Servants of Knowledge
Karnataka Gazette · Government of Karnataka

Karnataka Gazette, Part Part-3, 23 November 2017

Published 23 November 2017

Part
Part-3
Identifier
in.gazette.karnataka_new.2017-11-23.Part-3
Languages
English, Kannada
Published at
Original source ↗

click here for IIIF manifest

ಸಂಪುಟ ೧೫೨

Volume 152

ಬೆಂಗಳೂರು, ಗುರುವಾರ, ನವೆಂಬರ್ ೨೩, ೨೦೧೭ (ಮಾರ್ಗಶಿರ ೨, ಶಕ ವರ್ಷ ೧೯೩೯)

Bengaluru, Thursday, November 23, 2017 (Margashira 2, Shaka Varsha 1939)

ಸಂಚಿಕೆ ೪೬

Issue 46

ಭಾಗ ೩

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ

ಸಂಬಂಧಿಸಿದ ಅಧಿಸೂಚನೆಗಳು

ಅಧಿಕಾರಿಯುತ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯ, ಭದ್ರಾವತಿ ವಿಭಾಗ, ಭದ್ರಾವತಿ.

ಸಂಖ್ಯೆ: ಎಫ್.ಓ.ಸಿ.-ಸಿಓಎನ್-ಸಿಆರ್-11/2003-04, ದಿನಾಂಕ: 14-09-2017

ಉಪಸ್ಥಿತರು : ಶ್ರೀ ಟಿ. ಬಾಲಚಂದ್ರ, ಭಾ.ಅ.ಸೇ.,

ಅಧಿಕಾರಿಯುತ ಅಧಿಕಾರಿಗಳು ಹಾಗೂ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು,

ಭದ್ರಾವತಿ ವಿಭಾಗ, ಭದ್ರಾವತಿ.

ಪಿರ್ಯಾಧಿದಾರರು : ವಲಯ ಅರಣ್ಯಾಧಿಕಾರಿ,

ಅಜ್ಜಂಪುರ ವಲಯ, ಅಜ್ಜಂಪುರ.

ಅರ್ಜಿದಾರರು : ಶ್ರೀ ಸಾದೀಕ್ ಎಸ್.

ಬಿನ್ ಶೇಕ್ ಮಹಮ್ಮದ್ ಸಾಬ್,

ಸೀಗೆಬಾಗಿ, ನವಾಜಿ ರಸ್ತೆ,

2ನೇ ಕ್ರಾಸ್, ಭದ್ರಾ ಕಾಲೋನಿ ಅಂಚೆ.

ಭದ್ರಾವತಿ.

ಪ್ರಕರಣದ ಹಿನ್ನೆಲೆ:-

ದಿನಾಂಕ: 23-08-2003 ರಂದು ಅಜ್ಜಂಪುರ ವಲಯದ ವ್ಯಾಪ್ತಿಯಲ್ಲಿ ಲಾರಿ ಸಂಖ್ಯೆ:ಕೆಎ-06-9385 ರಲ್ಲಿ ಅಕ್ರಮವಾಗಿ 5000 (ಐದು ಸಾವಿರ) ಬಿದಿರು ಸೀಬುಗಳನ್ನು ಸಾಗಾಣಿಕೆ ಸಂಬಂಧ ಪತ್ತೆ ಹಚ್ಚಿ ವಶಪಡಿಸಿಕೊಂಡು ಅರಣ್ಯ ಮೊಕದ್ದಮೆ ಸಂಖ್ಯೆ: 16/2003-04 ನ್ನು ದಾಖಲು ಮಾಡಿ ಅರಣ್ಯ ಕಾಯ್ದೆ 71(ಎ) ಪ್ರಕಾರ ಕ್ರಮ ಜರುಗಿಸಲು ಈ ನ್ಯಾಯಾಲಯದ ಸಮಕ್ಷಮ ಹಾಜರುಪಡಿಸಿರುತ್ತಾರೆ. ಸದರಿ ವಾಹನ ಬಿಡುಗಡೆ ಕೋರಿ ಶ್ರೀ ಸಾದೀಕ್ ಎಸ್.

ಬಿನ್ ಶೇಕ್ ಮಹಮ್ಮದ್ ಸಾಬ್, ಸೀಗೆಬಾಗಿ, ನವಾಜಿ ರಸ್ತೆ, 2ನೇ ಕ್ರಾಸ್, ಭದ್ರಾ ಕಾಲೋನಿ ಅಂಚೆ. ಭದ್ರಾವತಿ ಇವರು ಅರ್ಜಿ ಸಲ್ಲಿಸಿದ್ದು, ಅವರ ಅರ್ಜಿಯನ್ನು ಪುರಸ್ಕರಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಾಹನಕ್ಕೆ ನಿಗಧಿಪಡಿಸಿದ ಬೆಲೆ `. 70,000/-ಗಳಿಗೆ ಬ್ಯಾಂಕ್ ಗ್ಯಾರಂಟಿಯನ್ನು ಹಾಗೂ ಇತರೆ ಷರತ್ತುಗಳ ಬಗ್ಗೆ ಇಂಡಂಮ್ನಿಟಿ ಬಾಂಡ್‌ನ್ನು ಛಾಪಾ ಕಾಗದದಲ್ಲಿ ನೀಡಲು ಸೂಚಿಸಿ ದಿನಾಂಕ: 04-11-2003 ರಂದು ವಾಹನವನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಿರುತ್ತದೆ. ವಾಹನದ ಮಾಲೀಕರು ಷರತ್ತುಗಳನ್ನು ಪೂರೈಸಿ ವಾಹನವನ್ನು ತಾತ್ಕಾಲಿಕ ವಶಕ್ಕೆ ಪಡೆದಿರುತ್ತಾರೆ. ಈ ಪ್ರಕರಣದ ಬಗ್ಗೆ ಅಂತಿಮ ವಿಚಾರಣೆ ನಡೆಸಿ ವಾಹನದಲ್ಲಿ 5000 (ಐದು ಸಾವಿರ) ಬಿದಿರು ಸೀಬುಗಳನ್ನು ಅಕ್ರಮವಾಗಿ ಸಾಗಿಸಿರುವುದು ದೃಡಪಟ್ಟಿದ್ದರಿಂದ ದಿನಾಂಕ: 15-02-2006 ರಂದು ವಾಹನವನ್ನು ಅಂತಿಮವಾಗಿ ಸರ್ಕಾರಕ್ಕೆ ಮುಟ್ಟುಗೋಲು ಮಾಡಿ ಆದೇಶ ಹೊರಡಿಸಲಾಗಿರುತ್ತದೆ.

ಈ ಕಛೇರಿಯ ನ್ಯಾಯಾಲಯದ ಆದೇಶದ ವಿರುದ್ಧ ಶೀಘ್ರ ವಿಲೇವಾರಿ ನ್ಯಾಯಾಲಯ-|| ಶಿವಮೊಗ್ಗ ಇವರಲ್ಲಿ ಮೇಲ್ಮನವಿ ಸಲ್ಲಿಸಿದ್ದು ಘನ ನ್ಯಾಯಾಲಯವು ಅವರ ಅರ್ಜಿಯನ್ನು ವಜಾಗೊಳಿಸಿ ಈ ಕಛೇರಿಯ ಅಂತಿಮ ಆದೇಶವನ್ನು ಊರ್ಜಿತಗೊಳಿಸಿ ರಿಟ್ ಅರ್ಜಿ ಸಂಖ್ಯೆ: 6148/2010 ದಿನಾಂಕ: 14-11-2013 ರಂದು ಆದೇಶ ಹೊರಡಿಸಿರುತ್ತಾರೆ. ವಾಹನದ ಮಾಲೀಕರು ಈ ಆದೇಶದ ವಿರುದ್ಧ ವಾಹನದ ಮಾಲೀಕರು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು ರಾಜ್ಯ ಉಚ್ಛ ನ್ಯಾಯಾಲಯವು ಸಹ ಅರ್ಜಿದಾರರ ಅರ್ಜಿಯನ್ನು ವಜಾಗೊಳಿಸಿರುತ್ತದೆ. ಈ ಕಛೇರಿಯಿಂದ ಹೊರಡಿಸಿದ ದಿನಾಂಕ:15-02-2006 ರ ಆದೇಶವನ್ನು ಎತ್ತಿ ಹಿಡಿದಿರುತ್ತದೆ. ಆದ್ದರಿಂದ ಈ ಕೆಳಕಂಡಂತೆ ಆದೇಶ ಹೊರಡಿಸಿರುತ್ತದೆ.

(೫೩೬೯)

೫೩೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ಭಾಗ ೩

ಆದೇಶ

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿದ ಮೇರೆಗೆ ದಿನಾಂಕ: 15-02-2006ರ ಆದೇಶದಂತೆ ವಾಹನವನ್ನು ಸರ್ಕಾರದ ಪರ ಮುಟ್ಟುಗೋಲು ಮಾಡಿದ್ದು ವಾಹನದ ಮಾಲೀಕರು ಈ ಕಛೇರಿ ನ್ಯಾಯಾಲಯಕ್ಕೆ ಬರೆದುಕೊಟ್ಟ ಇಂಡಂಮ್ನಿಟಿ ಬಾಂಡ್‌ನಲ್ಲಿರುವ ಷರತ್ತಿನಂತೆ ಬ್ಯಾಂಕ್ ಗ್ಯಾರಂಟಿಯ ಮೊಬಲಗು `. 70,000/- ಹಾಗೂ ತಾತ್ಕಾಲಿಕವಾಗಿ ಬಿಡುಗಡೆ ಮಾಡಿದ ಲಾರಿ ಸಂಖ್ಯೆ:ಕೆಎ-06-9385ನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿದೆ.

ಈ ಆದೇಶವನ್ನು ನನ್ನ ಸಹಿ ಹಾಗೂ ಮೊಹಿರಿನೊಂದಿಗೆ ದಿನಾಂಕ: 14-09-2017 ರಂದು ಆದೇಶ ಹೊರಡಿಸಿರುತ್ತೇನೆ.

PR – 782

ಟಿ. ಬಾಲಚಂದ್ರ, ಭಾ.ಅ.ಸೇ.,

SC - 05

ಅಧಿಕಾರಿಯುತ ಅಧಿಕಾರಿ ಹಾಗೂ

ಉಪ ಅರಣ್ಯ ಸಂರಕ್ಷಣಾಧಿಕಾರಿ,

ಭದ್ರಾವತಿ ವಿಭಾಗ, ಭದ್ರಾವತಿ.

ಅಧಿಕಾರಿಯುತ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯ, ಭದ್ರಾವತಿ ವಿಭಾಗ, ಭದ್ರಾವತಿ.

ಸಂಖ್ಯೆ: ಎಫ್.ಓ.ಸಿ.-ಸಿಓಎನ್-ಸಿಆರ್-23/2011-12, ದಿನಾಂಕ: 28-09-2017

ಉಪಸ್ಥಿತರು : ಶ್ರೀ ಟಿ. ಬಾಲಚಂದ್ರ, ಭಾ.ಅ.ಸೇ.,

ಅಧಿಕಾರಿಯುತ ಅಧಿಕಾರಿಗಳು ಹಾಗೂ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು,

ಭದ್ರಾವತಿ ವಿಭಾಗ, ಭದ್ರಾವತಿ.

ಪಿರ್ಯಾಧಿದಾರರು : ವಲಯ ಅರಣ್ಯಾಧಿಕಾರಿ,

ಭದ್ರಾವತಿ ವಲಯ.

(ಪರ:ಸಹಾಯಕ ಸರ್ಕಾರಿ ಅಭಿಯೋಜಕರು, ಭದ್ರಾವತಿ)

ಅರ್ಜಿದಾರರು : ಶ್ರೀ ಭೈರಪ್ಪ ಬಿನ್ ನಿಂಗಪ್ಪ,

ವ್ಯವಸಾಯಗಾರರು, ಅತ್ತಿಗುಂದ ಗ್ರಾಮದ

ವಾಸಿ, ಭದ್ರಾವತಿ ತಾಲ್ಲೂಕು.

(ಪರವಾಗಿ: ಶ್ರೀ ಕೆ.ಎನ್. ಶ್ರೀಹರ್ಷ, ವಕೀಲರು)

ಪ್ರಕರಣದ ಹಿನ್ನೆಲೆ:-

ದಿನಾಂಕ: 17-12-2011 ರಂದು ಭದ್ರಾವತಿ ವಲಯದ ನಗರ ತನಿಖಾ ವನಪಾಲಕರು ಮತ್ತು ಸಿಬ್ಬಂದಿಯವರು ಭದ್ರಾವತಿ ನಗರದ ರಂಗಪ್ಪ ಸರ್ಕಲ್ ಹತ್ತಿರ ಚನ್ನಗಿರಿ ಕಡೆಯಿಂದ ಬರುತ್ತಿದ್ದ ಟ್ರಾಕ್ಟರ್ ಸಂಖ್ಯೆ:ಕೆಎ-14-ಟಿ-9780 ಮತ್ತು ಟ್ರೈಲರ್ ಕೆಎ-14-ಟಿ-2798 ರಲ್ಲಿ ಅಕ್ರಮವಾಗಿ ಸಾಗುವಾನಿ ಸೈಜು 221=1.230 ಎಂ3, ಹುನಾಲು 3=0.036 ಎಂ3, ಹೊನ್ನೆ 2=0.018 ಎಂ3 ಹಾಗೂ ಮತ್ತಿ 3=0.026 ಎಂ3 ಸೈಜುಗಳನ್ನು 70 ಚೀಲ ಅಡಿಕೆ (4900 ಕೆ.ಜಿ.)ಯನ್ನು ಸಾಗಿಸುತ್ತಿದ್ದನ್ನು ವಶಪಡಿಸಿಕೊಂಡು ಸ್ಥಳದಲ್ಲೇ ಪಂಚನಾಮೆ ಜರುಗಿಸಿ ಅರಣ್ಯ ಮೊಕದ್ದಮೆ ಸಂಖ್ಯೆ: 68/2011-12 ನ್ನು ದಾಖಲು ಮಾಡಿರುತ್ತಾರೆ. ಈ ಸಂಬಂಧ ಪ್ರಕರಣದ ದಾಖಲಾತಿಗಳನ್ನು ಈ ಕಛೇರಿ ನ್ಯಾಯಾಲಯ ಸಮಕ್ಷಮ ಹಾಜರುಪಡಿಸಿ ಪ್ರಕರಣವನ್ನು ಕರ್ನಾಟಕ ಅರಣ್ಯ ಕಾಯ್ದೆ 1963 ನಿಯಮ 50, 62, 80, 71(ಎ) ಹಾಗೂ ಅರಣ್ಯ ಕಾನೂನು 1969 ನಿಯಮ 144, 165 ರಂತೆ ಕ್ರಮ ಜರುಗಿಸಲು ಕೋರಿರುತ್ತಾರೆ.

ದಾಖಲಾತಿಗಳನ್ನು ಪರಿಶೀಲಿಸಿ ಅರಣ್ಯ ಕಾಯ್ದೆ 71 (ಎ) ಪ್ರಕಾರ ಕ್ರಮ ಜರುಗಿಸಿ ವಾಹವನ್ನು ವಲಯ ಅರಣ್ಯಾಧಿಕಾರಿ, ಭದ್ರಾವತಿ ವಲಯ ಇವರ ವಶಕ್ಕೆ ಕೊಡಲಾಗಿದೆ.

ವಾಹನದ ಮಾಲೀಕರು ದಿನಾಂಕ: 27-12-2011 ರಂದು ವಕೀಲರ ಮುಖಾಂತರ ಅರ್ಜಿ ಸಲ್ಲಿಸಿ ಟ್ರಾಕ್ಟರ್ ಸಂಖ್ಯೆ:ಕೆಎ-14-ಟಿ-9780 ಹಾಗೂ ಟ್ರೈಲರ್ ಕೆಎ-14-ಟಿ-2798 ರ ಮಾಲೀಕನಾಗಿರುತ್ತೇನೆ. ಸದರಿ ವಾಹನವನ್ನು ವಲಯ ಅರಣ್ಯಾಧಿಕಾರಿ, ಭದ್ರಾವತಿ ವಲಯ ಸಿಬ್ಬಂದಿ ವರ್ಗದವರು ಅಮಾನತ್ತು ಪಡಿಸಿಕೊಂಡಿರುತ್ತಾರೆ. ಸದರಿ ವಾಹನದಿಂದಲೇ ನನ್ನ ಜೀವನ ಸಾಗುತ್ತಿದ್ದು, ವಾಹನವು ಕೃಷಿ ಉಪಯೋಗಕ್ಕಾಗಿ ಅವಶ್ಯಕತೆಯಿದ್ದು ವಾಹನವನ್ನು ಸಾಲ ಮಾಡಿ ಖರೀದಿಸಿದ್ದು, ಸಾಲದ ಕಂತನ್ನು ಸದರಿ ವಾಹನದ ಉತ್ಪತ್ತಿಯಿಂದಲೇ ತೀರಿಸಬೇಕಾಗಿರುತ್ತದೆ. ಕಛೇರಿ ಬಯಲಿನಲ್ಲಿ ವಿಚಾರಣೆ ಮುಗಿಯುವವರೆಗೂ ನಿಲ್ಲಿಸಿದ್ದಲ್ಲಿ ಅದು ಉಪಯೋಗಕ್ಕೆ ಬಾರದಂತೆ ಆಗುತ್ತದೆ. ನ್ಯಾಯಾಲಯವು ಒದಗಿಸುವ ಷರತ್ತಿಗೆ ಬದ್ಧನಾಗಿರುತ್ತೇನೆ. ವಾಹನವನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಬೇಕೆಂದು ಕೋರಿಕೊಂಡಿರುತ್ತಾರೆ.

ದಿನಾಂಕ: 31-12-2011 ರಂದು ವಾಹನದ ಮಾಲೀಕರಿಗೆ ಅರಣ್ಯ ಕಾಯ್ದೆ 71(ಬಿ) ಪ್ರಕಾರ ವಾಹನವನ್ನು ಸರ್ಕಾರಕ್ಕೆ ಏಕೆ ಮುಟ್ಟುಗೋಲು ಮಾಡಿಕೊಳ್ಳಬಾರದು ಎಂಬುವ ಬಗ್ಗೆ ಸಮಜಾಯಿಸಿ ನೀಡಲು ಕಾರಣ ಕೇಳಿ ತಿಳುವಳಿಕೆ ಪತ್ರ ನೀಡಿರುತ್ತದೆ. ವಾಹನದ ಮಾಲೀಕರು 07-01-2012 ರಂದು ಸಮಜಾಯಿಸಿ ನೀಡಿ ದಿನಾಂಕ:16-12-2011 ರಂದು ವಲಯ ಅರಣ್ಯಾಧಿಕಾರಿ, ಭದ್ರಾವತಿ ವಲಯ ಇವರು ಅಕ್ರಮ ಅರಣ್ಯ ಉತ್ಪನ್ನ ಸಾಗಾಣಿಕೆ ಸಂಬಂಧ ವಶಪಡಿಸಿಕೊಂಡ ಟ್ರಾಕ್ಟರ್ ಸಂಖ್ಯೆ:ಕೆಎ-14-ಟಿ-9780 ಮತ್ತು ಟ್ರೈಲರ್ ಕೆಎ-14-ಟಿ-2798 ರ ವಾಹನದಲ್ಲಿ ಅರಣ್ಯ ಉತ್ಪನ್ನವು ಕಡಿಮೆ ತಿಳುವಳಿಕೆಯಿಂದ ಸಾಗಾಣಿಕೆಯಾಗಿದ್ದು ಯಾವುದೇ ದುರದ್ದೇಶದಿಂದ ಮಾಡಿರುವುದಿಲ್ಲ. ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತೇನೆ. ವಾಹನದಿಂದಲೇ ಜೀವನೋಪಾಯ ಆಗುತ್ತಿರುವುದರಿಂದ ಸದರಿ ವಾಹನದಿಂದಲೇ ಜೀವನೋಪಾಯ ನಡೆಯುತ್ತಿರುತ್ತದೆ. ವಾಹನವನ್ನು ಕಛೇರಿ ಬಯಲಿನಲ್ಲಿ ಇಟ್ಟಿರುವುದರಿಂದ ವಾಹನವು ಹಾಳಾಗಿ ಉಪಯೋಗಕ್ಕೆ ಬಾರದಂತಾಗುತ್ತದೆ. ಈ ಬಗ್ಗೆ ವಾಹನ ಬಿಡುಗಡೆ ಕೋರಿ ಈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿರುತ್ತಾರೆ. ಹಾಗೂ ನ್ಯಾಯಾಲಯವು ವಿಧಿಸುವ ಷರತ್ತುಗಳಿಗೆ ಬದ್ಧನಿರುವುದಾಗಿ ತಿಳಿಸಿ ವಾಹನ ಬಿಡುಗಡೆ ಮಾಡಬೇಕಾಗಿ ಕೋರಿರುತ್ತಾರೆ.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ೫೩೭೧

ದಿನಾಂಕ: 12-01-2012 ರಂದು ಸರ್ಕಾರಿ ಸಹಾಯಕ ಅಭಿಯೋಜಕರು, ಭದ್ರಾವತಿ ಇವರು ಆಕ್ಷೇಪಣೆ ವರದಿ ಒಪ್ಪಿಸಿ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರು/ವಾಹನದ ಮಾಲೀಕರ ನೇಮಿಸಿದಂತಹ ಪ್ರತಿನಿಧಿಗಳು ಅಪರಾಧದಲ್ಲಿ ಭಾಗಿ ಆಗಿರುವುದು ಮೇಲುನೋಟಕ್ಕೆ ಕಂಡುಬಂದಿರುತ್ತದೆ. ಪ್ರಕರಣಕ್ಕೆ ಸಂಬಂಧಿಸಿದ ವಾಹನವನ್ನು ಈ ಹಂತದಲ್ಲಿ ಬಿಡುಗಡೆ ಮಾಡಿದಲ್ಲಿ ವಾಹನದ ಬಣ್ಣ ಚಹರೆ ಹಾಗೂ ವಾಹನದ ಬಿಡಿ ಭಾಗಗಳನ್ನು ಬದಲಿಸುವ ಸಾಧ್ಯತೆಯಿರುತ್ತದೆ. ಹಾಗೂ ವಾಹನವನ್ನು ದುರ್ಬಳಕೆಗೆ ಉಪಯೋಗಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಮುಂದಿನ ತನಿಖೆಗೆ ಅಡಚಣೆ ಉಂಟಾಗುವ ಸಾದ್ಯತೆ ಹೆಚ್ಚಿರುತ್ತದೆ. ಆದ್ದರಿಂದ ವಾಹನವನ್ನು ಈ ಹಂತದಲ್ಲಿ ಬಿಡುಗಡೆ ಮಾಡಬಾರದಾಗಿ ವಿನಂತಿಸಿರುತ್ತಾರೆ.

ಮೇಲ್ಕಂಡ ಪ್ರಕರಣದ ಬಗ್ಗೆ ಪಿರ್ಯಾಧಿದಾರರು ಸಲ್ಲಿಸಿದ ದಾಖಲಾತಿಗಳು ಅರ್ಜಿದಾರರು ವಕೀಲರ ಮುಖಾಂತರ ಸಲ್ಲಿಸಿದ ಮಧ್ಯಂತರ ಅರ್ಜಿ ಹಾಗೂ ಸಮಜಾಯಿಷಿ ಮತ್ತು ಸಹಾಯಕ ಸರ್ಕಾರಿ ಅಭಿಯೋಜಕರು, ಜೆ.ಎಂ.ಎಫ್.ಸಿ. ನ್ಯಾಯಾಲಯ, ಭದ್ರಾವತಿ ರವರು ಸಲ್ಲಿಸಿದ ತಕರಾರು ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ `. 3,00,000/-ಕ್ಕೆ ಜಮೀನನ್ನು ಆಧಾರ ಮಾಡಿಕೊಂಡು ಇತರೆ ಷರತ್ತುಗಳ ಬಗ್ಗೆ ಇಂಡಂಮ್ನಿಟಿ ಬಾಂಡ್‌ನ್ನು ಪಡೆದು ವಾಹನವನ್ನು ತಾತ್ಕಾಲಿಕವಾಗಿ ದಿನಾಂಕ:20-01-2012 ರಂದು ಬಿಡುಗಡೆಗೊಳಿಸಿ ಆದೇಶಿಸಲಾಗಿರುತ್ತದೆ.

ಈ ಪ್ರಕರಣದ ಬಗ್ಗೆ ಈ ಕಛೇರಿ ನ್ಯಾಯಾಲಯದಲ್ಲಿ ದಿನಾಂಕ: 15-06-2012 ರಿಂದ 14-09-2017 ರವರೆಗೆ ವಿವಿಧ ದಿನಾಂಕಗಳನ್ನು ಗೊತ್ತುಪಡಿಸಿ ಪ್ರಕರಣದ ಬಗ್ಗೆ ಅಂತಿಮ ಆದೇಶ ಹೊರಡಿಸಲು ವಿಚಾರಣೆಯನ್ನು ನಡೆಸಿರುತ್ತದೆ. ದಿನಾಂಕ: 14-05-2015 ರಂದು ಶ್ರೀ ಮಂಜುನಾಥ ಹಿರೇಮಠ್, ಉಪ ವಲಯ ಅರಣ್ಯಾಧಿಕಾರಿ ಇವರನ್ನು ಪಿ.ಡಬ್ಲ್ಯೂ1 ಸಾಕ್ಷಿದಾರರನ್ನಾಗಿ ಹಾಗೂ ಶ್ರೀ ಜಿ. ಹನುಮಂತಪ್ಪ, ಉಪ ವಲಯ ಅರಣ್ಯಾಧಿಕಾರಿ ಇವರನ್ನು ದಿನಾಂಕ:04-06-2015 ರಂದು ಪಿಡಬ್ಲ್ಯೂ2 ಸಾಕ್ಷಿದಾರರನ್ನಾಗಿ ವಿಚಾರಣೆಯನ್ನು ಅಭಿಯೋಜನಾವತಿಯಿಂದ ಮಾಡಲಾಗಿರುತ್ತದೆ. ಅರ್ಜಿದಾರರ ಪರ ವಕೀಲರು ಹಾಗೂ ಅರ್ಜಿದಾರರು ಸುರ್ದೀಘವಾಗಿ ಗೈರು ಹಾಜರಾಗಿರುವುದರಿಂದ ಪಾಟೀ ಸವಾಲು ಇಲ್ಲವೆಂದು ತೀರ್ಮಾನಿಸಲಾಯಿತು.

ಪ್ರತಿವಾದಿಯ ಪರವಾಗಿ ವಾಹನದ ಮಾಲೀಕರಾದ ಶ್ರೀ ಭೈರಪ್ಪ ಬಿನ್ ನಿಂಗಪ್ಪ, ವ್ಯವಸಾಯಗಾರರು, ಅತ್ತಿಗುಂದ ಗ್ರಾಮದ ವಾಸಿ ಇವರಿಗೆ ವಿಚಾರಣೆಗೆ ಹಾಜರಾಗಿ ತಾತ್ಕಾಲಿಕವಾಗಿ ಬಿಡುಗಡೆ ಮಾಡಿದ ವಾಹನವನ್ನು ನ್ಯಾಯಾಲಯದ ಸಮಕ್ಷಮ ಹಾಜರುಪಡಿಸಲು ನೋಟೀಸ್ ನೀಡಲು ತಿಳಿಸಿದರು ಸಹ ಗೈರು ಹಾಜರಾಗಿರುತ್ತಾರೆ.

ಈ ಪ್ರಕರಣದಲ್ಲಿ ಪ್ರಾಧಿಕಾರಕ್ಕೆ ಹಾಜರುಪಡಿಸಿದ ದಾಖಲಾತಿಗಳನ್ನು ಹಾಗೂ ಅರ್ಜಿದಾರರ ಪರವಾಗಿ ನ್ಯಾಯವಾದಿಗಳು ಸಲ್ಲಿಸಿದ ಅರ್ಜಿ ಹಾಗೂ ಪಿರ್ಯಾಧಿ ಪರ ಸಹಾಯಕ ಸರ್ಕಾರಿ ಅಭಿಯೋಜಕರು ಹಾಗೂ ಅರ್ಜಿದಾರರ ಪರ ಮಂಡಿಸಿದ ವಾದ ವಿವಾದವನ್ನು ಪರೀಶಿಲಿಸಿ ಆಲಿಸಲಾಯಿತು.

ಈ ಪ್ರಕರಣದಲ್ಲಿ ವಾಸ್ತಾವಾಂಶ ಮತ್ತು ಕಾನೂನಿನ ವಸ್ತುಸ್ಥಿತಿ ಲಭ್ಯವಿದ್ದ ವಿಷಯ ಸಾಮಗ್ರಿಗಳ ತಳಹದಿಯ ಮೇಲೆ ಗಮನಿಸಿ ಪರಿಗಣಿಸಬೇಕಾದ ಅಂಶಗಳು ಈ ಕೆಳಗಿನಂತಿದೆ.

1. ಅರ್ಜಿದಾರರ ಟ್ರಾಕ್ಟರ್ & ಟ್ರೈಲರ್ ಸಂಖ್ಯೆ:ಕೆಎ-14-ಟಿ-9780 ಹಾಗೂ ಕೆಎ-14-ಟಿ-27-98 ರ ವಾಹನದಲ್ಲಿ ಸಾಗುವಾನಿ ಸೈಜು 121=1.230 ಎಂ3, ಹುನಾಲು 3=0.036 ಎಂ3, ಹೊನ್ನೆ 2=0.018 ಎಂ3 ಹಾಗೂ ಮತ್ತಿ 3=0.026 ಎಂ3 ಸೈಜುಗಳನ್ನು ಮತ್ತು 70 ಚೀಲದ ಅಡಿಕೆ (4900 ಕೆ.ಜಿ.)ಯನ್ನು ದಿನಾಂಕ: 17-12-2011 ರಂದು ಕಾನೂನಿಗೆ ವಿರುದ್ಧವಾಗಿ ಸಾಗಿಸಲು ಉಪಯೋಗಿಸಲಾಗಿತ್ತೆ? ಹಾಗೂ ಈ ರೀತಿ ಸಾಗಿಸುವ ಮುಖಾಂತರ ಅರಣ್ಯ ಅಪರಾಧವೆಸಗಿ ಕರ್ನಾಟಕ ಅರಣ್ಯ ಕಾಯಿದೆ ಮತ್ತು ನಿಯಮ ಉಲ್ಲಂಘಿಸಲಾಗಿದೆಯೇ?

2. ಕರ್ನಾಟಕ ಅರಣ್ಯ ಕಾಯ್ದೆಯಂತೆ 71(ಬಿ) (1) ರ ಪ್ರಕಾರ ವಾಹನದ ಮಾಲೀಕರಿಗೆ ಕಾರಣ ಕೇಳೀ ನೋಟೀಸ್ ನೀಡಲಾಗಿದೆಯೇ ಅವರ ಅಹವಾಲನ್ನು ಮಂಡಿಸಿ ಸಮರ್ಥಿಸಿಕೊಳ್ಳಲು ಸಾಕಷ್ಟು ಅವಕಾಶ ನೀಡಲಾಗಿದೆಯೇ?

3. ವಾಹನದ ಮಾಲೀಕರು ಅಥವಾ ಕೆಲಸಗಾರರು ಆಥವಾ ಅವರ ಪ್ರತಿನಿಧಿಗಳು ವಾಹನದಲ್ಲಿ ಅಕ್ರಮವಾಗಿ ಸರ್ಕಾರದ ಸ್ವತ್ತಾದ ಅರಣ್ಯ ಉತ್ಪನ್ನವನ್ನು ಸಾಗಿಸಲು ಶಾಮೀಲಾಗಿದ್ದಾರೆಯೇ? ಹಾಗೂ ವಾಹನದ ಮಾಲೀಕರ ಪ್ರತಿನಿಧಿಗಳ ಗಮನಕ್ಕೆ ಬಾರದಂತೆಯೇ ವಾಹನವನ್ನು ಅರಣ್ಯ ಉತ್ಪನ್ನ ಕಳ್ಳ ಸಾಗಾಣಿಕೆಗೆ ಉಪಯೋಗಿಸಲಾಗಿದೆಯೇ? ಹಾಗೂ ಈ ವಾಹನವನ್ನು ಇಂತಹ ಅಕ್ರಮ ಕಾನೂನು ಬಾಹಿರ ಅರಣ್ಯ ಉತ್ಪನ್ನ ಸಾಗಾಣಿಕೆಗೆ ಉಪಯೋಗಿಸಿ ಕಾನೂನು ಬಾಹಿರ ಅರಣ್ಯ ಉತ್ಪನ್ನ ಸಾಗಾಣಿಕೆಗೆ ಉಪಯೋಗಿಸದಂತೆ ವಾಹನದ ಮಾಲೀಕರು ಅಥವಾ ಚಾಲಕರು ಅಥವಾ ಅವರ ಪ್ರತಿನಿಧಿಗಳು ಸಾಕಷ್ಟು ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡಿರುತ್ತಾರೆಯೇ?

4. ವಾಹನದ ಮಾಲೀಕರು ನ್ಯಾಯಾಲಯದ ದಿನಾಂಕ: 20-01-2012 ರ ವಾಹನದ ತಾತ್ಕಾಲಿಕ ಬಿಡುಗಡೆ ಆದೇಶದ ಷರತ್ತುಗಳನ್ನು ಉಲ್ಲಂಘನೆ ಮಾಡಿರುತ್ತಾರೆಯೇ?

5. ಏನು ತೀರ್ಮಾನಕ್ಕೆ ಬರಬಹುದಾಗಿದೆ?

ಈ ಮೇಲಿನ ಅಂಶಗಳಿಗೆ ಈ ಕೆಳಗಿನಂತೆ ಉತ್ತರಿಸಿ ಈ ಕೆಳಗಿನಂತೆ ತೀರ್ಮಾನಕ್ಕೆ ಬರಲಾಗಿದೆ. ಅದಕ್ಕೆ ಕಾರಣಗಳನ್ನು ಈ ಕೆಳಗಿನಂತೆ ನೀಡಲಾಗಿದೆ. 1. 1ನೇ ಅಂಶಕ್ಕೆ ಹೌದು ಎಂತಲೂ 2. 2ನೇ ಅಂಶಕ್ಕೆ ಹೌದು ಎಂತಲೂ 3. 3ನೇ ಅಂಶಕ್ಕೆ ಮೊದಲನೇ ಭಾಗದ ಪ್ರಶ್ನೆಗೆ ಹೌದು ಎಂದು ಎರಡು ಮತ್ತು 3ನೇ ಭಾಗದ ಪ್ರಶ್ನೆಗೆ ಇಲ್ಲ ಎಂದಾಗಿರುತ್ತದೆ. 4. 4ನೇ ಅಂಶಕ್ಕೆ ಹೌದು ಎಂತಲೂ

ಕಾರಣಗಳು

ಅಂಶ-1

ದಿನಾಂಕ: 17-12-2011 ರಂದು ಭದ್ರಾವತಿ ವಲಯದ ನಗರ ತನಿಖಾ ವನಪಾಲಕರು ಮತ್ತು ಸಿಬ್ಬಂದಿಯವರು ಭದ್ರಾವತಿ ನಗರದ ರಂಗಪ್ಪ ಸರ್ಕಲ್ ಹತ್ತಿರ ಚನ್ನಗಿರಿ ಕಡೆಯಿಂದ ಬರುತ್ತಿದ್ದ ಟ್ರಾಕ್ಟರ್ ಸಂಖ್ಯೆ:ಕೆಎ-14-ಟಿ-9780 ಮತ್ತು ಟ್ರೈಲರ್ ಕೆಎ-14-ಟಿ-2798 ರಲ್ಲಿ ಅಕ್ರಮವಾಗಿ ಸಾಗುವಾನಿ ಸೈಜು 221=1.230 ಎಂ3, ಹುನಾಲು 3=0.036 ಎಂ3, ಹೊನ್ನೆ 2=0.018 ಎಂ3 ಹಾಗೂ ಮತ್ತಿ 3=0.026 ಎಂ3 ಸೈಜುಗಳನ್ನು 70 ಚೀಲ ಅಡಿಕೆ (4900 ಕೆ.ಜಿ.)ಯನ್ನು ಸಾಗಿಸುತ್ತಿದ್ದನ್ನು ವಶಪಡಿಸಿಕೊಂಡು ಸ್ಥಳದಲ್ಲೇ ಪಂಚನಾಮೆ ಜರುಗಿಸಿ ಅರಣ್ಯ ಮೊಕದ್ದಮೆ ಸಂಖ್ಯೆ:68/2011-12 ನ್ನು ದಾಖಲು೫೩೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ಭಾಗ ೩ ಮಾಡಿರುತ್ತಾರೆ. ಈ ಸಂಬಂಧ ಪ್ರಕರಣದ ದಾಖಲಾತಿಗಳನ್ನು ಈ ಕಛೇರಿ ನ್ಯಾಯಾಲಯ ಸಮಕ್ಷಮ ಹಾಜರುಪಡಿಸಿ ಪ್ರಕರಣವನ್ನು ಕರ್ನಾಟಕ ಅರಣ್ಯ ಕಾಯ್ದೆ 1963 ನಿಯಮ 50, 62, 80, 71(ಎ) ಹಾಗೂ ಅರಣ್ಯ ಕಾನೂನು 1969 ನಿಯಮ 144, 165 ರಂತೆ ಕ್ರಮ ಜರುಗಿಸಲು ಕೋರಿರುತ್ತಾರೆ.

ದಾಖಲಾತಿಗಳನ್ನು ಪರಿಶೀಲಿಸಿ ಅರಣ್ಯ ಕಾಯ್ದೆ 71 (ಎ) ಪ್ರಕಾರ ಕ್ರಮ ಜರುಗಿಸಿ ವಾಹವನ್ನು ವಲಯ ಅರಣ್ಯಾಧಿಕಾರಿ, ಭದ್ರಾವತಿ ವಲಯ ಇವರ ವಶಕ್ಕೆ ಕೊಡಲಾಗಿರುತ್ತದೆ.

ಈ ಪ್ರಕರಣದಲ್ಲಿ ದಿನಾಂಕ:14-05-2015 ರಂದು ಶ್ರೀ ಮಂಜುನಾಥ ಹಿರೇಮಠ್, ಉಪ ವಲಯ ಅರಣ್ಯಾಧಿಕಾರಿ ಇವರು ಪಿ.ಡಬ್ಲ್ಯೂ1 ಸಾಕ್ಷಿದಾರರನ್ನಾಗಿ ಅಭಿಯೋಜನಾವತಿಯಿಂದ ವಿಚಾರಣೆ ಮಾಡಲಾಗಿ ದಿನಾಂಕ:16-12-2011 ರಂದು ಭದ್ರಾವತಿ ವಲಯ ಅರಣ್ಯಾಧಿಕಾರಿಯಾದ ಶ್ರೀ ಮುಕುಂದಚಂದ್ರ ಇವರು ದೂರವಾಣಿ ಮೂಲಕ ಚನ್ನಗಿರಿ ರಸ್ತೆಯಲ್ಲಿ ಮರದ ತುಂಡುಗಳನ್ನು ಅಕ್ರಮವಾಗಿ ಟ್ರಾಕ್ಟರ್‌ನಲ್ಲಿ ತರುತ್ತಿದ್ದು ಅದನ್ನು ತಪಾಸಣೆ ಮಾಡಲು ತಿಳಿಸಿರುತ್ತಾರೆ. ಬೆಳಿಗ್ಗೆ 7.00 ಗಂಟೆಗೆ ರಂಗಪ್ಪ ಸರ್ಕಲ್ ಹತ್ತಿರ ಬಂದಾಗ ಅಲ್ಲಿ ಶ್ರೀ ಹನುಮಂತಪ್ಪ ಜಿ. ನಗರ ತನಿಖಾ ವನಪಾಲಕರು ಮತ್ತು ಎಸ್.ಪಿ. ಸುರೇಂದ್ರ ಸಹ ಬಂದಿದ್ದರು. ಸುಮಾರು 7.30ರ ಸಮಯದಲ್ಲಿ ಟ್ರಾಕ್ಟರ್ ಬಂದಿದ್ದು ತಡೆದು ವಾಹನ ಚಾಲಕನನ್ನು ವಿಚಾರಿಸಿದಾಗ ವಾಹನದಲ್ಲಿ ಅಡಿಕೆ ಚೀಲಗಳು ತುಂಬಿದ್ದು ಯಾವುದೇ ಅರಣ್ಯ ಉತ್ಪನ್ನ ಇರುವುದಿಲ್ಲವೆಂದು ವಾಗ್ವಾದ ಮಾಡಿರುತ್ತಾನೆ. ನಂತರ ಅವನನ್ನು ಸಮದಾನ ಪಡಿಸಿ ವಾಹನವನ್ನು ತಪಾಸಣೆಗೋಸ್ಕರ ವಲಯ ಅರಣ್ಯಾಧಿಕಾರಿ ಕಛೇರಿಗೆ ತೆಗೆದುಕೊಂಡು ಹೋಗಿರುತ್ತೇವೆ. ಕಛೇರಿ ಆವರಣದಲ್ಲಿ ವಾಹನದಲ್ಲಿದ್ದ ಅಡಿಕೆ ಚೀಲವನ್ನು ಸರಿಸಿ ನೋಡಿದಾಗ ಸಾಗುವಾನಿ, ಹೊನ್ನೆ, ಮತ್ತಿ, ಮತ್ತು ಹುನಾಲು ಜಾತಿಯ ಸೈಜುಗಳಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ರಹದಾರಿ ಕೇಳಲಾಗಿ ರಹದಾರಿ ಇಲ್ಲವೆಂದು ತಿಳಿಸಿದ್ದು, ರಹದಾರಿ ಇಲ್ಲದೇ ಸಾಗಾಣಿಕೆ ಮಾಡಿರುವುದು ಅಕ್ರಮವಾಗಿರುವುದರಿಂದ ಆರೋಪಿಗಳ ಸಮೇತ ವಶಪಡಿಸಿಕೊಂಡಿರುತ್ತೇವೆ.

ವಾಹನದ ಸಂಖ್ಯೆ:ಕೆಎ-14-ಟಿ-9780 ಟ್ರೈಲರ್ ನಂಬರ್ ನನಗೆ ಗೊತ್ತಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಈ ಬಗ್ಗೆ ಸ್ಥಳದಲ್ಲೇ ಮಹಜರ್ ಕ್ರಮ ಜರುಗಿಸಿ ಸದರಿ ಸ್ಥಳ ಮಹಜರ್‌ನ್ನು ನಿಶಾನೆ ಪಿ1 ಎಂದು, ಸಾಕ್ಷಿದಾರರ ಸಹಿಯನ್ನು ಪಿ1ಎ ಎಂದು ಗುರುತಿಸಲಾಗಿರುತ್ತದೆ. ಸೈಜುಗಳ ಮೇಲೆ ಇಲಾಖಾ ಛಾಪಾ ಕೆ.ಎನ್.ಎಫ್.ಡಿ. ಬಿ.ಎಫ್.1ಬಿಬಿ ಮುದ್ರಿಸಲಾಗಿ ಕ್ರಮ ಸಂಖ್ಯೆಯನ್ನು 1 ರಿಂದ 229 ರ ವರೆಗೆ ಬಿಳಿ ಬಣ್ಣದಿಂದ ಕೊಡಲಾಗಿರುತ್ತದೆ ಎಂದು ತಿಳಿಸಿರುತ್ತಾರೆ.

ಸ್ಥಳ ಪಂಚನಾಮೆಗೆ ಸಾರ್ವಜನಿಕರಾದ ಅಶೋಕ ಮಂಜುನಾಥ ಇವರುಗಳು ಸಹಿ ಮಾಡಿರುತ್ತಾರೆ ಎಂದು ಹೇಳಿಕೆ ನೀಡಿರುತ್ತಾರೆ. ಅರ್ಜಿದಾರರ ಪರ ವಕೀಲರಾದ ಶ್ರೀ ಕೆ.ಎನ್.ಎಸ್. ಇವರು ಮಾಡಿದ ಪಾಟೀ ಸವಾಲಿನಲ್ಲಿ ಪಿ.ಡಬ್ಲ್ಯೂ1 ಸಾಕ್ಷಿದಾರರು ನೀಡಿದ ಹೇಳಿಕೆಯಂತೆ ರಂಗಪ್ಪ ಸರ್ಕಲ್‌ನಲ್ಲಿ ಸ್ಥಳ ಪಂಚನಾಮೆಯನ್ನು ಮಾಡಿರುವುದಿಲ್ಲ. ವಲಯ ಅರಣ್ಯಾಧಿಕಾರಿಗಳ ಕಛೇರಿಗೆ ಖಾಸಾಗಿ ಪಂಚಾಯಿತಿದಾರರನ್ನು ಕರೆದುಕೊಂಡು ಹೋಗಿದ್ದು ಅವರ ಹೆಸರು ಅಶೋಕ ಮಂಜುನಾಥ ಆಗಿರುತ್ತಾರೆ. ಪಂಚನಾಮೆಯನ್ನು ಎಸ್.ಪಿ. ಸುರೇಂದ್ರ, ಅರಣ್ಯ ರಕ್ಷಕ ಇವರು ಬರೆದಿರುತ್ತಾರೆ. ವಾಹನದ ಮಾಲೀಕರ ಬಗ್ಗೆ ಪಂಚನಾಮೆಯಲ್ಲಿ ನಮೂದಿಸಿರುವುದು ನಿಖರವಾಗಿ ಗೊತ್ತಿರುವುದಿಲ್ಲ. ಖಾಸಾಗಿ ಪಂಚರ ಸಮಕ್ಷಮ ಪಂಚನಾಮೆಯನ್ನು ಬರೆದಿರುತ್ತೇವೆ. ಪ್ರಕರಣದಲ್ಲಿ ವಶಪಡಿಸಿಕೊಂಡ ಉತ್ಪನ್ನಗಳಿಗೂ ವಾಹನದ ಮಾಲೀಕರಾದ ಭೈರಪ್ಪ ಇವರಿಗೆ ಸಂಬಂಧ ಇಲ್ಲವೆಂದರೆ ಸರಿಯಲ್ಲ. ಪ್ರಕರಣದಲ್ಲಿ ಹನುಮಂತಪ್ಪ ವನಪಾಲಕರು ಇವರು ಸಾಕ್ಷಿ ಹೇಳಿದಂತೆ ಎಂದರೆ ಸರಿಯಲ್ಲ. ಪ್ರಕರಣದ ಪ್ರತಿಯೊಂದು ವಿಚಾರವು ನನಗೆ ಗೊತ್ತಿರುತ್ತದೆ. ಮೇಲಾಧಿಕಾರಿಗಳು ಸಿದ್ಧಪಡಿಸಿದ ಪಂಚನಾಮೆಗೆ ನಂತರ ಕಛೇರಿಯಲ್ಲಿ ಸಹಿ ಮಾಡಿದ್ದೇನೆ ಎಂದರೆ ಸರಿಯಲ್ಲ.

ದಿನಾಂಕ: 04-06-2005 ರಂದು ಪಿ.ಡಬ್ಲ್ಯೂ2 ಸಾಕ್ಷಿದಾರ ಹೇಳಿಕೆ ನೀಡಿದ್ದು ದಿನಾಂಕ: 16-12-2011 ರಂದು ಅಕ್ರಮವಾಗಿ ಸಾಗುವಾನಿ, ಹೊನ್ನೆ, ಹುನಾಲು ಮತ್ತು ಮತ್ತಿ ಜಾತಿಯ ಅಕ್ರಮ ಸೈಜುಗಳನ್ನು ಅಡಿಕೆ ಚೀಲದೊಂದಿಗೆ ಸಾಗಿಸುತ್ತಿರುವುದನ್ನು ಪತ್ತೇ ಹಚ್ಚಿ ವಶಪಡಿಸಿಕೊಂಡಿರುತ್ತೇವೆ. ಈ ಬಗ್ಗೆ ವಲಯ ಅರಣ್ಯಾಧಿಕಾರಿಗಳ ಕಛೇರಿ ಆವರಣದಲ್ಲಿ ಸ್ಥಳ ಪಂಚನಾಮೆಯನ್ನು ಜರುಗಿಸಿದ್ದು ಅದನ್ನು ಈಗಾಗಲೇ ನಿಶಾನೆ ಪಿ1 ಎಂದು ಗುರುತಿಸಿದ್ದು ಅದರಲ್ಲಿರುವ ಸಾಕ್ಷಿದಾರರ ಸಹಿಯನ್ನು ಪಿ1ಬಿ ಎಂದು ಗುರುತಿಸಿಕೊಂಡಿರುತ್ತಾರೆ. ಅಮಾನತ್ತು ವರದಿಯನ್ನು ನಾನೇ ದಾಖಲಿಸಿದ್ದು ಅದನ್ನು ನಿಶಾನೆ ಪಿ2 ಎಂದು ಗುರುತಿಸಿದ್ದು ಅದರಲ್ಲಿರುವ ಸಹಿಯನ್ನು ಪಿ2ಎ ಎಂದು ಗುರುತಿಸಿಕೊಂಡಿರುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಥಮ ಮಾಹಿತಿ ವರದಿಯನ್ನು ನಿಶಾನೆ ಪಿ3 ಎಂದು ಗುರುತಿಸಿದ್ದು, ಅದರಲ್ಲಿರುವ ಸಾಕ್ಷಿದಾರರ ಸಹಿಯನ್ನು ಪಿ3 ಎಂದು ಗುರುತಿಸಲಾಯಿತು. ಅರ್ಜಿದಾರರ ಪರ ಕೆ.ಎನ್.ಎಸ್. ವಕೀಲರು ಮಾಡಿದ ಪಾಟೀ ಸವಾಲಿನಲ್ಲಿ ಪ್ರಕರಣದಲ್ಲಿ ವಶಪಡಿಸಿಕೊಂಡ ಉತ್ಪನ್ನಗಳಿಗೂ ವಾಹನದ ಮಾಲೀಕ ಭೈರಪ್ಪನವರಿಗೂ ಸಂಬಂಧ ಇಲ್ಲವೆಂದರೆ ಸರಿಯಲ್ಲ. ವಾಹನದಲ್ಲಿ ಅಕ್ರಮವಾಗಿ ಅರಣ್ಯ ಉತ್ಪನ್ನವು ಸಾಗಾಣಿಕೆಯಾಗುತ್ತಿರುವುದು ನಿಜವಿರುತ್ತದೆ ಎಂದು ಪಾಟಿ ಸವಾಲಿನಲ್ಲಿ ತಿಳಿಸಿರುತ್ತಾರೆ.

ಅಭಿಯೋಜನವಾವತಿಯಿಂದ ಸಾಕ್ಷಿದಾರರಿಗೆ ಮಾಡಿದ ಮುಖ್ಯ ವಿಚಾರಣೆಯಲ್ಲಿ ಅರ್ಜಿದಾರರ ವಾಹನವು ಸಾಗುವಾನಿ, ಹೊನ್ನೆ, ಹುನಾಲು ಮತ್ತು ಮತ್ತಿ ಜಾತಿಯ ಸೈಜುಗಳನ್ನು ಸಾಗಿಸಲು ಉಪಯೋಗಿಸಲಾಗಿತ್ತು ಎಂಬುದನ್ನು ದೃಡಪಡಿಸಿರುತ್ತಾರೆ. ಅರ್ಜಿದಾರರ ಪರ ವಕೀಲರು ಮಾಡಿದ ಪಾಟೀ ಸವಾಲಿನಲ್ಲಿ ವಾಹನವು ಸಾಗುವಾನಿ, ಹೊನ್ನೆ, ಹುನಾಲು ಮತ್ತು ಮತ್ತಿ ಜಾತಿಯ ಸೈಜುಗಳ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ ಭಾಗಿಯಾಗಿರುವುದಿಲ್ಲ ಎಂಬ ಬಗ್ಗೆ ಯಾವುದೇ ವ್ಯತಿರಿಕ್ತ ಹೇಳಿಕೆಗಳನ್ನು ಸಾಕ್ಷಿದಾರರು ನೀಡಿರುವುದಿಲ್ಲ. ಈ ಪ್ರಕರಣದ ವಾಹನದಲ್ಲಿ ಅರಣ್ಯ ಉತ್ಪನ್ನ ಸಾಗಿಸಿರುವುದು ದೃಡಪಟ್ಟಿರುತ್ತದೆ.

ಆದ್ದರಿಂದ ಅಂಶ-1ಕ್ಕೆ ನನ್ನ ಉತ್ತರ ಹೌದು ಎಂಬುದಾಗಿದೆ.

ಅಂಶ-2:-

ಈ ಪ್ರಕರಣದಲ್ಲಿ ಅಮಾನತ್ತುಪಡಿಸಿದ ಟ್ರಾಕ್ಟರ್ & ಟ್ರೈಲರ್ ಕೆಎ-14-ಟಿ-9780 ಮತ್ತು ಕೆಎ-14-ಟಿ-2798 ರ ಮಾಲೀಕರಾದ ಶ್ರೀ ಭೈರಪ್ಪ ಬಿನ್ ನಿಂಗಪ್ಪ, ವ್ಯವಸಾಯಗಾರರ, ಅತ್ತಿಗುಂದ ಗ್ರಾಮ ಇವರು ದಿನಾಂಕ:27-12-2011 ರಂದು ಈ ನ್ಯಾಯಾಲಯಕ್ಕೆ ಮಧ್ಯಂತರ ಸ್ವಾಧೀನಕ್ಕೆ ಬಿಡುಗಡೆ ಮಾಡಲು ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ದಿನಾಂಕ:31-12-2011 ರಂದು ವಾಹನದ ಮಾಲೀಕರಿಗೆ ಅರಣ್ಯ ಕಾಯ್ದೆ 1963 71 (ಬಿ) ಪ್ರಕಾರ ಕಾರಣ ಕೇಳಿ ತಿಳುವಳಿಕೆ ಪತ್ರ ನೀಡಿರುತ್ತದೆ. ಅರ್ಜಿದಾರರು ದಿನಾಂಕ:07-01-2012 ರಂದು ಸಮಾಜಾಯಿಷಿಯನ್ನು ನೀಡಿರುತ್ತಾರೆ. ಅರ್ಜಿದಾರರ ವಾಹನದ ತಾತ್ಕಾಲಿಕ ಬಿಡುಗಡೆಗೆ ಕೋರಿದ ಅರ್ಜಿಯನ್ನು ಪುರಸ್ಕರಿಸಿ ದಿನಾಂಕ:20-01-2012 ರಂದು ವಾಹನವನ್ನು ತಾತ್ಕಾಲಿಕವಾಗಿ ಬಿಡುಗಡೆಗೊಳಿಸಿರುತ್ತದೆ. ಆದ ಕಾರಣ ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷನ್ 71(ಬಿ)ಪ್ರಕಾರ ಆರ್.ಸಿ. ಮಾಲೀಕರಿಗೆ ಅವಕಾಶ ನೀಡಿರುವುದಾಗಿ ತೀರ್ಮಾನಿಸಿರುತ್ತೇನೆ. ಆದ್ದರಿಂದ ಕಾರಣ ಅಂಶ 2ಕ್ಕೆ ನನ್ನ ಉತ್ತರ ಹೌದು ಎಂಬುದಾಗಿದೆ.

ಅಂಶ-3:-

ವಾಹನದ ಮಾಲೀಕರು ದಿನಾಂಕ:27-12-2011 ರಂದು ವಕೀಲರ ಮುಖಾಂತರ ಅರ್ಜಿ ಸಲ್ಲಿಸಿ ಟ್ರಾಕ್ಟರ್ ಸಂಖ್ಯೆ:ಕೆಎ-14-ಟಿ-9780 ಹಾಗೂ ಟ್ರೈಲರ್ ಕೆಎ-14-ಟಿ-2798 ರ ಮಾಲೀಕನಾಗಿರುತ್ತೇನೆ. ಸದರಿ ವಾಹನವನ್ನು ವಲಯ ಅರಣ್ಯಾಧಿಕಾರಿ, ಭದ್ರಾವತಿ ವಲಯ ಸಿಬ್ಬಂದಿ ವರ್ಗದವರು ಅಮಾನತ್ತು ಪಡಿಸಿಕೊಂಡಿರುತ್ತಾರೆ. ಸದರಿ ವಾಹನದಿಂದಲೇ ನನ್ನ ಜೀವನ ಸಾಗುತ್ತಿದ್ದು, ವಾಹನವು ಕೃಷಿ ಉಪಯೋಗಕ್ಕಾಗಿ ಅವಶ್ಯಕತೆಯಿದ್ದು ವಾಹನವನ್ನುಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ೫೩೭೩ ಸಾಲ ಮಾಡಿ ಖರೀದಿಸಿದ್ದು, ಸಾಲದ ಕಂತನ್ನು ಸದರಿ ವಾಹನದ ಉತ್ಪತ್ತಿಯಿಂದಲೇ ತೀರಿಸಬೇಕಾಗಿರುತ್ತದೆ. ಕಛೇರಿ ಬಯಲಿನಲ್ಲಿ ವಿಚಾರಣೆ ಮುಗಿಯುವವರೆಗೂ ನಿಲ್ಲಿಸಿದ್ದಲ್ಲಿ ಅದು ಉಪಯೋಗಕ್ಕೆ ಬಾರದಂತೆ ಆಗುತ್ತದೆ. ನ್ಯಾಯಾಲಯವು ಒದಗಿಸುವ ಷರತ್ತಿಗೆ ಬದ್ಧನಾಗಿರುತ್ತೇನೆ. ವಾಹನವನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಬೇಕೆಂದು ಕೋರಿಕೊಂಡಿರುತ್ತಾರೆ. ದಿನಾಂಕ: 31-12-2011 ರಂದು ವಾಹನದ ಮಾಲೀಕರಿಗೆ ಅರಣ್ಯ ಕಾಯ್ದೆ 71(ಬಿ0 ಪ್ರಕಾರ ನೋಟೀಸ್ ನೀಡಿರುತ್ತದೆ. ದಿನಾಂಕ: 07-01-2011 ರಂದು ಸಮಜಾಯಿಷಿ ನೀಡಿರುತ್ತಾರೆ. ಅವರ ಅರ್ಜಿ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಬಾಕಿಯಿರಿಸಿಕೊಂಡು `. 3,00,000/- ಲಕ್ಷಕ್ಕೆ ಜಾಮೀನು ಪಡೆದು ಇತರೆ ಷರತ್ತುಗಳೊಂದಿಗೆ ತಾತ್ಕಾಲಿಕವಾಗಿ ವಾಹನವನ್ನು ಬಿಡುಗಡೆಗೊಳಿಸಿರುತ್ತದೆ.

ಈ ಪ್ರಕರಣದ ಬಗ್ಗೆ ಡಿಫೆನ್ಸ್ ಪರವಾಗಿ ಅರ್ಜಿದಾರರ ವಿಚಾರಣೆ ಮಾಡಲು ಹಾಗೂ ಅವರ ಬಳಿ ಇರುವ ಸಾಕ್ಷ್ಯಧಾರಗಳನ್ನು ಹಾಜರು ಪಡಿಸಲು ಹಲವಾರು ದಿನಾಂಕಗಳಂದು ನೋಟಿಸ್ ಜಾರಿ ಮಾಡಿ ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಿದ್ದರು. ನ್ಯಾಯಾಲಯಕ್ಕೆ ಹಾಜರಾಗದೆ ಹಾಗೂ ಯಾವುದೆ ಸಾಕ್ಷ್ಯದಾರಗಳನ್ನು ಹಾಜರುಪಡಿಸದೇ ಗೈರು ಹಾಜರಾಗಿರುತ್ತಾರೆ. ಅರ್ಜಿದಾರರ ವಾಹನದಲ್ಲಿ ಅಕ್ರಮ ಅರಣ್ಯ ಉತ್ಪನ್ನಗಳು ಸಾಗಾಣಿಕೆಗೆ ಬಳಕೆಯಾಗದಂತೆ ವಾಹನದ ಮಾಲೀಕರು ಅಥವಾ ಅದರ ಪ್ರತಿನಿಧಿಗಳು ಅಥವಾ ಅದಕ್ಕೆ ಸಂಬಂಧಪಟ್ಟವರು ವಾಹನವನ್ನು ಸರ್ಕಾರದ ಸೊತ್ತಾದ ಅರಣ್ಯ ಉತ್ಪನ್ನವನ್ನು ರಹದಾರಿಯಿಲ್ಲದೇ ಕಳ್ಳ ಸಾಗಾಣಿಕೆಗೆ ಬಳಸಿದಾಗ ಅದು ತನ್ನ ಗಮನಕ್ಕೆ ಬಾರದಂತೆ ಈ ಕೃತ್ಯ ನಡೆದಿದೆ ಎಂಬುದನ್ನು ಸಮರ್ಥಿಸುವ ಸಾಕ್ಷ್ಯಧಾರಗಳನ್ನು ವಾಹನದ ಮಾಲೀಕರು ನೀಡಿರುವುದಿಲ್ಲ. ಅಲ್ಲದೇ ಈ ವಾಹನದಲ್ಲಿ ಅರಣ್ಯ ಉತ್ಪನ್ನಗಳು ಅಕ್ರಮ ಸಾಗಾಣಿಕೆಗೆ ಬಳಕೆಯಾಗದಂತೆ ವಾಹನದ ಮಾಲೀಕರು ಅಥವ ಅದರ ಪ್ರತಿನಿಧಿಗಳು ಯಾವುದೇ ಮುನ್ನೆಚ್ಚರಿಕೆ ವಹಿಸಿದ ಬಗ್ಗೆ ಸಮರ್ಪಕವಾದ ಸಾಕ್ಷ್ಯಧಾರ ನೀಡಿರುವುದಿಲ್ಲ. ವಾಹನದಲ್ಲಿ ನನ್ನ ಗಮನಕ್ಕೆ ಬಾರದಂತೆ ಈ ಕೃತ್ಯ ನಡೆದಿದೆ ಎಂಬುದಕ್ಕೆ ಕರ್ನಾಟಕ ಅರಣ್ಯ ಕಾಯಿದೆ ಕಲಂ 71(ಬಿ) (2) ರೀತ್ಯಾ ಸಾಬೀತು ಪಡಿಸುವ ಜವಾಬ್ದಾರಿ ವಾಹನದ ಮಾಲೀಕರಿಗೆ ಸೇರಿದ್ದಾಗಿರುತ್ತದೆ. ಅಲ್ಲದೇ ವಾಹನದ ಮಾಲೀಕರ ಎಜೆಂಟರಾಗಲೀ, ಚಾಲಕರಾಗಲೀ ಅಥವಾ ಇತರೆ ನಂಬಿಕೆ ಪ್ರತಿನಿಧಿಗಳು ವಾಹನದಲ್ಲಿ ಅಕ್ರಮ ಸಾಗಾಣಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಸಹ ಅವರುಗಳ ಜವಬ್ದಾರಿಯಾಗಿರುತ್ತದೆ.

"Without prejudice to the provisions of sub-section (1), no order confiscating any tool,rope, chain, boat, vehicle or cattle shall be made under section 71A if the owner of the tool,rope,chain,boat,vehicle or cattle proves to the satisfaction of the authorised officer that it was used in carrying the timber, sandalwood, charcoal, firewood or ivory without the knowledge or connivance of the owner himself, his agent, if any, and the person in charge of the tool,rope,chain,boat,vehicle or cattle and that each of them had taken all reasonable and necessary precautions against such use."

ಹಾಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಾಹನದ ಮಾಲೀಕರು ಈ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯನ್ನು ಗಮನಿಸಿದಾಗ ವಾಹನವನ್ನು ಬಿಡಿಸಿಕೊಳ್ಳಲು ಸೃಷ್ಟಿಸಿದ ಒಂದು ಕಟ್ಟುಕತೆ ಎಂದು ಹಾಗೂ ವಾಹನದಲ್ಲಿ ಅರಣ್ಯ ಉತ್ಪನ್ನಗಳ ಅಕ್ರಮ ಸಾಗಾಣಿಕೆಯು ವಾಹನದ ಮಾಲೀಕರಿಗೆ ಗೊತ್ತಿದ್ದೇ ಈ ಕೃತ್ಯ ನಡೆದಿದೆಯೆಂದು ಅಭಿಪ್ರಾಯ ಪಡುತ್ತೇನೆ.

ಈ ಮೇಲಿನ ಎಲ್ಲಾ ಕಾರಣಗಳಿಂದ 3ನೇ ಅಂಶದ ಪ್ರಶ್ನೆಗೆ ಮೊದಲನೇ ಭಾಗದ ಪ್ರಶ್ನೆಗೆ ನನ್ನ ಉತ್ತರ ಹೌದು ಎಂದು ಎರಡನೇ ಹಾಗೂ 3ನೇ ಭಾಗದ ಪ್ರಶ್ನೆಗೆ ನನ್ನ ಉತ್ತರ ಇಲ್ಲವೆಂದು ಅಭಿಪ್ರಾಯ ಪಡುತ್ತೇನೆ.

ಅಂಶ-4:-

ಅರ್ಜಿದಾರರಿಗೆ ದಿನಾಂಕ:20-01-2012 ರಂದು ವಾಹನವನ್ನು `. 3,00,000/-ಕ್ಕೆ ಜಾಮೀನನ್ನು ಪಡೆದು ವಾಹನವನ್ನು ಬೇರೆಯವರಿಗೆ ಮಾರಾಟ ಮಾಡುವಂತಿಲ್ಲ ಹಾಗೂ ವರ್ಗಾಯಿಸುವಂತಿಲ್ಲ ಮತ್ತು ವಾಹನದ ಮೌಲ್ಯಕ್ಕೆ ದಕ್ಕೆ ಬಾರದಂತೆ ಮಾರ್ಪಾಟು ಮಾಡುವಂತಿಲ್ಲ, ದೀಡುಮಾಡುವಂತಿಲ್ಲ. ವಾಹನವನ್ನು ಯಾವುದೇ ಅಕ್ರಮ ಸಾಗಾಣಿಕೆಯಲ್ಲಿ ತೊಡಗಿಸಕೂಡದು. ವಾಹನವನ್ನು ಅಧಿಕೃತ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಭದ್ರಾವತಿ ರವರು ಆದೇಶಿಸಿದ ದಿನಾಂಕಗಳಂದು ತಪ್ಪದೇ ನ್ಯಾಯಾಲಯಕ್ಕೆ ಹಾಜರುಪಡಿಸತಕ್ಕದ್ದು. ಮೊಕದ್ದಮೆಯು ಅಂತಿಮವಾಗಿ ತೀರ್ಮಾನವಾಗುವವರೆಗೆ ವಿಚಾರಣೆ ದಿನಾಂಕದಂದು ಈ ನ್ಯಾಯಾಲಯದಲ್ಲಿ ಹಾಜರಾಗತಕ್ಕದ್ದು. ಮೇಲ್ಕಂಡ ಯಾವುದೇ ಷರತ್ತುಗಳನ್ನು ಉಲ್ಲಂಘನೆ ಮಾಡಿದಲ್ಲಿ ಏಕ ಪಕ್ಷೀಯವಾಗಿ ಪ್ರಕರಣದ ಬಗ್ಗೆ ಕ್ರಮ ಜರುಗಿಸಿ ಜಾಮೀನು ನೀಡಿದ ಆಸ್ತಿಯನ್ನು ಸರ್ಕಾರದ ಪರ ಮುಟ್ಟುಗೋಲು ಮಾಡಿ ವಾಹನವನ್ನು ಸರ್ಕಾರ ಪರ ಮುಟ್ಟುಗೋಲು ಹಾಕಿ ಕೊಳ್ಳಲಾಗುವುದು. ಈ ಬಗ್ಗೆ ಮುಚ್ಚಳಿಕೆ ಪತ್ರವನ್ನು ಛಾಪಾ ಕಾಗದದಲ್ಲಿ ಹಾಜರು ಪಡಿಸುವುದು ಎಂಬ ಷರತ್ತಿನ ಮೇರೆಗೆ ವಾಹನವನ್ನು ತಾತ್ಕಾಲಿಕ ಬಿಡುಗಡೆ ಮಾಡಲಾಗಿರುತ್ತದೆ.

ಅರ್ಜಿದಾರರು ನ್ಯಾಯಾಲಯದ ಷರತ್ತಿನಂತೆ ಘನ ನ್ಯಾಯಾಲಯಕ್ಕೆ ಹಾಜರಾಗಾದೇ ಗೈರು ಹಾಜರಾಗಿದ್ದು ವಾಹನವನ್ನು ನ್ಯಾಯಾಲಯದ ಸಮಕ್ಷಮ ವಿಚಾರಣೆಗೆ ಹಾಜರು ಪಡಿಸಿರುವುದಿಲ್ಲ. ನ್ಯಾಯಾಲಯದ ಎಲ್ಲಾ ಷರತ್ತುಗಳನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಕಂಡುಬಂದಿರುತ್ತದೆ.

ಆದ್ದರಿಂದ ಅಂಶ-4 ಕ್ಕೆ ಹೌದು ಎಂಬುದಾಗಿದೆ.

ಈ ಮೇಲಿನ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ವಾಹನದ ಮಾಲೀಕರು ಅರಣ್ಯ ಉತ್ಪನ್ನಗಳ ಸಾಗಾಣಿಕೆಯಲ್ಲಿ ಭಾಗವಹಿಸಲು ವಾಹನವನ್ನು ಉಪಯೋಗಿಸಿರುವುದು ಸ್ಪಷ್ಟವಾಗಿ ಕಂಡುಬಂದಿರುತ್ತದೆ. ಅಲ್ಲದೇ ಪ್ರಾಧೀಕಾರಕ್ಕೆ ಹಾಜರುಪಡಿಸಿದ ಪ್ರಕರಣದ ಮಹಜರ್ ನಿಶಾನೆ ಪಿ1ರ ಪ್ರಕಾರ ಹಾಗೂ ಪ್ರಾಸಿಕ್ಯೂಷನ್ ಸಾಕ್ಷಿಗಳಾದ ಪಿಡಬ್ಲ್ಯೂ1 ಮತ್ತು 2 ರವರು ಈ ಪ್ರಾಧಿಕಾರದಲ್ಲಿ ಸಾಕ್ಷಿ ನುಡಿದಂತೆ ಸಾಗುವಾನಿ ಸೈಜು 221=1.230 ಎಂ3, ಹುನಾಲು 3=0.036 ಎಂ3, ಹೊನ್ನೆ 2=0.018 ಎಂ3 ಹಾಗೂ ಮತ್ತಿ 3=0.026 ಎಂ3 ಸೈಜುಗಳನ್ನು 70 ಚೀಲ ಅಡಿಕೆ (4900 ಕೆ.ಜಿ.)ಯನ್ನು ಸಾಗಿಸಲು ವಾಹನ ಬಳಸಿರುವುದು ಸ್ಪಷ್ಟವಾಗಿ ಕಂಡು ಬಂದಿರುತ್ತದೆ. ಅಲ್ಲದೇ ನನ್ನ ಮುಂದೆ ಹಾಜರುಪಡಿಸಿದ ದಾಖಲಾತಿಗಳು ಸಾಕ್ಷ್ಯಧಾರಗಳು ಮತ್ತು ವಾದ ವಿವಾದಗಳಿಂದ ವಾಹನ ಮಾಲೀಕರಾಗಲೀ ಇಲ್ಲವೇ ವಾಹನದ ಉಸ್ತುವಾರಿದಾರರಾಗಲೀ ವಾಹನವು ಅಕ್ರಮ ಅರಣ್ಯ ಉತ್ಪನ್ನ ಸಾಗಾಣಿಕೆಯಲ್ಲಿ ಭಾಗಿ ಆಗದಂತೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದೇ ಬದಲಾಗಿ ತಮಗೆ ಗೊತ್ತಿದ್ದೆ ಈ ಎಲ್ಲಾ ವ್ಯಕ್ತಿಗಳು ಈ ವಾಹನದಲ್ಲಿ ಅಕ್ರಮವಾಗಿ ಸಾಗುವಾನಿ ತುಂಡುಗಳು ಅರಣ್ಯ ಕಾಯ್ದೆ 1963 ಕಲಂ 50, 62,80, 71(ಎ) ಹಾಗೂ ಅರಣ್ಯ ಕಾನೂನು 1969 ನಿಯಮ 144, 165 ರ ವಿರುದ್ಧವಾಗಿ ಸಾಗಿಸಲು ಉಪಯೋಗಿಸಿದ್ದಾರೆಂದು ಹಾಗೂ ದಿನಾಂಕ:20-01-2012 ರಂದು ಈ ಕಛೇರಿ ನ್ಯಾಯಾಲಯದಿಂದ ನೀಡಿದ ವಾಹನದ ತಾತ್ಕಾಲಿಕ ಬಿಡಿಗಡೆ ಆದೇಶದ ಷರತ್ತುಗಳನ್ನು ಉಲ್ಲಂಘಿಸಿರುವುದಾಗಿ ತೀರ್ಮಾನಿಸಿ ಈ ಕೆಳಕಂಡಂತೆ ಆದೇಶ ನೀಡ ಬಯಸುತ್ತೇನೆ.

೫೩೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ಭಾಗ ೩

ಆದೇಶ

ಈ ಮೇಲ್ಕಾಣಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ದಾಖಲಾತಿಗಳನ್ನು ಹಾಗೂ ಸಾಕ್ಷ್ಯಧಾರಗಳನ್ನು ಮತ್ತು ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಟಿ. ಬಾಲಚಂದ್ರ, ಭಾ.ಅ.ಸೇ., ಅಧಿಕಾರಿಯುತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಭದ್ರಾವತಿ ವಿಭಾಗ, ಭದ್ರಾವತಿ ಆದ ನಾನು ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 71(ಎ) (2ನೇ ತಿದ್ದುಪಡಿ) ಪ್ರಕಾರ ಟ್ರಾಕ್ಟರ್ & ಟ್ರೈಲರ್ ವಾಹನ ಸಂಖ್ಯೆ:ಕೆಎ-14-ಟಿ-9780 ಮತ್ತು ಕೆಎ-14-ಟಿ-2798 ಹಾಗೂ ಸಾಗುವಾನಿ ಸೈಜು 221=1.230 ಎಂ3, ಹುನಾಲು 3=0.036 ಎಂ3, ಹೊನ್ನೆ 2=0.018 ಎಂ3 ಹಾಗೂ ಮತ್ತಿ 3=0.026 ಎಂ3 ಸೈಜುಗಳನ್ನು 70 ಚೀಲ ಅಡಿಕೆ (4900 ಕೆ.ಜಿ.)ಯನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿ ಆದೇಶ ಹೊರಡಿಸಿರುತ್ತೇನೆ.

ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾದಲ್ಲಿ ಈ ಆದೇಶ ಹೊರಡಿಸಿದ 30 ದಿವಸದೊಳಗೆ ಸಲ್ಲಿಸಬಹುದಾಗಿದೆ. ತಪ್ಪಿದಲ್ಲಿ ಇದೇ ಅಂತಿಮ ಆದೇಶವಾಗಿ ಊರ್ಜಿತಗೊಳ್ಳುತ್ತದೆ. ಅಲ್ಲದೇ ಮೇಲ್ಮನವಿ ಅವಧಿ ಮೀರಿದ ಬಳಿಕ ವಾಹನ ಹಾಗೂ ಅರಣ್ಯ ಉತ್ಪನ್ನವನ್ನು ಕಾನೂನು ರೀತ್ಯಾ ವಿಲೇವಾರಿ ಮಾಡಲು ಕೂಡ ಆದೇಶಿಸಿದೆ.

ಈ ಆದೇಶವನ್ನು ದಿನಾಂಕ:28-09-2017 ರಂದು ನ್ಯಾಯಾಲಯದ ಮೊಹರು ಹಾಗೂ ನನ್ನ ಸಹಿಯೊಂದಿಗೆ ಹೊರಡಿಸಿರುತ್ತೇನೆ.

PR – 783

ಟಿ.ಬಾಲಚಂದ್ರ. ಭಾ.ಆ.ಸೇ.

SC – 05

ಅಧಿಕಾರಿಯುತ ಅಧಿಕಾರಿಗಳು

ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು,

ಭದ್ರಾವತಿ.

ಅಧಿಕಾರಿಯುತ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯ, ಭದ್ರಾವತಿ ವಿಭಾಗ, ಭದ್ರಾವತಿ.

ಸಂಖ್ಯೆ:ಎ3-ಸಿಓಎನ್-ಸಿಆರ್-8/2005-06, ದಿನಾಂಕ:14-09-2017

ಉಪಸ್ಥಿತರು : ಟಿ. ಬಾಲಚಂದ್ರ, ಭಾ.ಅ.ಸೇ.,

ಅಧಿಕಾರಿಯುತ ಅಧಿಕಾರಿಗಳು ಹಾಗೂ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು,

ಭದ್ರಾವತಿ ವಿಭಾಗ, ಭದ್ರಾವತಿ.

ಪಿರ್ಯಾದಿದಾರರು : ಪೊಲೀಸ್ ಸಬ್ ಇನ್ಸ್‌ಪೆಕ್ಟರ್,

ಚನ್ನಗಿರಿ ಪೊಲೀಸದ ಠಾಣೆ,

ಚನ್ನಗಿರಿ.

(ಪರ:ಸಹಾಯಕ ಸರ್ಕಾರಿ ಅಭಿಯೋಜಕರು, ಭದ್ರಾವತಿ)

ಅರ್ಜಿದಾರರು : ಶ್ರೀ ನಾಗಪ್ಪ ಬಿನ್ ಗಂಗಪ್ಪ,

ವ್ಯವಸಾಯಗಾರರು, ಚಿಕ್ಕಹೆಬ್ಳಿಗೆರೆ ಗ್ರಾಮ,

ಚನ್ನಗಿರಿ ತಾಲ್ಲೂಕು,

ದಾವಣಗೆರೆ ಜಿಲ್ಲೆ.

ಪ್ರಕರಣದ ಹಿನ್ನೆಲೆ:-

ದಿನಾಂಕ:03-10-2005 ರಂದು ರಾತ್ರಿ 10.00 ಗಂಟೆಗೆ ನಾಕಾ ಬಂದಿ ಪ್ರಯುಕ್ತ ಚನ್ನಗಿರಿ ಪಿ.ಎಸ್.ಐ. ಸಾಹೇಬರ್ ಆದೇಶದ ಮೇರೆಗೆ ನಾಕಾ ಬಂದಿ ರಾತ್ರಿ ಗಸ್ತು ಕರ್ತವ್ಯವನ್ನು ಪಿಸಿ 313, 390 ರವರು ಮಾಡುತ್ತಾ ಚನ್ನಗಿರಿ ಟೌನ್, ಬಸ್‌ಸ್ಟ್ಯಾಂಡ್, ಕುಮಾರ್ ಕೋಸ್, ಅಜ್ಜಿಹಳ್ಳಿ ಸರ್ಕಲ್, ರಂಗನಾಥ ಸರ್ಕಲ್, ನೃಪತುಂಗಾ ರಸ್ತೆ, ಕಲ್ ಸಾಗರ ರಸ್ತೆ ಬಸ್‌ಸ್ಟ್ಯಾಂಡ್‌ಗಳಲ್ಲಿ ಗಸ್ತು ಮಾಡುತ್ತಾ ದಿನಾಂಕ: 4-10-2005 ರಂದು ಬೆಳಗಿನ ಜಾವಾ 3.30 ಗಂಟೆ ಸಮಯದಲ್ಲಿ ತಾವರೆಕೆರೆ ಕ್ರಾಸ್ ಹತ್ತಿರ ಗಸ್ತು ಮಾಡುತ್ತಿರುವಾಗ ಹೊನ್ನೆಬಾಗಿ ಕಡೆಯಿಂದ ಒಂದು ಮೋಟಾರ್ ಸೈಕಲ್‌ನಲ್ಲಿ ಬರುತ್ತಿದ್ದ ಆಸಾಮಿಗಳನ್ನು ತಡೆದು ವಾಹನ ಚೆಕ್ ಮಾಡಿದಾಗ ಮೋಟಾರ್ ಸೈಕಲ್‌ನಲ್ಲಿದ್ದ 2 ಜನ ಆಸಾಮಿಗಳ ಮಧ್ಯೆ ಒಂದು ಹಳೆಯ ಪ್ಲಾಸ್ಟಿಕ್ ಚೀಲದಲ್ಲಿ ಶ್ರೀಗಂಧದ ಚಕ್ಕೆ ಮತ್ತು ಪೀಸುಗಳಿರುತ್ತವೆ. ಸದರಿ ಆಸಾಮಿಗಳಿಗೆ ಈ ಶ್ರೀಗಂಧದ ಚಕ್ಕೆ ಮತ್ತು ಪೀಸುಗಳನ್ನು ಎಲ್ಲಿಂದ ತಂದಿರಿ, ಇದನ್ನು ಸಾಗಿಸಲು ನಿಮ್ಮ ಬಳಿ ಏನಾದರೂ ಪರವಾನಿಗೆ ಇದೆಯೇ ಎಂದು ಕೇಳಿದಾಗ ಇಲ್ಲ ಅಂತ ತಿಳಿಸಿದರು. ಸದರಿಯವರು ಶ್ರೀಗಂಧದ ತುಂಡುಗಳನ್ನು ಕಳವು ಮಾಡಿ ಅಕ್ರಮವಾಗಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದರಿಂದ ಮೋಟಾರ್ ಸೈಕಲ್ ಚಾಲನೆ ಮಾಡುತ್ತಿದ್ದ ಆಸಾಮಿಯಮ ಹೆಸರು ವಿಳಾಸ ಕೇಳಲಾಗಿ ಹನುಮಂತ ಬಿನ್ ಕುರಿಗಂಗಪ್ಪ, ಚಿಕ್ಕಹೆಬ್ಳಿಗೆರೆ, ರಮೇಶ ಬಿನ್ ಸುಂಕಪ್ಪ, ಚಿಕ್ಕಹೆಬ್ಳಿಗೆರೆ ಅಂತ ತಿಳಿಸಿದನು ಮೋಟಾರ್ ಸೈಕಲ್ ನೋಡಲಾಗಿ ನಂಬರ್ ಇರುವುದಿಲ್ಲ. ಕೆಂಪುಬಣ್ಣದ ಟಿ.ವಿ.ಎಸ್. ವಿಕ್ಟರ್ ಮೋಟಾರ್ ಸೈಕಲ್ ಆಗಿರುತ್ತದೆ. ಸದರಿ ಪ್ಲಾಸ್ಟಿಕ್ ಚೀಲದಲ್ಲಿ ಸುಮಾರು 7 ಕೆ.ಜಿ. ತೂಕದ ಶ್ರೀಗಂಧದ ಚಕ್ಕೆ ಮತ್ತು ಮಾಲನ್ನು ಮುಂದಿನ ನಡವಳಿಕೆ ಬಗ್ಗೆ ಬೆಳಿಗ್ಗೆ 4.00 ಗಂಟೆಗೆ ಠಾಣೆಗೆ ಕರೆತಂದು ವರದಿಯಾಂದಿಗೆ ಪೊಲೀಸ್ ಸಬ್ಇನ್ಸ್‌ಪೆಕ್ಟರ್, ಚನ್ನಗಿರಿ ಪೊಲೀಸ್ ಠಾಣೆ ಸಮಕ್ಷಮ ಹಾಜರುಪಡಿಸಿರುತ್ತಾರೆ.

ಸದರಿ ಅರಣ್ಯ ಉತ್ಪನ್ನ ಹಾಗೂ ವಾಹನವನ್ನು ಠಾಣಾ ಕ್ರೈಂ ನಂ.285/2005 ಕಲಂ 379 ಐ.ಪಿ.ಸಿ. 86, 87, ಕೆ.ಎಫ್. ಆ್ಯಕ್ಟ್ ರೀತ್ಯ ಕೇಸು ದಾಖಲಿಸಿರುತ್ತಾರೆ. ನಂತರ ಈ ಕಛೇರಿ ನ್ಯಾಯಾಲಯಕ್ಕೆ ದಾಖಲಾತಿಗಳನ್ನು ಒಪ್ಪಿಸಿ ಅರಣ್ಯ ಕಾಯ್ದೆ 1963, 71(ಎ) ಪ್ರಕಾರ ಕ್ರಮ ಜರುಗಿಸಲು ಕೋರಿರುತ್ತಾರೆ. ಮೇಲ್ಕಂಡ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ಸದರಿ ಪ್ರಕರಣವನ್ನು ಅರಣ್ಯ ಕಾಯ್ದೆ 1963 ಸೆಕ್ಷನ್ 71(ಎ) ಪ್ರಕಾರ ಕ್ರಮ ಜರುಗಿಸಿ ವಶಪಡಿಸಿಕೊಂಡ ಟಿ.ವಿ.ಎಸ್. ಸಂಖ್ಯೆ ಇಲ್ಲ ಹಾಗೂ ಶ್ರೀಗಂಧ (7 ಕೆ.ಜಿ.)ವನ್ನು ವಲಯ ಅರಣ್ಯಾಧಿಕಾರಿ, ನಾಟಾ ಸಂಗ್ರಹಾಲಯ, ತರೀಕೆರೆ ರವರ ವಶಕ್ಕೆ ಸುರಕ್ಷತೆಗೆ ದಿನಾಂಕ:09-12-2005 ರಂದು ನೀಡಿರುತ್ತದೆ.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ೫೩೭೫

ದಿನಾಂಕ:03-11-2005 ರಂದು ಶ್ರೀ ನಾಗಪ್ಪ ಬಿನ್ ಗಂಗಪ್ಪ, ಚನ್ನಗಿರಿ ತಾಲ್ಲೂಕು ಇವರು ವಕೀಲರ ಮುಖಾಂತರ ಈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಮೇಲ್ಕಂಡ ಪ್ರಕರಣದಲ್ಲಿ ವಶಪಡಿಸಿ ಕೊಂಡ ಟಿ.ವಿ.ಎಸ್. ವಿಕ್ಟರ್ ಜಿ.ಎಕ್ಸ್ ವಾಹನವನ್ನು ದಿನಾಂಕ:05-9-2005ರಲ್ಲಿ ಖರೀದಿಸಿರುತ್ತೇನೆ. ಈ ಸಂಬಂಧ ದಾಖಲಾತಿಗಳನ್ನು ಒಪ್ಪಿಸಿರುತ್ತಾರೆ. ಸದರಿ ವಾಹನವನ್ನು ದಿನಾಂಕ:03-10-2005 ರಂದು ಬೆಳಿಗ್ಗೆ 10.00 ಗಂಟೆಗೆ ಮನೆಯ ಮುಂದೆ ನಿಲ್ಲಿಸಿದ್ದು ಆ ಸಮಯದಲ್ಲಿ ಹನುಮಂತಪ್ಪ ಎಂಬ ವ್ಯಕ್ತಿ ವಾಹನವು ಹೊಸದಾದ್ದರಿಂದ 1 ಸುತ್ತು ಹಾಕಿಕೊಂಡು ಬರುವುದಾಗಿ ವಾಹನವನ್ನು ತೆಗೆದುಕೊಂಡು ಹೋಗಿರುತ್ತಾರೆ. ನಂತರ ವಾಪಸ್ಸು ವಾಹನ ಹಾಗೂ ವಾಹನದಲ್ಲಿ ಹೋದ ಎರಡು ಜನ ಆಸಾಮಿಗಳು ಬರಲಿಲ್ಲ. ದಿನಾಂಕ:04-10-2005 ರಂದು ವಾಹನದ ಮೇಲೆ ಅರಣ್ಯ ಉತ್ಪನ್ನ ಸಾಗಾಣಿಕೆಯ ಆಧಾರದ ಮೇಲೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಕೇಸನ್ನು ನೊಂದಾಯಿಸಿ ಕೊಂಡಿರುತ್ತಾರೆ. ಚನ್ನಗಿರಿ ಪೊಲೀಸ್‌ನವರು ವಾಹನದ ಬಗ್ಗೆ ಸುಳ್ಳು ಕೇಸನ್ನು ನೊಂದಾಯಿಸಿ ತೊಂದರೆ ನೀಡಿರುತ್ತಾರೆ. ವಾಹನದಲ್ಲಿ ಯಾವುದೇ ಅಕ್ರಮ ಸಾಗಾಣಿಕೆ ನಡೆದಿರುವುದಿಲ್ಲ.

ವಾಹನವು ಹೊಸದಾಗಿದ್ದು ಇಲಾಖೆಯ ವಶದಲ್ಲಿ ಚಲಿಸದೇ ಇಟ್ಟಲ್ಲಿ ವಾಹನದ ಮೌಲ್ಯ ಹಾಳಾಗಿ ಉಪಯೋಗಕ್ಕೆ ಬಾರದಂತಾಗುತ್ತದೆ. ವಾಹನದ ಮಾಲೀಕನಾದ ನನ್ನ ಪಾತ್ರ ಹಾಗೂ ಬೇರೆ ಯಾರ ಪಾತ್ರವು ಸಹ ಇರುವುದಿಲ್ಲ. ವಾಹನವು ಸಾಲ ಮಾಡಿ ಖರೀದಿಸಿದ್ದು ದಯಮಾಡಿ ಮಾನ್ಯ ನ್ಯಾಯಾಲಯವು ವಾಹನವನ್ನು ಬಿಡುಗಡೆ ಮಾಡಬೇಕಾಗಿ ವಿನಂತಿಸಿರುತ್ತಾರೆ. ದಿನಾಂಕ: 14-12-2005 ರಂದು ಈ ಕಛೇರಿಯಿಂದ ವಾಹನದ ಮಾಲೀಕರಿಗೆ ಅರಣ್ಯ ಕಾಯ್ದೆ 1963, 71(ಬಿ) ಪ್ರಕಾರ ಕಾರಣ ಕೇಳಿ ತಿಳುವಳಿಕೆ ಪತ್ರ ನೀಡಿರುತ್ತದೆ. ವಾಹನದ ಮಾಲೀಕರು ದಿನಾಂಕ:14-12-2005 ರಂದು ಸಮಜಾಯಿಷಿ ನೀಡಿ ಮೇಲ್ಕಂಡ ಪ್ರಕರಣದ ವಾಹನದಲ್ಲಿ ಯಾವುದೇ ಅಪರಾಧ ನಡೆದಿರುವುದಿಲ್ಲ. ಚನ್ನಗಿರಿ ಪೊಲೀಸ್‌ನವರು ಸುಳ್ಳು ಕೇಸನ್ನು ಸೃಷ್ಟಿಮಾಡಿರುತ್ತಾರೆ. ಈ ಬಗ್ಗೆ ಚನ್ನಗಿರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಾಹನ ಬಿಡುಗಡೆ ಮಾಡುವ ಬಗ್ಗೆ ಅರ್ಜಿ ಸಲ್ಲಿಸಿದ್ದು ಘನ ನ್ಯಾಯಾಲಯವು ವಾಹನವನ್ನು ಬಿಡುಗಡೆ ಮಾಡುವ ಬಗ್ಗೆ ಈ ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲವೆಂದು ತಿರಸ್ಕರಿಸಿರುತ್ತಾರೆ. ಆದ್ದರಿಂದ ದಯಮಾಡಿ ಸೂಕ್ತ ಜಾಮೀನಿನ ಮೇಲೆ ವಾಹನವನ್ನು ಬಿಡುಗಡೆ ಮಾಡಬೇಕಾಗಿ ಕೋರಿರುತ್ತಾರೆ.

ಈ ಪ್ರಕರಣದ ಬಗ್ಗೆ ಸಹಾಯಕ ಸರ್ಕಾರಿ ಅಭಿಯೋಜಕರು, ಜೆ.ಎಂ.ಎಫ್.ಸಿ. ನ್ಯಾಯಾಲಯ, ಭದ್ರಾವತಿ ರವರು ಆಕ್ಷೇಪಣೆ ಸಲ್ಲಿಸಿ ಪ್ರಕರಣದಲ್ಲಿ ವಶಪಡಿಸಿಕೊಂಡ ವಾಹನದಲ್ಲಿ ಶ್ರೀಗಂದ ತುಂಡುಗಳು ಸಾಗಾಣಿಕೆ ಮಾಡಿದ್ದು, ಅಪರಾದಿಗಳು ಸಹ ನ್ಯಾಯಾಂಗ ಬಂಧನಕ್ಕೆ ನೀಡಿರುತ್ತಾರೆ. ವಾಹನವನ್ನು ಈ ಹಂತದಲ್ಲಿ ಬಿಡುಗಡೆ ಮಾಡಿದ್ದೇ ಆದಲ್ಲಿ ಪುನ: ಅಕ್ರಮ ಚಟುವಟಿಕೆಯಲ್ಲಿ ತೊಡಗಿಸುವ ಸಾದ್ಯತೆಯಿರುತ್ತದೆ. ಪ್ರಕರಣದ ಬಗ್ಗೆ ಸಂಪೂರ್ಣ ವಿಚಾರಣೆ ಅವಶ್ಯಕತೆಯಿದ್ದು ಅರ್ಜಿದಾರರ ಅರ್ಜಿಯನ್ನು ವಜಾ ಮಾಡಬೇಕಾಗಿ ವಿನಂತಿಸಿರುತ್ತಾರೆ.

ದಿನಾಂಕ:23-9-2006 ರಂದು ಅರ್ಜಿದಾರರು ಪುನ: ಈ ಪ್ರಕರಣದ ಬಗ್ಗೆ ಅರ್ಜಿ ಸಲ್ಲಿಸಿ ಈ ಪ್ರಕರಣಕ್ಕೆ ಸಂಬಂಧಿಸಿದ ಅಪರಾಧಿಗಳನ್ನು ಅತೀ ಶೀಘ್ರ ವಿಲೇವಾರಿ ನ್ಯಾಯಾಲಯ, ದಾವಣಗೆರೆ ಜಿಲ್ಲಾ ಸೆಷನ್ ನ್ಯಾಯಾಲಯದಲ್ಲಿ ಎಸ್.ಸಿ.ನಂ.42/2006 ದಿನಾಂಕ:18-8-2006ರ ಆದೇಶದಲ್ಲಿ ದೋಷಮುಕ್ತಗೊಳಿಸಿ ಬಿಡುಗಡೆ ಮಾಡಿ ಆದೇಶ ಹೊರಡಿಸಿರುತ್ತದೆ. ಸದರಿ ಪ್ರತಿಯನ್ನು ಈ ನ್ಯಾಯಾಲಯಕ್ಕೆ ಒಪ್ಪಿಸಿ ಈ ಪ್ರಕರಣದಲ್ಲಿ ಅಪರಾಧಿಗಳನ್ನು ನಿರಪರಾದಿಯೆಂದು ಘನ ನ್ಯಾಯಾಲಯವು ಆದೇಶ ಹೊರಡಿಸಿರುವುದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಿ ವಾಹನವನ್ನು ಬಿಡುಗಡೆ ಮಾಡಬೇಕಾಗಿ ವಿನಂತಿಸಿರುತ್ತಾರೆ.

ಈ ಪ್ರಕರಣದ ಬಗ್ಗೆ ದಿನಾಂಕ: 18-11-2006 ರಂದು ವಿಚಾರಣೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು, ಅರ್ಜಿದಾರರ ಅರ್ಜಿ ಹಾಗೂ ಅರಣ್ಯ ಕಾಯ್ದೆ 71(ಬಿ) ಪ್ರಕಾರ ನೀಡಿದ ಸಮಜಾಯಿಷಿ ಮತ್ತು ಸರ್ಕಾರಿ ಅಭಿಯೋಜಕರು ನೀಡಿದ ಆಕ್ಷೇಪಣೆಗಳನ್ನು ಪರಿಶೀಲಿಸಿದ್ದು ವಾಹನ ಮಾಲೀಕರು ಅವರ ಅರ್ಜಿಯಲ್ಲಿ ಅರಣ್ಯ ಸಿಬ್ಬಂದಿಯವರು ಸುಳ್ಳು ಮೊಕದ್ದಮೆ ದಾಖಲಿಸಿರುತ್ತಾರೆ ಎಂದು ತಿಳಿಸಿದ್ದು, ಈ ಬಗ್ಗೆ ಸಾಕ್ಷ್ಯಧಾರಗಳು ಅವಶ್ಯವಿದ್ದು ಕರ್ನಾಟಕ ಅರಣ್ಯ ಕಾಯ್ದೆ ಕಲಂ 71(ಬಿ), (2) ರೀತ್ಯಾ ಸಾಭೀತು ಪಡಿಸುವ ಜವಾಬ್ದಾರಿ ವಾಹನದ ಮಾಲೀಕರಿಗೆ ಸೇರಿದ್ದಾಗಿರುತ್ತದೆ. ಈ ಪ್ರಕರಣದ ಬಗ್ಗೆ ವಾಹನವನ್ನು ತಾತ್ಕಾಲಿಕ ಬಿಡುಗಡೆ ಮಾಡಲು ಸಲ್ಲಿಸಿರುವ ಅರ್ಜಿದಾರರ ಅರ್ಜಿಯನ್ನು ದಿನಾಂಕ:22-08-2013 ರಂದು ತಿರಸ್ಕರಿಸಿ ಆದೇಶ ಹೊರಡಿಸಿರುತ್ತದೆ.

ಈ ಪ್ರಕರಣದ ಬಗ್ಗೆ ಈ ಕಛೇರಿ ನ್ಯಾಯಾಲಯದಲ್ಲಿ ದಿನಾಂಕ:01-03-2008 ರಿಂದ 14-09-2017 ರವರೆಗೆ ವಿವಿಧ ದಿನಾಂಕಗಳನ್ನು ಗೊತ್ತುಪಡಿಸಿ ಪ್ರಕರಣದ ಬಗ್ಗೆ ಅಂತಿಮ ಆದೇಶ ಹೊರಡಿಸಲು ವಿಚಾರಣೆಯನ್ನು ನಡೆಸಿರುತ್ತದೆ. ದಿನಾಂಕ:01-03-2008 ರಂದು ಪಿ.ಡಬ್ಲ್ಯೂ1 ಸಾಕ್ಷಿದಾರರಾದ ಶ್ರೀ ಪಿ.ಬಿ.ಮಹಾದೇವಪ್ಪ ಬಿನ್ ಬಸಪ್ಪ, ಹೆಚ್.ಸಿ.90, ನ್ಯಾಮತಿ ಪೊಲೀಸ್ ಸ್ಟೇಷನ್, ಸಾಕ್ಷಿದಾರರನ್ನಾಗಿ ವಿಚಾರಣೆಯನ್ನು ಅಭಿಯೋಜನಾವತಿಯಿಂದ ಮಾಡಲಾಗಿರುತ್ತದೆ. ಅರ್ಜಿದಾರರ ಪರ ವಕೀಲರು ಹಾಗೂ ಅರ್ಜಿದಾರರು ಸುರ್ದೀಘವಾಗಿ ಗೈರು ಹಾಜರಾಗಿರುವುದರಿಂದ ಪಾಟೀ ಸವಾಲು ಇಲ್ಲವೆಂದು ತೀರ್ಮಾನಿಸಲಾಯಿತು.

ಪ್ರತಿವಾದಿಯ ಪರವಾಗಿ ವಾಹನದ ಮಾಲೀಕರಾದ ಶ್ರೀ ನಾಗಪ್ಪ ಬಿನ್ ಗಂಗಪ್ಪ, ಚನ್ನಗಿರಿ ತಾಲ್ಲೂಕು ಇವರಿಗೆ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಲು ತಿಳಿಸಿದರು ಸಹ ಗೈರು ಹಾಜರಾಗಿರುತ್ತಾರೆ.

ಈ ಪ್ರಕರಣದಲ್ಲಿ ಪ್ರಾಧಿಕಾರಕ್ಕೆ ಹಾಜರುಪಡಿಸಿದ ದಾಖಲಾತಿಗಳನ್ನು ಹಾಗೂ ಅರ್ಜಿದಾರರ ಪರವಾಗಿ ನ್ಯಾಯವಾದಿಗಳು ಸಲ್ಲಿಸಿದ ಅರ್ಜಿ ಹಾಗೂ ಪಿರ್ಯಾಧಿ ಪರ ಸಹಾಯಕ ಸರ್ಕಾರಿ ಅಭಿಯೋಜಕರು ಮಂಡಿಸಿದ ವಾದವನ್ನು ಪರೀಶಿಲಿಸಿ ಆಲಿಸಲಾಯಿತು.

ಈ ಪ್ರಕರಣದಲ್ಲಿ ವಾಸ್ತಾವಾಂಶ ಮತ್ತು ಕಾನೂನಿನ ವಸ್ತುಸ್ಥಿತಿ ಲಭ್ಯವಿದ್ದ ವಿಷಯ ಸಾಮಗ್ರಿಗಳ ತಳಹದಿಯ ಮೇಲೆ ಗಮನಿಸಿ ಪರಿಗಣಿಸಬೇಕಾದ ಅಂಶಗಳು ಈ ಕೆಳಗಿನಂತಿದೆ.

1. ಅರ್ಜಿದಾರರ ಮಹೇಂದ್ರ ಟಿವಿಎಸ್ ವಿಕ್ಟರ್ ಸಂಖ್ಯೆ:ಇಲ್ಲದ ವಾಹನದಲ್ಲಿ ಶ್ರೀಗಂಧ ಚಕ್ಕೆ ಮತ್ತು ತುಂಡುಗಳು 7 ಕೆ.ಜಿ.ಯನ್ನು ದಿನಾಂಕ:03-10- 2005 ರಂದು ಕಾನೂನಿಗೆ ವಿರುದ್ಧವಾಗಿ ಸಾಗಿಸಲು ಉಪಯೋಗಿಸಲಾಗಿತ್ತೆ? ಹಾಗೂ ಈ ರೀತಿ ಸಾಗಿಸುವ ಮುಖಾಂತರ ಅರಣ್ಯ ಅಪರಾಧವೆಸಗಿ ಕರ್ನಾಟಕ ಅರಣ್ಯ ಕಾಯಿದೆ ಮತ್ತು ನಿಯಮ ಉಲ್ಲಂಘಿಸಲಾಗಿದೆಯೇ?

2. ಕರ್ನಾಟಕ ಅರಣ್ಯ ಕಾಯ್ದೆಯಂತೆ 71(ಬಿ) (1) ರ ಪ್ರಕಾರ ವಾಹನದ ಮಾಲೀಕರಿಗೆ ಕಾರಣ ಕೇಳೀ ನೋಟೀಸ್ ನೀಡಲಾಗಿದೆಯೇ ಅವರ ಅಹವಾಲನ್ನು ಮಂಡಿಸಿ ಸಮರ್ಥಿಸಿಕೊಳ್ಳಲು ಸಾಕಷ್ಟು ಅವಕಾಶ ನೀಡಲಾಗಿದೆಯೇ?

3. ವಾಹನದ ಮಾಲೀಕರು ಅಥವಾ ಕೆಲಸಗಾರರು ಆಥವಾ ಅವರ ಪ್ರತಿನಿಧಿಗಳು ವಾಹನದಲ್ಲಿ ಅಕ್ರಮವಾಗಿ ಸರ್ಕಾರದ ಸ್ವತ್ತಾದ ಅರಣ್ಯ ಉತ್ಪನ್ನವನ್ನು ಸಾಗಿಸಲು ಶಾಮೀಲಾಗಿದ್ದಾರೆಯೇ? ಹಾಗೂ ವಾಹನದ ಮಾಲೀಕರ ಪ್ರತಿನಿಧಿಗಳ ಗಮನಕ್ಕೆ ಬಾರದಂತೆಯೇ ವಾಹನವನ್ನು೫೩೭೬ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ಭಾಗ ೩ ಅರಣ್ಯ ಉತ್ಪನ್ನ ಕಳ್ಳ ಸಾಗಾಣಿಕೆಗೆ ಉಪಯೋಗಿಸಲಾಗಿದೆಯೇ? ಹಾಗೂ ಈ ವಾಹನವನ್ನು ಇಂತಹ ಅಕ್ರಮ ಕಾನೂನು ಬಾಹಿರ ಅರಣ್ಯ ಉತ್ಪನ್ನ ಸಾಗಾಣಿಕೆಗೆ ಉಪಯೋಗಿಸಿ ಕಾನೂನು ಬಾಹಿರ ಅರಣ್ಯ ಉತ್ಪನ್ನ ಸಾಗಾಣಿಕೆಗೆ ಉಪಯೋಗಿಸದಂತೆ ವಾಹನದ ಮಾಲೀಕರು ಅಥವಾ ಚಾಲಕರು ಅಥವಾ ಅವರ ಪ್ರತಿನಿಧಿಗಳು ಸಾಕಷ್ಟು ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡಿರುತ್ತಾರೆಯೇ?

4. ಏನು ತೀರ್ಮಾನಕ್ಕೆ ಬರಬಹುದಾಗಿದೆ?

ಈ ಮೇಲಿನ ಅಂಶಗಳಿಗೆ ಈ ಕೆಳಗಿನಂತೆ ಉತ್ತರಿಸಿ ಈ ಕೆಳಗಿನಂತೆ ತೀರ್ಮಾನಕ್ಕೆ ಬರಲಾಗಿದೆ. ಅದಕ್ಕೆ ಕಾರಣಗಳನ್ನು ಈ ಕೆಳಗಿನಂತೆ ನೀಡಲಾಗಿದೆ. 1. 1ನೇ ಅಂಶಕ್ಕೆ ಹೌದು ಎಂತಲೂ 2. 2ನೇ ಅಂಶಕ್ಕೆ ಹೌದು ಎಂತಲೂ 3. 3ನೇ ಅಂಶಕ್ಕೆ ಮೊದಲನೇ ಭಾಗದ ಪ್ರಶ್ನೆಗೆ ಹೌದು ಎಂದು ಎರಡು ಮತ್ತು 3ನೇ ಭಾಗದ ಪ್ರಶ್ನೆಗೆ ಇಲ್ಲ ಎಂದಾಗಿರುತ್ತದೆ.

ಕಾರಣಗಳು

ಅಂಶ-1

ದಿನಾಂಕ:03-10-2005 ರಂದು ರಾತ್ರಿ 10.00 ಗಂಟೆಗೆ ನಾಕಾ ಬಂದಿ ಪ್ರಯುಕ್ತ ಚನ್ನಗಿರಿ ಪಿ.ಎಸ್.ಐ. ಸಾಹೇಬರ್ ಆದೇಶದ ಮೇರೆಗೆ ನಾಕಾ ಬಂದಿ ರಾತ್ರಿ ಗಸ್ತು ಕರ್ತವ್ಯವನ್ನು ಪಿಸಿ 313, 390 ರವರು ಮಾಡುತ್ತಾ ಚನ್ನಗಿರಿ ಟೌನ್, ಬಸ್‌ಸ್ಟ್ಯಾಂಡ್, ಕುಮಾರ್ ಕೋಸ್, ಅಜ್ಜಿಹಳ್ಳಿ ಸರ್ಕಲ್, ರಂಗನಾಥ ಸರ್ಕಲ್, ನೃಪತುಂಗಾ ರಸ್ತೆ, ಕಲ್ ಸಾಗರ ರಸ್ತೆ ಬಸ್‌ಸ್ಟ್ಯಾಂಡ್‌ಗಳಲ್ಲಿ ಗಸ್ತು ಮಾಡುತ್ತಾ ದಿನಾಂಕ: 4-10-2005 ರಂದು ಬೆಳಗಿನ ಜಾವಾ 3.30 ಗಂಟೆ ಸಮಯದಲ್ಲಿ ತಾವರೆಕೆರೆ ಕ್ರಾಸ್ ಹತ್ತಿರ ಗಸ್ತು ಮಾಡುತ್ತಿರುವಾಗ ಹೊನ್ನೆಬಾಗಿ ಕಡೆಯಿಂದ ಒಂದು ಮೋಟಾರ್ ಸೈಕಲ್‌ನಲ್ಲಿ ಬರುತ್ತಿದ್ದ ಆಸಾಮಿಗಳನ್ನು ತಡೆದು ವಾಹನ ಚೆಕ್ ಮಾಡಿದಾಗ ಮೋಟಾರ್ ಸೈಕಲ್‌ನಲ್ಲಿದ್ದ 2 ಜನ ಆಸಾಮಿಗಳ ಮಧ್ಯೆ ಒಂದು ಹಳೆಯ ಪ್ಲಾಸ್ಟಿಕ್ ಚೀಲದಲ್ಲಿ ಶ್ರೀಗಂಧದ ಚಕ್ಕೆ ಮತ್ತು ಪೀಸುಗಳಿರುತ್ತವೆ. ಸದರಿ ಆಸಾಮಿಗಳಿಗೆ ಈ ಶ್ರೀಗಂಧದ ಚಕ್ಕೆ ಮತ್ತು ಪೀಸುಗಳನ್ನು ಎಲ್ಲಿಂದ ತಂದಿರಿ, ಇದನ್ನು ಸಾಗಿಸಲು ನಿಮ್ಮ ಬಳಿ ಏನಾದರೂ ಪರವಾನಿಗೆ ಇದೆಯೇ ಎಂದು ಕೇಳಿದಾಗ ಇಲ್ಲ ಅಂತ ತಿಳಿಸಿದರು. ಸದರಿಯವರು ಶ್ರೀಗಂಧದ ತುಂಡುಗಳನ್ನು ಕಳವು ಮಾಡಿ ಅಕ್ರಮವಾಗಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದರಿಂದ ಮೋಟಾರ್ ಸೈಕಲ್ ಚಾಲನೆ ಮಾಡುತ್ತಿದ್ದ ಆಸಾಮಿಯಮ ಹೆಸರು ವಿಳಾಸ ಕೇಳಲಾಗಿ ಹನುಮಂತ ಬಿನ್ ಕುರಿಗಂಗಪ್ಪ, ಚಿಕ್ಕಹೆಬ್ಳಿಗೆರೆ, ರಮೇಶ ಬಿನ್ ಸುಂಕಪ್ಪ, ಚಿಕ್ಕಹೆಬ್ಳಿಗೆರೆ ಅಂತ ತಿಳಿಸಿದನು ಮೋಟಾರ್ ಸೈಕಲ್ ನೋಡಲಾಗಿ ನಂಬರ್ ಇರುವುದಿಲ್ಲ. ಕೆಂಪುಬಣ್ಣದ ಟಿ.ವಿ.ಎಸ್. ವಿಕ್ಟರ್ ಮೋಟಾರ್ ಸೈಕಲ್ ಆಗಿರುತ್ತದೆ. ಸದರಿ ಪ್ಲಾಸ್ಟಿಕ್ ಚೀಲದಲ್ಲಿ ಸುಮಾರು 7 ಕೆ.ಜಿ. ತೂಕದ ಶ್ರೀಗಂಧದ ಚಕ್ಕೆ ಮತ್ತು ಮಾಲನ್ನು ಮುಂದಿನ ನಡವಳಿಕೆ ಬಗ್ಗೆ ಬೆಳಿಗ್ಗೆ 4.00 ಗಂಟೆಗೆ ಠಾಣೆಗೆ ಕರೆತಂದು ವರದಿಯಾಂದಿಗೆ ಪೊಲೀಸ್ ಸಬ್ಇನ್ಸ್‌ಪೆಕ್ಟರ್, ಚನ್ನಗಿರಿ ಪೊಲೀಸ್ ಠಾಣೆ ಸಮಕ್ಷಮ ಹಾಜರುಪಡಿಸಿರುತ್ತಾರೆ.

ಸದರಿ ಅರಣ್ಯ ಉತ್ಪನ್ನ ಹಾಗೂ ವಾಹನವನ್ನು ಠಾಣಾ ಕ್ರೈಂ ನಂ.285/2005 ಕಲಂ 379 ಐ.ಪಿ.ಸಿ. 86, 87, ಕೆ.ಎಫ್. ಆ್ಯಕ್ಟ್ ರೀತ್ಯ ಕೇಸು ದಾಖಲಿಸಿರುತ್ತಾರೆ. ನಂತರ ಈ ಕಛೇರಿ ನ್ಯಾಯಾಲಯಕ್ಕೆ ದಾಖಲಾತಿಗಳನ್ನು ಒಪ್ಪಿಸಿ ಅರಣ್ಯ ಕಾಯ್ದೆ 1963, 71(ಎ) ಪ್ರಕಾರ ಕ್ರಮ ಜರುಗಿಸಲು ಕೋರಿರುತ್ತಾರೆ.

ಪಿ.ಡಬ್ಲ್ಯೂ1 ಸಾಕ್ಷಿದಾರ ಶ್ರೀ ಪಿ.ಬಿ.ಮಹಾದೇವಪ್ಪ ಬಿನ್ ಬಸಪ್ಪ, ಹೆಡ್ ಕಾನ್ಸ್‌ಟೇಬಲ್ ಇವರು ದಿನಾಂಕ:01-03-2008 ರಂದು ಹೇಳಿಕೆಯನ್ನು ನೀಡಿದ್ದು ದಿನಾಂಕ:03-10-2005 ರಂದು ನನ್ನನ್ನು ನಾಕಾ ಬಂಧಿಗೆ ನೇಮಿಸಿದ್ದು, ಅದೇ ರಾತ್ರಿ ಬೆಳಗಿನ ಜಾವ 3.30 ಕ್ಕೆ ತಾವರೆಕೆರೆ ಕಡೆಯಿಂದ ಒಂದು ಮೋಟಾರ್ ಸೈಕಲ್‌ನಲ್ಲಿ ಎರಡು ಆಸಾಮಿಗಳು ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ಹೋಗುತ್ತಿರುವಾಗ ಅವರನ್ನು ನಿಲ್ಲಿಸಿ ಪರಿಶೀಲಿಸಿದಾಗ ಅದರಲ್ಲಿ ಶ್ರೀಗಂಧದ ಚಕ್ಕೆಗಳು ಇದ್ದವು. ಅವುಗಳನ್ನು ಎಲ್ಲಿಂದ ತಂದರು ಎಂದು ಕೇಳಿದಾಗ ಗೊತ್ತಿಲ್ಲ ಎಂದು ತಿಳಿಸಿರುತ್ತಾರೆ. ಅವರ ಹೆಸರು ಕೇಳಲಾಗಿ ರಮೇಶ ಮತ್ತು ಹನುಮಂತಪ್ಪ, ಚಿಕ್ಕಬ್ಬಿಗೆರೆ ವಾಸಿ ಎಂದು ತಿಳಿಸಿರುತ್ತಾರೆ. ಸದರಿ ಮಾಲುಗಳು ಕಳ್ಳತನದಿಂದ ಸಾಗಿಸುತ್ತಿದ್ದಾರೆ ಎಂದು ಖಚಿತ ಪಡಿಸಿಕೊಂಡು ಸ್ಥಳದಲ್ಲಿಯೇ ಪ್ರಥಮ ವರ್ತಮಾನ ಮಾಹಿತಿಯನ್ನು ದಾಖಲಿಸಿದ್ದು ಅದನ್ನು ನಿಶಾನೆ ಪಿ1 ಎಂದು ಅದರಲ್ಲಿರುವ ಸಹಿಯನ್ನು ನಿಶಾನೆ ಪಿ1ಎ ಎಂದು ಗುರುತಿಸಿಕೊಂಡಿರುತ್ತಾರೆ. ನನ್ನ ಮತ್ತು ಸಾಕ್ಷಿದಾರರ ಸಹಿಯನ್ನು ಪಡೆದಿರುತ್ತಾರೆ. ಮಹಜರ್‌ನ್ನು ಬೆಳಿಗ್ಗೆ 9.30 ರಿಂದ 10.30 ರವರೆಗೆ ಬರೆಯಲಾಯಿತು.

ಸದರಿ ಮಹಜರ್ ನ್ನು ನಿಶಾನೆ ಪಿ2 ಎಂದು ಹಾಗೂ ಸಾಕ್ಷಿದಾರರ ಸಹಿಯನ್ನು ನಿಶಾನೆ ಪಿ2ಎ ಎಂದು ಗುರುತಿಸಲಾಯಿತು. ಆರೋಪಿಗಳನ್ನು ಮತ್ತು ವಾಹನಗಳನ್ನು ನೋಡಿದರೆ ಪ್ರಕರಣಕ್ಕೆ ಸಂಬಂಧಿಸಿದ ವಾಹನವನ್ನು ನೋಡಿದರೆ ಗುರುತಿಸುತ್ತೇನೆ ಎಂದು ಹೇಳಿಕೆ ನೀಡಿರುತ್ತಾರೆ. ಅರ್ಜಿದಾರರ ಪರ ವಕೀಲರು ಮಾಡಿದ ಪಾಟೀ ಸವಾಲಿನಲ್ಲಿ ತಾವರೆಕೆರೆ ಕ್ರಾಸ್‌ಗೂ ಪೊಲೀಸ್ ಠಾಣೆಗೂ ಅರ್ಧ ಕಿ.ಮೀ. ಆಗುತ್ತದೆ. ತಾವರೆಕೆರೆ ಕ್ರಾಸ್‌ಗೆ ಹೋಗುವ ರಸ್ತೆಯು ಚಿತ್ರದುರ್ಗ ಹೆದ್ದಾರಿಗೆ ಸೇರಿರುತ್ತದೆ. ಘಟನೆಯ ದಿವಸ ವಶಪಡಿಸಿಕೊಂಡ ಸಮಯದಲ್ಲಿ ಈ ವಾಹನ ಹೊರತುಪಡಿಸಿ ಬೇರೆ ಯಾವುದೇ ವಾಹನ ಬಂದಿರುವುದಿಲ್ಲ/ಚೆಕ್ ಮಾಡಿರುವುದಿಲ್ಲ. ನಾಕಾ ಬಂಧಿಗೆ ಹೋದಾಗ ಅನುಮಾನ ಬಂದ ವಾಹನವನ್ನು ಮಾತ್ರ ಚೆಕ್ ಮಾಡುತ್ತೇವೆ. ಪ್ರಕರಣದ ವಾಹನ ಬರುತ್ತಿರುವುದನ್ನು ಒಂದು ಫರ್ಲಾಂಗ್‌ನಿಂದ ನೋಡಿರುತ್ತೇವೆ. ವಾಹನದ ನಂಬರ್ ಪ್ಲೇಟ್ ಇದ್ದು ನಂಬರ್ ಇರಲಿಲ್ಲ. ವಿಚಾರಿಸಿದಾಗ ಮಾಹಿತಿ ತಿಳಿಸಲಿಲ್ಲ.

ವಾಹನವನ್ನು ರಮೇಶ ಎಂಬ ವ್ಯಕ್ತಿ ಓಡಿಸುತ್ತಿದ್ದ. ಠಾಣೆಗೆ ಹೋದಾಗ ಪಿ.ಎಸ್.ಐ. ಬಸಪ್ಪ ಇದ್ದರು. ವಶಪಡಿಸಿಕೊಂಡ ಶ್ರೀಗಂಧ ಅಳತೆ ಹೇಳಲು ಬರುವುದಿಲ್ಲ. ಒಟ್ಟು 7 ಕೆ.ಜಿ. ಬರುತ್ತದೆ. ಘಟನೆ ದಿವಸ ಯಾವುದೇ ವಾಹನ, ಶ್ರೀಗಂಧ ವಶಪಡಿಸಿಕೊಂಡಿಲ್ಲ ಎಂದು ಹೇಳುವುದು ಸರಿಯಲ್ಲ. ನಾಗಪ್ಪ ಎಂಬುವವರ ವಾಹನ ಪ್ರಕರಣದಲ್ಲಿ ಬಾಗಿಯಾಗಿರುತ್ತದೆ ಎಂದು ಹೇಳುತ್ತೇನೆ. ನಾಗಪ್ಪ ಠಾಣೆಗೆ ದೂರು ನೀಡಿರುವುದು ಗೊತ್ತಿಲ್ಲ. ಉದ್ದೇಶ ಪೂರ್ವಕವಾಗಿ ವಾಹನವನ್ನು ಅಮಾನತ್ತುಪಡಿಸಿಕೊಂಡಿರುತ್ತೀರ ಎಂದು ಹೇಳುವುದು ಸರಿಯಲ್ಲ ಎಂದು ಪಾಟೀ ಸವಾಲಿನಲ್ಲಿ ಹೇಳಿಕೆ ನೀಡಿರುತ್ತಾರೆ.

ಅಭಿಯೋಜನವಾವತಿಯಿಂದ ಸಾಕ್ಷಿದಾರರಿಗೆ ಮಾಡಿದ ಮುಖ್ಯ ವಿಚಾರಣೆಯಲ್ಲಿ ಅರ್ಜಿದಾರರ ವಾಹನವು ಶ್ರೀಗಂಧವನ್ನು ಸಾಗಿಸಲು ಉಪಯೋಗಿಸಲಾಗಿತ್ತು ಎಂಬುದನ್ನು ದೃಡಪಡಿಸಿರುತ್ತಾರೆ. ಅರ್ಜಿದಾರರ ಪರ ವಕೀಲರು ಮಾಡಿದ ಪಾಟೀ ಸವಾಲಿನಲ್ಲಿ ವಾಹನವು ಶ್ರೀಗಂಧ ಪ್ರಕರಣದಲ್ಲಿ ಭಾಗಿಯಾಗಿರುವುದಿಲ್ಲ ಎಂಬ ಬಗ್ಗೆ ಯಾವುದೇ ವ್ಯತಿರಿಕ್ತ ಹೇಳಿಕೆಗಳನ್ನು ಸಾಕ್ಷಿದಾರರು ನೀಡಿರುವುದಿಲ್ಲ. ಈ ಪ್ರಕರಣದ ವಾಹನದಲ್ಲಿ ಅರಣ್ಯ ಉತ್ಪನ್ನ ಸಾಗಿಸಿರುವುದು ದೃಡಪಟ್ಟಿರುತ್ತದೆ. ಆದ್ದರಿಂದ ಅಂಶ-1ಕ್ಕೆ ನನ್ನ ಉತ್ತರ ಹೌದು ಎಂಬುದಾಗಿದೆ.

ಅಂಶ-2:-

ಈ ಪ್ರಕರಣದಲ್ಲಿ ಅಮಾನತ್ತುಪಡಿಸಿದ ಟಿವಿಎಸ್ ಮೋಟಾರ್ ಸೈಕಲ್ ಸಂಖ್ಯೆ:ಇಲ್ಲದ ಮಾಲೀಕರಾದ ಶ್ರೀ ನಾಗಪ್ಪ ಬಿನ್ ಗಂಗಪ್ಪ, ಚನ್ನಗಿರಿ ತಾಲ್ಲೂಕು ಇವರು ದಿನಾಂಕ:03-11-2005 ರಂದು ಈ ನ್ಯಾಯಾಲಯಕ್ಕೆ ಮಧ್ಯಂತರ ಸ್ವಾಧೀನಕ್ಕೆ ಬಿಡುಗಡೆ ಮಾಡಲು ಕೋರಿ ಅರ್ಜಿ ಸಲ್ಲಿಸಿರುತ್ತಾರೆ.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ೫೩೭೭

ದಿನಾಂಕ:12-12-2005 ರಂದು ವಾಹನದ ಮಾಲೀಕರಿಗೆ ಅರಣ್ಯ ಕಾಯ್ದೆ 1963 71 (ಬಿ) ಪ್ರಕಾರ ಕಾರಣ ಕೇಳಿ ತಿಳುವಳಿಕೆ ಪತ್ರ ನೀಡಿರುತ್ತದೆ.

ಅರ್ಜಿದಾರರು ದಿನಾಂಕ:14-12-2005 ರಂದು ಸಮಾಜಾಯಿಷಿಯನ್ನು ನೀಡಿರುತ್ತಾರೆ. ಅರ್ಜಿದಾರರ ವಾಹನದ ತಾತ್ಕಾಲಿಕ ಬಿಡುಗಡೆಗೆ ಕೋರಿದ ಅರ್ಜಿಯನ್ನು ದಿನಾಂಕ:06-01-2007 ರಂದು ಸಂಪೂರ್ಣ ವಿಚಾರಣೆಯ ಅವಶ್ಯಕತೆ ದೃಷ್ಟಿಯಿಂದ ತಿರಸ್ಕರಿಸಲಾಗಿರುತ್ತದೆ. ವಿಚಾರಣೆಯ ದಿವಸ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯಧಾರಗಳನ್ನು ಹಾಜರುಪಡಿಸುವಲ್ಲಿ ವಿಫಲರಾಗಿರುತ್ತಾರೆ. ಆದ ಕಾರಣ ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷನ್ 71(ಬಿ)ಪ್ರಕಾರ ಆರ್.ಸಿ. ಮಾಲೀಕರಿಗೆ ಅವಕಾಶ ನೀಡಿರುವುದಾಗಿ ತೀರ್ಮಾನಿಸಿರುತ್ತೇನೆ. ಆದ್ದರಿಂದ ಕಾರಣ ಅಂಶ 2ಕ್ಕೆ ನನ್ನ ಉತ್ತರ ಹೌದು ಎಂಬುದಾಗಿದೆ.

ಅಂಶ-3:-

ವಾಹನದ ಆರ್.ಸಿ. ಮಾಲೀಕರ ಆದ ಶ್ರೀ ನಾಗಪ್ಪ ಬಿನ್ ಗಂಗಪ್ಪ, ಚಿಕ್ಕಹೆಬ್ಳೀಗೆರೆ ಗ್ರಾಮ, ಚನ್ನಗಿರಿ ತಾಲ್ಲೂಕು ಇವರು ವಕೀಲರ ಮುಖಾಂತರ ಈ ಕಛೇರಿಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಟಿವಿಎಸ್ ಮೋಟಾರ್ ಸೈಕಲ್ ಆರ್.ಸಿ. ಮಾಲೀಕನಾಗಿರುತ್ತೇನೆ. ಸದರಿ ಮೋಟಾರ್ ಸೈಕಲ್ ಹೊಸದಾಗಿರುವುದರಿಂದ ನಂಬರ್ ದೊರಕಿರುವುದಿಲ್ಲ ಎಂದು ವಾಹನಕ್ಕೆ ಸಂಬಂಧಿಸಿ ಆರ್.ಸಿ. ಜೆರಾಕ್ಸ್ ಒಪ್ಪಿಸಿರುತ್ತಾರೆ. ದಿನಾಂಕ:03-10-2005 ರಂದು ಬೆಳಿಗ್ಗೆ 10.00 ಗಂಟೆಗೆ ಹನುಮಂತಪ್ಪ ಎಂಬ ವ್ಯಕ್ತಿಯು ವಾಹನ ಹೊಸದಾದ್ದರಿಂದ ಒಂದು ಸುತ್ತು ಹಾಕಿಕೊಂಡು ಬರುವುದಾಗಿ ವಾಹನವನ್ನು ತೆಗೆದುಕೊಂಡು ಹೋಗಿರುತ್ತಾರೆ. ನಂತರ ವಾಹನ ಹಾಗೂ ವಾಹನದಲ್ಲಿ ಹೋದ ಎರಡು ಜನ ಆಸಾಮಿಗಳು ಬರಲಿಲ್ಲ. ದಿನಾಂಕ:04-10-2005 ರಂದು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಸುಳ್ಳು ಕೇಸನ್ನು ನೋಂದಾಯಿಸಿ ತೊಂದರೆ ನೀಡಿರುತ್ತಾರೆ. ವಾಹನದಲ್ಲಿ ಯಾವುದೇ ಅಕ್ರಮ ಸಾಗಾಣಿಕೆ ನಡೆದಿರುವುದಿಲ್ಲ.

ವಾಹನ ಹೊಸದಾಗಿದ್ದು, ಸಾಲ ಮಾಡಿ ಖರೀದಿಸಿದ್ದು ಮಾನ್ಯ ನ್ಯಾಯಾಲಯವು ವಾಹನವನ್ನು ಬಿಡುಗಡೆ ಮಾಡಬೇಕಾಗಿ ವಿನಂತಿಸಿರುತ್ತಾರೆ. ವಾಹನದ ಮಾಲೀಕರಿಗೆ ದಿನಾಂಕ:12-12-2005 ರಂದು ಅರಣ್ಯ ಕಾಯ್ದೆ 1963 ಸೆಕ್ಷನ್ 71 (ಬಿ) ಪ್ರಕಾರ ಕಾರಣ ಕೇಳಿ ತಿಳುವಳಿಕೆ ಪತ್ರ ನೀಡಿ ಸಮಜಾಯಿಸಿ ನೀಡಲು ತಿಳಿಸಿರುತ್ತದೆ. ವಾಹನದ ಮಾಲೀಕರು ವಕೀಲರ ಮುಖಾಂತರ ದಿನಾಂಕ:14-12-2005 ರಂದು ಸಮಜಾಯಿಸಿ ನೀಡಿ ಪ್ರಕರಣದಲ್ಲಿ ವಶಪಡಿಸಿಕೊಂಡ ವಾಹನದಲ್ಲಿ ಯಾವುದೇ ಅರಣ್ಯ ಉತ್ಪನ್ನ ಇರಲಿಲ್ಲ. ಸುಳ್ಳು ಕೇಸನ್ನು ಹಾಕಿರುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರ ಪಾತ್ರವು ಇರುವುದಿಲ್ಲ.

ವಾಹನದಿಂದಲೇ ಜೀವನ ನಿರ್ವಹಣೆ ಆಗುತ್ತಿರುವುದರಿಂದ ವಾಹನವನ್ನು ದಯಮಾಡಿ ಸೂಕ್ತ ಷರತ್ತಿನೊಂದಿಗೆ ತಾತ್ಕಾಲಿಕ ಬಿಡುಗಡೆ ಮಾಡಬೇಕಾಗಿ ಕೋರಿರುತ್ತಾರೆ.

ಈ ಪ್ರಕರಣದ ಬಗ್ಗೆ ಡಿಫೆನ್ಸ್ ಪರವಾಗಿ ಅರ್ಜಿದಾರರ ವಿಚಾರಣೆ ಮಾಡಲು ಹಾಗೂ ಅವರ ಬಳಿ ಇರುವ ಸಾಕ್ಷ್ಯಧಾರಗಳನ್ನು ಹಾಜರು ಪಡಿಸಲು ಹಲವಾರು ದಿನಾಂಕಗಳಂದು ನೋಟಿಸ್ ಜಾರಿ ಮಾಡಿ ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಿದ್ದರು. ನ್ಯಾಯಾಲಯಕ್ಕೆ ಹಾಜರಾಗದೆ ಹಾಗೂ ಯಾವುದೆ ಸಾಕ್ಷ್ಯದಾರಗಳನ್ನು ಹಾಜರುಪಡಿಸದೇ ಗೈರು ಹಾಜರಾಗಿರುತ್ತಾರೆ. ಅರ್ಜಿದಾರರ ವಾಹನದಲ್ಲಿ ಅರಣ್ಯ ಉತ್ಪನ್ನವಾದ ಶ್ರೀಗಂಧ 7 ಕೆ.ಜಿ.ಯನ್ನು ಸಾಗಾಣಿಕೆಗೆ ಬಳಕೆಯಾಗದಂತೆ ವಾಹನದ ಮಾಲೀಕರು ಅಥವಾ ಅದರ ಪ್ರತಿನಿಧಿಗಳು ಅಥವಾ ಅದಕ್ಕೆ ಸಂಬಂಧಪಟ್ಟವರು ವಾಹನವನ್ನು ಸರ್ಕಾರದ ಸೊತ್ತಾದ ಅರಣ್ಯ ಉತ್ಪನ್ನವನ್ನು ರಹದಾರಿಯಿಲ್ಲದೇ ಕಳ್ಳ ಸಾಗಾಣಿಕೆಗೆ ಬಳಸಿದಾಗ ಅದು ತನ್ನ ಗಮನಕ್ಕೆ ಬಾರದಂತೆ ಈ ಕೃತ್ಯ ನಡೆದಿದೆ ಎಂಬುದನ್ನು ಸಮರ್ಥಿಸುವ ಸಾಕ್ಷ್ಯಧಾರಗಳನ್ನು ವಾಹನದ ಮಾಲೀಕರು ನೀಡಿರುವುದಿಲ್ಲ. ಅಲ್ಲದೇ ಈ ವಾಹನದಲ್ಲಿ ಶ್ರೀಗಂಧ 7 ಕೆ.ಜಿ.ಯನ್ನು ಅಕ್ರಮ ಸಾಗಾಣಿಕೆಗೆ ಬಳಕೆಯಾಗದಂತೆ ವಾಹನದ ಮಾಲೀಕರು ಅಥವ ಅದರ ಪ್ರತಿನಿಧಿಗಳು ಯಾವುದೇ ಮುನ್ನೆಚ್ಚರಿಕೆ ವಹಿಸಿದ ಬಗ್ಗೆ ಸಮರ್ಪಕವಾದ ಸಾಕ್ಷ್ಯಧಾರ ನೀಡಿರುವುದಿಲ್ಲ. ವಾಹನದಲ್ಲಿ ನನ್ನ ಗಮನಕ್ಕೆ ಬಾರದಂತೆ ಈ ಕೃತ್ಯ ನಡೆದಿದೆ ಎಂಬುದಕ್ಕೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗದವರು ಸುಳ್ಳು ಪ್ರಕರಣವನ್ನು ದಾಖಲು ಮಾಡಿರುತ್ತಾರೆ. ಯಾವುದೇ ಅರಣ್ಯ ಉತ್ಪನ್ನವು ವಾಹನದಲ್ಲಿ ಸಾಗಿಸಿರುವುದಿಲ್ಲ ಎಂಬ ಬಗ್ಗೆ ಕರ್ನಾಟಕ ಅರಣ್ಯ ಕಾಯಿದೆ ಕಲಂ 71(ಬಿ) (2) ರೀತ್ಯಾ ಸಾಬೀತು ಪಡಿಸುವ ಜವಾಬ್ದಾರಿ ವಾಹನದ ಮಾಲೀಕರಿಗೆ ಸೇರಿದ್ದಾಗಿರುತ್ತದೆ. ಅಲ್ಲದೇ ವಾಹನದ ಮಾಲೀಕರ ಎಜೆಂಟರಾಗಲೀ, ಚಾಲಕರಾಗಲೀ ಅಥವಾ ಇತರೆ ನಂಬಿಕೆ ಪ್ರತಿನಿಧಿಗಳು ವಾಹನದಲ್ಲಿ ಅಕ್ರಮ ಸಾಗಾಣಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಸಹ ಅವರುಗಳ ಜವಬ್ದಾರಿಯಾಗಿರುತ್ತದೆ.

"Without prejudice to the provisions of sub-section (1), no order confiscating any tool,rope, chain, boat, vehicle or cattle shall be made under section 71A if the owner of the tool,rope,chain,boat,vehicle or cattle proves to the satisfaction of the authorised officer that it was used in carrying the timber, sandalwood, charcoal, firewood or ivory without the knowledge or connivance of the owner himself, his agent, if any, and the person in charge of the tool,rope,chain,boat,vehicle or cattle and that each of them had taken all reasonable and necessary precautions against such use."

ಅರಣ್ಯ ಕಾಯಿದೆ ಕಲಂ 80ರ ಪ್ರಕಾರ ಯಾವುದೇ ಅರಣ್ಯ ಅಪರಾದ ಪ್ರಕರಣದಲ್ಲಿ ವಶಪಡಿಸಿಕೊಂಡ ಅರಣ್ಯ ಉತ್ಪನ್ನ ಪ್ರಾಥಮಿಕ ಹಂತದಲ್ಲಿ ರಾಜ್ಯ ಸರ್ಕಾರದೆಂದು ಭಾವಿಸಬೇಕಾಗಿದ್ದು ಅಪಾದನೆ ಹೊರಿಸಲ್ಪಟ್ಟ ವ್ಯಕ್ತಿ ಅಮಾನತ್ತುಪಡಿಸಿಕೊಂಡ ಅರಣ್ಯ ಉತ್ಪನ್ನವು ತನಗೆ ಸೇರಿದೆ ಎಂಬುದನ್ನು ಪುರಾವೆ ಮಾಡುವ ಹೊಣೆಯನ್ನು ಹೊರಬೇಕಾಗಿರುತ್ತದೆ.

"When in any proceedings taken under this Act or in consequence of anything done under this Act or under any other law for the time being in force, a question arises as to whether any forest produce is the property of the State Government, such produce shall be presumed to be the property of the State Government until the contrary is proved, and in case of any prosecution the burden of proving the contrary shall lie on the accused. "

ಆದರೆ ಈ ಪ್ರಕರಣದಲ್ಲಿ ವಶಪಡಿಸಿಕೊಂಡ ಅರಣ್ಯ ಉತ್ಪನ್ನವು ತನಗೆ ಸೇರಿದೆ ಎಂಬುದಾಗಲೀ ಅಥವಾ ವಶಪಡಿಸಿಕೊಂಡ ವಾಹನದಲ್ಲಿ ಸಾಗಾಣಿಕೆಯ ಪಾತ್ರ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಗಲೀ ಇಲ್ಲವೆಂಬ ಬಗ್ಗೆ ವಾಹನದ ಮಾಲೀಕರು ಯಾವುದೇ ಸಾಕ್ಷ್ಯಧಾರಗಳನ್ನು ಹಾಜರುಪಡಿಸಿರುವುದಿಲ್ಲ.

1. ಅರಣ್ಯ ಕಾಯ್ದೆ 1963 ಕಲಂ 84ರ ಪ್ರಕಾರ ಶ್ರೀಗಂಧವು ಸರ್ಕಾರದ ಸೊತ್ತಾಗಿರುತ್ತದೆ.

1. all sandal trees which may grow in any land after the date of the commencement of this Act, and

2. all sandal trees existing on any land prior to the commencement of the Act, 2(***) shall be the exclusive property of the State Government.

3(2) Where in any proceedings taken under this Act, a question arises as to whether any sandalwood is the property of the State Government, it shall, until the contrary is proved, be presumed to be the part of a sandal tree which was the exclusive property of೫೩೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ಭಾಗ ೩ the State Government under sub-section (1), and in the case of any prosecution, the burden of proving the contrary shall lie on the accused.

8. ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಕ್ರಿಮಿನಲ್ ರಿವಿಷನ್ ಪಿಟಿಷನ್ ನಂ.616/2001 ದಿನಾಂಕ: 12-1-2004 ರಂದು ನೀಡಿದ ತೀರ್ಪಿನಲ್ಲಿ ಯಾವುದೇ ಅಪರಾದಿಗಳು ನಿರಪರಾದಿಯೆಂದು ನ್ಯಾಯಾಲಯವು ಆದೇಶಿಸಿದ ತೀರ್ಪಿನ ಮೇಲೆ ವಾಹನವನ್ನು ಅಪರಾದಿ ಪ್ರಕರಣದಿಂದ ಬಿಡುಗಡೆ ಮಾಡಬೇಕೆಂಬುದು ಸಮಂಜಸವಲ್ಲವೆಂದು ತೀರ್ಪು ನೀಡಿರುತ್ತದೆ. ಸದರಿ ತೀರ್ಪಿನ ಉದ್ಗ್ರತ ಭಾಗ ಈ ಕೆಳಕಂಡಂತಿದೆ.

"Confiscation of the vehicle used for transporting the sandalwood illegal Acquittal of accused release of confiscated vehicle proper. Since on acquittal of accused. It cannot be said that the vehicle was used for commission of any offence which is incorrect and improper" more acquittal of an accused on the charges leveled against him is not a good ground to release the vehicle to its owner. It is well settled that in criminal case, the prosecution is expected to prove the charges leveled against the accused beyond shadow of doubt therefore. The con collusion arrived at by the learned sessions judge is illegal. It is clear that the learned sessions judge has ignored the main object of the enactment of the Forest Act and also the decision of the apex court reported in 2000 (7) Sec 80.

ಹಾಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಾಹನದ ಮಾಲೀಕರು ಈ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯನ್ನು ಗಮನಿಸಿದಾಗ ವಾಹನವನ್ನು ಬಿಡಿಸಿಕೊಳ್ಳಲು ಸೃಷ್ಟಿಸಿದ ಒಂದು ಕಟ್ಟುಕತೆ ಎಂದು ಹಾಗೂ ವಾಹನದಲ್ಲಿ ಶ್ರೀಗಂಧ 7 ಕೆ.ಜಿ.ಯನ್ನು ಅಕ್ರಮ ಸಾಗಾಣಿಕೆಯು ವಾಹನದ ಮಾಲೀಕರಿಗೆ ಗೊತ್ತಿದ್ದೇ ಈ ಕೃತ್ಯ ನಡೆದಿದೆಯೆಂದು ಅಭಿಪ್ರಾಯ ಪಡುತ್ತೇನೆ.

ಈ ಮೇಲಿನ ಎಲ್ಲಾ ಕಾರಣಗಳಿಂದ 3ನೇ ಅಂಶದ ಪ್ರಶ್ನೆಗೆ ಮೊದಲನೇ ಭಾಗದ ಪ್ರಶ್ನೆಗೆ ನನ್ನ ಉತ್ತರ ಹೌದು ಎಂದು ಎರಡನೇ ಹಾಗೂ 3ನೇ ಭಾಗದ ಪ್ರಶ್ನೆಗೆ ನನ್ನ ಉತ್ತರ ಇಲ್ಲವೆಂದು ಅಭಿಪ್ರಾಯ ಪಡುತ್ತೇನೆ.

ಈ ಮೇಲಿನ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ವಾಹನದ ಮಾಲೀಕರು ಅರಣ್ಯ ಉತ್ಪನ್ನಗಳ ಸಾಗಾಣಿಕೆಯಲ್ಲಿ ಭಾಗವಹಿಸಲು ವಾಹನವನ್ನು ಉಪಯೋಗಿಸಿರುವುದು ಸ್ಪಷ್ಟವಾಗಿ ಕಂಡುಬಂದಿರುತ್ತದೆ. ಅಲ್ಲದೇ ಪ್ರಾಧೀಕಾರಕ್ಕೆ ಹಾಜರುಪಡಿಸಿದ ಪ್ರಕರಣದ ಮಹಜರ್ ನಿಶಾನೆ ಪಿ1ರ ಪ್ರಕಾರ ಹಾಗೂ ಪ್ರಾಸಿಕ್ಯೂಷನ್ ಸಾಕ್ಷಿಗಳಾದ ಪಿಡಬ್ಲ್ಯೂ1 ರವರು ಈ ಪ್ರಾಧಿಕಾರದಲ್ಲಿ ಸಾಕ್ಷಿ ನುಡಿದಂತೆ ಶ್ರೀಗಂಧ 7 ಕೆ.ಜಿ.ಯನ್ನು ಸಾಗಿಸಲು ವಾಹನ ಬಳಸಿರುವುದು ಸ್ಪಷ್ಟವಾಗಿ ಕಂಡು ಬಂದಿರುತ್ತದೆ. ಅಲ್ಲದೇ ನನ್ನ ಮುಂದೆ ಹಾಜರುಪಡಿಸಿದ ದಾಖಲಾತಿಗಳು ಸಾಕ್ಷ್ಯಧಾರಗಳು ಮತ್ತು ವಾದ ವಿವಾದಗಳಿಂದ ವಾಹನ ಮಾಲೀಕರಾಗಲೀ ಇಲ್ಲವೇ ವಾಹನದ ಉಸ್ತುವಾರಿದಾರರಾಗಲೀ ವಾಹನವು ಅಕ್ರಮ ಅರಣ್ಯ ಉತ್ಪನ್ನ ಸಾಗಾಣಿಕೆಯಲ್ಲಿ ಭಾಗಿ ಆಗದಂತೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದೇ ಬದಲಾಗಿ ತಮಗೆ ಗೊತ್ತಿದ್ದೆ ಈ ಎಲ್ಲಾ ವ್ಯಕ್ತಿಗಳು ಈ ವಾಹನದಲ್ಲಿ ಅಕ್ರಮವಾಗಿ ಶ್ರೀಗಂಧ 7 ಕೆ.ಜಿ.ಯನ್ನು ಅರಣ್ಯ ಕಾಯ್ದೆ 1963 ಕಲಂ 24, 50, 62,86,87 71(ಎ) ಹಾಗೂ ಕಲಂ ನಂ.379 ಐ.ಪಿ.ಸಿ. ಕಾಯ್ದೆಯ ವಿರುದ್ಧವಾಗಿ ಸಾಗಿಸಲು ಉಪಯೋಗಿಸಿದ್ದಾರೆಂದು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶ ನೀಡ ಬಯಸುತ್ತೇನೆ.

ಆದೇಶ

ಈ ಮೇಲ್ಕಾಣಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ದಾಖಲಾತಿಗಳನ್ನು ಹಾಗೂ ಸಾಕ್ಷ್ಯಧಾರಗಳನ್ನು ಮತ್ತು ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಟಿ. ಬಾಲಚಂದ್ರ, ಭಾ.ಅ.ಸೇ., ಅಧಿಕಾರಿಯುತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಭದ್ರಾವತಿ ವಿಭಾಗ, ಭದ್ರಾವತಿ ಆದ ನಾನು ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 71(ಎ) (2ನೇ ತಿದ್ದುಪಡಿ) ಪ್ರಕಾರ ಟಿ.ವಿ.ಎಸ್. ವಿಕ್ಟರ್ ಮೋಟಾರ್ ಸೈಕಲ್ ಸಂಖ್ಯೆ:ಇಲ್ಲ (ಇಂಜಿನ್ ನಂ.OFIH51-446990 ಚಾಸೀಸ್ ನಂ.MD625AA1452H65204) ಹಾಗೂ ಶ್ರೀಗಂಧದ ಚಕ್ಕೆ ಮತ್ತು ಸಣ್ಣ ತುಂಡು ಒಟ್ಟು 7 ಕೆ.ಜಿ.ಯನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿ ಆದೇಶ ಹೊರಡಿಸಿರುತ್ತೇನೆ.

ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾದಲ್ಲಿ ಈ ಆದೇಶ ಹೊರಡಿಸಿದ 30 ದಿವಸದೊಳಗೆ ಸಲ್ಲಿಸಬಹುದಾಗಿದೆ. ತಪ್ಪಿದಲ್ಲಿ ಇದೇ ಅಂತಿಮ ಆದೇಶವಾಗಿ ಊರ್ಜಿತಗೊಳ್ಳುತ್ತದೆ. ಅಲ್ಲದೇ ಮೇಲ್ಮನವಿ ಅವಧಿ ಮೀರಿದ ಬಳಿಕ ವಾಹನ ಹಾಗೂ ಅರಣ್ಯ ಉತ್ಪನ್ನವನ್ನು ಕಾನೂನು ರೀತ್ಯಾ ವಿಲೇವಾರಿ ಮಾಡಲು ಕೂಡ ಆದೇಶಿಸಿದೆ.

ಈ ಆದೇಶವನ್ನು ದಿನಾಂಕ: 14-09-2017 ರಂದು ನ್ಯಾಯಾಲಯದ ಮೊಹರು ಹಾಗೂ ನನ್ನ ಸಹಿಯೊಂದಿಗೆ ಹೊರಡಿಸಿರುತ್ತೇನೆ.

ಟಿ. ಬಾಲಚಂದ್ರ, ಭಾ.ಅ.ಸೇ.,

ಅಧಿಕಾರಿಯುತ ಅಧಿಕಾರಿ ಹಾಗೂ

ಉಪ ಅರಣ್ಯ ಸಂರಕ್ಷಣಾಧಿಕಾರಿ,

ಭದ್ರಾವತಿ ವಿಭಾಗ, ಭದ್ರಾವತಿ.

ಅನುಬಂಧ:

1. ಫಿರ್ಯಾಧಿದಾರರ ಪರ ಸಾಕ್ಷಿಗಳ ವಿಚಾರಣೆ

ಅ) ಪಿಡಬ್ಲ್ಯೂ 1 ಶ್ರೀ ಪಿ.ಬಿ. ಮಹಾದೇವಪ್ಪ ಬಿನ್ ಪಿ. ಬಸಪ್ಪ, ಹೆಚ್.ಸಿ. 190, ನ್ಯಾಮತಿ ಪೊಲೀಸ್ ಸ್ಟೇಷನ್.

2. ಫಿರ್ಯಾಧಿದಾರರ ಪರ ದಾಖಲಾತಿಗಳ ಪರಿಶೀಲನೆ 3. ನಿಶಾನೆ ಪಿ2 ಪ್ರಥಮ ಮಾಹಿತಿ ವರದಿ

ನಿಶಾನೆ ಪಿ1ಎ ಪಿಡಬ್ಲ್ಯೂ 1 ಸಾಕ್ಷಿದಾರರ ಸಹಿ

ನಿಶಾನೆ ಪಿ2 ಸ್ಥಳ ಮಹಜರ್

ನಿಶಾನೆ ಪಿ2ಎ ಪಿಡಬ್ಲ್ಯೂ 1 ಸಾಕ್ಷಿದಾರರ ಸಹಿಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ೫೩೭೯ 4. ಅರ್ಜಿದಾರರ ಪರ ಸಾಕ್ಷಿಗಳ ವಿಚಾರಣೆ ಇರುವುದಿಲ್ಲ. 5. ಅರ್ಜಿದಾರರ ಪರ ದಾಖಲಾತಿಗಳ ಪರಿಶೀಲನೆ ಇರುವುದಿಲ್ಲ.

PR - 784

ಅಧಿಕಾರಿಯುತ ಅಧಿಕಾರಿಗಳು

SC – 05

ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು

ಭದ್ರಾವತಿ ವಿಭಾಗ, ಭದ್ರಾವತಿ.

ಅಧಿಕಾರಿಯುತ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯ, ಭದ್ರಾವತಿ ವಿಭಾಗ, ಭದ್ರಾವತಿ.

ಸಂಖ್ಯೆ: ಎ3-ಸಿಓಎನ್-ಸಿಆರ್-26/2011-12, ದಿನಾಂಕ: 14-09-2017

ಉಪಸ್ಥಿತರು : ಟಿ. ಬಾಲಚಂದ್ರ, ಭಾ.ಅ.ಸೇ.,

ಅಧಿಕಾರಿಯುತ ಅಧಿಕಾರಿಗಳು ಹಾಗೂ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು,

ಭದ್ರಾವತಿ ವಿಭಾಗ, ಭದ್ರಾವತಿ.

ಪಿರ್ಯಾದಿದಾರರು : ವಲಯ ಅರಣ್ಯಾಧಿಕಾರಿ,

ಉಂಬ್ಳೇಬೈಲು ವಲಯ, ಉಂಬ್ಳೇಬೈಲು.

(ಪರ:ಸಹಾಯಕ ಸರ್ಕಾರಿ ಅಭಿಯೋಜಕರು, ಭದ್ರಾವತಿ)

ಅರ್ಜಿದಾರರು : ಶ್ರೀ ಸಂತೋಷ ಬಿನ್ ನಾಗರಾಜ,

ಅಗಳಬಾಗಿಲು, ಅರಗ ಪೊಸ್ಟ್,

ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.

(ಪರವಾಗಿ: ಶ್ರೀ ದಿವಾಕರ.ಎಸ್.ವಿ, ವಕೀಲರು)

ಪ್ರಕರಣದ ಹಿನ್ನೆಲೆ:-

ದಿನಾಂಕ:12-01-2012 ರಂದು ಉಂಬ್ಳೇಬೈಲು ವಲಯದ ಮಾರಿದಿಬ್ಬ ಅರಣ್ಯ ತನಿಖಾ ಠಾಣೆಯ ವನಪಾಲಕ ಮತ್ತು ಸಿಬ್ಬಂದಿಯವರು ರಾತ್ರಿ ಗಸ್ತು ಕಾರ್ಯ ನಿರ್ವಹಿಸುತ್ತಿದ್ದಾಗ ಎನ್.ಆರ್.ಪುರ ಕಡೆಯಿಂದ ಶಿವಮೊಗ್ಗದ ಕಡೆಗೆ ಹೋಗುತ್ತಿದ್ದ ಮಹೇಂದ್ರ ಬುಲೇರೋ ಪಿಕ್ಅಪ್ ಸಂಖ್ಯೆ:ಕೆಎ-18-ಎ-1567 ರ ವಾಹನವನ್ನು ತನಿಖಾ ಠಾಣೆಯಲ್ಲಿ ತಪಾಸಣೆ ಮಾಡಿದಾಗ ವಾಹನದಲ್ಲಿ ಗಾಜಿನ ಚೂರುಗಳನ್ನು ತುಂಬಿದ ಪ್ಲಾಸ್ಟಿಕ್ ಚೀಲದೊಂದಿಗೆ ಅಕ್ರಮವಾಗಿ `. 60,000/- ಬೆಲೆ ಬಾಳುವ ಹೊನ್ನೆ ಹಲಗೆ 56, ಎತ್ಯಾಗ ಹಲಗೆ 5 ಹಾಗೂ ಹೊನ್ನೆ ಜಾತಿಯ ಚಟ್ಟಗಳು 10 ಒಟ್ಟು ಪ್ರಮಾಣ 0.984 ಎಂ3 ನ್ನು ಸಾಗಿಸುತ್ತಿದ್ದನ್ನು ವಾಹನದ ಸಮೇತ ವಶಪಡಿಸಿಕೊಂಡು ಸ್ಥಳದಲ್ಲೇ ಪಂಚನಾಮೆ ಜರುಗಿಸಿ ಅರಣ್ಯ ಮೊಕದ್ದಮೆ ಸಂಖ್ಯೆ:41/2011-12 ನ್ನು ದಾಖಲು ಮಾಡಿರುತ್ತಾರೆ. ಈ ಸಂಬಂಧ ಪ್ರಕರಣದ ದಾಖಲಾತಿಗಳನ್ನು ಈ ಕಛೇರಿ ನ್ಯಾಯಾಲಯ ಸಮಕ್ಷಮ ಹಾಜರುಪಡಿಸಿ ಪ್ರಕರಣವನ್ನು ಕರ್ನಾಟಕ ಅರಣ್ಯ ಕಾಯ್ದೆ 1963 ನಿಯಮ 50, 62, 71(ಎ) ಹಾಗೂ ಅರಣ್ಯ ಕಾನೂನು 1969 ನಿಯಮ 144, 145 ರಂತೆ ಕ್ರಮ ಜರುಗಿಸಲು ಕೋರಿರುತ್ತಾರೆ. ದಾಖಲಾತಿಗಳನ್ನು ಪರಿಶೀಲಿಸಿ ವಾಹನವನ್ನು ಹಾಗೂ ಅರಣ್ಯ ಉತ್ಪನ್ನವನ್ನು ಈ ನ್ಯಾಯಾಲಯದಿಂದ ಮುಂದಿನ ಆದೇಶ ನೀಡುವವರೆಗೂ ವಲಯ ಅರಣ್ಯಾಧಿಕಾರಿ, ಶ್ರೀಗಂಧ ಕೋp, ತರೀಕೆರೆ ಇವರ ಸುರಕ್ಷತೆಗೆ ಕೊಡಲಾಗಿದೆ.

ದಿನಾಂಕ:17-01-2012 ರಂದು ಪಿಕ್ ಅಪ್ ವಾಹನ ಸಂಖ್ಯೆ:ಕೆಎ-18-ಎ-1567 ರ ಮಾಲೀಕ ರೆಂದು ಶ್ರೀ ಸಂತೋಷ ಬಿನ್ ನಾಗರಾ, ಅಗಳಬಾಗಿಲು, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರು ಅರ್ಜಿ ಸಲ್ಲಿಸಿ ವಾಹನದಲ್ಲಿ ಯಾವುದೇ ಅಕ್ರಮ ಸಾಗಾಣಿಕೆ ಆಗಿರುವುದಿಲ್ಲ ಹಾಗೂ ವಾಹನದ ಮಾಲೀಕರು ಭಾಗಿಯಾರುವುದಿಲ್ಲ. ಈ ವಾಹನದಿಂದಲೇ ಅರ್ಜಿದಾರರ ಸಂಸಾರದ ಜೀವನ ಸಾಗುತ್ತಿದ್ದು, ವಾಹನವನ್ನು ಹಣಕಾಸು ಸಂಸ್ಥೆಯಿಂದ ಸಾಲ ಮಾಡಿ ಖರೀದಿಸಿದ್ದು, ಸಾಲದ ಕಂತುಗಳನ್ನು ಸಹ ವಾಹನದ ಬಾಡಿಗೆಯಿಂದಲೇ ಪಾವತಿಸಬೇಕಾಗಿರುತ್ತದೆ. ನ್ಯಾಯಾಲಯವು ವಿಧಿಸುವ ಷರತ್ತಿಗೆ ಬದ್ಧರಾಗಿರುವುದಾಗಿ ತಿಳಿಸಿ ವಾಹನವನ್ನು ತಾತ್ಕಾಲಿಕ ಬಿಡುಗಡೆಗೆ ಕೋರಿರುತ್ತಾರೆ.

ವಾಹನದ ಮಾಲೀಕರಿಗೆ ದಿನಾಂಕ: 20-01-2012 ರಂದು ಅರಣ್ಯ ಕಾಯಿದೆ 71(ಬಿ) ಪ್ರಕಾರ ಕಾರಣ ಕೇಳಿ ತಿಳುವಳಿಕೆ ಪತ್ರ ನೀಡಿರುತ್ತದೆ.

ವಾಹನದ ಮಾಲೀಕರು ದಿನಾಂಕ: 28-01-2012 ರಂದು ಸಮಜಾಯಿಷಿ ನೀಡಿ ಅರಣ್ಯ ಅಪರಾಧ ಪ್ರಕರಣಕ್ಕೂ ಅರ್ಜಿದಾರರಿಗೂ ಯಾವುದೇ ಸಂಬಂಧ ಇರುವುದಿಲ್ಲ. ಉಂಬ್ಳೇಬೈಲು ವಲಯ ಅರಣ್ಯಾಧಿಕಾರಿ ಹಾಗೂ ಅರ್ಜಿದಾರರ ನಡುವೆ ಮಾತಿನ ಚಕಮಕಿ ನಡೆದು ಅರ್ಜಿದಾರ/ವಾಹನದ ಮಾಲೀಕರ ಮೇಲೆ ಸುಳ್ಳು ಕೇಸನ್ನು ದಾಖಲು ಮಾಡಿರುತ್ತಾರೆ. ಆದ್ದರಿಂದ ದಯಮಾಡಿ ವಾಹನವನ್ನು ಬಿಡುಗಡೆ ಮಾಡಲು ಕೋರಿಕೊಂಡಿರುತ್ತಾರೆ.

ಸಹಾಯಕ ಸರ್ಕಾರಿ ಅಭಿಯೋಜಕರು, ಜೆ.ಎಂ.ಎಫ್.ಸಿ. ನ್ಯಾಯಾಲಯ, ಭದ್ರಾವತಿ ಇವರು ದಿನಾಂಕ:05-07-2012 ರಂದು ತಕರಾರು ಅರ್ಜಿ ಸಲ್ಲಿಸಿರುತ್ತಾರೆ. ಈ ಪ್ರಕರಣದಲ್ಲಿ ಭಾಗಿಯಾದ ವಾಹನವನ್ನು ಬಿಡುಗಡೆ ಮಾಡಿದಲ್ಲಿ ಅದರ ಬಣ್ಣ ಮತ್ತು ಚಹರೆಯನ್ನು ಬದಲಾಯಿಸುವ ಸಾದ್ಯತೆ ಹೆಚ್ಚಾಗಿರುತ್ತದೆ. ಮಾರಾಟ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅರ್ಜಿದಾರರು ತಮ್ಮ ವಾಹನವನ್ನು ಅರಣ್ಯ ಉತ್ಪನ್ನಗಳ ಸಾಗಾಣಿಕೆಯಲ್ಲಿ ಭಾಗಿಯಾಗದಂತೆ ಯಾವುದೇ ಕ್ರಮ ಕೈಗೊಂಡಿರುವುದು ಕಂಡುಬಂದಿರುವುದಿಲ್ಲ. ಆದ್ದರಿಂದ ಅರ್ಜಿದಾರರ ಅರ್ಜಿಯನ್ನು ವಜಾ ಮಾಡಬೇಕಾಗಿ ಅಭಿಯೋಜನಾವತಿಯಿಂದ ವಿನಂತಿಸಿರುತ್ತಾರೆ.

ಮೇಲ್ಕಂಡ ಪ್ರಕರಣದ ಬಗ್ಗೆ ಪಿರ್ಯಾಧಿದಾರರು ಸಲ್ಲಿಸಿದ ದಾಖಲಾತಿಗಳು ಅರ್ಜಿದಾರರು ವಕೀಲರ ಮುಖಾಂತರ ಸಲ್ಲಿಸಿದ ಮಧ್ಯಂತರ ಅರ್ಜಿ ಹಾಗೂ ಸಮಜಾಯಿಷಿ ಮತ್ತು ಸಹಾಯಕ ಸರ್ಕಾರಿ ಅಭಿಯೋಜಕರು, ಜೆ.ಎಂ.ಎಫ್.ಸಿ. ನ್ಯಾಯಾಲಯ, ಭದ್ರಾವತಿ ರವರು ಸಲ್ಲಿಸಿದ ತಕರಾರು ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಸಿದಾಗ ವಾಹನದಲ್ಲಿ ಅಕ್ರಮ ಅರಣ್ಯ ಉತ್ಪನ್ನ ಸಾಗಾಣಿಕೆ ಆಗಿರುವುದು ದಾಖಲಾತಿಗಳಿಂದ ಮೇಲ್ಮೋಟಕ್ಕೆ ಕಂಡುಬಂದಿರುತ್ತದೆ.

ಈ ಪ್ರಕರಣದಲ್ಲಿ ಅಪರಾಧಿ ಗಳನ್ನು ಬಂಧಿಸಿ ಬೇಕಾಗಿದ್ದು ಈ ಬಗ್ಗೆ ತನಿಖೆಯು ಅವಶ್ಯಕತೆಯಾಗಿರುತ್ತದೆ. ತನಿಖಾ ವರದಿಯ ಆಧಾರದ ಮೇಲೆ ಪ್ರಕರಣದ ಬಗ್ಗೆ ಈ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಅಂತಿಮ ಆದೇಶ ಹೊರಡಿಸಬೇಕಾಗಿರುತ್ತದೆ, ವಾಹನದ ಮಾಲೀಕರು ಅವರ ಅರ್ಜಿಯಲ್ಲಿ ಅರಣ್ಯ ಸಿಬ್ಬಂದಿ೫೩೮೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ಭಾಗ ೩ ವರ್ಗದವರು ಸುಳ್ಳು ಮೊಕದ್ದಮ್ಮೆ ದಾಖಲಿಸಿರುತ್ತಾರೆ ಎಂದು ತಿಳಿಸಿದ್ದು, ಈ ಬಗ್ಗೆ ಸಾಕ್ಷ್ಯಧಾರಗಳು ಅವಶ್ಯವಿದ್ದು ಕರ್ನಾಟಕ ಅರಣ್ಯ ಕಾಯ್ದೆ ಕಲಂ 71(ಬಿ), (2) ರೀತ್ಯಾ ಸಾಭೀತು ಪಡಿಸುವ ಜವಾಬ್ದಾರಿ ವಾಹನದ ಮಾಲೀಕರಿಗೆ ಸೇರಿದ್ದಾಗಿರುತ್ತದೆ. ಈ ಪ್ರಕರಣದ ಬಗ್ಗೆ ವಾಹನವನ್ನು ತಾತ್ಕಾಲಿಕ ಬಿಡುಗಡೆ ಮಾಡಲು ಸಲ್ಲಿಸಿರುವ ಅರ್ಜಿದಾರರ ಅರ್ಜಿಯನ್ನು ದಿನಾಂಕ: 22-08-2013 ರಂದು ತಿರಸ್ಕರಿಸಿ ಆದೇಶ ಹೊರಡಿಸಿರುತ್ತದೆ.

ಈ ಪ್ರಕರಣದ ಬಗ್ಗೆ ಈ ಕಛೇರಿ ನ್ಯಾಯಾಲಯದಲ್ಲಿ ದಿನಾಂಕ: 13-03-2014 ರಿಂದ 14-05-2015 ರವರೆಗೆ ವಿವಿಧ ದಿನಾಂಕಗಳನ್ನು ಗೊತ್ತುಪಡಿಸಿ ಪ್ರಕರಣದ ಬಗ್ಗೆ ಅಂತಿಮ ಆದೇಶ ಹೊರಡಿಸಲು ವಿಚಾರಣೆಯನ್ನು ನಡೆಸಿರುತ್ತದೆ. ದಿನಾಂಕ: 19-03-2015 ರಂದು ಪಿ.ಡಬ್ಲ್ಯೂ1 ಸಾಕ್ಷಿದಾರರಾದ ಶ್ರೀ ಎನ್.ಡಿ. ಕೆಂಪೇಗೌಡ, ಉಪ ವಲಯ ಅರಣ್ಯಾಧಿಕಾರಿ, ಉಂಬ್ಳೇಬೈಲು ವಲಯ ಹಾಗೂ ಶ್ರೀ ಗಿಡ್ಡುಸ್ವಾಮಿ, ಉಪ ವಲಯ ಅರಣ್ಯಾಧಿಕಾರಿ, ಉಂಬ್ಳೇಬೈಲು ವಲಯ ಇವರನ್ನು ಪಿ.ಡಬ್ಲ್ಯೂ2 ಪ್ರಾಸಿಕ್ಯೂಷನ್ ಸಾಕ್ಷಿದಾರರನ್ನಾಗಿ ವಿಚಾರಣೆಯನ್ನು ಅಭಿಯೋಜನಾವತಿಯಿಂದ ಮಾಡಲಾಗಿರುತ್ತದೆ. ಅರ್ಜಿದಾರರ ಪರ ವಕೀಲರು ಹಾಗೂ ಅರ್ಜಿದಾರರು ಸುರ್ದೀಘವಾಗಿ ಗೈರು ಹಾಜರಾಗಿರುವುದರಿಂದ ಪಾಟೀ ಸವಾಲು ಇಲ್ಲವೆಂದು ತೀರ್ಮಾನಿಸಲಾಯಿತು.

ಪ್ರತಿವಾದಿಯ ಪರವಾಗಿ ವಾಹನದ ಮಾಲೀಕರಾದ ಶ್ರೀ ಸಂತೋಷ ಬಿನ್ ನಾಗರಾಜ, ಅಗಳಬಾಗಿಲು, ಅರಗ ಪೋಸ್ಟ್, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರಿಗೆ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಲು ತಿಳಿಸಿದರು ಸಹ ಗೈರು ಹಾಜರಾಗಿರುತ್ತಾರೆ.

ಈ ಪ್ರಕರಣದಲ್ಲಿ ಪ್ರಾಧಿಕಾರಕ್ಕೆ ಹಾಜರುಪಡಿಸಿದ ದಾಖಲಾತಿಗಳನ್ನು ಹಾಗೂ ಅರ್ಜಿದಾರರ ಪರವಾಗಿ ನ್ಯಾಯವಾದಿಗಳು ಸಲ್ಲಿಸಿದ ಅರ್ಜಿ ಹಾಗೂ ಪಿರ್ಯಾಧಿ ಪರ ಸಹಾಯಕ ಸರ್ಕಾರಿ ಅಭಿಯೋಜಕರು ಮಂಡಿಸಿದ ವಾದವನ್ನು ಪರೀಶಿಲಿಸಿ ಆಲಿಸಲಾಯಿತು.

ಈ ಪ್ರಕರಣದಲ್ಲಿ ವಾಸ್ತಾವಾಂಶ ಮತ್ತು ಕಾನೂನಿನ ವಸ್ತುಸ್ಥಿತಿ ಲಭ್ಯವಿದ್ದ ವಿಷಯ ಸಾಮಗ್ರಿಗಳ ತಳಹದಿಯ ಮೇಲೆ ಗಮನಿಸಿ ಪರಿಗಣಿಸಬೇಕಾದ ಅಂಶಗಳು ಈ ಕೆಳಗಿನಂತಿದೆ.

1. ಅರ್ಜಿದಾರರ ಮಹೇಂದ್ರ ಬುಲೇರೋ ಪಿಕ್ಅಪ್ ಸಂಖ್ಯೆ:ಕೆಎ-18-ಎ-1567 ಹಾಗೂ ರಲ್ಲಿ ಹೊನ್ನೆ ಹಲಗೆ 56, ಎತ್ಯಾಗ ಹಲಗೆ 5, ಹಾಗೂ ಹೊನ್ನೆ ಜಾತಿಯ ಚಟ್ಟಗಳು 10 ಒಟ್ಟು ಪ್ರಮಾಣ 0.984 ಎಂ3 ನ್ನು ದಿನಾಂಕ:12-01-2012 ರಂದು ಕಾನೂನಿಗೆ ವಿರುದ್ಧವಾಗಿ ಸಾಗಿಸಲು ಉಪಯೋಗಿಸಲಾಗಿತ್ತೆ? ಹಾಗೂ ಈ ರೀತಿ ಸಾಗಿಸುವ ಮುಖಾಂತರ ಅರಣ್ಯ ಅಪರಾಧವೆಸಗಿ ಕರ್ನಾಟಕ ಅರಣ್ಯ ಕಾಯಿದೆ ಮತ್ತು ನಿಯಮ ಉಲ್ಲಂಘಿಸಲಾಗಿದೆಯೇ?

2. ಕರ್ನಾಟಕ ಅರಣ್ಯ ಕಾಯ್ದೆಯಂತೆ 71(ಬಿ) (1) ರ ಪ್ರಕಾರ ವಾಹನದ ಮಾಲೀಕರಿಗೆ ಕಾರಣ ಕೇಳೀ ನೋಟೀಸ್ ನೀಡಲಾಗಿದೆಯೇ ಅವರ ಅಹವಾಲನ್ನು ಮಂಡಿಸಿ ಸಮರ್ಥಿಸಿಕೊಳ್ಳಲು ಸಾಕಷ್ಟು ಅವಕಾಶ ನೀಡಲಾಗಿದೆಯೇ?

3. ವಾಹನದ ಮಾಲೀಕರು ಅಥವಾ ಕೆಲಸಗಾರರು ಅಥವಾ ಅವರ ಪ್ರತಿನಿಧಿಗಳು ವಾಹನದಲ್ಲಿ ಅಕ್ರಮವಾಗಿ ಸರ್ಕಾರದ ಸ್ವತ್ತಾದ ಅರಣ್ಯ ಉತ್ಪನ್ನವನ್ನು ಸಾಗಿಸಲು ಶಾಮೀಲಾಗಿದ್ದಾರೆಯೇ? ಹಾಗೂ ವಾಹನದ ಮಾಲೀಕರ ಪ್ರತಿನಿಧಿಗಳ ಗಮನಕ್ಕೆ ಬಾರದಂತೆಯೇ ವಾಹನವನ್ನು ಅರಣ್ಯ ಉತ್ಪನ್ನ ಕಳ್ಳ ಸಾಗಾಣಿಕೆಗೆ ಉಪಯೋಗಿಸಲಾಗಿದೆಯೇ? ಹಾಗೂ ಈ ವಾಹನವನ್ನು ಇಂತಹ ಅಕ್ರಮ ಕಾನೂನು ಬಾಹಿರ ಅರಣ್ಯ ಉತ್ಪನ್ನ ಸಾಗಾಣಿಕೆಗೆ ಉಪಯೋಗಿಸಿ ಕಾನೂನು ಬಾಹಿರ ಅರಣ್ಯ ಉತ್ಪನ್ನ ಸಾಗಾಣಿಕೆಗೆ ಉಪಯೋಗಿಸದಂತೆ ವಾಹನದ ಮಾಲೀಕರು ಅಥವಾ ಚಾಲಕರು ಅಥವಾ ಅವರ ಪ್ರತಿನಿಧಿಗಳು ಸಾಕಷ್ಟು ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡಿರುತ್ತಾರೆಯೇ?

4. ಏನು ತೀರ್ಮಾನಕ್ಕೆ ಬರಬಹುದಾಗಿದೆ?

ಈ ಮೇಲಿನ ಅಂಶಗಳಿಗೆ ಈ ಕೆಳಗಿನಂತೆ ಉತ್ತರಿಸಿ ಈ ಕೆಳಗಿನಂತೆ ತೀರ್ಮಾನಕ್ಕೆ ಬರಲಾಗಿದೆ. ಅದಕ್ಕೆ ಕಾರಣಗಳನ್ನು ಈ ಕೆಳಗಿನಂತೆ ನೀಡಲಾಗಿದೆ.

1. 1ನೇ ಅಂಶಕ್ಕೆ ಹೌದು ಎಂತಲೂ 2. 2ನೇ ಅಂಶಕ್ಕೆ ಹೌದು ಎಂತಲೂ 3. 3ನೇ ಅಂಶಕ್ಕೆ ಮೊದಲನೇ ಭಾಗದ ಪ್ರಶ್ನೆಗೆ ಹೌದು ಎಂದು ಎರಡು ಮತ್ತು 3ನೇ ಭಾಗದ ಪ್ರಶ್ನೆಗೆ ಇಲ್ಲ ಎಂದಾಗಿರುತ್ತದೆ.

ಕಾರಣಗಳು

ಅಂಶ-1

ದಿನಾಂಕ: 12-01-2012 ರಂದು ಉಂಬ್ಳೇಬೈಲು ವಲಯದ ಮಾರಿದಿಬ್ಬ ಅರಣ್ಯ ತನಿಖಾ ಠಾಣೆಯ ವನಪಾಲಕ ಮತ್ತು ಸಿಬ್ಬಂದಿಯವರು ರಾತ್ರಿ ಗಸ್ತು ಕಾರ್ಯ ನಿರ್ವಹಿಸುತ್ತಿದ್ದಾಗ ಎನ್.ಆರ್.ಪುರ ಕಡೆಯಿಂದ ಶಿವಮೊಗ್ಗದ ಕಡೆಗೆ ಹೋಗುತ್ತಿದ್ದ ಮಹೇಂದ್ರ ಬುಲೇರೋ ಪಿಕ್ಅಪ್ ಸಂಖ್ಯೆ:ಕೆಎ-18-ಎ- 1567 ರ ವಾಹನವನ್ನು ತನಿಖಾ ಠಾಣೆಯಲ್ಲಿ ತಪಾಸಣೆ ಮಾಡಿದಾಗ ವಾಹನದಲ್ಲಿ ಗಾಜಿನ ಚೂರುಗಳನ್ನು ತುಂಬಿದ ಪ್ಲಾಸ್ಟಿಕ್ ಚೀಲದೊಂದಿಗೆ ಅಕ್ರಮವಾಗಿ `. 60,000/- ಬೆಲೆ ಬಾಳುವ ಹೊನ್ನೆ ಹಲಗೆ 56, ಎತ್ಯಾಗ ಹಲಗೆ 5 ಹಾಗೂ ಹೊನ್ನೆ ಜಾತಿಯ ಚಟ್ಟಗಳು 10 ಒಟ್ಟು ಪ್ರಮಾಣ 0.984 ಎಂ3 ನ್ನು ಸಾಗಿಸುತ್ತಿದ್ದನ್ನು ವಾಹನದ ಸಮೇತ ವಶಪಡಿಸಿಕೊಂಡು ಸ್ಥಳದಲ್ಲೇ ಪಂಚನಾಮೆ ಜರುಗಿಸಿ ಅರಣ್ಯ ಮೊಕದ್ದಮೆ ಸಂಖ್ಯೆ:41/2011-12 ನ್ನು ದಾಖಲು ಮಾಡಿರುತ್ತಾರೆ. ಈ ಸಂಬಂಧ ಪ್ರಕರಣದ ದಾಖಲಾತಿಗಳನ್ನು ಈ ಕಛೇರಿ ನ್ಯಾಯಾಲಯ ಸಮಕ್ಷಮ ಹಾಜರುಪಡಿಸಿ ಪ್ರಕರಣವನ್ನು ಕರ್ನಾಟಕ ಅರಣ್ಯ ಕಾಯ್ದೆ 1963 ನಿಯಮ 50,62, 71(ಎ) ಹಾಗೂ ಅರಣ್ಯ ಕಾನೂನು 1969 ನಿಯಮ 144, 145 ರಂತೆ ಕ್ರಮ ಜರುಗಿಸಲು ಕೋರಿರುತ್ತಾರೆ. ಪಿ.ಡಬ್ಲ್ಯೂ1 ಸಾಕ್ಷಿದಾರ ಶ್ರೀ ಎನ್.ಡಿ. ಕೆಂಪೇಗೌಡ, ಉಪ ವಲಯ ಅರಣ್ಯಾಧಿಕಾರಿ ಇವರ ಹೇಳಿಕೆಯಂತೆ ದಿನಾಂಕ:12-01-2012 ರಂದು ಮಾರಿದಿಬ್ಬ ತನಿಖಾ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ರಾತ್ರಿ ಪಾಳಿಯ ಗಸ್ತಿಗೆ ದಿನೇಶ, ಬಾಲರಾಜ್, ಗಿಡ್ಡುಸ್ವಾಮಿ ಇವರುಗಳು ಬಂದಿರುತ್ತಾರೆ. ರಾತ್ರಿ 9.50 ರ ಸಮಯದಲ್ಲಿ ಎನ್.ಆರ್.ಪುರ ಕಡೆಯಿಂದ ಬೊಲೆರೋ ಪಿಕ್ ಅಪ್ ವಾಹನ ಬಂದಿದ್ದು, ಅದರಲ್ಲಿ 2 ಜನ ಆಸಾಮಿಗಳಿದ್ದರು. ವಾಹನದಲ್ಲಿ ಗುಜರಿ ಸಾಮಾನುಗಳನ್ನು ತುಂಬಿರುವುದಾಗಿ ತಿಳಿಸಿರುತ್ತಾರೆ. ಅವರ ನಡವಳಿಕೆಯು ಅನುಮಾನ ಬಂದು ಚೀಲಗಳನ್ನು ತೆಗೆದು ನೋಡಲಾಗಿ ಹೊನ್ನೆ, ಎತ್ಯಾಗ, ಹಲಗೆ ಹಾಗೂ ಚಟ್ಟಗಳು ಕಂಡುಬಂದವು. ಈ ಬಗ್ಗೆ ರಹದಾರಿ ವಿಚಾರಿಸಿದಾಗ ಯಾವುದೇ ರಹದಾರಿ ಇಲ್ಲವೆಂದು ಅಕ್ರಮವಾಗಿ ಮಲ್ಲಂದೂರಿನಿಂದ ಶಿವಮೊಗ್ಗಕ್ಕೆ ಸಾಗಿಸಿರುವುದಾಗಿ ತಿಳಿಸಿರುತ್ತಾರೆ. ವಾಹನದ ಸಂಖ್ಯೆ:ಕೆಎ-18-ಎ-1567 ಆಗಿರುತ್ತದೆ. ವಾಹನದಲ್ಲಿ ಸಿಕ್ಕ ಆರೋಪಿಗಳ ಹೆಸರು ಸಂತೋಷ ಬಿನ್ ನಾಗರಾಜ,ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ೫೩೮೧ ಯೋಗಿಶ ಬಿನ್ ನಾಗಪ್ಪ ಎಂದು ತಿಳಿಸಿರುತ್ತಾರೆ. ವಾಹನ ಹಾಗೂ ಅರಣ್ಯ ಉತ್ಪನ್ನಗಳನ್ನು ವಶಪಡಿಸಿಕೊಂಡು ಅಳತೆ ಮಾಡಿ ಕ್ರಮ ಸಂಖ್ಯೆ: 1 ರಿಂದ 71 ನ್ನು ಕೆಂಪುಬಣ್ಣದಿಂದ ಕೊಡಲಾಗಿರುತ್ತದೆ. ಇಲಾಖಾ ಛಾಪಾ ಕೆ.ಎನ್.ಎಫ್.ಡಿ.ಎಫ್.6ಬಿಬಿ ಎಂದು ಮುದ್ರಿಸಲಾಯಿತು. ಈ ಬಗ್ಗೆ ಸ್ಥಳದಲ್ಲೇ ಮಹಜರ್ ಕ್ರಮ ಜರುಗಿಸಲಾಯಿತು. ಮಹಜರ್‌ನ್ನು ಶ್ರೀ ಗಿಡ್ಡುಸ್ವಾಮಿ, ಉಪ ವಲಯ ಅರಣ್ಯಾಧಿಕಾರಿ ಇವರು ಬರೆದಿರುತ್ತಾರೆ. ಸದರಿ ಮಹಜರ್‌ನ್ನು ನಿಶಾನೆ ಪಿ1 ಎಂದು ಮಹಜರ್‌ನಲ್ಲಿರುವ ಸಹಿಯನ್ನಿ ಪಿ1ಎ ಎಂದು ಗುರುತಿಸಲಾಯಿತು. ನಂತರ ಪ್ರಥಮ ಮಾಹಿತಿ ವರದಿಯನ್ನು ನಿಶಾನೆ ಪಿ2 ಎಂದು ಅದರಲ್ಲಿರುವ ಸಹಿಯನ್ನು ಪಿ2ಎ ಎಂದು ಗುರುತಿಸಿರುತ್ತದೆ. ಅಮಾನತ್ತು ವರದಿಯನ್ನು ನಿಶಾನೆ ಪಿ3 ಎಂದು ಹಾಗೂ ಅದರಲ್ಲಿರುವ ಸಹಿಯನ್ನು ನಿಶಾನೆ ಪಿ3ಎ ಎಂದು ಗುರುತಿಸಲಾಯಿತು. ಅಂದು ಸ್ಥಳದಲ್ಲಿ ವಶಪಡಿಸಿಕೊಂಡ ಮುದ್ದೆ ಮಾಲುಗಳನ್ನು ನೋಡಿದರೆ ಗುರುತಿಸುತ್ತೇನೆ ಎಂದು ಹೇಳಿಕೆ ನೀಡಿರುತ್ತಾರೆ.

ದಿನಾಂಕ: 19-03-2015 ರಂದು ಪ್ರಾಸಿಕ್ಯೂಷನ್ ಸಾಕ್ಷಿ 2 ಶ್ರೀ ಗಿಡ್ಡುಸ್ವಾಮಿ, ಉಪ ವಲಯ ಅರಣ್ಯಾಧಿಕಾರಿ, ಉಂಬ್ಳೇಬೈಲು ವಲಯ ಇವರು ಸಹ ಪ್ರಕರಣದ ಬಗ್ಗೆ ಪ್ರಾಸಿಕ್ಯೂಷನ್ ಸಾಕ್ಷಿ 1 ರಂತೆ ಸಾಕ್ಷಿ ನುಡಿದಿರುತ್ತಾರೆ. ಅವರ ಸಹಿಯನ್ನು ನಿಶಾನೆ ಪಿ1ಬಿ ಎಂದು ಗುರುತಿಸಲಾಯಿತು ಪ್ರಕರಣದಲ್ಲಿ ವಶಪಡಿಸಿಕೊಂಡ ಮುದ್ದೆ ಮಾಲುಗಳನ್ನು ನೋಡಿದರೆ ಗುರುತಿಸುತ್ತೇನೆ ಎಂದು ಹೇಳಿಕೆ ನೀಡಿರುತ್ತಾರೆ.

ಅರ್ಜಿದಾರರ ಪರ ವಕೀಲರು ಪ್ರಾಸಿಕ್ಯೂಷನ್ ಸಾಕ್ಷಿದಾರರಾದ ಪಿಡಬ್ಲ್ಯೂ-1 ಹಾಗೂ ಪಿಡಬ್ಲ್ಯೂ-2 ರವರಿಗೆ ಪಾಟೀ ಸವಾಲು ಮಾಡಿರುವುದಿಲ್ಲ.

ಆದ್ದರಿಂದ ಪಾಟೀ ಸವಾಲು ಇಲ್ಲವೆಂದು ತೀರ್ಮಾನಿಸಿರುತ್ತದೆ.

ಅರ್ಜಿದಾರರ ಪರ ವಕೀಲರು ಹಾಗೂ ಅರ್ಜಿದಾರರು ಹಲವಾರು ಬಾರಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರೂ ಸಹ ಗೈರು ಹಾಜರಾಗಿರುತ್ತಾರೆ. ಈ ಪ್ರಕರಣದ ವಾಹನದಲ್ಲಿ ಅರಣ್ಯ ಉತ್ಪನ್ನ ಸಾಗಿಸಿರುವುದು ಹಾಗೂ ಅರ್ಜಿದಾರರು ನೇರವಾಗಿ ಭಾಗಿ ಆಗಿರುವುದು ದೃಡ ಪಟ್ಟಿರುತ್ತದೆ.

ಪ್ರಾಸಿಕ್ಯೂಷನ್ ಸಾಕ್ಷಿದಾರರು ಯಾವುದೇ ವ್ಯತಿರಿಕ್ತ ಹೇಳಿಕೆಗಳನ್ನು ಹೇಳಿರುವುದಿಲ್ಲ. ಆದ್ದರಿಂದ ಅಂಶ-1ಕ್ಕೆ ನನ್ನ ಉತ್ತರ ಹೌದು ಎಂಬುದಾಗಿದೆ.

ಅಂಶ-2:-

ಈ ಪ್ರಕರಣದಲ್ಲಿ ಅಮಾನತ್ತುಪಡಿಸಿದ ಮಹೇಂದ್ರ ಬುಲೇರೋ ಪಿಕ್ಅಪ್ ಸಂಖ್ಯೆ: ಕೆಎ-18-ಎ-1567 ರ ಮಾಲೀಕರಾದ ಶ್ರೀ ಸಂತೋಷ ಬಿನ್ ನಾಗರಾಜ, ಅಗಳಬಾಗಿಲು, ಅರಗಪೋಸ್ಟ್, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರು ದಿನಾಂಕ: 17-01-2012 ರಂದು ಈ ನ್ಯಾಯಾಲಯಕ್ಕೆ ವಾಹನವನ್ನು ಮಧ್ಯಾಂತರ ಸ್ವಾಧೀನಕ್ಕೆ ಬಿಡುಗಡೆ ಮಾಡಲು ಕೋರಿ ಅರ್ಜಿಸಲ್ಲಿಸಿದ್ದು ದಿನಾಂಕ: 20-01-2012 ರಂದು ವಾಹನದ ಮಾಲೀಕರಿಗೆ ಅರಣ್ಯ ಕಾಯ್ದೆ 1963 71 (ಬಿ) ಪ್ರಕಾರ ಕಾರಣ ಕೇಳಿ ತಿಳುವಳಿಕೆ ಪತ್ರ ನೀಡಿರುತ್ತದೆ. ಅರ್ಜಿದಾರರು ದಿನಾಂಕ: 28-01-2012 ರಂದು ಸಮಾಜಾಯಿಷಿಯನ್ನು ನೀಡಿರುತ್ತಾರೆ. ಅರ್ಜಿದಾರರ ವಾಹನದ ತಾತ್ಕಾಲಿಕ ಬಿಡುಗಡೆಗೆ ಕೋರಿದ ಅರ್ಜಿಯನ್ನು ದಿನಾಂಕ: 22-08-2013 ರಂದು ಸಂಪೂರ್ಣ ವಿಚಾರಣೆಯ ಅವಶ್ಯಕತೆ ದೃಷ್ಟಿಯಿಂದ ತಿರಸ್ಕರಿಸಲಾಗಿರುತ್ತದೆ. ವಿಚಾರಣೆಯ ದಿವಸ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯಧಾರಗಳನ್ನು ಹಾಜರುಪಡಿಸುವಲ್ಲಿ ವಿಫಲರಾಗಿರುತ್ತಾರೆ. ಆದ ಕಾರಣ ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷನ್ 71(ಬಿ)ಪ್ರಕಾರ ಆರ್.ಸಿ. ಮಾಲೀಕರಿಗೆ ಅವಕಾಶ ನೀಡಿರುವುದಾಗಿ ತೀರ್ಮಾನಿಸಿರುತ್ತೇನೆ. ಆದ್ದರಿಂದ ಕಾರಣ ಅಂಶ 2ಕ್ಕೆ ನನ್ನ ಉತ್ತರ ಹೌದು ಎಂಬುದಾಗಿದೆ.

ಅಂಶ-3:-

ವಾಹನದ ಆರ್.ಸಿ. ಮಾಲೀಕರ ಆದ ಶ್ರೀ ಸಂತೋಷ ಬಿನ್ ನಾಗರಾಜ, ಅಗಳಬಾಗಿಲು, ಅರಗಪೋಸ್ಟ್, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರು ವಕೀಲರ ಮುಖಾಂತರ ಈ ಕಛೇರಿಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮಹೇಂದ್ರ ಬುಲೇರೋ ಪಿಕ್ಅಪ್ ಸಂಖ್ಯೆ: ಕೆಎ-18-ಎ-1567 ರ ಆರ್.ಸಿ. ಮಾಲೀಕನಾಗಿರುತ್ತೇನೆ ಎಂದು ವಾಹನಕ್ಕೆ ಸಂಬಂಧಿಸಿ ಆರ್.ಸಿ. ಜೆರಾಕ್ಸ್ ಒಪ್ಪಿಸಿರುತ್ತಾರೆ. ಉಂಬ್ಳೇಬೈಲು ವಲಯ ಅರಣ್ಯಾಧಿಕಾರಿ ಹಾಗೂ ಅರ್ಜಿದಾರ/ವಾಹನದ ಮಾಲೀಕರಿಗೆ ಮಾತಿನ ಚಕಮಕಿ ಆಗಿದ್ದು, ಈ ಸಂಬಂಧ ಉಂಬ್ಳೇಬೈಲು ವಲಯ ಅರಣ್ಯಾಧಿಕಾರಿ ವಾಹನದ ಮೇಲೆ ಸುಳ್ಳು ಕೇಸನ್ನು ದಾಖಲು ಮಾಡಿರುತ್ತಾರೆ. ವಾಹನದಲ್ಲಿ ಯಾವುದೇ ಅರಣ್ಯ ಉತ್ಪನ್ನ ಸಾಗಿಸಿರುವುದಿಲ್ಲ. ಆದ್ದರಿಂದ ವಾಹನವನ್ನು ತಾತ್ಕಾಲಿಕ ಬಿಡುಗಡೆಗೊಳಿಸಬೇಕಾಗಿ ಕೋರಿರುತ್ತಾರೆ. ವಾಹನದ ಮಾಲೀಕರಿಗೆ ಅರಣ್ಯ ಕಾಯ್ದೆ 1963 ಸೆಕ್ಷನ್ 71 (ಬಿ) ಪ್ರಕಾರ ಕಾರಣ ಕೇಳಿ ತಿಳುವಳಿಕೆ ಪತ್ರ ನೀಡಿ ಸಮಜಾಯಿಸಿ ನೀಡಲು ತಿಳಿಸಿರುತ್ತದೆ. ವಾಹನದ ಮಾಲೀಕರು ವಕೀಲರ ಮುಖಾಂತರ ದಿನಾಂಕ: 28-01-2012 ರಂದು ಸಮಜಾಯಿಸಿ ನೀಡಿ ಪ್ರಕರಣದಲ್ಲಿ ವಶಪಡಿಸಿಕೊಂಡ ವಾಹನದಲ್ಲಿ ಯಾವುದೇ ಅರಣ್ಯ ಉತ್ಪನ್ನ ಇರಲಿಲ್ಲ. ಸುಳ್ಳು ಕೇಸನ್ನು ಹಾಕಿರುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರ ಪಾತ್ರವು ಇರುವುದಿಲ್ಲ.

ವಾಹನದಿಂದಲೇ ಜೀವನ ನಿರ್ವಹಣೆ ಆಗುತ್ತಿರುವುದರಿಂದ ವಾಹನವನ್ನು ದಯಮಾಡಿ ಸೂಕ್ತ ಷರತ್ತಿನೊಂದಿಗೆ ತಾತ್ಕಾಲಿಕ ಬಿಡುಗಡೆ ಮಾಡಬೇಕಾಗಿ ಕೋರಿರುತ್ತಾರೆ.

ಈ ಪ್ರಕರಣದ ಬಗ್ಗೆ ಡಿಫೆನ್ಸ್ ಪರವಾಗಿ ಅರ್ಜಿದಾರರ ವಿಚಾರಣೆ ಮಾಡಲು ಹಾಗೂ ಅವರ ಬಳಿ ಇರುವ ಸಾಕ್ಷ್ಯಧಾರಗಳನ್ನು ಹಾಜರು ಪಡಿಸಲು ಹಲವಾರು ದಿನಾಂಕಗಳಂದು ನೋಟಿಸ್ ಜಾರಿ ಮಾಡಿ ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಿದ್ದರು. ನ್ಯಾಯಾಲಯಕ್ಕೆ ಹಾಜರಾಗದೆ ಹಾಗೂ ಯಾವುದೆ ಸಾಕ್ಷ್ಯದಾರಗಳನ್ನು ಹಾಜರುಪಡಿಸದೇ ಗೈರು ಹಾಜರಾಗಿರುತ್ತಾರೆ. ಅರ್ಜಿದಾರರ ವಾಹನದಲ್ಲಿ ಅರಣ್ಯ ಉತ್ಪನ್ನವಾದ ಹೊನ್ನೆ ಹಲಗೆ-56, ಎತ್ಯಾಗ ಹಲಗೆ-5, ಹಾಗೂ ಹೊನ್ನೆ ಜಾತಿಯ ಚಟ್ಟುಗಳು 10 ಸಾಗಾಣಿಕೆಗೆ ಬಳಕೆಯಾಗದಂತೆ ವಾಹನದ ಮಾಲೀಕರು ಅಥವಾ ಅದರ ಪ್ರತಿನಿಧಿಗಳು ಅಥವಾ ಅದಕ್ಕೆ ಸಂಬಂಧಪಟ್ಟವರು ವಾಹನವನ್ನು ಸರ್ಕಾರದ ಸೊತ್ತಾದ ಅರಣ್ಯ ಉತ್ಪನ್ನವನ್ನು ರಹದಾರಿಯಿಲ್ಲದೇ ಕಳ್ಳ ಸಾಗಾಣಿಕೆಗೆ ಬಳಸಿದಾಗ ಅದು ತನ್ನ ಗಮನಕ್ಕೆ ಬಾರದಂತೆ ಈ ಕೃತ್ಯ ನಡೆದಿದೆ ಎಂಬುದನ್ನು ಸಮರ್ಥಿಸುವ ಸಾಕ್ಷ್ಯಧಾರಗಳನ್ನು ವಾಹನದ ಮಾಲೀಕರು ನೀಡಿರುವುದಿಲ್ಲ. ಅಲ್ಲದೇ ಈ ವಾಹನದಲ್ಲಿ ಹೊನ್ನೆ ಹಲಗೆ-56, ಎತ್ಯಾಗ ಹಲಗೆ-5, ಹಾಗೂ ಹೊನ್ನೆ ಜಾತಿಯ ಚಟ್ಟುಗಳು 10 ಅಕ್ರಮ ಸಾಗಾಣಿಕೆಗೆ ಬಳಕೆಯಾಗದಂತೆ ವಾಹನದ ಮಾಲೀಕರು ಅಥವ ಅದರ ಪ್ರತಿನಿಧಿಗಳು ಯಾವುದೇ ಮುನ್ನೆಚ್ಚರಿಕೆ ವಹಿಸಿದ ಬಗ್ಗೆ ಸಮರ್ಪಕವಾದ ಸಾಕ್ಷ್ಯಧಾರ ನೀಡಿರುವುದಿಲ್ಲ. ವಾಹನದಲ್ಲಿ ನನ್ನ ಗಮನಕ್ಕೆ ಬಾರದಂತೆ ಈ ಕೃತ್ಯ ನಡೆದಿದೆ ಎಂಬುದಕ್ಕೆ ಹಾಗೂ ವಲಯ ಅರಣ್ಯಾಧಿಕಾರಿಯವರು ಸುಳ್ಳು ಪ್ರಕರಣವನ್ನು ದಾಖಲು ಮಾಡಿರುತ್ತಾರೆ. ಯಾವುದೇ ಅರಣ್ಯ ಉತ್ಪನ್ನವು ವಾಹನದಲ್ಲಿ ಸಾಗಿಸಿರುವುದಿಲ್ಲ ಎಂಬ ಬಗ್ಗೆ ಕರ್ನಾಟಕ ಅರಣ್ಯ ಕಾಯಿದೆ ಕಲಂ 71(ಬಿ) (2) ರೀತ್ಯಾ ಸಾಬೀತು ಪಡಿಸುವ ಜವಾಬ್ದಾರಿ ವಾಹನದ ಮಾಲೀಕರಿಗೆ ಸೇರಿದ್ದಾಗಿರುತ್ತದೆ. ಅಲ್ಲದೇ ವಾಹನದ ಮಾಲೀಕರ ಎಜೆಂಟರಾಗಲೀ, ಚಾಲಕರಾಗಲೀ ಅಥವಾ ಇತರೆ ನಂಬಿಕೆ ಪ್ರತಿನಿಧಿಗಳು ವಾಹನದಲ್ಲಿ ಅಕ್ರಮ ಸಾಗಾಣಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಸಹ ಅವರುಗಳ ಜವಬ್ದಾರಿಯಾಗಿರುತ್ತದೆ.

"Without prejudice to the provisions of sub-section (1), no order confiscating any tool,rope, chain, boat, vehicle or cattle shall be made under section 71A if the owner of the tool,rope,chain,boat,vehicle or cattle proves to the satisfaction of the authorised officer that it was used in carrying the timber, sandalwood, charcoal, firewood or ivory without the knowledge or connivance of the owner himself, his agent, if any, and the person in charge of the tool,rope,chain,boat,vehicle or cattle and that each of them had taken all reasonable and necessary precautions against such use."೫೩೮೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ಭಾಗ ೩ ಹಾಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಾಹನದ ಮಾಲೀಕರು ಈ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯನ್ನು ಗಮನಿಸಿದಾಗ ವಾಹನವನ್ನು ಬಿಡಿಸಿಕೊಳ್ಳಲು ಸೃಷ್ಟಿಸಿದ ಒಂದು ಕಟ್ಟುಕತೆ ಎಂದು ಹಾಗೂ ವಾಹನದಲ್ಲಿ ಹೊನ್ನೆ ಹಲಗೆ-56, ಎತ್ಯಾಗ ಹಲಗೆ-5, ಹಾಗೂ ಹೊನ್ನೆ ಜಾತಿಯ ಚಟ್ಟುಗಳು 10 ಅಕ್ರಮ ಸಾಗಾಣಿಕೆಯು ವಾಹನದ ಮಾಲೀಕರಿಗೆ ಗೊತ್ತಿದ್ದೇ ಈ ಕೃತ್ಯ ನಡೆದಿದೆಯೆಂದು ಅಭಿಪ್ರಾಯ ಪಡುತ್ತೇನೆ.

ಈ ಮೇಲಿನ ಎಲ್ಲಾ ಕಾರಣಗಳಿಂದ 3ನೇ ಅಂಶದ ಪ್ರಶ್ನೆಗೆ ಮೊದಲನೇ ಭಾಗದ ಪ್ರಶ್ನೆಗೆ ನನ್ನ ಉತ್ತರ ಹೌದು ಎಂದು ಎರಡನೇ ಹಾಗೂ 3ನೇ ಭಾಗದ ಪ್ರಶ್ನೆಗೆ ನನ್ನ ಉತ್ತರ ಇಲ್ಲವೆಂದು ಅಭಿಪ್ರಾಯ ಪಡುತ್ತೇನೆ.

ಈ ಮೇಲಿನ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ವಾಹನದ ಮಾಲೀಕರು ಅರಣ್ಯ ಉತ್ಪನ್ನಗಳ ಸಾಗಾಣಿಕೆಯಲ್ಲಿ ಭಾಗವಹಿಸಲು ವಾಹನವನ್ನು ಉಪಯೋಗಿಸಿರುವುದು ಸ್ಪಷ್ಟವಾಗಿ ಕಂಡುಬಂದಿರುತ್ತದೆ. ಅಲ್ಲದೇ ಪ್ರಾಧೀಕಾರಕ್ಕೆ ಹಾಜರುಪಡಿಸಿದ ಪ್ರಕರಣದ ಮಹಜರ್ ನಿಶಾನೆ ಪಿ1ರ ಪ್ರಕಾರ ಹಾಗೂ ಪ್ರಾಸಿಕ್ಯೂಷನ್ ಸಾಕ್ಷಿಗಳಾದ ಪಿಡಬ್ಲ್ಯೂ1 ಮತ್ತು 2 ರವರು ಈ ಪ್ರಾಧಿಕಾರದಲ್ಲಿ ಸಾಕ್ಷಿ ನುಡಿದಂತೆ ಹೊನ್ನೆ ಹಲಗೆ-56, ಎತ್ಯಾಗ ಹಲಗೆ-5, ಹಾಗೂ ಹೊನ್ನೆ ಜಾತಿಯ ಚಟ್ಟುಗಳು 10 ನ್ನು ಸಾಗಿಸಲು ವಾಹನ ಬಳಸಿರುವುದು ಸ್ಪಷ್ಟವಾಗಿ ಕಂಡು ಬಂದಿರುತ್ತದೆ. ಅಲ್ಲದೇ ನನ್ನ ಮುಂದೆ ಹಾಜರುಪಡಿಸಿದ ದಾಖಲಾತಿಗಳು ಸಾಕ್ಷ್ಯಧಾರಗಳು ಮತ್ತು ವಾದ ವಿವಾದಗಳಿಂದ ವಾಹನ ಮಾಲೀಕರಾಗಲೀ ಇಲ್ಲವೇ ವಾಹನದ ಉಸ್ತುವಾರಿದಾರರಾಗಲೀ ವಾಹನವು ಅಕ್ರಮ ಅರಣ್ಯ ಉತ್ಪನ್ನ ಸಾಗಾಣಿಕೆಯಲ್ಲಿ ಭಾಗಿ ಆಗದಂತೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದೇ ಬದಲಾಗಿ ತಮಗೆ ಗೊತ್ತಿದ್ದೆ ಈ ಎಲ್ಲಾ ವ್ಯಕ್ತಿಗಳು ಈ ವಾಹನದಲ್ಲಿ ಅಕ್ರಮವಾಗಿ ಹೊನ್ನೆ ಹಲಗೆ-56, ಎತ್ಯಾಗ ಹಲಗೆ-5, ಹಾಗೂ ಹೊನ್ನೆ ಜಾತಿಯ ಚಟ್ಟುಗಳು 10 ನ್ನು ಅರಣ್ಯ ಕಾಯ್ದೆ 1963 ಕಲಂ 24, 50, 62, 71(ಎ) ಹಾಗೂ ಅರಣ್ಯ ಕಾನೂನು 1969 ನಿಯಮ 144, 165 ರ ವಿರುದ್ಧವಾಗಿ ಸಾಗಿಸಲು ಉಪಯೋಗಿಸಿದ್ದಾರೆಂದು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶ ನೀಡ ಬಯಸುತ್ತೇನೆ.

ಆದೇಶ

ಈ ಮೇಲ್ಕಾಣಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ದಾಖಲಾತಿಗಳನ್ನು ಹಾಗೂ ಸಾಕ್ಷ್ಯಧಾರಗಳನ್ನು ಮತ್ತು ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಟಿ. ಬಾಲಚಂದ್ರ, ಭಾ.ಅ.ಸೇ., ಅಧಿಕಾರಿಯುತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಭದ್ರಾವತಿ ವಿಭಾಗ, ಭದ್ರಾವತಿ ಆದ ನಾನು ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 71(ಎ) (2ನೇ ತಿದ್ದುಪಡಿ) ಪ್ರಕಾರ ಮಹೇಂದ್ರ ಬುಲೇರೋ ಪಿಕ್ಅಪ್ ಸಂಖ್ಯೆ: ಕೆಎ-18-ಎ-1567 (ಇಂಜಿನ್ ನಂ.GG71G52227 ಚಾಸೀಸ್ ನಂ. MAIZN2GGA71636937) ಹಾಗೂ ಹೊನ್ನೆ ಹಲಗೆ-56, ಎತ್ಯಾಗ ಹಲಗೆ-5, ಹಾಗೂ ಹೊನ್ನೆ ಜಾತಿಯ ಚಟ್ಟುಗಳು 10 ನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿ ಆದೇಶ ಹೊರಡಿಸಿರುತ್ತೇನೆ.

ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾದಲ್ಲಿ ಈ ಆದೇಶ ಹೊರಡಿಸಿದ 30 ದಿವಸದೊಳಗೆ ಸಲ್ಲಿಸಬಹುದಾಗಿದೆ. ತಪ್ಪಿದಲ್ಲಿ ಇದೇ ಅಂತಿಮ ಆದೇಶವಾಗಿ ಊರ್ಜಿತಗೊಳ್ಳುತ್ತದೆ. ಅಲ್ಲದೇ ಮೇಲ್ಮನವಿ ಅವಧಿ ಮೀರಿದ ಬಳಿಕ ವಾಹನ ಹಾಗೂ ಅರಣ್ಯ ಉತ್ಪನ್ನವನ್ನು ಕಾನೂನು ರೀತ್ಯಾ ವಿಲೇವಾರಿ ಮಾಡಲು ಕೂಡ ಆದೇಶಿಸಿದೆ.

ಈ ಆದೇಶವನ್ನು ದಿನಾಂಕ:14-09-2017 ರಂದು ನ್ಯಾಯಾಲಯದ ಮೊಹರು ಹಾಗೂ ನನ್ನ ಸಹಿಯೊಂದಿಗೆ ಹೊರಡಿಸಿರುತ್ತೇನೆ.

ಟಿ. ಬಾಲಚಂದ್ರ, ಭಾ.ಅ.ಸೇ.,

ಅಧಿಕಾರಿಯುತ ಅಧಿಕಾರಿ ಹಾಗೂ

ಉಪ ಅರಣ್ಯ ಸಂರಕ್ಷಣಾಧಿಕಾರಿ,

ಭದ್ರಾವತಿ ವಿಭಾಗ, ಭದ್ರಾವತಿ.

ಅನುಬಂಧ :

1. ಫಿರ್ಯಾಧಿದಾರರ ಪರ ಸಾಕ್ಷಿಗಳ ವಿಚಾರಣೆ

ಅ) ಪಿಡಬ್ಲ್ಯೂ 1 ಶ್ರೀ ಎನ್.ಡಿ. ಕೆಂಪೇಗೌಡ, ಉಪ ವಲಯ ಅರಣ್ಯಾಧಿಕಾರಿ, ಉಂಬ್ಳೇಬೈಲು ವಲಯ.

ಆ) ಪಿಡಬ್ಲ್ಯೂ 2 ಶ್ರೀ ಗಿಡ್ಡುಸ್ವಾಮಿ, ಉಪ ವಲಯ ಅರಣ್ಯಾಧಿಕಾರಿ ಉಂಬ್ಳೇಬೈಲು ವಲಯ.

2. ಫಿರ್ಯಾಧಿದಾರರ ಪರ ದಾಖಲಾತಿಗಳ ಪರಿಶೀಲನೆ

ನಿಶಾನೆ ಪಿ1 ಸ್ಥಳ ಮಹಜರ್

ನಿಶಾನೆ ಪಿ1ಎ ಪಿಡಬ್ಲ್ಯೂ 1 ಸಾಕ್ಷಿದಾರರ ಸಹಿ

ನಿಶಾನೆ ಪಿ1ಬಿ ಪಿಡಬ್ಲ್ಯೂ 2 ಸಾಕ್ಷಿದಾರರ ಸಹಿ

ನಿಶಾನೆ ಪಿ2 ಪ್ರಥಮ ಮಾಹಿತಿ ವರದಿ

ನಿಶಾನೆ ಪಿ2ಎ ಪಿಡಬ್ಲ್ಯೂ 1 ಸಾಕ್ಷಿದಾರರ ಸಹಿ

ನಿಶಾನೆ ಪಿ3 ಸೀಜರ್ ರಿಪೋರ್ಟ್

ನಿಶಾನೆ ಪಿ3ಎ ಪಿಡಬ್ಲ್ಯೂ 1 ಸಾಕ್ಷಿದಾರರ ಸಹಿ 3. ಅರ್ಜಿದಾರರ ಪರ ಸಾಕ್ಷಿಗಳ ವಿಚಾರಣೆ ಇರುವುದಿಲ್ಲ. 4. ಅರ್ಜಿದಾರರ ಪರ ದಾಖಲಾತಿಗಳ ಪರಿಶೀಲನೆ ಇರುವುದಿಲ್ಲ.

PR - 785

ಅಧಿಕಾರಿಯುತ ಅಧಿಕಾರಿ ಹಾಗೂ

SC - 05

ಉಪ ಅರಣ್ಯ ಸಂರಕ್ಷಣಾಧಿಕಾರಿ,

ಭದ್ರಾವತಿ ವಿಭಾಗ, ಭದ್ರಾವತಿ.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ೫೩೮೩

ಅಧಿಕಾರಿಯುತ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯ, ಭದ್ರಾವತಿ ವಿಭಾಗ, ಭದ್ರಾವತಿ.

ಸಂಖ್ಯೆ: ಎಫ್.ಓ.ಸಿ.-ಸಿಓಎನ್-ಸಿಆರ್-7/2008-09, ದಿನಾಂಕ: 28-09-2017

ಉಪಸ್ಥಿತರು : ಶ್ರೀ ಟಿ. ಬಾಲಚಂದ್ರ, ಭಾ.ಅ.ಸೇ.,

ಅಧಿಕಾರಿಯುತ ಅಧಿಕಾರಿಗಳು ಹಾಗೂ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು,

ಭದ್ರಾವತಿ ವಿಭಾಗ, ಭದ್ರಾವತಿ.

ಪಿರ್ಯಾಧಿದಾರರು : ವಲಯ ಅರಣ್ಯಾಧಿಕಾರಿ,

ತರೀಕೆರೆ ವಲಯ, ತರೀಕೆರೆ.

ಅರ್ಜಿದಾರರು : ಶ್ರೀ ಸಮಿವುಲ್ಲಾ ಬಿನ್ ಆಲಿಮುರ್ತುಜಾ,

ವಯಸ್ಸು 26, ಗಾಳಿಹಳ್ಳಿ, ತರೀಕೆರೆ.

ಪ್ರಕರಣದ ಹಿನ್ನೆಲೆ:-

ದಿನಾಂಕ: 01-10-2008 ರಂದು ತರೀಕೆರೆ ವಲಯದ ಲಿಂಗದಹಳ್ಳಿ ಶಾಖೆಯ ವನಪಾಲಕರು ಹಾಗೂ ಸಿಬ್ಬಂದಿ ವರ್ಗದವರು ಸೈದೂಖಾನ್ ಬಸ್ ನಿಲ್ದಾಣದ ಬಳಿ ತುರ್ತು ವರ್ತಮಾನ ನಿಮಿತ್ತ ಗಸ್ತು ತಿರುಗುವಾಗ ಸಾಗುವಾನಿ ತುಂಡು 5=1.009 ಎಂ3 ನ್ನು ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಒಂದು ಟಾಟಾ ಮೊಬೈಲ್ ವ್ಯಾನ್ ಸಂಖ್ಯೆ:ಕೆಎ-18-6675 ನ್ನು ಅಪರಾದಿಗಳ ಸಮೇತ ವಶಪಡಿಸಿಕೊಂಡು ಅರಣ್ಯ ಮೊಕದ್ದಮೆ ಸಂಖ್ಯೆ:88/2008-09 ನ್ನು ದಾಖಲು ಮಾಡಿ ಅರಣ್ಯ ಕಾಯ್ದೆ 71(ಎ) ಪ್ರಕಾರ ಕ್ರಮ ಜರುಗಿಸಲು ಈ ನ್ಯಾಯಾಲಯದ ಸಮಕ್ಷಮ ಹಾಜರುಪಡಿಸಿರುತ್ತಾರೆ.

ವಾಹನ ಮತ್ತು ಅರಣ್ಯ ಉತ್ಪನ್ನವನ್ನು ವಲಯ ಅರಣ್ಯಾಧಿಕಾರಿ, ಸರ್ಕಾರಿ ನಾಟಾ ಸಂಗ್ರಹಾಲಯ, ತರೀಕೆರೆ ಇವರ ವಶಕ್ಕೆ ಸುರಕ್ಷತೆಗಾಗಿ ಕೊಡಲಾಗಿದೆ.

ದಿನಾಂಕ:17-10-2008 ರಂದು ವಾಹನದ ಆರ್.ಸಿ. ಮಾಲೀಕ ಸಮಿವುಲ್ಲಾ ಬಿನ್ ಆಲಿ ಮುರ್ತುಜಾ, ಗಾಳಿಹಳ್ಳಿ, ತರೀಕೆರೆ ಇವರು ಈ ಕಛೇರಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಅರ್ಜಿ ಸಲ್ಲಿಸಿ ದಿನಾಂಕ:01-10-2008 ರಂದು ವಶಪಡಿಸಿಕೊಂಡ ವಾಹನದಲ್ಲಿ ಯಾವುದೇ ಅರಣ್ಯ ಉತ್ಪನ್ನ ಸಾಗಿಸಿರುವುದಿಲ್ಲ. ಪ್ರಕರಣದಲ್ಲಿ ವಶಪಡಿಸಿಕೊಂಡ ವಾಹನದಲ್ಲಿ ಅರಣ್ಯ ಉತ್ಪನ್ನ ಸಾಗಿಸಿರುವ ಬಗ್ಗೆ ಅರಣ್ಯಾಧಿಕಾರಿಯ ಹೊರತು ಪಡಿಸಿ ಬೇರೆ ಯಾರಿಗೂ ಮಾಹಿತಿ ಇರುವುದಿಲ್ಲ. ಸುಳ್ಳು ಪ್ರಕರಣವನ್ನು ದಾಖಲು ಮಾಡಿರುತ್ತಾರೆ. ನ್ಯಾಯಾಲಯವು ವಿಧಿಸುವ ಯಾವುದೇ ಷರತ್ತಿಗೆ ಬದ್ಧರಿರುವುದಾಗಿ ತಿಳಿಸಿ ವಾಹನವನ್ನು ಬಿಡುಗಡೆಗೆ ಕೋರಿರುತ್ತಾರೆ.

ವಾಹನದ ಮಾಲೀಕರಿಗೆ ದಿನಾಂಕ:23-12-2008 ರಂದು ಅರಣ್ಯ ಕಾಯ್ದೆ 71(ಬಿ) ಪ್ರಕಾರ ಕಾರಣ ಕೇಳಿ ತಿಳುವಳಿಕೆ ಪತ್ರವನ್ನು ಜಾರಿ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದ ವಾಹನದ ಮಾಲೀಕರು ನೀವೆಂದು ತಿಳಿದುಬಂದಿದ್ದು, ನಿಮ್ಮ ವಾಹನವು ಅರಣ್ಯ ಉತ್ಪನ್ನದ ಕಳ್ಳ ಸಾಗಾಣಿಕೆಯಲ್ಲಿ ಭಾಗಿಯಾಗಿದ್ದು ನೀವು ಅಥವಾ ನೀವು ನೇಮಿಸಿದಂತಹ ಚಾಲಕ/ಪ್ರತಿನಿಧಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿ ಕೈಗೆ ಸಿಗದೇ ಪರಾರಿಯಾಗಿರುವುದು ದಾಖಲಾತಿಗಳಿಂದ ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ನಿಮ್ಮ ವಾಹನವನ್ನು ಸರ್ಕಾರಕ್ಕೆ ಏಕೆ ಮುಟ್ಟುಗೋಲು ಮಾಡಿಕೊಳ್ಳಬಾರದೆಂಬುದರ ಬಗ್ಗೆ 7(ಏಳು) ದಿನಗಳಲ್ಲಿ ಲಿಖಿತವಾಗಿ ಅಥವಾ ಖುದ್ದಾಗಿ ನಿಮ್ಮ ಸಮಜಾಯಿಷಿಯನ್ನು ದಾಖಲಾತಿಗಳೊಂದಿಗೆ ಒಪ್ಪಿಸಲು ಸೂಚಿಸಲಾಗಿರುತ್ತದೆ.

ದಿನಾಂಕ: 07-01-2009 ರಂದು ಅರ್ಜಿದಾರರು ಸಮಜಾಯಿಷಿ ನೀಡಿ ದಿನಾಂಕ: 23-12-2008 ರಂದು ನೀಡಿದ ಕಾರಣ ಕೇಳಿ ತಿಳುವಳಿಕೆ ಪತ್ರದಲ್ಲಿರುವ ವಿಚಾರಗಳು ಸುಳ್ಳಾಗಿದ್ದು ವಾಹನವನ್ನು ಯಾವುದೇ ರೀತಿ ದುರುಪಯೋಗಪಡಿಸಿಕೊಂಡಿರುವುದಿಲ್ಲ. ವಾಹನದಲ್ಲಿ ಯಾವುದೇ ಅರಣ್ಯ ಉತ್ಪನ್ನ, ಅಕ್ರಮ ಸಾಗಾಣಿಕೆಯಾಗಿರುವುದಿಲ್ಲ. ವಾಹನವನ್ನು ಚಾಲಕನ ಸಂಗಡ ಬಾಡಿಗೆಗಾಗಿ ಕಳುಹಿಸಿದ್ದು ವಾಹನವು ಕೆಮ್ಮಣ್ಣುಗುಂಡಿಯಿಂದ ಲಿಂಗದಹಳ್ಳಿ ಮುಖಾಂತರ ತರೀಕೆರೆ ಕಡೆಗೆ ಬರಬೇಕಾದರೆ ಅರಣ್ಯ ಇಲಾಖಾ ಸಿಬ್ಬಂದಿಯವರು ಸೈದೂಖಾನ್ ಬಸ್ ಸ್ಟಾಪ್ ಹತ್ತಿರ ವಾಹನವನ್ನು ತಡೆದು ನಿಲ್ಲಿಸಿರುತ್ತಾರೆ.

ಹಾಗೂ ಲಿಂಗದಹಳ್ಳಿ ಗ್ರಾಮದ ತನಕ ಡ್ರಾಪ್ಟ್ ಕೊಡಲು ಕೇಳಿರುತ್ತಾರೆ. ಆ ಸಮಯದಲ್ಲಿ ವಾಹನದ ಚಾಲಕನು ಇಲಾಖಾ ಸಿಬ್ಬಂದಿಯವರನ್ನು ಕರೆದುಕೊಂಡು ಬಂದಿರುತ್ತಾನೆ. ಲಿಂಗದಹಳ್ಳಿ ಗ್ರಾಮದ ಹತ್ತಿರ ಬಂದ ಕೂಡಲೇ ವಾಹನವನ್ನು ಅರಣ್ಯ ಇಲಾಖೆಯ ವ್ಯಾಪ್ತಿಗೆ ಪಡೆದು ವಾಹನದ ಚಾಲಕನನ್ನು ಓಡಿ ಹೋಗಲು ತಿಳಿಸಿರುತ್ತಾರೆ. ತಪ್ಪಿದಲ್ಲಿ ನಿಮ್ಮ ಮೇಲೆ ಕೇಸ್ ದಾಖಲು ಮಾಡಲಾಗುವುದು ಎಂದು ಬೆದರಿಸಿರುತ್ತಾರೆ. ವಾಹನದ ಮಾಲೀಕರನು ಸ್ಥಳದಿಂದ ವಾಪಸ್ಸು ಬಂದು ಇದ್ದ ವಿಷಯವನ್ನು ತಿಳಿಸಿರುತ್ತಾನೆ. ನಂತರ ವಾಹನದ ಮಾಲೀಕರು ಸ್ಥಳಕ್ಕೆ ಹೋದಾಗ ವಾಹನದಲ್ಲಿ ಅರಣ್ಯ ಉತ್ಪನ್ನ ಸಾಗಿಸುತ್ತಿರುವುದಾಗಿ ವಾಹನದ ಮೇಲೆ ಅರಣ್ಯ ಅಪರಾಧ ಪ್ರಕರಣ ದಾಖಲು ಮಾಡಿರುವುದಾಗಿ ತಿಳಿಸಿರುತ್ತಾರೆ. ವಾಹನದಲ್ಲಿ ಯಾವುದೇ ಅರಣ್ಯ ಉತ್ಪನ್ನ ಸಾಗಿಸಿರುವುದಿಲ್ಲ.

ವಾಹನದಿಂದಲೇ ಜೀವನೋಪಾಯ ಸಾಗುತ್ತಿರುವುದರಿಂದ ವಾಹನವನ್ನು ಷರತ್ತನ್ನು ವಿಧಿಸಿ ಬಿಡುಗಡೆ ಮಾಡಬೇಕಾಗಿ ಕೋರಿರುತ್ತಾರೆ.

ದಿನಾಂಕ: 18-12-2014 ರಂದು ಸರ್ಕಾರಿ ಸಹಾಯಕ ಅಭಿಯೋಜಕರು, ಭದ್ರಾವತಿ ಇವರು ಆಕ್ಷೇಪಣೆ ವರದಿ ಒಪ್ಪಿಸಿ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರು/ವಾಹನದ ಮಾಲೀಕರ ನೇಮಿಸಿದಂತಹ ಪ್ರತಿನಿಧಿಗಳು ಅಪರಾಧದಲ್ಲಿ ಭಾಗಿ ಆಗಿರುವುದು ಮೇಲುನೋಟಕ್ಕೆ ಕಂಡುಬಂದಿರುತ್ತದೆ. ಪ್ರಕರಣಕ್ಕೆ ಸಂಬಂಧಿಸಿದ ವಾಹನವನ್ನು ಈ ಹಂತದಲ್ಲಿ ಬಿಡುಗಡೆ ಮಾಡಿದಲ್ಲಿ ವಾಹನದ ಬಣ್ಣ ಚಹರೆ ಹಾಗೂ ವಾಹನದ ಬಿಡಿ ಭಾಗಗಳನ್ನು ಬದಲಿಸುವ ಸಾಧ್ಯತೆಯಿರುತ್ತದೆ. ಹಾಗೂ ವಾಹನವನ್ನು ದುರ್ಬಳಕೆಗೆ ಉಪಯೋಗಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಮುಂದಿನ ತನಿಖೆಗೆ ಅಡಚಣೆ ಉಂಟಾಗುವ ಸಾದ್ಯತೆ ಹೆಚ್ಚಿರುತ್ತದೆ. ಆದ್ದರಿಂದ ವಾಹನವನ್ನು ಈ ಹಂತದಲ್ಲಿ ಬಿಡುಗಡೆ ಮಾಡಬಾರದಾಗಿ ವಿನಂತಿಸಿರುತ್ತಾರೆ.

ಈ ಪ್ರಕರಣದ ಬಗ್ಗೆ ಘನ ನ್ಯಾಯಾಲಯಕ್ಕೆ ಹಾಜರಾಗಲು ದಿನಾಂಕ: 20-11-2014 ರಿಂದ 14-09-2017 ರ ವರೆಗೆ ಕಾಲಾವಕಾಶವನ್ನು ನೀಡಿ ವಾಹನದಲ್ಲಿ ಯಾವುದೇ ಅರಣ್ಯ ಉತ್ಪನ್ನಗಳು ಅಕ್ರಮವಾಗಿ ಸಾಗಾಣಿಕೆ ಮಾಡಿರುವುದಿಲ್ಲ ಎಂಬ ಬಗ್ಗೆ ನಿರೂಪಿಸಲು ಸಾಕಷ್ಟು ಕಾಲಾವಕಾಶವನ್ನು ನೀಡಲಾಗಿರುತ್ತದೆ. ಅರ್ಜಿದಾರರ ಪರ ವಕೀಲರು ಹಾಜರಾಗಿದ್ದು ವಾಹನವನ್ನು ಸರ್ಕಾರದ ಪರ ಮುಟ್ಟುಗೋಲು ಮಾಡಬಾರದಾಗಿ ಅವಕಾಶ ನೀಡಬೇಕಾಗಿ ಕೋರಿರುತ್ತಾರೆ. ಸಹಾಯಕ ಸರ್ಕಾರಿ ಅಭಿಯೋಜಕರು ಈಗಾಗಲೇ ವಾಹನದ ಮಾಲೀಕರು/ಅರ್ಜಿದಾರರಿಗೆ ಸಾಕಷ್ಟು ಕಾಲಾವಕಾಶವನ್ನು ಕೊಟ್ಟಿರುವುದರಿಂದ ಅರ್ಜಿದಾರರ ಗೈರು ಹಾಜರಾತಿ ಮೇಲೆ ಪ್ರಕರಣವನ್ನು ಮುಕ್ತಾಯಗೊಳಿಸಿ ವಾಹನವನ್ನು ಸರ್ಕಾರದ ಪರ ಮುಟ್ಟುಗೋಲು ಮಾಡಲು ವಾದ ಮಂಡಿಸಿರುತ್ತಾರೆ.

೫೩೮೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ಭಾಗ ೩

ಅರ್ಜಿದಾರರ ಅರ್ಜಿ ಹಾಗೂ ಪಿರ್ಯಾಧಿದಾರರು ಪ್ರಕರಣದ ಬಗ್ಗೆ ದಾಖಲಿಸಿದ ದಾಖಲಾತಿಗಳು ಅಭಿಯೋಜನಾವತಿಯಿಂದ ನೀಡಿದ ತಕರಾರು ಅರ್ಜಿ ಮತ್ತು ಅರ್ಜಿದಾರರ ಪರ ವಕೀಲರು ಸಲ್ಲಿಸಿದ ಮನವಿಯನ್ನು ಮೇಲ್ಕಂಡ ಪ್ರಸ್ತಾವನೆಯಂತೆ ಪರಿಶೀಲಿಸಲಾಗಿ ಈ ಪ್ರಕರಣದ ಬಗ್ಗೆ ಡಿಫೆನ್ಸ್ ಪರವಾಗಿ ಅರ್ಜಿದಾರರ ವಿಚಾರಣೆ ಮಾಡಲು ಹಾಗೂ ಅವರ ಬಳಿ ಇರುವ ಸಾಕ್ಷ್ಯಧಾರಗಳನ್ನು ಹಾಜರು ಪಡಿಸಲು ಹಲವಾರು ದಿನಾಂಕಗಳಂದು ನೋಟಿಸ್ ಜಾರಿ ಮಾಡಿ ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಿದ್ದರು. ನ್ಯಾಯಾಲಯಕ್ಕೆ ಹಾಜರಾಗದೆ ಹಾಗೂ ಯಾವುದೆ ಸಾಕ್ಷ್ಯದಾರಗಳನ್ನು ಹಾಜರುಪಡಿಸದೇ ಗೈರು ಹಾಜರಾಗಿರುತ್ತಾರೆ. ಅರ್ಜಿದಾರರ ವಾಹನದಲ್ಲಿ ಅಕ್ರಮ ಅರಣ್ಯ ಉತ್ಪನ್ನಗಳು ಸಾಗಾಣಿಕೆಗೆ ಬಳಕೆಯಾಗದಂತೆ ವಾಹನದ ಮಾಲೀಕರು ಅಥವಾ ಅದರ ಪ್ರತಿನಿಧಿಗಳು ಅಥವಾ ಅದಕ್ಕೆ ಸಂಬಂಧಪಟ್ಟವರು ವಾಹನವನ್ನು ಸರ್ಕಾರದ ಸೊತ್ತಾದ ಅರಣ್ಯ ಉತ್ಪನ್ನವನ್ನು ರಹದಾರಿಯಿಲ್ಲದೇ ಕಳ್ಳ ಸಾಗಾಣಿಕೆಗೆ ಬಳಸಿದಾಗ ಅದು ತನ್ನ ಗಮನಕ್ಕೆ ಬಾರದಂತೆ ಈ ಕೃತ್ಯ ನಡೆದಿದೆ ಎಂಬುದನ್ನು ಸಮರ್ಥಿಸುವ ಸಾಕ್ಷ್ಯಧಾರಗಳನ್ನು ವಾಹನದ ಮಾಲೀಕರು ನೀಡಿರುವುದಿಲ್ಲ.

ಅಲ್ಲದೇ ಈ ವಾಹನದಲ್ಲಿ ಅರಣ್ಯ ಉತ್ಪನ್ನಗಳು ಅಕ್ರಮ ಸಾಗಾಣಿಕೆಗೆ ಬಳಕೆಯಾಗದಂತೆ ವಾಹನದ ಮಾಲೀಕರು ಅಥವ ಅದರ ಪ್ರತಿನಿಧಿಗಳು ಯಾವುದೇ ಮುನ್ನೆಚ್ಚರಿಕೆ ವಹಿಸಿದ ಬಗ್ಗೆ ಸಮರ್ಪಕವಾದ ಸಾಕ್ಷ್ಯಧಾರ ನೀಡಿರುವುದಿಲ್ಲ. ವಾಹನದಲ್ಲಿ ನನ್ನ ಗಮನಕ್ಕೆ ಬಾರದಂತೆ ಈ ಕೃತ್ಯ ನಡೆದಿದೆ ಎಂಬುದಕ್ಕೆ ಕರ್ನಾಟಕ ಅರಣ್ಯ ಕಾಯಿದೆ ಕಲಂ 71(ಬಿ) (2) ರೀತ್ಯಾ ಸಾಬೀತು ಪಡಿಸುವ ಜವಾಬ್ದಾರಿ ವಾಹನದ ಮಾಲೀಕರಿಗೆ ಸೇರಿದ್ದಾಗಿರುತ್ತದೆ. ಅಲ್ಲದೇ ವಾಹನದ ಮಾಲೀಕರ ಎಜೆಂಟರಾಗಲೀ, ಚಾಲಕರಾಗಲೀ ಅಥವಾ ಇತರೆ ನಂಬಿಕೆ ಪ್ರತಿನಿಧಿಗಳು ವಾಹನದಲ್ಲಿ ಅಕ್ರಮ ಸಾಗಾಣಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಸಹ ಅವರುಗಳ ಜವಬ್ದಾರಿಯಾಗಿರುತ್ತದೆ.

"Without prejudice to the provisions of sub-section (1), no order confiscating any tool,rope, chain, boat, vehicle or cattle shall be made under section 71A if the owner of the tool,rope,chain,boat,vehicle or cattle proves to the satisfaction of the authorised officer that it was used in carrying the timber, sandalwood, charcoal, firewood or ivory without the knowledge or connivance of the owner himself, his agent, if any, and the person in charge of the tool,rope,chain,boat,vehicle or cattle and that each of them had taken all reasonable and necessary precautions against such use."

ಹಾಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಾಹನದ ಮಾಲೀಕರು ಈ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯನ್ನು ಗಮನಿಸಿದಾಗ ವಾಹನವನ್ನು ಬಿಡಿಸಿಕೊಳ್ಳಲು ಸೃಷ್ಟಿಸಿದ ಒಂದು ಕಟ್ಟುಕತೆ ಎಂದು ಹಾಗೂ ವಾಹನದಲ್ಲಿ ಸಾಗುವಾನಿ ತುಂಡುಗಳು 5=1.009 ಎಂ3 ನ್ನು ಅಕ್ರಮ ಸಾಗಾಣಿಕೆಯು ವಾಹನದ ಮಾಲೀಕರಿಗೆ ಗೊತ್ತಿದ್ದೇ ಈ ಕೃತ್ಯ ನಡೆದಿದೆಯೆಂದು ಅಭಿಪ್ರಾಯದ ಮೇರೆಗೆ ಪ್ರಕರಣದ ಬಗ್ಗೆ ಈ ಕೆಳಕಂಡಂತೆ ಆದೇಶ ಹೊರಡಿಸಿರುತ್ತೇನೆ.

ಆದೇಶ

ಈ ಮೇಲ್ಕಾಣಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ದಾಖಲಾತಿಗಳನ್ನು ಹಾಗೂ ಸಾಕ್ಷ್ಯಧಾರಗಳನ್ನು ಮತ್ತು ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಟಿ. ಬಾಲಚಂದ್ರ, ಭಾ.ಅ.ಸೇ., ಅಧಿಕಾರಿಯುತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಭದ್ರಾವತಿ ವಿಭಾಗ, ಭದ್ರಾವತಿ ಆದ ನಾನು ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 71(ಎ) (2ನೇ ತಿದ್ದುಪಡಿ) ಪ್ರಕಾರ ಟಾಟಾ ಮೊಬೈಲ್ ವ್ಯಾನ್ ಸಂಖ್ಯೆ: ಕೆಎ-18-6675 ಹಾಗೂ ಸಾಗುವಾನಿ ತುಂಡುಗಳು 5=1.009 ಎಂ3 ನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿ ಆದೇಶ ಹೊರಡಿಸಿರುತ್ತೇನೆ.

ಈ ಆದೇಶವನ್ನು ನನ್ನ ಸಹಿ ಹಾಗೂ ಮೊಹಿರಿನೊಂದಿಗೆ ದಿನಾಂಕ: 28-09-2017 ರಂದು ಆದೇಶ ಹೊರಡಿಸಿರುತ್ತೇನೆ.

PR - 786

ಟಿ. ಬಾಲಚಂದ್ರ, ಭಾ.ಅ.ಸೇ.,

SC - 05

ಅಧಿಕಾರಿಯುತ ಅಧಿಕಾರಿ ಹಾಗೂ

ಉಪ ಅರಣ್ಯ ಸಂರಕ್ಷಣಾಧಿಕಾರಿ,

ಭದ್ರಾವತಿ ವಿಭಾಗ, ಭದ್ರಾವತಿ.

ಅಧಿಕಾರಿಯುತ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯ, ಭದ್ರಾವತಿ ವಿಭಾಗ, ಭದ್ರಾವತಿ.

ಸಂಖ್ಯೆ: ಎಫ್.ಓ.ಸಿ.-ಸಿಓಎನ್-ಸಿಆರ್-14/2001-02, ದಿನಾಂಕ: 14-09-2017

ಉಪಸ್ಥಿತರು : ಶ್ರೀ ಟಿ. ಬಾಲಚಂದ್ರ, ಭಾ.ಅ.ಸೇ.,

ಅಧಿಕಾರಿಯುತ ಅಧಿಕಾರಿಗಳು ಹಾಗೂ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು,

ಭದ್ರಾವತಿ ವಿಭಾಗ, ಭದ್ರಾವತಿ.

ಪಿರ್ಯಾಧಿದಾರರು : ವಲಯ ಅರಣ್ಯಾಧಿಕಾರಿ,

ತರೀಕೆರೆ ವಲಯ, ತರೀಕೆರೆ.

ಅರ್ಜಿದಾರರು : ಶ್ರೀ ಅಕ್ಬರ್ ಬಿನ್ ದಸ್ತಗಿರಿ ಸಾಬ್,

ಆಟೋ ಡ್ರೈವರ್, ಕೋಟೆ ಕ್ಯಾಂಪ್,

ತರೀಕೆರೆ.

ಪ್ರಕರಣದ ಹಿನ್ನೆಲೆ:-

ದಿನಾಂಕ:29-06-1998 ರಂದು ತರೀಕೆರೆ ವಲಯದ ವ್ಯಾಪ್ತಿಯಲ್ಲಿ ಆಟೋ ರಿಕ್ಷ ಸಂಖ್ಯೆ:ಕೆಎ-18-4467 ರಲ್ಲಿ ಅಕ್ರಮವಾಗಿ ಬೀಟೆ ಜಾತಿಯ ತುಂಡುಗಳು 5=0.089 ಎಂ3 ನ್ನು ಸಾಗಾಣಿಕೆ ಸಂಬಂಧ ಪತ್ತೆ ಹಚ್ಚಿ ವಶಪಡಿಸಿಕೊಂಡು ಅರಣ್ಯ ಮೊಕದ್ದಮೆ ಸಂಖ್ಯೆ: 60/2001-02 ನ್ನು ದಾಖಲು ಮಾಡಿಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ೫೩೮೫ ಅರಣ್ಯ ಕಾಯ್ದೆ 71(ಎ) ಪ್ರಕಾರ ಕ್ರಮ ಜರುಗಿಸಲು ಈ ನ್ಯಾಯಾಲಯದ ಸಮಕ್ಷಮ ಹಾಜರುಪಡಿಸಿರುತ್ತಾರೆ. ಸದರಿ ವಾಹನ ಬಿಡುಗಡೆ ಕೋರಿ ಶ್ರೀ ಅಕ್ಬರ್ ಬಿನ್ ದಸ್ತಗಿರಿ ಸಾಬ್, ಆಟೋ ಡ್ರೈವರ್, ಕೋಟೆ ಕ್ಯಾಂಪ್, ತರೀಕೆರೆ ಇವರು ಅರ್ಜಿ ಸಲ್ಲಿಸಿದ್ದು, ಇವರ ಅರ್ಜಿಯನ್ನು ಪುರಸ್ಕರಿಸಿ ಮೇಲ್ಕಂಡ ವಾಹನವನ್ನು ಈ ಕಛೇರಿ ನ್ಯಾಯಾಲಯದಿಂದ ದಿನಾಂಕ: 09-04-2003 ರಂದು ವಿಚಾರಣೆಯನ್ನು ಬಾಕಿಯಿರಿಸಿಕೊಂಡು `. 17,400/-ಗಳಿಗೆ ಬ್ಯಾಂಕ್ ಗ್ಯಾರಂಟಿ ಹಾಗೂ ಷರತ್ತುಗಳನ್ನು ವಿಧಿಸಿ ತಾತ್ಕಾಲಿಕವಾಗಿ ಬಿಡುಗಡೆಗೊಳಿಸಲಾಗಿರುತ್ತದೆ. ಈ ಪ್ರಕರಣದ ಬಗ್ಗೆ ಅಂತಿಮ ವಿಚಾರಣೆ ನಡೆಸಿ ವಾಹನದಲ್ಲಿ ಅಕ್ರಮವಾಗಿ ಬೀಟೆ ತುಂಡುಗಳು 5=0.089 ಎಂ3 ನ್ನು ಸಾಗಿಸಿರುವುದು ದೃಡಪಟ್ಟಿದ್ದರಿಂದ ದಿನಾಂಕ: 08-09-2004 ರಂದು ವಾಹನವನ್ನು ಅಂತಿಮವಾಗಿ ಸರ್ಕಾರಕ್ಕೆ ಮುಟ್ಟುಗೋಲು ಮಾಡಿ ಆದೇಶ ಹೊರಡಿಸಲಾಗಿರುತ್ತದೆ.

ಈ ಕಛೇರಿಯ ನ್ಯಾಯಾಲಯದ ಆದೇಶದ ವಿರುದ್ಧ ಇದುವರೆಗೂ ಯಾವುದೇ ಘನ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿರುವುದಿಲ್ಲ. ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೀಡಿದ ಬ್ಯಾಂಕ್ ಗ್ಯಾರಂಟಿಯ ಅವದಿಯು ದಿನಾಂಕ:01-12-2016ಕ್ಕೆ ಮುಕ್ತಾಯಗೊಂಡಿರುತ್ತದೆ. ವಾಹನದ ಮಾಲೀಕರಿಗೆ ಬ್ಯಾಂಕ್ ಗ್ಯಾರಂಟಿ ಅವಧಿಯನ್ನು ನವೀಕರಿಸಲು ದಿನಾಂಕ: 21-04-2017 ರಂದು ಸೂಚಿಸಿದರು ಸಹ ನವೀಕರಿಸಿರುವುದಿಲ್ಲ. ಈಗಾಗಲೇ ಈ ಪ್ರಕರಣದಲ್ಲಿ ವಾಹನವನ್ನು ಅಂತಿಮವಾಗಿ ಸರ್ಕಾರಕ್ಕೆ ಮುಟ್ಟುಗೋಲು ಆದೇಶ ಹೊರಡಿಸಿರುವುದರಿಂದ ವಾಹನದ ಮಾಲೀಕರು ಈ ಕಛೇರಿ ನ್ಯಾಯಾಲಯದ ಷರತ್ತನ್ನು ಉಲ್ಲಂಘಿಸಿರುವುದರಿಂದ ಈ ಕೆಳಕಂಡಂತೆ ಆದೇಶ ಹೊರಡಿಸಿರುತ್ತದೆ.

ಆದೇಶ

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿದ ಮೇರೆಗೆ ದಿನಾಂಕ: 08-09-2004 ರ ಆದೇಶದಂತೆ ವಾಹನವನ್ನು ಸರ್ಕಾರದಪರ ಮುಟ್ಟುಗೋಲು ಮಾಡಿರುವುದರಿಂದ ಈ ಕಛೇರಿ ನ್ಯಾಯಾಲಯಕ್ಕೆ ಬರೆದುಕೊಟ್ಟ ಇಂಡಂಮ್ನಿಟಿ ಬಾಂಡ್‌ನಲ್ಲಿರುವ ಷರತ್ತಿನ್ನು ಉಲ್ಲಂಘನೆ ಮಾಡಿರುವುದರಿಂದ ಬ್ಯಾಂಕ್ ಗ್ಯಾರಂಟಿಯ ಮೊಬಲಗು `. 17,400/-ನ್ನು ಹಾಗೂ ತಾತ್ಕಾಲಿಕವಾಗಿ ಬಿಡುಗಡೆ ಮಾಡಿದ ಆಟೋ ರಿಕ್ಷಾ ಸಂಖ್ಯೆ: ಕೆಎ-18-4467 ನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿದೆ.

ಈ ಆದೇಶವನ್ನು ನನ್ನ ಸಹಿ ಹಾಗೂ ಮೊಹಿರಿನೊಂದಿಗೆ ದಿನಾಂಕ: 14-09-2017 ರಂದು ಆದೇಶ ಹೊರಡಿಸಿರುತ್ತೇನೆ.

PR - 787

ಟಿ. ಬಾಲಚಂದ್ರ, ಭಾ.ಅ.ಸೇ.,

SC - 05

ಅಧಿಕಾರಿಯುತ ಅಧಿಕಾರಿ ಹಾಗೂ

ಉಪ ಅರಣ್ಯ ಸಂರಕ್ಷಣಾಧಿಕಾರಿ,

ಭದ್ರಾವತಿ ವಿಭಾಗ, ಭದ್ರಾವತಿ.

ಅಧಿಕಾರಿಯುತ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯ, ಭದ್ರಾವತಿ ವಿಭಾಗ, ಭದ್ರಾವತಿ.

ಸಂಖ್ಯೆ: ಎಫ್.ಓ.ಸಿ.-ಸಿಓಎನ್-ಸಿಆರ್-4/2005-06, ದಿನಾಂಕ: 14-09-2017

ಉಪಸ್ಥಿತರು : ಶ್ರೀ ಟಿ. ಬಾಲಚಂದ್ರ, ಭಾ.ಅ.ಸೇ.,

ಅಧಿಕಾರಿಯುತ ಅಧಿಕಾರಿಗಳು ಹಾಗೂ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು,

ಭದ್ರಾವತಿ ವಿಭಾಗ, ಭದ್ರಾವತಿ.

ಪಿರ್ಯಾಧಿದಾರರು : ವಲಯ ಅರಣ್ಯಾಧಿಕಾರಿ,

ಉಂಬ್ಳೇಬೈಲು ವಲಯ, ಉಂಬ್ಳೇಬೈಲು.

ಅರ್ಜಿದಾರರು : ಶ್ರೀ ಮುನಿಸ್ವಾಮಿ ಬಿನ್ ಲಕ್ಷ್ಮಯ್ಯ,

ವ್ಯವಸಾಯಗಾರರು, ಮತ್ತೂರು ಗ್ರಾಮ.

ಶಿವಮೊಗ್ಗ.

ಪ್ರಕರಣದ ಹಿನ್ನೆಲೆ:-

ದಿನಾಂಕ:26-06-2005 ರಂದು ಉಂಬ್ಳೇಬೈಲು ವಲಯದ ವ್ಯಾಪ್ತಿಯಲ್ಲಿ ಟ್ರಾಕ್ಟರ್ & ಟ್ರೈಲರ್ ಸಂ:ಕೆಎ-14-ಟಿ-7457 ಹಾಗೂ ಎಂ.ವೈ.ಹೆಚ್- 5408 ರ ವಾಹನದಲ್ಲಿ ಸಾಗುವಾನಿ ನಾಟಾ 7=0.491 ಎಂ3 ನ್ನು ಅಕ್ರಮವಾಗಿ ಸಾಗಾಣಿಕೆ ಸಂಬಂಧ ಪತ್ತೆ ಹಚ್ಚಿ ವಶಪಡಿಸಿಕೊಂಡು ಅರಣ್ಯ ಮೊಕದ್ದಮೆ ಸಂಖ್ಯೆ:34/2005 ನ್ನು ದಾಖಲು ಮಾಡಿ ಅರಣ್ಯ ಕಾಯ್ದೆ 71(ಎ) ಪ್ರಕಾರ ಕ್ರಮ ಜರುಗಿಸಲು ಈ ನ್ಯಾಯಾಲಯದ ಸಮಕ್ಷಮ ಹಾಜರುಪಡಿಸಿರುತ್ತಾರೆ. ಸದರಿ ವಾಹನ ಬಿಡುಗಡೆ ಕೋರಿ ಶ್ರೀ ಮುನಿಸ್ವಾಮಿ ಬಿನ್ ಲಕ್ಷ್ಮಯ್ಯ, ಮತ್ತೂರು ಗ್ರಾಮ ಇವರು ಅರ್ಜಿ ಸಲ್ಲಿಸಿದ್ದು, ಇವರ ಅರ್ಜಿಯನ್ನು ಪುರಸ್ಕರಿಸಿ ಮೇಲ್ಕಂಡ ವಾಹನವನ್ನು ಈ ಕಛೇರಿ ನ್ಯಾಯಾಲಯದಿಂದ ದಿನಾಂಕ:16-07-2005 ರಂದು ವಿಚಾರಣೆಯನ್ನು ಬಾಕಿಯಿರಿಸಿಕೊಂಡು `. 40,000/-ಗಳಿಗೆ ಬ್ಯಾಂಕ್ ಗ್ಯಾರಂಟಿ ಹಾಗೂ ಷರತ್ತುಗಳನ್ನು ವಿಧಿಸಿ ತಾತ್ಕಾಲಿಕವಾಗಿ ಬಿಡುಗಡೆಗೊಳಿಸಲಾಗಿರುತ್ತದೆ. ಈ ಪ್ರಕರಣದ ಬಗ್ಗೆ ಅಂತಿಮ ವಿಚಾರಣೆ ನಡೆಸಿ ವಾಹನದಲ್ಲಿ ಅಕ್ರಮವಾಗಿ ಸಾಗುವಾನಿ ನಾಟಾ 7=0.491 ಎಂ3 ನ್ನು ಸಾಗಿಸಿರುವುದು ದೃಡಪಟ್ಟಿದ್ದರಿಂದ ದಿನಾಂಕ:23-07-2015 ರಂದು ವಾಹನವನ್ನು ಅಂತಿಮವಾಗಿ ಸರ್ಕಾರಕ್ಕೆ ಮುಟ್ಟುಗೋಲು ಮಾಡಿ ಆದೇಶ ಹೊರಡಿಸಲಾಗಿರುತ್ತದೆ.

ಈ ಕಛೇರಿಯ ನ್ಯಾಯಾಲಯದ ಆದೇಶದ ವಿರುದ್ಧ ನಾಲ್ಕನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ, ಶಿವಮೊಗ್ಗ (ಭದ್ರಾವತಿ ಬ್ರಾಂಚ್) ಇವರಲ್ಲಿ ಕ್ರಿಮಿನಲ್ ಅಪೀಲ್ ನಂ.217/2015 ರಲ್ಲಿ ಮೇಲ್ಮನವಿ ಸಲ್ಲಿಸಿರುತ್ತಾರೆ. ಘನ ನ್ಯಾಯಾಲಯವು ಅರ್ಜಿದಾರರ ಮೇಲ್ಮನವಿಯನ್ನು ವಜಾಗೊಳಿಸಿ ಈ೫೩೮೬ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ಭಾಗ ೩ ಕಛೇರಿ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದು ದಿನಾಂಕ: 17-06-2016 ರಂದು ಆದೇಶ ಹೊರಡಿಸಲಾಗಿರುತ್ತದೆ. ನ್ಯಾಯಾಲಯದ ಆದೇಶದಂತೆ ವಾಹನವನ್ನು ಈ ಕಛೇರಿ ಸಮಕ್ಷಮ ಹಾಜರುಪಡಿಸಲು ದಿನಾಂಕ: 28-06-2016 ಹಾಗೂ 21-04-2017 ರಂದು ಸೂಚನೆ ನೀಡಿದರೂ ಸಹ ವಾಹನವನ್ನು ಹಾಜರಪಡಿಸಿರುವುದಿಲ್ಲ.ಹಾಗೂ ನ್ಯಾಯಾಲಯದ ಆದೇಶಗಳ ಮೇಲಿನ ಘನ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿರುವುದಿಲ್ಲ. ಆದ್ದರಿಂದ ಈ ಕೆಳಕಂಡಂತೆ ಆದೇಶ ಹೊರಡಿಸಿರುತ್ತದೆ.

ಆದೇಶ

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿದ ಮೇರೆಗೆ ದಿನಾಂಕ: 23-07-2015ರ ಆದೇಶದಂತೆ ವಾಹನವನ್ನು ಸರ್ಕಾರದಪರ ಮುಟ್ಟುಗೋಲು ಮಾಡಿರುವುದರಿಂದ ಈ ಕಛೇರಿ ನ್ಯಾಯಾಲಯಕ್ಕೆ ಬರೆದುಕೊಟ್ಟ ಇಂಡಂಮ್ನಿಟಿ ಬಾಂಡ್‌ನಲ್ಲಿರುವ ಷರತ್ತಿನಂತೆ `. 40,000/-ಕ್ಕೆ ನೀಡಿದ ಬ್ಯಾಂಕ್ ಗ್ಯಾರಂಟಿಯನ್ನು ಹಾಗೂ ತಾತ್ಕಾಲಿಕವಾಗಿ ಬಿಡುಗಡೆ ಮಾಡಿದ ಟ್ರಾಕ್ಟರ್ & ಟ್ರೈಲರ್ ಸಂಖ್ಯೆ: ಕೆಎ-14-ಟಿ-7457-ಎಂ.ವೈ.ಹೆಚ್.5408 ನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿದೆ.

ಈ ಆದೇಶವನ್ನು ನನ್ನ ಸಹಿ ಹಾಗೂ ಮೊಹರಿನೊಂದಿಗೆ ದಿನಾಂಕ: 14-09-2017 ರಂದು ಆದೇಶ ಹೊರಡಿಸಿರುತ್ತೇನೆ.

PR - 788

ಟಿ. ಬಾಲಚಂದ್ರ, ಭಾ.ಅ.ಸೇ.,

SC - 05

ಅಧಿಕಾರಿಯುತ ಅಧಿಕಾರಿ ಹಾಗೂ

ಉಪ ಅರಣ್ಯ ಸಂರಕ್ಷಣಾಧಿಕಾರಿ,

ಭದ್ರಾವತಿ ವಿಭಾಗ, ಭದ್ರಾವತಿ.

ಅಧಿಕಾರಿಯುತ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯ, ಭದ್ರಾವತಿ ವಿಭಾಗ, ಭದ್ರಾವತಿ.

ಸಂಖ್ಯೆ: ಎಫ್.ಓ.ಸಿ.-ಸಿಓಎನ್-ಸಿಆರ್-9/2002-03, ದಿನಾಂಕ: 14-09-2017

ಉಪಸ್ಥಿತರು : ಶ್ರೀ ಟಿ. ಬಾಲಚಂದ್ರ, ಭಾ.ಅ.ಸೇ.,

ಅಧಿಕಾರಿಯುತ ಅಧಿಕಾರಿಗಳು ಹಾಗೂ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು,

ಭದ್ರಾವತಿ ವಿಭಾಗ, ಭದ್ರಾವತಿ.

ಪಿರ್ಯಾಧಿದಾರರು : ವಲಯ ಅರಣ್ಯಾಧಿಕಾರಿ,

ಭದ್ರಾವತಿ ವಲಯ, ಭದ್ರಾವತಿ.

ಅರ್ಜಿದಾರರು : ಶ್ರೀ ಅಸ್ಲಾಂಖಾನ್ ಬಿನ್ ಸಿಕಂದರ್ ಖಾನ್,

ದೊಡ್ಡೇರಿ ಗ್ರಾಮ, ಕೂಡ್ಲಿಗೆರೆ ಹೋಬಳಿ,

ಭದ್ರಾವತಿ ತಾಲ್ಲೂಕು.

ಪ್ರಕರಣದ ಹಿನ್ನೆಲೆ:-

ದಿನಾಂಕ: 15-05-2002 ರಂದು ಭದ್ರಾವತಿ ವಲಯದ ವ್ಯಾಪ್ತಿಯಲ್ಲಿ ಆಟೋ ರಿಕ್ಷ ಸಂಖ್ಯೆ:ಸಿಆರ್ಎಸ್-1853 ರಲ್ಲಿ ಅಕ್ರಮವಾಗಿ ಬೀಟೆ ಸೈಜುಗಳು 2=0.058 ಎಂ3 ನ್ನು ಸಾಗಾಣಿಕೆ ಸಂಬಂಧ ಪತ್ತೆ ಹಚ್ಚಿ ವಶಪಡಿಸಿಕೊಂಡು ಅರಣ್ಯ ಮೊಕದ್ದಮೆ ಸಂಖ್ಯೆ:5/57/2002-03 ನ್ನು ದಾಖಲು ಮಾಡಿ ಅರಣ್ಯ ಕಾಯ್ದೆ 71(ಎ) ಪ್ರಕಾರ ಕ್ರಮ ಜರುಗಿಸಲು ಈ ನ್ಯಾಯಾಲಯದ ಸಮಕ್ಷಮ ಹಾಜರುಪಡಿಸಿರುತ್ತಾರೆ. ಸದರಿ ವಾಹನ ಬಿಡುಗಡೆ ಕೋರಿ ಶ್ರೀ ಅಸ್ಲಾಂಖಾನ್ ಬಿನ್ ಸಿಕಂದರ್ ಖಾನ್, ದೊಡ್ಡೇರಿ ಗ್ರಾಮ, ಕೂಡ್ಲಿಗೆರೆ ಹೋಬಳಿ,ಭದ್ರಾವತಿ ತಾಲ್ಲೂಕು ಇವರು ಅರ್ಜಿ ಸಲ್ಲಿಸಿದ್ದು, ಇವರ ಅರ್ಜಿಯನ್ನು ದಿನಾಂಕ:31-07-2002 ರಂದು ತಿರಸ್ಕರಿಸಿ ಆದೇಶ ಹೊರಡಿಸಲಾಗಿರುತ್ತದೆ. ಈ ಆದೇಶದ ವಿರುದ್ಧ ಶಿವಮೊಗ್ಗ ಜಿಲ್ಲಾ ಸೆಷನ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿರುತ್ತಾರೆ. ಘನ ನ್ಯಾಯಾಲಯವು ಅರ್ಜಿದಾರರ ಅರ್ಜಿಯನ್ನು ಪುರಸ್ಕರಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನೀಡುವ ವಾಹನದ ಬೆಲೆಗೆ ಬ್ಯಾಂಕ್ ಗ್ಯಾರಂಟಿಯನ್ನು ಪಾವತಿಸಲು ಆದೇಶಿಸಿ ವಾಹನವನ್ನು ತಾತ್ಕಾಲಿಕ ಬಿಡುಗಡೆ ಮಾಡಲು ದಿನಾಂಕ:05-09-2002 ರಂದು ಆದೇಶಿಸಿರುತ್ತದೆ. ವಾಹನದ ಮಾಲೀಕರು `. 6,000/-ಗಳಿಗೆ ಬ್ಯಾಂಕ್ ಗ್ಯಾರಂಟಿಯನ್ನು ನೀಡಿ ಷರತ್ತುಗಳ ಬಗ್ಗೆ ಇಂಡ್ಮಮ್ನಿಟಿ ಬಾಂಡ್‌ನ್ನು ನೀಡಿ ವಾಹನವನ್ನು ತಾತ್ಕಾಲಿಕ ವಶಕ್ಕೆ ಪಡೆದಿರುತ್ತಾರೆ. ಈ ಪ್ರಕರಣದ ಬಗ್ಗೆ ಅಂತಿಮ ವಿಚಾರಣೆ ನಡೆಸಿ ವಾಹನದಲ್ಲಿ ಅಕ್ರಮವಾಗಿ ಬೀಟೆ ಸೈಜುಗಳು 2=0.058 ಎಂ3 ನ್ನು ಸಾಗಿಸಿರುವುದು ದೃಡಪಟ್ಟಿದ್ದರಿಂದ ದಿನಾಂಕ: 22-02-2006 ರಂದು ವಾಹನವನ್ನು ಅಂತಿಮವಾಗಿ ಸರ್ಕಾರಕ್ಕೆ ಮುಟ್ಟುಗೋಲು ಮಾಡಿ ಆದೇಶ ಹೊರಡಿಸಲಾಗಿರುತ್ತದೆ.

ಈ ಕಛೇರಿಯ ನ್ಯಾಯಾಲಯದ ಆದೇಶದ ವಿರುದ್ಧ ಶೀಘ್ರ ವಿಲೇವಾರಿ ನ್ಯಾಯಾಲಯ-||, ಶಿವಮೊಗ್ಗ (ಭದ್ರಾವತಿ ಬ್ರಾಂಚ್) ಇಲ್ಲಿ ಮೇಲ್ಮನವಿ ಸಲ್ಲಿಸಿರುತ್ತಾರೆ. ಘನ ನ್ಯಾಯಾಲಯವು ಕ್ರಿಮಿನಲ್ ಅಪೀಲ್ ನಂ.11/2006 ದಿನಾಂಕ: 09-07-2010 ರಂದು ಅರ್ಜಿದಾರರ ಮೇಲ್ಮನವಿಯನ್ನು ತಿರಸ್ಕರಿಸಿ ಈ ಕಛೇರಿಯ ಆದೇಶವನ್ನೇ ಊರ್ಜಿತಗೊಳಿಸಿರುತ್ತಾರೆ. ಅರ್ಜಿದಾರರು ಈ ಬಗ್ಗೆ ಯಾವುದೇ ಘನ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿರುವುದಿಲ್ಲ.

ಆದ್ದರಿಂದ ಈ ಕೆಳಕಂಡಂತೆ ಆದೇಶ ಹೊರಡಿಸಿರುತ್ತದೆ.

ಆದೇಶ

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿದ ಮೇರೆಗೆ ದಿನಾಂಕ: 22-02-2006 ರ ಆದೇಶದಂತೆ ವಾಹನವನ್ನು ಸರ್ಕಾರದಪರ ಮುಟ್ಟುಗೋಲು ಮಾಡಿರುವುದರಿಂದ ಈ ಕಛೇರಿ ನ್ಯಾಯಾಲಯಕ್ಕೆ ಬರೆದುಕೊಟ್ಟ ಇಂಡಂಮ್ನಿಟಿ ಬಾಂಡ್‌ನಲ್ಲಿರುವ ಷರತ್ತಿನಂತೆ ಬ್ಯಾಂಕ್ ಗ್ಯಾರಂಟಿಯ ಮೊಬಲಗು `.6,000/-ನ್ನು ಹಾಗೂ ತಾತ್ಕಾಲಿಕವಾಗಿ ಬಿಡುಗಡೆ ಮಾಡಿದ ಆಟೋ ರಿಕ್ಷಾ ಸಂಖ್ಯೆ: :ಸಿಆರ್ಎಸ್-1853 ನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿದೆ.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ೫೩೮೭

ಈ ಆದೇಶವನ್ನು ನನ್ನ ಸಹಿ ಹಾಗೂ ಮೊಹಿರಿನೊಂದಿಗೆ ದಿನಾಂಕ: 14-09-2017 ರಂದು ಆದೇಶ ಹೊರಡಿಸಿರುತ್ತೇನೆ.

PR - 789

ಟಿ. ಬಾಲಚಂದ್ರ, ಭಾ.ಅ.ಸೇ.,

SC - 05

ಅಧಿಕಾರಿಯುತ ಅಧಿಕಾರಿ ಹಾಗೂ

ಉಪ ಅರಣ್ಯ ಸಂರಕ್ಷಣಾಧಿಕಾರಿ,

ಭದ್ರಾವತಿ ವಿಭಾಗ, ಭದ್ರಾವತಿ.

ಅಧಿಕಾರಿಯುತ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯ, ಭದ್ರಾವತಿ ವಿಭಾಗ, ಭದ್ರಾವತಿ.

ಸಂಖ್ಯೆ: ಎಫ್.ಓ.ಸಿ.-ಸಿಓಎನ್-ಸಿಆರ್-15/2006-07, ದಿನಾಂಕ: 14-09-2017

ಉಪಸ್ಥಿತರು : ಶ್ರೀ ಟಿ. ಬಾಲಚಂದ್ರ, ಭಾ.ಅ.ಸೇ.,

ಅಧಿಕಾರಿಯುತ ಅಧಿಕಾರಿಗಳು ಹಾಗೂ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು,

ಭದ್ರಾವತಿ ವಿಭಾಗ, ಭದ್ರಾವತಿ.

ಪಿರ್ಯಾಧಿದಾರರು : ವಲಯ ಅರಣ್ಯಾಧಿಕಾರಿ,

ಉಂಬ್ಳೇಬೈಲು ವಲಯ, ಉಂಬ್ಳೇಬೈಲು.

ಅರ್ಜಿದಾರರು : ಶ್ರೀ ಎನ್.ವಿ.ಎಸ್. ರಂಗನಾಥರಾಜು

ಬಿನ್ ರಾಮಕೃಷ್ಣರಾಜು, 52 ವರ್ಷ,

ಕೃಷಿಕರು, ಹಂಪಾಸಾಗರ, ಹಗರಿಬೊಮ್ಮನಹಳ್ಳಿ

ತಾಲ್ಲೂಕು, ಬಳ್ಳಾರಿ ಜಿಲ್ಲೆ.

ಪ್ರಕರಣದ ಹಿನ್ನೆಲೆ:-

ದಿನಾಂಕ:18-03-2007 ರಂದು ಉಂಬ್ಳೇಬೈಲು ವಲಯದ ವ್ಯಾಪ್ತಿಯಲ್ಲಿ ಟ್ರಾಕ್ಟರ್ & ಟ್ರೈಲರ್ ಸಂಖ್ಯೆ:ಕೆಎ-35-ಟಿಎ-999 ಮತ್ತು ಕೆಎ-35-ಟಿ- 2488 ರಲ್ಲಿ ಅಕ್ರಮವಾಗಿ 15 ಸಾಗುವಾನಿ ಜಾತಿಯ ಪಟ್ಟಿ ತುಂಡುಗಳು ಹಾಗೂ ಬೀಟೆ ತುಂಡುಗಳು 2=1.260 ಎಂ3 ಸಾಗಾಣಿಕೆ ಸಂಬಂಧ ಪತ್ತೆ ಹಚ್ಚಿ ವಶಪಡಿಸಿಕೊಂಡು ಅರಣ್ಯ ಮೊಕದ್ದಮೆ ಸಂಖ್ಯೆ:171/2006-07 ನ್ನು ದಾಖಲು ಮಾಡಿ ಅರಣ್ಯ ಕಾಯ್ದೆ 71(ಎ) ಪ್ರಕಾರ ಕ್ರಮ ಜರುಗಿಸಲು ಈ ನ್ಯಾಯಾಲಯದ ಸಮಕ್ಷಮ ಹಾಜರುಪಡಿಸಿರುತ್ತಾರೆ. ಸದರಿ ವಾಹನ ಬಿಡುಗಡೆ ಕೋರಿ ಶ್ರೀ ಎನ್.ವಿ.ಎಸ್. ರಂಗನಾಥರಾಜು ಕೃಷಿಕರು, ಹಂಪಾಸಾಗರ, ಹಗರಿಬೊಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ ಇವರು ಅರ್ಜಿ ಸಲ್ಲಿಸಿದ್ದು, ಇವರಿಗೆ ಅವರ ಅರ್ಜಿಯನ್ನು ಪುರಸ್ಕರಿಸಿ `. 5000/- ಠೇವಣಿ ಹಾಗೂ `. 1,50,000/-ಕ್ಕೆ ಇಂಡ್ಮಮ್ನಿಟಿ ಬಾಂಡ್ ನ್ನು ಪಡೆದು ಷರತ್ತಿನೊಂದಿಗೆ ವಾಹನವನ್ನು ದಿನಾಂಕ:16-05-2007 ರಂದು ತಾತ್ಕಾಲಿಕ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿರುತ್ತದೆ. ವಾಹನದ ಮಾಲೀಕರು ಷರತ್ತುಗಳನ್ನು ಪೂರೈಸಿ ವಾಹನವನ್ನು ತಾತ್ಕಾಲಿಕ ವಶಕ್ಕೆ ಪಡೆದಿರುತ್ತಾರೆ. ಈ ಪ್ರಕರಣದ ಬಗ್ಗೆ ಅಂತಿಮ ವಿಚಾರಣೆ ನಡೆಸಿ ವಾಹನದಲ್ಲಿ 15 ಸಾಗುವಾನಿ ಜಾತಿಯ ಪಟ್ಟಿ ತುಂಡುಗಳು ಹಾಗೂ ಬೀಟೆ ತುಂಡುಗಳು 2=1.260 ಎಂ3 ನ್ನು ಅಕ್ರಮವಾಗಿ ಸಾಗಿಸಿರುವುದು ದೃಡಪಟ್ಟಿದ್ದರಿಂದ ದಿನಾಂಕ:08-01-2015 ರಂದು ವಾಹನವನ್ನು ಅಂತಿಮವಾಗಿ ಸರ್ಕಾರಕ್ಕೆ ಮುಟ್ಟುಗೋಲು ಮಾಡಿ ಆದೇಶ ಹೊರಡಿಸಲಾಗಿರುತ್ತದೆ.

ಈ ಕಛೇರಿಯ ನ್ಯಾಯಾಲಯದ ಆದೇಶದ ವಿರುದ್ಧ 4ನೇ ಅಡಿಷನಲ್ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಶಿವಮೊಗ್ಗ (ಭದ್ರಾವತಿ ಬ್ರಾಂಚ್) ಇವರಲ್ಲಿ ಮೇಲ್ಮನವಿ ಸಲ್ಲಿಸಿದ್ದು ಘನ ನ್ಯಾಯಾಲಯವು ಅವರ ಅರ್ಜಿಯನ್ನು ವಜಾಗೊಳಿಸಿ ಈ ಕಛೇರಿಯ ಅಂತಿಮ ಆದೇಶವನ್ನು ಊರ್ಜಿತಗೊಳಿಸಿ ಕ್ರಿಮಿನಲ್ ಅಪೀಲ್ ನಂ.116/2015 ದಿನಾಂಕ:26-10-2016 ರಂದು ಆದೇಶ ಹೊರಡಿಸಿರುತ್ತಾರೆ. ವಾಹನದ ಮಾಲೀಕರು ಈ ಆದೇಶದ ವಿರುದ್ಧ ಯಾವುದೇ ಘನ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿರುವುದಿಲ್ಲ. ಈಗಾಗಲೇ ಮೇಲ್ಮನವಿ ಸಲ್ಲಿಸುವ ಅವಧಿಯು ಮುಕ್ತಾಯಗೊಂಡಿರುವುದರಿಂದ ಈ ಕೆಳಕಂಡಂತೆ ಆದೇಶ ಹೊರಡಿಸಿರುತ್ತದೆ.

ಆದೇಶ

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿದ ಮೇರೆಗೆ ದಿನಾಂಕ: 08-01-2015 ರ ಆದೇಶದಂತೆ ವಾಹನವನ್ನು ಸರ್ಕಾರದ ಪರ ಮುಟ್ಟುಗೋಲು ಮಾಡಿದ್ದು ವಾಹನದ ಮಾಲೀಕರು ಯಾವುದೇ ಮೇಲ್ಮನವಿಯನ್ನು ಸಲ್ಲಿಸದೇ ಇರುವ ಕಾರಣ ಈ ಕಛೇರಿ ನ್ಯಾಯಾಲಯಕ್ಕೆ ಬರೆದುಕೊಟ್ಟ ಇಂಡಂಮ್ನಿಟಿ ಬಾಂಡ್‌ನಲ್ಲಿರುವ ಷರತ್ತಿನಂತೆ ಬ್ಯಾಂಕ್ ಗ್ಯಾರಂಟಿಯ ಮೊಬಲಗು `. 5,000/- ಠೇವಣಿ ಹಣ ಹಾಗೂ ತಾತ್ಕಾಲಿಕವಾಗಿ ಬಿಡುಗಡೆ ಮಾಡಿದ ಟ್ರಾಕ್ಟರ್ & ಟ್ರೈಲರ್ ಸಂಖ್ಯೆ:ಕೆಎ-35-ಟಿಎ-999 ಮತ್ತು ಕೆಎ-35-ಟಿ-2488 ರಲ್ಲಿ ಅಕ್ರಮವಾಗಿ 15 ಸಾಗುವಾನಿ ಜಾತಿಯ ಪಟ್ಟಿ ತುಂಡುಗಳು ಹಾಗೂ ಬೀಟೆ ತುಂಡುಗಳು 2=1.260 ಎಂ3 ನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿದೆ.

ಈ ಆದೇಶವನ್ನು ನನ್ನ ಸಹಿ ಹಾಗೂ ಮೊಹಿರಿನೊಂದಿಗೆ ದಿನಾಂಕ:14-09-2017 ರಂದು ಆದೇಶ ಹೊರಡಿಸಿರುತ್ತೇನೆ.

PR - 790

ಟಿ. ಬಾಲಚಂದ್ರ, ಭಾ.ಅ.ಸೇ.,

SC - 05

ಅಧಿಕಾರಿಯುತ ಅಧಿಕಾರಿ ಹಾಗೂ

ಉಪ ಅರಣ್ಯ ಸಂರಕ್ಷಣಾಧಿಕಾರಿ,

ಭದ್ರಾವತಿ ವಿಭಾಗ, ಭದ್ರಾವತಿ.

೫೩೮೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ಭಾಗ ೩

In the Court of the Authorised Officer and Deputy Conservator of Forests, Bhadravathi Division,

Bhadravathi.

No. FOC.CON.CR-26/1988-89, Dated: 14-09-2017

Present : Sri T. Balachandra, IFS.,

Authorised Officer and

Deputy Conservator of Forests,

Bhadravathi Division, Bhadravathi.

Complainant : The Range Forest Officer,

Channagiri Range, Channagiri.

Applicant : Sri Paramajit Singh

S/o Mukthiyar Singh, Lorry Owner

His GPA Holder Sri Sathnam Sing

S/oAkar Singh, MalviSaheb

Garrage, 8th Cross, Siddiah Road, Bengaluru.

Preamble:-

The Range Forest Officer, Channagiri Range and his staff had seized the Lorry bearing No.DEL-3969 which was transporting 3800 kgs of Sandal wood illicitly on 20-10-1988 at Channagiri Range jurisdiction and booked the FOC No.238/1988-89 under section 71(A) of Forest Act. The Range Forest Officer, Channagiri had produced the seized vehicle and sandal wood to this court for taking further action. The applicant has filed interim application to this court for release of the seized vehicle, before this court on 26-12-1988.

This office has issued notice to the applicant under section 71(B) of Forest Act on 25-02-1989. Further the applicant has filed writ petition No.6692/1989 before the Hon'ble High Court, Bengaluru on 08-03-1989 and had prayed for release of seized vehicle on bond for interim custody. The Hon'ble High Court had ordered on 11-08-1989 to release the vehicle for interim custody of the applicant by producing the Bank Guarantee of `.1.00 lakhs and the applicant has produced the Bank Guarantee `. 1.00 lakhs and took the vehicle for his custody on 02-08-1991.

After detailed investigation and enquiry of this case by the Authorised officer and Deputy Conservator of Forests, Bhadravathi Court, the Sandal of which was transported illegally in the above vehicle has been proved and appropriate orders were passed on 09-11-2005, confiscating the said vehicle along with sandal wood to the Government.

The orders of this court was sent to the applicant's address by RPAD on 06-12-2005 the same was returned without serving the order. So far the applicant has not filed any appeal petition to the appellate courts and time limit for filing the appeal petition is over.

Hence I am passing the following orders.

ORDER

As per discussion made in the above preamble, the orders passed by this Court on 09-11-2005 confiscating the vehicle Lorry bearing No.DEL-3969 to government and the applicant not filing any appeal petition to the appellate Authority, till date, as per the conditions of the Indemnity Bond (exercised by the applicant), the Bank Guarantee `.1.00 lakhs and Lorry No.DEL-3969 which was released for interim custody of the applicant has been confiscated to Government.

The orders have been passed by me on 14-09-2017 with seal and my signature.

PR - 791

T. Balachandra, IFS.,

Authorised Officer and

SC - 05

Deputy Conservator of Forests,

Bhadravathi Division, Bhadravathi.

ಕಂದಾಯ ಸಚಿವಾಲಯ

ಅಧಿಸೂಚನೆ

ನಮೂನೆ-29

ಸಂಖ್ಯೆ : ಆರ್‌ಡಿ 39 ಎಲ್‌ಜಿಎಲ್ 2017, ಬೆಂಗಳೂರು, ದಿನಾಂಕ: 26.09.2017.

68ನೇ ಪ್ರಕರಣದ (5)ನೇ ಉಪ ಪ್ರಕರಣದ ಮೇರೆಗೆ ಘೋಷಣೆ-ನಿಯಮ 96

ಕರ್ನಾಟಕ ಭೂಕಂದಾಯ ಅಧಿನಿಯಮ 1964ರ 68ನೇ ಪ್ರಕರಣದ(5)ನೇ ಉಪ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸದರಿ ಪ್ರಕರಣದ (1)ನೇ ಉಪ ಪ್ರಕರಣದ ಮೇರೆಗೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕ:09-09-2016, ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ ಇವರ ಪತ್ರ ಸಂಖ್ಯೆ: ಕಂಶಾ/ಎಲ್‌ಜಿಎಲ್/ವಿವ/31/2016-17ರ ಅನುಸೂಚಿಯಲ್ಲಿ ನಿರ್ಧಿಷ್ಟಪಡಿಸಿದ ಮತ್ತು ಕೆಳಗಿನ ಅನುಸೂಚಿಯಲ್ಲಿ ನಿರ್ಧಿಷ್ಟಪಡಿಸಿದ 'ಬಿ' ವರ್ಗದಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ೫೩೮೯ ಗೋಮಾಳ ಜಮೀನು ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿಲ್ಲವೆಂದು ವ್ಯವಹರಣೆಗಳ ದಾಖಲೆಗಳನ್ನು ಮತ್ತು ಬೆಳಗಾವಿ ಜಿಲ್ಲೆಯ ಡೆಪ್ಯೂಟಿ ಕಮಿಷನರ್ ರವರ ವರದಿಯನ್ನು ರಾಜ್ಯ ಸರ್ಕಾರವು ಪರಿಶೀಲಿಸಿದ ತರುವಾಯ, 'ಬಿ' ವರ್ಗದ ಗೋಮಾಳ ಜಮೀನಿನ ಅಂತಹ ಭಾಗದಲ್ಲಿನ ಅಥವಾ ಅದರ ಮೇಲಿನ ಸಾರ್ವಜನಿಕರ ಹಾಗೂ ವ್ಯಕ್ತಿಗಳ ಎಲ್ಲಾ ಹಕ್ಕುಗಳು ಕೊನೆಗೊಳ್ಳತಕ್ಕದೆಂದು ಈ ಮೂಲಕ ಘೋಷಿಸಿದೆ.

ಜಮೀನು ಭಾಗ ಇತ್ಯಾದಿ ಇರುವ ಗ್ರಾಮ ಕೊಕಟನೂರ
ತಾಲ್ಲೂಕು ಅಥಣಿ
ಜಿಲ್ಲೆ ಬ ಳಗಾವಿ ೆ
ಸಾರ್ವಜನಿಕ ಹಕ್ಕು ಮೊಟಕುಗೊಳಿಸುತ್ತಿರುವ ರಿ.ಸರ್ವೆ ನಂ. ವಿವರ 410ಅ
ವಿಸ್ತೀರ್ಣ 1-00 ಎಕರೆ
ವ ುೕರೆಗಳು ೆ ನಕ್ಷೆಯಲ್ಲಿರುವಂತೆ

PR – 778

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50

ಎಂ.ಇ. ಚನ್ನಬಸವರಾಜ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಭೂ ಮಂಜೂರಾತಿ-3)

ಕಂದಾಯ ಸಚಿವಾಲಯ

ಅಧಿಸೂಚನೆ

ನಮೂನೆ-29

ಸಂಖ್ಯೆ: ಆರ್‌ಡಿ 39 ಎಲ್‌ಜಿಎಲ್ 2017, ಬೆಂಗಳೂರು, ದಿನಾಂಕ: 26.09.2017.

68ನೇ ಪ್ರಕರಣದ (5)ನೇ ಉಪ ಪ್ರಕರಣದ ಮೇರೆಗೆ ಘೋಷಣೆ-ನಿಯಮ 96

ಕರ್ನಾಟಕ ಭೂಕಂದಾಯ ಅಧಿನಿಯಮ 1964ರ 68ನೇ ಪ್ರಕರಣದ(5)ನೇ ಉಪ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸದರಿ ಪ್ರಕರಣದ (1)ನೇ ಉಪ ಪ್ರಕರಣದ ಮೇರೆಗೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕ:09-09-2016, ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ ಇವರ ಪತ್ರ ಸಂಖ್ಯೆ: ಕಂಶಾ/ಎಲ್‌ಜಿಎಲ್/ವಿವ/31/2016-17ರ ಅನುಸೂಚಿಯಲ್ಲಿ ನಿರ್ಧಿಷ್ಟಪಡಿಸಿದ ಮತ್ತು ಕೆಳಗಿನ ಅನುಸೂಚಿಯಲ್ಲಿ ನಿರ್ಧಿಷ್ಟಪಡಿಸಿದ 'ಬಿ' ವರ್ಗದ ಗೋಮಾಳ ಜಮೀನು ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿಲ್ಲವೆಂದು ವ್ಯವಹರಣೆಗಳ ದಾಖಲೆಗಳನ್ನು ಮತ್ತು ಬೆಳಗಾವಿ ಜಿಲ್ಲೆಯ ಡೆಪ್ಯೂಟಿ ಕಮಿಷನರ್ ರವರ ವರದಿಯನ್ನು ರಾಜ್ಯ ಸರ್ಕಾರವು ಪರಿಶೀಲಿಸಿದ ತರುವಾಯ, 'ಬಿ' ವರ್ಗದ ಗೋಮಾಳ ಜಮೀನಿನ ಅಂತಹ ಭಾಗದಲ್ಲಿನ ಅಥವಾ ಅದರ ಮೇಲಿನ ಸಾರ್ವಜನಿಕರ ಹಾಗೂ ವ್ಯಕ್ತಿಗಳ ಎಲ್ಲಾ ಹಕ್ಕುಗಳು ಕೊನೆಗೊಳ್ಳತಕ್ಕದೆಂದು ಈ ಮೂಲಕ ಘೋಷಿಸಿದೆ.

ಜಮೀನು ಭಾಗ ಇತ್ಯಾದಿ ಇರುವ ಗ್ರಾಮ ಕೊಕಟನೂರ
ತಾಲ್ಲೂಕು ಅಥಣಿ
ಜಿಲ್ಲೆ ಬ ಳ ೆ ಗಾವಿ
ಸಾರ್ವಜನಿಕ ಹಕ್ಕು ಮೊಟಕುಗೊಳಿಸುತ್ತಿರುವ ರಿ.ಸರ್ವೆ ನಂ. ವಿವರ 410ಅ
ವಿಸ್ತೀರ್ಣ 1-00 ಎಕರೆ
ವ ುೕರೆಗಳು ೆ ನಕ್ಷೆಯಲ್ಲಿರುವಂತೆ

PR – 779

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50

ಎಂ.ಇ. ಚನ್ನಬಸವರಾಜ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಭೂ ಮಂಜೂರಾತಿ-3)೫೩೯೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ಭಾಗ ೩

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ: ಆನಾಸ 06 ಕಾಮಾಸೇ 2014, ಬೆಂಗಳೂರು, ದಿನಾಂಕ: 19-10-2017.

ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಆಸುಇ 6 ಪಿಎಲ್ಎಕ್ಸ್ 2012, ದಿನಾಂಕ: 06-11-2013ರ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013ರಲ್ಲಿನ ಕಂಡಿಕೆ 3 ಮತ್ತು 13ರಲ್ಲಿ ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಆಸುಇ 6 ಪಿಎಲ್ಎಕ್ಸ್ 2012 ದಿನಾಂಕ: 20-01-2014 ರಲ್ಲಿನ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್- ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) (ತಿದ್ದುಪಡಿ), ಆದೇಶ 2013ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸ್ಥಳೀಯ ವೃಂದಗಳನ್ನು ರಚಿಸಿ ಸದರಿ ವೃಂದದ ಅಧಿಕಾರ ವ್ಯಾಪ್ತಿಯೊಳಗಿನ ಪ್ರತಿಯೊಂದು ವೃಂದದಲ್ಲಿನ ಹುದ್ದೆಗಳ ಸಂಖ್ಯೆಯನ್ನು ಹಾಗೂ ರಾಜ್ಯ ಮಟ್ಟದ ಕಛೇರಿಯಲ್ಲಿನ ಹುದ್ದೆಗಳನ್ನು ಗುರುತಿಸಿ ಹೊರಡಿಸಿದ್ದ ಅಧಿಸೂಚನೆ ಸಂಖ್ಯೆ: ಆನಾಸ 06 ಕಾಮಾಸೇ 2014, ದಿನಾಂಕ: 26-03-2015, ಅಧಿಸೂಚನೆಯನ್ನು ಹಿಂಪಡೆದು ಕೆಳಕಂಡ ಅನುಸೂಚಿಯಲ್ಲಿರುವಂತೆ ಅಧಿಸೂಚಿಸಲಾಗಿದೆ.

ಕ್ರ.ಸಂ ಹ ುದ್ದೆ ಸ ್ಥಳೀಯ ವೃಂದದಲ್ಲಿನ ಜಿಲ್ಲಾವಾರು ವ ೃಂದ ಬಲ ಸ ್ಥಳೀಯ ವೃಂದದಲ್ಲಿ ಮೀಸಲಿರಿಸಿದ ಶೇಕಡಾವಾರು ವ ೃಂದ ಬಲ ವ ುುಂಬಡ್ತಿ ನೇರ ನೇಮಕಾತಿ ರಾಜ್ಯ ಮಟ್ಟದ ಕಛೇರಿಯಲ್ಲಿನ ವೃಂದ ಬಲ ರಾಜ್ಯ ಮಟ್ಟದ ಕಛೇರಿಯಲ್ಲಿ ಹೈ-ಕ ಪ ದ ್ರ ೕಶದವರಿಗಾಗಿ ಗುರುತಿಸಲಾದ ೆ ಹ ುದ್ದೆಗಳು ಒಟ್ಟು
ವ ುುಂಬಡ್ತಿ ನೇರ ನೇಮಕಾತಿ
1 2 3 4 5 6 7 8 9
ಗ್ರೂಪ್-ಬಿ ಶೇ.75% ಶೇ.8%
1. ಸ ಹಾಯಕ ನಿಯಂತ್ರಕರು (ನೇ.ನೇ.-ಶೇ.50 ವ ುುಂಬಡ್ತಿ-50) ಬಳ್ಳಾರಿ 01 05 03 02 09 0 01
ಕೊಪ್ಪಳ 01
ರಾಯಚೂರು 01
ಯಾದಗಿರಿ 01
ಕಲಬುರಗಿ 01
ಬೀದರ್ 01
ಒಟ್ಟು 06
ಗ್ರೂಪ್-ಸಿ ಶೇ.80% ಶೇ.8%
2. ಅಧೀಕ್ಷಕರು (ಮುಂಬಡ್ತಿ ಶೇ.100%) ಬಳ್ಳಾರಿ 0 0 0 0 03 01 0
ಕೊಪ್ಪಳ 0
ರಾಯಚೂರು 0
ಯಾದಗಿರಿ 0
ಕಲಬುರಗಿ 0
ಬೀದರ್ 0
ಒಟ್ಟು 0
1 2 3 4 5 6 7 8 9
3. ನಿರೀಕ್ಷಕರು (ನೇ.ನೇ.-ಶೇ.90 ವ ುುಂಬಡ್ತಿ-10) ಬಳ್ಳಾರಿ 03 10 01 09 22 0 02
ಕೊಪ್ಪಳ 01
ರಾಯಚೂರು 02
ಯಾದಗಿರಿ 01
ಕಲಬುರಗಿ 03
ಬೀದರ್ 02
ಒಟ್ಟು 12
4. ಶೀಘ್ರೀಲಿಪಿಗಾರರು (ನೇ.ನೇ.-75 ವ ುುಂಬಡ್ತಿ-25) ಬಳ್ಳಾರಿ 0 0 0 0 04 0 01
ಕೊಪ್ಪಳ 0
ರಾಯಚೂರು 0
ಯಾದಗಿರಿ 0
ಕಲಬುರಗಿ 0
ಬೀದರ್ 0
ಒಟ್ಟು 0
5. ಪ ಥ ್ರ ವ ು ದರ್ಜೆ ಸ ಹಾಯಕರು (ನೇ.ನ.-ಶೇ.75 ವ ುುಂಬಡ್ತಿ-25) ಬಳ್ಳಾರಿ 0 02 01 01 12 0 01
ಕೊಪ್ಪಳ 0
ರಾಯಚೂರು 0
ಯಾದಗಿರಿ 01
ಕಲಬುರಗಿ 01
ಬೀದರ್ 0
ಒಟ್ಟು 02
6. ಹಿರಿಯ ಚಾಲಕರು (ಮುಂಬಡ್ತಿ- ಶ ೕ.100) ೆ ಬಳ್ಳಾರಿ 0 0 0 0 0 0 0
ಕೊಪ್ಪಳ 0
ರಾಯಚೂರು 0
ಯಾದಗಿರಿ 0
ಕಲಬುರಗಿ 0
ಬೀದರ್ 0
ಒಟ್ಟು 0
1 2 3 4 5 6 7 8 9
7. ಹಿರಿಯ ಬ ರಳಚ್ಚುಗಾರರು ೆ (ಮುಂಬಡ್ತಿ-ಶೇ.100) ಬಳ್ಳಾರಿ 0 0 0 0 0 0 0
ಕೊಪ್ಪಳ 0
ರಾಯಚೂರು 0
ಯಾದಗಿರಿ 0
ಕಲಬುರಗಿ 0
ಬೀದರ್ 0
ಒಟ್ಟು 0
8. ದಿ ್ವತೀಯ ದರ್ಜೆ ಸ ಹಾಯಕರು (ನೇ.ನೇ-ಶೇ90 ವ ುುಂಬಡ್ತಿ-10) ಬಳ್ಳಾರಿ 01 05 0 05 08 0 01
ಕೊಪ್ಪಳ 01
ರಾಯಚೂರು 01
ಯಾದಗಿರಿ 01
ಕಲಬುರಗಿ 02
ಬೀದರ್ 0
ಒಟ್ಟು 06
9. ಬ ರಳಚ್ಚುಗಾರರು ೆ (ನೇ.ನೇ-ಶೇ.100) ಬಳ್ಳಾರಿ 01 03 0 03 09 0 01
ಕೊಪ್ಪಳ 0
ರಾಯಚೂರು 01
ಯಾದಗಿರಿ 0
ಕಲಬುರಗಿ 02
ಬೀದರ್ 0
ಒಟ್ಟು 04
10. ಕ್ಲರ್ಕ್ ಕಂ. ಟೈಪಿಸ್ಟ್ (ನೇ.ನೇ.ಶೇ.100) ಬಳ್ಳಾರಿ 0 0 0 0 0 0 0
ಕೊಪ್ಪಳ 0
ರಾಯಚೂರು 0
ಯಾದಗಿರಿ 0
ಕಲಬುರಗಿ 0
ಬೀದರ್ 01
ಒಟ್ಟು 01
1 2 3 4 5 6 7 8 9
11. ದ ೖಹಿಕ ೆ ಸ ಹಾಯಕರು (ನೇ.ನೇ-ಶೇ75 ವ ುುಂಬಡ್ತಿ-25) ಬಳ್ಳಾರಿ 04 13 03 10 20 0 02
ಕೊಪ್ಪಳ 02
ರಾಯಚೂರು 03
ಯಾದಗಿರಿ 01
ಕಲಬುರಗಿ 03
ಬೀದರ್ 03
ಒಟ್ಟು 16
12. ವಾಹನ ಚಾಲಕರು (ನೇ.ನೇ-ಶೇ.100) ಬಳ್ಳಾರಿ 0 01 0 01 07 0 01
ಕೊಪ್ಪಳ 0
ರಾಯಚೂರು 0
ಯಾದಗಿರಿ 01
ಕಲಬುರಗಿ 01
ಬೀದರ್ 0
ಒಟ್ಟು 02
ಗ್ರೂಪ್-ಡಿ ಶೇ.85% ಶೇ.8%
13. ಅಟೆಂಡರ್ / ಜಮೇದಾರ್ (ಮುಂಬಡ್ತಿ ಶೇ.100) ಬಳ್ಳಾರಿ 0 0 0 0 0 0 0
ಕೊಪ್ಪಳ 0
ರಾಯಚೂರು 0
ಯಾದಗಿರಿ 0
ಕಲಬುರಗಿ 0
ಬೀದರ್ 0
ಒಟ್ಟು 0
14. ಗ್ರೂಪ್-ಡಿ (ನೇ.ನೇ.ಶೇ100) ಬಳ್ಳಾರಿ 01 01 0 01 29 0 02
ಕೊಪ್ಪಳ 0 0 0 0
ರಾಯಚೂರು 02 02 0 02
ಯಾದಗಿರಿ 01 01 0 01
ಕಲಬುರಗಿ 03 03 0 03
ಬೀದರ್ 02 02 0 02
ಒಟ್ಟು 09 09 0 09
1 2 3 4 5 6 7 8 9 10 (5+6+8+9)
15. ವಾಚ್ ಮನ್ (ನೇ.ನೇ.ಶೇ.100) ಬಳ್ಳಾರಿ 0 0 0 0 01 0 0 0
ಕೊಪ್ಪಳ 0
ರಾಯಚೂರು 0
ಯಾದಗಿರಿ 0
ಕಲಬುರಗಿ 0
ಬೀದರ್ 0
ಒಟ್ಟು 0
ಒಟ್ಟು 48 08 40 124 01 12 61
ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ೫೩೯೧ ೫೩೯೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ೫೩೯೩ ೫೩೯೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ಭಾಗ ೩

ಕಾನೂನು ಮಾಪನಶಾಸ್ತ್ರ ಇಲಾಖೆಯ ಗ್ರೂಪ್-ಸಿ ಹಾಗೂ ಗ್ರೂಪ್-ಡಿ ವೃಂದದ ಹುದ್ದೆಗಳು ರಾಜ್ಯ ಮಟ್ಟದ ಹುದ್ದೆಗಳಾಗಿದ್ದು, ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್- ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) (ತಿದ್ದುಪಡಿ), ಆದೇಶ 2013ಕ್ಕೆ ಸಂಬಂಧಿಸಿದಂತೆ, ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಸೇರಿದ ಗ್ರೂಪ್- ಸಿ ವೃಂದದ ಹುದ್ದೆಗಳು ಹೈದರಾಬಾದ್-ಕರ್ನಾಟಕ ವಿಭಾಗೀಯ ವೃಂದದ ಹುದ್ದೆಗಳನ್ನಾಗಿ ಹಾಗೂ ಗ್ರೂಪ್-ಡಿ ವೃಂದದ ಹುದ್ದೆಗಳನ್ನು ಜಿಲ್ಲಾ ವೃಂದದ ಹುದ್ದೆಗಳನ್ನಾಗಿ ಪರಿಗಣಿಸಿದೆ.

PR-811

SC-200

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಎಸ್.ಉಮಾದೇವಿ ಸರ್ಕಾರದ ಅಧೀನ ಕಾರ್ಯದರ್ಶಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ.

ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ನಡವಳಿಗಳು

ವಿಷಯ : ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2013 ರಲ್ಲಿ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ವಿಜಯಪುರ ನಗರಸಭೆಯಿಂದ ಸ್ಪರ್ಧಿಸಿದ ಅಭ್ಯರ್ಥಿಗಳು ಚುನಾವಣಾ ವೆಚ್ಚ ವಿವರವನ್ನು ಸಲ್ಲಿಸದಿರುವುದರಿಂದ ಕರ್ನಾಟಕ ಮುನಿಸಿಪಾಲಿಟೀಸ್ ಅಧಿನಿಯಮ 1964 ರ ಕಲಂ 16ಸಿ ಪ್ರಕಾರ ಅನರ್ಹಗೊಳಿಸುವ ಬಗ್ಗೆ.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ೫೩೯೫

ಕರ್ನಾಟಕ ಮುನಿಸಿಪಾಲಿಟೀಸ್ ಅಧಿನಿಯಮ 1964 ರ ಪ್ರಕರಣ 16ಸಿ ಹಾಗೂ ಕರ್ನಾಟಕ ಮುನಿಸಿಪಾಲಿಟೀಸ್ (ಕೌನ್ಸಿಲರ್‌ಗಳ ಚುನಾವಣೆ) ಸೇರ್ಪಡೆ ನಿಯಮಗಳು 2010 ರ ನಿಯಮ 22ಸಿ(5) ರನ್ವಯ ಆಯೋಗದಿಂದ ಉಲ್ಲೇಖ(3) ರ ದಿನಾಂಕ: 27-10-2014 ರಂತೆ ನೋಟೀಸನ್ನು ನೀಡಿ ಏಕೆ ಅನರ್ಹಗೊಳಿಸಬಾರದು ಎಂಬ ಬಗ್ಗೆ ಸಮಜಾಯಿಷಿ ನೀಡಲು ತಿಳಿಯಪಡಿಸಲಾಗಿತ್ತು. ಆದಾಗ್ಯೂ ಅಭ್ಯರ್ಥಿಗಳು ಸಮಜಾಯಷಿಯನ್ನು ಹಾಗೂ ವೆಚ್ಚ ವಿವರಗಳನ್ನು ಸಲ್ಲಿಸಿರುವುದಿಲ್ಲ. ಆಯೋಗದ ನೋಟೀಸನ್ನು ಅಭ್ಯರ್ಥಿಗಳಿಗೆ ಜಾರಿ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿಗಳು ವಿಜಯಪುರ ರವರು ಉಲ್ಲೇಖ(4) ದಿನಾಂಕ: 20-02-2017 ರಂದು ವರದಿ ಮಾಡಿರುತ್ತಾರೆ.

ಅದರಂತೆ ಅನುಬಂಧ-ಅ ರಲ್ಲಿ ನಮೂದಾಗಿರುವ 08 ಅಭ್ಯರ್ಥಿಗಳು ಆಯೋಗದ ನೋಟೀಸು ಜಾರಿಯಾಗಿದ್ದರೂ ನಿಗದಿತ ಅವಧಿಯಲ್ಲಿ ವೆಚ್ಚವನ್ನು ಸಲ್ಲಿಸಲು ವಿಫಲರಾದ ಬಗ್ಗೆ ಯಾವುದೇ ಸಮಜಾಯಿಷಿಯನ್ನು ಸಲ್ಲಿಸಿರುವುದಿಲ್ಲ.

ಈ ಹಿನ್ನಲೆಯಲ್ಲಿ ಲಗತ್ತಿಸಿರುವ ಅನುಬಂಧ-ಅರಲ್ಲಿ ನಮೂದಿಸಿರುವ 08ಅಭ್ಯರ್ಥಿಗಳು ಚುನಾವಣಾ ವೆಚ್ಚ ವಿವರಗಳನ್ನು ಸಲ್ಲಿಸಲು ವಿಫಲರಾಗಿರುವುದರಿಂದ ಹಾಗೂ ಸೂಕ್ತ ಸಮಜಾಯಿಷಿ ನೀಡದಿರುವುದರಿಂದ ಈ ಕೆಳಕಂಡಂತೆ ಆದೇಶ,

ಆದೇಶ ಸಂಖ್ಯೆ: ರಾಚುಆ 28 ಇಯುಬಿ 2013, ಬೆಂಗಳೂರು, ದಿನಾಂಕ:16-03-2017 ಮೇಲೆ ವಿವರಿಸಿರುವಂತೆ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ– 2013ರಲ್ಲಿ ವಿಜಯಪುರ ಜಿಲ್ಲೆಯ, ವಿಜಯಪುರ ತಾಲ್ಲೂಕಿನ, ವಿಜಯಪುರ ನಗರಸಭೆಯಿಂದ ಸ್ಪರ್ಧಿಸಿದ 08 ಅಭ್ಯರ್ಥಿಗಳು ಆಯೋಗದಿಂದ ನೀಡಿದ ನೋಟಿಸಿಗೆ ಸಮಜಾಯಿಷಿಯನ್ನು ನೀಡದೇ ಇರುವುದರಿಂದ ಹಾಗೂ ಚುನಾವಣಾ ವೆಚ್ಚ ವಿವರಗಳನ್ನು ಸಲ್ಲಿಸಿಲ್ಲವೆಂದು ದೃಡಪಟ್ಟಿರುವುದರಿಂದ, ರಾಜ್ಯ ಚುನಾವಣಾ ಆಯೋಗವು ಅನುಬಂಧ-ಅರಲ್ಲಿ ನಮೂದಿಸಿರುವ ಅಭ್ಯರ್ಥಿಗಳನ್ನು ಕರ್ನಾಟಕ ಮುನಿಸಿಪಾಲಿಟೀಸ್ ಅಧಿನಿಯಮ, 1964ರ ಪ್ರಕರಣ 16ಸಿ ಅನುಸಾರ ಈ ಆದೇಶದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅನರ್ಹರೆಂದು ಘೋಷಿಸಿರುತ್ತದೆ.

ಆಯುಕ್ತರು

ರಾಜ್ಯ ಚುನಾವಣಾ ಆಯೋಗ.

ಅನುಬಂಧ-ಅ

ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2013ರಲ್ಲಿ ಸ್ಪರ್ಧಿಸಿ, ಚುನಾವಣಾ ವೆಚ್ಚ ವಿವರಗಳನ್ನು ಸಲ್ಲಿಸದೇ ಇರುವುದರಿಂದ, ಕರ್ನಾಟಕ ಮುನಿಸಿಪಾಲಿಟೀಸ್

ಅಧಿನಿಯಮ 1964ರ ಕಲಂ 16ಸಿ ರಡಿ ಅನರ್ಹಗೊಳಿಸಿರುವ ಅಭ್ಯರ್ಥಿಗಳ ವಿವರ

ಜಿಲ್ಲೆಯ ಹೆಸರು : ವಿಜಯಪುರ

ಕ್ರ. ಸಂ. ಅಭ್ಯರ್ಥಿ ಹೆಸರು ಮತ್ತು ವಿಳಾಸ ಶ್ರೀ/ ಶ್ರೀಮತಿ ವಾರ್ಡ್ ನಂ. ಜಿಲ್ಲಾಧಿಕಾರಿಗಳ ವ ರದಿಯ ದಿನಾಂಕ ಅಭ್ಯರ್ಥಿಗೆ ಆಯೋಗದ ನೋಟಿಸ್ ಜಾರಿಯಾಗಿರುವ ದಿನಾಂಕ ನೋಟಿಸ್ ಜಾರಿಯಾದ ನಂತರ ಜಿಲ್ಲಾಧಿಕಾರಿಗಳ ವ ರದಿಯ ದಿನಾಂಕ ಆಯೋಗದ ಷರಾ
1 2 3 4 5 6 7
1. ರಾಠೋಡ ತಾರಾ ಹೇಮಂತ, ಅಲ್ಲಾಪೂರ ತಾಂಡ, ವಿಜಯಪುರ 17 04-04-2014 28-11-2014 20-02-2017 ಅನರ್ಹಗೊಳಿಸಲಾಗಿದೆ. ಹಾಗೂ ಚುನಾವಣಾ ವೆಚ್ಚ ುಜಾಯಿಷಿ ನೀಡದಿರುವುದರಿಂದ ವ ವಿವರಗಳನ್ನು ಸಲ್ಲಿಸದಿರುವುದರಿಂದ ಸ ಆಯೋಗದಿಂದ ನೀಡಿದ ನೋಟೀಸಿಗೆ
2. ಸಾವಿತ್ರಿ ಕಾಂತಪ್ಪ ಕೂಡಗಿ, ಅಲ್ಲಾಪೂರ ಓಣಿ, ವಿಜಯಪುರ 17 04-04-2014 28-11-2014 20-02-2017
3. ವ ುಹಾವೀರ ತೊನಶ್ಯಾಳ್, ಇಬ್ರಾಹಿಂಪೂರ, ವಿಜಯಪುರ 21 04-04-2014 28-11-2014 20-02-2017
4. ವ ುಹ್ಮಮದ ಇರ್ಫಾನ ರಫೀಖ ಅಹ್ಮದ ನಾಡೆವಾಲ, ದರಬಾರಗಲ್ಲಿ, ಬಾಗಲಕೋ: ಕ್ರಾಸ್, ವಾರ್ಡ್ ನಂ. 23, ವಿಜಯಪುರ 23 04-04-2014 27-11-2014 20-02-2017
5. ತಾರಾಬಾಯಿ ಮಹಾದೇವಪ್ಪಾ ನಾಯಿಕೋಡಿ, ದಿವಟಗೇರಿ ಗಲ್ಲಿ, ರಾಘವೇಂದ್ರ ಮಠದ ಹತ್ತಿರ, ವಿಜಯಪುರ 26 04-04-2014 27-11-2014 20-02-2017
6. ಪ ಟೇಲ ಜೀನತಕೌಸರ ಗೌಸಮೋದಿನ, ಲಂಗರ ಬಜಾರ ದರಬಾರ ಗಲ್ಲಿ, ವಿಜಯಪುರ 28 04-04-2014 27-11-2014 20-02-2017
7. ಬಿ ೕಮರಾಯ ಚಂದ್ರಶೇಖರ ಮಾಶ್ಯಾಳ, ಅಡಕಿ ಗಲ್ಲಿ, ವಿಜಯಪುರ 34 04-04-2014 28-11-2014 20-02-2017
8. ಕಾಂಬಳೆ ಸುನೀತಾ ಅರ್ಜುನ, ಸಮಗಾರ ಓಣಿ, ವಿಜಯಪುರ 35 04-04-2014 27-11-2014 20-02-2017

PR-772

SC-05

ಪಿ.ಎನ್.ಶ್ರೀನಿವಾಸಾಚಾರಿ ಆಯುಕ್ತರು ರಾಜ್ಯ ಚುನಾವಣಾ ಆಯೋಗ೫೩೯೬ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ಭಾಗ ೩

ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ನಡವಳಿಗಳು

ವಿಷಯ : ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ -2013 ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಮುದ್ದೇಬಿಹಾಳ ಪುರಸಭೆಯಿಂದ ಸ್ಪರ್ಧಿಸಿದ ಅಭ್ಯರ್ಥಿಗಳು ಚುನಾವಣಾ ವೆಚ್ಚ ವಿವರವನ್ನು ಸಲ್ಲಿಸದಿರುವುದರಿಂದ ಕರ್ನಾಟಕ ಮುನಿಸಿಪಾಲಿಟೀಸ್ ಅಧಿನಿಯಮ 1964 ರ ಕಲಂ 16ಸಿ ಪ್ರಕಾರ ಅನರ್ಹಗೊಳಿಸುವ ಬಗ್ಗೆ. 1. ಕರ್ನಾಟಕ ಮುನಿಸಿಪಾಲಿಟೀಸ್ ಅಧಿನಿಯಮ, 1964 ರ ಕಲಂ 16ಬಿ ಮತ್ತು 16ಸಿ ಹಾಗೂ ಕರ್ನಾಟಕ ಮುನಿಸಿಪಾಲಿಟೀಸ್ (ಕೌನ್ಸಿಲರುಗಳ ಚುನಾವಣೆ) ಸೇರ್ಪಡೆ ನಿಯಮಗಳು 2010 ಉಲ್ಲೇಖ :

ರ ನಿಯಮ, 22 ಸಿ

2. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು, ವಿಜಯಪುರ ಜಿಲ್ಲೆ ಇವರ ವರದಿ ಸಂಖ್ಯೆ: ಜಿನಕೊ/ಚುನಾವಣೆ/ಸಿಆರ್-21/2012-13 ದಿನಾಂಕ: 04-04-2014. 3. ಆಯೋಗದ ನೋಟಿಸು ಸಂಖ್ಯೆ: ರಾಚುಆ.29.ಇಯುಬಿ.2013 ದಿನಾಂಕ :27-10-2014.

ಪ್ರಸ್ತಾವನೆ :

2013ರಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಮುದ್ದೇಬಿಹಾಳ ಪುರಸಭೆಯಿಂದ ಸ್ಪರ್ಧಿಸಿದ ಅಭ್ಯರ್ಥಿಗಳು ಚುನಾವಣಾ ವೆಚ್ಚ ವಿವರವನ್ನು ಸಲ್ಲಿಸದಿರುವುದರಿಂದ ಕರ್ನಾಟಕ ಮುನಿಸಿಪಾಲಿಟೀಸ್ ಅಧಿನಿಯಮ 1964 ರ ಪ್ರಕರಣ 16ಬಿ ಮತ್ತು 16ಸಿಯಲ್ಲಿ ಉಪಬಂಧಿಸಿರುವಂತೆ ಹಾಗೂ ಕರ್ನಾಟಕ ಮುನಿಸಿಪಾಲಿಟೀಸ್ (ಕೌನ್ಸಿಲರ್‌ಗಳ ಚುನಾವಣೆ) ಸೇರ್ಪಡೆ ನಿಯಮಗಳು 2010 ರ ನಿಯಮ 22ಸಿ ರನ್ವಯ ಮತಗಳ ಎಣಿಕೆ ನಡೆದು ಫಲಿತಾಂಶ ಘೋಷಣೆಯಾದ 30 ದಿನಗಳ ಒಳಗೆ ಚುನಾವಣಾ ವೆಚ್ಚ ವಿವರಗಳನ್ನು ಸಲ್ಲಿಸಿರುವುದಿಲ್ಲವೆಂದು ಉಲ್ಲೇಖ(2)ರಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು, ವಿಜಯಪುರ ಜಿಲ್ಲೆ ರವರು ವರದಿ ಸಲ್ಲಿಸಿರುತ್ತಾರೆ.

ಕರ್ನಾಟಕ ಮುನಿಸಿಪಾಲಿಟೀಸ್ ಅಧಿನಿಯಮ 1964 ರ ಪ್ರಕರಣ 16ಸಿ ಹಾಗೂ ಕರ್ನಾಟಕ ಮುನಿಸಿಪಾಲಿಟೀಸ್ (ಕೌನ್ಸಿಲರ್‌ಗಳ ಚುನಾವಣೆ) ಸೇರ್ಪಡೆ ನಿಯಮಗಳು 2010 ರ ನಿಯಮ 22ಸಿ(5) ರನ್ವಯ ಆಯೋಗದಿಂದ ಉಲ್ಲೇಖ(3) ರ ದಿನಾಂಕ: 27-10-2014 ರಂತೆ ನೋಟೀಸನ್ನು ನೀಡಿ ಏಕೆ ಅನರ್ಹಗೊಳಿಸಬಾರದು ಎಂಬ ಬಗ್ಗೆ ಸಮಜಾಯಿಷಿ ನೀಡಲು ತಿಳಿಯಪಡಿಸಲಾಗಿತ್ತು.

ಅದರಂತೆ ಅನುಬಂಧ-ಅ ರಲ್ಲಿ ನಮೂದಾಗಿರುವ 17ಅಭ್ಯರ್ಥಿಗಳು ಆಯೋಗದ ನೋಟೀಸು ಜಾರಿಯಾಗಿದ್ದರೂ ನಿಗದಿತ ಅವಧಿಯಲ್ಲಿ ವೆಚ್ಚವನ್ನು ಸಲ್ಲಿಸಲು ವಿಫಲರಾದ ಬಗ್ಗೆ ಯಾವುದೇ ಸಮಜಾಯಿಷಿಯನ್ನು ಸಲ್ಲಿಸಿರುವುದಿಲ್ಲ.

ಈ ಹಿನ್ನಲೆಯಲ್ಲಿ ಲಗತ್ತಿಸಿರುವ ಅನುಬಂಧ-ಅ ರಲ್ಲಿ ನಮೂದಿಸಿರುವ 17 ಅಭ್ಯರ್ಥಿಗಳು ಚುನಾವಣಾ ವೆಚ್ಚ ವಿವರಗಳನ್ನು ಸಲ್ಲಿಸಲು ವಿಫಲರಾಗಿರುವುದರಿಂದ ಹಾಗೂ ಸೂಕ್ತ ಸಮಜಾಯಿಷಿ ನೀಡದಿರುವುದರಿಂದ ಈ ಕೆಳಕಂಡಂತೆ ಆದೇಶ,

ಆದೇಶ ಸಂಖ್ಯೆ: ರಾಚುಆ 29 ಇಯುಬಿ 2013, ಬೆಂಗಳೂರು, ದಿನಾಂಕ:10-03-2017

ಮೇಲೆ ವಿವರಿಸಿರುವಂತೆ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ - 2013ರಲ್ಲಿ ವಿಜಯಪುರ ಜಿಲ್ಲೆಯ,ಮುದ್ದೇಬಿಹಾಳ ತಾಲ್ಲೂಕಿನ ಮುದ್ದೇಬಿಹಾಳ ಪುರಸಭೆಯಿಂದ ಸ್ಪರ್ಧಿಸಿದ 17 ಅಭ್ಯರ್ಥಿಗಳು ಆಯೋಗದಿಂದ ನೀಡಿ ನೋಟಿಸಿಗೆ ಸಮಜಾಯಿಷಿಯನ್ನು ನೀಡದೇ ಇರುವುದರಿಂದ ಹಾಗೂ ಚುನಾವಣಾ ವೆಚ್ಚ ವಿವರಗಳನ್ನು ಸಲ್ಲಿಸಿಲ್ಲವೆಂದು ದೃಡಪಟ್ಟಿರುವುದರಿಂದ, ರಾಜ್ಯ ಚುನಾವಣಾ ಆಯೋಗವು ಅನುಬಂಧ-ಅ ರಲ್ಲಿ ನಮೂದಿಸಿರುವ ಅಭ್ಯರ್ಥಿಗಳನ್ನು ಕರ್ನಾಟಕ ಮುನಿಸಿಪಾಲಿಟೀಸ್ ಅಧಿನಿಯಮ, 1964ರ ಪ್ರಕರಣ 16ಸಿ ಅನುಸಾರ ಈ ಆದೇಶದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅನರ್ಹರೆಂದು ಘೋಷಿಸಿರುತ್ತದೆ.

ಆಯುಕ್ತರು

ರಾಜ್ಯ ಚುನಾವಣಾ ಆಯೋಗ.

ಅನುಬಂಧ-ಅ

ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2013ರಲ್ಲಿ ಸ್ಪರ್ಧಿಸಿ, ಚುನಾವಣಾ ವೆಚ್ಚ ವಿವರಗಳನ್ನು ಸಲ್ಲಿಸದೇ ಇರುವುದರಿಂದ, ಕರ್ನಾಟಕ ಮುನಿಸಿಪಾಲಿಟೀಸ್

ಅಧಿನಿಯಮ 1964ರ ಕಲಂ 16ಸಿ ರಡಿ ಅನರ್ಹಗೊಳಿಸಿರುವ ಅಭ್ಯರ್ಥಿಗಳ ವಿವರ

ಜಿಲ್ಲೆಯ ಹೆಸರು : ವಿಜಯಪುರ

ತಾಲ್ಲೂಕು : ಮುದ್ದೇಬಿಹಾಳ ನಗರ ಸ್ಥಳೀಯ ಸಂಸ್ಥೆ ಹೆಸರು : ಮುದ್ದೇಬಿಹಾಳ ಪುರಸಭೆ

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ೫೩೯೭
ಕ್ರ. ಸಂ. ಅಭ್ಯರ್ಥಿ ಹೆಸರು ಮತ್ತು ವಿಳಾಸ ಶ್ರೀ/ ಶ್ರೀಮತಿ ವಾರ್ಡ್ ನಂ. ಜಿಲ್ಲಾಧಿಕಾರಿಗಳ ವ ರದಿಯ ದಿನಾಂಕ ಅಭ್ಯರ್ಥಿಗೆ ಆಯೋಗದ ನೋಟಿಸ್ ಜಾರಿಯಾಗಿರುವ ದಿನಾಂಕ ನೋಟಿಸ್ ಜಾರಿಯಾದ ನಂತರ ಜಿಲ್ಲಾಧಿಕಾರಿಗಳ ವರದಿಯ ದಿನಾಂಕ ಆಯೋಗದ ಷರಾ
1 2 3 4 5 6 7
1. ಹೊಳಿ ಸಿದ್ದರಾಜ್ ಈರಪ್ಪ, ಮಾರುತಿನಗರ, ಮುದ್ದೇಬಿಹಾಳ 2 04-04-2014 ____ 20-02-2017 ನೀಡದಿರುವುದರಿಂದ ಹಾಗೂ ಚುನಾವಣಾ ವೆಚ್ಚ ಆಯೋಗದಿಂದ ನೀಡಿದ ನೋಟೀಸಿಗೆ ಸಮಜಾಯಿಷಿ ವಿವರಗಳನ್ನು ಸಲ್ಲಿಸದಿರುವುದರಿಂದ ಅನರ್ಹಗೊಳಿಸಲಾಗಿದೆ.
2. ಬಿರಾದಾರ ನಿಂಗನಗೌಡ (ಅಪ್ಪು) ಶಿವಪ್ಪ, ಮಾರುತಿನಗರ, ಮುದ್ದೇಬಿಹಾಳ 2 04-04-2014 10-03-2015 20-02-2017
3. ಕಾಮರಾಜ ಭೋಜರಾಜ್ ಬಿರಾದರ, ಹೊರಪೇಟಗಲ್ಲಿ, ಮುದ್ದೇಬಿಹಾಳ 5 04-04-2014 ____ 20-02-2017
4. ವ ುಠ ಮಹಾದೇವಿ ಪ್ರಭಯ್ಯ, ಪಿಲೇಕಮ್ಮ ನಗರ, ಮುದ್ದೇಬಿಹಾಳ 10 04-04-2014 ____ 20-02-2017
5. ಸ ುರೇಖಾ ಹರೀಶ ನಾಟಿಕರ, ಇಂದಿರಾನಗರ, ಮುದ್ದೇಬಿಹಾಳ 12 04-04-2014 ____ 20-02-2017
6. ರೇವಣಪ್ಪ ರಂಗಪ್ಪ ಹರಿಜನ, ಇಂದಿರಾನಗರ, ಮುದ್ದೇಬಿಹಾಳ 13 04-04-2014 ____ 20-02-2017
7. ಅಬ್ದುಲ್‌ವಹಾಬ ಇಸ್ಮಾಯಲಸಾಬ ಮೋಮಿನ, ಕುಂಬಾರ ಓಣಿ, ಕಳಸದ ಸಂಧಿ, ವ ುುದ್ದೇಬಿಹಾಳ 14 04-04-2014 ____ 20-02-2017
8. ವ ುಮ್ಮದ ಯಾಶೀನ ಮಮ್ಮದಯೂಸುಫ ನಾಲಬಂದ, ಭಾರಪೇಟ ಗಲ್ಲಿ, ಎಂಟು ಗಡಗಡಿ ಬಾವಿ, ಮುದ್ದೇಬಿಹಾಳ 15 04-04-2014 ____ 20-02-2017
9. ವ ೂೕಟಗಿ ರತ್ನಾಬಾಯಿ ಮಹಾಬಳೇಶ್ವರ, ಗೋನಾಳ ಓಣಿ, ಮುದ್ದೇಬಿಹಾಳ ೆ 16 04-04-2014 ____ 20-02-2017
10. ಶಿವಯೋಗಿಮಠ ನಿಜಲಿಂಗಯ್ಯ ಮಹಾಂತಯ್ಯ, ವಿರೇಶ್ವರನಗರ, ಮುದ್ದೇಬಿಹಾಳ 17 04-04-2014 ____ 20-02-2017
11. ರಿಸಾಲದಾರ ಸಹೇಬಲಾಲ ಲಾಳೇಸಾಬ, ಪಿಲ್ಲೆಕಮ್ಮ ನಗರ, ಮುದ್ದೇಬಿಹಾಳ 19 04-04-2014 ____ 20-02-2017 ಅನರ್ಹಗೊಳಿಸಲಾಗಿದೆ. ಹಾಗೂ ಚುನಾವಣಾ ವೆಚ್ಚ ುಜಾಯಿಷಿ ನೀಡದಿರುವುದರಿಂದ ವ ವಿವರಗಳನ್ನು ಸಲ್ಲಿಸದಿರುವುದರಿಂದ ಸ ಆಯೋಗದಿಂದ ನೀಡಿದ ನೋಟೀಸಿಗೆ
12. ಅಲ್ತಾಪ ಮೋದಿನಸಾಬ ಉಣ್ಣೆಬಾವಿ, ಅವಟಿ ಗಲ್ಲಿ, ಮುದ್ದೇಬಿಹಾಳ 19 04-04-2014 ____ 20-02-2017
13. ಕುಂಟೋಜಿ ಮೈಹರುನ್ನಬಿ ಮೈಹಿಬೂಬ, ಆಜಾದ ನಗರ, ಮುದ್ದೇಬಿಹಾಳ 21 04-04-2014 ____ 20-02-2017
14. ದ ಖನಿ ಹುಸೇನಬಿ ರಿಯಾಜಹ್ಮದ, ಮೇಲಿನ ಓಣಿ, ಮುದ್ದೇಬಿಹಾಳ 21 04-04-2014 ____ 20-02-2017
15. ತಾಹೇರಾಬೇಗಂ ಯಾಕೂಬಸಾಬ ದಫೇದಾರ, ಮಹಿಟೂಬ ನಗರ, ವ ುುದ್ದೇಬಿಹಾಳ 22 04-04-2014 ____ 20-02-2017
16. ಶಿರೊಳ ಬಿಬಿಜಾನ ಅಮೀನಸಾಬ, ಮಕ್ಕಾ ಮಸೀದ, ಮುದ್ದೇಬಿಹಾಳ 22 04-04-2014 ____ 20-02-2017
17. ಕಲ್ಯಾಣಮಠ ಶಂಕ್ರಯ್ಯ ಸಿದ್ದಯ್ಯ, ಬನಶಂಕರಿ ನಗರ, ಮುದ್ದೇಬಿಹಾಳ 23 04-04-2014 ____ 20-02-2017

PR-773

ಪಿ.ಎನ್.ಶ್ರೀನಿವಾಸಾಚಾರಿ

SC-05

ಆಯುಕ್ತರು

ರಾಜ್ಯ ಚುನಾವಣಾ ಆಯೋಗ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೫೩೯೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೩, ೨೦೧೭ ಭಾಗ ೩

ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ನಡವಳಿಗಳು

ವಿಷಯ : ಗ್ರಾಮ ಪಂಚಾಯಿತಿಯಿಂದ ಮೇಲ್ದರ್ಜೆಗೇರಿಸಿದ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2016 ರ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಜಾಲಿ ಪಟ್ಟಣ ಪಂಚಾಯಿತಿಯ ವಾರ್ಡ್ ನಂ:3 ರಿಂದ ಸ್ಪರ್ಧಿಸಿದ ಅಭ್ಯರ್ಥಿಯಾದ ಶ್ರೀಮತಿ ಪಾರ್ವತಿ ಲಕ್ಷ್ಮಣನಾಯ್ಕ ರವರು ಚುನಾವಣಾ ವೆಚ್ಚ ವಿವರವನ್ನು ಸಲ್ಲಿಸದೇ ಇರುವುದರಿಂದ ಕರ್ನಾಟಕ ಮುನಿಸಿಪಾಲಿಟೀಸ್ ಅಧಿನಿಯಮ 1964ರ ಕಲಂ 16ಸಿ ಪ್ರಕಾರ ಅನರ್ಹಗೊಳಿಸುವ ಬಗ್ಗೆ. 1. ಕರ್ನಾಟಕ ಮುನಿಸಿಪಾಲಿಟೀಸ್ ಅಧಿನಿಯಮ 1964ರ ಕಲಂ 16ಬಿ ಮತ್ತು 16ಸಿ ಹಾಗೂ ಕರ್ನಾಟಕ ಮುನಿಸಿಪಾಲಿಟೀಸ್ (ಕೌನ್ಸಿಲರುಗಳ ಚುನಾವಣೆ) ಸೇರ್ಪಡೆ ನಿಯಮಗಳು 2010ರ ಉಲ್ಲೇಖ :

ನಿಯಮ, 22ಸಿ.

2. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು, ಉತ್ತರಕನ್ನಡ ಜಿಲ್ಲೆ ಇವರ ವರದಿ ಸಂಖ್ಯೆ: ನಸ್ಥಸಂ/ಚುನಾವಣೆ/ವಿವ-20/2016-17 ದಿನಾಂಕ:20.06.2016. 3. ಆಯೋಗದ ನೋಟೀಸ್ ಸಂಖ್ಯೆ:ರಾಚುಆ/9(52)ಯುಬಿ/2016 ದಿನಾಂಕ : 09.08.2016 ಹಾಗೂ 06.10.2016. 4. ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ ರವರ ಪತ್ರದ ಸಂಖ್ಯೆ : ನಸ್ಥಸಂ / ಚುನಾವಣೆ / ವಿವ-20/2016-17 ದಿನಾಂಕ : 09.09.2016 ಹಾಗೂ 25.03.2017

ಪ್ರಸ್ತಾವನೆ :

2016ರಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಜಾಲಿ ಪಟ್ಟಣ ಪಂಚಾಯಿತಿಯ ವಾರ್ಡ್ ನಂ:3 ರಿಂದ ಸ್ಪರ್ಧಿಸಿದ ಅಭ್ಯರ್ಥಿ ಶ್ರೀಮತಿ ಪಾರ್ವತಿ ಲಕ್ಷ್ಮಣ ನಾಯ್ಕರವರು ಚುನಾವಣಾ ವೆಚ್ಚ ವಿವರವನ್ನು ಸಲ್ಲಿಸದೇ ಇರುವುದರಿಂದ ಕರ್ನಾಟಕ ಮುನಿಸಿಪಾಲಿಟೀಸ್ ಅಧಿನಿಯಮ 1964ರ ಕಲಂ 16ಬಿ ಮತ್ತು 16ಸಿ ಯಲ್ಲಿ ಉಪಬಂಧಿಸಿರುವಂತೆ ಹಾಗೂ ಕರ್ನಾಟಕ ಮುನಿಸಿಪಾಲಿಟೀಸ್ (ಕೌನ್ಸಿಲರ್‌ಗಳ ಚುನಾವಣೆ) ಸೇರ್ಪಡೆ ನಿಯಮಗಳು 2010 ರ ನಿಯಮ 22ಸಿ ರನ್ವಯ ಮತಗಳ ಎಣಿಕೆ ನಡೆದು ಫಲಿತಾಂಶ ಘೋಷಣೆಯಾದ 30 ದಿನಗಳ ಒಳಗೆ ಚುನಾವಣಾ ವೆಚ್ಚ ವಿವರಗಳನ್ನು ಸಲ್ಲಿಸಿರುವುದಿಲ್ಲವೆಂದು ಉಲ್ಲೇಖ(2)ರಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ ರವರು ವರದಿ ಸಲ್ಲಿಸಿರುತ್ತಾರೆ.

ಶ್ರೀಮತಿ ಪಾರ್ವತಿ ಲಕ್ಷ್ಮಣ ನಾಯ್ಕರವರು ದಿನಾಂಕ 24-04-2016 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆ, ಜಾಲಿ ಪಟ್ಟಣ ಪಂಚಾಯ್ತಿಯ ವಾರ್ಡ್ ನಂ. 3 ರಿಂದ ಸ್ಪರ್ಧಿಸಿದ್ದು, ಅವರು ಚುನಾವಣಾ ಫಲಿತಾಂಶ ಘೋಷಣೆಯಾದ ದಿನಾಂಕ 27-04-2016 ರಿಂದ 30 ದಿನಗಳು ಅಂದರೆ 27-5-2016 ರೊಳಗಾಗಿ ಅವರ ಚುನಾವಣಾ ವೆಚ್ಚ ವಿವರಗಳನ್ನು ಕರ್ನಾಟಕ ಮುನಿಸಿಪಾಲಿಟೀಸ್ ಅಧಿನಿಯಮ 1964ರ ಪ್ರಕರಣ 16(ಬಿ) ರನ್ವಯ ಸಲ್ಲಿಸಬೇಕಾಗಿದ್ದು, ಸಲ್ಲಿಸದೇ ಇರುವುದರಿಂದ ಕರ್ನಾಟಕ ಮುನಿಸಿಪಾಲಿಟೀಸ್ ಅಧಿನಿಯಮ 1964ರ ಪ್ರಕರಣ 16 ಸಿ ಹಾಗೂ ಕರ್ನಾಟಕ ಮುನಿಸಿಪಾಲಿಟೀಸ್ (ಕೌನ್ಸಿಲರುಗಳ ಚುನಾವಣೆ) ಸೇರ್ಪಡೆ ನಿಯಮ 2010ರ ನಿಯಮ 22ಸಿ (5) ರಂತೆ ಆಯೋಗದಿಂದ ಉಲ್ಲೇಖ (3)ರ ದಿನಾಂಕ 9-8-2016 ಹಾಗೂ 6-10-2016 ರಂದು ನೋಟೀಸುಗಳನ್ನು ನೀಡಿ ಏಕೆ ಅನರ್ಹಗೊಳಿಸಬಾರದು ಎಂಬ ಬಗ್ಗೆ ಸಮಜಾಯಿಷಿ ನೀಡಲು ತಿಳಿಸಲಾಗಿತ್ತು.

ಆಯೋಗದ ನೋಟೀಸನ್ನು ಸದರಿ ಅಭ್ಯರ್ಥಿಗೆ ಜಾರಿ ಮಾಡಿದ ಬಗ್ಗೆ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ ರವರು ಉಲ್ಲೇಖ(4) ರಲ್ಲಿ ದಿನಾಂಕ: 9-9-2016 ಮತ್ತು 25-03-2017 ರಂತೆ ವರದಿ ಮಾಡಿರುತ್ತಾರೆ.

ಸದರಿ ಅಭ್ಯರ್ಥಿಗೆ ನೋಟೀಸು ಜಾರಿಯಾಗಿದ್ದರೂ, ನೋಟೀಸನ್ನು ಪಡೆದ ಅಭ್ಯರ್ಥಿಯು ಚುನಾವಣಾ ವೆಚ್ಚ ವಿವರಗಳನ್ನು ಸಲ್ಲಿಸಲು ವಿಫಲರಾಗಿರುವ ಬಗ್ಗೆ ಈವರೆಗೂ ಆಯೋಗಕ್ಕೆ ಯಾವುದೇ ಸಮಜಾಯಿಷಿ ಸಲ್ಲಿಸಿರುವುದಿಲ್ಲ.

ಈ ಹಿನ್ನೆಲೆಯಲ್ಲಿ ಶ್ರೀಮತಿ ಪಾರ್ವತಿ ಲಕ್ಷ್ಮಣನಾಯ್ಕರವರು ಚುನಾವಣಾ ವೆಚ್ಚ ವಿವರಗಳನ್ನು ಸಲ್ಲಿಸಲು ವಿಫಲರಾಗಿರುವುದರಿಂದ ಹಾಗೂ ಯಾವುದೇ ಸಮಜಾಯಿಷಿ ನೀಡದಿರುವುದರಿಂದ ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಆದೇಶ ಸಂಖ್ಯೆ: ರಾಚುಆ 9(52) ಇಯುಬಿ 2016 ದಿನಾಂಕ:21.04.2017

ಮೇಲೆ ವಿವರಿಸಿರುವಂತೆ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2016 ರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಜಾಲಿ ಪಟ್ಟಣ ಪಂಚಾಯಿತಿಯ ವಾರ್ಡ್ ನಂ:3 ರಿಂದ ಸ್ಪರ್ಧಿಸಿದ ಅಭ್ಯರ್ಥಿಯಾದ ಶ್ರೀಮತಿ ಪಾರ್ವತಿ ಲಕ್ಷ್ಮಣ ನಾಯ್ಕರವರು ಆಯೋಗದಿಂದ ನೀಡಿದ ನೋಟೀಸುಗಳಿಗೆ ಸಮಜಾಯಿಷಿಯನ್ನು ನೀಡದೇಇರುವುದರಿಂದ ಹಾಗೂ ಚುನಾವಣಾ ವೆಚ್ಚ ವಿವರವನ್ನು ಸಲ್ಲಿಸಿಲ್ಲವೆಂದು ದೃಡಪಟ್ಟಿರುವುದರಿಂದ, ರಾಜ್ಯ ಚುನಾವಣಾ ಆಯೋಗವು ಶ್ರೀಮತಿ ಪಾರ್ವತಿ ಲಕ್ಷ್ಮಣನಾಯ್ಕರವರನ್ನು ಕರ್ನಾಟಕ ಮುನಿಸಿಪಾಲಿಟೀಸ್ ಅಧಿನಿಯಮ, 1964ರ ಕಲಂ 16ಸಿ ಅನುಸಾರ, ಈ ಆದೇಶದ ದಿನಾಂಕದಿಂದ 3 ವರ್ಷಗಳ ಅವಧಿಗೆ ಅನರ್ಹರೆಂದು ಘೋಷಿಸಿರುತ್ತದೆ.

PR-774

ಪಿ.ಎನ್. ಶ್ರೀನಿವಾಸಾಚಾರಿ

SC-05

ಆಯುಕ್ತರು

ರಾಜ್ಯ ಚುನಾವಣಾ ಆಯೋಗ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 23 November 2017. Indian Gazettes, https://egazette.servantsofknowledge.in/details/in.gazette.karnataka_new.2017-11-23.Part-3/. Archive identifier in.gazette.karnataka_new.2017-11-23.Part-3.