Servants of Knowledge
Karnataka Gazette · Government of Karnataka

Karnataka Gazette, Part Part-3, 21 September 2017

Published 21 September 2017

Part
Part-3
Identifier
in.gazette.karnataka_new.2017-09-21.Part-3
Languages
English, Kannada
Published at
Original source ↗

click here for IIIF manifest

ಸಂಪುಟ ೧೫೨

Volume 152

ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೨೧, ೨೦೧೭ (ಭಾದ್ರಪದ ೩೦, ಶಕ ವರ್ಷ ೧೯೩೯)

Bengaluru, Thursday, September 21, 2017 (Bhadrapada 30, Shaka Varsha 1939)

ಸಂಚಿಕೆ ೩೮

Issue 38

ಭಾಗ ೩

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ

ಸಂಬಂಧಿಸಿದ ಅಧಿಸೂಚನೆಗಳು

ಪೊಲೀಸ್ ಇಲಾಖೆ

ಪೊಲೀಸ್ ಕಮೀಷನರ್‌ರವರ ಕಛೇರಿ, ನಂ. 1, ಇನ್‌ಫೆಂಟ್ರಿ ರಸ್ತೆ, ಬೆಂಗಳೂರು ನಗರ

ಅಧಿಸೂಚನೆ

ಸಂಖ್ಯೆ: ಅಸೂ/30/ಅಸಿಪಿ(ಸಂ)/2017, ದಿನಾಂಕ: 25.08.2017.

ಬೆಂಗಳೂರು ನಗರ – ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊರಮಾವು ಹೊರವರ್ತುಲ ರಸ್ತೆ, ಹೆಣ್ಣೂರು ಮುಖ್ಯ ರಸ್ತೆ, ಥಣಿಸಂದ್ರ ಮುಖ್ಯ ರಸ್ತೆ, ಹೆಚ್.ಆರ್.ಬಿ.ಆರ್ 5ನೇ ಮುಖ್ಯ ರಸ್ತೆ, ಹೊರಮಾವು 100 ಅಡಿ ರಸ್ತೆಗಳ ಕೆಲವು ಭಾಗದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು ವಾಹನ ಸವಾರರು/ಚಾಲಕರು ಈ ರಸ್ತೆಗಳ ಎರಡೂ ಬದಿಗಳಲ್ಲಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಈ ರಸ್ತೆಗಳಲ್ಲಿ ಸಾಗುವ ಇತರೆ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಈ ಭಾಗದ ರಸ್ತೆಗಳಲ್ಲಿ ವಾಹನಗಳ ನಿಲುಗಡೆ ನಿಷೇಧಗಳನ್ನು ಮಾಡಿ ನಿಲುಗಡೆ ನಿಷೇಧದ ಫಲಕಗಳನ್ನು ಅಳವಡಿಸಿ ಪಾದಚಾರಿಗಳು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಅವಶ್ಯಕವಾಗಿರುತ್ತದೆ.

ಆದ್ದರಿಂದ, ಕಲಂ 115 ಮೋಟಾರ್ ವಾಹನ ಕಾಯ್ದೆ, 1988 ಹಾಗೂ ಕಲಂ 3 ಕರ್ನಾಟಕ ಟ್ರಾಫಿಕ್ ಕಂಟ್ರೋಲ್ ಆಕ್ಟ್, 1960 ರ ಪ್ರಕಾರ ನನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಟಿ. ಸುನೀಲ್‌ಕುಮಾರ್, ಐಪಿಎಸ್, ಪೊಲೀಸ್ ಕಮೀಷನರ್, ಬೆಂಗಳೂರು ನಗರ ಆದ ನಾನು ವಾಹನ ನಿಲುಗಡೆ ನಿಷೇಧಕ್ಕೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಆದೇಶಿಸಿರುತ್ತೇನೆ.

ವಾಹನ ನಿಲುಗಡೆ ನಿಷೇಧ:

1. ಹೊರಮಾವು ಹೊರವರ್ತುಲ ರಸ್ತೆ - ಹೊರಮಾವು ಹೊರವರ್ತುಲ ರಸ್ತೆ ವೃತ್ತದಿಂದ ಜಯಂತಿ ಗ್ರಾಮದ ಜಂಕ್ಷನ್‌ವರೆಗೆ ರಸ್ತೆಯ ಎಡಭಾಗದಲ್ಲಿ.

2. ಹೆಣ್ಣೂರು ಮುಖ್ಯ ರಸ್ತೆಯ ಹೆಣ್ಣೂರು ಹೊರವರ್ತುಲ ರಸ್ತೆ:

➢ ಹೆಣ್ಣೂರು ಮುಖ್ಯ ರಸ್ತೆಯ ಹೆಣ್ಣೂರು ಹೊರವರ್ತುಲ ರಸ್ತೆ ಜಂಕ್ಷನ್‌ನಿಂದ ಹೆಣ್ಣೂರು ಕ್ರಾಸ್‌ವರೆಗೆ ರಸ್ತೆಯ ಎರಡು ಬದಿಗಳಲ್ಲಿ.

➢ ಹೆಣ್ಣೂರು ಕ್ರಾಸ್‌ನಿಂದ ಕೆ. ನಾರಾಯಣಪುರ ಜಂಕ್ಷನ್‌ವರೆಗೆ ರಸ್ತೆಯ ಎಡಭಾಗದಲ್ಲಿ.

3. ಥಣಿಸಂದ್ರ ಮುಖ್ಯ ರಸ್ತೆ: ಥಣಿಸಂದ್ರ ಮುಖ್ಯ ರಸ್ತೆಯ ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ರೈಲ್ವೆ ಅಂಡರ್‌ಪಾಸ್‌ವರೆಗೆ ರಸ್ತೆಯ ಎಡಭಾಗದಲ್ಲಿ.

4. ಹೆಚ್.ಆರ್.ಬಿ.ಆರ್ 5ನೇ ಮುಖ್ಯ ರಸ್ತೆ: ಈ ರಸ್ತೆಯಲ್ಲಿ ಕುಳ್ಳಪ್ಪ ಸರ್ಕಲ್‌ನಿಂದ ಹೊರವರ್ತುಲ ರಸ್ತೆಯ ಸರ್ವೀಸ್ ರಸ್ತೆಯವರೆಗೆ ರಸ್ತೆಯ ಎಡಭಾಗದಲ್ಲಿ.

5. ಹೊರಮಾವು 100 ಅಡಿ ರಸ್ತೆ: ಈ ರಸ್ತೆಯಲ್ಲಿ ಹೊರಮಾವು ಹೊರವರ್ತುಲ ರಸ್ತೆ ವೃತ್ತದಿಂದ ವೇಮನ ವೃತ್ತದವರೆಗೆ ರಸ್ತೆಯ ಎಡಭಾಗದಲ್ಲಿ.

ಅಂತೆಯೇ ಕಲಂ 116 ಮೋಟಾರ್ ವಾಹನ ಕಾಯ್ದೆ, 1988 ಹಾಗೂ ಕಲಂ 4 ಕರ್ನಾಟಕ ಟ್ರಾಫಿಕ್ ಕಂಟ್ರೋಲ್ ಆಕ್ಟ್, 1960 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮೇಲ್ಕಂಡಂತೆ ವಾಹನ ನಿಲುಗಡೆ ನಿಷೇಧವನ್ನು ಜಾರಿಗೊಳಿಸಲು ಬೇಕಾದ ಅಗತ್ಯ ಸೂಚನಾ ಫಲಕಗಳನ್ನು ಸೂಕ್ತ ಸ್ಥಳಗಳಲ್ಲಿ ಅಳವಡಿಸಲು ಸ್ಥಳೀಯ ಅಧಿಕಾರಿಗಳಿಗೆ ಆದೇಶಿಸಿರುತ್ತೇನೆ.

ಈ ಮೇಲ್ಕಂಡ ವ್ಯವಸ್ಥೆಯನ್ನು ದಿನಾಂಕ: 25-08-2017 ರಿಂದ ಜಾರಿಯಲ್ಲಿರುವಂತೆ ಆದೇಶಿಸಿರುತ್ತೇನೆ.

(೪೭೪೫)೪೭೪೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೨೧, ೨೦೧೭ ಭಾಗ ೩ ಈ ಆದೇಶವನ್ನು ನಾನು ಈ ದಿವಸ ಅಂದರೆ ದಿನಾಂಕ: 25-08-2017 ರಂದು ನನ್ನ ಸಹಿ ಮತ್ತು ಮುದ್ರೆಯೊಂದಿಗೆ ನೀಡಿರುತ್ತೇನೆ.

PR – 707

ಟಿ. ಸುನೀಲ್‌ಕುಮಾರ್

ಪೊಲೀಸ್ ಕಮೀಷನರ್

ಬೆಂಗಳೂರು ನಗರ.

ಪೊಲೀಸ್ ಇಲಾಖೆ

ಪೊಲೀಸ್ ಕಮೀಷನರ್‌ರವರ ಕಛೇರಿ, ನಂ. 1, ಇನ್‌ಫೆಂಟ್ರಿ ರಸ್ತೆ, ಬೆಂಗಳೂರು ನಗರ

ಅಧಿಸೂಚನೆ

ಸಂಖ್ಯೆ: ಅಸೂ/31/ಅಸಿಪಿ(ಸಂ)/2017, ದಿನಾಂಕ: 26.08.2017.

ಬೆಂಗಳೂರು ನಗರ - ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪಶ್ಚಿಮ ಕಾರ್ಡ್ ರಸ್ತೆಯಲ್ಲಿರುವ ರಾಜಾಜಿನಗರ ಮೆಟ್ರೋ ರೈಲ್ವೆ ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರು ಹಾಗೂ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲುಗಡೆ ಸ್ಥಳದಲ್ಲಿ ನಿಲುಗಡೆ ಮಾಡದೆ, ಮೆಟ್ರೋ ರೈಲು ನಿಲ್ದಾಣದ ಬಳಿ ಪಶ್ಚಿಮ ಕಾರ್ಡ್ ರಸ್ತೆಯ ಎರಡೂ ಕಡೆಯ ಸರ್ವೀಸ್ ರಸ್ತೆಗಳ ಇಕ್ಕೆಲಗಳಲ್ಲಿ ನಿಲುಗಡೆ ಮಾಡುತ್ತಿರುತ್ತಾರೆ. ಪಶ್ಚಿಮ ಕಾರ್ಡ್ ರಸ್ತೆಯು ಅತಿ ಮುಖ್ಯವಾದ ರಸ್ತೆಯಾಗಿರುತ್ತದೆ. ಈ ರಸ್ತೆಯು ಪ್ರತಿನಿತ್ಯ ಹೆಚ್ಚಿನ ಸಂಚಾರ ದಟ್ಟಣೆಯಿಂದ ಕೂಡಿದ್ದು, ಗಣ್ಯ ಮತ್ತು ಅತಿಗಣ್ಯ ವ್ಯಕ್ತಿಗಳು ಸಂಚರಿಸುವ ಮಾರ್ಗವಾಗಿರುತ್ತದೆ. ಅಲ್ಲದೆ ಈ ರಸ್ತೆಯಲ್ಲಿ ಬಿ.ಎಂ.ಟಿ.ಸಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಸಹ ಸಂಚರಿಸುವುದರಿಂದ ಸಾರ್ವಜನಿಕರು ತಮ್ಮ ವಾಹನಗಳನ್ನು ಮೆಟ್ರೋ ರೈಲು ನಿಲ್ದಾಣದ ಬಳಿ ಪಶ್ಚಿಮ ಕಾರ್ಡ್ ರಸ್ತೆಯ ಎರಡೂ ಕಡೆಯ ಸರ್ವೀಸ್ ರಸ್ತೆಗಳ ಇಕ್ಕೆಲಗಳಲ್ಲಿ ನಿಲುಗಡೆ ಮಾಡುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿರುವುದಲ್ಲದೆ ಬಹಳಷ್ಟು ಸಮಯ ಸಂಚಾರ ಸ್ಥಗಿತಗೊಳ್ಳಲು ಕಾರಣವಾಗುತ್ತಿದೆ. ಈ ಬಗ್ಗೆ ಸಾರ್ವಜನಿಕವಾಗಿ ಹಾಗೂ ಬಿ.ಎಂ.ಆರ್.ಸಿ.ಎಲ್ ವತಿಯಿಂದ ಸಹ ಹಲವಾರು ಮನವಿಗಳು ಬಂದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾದೃಷ್ಟಿಯಿಂದ ರಾಜಾಜಿನಗರ ಮೆಟ್ರೋ ರೈಲು ನಿಲ್ದಾಣದ ಬಳಿ ಪಶ್ಚಿಮ ಕಾರ್ಡ್ ರಸ್ತೆಯಲ್ಲಿನ ಪೂರ್ವ ದಿಕ್ಕಿನ ಸರ್ವೀಸ್ ರಸ್ತೆಯಲ್ಲಿ ಉತ್ತರ ದಿಕ್ಕಿಗೆ ಮೋದಿ ಜಂಕ್ಷನ್‌ನಿಂದ ಭೀಮಾ ಜ್ಯೂವೆಲರ್ಸ್ ಮತ್ತು ಪಶ್ಚಿಮ ದಿಕ್ಕಿನ ಸರ್ವೀಸ್ ರಸ್ತೆಯಲ್ಲಿ ಉತ್ತರ ದಿಕ್ಕಿಗೆ 11ನೇ ಕ್ರಾಸ್ ಜಂಕ್ಷನ್‌ವರೆಗೆ ಹಾಗೂ 19 ಮತ್ತು 20ನೇ ಮುಖ್ಯ ರಸ್ತೆಯ ಮಧ್ಯೆ ಇರುವ 14ನೇ ಕ್ರಾಸ್ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸುವುದು ಅವಶ್ಯಕವಾಗಿರುತ್ತದೆ.

ಆದ್ದರಿಂದ, ಕಲಂ 115 ಮೋಟಾರ್ ವಾಹನ ಕಾಯ್ದೆ, 1988 ಹಾಗೂ ಕಲಂ 3 ಕರ್ನಾಟಕ ಟ್ರಾಫಿಕ್ ಕಂಟ್ರೋಲ್ ಆಕ್ಟ್, 1960 ರ ಪ್ರಕಾರ ನನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಟಿ. ಸುನೀಲ್‌ಕುಮಾರ್, ಐಪಿಎಸ್, ಪೊಲೀಸ್ ಕಮೀಷನರ್, ಬೆಂಗಳೂರು ನಗರ ಆದ ನಾನು ವಾಹನ ನಿಲುಗಡೆ ನಿಷೇಧಕ್ಕೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಆದೇಶಿಸಿರುತ್ತೇನೆ.

ಕ್ರ.ಸಂ ರಸ್ತೆಯ ವಿವರ ಇಂದ ವ ರೆಗೆ
1 ರಾಜಾಜಿನಗರ ಮೆಟ್ರೋ ರೈಲು ನಿಲ್ದಾಣದ ಪ ಶಿ ವ ್ಚ ು ಕಾರ್ಡ್ ರಸ್ತೆಯ ಪೂರ್ವ ದಿಕ್ಕಿನ ಸ ರ್ವೀಸ್ ರಸ್ತೆಯಲ್ಲಿ ಉತ್ತರ ದಿಕ್ಕಿಗೆ ವ ೂೕದಿ ಜಂಕ್ಷನ್‌ನಿಂದ ೆ ಬಿ ೕಮಾ ಜ್ಯೂವೆಲರ್ಸ್‌ವರೆಗೆ ( ರ ಸ ಯ ಎರಡೂ ಕಡೆಗಳಲ್ಲಿ ವಾಹನ ೆ ್ತ ನಿಲುಗಡೆಯನ್ನು ನಿಷೇಧಿಸಲಾಗಿದೆ)
2 ರಾಜಾಜಿನಗರ ಮೆಟ್ರೋ ರೈಲು ನಿಲ್ದಾಣದ ಪ ಶಿ ವ ್ಚ ು ಕಾರ್ಡ್ ರಸ್ತೆಯ ಪಶ್ಚಿಮ ದಿಕ್ಕಿನ ಸ ರ್ವೀಸ್ ರಸ್ತೆಯಲ್ಲಿ ಉತ್ತರ ದಿಕ್ಕಿಗೆ ವ ೂೕದಿ ಜಂಕ್ಷನ್‌ನಿಂದ ೆ 11ನೇ ಕ್ರಾಸ್ ಜಂಕ್ಷನ್‌ವರೆಗೆ ( ರ ಸ ಯ ಎರಡೂ ಕಡೆಗಳಲ್ಲಿ ವಾಹನ ೆ ್ತ ನಿಲುಗಡೆಯನ್ನು ನಿಷೇಧಿಸಲಾಗಿದೆ)
3 19 ಮತ್ತು 20ನೇ ಮುಖ್ಯ ರಸ್ತೆ ಮಧ್ಯೆ ಇರುವ 14ನೇ ಕ್ರಾಸ್ ರಸ್ತೆಯಲ್ಲಿ 19ನೇ ಮುಖ್ಯ ರಸ್ತೆ ಜಂಕ್ಷನ್‌ನಿಂದ 20ನೇ ಮಖ್ಯ ರಸ್ತೆ ಜಂಕ್ಷನ್‌ವರೆಗೆ ( ರ ಸ ಯ ಎರಡೂ ಕಡೆಗಳಲ್ಲಿ ವಾಹನ ೆ ್ತ ನಿಲುಗಡೆಯನ್ನು ನಿಷೇಧಿಸಲಾಗಿದೆ)

ಅಂತೆಯೇ ಕಲಂ 116 ಮೋಟಾರ್ ವಾಹನ ಕಾಯ್ದೆ, 1988 ಹಾಗೂ ಕಲಂ 4 ಕರ್ನಾಟಕ ಟ್ರಾಫಿಕ್ ಕಂಟ್ರೋಲ್ ಆಕ್ಟ್, 1960 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮೇಲ್ಕಂಡಂತೆ ವಾಹನ ನಿಲುಗಡೆ ನಿಷೇಧವನ್ನು ಜಾರಿಗೊಳಿಸಲು ಬೇಕಾದ ಅಗತ್ಯ ಸೂಚನಾ ಫಲಕಗಳನ್ನು ಸೂಕ್ತ ಸ್ಥಳಗಳಲ್ಲಿ ಅಳವಡಿಸಲು ಸ್ಥಳೀಯ ಅಧಿಕಾರಿಗಳಿಗೆ ಆದೇಶಿಸಿರುತ್ತೇನೆ.

ಈ ಮೇಲ್ಕಂಡ ವ್ಯವಸ್ಥೆಯನ್ನು ದಿನಾಂಕ: 26-08-2017 ರಿಂದ ಜಾರಿಯಲ್ಲಿರುವಂತೆ ಆದೇಶಿಸಿರುತ್ತೇನೆ.

ಈ ಆದೇಶವನ್ನು ನಾನು ಈ ದಿವಸ ಅಂದರೆ ದಿನಾಂಕ: 26-08-2017 ರಂದು ನನ್ನ ಸಹಿ ಮತ್ತು ಮುದ್ರೆಯೊಂದಿಗೆ ನೀಡಿರುತ್ತೇನೆ.

PR – 708

ಟಿ. ಸುನೀಲ್‌ಕುಮಾರ್

ಪೊಲೀಸ್ ಕಮೀಷನರ್,

ಬೆಂಗಳೂರು ನಗರ.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೨೧, ೨೦೧೭ ೪೭೪೭ IN THE COURT OF ACJ AND JMFC COURT, RAMANAGARA.

It is here by notified to the public that,The Ijoor Police Station, Ramanagara have seized the following vehicles as unclaimed and such vehicles are lying in the police station as unclaimed so far. Hence, the owners of the properties and vehicles may put their claim one month from the date of this publication.

RAMANAGARA

Additional Chief Judge & JMFC

Date: 10.07.2017

Ramanagara.

SL.NO CMISS.NO PF.NO. VEHICLE NUMBER & TYPE OF VEHICLE.
01 01/2000 04/2000 MOPED CHASSIS NUMBER 393321
02 21/2001 16/2001 LUNA RED COLOUR.
03 146/08 37/08 KA 05 Z 6291 CAR.
04 148/2010 60/2010 TVS XL CHASSIS NUMBER MD621BW1891Y16182
05 170/11 34/11 BAJAJ PLATINA CHASSIS NUMBER MD2DDZZMWF38505
06 388/12 52/12 TATA SUMO CHASSIS NUMBER T30SYZ817750
07 04/13 01/13 BAJAJ AVENGER TWO WHEELER KA-01 EG 9077
08 41/13 09/13 SPLENDOR + KA-02 EW 4515
09 66/13 16/13 HERO HONDA SPLENDOR ENG NO.00A186E16039 CHASSIS NO. 00A20E6142
10 74/13 20/13 AUTO . NO KA 02 5361
11 80/13 20/13 KA-02 EA 398 SUZUKI BIKE
12 100/13 24/13 KA-05-ET-5196 BAJAJ BIKE
13 187/13 41/13 KA-02 E 5934 HERO HONDA SPLENDOR+
14 187/13 41/13 KA-11 E- 6005 HERO HONDA CD 100 SS
15 187/13 41/13 KA-02 S-1558 HERO HONDA SPLENDOR+
16 187/13 41/13 KA-02 ET 8451 HERO HONDA SPLENDOR+
17 187/13 41/13 KA-06 E 9042 HERO HONDA CD100
18 187/13 41/13 KA-09 W 9534 HERO HOND SPLENDOR
19 187/13 41/13 CKO 6348 YAMAHA RX100
20 187/13 41/13 KA-03 EC 8886 YAMAHA RX 135
21 187/13 41/13 YAMAHA RX CHASSIS NO.141041392
22 187/13 41/13 KA-02 EH 3587 LML FREEDOM
23 187/13 41/13 KA-02 X-962 SUZUKI SAMURAI
24 187/13 41/13 KA-06 R-1950 SUZUKI MAX 100
25 187/13 41/13 KA-05 C 4980 BAJAJ CT100
26 187/13 41/13 KA-03 S 6142 TVS CHAMP
27 187/13 41/13 CNK 5575 TVS CHAMP
28 187/13 41/13 CAV 5862 BAJAJ CHETHAK
29 187/13 41/13 KA-05 K 1795 HERO PUCH
30 187/13 41/13 KA-04 J 5614 HERO PUCH
31 187/13 41/13 KA-05 EM 9141 HERO HONDA SPLENDOR +

ಅಪರ ಸಿವಿಲ್ ನ್ಯಾಯಾಧೀಶರು

PR - 638

(ಕಿ.ವಿ.) ಮತ್ತು ಜೆ.ಎಂ.ಎಫ್.ಸಿ.,

ರಾಮನಗರ.

೪೭೪೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೨೧, ೨೦೧೭ ಭಾಗ ೩

ಆರ್ಥಿಕ ಸಚಿವಾಲಯ

ಅಧಿಕೃತ ಜ್ಞಾಪನ ಸಂಖ್ಯೆ: ಆಇ 95 ಆಖಇ 2006, ದಿನಾಂಕ: 06-03-2006 ಕ್ಕೆ ತಿದ್ದುಪಡಿ

ಸಂಖ್ಯೆ: ಆಇ 61 ಅಖಇ 2012, ಬೆಂಗಳೂರು, ದಿನಾಂಕ: 16ನೇ ಆಗಸ್ಟ್ 2017.

ಶ್ರೀ ಇಷಾಕ್ ಅಹ್ಮದ್ ಷರೀಫ್, ಸಹಾಯಕ ಜಿಲ್ಲಾ ಖಜಾನಾಧಿಕಾರಿ ಇವರನ್ನು ದಿನಾಂಕ: 18-06-1998 ರಿಂದ ಅನ್ವಯವಾಗುವಂತೆ ಜಿಲ್ಲಾ ಖಜಾನಾಧಿಕಾರಿ ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 32 ರಡಿಯಲ್ಲಿ ಸ್ವತಂತ್ರ ಪ್ರಭಾರದಲ್ಲಿ ನೇಮಿಸಲಾಗಿದೆ. ನಂತರದಲ್ಲಿ ಬೆಂಗಳೂರು ಜಿಲ್ಲಾ ಖಜಾನೆಯಲ್ಲಿ 1999-2001 ನೇ ಅವಧಿಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಅಕ್ರಮ ಬಿಲ್ಲುಗಳನ್ನು ಪಾಸು ಮಾಡುವಲ್ಲಿ ಖಜಾನೆ ಕಾರ್ಯವಿಧಾನದಲ್ಲಿ ಲೋಪವೆಸಗಿರುವ ಸಂಬಂಧ ಅವರನ್ನು ದಿನಾಂಕ: 18-9-2001ರ ಆದೇಶದಲ್ಲಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ. ಖಜಾನೆ ಇಲಾಖೆಯಲ್ಲಿ ಸಹಾಯಕ ಖಜಾನಾಧಿಕಾರಿಗಳ ವೃಂದದಿಂದ ಜಿಲ್ಲಾ ಖಜಾನಾಧಿಕಾರಿ ವೃಂದಕ್ಕೆ ಮುಂಬಡ್ತಿ ನೀಡುವ ಸಂಬಂಧ ದಿನಾಂಕ: 15-04-2002 ರಂದು ಜರುಗಿದ ಇಲಾಖಾ ಮುಂಬಡ್ತಿ ಸಮಿತಿ ಸಭೆಯಲ್ಲಿ ಶ್ರೀ ಇಷಾಕ್ ಅಹ್ಮದ್ ಷರೀಫ್, ಇವರನ್ನು ಮೇಲ್ಕಂಡ ಆರೋಪಗಳ ಮೇಲೆ ಅಮಾನತ್ತಿನಲ್ಲಿಟ್ಟಿದ್ದ ಕಾರಣದಿಂದ ಇವರ ಮುಂಬಡ್ತಿಯ ಅರ್ಹತೆಗೆ ಸಂಬಂಧಿಸಿದ ನಿರ್ಧಾರವನ್ನು ಮುಚ್ಚಿದ ಲಕೋಟೆಯಲ್ಲಿರಿಸಲಾಗಿತ್ತು. ಆದರೆ ಸೇವಾ ಜೇಷ್ಠತೆಯಲ್ಲಿ ಇವರಿಗಿಂತ ಕಿರಿಯರಾದ ಶ್ರೀ. ಪಿ. ದೊಡ್ಡಬಸಪ್ಪ ಇವರನ್ನೊಳಗೊಂಡಂತೆ ಉಳಿದ ಅಧಿಕಾರಿಗಳಿಗೆ ದಿನಾಂಕ: 19-06-2002ರಂದು ಜಿಲ್ಲಾ ಖಜಾನಾಧಿಕಾರಿ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಲಾಗಿರುತ್ತದೆ.

ನಂತರದಲ್ಲಿ ಶ್ರೀ ಇಷಾಕ್ ಅಹ್ಮದ್ ಷರೀಫ್, ಇವರನ್ನು ದಿನಾಂಕ: 07-08-2003ರ ಆದೇಶದಲ್ಲಿ ಅಮಾನತ್ತಿನಿಂದ ಬಿಡುಗಡೆಗೊಳಿಸಿ ಸೇವೆಗೆ ಪುನರ್‌ಸ್ಥಾಪಿಸಲಾಗಿದೆ. ಇವರ ಮೇಲೆ ಹೊರಿಸಲಾಗಿದ್ದ ಆರೋಪಗಳ ಬಗ್ಗೆ ತನಿಖೆ ನಡೆಸಿದ ಪೊಲೀಸ್ ಮಹಾನಿರ್ದೇಶಕರು, ಸಿ.ಐ.ಡಿ. ಇವರು ಶ್ರೀ ಇಷಾಕ್ ಅಹ್ಮದ್ ಷರೀಫ್, ಇವರ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗದ ಕಾರಣ ಅವರನ್ನು ಆರೋಪಿ ಎಂದು ಪರಿಗಣಿಸದೆ ಸಾಕ್ಷಿದಾರರನ್ನಾಗಿ ಪರಿಗಣಿಸಿರುವುದಾಗಿ ವರದಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ, ದಿನಾಂಕ: 02-07-2013ರ ಆದೇಶದಲ್ಲಿ ಶ್ರೀ ಇಷಾಕ್ ಅಹ್ಮದ್ ಷರೀಫ್ ರವರು ದಿನಾಂಕ: 18-09-2001 ರಿಂದ 07-08-2003ರವರೆಗೆ ಅಮಾನತ್ತಿನಲ್ಲಿ ಕಳೆದ ಅವಧಿಯನ್ನು ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 100(3) ರನ್ವಯ ಕರ್ತವ್ಯದ ಮೇಲೆ ಕಳೆದ ಅವಧಿಯೆಂದು ಪರಿಗಣಿಸಿ ಆದೇಶಿಸಲಾಗಿದೆ.

ಮೇಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಅಧಿಸೂಚನೆ ಸಂಖ್ಯೆ: ಆಇ 61 ಆಖಇ 2016, ದಿನಾಂಕ: 26-02-2016ರಲ್ಲಿ ಶ್ರೀ ಇಷಾಕ್ ಅಹ್ಮದ್ ಷರೀಫ್ ಇವರಿಗೆ ದಿನಾಂಕ: 15-04-2002ರಲ್ಲಿ ನಡೆದ ಇಲಾಖಾ ಮುಂಬಡ್ತಿ ಸಮಿತಿ ಸಭೆಯ ಮುಚ್ಚಿದ ಲಕೋಟೆಯಲ್ಲಿದ್ದ ನಿರ್ಣಯವನ್ನು ಪರಿಗಣಿಸಿ ಸೇವಾ ಜೇಷ್ಠತೆಯಲ್ಲಿ ಇವರಿಗಿಂತ ಕಿರಿಯರಾದ ಶ್ರೀ ಪಿ. ದೊಡ್ಡಬಸಪ್ಪ ಇವರಿಗೆ ಜಿಲ್ಲಾ ಖಜಾನಾಧಿಕಾರಿ ಹುದ್ದೆಗೆ ಮುಂಬಡ್ತಿ ನೀಡಿದ ದಿನಾಂಕ: 19-06-2002ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಜಿಲ್ಲಾ ಖಜಾನಾಧಿಕಾರಿ ಹುದ್ದೆಗೆ ಕರ್ನಾಟಕ ನಾಗರಿಕ ಸೇವಾ (ಮುಂಬಡ್ತಿ, ವೇತನ ಮತ್ತು ಪಿಂಚಣಿ ಕ್ರಮ ಬದ್ಧತೆ) ನಿಯಮಗಳು, 1978ರ ನಿಯಮ 2(1)(ಎ)ರನ್ವಯ ಸ್ಥಾನಪನ್ನ ಮುಂಬಡ್ತಿ ನೀಡಲಾಗಿದೆ.

ದಿನಾಂಕ: 21-05-2016ರ ಪತ್ರದಲ್ಲಿ ಖಜಾನೆ ನಿರ್ದೇಶಕರು ಶ್ರೀ ಇಷಾಕ್ ಅಹ್ಮದ್ ಷರೀಫ್, ಜಿಲ್ಲಾ ಖಜಾನಾಧಿಕಾರಿ (ನಿವೃತ್ತಿ) ಇವರು ದಿನಾಂಕ: 06-03-2008ರ ಅಧಿಕೃತ ಜ್ಞಾಪನದಲ್ಲಿ ದಿನಾಂಕ: 10-08-1991ರಿಂದ 01-01-2006ರವರೆಗಿನ ಅವಧಿಯ ಜಿಲ್ಲಾ ಖಜಾನಾಧಿಕಾರಿ ವೃಂದವು ಸೇರಿದಂತೆ ಖಜಾನೆ ಇಲಾಖೆಯ ವಿವಿಧ ವೃಂದದ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ತಮಗಿಂತ ಸೇವಾ ಜೇಷ್ಠತೆಯಲ್ಲಿ ತಕ್ಷಣ ಕಿರಿಯರಾಗಿರುವ ಶ್ರೀ ಕೆ.ಎಸ್. ಬಾಲಸುಬ್ರಮಣ್ಯಂ ಇವರಿಗೆ ದಿನಾಂಕ: 18-06-1998 ನ್ನು ಸ್ಥಾನಪನ್ನ ಅರ್ಹತಾ ದಿನಾಂಕವನ್ನು ನಿಗಧಿಪಡಿಸಲಾಗಿದ್ದು ತಮಗೂ ಈ ಸೌಲಭ್ಯವನ್ನು ವಿಸ್ತರಿಸಬೇಕೆಂದು ಕೋರಿರುವ ಬಗ್ಗೆ ತಿಳಿಸಿದ್ದಾರೆ. ಅವರು ವರದಿ ಮಾಡಿರುವಂತೆ ಶ್ರೀ ಇಷಾಕ್ ಅಹ್ಮದ್ ಷರೀಫ್, ಇವರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇದ್ದುದರಿಂದ ದಿನಾಂಕ: 06-03-2008ರಲ್ಲಿ ಪ್ರಕಟಿಸಲಾದ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ಅವರಿಗೆ ಅರ್ಹತಾ ದಿನಾಂಕವನ್ನು ನಿಗಧಿಪಡಿಸಿರುವುದಿಲ್ಲ. ನಂತರದಲ್ಲಿ, ಸಿ.ಐ.ಡಿ. ವಿಚಾರಣೆ ಪೂರ್ಣಗೊಂಡು ಇವರನ್ನು ಅಪರಾಧಿ ಎಂದು ಪರಿಗಣಿಸದ ಹಿನ್ನೆಲೆಯಲ್ಲಿ ಅವರು ಅಮಾನತ್ತಿನಲ್ಲಿ ಕಳೆದ ಅವಧಿಯನ್ನು ಕರ್ತವ್ಯವೆಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ಶ್ರೀ ಇಷಾಕ್ ಅಹ್ಮದ್ ಷರೀಫ್ ಇವರಿಗೂ ಸಹ ದಿನಾಂಕ: 18-06-1998ನ್ನೇ ಅರ್ಹತಾ ದಿನಾಂಕವೆಂದು ನೀಡಿ ಅಂದಿನಿಂದಲೇ ಪೂರ್ವಾನ್ವಯವಾಗಿ ಸ್ಥಾನಪನ್ನ ಜಿಲ್ಲಾ ಖಾಜಾನಾಧಿಕಾರಿಯೆಂದು ಪರಿಗಣಿಸಬೇಕೆಂದು ಪ್ರಸ್ತಾಪಿಸಿದ್ದಾರೆ.

ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದ್ದು, ಶ್ರೀ ಇಷಾಕ್ ಅಹ್ಮದ್ ಷರೀಫ್, ಇವರನ್ನು ದಿನಾಂಕ:18-06-1998ರಿಂದಲೇ ಅನ್ವಯವಾಗುವಂತೆ ಜಿಲ್ಲಾ ಖಜಾನಾಧಿಕಾರಿ ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 32ರಡಿಯಲ್ಲಿ ಸ್ವತಂತ್ರ ಪ್ರಭಾರದಲ್ಲಿ ನೇಮಿಸಲಾಗಿತ್ತಾದರೂ ದಿನಾಂಕ: 18-09-2001ರ ಆದೇಶದಲ್ಲಿ ಅವರನ್ನು ಬೆಂಗಳೂರು ಜಿಲ್ಲಾ ಖಜಾನೆಯ ಅಕ್ರಮಗಳಿಗೆ ಸಂಬಂಧಿಸಿದಂತೆ ಅಮಾನತ್ತಿನಲ್ಲಿರಿಸಲಾಗಿತ್ತು. ದಿನಾಂಕ: 15-04-2002ರಂದು ಸಹಾಯಕ ಖಜಾನಾಧಿಕಾರಿ ವೃಂದದಿಂದ ಜಿಲ್ಲಾ ಖಜಾನಾಧಿಕಾರಿ ವೃಂದಕ್ಕೆ ಮುಂಬಡ್ತಿಗೆ ಸಂಬಂಧಿಸಿದಂತೆ ಜರುಗಿದ ಇಲಾಖಾ ಮುಂಬಡ್ತಿ ಸಮಿತಿಯ ಸಭೆಯಲ್ಲಿ ಸಹ ಇವರ ಪ್ರಕರಣವನ್ನು ಮುಚ್ಚಿದ ಲಕೋಟೆಯಲ್ಲಿರಿಸಲಾಗಿತ್ತು.

ವಿಚಾರಣೆ ಬಾಕಿ ಇದೆ ಎಂಬ ಕಾರಣಕ್ಕಾಗಿ ದಿನಾಂಕ: 06-03-2008ರ ಅಧಿಕೃತ ಜ್ಞಾಪನದಲ್ಲಿ ದಿನಾಂಕ: 10-08-1991 ರಿಂದ 01-01-2006 ರಲ್ಲಿದ್ದಂತೆ ಪ್ರಕಟಿಸಲಾದ ಖಜಾನೆ ಇಲಾಖೆಯ ವಿವಿಧ ವೃಂದಗಳ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ಸಹ ಇವರಿಗೆ ಅರ್ಹತಾ ದಿನಾಂಕವನ್ನು ನಿಗಧಿಪಡಿಸಲಾಗಿರುವುದಿಲ್ಲ.

ವಿಚಾರಣೆಯಲ್ಲಿ ಇವರ ವಿರುದ್ಧ ಆರೋಪ ಸಾಬೀತಾಗಿಲ್ಲವಾದ್ದರಿಂದ ಶ್ರೀ ಇಷಾಕ್ ಅಹ್ಮದ್ ಷರೀಫ್ ಇವರಿಗೆ ದಿನಾಂಕ: 06-03-2008ರ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ಜಿಲ್ಲಾ ಖಜಾನಾಧಿಕಾರಿ ವೃಂದದಲ್ಲಿ ಜೇಷ್ಠತೆಯಲ್ಲಿ ನಿಕಟ ಕಿರಿಯ ಅಧಿಕಾರಿಯಾದ ಶ್ರೀ ಕೆ.ಎಸ್. ಬಾಲಸುಬ್ರಮಣ್ಯಂ ಇವರಿಗೆ ನೀಡಲಾಗಿರುವ 18-06-1998ರ ಅರ್ಹತಾ ದಿನಾಂಕವನ್ನು ನೀಡಬೇಕಾಗುತ್ತದೆ.

ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ, ಶ್ರೀ ಇಷಾಕ್ ಅಹ್ಮದ್ ಷರೀಫ್, ಜಿಲ್ಲಾ ಖಜಾನಾಧಿಕಾರಿ (ನಿವೃತ್ತ), ಖಜಾನೆ ಇಲಾಖೆ ಇವರಿಗೆ ದಿನಾಂಕ:

10-08-1991 ರಿಂದ 01-01-2006 ರಲ್ಲಿದ್ದಂತೆ ಜಿಲ್ಲಾ ಖಜಾನಾಧಿಕಾರಿಗಳ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿರುವ ಅಧಿಕೃತ ಜ್ಞಾಪನ ಸಂಖ್ಯೆ: ಆಇ 95 ಆಖಇ 2006, ದಿನಾಂಕ: 06-03-2008ರ ಅನುಬಂಧ-4 ರ (VII) ನೇ ಬ್ಲಾಕ್ ದಿನಾಂಕ: 17-05-1997 ರಿಂದ 18-07-2002ರವರೆಗೆ 38 ಬಡ್ತಿ 3ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೨೧, ೨೦೧೭ ೪೭೪೯ ನೇರ ನೇಮಕಾತಿ) ಕ್ರ.ಸಂ. 88 ರಲ್ಲಿರುವ ಶ್ರೀ ಇಷಾಕ್ ಅಹ್ಮದ್ ಷರೀಫ್ ಇವರಿಗೆ ಸ್ಥಾನಪನ್ನ ಅರ್ಹತಾ ದಿನಾಂಕ ಕಾಲಂನಲ್ಲಿ "ವಿಚಾರಣೆ" ಎಂಬ ನಮೂದನೆಯನ್ನು ಕೈಬಿಟ್ಟು ಅಲ್ಲಿನ "ದಿನಾಂಕ: 18-06-1998ನ್ನು ಅರ್ಹತಾ ದಿನಾಂಕ"ವೆಂದು ನಿಗಧಿಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಜಿ. ಶಶಿಧರ್

PR : 700

ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ ಮತ್ತು ಮುಂಗಡ) ಆರ್ಥಿಕ ಇಲಾಖೆ.

ಮಾರಾಟಾಧಿಕಾರಿಗಳು, ಕರ್ನಾಟಕ ಕಂಟ್ರಾಕ್ಟರ್ಸ್ ಸಹಕಾರ ಬ್ಯಾಂಕ್ ನಿಯಮಿತ, ಕಾವೇರಿ ಭವನ, ಬೆಂಗಳೂರು ಇವರ ಕಛೇರಿಯಿಂದ

ಪ್ರಕಟಣೆ.

ಫಾರಂ ನಂ. 7

38ನೇ ರೂಲು 2 (ಸಿ)

ಸ್ಥಿರ ಸ್ವತ್ತುಗಳ ಜಪ್ತಿ ನೋಟೀಸು

ಕರ್ನಾಟಕ ಕಂಟ್ರಾಕ್ಟರ್ಸ್ ಕೋ-ಅಪರೇಟಿವ್ ಬ್ಯಾಂಕ್ ನಿಯಮಿತ, ಕಾವೇರಿ ಭವನ, ಬೆಂಗಳೂರು ಈ ಸಹಕಾರ ಬ್ಯಾಂಕಿನಿಂದ ಶ್ರೀಮತಿ. ಎನ್. ಸುಧಾ w/o ಎನ್. ಸುಬ್ಬಾರೆಡ್ಡಿ ಮನೆ ನಂ. 146,147, 3ನೇ ಅಡ್ಡರಸ್ತೆ, 1ನೇ ಹಂತ, ಬಿ.ಟಿ.ಎಂ. ಲೇಔಟ್, ಬೆಂಗಳೂರು -68, ಇವರು ನಮ್ಮ ಬ್ಯಾಂಕಿನಿಂದ `.11,80,000/- ಗಳನ್ನು ಸಾಲ ಪಡೆದು ಸಾಲವನ್ನು ಬ್ಯಾಂಕಿಗೆ ಮರುಪಾವತಿಸದೆ ಸುಸ್ತಿಯಾಗಿದ್ದರಿಂದ ಶ್ರೀಮತಿ. ಎನ್. ಸುಧಾ w/o ಎನ್. ಸುಬ್ಬಾರೆಡ್ಡಿ ಇವರ ವಿರುದ್ಧ ಸಹಕಾರ ಸಂಘದ ಕಾಯಿದೆ 70 ರಡಿಯಲ್ಲಿ ತೀರ್ಪು ಆದೇಶವನ್ನು ಪಡೆದು ಸದರಿ ಸುಸ್ತಿ ಸಾಲವನ್ನು ವಸೂಲಿ ಮಾಡಲು ನಂ. ಎಆರ್ಇ/ಯು.ಬಿ.ಎಫ್/1089/10-11 ರೀತ್ಯಾ ಅಮಲ್ಜಾರಿ ಕ್ರಮವನ್ನು ಕೈಗೊಳ್ಳಲಾಗಿರುತ್ತದೆ. ಸದರಿಯವರು ಬ್ಯಾಂಕಿಗೆ ಸಾಲ ಪಡೆಯುವಾಗ ಆಧಾರ ಮಾಡಿದ ಸ್ಥಿರಾಸ್ತಿಯನ್ನು ಪರಬಾರೆ ಮಾಡಿದ ಹಿನ್ನೆಲೆಯಲ್ಲಿ ಇವರ ಹೆಸರಿಗೆ ಇರುವ ಸ್ಥಿರಾಸ್ತಿಯನ್ನು ಸಹಕಾರ ಸಂಘದ ಕಾಯಿದೆ ನಿಯಮ 38ನೇ ರೂಲು ನಂ. 2 (ಸಿ) ರೀತಿಯ ಫಾರಂ ನಂ. 7 ರೀತಿಯ ಜಾರಿ ಮಾಡಲು ಬ್ಯಾಂಕಿನ ಮಾರಾಟಾಧಿಕಾರಿಗಳು ಮುದ್ದಾಂ ಜಾರಿ ಮಾಡಲು ಕ್ರಮ ಕೈಗೊಂಡಿದ್ದು ಆದರೆ ಶ್ರೀಮತಿ. ಎನ್. ಸುಧಾ w/o ಎನ್. ಸುಬ್ಬಾರೆಡ್ಡಿ, ಸದರಿ ನೋಟಿಸ್‌ನ್ನು ತಿರಸ್ಕರಿಸಿರುವುದರಿಂದ ಅಂಚೆ ದೃಡೀಕರಣ ಮೂಲಕ ಕಳುಹಿಸಿಕೊಡಲಾಗಿರುತ್ತದೆ. ಇವರ ಹೆಸರಿಗೆ ಇರುವ ಸ್ಥಿರ ಸ್ವತ್ತಿನ ವಿವರ ಈ ಕೆಳಕಂಡತೆ ಇರುತ್ತದೆ.

ಸ್ಥಿರ ಸ್ವತ್ತುಗಳ ಯಾದಾಸ್ತು

ಬೆಂಗಳೂರು ನಗರ ಜಿಲ್ಲಾ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ಮಡಿವಾಳ ವಿಲೇಜ್ ಸರ್ವೆ ನಂ. 98/1, ಸೈಟ್ ನಂ. 146, 147, ಯುಕೋ ಬ್ಯಾಂಕ್ ನೌಕರರ ಕೋ-ಅಪರೇಟಿವ್ ಹೌಸಿಂಗ್ ಸೊಸೈಟಿ, ಈಗಿನ ಬೆಂಗಳೂರು ಮಹಾನಗರ ಪಾಲಿಕೆಯ ಮನೆ ನಂ. 146, 147, 3ನೇ ಅಡ್ಡರಸ್ತೆ, 1ನೇ ಹಂತ, ಬಿ.ಟಿ.ಎಂ. ಲೇಔಟ್, ಬೆಂಗಳೂರು-68.

ನಿವೇಶನದ ಅಳತೆ : ಪೂರ್ವ - ಪಶ್ಚಿಮ 60 ಅಡಿ

ಉತ್ತರ – ದಕ್ಷಿಣ 40 ಅಡಿ ಒಟ್ಟು ನಿವೇಶನದ ಅಳತೆ 2400 ಅಡಿಗಳು

ನಿವೇಶನದ ಚೆಕ್ ಬಂದಿ : ಪೂರ್ವಕ್ಕೆ : ನಿವೇಶನ ಸಂಖ್ಯೆ : 145.

ಪಶ್ಚಿಮಕ್ಕೆ : ನಿವೇಶನ ಸಂಖ್ಯೆ : 148.

ಉತ್ತರಕ್ಕೆ : ರಸ್ತೆ,

ದಕ್ಷಿಣಕ್ಕೆ ನಿವೇಶನ ಸಂಖ್ಯೆ : 94, 95.

ಆದ್ದರಿಂದ ಶ್ರೀಮತಿ. ಎನ್. ಸುಧಾ w/o ಎನ್. ಸುಬ್ಬಾರೆಡ್ಡಿ, ಇವರ ಹೆಸರಿಗೆ ಇರುವ ಸ್ಥಿರಾ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಈ ಮೂಲಕ ತಿಳಿಸಲಾಗಿದೆ. ಇವರಿಂದ ಬರಬೇಕಾದ ಸುಸ್ತಿ ಬಾಕಿ ಒಟ್ಟು ಮೊತ್ತ `. 45,45,500/- ಗಳನ್ನು ದಿನಾಂಕ: 20.09.2017 ರೊಳಗೆ ಬಡ್ಡಿ ಸಮೇತ ಪಾವತಿ ಮಾಡುವುದು, ತಪ್ಪಿದಲ್ಲಿ ಮುಂದೆ ಪಾವತಿ ಮಾಡುವ ದಿನಾಂಕದವರೆಗೂ ಬಡ್ಡಿ ಲೆಕ್ಕಾಚಾರ ಮಾಡಿ, ಸದರಿ ಮೊತ್ತದ ವಸೂಲಾತಿಗೆ ಕಾನೂನಿನ ಪ್ರಕಾರ ಸದರಿ ಸ್ಥಿರ ಸ್ವತ್ತನ್ನು ಬಹಿರಂಗ ಹರಾಜು ಮೂಲಕ ನಿಯಮಾನುಸಾರ ಮಾರಾಟ ಮಾಡಿ ಸುಸ್ತಿ ಸಾಲವನ್ನು ವಸೂಲಿ ಮಾಡಲಾಗುವುದೆಂದು ತಿಳಿಸಿದೆ. ಆದ್ದರಿಂದ ಈ ಸ್ಥಿರ ಸ್ವತ್ತನ್ನು ಪರಬಾರೆ, ಭೋಗ್ಯ, ಅಥವಾ ಈ ಸ್ವತ್ತಿನ ಮೇಲೆ ಯಾವುದೇ ಸಾಲವನ್ನು ಶ್ರೀಮತಿ. ಎನ್. ಸುಧಾ w/o ಎನ್.

ಸುಬ್ಬಾರೆಡ್ಡಿ ಪಡೆಯಬಾರದೆಂದು ತಿಳಿಸಿದೆ. ಆದಾಗ್ಯೂ ಸಾರ್ವಜನಿಕರು ಈ ಸ್ಥಿರಾಸ್ತಿಯನ್ನು ಪರಭಾರೆ / ಸಾಲ ಅಥವಾ ಭೋಗ್ಯ ಮಾಡಿಕೊಂಡಲ್ಲಿ ಅವರಿಗೆ ಈ ಸ್ಥಿರಾಸ್ತಿ ಮೇಲೆ ಯಾವುದೇ ಹಕ್ಕು ಸಿಂಧುತ್ವವಾಗುವುದಿಲ್ಲವೆಂದು ತಿಳಿಸಿ ಈ ಮೂಲಕ ಪ್ರಕಟಿಸಿ ಜಫ್ತಿ ಮಾಡಲಾಗಿದೆ.

ದಿನಾಂಕ: 04.09.2017

ಚಂದ್ರಶೇಖರಯ್ಯ ಎಸ್.

ಸ್ಥಳ : ಬೆಂಗಳೂರು.

ಮಾರಾಟಾಧಿಕಾರಿ,

PD-117

ಕರ್ನಾಟಕ ಕಂಟ್ರಾಕ್ಟರ್ಸ್, ಸಹಕಾರ ಬ್ಯಾಂಕ್ ನಿ., SC-50

ಬೆಂಗಳೂರು.

೪೭೫೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೨೧, ೨೦೧೭ ಭಾಗ ೩

ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ, ತುಮಕೂರು ಇವರ ಕಾರ್ಯಾಲಯದ ನಡವಳಿ

ವಿಷಯ : ಕೇಂದ್ರ ಸರ್ಕಾರದ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್.ಎ.ಎಲ್)ಗೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ, ಬಿದರೆಹಳ್ಳ ಕಾವಲ್ ಸ.ನಂ. 01 (ಹೊಸ ನಂ. 211)ರಲ್ಲಿ 610-00 ಎಕರೆ ಈಗಾಗಲೇ ಮಂಜೂರು ಮಾಡಿರುವ ಜಮೀನಿಗೆ ಹೋಗಲು ಎನ್‌ಹೆಚ್ 206ರಿಂದ ಸಂಪರ್ಕ ರಸ್ತೆಗಾಗಿ ಸೋಪನಹಳ್ಳಿ ಗ್ರಾಮದ ಸ.ನಂ. 27ರಲ್ಲಿ 5-00 ಎಕರೆ ಸರ್ಕಾರಿ ಬಂಜರು ಭೂಮಿಯನ್ನು ಮಂಜೂರು ಮಾಡಿ ವ್ಯವಸಾಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಿಕೊಡುವ ಬಗ್ಗೆ.

ಓದಲಾಗಿದೆ : 1) ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಮೂಲಭೂತ ಸೌಕರ್ಯ ಇಲಾಖೆ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ನಡವಳಿ ದಿನಾಂಕ: 11.12.2014.

2) ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 02.01.2015ರಂದು ನಡೆದಿರುವ ಸಭೆಯ ನಡವಳಿ.

3) ತಹಶೀಲ್ದಾರ್, ಗುಬ್ಬಿ ತಾಲ್ಲೂಕು ಇವರ ಪತ್ರ ಸಂ: ಎಲ್ಎನ್‌ಡಿ(ಎಂ)ಸಿಆರ್ 169/2014-15, ದಿನಾಂಕ: 21.01.2015.

4) ಉಪವಿಭಾಗಾಧಿಕಾರಿ, ತುಮಕೂರು ಉಪವಿಭಾಗ, ತುಮಕೂರು ಇವರ ಪತ್ರ ಸಂ: ಎಲ್ಎನ್‌ಡಿ ಸಿಆರ್/214/2014-15, ದಿನಾಂಕ: 23.01.2015.

5) ಈ ಕಾರ್ಯಾಲಯದ ಪತ್ರ ಸಂಖ್ಯೆ: ಎಲ್ಎನ್‌ಡಿ(ಟಿಎಂಕೆ)ಸಿಆರ್ 263/2014-15, ದಿನಾಂಕ: 03.02.2016.

6) ಸರ್ಕಾರದ ಆದೇಶ ಸಂಖ್ಯೆ: ಅಪಜೀ 113 ಎಫ್ಎಲ್ಎಲ್ 2015, ದಿನಾಂಕ: 17.12.2015.

7) ಸರ್ಕಾರದ ಪತ್ರ ಸಂಖ್ಯೆ: ಆರ್‌ಡಿ 30 ಎಲ್‌ಜಿಟಿ 2015, ದಿನಾಂಕ: 04.04.2016.

8) ಸರ್ಕಾರದ ಅಧಿಸೂಚನೆ ಸಂ: ಆರ್‌ಡಿ 53 ಎಲ್‌ಜಿಟಿ 2015, ದಿನಾಂಕ: 21.08.2014.

9) ಈ ಕಾರ್ಯಾಲಯದ ಆದೇಶದ ಕ್ರಮಾಂಕ: ಎಲ್ಎನ್‌ಡಿ(ಟಿಎಂಕೆ)ಸಿಆರ್ 215/2012-13, ದಿನಾಂಕ: 19.12.2015 ಹಾಗೂ 31.12.2015.

10) ಈ ಕಾರ್ಯಾಲಯ ಪತ್ರದ ಸಂಖ್ಯೆ: ಎಲ್ಎನ್‌ಡಿ(ಟಿಎಂಕೆ)ಸಿಆರ್ 263/2014-15ರಂತೆ ಹೆಚ್ಎಎಲ್ ಸಂಸ್ಥೆಯವರಿಗೆ ಹಣ ಜಮಾ ಮಾಡಲು ನೋಟಿಸ್ ನೀಡಿದ ದಿನಾಂಕ: 10.05.2016.

11) ಅಡಿಷನಲ್ ಜನರಲ್ ಮ್ಯಾನೇಜರ್, ಹೆಚ್.ಎ.ಎಲ್. ಡಿವಿಜನ್ ಬೆಂಗಳೂರು ರವರು ಈ ಜಮೀನಿನ ಕಿಮ್ಮತ್ತು `. 5,00,000/- ಚಲನ್ ಸಂ: 69 ಭೂಪರಿವರ್ತನಾ ಶುಲ್ಕ `. 1,08,900/- ಹಾಗೂ ಚಲನ್ ನಂ. 584 ಹಾಗೂ ಪೋಡಿ ಫೀ `. 55/- ಚಲನ್ ನಂ. 66ರಂತೆ `. 6,08,955/- ದಿನಾಂಕ: 26.07.2016ರಂದು ಖಜಾನೆಗೆ ಜಮಾ ಮಾಡಿದ ಚಲನ್.

ಪ್ರಸ್ತಾವನೆ :-

ಓದಲಾದ ಕ್ರ. ಸಂ. (8)ರ ದಿನಾಂಕ: 21.08.2014ರ ಸರ್ಕಾರದ ಆದೇಶದಂತೆ ಈಗಾಗಲೇ ಗುಬ್ಬಿ ತಾಲ್ಲೂಕು, ನಿಟ್ಟೂರು ಹೋಬಳಿ, ಬಿದರೆಹಳ್ಳ ಕಾವಲ್ ನಂ: 1ರಲ್ಲಿ (ಹೊಸ ಸ.ನಂ. 211) 610-00 ಎಕರೆ/ಗುಂಟೆ ಜಮೀನನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇವರಿಗೆ ಹೆಲಿಕಾಪ್ಟರ್ ಉತ್ಪಾದನೆ ದುರಸ್ತಿ ಮತ್ತು ಓವರ್ಆಲ್ ಉದ್ದೇಶದ ಕೈಗಾರಿಕಾ ಸ್ಥಾಪನೆಗೆ ಓದಲಾದ ಕ್ರ. ಸಂ. (9)ರಂತೆ ದಿನಾಂಕ: 19.12.2015ರಂತೆ ಜಮೀನು ಮಂಜೂರು ಮಾಡಿ ದಿನಾಂಕ: 31.12.2015ರಂತೆ ಹಸ್ತಾಂತರಿಸಲಾಗಿದೆ.

1) ಹೆಚ್ಎಎಲ್ ಸಂಸ್ಥೆಗೆ ಹಸ್ತಾಂತರಿಸಲಾಗಿರುವ ಜಮೀನಿಗೆ ರಾಷ್ಟ್ರೀಯ ಹೆದ್ದಾರಿ 206ರಿಂದ ರಸ್ತೆಯನ್ನು ಕಲ್ಪಿಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಮೂಲಭೂತ ಸೌಲಭ್ಯ ಇಲಾಖೆ, ಬೆಂಗಳೂರು ಇವರ ಮೇಲೆ ಓದಲಾದ ಕ್ರ. ಸಂ. (1)ರ ದಿನಾಂಕ: 11.12.2014ರಂತೆ ನಡೆಸಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

2) ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಓದಲಾದ ಕ್ರ. ಸಂ. (2)ರ ದಿನಾಂಕ: 02.01.2015ರಂದು ನಡೆದಿರುವ ಸಭಾ ನಡವಳಿಯಂತೆ ರಾಷ್ಟ್ರೀಯ ಹೆದ್ದಾರಿ 206ರಿಂದ ಹೆಚ್ಎಎಲ್ ಸಂಸ್ಥೆಗೆ ಮಂಜೂರು ಮಾಡಿರುವ ಜಮೀನಿಗೆ ಸಂಪರ್ಕ ರಸ್ತೆ ಕಲ್ಪಿಸುವ ಉದ್ದೇಶಕ್ಕಾಗಿ ಜಮೀನು ಮಂಜೂರು ಮಾಡಲು ಪ್ರಸ್ತಾವನೆಯನ್ನು ಸಲ್ಲಿಸಲು ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಯವರಿಗೆ ಸೂಚನೆ ನೀಡಲಾಗಿದೆ.

3) ದಿನಾಂಕ: 21.01.2015ರಂತೆ ತಹಶೀಲ್ದಾರ್, ಗುಬ್ಬಿರವರಿಂದ ದಿನಾಂಕ: 21.01.2015ರಂದು ಉಪವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆ ಸಲಿಸಿದ್ದು, ಕ್ರ. ಸಂ. (4)ರಂತೆ ಉಪವಿಭಾಗಾಧಿಕಾರಿ, ತುಮಕೂರು ಉಪವಿಭಾಗ ಇವರಿಂದ ಪ್ರಸ್ತಾವನೆ ಪಡೆದು, ಈ ಕಾರ್ಯಾಲಯದಿಂದ ಕ್ರ. ಸಂ.

(6), ದಿನಾಂಕ: 03.02.2016ರಂತೆ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಪ್ರಸ್ತಾಪಿತ ಜಮೀನಿಗೂ ಈಗಾಗಲೇ 610-00 ಎಕರೆ ಪ್ರದೇಶಕ್ಕೆ ವಿಧಿಸಿರುವ ಎಕರೆ ಒಂದಕ್ಕೆ `. 1.00 ಲಕ್ಷದಂತೆ ನಿಗಧಿಪಡಿಸಬೇಕೆ ? ಅಥವಾ ಉಚಿತವಾಗಿ ನೀಡಬೇಕೆ ? ಎಂಬ ಬಗ್ಗೆ ಸ್ಪಷ್ಟೀಕರಣ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.

4) ಸರ್ಕಾರದ ಆದೇಶ ಕ್ರ. ಸಂ. (6)ರ ದಿನಾಂಕ: 17.12.2015ರಂತೆ ಸದರಿ ಸರ್ವೆ ನಂಬರ್‌ನಲ್ಲಿ 5-00 ಎಕರೆ ಬಂಜರು ಭೂಮಿ ಜಮೀನು ಅರಣ್ಯ ಇಲಾಖೆಯಿಂದ ಬಿಡುಗಡೆಗೊಳಿಸಿ, ಹೆಚ್ಎಎಲ್ ಸಂಸ್ಥೆಗೆ ಸಂಪರ್ಕ ರಸ್ತೆಗಾಗಿ ಬಿಡುಗಡೆಗೊಳಿಸಲು ಆದೇಶಿಸಲಾಗಿದೆ.

5) ಕ್ರ. ಸಂ. (7)ರ ದಿನಾಂಕ: 04.04.2016ರ ಸರ್ಕಾರದ ಪತ್ರದಂತೆ ಈ ಹಿಂದೆ ಕ್ರ.ಸಂ. (8)ರ ಆದೇಶದಲ್ಲಿ ಬಿದರೆಹಳ್ಳ ಕಾವಲ್ ಸ.ನಂ. 1ರಲ್ಲಿ ಮಂಜೂರಾದ ವಿಸ್ತೀರ್ಣ 610-00 ಎಕರೆ ಪ್ರದೇಶಕ್ಕೆ ವಿಧಿಸಿರುವಂತೆ ಎಕರೆ ಒಂದಕ್ಕೆ `. 1.00 ಲಕ್ಷ ವಿಧಿಸಿ ಸದರಿ ಆದೇಶದಲ್ಲಿ ಈಗಾಗಲೇ ವಿಧಿಸಿರುವ ಇತರೆ ಷರತ್ತುಗಳನ್ನು ಪ್ರಸಕ್ತ ಪ್ರಕರಣದಲ್ಲಿಯೂ ವಿಧಿಸಿ ಆದೇಶ ಹೊರಡಿಸಲು ಮತ್ತು ಕರ್ನಾಟಕ ಗೆಜೆಟ್‌ನಲ್ಲಿ ನೋಟಿಫಿಕೇಷನ್ ಹೊರಡಿಸಲು ಕ್ರಮ ಕೈಗೊಳ್ಳಲು ಸರ್ಕಾರದ ಪೂರ್ವಾನುಮೋದನೆ ನೀಡಲಾಗಿದೆ ಎಂದು ನಿರ್ದೇಶಿಸಲಾಗಿದೆ.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೨೧, ೨೦೧೭ ೪೭೫೧

6) ಸರ್ಕಾರದ ಕ್ರ.ಸಂ. 7ರ ಪತ್ರ ದಿನಾಂಕ: 04.04.2016ರ ನಿರ್ದೇಶನದಂತೆ ಶುಲ್ಕ, ಭೂಪರಿವರ್ತನೆ ಶುಲ್ಕ ಹಾಗೂ ಪೋಡಿ ಶುಲ್ಕ ಜಮಾ ಮಾಡಲು ಹೆಚ್ಎಎಲ್ ಸಂಸ್ಥೆಯವರಿಗೆ ಈ ಕಾರ್ಯಾಲಯದಿಂದ ಕ್ರ. ಸಂ. (10)ರ ದಿನಾಂಕ: 10.05.2016ರಂತೆ ನೋಟಿಸ್ ನೀಡಲಾಗಿತ್ತು.

7) ಹೆಚ್ಎಎಲ್ ಸಂಸ್ಥೆಯವರು ಪ್ರಸ್ತಾಪಿತ ಜಮೀನಿಗೆ ವಿಧಿಸಿರುವ `. 5,00,000/- ಚಲನ್ ಸಂ. 69, ಭೂಪರಿವರ್ತನಾ ಶುಲ್ಕ `. 1,08,900/- ಚಲನ್ ಸಂ: 584 ಹಾಗೂ ಪೋಡಿ ಫೀ `. 55/- ಚಲನ್ 66ರಂತೆ ಒಟ್ಟು `. 6,08,955/-ಗಳನ್ನು ದಿನಾಂಕ: 26.07.2016ರಂತೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನಲ್ಲಿ ಜಮಾ ಮಾಡಿ ಮೂಲ ಚಲನ್ ಹಾಗೂ ಸಂಸ್ಥೆಯ ಪತ್ರವನ್ನು ಓದಲಾದ ಕ್ರ.ಸಂ. (9)ರಂತೆ ಹಾಜರುಪಡಿಸಿರುತ್ತಾರೆ.

ಆದ್ದರಿಂದ ಪ್ರಸ್ತಾವನೆಯಲ್ಲಿ ವಿವರಿಸಿರುವ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಗುಬ್ಬಿ ತಾಲ್ಲೂಕು, ನಿಟ್ಟೂರು ಹೋಬಳಿ, ಸೋಪನಹಳ್ಳಿ ಗ್ರಾಮದ ಸ.ನಂ. 27ರಲ್ಲಿ 5-00 ಎಕರೆ ಬಂಜರು ಜಮೀನನ್ನು ನಕ್ಷೆಯಲ್ಲಿ ಗುರ್ತಿಸಿರುವ ಚಕ್ಕುಬಂದಿಯಂತೆ ರಾಷ್ಟ್ರೀಯ ಹೆದ್ದಾರಿ 206ರಿಂದ ಸಂಪರ್ಕ ರಸ್ತೆಗಾಗಿ ಈಗಾಗಲೇ ಮಂಜೂರು ಮಾಡಿರುವ 610-00 ಎಕರೆ ಜಮೀನಿಗೆ ಹೋಗಲು ಸಂಪರ್ಕ ರಸ್ತೆಗಾಗಿ ಮಂಜೂರು ಮಾಡಿ ಕೆಳಕಂಡಂತೆ ಆದೇಶ ಮಾಡಲಾಗಿದೆ.

ಆದೇಶ

ಕ್ರಮಾಂಕ: ಎಲ್ಎನ್‌ಡಿ(ಟಿಎಂಕೆ)ಸಿಆರ್ 263/2014-15, ದಿನಾಂಕ: 15.09.2016.

ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ನಿಟ್ಟೂರು ಹೋಬಳಿ, ಸೋಪನಹಳ್ಳಿ ಗ್ರಾಮದ ಸ.ನಂ. 27ರಲ್ಲಿ ಒಟ್ಟು 21-01 ಎಕರೆ/ಗುಂಟೆಯಲ್ಲಿ (ಖರಾಬು ಜಾತಾ 3-23 ಎಕರೆ) ಉಳಿದ 17-18 ಎಕರೆ ಪ್ರದೇಶದಲ್ಲಿ ಸರ್ಕಾರಿ ಬಂಜರು ಎಂದು ಆರ್‌ಟಿಸಿ ಕಲಂ 9ರಲ್ಲಿ ದಾಖಲಿಸಿರುವ 5-00 ಎಕರೆ ಅರಣ್ಯೇತರ ಪ್ರದೇಶವನ್ನು ನಕ್ಷೆಯಲ್ಲಿ ಗುರ್ತಿಸಿರುವಂತೆ ಈಗಾಗಲೇ ಮಂಜೂರು ಮಾಡಿರುವ 610-00 ಎಕರೆ ಜಮೀನಿಗೆ ಹೋಗಲು ಸಂಪರ್ಕ ರಸ್ತೆಗಾಗಿ ಕರ್ನಾಟಕ ಭೂಕಂದಾಯ ನಿಯಮಾವಳಿ 1969ರನ್ವಯ ಕೇಂದ್ರ ಸರ್ಕಾರದ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ಇವರಿಗೆ ಮಂಜೂರು ಮಾಡಿ ವ್ಯವಸಾಯೇತರ ಉದ್ದೇಶಕ್ಕೆ ಭೂಪರಿವರ್ತನೆ ಮಾಡಿ ಆದೇಶಿಸಿದೆ.

ಚೆಕ್ಕುಬಂದಿ :-

ಪೂರ್ವಕ್ಕೆ - ಸ.ನಂ. 27ರ ಉಳಿಕೆ ಜಮೀನು

ಪಶ್ಚಿಮಕ್ಕೆ - ತಿಮ್ಮಳ್ಳಿಪಾಳ್ಯದ ಗಡಿ.

ಉತ್ತರಕ್ಕೆ - ಎನ್‌ಹೆಚ್-206 ರಾಷ್ಟ್ರೀಯ ಹೆದ್ದಾರಿ

ದಕ್ಷಿಣಕ್ಕೆ - ಬಿದರೆಹಳ್ಳ ಕಾವಲ್ ಗಡಿ.

ಕೇಂದ್ರ ಸರ್ಕಾರ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ಬೆಂಗಳೂರು ಇವರಿಗೆ ಮಂಜೂರು ಮಾಡಿರುವ ಜಮೀನನ್ನು ಕಂದಾಯ ದಾಖಲೆಗಳಲ್ಲಿ ಇಂಡೀಕರಣ ಮಾಡಿ, ಹೆಚ್ಎಎಲ್ ಸಂಸ್ಥೆಯವರಿಗೆ ಈ ಕೆಳಕಂಡ ಷರತ್ತುಗಳೊಂದಿಗೆ ಹಸ್ತಾಂತರಿಸಲು ತಹಶೀಲ್ದಾರ್, ಗುಬ್ಬಿ ತಾಲ್ಲೂಕು ಇವರಿಗೆ ಆದೇಶಿಸಿದೆ.

ಷರತ್ತುಗಳು :- ಓದಲಾದ ಕ್ರ. ಸಂ. (8)ರಲ್ಲಿ ಸರ್ಕಾರವು ವಿಧಿಸಿರುವಂತೆ

1. ಭೂಮಂಜೂರಾತಿ ಸಂದರ್ಭದಲ್ಲಿ ಅನಾವಶ್ಯಕ ವ್ಯಾಜ್ಯಗಳಿಗೆ ಎಡೆಮಾಡಿಕೊಡದೆ ಹಾಗೂ ಹೆಚ್ಎಎಲ್ ಉದ್ದಿಮೆಯ ಸ್ಥಳೀಯರಿಗೆ ಉದ್ಯೋಗಾವಕಾಶಕ್ಕೆ ಆದ್ಯತೆ ನೀಡುವುದು.

2. ಸರ್ಕಾರದ ಆದೇಶ ಸಂ: ಸಿಐ 47 ಎಸ್‌ಪಿಐ 2013, ದಿನಾಂಕ: 09.07.2014ರಲ್ಲಿ ವಿಧಿಸಲಾದ ಷರತ್ತುಗಳು ಯಥಾವತ್ತಾಗಿ ಅನ್ವಯಿಸುತ್ತದೆ. 3. ಪ್ರಸ್ತಾವಿತ ಜಮೀನನ್ನು ಯಾವ ಉದ್ದೇಶಕ್ಕಾಗಿ ಮಂಜೂರು ಮಾಡಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು. 4. ಕಂದಾಯ ಇಲಾಖೆ ಅನುಮತಿ ಇಲ್ಲದೆ ಬೇರೆ ಉದ್ದೇಶಕ್ಕೆ ಉಪಯೋಗಿಸತಕ್ಕದ್ದಲ್ಲ.

PR – 676

ಜಿಲ್ಲಾಧಿಕಾರಿಗಳು,

SC - 10

ತುಮಕೂರು ಜಿಲ್ಲೆ.

ಅಧಿಕಾರಿಯುತ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯ, ಭದ್ರಾವತಿ ವಿಭಾಗ, ಭದ್ರಾವತಿ.

ಸಂಖ್ಯೆ: ಎ3-ಎಫ್.ಓ.ಸಿ.ಸಿ.ಓ.ಎನ್.ಸಿಆರ್-10/2012-13, ದಿನಾಂಕ: 20-04-2017

ವಿಷಯ:- ಅಕ್ರಮ ಅರಣ್ಯ ಉತ್ಪನ್ನ ಕಳ್ಳ ಸಾಗಣಿಕೆ ಸಂಬಂಧ ಮಾರುತಿ ಹಿರೋಹೊಂಡಾ

ಸಿಡಿ 100 ಸಂ:ಕೆಎ-14-ಹೆಚ್-202 ನ್ನು ವಶಪಡಿಸಿಕೊಂಡ ಬಗ್ಗೆ.

ಉಲ್ಲೇಖ:- 1. ವಲಯ ಅರಣ್ಯಾಧಿಕಾರಿ, ಶಾಂತಿಸಾಗರ ವಲಯ, ಮಾವಿನಕಟ್ಟೆ ಇವರ ಅ.ಮೊ.ಸಂ:12/2012-13 ದಿನಾಂಕ:14-07-2012

2. ವಲಯ ಅರಣ್ಯಾಧಿಕಾರಿ, ಶಾಂತಿಸಾಗರ ವಲಯ, ಮಾವಿನಕಟ್ಟೆ ಇವರ

ಸಂ117/ 2012-13 ದಿನಾಂಕ:19-07-2012

3. ಅಧಿಕಾರಿಯುತ ಅಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಭದ್ರಾವತಿ ವಿಭಾಗ, ಭದ್ರಾವತಿ ಇವರ ನ್ಯಾಯಾಲಯದ ಅಧಿಸೂಚನೆ

ಸಂಖ್ಯೆ:ಎ3.ಸಿ.ಓ.ಎನ್.ಸಿಆರ್-1/2015-16 ದಿನಾಂಕ: 10-02-2016 ನ್ನು

ಕರ್ನಾಟಕ ರಾಜ್ಯ ಪತ್ರದಲ್ಲಿ 26-05-2016 ರಂದು ಪ್ರಕಟಿಸಲಾಗಿದೆ.

೪೭೫೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೨೧, ೨೦೧೭ ಭಾಗ ೩

ಪ್ರಕಟಣೆಯ ಹಿನ್ನೆಲೆ:-

ದಿನಾಂಕ:14-07-2012 ರಂದು ಶಾಂತಿಸಾಗರ ವಲಯದ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಭದ್ರಾಪುರ ಎಸ್.ಎಫ್.ಗೆ ಸೇರಿದ ಎನ್.ಗಾಣದಕಟ್ಟೆ ಸರ್ವೆ ನಂ.18ರ ಸಾಮಾಜಿಕ ಅರಣ್ಯ ವಲಯ ವ್ಯಾಪ್ತಿಯ ನೆಡುತೋಪಿನ ಸಂಪಿಗೆ ಸಿದ್ದೇಶ್ವರಸ್ವಾಮಿ ದೇವಸ್ಥಾನದ ಹತ್ತಿರ ಇಲಾಖಾ ಹೆಚ್-202ನ್ನು ಆರೋಪಿ ಸಮೇತ ವಶಪಡಿಸಿಕೊಂಡು ಸ್ಥಳದಲ್ಲೇ ಪಂಚನಾಮೆ ಜರುಗಿಸಿ ಅರಣ್ಯ ಮೊಕದ್ದಮ್ಮೆ ಸಂಖ್ಯೆ:12/2012-13 ರಲ್ಲಿ ಪ್ರಕರಣ ದಾಖಲು ಮಾಡಿರುತ್ತಾರೆ. ಈ ಸಂಬಂಧ ಪ್ರಕರಣದ ದಾಖಲಾತಿಗಳನ್ನು ಈ ಕಛೇರಿ ನ್ಯಾಯಾಲಯ ಸಮಕ್ಷಮ ಹಾಜರುಪಡಿಸಿ ಪ್ರಕರಣವನ್ನು ಕರ್ನಾಟಕ ಅರಣ್ಯ ಕಾಯ್ದೆ 1963 ನಿಯಮ 24(ಜೆ), 71(ಎ) ಹಾಗೂ ವನ್ಯಪ್ರಾಣಿ ಸಂರಕ್ಷಣಾ ಕಾಯ್ದೆ, 1972 ರ ನಿಯಮ 9,39, 51 ರಂತೆ ಕ್ರಮ ಜರುಗಿಸಲು ಕೋರಿರುತ್ತಾರೆ.

ಸದರಿ ವಾಹನವನ್ನು ವಲಯ ಅರಣ್ಯಾಧಿಕಾರಿ, ತರೀಕೆರೆ ನಾಟಾ ಸಂಗ್ರಹಾಲಯ ಇವರ ವಶಕ್ಕೆ ಸುರಕ್ಷತೆಗೆ ನೀಡಿರುತ್ತದೆ.

ಮೇಲ್ಕಂಡ ವಾಹನದ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಶಿವಮೊಗ್ಗ ಜಿಲ್ಲೆ ಇವರಿಗೆ ವಾಹನದ ಮಾಲೀಕರ ವಿವರವುಳ್ಳ "ಬಿ" ವಹಿಯನ್ನು ಒಪ್ಪಿಸಲು ದಿನಾಂಕ:25-07-2012 ರಂದು ಪತ್ರ ಬರೆದಿರುತ್ತದೆ. ವಾಹನದ ವಾರಸುದಾರರು ಯಾರು ಸಹ ಈ ಕಛೇರಿ ನ್ಯಾಯಾಲಯಕ್ಕೆ ವಾಹನದ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿರುವುದಿಲ್ಲ.

ಸದರಿ ವಾಹನಕ್ಕೆ ಸಂಬಂಧಿಸಿದಂತೆ ಲಿಖಿತವಾಗಿ ಅಥವಾ ಖುದ್ದಾಗಿ ಸಮಜಾಯಿಸಿಯನ್ನು ದಾಖಲಾತಿಗಳೊಂದಿಗೆ ನೀಡದೇ ಇದ್ದುದರಿಂದ ಕರ್ನಾಟಕ ಅರಣ್ಯ ಕಾಯಿದೆ 71(ಬಿ) ಪ್ರಕಾರ 30 ದಿನಗಳ ಕಾಲಾವಾಕಾಶ ನೀಡಿ ಯಾರಾದರೂ ವಾರಸುದಾರರು ಇದ್ದರೆ ವಾಹನಕ್ಕೆ ಸಂಬಂಧಿಸಿದ ದಾಖಲಾತಿಗಳ ಸಮೇತ ಹಕ್ಕುಬಾದ್ಯತೆಗಳನ್ನು ಈ ಕೆಳಗೆ ಸಹಿ ಮಾಡಿದವರ ಮುಂದೆ ಖುದ್ದಾಗಿಯಾಗಲೀ ಅಥವಾ ನ್ಯಾಯಾವಾದಿಗಳವರ ಮುಖಾಂತರವಾಗಲೀ ಹಾಜರು ಪಡಿಸುವುದಕ್ಕೆ ಹಾಗೂ ಅರಣ್ಯ ಉತ್ಪನ್ನ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ ಸಂಬಂಧದಲ್ಲಿ ವಾಹನವನ್ನು ಏಕೆ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂಬುದರ ಬಗ್ಗೆ ತಿಳುವಳಿಕೆ ಪತ್ರವನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ದಿನಾಂಕ:26-05-2016 ರಂದು ಪ್ರಚಾರ ಪಡಿಸಿ ಪ್ರಕಟಿಸಲಾಗಿದೆ.

ಪ್ರಕಟಣೆಯಂತೆ 30 ದಿನಗಳು ದಿನಾಂಕ:25-06-2016 ಕ್ಕೆ ಮುಕ್ತಾಯಗೊಂಡಿದ್ದು, ವಾಹನದ ಬಗ್ಗೆ ಯಾವ ವಾರಸುದಾರರೂ ತಮ್ಮ ಮಾಲೀಕತ್ವವನ್ನು ದೃಡಪಡಿಸಿ ವಾಹನವನ್ನು ತಮ್ಮ ವಶಕ್ಕೆ ಕೋರಿಕೊಳ್ಳದೆ ಇದ್ದುದರಿಂದ ಸದರಿ ವಾಹನವನ್ನು ಅರಣ್ಯ ಉತ್ಪನ್ನ ಕಳ್ಳ ಸಾಗಾಣಿಕೆಯಲ್ಲಿ ಉಪಯೋಗಿಸಿರುವುದು ಸ್ಪಷ್ಟವಾಗಿರುತ್ತದೆ.

ಈ ಮೊಕದ್ದಮೆಯಲ್ಲಿ ಸಾಕಷ್ಟು ಕಾಲವಕಾಶವನ್ನು ಕೊಟ್ಟರೂ ಸಹ ಮಾಲೀಕರು ಅಧಿಕಾರಿಯುತ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಭದ್ರಾವತಿ ವಿಭಾಗ, ಭದ್ರಾವತಿ ಇವರ ನ್ಯಾಯಾಲಯದ ಮುಂದೆ ಬಂದು ವಾಹನದ ಮಾಲೀಕತ್ವದ ಬಗ್ಗೆ ಮೂಲ ದಾಖಲಾತಿಗಳನ್ನು ಹಾಜರು ಪಡಿಸಿ, ತಾವು ತಪ್ಪಿತಸ್ತರಲ್ಲವೆಂಬುದನ್ನು ಸಾಬೀತು ಪಡಿಸಿರುವುದಿಲ್ಲವಾದ ಕಾರಣ ಮೇಲ್ಕಂಡ ವಾಹನವನ್ನು ಕರ್ನಾಟಕ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಈ ಕೆಳಕಂಡಂತೆ ಆದೇಶ ಹೊರಡಿಸಿರುತ್ತೇನೆ.

ಆದೇಶ

ಮೇಲ್ಕಂಡ ವಿದ್ಯಾಮಾನಗಳನುಸಾರವಾಗಿ ಶ್ರೀ ಟಿ. ಬಾಲಚಂದ್ರ, ಭಾಅಸೇ., ಅಧಿಕಾರಿಯುತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಭದ್ರಾವತಿ ವಿಭಾಗ, ಭದ್ರಾವತಿ ಆದ ನಾನು ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 71(ಎ) (2ನೇ ತಿದ್ದುಪಡಿ) ಪ್ರಕಾರ ಹೀರೋಹೊಂಡಾ ಸಿಡಿ 100 ಸಂಖ್ಯೆ:ಕೆಎ-14-ಹೆಚ್-202 (ಇಂಜಿನ್ ನಂ. ಇಲ್ಲ & ಚಾಸೀಸ್ ನಂ. ಇಲ್ಲ) ನ್ನು ಸರ್ಕಾರದ ಪರ ಮುಟ್ಟುಗೋಲು ಮಾಡಿ ಆದೇಶಿಸಲಾಗಿದೆ.

ಈ ಆದೇಶವನ್ನು ದಿನಾಂಕ:20-04-2017 ರಂದು ಈ ನ್ಯಾಯಾಲಯದ ಮೊಹರು ಹಾಗೂ ನನ್ನ ಸಹಿಯೊಂದಿಗೆ ಹೊರಡಿಸಿರುತ್ತೇನೆ

ಟಿ. ಬಾಲಚಂದ್ರ, ಭಾಅಸೇ.,

PR - 712

ಅಧಿಕಾರಿಯುತ ಅಧಿಕಾರಿಗಳು

SC - 05

ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಭದ್ರಾವತಿ

ಅಧಿಕಾರಿಯುತ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯ, ಭದ್ರಾವತಿ ವಿಭಾಗ, ಭದ್ರಾವತಿ.

ಸಂಖ್ಯೆ: ಎ3-ಎಫ್.ಓ.ಸಿ.ಸಿ.ಓ.ಎನ್.ಸಿಆರ್-4/2015-16, ದಿನಾಂಕ: 20-04-2017

ವಿಷಯ : ಅಕ್ರಮ ಅರಣ್ಯ ಉತ್ಪನ್ನ ಕಳ್ಳ ಸಾಗಣಿಕೆ ಸಂಬಂಧ ಒಂದು ಟಿವಿಎಸ್ ವಿಕ್ಟರ್ ಸಂಖ್ಯೆ:ಕೆಎ-15-

ಉಲ್ಲೇಖ :

ಹೆಚ್-7488 & ಟಿವಿಎಸ್ ಎಕ್ಸಲ್ ಸೂಪರ್ ನೋಂದಣ ಸಂ:ಕೆಎ-14-ಹೆಚ್-6130 ನ್ನು ವಶಪಡಿಸಿಕೊಂಡ ಬಗ್ಗೆ. 1. ವಲಯ ಅರಣ್ಯಾಧಿಕಾರಿ, ಲಕ್ಕವಳ್ಳಿ ವಲಯ, ಲಕ್ಕವಳ್ಳಿ ಇವರ ಅ.ಮೊ.ಸಂ:15/2015-16 ದಿನಾಂಕ:12-09-2015

2. ವಲಯ ಅರಣ್ಯಾಧಿಕಾರಿ, ಲಕ್ಕವಳ್ಳಿ ವಲಯ, ಲಕ್ಕವಳ್ಳಿ ಇವರ ಸಂ.13/2015-16 ದಿನಾಂಕ:14-09-2015

3. ಅಧಿಕಾರಿಯುತ ಅಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಭದ್ರಾವತಿ ವಿಭಾಗ, ಭದ್ರಾವತಿ ಇವರ ನ್ಯಾಯಾಲಯದ ಅಧಿಸೂಚನೆ ಸಂಖ್ಯೆ:ಎ3.ಸಿ.ಓ.ಎನ್.ಸಿಆರ್-1/2015-16, ದಿನಾಂಕ:10-02-2016 ನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ 26-05-2016 ರಂದು ಪ್ರಕಟಿಸಲಾಗಿದೆ.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೨೧, ೨೦೧೭ ೪೭೫೩

ಪ್ರಕಟಣೆಯ ಹಿನ್ನೆಲೆ:-

ದಿನಾಂಕ:12-09-2015 ರಂದು ಉಪ ವಲಯ ಅರಣ್ಯಾಧಿಕಾರಿ, ಲಕ್ಕವಳ್ಳಿ ಶಾಖೆ ಭಾಗ-1 ಮತ್ತು ಸಿಬ್ಬಂದಿ ವರ್ಗದವರು ಕರಕುಚ್ಚಿ ಗಸ್ತಿನ ಸಿದ್ಲಿಪುರ ಗ್ರಾಮ ಸರ್ವೆ ನಂ.43 ರ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಶ್ರೀಗಂಧದ ಮರದ ಬುಡ ಮತ್ತು ಚೆಕ್ಕಗಳು 1=13 ಕೆ.ಜಿ.ಯನ್ನು ಹಾಗೂ ಕೆಂಪುಬಣ್ಣದ ಟಿವಿಎಸ್ ವಿಕ್ಟರ್ ಜಿಎಲ್ ನೋಂದಣಿ ಸಂಖ್ಯೆ:ಕೆಎ-15-ಹೆಚ್-7488 ಮತ್ತು ಹಸಿರು ಬಣ್ಣದ ಟಿವಿಎಸ್ ಎಕ್ಸಲ್ ಸೂಪರ್ ನೋಂದಣಿ ಸಂ:ಕೆಎ-14-ಹೆಚ್-6130 ನ್ನು ವಶಪಡಿಸಿಕೊಂಡು ಸ್ಥಳದಲ್ಲಿ ಪಂಚನಾಮೆ ಜರುಗಿಸಿ ಅರಣ್ಯ ಮೊಕದ್ದಮೆ ಸಂಖ್ಯೆ:15/2015-16 ನ್ನು ದಾಖಲು ಮಾಡಿರುತ್ತಾರೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಈ ಕಛೇರಿ ನ್ಯಾಯಾಲಯ ಸಮಕ್ಷಮ ಹಾಜರುಪಡಿಸಿ ಪ್ರಕರಣವನ್ನು ಅರಣ್ಯ ಕಾಯ್ದೆ, 1963 ಸೆಕ್ಷನ್ 84,86,87,71(ಎ) ಮತ್ತು ಅರಣ್ಯ ಕಾನೂನು 1969 ನಿಯಮ 144, 163 & 165 ರಂತೆ ಕ್ರಮ ಜರುಗಿಸಲು ಒಪ್ಪಿಸಿರುತ್ತಾರೆ. ಸದರಿ ವಾಹನವನ್ನು ವಲಯ ಅರಣ್ಯಾಧಿಕಾರಿ, ತರೀಕೆರೆ ಸರ್ಕಾರಿ ನಾಟಾ ಸಂಗ್ರಹಾಲಯ ಇವರ ವಶಕ್ಕೆ ಸುರಕ್ಷತೆಗೆ ನೀಡಿರುತ್ತದೆ.

ಮೇಲ್ಕಂಡ ವಾಹನದ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಶಿವಮೊಗ್ಗ ಜಿಲ್ಲೆ ಇವರಿಗೆ ವಾಹನದ ಮಾಲೀಕರ ವಿವರವುಳ್ಳ "ಬಿ" ವಹಿಯನ್ನು ಒಪ್ಪಿಸಲು ದಿನಾಂಕ:23-09-2015 ರಂದು ಪತ್ರ ಬರೆದಿರುತ್ತದೆ. ವಾಹನದ ವಾರಸುದಾರರು ಯಾರು ಸಹ ಈ ಕಛೇರಿ ನ್ಯಾಯಾಲಯಕ್ಕೆ ವಾಹನದ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿರುವುದಿಲ್ಲ.

ಸದರಿ ವಾಹನಕ್ಕೆ ಸಂಬಂಧಿಸಿದಂತೆ ಲಿಖಿತವಾಗಿ ಅಥವಾ ಖುದ್ದಾಗಿ ಸಮಜಾಯಿಸಿಯನ್ನು ದಾಖಲಾತಿಗಳೊಂದಿಗೆ ನೀಡದೇ ಇದ್ದುದರಿಂದ ಕರ್ನಾಟಕ ಅರಣ್ಯ ಕಾಯಿದೆ 71(ಬಿ) ಪ್ರಕಾರ 30 ದಿನಗಳ ಕಾಲಾವಾಕಾಶ ನೀಡಿ ಯಾರಾದರೂ ವಾರಸುದಾರರು ಇದ್ದರೆ ವಾಹನಕ್ಕೆ ಸಂಬಂಧಿಸಿದ ದಾಖಲಾತಿಗಳ ಸಮೇತ ಹಕ್ಕುಬಾದ್ಯತೆಗಳನ್ನು ಈ ಕೆಳಗೆ ಸಹಿ ಮಾಡಿದವರ ಮುಂದೆ ಖುದ್ದಾಗಿಯಾಗಲೀ ಅಥವಾ ನ್ಯಾಯಾವಾದಿಗಳವರ ಮುಖಾಂತರವಾಗಲೀ ಹಾಜರು ಪಡಿಸುವುದಕ್ಕೆ ಹಾಗೂ ಅರಣ್ಯ ಉತ್ಪನ್ನ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ ಸಂಬಂಧದಲ್ಲಿ ವಾಹನವನ್ನು ಏಕೆ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂಬುದರ ಬಗ್ಗೆ ತಿಳುವಳಿಕೆ ಪತ್ರವನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ದಿನಾಂಕ:26-05-2016 ರಂದು ಪ್ರಚಾರ ಪಡಿಸಿ ಪ್ರಕಟಿಸಲಾಗಿದೆ.

ಪ್ರಕಟಣೆಯಂತೆ 30 ದಿನಗಳು ದಿನಾಂಕ:25-06-2016 ಕ್ಕೆ ಮುಕ್ತಾಯಗೊಂಡಿದ್ದು, ವಾಹನದ ಬಗ್ಗೆ ಯಾವ ವಾರಸುದಾರರೂ ತಮ್ಮ ಮಾಲೀಕತ್ವವನ್ನು ದೃಡಪಡಿಸಿ ವಾಹನವನ್ನು ತಮ್ಮ ವಶಕ್ಕೆ ಕೋರಿಕೊಳ್ಳದೆ ಇದ್ದುದರಿಂದ ಸದರಿ ವಾಹನವನ್ನು ಅರಣ್ಯ ಉತ್ಪನ್ನ ಕಳ್ಳ ಸಾಗಾಣಿಕೆಯಲ್ಲಿ ಉಪಯೋಗಿಸಿರುವುದು ಸ್ಪಷ್ಟವಾಗಿರುತ್ತದೆ.

ಈ ಮೊಕದ್ದಮೆಯಲ್ಲಿ ಸಾಕಷ್ಟು ಕಾಲವಕಾಶವನ್ನು ಕೊಟ್ಟರೂ ಸಹ ಮಾಲೀಕರು ಅಧಿಕಾರಿಯುತ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಭದ್ರಾವತಿ ವಿಭಾಗ, ಭದ್ರಾವತಿ ಇವರ ನ್ಯಾಯಾಲಯದ ಮುಂದೆ ಬಂದು ವಾಹನದ ಮಾಲೀಕತ್ವದ ಬಗ್ಗೆ ಮೂಲ ದಾಖಲಾತಿಗಳನ್ನು ಹಾಜರು ಪಡಿಸಿ, ತಾವು ತಪ್ಪಿತಸ್ತರಲ್ಲವೆಂಬುದನ್ನು ಸಾಬೀತು ಪಡಿಸಿರುವುದಿಲ್ಲವಾದ ಕಾರಣ ಮೇಲ್ಕಂಡ ವಾಹನವನ್ನು ಕರ್ನಾಟಕ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಈ ಕೆಳಕಂಡಂತೆ ಆದೇಶ ಹೊರಡಿಸಿರುತ್ತೇನೆ.

ಆದೇಶ

ಮೇಲ್ಕಂಡ ವಿದ್ಯಾಮಾನಗಳನುಸಾರವಾಗಿ ಶ್ರೀ ಟಿ. ಬಾಲಚಂದ್ರ,ಭಾಅಸೇ., ಅಧಿಕಾರಿಯುತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಭದ್ರಾವತಿ ವಿಭಾಗ, ಭದ್ರಾವತಿ ಆದ ನಾನು ಕರ್ನಾಟಕ ಅರಣ್ಯ ಕಾಯ್ದೆ, 1963ರ ಸೆಕ್ಷನ್ 71(ಎ) (2ನೇ ತಿದ್ದುಪಡಿ) ಪ್ರಕಾರ ಕೆಂಪುಬಣ್ಣದ ಟಿವಿಎಸ್ ವಿಕ್ಟರ್ ಜಿಎಲ್ ನೋಂದಣಿ ಸಂಖ್ಯೆ:ಕೆಎ-15-ಹೆಚ್-7488 ಮತ್ತು ಹಸಿರು ಬಣ್ಣದ ಟಿವಿಎಸ್ ಎಕ್ಸಲ್ ಸೂಪರ್ ನೋಂದಣಿ ಸಂ:ಕೆಎ-14-ಹೆಚ್-6130 (ಇಂಜಿನ್ ನಂ.ಇಲ್ಲ - & ಚಾಸೀಸ್ ನಂ. ಇಲ್ಲ-) ಮತ್ತು ಅರಣ್ಯ ಉತ್ಪನ್ನ ಶ್ರೀಗಂಧದ ಮರದ ಬುಡ ಮತ್ತು ಚೆಕ್ಕಗಳು 1=13 ಕೆ.ಜಿ.ಯನ್ನು ಸರ್ಕಾರದ ಪರ ಮುಟ್ಟುಗೋಲು ಮಾಡಿ ಆದೇಶಿಸಲಾಗಿದೆ.

ಈ ಆದೇಶವನ್ನು ದಿನಾಂಕ:20-04-2017 ರಂದು ಈ ನ್ಯಾಯಾಲಯದ ಮೊಹರು ಹಾಗೂ ನನ್ನ ಸಹಿಯೊಂದಿಗೆ ಹೊರಡಿಸಿರುತ್ತೇನೆ.

ಟಿ. ಬಾಲಚಂದ್ರ, ಭಾಅಸೇ.,

PR - 711

ಅಧಿಕಾರಿಯುತ ಅಧಿಕಾರಿಗಳು

SC - 01

ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಭದ್ರಾವತಿ

ಪೊಲೀಸ್ ಇಲಾಖೆ

ಪೊಲೀಸ್ ಆಯುಕ್ತರು ಮತ್ತು ಅಪರ ಜಿಲ್ಲಾ ದಂಡಾಧಿಕಾರಿಗಳು ಬೆಂಗಳೂರು ನಗರ ರವರ ನಡವಳಿಗಳು

ಉಪಸ್ಥಿತರು: ಶ್ರೀ ಟಿ. ಸುನೀಲ್‌ಕುಮಾರ್, ಐ.ಪಿ.ಎಸ್.,

ಪೊಲೀಸ್ ಕಮೀಷನರ್,

ಬೆಂಗಳೂರು ನಗರ.

ವಿಷಯ : ಭಾರತೀಯ ಜನತಾ ಪಾರ್ಟಿ ವತಿಯಿಂದ ದಿನಾಂಕ: 05-09-2017 ಮಂಗಳವಾರ ರಂದು ಬೈಕ್ ರ್ಯಾಲಿ ನಡೆಸಲು ಅನುಮತಿ ಕೋರಿರುವ ಬಗ್ಗೆ.

ಪ್ರಸ್ತಾವನೆ:

1. ಶ್ರೀ ಶಿವಾಜಿರಾವ್, ಕಾರ್ಯಾಲಯ ಕಾರ್ಯದರ್ಶಿ, ಬಿಜೆಪಿ, ಬೆಂಗಳೂರು ನಗರ ರವರು ನೀಡಿರುವ ದಿನಾಂಕ: 30-08-2017ರ ಪತ್ರದಲ್ಲಿ, ಹಿಂದೂ ಕಾರ್ಯಕರ್ತರ ಕಗ್ಗೊಲೆ ಖಂಡಿಸಿ "ಮಂಗಳೂರು ಚಲೋ" ಬೈಕ್ ರ್ಯಾಲಿಯನ್ನು ಭಾರತೀಯ ಜನತಾ ಪಾರ್ಟಿ, ಯುವ ಮೋರ್ಚಾ, ಬೆಂಗಳೂರು ನಗರ ಮತ್ತು ನಗರ ಜಿಲ್ಲೆ ವತಿಯಿಂದ ಹಮ್ಮಿಕೊಂಡಿದ್ದು, ಈ ಬೈಕ್ ರ್ಯಾಲಿಯ ನೇತೃತ್ವವನ್ನು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾದ೪೭೫೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೨೧, ೨೦೧೭ ಭಾಗ ೩ ಶ್ರೀ ಆರ್. ಅಶೋಕ ರವರು ವಹಿಸಿದ್ದು, ದಿನಾಂಕ: 05-09-2017ರ ಮಂಗಳವಾರ ಬೆಳಿಗ್ಗೆ 9-00 ಗಂಟೆಗೆ ಫ್ರೀಡಂ ಪಾರ್ಕ್ ಮುಂಭಾಗದಲ್ಲಿ ಚಾಲನೆ ನೀಡಿ, ಬೈಕ್ ರ್ಯಾಲಿಯಲ್ಲಿ ಬೆಂಗಳೂರು ನಗರ ಯುವ ಮೋರ್ಚ ಅಧ್ಯಕ್ಷರಾದ ಶ್ರೀ ಸಪ್ತಗಿರಿಗೌಡರವರು, ಬೆಂಗಳೂರು ನಗರ ಜಿಲ್ಲೆ ಯುವ ಮೋರ್ಚ ಅಧ್ಯಕ್ಷರಾದ ಶ್ರೀ ನವೀನ್ ರೆಡ್ಡಿ ರವರು ಹಾಗೂ ಅಂದಾಜು 1000 ಬೈಕ್‌ನಲ್ಲಿ ಯುವ ಮೋರ್ಚಾ ಕಾರ್ಯಕರ್ತರು ಭಾಗವಹಿಸಲಿದ್ದು, ಈ ಸಂದರ್ಭದಲ್ಲಿ ಬೆಂಗಳೂರು ನಗರ ಅಧ್ಯಕ್ಷರಾದ ಶ್ರೀ ಪಿ.ಎನ್. ಸದಾಶಿವ ರವರು, ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಎಸ್. ಮುನಿರಾಜು ರವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಬಿಬಿಎಂಪಿ ಸದಸ್ಯರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿರುವುದಾಗಿ ತಿಳಿಸಿ, ಬೈಕ್ ರ್ಯಾಲಿ ನಡೆಸಲು ಅನುಮತಿ ಕೋರಿರುತ್ತಾರೆ.

2. ಈ ಬಗ್ಗೆ ದಿನಾಂಕ: 31-08-2017 ರಂದು ಅರ್ಜಿದಾರರಿಗೆ ನೀಡಲಾಗಿರುವ ಪೊಲೀಸ್ ನೋಟಿಸ್‌ನಲ್ಲಿ, ಬೆಂಗಳೂರು ನಗರದಲ್ಲಿ ವಾಹನ ಸಂಚಾರ ದಟ್ಟಣೆ ಅಧಿಕವಾಗಿರುವ, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ದೃಷ್ಟಿಯಿಂದ ಹಾಗೂ ಸಾರ್ವಜನಿಕರ ಹಿತದೃಷ್ಟಿಯ ಕಾರಣದಿಂದಾಗಿ ಅವಶ್ಯಕವಾಗಿದ್ದ ಕೆಲವು ಮಾಹಿತಿಯನ್ನು ನೀಡುವಂತೆ ಕೋರಲಾಗಿದ್ದು, ಸದರಿ ಮಾಹಿತಿಯನ್ನು ಅರ್ಜಿದಾರರು ಇದುವರೆವಿಗೂ ನೀಡಿರುವುದಿಲ್ಲ.

3. ನಗರದಲ್ಲಿ ಯಾವುದೇ ಸಭೆ ಮತ್ತು ಮೆರವಣಿಗೆ ನಡೆಸುವ ಸಂದರ್ಭದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಕಛೇರಿ ಅಧಿಸೂಚನೆ ಪತ್ರ ಸಂಖ್ಯೆ:BC/CP/MAG/1/2009 ದಿನಾಂಕ: 20-05-2009 ರನ್ವಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.

4. ಬೈಕ್ ರ್ಯಾಲಿ ಕಾರ್ಯಕ್ರಮವನ್ನು ಕೈಗೊಂಡಲ್ಲಿ, ಬೈಕ್‌ರ್ಯಾಲಿ ಹೋಗುವ ಸ್ಥಳಗಳಲ್ಲಿ ಕಿಡಿಗೇಡಿಗಳು, ಸಮಾಜಘಾತುಕ ವ್ಯಕ್ತಿಗಳು ಹಾಗೂ ರ್ಯಾಲಿಗೆ ಸಂಬಂಧ ಪಡದೇ ಇರುವ ವ್ಯಕ್ತಿಗಳು ಸೇರಿಕೊಂಡು ಈ ಸನ್ನಿವೇಶದ ದುರುಪಯೋಗ ಪಡೆದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿ, ಸಾರ್ವಜನಿಕರ ಆಸ್ತಿ ಪಾಸ್ತಿಗೆ ಹಾನಿವುಂಟು ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಗುಂಪನ್ನು ನಿಯಂತ್ರಿಸುವಲ್ಲಿ ತೊಂದರೆ ಉಂಟಾಗಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಲ್ಲಿ, ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇರುವುದಾಗಿ ಗುಪ್ತಚಾರ ಇಲಾಖೆಯಿಂದ ಪ್ರತಿಕೂಲ ಮಾಹಿತಿ ಇರುತ್ತದೆ.

5. ಅಲ್ಲದೇ ಬೆಂಗಳೂರು ನಗರದಲ್ಲಿ ಅತಿಯಾದ ಸಂಚಾರ ದಟ್ಟಣೆ ಇರುವುದರಿಂದ, ಬೈಕ್ ರ್ಯಾಲಿಗೆ ಅನುಮತಿ ನೀಡಿದಲ್ಲಿ, ರ್ಯಾಲಿಯಲ್ಲಿ ಸುಮಾರು 1000 ಬೈಕ್‌ಗಳು ಪಾಲ್ಗೊಳ್ಳಲಿರುವುದರಿಂದ, ರ್ಯಾಲಿಯು ಸುಮಾರು 2 ಕಿಲೋಮೀಟರ್ ಉದ್ದ ವಿಸ್ತರಿಸುವುದರಿಂದ, ರ್ಯಾಲಿ ಹಾದು ಹೋಗಲು ಕನಿಷ್ಟ 3 ರಿಂದ 4 ಗಂಟೆಗಳು ಬೇಕಾಗುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ಕಡೆಗಳ ರಸ್ತೆಗಳ ಸಂಚಾರವು ಸ್ಥಬ್ದವಾಗುತ್ತದೆ ಅಲ್ಲದೇ ಅವಶ್ಯಕ ಮತ್ತು ತುರ್ತು ಸೇವೆಗಳಲ್ಲಿ ತೊಡಗಿರುವ ವಾಹನಗಳಿಗೆ/ಸೇವೆಗಳಿಗೆ ಅಡ್ಡಿ ಉಂಟಾಗಿ, ಸಾರ್ವಜನಿಕರಿಗೆ, ರೋಗಿಗಳಿಗೆ, ವಯೋವೃದ್ಧರು ಮತ್ತು ಶಾಲಾ ಮಕ್ಕಳುಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.

6. ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ವಾಹನಗಳು ಸಂಕೀರ್ಣವಾದ ರಸ್ತೆಯಲ್ಲಿ ಸಂಚರಿಸುವಾಗ ಪರಸ್ಪರ ಹಾಗೂ ಇತರೆ ವಾಹನಗಳೊಂದಿಗೆ ಅಪಘಾತವುಂಟಾಗಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ವಾಹನ ಸವಾರರಿಗೂ ಮತ್ತು ಸಾರ್ವಜನಿಕರಿಗೂ ಪ್ರಾಣ ಹಾನಿ ಉಂಟಾಗಿ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆ ಇರುತ್ತದೆ.

7. ಬೈಕ್ ರ್ಯಾಲಿ ನಡೆಸುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಸಂಚಾರ ವಿಭಾಗದಿಂದ ಅನುಮತಿ ಪಡೆದಿರುವುದು ಕಂಡು ಬಂದಿರುವುದಿಲ್ಲ ಮತ್ತು ಬೈಕ್ ರ್ಯಾಲಿಯಲ್ಲಿ ಪಾಲ್ಗೊಳ್ಳುವವರ ವಿವರಗಳನ್ನು ಸಹ ನೀಡಿರುವುದಿಲ್ಲ.

8. ಅಲ್ಲದೇ ದಿನಾಂಕ: 4-9-2017 ರಿಂದ 6-09-2017 ರವರೆಗೆ ಪ್ರಗತಿ ಪರ ಮಠಾಧೀಶರ ವೇದಿಕೆ ವತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಪಡೆದಿರುತ್ತಾರೆ ಈ ಪ್ರತಿಭಟನೆಗೆ ಹೆಚ್ಚು ಜನಸಂಖ್ಯೆ ಸೇರುವುದರಿಂದ, ಈ ಕಾರ್ಯಕ್ರಮಕ್ಕೆ ಮತ್ತು ಬೈಕ್ ರ್ಯಾಲಿಗೆ ಏಕ ಕಾಲದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಕಷ್ಟಸಾಧ್ಯವಾಗಿರುತ್ತದೆ.

9. ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರ ಕಗ್ಗೊಲೆ ಬಗ್ಗೆ ಕೆಲವು ಅಹಿತಕರ ಘಟನೆಗಳು ಸಂಭವಿಸಿದ್ದು, ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿರುತ್ತವೆ ಅಲ್ಲದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಿರುವುದು ಕಂಡು ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ತಿಂಗಳ ಕಾಲ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದ್ದು, ದೀರ್ಘಕಾಲ ಕಲಂ 144 ದಂಡ ಪ್ರಕ್ರಿಯಾ ಸಂಹಿತೆ ಅಡಿಯಲ್ಲಿ ನಿಷೇದಾಜ್ಞೆ ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 35 ರಡಿಯಲ್ಲಿ ಪ್ರತಿಬಂಧಕಾಜ್ಞೆ ಸಹ ಹೊರಡಿಸಲಾಗಿತ್ತು. ಈ ಬೈಕ್ ರ್ಯಾಲಿಯು ಬೆಂಗಳೂರಿನಿಂದ ಪ್ರಾರಂಭಗೊಂಡು ಮಂಗಳೂರು ಜಿಲ್ಲೆಗೆ ಸಾಗಲಿದ್ದು, ಬೈಕ್ ರ್ಯಾಲಿಯು ಮಂಗಳೂರಿನಲ್ಲಿ ಆಗಮಿಸಲು ಮಂಗಳೂರು ಜಿಲ್ಲಾ ಪೊಲೀಸ್/ಮಂಗಳೂರು ಪೊಲೀಸ್ ಆಯುಕ್ತರು ರವರಿಂದ ಅನುಮತಿ ನೀಡಿರುವುದು ಕಂಡು ಬಂದಿರುವುದಿಲ್ಲ.

10. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಪ ಪೊಲೀಸ್ ಆಯುಕ್ತರು, ಮೇಲ್ಕಂಡ ಅಂಶಗಳನ್ನು ಪರಿಗಣಿಸಿ, ಬೈಕ್ ರ್ಯಾಲಿ ನಡೆಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ, ದಿನಾಂಕ: 04-09-2017 ರಂದು ಹಿಂಬರಹ ನೀಡಿ, ವರದಿಯನ್ನು ಸಲ್ಲಿಸಿದ್ದು, ಸದರಿ ವರದಿಯನ್ನು ಪರಿಶೀಲಿಸಿರುತ್ತೇನೆ.

ಬೈಕ್ ರ್ಯಾಲಿಯು ಫ್ರೀಡಂ ಪಾರ್ಕ್‌ನಿಂದ ಪ್ರಾರಂಭಗೊಂಡು ನೆಲಮಂಗಲ ಮುಖೇನ ಸಾಗುವುದರಿಂದ, ಇದು ಕೇವಲ ನಗರದ ಪಶ್ಚಿಮ ವಿಭಾಗಕ್ಕೆ ಸೀಮಿತವಾಗಿರದೇ ನಗರದ ಉತ್ತರ ವಿಭಾಗದ ಪ್ರದೇಶಗಳಲ್ಲಿ ಮತ್ತು ನಗರದ ಹೊರವಲಯದ ಮುಖೇನ ಸಹ ಸಾಗಿ ಹೋಗುವುದರಿಂದ, ಬೆಂಗಳೂರು ನಗರದ ಅರ್ಧ ಭಾಗವು ಸಂಚಾರ ದಟ್ಟಣೆಗೆ ಒಳಪಡುತ್ತದೆ ಮತ್ತು ಬೈಕ್ ರ್ಯಾಲಿ ಸಾಗುವಂತಹ ಇತರೆ ಪ್ರದೇಶಗಳಲ್ಲಿಯೂ ಸಹ ಕಾನೂನು ಸುವ್ಯವಸ್ಥೆಗೆ ಭಂಗವುಂಟಾಗುವಂತಹ ಸಂದರ್ಭಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಈ ಬೈಕ್ ರ್ಯಾಲಿಯನ್ನು ನಡೆಸಿದಲ್ಲಿ, ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟಾಗುವ ಸಾಧ್ಯತೆ ಇರುವುದಲ್ಲದೇ ಬೈಕ್ ರ್ಯಾಲಿ ಸಂದರ್ಭದಲ್ಲಿ ಅಹಿತಕರ ಘಟನೆ ಉಂಟಾಗಿ ಸಾರ್ವಜನಿಕ ಪ್ರಾಣ, ಆಸ್ತಿ ಹಾಗೂ ಭದ್ರತೆಗೆ ಹಾನಿವುಂಟಾಗುವ ಸಾಧ್ಯತೆ ಇರುತ್ತದೆಂದು ಹಾಗೂ ಈ ಬಗ್ಗೆ ಪ್ರತಿಬಂಧಕಾಜ್ಞೆ ವಿಧಿಸದಿದ್ದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಹೆಚ್ಚಿನ ಸಾಧ್ಯತೆ ಇರುತ್ತದೆಂದು ನನಗೆ ಮನವರಿಕೆಯಾಗಿರುತ್ತದೆ.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೨೧, ೨೦೧೭ ೪೭೫೫

ಆದೇಶ ಸಂಖ್ಯೆ : ಎಂ.ಎ.ಜಿ.(2)/15/ಪ್ರಜ್ಞಾ/ಇತರೆ/2017.

ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ, ಶ್ರೀ ಟಿ. ಸುನೀಲ್‌ಕುಮಾರ್, ಐ.ಪಿ.ಎಸ್. ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಆದ ನಾನು ನನಗಿರುವ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪೊಲೀಸ್ ಕಾಯ್ದೆ, ಕಲಂ 35(3) ಅಡಿ ಈ ಕೆಳಕಂಡಂತೆ ಆದೇಶ ಮಾಡಿರುತ್ತೇನೆ.

ಶ್ರೀ ಶಿವಾಜಿರಾವ್, ಕಾರ್ಯಾಲಯ ಕಾರ್ಯದರ್ಶಿ, ಬಿಜೆಪಿ, ಬೆಂಗಳೂರು ನಗರ ರವರು ದಿನಾಂಕ: 05-09-2017 ರಂದು ಬೈಕ್‌ರ್ಯಾಲಿ ನಡೆಸಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ಮೇಲ್ಕಂಡಂತೆ ವಿವರಿಸಿರುವ ಹಿನ್ನೆಲೆಯಲ್ಲಿ ದಿನಾಂಕ: 04/05-09-2017 ರ ಮಧ್ಯರಾತ್ರಿ 12-00 ಗಂಟೆಯಿಂದ ದಿನಾಂಕ: 08/09-09-2017ರ ಮಧ್ಯರಾತ್ರಿ 12-00 ಗಂಟೆವರೆಗೆ ಸಾರ್ವಜನಿಕ ಹಿತದೃಷ್ಟಿ ಮತ್ತು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅರ್ಜಿದಾರರು ನಡೆಸಲು ಉದ್ದೇಶಿಸಿರುವ ಬೈಕ್ ರ್ಯಾಲಿಯನ್ನು ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ನಡೆಸದಂತೆ ಪ್ರತಿಬಂಧಕಾಜ್ಞೆಯನ್ನು ವಿಧಿಸಿರುತ್ತೇನೆ.

ಸದರಿ ಆದೇಶವನ್ನು ಶ್ರೀ ಶಿವಾಜಿರಾವ್, ಕಾರ್ಯಾಲಯ ಕಾರ್ಯದರ್ಶಿ, ಬಿಜೆಪಿ ಕಾರ್ಯಾಲಯ, ಬೆಂಗಳೂರು ರವರಿಗೆ ಜಾರಿ ಮಾಡಲು ಡಿಸಿಪಿ ಪಶ್ಚಿಮ ವಿಭಾಗದವರು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಈ ಆದೇಶವನ್ನು ನನ್ನ ಸಹಿ ಮತ್ತು ಮುದ್ರೆಯೊಂದಿಗೆ ದಿನಾಂಕ 04-09-2017 ರಂದು ಹೊರಡಿಸಿರುತ್ತೇನೆ.

PR-713

ಪೊಲೀಸ್ ಆಯುಕ್ತರು ಮತ್ತು

ಅಪರ ಜಿಲ್ಲಾ ದಂಡಾಧಿಕಾರಿಗಳು

ಬೆಂಗಳೂರು ನಗರ.

ಜಲಸಂಪನ್ಮೂಲ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಜಸಂಇ 45 ಎಂಟಿಪಿ 2017, ಬೆಂಗಳೂರು, ದಿನಾಂಕ: 15-07-2017.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ, '1999ರ ಕಲಂ 4(ಎ) ಅಡಿಯಲ್ಲಿ ನೀಡಲಾಗಿರುವ ಅಧಿಕಾರದನ್ವಯ ಹಾಗೂ ಸುತ್ತೋಲೆ ಸಂಖ್ಯೆ:ಪಿಡಬ್ಲ್ಯುಡಿ 381 ಆಕೋ-3/06, ದಿನಾಂಕ: 10-11-2006ರಲ್ಲಿ ನೀಡಿರುವ ಸ್ಪಷ್ಠೀಕರಣದ ಅನ್ವಯ, ನಂ.2 ಕಾಲುವೆ ವಿಭಾಗ ವಡ್ಡರಹಟ್ಟಿ ವಿಭಾಗದಡಿಯಲ್ಲಿ ಬರುವ ನಂ.2 ಉಪವಿಭಾಗ ಕಾರಟಗಿ ವ್ಯಾಪ್ತಿಯ ತುಂಗಭದ್ರಾ ಎಡದಂಡೆ ಮುಖ್ಯ ವ್ಯಾಪ್ತಿಯಲ್ಲಿ ಬರುವ ಮೈಲ್ 36 (ಕಿ.ಮೀ.-60)ರಲ್ಲಿ ಸರಪಳಿ 1947 ಬಲಭಾಗದ ವಿತರಣಾ ಕಾಲುವೆ 27ರ ಪೈಪಿಂಗ್ ರೆಷ್ಟೋರೇಶನ್ ಕಾಮಗಾರಿಯನ್ನು "ತುರ್ತು ಕಾಮಗಾರಿ" ಎಂದು ಘೋಷಿಸಿ, ಇದನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ '1999ರ ಸೆಕ್ಷನ್ 4(ಎ) ಅಡಿಯಲ್ಲಿ ವಿನಾಯಿತಿ ನೀಡಿ ಅಧಿಸೂಚನೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR-710

ಸಿ.ಶ್ರೀನಿವಾಸಲು

SC-25

ಸರ್ಕಾರದ ಅಧೀನ ಕಾರ್ಯದರ್ಶಿ (ತಾಂತ್ರಿಕ-1)

ಜಲಸಂಪನ್ಮೂಲ ಇಲಾಖೆ.

ಗೃಹ ಆಯುಕ್ತರವರ ಕಛೇರಿ, ಕರ್ನಾಟಕ ಗೃಹ ಮಂಡಳಿ, ಕಾವೇರಿ ಭವನ, ಬೆಂಗಳೂರು.

ಭೂಸ್ವಾಧೀನ ಕಾಯ್ದೆ 1894ರ ಕಲಂ 16(2)ರನ್ವಯ ಪ್ರಕಟಣೆ

ಅಧಿಸೂಚನೆಯ ಕ್ರಮಾಂಕ: ಕಗೃಮಂ/ಭೂಸ್ವಾವಿ/ಹಾ(ದೇ.ಯ)/01/2013-14, ದಿನಾಂಕ: 17-07-2017.

ಭೂಸ್ವಾಧೀನ ಅಧಿನಿಯಮ 1894 ಸೆಕ್ಷನ್ 16(2)ರನ್ವಯ ಕ್ರಮ ಸಂ: ಕಗೃಮಂ/ ಭೂಸ್ವಾವಿ/ ಹಾ(ದೇ.ಯ)/ 01/ 2013-14 ರಾಜ್ಯ ಸರ್ಕಾರದ ಕರ್ನಾಟಕ ಅಧಿನಿಯಮ 17/1961ರಲ್ಲಿ ತಿದ್ದುಪಡಿಯಾದಂತೆ ಭೂಸ್ವಾಧೀನ ಅಧಿನಿಯಮ 1894ರನ್ವಯ ಕಲಂ 16ರ ಪ್ರಕರಣ (2) ಉಪಪ್ರಕರಣ ಮೇರೆಗೆ ಈ ಮುಂದಿನ ಅನುಸೂಚಿಯಲ್ಲಿ ಸೂಚಿಸಲಾದ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಕರ್ನಾಟಕ ಗೃಹ ಮಂಡಳಿ, ಬೆಂಗಳೂರುರವರ ವಸತಿ ಯೋಜನೆಯ ಸಲುವಾಗಿ ಅಧಿಕೃತವಾಗಿ ಸದರಿ ಭೂಸ್ವಾಧೀನ ಅಧಿನಿಯಮ ಪ್ರಕರಣ 16(1)ರಂತೆ ವಶಪಡಿಸಿಕೊಳ್ಳಲಾಗಿದೆ ಎಂದು ಈ ಮೂಲಕ ಅಧಿಸೂಚಿಸಲಾಗಿದೆ.

ಅನುಸೂಚಿ

ಕ್ರ. ಸ ಂ. 6(1)ರ ಅಧಿಸೂಚನೆಯಂತೆ ಕ್ರಮ ಸಂಖ್ಯೆ ಸ . ನಂ. ತ ರಹೆ ವಿಸ್ತೀರ್ಣ ಎ-ಗುಂ ವ ುಂಡಳಿವಶಕ್ಕೆ ಪ ಡೆದುಕೊಂಡ ದಿನಾಂಕ
1. 02 110/1+2+3+4+5/ಬ ಖುಷ್ಕಿ 1-03 11-05-2017
2. 03 110/1+2+3+4+5/ಕ1 ಖುಷ್ಕಿ 0-35 07-06-2017
3. 04 110/1+2+3+4+5/ಕ2 ಖುಷ್ಕಿ 0-23.08 07-06-2017

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೪೭೫೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೨೧, ೨೦೧೭ ಭಾಗ ೩
ಕ್ರ. ಸ ಂ. 6(1)ರ ಅಧಿಸೂಚನೆಯಂತೆ ಕ್ರಮ ಸಂಖ್ಯೆ ಸ . ನಂ. ತ ರಹೆ ವಿಸ್ತೀರ್ಣ ಎ-ಗುಂ ವ ುಂಡಳಿವಶಕ್ಕೆ ಪ ಡೆದುಕೊಂಡ ದಿನಾಂಕ
4. 05 110/1+2+3+4+5/ಕ3 ಖುಷ್ಕಿ 0-35 07-06-2017
5. 06 110/1+2+3+4+5/ಕ4 ಖುಷ್ಕಿ 0-29.08 07-06-2017
6. 07 110/1+2+3+4+5/ಕ5 ಖುಷ್ಕಿ 1-20 11-05-2017
7. 08 110/1+2+3+4+5/ಡ ಖುಷ್ಕಿ 5-03 20-05-2017
8. 09 110/1+2+3+4+5/ಇ ಖುಷ್ಕಿ 5-39 21-10-2016
9. 10 110/1+2+3+4+5/ಫ ಖುಷ್ಕಿ 4-00 22-11-2016
10. 11 110/1+2+3+4+5/ಗ ಖುಷ್ಕಿ 2-00 16-09-2016
11. 12 112/1 ಖುಷ್ಕಿ 4-00 09-06-2017
12. 13 112/2 ಖುಷ್ಕಿ 4-00 31-08-2016
13. 14 112/3 ಖುಷ್ಕಿ 3-10 31-08-2016
14. 15 112/4 ಖುಷ್ಕಿ 4-12 13-01-2017
15. 18 113/1 ಖುಷ್ಕಿ 10-15 0-01(ಖ) 09-11-2016
16. 19 113/2ಅ/1 ಖುಷ್ಕಿ 3-20 0-0.08(ಖ) 10-01-2017
17. 20 113/2ಬ ಖುಷ್ಕಿ 10-02 0-1.08 28-10-2016
18. 23 114/3ಅ ಖುಷ್ಕಿ 1-00 03-12-2016
19. 24 114/3ಬ ಖುಷ್ಕಿ 4-15 0-02(ಖ) 23-11-2016
20. 25 114/4 ಖುಷ್ಕಿ 5-07 0-02(ಖ) 20-05-2017
21. 27 114/5ಬ ಖುಷ್ಕಿ 2-39 0-01(ಖ) 16-09-2016
ಒಟ್ಟು 75-28 0-08(ಖ)

PD-116

ವಿಶೇಷ ಭೂಸ್ವಾಧೀನಾಧಿಕಾರಿಗಳು

SC-50

ಕರ್ನಾಟಕ ಗೃಹ ಮಂಡಳಿ

ಕಾವೇರಿ ಭವನ, ಬೆಂಗಳೂರು

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 21 September 2017. Indian Gazettes, https://egazette.servantsofknowledge.in/details/in.gazette.karnataka_new.2017-09-21.Part-3/. Archive identifier in.gazette.karnataka_new.2017-09-21.Part-3.