ಸಂಪುಟ ೧೫೨
Volume 152
ಬೆಂಗಳೂರು, ಗುರುವಾರ, ನವೆಂಬರ್ ೯, ೨೦೧೭ (ಕಾರ್ತೀಕ ೧೮, ಶಕ ವರ್ಷ ೧೯೩೯)
Bengaluru, Thursday, November 9, 2017 (Karthika 18, Shaka Varsha 1939)
ಸಂಚಿಕೆ ೪೪
Issue 44
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
PERSONNEL AND ADMINISTRATIVE REFORMS SECRETARIAT
Sub : Revocation of suspension of Sri. A.C. Keshavamurthy, IFS (KN-88) – modified orders - reg Read : 1. G.O.No. DPAR/151/SFP/2014, dated : 16/09/2014.
2. Order dated : 19/09/2014 in O.A.No. 1133/2014 of Hon'ble CAT.
3. Order dated : 01/10/2014 of Hon'ble CAT in O.A.No.1133 / 2014
4. Hon'ble CAT order dated : 26/03/2015 in O.A.No. 1133 / 2014
5. Hon'ble CAT order dated : 26/03/2015 in O.A. No.1083 / 2014
6. G.O.No. DPAR / 151/SFP/2014, dated: 21/09/2015
Government Order No : DPAR 151 SFP 2014, Bengaluru, Dated : 25/07/2017
Whereas an order placing Sri. A.C. Keshavamurthy, IFS (KN-88) under suspension was issued by Government of Karnataka Vide G.O. dated : 16/09/2014 read at (1) above, pending further investigation by Karnataka Lokayukta Police in case No.16/2014 for alleged possession of disproportionate wealth to the known sources of income and pending initiation of Disciplinary proceedings against him.
Whereas Sri A.C. Keshavamurthy, IFS aggrieved by the suspension order dated : 16/09/2014 filed O.A. No. 1133/2014 before the Hon'ble CAT in which the Hon'ble CAT in its order dated : 19/09/2014 stayed the operation of the suspension order dated : 16/09/2014 for two weeks and further in its order dated : 01/10/2014 extended the stay till the next date of hearing.
Whereas, the Hon'ble CAT in its order dated : 26/03/2015 in O.A. No. 1133/2014 read at (4) above ordered as follows :
" This is a connected matter with O.A. No. 1083/2014. There is a slight difference in this matter. The difference is suspension is not revoked on technical ground. The suspension has not taken effect because of the stay. Therefore, we remit this issue to the Government to decide as fast as possible in terms of decision taken already. In all other sense the order will be the same in both O.A. No. 1083/2014 and O.A. No.1133/2014. Enquiry will be completed within three months next positively.
O.A. is disposed of. No order as to costs".
Whereas, the Hon'ble CAT in its order dated : 26/03/2015 in O.A. No.1083/2014 filed by Sri Hari Kumar Jha, IFS has observed that keeping him out of employment and paying subsistence allowance will drain the Government resources and therefore ordered not to continue suspension.
Whereas, after examining the case in the light of the order passed by Hon'ble CAT in O.A. No. 1133/2014, dated : 26/03/2015 and in O.A. No. 1083/2014, dated 26/03/2015, the Government of Karnataka in exercise of the powers conferred under rule 3(7) ( c) of All India Services (D&A) Rules, 1969, revoked the suspension and reinstated him in to service pending further investigation by Karnataka Lokayukta Police with immediate effect vide order dated : 21/09/2015 read at (6) above.
Whereas, the Government have reexamined the matter in consultation with Law Department in the light of the fact that Sri. A.C. Keshavamurthy, IFS has worked in a post during the period of suspension and that the Hon'ble CAT in its order dated : 26/03/2015 in
(೧೨೨೩)೧೨೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೯, ೨೦೧೭ ಭಾಗ ೧ O.A.No.1133/2014 has ruled that the suspension has not taken effect because of the stay. Therefore, the Government have decided to revoke the suspension and reinstate him into service w.e.f. 16/09/2014, itself.
Now, therefore, in supersession of the Government Order No. DPAR/151/SFP/2014, dated : 21/09/2015 the Government of Karnataka in exercise of the powers conferred under rule 3(7) ( c) of All India Service (D&A) Rules, 1969 hereby revoke the suspension of Sri. A.C. Keshavamurthy, IFS and reinstate him into service w.e.f. 16/09/2014.
By order and in the name of the Governor of Karnataka PR-313
S.K. Nagaveni
Under Secretary to Government
DPAR (Services-V)
ಕಂದಾಯ ಸಚಿವಾಲಯ
ವಿಷಯ: ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕು, ಹಿರೇಎಮ್ಮಿಗನೂರು ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಯಿಂದ ಕೈಬಿಡುವ ಕುರಿತು.
ಓದಲಾಗಿದೆ : 1. ಸರ್ಕಾರದ ಅಧಿಸೂಚನೆ ಸಂಖ್ಯೆ : ಕಂಇ 87 ಮುಆಬಿ 2012 ದಿನಾಂಕ : 29-09-2012.
2. ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ : ಎಡಿಎಂ/5/ಸಿಆರ್/65/2016-17 ದಿ:22-08-2017.
ಪ್ರಸ್ತಾವನೆ :
ಮೇಲೆ (1) ರಲ್ಲಿ ಓದಲಾದ ಸರ್ಕಾರದ ಅಧಿಸೂಚನೆಯಲ್ಲಿ ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕು, ಹಿರೇಎಮ್ಮಿಗನೂರು ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನವನ್ನು ಪುಟ ಸಂಖ್ಯೆ : (263)ರ ಕ್ರಮ ಸಂಖ್ಯೆ: (09) ರಲ್ಲಿ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಲಾಗಿರುತ್ತದೆ.
ಮೇಲೆ (2) ರಲ್ಲಿ ಓದಲಾದ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯಲ್ಲಿ ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕು, ಹಿರೇಎಮ್ಮಿಗನೂರು ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನವನ್ನು ಶ್ರೀ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವರು ಹಾಗೂ ಹಾಲಿ ಶಾಸಕರು, ದಾವಣಗೆರೆ ಜಿಲ್ಲೆ ಇವರು ತಮ್ಮ ಸ್ವಂತ ಖರ್ಚಿನಿಂದ ಅಭಿವೃದ್ಧಿಪಡಿಸಲು ಹಾಗೂ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಇಚ್ಚಿಸಿರುವುದರಿಂದ ಸಾರ್ವಜನಿಕ / ಭಕ್ತಾಧಿಗಳ ಹಿತದೃಷ್ಟಿಯಿಂದ ಸದರಿ ದೇವಾಲಯವನ್ನು ಅಧಿಸೂಚಿತ ದೇವಸ್ಥಾನಗಳ ಪಟ್ಟಿಯಿಂದ ಕೈಬಿಟ್ಟು ಟ್ರಸ್ಟ್ಗೆ ವಹಿಸಿಕೊಡುವಂತೆ ಕೋರಿರುತ್ತಾರೆ. ಅಲ್ಲದೇ, ಮಾನ್ಯ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವರು ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಸಹ ಸದರಿ ದೇವಾಲಯವನ್ನು ಮುಜರಾಯಿ ಇಲಾಖೆಯಿಂದ ಕೈಬಿಡುವಂತೆ ಕೋರಿರುತ್ತಾರೆ.
ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕು, ಹಿರೇಎಮ್ಮಿಗನೂರು ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಡುವ ಕುರಿತು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆಯ ಸೆಕ್ಷನ್ 20 (ಎ)(v) ರನ್ವಯ ಸೂಕ್ತ ನಿರ್ಣಯ ಕೈಗೊಳ್ಳುವ ಸಲುವಾಗಿ ದಿನಾಂಕ : 28-06-2017ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಗೆ ಪ್ರಸ್ತಾವನೆಯನ್ನು ಮಂಡಿಸಲಾಗಿತ್ತು. ಸದರಿ ಸಭೆಯಲ್ಲಿ ಈ ವಿಷಯದ ಕುರಿತು ಸವಿವರವಾಗಿ ಚರ್ಚಿಸಿ ಸದರಿ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಲು ತೀರ್ಮಾನಿಸಲಾಗಿರುತ್ತದೆ.
ಆದುದರಿಂದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭಾ ನಿರ್ಣಯದಂತೆ, ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕು, ಹಿರೇಎಮ್ಮಿಗನೂರು ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವಂತೆ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರು ಕೋರಿರುತ್ತಾರೆ.
ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ : ಕಂಇ 38 ಮುಆಬಿ 2017. ಬೆಂಗಳೂರು, ದಿನಾಂಕ : 20ನೇ ಸೆಪ್ಟೆಂಬರ್, 2017
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ದಿನಾಂಕ : 28-06-2017 ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯ ನಿರ್ಣಯದಂತೆ ಸರ್ಕಾರದ ಅಧಿಸೂಚನೆ ಸಂಖ್ಯೆ : ಕಂಇ 87 ಮುಆಬಿ 2012, ದಿನಾಂಕ : 29-09-2012 ರ ಪುಟ ಸಂಖ್ಯೆ : 263 ಕ್ರ.ಸಂ. 09 ರಲ್ಲಿನ ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕು, ಹಿರೇಎಮ್ಮಿಗನೂರು ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಿ ಆದೇಶಿಸಿದೆ.
PR-318
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಬಿ.ಎಸ್.ನಾಗರತ್ನಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ. (ಭೂ ಸುಧಾರಣೆ)
ಕಂದಾಯ ಸಚಿವಾಲಯ
ವಿಷಯ: ಚಾರ್ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಿಕರಿಗೆ ಸರ್ಕಾರದ ವತಿಯಿಂದ ಧನ ಸಹಾಯ ನೀಡುವ ಕುರಿತು ಮಾರ್ಗಸೂಚಿ.
ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ : ಕಂಇ 179 ಮುಅಬಿ 2014 ದಿನಾಂಕ : 07-11-2014 2. ಸರ್ಕಾರದ ಆದೇಶ ಸಂಖ್ಯೆ : ಕಂಇ 91 ಮುಅಬಿ 2016 ದಿನಾಂಕ : 25-10-2016 3. ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ: ಎಡಿಎಂ 13 ಸಿಆರ್ 2 / 2016-17 ದಿನಾಂಕ : 17-04-2017ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೯, ೨೦೧೭ ೧೨೨೫
ಪ್ರಸ್ತಾವನೆ :
ಮೇಲೆ (1) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ 2014-15ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ಚಾರ್ಧಾಮ್ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಧನ ಸಹಾಯ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿತ್ತು ಹಾಗೂ ಸದರಿ ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಸಹ ಹೊರಡಿಸಲಾಗಿತ್ತು.
ಮೇಲೆ (2) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಈ ಹಿಂದೆ ಹೊರಡಿಸಲಾಗಿದ್ದ ಮೇಲೆ ಓದಲಾದ (1)ರ ಆದೇಶದಲ್ಲಿನ ಮಾರ್ಗಸೂಚಿಯನ್ನು ಹಿಂಪಡೆದು ಪರಿಷ್ಕøತ ಮಾರ್ಗಸೂಚಿಯನ್ನು ಹೊರಡಿಸಲಾಗಿತ್ತು.
ಮೇಲೆ (3) ರಲ್ಲಿ ಓದಲಾದ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರದಲ್ಲಿ ಚಾರ್ಧಾಮ್ ಯೋಜನೆಯಡಿ ಹಿಂದಿನ ಸಾಲಿನ ಆಯವ್ಯಯದಲ್ಲಿ ಮಂಜೂರಾಗಿರುವ ಅನುದಾನಕ್ಕಿಂತ ಹೆಚ್ಚಿನ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಎಲ್ಲಾ ಅರ್ಜಿಗಳಿಗೆ ಅನುದಾನ ಪಾವತಿಸಲು ಅನುದಾನದ ಕೊರತೆ ಇರುತ್ತದೆ. ಆದುದರಿಂದ 2016-17ನೇ ಸಾಲಿನ ಬಾಕಿಯಿರುವ ಅರ್ಜಿಗಳಿಗೆ ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಲು ಮತ್ತು 2017- 18ನೇ ಸಾಲಿನ ಆಯವ್ಯಯದಲ್ಲಿ ಮಂಜೂರಾಗಿರುವ ಅನುದಾನಕ್ಕನುಗುಣವಾಗಿ ಫಲಾನುಭವಿಗಳಿಗೆ ಧನಸಹಾಯವನ್ನು ಪಾವತಿಸಲು ಈ ಹಿಂದಿನ ಮಾರ್ಗಸೂಚಿಗಳ ಜೊತೆಗೆ ಕೆಲವೊಂದು ಅಂಶಗಳನ್ನು ಸೇರಿಸಿ ಸರ್ಕಾರದ ಆದೇಶ ಹೊರಡಿಸುವಂತೆ ಕೋರಿರುತ್ತಾರೆ. ಅದರಂತೆ ಆಯುಕ್ತರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ : ಕಂಇ 70 ಮುಅಬಿ 2017, ಬೆಂಗಳೂರು, ದಿನಾಂಕ : 20ನೇ ಸೆಪ್ಟೆಂಬರ್, 2017
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಈ ಹಿಂದೆ ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ : ಕಂಇ 91 ಮುಅಬಿ 2016 ದಿನಾಂಕ : 25-10-2016 ರ ಮಾರ್ಗಸೂಚಿಯನ್ನು ಹಿಂಪಡೆದು 2017-18ನೇ ಸಾಲಿಗೆ ಅನ್ವಯವಾಗುವಂತೆ ಪರಿಷ್ಕøತ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಪರಿಷ್ಕøತ ಮಾರ್ಗಸೂಚಿಯನ್ನು ಅನುಬಂಧದಲ್ಲಿ ಲಗತ್ತಿಸಿದೆ.
ಈ ಮಾರ್ಗಸೂಚಿಗಳನ್ನು ಚಾರ್ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಧನಸಹಾಯ ನೀಡುವ ಅನುಷ್ಠಾನಕ್ಕಾಗಿ ಅನುಸರಿಸುವಂತೆ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಬಿ.ಎಸ್.ನಾಗರತ್ನಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ (ಮುಜರಾಯಿ) ಸರ್ಕಾರಿ ಆದೇಶ ಸಂಖ್ಯೆ: ಕಂಇ 70 ಮುಅಬಿ 2017, ಬೆಂಗಳೂರು,
ದಿನಾಂಕ : 20 ನೇ ಸೆಪ್ಟೆಂಬರ್, 2017ರ
ಮಾರ್ಗಸೂಚಿ
ಅನುಬಂಧ
ಕರ್ನಾಟಕ ರಾಜ್ಯದ ವತಿಯಿಂದ ಚಾರ್ಧಾಮ್ (ಬದರಿನಾಥ್, ಕೇದಾರನಾಥ್, ಗಂಗೋತ್ರಿ ಮತ್ತು ಯಮುನೋತ್ರಿ) ಯಾತ್ರೆಯನ್ನು ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಧನ ಸಹಾಯ ನೀಡುವ ದೃಷ್ಟಿಯಿಂದ ಈ ಯೋಜನೆಯನ್ನು ರೂಪಿಸಲಾಗಿದೆ.
1. ಕರ್ನಾಟಕದಿಂದ ಚಾರ್ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಿಕರಿಗೆ ಗರಿಷ್ಠ ` 20,000 ದಂತೆ ಧನ ಸಹಾಯವನ್ನು ನೀಡಲಾಗುವುದು. 2. ಚಾರ್ಧಾಮ್ ಯಾತ್ರಾರ್ಥಿಗಳು ನಾಲ್ಕು ಪುಣ್ಯ ಕ್ಷೇತ್ರಗಳ (ಬದರಿನಾಥ್, ಕೇಧಾರನಾಥ್, ಗಂಗೋತ್ರಿ ಮತ್ತು ಯಮುನೋತ್ರಿ) ದರ್ಶನವನ್ನು ಪೂರೈಸಿರುವ ಬಗ್ಗೆ ಉತ್ತರಖಂಡ ಪ್ರವಾಸೋಧ್ಯಮ ಮಂಡಳಿ ನೀಡುವ (Tourist / Pilgrim Registration & Tracking Access card) ಪಿಲಿಗ್ರೀಮ್ ಕಾರ್ಡ್ನ್ನು ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು.
3. ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಈ ಧನ ಸಹಾಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. 4. ಯಾತ್ರಾರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರುವ ಬಗ್ಗೆ ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸಬೇಕು.
iii) ಯಾತ್ರಾರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರುವ ಬಗ್ಗೆ "ಆಧಾರ್ ಗುರುತಿನ ಚೀಟಿ" ಯೊಂದಿಗೆ ಮಾಹಿತಿಯನ್ನು ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು;
iv) ಎರಡು ಭಾವ ಚಿತ್ರ.
| ಕ್ರ. ಸ ಂ. | ಕ್ಷೇತ್ರ | ದ ರ್ಶನ ಪ್ರಾರಂಭವಾಗುವ ದಿನಾಂಕ | ವ ುುಕ್ತಾಯವಾಗುವ ದಿನಾಂಕ |
| 1 | ಯಮುನೋತ್ರಿ | ಅಕ್ಷಯ ತೃತೀಯ 29-04-2017 | ಯಮದ್ವಿತೀಯ 20-10-2017 |
| 2 | ಗಂಗೋತ್ರಿ | ಅಕ್ಷಯ ತೃತೀಯ 29-04-2017 | ದೀಪಾವಳಿ 20-10-2017 |
| 3 | ಕೇದಾರನಾಥ | ವ ುಹಾಶಿವರಾತ್ರಿ 24-02-2017 | ಬಲಿಪಾಡ್ಯಮಿ (ಯಮದ್ವಿತಿಯ) 21-10-2017 |
| 4 | ಬದರಿನಾಥ್ | ವ ಸ ಂತ ಪಂಚಮಿ 01-02-2017 | ವಿಜಯದಶಮಿ 30-09-2017 |
6. ಈ ಸಾಲಿನ ಯಾತ್ರೆಯು ದಿನಾಂಕ : 01-02-2017 ರಿಂದ ಪ್ರಾರಂಭವಾಗಿ ದಿನಾಂಕ : 21-10-2017 ರಂದು ಅಂತಿಮ ಚರಣದ ಯಾತ್ರೆಯು ಮುಕ್ತಾಯಗೊಳ್ಳಲಿದ್ದು, ದಿ:21-11-2017ರ ಅವಧಿಯೊಳಗಾಗಿ ಎಲ್ಲಾ ಅಗತ್ಯ ದಾಖಲೆಗಳನ್ನು ಆನ್ಲೈನ್/ ಮುದ್ದಾಂ ಮೂಲಕ ಸಲ್ಲಿಸತಕ್ಕದ್ದು. ನಂತರ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
7. ಕರ್ನಾಟಕ ರಾಜ್ಯದಿಂದ 4 ಪುಣ್ಯ ಕ್ಷೇತ್ರಗಳ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಆರ್ಥಿಕ ವರ್ಷದ ಮೊದಲ ದಿನಕ್ಕೆ ಅನ್ವಯಿಸುವಂತೆ (ದಿನಾಂಕ: 01-04-2017) 45 ವರ್ಷಗಳ ಮೇಲ್ಪಟ್ಟವರಾಗಿರತಕ್ಕದ್ದು. 45 ವರ್ಷ ವಯಸ್ಸಿನ ಕೆಳಗಿನವರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. 45 ವರ್ಷ ಮೇಲ್ಪಟ್ಟ ಅರ್ಜಿದಾರರು ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಹಾಜರುಪಡಿಸುವುದು.
8. ಯಾತ್ರಾರ್ಥಿಗಳು ಸಹಾಯ ಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ ಅದೇ ವ್ಯಕ್ತಿಗೆ ಎರಡನೇ ಬಾರಿ ಅನುದಾನ ನೀಡಲು ಪರಿಗಣಿಸಲಾಗುವುದಿಲ್ಲ. ಈ ಬಗ್ಗೆ ಯಾತ್ರಾರ್ಥಿಗಳು ` 20/- ಗಳ ಛಾಪಕಾಗದದಲ್ಲಿ ಈ ಹಿಂದೆ ಸಹಾಯಧನವನ್ನು ಪಡೆದಿಲ್ಲವೆಂದು ದೃಡೀಕರಣ ನೀಡತಕ್ಕದ್ದು.
9. ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಎಲ್ಲಾ ಅರ್ಹ ಅರ್ಜಿದಾರರ ಹೆಸರುಗಳನ್ನು ಲಾಟರಿ ಮುಖಾಂತರ ಅನುದಾನಕ್ಕೆ ಅನುಗುಣವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಸಹಾಯಧನವನ್ನು ಆರ್.ಟಿ.ಜಿ.ಎಸ್., ಮೂಲಕ ನೀಡಲಾಗುವುದು. ಸದರಿ ಲಾಟರಿಯನ್ನು ರಾಜ್ಯ ಧಾರ್ಮಿಕ ಪರಿಷತ್ನ ನ್ಯಾಯಿಕ ಸದಸ್ಯರು, ಕೇಂದ್ರ ಸ್ಥಾನಿಕ ಸಹಾಯಕರು ಹಾಗೂ ಪ್ರವರ್ಗ 'ಎ' ದೇವಾಲಯದ ಮೂರು ಜನ ಕಾರ್ಯನಿರ್ವಾಹಕ ಅಧಿಕಾರಿಗಳನ್ನೊಳಗೊಂಡ 05 ಜನ ಸದಸ್ಯರ ಸಮಿತಿಯ ಸಮಕ್ಷಮದಲ್ಲಿ ಪೂರ್ಣವಾಗಿ ವೀಡಿಯೋ ಚಿತ್ರೀಕರಣದೊಂದಿಗೆ ಮಾಡುವುದು.
10. ಕರ್ನಾಟಕ ರಾಜ್ಯದಲ್ಲಿರುವ ಕೇಂದ್ರ / ರಾಜ್ಯ ಸರ್ಕಾರಿ ನೌಕರರು ಸಹ ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. 11. ಚಾರ್ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಒಟ್ಟಾರೆ ಯೋಜನೆಯ ಬಗ್ಗೆ ಪ್ರಕಟಣೆ ನೀಡಿ ನಿರ್ದಿಷ್ಟ ಸಂಖ್ಯೆಯ ಫಲಾನುಭವಿಗಳಿಗೆ ಮಾತ್ರ ಸಹಾಯ ಧನ ನೀಡುವ ಬಗ್ಗೆ ಸಾರ್ವಜನಿಕರಿಗೆ ಸೂಚನೆ ನೀಡಿ, ಅರ್ಜಿಗಳನ್ನು ಆಹ್ವಾನಿಸಿ ಅನುದಾನದ ಲಭ್ಯತೆಯ ಮೇರೆಗೆ ಮಾತ್ರ ಧನಸಹಾಯ ನೀಡತಕ್ಕದ್ದು.
PR-319
ಬಿ.ಎಸ್.ನಾಗರತ್ನಮ್ಮ
SC-25
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ. (ಮುಜರಾಯಿ)
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ವಿಷಯ : ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರು ಹಾಗೂ ನಿವೃತ್ತ
ನ್ಯಾಯಾಧೀಶರುಗಳಿಗೆ ದೂರವಾಣಿ ಸೌಲಭ್ಯವನ್ನು ಒದಗಿಸುವ ಬಗ್ಗೆ.
ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 84 ಎಸ್ಹೆಚ್ಸಿ 2004, ದಿನಾಂಕ: 15-10-2004. 2. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 84 ಎಸ್ಹೆಚ್ಸಿ 2004, ದಿನಾಂಕ: 22-09-2006. 3. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 18 ಸೇಉನ್ಯಾ 2011(ಭಾ), ದಿನಾಂಕ: 25-06-2011. 4. ತಿದ್ದುಪಡಿ ಆದೇಶ ಸಂಖ್ಯೆ: ಸಿಆಸುಇ 18 ಸೇಉನ್ಯಾ 2011, ದಿನಾಂಕ: 23-07-2011. 5. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 31 ಸೇಉನ್ಯಾ 2011, ದಿನಾಂಕ: 21-03-2012. 6. ಸೇರ್ಪಡೆ ಆದೇಶ ಸಂಖ್ಯೆ: ಸಿಆಸುಇ 59 ಸೇಉನ್ಯಾ 2012, ದಿನಾಂಕ: 16-11-2012. 7. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 43 ಸೇಉನ್ಯಾ 2013, ದಿನಾಂಕ: 21-06-2013. 8. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 16 ಸೇಉನ್ಯಾ 2015, ದಿನಾಂಕ: 18-11-2016. 9. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 16 ಸೇಉನ್ಯಾ 2015, ದಿನಾಂಕ: 18-01-2017. 10. ತಿದ್ದುಪಡಿ ಆದೇಶ ಸಂಖ್ಯೆ: ಸಿಆಸುಇ 57 ಸೇಉನ್ಯಾ 2016, ದಿನಾಂಕ: 27-06-2017.
11. ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು, ಇವರ ಪತ್ರ ಸಂಖ್ಯೆ: ಹೆಚ್ಸಿಎ-1/60/2015-16, ದಿನಾಂಕ: 01-08-2017.
ಪ್ರಸ್ತಾವನೆ:
ಮೇಲೆ ಕ್ರಮ ಸಂಖ್ಯೆ (1)ರಲ್ಲಿ ಓದಲಾದ, ದಿನಾಂಕ: 15-10-2004ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನಿವೃತ್ತಿ ಹೊಂದಿದ ಹಾಗೂ ದೇಶದ ಯಾವುದೇ ಭಾಗದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ಕ್ರಮವಾಗಿ ಮಾಸಿಕ `.3,000/-ಗಳು ಹಾಗೂ `.2,500/-ಗಳ ಗೃಹ ಪರಿಚಾರಕ ಭತ್ಯೆಯನ್ನು, ಮಾಸಿಕ `..1,500/- ಹಾಗೂ `.1,000/-ಗಳ ದೂರವಾಣಿ ಭತ್ಯೆಯನ್ನು ಹಾಗೂ ವಾರ್ಷಿಕ `.15,000/- ಹಾಗೂ `.10,000/-ಗಳ ವೈದ್ಯಕೀಯ ವೆಚ್ಚವನ್ನು ಷರತ್ತುಗಳೊಂದಿಗೆ ಮಂಜೂರು ಮಾಡಿ ಆದೇಶಿಸಲಾಗಿದೆ.
ಈ ಸೌಲಭ್ಯಗಳನ್ನು ಮೇಲೆ ಕ್ರಮ ಸಂಖ್ಯೆ (2)ರಲ್ಲಿ ಓದಲಾದ, ದಿನಾಂಕ: 22-09-2006ರ ಸರ್ಕಾರದ ಆದೇಶದಲ್ಲಿ, ಮೂಲತಃ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನೇಮಕಗೊಂಡು, ನಂತರ ಇತರ ಉಚ್ಛ ನ್ಯಾಯಾಲಯಗಳಿಗೆ ವರ್ಗಾಯಿಸಲಾಗಿರುವ ಹಾಗೂ ಇತರ ಉಚ್ಛ ನ್ಯಾಯಾಲಯಗಳಲ್ಲಿ ನಿವೃತ್ತಿ ಹೊಂದಿರುವ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳಿಗೂ ಸಹ ಷರತ್ತುಗಳೊಂದಿಗೆ ವಿಸ್ತರಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (3)ರಲ್ಲಿ ಓದಲಾದ, ದಿನಾಂಕ: 25-06-2011ರ ಸರ್ಕಾರದ ಆದೇಶದಲ್ಲಿ, ಕರ್ನಾಟಕ ಉಚ್ಛ ನ್ಯಾಯಾಲಯದಿಂದ ನಿವೃತ್ತಿಗೊಂಡು ಭಾರತದ ಯಾವುದೇ ಭಾಗದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳಿಗೆ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರುಗಳಿಗೆ ಕಲ್ಪಿಸಲಾಗಿರುವ ವೈದ್ಯಕೀಯ ಸೌಲಭ್ಯವನ್ನು ಷರತ್ತುಗಳೊಂದಿಗೆ ವಿಸ್ತರಿಸಿ ಆದೇಶಿಸಲಾಗಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೯, ೨೦೧೭ ೧೨೨೭ಮೇಲೆ ಕ್ರಮ ಸಂಖ್ಯೆ (4)ರಲ್ಲಿ ಓದಲಾದ, ದಿನಾಂಕ: 23-07-2011ರ ಸರ್ಕಾರದ ತಿದ್ದುಪಡಿ ಆದೇಶದಲ್ಲಿ, ದಿನಾಂಕ: 25-06-2011ರ ಸರ್ಕಾರದ ಆದೇಶದಲ್ಲಿ ವಿಧಿಸಲಾಗಿದ್ದ (ಸಿ) ಷರತ್ತಿನಲ್ಲಿ "Arbitrator" ಎಂಬ ಪದವನ್ನು ಬಿಟ್ಟು ತಿದ್ದುಪಡಿ ಆದೇಶವನ್ನು ಹೊರಡಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (5)ರಲ್ಲಿ ಓದಲಾದ, ದಿನಾಂಕ: 21-03-2012ರ ಸರ್ಕಾರದ ಆದೇಶದಲ್ಲಿ, ಮೂಲತಃ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನೇಮಕಗೊಂಡು, ನಂತರ ಇತರ ಉಚ್ಛ ನ್ಯಾಯಾಲಯಗಳಿಗೆ ವರ್ಗಾಯಿಸಲಾಗಿರುವ ಹಾಗೂ ಇತರ ಉಚ್ಛ ನ್ಯಾಯಾಲಯಗಳಲ್ಲಿ ನಿವೃತ್ತಿ ಹೊಂದಿರುವ ಹಾಗೂ ಕರ್ನಾಟಕದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳಿಗೂ ಸಹ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರುಗಳಿಗೆ ಕಲ್ಪಿಸಲಾಗಿರುವ ವೈದ್ಯಕೀಯ ಸೌಲಭ್ಯವನ್ನು ಷರತ್ತುಗಳೊಂದಿಗೆ ವಿಸ್ತರಿಸಿ ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (6)ರಲ್ಲಿ ಓದಲಾದ, ದಿನಾಂಕ: 16-11-2012ರ ಸರ್ಕಾರದ ಸೇರ್ಪಡೆ ಆದೇಶದಲ್ಲಿ, ದಿನಾಂಕ: 21-03-2012ರ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 31 ಸೇಉನ್ಯಾ 2011ರಲ್ಲಿ ವಿಧಿಸಲಾಗಿದ್ದ (ಬಿ) ಮತ್ತು (ಸಿ) ಷರತ್ತುಗಳನ್ನು ಮಾರ್ಪಡಿಸಿ ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (7)ರಲ್ಲಿ ಓದಲಾದ, ದಿನಾಂಕ: 21-06-2013ರ ಸರ್ಕಾರದ ತಿದ್ದುಪಡಿ ಆದೇಶದಲ್ಲಿ, ದಿನಾಂಕ: 16-11-2012ರ ಸೇರ್ಪಡೆ ಆದೇಶದಲ್ಲಿ ಮಾರ್ಪಡಿಸಲಾಗಿದ್ದ ದಿನಾಂಕ: 21-03-2012ರ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 31 ಸೇಉನ್ಯಾ 2011ರ ಆದೇಶದ (ಬಿ) ಷರತ್ತಿನ ಮಾರ್ಪಾಡನ್ನು ಹಿಂಪಡೆಯಲಾಗಿದೆ.
ಜಸ್ಟೀಸ್ ಕೆದಂಬಾಡಿ ಜಗನ್ನಾಥಶೆಟ್ಟಿ ಹಾಗೂ ಇತರರು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾಖಲಿಸಿದ್ದ ರಿಟ್ ಅರ್ಜಿ ಸಂಖ್ಯೆ: 1944- 45/2015(S-R) ರಲ್ಲಿ ಮಾನ್ಯ ನ್ಯಾಯಾಲಯವು ದಿನಾಂಕ: 07-01-2015ರಂದು ನೀಡಿದ ಮಧ್ಯಂತರ ಆದೇಶದನ್ವಯ, ಮೇಲೆ ಕ್ರಮ ಸಂಖ್ಯೆ (8)ರಲ್ಲಿ ಓದಲಾದ, ದಿನಾಂಕ: 18-11-2016ರ ಸರ್ಕಾರದ ಆದೇಶದಲ್ಲಿ, ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರುಗಳಿಗೆ ನೀಡಲಾಗುತ್ತಿದ್ದ ದೂರವಾಣಿ ಭತ್ಯೆಯನ್ನು ಮಾಸಿಕ `.1,000/-ಗಳಿಂದ `.1,500/-ಗಳಿಗೆ ದಿನಾಂಕ: 01-10-2014ರಿಂದ ಜಾರಿಗೆ ಬರುವಂತೆ ಹೆಚ್ಚಿಸಿ ಮಂಜೂರು ಮಾಡಿ ಆದೇಶಿಸಲಾಗಿದೆ.
ಜಸ್ಟೀಸ್ ಕೆದಂಬಾಡಿ ಜಗನ್ನಾಥಶೆಟ್ಟಿ ಹಾಗೂ ಇತರರು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾಖಲಿಸಿದ್ದ ರಿಟ್ ಅರ್ಜಿ ಸಂಖ್ಯೆ: 1944-45/2015(S-R) ರಲ್ಲಿ ಮಾನ್ಯ ನ್ಯಾಯಾಲಯವು ದಿನಾಂಕ: 10-01-2017ರಂದು ನೀಡಿದ ಸೂಚನೆಯನ್ವಯ ಶ್ರೀ ಪಿ. ರಾಮಕೃಷ್ಣಮ್ ರಾಜು, ಇವರ ಪ್ರಕರಣದ ತೀರ್ಪಿನಲ್ಲಿ ಆದೇಶಿಸಿರುವಂತೆ ಆಂಧ್ರಪ್ರದೇಶದ ಮಾದರಿಯಲ್ಲಿ ಮೇಲೆ ಕ್ರಮ ಸಂಖ್ಯೆ (9)ರಲ್ಲಿ ಓದಲಾದ, ದಿನಾಂಕ: 18-01-2017ರ ಸರ್ಕಾರದ ಆದೇಶದಲ್ಲಿ, ದಿನಾಂಕ: 15-10-2004ರ ಆದೇಶವನ್ನು ಭಾಗಶಃ ಮಾರ್ಪಡಿಸಿ ಹಾಗೂ ದಿನಾಂಕ: 18-11-2016ರ ಆದೇಶವನ್ನು ಹಿಂಪಡೆದು, ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರು ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ನೀಡಲಾಗುತ್ತಿದ್ದ `.1,500/-ಗಳ ದೂರವಾಣಿ ಭತ್ಯೆಯ ಬದಲಾಗಿ, ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರು ಹಾಗೂ ನಿವೃತ್ತ ನ್ಯಾಯಾಧೀಶರುಗಳ ನಿವಾಸಗಳಿಗೆ ಉಚಿತ ದೂರವಾಣಿಯೊಂದಿಗೆ ದೂರವಾಣಿ ಪ್ರಾಧಿಕಾರವು ಒದಗಿಸಿರುವ ಉಚಿತ ದೂರವಾಣಿ ಕರೆಗಳ ನಂತರ 1500 ಉಚಿತ ಕರೆಗಳ ಸೌಲಭ್ಯವನ್ನು ದಿನಾಂಕ: 01-10-2014ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಿ ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (10)ರಲ್ಲಿ ಓದಲಾದ, ದಿನಾಂಕ: 27-06-2017ರ ಸರ್ಕಾರದ ತಿದ್ದುಪಡಿ ಆದೇಶದಲ್ಲಿ, ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 18 ಸೇಉನ್ಯಾ 2011(ಭಾ), ದಿನಾಂಕ: 25-06-2011ರಲ್ಲಿನ (ಸಿ) ಷರತ್ತನ್ನು ತಿದ್ದುಪಡಿ ಮಾಡಿ ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (11)ರಲ್ಲಿ ಓದಲಾದ, ದಿನಾಂಕ: 01-08-2017ರ ಪತ್ರದಲ್ಲಿ ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು, ಇವರು ಆದೇಶಗಳಲ್ಲಿ ವಿಧಿಸಲಾಗಿರುವ (ಬಿ) ಮತ್ತು (ಸಿ) ಷರತ್ತುಗಳನ್ನು ಸಂಪೂರ್ಣವಾಗಿ ಕೈಬಿಡುವ ಬಗ್ಗೆ ಕ್ರಮಕೈಗೊಳ್ಳಬೇಕೆಂದು ದಿನಾಂಕ: 29-06-2017ರಂದು ನಡೆದ ಮುಖ್ಯ ನ್ಯಾಯಾಧೀಶರ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯಗಳ ಜಾರಿ ಬಗ್ಗೆ ನಿಗಾ ವಹಿಸಲು ರಚಿಸಲಾದ ಸಮಿತಿಯ ಸಭೆಯಲ್ಲಿ ತೀರ್ಮಾನವಾದ ಹಿನ್ನೆಲೆಯಲ್ಲಿ, ಅದರಂತೆ ಕ್ರಮ ಕೈಗೊಳ್ಳಬೇಕೆಂದು ಕೋರಿರುತ್ತಾರೆ.
ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು, ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನಿವೃತ್ತಿ ಹೊಂದಿದ ಹಾಗೂ ದೇಶದ ಯಾವುದೇ ಭಾಗದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ಹಾಗೂ ಮೂಲತಃ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನೇಮಕಗೊಂಡು, ನಂತರ ಇತರ ಉಚ್ಛ ನ್ಯಾಯಾಲಯಗಳಿಗೆ ವರ್ಗಾವಣೆಗೊಂಡು ನಿವೃತ್ತಿ ಹೊಂದಿರುವ, ಆದರೆ, ಕರ್ನಾಟಕದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳಿಗೆ ಸೌಲಭ್ಯಗಳನ್ನು ಮಂಜೂರು ಮಾಡಲು ವಿಧಿಸಲಾಗಿರುವ (ಬಿ) ಮತ್ತು (ಸಿ) ಷರತ್ತುಗಳನ್ನು ಕೈಬಿಡಲು ತೀರ್ಮಾನಿಸಿದ ಸರ್ಕಾರವು, ಮೇಲ್ಕಂಡ ಬೇರೆ ಬೇರೆ ಆದೇಶಗಳಲ್ಲಿ ವೈದ್ಯಕೀಯ ಸೌಲಭ್ಯ, ದೂರವಾಣಿ ಭತ್ಯೆ ಹಾಗೂ ಗೃಹ ಪರಿಚಾರಕರ ಭತ್ಯೆಗಳನ್ನು ಮಂಜೂರು ಮಾಡಿರುವುದರಿಂದ, ಗೊಂದಲ ಉಂಟಾಗುತ್ತಿರುವುದರಿಂದ ದೂರವಾಣಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಈ ಎಲ್ಲಾ ಆದೇಶಗಳನ್ನು ಒಟ್ಟುಗೂಡಿಸಿ, ಒಂದೇ ಆದೇಶವನ್ನು ಹೊರಡಿಸಲು ತೀರ್ಮಾನಿಸಿ ಕೆಳಕಂಡಂತೆ ಆದೇಶವನ್ನು ಹೊರಡಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 57 ಸೇಉನ್ಯಾ 2016, ಬೆಂಗಳೂರು, ದಿನಾಂಕ: 15-09-2017.
ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನಿವೃತ್ತಿ ಹೊಂದಿದ ಹಾಗೂ ದೇಶದ ಯಾವುದೇ ಭಾಗದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಾಧೀಶರುಗಳಿಗೆ ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ಹಾಗೂ ಮೂಲತಃ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನೇಮಕಗೊಂಡು, ನಂತರ ಇತರ ಉಚ್ಛ ನ್ಯಾಯಾಲಯಗಳಿಗೆ ವರ್ಗಾವಣೆಗೊಂಡು ನಿವೃತ್ತಿ ಹೊಂದಿರುವ, ಆದರೆ, ಕರ್ನಾಟಕದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳ ನಿವಾಸಗಳಿಗೆ ಉಚಿತ ದೂರವಾಣಿಯೊಂದಿಗೆ ದೂರವಾಣಿ ಪ್ರಾಧಿಕಾರವು ಒದಗಿಸಿರುವ ಉಚಿತ ದೂರವಾಣಿ ಕರೆಗಳ ನಂತರ 1500 ಉಚಿತ ಕರೆಗಳ ಸೌಲಭ್ಯವನ್ನು ಮಂಜೂರು ಮಾಡಿ ಆದೇಶಿಸಲಾಗಿದೆ.
ಈ ದೂರವಾಣಿ ಸೌಲಭ್ಯವನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರು ಹಾಗೂ ನಿವೃತ್ತ ನ್ಯಾಯಾಧೀಶರುಗಳ ನಿವಾಸಗಳ ಸ್ಥಿರ ದೂರವಾಣಿ ಅಥವಾ ಮೊಬೈಲ್ ಎರಡರಲ್ಲಿ ಒಂದರ ದರ ಪಡೆಯಬಹುದಾಗಿರುತ್ತದೆ.
೧೨೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೯, ೨೦೧೭ ಭಾಗ ೧ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರು ಹಾಗೂ ನಿವೃತ್ತ ನ್ಯಾಯಾಧೀಶರುಗಳು ನಿವಾಸಗಳ ಸ್ಥಿರ ದೂರವಾಣಿಗೆ ಮರುಪಾವತಿಯನ್ನು ಪಡೆದಲ್ಲಿ, ನಿವಾಸಗಳ ಸ್ಥಿರ ದೂರವಾಣಿಗೆ ದೂರವಾಣಿ ಪ್ರಾಧಿಕಾರವು ಒದಗಿಸಿರುವ ಉಚಿತ ದೂರವಾಣಿ ಕರೆಗಳ ನಂತರ 1500 ಕರೆಗಳ ಮಿತಿಯು ಅನ್ವಯವಾಗುತ್ತದೆ. ಒಂದು ವೇಳೆ ಸ್ಥಿರ ದೂರವಾಣಿಗೆ ಬದಲಾಗಿ ಮೊಬೈಲ್ನ ಮಾಸಿಕ ಬಿಲ್ಲಿಗೆ ಮರುಪಾವತಿ ಪಡೆಯುವುದಾದಲ್ಲಿ ಮರುಪಾವತಿಯ ಮಿತಿಯು `.1,500/-ಗಳಿಗೆ ಸೀಮಿತಗೊಳ್ಳುತ್ತದೆ.
ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು, ಇವರು ಈ ವೆಚ್ಚವನ್ನು ಸೆಳೆಯುವ ಮತ್ತು ಪಾವತಿಸುವ ಪ್ರಾಧಿಕಾರವಾಗಿರುತ್ತಾರೆ.
ಈ ವೆಚ್ಚವನ್ನು "2014-00-102-0-01 ಉಚ್ಛ ನ್ಯಾಯಾಲಯದ ನ್ಯಾಯಾಧೀಶರು" ಲೆಕ್ಕಶೀರ್ಷಿಕೆಯಲ್ಲಿ ಭರಿಸತಕ್ಕದ್ದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 704 ಸೇ-1/2017, ದಿನಾಂಕ: 11-08-2017ರ ಸಹಮತಿಯನ್ವಯ ಹೊರಡಿಸಲಾಗಿದೆ.
PR-320
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-200
ಚಂದ್ರಹಾಸ ಗಂ.ತಾಳೂಕರ
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-6).
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ವಿಷಯ : ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರು ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ಹಾಗೂ ಮರಣ ಹೊಂದಿರುವ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳ ಪತಿ/ಪತ್ನಿಯರಿಗೆೆ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ ಬಗ್ಗೆ.
ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 84 ಎಸ್ಹೆಚ್ಸಿ 2004, ದಿನಾಂಕ: 15-10-2004. 2. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 84 ಎಸ್ಹೆಚ್ಸಿ 2004, ದಿನಾಂಕ: 22-09-2006. 3. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 40 ಸೇಉನ್ಯಾ 2010, ದಿನಾಂಕ: 20-11-2010. 4. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 18 ಸೇಉನ್ಯಾ 2011(ಭಾ), ದಿನಾಂಕ: 25-06-2011. 5. ತಿದ್ದುಪಡಿ ಆದೇಶ ಸಂಖ್ಯೆ: ಸಿಆಸುಇ 18 ಸೇಉನ್ಯಾ 2011, ದಿನಾಂಕ: 23-07-2011. 6. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 31 ಸೇಉನ್ಯಾ 2011, ದಿನಾಂಕ: 21-03-2012. 7. ಸೇರ್ಪಡೆ ಆದೇಶ ಸಂಖ್ಯೆ: ಸಿಆಸುಇ 59 ಸೇಉನ್ಯಾ 2012, ದಿನಾಂಕ: 16-11-2012. 8. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 43 ಸೇಉನ್ಯಾ 2013, ದಿನಾಂಕ: 21-06-2013. 9. ತಿದ್ದುಪಡಿ ಆದೇಶ ಸಂಖ್ಯೆ: ಸಿಆಸುಇ 57 ಸೇಉನ್ಯಾ 2016, ದಿನಾಂಕ: 27-06-2017. 10. ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು, ಇವರ ಪತ್ರ ಸಂಖ್ಯೆ: (ಎಮ್ಸಿಆರ್ಬಿ)ಆರ್ಪಿಎಸ್71/2002, ದಿನಾಂಕ: 18-02-2017.
11. ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು, ಇವರ ಪತ್ರ ಸಂಖ್ಯೆ: ಹೆಚ್ಸಿಎ-1/60/2015-16, ದಿನಾಂಕ: 01-08-2017.
ಪ್ರಸ್ತಾವನೆ:
ಮೇಲೆ ಕ್ರಮ ಸಂಖ್ಯೆ (1)ರಲ್ಲಿ ಓದಲಾದ, ದಿನಾಂಕ: 15-10-2004ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನಿವೃತ್ತಿ ಹೊಂದಿದ ಹಾಗೂ ದೇಶದ ಯಾವುದೇ ಭಾಗದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ಕ್ರಮವಾಗಿ ಮಾಸಿಕ `.3,000/-ಗಳು ಹಾಗೂ `.2,500/-ಗಳ ಗೃಹ ಪರಿಚಾರಕ ಭತ್ಯೆಯನ್ನು, ಮಾಸಿಕ `.1,500/- ಹಾಗೂ `.1,000/-ಗಳ ದೂರವಾಣಿ ಭತ್ಯೆಯನ್ನು ಹಾಗೂ ವಾರ್ಷಿಕ `.15,000/- ಹಾಗೂ `.10,000/-ಗಳ ವೈದ್ಯಕೀಯ ವೆಚ್ಚವನ್ನು ಷರತ್ತುಗಳೊಂದಿಗೆ ಮಂಜೂರು ಮಾಡಿ ಆದೇಶಿಸಲಾಗಿದೆ.
ಈ ಸೌಲಭ್ಯಗಳನ್ನು ಮೇಲೆ ಕ್ರಮ ಸಂಖ್ಯೆ (2)ರಲ್ಲಿ ಓದಲಾದ, ದಿನಾಂಕ: 22-09-2006ರ ಸರ್ಕಾರದ ಆದೇಶದಲ್ಲಿ, ಮೂಲತಃ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನೇಮಕಗೊಂಡು, ನಂತರ ಇತರ ಉಚ್ಛ ನ್ಯಾಯಾಲಯಗಳಿಗೆ ವರ್ಗಾಯಿಸಲಾಗಿರುವ ಹಾಗೂ ಇತರ ಉಚ್ಛ ನ್ಯಾಯಾಲಯಗಳಲ್ಲಿ ನಿವೃತ್ತಿ ಹೊಂದಿರುವ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳಿಗೂ ಸಹ ಷರತ್ತುಗಳೊಂದಿಗೆ ವಿಸ್ತರಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (3)ರಲ್ಲಿ ಓದಲಾದ, ದಿನಾಂಕ: 20-11-2010ರ ಸರ್ಕಾರದ ಆದೇಶದಲ್ಲಿ, ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನಿವೃತ್ತಿ ಹೊಂದಿದ ಹಾಗೂ ಭಾರತದ ಯಾವುದೇ ಭಾಗದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ನೀಡಲಾಗುತ್ತಿದ್ದ ವೈದ್ಯಕೀಯ ವೆಚ್ಚವನ್ನು ಕ್ರಮವಾಗಿ ವಾರ್ಷಿಕ `.30,000/-ಗಳು ಮತ್ತು `.20,000/-ಗಳಿಗೆ ಹೆಚ್ಚಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (4)ರಲ್ಲಿ ಓದಲಾದ, ದಿನಾಂಕ: 25-06-2011ರ ಸರ್ಕಾರದ ಆದೇಶದಲ್ಲಿ, ಕರ್ನಾಟಕ ಉಚ್ಛ ನ್ಯಾಯಾಲಯದಿಂದ ನಿವೃತ್ತಿಗೊಂಡು ಭಾರತದ ಯಾವುದೇ ಭಾಗದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳಿಗೆ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರುಗಳಿಗೆ ಕಲ್ಪಿಸಲಾಗಿರುವ ವೈದ್ಯಕೀಯ ಸೌಲಭ್ಯವನ್ನು ಷರತ್ತುಗಳೊಂದಿಗೆ ವಿಸ್ತರಿಸಿ ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (5)ರಲ್ಲಿ ಓದಲಾದ, ದಿನಾಂಕ: 23-07-2011ರ ಸರ್ಕಾರದ ತಿದ್ದುಪಡಿ ಆದೇಶದಲ್ಲಿ, ದಿನಾಂಕ: 25-06-2011ರ ಸರ್ಕಾರದ ಆದೇಶದಲ್ಲಿ ವಿಧಿಸಲಾಗಿದ್ದ (ಸಿ) ಷರತ್ತಿನಲ್ಲಿ "Arbitrator" ಎಂಬ ಪದವನ್ನು ಬಿಟ್ಟು ತಿದ್ದುಪಡಿ ಆದೇಶವನ್ನು ಹೊರಡಿಸಲಾಗಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೯, ೨೦೧೭ ೧೨೨೯ಮೇಲೆ ಕ್ರಮ ಸಂಖ್ಯೆ (6)ರಲ್ಲಿ ಓದಲಾದ, ದಿನಾಂಕ: 21-03-2012ರ ಸರ್ಕಾರದ ಆದೇಶದಲ್ಲಿ, ಮೂಲತಃ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನೇಮಕಗೊಂಡು, ನಂತರ ಇತರ ಉಚ್ಛ ನ್ಯಾಯಾಲಯಗಳಿಗೆ ವರ್ಗಾಯಿಸಲಾಗಿರುವ ಹಾಗೂ ಇತರ ಉಚ್ಛ ನ್ಯಾಯಾಲಯಗಳಲ್ಲಿ ನಿವೃತ್ತಿ ಹೊಂದಿರುವ ಹಾಗೂ ಕರ್ನಾಟಕದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳಿಗೂ ಸಹ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರುಗಳಿಗೆ ಕಲ್ಪಿಸಲಾಗಿರುವ ವೈದ್ಯಕೀಯ ಸೌಲಭ್ಯವನ್ನು ಷರತ್ತುಗಳೊಂದಿಗೆ ವಿಸ್ತರಿಸಿ ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (7)ರಲ್ಲಿ ಓದಲಾದ, ದಿನಾಂಕ: 16-11-2012ರ ಸರ್ಕಾರದ ಸೇರ್ಪಡೆ ಆದೇಶದಲ್ಲಿ, ದಿನಾಂಕ: 21-03-2012ರ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 31 ಸೇಉನ್ಯಾ 2011ರಲ್ಲಿ ವಿಧಿಸಲಾಗಿದ್ದ (ಬಿ) ಮತ್ತು (ಸಿ) ಷರತ್ತುಗಳನ್ನು ಮಾರ್ಪಡಿಸಿ ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (8)ರಲ್ಲಿ ಓದಲಾದ, ದಿನಾಂಕ: 21-06-2013ರ ಸರ್ಕಾರದ ತಿದ್ದುಪಡಿ ಆದೇಶದಲ್ಲಿ, ದಿನಾಂಕ: 16-11-2012ರ ಸೇರ್ಪಡೆ ಆದೇಶದಲ್ಲಿ ಮಾರ್ಪಡಿಸಲಾಗಿದ್ದ ದಿನಾಂಕ: 21-03-2012ರ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 31 ಸೇಉನ್ಯಾ 2011ರ ಆದೇಶದ (ಬಿ) ಷರತ್ತಿನ ಮಾರ್ಪಾಡನ್ನು ಹಿಂಪಡೆಯಲಾಗಿದೆ.
ಮೇಲೆ ಕ್ರಮ ಸಂಖ್ಯೆ (9)ರಲ್ಲಿ ಓದಲಾದ, ದಿನಾಂಕ: 27-06-2017ರ ಸರ್ಕಾರದ ತಿದ್ದುಪಡಿ ಆದೇಶದಲ್ಲಿ, ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 18 ಸೇಉನ್ಯಾ 2011(ಭಾ), ದಿನಾಂಕ: 25-06-2011ರಲ್ಲಿನ (ಸಿ) ಷರತ್ತನ್ನು ತಿದ್ದುಪಡಿ ಮಾಡಿ ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (11)ರಲ್ಲಿ ಓದಲಾದ, ದಿನಾಂಕ: 01-08-2017ರ ಪತ್ರದಲ್ಲಿ ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು, ಇವರು ಆದೇಶಗಳಲ್ಲಿ ವಿಧಿಸಲಾಗಿರುವ (ಬಿ) ಮತ್ತು (ಸಿ) ಷರತ್ತುಗಳನ್ನು ಸಂಪೂರ್ಣವಾಗಿ ಕೈಬಿಡುವ ಬಗ್ಗೆ ಕ್ರಮಕೈಗೊಳ್ಳಬೇಕೆಂದು ದಿನಾಂಕ: 29-06-2017ರಂದು ನಡೆದ ಮುಖ್ಯ ನ್ಯಾಯಾಧೀಶರ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯಗಳ ಜಾರಿ ಬಗ್ಗೆ ನಿಗಾ ವಹಿಸಲು ರಚಿಸಲಾದ ಸಮಿತಿಯ ಸಭೆಯಲ್ಲಿ ತೀರ್ಮಾನವಾದ ಹಿನ್ನೆಲೆಯಲ್ಲಿ, ಅದರಂತೆ ಕ್ರಮ ಕೈಗೊಳ್ಳಬೇಕೆಂದು ಕೋರಿರುತ್ತಾರೆ.
ಮೇಲೆ ಕ್ರಮ ಸಂಖ್ಯೆ (10)ರಲ್ಲಿ ಓದಲಾದ, ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು, ಇವರ ದಿನಾಂಕ: 18-02-2017ರ ಪತ್ರದಲ್ಲಿ, ಕರ್ನಾಟಕ ಉಚ್ಛ ನ್ಯಾಯಾಲಯದ ಕಾರ್ಯನಿತರ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳಿಗೆ ನೀಡುತ್ತಿರುವ ವೈದ್ಯಕೀಯ ಸೌಲಭ್ಯವನ್ನು ಮರಣ ಹೊಂದಿದ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನಿವೃತ್ತ ನ್ಯಾಯಾಧೀಶರುಗಳ ಪತಿ/ಪತ್ನಿಯರಿಗೂ ಸಹ ವಿಸ್ತರಿಸಬೇಕೆಂದು ಕೋರಿರುತ್ತಾರೆ.
ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು, ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನಿವೃತ್ತಿ ಹೊಂದಿದ ಹಾಗೂ ದೇಶದ ಯಾವುದೇ ಭಾಗದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ಹಾಗೂ ಮೂಲತಃ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನೇಮಕಗೊಂಡು, ನಂತರ ಇತರ ಉಚ್ಛ ನ್ಯಾಯಾಲಯಗಳಿಗೆ ವರ್ಗಾವಣೆಗೊಂಡು ನಿವೃತ್ತಿ ಹೊಂದಿರುವ, ಆದರೆ, ಕರ್ನಾಟಕದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳಿಗೆ ಸೌಲಭ್ಯಗಳನ್ನು ಮಂಜೂರು ಮಾಡಲು ವಿಧಿಸಲಾಗಿರುವ (ಬಿ) ಮತ್ತು (ಸಿ) ಷರತ್ತುಗಳನ್ನು ಕೈಬಿಡಲು ತೀರ್ಮಾನಿಸಿದ ಸರ್ಕಾರವು, ಮೇಲ್ಕಂಡ ಬೇರೆ ಬೇರೆ ಆದೇಶಗಳಲ್ಲಿ ವೈದ್ಯಕೀಯ ಸೌಲಭ್ಯ, ದೂರವಾಣಿ ಭತ್ಯೆ ಹಾಗೂ ಗೃಹ ಪರಿಚಾರಕರ ಭತ್ಯೆಗಳನ್ನು ಮಂಜೂರು ಮಾಡಿರುವುದರಿಂದ, ಗೊಂದಲ ಉಂಟಾಗುತ್ತಿರುವುದರಿಂದ ವೈದ್ಯಕೀಯ ಸೌಲಭ್ಯಕ್ಕೆ ಸಂಬಂಧಿಸಿದಂತೆ ಈ ಎಲ್ಲಾ ಆದೇಶಗಳನ್ನು ಒಟ್ಟುಗೂಡಿಸಿ, ಒಂದೇ ಆದೇಶವನ್ನು ಹೊರಡಿಸಲು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ಕಾರ್ಯನಿರತ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳಿಗೆ ನೀಡುತ್ತಿರುವ ವೈದ್ಯಕೀಯ ಸೌಲಭ್ಯವನ್ನು ಮರಣ ಹೊಂದಿದ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನಿವೃತ್ತ ನ್ಯಾಯಾಧೀಶರುಗಳ ಪತಿ/ಪತ್ನಿಯರಿಗೂ ಸಹ ವಿಸ್ತರಿಸಬೇಕೆಂದು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶವನ್ನು ಹೊರಡಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 57 ಸೇಉನ್ಯಾ 2016, ಬೆಂಗಳೂರು, ದಿನಾಂಕ: 15-09-2017.
ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನಿವೃತ್ತಿ ಹೊಂದಿದ ಹಾಗೂ ದೇಶದ ಯಾವುದೇ ಭಾಗದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಾಧೀಶರುಗಳಿಗೆ ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ಹಾಗೂ ಮೂಲತಃ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನೇಮಕಗೊಂಡು, ನಂತರ ಇತರ ಉಚ್ಛ ನ್ಯಾಯಾಲಯಗಳಿಗೆ ವರ್ಗಾವಣೆಗೊಂಡು ನಿವೃತ್ತಿ ಹೊಂದಿರುವ, ಆದರೆ, ಕರ್ನಾಟಕದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳಿಗೆ ಕರ್ನಾಟಕ ಉಚ್ಛ ನ್ಯಾಯಾಲಯದ ಕಾರ್ಯನಿರತ ನ್ಯಾಯಾಧೀಶರುಗಳಿಗೆ ಕಲ್ಪಿಸಲಾಗಿರುವ ವೈದ್ಯಕೀಯ ಸೌಲಭ್ಯವನ್ನು ವಿಸ್ತರಿಸಿ ಆದೇಶಿಸಲಾಗಿದೆ.
ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನಿವೃತ್ತಿ ಹೊಂದಿದ್ದ ಹಾಗೂ ದೇಶದ ಯಾವುದೇ ಭಾಗದಲ್ಲಿ ನೆಲೆಸಿದ್ದು ಮರಣ ಹೊಂದಿರುವ ನಿವೃತ್ತ ಮುಖ್ಯ ನ್ಯಾಯಾಧೀಶರುಗಳು ಹಾಗೂ ನಿವೃತ್ತ ನ್ಯಾಯಾಧೀಶರುಗಳ ಹಾಗೂ ಮೂಲತಃ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನೇಮಕಗೊಂಡು, ನಂತರ ಇತರ ಉಚ್ಛ ನ್ಯಾಯಾಲಯಗಳಿಗೆ ವರ್ಗಾವಣೆಗೊಂಡು ನಿವೃತ್ತಿ ಹೊಂದಿದ್ದ, ಆದರೆ, ಕರ್ನಾಟಕದಲ್ಲಿ ನೆಲೆಸಿದ್ದು ಮರಣ ಹೊಂದಿರುವ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳ ಪತಿ/ಪತ್ನಿಯರಿಗೆೆ ಕರ್ನಾಟಕ ಉಚ್ಛ ನ್ಯಾಯಾಲಯದ ಕಾರ್ಯನಿರತ ನ್ಯಾಯಾಧೀಶರುಗಳಿಗೆ ಕಲ್ಪಿಸಲಾಗಿರುವ ವೈದ್ಯಕೀಯ ಸೌಲಭ್ಯವನ್ನು ವಿಸ್ತರಿಸಿ ಆದೇಶಿಸಲಾಗಿದೆ.
ವೈದ್ಯಕೀಯ ವೆಚ್ಚ ಮರುಪಾವತಿಯು, ಕಾರ್ಯನಿರತ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಧೀಶರುಗಳಿಗೆ ಅನ್ವಯವಾಗುವ ಕರ್ನಾಟಕ ಸಚಿವರು, ರಾಜ್ಯ ಸಚಿವರು ಮತ್ತು ಉಪ ಸಚಿವರುಗಳ ವೈದ್ಯಕೀಯ ಹಾಜರಾತಿ ನಿಯಮಗಳು, 1958ಕ್ಕೆ ಅನುಸಾರವಾಗಿರತಕ್ಕದ್ದು.
ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು, ಇವರು ಈ ವೆಚ್ಚವನ್ನು ಸೆಳೆಯುವ ಮತ್ತು ಪಾವತಿಸುವ ಪ್ರಾಧಿಕಾರವಾಗಿರುತ್ತಾರೆ.
ಈ ವೆಚ್ಚವನ್ನು "2014-00-102-0-01 ಉಚ್ಛ ನ್ಯಾಯಾಲಯದ ನ್ಯಾಯಾಧೀಶರು" ಲೆಕ್ಕಶೀರ್ಷಿಕೆಯಲ್ಲಿ ಭರಿಸತಕ್ಕದ್ದು.
೧೨೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೯, ೨೦೧೭ ಭಾಗ ೧ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 704 ಸೇ-1/2017, ದಿನಾಂಕ: 11-08-2017 ಹಾಗೂ ಟಿಪ್ಪಣಿ ಸಂಖ್ಯೆ: ಆಇ 246 ಸೇ-1/2017, ದಿನಾಂಕ: 28-04-2017ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.
PR-321
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-200
ಚಂದ್ರಹಾಸ ಗಂ.ತಾಳೂಕರ
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-6).
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ವಿಷಯ : ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರು ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ಗೃಹ ಪರಿಚಾರಕರ ಭತ್ಯೆ (Servant Allowance) ಯನ್ನು ಮಂಜೂರು ಮಾಡುವ ಬಗ್ಗೆ.
ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 84 ಎಸ್ಹೆಚ್ಸಿ 2004, ದಿನಾಂಕ: 15-10-2004. 2. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 84 ಎಸ್ಹೆಚ್ಸಿ 2004, ದಿನಾಂಕ: 22-09-2006. 3. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 18 ಸೇಉನ್ಯಾ 2011(ಭಾ), ದಿನಾಂಕ: 25-06-2011. 4. ತಿದ್ದುಪಡಿ ಆದೇಶ ಸಂಖ್ಯೆ: ಸಿಆಸುಇ 18 ಸೇಉನ್ಯಾ 2011, ದಿನಾಂಕ: 23-07-2011. 5. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 31 ಸೇಉನ್ಯಾ 2011, ದಿನಾಂಕ: 21-03-2012. 6. ಸೇರ್ಪಡೆ ಆದೇಶ ಸಂಖ್ಯೆ: ಸಿಆಸುಇ 59 ಸೇಉನ್ಯಾ 2012, ದಿನಾಂಕ: 16-11-2012. 7. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 43 ಸೇಉನ್ಯಾ 2013, ದಿನಾಂಕ: 21-06-2013. 8. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 72 ಸೇಉನ್ಯಾ 2012, ದಿನಾಂಕ: 21-08-2013. 9. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 16 ಸೇಉನ್ಯಾ 2015, ದಿನಾಂಕ: 18-01-2016. 10. ತಿದ್ದುಪಡಿ ಆದೇಶ ಸಂಖ್ಯೆ: ಸಿಆಸುಇ 57 ಸೇಉನ್ಯಾ 2016, ದಿನಾಂಕ: 27-06-2017. 11. ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು, ಇವರ ಪತ್ರ ಸಂಖ್ಯೆ:ಆರ್ಪಿಎಸ್54/2016, ದಿನಾಂಕ: 03-10-2016.
ಪ್ರಸ್ತಾವನೆ:
ಮೇಲೆ ಕ್ರಮ ಸಂಖ್ಯೆ (1)ರಲ್ಲಿ ಓದಲಾದ, ದಿನಾಂಕ: 15-10-2004ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನಿವೃತ್ತಿ ಹೊಂದಿದ ಹಾಗೂ ದೇಶದ ಯಾವುದೇ ಭಾಗದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ಕ್ರಮವಾಗಿ ಮಾಸಿಕ `.3,000/-ಗಳು ಹಾಗೂ `.2,500/-ಗಳ ಗೃಹ ಪರಿಚಾರಕ ಭತ್ಯೆಯನ್ನು, ಮಾಸಿಕ `.1,500/- ಹಾಗೂ `.1,000/-ಗಳ ದೂರವಾಣಿ ಭತ್ಯೆಯನ್ನು ಹಾಗೂ ವಾರ್ಷಿಕ `.15,000/- ಹಾಗೂ `.10,000/-ಗಳ ವೈದ್ಯಕೀಯ ವೆಚ್ಚವನ್ನು ಷರತ್ತುಗಳೊಂದಿಗೆ ಮಂಜೂರು ಮಾಡಿ ಆದೇಶಿಸಲಾಗಿದೆ.
ಈ ಸೌಲಭ್ಯಗಳನ್ನು ಮೇಲೆ ಕ್ರಮ ಸಂಖ್ಯೆ (2)ರಲ್ಲಿ ಓದಲಾದ, ದಿನಾಂಕ: 22-09-2006ರ ಸರ್ಕಾರದ ಆದೇಶದಲ್ಲಿ, ಮೂಲತಃ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನೇಮಕಗೊಂಡು, ನಂತರ ಇತರ ಉಚ್ಛ ನ್ಯಾಯಾಲಯಗಳಿಗೆ ವರ್ಗಾಯಿಸಲಾಗಿರುವ ಹಾಗೂ ಇತರ ಉಚ್ಛ ನ್ಯಾಯಾಲಯಗಳಲ್ಲಿ ನಿವೃತ್ತಿ ಹೊಂದಿರುವ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳಿಗೂ ಸಹ ಷರತ್ತುಗಳೊಂದಿಗೆ ವಿಸ್ತರಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (3)ರಲ್ಲಿ ಓದಲಾದ, ದಿನಾಂಕ: 25-06-2011ರ ಸರ್ಕಾರದ ಆದೇಶದಲ್ಲಿ, ಕರ್ನಾಟಕ ಉಚ್ಛ ನ್ಯಾಯಾಲಯದಿಂದ ನಿವೃತ್ತಿಗೊಂಡು ಭಾರತದ ಯಾವುದೇ ಭಾಗದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳಿಗೆ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರುಗಳಿಗೆ ಕಲ್ಪಿಸಲಾಗಿರುವ ವೈದ್ಯಕೀಯ ಸೌಲಭ್ಯವನ್ನು ಷರತ್ತುಗಳೊಂದಿಗೆ ವಿಸ್ತರಿಸಿ ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (4)ರಲ್ಲಿ ಓದಲಾದ, ದಿನಾಂಕ: 23-07-2011ರ ಸರ್ಕಾರದ ತಿದ್ದುಪಡಿ ಆದೇಶದಲ್ಲಿ, ದಿನಾಂಕ: 25-06-2011ರ ಸರ್ಕಾರದ ಆದೇಶದಲ್ಲಿ ವಿಧಿಸಲಾಗಿದ್ದ (ಸಿ) ಷರತ್ತಿನಲ್ಲಿ "Arbitrator" ಎಂಬ ಪದವನ್ನು ಬಿಟ್ಟು ತಿದ್ದುಪಡಿ ಆದೇಶವನ್ನು ಹೊರಡಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (5)ರಲ್ಲಿ ಓದಲಾದ, ದಿನಾಂಕ: 21-03-2012ರ ಸರ್ಕಾರದ ಆದೇಶದಲ್ಲಿ, ಮೂಲತಃ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನೇಮಕಗೊಂಡು, ನಂತರ ಇತರ ಉಚ್ಛ ನ್ಯಾಯಾಲಯಗಳಿಗೆ ವರ್ಗಾಯಿಸಲಾಗಿರುವ ಹಾಗೂ ಇತರ ಉಚ್ಛ ನ್ಯಾಯಾಲಯಗಳಲ್ಲಿ ನಿವೃತ್ತಿ ಹೊಂದಿರುವ ಹಾಗೂ ಕರ್ನಾಟಕದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳಿಗೂ ಸಹ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರುಗಳಿಗೆ ಕಲ್ಪಿಸಲಾಗಿರುವ ವೈದ್ಯಕೀಯ ಸೌಲಭ್ಯವನ್ನು ಷರತ್ತುಗಳೊಂದಿಗೆ ವಿಸ್ತರಿಸಿ ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (6)ರಲ್ಲಿ ಓದಲಾದ, ದಿನಾಂಕ: 16-11-2012ರ ಸರ್ಕಾರದ ಸೇರ್ಪಡೆ ಆದೇಶದಲ್ಲಿ, ದಿನಾಂಕ: 21-03-2012ರ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 31 ಸೇಉನ್ಯಾ 2011ರಲ್ಲಿ ವಿಧಿಸಲಾಗಿದ್ದ (ಬಿ) ಮತ್ತು (ಸಿ) ಷರತ್ತುಗಳನ್ನು ಮಾರ್ಪಡಿಸಿ ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (7)ರಲ್ಲಿ ಓದಲಾದ, ದಿನಾಂಕ: 21-06-2013ರ ಸರ್ಕಾರದ ತಿದ್ದುಪಡಿ ಆದೇಶದಲ್ಲಿ, ದಿನಾಂಕ: 16-11-2012ರ ಸೇರ್ಪಡೆ ಆದೇಶದಲ್ಲಿ ಮಾರ್ಪಡಿಸಲಾಗಿದ್ದ ದಿನಾಂಕ: 21-03-2012ರ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 31 ಸೇಉನ್ಯಾ 2011ರ ಆದೇಶದ (ಬಿ) ಷರತ್ತಿನ ಮಾರ್ಪಾಡನ್ನು ಹಿಂಪಡೆಯಲಾಗಿದೆ.
ಮೇಲೆ ಕ್ರಮ ಸಂಖ್ಯೆ (8)ರಲ್ಲಿ ಓದಲಾದ, ದಿನಾಂಕ: 21-08-2013ರ ಸರ್ಕಾರದ ಆದೇಶದಲ್ಲಿ, ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ನೀಡಲಾಗುತ್ತಿದ್ದ ಮನೆಗೆಲಸ ಸಹಾಯಕರ (Servant Allowance) ಮಾಸಿಕ ಭತ್ಯೆಯನ್ನು ಕ್ರಮವಾಗಿ ಮಾಸಿಕ `.8,000/-ಗಳು ಹಾಗೂ `.6,000/-ಗಳಿಗೆ ಹೆಚ್ಚಿಸಲಾಗಿದೆ.
ಜಸ್ಟೀಸ್ ಕೆದಂಬಾಡಿ ಜಗನ್ನಾಥಶೆಟ್ಟಿ ಹಾಗೂ ಇತರರು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾಖಲಿಸಿದ್ದ ರಿಟ್ ಅರ್ಜಿಸಂಖ್ಯೆ:1944- 45/2015(S-R) ರಲ್ಲಿ ಮಾನ್ಯ ನ್ಯಾಯಾಲಯವು ದಿನಾಂಕ: 07-01-2015ರಂದು ನೀಡಿದ ಮಧ್ಯಂತರ ಆದೇಶದನ್ವಯ ಮೇಲೆ ಕ್ರಮ ಸಂಖ್ಯೆ (9)ರಲ್ಲಿಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೯, ೨೦೧೭ ೧೨೩೧ ಓದಲಾದ, ದಿನಾಂಕ: 18-01-2016ರ ಸರ್ಕಾರದ ಆದೇಶದಲ್ಲಿ, ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ನೀಡಲಾಗುತ್ತಿದ್ದ ಗೃಹಪರಿಚಾರಕರ ಮಾಸಿಕ ಭತ್ಯೆಯನ್ನು Servant Allowance) ದಿನಾಂಕ: 01-10-2014ರಿಂದ ಜಾರಿಗೆ ಬರುವಂತೆ ಪರಿಚಾರಕ/ವಾಹನ ಚಾಲಕ/ಲಿಪಿಕ ಸಿಬ್ಬಂದಿ/ಭದ್ರತಾ ಸಿಬ್ಬಂದಿಯ ವೆಚ್ಚವು ಒಳಗೊಂಡಂತೆ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ `.14,000/- (ಹದಿನಾಲ್ಕು ಸಾವಿರ ರೂಪಾಯಿಗಳು ಮಾತ್ರ) ಹಾಗೂ ನಿವೃತ್ತ ನ್ಯಾಯಾಧೀಶರಿಗಳಿಗೆ `.12,000/- (ಹನ್ನೆರಡು ಸಾವಿರ ರೂಪಾಯಿಗಳು ಮಾತ್ರ) ರಂತೆ ಹೆಚ್ಚಿಸಿ ಮಂಜೂರು ಮಾಡಿ ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (10)ರಲ್ಲಿ ಓದಲಾದ, ದಿನಾಂಕ: 27-06-2017ರ ಸರ್ಕಾರದ ತಿದ್ದುಪಡಿ ಆದೇಶದಲ್ಲಿ, ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 18 ಸೇಉನ್ಯಾ 2011(ಭಾ), ದಿನಾಂಕ: 25-06-2011ರಲ್ಲಿನ (ಸಿ) ಷರತ್ತನ್ನು ತಿದ್ದುಪಡಿ ಮಾಡಿ ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ: (11)ರಲ್ಲಿ ಓದಲಾದ, ದಿನಾಂಕ: 03-10-2016ರ ಪತ್ರದಲ್ಲಿ ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು, ಇವರು ಗೃಹಕೃತ್ಯ ಸಹಾಯ ನಿಯಮಗಳು, 2016ನ್ನು ರಚಿಸುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಈ ರೀತಿ ನಿಯಮಗಳನ್ನು ರಚಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲದಿದ್ದುದರಿಂದ, ಈ ಬಗ್ಗೆ ದಿನಾಂಕ: 29-06-2017ರಂದು ನಡೆದ ಮುಖ್ಯ ನ್ಯಾಯಾಧೀಶರ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯಗಳ ಜಾರಿ ಬಗ್ಗೆ ನಿಗಾ ವಹಿಸಲು ರಚಿಸಲಾದ ಸಮಿತಿಯ ಸಭೆಯಲ್ಲಿ, ಈ ರೀತಿ ನಿಯಮಗಳನ್ನು ರಚಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲದಿದ್ದಲ್ಲಿ ಗೃಹ ಪರಿಚಾರಕರ ಸೌಲಭ್ಯಗಳನ್ನು ಮಂಜೂರು ಮಾಡಿರುವ ಇತ್ತೀಚಿನ ನಡವಳಿಯನ್ನು ಪರಿಶೀಲಿಸುವ/ಮಾರ್ಪಡಿಸುವ ಬಗ್ಗೆ ಕ್ರಮಕೈಗೊಳ್ಳುವಂತೆ ತಿಳಿಸಿರುತ್ತದೆ.
ಅದರಂತೆ, ಸಮಿತಿಯ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು ಕೆಳಕಂಡಂತೆ ಆದೇಶವನ್ನು ಹೊರಡಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 66 ಸೇಉನ್ಯಾ 2017, ಬೆಂಗಳೂರು, ದಿನಾಂಕ: 07-09-2017.
ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನಿವೃತ್ತಿ ಹೊಂದಿದ ಹಾಗೂ ದೇಶದ ಯಾವುದೇ ಭಾಗದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಾಧೀಶರುಗಳಿಗೆ ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ಹಾಗೂ ಮೂಲತಃ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನೇಮಕಗೊಂಡು, ನಂತರ ಇತರ ಉಚ್ಛ ನ್ಯಾಯಾಲಯಗಳಿಗೆ ವರ್ಗಾವಣೆಗೊಂಡು ನಿವೃತ್ತಿ ಹೊಂದಿರುವ, ಆದರೆ, ಕರ್ನಾಟಕದಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನಿವೃತ್ತ ನ್ಯಾಯಾಧೀಶರುಗಳಿಗೆ ಕೆಳಕಂಡ ಅಂಶಗಳೊಂದಿಗೆ ಗೃಹ ಪರಿಚಾರಕ ಭತ್ಯೆಯನ್ನು ಮಂಜೂರು ಮಾಡಿ ಆದೇಶಿಸಲಾಗಿದೆ.
1. ಇನ್ಯಾವುದೇ ಉಚ್ಛ ನ್ಯಾಯಾಲಯಗಳಿಂದ ಈ ಸೌಲಭ್ಯವನ್ನು ಪಡೆಯದಿರುವ ಅಥವಾ ನಿವೃತ್ತಿಯ ನಂತರ ನೇಮಕಗೊಂಡಿರುವ ಕಛೇರಿ ಅಥವಾ ಹುದ್ದೆಗೆ ಈ ಸೌಲಭ್ಯವಿಲ್ಲದಿರುವ ನಿವೃತ್ತ ಮುಖ್ಯ ನ್ಯಾಯಾಧೀಶರುಗಳು ಹಾಗೂ ನಿವೃತ್ತ ನ್ಯಾಯಾಧೀಶರುಗಳು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ.
2. ನಿವೃತ್ತ ಮುಖ್ಯ ನ್ಯಾಯಾಧೀಶರುಗಳು ಹಾಗೂ ನಿವೃತ್ತ ನ್ಯಾಯಾಧೀಶರುಗಳು ತಮ್ಮ ಇಚ್ಛೆಯ ಮೇರೆಗೆ ಗೃಹ ಕೃತ್ಯ ಸಹಾಯಕರನ್ನು ಆಯ್ಕೆ ಮಾಡತಕ್ಕದ್ದು.
3. ಗೃಹ ಕೃತ್ಯ ಸಹಾಯಕರಿಗೆ ನೀಡಲಾಗುವ ಭತ್ಯೆಯನ್ನು ಪ್ರತಿ ತಿಂಗಳ ಅಂತ್ಯದಲ್ಲಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದಿಂದ ಪಾವತಿಸತಕ್ಕದ್ದು.
4. ಗೃಹ ಕೃತ್ಯ ಸಹಾಯಕರಿಗೆ ನೀಡಲಾಗುವ ಭತ್ಯೆಯು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ 4ನೇ ದರ್ಜೆ ವೃಂದದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ವೇತನ ಶ್ರೇಣಿಯ ಕನಿಷ್ಠ ವೇತನಕ್ಕೆ ತುಟ್ಟಿ ಭತ್ಯೆಯನ್ನು ಸೇರಿಸುವುದರಿಂದ ಆಗುವ ಸಂಚಿತ ಮೊತ್ತಕ್ಕೆ ಸಮಾನವಾಗಿರತಕ್ಕದ್ದು.
ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು, ಇವರು ಈ ವೆಚ್ಚವನ್ನು ಸೆಳೆಯುವ ಮತ್ತು ಪಾವತಿಸುವ ಪ್ರಾಧಿಕಾರವಾಗಿರುತ್ತಾರೆ.
ಈ ವೆಚ್ಚವನ್ನು "2014-00-102-0-01 ಉಚ್ಛ ನ್ಯಾಯಾಲಯದ ನ್ಯಾಯಾಧೀಶರು" ಲೆಕ್ಕಶೀರ್ಷಿಕೆಯಲ್ಲಿ ಭರಿಸತಕ್ಕದ್ದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ: ಆಇ 205 ಸೇವೆಗಳು-1/2017, ದಿನಾಂಕ: 15-06-2017ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.
PR-322
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-200
ಶ್ರ.ದೇ. ಸುನಂದ
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-3).
ಆರ್ಥಿಕ ಸಚಿವಾಲಯ
ವಿಷಯ : ಮಹಾನಗರ ಪಾಲಿಕೆ, ನಗರ ಪಾಲಿಕೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿರುವ ಸನ್ನದುಗಳ ಬಗ್ಗೆ.
ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 35 ಇಎಫ್ಎಲ್ 2016 ದಿ.27-6-2017
2. ಮಾನ್ಯ ಸರ್ವೋಚ್ಛ ನ್ಯಾಯಾಲಯದ ಎಸ್ಎಲ್ಪಿ(ಸಿವಿಲ್) ನಂ.10243/2017 ರ ಆದೇಶ ದಿನಾಂಕ:11.07.2017.
3. ತಮ್ಮ ಪತ್ರ ಸಂಖ್ಯೆ: ಇಸಿಇ/01/ಜ-ಐಎಂಎಲ್/2015-16, ದಿ:24.08.2017
4. ತಮ್ಮ ಪತ್ರ ಸಂಖ್ಯೆ: ಇಸಿಇ/24/ಜ-ಐಎಂಎಲ್/2014-15, ದಿ:05.09.2017 R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೧೨೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೯, ೨೦೧೭ ಭಾಗ ೧ಪ್ರಸ್ತಾವನೆ:
ಮಹಾನಗರ ಪಾಲಿಕೆ, ನಗರ ಪಾಲಿಕೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿರುವ ಸನ್ನದುಗಳ ಬಗ್ಗೆ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶ ದಿನಾಂಕ: 15-12-2016 ಮತ್ತು 31-3-2017ರನ್ವಯ ಭಾದಿತ ಸನ್ನದುಗಳನ್ನು ಸ್ಥಳಾಂತರಿಸಲು ಮೇಲೆ ಓದಲಾದ (1)ರ ಸರ್ಕಾರದ ಆದೇಶದಲ್ಲಿ ಸನ್ನದುದಾರರ ಹಿತದೃಷ್ಟಿಯಿಂದ ಕೆಲವು ವಿನಾಯಿತಿ/ರಿಯಾಯಿತಿಗಳನ್ನು ನೀಡಲಾಗಿರುತ್ತದೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯವು ಮೇಲೆ ಓದಲಾದ (2)ರ ಆದೇಶದಲ್ಲಿ, ದಿನಾಂಕ: 15-12-2016ರಲ್ಲಿ ಹೊರಡಿಸಿದ್ದ ತೀರ್ಪಿನಲ್ಲಿ ಹೇಳಲಾಗಿರುವ ನಿರ್ದೇಶನಗಳ ಪ್ಯಾರಾ 7 ರಲ್ಲಿನ ಅನ್ವಯ ರಾಜ್ಯ ಹೆದ್ದಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳಿಂದ 500 ಮೀ. ಇಕ್ಕೆಲಗಳ ವ್ಯಾಪ್ತಿಯಲ್ಲಿ ಹಾದು ಹೋಗುವ ಸ್ಥಳಗಳಲ್ಲಿರುವ ಅಬಕಾರಿ ಸನ್ನದುಗಳಿಗೆ ದಿ.15-12-2016ರ ಸರ್ವೋಚ್ಛ ನ್ಯಾಯಾಲಯವು ನೀಡಿರುವ ನಿರ್ದೇಶನಗಳು ಅನ್ವಯಿಸುವುದಿಲ್ಲವೆಂದು ಸ್ಪಷ್ಟೀಕರಿಸಿರುವ ಹಿನ್ನೆಲೆಯಲ್ಲಿ ಮೇಲೆ ಓದಲಾದ (3)ರ ಪತ್ರದಲ್ಲಿ ಅಬಕಾರಿ ಆಯುಕ್ತರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸನ್ನದುಗಳನ್ನು ನವೀಕರಿಸುವ ಸಂಬಂಧದಲ್ಲಿ ಸೂಚನೆಗಳನ್ನು ನೀಡಿರುತ್ತಾರೆ. ಈ ಸ್ಪಷ್ಟೀಕರಣದ ಪೂರ್ವದಲ್ಲಿ ದಿನಾಂಕ: 15-12-2016 ರಲ್ಲಿ ಹೊರಡಿಸಿದ್ದ ಆದೇಶದ ಅನ್ವಯ ಭಾದಿತಕ್ಕೆ ಒಳಪಟ್ಟ ಕೆಲವು ಸನ್ನದುಗಳು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವ ಸಲುವಾಗಿ ಇತರೆಡೆಗೆ ಸ್ಥಳಾಂತರ ಮಾಡಿಕೊಂಡಿರುವ ಅನಿವಾರ್ಯತೆ ಇರುತ್ತದೆ. ಸ್ಥಳಾಂತರಗೊಂಡ ಅಂತಹ ಸನ್ನದುಗಳು ಮರಳಿ ಮೊದಲು ಇದ್ದಂತಹ ಸ್ಥಳಗಳಿಗೆ ಬರಲು ಇಚ್ಚಿಸಿದಲ್ಲಿ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು, 1968ರ ನಿಯಮ 8 ರಲ್ಲಿ ನಿಗದಿಪಡಿಸಿರುವ ಸನ್ನದು ಸ್ಥಳಾಂತರದ ಶುಲ್ಕದಲ್ಲಿ ಶೇ.50 ರಷ್ಟು ರಿಯಾಯಿತಿಯನ್ನು ನೀಡಲು ಹಾಗೂ ಮರಳಿ ಮೂಲ ಸ್ಥಾನಕ್ಕೆ ಸನ್ನದುದಾರರ ಕೋರಿಕೆಯ ಮೇರೆಗೆ ಸ್ಥಳಾಂತರಿಸಿಕೊಳ್ಳಲು ಈ ಹಿಂದೆ ಮೂಲ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸದರಿ ಸನ್ನದಿತ ವಿರುದ್ಧ ಇದ್ದಂತಹ ನ್ಯಾಯಾಲಯ ಮತ್ತು ಇತರೆ ಮೇಲ್ಮನವಿ ಪ್ರಾಧಿಕಾರಗಳಲ್ಲಿನ ಪ್ರಕರಣಗಳು ಆಯಾ ನ್ಯಾಯಾಲಯದ ಅಂತಿಮ ತೀರ್ಪುಗಳಿಗೆ ಒಳಪಟ್ಟಿರುತ್ತದೆ ಎಂಬ ಷರತ್ತನ್ನು ವಿಧಿಸಬಹುದಾಗಿದೆ ಎಂದು ಮೇಲೆ ಓದಲಾದ (4)ರ ಪತ್ರದಲ್ಲಿ ಅಬಕಾರಿ ಆಯುಕ್ತರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಅಬಕಾರಿ ಆಯುಕ್ತರ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಗಿನಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆಇ 35 ಇಎಫ್ಎಲ್ 2016, ದಿನಾಂಕ 22-9-2017.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳನ್ನು ಪರಿಶೀಲಿಸಿ ದಿನಾಂಕ:11.07.2017ರಂದು ಎಸ್ಎಲ್ಪಿ(ಸಿವಿಲ್) ನಂ.10243/2017 ಅರ್ಜಿಯಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ಸ್ಪಷ್ಟೀಕರಣದ ಹಿನ್ನೆಲೆಯಲ್ಲಿ ಅಬಕಾರಿ ಆಯುಕ್ತರ ಈ ಕೆಳಕಂಡ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ:
1. ಮಾನ್ಯ ಸರ್ವೋಚ್ಛ ನ್ಯಾಯಾಲಯದ ಸ್ಪಷ್ಟೀಕರಣದ ಪೂರ್ವದಲ್ಲಿ ದಿನಾಂಕ: 15.12.2016ರಲ್ಲಿ ಹೊರಡಿಸಿದ್ದ ಆದೇಶದನ್ವಯ ಮಹಾನಗರ ಪಾಲಿಕೆ, ನಗರ ಪಾಲಿಕೆ, ನಗರ ಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿ ವ್ಯಾಪ್ತಿಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿರುವ ಭಾದಿತರಾದ ಕೆಲವು ಸನ್ನದುಗಳು ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಪಾಲಿಸುವ ಸಲುವಾಗಿ ಬೇರೆ ಸ್ಥಳಗಳಿಗೆ ಅನಿವಾರ್ಯವಾಗಿ ಸ್ಥಳಾಂತರ ಮಾಡಿಕೊಂಡಿದ್ದು, ಸ್ಥಳಾಂತರಗೊಂಡ ಅಂತಹ ಸನ್ನದುಗಳು ದಿನಾಂಕ: 24.08.2017ರ ಪತ್ರದಲ್ಲಿ ನೀಡಿರುವ ಸ್ಪಷ್ಟೀಕರಣದನ್ವಯ ಮರಳಿ ಮೊದಲು ಇದ್ದಂತಹ ಸ್ಥಳಗಳಿಗೆ ಮರುಸ್ಥಳಾಂತರಗೊಳ್ಳಲು ಇಚ್ಛಿಸಿದ್ದಲ್ಲಿ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು, 1968ರ ನಿಯಮ 8 ರಲ್ಲಿ ನಿಗದಿಪಡಿಸಿರುವ ಸನ್ನದು ಸ್ಥಳಾಂತರದ ಶುಲ್ಕದಲ್ಲಿ ಶೇ.50 ರಷ್ಟು ರಿಯಾಯಿತಿಯನ್ನು ದಿನಾಂಕ: 30.09.2017 ರವರೆಗೆ ಮಾತ್ರ ನೀಡುವುದು;
2. ಈ ರೀತಿ ಮೂಲ ಸ್ಥಾನಕ್ಕೆ ಸನ್ನದುದಾರರ ಕೋರಿಕೆಯ ಮೇರೆಗೆ ಮರುಸ್ಥಳಾಂತರಗೊಳ್ಳಲು ಅನುಮತಿಸಿದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲಿ ಸದರಿ ಸನ್ನದಿನ ವಿರುದ್ಧ ಇದ್ದಂತಹ ನ್ಯಾಯಾಲಯ ಮತ್ತು ಇತರೆ ಮೇಲ್ಮನವಿ ಪ್ರಾಧಿಕಾರಗಳಲ್ಲಿನ ಪ್ರಕರಣಗಳು ಸದರಿ ನ್ಯಾಯಾಲಯ / ಮೇಲ್ಮನವಿ ಪ್ರಾಧಿಕಾರಗಳ ಅಂತಿಮ ತೀರ್ಪುಗಳು / ನಿರ್ಣಯಗಳಿಗೆ ಒಳಪಟ್ಟಿರುತ್ತದೆ ಎಂಬ ಷರತ್ತನ್ನು ವಿಧಿಸಿ ಮರುಸ್ಥಳಾಂತರಕ್ಕೆ ಅನುಮತಿಸುವುದು.
PR-323
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-200
ಯು.ಹೆಚ್. ನಾರಾಯಣಸ್ವಾಮಿ
ಸರ್ಕಾರದ ಉಪ ಕಾರ್ಯದರ್ಶಿ,
(ಆಡಳಿತ ಮತ್ತು ಸಮನ್ವಯ) ಆರ್ಥಿಕ ಇಲಾಖೆ ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.