ಸಂಪುಟ ೧೫೨
Volume 152
ಬೆಂಗಳೂರು, ಗುರುವಾರ, ಅಕ್ಟೋಬರ್ ೧೨, ೨೦೧೭ (ಆಶ್ವಯುಜ ೨೦, ಶಕ ವರ್ಷ ೧೯೩೯)
Bengaluru, Thursday, October 12, 2017 ( Aashwayuja 20, Shaka Varsha 1939)
ಸಂಚಿಕೆ ೪೦
Issue 40
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಆರ್ಥಿಕ ಸಚಿವಾಲಯ
ವಿಷಯ: 6ನೇ ರಾಜ್ಯ ವೇತನ ಆಯೋಗದ ಅವಧಿಯನ್ನು ವಿಸ್ತರಿಸುವ ಬಗ್ಗೆ.
ಓದಲಾಗಿದೆ: 1. ದಿನಾಂಕ: 01-06-2017ರ ಸರ್ಕಾರಿ ಆದೇಶ ಸಂಖ್ಯೆ: ಆಇ 22 ಎಸ್ಆರ್‌ಪಿ 2017.
2. ದಿನಾಂಕ: 29-06-2017ರ ಸರ್ಕಾರಿ ಆದೇಶ ಸಂಖ್ಯೆ: ಆಇ 33 ಎಸ್ಆರ್‌ಪಿ 2017(ಭಾ). 3. ಕಾರ್ಯದರ್ಶಿ, ಕರ್ನಾಟಕ 6ನೇ ರಾಜ್ಯ ವೇತನ ಆಯೋಗ ಇವರ ಪತ್ರ ಸಂಖ್ಯೆ: 6 ರಾವೇಆ/53/2017-18, ದಿನಾಂಕ: 06-09-2017.
ಪ್ರಸ್ತಾವನೆ :
ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು, ಮೇಲೆ ಓದಲಾದ ಕ್ರಮ ಸಂಖ್ಯೆ(1)ರ ದಿನಾಂಕ: 01-06-2017ರ ಸರ್ಕಾರಿ ಆದೇಶದಲ್ಲಿ ಶ್ರೀ ಎಂ.ಆರ್.ಶ್ರೀನಿವಾಸಮೂರ್ತಿ, ಭಾ.ಆ.ಸೇ.(ನಿವೃತ್ತ) ಇವರ ಅಧ್ಯಕ್ಷತೆಯಲ್ಲಿ 6ನೇ ರಾಜ್ಯ ವೇತನ ಆಯೋಗವನ್ನು ರಚಿಸಿ, 04 ತಿಂಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ತಿಳಿಸಲಾಗಿತ್ತು.
ಈ ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ದಿನಾಂಕ: 29-06-2017ರ ಸರ್ಕಾರಿ ಆದೇಶದಲ್ಲಿ 6ನೇ ರಾಜ್ಯ ವೇತನ ಆಯೋಗಕ್ಕೆ ವಿವಿಧ ವೃಂದದ 40 ಹುದ್ದೆಗಳನ್ನು ಸೃಜಿಸಲಾಗಿರುತ್ತದೆ.
ಆದರೆ, ಕ್ರಮ ಸಂಖ್ಯೆ (3)ರಲ್ಲಿ ಓದಲಾದ ಪತ್ರದಲ್ಲಿ, ಕಾರ್ಯದರ್ಶಿಗಳು, ಕರ್ನಾಟಕ 6ನೇ ರಾಜ್ಯ ವೇತನ ಆಯೋಗ ಇವರು, 'ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ, ವಿವಿಧ ವೃಂದಗಳ ವೇತನ ರಚನೆಗೆ ಸಂಬಂಧಿಸಿದ ಅಂಶಗಳು ಮತ್ತು ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ವಿವಿಧ ಇಲಾಖೆಗಳೊಂದಿಗೆ ಸಮಾಲೋಚನೆಯನ್ನು ಇನ್ನೂ ಪೂರ್ಣಗೊಳಿಸಿರುವುದಿಲ್ಲ. ಇದನ್ನು ಪೂರ್ಣಗೊಳಿಸಿದ ನಂತರ ಶಿಫಾರಸ್ಸನ್ನು ಅಂತಿಮಗೊಳಿಸಿ ವರದಿ ಸಲ್ಲಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೇ, ವಿವಿಧ ಇಲಾಖೆಯ ವೃಂದಗಳಲ್ಲಿನ ವೇತನ ರಚನೆಯಲ್ಲಿನ ನ್ಯೂನ್ಯತೆಗಳು ಹಾಗೂ ಸರ್ಕಾರಿ ಇಲಾಖೆಗಳ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸುವ ಬಗ್ಗೆ ಹಾಗೂ ಸರ್ಕಾರಿ ನೌಕರರುಗಳ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸುವ ಸಂಬಂಧ ಶಿಫಾರಸ್ಸನ್ನು ಅಂತಿಮಗೊಳಿಸಲು ಹೆಚ್ಚಿನ ಕಾಲಾವಧಿಯ ಅಗತ್ಯವಿರುವುದರಿಂದ', 6ನೇ ರಾಜ್ಯ ವೇತನ ಆಯೋಗದ ಕಾಲಾವಧಿಯನ್ನು ವಿಸ್ತರಿಸುವಂತೆ ಸರ್ಕಾರವನ್ನು ಕೋರಿರುತ್ತಾರೆ.
ಕರ್ನಾಟಕ 6ನೇ ರಾಜ್ಯ ವೇತನ ಆಯೋಗದ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶವನ್ನು ಹೊರಡಿಸಿದೆ.
ಸರ್ಕಾರಿ ಆದೇಶ ಸಂಖ್ಯೆ: ಆಇ 22 ಎಸ್ಆರ್‌ಪಿ 2017, ಬೆಂಗಳೂರು, ದಿನಾಂಕ 11ನೇ ಸೆಪ್ಟ್ಟೆಂಬರ್, 2017.
ಕರ್ನಾಟಕ 6ನೇ ರಾಜ್ಯ ವೇತನ ಆಯೋಗವು ತನ್ನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಲು ಮತ್ತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಅನುಕೂಲವಾಗುವಂತೆ, 6ನೇ ರಾಜ್ಯ ವೇತನ ಆಯೋಗದ ಕಾಲಾವಧಿಯನ್ನು ದಿನಾಂಕ: 31-01-2018ರವರೆಗೆ ಹಾಗೂ ದಿನಾಂಕ: 29-06-2017ರ ಆದೇಶದನ್ವಯ ಸೃಜಿಸಲಾದ ಎಲ್ಲಾ ಹುದ್ದೆಗಳ ಅವಧಿಯನ್ನು ದಿನಾಂಕ: 31-01-2018ರವರೆಗೆ ವಿಸ್ತರಿಸಿ ಆದೇಶಿಸಿದೆ.
PR. 308
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 100
ಡಿ.ಎಸ್.ಜೋಗೋಜೆ,
ಸರ್ಕಾರದ ಉಪ ಕಾರ್ಯದರ್ಶಿ,
ಆರ್ಥಿಕ ಇಲಾಖೆ. (ಸೇವೆಗಳು-2)
(೧೧೭೫)೧೧೭೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೨, ೨೦೧೭ ಭಾಗ ೧
ಶಿಕ್ಷಣ ಸಚಿವಾಲಯ
ವಿಷಯ: ಪ್ರೊ. ಬಿ. ಶಿವರಾಜ್, ಪ್ರ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ ಇವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿರುವ ಸಿಂಡಿಕೇಟ್ ನಿರ್ಣಯವನ್ನು ರದ್ದುಗೊಳಿಸಿರುವ ಬಗ್ಗೆ.
ಓದಲಾಗಿದೆ: 1. ಪ್ರೊ. ಬಿ. ಶಿವರಾಜ್, ಪ್ರ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ ಇವರ ದಿನಾಂಕ: 03-12-2016ರ ಮನವಿ.
2. ಇದೇ ಸಮಸಂಖ್ಯೆ ದಿ: 17-04-2017ರ ಕಾರಣ ಕೇಳುವ ನೋಟೀಸು. 3. ಕುಲಸಚಿವರು, ಮೈಸೂರು ವಿಶ್ವವಿದ್ಯಾಲಯ ಪತ್ರ ಸಂಖ್ಯೆ: ಇಟಿ 09/513/2012-13, ದಿನಾಂಕ: 28-04-2017.
ಪ್ರಸ್ತಾವನೆ:
ಪ್ರೊ|| ಬಿ. ಶಿವರಾಜ್, ಪ್ರಾಧ್ಯಾಪಕರು, ಬಹದ್ದೂರ್ ಇನ್ಸ್‌ಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, ಮೈಸೂರು ವಿಶ್ವವಿದ್ಯಾಲಯ, ಮಾನಸ ಗಂಗೋತ್ರಿ, ಮೈಸೂರು ಇವರ ಮೇಲೆ 2013ರಲ್ಲಿ, ಮೈಸೂರು ವಿಶ್ವವಿದ್ಯಾನಿಲಯವು ಈ ಕೆಳಕಂಡ ಎರಡು ಆಪಾದನೆಗಳನ್ನು ಹೊರಿಸಿ, ಒಂದು ಇಲಾಖಾ ವಿಚಾರಣೆಯನ್ನು (2/2013) ನಡೆಸಿರುತ್ತದೆ.
1) ಪ್ರೊ. ಬಿ. ಶಿವರಾಜ್, ಬಿಸಿನೆಸ್ ಆಡ್ಮಿನಿಷ್ಟ್ರೇಷನ್ ವಿಭಾಗದ ಮುಖ್ಯಸ್ಥರಾಗಿದ್ದಾಗ 2009 ರಲ್ಲಿ, ಇರಾನ್ ದೇಶದ ಸಿಸ್ತನ್ ಬಲೂಚಿಸ್ತಾನ್ ವಿಶ್ವವಿದ್ಯಾನಿಲಯದ ಆಹ್ವಾನದ ಮೇರೆಗೆ, ಮೈಸೂರು ವಿಶ್ವವಿದ್ಯಾಲಯದ ಅನುಮತಿ ಪಡೆಯದೆ ಐದು ದಿನಗಳ ಶೈಕ್ಷಣಿಕ ಭೇಟಿ ನೀಡಿದ್ದರು. ಈ ಸಂಧರ್ಭದಲ್ಲಿ, ಅವರು ಅಲ್ಲಿನ ವಿಶ್ವವಿದ್ಯಾಲಯ ಮ್ಯಾನೇಜ್‌ಮೆಂಟ್ ವಿಭಾಗದೊಂದಿಗೆ ಶೈಕ್ಷಣಿಕ ವಿನಿಮಯಗಳ ಬಗ್ಗೆ ಒಂದು ಒಡಂಬಡಿಕೆ (MOU), ಮಾಡಿರುತ್ತಾರೆ. ವಿಶ್ವವಿದ್ಯಾಲಯದ ಅನುಮತಿ ಪಡೆಯದೆ ಬೇರೆ ದೇಶದ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದು ವಿಶ್ವವಿದ್ಯಾಲಯದ ಪರಿನಿಯಮಾವಳಿಗೆ ವಿರುದ್ಧವಾಗಿರುತ್ತದೆ.
2) ಪ್ರೊ.ಬಿ. ಶಿವರಾಜ್‌ರವರು, ತಂತ್ರಾಂಶ ಒದಗಿಸಲು ಎಲ್ಲಾ ಎಂ.ಬಿ.ಎ. ವಿದ್ಯಾರ್ಥಿಗಳಿಂದ ವಿಶ್ವವಿದ್ಯಾಲಯದ ಅನುಮತಿ ಪಡೆಯದೆ `.150/- ಅನ್ನು ಸಂಗ್ರಹಿಸಿರುತ್ತಾರೆ. ಆದ್ದರಿಂದ, ಪ್ರೊ. ಬಿ. ಶಿವರಾಜ್‌ರವರು ಮೈಸೂರು ವಿಶ್ವವಿದ್ಯಾಲಯದ ನಡತೆ ನಿಬಂಧನೆಯ ಸೆಕ್ಷನ್ (3) ಉಲ್ಲಂಘನೆ ಮಾಡಿದ್ದಾರೆ.
ಈ ಆಪಾದನೆಗಳ ಬಗ್ಗೆ ಇಲಾಖಾ ವಿಚಾರಣೆ 2/2013 ನಡೆಯುತ್ತಿದ್ದಾಗ, ವಿಚಾರಣಾಧಿಕಾರಿ ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ, ಅವರನ್ನು ಬದಲಿಸಬೇಕು ಎಂಬ ಆಪಾದನೆ ಮೇರೆಗೆ, ಮಾನ್ಯ ಉಚ್ಚನ್ಯಾಯಾಲಯಲ್ಲಿ ಪ್ರೊ. ಬಿ. ಶಿವರಾಜ್‌ರವರು ರಿಟ್ ಅರ್ಜಿ ಸಂಖ್ಯೆ: 33863/2015 ಅನ್ನು ದಾವೆ ಹೂಡಿರುತ್ತಾರೆ. ಈ ಪ್ರಕರಣಕ್ಕೆ ಮಾನ್ಯ ಉಚ್ಛನ್ಯಾಯಾಲಯವು ಈ ಕೆಳಕಂಡ ತೀರ್ಪನ್ನು ನೀಡಿರುತ್ತದೆ.
I am of the view that it is inappropriate to continue the enquiry. The enquiry commenced in the year 2013. It is at the stage of arguments. Therefore, it would cause prejudice to the respondents. However, the legal right of the petitioners requires to be considered by this Court. Hence, it is just and necessary modify the intern order by holding that further proceedings would be subject to further order of this Court.
ಇದರನ್ವಯ, ಮೈಸೂರು ವಿಶ್ವವಿದ್ಯಾಲಯ ತೆಗೆದುಕೊಳ್ಳುವ ನಿರ್ಧಾರಗಳು, ಕೋರ್ಟಿನ ಆದೇಶಗಳಿಗೆ ಒಳಪಟ್ಟಿರುತ್ತದೆ ಎಂಬ ನಿರ್ಬಂದನೆ ವಿಧಿಸಿತ್ತು. ಬಳಿಕ ಮೈಸೂರು ವಿಶ್ವವಿದ್ಯಾಲಯದ ತನಿಖೆ 2/2013ರ ವರದಿಯನ್ನು, ಸಿಂಡಿಕೇಟ್ ಸಭೆಯಲ್ಲಿ ಮಂಡಿಸಿದ್ದು, ಆಪಾದನೆ (1) ಸಾಬೀತಾಗಿದೆ, ಆಪಾದನೆ (2) ಭಾಗಶಃ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪ್ರೊ ಬಿ.ಶಿವರಾಜ್‌ರವರ ವೇತನವನ್ನು ಪ್ರೊಫೆಸರ್ ಹುದ್ದೆಯಲ್ಲಿನ ಕನಿಷ್ಠ ಮಟ್ಟಕ್ಕೆ, ಇಳಿಸಿ ಆದೇಶ ಹೊರಡಿಸಿತ್ತು. (ಮೈಸೂರು ವಿಶ್ವವಿದ್ಯಾಲಯ ಸಿಂಡಿಕೇಟ್ ನಿರ್ಣಯ 2016/1.4 ಮತ್ತು ಆದೇಶ ಇಟಿ 9/513/Vol.2/2012-13, ದಿನಾಂಕ:9.2.2016) ಇದರ ಬಗ್ಗೆ ಮಾನ್ಯ ಉಚ್ಛ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ: 33863/2015 ಇನ್ನೂ ಇತ್ಯರ್ಥವಾಗಿಲ್ಲ.
ಮುಂದುವರೆದು, ಈ ವಿಷಯದ ಬಗ್ಗೆ ಫೆಬ್ರವರಿ 8, 2016 "ಆಂದೋಲನ" ಪತ್ರಿಕೆಯಲ್ಲಿ "ಕುಲಪತಿ ರಂಗಪ್ಪನವರ ವೈಯಕ್ತಿಕ ದ್ವೇಷದ ಕ್ರಮ" ಯುವರಾಜ ಕಾಲೇಜಿನ ಎಂ.ಎಸ್ಸಿ (ಮಾಲಿಕ್ಯೂಲರ್ ಬಯಲಾಜಿ) ಕೋರ್ಸ್‌ಗೆ 2006ರಲ್ಲಿ ನಡೆದ ಪ್ರವೇಶಾತಿಯಲ್ಲಿ ಪ್ರೊ.ರಂಗಪ್ಪನವರ ಮಗ ಶ್ರೀ ಆರ್.
ಶೋಭಿತ್‌ಗೆ ಅಕ್ರಮ ಪ್ರವೇಶಾತಿ ಕೊಡಲಾಗಿತ್ತು. ಇದರ ಬಗ್ಗೆ ನಡೆದ ತನಿಖಾ ವರದಿಯನ್ನು ಪ್ರಭಾರ ಕುಲಪತಿ ಪ್ರೊ. ಶಿವರಾಜ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆ, 2.1.2012ರಂದು, ಒಪ್ಪಿಕೊಂಡು ಅಕ್ರಮ ಪ್ರವೇಶಾತಿ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ತೀರ್ಮಾನಿಸಿತು" ಎಂಬ ವರದಿ ಪ್ರಕಟವಾಯಿತು.
ಪ್ರೊ. ಬಿ. ಶಿವರಾಜ್ 'ಆಂದೋಲನ'ಕ್ಕೆ ಹೇಳಿಕೆಯನ್ನು ನೀಡಿದ್ದಾರೆ, ಆದರೆ ಅದನ್ನು ಕುಲಾಧಿಪತಿಗಳಿಗೆ ವರದಿ ಮಾಡಿಲ್ಲ, ಆದ್ದರಿಂದ, ಮೈಸೂರು ವಿಶ್ವವಿದ್ಯಾಲಯ ನಡತೆ ನಿಬಂಧನೆಯ ಸೆಕ್ಷನ್ 19 ಉಲ್ಲಂಘನೆಯಾಗಿದೆ ಎಂದು ಆಪಾದಿಸಿ ಎರಡನೆ ಇಲಾಖಾ ವಿಚಾರಣೆ 1/2016ರನ್ನು ಆರಂಭಿಸಲಾಯಿತು.
ವಿಶ್ವವಿದ್ಯಾಲಯದ ನಡತೆ ನಿಬಂಧನೆಯ ಪರಿನಿಯಮಾವಳಿಯ 1984(CCA statute) ಇದರ ಪ್ರಕರಣ 19 ಈ ಕೆಳಕಂಡಂತೆ ವಿವರಿಸಲಾಗಿದೆ.
Vindication of acts and character of the University employees: No employee shall have resource to any Court or to the press for vindication of any official act which has been the subject matter of adverse criticism or an attack of a defamatory character, without reporting the matter to the Chancellor, or such authority as he may specify.
ಸದರಿ ವಿಚಾರಣೆಯಲ್ಲಿ ಪ್ರೊ ಬಿ. ಶಿವರಾಜ್ ಇವರಿಗೆ ತಮ್ಮ ಹೇಳಿಕೆಯನ್ನು ನೀಡಲು ಅವಕಾಶ ಕಲ್ಪಿಸದೆ ವಿಚಾರಣೆಯನ್ನು 90 ದಿನಗಳ ಕಾಲಾವಕಾಶವಿದ್ದರೂ, ಕೇವಲ 40 ದಿನಗಳಲ್ಲಿ ಪೂರ್ಣಗೊಳಿಸಿ, ಏಕಪಕ್ಷಿಯ (Ex-parte) ವರದಿಯ ಆಧಾರದ ಮೇಲೆ, ಸಿಂಡಿಕೇಟ್ ಸಭೆ, ಮೈಸೂರು ವಿಶ್ವವಿದ್ಯಾಲಯ ಸಿಂಡಿಕೇಟ್ ನಿರ್ಣಯ 2016/11.9 ಮತ್ತು ಆದೇಶ ಇಟಿ9/513/Vol.2 2012-13, ದಿನಾಂಕ:30.11.2016, ಶಿವರಾಜ್‌ರವನ್ನು ಕಡ್ಡಾಯ ನಿವೃತ್ತಿಗೊಳಿಸಿತು.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೨, ೨೦೧೭ ೧೧೭೭ಮೇಲ್ಕಂಡ ಎರಡು ವಿಚಾರಣೆಗಳ ಬಗೆಗಿನ ಸಿಂಡಿಕೇಟ್ ನಿರ್ಣಯಗಳು ತತ್ಸಂಬಂದ ಮೈಸೂರು ವಿಶ್ವವಿದ್ಯಾಲಯ ಆದೇಶಗಳನ್ನು, ಕರ್ನಾಟಕ ವಿಶ್ವವಿದ್ಯಾಲಯ ಕಾಯಿದೆ, 2000ರ ಪ್ರಕರಣ 10(1) ಅನ್ವಯ ರದ್ದುಗೊಳಿಸಲು, ಪ್ರೊ. ಬಿ. ಶಿವರಾಜ್ ಇವರು ಮೇಲೆ ಓದಲಾದ (1)ರ ಮನವಿಯಲ್ಲಿ ಕೋರಿರುತ್ತಾರೆ.
ಸದರಿಯವರ ಮನವಿಯನ್ನು ಪರಿಶೀಲಿಸಲು, ವಿಶ್ವವಿದ್ಯಾಲಯದ ಸಿಂಡಿಕೇಟ್ ನಿರ್ಣಯಗಳು ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ, 2000 ಪ್ರಕರಣ 10 (1)ರನ್ವಯ ರದ್ದುಗೊಳಿಸುವ ಮುನ್ನ ವಿಶ್ವವಿದ್ಯಾಲಯದ ಹೇಳಿಕೆಯನ್ನು ಪಡೆಯಲು ವಿಶ್ವವಿದ್ಯಾಲಯಕ್ಕೆ ಒಂದು ಅವಕಾಶವನ್ನು ನೀಡಬೇಕಾಗಿರುತ್ತದೆ. ಇದರನ್ವಯ, ಮೈಸೂರು ವಿಶ್ವವಿದ್ಯಾಲಯದ ಹೇಳಿಕೆಯನ್ನು ಪಡೆಯಲು ಮೇಲೆ ಓದಲಾದ (2)ರನ್ವಯ ಈ ಕೆಳಕಂಡ ಅಂಶಗಳ ಮೇಲೆ ವಿವರಣೆಯನ್ನು ಪಡೆಯಲು ಕಾರಣ ಕೇಳುವ ನೋಟೀಸನ್ನು ಜಾರಿ ಮಾಡಲಾಗಿತ್ತು.
1. ಮೈಸೂರು ವಿಶ್ವವಿದ್ಯಾಲಯದ ನಡತೆ ನಿಬಂಧನೆ, 1984, ಮತ್ತು ಸಿಸಿಎ ನಿಬಂಧನೆ, 1983 ನಿಬಂಧನೆಗಳು, ಕರ್ನಾಟಕ ವಿಶ್ವವಿದ್ಯಾಲಯ ಕಾಯಿದೆ, 1976ರ ಸೆಕ್ಷನ್ 35(ಎಂ) ಅನ್ವಯ ರಚನೆ ಹಾಗೂ ಸ್ಥಾಪಿತವಾದ ನಿಬಂಧನೆಗಳಾಗಿವೆ. ಆದರೆ, ಕರ್ನಾಟಕ ವಿಶ್ವವಿದ್ಯಾಲಯ ಕಾಯಿದೆ, 2000 ಜಾರಿಗೆ ಬಂದ ಮೇಲೆ, ಈ ಎರಡು ನಿಬಂಧನೆಗಳನ್ನೂ ಸೆಕ್ಷನ್ 40(3)ರ ಅನುಗುಣವಾಗಿ ತಿದ್ದುಪಡಿ ಮಾಡಲಾಗಿಲ್ಲ.
ಆದ್ದರಿಂದ, ಈ ಎರಡು ನಿಬಂಧನೆಗಳ ಅನ್ವಯ ಮಾಡಿರುವ ತನಿಖೆ ಹಾಗೂ ದಂಡನೆಗಳು ಅನೂರ್ಜಿತವಾಗುತ್ತವೆ.
2. ಪ್ರೊ. ಬಿ. ಶಿವರಾಜ್ ಇವರನ್ನು ಕಡ್ಡಾಯ ನಿವೃತ್ತಿ ಮೈಸೂರು ವಿಶ್ವವಿದ್ಯಾಲಯದ ಶಿಸ್ತು ಪ್ರಾಧಿಕಾರವಾದ ಸಿಂಡಿಕೇಟ್ ಸಭೆಯು ಗಂಭೀರವಾಗಿ ವಿಷಯಗಳನ್ನು ಪರಗಣಿಸಿಲ್ಲ ಎಂಬುದು ಕಂಡು ಬರುತ್ತದೆ. ಯಾವುದೇ ದಂಡನೆ ವಿಧಿಸುವಾಗ ಅದು Punishment should be proportionate to the gravity of the offence ಎಂಬ ಸಹಜ ನ್ಯಾಯಪಾಲಿಸಬೇಕಾಗಿರುತ್ತದೆ.
3. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ, 2000 ಪ್ರಕರಣ (40)ರಲ್ಲಿ ವಿಶ್ವವಿದ್ಯಾಲಯವು ಪರಿನಿಯಮಾವಳಿಗಳನ್ನು ರಚಿಸುವ ಬಗ್ಗೆ ವಿವರಿಸಲಾಗಿದೆ. ಸರ್ಕಾರಿ ಸುತ್ತೋಲೆ ಸಂಖ್ಯೆ: ಸಿಆಸುಇ 18 ಸೇಇವಿ 2001, ಬೆಂಗಳೂರು, ದಿನಾಂಕ: 14ನೇ ಸೆಪ್ಟೆಂಬರ್, 2001 ಯಲ್ಲಿ ದುರ್ನಡತೆ ಹಾಗೂ ದಂಡನೆಗಳ ವರ್ಗೀಕರಣ ಮಾಡಲಾಗಿದೆ. ಆದ್ದರಿಂದ, ಸದರಿ ಸುತೋಲೆಯಂತೆ ಸಿಂಡಿಕೇಟ್ ವಿಧಿಸಿರುವ ದಂಡ ಅಸಮತವಾದದ್ದು (Disproportionate to the gravity of the misconduct). ಆದ್ದರಿಂದ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯಿದೆ, 2000ರ ಸೆಕ್ಷನ್ 40(3) ರ ಸ್ಪಷ್ಟ ಉಲ್ಲಂಘನೆಯಾಗಿದೆ.
4. ಸದರಿ ವಿಚಾರಣೆಯಲ್ಲಿ ಪ್ರೊ. ಬಿ. ಶಿವರಾಜ್ ಇವರಿಗೆ ತಮ್ಮ ಹೇಳಿಕೆಯನ್ನು ನೀಡಲು ಅವಕಾಶ ಕಲ್ಪಿಸದೆ ವಿಚಾರಣೆಯನ್ನು 90 ದಿನಗಳ ಕಾಲಾವಕಾಶವಿದ್ದರೂ, ಕೇವಲ 40 ದಿನಗಳಲ್ಲಿ ಪೂರ್ಣಗೊಳಿಸಿ, ಏಕಪಕ್ಷಿಯ (Ex-parte) ವರದಿಯ ಆಧಾರದ ಮೇಲೆ, ಸಿಂಡಿಕೇಟ್ ಸಭೆಯು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಪ್ರೊ, ಬಿ. ಶಿವರಾಜ್ ಇವರು ಆಕ್ಷೇಪಿಸಿರುತ್ತಾರೆ. ವಿಚಾರಣೆಯ ವೇಳೆಯಲ್ಲಿ ಪ್ರೊ. ಬಿ ಶಿವರಾಜ್ ಇವರಿಗೆ ತಮ್ಮ ಹೇಳಿಕೆಯನ್ನು ನೀಡಲು ಅವಕಾಶ ಕಲ್ಪಿಸಿರುವುದಿಲ್ಲ ಎಂದು ಸಿಂಡಿಕೇಟ್ ಸದಸ್ಯರಾದ ಶ್ರೀ ಎಂ.ಎಸ್.ಎಸ್. ಕುಮಾರ್ ಇವರು ಆಕ್ಷೇಪಣೆ ವ್ಯಕ್ತಪಡಿಸಿರುತ್ತಾರೆ.
ಸರ್ಕಾರವು ದಿನಾಂಕ: 17-04-2017ರಂದು ಹೊರಡಿಸಿರುವ ಕಾರಣ ಕೇಳುವ ನೋಟೀಸಿನಲ್ಲಿ ಕೋರಿರುವ ಕೆಲವು ಅಂಶಗಳಿಗೆ ಕುಲಸಚಿವರು, ಮೈಸೂರು ವಿಶ್ವವಿದ್ಯಾಲಯ ಇವರು ಸ್ಪಷ್ಟವಾದ ಮಾಹಿತಿ ನೀಡಿರುವುದಿಲ್ಲ. ಹಾಗೂ ಪ್ರೊ. ಬಿ. ಶಿವರಾಜ್ ಇವರ ವಿರುದ್ಧ ಈ ಹಿಂದೆ ಹೂಡಿರುವ ಎಲ್ಲಾ ಆಪಾದನೆಗಳನ್ನು ಸೇರಿಸಿ ಸದರಿಯವರನ್ನು ಸಿಂಡಿಕೇಟ್ ನಿರ್ಣಯ 2016/11.9 ರನ್ವಯ ಕಡ್ಡಾಯ ನಿವೃತ್ತಿಗೊಳಿಸಲಾಗಿದೆ ಎಂದು ಕುಲಸಚಿವರು ಮೇಲೆ ಓದಲಾದ (3)ರ ಪತ್ರದಲ್ಲಿ ವಿವರಣೆಯನ್ನು ನೀಡಿರುತ್ತಾರೆ.
ಕುಲಸಚಿವರು ಮೈಸೂರು ವಿಶ್ವವಿದ್ಯಾಲಯ ಇವರು ನೀಡಿರುವ ವಿವರಣೆಯನ್ನು ಪರಿಶೀಲಿಸಿದ್ದು, ಪ್ರೊ. ಬಿ.ಶಿವರಾಜ್ ಇವರ ವಿರುದ್ಧ ವಿದೇಶ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿರುವುದು ಮತ್ತು ಎಂ.ಬಿ.ಎ ವಿದ್ಯಾರ್ಥಿಗಳಿಂದ `. 150ಗಳನ್ನು ವಸೂಲು ಮಾಡಿರುವುದಕ್ಕೆ ಸಿಂಡಿಕೇಟ್ ನಿರ್ಣಯ 2016/11.4 ರಲ್ಲಿ ತೆಗೆದುಕೊಂಡಿರುವ ನಿರ್ಣಯದ ವಿರುದ್ಧ ಮಾನ್ಯ ಉಚ್ಛನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ನ್ಯಾಯಾಲಯದ ಅಂತಿಮ ತೀರ್ಪನ್ನು ನಿರೀಕ್ಷಿಸದೆ ಪ್ರೊ. ಬಿ. ಶಿವರಾಜ್ ಇವರ ವಿರುದ್ಧ ಈ ಹಿಂದೆ ಹೂಡಿರುವ ಎಲ್ಲಾ ಆಪಾದನೆಗಳನ್ನು ಪರಿಗಣಿಸಿ ಪ್ರೊ. ಬಿ.ಶಿವರಾಜ್ ಇವರನ್ನು ಕಡ್ಡಾಯ ನಿವೃತ್ತಿಗೊಳಿಸಿ ಸಿಂಡಿಕೇಟ್ ನಿರ್ಣಯ ಸಂಖ್ಯೆ: 2016/11.9ರಲ್ಲಿ ತೆಗೆದುಕೊಂಡ ನಿರ್ಣಯವು ನಿಯಮಬಾಹಿರವಾಗಿರುತ್ತದೆ.
ಪ್ರೊ. ಬಿ. ಶಿವರಾಜ್ ಇವರ ವೇತನವನ್ನು ಕನಿಷ್ಠ ಮಟ್ಟಕ್ಕೆ ಇಳಿಸಲು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ನಿರ್ಣಯ ಸಂಖ್ಯೆ:2016/11.4 ಇದರ ವಿರುದ್ಧ ಪ್ರೊ. ಬಿ. ಶಿವರಾಜ್ ಇವರು ಮಾನ್ಯ ಉಚ್ಛನ್ಯಾಯಾಲಯದಲ್ಲಿ ದಾವೆ ಹೂಡಿರುವುದರಿಂದ ಸದರಿ ಸಿಂಡಿಕೇಟ್ ನಿರ್ಣಯದ ಮೇಲೆ ಕ್ರಮತೆಗೆದುಕೊಳ್ಳುವುದು ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಮಧ್ಯೆ ಪ್ರವೇಶ ಮಾಡಿದಂತಾಗಿರುತ್ತದೆ.
ಮೇಲೆ ತಿಳಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಮೈಸೂರು ವಿಶ್ವವಿದ್ಯಾಲಯವು ಸದರಿಯವರನ್ನು ಕಡ್ಡಾಯ ನಿವೃತ್ತಿಗೊಳಿಸುವ ಸಂಬಂಧ ಸಿಂಡಿಕೇಟ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯವು ಸಹಜ ನ್ಯಾಯಕ್ಕೆ ವಿರುದ್ಧವಾಗಿದ್ದು ಹಾಗೂ ಏಕಪಕ್ಷೀಯವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಆದ್ದರಿಂದ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ, 2000 ಪ್ರಕರಣ 10(1)ರನ್ವಯ ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ನಿರ್ಣಯ 2016/11.9ಅನ್ನು ರದ್ದುಗೊಳಿಸಲು ಸರ್ಕಾರವು ತೀರ್ಮಾನಿಸಿದೆ. ಅದರಂತೆ, ಈ ಕೆಳಕಂಡ ಆದೇಶ.
ಸರ್ಕಾರಿ ಆದೇಶ ಸಂಖ್ಯೆ: ಇಡಿ 102 ಯುಎಂವಿ 2016, ಬೆಂಗಳೂರು ದಿನಾಂಕ: 12-06-2017.
ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ದಿನಾಂಕ: 21-11-2016ರಂದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯ ಕ್ರಮಾಂಕ 2016/11.9 ವಿಷಯದಲ್ಲಿ ತೆಗೆದುಕೊಂಡಿರುವ ತೀರ್ಮಾನ ಹಾಗೂ ತತ್ಸಂಬಂದ ಮೈಸೂರು ವಿಶ್ವವಿದ್ಯಾಲಯದ ಆದೇಶಗಳನ್ನು ಸರ್ಕಾರವು ಕರ್ನಾಟಕ ರಾಜ್ಯ೧೧೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೨, ೨೦೧೭ ಭಾಗ ೧ ವಿಶ್ವವಿದ್ಯಾಲಯಗಳ ಅಧಿನಿಯಮ 2000ದ ಪ್ರಕರಣ 10(1)ರನ್ವಯ ರದ್ದುಗೊಳಿಸಿದೆ ಹಾಗೂ ಸದರಿಯವರನ್ನು ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳಲು ಮುಂದಿನ ಕ್ರಮ ಕೈಗೊಳ್ಳುವಂತೆ ಮೈಸೂರು ವಿಶ್ವವಿದ್ಯಾಲಯವನ್ನು ಸೂಚಿಸಿದೆ.
PR. 309
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC. 600
ಎನ್.ವೀರಬ್ರಹ್ಮಚಾರಿ,
ಸರ್ಕಾರದ ಅಧೀನ ಕಾರ್ಯದರ್ಶಿ,
ಉನ್ನತ ಶಿಕ್ಷಣ ಇಲಾಖೆ. (ವಿಶ್ವವಿದ್ಯಾನಿಲಯಗಳು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ : 2017-18 ನೇ ಸಾಲಿಗೆ ರಾಜ್ಯದಲ್ಲಿನ ವೈದ್ಯಕೀಯ & ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ ಕೋರ್ಸುಗಳ ಸೀಟುಗಳ ಶುಲ್ಕವನ್ನು ಪರಿಷ್ಕರಿಸುವ ಬಗ್ಗೆ.
ಪ್ರಸ್ತಾವನೆ :
2017-18 ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ & ದಂತ ವೈದ್ಯಕೀಯ ಕೋರ್ಸುಗಳ ಸೀಟು ಹಂಚಿಕೆ & ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಸರ್ಕಾರವು ರಾಜ್ಯದ ಖಾಸಗಿ ಕಾಲೇಜುಗಳ ಸಂಘಗಳಾದ KPCF, KRLMPCA & AMPCK ಗಳೊಂದಿಗೆ ಈಗಾಗಲೇ ಮಾಡಿಕೊಳ್ಳಲಾಗಿರುವ ಪರಸ್ಪರ ಒಡಂಬಡಿಕೆಗಳಲ್ಲಿ 2017-18 ನೇ ಸಾಲಿನ ವೈದ್ಯಕೀಯ & ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸುಗಳಿಗೆ 2016-17 ನೇ ಸಾಲಿಗೆ ನಿಗದಿಪಡಿಸಲಾದ ಶುಲ್ಕವನ್ನು ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ.
ರಾಜ್ಯದಲ್ಲಿನ ಖಾಸಗಿ ವೈದ್ಯಕೀಯ & ದಂತ ವೈದ್ಯಕೀಯ ಕಾಲೇಜುಗಳಲ್ಲಿನ (KPCF, KRLMPCA & AMPCK) ಸ್ನಾತಕೋತ್ತರ ವೈದ್ಯಕೀಯ ಡಿಗ್ರಿ/ಡಿಪ್ಲೊಮಾ &
ದಂತ ವೈದ್ಯಕೀಯ ಡಿಗ್ರಿ/ಡಿಪ್ಲೊಮಾ ಕೋರ್ಸುಗಳ ಸೀಟುಗಳಿಗೆ ಪಾವತಿಸಬೇಕಾದ ಶುಲ್ಕದ ವಿವರ:
| ಸ ಂಖ್ಯೆ | ಕೋರ್ಸುಗಳ ವಿವರ | ಖಾಸಗಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ | ಸ ರ್ಕಾರಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ | ||
| ಪ ಸ ್ರ ು್ತತ ನಿಗದಿಪಡಿಸಿರುವ ಶುಲ್ಕ | ಪ ರಿಷ್ಕøತ ಶುಲ್ಕ | ಪ ಸ ್ರ ು್ತತ ನಿಗದಿಪಡಿಸಿರುವ ಶುಲ್ಕ | ಪ ರಿಷ್ಕøತ ಶುಲ್ಕ | ||
| 1. ವೈದ್ಯಕೀಯ ಪದವಿ: | |||||
| (ಅ) | ಕಿ ನಿಕಲ್ ್ಲ | 6,00,000 | 6,60,000 | 4,00,000 | 4,40,000 |
| (ಆ) ಪ್ಯಾರಾ ಕ್ಲಿನಿಕಲ್ | 1,50,000 | 1,65,000 | 1,00,000 | 1,10,000 | |
| (ಇ) ಪ್ರಿಕ್ಲಿನಿಕಲ್ | 75,000 | 83,000 | 50,000 | 55,000 | |
| 2. ವೈದ್ಯಕೀಯ ಡಿಪ್ಲೊಮಾ: | |||||
| (ಅ) | ಕಿ ನಿಕಲ್ ್ಲ | 4,55,000 | 5,00,000 | 3,00,000 | 3,30,000 |
| (ಆ) ಪ್ಯಾರಾ ಕ್ಲಿನಿಕಲ್ | 1,50,000 | 1,65,000 | 1,00,000 | 1,10,000 | |
| 3. ದಂತ ವೈದ್ಯಕೀಯ: | |||||
| (ಅ) ಪದವಿ ಮತ್ತು ಡಿಪ್ಲೊಮಾ | 3,20,000 | 3,52,000 | 2,05,000 | 2,25,000 |
ಮುಂದುವರೆದು, 2017-18 ನೇ ಸಾಲಿಗೆ ರಾಜ್ಯದ ಡೀಮ್ಡ್ ವಿಶ್ವವಿದ್ಯಾಲಯಗಳೂ ಸಹ ಸರ್ಕಾರದೊಂದಿಗೆ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದು, ಅದರನ್ವಯ ಈಗಾಗಲೇ ಏರ್ಪಟ್ಟಿರುವ ಪರಸ್ಪರ ಒಡಂಬಡಿಕೆಯಂತೆ ಸದರಿ ಡೀಮ್ಡ್ ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ವೈದ್ಯಕೀಯ & ದಂತ ವೈದ್ಯಕೀಯ ಕಾಲೇಜುಗಳು ಸರ್ಕಾರಿ ಕೋಟಾಗೆ ನೀಡಲಿರುವ 25% ಸ್ನಾತಕೋತ್ತರ ವೈದ್ಯಕೀಯ & ದಂತ ವೈದ್ಯಕೀಯ ಸೀಟುಗಳಿಗೆ ಈ ಕೆಳಗಿನಂತೆ ಶುಲ್ಕವನ್ನು ನಿಗದಿಪಡಿಸಲಾಗಿದೆ.
| ಕ್ರ.ಸಂ. | ಕೋರ್ಸುಗಳ ವಿವರ | ಸ ರ್ಕಾರಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ |
| 1. ವೈದ್ಯಕೀಯ ಪದವಿ: | ||
| (ಅ) | ಕಿ ನಿಕಲ್ ್ಲ | 6,00,000 |
| (ಆ) ಪ್ಯಾರಾ ಕ್ಲಿನಿಕಲ್ | 2,00,000 | |
| (ಇ) ಪ್ರಿಕ್ಲಿನಿಕಲ್ | 1,00,000 | |
| 2. ವೈದ್ಯಕೀಯ ಡಿಪ್ಲೊಮಾ: | ||
| (ಅ) | ಕಿ ನಿಕಲ್ ್ಲ | 4,00,000 |
| (ಆ) ಪ್ಯಾರಾ ಕ್ಲಿನಿಕಲ್ 3. ದಂತ ವೈದ್ಯಕೀಯ ಪದವಿ ಮತ್ತು ಡಿಪ್ಲೊಮಾ: | 2,00,000 | |
| (ಅ) | ಕಿ ನಿಕಲ್ & ಪ್ರಿಕ್ಲಿನಿಕಲ್ ್ಲ | 6,00,000 |
| (ಆ) ಪ್ಯಾರಾ ಕ್ಲಿನಿಕಲ್ | 2,00,000 |
ಡೀಮ್ಡ್ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ವೈದ್ಯಕೀಯ & ದಂತ ವೈದ್ಯಕೀಯ ಕಾಲೇಜುಗಳ ಸ್ನಾತಕೋತ್ತರ ಕೋರ್ಸುಗಳಿಗೆ ಖಾಸಗಿ ಕೋಟಾದಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಆಯ್ಕೆಯಾಗುವ ವಿದ್ಯಾರ್ಥಿಗಳು ಆಯಾ ಡೀಮ್ಡ್ ವಿಶ್ವವಿದ್ಯಾಲಯಗಳ ಶುಲ್ಕ ನಿಗದಿ ಸಮತಿಯು ನಿಗದಿಪಡಿಸುವ ಶುಲ್ಕವನ್ನು ಪಾವತಿಸಬೇಕಾಗಿದ್ದು, ಅದರನ್ವಯ ಎಲ್ಲಾ ಡೀಮ್ಡ್ ವಿಶ್ವವಿದ್ಯಾಲಯಗಳು ಶುಲ್ಕ ನಿಗದಿ ಸಮಿತಿಯು ನಿಗದಿಪಡಿಸಿರುವ ಶುಲ್ಕದ ವಿವರವನ್ನು ವೈದ್ಯಕೀಯ ಶಿಕ್ಷಣ ನಿರ್ದೇಶಕರು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.
ಉಳಿದಂತೆ ಸರ್ಕಾರಿ ಸ್ವಾಯತ್ತ ವೈದ್ಯಕೀಯ/ದಂತ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ ವೈದ್ಯಕೀಯ & ದಂತ ವೈದ್ಯಕೀಯ ಕೋರ್ಸುಗಳಿಗೆ 2017-18 ನೇ ಸಾಲಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 2016-17 ನೇ ಸಾಲಿನಲ್ಲಿ ಕೆಳಕಂಡಂತೆ ನಿಗದಿಪಡಿಸಿದ್ದ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ.
| ಕ್ರ.ಸಂ. | ಕೋರ್ಸುಗಳ ವಿವರ | ನಿಗದಿಪಡಿಸಿರುವ ಶುಲ್ಕ |
| ಸ್ನಾತಕೋತ್ತರ ಪದವಿ ವೈದ್ಯಕೀಯ ಕೋರ್ಸುಗಳು | ||
| 1. | ಕಿ ನಿಕಲ್ ್ಲ | 20,000 |
| 2. | ಪ್ಯಾರಾ ಕ್ಲಿನಿಕಲ್ | 10,000 |
| 3. | ಪಿ ಕಿ ್ರ ನಿಕಲ್ ್ಲ | 5,000 |
| ಸ್ನಾತಕೋತ್ತರ ಡಿಪ್ಲೊಮಾ ಕೋರ್ಸುಗಳು | ||
| 1. | ಕಿ ನಿಕಲ್ ್ಲ | 20,000 |
| 2. | ಪ್ಯಾರಾ ಕ್ಲಿನಿಕಲ್ | 10,000 |
| ಸ್ನಾತಕೋತ್ತರ ಪದವಿ ದಂತ ವೈದ್ಯಕೀಯ ಕೋರ್ಸುಗಳು | ||
| 1. | ಕಿ ನಿಕಲ್ ್ಲ | 20,000 |
| 2. | ಪ್ಯಾರಾ ಕ್ಲಿನಿಕಲ್ | 5,000 |
ವಿಷಯವನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಕೂಲಂಕಷವಾಗಿ ಪರಿಶೀಲಿಸಿದ ನಂತರ, ರಾಜ್ಯದಲ್ಲಿನ ಸರ್ಕಾರಿ, ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಬರುವ ವೈದ್ಯಕೀಯ & ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸುಗಳ ಸೀಟುಗಳ ಪ್ರವೇಶ ಶುಲ್ಕವನ್ನು 2017-18 ನೇ ಸಾಲಿಗೆ ಮೇಲಿನಂತೆ ನಿಗದಿಪಡಿಸಲು ಸರ್ಕಾರವು ತೀರ್ಮಾನಿಸಿ, ಈ ಆದೇಶವನ್ನು ಹೊರಡಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆಕುಕ 77 ಆರ್‌ಜಿಯು 2017, ಬೆಂಗಳೂರು, ದಿನಾಂಕ: 03-04-2017.
ರಾಜ್ಯದಲ್ಲಿನ ಖಾಸಗಿ ವೈದ್ಯಕೀಯ / ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸುಗಳ ಸೀಟುಗಳ ಪ್ರವೇಶ ಶುಲ್ಕವನ್ನು 2017-18 ನೇ ಸಾಲಿಗೆ ಈ ಕೆಳಗಿನಂತೆ ಪರಿಷ್ಕರಿಸಿ ಆದೇಶಿಸಲಾಗಿದೆ.
ರಾಜ್ಯದಲ್ಲಿನ ಖಾಸಗಿ ವೈದ್ಯಕೀಯ & ದಂತ ವೈದ್ಯಕೀಯ ಕಾಲೇಜುಗಳಲ್ಲಿನ (KPCF, KRLMPCA & AMPCK) ಸ್ನಾತಕೋತ್ತರ ವೈದ್ಯಕೀಯ ಡಿಗ್ರಿ/ಡಿಪ್ಲೊಮಾ &
ದಂತ ವೈದ್ಯಕೀಯ ಡಿಗ್ರಿ/ಡಿಪ್ಲೊಮಾ ಕೋರ್ಸುಗಳ ಸೀಟುಗಳಿಗೆ ನಿಗದಿಪಡಿಸಲಾದ ಶುಲ್ಕದ ವಿವರ:
| ಕ್ರ. ಸಂ. | ಕೋರ್ಸುಗಳ ವಿವರ | ಖಾಸಗಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ | ಸ ರ್ಕಾರಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ | ||
| ಪ ಸ ್ರ ು್ತತ ನಿಗದಿಪಡಿಸಿರುವ ಶುಲ್ಕ | ಪ ರಿಷ್ಕøತ ಶುಲ್ಕ | ಪ ಸ ್ರ ು್ತತ ನಿಗದಿಪಡಿಸಿರುವ ಶುಲ್ಕ | ಪ ರಿಷ್ಕøತ ಶುಲ್ಕ | ||
| 1. ವೈದ್ಯಕೀಯ ಪದವಿ: | |||||
| (ಅ) | ಕಿ ನಿಕಲ್ ್ಲ | 6,00,000 | 6,60,000 | 4,00,000 | 4,40,000 |
| (ಆ) ಪ್ಯಾರಾ ಕ್ಲಿನಿಕಲ್ | 1,50,000 | 1,65,000 | 1,00,000 | 1,10,000 | |
| (ಇ) ಪ್ರಿಕ್ಲಿನಿಕಲ್ | 75,000 | 83,000 | 50,000 | 55,000 | |
| 2. ವೈದ್ಯಕೀಯ ಡಿಪ್ಲೊಮಾ: | |||||
| (ಅ) | ಕಿ ನಿಕಲ್ ್ಲ | 4,55,000 | 5,00,000 | 3,00,000 | 3,30,000 |
| (ಆ) ಪ್ಯಾರಾ ಕ್ಲಿನಿಕಲ್ | 1,50,000 | 1,65,000 | 1,00,000 | 1,10,000 | |
| 3. ದಂತ ವೈದ್ಯಕೀಯ: | |||||
| (ಅ) ಪದವಿ ಮತ್ತು ಡಿಪ್ಲೊಮಾ | 3,20,000 | 3,52,000 | 2,05,000 | 2,25,000 |
ರಾಜ್ಯದ ಡೀಮ್ಡ್ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಬರುವ ವೈದ್ಯಕೀಯ & ದಂತ ವೈದ್ಯಕೀಯ ಕಾಲೇಜುಗಳು ಸರ್ಕಾರಿ ಕೋಟಾಗೆ ನೀಡಲಿರುವ 25% ಸ್ನಾತಕೋತ್ತರ ವೈದ್ಯಕೀಯ & ದಂತ ವೈದ್ಯಕೀಯ ಸೀಟುಗಳಿಗೆ 2017-18 ನೇ ಸಾಲಿಗೆ ನಿಗದಿಪಡಿಸಲಾದ ಶುಲ್ಕದ ವಿವರ ಕೆಳಕಂಡಂತಿದೆ:
| ಕ್ರ.ಸಂ. | ಕೋರ್ಸುಗಳ ವಿವರ | ಸ ರ್ಕಾರಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ |
| 1. ವೈದ್ಯಕೀಯ ಪದವಿ: | ||
| (ಅ) | ಕಿ ನಿಕಲ್ ್ಲ | 6,00,000 |
| (ಆ) ಪ್ಯಾರಾ ಕ್ಲಿನಿಕಲ್ | 2,00,000 | |
| (ಇ) ಪ್ರಿಕ್ಲಿನಿಕಲ್ | 1,00,000 | |
| 2. ವೈದ್ಯಕೀಯ ಡಿಪ್ಲೊಮಾ: | ||
| (ಅ) | ಕಿ ನಿಕಲ್ ್ಲ | 4,00,000 |
| (ಆ) ಪ್ಯಾರಾ ಕ್ಲಿನಿಕಲ್ | 2,00,000 | |
| 3. ದಂತ ವೈದ್ಯಕೀಯ ಪದವಿ ಮತ್ತು ಡಿಪ್ಲೊಮಾ: | ||
| (ಅ) | ಕಿ ನಿಕಲ್ & ಪ್ರಿಕ್ಲಿನಿಕಲ್ ್ಲ | 6,00,000 |
| (ಆ) ಪ್ಯಾರಾ ಕ್ಲಿನಿಕಲ್ | 2,00,000 |
ಡೀಮ್ಡ್ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ವೈದ್ಯಕೀಯ & ದಂತ ವೈದ್ಯಕೀಯ ಕಾಲೇಜುಗಳ ಸ್ನಾತಕೋತ್ತರ ಕೋರ್ಸುಗಳಿಗೆ ಖಾಸಗಿ ಕೋಟಾದಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಆಯಾ ಡೀಮ್ಡ್ ವಿಶ್ವವಿದ್ಯಾಲಯಗಳ ಶುಲ್ಕ ನಿಗದಿ ಸಮಿತಿಯ ಶಿಫಾರಸ್ಸಿನಂತೆ ನಿಗದಿಪಡಿಸಿರುವ ಶುಲ್ಕದ ವಿವರವನ್ನು ಅನುಬಂಧದಲ್ಲಿ ಲಗತ್ತಿಸಿದೆ.
ಉಳಿದಂತೆ ಸರ್ಕಾರಿ ಸ್ವಾಯತ್ತ ವೈದ್ಯಕೀಯ/ದಂತ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ ವೈದ್ಯಕೀಯ & ದಂತ ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಪಾವತಿಸಬೇಕಾದ ಶುಲ್ಕದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲವಾದ್ದರಿಂದ 2016-17 ನೇ ಸಾಲಿನಲ್ಲಿ ಕೆಳಕಂಡಂತೆ ನಿಗದಿಪಡಿಸಿರುವ ಶುಲ್ಕವನ್ನೇ 2017-18 ನೇ ಸಾಲಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೂ ನಿಗದಿಪಡಿಸಲಾಗಿದೆ.
| ಸ ಂಖ್ಯೆ | ಕೋರ್ಸುಗಳ ವಿವರ | ನಿಗದಿಪಡಿಸಿರುವ ಶುಲ್ಕ |
| ಸ್ನಾತಕೋತ್ತರ ಪದವಿ ವೈದ್ಯಕೀಯ ಕೋರ್ಸುಗಳು | ||
| 1. | ಕಿ ನಿಕಲ್ ್ಲ | 20,000 |
| 2. | ಪ್ಯಾರಾ ಕ್ಲಿನಿಕಲ್ | 10,000 |
| 3. | ಪಿ ಕಿ ್ರ ನಿಕಲ್ ್ಲ | 5,000 |
| ಸ್ನಾತಕೋತ್ತರ ಡಿಪ್ಲೊಮಾ ಕೋರ್ಸುಗಳು | ||
| 1. | ಕಿ ನಿಕಲ್ ್ಲ | 20,000 |
| 2. | ಪ್ಯಾರಾ ಕ್ಲಿನಿಕಲ್ | 10,000 |
| ಸ್ನಾತಕೋತ್ತರ ಪದವಿ ದಂತ ವೈದ್ಯಕೀಯ ಕೋರ್ಸುಗಳು | ||
| 1. | ಕಿ ನಿಕಲ್ ್ಲ | 20,000 |
| 2. | ಪ್ಯಾರಾ ಕ್ಲಿನಿಕಲ್ | 5,000 |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ.ಬಿ.ಧೋತ್ರೆ
ಸರ್ಕಾರದ ಅಧೀನ ಕಾರ್ಯದರ್ಶಿ-2,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ವೈದ್ಯಕೀಯ ಶಿಕ್ಷಣ)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೨, ೨೦೧೭ ೧೧೮೧
ಅನುಬಂಧ
Sri Siddartha Academy of Higher Education, Tumakuru.
Annual Fee Structure for DEEMED Universities 50% of All India Quota Seats
| SI. No | Course Name | Degree | Diploma |
| Pre Clinical | |||
| 1 | M.S. (Anatomy) | 3.50 | |
| 2 | M.D. (Physiology) | 3.50 | |
| Para Clinical | |||
| 3 | M.D. (Pathology) | 8.00 | |
| 4 | M.D. (Microbiology) | 5.00 | |
| 5 | M.D. (Community Medicine) | 5.00 | |
| Clinical | |||
| 6 | M.D. (General Medicine) | 22.00 | |
| 7 | M.D. (Paediatrics) | 22.00 | 18.00 |
| 8 | M.D. (Anaesthesiology) | 15.00 | 10.00 |
| 9 | M.D. (Radio - Diagnosis) (Radiology) | 22.00 | 18.00 |
| 10 | M.D. (Dermatology & STD) | 22.00 | |
| 11 | M.D. (Psychiatry) | 15.00 | |
| 12 | M.D. (Obstetrics & Gynaecology) | 22.00 | 18.00 |
| 13 | M.S. (Orthopaedics) | 22.00 | 18.00 |
| 14 | M.S. (E.N.T.) | 18.00 | 15.00 |
| 15 | M.S. (General Surgery) | 22.00 | |
| 16 | M.S. (Ophthalmology) | 18.00 | 10.00 |
| SI. No | Course Name | Degree | Dlploma |
| 1 | Conservative Dentistry & Endodontics | 7.00 | |
| 2 | Oral & Maxillofacial Surgery | 7.00 | |
| 3 | Oral Pathology & Microbiology | 7.00 | |
| 4 | Orthodontics & D Forthopaedics . | 7.00 | |
| 5 | Paedodontics & Preventive Dentistry | 7.00 | |
| 6 | Periodontology | 7.00 | |
| 7 | Prosthodontics & Crown & Bridge | 7.00 |
However, for 2nd & 3rd yr PG Medical (MDIMSIPG Diploma) & Dental PG (MDS) it will be minus(-) of 11,000/-
Yenapoya Medical College, Mangaluru
Annual Fee Structure for DEEMED Universities 50% of All India Quota Seats
| SI. No | Course Name | Degree | Diploma |
| Pre Clinical | |||
| 1 | M.S. (Anatomy) | 6.00 | |
| 2 | M.D. (Physiology) | 6.00 | |
| 3 Para Clinical | MD Biochemistry | 6.00 | |
| 4 | M.D. (Pathology) | 6.00 | |
| 5 | M.D. (Microbiology) | 6.00 | |
| 6 | M.D. (Community Medicine) | 6.00 | |
| 7 | MD Pharmocology | 6.00 | |
| 8 | MD Forensic Medicine | 6.00 | |
| Clinical | |||
| 9 | MD Tuberculosis | 6.00 | |
| 10 | M.D. (General Medicine) | 6.00 | |
| 11 | M.D. (Paediatrics) | 6.00 | |
| 12 | M.D. (Anaesthesiology) | 6.00 | |
| 13 | M.D. (Radio - Diagnosis) / (Radiology) | 6.00 | |
| 14 | M.D. (Dermatology & STD) | 6.00 | |
| 15 | M.D. (Psychiatry) | 6.00 | |
| 16 | M.D. (Obstetrics & Gynaecology) | 6.00 | |
| 17 | M.S. (Orthopaedics) | 6.00 | |
| 18 | M.S. (E.N.T.) | 6.00 | |
| 19 | M.S. (General Surgery) | 6.00 | |
| 20 | M.S. (Ophthalmology) | 6.00 | |
| 1 | Conservative Dentistry & Endodontics | 14.50 | |
| 2 | Oral & Maxillofacial Surgery | 10.00 | |
| 3 | Oral Medicine and Radiology | 5.00 | |
| 4 | Oral Pathology & Microbiology | 5.00 | |
| 5 | Orthodontics & D Forthopaedics | 14.50 | |
| 6 | Paedodontics & Preventive Dentistry | 12.00 | |
| 7 | Periodontology | 10.00 | |
| 8 | Prosthodontics & Crown & Bridge. | 10.00 | |
| 9 | Public Health Dentistry | 6.00 |
KLE University JN Medical College, Belagavi
Annual Fee Structure for DEEMED Universities 50% of All India Quota Seats
| SI. No | Course Name | Degree | Diploma |
| Pre Clinical | |||
| 1 | M.S. (Anatomy) | 8.24 | |
| 2 | M.D. (Physiology) | 8.24 | |
| 3 | MD Biochemistry | 8.24 | |
| Para Clinical | |||
| 4 | M.D. (Pathology) | 8.24 | 14.29 |
| 5 | M.D. (Microbiology) | 8.24 | |
| 6 | M.D. (Community Medicine) | 8.24 | 14.29 |
| 7 | MD Pharmocology | 8.24 | |
| 8 | MD Forensic Medicine | 8.24 | 14.29 |
| Clinical | |||
| 9 | MD Tuberculosis | 20.00 | |
| 10 | M.D. (General Medicine) | 20.00 | |
| 11 | M.D. (Paediatrics) | 20.00 | 15.75 |
| 12 | M.D. (Anaesthesiology) | 20.00 | 14.29 |
| 13 | M.D. (Radio - Diagnosis) / (Radiology) | 20.00 | 15.75 |
| 14 | M.D. (Dermatology & STD) | 20.00 | 15.75 |
| 15 | M.D. (Psychiatry) | 20.00 | |
| 16 | M.D. (Obstetrics & Gynaecology) | 20.00 | 15.75 |
| 17 | M.S. (Orthopaedics) | 20.00 | 15.75 |
| 18 | M.S. (E.N.T.) | 20.00 | 14.29 |
| 19 | M.S. (General Surgery) | 20.00 | |
| 20 | M.S. (Ophthalmology) | 20.00 | 14.29 |
| 1 | Conservative Dentistry & Endodontics | 10.00 | |
| 2 | Oral & Maxillofacial Surgery | 10.00 | |
| 3 | Oral Medicine and Radiology | 5.00 | |
| 4 | Oral Pathology & Microbiology | 5.00 | |
| 5 | Orthodontics & D FOrthopaedics . | 10.00 | |
| 6 | Paedodontics & Preventive Dentistry | 10.00 | |
| 7 | Periodontology | 10.00 | |
| 8 | Prosthodontics & Crown & Bridge; | 10.00 | |
| 9 | Public Health Dentistry | 10.00 |
Manipal University
Kasturba Medical College, Manipal
Annual Fee Structure for DEEMED Universities 50% of All India Quota Seats
| SI. No | Course Name | Degree | Diploma |
| Pre Clinical | |||
| 1 | M.S. (Anatomy) | 3.94 | |
| 2 | M.D. (Physiology) | 3.94 | |
| 3 | M.D. Biochemistry | 3.94 | |
| Para Clinical | |||
| 4 | M.D. (Pathology) | 16.54 | 8.43 |
| 5 | M.D. (Microbiology) | 12.64 | |
| 6 | M.D. (Community Medicine) | 10.58 | |
| 7 | M.D. Pharmocology | 10.58 | |
| 8 Clinical | M.D. Forensic Medicine | 3.94 | |
| 9 | MD Tuberculosis | 15.02 | |
| 10 | M.D. (General Medicine) | 16.40 | |
| 11 | M.D. (Paediatrics) | 19.84 | 15.45 |
| 12 | M.D. (Anaesthesiology) | 15.02 | 12.32 |
| 13 | M.D. (Radio - Diagnosis) / (Radiology) | 23.26 | 18.20 |
| 14 | M.D. (Dermatology & STD) | 16.40 | 12.32 |
| 15 | M.D.- (Psychiatry) | 15.02 | 12.32 |
| 16 | M.D. (Obstetrics & Gynaecology) | 17.90 | 12.32 |
| 17 | M.S. (Orthopaedics) | 19.84 | 15.45 |
| 18 | M.S. (E.N.T.) | 17.90 | 12.32 |
| 19 | M.S. (General Surgery) | 17.90 | |
| 20 | M.S. (Ophthalmology) | 17.90 | |
| 21 | M.D. Hospital administration | 15.14 | |
| 22 | RadioTherapy | 15.02 | |
| 1 | Conservative Dentistry & Endodontics | 15.08 | |
| 2 | Oral & Maxillofacial Surgery | 13.92 | |
| 3 | Oral Medicine and Radiology | 8.72 | |
| 4 | Oral Pathology & Microbiology | 8.72 | |
| 5 | Orthodontics & D FOrthopaedics ' | 15.08 | |
| 6 | Paedodontics & Preventive Dentistry | 13.92 | |
| 7 | Periodontology | 10.78 | |
| 8 | Prosthodontics & Crown & Bridge | 13.92 | |
| 9 | Public Health Dentistry | 10.78 | |
| 10 | Dental Material | 1.87 |
Manipal University
Kasturba Medical College, Mangaluru
Annual Fee Structure for DEEMED Universities 50% of All India Quota Seats
| SI. No | Course Name | Degree | Diploma |
| Pre Clinical | |||
| 1 | M.S. (Anatomy) | 3.94 | |
| 2 | M.D. (Physiology) | 3.94 | |
| 3 | MD Biochemistry | 3.94 | |
| Para Clinical | |||
| 4 | M.D. (Pathology) | 16.54 | 8.43 |
| 5 | M.D. (Microbiology) | 12.64 | |
| 6 | M.D. (Community Medicine) | ||
| 7 | MD Pharmocology | 10.58 | |
| 8 Clinical | MD Forensic Medicine | 3.94 | |
| 9 | MD Tuberculosis | ||
| 10 | M.D. (General Medicine) | 16.40 | |
| 11 | M.D. (Paediatrics) | 19.84 | 15.45 |
| 12 | M.D. (Anaesthesiology) | 15.02 | 12.32 |
| 13 | M.D. (Radio - Diagnosis) / (Radiology) | 23.26 | |
| 14 | M.D. (Dermatology & STD) | 16.40 | |
| 15 | M.D. (Psychiatry) | ||
| 16 | M.D. (Obstetrics & Gynaecology) | 17.90 | |
| 17 | M.S. (Orthopaedics) | 19.84 | |
| 18 | M.S. (E.N.T.) | 17.90 | 12.32 |
| 19 | M.S. (General Surgery) | 17.90 | |
| 20 | M.S. (Ophthalmology) | 17.90 | 12.32 |
| 21 | MD Hospital administration | ||
| 22 | Radio Therapy | ||
| 1 | Conservative Dentistry & Endodontics | 15.08 | |
| 2 | Oral & Maxillofacial Surgery | 13.92 | |
| 3 | Oral Medicine and Radiology | 8.72 | |
| 4 | Oral Pathology & Microbiology | 8.72 | |
| 5 | Orthodontics & D FOrthopaedics | 15.08 | |
| 6 | Paedodontics & Preventive Dentistry | 13.92 | |
| 7 | Periodontology | 10.78 | |
| 8 | Prosthodontics & Crown & Bridge | 13.92 | |
| 9 | Public Health Dentistry | 10.78 | |
| 10 | Dental Material | - | 1.87 |
Sri Devaraj Urs academy of Higher Education & Research
Annual Fee Structure for DEEMED Universities 50% of All India Quota Seats
| SI. No | Course Name | Degree | Diploma |
| Pre Clinical | |||
| 1 | M.S. (Anatomy) | 4.00 | |
| 2 | M.D. (Physiology) | 4.00 | |
| 3 | MD Biochemistry | 4.00 | |
| Para Clinical | |||
| 4 | M.D. (Pathology) | 7.00 | |
| 5 | M.D. (Microbiology) | 5.00 | |
| 6 | M.D. (Community Medicine) | 5.00 | |
| 7 | MD Pharmocology | 5.00 | |
| 8 | MD Forensic Medicine | 4.00 | |
| Clinical | |||
| 9 | MD Tuberculosis | ||
| 10 | M.D. (General Medicine) | 20.00 | |
| 11 | M.D. (Paediatrics) | 20.00 | 10.00 |
| 12 | M.D. (Anaesthesiology) | 15.00 | 10.00 |
| 13 | M.D. (Radio - Diagnosis) / (Radiology) | 25.00 | 10.00 |
| 14 | M.D. (Dermatology & STD) | 20.00 | 10.00 |
| 15 | M.D. (Psychiatry) | ||
| 16 | M.D. (Obstetrics & Gynaecology) | 20.00 | 10.00 |
| 17 | M.S. (Orthopaedics) | 20.00 | 10.00 |
| 18 | M.S. (E.N.T.) | 15.00 | 10.00 |
| 19 | M.S. (General Surgery) | 20.00 | |
| 20 | M.S. (Ophthalmology) | 15.00 | 10.00 |
| 21 | MD Hospital administration | ||
| 22 | Radio Therapy | ||
| 1 | Conservative Dentistry & Endodontics | ||
| 2 | Oral & Maxillofacial Surgery | ||
| 3 | Oral Medicine and Radiology | ||
| 4 | Oral Pathology & Microbiology | ||
| 5 | Orthodontics & D FOrthopaedics | ||
| 6 | Paedodontics & Preventive Dentistry | ||
| 7 | Periodontology | ||
| 8 | Prosthodontics & Crown & Bridge | ||
| 9 | Public Health Dentistry | ||
| 10 | Dental Material |
BLDE University, Vijayapura
Annual Fee Structure for DEEMED Universities 50% of All India Quota Seats
| SI. No | Course Name | Degree | Diploma |
| Pre Clinical | .. | ||
| I | M.S. (Anatomy) | 1.35 | |
| 2 | M.D. (Physiology) | 1.35 | |
| 3 | MD Biochemistry | 1.35 | |
| Para Clinical | |||
| 4 | M.D. (Pathology) | 4.45 | 1.35 |
| 5 | M.D. (Microbiology) | 2.25 | |
| 6 | M.D. (Community Medicine) | 2.25 | |
| 7 | MD Pharmocology | 2.25 | |
| 8 | MD Forensic Medicine | 2.25 | |
| Clinical | |||
| 9 | MD Tuberculosis | ||
| 10 | M.D. (General Medicine) | 17.55 | |
| 11 | M.D. (Paediatrics) | 17.55 | 13.40 |
| 12 | M.D. (Anaesthesiology) | 17.55 | 13.40 |
| 13 | M.D. (Radio - Diagnosis) (Radiology) | 17.55 | |
| 14 | M.D. (Dermatology & STD) | 17.55 | |
| 15 | M.D. (Psychiatry) | ||
| 16 | M.D. (Obstetrics & Gynaecology) | 17.55 | 13.40 |
| 17 | M.S. (Orthopaedics) | 17.55 | 13.40 |
| 18 | M.S. (E.N.T.) | 17.55 | 4.45 |
| 19 | M.S. (General Surgery) | 17.55 | |
| 20 | M.S. (Ophthalmology) | 17.55 | |
| 21 | MD Hospital administration | ||
| 22 | Radio Therappy | ||
| SI.No | Course Name | Degree | Diploma. |
| 1 | Conservative Dentistry & Endodontics | ||
| 2 | Oral & Maxillofacial Surgery | ||
| 3 | Oral Medicine and Radiology | ||
| 4 | Oral Pathology & Microbiology | ||
| 5 | Orthodontics & D FOrthopaedics | ||
| 6 | Paedodontics & Preventive Dentistry | ||
| 7 | Periodontology | ||
| 8 | Prosthodontics & Crown & Bridge | ||
| 9 | Public Health Dentistry | ||
| 10 | Dental Material |
JSS University, JSS Medical College, Mysuru
Annual Fee Structure for DEEMED Universities 50% of All India
| SI.No | Course Name | Degree | Diploma. |
| Pre Clinical | |||
| 1 | M.S. (Anatomy) | 4.50 | |
| 2 | M.D. (Physiology) | 4.50 | |
| 3 | MD Biochemistry | 4.50 | |
| Para Clinical | |||
| 4 | M.D. (Pathology) | 5.50 | 4.75 |
| 5 | M.D. (Microbiology) | 5.50 | |
| 6 | M.D. (Community Medicine) | 5.50 | |
| 7 | MD Phannocology | 5.50 | |
| 8 | MD Forensic Medicine | 5.50 | |
| Clinical | |||
| 9 | MD Tuberculosis | 15.00 | |
| 10 | M.D. (General Medicine) | 15.00 | |
| 11 | M.D. (Paediatrics) | 15.00 | 12.00 |
| 12 | M.D. (Anaesthesiology) | 15.00 | |
| 13 | M.D. (Radio - Diagnosis) 1 (Radiology) | 15.00 | 12.00 |
| 14 | M.D. (Dermatology & STD) | 15.00 | |
| 15 | M.D. (Psychiatry) | 15.00 | 12.00 |
| 16 | M.D. (Obstetrics & Gynaecology) | 15.00 | 12.00 |
| 17 | M.S. (Orthopaedics) | 15.00 | 12.00 |
| 18 | M.S. (E.N.T.) | 15.00 | 12.00 |
| 19 | M.S. (General Surgery) | 15.00 | |
| 20 | M.S. (Ophthalmology) | 15.00 | |
| 21 | MD Hospital administration | 15.00 | |
| 22 | Radio Therappy | ||
| 23 | Emergency Medicine | 15.00 | |
| SI.No | Course Name | Degree | Diploma |
| 1 | Conservative Dentistry & Endodontics | 5.70 | |
| 2 | Oral & Maxillofacial Surgery | 5.70 | |
| 3 | Oral Medicine and Radiology | 5.70 | |
| 4 | Oral Pathology & Microbiology | 5.70 | |
| 5 | Orthodontics & D Forthopaedics | 5.70 | |
| 6 | Paedodontics & Preventive Dentistry | 5.70 | |
| 7 | Periodontology | 5.70 | |
| 8 | Prosthodontics & Crown & Bridge | 5.70 | |
| 9 | Public Health Dentistry | 5.70 |
Medical Degree Clinical courses
62,500/- will be collected as other fee for Medical Diploma Clinical courses
55.500/- will be collected as other fee for. Medical Diploma Para Clinical courses 55.500/- will be collected as other fee for Dental Degree courses
Nitte University
K.S.Hegde Medical Academy, Mangaluru/ A.B. Shetty Memorial
Annual Fee Structure for DEEMED Universities 50 of All India
| SI.No | Course Name | Degree | Diploma |
| Pre Clinical | |||
| 1 | M.S. (Anatomy) | 5.08 | |
| 2 | M.D. (Physiology) | 5.08 | |
| 3 | MD Biochemistry | 5.08 | |
| Para Clinical | |||
| 4 | M.D. (Pathology) | 10.08 | |
| 5 | M.D. (Microbiology) | 10.08 | |
| 6 | M.D. (Community Medicine) | 8.08 | |
| 7 | MD Pharmocology | 8.08 | |
| 8 | MD Forensic Medicine | ||
| Clinical | |||
| 9 | MD Tuberculosis | ||
| 10 | M.D. (General Medicine) | 24.08 | |
| 11 | M.D. (Paediatrics) | 28.08 | |
| 12 | M.D. (Anaesthesiology) | 18.08 | |
| 13 | M.D. (Radio - Diagnosis) / (Radiology) | 28.08 | |
| 14 | M.D. (Dermatology & STD) | 28.08 | |
| 15 | M.D. (Psychiatry) | 18.08 | |
| 16 | M.D. (Obstetrics & Gynaecology) | 24.08 | |
| 17 | M.S. (Orthopaedics) | 24.08 | |
| 18 | M.S. (E.N.T.) | 24.08 | |
| 19 | M.S. (General Surgery) | ||
| 20 | M.S. (Ophthalmology) | ||
| 21 | MD Hospital administration | ||
| 22 | Radio Therappy | ||
| 23 | Emergency Medicine | - | |
| 1 | Conservative Dentistry & Endodontics | 10.08 | |
| 2 | Oral & Maxillofacial Surgery | 10.08 | |
| 3 | Oral Medicine and Radiology | 3.08 | |
| 4 | Oral Pathology & Microbiology | 2.08 | |
| 5 | Orthodontics & D Forthopaedics | 10.08 | |
| 6 | Paedodontics & Preventive Dentistry | 10.08 | |
| 7 | Periodontology | 7.58 | |
| 8 | Prosthodontics & Crown & Bridge | 10.08 | |
| 9 | Public Health Dentistry |
PR-304
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ S-25
ಎಂ.ಬಿ.ಧೋತ್ರೆ
ಸರ್ಕಾರದ ಅಧೀನ ಕಾರ್ಯದರ್ಶಿ-2,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
(ವೈದ್ಯಕೀಯ ಶಿಕ್ಷಣ)
ಒಳಾಡಳಿತ ಸಚಿವಾಲಯ
ವಿಷಯ : ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ, ವಿಚಾರಣಾ ಆಯೋಗಕ್ಕೆ ಹಣ ಬಿಡುಗಡೆ ಮಾಡುವ ಬಗ್ಗೆ.
ಓದಲಾಗಿದೆ :
1. ಸರ್ಕಾರದ ಅಧಿಸೂಚನೆ ಸಂ: ಹೆಚ್‌ಡಿ 10 ಪಿಸಿಇ 2016, ದಿನಾಂಕ:16.7.2016. 2. ಸರ್ಕಾರದ ಅಧಿಸೂಚನೆ ಸಂ: ಹೆಚ್‌ಡಿ 10 ಪಿಸಿಇ 2016, ದಿನಾಂಕ:6.1.2017. 3. ಸರ್ಕಾರದ ಅಧಿಸೂಚನೆ ಸಂ: ಹೆಚ್‌ಡಿ 10 ಪಿಸಿಇ 2016, ದಿನಾಂಕ:10.7.2017.
4. ಕಾರ್ಯದರ್ಶಿ, ನ್ಯಾಯಮೂರ್ತಿ ಶ್ರೀ ಕೆ.ಎನ್.ಕೇಶವ ನಾರಾಯಣ ವಿಚಾರಣಾ ಆಯೋಗರವರ ಪತ್ರ ಸಂಖ್ಯೆ: ಕೆಎನ್‌ಕೆಸಿಐ/54/2017-18, ದಿ: 28.7.2017.
5. ಸರ್ಕಾರದ ಅಧೀನ ಕಾರ್ಯದರ್ಶಿ, (ಎಫ್ಆರ್&ಬಿಸಿಸಿ), ಆರ್ಥಿಕ ಇಲಾಖೆರವರ ಸರ್ಕಾರಿ ಆದೇಶ ಸಂಖ್ಯೆ: ಆಇ 42 ಬಿಆರ್ಎಸ್ 2017, ದಿನಾಂಕ 29.8.2017.
ಪ್ರಸ್ತಾವನೆ :
ಮೇಲೆ ಓದಲಾದ(1)ರ ಅಧಿಸೂಚನೆಯಲ್ಲಿ ಶ್ರೀ ಎಂ.ಕೆ. ಗಣಪತಿ, ಡಿವೈಎಸ್ಪಿ, (ಇಲಾಖಾ ವಿಚಾರಣೆ), ಐಜಿಪಿ ಕಛೇರಿ, ಪಶ್ಚಿಮ ವಲಯ, ಮಂಗಳೂರು ಇವರು ದಿನಾಂಕ:07/07/2016 ರಂದು ಅಸ್ವಾಭಾವಿಕ ಮರಣ ಹೊಂದಿದ್ದು, ಇದಕ್ಕೆ ಕಾರಣವಾದ ಸಂದರ್ಭಗಳು ಹಾಗೂ ಘಟನೆಗಳ ಕುರಿತು ಮತ್ತು ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದಿ: 07/07/2016ರಂದು ದಾಖಲಾಗಿರುವ ಯುಡಿಆರ್ ನಂ.9/2016 ಕುರಿತು ನ್ಯಾಯಾಂಗ ವಿಚಾರಣೆಗಾಗಿ ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ, ನಿವೃತ್ತ ನ್ಯಾಯಾಧೀಶರು, ಕರ್ನಾಟಕ ಉಚ್ಚ ನ್ಯಾಯಾಲಯ ಇವರನ್ನು ಏಕ ಸದಸ್ಯ ವಿಚಾರಣಾ ಆಯೋಗವನ್ನಾಗಿ ನೇಮಿಸಿ, ಅಧಿಸೂಚಿಸಿದೆ.
ಮೇಲೆ ಓದಲಾದ(2)ರ ಅಧಿಸೂಚನೆಯಲ್ಲಿ ಶ್ರೀ ಕೆ.ಎನ್.ಕೇಶವನಾರಾಯಣ ವಿಚಾರಣಾ ಆಯೋಗದ ಅವಧಿಯನ್ನು ದಿನಾಂಕ: 15.07.2017 ರವರೆಗೆ ವಿಸ್ತರಿಸಲಾಗಿದೆ.
ಮೇಲೆ ಓದಲಾದ(3)ರ ಅಧಿಸೂಚನೆಯಲ್ಲಿ ಶ್ರೀ ಕೆ.ಎನ್.ಕೇಶವನಾರಾಯಣ ವಿಚಾರಣಾ ಆಯೋಗದ ಅವಧಿಯನ್ನು ದಿನಾಂಕ: 15.01.2018 ರವರೆಗೆ ವಿಸ್ತರಿಸಲಾಗಿದೆ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೧೧೯೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೨, ೨೦೧೭ ಭಾಗ ೧ಮೇಲೆ ಓದಲಾದ(4)ರ ಪತ್ರದಲ್ಲಿ ಕಾರ್ಯದರ್ಶಿ, ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ ವಿಚಾರಣಾ ಆಯೋಗ ರವರು, ಆಯೋಗದ ಅಧಿಕಾರಿ/ಸಿಬ್ಬಂದಿರವರಿಗೆ ವೇತನ, ಇನ್ನಿತರೆ ಖರ್ಚು-ವೆಚ್ಚಗಳನ್ನು ಭರಿಸಲು ಅನುಕೂಲವಾಗುವಂತೆ ಹೆಚ್ಚುವರಿಯಾಗಿ `.49,00,000/- (ರೂಪಾಯಿ ನಲವತ್ತೊಂಬತ್ತು ಲಕ್ಷಗಳು ಮಾತ್ರ) ಗಳ ಅನುದಾನ ಮಂಜೂರು ಮಾಡುವಂತೆ ಸರ್ಕಾರವನ್ನು ಕೋರಿರುತ್ತಾರೆ.
ಮೇಲೆ ಓದಲಾದ(5)ರ ಆದೇಶದಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ, (ಎಫ್ಆರ್&ಬಿಸಿಸಿ), ಆರ್ಥಿಕ ಇಲಾಖೆರವರು 2017-18ನೇ ಸಾಲಿಗೆ ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ ವಿಚಾರಣಾ ಆಯೋಗದ ಖರ್ಚು-ವೆಚ್ಚಗಳಿಗಾಗಿ ಲೆಕ್ಕ ಶೀರ್ಷಿಕೆ "2070-00-105-0-02-059 ಇತರ ವಿಚಾರಣಾ ಆಯೋಗ (ಯೋಜನೇತರ)" ದಡಿ `.49,00,000 ಲಕ್ಷ (ರೂಪಾಯಿ ನಲವತ್ತೊಂಬತ್ತು ಲಕ್ಷಗಳು ಮಾತ್ರ) ಗಳನ್ನು ಹೆಚ್ಚುವರಿ ಅನುದಾನವಾಗಿ ಬಿಡುಗಡೆ ಮಾಡಿ ಮಂಜೂರಾತಿ ನೀಡಿದೆ.
ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಈ ಕೆಳಕಂಡ ಆದೇಶ ಹೊರಡಿಸಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ:ಹೆಚ್‌ಡಿ 10 ಪಿಸಿಇ 2016(ಭಾಗ-3) ಬೆಂಗಳೂರು, ದಿನಾಂಕ 1.9.2017
ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ ವಿಚಾರಣಾ ಆಯೋಗದ ಅಧ್ಯಕ್ಷರಿಗೆ, ಕಾರ್ಯದರ್ಶಿಯವರಿಗೆ ಹಾಗೂ ಸಿಬ್ಬಂದಿಯ ವೇತನ ಮತ್ತು ಇನ್ನಿತರೆ ಖರ್ಚು-ವೆಚ್ಚಗಳಿಗೆ ಅನುಕೂಲವಾಗುವಂತೆ 2017-2018ನೇ ಸಾಲಿನ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ, `.49,00,000/- (ರೂಪಾಯಿ ನಲವತ್ತೊಂಬತ್ತು ಲಕ್ಷಗಳು ಮಾತ್ರ) ಹೆಚ್ಚುವರಿ ಅನುದಾನವನ್ನು ಲೆಕ್ಕ ಶೀರ್ಷಿಕೆ "2070-00-105-0-02-059 ಇತರ ವಿಚಾರಣಾ ಆಯೋಗ (ಯೋಜನೇತರ)" ಅಡಿಯಲ್ಲಿ ಭರಿಸುವಂತೆ ಸರ್ಕಾರವು ಮಂಜೂರು ಮಾಡಿದೆ.
ಸದರಿ ಆಯೋಗದ ಕಾರ್ಯದರ್ಶಿಯವರಾದ ಶ್ರೀ ಬಿ.ಶಿವಲಿಂಗೇಗೌಡ ಇವರು ಹಣವನ್ನು ಹಿಂತೆಗೆಯುವ ಮತ್ತು ವಿತರಿಸುವ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವರು.
ಈ ಆದೇಶವನ್ನು ಆರ್ಥಿಕ ಇಲಾಖೆ ಆದೇಶ ಸಂಖ್ಯೆ: ಆಇ 42 ಬಿಆರ್ಎಸ್ 2017, ದಿನಾಂಕ 29.8.2017 ರನ್ವಯ ಹೊರಡಿಸಲಾಗಿದೆ.
PR-305
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-25
ಕೆ.ಪದ್ಮಿನಿ ದೇವಿ
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ. (ಕಾನೂನು ಮತ್ತು ಸುವ್ಯವಸ್ಥೆ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.