರು ಗ್ರಾಮ ಪಂಚಾಯತಿ ಕಾರ್ಗಲ್ ಪಟ್ಟಣ ಪಂಚಾಯತಿ
ಕುದ್ರೂರು ಗ್ರಾಮ ಪಂಚಾಯತಿ ಅರಮನೆ ಕೊಪ್ಪ ಗ್ರಾಮ ಪಂಚಾಯತಿ
ಎಸ್.ಎಸ್. ಬೋಗ್ ಗ್ರಾಮ ಪಂಚಾಯತಿ ಎಸ್.ಎಸ್. ಬೋಗ್ ಗ್ರಾಮ ಪಂಚಾಯತಿ

ಭಾಗ ೧

ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭

೧೦೦೭

ಚ ನ ಗೊಂಡ ಗ್ರಾಮ ಪಂಚಾಯತಿ ಚ ನಗೊಂಡ ಗ್ರಾಮ ಪಂಚಾಯತಿ

ಶಿವಮೊಗ್ಗ ವಲಯದ ಅಂಬರಗೋಡ್ಲು-ಕಳಸವಳ್ಳಿ; ಹಸಿರುಮಕ್ಕಿ-ಕೊಲ್ಲೂರು ಮತ್ತು ತಳಕಳಲೆ-ಕುಡುಗುಂಜಿ ಕಡವುಗಳಲ್ಲಿ ಪ್ರಯಾಣಿಸುವ ಒಟ್ಟು ಪ್ರಯಾಣಿಕರಲ್ಲಿ ಶೇಕಡಾ 10-15 ರಷ್ಟು ಮಾತ್ರ ಸ್ಥಳೀಯರಾಗಿದ್ದು, ಉಳಿದವರು ಹೊರಗಿನಿಂದ ಬರುವ ಪ್ರವಾಸಿಗರು ಆಗಿರುತ್ತಾರೆ. ಸ್ಥಳೀಯ ಗ್ರಾಮ ಪಂಚಾಯತ್‌ನಿಂದ ಇವರ ಗುರುತಿನ ಬಗ್ಗೆ ನೀಡುವ ದೃಡೀಕರಣವನ್ನಾಧರಿಸಿ ಇವರಿಗೆ ಇಲಾಖೆಯಿಂದ ರಿಯಾಯಿತಿ ಪಾಸ್ ನೀಡಬಹುದಾಗಿದೆ. ಅಂಬರಗೋಡ್ಲು–ಕಳಸವಳ್ಳಿ ಕಡವಿನಲ್ಲಿ ಧಾರ್ಮಿಕ ಕ್ಷೇತ್ರವಾದ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.

ಆದ್ದರಿಂದ, ಶಿವಮೊಗ್ಗ ವಲಯದ ಅಂಬರಗೋಡ್ಲು – ಕಳಸವಳ್ಳಿ; ಹಸಿರುಮಕ್ಕಿ – ಕೊಲ್ಲೂರು ಮತ್ತು ತಳಕಳಲೆ – ಕುಡಗುಂಜಿ ಕಡವುಗಳಲ್ಲಿ ಪ್ರಯಾಣಿಸುವ ಸ್ಥಳೀಯ ಜನರಿಗೆ ಈ ಹಿಂದಿನ ದರದಲ್ಲಿ ಹಾಸಲು ದರ ನಿಗದಿಪಡಿಸಿ, ಹೊರಗಿನಿಂದ ಬರುವ ಪ್ರವಾಸಿಗರಿಗೆ ಮೇಲೆ (1)ರಲ್ಲಿ ಓದಲಾದ ದಿನಾಂಕ: 12.08.2016ರ ಸರ್ಕಾರದ ಆದೇಶದಲ್ಲಿ ನಿಗಧಿಪಡಿಸಿರುವಂತೆ ಹಾಸಲು ದರವನ್ನು ನಿಗದಿಪಡಿಸಬಹುದಾಗಿದೆ. ಇದರಿಂದ ಸ್ಥಳೀಯ ಜನರಿಗೆ ಸಾಮಾಜಿಕ ನ್ಯಾಯ ಒದಗಿಸಿದಂತಾಗುತ್ತದೆ ಎಂದು ತಿಳಿಸುತ್ತಾ, ಈ ಸಂಬಂಧ ಸರ್ಕಾರವು ಸೂಕ್ತ ಆದೇಶ ಹೊರಡಿಸುವಂತೆ ಕೋರಿರುತ್ತಾರೆ ಹಾಗೂ ಮೇಲ್ಕಂಡ ಸ್ಥಳಗಳಲ್ಲಿ ಸ್ಥಳೀಯರಿಗೆ ರಿಯಾಯಿತಿ ದರದಲ್ಲಿ ಪಾಸು ವಿತರಿಸಲು ಹಾಗೂ ಚಲನಚಿತ್ರ/ಧಾರವಾಹಿ ಚಿತ್ರೀಕರಣಕ್ಕಾಗಿ ಅಥವಾ ಖಾಸಗಿ ಉದ್ದೇಶಕ್ಕಾಗಿ ಲಾಂಚ್‌ಗಳನ್ನು ಬಳಸಿದಲ್ಲಿ ಪ್ರತಿ ಘಂಟೆಗೆ ರೂ.400/- ರಂತೆ ದರ ಆಕರಿಸಲು ಅನುಮೋದನೆ ಕೋರಿರುತ್ತಾರೆ.

ನಿರ್ದೇಶಕರು, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕಾರವಾರ, ರವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ:

ಸರ್ಕಾರದ ಆದೇಶ ಸಂಖ್ಯೆ: ಲೋಇ 86 ಬನೌಸೇ 2014, ಬೆಂಗಳೂರು, ದಿನಾಂಕ : 31.05.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದಾಗಿ, ಸರ್ಕಾರದ ಆದೇಶ ಸಂಖ್ಯೆ: ಲೋಇ 86 ಬನೌಸೇ 2014, ದಿನಾಂಕ: 12.08.2016ರ ಅನುಬಂಧದಲ್ಲಿರುವ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ 19 ಕಡವು ಸೇವೆಗಳ ದರ ಪರಿಷ್ಕರಣೆಯ ಪೈಕಿ ಶಿವಮೊಗ್ಗ ವಲಯಕ್ಕೆ ಸಂಬಂಧಿಸಿದ ಕ್ರಮ ಸಂಖ್ಯೆ: (17)- ಅಂಬರಗೋಡ್ಲು-ಕಳಸವಳ್ಳಿ; (18)-ಹಸಿರುಮಕ್ಕಿ-ಕೊಲ್ಲೂರು ಮತ್ತು (19)-ತಳಕಳಲೆ-ಕುಡುಗುಂಜಿ ಕಡವುಗಳ ಹಾಸಲು ದರಗಳನ್ನು ಈ ಆದೇಶಕ್ಕೆ ಲಗತ್ತಿಸಲಾದ ಅನುಬಂಧದಲ್ಲಿರುವಂತೆ ಪುನರ್ ಪರಿಷ್ಕರಿಸಿ ಆದೇಶಿಸಿದೆ. ಈ ಮೂರು ಕಡವು ಮಾರ್ಗಗಳಲ್ಲಿ ದೃಡವಾದ ಹಾಸಲು ಸಂಗ್ರಹಣಾ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ವಹಿಸುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್.ಎನ್. ಬಸವರಾಜು ಸರ್ಕಾರದ ಅಧೀನ ಕಾರ್ಯದರ್ಶಿ,

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ. (ಬಂದರುಗಳು) ಸರ್ಕಾರದ ಆದೇಶ ಸಂಖ್ಯೆ: ಲೋಇ 86 ಬನೌಸೇ 2014, ದಿನಾಂಕ: 31.05.2017ಕ್ಕೆ ಅನುಬಂಧ

ಶಿವಮೊಗ್ಗ ವಲಯದ ಅಂಬರಗೋಡ್ಲು-ಕಳಸವಳ್ಳಿ, ಹಸಿರುಮಕ್ಕಿ-ಕೊಲ್ಲೂರು, ತಳಕಳಲೆ-ಕುಡುಗುಂಜಿ ಕಡವುಗಳಲ್ಲಿ ಪ್ರಯಾಣಿಸುವ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಹಾಸಲು ದರಗಳ ಪುನರ್ ನಿಗಧಿ

ಕ . ್ರ ಸಂ ಕ ಡವಿನ ಹೆಸರು ಪ್ರಯಾಣಿಕರು ಆಡು ದನ ಸೈಕಲ್ ಮೋಟಾರ್ ಸೈಕಲ್ ಬಸ್ ಕಾರು ವ್ಯಾನ್ ಜೀಪು ಲಾರಿ ಟಿಲ್ಲರ್ ಟ್ರಾಕ್ಟರ್ ಎತ್ತಿನ ಗಾಡಿ ಆಟೋ ರಿಕ್ಷಾ ಸರಕು ಪ್ರತಿ 50 ಕೆ.ಜಿ.ಗೆ ವಿಶೇಷ ಟ್ರಿಪ್ ಒಂದಕ್ಕೆ
ಸ್ಥಳೀಯರು ಪ್ರವಾಸಿಗರು ಸ್ಥಳೀಯರು ಪ್ರವಾಸಿಗರು ಸ್ಥಳೀಯರು ಪ್ರವಾಸಿಗರು ಸ್ಥಳೀಯರು ಪ್ರವಾಸಿಗರು ಸ್ಥಳೀಯರು ಪ್ರವಾಸಿಗರು ಸ್ಥಳೀಯರು ಪ್ರವಾಸಿಗರು ಸ್ಥಳೀಯರು ಪ್ರವಾಸಿಗರು ಸ್ಥಳೀಯರು ಪ್ರವಾಸಿಗರು ಸ್ಥಳೀಯರು ಪ್ರವಾಸಿಗರು ಸ್ಥಳೀಯರು ಪ್ರವಾಸಿಗರು ಸ್ಥಳೀಯರು ಪ್ರವಾಸಿಗರು ಸ್ಥಳೀಯರು ಪ್ರವಾಸಿಗರು ಸ್ಥಳೀಯರು ಪ್ರವಾಸಿಗರು ಸ್ಥಳೀಯರು ಪ್ರವಾಸಿಗರು ಸ್ಥಳೀಯರು ಪ್ರವಾಸಿಗರು ಸ್ಥಳೀಯರು ಪ್ರವಾಸಿಗರು
1 ಅಂಬರಗೊಡ್ಲು - ಕಳಸವಳ್ಳಿ 1 10 2 10 5 10 1 5 5 10 50 100 15 50 15 50 15 50 40 100 15 50 20 50 5 10 5 10 2 10 60 200

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೦೦೮

ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೩, ೨೦೧೭

ಭಾಗ ೧

2 ಹಸಿರು ಮಕ್ಕಿ – ಕ ೂಲ್ಲೂರು ೆ 1 10 2 10 5 10 1 5 5 10 50 100 30 50 30 50 30 50 80 100 15 50 40 50 5 10 5 10 2 10 60 150
3 ತಲಕಳಲೆ – ಕ ುಡುಗುಂಜಿ 1 10 2 10 5 10 1 5 5 10 -- -- -- -- -- -- -- -- -- -- 60 100

ವಿಶೇಷ ಸೂಚನೆ :

➢ ಸ್ಥಳೀಯ ಜನರಿಗೆ ಕೋರಿಕೆ ಮೇರೆಗೆ ರಿಯಾಯಿತಿ ಪಾಸು ವಾರ್ಷಿಕ - `. 500/- ದರದಲ್ಲಿ ವಿತರಿಸುವುದು. ➢ ಚಲನಚಿತ್ರ/ಧಾರವಾಹಿ ಚಿತ್ರೀಕರಣಕ್ಕಾಗಿ ಅಥವಾ ಖಾಸಗಿ ಉದ್ದೇಶಕ್ಕಾಗಿ ಲಾಂಚ್‌ಗಳನ್ನು ಬಳಸಿದಲ್ಲಿ, ಪ್ರತಿ ಘಂಟೆಗೆ `. 400/- ರಂತೆ ದರ ಆಕರಿಸುವುದು. ➢ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ವಾರ್ಷಿಕ `. 100/- ಗಳಿಗೆ ಪಾಸು ವಿತರಿಸುವುದು. ➢ ಮೇಲ್ಕಂಡ ಕಡವುಗಳ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಗ್ರಾಮ/ಪಟ್ಟಣ ಪಂಚಾಯತ್‌ನಿಂದ ನೀಡುವ ಗುರುತಿನ ದೃಡೀಕರಣವನ್ನಾಧರಿಸಿ ಸ್ಥಳೀಯರಿಗೆ ಇಲಾಖೆಯಿಂದ ರಿಯಾಯಿತಿ ದರ/ಪಾಸ್ ನೀಡುವುದು.

P.R. 185

ಎನ್.ಎನ್. ಬಸವರಾಜು

SC-100

ಸರ್ಕಾರದ ಅಧೀನ ಕಾರ್ಯದರ್ಶಿ,

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ. (ಬಂದರುಗಳು) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 13 July 2017. Indian Gazettes, https://egazette.servantsofknowledge.in/details/in.gazette.karnataka_new.2017-07-13.Part-1/. Archive identifier in.gazette.karnataka_new.2017-07-13.Part-1.