Servants of Knowledge
Karnataka Gazette · Government of Karnataka

Karnataka Gazette, Part Part-1, 07 December 2017

Published 07 December 2017

Part
Part-1
Identifier
in.gazette.karnataka_new.2017-12-07.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೨

Volume 152

ಬೆಂಗಳೂರು, ಗುರುವಾರ, ಡಿಸೆಂಬರ್ ೭, ೨೦೧೭ (ಮಾರ್ಗಶಿರ ೧೬, ಶಕ ವರ್ಷ ೧೯೩೯)

Bengaluru, Thursday, December 7, 2017 (Margashira 16, Shaka Varsha 1939)

ಸಂಚಿಕೆ ೪೮

Issue 48

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಆರ್ಥಿಕ ಸಚಿವಾಲಯ

ವಿಷಯ: ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ಬೋಧಕ ವರ್ಗದವರಿಗೆ ಮತ್ತು ಎನ್‌ಜೆಪಿಸಿ ವೇತನ ಶ್ರೇಣಿಯಲ್ಲಿರುವ ನ್ಯಾಯಾಂಗ ಅಧಿಕಾರಿಗಳಿಗೆ/ಎನ್‌ಜೆಪಿಸಿ ನಿವೃತ್ತಿ ವೇತನದಾರರಿಗೆ ತುಟ್ಟಿ ಭತ್ಯೆಯನ್ನು ಮಂಜೂರು ಮಾಡುವ ಕುರಿತು.

ಓದಲಾಗಿದೆ :

(1) ಸ.ಆ.ಸಂಖ್ಯೆ: ಎಫ್‌ಡಿ 10 ಎಸ್ಆರ್‌ಪಿ 2013, ದಿನಾಂಕ : 20-05-2013 (2) ಸ.ಆ.ಸಂಖ್ಯೆ: ಎಫ್ ಡಿ 12 ಎಸ್ಆರ್‌ಪಿ 2013(II), ದಿನಾಂಕ : 12-06-2013 (3) ಸ.ಆ.ಸಂಖ್ಯೆ: ಎಫ್ ಡಿ 22 ಎಸ್ಆರ್‌ಪಿ 2013, ದಿನಾಂಕ : 10-10-2013 (4) ಸ.ಆ.ಸಂಖ್ಯೆ: ಎಫ್ ಡಿ 07 ಎಸ್ಆರ್‌ಪಿ 2014, ದಿನಾಂಕ : 11-04-2014 (5) ಸ.ಅ.ಸಂಖ್ಯೆ: ಎಫ್ ಡಿ 18 ಎಸ್ಆರ್‌ಪಿ 2014, ದಿನಾಂಕ : 01-10-2014 (6) ಸ.ಅ.ಸಂಖ್ಯೆ: ಎಫ್ ಡಿ 12 ಎಸ್ಆರ್‌ಪಿ 2015, ದಿನಾಂಕ : 08-05-2015 (7) ಸ.ಅ.ಸಂಖ್ಯೆ: ಎಫ್ ಡಿ 19 ಎಸ್ಆರ್‌ಪಿ 2015 ದಿನಾಂಕ : 08-10-2015 (8) ಸ.ಅ.ಸಂಖ್ಯೆ: ಎಫ್ ಡಿ 18 ಎಸ್ಆರ್‌ಪಿ 2016 ದಿನಾಂಕ : 18-04-2016 (9) ಸ.ಅ.ಸಂಖ್ಯೆ: ಎಫ್ ಡಿ 34 ಎಸ್ಆರ್‌ಪಿ 2016 ದಿನಾಂಕ : 28-10-2016 (10) ಸ.ಅ.ಸಂಖ್ಯೆ: ಎಫ್ ಡಿ 19 ಎಸ್ಆರ್‌ಪಿ 2017 ದಿನಾಂಕ : 04-04-2017.

ಸರ್ಕಾರಿ ಆದೇಶ ಸಂಖ್ಯೆ : ಆಇ 40 ಎಸ್ಆರ್‌ಪಿ 2017, ಬೆಂಗಳೂರು, ದಿನಾಂಕ : 16ನೇ ಅಕ್ಟೋಬರ್ 2017.

ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳಲ್ಲಿರುವ ಬೋಧಕ ಸಿಬ್ಬಂದಿಗಳಿಗೆ ಮತ್ತು ಎನ್‌ಜೆಪಿಸಿ ವೇತನ ಶ್ರೇಣಿಯಲ್ಲಿರುವ ನ್ಯಾಯಾಂಗ ಅಧಿಕಾರಿಗಳಿಗೆ ಹಾಲಿ ಲಭ್ಯವಿರುವ ತುಟ್ಟಿ ಭತ್ಯೆಯ ದರವನ್ನು ಮೂಲ ವೇತನದ ಶೇ.136% ರಿಂದ ಶೇ.139% ಕ್ಕೆ ಹೆಚ್ಚಿಸಿ ದಿನಾಂಕ 1ನೇ ಜುಲೈ 2017ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ.

2. ಈ ಆದೇಶದ ಉದ್ದೇಶಗಳಿಗಾಗಿ 'ಮೂಲ ವೇತನ' ಎಂದರೆ ಸರ್ಕಾರಿ ನೌಕರರು ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ ಯುಜಿಸಿ/ಐಸಿಎಆರ್/ ಎಐಸಿಟಿಇ ಮತ್ತು ಎನ್‌ಜೆಪಿಸಿ ವೇತನ ಶ್ರೇಣಿಗಳಲ್ಲಿ ಪಡೆಯುವ ವೇತನ.

3. ಮೂಲ ವೇತನಕ್ಕೆ ಇನ್ಯಾವುದೇ ಉಪಲಬ್ದಗಳನ್ನು ಸೇರಿಸತಕ್ಕದ್ದಲ್ಲ.

4. ಎನ್‌ಜೆಪಿಸಿ ನಿವೃತ್ತಿ ವೇತನದಾರರು/ ಕುಟುಂಬ ನಿವೃತ್ತಿ ವೇತನದಾರರಿಗೆ ಹಾಲಿ ಲಭ್ಯವಿರುವ ತುಟ್ಟಿ ಭತ್ಯೆಯ ದರವನ್ನು ಮೂಲ ನಿವೃತ್ತಿ ವೇತನ / ಕುಟುಂಬ ನಿವೃತ್ತಿ ವೇತನದ ಶೇ.136% ರಿಂದ ಶೇ.139% ಕ್ಕೆ ಹೆಚ್ಚಿಸಿ ದಿನಾಂಕ 1ನೇ ಜುಲೈ 2017ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಲು ಸಹ ಸರ್ಕಾರವು ಹರ್ಷಿಸುತ್ತದೆ.

5. ಈ ಆದೇಶದ ಮೇರೆಗೆ ಮಂಜೂರಾಗಿರುವ ತುಟ್ಟಿ ಭತ್ಯೆಯನ್ನು ಮುಂದಿನ ಆದೇಶ ಹೊರಡಿಸುವವರೆಗೆ ನಗದಾಗಿ ಪಾವತಿ ಮಾಡಲಾಗುವುದು.

6. ತುಟ್ಟಿ ಭತ್ಯೆಯ ಕಾರಣದಿಂದ ಸಂದಾಯ ಮಾಡಬೇಕಾಗಿರುವ ಐವತ್ತು ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸತಕ್ಕದ್ದು ಮತ್ತು ಐವತ್ತು ಪೈಸೆಗಿಂತ ಕಡಿಮೆ ಇರುವ ಭಿನ್ನಾಂಕಗಳನ್ನು ಕಡೆಗಣಿಸತಕ್ಕದ್ದು.

(೧೨೯೩)

೧೨೯೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ಭಾಗ ೧

7. ತುಟ್ಟಿ ಭತ್ಯೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸುವುದು ಮತ್ತು ಯಾವುದೇ ಉದ್ದೇಶಕ್ಕಾಗಿ ಇದನ್ನು ವೇತನ ಎಂದು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಡಿ.ಎಸ್.ಜೋಗೋಜೆ

ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸೇವೆಗಳು-2)

FINANCE SECRETARIAT

Sub : Dearness Allowance to Teaching Staff on UGC/ AICTE/ ICAR scales of pay and

Judicial Officers/Pensioners on NJPC pay scales – Revision of rates.

READ : (1) G.O. No. FD 10 SRP 2013 dated : 20.05.2013

(2) G.O. No. FD 12 SRP 2013 (II) dated : 12.06.2013

(3) G.O. No. FD 22 SRP 2013 dated : 10.10.2013

(4) G.O. No. FD 07 SRP 2014 dated : 11.04.2014

(5) G.O. No. FD 18 SRP 2014 dated : 01.10.2014

(6) G.O. No. FD 12 SRP 2015 dated : 08.05.2015

(7) G.O. No. FD 19 SRP 2015 dated : 08.10.2015

(8) G.O. No. FD 18 SRP 2016 dated : 18.04.2016

(9) G.O. No. FD 34 SRP 2016 dated : 28.10.2016.

(10) G.O. No. FD 19 SRP 2017 dated : 04.04.2017

GOVERNMENT ORDER NO. FD 40 SRP 2017, BENGALURU, DATED 16TH OCTOBER 2017

Government are pleased to sanction increase in the rates of Dearness Allowance to Teaching Staff who are on UGC/AICTE/ICAR scales of pay and to Judicial Officers on NJPC pay scales from the existing 136% to 139% of the basic pay with effect from 1st July 2017.

2. For the purpose of this order, the term ' Basic Pay' means the pay drawn by a Government employee in the UGC/AICTE/ICAR and NJPC scales of pay applicable to the post held by him.

3. Basic Pay shall not include any other emoluments.

4. Government are also pleased to sanction increase in the rates of Dearness Allowance to NJPC Pensioners/ Family Pensiones from the existing 136% to 139% of the basic pension / family pension with effect from 1st July 2017.

5. The increase in Dearness Allowance admissible under this order is payable in cash until further orders.

6. The payment on account of Dearness Allowance involving fractions of 50 paise and above shall be rounded off to the next rupee and fractions less than 50 paise shall be ignored.

7. The Dearness Allowance will be shown as a distinct element of remuneration and will not be treated as pay for any purpose.

PR-352

BY ORDER AND IN THE NAME OF THE GOVERNOR OF KARNATAKA SC-50

D.S. JOGOJE Deputy Secretary to Government,

Finance Department. (Services-2)

ಕಂದಾಯ ಸಚಿವಾಲಯ

ವಿಷಯ : ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ (ಅಪರ) ತಾಲ್ಲೂಕಿನ ವಿವಿಧ ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿನ ಜಮೀನನ್ನು ಏರ್ ಪೋರ್ಸ್ ಸ್ಟೇಷನ್, ಜಾಲಹಳ್ಳಿ, ರಕ್ಷಣಾ ಮಂತ್ರಾಲಯ, ಭಾರತ ಸರ್ಕಾರ ಇವರಿಗೆ ಮಂಜೂರು ಮಾಡಿರುವ ಆದೇಶವನ್ನು ಭಾಗಶಃ ಮಾರ್ಪಡಿಸಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಮೀನುಗಳನ್ನು ರದ್ದುಪಡಿಸುವ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 50 ಎಲ್‌ಜಿಬಿ 1985 ದಿನಾಂಕ : 18.04.1987.

2. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಇವರ ಅ.ಸ.ಪತ್ರ ಸಂಖ್ಯೆ :

ಅಪಜೀ 80 ಎಫ್ಎಲ್ಎಲ್ 2017 ದಿನಾಂಕ : 11-07-2017.

3. ಕರ್ನಾಟಕ ವಿಧಾನಸಭೆ ಸಚಿವಾಲಯದ ಪತ್ರ ಸಂಖ್ಯೆ : ಕವಿಸಸ/ಸಾಲೆಸ/ಸೂಪ:28:2016-17

ದಿನಾಂಕ : 10-07-2017

4. ಸರ್ಕಾರದ ಪತ್ರ ಸಂಖ್ಯೆ : ಆರ್‌ಡಿ 228 ಎಲ್‌ಜಿಬಿ 2017 ದಿನಾಂಕ : 05.08.2017.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ೧೨೯೫

5. ಕರ್ನಾಟಕ ವಿಧಾನಸಭೆ ಸಚಿವಾಲಯದ ಪತ್ರ ಸಂಖ್ಯೆ :ಕವಿಸಸ/ಸಾಲೆಸ/ಕಂಇ (ಹೆಮಾ):11:2016-17, ದಿನಾಂಕ : 05.09.2017.

6. ಸರ್ಕಾರದ ಪತ್ರ ಸಂಖ್ಯೆ : ಆರ್‌ಡಿ 228 ಎಲ್‌ಜಿಬಿ 2017 ದಿನಾಂಕ : 07-09-2017.

7. ಸರ್ಕಾರದ ಅನಧಿಕೃತ ಟಿಪ್ಪಣಿ ಸಂಖ್ಯೆ : ಆರ್‌ಡಿ 228 ಎಲ್‌ಜಿಬಿ 2017 ದಿನಾಂಕ : 12-09-2017.

8. ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಇವರ ಅನಧಿಕೃತ ಟಿಪ್ಪಣಿ ಸಂಖ್ಯೆ : ಅಪಜೀ 80 ಎಫ್ಎಲ್ಎಲ್ 2017 ದಿನಾಂಕ : 07.10.2017.

9. ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರ ಪತ್ರ ಸಂಖ್ಯೆ : ಎಲ್ಎನ್‌ಡಿ(ಎನ್)ಸಿಆರ್/90/2017-18 ದಿನಾಂಕ: 07.10.2017.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ದಿನಾಂಕ : 18-04-1987ರ ಸರ್ಕಾರದ ಆದೇಶದಲ್ಲಿ ಡಿಫೆನ್ಸ್ ಎಸ್ಟೇಟ್ ಆಫೀಸರ್, ಏರ್ ಪೋರ್ಸ್ ಸ್ಟೇಷನ್, ಕರ್ನಾಟಕ ಸರ್ಕಲ್, ರಕ್ಷಣಾ ಮಂತ್ರಾಲಯ ಇವರ ಪತ್ರ ಸಂಖ್ಯೆ: ಎಂವೈ 370/ಎಸಿಕ್ಯೂ ದಿನಾಂಕ : 25-02-1987ರ ಪತ್ರದಲ್ಲಿನ ಕೋರಿಕೆಯಂತೆ 1941-42 ರಿಂದ ಭಾರತೀಯ ವಾಯುಸೇನೆಯ ಸ್ವಾಧೀನದಲ್ಲಿರುವ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೂಕಿನ ವಿವಿಧ ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿನ ಒಟ್ಟು ವಿಸ್ತೀರ್ಣ 570-18 ಎಕರೆ/ಗುಂಟೆ ಜಮೀನನ್ನು ಸದರಿ ಮನವಿಯನ್ನು ಪರಿಗಣಿಸಿ ಸರ್ಕಾರವು ಮಂಜೂರು ಮಾಡಲಾಗಿತ್ತು. ವಿವರ

ತಾಲ್ಲೂಕು ಗ್ರಾಮ ಸ ವ ರ್ ನಂಬರ್ ೆ ವಿಸ್ತೀರ್ಣ ಎ/ಗುಂಟೆ
ಬ ಂಗಳೂರು ಉತ್ತರ ೆ ದಾಸರಹಳ್ಳಿ 5 7-06
ದಾಸರಹಳ್ಳಿ 6 28-12
ಪೀಣ್ಯ ಪ್ಲಾಂಟೇಶನ್ 2 94-29.08
ಕಮ್ಮಗೊಂಡನಹಳ್ಳಿ (ಭಾಗ) 63 46-00.08
ಜಾರಕ ಬಂಡೆಕಾವಲ್ 18 31-10
ಜಾರಕ ಬಂಡೆಕಾವಲ್ 19 19-28
ಜಾರಕ ಬಂಡೆಕಾವಲ್ 20 7-07
ಜಾರಕ ಬಂಡೆಕಾವಲ್ 33 31-01
ಜಾರಕ ಬಂಡೆಕಾವಲ್ 34 26-08
ಜಾರಕ ಬಂಡೆಕಾವಲ್ 36 44-21
ಜಾರಕ ಬಂಡೆಕಾವಲ್ 37 1-15
ಜಾರಕ ಬಂಡೆಕಾವಲ್ 38 17-30
ಜಾರಕ ಬಂಡೆಕಾವಲ್ 44 37-23
ಜಾರಕ ಬಂಡೆಕಾವಲ್ 45 37-14
ಜಾರಕ ಬಂಡೆಕಾವಲ್ 46 40-30
ಜಾರಕ ಬಂಡೆಕಾವಲ್ 47 30-21
ಜಾರಕ ಬಂಡೆಕಾವಲ್ 49 32-07
ರಾಮ ಚಂದ್ರಪುರ 30 12-07
ರಾಮ ಚಂದ್ರಪುರ 31 9-15
ರಾಮ ಚಂದ್ರಪುರ 32 15-13
ಒಟ್ಟು 570-18

ಮುಂದುವರೆದು, ಸದರಿ ಆದೇಶದಲ್ಲಿ ಡಿಫೆನ್ಸ್ ಎಸ್ಟೇಟ್ ಆಫೀಸರ್, ಕರ್ನಾಟಕ ಸರ್ಕಲ್ ರವರ ಕೋರಿಕೆಯನ್ನು ಪರಿಗಣಿಸಿ ಎಕರೆಯೊಂದಕ್ಕೆ `. 50,000/-ಗಳ ಭೂಮೌಲ್ಯವನ್ನು ಹಾಗೂ ಭೂ ಪರಿವರ್ತನಾ ಶುಲ್ಕ / ಪೋಡಿ ಶುಲ್ಕವನ್ನು ವಸೂಲಿ ಮಾಡಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮಗಳಂತೆ ಷರತ್ತುಗಳನ್ನು ವಿಧಿಸಿ ಮಂಜೂರು ಮಾಡಲಾಗಿತ್ತು.

೧೨೯೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ಭಾಗ ೧

ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಅರಣ್ಯ ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಇವರ ದಿನಾಂಕ : 11-07-2017ರ ಅರೆ ಸರ್ಕಾರಿ ಪತ್ರದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ದಿನಾಂಕ : 31-03-2014ಕ್ಕೆ ಅಂತ್ಯಗೊಂಡ ಭಾರತ ಮಹಾಲೆಕ್ಕಪತ್ರ ನಿಯಂತ್ರಕರು ಮತ್ತು ಲೆಕ್ಕಪರಿಶೋಧಕರು ಇವರ ವರದಿಯಲ್ಲಿನ ಕಂಡಿಕೆ – 7.2.6(i) ರಿಂದ (iii) ವರೆಗೆ ಅರಣ್ಯ ಇಲಾಖೆಯಿಂದ ಸಲ್ಲಿಸಲಾದ ಇಲಾಖಾ ಟಿಪ್ಪಣಿಯು ದಿನಾಂಕ 07-07-2017ರಂದು ನಡೆದ ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆಯಲ್ಲಿ ಚರ್ಚಿಸಿ ಪರಿಶೀಲಿಸಲ್ಪಟ್ಟಿದ್ದು, ಬೆಂಗಳೂರಿನ ಜಾರಕಬಂಟೆ ಸ್ಟಾಂಡರ್ಡ್ ರಿಸರ್ವ್ ರಕ್ಷಿತಾ ಅರಣ್ಯ ಪ್ರದೇಶದ ಅರಣ್ಯ ಇಲಾಖೆಗೆ ಸೇರಿದ ಒಟ್ಟು 452 ಎಕರೆ 4.50 ಗುಂಟೆ ವಿಸ್ತೀರ್ಣದ ಪ್ರದೇಶವನ್ನು ಕಂದಾಯ ಇಲಾಖೆಯಿಂದ ರಕ್ಷಣಾ ಇಲಾಖೆಗೆ ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 50 ಎಲ್‌ಜಿಬಿ 1985 ದಿನಾಂಕ 18-04-1987 ರಲ್ಲಿ ಮಂಜೂರು ಮಾಡಲಾಗಿದೆ ಎಂದು ತಿಳಿಸಿರುತ್ತಾರೆ. ಮುಂದುವರೆದು, ಹೀಗೆ ಮಂಜೂರು ಮಾಡುವಾಗ ಅರಣ್ಯ ಇಲಾಖೆಯ ಸಹಮತಿ / ಅನುಮತಿ ಪಡೆದಿರುವುದಿಲ್ಲವೆಂದು ತಿಳಿಸಿದ್ದು, ಸದರಿ ಜಮೀನನ್ನು ಅರಣ್ಯ ಇಲಾಖೆಯಿಂದಾಗಲೀ, ಕಂದಾಯ ಇಲಾಖೆಯಿಂದಾಗಲೀ, ಅರಣ್ಯ ಸಂರಕ್ಷಣಾ ಕಾಯ್ದೆ, 1980 ರ ಅಡಿಯಲ್ಲಿ ಕೇಂದ್ರ ಸರ್ಕಾರದ ಪೂರ್ವಾನುಮೋದನೆಯನ್ನು ಪಡೆದು ಮಂಜೂರು ಮಾಡಿರುವುದಿಲ್ಲವೆಂದು ತಿಳಿಸಿದ್ದಾರೆ.

ಅಲ್ಲದೇ ಸದರಿ ಜಮೀನಿನ ಮೌಲ್ಯವನ್ನು ಕಂದಾಯ ಇಲಾಖೆಯು ಪಾವತಿಸಿಕೊಂಡಿದ್ದು, ಸದರಿ ಮೌಲ್ಯವನ್ನು ಅರಣ್ಯ ಇಲಾಖೆಗೆ ಪಾವತಿಸಿರುವುದಿಲ್ಲವೆಂದು ತಿಳಿಸಿದ್ದಾರೆ.

ಮುಂದುವರೆದು, ಕಂದಾಯ ಇಲಾಖೆಯಿಂದ 1987ರಲ್ಲಿ ಮಂಜೂರು ಮಾಡಿದ ಸದರಿ ಪ್ರದೇಶವು ಅರಣ್ಯ ಇಲಾಖೆಗೆ ಸೇರಿದ ಜಮೀನಾಗಿರುವುದರಿಂದ, ಸದರಿ ಜಮೀನನ್ನು ಕೇಂದ್ರ ಅರಣ್ಯ ಸಂರಕ್ಷಣಾ ಕಾಯ್ದೆ, 1980ರಡಿ ಪೂರ್ವಾನುಮೋದನೆ ಇಲ್ಲದೆ ಮಾಡಿರುವ ಮಂಜೂರಾತಿ ಕಾನೂನಾತ್ಮಕವಾಗಿ ಸಮರ್ಥನೀಯವಾಗಿರುವುದಿಲ್ಲವೆಂದು ಸದರಿ ಮಂಜೂರಾತಿಯನ್ನು ರದ್ದುಮಾಡುವ ಕುರಿತು ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಮುಂದೆ ವರದಿ ಸಲ್ಲಿಸಿರುತ್ತಾರೆ. ಹಾಗೂ ಕಂದಾಯ ಇಲಾಖೆಯಿಂದ ಸಮಿತಿಗೆ ಮಾಹಿತಿ ಸಲ್ಲಿಸುವಂತೆ ಕೋರಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (3) ರಂತೆ ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಮುಂದೆ ಕಂದಾಯ ಇಲಾಖೆಯ ಪರವಾಗಿ ಸದರಿ ಜಮೀನಿನ ಮಂಜೂರಾತಿ ಕುರಿತು ರಕ್ಷಣಾ ಇಲಾಖೆಗೆ ಮಂಜೂರು ಮಾಡಿರುವ ಜಮೀನನ್ನು ರದ್ದುಪಡಿಸುವ ಕುರಿತು ರಕ್ಷಣಾ ಇಲಾಖೆ ನೋಟೀಸ್ ಜಾರಿ ಮಾಡಲಾಗುವುದೆಂದು ತಿಳಿಸಲಾಗಿತ್ತು. ಅದರಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (4) ರಲ್ಲಿ ರಕ್ಷಣಾ ಇಲಾಖೆಗೆ ಸರ್ಕಾರದಿಂದ ದಿನಾಂಕ : 18-04-1987 ರಂದು ಆದೇಶ ಸಂಖ್ಯೆ : ಆರ್‌ಡಿ 50 ಎಲ್‌ಜಿಬಿ 1985 ರಂತೆ ರಕ್ಷಣೆ ಇಲಾಖೆಗೆ ಮಾಡಿರುವ ಮಂಜೂರಾತಿಯನ್ನು ಯಾಕೆ ರದ್ದು ಮಾಡಬಾರದು ಎಂಬ ಬಗ್ಗೆ 15 ದಿನಗಳೊಳಗಾಗಿ ಅಹವಾಲುಗಳೇನಾದರೂ ಇದ್ದರೆ ಸಲ್ಲಿಸುವಂತೆ ನೋಟೀಸನ್ನು ಜಾರಿಗೊಳಿಸಲಾಗಿತ್ತು. ಮೇಲೆ ಓದಲಾದ ಕ್ರಮ ಸಂಖ್ಯೆ (5) ರಂತೆ ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು 10ನೇ ವಿಧಾನಸಭೆಯ 13ನೇ ವರದಿಯಲ್ಲಿನ ಕಂಡಿಕೆ 7.2.6(i) " Lands leased out to Defence Department (CAG's Revenue Receipts Report for the year ending March-1991)" ಗೆ ಇಲಾಖೆಯ ಅನುಸರಣಾ ವರದಿಯ ಮೇಲೆ ಚರ್ಚಿಸಿದ ಸಂದರ್ಭದಲ್ಲಿ ಮಂಜೂರು ಮಾಡಲಾದ ಜಮೀನನ್ನು ರದ್ದುಪಡಿಸುವ ಕುರಿತು ರಕ್ಷಣಾ ಇಲಾಖೆಗೆ ದಿನಾಂಕ : 05.08.2017 ರಂದು ನೋಟೀಸು ಜಾರಿ ಮಾಡಿದ್ದು, ಪ್ರಸ್ತುತ ರಕ್ಷಣಾ ಇಲಾಖೆಯಿಂದ ಸ್ವೀಕೃತವಾಗಿರುವ ಉತ್ತರ ಮತ್ತು ಸದರಿ ವಿಷಯದ ಕುರಿತು ಇಲಾಖೆ ಕೈಗೊಂಡ ಕ್ರಮದ ಬಗ್ಗೆ ಸಂಪೂರ್ಣ ವರದಿಯನ್ನು ಕೋರಿರುತ್ತಾರೆ. ಆದರೆ, ಇದುವರೆಗೂ ರಕ್ಷಣಾ ಇಲಾಖೆಯಿಂದ ನೋಟೀಸ್ ಕುರಿತು ಯಾವುದೇ ಪ್ರತಿಕ್ರಿಯೆಯು ಬಂದಿರುವುದಿಲ್ಲ.

ಮುಂದುವರೆದು, ಮೇಲೆ ಓದಲಾದ ಕ್ರಮ ಸಂಖ್ಯೆ (6) ರಲ್ಲಿ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ರವರನ್ನು ಅರಣ್ಯ ಜಮೀನಿನ ಮಂಜೂರಾತಿಯನ್ನು ರದ್ದುಪಡಿಸುವ ಕುರಿತು ಅರಣ್ಯ ಇಲಾಖೆಗೆ ಸೇರಿದ ಬೆಂಗಳೂರಿನ ಜಾರಕಬಂಟೆ ಸ್ಯಾಂಡಲ್ ರಿಸರ್ವ್ ರಕ್ಷಿತ ಅರಣ್ಯ ಪ್ರದೇಶದ ಒಟ್ಟು 452 ಎಕರೆ 4-50 ಗುಂಟೆ ಪ್ರದೇಶದ ಗ್ರಾಮ, ಸರ್ವೆ ನಂಬರ್ ಮತ್ತು ವಿಸ್ತೀರ್ಣದ ವಿವರವನ್ನು ತಿಳಿಸುವಂತೆ ಕೋರಲಾಗಿತ್ತು. ಹಾಗೂ ಈ ಬಗ್ಗೆ ಮೇಲೆ ಓದಲಾದ ಕ್ರಮ ಸಂಖ್ಯೆ (7) ರಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯವರನ್ನು ಸಹ ಕೋರಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (8) ರ ದಿನಾಂಕ : 07-10-2017ರಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಇವರು ಬೆಂಗಳೂರು ಜಾಲಹಳ್ಳಿ ಪ್ರದೇಶದಲ್ಲಿ ಭಾರತ ಸರ್ಕಾರದ ರಕ್ಷಣಾ ಇಲಾಖೆಯ ಸುಪರ್ದಿಯಲ್ಲಿರುವ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ವಿವರಗಳನ್ನು ಕೆಳಕಂಡಂತೆ

ಕ್ರ. ಸಂ. ಪ ದ ್ರ ೕಶ ೆ ಸ ವ ರ್ ನಂಬರ್ ೆ ವಿಸ್ತೀರ್ಣ (ಎಕರೆ / ಗುಂಟೆ)
1 ಪೀಣ್ಯ ಪ್ಲಾಂಟೇಶನ್ 2 94-29.5
2 ಜಾರಕ ಬಂಡೆಕಾವಲ್ 18 31-10
ಜಾರಕ ಬಂಡೆಕಾವಲ್ 19 19-28
ಜಾರಕ ಬಂಡೆಕಾವಲ್ 20 7-07
ಜಾರಕ ಬಂಡೆಕಾವಲ್ 33 31-01
ಜಾರಕ ಬಂಡೆಕಾವಲ್ 34 26-08
ಜಾರಕ ಬಂಡೆಕಾವಲ್ 36 44-21
ಜಾರಕ ಬಂಡೆಕಾವಲ್ 37 1-15
ಜಾರಕ ಬಂಡೆಕಾವಲ್ 38 17-30
ಜಾರಕ ಬಂಡೆಕಾವಲ್ 44 37-23
ಜಾರಕ ಬಂಡೆಕಾವಲ್ 45 37-14
ಜಾರಕ ಬಂಡೆಕಾವಲ್ 46 40-30
ಜಾರಕ ಬಂಡೆಕಾವಲ್ 47 30-21
ಜಾರಕ ಬಂಡೆಕಾವಲ್ 49 32-07
ಒಟ್ಟು 452 ಎಕರೆ 4.50 ಗುಂಟೆ
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ೧೨೯೭

ಮೇಲೆ ಓದಲಾದ ಕ್ರಮ ಸಂಖ್ಯೆ (9) ರ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರ ದಿನಾಂಕ : 07-10-2017ರ ಪತ್ರದಲ್ಲಿ ಡಿಫೆನ್ಸ್ ಎಸ್ಟೇಟ್ ಆಫೀಸರ್, ಏರ್ ಪೋರ್ಸ್ ಸ್ಟೇಷನ್, ಕರ್ನಾಟಕ ಸರ್ಕಲ್, ರಕ್ಷಣಾ ಮಂತ್ರಾಲಯ ಇವರ ಪತ್ರ ಸಂಖ್ಯೆ : ಎಂವೈ 370/ಎಸಿಕ್ಯೂ ದಿನಾಂಕ : 25-02-1987 ರ ಪತ್ರದಲ್ಲಿನ ಕೋರಿಕೆಯಂತೆ 1941-42 ರಿಂದ ಭಾರತೀಯ ವಾಯುಸೇನೆಯ ಸ್ವಾಧೀನದಲ್ಲಿರುವ ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಉತ್ತರ ತಾಲ್ಲೂಕಿನ ವಿವಿಧ ಗ್ರಾಮಗಳ ಸರ್ವೆ ನಂಬರ್ ಗಳಲ್ಲಿನ ಒಟ್ಟು ವಿಸ್ತೀರ್ಣ 570-18 ಎಕರೆ / ಗುಂಟೆ ಜಮೀನನನ್ನು ಸದರಿ ಮನವಿಯನ್ನು ಪರಿಗಣಿಸಿ ಸರ್ಕಾರವು ಮಂಜೂರು ಮಾಡಲಾಗಿದ್ದು ಪ್ರಸ್ತಾಪಿತ ಜಮೀನಿನ ಎಕರೆಯೊಂದಕ್ಕೆ `. 50,000/- ಗಳ ಭೂಮೌಲ್ಯವನ್ನು ಹಾಗೂ ಭೂ ಪರಿವರ್ತನಾ ಶುಲ್ಕ / ಪೋಡಿ ಶುಲ್ಕವನ್ನು ವಸೂಲಿ ಮಾಡಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮಗಳಂತೆ ಷರತ್ತುಗಳನ್ನು ವಿಧಿಸಲಾಗಿತ್ತೆಂದು, ಆ ಪ್ರಕಾರ ಲೆಕ್ಕಾಚಾರ ಮಾಡಿದಂತೆ ಮೊತ್ತವನ್ನು ಪಾವತಿಸದೇ ಅಲ್ಪ ಮೊತ್ತವನ್ನು ಪಾವತಿಸಿರುವುದಾಗಿ ವರದಿ ಮಾಡಿರುತ್ತಾರೆ.

ಪ್ರಸ್ತಾಪಿತ ಜಾಲಹಳ್ಳಿ ಪ್ರದೇಶದಲ್ಲಿ ಭಾರತ ಸರ್ಕಾರದ ರಕ್ಷಣಾ ಇಲಾಖೆಯ ಸುಪರ್ದಿಯಲ್ಲಿರುವ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಗ್ರಾಮ ಸರ್ವೆ ನಂಬರುವಾರು ವಿಸ್ತೀರ್ಣದ ವಿವರಗಳನ್ನು ಸರ್ಕಾರದ ಆದೇಶ ಸಂಖ್ಯೆ. ಆರ್‌ಡಿ 50 ಎಲ್‌ಜಿಬಿ 1985 ದಿನಾಂಕ : 18.04.1987ರಲ್ಲಿ ನಮೂದಿಸಲಾಗಿರುತ್ತದೆ ಎಂದು ತಿಳಿಸುತ್ತಾ ರಕ್ಷಣಾ ಇಲಾಖೆಗೆ ಮಂಜೂರು ಮಾಡಿರುವ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು ಎಂದು ತಿಳಿಸಿರುವಂತಹ ಪೀಣ್ಯ ಪ್ಲಾಂಟೇಶನ್‌ನ ವಿಸ್ತೀರ್ಣ 94 ಎಕರೆ 29.5 ಗುಂಟೆ ಹಾಗೂ ಜಾರಕಬಂಡೆ ಕಾವಲ್ ಗ್ರಾಮದ ವಿವಿಧ ಸರ್ವೆ ನಂಬರ್ ನಲ್ಲಿರುವ 357 ಎಕರೆ 15 ಗುಂಟೆ ಒಟ್ಟು 452 ಎಕರೆ 4.50 ಗುಂಟೆ ಜಮೀನಿನ ಮಂಜೂರಾತಿಯನ್ನು ರದ್ದುಪಡಿಸುವ ಕುರಿತು ಸರ್ಕಾರದ ಹಂತದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಸಲ್ಲಸಿರುವ ಪ್ರಸ್ತಾವನೆಯಲ್ಲಿ ತಿಳಿಸಿರುತ್ತಾರೆ.

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಹಾಗೂ ಜಿಲ್ಲಾಧಿಕಾರಿಗಳ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 228 ಎಲ್‌ಜಿಬಿ 2017, ಬೆಂಗಳೂರು, ದಿನಾಂಕ : 09.10.2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಏರ್ ಪೋರ್ಸ್ ಸ್ಟೇಷನ್, ಜಾಲಹಳ್ಳಿ, ರಕ್ಷಣಾ ಮಂತ್ರಾಲಯ, ಭಾರತ ಸರ್ಕಾರ ಇವರಿಗೆ ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 50 ಎಲ್‌ಜಿಬಿ 1985 ದಿನಾಂಕ : 18.04.1987 ಅನ್ನು ಭಾಗಶಃ ಮಾರ್ಪಡಿಸಿ ಸದರಿ ಆದೇಶದಲ್ಲಿ ಮಂಜೂರು ಮಾಡಿರುವ ಒಟ್ಟು ವಿಸ್ತೀರ್ಣ 570-18 ಎಕರೆ ಪೈಕಿ ಅರಣ್ಯ ಇಲಾಖೆಗೆ ಸೇರಿದ್ದು ಎಂದು ತಿಳಿಸಿರುವ ಪೀಣ್ಯ ಪ್ಲಾಂಟೇಶನ್‌ನ ವಿಸ್ತೀರ್ಣ 94 ಎಕರೆ 29.5 ಗುಂಟೆ ಹಾಗೂ ಜಾರಕಬಂಡೆ ಕಾವಲ್ ಗ್ರಾಮದ ವಿವಿಧ ಸರ್ವೆ ನಂಬರ್‌ನಲ್ಲಿರುವ 357 ಎಕರೆ 15 ಗುಂಟೆ ಒಟ್ಟು 452 ಎಕರೆ 4.50 ಗುಂಟೆ ಜಮೀನಿನ ಮಂಜೂರಾತಿಯನ್ನು ರದ್ದುಪಡಿಸಿ ಆದೇಶಿಸಿದೆ.

ಮುಂದುವರೆದು, ಮಂಜೂರಾತಿ ರದ್ದುಪಡಿಸಿದ ಜಮೀನಿನ ಮ್ಯುಟೇಶನ್ ಅರಣ್ಯ ಇಲಾಖೆಯ ಹೆಸರಿಗೆ ಅರಣ್ಯ ಇಲಾಖೆಯ ಗೆಜೆಟ್ ನೋಟಿಫಿಕೇಶನ್ ಆಧಾರದಲ್ಲಿ ಮಾಡಲು ಹಾಗೂ ಕಂದಾಯ ಇಲಾಖೆಗೆ ಸೇರಿದ ದಾಸರಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳ ವಿಸ್ತೀರ್ಣ 35 ಎಕರೆ 18 ಗುಂಟೆ ಮತ್ತು ಕಮ್ಮಗೊಂಡನಹಳ್ಳಿ (ಭಾಗ) 46 ಎಕರೆ 0.50 ಮತ್ತು ರಾಮಚಂದ್ರಪುರ ಗ್ರಾಮದ ವಿವಿಧ ಸರ್ವೆ ನಂಬರ್‌ಗಳ 36 ಎಕರೆ 35 ಗುಂಟೆ ಜಮೀನು ಸೇರಿ ಒಟ್ಟು 118 ಎಕರೆ 13.50 ಗುಂಟೆ ಪ್ರದೇಶಕ್ಕೆ ರಕ್ಷಣಾ ಇಲಾಖೆಯವರು ಪಾವತಿಸಿರುವ ಹಣವನ್ನು ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಕ್ರಮವಹಿಸಲು ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರಿಗೆ ಸೂಚಿಸಿದೆ.

PR-356

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-100

ಎಸ್.ಎಲ್.ಮಹಾಂತೇಗೌಡ

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ. (ಭೂಮಂಜೂರಾತಿ – 1)

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ವಿಷಯ :- ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವ್ಯಾಪ್ತಿಯಲ್ಲಿನ ಕಡಿಮೆ ಅಂತರದಲ್ಲಿರುವ ಹಾಗೂ ಪ್ರಸ್ತುತ ಕಾರ್ಯ ನಿರ್ವಹಿಸದೇ ಇರುವ ಪಶುವೈದ್ಯ ಸಂಸ್ಥೆಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕುರಿತು.

ಓದಲಾಗಿದೆ :- 1) ಸರ್ಕಾರಿ ಆದೇಶ ಸಂಖ್ಯೆ: ಪಸಂಮೀ 73 ಪಸಸೇ 2014, ದಿನಾಂಕ: 24.12.2014.

2) ಪತ್ರ ಸಂಖ್ಯೆ: ಆಪಸಂ/ಡಿವಿಡಿ-3/ಕು.ಪ್ರಾ.ಸ್ಥ/2017, ದಿನಾಂಕ: 06.07.2017.

ಪ್ರಸಾವನೆ:

ಮೇಲೆ ಕ್ರಮ ಸಂಖ್ಯೆ (1) ರಲ್ಲಿ ಓದಲಾದ ದಿನಾಂಕ: 31.03.2016ರ ಆದೇಶದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ರಾಜ್ಯಾದ್ಯಂತ 100 ಹೊಸ ಪಶುಚಿಕಿತ್ಸಾಲಯಗಳನ್ನು ತೆರೆಯಲು ಹಾಗೂ 100 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಮಂಜೂರಾತಿ ನೀಡಿ ಆದೇಶಿಸಲಾಗಿದೆ.

ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಆಯುಕ್ತರ ಪತ್ರದಲ್ಲಿ ಕುಂದಗೋಳ ತಾಲ್ಲೂಕು ಕೇಂದ್ರದಲ್ಲಿ ಪಶು ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದ್ದು, ಸದರಿ ಆಸ್ಪತ್ರೆಯಲ್ಲಿ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಹುದ್ದೆ-1, ಮುಖ್ಯ ಪಶುವೈದ್ಯಾಧಿಕಾರಿಗಳು-1, ಜಾನುವಾರು ಅಭಿವೃದ್ಧಿ ಅಧಿಕಾರಿಗಳು-1, ಹಿರಿಯ ಪಶುವೈದ್ಯಕೀಯ ಪರೀಕ್ಷಕರು-1, ಪಶುವೈದ್ಯಕೀಯ ಸಹಾಯಕರು-3, ದ್ವಿತೀಯ ದರ್ಜೆ ಸಹಾಯಕರು-1, ವಾಹನ ಚಾಲಕರು-1 ಹಾಗೂ 2 'ಡಿ' ದರ್ಜೆ೧೨೯೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ಭಾಗ ೧ ನೌಕರರ ಹುದ್ದೆಗಳು ಮಂಜೂರಾಗಿರುವುದಾಗಿ, ಸದರಿ ಆಸ್ಪತ್ರೆಯ ಆವರಣದಲ್ಲಿ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ ಕುಂದಗೋಳ ಸಹ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ ಕುಂದಗೋಳದಲ್ಲಿ ಹಿರಿಯ ಪಶುವೈದ್ಯಕೀಯ ಪರೀಕ್ಷಕರು-1, ಪಶುವೈದ್ಯಕೀಯ ಸಹಾಯಕರು-1, 'ಡಿ' ದರ್ಜೆ ನೌಕರ-1 ಮಂಜೂರಾಗಿರುತ್ತದೆಂದು ಆಯುಕ್ತರು ವರದಿ ಮಾಡಿರುತ್ತಾರೆ.

ಮುಂದುವರೆದು, ಕುಂದಗೋಳದ ತಾಲ್ಲೂಕು ಪಶು ಆಸ್ಪತ್ರೆಯು ತನ್ನ ವ್ಯಾಪ್ತಿ ಪ್ರದೇಶಕ್ಕೆ ಒಳಪಡುವ ಹಳ್ಳಿಗಳಿಗೆ ಪಶುವೈದ್ಯಕೀಯ ಸೇವೆಯನ್ನು ನೀಡುತ್ತಿರುವುದರಿಂದ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ ಕುಂದಗೋಳವನ್ನು ಇಲ್ಲಿ ಮಂಜೂರಾಗಿರುವ ಹಿರಿಯ ಪಶುವೈದ್ಯಕೀಯ ಪರೀಕ್ಷಕರು-1, ಪಶುವೈದ್ಯಕೀಯ ಸಹಾಯಕರು-1, 'ಡಿ' ದರ್ಜೆ ನೌಕರ-1 ಹುದ್ದೆಗಳೊಂದಿಗೆ ಮಂಡ್ಯ ಜಿಲ್ಲೆ ಮಂಡ್ಯ ತಾಲ್ಲೂಕು, ಕೊತ್ತತ್ತಿ ಹೋಬಳಿ ಯತ್ತಗದಹಳ್ಳಿಗೆ ಸ್ಥಳಾಂತರಿಸಲು ಆದೇಶ ನೀಡಬೇಕಾಗಿ ಕೋರಿ ಆಯುಕ್ತರು ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಆಯುಕ್ತರ ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು. ಸದರಿ ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಿರುವ ಕುಂದಗೋಳ ತಾಲ್ಲೂಕು ಕೇಂದ್ರದಲ್ಲಿ ಪಶು ಆಸ್ಪತ್ರೆ ಆವರಣದಲ್ಲಿ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರವನ್ನು ಸೇರಿದಂತೆ ಕಡಿಮೆ ಅಂತರದಲ್ಲಿ ಇರುವ ಹಾಗೂ ಹಾಲಿ ಇರುವ ಸ್ಥಳದಲ್ಲಿ ಯಾವುದೇ ಕಾರ್ಯ ಚಟುವಟಿಕೆ ಇಲ್ಲದಿರುವ ಈ ಕೆಳಕಂಡ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಸಹ ಈ ಕೆಳಕಂಡಂತೆ ಸದರಿ

ಕ್ರ. ಸ ಂ. ಹಾಲಿ ಕಾರ್ಯ ನಿರ್ವಹಿಸುತ್ತಿರುವ ಪಶುಚಿಕಿತ್ಸಾಲಯ /ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳ ಸ್ಥಳದ ವಿವರ ಸ ್ಥಳಾಂತರಗೊಳಿಸುತ್ತಿರುವ ಸ್ಥಳದ ವಿವರ ಸ ್ಥಳಾಂತರಗೊಳ್ಳುವ ಹುದ್ದೆಗಳ ವಿವರ
1. ಪ ಶ ುಚಿಕಿತ್ಸಾಲಯ, ಗೋರ್ವಾಲೆ, ಮಂಡ್ಯ ತಾಲ್ಲೂಕು ಮತ್ತು ಜಿಲ್ಲೆ ಯತ್ತಗದಹಳ್ಳಿ, ಮಂಡ್ಯ ತಾಲ್ಲೂಕು ಮತ್ತು ಜಿಲ್ಲೆ ಪ ಶ ುವೈದ್ಯಾಧಿಕಾರಿ-1 ಪ ಶ ುವೈದ್ಯ ಪರೀಕ್ಷಕರು-1 ಗ್ರೂಪ್ ಡಿ –2
2. ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ, ಕ ುಂದಗೋಳ, ದ ಾರವಾಡ ಜಿಲ್ಲೆ ಯಗಟಿ, ಅರಕಲಗೂಡು ತಾಲ್ಲೂಕು, ಹಾಸನ ಜಿಲ್ಲೆ ಹಿರಿಯ ಪಶುವೈದ್ಯ ಪರೀಕ್ಷಕರು – 01 ಪ ಶ ುವೈದ್ಯ ಸಹಾಯಕರು – 01 ಗ್ರೂಪ್ ಡಿ -01
3. ಪ್ರಾಥಮಿಕ ಪ ಶ ುಚಿಕಿತ್ಸಾ ಕೇಂದ್ರ, ಗುತ್ತಲು (ಅರಕೇಶ್ವರ ನಗರ) ಮಂಡ್ಯ ತಾಲ್ಲೂಕು ಮತ್ತು ಜಿಲ್ಲೆ ನೆಲವಾಗಲು, ಹೊಸಕೋಟೆ ತಾಲ್ಲೂಕು, ಬ ಂಗಳೂರು ಗ್ರಾಮಾಂತರ ಜಿಲ್ಲೆ ೆ ಹಿರಿಯ ಪಶುವೈದ್ಯ ಪರೀಕ್ಷಕರು – 01 ಪ ಶ ುವೈದ್ಯ ಸಹಾಯಕರು – 01 ಗ್ರೂಪ್ ಡಿ -01
4. ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ, ದೊಡ್ಡಬುವಳ್ಳಿ, ವ ುಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ ಆಲೂರು, ವ ುದ್ದೂರು ತಾಲ್ಲೂಕು, ವ ುಂಡ್ಯ ಜಿಲ್ಲೆ ಹಿರಿಯ ಪಶುವೈದ್ಯ ಪರೀಕ್ಷಕರು – 01 ಪ ಶ ುವೈದ್ಯ ಸಹಾಯಕರು – 01 ಗ್ರೂಪ್ ಡಿ -01

ಮೇಲೆ ವಿವರಿಸಲಾದಂತೆ, ಪ್ರಸ್ತುತ ಹಾಲಿ ಸ್ಥಳದಲ್ಲಿಯಾವುದೇ ಕಾರ್ಯ ಚಟುವಟಿಕೆ ಇಲ್ಲದಿರುವ ಹಾಗೂ ಕಡಿಮೆ ಅಂತರದಲ್ಲಿರುವ ಪಶುಚಿಕಿತ್ಸಾಲಯಗಳನ್ನು ಹಾಗೂ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಪಶು ಕೇಂದ್ರಗಳ ಸಂಸ್ಥೆ ಹೆಚ್ಚು ಅವಶ್ಯವಿರುವ ಸ್ಥಳಗಳಿಗೆ ಹುದ್ದೆಗಳ ಸಮೇತ ಸ್ಥಳಾಂತರಿಸಲು ತೀರ್ಮಾನಿಸಿ, ಈ ಕೆಳಕಂಡ ಆದೇಶ.

ಸರ್ಕಾರಿ ಆದೇಶ ಸಂಖ್ಯೆ: ಪಸಂಮೀ 186 ಪಸಸೇ 2017, ಬೆಂಗಳೂರು, ದಿನಾಂಕ: 26.09.2017

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಈ ಕೆಳಗಿನ ತಖ್ತೆ:ಯಲ್ಲಿ ನೀಡಲಾಗಿರುವ ಪ್ರಸ್ತುತ ಹಾಲಿ ಸ್ಥಳದಲ್ಲಿ ಯಾವುದೇ ಕಾರ್ಯ ಚಟುವಟಿಕೆ ಇಲ್ಲದಿರುವ ಹಾಗೂ ಕಡಿಮೆ ಅಂತರದಲ್ಲಿರುವ ಪಶುಚಿಕಿತ್ಸಾಲಯಗಳನ್ನು ಹಾಗೂ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಅವುಗಳ ಹೆಸರಿನ ಎದುರಿಗೆ ತೋರಿಸಿರುವ ಹಾಗೂ ಪಶು ಕೇಂದ್ರಗಳ ಸಂಸ್ಥೆ ಹೆಚ್ಚು ಅವಶ್ಯವಿರುವ ಸ್ಥಳಗಳಿಗೆ ಈ ಕೆಳಕಂಡಂತೆ ಹುದ್ದೆಗಳ ಸಮೇತ

ಕ್ರ. ಸ ಂ. ಹಾಲಿ ಕಾರ್ಯ ನಿರ್ವಹಿಸುತ್ತಿರುವ ಪಶುಚಿಕಿತ್ಸಾಲಯ /ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳ ಸ್ಥಳದ ವಿವರ ಸ ್ಥಳಾಂತರಗೊಳಿಸುತ್ತಿರುವ ಸ್ಥಳದ ವಿವರ ಸ ್ಥಳಾಂತರಗೊಳ್ಳುವ ಹುದ್ದೆಗಳ ವಿವರ
1. ಪ ಶ ುಚಿಕಿತ್ಸಾಲಯ, ಗ ೂೕರ್ವಾಲೆ, ೆ ವ ುಂಡ್ಯ ತಾಲ್ಲೂಕು ಮತ್ತು ಜಿಲ್ಲೆ ಯತ್ತಗದಹಳ್ಳಿ, ಮಂಡ್ಯ ತಾಲ್ಲೂಕು ಮತ್ತು ಜಿಲ್ಲೆ ಪ ಶ ುವೈದ್ಯಾಧಿಕಾರಿ-1 ಪ ಶ ುವೈದ್ಯ ಪರೀಕ್ಷಕರು-1 ಗ್ರೂಪ್ ಡಿ – 2
2. ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ, ಕುಂದಗೋಳ, ದ ಾರವಾಡ ಜಿಲ್ಲೆ ಯಗಟಿ, ಅರಕಲಗೂಡು ತಾಲ್ಲೂಕು, ಹಾಸನ ಜಿಲ್ಲೆ ಹಿರಿಯ ಪಶುವೈದ್ಯ ಪರೀಕ್ಷಕರು – 01 ಪ ಶ ುವೈದ್ಯ ಸಹಾಯಕರು – 01 ಗ್ರೂಪ್ ಡಿ -01
3. ಪ್ರಾಥಮಿಕ ಪ ಶ ುಚಿಕಿತ್ಸಾ ಕೇಂದ್ರ, ಗ ುತ್ತಲು (ಅರಕೇಶ್ವರ ನಗರ) ಮಂಡ್ಯ ತಾಲ್ಲೂಕು ಮತ್ತು ಜಿಲ್ಲೆ ನೆಲವಾಗಲು, ಹೊಸಕೋಟೆ ತಾಲ್ಲೂಕು, ಬ ಂಗಳೂರು ಗ್ರಾಮಾಂತರ ಜಿಲ್ಲೆ ೆ ಹಿರಿಯ ಪಶುವೈದ್ಯ ಪರೀಕ್ಷಕರು – 01 ಪ ಶ ುವೈದ್ಯ ಸಹಾಯಕರು – 01 ಗ್ರೂಪ್ ಡಿ -01
4. ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ, ದೊಡ್ಡಬುವಳ್ಳಿ, ವ ುಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ ಆಲೂರು, ವ ುದ್ದೂರು ತಾಲ್ಲೂಕು, ವ ುಂಡ್ಯ ಜಿಲ್ಲೆ ಹಿರಿಯ ಪಶುವೈದ್ಯ ಪರೀಕ್ಷಕರು – 01 ಪ ಶ ುವೈದ್ಯ ಸಹಾಯಕರು – 01 ಗ್ರೂಪ್ ಡಿ -01
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ೧೨೯೯

PR. 354

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC. 100

ಎಂ. ಧನಂಜಯ

ಪೀಠಾಧಿಕಾರಿ-2

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ. (ಪಶುಸಂಗೋಪನೆ-ಎ)

ನಗರಾಭಿವೃದ್ಧಿ ಸಚಿವಾಲಯ

ವಿಷಯ : ಬೆಂಗಳೂರಿನಲ್ಲಿ ಬೈಸಿಕಲ್ ಬಳಕೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಕುರಿತು.

ಓದಲಾಗಿದೆ : 1. ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ: FD 451 Exp-9/2017, ದಿನಾಂಕ 25-07-2017.

2. ನಗರ ಭೂ ಸಾರಿಗೆ ನಿರ್ದೇಶನಾಲಯದ ಏಕ ಕಡತ ಸಂಖ್ಯೆ: DULT /81/ PBS Bengaluru - GEN/2016-17

ಪ್ರಸ್ತಾವನೆ :-

ಮೇಲೆ ಓದಲಾದ (2)ರ ನಗರ ಭೂ ಸಾರಿಗೆ ನಿರ್ದೇಶನಾಲಯದ ಏಕ ಕಡತದಲ್ಲಿ, ಬೆಂಗಳೂರು ನಗರದಲ್ಲಿ ಪ್ರತಿ ವರ್ಷವೂ ನೋಂದಾಯಿತ ಮೋಟಾರು ವಾಹನಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗುತ್ತಿದ್ದು, ಇದರ ಪರಿಣಾಮವಾಗಿ ಸಂಚಾರ ದಟ್ಟಣೆಯು ಹದಗೆಡುತ್ತಿದೆ. ನಮ್ಮ ಮೆಟ್ರೊ ಮತ್ತು ಉಪನಗರ ರೈಲು ವ್ಯವಸ್ಥೆ ಅನುಷ್ಠಾನದಿಂದಾಗಿ ಮುಖ್ಯವಾಗಿ ರಸ್ತೆಗಳಲ್ಲಿನ ದಟ್ಟಣೆ ನಿವಾರಣೆಗೊಳ್ಳುವ ಆಶಯವಿದೆ. ಮೆಟ್ರೊ ನಿಲ್ದಾಣಗಳಿಗೆ ಮತ್ತು ಇತರೆ ಸಾರ್ವಜನಿಕ ಸಾರಿಗೆ ಕ್ರಮಗಳಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಕೊನೆಯ ಮೈಲು ಸಂಪರ್ಕ ಹೊಂದಬೇಕಿರುವುದು ಸಮೂಹ ಸಾಗಣೆಯ ಯಶಸ್ಸಿಗೆ ನಿರ್ಣಾಯಕವಾಗಿರುತ್ತದೆ. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು, 2017-18ರ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ, ಸಾರ್ವಜನಿಕ ಬೈಸಿಕಲ್ ಬಳಕೆ (PBS) ವ್ಯವಸ್ಥೆಯನ್ನು ಬಾಗಶಃ ಬೆಂಗಳೂರಿನ ಆಯ್ದ ಸಮೂಹಗಳಲ್ಲಿ ಅನುಷ್ಠಾನಗೊಳಿಸಲು ಪ್ರಸ್ತಾವಿಸಿರುತ್ತದೆ. ಕರ್ನಾಟಕ ಸರ್ಕಾರವು 2017-18ನೇ ಸಾಲಿನ ಆಯವ್ಯಯದ ಪ್ಯಾರಾ ನಂ-320 ರಲ್ಲಿ ಬೆಂಗಳೂರು ನಗರದ ಆಯ್ದ ಕ್ಲಸ್ಟರಗಳಲ್ಲಿ ಪ್ರಾರಂಭಿಸಲು ಘೋಷಿಸಲಾದಂತೆ ನಗರ ಭೂ ಸಾರಿಗೆ ಇಲಾಖೆಯು ಬೆಂಗಳೂರು ಸಾರ್ವಜನಿಕ ಬೈಸಿಕಲ್ ಬಳಕೆ ಮೇಲಿನ ಬೇಡಿಕೆ ಬಗ್ಗೆ ಮೌಲ್ಯಮಾಪನ ಮಾಡಿದ್ದು, PBS ನ್ನು ಆಯೋಜಿಸಲು ಲಭ್ಯವಿರುವ ಮಾರ್ಗಸೂಚಿಯ ಆಧಾರದ ಮೇಲೆ ನಿರ್ದೇಶನಾಲಯವು ಬೆಂಗಳೂರು ನಗರದಲ್ಲಿ ಎರಡು ಸಮೂಹಗಳನ್ನು ನಿರೂಪಿಸಿದ್ದು, ಮೊದಲ ಹಂತದಲ್ಲಿ PBS ವ್ಯವಸ್ಥೆಯ ಅನುಷ್ಠಾನವನ್ನು ಈ ಸಮೂಹಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು. ಬೆಂಗಳೂರಿನಲ್ಲಿ ಸುಮಾರು 28 ಚದರ ಕಿ.ಮೀ ವಿಸ್ತೀರ್ಣವುಳ್ಳ ಎರಡು ಸಮೂಹಗಳನ್ನು ಗುರುತಿಸಿದ್ದು ಇವುಗಳಲ್ಲಿನ 345 ಡಾಕಿಂಗ್ ನಿಲುಗಡೆ ಸ್ಥಾನಗಳಲ್ಲಿ 6000 ಬೈಸಿಕಲ್‌ಗಳನ್ನು ತಾತ್ಕಾಲಿಕವಾಗಿ

ಸ ವ ುೂಹ ಸ ಂಖ್ಯೆ ಪ ್ರದೇಶ ವ್ಯಾಪ್ತಿಯ ಪ್ರದೇಶ ಚ ದ ರ ಕಿ.ಮೀ ಗಳಲ್ಲಿ ವಾರ್ಡ್‌ಗಳ ಸ ಂಖ್ಯೆ (ಭಾಗಶ:/ಪೂರ್ಣ) ಡಾಕಿಂಗ್ ನಿಲ್ದಾಣಗಳ ಸ ಂಖ್ಯೆ ಸ ೖಕಲ್‌ಗಳ ೆ ಸ ಂಖ್ಯೆ
1. ಎಂ.ಜಿ. ರಸ್ತೆ, ವಿಧಾನಸೌಧ, ಇಂದಿರಾನಗರ, ಬಾಣಸವಾಡಿ, ಹೆಚ್.ಆರ್. ಬಿ.ಆರ್ ಲೇಔಟ್, ಹೆಚ್.ಬಿ. ಆರ್ ಲೇಔಟ್, ಕಾಚರಕನಹಳ್ಳಿ ಮುಂತಾದವು. 18.25 17 181 3148
2. ಕೋರಮಂಗಲ, ಎಚ್.ಎಸ್.ಆರ್ ಲೇಔಟ್. 10.00 15 164 2852

ಡಾಕಿಂಗ್ ನಿಲುಗಡೆ ಸ್ಥಾನಗಳನ್ನು ಸುಮಾರು 300-500 ಮೀಟರ್ ಅಂತರದೊಳಗೆ ಸ್ಥಾಪಿಸಲಾಗುವುದು ಮತ್ತು ಈ ಡಾಕಿಂಗ್ ನಿಲುಗಡೆ ಸ್ಥಾನಗಳು ಪ್ರಮುಖ ಚಟುವಟಿಕೆ ತಾಣಗಳಲ್ಲಿ ಅಂದರೆ ಪ್ರಮುಖ ಔದ್ಯೋಗಿಕ ಕೇಂದ್ರಗಳು, ಸಾರಿಗೆ ನಿಲ್ದಾಣಗಳು, ಬಸ್ ಸಾರಿಗೆ ನಿಲ್ದಾಣ ಸಮುಚ್ಫಯಗಳು, ಉದ್ಯಾನವನಗಳು, ಹೆಚ್ಚಿನ ಸಾಂದ್ರತೆಯ ವಸತಿ ಸಮುಚ್ಫಯಗಳು, ವಾಣಿಜ್ಯ ಪ್ರದೇಶಗಳು ಮುಂತಾದ ಕಡೆಗಳಲ್ಲಿ ಇರಿಸಲಾಗುವುದು. ಪ್ರತಿಯೊಂದು ಪ್ರದೇಶದಲ್ಲಿಯೂ ಆಯಾಯ ಪ್ರದೇಶದ ಬೇಡಿಕೆ ಅಂದಾಜುಗನುಗುಣವಾಗಿ 12 ರಿಂದ 48 ಸೈಕಲ್‌ಗಳನ್ನು ಒದಗಿಸಲಾಗುವುದು. ನಿಯಂತ್ರಣ ಕೇಂದ್ರಗಳು ಮತ್ತು ನಿರ್ವಹಣಾ ಕೇಂದ್ರಗಳನ್ನು ಸ್ಥಾಪಿಸಿ ವ್ಯವಸ್ಥೆಯ ಕೇಂದ್ರೀಕೃತ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಮಾಡಲಾಗುವುದು. ಮರು ಹಂಚಿಕಾ ವಾಹನಗಳನ್ನು ಉಪಯೋಗಿಸಿಕೊಂಡು ಸೈಕಲ್‌ಗಳನ್ನು ಒಂದು ಡಾಕಿಂಗ್ ನಿಲುಗಡೆ ಸ್ತಾನದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಇರುವ ಸೈಕಲ್‌ಗಳನ್ನು ಬೇರೆ ಖಾಲಿ ಇರುವ ನಿಲುಗಡೆ ಸ್ಥಾನಗಳಿಗೆ ಸಾಗಿಸಲಾಗುವುದು ಈ ವ್ಯವಸ್ಥೆಗೆ ಸುಲಭ, ಸುರಕ್ಷಿತ ಹಾಗೂ ಸಮರ್ಥ ಕಾರ್ಯಚರಣೆ ಮತ್ತು ಮೇಲ್ವಿಚಾರಣೆ ಮಾಡುವ ಸಲುವಾಗಿ ಮಾಹಿತಿ ತಂತ್ರಜ್ಞಾನ ಸಕ್ರಿಯಗೊಳಿಸಲಾಗುವುದು. PBS ವ್ಯವಸ್ಥೆಯು ಯಶಸ್ವಿಯಾಗಲು ಸುರಕ್ಷಿತಾ ಸೈಕ್ಲಿಂಗ್ ಮೂಲ ಸೌಕರ್ಯ ದೊರಕಿಸಿಕೊಡುವುದಷ್ಟೇ ಅಲ್ಲದೆ, ಈ ವ್ಯವಸ್ಥೆಯಡಿ ಬರುವ ಸಮೂಹಗಳಲ್ಲಿ ಸೈಕ್ಲಿಂಗ್‌ಗಾಗಿ ಸುರಕ್ಷಿತಾ ಮಾರ್ಗಗಳನ್ನು ಗುರುತಿಸಿ ಸೃಷ್ಟಿಸುವುದು ಆಗಿರುತ್ತದೆ.

PBS ಯೋಜನೆಯ ಅನುಷ್ಠಾನಕ್ಕಾಗಿ ಸೊಸೈಟಿಯೊಂದನ್ನು ಸ್ಥಾಪಿಸಿ ತನ್ಮೂಲಕ ಇದರ ಕಾರ್ಯಚರಣೆಯ ಹೊಣೆಯನ್ನು ಸದರಿ ಸೊಸೈಟಿಗೆ ವಹಿಸಿಕೊಡಲು ಪ್ರಸ್ತಾವಿಸಲಾಗಿದೆ. ಭವಿಷ್ಯದಲ್ಲಿ ಹಂತ ಹಂತವಾಗಿ PBS ವ್ಯವಸ್ಥೆಯ ವಿಸ್ತರಣೆಯನ್ನು ಯೋಜಿಸಲು ಸದರಿ ಸೊಸೈಟಿ ನಗರ ಭೂ ಸಾರಿಗೆ ನಿರ್ದೇಶನಾಲಯದೊಂದಿಗೆ ಸಮಾಲೋಚಿಸಿ ಕ್ರಮ ವಹಿಸುವ ಹೊಣೆಗಾರಿಕೆ ಇರುತ್ತದೆ. ಮೋಟಾರುರಹಿತ ಸಾರಿಗೆ (ಸೈಕಲ್ ದಿನ, ತೆರೆದ ಬೀದಿ೧೩೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ಭಾಗ ೧ ಮುಂತಾದವು) ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಹಾಗೂ ಮೋಟಾರುರಹಿತ ಸಾರಿಗೆ ಉಪಕ್ರಮಗಳನ್ನು ಅನುಷ್ಠಾನಗೊಳಿಸುವ ಕಾರ್ಯ ಭಾರದ ಹೊಣೆಗಾರಿಕೆಯನ್ನು ಮತ್ತು ಇದರ ಜೊತೆಗೆ ಕರ್ನಾಟಕ ರಾಜ್ಯದಲ್ಲಿ ಬೇರೆಡೆ ಎಲ್ಲಿಯಾದರು PBS ಅನುಷ್ಠಾನಗೊಳಿಸುವ ಕಾರ್ಯವನ್ನು ಸೊಸೈಟಿ ನಿರ್ವಹಿಸುವುದು. ಸೊಸೈಟಿಯ ಆಡಳಿತವನ್ನು "ಗವರ್ನಿಂಗ್ ಕೌನ್ಸಿಲ್" (Governing Council) ಒಂದನ್ನು ರಚಿಸಿ ನಿರ್ವಹಿಸಲು ಪ್ರಸ್ತಾಪಿಸಿದೆ. ಈ ಗರ್ವನಿಂಗ್ ಕೌನ್ಸಿಲ್‌ನಲ್ಲಿ ಅಧ್ಯಕ್ಷರಾಗಿ ಅಪರ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಇವರು ಹಾಗೂ ನಗರ ಭೂ ಸಾರಿಗೆ ಇಲಾಖೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮೆಟ್ರೊ ರೈಲು ನಿಗಮ ಮತ್ತು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಇವುಗಳ ಮುಖ್ಯಸ್ಥರು ಪ್ರತಿನಿಧಿಸುವರು. ಸೊಸೈಟಿ ಕಾರ್ಯಚಟುವಟಿಕೆಗಳಿಗೆ ಕಾರ್ಯತಂತ್ರ ಮತ್ತು ಕಾರ್ಯಾಚರಣೆ ಮಾರ್ಗದರ್ಶನ ಒದಗಿಸಲು, ಆಯುಕ್ತರು, ನಗರ ಭೂ ಸಾರಿಗೆ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಹಾಗೂ ನಗರ ಭೂ ಸಾರಿಗೆ ಇಲಾಖೆ, ಬೆಂಗಳೂರು, ಮೆಟ್ರೋ ರೈಲು ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಳಿಂದ ಹಿರಿಯ ಬೋರ್ಡುಗಳು, ಸ್ಮಾರ್ಟ್ ಕಾರ್ಡ್, ಸೈಕಲ್ ಮೇಲೆ ಜಾಹೀರಾತುಗಳನ್ನು ಅನುಮತಿಸಲಾಗುವುದು. 5 ವರ್ಷಗಳ ಕಾರ್ಯಾಚರಣೆ ಅವಧಿಯಲ್ಲಿ ಈ ವ್ಯವಸ್ಥೆಯಡಿ `. 27.02 ಕೋಟಿಗಳ ಆದಾಯವನ್ನು ಅಂದಾಜಿಸಲಾಗಿರುತ್ತದೆ. ಆದ್ದರಿಂದ ಆಯವ್ಯಯದಿಂದ ಬಂಡವಾಳ ನಿಧಿಯನ್ನು ಒದಗಿಸಲು ಮತ್ತು ಬರುವ ಆದಾಯದಿಂದ ಕಾರ್ಯನಿರ್ವಹಣೆ ವೆಚ್ಚವನ್ನು ಭರಿಸಲು ಪ್ರಸ್ತಾವಿಸಲಾಗಿದೆ.

ಯೋಜನೆಯ ಬಂಡವಾಳ ವೆಚ್ಚವನ್ನು ಮೊದಲನೆ ಆರ್ಥಿಕ ವರ್ಷದಲ್ಲಿ (2017-18) ಸೊಸೈಟಿಗೆ ಒದಗಿಸಲಾಗುವ ಬಂಡವಾಳ ವೆಚ್ಚದ ಶೇ.25ರಷ್ಟು ಹಣದಿಂದ ಭರಿಸಲಾಗುವುದು ಮತ್ತು ಶೇ.25ರಷ್ಟು ಹಣವನ್ನು 2018-19ನೇ ಆರ್ಥಿಕ ವರ್ಷದಲ್ಲಿ ನಗರ ಭೂ ಸಾರಿಗೆ ಇಲಾಖೆ ಮೂಲಕ ನಗರ ಸಾರಿಗೆ ನಿಧಿಯಿಂದ (SUTF) ಯಿಂದ ಭರಿಸಲು ಹಾಗೂ ಇನ್ನುಳಿದ 50% ಬಂಡವಾಳ ವೆಚ್ಚವನ್ನು 2018-19ನೇ ಸಾಲಿನ ರಾಜ್ಯ ಸರ್ಕಾರದ ಆಯವ್ಯಯ ಹಂಚಿಕೆಯಿಂದ ಭರಿಸಲು ಪ್ರಸ್ತಾವಿಸಲಾಗಿದೆ.

ಮೇಲ್ಕಾಣಿಸಿದ ನಗರ ಭೂ ಸಾರಿಗೆ ಇಲಾಖೆಯ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರದ (ವ್ಯವಹಾರ ನಿರ್ವಹಣೆ Transaction of Business Rules) ನಿಯಮಗಳು 1977ರ ಒಂದನೆಯ ಷೆಡ್ಯೂಲ್‌ನ ಅಂಶ 28 ರಡಿ ಈ ಕೆಳಗೆ ತೋರಿಸಿರುವ ಅಂಶಗಳಿಗೆ ಸಚಿವ ಸಂಪುಟದ ಒಪ್ಪಿಗೆಯನ್ನು ಕೋರಲಾಗಿತ್ತು.

i. ಬೆಂಗಳೂರು ನಗರದ ಆಯ್ದ ಸಮೂಹಗಳಲ್ಲಿ, ಅಂದಾಜಿಸಿದ ಬಂಡವಾಳ ಮೊತ್ತ `.80.18 ಕೋಟಿಗಳ ವೆಚ್ಚದೊಂದಿಗೆ ಸಾರ್ವಜನಿಕ ಬೈಸಿಕಲ್ ಬಳಕೆ (PBS) ಹಂಚಿಕೆ ವ್ಯವಸ್ಥೆಯ ಅನುಷ್ಠಾನಕ್ಕಾಗಿ,

ii. ಬೆಂಗಳೂರಿನ ಆಯ್ದ ಸಮೂಹಗಳಾದ (Clusters) ಎಂ.ಜಿ. ರಸ್ತೆ, ವಿಧಾನಸೌಧ, ಇಂದಿರಾನಗರ, ಬಾಣಸವಾಡಿ, ಹೆಚ್ಆರ್‌ಬಿಆರ್ ಲೇಔಟ್, ಹೆಚ್‌ಬಿಆರ್ ಲೇಔಟ್, ಕಾಚರಕನಹಳ್ಳಿ, ಕೋರಮಂಗಲ, ಹೆಚ್ಎಸ್ಆರ್ ಲೇಔಟ್ ಮುಂತಾದವುಗಳಲ್ಲಿ ಮೊದಲ ಹಂತದಲ್ಲಿ ಸಾರ್ವಜನಿಕ ಬೈಸಿಕಲ್ (PBS) ಬಳಕೆಯ ಅನುಷ್ಠಾನಗೊಳಿಸಲು ಹಾಗೂ iii. ರಾಜ್ಯದಲ್ಲಿ ಯಂತ್ರರಹಿತ ಸಾರಿಗೆ ಹಾಗೂ ಸಾರ್ವಜನಿಕ ಸೈಕಲ್ ಬಳಕೆ ವ್ಯವಸ್ಥೆಯ ಅನುಷ್ಠಾನಕ್ಕಾಗಿ ಒಂದು ಸಹಕಾರ ಸಂಘವನ್ನು ಸೃಜನೆ ಮಾಡಲು ಅನುಮತಿ ಕೋರಿದೆ.

ಆಯುಕ್ತರು, ನಗರ ಭೂ ಸಾರಿಗೆ ನಿರ್ದೆಶನಾಲಯ ರವರ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ನಅಇ 237 ಪಿಆರ್‌ಜೆ 2017, ಬೆಂಗಳೂರು, ದಿನಾಂಕ:-24-10-2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಂಗಳೂರು ಸಾರ್ವಜನಿಕ ಬೈಸಿಕಲ್ ಬಳಕೆ ವ್ಯವಸ್ಥೆ (PBS) ಯೋಜನೆಯನ್ನು ಅನುಷ್ಠಾನಗೊಳಿಸಲು ಈ ಕೆಳಕಂಡ ಅಂಶಗಳಿಗೆ ಅನುಮೋದನೆ ನೀಡಿ ಆದೇಶಿಸಿದೆ.

1. ನಗರ ಭೂ ಸಾರಿಗೆ ಇಲಾಖೆಯು ಸಾರ್ವಜನಿಕ ಬೈಸಿಕಲ್ ಬಳಕೆಯ ವ್ಯವಸ್ಥೆಯನ್ನು ಒಟ್ಟು `.80.18 ಕೋಟಿ ರೂಪಾಯಿಗಳ ಅಂದಾಜು ಮೊತ್ತದ ಬಂಡವಾಳ ವೆಚ್ಚದಲ್ಲಿ ಸುರಕ್ಷಿತ ಸೈಕ್ಲಿಂಗ್ ಮೂಲ ಸೌಕರ್ಯ ಒದಗಿಸಿ ಗುರುತಿಸಲಾದ ಸಮೂಹಗಳಲ್ಲಿನ ಪ್ರದೇಶಗಳಾದ ಎಂ.ಜಿ. ರಸ್ತೆ, ವಿಧಾನಸೌಧ, ಇಂದಿರಾನಗರ, ಬಾಣಸವಾಡಿ, ಹೆಚ್ಆರ್‌ಬಿಆರ್ ಲೇಔಟ್, ಹೆಚ್‌ಬಿಆರ್ ಲೇಔಟ್, ಕಾಚರಕನಹಳ್ಳಿ, ಕೋರಮಂಗಲ, ಹೆಚ್ಎಸ್ಆರ್ ಲೇಔಟ್ ಗಳಲ್ಲಿ ಅನುಷ್ಠಾನಗೊಳಿಸತಕ್ಕದ್ದು.

2. ಮೇಲಿನ ಕಾಮಗಾರಿಗಳ ಬಂಡವಾಳ ವೆಚ್ಚದ ಮೊತ್ತ `..80.18 ಕೋಟಿ ರೂಪಾಯಿಗಳನ್ನು ಈ ಕೆಳಗೆ ತಿಳಿಸಲಾದ ಸಂಪನ್ಮೂಲದಿಂದ ಭರಿಸಲಾಗುವುದು.

ಅ) ಒಟ್ಟು ಬಂಡವಾಳ ವೆಚ್ಚದ ಶೇ.25ರಷ್ಟು ಹಣವನ್ನು ನಗರ ಭೂ ಸಾರಿಗೆ ಇಲಾಖೆಯ ಮೂಲಕ ನಗರ ಸಾರಿಗೆ ನಿಧಿಯಿಂದ 2017-18 ನೇ ಸಾಲಿನಲ್ಲಿ ಭರಿಸತಕ್ಕದ್ದು.

ಆ) ಇನ್ನೊಂದು ಬಂಡವಾಳ ವೆಚ್ಚದ ಶೇ.25ರಷ್ಟು ಹಣವನ್ನು ನಗರ ಭೂ ಸಾರಿಗೆ ಇಲಾಖೆಯ ಮೂಲಕ ನಗರ ಸಾರಿಗೆ ನಿಧಿಯಿಂದ 2018-19 ನೇ ಸಾಲಿನಲ್ಲಿ ಭರಿಸತಕ್ಕದ್ದು.

ಇ) ಉಳಿದ ಬಂಡವಾಳ ವೆಚ್ಚದ ಶೇ.50ರಷ್ಟು ಹಣವನ್ನು 2018-19ರ ಸಾಲಿನಲ್ಲಿ ರಾಜ್ಯದ ಆಯವ್ಯಯದಡಿ ಅನುದಾನವನ್ನು ಒದಗಿಸತಕ್ಕದ್ದು.

ಷರತ್ತುಗಳು :

1) ಬೆಂಗಳೂರು ಸಾರ್ವಜನಿಕ ಬೈಸಿಕಲ್ ಬಳಕೆ ವ್ಯವಸ್ಥೆಯ ಯೋಜನೆಯ ಒಟ್ಟಾರೆ ಮೇಲುಸ್ತುವಾರಿ ಮತ್ತು ಮೇಲ್ವಿಚಾರಣೆ ಜವಾಬ್ದಾರಿಯನ್ನು ನೋಡಲ್ ಸಂಸ್ಥೆಯಾಗಿ ನಗರ ಭೂ ಸಾರಿಗೆ ನಿರ್ದೇಶನಾಲಯವು ನಿರ್ವಹಿಸತಕ್ಕದ್ದು.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ೧೩೦೧

2) ಬೆಂಗಳೂರು ಸಾರ್ವಜನಿಕ ಬೈಸಿಕಲ್ ಬಳಕೆ ವ್ಯವಸ್ಥೆಯ ಯೋಜನೆಯನ್ನು ಅನುಷ್ಠಾನಗೊಳಿಸಲು ಸೊಸೈಟಿಯೊಂದನ್ನು ಸ್ಥಾಪಿಸಿ ಇದಕ್ಕೆ ಗವರ್ನಿಂಗ್ ಕೌನ್ಸಿಲ್ ಮತ್ತು ಎಕ್ಸಿಗೀಟೀವ್ ಕೌನ್ಸಿಲ್ ಒಳಗೊಂಡಿರುವಂತೆ ಅಗತ್ಯ ಚೌಕಟ್ಟನ್ನು ರಚಿಸತಕ್ಕದ್ದು. ಈ ಗರ್ವನಿಂಗ್ ಕೌನ್ಸಿಲ್‌ನಲ್ಲಿ ಅಧ್ಯಕ್ಷರಾಗಿ ಅಪರ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಇವರು ಹಾಗೂ ನಗರ ಭೂ ಸಾರಿಗೆ ಇಲಾಖೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮೆಟ್ರೊ ರೈಲು ನಿಗಮ ಮತ್ತು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಇವುಗಳ ಮುಖ್ಯಸ್ಥರು ಪ್ರತಿನಿಧಿಸುವರು.

ಸೊಸೈಟಿ ಕಾರ್ಯಚಟುವಟಿಕೆಗಳಿಗೆ ಕಾರ್ಯತಂತ್ರ ಮತ್ತು ಕಾರ್ಯಾಚರಣೆ ಮಾರ್ಗದರ್ಶನ ಒದಗಿಸಲು, ಆಯುಕ್ತರು, ನಗರ ಭೂ ಸಾರಿಗೆ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಹಾಗೂ ನಗರ ಭೂ ಸಾರಿಗೆ ಇಲಾಖೆ, ಬೆಂಗಳೂರು, ಮೆಟ್ರೋ ರೈಲು ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಳಿಂದ ಹಿರಿಯ ಅಧಿಕಾರಿಗಳಿರುವ ಎಕ್ಸಿಗೀಟೀವ್ ಕೌನ್ಸಿಲ್‌ವೊಂದನ್ನು ರಚಿಸುವುದು. ಸೊಸೈಟಿಯ ಕಾರ್ಯನಿರ್ವಹಣೆಗಾಗಿ ಅಗತ್ಯ ಸಿಬ್ಬಂದಿ ಹುದ್ದೆಗಳನ್ನು ಹೊಂದಿರತಕ್ಕದ್ದು. ನಗರ ಭೂ ಸಾರಿಗೆ ಇಲಾಖೆಯು ಸೊಸೈಟಿಯನ್ನು ಸ್ಥಾಪಿಸಲು ಅಗತ್ಯ ಉಪ ಕ್ರಮಗಳನ್ನು ಕೈಗೊಳ್ಳತಕ್ಕದ್ದು.

3) ಸದರಿ ಸೊಸೈಟಿಯು ಬೆಂಗಳೂರು ಸಾರ್ವಜನಿಕ ಬೈಸಿಕಲ್ ಬಳಕೆ ವ್ಯವಸ್ಥೆಯ ಯೋಜನೆ ಅನುಷ್ಠಾನಗೊಳಿಸುವುದರ ಜೊತೆಗೆ ಮೋಟಾರುರಹಿತ ಸಾರಿಗೆಗಾಗಿ ಸುರಕ್ಷಿತ ಸೈಕಲ್ ಮಾರ್ಗಗಳನ್ನು ಸೃಷ್ಠಿಸುವುದು, ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಚಟುವಟಿಕೆಗಳನ್ನು ಬೆಂಗಳೂರು ಸಾರ್ವಜನಿಕ ಬೈಸಿಕಲ್ ಬಳಕೆ ವ್ಯವಸ್ಥೆ ಪೂರಕವಾಗಿ ಕೈಗೊಳ್ಳಲು ಹಾಗೂ ಇದರೊಂದಿಗೆ ಕರ್ನಾಟಕ ರಾಜ್ಯದಲ್ಲಿ ಬೇರೆಡೆ ಎಲ್ಲಿಯಾದರು ಇಂತಹದೆ ಕಾರ್ಯವನ್ನು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಮತ್ತು ನಗರ ಭೂ ಸಾರಿಗೆ ಇಲಾಖೆಯೊಂದಿಗೆ ಸಮನ್ವಯಿಸುವ ಕಾರ್ಯವನ್ನು ಸೊಸೈಟಿ ನಿರ್ವಹಿಸುವುದು.

4) ಡಾಕಿಂಗ್ ನಿಲ್ದಾಣಗಳ ಅನುಷ್ಠಾನಕ್ಕಾಗಿ ಬಳಸಲು ಗುರುತಿಲ್ಪಪಟ್ಟಿರುವ ಭೂಮಿಯನ್ನು ಭೂ ಮಾಲೀಕತ್ವ ಹೊಂದಿರುವ ಸಂಬಂಧಪಟ್ಟ ಸಂಸ್ಥೆಗಳು ಯಾವುದೇ ವೆಚ್ಚವಿಲ್ಲದೇ ಸೊಸೈಟಿಯ ಸುಪರ್ಧಿಗೆ ನೀಡತಕ್ಕದ್ದು ಇದರಿಂದಾಗಿ ವ್ಯವಸ್ಥೆಯನ್ನು ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ಅನುಷ್ಠಾನ ಗೊಳಿಸಬಹುದಾಗಿದೆ. ಈ ಬಗ್ಗೆ ಸೊಸೈಟಿಯು ಸಂಬಂಧಪಟ್ಟ ಸಂಸ್ಥೆಯೊಂದಿಗೆ ಒಡಂಬಡಿಕೆಗೆ (MOU) ಬರತಕ್ಕದ್ದು.

5) ಸೊಸೈಟಿಯೊಂದನ್ನು ಸ್ಥಾಪಿಸುವ ತನಕ, ಬೆಂಗಳೂರು ಸಾರ್ವಜನಿಕ ಬೈಸಿಕಲ್ ಬಳಕೆ ವ್ಯವಸ್ಥೆ ಅನುಷ್ಠಾನಗೊಳಿಸುವ ಕಾರ್ಯಚಟುವಟಿಕೆಗಳಾದ ಕಾಮಗಾರಿಗಳ ಸಂರಚನೆ ಅಂತಿಮಗೊಳಿಸುವುದು, ಸುರಕ್ಷಿತಾ ಸೈಕಲ್ ಮಾರ್ಗಗಳು, ಯೋಜನಾ ಮೇಲ್ವಿಚಾರಣಾ ಸಮಾಲೋಚಕರನ್ನು ನೇಮಕಮಾಡಿಕೊಳ್ಳಲು ಮತ್ತು ಮೂರನೇ ವ್ಯಕ್ತಿಯ ಖಾಸಗಿ ಆಪರೇಟ್‌ರೊಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಕಾರ್ಯವನ್ನು ನಗರ ಭೂ ಸಾರಿಗೆ ಇಲಾಖೆಯು ನಿರ್ವಹಿಸತಕ್ಕದ್ದು.

6) ಯೋಜನೆಯ ಅನುಷ್ಠಾನಕ್ಕೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಅಗತ್ಯ ಒಡಂಬಡಿಕೆ ಮಾಡಿಕೊಳ್ಳಲು ಹಾಗೂ ಇತ್ಯಾಧಿ ಅನುಸರಣಾ ಕ್ರಮಗಳನ್ನು ನಗರ ಭೂ ಸಾರಿಗೆ ನಿರ್ದೇಶನಾಲಯ ಕೈಗೊಳ್ಳತಕ್ಕದ್ದು.

7) ಅಗತ್ಯವಿರುವಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999 ಮತ್ತು ನಿಯಮಗಳು 2000ನ್ನು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.

PR. 355

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC. 50

ಲಲಿತಾಬಾಯಿ

ಸರ್ಕಾರದ ಅಧೀನ ಕಾರ್ಯದರ್ಶಿ

ನಗರಾಭಿವೃದ್ಧಿ ಇಲಾಖೆ. (ಯೋಮೇಕೋ)

ಸಹಕಾರ ಸಚಿವಾಲಯ

ವಿಷಯ : 2016-17ನೇ ಸಾಲಿನಲ್ಲಿ ಕೃಷಿ ಸಾಲಗಳ ಮೇಲಿನ ಬಡ್ಡಿ ರಿಯಾಯಿತಿ ಯೋಜನೆಯಡಿಯಲ್ಲಿ ಫ್ಯಾಕ್ಸ್ ಮತ್ತು ಡಿಸಿಸಿ ಬ್ಯಾಂಕಿನ ಮೂಲಕ ನೀಡುವ ಮಧ್ಯಮಾವಧಿ ಕೃಷಿ ಸಾಲಗಳಿಗೆ ಬಡ್ಡಿ ಸಹಾಯಧನ ದರ ನಿಗದಿಪಡಿಸುವ ಕುರಿತು ಆದೇಶ.

ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ:ಸಿಒ 244 ಸಿಎಲ್ಎಸ್ 2016, ದಿನಾಂಕ:16.05.2016.

2) ಸರ್ಕಾರದ ಆದೇಶ ಸಂಖ್ಯೆ:ಸಿಒ 578 ಸಿಎಲ್ಎಸ್ 2016, ದಿನಾಂಕ:25.08.2016. ಹಾಗೂ ತಿದ್ದುಪಡಿ ಆದೇಶ ದಿ:07.09.2016

3) ಸಹಕಾರ ಸಂಘಗಳ ನಿಬಂಧಕರ ಪತ್ರ ಸಂಖ್ಯೆ:ಸಿಆರ್‌ಡಿ/ ಸಿಎಬಿ-1/03/2017-18, ದಿನಾಂಕ : 15.09.2017.

ಪ್ರಸ್ತಾವನೆ :

ಮೇಲೆ (1) ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ ರಾಜ್ಯದ ರೈತರಿಗೆ ಪತ್ತಿನ ಸಹಕಾರಿ ಸಂಸ್ಥೆಗಳು ಶೇಕಡಾ 3 ರ ಬಡ್ಡಿ ದರದಲ್ಲಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳನ್ನು ನೀಡುವ ಯೋಜನೆಯನ್ನು 2016-17ನೇ ಸಾಲಿಗೆ ಮುಂದುವರೆಸಿ ಆದೇಶ ಹೊರಡಿಸಲಾಗಿರುತ್ತದೆ.

೧೩೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ಭಾಗ ೧

ಮೇಲೆ (2) ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ 2015-16 ನೇ ಸಾಲಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಡಿಸಿಸಿ ಬ್ಯಾಂಕ್‌ಗಳು ರೈತರಿಗೆ ವಿತರಿಸಿದ ಮಧ್ಯಮಾವಧಿ ಕೃಷಿ ಸಾಲಗಳಿಗೆ ಕ್ರಮವಾಗಿ ಶೇ.9.00 ಮತ್ತು ಶೇ.8.00 ದರದಲ್ಲಿ ಬಡ್ಡಿ ಸಹಾಯಧನವನ್ನು ನಿಗದಿಪಡಿಸಲಾಗಿರುತ್ತದೆ.

ಮೇಲೆ (3) ರಲ್ಲಿ ಓದಲಾದ ದಿನಾಂಕ:15.09.2017 ರ ಪತ್ರದಲ್ಲಿ ಸಹಕಾರ ಸಂಘಗಳ ನಿಬಂಧಕರು 2016-17 ನೇ ಸಾಲಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳು ರೈತರಿಗೆ ವಿತರಿಸಲಾದ ಮಧ್ಯಮಾವಧಿ ಕೃಷಿ ಸಾಲಗಳಿಗೆ ಕ್ರಮವಾಗಿ ಶೇ.9.35 ಹಾಗೂ ಶೇ.8.25 ರ ದರದಲ್ಲಿ ಬಡ್ಡಿ ಸಹಾಯಧನ ನಿಗದಿಪಡಿಸಿ ಮತ್ತು ರೈತರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ವಸೂಲಿ ಮಾಡಿದ ಶೇ.3 ರ ಬಡ್ಡಿದರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ತಮ್ಮ ಮಾರ್ಜಿನ್ ಆಗಿ ಶೇ.2.50ನ್ನು ಉಳಿಸಿಕೊಂಡು ಶೇ.0.50 ಮಾರ್ಜಿನ್‌ನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಿಗೆ ವರ್ಗಾಯಿಸಿ ಆದೇಶ ಹೊರಡಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ ಕೆಳಕಂಡ ಆದೇಶವನ್ನು ಹೊರಡಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ : ಸಿಒ 390 ಸಿಎಲ್ಎಸ್ 2017, ಬೆಂಗಳೂರು, ದಿನಾಂಕ : 16.10.2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2016-17ನೇ ಸಾಲಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ರೈತರಿಗೆ ವಿತರಿಸಿದ ಮಧ್ಯಮಾವಧಿ ಸಾಲಗಳಿಗೆ ಕ್ರಮವಾಗಿ ಶೇ.8.10 ಮತ್ತು ಶೇ.7.00 ದರದಲ್ಲಿ ಬಡ್ಡಿ ಸಹಾಯಧನವನ್ನು ನಿಗಧಿಪಡಿಸಿ ಆದೇಶಿಸಲಾಗಿದೆ.

ರೈತರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ವಸೂಲಿ ಮಾಡಿದ ಶೇ.3ರ ಬಡ್ಡಿದರವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ಕ್ರಮವಾಗಿ ಶೇ.2.50 : 0.50 ಅನುಪಾತದಲ್ಲಿ ಮಾರ್ಜಿನ್ ಮೊತ್ತವನ್ನು ನಿಗಧಿಪಡಿಸಿ ಆದೇಶಿಸಲಾಗಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 237 ವೆಚ್ಚ-2 2017 ದಿ:09.10.2017ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

PR. 358

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC. 100

ಡಿ. ಧನಂಜಯ

ಸರ್ಕಾರದ ಅಧೀನ ಕಾರ್ಯದರ್ಶಿ-3, (ಪ್ರ)

ಸಹಕಾರ ಇಲಾಖೆ.

ಕಂದಾಯ ಸಚಿವಾಲಯ

ವಿಷಯ : ಶ್ರೀ ಗಂಗಹನುಮಯ್ಯ, ನಿವೃತ್ತ ಉಪನೋಂದಣಾಧಿಕಾರಿ ಇವರ ವಿರುದ್ಧದ ಇಲಾಖಾ ವಿಚಾರಣೆ ಕುರಿತು.

ಓದಲಾಗಿದೆ :- 1) ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ವರದಿ: ಕಂಪ್ಲೇಂಟ್/ ಉಪಲೋಕ್/ಬಿಸಿಡಿ-404/04/ಎಆರ್ಇ-4 ದಿನಾಂಕ: 07-01-2008.

2) ಸರ್ಕಾರದ ಆದೇಶ ಸಂಖ್ಯೆ: ಕಂಇ 5 ಮುನೋಸೇ(2) 2008 ದಿನಾಂಕ: 26-03-2008.

3) ಅಪರ ನಿಬಂಧಕರು, ವಿಚಾರಣೆಗಳು-3, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ವಿಚಾರಣಾ ವರದಿ ವರದಿ LOK/ARE-3/ENQ-16/2008 ದಿನಾಂಕ: 13-12-2013.

4) ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಶಿಫಾರಸ್ಸು:

5) ಸರ್ಕಾರದ ಪತ್ರ ಸಂಖ್ಯೆ: ಕಂಇ 21 ಮುನೋಸೇ(2) 2014 ದಿನಾಂಕ: 13-06-2014

6) ಮಾನ್ಯ ಉಪ ಲೋಕಾಯುಕ್ತರು-1, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಶಿಫಾರಸ್ಸು:

7) ಕಾರಣ ಕೇಳುವ ನೊಟೀಸ್: ಕಂಇ 21 ಮುನೋಸೇ(2) 2014 ದಿನಾಂಕ:10-10-2014.

8) ಶ್ರೀ ಗಂಗಹನುಮಯ್ಯ, ನಿವೃತ್ತ ಉಪನೋಂದಣಾಧಿಕಾರಿ ಇವರ ಲಿಖಿತ ಸಮಜಾಯಿಷಿ ದಿನಾಂಕ: 05-01-2015.

9) ಸರ್ಕಾರದ ಪತ್ರ ಸಂಖ್ಯೆ: ಕಂಇ 5 ಮುನೋಸೇ(2) 2017 ದಿನಾಂಕ: 11-07-2017.

10) ಅಪರ ನಿಬಂಧಕರು ವಿಚಾರಣೆಗಳು-3, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ವಿಚಾರಣಾ ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ದಿನಾಂಕ: 07-01-2008ರ ವರದಿಯಲ್ಲಿ ಶ್ರೀ ಗಂಗಹನುಮಯ್ಯ, ನಿವೃತ್ತ ಉಪನೋಂದಣಾಧಿಕಾರಿ, ಯಲಹಂಕ ಹಾಲಿ ನೆಲಮಂಗಲ ಇವರ ವಿರುದ್ಧ ಶ್ರೀ ಸೈಯದ್ ಮುಸಿಬೂರ್ ರೆಹಮಾನ್ ಮತ್ತಿತರ 7 ಜನರು ಹಾಜರುಪಡಿಸಿದ ಕರಾರುಪತ್ರಗಳನ್ನು 7 ವರ್ಷಗಳ ಕಾಲ ಇತ್ಯರ್ಥಗೊಳಿಸದೇ ಹಾಗೆ ಇಟ್ಟುಕೊಂಡಿದ್ದಾರೆಂದು ಹಾಗೂ ಯಾವುದೇ ದಾಖಲಾತಿಗಳನ್ನು ನೋಂದಣಿಗಾಗಿ ಹಾಜರು ಪಡಿಸಿದ ನಂತರ ಯುಕ್ತ ಅವಧಿಯೊಳಗೆ ನೋಂದಾಯಿಸಬೇಕಾಗಿದೆ ಅಥವಾ ತಿರಸ್ಕರಿಸಬೇಕಾಗಿದೆ.

ಆ ರೀತಿ ಮಾಡದೇ 7 ವರ್ಷಗಳ ನಂತರ ನೋಂದಣಿ ಮಾಡಿದ್ದು, ಆ ರೀತಿ ವಿಳಂಬ ಮಾಡಿ ತಮ್ಮ ಅಧಿಕಾರಿ ದುರುಪಯೋಗ ಮಾಡಿ ತನ್ಮೂಲಕ ತನ್ನ ಕರ್ತವ್ಯದಲ್ಲಿ ಬೇಜವಾಬ್ದಾರಿ ಮತ್ತು ನಿರ್ಲಕ್ಷತೆ ತೋರಿಸಿ ದುರ್ನಡತೆ ಎಸಗಿದ್ದಾರೆ. ಜೊತೆಗೆ ಈ ಕರಾರನ್ನು ನೋಂದಾಯಿಸಿರುವ ಘೋಟೋಗಳನ್ನುಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ೧೩೦೩ ನೋಂದಣಿ ಕಾಯ್ದೆ ಅಡಿ ಕಡ್ಡಾಯವಾಗಿ ಲಗತ್ತಿಸಬೇಕಾಗಿದ್ದರೂ, ಘೋಟೋಗಳನ್ನು ಲಗತ್ತಿಸಲು ಯಾವುದೇ ಕ್ರಮ ತೆಗೆದುಕೊಳ್ಳದೇ, ದಾಖಲೆಗಳನ್ನು ನೋಂದಾಯಿಸಿ ನೋಂದಣಿ ಕಾಯ್ದೆಯ ನಿಯಮಗಳನ್ನು ಉರ್ಲ್ಲಂಘಿಸಿ ಕರ್ತವ್ಯ ಲೋಪ ಎಸಗಿರುತ್ತಾರೆ. ಎಂಬುದಾಗಿ ದೂರನ್ನು ಸಲ್ಲಿಸಿದ್ದು, ಸದರಿ ದೂರಿನನ್ವಯ ತನಿಖೆ ನಡೆಸಲಾಗಿ ಸದರಿ ನೌಕರರು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ, ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 14(ಎ)ರಡಿ ಪ್ರಕರಣದ ಕುರಿತು ವಿಚಾರಣೆಗಾಗಿ ಮೇಲೆ ಓದಲಾದ ಕ್ರಮ ಸಂಖ್ಯೆ (2)ರಲ್ಲಿ ಶ್ರೀ ಗಂಗಹನುಮಯ್ಯ, ನಿವೃತ್ತ ಉಪನೋಂದಣಾಧಿಕಾರಿ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಕರ್ನಾಟಕ ನಾಗರೀಕ ಸೇವಾ (ಸಿಸಿಎ) ನಿಯಮಾವಳಿ 1957ರ ನಿಯಮ 14(ಎ)ರನ್ವಯ ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸಿ ಆದೇಶಿಸಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (3)ರಲ್ಲಿ ಅಪರ ನಿಬಂಧಕರು, ವಿಚಾರಣೆಗಳು-3, ಮಾನ್ಯ ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ಪ್ರಕರಣಕ್ಕೆ ಸಂಬಂಧಿಸಿದಂತೆ, ದಿನಾಂಕ: 31-12-2013 ರಲ್ಲಿ ವಿಚಾರಣಾ ವರದಿಯನ್ನು ಮಾನ್ಯ ಉಪ ಲೋಕಾಯುಕ್ತರಿಗೆ ಸಲ್ಲಿಸಿದ್ದು, ಸದರಿ ವರದಿಯಲ್ಲಿ ಆಪಾದಿತ ನೌಕರರಾದ ಶ್ರೀ ಗಂಗಹನುಮಯ್ಯ, ನಿವೃತ್ತ ಉಪನೋಂದಣಾಧಿಕಾರಿ ಇವರ ವಿರುದ್ಧದ ಆರೋಪವು ರುಜುವಾತಾಗಿರುವುದಾಗಿ ವರದಿ ನೀಡಿದ್ದು, ಸದರಿ ವರದಿಯ ಆಧಾರದ ಮೇಲೆ ಆಪಾದಿತರಿಗೆ ಕರ್ನಾಟಕ ನಾಗರೀಕ ಸೇವಾ (ಸಿಸಿಎ) ನಿಯಮಾವಳಿಗಳ ನಿಯಮ 8(iii)ರ ಪ್ರಕಾರ ಐದು (5) ವಾರ್ಷಿಕ ವೇತನ ಬಡ್ತಿಯನ್ನು ಸಂಚಿತ ಪರಿಣಾಮ ಬೀರುವಂತೆ ತಡೆಹಿಡಿಯುವ ದಂಡನೆಯನ್ನು ವಿಧಿಸುವಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (4)ರ ದಿನಾಂಕ: 03-05-2014ರಲ್ಲಿ ಮಾನ್ಯ ಉಪಲೋಕಾಯುಕ್ತರು ಶಿಫಾರಸ್ಸು ಮಾಡಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (5)ರ ಸರ್ಕಾರದ ದಿನಾಂಕ: 13-06-2014ರ ಪತ್ರದಲ್ಲಿ ಶ್ರೀ ಗಂಗಹನುಮಯ್ಯ, ನಿವೃತ್ತ ಉಪನೋಂದಣಾಧಿಕಾರಿ ಪ್ರಸ್ತುತ ನಿವೃತ್ತ ಅವರ ವಿರುದ್ಧದ ಪ್ರಕರಣದಲ್ಲಿ ನೀಡಿರುವ ವರದಿಯಲ್ಲಿ ಸದರಿಯವರಿಗೆ 5 ವಾರ್ಷಿಕ ವೇತನ ಬಡ್ತಿಗಳನ್ನು ಸಂಚಿತ ಪರಿಣಾಮ ಬೀರುವಂತೆ ತಡೆಹಿಡಿಯುವಂತೆ ತಮ್ಮ ಶಿಫಾರಸ್ಸಿನಲ್ಲಿ ತಿಳಿಸಲಾಗಿರುತ್ತದೆ. ಪ್ರಸ್ತುತ ಶ್ರೀ ಗಂಗಹನುಮಯ್ಯ, ಉಪ ನೋಂದಣಾಧಿಕಾರಿ ಇವರು ದಿನಾಂಕ: 30-06- 2009ರಂದು ವಯೋನಿವೃತ್ತಿ ಹೊಂದಿರುವುದರಿಂದ ಸದರಿಯವರಿಗೆ ಮಾನ್ಯ ಉಪಲೋಕಾಯುಕ್ತರ ಶಿಫಾರಸ್ಸಿನಂತೆ ಅವರ 5 ವಾರ್ಷಿಕ ವೇತನ ಬಡ್ತಿಗಳನ್ನು ಸಂಚಿತ ಪರಿಣಾಮ ಬೀರುವಂತೆ ತಡೆಹಿಡಿಯಲು ಅವಕಾಶವಿರುವುದಿಲ್ಲವಾದುದರಿಂದ ಅವರ ವಿರುದ್ಧ ಶಿಫಾರಸ್ಸು ಮಾಡಿರುವ ದಂಡನೆಯ ಸ್ವರೂಪವನ್ನು ಮಾರ್ಪಡಿಸಿ ಕಳುಹಿಸಿಕೊಡುವಂತೆ ಕೋರಲಾಗಿ, ಮಾನ್ಯ ಉಪ ಲೋಕಾಯುಕ್ತರು-1 ಇವರು ಆರೋಪಿತ ನೌಕರರು ನಿವೃತ್ತರಾಗಿವುದರಿಂದ ಕೆ.ಸಿ.ಎಸ್.ಆರ್ ನಿಯಮ 241 (1)(ಎ)ರಡಿಯಲ್ಲಿನ ಅವಕಾಶದಂತೆ ಆರೋಪಿತರ ನಿವೃತ್ತ ವೇತನದಿಂದ ಶೇ.5% ರಷ್ಟು ದಂಡನೆಯಾಗಿ ಶಾಶ್ವತವಾಗಿ ತಡೆಹಿಡಿಯುವ ದಂಡನೆಯನ್ನು ವಿಧಿಸುವಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (6)ರ ದಿನಾಂಕ: 14-08-2014ರಲ್ಲಿ ಮಾನ್ಯ ಉಪಲೋಕಾಯುಕ್ತರು ಶಿಫಾರಸ್ಸು ಮಾಡಿರುತ್ತಾರೆ. ಮಾನ್ಯ ಉಪ ಲೋಕಾಯುಕ್ತರು ಶಿಫಾರಸ್ಸು ಮಾಡಿರುವಂತೆ ಆರೋಪಿತರಿಗೆ ದಂಡನೆಯನ್ನು ವಿಧಿಸಲು ಅವಕಾಶವಿರುವುದಿಲ್ಲವಾದ್ದರಿಂದ, ಮೇಲೆ ಓದಲಾದ ಕ್ರಮ ಸಂಖ್ಯೆ (9)ರ ದಿನಾಂಕ: 11-07-2017ರ ಸರ್ಕಾರದ ಪತ್ರದಲ್ಲಿ ಅಪರ ನಿಬಂಧಕರು ವಿಚಾರಣೆಗಳು-3, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರನ್ನು ಕೋರಲಾಗಿ, ಮೇಲೆ ಓದಲಾದ ಕ್ರಮ ಸಂಖ್ಯೆ (10)ರ ದಿನಾಂಕ: 14-07-2017ರ ಅರೆ ಸರ್ಕಾರಿ ಪತ್ರದಲ್ಲಿ ಅಪರ ನಿಬಂಧಕರು ವಿಚಾರಣೆಗಳು-3, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ಕೆ.ಸಿ.ಎಸ್.ಆರ್ ನಿಯಮ 241 (1)(ಎ)ರ ಬದಲಾಗಿ ಕೆ.ಸಿ.ಎಸ್.ಆರ್ ನಿಯಮ 214 (1)(ಎ)ರಡಿಯಲ್ಲಿ ದಂಡನೆಯನ್ನು ವಿಧಿಸುವಂತೆ ಸೂಚಿಸಿರುತ್ತಾರೆ.

ಅಪರ ನಿಬಂಧಕರು, ವಿಚಾರಣೆಗಳು-3, ಮಾನ್ಯ ಕರ್ನಾಟಕ ಲೋಕಾಯುಕ್ತ ಇವರ ವಿಚಾರಣಾ ವರದಿ ಹಾಗೂ ಮಾನ್ಯ ಉಪಲೋಕಾಯುಕ್ತರು-1 ಇವರ ಶಿಫಾರಸ್ಸಿನ ಹಿನ್ನೆಲೆಯಲ್ಲಿ, ಏಕೆ? ಕ್ರಮ ಕೈಗೊಳ್ಳಬಾರದು ಎಂದು ಸಮಜಾಯಿಷಿ ಕೇಳಿ ಶ್ರೀ ಗಂಗಹನುಮಯ್ಯ, ನಿವೃತ್ತ ಉಪನೋಂದಣಾಧಿಕಾರಿ ಇವರಿಗೆ ದಿನಾಂಕ: 10-10-2014ರಲ್ಲಿ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಶ್ರೀ ಗಂಗಹನುಮಯ್ಯ, ನಿವೃತ್ತ ಉಪನೋಂದಣಾಧಿಕಾರಿ ಇವರು ಮೇಲೆ ಓದಲಾದ ಕ್ರಮ ಸಂಖ್ಯೆ (8)ರ ದಿನಾಂಕ: 05-01-2015ರಲ್ಲಿ ಸಮಜಾಯಿಷಿಯನ್ನು ಸಲ್ಲಿಸಿರುತ್ತಾರೆ.

ಈ ಪ್ರಕರಣವು ಫಿರ್ಯಾದುದಾರರಾದ ಶ್ರೀ ಸೈಯದ್ ಮುಹೀಬೂರ್ ರೆಹಮಾನ್ ಮತ್ತಿತರ ಏಳು ಜನರು ನೀಡಿದ ದೂರಿನ ಆಧಾರದ ಮೇಲೆ ವಿಚಾರಣೆ ಪ್ರಾರಂಭವಾಗಿದ್ದು, ವಿಚಾರಣೆಯಲ್ಲಿ ಸದರಿ ನೌಕರರು ದುರ್ನಡತೆ ಎಸಗಿರುವ ಆರೋಪವು ಧೃಡಪಟ್ಟಿರುವುದರಿಂದ, ಹಾಗೂ ಆಪಾದಿತ ನೌಕರರ ಸಮಜಾಯಿಷಿಯಲ್ಲಿ ಪರಿಗಣನಾರ್ಹವಾದ ಅಂಶಗಳು ಕಂಡುಬಂದಿರುವುದಿಲ್ಲವಾದ್ದರಿಂದ, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಾಮಾವಳಿಗಳು 1966ರ ನಿಯಮಗಳನ್ನು ಉಲ್ಲಂಘಿಸಿ, ದುರ್ನಡತೆ ಎಸಗಿರುವುದು ವಿಚಾರಣಾ ವರದಿಯಿಂದ ಸಾಬೀತಾಗಿರುವುದರಿಂದ, ಮಾನ್ಯ ಉಪ ಲೋಕಾಯುಕ್ತರು-1 ಇವರ ಶಿಫಾರಸ್ಸನ್ನು ಅಂಗೀಕರಿಸಿ ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 5 ಮುನೋಸೇ(2) 2017, ಬೆಂಗಳೂರು, ದಿನಾಂಕ: 16-09-2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಶ್ರೀ ಗಂಗಹನುಮಯ್ಯ, ನಿವೃತ್ತ ಉಪ ನೋಂದಣಾಧಿಕಾರಿ ಇವರು ಸರ್ಕಾರಿ ನೌಕರರಾಗಿ, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳನ್ನು ಉಲ್ಲಂಘಿಸಿ, ದುರ್ನಡತೆ ಎಸಗಿರುವುದು ಸಾಬೀತಾಗಿದ್ದು, ಹಾಲಿ ನಿವೃತ್ತರಾಗಿರುವುದರಿಂದ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು, 1958ರ ನಿಯಮ 214(1)(ಎ) ರಡಿಯಲ್ಲಿ ಸದರಿಯವರ ನಿವೃತ್ತಿ ವೇತನದಲ್ಲಿ ಶೇ.5 ರಷ್ಟು ಮೊತ್ತವನ್ನು ಶಾಶ್ವತವಾಗಿ ತಡೆಹಿಡಿಯುವ ದಂಡನೆಯನ್ನು ವಿಧಿಸಿ ಆದೇಶಿಸಿದೆ.

PR. 363

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC. 10

ವಸಂತಕುಮಾರ

ಪೀಠಾಧಿಕಾರಿ,

ಕಂದಾಯ ಇಲಾಖೆ. (ನೋಂದಣಿ ಮತ್ತು ಮುದ್ರಾಂಕ)೧೩೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ಭಾಗ ೧

ಇಂಧನ ಸಚಿವಾಲಯ

ವಿಷಯ : ಇಂಧನ ಇಲಾಖೆಯ ಅಂಗ ಸಂಸ್ಥೆಗಳಲ್ಲಿ ಚಾಲ್ತಿಯಲ್ಲಿರುವ Line man ಹುದ್ದೆಯಪದನಾಮವನ್ನು

"Power Man" ಎಂದು ಬದಲಾಯಿಸುವ ಬಗ್ಗೆ.

ಓದಲಾಗಿದೆ : ದಿನಾಂಕ:-6-9-2017ರಂದು ನಡೆದ ಮಾಸಿಕ ವಿವಿಧ ಹಂತದ ಪರಿಶೀಲನಾ ಸಭೆಯ ನಡವಳಿಗಳು.

ಪ್ರಸ್ತಾವನೆ : 1. ಇಂಧನ ಇಲಾಖೆಯ ಅಂಗ ಸಂಸ್ಥೆಗಳಲ್ಲಿ Line man ಗಳ ಪಾತ್ರವು ಅತ್ಯಂತ ಹಿರಿಯದಾಗಿದ್ದು, ಪ್ರಮುಖವಾಗಿ ವಿದ್ಯುತ್ ಉಪಕರಣಗಳು, ಸಲಕರಣೆಗಳು ಮತ್ತು ವಿದ್ಯುತ್ ಮಾರ್ಗಗಳ ಚಾಲನೆ, ನಿರ್ವಹಣೆ ಹಾಗೂ ದುರಸ್ತಿ ಕಾರ್ಯಗಳನ್ನು ನಿರ್ವಹಿಸುತ್ತಿರುತ್ತಾರೆ.

2. ಪ್ರಸ್ತುತ ಬಳಕೆಯಾಗುತ್ತಿರುವ Line man ಹುದ್ದೆಯ ಹೆಸರಿನ ಬದಲಿಗೆ, ಅವರುಗಳು ನಿರ್ವಹಿಸುವ ಕಾರ್ಯಕ್ಕೆತಕ್ಕಂತೆ ಹುದ್ದೆಯ ಹೆಸರನ್ನು ಬದಲಾಯಿಸುವ ಕುರಿತಂತೆ ಪರಿಶೀಲಿಸಿ, ದಿನಾಂಕ 6-9-2017ರಂದು ನಡೆದ ಮಾಸಿಕ ಇಂಧನ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಚರ್ಚಿಸಿ, ಅವುಗಳ ಪೈಕಿ "Power Man" ಎಂಬ ಹೆಸರು ಸಮಂಜಸವಾಗಿ ಹೊಂದುವುದೆಂದು ತೀರ್ಮಾನಿಸಿ, ಅದರಂತೆ ಇಂಧನ ಇಲಾಖೆಯ ಎಲ್ಲಾ ಅಂಗ ಸಂಸ್ಥೆಗಳಲ್ಲಿ Line man ಎಂಬ ಹುದ್ದೆಯ ಪದನಾಮದ ಬದಲಾಗಿ "Power Man" ಎಂಬ ಪದನಾಮ ಬಳಸಲು ಹಾಗೂ ಇದಕ್ಕೆ ಸಂಬಂಧಿಸಿದಂತೆ "ನೇಮಕಾತಿ ಮತ್ತು ಬಡ್ತಿ ನಿಯಮಾವಳಿ"ಗಳಲ್ಲಿ (Recruitment & Promotion Regulations) ಸೂಕ್ತ ಮಾರ್ಪಾಡು ಮಾಡುವಂತೆ ತೀರ್ಮಾನಿಸಲಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಕೆಳಕಂಡ ಆದೇಶವನ್ನು ಹೊರಡಿಸಲಾಗಿದೆ.

ಸರ್ಕಾರಿ ಆದೇಶ ಸಂಖ್ಯೆ : ಇಎನ್247ವಿಎಸ್‌ಸಿ 2017, ಬೆಂಗಳೂರು, ದಿನಾಂಕ: 27-10-2017

"ಇಂಧನ ಇಲಾಖೆಯ ಅಧೀನದಲ್ಲಿ ಬರುವಂತಹ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು/ನಿಗಮ/ಮಂಡಳಿಗಳಲ್ಲಿ ಹಾಲಿ ಚಾಲ್ತಿಯಲ್ಲಿರುವ Line man ಹುದ್ದೆಯ ಪದನಾಮವನ್ನು ಈ ಕೂಡಲೇ ಜಾರಿಗೆ ಬರುವಂತೆ "Power Man" ಎಂದು ಬದಲಾಯಿಸಲು ಆದೇಶಿಸಿದೆ ಹಾಗೂ ಈ ಬಗ್ಗೆ ಸಂಬಂಧಪಟ್ಟ ಸಂಸ್ಥೆಗಳು "ನೇಮಕಾತಿ ಮತ್ತು ಬಡ್ತಿ ನಿಯಮಾವಳಿ" ಗಳಲ್ಲಿ (Recruitment & Promotion Regulations) ಸೂಕ್ತ ಮಾರ್ಪಾಡು ಮಾಡಿಕೊಳ್ಳತಕ್ಕದ್ದು.

PR. 364

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 10

ಬಿ.ವಿ. ಶ್ರೀನಿವಾಸಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಇಂಧನ ಇಲಾಖೆ.

ಇಂಧನ ಸಚಿವಾಲಯ

ತಿದ್ದುಪಡಿ ಆದೇಶ

ಸಂಖ್ಯೆ: ಇಎನ್ 88 ವಿಎಸ್‌ಸಿ 2017, ಬೆಂಗಳೂರು, ದಿನಾಂಕ: 07-10-2017.

ಸರ್ಕಾರದ ಆದೇಶ ಸಂಖ್ಯೆ:ಇಎನ್ 88 ವಿಎಸ್‌ಸಿ 2017, ದಿನಾಂಕ: 19.07.2017ರ ಆದೇಶದ ಭಾಗದ ಎರಡನೇ ಸಾಲಿನಲ್ಲಿರುವ "ಪವನ ವಿದ್ಯುತ್ ಯೋಜನೆಗಳನ್ನು" ಎಂಬುದರ ಬದಲಾಗಿ "ಪವನ/ಸೌರ ವಿದ್ಯುತ್ ಯೋಜನೆಗಳನ್ನು" ಎಂದು ತಿದ್ದಿ ಓದಿಕೊಳ್ಳುವುದು.

ಉಳಿದಂತೆ ಸದರಿ ಆದೇಶದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

PR. 366

ಬಿ.ವಿ. ಶ್ರೀನಿವಾಸಯ್ಯ,

SC. 10

ಸರ್ಕಾರದ ಅಧೀನ ಕಾರ್ಯದರ್ಶಿ,

ಇಂಧನ ಇಲಾಖೆ.

ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಮತ್ತು ಕಾನೂನು ಮಾಪನಶಾಸ್ತ್ರ ಸಚಿವಾಲಯ

ವಿಷಯ : ಕರ್ನಾಟಕ ರಾಜ್ಯ ಆಹಾರ ಆಯೋಗಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ:ಆನಾಸ 100 ಡಿಆರ್ಎ 2017, ದಿನಾಂಕ: 05-07-2017. 2) ಸರ್ಕಾರದ ಆದೇಶ ಸಂಖ್ಯೆ: ಆನಾಸ 52 ಡಿಆರ್ಎ 2012, ದಿನಾಂಕ: 10-06-2016. 3) ಆಯುಕ್ತರು, ಆನಾಸ ಮತ್ತು ಗ್ರಾವ್ಯ ಇಲಾಖೆ ಇವರ ಏಕ ಕಡತ ಸಂ: ಎಫ್ಎಸ್ಎ/

ಬಿಯುಡಿ/19/ಆಹಾರ/2017-18.

ಪ್ರಸ್ತಾವನೆ :

ಮೇಲೆ ಓದಲಾದ 1ರ ಸರ್ಕಾರದ ದಿನಾಂಕ: 05.07.2017ರ ಆದೇಶದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ನಿಯಮ 16ರನ್ವಯ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಅಧ್ಯಕ್ಷರು ಹಾಗೂ ಸದಸ್ಯರನ್ನೊಳಗೊಂಡ ಆಹಾರ ಆಯೋಗವನ್ನು ರಚನೆ ಮಾಡಿ ಆದೇಶ ಹೊರಡಿಸಲಾಗಿದೆ.

ಮೇಲೆ ಓದಲಾದ 2ರ ಸರ್ಕಾರದ ದಿನಾಂಕ: 10.06.2016ರ ಆದೇಶದಲ್ಲಿ ರಾಜ್ಯ ಆಹಾರ ಆಯೋಗ ರಚನೆಯಾಗಿದ್ದಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳು ಅಂತಿಮಗೊಳ್ಳುವವರೆಗೆ ಆಯೋಗದ ವೇತನ ಮತ್ತು ಭತ್ಯೆಗಳನ್ನು ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ವ್ಯವಹಾರಗಳ ಇಲಾಖೆ ಇವರ ಆಯವ್ಯಯದಲ್ಲಿ ಭರಿಸಲು ಆದೇಶಿಸಲಾಗಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ೧೩೦೫

ಮೇಲೆ ಓದಲಾದ 3ರ ಏಕ ಕಡತದಲ್ಲಿ ಸದರಿ ಆಹಾರ ಆಯೋಗವು ತನ್ನ ಪ್ರಕ್ರಿಯೆಯನ್ನು ಪ್ರಾರಂಭಿಸಲು 2017-18ನೇ ಸಾಲಿಗೆ ವೇತನ ಮತ್ತು ಭತ್ಯೆಗಳು ಹಾಗೂ ಇತರೆ ಆಡಳಿತಾತ್ಮಕ ವೆಚ್ಚ `.290 ಲಕ್ಷ ಹೆಚ್ಚುವರಿ ಅನುದಾನದ ಅವಶ್ಯಕವಿರುವುದಾಗಿ ತಿಳಿಸಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಪರಿಶೀಲಿಸಲಾಗಿ, ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಆನಾಸ 293 ಡಿಆರ್ಎ 2017, ಬೆಂಗಳೂರು, ದಿನಾಂಕ: 24.10.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ಹಾಗೂ ಸದಸ್ಯರಿಗೆ ಜುಲೈ 2017ರಿಂದ ಮಾರ್ಚ್ 2018 ರವರೆಗೆ ವೇತನಕ್ಕಾಗಿ ಅಗತ್ಯವಿರುವ ಅನುದಾನ `.44.23 ಲಕ್ಷಗಳನ್ನು ಹೆಚ್ಚುವರಿಯಾಗಿ ಲೆಕ್ಕಶೀರ್ಷಿಕೆ 2408-01-001-0-01-034 ರಡಿ ಪೂರಕ ಅಂದಾಜು-2ರಲ್ಲಿ ಒದಗಿಸಲು ಹಾಗೂ ವೇತನೇತರ ಮೊತ್ತಕ್ಕೆ ಅಗತ್ಯವಿರುವ ಅನುದಾನವನ್ನು ಸದರಿ ಲೆಕ್ಕಶೀರ್ಷಿಕೆಯಲ್ಲಿ ಒದಗಿಸಿರುವ ಅನುದಾನದಲ್ಲಿ ವೆಚ್ಚ ಭರಿಸುವಂತೆ ಆದೇಶಿಸಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 935 ವೆಚ್ಚ-5/2017, ದಿನಾಂಕ: 15.09.2017 ಮತ್ತು ಟಿಪ್ಪಣಿ ಸಂಖ್ಯೆ: ಆಇ 983 ವೆಚ್ಚ-5/2017 ದಿನಾಂಕ : 27.09.2017 ಸಹಮತಿಯನ್ವಯ ಹೊರಡಿಸಿದೆ.

PR. 370

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 200

ಎಸ್.ಉಮಾದೇವಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಮತ್ತು

ಕಾನೂನು ಮಾಪನಶಾಸ್ತ್ರ ಇಲಾಖೆ.

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ವಿಷಯ :- ರಾಜ್ಯದಲ್ಲಿ ಪಶುಪಾಲನಾ ಇಲಾಖೆಯ ವ್ಯಾಪ್ತಿಯಲ್ಲಿ ಹಾಲಿ ಇರುವ 1512 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಹಂತ ಹಂತವಾಗಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಹಾಗೂ 2017-18 ನೇ ಸಾಲಿನಲ್ಲಿ 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಓದಲಾಗಿದೆ :- 1) ಪತ್ರ ಸಂಖ್ಯೆ: ಆಪಸಂ/ಡಿವಿಡಿ-3/ವಿವ-16/2016-17, ದಿನಾಂಕ: 16.09.2016.

2) ಪತ್ರ ಸಂಖ್ಯೆ: ಆಪಸಂ/ನೂತನ ಯೋಜನೆ/ ಕಂಡಿಕೆ-43/2017-18, ದಿನಾಂಕ: 04.04.2017. 3) ಮಾನ್ಯ ಮುಖ್ಯಮಂತ್ರಿಯವರ ಅನುಮೋದಿತ ಟಿಪ್ಪಣಿ ದಿನಾಂಕ: 25.09.2017

ಪ್ರಸಾವನೆ :

2017-18 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಕಂಡಿಕೆ ಸಂಖ್ಯೆ 43 ರ ಅನುಸಾರ, ರಾಜ್ಯದ ಎಲ್ಲಾ ಹಳ್ಳಿಗಳಿಗೆ ಪರಿಣಿತ ಹಾಗೂ ಸುಧಾರಿತ ಪಶುವೈದ್ಯಕೀಯ ಸೇವೆಗಳನ್ನು ವಿಸ್ತರಿಸುವ ಗುರಿಯೊಂದಿಗೆ ಹಂತ ಹಂತವಾಗಿ 1512 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದ್ದು, ಈ ಸಾಲಿನಲ್ಲಿ ಇಂತಹ 302 ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದೆಂದು ಘೋಷಿಸಿರುತ್ತಾರೆ.

ಮೇಲೆ ಕ್ರಮ ಸಂಖ್ಯೆ (1) ರಲ್ಲಿ ಓದಲಾದ ಪತ್ರದಲ್ಲಿ ಆಯುಕ್ತರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರು ರಾಜ್ಯದಲ್ಲಿ ಪ್ರಸ್ತುತ 4215 ವಿವಿಧ ಹಂತದ ಪಶುವೈದ್ಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 1512 ಅತ್ಯಂತ ಕೆಳಹಂತದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಹಾಗೂ ಈ 1512 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಜಿಲ್ಲಾ ಪಂಚಾಯತ್ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ, ಇವುಗಳ ಮುಖ್ಯಸ್ಥರಾಗಿ ಹಾಲಿ ಅರೆ-ಪಶುವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಪದವೀಧರ ಪಶುವೈದ್ಯರು ಇರುವುದಿಲ್ಲ. ಪ್ರಾಣಿಗಳಿಗೆ ಪಕ್ವ ಚಿಕಿತ್ಸೆ ನೀಡಲು ಪದವೀಧರ ಪಶುವೈದ್ಯರ ಸೇವೆ ಇಲ್ಲಿ ಅವಶ್ಯವಿದೆ. ಆದುದರಿಂದ, 1512 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಪದವೀಧರ ಪಶುವೈದ್ಯ ಅಧಿಕಾರಿಯ ಹುದ್ದೆಯೊಂದಿಗೆ ಪಶು ಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸುವಂತೆ ಕೋರಿರುತ್ತಾರೆ.

ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಪತ್ರದಲ್ಲಿ ಆಯುಕ್ತರು, ರಾಷ್ಟ್ರೀಯ ಕೃಷಿ ಆಯೋಗದ Standard Pattern and Norm ಹಾಗೂ ಭಾರತೀಯ ಪಶುವೈದ್ಯಕೀಯ ಪರಿಷತ್ತಿನ ಶಿಫಾರಸ್ಸಿನನ್ವಯ ಪ್ರತಿಯೊಂದು ಪಶುಚಿಕಿತ್ಸಾ ಸಂಸ್ಥೆಯಲ್ಲಿ ಪದವೀಧರ ಪಶುವೈದ್ಯರು ಇರಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ 1512 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಹಂತ ಹಂತವಾಗಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಬೇಕಾಗಿದ್ದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳ ಹಾಗೂ ಪಶುಚಿಕಿತ್ಸಾಲಯಗಳ ಹುದ್ದೆಗಳ ವಿನ್ಯಾಸ ಈ ಕೆಳಕಂಡಂತೆ ಇರುವುದಾಗಿ ಪ್ರಸ್ತಾಪಿಸಿರುತ್ತಾರೆ.

ಕ್ರ.ಸಂ ಹ ುದ್ದೆಗಳ ವಿವರ ಹ ುದ್ದೆಗಳ ಸಂಖ್ಯೆ
1 ಹಿರಿಯ ಪಶುವೈದ್ಯ ಪರೀಕ್ಷಕರು 1
2 ಪ ಶ ುವೈದ್ಯ ಸಹಾಯಕರು 1
3 ಡಿ-ದರ್ಜೆ ನೌಕರರು 1
1 ಪ ಶ ುವೈದ್ಯಾಧಿಕಾರಿ 1
2 ಪ ಶ ುವೈದ್ಯ ಪರೀಕ್ಷಕರು 1
3 ಪ ಶ ುವೈದ್ಯ ಸಹಾಯಕರು 1
4 ಡಿ-ದರ್ಜೆ ನೌಕರರು 2
೧೩೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ಭಾಗ ೧

ಆಡಳಿತಾತ್ಮಕ ಹಿತದೃಷ್ಟಿಯಿಂದ ಪ್ರಸ್ತುತ ಹಾಲಿ ಇರುವ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರದ ಹುದ್ದೆಗಳ ವಿನ್ಯಾಸದ ಜೊತೆಗೆ ಮೇಲ್ದರ್ಜೆಗೇರಿಸಲಾಗುವ ಪಶುಚಿಕಿತ್ಸಾಲಯಗಳಿಗೆ ಹೆಚ್ಚುವರಿಯಾಗಿ ಅವಶ್ಯವಿರುವ 1- ಪಶುವೈದ್ಯಾಧಿಕಾರಿ ಮತ್ತು 1-ಡಿ-ದರ್ಜೆ ನೌಕರರ ಹುದ್ದೆಯನ್ನು ನೂತನವಾಗಿ ಸೃಜಿಸಬೇಕಾಗಿರುತ್ತದೆ. 2017-18ನೇ ಸಾಲಿನ ಆಯವ್ಯಯ ಘೋಷಣೆಯನ್ವಯ ರಾಜ್ಯದಲ್ಲಿರುವ 1512 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು

ಕ್ರ ಸಂ ಸಾಲು ವ ುೕಲ್ದರ್ಜೆಗೇರಿಸಬೇಕಾದ ೆ ಸ ಂಸ್ಥೆಗಳ ಸಂಖ್ಯೆ ಹ ುದ್ದೆ ಸೃಜನೆ ಅಗತ್ಯ ಅಂದಾಜು ಅನುದಾನ- ವಾರ್ಷಿಕ (`. ಕೋಟಿಗಳಲ್ಲಿ)
ಪ ಶುವೈದ್ಯಾಧಿಕಾರಿ "ಡಿ" ದರ್ಜೆ
1 2017-18 302 302 302 36.72
2 2018-19 400 400 400 48.00
3 2019-20 400 400 400 48.00
4 2020-21 410 410 410 50.00
ಒಟ್ಟು 1512 1512 1512 182.72

ಮೊದಲ ಹಂತದಲ್ಲಿ 2017-18 ನೇ ಸಾಲಿನಲ್ಲಿ 302 ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಘೋಷಣೆಯಾಗಿದ್ದು, ಉಳಿದ ಸಂಸ್ಥೆಗಳನ್ನು ಮುಂದಿನ ವರ್ಷಗಳಲ್ಲಿ ಹಂತ ಹಂತವಾಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಿದ್ದು, ಈ ಸಂಬಂಧ 2017-18 ನೇ ಸಾಲಿಗೆ ಸಂಬಂಧಿಸಿದಂತೆ 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಆಯುಕ್ತರು ಕೋರಿರುತ್ತಾರೆ.

ಮುಂದುವರೆದು, ಪ್ರಸಕ್ತ ಸಾಲಿನಲ್ಲಿ 302 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಪಶು ಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಆಯವ್ಯಯದಲ್ಲಿ ಘೋಷಣೆಯಾಗಿದ್ದು, ಈ ಸಂಬಂಧ 302 ಪಶುವೈದ್ಯಾಧಿಕಾರಿಗಳ ಹುದ್ದೆ ಹಾಗೂ 302 ಡಿ-ದರ್ಜೆ ನೌಕರರ ಹುದ್ದೆಯನ್ನು ಸೃಜಿಸಬೇಕಾಗಿದ್ದು, ಅಂದಾಜು ವಾರ್ಷಿಕ ತಗಲುವ ವೆಚ್ಚ `.36.72 ಕೋಟಿಗಳ ಅನುದಾನದ ಅವಶ್ಯಕತೆ ಇದ್ದು ವಿವರವನ್ನು ಈ ಕೆಳಗಿನಂತೆ ಸಲ್ಲಿಸಿರುತ್ತಾರೆ. 2017-18 ನೇ ಸಾಲಿನಲ್ಲಿ 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಪಶು ಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ತಗಲುವ ಆವರ್ತಕ

1) ಆವರ್ತಕ ವೆಚ್ಚದ ವಿವರ `.ಗಳಲ್ಲಿ
ಎ. ವ ೕತನ ೆ
1. ಪಶುವೈದ್ಯರು- 1 ಹುದ್ದೆಗೆ
ವ ೕತನ ಶ್ರೇಣಿ: 28100-50100 ಮೂಲ ವೇತನ ೆ 39,100
ತ ುಟ್ಟಿ ಭತ್ಯೆ 43.25 % 16,911
ವ ುನೆ ಬಾಡಿಗೆ 10% 3,910
ವಿಶೇಷ ಭತ್ಯೆ 1,000
ಒಟ್ಟು 60,921
2 'ಡಿ' ದರ್ಜೆ ನೌಕರರು - 1 ಹುದ್ದೆಗೆ ರೂ.ಗಳಲ್ಲಿ
ವ ೕತನ ಶ್ರೇಣಿ: 9600-14550 ಮೂಲ ವೇತನ ೆ 12,075
ತ ುಟ್ಟಿ ಭತ್ಯೆ 43.25 % 4,860
ವ ುನೆ ಬಾಡಿಗೆ 10% 1,207
ವಿಶೇಷ ಭತ್ಯೆ 400
ಒಟ್ಟು 18,542
ಬಿ) ವ ೕತನಕ್ಕಾಗಿ ಒಟ್ಟು (1) + (2) = (ಒಂದು ತಿಂಗಳಿಗೆ) ೆ 79,463
ಒಂದು ವರ್ಷಕ್ಕೆ: 79463 x 12 9,53,556
ಪ ವಾಸ ಭತ್ಯೆ ್ರ 40,000
ಸಿ) ಕಚೇರಿ ವೆಚ್ಚ 22,500
ಒಟ್ಟು ಆವರ್ತಕ ವೆಚ್ಚ ಒಂದು ಸಂಸ್ಥೆಗೆ: 10,16,056
ಒಟ್ಟು ಆವರ್ತಕ ವೆಚ್ಚ 302 ಸಂಸ್ಥೆಗಳಿಗೆ (10,16,056 X 302) 30,68,48,912
ಒಟ್ಟು ಆವರ್ತಕ ವೆಚ್ಚ 302 ಸಂಸ್ಥೆಗಳಿಗೆ ರೂ. ಕೋಟಿಗಳಲ್ಲಿ 30.68 ಕೋಟಿ
2, ಆನಾರ್ತಕ ವೆಚ್ಚದ ವಿವರ `.ಗಳಲ್ಲಿ
ಸಾಧನ ಸಾಮಾಗ್ರಿಗಳು 1,00,000
ಕೃತಕ ಗರ್ಭಧಾರಣೆ ಸಾಮಾಗ್ರಿಗಳು 1,00,000
ಒಟ್ಟು ಆನಾವರ್ತಕ ವೆಚ್ಚ ಒಂದು ಸಂಸ್ಥೆಗೆ: 2,00,000
ಒಟ್ಟು ಆನಾವರ್ತಕ ವೆಚ್ಚ 302 ಸಂಸ್ಥೆಗಳಿಗೆ (2,00,000 X 302) 6.04 ಕೋಟಿ
ಒಟ್ಟು ಆವರ್ತಕ + ಆನಾವರ್ತಕ ವೆಚ್ಚ 302 ಸಂಸ್ಥೆಗಳಿಗೆ 30,68 ಕೋಟಿ + 6.04 ಕೋಟಿ 30,68 + 6.04 36.72 ಕೋಟಿ
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ೧೩೦೭

ಈ ಸಂಬಂಧ 1512 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಹಂತಹಂತವಾಗಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ಹಾಗೂ 2017-18ನೇ ಸಾಲಿನಲ್ಲಿ 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು 302 ಪಶುವೈದ್ಯಾಧಿಕಾರಿಗಳ ಹುದ್ದೆ ಹಾಗೂ 302 ಡಿ-ದರ್ಜೆ ನೌಕರರ ಹುದ್ದೆಯನ್ನು ಸೃಜಿಸಿ ಒಟ್ಟು ರೂ 36.72 ಕೋಟಿಗಳ ಅನುದಾನಕ್ಕೆ ಮಂಜೂರಾತಿ ನೀಡಲು ಕೋರಲಾಗಿದೆ. ಸದರಿ ವೆಚ್ಚವನ್ನು"ಲೆಕ್ಕಶೀರ್ಷಿಕೆ 2403-00-001-0-01 ನಿರ್ದೇಶನ ಮತ್ತು ಆಡಳಿತ"ದಲ್ಲಿ ಭರಿಸಬಹುದಾಗಿದೆ ಎಂದು ತಿಳಿಸುತ್ತಾ, 302 ಪಶುಚಿಕಿತ್ಸಾಲಯಗಳಿಗೂ ಹೊಸದಾಗಿ 302 ಪಶುವೈದ್ಯಾಧಿಕಾರಿಗಳ ಹುದ್ದೆ ಹಾಗೂ 302 ಡಿ-ದರ್ಜೆ ಹುದ್ದೆಯನ್ನು ಸೃಜಿಸಲು ಹಾಗೂ ಸದರಿ ಪ್ರಕಿಯೆಗೆ ತಗಲುವ ಅಂದಾಜು ವಾರ್ಷಿಕ ಆವರ್ತಕ ವೆಚ್ಚ 30.38 ಕೋಟಿ ಹಾಗೂ ಆನಾವರ್ತಕ ವೆಚ್ಚ-6.04 ಕೋಟಿ ಒಟ್ಟು 36.72 ಕೋಟಿ ವೆಚ್ಚವನ್ನು "ಲೆಕ್ಕಶೀರ್ಷಿಕೆ 2403-00-001-0-01 ನಿರ್ದೇಶನ ಮತ್ತು ಆಡಳಿತ"ದಲ್ಲಿ ಭರಿಸಲು ಆಡಳಿತಾತ್ಮಕ ಅನುಮೋದನೆ ಮಂಜೂರಾತಿ ನೀಡಲು ಕೋರಿ ಆಯುಕ್ತರು ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಮೇಲೆ ಕ್ರಮ ಸಂಖ್ಯೆ (3) ರಲ್ಲಿ ಓದಲಾದ ಟಿಪ್ಪಣಿಯಲ್ಲಿ ಮಾನ್ಯ ಮುಖ್ಯಮಂತ್ರಿಯವರು 2017-18 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವಂತೆ ಹಂತ ಹಂತವಾಗಿ 1512 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು `.182.72 ಕೋಟಿ ವೆಚ್ಚದಲ್ಲಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಹಾಗೂ ಪ್ರಸ್ತುತ ಸಾಲಿನಲ್ಲಿ (2017-18 ರಲ್ಲಿ) 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು `.36.72 ಕೋಟಿಗಳ ವೆಚ್ಚದಲ್ಲಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಹಾಗೂ ಸದರಿ ಕಾರ್ಯಕ್ಕೆ ಪ್ರಸಕ್ತ ಸಾಲಿನಲ್ಲಿ (2017-18) `.36.72 ಕೋಟಿಗಳ ವೆಚ್ಚದಲ್ಲಿ ಆಯುಕ್ತಾಲಯ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರ ವತಿಯಿಂದ ಅನುಷ್ಠಾನಗೊಳಿಸಲು ಆಡಳಿತಾತ್ಮಕವಾಗಿ ಅನುಮೋದನೆ ನೀಡಿರುತ್ತಾರೆ.

ಮುಂದುವರೆದು, ಪ್ರಸಕ್ತ ಸಾಲಿಗೆ ಅವಶ್ಯವಿರುವ 302 ಪಶುವೈದ್ಯಾಧಿಕಾರಿಗಳ ಹುದ್ದೆ ಹಾಗೂ 302 ಡಿ-ದರ್ಜೆ ನೌಕರರ ಹುದ್ದೆಗಳನ್ನು ಸೃಜಿಸುವ ಬಗ್ಗೆ ಅರ್ಥಿಕ ಇಲಾಖೆಯೊಂದಿಗೆ ಪ್ರತ್ಯೇಕವಾಗಿ ಸಮಾಲೋಚಿಸಿ ಆದೇಶ ಹೊರಡಿಸುವಂತೆ ಸೂಚಿಸಿರುತ್ತಾರೆ.

ಮೇಲ್ಕಂಡ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಸಂಬಂಧಿಸಿದಂತೆ, 2017-18 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವಂತೆ ಹಂತ ಹಂತವಾಗಿ 1512 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ರೂ. 182.72 ಕೋಟಿ ವೆಚ್ಚದಲ್ಲಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಹಾಗೂ ಪ್ರಸ್ತುತ ಸಾಲಿನಲ್ಲಿ (2017-18 ರಲ್ಲಿ) 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು `.36.72 ಕೋಟಿಗಳ ವೆಚ್ಚದಲ್ಲಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಹಾಗೂ ಸದರಿ ವೆಚ್ಚವನ್ನು "ಲೆಕ್ಕ ಶೀರ್ಷಿಕೆ 2403-00-001-0-01- ನಿರ್ದೇಶನ ಮತ್ತು ಆಡಳಿತ"ದಲ್ಲಿ ಭರಿಸಲು ಮತ್ತು ಸದರಿ ಕಾರ್ಯಕ್ರಮವನ್ನು ಆಯುಕ್ತಾಲಯ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರ ವತಿಯಿಂದ ಅನುಷ್ಠಾನಗೊಳಿಸಲು ತೀರ್ಮಾನಿಸಿ ಈ ಕೆಳಕಂಡ ಆದೇಶ.

ಸರ್ಕಾರಿ ಆದೇಶ ಸಂಖ್ಯೆ: ಪಸಂಮೀ 278 ಪಸಸೇ 2016, ಬೆಂಗಳೂರು, ದಿನಾಂಕ: 09.10.2017

ಮೇಲ್ಕಂಡ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, 2017-18 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಘೋಷಿಸಿರುವಂತೆ ಈ ಕೆಳಗಿನ ಪಟ್ಟಿಯಲ್ಲಿ ವಿವರಿಸಿರುವಂತೆ ಹಂತ ಹಂತವಾಗಿ 1512 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು `. 182.72 ಕೋಟಿಗಳ ಅಂದಾಜು ವೆಚ್ಚದಲ್ಲಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಹಾಗೂ ಪ್ರಸಕ್ತ ಸಾಲಿನಲ್ಲಿ (2017-18 ರಲ್ಲಿ) 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು `.36.72 ಕೋಟಿಗಳ ಅಂದಾಜು ವೆಚ್ಚದಲ್ಲಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ.

೧೩೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ಭಾಗ ೧
ಕ್ರ ಸಂ ಸಾಲು ವ ುೕಲ್ದರ್ಜೆಗೇರಿಸಬೇಕಾದ ೆ ಸ ಂಸ್ಥೆಗಳ ಸಂಖ್ಯೆ ಹ ುದ್ದೆ ಸೃಜನೆ ಅಗತ್ಯ ಅಂದಾಜು ಅನುದಾನ- ವಾರ್ಷಿಕ (`.ಕೋಟಿಗಳಲ್ಲಿ)
ಪ ಶುವೈದ್ಯಾಧಿಕಾರಿ "ಡಿ" ದರ್ಜೆ
1 2017-18 302 302 302 36.72
2 2018-19 400 400 400 48.00
3 2019-20 400 400 400 48.00
4 2020-21 410 410 410 50.00
ಒಟ್ಟು 1512 1512 1512 182.72

ಮೊದಲ ಹಂತದ ಪ್ರಸಕ್ತ ಸಾಲಿನಲ್ಲಿ 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ತಗಲುವ `.36.72 ಕೋಟಿಗಳ ಅಂದಾಜು ವೆಚ್ಚವನ್ನು "ಲೆಕ್ಕ ಶೀರ್ಷಿಕೆ 2403-00-001-0-01 ನಿರ್ದೇಶನ ಮತ್ತು ಆಡಳಿತ" ರಡಿಯಲ್ಲಿ ಒದಗಿಸಲಾಗಿರುವ `.7092.00 ಲಕ್ಷಗಳ ಅನುದಾನದಲ್ಲಿ ಭರಿಸಲು ಮಂಜೂರಾತಿ ನೀಡಿದೆ ಮತ್ತು ಸದರಿ ಕಾರ್ಯಕ್ರಮವನ್ನು ಆಯುಕ್ತಾಲಯ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರ ವತಿಯಿಂದ ಅನುಷ್ಠಾನಗೊಳಿಸತಕ್ಕದ್ದು.

ಈ ಯೋಜನೆಯನ್ನು 2017-18 ನೇ ಸಾಲಿಗೆ ಆಯವ್ಯಯದಲ್ಲಿ ನಿಗಧಿಪಡಿಸಿರುವ ಅನುಷ್ಠಾನದ ಮಿತಿಯೊಳಗೆ ಹಾಗೂ ಇಲಾಖೆಯ ಮಾರ್ಗಸೂಚಿಗಳನ್ವಯ ಪ್ರಾರಂಭಿಸಿ ಅನುಷ್ಠಾನಗೊಳಿಸತಕ್ಕದ್ದು.

ಮುಂದುವರೆದು, ಈಗಾಗಲೇ ಅಸ್ತಿತ್ವದಲ್ಲಿರುವ 1512 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳ ಪೈಕಿ ಪ್ರಸಕ್ತ ಸಾಲಿನಲ್ಲಿ ಮೇಲ್ದರ್ಜೆಗೇರಿಸುತ್ತಿರುವ 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಗುರುತಿಸಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸುವ ಸಂಸ್ಥೆಗಳ ಬಗ್ಗೆ ಪ್ರತ್ಯೇಕವಾಗಿ ಆದೇಶ ಹೊರಡಿಸಲಾಗುವುದು ಹಾಗೂ ಸದರಿ 302 ಪಶುಚಿಕಿತ್ಸಾಲಯಗಳಿಗೆ ಅವಶ್ಯವಿರುವ "302 ಪಶುವೈದ್ಯಾಧಿಕಾರಿಗಳ ಹುದ್ದೆ" ಹಾಗೂ "302 ಡಿ ದರ್ಜೆ ನೌಕರರ ಹುದ್ದೆಗಳ" ಸೃಜನೆಯ ಬಗ್ಗೆಯೂ ಸಹ ಪ್ರತ್ಯೇಕವಾಗಿ ಆದೇಶ ಹೊರಡಿಸಲಾಗುವುದು.

ಈ ಆದೇಶವನ್ನು ಯೋಜನಾ ಇಲಾಖೆಯ ಟಿಪ್ಪಣೆ ಸಂಖ್ಯೆ ಪಿಡಿ 42 ಪಿಎಫ್ಒ 2017 ದಿನಾಂಕ 24.04.2017 ಮತ್ತು 29.05.2017 ಮತ್ತು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 331 ವೆಚ್ಚ-4/2017, ದಿನಾಂಕ: 05.05.2017 ರಲ್ಲಿ ನೀಡಿರುವ ಸಹಮತಿಯೊಂದಿಗೆ ಹೊರಡಿಸಲಾಗಿದೆ.

PR. 371

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 200

ಧನಂಜಯ.ಎಂ.

ಪೀಠಾಧಿಕಾರಿ-2,

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ.

(ಪಶುಸಂಗೋಪನೆ-ಎ)

ಕಂದಾಯ ಸಚಿವಾಲಯ

ವಿಷಯ : ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲ್ಲೂಕು, ಸಂಗೊಳ್ಳಿ ಗ್ರಾಮದ ಸ.ನಂ.114, 115, 116, 117, 119, 120ರಲ್ಲಿ ಒಟ್ಟು 100-00 ಎಕರೆ ಜಮೀನನ್ನು ಸಂಗೊಳ್ಳಿ ರಾಯಣ್ಣ ಶೌರ್ಯ ಅಕಾಡೆಮಿ ಸ್ಥಾಪಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ : 1. ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ, ಬೆಳಗಾವಿ ಇವರ ಪತ್ರ ಸಂಖ್ಯೆ:ಕಂಶಾ/ಎಲ್‌ಜಿಎಲ್/ಸಿಆರ್/130/2015-16, ದಿನಾಂಕ:31-03-2017 ಮತ್ತು 02-08-2017.

2. ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರ ಪತ್ರ ಸಂಖ್ಯೆ: ಪ್ರಾಆಬೆ/ ಭೂಮಿ/4/ಎಲ್‌ಜಿಎಲ್/47/2016-17, ದಿನಾಂಕ: 01-04-2017.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ(1)ರ ದಿನಾಂಕ: 31-03-2017ರ ಪತ್ರದಲ್ಲಿ ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ ಇವರು ಸಲ್ಲಿಸಿರುವ ವರದಿಯಲ್ಲಿ, ಸದಸ್ಯ ಕಾರ್ಯದರ್ಶಿ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಇವರು ದಿನಾಂಕ: 04-11-2015ರಂದು ಸಲ್ಲಿಸಿರುವ ಪತ್ರದಲ್ಲಿ, ದಿನಾಂಕ:14-01-2005ರಂದು ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಗೊಳ್ಳಿ ರಾಯಣ್ಣನವರ ಹೆಸರಿನಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮಾದರಿಯಲ್ಲಿ "ಸಂಗೊಳ್ಳಿ ರಾಯಣ್ಣ ಶೌರ್ಯ ಅಕಾಡೆಮಿ" ಸ್ಥಾಪಿಸಲು ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕಾಗಿ ಸಂಗೊಳ್ಳಿ ರಾಯಣ್ಣನವರ ಹುಟ್ಟೂರಾದ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ 100-00 ಎಕರೆ ಜಮೀನನ್ನು ಮಂಜೂರು ಮಾಡುವಂತೆ ಕೋರಿರುವುದಾಗಿ ತಿಳಿಸಿರುತ್ತಾರೆ.

ಮುಂದುವರಿದು, ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲೂಕು, ಸಂಗೊಳ್ಳಿ ಗ್ರಾಮದ ಸ.ನಂ.114, 115, 116, 117, 118, 119, 120, 121, 122, 123, 124, 125ರಲ್ಲಿನ ಒಟ್ಟು ಕ್ಷೇತ್ರ 176-35 ಎಕರೆ ಜಮೀನುಗಳು ಆರ್‌ಟಿಸಿ ಪತ್ರಿಕೆಗಳಲ್ಲ್ಲಿ 'ಗಾಯರಾಣ ಕರ್ನಾಟಕ ಸರ್ಕಾರ' ಎಂದು ನಮೂದಿಸಲಾಗಿದ್ದು, ಆಕಾರ್ ಬಂದ್‌ನಲ್ಲಿ ಈ ಎಲ್ಲಾ ಕ್ಷೇತ್ರಗಳು 'ಬಿ ಖರಾಬು' ಎಂದು ವರ್ಗೀಕೃತಗೊಂಡಿರುವುದರಿಂದ, ಸದರಿ ಜಮೀನುಗಳಿಗೆ ಸಂಬಂಧಿಸಿದಂತೆ, ಜಿಲ್ಲಾಧಿಕಾರಿಗಳು ದಿನಾಂಕ: 04-09-2016ರಂದು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 68(1)ರಡಿ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿರುತ್ತಾರೆ. ತತ್ಸಂಬಂಧ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿರುವುದಿಲ್ಲವೆಂದು ವರದಿಸಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ(1)ರ ದಿನಾಂಕ: 02-08-2017ರ ಪತ್ರದಲ್ಲಿ, ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ ಇವರು "ಸಂಗೊಳ್ಳಿ ರಾಯಣ್ಣ ಶೌರ್ಯ ಅಕಾಡೆಮಿ" ಸ್ಥಾಪನೆಗಾಗಿ ಮಂಜೂರು ಮಾಡಲು ಪ್ರಸ್ತಾಪಿಸಿರುವ ಜಮೀನು ಗಾಯರಾಣ ಜಮೀನಾಗಿರುವುದರಿಂದ, ಜಾನುವಾರುಗಳ ಮೇವಿಗೆ 151-00ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ೧೩೦೯ ಎಕರೆ ಗೋಮಾಳ ಜಮೀನಿನ ಕೊರತೆಯಾಗುತ್ತದೆ. ಆದರೆ ಸಂಗೊಳ್ಳಿ ಗ್ರಾಮದ ಪಕ್ಕದ ಗ್ರಾಮಗಳಾದ ಬಿದರಗಡ್ಡಿ ಹಾಗೂ ಪಟ್ಟಹಾಳ.ಕೆ.ಬಿ. ಗ್ರಾಮಗಳಲ್ಲಿ 154-00ಎಕರೆ ಹೆಚ್ಚುವರಿ ಗಾಯರಾಣ ಲಭ್ಯವಿದ್ದು, ಈ ಕೊರತೆಯನ್ನು ಸರಿದೂಗಿಸಬಹುದಾಗಿರುವುದರಿಂದ, ಪ್ರಸ್ತಾಪಿತ 100-00ಎಕರೆ ಜಮೀನನ್ನು ಅಕಾಡೆಮಿ ಸ್ಥಾಪನೆಗಾಗಿ ಮಂಜೂರು ಮಾಡಬಹುದಾಗಿದೆ ಎಂದು ತಿಳಿಸಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ(2)ರ ದಿನಾಂಕ: 01-04-2017ರ ಪ್ರಸ್ತಾವನೆಯಲ್ಲಿ ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರು, ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲ್ಲೂಕು, ಸಂಗೊಳ್ಳಿ ಗ್ರಾಮದ ಸ.ನಂ.114 ರಲ್ಲಿ 10-28 ಎಕರೆ, 115ರಲ್ಲಿ 17-13ಎಕರೆ, 116ರಲ್ಲಿ 11-04ಎಕರೆ, 117ರಲ್ಲಿ 19-15ಎಕರೆ, 119ರಲ್ಲಿ 22-33ಎಕರೆ, ಮತ್ತು 120ರಲ್ಲಿ 18-27ಎಕರೆ ಜಮೀನುಗಳು ಸೇರಿದಂತೆ ಒಟ್ಟು 100-00 ಎಕರೆ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4)ರನ್ವಯ ಗಾಯರಾಣ ಶಿರ್ಷಿಕೆಯಿಂದ ತಗ್ಗಿಸಿ, ಸರ್ಕಾರದ ಆದೇಶ ಸಂಖ್ಯೆ:ಆರ್‌ಡಿ 11 ಎಲ್‌ಜಿಡಬ್ಲ್ಯೂ71 ದಿನಾಂಕ: 20-05-1971 ಮೇರೆಗೆ "ಸಂಗೊಳ್ಳಿ ರಾಯಣ್ಣ ಶೌರ್ಯ ಅಕಾಡೆಮಿ" ಸ್ಥಾಪಿಸಲು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರಕ್ಕೆ ಮಂಜೂರು ಮಾಡಲು ಶಿಫಾರಸ್ಸು ಮಾಡಿರುತ್ತಾರೆ.

ಮೇಲ್ಕಂಡ ಅಂಶದ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 16 ಎಲ್‌ಜಿಎಲ್ 2017, ಬೆಂಗಳೂರು, ದಿನಾಂಕ : 06-9-2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲ್ಲೂಕು, ಸಂಗೊಳ್ಳಿ ಗ್ರಾಮದ ಸ.ನಂ.114 ರಲ್ಲಿ 10-28 ಎಕರೆ, 115 ರಲ್ಲಿ 17-13 ಎಕರೆ, 116ರಲ್ಲಿ 11-04 ಎಕರೆ, 117ರಲ್ಲಿ 19-15 ಎಕರೆ, 119ರಲ್ಲಿ 22-33 ಎಕರೆ ಮತ್ತು 120 ರಲ್ಲಿ 18-27 ಎಕರೆ ಜಮೀನುಗಳು ಸೇರಿದಂತೆ ಒಟ್ಟು 100-00 ಎಕರೆ ಗೋಮಾಳ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ, 97(4)ರನ್ವಯ ಗಾಯರಾಣ ಶೀರ್ಷಿಕೆಯಿಂದ ತಗ್ಗಿಸಿ, ಸಂಗೊಳ್ಳಿ ರಾಯಣ್ಣ ಶೌರ್ಯ ಅಕಾಡೆಮಿ ಸ್ಥಾಪಿಸಲು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವುದಕ್ಕಾಗಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22ಎ(3)(i) ರನ್ವಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಉಚಿತವಾಗಿ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರು ಮಾಡಿ ಆದೇಶಿಸಿದೆ.

ಷರತ್ತುಗಳು :

1. ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ ಇವರು ಜಮೀನು ಹಸ್ತಾಂತರ ಪ್ರಕ್ರಿಯೆಯನ್ನು ನಿಯಮಾನುಸಾರ ಮಾಡತಕ್ಕದ್ದು.

2. ಸದರಿ ಜಮೀನನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ, ಅದೇ ಉದ್ದೇಶಕ್ಕಾಗಿ ಮಾತ್ರ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.

3. ಮಂಜೂರಾದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮ ವಹಿಸತಕ್ಕದ್ದು. ಈ ಜಮೀನಿನ ಸಂಪೂರ್ಣ ಸಂರಕ್ಷಣೆೆ ಮಂಜೂರಾತಿ ಪಡೆದ ಇಲಾಖೆಯ ಜವಾಬ್ದಾರಿಯಾಗಿರುತ್ತದೆ.

4. ಮಂಜೂರು ಮಾಡಲ್ಪಡುವ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ದಾವೆ ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ.

5. ಮಂಜೂರಾದ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂದಿರುಗಿಸತಕ್ಕದ್ದು.

6. ಮಂಜೂರಾದ ಜಮೀನಿನಲ್ಲಿ, ಅಭಿವೃದ್ದಿ ಕಾರ್ಯಗಳನ್ನು ಆರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

7. ಜಿಲ್ಲಾಧಿಕಾರಿಯವರು ಮಂಜೂರಾದ ಜಮೀನನ್ನು ಫಲಾನುಭವಿಗಳಿಗೆ/ಇಲಾಖೆಗೆ ಹಸ್ತಾಂತರಿಸುವಾಗ ಮಂಜೂರಾದ ಜಮೀನಿನ ವಾಸ್ತವ ಪರಿಸ್ಥಿತಿಗಳನ್ನು ಗಮನದಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

8. ಸರ್ಕಾರದ ಪೂರ್ವಾನುಮತಿ ಇಲ್ಲದೆ ಭೂಮಿಯನ್ನು ಮಂಜೂರು ಮಾಡಲಾದ ಉದ್ದೇಶಕ್ಕಲ್ಲದೆ ಇತರೆ ಯಾವುದೇ ಉದ್ದೇಶಕ್ಕಾಗಿಯೂ ಇದನ್ನು ವಿನಿಯೋಗಿಸತಕ್ಕದ್ದಲ್ಲ.

9. ಮಂಜೂರಾದ ಜಮೀನನ್ನು ಪರಾಭಾರೆ ಮಾಡಲು, ಗುತ್ತಿಗೆ ನೀಡಲು, ವಾಣಿಜ್ಯ ಉದ್ದೇಶಕ್ಕೆ ಬಳಸಲು, ಖಾಸಗಿ ಸಂಸ್ಥೆ / ವ್ಯಕ್ತಿಗೆ ನೀಡಲು ಅವಕಾಶವಿಲ್ಲ.

10. ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ, ಈ ಮಂಜೂರಾತಿ ಆದೇಶವನ್ನು ನಿಯಮಾನುಸಾರ ರದ್ದುಪಡಿಸಿ, ಯಾವುದೇ ಪರಿಹಾರ ನೀಡದೆ ಮಂಜೂರಾದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಸಂಖ್ಯೆ:ಆಇ 578 ವೆಚ್ಚ-7/2017 ದಿನಾಂಕ:28-07-2017ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

PR-325

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ SC-25

ಎಂ.ಇ.ಚನ್ನಬಸವರಾಜ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ. (ಭೂ.ಮಂಜೂರಾತಿ-3)೧೩೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ಭಾಗ ೧ WATER RESOURCES SECRETARIAT SUB : Approval to the formation of a Technical Committee to assess the reasons/ causes for variation in BOQ under the powers vested with the Empowered Committee, as supportive committee for implementation of the Dam Rehabilitation and Improvement Project (DRIP) with loan assistance from the World Bank.

READ : 1. Govt.Order.No.WRD/07/DSP/2009, Bengaluru, Dtd:12/19-05-2011.

2. Proceedings of the Sixth meeting of the Empowered Committee for DRIP held on 08-08-2017.

3. Chief Engineer & Nodal Officer(DRIP), WRDO, B'lore Ltr No.CE/ WRDO/SPMU/DRIP/2017-18/347, Dtd: 23-08-2017.

PREAMBLE :

In the Government Order read at (1) above, approval has been accorded for constitution of Empowered Committee for the timely implementation of the project and to achieve co-ordination of the various agencies and department involved in the project, as per the guidelines issued by the Finance Department vide circular No. FD 27 PMU 1997, Dated: 13.03.1999 and with the concurrence of the Finance Department vide Note No. PWD 730 FC-1/10, Dated: 04.10.2010 and Note No. PWD 73 FC-1/11, Dated: 09.02.2011 and Planning Department vide letter No. PD 04 PFE 2010, Dated: 29.10.2010 and Note No. PD 01 OTM 2011, Dated: 28.01.2011.

Empowered Committee has been constituted on 12.05.2011 with the following powers:

(a) Approve the works to be taken up under the Dam Rehabilitation and Improvement Project (DRIP) Programme.

(b) Sanction and Award contracts regardless of their costs.

(c) Engage consultants as per the project agreement with the World Bank.

(d) Approve the requirements of staff to implement the project.

(e) Create posts for the duration of the project in accordance with the project agreement or to be filled up on contract.

(f) Procure vehicles, equipment, furniture and other supplies, consultancy services and procurement of Civil Works as provided in the Project Agreement.

(g) To constitute sub-committees such as Project Steering Committee, Tender Evaluation Committee as supportive Committees reporting to Empowered Committee, as and when required for smooth implementation of the proposed project.

(h) Take any other decision for the smooth implementation of the project.

(i) Review the progress of the project implementation.

In the Powers vested with the Empowered Committee, it has been stated at para (g) that the Committee shall constitute sub-committees such as Project Steering Committee, Tender Evaluation Committee as supportive Committees reporting to Empowered committee, as and when required for smooth implementation of the proposed project.

In the Sixth Empowered Committee meeting held on 08.08.2017, it was directed to constitute a Technical Committee as per the powers vested with the Empowered Committee to recommend the Variation/ Extra Financial Implication under the Chairmanship of Chief Engineer, WRDO & Nodal Officer (DRIP), Project Director, SPMU-DRIP as the Member Secretary and Chief Engineer, Superintending Engineer and Executive Engineer of the concerned dam, SPMU technical consultant as members and directed that this committee shall scrutinize the proposals received from the Managing Directors of the concerned Nigams and to place the same before the Empowered Committee for according approval to Variation/EFI proposals.

The Empowered Committee has accorded approval to the following delegation of powers to the Technical Committee vide the

Sl.No Issues CE-WRDO & Nodal Officer Empowered Committee
a To approve variations in BOQ (extra & deviated items) Upto 5% of Original Contract price on recommendation of Technical committee. Above 5% of Original Contract price on recommendation of Technical committee.

GOVERNMENT ORDER NO. WRD 15 DSP 2017 BENGALURU, DTD: 15-09-2017

The TECHNICAL COMMITTEE for DRIP is constituted as detailed below under the Powers vested with the EMPOWERED

1 Chief Engineer & Nodal officer (DRIP), WRDO, Bengaluru Chairman
2 Chief Engineer of the concerned DRIP Dam Member
3 Superintending Engineer (Hydrology) & Project Director (SPMU-DRIP), Bengaluru Member Secretary
4 Superintending Engineer of concerned DRIP Dam Member
5 Executive Engineer of concerned DRIP Dam Member
6 S.L Shivaprasad, Chief Engineer (Rtd), SPMU Consultant Member
7 N.S Bendre, Former Executive Director, KPCL, SPMU Consultant Member
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ೧೩೧೧

i) Look into reasons/ causes for variations in civil contracts of Karnataka State, Dam Rehabilitation and Improvement Project.

ii) Assess/ analyse all the variations and recommend to the Chief Engineer & Nodal officer (DRIP), WRDO/ Empowered Committee for consideration of variations.

Sl.No Issues CE-WRDO & Nodal Officer Empowered Committee
a To approve variations in BOQ (extra & deviated items) Upto 5% of Original Contract price on recommendation of Technical committee. Above 5% of Original Contract price on recommendation of Technical committee.

By order and in the name of the Governor of Karnataka PR-326

B. HARINARAYAN

SC-150

Under Secretary to Government (KBJN),

Water Resources Department.

ಸಹಕಾರ ಸಚಿವಾಲಯ

ವಿಷಯ : 2016-17ನೇ ಸಾಲಿಗೆ ಇದ್ದಂತೆ ವಿವಿಧ ಯೋಜನೆಗಳಡಿ ಎನ್.ಸಿ.ಡಿ.ಸಿ. ಯಿಂದ ಪಡೆದಿರುವ ಸಾಲಗಳ ವಾರ್ಷಿಕ ಕಂತಿನ ಅಸಲು ಮತ್ತು ಬಡ್ಡಿಯನ್ನು ಪಾವತಿಸುವ ಬಗ್ಗೆ.

ಓದಲಾಗಿದೆ : ಸಹಕಾರ ಸಂಘಗಳ ನಿಬಂಧಕರ ಪತ್ರ ಸಂಖ್ಯೆ: ಆರ್‌ಸಿಎಸ್/ ಎಲ್ಎನ್ಎಸ್ / ಎನ್‌ಸಿಡಿಸಿ/17/2017-18, ದಿನಾಂಕ : 31-08-2016.

ಪ್ರಸ್ತಾವನೆ :

ಮೇಲೆ ಓದಲಾದ ಪತ್ರದಲ್ಲಿ ಸಹಕಾರ ಸಂಘಗಳ ನಿಬಂಧಕರು 2016-17ನೇ ಸಾಲಿನ ಅಂತ್ಯಕ್ಕೆ ಎನ್.ಸಿ.ಡಿ.ಸಿ. ವತಿಯಿಂದ ವಿವಿಧ ಯೋಜನೆಗಳಿಗೆ ಪಡೆದಿರುವ ಸಾಲಗಳ ವಾರ್ಷಿಕ ಅಸಲು ಕಂತು `.18,62,100/- ಮತ್ತು ಬಡ್ಡಿ `.2,89,170/- ಸೇರಿ ಒಟ್ಟು `.21,51,270/-ಗಳನ್ನು ಮರುಪಾವತಿಸಬೇಕೆಂದು, ದಿನಾಂಕ: 05-10-2017ರೊಳಗೆ ಎನ್.ಸಿ.ಡಿ.ಸಿ.ಗೆ ಸರ್ಕಾರದಿಂದ ಹಣ ಪಾವತಿಸಿದಲ್ಲಿ ಈ ಬಾಕಿ ಕಂತಿನ ಹಣದ ಮೇಲೆ ರಿಬೇಟ್ ಸೌಲಭ್ಯ ದೊರಕುವುದಾಗಿ ಉಪನಿರ್ದೇಶಕರು, ಎನ್.ಸಿ.ಡಿ.ಸಿ., ನವದೆಹಲಿ ರವರ ಪತ್ರ ಸಂಖ್ಯೆ: ಎನ್‌ಸಿಡಿಸಿ/ಎ&ಸಿ/X(1)ಆರ್ಇಪಿ/2001-02/3756, ದಿನಾಂಕ: 07-07-2017 ರಲ್ಲಿ ತಿಳಿಸಿರುವುದರಿಂದ ಅದರಂತೆ, ದಿನಾಂಕ: 05-10-2017ರೊಳಗಾಗಿ ಸಾಲದ ಕಂತು ಮರುಪಾವತಿಸಲು ಸೂಕ್ತ ಆದೇಶ ಹೊರಡಿಸಲು ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಕೆಳಕಂಡ ಆದೇಶವನ್ನು ಹೊರಡಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಸಿಒ 356 ಸಿಎಲ್ಎಸ್ 2017, ಬೆಂಗಳೂರು, ದಿನಾಂಕ: 21-9-2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2016-17ನೇ ಸಾಲಿನ ಅಂತ್ಯಕ್ಕೆ ಎನ್.ಸಿ.ಡಿ.ಸಿ. ವತಿಯಿಂದ ವಿವಿಧ ಯೋಜನೆಗಳಿಗೆ ಪಡೆದಿರುವ ಸಾಲಗಳ ಬಾಬ್ತು ಅಸಲು ಮತ್ತು ಬಡ್ಡಿ ಮರುಪಾವತಿ `. 21,51,270/- ( ಇಪ್ಪತ್ತೊಂದು ಲಕ್ಷದ ಐವತ್ತೊಂದು ಸಾವಿರದ ಇನ್ನೂರ ಎಪ್ಪತ್ತು ರೂಪಾಯಿಗಳು ಮಾತ್ರ)ಗಳನ್ನು ಅಂದರೆ ಅಸಲು `. 18,62,100/- (ಹದಿನೆಂಟು ಲಕ್ಷ ಅರವತ್ತೆರಡು ಸಾವಿರದ ನೂರು ರೂಪಾಯಿಗಳು ಮಾತ್ರ)ಗಳು ಲೆಕ್ಕ ಶೀರ್ಷಿಕೆ 6003-00-108-0-01-240 ರಡಿಯಲ್ಲಿ ಹಾಗೂ ಬಡ್ಡಿ `. 2,89,170/- (ಎರಡು ಲಕ್ಷದ ಎಂಭತ್ತೊಂಭತ್ತು ಸಾವಿರದ ಒಂದು ನೂರ ಎಪ್ಪತ್ತು ರೂಪಾಯಿಗಳು ಮಾತ್ರ)ಗಳನ್ನು ಲೆಕ್ಕ ಶೀರ್ಷಿಕೆ 2049-01-200-2-03-240 ರಡಿಯಲ್ಲಿ ಬಿಡುಗಡೆ ಮಾಡಿ ಎನ್.ಸಿ.ಡಿ.ಸಿ., ನವದೆಹಲಿ ಈ ಸಂಸ್ಥೆಗೆ ಪಾವತಿಸಲು ಆದೇಶಿಸಿದೆ.

ಸದರಿ ಮೊಬಲಗನ್ನು ಪಾವತಿಸಲು ಅನುವಾಗಲು ಹಾಗೂ ಖಜಾನೆಯಿಂದ ಡ್ರಾ ಮಾಡಲು ಸಲ್ಲಿಸಬೇಕಾದ ಹಣ ಸಂದಾಯ ರಸೀದಿಯಲ್ಲಿ ಸಹಕಾರ ಸಂಘಗಳ ಜಂಟಿ ನಿಬಂಧಕರು (ಆಡಳಿತ ಮತ್ತು ಅಭಿವೃದ್ಧಿ) ರವರ ಸಹಿ ಮತ್ತು ಸಹಕಾರ ಸಂಘಗಳ ನಿಬಂಧಕರುರವರ ಮೇಲು ಸಹಿ ಪಡೆದು ಡ್ರಾ ಮಾಡಲು ಆದೇಶಿಸಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 221 ವೆಚ್ಚ-2 2017 ದಿನಾಂಕ: 14-09-2017 ರಲ್ಲಿ ನೀಡಲಾದ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR-327

SC-25

ಎಂ. ವೆಂಕಟಸ್ವಾಮಿ

ವಿಶೇಷ ಕರ್ತವ್ಯಾಧಿಕಾರಿ ಹಾಗೂ

ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ

ಸಹಕಾರ ಇಲಾಖೆ.

೧೩೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ಭಾಗ ೧

ಸಹಕಾರ ಸಚಿವಾಲಯ

ವಿಷಯ : ಖಜಾನೆ-2 ಸಮಗ್ರ ಹಣಕಾಸು ನಿರ್ವಹಣ ವ್ಯವಸ್ಥೆಯಲ್ಲಿ ಇಲಾಖೆಗಳಿಗೆ ಕಛೇರಿ ವೆಚ್ಚಗಳಡಿ ಎರಡನೇ ಕಂತಿನ ಅನುದಾನ ಬಿಡುಗಡೆ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಸಿಒ 183 ಸಿಎಲ್ಎಸ್ 2017, ಬೆಂಗಳೂರು, ದಿನಾಂಕ: 03-05-2017.

2. ಸಹಕಾರ ಸಂಘಗಳ ನಿಬಂಧಕರ ಪತ್ರ ಸಂಖ್ಯೆ: ಆರ್‌ಸಿಎಸ್/ಬಿಯುಡಿ-3/02/2017-18 ದಿನಾಂಕ: 04-07-2017. 3. ಸರ್ಕಾರದ ಆದೇಶ ಸಂಖ್ಯೆ: ಆಇ 3 ಟಿಎಆರ್ 2016, ದಿನಾಂಕ: 07-04-2017. 4. ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 09 ಬಿಪಿಇ 2017, ದಿನಾಂಕ: 29-06-2017.

ಪ್ರಸ್ತಾವನೆ:

ಸಹಕಾರ ಇಲಾಖೆಗೆ 2017-18ನೇ ಸಾಲಿಗೆ ನಿರ್ದೇಶನ ಮತ್ತು ಆಡಳಿತ ಲೆಕ್ಕ ಶೀರ್ಷಿಕೆ 2425-00-001-0-01 ರಡಿ 021- ವೈದ್ಯಕೀಯ ವೆಚ್ಚ ಹಿಂಬರಿಸುವುದು `.86.00 ಲಕ್ಷ, 041- ಪ್ರಯಾಣ ವೆಚ್ಚ `.102.00 ಲಕ್ಷ, 051- ಸಾಮಾನ್ಯ ವೆಚ್ಚಗಳು `. 164.00 ಲಕ್ಷ. 052- ದೂರವಾಣಿ ವೆಚ್ಚ `. 33.00 ಲಕ್ಷ. 034- ಹೊರಗುತ್ತಿಗೆ ನೌಕರರ ವೇತನ `. 144.00 ಲಕ್ಷ 071- ಕಟ್ಟಡ ವೆಚ್ಚ `. .156.00 ಲಕ್ಷ 195- ಸಾರಿಗೆ ವೆಚ್ಚ `. 120.00 ಲಕ್ಷಗಳನ್ನು ಆಯವ್ಯಯದಲ್ಲಿ ಅವಕಾಶ ಒದಗಿಸಲಾಗಿರುತ್ತದೆ.

ಮೇಲೆ ಓದಲಾದ (1)ರ ಆದೇಶದಲ್ಲಿ ಸಹಕಾರ ಸಂಘಗಳ ನಿಬಂಧಕರಿಗೆ ಆಯವ್ಯಯದ ಶೇ.25ರಷ್ಟು ಮೊಬಲಗನ್ನು ಬಿಡುಗಡೆ ಮಾಡಲಾಗಿರುತ್ತದೆ.

ಮೇಲೆ ಓದಲಾದ (2)ರ ಪತ್ರದಲ್ಲಿ 2017-18ನೇ ಸಾಲಿಗೆ ಕಛೇರಿ ವೆಚ್ಚಗಳಡಿ ಇಲಾಖೆಗೆ ಪೂರ್ಣ ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಲು ಸಹಕಾರ ಸಂಘಗಳ ನಿಬಂಧಕರು ಕೋರಿರುತ್ತಾರೆ.

ಮೇಲೆ ಓದಲಾದ (3)ರ ಆದೇಶದಲ್ಲಿ 2017-18ನೇ ಸಾಲಿಗೆ ಕ್ಷೇತ್ರ ಇಲಾಖೆಗಳಿಗೆ ಆಡಳಿತ ಇಲಾಖೆಯು ಕಡ್ಡಾಯವಾಗಿ ಖಜಾನೆ-2ರಲ್ಲಿ ಹಣ ಬಿಡುಗಡೆ ಮಾಡಲು ಮಂಜೂರಾತಿ ನೀಡಿರುತ್ತಾರೆ.

ಮೇಲೆ ಓದಲಾದ (4)ರ ಆದೇಶದಲ್ಲಿ 2017-18ನೇ ಸಾಲಿನಲ್ಲಿ 1ನೇ ಏಪ್ರಿಲ್ 2017 ರಿಂದ 31 ನೇ ಮಾರ್ಚ್ 2018ರ ಅವಧಿಗೆ ಖರ್ಚನ್ನು ಮಾಡಲು ಲೇಖಾನುದಾನದ ಮೂಲಕ ವೆಚ್ಚ ಮಾಡಲು ಇಲಾಖಾ ಮುಖ್ಯಸ್ಥರು ಹಾಗೂ ಅಂದಾಜು ಅಧಿಕಾರಿಗಳಿಗೆ ಅನುಮತಿ ನೀಡಲಾಗಿರುತ್ತದೆ.

ಸಹಕಾರ ಸಂಘಗಳ ನಿಬಂಧಕರ ಪ್ರಸ್ತಾವನೆಯನ್ನು ಪರಿಶೀಲಿಸಿ, ಎರಡನೇ ಕಂತಿನ ಶೇ.25 ರಷ್ಟು ಅನುದಾನವನ್ನು ಬಿಡುಗಡೆಗೊಳಿಸಲು ಈ ಕೆಳಕಂಡ ಆದೇಶವನ್ನು ಹೊರಡಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಸಿಒ 183 ಸಿಎಲ್ಎಸ್ 2017, ಬೆಂಗಳೂರು, ದಿನಾಂಕ: 21-9-2017.

ಪ್ರಸ್ತಾವನೆಯಲ್ಲಿ ತಿಳಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸಹಕಾರ ಸಂಘಗಳ ನಿಬಂಧಕರಿಗೆ ನಿರ್ದೇಶನ ಮತ್ತು ಆಡಳಿತ ಲೆಕ್ಕ ಶೀರ್ಷಿಕೆ 2425-00- 001-0-01 ರಡಿ ಮೊದಲನೇ ಕಂತಿನಲ್ಲಿ ಬಿಡುಗಡೆಯಾಗಿ ನಂತರ ಬಿಡುಗಡೆಗೆ ಬಾಕಿ ಉಳಿದ ಅನುದಾನದಲ್ಲಿ ಎರಡನೇ ಕಂತಿನ ಶೇ.25 ರಷ್ಟು ಅನುದಾನವನ್ನು ಕೋಷ್ಟಕದಲ್ಲಿ ವಿವರಿಸಿರುವಂತೆ ಬಿಡುಗಡೆ ಮಾಡಿ ಆದೇಶಿಸಿದೆ.

ಯೋಜನೆ : ನಿರ್ದೇಶನ ಮತ್ತು ಆಡಳಿತ

ಲೆಕ್ಕಶೀರ್ಷಿಕೆ : 2425-00-001-0-01

ಅಬ್ಜಕ್ಟೀವ್ ಕೋಡ್ ಆಯವ್ಯಯ ಅವಕಾಶ ವ ೂದಲ ಕಂತಿನಲ್ಲಿ ಹಣ ೆ ಬಿಡುಗಡೆ ಮಾಡಿರುವ ಮೊತ್ತ ಬಾಕಿ ಉಳಿಕೆ ಎರಡನೇ ಕಂತಿನ ಹಣ ಬಿಡುಗಡೆ ವ iಾಡಿರುವ ಮೊತ್ತ
021- ವೈದ್ಯಕೀಯ ವೆಚ್ಚ ಹಿಂಬರಿಸುವುದು 86.00 21.50 64.50 21.50
041- ಪ್ರಯಾಣ ವೆಚ್ಚ 102.00 25.50 76.50 25.50
051- ಸಾಮಾನ್ಯ ವೆಚ್ಚ 164.00 41.00 123.00 41.00
052- ದೂರವಾಣಿ ವೆಚ್ಚ 33.00 8.25 24.75 8.25
034- ಹ ೂರಗುತ್ತಿಗೆ ೆ ನೌಕರರ ವೇತನ 144.00 36.00 108.00 36.00
071- ಕಟ್ಟಡ ವೆಚ್ಚ 156.00 39.00 117.00 39.00
195- ಸಾರಿಗೆ ವೆಚ್ಚ 120.00 30.00 90.00 30.00

ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ ಎಫ್‌ಡಿ 1 ಟಿಎಫ್‌ಸಿ 2017, ಬೆಂಗಳೂರು, ದಿನಾಂಕ : 05-04-2017ರಲ್ಲಿ ಸರ್ಕಾರದ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸಿರುವ ವಿತ್ತಾಧಿಕಾರದನ್ವಯ ಮತ್ತು ಆಂತರಿಕ ಆರ್ಥಿಕ ಸಲಹೆಗಾರರ ಟಿಪ್ಪಣಿ ಸಂಖ್ಯೆ: ಸಇ 88 ಆಂಆಸ(ಎ) 2017, ದಿನಾಂಕ: 12-09-2017ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR-329

ಡಿ. ಧನಂಜಯ

SC-50

ಸರ್ಕಾರದ ಅಧೀನ ಕಾರ್ಯದರ್ಶಿ-3 (ಪ್ರ)

ಸಹಕಾರ ಇಲಾಖೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ೧೩೧೩

ಕಂದಾಯ ಸಚಿವಾಲಯ

ವಿಷಯ : ಬಳ್ಳಾರಿ ಜಿಲ್ಲೆ, ಸಂಡೂರು ತಾಲ್ಲೂಕಿನ 14 ಇನಾಂ ಗ್ರಾಮಗಳ ಸೆಟ್ಲ್‌ಮೆಂಟ್ ಅಧಿಕಾರಿಯನ್ನು ನೇಮಿಸುವ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಕಂಇ 270 ಭೂದಾಅ 2015, ದಿನಾಂಕ: 12.04.2016.

2. ಆಯುಕ್ತರು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ, ರವರ ಪತ್ರ ಸಂಖ್ಯೆ:11025/01/2016, ದಿನಾಂಕ: 15-06-2017.

ಪ್ರಸ್ತಾವನೆ :

ಮೇಲೆ ಓದಲಾದ ಪತ್ರದ ಕ್ರ.ಸಂ.(1) ರ ಆದೇಶದಲ್ಲಿ ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನಲ್ಲಿರುವ 1) ಧರ್ಮಾಪುರ 2) ಕಾರ್ತಿಕೇಶ್ವರ 3) ದೇವಗಿರಿ 4) ಸುಶೀಲಾನಗರ 5) ಸಿದ್ದಾಪೂರ 6) ರಾಮಘಡ 7) 18-ಹುಲಿಕುಂಟೆ 8) ರಣಜಿತಪುರ 9) ಶಂಕ್ರಾಪುರ 10) ಮುದಾರಿಪುರ 11) ಎಸ್.ಓಬಳಾಪುರ 12) ಜೋಡಿ ಬೊಮ್ಮನಹಳ್ಳಿ 13) ಜೋಡಿ ಕಸಿನಾಯ್ಕನಹಳ್ಳಿ ಮತ್ತು 14) ತಿಪ್ಪನಮರಡಿ ಈ ಗ್ರಾಮಗಳನ್ನು ಹೊಸದಾಗಿ ಅಳತೆ ಮಾಡಿ ನಕ್ಷೆ ತಯಾರಿಸಿ ಸೆಟ್ಲಮೆಂಟ್ ಮಾಡಬೇಕಾಗಿದ್ದು, ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ ಕಲಂ:106, 112, 114, 116ರ ಪ್ರಕಾರ ಸದರಿ ಗ್ರಾಮಗಳಲ್ಲಿ ಮರುಭೂಮಾಪನ ಜಾರಿಗೊಳಿಸಲು ಸರ್ಕಾರವು ಆದೇಶಿಸಿದೆ.

ಆಯುಕ್ತರು, ಭೂಮಾಪನ ಇಲಾಖೆ, ರವರು ಮೇಲೆ ಓದಲಾದ ಕ್ರ.ಸಂ (2) ರಲ್ಲಿನ ಪತ್ರದಲ್ಲಿ ಇನಾಂ ಗ್ರಾಮಗಳ ಮರು ಭೂಮಾಪನ ಮತ್ತು ಸೆಟ್ಲಮೆಂಟ್ ಕಾರ್ಯವನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು, ಬಳ್ಳಾರಿ ಇವರನ್ನು ಕೋರಲಾಗಿತ್ತು. ಜಿಲ್ಲಾಧಿಕಾರಿಗಳು, ಬಳ್ಳಾರಿ ಇವರು 14 ಗ್ರಾಮಗಳ ಮರುಭೂಮಾಪನ ಮತ್ತು ಸೆಟ್ಲಮೆಂಟ್ ಕಾರ್ಯವು ಪೂರ್ಣಗೊಂಡಿದ್ದು ಸೆಟ್ಲಮೆಂಟ್ ಜಾರಿಗೊಳಿಸಲು ಸೆಟ್ಲಮೆಂಟ್ ಅಧಿಕಾರಿಯನ್ನು ನೇಮಿಸಿಕೊಡುವಂತೆ ಕೋರಿರುತ್ತಾರೆ. ಸಂಡೂರು ತಾಲ್ಲೂಕಿನ 14 ಇನಾಂ ಗ್ರಾಮಗಳ ಪೈಕಿ 10 ಗ್ರಾಮಗಳು ಕರ್ನಾಟಕ (ಸಂಡೂರು ಪ್ರದೇಶ) ಇನಾಂಗಳ ರದ್ದಿಯಾತಿ ವ್ಯಾಪ್ತಿಗೆ ಮತ್ತು 3 ಗ್ರಾಮಗಳು ಮೈಸೂರು ಇನಾಂ ರದ್ದಿಯಾತಿ ವ್ಯಾಪ್ತಿಗೆ ಹಾಗೂ 1 ಗ್ರಾಮವು ಮದರಾಸು ಪ್ರದೇಶ ಇನಾಂ ರದ್ದಿಯಾತಿ ವ್ಯಾಪ್ತಿಗೆ ಒಳಪಡುತ್ತವೆ.

ಕರ್ನಾಟಕ (ಸಂಡೂರು ಪ್ರದೇಶ) ಇನಾಂಗಳ ರದ್ದಿಯಾತಿ ಅಧಿನಿಯಮ, 1976ರ ಕಲಂ:8(2)ರಲ್ಲಿ ಜಿಲ್ಲಾಧಿಕಾರಿಗಳು ಸೆಟ್ಲಮೆಂಟ್ ಅಧಿಕಾರಿಯಾಗಿರುತ್ತಾರೆ.

ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ ಕಲಂ:18ರಲ್ಲಿ ರಾಜ್ಯ ಸರ್ಕಾರವು ತಾನು ಅವಶ್ಯವೆಂದು ಭಾವಿಸುವಂತ ಅಧಿಕಾರಿಗಳನ್ನು ಅಧಿಸೂಚನೆ ಮೂಲಕ ಸೆಟ್ಲಮೆಂಟ್ ಅಧಿಕಾರಿಯನ್ನು ನೇಮಕ ಮಾಡಬಹುದಾಗಿರುತ್ತದೆ. ಪ್ರಸ್ತುತ ಪ್ರಕರಣದಲ್ಲಿ ಹೆಚ್ಚಿನ ನಿಯಮಗಳಲ್ಲಿ ಜಿಲ್ಲಾಧಿಕಾರಿಗಳೇ ಸೆಟ್ಲಮೆಂಟ್ ಅಧಿಕಾರಿಯಾಗಿರುತ್ತಾರೆ. ಆದ್ದರಿಂದ, ಸಂಡೂರು ತಾಲ್ಲೂಕಿನ 14 ಇನಾಂ ಗ್ರಾಮಗಳ ಮರುಭೂಮಾಪನ ಕಾರ್ಯವು ಅಂತಿಮಗೊಂಡಿರುವುದರಿಂದ ಸೆಟ್ಲಮೆಂಟ್ ಜಾರಿಗೊಳಿಸಲು ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಬೇಕಾಗುತ್ತದೆ. ಆದರೆ, ವಿಶೇಷ ಜಿಲ್ಲಾಧಿಕಾರಿಗಳ ಹುದ್ದೆ ಇಲ್ಲವಾದ್ದರಿಂದ ಸದರಿ ಅಧಿಕಾರವನ್ನು ಉಪವಿಭಾಗಾಧಿಕಾರಿಗಳಿಗೆ ಪ್ರತ್ಯಾಯೋಜಿಸಿ ನೇಮಕ ಮಾಡಿ ಆದೇಶ ಹೊರಡಿಸಲು ಕೋರಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಕಂಇ 113 ಭೂದಾಅ 2017, ಬೆಂಗಳೂರು, ದಿನಾಂಕ : 15-07-2017.

ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆ, ಸಂಡೂರು ತಾಲ್ಲೂಕಿನ 14 ಇನಾಂ ಗ್ರಾಮಗಳ ಮರುಭೂಮಾಪನ ಕಾರ್ಯವು ಅಂತಿಮಗೊಂಡಿರುವುದರಿಂದ ಸೆಟ್ಲಮೆಂಟ್ ಜಾರಿಗೊಳಿಸಲು ಉಪವಿಭಾಗಾಧಿಕಾರಿಗಳು, ಬಳ್ಳಾರಿ ವಿಭಾಗ, ಇವರಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಿ ನೇಮಕ ಮಾಡಿ ಆದೇಶಿಸಿದೆ.

PR-361

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-25

ಸಿ.ಪುಟ್ಟನಂಜಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ. (ಭೂಮಾಪನ)

ಕಂದಾಯ ಸಚಿವಾಲಯ

ವಿಷಯ : ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ವಂದಾರಗುಪ್ಪೆ ಗ್ರಾಮದ ಸ.ನಂ. 13ರಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ 10-00 ಎಕರೆ ಜಮೀನನ್ನು ಕೇಂದ್ರೀಯ ವಿದ್ಯಾಲಯ ಸ್ಥಾಪನೆಗಾಗಿ ನೀಡಲು ಹಾಗೂ ಸದರಿ ಜಮೀನಿಗೆ ಬದಲಿಯಾಗಿ ಸ.ನಂ.136 ರಲ್ಲಿ 12-19 ಎಕರೆ ಸರ್ಕಾರಿ ಖರಾಬು ಜಮೀನನ್ನು ತೋಟಗಾರಿಕೆ ಇಲಾಖೆಗೆ ಉಚಿತವಾಗಿ ಮಂಜೂರು ಮಾಡುವ ಕುರಿತು.

ಓದಲಾಗಿದೆ : ಜಿಲ್ಲಾಧಿಕಾರಿ, ರಾಮನಗರ ಜಿಲ್ಲೆ ಇವರ ಪತ್ರ ಸಂಖ್ಯೆ:ರಾಜಿಕಾ/ಎಲ್ಎನ್‌ಡಿ/ಸಿಆರ್ /159/2015-16, ದಿನಾಂಕ: 31-03-2017 ಮತ್ತು 05-04-2017.

ಪ್ರಸ್ತಾವನೆ:

ಮೇಲೆ ಓದಲಾದ ದಿನಾಂಕ:31-03-2017ರ ಪತ್ರದಲ್ಲಿ ಜಿಲ್ಲಾಧಿಕಾರಿ, ರಾಮನಗರ ಜಿಲ್ಲೆ ಇವರು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ವಂದಾರಗುಪ್ಪೆ ಗ್ರಾಮದ ಸ.ನಂ.13ರಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ 10-00 ಎಕರೆ ಜಮೀನನ್ನು 'ಕೇಂದ್ರಿಯ ವಿದ್ಯಾಲಯ' ಸ್ಥಾಪನೆಗಾಗಿ ಹಾಗೂ ಸದರಿ ಜಮೀನಿನ ಬದಲಿಯಾಗಿ ಸ.ನಂ.136 ರಲ್ಲಿನ 12-19 ಎಕರೆ ಸರ್ಕಾರಿ 'ಬಿ' ಖರಾಬು ಜಮೀನನ್ನು ತೋಟಗಾರಿಕೆ ಇಲಾಖೆಗೆ ಮಂಜೂರು ಮಾಡಲು ಪ್ರಸ್ತಾಪಿಸಿದ್ದಾರೆ.

ಮುಂದುವರೆದು, ರಾಮನಗರ ಜಿಲ್ಲೆಯು ಬೆಂಗಳೂರು ಜಿಲ್ಲೆಗೆ ಹೊಂದಿಕೊಂಡಂತಿದ್ದು, ಶೈಕ್ಷಣಿಕ ಉದ್ದೇಶಕ್ಕಾಗಿ ವಿದ್ಯಾರ್ಥಿಗಳು ಬೆಂಗಳೂರಿನ ವಿದ್ಯಾಸಂಸ್ಥೆಗಳನ್ನು ಅವಲಂಬಿಸಬೇಕಾಗಿರುತ್ತದೆ. ಈ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಮೌಲ್ಯಯುತ ಶಿಕ್ಷಣ ಒದಗಿಸುವ೧೩೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ಭಾಗ ೧ ಸಲುವಾಗಿ ಕೇಂದ್ರ ಸರ್ಕಾರದ ವತಿಯಿಂದ ಮಂಜೂರಾಗಿರುವ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಅಗತ್ಯ ಜಮೀನನ್ನು ನೀಡುವುದು ಅವಶ್ಯಕವಾಗಿರುತ್ತದೆ ಎಂದು ಸಹ ವರದಿಯಲ್ಲಿ ತಿಳಿಸಿರುತ್ತಾರೆ.

ದಿನಾಂಕ : 05-04-2017ರ ಪತ್ರದಲ್ಲಿ ಪ್ರಸ್ತಾವಿತ ವಂದಾರಗುಪ್ಪೆ ಗ್ರಾಮದ ಸ.ನಂ.13 ರಲ್ಲಿನ ಪಹಣಿ ಪತ್ರಿಕೆ ಪ್ರಕಾರ ಒಟ್ಟು 16-11 ಎಕರೆ ಜಮೀನು ತೋಟಗಾರಿಕೆ ಇಲಾಖೆಗೆ ಸೇರಿದ್ದು ಆ ಪೈಕಿ 10-00 ಎಕರೆ ಜಮೀನು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇದ್ದು ರಸ್ತೆ ಸಂಪರ್ಕವಿರುವುದರಿಂದ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗಾಗಿ ಸೂಕ್ತವಾಗಿರುತ್ತದೆಂದು ತಿಳಿಸಲಾಗಿದೆ. ಸದರಿ ವಿಸ್ತೀರ್ಣದ ಜಮೀನನ್ನು ತೋಟಗಾರಿಕೆ ಇಲಾಖೆಯಿಂದ ಹಿಂಪಡೆದು ಕೇಂದ್ರಿಯ ವಿದ್ಯಾಲಯ ಸ್ಥಾಪನೆಗಾಗಿ ಮಂಜೂರು ಮಾಡಲು ಹಾಗೂ ಸದರಿ ಜಮೀನಿಗೆ ಬದಲಿಯಾಗಿ ಸ.ನಂ.136 ರಲ್ಲಿ 12-19 ಎಕರೆ ಜಮೀನು ತೋಟಗಾರಿಕೆ ಇಲಾಖೆಗೆ ಮಂಜೂರು ಮಾಡಲು ಪ್ರಸ್ತಾಪಿಸಲಾಗಿದೆ. ಪಹಣಿ ಪತ್ರಿಕೆಯಲ್ಲಿ ಸದರಿ ವಿಸ್ತೀರ್ಣದ ಜಮೀನು 'ಸರ್ಕಾರಿ ಖರಾಬು' ಎಂದು ವರ್ಗೀಕೃತಗೊಂಡಿರುತ್ತದೆ. ಸದರಿ ಬಿ-ಖರಾಬು ಜಮೀನನ್ನು ಮಂಜೂರಿಸಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ. ಆದರೆ ಪ್ರಸ್ತಾಪಿತ ಜಮೀನು ಖರಾಬಿನ ಲಕ್ಷಣಗಳನ್ನು ಕಳೆದುಕೊಂಡಿದ್ದಲ್ಲಿ ಮಾತ್ರ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 68 ರಡಿಯಲ್ಲಿ ಪ್ರಕ್ರಿಯೆ ನಡೆಸಿ, ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸಿ ನಂತರ, ತೋಟಗಾರಿಕೆ ಇಲಾಖೆಗೆ ಮಂಜೂರಿಸಲು ಕ್ರಮವಹಿಸಬಹುದಾಗಿದೆ. ಮುಂದುವರೆದು, ಕೇಂದ್ರಿಯ ವಿದ್ಯಾಲಯ ಸಂಘಟನೆ, ನವದೆಹಲಿ, ಈ ಸಂಸ್ಥೆಯ ಕಛೇರಿ ಆದೇಶ ದಿನಾಂಕ: 30-03-2017 ರಲ್ಲಿ 2017-18ನೇ ಸಾಲಿನಲ್ಲಿ ಭಾರತ ಸರ್ಕಾರವು ದೇಶದಾದ್ಯಂತ 50 ಕೇಂದ್ರೀಯ ವಿದ್ಯಾಲಯಗಳನ್ನು ಸ್ಥಾಪಿಸಲು ತೀಮಾನಿಸಿದ್ದು, ಆ ಪೈಕಿ ಒಂದನ್ನು ರಾಮನಗರ ಜಿಲ್ಲೆ, ಚನ್ನಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿರುವುದಾಗಿ ತಿಳಿಸಿದೆ.

ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22ಎ(3)(i) ರನ್ವಯ ರಾಜ್ಯ ಸರ್ಕಾರದ ಯಾವುದೇ ಇಲಾಖೆಗಳಿಗೆ ಹಾಗೂ ನಿಯಮ 22ಎ(3)(iv) ರನ್ವಯ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸ್ವಾಮ್ಯದ ಸಂಸ್ಥೆಗಳಿಗೆ ಅವುಗಳಿಂದ ರಾಜ್ಯಕ್ಕೆ ನೇರವಾಗಿ ಸೌಲಭ್ಯ ದೊರಕುವುದಾದಲ್ಲಿ ಜಮೀನನ್ನು ಉಚಿತವಾಗಿ ಮಂಜೂರು ಮಾಡಲು ಅವಕಾಶವಿರುತ್ತದೆ.

ಜಿಲ್ಲಾಧಿಕಾರಿಗಳ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 98 ಎಲ್‌ಜಿಬಿ 2017, ಬೆಂಗಳೂರು, ದಿನಾಂಕ : 15.07.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ವಂದಾರಗುಪ್ಪೆ ಗ್ರಾಮದ ಸ.ನಂ.13ರಲ್ಲಿನ ತೋಟಗಾರಿಕೆ ಇಲಾಖೆಗೆ ಸೇರಿದ 10-00 ಎಕರೆ ಜಮೀನನ್ನು ಕಂದಾಯ ಇಲಾಖೆಗೆ ಹಿಂಪಡೆದು ಕೇಂದ್ರಿಯ ವಿದ್ಯಾಲಯ ಸ್ಥಾಪನೆಗಾಗಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22ಎ(3)(IV) ರನ್ವಯ ಉಚಿತವಾಗಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಹಿಂಪಡೆದ ಜಮೀನಿನ ಬದಲಿಯಾಗಿ ವಂದಾರಗುಪ್ಪೆ ಗ್ರಾಮದ ಸ.ನಂ.136 ರಲ್ಲಿನ 12-19 ಎಕರೆ 'ಸರ್ಕಾರಿ ಖರಾಬು' ಜಮೀನನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 68 ರಡಿಯಲ್ಲಿ ಪ್ರಕ್ರಿಯೆ ನಡೆಸಿ ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸಿದ ನಂತರ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22ಎ(3)(i) ರನ್ವಯ ತೋಟಗಾರಿಕೆ ಇಲಾಖೆಗೆ ಉಚಿತವಾಗಿ ಈ ಕೆಳಕಂಡ ಷರತ್ತಿಗೊಳಪಟ್ಟು ಮಂಜೂರು ಮಾಡಿ ಆದೇಶಿಸಿದೆ.

1. ಮಂಜೂರಾದ ಜಮೀನನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.

2. ಮಂಜೂರದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ ಹಾಗೂ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.

3. ಮಂಜೂರಾದ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂದಿರುಗಿಸತಕ್ಕದ್ದು.

4. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು ಹಾಗೂ ವಾಣಿಜ್ಯ ಉದ್ದೇಶಕ್ಕೆ ಬಳಸಬಾರದು.

5. ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

6. ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ನಿಯಮಾನುಸಾರ ಯಾವುದೇ ಪರಿಹಾರ ನೀಡದೆ ಮಂಜೂರಾತಿಯನ್ನು ರದ್ದುಗೊಳಿಸಲಾಗುವುದು ಹಾಗೂ ಜಮೀನನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

7. ಜಿಲ್ಲಾಧಿಕಾರಿಗಳು ಮಂಜೂರಾದ ಜಮೀನನ್ನು ಫಲಾನುಭವಿಗಳಿಗೆ/ಇಲಾಖೆಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

PR. 362

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 100

ಎಸ್.ಎಲ್. ಮಹಾಂತೇಗೌಡ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ. (ಭೂಮಂಜೂರಾತಿ-1)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ೧೩೧೫

ಕಂದಾಯ ಸಚಿವಾಲಯ

ವಿಷಯ : ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ "Ease of Doing Business" ನ್ನು Business Reform Action Plan 2017 ರಡಿ ಕಾರ್ಯಗತಗೊಳಿಸುವ ಬಗ್ಗೆ.

ಓದಲಾಗಿದೆ : 1. ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕ ಆಯುಕ್ತರ ಕಛೇರಿಯ ಪ್ರಸ್ತಾವನೆ ಸಂಖ್ಯೆ :

Comp/66/2012-13 ದಿನಾಂಕ :19/21-04-2017

2. ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ದೇಶನ ದಿನಾಂಕ : 03-08-2017.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ (1) ದಿನಾಂಕ : 19/21-04-2017ರ ಪ್ರಸ್ತಾವನೆಯಲ್ಲಿ, ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕ ಆಯುಕ್ತರವರು 2015-16ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಆಯವ್ಯಯ ಭಾಷಣದ ಪ್ಯಾರಾ ನಂ.513ರಲ್ಲಿ, "ಸುಲಭ ನೋಂದಣಿ" ದಸ್ತಾವೇಜುಗಳ ನೋಂದಣಿಗಾಗಿ ಆಯಾ ಜಿಲ್ಲೆಯೊಳಗೆ ಅನುಕೂಲವಾಗುವ ಉಪ ನೋಂದಣಿ ಅಧಿಕಾರಿ ಕಛೇರಿ ಆಯ್ಕೆ ಮಾಡಿ ಮತ್ತು ಸಮಯವನ್ನು ಮುಂಗಡವಾಗಿ ಕಾಯ್ದಿರಿಸಲು ಆನ್‌ಲೈನ್ ಮೂಲಕ ಅವಕಾಶ ಮಾಡಿ ಕೊಡಲಾಗುವುದು. ಸಾರ್ವಜನಿಕರು ಪಾವತಿಸಬೇಕಾದ ಮುದ್ರಾಂಕ ಹಾಗೂ ನೋಂದಣಿ ಶುಲ್ಕಗಳನ್ನು ತಾವೇ ಸ್ವತಃ ಲೆಕ್ಕ ಹಾಕಿ ಪಾವತಿಸಲು ಅವಕಾಶ ಕಲ್ಪಿಸಲಾಗುವುದು. ಕ್ರಯ ಪತ್ರ, ಮುಂತಾದ ವರ್ಗಾವಣೆ ದಸ್ತಾವೇಜು ನಮೂನೆಗಳನ್ನು ಆನ್‌ಲೈನ್ ನಲ್ಲಿ ದೊರೆಯುವಂತೆ ಹಾಗೂ ದಸ್ತಾವೇಜುಗಳ ದೃಡೀಕೃತ ನಕಲು, ಋುಣಭಾರ ಪತ್ರಗಳನ್ನು ಸಾರ್ವಜನಿಕರು ಪಡೆಯಲು "ಸುಲಭ ನೋಂದಣಿ" ವೆಬ್ ತಂತ್ರಾಂಶದಡಿ ತರಲು ಉದ್ದೇಶಿಸಲಾಗಿದ್ದು ಹಾಗೂ ನೋಂದಣಿ ಕಾಯ್ದೆ 1908ಕ್ಕೆ ಸೂಕ್ತ ತಿದ್ದುಪಡಿ ಮಾಡಿ ಕ್ರಯದ ಕರಾರು, ಲೀಸ್ ಪತ್ರಗಳು ಮತ್ತು ಲೀವ್ ಅಂಡ್ ಲೈಸನ್ಸ್ ದಸ್ತಾವೇಜುಗಳನ್ನು ಆನ್‌ಲೈನ್ ಮುಖಾಂತರ ನೋಂದಣಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿರುತ್ತದೆ.

Ease of Doing Business ಕುರಿತು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸುಲಭ ನೋಂದಣಿಯನ್ನು ಪಾಲಿಸಲು Business Reform R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೩೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೭, ೨೦೧೭ ಭಾಗ ೧

82: ಆಯಾ ಉಪ ನೋಂದಣಿ ಕಛೇರಿಗಳಲ್ಲಿ ನೋಂದಾಯಿಸಲು ಉದ್ದೇಶಿಸಲಾಗಿರುವ ದಸ್ತಾವೇಜುಗಳ ನೋಂದಣಿಗಾಗಿ ದಿನಾಂಕ ಮತ್ತು ಸಮಯವನ್ನು ಸ್ವಯಂಚಾಲಿತವಾಗಿ ನಿಗದಿಪಡಿಸಿಕೊಳ್ಳುವುದಕ್ಕಾಗಿ ಹಾಗೂ ತತ್ಸಂಬಂಧಿತ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸುವ ವ್ಯವಸ್ಥೆಯನ್ನು ಕಲ್ಪಿಸುವುದು.

84: ಸಲ್ಲಿಸಿದ ಅರ್ಜಿ ಮತ್ತು ದಸ್ತಾವೇಜುಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಿದ ಬಗ್ಗೆ ಅಥವಾ ನಿಗದಿಪಡಿಸಲಾಗಿರುವ ದಿನಾಂಕ ಮತ್ತು ಸಮಯವನ್ನು ಅರ್ಜಿದಾರರಿಗೆ ತಿಳಿಸುವ ಸಹಿ ಮಾಡಲ್ಪಟ್ಟ ತಿಳುವಳಿಕೆ ಪತ್ರವನ್ನು ಅರ್ಜಿದಾರರು ಪೋರ್ಟ್‌ಲ್ ಮುಖಾಂತರ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸುವುದು.

PR-360

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-300

ಟಿ. ನಾರಾಯಣಪ್ಪ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ. (ನೋಂದಣಿ ಮತ್ತು ಮುದ್ರಾಂಕ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 07 December 2017. Indian Gazettes, https://egazette.servantsofknowledge.in/details/in.gazette.karnataka_new.2017-12-07.Part-1/. Archive identifier in.gazette.karnataka_new.2017-12-07.Part-1.