Servants of Knowledge
Karnataka Gazette · Government of Karnataka

Karnataka Gazette, Part Part-1, 17 August 2017

Published 17 August 2017

Part
Part-1
Identifier
in.gazette.karnataka_new.2017-08-17.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೨

Volume 152

ಬೆಂಗಳೂರು, ಗುರುವಾರ, ಆಗಸ್ಟ್ ೧೭, ೨೦೧೭ (ಶ್ರಾವಣ ೨೬, ಶಕ ವರ್ಷ ೧೯೩೯)

Bengaluru, Thursday, August 17, 2017 (Shravana 26, Shaka Varsha 1939)

ಸಂಚಿಕೆ ೩೩

Issue 33

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯ

ತಿದ್ದುಪಡಿ ಆದೇಶ

ಸಂಖ್ಯೆ: ಹಿಂವಕ 90 ಬಿಇಟಿ 2016 (ಭಾ-2), ಬೆಂಗಳೂರು, ದಿನಾಂಕ:27.06.2017.

ವಿಷಯ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್-ಡಿ ವೃಂದದ

ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ:ಹಿಂವಕ 336 ಬಿಇಟಿ 2015, ದಿ:05.11.2015

2. ಸರ್ಕಾರದ ಆದೇಶ ಸಂಖ್ಯೆ:ಹಿಂವಕ 90 ಬಿಇಟಿ 2016 ಭಾಗ, ದಿ:29.9.2016

3. ಸರ್ಕಾರದ ಆದೇಶ ಸಂಖ್ಯೆ:ಹಿಂವಕ 90 ಬಿಇಟಿ 2016 (ಭಾಗ-2),

ದಿನಾಂಕ:2.6.2017

4. ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರ

ಏಕ ಕಡತ ಪ್ರಸ್ತಾವನೆ ಸಂಖ್ಯೆ:ಹಿಂವಕಇ/ ಸಿಬ್ಬಂದಿ-4/ಸಿಆರ್-8/2015-16,

ದಿನಾಂಕ: 27.06.2017

ಮೇಲೆ ಓದಲಾದ (1)ರ ಸರ್ಕಾರದ ಆದೇಶದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 1547 ಅಡುಗೆಯವರು ಮತ್ತು 2470 ಅಡುಗೆ ಸಹಾಯಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅನುಮತಿಯನ್ನು ನೀಡಿದ್ದು, ಈ ಹುದ್ದೆಗಳ ಭರ್ತಿಗಾಗಿ ಓದಲಾದ (2)ರ ಸರ್ಕಾರದ ಆದೇಶದಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ. ಅದರಂತೆ, ಸ್ವೀಕರಿಸಲಾಗಿರುವ ಅರ್ಜಿಗಳಿಂದ 1:5 ಅನುಪಾತದಲ್ಲಿ ದಾಖಲಾತಿ ಪರಿಶೀಲನೆ ಹಾಗೂ 1:3 ಅನುಪಾತದಲ್ಲಿ ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆಗೆ ಕೆಳಗಿನಂತೆ ದಿನಾಂಕಗಳನ್ನು ನಿಗದಿಪಡಿಸಿ ಓದಲಾದ (3)ರಲ್ಲಿ, ಆದೇಶ

ಹ ುದ್ದೆಗಳ ವಿವರ ದಾಖಲಾತಿಗಳ ಪ ರಿಶೀಲನೆ ದಿನಾಂಕ ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆ ದಿನಾಂಕ ತಾತ್ಕಾಲಿಕ ಆಯ್ಕೆ ಪಟ್ಟಿ ಹ ೂರಡಿಸುವುದು. ೆ ಅಂತಿಮ ಆಯ್ಕೆ ಪಟ್ಟಿ ಹ ೂರಡಿಸುವುದು. ೆ (ಆಕ್ಷೇಪಣೆಗಳಿಗೆ ಸಮಜಾಯಿಷಿ ನೀಡಿದ ನಂತರ)
ಅಡುಗೆಯವರು 22.6.2017 28.6.2017 03.7.2017 18.7.2017
ಅಡುಗೆ ಸಹಾಯಕರು 23.6.2017 29.6.2017 03.7.2017 18.7.2017

ಮೇಲೆ ಓದಲಾದ 3 ರಲ್ಲಿ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರು ಪ್ರಸ್ತಾವನೆ ಸಲ್ಲಿಸಿ, ದಾಖಲಾತಿ ಪರಿಶೀಲನೆಯನ್ನು ಅಡುಗೆಯವರು ಹುದ್ದೆಗಳಿಗೆ ಸಂಬಂಧಿಸಿದಂತೆ ದಿನಾಂಕ:22.06.2017ರಂದು ಹಾಗೂ ಅಡುಗೆ ಸಹಾಯಕರು ಹುದ್ದೆಗಳಿಗೆ ಸಂಬಂಧಿಸಿದಂತೆ

(೧೦೮೯)

೧೦೯೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ಭಾಗ ೧

ದಿನಾಂಕ:23.06.2017ರಂದು ಪೂರ್ಣಗೊಳಿಸಲಾಗಿರುತ್ತದೆ. ದಾಖಲಾತಿ ಪರಿಶೀಲನೆಗೆ 1:5ರಂತೆ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದ್ದು ಇದರಲ್ಲಿ ಅರ್ಹರಾದ ಅಭ್ಯರ್ಥಿಗಳಲ್ಲಿ 1:3 ರಂತೆ ಪ್ರವರ್ಗವಾರು/ಮೀಸಲಾತಿವಾರು ಪಟ್ಟಿ ತಯಾರಿಸಿ ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆಗೆ ಆಹ್ವಾನಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಕೆಲವು ಜಿಲ್ಲೆಗಳಲ್ಲಿ ಕೆಲವು ಪ್ರವರ್ಗಗಳಲ್ಲಿ ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆಗೆ 1:3 ರ ಅಭ್ಯರ್ಥಿಗಳ ಕೊರತೆಯಿದ್ದು 1:1, 1:2 ಅಭ್ಯರ್ಥಿಗಳು ಲಭ್ಯವಿರುತ್ತಾರೆ.

ದಿನಾಂಕ : 25.06.2017 ಹಾಗೂ 26.06.2017ರಂದು ಸಾರ್ವತ್ರಿಕ ರಜಾ ದಿನಗಳಾಗಿರುವುದರಿಂದ ರಾಜ್ಯ ಎನ್.ಐ.ಸಿ. ಯು ಕಾರ್ಯನಿರ್ವಹಿಸಿರುವುದಿಲ್ಲ. ಕೆಲವು ಜಿಲ್ಲೆಗಳಲ್ಲಿ ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆಗೆ 1:3 ರಂತೆ ಅರ್ಹರಾದ ಅಭ್ಯರ್ಥಿಗಳ ವಿವರಗಳನ್ನು ಪ್ರವರ್ಗವಾರು/ಮೀಸಲಾತಿವಾರು ಅಂಕಗಳ ಆಧಾರದ ಮೇಲೆ ಪರಿಶೀಲಿಸಿ ಜಿಲ್ಲಾ ನೇಮಕಾತಿ ಸಮಿತಿಯ ಮುಂದೆ ಮಂಡಿಸಿ ಅನುಮೋದನೆ ಪಡೆಯಲು ವಿಳಂಬವಾಗಿರುತ್ತದೆ. ಅಲ್ಲದೇ, ಹೈದರಾಬಾದ್-ಕರ್ನಾಟಕ ವ್ಯಾಪ್ತಿಯ 371(ಜೆ) ಗೆ ಒಳಪಡುವ ಜಿಲ್ಲೆಗಳಲ್ಲಿ ಹೈದರಾಬಾದ್-ಕರ್ನಾಟಕ ವ್ಯಾಪ್ತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ 371(ಜೆ) ನಮೂದಿಸಿದ್ದು, ದಾಖಲಾತಿ ಪರಿಶೀಲನೆ ಸಂದರ್ಭದಲ್ಲಿ ಹಾಜರುಪಡಿಸದೇ ಇರುವುದರಿಂದ ಇಂತಹ ಅಭ್ಯರ್ಥಿಗಳನ್ನು ಉಳಿಕೆ ಮೂಲ ವೃಂದದ ಹುದ್ದೆಗಳಿಗೆ ವರ್ಗಾಯಿಸುವ ಬಗ್ಗೆ ತಂತ್ರಾಂಶವನ್ನು ಎನ್.ಐ.ಸಿ. ಯು ಒದಗಿಸಬೇಕಾಗಿದೆ. ಅಲ್ಲದೇ, ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲು ಹಾಗೂ ಈ ಅಭ್ಯರ್ಥಿಗಳಿಗೆ ಹಾಜರಾತಿ ಪತ್ರವನ್ನು ಕಳುಹಿಸಲು ಕಾಲಾವಕಾಶ ಬೇಕಾಗಿದೆ ಎಂದು ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಕೋರಿರುವ ಹಿನ್ನೆಲೆಯಲ್ಲಿ ಅಡುಗೆಯವರು ಹಾಗೂ ಅಡುಗೆ ಸಹಾಯಕರು ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ, ನಿಗಧಿಪಡಿಸಿದ ದಿನಾಂಕಗಳನ್ನು ಈ ಕೆಳಗಿನಂತೆ ಮರುನಿಗಧಿಪಡಿಸಿ ಆದೇಶ ಹೊರಡಿಸಲು ಕೋರಿರುತ್ತಾರೆ.

ಮೇಲ್ಕಂಡ ಪ್ರಸ್ತಾವನೆ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡುಗೆಯವರು ಹಾಗೂ ಅಡುಗೆ ಸಹಾಯಕರು ಹುದ್ದೆ ನೇರ ನೇಮಕಾತಿ ಪ್ರಕ್ರಿಯೆ ಸಂಬಂಧ ನಿಗಧಿಪಡಿಸಲಾದ ವೇಳಾಪಟ್ಟಿಯನ್ನು ಈ ಕೆಳಗಿನಂತೆ ಮರುನಿಗಧಿಪಡಿಸಿ ಮೇಲೆ ಓದಲಾದ (3)ರ ಸರ್ಕಾರದ ಆದೇಶಕ್ಕೆ

ಹ ುದ್ದೆಗಳ ವಿವರ ಅಡುಗೆ ತಯಾರಿಕೆ ಪ್ರಾಯೋಗಿಕ ಪ ರೀಕ್ಷೆಗೆ ನಿಗದಿಪಡಿಸಿದ್ದ ದಿನಾಂಕ ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆಗೆ ವ ುರುನಿಗದಿ ಪಡಿಸಿದ ದಿನಾಂಕ ತಾತ್ಕಾಲಿಕ ಆಯ್ಕೆ ಪಟ್ಟಿ ಹ ೂರಡಿಸುವುದು. ೆ ಅಂತಿಮ ಆಯ್ಕೆ ಪಟ್ಟಿ ಹ ೂರಡಿಸುವುದು. ೆ (ಆಕ್ಷೇಪಣೆಗಳಿಗೆ ಸಮಜಾಯಿಷಿ ನೀಡಿದ ನಂತರ)
ಅಡುಗೆಯವರು 28.06.2017 03.07.2017 07.07.2017 22.07.2017
ಅಡುಗೆ ಸಹಾಯಕರು 29.06.2017 04.07.2017 07.07.2017 22.07.2017

ಉಳಿದಂತೆ ಮೇಲೆ ಓದಲಾದ 1, 2 ಮತ್ತು 3 ರ ಸರ್ಕಾರದ ಆದೇಶದಲ್ಲಿನ ನಿಬಂಧನೆಗಳು ಮುಂದುವರೆಯುತ್ತವೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR - 212

ಎನ್.ಆರ್. ಎರೆಕುಪ್ಪಿ

SC - 200

ಸರ್ಕಾರದ ಅಧೀನ ಕಾರ್ಯದರ್ಶಿ-1

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯ

ವಿಷಯ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆ/ ಕಾಲೇಜುಗಳ

ಪ್ರಾಂಶುಪಾಲರುಗಳಿಗೆ ಆಡಳಿತಾತ್ಮಕ/ಆರ್ಥಿಕ ಅಧಿಕಾರ ಪ್ರತ್ಯಾಯೋಜಿಸುವ ಕುರಿತು.

ಓದಲಾಗಿದೆ: 1. ಸರ್ಕಾರದ ಆದೇಶ ಸಂಖ್ಯೆ:ಹಿಂವಕ 602 ಬಿಇಟಿ 2015 ದಿ:10.12.2015.

2. ಆಯುಕ್ತರು, ಹಿಂವಕ ಇವರ ಪತ್ರ ಸಂಖ್ಯೆ:ಹಿಂವಕನಿ/ಕನಿಶಾ/ ಸಿಆರ್-120/2016-17

ದಿ:01.02.2017

ಪ್ರಸ್ತಾವನೆ:

ಮೇಲೆ ಓದಲಾದ (1)ರ ಆದೇಶದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಉಪಾಧ್ಯಕ್ಷರು, ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಇತರೆ ಅಧಿಕಾರಿಗಳಿಗೆ ಹಾಗೂ ಸಂಘದ ಅಧೀನದ ವಸತಿ ಶಾಲೆ/ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಆಡಳಿತಾತ್ಮಕ ಅಧಿಕಾರ ಪ್ರತ್ಯಾಯೋಜನೆಯನ್ನು ನೀಡಿ ಆದೇಶಿಸಲಾಗಿದೆ. ದಿನಾಂಕ:16.11.2016ರಂದು ನಡೆದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 67ನೇ ಆಡಳಿತ ಮಂಡಳಿಯ ಸಭೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಯ ಪ್ರಾಂಶುಪಾಲರುಗಳಿಗೆ ಆಡಳಿತಾತ್ಮಕ/ಆರ್ಥಿಕ ಅಧಿಕಾರ ಪ್ರತ್ಯಾಯೋಜಿಸುವ ಬಗ್ಗೆ ಚರ್ಚಿಸಲಾಗಿ ಈಗಿರುವ ಅಧಿಕಾರ ಪ್ರತ್ಯಾಯೋಜನೆಯ ಆದೇಶವನ್ನು ಹಿಂಪಡೆದು ಮೊದಲಿನಂತೆಯೇ ಅಧಿಕಾರ ಪ್ರತ್ಯಾಯೋಜನೆ ಮುಂದುವರೆಸತಕ್ಕದ್ದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮೇಲೆ ಓದಲಾದ (2)ರ ಪತ್ರದಲ್ಲಿ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರ ವಿಕೇಂದ್ರಿಕರಣದ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಗಳನ್ನು ನಿರ್ವಹಿಸಲು ಅಧಿಕಾರ ವಿಕೇಂದ್ರಿಕರಣದ ಬಗ್ಗೆ ವರದಿಯನ್ನು ಸಲ್ಲಿಸಿರುತ್ತಾರೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ೧೦೯೧

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಸರ್ಕಾರದ ಆದೇಶ ದಿ:10.12.2015ರ ಆದೇಶದಲ್ಲಿ ಆಡಳಿತಾತ್ಮಕ ಮತ್ತು ವಿತ್ತಾಧಿಕಾರಗಳನ್ನು ನೀಡಿರುವುದರಿಂದ ಕೆಲವೊಂದು ಸಮಸ್ಯೆಗಳು ಉದ್ಭವವಾಗಿದ್ದು, ಆ ಸಂಘವು ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಮತ್ತು ಆಡಳಿತಾತ್ಮಕ ವ್ಯವಹಾರಗಳು, ಶಿಸ್ತು ಪ್ರಕರಣಗಳ ಬಗ್ಗೆ ಸರ್ಕಾರದ ಅನುಮೋದನೆಯನ್ನು ಸಹ ಪಡೆಯದಿರುವುದನ್ನು ಗಮನಿಸಲಾಗಿರುತ್ತದೆ. ಹಿಂದುಳಿದ ವರ್ಗಗಳ ಕಲ್ಯಾಣ ಉಪ ನಿರ್ದೇಶಕರುಗಳು ಮೇಲುಸ್ತುವಾರಿ ಮಾಡುವಂತೆ ನಿರ್ದೇಶಿಸಿರುವುದರಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಗತಿಯಲ್ಲಿ ಜಿಲ್ಲಾಧಿಕಾರಿಗಳ ಪ್ರಗತಿ ಕುಂpತವಾಗಿರುತ್ತದೆ.

ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಡಳಿತ ದೃಷ್ಠಿಯಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಈಗಾಗಲೇ 492 ವಸತಿ ಶಾಲೆಗಳು ಹಾಗೂ 26 ವಸತಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ತೀರ್ಮಾನದನ್ವಯ ಹೋಬಳಿಗೊಂದು ವಸತಿ ಶಾಲೆಗಳನ್ನು ತೆರೆಯಬೇಕಾಗಿದ್ದು, ವಸತಿ ಶಾಲೆಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಹಾಗೂ ಸಂಘದಲ್ಲಿರುವ ಕೇಂದ್ರೀಕೃತ ವಸತಿ ಶಾಲೆಗಳ ನಿರ್ವಹಣೆ ಕಷ್ಟ ಸಾಧ್ಯವಾಗುವ ಸಂಭವ ಇರುತ್ತದೆ. ಈ ಕಾರಣದಿಂದಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ನಡೆಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಗಳನ್ನು ಈಗಾಗಲೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಗಳನ್ನು ಬೇರ್ಪಡಿಸಿರುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಗಳನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಿಂದ ಬೇರ್ಪಡಿಸಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಈ ಹಿಂದೆ ಜಿಲ್ಲಾಧಿಕಾರಿಗಳು ನಿಯಂತ್ರಿಸುತ್ತಿದ್ದಂತೆ ವಸತಿ ಶಾಲೆಗಳ ಎಲ್ಲಾ ಜವಾಬ್ದಾರಿಗಳನ್ನು ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ನಿರ್ವಹಣೆ ಮಾಡುವುದು ಅವಶ್ಯಕವಾಗಿರುತ್ತದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಈಗಾಗಲೇ 492 ವಸತಿ ಶಾಲೆಗಳು ಹಾಗೂ 26 ವಸತಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ತೀರ್ಮಾನದನ್ವಯ ಹೋಬಳಿಗೊಂದು ವಸತಿ ಶಾಲೆಗಳನ್ನು ಪ್ರಾರಂಭಿಸಬೇಕಿದ್ದು, ಸಂಸ್ಥೆಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಹಾಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಇರುವ ಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲಿ ವಸತಿ ಶಾಲೆಗಳ ನಿರ್ವಹಣೆ ಕಷ್ಟಸಾಧ್ಯವಾಗುವ ಸಂಭವಿರುತ್ತದೆ. ಈ ಹಿನ್ನೆಲೆಯಲ್ಲಿ "ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಡೆಯುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಗಳನ್ನು ಈಗಾಗಲೇ ಅಲ್ಪಸಂಖ್ಯಾತರ ಇಲಾಖೆಯ ವಸತಿ ಶಾಲೆಗಳನ್ನು ಬೇರ್ಪಡಿಸಿರುವಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಿಂದ ಬೇರ್ಪಡಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಶದಲ್ಲಿ ಇರುವುದು ಸೂಕ್ತವಾಗಿರುತ್ತದೆ. ಹಾಗೂ ಸದರಿ ವಸತಿ ಶಾಲೆಗಳನ್ನು ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿಗಳು ಮೇಲುಸ್ತುವಾರಿಯಲ್ಲಿಯೇ ಜಿಲ್ಲಾ ಮಟ್ಟದಲ್ಲಿ ನಿರ್ವಹಣೆ ಮಾಡುವುದು ಸೂಕ್ತವಾಗಿರುತ್ತದೆ" ಎಂದು ನಿರ್ಧರಿಸಿರುವುದರಿಂದ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ:ಹಿಂವಕ 608 ಬಿಇಟಿ 2015, ಬೆಂಗಳೂರು ದಿನಾಂಕ: 23.06.2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳು ಹಾಗೂ ಕಾಲೇಜುಗಳ/ಪ್ರಾಂಶುಪಾಲರಿಗೆ ಸರ್ಕಾರದ ಆದೇಶ ಸಂಖ್ಯೆ ಹಿಂವಕ 608 ಬಿಇಟಿ 2015, ದಿನಾಂಕ: 10.12.2015ರಲ್ಲಿ ನೀಡಲಾಗಿರುವ ಆಡಳಿತಾತ್ಮಕ/ಆರ್ಥಿಕ ಅಧಿಕಾರದ ಪ್ರತ್ಯಾಯೋಜಿಸಿರುವುದನ್ನು ಸಂಪೂರ್ಣವಾಗಿ ವಸತಿ ಶಾಲೆಗಳ ಸುಗಮ ಕಾರ್ಯ ನಿರ್ವಣೆಗಾಗಿ ಈ ಕೆಳಕಂಡಂತೆ ಆಡಳಿತಾತ್ಮಕ/ಆರ್ಥಿಕ ಅಧಿಕಾರ ಪ್ರತ್ಯಾಯೋಜಿಸಿ ಆದೇಶಿಸಿದೆ.

1. ವಸತಿ ಶಾಲೆಗಳ ದೈನಂದಿನ ಆಡಳಿತ ಹಾಗೂ ನಿರ್ವಹಣೆಯ ಸಂಪೂರ್ಣ ಹೊಣೆಗಾರಿಕೆಯನ್ನು ಆಯಾ ಜಿಲ್ಲೆಯ ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆರವರು ನಿರ್ವಹಿಸತಕ್ಕದ್ದು.

2. ವಸತಿ ಶಾಲೆಗಳಿಗೆ ಅಗತ್ಯವಾದ ಸಾಮಗ್ರಿಗಳನ್ನು ಅವರೇ ಸೋಲಾರ್ ವಾಟರ್ ಹೀಟರ್, ಸೋಲಾರ್ ಲೈಟಿಂಗ್, ಕಂಪ್ಯೂಟರ್, ಸ್ಮಾರ್ಟ್ ಕ್ಲಾಸ್ ಉಪಕರಣಗಳು, ಪೀಠೋಪಕರಣ, ಸಮವಸ್ತ್ರ, ಇತ್ಯಾದಿಗಳನ್ನು ಖರೀದಿಸಲು ಹಾಗೂ ದೈನಂದಿನ ಅವಶ್ಯಕತೆಗಳಾದಂತಹ ಆಹಾರ ಸಾಮಗ್ರಿ ಹಾಗೂ ಇನ್ನಿತರೆ ವಸ್ತುಗಳ ಸರಬರಾಜನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯ ತೀರ್ಮಾನದನ್ವಯ ಜಿಲ್ಲಾ ಮಟ್ಟದಲ್ಲಿಯೇ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದ ಅನ್ವಯ ಪಡೆಯುವುದು, ಯಾವ ಕಾರಣಕ್ಕೂ ಆಹಾರ ಸಾಮಗ್ರಿಗಳು ಹಾಗೂ ಇತರೆ ಅವಶ್ಯಕ ಸಾಮಗ್ರಿಗಳ ಸಂಗ್ರಹಣೆಯನ್ನು ಕೇಂದ್ರಿಕೃತಗೊಳಿಸತಕ್ಕದ್ದಲ್ಲ. ಹಾಗೂ ಸದರಿ ಸರಬರಾಜಿಗೆ ಸಂಬಂಧಿಸಿದಂತೆ ಸರಬರಾಜು ದಾರರಿಗೆ ಮಾಡುವ ಪಾವತಿಗಳನ್ನು ಸಹ ಜಿಲ್ಲೆಗಳಲ್ಲೇ ಮಾಡುವುದು, ಯಾವುದೇ ಕಾರಣಕ್ಕೂ ಪಾವತಿ ಪ್ರಕ್ರಿಯೆಯನ್ನು ಕೇಂದ್ರಿಕೃತಗೊಳಿಸತಕ್ಕದ್ದಲ್ಲ.

3. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಸತಿ ಶಾಲೆಗಳ ನಿರ್ವಹಣೆಗಾಗಿ ಅನುದಾನವನ್ನು ಸ್ವೀಕರಿಸುತ್ತಿದ್ದು, ಮೇಲ್ಕಂಡ 3 ಇಲಾಖೆಗಳಿಂದ ಒದಗಿಸಲಾದ ಅನುದಾನದ ಕುರಿತಂತೆ ಇಲಾಖಾವಾರು ಪ್ರತ್ಯೇಕವಾಗಿ ಲೆಕ್ಕಪತ್ರಗಳನ್ನು ನಿರ್ವಹಣೆ ಮಾಡತಕ್ಕದ್ದು (ಪ್ರತಿ MPIC ಸಭೆಯಲ್ಲಿ ವರದಿಯನ್ನು ಮಂಡಿಸತಕ್ಕದ್ದು).

4. ವಸತಿ ಶಾಲೆಗಳ ಸಮರ್ಪಕ ನಿರ್ವಹಣೆ ಕುರಿತಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಆಯಾ ಜಿಲ್ಲೆಯ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪ್ರಾಂಶುಪಾಲರುಗಳು ಕಡ್ಡಾಯವಾಗಿ ಪಾಲಿಸುವುದು ಹಾಗೂ ಆಯಾ ಜಿಲ್ಲೆಗಳಲ್ಲಿ ವಸತಿ ಶಾಲೆಗಳ ಸಂಪೂರ್ಣ ನಿರ್ವಹಣೆ ಆಯಾ ಜಿಲ್ಲಾಧಿಕಾರಿಗಳ ಅಧೀನದಲ್ಲಿಯೇ ನಿರ್ವಹಿಸತಕ್ಕದ್ದು.

5. ವಸತಿ ಶಾಲೆಗಳಲ್ಲಿ ಹಾಗೂ ಕಾಲೇಜುಗಳ ಸಿಬ್ಬಂದಿಗಳ ಸೇವಾ ವಿವರಗಳ ನಿರ್ವಹಣೆಯನ್ನು ಆಯಾ ಪ್ರಾಂಶುಪಾಲರು ನಿರ್ವಹಿಸುವುದು ಹಾಗೂ ಸಿಬ್ಬಂದಿಗಳ ರಜೆ ಹಾಗೂ ಇನ್ನಿತರೆ ಸೌಲಭ್ಯಗಳ ಕುರಿತಂತೆ ಈ ಕೆಳಗಿನಂತೆ ಕ್ರಮ ವಹಿಸುವುದು.

೧೦೯೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ಭಾಗ ೧

ಅ) ವಸತಿ ಶಾಲೆ/ಕಾಲೇಜಿನ ಸಿಬ್ಬಂದಿಗಳಿಗೆ ಹೆರಿಗೆ ರಜೆ/ಪಿತೃತ್ವ ರಜೆ ಮಂಜೂರಾತಿ ಪ್ರಾಧಿಕಾರ-ಸಂಬಂಧಿಸಿದ ಶಾಲೆ/ಕಾಲೇಜಿನ ಪ್ರಾಂಶುಪಾಲರು.

ಆ) ವಸತಿ ಶಾಲೆ/ಕಾಲೇಜಿನ ಸಿಬ್ಬಂದಿಗಳಿಗೆ ಹೆರಿಗೆ ರಜೆ/ಪಿತೃತ್ವ ರಜೆ ಮಂಜೂರಾತಿ ಪ್ರಾಧಿಕಾರ- ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು.

ಇ) ವಸತಿ ಶಾಲೆ/ಕಾಲೇಜಿನ ಸಿಬ್ಬಂದಿಗಳಿಗೆ ಸಾಂಧರ್ಬಿಕ ರಜೆ ಮಂಜೂರಾತಿ ಪ್ರಾಧಿಕಾರ- ಆಯಾ ಶಾಲೆಗಳ ಪ್ರಾಂಶುಪಾಲರುಗಳು.

ಈ) ವಸತಿ ಶಾಲೆ/ಕಾಲೇಜಿನ ಪ್ರಾಂಶುಪಾಲರುಗಳಿಗೆ ಸಾಂದರ್ಭಿಕ ರಜೆ ಮಂಜೂರಾತಿ ಪ್ರಾಧಿಕಾರ- ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು.

ಉ) ಗಳಿಕೆ ರಜೆ ಮಂಜೂರು ಮತ್ತು ರಜೆ ನಗಧೀಕರಣ ಸೌಲಭ್ಯ.

1. ವಸತಿ ಶಾಲೆ/ ಕಾಲೇಜಿನ ಸಿಬ್ಬಂದಿಗಳು-ಸಂಬಂಧಿಸಿದ ಪ್ರಾಂಶುಪಾಲರು (15 ದಿನಗಳವರೆಗೆ)

2. ವಸತಿ ಶಾಲೆ/ಕಾಲೇಜಿನ ಪ್ರಾಂಶುಪಾಲರು-ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು. (15 ದಿನಗಳವರೆಗೆ)

3. 15 ದಿನಗಳನ್ನು ಮೀರಿದ ಗಳಿಕೆ ರಜೆ ಮಂಜೂರಾತಿ ಪ್ರಾಧಿಕಾರ-ಕಾರ್ಯನಿರ್ವಾಹಕ ನಿರ್ದೇಶಕರು.

4. ಸಂಬಂಧಿಸಿದ ಸಂಘದ ಸಿಬ್ಬಂದಿಗಳಿಗೆ ಪ್ರಯಾಣ ಭತ್ಯೆ ಮಂಜೂರು, ವೈದ್ಯಕೀಯ ವೆಚ್ಚ ಮರುಪಾವತಿ, ಹಬ್ಬದ ಮುಂಗಡ ಪಾವತಿ, ಸಾಮಗ್ರಿಗಳ ಸಾಗಾಣಿಕೆ ವೆಚ್ಚ, ಕಾಲಾತೀತವಾದ ಸಾಮಗ್ರಿಗಳನ್ನು ವಿಲೇ ಮಾಡುವ ಜವಾಬ್ದಾರಿಯನ್ನು ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವಹಿಸಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಬೇಡಿಕೆಯನ್ನು ಪಡೆದು ಕಾರ್ಯನಿರ್ವಾಹಕ ನಿರ್ದೇಶಕರು ಅಗತ್ಯ ಅನುದಾನವನ್ನು ಬಿಡುಗಡೆ ಮಾಡುವುದು.

5. ವಸತಿ ಶಾಲೆ/ಕಾಲೇಜುಗಳ ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ತರಬೇತಿಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಏರ್ಪಡಿಸತಕ್ಕದ್ದು.

6. ಈ ಆದೇಶದ ಬಗ್ಗೆ ಯಾವುದೇ ಸಲಹೆ/ನಿರ್ದೇಶನ ಹಾಗೂ ನಿಯಂತ್ರಣದ ಬಗ್ಗೆ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ರವರು ಸೂಕ್ತ ನಿರ್ದೇಶನ ಹೊರಡಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR - 213

ಎನ್.ಆರ್. ಎರೆಕುಪ್ಪಿ

SC - 300

ಸರ್ಕಾರದ ಅಧೀನ ಕಾರ್ಯದರ್ಶಿ-1

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಹಿಂವಕ 283 ಬಿಇಟಿ 2017, ಬೆಂಗಳೂರು, ದಿನಾಂಕ: 29.06.2017

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಛೇರಿ ಮೇಲ್ವಿಚಾರಕರು/ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು/ಕಚೇರಿ ವ್ಯವಸ್ಥಾಪಕರ ವೃಂದಗಳಿಂದ ವೇತನ ಶ್ರೇಣಿ `.22800-600-24600-700-28800-800-33600-900-39000-1050-43200ರ ಪತ್ರಾಂಕಿತ ವ್ಯವಸ್ಥಾಪಕರ ಹುದ್ದೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ-32ರಡಿ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಸ್ವತಂತ್ರ ಪ್ರಭಾರದಲ್ಲಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ಸ್ಥಳನಿಯುಕ್ತಿಗೊಳಿಸಿ

ಕ್ರ. ಸ ಂ. ನೌಕರರ ಹೆಸರು ಹಾಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳ ಕ.ನಾ.ಸೇ. ನಿಯಮಗಳ ನಿಯಮ-32ರಡಿ ಪ ತ್ರಾಂಕಿತ ವ್ಯವಸ್ಥಾಪಕರ ವೃಂದದಲ್ಲಿ ಸ್ವತಂತ್ರ ಪ ಭಾರದಲ್ಲಿರಿಸಿ ಸ್ಥಳನಿಯುಕ್ತಿಗೊಳಿಸಲಾದ ್ರ ಹ ುದ್ದೆ.
1. ಬ ಹ್ಮದೇವಯ್ಯ ಟಿ.ಬಿ. ್ರ ಆಯುಕ್ತರ ಕಛೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ಬ ಂಗಳೂರು ಗ್ರಾಮಾಂತರ ಜಿಲ್ಲೆ. ೆ
2. ಎನ್. ಎಸ್. ಭಾಗ್ಯ ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ಕ .ಆರ್. ೆ ನ ಗ ರ ತಾ:, ವ ುೖಸೂರು ಜಿಲ್ಲೆ. ೆ ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ವ ುೖಸೂರು ಜಿಲ್ಲೆ. ೆ
3. ಶ ಂಕರೇಗೌಡ ಪಿ. ಎಲ್. ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ಮಂಡ್ಯ ತಾಲ್ಲೂಕು, ಮತ್ತು ಜಿಲ್ಲೆ. ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ಚಾಮರಾಜನಗರ ಜಿಲ್ಲೆ.
4. ಕೃಷ್ಣೇಗೌಡ ಡಿ. ಕಛೇರಿ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ವ ುೖಸೂರು ಜಿಲ್ಲೆ. ೆ ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ಕೊಡಗು ಜಿಲ್ಲೆ.
5. ಕುಮಾರ ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ. ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ಶಿವಮೊಗ್ಗ ಜಿಲ್ಲೆ.
6. ಎನ್. ವಿಜಯಲಕ್ಷ್ಮೀ ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ನೆಲಮಂಗಲ ತಾಲ್ಲೂಕು, ಬ ಂಗಳೂರು ಗ್ರಾಮಾಂತರ ಜಿಲ್ಲೆ. ೆ ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ರಾಮನಗರ ಜಿಲ್ಲೆ.
7. ಶ ಶಿಕಲಾವತಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ, ಬ ಂಗಳೂರು. ೆ ಪ ತ್ರಾಂಕಿತ ವ ್ಯವಸ್ಥಾಪಕರು/ಅಧ್ಯಕ್ಷರ ಆಪ್ತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಹಿಂದುಳಿದ ವ ರ್ಗಗಳ ಆಯೋಗ, ಬೆಂಗಳೂರು.
8. ಬ ಾಗೀರಥಮ್ಮ ಸಿ.ಕೆ. ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ಚಿಕ್ಕಮಗಳೂರು ತಾಲ್ಲೂಕು ವ ುತ್ತು ಜಿಲ್ಲೆ. ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ಹಾಸನ ಜಿಲ್ಲೆ.
9. ಜಿ.ಬಿ. ಬಾರಕೇರ ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ಹಾವೇರಿ ತಾಲ್ಲೂಕು ಮತ್ತು ಜಿಲ್ಲೆ. ಆಯುಕ್ತರ ಕಛೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು.
10. ಪಿ. ಕಮಲಾಬಾಯಿ ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ವಿಜಯಪುರ ತಾಲ್ಲೂಕು ವ ುತ್ತು ಜಿಲ್ಲೆ. ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ವಿಜಯಪುರ ಜಿಲ್ಲೆ.
11. ಕೆಂಗೇಗೌಡ ಕಛೇರಿ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ಹಾಸನ ಜಿಲ್ಲೆ ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ಉಡುಪಿ ಜಿಲ್ಲೆ.
12. ವ ೂಹಮ್ಮದ್ ಸಿಯಾರ್ ೆ ಕಛೇರಿ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ತ ುಮಕೂರು ಜಿಲ್ಲೆ. ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ಚಿಕ್ಕಮಗಳೂರು ಜಿಲ್ಲೆ.
13. ದ ೕವರಾಜು ಆರ್. ಎಸ್. ೆ ಕಛೇರಿ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ಬ ಂಗಳೂರು ಗ್ರಾಮಾಂತರ ಜಿಲ್ಲೆ ೆ ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ತ ುಮಕೂರು ಜಿಲ್ಲೆ.
14 ವ ುಹಾರುದ್ರಪ್ಪ ಹೆಚ್.ಕೆ. ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ಚ ನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ. ಆಯುಕ್ತರ ಕಛೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು.
15. ಬಿ.ಜಿ. ಹೊಕ್ರಾಣಿ ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ಬೆಳಗಾವಿ ತಾಲ್ಲೂಕು ಮತ್ತು ಜಿಲ್ಲೆ. ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ಬಾಗಲಕೋಟೆ ಜಿಲ್ಲೆ.
16. ನಾಡಿಗೇರ ಎಸ್.ಪಿ. ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ವ ುುಂಡಗಿರಿ ತಾಲ್ಲೂಕು, ಗದಗ ಜಿಲ್ಲೆ. ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ದ ಾರವಾಡ
17. ಕೆ.ಎಸ್. ಇಂಗಳಗಿ ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ಹಿರೇಕೆರೂರು ತಾಲ್ಲೂಕು ವ ುತ್ತು ಹಾವೇರಿ ಜಿಲ್ಲೆ. ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಗದಗ ಜಿಲ್ಲೆ.
18. ಗಂಗಾಧರ ಹಳೆಮನಿ ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ಸವದತ್ತಿ ತಾಲ್ಲೂಕು ಮತ್ತು ಬ ಳ ೆ ಗಾವಿ ಜಿಲ್ಲೆ. ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಬ ಳ ೆ ಗಾವಿ ಜಿಲ್ಲೆ.
19. ಬಿರಾದಾರ್ ಸಿ.ಎನ್. ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ಬ ಂಗಳೂರು ೆ ಪ ೂರ್ವ ತಾಲ್ಲೂಕು ಮತ್ತು ಬೆಂಗಳೂರು ನಗರ ಜಿಲ್ಲೆ. ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಬ ಂಗಳೂರು ನಗರ ಜಿಲ್ಲೆ. ೆ
20. ಸ ುರೇಶಬಾಬು ಎ. ಹುಗ್ಗಿ ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ಸ ವ ಣೂರು ತಾಲ್ಲೂಕು ವ ುತ್ತು ಹಾವೇರಿ ಜಿಲ್ಲೆ. ಆಯುಕ್ತರ ಕಛೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು.
21. ಆಂಜನೇಯ ಮೂರ್ತಿ ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ಬಳ್ಳಾರಿ ತಾಲ್ಲೂಕು ಮತ್ತು ಜಿಲ್ಲೆ. ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಕೋಲಾರ ಜಿಲ್ಲೆ.
22 ಅಫಜಲ್ ಬಾನು ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ಹೊಸಕೋಟೆ ತಾಲ್ಲೂಕು ವ ುತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಆಯುಕ್ತರ ಕಛೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು.
23. ಬ ಾಗ್ಯಲಕ್ಷ್ಮೀ ಎಸ್. ಹೆಗಡೆ ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ಹ ಳಿಯಾಳ ತಾಲ್ಲೂಕು ವ ುತ್ತು ಉತ್ತರ ಕನ್ನಡ ಜಿಲ್ಲೆ. ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಉತ್ತರ ಕನ್ನಡ ಜಿಲ್ಲೆ.
24. ರಾಣಿ ಎಸ್. ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ಹುಣಸೂರು ತಾಲ್ಲೂಕು, ವ ುೖಸೂರು ಜಿಲ್ಲೆ. ೆ ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ವ ುಂಡ್ಯ ಜಿಲ್ಲೆ.
25. ವ ಸ ಂತಾದೇವಿ ಎ.ಎಲ್. ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ವ ುೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ. ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಚಿತ್ರದುರ್ಗ ಜಿಲ್ಲೆ.
26. ವ ುುದುಕಣ್ಣನವರ್ ಎಸ್.ಎಂ ಕಛೇರಿ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ದಾವಣಗೆರೆ ಜಿಲ್ಲೆ. ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ದಾವಣಗೆರೆ ಜಿಲ್ಲೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ೧೦೯೩ ೧೦೯೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ಭಾಗ ೧

II. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹೈದರಾಬಾದ್-ಕರ್ನಾಟಕ ವೃಂದ:

ಕ್ರ. ಸ ಂ. ನೌಕರರ ಹೆಸರು ಹಾಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳ ಕ.ನಾ.ಸೇ. ನಿಯಮಗಳ ನಿಯಮ-32ರಡಿ ಪ ತ್ರಾಂಕಿತ ವ್ಯವಸ್ಥಾಪಕರ ವೃಂದದಲ್ಲಿ ಸ್ವತಂತ್ರ ಪ ಭಾರದಲ್ಲಿರಿಸಿ ಸ್ಥಳನಿಯುಕ್ತಿಗೊಳಿಸಲಾದ ್ರ ಹ ುದ್ದೆ.
1. ದ ೕನು ದೇವಲು ನಾಯಕ್ ೆ ತಾಲ್ಲೂಕು ಹಿಂದುಳಿದ ವ ರ್ಗಗಳ ವಿಸ್ತರಣಾಧಿಕಾರಿ, ಚಿಂಚೋಳಿ ತಾಲ್ಲೂಕು, ಕಲಬುರಗಿ ಜಿಲ್ಲೆ ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಬೀದರ್ ಜಿಲ್ಲೆ
2. ವ ೂನಪ್ಪ ಗೊನಾಳ್ ೆ ಕಛೇರಿ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ರಾಯಚೂರು ಜಿಲ್ಲೆ ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ರಾಯಚೂರು ಜಿಲ್ಲೆ
3. ವಿಠಲ್ ಮದ್ನೂರ್ ಕಛೇರಿ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ಯಾದಗಿರಿ ಜಿಲ್ಲೆ ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಯಾದಗಿರಿ ಜಿಲ್ಲೆ
4. ಶಿವಶಂಕರಪ್ಪ ಎ. ಬಿರಾದಾರ್ ಕಛೇರಿ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ಕಲಬುರಗಿ ಜಿಲ್ಲೆ ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ಕಲಬುರಗಿ ಜಿಲ್ಲೆ.
5. ಎಸ್. ಎ. ಅಮದಿಹಾಳ್ ಕಛೇರಿ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ಕೊಪ್ಪಳ ಜಿಲ್ಲೆ ಪ ತ್ರಾಂಕಿತ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವ ರ್ಗಗಳ ಕಲ್ಯಾಣಾಧಿಕಾರಿಗಳ ಕ ಛೇರಿ, ಕೊಪ್ಪಳ ಜಿಲ್ಲೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ೧೦೯೫

ಷರತ್ತುಗಳು :

1. ಕರ್ನಾಟಕ ನಾಗರಿಕ ಸೇವಾ ನಿಯಮಗಳು, 1958ರ ನಿಯಮ-32ರಡಿ ಮಾಡಲಾಗುವ ಸ್ವತಂತ್ರ ಪ್ರಭಾರ ವ್ಯವಸ್ಥೆಯು ಕ್ರಮಬದ್ದ ಮುಂಬಡ್ತಿಗೆ ಬದಲಿ ಮಾಡುವ ಒಂದು ತಾತ್ಕಾಲಿಕ ವ್ಯವಸ್ಥೆಯಾಗಿದೆ. ಅದು ಮುಂಬಡ್ತಿ ಅಲ್ಲ. ಸ್ವತಂತ್ರ ಪ್ರಭಾರದಲ್ಲಿರಿಸಿರುವ ಆದೇಶವನ್ನು ಯಾವುದೇ ಸಂದರ್ಭದಲ್ಲಾದರೂ ಹಿಂದಕ್ಕೆ ಪಡೆಯಲು ಆಸ್ಪದವಿರುತ್ತದೆ.

2. ಈ ವ್ಯವಸ್ಥೆಯು ತಾತ್ಕಾಲಿಕವಾಗಿದ್ದು, ಪೂರ್ವಾನ್ವಯ ಮುಂಬಡ್ತಿಗೆ ಹಕ್ಕೊತ್ತಾಯ ಮಾಡುವಂತಿಲ್ಲ.

3. ಈ ವ್ಯವಸ್ಥೆಯು ದಿ:09/02/2017ರಂದು ಮಾನ್ಯ ಸರ್ವೋಚ್ಚ ನ್ಯಾಯಾಲಯವು ಶ್ರೀ ಬಿ.ಕೆ. ಪವಿತ್ರ ಪ್ರಕರಣದ ವಿರುದ್ದ ಸಲ್ಲಿಸಲಾಗಿರುವ ಪುನರ್‌ಪರಿಶೀಲನಾ ಅರ್ಜಿಯ ಅಂತಿಮ ತೀರ್ಪಿಗೊಳಪಟ್ಟಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR - 214

ಎನ್.ಆರ್. ಎರೆಕುಪ್ಪಿ

SC - 100

ಸರ್ಕಾರದ ಅಧೀನ ಕಾರ್ಯದರ್ಶಿ-1

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕಂದಾಯ ಸಚಿವಾಲಯ

ವಿಷಯ:- ಮಾಜಿ ಪಟೇಲರುಗಳಿಗೆ 1963 ರಿಂದ 1979 ರ ವರೆಗಿನ ಅನುಕಂಪ ಭತ್ಯೆಯನ್ನು ಮಂಜೂರು ಮಾಡುವಾಗ ಕೈಬಿಟ್ಟು ಹೋಗಿದ್ದ ಉಳಿದ ಮಾಜಿ ಪಟೇಲರುಗಳಿಗೂ ಅನುಕಂಪದ ಭತ್ಯೆಯನ್ನು ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ:- 1) ಮಾನ್ಯ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 100222/2013, ಆದೇಶ ದಿನಾಂಕ: 12.11.2013.

2) ಸರ್ಕಾರದ ಆದೇಶ ಸಂಖ್ಯೆ: ಕಂಇ 54 ಎಂವಿಎಸ್ 2013, ದಿನಾಂಕ: 04.06.2015.

3) ಕರ್ನಾಟಕ ರಾಜ್ಯ ಪಟೇಲರ ಸಂಘ (ರಿ) ಇವರ ಮನವಿ ದಿನಾಂಕ: 28.01.2016.

4) ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗ, ಕಲಬುರಗಿ ಇವರ ಪತ್ರ ಸಂಖ್ಯೆ: ಕಂ:ಪ್ರಾಆಕ/ಬಜೆಟ/ 10/2014-15, ದಿನಾಂಕ: 23.02.2016.

5) ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ಇವರ ಪತ್ರ ಸಂಖ್ಯೆ:

ಹೆಚ್ಓಎ:ಸಿಆರ್.4/14-15, ದಿನಾಂಕ: 16.06.2016

6) ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರ ಪತ್ರ ಸಂಖ್ಯೆ:

ಪ್ರಾಆಬೆ:ಭೂಮಿ-2/ವತನ/ ಸಿಆರ್/ 12/15-16, ದಿನಾಂಕ: 29.07.2016.

7) ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರ ಪತ್ರ ಸಂಖ್ಯೆ:

ಇನಾಂ:ಸಿಆರ್/02/2015-16, ದಿನಾಂಕ:22.10.2016.

೧೦೯೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ಭಾಗ ೧

ಪ್ರಸ್ತಾವನೆ :

ಮೇಲೆ ಕ್ರ.ಸಂ. (1)ರಲ್ಲಿ ಓದಲಾದ ಶ್ರೀ ಎ.ವಿ. ನಾಯಕೋಡಿ ಮತ್ತು ಇತರರು ರಾಜ್ಯ ಸರ್ಕಾರದ ವಿರುದ್ದ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿ ಸಂಖ್ಯೆ 100222/2013 ರಲ್ಲಿ ಮಾನ್ಯ ನ್ಯಾಯಾಲಯವು ದಿನಾಂಕ: 12.11.2013 ರ ಆದೇಶದಲ್ಲಿ, ದಿನಾಂಕ 01.02.1963 ರಿಂದ ಜಾರಿಗೆ ಬಂದ ಕರ್ನಾಟಕ ಗ್ರಾಮಾಧಿಕಾರಿಗಳ ರದ್ದತಿ ಕಾಯ್ದೆ 1961 ರ ನಂತರ ತಾತ್ಕಾಲಿಕವಾಗಿ ಸೇವೆಯಲ್ಲಿ ಮುಂದುವರೆದು ವಯೋಮಿತಿ ತಲುಪಿ ಯಾವುದೇ ಭತ್ಯೆಯನ್ನು ಪಡೆಯದೇ ಸೇವೆಯಿಂದ ಬಿಡುಗಡೆ ಹೊಂದಿದ ಮಾಜಿ ಪಟೇಲರುಗಳಿಗೆ 1963 ರಿಂದ 1979 ರವರೆಗೆ ಮಾಜಿ ಶಾನುಭೋಗರಿಗೆ ನೀಡಿದ ರೀತಿಯಲ್ಲಿಯೇ ಅನುಕಂಪ ಭತ್ಯೆಯನ್ನು ಮಂಜೂರು ಮಾಡುವಂತೆ ಆದೇಶ ನೀಡಿರುತ್ತದೆ.

ಮಾನ್ಯ ಉಚ್ಚ ನ್ಯಾಯಾಲಯದ ಆದೇಶದನ್ವಯ, ಮಾಜಿ ಶಾನುಭೋಗರುಗಳಿಗೆ ಅನುಕಂಪ ಭತ್ಯೆ ನೀಡಿರುವ ರೀತ್ಯ ಮಾಜಿ ಪಟೇಲರುಗಳಿಗೂ 1963 ರಿಂದ 1979 ರವರೆಗೆ ಮಾಸಿಕ `. 100/- ರಂತೆ ಒಟ್ಟು 709 ಪಟೇಲರುಗಳಿಗೆ 2015-16ನೇ ಸಾಲಿನ ಲೆಕ್ಕ ಶೀರ್ಷಿಕೆ 2071-01-200-0-06-251 ತಾತ್ಕಾಲಿಕ ಪಿಂಚಣಿ ಮತು ನಿವೃತ್ತಿ ಸೌಲಭ್ಯಗಳಡಿ ಒದಗಿಸಿರುವ ಅನುದಾನದಿಂದ ರೂ. 1,44,63,600/-ಗಳ ಪರಿಹಾರ ಭತ್ಯೆಯನ್ನು ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ದಿನಾಂಕ: 04.06.2015 ರ ಆದೇಶದಲ್ಲಿ ಮಂಜೂರು ಮಾಡಲಾಗಿದೆ

ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ದಿನಾಂಕ: 04.06.2015 ರ ಆದೇಶ ಹೊರಡಿಸಿದ ನಂತರ ಕರ್ನಾಟಕ ರಾಜ್ಯ ಪಟೇಲರ ಸಂಘವು ಮೇಲೆ ಕ್ರಮ ಸಂಖ್ಯೆ (3) ರಲ್ಲಿ ಓದಲಾದ ದಿನಾಂಕ: 28.01.2016 ಮನವಿಯಲ್ಲಿ ರಾಜ್ಯದಲ್ಲಿ 709 ಪಟೇಲರುಗಳಿಗಿಂತ ಇನ್ನೂ ಹೆಚ್ಚಿನ ಮಂದಿ ಇದ್ದು, ಆದರೆ ಮಾಸಿಕ `.100/- ಮೇಲ್ಕಂಡ ಅವಧಿಗೆ ಪರಿಹಾರ ಭತ್ಯೆ ಮಂಜೂರು ಮಾಡುವ ಸಮಯದಲ್ಲಿ ಇವರುಗಳನ್ನು ಗಣನೆಗೆ ತೆಗೆದುಕೊಂಡಿಲ್ಲವೆಂದು ಕೂಡಲೇ ಇದನ್ನು ಮರುಪರಿಶೀಲಿಸಿ, ಉಳಿದವರಿಗೂ ಸದರಿ ಮೊತ್ತವನ್ನು ಮಂಜೂರು ಮಾಡಬೇಕೆಂದು ಸರ್ಕಾರವನ್ನು ಕೋರಿರುತ್ತಾರೆ. ಈ ಹಿನ್ನೆಲೆಯಲ್ಲಿ, ಆಯಾ ವಿಭಾಗದಲ್ಲಿ ಬರುವ ಜಿಲ್ಲೆಗಳಲ್ಲಿ ವಾಸ್ತವವಾಗಿ ಅನುಕಂಪ ಭತ್ಯೆ ಪಡೆಯುತ್ತಿರುವ ಒಟ್ಟು ಎಷ್ಟು ಮಂದಿ ಮಾಜಿ ಪಟೇಲರುಗಳು ಇದ್ದಾರೆ ಎಂಬುದನ್ನು ಕರಾರುವಕ್ಕಾಗಿ ತಿಳಿಸುವಂತೆ ಎಲ್ಲಾ ವಿಭಾಗದ ಪ್ರಾದೇಶಿಕ ಆಯುಕ್ತರುಗಳನ್ನು ಕೋರಲಾಗಿತ್ತು.

ಪ್ರಾದೇಶಿಕ ಆಯುಕ್ತರುಗಳು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ಅನುಕಂಪ ಭತ್ಯೆ ಪಡೆಯುತ್ತಿರುವ ಒಟ್ಟು ಮಾಜಿ ಪಟೇಲರುಗಳ ಹೆಸರುಗಳ ಸಹಿತ ನಿಖರ ಮಾಹಿತಿಯನ್ನು ಪಡೆದು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಅದರನ್ವಯ, ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗ, ಕಲಬುರಗಿ ಇವರು ಮೇಲೆ ಕ್ರ.ಸಂ.

(4)ರಲ್ಲಿ ಓದಲಾದ ದಿ:23.02.2016 ರ ಪತ್ರದಲ್ಲಿ ಒದಗಿಸಿರುವ ಮಾಹಿತಿ ಪ್ರಕಾರ ಕಲಬುರಗಿ ವಿಭಾಗದಲ್ಲಿ ಒಟ್ಟು 389 ಮಾಜಿ ಪಟೇಲರುಗಳು ಇರುತ್ತಾರೆ.

ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ಇವರು ಮೇಲೆ ಕ್ರ.ಸಂ. (5)ರಲ್ಲಿ ಓದಲಾದ ದಿ:16.06.2016 ರ ಪತ್ರದಲ್ಲಿ ಒದಗಿಸಿರುವ ಮಾಹಿತಿ ಪ್ರಕಾರ ಬೆಂಗಳೂರು ವಿಭಾಗದಲ್ಲಿ ಒಟ್ಟು 558 ಮಾಜಿ ಪಟೇಲರುಗಳು ಇರುತ್ತಾರೆ.

ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರು ಮೇಲೆ ಕ್ರ.ಸಂ. (6)ರಲ್ಲಿ ಓದಲಾದ ದಿ:29.07.2016 ರ ಪತ್ರದಲ್ಲಿ ಒದಗಿಸಿರುವ ಮಾಹಿತಿ ಪ್ರಕಾರ ಬೆಳಗಾವಿ ವಿಭಾಗದಲ್ಲಿ ಒಟ್ಟು 337 ಮಾಜಿ ಪಟೇಲರುಗಳು ಇರುತ್ತಾರೆ.

ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರು ಮೇಲೆ ಕ್ರ.ಸಂ. (7)ರಲ್ಲಿ ಓದಲಾದ ದಿ:22.10.2016 ರ ಪತ್ರದಲ್ಲಿ ಒದಗಿಸಿರುವ ಮಾಹಿತಿ ಪ್ರಕಾರ ಮೈಸೂರು ವಿಭಾಗದಲ್ಲಿ ಒಟ್ಟು 431 ಮಾಜಿ ಪಟೇಲರುಗಳು ಇರುತ್ತಾರೆ.

ಪ್ರಾದೇಶಿಕ ಆಯುಕ್ತರುಗಳು / ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿರುವ ಪರಿಷ್ಕøತ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು 1715 ಮಂದಿ ಮಾಜಿ ಪಟೇಲರುಗಳು ಇರುತ್ತಾರೆ. ಇವರುಗಳ ಪೈಕಿ ಈಗಾಗಲೇ 709 ಮಂದಿ ಮಾಜಿ ಪಟೇಲರುಗಳಿಗೆ ಪರಿಹಾರ ಭತ್ಯೆ ಮಂಜೂರು ಮಾಡಲಾಗಿದ್ದು, ಉಳಿದ 1006 ಮಂದಿ ಮಾಜಿ ಪಟೇಲರುಗಳ ಹೆಸರುಗಳು ಕೈಬಿಟ್ಟು ಹೋಗಿದ್ದು, ಸದರಿ 1006 ಮಂದಿ ಪಟೇಲರುಗಳು ಈಗಲೂ ಜೀವಂತವಾಗಿರುವ ವ್ಯಕ್ತಿಗಳಾಗಿದ್ದು ಒಂದೇ ಪ್ರವರ್ಗದಲ್ಲಿ ಬರುವ ವ್ಯಕ್ತಿಗಳಾಗಿರುತ್ತಾರೆ. ಒಂದೇ ಪ್ರವರ್ಗದ ವ್ಯಕ್ತಿಗಳು ಒಂದೇ ಪರಿಸ್ಥಿತಿಯಲ್ಲಿದ್ದಾಗ ಒಬ್ಬರನ್ನು ಮತ್ತೊಬ್ಬರಿಂದ ವಿಭಿನ್ನಗೊಳಿಸಲು ಸಾಧ್ಯವಿಲ್ಲ. ಆದುದರಿಂದ ಬಾಕಿ ಉಳಿದಂತ 1006 ಮಂದಿ ಮಾಜಿ ಪಟೇಲರುಗಳಿಗೂ ಸಹ ಅನುಕಂಪ ಭತ್ಯೆಯನ್ನು ಮಂಜೂರು ಮಾಡಲು ಸರ್ಕಾರವು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ:ಕಂಇ 54 ಎಂವಿಎಸ್ 2013, ಬೆಂಗಳೂರು, ದಿ:08.05.2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಇರುವ ಒಟ್ಟು 1715 ಮಂದಿ ಮಾಜಿ ಪಟೇಲರುಗಳ ಪೈಕಿ ಈಗಾಗಲೇ 709 ಮಾಜಿ ಪಟೇಲರುಗಳಿಗೆ ಅನುಕಂಪ ಭತ್ಯೆ ನೀಡಿರುವಂತೆ, ಉಳಿದ 1006 ಮಾಜಿ ಪಟೇಲರುಗಳಲ್ಲಿ ಜೀವಂತವಾಗಿರುವ ಪಟೇಲರುಗಳಿಗೆ 1963 ರಿಂದ 1979 ರವರೆಗೆ ಮಾಸಿಕ `. 100/- ರಂತೆ ಪರಿಹಾರ ಭತ್ಯೆ ನೀಡಲು ತಗಲುವ ಒಟ್ಟು ವೆಚ್ಚ `.2,05,22,400/- ಗಳನ್ನು 2017-18ನೇ ಸಾಲಿನ ಲೆಕ್ಕ ಶೀರ್ಷಿಕೆ:

2071-01-200-0-06-251 'ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳು' ಅಡಿಯಲ್ಲಿ ಒದಗಿಸಿರುವ ಅನುದಾನದಿಂದ ಮಂಜೂರು ಮಾಡಲು ಆದೇಶಿಸಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 322 ವೆಚ್ಚ-7/2017, ದಿ:22.04.2017 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

PR 249

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC.100

ಬಿ.ಎಸ್. ಶ್ರೀನಿವಾಸ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಸೇವೆಗಳು-1)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ೧೦೯೭

ಕಂದಾಯ ಸಚಿವಾಲಯ

ವಿಷಯ:- ಶ್ರೀ ಗುರುರಾಜ್ ಬಿನ್ ಶ್ರೀನಿವಾಸ್ ಗಾಣಿಗ, ಮೂಡುತೊನ್ಸೆ ಗ್ರಾಮ, ಇವರಿಗೆ ಉಡುಪಿ ತಾಲ್ಲೂಕು, ಬ್ರಹ್ಮಾವರ ಹೋಬಳಿ, ಮೂಡುತೊನ್ಸೆ ಗ್ರಾಮದ ಸ.ನಂ 101/1ರಲ್ಲಿ 50'X80' ಸರ್ಕಾರಿ ಜಮೀನನ್ನು ವಾಸ್ತವ್ಯ ಉದ್ದೇಶಕ್ಕಾಗಿ ಮಂಜೂರು ಮಾಡುವ ಕುರಿತು.

ಓದಲಾಗಿದೆ:- ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ, ಉಡುಪಿ ರವರ ಪತ್ರ ಸಂ:ಎಲ್ಎನ್‌ಡಿ. ಹೆಚ್ಎಸ್. 44/2016-17/ಇ-8345 ದಿನಾಂಕ 16-11-2016

ಪ್ರಸ್ತಾವನೆ:-

ಮೇಲೆ ಓದಲಾದ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ, ಉಡುಪಿ ಇವರ ದಿನಾಂಕ 16-11-2016ರ ಪ್ರಸ್ತಾವನೆಯಲ್ಲಿ ಮಾನ್ಯ ಕೋಟ ಶ್ರೀನಿವಾಸ ಪೂಜಾರಿ ಶಾಸಕರು ವಿಧಾನ ಪರಿಷತ್ತ್ ಹಾಗೂ ಮಾಜಿ ಸಚಿವರು ಇವರು ಮಾನ್ಯ ಕಂದಾಯ ಸಚಿವರಲ್ಲಿ ಮನವಿ ಸಲ್ಲಿಸಿ ಶ್ರೀ ಗುರುರಾಜ ಬಿನ್ ಶ್ರೀನಿವಾಸ ಗಾಣಿಗ ಇವರಿಗೆ ಮೂಡುತೋನ್ಸೆ ಗ್ರಾಮದ ಸ.ನಂ.101/1 ರಲ್ಲಿ ವಾಸ್ತವ್ಯಕ್ಕೆ 10 ಸೆಂಟ್ಸ್ ಜಮೀನು ಮಂಜೂರು ಮಾಡುವ ಬಗ್ಗೆ ಪುನರ್‌ಪರಿಶೀಲಿಸಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಜಮೀನನ್ನು ಮಂಜೂರು ಮಾಡುವಂತೆ ಕೋರಿರುತ್ತಾರೆ.

ಶ್ರೀ ಗುರುರಾಜ ಬಿನ್ ಶ್ರೀನಿವಾಸ ಗಾಣಿಗ ಇವರು ಸರ್ಕಾರಿ ಸ್ಥಳದಲ್ಲಿ ವಾಸವಾಗಿದ್ದು, ಸದ್ರಿ ಸ್ಥಳದ ಮಂಜೂರಾತಿಗೆ ಅರ್ಜಿದಾರರು ಕಲಂ 94ಸಿ ಯಂತೆ ಅರ್ಜಿ ಸಲ್ಲಿಸಿದ್ದು, ಆದರೆ ಅವರು ಅತಿಕ್ರಮಣ ಮಾಡಿದ ಸ್ಥಳವು ಪಿಡಬ್ಲ್ಯೂಡಿ. ರಸ್ತೆ ಮಾರ್ಜಿನ್ ಆಗಿರುವುದರಿಂದ ಅವರ 94ಸಿ ಅರ್ಜಿಯು ತಿರಸ್ಕøತವಾಗಿರುತ್ತದೆ. ಆದುದರಿಂದ ಸದ್ರಿ ಸ.ನಂ 101/1 ರಲ್ಲಿ ಪ್ರಸ್ತುತ ಖಾಲಿ ಇರುವ ಅರ್ಜಿದಾರರು ಮನೆಕಟ್ಟಿ ವಾಸ್ತವ್ಯವಿರುವ ಪಕ್ಕದ ಜಮೀನಿನಲ್ಲಿ 0.10 ಎಕರೆ ಸ್ಥಳವನ್ನು ವಾಸ್ತವ್ಯ ಉದ್ದೇಶಕ್ಕೆ ಮಂಜೂರು ಮಾಡಲು ಕೋರಿರುತ್ತಾರೆ. ಅರ್ಜಿದಾರರು ಭೂ ರಹಿತ ಬಡವರಾಗಿರುತ್ತಾರೆ. ಅರ್ಜಿದಾರರು ಸಣ್ಣ ಗೂಡಂಗಡಿಯನ್ನು ನಡೆಸುತ್ತಿದ್ದು, ಅವರ ವಾರ್ಷಿಕ ವರಮಾನ `.11,000/- ಇದ್ದು, ಅರ್ಜಿದಾರರು ಕೋರಿರುವ ಪ್ರಸ್ತಾವಿತ ಜಮೀನು ಪಿಡಬ್ಲ್ಯೂಡಿ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಸಲ್ಲಿಸಿರುತ್ತಾರೆ. ಅರ್ಜಿದಾರರಿಗೆ ಜಮೀನು ಮಂಜೂರಾತಿಗೆ ಗ್ರಾಮ ಪಂಚಾಯತ್‌ನಿಂದ ಆಕ್ಷೇಪವಿರುವುದಿಲ್ಲವೆಂದು ಸಭೆಯು ನಿರ್ಣಯ ಸಹಿತ ನೀಡಲಾಗಿದೆ. ಮೂಡುತೋನ್ಸೆ ಗ್ರಾಮದ ಸ.ನಂ 101/1 ರ ಪಹಣಿಯಲ್ಲಿ ಕಾಲಂ ನಂ.11 ರಲ್ಲಿ ಆಟದ ಸ್ಥಳ ಎಂದು ದಾಖಲಿಸಿದ್ದು, ಹಿಂದೂ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಣ್ಣು ಇದರ ಆಡಳಿತ ಮಂಡಳಿಯ ಸಂಚಾಲಕರು ಈ ಜಮೀನು ಆಟದ ಬಯಲಿಗೆ ಪ್ರಸ್ತುತ ಉಪಯೋಗವಾಗುತ್ತಿಲ್ಲ ಹಾಗೂ ತಮ್ಮಿಂದ ಯಾವುದೇ ಆಕ್ಷೇಪವಿಲ್ಲ ಎಂಬುದಾಗಿ ಒಪ್ಪಿಗೆ ಪತ್ರ ನೀಡಿರುತ್ತಾರೆ.

ಅರ್ಜಿದಾರರು ಮೊದಲು ಆಕ್ರಮಿಸಿರುವ ಸ್ಥಳವನ್ನು ರಸ್ತೆಗಾಗಿ ಬಿಟ್ಟುಕೊಡುವ ಬಗ್ಗೆ ಭೂಸ್ವಾಧೀನಾಧಿಕಾರಿಯವರ ಸಮಕ್ಷಮ ಪಡೆದ ಅಫಿಡೆವಿಟ್‌ನ್ನು ಸಲ್ಲಿಸಿರುತ್ತಾರೆ. ಉಪನೊಂದಣಾಧಿಕಾರಿ, ಉಡುಪಿ ಇವರಿಂದ ಪಡೆದ 2016-17ನೇ ಸಾಲಿನ ಮಾರ್ಗಸೂಚಿ ದರ ಎಕರೆ 1ರ `.15,40,000/-ರಂತೆ 0.10 ಎಕರೆಗೆ `.1,54,000/- (ಒಂದು ಲಕ್ಷದ ಐವತ್ತ ನಾಲ್ಕು ಸಾವಿರ ಮಾತ್ರ) ಆಗುತ್ತದೆ. ಆದುದರಿಂದ ಮಾನ್ಯ ಶಾಸಕರು ಕೋರಿರುವಂತೆ ಶ್ರೀ ಗುರುರಾಜ ಬಿನ್.

ಶ್ರೀ ನಿವಾಸ ಗಾಣಿಗ ಇವರು ಸ.ನಂ.101/1ರ ಸರಕಾರಿ ಸ್ಥಳದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದು, ಈಗ ಈ ಸ್ಥಳವು ರಸ್ತೆ ಅಗಲೀಕರಣಕ್ಕಾಗಿ ಹೋಗುವುದರಿಂದ ಪ್ರಸ್ತುತ ಈ ಸರ್ವೆ ನಂಬರಿನ ಪಕ್ಕದಲ್ಲಿ ಖಾಲಿ ಇರುವ 0.10 ಎಕರೆ ಸ್ಥಳವನ್ನು ವಾಸ್ತವ್ಯ ಉದ್ದೇಶಕ್ಕೆ ಮಂಜೂರು ಮಾಡಬಹುದಾಗಿಯೂ ಈ ಸ್ಥಳವು ನಗರಸಭಾ ವ್ಯಾಪ್ತಿಯಿಂದ 5 ಕಿ.ಮೀ. ಪರಿಮಿತಿಯೊಳಗೆ ಬರುವುದರಿಂದ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಜಮೀನಿನ ಮೌಲ್ಯವನ್ನು ಪಾವತಿಸಿಕೊಂಡು ಮಂಜೂರು ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ ರವರು ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಪ್ರಸ್ತಾವನೆಯಲ್ಲಿನ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ದಿನಾಂಕ 22-06-2017ರಂದು ನಡೆದ ಸಚಿವ ಸಂಪುಟದ ನಿರ್ಣಯದಂತೆ (ಪ್ರಕರಣ ಸಂಖ್ಯೆ: ಸಿ:406/2017) ಈ ಕೆಳಕಂಡಂತೆ ಆದೇಶಿಸಿದೆ:-

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 66 ಎಲ್‌ಜಿಎ 2016, ದಿನಾಂಕ: 14-07-2017

ಶ್ರೀ ಗುರುರಾಜ್ ಬಿನ್ ಶ್ರೀನಿವಾಸ್ ಗಾಣಿಗ, ಮೂಡುತೊನ್ಸೆ ಗ್ರಾಮ, ಇವರಿಗೆ ಉಡುಪಿ ತಾಲ್ಲೂಕು, ಬ್ರಹ್ಮಾವರ ಹೋಬಳಿ, ಮೂಡುತೊನ್ಸೆ ಗ್ರಾಮದ ಸ.ನಂ 101/1ರಲ್ಲಿ ಸರ್ಕಾರಿ ಜಮೀನನ್ನು ವಾಸ್ತವ್ಯ ಉದ್ದೇಶಕ್ಕಾಗಿ ಮಂಜೂರು ಮಾಡಲು ಕೋರಿರುವ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ.

PR 250

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC.25

ಉದಯ ಆರ್. ನಾಯಕ್

ಪೀಠಾಧಿಕಾರಿ,

ಕಂದಾಯ ಇಲಾಖೆ (ಭೂ.ಮಂ-2)

COMMERCE & INDUSTRIES SECRETARIAT

Sub: Organizing Vendor Development & Investors Summit during October / November 2017.

Read: KUM file No. E5/57/VDP-17/2017-18.

PREAMBLE:

In the Budget Speech of 2017-18, the Hon'ble Chief Minister of Karnataka at Para No.395 has announced that "It is proposed to conduct Vendor Development Event at a national level to bring together MSMEs and Large Manufacturers / Public Sector Undertakings for giving marketing support to MSMEs".

೧೦೯೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ಭಾಗ ೧

Finance Department, vide "BUDGET ADVICE" dated 1st April, 2017 has allocated budget of `.. 300.00 lakh grants for the year 2017-18 for implementing this new announcement under the Scheme "Export and Trade Promotion" Head of Account 2852-80-102-

0-02 (125).

Manufacturing Sector has been recognized as the main engine for the economic growth and creation of wealth and accordingly emphasis was placed on growth of industries in most of the 5 year plans. Central/ State Government undertakings, Large & Mega Industries require various parts, components, accessories and services.

Vendor Development Programme provides a platform for bridging the gap between the requirements of large units and production capabilities of MSMEs. This programme will act as common platform for large units to identify vendors of their choice in terms of production capacity and quality standards.

At the same time, it will provide opportunity to the participating companies to explore the investment opportunities in the State and firm up their new / expansion investment proposals with the State Government in terms of project approvals / MoUs.


  1. ({{^{{FOOTNOTE 125}}}}) during {{^{{FOOTNOTE 2017}}}}-{{^{{FOOTNOTE 18}}}} and `.. {{^{{FOOTNOTE 12}}}}.{{^{{FOOTNOTE 00}}}} crore is available in Karnataka Udyog Mitra which was released for various events & the savings out of the released will be utilized. The proposal has been concurred by Finance Department vide Note No. FD 214 Exp-1/2017, dated 02.06.2017, Planning Department vide Note No. PD 41 FRO 2017, dated 05.06.2017 and Cabinet approval vide subject No. C:425/2017, dated: 05.07.2017. Hence the following order: GOVERNMENT ORDER No: CI 126 SPI 2017 BENGALURU, DATED: 11.07.2017 In view of the facts and circumstances explained in the preamble above, the Government is pleased to accord approval for organizing Vendor Development & Investors Summit at BIEC, Bengaluru during October / November-2017 with a budget outlay of Rs `.. {{^{{FOOTNOTE 15}}}}.{{^{{FOOTNOTE 00}}}} crore. ↩

In this regard, the Commissioner for Industrial Development and Director of Industries & Commerce Department in the file read at reference has submitted the budget requirement for organizing Vendor Development & Investors Summit during October / November-

Sl. No. Particulars Amount (`. in Crore)
1 Venue rent 1.75
2 Advertisement, Media and Publicity 5.00
3 Conference halls & Exhibition infrastructure and Venue branding 5.00
4 Road Shows 1.00
5 Food and Catering 1.00
6 Logistics (Transportation) 0.20
7 Accommodation 0.10
8 Printing & Stationery 0.20
9 Gifts and Mementos 0.10
10 Postage, Courier, Audit fee 0.05
11 Parking charges and NH Toll fee 0.20
12 Cultural programme 0.15
13 Event Partner fee-CII 0.25
Total 15.00
The actual expenditure in the above components may vary, however, it will be adjusted in the overall expenditure of `..15.00 crore.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ೧೦೯೯

COMMERCE & INDUSTRIES SECRETARIAT


  1. Letter No. ಜಿಕೈಕೇ/ಯೋಜನೆ/ಅನುದಾನ/ಪ.ಜಾ.ಪ.ಪಂ/{{^{{FOOTNOTE 2017}}}}-{{^{{FOOTNOTE 18}}}}, dated {{^{{FOOTNOTE 18}}}}.{{^{{FOOTNOTE 04}}}}.{{^{{FOOTNOTE 2017}}}} of the Commissioner for Industrial Development and Director of Industries & Commerce, Bengaluru. PREAMBLE: In the Budget Speech of 2017-18, the Hon’ble Chief Minister of Karnataka at Para No.390 has announced that “Under Chennai- Bengaluru-Chitradurga Industrial Corridor Project, one-time grant of `.{{^{{FOOTNOTE 400}}}}.{{^{{FOOTNOTE 00}}}} crore will be provided for Tumakuru Industrial Node for land acquisition by the KIADB”. Government of India has taken up the development of economic and industrial corridors in the country along major national highways connecting economic and industrial hubs. The following five corridors are under development viz:  Delhi–Mumbai Industrial Corridor;  Amritsar–Kolkatta Industrial Corridor;  Chennai–Vizag Industrial Corridor;  Chennai–Bengaluru Industrial Corridor; and  Bengaluru–Mumbai Economic Corridor. The identified corridors have an influencing area of around 150 kms on either side of these corridors and specific locations have been identified to be developed as Nodes along the corridors. These Nodes are proposed to be developed as Integrated Townships with the state-of-the-art infrastructure facilities and land use on the basis of clean and energy efficient technology; necessary social infrastructure; skill development facilities; etc. These nodes will be administered by a Special Purpose Vehicle (SPV) having all statutory powers. Chennai–Bengaluru Chitradurga Industrial Corridor (CBIC) and Bengaluru–Mumbai Economic Corridor (BMEC) are passing through the State of Karnataka and the GoI has identified the following first Nodes on these corridors:  Tumakuru Node on Chennai-Bengaluru Industrial Corridor  Dharawad Node on Bengaluru-Mumbai Economic Corridor Delhi Mumbai Industrial Corridor Development Corporation (DMICDC) with its experience of developing nodes has been nominated by GoI to give the technical assistance for the development of these Nodes. In the Joint Monitoring Committee (JMC) Meeting of GoI held on 19.05.2016, the following issue was discussed: “The land has to come as equity from the State Government to SPV. Later the Government of India will release their equity up to `.. {{^{{FOOTNOTE 3000}}}} crore to the SPV. So there is no provision in which the land cost can be returned back to ↩
೧೧೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ಭಾಗ ೧

KIADB from SPV. The returns on investment after the sale of developed land will be of the SPV and this money can again be reinvested to develop more industrial nodes".

The Secretary, DIPP, GoI in the JMC Meeting held on 02.08.2016 has requested the State Government to give land as equity and come forward for signing of Share Holders Agreement (SHA) and State Support Agreement (SSA) as has been done in neighboring States.

KIADB is acquiring land from private land owners by paying compensation fixed by the price advisory committee headed by the Deputy Commissioner of the District and the amount realized from the allotment of land will not come back to KIADB for servicing the loans.

The node consists of 4th Phase, Vasanthanarasapura, 1722-30 acres of land, which is under possession of KIADB and compensation to land owners is under progress, 5th Phase (3174-25 acres) and 6th Phase (4731-39 acres) of Vasanthanarasapura, wherein preliminary notifications u/s 28(1) of KIAD Act were issued.

KIADB requires minimum of `.3000 crore to acquire 9,629 acres of land for Tumakuru Industrial Node under CBCIC. KIADB is not in a position to borrow and invest such a huge investment for land, if the said investment not come back to KIADB for servicing the loan.

The cost of land acquisition for Vasantha Narasapura 4th Phase is around `.602.96 crore for 1722-30 acres of land.

4852-80-004-0-01 (211) Industrial Investment 363.44
4852-80-004-0-01 (422) SCP 132.15
4852-80-004-0-01 (423) TSP 54.41
Total 550.00
Sl.No. Particulars Amount
1 One time grant to KIADB for Tumakuru Node-land acquisition (New) 300.00
2 Establishment of Precision Metrology Lab (New) 2.00
3 Establishment of Advanced Polymer Design Lab by CIPET (On-going) 10.00
4 Aerospace Common Finishing and Facility Centre through KIADB (On-going) 5.00
5 Assistance to R&D Centres (On-going) 3.00
6 Critical Infrastructure (KIADB-KSSIDC) (On-going) 43.44
Total 363.44
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ೧೧೦೧

GOVERNMENT ORDER No: CI 97 SPI 2017 BENGALURU, DATED: 11.07.2017

In the circumstances explained in the preamble, Government is pleased to accord approval for the following;

i. Approval for providing one time grant of `.Rs. 400.00 crore to Tumakuru Industrial Node for land acquisition by the KIADB for 4th Phase, Vasantha Narasapur, Tumakuru under Chennai-Bengaluru-Chitradurga Industrial Corridor (CBCIC) Project under HoA 4852-80-004-0-01 (211).

ಕಂದಾಯ ಸಚಿವಾಲಯ

ಸೇರ್ಪಡೆ ಆದೇಶ

ಸಂಖ್ಯೆ: ಕಂಇ 109 ಮುಸೇವಿ 2015, (ಭಾಗ-3) ಬೆಂಗಳೂರು, ದಿನಾಂಕ: 07-04-2017.

ಸರ್ಕಾರದ ಆದೇಶ ಸಂಖ್ಯೆ:ಕಂಇ 109 ಮುಸೇವಿ 2015, ದಿನಾಂಕ:29-01-2016ರ ಆದೇಶದಲ್ಲಿ ಶ್ರವಣಬೆಳಗೊಳದಲ್ಲಿ 2018ನೇ ಸಾಲಿನಲ್ಲಿ ಜರುಗಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ರಾಜ್ಯ ಮಟ್ಟದ ಸಮತಿಯಲ್ಲಿ ಕ್ಷೇತ್ರದ ಹಾಗೂ ಸಮಾಜ ಪ್ರತಿನಿಧಿಗಳು ಪಟ್ಟಿಯಲ್ಲಿ "ಶ್ರೀ ಕೆ. ರಾಮಚಂದ್ರಪ್ಪ, ನಂ.2, 1ನೇ ಅಡ್ಡ ರಸ್ತೆ, ದ್ವಾರಕನಗರ, ಬನಶಂಕರಿ 3ನೇ ಹಂತ, ಬೆಂಗಳೂರು-560 085" ಇವರನ್ನು ಆರ್ಥಿಕ ಸಲಹೆಗಾರ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಬಿ.ಎಸ್. ನಾಗರತ್ನಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ. (ಮುಜರಾಯಿ)

ಕಂದಾಯ ಸಚಿವಾಲಯ

ವಿಷಯ : ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕು, ಕೆಂಗೇರಿ ಮುರಗೋಡು ಗ್ರಾಮದ ಶ್ರೀ ಶಿವಚಿದಂಬರೇಶ್ವರ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವ ಬಗ್ಗೆ.

ಓದಲಾಗಿದೆ : (1) ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 77 ಮುಸೇವಿ 2003, ದಿನಾಂಕ:30-04-2003.

(2) ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ:ಆರ್‌ಡಿಪಿ/ಟಿಆರ್ಐ 02/2012-13, ದಿ:15-09-2016.

ಪ್ರಸ್ತಾವನೆ:-

ಮೇಲೆ (1)ರಲ್ಲಿ ಓದಲಾದ ಸರ್ಕಾರದ ಅಧಿಸೂಚನೆಯಲ್ಲಿ ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕು, ಕೆಂಗೇರಿ ಮುರಗೋಡು ಗ್ರಾಮದ ಶ್ರೀ ಶಿವಚಿದಂಬರೇಶ್ವರ ದೇವಾಲಯವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಸೆಕ್ಷನ್ 23 ರಡಿಯಲ್ಲಿ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿರುತ್ತದೆ.

ಮೇಲೆ (2)ರಲ್ಲಿ ಓದಲಾದ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯಲ್ಲಿ ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕು, ಕೆಂಗೇರಿ ಮುರಗೋಡು ಗ್ರಾಮದ ಶ್ರೀ ಶಿವಚಿದಂಬರೇಶ್ವರ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವಂತೆ ಕೋರಿ ಸದರಿ ಸಂಸ್ಥೆಯ ಪೀಠಾಧಿಕಾರಿಯಾದ ಶ್ರೀ ಶಂಕರ ದೀಕ್ಷಿತ್ ಇವರು ಮನವಿ ಸಲ್ಲಿಸಿರುತ್ತಾರೆ. ಸದರಿ ಮನವಿಯಲ್ಲಿ ಕೋರಿರುವಂತೆ ಪ್ರಸ್ತಾಪಿತ ದೇವಾಲಯವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವ ಕುರಿತು ದಿನಾಂಕ:29-10-2011ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಮಂಡಿಸಲಾಗಿದ್ದು, ಸದರಿ ಪ್ರಕರಣವನ್ನು ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಾಧೀಕರಣಕ್ಕೆ ವಹಿಸಲಾಗಿರುತ್ತದೆ. ಈ ಬಗ್ಗೆ ನ್ಯಾಯಾಧೀಕರಣವು ವಿಚಾರಣೆ ನಡೆಸಿ, ದಾಖಲೆಗಳನ್ನು ಪರಿಶೀಲಿಸಿ ದಿನಾಂಕ:05-05-2012ರಂದು ನೀಡಿರುವ ಅಭಿಪ್ರಾಯ ವರದಿಯಲ್ಲಿ ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕು, ಕೆಂಗೇರಿ ಮುರಗೋಡು೧೧೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ಭಾಗ ೧ ಶ್ರೀ ಶಿವಚಿದಂಬರೇಶ್ವರ ದೇವಾಲಯ ಹಾಗೂ ಶ್ರೀ ಮಾರ್ತಾಂಡೇಶ್ವರ ದೇವಾಲಯಗಳು ಮಠಕ್ಕೆ ಸೇರಿದ ದೇವಾಲಯಗಳಾಗಿರುವುದರಿಂದ ಕಲಂ 1(4)ರ ಪ್ರಕಾರ ಮತ್ತು ಕಲಂ 2(14)(ಬಿ)ರ ಪ್ರಕಾರ ಇವುಗಳು ಸಾರ್ವಜನಿಕ ಜಿಮ್ಮೆಗಳು ಆಗಿರುವುದಿಲ್ಲ. ಶ್ರೀ ಶಿವಚಿದಂಬರೇಶ್ವರ ಮತ್ತು ಶ್ರೀ ಮಾರ್ತಾಂಡೇಶ್ವರ ದೇವಾಲಯಗಳು ಶ್ರೀ ಚಿದಂಬರೇಶ್ವರ ಮಠಕ್ಕೆ ಸೇರಿದ ದೇವಾಲಯಗಳಾಗಿದ್ದು, ಇವುಗಳು ಮಠದಿಂದ ನಿರ್ವಹಿಸಲಾಗುವುದರಿಂದ ಇವುಗಳನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 20ಎ(2)(v)ಅನ್ವಯ ಸಂಸ್ಥೆಯನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಬಹುದಾಗಿದೆ ಎಂದು ಅಭಿಪ್ರಾಯ ನೀಡಿರುತ್ತದೆ.

ಅಲ್ಲದೇ, ಪ್ರಸ್ತಾಪಿತ ದೇವಾಲಯವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವ ಕುರಿತು ಸಹಾಯಕ ಆಯುಕ್ತರು, ಹಿಂದೂ ಪ್ರಕಟಣೆ ಹೊರಡಿಸಲಾಗಿರುತ್ತದೆ. ಈ ಬಗ್ಗೆ ಸ್ವೀಕೃತವಾದ ಅರ್ಜಿಗಳನ್ನು ಹಾಗೂ ದಾಖಲೆಗಳನ್ನು ಪರಿಶೀಲಿಸಿ ಸಲ್ಲಿಸಿರುವ ವರದಿಯಲ್ಲಿ ಶ್ರೀ ಶ್ರೀಪಾದ ದೀಕ್ಷಿತ್ ಶಂಕರ ದೀಕ್ಷಿತ್ ಇನಾಮ್‌ದಾರ ಇವರು ಪ್ರಸ್ತಾಪಿತ ಸಂಸ್ಥೆಯು ವಂಶಪಾರಂಪರ್ಯ ಟ್ರಸ್ಟೀ ಎಂದು ಕಂಡು ಬಂದಿದ್ದು, ವಂಶಪಾರಂಪರಿಕ ಆಡಳಿತ ಮಂಡಳಿಯು ಶ್ರೀ ಚಿದಂಬರೇಶ್ವರ ಹಾಗೂ ಮಾರ್ತಾಂಡೇಶ್ವರ ದೇವಾಲಯವೆಂದು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತವಾಗಿ ತಿಳಿದು ಬಂದಿರುವುದಾಗಿ ವರದಿ ಮಾಡಿರುತ್ತಾರೆ.

ಈ ಎಲ್ಲಾ ವಿಚಾರಗಳ ಬಗ್ಗೆ ದಿನಾಂಕ:17-08-2016ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ವಿವರವಾಗಿ ಚರ್ಚಿಸಿ, ಜಿಲ್ಲಾಧಿಕಾರಿಗಳು, ಬೆಳಗಾವಿ ಜಿಲ್ಲೆ ರವರು ಸಲ್ಲಿಸಿರುವ ವರದಿ ಹಾಗೂ ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಾಧೀಕರಣವು ವಿಚಾರಣೆ ನಡೆಸಿ ನೀಡಿರುವ ಅಭಿಪ್ರಾಯದ ವರದಿಯನ್ನು ಆಧಾರವಾಗಿಟ್ಟುಕೊಂಡು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ ಸೆಕ್ಷನ್ 23ರ ಅಡಿಯಲ್ಲಿ ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕಿನ ಕೆಂಗೇರಿ ಮುರಗೋಡು ಶ್ರೀ ಶಿವಚಿದಂಬರೇಶ್ವರ, ಮಾರ್ತಾಂಡೇಶ್ವರ ದೇವಾಲಯವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಿ ಆದೇಶ ಹೊರಡಿಸುವಂತೆ ತೀರ್ಮಾನಿಸಲಾಗಿರುತ್ತದೆ. ಆದುದರಿಂದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯ ನಿರ್ಣಯದಂತೆ ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕು, ಕೆಂಗೇರಿ ಮುರಗೋಡು ಶ್ರೀ ಶಿವಚಿದಂಬರೇಶ್ವರ, ಮಾರ್ತಾಂಡೇಶ್ವರ ದೇವಾಲಯವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಿ ಆದೇಶ ಹೊರಡಿಸುವಂತೆ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರು ಕೋರಿರುತ್ತಾರೆ.

ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 24 ಮುಆಬಿ 2016, ಬೆಂಗಳೂರು; ದಿನಾಂಕ: 05ನೇ ಅಕ್ಟೋಬರ್, 2016.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಿನಾಂಕ:17-08-2016ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯ ನಿರ್ಣಯದಂತೆ ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕು, ಕೆಂಗೇರಿ ಮುರಗೋಡು ಶ್ರೀ ಶಿವಚಿದಂಬರೇಶ್ವರ, ಮಾರ್ತಾಂಡೇಶ್ವರ ದೇವಾಲಯವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಿ ಆದೇಶಿಸಿದೆ.

PR-258

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-50

ಬಿ.ಎಸ್. ನಾಗರತ್ನಮ್ಮ

ಕಂದಾಯ ಇಲಾಖೆ. (ಮುಜರಾಯಿ)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 83 ಮುಸೇವಿ 2016, ಬೆಂಗಳೂರು, ದಿನಾಂಕ: 20-01-2017.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 21 ರಡಿ ಮತ್ತು ತಿದ್ದುಪಡಿ ಅಧಿನಿಯಮ 2011 ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉತ್ತರ ಕನ್ನಡ ಜಿಲ್ಲೆಗೆ ಈ ಕೆಳಗಿನಂತೆ ಜಿಲ್ಲಾ ಧಾರ್ಮಿಕ

ಕ್ರ.ಸಂ ಹ ಸ ೆ ರು ಮತ್ತು ವಿಳಾಸ ಪ ದ ನಾಮ
1 ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ಅಧ್ಯಕ್ಷರು
2 ಸ ಹಾಯಕ ಆಯುಕ್ತರು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಉತ್ತರ ಕನ್ನಡ ಜಿಲ್ಲೆ, ಕಾರವಾರ ಪ ದ ನಿಮಿತ್ತ ಕಾರ್ಯದರ್ಶಿ
1 ಶ ಂಕರ ಎನ್ ನಾಯಕ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ದೀಕ್ಷಿತ್ ರಸ್ತೆ, ಕುಮಟಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಹಾಗೂ ಸನನ್ ಗುಳಿ ಹೌಸ್, ನಂ.1-1-20/8, ದ ೕರೆಬೈಲ್-ಕೊಂಚಾಡಿ, ಮಂಗಳೂರು - 575008 ೆ ಸ ದ ಸ ್ಯರು
2 ಆಗಮ ರತ್ನ ಸಾಂಬಗಣಪತಿ ಹಿರೇಗಂಗೆ, ಆಗಮ ವಿದ್ವಾಂಸರು, ಗೋಕರ್ಣ, ಕುಮಟಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಸ ದ ಸ ್ಯರು
3 ವ ುುಕುಂದ ಭಟ್ಟ, ವ ೕದ ವಿದ್ವಾಂಸರು, ಸಾಕೀನ, ಬೇರೂಳ್ಳಿ ಅಂಚೆ, ನಗರೆ, ಹೊನ್ನಾವರ ತಾಲ್ಲೂಕು, ೆ ಉತ್ತರ ಕನ್ನಡ ಜಿಲ್ಲೆ ಸ ದ ಸ ್ಯರು
4 ರಾಮಾ ಮೊಗೇರ ಅಳ್ವೆಕೋಡಿ, ಶಿರಾಲಿ, ಭಟ್ಕಳ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಸ ದ ಸ ್ಯರು
5 ಮೀರಾ ಶಾನಭಾಗ ಹೆರವಟ್ಟಾ, ಕುಮಟಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಸ ದ ಸ ್ಯರು
6 ನಾಗಪ್ಪ ಬಿ. ಅಂಬಿಗ ಗಂಗಾವಳಿ ಅಂಚೆ, ಕುಮಟಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಸ ದ ಸ ್ಯರು
7 ರಾಜೇಶ ನಾಯ್ಕ ಪ ದ್ಮಾವತಿ ಭವನ, ನಾಗಪ್ಪ ನಾಯಕ ರಸ್ತೆ, ಭಟ್ಕಳ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಸ ದ ಸ ್ಯರು
8 ಜಿ.ಟಿ. ಹೆಗಡೆ ತಟ್ಟಿಸರ್, ವ ಕೀಲರು, ಬಸ್ತೀಗಲ್ಲಿ, ಶಿರಸಿ - 561401 ಸ ದ ಸ ್ಯರು
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ೧೧೦೩

ಸದರಿ ಪರಿಷತ್ತು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 21ಎ ರಡಿ ನಮೂದಿಸಿರುವ ಕರ್ತವ್ಯ ಮತ್ತು ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು.

ಈ ಜಿಲ್ಲಾ ಧಾರ್ಮಿಕ ಪರಿಷತ್ತು ನಾಲ್ಕು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ; ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.

PR-259

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-25

ಬಿ.ಎಸ್. ನಾಗರತ್ನಮ್ಮ

ಕಂದಾಯ ಇಲಾಖೆ. (ಮುಜರಾಯಿ)

ಕಂದಾಯ ಸಚಿವಾಲಯ

ವಿಷಯ : ಚಾರ್‌ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಿಕರಿಗೆ ಸರ್ಕಾರದ ವತಿಯಿಂದ ಧನ ಸಹಾಯ ನೀಡುವ ಕುರಿತು ಮಾರ್ಗಸೂಚಿ.

ಓದಲಾಗಿದೆ : (1) ಸರ್ಕಾರದ ಆದೇಶ ಸಂಖ್ಯೆ:ಕಂಇ 179 ಮುಅಬಿ 2014, ದಿನಾಂಕ: 07-11-2014.

(2) ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ:ಎಡಿಎಂ 13 ಸಿಆರ್ 2/2016-17, ದಿನಾಂಕ: 06-06-2016.

ಪ್ರಸ್ತಾವನೆ :-

ಮೇಲೆ (1)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ 2014-15ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಪ್ರಕಟಿಸಿರುವಂತೆ ಚಾರ್ ಧಾಮ್ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಧನ ಸಹಾಯ ನೀಡುವ ಯೋಜನೆಯನ್ನು ಜಾರಿಗೆ ತರಲು ಅನುಮತಿಯನ್ನು ನೀಡಿ, ಸದರಿ ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಹೊರಡಿಸಲಾಗಿರುತ್ತದೆ.

ಮೇಲೆ (2)ರಲ್ಲಿ ಓದಲಾದ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರದಲ್ಲಿ ಕರ್ನಾಟಕ ರಾಜ್ಯದಿಂದ ಚಾರ್‌ಧಾಮ್ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳಿಗೆ ಧನ ಸಹಾಯ ನೀಡುವ ಯೋಜನೆಯಲ್ಲಿ ಯಾವುದೇ ದುರುಪಯೋಗವಾಗದಂತೆ ಹಾಗೂ ಯಾತ್ರಾರ್ಥಿಗಳು ಸುಳ್ಳು ದಾಖಲೆಗಳನ್ನು ಹಾಜರುಪಡಿಸದಂತೆ ಮುನ್ನೆಚ್ಚರಿಕೆ ಕೈಗೊಳ್ಳುವ ಸಲುವಾಗಿ ದಿನಾಂಕ:07-11-2014ರ ಮಾರ್ಗಸೂಚಿಯಲ್ಲಿ ಕೆಲವೊಂದು ತಿದ್ದುಪಡಿಯನ್ನು ಮಾಡಿ ಪರಿಷ್ಕøತ ಮಾರ್ಗಸೂಚಿಯನ್ನು ಹೊರಡಿಸುವಂತೆ ಕೋರಿರುತ್ತಾರೆ. ಅದರಂತೆ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ:ಕಂಇ 91 ಮುಅಬಿ 2016, ಬೆಂಗಳೂರು, ದಿನಾಂಕ: 25ನೇ ಅಕ್ಟೋಬರ್, 2016.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಈ ಹಿಂದೆ ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ:ಕಂಇ 179 ಮುಅಬಿ 2014, ದಿನಾಂಕ:07-11-2014ರ ಮಾರ್ಗಸೂಚಿಯನ್ನು ಹಿಂಪಡೆಯಲಾಗಿದೆ.

೧೧೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ಭಾಗ ೧

ಈ ಆದೇಶಕ್ಕೆ ಲಗತ್ತಿಸಿರುವ ಅನುಬಂಧದಲ್ಲಿರುವ ಪರಿಷ್ಕøತ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಮಾರ್ಗಸೂಚಿಯನ್ನು ಚಾರ್‌ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಧನಸಹಾಯ ನೀಡುವ ಅನುಷ್ಠಾನಕ್ಕಾಗಿ ಅನುಸರಿಸುವಂತೆ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಎಸ್. ನಾಗರತ್ನಮ್ಮ

ಕಂದಾಯ ಇಲಾಖೆ. (ಮುಜರಾಯಿ) ಸರ್ಕಾರಿ ಆದೇಶ ಸಂಖ್ಯೆ:ಕಂಇ 91 ಮುಅಬಿ 2016, ಬೆಂಗಳೂರು, ದಿನಾಂಕ: 25ನೇ ಅಕ್ಟೋಬರ್, 2016ರ

ಮಾರ್ಗಸೂಚಿ

ಅನುಬಂಧ

ಕರ್ನಾಟಕ ರಾಜ್ಯದ ವತಿಯಿಂದ ಚಾರ್‌ಧಾಮ್ (ಬದರಿನಾಥ್, ಕೇದಾರನಾಥ್, ಗಂಗೋತ್ರಿ ಮತ್ತು ಯಮುನೋತ್ರಿ) ಯಾತ್ರೆಯನ್ನು ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಧನ ಸಹಾಯ ನೀಡುವ ದೃಷ್ಟಿಯಿಂದ ಈ ಯೋಜನೆಯನ್ನು ರೂಪಿಸಲಾಗಿದೆ.

1. ಕರ್ನಾಟಕದಿಂದ ಚಾರ್‌ಧಾಮ್ ಯಾತ್ರೆ ಕೈಗೊಳ್ಳುವ ಪ್ರತಿ ಯಾತ್ರಿಕರಿಗೆ ಗರಿಷ್ಠ `.20,000 ಅನ್ನು ಸಹಾಯ ಧನವಾಗಿ ನೀಡಲಾಗುವುದು.

ಈ ಯೋಜನೆಯು 2014-15ನೇ ಸಾಲಿನಿಂದ ಜಾರಿಗೆ ಬರುತ್ತದೆ.

2. ಚಾರ್‌ಧಾಮ್ ಯಾತ್ರಾರ್ಥಿಗಳು ನಾಲ್ಕು ಪುಣ್ಯ ಕ್ಷೇತ್ರಗಳ (ಬದರಿನಾಥ್, ಕೇದಾರನಾಥ್, ಗಂಗೋತ್ರಿ ಮತ್ತು ಯಮುನೋತ್ರಿ) ದರ್ಶನವನ್ನು ಪೂರೈಸಿರುವ ಬಗ್ಗೆ ಉತ್ತರಖಾಂಡ ಪ್ರವಾಸೋಧ್ಯಮ ಮಂಡಳಿ ನೀಡುವ (Tourist / Pilgrim Registration & Tracking Access card) ಪಿಲಿಗ್ರೀಮ್ ಕಾರ್ಡ್‌ನ್ನು ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು.

3. ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಈ ಧನ ಸಹಾಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.

4. ಯಾತ್ರಾರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರುವ ಬಗ್ಗೆ ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸಬೇಕು.

i) ಯಾತ್ರಾರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರುವ ಬಗ್ಗೆ "ಆಧಾರ್ ಗುರುತಿನ ಚೀಟಿ"ಯೊಂದಿಗೆ ಮಾಹಿತಿಯನ್ನು ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು;

ii) ಎರಡು ಭಾವ ಚಿತ್ರ.

5. ಯಾತ್ರಾರ್ಥಿಗಳು ಕಡ್ಡಾಯವಾಗಿ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಅಂಗೀಕರಿಸಲ್ಪಟ್ಟ ಪ್ರವಾಸಿ (ಟ್ರಾವಲ್ಸ್) ಸಂಸ್ಥೆಗಳ ಮುಖಾಂತರ ಯಾತ್ರೆ ಕೈಗೊಳ್ಳಬೇಕು ಮತ್ತು ಯಾತ್ರೆ ಪೂರ್ಣಗೊಳಿಸಿರುವುದಕ್ಕೆ ಸಂಬಂಧಪಟ್ಟ ಪ್ರವಾಸಿ (ಟಾವಲ್ಸ್) ಸಂಸ್ಥೆಗಳಿಂದ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸತಕ್ಕದ್ದು.

6. ಯಾತ್ರಾರ್ಥಿಗಳು ಉತ್ತರ ಖಾಂಡ ಪ್ರವಾಸೋಧ್ಯಮ ಮಂಡಳಿಯು ನೀಡುವ (ಪಿಲಿಗ್ರಿಮ್ ಕಾರ್ಡ್) Pilgrim card ನಲ್ಲಿ ನಮೂದಿಸಿರುವಂತೆ ಪ್ರವಾಸವನ್ನು ಮುಕ್ತಾಯಗೊಳಿಸಿದ ದಿನಾಂಕದಿಂದ ನಾಲ್ಕು (4) ತಿಂಗಳೊಳಗಾಗಿ ಧಾರ್ಮಿಕ ದತ್ತಿ ಆಯುಕ್ತರಿಗೆ ಸಂಬಂಧಪಟ್ಟ ದೃಡೀಕರಣ ದಾಖಲೆಗಳೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸತಕ್ಕದ್ದು, ಅರ್ಜಿಯನ್ನು ನಿಗದಿತ ಸಮಯದಲ್ಲಿ ಸಲ್ಲಿಸದೆ ಇದ್ದರೇ ಹಾಗೂ ನಿಗದಿತ ಸಮಯದಲ್ಲಿ ಸಲ್ಲಿಸಿರುವ ದಾಖಲೆಗಳು ಅಪೂರ್ಣವಾಗಿದ್ದಲ್ಲಿಯೂ ಸಹ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. (ಅರ್ಜಿ ಸಲ್ಲಿಸಬೇಕಾದ ವಿಳಾಸ:- ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಮಿಂಟೋ ಶ್ರೀ ಆಂಜನೇಯಸ್ವಾಮಿ ಭವನ, ಆಲೂರು ವೆಂಕಟರಾವ್ ರಸ್ತೆ, ಮಿಂಟೋ ಆಸ್ಪತ್ರೆ ಹತ್ತಿರ, ಚಾಮರಾಜಪೇಟೆ, ಬೆಂಗಳೂರು-18)

7. ಯಾತ್ರಾರ್ಥಿಗಳು ಚಾರ್‌ಧಾಮ್ ಯಾತ್ರೆಯನ್ನು ಪೂರ್ಣಗೊಳಿಸಿದ ನಂತರ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಿದಲ್ಲಿ, ಯಾತ್ರೆಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ಜೇಷ್ಠತೆಯ ಆಧಾರದ ಮೇಲೆ ಅರ್ಹ ಫಲಾನುಭವಿಗಳನ್ನು ಗುರುತಿಸಿದ ನಂತರ ಸಹಾಯಧನವನ್ನು ಆರ್.ಟಿ.ಜಿ.ಎಸ್., ಮೂಲಕ ನೀಡಲಾಗುವುದು.

8. ಯಾತ್ರಾರ್ಥಿಗಳು ಸಹಾಯ ಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ ಅದೇ ವ್ಯಕ್ತಿಗೆ ಎರಡನೇ ಬಾರಿ ಅನುದಾನ ನೀಡಲು ಪರಿಗಣಿಸಲಾಗುವುದಿಲ್ಲ. ಈ ಬಗ್ಗೆ ಯಾತ್ರಾರ್ಥಿಗಳು `.20/-ಗಳ ಛಾಪಕಾಗದದಲ್ಲಿ ಈ ಹಿಂದೆ ಸಹಾಯಧನವನ್ನು ಪಡೆದಿಲ್ಲವೆಂದು ದೃಡೀಕರಣ ನೀಡತಕ್ಕದ್ದು.

9. ಕರ್ನಾಟಕ ರಾಜ್ಯದಲ್ಲಿರುವ ಕೇಂದ್ರ/ರಾಜ್ಯ ಸರ್ಕಾರಿ ನೌಕರರು ಸಹ ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ.

PR-260

ಬಿ.ಎಸ್. ನಾಗರತ್ನಮ್ಮ

SC-25

ಕಂದಾಯ ಇಲಾಖೆ. (ಮುಜರಾಯಿ)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ೧೧೦೫

ಕಂದಾಯ ಸಚಿವಾಲಯ

ತಿದ್ದೋಲೆ

ಸಂಖ್ಯೆ: ಕಂಇ 109 ಮುಸೇವಿ 2015, ಬೆಂಗಳೂರು, ದಿನಾಂಕ: 26-12-2016.

ಸರ್ಕಾರದ ಆದೇಶ ಸಂಖ್ಯೆ:ಕಂಇ 109 ಮುಸೇವಿ 2015, ದಿನಾಂಕ: 19-08-2016ರ ತಿದ್ದುಪಡಿ ಆದೇಶದಲ್ಲಿ "ಶ್ರೀ ಹೆಚ್.ಜಿ.ಡಿ. ರಾಜೇಂದ್ರ, ಎಂ.ಐ.ಜಿ 13, ಸಂಸ್ಕøತಿ, ಕುವೆಂಪು ನಗರ, ಹಾಸನ" ಎಂಬುದರ ಬದಲಾಗಿ ಶ್ರೀ ಹೆಚ್.ಡಿ. ರಾಜೇಂದ್ರ, ಎಂ.ಐ.ಜಿ 13, ಸಂಸ್ಕøತಿ, ಕುವೆಂಪು ನಗರ, ಹಾಸನ" ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

PR-261

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-50

ಬಿ.ಎಸ್. ನಾಗರತ್ನಮ್ಮ

ಕಂದಾಯ ಇಲಾಖೆ. (ಮುಜರಾಯಿ)

ಕಂದಾಯ ಸಚಿವಾಲಯ

ಸೇರ್ಪಡೆ ಆದೇಶ

ಸಂಖ್ಯೆ: ಕಂಇ 109 ಮುಸೇವಿ 2015 (ಭಾ-3), ಬೆಂಗಳೂರು, ದಿನಾಂಕ: 30-12-2016.

ಸರ್ಕಾರದ ಆದೇಶ ಸಂಖ್ಯೆ:ಕಂಇ 109 ಮುಸೇವಿ 2015 ದಿನಾಂಕ:29-01-2016ರ ಆದೇಶದಲ್ಲಿ ಕ್ಷೇತ್ರದ ಹಾಗೂ ಸಮಾಜ ಪ್ರತಿನಿಧಿಗಳು ಪಟ್ಟಿಯಲ್ಲಿ ಕ್ರಮ ಸಂಖ್ಯೆ (14)ರಲ್ಲಿ "ಶ್ರೀ ಹೆಚ್.ಬಿ. ಬ್ರಹ್ಮಪಾಲ್ ತಂದೆ ಲೇಟ್ ಶ್ರೀ ಹೆಚ್.ಕೆ. ಭೂಪಾಲಪ್ಪ, ಪದ್ಮ ಹಾರ್ಡ್‌ವೇರ್ ಮುಖ್ಯರಸ್ತೆ, ಹೊಸದುರ್ಗ ಟೌನ್, ಚಿತ್ರದುರ್ಗ ಜಿಲ್ಲೆ" ಇವರನ್ನು ಹೆಚ್ಚುವರಿ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶಿಸಿದೆ.

PR-262

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-25

ಬಿ.ಎಸ್. ನಾಗರತ್ನಮ್ಮ

ಕಂದಾಯ ಇಲಾಖೆ. (ಮುಜರಾಯಿ)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 60 ಮುಆಬಿ 2016, ಬೆಂಗಳೂರು, ದಿನಾಂಕ: 06.01.2017.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ, 1997ರ ಕಲಂ 23(ಎ)(ii)ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ, "ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕು, ರಾಜಘಟ್ಟ ಅಮಾನಿಕೆರೆ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯ"ವನ್ನು ಮುಜರಾಯಿ ಇಲಾಖಾ ವ್ಯಾಪ್ತಿಯ ಅಧಿಸೂಚಿತ ಸಂಸ್ಥೆಗಳ ಪಟ್ಟಿಗೆ ಸೇರ್ಪಡಿಸಿ ಆದೇಶಿಸಿದೆ.

PR-263

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಬಿ.ಎಸ್. ನಾಗರತ್ನಮ್ಮ

ಕಂದಾಯ ಇಲಾಖೆ (ಮುಜರಾಯಿ)

ಕಂದಾಯ ಸಚಿವಾಲಯ

ವಿಷಯ : ಬೀದರ್ ಜಿಲ್ಲೆ, ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ ಗ್ರಾಮದ ಶ್ರೀ ನಾಗಭೂಷಣ ದೇವಾಲಯವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವ ಬಗ್ಗೆ.

ಓದಲಾಗಿದೆ : ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ:ಎಡಿಎಂ 5 ಸಿಆರ್ 39/2009-10 ದಿ:23-07-2016.

ಪ್ರಸ್ತಾವನೆ:

ಮೇಲೆ ಓದಲಾದ ದಿನಾಂಕ:23-07-2016ರಲ್ಲಿ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರದಲ್ಲಿ ಬೀದರ್ ಜಿಲ್ಲೆ, ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ ಗ್ರಾಮದ ಶ್ರೀ ನಾಗಭೂಷಣ ಶಿವಯೋಗಿ ಸಂಸ್ಥಾನ ಸಂಸ್ಥೆಯನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಡುವಂತೆ ಕೋರಿ ಪರಮ ಪೂಜ್ಯ ಶ್ರೀ ಪ್ರಣವಾನಂದ ಮಹಾಸ್ವಾಮಿಗಳು, ಶ್ರೀ ಸದ್ಗುರು ನಾಗಭೂಷಣ ಶಿವಯೋಗಿ ಸಂಸ್ಥಾನ ಮಠ, ಮುಚಳಂಬ, ಬಸವಕಲ್ಯಾಣ ತಾಲ್ಲೂಕು ಇವರು ಮನವಿ ಸಲ್ಲಿಸಿರುತ್ತಾರೆ. ಸದರಿ ಮನವಿಯನ್ನು ಪರಿಶೀಲಿಸಿ, ಪ್ರಸ್ತಾಪಿತ ದೇವಾಲಯವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವ ಬಗ್ಗೆ ಮಾನ್ಯ ಉಚ್ಚ ನ್ಯಾಯಾಲಯ ಸಂಚಾರಿ ಪೀಠ, ಕಲಬುರ್ಗಿ ಇಲ್ಲಿ ಶ್ರೀ ನಾಗಭೂಷಣ ಶಿವಯೋಗಿ ಸಂಸ್ಥಾನ ಮಠದವರು ಜಿಲ್ಲಾಧಿಕಾರಿ, ಬೀದರ ಇವರ ವಿರುದ್ದ ರಿಟ್ ಅರ್ಜಿ ಸಂ.83724-25/2009 ಪ್ರಕರಣವನ್ನು ದಾಖಲು ಮಾಡಿದ್ದು, ಸದರಿ ಪ್ರಕರಣವು ಇನ್ನು ಚಾಲ್ತಿಯಲ್ಲಿರುವುದರಿಂದ ಮಾನ್ಯ ಉಚ್ಚ೧೧೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ಭಾಗ ೧ ನ್ಯಾಯಾಲಯದ ಅಂತಿಮ ಆದೇಶ ಸ್ವೀಕೃತವಾಗುವವರೆಗೂ ಪ್ರಕ್ರಿಯೆ ಅಂತಿಮಗೊಳಿಸಲು ಅವಕಾಶ ಇರುವುದಿಲ್ಲವೆಂದು ಜಿಲ್ಲಾಧಿಕಾರಿ, ಬೀದರ್ ಜಿಲ್ಲೆ ಇವರು ದಿನಾಂಕ:08-06-2010ರಂದು ವರದಿ ಮಾಡಿರುತ್ತಾರೆ.

ಸದರಿ ಪ್ರಕರಣದಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ದಿನಾಂಕ:17-04-2013ರಂದು ಪ್ರಸ್ತಾಪಿತ ದೇವಾಲಯವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಡುವ ಕುರಿತು ಮೊದಲನೇ ಪ್ರತಿವಾದಿಯಾದ ಜಿಲ್ಲಾಧಿಕಾರಿ, ಬೀದರ್ ಇವರು ಮರು ವಿಚಾರಣೆ ನಡೆಸುವಂತೆ ತೀರ್ಪನ್ನು ನೀಡಿರುತ್ತದೆ.

ಅದರನ್ವಯ ದಿನಾಂಕ:16-08-2013ರಂದು ತಹಶೀಲ್ದಾರ್, ಬಸವ ಕಲ್ಯಾಣ ಮತ್ತು ಸಹಾಯಕ ಆಯುಕ್ತರ ಕಛೇರಿಯ ತಹಶೀಲ್ದಾರ್ ಇವರು ಸ್ಥಳ ಪರಿಶೀಲನೆ ನಡೆಸಿ, ನೀಡಿದ ವರದಿಯನ್ವಯ ಪ್ರಸ್ತಾಪಿತ ದೇವಸ್ಥಾನವು ಮಠವಾಗಿರುತ್ತದೆ ಎಂದು ಜಿಲ್ಲಾಧಿಕಾರಿ, ಬೀದರ್ ಇವರು ದಿನಾಂಕ:17-12-2013ರಂದು ವರದಿ ಸಲ್ಲಿಸಿರುತ್ತಾರೆ.

ನಂತರ, ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರು ದಿನಾಂಕ:16-04-2015ರ ಅಧಿಕೃತ ಜ್ಞಾಪನಾ ಪತ್ರದಲ್ಲಿ ಪ್ರಸ್ತಾಪಿತ ದೇವಾಲಯವು, ದೇವಾಲಯವೇ ಅಥವಾ ಮಠವೇ ಎಂಬ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಲು, ಶ್ರೀ ಗಣಪತಿ ಮಹಾಬಲಶಾಸ್ತ್ರಿ, ಶೈವಾಗಮ ಪ್ರಾಧ್ಯಾಪಕರು, ಸರ್ಕಾರಿ ಮಹಾರಾಜ ಸಂಸ್ಕøತ ಕಾಲೇಜು, ಮೈಸೂರು ಇವರನ್ನು ನಿಯೋಜಿಸಲಾಗಿರುತ್ತದೆ. ಪ್ರಸ್ತಾಪಿತ ದೇವಾಲಯವು ಮಠದ ಸ್ವರೂಪವಾಗಿದ್ದು, ಶ್ರೀ ನಾಗಭೂಷಣ ಶಿವಯೋಗಿ ಮಹಾಸಂಸ್ಥಾನ ಮಠ ಎಂದು ಕರೆಯಲಾಗುತ್ತಿದೆ. ಈ ಮಠದ ನಿರ್ವಹಣೆಯು ಪೀಠಾಧಿಪತಿಯವರಿಂದ ನಿರ್ವಹಿಸಲ್ಪಡುತ್ತಿದ್ದು, ಇದೊಂದು ಮಠವೇ ಹೊರತು ದೇವಾಲಯವಾಗಿರುವುದಿಲ್ಲ. ಅಲ್ಲದೆ ಸದರಿ ಸಂಸ್ಥೆಗೆ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ತಸ್ಥೀಕ್, ವರ್ಷಾಸನ ಹಾಗೂ ಯಾವುದೇ ರೀತಿಯ ಆದಾಯವಿರುವುದಿಲ್ಲ ಮತ್ತು ಹಾಲಿ ಪೀಠಾಧ್ಯಕ್ಷರಾಗಿರುವ ಶ್ರೀ ಪ್ರಣವಾನಂದ ಸ್ವಾಮಿಗಳು ಶ್ರೀ ನಾಗಭೂಷಣ ಮಠ ಎಂಬ ಪ್ರತ್ಯೇಕ ಸೊಸೈಟಿಯನ್ನು ಸ್ಥಾಪಿಸಿಕೊಂಡು ಮಠದ ಆಡಳಿತವನ್ನು ನಿರ್ವಹಿಸುತ್ತಿರುವುದಾಗಿ ಶೈವಾಗಮ ಪ್ರಾಧ್ಯಾಪಕರು, ಮೈಸೂರು ಇವರು ವರದಿ ಮಾಡಿರುತ್ತಾರೆ.

ಜಿಲ್ಲಾಧಿಕಾರಿ, ಬೀದರ್ ಜಿಲ್ಲೆ ಮತ್ತು ಶೈವಾಗಮ ಪ್ರಾಧ್ಯಾಪಕರು, ಮೈಸೂರು ಇವರು ನೀಡಿರುವ ಸ್ಥಳ ಪರಿಶೀಲನಾ ವರದಿಯ ಆಧಾರದ ಮೇಲೆ ಬೀದರ್ ಜಿಲ್ಲೆ, ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ ಗ್ರಾಮದ ಶ್ರೀ ನಾಗಭೂಷಣ ದೇವಾಲಯವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಡುವ ಕುರಿತು ತೀರ್ಮಾನ ಕೈಗೊಳ್ಳಲು ಪ್ರಸ್ತಾವನೆಯನ್ನು ದಿನಾಂಕ:23-05-2016ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಮಂಡಿಸಲಾಗಿತ್ತು. ಸದರಿ ಸಭೆಯಲ್ಲಿ ಪ್ರಸ್ತಾಪಿತ ಸಂಸ್ಥೆಯು ಒಂದು ಮಠವಾಗಿದ್ದು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ, 1997ರ ಕಲಂ 1(4)ರನ್ವಯ ಯಾವುದೇ ಒಂದು ಮಠ ಅಥವಾ ಮಠಕ್ಕೆ ಸೇರಿದ ದೇವಾಲಯಕ್ಕೆ ಸದರಿ ಕಾಯ್ದೆಯು ಅನ್ವಯವಾಗುವುದಿಲ್ಲವಾದ ಕಾರಣ ಪ್ರಸ್ತಾಪಿತ ದೇವಾಲಯವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಣಯವಾಗಿರುತ್ತದೆ.

ಆದುದರಿಂದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯ ನಿರ್ಣಯದಂತೆ ಬೀದರ್ ಜಿಲ್ಲೆ, ಬಸವಕಲ್ಯಾಣ ತಾಲ್ಲೂಕು, ಮುಚಳಂಬ ಗ್ರಾಮದ ಶ್ರೀ ನಾಗಭೂಷಣ ದೇವಾಲಯವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಟ್ಟು ಆದೇಶ ಹೊರಡಿಸುವಂತೆ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರು ಕೋರಿರುತ್ತಾರೆ.

ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 47 ಮುಆಬಿ 2016, ಬೆಂಗಳೂರು; ದಿನಾಂಕ: 01ನೇ ಡಿಸೆಂಬರ್, 2016.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಿನಾಂಕ:23-05-2016ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ನಿರ್ಣಯದಂತೆ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 1(4)ರನ್ವಯ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 87 ಮುಆಬಿ 2012 ದಿನಾಂಕ:29-09-2012ರ ಪುಟ ಸಂಖ್ಯೆ:207, ಕ್ರಮ ಸಂಖ್ಯೆ:48ರಲ್ಲಿರುವ ಬೀದರ್ ಜಿಲ್ಲೆ, ಬಸವಕಲ್ಯಾಣ ತಾಲ್ಲೂಕು, ಮುಚಳಂಬ ಗ್ರಾಮದ ಶ್ರೀ ನಾಗಭೂಷಣ ದೇವಾಲಯವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಿ ಆದೇಶಿಸಿದೆ.

PR-264

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-50

ಬಿ.ಎಸ್. ನಾಗರತ್ನಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಮುಜರಾಯಿ)

ಕಂದಾಯ ಸಚಿವಾಲಯ

ವಿಷಯ : ಬೀದರ್ ಜಿಲ್ಲೆ, ಬೀದರ್ ತಾಲ್ಲೂಕು, ಬೆನಕನಹಳ್ಳಿ ಶ್ರೀ ಯಲ್ಲಮ್ಮ ದೇವಾಲಯ (ಭವಾನಿ ದೇವಾಲಯ) ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಡುವ ಬಗ್ಗೆ.

ಓದಲಾಗಿದೆ : 1) ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 87 ಮುಆಬಿ 2012 ದಿನಾಂಕ:29-09-2012.

2) ಬೀದರ್ ತಾಲ್ಲೂಕು, ಬೆನಕನಹಳ್ಳಿ ಗ್ರಾಮಸ್ಥರು ಸರ್ಕಾರಕ್ಕೆ ಸಲ್ಲಿಸಿರುವ ಮನವಿ ದಿನಾಂಕ:11-08-2016.

ಪ್ರಸ್ತಾವನೆ :

ಮೇಲೆ (1) ರಲ್ಲಿ ಓದಲಾದ ದಿನಾಂಕ:29-09-2012ರ ಸರ್ಕಾರದ ಅಧಿಸೂಚನೆಯಲ್ಲಿ ಬೀದರ್ ಜಿಲ್ಲೆ, ಬೀದರ್ ತಾಲ್ಲೂಕು ಬೆನಕನಹಳ್ಳಿ ಶ್ರೀ ಯಲ್ಲಮ್ಮ ಭವಾನಿ ಮಂದಿರವನ್ನು ಪುಟ ಸಂಖ್ಯೆ:(203)ರ ಕ್ರಮ ಸಂಖ್ಯೆ:(18)ರಲ್ಲಿ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಲಾಗಿರುತ್ತದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ೧೧೦೭

ಮೇಲೆ (2) ರಲ್ಲಿ ಓದಲಾದ ದಿನಾಂಕ:11.08.2016ರ ಬೆನಕನಹಳ್ಳಿ ಗ್ರಾಮಸ್ಥರು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ಬೀದರ್ ಜಿಲ್ಲೆ, ಬೀದರ್ ತಾಲ್ಲೂಕು, ಬೆನಕನಹಳ್ಳಿಯಲ್ಲಿರುವ ಶ್ರೀ ಯಲ್ಲಮ್ಮ ದೇವಾಲಯ (ಭವಾನಿ ದೇವಾಲಯ) ಖಾಸಗಿ ಸಂಸ್ಥೆಯಾಗಿದ್ದು, ಸದರಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಿಕೊಳ್ಳಲಾಗಿರುತ್ತದೆ. ಸದರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭಗಳಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ. ಗ್ರಾಮಸ್ಥರು ಒಟ್ಟುಗೂಡಿ ಈ ದೇವಾಲಯದ ಅಭಿವೃದ್ದಿಯನ್ನು ಕೈಗೊಳ್ಳುತ್ತಿದ್ದು, ಸದರಿ ದೇವಾಲಯವು ಮುಜರಾಯಿ ಇಲಾಖಾ ವ್ಯಾಪ್ತಿಗೆ ಸೇರಿರುವುದರಿಂದ ಅಭಿವೃದ್ದಿ ಕಾಮಗಾರಿಯನ್ನು ಕೈಗೊಳ್ಳಲು ತೊಂದರೆಯಾಗುತ್ತಿರುತ್ತದೆ. ಸ್ಥಳೀಯ ಶಾಸಕರು ಸಹ ಸದರಿ ದೇವಸ್ಥಾನವನ್ನು ಮುಜರಾಯಿ ಇಲಾಖೆಯಿಂದ ಹೊರತುಪಡಿಸುವಂತೆ ಕೋರಿರುತ್ತಾರೆ. ಆದುದರಿಂದ, ಪ್ರಸ್ತಾಪಿತ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಿ ಆದೇಶಿಸುವಂತೆ ಕೋರಿರುತ್ತಾರೆ. ಸದರಿ ಮನವಿಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಕಂಇ 52 ಮುಆಬಿ 2016, ಬೆಂಗಳೂರು, ದಿನಾಂಕ: 13ನೇ ಜನವರಿ, 2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 87 ಮುಆಬಿ 2012, ದಿನಾಂಕ:29-09-2012ರ ಪುಟ ಸಂಖ್ಯೆ:(203) ಕ್ರ.ಸಂ.18ರಲ್ಲಿನ ಬೀದರ್ ಜಿಲ್ಲೆ, ಬೀದರ್ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿರುವ ಶ್ರೀ ಯಲ್ಲಮ್ಮ ದೇವಾಲಯ (ಭವಾನಿ ದೇವಾಲಯ)ವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಿ ಸರ್ಕಾರವು ಆದೇಶಿಸಿದೆ.

PR-265

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-50

ಬಿ.ಎಸ್. ನಾಗರತ್ನಮ್ಮ

ಕಂದಾಯ ಇಲಾಖೆ. (ಮುಜರಾಯಿ)

ಕಂದಾಯ ಸಚಿವಾಲಯ

ತಿದ್ದೋಲೆ

ಸಂಖ್ಯೆ: ಕಂಇ 63 ಮುಆಬಿ 2016, ಬೆಂಗಳೂರು, ದಿನಾಂಕ: 09-01-2017.

ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಿ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿರುವ ಸರ್ಕಾರದ ಆದೇಶ ಸಂಖ್ಯೆ:ಕಂಇ 87 ಮುಆಬಿ 2012, ದಿನಾಂಕ: 29-09-2012ರಲ್ಲಿ ಹಾಸನ ಜಿಲ್ಲೆ, ಹಾಸನ ತಾಲ್ಲೂಕಿನ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಪುಟ ಸಂಖ್ಯೆ:466, ಕ್ರಮ ಸಂಖ್ಯೆ: 497ರಲ್ಲಿ "ಶ್ರೀ ಪರಶಿವ ದೇವರು ದೇವಾಲಯ, ಗೊರೂರು ಗ್ರಾಮ" ಎಂದಿರುವುದನ್ನು "ಶ್ರೀ ಪರವಾಸು ದೇವರು ದೇವಾಲಯ, ಗೊರೂರು ಗ್ರಾಮ" ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

PR-266

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-25

ಬಿ.ಎಸ್. ನಾಗರತ್ನಮ್ಮ

ಕಂದಾಯ ಇಲಾಖೆ (ಮುಜರಾಯಿ)

ಕಂದಾಯ ಸಚಿವಾಲಯ

ಸೇರ್ಪಡೆ ಆದೇಶ

ಸಂಖ್ಯೆ: ಕಂಇ 109 ಮುಸೇವಿ 2015 (ಭಾ-1) ಬೆಂಗಳೂರು, ದಿನಾಂಕ 08-12-2016.

ಸರ್ಕಾರದ ಆದೇಶ ಸಂಖ್ಯೆ:ಕಂಇ 109 ಮುಸೇವಿ 2015, ದಿನಾಂಕ:29-01-2016ರ ಆದೇಶದಲ್ಲಿ ಕ್ಷೇತ್ರದ ಹಾಗೂ ಸಮಾಜ ಪ್ರತಿನಿಧಿಗಳು ಪಟ್ಟಿಯಲ್ಲಿ ಕ್ರಮ ಸಂಖ್ಯೆ (12)ರಲ್ಲಿ "ಶ್ರೀ ಎಸ್.ಜೆ. ಗುಣಪಾಲ್ ಜೈನ್, ಸಾಲಿಗ್ರಾಮ ಗ್ರಾಮ, ಕೆ.ಆರ್.ನಗರ ತಾಲ್ಲೂಕು, ಮೈಸೂರು ಜಿಲ್ಲೆ" ಇವರನ್ನು ಹೆಚ್ಚುವರಿಯಾಗಿ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶಿಸಿದೆ.

PR-267

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಬಿ.ಎಸ್. ನಾಗರತ್ನಮ್ಮ

ಕಂದಾಯ ಇಲಾಖೆ (ಮುಜರಾಯಿ) FOREST, ECOLOGY AND ENVIRNOMENT SECRETARIAT

೧೧೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ಭಾಗ ೧

Read : Principal Chief Conservator of Forests (Wildlife) & Chief Wildlife Warden, Karnataka letter No. PCCF(WL)/B2/CR/ /2016-17, Dated:04.06.2016.

Preamble :-

In the letter read above, the PCCF(WL) has proposed that a Committee has been formed under the Chairmanship of the Addl. Principal Chief conservator of Forests (Project Tiger) Mysuru for finalisation of guidelines for private resorts/institutions/entities operating in the revenue enclosures as well as those located close to Protected Areas. In response to this, the Chairman of the Committee after detailed deliberation has submitted a report. The PCCF(WL) requested to review the report and issue necessary order.

The proposal has been scrutinised and hence this order.

Government Order No. FEE 95 FWL 2016, Bengaluru, dated: 10.07.2017

In view of the reasons mentioned in the preamble, Guidelines for private resorts/institutions/entities operating in the revenue enclosures within Wildlife Sanctuaries and National Parks as well as those located close to Protected Areas is furnished as per Annexure. This Order will come in to force with immediate effect and until further orders.

By Order and in the Name of the Governor of Karnataka,

H.S. BHAGYALAKSHMI

Under Secretary to Government,

Forest, Ecology and Envirnoment Department.

Annexure to Govt. Order No.FEE 95 FWL 2016, dated: 10.07.2017

Guidelines for regulation of Private Resorts, Home Stays, Institutions, other Entities in Revenue Enclosures and

around the Protected Areas (Wildlife Sanctuaries and National Parks).

INTRODUCTION

Eco tourism is ecologically sustainable (nature tourism) and is distinct from the mass tourism, in having equitable and community based efforts for improving the living standards of local communities living on the fringes or in the enclosures of Protected Areas.

The objective of these guidelines is to move from wildlife tourism to Eco-tourism which is defined as the responsible travel to natural areas that ensures ecological security for the well being of the local residents and its environment.

These guidelines are to support the effective implementation of the provisions of Wildlife (Protection) Act 1972, guidelines issued under the Eco-Sensitive Zone (ESZ) in and around the Protected Areas, and also the Wilderness Tourism Policy 2004 of Government of Karnataka, without violating the existing statutes and the orders of the Hon'ble High Court of Karnataka and Hon'ble Supreme Court.

The activities are as follows:

1. There should not be any change in the land use pattern for over next 50 years inside the Protected Areas as stipulated by the Hon'ble Supreme Court in the writ petition no. 337/95.

2. Only the existing and recognized resorts will be permitted to operate within the Eco Sensitive Zones and enclosures of the Protected Areas.

3. Overcrowding, misuse of natural resources, construction of buildings and infrastructure produces negative impact on the Environment and Wildlife Conservation by exceeding its carrying capacity and also creates water scarcity. Increased vehicular movement in and around Pas interfere with the animal activities such as search for food, water and shelter. The case studies in Africa and other Countries have revealed that increased tourism will affect the animal behaviour and the very survival of certain species. Under the circumstances the rights and privileges settled at the time of constituting Reserve forests/ State forests/ Minor forests/ any other type of forests/ Sanctuaries/ National Parks and Tiger Reserves will remain unaltered in these areas and their enclosures. The activities which may be allowed in a limited way are as follows:

a. Trekking or nature walks through designated paths.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ೧೧೦೯

b. Accommodation for temporary occupation of tourists related to Eco-friendly Tourisms activities may be permitted with the permission from Appropriate Authority (respective eco-sensitive zone committees) without creating any new infrastructure.

c. Certified guides by the Eco Tourism Board and preferably from the local area.

d. Bird watching and study of flora and fauna. However collection of specimens shall be prohibited, unless permitted by the Chief Wildlife Warden.

e. In respect of the carrying capacity of any particular Protected Area for tourism in its enclosures is regulated under G.O. No. FEE 38 FWL 2013, dated 11-06-2013.

f. Liquid waste and solid wastes disposal shall be as approved by the Competent Authority under the law governing the subject. No untreated used water shall be allowed in to the rivers, streams and other water bodies.

g. Movement of vehicles in the enclosures and around the Pas are regulated as per the existing rules and norms.

h. Eco-Tourism activities in Eco-Sensitive Zone (ESZ) of protected areas will be in accordance with ESZ notification of respective protected area and as decided by the ESZ management committee.

i. Eco-Tourism in and around Tiger Reserves will be in accordance with National Tiger Conservation Authority (NTCA) guidelines or directives.

Do's and Don'ts for the tourists/ visitors entering the Protected Areas (PA):

1. Abide by the PA rule.

2. Don't enter the PA with fire arms/ explosives.

3. Obtain Permission before entering the PA.

4. Don't carry transistor and tape recorder into the PA.

5. Obey the park guide.

6. Don't blow horn.

7. Speed limit to be fixed for vehicles moving inside the PA, recommended maximum speed is 20 km/h.

8. Don't litter with cans, bottles, etc.

9. Always carry drinking water.

10. Don't get down, unless told by the guide.

11. Don't remove any forest property.

12. Don't chase or tease animals.

13. Smoking is prohibited.

14. Animals have the first right of way.

15. Consumption of alcohol inside Park/PA is prohibited.

16. Use of polythene inside the park/ PA is strictly prohibited.

17. No pets are allowed inside the park.

18. Do not get down from your vehicle except at designated places.

19. Overtaking is strictly prohibited.

20. Maintain minimum distance of 30 metres while viewing wildlife.

21. Un-registered vehicles carrying tourists are not allowed.

Do's and Don'ts for the Home Stays/ Resorts/ Hotel/ Institutions located in and around the Pas and Eco sensitive

zone.

1. Environmental friendly atmosphere should be created.

2. Use of Solar Energy and LPG to be encouraged and to be made mandatory in a time frame.

3. Establishment of units for recycling of Solid Waste (ex: Kitchen Waste)/ Liquid Waste to be encouraged and to be made mandatory in a time frame.

೧೧೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ಭಾಗ ೧

4. Ban on use of loud music.

5. Ban on use of Plastic and visitors need to be educated on the same. Plastic brought by the visitors should be carried back by them.

6. Bonfire/ Camp fire prohibited.

7. Certified Naturalist/ Guide should compulsorily accompany the visitors during a Safari/Trekking.

8. Use of LED bulbs to be encouraged and to be made mandatory in a time frame.

9. Literature about local flora and fauna including bird check lists to be provided.

H.S. BHAGYALAKSHMI,

PR-254

Under Secretary to Government,

SC-200

Forest, Ecology and Envirnoment Department.

ನಗರಾಭಿವೃದ್ಧಿ ಸಚಿವಾಲಯ

ವಿಷಯ: ಬೆಂಗಳೂರು ಮಹಾನಗರ ಪ್ರದೇಶದ ಪರಿಷ್ಕøತ ರಚನಾ ನಕ್ಷೆ-2031 ಕ್ಕೆ ಅನುಮೋದನೆ

ಓದಲಾಗಿದೆ :

ನೀಡುವ ಬಗ್ಗೆ. (1) ಸರ್ಕಾರದ ಆದೇಶ ಸಂಖ್ಯೆ: ನಅಇ 51 ಬಿಎಂಆರ್ 2002, ದಿನಾಂಕ: 21-09-2005.

(2) ಸರ್ಕಾರದ ಆದೇಶ ಸಂಖ್ಯೆ: ನಅಇ 204 ಬಿಎಂಆರ್ 2010, ದಿನಾಂಕ: 24-02-2011.

(3) ಮಹಾನಗರ ಆಯುಕ್ತರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಇವರ ಪತ್ರ ಸಂಖ್ಯೆ: ಬಿಎಂಆರ್‌ಡಿಎ/ಟಿಪಿ/ಎಸ್‌ಟಿಆರ್-ಪ್ಲ್ಯಾನ್/ 18/2007-08, ದಿನಾಂಕ: 08-01-2016 ಮತ್ತು 19-11-2016.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ:(1) ರ ಆದೇಶದಲ್ಲಿ ಬೆಂಗಳೂರು ಮಹಾನಗರ ಪ್ರದೇಶದ ಯೋಜಿತ ಬೆಳವಣಿಗಾಗಿ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರವು ಸಿದ್ದಪಡಿಸಿರುವ ರಚನಾ ನಕ್ಷೆಯಲ್ಲಿ ಬರುವ ಇಂಟರ್‌ಸ್ಟೀಷಿಯಲ್ ವಲಯದಲ್ಲಿ ಅನುಮತಿಸಬಹುದಾದ/ವಿಶೇಷ ಸಂದರ್ಭಗಳಲ್ಲಿ ಅನುಮತಿಸಬಹುದಾದ ಉಪಯೋಗಗಳನ್ನು ಅಳವಡಿಸಿ ಜಾರಿಗೊಳಿಸಲು ಸರ್ಕಾರದ ಮಂಜೂರಾತಿ ನೀಡಲಾಗಿರುತ್ತದೆ ಹಾಗೂ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ಥಳೀಯ ಯೋಜನಾ ಪ್ರಾಧಿಕಾರಗಳು ಅಂತಿಮ ಅನುಮೋದಿತ ರಚನಾ ನಕ್ಷೆಯ ಆಧಾರದ ಮೇಲೆ ತಮ್ಮ ಸ್ಥಳೀಯ ಯೋಜನಾ ಪ್ರದೇಶಕ್ಕೆ ಸ್ಥೂಲಾಭಿವೃದ್ಧಿ ಯೋಜನೆ/ವ್ಯಾಪಕಾಭಿವೃದ್ಧಿ ಯೋಜನೆ/ಪರಿಷ್ಕøತ ವ್ಯಾಪಕಾಭಿವೃದ್ಧಿ ಯೋಜನೆಗಳನ್ನು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೆರವಿನೊಂದಿಗೆ ತ್ವರಿತವಾಗಿ ಸಿದ್ಧಪಡಿಸಲು ಕ್ರಮಕೈಗೊಳ್ಳಲು ಆದೇಶಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ:(2) ರ ಆದೇಶದಲ್ಲಿ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯು ಶೀಘ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವುದರಿಂದ, ಬೆಂಗಳೂರು ಮಹಾನಗರ ಪ್ರದೇಶದ ಯೋಜಿತ ಬೆಳವಣಿಗಾಗಿ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರವು ಸಿದ್ದಪಡಿಸಿರುವ ಕರಡು ರಚನಾ ನಕ್ಷೆ-2031ಕ್ಕೆ ವ್ಯವಸಾಯ ವಲಯದಲ್ಲಿ ಅನುಮತಿಸಬಹುದಾದ ಉಪಯೋಗಗಳಲ್ಲಿ 'Eco friendly/Heritage Tourist Resorts with Zero discharge approved by Tourism Department' ಇವುಗಳನ್ನು ಅಳವಡಿಸಿಕೊಳ್ಳುವ ನಿಬಂಧನೆಗೊಳಪಟ್ಟು ಸರ್ಕಾರದ ಮಂಜೂರಾತಿ ನೀಡಿ, ಸಾರ್ವಜನಿಕರಿಗಾಗಿ ಸದರಿ ಕರಡು ರಚನಾ ನಕ್ಷೆಯನ್ನು ಪ್ರಕಟಿಸಿ, 30 ದಿನಗಳ ಕಾಲಾವಕಾಶ ನೀಡಿ ಆಕ್ಷೇಪಣೆ/ಸಲಹೆಗಳನ್ನು ಆಹ್ವಾನಿಸಿ ಜಾಹೀರಾತು ನೀಡಲು ಆದೇಶಿಸಲಾಗಿರುತ್ತದೆ.

ಮಹಾನಗರ ಆಯುಕ್ತರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಇವರು ಮೇಲೆ ಓದಲಾದ ಕ್ರಮ ಸಂಖ್ಯೆ:(3) ರ ಪತ್ರಗಳಲ್ಲಿ ಕರಡು ಪರಿಷ್ಕøತ ರಚನಾ ನಕ್ಷೆ-2031ರ ಕುರಿತು ಸಾರ್ವಜನಿಕರ ಸಲಹೆ/ಆಕ್ಷೇಪಣೆ ಆಹ್ವಾನಿಸಿ ದಿನಾಂಕ:09-03-2013ರ ಕರ್ನಾಟಕ ರಾಜ್ಯ ಪತ್ರ ಮತ್ತು ದಿನಪತ್ರಿಕೆಗಳಲ್ಲಿ ಪ್ರಕಟಣೆಯನ್ನು ಪ್ರಕಟಿಸಲಾಗಿದ್ದು, ನಿಗದಿತ 30 ದಿನಗಳ ಅವಧಿಯೊಳಗೆ ಸಾರ್ವಜನಿಕರಿಂದ ಒಟ್ಟು 27 ಸಲಹೆ/ಆಕ್ಷೇಪಣೆಗಳು ಮತ್ತು ಅವಧಿ ಮೀರಿದ ನಂತರ 01 ಸಲಹೆ/ಆಕ್ಷೇಪಣೆ ಸ್ವೀಕೃತವಾಗಿರುತ್ತವೆ.

ದಿನಾಂಕ 15-03-2013 ರಂದು ಮಹಾನಗರ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರಡು ಪರಿಷ್ಕøತ ರಚನಾ ನಕ್ಷೆ-2031 ಕ್ಕೆ ಸಂಬಂಧಿಸಿದಂತೆ ಸ್ವೀಕರಿಸಲಾಗಿದ್ದ ಸಾರ್ವಜನಿಕ ಆಕ್ಷೇಪಣೆಗಳನ್ನು ಪರಿಶೀಲಿಸಿ, ಸಾಮಾನ್ಯವಾಗಿ ವಸತಿ, ವಾಣಿಜ್ಯ, ಕೈಗಾರಿಕಾ ಮತ್ತು ಪ್ರವಾಸೋದ್ಯಮ ಉದ್ದೇಶಗಳಿಗಾಗಿ ಜಮೀನುಗಳನ್ನು ನಕ್ಷೆಯಲ್ಲಿ ಕಾಯ್ದಿರಿಸಲು ಕೋರಲಾಗಿದ್ದು, ಎಲ್ಲಾ ಆಕ್ಷೇಪಣೆಗಳು ರಚನಾ ನಕ್ಷೆಯಲ್ಲಿನ ವ್ಯವಸಾಯ ವಲಯದ Conservation Zone ಗಳಲ್ಲಿ ಬರುತ್ತಿರುವುದರಿಂದ ರಚನಾ ನಕ್ಷೆಯ ಉದ್ದೇಶವು Broad Policy Guide ಆಗಿದ್ದು, ಇವುಗಳಲ್ಲಿ Agriculture Zone ಮತ್ತು Conservation Zone ನಲ್ಲಿ ಬರುವಂತಹ ಪ್ರದೇಶಗಳನ್ನು Ecological sensitive ಆಗಿರುವುದರಿಂದ ತಿರಸ್ಕರಿಸಲಾಗಿರುತ್ತದೆ ಹಾಗೂ Area Planning Zoneಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ೧೧೧೧ ನಲ್ಲಿ ಬಂದಿರುವಂತಹ ಆಕ್ಷೇಪಣೆಗಳು ಆಯಾ ಸ್ಥಳೀಯ ಯೋಜನಾ ಪ್ರದೇಶಗಳು ಸರ್ಕಾರದಿಂದ ಅನುಮೋದನೆಗೊಂಡ ಮಹಾಯೋಜನೆ/ಮಧ್ಯಂತರ ಮಹಾಯೋಜನೆ ನಿಯಮಾವಳಿಗಳಂತೆ ನಿಯಂತ್ರಿಸಲ್ಪಡುವುದರಿಂದ ತಿರಸ್ಕರಿಸಲು ತೀರ್ಮಾನಿಸಲಾಗಿರುತ್ತದೆ.

ದಿನಾಂಕ 29-12-2015ರಂದು ನಡೆದ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ 15ನೇ ಸಭೆಯಲ್ಲಿ, ಪರಿಷ್ಕøತ ರಚನಾ ನಕ್ಷೆ-2031ಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಹಾಗೂ ಮಾನ್ಯ ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳಲ್ಲಿ ನೀಡಲಾಗಿರುವ ಸಲಹೆ/ಅಭಿಪ್ರಾಯಗಳನ್ನು ಅಂತಿಮ 'ಪರಿಷ್ಕøತ ರಚನಾ ನಕ್ಷೆ-2031ರಲ್ಲಿ ಅಳವಡಿಸಿರುವುದನ್ನು ಅವಗಾಹಿಸಿ ಅನುಮೋದಿಸಲಾಗಿದ್ದು, ಪರಿಷ್ಕøತ ರಚನಾ ನಕ್ಷೆ-2031ನ್ನು ಸರ್ಕಾರದ ಅಂತಿಮ ಅನುಮೋದನೆಗಾಗಿ ಸಲ್ಲಿಸಲು ತೀರ್ಮಾನಿಸಲಾಗಿರುತ್ತದೆ. ಪ್ರಾಧಿಕಾರದ ಸಭೆಯ ನಿರ್ಣಯದಂತೆ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ-1985ರ ಕಲಂ 9ರ ಅಡಿಯಲ್ಲಿ ತಯಾರಿಸಿರುವ ಬೆಂಗಳೂರು ಮಹಾನಗರ ಪ್ರದೇಶದ ಅಂತಿಮ 'ಪರಿಷ್ಕøತ ರಚನಾ ನಕ್ಷೆ-2031' ಕ್ಕೆ ಸರ್ಕಾರದ ಅನುಮೋದನೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ದಿನಾಂಕ:02-08-2016 ರಂದು ನಡೆದ ಸಭೆಯಲ್ಲಿ ಈ ಕೆಳಕಂಡ 'Innovative Financing Techniques' ಗಳನ್ನು ಪರಿಷ್ಕøತ ರಚನಾ ನಕ್ಷೆ-2031 ರಲ್ಲಿ ಅಳವಡಿಸಿ ಅನುಮೋದನೆಗಾಗಿ ಕ್ರಮ ಜರುಗಿಸಲು ತೀರ್ಮಾನಿಸಲಾಗಿರುತ್ತದೆ.

1) Exchange of part of developed acquired lands as compensation for the lands required for the projects.

2) Levy of premium FSI subject to amendment to the Zonal Regulations.

3) Levy of cess at the time of granting approval for development of land or buildings.

4) Construction and exploitation of commercial spaces near important infrastructure projects.

5) Generation of revenue through various commercial activities like advertising, providing access, business

development etc.

6) (a) Generation of revenue through levying of fees for easy change of land use in the vicinity of insfrastructure

projects.

7) To bring a comprehensive self contained amendment to the Karnataka Town and Country Planning Act, so that a

mechanism of betterment tax could be levied all over the State by the concerned planning authority.

ಸಭೆಯ ನಿರ್ಣಯದಂತೆ ಎಲ್ಲಾ ಅಂಶಗಳನ್ನು ಪರಿಷ್ಕøತ ರಚನಾ ನಕ್ಷೆ-2031 ರ ವರದಿಯಲ್ಲಿ ಅಳವಡಿಸಿ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದ್ದು, ಈ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ನಅಇ 149 ಬಿಎಂಆರ್ 2014, ಬೆಂಗಳೂರು ದಿನಾಂಕ: 08-05-2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ಮಹಾನಗರ ನಕ್ಷೆ-2031 ಕ್ಕೆ ಸರ್ಕಾರದ ಅನುಮೋದನೆ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR - 256

ಎನ್. ನರಸಿಂಹಮೂರ್ತಿ

SC-200

ಸರ್ಕಾರದ ಅಧೀನ ಕಾರ್ಯದರ್ಶಿ

ನಗರಾಭಿವೃದ್ಧಿ ಇಲಾಖೆ.

ಶಿಕ್ಷಣ ಸಚಿವಾಲಯ

ವಿಷಯ: 2017-18ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ / ವಿಶ್ವವಿದ್ಯಾಲಯ / ಖಾಸಗಿ ಅನುದಾನಿತ / ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕಾಲೇಜುಗಳಲ್ಲಿ ಪ್ರವೇಶಾತಿಗೆ ಸಂಬಂಧಿಸಿದಂತೆ ಶುಲ್ಕಗಳನ್ನು ಹಾಗೂ ಸೀಟು ಹಂಚಿಕೆ ಪ್ರಮಾಣವನ್ನು ನಿಗದಿಪಡಿಸುವ ಕುರಿತು.

ಓದಲಾಗಿದೆ :

1. ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) (ತಿದ್ದುಪಡಿ) ಅಧಿನಿಯಮ 2015 (2015 ರ ಕರ್ನಾಟಕ ಅಧಿನಿಯಮ ಸಂಖ್ಯೆ 39)

2. ಕರ್ನಾಟಕ ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸಂಘಟನೆಗಳಾದ KUPECA & KRLMPCA ಗಳೊಂದಿಗೆ ದಿನಾಂಕ:08/06/2017 ರಂದು ಮಾಡಿಕೊಂಡಿರುವ ಸಮ್ಮತಾಭಿಪ್ರಾಯದ ಒಡಂಬಡಿಕೆ೧೧೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ಭಾಗ ೧

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) (ತಿದ್ದುಪಡಿ) ಅಧಿನಿಯಮ, 2015 (Act No.39 of 2015) ರಲ್ಲಿನ ಪ್ರಕರಣ 4(ಎ) ಮತ್ತು 4(ಬಿ) ರಲ್ಲಿ ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸೀಟು ಹಂಚಿಕೆ ಮತ್ತು ಶುಲ್ಕ ನಿಗಧಿಯ ಸಂಬಂಧವಾಗಿ ಸರ್ಕಾರವು, ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಒಕ್ಕೂಟ / ಪ್ರತಿನಿಧಿಗಳೊಂದಿಗೆ ಸಮ್ಮತಾಭಿಪ್ರಾಯದ ಒಪ್ಪಂದಕ್ಕೆ / ಒಡಂಬಡಿಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2)ರಂತೆ, ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸೀಟು ಹಂಚಿಕೆ ಮತ್ತು ಶುಲ್ಕ ನಿಗಧಿಯ ಸಂಬಂಧವಾಗಿ ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ / ವಿಶ್ವವಿದ್ಯಾಲಯ / ಖಾಸಗಿ ಅನುದಾನಿತ / ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕಾಲೇಜುಗಳಲ್ಲಿ 2017-18 ನೇ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸೀಟು ಹಂಚಿಕೆ ಪ್ರಮಾಣ ಮತ್ತು ಶುಲ್ಕ ನಿಗಧಿಯ ಬಗ್ಗೆ ದಿನಾಂಕ: 08-06-2017 ರಂದು ಮಾನ್ಯ ಉನ್ನತ ಶಿಕ್ಷಣ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೋಧನಾ ಶುಲ್ಕ ನಿಗದಿಯ ಬಗ್ಗೆ ಮತ್ತು ಸೀಟು ಹಂಚಿಕೆ ಪ್ರಮಾಣ, ಖಾಸಗೀ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳು, ಇದರ ಮಾರ್ಗೋಪಾಯಗಳು ಇತ್ಯಾದಿಗಳ ಬಗ್ಗೆ ವಿಸ್ತøತವಾಗಿ ಚರ್ಚಿಸಿ, ಸರ್ಕಾರದ ವತಿಯಿಂದ ಕರ್ನಾಟಕ ಸರ್ಕಾರ ಮತ್ತು ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಒಕ್ಕೂಟ / ಪ್ರತಿನಿಧಿಗಳಾದ KUPECA and KRLMPCA ಪದಾಧಿಕಾರಿಗಳೊಂದಿಗೆ ಸಮ್ಮತಾಭಿಪ್ರಾಯದ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ.

ಸಮ್ಮತಾಭಿಪ್ರಾಯದ ಒಡಂಬಡಿಕೆಯಂತೆ, ಎಐಸಿಟಿಇ, ನವದೆಹಲಿ ಇವರಿಂದ ಅನುಮೋದಿತ ಪ್ರವೇಶಾತಿಯಲ್ಲಿ ಶೇ. 45 ರಷ್ಟು ಪ್ರಮಾಣದ ಸೀಟುಗಳನ್ನು ಕುಪೆಕಾ ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದು, ಇದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪ್ರವೇಶಾತಿ ಮಾಡಬೇಕು. ಉಳಿಕೆ ಪ್ರಮಾಣದಲ್ಲಿ ಶೇ. 30 ರಷ್ಟು ಸೀಟುಗಳನ್ನು ಕಾಮೆಡ್-ಕೆ ಮೂಲಕ ಪ್ರವೇಶಾತಿ ಮಾಡಬೇಕು, ಶೇ. 15 ರಷ್ಟು ಸೀಟುಗಳನ್ನು ಎನ್ಆರ್ಐ / ಎನ್ಆರ್ಐ ಪ್ರಾಯೋಜಿತರಿಂದ ಮತ್ತು ಶೇ. 10 ರಷ್ಟು ಸೀಟುಗಳನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಮೂಲಕ ಪ್ರವೇಶಾತಿ ಮಾಡಬೇಕು. ಅದೇ ರೀತಿ, ಅಲ್ಪ ಸಂಖ್ಯಾತ ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ, ಎಐಸಿಟಿಇ ಅನುಮೋದಿತ ಪ್ರವೇಶಾತಿಯಲ್ಲಿ ಶೇ. 40 ರಷ್ಟು ಪ್ರಮಾಣದ ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಲಾಗಿದ್ದು, ಇದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪ್ರವೇಶಾತಿ ಮಾಡಬೇಕು. ಉಳಿಕೆ ಪ್ರಮಾಣದಲ್ಲಿ ಶೇ.

30 ರಷ್ಟು ಸೀಟುಗಳನ್ನು ಕೆ.ಆರ್.ಎಲ್.ಎಂ.ಪಿ.ಸಿ.ಎ ವತಿಯಿಂದ ಪ್ರವೇಶಾತಿ ಮಾಡಬೇಕು. ಶೇ. 20 ರಷ್ಟು ಸೀಟುಗಳನ್ನು ಎನ್ಆರ್ಐ / ಎನ್ಆರ್ಐ ಪ್ರಾಯೋಜಿತರಿಂದ ಮತ್ತು ಶೇ. 10 ರಷ್ಟು ಸೀಟುಗಳನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಮೂಲಕ ಪ್ರವೇಶಾತಿ ಮಾಡಬೇಕು.

ಕುಪೆಕಾ ವತಿಯಿಂದ ರಾಜ್ಯ ಸರ್ಕಾರಕ್ಕೆ ಬಿಟ್ಟುಕೊಡಲಾಗುವ ಸೀಟುಗಳಿಗೆ ವಾಸ್ತವವಾಗಿ ಕುಪೆಕಾಗೆ ಸೇರಿದ ಕಾಲೇಜುಗಳು ನಿಗದಿಪಡಿಸುವ ಬೋಧನಾ ಶುಲ್ಕದ ಬಗ್ಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಹಾಗೂ ಇತರೆಯವರಿಗೆ ಈ ಹಿಂದೆ ಸ್ಕಾಲರ್‌ಶಿಪ್, ಫ್ರೀಶಿಪ್ ಕೊಡುಗೆಗಳನ್ನು ನೀಡುವ ಮೂಲಕ ಕುಪೆಕಾ ರಿಯಾಯಿತಿಯನ್ನು ವಿಸ್ತರಿಸಿದ್ದು, ಈ ಸಾಲಿನಲ್ಲೂ ಸಹ ಈ ಕೊಡುಗೆಯನ್ನು ವಿಸ್ತರಿಸುವಂತೆ ಹಾಗೂ ಇದನ್ನು ಎನ್ಆರ್ಐ ಮತ್ತು ಇತರೆಯವರಿಂದ ಸ್ವೀಕರಿಸಲಾಗುವ ಹೆಚ್ಚುವರಿ ಶುಲ್ಕದಿಂದ ಭರಿಸಬಹುದಾಗಿದೆ ಎಂಬ ರಾಜ್ಯ ಸರ್ಕಾರದ ಮನವಿಯನ್ನು ಕುಪೆಕಾ ಪರಿಗಣಿಸಿರುತ್ತದೆ. ಹಾಗೆಯೇ, ಉತ್ಕøಷ್ಟ ಮಟ್ಟದ ಶಿಕ್ಷಣವನ್ನು ನೀಡುವ ಅಗತ್ಯತೆ ಮತ್ತು ಶಿಕ್ಷಣದಲ್ಲಿ ಉತ್ತಮ ಗುಣಮಟ್ಟನ್ನು ತಲುಪಲು ರಿಯಾಯಿತಿಗಳಿಂದಾಗುವ ಲಾಭವು ಪ್ರವೇಶಾತಿಯಲ್ಲಿ ಪಾತ್ರವಹಿಸುವುದರಿಂದ, ಸಮ್ಮತಾಭಿಪ್ರಾಯದ ಒಡಂಬಡಿಕೆಯನ್ನು ಆಧರಿಸಿ, 2017-18ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ / ವಿಶ್ವವಿದ್ಯಾಲಯ / ಖಾಸಗಿ ಅನುದಾನಿತ / ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಭರಿಸಬೇಕಾದ ಬೋಧನಾ ಶುಲ್ಕ, ವಿಶ್ವವಿದ್ಯಾಲಯದ ಶುಲ್ಕ ಹಾಗೂ ಸೀಟು ಹಂಚಿಕೆ ಪ್ರಮಾಣವನ್ನು ನಿಗದಿಪಡಿಸಲು ತೀರ್ಮಾನಿಸಿ, ಸರ್ಕಾರವು, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಇಡಿ 160 ಟಿಇಸಿ 2016.ಬೆಂಗಳೂರು, ದಿನಾಂಕ: 24 ನೇ ಜೂನ್ 2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಸರ್ಕಾರವು, 2017-18ನೇ ಶೈಕ್ಷಣಿಕ ಸಾಲಿಗೆ ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ / ವಿಶ್ವವಿದ್ಯಾಲಯ / ಖಾಸಗಿ ಅನುದಾನಿತ / ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಪಾವತಿಸಬೇಕಾದ ಬೋಧನಾ ಶುಲ್ಕ, ವಿಶ್ವವಿದ್ಯಾಲಯ ಶುಲ್ಕ ಮತ್ತು ಸೀಟು ಹಂಚಿಕೆ ಪ್ರಮಾಣವನ್ನು ಅನುಬಂಧದಲ್ಲಿರುವಂತೆ ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ನಿಗದಿಪಡಿಸಿ ಆದೇಶಿಸಲಾಗಿದೆ.

2017-18ನೇ ಸಾಲಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು 04 ವರ್ಷದ ಪದವಿ ಕೋರ್ಸು ಪೂರ್ಣಗೊಳ್ಳುವವರೆಗೂ ವಾರ್ಷಿಕವಾಗಿ ಅನುಬಂಧಲ್ಲಿರುವಂತೆ ಶುಲ್ಕಗಳನ್ನು ಮಾತ್ರ ಪಾವತಿಸತಕ್ಕದ್ದು.

ಷರತ್ತು ಮತ್ತು ನಿಬಂಧನೆಗಳು:

1. ಎಲ್ಲಾ ಸರ್ಕಾರಿ / ವಿಶ್ವವಿದ್ಯಾಲಯ / ಖಾಸಗಿ ಅನುದಾನಿತ / ಖಾಸಗಿ ಅನುದಾನರಹಿತ (ಅಲ್ಪಸಂಖ್ಯಾತ ಹಾಗೂ ಅಲ್ಪಸಂಖ್ಯಾತವಲ್ಲದ) ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಎ.ಐ.ಸಿ.ಟಿ.ಇ.ಯು ಅನುಮೋದಿಸಿರುವ / ನಿಗದಿಪಡಿಸಿರುವ ಪ್ರತಿ ಕೋರ್ಸುಗಳ ಒಟ್ಟು ಪ್ರವೇಶ ಮಿತಿಯ ಮೇಲೆ ಶೇ.5 ರಷ್ಟು ಸಂಖ್ಯಾಧಿಕ ಸೀಟುಗಳನ್ನು (Supernumerary Seats (SNQ)) ಯಾವುದೇ ಬೋಧನಾ ಶುಲ್ಕವಿಲ್ಲದೆ (tuition fee waiver schemes) ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ (ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯವು `.6.00 ಲಕ್ಷದ ಮಿತಿಯೊಳಗಿರಬೇಕು) ಮೆರಿಟ್ ಆಧಾರದ ಮೇಲೆ ಸೀಟುಗಳನ್ನು ಕೆಳಕಂಡ ಷರತ್ತುಗಳಿಗೆ ಒಳಪಡಿಸಿ ಹಂಚಿಕೆ ಮಾಡುವುದು.

(ಅ) ರಾಜ್ಯ ಸರ್ಕಾರವು ನಿಗದಿಪಡಿಸಿರುವ ಬೋಧನಾ ಶುಲ್ಕವನ್ನು ಸಂಖ್ಯಾಧಿಕ ಸೀಟುಗಳನ್ನು ಪಡೆದ ಫಲಾನುಭವಿಯು ಭರಿಸತಕ್ಕದ್ದಲ್ಲ.

ಆದರೆ, ಈ ಅಭ್ಯರ್ಥಿಯು ಕಾಲಕಾಲಕ್ಕೆ ವಿಶ್ವವಿದ್ಯಾಲಯವು ನಿಗದಿಪಡಿಸುವ ವಿಶ್ವವಿದ್ಯಾಲಯ ಶುಲ್ಕವನ್ನು ಮಾತ್ರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪಾವತಿಸತಕ್ಕದ್ದು.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ೧೧೧೩

(ಆ) ಇದು ಎಐಸಿಟಿಇ ಯೋಜನೆಯಾಗಿದ್ದು, ಈ ಸಂಖ್ಯಾಧಿಕ ಸೀಟುಗಳ ಹಂಚಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹ ಅಭ್ಯರ್ಥಿಗಳು ಪಡೆದ ರ್ಯಾಂಕ್ ಆಧಾರದ ಮೇಲೆ ಮಾತ್ರ ಭರ್ತಿ ಮಾಡತಕ್ಕದ್ದು.

(ಇ) ಸಂಖ್ಯಾಧಿಕ ಸೀಟುಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಅಂತಹ ಸೀಟುಗಳನ್ನು ಕಾಮೆಡ್-ಕೆ ಅಥವಾ ಆಡಳಿತ ಮಂಡಳಿ ಕೋಟಾ ಸೀಟುಗಳಾಗಿ ಪರಿವರ್ತಿಸತಕ್ಕದ್ದಲ್ಲ ಹಾಗೂ ಈ ಪ್ರವೇಶಾತಿಗಳಿಗೆ 2ನೇ ವರ್ಷದ ಲ್ಯಾಟರಲ್ ಪ್ರವೇಶಾತಿಗೆ ಪರಿಗಣಿಸತಕ್ಕದ್ದಲ್ಲ.

(ಈ) ಸಂಖ್ಯಾಧಿಕ (SNQ) ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳಿಗೆ ಮತ್ತು ತಾಂತ್ರಿಕ ಶಿಕ್ಷಣ ನಿರ್ದೇಶಕರಿಗೆ ಪೂರ್ಣ ವಿವರಗಳೊಂದಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಲ್ಲಿಸತಕ್ಕದ್ದು.

(ಉ) ಸಂಖ್ಯಾಧಿಕ ಕೋಟಾದಡಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಯಾವುದೇ ಕಾರಣದಿಂದಲೂ ಶಿಕ್ಷಣ ಸಂಸ್ಥೆಗಳ ಹಾಗೂ ಕೋರ್ಸುಗಳ ಬದಲಾವಣೆಗೆ ಅವಕಾಶ ಇರತಕ್ಕದ್ದಲ್ಲ.

(ಊ) ಸಂಖ್ಯಾಧಿಕ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಅಂತರಜಾಲದಲ್ಲಿ ಪ್ರಕಟಿಸತಕ್ಕದ್ದು.

2. ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಅನುದಾನರಹಿತ ಕೋರ್ಸುಗಳಿಗೆ ಮತ್ತು ಅನುದಾನರಹಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಯು, ಒಟ್ಟು ವಾರ್ಷಿಕ ಶುಲ್ಕ `. 49,500/- ಅಥವಾ `. 55,000/- ಗಳು (ಇದರಲ್ಲಿ 2016-17ನೇ ಸಾಲಿನ ವಿಶ್ವವಿದ್ಯಾಲಯ ಶುಲ್ಕ ಮತ್ತು ಇತರೆ ಶುಲ್ಕ ಸೇರಿದಂತೆ) ಮತ್ತು 2017-18ನೇ ಸಾಲಿಗೆ ವಿಶ್ವವಿದ್ಯಾಲಯವು ಪರಿಷ್ಕøರಿಸಿದ ಹೆಚ್ಚುವರಿ ಶುಲ್ಕವನ್ನು ಮಾತ್ರ ಪಾವತಿಸತಕ್ಕದ್ದು. ಈ ಬಗ್ಗೆ ಸರ್ಕಾರದಿಂದ ಯಾವುದೇ ಸಹಾಯಧನವನ್ನು ನೀಡಲಾಗುವುದಿಲ್ಲ.

3. ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ವಾರ್ಷಿಕ `. 15,000/-ಶುಲ್ಕ ಹಾಗೂ ವಿಶ್ವವಿದ್ಯಾಲಯ ಶುಲ್ಕವನ್ನು ಪಾವತಿಸತಕ್ಕದ್ದು.

4. ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಅನುದಾನಿತ ಕೋರ್ಸುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ವಾರ್ಷಿಕ `. 15,000/- ಶುಲ್ಕ ಹಾಗೂ ವಿಶ್ವವಿದ್ಯಾಲಯ ಶುಲ್ಕವನ್ನು ಮಾತ್ರ ಪಾವತಿಸತಕ್ಕದ್ದು.

5. ಸಮ್ಮಾತಾಭಿಪ್ರಾಯದ ಒಡಂಬಡಿಕೆಯ ಪ್ರಕಾರ, ಆಡಳಿತ ಮಂಡಳಿ ಕೋಟಾದ ಪ್ರವೇಶಾತಿಗೆ ಸಂಬಂಧಿಸಿದಂತೆ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ವಾರ್ಷಿಕ `. 121000-00 ಗಳ ಬೋಧನಾ ಶುಲ್ಕ ಅಥವಾ `. 170000-00 ಗಳ ಮಿತಿಗೆ ಒಳಪಟ್ಟು ಬೋಧನಾ ಶುಲ್ಕವನ್ನು ನಿಗದಿಪಡಿಸಬೇಕು. ಬೋಧನಾ ಶುಲ್ಕವನ್ನು `. 170000-00 ಗಳ Upper limit ನ ಮಿತಿಗೊಳಪಟ್ಟು ಮಾತ್ರ ಪಡೆಯತಕ್ಕದ್ದು. ಈ ಮಿತಿಯನ್ನು ಮೀರತಕ್ಕದ್ದಲ್ಲ ಮತ್ತು ತಾನು ಆಯ್ಕೆ ಮಾಡಿಕೊಂಡಿರುವ ಬೋಧನಾ ಶುಲ್ಕದ ವಿವರಗಳನ್ನು ಸೂಕ್ತವಾಗಿ ಪ್ರಚುರಪಡಿಸಬೇಕು. 6. ಇಂಜನಿಯರಿಂಗ್ ಕೋರ್ಸುಗಳಿಗೆ ಸಂಬಂಧಿಸಿದಂತೆ, ಆಡಳಿತ ಮಂಡಳಿಗಳು ವಿವಿಧ ಕೋರ್ಸುಗಳಿಗೆ / ವಿಭಾಗಗಳಿಗೆ ವಿವಿಧ ಬೋಧನಾ ಶುಲ್ಕವನ್ನು ನಿಗಧಿಪಡಿಸಬಹುದು. ಆದರೆ ಈ ಬೋಧನಾ ಶುಲ್ಕವು ಮೇಲೆ ತಿಳಿಸಿರುವ ಅಪ್ಪರ್ ಲಿಮಿಟ್ ಮಿತಿಯೊಳಗೆ ಇರಬೇಕು.

7. ಯಾವುದೇ ಖಾಸಗೀ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯು, ಆಡಳಿತ ಮಂಡಳಿ ಕೋಟದ ಪ್ರವೇಶಾತಿಗೆ ವಾರ್ಷಿಕ `. 121000-00 ಗಳ ಬೋಧನಾ ಶುಲ್ಕವನ್ನು ಆಯ್ಕೆ ಮಾಡಿಕೊಂಡಲ್ಲಿ, ಆ ಸಂಸ್ಥೆಯಲ್ಲಿನ ಸರ್ಕಾರಿ ಪ್ರಾಯೋಜಿತ ವಿದ್ಯಾರ್ಥಿಗೆ ವಾರ್ಷಿಕ `. 55000-00 ಗಳು ಬೋಧನಾ ಶುಲ್ಕವಾಗಿರುತ್ತದೆ. ಅದೇ ರೀತಿ, ಆಡಳಿತ ಮಂಡಳಿ ಕೋಟದ ಪ್ರವೇಶಾತಿಗೆ ವಾರ್ಷಿಕ `. 170000-00 ಗಳ ಬೋಧನಾ ಶುಲ್ಕವನ್ನು ಆಯ್ಕೆ ಮಾಡಿಕೊಂಡಲ್ಲಿ, ಆ ಸಂಸ್ಥೆಯಲ್ಲಿನ ಸರ್ಕಾರಿ ಪ್ರಾಯೋಜಿತ ವಿದ್ಯಾರ್ಥಿಗೆ ವಾರ್ಷಿಕ `. 49500-00 ಗಳು ಬೋಧನಾ ಶುಲ್ಕವಾಗಿರುತ್ತದೆ. 8. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಅಂತಿಮ ಸುತ್ತಿನ ಪ್ರವೇಶಾತಿ ಮತ್ತು ಪ್ರವೇಶಾತಿಗಾಗಿ ನಿಗಧಿಪಡಿಸಿದ ಅವಧಿಯ ನಂತರ ಖಾಲಿ ಬೀಳುವ ಸೀಟುಗಳನ್ನು ರಿಕನ್ಸಿಲೇಷನ್ ಮೂಲಕ ಆಯಾಯ ಶಿಕ್ಷಣ ಸಂಸ್ಥೆಗಳಿಗೆ ನೀಡತಕ್ಕದ್ದು. ಖಾಲಿ ಬೀಳುವ ಈ ಸೀಟುಗಳು ವ್ಯರ್ಥವಾಗುವುದನ್ನು ತಪ್ಪಿಸಲು ಈ ಸೀಟುಗಳನ್ನು ಅರ್ಹ ಇತರೇ ಅಭ್ಯರ್ಥಿಗಳಿಂದ ತುಂಬತಕ್ಕದ್ದು.

9. ಸಮ್ಮತಾಭಿಪ್ರಾಯದ ಒಡಂಬಡಿಕೆಯಂತೆ, ಅಲ್ಪಸಂಖ್ಯಾತವಲ್ಲದ ಖಾಸಗೀ ಕಾಲೇಜುಗಳ ಆಡಳಿತ ಮಂಡಳಿಗೆ ಒಟ್ಟು ಪ್ರವೇಶಾತಿಯಲ್ಲಿ ಎನ್ ಆರ್ ಐ ಮತ್ತು ಇತರೆ ಕೋಟಾದ ಪ್ರವೇಶಾತಿಗೆ ನಿಗಧಿಯಾಗಿರುವ ಶೇ. 25 (ಎನ್ ಆರ್ ಐ ಶೇ. 15 ಮತ್ತು ಆಡಳಿತ ಮಂಡಳಿ ಶೇ. 10) ರಷ್ಟು ಪ್ರಮಾಣವು ಯಾವುದೇ ಕಾರಣದಿಂದಲೂ ಮೀರತಕ್ಕದ್ದಲ್ಲ. ಅದೇ ರೀತಿ, ಅಲ್ಪಸಂಖ್ಯಾತ ಖಾಸಗೀ ಕಾಲೇಜುಗಳಿಗೆ ಇದೇ ಕೋಟಾದ ಪ್ರವೇಶಾತಿಗೆ ನಿಗಧಿಯಾಗಿರುವ ಶೇ. 30 (ಎನ್ ಆರ್ ಐ ಶೇ. 20 ಮತ್ತು ಆಡಳಿತ ಮಂಡಳಿ ಶೇ. 10) ರಷ್ಟು ಪ್ರಮಾಣವು ಯಾವುದೇ ಕಾರಣದಿಂದಲೂ ಮೀರತಕ್ಕದ್ದಲ್ಲ.

10. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಅಂತಿಮ ಸುತ್ತಿನ ಪ್ರವೇಶಾತಿಯ ನಂತರ ಯಾವುದೇ ಪರಸ್ಪರ ಸೀಟುಗಳ ವರ್ಗಾವಣಿಗೆ ಸರ್ಕಾರದಿಂದಾಗಲೀ / ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇವರಿಂದಾಗಲೀ / ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಾಗಲೀ ಅವಕಾಶ ಇರುವುದಿಲ್ಲ.

11. ಪ್ರವೇಶಾತಿಗಾಗಿ ನಿಗಧಿಪಡಿಸಿದ ಅವಧಿಯೊಳಗಾಗಿ ಪ್ರವೇಶಾತಿ ಪಡೆಯಲು ವಿಫಲರಾದ ಅಭ್ಯರ್ಥಿಗಳ ಸೀಟುಗಳು ರದ್ದಾಗುವುದು ಮತ್ತು ಈ ಬಗ್ಗೆ ಶುಲ್ಕ ಮುಟ್ಟುಗೋಲು / ದಂಡ ವಿಧಿಸುವಿಕೆ ಇತ್ಯಾದಿಗಳ ಬಗ್ಗೆ ಇರುವ ನಿಯಮಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ / ಕಾಮೆಡ್-ಕೆ / ಕೆ ಆರ್ ಎಲ್ ಎಂ ಪಿ ಸಿ ಎ ಗಳು ಕಟ್ಟುನಿಟ್ಟಾಗಿ ಪಾಲಿಸುವುದು.

12. ಹೈದ್ರಾಬಾದ್-ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳ ಮೀಸಲಾತಿ ಬಗ್ಗೆ ಸರ್ಕಾರಿ ಆದೇಶಗಳಲ್ಲಿ ಇರುವ ಮಾರ್ಗಸೂಚಿಯನ್ನು ಪಾಲಿಸುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್. ವೆಂಕಟೇಶ್

ಸರ್ಕಾರದ ಅಧೀನ ಕಾರ್ಯದರ್ಶಿ, ಶಿಕ್ಷಣ ಇಲಾಖೆ. (ತಾಂತ್ರಿಕ ಶಿಕ್ಷಣ)೧೧೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ಭಾಗ ೧

ಅನುಬಂಧ

ಸರ್ಕಾರದ ಆದೇಶ ಸಂಖ್ಯೆ : ಇಡಿ 160 ಟಿಇಸಿ 2016, ಬೆಂಗಳೂರು, ದಿನಾಂಕ: 24ನೇ ಜೂನ್ 2017

ಸರ್ಕಾರಿ/ ವಿಶ್ವವಿದ್ಯಾಲಯ / ಖಾಸಗಿ ಅನುದಾನಿತ / ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ /ಆರ್ಕಿ ಟೆಕ್ಚರ್ ಕಾಲೇಜುಗಳು

ಕೋರ್ಸಿನ ಹೆಸರು ಸ ರ್ಕಾರಿ ಕಾಲೇಜುಗಳು ವ ುತ್ತು ವಿಶ್ವ ವಿದ್ಯಾಲಯದ ಘ ಟಕ ಕಾಲೇಜುಗಳು (ಶೇ. 100 ಸರ್ಕಾರಿ ಸೀಟುಗಳು) ಶುಲ್ಕ (ವಿ.ವಿ. ಶುಲ್ಕ ಸೇರಿ) ಖಾಸಗಿ ಅನುದಾನಿತ ಕಾಲೇಜುಗಳು ಶುಲ್ಕ (ವಿ.ವಿ. ಹಾಗೂ ಇತರೆ ಶುಲ್ಕ ಸೇರಿ) ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ / ಟೆಕ್ನಾಲಜಿ/ ಆರ್ಕಿಟೆಕ್ಚರ್ ಕಾಲೇಜುಗಳಲ್ಲಿನ ಸೀಟುಗಳಿಗೆ ನಿಗಧಿಪಡಿಸಿದ ಶುಲ್ಕ (ಅಲ್ಪಸಂಖ್ಯಾತವಲ್ಲದ ಸಂಸ್ಥೆಗಳು) ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ / ಟೆಕ್ನಾಲಜಿ/ ಆರ್ಕಿಟೆಕ್ಚರ್ ಕಾಲೇಜುಗಳಲ್ಲಿನ ಸೀಟುಗಳಿಗೆ ನಿಗಧಿಪಡಿಸಿದ ಶುಲ್ಕ (ಅಲ್ಪಸಂಖ್ಯಾತ ಸಂಸ್ಥೆಗಳು) (ವಿಶ್ವವಿದ್ಯಾಲಯ ಶುಲ್ಕ ಹಾಗೂ ಇತರೆ ಶುಲ್ಕ
ಶ ೕಕಡ 95 ಸರ್ಕಾರಿ ೆ ಸೀಟುಗಳು (ಕರ್ನಾಟಕ ಪ ರೀಕ್ಷೆ ಪ್ರಾಧಿಕಾರದ ವ ುೂಲಕ) ಶ ೕಕಡ 5 ಆಡಳಿತ ೆ ವ ುಂಡಳಿ ಸೀಟುಗಳು ಸ ರ್ಕಾರಿ ಕೋಟಾ Comed –K ಕೋಟ ಆಡಳಿತ ಮಂಡಳಿ ಕೋಟ ಸ ರ್ಕಾರಿ ಕೋಟ KRLMPCA ಕೋಟ ಆಡಳಿತ ಮಂಡಳಿ ಕೋಟಾ
ಶ ೕ, 45 % ೆ ಸೀಟುಗಳು ಶ ೕ. 30 % ೆ ಸೀಟುಗಳು ಶ ೕ. 25 % ೆ ಸೀಟುಗಳು (15+10) ಶ ೕ. 40 % ೆ ಸೀಟುಗಳು ಶ ೕ. 30 % ೆ ಸೀಟುಗಳು ಶ ೕ. 30 % ೆ ಸೀಟುಗಳು (20+10)
ಇಂಜಿನಿಯರಿಂಗ್ / ಆರ್ಕಿಟೆಕ್ಚರ್ `. 18090.00 `. 18090.00 ಸ ವ ು್ಮತಾಭಿಪ್ರಾಯದ ಒಪ್ಪಂದದಲ್ಲಿ ಇರುವಂತೆ (as Per Consensual agreement 2017-18 `. 49500.00 ಅಥವಾ 55000-00 `. 121000-00 ಅಥವಾ 170000-00 ಗಳ ಮಿತಿಗೊಳಪಟ್ಟು ಸ ವ ು್ಮತಾಭಿಪ್ರಾಯದ ಒಪ್ಪಂದದಲ್ಲಿ ಇರುವಂತೆ (as Per Consensual agreement 2017-18 `. 49500-00 ಅಥವಾ 55000-00 `. 121000-00 ಅಥವಾ 170000-00 ಗಳ ಮಿತಿಗೊಳಪಟ್ಟು ಸ ವ ು್ಮತಾಭಿಪ್ರಾಯದ ಒಪ್ಪಂದದಲ್ಲಿ ಇರುವಂತೆ (As Per Consensual Agreement 2017-18

• 2017-18ನೇ ಸಾಲಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ರವರು `. 1000-00 ಗಳ ರಿಜಿಸ್ಟ್ರೇಷನ್ ಶುಲ್ಕವನ್ನು ಹೆಚ್ಚಿಸಿದ್ದು. ಈ ಹೆಚ್ಚುವರಿ ಶುಲ್ಕವನ್ನು ಮಾತ್ರ ಮೇಲ್ಕಂಡ ಪಟ್ಟಿಯಲ್ಲಿನ ಶುಲ್ಕದೊಂದಿಗೆ ಪಡೆಯುವುದು.

• ಶೇ. 5 ಸಂಖ್ಯಾತಿರಿಕ್ತ ಸೀಟುಗಳಿಗೆ (supernumerary quota) ಪ್ರವೇಶಾತಿ ಪಡೆಯುವ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕವನ್ನು ಪಾವತಿಸುವುದರಿಂದ ವಿನಾಯ್ತಿ ಇರುತ್ತದೆ.

PR - 255

ಎಸ್. ವೆಂಕಟೇಶ್

SC- 100

ಸರ್ಕಾರದ ಅಧೀನ ಕಾರ್ಯದರ್ಶಿ, ಶಿಕ್ಷಣ ಇಲಾಖೆ. (ತಾಂತ್ರಿಕ ಶಿಕ್ಷಣ)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ೧೧೧೫

ಶಿಕ್ಷಣ ಸಚಿವಾಲಯ

ವಿಷಯ : ಶ್ರೀ ಸಂಜೀವ ಆಲೂರ್, ಧಾರವಾಡ ಇವರ ಹೆಸರನ್ನು ಸಹಾಯಕ ಪ್ರಾಧ್ಯಾಪಕರ ಅಂತಿಮ ಆಯ್ಕೆ ಪಟ್ಟಿಯಿಂದ ತೆಗೆದುಹಾಕುವ ಬಗ್ಗೆ.

ಓದಲಾಗಿದೆ :

1. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಸೂಚನೆ ಸಂಖ್ಯೆ : ED/KEA/ADMN/CR-55/2014-15 ದಿನಾಂಕ : 22-01-2015.

2. ಶ್ರೀ ಸಂಜೀವ ಆಲೂರ್ ಇವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೊಂದಣಿ ಸಂಖ್ಯೆ : D1410 ರಡಿ ಸಲ್ಲಿಸಿರುವ ಅರ್ಜಿ ಸಂಖ್ಯೆ : FG519015 , ದಿನಾಂಕ : 20-03-2015. 3. ಸರ್ಕಾರಿ ಆದೇಶ ಸಂಖ್ಯೆ:ಇಡಿ 33 ಡಿಸಿಇ 2017 ದಿನಾಂಕ: 04-02-2017.

4. ತಹಶೀಲ್ದಾರ್ ಗ್ರೇಡ್-2, ಧಾರವಾಡ ಇವರ ಆದೇಶ ಸಂಖ್ಯೆ: ಮಿಸಲೇನಿಯಸ್ಸ್/ವಹಿ/44/16-17 ದಿನಾಂಕ: 17-8-2016.

5. ಉಪ ವಿಭಾಗಾಧಿಕಾರಿ, ಧಾರವಾಡ ಇವರ ಆದೇಶ ಸಂಖ್ಯೆ: ಎಂ.ಎ.ಜಿ/ಸಿಆರ್/44/2016-17 ದಿನಾಂಕ: 16-01-2017.

6. ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ, ಬೆಂಗಳೂರು ಇವರ ಪತ್ರ ಸಂಖ್ಯೆ:ಜಾವಿ/07/ಬಿಜಿಎಂ/ನಾಹಜಾನಿ/2016 ದಿನಾಂಕ: 27-1-2017.

7. ಸರ್ಕಾರದ ಕಾರಣ ಕೇಳುವ ನೋಟೀಸ್ ಸಂಖ್ಯೆ: ಇಡಿ 39 ಡಿಸಿಇ 2017 ದಿ: 18-04-2017. 8. ಶ್ರೀ ಸಂಜೀವ ಆಲೂರ್ ಇವರು ಸರ್ಕಾರದ ದಿನಾಂಕ: 18-04-2017ರ ನೋಟೀಸ್‌ಗೆ ನೀಡಿರುವ ಉತ್ತರ.

ಪ್ರಸ್ತಾವನೆ:

ಮೇಲೆ ಓದಲಾದ (1)ರ ಅಧಿಸೂಚನೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಶ್ರೀ ಸಂಜೀವ ಆಲೂರ್ ಇವರು ಮೇಲೆ ಓದಲಾದ (2)ರಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅಪರಾಧಶಾಸ್ತ್ರ ವಿಷಯದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ್ದು, ಸದರಿ ಅರ್ಜಿಯಲ್ಲಿ ಪ್ರವರ್ಗ ಎಂಬ ಶೀರ್ಷಿಕೆಯಡಿ "ST" ಎಂದು ಹಾಗೂ ಜಾತಿಯ ಹೆಸರು ಎಂಬ ಶೀರ್ಷಿಕೆಯಡಿ "ಹಿಂದೂ ನಾಯಕ" ಎಂದು ತಿಳಿಸುತ್ತಾ ಅರ್ಜಿಯೊಂದಿಗೆ ಕೆಳಕಂಡಂತೆ ಘೋಷಣಾ ಪತ್ರವನ್ನು ಸಲ್ಲಿಸಿರುತ್ತಾರೆ.

DECLARATION

I hereby declare that all statements made in this application are true, correct and complete to the best of my knowledge and belief.

I have read the rules and I understand that in the event of any information being found false or ineligibility being detected before or after the selection, action can be taken against me by the Government / appointing authority under rule 20 of the Karnataka Civil Services (General Recruitment) Rules 1977 as amended from time to time.

I have read the Rules and instructions carefully and hereby undertake to abide by them. I further declare that, I will fulfill all the eligibility conditions regarding age, educational qualifications, reservations etc. where applicable prescribed for the post.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಲಿಖಿತ ಪರೀಕ್ಷೆಯನ್ನು ನಡೆಸಿ ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದಂತೆ, ಸರ್ಕಾರವು ಮೇಲೆ ಓದಲಾದ (3)ರಲ್ಲಿನ ಅಧಿಸೂಚನೆ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸ್ವೀಕರಿಸಲಾದ ಸಹಾಯಕ ಪ್ರಾಧ್ಯಾಪಕರ ಅಂತಿಮ ಆಯ್ಕೆ ಪಟ್ಟಿಯನ್ನು ಹೊರಡಿಸಿದೆ. ಸರ್ಕಾರ ಹೊರಡಿಸಿದ ಅಪರಾಧಶಾಸ್ತ್ರ ವಿಷಯದ ಸಹಾಯಕ ಪ್ರಾಧ್ಯಾಪಕರ ಅಂತಿಮ ಆಯ್ಕೆಪಟ್ಟಿಯಲ್ಲಿ ಶ್ರೀ ಸಂಜೀವ ಆಲೂರ್ ಇವರ ಹೆಸರನ್ನು ನಮೂದಿಸಿದ್ದು, ಸದರಿ ಆಯ್ಕೆಯು ಮಾನ್ಯ ಉಚ್ಚ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಿದೆ ಎಂದು ತಿಳಿಸಲಾಗಿದೆ.

ತಹಶೀಲ್ದಾರರು, ಧಾರವಾಡ ಇವರು ಸಾರ್ವಜನಿಕರ ದೂರಿನ ಮೇರೆಗೆ ಶ್ರೀ ಸಂಜೀವ ಆಲೂರ್ ಇವರಿಗೆ ನೀಡಿದ್ದ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರವನ್ನು ಮೇಲೆ ಓದಲಾದ (4)ರ ಅವರ ಆದೇಶದಲ್ಲಿ ಹಿಂಪಡೆದು ರದ್ದುಪಡಿಸಿರುತ್ತಾರೆ. ತಹಶೀಲ್ದಾರ್, ಧಾರವಾಡ ಇವರ ಈ ಆದೇಶದ ವಿರುದ್ಧ ಶ್ರೀ ಸಂಜೀವ ಆಲೂರ್ ಇವರು ಸಲ್ಲಿಸಿದ್ದ ಮೇಲ್ಮನವಿಯನ್ನು ಧಾರವಾಡದ ಉಪವಿಭಾಗಾಧಿಕಾರಿಯವರು ಮೇಲೆ ಓದಲಾದ (5)ರ ಆದೇಶದ ಪ್ರಕಾರ ತಿರಸ್ಕರಿಸಿರುತ್ತಾರೆ.

ಮೇಲೆ ಓದಲಾದ (6)ರಲ್ಲಿನ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ, ಬೆಂಗಳೂರು ಇವರು ಶ್ರೀ ಸಂಜೀವ ಆಲೂರ್ ಇವರು ಪರಿಶಿಷ್ಟ ಪಂಗಡದ "ನಾಯಕ" ಜಾತಿಗೆ ಸೇರಿರುವುದಿಲ್ಲವೆಂದು ದೃಡಪಟ್ಟಿರುವುದರಿಂದ, ಇವರು ಪರಿಶಿಷ್ಟ ಪಂಗಡದ ಮೀಸಲಾತಿಯಡಿ ಪಡೆದುಕೊಂಡಿರುವ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿ.ಹೆಚ್.ಡಿ.

ಪದವಿಗಳನ್ನು ರದ್ದುಪಡಿಸುವ ಕುರಿತು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವರು ಈಗಾಗಲೇ ಕ್ರಮಜರುಗಿಸಿರುತ್ತಾರೆ ಎಂದು ತಿಳಿಸುತ್ತಾ, ಇವರನ್ನು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ ಮಾಡಬಾರದೆಂದು ಕೋರಿರುತ್ತಾರೆ.

ಮೇಲೆ ಓದಲಾದ 4, 5, ಮತ್ತು 6ರಲ್ಲಿನ ಆದೇಶ / ವರದಿಗಳ ಪ್ರಕಾರ ಶ್ರೀ ಸಂಜೀವ ಆಲೂರ್ ಇವರು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವಾಗ ಪರಿಶಿಷ್ಟ ಪಂಗಡದ 'ನಾಯಕ' ಜಾತಿಗೆ ಸೇರಿರುವುದಾಗಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುವುದು ದೃಡಪಟ್ಟಿರುವುದರಿಂದ ಹಾಗೂ ಪಡೆದಿದ್ದ ಜಾತಿ ಪ್ರಮಾಣಪತ್ರವನ್ನು ತಹಶೀಲ್ದಾರ್, ಧಾರವಾಡ ಇವರು ಹಿಂಪಡೆದು ರದ್ದುಪಡಿಸಿರುವುದರಿಂದ ಹಾಗೂ ಉಪವಿಭಾಗಾಧಿಕಾರಿಗಳು, ಧಾರವಾಡ ಇವರ ನ್ಯಾಯಾಲಯವು ಶ್ರೀ ಸಂಜೀವ ಆಲೂರ್ ಇವರ ಮೇಲ್ಮನವಿಯನ್ನು ತಿರಸ್ಕರಿಸಿ ಆದೇಶಿಸಿರುವುದರಿಂದ, ಇವರ ಆಯ್ಕೆಯನ್ನು ಏಕೆ ರದ್ದುಗೊಳಿಸಬಾರದು ಎಂಬ ಬಗ್ಗೆ ವಿವರಣೆಯನ್ನು ನೀಡುವಂತೆ ಮೇಲೆ ಓದಲಾದ(7)ರಂತೆ ಕಾರಣ ಕೇಳುವ ನೋಟೀಸ್‌ನ್ನು ಜಾರಿ ಮಾಡಿದ್ದು, ಮೇಲೆ೧೧೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ಭಾಗ ೧ ಓದಲಾದ (8)ರಂತೆ ಶ್ರೀ ಸಂಜೀವ ಆಲೂರ್ ಇವರು ಸರ್ಕಾರಕ್ಕೆ ಸಲ್ಲಿಸಿರುವ ಹೇಳಿಕೆಯನ್ನು ಸರ್ಕಾರ ಪರಿಶೀಲಿಸಿದ್ದು, ಇವರ ಹೇಳಿಕೆಯಲ್ಲಿ ಸರ್ಕಾರದ ವಿವಿಧ ಪ್ರಾಧಿಕಾರಗಳಾದ ತಹಶೀಲ್ದಾರ್, ಧಾರವಾಡ, ಉಪವಿಭಾಗಾಧಿಕಾರಿಗಳು, ಧಾರವಾಡ ಮತ್ತು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ, ಬೆಂಗಳೂರು ಇವರು ಜಾರಿ ಮಾಡಿರುವ ಅಧಿಕೃತ ಆದೇಶಗಳು ಮತ್ತು ಸರ್ಕಾರಕ್ಕೆ ಸಲ್ಲಿಸಿರುವ ಅಧಿಕೃತ ವರದಿಗಳು ತಪ್ಪೆಂದು ತೋರಿಸಲು ಯಾವುದೇ ಸಾಕ್ಷ್ಯಾಧಾರ ಮತ್ತು ದಾಖಲೆಗಳನ್ನು ಹಾಜರುಪಡಿಸದೇ ಇರುವುದರಿಂದ ಅವರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲವೆಂದು ಸರ್ಕಾರ ತೀರ್ಮಾನಿಸಿದೆ.

ಮೇಲಿನ ಅಂಶಗಳ ಹಿನ್ನೆಲೆಯಲ್ಲಿ, ಶ್ರೀ ಸಂಜೀವ ಆಲೂರ್ ಇವರು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವಾಗ ಸರ್ಕಾರಕ್ಕೆ ಮತ್ತು ಪರಿಶಿಷ್ಟ ಪಂಗಡದ ಇತರೆ ಅಭ್ಯರ್ಥಿಗಳಿಗೆ ವಂಚನೆ ಮಾಡುವ ದುರುದ್ದೇಶದಿಂದ ತಾವು ಪರಿಶಿಷ್ಟ ಪಂಗಡದ "ನಾಯಕ" ಜಾತಿಗೆ ಸೇರಿದವರೆಂದು ಸುಳ್ಳು ಮಾಹಿತಿಯನ್ನು ನೀಡುವ ಮೂಲಕ ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಾವಳಿ, 1977ರ ನಿಯಮ 20ರಲ್ಲಿ ತಿಳಿಸಿರುವ ಶಿಸ್ತು ಕ್ರಮಕ್ಕೆ ಗುರಿಯಾಗಿರುತ್ತಾರೆ. ಆದುದರಿಂದ, ಸರ್ಕಾರ ಶ್ರೀ ಸಂಜೀವ ಆಲೂರ್ ಇವರ ಹೆಸರನ್ನು ಸಹಾಯಕ ಪ್ರಾಧ್ಯಾಪಕರ ಅಂತಿಮ ಆಯ್ಕೆಪಟ್ಟಿಯಿಂದ ತೆಗೆದುಹಾಕುವುದರ ಜೊತೆಗೆ ಅವರನ್ನು ಸರ್ಕಾರದ ಅಡಿಯಲ್ಲಿನ ಉದ್ಯೋಗದಿಂದ ಖಾಯಂ ಆಗಿ ಅನರ್ಹಗೊಳಿಸಲು ತೀರ್ಮಾನಿಸಿದೆ. ಅದರಂತೆ ಈ ಆದೇಶ.

ಸರ್ಕಾರಿ ಆದೇಶ ಸಂಖ್ಯೆ : ಇಡಿ 39 ಡಿಸಿಇ 2017, ಬೆಂಗಳೂರು, ದಿನಾಂಕ : 03ನೇ ಜೂನ್ 2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಶ್ರೀ ಸಂಜೀವ ನಾಗರಾಜ್ ಆಲೂರ್, ಧಾರವಾಡ ಇವರು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಅಪರಾಧಶಾಸ್ತ್ರ ವಿಷಯದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವಾಗ ಸುಳ್ಳು ಮಾಹಿತಿಯನ್ನು ನೀಡುವ ಮೂಲಕ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸುಳ್ಳು ಘೋಷಣಾ ಪತ್ರವನ್ನು ಸಲ್ಲಿಸುವ ಮೂಲಕ ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಾವಳಿ, 1977ರ ನಿಯಮ 20ರಡಿ ತಿಳಿಸಿರುವ ದುರ್ವರ್ತನೆಯನ್ನು ಎಸಗಿರುವುದರಿಂದ ಶ್ರೀ ಸಂಜೀವ ನಾಗರಾಜ್ ಆಲೂರ್, ಧಾರವಾಡ ಇವರ ಹೆಸರನ್ನು ದಿನಾಂಕ : 04-02-2017ರ ಸಹಾಯಕ ಪ್ರಾಧ್ಯಾಪಕರ ಅಂತಿಮ ಆಯ್ಕೆಪಟ್ಟಿಯಿಂದ ಕೈಬಿಡಲಾಗಿದೆ.

ಅದೇ ನಿಯಮ 20ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರ ಶ್ರೀ ಸಂಜೀವ ನಾಗರಾಜ್ ಆಲೂರ್, ಧಾರವಾಡ ಇವರನ್ನು ಸರ್ಕಾರದ ಅಡಿಯಲ್ಲಿನ ಉದ್ಯೋಗದಿಂದ ಖಾಯಂ ಆಗಿ ಅನರ್ಹಗೊಳಿಸಿದೆ.

PR.274

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC.100

ಕೆ. ಶಿವಲಿಂಗಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ, ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ)

ಕಂದಾಯ ಸಚಿವಾಲಯ

ವಿಷಯ : ನೋಂದಣಿ ಮತ್ತು ಮುದ್ರಾಂಕ ಇಲಾಖೆಯ 2017-18ನೇ ಸಾಲಿನ ಆಯವ್ಯಯ ಅನುದಾನವನ್ನು

ಖಜಾನೆ-2 ರಲ್ಲಿ ಬಿಡುಗಡೆ ಮಾಡುವ ಬಗ್ಗೆ.

ಓದಲಾಗಿದೆ :

1) ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರ ಪತ್ರ ಸಂಖ್ಯೆ:

ಬಿಯುಡಿ/02/2017-18 ದಿನಾಂಕ: 27-06-2017.

2) ಸರ್ಕಾರದ ಆದೇಶ ಸಂಖ್ಯೆ: ಕಂಇ 37 ಮುನೋಮು 2017 ದಿನಾಂಕ:06-05-2017.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮಾಂಕ(1) ದಿನಾಂಕ: 27-06-2017ರ ಪತ್ರದಲ್ಲಿ, ಸರ್ಕಾರದ ಆದೇಶ ಸಂಖ್ಯೆ: ಆಇ 03 ಬಿಪಿಇ 2017 ದಿನಾಂಕ: 31-03-2017 ರಲ್ಲಿ, 2017-18ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಪ್ರಸಕ್ತ ಸಾಲಿಗೆ ನಿಗಧಿಯಾಗಿರುವ ಒಟ್ಟಾರೆ ಅಭಿಯಾಚನೆ ಪುರಸ್ಕøತ ಮೊತ್ತ ರೂ.10330.00 ಲಕ್ಷಗಳಾಗಿದ್ದು, ಸರ್ಕಾರದ ಆದೇಶ ಸಂಖ್ಯೆ: ಆಇ 01 ಬಿಪಿಇ 2017 ದಿನಾಂಕ: 05-04-2017ರಲ್ಲಿ, ಲೇಖಾನುದಾನ ಮಿತಿ ಅಡಿಯಲ್ಲಿ ಆಡಳಿತ ಇಲಾಖೆಯು ಒಟ್ಟು ಆಯವ್ಯಯದ ನಾಲ್ಕನೇ ಒಂದು ಭಾಗವನ್ನು ಪರಿಗಣಿಸಿ, ಸರ್ಕಾರದ ಆದೇಶ ಸಂಖ್ಯೆ: ಆಇ 03 ಟಿಎಆರ್ 2016 ದಿನಾಂಕ:07-04-2017 ರಲ್ಲಿನ ಆದೇಶದಂತೆ ಅನುದಾನವನ್ನು ಖಜಾನೆ-2 ರಲ್ಲಿ ಬಿಡುಗಡೆ ಮಾಡಲು ಸ್ವಷ್ಟ ಆದೇಶ ಇರುತ್ತದೆ.

ಮೇಲಿನ ಸರ್ಕಾರದ ಆದೇಶಗಳನ್ವಯ ಸರ್ಕಾರದ ಆದೇಶ ಸಂಖ್ಯೆ: ಕಂಇ 37 ಮುನೋಮು 2017 ದಿನಾಂಕ: 06-05-2017ರಲ್ಲಿ, ಲೇಖಾನುದಾನದ ಮಿತಿಯೊಳಗೆ ಸರ್ಕಾರದಿಂದ ವೇತನೇತರ ಬಾಬ್ತುಗಳ ಲೆಕ್ಕಶೀರ್ಷಿಕೆಗಳ ಅಡಿಯಲ್ಲಿ ರೂ.1248.25 ಲಕ್ಷಗಳ ಅನುದಾನವನ್ನು ಮೊದಲ ಕಂತಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸರ್ಕಾರ ಬಿಡುಗಡೆ ಮಾಡಿತ್ತು. ಸದರಿ ಅನುದಾನವನ್ನು ಇಲಾಖೆಯ ಎಲ್ಲಾ ಅನುಷ್ಠಾನಾಧಿಕಾರಿಗಳಿಗೆ ಮರುಹಂಚಿಕೆ ಮಾಡಿ ಐಜಿಆರ್ ಕಛೇರಿಯಿಂದ ದಿನಾಂಕ: 09-05-2017 ರಂದು ಬಿಡುಗಡೆ ಮಾಡಲಾಗಿದೆ.

ಆದರೆ, ಅನುದಾನದ ಕೊರತೆಯಿಂದಾಗಿ ಬಹಳಷ್ಟು ವಾಹನಗಳ ದುರಸ್ಥಿ ಬಿಲ್‌ಗಳು, ಇಂಧನದ ಬಿಲ್‌ಗಳನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ.

ಇದರಿಂದಾಗಿ ಪೆಟ್ರೊಲ್ ಬಂಕ್‌ಗಳಲ್ಲಿ ಇಂಧನ ಪಡೆಯಲು ಕಷ್ಟಕರವಾಗುತ್ತಿದೆ. ಅಲ್ಲದೆ ದೂರವಾಣಿ ಬಿಲ್‌ಗಳು, ವಿದ್ಯುತ್ ಬಿಲ್‌ಗಳು ಹಾಗೂ ಇನ್ನಿತರೆ ಅತ್ಯವಶ್ಯಕ ವೆಚ್ಚಗಳ ಬಿಲ್ಲುಗಳನ್ನು ಸಕಾಲದಲ್ಲಿ ಪಾವತಿಸದೇ ಹೋದಲ್ಲಿ ಅವುಗಳ ಸಂಪರ್ಕ ಯಾವುದೇ ಸಮಯದಲ್ಲಿ ಸ್ಥಗಿತಗೊಂಡು ಕಛೇರಿ ಮತ್ತು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗುವ ಸಂಭವ ಇರುತ್ತದೆ. ಆದಕಾರಣ ಕಛೇರಿ ಸಾದಿಲ್ವಾರು ವೆಚ್ಚಗಳಿಗಾಗಿ ಕೂಡಲೇ ಉಳಿಕೆ ಅನುದಾನವನ್ನು ಖಜಾನೆ-2ರಲ್ಲಿ ಬಿಡುಗಡೆ ಮಾಡಬೇಕಾಗಿ ಕೋರುತ್ತಾ, ಪ್ರಸ್ತಾವನೆಯನ್ನು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರವರು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮಾಂಕ(2) ದಿನಾಂಕ: 06-05-2017ರ ಆದೇಶದಲ್ಲಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಧಾನ ಲೆಕ್ಕಶೀರ್ಷಿಕೆ "2030" ಯಲ್ಲಿನ ಒಟ್ಟು 8 ಲೆಕ್ಕಶೀರ್ಷಿಕೆಗಳಾದ 2030-01-101-0-00-059, 2030-01-102-0-00-015, 2030-03-001-2-08-051, 2030-03- 911-0-00-261 ಹಾಗೂ 2030-03-001-1-00-034ಗಳ ಉಪ ಲೆಕ್ಕಶೀರ್ಷಿಕೆಗಳು ಖಜಾನೆ-2 ತಂತ್ರಾಂಶದಲ್ಲಿ ಮ್ಯಾಪಿಂಗ್ ಆಗಿರುವುದಿಲ್ಲವಾದ್ದರಿಂದ,ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ೧೧೧೭ ಇವುಗಳನ್ನು ಹೊರತುಪಡಿಸಿ, ಉಳಿದ ಈ ಕೆಳಕಂಡ ಲೆಕ್ಕಶೀರ್ಷಿಕೆಗಳಿಗೆ ನಿಗದಿಯಾಗಿರುವಂತೆ, ಲೇಖಾನುದಾನದ ಮಿತಿಯೊಳಗೆ ಅಂದರೆ ಒಟ್ಟು ಆಯವ್ಯಯದ ನಾಲ್ಕನೇ ಒಂದು ಭಾಗದಷ್ಟು ಅನುದಾನವನ್ನು ಮೊದಲನೇ ಕಂತಿನ ರೂಪದಲ್ಲಿ ಕಾಲಂ-5 ರಲ್ಲಿ ನಮೂದಿಸಿರುವಂತೆ ಬಿಡುಗಡೆ ಮಾಡಿ ಆದೇಶಿಸಿದೆ.

ಕ್ರ. ಸಂ. ಲ ಕ್ಕಶೀರ್ಷಿಕೆ ೆ ವಿವರಣೆ 2017-18ರ ಆಯವ್ಯಯ ಮೊತ್ತ 1ನೇ ಕಂತಿನ ಅನುದಾನ
1 2 3 4 5
1 2030-03-001-1-00 021-ವೈದ್ಯಕೀಯ ವೆಚ್ಚ ಮರುಪಾವತಿ 78.00 19.50
041-ಪ್ರಯಾಣ ವೆಚ್ಚಗಳು 3.00 0.75
051-ಸಾಮಾನ್ಯ ವೆಚ್ಚಗಳು 237.00 59.25
071-ಕಟ್ಟಡ ವೆಚ್ಚಗಳು 780.00 195.00
180-ಯಂತ್ರ & ಸಾಮಾಗ್ರಿ ವೆಚ್ಚ 25.00 6.25
195-ಸಾರಿಗೆ ವೆಚ್ಚಗಳು 70.00 17.50
2 2030-03-001-2-04 051-ಸಾಮಾನ್ಯ ವೆಚ್ಚಗಳು 4800.00 950.00

ಪ್ರಸ್ತುತ, ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರವರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಧಾನ ಲೆಕ್ಕಶೀರ್ಷಿಕೆ "2030" ಯಲ್ಲಿ ಒಟ್ಟು 8 ಲೆಕ್ಕಶೀರ್ಷಿಕೆಗಳಿದ್ದು, ಅವುಗಳ ಪೈಕಿ 2030-01-101- 0-00-059, 2030-01-102-0-00-015, 2030-03-001-2-08-051, 2030-03-911-0-00-261 ಹಾಗೂ 2030-03-001-1-00-034 ಗಳಿಗೆ ಖಜಾನೆ-2 ತಂತ್ರಾಂಶದಲ್ಲಿ ಮ್ಯಾಪಿಂಗ್ ಆಗಿರುವುದಿಲ್ಲ. ಈ ಲೆಕ್ಕಶೀರ್ಷಿಕೆಗಳನ್ನು ಹೊರತುಪಡಿಸಿ, ಉಳಿದ ಲೆಕ್ಕಶೀರ್ಷಿಕೆಗಳಡಿಯಲ್ಲಿ ಒದಗಿಸಲಾದ ಆಯವ್ಯಯದ ನಾಲ್ಕನೇ ಒಂದು ಭಾಗದಷ್ಟು ಅನುದಾನವನ್ನು ಎರಡನೇ ಕಂತಿನ ರೂಪದಲ್ಲಿ ಬಿಡುಗಡೆ ಮಾಡಲು ಸರ್ಕಾರವು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಕಂಇ 37 ಮುನೋಮು 2017, ಬೆಂಗಳೂರು, ದಿನಾಂಕ: 21-07-2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಧಾನ ಲೆಕ್ಕಶೀರ್ಷಿಕೆ "2030" ಯಲ್ಲಿನ ಒಟ್ಟು 8 ಲೆಕ್ಕಶೀರ್ಷಿಕೆಗಳಾದ 2030-01-101-0-00-059, 2030-01-102-0-00-015, 2030-03-001-2-08-051, 2030-03-911-0-00-261 ಹಾಗೂ 2030-03-001-1-00-034ಗಳ ಉಪ ಲೆಕ್ಕಶೀರ್ಷಿಕೆಗಳು ಖಜಾನೆ-2 ತಂತ್ರಾಂಶದಲ್ಲಿ ಮ್ಯಾಪಿಂಗ್ ಆಗಿರುವುದಿಲ್ಲವಾದ್ದರಿಂದ, ಇವುಗಳನ್ನು ಹೊರತುಪಡಿಸಿ, ಉಳಿದ ಈ ಕೆಳಕಂಡ ಲೆಕ್ಕಶೀರ್ಷಿಕೆಗಳಿಗೆ ನಿಗದಿಯಾಗಿರುವಂತೆ, ಲೇಖಾನುದಾನದ ಮಿತಿಯೊಳಗೆ ಅಂದರೆ ಒಟ್ಟು ಆಯವ್ಯಯದ ನಾಲ್ಕನೇ ಒಂದು ಭಾಗದಷ್ಟು ಅನುದಾನವನ್ನು ಎರಡನೇ ಕಂತಿನ ರೂಪದಲ್ಲಿ ಕಾಲಂ-5 ರಲ್ಲಿ ನಮೂದಿಸಿರುವಂತೆ ಬಿಡುಗಡೆ ಮಾಡಿ ಆದೇಶಿಸಿದೆ.

ಕ್ರ. ಸಂ. ಲ ಕ್ಕಶೀರ್ಷಿಕೆ ೆ ವಿವರಣೆ 2017-18ರ ಆಯವ್ಯಯ ಮೊತ್ತ 2ನೇ ಕಂತಿನ ಅನುದಾನ
1 2 3 4 5
1 2030-03-001-1-00 021-ವೈದ್ಯಕೀಯ ವೆಚ್ಚ ಮರುಪಾವತಿ 78.00 19.50
041-ಪ್ರಯಾಣ ವೆಚ್ಚಗಳು 3.00 0.75
051-ಸಾಮಾನ್ಯ ವೆಚ್ಚಗಳು 237.00 59.25
071-ಕಟ್ಟಡ ವೆಚ್ಚಗಳು 780.00 195.00
180-ಯಂತ್ರ & ಸಾಮಾಗ್ರಿ ವೆಚ್ಚ 25.00 6.25
195-ಸಾರಿಗೆ ವೆಚ್ಚಗಳು 70.00 17.50
2 2030-03-001-2-04 051-ಸಾಮಾನ್ಯ ವೆಚ್ಚಗಳು 4800.00 975.00

ಈ ಆದೇಶವನ್ನು ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 01 ಟಿಎಫ್‌ಪಿ 2017 ದಿನಾಂಕ: 05-04-2017 ರನ್ವಯ ಸರ್ಕಾರದ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿರುವ ಆರ್ಥಿಕ ಅಧಿಕಾರದನ್ವಯ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ. ನಾರಾಯಣಪ್ಪ

PR.275

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ನೋಂದಣಿ ಮತ್ತು ಮುದ್ರಾಂಕ).

೧೧೧೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ಭಾಗ ೧

ಕಂದಾಯ ಸಚಿವಾಲಯ

ವಿಷಯ : ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಯಲಹಂಕ ಹೋಬಳಿ, ಆವಲಹಳ್ಳಿ ಗ್ರಾಮದ ಸ.ನಂ.79 ರಲ್ಲಿ 10-00 ಎಕರೆ ಜಮೀನನ್ನು 'ದಿ ಮಿಥಿಕ್ ಸೊಸೈಟಿ' ಬೆಂಗಳೂರು ಇವರಿಗೆ ಮಂಜೂರು ಮಾಡಿರುವುದನ್ನು ರದ್ದುಪಡಿಸುವ ಬಗ್ಗೆ.

ಓದಲಾಗಿದೆ :

1) ಸರ್ಕಾರದ ಆದೇಶ ಸಂಖ್ಯೆ:ಆರ್‌ಡಿ 385 ಎಲ್‌ಜಿಬಿ 2011 ದಿನಾಂಕ:28.10.2011

2) ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಇವರ ಕಛೇರಿ ಆದೇಶ

ಸಂಖ್ಯೆ: ಎಲ್ಎನ್‌ಡಿ(ಎನ್.ಎ)/ಸಿಆರ್/301/2010-11 ದಿನಾಂಕ: 17.01.2012

3) ಸರ್ಕಾರದ ಪತ್ರ ಸಂಖ್ಯೆ: ಆರ್‌ಡಿ 219 ಎಲ್‌ಜಿಬಿ 2015 ದಿನಾಂಕ:16.02.2017

4) ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಇವರ ಪತ್ರ

ಸಂಖ್ಯೆ: ಎಲ್ಎನ್‌ಡಿ(ಎನ್.ಎ)/ಸಿಆರ್/301/2010-11 ದಿನಾಂಕ:03.3.2016 ಮತು 18.01.2017.

5) ತಹಶೀಲ್ದಾರ್, ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಯಲಹಂಕ ರವರ ಪತ್ರ ಸಂಖ್ಯೆ ಎಲ್ಎನ್‌ಡಿ/ಎನ್ಎ/ಸಿಆರ್/21/14-15 ದಿನಾಂಕ: 16-12-2015.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ(1)ರ ದಿನಾಂಕ: 28.11.2011ರ ಸರ್ಕಾರಿ ಆದೇಶದಲ್ಲಿ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ (ಅಪರ) ತಾಲ್ಲೂಕು ಯಲಹಂಕ ಹೋಬಳಿ, ಆವಲಹಳ್ಳಿ ಗ್ರಾಮದ ಸ.ನಂ.79 ರಲ್ಲಿನ 103-30 ಎಕರೆ ಸರ್ಕಾರಿ ಗೋಮಾಳ ಜಮೀನಿನ ಪೈಕಿ 10-00 ಎಕರೆ ಜಮೀನನ್ನು ಮಾರ್ಗಸೂಚಿ ಬೆಲೆಯ ಶೇ.30% ವಿಧಿಸಿ 'ದಿ ಮಿಥಿಕ್ ಸೊಸೈಟಿ' ಇಂಡಾಲಜಿ ಬೆಂಗಳೂರು ಇವರಿಗೆ ಭಾರತೀಯ ಶಾಸ್ತ್ರ ಅಧ್ಯಯನ ಮತ್ತು ಪುರಾತತ್ವ ಶಾಸನ ಶಾಸ್ತ್ರಗಳ ಅಧ್ಯಯನ, ತಾಳೆಗರಿ ಹಸ್ತ ಪ್ರತಿಗಳ ಸಂರಕ್ಷಣೆ ಅಧ್ಯಯನ ಕೇಂದ್ರ ಗ್ರಂಥಾಲಯ ಮತ್ತು ವಿದ್ಯಾರ್ಥಿ ನಿಲಯ ಇವುಗಳನ್ನೊಳಗೊಂಡ ಕ್ಯಾಂಪಸ್ ಸ್ಥಾಪನೆಗಾಗಿ ಮಂಜೂರು ಮಾಡಿ ಆದೇಶಿಸಲಾಗಿತ್ತು.

ಸದರಿ, ಸರ್ಕಾರಿ ಆದೇಶವನ್ನು ಅನುಸರಿಸಿ, ಮೇಲೆ ಓದಲಾದ ಕ್ರಮ ಸಂಖ್ಯೆ (2) ರಂತೆ ದಿನಾಂಕ:17.01.2012ರಲ್ಲಿ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಯಲಹಂಕ ಹೋಬಳಿ, ಆವಲಹಳ್ಳಿ ಗ್ರಾಮದ ಸ.ನಂ.79 ರಲ್ಲಿ 10-00 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ಈ ಕೆಳಕಂಡ ಷರತ್ತುಗಳನ್ನು ವಿಧಿಸಿ ಮಂಜೂರು ಮಾಡಿರುತ್ತಾರೆ.

2 ವರ್ಷದೊಳಗೆ ಉಪಯೋಗಿಸತಕ್ಕದ್ದು.

2. ಸದರಿ ಜಮೀನನ್ನು 2 ವರ್ಷದ ಅವಧಿಯಲ್ಲಿ ಉಪಯೋಗಿಸದ ಪಕ್ಷದಲ್ಲಿ ಅಥವಾ ಬೇರೆ ಉದ್ದೇಶಕ್ಕೆ ಉಪಯೋಗಿಸದೇ ಆದ ಪಕ್ಷದಲ್ಲಿ ಯಾವುದೇ ಮುನ್ಸೂಚನೆ ನೀಡದೇ, ಸದರಿ ಜಮೀನನ್ನು ಕಂದಾಯ ಇಲಾಖೆಗೆ ಹಿಂದಕ್ಕೆ ಪಡೆಯಲಾಗುವುದು.

3. ಸದರಿ ಜಮೀನು ಅಥವಾ ಜಮೀನಿನ ಒಂದು ಭಾಗ ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಾದಲ್ಲಿ ಹಿಂದಕ್ಕೆ ಪಡೆಯುವ ಅಧಿಕಾರವನ್ನು ಜಿಲ್ಲಾಧಿಕಾರಿಗಳು ಹೊಂದಿರುತ್ತಾರೆ.

4. ತಹಶೀಲ್ದಾರ್ ರವರು ಸದರಿ ಸರ್ಕಾರಿ ಜಮೀನನ್ನು ಮೋಜಣಿ ಮಾಡಿಸಿ, ಗಡಿ ಗುರುತಿಸಿ, ದಿ ಮಿಥಿಕ್ ಸೊಸೈಟಿ ಎಂದು ಕಂದಾಯ ದಾಖಲೆಗಳಲ್ಲಿ ಸೂಕ್ತವಾಗಿ ನಮೂದು ಮಾಡಲು ಸೂಚಿಸಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ(4)ರ ದಿನಾಂಕ:03.03.2016 ಪತ್ರದಲ್ಲಿ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರು ತಹಶೀಲ್ದಾರ್, ಬೆಂಗಳೂರು ಉತ್ತರ (ಅಪರ) ತಾಲ್ಲೂಕು ಯಲಹಂಕ, ಇವರು ವರದಿಯೊಂದನ್ನು ಸಲ್ಲಿಸಿ, ದಿ ಮಿಥಿಕ್ ಸೊಸೈಟಿ ಬೆಂಗಳೂರು ಇವರು ಸರ್ಕಾರಿ ಮಂಜೂರಾತಿ ಆದೇಶದಲ್ಲಿರುವ ಷರತ್ತುಗಳಲ್ಲಿ ಒಂದನೇ ಷರತ್ತಿನನ್ವಯ ಜಮೀನನ್ನು ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸಿಕೊಂಡಿರುವುದಿಲ್ಲವೆಂದು ಹಾಗೂ ಎರಡನೇ ಷರತ್ತಿನನ್ವಯ ಹೀಗೇ ಉಪಯೋಗಿಸದ ಪಕ್ಷದಲ್ಲಿ ಯಾವುದೇ ಮುನ್ನಸೂಚನೆ ಇಲ್ಲದೇ ಹಿಂಪಡೆಯಲಾಗುದೆಂದು ಷರತ್ತುಗಳನ್ನು ವಿಧಸಲಾಗಿದ್ದರೂ, ಸಹ ಸೊಸೈಟಿಯು ಮಂಜೂರಾದ ಜಮೀನನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳದೇ ಭೂ ಮಂಜೂರಾತಿ ಷರತ್ತುಗಳನ್ನು ಉಲ್ಲಂಘಿಸಿರುವುದರಿಂದ, ಪ್ರಸ್ತಾಪಿತ ಆವಲಹಳ್ಳಿ ಗ್ರಾಮದ ಸ.ನಂ.79ರಲ್ಲಿ 10-00 ಎಕರೆ ಜಮೀನನ್ನು 'ದಿ ಮಿಥಿಕ್ ಸೊಸೈಟಿ' ಬೆಂಗಳೂರು ಇವರಿಗೆ ಮಂಜೂರು ಮಾಡಿರುವುದನ್ನು ರದ್ದುಪಡಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.

ಮೇಲೆ ಓದಲಾದ ಕ್ರಮ ಸಂಖ್ಯೆ(3) ರ ದಿನಾಂಕ:16.02.2017 ಪತ್ರದಲ್ಲಿ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಯಲಹಂಕ ಹೋಬಳಿ, ಆವಲಹಳ್ಳಿ ಗ್ರಾಮದ ಸ.ನಂ.79 ರಲ್ಲಿ 10-00 ಎಕರೆ ಜಮೀನನ್ನು 'ದಿ ಮಿಥಿಕ್ ಸೊಸೈಟಿ' ಬೆಂಗಳೂರು ಇವರಿಗೆ ರದ್ದುಪಡಿಸಲು ಕ್ರಮವಹಿಸುವ ಮುನ್ನ ಮಂಜೂರಾತಿ ಮಾಡಿದ ಸಂಸ್ಥೆಯ ಅಹವಾಲು ಸಲ್ಲಿಸಲು ಅವಕಾಶ ನೀಡುವ ಬಗ್ಗೆ ತಿಳಿಸಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ(4)ರ ದಿನಾಂಕ:18.01.2017ರ ಪತ್ರದಲ್ಲಿ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರು ವರದಿಯಲ್ಲಿ ತಿಳಿಸಿರುವಂತೆ, ತಹಶೀಲ್ದಾರ್, ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಯಲಹಂಕ ಇವರು 'ದಿ ಮಿಥಿಕ್ ಸೊಸೈಟಿ' ಇವರಿಗೆ ತಿಳುವಳಿಕೆ ಪತ್ರ ಸಂಖ್ಯೆ:

ಎಲ್ಎನ್‌ಡಿ/ಎನ್.ಎ/ಸಿಆರ್/21/14-15 ದಿನಾಂಕ:16.12.2015ನ್ನು ನೀಡಿ ಪ್ರಸ್ತಾಪಿತ ಮಂಜೂರಾತಿ ಆದೇಶದಲ್ಲಿನ ಷರತ್ತುಗಳನ್ನು ಉಲ್ಲಂಘಿಸಿರುವುದರಿಂದ, ಮಂಜೂರಾತಿ ಆದೇಶವನ್ನು ಏಕೆ ರದ್ದುಪಡಿಸಬಾರದು? ಎಂಬ ಬಗ್ಗೆ ಖುದ್ದು ಹಾಜರಾಗಿ ಲಿಖಿತ ಹೇಳಿಕೆ ಸಲ್ಲಿಸತಕ್ಕದ್ದೆಂದು ತಿಳಿಸಲಾಗಿರುತ್ತದೆ ಎಂದು ವರದಿ ಮಾಡಿರುತ್ತಾರೆ. ಮುಂದುವರೆದು, ಸದರಿ ತಿಳುವಳಿಕೆ ಪತ್ರಕ್ಕೆ 'ದಿ ಮಿಥಿಕ್ ಸೊಸೈಟಿ' ಬೆಂಗಳೂರು ಇವರ ಪತ್ರ ಸಂಖ್ಯೆ:ಎಂ.ವೈ/301/2015-16 ದಿನಾಂಕ: 23.12.2015ರಲ್ಲಿ ಸಮಜಾಯಿಸಿ ನೀಡಿರುತ್ತಾರೆ. ಸದರಿ ಸಮಜಾಯಿಸಿಯಲ್ಲಿ ಸರ್ಕಾರದ ಆದೇಶದನ್ವಯ ಸೊಸೈಟಿಯು ದಿನಾಂಕ:16.1.2012 ರಂದು `.1,80,00,000/-ಗಳನ್ನು ಸರ್ಕಾರದ ಖಾತೆಗೆ ಜಮಾ ಮಾಡಲಾಗಿದ್ದು, ಮಂಜೂರಾದ ಜಮೀನನ್ನು ಗಡಿ ಗುರುತಿಸಿ ಜಕ್ಕುಬಂದಿ ಮಾಡಿಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ೧೧೧೯ ಸೊಸೈಟಿಗೆ ಹಸ್ತಾಂತರಿಸಲು ಕೋರಲಾಗಿತ್ತೆಂದು ಆದರೆ, ಗಡಿ ಗುರುತಿಸಿ ಜಮೀನನ್ನು ಸೊಸೈಟಿಗೆ ಹಸ್ತಾಂತರ ಮಾಡದೇ ಇರುವುದರಿಂದ, ನಿಗದಿತ ಉದ್ದೇಶಕ್ಕೆ ಉಪಯೋಗಿಸಲು ಅವಕಾಶವಾಗಿಲ್ಲವೆಂದು ಪ್ರಸ್ತುತ ಗಡಿ ಗುರುತಿಸಿ ಜಮೀನನ್ನು ಹಸ್ತಾಂತರಿಸಲು ಕೋರಿದ್ದಾರೆಂದು ತಿಳಿಸಿರುತ್ತಾರೆ.

ಆದರೆ, 'ದಿ ಮಿಥಿಕ್ ಸೊಸೈಟಿ' ಬೆಂಗಳೂರು ಇವರಿಗೆ ಸರ್ಕಾರಿ ಆದೇಶ ಸಂಖ್ಯೆ:ಆರ್‌ಡಿ 385 ಎಲ್‌ಜಿಬಿ 2011 ದಿನಾಂಕ:28.10.2011 ಹಾಗೂ ಜಿಲ್ಲಾಧಿಕಾರಿಗಳ, ಆದೇಶ ದಿನಾಂಕ:17.01.2012 ರ ಮಂಜೂರಾತಿ ಷರತ್ತಿನಂತೆ ಮಂಜೂರು ಮಾಡಲಾಗಿರುವ ಜಮೀನನ್ನು ಮಂಜೂರು ಮಾಡಿರುವ ಉದ್ದೇಶಕ್ಕೆ ನಿಗದಿತ ಎರಡು ವರ್ಷದೊಳಗಾಗಿ ಉಪಯೋಗಿಸದ ಪಕ್ಷದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಸದರಿ ಜಮೀನನ್ನು ಕಂದಾಯ ಇಲಾಖೆಗೆ ಹಿಂದಕ್ಕೆ ಪಡೆಯುವ ಷರತ್ತಿನೊಂದಿಗೆ ಮಂಜೂರಾತಿ ನೀಡಿರುವುದರಿಂದ ಹಾಗೂ ಸಂಸ್ಥೆಯ ಹೆಸರಿಗೆ ಎಮ್.ಆರ್/24/11-12 ದಿನಾಂಕ:04.12.2012 ರಂತೆ ಖಾತೆ ಅಂಗೀಕರಿಸಿ ಪಹಣಿ ಕಲಂ 9 ರಲ್ಲಿ ನಮೂದು ಸಹ ತಂದಿದ್ದಾಗ್ಯೂ ಸದರಿ ಜಮೀನನ್ನು ಸ್ವಾಧೀನಕ್ಕೆ ಪಡೆದು ಅನುಭೋಗದಲ್ಲಿ ಇಲ್ಲದೇ ಇರುವುದು ಮನಗಂಡು ದಿ ಮಿಥಿಕ್ ಸೊಸೈಟಿ ಬೆಂಗಳೂರು ಇವರು ಮಂಜೂರಾತಿ ಆದೇಶದಲ್ಲಿನ ಷರತ್ತುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದರಿಂದ, ಮಂಜೂರಾತಿ ಆದೇಶವನ್ನು ರದ್ದುಪಡಿಸಿ, ಸರ್ಕಾರದ ವಶಕ್ಕೆ ಪ್ರಸ್ತಾಪಿತ ಜಮೀನನ್ನು ಹಿಂಪಡೆಯಲು ಜಿಲ್ಲಾಧಿಕಾರಿಗಳು ಪ್ರಸ್ತಾಪಿಸಿರುತ್ತಾರೆ.

ಜಿಲ್ಲಾಧಿಕಾರಿಗಳ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 219 ಎಲ್‌ಜಿಬಿ 2015, ಬೆಂಗಳೂರು, ದಿನಾಂಕ: 20.06.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಯಲಹಂಕ ಹೋಬಳಿ, ಆವಲಹಳ್ಳಿ ಗ್ರಾಮದ ಸ.ನಂ.79 ರಲ್ಲಿನ 10-00 ಎಕರೆ ಗೋಮಾಳ ಜಮೀನನ್ನು ಮಾರ್ಗಸೂಚಿ ಬೆಲೆಯ ಶೇ.30% ರಷ್ಟು ವಿಧಿಸಿ, ಸರ್ಕಾರಿ ಆದೇಶ ಸಂಖ್ಯೆ:ಆರ್‌ಡಿ 385 ಎಲ್‌ಜಿಬಿ 2011 ದಿನಾಂಕ:28.10.2011 ರಲ್ಲಿ "ದಿ ಮಿಥಿಕ್ ಸೊಸೈಟಿ", ಬೆಂಗಳೂರು ಇವರಿಗೆ ಭಾರತೀಯ ಶಾಸ್ತ್ರ ಅಧ್ಯಯನ ಹಾಗೂ ಇತರೆ ಅಧ್ಯಯನಗಳ ಉದ್ದೇಶಕ್ಕಾಗಿ ಮಂಜೂರು ಮಾಡಿರುವ ಆದೇಶದಲ್ಲಿನ ಷರತ್ತುಗಳನ್ನು ಉಲ್ಲಂಘಿಸಿರುವ ಕಾರಣ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 25 ರನ್ವಯ ಸದರಿ ಮಂಜೂರಾತಿಯನ್ನು ರದ್ದುಪಡಿಸಿ ಆದೇಶಿಸಿದೆ.

ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ಇವರು ಸದರಿ ಜಮೀನನ್ನು ನಿಯಮಾನುಸಾರ ಸರ್ಕಾರದ ವಶಕ್ಕೆ ಹಿಂಪಡೆದು, ಸದರಿಯವರು ಪಾವತಿಸಿರುವ `.1,80,00,000/-ಗಳನ್ನು ಸಂಸ್ಥೆಗೆ ಮರುಪಾವತಿಸುವಂತೆ ತಿಳಿಸಲಾಗಿದೆ.

PR.276

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC.50

ಎಸ್.ಎಲ್.ಮಹಾಂತೇಗೌಡ

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂ ಮಂಜೂರಾತಿ-1).

ಒಳಾಡಳಿತ ಸಚಿವಾಲಯ

ವಿಷಯ:- ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ, ವಿಚಾರಣಾ ಆಯೋಗಕ್ಕೆ ಹಣ

ಬಿಡುಗಡೆ ಮಾಡುವ ಬಗ್ಗೆ.

ಓದಲಾಗಿದೆ: 1) ಸರ್ಕಾರದ ಅಧಿಸೂಚನೆ ಸಂ: ಹೆಚ್‌ಡಿ 10 ಪಿಸಿಇ 2016, ದಿನಾಂಕ:16.07.2016.

2) ಸರ್ಕಾರದ ಅಧಿಸೂಚನೆ ಸಂ: ಹೆಚ್‌ಡಿ 10 ಪಿಸಿಇ 2016, ದಿನಾಂಕ:06.01.2017.

3) ಸರ್ಕಾರದ ಅಧಿಸೂಚನೆ ಸಂ: ಹೆಚ್‌ಡಿ 10 ಪಿಸಿಇ 2016, ದಿನಾಂಕ:10.7.2017.

4) ಕಾರ್ಯದರ್ಶಿ, ನ್ಯಾಯಮೂರ್ತಿ ಶ್ರೀ ಕೆ.ಎನ್.ಕೇಶವನಾರಾಯಣ ವಿಚಾರಣಾ

ಆಯೋಗರವರ ಪತ್ರ ಸಂಖ್ಯೆ: ಕೆಎನ್‌ಕೆಸಿಐ/21/2017-18, ದಿ: 21.6.2017.

ಪ್ರಸ್ತಾವನೆ:

ಮೇಲೆ ಓದಲಾದ(1)ರ ಅಧಿಸೂಚನೆಯಲ್ಲಿ ಶ್ರೀ ಎಂ.ಕೆ. ಗಣಪತಿ, ಡಿವೈಎಸ್ಪಿ, (ಇಲಾಖಾ ವಿಚಾರಣೆ), ಐಜಿಪಿ ಕಛೇರಿ, ಪಶ್ಚಿಮ ವಲಯ, ಮಂಗಳೂರು ಇವರು ದಿನಾಂಕ:07/07/2016ರಂದು ಅಸ್ವಾಭಾವಿಕ ಮರಣ ಹೊಂದಿದ್ದು, ಇದಕ್ಕೆ ಕಾರಣವಾದ ಸಂದರ್ಭಗಳು ಹಾಗೂ ಘಟನೆಗಳ ಕುರಿತು ಮತ್ತು ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದಿ:07/07/2016ರಂದು ದಾಖಲಾಗಿರುವ ಯುಡಿಆರ್ ನಂ.9/2016 ಕುರಿತು ನ್ಯಾಯಾಂಗ ವಿಚಾರಣೆಗಾಗಿ ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ, ನಿವೃತ್ತ ನ್ಯಾಯಾಧೀಶರು, ಕರ್ನಾಟಕ ಉಚ್ಚ ನ್ಯಾಯಾಲಯ ಇವರನ್ನು ಏಕ ಸದಸ್ಯ ವಿಚಾರಣಾ ಆಯೋಗವನ್ನಾಗಿ ನೇಮಿಸಿ, ಅಧಿಸೂಚಿಸಿದೆ.

ಮೇಲೆ ಓದಲಾದ(2)ರ ಅಧಿಸೂಚನೆಯಲ್ಲಿ ಶ್ರೀ ಕೆ.ಎನ್.ಕೇಶವನಾರಾಯಣ ವಿಚಾರಣಾ ಆಯೋಗದ ಅವಧಿಯನ್ನು ದಿನಾಂಕ: 15.07.2017 ರವರೆಗೆ ವಿಸ್ತರಿಸಲಾಗಿದೆ.

ಮೇಲೆ ಓದಲಾದ(3)ರ ಅಧಿಸೂಚನೆಯಲ್ಲಿ ಶ್ರೀ ಕೆ.ಎನ್.ಕೇಶವನಾರಾಯಣ ವಿಚಾರಣಾ ಆಯೋಗದ ಅವಧಿಯನ್ನು ದಿನಾಂಕ: 15.01.2018 ರವರೆಗೆ ವಿಸ್ತರಿಸಲಾಗಿದೆ.

ಮೇಲೆ ಓದಲಾದ (4)ರ ಪತ್ರದಲ್ಲಿ ಕಾರ್ಯದರ್ಶಿ, ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ ವಿಚಾರಣಾ ಆಯೋಗ ರವರು, ಆಯೋಗದ ಅಧಿಕಾರಿ/ಸಿಬ್ಬಂದಿರವರಿಗೆ ವೇತನ, ಇನ್ನಿತರೆ ಖರ್ಚು-ವೆಚ್ಚಗಳನ್ನು ಭರಿಸಲು ಅನುಕೂಲವಾಗುವಂತೆ ತುರ್ತಾಗಿ `.15,00,000/- (ರೂಪಾಯಿ ಹದಿನೈದು ಲಕ್ಷಗಳು ಮಾತ್ರ) ಗಳ ಅನುದಾನ ಮಂಜೂರು ಮಾಡಲು ಕೋರಿದ್ದು, ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೧೨೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೭, ೨೦೧೭ ಭಾಗ ೧

ಸರ್ಕಾರದ ಆದೇಶ ಸಂಖ್ಯೆ : ಹೆಚ್‌ಡಿ 10 ಪಿಸಿಇ 2016(ಭಾಗ-3) ಬೆಂಗಳೂರು, ದಿನಾಂಕ 26.7.2017

ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ ವಿಚಾರಣಾ ಆಯೋಗದ ಅಧ್ಯಕ್ಷರಿಗೆ, ಕಾರ್ಯದರ್ಶಿಯವರಿಗೆ ಹಾಗೂ ಸಿಬ್ಬಂದಿಯ ವೇತನ ಮತ್ತು ಇನ್ನಿತರೆ ಖರ್ಚು-ವೆಚ್ಚಗಳಿಗೆ ಅನುಕೂಲವಾಗುವಂತೆ 2017-2018ನೇ ಸಾಲಿನ 2ನೇ ತ್ರೈಮಾಸಿಕ ಅವಧಿಯಲ್ಲಿ ಲಭ್ಯವಿರುವ `.8,00,000/- (ರೂಪಾಯಿ ಎಂಟು ಲಕ್ಷಗಳು ಮಾತ್ರ) ಗಳನ್ನು ಲೆಕ್ಕ ಶೀರ್ಷಿಕೆ "2070-00-105-0-02-059 ಇತರ ವಿಚಾರಣಾ ಆಯೋಗ (ಯೋಜನೇತರ)" ಅಡಿಯಲ್ಲಿ ಭರಿಸುವಂತೆ ಸರ್ಕಾರವು ಮಂಜೂರು ಮಾಡಿದೆ.

ಸದರಿ ಆಯೋಗದ ಕಾರ್ಯದರ್ಶಿಯವರಾದ ಶ್ರೀ ಬಿ.ಶಿವಲಿಂಗೇಗೌಡ ಇವರು ಹಣವನ್ನು ಹಿಂತೆಗೆಯುವ ಮತ್ತು ವಿತರಿಸುವ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವರು.

ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 1 ಟಿಎಫ್‌ಪಿ 1996, ದಿನಾಂಕ: 10.07.1996 ರಲ್ಲಿ ಸರ್ಕಾರದ ಪ್ರಧಾನ / ಅಪರ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿರುವ ಅಧಿಕಾರ ಪ್ರತ್ಯಾಯೋಜನೆ ರೀತ್ಯಾ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆರವರ ಆದೇಶ ಸಂಖ್ಯೆ: ಸಿಆಸುಇ 16 ಹೆಸಅ 2017, ದಿನಾಂಕ 24.7.2017ರ ಸಹಮತಿಯನ್ವಯ ಈ ಆದೇಶವನ್ನು ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR.277

ಕೆ. ಪದ್ಮಿನಿದೇವಿ

SC.25

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ, (ಕಾನೂನು ಮತ್ತು ಸುವ್ಯವಸ್ಥೆ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 17 August 2017. Indian Gazettes, https://egazette.servantsofknowledge.in/details/in.gazette.karnataka_new.2017-08-17.Part-1/. Archive identifier in.gazette.karnataka_new.2017-08-17.Part-1.