ಸಂಪುಟ ೧೫೨
Volume 152
ಬೆಂಗಳೂರು, ಗುರುವಾರ, ಅಕ್ಟೋಬರ್ ೧೯, ೨೦೧೭ (ಆಶ್ವಯುಜ ೨೭, ಶಕ ವರ್ಷ ೧೯೩೯)
Bengaluru, Thursday, October 19, 2017 ( Aashwayuja 27, Shaka Varsha 1939)
ಸಂಚಿಕೆ ೪೧
Issue 41
ಭಾಗ ೫
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
IN THE COURT OF THE HON'BLE CITY CIVIL JUDGE, MAYOHALL,
AT BENGALURU (CCH-21)
P&SC.No. 25040/17
IN THE MATTEROF LAST WILL AND TESTAMENT OF SMT. RITA.J.SAVIAL DATED: 12.05.1988
BETWEEN
R.ANTHONAPPA
S/o. Chikkarayappa
Aged about 57 years
Residing at No.1055,
Bannerghatta Road
Opp Panchayathi Weavers Colony,
Bengaluru South Taluk
Bengaluru 560083
PETITIONER
-V/s-
AND
Nil RESPONDENT
PUBLIC NOTICE
Whereas, the above named petitioner has filed the above petition under Memorandum of Petition for probate under Sections 272, 273 & 276 of the Indian Succession Act for probate the Will executed by Late Smt. RITA J SAVIAL dated: 12/05/1988 in respect of the schedule property, who died on 22.07.1991.
It is hereby notify that, any person/persons having any claim over the same, they may appear before this Hon'ble Court and submit their objections on or before 7th day of December 2017 (07/12/2017), at 11.00 AM without fail, failing which the petition will be heard and determined exparte.
SCHEDULE PROPERTY
All that piece and parcel of the Property bearing Old No.23, New No.96, Coles Road, C & M Station, Bengaluru, measuring 9950 Sq.Ft bounded on the
(೨೦೦೭)೨೦೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೯, ೨೦೧೭ ಭಾಗ ೫ East by: Hajee Ismail Sait Property West by: Portion of Owner's Property
North by: Coles Road
South by: Munshi Akbar Hussain's Property
Total extent of the property approximately 9,950 Sq.Ft
Given under my hand and seal of this Court on this 22nd day of September 2017.
Address for Service
K.R.Adisesha Reddy
Advocate No.1043,4th Main
8th Cross, Srinivasanagar
Bengaluru 560050
By Order of the Court,
Asst. Registrar
PD - 64
SC - 10
City Civil Court,
Mayohall Unit, Bengaluru.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳ ಕಾರ್ಯಾಲಯ, ಹಾಸನ ಜಿಲ್ಲೆ, ಹಾಸನ
ಕಂದಾಯ ಇಲಾಖೆ
ನಂ.ಗ್ರಾ.ಲೆ.ಸಿಬ್ಬಂದಿ-83/2016-2017, ದಿನಾಂಕ : 11-08-2017
ಅಧಿಕೃತ ಜ್ಞಾಪನ
ವಿಷಯ : ಹಾಸನ ಜಿಲ್ಲಾ ಕಂದಾಯ ಘಟಕದಲ್ಲಿ 2016 ನೇ ಸಾಲಿನಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆ ಆದ ಅಭ್ಯರ್ಥಿಗಳು ನೇಮಕಾತಿ ಆಗದಿರುವ ಕುರಿತು.
2. ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ 53 ಸೆನೆನಿ 2007, ದಿನಾಂಕ: 04-01-2008.
3. ಸರ್ಕಾರದ ಆದೇಶ ಸಂಖ್ಯೆ:ಕಂಇ 299 ಬಿಎಸ್‌ಸಿ 2006. ದಿನಾಂಕ: 03-02-2009 ಮತ್ತು 9-7-2009.
4. ಸರ್ಕಾರದ ಆದೇಶ ಸಂಖ್ಯೆ: ಕಂಇ 04 ಬಿಎಸ್‌ಸಿ 2011. ದಿನಾಂಕ: 25-02-2011.
5. ಸರ್ಕಾರದ ಆದೇಶ ಸಂಖ್ಯೆ: ಕಂಇ 33 ಡಿಎಸ್‌ಪಿ 2012. ದಿನಾಂಕ: 05-06-2012.
6. ಸರ್ಕಾರದ ಅ.ಸ. ಪತ್ರದ ಸಂಖ್ಯೆ: ಆರ್‌ಡಿ 33 ಡಿಎಸ್‌ಪಿ 2012. ದಿನಾಂಕ: 21-06-2012.
7. ಸರ್ಕಾರದ ಅ.ಸ.ಪ.ಸಂಖ್ಯೆ: 103 ಬಿಎಸ್‌ಸಿ 2016, ದಿನಾಂಕ: 22-07-2016.
8. ಈ ಕಛೇರಿಯ ಸಮಸಂಖ್ಯೆ ಅಧಿಸೂಚನೆ ದಿನಾಂಕ: 12-09-2016.
9. ಈ ಕಛೇರಿಯ ಸಮಸಂಖ್ಯೆ ಅಧಿಸೂಚನೆ ದಿನಾಂಕ: 15-02-2017.
10. ಈ ಕಛೇರಿಯ ಸಮಸಂಖ್ಯೆ ಅಧಿಸೂಚನೆ ದಿನಾಂಕ: 21-06-2017.
11. ಈ ಕಛೇರಿಯ ಸಮಸಂಖ್ಯೆ ಅಧಿಕೃತ ಜ್ಞಾಪನ ದಿನಾಂಕ: 21-06-2017.
ಹಾಸನ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ 2016 ನೇ ಸಾಲಿನಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು ನೇರನೇಮಕಾತಿ ಮೂಲಕ ಭರ್ತಿಮಾಡುವ ಸಂಬಂಧ ಕರ್ನಾಟಕ ಸಾಮಾನ್ಯ ಸೇವೆಗಳು (ರೆವಿನ್ಯೂ ಸಬಾರ್ಡಿನೇಟ್ ಬ್ರಾಂಚ್, ಕೇಡರ್ ಅಂಡ್ ರಿಕ್ರೂಟ್‌ಮೆಂಟ್) ನಿಯಮಗಳನ್ವಯ ಉಲ್ಲೇಖ (10) ರಲ್ಲಿ ಒಟ್ಟು 30 ಜನ ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಮತ್ತು ವರ್ಗವಾರು ಆಧಾರದ ಮೇಲೆ ಅಂತಿಮವಾಗಿ ಆಯ್ಕೆ ಮಾಡಿ, ಉಲ್ಲೇಖ(11)ರಲ್ಲಿ 29 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡಲಾಗಿದ್ದು, 01 ಅಭ್ಯರ್ಥಿಗೆ ಮೂಲ ದಾಖಲಾತಿಗಳ ಸತ್ಯಾಪನೆ ನಂತರ ನೇಮಕಾತಿ ಆದೇಶ ನೀಡುವುದಾಗಿ ತಿಳಿಸಲಾಗಿರುತ್ತದೆ.
ನೇಮಕಾತಿ ಆದೇಶ ನೀಡಿದ ಒಟ್ಟು 30 ಅಭ್ಯರ್ಥಿಗಳಲ್ಲಿ ಈ ಕೆಳಕಂಡ 04 ಜನ ಅಭ್ಯರ್ಥಿಗಳ ಪೈಕಿ ಕ್ರ.ಸಂ. 01, 02, 03 ರ ಅಭ್ಯರ್ಥಿಗಳು ನೇಮಕಾತಿ ಆದೇಶದಲ್ಲಿನ ಕ್ರಮ ಸಂಖ್ಯೆ 1 ರ ಷರತ್ತಿನಂತೆ ನೇಮಕಾತಿ ಆದೇಶ ಸ್ವೀಕರಿಸಿದ 15 ದಿನಗಳೊಳಗೆ ಕರ್ತವ್ಯದ ಮೇಲೆ ಹಾಜರಾಗಿರುವುದಿಲ್ಲ ಹಾಗೂ ಕ್ರ.ಸಂ. 04 ರಲ್ಲಿನ ಅಭ್ಯರ್ಥಿಯು ಮೂಲ ದಾಖಲಾತಿಯನ್ನು ಹಾಜರುಪಡಿಸಿರುವುದಿಲ್ಲ ಹಾಗೂ ಕಾರವಾರ ಜಿಲ್ಲೆಯಲ್ಲಿ ನೇಮಕಾತಿ ಹೊಂದಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿರುತ್ತಾರೆ.
ಆದ್ದುದರಿಂದ ಉಲ್ಲೇಖ (11) ರ ಆದೇಶದಲ್ಲಿ ಸದರಿ ಅಭ್ಯರ್ಥಿಗಳ ನೇಮಕಾತಿ ಆದೇಶಗಳನ್ನು ರದ್ದುಪಡಿಸಿ ಆದೇಶಿಸಿದೆ.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೯, ೨೦೧೭ ೨೦೦೯| ಕ್ರ. ಸ ಂ. | ರೆಫರೆನ್ಸ ಸ ಂ. | ಅಭ್ಯರ್ಥಿ ಹೆಸರು | ವಿಳಾಸ | ಆಯ್ಕೆ ಆಗಿರುವ ವರ್ಗ | ನೇಮಕ ಆಗಿರುವ ಸ್ಥಳ |
| 1 | 185042 | ವ ುಂಜುನಾಥ್ ಗಂಜ್ಯಾಲ್ | ಬಿನ್ ಅಶೋಕ, ಗಂಜಿಹಾಳ್ ಗ್ರಾಮ ವ ುತ್ತು ಅಂಚೆ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ- 587115 | ಸಾಮಾನ್ಯ- ಯೋಜನಾ ನಿರಾಶ್ರಿತ | ಕಿತ್ತಾನೆ ವೃತ್ತ, ಕಟ್ಟಾಯ ಹೋಬಳಿ, ಹಾಸನ ತಾಲ್ಲೂಕು |
| 2 | 172399 | ಪ ತಿಭಾ ್ರ ವ ುರಿಯಲ್ಲಪ್ಪನವರ | ಬಿನ್ ಶಿವಪ್ಪ ಎಂ, ಹೆಚ್.ನಂ. 436ಸಿ 124 10ನೇ ವಾರ್ಡ್, ಬಸವೇಶ್ವರ ನಗರ, ಹೂವಿನಹಡಗಲಿ ಬಳ್ಳಾರಿ-583219. | 2ಎ-ಗ್ರಾಮೀಣ | ಶ್ಯಾನೆಗೆರೆ ವೃತ್ತ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು |
| 3 | 179239 | ಬ ಾಗಪ್ಪ ಬಟೋಲಿ | ಬಿನ್ ಯಲ್ಲಪ್ಪ, ಬ್ಯಾಡಗೀಹಾಳ್ ಗ್ರಾಮ ಮತ್ತು ಅಂಚೆ, ಮಾದನಹಳ್ಳಿ, ವಿಜಯಾಪುರ ಜಿಲ್ಲೆ-586202. | 2ಎ-ಪಿಡಿಪಿ | ರಾಜನಶಿರಿಯೂರು ವೃತ್ತ, ಹಳೆಬೀಡು ವೃತ್ತ, ಬ ೕಲೂರು ತಾಲ್ಲೂಕು ೆ |
| 4 | 176887 | ಬ ರತ್ ಎಸ್. ಆಚಾರ್ಯ | ಬಿನ್ ಸುಬ್ರಮಣ್ಯ, ಮಠದ ಜೆಡ್ಡು, ಕರೆಬೈಲು, ಶಂಕರನಾರಾಯಣ ಗ್ರಾಮ, ಕುಂದಾಪುರ ತಾಲ್ಲೂಕು, ಉಡುಪಿ-573227 | ಸಾಮಾನ್ಯ-ಗ್ರಾಮೀಣ | - |
(ಅಧ್ಯಕ್ಷರು, ಗ್ರಾಮಲೆಕ್ಕಿಗರ ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ)
PR-170
ಕಾರ್ಯದರ್ಶಿಗಳು
ಗ್ರಾಮಲೆಕ್ಕಿಗರ ನೇಮಕಾತಿ ಪ್ರಾಧಿಕಾರ ಹಾಗೂ,
ಅಪರ ಜಿಲ್ಲಾಧಿಕಾರಿ, ಹಾಸನ ಜಿಲ್ಲೆ, ಹಾಸನ
ಅಲ್ಪಸಂಖ್ಯಾತರ ನಿರ್ದೇಶನಾಲಯ
ಅಧಿಕೃತ ಜ್ಞಾಪನ
ಸಂಖ್ಯೆ:ಅಸಂನಿ/ಸಿಆರ್-ನೇಮಕಾತಿ(ಪ್ರಾ.ಉ.ಭಾ)/01/2017-18, ದಿನಾಂಕ:26.08.2017
ವಿಷಯ : ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಗೊಂಡ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರು (ಉರ್ದು ಭಾಷೆ) ಹುದ್ದೆಗಳಿಗೆ ನೇಮಕಾತಿ ಆದೇಶ ನೀಡುವ ಬಗ್ಗೆ.
ಓದಲಾಗಿದೆ : 1. ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ಸಂಖ್ಯೆ: PSC 1 RTB-1/2016, ದಿನಾಂಕ: 24.08.2016.
2. ಕರ್ನಾಟಕ ಲೋಕಸೇವಾ ಆಯೋಗದ ಅಂತಿಮ ಆಯ್ಕೆ ಪಟ್ಟಿಯ ಅಧಿಸೂಚನೆ ಸಂಖ್ಯೆ: PSC 11 RTB 2016, ದಿನಾಂಕ: 17.08.2017 ಮತ್ತು ಕ.ಲೋ.ಸೇ. ಆಯೋಗದ ಪತ್ರ ಸಂಖ್ಯೆ:ಪಿಎಸ್‌ಸಿ 11 ಆರ್‌ಟಿಬಿ 2016, ದಿನಾಂಕ: 19.08.2017.
3. ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಹೈದ್ರಾಬಾದ್-ಕರ್ನಾಟಕ ಮೀಸಲಾತಿಯಡಿ ಆಯ್ಕೆಯಾದ ಅಭ್ಯರ್ಥಿಯ (ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ ಅನುಚ್ಛೇದ 371 ಜೆ, ನಿಯಮಗಳು 2013) ಪ್ರಮಾಣ ಪತ್ರ ನೀಡುವ ಬಗ್ಗೆ ಸಂಬಂಧಿತ ಜಿಲ್ಲೆಯ ಜಿಲ್ಲಾಧಿಕಾರಿಗೆ ಬರೆದ ಪತ್ರ ಸಂಖ್ಯೆ: ಅಂ.ಸ.ನಿ/ಕೆ.ಪಿ.ಎಸ್.ಸಿ/ನೇ/ಹೈ.ಕ.ಪ/662/2017-18, ದಿನಾಂಕ: 22.08.2017.
4. ಸದರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಬಗ್ಗೆ ಸಂಬಂಧಿತ ಜಿಲ್ಲೆಗಳ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಬರೆದ ಪತ್ರ ಸಂಖ್ಯೆ: ಅ.ಸಂ.ನಿ/ನೇ-ಪ್ರಾ.ಉ.ಭಾ-633-635/2017-18, ದಿನಾಂಕ:22.07.2017.
5. ಸದರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಗುಣ ಮತ್ತು ನಡತೆ ಪರಿಶೀಲಿಸಿ ವರದಿ ನೀಡುವ ಬಗ್ಗೆ ಸಂಬಂಧಿತ ಜಿಲ್ಲೆಗಳ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಬರೆದ ಪತ್ರ ಸಂಖ್ಯೆ: ಅ.ಸಂ.ನಿ/ನೇ- ಪ್ರಾ.ಉ.ಭಾ-633-635/2017-18, ದಿನಾಂಕ:22.07.2017.
6. ಈ ಕಛೇರಿ ಪತ್ರ ಸಂಖ್ಯೆ: ಅ.ಸಂ.ನಿ/ಆಡಳಿತ(ನೇ)/ಸಿಆರ್-663/2017-18, ದಿನಾಂಕ:22.08.2017.
೨೦೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೯, ೨೦೧೭ ಭಾಗ ೫ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ಪ್ರಾಂಶುಪಾಲರು (ಉರ್ದು ಭಾಷೆ) ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು ಉಲ್ಲೇಖ (1)ರಲ್ಲಿ ಅಧಿಸೂಚನೆಯನ್ನು ಹೊರಡಿಸಿರುತ್ತದೆ. ಅದರಂತೆ ನೇಮಕಾತಿಯ ಎಲ್ಲಾ ಹಂತದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಉಲ್ಲೇಖ (2) ರಂತೆ ಕರ್ನಾಟಕ ಲೋಕ ಸೇವಾ ಆಯೋಗವು ಅಂತಿಮ ಆಯ್ಕೆ ಪಟ್ಟಿಯ ಅಧಿಸೂಚನೆಯೊಂದಿಗೆ ಆಯ್ಕೆಯಾದ ಅಭ್ಯರ್ಥಿಗಳ ಅರ್ಜಿಗಳನ್ನು ಲಗತ್ತಿಸಿ ನಿರ್ದೇಶನಾಲಯಕ್ಕೆ ಸಲ್ಲಿಸಿರುತ್ತದೆ.
ಉಲ್ಲೇಖ (2)ರ ಪತ್ರದ ಆಧಾರದ ಮೇಲೆ ನೇಮಕಾತಿ ಹೊಂದಿದ ಅಭ್ಯರ್ಥಿಗಳ, ಹೈದ್ರಾಬಾದ್ ಕರ್ನಾಟಕ 371(ಜೆ) ಪ್ರಮಾಣ ಪತ್ರ (ಉಲ್ಲೇಖ-3), ವೈದ್ಯಕೀಯ ಪ್ರಮಾಣ ಪತ್ರ (ಉಲ್ಲೇಖ-4) ಹಾಗೂ ಗುಣ ಮತ್ತು ನಡತೆಯ ಪ್ರಮಾಣ ಪತ್ರಗಳಿಗಾಗಿ (ಉಲ್ಲೇಖ-5) ಸಂಬಂಧಿತ ಪ್ರಾಧಿಕಾರಗಳಿಗೆ ಪತ್ರಗಳನ್ನು ಬರೆಯಲಾಗಿತ್ತು.
ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ಪ್ರಾಂಶುಪಾಲರು (ಉರ್ದು ಭಾಷೆ) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ಉಲ್ಲೇಖ (6)ರಂತೆ ದಿನಾಂಕ:26.08.2017ರಂದು ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ಇಲ್ಲಿ ನಡೆಸಲಾಯಿತು. ಸದರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಮೆರಿಟ್ ಹಾಗೂ ಮೀಸಲಾತಿಗಳ ಆಧಾರದ ಮೇಲೆ ಅಭ್ಯರ್ಥಿಗಳ ಸಹಮತಿಯೊಂದಿಗೆ ಪ್ರಾಂಶುಪಾಲರು (ಉರ್ದು ಭಾಷೆ) ಹುದ್ದೆಗಳಿಗೆ ರೂ. 22800-43200 ವೇತನಶ್ರೇಣಿಯಲ್ಲಿ ಈ ಕೆಳಕಂಡ ಷರತ್ತುಗೊಳಪಡಿಸಿ, ಅವರ ಹೆಸರಿನ ಮುಂದೆ
| SL NO. | NAME OF THE CANDIDATE | REG.NO. | Place of Appointment and Posting |
| D O B | |||
| RESVN. | |||
| 1 | SAKHLAIN AHAMED A S/O ABBAS AHAMED M K HATTI VILLAGE AT POST CHITRADURGA 577502 | 1401854 | PRINCIPAL Minority MorarjiDesai Residential School, Hanagal Town, Haveri District. |
| 27/05/83 | |||
| GM/2B | |||
| 2 | ASMA PERVEEN ASSAR MOHALA 2ND CROSS BHEEM RAO BEEDI CHITRADURGA 577501 | 1004398 | PRINCIPAL Minority MorarjiDesai Residential School, Nijalingappa Badavane, Davangere District. |
| 07/02/80 | |||
| GM/2B/W | |||
| 3 | SHAIK SHAMSE NAVEED S/O SHAIK AMEENUDDIN # H. NO. 6-3-126 NEAR MASJID, MOZAMPURA STREET, SHORAPUR YADAGIRI 585224 | 1200509 | PRINCIPAL (On Own Pay Scale) Minority Model Residential School (Navodaya), Bandahalli, Yadgir Town, Yadgir District |
| 09/07/80 | |||
| GM/2B |
ಈ ನೇಮಕಾತಿಯು ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ
1. ಸದರಿ ನೇಮಕಾತಿಯು ಕರ್ನಾಟಕ ನಾಗರೀಕ ಸೇವಾ (ಪರೀಕ್ಷಾರ್ಥ) ನಿಯಮಾವಳಿಗಳು 1977 ರನ್ವಯ 2 ವರ್ಷಗಳ ಖಾಯಂ ಪೂರ್ವ ಪರೀಕ್ಷಾರ್ಥ ಸೇವಾ ಅವಧಿ ಒಳಪಟ್ಟಿರುತ್ತದೆ. ಖಾಯಂ ಪೂರ್ವ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸತಕ್ಕದ್ದು.
2. ಸದರಿ ಅಭ್ಯರ್ಥಿಗಳ ನೇಮಕಾತಿಯು ಮತ್ತು ಸೇವಾ ಸೌಲಭ್ಯಗಳು ಆಗಿಂದಾಗ್ಗೆ ಜಾರಿಯಲ್ಲಿರುವ ಸರ್ಕಾರದ ನಿಯಮಗಳು/ಆದೇಶಗಳ ಅಧೀನಕ್ಕೊಳಪಟ್ಟಿರುತ್ತದೆ.
3. ಈ ನೇಮಕಾತಿಯ ಆದೇಶ ಪಡೆದ ದಿನಾಂಕದಿಂದ 15 ದಿನಗೊಳಗಾಗಿ ಅಭ್ಯರ್ಥಿಗಳು ನೇಮಕಗೊಂಡ ಸ್ಥಳದಲ್ಲಿ ತಪ್ಪದೇ ಕರ್ತವ್ಯಕ್ಕೆ ವರದಿಮಾಡಿಕೊಳ್ಳತಕ್ಕದ್ದು. ನಿಗಧಿತ ದಿನಾಂಕದೊಳಗಾಗಿ ಕರ್ತವ್ಯಕ್ಕೆ ವರದಿಮಾಡಿಕೊಳ್ಳದಿದ್ದಲ್ಲಿ ನೇಮಕಾತಿಯ ಆದೇಶವನ್ನು ಯಾವುದೇ ಮುನ್ಸೂಚನೆ ಇಲ್ಲದೇ ರದ್ದುಗೊಳಿಸಲಾಗುವುದು.
4. ಈ ಮೇಲ್ಕಂಡ ಅಭ್ಯರ್ಥಿಗಳ ಸಿಂಧುತ್ವ ಪ್ರಮಾಣ ಪತ್ರ, ಹೈದ್ರಾಬಾದ್ ಕರ್ನಾಟಕ 371(ಜೆ) ಪ್ರಮಾಣ ಪತ್ರ, ಪೋಲಿಸ್ ವರದಿ, ವೈದ್ಯಕೀಯ ಪ್ರಮಾಣ
ಪತ್ರಗಳನ್ನು ಸಲ್ಲಿಸುವ ಷರತ್ತಿಗೊಳಪಟ್ಟು ಆದೇಶ ನೀಡಲಾಗಿರುತ್ತದೆ. ಸದರಿ ದಾಖಲಾತಿ ಸಲ್ಲಿಸಲು ವಿಪಲರಾಗಿದ್ದಲ್ಲಿ ನೇಮಕಾತಿ ಆದೇಶವನ್ನು
ರದ್ದುಪಡಿಸಲಾಗುವುದು.
5. ಅಭ್ಯರ್ಥಿಗಳು ಹುದ್ದೆಗೆ ನಿಗಧಿಪಡಿಸಿರುವ ಎಲ್ಲಾ ಇಲಾಖಾ ಪರೀಕ್ಷೆಗಳಲ್ಲಿ ಕರ್ನಾಟಕ ನಾಗರೀಕ ಸೇವಾ (ಕನ್ನಡ ಭಾಷಾ ಪರೀಕ್ಷೆ) 1974 ರನ್ವಯ ತೇರ್ಗಡೆ ಹೊಂದತಕ್ಕದ್ದು.
6. ಸದರಿ ಅಭ್ಯರ್ಥಿಗಳಿಗೆ ನೇಮಕಾತಿ ಮಾಡಿದ ಸ್ಥಳ ಸೇರಲು ಯಾವುದೇ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ನೀಡಲಾಗುವುದಿಲ್ಲ.
7. ಅಭ್ಯರ್ಥಿಯು ಸೇವೆಗೆ ಹಾಜರಾಗುವ ಪೂರ್ವದಲ್ಲಿ, ಅಭ್ಯರ್ಥಿಗೆ ಹಾಗೂ ಅಭ್ಯರ್ಥಿಯ ಕುಟುಂಬಕ್ಕೆ ಸಂಬಂಧಿಸಿದಂತೆ ಸ್ಥಿರ ಮತ್ತು ಚರಾಸ್ಥಿಗಳ ವಿವರ, ಸಾಲಗಳ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಅಳತೆಯ 2 ಇತ್ತೀಚಿನ ಭಾವಚಿತ್ರ ಹಾಗೂ ಇತರೆ ದಾಖಲಾತಿಗಳನ್ನು ಕರ್ತವ್ಯಕ್ಕೆ ವರದಿಮಾಡಿಕೊಳ್ಳುವ ಸಂದರ್ಭದಲ್ಲಿ ಹಾಜರುಪಡಿಸತಕ್ಕದ್ದು.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೯, ೨೦೧೭ ೨೦೧೧8. ಅಭ್ಯರ್ಥಿಯು ಸಲ್ಲಿಸುವ ಮೂಲ ದಾಖಲಾತಿಗಳಲ್ಲಿ ತಪ್ಪು ಮಾಹಿತಿ ಅಥವಾ ಸುಳ್ಳು ಎಂದು ಕಂಡು ಬಂದಲ್ಲಿ ಅಂತಹವರ ಆಯ್ಕೆಯನ್ನು ರದ್ದುಪಡಿಸಲಾಗುವುದು. ಸರ್ಕಾರದ ಸುತ್ತೋಲೆ ಸಂಖ್ಯೆ:ಕಂಇ/216/ಬಿಎಸ್‌ಸಿ/2013 ದಿನಾಂಕ:22.08.2013 ರಲ್ಲಿ ಸೂಚಿಸಲಾಗಿರುವಂತೆ, ಅಂತಹ ಅಭ್ಯರ್ಥಿಯ ವಿರುದ್ದ ಭಾರತೀಯ ದಂಡ ಸಂಹಿತೆಯಲ್ಲಿನ ಸೂಕ್ತ ಕಲಂಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಕೆ.ಸಿ.ಎಸ್ (ಸಿಸಿಎ) ನಿಯಮಗಳನ್ವಯ 1957 ರ ಅಡಿಯಲ್ಲಿ ಶಿಸ್ತು ಕ್ರಮಕೈಗೊಳ್ಳಲಾಗುವುದು.
9. ಅಭ್ಯರ್ಥಿಯು ಮದುವೆಯಾಗಿದ್ದಲ್ಲಿ ಒಬ್ಬರೇ ಪತಿ ಅಥವಾ ಪತ್ನಿ ಹೊಂದಿರುವ ಬಗ್ಗೆ ಕೆ.ಸಿ.ಎಸ್ (ನಡತೆ) ನಿಯಮಗಳು 1966 ರಲ್ಲಿನ ನಿಯಮ 28ರ ರೀತ್ಯಾ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಕಚೇರಿಯ ಮುಖ್ಯಸ್ಥರ ಮುಂದೆ ಘೋಷಣೆ ಹಾಜರುಪಡಿಸತಕ್ಕದ್ದು.
10. ಆಯ್ಕೆಯಾಗಿರುವ ಅಭ್ಯರ್ಥಿಯು ಅವರನ್ನು ನೇಮಿಸಿರುವ ಸ್ಥಳದಲ್ಲಿ ಕಡ್ಡಾಯವಾಗಿ ವಾಸ ಮಾಡಬೇಕು, ಮತ್ತು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಸಂದರ್ಭದಲ್ಲಿ ನೋಟರಿ ಪ್ರಮಾಣ ಪತ್ರವನ್ನು ಹಾಜರು ಪಡಿಸಬೇಕು.
11. ಅಭ್ಯರ್ಥಿಯು ಸೇವೆಗೆ ಹಾಜರಾಗಿ ಭಾರತ ಸಂವಿಧಾನದ ರೀತ್ಯಾ "ನಿಷ್ಠೆಯ ಪ್ರಮಾಣ ವಚನ" ಸ್ವೀಕರಿಸುವುದು.
12. ಅಭ್ಯರ್ಥಿಯು ಸರ್ಕಾರದ ಆದೇಶ ನಂ. FD/SPL/04/PET/05 ದಿನಾಂಕ: 31.03.2016 ರಂತೆ ಹೊಸ ನಿವೃತ್ತಿ ವೇತನ ಯೋಜನೆಗೆ (NPS) ಒಳಪಟ್ಟಿರುತ್ತಾರೆ. ದಿನಾಂಕ: 01.04.2006 ರ ನಂತರ ಸರ್ಕಾರಿ ಸೇವೆಗೆ ನೇಮಕಗೊಂಡ ನೌಕರರ ಮೂಲ ವೇತನ ಮತ್ತು ತುಟಿಭತ್ಯೆಯ ಒಟ್ಟು ಮೊತ್ತದ ಶೇಕಡಾ 10% ರಷ್ಟು ಭಾಗವನ್ನು ಅವರ ಪ್ರತಿ ಮಾಹೆಯ ವೇತನದಲ್ಲಿ ನಿವೃತ್ತಿ ಸೌಲಭ್ಯದ ವಂತಿಕೆಯನ್ನು ಕಟಾಯಿಸಲಾಗುವುದು.
13. ಅಭ್ಯರ್ಥಿಗಳು ಕರ್ನಾಟಕ ನಾಗರೀಕ ಸೇವೆ (ನಡತೆ) ನಿಯಮಗಳು 1966 ಹಾಗೂ ಕರ್ನಾಟಕ ನಾಗರೀಕ ಸೇವೆ (ವರ್ಗೀಕರಣ, ನಿಯಂತ್ರಣ, ಮೇಲ್ಮನವಿ) ನಿಯಮಗಳು 1957 ಹಾಗೂ ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗುವ ಇತರೆ ನಿಯಮಾವಳಿಗಳಿಗೆ ಬದ್ದರಾಗಿರುತ್ತಾರೆ.
14. ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಇಲಾಖಾ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಸಿದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು, ಹಾಗೂ ಇಲಾಖಾಧಿಕಾರಿಗಳು ನೀಡಿರುವ ನಿರಾಕ್ಷೇಪಣಾ ಪತ್ರವನ್ನು ಸಲ್ಲಿಸತಕ್ಕದ್ದು. ಅಂತಹ ಅಭ್ಯರ್ಥಿಗಳು ಇಲಾಖೆಯಿಂದ ಬಿಡುಗಡೆಯಾಗಿರುವ ಬಗ್ಗೆ ದೃಡೀಕರಣ ಪತ್ರವನ್ನು ಹಾಜರು ಪಡಿಸತಕ್ಕದ್ದು. ಸರ್ಕಾರಿ ಸೇವೆಯಲ್ಲಿರುವ ಹಾಗೂ ಇಲಾಖಾ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಯಮಾವಳಿಗಳನ್ನು ಉಲ್ಲಂಘಿಸಿ ಅರ್ಜಿ ಸಲ್ಲಿಸಿರುವುದಿಲ್ಲವೆಂಬ ಬಗ್ಗೆ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು.
15. ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಆಸುಇ154 ಎಸ್.ಸಿ.ಆರ್ 2014 ದಿನಾಂಕ: 27.04.2015ರ ಮೇರೆಗೆ ಅಭ್ಯರ್ಥಿಯು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ನಿಗಧಿತ ಅವಧಿಯೊಳಗೆ ತೇರ್ಗಡೆ ಹೊಂದತಕ್ಕದ್ದು.
16. ನೇಮಕಾತಿಗೊಳಿಸಿದ ಸ್ಥಳ/ಕಛೇರಿಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲಾಗುವುದಿಲ್ಲ. ಸ್ಥಳ ಬದಲಾವಣೆ ಮಾಡುವಂತೆ ಒತ್ತಡ ತಂದಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿ ಆದೇಶವನ್ನು ರದ್ದುಗೊಳಿಸಲಾಗುವುದು.
17. ಹೈದ್ರಾಬಾದ್-ಕರ್ನಾಟಕ ಮೀಸಲಾತಿಯಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿಯು, ಸಕ್ಷಮ ಪ್ರಾಧಿಕಾರಿಯಿಂದ ಅರ್ಹತಾ ಸಿಂಧುತ್ವ ಪ್ರಮಾಣಪತ್ರ ಸಲ್ಲಿಸುವಿಕೆಯ ನಿರ್ಬಂಧನೆಗೆ ಒಳಪಟ್ಟಿರುತ್ತದೆ.
18. ನೌಕರರ ವೇತನವನ್ನು ನಿರ್ದೇಶಕರ ಕಚೇರಿಯಿಂದ ಪ್ರಥಮ ವೇತನ ಪ್ರಮಾಣ ಪತ್ರ ಪಡೆದ ನಂತರವೇ ಪಡೆದುಕೊಳ್ಳತಕ್ಕದ್ದು. 19. ಸರ್ಕಾರಿ ಆದೇಶಗಳು, ನಿರ್ದೇಶಕರು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ/ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಹಾಗೂ ಇತರೆ ಸಂಬಂಧಿತ ಅಧಿಕಾರಿಗಳ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
20. ಸದರಿ ನೌಕರರ ಸೇವಾಪುಸ್ತಕ (Service Register) ವಾರ್ಷಿಕ ಕಾರ್ಯ ನಿರ್ವಹಣಾ ವರದಿ, ಸ್ಥಿರಾಸ್ತಿ ಮತ್ತು ಚರಾಸ್ತಿ ಪಟ್ಟಿ, ಮತ್ತು ವೈಯಕ್ತಿಕ ಕಡತವನ್ನು ಜಿಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ನಿರ್ವಹಿಸುವುದು.
21. ಅಭ್ಯರ್ಥಿಗಳ ಜೇಷ್ಠತೆಯನ್ನು ಕರ್ನಾಟಕ ಲೋಕಸೇವಾ ಆಯೋಗವು ನೀಡಿರುವ ಆಯ್ಕೆ ಪಟ್ಟಿಯ ಕ್ರಮಾಂಕದ ಆಧಾರದ ಮೇಲೆ ಪರಿಗಣಿಸಲಾಗುವುದು.
PR-171
ಅಕ್ರಂ ಪಾಷ ಕೆ.ಎ.ಎಸ್
SC-100
ನಿರ್ದೇಶಕರು
ಅಲ್ಪಸಂಖ್ಯಾತರ ನಿರ್ದೇಶನಾಲಯ
ಬೆಂಗಳೂರು.
ಜಿಲ್ಲಾಧಿಕಾರಿಗಳ ಕಾರ್ಯಾಲಯ, ಕೊಪ್ಪಳ
ಅಧಿಸೂಚನೆ
ಸಂಖ್ಯೆ:ಕಂದಾಯ/ಸಿಬ್ಬಂದಿ-1/36/2017-18/ಇ-12563, ದಿನಾಂಕ:23/09/2017
ಕೊಪ್ಪಳ ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ [34] ಗ್ರಾಮಲೆಕ್ಕಾಧಿಕಾರಿ ಹುದ್ದೆಗಳನ್ನು ವರ್ಗೀಕರಣ ಮತ್ತು ಮೀಸಲಾತಿ ಅನ್ವಯ ಕರ್ನಾಟಕ ಸಾಮಾನ್ಯ ಸೇವೆಗಳು (ರೆವೆನ್ಯೂ ಸಬಾರ್ಡಿನೇಟ್ ಬ್ರಾಂಚ್) (ಕೇಡರ್ & ರಿಕ್ರೂಟ್‌ಮೆಂಟ್) (ತಿದ್ದುಪಡಿ) ನಿಯಮಗಳು 2008ರ ನಿಯಮ 2 ರ ಅನ್ವಯ ಮತ್ತು 2009 ರನ್ವಯ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರದ ಸುತ್ತೋಲೆ ಸಂಖ್ಯೆ/ಕಂಇ/299/ಬಿಎಸ್‌ಸಿ/2006 ದಿನಾಂಕ 03/02/2009ರಲ್ಲಿ ಹಾಗೂ ಸರ್ಕಾರದ ಪತ್ರ ಸಂಖ್ಯೆ:ಕಂಇ/04/ಬಿ.ಎಸ್.ಸಿ./2011 ದಿನಾಂಕ:25/02/2011ರಲ್ಲಿ ಅನುಮೋದನೆ ನೀಡಿದೆ. ಕಾರಣ ಕೊಪ್ಪಳ ಜಿಲ್ಲೆ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಾಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಪ್ರಾಧಿಕಾರವು ನಿಗದಿಪಡಿಸಿರುವ ನಮೂನೆಯಲ್ಲಿ ಅರ್ಜಿಗಳನ್ನು ಆನ್ ಲೈನ್ ಮೂಲಕ ಅಹ್ವಾನಿಸಲಾಗಿದೆ.
1) ಖಾಲಿ ಇರುವ ಒಟ್ಟು ಗ್ರಾಮಲೆಕ್ಕಾಧಿಕಾರಿ ಹುದ್ದೆಗಳ ಸಂಖ್ಯೆ : 34 2) ಸ್ಥಳೀಯ ವೃಂದದಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ : 24೨೦೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೯, ೨೦೧೭ ಭಾಗ ೫ 3) ಮಿಕ್ಕುಳಿದ ವೃಂದದಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ : 10
2015ನೇ ಸಾಲಿನಲ್ಲಿ ಅಧಿಸೂಚಿಸಲಾದ ಹುದ್ದೆಗಳ ಪೈಕಿ ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳ ಸಂಖ್ಯೆ-05
| ಕ್ರ.ಸಂ | ವ ರ್ಗೀಕರಣದ ವಿವರ | ಸಾಮಾನ್ಯ ಅಭ್ಯರ್ಥಿ | ವ ುಹಿಳಾ ಅಭ್ಯರ್ಥಿ | ಗ್ರಾಮೀಣ ಅಭ್ಯರ್ಥಿ | ಅಂಗವಿಕಲ ಅಭ್ಯರ್ಥಿ | ವ iಾಜಿ ಸ ೖನಿಕರು ೆ | ಕನ್ನಡ ವ iಾಧ್ಯಮ ಅಭ್ಯರ್ಥಿ | ಯೋಜನಾ ನಿರಾಶ್ರಿತರು | ಒಟ್ಟು |
| 1 | ಪ .ವರ್ಗ-1 ್ರ | - | - | - | - | - | - | - | - |
| 2 | ಪ .ವರ್ಗ-3ಎ ್ರ | - | - | - | - | - | - | - | - |
| 3 | ಪ ವರ್ಗ-3ಬಿ ್ರ | - | - | - | - | - | - | - | - |
| 4 | ಸಾಮಾನ್ಯ | 01 | - | 01 | - | - | 01 | - | 03 |
| ಒಟ್ಟು | 01 | - | 01 | - | - | 01 | - | 03 | |
| 1 | ಪ .ಜಾ | 01 | - | - | - | - | - | - | 01 |
| 2 | ಪ .ಪಂ | 01 | - | - | - | - | - | - | 01 |
| 3 | ಪ .ವರ್ಗ-1 ್ರ | - | - | - | - | - | - | - | - |
| 4 | ಪ ವರ್ಗ-2ಎ ್ರ | - | - | - | - | - | - | - | - |
| 5 | ಸಾಮಾನ್ಯ | - | - | - | - | - | - | - | - |
| ಒಟ್ಟು | 02 | - | - | - | - | - | - | 02 |
2016 ಮತ್ತು 2017ನೇ ಸಾಲಿನಲ್ಲಿ ಖಾಲಿಯಾದ ಹುದ್ದೆಗಳ ಸಂಖ್ಯೆ- 29
ಸ್ಥಳೀಯ ವೃಂದದಲ್ಲಿ (lOCAL CADRE)ಭರ್ತಿ ಮಾಡಲಾಗುವ ಹುದ್ದೆಗಳ ಸಂಖ್ಯೆ 21
| ಕ್ರ. ಸ ಂ | ವ ರ್ಗೀಕರಣದ ವಿವರ | ಇತರೆ | ವ ುಹಿಳಾ ಅಭ್ಯರ್ಥಿ | ಗ್ರಾಮೀಣ ಅಭ್ಯರ್ಥಿ | ಅಂಗವಿಕಲ ಅಭ್ಯರ್ಥಿ | ವ iಾಜಿ ಸ ೖನಿಕರು ೆ | ಕನ್ನಡ ವ iಾಧ್ಯಮ ಅಭ್ಯರ್ಥಿ | ಯೋಜನಾ ನಿರಾಶ್ರಿತರು | ಒಟ್ಟು |
| 1 | ಪ .ಜಾ | 01 | 01 | 02 | - | - | - | - | 04 |
| 2 | ಪ .ಪಂ | - | - | - | 01 | - | - | - | 01 |
| 3 | ಪ .ವರ್ಗ-1 ್ರ | - | - | - | 01 | - | - | - | 01 |
| 4 | ಪ ವರ್ಗ-2ಎ ್ರ | 01 | 01 | 01 | - | 01 | - | - | 04 |
| 5 | ಪ ವರ್ಗ-2 ಬಿ ್ರ | - | - | 01 | - | - | - | - | 01 |
| 6 | ಪ .ವರ್ಗ-3ಎ ್ರ | - | - | - | - | - | - | - | - |
| 7 | ಪ ವರ್ಗ-3ಬಿ ್ರ | - | - | - | - | - | - | - | - |
| 8 | ಸಾಮಾನ್ಯ | 02 | 03 | 02 | - | 01 | 01 | 01 | 10 |
| ಒಟ್ಟು | 04 | 05 | 06 | 02 | 02 | 01 | 01 | 21 |
ಮಿಕ್ಕುಳಿದ ವೃಂದದಲ್ಲಿ (RESIDUAL CADRE)ಭರ್ತಿ ಮಾಡಲಾಗುವ ಹುದ್ದೆಗಳ ಸಂಖ್ಯೆ 08
| ಕ್ರ. ಸ ಂ | ವ ರ್ಗೀಕರಣದ ವಿವರ | ಇತರೆ | ವ ುಹಿಳಾ ಅಭ್ಯರ್ಥಿ | ಗ್ರಾಮೀಣ ಅಭ್ಯರ್ಥಿ | ಅಂಗವಿಕಲ ಅಭ್ಯರ್ಥಿ | ವ iಾಜಿ ಸ ೖನಿಕರು ೆ | ಕನ್ನಡ ವ iಾಧ್ಯಮ ಅಭ್ಯರ್ಥಿ | ಯೋಜನಾ ನಿರಾಶ್ರಿತರು | ಒಟ್ಟು |
| 1 | ಪ .ಜಾ | - | - | 01 | - | - | - | - | 01 |
| 2 | ಪ .ಪಂ | - | 01 | - | - | - | - | - | 01 |
| 3 | ಪ .ವರ್ಗ-2ಎ ್ರ | 01 | - | - | - | - | - | - | 01 |
| 4 | ಪ ವರ್ಗ-2ಬಿ ್ರ | - | 01 | - | - | - | - | - | 01 |
| 5 | ಸಾಮಾನ್ಯ | - | 01 | 02 | - | - | 01 | - | 04 |
| ಒಟ್ಟು | 01 | 03 | 03 | - | - | 01 | - | 08 |
1.ಅರ್ಜಿ ಸಲ್ಲಿಸುವ ವಿಧಾನ:- ಅರ್ಜಿಗಳನ್ನು ಆನ್-ಲೈನ್ [ On line ] [ಎಲೆಕ್ಟ್ರಾನಿಕ್ ಮಾರ್ಗ] ಮುಖಾಂತರ ಮಾತ್ರ ಸಲ್ಲಿಸತಕ್ಕದ್ದಾಗಿದೆ. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.
| 1 | ಪ ರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಾಗೂ ಪ್ರ.ವರ್ಗ-1 | `.200 | ಬ್ಯಾಂಕ ಶುಲ್ಕವನ್ನು ಅಭ್ಯರ್ಥಿಗಳು ಪ ತ ್ರ ್ಯೕಕವಾಗಿ ಭರಿಸತಕ್ಕದ್ದು. ೆ |
| 2 | 2ಎ, 2ಬಿ, 3ಎ, 3ಬಿ ವರ್ಗಕ್ಕೆ | `.300 | |
| 3 | ಸಾಮಾನ್ಯ ವರ್ಗ | `.400 |
3.ಆನ್-ಲೈನ್ [ On line ] [ಎಲೆಕ್ಟ್ರಾನಿಕ್ ಮಾರ್ಗ] ಮುಖಾಂತರ ಅರ್ಜಿ ಸಲ್ಲಿಸುವ ವಿಧಾನ:-
ಅಭ್ಯರ್ಥಿಯು ಇಲಾಖೆಯ ಅಧಿಕೃತ ವೆಬ್ ಸೈಟ್ http://koppal-va.kar.nic.in ತೆರೆದು ಕಂಪ್ಯೂಟರ್ ಪರದೆಯ ಮೇಲೆ ಅರ್ಜಿಯನ್ನು ತುಂಬಬೇಕು ಹಾಗೂ ಇತ್ತೀಚಿನ ಭಾವ ಚಿತ್ರವನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು. ನಂತರ ಅಭ್ಯರ್ಥಿಯು Submit Button ಅನ್ನು ಒತ್ತಿದರೆ ಅರ್ಜಿ ಸಂಖ್ಯೆ [Reference Number] ಸೃಷ್ಟಿಯಾಗುತ್ತದೆ. ಆನ್-ಲೈನ್ ಅರ್ಜಿಯನ್ನು ಭರ್ತಿ ಮಾಡಿದ ನಂತರ ಅಭ್ಯರ್ಥಿಗಳು ಸ್ವೀಕೃತಿ ಪತ್ರ [Acknowledgement Slip] ಮತ್ತು ದ್ವಿ ಪ್ರತಿ ಚಲನ್ ಅನ್ನು ತೆಗೆದುಕೊಳ್ಳತಕ್ಕದ್ದು. ಈ ಚಲನ್ ಅನ್ನು ಅರ್ಜಿ ಶುಲ್ಕದೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟ್ರಜರಿ ಶಾಖೆ ಕೊಪ್ಪಳದಲ್ಲಿ ಜಮಾ ಆಗುವಂತೆ ಪಾವತಿಸಬೇಕು.ಅಭ್ಯರ್ಥಿಗಳು ಸ್ವೀಕೃತಿ ಸ್ಲಿಪ್ ನ್ನು ಮತ್ತು ಚಲನ್ ಪಾವತಿಯ ಒಂದು ಪ್ರತಿಯನ್ನು ಖಡ್ಡಾಯವಾಗಿ ತಮ್ಮ ಬಳಿ ಇರಿಸಿಕೊಳ್ಳತಕ್ಕದ್ದು. ಇನ್ನೊಂದು ಚಲನ್ ಪ್ರತಿ ಬ್ಯಾಂಕ್ ಬಳಿ ಇರುತ್ತದೆ. ಈ ದಾಖಲೆಗಳನ್ನು ಪರಿಶೀಲನೆಗೆ ನಿಗದಿಪಡಿಸಿದ ದಿನಾಂಕ 16/12/2017ರಂದು ಹಾಜರುಪಡಿಸತಕ್ಕದ್ದು. ಬ್ಯಾಂಕಿನಲ್ಲಿ ನಿಗದಿತ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ :10/11/2017 ಆಗಿರುತ್ತದೆ. ನಿಗದಿತ ಅರ್ಜಿ ಶುಲ್ಕದೊಂದಿಗೆ ಬ್ಯಾಂಕ್ ಶುಲ್ಕವನ್ನು ಪ್ರತ್ಯೇಕವಾಗಿ ಭರಿಸತಕ್ಕದ್ದು.ನಗದು/ಡಿ.ಡಿ./ಪೋಸ್ಟಲ್ ಆರ್ಡರ್, ಮನಿ ಆರ್ಡರ್ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ.ಅಲ್ಲದೆ ಒಮ್ಮೆ ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ ಅದನ್ನು ಯಾವುದೇ ಸಂದರ್ಭದಲ್ಲಿಯೂ ಹಿಂದಿರುಗಿಸಲಾಗು- ವುದಿಲ್ಲ ಅಥವಾ ಅದನ್ನು ಇತರೆ ಯಾವುದೇ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ.ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 09/11/2017ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.
3. ಅರ್ಜಿಗಳನ್ನು ದಿನಾಂಕ: 10/10/2017 ರಿಂದ 09/11/2017 ರ ಒಳಗಾಗಿ ಸಲ್ಲಿಸತಕ್ಕದ್ದು.
4. ಅರ್ಜಿ ಶುಲ್ಕವನ್ನು ದಿನಾಂಕ:10/10/2017 ರಿಂದ 10/11/2017 ರ ವರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟ್ರಜರಿ ಶಾಖೆ ಕೊಪ್ಪಳ ಎಸ್.ಬಿ.ಖಾತೆ ಸಂಖ್ಯೆ:62111714066 IFSC Code No: SBIN0020968 ಇದಕ್ಕೆ ಬ್ಯಾಂಕ್ ವ್ಯವಹಾರದ ವೇಳೆಯಲ್ಲಿ ಪಾವತಿಸತಕ್ಕದ್ದು. ಹಾಗೂ ಶುಲ್ಕ ಪಾವತಿಸಿದ ನಂತರ ಆನ್‌ಲೈನ್ ಮೂಲಕ ತಂತ್ರಾಶದ ಸೂಚನೆಯನ್ನು ಪಾಲಿಸಿ ಸ್ಕ್ಯಾನ ಮಾಡಿದ ಚಲನ್ (ಬ್ಯಾಂಕಿನಲ್ಲಿ ಅರ್ಜಿ ಶುಲ್ಕ ಸಂದಾಯ ಮಾಡಿ ಬ್ಯಾಂಕ ಮೋಹರು ಹಾಕಲಾದ ಚಲನ್) ಅಪ್‌ಲೋಡ್ (Uploading Challan Option) ಮಾಡತಕ್ಕದ್ದು. ಇದು ಅಭ್ಯರ್ಥಿಯ ಜವಾಬ್ದಾರಿಯಾಗಿರುತ್ತದೆ. (ಅರ್ಜಿ ಶುಲ್ಕ ಪಾವತಿಸಿರುವ ಚಲನ್ ಅನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದ್ದು, ಚಲನ್ ಅಪ್‌ಲೋಡ್ ಮಾಡದೇ ಇದ್ದಲ್ಲಿ ಅಂತಹ ಆನ್‌ಲೈನ್ ಅರ್ಜಿಯನ್ನು ತಿರಸ್ಕರಿಸಲಾಗುವುದು.
5. ಅರ್ಹತಾ ಷರತ್ತುಗಳು:-
ಅ] ಭಾರತೀಯ ನಾಗರೀಕನಾಗಿರತಕ್ಕದ್ದು.
ಆ] ಅಭ್ಯರ್ಥಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯು ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ/ಮಾನಸಿಕ ನ್ಯೂನತೆಯಿಂದ ಮುಕ್ತರಾಗಿರತಕ್ಕದ್ದು.
ಇ] ಅಭ್ಯರ್ಥಿಯು ಈ ಹಿಂದೆ ಯಾವುದೇ ಸರ್ಕಾರದ ಸೇವೆಯಿಂದ ವಜಾಗೊಂಡಿರಬಾರದು.
ಈ] ದೈಹಿಕವಾಗಿ ಅನರ್ಹರಾಗಿದ್ದಾರೆಂಬುದಾಗಿ ವೈದ್ಯಕೀಯ ಮಂಡಳಿಯ ವರದಿಯ ಮೇಲೆ ಅರ್ಜಿಯನ್ನು ತಿರಸ್ಕರಿಸುವ ಪೂರ್ಣ ವಿವೇಚನೆಯನ್ನು ನೇಮಕಾತಿ ಪ್ರಾಧಿಕಾರ ಕಾಯ್ದಿರಿಸಿಕೊಂಡಿದೆ.
೨೦೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೯, ೨೦೧೭ ಭಾಗ ೫6. ಶೈಕ್ಷಣಿಕ ವಿದ್ಯಾರ್ಹತೆ :-
ಅ] ದ್ವಿತೀಯ ಪಿ.ಯು.ಸಿ. ಪರೀಕ್ಷೆ ಅಥವಾ ಸೆಂಟ್ರಲ್ ಬೋರ್ಡ್ ಆಪ್ ಸೆಕೆಂಡರಿ ಎಜುಕೇಷನ್ (CBSE) ಅಥವಾಐ.ಸಿ.ಎಸ್.ಇ (ICSE) ನಡೆಸುವ 12 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.ಈ ವಿದ್ಯಾರ್ಹತೆಯನ್ನು ಅಧಿಸೂಚನೆ ಹೊರಡಿಸಿರುವ ದಿನಾಂಕಕ್ಕೆ ಮುಂಚಿತವಾಗಿ ಹೊಂದಿರತಕ್ಕದ್ದು.ಈ ವಿದ್ಯಾರ್ಹತೆ ಹೊರತುಪಡಿಸಿ ಇನ್ನಿತರ ಯಾವುದೇ ತತ್ಸಮಾನ ವಿದ್ಯಾರ್ಹತೆ ಅಥವಾ ಮುಕ್ತ ವಿದ್ಯಾಲಯದಿಂದ ನೀಡಲಾದ ಪ್ರಮಾಣ ಪತ್ರವನ್ನು ಪರಿಗಣಿಸಲಾಗುವುದಿಲ್ಲ.
ಆ] ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
7. ವೇತನ ಶ್ರೇಣಿ:- `.11600-200-12000-250-13000-300-14200-350-15600-400-17200-450-19000-500-21000 8. ವಯೋಮಿತಿ:- ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕವಾದ 09/11/2017 ರಂದು ಈ ಕೆಳಗಿನಂತೆ ವಯೋಮಿತಿ
| ಕ್ರ.ಸಂ | ವಿವರ | ಕನಿಷ್ಟ | ಗರಿಷ್ಟ |
| 1 | ಪ ರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರ..ವರ್ಗ-1 | 18 | 40 |
| 2 | ಪ .ವರ್ಗ - 2ಎ. 2ಬಿ. 3ಎ. 3ಬಿ ್ರ | 18 | 38 |
| 3 | ಸಾಮಾನ್ಯ ವರ್ಗದವರಿಗೆ | 18 | 35 |
ಎಸ್.ಎಸ್.ಎಲ್.ಸಿ. ಅಥವಾ ವರ್ಗಾವಣೆ ಪ್ರಮಾಣ ಪತ್ರ [ಟಿ.ಸಿ] ಅಥವಾ ಕ್ಯುಮುಲೇಟಿವ್ ರೆಕಾರ್ಡ್‌ನಲ್ಲಿ ನಮೂದಿಸಿರುವ ಜನ್ಮ ದಿನಾಂಕವನ್ನು ಆಯ್ಕೆ ಪ್ರಾಧಿಕಾರವು ಪರಿಗಣಿಸುತ್ತದೆ.ಇತರೆ ಯಾವುದೇ ದಾಖಲಾತಿಗಳನ್ನು ಪರಿಗಣಿಸಲಾಗುವುದಿಲ್ಲ.ಕರ್ನಾಟಕ ಸರ್ಕಾರಿ ಸೇವಾ [ಸಾಮಾನ್ಯ ನೇಮಕಾತಿ]1977 ರ ನಿಯಮಾವಳಿಗಳ ನಿಯಮ 6 ರಂತೆ ವಯೋಮಿತಿಯನ್ನು ಅದರಲ್ಲಿ ತಿಳಿಸಿರುವ ಮಟ್ಟಿಗೆ ಸಂಬಂಧಪಟ್ಟ ದಾಖಲೆ ಒದಗಿಸಿದಲ್ಲಿ ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುವುದು.
ಕರ್ನಾಟಕ ಸರ್ಕಾರಿ ಸೇವಾ [ಸಾಮಾನ್ಯ ನೇಮಕಾತಿ] 1977 ರ ನಿಯಮಾವಳಿಗಳ ನಿಯಮ 6 ರಂತೆ ಗರಿಷ್ಟ ವಯೋಮಿತಿಯನ್ನು ಈ ಮುಂದಿನ ಪ್ರಕರಣಗಳಲ್ಲಿ ಮುಂದೆ ಹೇಳಿರುವಷ್ಟರಮಟ್ಟಿಗೆ ಹೆಚ್ಚಿಸಲು ಅವಕಾಶವಿದೆ.
[ಎ] ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪಿಸಲಾದ ಅಥವಾ ರಾಜ್ಯ ಅಧಿನಿಯಮದ ಅಥವಾ ಕೇಂದ್ರ ಅಧಿನಿಯಮದ ಅಡಿಯಲ್ಲಿನ ಸರ್ಕಾರದಿಂದ ಸ್ಥಾಪಿತವಾಗಿದ್ದು, ಮತ್ತು ಸರ್ಕಾರವು ಒಡೆತನ ಹೊಂದಿರುವ ಅಥವಾ ನಿಯಂತ್ರಣ ಹೊಂದಿರುವ ನಿಗಮದ ಅಡಿಯಲ್ಲಿ ಹುದ್ದೆಯನ್ನು ಧಾರಣ ಮಾಡಿರುವ ಅಥವಾ ಧಾರಣ ಮಾಡಿದ್ದ ಅಭ್ಯರ್ಥಿಯ ಸಂದರ್ಭದಲ್ಲಿ ಆತ ಅಂಥ ಹುದ್ದೆಯನ್ನು ಧಾರಣೆ ಮಾಡಿರುವಷ್ಟು ಅಥವಾ ಧಾರಣೆ ಮಾಡಿದ್ದಷ್ಟು ಅಥವಾ [ಹತ್ತು] ವರ್ಷಗಳು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.
[ಬಿ] ಮಾಜಿ ಸೈನಿಕನಾಗಿರುವ ಅಭ್ಯರ್ಥಿಯ ಸಂದರ್ಭದಲ್ಲಿ ಮೂರು ವರ್ಷಗಳು ಮತ್ತು ಇದಕ್ಕೆ ಕೇಂದ್ರದ ಸಶಸ್ತ್ರ ಪಡೆಗಳಲ್ಲಿ ಅವನು ಸೇವೆ ಸಲ್ಲಿಸಿರುವಷ್ಟು ವರ್ಷಗಳನ್ನು ಸೇರಿಸಬೇಕು.
[ಸಿ] ಪೂರ್ಣಾವಧಿ ಕೆಡೆಟ್ ಇನ್‌ಸ್ಟ್ರಕ್ಟರ್ ಆಗಿ ಸೇವೆ ಸಲ್ಲಿಸಿದ ತರುವಾಯ, ರಾಷ್ಟ್ರೀಯ ಕೆಡೆಟ್ ದಳದಿಂದ ಬಿಡುಗಡೆ ಮಾಡಿದ ಅಭ್ಯರ್ಥಿಯ ಸಂದರ್ಭದಲ್ಲಿ, ಹಾಗೆ ಕೆಡೆಟ್ ಇನ್‌ಸ್ಟ್ರಕ್ಟರ್‌ರಾಗಿ ಆತನು ಸೇವೆ ಸಲ್ಲಿಸಿರುವಷ್ಟು ವರ್ಷಗಳು
[ಡಿ]ರಾಜ್ಯ ಸರ್ಕಾರ ಪ್ರಾಯೋಜಿತ ಗ್ರಾಮೀಣ ಕೈಗಾರೀಕರಣ ಯೋಜನೆಯಲ್ಲಿ ನೇಮಕಗೊಂಡ ಗ್ರಾಮ ಸಮೂಹ ಇನ್ ಪೆಕ್ಟರ್ ಆಗಿರುವ ಅಥವಾ ಆಗಿದ್ದಂಥ ಅಭ್ಯರ್ಥಿಯು ಸಂದರ್ಭದಲ್ಲಿ ಅಂಥ ಗ್ರಾಮ ಸಮೂಹ ಇನ್ಸ್‌ಪೆಕ್ಟರಾಗಿ ಆತ ಸೇವೆ ಸಲ್ಲಿಸಿರುವಷ್ಟು ವರ್ಷಗಳು.
[ಇ]ಅಂಗವಿಕಲನಾಗಿರುವ ಅಭ್ಯರ್ಥಿಯ ಸಂದರ್ಭದಲ್ಲಿ ಹತ್ತು ವರ್ಷಗಳು
[ಎಫ್] ಈ ರಾಜ್ಯದಲ್ಲಿರುವ ಭಾರತ ಸರ್ಕಾರದ ಜನಗಣತಿ ಸಂಸ್ಥೆಯಲ್ಲಿ ಹುದ್ದೆಯನ್ನು ಧಾರಣೆ ಮಾಡಿರುವ ಅಥವಾ ಧಾರಣ ಮಾಡಿದ್ದ ಅಭ್ಯರ್ಥಿಯ ಸಂದರ್ಭದಲ್ಲಿ ಅಂಥ ಹುದ್ದೆಯನ್ನು ಆತನು ಧಾರಣೆ ಮಾಡಿರುವಷ್ಟು ಅಥವಾ ಧಾರಣೆ ಮಾಡಿದ್ದಷ್ಟು ವರ್ಷಗಳು ಅಥವಾ ಐದು ವರ್ಷಗಳು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.
[ಜಿ] ಅಭ್ಯರ್ಥಿ ವಿಧವೆಯಾಗಿರುವ ಸಂದರ್ಭದಲ್ಲಿ ಹತ್ತು ವರ್ಷಗಳು
[ಹೆಚ್]ಜೀತ ಕಾರ್ಮಿಕನಾಗಿದ್ದ ಅಭ್ಯರ್ಥಿಯ ಸಂದರ್ಭದಲ್ಲಿ ಹತ್ತು ವರ್ಷಗಳು.
ಅನುಚ್ಛೇದ 371(ಜೆ) ರಂತೆ ಹೈದ್ರಾಬಾದ-ಕರ್ನಾಟಕ ಪ್ರದೇಶಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಾತಿ:
ಅ] ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) (ಅರ್ಹತಾ ಪ್ರಮಾಣ ಪತ್ರಗಳ ನೀಡಿಕೆ) ನಿಯಮಗಳು 2013ಕ್ಕೆ ಸಂಬಂಧಿಸಿದಂತೆ, ನೇರ ನೇಮಕಾತಿಯಲ್ಲಿ ಸ್ಥಳೀಯ ವ್ಯಕ್ತಿಯೆಂಬ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು 'ಅನುಭಂಧ-ಎ' ರಲ್ಲಿ ಸೂಚಿಸಿರುವ ನಮೂನೆಯಲ್ಲಿಯೇ ಅರ್ಹತಾ ಪ್ರಮಾಣ ಪತ್ರವನ್ನು ಸಕ್ಷಮ ಪ್ರಾಧಿಕಾರವಾದ ಸಂಬಂಧಪಟ್ಟ ಉಪ ವಿಭಾಗದ ಸಹಾಯಕ ಆಯುಕ್ತರಿಂದ ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಹಿ, ಮೊಹರು ಮತ್ತು ಜಾರಿ ಮಾಡಿದ ದಿನಾಂಕದೊಂದಿಗೆ ಪಡೆದಿಟ್ಟುಕೊಂಡಿರತಕ್ಕದ್ದು. ಈ ನಮೂನೆಯನ್ನು ಹೊರತುಪಡಿಸಿ ಇತರೆ ಯಾವುದೇ ನಮೂನೆಯಲ್ಲಿ ಪಡೆಯಲಾದ ಅರ್ಹತಾ ಪ್ರಮಾಣ ಪತ್ರವನ್ನು ತಿರಸ್ಕರಿಸಲಾಗುವುದು.
ಆ] ಸ್ಥಳೀಯ ಅಭ್ಯರ್ಥಿಗಳು ಸ್ಥಳೀಯ ವೃಂದದಲ್ಲಿ ಆಯ್ಕೆಯಾಗದೇ ಒಂದು ವೇಳೆ ಮೆರಿಟ್ ಆಧಾರದ ಮೇಲೆ ಸ್ಥಳಿಯೇತರ ವೃಂದದಲ್ಲಿ ಆಯ್ಕೆಯಾಗುವ ಅವಕಾಶವಿದ್ದಲ್ಲಿ, ತಮ್ಮ ಒಪ್ಪಿಗೆಯನ್ನು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪ್ರತ್ಯೇಕವಾಗಿ ನಮೂದಿಸತಕ್ಕದ್ದು. ಹೀಗೆ ಸ್ಥಳಿಯೇತರ ವೃಂದದಲ್ಲಿ ಆಯ್ಕೆಯಾಗುವ ಸ್ಥಳೀಯ ಅಭ್ಯರ್ಥಿಗಳು ತಮ್ಮ ಪೂರ್ಣ ಸೇವೆಯನ್ನು ಸ್ಥಳಿಯೇತರ ವೃಂದದಲ್ಲಿ ಮುಂದುವರೆಸಬೇಕಾಗುತ್ತದೆ.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೯, ೨೦೧೭ ೨೦೧೫10. ಜಾತಿ ಮೀಸಲಾತಿ ಪ್ರಮಾಣ ಪತ್ರಗಳು
ಜಾತಿ ಮೀಸಲಾತಿ ಕೋರಬಯಸುವ ಅಭ್ಯರ್ಥಿಗಳು ತಹಶೀಲ್ದಾರ್ ಹುದ್ದೆಗಿಂತ ಕಡಿಮೆ ಇಲ್ಲದ ಅಧಿಕಾರಿಗಳಿಂದ ಪ್ರಮಾಣ ಪತ್ರಗಳನ್ನು ಪಡೆದಿರತಕ್ಕದ್ದು.
1. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ನಮೂನೆ – ಡಿ ರಲ್ಲಿ [ ಅನುಭಂದ-1]
2. ಪ್ರ.ವರ್ಗ-1 ರ ಅಭ್ಯರ್ಥಿಗಳು ನಮೂನೆ ' ಇ ' ನಲ್ಲಿ [ ಅನುಬಂಧ-2]
3. ಪ್ರ.ವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು ನಮೂನೆ ' ಎಫ್ ' ನಲ್ಲಿ [ಅನುಬಂಧ-3]
ಈ ಪ್ರಮಾಣ ಪತ್ರಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ: 09/11/2017 ರ ಒಳಗೆ ಅರ್ಹತೆಯನ್ನು ಪಡೆದಿರಬೇಕು.
4. ಜಾತಿ ಮೀಸಲಾತಿ ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜಾತಿ ಪ್ರಮಾಣ ಪತ್ರದ ಬಗ್ಗೆ ಜಿಲ್ಲಾಧಿಕಾರಿ, [ಅಧ್ಯಕ್ಷರು, ಜಾತಿ ಆದಾಯ ಪರಿಶೀಲನಾ ಸಮಿತಿ] ರವರಿಂದ ಸಿಂಧುತ್ವ ಪ್ರಮಾಣಪತ್ರ ಪಡೆದ ನಂತರ ನೇಮಕಾತಿ ಆದೇಶ ನೀಡಲಾಗುವುದು.
11. ಗ್ರಾಮೀಣ ಅಭ್ಯರ್ಥಿ:-
1. ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ರೀತ್ಯಾ ಗ್ರಾಮೀಣ ಮೀಸಲಾತಿಗೆ ಒಳಪಡುವ ಪ್ರದೇಶಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿ ಉತ್ತೀರ್ಣರಾಗಿರಬೇಕು.
2. ಗ್ರಾಮೀಣ ಮೀಸಲಾತಿಯನ್ನು ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರ.ವರ್ಗ-1, 2ಎ, 2ಬಿ, 3ಎ, 3ಬಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ನಮೂನೆ-2 ರಲ್ಲಿ ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರವನ್ನು ಪಡೆದಿಟ್ಟುಕೊಂಡಿರತಕ್ಕದ್ದು.
3. ಗ್ರಾಮೀಣ ಮೀಸಲಾತಿ ಕೋರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ನಮೂನೆ-2ರ ಗ್ರಾಮೀಣ ಮೀಸಲಾತಿಪ್ರಮಾಣ ಪತ್ರದ ಜೊತೆಗೆ ನಮೂನೆ-1 ರಲ್ಲಿ ಮೇಲುಸ್ತರಕ್ಕೆ ಸೇರಿಲ್ಲದಿರುವಬಗ್ಗೆ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ತಹಶೀಲ್ದಾರರಿಂದ ಪಡೆದಿಟ್ಟುಕೊಂಡಿರತಕ್ಕದ್ದು.
ಸೂಚನೆ:- ಗ್ರಾಮೀಣ ಮೀಸಲಾತಿಗೆ ಸಂಬಂಧಿಸಿದಂತೆ ನಮೂನೆ-2 ರಲ್ಲಿಯ ಪ್ರಮಾಣ ಪತ್ರವನ್ನು ಅಭ್ಯರ್ಥಿಗಳು ತಾವು ವ್ಯಾಸಂಗ ಮಾಡಿದ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಮತ್ತು ಮೊಹರಿನೊಂದಿಗೆ ಪ್ರಮಾಣ ಪತ್ರವನ್ನು ಪಡೆದು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಪಡಿದಿರತಕ್ಕದ್ದು.
12. ಕನ್ನಡ ಮಾಧ್ಯಮ ಅಭ್ಯರ್ಥಿ:-
ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು 1ನೇ ತರಗತಿಯಿಂದ 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಮತ್ತು ಮೊಹರಿನೊಂದಿಗೆ ಪ್ರಮಾಣ ಪತ್ರವನ್ನು ಪಡೆದು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಪಡಿದಿರತಕ್ಕದ್ದು.
13. ಯೋಜನಾ ನಿರಾಶ್ರೀತ ಅಭ್ಯರ್ಥಿ:
ಯೋಜನೆಗಳಿಂದ ನಿರ್ವಸಿತರಾದ ಕುಟುಂಬದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳನ್ನು ಕೋರುವ ಅಭ್ಯರ್ಥಿಗಳು ಸಂಬಂಧಿಸಿದ ತಹಶೀಲ್ದಾರ್ ರವರಿಂದ ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರವನ್ನು ಪಡೆದುಕೊಂಡಿರತಕ್ಕದು.
14. ಮಾಜಿ ಸೈನಿಕ ಮೀಸಲಾತಿ ಬಗ್ಗೆ:
ಮಾಜಿ ಸೈನಿಕ ಎಂದರೆ ಸಶಸ್ತ್ರದಳಗಳಾದ ನಿಯಮಿತ ಭೂದಳ, ನೌಕಾದಳ ಮತ್ತು ವಾಯುದಳದಲ್ಲಿ ಯಾವುದೇ ಶ್ರೇಣಿಯಲ್ಲಿ (ಯೋಧ ಅಥವಾ ಯೋಧರಲ್ಲದ ಹುದ್ದೆಗಳಲ್ಲಿ) ಸೇವೆ ಸಲ್ಲಿಸಿದ ವ್ಯಕ್ತಿ. ಆದರೆ ಡಿಫೆನ್ಸ್ ಸೆಕ್ಯುರಿಟಿಕೋರ್, ಜನರಲ್ ರಿಸರ್ವ್ ಇಂಜಿನೀಯರಿಂಗ್ ಫೋರ್ಸ್, ಲೋಸಹಾಯಕ ಸೇನಾ ಮತ್ತು ಪ್ಯಾರಾ ಮಿಲಿಟಿರಿ ದಳದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಸೇರ್ಪಡೆಯಾಗುವುದಿಲ್ಲ.
15.ಅಂಗವಿಕಲರ ಮೀಸಲಾತಿ ಬಗ್ಗೆ:-
ಕರ್ನಾಟಕ ನಾಗರೀಕ ಸೇವಾ [ಸಾಮಾನ್ಯ ನೇಮಕಾತಿ] ನಿಯಮಗಳು 1977 ರ ನಿಯಮ 9[1-ಎ] ರ ಅನ್ವಯ ರಾಜ್ಯ ಸಿವಿಲ್ ಸೇವೆಯಲ್ಲಿನ ಗ್ರೂಪ್-ಸಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಂಗವಿಕಲರಿಗೆ ಶೇಕಡಾ 5 ರಷ್ಟು ಸಮತಳ ಮೀಸಲಾತಿ ಕಲ್ಪಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ:
ಸಿಆಸುಇ/12/ಸೆನೆನಿ/2006 ದಿನಾಂಕ:1.8.2009 ರಂತೆ ಮೀಸಲಾತಿ ನೀಡಲಾಗುವುದು. ಸರ್ಕಾರದ ಅಧಿಸೂಚನೆ ಸಂಖ್ಯೆ:ಡಿಪಿಎಆರ್/52/ಎಸ್.ಎಸ್.ಆರ್/99 ದಿನಾಂಕ:29-11-2002 ಮತ್ತು ಸರಕಾರದ ಅಧಿಸೂಚನೆ ಸಂಖ್ಯೆ/ಡಿಪಿಎಆರ್/54/ಎಸ್ಆರ್‌ಪಿ/2012 ದಿನಾಂಕ 23/06/2012 ರೀತ್ಯಾ ಗ್ರಾಮಲೆಕ್ಕಿಗರ ಹುದ್ದೆಗಳಲ್ಲಿ ಅಂಗವಿಕಲರ ಮೀಸಲಾತಿಯನ್ನು ಈ ಕೆಳಕಂಡ ವರ್ಗಗಳಿಗೆ ಮಾತ್ರ ಕಲ್ಪಿಸಲಾಗಿದೆ.
1. ಕುಷ್ಟ ರೋಗದಿಂದ ಗುಣಮುಖರಾದವರು [Leprosy cured]
2. ಶ್ರವಣ ದೋಷವುಳ್ಳವರು [Hearing impaired]
3. ಮಾನಸಿಕ ಅಸ್ವಸ್ಥತೆ [Mentally ill ]
4. ದೈಹಿತ ಅಂಗವಿಕಲತೆ ಉಳ್ಳವರು [Locomotor Disability]
ಈ ಮೇಲಿನ ಅಂಗವಿಕಲರು ಹೊರತುಪಡಿಸಿ ಇತರ ದೈಹಿಕ ಅಂಗವಿಕಲತೆಯುಳ್ಳ ಅಭ್ಯರ್ಥಿಗಳು ಗ್ರಾಮಲೆಕ್ಕಿಗರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
೨೦೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೯, ೨೦೧೭ ಭಾಗ ೫ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ:ಸಿಆಸುಇ/128/ಸೆನೆನಿ/2005 ದಿನಾಂಕ:19/11/2005 ರಲ್ಲಿ ನಿಗದಿಪಡಿಸಿರುವ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯು ನೀಡುವ ಪ್ರಮಾಣ ಪತ್ರವನ್ನು ಪಡೆದುಕೊಂಡಿರತಕ್ಕದ್ದು. ಬೇರೆ ಯಾವುದೇ ನಮೂನೆಗಳಲ್ಲಿ ಪಡೆಯಲಾಗಿರುವ ಪ್ರಮಾಣ ಪತ್ರಗಳನ್ನು ಪರಿಗಣಿಸಲು ಬರುವುದಿಲ್ಲ.
ಸೂಚನೆ:- ಈ ಮೇಲಿನ ಎಲ್ಲಾ ಪ್ರಮಾಣ ಪತ್ರಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ:09/11/2017 ರೊಳಗೆ ಅರ್ಹತೆಯನ್ನು ಪಡೆದಿರಬೇಕು. ತಾತ್ಕಾಲಿಕ ಪರಿಶೀಲನಾ ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳು ಮಾತ್ರ ನಿಗದಿತ ದಿನಾಂಕ:16/12/2017 ರಂದು ಪೂರ್ವಾಹ್ನ 11.00 ಗಂಟೆಗೆ ನೇಮಕಾತಿ ಪ್ರಾಧಿಕಾರದ ಎದುರು [ ಕೊಪ್ಪಳ ಜಿಲ್ಲಾ ಆಡಳಿತ ಭವನ ಆಡಿಟೋರಿಯಂ ಹಾಲ್ ] ಮೂಲ ಪ್ರಮಾಣ ಪತ್ರಗಳನ್ನು ತಪ್ಪದೆ ಹಾಜರ್ ಪಡಿಸತಕ್ಕದ್ದು.ಮೂಲ ಪ್ರಮಾಣ ಪತ್ರಗಳನ್ನು ಹಾಜರ್ ಪಡಿಸದಿರುವ ಅಭ್ಯರ್ಥಿಗಳ ಅರ್ಜಿಯನ್ನು ಯಾವುದೇ ಸೂಚನೆ ನೀಡದೇ ತಿರಸ್ಕøತಗೊಳಿಸಲಾಗುವುದು.
16. ಆಯ್ಕೆ ವಿಧಾನ:-
ಕರ್ನಾಟಕ ಜನರಲ್ ಸರ್ವೀಸಸ್ [Revenue Subordinate Branch] [Cadre & Recruitment] [ತಿದ್ದುಪಡಿ] ನಿಯಮಗಳು 2008 ಮತ್ತು 2009 ಹಾಗೂ ಕರ್ನಾಟಕ ನಾಗರೀಕ ಸೇವಾ [ಸಾಮಾನ್ಯ ನೇಮಕಾತಿ] ನಿಯಮಗಳು 1977 ರ ಪ್ರಕಾರ ಅಭ್ಯರ್ಥಿಯನ್ನು ಅವರು ಪಿ.ಯು.ಸಿ. ಪರೀಕ್ಷೆ ಅಥವಾ CBSE ಅಥವಾ ICSE ನಡೆಸುವ 12 ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳ [ On merit ] ಆಧಾರದ ಮೇಲೆ ಆಯಾಯ ಮೀಸಲಾತಿ ಪ್ರವರ್ಗಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಲಾಗುವುದು. ನಿಯಮಾವಳಿಯಂತೆ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ದಿನಾಂಕ:24/11/2017 ರಂದು ಪ್ರಕಟಿಸಲಾಗುವುದು.
17. ಪ್ರಮುಖ ಸೂಚನೆಗಳು:-
ಈ ಕೆಳಕಂಡ ಮೂಲ ಪ್ರಮಾಣ ಪತ್ರಗಳನ್ನು ದಿನಾಂಕ:16/12/2017 ರಂದು ಪರಿಶೀಲನೆಗೆ ಹಾಜರ್ ಪಡಿಸತಕ್ಕದ್ದು.
ಅ] ದ್ವಿತೀಯ ಪಿ.ಯು.ಸಿ. ಪರೀಕ್ಷೆ ಅಥವಾ CBSE ಅಥವಾ ICSE ನಡೆಸುವ 12 ನೇ ತರಗತಿ ಪರೀಕ್ಷೆಯಅಂಕ ಪಟ್ಟಿ ಪ್ರಮಾಣ ಪತ್ರ.
ಆ] ಹುಟ್ಟಿದ ದಿನಾಂಕದ ಪ್ರಮಾಣ ಪತ್ರ [ಎಸ್.ಎಸ್.ಎಲ್.ಸಿ/ಟಿ.ಸಿ. ಅಥವಾ ಕ್ಯುಮುಲೇಟಿವ್‌ರೆಕಾರ್ಡ]
ಇ] ಸೇವೆಯಲ್ಲಿರುವ ಅಭ್ಯರ್ಥಿಗಳು ಅವರು ಸೇವೆಯಲ್ಲಿ ಇರುವ ಬಗ್ಗೆ ಸೇವಾ ಪ್ರಮಾಣ ಪತ್ರ ಮತ್ತು ಸದರಿ ಹುದ್ದೆಗೆ ಅರ್ಜಿ ಸಲ್ಲಿಸುವ ಬಗ್ಗೆ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು [No Objection Certificate] ಸಂಬಂಧಿಸಿದ ನೇಮಕಾತಿ ಪ್ರಾಧಿಕಾರದಿಂದ ಪಡೆದಿಟ್ಟು-ಕೊಂಡಿರಬೇಕು.
ಈ] ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ [ಅನುಬಂಧ-1 ನಮೂನೆ 'ಡಿ '] ಮತ್ತು ಪ್ರ.ವರ್ಗ-1 [ಅನುಬಂಧ-2 ನಮೂನೆ 'ಇ'] ಹಾಗೂ ಪ್ರ ವರ್ಗ-2ಎ, 2ಬಿ, 3ಎ, 3ಬಿ [ ಅನುಬಂಧ-3 ನಮೂನೆ – ಎಫ್ ] ಮೀಸಲಾತಿ ಅಭ್ಯರ್ಥಿಗಳು ಕ್ರಮವಾಗಿ ನಮೂನೆ ಡಿ/ಇ/ಎಫ್ ನಲ್ಲಿ ತಹಶೀಲ್ದಾರ್ ರವರಿಂದ ಪಡೆದ ಪ್ರಮಾಣ ಪತ್ರಗಳನ್ನು ಪಡೆದಿಟ್ಟುಕೊಂಡಿರತಕ್ಕದ್ದು
ಉ] ಯೋಜನಾ ನಿರಾಶ್ರಿತ ಕುಟುಂಬದ ಅಭ್ಯರ್ಥಿಗಳು, ವಿಧವೆಯರು, ಜೀತ ಕಾರ್ಮಿಕರು, ಇವರುಗಳು ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ.
ಊ] ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ
ಋು] ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ
ಋುೂ] ಸೈನಿಕ ಸೇವೆಯಿಂದ ಬಿಡುಗಡೆಯಾದ /ಮುಕ್ತಿಹೊಂದಿದ ಬಗೆಗಿನ ಪ್ರಮಾಣ ಪತ್ರ ಮತ್ತು ಪಿಂಚಣಿ ಪಡೆಯುತ್ತಿರುವ ದಾಖಲೆಯ ಪ್ರತಿ, ಗುರುತಿನ ಚೀಟಿ.
18] ಸಾಮಾನ್ಯ ಸೂಚನೆಗಳು:-
1. ನೈತಿಕ ದುರ್ನಡೆಯಿಂದಾಗಿ/ನೀತಿ ಬಾಹಿರ ಚಟುವಟಿಕೆಗಳಿಂದಾಗಿ ನ್ಯಾಯಾಲಯದಿಂದ ಶಿಕ್ಷೆಗೊಳಪಟ್ಟಿರುವ ವ್ಯಕ್ತಿ ಅಥವಾ ರಾಜ್ಯ/ಕೇಂದ್ರ/ಸ್ಥಳೀಯ ಸಂಸ್ಥೆ ಕಛೇರಿಗಳಲ್ಲಿ ನೈತಿಕ ದುರ್ನಡತೆಯಿಂದಾಗಿ ಅಥವಾ ನೀತಿ ಬಾಹಿರ ಚಟುವಟಿಕೆಗಳಲ್ಲಿ ಒಳಗಾಗಿ ಅಥವಾ ಆಯ್ಕೆಯಾದ ಅಭ್ಯರ್ಥಿಯು ಬದಲಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಾನೂನು ಬಾಹಿರ/ನೀತಿ ಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಸೇವೆಯಿಂದ ತೆಗೆದುಹಾಕಿದ್ದಲ್ಲಿ/ವಜಾ ಮಾಡಲ್ಪಟ್ಟಿದ್ದು ಕಂಡುಬಂದಲ್ಲಿ ನೇಮಕಾತಿಗೆ ಅನರ್ಹರಾಗಿರುತ್ತಾರೆ.
2. ಅರ್ಜಿಯಲ್ಲಿ ತಪ್ಪು/ಸುಳ್ಳು ಮಾಹಿತಿ ನೀಡಿ ಉದ್ಯೋಗ ಪಡೆಯುವ ಅಭ್ಯರ್ಥಿಗಳನ್ನು ಯಾವುದೇ ಸಮಯದಲ್ಲಾದರೂ ವಜಾ ಮಾಡಲಾಗುತ್ತದೆ ಹಾಗೂ ಕ್ರೀಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
3. ಅರ್ಜಿಯಲ್ಲಿ ನೀಡುವ ವಿಳಾಸವೇ ಅಂತಿಮವಾಗಿದ್ದು ಎಲ್ಲಾ ಪತ್ರ ವ್ಯವಹಾರಗಳನ್ನು ಅದೇ ವಿಳಾಸಕ್ಕೆ ಕಳುಹಿಸಿಕೊಡಲಾಗುವುದು. ನಂತರದಲ್ಲಿ ವಿಳಾಸ ಬದಲಾವಣೆ ಬಗ್ಗೆ ಯಾವುದೇ ಪತ್ರ ವ್ಯವಹಾರವನ್ನುಪರಿಗಣಿಸಲಾಗುವುದಿಲ್ಲ
4. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಆನ್ ಲೈನ್ ಮುಖಾಂತರ ವೆಬ್ ಸೈಟ್‌ನಲ್ಲಿ ಲಭ್ಯವಿರುವ ಸೂಚನೆಗಳನ್ನು ಪಾಲಿಸಬೇಕು.
5. ಅಭ್ಯರ್ಥಿಗಳ ಅರ್ಹತೆಯ ವಿಷಯದಲ್ಲಿ ಆಯ್ಕೆ ಪ್ರಾಧಿಕಾರದ ನಿರ್ಧಾರವೇ ಅಂತಿಮವಾಗಿರುತ್ತದೆ.
6. ಅಭ್ಯರ್ಥಿಯ ಹೆಸರು ಅಂತಿಮ ಆಯ್ಕೆ ಪಟ್ಟಿಯಲ್ಲಿ ಬಂದಿದೆ ಎಂಬುದರ ಆಧಾರದ ಮೇಲೆ ಅಭ್ಯರ್ಥಿಗೆ ನೇಮಕಾತಿಯ ಯಾವುದೇ ಹಕ್ಕು ದೊರೆಯುವುದಿಲ್ಲ.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೯, ೨೦೧೭ ೨೦೧೭7. ಆಯ್ಕೆ ಸಂಬಂಧವಾಗಿ ಈ ಕಛೇರಿಯೊಂದಿಗೆ ಯಾವುದೆ ಪತ್ರ ವ್ಯವಹಾರಕ್ಕೆ ಆಸ್ಪದವಿರುವುದಿಲ್ಲ.
8. ಅರ್ಜಿ ತುಂಬುವ ವಿಧಾನ ಹಾಗೂ ಹೆಚ್ಚಿನ ವಿವರಗಳು ಜಿಲ್ಲಾಧಿಕಾರಿಗಳು ಕೊಪ್ಪಳ ಕಛೇರಿಯ ಅಧಿಕೃತ ವೆಬ್ ಸೈಟ್.http://koppal- va.kar.nic.inರಲ್ಲಿನ ಮಾಹಿತಿ ಸೂಚಿಯಲ್ಲಿ ಲಭ್ಯವಿರುತ್ತದೆ ಮತ್ತು ಸ್ಪಷ್ಟೀಕರಣ ಅಗತ್ಯವಿದ್ದಲ್ಲಿ ಸಹಾಯವಾಣಿ ಸಂಖ್ಯೆ: 08539-221690 ರಲ್ಲಿ ಕಛೇರಿ ಕೆಲಸದ ವೇಳೆಯಲ್ಲಿ ಸಂಪರ್ಕಿಸಬಹುದು.
PR-172
ಅಧ್ಯಕ್ಷರು,
SC-100
ಕನಕವಲ್ಲಿ. ಎಂ ಭಾ.ಆ.ಸೇ
ಗ್ರಾಮಲೆಕ್ಕಿಗರ ನೇಮಕಾತಿ ಆಯ್ಕೆ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳು
ಕೊಪ್ಪಳ ಜಿಲ್ಲೆ, ಕೊಪ್ಪಳ
FORM-IV
(See Rule 12)
NOTICE
Dated : 15-09-2017
It is hereby notified that the undersigned has changed his name from BALAPPA PARIS THABAGOND to BALAPPA PARIS HANAMANNAVAR.
PD-C/N-116
BALAPPA PARIS THABAGOND
SC - 10
ನಮೂನೆ 1
(ನಿಯಮ-9)
ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಸವನ ಬಾಗೇವಾಡಿ ಜಿII ವಿಜಯಪುರ
ಅಧಿಸೂಚನೆ ದಿನಾಂಕ: 06-09-2017.
ಶ್ರೀ ಪ್ರಭು. ಖೀರು. ಸಜ್ಜನ ಇವರು ಸಹ ಶಿಕ್ಷಕರಾಗಿ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಸಾಲಿಹಾಳ ತಾII ಬಸವನಬಾಗೇವಾಡಿ ಜಿII ವಿಜಯಪುರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರ ಹೆಸರನ್ನು ಪ್ರಭು. ಖೀರು. ರಾಠೋಡ ಎಂಬುದಾಗಿ ಬದಲಾವಣೆಗೆ ಅನುಮತಿ ನೀಡಲಾಗಿದೆ.
PD-C/N-117
ಕ್ಷೇತ್ರ ಶಿಕ್ಷಣಾಧಿಕಾರಿಗಳು
SC - 10
ಸಾರ್ವಜನಿಕ ಶಿಕ್ಷಣ ಇಲಾಖೆ
ಬಸವನಬಾಗೇವಾಡಿ ಜಿII ವಿಜಯಪುರ
FORM-IV
(See Rule 12)
NOTICE
Dated : 01-09-2017.
It is hereby notified that the undersigned has changed his name from BASAVANNEPPA BASAPPA HARIJAN to BASAVANNEPPA BASAPPA HOSALLI.
PD-C/N-118
BASAVANNEPPA BASAPPA HARIJAN
SC - 10
ನಮೂನೆ 1
(ನಿಯಮ-9)
ಆರಕ್ಷಕ ಅಧೀಕ್ಷಕರವರ ಕಛೇರಿ, ವಿಜಯಪುರ
ಅಧಿಸೂಚನೆ
ದಿನಾಂಕ: 23-09-2017.
ಶ್ರೀ ಈರಣ್ಣ ತಂ: ಶ್ರೀಮಂತ ತಳವಾರ ಇವರು ಸಿಪಿಸಿ-710 ದೇವರಹಿಪ್ಪರಗಿ ಪೊಲೀಸ್ ಠಾಣೆ ವಿಜಯಪುರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರ ಹೆಸರನ್ನು ಈರಣ್ಣ ತಂ: ಶ್ರೀಮಂತ ವಾಲಿಕಾರ ಎಂಬುದಾಗಿ ಬದಲಾವಣೆಗೆ ಅನುಮತಿ ನೀಡಲಾಗಿದೆ.
PD-C/N-119
ಆರಕ್ಷಕ ಅಧೀಕ್ಷಕರು
ವಿಜಯಪುರ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೨೦೧೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೯, ೨೦೧೭ ಭಾಗ ೫FORM-IV
(See Rule 12)
NOTICE
Dated : 17-07-2017.
It is hereby notified that the undersigned has changed her name from Srimathi RESHMA D/O DAWALSAB MULLA to RESHMA W/O MODINSAB FOUJI.
PD-C/N-120
RESHMA DAWALSAB MULLA
SC - 10
FORM - I
(See Rule 9)
OFFICE OF THE COMMANDANT IIND BN K.S.R.P BELAGAVI.
NOTIFICATION
Dated : 15-09-2017.
DHAKOJI DEEPLIA BANDIGUDDA working as POLICE CONSTABLE in the Office of COMMANDANT II BN K.S.R.P BELAGAVI is permitted to change his/her Name to DHAKOJI DEEPLIA PAWAR.
PD C/N-121
DIRECTOR
SC - 10
COMMANDANT IIND BN K.S.R.P BELAGAVI.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.