Servants of Knowledge
Karnataka Gazette · Government of Karnataka

Karnataka Gazette, Part Part-1, 03 August 2017

Published 03 August 2017

Part
Part-1
Identifier
in.gazette.karnataka_new.2017-08-03.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೨

Volume 152

ಬೆಂಗಳೂರು, ಗುರುವಾರ, ಆಗಸ್ಟ್ ೩, ೨೦೧೭ (ಶ್ರಾವಣ ೧೨, ಶಕ ವರ್ಷ ೧೯೩೯)

Bengaluru, Thursday, August 3, 2017 (Shravana 12, Shaka Varsha 1939)

ಸಂಚಿಕೆ ೩೧

Issue 31

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಕಂದಾಯ ಸಚಿವಾಲಯ

ವಿಷಯ : ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ಕಸಬಾ ಹೋಬಳಿ, ಮೂಡ್ಲುಪಣ್ಣೆ ಗ್ರಾಮದ ಸ.ನಂ. 38 ರಲ್ಲಿ 2-00 ಎಕರೆ ಗೋಮಾಳ ಜಮೀನನ್ನು ತಾಲ್ಲೂಕು ಕುರುಬರ ಸಂಘ(ರಿ), ಕೊರಟಗೆರೆ ತಾಲ್ಲೂಕು, ಇವರಿಗೆ ಮಂಜೂರಾಗಿದ್ದು ಈ ಜಮೀನಿಗೆ ಮಾರ್ಗಸೂಚಿ ಬೆಲೆಯ ಶೇಕಡ 10 ರಷ್ಟು ನಿಗಧಿ ಮಾಡುವ ಬಗ್ಗೆ.

ಓದಲಾಗಿದೆ : 1) ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ಇವರ ಪತ್ರ ಸಂಖ್ಯೆ:ಎಲ್ಎನ್‌ಡಿ/ಸಿಆರ್/6/2014-15, ದಿನಾಂಕ:29-4-2014.

2) ಸರ್ಕಾರದ ಆದೇಶ ಸಂಖ್ಯೆ:ಕಂಇ/43/ಎಲ್‌ಜಿಟಿ/2014, ದಿನಾಂಕ:18-7-2016.

3) ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವರ ನಡವಳಿ ಸಂಖ್ಯೆ:ಕಾ.ಸಂವ್ಯ & ಸನೀಸ(ನ):750/2017, ದಿನಾಂಕ: 25-1-2017.

4) ಮಾನ್ಯ ಮುಖ್ಯಮಂತ್ರಿಯವರ ಪತ್ರ ಸಂಖ್ಯೆ:ಸಿಎಂ/7981/ಆರ್ಇಪಿ-1, ದಿನಾಂಕ: 09-02-2017.

ಪ್ರಸ್ತಾವನೆ:

ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಇವರು ಮೇಲೆ (1)ರಲ್ಲಿ ಓದಲಾದ ದಿನಾಂಕ:29-4-2014ರ ಪತ್ರದಲ್ಲಿ ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ಕಸಬಾ ಹೋಬಳಿ, ಮೂಡ್ಲುಪಣ್ಣೆ ಗ್ರಾಮದ ಸ.ನಂ.38 ರಲ್ಲಿ 2-00ಎಕರೆ ಗೋಮಾಳ ಜಮೀನನ್ನು ತಾಲ್ಲೂಕು ಕುರುಬರ ಸಂಘ(ರಿ), ಕೊರಟಗೆರೆ ತಾಲ್ಲೂಕು, ಇವರಿಗೆ ಮಂಜೂರು ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, ತಾಲ್ಲೂಕು ಕುರುಬರ ಸಂಘ(ರಿ), ಕೊರಟಗೆರೆ ತಾಲ್ಲೂಕು, ಕೊರಟಗೆರೆ ಇವರಿಗೆ ವಿವಿಧ ಉದ್ದೇಶಗಳಿಗಾಗಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ ರನ್ವಯ ಪ್ರಚಲಿತ ಮಾರುಕಟ್ಟೆ ದರ ಹಾಗೂ ನಿಯಮಾನುಸಾರ ಇತರೆ ಶುಲ್ಕಗಳನ್ನು ವಿಧಿಸಿ ಹಾಗೂ ನಗರ/ಮುನ್ಸಿಪಲ್ ವ್ಯಾಪ್ತಿಯೊಳಗೆ ಬರುವ ಸರ್ಕಾರಿ ಜಮೀನನ್ನು ಯಾವುದೇ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಮಂಜೂರು ಮಾಡಬಾರದೆಂದು ನಿಯಮಗಳಲ್ಲಿ ಇರುವ ಅವಕಾಶವನ್ನು ಸಡಲಿಸಿ ಇನ್ನಿತರೆ ಷರತ್ತುಗಳೊಂದಿಗೆ ಮೇಲೆ (2)ರಲ್ಲಿ ಓದಲಾದ ಸರ್ಕಾರಿ ಆದೇಶ ಸಂಖ್ಯೆ: ಕಂಇ/43/ಎಲ್‌ಜಿಟಿ/2014, ದಿನಾಂಕ: 18-7-2016ರಲ್ಲಿ ನೀಡಿ ಆದೇಶಿಸಲಾಗಿದೆ.

ಮೇಲ್ಕಂಡಂತೆ ಆದೇಶ ಹೊರಡಿಸಿದ ನಂತರ ಮೇಲೆ (3) ರಲ್ಲಿ ಓದಲಾದ ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವರ ನಡವಳಿ ದಿನಾಂಕ:25-1-2017 ಅನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಕಳುಹಿಸಿ ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ಕಸಬಾ ಹೋಬಳಿ, ಮೂಡ್ಲುಪಣ್ಣೆ ಗ್ರಾಮದ ಸ.ನಂ.38 ರಲ್ಲಿ 2-00ಎಕರೆ ಗೋಮಾಳ ಜಮೀನನ್ನು ತಾಲ್ಲೂಕು ಕುರುಬರ ಸಂಘ(ರಿ), ಕೊರಟಗೆರೆ ತಾಲ್ಲೂಕು, ಇವರಿಗೆ ಮಂಜೂರಾಗಿದ್ದು ಈ ಜಮೀನಿಗೆ ಮಾರ್ಗಸೂಚಿ ಬೆಲೆಯ ಶೇ. 10ರಷ್ಟು ಬೆಲೆ ನಿಗದಿಮಾಡಲು ಕೋರಿರುತ್ತಾರೆ. ಮಾನ್ಯ ಮುಖ್ಯಮಂತ್ರಿಗಳ ಮೇಲೆ (4) ರಲ್ಲಿ ಓದಲಾದ ದಿನಾಂಕ:09-2-2017 ಅನ್ನು ಕಂದಾಯ ಇಲಾಖೆಗೆ ಕಳುಹಿಸಿ ಸಚಿವ ಸಂಪುಟದ ಮುಂದೆ ತರುವುದು ಎಂದು ಮಾನ್ಯ ಮುಖ್ಯಮಂತ್ರಿಗಳು ಆದೇಶಿಸಿರುತ್ತಾರೆ.

ಸದರಿ ಕೋರಿಕೆಯ ಹಿನ್ನೆಲೆಯಲ್ಲಿ ಈ ಬಗ್ಗೆ ಸರ್ಕಾರವು ಪುನರ್ ಪರಿಶೀಲಿಸಿದೆ. ಹಾಗೂ ಸರ್ಕಾರಿ ಆದೇಶ ಸಂಖ್ಯೆ: ಕಂಇ/43/ಎಲ್‌ಜಿಟಿ/2014, ದಿನಾಂಕ:18-7-2016 ಅನ್ನು ಮಾರ್ಪಡಿಸಿ ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ಕಸಬಾ ಹೋಬಳಿ, ಮೂಡ್ಲುಪಣ್ಣೆ ಗ್ರಾಮದ ಸ.ನಂ.38 ರಲ್ಲಿ 2-00 ಎಕರೆ ಗೋಮಾಳ ಜಮೀನನ್ನು ತಾಲ್ಲೂಕು ಕುರುಬರ ಸಂಘ(ರಿ), ಕೊರಟಗೆರೆ ತಾಲ್ಲೂಕು, ಇವರಿಗೆ ವಿವಿಧ ಉದ್ದೇಶಗಳಿಗಾಗಿ ಪ್ರಚಲಿತ ಮಾರುಕಟ್ಟೆ ದರ

(೧೦೫೩)೧೦೫೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩, ೨೦೧೭ ಭಾಗ ೧ ಹಾಗೂ ನಿಯಮಾನುಸಾರ ಇತರೆ ಶುಲ್ಕಗಳನ್ನು ವಿಧಿಸಿ ಮಂಜೂರು ಮಾಡುವ ಬದಲಾಗಿ ಸದರಿ ಜಮೀನನ್ನು ಮಾರ್ಗಸೂಚಿ ಬೆಲೆಯ ಶೇ.10 ರಷ್ಟು ದರ ವಿಧಿಸಿ ಮಂಜೂರು (grant) ಮಾಡಲು ಸರ್ಕಾರವು ತೀರ್ಮಾನಿಸಿದೆ.

ಆದುದರಿಂದ, ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಕಂಇ 09 ಎಲ್‌ಜಿಟಿ 2017, ಬೆಂಗಳೂರು ದಿನಾಂಕ: 28-06-2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ಕಸಬಾ ಹೋಬಳಿ ಮೂಡ್ಲಪಣ್ಣೆ ಗ್ರಾಮದ ಸ.ನಂ.38ರಲ್ಲಿ 2-00ಎಕರೆ ಗೋಮಾಳ ಜಮೀನನ್ನು ತಾಲ್ಲೂಕು ಕುರುಬರ ಸಂಘ(ರಿ) ಕೊರಟಗೆರೆ ತಾಲ್ಲೂಕು, ಕೊರಟಗೆರೆ ಇವರಿಗೆ ವಿವಿಧ ಉದ್ದೇಶಗಳಿಗಾಗಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22-ಎ ರನ್ವಯ ಪ್ರಚಲಿತ ಮಾರುಕಟ್ಟೆ ದರ ಹಾಗೂ ನಿಯಮಾನುಸಾರ ಇತರೆ ಶುಲ್ಕಗಳನ್ನು ವಿಧಿಸಿ ಹಾಗೂ ನಗರ/ಮುನಿಸಿಪಲ್ ವ್ಯಾಪ್ತಿಯೊಳಗೆ ಬರುವ ಸರ್ಕಾರಿ ಜಮೀನನ್ನು ಯಾವುದೇ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಮಂಜೂರು ಮಾಡಬಾರದೆಂದು ನಿಯಮಗಳಲ್ಲಿ ಇರುವ ಅವಕಾಶವನ್ನು ಸಡಿಲಿಸಿ ಮಂಜೂರು ಮಾಡುವ ಬದಲಾಗಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22-ಎ ಅನ್ನು ಸಡಿಲಿಸಿ ಸದರಿ ಜಮೀನನ್ನು ಮಾರ್ಗಸೂಚಿ ಬೆಲೆಯ ಶೇ.10 ರಷ್ಟು ದರ ವಿಧಿಸಿ ಮಂಜೂರು (grant) ಮಾಡಿ ಈ ಮೂಲಕ ಆದೇಶಿಸಿದೆ.

1. ಜಮೀನು ಹಸ್ತಾಂತರ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ ಇವರು ನಿಯಮಾನುಸಾರ ನಿರ್ವಹಿಸಲು ನಿರ್ದೇಶನ ನೀಡಿದೆ.

2. ಮಂಜೂರಾದ ಭೂಮಿಯನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.

3. ಮಂಜೂರು ಮಾಡಲ್ಪಡುವ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ದಾವೆಗಳು ದಾಖಲಾಗಿದ್ದಲ್ಲಿ ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.

4. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲಿ, ಗುತ್ತಿಗೆ/ಉಪಗುತ್ತಿಗೆ ನೀಡುವುದಾಗಲಿ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು ಹಾಗೂ ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು.

5. ಮಂಜೂರಾದ ಜಮೀನಿನಲ್ಲಿ, ಅಭಿವೃದ್ದಿ ಕಾರ್ಯಗಳನ್ನು ಆರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರಾವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

6. ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ, ಈ ಮಂಜೂರಾತಿ ಆದೇಶ ತನ್ನಷ್ಟಕ್ಕೆ ತಾನೇ ರದ್ದಾಗುವುದು ಹಾಗೂ ಯಾವುದೇ ಪರಿಹಾರ ನೀಡದೆ ಮಂಜುರಾದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು.

ಈ ಆದೇಶವು ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು, 1977ರ ನಿಯಮ 17ರ ಉಪನಿಯಮ (2)ರ ವ್ಯಾಪ್ತಿಯಡಿ ಬರುತ್ತಿದ್ದು ಅದರನ್ವಯ ಹೊರಡಿಸಲಾಗಿದೆ.

PR – 206

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50

ಎಂ.ಇ.ಚನ್ನಬಸವರಾಜ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಭೂ ಮಂಜೂರಾತಿ-3)

ಕಂದಾಯ ಸಚಿವಾಲಯ

ತಿದ್ದುಪಡಿ

ಸಂಖ್ಯೆ : ಕಂಇ 10 ಮುಆಬಿ 2017, ಬೆಂಗಳೂರು, ದಿನಾಂಕ: 14-06-2017

ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಿ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿರುವ ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 87 ಮುಆಬಿ 2012 ದಿನಾಂಕ:29-09-2012ರ ಪುಟ ಸಂಖ್ಯೆ:290, ಕ್ರಮ ಸಂಖ್ಯೆ:1 ರಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯ ತಾಲ್ಲೂಕು, ಎಡಮಂಗಲ ಗ್ರಾಮ, ಕೇರ್ಪಡ "ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ"ದ ಹೆಸರನ್ನು "ಶ್ರೀ ಮಹಿಷಮರ್ಧಿನಿ ದೇವಾಲಯ" ಕೇರ್ಪಡ ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

PR – 207

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 25

ಬಿ.ಎಸ್. ನಾಗರತ್ನಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಮುಜರಾಯಿ)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩, ೨೦೧೭ ೧೦೫೫ PERSONNEL AND ADMINISTRATIVE REFORMS SECRETARIAT

CORRIGENDUM

No. DPAR 57 SE VU NYA 2016, BENGALURU, DATED: 27-06-2017

Sub: Extension of Medical expenses reimbursement to the retired Chief Justices and Judges of the High Court of Karnataka.

For the words appearing in condition (c), appearing in Order portion of the Government Order No. DPAR 18 SE VU NYA 2011 (Part), dated 25-06-2011, the following words may be substituted and it shall be always deemed to have been substituted:-

"c) who are not engaged or re-employed in any Government Assignments

Provided that the retired Chief Justices and Judges on such re-employment may be permitted to avail of

Medical Reimbursement either as specified in this Government Order or as per the Medical Reimbursement

benefits that may be availed from the office where the retired Chief Justices and Judges are re-employed."

By Order and in the name of the Governor of Karnataka, PR - 208

S.D.SUNANDA

Under Secretary to Government,

Department of Personnel and Administrative Reforms (Services-3).

ಮೂಲಸೌಲಭ್ಯ ಅಭಿವೃದ್ಧಿ ಸಚಿವಾಲಯ

ವಿಷಯ : ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿನ ವಿಮಾನಯಾನ ಅಭಿವೃದ್ಧಿ ಕೋಶವನ್ನು "ಮೂಲಸೌಲಭ್ಯ ಅಭಿವೃದ್ಧಿ ಕೋಶ" ವನ್ನಾಗಿ ಪದನಾಮೀಕರಿಸುವ ಬಗ್ಗೆ.

ಓದಲಾಗಿದೆ : 1. ಸರ್ಕಾರಿ ಆದೇಶ ಸಂಖ್ಯೆ : ಮೂಅಇ 7 ರಾಅವಿ 2002, ದಿನಾಂಕ : 22.04.2002. 2. ಸರ್ಕಾರದ ಪತ್ರ ಸಂಖ್ಯೆ : ಮೂಅಇ 125 ರಾಅವಿ 2008, ದಿನಾಂಕ : 24.03.2009. 3. ಸರ್ಕಾರದ ಪತ್ರ ಸಂಖ್ಯೆ : ಮೂಅಇ 37 ರಾಅವಿ 2003 (ಭಾಗ-2), ದಿನಾಂಕ : 03.04.2010.

4. ವ್ಯವಸ್ಥಾಪಕ ನಿರ್ದೇಶಕರು, ಕೆ.ಎಸ್.ಐ.ಐ.ಡಿ.ಸಿ. ಇವರ ಪತ್ರ ಸಂಖ್ಯೆ : GM/IPD/2112/2014-15, ದಿನಾಂಕ : 08.01.2015.

5. ವ್ಯವಸ್ಥಾಪಕ ನಿರ್ದೇಶಕರು, ಕೆ.ಎಸ್.ಐ.ಐ.ಡಿ.ಸಿ. ಇವರ ಪತ್ರ ಸಂಖ್ಯೆ: GM/IPD/2576/2014-15, ದಿನಾಂಕ : 10.03.2015.

6. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ದಿನಾಂಕ:10.08.2015 ರಂದು ನಡೆದ ಸಭೆಯ ನಡವಳಿಗಳು.

7. ಸರ್ಕಾರದ ಆದೇಶ ಸಂಖ್ಯೆ : ಮೂಅಇ 163 ರಾಅವಿ 2014, ದಿನಾಂಕ : 05.11.2015.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ದಿನಾಂಕ:22.04.2002 ರ ಆದೇಶದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸಲು ಯೋಜನೆಯ ನೋಡೆಲ್ ಏಜೆನ್ಸಿಯಾದ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSIIDC) , ಬೆಂಗಳೂರು ಇಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಕೋಶವನ್ನು (BIAP Cell) ಸೃಜಿಸಲಾಗಿದೆ ಮತ್ತು, ಈ ಕೋಶದ ನಿರ್ವಹಣೆಗಾಗಿ ವಿವಿಧ ಸರ್ಕಾರಿ ಆದೇಶಗಳಲ್ಲಿ ಅಗತ್ಯ ಅನುದಾನವನ್ನು 2016-17ನೇ ಸಾಲಿನವರೆಗೆ ಕೆ.ಎಸ್.ಐ.ಐ.ಡಿ.ಸಿ. ಗೆ ಬಿಡುಗಡೆ ಮಾಡಲಾಗಿರುತ್ತದೆ.

2) ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ದಿ:24.03.2009 ರ ಪತ್ರದಲ್ಲಿ ರಾಜ್ಯದ ವಿವಿಧ ಕಡೆ ವಿಮಾನ ಇಳಿದಾಣಗಳನ್ನು ನಿರ್ಮಿಸಲು ಪೂರ್ವ ತಯಾರಿ ಹಾಗೂ ಮಾಸ್ಟರ್ ಪ್ಲಾನ್ ತಯಾರಿಸಲು ಕರ್ನಾಟಕ ಗೃಹ ಮಂಡಳಿಗೆ ಸೂಚನೆಗಳನ್ನು ನೀಡಲಾಗಿರುತ್ತದೆ. ಮುಂದುವರೆದು, ಮೇಲೆ ಓದಲಾದ ಕ್ರಮ ಸಂಖ್ಯೆ (3) ರ ಪತ್ರದಲ್ಲಿ ಕರ್ನಾಟಕ ಗೃಹ ಮಂಡಳಿಯನ್ನು ವಿಮಾನ ಇಳಿದಾಣಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೋಡೆಲ್ ಏಜೆನ್ಸಿಯಾಗಿ ನೇಮಿಸಲಾಗಿರುತ್ತದೆ.

3) ಮೇಲೆ ಓದಲಾದ ಕ್ರಮ ಸಂಖ್ಯೆ (4) ಮತ್ತು (5) ರ ಪತ್ರಗಳಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕೆ.ಎಸ್.ಐ.ಐ.ಡಿ.ಸಿ. ಇವರು ವಿಮಾನ ನಿಲ್ದಾಣ ಮೂಲಸೌಲಭ್ಯ ಅಭಿವೃದ್ಧಿ ನಿಗಮ ಎಂಬುದರ ಬದಲಾಗಿ "ವಿಮಾನ ನಿಲ್ದಾಣ ಮೂಲಸೌಲಭ್ಯ ಅಭಿವೃದ್ಧಿ ಕೋಶ"ವನ್ನು ಸೃಜಿಸಲು ಮತ್ತು ಸದರಿ ಕೋಶದ ಜವಾಬ್ದಾರಿ, ಕಾರ್ಯನಿರ್ವಹಣೆ, ಕೋಶಕ್ಕೆ ಬೇಕಾದ ಸಿಬ್ಬಂದಿ ಮತ್ತು ಅದರ ನಿರ್ವಹಣೆಗಾಗಿ ತಗಲುವ ವಾರ್ಷಿಕ ವೆಚ್ಚದ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸಿರುತ್ತಾರೆ.

4) ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ, ಮೇಲೆ ಓದಲಾದ ಕ್ರಮ ಸಂಖ್ಯೆ (6) ರ ದಿನಾಂಕ:10.08.2015 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಸಭಾ ನಡವಳಿಯಲ್ಲಿ ನಿರ್ಣಯಿಸಿದಂತೆ, ಮೇಲೆ ಓದಲಾದ ಕ್ರಮ ಸಂಖ್ಯೆ (7) ರ ದಿನಾಂಕ:05.11.2015 ರ ಸರ್ಕಾರಿ ಆದೇಶದಲ್ಲಿ ಈ ಕೆಳಕಂಡ ಷರತ್ತುಗಳನ್ನು ವಿಧಿಸಿ ಆದೇಶಿಸಲಾಗಿದೆ:

೧೦೫೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩, ೨೦೧೭ ಭಾಗ ೧

➢ ಕೆ.ಎಸ್.ಐ.ಐ.ಡಿ.ಸಿ. ಯಲ್ಲಿ ಹೊಸ ವಿಮಾನ ನಿಲ್ದಾಣ ಅಭಿವೃದ್ಧಿ ಕೋಶವನ್ನು ಸೃಜಿಸಿ ಈಗಾಗಲೇ ಹಾಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಕೋಶವನ್ನು ಹೊಸ ವಿಮಾನ ನಿಲ್ದಾಣ ಅಭಿವೃದ್ಧಿ ಕೋಶದಲ್ಲಿ ವಿಲೀನಗೊಳಿಸುವುದು.

➢ ಕರ್ನಾಟಕ ಗೃಹ ಮಂಡಳಿಯು ವಿಮಾನ ಇಳಿದಾಣಗಳ ಅಭಿವೃದ್ಧಿಗಾಗಿ ಬಳಸಿರುವ ಅನುದಾನದ ಉಪಯೋಗಿತ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ನೀಡುವುದು.

➢ ಕರ್ನಾಟಕ ಗೃಹ ಮಂಡಳಿಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಮೊತ್ತದಲ್ಲಿ ಬಾಕಿ ಇರುವ ಅನುದಾನವನ್ನು ಕೆ.ಎಸ್.ಐ.ಐ.ಡಿ.ಸಿ ಗೆ ವರ್ಗಾಯಿಸುವುದು ಹಾಗೂ

➢ ಕರ್ನಾಟಕ ಗೃಹ ಮಂಡಳಿಗೆ ವಹಿಸಲಾಗಿದ್ದ ವಿಮಾನ ಇಳಿದಾಣ ಅಭಿವೃದ್ಧಿಯ ನೋಡೆಲ್ ಏಜೆನ್ಸಿ ಜವಾಬ್ದಾರಿಯನ್ನು ಕರ್ನಾಟಕ ಗೃಹ ಮಂಡಳಿಯಿಂದ ಹಿಂಪಡೆದು, ಕೆ.ಎಸ್.ಐ.ಐ.ಡಿ.ಸಿ. ಗೆ ವಹಿಸುವುದು.

5) ಮುಂದುವರೆದು, ವಿಮಾನ ನಿಲ್ದಾಣದ ವಿಷಯಗಳಿಗೆ ಸಂಬಂಧಪಟ್ಟಂತೆ ಕೆ.ಎಸ್.ಐ.ಐ.ಡಿ.ಸಿ. ಯು ವಿಮಾನ ನಿಲ್ದಾಣ ಅಭಿವೃದ್ಧಿ ಕೋಶದ ಮುಖಾಂತರ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ನೆರವು ನೀಡುತ್ತಿದೆ. ಆದರೆ ರೈಲ್ವೆ ವಿಷಯಗಳಿಗೆ ಸಂಬಂಧಿಸಿದ ಎಲ್ಲಾ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಹಾಗೂ ಈ ಯೋಜನೆಗಳಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಗಳು ತುಂಬ ವಿಳಂಬವಾಗುತ್ತಿದೆ. ಆದ್ದರಿಂದ ವಿಮಾನ ನಿಲ್ದಾಣ ಯೋಜನೆಗಳ ಜೊತೆಗೆ ರೈಲ್ವೆ ಯೋಜನೆಗಳನ್ನು ಸಹ ಶೀಘ್ರವಾಗಿ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಸೂಕ್ತ ಮೇಲ್ವಿಚಾರಣಾ (ಮಾನಿಟರಿಂಗ್) ವ್ಯವಸ್ಥೆಯ ಅವಶ್ಯಕತೆ ಇರುತ್ತದೆ. ಆದ್ದರಿಂದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಎಲ್ಲಾ ಯೋಜನೆಗಳನ್ನು ಮಾನಿಟರ್ ಮಾಡಲು ಪ್ರಸ್ತುತ ಈಗ ಕಾರ್ಯನಿರ್ವಹಿಸುತ್ತಿರುವ ವಿಮಾನ ನಿಲ್ದಾಣ ಅಭಿವೃದ್ಧಿ ಕೋಶ/ವಿಮಾನಯಾನ ಅಭಿವೃದ್ಧಿ ಕೋಶವನ್ನು "ಮೂಲಸೌಲಭ್ಯ ಅಭಿವೃದ್ಧಿ ಕೋಶ" ವನ್ನಾಗಿ ಪದನಾಮೀಕರಿಸಿ, ಕೆ.ಎಸ್.ಐ.ಐ.ಡಿ.ಸಿ ರವರ ಮುಖಾಂತರ ಇಲಾಖೆಯ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾನಿಟರ್ ಮಾಡಲು ಒಂದು ಸಾಫ್ಟ್‌ವೇರ್‌ನ್ನು ಅಭಿವೃದ್ಧಿ ಪಡಿಸಿ, ಅದನ್ನು ಕೆ.ಟಿ.ಪಿ.ಪಿ. ಕಾಯ್ದೆಯನ್ವಯ ಕ್ರಮ ಕೈಗೊಳ್ಳುವಂತೆ ನಿರ್ಧರಿಸಲಾಗಿದೆ.

6) ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ:ಮೂಅಇ 38 ಮೂಇವಿ 2017, ಬೆಂಗಳೂರು, ದಿನಾಂಕ:14.07.2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕೆ.ಎಸ್.ಐ.ಐ.ಡಿ.ಸಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಮಾನ ನಿಲ್ದಾಣ ಅಭಿವೃದ್ಧಿ ಕೋಶವನ್ನು/ವಿಮಾನಯಾನ ಅಭಿವೃದ್ಧಿ ಕೋಶವನ್ನು "ಮೂಲಸೌಲಭ್ಯ ಅಭಿವೃದ್ಧಿ ಕೋಶ" (Infrastructure Development Cell) ವನ್ನಾಗಿ ಪದನಾಮೀಕರಿಸಲಾಗಿದೆ. ಈ ಮೂಲಸೌಲಭ್ಯ ಅಭಿವೃದ್ಧಿ ಕೋಶದ ವತಿಯಿಂದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಯೋಜನೆಗಳನ್ನು ಮಾನಿಟರ್ ಮಾಡಲು ಕೆ.ಎಸ್.ಐ.ಐ.ಡಿ.ಸಿ. ಯನ್ನು ನೋಡೆಲ್ ಏಜೆನ್ಸಿಯಾಗಿ ನೇಮಿಸಿ, ಈ ಕೆಳಕಂಡ ಷರತ್ತಿಗೆ ಒಳಪಟ್ಟು ಸರ್ಕಾರದ ಮಂಜೂರಾತಿ ನೀಡಿದೆ :

1) ಕೆ.ಎಸ್.ಐ.ಐ.ಡಿ.ಸಿ.ಯು ವಿಮಾನಯಾನ ಅಭಿವೃದ್ಧಿ ಕೋಶಕ್ಕೆ ನಿಗದಿಪಡಿಸಲಾಗಿರುವ ಅನುದಾನವನ್ನೇ ಮೂಲಸೌಲಭ್ಯ ಅಭಿವೃದ್ಧಿ ಕೋಶದ ನಿರ್ವಹಣೆಗೆ ಉಪಯೋಗಿಸತಕ್ಕದ್ದು;

2) ಕೆ.ಎಸ್.ಐ.ಐ.ಡಿ.ಸಿ. ಯವರು ಮೂಲಸೌಲಭ್ಯ ಅಭಿವೃದ್ಧಿ ಕೋಶದಲ್ಲಿ ರೈಲ್ವೆ ಯೋಜನೆಗಳನ್ನೊಳಗೊಂಡಂತೆ ಇಲಾಖೆಯ ಎಲ್ಲಾ ಯೋಜನೆಗಳನ್ನು ಮಾನಿಟರ್ ಮಾಡಲು ನವೀನ ತಂತ್ರಜ್ಞಾನವನ್ನು (software) ಬಳಸಿಕೊಂಡು, ಪ್ರಾರಂಭಿಕವಾಗಿ ರೈಲ್ವೆ ಯೋಜನೆಗಳನ್ನು ಮಾನಿಟರ್ ಮಾಡಲು ಅಗತ್ಯ ಸೇವೆಗಳು ಮತ್ತು ಇತ್ಯಾದಿಗಳನ್ನು ಕೆ.ಟಿ.ಪಿ.ಪಿ. ಕಾಯ್ದೆಯನ್ವಯ ಸಂಗ್ರಹಿಸತಕ್ಕದ್ದು (Procurement).

3) ಈ ವೆಚ್ಚವನ್ನು ಲೆಕ್ಕ ಶೀರ್ಷಿಕೆ "3451-00-090-1-20-059-ವಿಮಾನಯಾನ ಅಭಿವೃದ್ಧಿ ಕೋಶ-ಇತರೆ ಖರ್ಚುಗಳು" ಇದರಡಿಯಲ್ಲಿ 2017- 18 ನೇ ಸಾಲಿನಲ್ಲಿ ಒದಗಿಸಿರುವ ಆಯವ್ಯಯದಿಂದ ಭರಿಸತಕ್ಕದ್ದು.

4) ಈ ಆದೇಶವನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಳಿಗೆ ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 01 ಟಿಎಫ್‌ಪಿ 2017, ದಿ:05.04.2017 ರಲ್ಲಿ ಪ್ರತ್ಯಾಯೋಜಿಸಿರುವ ಆರ್ಥಿಕ ಅಧಿಕಾರದನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR – 253

ವೆಂಕಟೇಶ ಮೂರ್ತಿ ಎಂ

SC - 50

ಸರ್ಕಾರದ ಅಧೀನ ಕಾರ್ಯದರ್ಶಿ-2,

ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ.

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಯುಸೇಇ 112 ಯುಸೇಕ್ರೀ 2017, ಬೆಂಗಳೂರು, ದಿನಾಂಕ: 21-04-2017

ಬೆಂಗಳೂರು ನಗರದಲ್ಲಿನ ಅಕ್ಕಿತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣಕ್ಕೆ ಈ ಕೂಡಲೇ ಜಾರಿಗೆ ಬರುವಂತೆ " ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಹಾಕಿ ಕ್ರೀಡಾಂಗಣ" ಎಂದು ನಾಮಕರಣ ಮಾಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR-215

ಆರ್. ಪ್ರಭುಶಂಕರ್

ಸರ್ಕಾರದ ಅಧೀನ ಕಾರ್ಯದರ್ಶಿ,

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩, ೨೦೧೭ ೧೦೫೭

ಒಳಾಡಳಿತ ಸಚಿವಾಲಯ

ವಿಷಯ: ಕುಮಾರಿ ಲೀಷಾ ಎನ್.ಎಸ್ ಬಿನ್ ಎನ್.ದೊರೆಸ್ವಾಮಿ, ಬೆಂಗಳೂರು ಇವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ.

ಓದಲಾಗಿದೆ:

1. ಕು.ಲೀಷಾ ರವರ ಮನವಿ ದಿನಾಂಕ 05.01.2015. 2. ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶ ದಿನಾಂಕ: 17.10.2016. 3. ಸಚಿವ ಸಂಪುಟದ ನಿರ್ಣಯ ಸಂಖ್ಯೆ- C.391/2017.

ಪ್ರಸ್ತಾವನೆ :

ದಿನಾಂಕ 17.04.2013 ರಂದು ಮಲ್ಲೇಶ್ವರಂ ಟೆಂಪಲ್ ಸ್ಟ್ರೀಟ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಕು.ಲೀಷಾ ಎನ್.ಎಸ್. ರವರು ತೀವ್ರವಾಗಿ ಗಾಯಗೊಂಡಿದ್ದು, ನಂತರ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಚಿಕಿತ್ಸೆ ಪಡೆದಿದ್ದು, ಶೇಕಡಾ 70 ರಷ್ಟು ಅಂಗವೈಕಲ್ಯ ಹೊಂದಿರುತ್ತಾರೆ. ಈ ಮಧ್ಯೆ ಅವರು ತಮ್ಮ ಇಂಜಿನಿಯರಿಂಗ್ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಬಿ.ಸಿ.ಎ ಪದವಿಯನ್ನು ಸರಾಸರಿ ಶೇಕಡಾ 73 ಅಂಕ ಪಡೆದು ಉತ್ತೀರ್ಣರಾಗಿರುತ್ತಾರೆ.

2) ಕು.ಲೀಷಾ ರವರು ಸರ್ಕಾರಕ್ಕೆ ಹಲವಾರು ಮನವಿಗಳನ್ನು ಸಲ್ಲಿಸಿ ತನ್ನ ಪ್ರಕರಣವನ್ನು 'ವಿಶೇಷ ಪ್ರಕರಣ' ಎಂದು ಪರಿಗಣಿಸಿ, ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಹಾಗೂ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಭರಿಸುವಂತೆ ಕೋರಿರುತ್ತಾರೆ. ಸರ್ಕಾರವು ಈಗಾಗಲೇ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ `. 10,17,078/- ಹಾಗೂ ಕೇಂದ್ರ ಸರ್ಕಾರದ "Victim Compensation Scheme 2011" ಯೋಜನೆಯ `.3.00 ಲಕ್ಷಗಳನ್ನು ಸಂತ್ರಸ್ಥೆಗೆ ವಿತರಿಸಿದೆ.

3) ಕು.ಲೀಷಾ ರವರು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿ ಸಂಖ್ಯೆ: 15990/2015ರಲ್ಲಿ ಮೇಲೆ ಓದಲಾದ (2)ರ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಂತೆ, ಸಂತ್ರಸ್ಥೆಯ ದಿನಾಂಕ:5.1.15ರ ಮನವಿಯನ್ನು ಪರಿಗಣಿಸಿ, ಅನುಕಂಪದ ಆಧಾರದ ಮೇರೆಗೆ ನ್ಯಾಯಾಲಯದ ಆದೇಶದ ದಿನಾಂಕದಿಂದ 03 ತಿಂಗಳೊಳಗಾಗಿ ಅವರ ವಿದ್ಯಾರ್ಹತೆಗೆ ತಕ್ಕ ಹುದ್ದೆಯನ್ನು ನೀಡಬೇಕೆಂದು ಸೂಚಿಸಿದೆ.

4) ಮೇಲೆ ಓದಲಾದ (3)ರ ಸಚಿವ ಸಂಪುಟದ ನಿರ್ಣಯದನ್ವಯ ಸಂತ್ರಸ್ಥೆಗೆ ಅನುಕಂಪದ ಆಧಾರದ ಮೇಲೆ Group "C" ಉದ್ಯೋಗ ನೀಡಲು ಹಾಲಿ ನಿಯಮಗಳಲ್ಲಿ ಅವಕಾಶವಿಲ್ಲದಿರುವುದರಿಂದ, ಸಿ.ಆ.ಸು ಇಲಾಖೆಯು ಸದರಿ ಪ್ರಕರಣಕ್ಕೆ ವಿನಾಯಿತಿ ನೀಡಿ ವಿಶೇಷ ನಿಯಮವನ್ನು ರೂಪಿಸಬೇಕೆಂದು, ಸಚಿವ ಸಂಪುಟವು ತೀರ್ಮಾನಿಸಿದೆ.

ಸಚಿವ ಸಂಪುಟದ ನಿರ್ಣಯದನ್ವಯ ಸಿ.ಆ.ಸು. ಇಲಾಖೆಯವರು ಕ್ರಮ ಕೈಗೊಳ್ಳಬೇಕಿದ್ದು, ಅದರಂತೆ, ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 09 ಸಿಆರ್ಆರ್ 2013 ಬೆಂಗಳೂರು, ದಿನಾಂಕ:01.07.2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಕು.ಲೀಷಾ ಎನ್.ಎಸ್. ರವರಿಗೆ ಅನುಕಂಪದ ಆಧಾರದ ಮೇಲೆ ಗ್ರೂಪ್ "ಸಿ" ಹುದ್ದೆಯನ್ನು ನೀಡಲು ಹಾಲಿ ನಿಯಮಗಳಲ್ಲಿ ಅವಕಾಶವಿಲ್ಲದಿರುವುದರಿಂದ ಸಿ.ಆ.ಸು. ಇಲಾಖೆಯು ಸದರಿ ಪ್ರಕರಣಕ್ಕೆ ವಿನಾಯಿತಿ ನೀಡಿ ವಿಶೇಷ ನಿಯಮಾವಳಿಯನ್ನು ರೂಪಿಸಿ, ಸಂತ್ರಸ್ಥೆಗೆ ಉದ್ಯೋಗಾವಕಾಶವನ್ನು ಕಲ್ಪಿಸಬೇಕೆಂದು ಸೂಚಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR - 216

ಕೆ. ಪದ್ಮಿನಿದೇವಿ

SC - 30

ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ, (ಕಾನೂನು ಮತ್ತು ಸುವ್ಯವಸ್ಥೆ)

ಕಾರ್ಮಿಕ ಸಚಿವಾಲಯ

ವಿಷಯ: ಕರ್ನಾಟಕ ಖಾಸಗಿ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಕಲ್ಪಿಸಲು ಯೋಜನೆಯನ್ನು ರೂಪಿಸುವ ಬಗ್ಗೆ.

ಓದಲಾಗಿದೆ: ಕಾರ್ಮಿಕ ಆಯುಕ್ತರ ಪತ್ರ ಸಂಖ್ಯೆ: ಐಎಎ-2/ಇತರೆ/ಸಿಆರ್-01/2016-17, ದಿನಾಂಕ: 07.04.2017

ಪ್ರಸ್ತಾವನೆ :

2017-18ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯ ಮಂತ್ರಿಯವರು ಖಂಡಿಕೆ 239ರಲ್ಲಿ "ಖಾಸಗಿ ವಲಯದ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಕಾರ್ಮಿಕರಿಗೆ ಉದ್ಯೋಗ ದೊರಕಿಸಿಕೊಡುವ ಸದುದ್ದೇಶದಿಂದ 'ಆಶಾದೀಪ ಯೋಜನೆ' ಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ಖಾಸಗಿ ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಳ್ಳುವ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಆಡಳಿತ ವರ್ಗದವರು ಪಾವತಿಸಬೇಕಿರುವ ESI ಮತ್ತು ಭವಿಷ್ಯ ನಿಧಿ ವಂತಿಗೆಯನ್ನು ಸರ್ಕಾರವೇ ಭರಿಸಲಿದೆ. ಪರಿಶಿಷ್ಟ ಜಾತಿ ಉಪಯೋಜನೆ / ಗಿರಿಜನ ಉಪಯೋಜನೆ ಕಾರ್ಯಕ್ರಮದಡಿ ಈ ಉದ್ದೇಶಕ್ಕೆ ಪ್ರಾರಂಭಿಕವಾಗಿ 5.00 ಕೋಟಿ `. ಒದಗಿಸಲಾಗುವುದು" ಎಂದು ಘೋಷಿಸಿರುತ್ತಾರೆ.

ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಆಗುತ್ತಿರುವ ತಾರತಮ್ಯವನ್ನು ಕಡಿಮೆ ಮಾಡುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ನೇಮಕಾತಿಯಲ್ಲಿ ಅನುಸರಿಸುತ್ತಿರುವ ಮೀಸಲಾತಿ ನೀತಿಯ ರೀತಿಯಲ್ಲಿಯೇ ಖಾಸಗಿ ವಲಯದ ಕೈಗಾರಿಕೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು, ಹೋಟೆಲ್‌ಗಳು ಸಂಘ ಸಂಸ್ಥೆಗಳು ಹಾಗೂ ಇತ್ಯಾದಿ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಾಗ ಮೀಸಲಾತಿ ನೀಡಿದಲ್ಲಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಈ ವರ್ಗದ ಜನರ ಮಟ್ಟದಲ್ಲಿ೧೦೫೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩, ೨೦೧೭ ಭಾಗ ೧ ಸುಧಾರಣೆ ತರಬಹುದಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ವಲಯದ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಕಾರ್ಮಿಕರಿಗೆ ಉದ್ಯೋಗ ದೊರಕಿಸಿಕೊಡುವ ಸದುದ್ದೇಶದಿಂದ 'ಆಶಾದೀಪ ಯೋಜನೆ'ಯನ್ನು ಜಾರಿಗೊಳಿಸುವಂತೆ ಮೇಲೆ ಓದಲಾದ ಪತ್ರದಲ್ಲಿ ಕಾರ್ಮಿಕ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಮುಂದಿನಂತೆ ಆದೇಶ ಹೊರಡಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಕಾಇ 327 ಎಲ್ಇಟಿ 2016, ದಿನಾಂಕ: 03.07.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಕಾರ್ಮಿಕರಿಗೆ ಉದ್ಯೋಗ ದೊರಕಿಸಿಕೊಡುವ ಸದುದ್ದೇಶದಿಂದ 2017-18ನೇ ಸಾಲಿನಿಂದ ಖಾಸಗಿ ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಳ್ಳುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸಂಬಂಧಿಸಿದ ಸಂಸ್ಥೆಯ ಆಡಳಿತ ವರ್ಗ ಪಾವತಿಸಬೇಕಾಗಿರುವ ಇಎಸ್ಐ ಮತ್ತು ಭವಿಷ್ಯ ನಿಧಿ ವಂತಿಗೆಯನ್ನು ಸರ್ಕಾರದಿಂದ ಭರಿಸಲು "ಆಶಾದೀಪ" ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಲು ಅನುಮೋದನೆ ನೀಡಲಾಗಿದೆ.

ಈ ಯೋಜನೆಯನ್ನು ವಿಶೇಷ ಘಟಕ ಉಪಯೋಜನೆ / ಗಿರಿಜನ ಉಪಯೋಜನೆ ಕಾರ್ಯಕ್ರಮಗಳಲ್ಲಿ ಅನುಷ್ಠಾನಗೊಳಿಸತಕ್ಕದ್ದು ಹಾಗೂ ಈ ಯೋಜನೆಯನ್ನು ಈ ಕೆಳಕಂಡ ಮಾರ್ಗಸೂಚಿಗಳನ್ವಯ ಅನುಷ್ಠಾನಗೊಳಿಸಿ ತಕ್ಷಣದಿಂದ ಜಾರಿಗೊಳಿಸತಕ್ಕದ್ದು.

ಆಶಾದೀಪ ಯೋಜನೆ ಲೆಕ್ಕ ಶೀರ್ಷಿಕೆ-

1) ಖಾಸಗಿ ವಲಯದ ಉದ್ದಿಮೆ: ಯಾವ ಖಾಸಗಿ ವಲಯದ ಉದ್ದಿಮೆಗೆ ಕಾರ್ಮಿಕರ ರಾಜ್ಯ ವಿಮಾ ಕಾಯ್ದೆ, 1948 ಹಾಗೂ ಕಾರ್ಮಿಕರ ಭವಿಷ್ಯ ನಿಧಿ ಮತ್ತು ಇತರೆ ಪ್ರಾವಧಾನಗಳ ಕಾಯ್ದೆ, 1952 ಅನ್ವಯಿಸುತ್ತದೆಯೋ ಅಂತಹ ಸಂಸ್ಥೆಗಳನ್ನು ಖಾಸಗಿ ವಲಯದ ಉದ್ದಿಮೆ ಎಂದು ಕರೆಯಲಾಗಿದೆ.

2) ಖಾಸಗಿ ವಲಯದ ಉದ್ದಿಮೆಗಳ ಕಾರ್ಮಿಕರು: ಮೇಲ್ಕಂಡ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಉದ್ದಿಮೆದಾರರ ಸಂಸ್ಥೆಯಲ್ಲಿ ಮೀಸಲಾತಿ ನಿಯಮಕ್ಕೊಳಪಟ್ಟು ಪ್ರಪ್ರಥಮವಾಗಿ ನೇಮಕಗೊಳ್ಳುವ ಎಲ್ಲಾ ಕುಶಲ/ಅರೆಕುಶಲ/ಕುಶಲರಲ್ಲದ ಮತ್ತು ಲಿಪಿಕ ಕಾರ್ಮಿಕರು (ಕಾರ್ಮಿಕರ ರಾಜ್ಯ ವಿಮಾ ನಿಗಮ ಮತ್ತು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಕಾಲಕಾಲಕ್ಕೆ ನಿಗಧಿಪಡಿಸುವ ವೇತನ ಮಿತಿಗೆ ಒಳಪಟ್ಟು).

3) ಪ್ರಪ್ರಥಮ ನೇಮಕಾತಿ: ಮೀಸಲಾತಿ ನಿಯಮಕ್ಕೆ ಒಳಪಟ್ಟು ನೇಮಕಗೊಳ್ಳುವ ಕಾರ್ಮಿಕರು ಈ ಹಿಂದೆ ಯಾವುದೇ ಉದ್ದಿಮೆಯ ಕೆಲಸದಲ್ಲಿ ಈ ಸೌಲಭ್ಯದಡಿ ನೇಮಕ ಹೊಂದಿರಬಾರದು/ಅಥವಾ ಪ್ರಪ್ರಥಮವಾಗಿ ಕಾರ್ಮಿಕರ ರಾಜ್ಯ ವಿಮಾ ಕಾಯ್ದೆ, 1948, ಕಾರ್ಮಿಕರ ಭವಿಷ್ಯ ನಿಧಿ ಮತ್ತು ಇತರೆ ಪ್ರಾವಧಾನಗಳ ಕಾಯ್ದೆ, 1952 ರಡಿ ಸವಲತ್ತುಗಳನ್ನು ಪಡೆಯದಿರತಕ್ಕಂತಹ ನೌಕರರು ನೇಮಕಗೊಂಡಲ್ಲಿ ಅಂಥಹ ನೌಕರರ ನೇಮಕಾತಿ ಪ್ರಪ್ರಥಮ ನೇಮಕಾತಿ ಎಂದು ಪರಿಗಣಿಸಲಾಗುವುದು.

4) ಯೋಜನೆ ಅನುಷ್ಠಾನಗೊಳಿಸುವ ಪ್ರಾಧಿಕಾರ: ಆಶಾದೀಪ ಯೋಜನೆಯಡಿ ಮೀಸಲಾತಿ ನಿಯಮದನ್ವಯ ನೇಮಕ ಮಾಡಿಕೊಂಡ ಕಾರ್ಮಿಕರಿಗೆ ಸಂಬಂಧಿಸಿದಂತೆ ಆಡಳಿತವರ್ಗದ ವಂತಿಕೆಗಳಾದ ಕಾರ್ಮಿಕ ರಾಜ್ಯ ವಿಮಾ ವಂತಿಕೆ ಮತ್ತು ಭವಿಷ್ಯ ನಿಧಿ ವಂತಿಕೆಗಳನ್ನು ಖಾಸಗಿ ಉದ್ದಿಮೆದಾರರಿಗೆ ಮರುಪಾವತಿಸುವ ಸಲುವಾಗಿ ಕಾರ್ಮಿಕ ಆಯುಕ್ತರನ್ನು ಸಕ್ಷಮ ಪ್ರಾಧಿಕಾರ ಎಂದು ನಿಯೋಜಿಸಿದೆ.

5) ಪರಿಶಿಷ್ಟ ಜಾತಿ: ಭಾರತದ ಸಂವಿಧಾನದ ಅನುಚ್ಛೇಧ 341ರಡಿಯಲ್ಲಿ (ಪರಿಶಿಷ್ಟ ಜಾತಿ) ಆದೇಶ 1950ರಲ್ಲಿ ಮತ್ತು ಕಾಲಕಾಲಕ್ಕೆ ಮಾಡಲಾದ ತಿದ್ದುಪಡಿಗಳಲ್ಲಿ ಸೂಚಿಸಲಾದ ಜಾತಿಗಳನ್ನು 'ಪರಿಶಿಷ್ಟ ಜಾತಿಗಳೆಂದು' ಉಲ್ಲೇಖಿಸಿದ್ದು, ಇವುಗಳನ್ನು ನಿರ್ಧಿಷ್ಟವಾಗಿ ಅನುಬಂಧ-1ರಲ್ಲಿ ನಮೂದಿಸಲಾಗಿದೆ.

ಕಾಲಕಾಲಕ್ಕೆ ಮಾಡಲಾದ ತಿದ್ದುಪಡಿಗಳಲ್ಲಿ ಸೂಚಿಸಲಾದ ಜಾತಿಗಳನ್ನು 'ಪರಿಶಿಷ್ಟ ಪಂಗಡಗಳೆಂದು' ಉಲ್ಲೇಖಿಸಿದ್ದು, ಇವುಗಳನ್ನು ನಿರ್ಧಿಷ್ಟವಾಗಿ ಅನುಬಂಧ-2ರಲ್ಲಿ ನಮೂದಿಸಲಾಗಿದೆ.

7) ಮೀಸಲಾತಿ: ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ-8ಸೇನಿಮ 95, ದಿನಾಂಕ: 20-06-1995ರ ಆದೇಶದಲ್ಲಿರುವಂತೆ ಪರಿಶಿಷ್ಟ ಜಾತಿಯವರಿಗಾಗಿ ಒಟ್ಟು ನೇಮಕಾತಿಯಲ್ಲಿ ಶೇಕಡ 15 ರಷ್ಟು ಹಾಗೂ ಪರಿಶಿಷ್ಟ ಪಂಗಡದವರಿಗಾಗಿ ಒಟ್ಟು ನೇಮಕಾತಿಯಲ್ಲಿ ಶೇಕಡ 3 ರಷ್ಟು.

(ನಿಯಮ-3ಎ(2)(3)) ರಲ್ಲಿ ತಮ್ಮ ಜಾತಿಯ ಬಗ್ಗೆ ಪ್ರಮಾಣ ಪತ್ರವನ್ನು (ಅನುಬಂಧ-3 ರಲ್ಲಿರುವಂತೆ) ತಮ್ಮ ಸ್ವಂತ ತಾಲ್ಲೂಕಿನ ತಹಶೀಲ್ದಾರ್‌ರವರಿಂದ ಪಡೆದು ಉದ್ದಿಮೆದಾರರಿಗೆ ಸಲ್ಲಿಸಬೇಕು.

9) ಸಿಂಧುತ್ವ ಪ್ರಮಾಣ: ನಮೂನೆ-ಡಿ ರಲ್ಲಿ (ಅನುಬಂಧ-4 ರಲ್ಲಿರುವಂತೆ) ಮೀಸಲಾತಿ ಕೋರಿ ಖಾಸಗಿ ಉದ್ದಿಮೆಗಳಲ್ಲಿ ನೇಮಕಾತಿ ಹೊಂದಲು ಇಚ್ಛಿಸುವ ಅಭ್ಯರ್ಥಿಗಳು ಸಲ್ಲಿಸಿದ್ದ ಜಾತಿ ಪ್ರಮಾಣ ಪತ್ರವನ್ನು ಉದ್ದಿಮೆದಾರರು ಸಂಬಂಧಿಸಿದ ಜಿಲ್ಲಾ ಪ್ರಾಧಿಕಾರದ ವತಿಯಿಂದ ಪರಿಶೀಲನೆ ಮಾಡಿ ಸಿಂಧುತ್ವವನ್ನು ಪಡೆದು ನಿಗಧಿತ ನಮೂನೆಯಲ್ಲಿ ಪಡೆದುಕೊಳ್ಳುವುದು.

10) ಮೀಸಲಾತಿ ನಿಯಮದನ್ವಯ ನೇಮಕಾತಿ ಹೊಂದಿದ ಕಾರ್ಮಿಕರ ರಾಜ್ಯ ವಿಮಾ ನಿಗಮ ನೋಂದಣಿ ಪ್ರಮಾಣ ಪತ್ರ: ಪ್ರಪ್ರಥಮವಾಗಿ ಮೀಸಲಾತಿ ನಿಯಮದನ್ವಯ ನೇಮಕಾತಿ ಹೊಂದಿದ ಕಾರ್ಮಿಕರ ನೋಂದಣಿಯನ್ನು ಕಾರ್ಮಿಕರ ರಾಜ್ಯ ವಿಮಾ ನಿಗಮ ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿದ ಬಗ್ಗೆ ಕಾರ್ಮಿಕರ ಐ.ಪಿ. ಸಂಖ್ಯೆ.

11) ಮೀಸಲಾತಿ ನಿಯಮದನ್ವಯ ನೇಮಕಾತಿ ಹೊಂದಿದ ಕಾರ್ಮಿಕರ ಭವಿಷ್ಯ ನಿಧಿ ನೋಂದಣಿ ಪ್ರಮಾಣ ಪತ್ರ: ಪ್ರಪ್ರಥಮವಾಗಿ ಮೀಸಲಾತಿ ನಿಯಮದನ್ವಯ ನೇಮಕಾತಿ ಹೊಂದಿದ ಕಾರ್ಮಿಕರ ನೋಂದಣಿಯನ್ನು ಭವಿಷ್ಯನಿಧಿ ಸಂಘಟನೆಯಲ್ಲಿ ನಮೂನೆ-2 ರಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿದ ಬಗ್ಗೆ ಕಾರ್ಮಿಕರ ಮತ್ತು ಉದ್ದಿಮೆಯ ನೋಂದಣಿ ಸಂಖ್ಯೆ./ಯು.ಎ.ಎನ್ (ಯೂನಿವರ್ಸಲ್ ಅಕೌಂಟ್ ಸಂಖ್ಯೆ).

12) ಈ ಯೋಜನೆ ಜಾರಿಗೆ ಬಂದ ನಂತರ ಮೀಸಲಾತಿ ನಿಯಮದನ್ವಯ ನೇಮಕ ಮಾಡಿಕೊಳ್ಳಲು ಉದ್ದೇಶಿಸಿರುವ ಖಾಸಗಿ ವಲಯದ ಉದ್ದಿಮೆದಾರರು ಮೀಸಲಾತಿ ನಿಯಮದಂತೆ ನೇಮಕ ಮಾಡಿಕೊಳ್ಳಲು ಈ ಕೆಳಕಂಡ ಕ್ರಮವನ್ನು ಅನುಸರಿಸತಕ್ಕದ್ದು.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩, ೨೦೧೭ ೧೦೫೯

ಅ) ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಮೀಸಲಾತಿ ಅನುಸರಿಸುವ ಬಗ್ಗೆ ಸ್ಥಳೀಯ ಮತ್ತು ಪ್ರಮುಖ ದಿನಪತ್ರಿಕೆಗಳಲ್ಲಿ ಅಥವಾ ಅನ್‌ಲೈನ್ (ವೆಬ್ ಪೋರ್ಟಲ್) ಮೂಲಕ ಪ್ರಕಟಣೆ ನೀಡುವುದು.

ಆ) ಅರ್ಜಿಯೊಂದಿಗೆ ಜಾತಿ ಪ್ರಮಾಣ ಪತ್ರವನ್ನು (ಅನುಬಂಧ-4 ರಲ್ಲಿ ಇರುವಂತೆ) ಪಡೆದುಕೊಳ್ಳುವುದು. ಮೀಸಲಾತಿ ನಿಯಮದಂತೆ ಪರಿಶೀಲಿಸಿ ನೇಮಕಾತಿ ಕ್ರಮಕೈಗೊಳ್ಳುವುದು. ಹಾಗೂ ಪಡೆದುಕೊಂಡ ಜಾತಿ ಪ್ರಮಾಣ ಪತ್ರದ ಸಿಂಧುತ್ವ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವುದು.

ಇ) ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಿದ ಬಗ್ಗೆ ನೀಡಿದ ಪತ್ರಿಕಾ ಪ್ರಕಟಣೆಯ ಪ್ರತಿ ಅಥವಾ ಅನ್‌ಲೈನ್ (ವೆಬ್‌ಪೋರ್ಟಲ್) ದಾಖಲೆಗಳು, ನೇಮಕ ಮಾಡಿಕೊಂಡ ಒಟ್ಟು ನೌಕರರ ಸಂಖ್ಯೆ, ಅದರಲ್ಲಿ ಮೀಸಲಾತಿ ಅನ್ವಯ ನೇಮಕಾತಿಗೊಂಡ ಅಭ್ಯರ್ಥಿಗಳ ಸಂಖ್ಯೆ ಮತ್ತು ಅವರ ಹೆಸರು ವಿಳಾಸ ಮತ್ತು ನೇಮಕಾತಿ ಪತ್ರ ಇವುಗಳನ್ನು ನಿರ್ವಹಿಸುವುದು.

13) ಸರ್ಕಾರದ ಯೋಜನೆಯಡಿ ಉದ್ದಿಮೆದಾರರು ತಮ್ಮ ಮೀಸಲಾತಿ ನಿಯಮದಲ್ಲಿ ನೇಮಕಗೊಂಡ ಕಾರ್ಮಿಕರ ಭವಿಷ್ಯ ನಿಧಿ ಮತ್ತು ಕಾರ್ಮಿಕರ ರಾಜ್ಯ ವಿಮಾ ವಂತಿಕೆಯನ್ನು ಕ್ಲೈಮ್ ಮಾಡಲು ಅನುಸರಿಸಬೇಕಾದ ವಿಧಾನಗಳು: ಈ ಯೋಜನೆ ಜಾರಿಗೆ ಬಂದನಂತರ ಖಾಸಗಿ ವಲಯದ ಉದ್ದಿಮೆದಾರರು ತಾವು ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಸಂಧರ್ಭದಲ್ಲಿ ಮೀಸಲಾತಿ ನೀಡಿ ನೇಮಿಸಿಕೊಂಡ ಪರಿಶಿಷ್ಟ ಜಾತಿ ಮತ್ತು ಪಂಗಡದ ವರ್ಗಕ್ಕೆ ಸೇರಿದ ಕಾರ್ಮಿಕರಿಗೆ ಸಂಬಂಧಿಸಿದಂತೆ ಕಾರ್ಮಿಕರ ರಾಜ್ಯ ವಿಮಾ ನಿಗಮಕ್ಕೆ ಪಾವತಿಸಬೇಕಾದ ಮಾಲೀಕರ ವಂತಿಕೆ 4.75 ಅನ್ನು ಹಾಗೂ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಗೆ ಪಾವತಿಸಬೇಕಾದ ಮಾಲೀಕವರ್ಗದ ವಂತಿಕೆ ಶೇಕಡ 12 ಮತ್ತು ಸಂಬಂಧಿಸಿದವರಿಗೆ ಪಾವತಿಸಿದ ಮಾಸಿಕ ವಂತಿಕೆ ಬಗ್ಗೆ ವೇತನ ಪಾವತಿಯಾದ ದಿನಾಂಕದ ನಂತರ ಕಾರ್ಮಿಕರ ರಾಜ್ಯ ವಿಮಾ ನಿಗಮ ಮತ್ತು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ನಿಗಧಿಪಡಿಸಿದ ಕೊನೆಯ ದಿನಾಂಕದ ನಂತರದ 15 ದಿವಸಗಳೊಳಗೆ ಪ್ರಪ್ರಥಮ ಮಾಹೆಯಲ್ಲಿ ಪ್ಯಾರ ಸಂಖ್ಯೆ: 12ರ ಅ, ಆ ಮತ್ತು ಇ ರಲ್ಲಿ ಸೂಚಿಸಿರುವ ದಾಖಲಾತಿಗಳೊಂದಿಗೆ ತಮ್ಮ ಸಂಸ್ಥೆಯ ನೋಂದಣಿ ಪ್ರಮಾಣ ಪತ್ರ/ಪರವಾನಗಿ ಪ್ರಮಾಣ ಪತ್ರದ ಧೃಡೀಕೃತ ಪ್ರತಿಯೊಂದಿಗೆ ಕಾರ್ಮಿಕರ ರಾಜ್ಯ ವಿಮಾ ನಿಗಮಕ್ಕೆ ಮಾಸಿಕ ಚಂದಾ ಕಟ್ಟಿರುವ ಚಲನ್ ಹಾಗೂ 'ಆಶಾದೀಪ' ಯೋಜನೆಯಡಿ ನೇಮಕಗೊಂಡ ಕಾರ್ಮಿಕರಿಗೆ ಸಂಬಂಧಿಸಿದಂತೆ (ಪ್ರಮುಖವಾಗಿ ಗುರುತಿಸಿ) ಆನ್‌ಲೈನ್ ಮುಖಾಂತರ ಪಡೆದ ಮಾಸಿಕ ಚಂದಾದಾರರ ಮಾಹಿತಿ, ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಗೆ ವಂತಿಕೆ ಪಾವತಿಸಿರುವ ಬಗ್ಗೆ ಎಲೆಕ್ಟ್ರಾನಿಕ್ ಚಲನ್ ಹಾಗೂ ಅನುಬಂಧ-4ರಲ್ಲಿ ಯೋಜನೆಯಡಿ ಕಾರ್ಮಿಕರ ಮಾಹಿತಿ ಮತ್ತು ನೇಮಕಾತಿ ಹೊಂದಿದ ಕಾರ್ಮಿಕರ ಧೃಡಿಕೃತ ಪಟ್ಟಿ ಹಾಗೂ ಇಲಾಖೆ ನಿಗಧಿಪಡಿಸಿರುವ ನಮೂನೆಯೊಂದಿಗೆ (ನಮೂನೆ-ಎ, ಅನುಬಂಧ-5 ರಲ್ಲಿರುವಂತೆ) ಪ್ರಸ್ತಾವನೆಯನ್ನು ಸಂಬಂಧಿಸಿದ ಪ್ರಾಧಿಕಾರಕ್ಕೆ ಸಲ್ಲಿಸುವುದು. ತದನಂತರದ ಮಾಹೆಗಳಲ್ಲಿ ಹೊಸದಾಗಿ ಮತ್ತೆ ನೇಮಕ ಮಾಡದೇ ಇದ್ದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದು, ಇಲ್ಲವಾದಲ್ಲಿ ಅರ್ಜಿಯನ್ನು ಕಾರ್ಮಿಕರ ರಾಜ್ಯ ವಿಮಾ ನಿಗಮ ಮತ್ತು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಗೆ ಪಾವತಿಸಿದ ಚಲನ್‌ಗಳ ಧೃಡೀಕೃತ ಪ್ರತಿಯೊಂದಿಗೆ ಹಾಗೂ ಸಂಬಂಧಿಸಿದ ಕಾರ್ಮಿಕರ ಪಟ್ಟಿಯನ್ನು ಹಾಗೂ ನಿಗಧಿ ಪಡಿಸಿದ ನಮೂನೆಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸುವುದು.

14) ಖಾಸಗಿ ಉದ್ದಿಮೆದಾರರು ಸಲ್ಲಿಸಿರುವ ಪ್ರಸ್ತಾವನೆಯನ್ನು ಅಂದರೆ, ಖಾಸಗಿ ಉದ್ದಿಮೆಯ ಉದ್ದಿಮೆದಾರರು ಮೀಸಲಾತಿ ನಿಯಮದನ್ವಯ ನೇಮಕಗೊಂಡ ಕಾರ್ಮಿಕರಿಗೆ ಸಂಬಂಧಿಸಿದಂತೆ ಕಾರ್ಮಿಕರ ರಾಜ್ಯ ವಿಮಾ ನಿಗಮಕ್ಕೆ ಪಾವತಿಸಿರುವ ಮಾಲೀಕರ ವಂತಿಕೆ ಶೇಕಡ 4.75 ರಷ್ಟು ಹಾಗೂ ಕಾರ್ಮಿಕರ ಭವಿಷ್ಯ ನಿಧಿ ವಂತಿಕೆ ಶೇಕಡ 12 ರಷ್ಟು ಅನ್ನು ಪಾವತಿಸಿರುವ ದಾಖಲೆಯನ್ನು ಕಾರ್ಮಿಕ ಆಯುಕ್ತರು ಪ್ರಸ್ತಾವನೆಯೊಂದಿಗೆ ದಾಖಲೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಖಾತ್ರಿಪಡಿಸಿಕೊಂಡು ಮರುಪಾವತಿ ಮಾಡಲು ಸೂಕ್ತ ಕ್ರಮಕೈಗೊಳ್ಳುವುದು.

15) ಖಾಸಗಿ ಉದ್ದಿಮೆದಾರರು ಈ ಯೋಜನೆಯಡಿ ತಾವು ಪಾವತಿಸಿದ ವಂತಿಕೆಯನ್ನು ದುರುದ್ದೇಶದಿಂದ ಇಲಾಖೆಯಿಂದ ಮರುಪಾವತಿ ಪಡೆದುಕೊಂಡಲ್ಲಿ ಪ್ರಾಧಿಕಾರವು ತೆಗೆದುಕೊಳ್ಳುವ ಸೂಕ್ತ ಕಾನೂನು ಕ್ರಮಕ್ಕೆ ಬಾದ್ಯಸ್ಥರಾಗುತ್ತಾರೆ.

16) ಈಗಾಗಲೇ ಕೇಂದ್ರ ಸರ್ಕಾರದ ಪಿ.ಎಂ.ಆರ್.ಪಿ.ವೈ. (ದಿ ಪ್ರಧಾನ ಮಂತ್ರಿ ರೋಜ್‌ಗಾರ್ ಪ್ರೋತ್ಸಾಹನ್ ಯೋಜನಾ) ರಡಿ ಉದ್ದಿಮೆದಾರರು ಪ್ರಯೋಜನವನ್ನು ಪಡೆದಿದ್ದಲ್ಲಿ ಈ ಯೋಜನೆಯಡಿ ಯಾವುದೇ ಪ್ರಯೋಜನವನ್ನು ಪಡೆಯಲು ಅರ್ಹರಿರುವುದಿಲ್ಲ. ಈ ಬಗ್ಗೆ ಮೇಲ್ಕಂಡ ಪಿ.ಎಂ.ಆರ್.ಪಿ.ವೈ. ಯೋಜನೆಯಡಿ ಪ್ರಯೋಜನವನ್ನು ಭಾರತ ಸರ್ಕಾರದಿಂದ ಪಡೆದಿಲ್ಲವೆಂದು ಘೋಷಣಾ ಪತ್ರವನ್ನು ಸಲ್ಲಿಸುವುದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಸಂಖ್ಯೆ: ಆಇ 269 ವೆಚ್ಚ-9/2017, ದಿನಾಂಕ:25.04.2017ರಲ್ಲಿ ನೀಡಿರುವ ಸಹಮತಿಯಂತೆ ಹಾಗೂ ಯೋಜನಾ ಇಲಾಖೆಯ ಸಂಖ್ಯೆ:ಯೋಇ 121 ಜಶಉ 2016, ದಿನಾಂಕ:26.11.2016ರಲ್ಲಿ ನೀಡಿರುವ ಸಹಮತಿಯಂತೆ ಹಾಗೂ ಅನುಸೂಚಿತ ಜಾತಿ / ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ತಿನಲ್ಲಿ ದಿನಾಂಕ: 02.06.2017 ರಂದು ಅನುಮೋದನೆಗೊಂಡ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR - 217

ಎಲ್. ಎಸ್. ಶ್ರೀಕಂಠಬಾಬು

SC - 100

ಸರ್ಕಾರದ ಉಪ ಕಾರ್ಯದರ್ಶಿ,

ಕಾರ್ಮಿಕ ಇಲಾಖೆ

ಕಂದಾಯ ಸಚಿವಾಲಯ

ವಿಷಯ: ಬಾಗಲಕೋಟೆ ಜಿಲ್ಲೆ, ಬಾಗಲಕೋಟೆ ತಾಲ್ಲೂಕು, ಶ್ರೀ ಬಾಲಾಜಿ ಮಂದಿರ ದೇವಾಲಯವನ್ನು

ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವ ಬಗ್ಗೆ.

ಓದಲಾಗಿದೆ: 1) ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 87 ಮುಆಬಿ 2012 ದಿನಾಂಕ: 29-09-2012.

2) ಚೇರ್‌ಮನ್, ಶ್ರೀ ಬಾಲಾಜಿ ಮಂದಿರ ಟ್ರಸ್ಟ್ ಕಮಿಟಿ, ಬಾಗಲಕೋಟೆ, ಇವರ ಮನವಿ ಸ್ವೀಕೃತಿ

ದಿನಾಂಕ: 05-12-2016ರಂದು ಸರ್ಕಾರಕ್ಕೆ ಸಲ್ಲಿಸಿರುವ ಮನವಿ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೦೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೩, ೨೦೧೭ ಭಾಗ ೧

ಪ್ರಸ್ತಾವನೆ:

ಶ್ರೀ ಬಾಲಾಜಿ ಮಂದಿರ ದೇವಾಲಯವನ್ನು ಪುಟ ಸಂಖ್ಯೆ: (65) ರ ಕ್ರಮ ಸಂಖ್ಯೆ: (49) ರಲ್ಲಿ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಲಾಗಿರುತ್ತದೆ.

ಮೇಲೆ (2) ರಲ್ಲಿ ಓದಲಾದ ಅಧ್ಯಕ್ಷರು, ಶ್ರೀ ಬಾಲಾಜಿ ಮಂದಿರ ಟ್ರಸ್ಟ್ ಕಮಿಟಿ, ಬಾಗಲಕೋಟೆ ಇವರು ದಿನಾಂಕ: 05-12-2016 ರಂದು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ತಮ್ಮ ಟ್ರಸ್ಟ್ ಒಂದು ಮಠದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಮಠಗಳು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ರ ಕಲಂ 1(4) ರನ್ವಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಇದಲ್ಲದೆ ಸದರಿ ಸಂಸ್ಥೆಯು ಇದುವರೆಗೆ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಪಡೆದುಕೊಂಡಿರುವುದಿಲ್ಲ. ಆದರೂ ಈ ಸಂಸ್ಥೆಯನ್ನು ಕಾನೂನಿನ ತೊಡಕಿನಿಂದಾಗಿ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದುದರಿಂದ ಶ್ರೀ ಬಾಲಾಜಿ ಮಂದಿರ ದೇವಾಲಯವನ್ನು ಅಧಿಸೂಚಿತ ಪಟ್ಟಿಯಿಂದ ಹೊರತುಪಡಿಸುವಂತೆ ಕೋರಿರುತ್ತಾರೆ.

ಈ ಕಾಯ್ದೆಯು ರದ್ದಾಗಿರುವುದರಿಂದ ಸದರಿ ಕಾಯ್ದೆಯಡಿ ನೋಂದಣಿಯಾದ ಎಲ್ಲಾ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಮತ್ತು ನಿಯಮಗಳು 2002 ರನ್ವಯ ಅಧಿಸೂಚಿತ ಸಂಸ್ಥೆಗಳಾಗಿರುತ್ತವೆ. ಸದರಿ ಸಂಸ್ಥೆಯ ಟ್ರಸ್ಟ್‌ನವರ ಮನವಿಯಲ್ಲಿ ಪ್ರಸ್ತಾಪಿಸಿರುವಂತೆ ಇದು ಒಂದು ಸಂಪೂರ್ಣವಾಗಿ ಖಾಸಗಿ ದೇವಾಲಯವಾಗಿದ್ದು, ಇದನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಲಾಗಿರುವುದು ಕಂಡುಬರುತ್ತದೆ. ಸದರಿ ಮನವಿಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಸ್ಥೆ ಕಂಇ 67 ಮುಆಬಿ 2016, ಬೆಂಗಳೂರು, ದಿನಾಂಕ 01 ನೇ, ಏಪ್ರಿಲ್ 2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರದ ಅಧಿಸೂಚನೆ ಸಂಖ್ಯೆ ಕಂಇ 87 ಮುಆಬಿ 2012, ದಿನಾಂಕ: 29-09-2012ರ ಪುಟ ಸಂಖ್ಯೆ: (65) ಕ್ರ ಸಂ. 49 ರಲ್ಲಿನ ಬಾಗಲಕೋಟೆ ಜಿಲ್ಲೆ, ಬಾಗಲಕೋಟೆ ತಾಲ್ಲೂಕು, ಶ್ರೀ ಬಾಲಾಜಿ ಮಂದಿರ ದೇವಾಲಯವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ PR. 202

ಬಿ.ಎಸ್. ನಾಗರತ್ನಮ್ಮ

SC-50

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ. (ಮುಜರಾಯಿ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 03 August 2017. Indian Gazettes, https://egazette.servantsofknowledge.in/details/in.gazette.karnataka_new.2017-08-03.Part-1/. Archive identifier in.gazette.karnataka_new.2017-08-03.Part-1.