Servants of Knowledge
Karnataka Gazette · Government of Karnataka

Karnataka Gazette, Part Part-1, 14 September 2017

Published 14 September 2017

Part
Part-1
Identifier
in.gazette.karnataka_new.2017-09-14.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೨

Volume 152

ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೧೪, ೨೦೧೭ (ಭಾದ್ರಪದ ೨೩, ಶಕ ವರ್ಷ ೧೯೩೯)

Bengaluru, Thursday, September 14, 2017 (Bhadrapada 23, Shaka Varsha 1939)

ಸಂಚಿಕೆ ೩೭

Issue 37

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಕಂದಾಯ ಸಚಿವಾಲಯ

ವಿಷಯ : ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕು ಮಾಳನಾಯ್ಕನಹಳ್ಳಿ ಹಾಗೂ ಇತರೆ 42 ಗ್ರಾಮಗಳಿಗೆ ಕಾವೇರಿ ನದಿಯಿಂದ ಕುಡಿಯುವ ನೀರಿನ ಶುದ್ದೀಕರಣ ಘಟಕ ಸ್ಥಾಪಿಸಲು ಸರ್ಕಾರಿ ಜಮೀನು ಮಂಜೂರು ಮಾಡುವ ಬಗ್ಗೆ.

MYS DC/ LND2.HUNS/134/2017 ಓದಲಾಗಿದೆ : ಜಿಲ್ಲಾಧಿಕಾರಿ, ಮೈಸೂರು ಜಿಲ್ಲೆ, ಮೈಸೂರು ರವರ ಪತ್ರ ಸಂ:

ದಿನಾಂಕ 09-05-2017.

ಪ್ರಸ್ತಾವನೆ :

ಮೇಲೆ ಓದಲಾದ ಪತ್ರದಲ್ಲಿ ಜಿಲ್ಲಾಧಿಕಾರಿ, ಮೈಸೂರು ಜಿಲ್ಲೆ, ಮೈಸೂರು ಇವರು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕು ಮಾಳನಾಯ್ಕನಹಳ್ಳಿ ಹಾಗೂ ಇತರೆ 42 ಗ್ರಾಮಗಳಿಗೆ ಕಾವೇರಿ ನದಿಯಿಂದ ಕುಡಿಯುವ ನೀರಿನ ಶುದ್ದೀಕರಣ ಘಟಕ ಸ್ಥಾಪಿಸಲು ಸರ್ಕಾರಿ ಜಮೀನು ಮಂಜೂರು ಮಾಡುವ ಬಗ್ಗೆ ಬೆಟ್ಟಹಳ್ಳಿ ಗ್ರಾಮದ ಸ.ನಂ.46ರ ರಲ್ಲಿರುವ 0.06 ಗುಂಟೆ ಸರ್ಕಾರಿ ಜಮೀನನು ಮತ್ತು ಬಕ್ರೆ ಹಳ್ಳದ ಕಾವಲು ಗ್ರಾಮದ ಸ.ನಂ.72/1ರಲ್ಲಿರುವ ಸರ್ಕಾರಿ ಜಮೀನಿನ ಪೈಕಿ 2.00 ಎಕರೆ ಒಟ್ಟು 2.06 ಎಕರೆ ಜಮೀನನ್ನು ಸದರಿ ಯೋಜನೆಯ ಅನುಷ್ಟಾನಕ್ಕಾಗಿ ಕಾಯ್ದಿರಿಸಲು ಪ್ರಸ್ತಾಪಿಸಲಾಗಿದ್ದು, ತಾಂತ್ರಿಕ ಸಮಸ್ಯೆಗಳಿಂದ ಸದರಿ ಜಾಗದಲ್ಲಿ ಪ್ರಾರಂಭಿಸಲು ಸಾಧ್ಯವಾಗದೇ ಇರುವುದರಿಂದ ಶ್ರೀ ಲಕ್ಷ್ಮಯ್ಯ ಬಿನ್ ರಂಗಯ್ಯ ಮತ್ತು ಶ್ರೀಮತಿ ನಲ್ಲೂರಮ್ಮ ಕೋಂ ಲಕ್ಷ್ಮಯ್ಯ ಇವರ ಹೆಸರಿಗೆ ಮಂಜೂರಾಗಿರುವ ಬಕ್ರೆಹಳ್ಳ ಕಾವಲು ಗ್ರಾಮ ಸ.ನಂ.73 ರಲ್ಲಿನ 2.29 ಎಕರೆ ಪೈಕಿ 1.00 ಎಕರೆ ಜಮೀನಿನಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿರುತ್ತದೆ. ಆದ್ದರಿಂದ 42 ಗ್ರಾಮಗಳಿಗೆ ಕಾವೇರಿ ನದಿಯಿಂದ ಕುಡಿಯುವ ನೀರು ಶುದ್ದೀಕರಣ ಘಟಕ ಸ್ಥಾಪಿಸುವ ಸಲುವಾಗಿ ಬಳಸಿಕೊಂಡಿರುವ ಬಕ್ರೆಹಳ್ಳ ಕಾವಲು ಗ್ರಾಮದ ಸ.ನಂ.73 ರಲ್ಲಿ 2.29ರ ಪೈಕಿ 1.00 ಎಕರೆ ಜಮೀನಿನ ಬದಲಿಯಾಗಿ ಸ.ನಂ.72/1ರಲ್ಲಿನ 1.00 ಎಕರೆ ಸರ್ಕಾರಿ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ನಿಯಮ 28(ಎ) (Grant for Land in Exchange for Land Relinquished) ಮತ್ತು ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಸೆಕ್ಷನ್ 91ರಡಿ ಮಂಜೂರು ಮಾಡಲು ಸರ್ಕಾರದ ಪೂರ್ವಾನುಮೋದನೆಯನ್ನು ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಮೇಲ್ಕಂಡ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ:-

ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 34 ಎಲ್‌ಜಿಎಂ 2017, ದಿನಾಂಕ: 17-08-2017

ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕು ಮಾಳನಾಯ್ಕನಹಳ್ಳಿ ಹಾಗೂ ಇತರೆ 42 ಗ್ರಾಮಗಳಿಗೆ ಕಾವೇರಿ ನದಿಯಿಂದ ಕುಡಿಯುವ ನೀರಿನ ಶುದ್ದೀಕರಣ ಘಟಕ ಸ್ಥಾಪಿಸುವ ಸಲುವಾಗಿ ಉಪಯೋಗಿಸಿಕೊಂಡಿರುವ ಬಕ್ರೆಹಳ್ಳ ಕಾವಲು ಗ್ರಾಮದ ಸ.ನಂ.73 ರಲ್ಲಿ 2.29ರ ಪೈಕಿ 1.00 ಎಕರೆ ಜಮೀನಿನ ಬದಲಿಯಾಗಿ ಶ್ರೀ ಲಕ್ಷ್ಮಯ್ಯ ಬಿನ್ ರಂಗಯ್ಯ ಮತ್ತು ಶ್ರೀಮತಿ ನಲ್ಲೂರಮ್ಮ ಕೋಂ ಲಕ್ಷ್ಮಯ್ಯ ಇವರಿಗೆ ಸ.ನಂ.72/1ರಲ್ಲಿನ 1.00 ಎಕರೆ ಸರ್ಕಾರಿ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ನಿಯಮ 28(ಎ)(Grant for Land in Exchange for Land Relinquished) ಮತ್ತು ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಸೆಕ್ಷನ್ 91ರಡಿ ಮಂಜೂರು ಮಾಡಲು ಸರ್ಕಾರದ ಅನುಮೋದನೆಯನ್ನು ನೀಡಲಾಗಿದೆ.

ಷರತ್ತುಗಳು:-

1. ಜಿಲ್ಲಾಧಿಕಾರಿಗಳು ಬದಲಿ ಜಮೀನು ನೀಡುವುದಕ್ಕೆ ಸಂಬಂಧಿಸಿದ ಷರತ್ತುಗಳನ್ನು ವಿಧಿಸುವುದು.

PR 291

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಉದಯ ಆರ್. ನಾಯಕ್

SC-25

ಪೀಠಾಧಿಕಾರಿ,

ಕಂದಾಯ ಇಲಾಖೆ (ಭೂ.ಮಂ-2)

(೧೧೫೯)೧೧೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೪, ೨೦೧೭ ಭಾಗ ೧

ಕಂದಾಯ ಸಚಿವಾಲಯ

ವಿಷಯ : ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕು ಅಂಪಾರು ಗ್ರಾಮದ ಶ್ರೀ ರಾಮಪಾಣ ಮತ್ತು ಶೀನಪಾಣ ಇವರಿಗೆ ಜಮೀನು ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ : ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ, ಉಡುಪಿ ರವರ ಪತ್ರ ಸಂ:ಎನ್‌ಸಿಆರ್/ಸಿಆರ್/ 142/2009-10. ದಿನಾಂಕ 22-12-2012.

ಪ್ರಸ್ತಾವನೆ:

ಶ್ರೀ ರಾಮಪಾಣ ಮತ್ತು ಶ್ರೀ ಶೀನಪಾಣ ಇವರು ಕುಂದಾಪುರ ತಾಲ್ಲೂಕು ಅಂಪಾರು ಗ್ರಾಮದ ಗುಂಡಿಬೆಟ್ಟು ಎಂಬಲ್ಲಿ ಸ.ನಂ. 15ರಲ್ಲಿ ತಲಾ 2.50 ಎಕರೆ ಅಕ್ರಮ-ಸಕ್ರಮ ಯೋಜನೆ ಅನ್ವಯ ಭೂ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಸದರಿ ಪ್ರಕ್ರಿಯೆ ಪ್ರಾರಂಭವಾಗುವಷ್ಟರಲ್ಲಿ ಅರ್ಜಿದಾರರ ಸ್ವಾಧೀನದಲ್ಲಿದ್ದ ಜಾಗವನ್ನು ಸಬಲರು ಅತಿಕ್ರಮಣ ಮಾಡಿ ನಮೂನೆ 50 & 53 ರಲ್ಲಿ ಜಮೀನನ್ನು ಮಂಜೂರು ಮಾಡಿಸಿಕೊಂಡಿದ್ದರಿಂದ, ಸದರಿ ಸರ್ವೆ ನಂಬರ್‌ನ ಉಳಿಕೆ ಜಮೀನಿನಲ್ಲಿ ತಲಾ 0-45 ಸೆಂಟ್ಸ್‌ರಂತೆ ಜಮೀನು ಮಂಜೂರು ಮಾಡಿರುತ್ತಾರೆ. ತಲಾ 45 ಸೆಂಟ್ಸ್ ಜಮೀನಿನಿಂದ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿರುವುದರಿಂದ ಅರ್ಜಿದಾರರಿಬ್ಬರು ತಮಗೆ ತಲಾ 2-50 ಎಕರೆಯಂತೆ ಒಟ್ಟು 5-00 ಎಕರೆ ಜಮೀನು ಮಂಜೂರು ಮಾಡುವಂತೆ ಕೋರಿ ಕರ್ನಾಟಕ ವಿಧಾನ ಪರಿಷತ್ ಅರ್ಜಿ ಸಮಿತಿಗೆ ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿ ಸಮಿತಿಯು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದ ಮೇಲೆ ಮಂಜೂರು ಮಾಡಲು ದಿನಾಂಕ 24-08-2012 ರಂದು ಶಿಫಾರಸ್ಸು ಮಾಡಿರುತ್ತದೆ.

ಮೇಲ್ಕಂಡ ಹಿನ್ನೆಲೆಯಲ್ಲಿ, ಮೇಲೆ ಓದಲಾದ ಪತ್ರದಲ್ಲಿ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ, ಉಡುಪಿ ರವರು ಪರಿಶೀಲಿಸಿ, ಕುಂದಾಪುರ ತಾಲ್ಲೂಕು ಅಂಪಾರು ಗ್ರಾಮದ ಗುಂಡಿಬೆಟ್ಟು ಎಂಬಲ್ಲಿ ಸ.ನಂ. 18 ರಲ್ಲಿ ಖಾಲಿ ಇರುವ ಸರ್ಕಾರಿ ಜಮೀನಿನಲ್ಲಿ ತಲಾ 2.05 ಎಕರೆ ಜಮೀನನ್ನು ಅರ್ಜಿದಾರರಾದ ಶ್ರೀ ರಾಮಪಾಣ ಮತ್ತು ಶ್ರೀ ಶೀನಪಾಣ ಇವರಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 8 ಮತ್ತು 12(4)ರ ಅಡಿಯಲ್ಲಿ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಯವರು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಅರ್ಜಿದಾರರಾದ ಶ್ರೀ ರಾಮಪಾಣ ಮತ್ತು ಶ್ರೀ ಶೀನಪಾಣ ಇವರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದ ಅಂಪಾರು ಗ್ರಾಮದ ಸ.ನಂ. 15 ರಲ್ಲಿನ 0.45 ಎಕರೆ ಜಮೀನನ್ನು ಈಗಾಗಲೇ ಅಕ್ರಮ-ಸಕ್ರಮ ಸಮಿತಿಯಿಂದ ಮಂಜೂರಾಗಿದ್ದು, ಸದರಿಯವರು ಇನ್ನೂ ಹೆಚ್ಚಿನ 2.05 ಎಕರೆ ಜಮೀನನ್ನು ಮಂಜೂರು ಮಾಡಲು ಕೋರಿದ್ದು, ಅಷ್ಟು ವಿಸ್ತೀರ್ಣದ ಜಮೀನು ಸ.ನಂ. 15ರಲ್ಲಿ ಮಂಜೂರಾತಿಗಾಗಿ ಲಭ್ಯವಿರುವುದಿಲ್ಲ.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅಂಪಾರು ಗ್ರಾಮದ ಸ.ನಂ. 18 ರಲ್ಲಿ ತಲಾ 2.05 ಎಕರೆ ವಿಸ್ತೀರ್ಣದ ಜಮೀನನ್ನು, ಸದರಿ ಅರ್ಜಿದಾರರು ಅನಧಿಕೃತವಾಗಿ ಸಾಗುವಳಿ ಮಾಡದೇ ಇರುವುದರಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಜಿಲ್ಲಾಧಿಕಾರಿಗಳ ಪ್ರಸ್ತಾವನೆಯನ್ನು ಪರಿಗಣಿಸಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳಲ್ಲಿ ಅವಕಾಶವಿಲ್ಲದೇ ಇರುವುದರಿಂದ ಇದೊಂದು ವಿಶೇಷ ಪ್ರಕರಣವೆಂದು ಸಚಿವ ಸಂಪುಟದ ಮುಂದೆ ಪ್ರಸ್ತಾವನೆಯನ್ನು ಮಂಡಿಸಲಾಗಿತ್ತು. ದಿನಾಂಕ 07-08-2017 ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಲು ತೀರ್ಮಾನಿಸಲಾಗಿದೆ. ಆದುದರಿಂದ ಈ ಆದೇಶ:-

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 40 ಎಲ್‌ಜಿಎ 2013, ದಿನಾಂಕ: 17-08-2017.

ಶ್ರೀ ರಾಮಪಾಣ ಮತ್ತು ಶ್ರೀ ಶೀನಪಾಣ ಇವರು ಕುಂದಾಪುರ ತಾಲ್ಲೂಕು ಅಂಪಾರು ಗ್ರಾಮದ ಗುಂಡಿಬೆಟ್ಟು ಎಂಬಲ್ಲಿ ಸ.ನಂ. 18 ರಲ್ಲಿ ತಲಾ 2.05 ಎಕರೆಯಂತೆ ಒಟ್ಟು 4.10 ಎಕರೆ ಸರ್ಕಾರಿ ಜಮೀನನ್ನು ಮಂಜೂರು ಮಾಡಲು ಕೋರಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ಸದರಿ ಪ್ರಸ್ತಾವನೆಯನ್ನು ಸರ್ಕಾರವು ಕೈಬಿಟ್ಟಿದೆ.

PR 292

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಉದಯ ಆರ್. ನಾಯಕ್

SC-50

ಪೀಠಾಧಿಕಾರಿ,

ಕಂದಾಯ ಇಲಾಖೆ (ಭೂ.ಮಂ-2)

ಕಂದಾಯ ಸಚಿವಾಲಯ

ವಿಷಯ: ಮೆ: ಬಾಲಾಜಿ ಹೈಡಲ್ ಪವರ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಇವರಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿದ್ದ ಮೈಸೂರು ಜಿಲ್ಲೆ, ಟಿ.ನರಸೀಪುರ ತಾಲ್ಲೂಕು, ತಲಕಾಡು ಹೋಬಳಿ, ಹೊಳೆಸಾಲು ಗ್ರಾಮದ ಸ.ನಂ. 807 ಮತ್ತು 808ರ ಬಾಜು 3-00 ಎಕರೆ ಪ್ರದೇಶದ ಗುತ್ತಿಗೆಯನ್ನು ರದ್ದುಪಡಿಸುವ ಬಗ್ಗೆ.

ಓದಲಾಗಿದೆ: 1) ಸರ್ಕಾರದ ಆದೇಶ ಸಂಖ್ಯೆ: ಕಂಇ 53 ಎಲ್‌ಜಿಎಂ 2000, ದಿನಾಂಕ 27-06-2000.

2) ಇಂಧನ ಇಲಾಖೆಯ ಆದೇಶ ಸಂಖ್ಯೆ: ಇಎನ್ 163 ಎನ್‌ಸಿಇ 201, ದಿನಾಂಕ 19-06-2010. 3) ಕಾರಣ ಕೇಳುವ ನೋಟೀಸು ಸಂಖ್ಯೆ: ಆರ್‌ಡಿ 113 ಎಲ್‌ಜಿಎಂ 2014. ದಿನಾಂಕ 22-06-2017.

ಪ್ರಸ್ತಾವನೆ :

ಮೇಲೆ ಓದಲಾದ (1)ರ ಆದೇಶದಲ್ಲಿ ಮೈಸೂರು ಜಿಲ್ಲೆ, ಟಿ.ನರಸೀಪುರ ತಾಲ್ಲೂಕು, ಹೊಳೆಸಾಲು ಗ್ರಾಮದ ಸ.ನಂ. 807 ಮತ್ತು 808ರ ಬಾಜು 3-00 ಎಕರೆ ಕಾವೇರಿ ನದಿ ಪಾತ್ರದ ಪ್ರದೇಶವನ್ನು ಮೆ: ಬಾಲಾಜಿ ಪವರ್ ಕಾರ್ಪೊರೇಷನ್ ಬೆಂಗಳೂರು ಇವರಿಗೆ ವಿದ್ಯುತ್ ಸ್ಥಾವರ ಸ್ಥಾಪಿಸಲು 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿತ್ತು. ಆದರೆ ಮೆ: ಬಾಲಾಜಿ ಹೈಡಲ್ ಪವರ್ ಪ್ರೈ. ಇವರು ಸರ್ಕಾರದ ಆದೇಶದಲ್ಲಿನ ಷರತ್ತುಗಳನ್ವಯ ಯೋಜನೆ ಅನುಷ್ಠಾನದ ನಿಟ್ಟಿನಲ್ಲಿ ಯಾವುದೇ ಪ್ರಗತಿ ಸಾಧಿಸದೇ ಇರುವುದರಿಂದ ಹಾಗೂ ಕಾಲಾವಕಾಶವನ್ನು ವಿಸ್ತರಣೆ ಮಾಡಿಕೊಳ್ಳದೇ ಇರುವುದರಿಂದ ಇಂಧನ ಇಲಾಖೆಯು ಮೇಲೆ ಓದಲಾದ (2)ರ ಆದೇಶದಲ್ಲಿ ಸದರಿ ಸಂಸ್ಥೆಗೆ ನೀಡಿರುವ ಯೋಜನೆಯ ಹಂಚಿಕೆ ಆದೇಶವನ್ನು ರದ್ದುಪಡಿಸಿರುತ್ತದೆ. ಆದ್ದರಿಂದ ಸದರಿ ಯೋಜನೆಗೆ ಕಂದಾಯ ಇಲಾಖೆಯಿಂದ ಗುತ್ತಿಗೆ ಆಧಾರದ ಮೇಲೆ ಯೋಜನೆಯನ್ನು ಅನುಷ್ಠಾನಗೊಳಿಸಲು ಮಂಜೂರು ಮಾಡಿದ ಜಮೀನನ್ನು ರದ್ದುಪಡಿಸುವ ಮೊದಲು ಈ ಬಗ್ಗೆ ಏನಾದರು ಹೇಳಿಕೆಯಿದ್ದಲ್ಲಿ 15 ದಿನಗಳೊಳಗಾಗಿ ಹೇಳಿಕೆ ಸಲ್ಲಿಸುವಂತೆ ಸೂಚಿಸಿ ಮೇಲೆ ಓದಲಾದ (3)ರ ಕಾರಣ ಕೇಳುವ ನೋಟೀಸನ್ನು ಜಾರಿ ಮಾಡಲಾಗಿತ್ತು. ಆದರೆ ಸದರಿ ನೋಟೀಸಿಗೆ ನಿಗದಿತ ಅವಧಿಯಲ್ಲಿ ಮೆ: ಬಾಲಾಜಿ ಹೈಡಲ್ ಪವರ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಇವರಿಂದ ಯಾವುದೇ ಹೇಳಿಕೆ ಸ್ವೀಕೃತವಾಗಿರುವುದಿಲ್ಲ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೪, ೨೦೧೭ ೧೧೬೧

ಮೇಲ್ಕಂಡ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ:-

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 113 ಎಲ್‌ಜಿಎಂ 2014, ದಿನಾಂಕ : 17.08.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ: ಕಂಇ 53 ಎಲ್‌ಜಿಎಂ 2000, ದಿನಾಂಕ 27-06-2000 ರಲ್ಲಿ ಮೈಸೂರು ಜಿಲ್ಲೆ, ಟಿ.ನರಸೀಪುರ ತಾಲ್ಲೂಕು, ಹೊಳೆಸಾಲು ಗ್ರಾಮದ ಸ.ನಂ. 807 ಮತ್ತು 808ರ ಬಾಜು 3-00 ಎಕರೆ ಕಾವೇರಿ ನದಿ ಪಾತ್ರದ ಪ್ರದೇಶವನ್ನು ಮೆ: ಬಾಲಾಜಿ ಹೈಡಲ್ ಪವರ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಇವರಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿರುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಿದೆ.

PR 293

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಉದಯ ಆರ್. ನಾಯಕ್

SC-25

ಪೀಠಾಧಿಕಾರಿ,

ಕಂದಾಯ ಇಲಾಖೆ (ಭೂ.ಮಂ-2)

ಕಂದಾಯ ಸಚಿವಾಲಯ

ವಿಷಯ : ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಪೀಲು ಸಂಖ್ಯೆ : 2685&2686/2010ರ ದಿನಾಂಕ: 03-09-2015ರ ಆದೇಶದ ರೀತ್ಯಾ ಚಿಕ್ಕಮಗಳೂರು ಜಿಲ್ಲೆ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾ, ಐ.ಡಿ (ಇನಾಂ ದತ್ತಾತ್ರೇಯ) ಪೀಠ ಇದಕ್ಕೆ ಸಂಬಂಧಿಸಿದಂತೆ ಧಾರ್ಮಿಕ ದತ್ತಿ ಆಯುಕ್ತರು ಸಲ್ಲಿಸಿರುವ ದಿನಾಂಕ:10.03.2010ರ ವರದಿಯ ಬಗ್ಗೆ ಸರ್ಕಾರವು ತೀರ್ಮಾನ ಕೈಗೊಳ್ಳುವ ಸಂಬಂಧ ಸಮಿತಿ ರಚಿಸುವ ಕುರಿತು.

ಪ್ರಸ್ತಾವನೆ :

ಧಾರ್ಮಿಕ ದತ್ತಿ ಆಯುಕ್ತರು ದಿನಾಂಕ:25.02.1989ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾದ ರಿಟ್ ಅರ್ಜಿ ಸಂಖ್ಯೆ:43621/2003 ಹಾಗೂ ರಿಟ್ ಅರ್ಜಿ ಸಂಖ್ಯೆ:38148/2000, 4262/2002 ಈ ಎಲ್ಲಾ ಪ್ರಕರಣಗಳನ್ನು ಒಟ್ಟುಗೂಡಿಸಿ ದಿನಾಂಕ:14.02.2007 ರಂದು ಮಾನ್ಯ ಉಚ್ಚ ನ್ಯಾಯಾಲಯವು ಸಂಬಂಧಪಟ್ಟ ಎಲ್ಲರಿಗೂ ಕಾಲವಕಾಶ ನೀಡಿ, ನಂತರ ಹೊಸದಾಗಿ ಆದೇಶ ಹೊರಡಿಸುವಂತೆ ನಿರ್ದೇಶನ ನೀಡಿರುತ್ತದೆ. ಮಾನ್ಯ ನ್ಯಾಯಾಲಯದ ದಿನಾಂಕ:14.02.2007ರ ನಿರ್ದೇಶನದ ವಿರುದ್ಧ ಸರ್ಕಾರವು ರಿಟ್ ಅಪೀಲು ಸಂಖ್ಯೆ:886/2007ನ್ನು ಹಾಗೂ ಇದೇ ನಿರ್ದೇಶನವನ್ನು ಶ್ರೀ ಗೌಸ್ ಮೊಹದ್ದೀನ್ ಶಾಖಾದ್ರಿ ಇವರು ರಿಟ್ ಅಪೀಲು ಸಂಖ್ಯೆ:2302/2007ನ್ನು ದಾಖಲಿಸಿದ್ದು, ಮಾನ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ದಿನಾಂಕ:04.08.2008 ಹಾಗೂ 05.11.2008ರ ತೀರ್ಪಿನಲ್ಲಿ ದಿನಾಂಕ:14.02.2007ರ ತೀರ್ಪನ್ನು ಎತ್ತಿ ಹಿಡಿದಿರುತ್ತದೆ. ಮಾನ್ಯ ಉಚ್ಚ ನ್ಯಾಯಾಲಯದ ರಿಟ್ ಅಪೀಲಿನಲ್ಲಿ ಆಗಿರುವ ದಿನಾಂಕ:04.08.2008ರ ಆದೇಶದ ವಿರುದ್ಧ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಎಸ್.ಎಲ್.ಪಿ ಸಂಖ್ಯೆ:27944/2008ರಲ್ಲಿ ಪ್ರಶ್ನಿಸಲಾಗಿರುತ್ತದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯವು ವಿಚಾರಣಾ ನೋಟೀಸ್‌ನ್ನು ಜಾರಿ ಮಾಡಿ, ಮಾನ್ಯ ಉಚ್ಚ ನ್ಯಾಯಾಲಯದ ತೀರ್ಪಿನನ್ವಯ ಧಾರ್ಮಿಕ ದತ್ತಿ ಆಯುಕ್ತರು ವಿಚಾರಣೆ ನಡೆಸಿ ವಿಚಾರಣಾ ವರದಿಯನ್ನು ಜಾರಿಗೆ ತರದೆ ನೇರವಾಗಿ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲು ನಿರ್ದೇಶನ ನೀಡಿರುತ್ತದೆ. ಅದರಂತೆ ಧಾರ್ಮಿಕ ದತ್ತಿ ಆಯುಕ್ತರು ವಿಚಾರಣಾ ವರದಿಯನ್ನು ದಿನಾಂಕ:10.03.2010ರಂದು ಮುಚ್ಚಿದ ಲಕೋಟೆಯಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.

ನಂತರದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ:2685 & 2686/2010ಗಳನ್ನು ಇತ್ಯರ್ಥಪಡಿಸಿ, ವಿಚಾರಣಾ ವರದಿಯ ಮೇಲೆ ಸಂಬಂಧಪಟ್ಟವರೆಲ್ಲರ ವಿಚಾರಣೆ ನಡೆಸಿ, ತೀರ್ಮಾನ ತೆಗೆದುಕೊಳ್ಳಲು ದಿನಾಂಕ:03.09.2015ರಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿರುತ್ತದೆ. ಸರ್ಕಾರವು ತೆಗೆದುಕೊಳ್ಳುವ ತೀರ್ಮಾನದಿಂದ ಬಾಧಿತರಾದವರು ಕಾನೂನಾತ್ಮಕ ಪರಿಹಾರವನ್ನು ಪಡೆದುಕೊಳ್ಳಬಹುದೆಂದು ಸ್ಪಷ್ಟಪಡಿಸಿದೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ದಿನಾಂಕ:03.09.2015ರನ್ವಯ ವಿಷಯವನ್ನು ರಾಜ್ಯ ಸಚಿವ ಸಂಪುಟದ ಮುಂದೆ ದಿನಾಂಕ:19.04.2017ರಂದು ಮಂಡಿಸಲಾಗಿ, ಸಚಿವ ಸಂಪುಟವು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವರ ಅಧ್ಯಕ್ಷತೆಯಲ್ಲಿ ಐದು ಜನ ಸಚಿವರನ್ನೊಳಗೊಂಡ ಸಚಿವ ಸಂಪುಟದ ಉಪ ಸಮಿತಿಯನ್ನು ದಿನಾಂಕ:24.04.2017ರಂದು ರಚಿಸಲಾಗಿ, ಈ ಉಪ ಸಮಿತಿಯು ದಿನಾಂಕ:10.05.2017 ಮತ್ತು 25.05.2017ಗಳಂದು ಸದರಿ ವಿಷಯದ ಬಗ್ಗೆ ಕೂಲಂಕಷವಾಗಿ ಚರ್ಚಿಸಿ, ಮಾನ್ಯ ಸರ್ವೋಚ್ಚ ನ್ಯಾಯಾಲಯದ ಅಥವಾ ಮಾನ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯ ಮೂರ್ತಿಗಳನ್ನೊಳಗೊಂಡ ಏಕ ಸದಸ್ಯ ಸಮಿತಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಮೂರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸುವುದು ಸೂಕ್ತವೆಂದು ಮನಗೊಂಡು ಸಚಿವ ಸಂಪುಟದ ಮುಂದೆ ತೀರ್ಮಾನ ಕೈಗೊಳ್ಳಲು ಪ್ರಸ್ತಾವನೆ ಮಂಡಿಸಲಾಗಿತ್ತು. ದಿನಾಂಕ:30.05.2017ರಂದು ಸಚಿವ ಸಂಪುಟವು ಮೂರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲು ತೀರ್ಮಾನಿಸಿರುತ್ತದೆೆ.

ಅದರಂತೆ ಸರ್ಕಾರವು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ:ಕಂಇ 14 ಮುದಾಪ್ರ 2009, ಬೆಂಗಳೂರು; ದಿನಾಂಕ: 11ನೇ ಆಗಸ್ಟ್, 2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರದ ಸಮ ಸಂಖ್ಯೆ ಆದೇಶ ದಿನಾಂಕ: 13.07.2017 ರಂದು ಹೊರಡಿಸಿರುವ ಆದೇಶವನ್ನು ಹಿಂಪಡೆದು, ಸದರಿ ಆದೇಶದಲ್ಲಿನ ಅಂಶಗಳನ್ನು ಕ್ರೋಡೀಕರಿಸಿ, ಕೆಲವು ಮಾರ್ಪಾಡಿನೊಂದಿಗೆ ಈ ಕೆಳಕಂಡಂತೆ ಪರಿಷ್ಕøತ ಆದೇಶ ಹೊರಡಿಸಿದೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯವು ರಿಟ್ ಅಪೀಲು ಸಂಖ್ಯೆ:2685&2686/2010 ದಿನಾಂಕ:03.09.2015ರಲ್ಲಿ ನೀಡಿರುವ ನಿರ್ದೇಶನದಂತೆ, ಧಾರ್ಮಿಕ ದತ್ತಿ ಆಯುಕ್ತರು ದಿನಾಂಕ:10.03.2010ರಂದು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ವಿಚಾರಣಾ ವರದಿಯ ಮೇಲೆ ಸಚಿವ ಸಂಪುಟದ ದಿನಾಂಕ:30.05.2017ರ ನಿರ್ಣಯದಂತೆ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ವಿಷಯದ ಸಂಬಂಧ ವಿವರವಾದ ವಿಚಾರಣೆಯನ್ನು ನಡೆಸಲು ಸರ್ಕಾರವು ಈ ಕೆಳಕಂಡ ಮೂರು ಸದ್ಯರುಗಳನ್ನೊಳಗೊಂಡ ಉನ್ನತ ಮಟ್ಟಡದ ಸಮಿತಿಯನ್ನು ರಚಿಸಿರುತ್ತದೆೆ.

೧೧೬೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೪, ೨೦೧೭ ಭಾಗ ೧
1. ಜಸ್ಟೀಸ್ ಹೆಚ್.ಎನ್. ನಾಗಮೋಹನ್‌ದಾಸ್ ವ iಾನ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ನ ಂ.687, 7ನೇ ಮುಖ್ಯ ರಸ್ತೆ, 3ನೇ ಹಂತ, ಜೆ.ಪಿ.ನಗರ, ಬ ಂಗಳೂರು - 560076 ೆ ಅಧ್ಯಕ್ಷರು
2. ಪ ೂ್ರ: ಎಸ್. ಶೆಟ್ಟರ್, ೆ ಪ್ಲಾಟ್ ನಂ.ಎ201, 2ನೇ ಮಹಡಿ, ಹೊಯ್ಸಳ ಶ್ರೀಕೃಷ್ಣ, 60 ಅಡಿ ರಸ್ತೆ, ಭೂಪಸಂದ್ರ, ಆರ್ಎಂವಿ ಬಡಾವಣೆ-2, ಬ ಂಗಳೂರು - 560094 ೆ ಸದಸ್ಯರು
3. ಶಿ ೕ ರಹಮತ್ ತರೀಕೆರೆ ್ರ 'ಸುಫಿ' ಎಂ.ಪಿ. ಪ್ರಕಾಶ್ ನಗರ, ಹೊಸಪೇಟೆ, ಬಳ್ಳಾರಿ ಜಿಲ್ಲೆ - 583201 ಸದಸ್ಯರು

ಈ ಉನ್ನತ ಮಟ್ಟದ ಸಮಿತಿಯು ಕೂಲಂಕಷವಾಗಿ ಪರಿಶೀಲಿಸಿ, ವಿಚಾರಣೆ ನಡೆಸಬೇಕಾದ ಅಂಶಗಳು [The terms of reference]:-

(1) ಧಾರ್ಮಿಕ ದತ್ತಿ ಆಯುಕ್ತರು ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ದಿನಾಂಕ:10.03.2010ರ ವಿಚಾರಣಾ ವರದಿಯಲ್ಲಿನ ಶಿಫಾರಸ್ಸುಗಳ ಬಗ್ಗೆ ಪರಿಶೀಲಿಸುವುದು.

(2) ಮಾನ್ಯ ಸರ್ವೋಚ್ಚ ನ್ಯಾಯಾಲಯದ ದಿನಾಂಕ:03.09.2015ರ ಅಂತಿಮ ಆದೇಶದ ಹಿನ್ನೆಲೆಯಲ್ಲಿ ಆಸಕ್ತ ಪಕ್ಷಕಾರರು ಹಾಗೂ ಸಾರ್ವಜನಿಕರು ಸರ್ಕಾರಕ್ಕೆ ಸಲ್ಲಿಸಿರುವ ಅಹವಾಲು/ ಆಕ್ಷೇಪಣೆಗಳನ್ನು ಪರಿಶೀಲಿಸುವುದು.

(3) ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಧಾರ್ಮಿಕ ದತ್ತಿ ಆಯುಕ್ತರ ವಿಚಾರಣಾ ವರದಿಗೆ ಉಭಯ ಪಕ್ಷಕಾರರು ಸಲ್ಲಿಸುವ ಆಕ್ಷೇಪಣೆಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು.

(4) ಈ ವಿಷಯದ ಬಗ್ಗೆ ಆಸಕ್ತ ಪಕ್ಷಕಾರರು ಮತ್ತು ಆಕ್ಷೇಪಣಾಕಾರರೆಲ್ಲರಿಗೂ ನೋಟೀಸ್ ನೀಡಿ, ವಿಚಾರಣೆ ನಡೆಸಿ, ವರದಿಯನ್ನು ಸಲ್ಲಿಸುವುದು.

ಮೇಲ್ಕಂಡ ಉನ್ನತ ಮಟ್ಟದ ಸಮಿತಿಯು ಈ ಎಲ್ಲಾ ವಿಷಯಗಳನ್ನೊಳಗೊಂಡ ವಿಚಾರಣಾ ವರದಿಯನ್ನು ಮೊದಲ ವಿಚಾರಣಾ ದಿನಾಂಕದಿಂದ ಮೂರು ತಿಂಗಳೊಳಗಾಗಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸತಕ್ಕದ್ದು. ಸಮಿತಿಯ ಕೇಂದ್ರ ಕಛೇರಿಯು ಬೆಂಗಳೂರಿನಲ್ಲಿರತಕ್ಕದ್ದು.

ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರನ್ನು ಸಮನ್ವಯ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ವಿಚಾರಣೆಯ ಸಮಯದಲ್ಲಿ ಸಮಿತಿಗೆ ಅಗತ್ಯ ಸಿಬ್ಬಂದಿಗಳ ಜೊತೆಗೆ ಸ್ಥಳಾವಕಾಶವನ್ನು ಒದಗಿಸಿ ಅವಶ್ಯವಿರುವ ಎಲ್ಲಾ ಮಾಹಿತಿ/ ದಾಖಲೆಗಳನ್ನು ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಬೆಂಗಳೂರು ಇವರು ಒದಗಿಸುವಂತೆ ಆದೇಶ ಹೊರಡಿಸಲಾಗಿದೆ.

PR 295

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಎಸ್. ನಾಗರತ್ನಮ್ಮ

SC-25

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಮುಜರಾಯಿ)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ವಿಷಯ: ಶ್ರೀಮತಿ ರೂಪಕಲಾ ಟಿ.ಕೆ, ಕೆ.ಎ.ಎಸ್ (ಕಿ.ಶ್ರೇ) ಅಧಿಕಾರಿ ಇವರನ್ನು ಸೇವೆಯಿಂದ ತೆಗೆದುಹಾಕುವ ಬಗ್ಗೆ. ಓದಲಾಗಿದೆ: (1) ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯ ಕಡತ ಸಂಖ್ಯೆ: ಐಟಿಡಿ 85 ಎಡಿಎಂ 2013.

(2) ಅಧಿಸೂಚನೆ ಸಂಖ್ಯೆ: ಸಿಆಸುಇ 33 ಕೆಆಹೊ 2013, ದಿನಾಂಕ:14-6-2013. (3) ಪತ್ರ ಸಂಖ್ಯೆ: ಸಿಆಸುಇ 33 ಕೆಆಹೊ 2013, ದಿನಾಂಕ:14-6-2013. (4) ಶ್ರೀಮತಿ ರೂಪಕಲಾ ಟಿ.ಕೆ ಕೆ.ಎ.ಎಸ್ (ಕಿ.ಶ್ರೇ) ಅಧಿಕಾರಿ ಇವರ ದಿನಾಂಕ: 19-8-2013ರ ಮನವಿ.

(5) ಅಧಿಸೂಚನೆ ಸಂಖ್ಯೆ: ಸಿಆಸುಇ 33 ಕೆಆಹೊ 2013, ದಿನಾಂಕ:27-1-2014. (6) ಪತ್ರ ಸಂಖ್ಯೆ:ಸಿಆಸುಇ 33 ಕೆಆಹೊ 2013, ದಿನಾಂಕ:27-1-2014.

(7) ಶ್ರೀಮತಿ ರೂಪಕಲಾ ಟಿ.ಕೆ, ಕೆ.ಎ.ಎಸ್ (ಕಿ.ಶ್ರೇ) ಅಧಿಕಾರಿ ಇವರ ದಿನಾಂಕ: 5-6-2014 ರ ಮನವಿ.

(8) ನೋಟೀಸ್ ಸಂಖ್ಯೆ:ಸಿಆಸುಇ 33 ಕೆಆಹೊ 2013, ದಿನಾಂಕ:26-7-2014. (9) ಪತ್ರ ಸಂಖ್ಯೆ:ಸಿಆಸುಇ 74 ಕೆಇವಿ 2014, ದಿನಾಂಕ:11-08-2014.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೪, ೨೦೧೭ ೧೧೬೩

(10) ಶ್ರೀಮತಿ ರೂಪಕಲಾ ಟಿ.ಕೆ, ಕೆ.ಎ.ಎಸ್ (ಕಿ.ಶ್ರೇ) ಅಧಿಕಾರಿ ಇವರ ದಿನಾಂಕ: 16-08-2014 ರ ಲಿಖಿತ ಹೇಳಿಕೆ .

(11) ಪತ್ರ ಸಂಖ್ಯೆ:ಸಿಆಸುಇ 33 ಕೆಆಹೊ 2013, ದಿನಾಂಕ:29-10-2014 (12) ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರ ಪತ್ರ ಸಂಖ್ಯೆ:ಸಿಬ್ಬಂದಿ (1)ಸಿಆರ್ / 134 / 2014- 15, ದಿನಾಂಕ: 12-02-2015.

(13) ಕಾರಣ ಕೇಳುವ ನೋಟೀಸ್ ಸಂಖ್ಯೆ: ಸಿಆಸುಇ 33 ಕೆಆಹೊ 2013, ದಿನಾಂಕ:09-04-2015. (14) ಪತ್ರ ಸಂಖ್ಯೆ:ಸಿಆಸುಇ 33 ಕೆಆಹೊ 2013, ದಿನಾಂಕ:14-5-2015.

(15) ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರ ಪತ್ರ ಸಂಖ್ಯೆ:ಸಿಬ್ಬಂದಿ (1) ಸಿಆರ್/134/2014-15, ದಿನಾಂಕ:10-07-2015.

(16) ಆದೇಶ ಸಂಖ್ಯೆ: ಸಿಆಸುಇ 33 ಕೆಆಹೊ 2013, ದಿನಾಂಕ:14-9-2015. (17) ವಿಚಾರಣಾಧಿಕಾರಿಗಳ ದಿನಾಂಕ:20-6-2016ರ ವಿಚಾರಣಾ ವರದಿ (18) 2ನೇ ಕಾರಣ ಕೇಳುವ ನೋಟೀಸ್ ಸಂಖ್ಯೆ: ಸಿಆಸುಇ 33 ಕೆಆಹೊ 2013,

ದಿನಾಂಕ:22-07-2016.

(19) ಪತ್ರ ಸಂಖ್ಯೆ:ಸಿಆಸುಇ 33 ಕೆಆಹೊ 2013, ದಿನಾಂಕ:18-10-2016. (20) ತಹಸೀಲ್ದಾರ್, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ಇವರ ಪತ್ರ ಸಂಖ್ಯೆ: ಸಿಬ್ಬಂದಿ (1) ಸಿಆರ್ 36 / 2014-15, ದಿನಾಂಕ:10-01-2017.

(21) ಅಂತಿಮ ಕಾರಣ ಕೇಳುವ ನೋಟೀಸ್ ಸಂಖ್ಯೆ:ಸಿಆಸುಇ 33 ಕೆಆಹೊ 2013,

ದಿನಾಂಕ:10-05-2017.

ಪ್ರಸ್ತಾವನೆ : ಮೇಲೆ ಕ್ರಮ ಸಂಖ್ಯೆ (1)ರಲ್ಲಿ ಓದಲಾದ ಕಡತದಲ್ಲಿ ಶ್ರೀಮತಿ ರೂಪಕಲಾ ಟಿ.ಕೆ, ಕೆ.ಎ.ಎಸ್ (ಕಿರಿಯ ಶ್ರೇಣಿ) ಅಧಿಕಾರಿ ಇವರು ಆಡಳಿತಾಧಿಕಾರಿಯಾಗಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನಿರ್ದೇಶನಾಲಯ, ಬೆಂಗಳೂರು ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದಿನಾಂಕ:17-06-2013 ರಿಂದ 04-09-2013ರ ವರೆಗೆ ಖಾಸಗಿಯಾಗಿ ಅಮೇರಿಕಾ ದೇಶಕ್ಕೆ ವಿದೇಶ ಪ್ರವಾಸ ಕೈಗೊಳ್ಳಲು ಅನುಮತಿ ನೀಡಲು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯು ಶಿಫಾರಸ್ಸಿನೊಂದಿಗೆ ಕಡತವನ್ನು ಈ ಇಲಾಖೆಗೆ ಕಳುಹಿಸಲಾಗಿತ್ತು. ಪ್ರಸ್ತಾವನೆಯನ್ನು ಪರಿಶೀಲಿಸಿ ಶ್ರೀಮತಿ ರೂಪಕಲಾ ಟಿ.ಕೆ, ಕೆ.ಎ.ಎಸ್ (ಕಿ.ಶ್ರೇ) ಅಧಿಕಾರಿ, ಆಡಳಿತಾಧಿಕಾರಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನಿರ್ದೇಶನಾಲಯ, ಬೆಂಗಳೂರು ಇವರಿಗೆ ದಿನಾಂಕ:17-6-2013 ರಿಂದ 4-9-2013ರ ವರೆಗೆ ಖಾಸಗಿಯಾಗಿ ಅಮೇರಿಕಾ ದೇಶಕ್ಕೆ ವಿದೇಶ ಪ್ರವಾಸ ಕೈಗೊಳ್ಳಲು ಕೆಲವೊಂದು ಷರತ್ತುಗಳೊಂದಿಗೆ ಹಾಗೂ ಈ ಅವಧಿಗೆ 30 ದಿನ ಗಳಿಕೆ ಹಾಗೂ 50 ದಿನ ಅರ್ಧವೇತನ ರಜೆಯನ್ನು ಮೇಲೆ ಕ್ರಮ ಸಂಖ್ಯೆ (2) ಮತ್ತು (3)ರಲ್ಲಿ ಓದಲಾದ ಪತ್ರ ಹಾಗೂ ಅಧಿಸೂಚನೆಯಲ್ಲಿ ಮಂಜೂರು ಮಾಡಲಾಗಿತ್ತು.

ಅಧಿಕಾರಿಯು ವಿದೇಶ ಪ್ರವಾಸ ಮುಕ್ತಾಯಗೊಂಡ ನಂತರ ವಿದೇಶದಿಂದ ಹಿಂದಿರುಗಿ ದಿನಾಂಕ:5-9-2013 ರಂದು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕಾಗಿತ್ತು. ಆದರೆ, ಮೇಲೆ ಕ್ರಮ ಸಂಖ್ಯೆ (4)ರಲ್ಲಿ ಓದಲಾದ ಮನವಿಯಲ್ಲಿ ಅಧಿಕಾರಿಯು ತಮ್ಮ ಮಗಳ ಅನಾರೋಗ್ಯದ ನಿಮಿತ್ತ ಅಮೇರಿಕಾದಲ್ಲಿಯೇ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾಗಿರುವುದರಿಂದ ದಿನಾಂಕ:5-9-2013 ರಿಂದ 15-06-2014 ವರೆಗೆ ಅಮೇರಿಕಾ ದೇಶದಲ್ಲಿಯೇ ಉಳಿದುಕೊಳ್ಳಲು ಅನುಮತಿ ಹಾಗೂ ಈ ಅವಧಿಗೆ ಅಸಾಧಾರಣ ರಜೆ ಮಂಜೂರು ಮಾಡುವಂತೆ ಕೋರಿರುತ್ತಾರೆ.

ಅಧಿಕಾರಿಯ ಮನವಿಯನ್ನು ಪರಿಗಣಿಸಿ, ಅಧಿಕಾರಿಯು ಮಗಳಿಗೆ ಅಮೇರಿಕಾದಲ್ಲಿಯೇ ವೈದ್ಯಕೀಯ ಚಿಕಿತ್ಸೆ ಕೊಡಿಸಿರುವ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸುವ ಷರತ್ತಿಗೊಳಪಟ್ಟು ದಿನಾಂಕ:05-09-2013 ರಿಂದ 15-06-2014ರ ವರೆಗೆ ಅಸಾಧಾರಣಾ ರಜೆಯನ್ನು ಮಂಜೂರಾತಿ ನೀಡಿ ಮೇಲೆ ಕ್ರಮ ಸಂಖ್ಯೆ (3)ರಲ್ಲಿ ಓದಲಾದ ಪತ್ರದಲ್ಲಿ ವಿಧಿಸಿದ್ದ ಷರತ್ತುಗಳಿಗೊಳಪಡಿಸಿ ಮೇಲೆ ಕ್ರಮ ಸಂಖ್ಯೆ (6)ರಲ್ಲಿ ಓದಲಾದ ಪತ್ರದಲ್ಲಿ ಅಮೇರಿಕಾ ದೇಶದಲ್ಲಿಯೇ ಉಳಿದುಕೊಳ್ಳಲು ಅನುಮತಿ ನೀಡಲಾಗಿತ್ತು.

ತದನಂತರ ಅಧಿಕಾರಿಯು ರಜೆ ಅವಧಿ ಮುಗಿದ ನಂತರ ವಿದೇಶದಿಂದ ಹಿಂದಿರುಗಿ ದಿನಾಂಕ:16-06-2014 ರಂದು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕಾಗಿತ್ತು. ಆದರೆ ಅಧಿಕಾರಿಯು ಮತ್ತೆ ಅಮೇರಿಕಾ ದೇಶದಲ್ಲಿದ್ದುಕೊಂಡೇ ಮೇಲೆ ಕ್ರಮ ಸಂಖ್ಯೆ (7)ರಲ್ಲಿ ಓದಲಾದ ಪತ್ರದಲ್ಲಿ ಸರ್ಕಾರಕ್ಕೆ ಮತ್ತೊಂದು ಮನವಿಯನ್ನು ಸಲ್ಲಿಸಿ, ಅಮೇರಿಕಾದಲ್ಲಿಯೇ ಉನ್ನತ ವ್ಯಾಸಂಗ ಮಾಡಲು ಅನುಮತಿ ಕೋರಿ, ಈ ವ್ಯಾಸಂಗಕ್ಕಾಗಿ ದಿನಾಂಕ:16-06-2014 ರಿಂದ 30-06-2016ರ ವರೆಗೆ 2 ವರ್ಷದ ಶೈಕ್ಷಣಿಕ ರಜೆಯನ್ನು ಮಂಜೂರು ಮಾಡುವಂತೆ ಕೋರಿರುತ್ತಾರೆ.

ಅಧಿಕಾರಿಯ ಈ ಕ್ರಮವು ದಿನಾಂಕ:14-06-2013 ಮತ್ತು ದಿನಾಂಕ:27-01-2014ರ ಪತ್ರಗಳಲ್ಲಿ ವಿಧಿಸಿದ್ದ ಷರತ್ತುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು ಹಾಗೂ ನಿಯಮಬಾಹಿರ ಕ್ರಮವಾದ್ದರಿಂದ ಮನವಿಯನ್ನು ತಿರಸ್ಕರಿಸಿ, ಸರ್ಕಾರವು ವಿಧಿಸಿದ್ದ ಷರತ್ತಿನನ್ವಯ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಹಾಗೂ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ನ್ನು ಉಲ್ಲಂಘಿಸಿದ್ದಕ್ಕಾಗಿ ಏಕೆ ಶಿಸ್ತು ಕ್ರಮವನ್ನು ಜರುಗಿಸಬಾರದು ಎಂಬ ಬಗ್ಗೆ ಆಡಳಿತಾತ್ಮಕ ನೋಟೀಸನ್ನು ಅಧಿಕಾರಿಯು ನೀಡಿದ್ದ ಬೆಂಗಳೂರಿನ ಹಾಗೂ ಅಮೇರಿಕಾದಲ್ಲಿನ ವಿಳಾಸಗಳಿಗೆ ನೊಂದಾಯಿತ ಅಂಚೆ ಮೂಲಕ ಜಾರಿ ಮಾಡಲಾಗಿತ್ತು. ಆದರೆ, ಈ ನೋಟೀಸ್ ಸ್ವೀಕೃತವಾಗದೆ ವಾಪಸ್ಸು ಬಂದಿರುತ್ತದೆ.

ಇದಲ್ಲದೆ, ಸದರಿ ಅಧಿಕಾರಿಗೆ ಸಂಬಂಧಿಸಿದ ಲೋಕಾಯುಕ್ತದಲ್ಲಿ ಬಾಕಿಯಿದ್ದ ಇಲಾಖಾ ವಿಚಾರಣೆ ಪ್ರಕರಣದಲ್ಲಿ "ನಂ.ಡಿ311, ರಾಜರಾಜೇಶ್ವರಿ ನಿವಾಸ, HTMT ಹಿಂಭಾಗ, ಬೊಮ್ಮನಹಳ್ಳಿ, ಬೆಂಗಳೂರು-560068" ವಿಳಾಸಕ್ಕೆ ಮೇಲೆ ಓದಲಾದ ಕ್ರಮ ಸಂಖ್ಯೆ (9)ರ ಸರ್ಕಾರದ ಪತ್ರವನ್ನು ಜಾರಿಗೊಳಿಸಿದ್ದು ಸದರಿ ಪತ್ರಕ್ಕೆ ಅಧಿಕಾರಿಯು ಬೆಂಗಳೂರಿನ ಈ ವಿಳಾಸದಿಂದಲೇ ಮೇಲೆ ಕ್ರಮ ಸಂಖ್ಯೆ (10)ರಲ್ಲಿ ಓದಲಾದ ಮನವಿಯಲ್ಲಿ ತಮ್ಮ ಲಿಖಿತ ಹೇಳಿಕೆಯನ್ನು ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಸದರಿಯವರು ಸ್ವೀಕರಿಸದೇ ಹಿಂದಿರುಗಿ ಬಂದಿದ್ದ ಮೇಲೆ ಕ್ರಮ ಸಂಖ್ಯೆ (8)ರಲ್ಲಿ ಓದಲಾದ ಸರ್ಕಾರದ ನೋಟೀಸನ್ನು ಪುನಃ೧೧೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೪, ೨೦೧೭ ಭಾಗ ೧ ಬೆಂಗಳೂರಿನ ಇದೇ ವಿಳಾಸಕ್ಕೆ ದಿನಾಂಕ:03-09-2014 ರಂದು ಮತ್ತೊಮ್ಮೆ ನೋಂದಾಯಿತ ಅಂಚೆ ಮೂಲಕ ಜಾರಿ ಮಾಡಲಾಗಿತ್ತು. ಆದಾಗ್ಯೂ ಸದರಿ ನೋಟೀಸು ಸ್ವೀಕೃತವಾಗದೆ ಹಿಂದಿರುಗಿಸಲಾಗಿದೆ.

ಆದ್ದರಿಂದ, ಸದರಿ ನೋಟೀಸನ್ನು ಅಧಿಕಾರಿಯವರ ಬೆಂಗಳೂರಿನ ವಿಳಾಸಕ್ಕೆ ಖುದ್ದಾಗಿ ಜಾರಿಗೊಳಿಸುವಂತೆ, ಒಂದು ವೇಳೆ ನೋಟೀಸನ್ನು ಸ್ವೀಕರಿಸದೇ ಇದ್ದಲ್ಲಿ ಅದನ್ನು ಅವರ ಮನೆಯ ಬಾಗಿಲಿಗೆ ಅಂಟಿಸಿ ನಿಯಮಾನುಸಾರ ಮಹಜರ್ ಮಾಡಿಸಿ ವರದಿಯನ್ನು ನೀಡುವಂತೆ ಮೇಲೆ ಕ್ರಮ ಸಂಖ್ಯೆ (11)ರಲ್ಲಿ ಓದಲಾದ ಪತ್ರದಲ್ಲಿ ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ, ಬೆಂಗಳೂರು ಇವರಿಗೆ ತಿಳಿಸಲಾಗಿತ್ತು. ಮೇಲೆ ಕ್ರಮ ಸಂಖ್ಯೆ (12)ರಲ್ಲಿ ಓದಲಾದ ಪತ್ರದಲ್ಲಿ ಅಧಿಕಾರಿಯು ಸದರಿ ಮನೆಯನ್ನು ಸುಮಾರು 2 ವರ್ಷಗಳ ಹಿಂದೆ ಬೇರೆಯವರಿಗೆ ಬಾಡಿಗೆಗೆ ನೀಡಿದ್ದು, ಸದರಿ ಬಾಡಿಗೆದಾರರ ಬಳಿ ಯಾವುದೇ ಮಾಹಿತಿ ಲಭ್ಯವಿರುವುದಿಲ್ಲವೆಂದು, ಸದರಿ ಮನೆಯು ಅಧಿಕಾರಿಯ ಪತಿಯಾದ ಶ್ರೀ ಮಂಜುನಾಥನಾಯಕ್ ಇವರ ಹೆಸರಿನಲ್ಲಿದ್ದು, ಸದರಿ ಮಹಜರ್‌ಗೆ ಅಕ್ಕಪಕ್ಕದ ಮನೆಯವರು ಸಹಿ ಹಾಕಲು ನಿರಾಕರಿಸುತ್ತಾರೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿಯವರು ವರದಿ ನೀಡಿರುತ್ತಾರೆ.

ಮೇಲೆ ಕ್ರಮ ಸಂಖ್ಯೆ (13)ರಲ್ಲಿ ಓದಲಾದ ಅಧಿಕಾರಿಯ ಗೈರು ಹಾಜರಾತಿಗೆ ಸಂಬಂಧಿಸಿದಂತೆ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು, 1957ರ ನಿಯಮ 11 ರಡಿ ಕಾರಣ ಕೇಳುವ ನೋಟೀಸ್‌ನೊಂದಿಗೆ ದೋಷಾರೋಪಣಾ ಪಟ್ಟಿ ಅನುಬಂಧ 1 ರಿಂದ 4 ನ್ನು ಅಧಿಕಾರಿಯ ಬೆಂಗಳೂರಿನ ಮನೆ ವಿಳಾಸಕ್ಕೆ ನೋಂದಾಯಿತ ಅಂಚೆ ಮೂಲಕ ಜಾರಿ ಮಾಡಲಾಗಿತ್ತು. ಸದರಿ ಕಾರಣ ಕೇಳುವ ನೋಟೀಸು ಸ್ವೀಕೃತವಾಗದೆ ಹಿಂದಿರುಗಿದ ಕಾರಣ ಮೇಲೆ ಕ್ರಮ ಸಂಖ್ಯೆ (14)ರಲ್ಲಿ ಓದಲಾದ ಪತ್ರದಲ್ಲಿ ಸದರಿ ನೋಟೀಸನ್ನು ಅಧಿಕಾರಿಯ ಬೆಂಗಳೂರಿನ ವಿಳಾಸ "ನಂ.ಡಿ311, ರಾಜರಾಜೇಶ್ವರಿ ನಿವಾಸ, HTMT ಹಿಂಭಾಗ, ಬೊಮ್ಮನಹಳ್ಳಿ, ಬೆಂಗಳೂರು-560 068"ಕ್ಕೆ ಖುದ್ದಾಗಿ ಜಾರಿಗೊಳಿಸುವಂತೆಯೂ, ಒಂದು ವೇಳೆ ಆಗಲೂ ಸದರಿ ನೋಟೀಸನ್ನು ಅಧಿಕಾರಿಯು ಸ್ವೀಕರಿಸದೇ ಇದ್ದಲ್ಲಿ, ಅದನ್ನು ಅವರ ಮನೆಯ ಬಾಗಿಲಿಗೆ ಅಂಟಿಸಿ ಮಹಜರ್ ಮಾಡಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ, ಬೆಂಗಳೂರು ಇವರಿಗೆ ತಿಳಿಸಲಾಗಿತ್ತು.

ಮೇಲೆ ಕ್ರಮ ಸಂಖ್ಯೆ (15)ರಲ್ಲಿ ಓದಲಾದ ಪತ್ರದಲ್ಲಿ, ಪ್ರಸ್ತಾಪಿತ ವಿಳಾಸದಲ್ಲಿ ಅಧಿಕಾರಿಯು ವಾಸವಿರುವುದಿಲ್ಲವೆಂದು, ಸದರಿ ನೋಟೀಸನ್ನು ಮನೆಯ ಗೋಡೆಯ ಮೇಲೆ ಚಿಟಕಾಯಿಸಿ ಮಹಜರ್ ಮಾಡಿದ್ದು, ಸದರಿ ಮಹಜರ್‌ಗೆ ಅಕ್ಕಪಕ್ಕದ ಮನೆಯವರು ಸಹಿ ಹಾಕಲು ನಿರಾಕರಿಸಿರುವುದಾಗಿಯೂ, ಮಹಜರ್‌ಗೆ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷಕರು ಸಹಿ ಮಾಡಿರುವುದಾಗಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಯವರು ವರದಿ ನೀಡಿರುತ್ತಾರೆ.

ಶ್ರೀಮತಿ ರೂಪಕಲಾ ಟಿ.ಕೆ, ಕೆ.ಎ.ಎಸ್ (ಕಿ.ಶ್ರೇ) ಇವರಿಗೆ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 11 ರ ನೋಟೀಸನ್ನು ಜಾರಿಗೊಳಿಸಲು ಸಾಕಷ್ಟು ಬಾರಿ ಪ್ರಯತ್ನಿಸಿದ್ದರೂ ಸಹ ಸದರಿ ಆಪಾದಿತ ಅಧಿಕಾರಿಯವರು ಸರ್ಕಾರವು ಜಾರಿ ಮಾಡಿದ ನೋಟೀಸನ್ನು ಸ್ವೀಕರಿಸದೆ ಹಾಗೂ ಅವರ ಮನೆಯ ಗೋಡೆಯ ಮೇಲೆ ಚಿಟಕಾಯಿಸಿದ ನೋಟೀಸಿಗೂ ಸಹ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರುವುದರಿಂದ, ಈ ಪ್ರಕರಣದಲ್ಲಿ ಸದರಿ ಆಪಾದಿತ ಅಧಿಕಾರಿಯವರ ಹೇಳಿಕೆಯು ಏನೂ ಇಲ್ಲವೆಂದು ಪರಿಗಣಿಸಿ ಸದರಿಯವರ ವಿರುದ್ದದ ಆರೋಪಗಳ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಯಲು ಮೇಲೆ ಕ್ರಮ ಸಂಖ್ಯೆ (16)ರಲ್ಲಿ ಓದಲಾದ ಆದೇಶದಲ್ಲಿ ಶ್ರೀ ಸುಭಾಷ್.ಟಿ.ಗೋಗಿ, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬೆಂಗಳೂರು ಇವರನ್ನು ವಿಚಾರಣಾಧಿಕಾರಿಯನ್ನಾಗಿ ಹಾಗೂ ತಹಸೀಲ್ದಾರ್ (ಆಡಳಿತ), ಪ್ರಾದೇಶಿಕ ಆಯುಕ್ತರ ಕಛೇರಿ, ಬೆಂಗಳೂರು ವಿಭಾಗ, ಬೆಂಗಳೂರು ಇವರನ್ನು ಮಂಡನಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಆಪಾದಿತ ಅಧಿಕಾರಿಯ ವಿರುದ್ದ ಇಲಾಖಾ ವಿಚಾರಣೆ ನಡೆಸಿ ಮೇಲೆ ಕ್ರಮ ಸಂಖ್ಯೆ (17)ರಲ್ಲಿ ಓದಲಾದ ಪತ್ರದಲ್ಲಿ ವಿಚಾರಣಾಧಿಕಾರಿಗಳು ನೀಡಿದ ವಿಚಾರಣಾ ವರದಿಯಲ್ಲಿ "ಆರೋಪಿತ ಅಧಿಕಾರಿಯ ಮೇಲಿನ ಆರೋಪಗಳು ರುಜುವಾತಾಗಿವೆ" ಎಂದು ತಿಳಿಸಲಾಗಿದೆ.

ಮೇಲೆ ಕ್ರಮ ಸಂಖ್ಯೆ (18)ರೊಂದಿಗೆ ಆಪಾದಿತ ಅಧಿಕಾರಿಗೆ 2ನೇ ಕಾರಣ ಕೇಳುವ ನೋಟೀಸ್‌ನೊಂದಿಗೆ ಇಲಾಖಾ ವಿಚಾರಣಾ ವರದಿಯ ಪ್ರತಿಯನ್ನು ಬೆಂಗಳೂರಿನ ಮನೆ ವಿಳಾಸಕ್ಕೆ ಜಾರಿಗೊಳಿಸಿ ಸದರಿ ವಿಚಾರಣಾ ವರದಿಯ ಬಗ್ಗೆ ಹೇಳಿಕೆ / ಸಮಜಾಯಿಷಿ ಸಲ್ಲಿಸುವಂತೆ ಕೋರಲಾಗಿತ್ತು. ದಿನಾಂಕ:22-07-2016ರಂದು ಜಾರಿಗೊಳಿಸಲಾದ 2ನೇ ಕಾರಣ ಕೇಳುವ ನೋಟೀಸ್ ಸ್ವೀಕೃತವಾಗದೆ ಹಿಂದಿರುಗಿಸಲಾಗಿದ್ದರಿಂದ, ಮೇಲೆ ಕ್ರಮ ಸಂಖ್ಯೆ (19) ರಲ್ಲಿ ಓದಲಾದ ಪತ್ರದಲ್ಲಿ ಸದರಿ 2ನೇ ಕಾರಣ ಕೇಳುವ ನೋಟೀಸನ್ನು "#ಡಿ311, ರಾಜರಾಜೇಶ್ವರಿ ನಿವಾಸ, ಹೆಚ್.ಟಿ.ಎಂ.ಟಿ ಹಿಂಬಾಗ, ಬೊಮ್ಮನಹಳ್ಳಿ, ಬೆಂಗಳೂರು-560 068" ಈ ವಿಳಾಸಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳ ಮೂಲಕ ಖುದ್ದಾಗಿ ಜಾರಿಗೊಳಿಸಿ ಸ್ವೀಕೃತಿ ನೀಡುವಂತೆ, ಆಗಲೂ ಒಂದು ವೇಳೆ ಅಧಿಕಾರಿಯು ನೋಟೀಸನ್ನು ಸ್ವೀಕರಿಸದೇ ಇದ್ದಲ್ಲಿ ಅದನ್ನು ಅವರ ಮನೆ ಬಾಗಿಲಿಗೆ ಅಂಟಿಸಿ ನಿಯಮಾನುಸಾರ ಮಹಜರ್ ಮಾಡಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಇವರನ್ನು ಕೋರಲಾಗಿತ್ತು.

ಮೇಲೆ ಕ್ರಮ ಸಂಖ್ಯೆ (20) ರಲ್ಲಿ ಓದಲಾದ ಪತ್ರದಲ್ಲಿ ತಹಸೀಲ್ದಾರ್, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ರವರು ಇದಕ್ಕನುಗುಣವಾಗಿ ವರದಿ ನೀಡುತ್ತಾ, ಆಪಾದಿತ ಅಧಿಕಾರಿಯು ಪ್ರಸ್ತಾಪಿತ ವಿಳಾಸದಲ್ಲಿ ವಾಸವಾಗಿಲ್ಲದೆ ಸದರಿ ಮನೆಯನ್ನು ಬಾಡಿಗೆಗೆ ನೀಡಿರುವುದು ತಿಳಿದು ಬಂದಿದ್ದು, ನೋಟೀಸನ್ನು ಜಾರಿ ಮಾಡಲು ಸಾಧ್ಯವಾಗದೇ ಸದರಿ 2ನೇ ಕಾರಣ ಕೇಳುವ ನೋಟೀಸನ್ನು ಮನೆಯ ವಿಳಾಸಕ್ಕೆ ಚಿಟಕಾಯಿಸಿರುವುದಾಗಿ ವರದಿ ನೀಡಿರುತ್ತಾರೆ.

ಮುಂದುವರೆದಂತೆ, ಪ್ರಕರಣದಲ್ಲಿ ಸರ್ಕಾರದ ಸುತ್ತೋಲೆ ಸಂಖ್ಯೆ:ಸಿಆಸುಇ 8 ಸೇಇವಿ 94, ದಿನಾಂಕ:3-11-97 ರನ್ವಯ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ ನಿಯಮ 28-ಎ ರಡಿ ಆದೇಶ ನೋಟೀಸು ಮುಂತಾದವುಗಳನ್ನು ಜಾರಿ ಮಾಡುವುದರ ಬಗ್ಗೆ ಲಭ್ಯವಿರುವ ಪರ್ಯಾಯ ಕ್ರಮಗಳನ್ವಯ ಅಧಿಕಾರಿಯ ಮನೆ ವಿಳಾಸಕ್ಕೆ ನೊಂದಾಯಿತ ಅಂಚೆ ಮೂಲಕ, ಖುದ್ದಾಗಿ ಹಾಗೂ ಅವರ ಮನೆ ವಿಳಾಸದಲ್ಲಿ ಅಂಟಿಸುವ ಮೂಲಕ ಜಾರಿಗೊಳಿಸುವ ಬಗ್ಗೆ ಕ್ರಮವಹಿಸಲಾಗಿದ್ದರೂ ಸಹ ಅಂತಿಮವಾಗಿ ಮೇಲೆ ಕ್ರಮ ಸಂಖ್ಯೆ (21) ರಲ್ಲಿ ಓದಲಾದ ದಿನಾಂಕ:10-5-2017ರ ಅಂತಿಮ ಕಾರಣ ಕೇಳುವ ನೋಟೀಸನ್ನು ಪ್ರಜಾವಾಣಿ ಮತ್ತು ಕನ್ನಡಪ್ರಭ ದಿನಪತ್ರಿಕೆಗಳಲ್ಲಿ ದಿನಾಂಕ: 17-05-2017 ರಂದು ಪ್ರಕಟಿಸಿ ಈ ನೋಟೀಸ್ ಪ್ರಕಟಣೆಯಾದ 15 ದಿನಗಳ ಒಳಗಾಗಿ ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ವಿಧಾನ ಸೌಧ, ಬೆಂಗಳೂರು-560 001 ಇಲ್ಲಿಗೆ ಖುದ್ದಾಗಿ ಹಾಜರಾಗಿ ಲಿಖಿತ ಹೇಳಿಕೆಯನ್ನು ಸಲ್ಲಿಸುವಂತೆ ಸೂಚಿಸಿ, ಈ ಅವಧಿಯೊಳಗೆ ಹಾಜರಾಗದಿದ್ದಲ್ಲಿ ತಮ್ಮ ಹೇಳಿಕೆ / ಸಮಜಾಯಿಷಿ ಏನೂ ಇಲ್ಲವೆಂದು ಪರಿಭಾವಿಸಿ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957ರ ನಿಯಮಗಳನ್ವಯ ಏಕಪಕ್ಷೀಯವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಸೂಚಿಸಲಾಗಿದ್ದರೂ ಸಹ ಸದರಿ ಅಧಿಕಾರಿಯು ಖುದ್ದಾಗಿ ಹಾಜರಾಗಿರುವುದಿಲ್ಲ ಅಥವಾ ಲಿಖಿತವಾಗಲಿ ಯಾವುದೇ ಹೇಳಿಕೆ ಸ್ವೀಕೃತವಾಗಿರುವುದಿಲ್ಲ.

ಈ ಮೇಲಿನ ಎಲ್ಲಾ ವಿವರಗಳ ಹಿನ್ನೆಲೆಯಲ್ಲಿ, ಶ್ರೀಮತಿ ರೂಪಕಲಾ ಟಿ.ಕೆ, ಕೆ.ಎ.ಎಸ್ (ಕಿ.ಶ್ರೇ) ಅಧಿಕಾರಿ ಇವರು ದಿನಾಂಕ:16-06-2014 ರಿಂದ ಈವರೆವಿಗೂ ಸರ್ಕಾರಿ ಕೆಲಸಕ್ಕೆ ಅನಧಿಕೃತ ಗೈರುಹಾಜರಾಗಿ ದುರ್ನಡತೆ ಎಸೆಗಿದ್ದು ಹಾಗೂ ಈ ಬಗ್ಗೆ ಅಧಿಕಾರಿಯ ವಿರುದ್ದದ ಇಲಾಖಾಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೪, ೨೦೧೭ ೧೧೬೫ ವಿಚಾರಣೆಯಲ್ಲಿಯೂ ಸಹ ಆರೋಪಗಳು ಸಾಬೀತಾಗಿರುವುದರಿಂದ, ಸದರಿಯವರ ವಿರುದ್ದ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ರನ್ವಯ ಕ್ರಮ ಜರುಗಿಸುವುದು ಸೂಕ್ತವೆಂದು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 33 ಕೆಆಹೊ 2013, ಬೆಂಗಳೂರು, ದಿನಾಂಕ:14ನೇ ಜುಲೈ 2017.

ಪ್ರಸ್ತಾವನೆಯಲ್ಲಿ ವಿವರಿಸಲಾದ ಕಾರಣಗಳಿಂದಾಗಿ, ಶ್ರೀಮತಿ ರೂಪಕಲಾ ಟಿ.ಕೆ, ಕೆ.ಎ.ಎಸ್ (ಕಿ.ಶ್ರೇ) ಅಧಿಕಾರಿ ಇವರು ದಿನಾಂಕ:16-6-2014 ರಿಂದ ಇಂದಿನವರೆಗೆ ಸರ್ಕಾರಿ ಕೆಲಸಕ್ಕೆ ಅನಧಿಕೃತ ಗೈರುಹಾಜರಾಗಿದ್ದು ಹಾಗೂ ಈ ಸಂಬಂಧವಾಗಿ ಅಧಿಕಾರಿಯ ವಿರುದ್ದ ನಡೆಸಲಾದ ಇಲಾಖಾ ವಿಚಾರಣೆಯಲ್ಲಿಯೂ ಸಹ ಅಧಿಕಾರಿಯ ವಿರುದ್ದದ ಆರೋಪಗಳು ಸಾಬೀತಾಗಿರುವುದರಿಂದ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 8(vii) ರನ್ವಯ ಶ್ರೀಮತಿ ರೂಪಕಲಾ ಟಿ.ಕೆ, ಕೆ.ಎ.ಎಸ್ (ಕಿ.ಶ್ರೇ) ಅಧಿಕಾರಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ "ಮುಂದೆ ಉದ್ಯೋಗಕ್ಕೆ ಅನರ್ಹತೆಯಾಗದಂತೆ" ಸರ್ಕಾರಿ ಸೇವೆಯಿಂದ ತೆಗೆದು ಹಾಕುವ ದಂಡನೆಯನ್ನು ವಿಧಿಸಿ ಆದೇಶಿಸಲಾಗಿದೆ.

PR 296

SC-50

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ನಾಗರಾಜ್ ಆರ್ ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು).

HORTICULTURE SECRETARIAT

Subject : Modification and incorporation of Memorandum of Association of Rules and Regulations of Karnataka State Horticulture Development Agency (KSHDA) reg.

Reference : 1) Government Order No:ಕೃತೋಇ 88 ತೋಯೋಕಾ 2008, dated:14.11.2008

2) Commissioner, Department of Horticulture letter No: ED/KSHDA/CW3/C.R./10/2016-17, dated:20.08.2016 and 14/19.09.2016

Preamble :

Vide proceeding read at (1) above the " Karnataka State Horticulture Development Agency" (KSHDA) has been registered under Karnataka Socities Registration Act 1960 {1960 (SL.No.17 Karnataka Article)}. The m ain objectives of KSHDA is to serve as a Special Purpose Vehicle (SPV) for successful and meaningful development of farms and nurseries of the Department of Horticulture.

The funds of the society shall consists, the revenue earned through sale of farm produce, seed, planting material etc, and interest earned on bank deposits. Karnataka State Horticulture Development Agency has a unique strength of having 418 farms and nurseries with a total area of 16096 acres, each ranging from 0.5 to 1500 acres.

To avail the benefit exemption of Income Tax, on the interest earned over bank deposits, the Income Tax Officer (Exemptions) ward-1, For Commissioner of Income Tax (Exem ption), Bengaluru, has suggested certain modification and incorporation in the society's Memorandum of Association.

The necessary incorporation and amendments of clauses in the society's Memorandum of Association has been approved in the 17th Executive Committee meeting held on 19.11.2016 under the Chairmanship of Additional Chief Secretary and Development Commissioner and the Chairman, Executive Committee, KSHDA Governm ent of Karnataka and also in the 4th General Body meeting held on 16.03.2017 under the Chairmanship of the Minister for Horticulture, Government of Karnataka and the Chairman of the General Body, KSHDA.

Vide proceedings read at (2) above the Commissioner of Horticulture has submitted proposal for modification and incorporation in the Memorandum of Association and Rules and Regulations to Government Order No:ಕೃತೋಇ 88 ತೋಯೋಕಾ 2008, dated:14.11.2008 as detailed in the order.

The proposals submitted by the Commissioner of Horticulture has been examined and Hence the order,

Government Order No:HCD 84 HPP 2016, Bengaluru, dated:12.06.2017

Under the circumstances explained above in the preamble, the Government is pleased to issue the am endments and incorporation as setforth vide Government Order No: ಕೃತೋಇ 88 ತೋಯೋಕಾ 2008, dated:14.11.2008.

Sl.No Existing clauses in MOU The clause to be substituted
5(d) Of Annexure-1, vide G.O dated 14.11.2008 Investment Clause: Item 5 (d) FUNCTIONS of ANNEXURE 1 of MOU vide Government Order NO: ಕೃೋಇ 88 ೋಯೋಾ 2008, Ĩ: 14.11.2008, Invest any money of the society not immediately required for any of its objectives in such manner as determined by the Executive committee of the Society. Investment of Society Funds: The management shall have full power to invest the Society funds which including money received from time to time and any accretions there to, by way of interest or other sums in accordance with the provisions of Section 13(1) and Section11(5) of the Income Tax Act, 1961 only and through permissible modes laid down from time to time.
Annexure-1, vide G.O dated 14.11.2008 The clauses newly incorporated

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೧೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೪, ೨೦೧೭ ಭಾಗ ೧
Sl.No Existing clauses in MOU The clause to be substituted
5(m) Irrevocable Clause a. The Society formed hereby shall be irrevocable in nature b. No am endment to the Bye-laws/rule or regulations of the Society shall be made which may prove repugnant to the provisions of Section 2(15), 11, 12, 13 and 80G of the Income Tax Act 1961 as amended from time to time. Further no amendments as stated here in above shall be carried out without the prior approval of Commissioner of Income Tax. c. Any Amendment, deletions and /or inclusions to this Bye-laws other than those stated in the above clause, may be carried out with the prior approval of the Society having a simple majority, in the Governing Council, provided such amendment, deletions and/or inclusions are within the objects of the Society.
5(n) Dissolution clause In case the society is dissolved, the properties of the society shall be transferred to Department of Horticulture governed by Government of Karnataka.
5(o) Beneficiary clause The benefits of the Trust/Society shall be open to all irrespective of caste, creed or religion.
5 (p) Utilization Clause No part of the Society funds or income there of, shall be utilized for any object other than the society's activities.

PR – 300

By Order and in the name of the Governor of Karnataka

R.Ramakrishna

Under Secretary to Government

Department of Horticulture.

. ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ

ವಿಷಯ : ಕಾಮಗಾರಿಗಳ ಗುಣಮಟ್ಟ ನಿಯಂತ್ರಣ ಕಾರ್ಯಪಡೆಯನ್ನು ಪುನರ್ ರಚಿಸುವ ಬಗ್ಗೆ

ಓದಲಾಗಿದೆ :

1. ಸರ್ಕಾರದ ಆದೇಶ ಸಂಖ್ಯೆ: ಲೋಇ 121 ಇಎಪಿ 2013, ದಿನಾಂಕ: 13-10-2014. 2. ಕಾಮಗಾರಿ ಗುಣನಿಯಂತ್ರಣ ಕಾರ್ಯಪಡೆಯ 51ನೇ ಸಭೆಯ ನಡವಳಿ ದಿನಾಂಕ: 29-07-2017.

ಪ್ರಸ್ತಾವನೆ :

ಮೇಲೆ ಓದಲಾದ ಸರ್ಕಾರಿ ಆದೇಶದಲ್ಲಿ ಡಾ|| ಬಿ.ಆರ್. ಶ್ರೀನಿವಾಸ ಮೂರ್ತಿ ಅಧ್ಯಕ್ಷರು, ನಿವೃತ್ತ ಪ್ರೋಫಸರ್, ಭಾರತೀಯ ವಿಜ್ಞಾನ ಸಂಸ್ಥೆ, ಇವರ ಅಧ್ಯಕ್ಷತೆಯಲ್ಲಿ ಒಟ್ಟು ಎಂಟು ಸದಸ್ಯರನ್ನೊಳಗೊಂಡಂತೆ ಸರ್ಕಾರಿ ವಲಯದಲ್ಲಿನ ಎಲ್ಲಾ ಕಾಮಗಾರಿಗಳ ನಿರ್ಮಾಣದಲ್ಲಿ ಗುಣಭರವಸೆ ಮೇಲ್ವಿಚಾರಣೆಗಾಗಿ ಗುಣಮಟ್ಟ ನಿಯಂತ್ರಣ ಕಾರ್ಯಪಡೆಯನ್ನು ರಚಿಸಿ ಆದೇಶಿಸಲಾಗಿತ್ತು.

ಮೇಲೆ ಓದಲಾದ ಕ್ರ.ಸಂ. -2ರ ನಡವಳಿಯಲ್ಲಿ ಕಾರ್ಯಪಡೆಯ ಸದಸ್ಯರಾದ ಶ್ರೀ ಸಿ.ಎನ್. ಬಾಬು ಇವರು ದಿನಾಂಕ: 05-07-2017ರಂದು ದೈವಾಧೀನರಾಗಿರುವುದಾಗಿ ನಮೂದಿಸಲಾಗಿದೆ.

ಸದರಿ ಕಾರ್ಯಪಡೆಯ ಸದಸ್ಯರಾದ ಶ್ರೀಯುತ ಸಿ.ಎನ್. ಬಾಬು, ನಿವೃತ್ತ ಮುಖ್ಯ ಇಂಜಿನಿಯರ್, ಮೈಸೂರು, ಇವರು ದೈವಾಧೀನರಾದ ಕಾರಣ ಇವರ ಅಕಾಲಿಕ ಮರಣದಿಂದ ತೆರವಾದ ಸ್ಥಳದಲ್ಲಿ ಹೊಸ ಸದಸ್ಯರನ್ನು ನೇಮಿಸಲು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಲೋಇ 77 ಆರ್‌ಡಿಎಫ್ 2017, ದಿನಾಂಕ: 29-08-2017

ಕಾಮಗಾರಿಗಳ ಗುಣಮಟ್ಟ ನಿಯಂತ್ರಣ ಕಾರ್ಯಪಡೆಗೆ ಶ್ರೀಯುತ ಬಸವರಾಜ್ ಕೋಟಿ, ನಿವೃತ್ತ ಮುಖ್ಯ ಅಭಿಯಂತರು, ಇವರನ್ನು ಸದಸ್ಯರನ್ನಾಗಿ ನೇಮಕ ಮಾಡಿ ಆದೇಶಿಸಿದೆ.

ಇನ್ನುಳಿದಂತೆ ದಿನಾಂಕ: 13-10-2014ರ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR - 298

ಕೆ.ಎಸ್. ಹರೀಶ್

SC - 20

ವಿಶೇಷಾಧಿಕಾರಿ, (ನಬಾರ್ಡ್) (ಪ್ರ)

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 14 September 2017. Indian Gazettes, https://egazette.servantsofknowledge.in/details/in.gazette.karnataka_new.2017-09-14.Part-1/. Archive identifier in.gazette.karnataka_new.2017-09-14.Part-1.