Servants of Knowledge
Karnataka Gazette · Government of Karnataka

Karnataka Gazette, Part Part-1, 05 October 2017

Published 05 October 2017

Part
Part-1
Identifier
in.gazette.karnataka_new.2017-10-05.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೨

Volume 152

ಬೆಂಗಳೂರು, ಗುರುವಾರ, ಅಕ್ಟೋಬರ್ ೫, ೨೦೧೭ (ಆಶ್ವಯುಜ ೧೩, ಶಕ ವರ್ಷ ೧೯೩೯)

Bengaluru, Thursday, October 5, 2017 ( Aashwayuja 13, Shaka Varsha 1939)

ಸಂಚಿಕೆ ೩೯

Issue 39

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಕಾರ್ಮಿಕ ಸಚಿವಾಲಯ

ವಿಷಯ : ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ವಿಮಾ ಯೋಜನೆಯಡಿ ನೋಂದಾಯಿತರಾಗಿರುವ ಚಾಲಕರಿಗೆ ತರಬೇತಿಯನ್ನು ಹಾಗೂ ಪ್ರೋತ್ಸಾಹಧನವನ್ನು ನೀಡುವ "ಅಪಘಾತ ಜೀವ ರಕ್ಷಕ ಯೋಜನೆ" ಯ ಕ್ರಿಯಾ ಯೋಜನೆಯನ್ನು 2017-18ರ ಸಾಲಿಗೆ ಮುಂದುವರೆಸುವ ಕುರಿತು.

ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ: ಕಾಇ 145 ಎಲ್ಇಟಿ 2016, ದಿ: 17-08-2016

2) ಸರ್ಕಾರದ ಆದೇಶ ಸಂಖ್ಯೆ: ಕಾಇ 145 ಎಲ್ಇಟಿ 2016 ದಿ: 28-12-2016

3) ಕಾರ್ಮಿಕ ಆಯುಕ್ತರ ಪತ್ರ ಸಂ:ಕಾಆ/ಅಜೀರ/ಸಿಆರ್-01/2016-17, ದಿನಾಂಕ: 14-06-

2017

4) ಜಂಟಿ ಕಾರ್ಮಿಕ ಆಯುಕ್ತರು ಮತ್ತು ಜಂಟಿ ಕಾರ್ಯದರ್ಶಿ ಕರ್ನಾಟಕ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಬೆಂಗಳೂರು ಇವರ ಪತ್ರ ಸಂಖ್ಯೆ: ಅಸಂಕಾ ಇಎಸ್‌ಟಿ/ಆಜೀರ/ಸಿಆರ್-27/2016-17, ದಿ:09-08-2017 ಮತ್ತು ದಿ: 29-08-2017.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ(1) ರಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಜಾರಿಗೊಳಿಸುತ್ತಿರುವ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆಯಡಿ ನೋಂದಾಯಿತರಾಗಿರುವ ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ ತರಬೇತಿ ಹಾಗೂ ಪ್ರೋತ್ಸಾಹಧನವನ್ನು ನೀಡುವ "ಅಪಘಾತ ಜೀವ ರಕ್ಷಕ ಯೋಜನೆ" ಯನ್ನು 2016-17ನೇ ಸಾಲಿಗೆ ಲೆಕ್ಕ ಶೀರ್ಷಿಕೆ 2230- 01-103-7-03ರಲ್ಲಿ ಚಾಲಕರಿಗೆ ವಿಮಾ ಯೋಜನೆಯಡಿ ಒದಗಿಸಿರುವ ರೂ.850.00 ಲಕ್ಷಗಳ ಅನುದಾನದಲ್ಲಿ ರೂ.100.00 ಲಕ್ಷಗಳನ್ನು ಬಳಸಿಕೊಂಡು ಮಂಡಳಿಯ ವತಿಯಿಂದ ಅನುಷ್ಟಾನಗೊಳಿಸಲು ದಿನಾಂಕ: 17-08-2016 ರಂದು ಆದೇಶಿಸಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ: (2)ರಲ್ಲಿ 2016-17ನೇ ಸಾಲಿಗೆ "ಅಪಘಾತ ಜೀವ ರಕ್ಷಕ ಯೋಜನೆ" ಯನ್ನು ಅನುಷ್ಠಾನಗೊಳಿಸಲು ಅನುಬಂಧದಲ್ಲಿನ ಕ್ರಿಯಾ ಯೋಜನೆಗೆ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ: (3)ರಲ್ಲಿ ಸದರಿ ಯೋಜನೆಯ ಜಾರಿಗಾಗಿ ತರಬೇತಿ ಕಾರ್ಯಾಗಾರಗಳನ್ನು ನಡೆಸಲು ತಗಲುವ ಆಯವ್ಯಯ ಮತ್ತು ವೆಚ್ಚಗಳ ಮಾಹಿತಿಯನ್ನೊಳಗೊಂಡ ಕ್ರಿಯಾ ಯೋಜನೆಗೆ ಕಾರ್ಮಿಕ ಆಯುಕ್ತರು ಸರ್ಕಾರದ ಅನುಮೋದನೆ ಕೋರಿರುತ್ತಾರೆ.

(೧೧೬೭)

೧೧೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೫, ೨೦೧೭ ಭಾಗ ೧

ಮುಂದುವರೆದು ಮೇಲೆ ಓದಲಾದ ಕ್ರಮ ಸಂಖ್ಯೆ (4)ರ ದಿನಾಂಕ: 09-08-2017 ಮತ್ತು 29-08-2017ರ ಪತ್ರಗಳಲ್ಲಿ ಸದರಿ ಯೋಜನೆಯನ್ನು ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಜಾರಿಗೊಳಿಸಬೇಕಾಗಿದೆಯೆಂದು ತಿಳಿಸುತ್ತಾ, 2016-17ನೇ ಸಾಲಿನಲ್ಲಿ ಹಂಚಿಕೆಯಾಗಿದ್ದ ಒಟ್ಟು ರೂ. 100.00 ಲಕ್ಷಗಳ ಆಯವ್ಯಯದಲ್ಲಿ ರೂ.70.00 ಲಕ್ಷಗಳು ಖರ್ಚಾಗದೆ ಬಾಕಿ ಉಳಿದಿರುವ ಅನುದಾನದ ಮೊತ್ತವು ಸೇರಿದಂತೆ 2017-18ನೇ ಪ್ರಸಕ್ತ ಸಾಲಿನಲ್ಲಿ ರೂ.100 ಲಕ್ಷಗಳು ಸೇರಿದಂತೆ ಒಟ್ಟು ರೂ.170 ಲಕ್ಷಗಳು ಈ ಯೋಜನೆಯ ಉದ್ದೇಶಕ್ಕಾಗಿ ಲಭ್ಯವಿರುವುದಾಗಿ ತಿಳಿಸಿರುತ್ತಾರೆ.

ಈ ಹಿನ್ನೆಲೆಯಲ್ಲಿ ಸದರಿ ಕ್ರಿಯಾ ಯೋಜನೆಯನ್ನು 2017-18ನೇ ಸಾಲಿಗೆ ಜಾರಿಗೊಳಿಸುವುದಕ್ಕಾಗಿ ಈ ಕೆಳಕಂಡಂತೆ ಸರ್ಕಾರಿ ಆದೇಶವನ್ನು ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಾಇ 255 ಎಲ್ಇಟಿ 2017 ಬೆಂಗಳೂರು, ದಿನಾಂಕ: 01-09-2017

2017-18ನೇ ಸಾಲಿಗೆ "ಅಪಘಾತ ಜೀವ ರಕ್ಷಕ ಯೋಜನೆ" ಯನ್ನು ಅನುಷ್ಠಾನಗೊಳಿಸಲು ಈ ಆದೇಶದೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿನ ಕ್ರಿಯಾ ಯೋಜನೆಗೆ ಸರ್ಕಾರದ ಅನುಮೋದನೆ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜಿ.ಎಂ. ಸಿದ್ಧರಾಜು

ಸರ್ಕಾರದ ಅಧೀನ ಕಾರ್ಯದರ್ಶಿ

ಕಾರ್ಮಿಕ ಇಲಾಖೆ.

"ಅಪಘಾತ ಜೀವ ರಕ್ಷಕ ಯೋಜನೆ"

2017-18ನೇ ಸಾಲಿನ ಕ್ರಿಯಾ ಯೋಜನೆ

I. ಪ್ರಸ್ತಾವನೆ:

ರಸ್ತೆ ಅಪಘಾತದಲ್ಲಿ ಸಿಲುಕಿದ ಗಾಯಾಳುಗಳಿಗೆ ಅಪಘಾತ ಸಂಭವಿಸಿದ ಮೊದಲ 60 ನಿಮಿಷಗಳ ಸುವರ್ಣ ಅವಧಿಯಲ್ಲಿ ವೈದ್ಯಕೀಯ ಸೌಲಭ್ಯಗಳು ಲಭ್ಯವಾದಲ್ಲಿ ಪ್ರತಿವರ್ಷ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜೀವಗಳನ್ನು ರಕ್ಷಿಸಬಹುದಾಗಿದೆ ಎನ್ನುವುದನ್ನು ಮನಗಂಡು ಕರ್ನಾಟಕ ರಾಜ್ಯ ಸರ್ಕಾರವು 2016-17ನೇ ಸಾಲಿನಲ್ಲಿ "ಅಪಘಾತ ಜೀವ ರಕ್ಷಕ ಯೋಜನೆ" ಯನ್ನು ಜಾರಿಗೆ ತಂದಿದ್ದು ಯೋಜನೆಯನ್ನು ಅನುಷ್ಠಾನಗೊಳಿಸುವ ಹೊಣೆಯನ್ನು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ವಹಿಸಿರುತ್ತದೆ.

2016-17ನೇ ಸಾಲಿನಲ್ಲಿ ಪ್ರಾಯೋಗಿಕವಾಗಿ, ರಾಜ್ಯದಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಿಸಿರುವ 9 ಜಿಲ್ಲೆಗಳಲ್ಲಿ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯವನ್ನು ಮೆ|| ಸೇಂಟ್ ಜಾನ್ ಆಂಬ್ಯುಲೆನ್ಸ್ (ಇಂಡಿಯಾ) ಹಾಗೂ ಮೆ|| ರೆಡ್ ಕ್ರಾಸ್ ಸೊಸೈಟಿಯ ಸಹಯೋಗದೊಂದಿಗೆ ನವೆಂಬರ್ 2016ರಿಂದ ಪ್ರಾರಂಭಿಸಿದ್ದು, ಸದರಿ ಸಾಲಿನಲ್ಲಿ 2,373 ಚಾಲಕರಿಗೆ ಪ್ರಥಮ ಚಿಕಿತ್ಸಾ ತರಬೇತಿಯನ್ನು ನೀಡಲಾಗಿದೆ. ಅಪಘಾತ ಜೀವ ರಕ್ಷಕ ಯೋಜನೆಯಡಿ ತರಬೇತಿ ಹೊಂದಬೇಕಾದ ಚಾಲಕರು ಕಡ್ಡಾಯವಾಗಿ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆಯಡಿ ಫಲಾನುಭವಿಯಾಗಿ ನೋಂದಣಿಯಾಗಬೇಕಾದ ಅವಶ್ಯಕತೆಯಿರುತ್ತದೆ. ಆದರೆ, ಸದರಿ ಯೋಜನೆಯನ್ನು "ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ" ಎಂದು ಪರಿಷ್ಕರಿಸಿದ್ದು, ಸಾರಿಗೆ ಇಲಾಖೆಯಡಿ ಖಾಸಗಿ ವಾಣಿಜ್ಯ ಸಾರಿಗೆ ವಾಹನದ ಅಧಿಕೃತ ಚಾಲನಾ ಪ್ರಮಾಣ ಪತ್ರ ಹೊಂದಿದ ಎಲ್ಲಾ ಚಾಲಕರು ಯೋಜನೆಯು ಜಾರಿಗೆ ಬಂದ ತಕ್ಷಣದಿಂದ ಫಲಾನುಭವಿಗಳೆಂದು ಪರಿಗಣಿಸಲಾಗುವುದು ಹಾಗೂ ನಂತರದ ದಿನಗಳಲ್ಲಿ ಅಂತಹ ಪ್ರಮಾಣ ಪತ್ರ ಹೊಂದಿದ ದಿನಾಂಕದಿಂದ ಫಲಾನುಭವಿಗಳಾಗಲು ಅರ್ಹರಾಗುತ್ತಾರೆ.

ಪ್ರಸಕ್ತ ವರ್ಷ ಅಂದರೆ 2017-18ನೇ ಸಾಲಿನಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಚಾಲಕರಿಗೆ ಪ್ರಥಮ ಚಿಕಿತ್ಸಾ ತರಬೇತಿ ನೀಡಿ ಅಪಘಾತ ಜೀವ ರಕ್ಷಕರನ್ನಾಗಿಸುವ ಉದ್ದೇಶ ಹೊಂದಲಾಗಿದೆ.

II. ಯೋಜನೆಗೆ ಆಯವ್ಯಯ:

2017-18ನೇ ಸಾಲಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯ ಲೆಕ್ಕಶೀರ್ಷಿಕೆ: 2230-01-103-7-03ರಡಿ ರೂ.1750 ಲಕ್ಷಗಳ ಆಯವ್ಯಯ ನಿಗಧಿಪಡಿಸಲಾಗಿದೆ. ಸದರಿ ಮೊತ್ತದಲ್ಲಿ ರೂ.100 ಲಕ್ಷಗಳ ಅನುದಾನವನ್ನು ಅಪಘಾತ ಜೀವ ರಕ್ಷಕ ಯೋಜನೆಗೆ ಮೀಸಲಿಟ್ಟ, ಸದರಿ ಅನುದಾನವನ್ನು ಸಂಪೂರ್ಣವಾಗಿ ಅಪಘಾತ ಜೀವರಕ್ಷಕರಿಗೆ ತರಬೇತಿ ನೀಡುವ ಉದ್ದೇಶಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೫, ೨೦೧೭ ೧೧೬೯

2017-18ನೇ ಸಾಲಿನಲ್ಲಿ ಅಪಘಾತ ಜೀವ ರಕ್ಷಕ ಯೋಜನೆಯಡಿ ಚಾಲಕರಿಗೆ ಪ್ರಥಮ ಚಿಕಿತ್ಸಾ ತರಬೇತಿ ನೀಡಲು ನಿಗಧಿಪಡಿಸಿದ ಗುರಿ

ಕ್ರ. ಸ ಂ. ಜಿಲ್ಲೆಯ ಹೆಸರು ಗುರಿ ಜಿಲ್ಲಾವಾರು ಆಯವ್ಯಯ ಹ ಂಚಿಕೆ (ರೂ.)
1 ಬ ಂಗಳೂರು – 1 ೆ 500 4,00,000
2 ಬ ಂಗಳೂರು – 2 ೆ 500 4,00,000
3 ಬ ಂಗಳೂರು – 3 ೆ 500 4,00,000
4 ಬ ಂಗಳೂರು - 4 ೆ 500 4,00,000
5 ಬ ಂಗಳೂರು - 5 ೆ 500 4,00.000
6 ಬ ಂಗಳೂರು - 6 ೆ 500 4,00,000
7 ಚಿತ್ರದುರ್ಗ 350 2,80,000
8 ಹಾಸನ 350 2,80,000
9 ಬಳ್ಳಾರಿ 400 3,20,000
10 ದ ಕಿ ಣ ಕನ್ನಡ ್ಷ 400 3,20,000
11 ತ ುಮಕೂರು 350 2,80,000
12 ರಾಮನಗರ 300 2,40,000
13 ವಿಜಯಪುರ 350 2,80,000
14 ಬ ಳ ೆ ಗಾವಿ 400 3,20,000
15 ಕಲಬುರ್ಗಿ 400 3,20,000
16 ಉಡುಪಿ 400 3,20,000
17 ಬೀದರ್ 300 2,40,000
18 ಶಿವಮೊಗ್ಗ 350 2,80,000
19 ವ ುಂಡ್ಯ 350 2,80,000
20 ಉತ್ತರ ಕನ್ನಡ 300 2,40,000
21 ಬಾಗಲಕೋಟೆ 350 2,80,000
22 ವ ುೖಸೂರು ೆ 450 3,60,000
23 ಚಾಮರಾಜನಗರ 250 2,00,000
24 ರಾಯಚೂರು 350 2,80,000
25 ಚಿಕ್ಕಮಗಳೂರು 300 2,40,000
26 ದಾವಣಗೆರೆ 350 2,80,000
27 ಚಿಕ್ಕಬಳ್ಳಾಪುರ 300 2,40,000
28 ಕೊಪ್ಪಳ 300 2,40,000
29 ದ ಾರವಾಡ 400 3,20,000
30 ಕೊಡಗು 300 2,40,000
31 ಹಾವೇರಿ 350 2,80,000
32 ಕೋಲಾರ 300 2,40,000
33 ಯಾದಗಿರಿ 250 2,00,000
34 ಗದಗ 250 2,00,000
ಒಟ್ಟು 12,500 100,00,000

2016-17ನೇ ಸಾಲಿನಲ್ಲಿ ಅಪಘಾತ ಜೀವರಕ್ಷಕ ಯೋಜನೆಗೆ ಮೀಸಲಾಗಿರುವ ರೂ. 100 ಲಕ್ಷಗಳಲ್ಲಿ "ಅಪಘಾತ ಜೀವರಕ್ಷಕರಿಗೆ ತರಬೇತಿಗಾಗಿ ತೆಗೆದಿರಿಸಿದ ರೂ. 30 ಲಕ್ಷಗಳನ್ನು ಮಾತ್ರ ಬಳಸಿಕೊಳ್ಳಲಾಗಿದ್ದು, ವಿವಿಧ ಉದ್ದೇಶಗಳಿಗೆ ಮೀಸಲಿಟ್ಟ ರು. 70 ಲಕ್ಷಗಳು ಖರ್ಚಾಗದೆ ಬಾಕಿ ಉಳಿದಿರುತ್ತದೆ.

೧೧೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೫, ೨೦೧೭ ಭಾಗ ೧

ಅದ್ದರಿಂದ ಬಾಕಿ ಉಳಿದ ಮೊತ್ತವು ಸೇರಿದಂತೆ ಸದರಿ ಯೋಜನೆಯ ಅನುಷ್ಠಾನಕ್ಕಾಗಿ 2017-18ನೇ ಸಾಲಿನಲ್ಲಿ ಒಟ್ಟು ರೂ. 170 ಲಕ್ಷಗಳು ಲಭ್ಯ ಇರುತ್ತವೆ.

ಸದರಿ ಮೊತ್ತವನ್ನು ಈ ಕೆಳಕಂಡ ಉದ್ದೇಶಕ್ಕೆ ಹಂಚಿಕೆ ಮಾಡಿಕೊಳ್ಳಲಾಗಿದೆ.

ಕ್ರ.ಸಂ. ಚ ಟುವಟಿಕೆಗಳು ಹ ಂಚಿಕೆ ಮಾಡಿದ ಮೊತ್ತ
1. ಜೀವರಕ್ಷಕರಿಗೆ ಪ್ರೋತ್ಸಾಹಧನ ರೂ. 20,00,000/-
2. ಸ ಂವಹನ ಚಟುವಟಿಕೆಗಳು ರೂ. 40,00,000/-
3. ತ ಂತ್ರಾಂಶ ಅಭಿವೃದ್ಧಿ ರೂ. 5,00,000/-
4. ಅಪಘಾತ ಜೀವರಕ್ಷಕರಿಗೆ ತರಬೇತಿ ರೂ. 100,00,000/-
5. ಯೋಜನೆಯಡಿ ಆಡಳಿತಾತ್ಮಕ ವೆಚ್ಚ ಮತ್ತು ಇತರೆ ಖರ್ಚುಗಳು ರೂ. 5,00,000/-

ಜಿ.ಎಂ. ಸಿದ್ಧರಾಜು

PR – 299

ಸರ್ಕಾರದ ಅಧೀನ ಕಾರ್ಯದರ್ಶಿ

SC - 100

ಕಾರ್ಮಿಕ ಇಲಾಖೆ.

ಆರ್ಥಿಕ ಸಚಿವಾಲಯ

ವಿಷಯ : ಖಜಾನೆ-2 ಸಮಗ್ರ ಹಣಕಾಸು ನಿರ್ವಹಣೆ ವ್ಯವಸ್ಥೆಯಲ್ಲಿ (ಐ.ಎಫ್.ಎಂ.ಎಸ್) ಇಲಾಖೆಗಳ ಆರ್ಥಿಕ ವಹಿವಾಟುಗಳನ್ನು ನಿರ್ವಹಿಸುವ ಕುರಿತು.

ಓದಲಾಗಿದೆ : 1. ಸರ್ಕಾರದ ಆದೇಶ ಸಂ:ಆಇ 03 ಟಿಎಆರ್ 2016, ದಿ: 30-3-2016.

2. ಸರ್ಕಾರದ ಆದೇಶ ಸಂ:ಆಇ 03 ಟಿಎಆರ್ 2016, ದಿ: 26-8-2016.

3. ಸರ್ಕಾರದ ಆದೇಶ ಸಂ:ಆಇ 03 ಟಿಎಆರ್ 2016, ದಿ: 17-10-2016.

4. ಸರ್ಕಾರದ ಕಾರ್ಯದರ್ಶಿ ಖಜಾನೆ-2 ಆರ್ಥಿಕ ಇಲಾಖೆ ಹಾಗೂ ಪದನಿಮಿತ್ತ ಖಜಾನೆ ಆಯುಕ್ತರ ಪತ್ರ ಸಂ:ಆಇ:ಕಾ/ಖ2/92/2015-16, ದಿ: 03-4-2017.

ಪ್ರಸ್ತಾವನೆ :

1. ಮೇಲೆ ಓದಲಾದ (1), (2) ಮತ್ತು (3)ರ ಸರ್ಕಾರದ ಆದೇಶಗಳಲ್ಲಿ ಒಟ್ಟು 91 ಇಲಾಖೆಗಳ ರಾಜ್ಯ ವಲಯಕ್ಕೆ ಸಂಬಂಧಿಸಿದ, ಜಮೆ, ಪಾವತಿ, ಠೇವಣಿ ಖಾತೆಗಳ ನಿರ್ವಹಣೆ, ಲೆಕ್ಕಗಳ ಸಮನ್ವಯ ಮುಂತಾದ ಹಣಕಾಸಿನ ವಹಿವಾಟುಗಳನ್ನು ಖಜಾನೆ-2ರಲ್ಲಿ ನಿರ್ವಹಿಸಲು ಆದೇಶಿಸಿದೆ.

2. ಮೇಲೆ (4)ರಲ್ಲಿ ಓದಲಾದ ಪತ್ರದಲ್ಲಿ ಕಾರ್ಯದರ್ಶಿಗಳು, ಖಜಾನೆ-2 ಇವರು, ಲೋಕೋಪಯೋಗಿ ಮತ್ತು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ವ್ಯಾಪ್ತಿಗೆ ಒಳಪಡುವ (1) ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ) (2) ಸಂಪರ್ಕ ಮತ್ತು ಕಟ್ಟಡಗಳು (ಉತ್ತರ) (3) ರಾಷ್ಟ್ರೀಯ ಹೆದ್ದಾರಿಗಳು ಬೆಂಗಳೂರು ಮತ್ತು (4) ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ (KSHIP) ಈ 4 ವಿಭಾಗಗಳು ದಿ : 01-05-2017 ರಿಂದ ರಾಜ್ಯ ವಲಯಕ್ಕೆ ಸಂಬಂಧಿಸಿದ ಜಮೆ, ಪಾವತಿ, ಠೇವಣಿ ಖಾತೆಗಳ ನಿರ್ವಹಣೆ, ಲೆಕ್ಕಗಳ ಸಮನ್ವಯ ಮುಂತಾದ ಹಣಕಾಸಿನ ವಹಿವಾಟುಗಳನ್ನು ಖಜಾನೆ-2ರಲ್ಲಿ ನಿರ್ವಹಿಸಲು ಸೂಕ್ತ ಆದೇಶವನ್ನು ಹೊರಡಿಸುವಂತೆ ಕೋರಿರುತ್ತಾರೆ.

4. ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂ : ಆಇ : 17 ಟಿಎಆರ್ 2017, ಬೆಂಗಳೂರು, ದಿನಾಂಕ : 22-04-2017.

1. ದಿನಾಂಕ : 01-05-2017ರಿಂದ ಜಾರಿಗೆ ಬರುವಂತೆ ಲೋಕೋಪಯೋಗಿ ಮತ್ತು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ವ್ಯಾಪ್ತಿಗೆ ಒಳಪಡುವ (1) ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ) (2) ಸಂಪರ್ಕ ಮತ್ತು ಕಟ್ಟಡಗಳು (ಉತ್ತರ) (3) ರಾಷ್ಟ್ರೀಯ ಹೆದ್ದಾರಿಗಳು ಬೆಂಗಳೂರು ಮತ್ತು (4) ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ (KSHIP) ಈ 4 ವಿಭಾಗಗಳು ರಾಜ್ಯವಲಯಕ್ಕೆ ಸಂಬಂಧಿಸಿದ ಜಮೆ, ಪಾವತಿ, ಠೇವಣಿ ಖಾತೆಗಳು ನಿರ್ವಹಣೆ, ಲೆಕ್ಕಗಳ ಸಮನ್ವಯ ಮುಂತಾದ ಹಣಕಾಸಿನ ವಹಿವಾಟುಗಳನ್ನು ಖಜಾನೆ-2ರಲ್ಲಿ ನಿರ್ವಹಿಸಲು ಹಾಗೂ ತಮ್ಮ ವೇತನ ಮತ್ತು ವೇತನಕ್ಕೆ ಸಂಬಂಧಿಸಿದಂತೆ ಭತ್ಯೆಗಳೇತರ ಬಿಲ್ಲುಗಳನ್ನು (ಸಾದಿಲ್ವಾರು, ಪ್ರಯಾಣ ಭತ್ಯೆ ಇತ್ಯಾದಿ) ಕಡ್ಡಾಯವಾಗಿ ಖಜಾನೆ-2ರಲ್ಲಿ ಸಲ್ಲಿಸುವಂತೆ ಆದೇಶಿಸಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೫, ೨೦೧೭ ೧೧೭೧

2. ಈ ಇಲಾಖೆಗಳ ವೇತನ ಮತ್ತು ವೇತನಕ್ಕೆ ಸಂಬಂಧಿಸಿದ ಭತ್ಯೆಗಳ ಬಿಲ್ಲುಗಳನ್ನು ಯಾವ ನಿರ್ದಿಷ್ಟ ದಿನಾಂಕದಿಂದ ಖಜಾನೆ-2ರಲ್ಲಿ ಸಲ್ಲಿಸಬೇಕು ಹಾಗೂ ಜಮೆ ಠೇವಣಿ ಖಾತೆಗಳನ್ನು ಯಾವ ನಿರ್ದಿಷ್ಟ ದಿನಾಂಕದಿಂದ ಖಜಾನೆ-2ರಲ್ಲಿ ನಿರ್ವಹಿಸಬೇಕು ಎಂಬುದನ್ನು ಖಜಾನೆ-2ರ ಯೋಜನಾ ನಿರ್ವಹಣಾ ಘಟಕವು (PMU) ನಿಗಧಿಪಡಿಸುವಂತೆ ತಿಳಿಸಿದೆ.

3. ಈ 4 ವಿಭಾಗಗಳು ಆರ್ಥಿಕ ಸೂಚನೆಗಳನ್ನು ಹೊಂದಿರುವ ತಮ್ಮ ಆದೇಶಗಳು, ಪತ್ರ ವ್ಯವಹಾರಗಳು, ಸುತ್ತೋಲೆಗಳು ಇತ್ಯಾದಿಗಳನ್ನು ದಿನಾಂಕ : 01-05-2017 ರಿಂದ ಕಡ್ಡಾಯವಾಗಿ ಖಜಾನೆ-2ರ ಮೂಲಕವೇ ಹೊರಡಿಸತಕ್ಕದ್ದು.

4. ಖಜಾನೆ-2 ವ್ಯವಸ್ಥೆಯಲ್ಲಿ ಖಜಾನೆಗಳಿಗೆ ಬಿಲ್ಲು ಸಲ್ಲಿಸುವುದು, ಪಾವತಿ ಪ್ರಕ್ರಿಯೆ, ಬಜೆಟ್ ನಿಯಂತ್ರಣ, ಲೆಕ್ಕ ಸಮನ್ವಯೀಕರಣ ಮುಂತಾದ ಪ್ರಕ್ರಿಯೆಗಳ ಬಗ್ಗೆ ಖಜಾನೆ ನಿರ್ದೇಶಕರು ಹೊರಡಿಸಿರುವ ಮಾರ್ಗ ಸೂಚಿಗಳನ್ನು ಪಾಲಿಸತಕ್ಕದ್ದು.

PR-306

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್.ಎ. ಶೋಭ

ಆರ್ಥಿಕ ಇಲಾಖೆ. (ಆನಿ ಮತ್ತು ಬಿಸಿಸಿ)

ಆರ್ಥಿಕ ಸಚಿವಾಲಯ

ವಿಷಯ : ಸಾದಿಲ್ವಾರು ವೆಚ್ಚ ಕೈಪಿಡಿ 1958ರ ನಿಯಮ 55 (2) (ಬಿ) ರಡಿಯಲ್ಲಿ ಅಂಶಕಾಲಿಕ ಅಕುಶಲ ಕೆಲಸದಾಳುಗಳ (Part time menials) ಸೇವೆ ಪಡೆಯುವುದನ್ನು ಸ್ಥಗಿತಗೊಳಿಸುವ ಬಗ್ಗೆ.

ಓದಲಾಗಿದೆ : (1) ಸರ್ಕಾರದ ಆದೇಶ ಸಂ: ಆಇ 05 ಟಿಎಫ್‌ಪಿ 2012, ದಿ: 25-06-2012.

ಪ್ರಸ್ತಾವನೆ :-

ಸಾದಿಲ್ವಾರು ವೆಚ್ಚ ಕೈಪಿಡಿ 1958ರ ನಿಯಮ 55 (2) (ಬಿ)ರ ಪ್ರಕಾರ ಇಲಾಖಾ ಮುಖ್ಯಾಧಿಕಾರಿಗಳು ಪಿಂಚಣಿ ರಹಿತ ಸಿಬ್ಬಂದಿಯಡಿ ಅಕುಶಲ ಅಂಶಕಾಲಿಕ ಕೆಲಸದಾಳುಗಳನ್ನು (Part time menials) ಅಂದರೆ ಮಸಾಲ್ಜಿಗಳು, ಕಸಗುಡಿಸುವವರು, ಕ್ಲೀನರುಗಳು, ಕಾವಲುಗಾರರು, ನೀರುಕೊಡುವವರು, ಭಂಗಿಗಳು, ತೋಟಿಗಳು ಹಾಗೂ ಮಾಲಿಗಳು ಮುಂತಾದವರುಗಳನ್ನು ಒಂದು ವರ್ಷಕ್ಕೆ ಮೀರದಂತೆ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ಮೇಲೆ (1)ರಲ್ಲಿ ಓದಲಾದ ಆದೇಶದಲ್ಲಿ ಸಾದಿಲ್ವಾರು ವೆಚ್ಚ ಕೈಪಿಡಿ 55 (2)(ಬಿ)ರ ನಿಯಮಗಳನ್ವಯ ಎಲ್ಲಾ ಇಲಾಖಾ ಮುಖ್ಯಸ್ಥರುಗಳು ಮತ್ತು ಇತರೆ ಅಧಿಕಾರಿಗಳಿಗೆ 3 ವರ್ಷಗಳ ಅವಧಿ ಮೀರದಂತೆ ಸಾದಿಲ್ವಾರು ವೆಚ್ಚದಲ್ಲಿ ಅಕುಶಲ ಅಂಶಕಾಲಿಕ ಕೆಲಸದಾಳುಗಳ ಸೇವೆಯನ್ನು ಪಡೆಯಲು ಮತ್ತು ಮಾಸಿಕ ಸಂಚಿತ ಸಂಭಾವನೆಯನ್ನು ಮಂಜೂರು ಮಾಡುವ ಆರ್ಥಿಕ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿದೆ.

ಸಾದಿಲ್ವಾರು ವೆಚ್ಚ ಕೈಪಿಡಿ 1958ರ ಪ್ರಸ್ತಾವಿಕ ಭಾಗದಲ್ಲಿಯೇ ಸ್ಪಷ್ಟಪಡಿಸಿರುವಂತೆ ಈ ಕೈಪಿಡಿಯ ನಿಯಮಗಳನ್ನು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಾಡುವ ಸಾದಿಲ್ವಾರು ವೆಚ್ಚವನ್ನು ನಿಯಂತ್ರಿಸಲು ರಚಿಸಲಾಗಿದೆ.

ಸಾದಿಲ್ವಾರು ವೆಚ್ಚ ಕೈಪಿಡಿಯ ನಿಯಮ 2 ರಲ್ಲಿ ವ್ಯಾಖ್ಯಾನಿಸಿರುವಂತೆ ಸರ್ಕಾರಿ ಕಛೇರಿಗಳನ್ನು ನಿರ್ವಹಿಸಲು ಮಾಡುವ ವಿವಿಧ ವೆಚ್ಚಗಳನ್ನು "ಸಾದಿಲ್ವಾರು ವೆಚ್ಚ"ವೆಂದು ಪರಿಗಣಿಸಲಾಗುವುದು. ಈ ಕೈಪಿಡಿಯಲ್ಲಿ ನಿಗದಿಪಡಿಸಿರುವ ವಿಧಿವಿಧಾನಗಳು ಸಾದಿಲ್ವಾರು ವೆಚ್ಚದ ಬಗ್ಗೆ ಮಾತ್ರ ಅನ್ವಯವಾಗುತ್ತದೆ. ವಿವಿಧ ಸಾದಿಲ್ವಾರು ವೆಚ್ಚಗಳನ್ನು ಭರಿಸಲು ಮಾತ್ರ ಈ ನಿಯಮಗಳನ್ನು ಅನ್ವಯಿಸಬಹುದಾಗಿದ್ದು, ಯಾವುದೇ ನೇಮಕಾತಿಗಳನ್ನು ಮಾಡಿಕೊಳ್ಳಲು ಅವಕಾಶವಿಲ್ಲ.

ಆದಾಗ್ಯೂ, ಈ ನಿಯಮಗಳ ಅವಕಾಶಗಳನ್ನು ತಪ್ಪಾಗಿ ಅರ್ಥೈಸಿ ಹುದ್ದೆಗಳೆದುರಿಗೆ ನೇಮಕಾತಿ ಮಾಡಿರುವುದು ಕಂಡು ಬಂದಿದೆ. ಇದು ನಿಯಮದ ಆಶಯಗಳಿಗೆ ವಿರುದ್ಧವಾಗಿದ್ದು, ಇಂತಹ ಕ್ರಮದಿಂದ ಕಾನೂನು ಮತ್ತು ಆಡಳಿತಾತ್ಮಕ ಸಮಸ್ಯೆಗಳು ಉದ್ಭವಿಸುವ ಸಂಭವವಿದೆ. ಅಲ್ಲದೆ, ಬದಲಾದ ಆಡಳಿತ ವ್ಯವಸ್ಥೆಯಲ್ಲಿ ಇಂತಹ ಪದ್ಧತಿಯ ಮುಂದುವರಿಕೆಯ ಅಗತ್ಯತೆಯ ಬಗ್ಗೆಯೇ ಪರಿಶೀಲಿಸಬೇಕೆಂದು ಮನಗಂಡು ಈ ಕೆಳಕಂಡಂತೆ ಆದೇಶವನ್ನು ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಆಇ 3 ಟಿಎಫ್‌ಪಿ 2017, ಬೆಂಗಳೂರು, ದಿನಾಂಕ: 07-07-2017.

ಪ್ರಸ್ತಾವನೆಯಲ್ಲಿ ವಿವರಿಸಿದ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಸಾದಿಲ್ವಾರು ವೆಚ್ಚ ಕೈಪಿಡಿ ನಿಯಮ 55 (2) (ಬಿ)ಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಪಡಿಸಿದೆ. ಇನ್ನು ಮುಂದೆ ಈ ಅವಕಾಶದಡಿ ಯಾವುದೇ ಅಂಶಕಾಲಿಕ ಅಕುಶಲ/ಅನಿಪುಣ ಕೆಲಸಗಾರರನ್ನು ನೇಮಿಸಿಕೊಳ್ಳುವುದನ್ನು ನಿರ್ಬಂಧಿಸಿದೆ.

ಕಛೇರಿ ಸ್ವಚ್ಛತೆ, ಕಛೇರಿ ಕಾವಲು, ಕೈತೋಟ ನಿರ್ವಹಣೆ ಮುಂತಾದ ಕೆಲಸಗಳನ್ನು ಸೇವಾ ಗುತ್ತಿಗೆ (Service contract) ನೀಡುವ ಮೂಲಕ ನಿರ್ವಹಿಸಲು ತಿಳಿಸಿದೆ. ಇದಕ್ಕೆ ತಗಲುವ ವೆಚ್ಚವನ್ನು '051- ಸಾಮಾನ್ಯ ವೆಚ್ಚಗಳು' ರಡಿಯಲ್ಲಿ ಭರಿಸಲು ತಿಳಿಸಿದೆ.

೧೧೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೫, ೨೦೧೭ ಭಾಗ ೧

ಈ ನಿಯಮದಡಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಹಾಗೂ ಆದೇಶ ಸಂಖ್ಯೆ:ಆಇ 5 ಟಿಎಫ್‌ಟಿ 2012, ದಿ:25-06-2012 ರನ್ವಯ ಮಾಸಿಕ ಸಂಚಿತ ಸಂಭಾವನೆ ಪಡೆಯುತ್ತಿರುವ ಎಲ್ಲಾ ಅರೆಕಾಲಿಕ ಅಕುಶಲ ಕೆಲಸದಾಳುಗಳ ಸೇವೆಯನ್ನು ಅವರುಗಳ ನೇಮಕಾತಿ ಅವಧಿ ಪೂರೈಸಿದ ತಕ್ಷಣ ಬರಖಾಸ್ತು/ಮುಕ್ತಾಯ ಮಾಡತಕ್ಕದ್ದು.

ಸಾದಿಲ್ವಾರು ವೆಚ್ಚ ಕೈಪಿಡಿ ನಿಯಮ 55 (2) (ಬಿ) ನಿಯಮಗಳಿಗೆ ಸೂಕ್ತ ತಿದ್ದುಪಡಿ ತರಲಾಗುವುದು.

PR-307

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-10

ರಿತ್ವಿಕ್ ಪಾಂಡೆ

ಆರ್ಥಿಕ ಇಲಾಖೆ.

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ

ವಿಷಯ : ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇವುಗಳ ಕ್ರಿಯಾ ಯೋಜನೆಯಲ್ಲಿ ನಿರ್ವಹಿಸುವ ಕಾಮಗಾರಿಗಳಿಗೆ ಮುಂಗಡ ಹಣ ನೀಡುವ ಬಗ್ಗೆ.

ಸರ್ಕಾರಿ ಆದೇಶ ಸಂಖ್ಯೆ : ಯೋಇ 100 ಪಿಟಿಪಿ 2017, ಬೆಂಗಳೂರು, ದಿನಾಂಕ : 01.09.2017

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ, ಶಿವಮೊಗ್ಗ: ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ, ಚಿತ್ರದುರ್ಗ ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು, ಇವರುಗಳು ಅನುಮೋದಿಸಿದ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಾಗ ಕೆ.ಆರ್.ಐ.ಡಿ.ಎಲ್., ನಿರ್ಮಿತಿ ಕೇಂದ್ರ ಮುಂತಾದ ಸಂಸ್ಥೆಗಳಿಗೆ ನೀಡುವ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ ನಂತರ, ಕೆಲವು ಸಂದರ್ಭದಲ್ಲಿ ಶೇಕಡ 100 ರಷ್ಟು ಅಥವಾ ಶೇ. 80 ರಷ್ಟು ಮುಂಗಡ ಹಣ ನೀಡುವ ಪರಿಪಾಠವನ್ನು ಇಟ್ಟುಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಕೆ.ಆರ್.ಐ.ಡಿ.ಎಲ್ ಮತ್ತು ನಿರ್ಮಿತಿ ಕೇಂದ್ರ ಅಥವಾ ಇನ್ನಿತರೆ ಅನುಷ್ಠಾನ ಸಂಸ್ಥೆಗಳಿಗೆ ವಹಿಸಲ್ಪಟ್ಟ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ ನಂತರ ಶೇ.40 ರಷ್ಟು ಹಣವನ್ನು ಮಾತ್ರ ಮುಂಗಡವಾಗಿ ನೀಡುವುದು. ನೀಡಿದ ಹಣಕ್ಕೆ ಕಾಮಗಾರಿಗಳು ಸಂಪೂರ್ಣ ಮುಗಿದಿವೆ ಎಂದು ಪ್ರಮಾಣೀಕರಿಸಿದ ನಂತರವೇ ಉಳಿದ ಶೇ.40 ರಷ್ಟು ಹಣವನ್ನು ಬಿಡುಗಡೆ ಮಾಡುವುದು. ಕೊನೆಯ ಶೇ.20ರಷ್ಟು ಹಣವನ್ನು 3ನೇ ವ್ಯಕ್ತಿಯಿಂದ ಕಾಮಗಾರಿಗಳ ಪರಿಶೀಲನಾ ವರದಿ ಬಂದ ನಂತರವೇ ಉಳಿದ ಹಣವನ್ನು ಬಿಡುಗಡೆ ಮಾಡುವುದು.

ಈಗಾಗಲೇ ನೀಡಿರುವ ಮುಂಗಡ ಹಣಕ್ಕೆ ಅನುಷ್ಠಾನ ಸಂಸ್ಥೆಯವರು ಪೂರ್ತಿ ಕೆಲಸ ಮಾಡದೇ ಹಣ ಇಟ್ಟುಕೊಂಡಿದ್ದಲ್ಲಿ ಅಥವಾ ಅರ್ಧ ಕೆಲಸವನ್ನು ಮಾಡಿದ್ದಲ್ಲಿ ಅಂತಹ ಸಂಸ್ಥೆಯವರಿಗೆ ನೋಟೀಸ್ ನೀಡಿ ಡಿಸೆಂಬರ್, 2017ರೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಆದೇಶ ನೀಡುವುದು, ತಪ್ಪಿದ್ದಲ್ಲಿ ಸದರಿ ಹಣವನ್ನು ಬಡ್ಡಿಯ ಸಮೇತ ವಾಪಸ್ಸು ಪಡೆಯಲು ಕ್ರಮ ಕೈಗೊಳ್ಳುವುದೆಂದು ಈ ಮೂಲಕ ಆದೇಶಿಸಿದೆ.

PR-301

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್.ಸಿ.ಹರ್ಷರಾಣಿ

ಸರ್ಕಾರದ ಅಧೀನ ಕಾರ್ಯದರ್ಶಿ (ಎಸ್-5),

ಯೋಜನೆ, ಕಾರ್ಯಕ್ರಮ ಸಂಯೋಜನೆ

ಮತ್ತು ಸಾಂಖ್ಯಿಕ ಇಲಾಖೆ.

FOREST, ECOLOGY AND ENVIRONMENT SECRETARIAT

ADDENDUM

NO. FEE 229 FDP 2016, Bengaluru, Date : 29-08-2017

The partial modification of the notification No. FEE 229 FDP 2016, Dated : 22.03.2017.

After Sl.No. 1 the following shall the inserted as 1 (a).

"1(a) All the Deputy Conservator of Forests in charge of Forest Mobile Squads ;"

PR-302

By Order and in the name of the Governor of Karnataka SC-100

D.S. Sudharshan Kumar

Under Secretary to Government

Forest, Ecology and Environment Departmentಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೫, ೨೦೧೭ ೧೧೭೩

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಷಯ : ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಬೆಂಗಳೂರಿನಿಂದ ರಾಮನಗರಕ್ಕೆ ಸ್ಥಳಾಂತರಿಸುವ ಬಗ್ಗೆ.

ಓದಲಾಗಿದೆ :

1. ಸರ್ಕಾರದ ಆದೇಶ ಸಂಖ್ಯೆ: ಆಕುಕ 425 ಆರ್‌ಜಿಯು 2015, ದಿನಾಂಕ 17.05.2016.

2. ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ 24.08.2016 ರಂದು ಜರುಗಿದ ಸಭೆಯ ಸಭಾ ನಡವಳಿಗಳು.

3. ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ರಾಮನಗರ ವಿಭಾಗ, ರಾಮನಗರ ಇವರ ಪತ್ರ ಸಂಖ್ಯೆ:ಕಾಅ/ಲೋಬಂಒಜಸಾಇ/ರಾವಿ/ರಾಮನಗರ/1950/2016-17, ದಿನಾಂಕ 25.10.2016.

4. ದಿನಾಂಕ 06.01.2017 ರಂದು ಜರುಗಿದ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 124 ನೇ ಸಿಂಡಿಕೇಟ್ ಸಮಿತಿ ಸಭೆಯ ನಡವಳಿಗಳು.

ಪ್ರಸ್ತಾವನೆ :

ಓದಲಾದ (1) ರ ಸರ್ಕಾರದ ಆದೇಶದಲ್ಲಿ ರಾಮನಗರ ತಾಲ್ಲೂಕು ಕಸಬಾ ಹೋಬಳಿಯ ಅರ್ಚಕರಹಳ್ಳಿ ಗ್ರಾಮದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕ್ಯಾಂಪಸ್ ಮತ್ತು ಇತರೆ ಪೂರಕ ಕಟ್ಟಡಗಳ ನಿರ್ಮಾಣ ಕಾಮಗಾರಿಯ ರೂ.580.00 ಕೋಟಿಗಳ ಪರಿಷ್ಕøತ ಸವಿವರ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಓದಲಾದ (2) ರಲ್ಲಿ ಮಾನ್ಯ ಇಂಧನ ಸಚಿವರು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರ ಜಂಟಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಕೆಳಕಂಡಂತೆ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

(1) ಗೌರವಾನ್ವಿತ ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಅರ್ಜಿಗಳನ್ನು ಇತ್ಯರ್ಥಗೊಳಿಸಲು ವಿಶೇಷ ವಕೀಲರನ್ನು ನೇಮಿಸಿ, ಪ್ರಕರಣವನ್ನು ಇತ್ಯರ್ಥಪಡಿಸಲು ಕ್ರಮವಹಿಸಲು

(2) ಸದರಿ ವಿಶ್ವವಿದ್ಯಾನಿಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಚಿವ ಸಂಪಟವು ಕೈಗೊಂಡಿರುವ ನಿರ್ಣಯದನ್ವಯ ಅನುಮೋದಿತವಾಗಿರುವ ಯೋಜನೆಯನ್ನು ಯಾವುದೇ ಬದಲಾವಣೆ ಇಲ್ಲದೇ ಯಥಾವತ್ತಾಗಿ ಅನುಷ್ಠಾನಗೊಳಿಸಲು

(3) ಸದರಿ ವಿಶ್ವವಿದ್ಯಾಲಯವನ್ನು ಬೆಂಗಳೂರಿನಿಂದ ರಾಮನಗರಕ್ಕೆ 03 ತಿಂಗಳ ಕಾಲದಲ್ಲಿ ಸ್ಥಳಾಂತರಿಸಲು ಸಿದ್ಧತಾ ಕ್ರಮಗಳನ್ನು ಮಾಡಿಕೊಳ್ಳಲು; ಹಾಗೂ

(4) ಸದರಿ ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ ಜಾಗವನ್ನು ರಾಮನಗರದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕಲ್ಪಿಸಲು ಮತ್ತು ವಿಶ್ವವಿದ್ಯಾಲಯದ ಆಡಳಿತ ನಿರ್ವಹಣೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ತುರ್ತಾಗಿ ಒದಗಿಸಲು;

ಓದಲಾದ (3) ರ ಪತ್ರದಲ್ಲಿ ರಾಮನಗರದ ಕಂದಾಯ ಭವನದಲ್ಲಿ ಒಟ್ಟು 107600 ಚ.ಅ. ಜಾಗ ಖಾಲಿ ಇದ್ದು, ಈ ಕಟ್ಟಡದಲ್ಲಿ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿ, ಈ ಕಟ್ಟಡಕ್ಕೆ ಉತ್ತಮವಾದ ಸಂಪರ್ಕ ರಸ್ತೆ ಹಾಗೂ ಕಟ್ಟಡದ ಸುತ್ತಲೂ ಖಾಲಿ ಜಾಗ ಹಾಗೂ ಉದ್ಯಾನವನವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿರುತ್ತಾರೆ.

ಓದಲಾದ (4) ರ ನಡವಳಿಯನ್ವಯ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ವಿಭಾಗವನ್ನು ರಾಮನಗರಕ್ಕೆ ಸ್ಥಳಾಂತರಿಸಲು ಹಾಗೂ ಇಂಜಿನೀಯರಿಂಗ್ ವಿಭಾಗವು ವಿಶ್ವವಿದ್ಯಾಲಯದ ಸ್ಥಳಾಂತರಕ್ಕೆ ಲಭ್ಯವಿರುವ ಸ್ಥಳಾವಕಾಶವನ್ನು ಪರಿಶೀಲಿಸಲು ಮತ್ತು ವಿಶ್ವವಿದ್ಯಾಲಯದ ಹಲವಾರು ವಿಭಾಗಗಳ ಸುಗಮ ಕಾರ್ಯನಿರ್ವಹಣೆಯ ಬಗ್ಗೆ ಕಾರ್ಯಯೋಜನೆಯನ್ನು ಸಿದ್ಧಪಡಿಸಲು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಮಿತಿಯು ನಿರ್ಣಯಿಸಿರುತ್ತದೆ.

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ) ಕಾಯ್ದೆ, 2007 ರ ಕಲಂ 3 ಕ್ಕೆ ತಂದಿರುವ ತಿದ್ದುಪಡಿಯನ್ವಯ ಪ್ರಸ್ತಾಪಿತ ವಿಶ್ವವಿದ್ಯಾಲಯವನ್ನು ರಾಮನಗರದಲ್ಲಿ ಸ್ಥಾಪಿಸಬೇಕಾಗಿರುತ್ತದೆ. ಅದರಂತೆ, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸದರಿ ವಿಶ್ವವಿದ್ಯಾಲಯವನ್ನು ರಾಮನಗರಕ್ಕೆ ಸ್ಥಳಾಂತರಿಸುವುದು ಅತೀ ಅವಶ್ಯವಿರುತ್ತದೆ.

ಪ್ರಸ್ತಾವನೆಯನ್ನು ಸಂಬಂಧಪಟ್ಟ ದಾಖಲೆಗಳೊಂದಿಗೆ ಕೂಲಂಕಷವಾಗಿ ಪರಿಶೀಲಿಸಿದ ನಂತರ, ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ರಾಮನಗರದ ಕಂದಾಯ ಭವನಕ್ಕೆ ಸ್ಥಳಾಂತರಿಸಲು ಸರ್ಕಾರವು ತೀರ್ಮಾನಿಸಿ, ಈ ಕೆಳಕಂಡ ಆದೇಶವನ್ನು ಹೊರಡಿಸಿದೆ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೧೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೫, ೨೦೧೭ ಭಾಗ ೧

ಸರ್ಕಾರದ ಆದೇಶ ಸಂಖ್ಯೆ : ಆಕುಕ 117 ಎಂಪಿಎಸ್ 2007, ಬೆಂಗಳೂರು, ದಿನಾಂಕ 08.02.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಮನಗರದ ಅರ್ಚಕರಹಳ್ಳಿಯಲ್ಲಿ ಉದ್ದೇಶಿತ ವಿಶ್ವವಿದ್ಯಾಲಯದ ಆಡಳಿತಾತ್ಮಕ ಬ್ಲಾಕ್‌ನ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ರಾಮನಗರದ ಕಂದಾಯ ಭವನಕ್ಕೆ ಸ್ಥಳಾಂತರಿಸಿ ಆದೇಶಿಸಿದೆ.

ಸದರಿ ವಿಶ್ವವಿದ್ಯಾಲಯದ ಸ್ಥಳಾಂತರ ಪ್ರಕ್ರಿಯೆಯನ್ನು ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ಕೈಗೊಳ್ಳಲು ವಿಶ್ವವಿದ್ಯಾಲಯದ ಉಪ ಕುಲಪತಿಗಳು ಕ್ರಮವಹಿಸತಕ್ಕದ್ದು ಹಾಗೂ ಈ ಸ್ಥಳಾಂತರ ಪ್ರಕ್ರಿಯೆಗೆ ತಗಲುವ ವೆಚ್ಚವನ್ನು ವಿಶ್ವವಿದ್ಯಾಲಯದ ನಿಧಿಯಿಂದ ಭರಿಸತಕ್ಕದ್ದು.

ಸದರಿ ವಿಶ್ವವಿದ್ಯಾಲಯದ ಸುಗಮ ಕಾರ್ಯಾಚರಣೆಗೆ ಅಗತ್ಯವಿರುವ ಹೆಚ್ಚುವರಿ ಮೂಲಭೂತ ಸೌಲಭ್ಯಗಳನ್ನು ಜಿಲ್ಲಾಧಿಕಾರಿಗಳು, ರಾಮನಗರ ಜಿಲ್ಲೆ, ರಾಮನಗರ ಇವರು ಕೂಡಲೇ ಒದಗಿಸಲು ಕ್ರಮ ಕೈಗೊಳ್ಳತಕ್ಕದ್ದು.

PR-303

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಮುರಳಿ

ಸರ್ಕಾರದ ಅಧೀನ ಕಾರ್ಯದರ್ಶಿ-2 (ಪ್ರ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. (ವೈದ್ಯಕೀಯ ಶಿಕ್ಷಣ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 05 October 2017. Indian Gazettes, https://egazette.servantsofknowledge.in/details/in.gazette.karnataka_new.2017-10-05.Part-1/. Archive identifier in.gazette.karnataka_new.2017-10-05.Part-1.