Servants of Knowledge
Karnataka Gazette · Government of Karnataka

Karnataka Gazette, Part Part-1, 11 January 2018

Published 11 January 2018

Part
Part-1
Identifier
in.gazette.karnataka_new.2018-01-11.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೩

Volume 153

ಬೆಂಗಳೂರು, ಗುರುವಾರ, ಜನವರಿ ೧೧, ೨೦೧೮ (ಪುಷ್ಯ ೨೧, ಶಕ ವರ್ಷ ೧೯೩೯)

Bengaluru, Thursday, January 11, 2018 (Pushya 21, Shaka Varsha 1939)

ಸಂಚಿಕೆ ೨

Issue 2

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಮತ್ತು ಕಾನೂನು ಮಾಪನಶಾಸ್ತ್ರ ಸಚಿವಾಲಯ

ವಿಷಯ : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವಿವಿಧ ವೃಂದಗಳ ಒಟ್ಟು 352 ತಾತ್ಕಾಲಿಕ ಹುದ್ದೆಗಳನ್ನು ದಿನಾಂಕ: 01.04.2017 ರಿಂದ 31.03.2018 ರವರೆಗೆ ಮುಂದುವರೆಸುವ ಬಗ್ಗೆ – ಆದೇಶ.

ಓದಲಾಗಿದೆ: 1. ಸರ್ಕಾರದ ಆದೇಶ ಸಂಖ್ಯೆ: ಆನಾಸ 41 ಆಇಸೇ 2016, ದಿನಾಂಕ: 14.03.2016.

2. ಆಯುಕ್ತರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರ ಪತ್ರ ಸಂಖ್ಯೆ:ಸಿಎಫ್ಎಸ್/ಇಎಸ್‌ಟಿ(1)32/1986-87, ದಿನಾಂಕ: 03.03.2017, 10.07.2017 ಹಾಗೂ 07.08.2017.

ಪ್ರಸ್ತಾವನೆ:

ಮೇಲೆ (1)ರಲ್ಲಿ ಓದಲಾದ ದಿನಾಂಕ: 14.03.2016ರ ಸರ್ಕಾರದ ಆದೇಶದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ 352 ತಾತ್ಕಾಲಿಕ ಹುದ್ದೆಗಳನ್ನು ದಿನಾಂಕ: 01.04.2016 ರಿಂದ 31.03.2017ರವರೆಗೆ ಮುಂದುವರೆಸಿ ಆದೇಶಿಸಿದೆ.

ಆಯುಕ್ತರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ರವರು ಮೇಲೆ (2)ರಲ್ಲಿ ಓದಲಾದ ದಿನಾಂಕ: 03.03.2017,10.07.2017 ಹಾಗೂ 07.08.2017ರ ಪತ್ರಗಳಲ್ಲಿ ಮೇಲೆ (1)ರಲ್ಲಿ ಓದಲಾದ ದಿನಾಂಕ: 14.03.2016ರ ಆದೇಶದಲ್ಲಿ ಮುಂದುವರೆಸಲಾದ 352 ತಾತ್ಕಾಲಿಕ ಹುದ್ದೆಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ದಿನಾಂಕ: 01.04.2017 ರಿಂದ 31.03.2018 ರವರೆಗೆ ಪುನಃ ಮುಂದುವರೆಸಬೇಕೆಂದು ಕೋರಿದ್ದಾರೆ. ಸರ್ಕಾರವು ಈ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಅದರಂತೆ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಆನಾಸ 65 ಆಇಸೇ 2017, ಬೆಂಗಳೂರು, ದಿನಾಂಕ: 15.12.2017.

ಸರ್ಕಾರದ ಆದೇಶ ಸಂಖ್ಯೆ: ಅನಾಸ 41 ಆಇಸೇ 2016, ದಿನಾಂಕ:14.03.2016ರಲ್ಲಿ ಮುಂದುವರೆಸಲಾಗಿದ್ದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವಿವಿಧ ವೃಂದಗಳ ಈ ಕೆಳಗೆ ಉಪ ಶೀರ್ಷಿಕೆ(i) ರಿಂದ (iv) ರಲ್ಲಿ ನಮೂದಿಸಿರುವಂತೆ ಒಟ್ಟು 352 ತಾತ್ಕಾಲಿಕ ಹುದ್ದೆಗಳನ್ನು ದಿನಾಂಕ: 01.04.2017 ರಿಂದ 31.03.2018ರವರೆಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮುಂದುವರಿಸಿ ಆದೇಶಿಸಿದೆ:-

i) ದಿನಾಂಕ:1.11.85ರಿಂದ ಜಾರಿಗೊಳಿಸಲಾದ ಒಟ್ಟು 370 ತಾತ್ಕಾಲಿಕವಾಗಿ ಮಂಜೂರಾದ ಹುದ್ದೆಗಳಲ್ಲಿ ಕಡಿತಗೊಳಿಸಿದ ನಂತರ

ಕ್ರಮ ಸಂಖ್ಯೆ ಹ ುದ್ದೆಗಳ ವಿವರ ವ ುುಂದುವರಿಸಬೇಕಾದ ಹುದ್ದೆಗಳ ಸಂಖ್ಯೆ
1 ಶಿರಸ್ತೇದಾರರು 107
2 ಪ ಥ ್ರ ವ ು ದರ್ಜೆ ಸಹಾಯಕರು 160
3 ವಾಹನ ಚಾಲಕರು 42
ಒಟ್ಟು 309 ಹುದ್ದೆಗಳು

(೧)೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ಭಾಗ ೧ ii) ಸರ್ಕಾರದ ಆದೇಶ ಸಂಖ್ಯೆ: ಆನಾಸ 203 ಆಇಸೇ 98, ದಿನಾಂಕ: 2.4.98 ಹಾಗೂ 21.9.98ರ ಮತ್ತು ಸರ್ಕಾರದ ಆದೇಶ

ಕ್ರಮ ಸಂಖ್ಯೆ ಹ ುದ್ದೆಗಳ ವಿವರ ವ ುುಂದುವರಿಸಬೇಕಾದ ಹುದ್ದೆಗಳ ಸಂಖ್ಯೆ
1 ಉಪ ನಿರ್ದೇಶಕರು 07
2 ಶಿರಸ್ತೇದಾರರು 01
3 ಬ ರಳಚ್ಚುಗಾರರು ೆ 02
4 ವಾಹನ ಚಾಲಕರು 07
5 ಲ ಕ್ಕಾಧೀಕ್ಷಕರು ೆ 07
ಒಟ್ಟು 24 ಹುದ್ದೆಗಳು

iii) ಸರ್ಕಾರದ ಆದೇಶ ಸಂಖ್ಯೆ: ಆನಾಸ 170 ಆಇಸೇ 07, ದಿನಾಂಕ: 23.8.2007, ದಿನಾಂಕ:23.8.2007ರ ಪ್ರಕಾರ ರಾಮನಗರ

ಕ್ರಮ ಸಂಖ್ಯೆ ಹ ುದ್ದೆಗಳ ವಿವರ ವ ುುಂದುವರಿಸಬೇಕಾದ ಹುದ್ದೆಗಳ ಸಂಖ್ಯೆ
1 ಉಪ ನಿರ್ದೇಶಕರು 02
2 ಲ ಕ್ಕಾಧೀಕ್ಷಕರು ೆ 02
3 ವ ್ಯವಸ್ಥಾಪಕರು 02
4 ಪ ಥ ್ರ ವ ು ದರ್ಜೆ ಸಹಾಯಕರು (ಲೆಕ್ಕಪತ್ರ) 02
5 ದಿ ್ವತೀಯ ದರ್ಜೆ ಸಹಾಯಕರು 02
6 ಬ ರಳಚ್ಚುಗಾರರು ೆ 02
7 ವಾಹನ ಚಾಲಕರು 02
ಒಟ್ಟು 14 ಹುದ್ದೆಗಳು

iv) ಸರ್ಕಾರದ ಆದೇಶ ಸಂಖ್ಯೆ: ಆನಾಸ 177 ಆಇಸೇ 2009, ದಿನಾಂಕ: 30.3.2010ರ ಪ್ರಕಾರ ಯಾದಗಿರಿ ಜಿಲ್ಲೆಗೆ ಸೃಜಿಸಲಾದ ತಾತ್ಕಾಲಿಕ ಹುದ್ದೆಗಳು:

ಕ್ರಮ ಸಂಖ್ಯೆ ಹ ುದ್ದೆಗಳ ವಿವರ ವ ುುಂದುವರಿಸಬೇಕಾದ ಹುದ್ದೆಗಳ ಸಂಖ್ಯೆ
1 ಉಪ ನಿರ್ದೇಶಕರು 01
2 ಲ ಕ್ಕಾಧೀಕ್ಷಕರು ೆ 01
3 ಶಿರಸ್ತೇದಾರರು/ವ್ಯವಸ್ಥಾಪಕರು 01
4 ಪ ಥ ್ರ ವ ು ದರ್ಜೆ ಸಹಾಯಕರು 01
5 ದಿ ್ವತೀಯ ದರ್ಜೆ ಸಹಾಯಕರು 01
ಒಟ್ಟು 05

ಈ ಆದೇಶವನ್ನು ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 1 ಟಿಎಫ್‌ಪಿ 96, ದಿನಾಂಕ: 10.7.1996ರ ಐಟಂ 3 ರಲ್ಲಿ ಇಲಾಖಾ ಪ್ರಧಾನ ಕಾರ್ಯದರ್ಶಿಯವರಿಗೆ ನೀಡಿರುವ ಅಧಿಕಾರ ಪ್ರತ್ಯಾಯೋಜನೆಯನ್ವಯ ಹೊರಡಿಸಲಾಗಿದೆ.

PR-411

ಕರ್ನಾಟಕ ರಾಜ್ಯಪಾಲರ ಆದೇಶನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ. ಮಂಜುನಾಥ

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ

ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ೩

ಸಂಸದೀಯ ವ್ಯವಹಾರಗಳ ಸಚಿವಾಲಯ

ತಿದ್ದೋಲೆ

ಸಂಖ್ಯೆ: ಸಂವ್ಯಶಾಇ 110 ಭಾನಿವಿ 2016, ಬೆಂಗಳೂರು, ದಿನಾಂಕ: 11.08.2017.

ದಿನಾಂಕ: 19.04.2017 ರ ಸರ್ಕಾರಿ ಆದೇಶ ಸಂಖ್ಯೆ: ಸಂವ್ಯಶಾಇ 110 ಭಾನಿವಿ 2016 ರಲ್ಲಿ ನಿರ್ದೇಶನಾಲಯದ ಮೂರು ಜನ ನಿವೃತ್ತ ಅಧಿಕಾರಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ಸದರಿ ಸಮಾಲೋಚಕರಿಗೆ ಪ್ರತಿ ತಿಂಗಳಿಗೆ `.25,000/- ಗಳ ಸಂಭಾವನೆ ಮೊತ್ತವನ್ನು "ಲೆಕ್ಕಶೀರ್ಷಿಕೆ 2052-00-092-0-05 ರಡಿಯಲ್ಲಿ ಉಪ ಲೆಕ್ಕ ಶೀರ್ಷಿಕೆ -051(ಸಾಮಾನ್ಯ ವೆಚ್ಚಗಳು) ರ ಬದಲಿಗೆ " "ಲೆಕ್ಕಶೀರ್ಷಿಕೆ 2052-00-092-0-05 ರಡಿಯಲ್ಲಿ ಉಪ ಲೆಕ್ಕ ಶೀರ್ಷಿಕೆ -034 (ಗುತ್ತಿಗೆ/ಹೊರಗುತ್ತಿಗೆ)" ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

PR-412

ಕರ್ನಾಟಕ ರಾಜ್ಯಪಾಲರ ಆದೇಶನುಸಾರ ಮತ್ತು ಅವರ ಹೆಸರಿನಲ್ಲಿ SC-50

ಹೆಚ್.ರಾಜ್‌ಕುಮಾರ್

ಸಹಾಯಕ ಪ್ರಾರೂಪಕಾರ ಮತ್ತು ಪದನಿಮಿತ್ತ

ಸರ್ಕಾರದ ಅಧೀನ ಕಾರ್ಯದರ್ಶಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.

ಕಾರ್ಮಿಕ ಸಚಿವಾಲಯ

ವಿಷಯ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಅವಶ್ಯಕವಿರುವ ವಿವಿಧ ಹುದ್ದೆಗಳನ್ನು ಸೃಜನೆ ಮಾಡುವ ಬಗ್ಗೆ

ಓದಲಾಗಿದೆ : 1. ದಿನಾಂಕ: 22-06-2017ರಂದು ನಡೆದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ 23ನೇ ಸಭೆಯ ನಡವಳಿಗಳು

2. ಕಾರ್ಯದರ್ಶಿಗಳು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಇವರ ಪತ್ರ ಸಂಖ್ಯೆ: ಸಿಡಬ್ಲ್ಯೂಡಬ್ಲ್ಯೂಬಿ/ಎಡಿಎಂ/ಸಿಆರ್-01/2017-18, ದಿ: 11-07-2017

ಪ್ರಸ್ತಾವನೆ:

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಆಡಳಿತ ಹಾಗೂ ಆರ್ಥಿಕ ವ್ಯವಸ್ಥೆಯನ್ನು ಸಮರ್ಪಕವಾಗಿ ಹಾಗೂ ಸುಲಲಿತವಾಗಿ ನಿರ್ವಹಿಸಲು ಅವಶ್ಯಕವಿರುವ ವಿವಿಧ ಶ್ರೇಣಿಯ ಅಧಿಕಾರಿಗಳ ಹುದ್ದೆಗಳನ್ನು ಸೃಜಿಸಿ ನಿಯೋಜನೆಯ ಮೇರೆಗೆ ಪಡೆಯಲು ಕ್ರಮ ಸಂಖ್ಯೆ (1)ರಲ್ಲಿ ಓದಲಾದ ಮಂಡಳಿಯ 23ನೇ ಸಭೆಯಲ್ಲಿ ನಿರ್ಣಯವಾಗಿರುತ್ತದೆ ಎಂದು ತಿಳಿಸಿ, ಕ್ರಮ ಸಂಖ್ಯೆ (2)ರಲ್ಲಿ ಓದಲಾದ ಕಾರ್ಯದರ್ಶಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇವರು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ, ಹುದ್ದೆಗಳನ್ನು ಸೃಜನೆ ಮಾಡುವಂತೆ ಕೋರಿರುತ್ತಾರೆ.

ಈ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ ಕಾಇ 189 ಎಲ್ಇಟಿ 2017, ಬೆಂಗಳೂರು, ದಿನಾಂಕ: 07-12-2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಆಡಳಿತ ಹಾಗೂ ಆರ್ಥಿಕ ವ್ಯವಸ್ಥೆಯನ್ನು ಸಮರ್ಪಕವಾಗಿ ಹಾಗೂ ಸುಲಲಿತವಾಗಿ ನಿರ್ವಹಿಸಲು ಸದರಿ ಮಂಡಳಿಯಲ್ಲಿ ಅವಶ್ಯಕವಿರುವ ವಿವಿಧ ಶ್ರೇಣಿಗಳ ಈ ಕೆಳಗಿನ ಅಧಿಕಾರಿಗಳ ಹುದ್ದೆಗಳನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಮತ್ತು ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ, 1996ರ ಕಲಂ 19(1) ಮತ್ತು ಕರ್ನಾಟಕ ನಿಯಮಗಳು 2006ರ ನಿಯಮ 27 (a) (b) ಮತ್ತು (c) ಅಡಿ ಇರುವ ಪ್ರದತ್ತವಾದ ಅಧಿಕಾರವನ್ನು

ಕ್ರಮ ಸಂಖ್ಯೆ ಹ ುದ್ದೆಗಳ ಪದನಾಮ ಸ ೃಜನೆಗೊಳಗೊಂಡ ಹುದ್ದೆಗಳ ಸ ಂಖ್ಯೆ ಸ ೃಜಿಸುವ ಹುದ್ದೆಗಳ ನೇಮಕಾತಿ ವಿಧಾನ
1 ಕಾರ್ಯದರ್ಶಿ 1 ನಿಯೋಜನೆ ನಿಯಮ 27(a) ರನ್ವಯ
2 ಜಂಟಿ ಕಾರ್ಯದರ್ಶಿ 1 ನಿಯೋಜನೆ ನಿಯಮ 27(b) & (c) ರನ್ವಯ ಕಾರ್ಮಿಕ ಇಲಾಖೆ
3 ಉಪ ಕಾರ್ಯದರ್ಶಿ ನಿಯೋಜನೆ 1 ನಿಯಮ 27(b) & (c) ರನ್ವಯ
3 ಕಾರ್ಮಿಕ ಇಲಾಖೆ/ KAS
4 ವಿಶೇಷ ಅಧಿಕಾರಿ 1 ನಿಯೋಜನೆ ನಿಯಮ 27(b) & (c) ರನ್ವಯ
5 ಸ ಹಾಯಕ /ಅಧೀನ ಕಾರ್ಯದರ್ಶಿ 1 ನಿಯೋಜನೆ
3 ನಿಯೋಜನೆ ನಿಯಮ 27(b) & (c) ರನ್ವಯ
6 ಕಾರ್ಮಿಕ ಅಧಿಕಾರಿ ನಿಯೋಜನೆ 7
7 ಹಿರಿಯ ಕಾರ್ಮಿಕ ನಿರೀಕ್ಷಕರು ಕಾರ್ಮಿಕ ಇಲಾಖೆ 7
8 ಡ ಪ ೆ ೂ್ಯಟಿ ಕಂಟ್ರೋಲರ್ ಆಫ್ ಫೈನಾನ್ಸ್ 1 ನಿಯೋಜನೆ ನಿಯಮ 27(b) & (c) ರನ್ವಯ ರಾಜ್ಯ ಲೆಕ್ಕಪತ್ರ ಇಲಾಖೆ
9 ಅಸಿಸ್ಟೆಂಟ್ ಕಂಟ್ರೋಲರ್ ಆಫ್ ಪ ೖನಾನ್ಸ್ ೆ 2 ನಿಯೋಜನೆ ರಾಜ್ಯ ಲೆಕ್ಕಪತ್ರ ಇಲಾಖೆ
10 ಅಕೌಂಟ್ಸ್ ಸೂಪರಿನ್‌ಟೆಂಡ್‌ಟೆಂಟ್ 2 ನಿಯೋಜನೆ ರಾಜ್ಯ ಲೆಕ್ಕಪತ್ರ ಇಲಾಖೆ
11 ಎಕ್ಸಿಕ್ಯೂಟಿವ್ ಇಂಜಿನಿಯರ್ 1
12 ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ನಿಯೋಜನೆ 1 ಲ ೂೕಕೋಪಯೋಗಿ ಇಲಾಖೆ ೆ
13 ಜೂನಿಯರ್ ಇಂಜಿನಿಯರ್ 2 ನಿಯೋಜನೆ ಲ ೂೕಕೋಪಯೋಗಿ ಇಲಾಖೆ/ಹೊರಗುತ್ತಿಗೆ ೆ
14 ಟೆಕ್ನಿಕಲ್ ಅಂಡ್ ಕನ್ಸ್‌ಟ್ರಕ್ಷನ್ ಟ್ರೈನಿಂಗ್ ಎಕ್ಸಪರ್ಟ್ 1 ನಿಯೋಜನೆ ನಿರ್ಮಿತಿ ಕೇಂದ್ರ ನಿಯಮ 27(c) ರನ್ವಯ
ಒಟ್ಟು 35
೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ಭಾಗ ೧

PR-413

ಕರ್ನಾಟಕ ರಾಜ್ಯಪಾಲರ ಆದೇಶನುಸಾರ ಮತ್ತು ಅವರ ಹೆಸರಿನಲ್ಲಿ SC-200

ಎಲ್.ಎಸ್. ಶ್ರೀಕಂಠಬಾಬು

ಸರ್ಕಾರದ ಉಪ ಕಾರ್ಯದರ್ಶಿ-1,

ಕಾರ್ಮಿಕ ಇಲಾಖೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಸಿಆಸುಇ 57 ಸೇಉನ್ಯಾ 2016, ಬೆಂಗಳೂರು, ದಿನಾಂಕ: 07-12-2017.

ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 57 ಸೇಉನ್ಯಾ 2017, ದಿನಾಂಕ:15-09-2017ರ ಆದೇಶ ಭಾಗದಲ್ಲಿ, "ಈ ವೆಚ್ಚವನ್ನು "2014-00-102-0-01 ಉಚ್ಛ ನ್ಯಾಯಾಲಯದ ನ್ಯಾಯಾಧೀಶರು" ಲೆಕ್ಕಶೀರ್ಷಿಕೆಯಲ್ಲಿ ಭರಿಸತಕ್ಕದ್ದು" ಎಂಬ ಪದಗಳು ಮತ್ತು ಅಂಕಿಗಳ ಬದಲಾಗಿ "ಈ ವೆಚ್ಚವನ್ನು "2014-00-102-0-02-052 (ದೂರವಾಣಿ ವೆಚ್ಚಗಳು)" ಲೆಕ್ಕಶೀರ್ಷಿಕೆಯಲ್ಲಿ ಭರಿಸತಕ್ಕದ್ದು" ಎಂದು ತಿದ್ದಿಕೊಂಡು ಓದಿಕೊಳ್ಳತಕ್ಕದ್ದು.

PR- 414

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC- 200

ಶ್ರ.ದೇ. ಸುನಂದ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ. (ಸೇವೆಗಳು-3)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ೫

ಕಂದಾಯ ಸಚಿವಾಲಯ

ವಿಷಯ : ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ತಾಲ್ಲೂಕು, ಕೂಡಲಿ ಶೃಂಗೇರಿ ಮಹಾಸಂಸ್ಥಾನ ಮಠದ ಆಡಳಿತಾಧಿಕಾರಿ ನೇಮಕ ಕುರಿತು. ಓದಲಾಗಿದೆ : 1. ಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತೀ ಸ್ವಾಮೀಜಿ ಇವರ ಪತ್ರ ದಿನಾಂಕ;12.06.2014

2. ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ:ಎಡಿಎಂ/08/ಸಿಆರ್/32/2012-13, ದಿನಾಂಕ:30.09.2014 3. ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 57 ಮುಸೇವಿ 2014 ದಿನಾಂಕ:12.03.2015 4. ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 57 ಮುಸೇವಿ 2014 ದಿನಾಂಕ:16.10.2015 5. ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 57 ಮುಸೇವಿ 2014 ದಿನಾಂಕ:01.01.2016 6. ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 57 ಮುಸೇವಿ 2014 ದಿನಾಂಕ:10.06.2016 7. ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 57 ಮುಸೇವಿ 2014 ದಿನಾಂಕ:03.10.2016 8. ಮಾನ್ಯ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ:6350/2016 c/w 35176/2016 ದಿನಾಂಕ:08.03.2017 9. ಸರ್ಕಾರದ ಆದೇಶ ಸಂಖ್ಯೆ:ಕಂಇ 33 ಮುದಾಪ್ರ 2016 ದಿನಾಂಕ:10.05.2017 10. ಮಾನ್ಯ ಉಚ್ಚ ನ್ಯಾಯಾಲಯದ ರಿವ್ಯೂ ಅರ್ಜಿ ಸಂಖ್ಯೆ:154/2017 & 203/2017 ದಿನಾಂಕ:21.04.2017

ಪ್ರಸ್ತಾವನೆ:-

ಮೇಲೆ ಓದಲಾದ (1)ರಲ್ಲಿ ಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತೀ ಸ್ವಾಮೀಜಿ, ಶ್ರೀ ಕೂಡಲೀ ಶೃಂಗೇರಿ ಮಹಾಸಂಸ್ಥಾನ ಮಠ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಇವರು ಸರ್ಕಾರಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿ 'ಮಠದ ಉತ್ತರಾಧಿಕಾರಿಯಾಗಬೇಕಾಗಿರುವ ಶಿಷ್ಯರ ಮೇಲೆ ಹಲವಾರು ಆರೋಪಗಳು ಇರುವುದರಿಂದ ಮಠದ ಆಡಳಿತ ಹಿತದೃಷ್ಟಿಯಿಂದ ಶಿವಮೊಗ್ಗ ತಹಶೀಲ್ದಾರ್ ಇವರನ್ನು ತಾತ್ಕಾಲಿಕವಾಗಿ ಆಡಳಿತಾಧಿಕಾರಿಯನ್ನಾಗಿ ನೇಮಿಸುವಂತೆ' ಕೋರಿರುತ್ತಾರೆ.

ಮೇಲೆ ಓದಲಾದ (2)ರ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರದಲ್ಲಿ, ಮಠಗಳು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, 1997ರ

ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ತಿಳಿಸಿ, ಜಿಲ್ಲಾಧಿಕಾರಿ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಇವರು ನೀಡಿರುವ ವರದಿಯಂತೆ, ಮಠದ ಆಡಳಿತವು ಪಾರದರ್ಶಕವಾಗಿ ನಡೆಯಲು ಹಾಗೂ ಸಾರ್ವಜನಿಕರ ಹಣ ದುರುಪಯೋಗವಾಗದಂತೆ ಲೆಕ್ಕ ಪತ್ರಗಳನ್ನು ನಿರ್ವಹಿಸಲು ತಾತ್ಕಾಲಿಕವಾಗಿ ತಹಶೀಲ್ದಾರ್, ಶಿವಮೊಗ್ಗ ತಾಲ್ಲೂಕು ಇವರನ್ನು ಮಠದ ಆಡಳಿತಾಧಿಕಾರಿಯನ್ನಾಗಿ ನೇಮಿಸಬಹುದಾಗಿರುತ್ತದೆಂಬ ಅಭಿಪ್ರಾಯದ ವರದಿಯನ್ನು ಸರ್ಕಾರಕ್ಕೆ ಮುಂದಿನ ಕ್ರಮಕ್ಕಾಗಿ ಸಲ್ಲಿಸಿರುತ್ತಾರೆ.

ಮೇಲೆ ಓದಲಾದ (3)ರ ಸರ್ಕಾರದ ಅಧಿಸೂಚನೆಯಲ್ಲಿ, ಶಿವಮೊಗ್ಗ ಜಿಲ್ಲೆಯ ಶ್ರೀ ಮಜ್ಜಗದ್ಗುರು ಶ್ರೀ ಕೂಡಲೀ ಶೃಂಗೇರಿ ಮಹಾಸಂಸ್ಥಾನಂ ಮಠ, ಕೂಡಲೀ ಸಂಸ್ಥೆಯ ಆಡಳಿತವು ಪಾರದರ್ಶಕವಾಗಿ ನಡೆಯಲು ಹಾಗೂ ಸಾರ್ವಜನಿಕರ ಹಣ ದುರುಪಯೋಗವಾಗದಂತೆ ಲೆಕ್ಕ ಪತ್ರಗಳನ್ನು ನಿರ್ವಹಿಸಲು ತಹಶೀಲ್ದಾರ್, ಶಿವಮೊಗ್ಗ ತಾಲ್ಲೂಕು ಇವರನ್ನು ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿರುತ್ತದೆ. ನಂತರ ಮೇಲೆ ಓದಲಾದ (4)ರ ಅಧಿಸೂಚನೆಯಲ್ಲಿ, ಮಠದ ಆಡಳಿತಾಧಿಕಾರಿಯವರ ಅವಧಿಯನ್ನು ದಿನಾಂಕ:12.09.2015ರಿಂದ ಆರು ತಿಂಗಳ ಅವಧಿಗೆ ವಿಸ್ತರಿಸಲಾಗಿರುತ್ತದೆ.

ಮೇಲೆ ಓದಲಾದ (5)ರ ಅಧಿಸೂಚನೆಯಲ್ಲಿ, ಮಠದ ಆಡಳಿತಾಧಿಕಾರಿಯಾಗಿದ್ದ ತಹಶೀಲ್ದಾರ್, ಶಿವಮೊಗ್ಗ ತಾಲ್ಲೂಕು ಇವರಿಗೆ ಹೆಚ್ಚಿನ ಕಾರ್ಯಭಾರಗಳ ಒತ್ತಡವಿರುವುದರಿಂದ ಇವರ ಬದಲಾಗಿ ಸರ್ಕಾರದ ನಿವೃತ್ತ ಹಿರಿಯ ಐ.ಎ.ಎಸ್. ಅಧಿಕಾರಿಯಾದ ಶ್ರೀ ಕೆ. ಜನಾರ್ಧನರಾವ್ ಇವರನ್ನು ಅಧಿಸೂಚನೆ ಸಂಖ್ಯೆ:ಕಂಇ 57 ಮುಸೇವಿ 2014 ದಿನಾಂಕ:12.09.2015ರಲ್ಲಿ ನಿಗದಿಪಡಿಸಿರುವ ಅವಧಿಗೆ ಸೀಮಿತಗೊಳಿಸಿ ಮಠದ ಆಡಳಿತವು ಪಾರದರ್ಶಕವಾಗಿ ನಡೆಯಲು ಹಾಗೂ ಸಾರ್ವಜನಿಕರ ಹಣ ದುರುಪಯೋಗವಾಗದಂತೆ ಲೆಕ್ಕ ಪತ್ರಗಳನ್ನು ನಿರ್ವಹಿಸಲು ಆಡಳಿತಾಧಿಕಾರಿಯನ್ನು ನೇಮಿಸಿ ದಿನಾಂಕ:01.01.2016ರಂದು ಆದೇಶ ಹೊರಡಿಸಲಾಗಿತ್ತು. ನಂತರ ಮೇಲೆ ಓದಲಾದ (6)ರ ಅಧಿಸೂಚನೆಯಲ್ಲಿ, ಶ್ರೀ ಕೆ. ಜನಾರ್ಧನರಾವ್, ಇವರ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ:12.03.2016ರಿಂದ ಅನ್ವಯವಾಗುವಂತೆ ಆರು ತಿಂಗಳ ಅವಧಿಗೆ ಮುಂದುವರೆಸಿ ಆದೇಶಿಸಲಾಗಿತ್ತು.

ಮೇಲೆ ಓದಲಾದ (7)ರ ಅಧಿಸೂಚನೆಯಲ್ಲಿ, ಮಠದ ಹಣಕಾಸಿನ ಸಂಪನ್ಮೂಲಗಳ ಕೊರತೆ ಹಿನ್ನೆಲೆಯಲ್ಲಿ ಶ್ರೀ ಕೆ. ಜನಾರ್ಧನರಾವ್, ನಿವೃತ್ತ ಐ.ಎ.ಎಸ್. ಅಧಿಕಾರಿ, ಮಠದ ಆಡಳಿತಾಧಿಕಾರಿ ಇವರ ಸೇವೆಯನ್ನು ಹಿಂಪಡೆದು, ಸರ್ಕಾರಿ ಅಧಿಕಾರಿಗಳನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡುವಂತೆ ಸರ್ಕಾರಕ್ಕೆ ಮನವಿಗಳು ಬಂದ ಹಿನ್ನಲೆಯಲ್ಲಿ, ಸದರಿ ಮಠದ ಆಡಳಿತಾಧಿಕಾರಿಯನ್ನಾಗಿ ಉಪ ವಿಭಾಗಾಧಿಕಾರಿ, ಶಿವಮೊಗ್ಗ ಉಪ ವಿಭಾಗ, ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಇವರನ್ನು ದಿನಾಂಕ:03.10.2016ರಿಂದ ಒಂದು ವರ್ಷದ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿತ್ತು.

ಮೇಲೆ ಓದಲಾದ (8)ರಲ್ಲಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಶ್ರೀ ವಿಧ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿಗಳು ಶ್ರೀ ಕೂಡಲೀ ಶೃಂಗೇರಿ ಮಠ, ಶಿವಮೊಗ್ಗ ತಾಲ್ಲೂಕು ಇವರು ದಾಖಲಿಸಿದ ರಿಟ್ ಅರ್ಜಿ ಸಂಖ್ಯೆ:6350/2016 c/w 35176/2016ರಲ್ಲಿ ಮಾನ್ಯ ನ್ಯಾಯಾಲಯವು ದಿನಾಂಕ: 08.03.2017ರಂದು ನೀಡಿರುವ ತೀರ್ಪಿನಲ್ಲಿ ಶ್ರೀ ಮಠದ ಹಿರಿಯ ಸ್ವಾಮಿಜಿಗಳಾದ ಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತೀ ಸ್ವಾಮೀಜಿ ಇವರು ದೈವಾದೀನರಾಗಿರುವುದರಿಂದ ಫಿರ್ಯಾದುದಾರರಿಗೆ ಮಠದ ಆಡಳಿತವನ್ನು ಹಿಂದಿರುಗಿಸುವಂತೆ ಆದೇಶಿಸಿರುತ್ತದೆ.

ಅದರನ್ವಯ ಮೇಲೆ ಓದಲಾದ (9)ರಲ್ಲಿನ ಸರ್ಕಾರದ ಆದೇಶದಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ:6350/2016 c/w 35176/2016ರಲ್ಲಿ ಮಾನ್ಯ ನ್ಯಾಯಾಲಯವು ದಿನಾಂಕ: 08.03.2017ರಂದು ನೀಡಿರುವ ತೀರ್ಪಿನನ್ವಯ, ಶಿವಮೊಗ್ಗ ಜಿಲ್ಲೆಯ ಶ್ರೀ ಮಜ್ಜಗದ್ಗುರು೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ಭಾಗ ೧ ಶ್ರೀ ಕೂಡಲೀ ಶೃಂಗೇರಿ ಮಹಾಸಂಸ್ಥಾನಂ ಮಠದ ಆಡಳಿತಾಧಿಕಾರಿಯನ್ನಾಗಿ ಉಪ ವಿಭಾಗಾಧಿಕಾರಿ, ಶಿವಮೊಗ್ಗ ಉಪ ವಿಭಾಗ, ಶಿವಮೊಗ್ಗ ಜಿಲ್ಲೆ ಇವರನ್ನು ನೇಮಿಸಿ ಹೊರಡಿಸಲಾಗಿದ್ದ ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 57 ಮುಸೇವಿ 2014 ದಿನಾಂಕ:03.10.2016ರ ಆದೇಶವನ್ನು ಹಿಂಪಡೆಯಲಾಗಿತ್ತು.

ಮೇಲೆ ಓದಲಾದ (10)ರಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಆರ್.ಪಿ. ನಂ.154/2017 & 203/2017ನ್ನು ದಾಖಲಿಸಿದ್ದು, ಮಾನ್ಯ ಉಚ್ಚ ನ್ಯಾಯಾಲಯವು ದಿನಾಂಕ:21.04.2017ರಂದು ಈ ಮುಂದಿನಂತೆ ತೀರ್ಪು ನೀಡಿರುತ್ತದೆ;-

'In the meanwhile since the learned counsel for the petitioner brings to the notice of this Court, the notification dated:03.10.2016, the Administrator appointed under the said notification shall continue to Administer the affairs of the next till further orders are made in this petition.'

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ:ಕಂಇ 33 ಮುದಾಪ್ರ 2016; ಬೆಂಗಳೂರು, ದಿನಾಂಕ: 05ನೇ ಡಿಸೆಂಬರ್, 2017.

ಮೇಲೆ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಆರ್.ಪಿ. ನಂ.154/2017 & 203/2017, ದಿನಾಂಕ:21.04.2017ರಂದು ನೀಡಿರುವ ಆದೇಶದನ್ವಯ, ಸರ್ಕಾರದ ಸಮ ಸಂಖ್ಯೆ ಆದೇಶ ದಿನಾಂಕ:10.05.2017ನ್ನು ಹಿಂಪಡೆದು, ಸರ್ಕಾರದ ಆದೇಶ ಸಂಖ್ಯೆ:ಕಂಇ 57 ಮುಸೇವಿ 2014 ದಿನಾಂಕ:03.10.2016ನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಆರ್.ಪಿ. ಸಂಖ್ಯೆ: 154/2017 & 203/2017ರ ಪ್ರಕರಣದಲ್ಲಿ ಮುಂದಿನ ಆದೇಶ ನೀಡುವವರೆಗೆ ಜಾರಿಗೊಳಿಸಿ ಆದೇಶಿಸಿದೆ.

PR-415

ಕರ್ನಾಟಕ ರಾಜ್ಯಪಾಲರ ಆದೇಶನುಸಾರ ಮತ್ತು ಅವರ ಹೆಸರಿನಲ್ಲಿ SC-25

ಬಿ.ಎಸ್. ನಾಗರತ್ನಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ. (ಮುಜರಾಯಿ)

ಕಂದಾಯ ಸಚಿವಾಲಯ

ವಿಷಯ : ಬೆಳಗಾವಿ ಜಿಲ್ಲೆ, ಬೆಳಗಾವಿ ತಾಲ್ಲೂಕು, ಸಾವಗಾಂವ ಗ್ರಾಮದ ರಿ.ಸ.ನಂ.225/1ರಲ್ಲಿ 2-00ಎಕರೆ ಜಮೀನನ್ನು ಅಂತರರಾಷ್ಟ್ರೀಯ ಗುಣಮಟ್ಟದ ಕುಸ್ತಿ ಶಾಲೆಯನ್ನು ತೆರೆಯಲು ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ : 1. ಅಧ್ಯಕ್ಷರು, ಕಂpೕರವ ಕೇಸರಿ ರತನ ಮಠಪತಿ ಸ್ಪೋರ್ಟ್ಸ್ ಮತ್ತು ಎಜುಕೇಷನ್ ಸೊಸೈಟಿ, ಜಮಖಂಡಿ ಇವರ ಮನವಿ.

2. ಜಿಲ್ಲಾಧಿಕಾರಿಗಳು ಬೆಳಗಾವಿ ಜಿಲ್ಲೆ ಬೆಳಗಾವಿ ಇವರ ಪತ್ರ ಸಂಖ್ಯೆ:ಕಂಶಾ/ಎಲ್‌ಜಿಎಲ್/ವಿವ/58/2015-16, ದಿನಾಂಕ:12-08-2015.

3. ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರ ಪತ್ರ ಸಂಖ್ಯೆ:ಪ್ರ್ರಾಆಬೆ/ ಭೂಮಿ-4/ ಎಲ್‌ಜಿಎಲ್/ವಿವ/15/2016-17, ದಿನಾಂಕ:25-06-2016 ಮತ್ತು ದಿನಾಂಕ: 03-06-2017.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ(1)ರ ಮನವಿಯಲ್ಲಿ ಅಧ್ಯಕ್ಷರು, ಕಂpೕರವ ಕೇಸರಿ ರತನ ಮಠಪತಿ ಸ್ಪೋರ್ಟ್ಸ್ ಮತ್ತು ಎಜುಕೇಷನ್ ಸೊಸೈಟಿ, ಜಮಖಂಡಿ, ಇವರು ಜಿಲ್ಲಾಧಿಕಾರಿಗಳು ಬೆಳಗಾವಿ ಜಿಲ್ಲೆ ಇವರಿಗೆ ಸಲ್ಲಿಸಿರುವ ಮನವಿಯಲ್ಲಿ ತಮ್ಮ ಸಂಸ್ಥೆಯು ದಿನಾಂಕ:23-03-2006ರಲ್ಲಿ ನೊಂದಣಿಯಾಗಿದ್ದು, ತಾವು ಅಂತರ ರಾಷ್ಟ್ರೀಯ ಮಟ್ಟದ ಕುಸ್ತಿಪಟುವಾಗಿದ್ದು, ಕರ್ನಾಟಕ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವುದಾಗಿ ತಿಳಿಸುತ್ತಾ, ಕನ್ನಡ ನಾಡಿನ ಹಾಗೂ ದೇಶದ ಭವ್ಯ ಪರಂಪರೆಯುಳ್ಳ ಕುಸ್ತಿ ಕಲೆಯನ್ನು ಜೀವಂತವಾಗಿರಿಸಲು ಕುಸ್ತಿಪಟುಗಳಿಗೆ ಅತ್ಯಾಧುನಿಕ ತರಬೇತಿ ನೀಡುವುದು ತಮ್ಮ ಸಂಸ್ಥೆಯ ಗುರಿಯಾಗಿರುತ್ತದೆ. ಆದ್ದರಿಂದ ಸದರಿ ಉದ್ದೇಶಕ್ಕಾಗಿ ಬೆಳಗಾವಿ ತಾಲ್ಲೂಕಿನ ಸಾವಗಾಂವ ಗ್ರಾಮದ ರಿ.ಸ.ನಂ.225/1ರಲ್ಲಿನ 5-34 ಎಕರೆ ಜಮೀನನ್ನು ಮಂಜೂರು ಮಾಡುವಂತೆ ಕೋರಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ:(2)ರ ದಿನಾಂಕ: 12-08-2015ರ ಪತ್ರದಲ್ಲಿ ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ ಇವರು ಬೆಳಗಾವಿ ತಾಲ್ಲೂಕಿನ ಕಿಣಿಯೇ ಗ್ರಾಮದ ರಿ.ಸ.ನಂ.100/2ರಲ್ಲಿ 5-00ಎಕರೆ ಜಮೀನನ್ನು ಅಂತರ ರಾಷ್ಟ್ರೀಯ ಗುಣಮಟ್ಟದ ಕುಸ್ತಿ ಶಾಲೆಯನ್ನು ತೆರೆಯಲು ಮಂಜೂರು ಮಾಡುವ ಕುರಿತು ಪ್ರಸ್ತಾಪಿಸಿರುತ್ತಾರೆ. ತದನಂತರ ಸದರಿ ಜಮೀನಿನ ಕುರಿತು ನ್ಯಾಯಾಲಯದಲ್ಲಿ ಪ್ರಕರಣವು ದಾಖಲಾಗಿರುವುದರಿಂದ, ಹಾಗೂ ಉಪ ನಿರ್ದೇಶಕರು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಬೆಳಗಾವಿ ಇವರು ಸದರಿ ಸಂಸ್ಥೆಯ ಪರಿವೀಕ್ಷಣೆ ನಡೆಸಿ ವರದಿಯನ್ನು ಸಲ್ಲಿಸಿದ್ದರ ಹಿನ್ನೆಲೆಯಲ್ಲಿ, ಈ ಹಿಂದೆ ಪ್ರಸ್ತಾಪಿಸಿದ್ದ ಜಮೀನಿಗೆ ಬದಲಾಗಿ ಬೆಳಗಾವಿ ತಾಲ್ಲೂಕು, ಸಾವಗಾಂವ ಗ್ರಾಮದ ರಿ.ಸ.ನಂ.225/1ರಲ್ಲಿನ 6-01ಎಕರೆ ಜಮೀನಿನ ಪೈಕಿ 5-34ಎಕರೆ ಜಮೀನನ್ನು ಕಂpೕರವ ಕೇಸರಿ ರತನ ಮಠಪತಿ ಸ್ಪೋರ್ಟ್ಸ್ ಮತ್ತು ಎಜುಕೇಷನ್ ಸೊಸೈಟಿಗೆ ಮಂಜೂರು ಮಾಡುವ ಬಗ್ಗೆ ವರದಿ ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ:(3)ರ ದಿನಾಂಕ:25-06-2016 ಮತ್ತು 03-06-2017ರ ಪತ್ರಗಳಲ್ಲಿ ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ ಇವರು ಜಿಲ್ಲಾಧಿಕಾರಿಗಳು ಈ ಮೊದಲು ಅಂತರ ರಾಷ್ಟ್ರೀಯ ಗುಣಮಟ್ಟದ ಕುಸ್ತಿ ಶಾಲೆಗಾಗಿ ಮಂಜೂರು ಮಾಡಲು ಪ್ರಸ್ತಾಪಿಸಿದ್ದ ಬೆಳಗಾವಿ ತಾಲ್ಲೂಕು, ಕಿಣಯೇ ಗ್ರಾಮದ ರಿ.ಸ.ನಂ.100/2 ರಲ್ಲಿ 5-00 ಎಕರೆ ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣವು ದಾಖಲಾಗಿರುವುದರಿಂದ, ಸದರಿ ಜಮೀನಿಗೆ ಬದಲಾಗಿ ಬೆಳಗಾವಿ ತಾಲ್ಲೂಕು, ಸಾವಗಾಂವ ಗ್ರಾಮದ ರಿ.ಸ.ನಂ.225/1ರಲ್ಲಿನ 6-01ಎಕರೆ ಜಮೀನಿನ ಪೈಕಿ 5-34 ಎಕರೆ ಜಮೀನನ್ನು ಸದರಿ ಸಂಸ್ಥೆಗೆ ಮಂಜೂರು ಮಾಡುವಂತೆ ಶಿಫಾರಸ್ಸು ಮಾಡಿರುತ್ತಾರೆ. ಮುಂದುವರೆದು, ಪ್ರಸ್ತಾಪಿತ ಬೆಳಗಾವಿ ತಾಲ್ಲೂಕು, ಸಾವಗಾಂವ ಗ್ರಾಮದ ರಿ.ಸ.ನಂ.225/1 ರಲ್ಲಿ ಒಟ್ಟು 6-01 ಎಕರೆ ಜಮೀನು "ಸರ್ಕಾರಿ ಪಡಾ" ಜಮೀನಾಗಿದ್ದು, ಕೆಂಪುಮಣ್ಣಿನ ಕೃಷಿ ಜಮೀನಾಗಿರುತ್ತದೆ. ಆದ್ದರಿಂದ ಸದರಿ ಜಮೀನಿಗೆ ಕೃಷಿ ದರವನ್ನೇ ಅಳವಡಿಸಬೇಕಾಗಿರುತ್ತದೆ. ಸದರಿ ಜಮೀನಿನ ಪ್ರಚಲಿತ ಮಾರ್ಗಸೂಚಿ ಬೆಲೆಯು ಒಂದು ಎಕರೆಗೆ `.3,56,000/-ಗಳಾಗಿದ್ದು, ಕನಿಷ್ಠ ದರ ನಿಗದಿಪಡಿಸುವುದು ಉಚಿತವೆಂಬ ಅಭಿಪ್ರಾಯದೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ೭

ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 73 ಎಲ್‌ಜಿಎಲ್ 2015 ಬೆಂಗಳೂರು, ದಿನಾಂಕ:29-11-2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲೆ, ಬೆಳಗಾವಿ ತಾಲ್ಲೂಕು, ಸಾವಗಾಂವ ಗ್ರಾಮದ, ರಿ.ಸ.ನಂ.225/1ರಲ್ಲಿನ 6-01 ಎಕರೆ ಜಮೀನಿನ ಪೈಕಿ 2-00 ಎಕರೆ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ, 27ರನ್ವಯ ನಿಯಮ, 22ಎ(2)ನ್ನು ಸಡಿಲಿಸಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22ಎ(1)(i)ರ ಕ್ರಮ ಸಂಖ್ಯೆ: 2ರನ್ವಯ ಪ್ರಚಲಿತ ಮಾರುಕಟ್ಟೆ ದರವನ್ನು ವಿಧಿಸಿ, ಕಂpೕರವ ಕೇಸರಿ ರತನ ಮಠಪತಿ ಸ್ಪೋರ್ಟ್ಸ್ ಮತ್ತು ಎಜುಕೇಷನ್ ಸೊಸೈಟಿ, ಜಮಖಂಡಿ ಇವರಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಕುಸ್ತಿ ಶಾಲೆಗಾಗಿ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರು ಮಾಡಿ ಆದೇಶಿಸಿದೆ.

ಷರತ್ತುಗಳು:

1. ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ ಇವರು ಜಮೀನು ಹಸ್ತಾಂತರ ಪ್ರಕ್ರಿಯೆಯನ್ನು ನಿಯಮಾನುಸಾರ ಮಾಡತಕ್ಕದ್ದು.

2. ಸದರಿ ಜಮೀನನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ, ಅದೇ ಉದ್ದೇಶಕ್ಕಾಗಿ ಮಾತ್ರ ಎರಡು

ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.

3. ಮಂಜೂರಾದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮ ವಹಿಸತಕ್ಕದ್ದು. 4. ಮಂಜೂರು ಮಾಡಲ್ಪಡುವ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ದಾವೆ

ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ.

5. ಮಂಜೂರಾದ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂದಿರುಗಿಸತಕ್ಕದ್ದು.

6. ಮಂಜೂರಾದ ಜಮೀನಿನಲ್ಲಿ, ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ

ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ

ಪಾವತಿಸಬೇಕಾದ ಎಲ್ಲಾ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

7. ಜಿಲ್ಲಾಧಿಕಾರಿಯವರು ಮಂಜೂರಾದ ಜಮೀನನ್ನು ಫಲಾನುಭವಿಗಳಿಗೆ/ಇಲಾಖೆಗೆ ಹಸ್ತಾಂತರಿಸುವಾಗ ಮಂಜೂರಾದ ಜಮೀನಿನ ವಾಸ್ತವ ಪರಿಸ್ಥಿತಿಗಳನ್ನು ಗಮನದಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

8. ಸರ್ಕಾರದ ಪೂರ್ವಾನುಮತಿ ಇಲ್ಲದೆ ಭೂಮಿಯನ್ನು ಮಂಜೂರು ಮಾಡಲಾದ ಉದ್ದೇಶಕ್ಕಲ್ಲದೆ ಇತರೆ ಯಾವುದೇ

ಉದ್ದೇಶಕ್ಕಾಗಿಯೂ ಇದನ್ನು ಉಪಯೋಗಿಸತಕ್ಕದ್ದಲ್ಲ.

9. ಮಂಜೂರಾದ ಜಮೀನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮಗಳಿಗೆ ಬದ್ದವಾಗಿದ್ದು,

ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ, ಈ ಮಂಜೂರಾತಿ ಆದೇಶವನ್ನು ರದ್ದುಪಡಿಸಿ, ಮಂಜೂರಾದ

ಜಮೀನನ್ನು ಯಾವುದೇ ಪರಿಹಾರ ನೀಡದೆ ಸರ್ಕಾರದ ವಶಕ್ಕೆ ಪಡೆಯಲಾಗುವುದು.

PR-403

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ SC-25

ಎಂ.ಇ.ಚನ್ನಬಸವರಾಜ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ. (ಭೂ.ಮಂಜೂರಾತಿ-3)

ಕಂದಾಯ ಸಚಿವಾಲಯ

ವಿಷಯ : ಜೆ.ಎಸ್.ಡಬ್ಲ್ಯೂ ಸ್ಟೀಲ್ಸ್ ತೋರಣಗಲ್ಲು ಇವರ ಕಾರ್ಖಾನೆಯ ನೀರು ಸಂಗ್ರಹಣೆಯ ಯೋಜನೆಗಾಗಿ ಬಳ್ಳಾರಿ ಜಿಲ್ಲೆ, ಹೊಸಪೇಟೆ ತಾಲ್ಲೂಕು, 61 ಗೋನಾಳು ಗ್ರಾಮದ 715.58 ಎಕರೆ ಭೂ ಸ್ವಾಧೀನಗೊಂಡಿರುವ ಜಮೀನುಗಳ ಮಧ್ಯಭಾಗದಲ್ಲಿ ಬರುವ ಸರ್ಕಾರಿ ಜಮೀನಿನ ವಿಸ್ತೀರ್ಣ 77.93 ಎಕರೆ/ಸೆಂಟ್ಸ್ ಜಮೀನನ್ನು ಮಂಜೂರು ಮಾಡುವ ಕುರಿತು.

ಓದಲಾಗಿದೆ : ಜಿಲ್ಲಾಧಿಕಾರಿ, ಬಳ್ಳಾರಿ ಜಿಲ್ಲೆ, ಬಳ್ಳಾರಿ ಇವರ ಪತ್ರ ಸಂಖ್ಯೆ: ಕಂ:ಭೂಮಿ/63/2014-15, ದಿನಾಂಕ: 01.06.2016 ಮತ್ತು 24.09.2016.

ಪ್ರಸ್ತಾವನೆ:

ಮೇಲೆ ಓದಲಾದ ಪತ್ರಗಳಲ್ಲಿ ಜಿಲ್ಲಾಧಿಕಾರಿ, ಬಳ್ಳಾರಿ ಜಿಲ್ಲೆ ರವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಜೆ.ಎಸ್.ಡಬ್ಲ್ಯೂ ಸ್ಟೀಲ್ಸ್ ಲಿಮಿಟೆಡ್, ತೋರಣಗಲ್ಲು ಇವರ ಕಾರ್ಖಾನೆಗಾಗಿ ನೀರು ಸಂಗ್ರಹಣೆ (Impounding Reservoir) ಉದ್ದೇಶಕ್ಕಾಗಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಐ 5 ಎಸ್‌ಪಿಕ್ಯೂ 2012, ದಿನಾಂಕ: 21.04.2012ರಲ್ಲಿ 61-ಗೋನಾಳು ಗ್ರಾಮದಲ್ಲಿ 633-35 ಎಕರೆ ಹಿಡುವಳಿ ವಿಸ್ತೀರ್ಣ ಮತ್ತು 82-23 ಎಕರೆ ಸರ್ಕಾರಿ ಜಮೀನಿನ ವಿಸ್ತೀರ್ಣವನ್ನೊಳಗೊಂಡಂತೆ ಒಟ್ಟು 715.58 ಎಕರೆ/ಸೆಂಟ್ಸ್ ವಿಸ್ತೀರ್ಣದ ಜಮೀನನ್ನು ಭೂ ಸ್ವಾಧೀನಪಡಿಸಿಕೊಳ್ಳಲು ಕಲಂ 3(1)ರಡಿಯಲ್ಲಿ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ. ಈ ಜಮೀನಿನ ಮಧ್ಯಭಾಗದಲ್ಲಿ 82-23 ಎಕರೆ/ಸೆಂಟ್ಸ್ ಸರ್ಕಾರಿ ಜಮೀನು ಒಳಗೊಂಡಿದ್ದು, ಈ ಪೈಕಿ ಸ.ನಂ. 42ರಲ್ಲಿನ 4.30 ಎಕರೆ/ಸೆಂಟ್ಸ್ ವಿಸ್ತೀರ್ಣವು ಭೂಸ್ವಾಧೀನಪಡಿಸಿಕೊಂಡಿರುವ ಪ್ರದೇಶದ ಹೊರಗಡೆ ಬರುವುದರಿಂದ ಈ ವಿಸ್ತೀರ್ಣವನ್ನು ಹೊರತುಪಡಿಸಿ, ಉಳಿದ ವಿಸ್ತೀರ್ಣ 77-93 ಎಕರೆ/ಸೆಂಟ್ಸ್ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಮಂಜೂರು ಮಾಡುವಂತೆ ಜೆ.ಎಸ್.ಡಬ್ಲ್ಯೂ ಸ್ಟೀಲ್ಸ್, ತೋರಣಗಲ್ಲು ಇವರು ಕೋರಿರುವುದಾಗಿ ವರದಿ ಮಾಡಿರುತ್ತಾರೆ.

೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ಭಾಗ ೧

ಪ್ರಸ್ತಾಪಿತ ಜಮೀನು ಜೆ.ಎಸ್.ಡಬ್ಲ್ಯೂ ಸ್ಟೀಲ್ಸ್ ಲಿಮಿಟೆಡ್, ತೋರಣಗಲ್ಲು ಇವರ ಕಾರ್ಖಾನೆಗಾಗಿ ನೀರು ಸಂಗ್ರಹಣೆ (Impounding Reservoir) ಉದ್ದೇಶಕ್ಕಾಗಿ ಭೂ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳ ಮಧ್ಯಭಾಗದಲ್ಲಿ ಬರುತ್ತಿದ್ದು, ಅಲ್ಲಲ್ಲಿ ಕಲ್ಲು-ಬಂಡೆಗಳಿಂದ ಕೂಡಿದ್ದು, ಕೃಷಿಗೆ ಯೋಗ್ಯವಲ್ಲದ ಜಮೀನುಗಳಾಗಿರುತ್ತವೆ. ಈ ಜಮೀನಿನಲ್ಲಿ ಯಾವುದೇ ಬೆಲೆ ಬಾಳುವ ಗಿಡ-ಮರಗಳಾಗಲಿ, ಪುರಾತನ ಸ್ಮಾರಕಗಳಾಗಲಿ ಇರುವುದಿಲ್ಲ. ಹೈಟೆನ್ಷನ್ ವಿದ್ಯುತ್ ಲೈನ್‌ಗಳು ಹಾದುಹೋಗಿರುವುದಿಲ್ಲ ಮತ್ತು ಒತ್ತುವರಿಯಾಗಿರುವುದಿಲ್ಲ.

ಮುಂದುವರೆದು, ಪ್ರಸ್ತಾಪಿತ ಜಮೀನಿನ ಪೈಕಿ ಸ.ನಂ. 46/ಸಿ ರಲ್ಲಿ 1-99 ಎಕರೆ/ಸೆಂಟ್ಸ್ ಮತ್ತು ಸ.ನಂ. 47/ಡಿ ರಲ್ಲಿ 1-80 ಎಕರೆ/ಸೆಂಟ್ಸ್ ವಿಸ್ತೀರ್ಣದ ಜಮೀನು ಪಹಣಿಯ ಪ್ರಕಾರ "ರಸ್ತೆ ಪರಂಪೋಕು ಎಂದು ವರ್ಗೀಕರಣಗೊಂಡಿದ್ದು, ಪ್ರಸ್ತುತ ರಸ್ತೆಯು ಅಸ್ತಿತ್ವದಲ್ಲಿ ಇಲ್ಲದೇ ಇರುವುದರಿಂದ ಸದರಿ ಜಮೀನನ್ನು ಕರ್ನಾಟಕ ಭೂ ಕಂದಯ ಕಾಯ್ದೆ 1964ರ ಕಲಂ 68 ರಡಿಯಲ್ಲಿ ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸಬೇಕಾಗಿರುತ್ತದೆ.

ಮುಂದುವರೆದು ಸ.ನಂ. 133/ಬಿ1ರಲ್ಲಿನ ವಿಸ್ತೀರ್ಣ 3-36 ಎಕರೆ/ಸೆಂಟ್ಸ್ ಜಮೀನನ್ನು ರಿಕನ್ವೆ ಮಾಡುವಂತೆ ಕೋರಿ ಶ್ರೀ ಜಿ.ಅಂಜಿನಪ್ಪ ತಂದೆ ರಾಮಪ್ಪ ಇವರು ಕೋರಿದ್ದು, ರಿಕನ್ವೆಯ ಅಂತಿಮ ಆದೇಶ ಅರ್ಜಿದಾರರ ಪರವಾಗಿ ಆದಲ್ಲಿ ಪ್ರಸ್ತಾಪಿತ ಜಮೀನಿನ ಪರಿಹಾರವನ್ನು ಕೆ.ಐ.ಎ.ಡಿ.ಬಿ ರವರು ಪಟ್ಟಾದಾರರಿಗೆ ಪಾವತಿಸಬೇಕು ಎನ್ನುವ ಷರತ್ತು ವಿಧಿಸಿ ಮಂಜೂರು ಮಾಡಬಹುದಾಗಿದ್ದು, ಒಟ್ಟು 77-93 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಎಕರೆ ಒಂದಕ್ಕೆ `. 6,00,000/-ಗಳು ಮತ್ತು ಇದಕ್ಕೆ ವಾರ್ಷಿಕವಾಗಿ ಶೇ.10ರಷ್ಟು ಹೆಚ್ಚಿಸಿ ಬೆಲೆ ನಿಗಧಿಪಡಿಸಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ರಡಿ ಕೆ.ಐ.ಎ.ಡಿ.ಬಿ ಇವರ ಮೂಲಕ ಮೆ|| ಜೆ.ಎಸ್.ಡಬ್ಲ್ಯೂ, ತೋರಣಗಲ್ಲು ಇವರಿಗೆ ಮಂಜೂರು ಮಾಡಬಹುದೆಂದು ಶಿಫಾರಸ್ಸು ಮಾಡಿರುತ್ತಾರೆ.

ಜಿಲ್ಲಾಧಿಕಾರಿಯವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ:ಆರ್‌ಡಿ: 22:ಎಲ್‌ಜಿಇ:2016, ಬೆಂಗಳೂರು, ದಿನಾಂಕ: 28.11.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬಳ್ಳಾರಿ ಜಿಲ್ಲೆ, ಹೊಸಪೇಟೆ ತಾಲ್ಲೂಕು, 61-ಗೋನಾಳು ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿನ ಒಟ್ಟು 77-93 ಎಕರೆ/ಸೆಂಟ್ಸ್ ಸರ್ಕಾರಿ ಜಮೀನಿಗೆ ದಿನಾಂಕ: 23.12.2013ರಂದು ನಡೆದ ಭೂ ಬೆಲೆ ನಿರ್ಧರಣಾ ಸಮಿತಿಯು ಪ್ರತಿ ಎಕರೆಗೆ `. 6,00,000/-(ರೂ. ಆರು ಲಕ್ಷ)ದಂತೆ ನಿಗದಿಪಡಿಸಿರುವ ಜಮೀನಿನ ಮೌಲ್ಯಕ್ಕೆ ಪ್ರತಿ ವóರ್ಷ ಶೇ.10ರಷ್ಟು ಹೆಚ್ಚಿಸಿ ಬೆಲೆ ನಿಗದಿಪಡಿಸಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ರ ಅಡಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ.) ಮೂಲಕ ಮೆ: ಜೆ.ಎಸ್.ಡಬ್ಲ್ಯೂ ಸ್ಟೀಲ್ಸ್, ತೋರಣಗಲ್ಲು ಇವರಿಗೆ ಕಾರ್ಖಾನೆಯ ನೀರು ಸಂಗ್ರಹಣೆ (Impounding Reservoir) ಯೋಜನೆಗಾಗಿ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರು ಮಾಡಿ ಆದೇಶಿಸಿದೆ.

ಷರತ್ತುಗಳು:-

1. ಪ್ರಸ್ತಾಪಿತ ಒಟ್ಟು 77-93 ಎಕರೆ/ಸೆಂಟ್ಸ್ ವಿಸ್ತೀರ್ಣದಲ್ಲಿ ಇರುವ ರಸ್ತೆ ಪರಂಬೋಕು ವಿಸ್ತೀರ್ಣ 3.79 ಎಕರೆ/ಸೆಂಟ್ಸ್ ಜಮೀನನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 68ರನ್ವಯ ಪ್ರಕ್ರಿಯೆ ನಡೆಸಿ ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸಲು ಕ್ರಮವಹಿಸುವುದು.

2. ಪ್ರಸ್ತಾಪಿತ ಒಟ್ಟು 77-93 ಎಕರೆ/ಸೆಂಟ್ಸ್ ವಿಸ್ತೀರ್ಣದ ಪೈಕಿ 03.36 ಎಕರೆ ಜಮೀನನ್ನು ರಿಕನ್ವೆಯ ಅಂತಿಮ ಆದೇಶವು ಅರ್ಜಿದಾರರ ಪರವಾಗಿ ಆದಲ್ಲಿ ಜಮೀನಿನ ಪರಿಹಾರದ ಮೊತ್ತವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಇವರಿಂದ ಪಟ್ಟಾದಾರರಿಗೆ ಪಾವತಿಸಬೇಕು.

3. ಮಂಜೂರಾದ ಭೂಮಿಯನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.

4. ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ. 5. ಮಂಜೂರಾದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.

6. ಮಂಜೂರು ಮಾಡಲ್ಪಡುವ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ದಾವೆಗಳು ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.

7. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ / ಉಪಗುತ್ತಿಗೆ ನೀಡುವುದಾಗಲಿ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು.

8. ಮಂಜೂರಾದ ಜಮೀನಿನಲ್ಲಿ ಅಭಿವೃದ್ದಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

9. ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ, ಉಲ್ಲಂಘನೆಯಾದಲ್ಲಿ ಈ ಮಂಜೂರಾತಿ ಆದೇಶವನ್ನು ನಿಯಮಾನುಸಾರ ರದ್ದುಪಡಿಸಲಾಗುವುದು ಹಾಗೂ ಯಾವುದೇ ಪರಿಹಾರ ನೀಡದೇ ಮಂಜೂರಾದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು.

10. ಜಿಲ್ಲಾಧಿಕಾರಿಗಳು ಜಮೀನನ್ನು ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯ ಷರತ್ತುಗಳೊಂದಿಗೆ ಪೂರಕವಾದ ಇತರೆ ಷರತ್ತುಗಳನ್ನು ವಿಧಿಸಬಹುದಾಗಿದೆ.

PR-404

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-50

ಎಂ.ಇ.ಚನ್ನಬಸವರಾಜು

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ(ಭೂ.ಮಂಜೂರಾತಿ-3)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ೯

ಒಳಾಡಳಿತ ಸಚಿವಾಲಯ

ವಿಷಯ : ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ದಿವಂಗತ ಎಂ.ಜಿ.ಹೆಬಾಳ್ಕರ್, ಡಿಜಿ&ಐಜಿಪಿ (ನಿವೃತ್ತ) ರವರ ಸ್ಮರಣಾರ್ಥ ಅವರ ಹೆಸರಿನಲ್ಲಿ ಎರಡು ರೋಲಿಂಗ್ ಟ್ರೋಫಿಯನ್ನು ನೀಡುವ ಕುರಿತು ಸರ್ಕಾರದ ಅನುಮತಿ ನೀಡುವ ಬಗ್ಗೆ.

ಓದಲಾಗಿದೆ : ಡಿಜಿ ಮತ್ತು ಐಜಿಪಿ ರವರ ಕಛೇರಿ ಪತ್ರ ಸಂಖ್ಯೆ: 19/ಕ್ರೀಡೆ/2017-18, ದಿನಾಂಕ: 26.09.2017.

ಪ್ರಸ್ತಾವನೆ:

ಶ್ರೀ ಎಸ್.ಎನ್.ಎಸ್.ಮೂರ್ತಿ, ಐ.ಪಿ.ಎಸ್., ಡಿಜಿ ಮತ್ತು ಐಜಿಪಿ (ನಿವೃತ್ತ) ರವರು ದಿವಂಗತ ಎಂ.ಜಿ.ಹೆಬಾಳ್ಕರ್, ಡಿಜಿ ಮತ್ತು ಐಜಿಪಿ (ನಿವೃತ್ತ) ರವರ ಸ್ಮರಣಾರ್ಥ ಅವರ ಹೆಸರಿನಲ್ಲಿ ಒಂದು ರೋಲಿಂಗ್ ಟ್ರೋಫಿಯನ್ನು ಪ್ರತಿ ವರ್ಷ ನಡೆಯಲಿರುವ ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಉತ್ತಮ ಅಥ್ಲೀಟ್ (ಪುರುಷ ಮತ್ತು ಮಹಿಳೆ) ರವರಿಗೆ ಪ್ರತ್ಯೇಕವಾಗಿ ದಿವಂಗತ ಎಂ.ಜಿ.ಹೆಬಾಳ್ಕರ್ ರವರ ಹೆಸರಿನಲ್ಲಿ ತಲಾ ಒಂದು ರೋಲಿಂಗ್ ಟ್ರೋಫಿಯನ್ನು ನೀಡಲು ಕೋರಿರುತ್ತಾರೆ. ಇದಲ್ಲದೇ ದಿವಂಗತ ಎಂ.ಜಿ.ಹೆಬಾಳ್ಕರ್ ರವರ ಕುಟುಂಬದವರು `. 1.00 ಲಕ್ಷ ರೂಗಳ ಹಣವನ್ನು ಕರ್ನಾಟಕ ರಾಜ್ಯ ಪೊಲೀಸ್ ಕ್ರೀಡಾಭಿವೃದ್ಧಿ ಮಂಡಳಿಗೆ ನೀಡಲು ಇಚ್ಚಿಸಿದ್ದು, ಅದರಲ್ಲಿ ಬರುವ ಬಡ್ಡಿಯನ್ನು ಪ್ರತಿ ವರ್ಷ ನಡೆಯುವ ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಉತ್ತಮ ಅಥ್ಲೀಟ್ (ಪುರುಷ ಮತ್ತು ಮಹಿಳೆ) ರವರಿಗೆ ಸಮನಾಗಿ ನಗದು ಬಹುಮಾನವಾಗಿ ನೀಡಲು ಕೋರಿರುವ ಹಿನ್ನಲೆಯಲ್ಲಿ, ಈ ಬಗ್ಗೆ ಸರ್ಕಾರದ ಅನುಮತಿಯನ್ನು ಮೇಲೆ ಓದಲಾದ ಪತ್ರದಲ್ಲಿ ಡಿಜಿ ಮತ್ತು ಐಜಿಪಿ ರವರು ಕೋರಿರುತ್ತಾರೆ. ಸದರಿ ನಗದು ಬಹುಮಾನ ನೀಡುವುದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಉಂಟಾಗುವುದಿಲ್ಲವಾದ್ದರಿಂದ ಅಲ್ಲದೆ, ಇಲಾಖೆಗೆ ಸೇರಿರುವ ಅಭ್ಯರ್ಥಿಗಳಿಗೆ ಸೇವಾ ಮನೋಭಾವ ಮತ್ತು ರಾಜ್ಯದ ರಕ್ಷಣಾ ಜಾಗೃತಿ ಹೆಚ್ಚುವುದರಿಂದ ಇಂತಹ ಬಹುಮಾನ ನೀಡುವುದು ಸೂಕ್ತ ಎಂದು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಒಇ 562 ಪೊಸಿಪ 2017, ಬೆಂಗಳೂರು, ದಿನಾಂಕ: 30-11-2017.

ಪ್ರಸ್ತಾವನೆಯಲ್ಲಿ ವಿವರಿಸಿದಂತೆ ಶ್ರೀ ಎಸ್.ಎನ್.ಎಸ್.ಮೂರ್ತಿ, ಐ.ಪಿ.ಎಸ್. ಡಿಜಿ ಮತ್ತು ಐಜಿಪಿ (ನಿವೃತ್ತ) ರವರು ದಿವಂಗತ ಎಂ.ಜಿ.ಹೆಬಾಳ್ಕರ್, ಡಿಜಿ ಮತ್ತು ಐಜಿಪಿ (ನಿವೃತ್ತ) ರವರ ಸ್ಮರಣಾರ್ಥ ಅವರ ಹೆಸರಿನಲ್ಲಿ ಒಂದು ರೋಲಿಂಗ್ ಟ್ರೋಫಿಯನ್ನು ಪ್ರತಿ ವರ್ಷ ನಡೆಯಲಿರುವ ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಉತ್ತಮ ಅಥ್ಲೀಟ್ (ಪುರುಷ ಮತ್ತು ಮಹಿಳೆ) ರವರಿಗೆ ಪ್ರತ್ಯೇಕವಾಗಿ ದಿವಂಗತ ಎಂ.ಜಿ.ಹೆಬಾಳ್ಕರ್ ರವರ ಹೆಸರಿನಲ್ಲಿ ತಲಾ ಒಂದು ರೋಲಿಂಗ್ ಟ್ರೋಫಿಯನ್ನು ನೀಡಲು ಹಾಗೂ ದಿವಂಗತ ಎಂ.ಜಿ.ಹೆಬಾಳ್ಕರ್ ರವರ ಕುಟುಂಬದವರು `. 1.00 ಲಕ್ಷ ರೂಗಳ ಹಣವನ್ನು ಕರ್ನಾಟಕ ರಾಜ್ಯ ಪೊಲೀಸ್ ಕ್ರೀಡಾಭಿವೃದ್ಧಿ ಮಂಡಳಿಗೆ ನೀಡಿ ಅದರಲ್ಲಿ ಬರುವ ಬಡ್ಡಿಯನ್ನು ಪ್ರತಿ ವರ್ಷ ನಡೆಯುವ ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಉತ್ತಮ ಅಥ್ಲೀಟ್ (ಪುರುಷ ಮತ್ತು ಮಹಿಳೆ) ರವರಿಗೆ ಸಮನಾಗಿ ನಗದು ಬಹುಮಾನವಾಗಿ ನೀಡಲು ಸರ್ಕಾರದ ಮಂಜೂರಾತಿ ನೀಡಿದೆ. ಒಂದು ವೇಳೆ ಯಾವುದಾದರೂ ವರ್ಷ ತರಬೇತಿ ನಡೆಯದಿದ್ದಲ್ಲಿ ಆ ವರ್ಷದ ಬಹುಮಾನದ ಮೊತ್ತವನ್ನು ಮೂಲಧನಕ್ಕೆ ಸೇರ್ಪಡಿಸಲು ಸೂಚಿಸಿದೆ.

PR-405

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ.ಎನ್.ಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಎ)

ಇಂಧನ ಸಚಿವಾಲಯ

ವಿಷಯ : ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವತಿಯಿಂದ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ಒದಗಿಸುವ ಮೂರನೇ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಇಎನ್ 68 ವಿಎಸ್‌ಸಿ 2017 ದಿ:24.07.2017. 2. ಸರ್ಕಾರದ ಆದೇಶ ಸಂಖ್ಯೆ: ಇಎನ್ 75 ವಿಎಸ್‌ಸಿ 2017 ದಿ:29.05.2017. 3. ತಮ್ಮ ಕಛೇರಿ ಪತ್ರ ಸಂಖ್ಯೆ: ಕೆಆರ್ಇಡಿಎಲ್/07/SOG/F30/2016/07 ದಿ:03.01.2017 4. ಸರ್ಕಾರದ ಪತ್ರ ಸಂಖ್ಯೆ: ಇಎನ್ 48 ವಿಎಸ್‌ಸಿ 2016 ದಿ:01.09.2016. 5. ಸರ್ಕಾರದ ಆದೇಶ ಸಂಖ್ಯೆ: ಇಎನ್ 17 ವಿಎಸ್‌ಸಿ 2016 ದಿ:23.04.2016. 6. ಸರ್ಕಾರದ ಆದೇಶ ಸಂಖ್ಯೆ: ಇಎನ್ 17 ವಿಎಸ್‌ಸಿ 2016 ದಿ:22.01.2016. 7. ಸರ್ಕಾರದ ಆದೇಶ ಸಂಖ್ಯೆ: ಇಎನ್ 48 ವಿಎಸ್‌ಸಿ 2016 ದಿ:05.01.2017. 8. ಸರ್ಕಾರದ ಪತ್ರ ಸಂಖ್ಯೆ: ಇಎನ್ 54 ವಿಎಸ್‌ಸಿ 2014 ದಿ:17.06.2015. 9. ಸರ್ಕಾರದ ತಿದ್ದುಪಡಿ ಆದೇಶ ಸಂಖ್ಯೆ: ಇಎನ್ 54 ವಿಎಸ್‌ಸಿ 2014 ದಿ:12.08.2015. 10. ಸರ್ಕಾರದ ಆದೇಶ ಸಂಖ್ಯೆ: ಇಎನ್ 54 ವಿಎಸ್‌ಸಿ 2014 ದಿ:28.02.2015.

ಪ್ರಸ್ತಾವನೆ:

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (ಕೆಆರ್ಇಡಿಎಲ್) ಮುಖಾಂತರ ಮೇಲೆ ಓದಲಾದ (7) ರಿಂದ (10) ರಲ್ಲಿ ವರ್ಷ 2012-13, 2013-14 ಮತ್ತು 2014-15ರ ಆಯವ್ಯಯದಲ್ಲಿ ಸೌರ ಶಕ್ತಿ ಯೋಜನೆಗಳಿಗೆ ಹಂಚಿಕೆಯಾಗಿದ್ದ ಒಟ್ಟು `. 26.8 ಕೋಟಿಗಳ ವೆಚ್ಚದಲ್ಲಿ೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ಭಾಗ ೧ 5 ಹೆಚ್.ಪಿ ಸಾಮರ್ಥ್ಯದ ಒಟ್ಟು 1009 ಸಂಖ್ಯೆಯ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ಹೊಸದಾಗಿ ಸಂಪರ್ಕ ಪಡೆಯುವ ರೈತರಿಗೆ ವಿತರಿಸುವ ಯೋಜನೆಯನ್ನು ಪ್ರಾಯೋಗಿಕವಾಗಿ 11 ತಾಲ್ಲೂಕುಗಳಲ್ಲಿ ಹಮ್ಮಿಕೊಂಡಿದ್ದು, ಸದರಿ ಯೋಜನೆಯಡಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ `. 1 (ಒಂದು) ಲಕ್ಷ ವಂತಿಗೆಯೊಂದಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಯಾವುದೇ ವಂತಿಗೆ ಇಲ್ಲದೆ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ವಿತರಿಸಲಾಗುತ್ತಿದೆ. ಅಕ್ಟೋಬರ್-17ರ ಅಂತ್ಯಕ್ಕೆ 916 ಸಂಖ್ಯೆಯ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸಿ ಚಾಲನೆಗೊಳಿಸಲಾಗಿದೆ.

ಮೇಲೆ ಓದಲಾದ (4) ರಿಂದ (6)ರಲ್ಲಿ 2015-16 ಮತ್ತು 2016-17ನೇ ಸಾಲಿನಲ್ಲಿ ಹಂಚಿಕೆಯಾಗಿದ್ದ ಒಟ್ಟು ರೂ.35 ಕೋಟಿಗಳ ವೆಚ್ಚದಲ್ಲಿ 1530 ಸಂಖ್ಯೆಯ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು 48 ತಾಲ್ಲೂಕುಗಳಲ್ಲಿ ಅನುಷ್ಟಾನಗೊಳಿಸಲು ಅನುಮೋದನೆ ನೀಡಲಾಗಿದೆ, ಅಕ್ಟೋಬರ್-17ರ ಅಂತ್ಯಕ್ಕೆ 122 ಸಂಖ್ಯೆಯ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸಿ ಚಾಲನೆಗೊಳಿಸಲಾಗಿದ್ದು, ಉಳಿದ ಕಾರ್ಯ ಪ್ರಗತಿಯಲ್ಲಿದೆ. ಮೇಲೆ ಓದಲಾದ (2)ರಲ್ಲಿ 2017-18ನೇ ಸಾಲಿನಲ್ಲಿ ಸೌರ ಯೋಜನೆಗಳಿಗೆ ಒದಗಿಸಿದ್ದ `. 25.42 ಕೋಟಿ ಅನುದಾನದಲ್ಲಿ ಕೆ.ಆರ್.ಇ.ಡಿ.ಎಲ್ ರವರು ಸಲ್ಲಿಸಿದ್ದ ಪ್ರಸ್ತಾವನೆಯನ್ವಯ ನಾಲ್ಕನೇ ಹಂತದಲ್ಲಿ 1013 ಸಂಖ್ಯೆಯ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ಒದಗಿಸುವ ಯೋಜನೆಯು ಜಾರಿಯಲ್ಲಿದೆ.

ಸೌರ ಶಕ್ತಿ ಆಧಾರಿತ ಜಾಲಮುಕ್ತ ಪಂಪ್‌ಸೆಟ್ ಒದಗಿಸುವ ಯೋಜನೆಯಡಿ, ಪ್ರತಿ ಪಂಪ್‌ಸೆಟ್‌ಗೆ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಅನ್ವಯವಾಗುವಂತೆ ವಂತಿಗೆ `.1 ಲಕ್ಷದಂತೆ 20 ಸಂಖ್ಯೆಯ ನೀರಾವರಿ ಪಂಪ್‌ಸೆಟ್‌ಗಳಿಗೆ `. 20 ಲಕ್ಷಗಳನ್ನು ಪಾವತಿಸಲು ಅರಣ್ಯ ಇಲಾಖೆಯಿಂದ ಸಹಮತಿ ನೀಡಿದ್ದ ಹಿನ್ನಲೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕೆಆರ್ಇಡಿಎಲ್‌ರವರ ಪ್ರಸ್ತಾವನೆಯಂತೆ, ಕೆಆರ್ಇಡಿಎಲ್ ವತಿಯಿಂದ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ಒದಗಿಸುವ ಯೋಜನೆಯಡಿ, ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಆಯ್ದ 20 ಸ್ಥಳಗಳಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ಸೌರ ಚಾಲಿತ ಪಂಪ್‌ಸೆಟ್‌ಗಳನ್ನು ಅಳವಡಿಸಲು ಮೇಲೆ ಓದಲಾದ (1)ರಲ್ಲಿ ಅನುಮೋದನೆ ನೀಡಿ ಆದೇಶಿಸಿದೆ.

ವ್ಯವಸ್ಥಾಪಕ ನಿರ್ದೇಶಕರು, ಕೆಆರ್ಇಡಿಎಲ್ ರವರು ಮೇಲೆ ಓದಲಾದ (3)ರಲ್ಲಿ ವರ್ಷ 2016-17ರಲ್ಲಿ ಬಿಡುಗಡೆಯಾದ `. 20 ಕೋಟಿಗಳಲ್ಲಿ ಉಳಿದ ಮೊತ್ತವಾದ `. 19.278 ಕೋಟಿಗಳಿಗೆ AC/DC ಪಂಪ್‌ಸೆಟ್‌ಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿದ್ದು, ತಾಂತ್ರಿಕ ಮತ್ತು ಆರ್ಥಿಕ ಬಿಡ್‌ನಲ್ಲಿ ಅರ್ಹರಾದ ಮೆ|| ಜೈನ್ ಇರಿಗೇಷನ್ ಸಿಸ್ಟಮ್ಸ್ ಲಿ., ರವರಿಗೆ ಕೆಆರ್ಇಡಿಎಲ್ ಸಂಸ್ಥೆಯ 82ನೇ ನಿರ್ದೇಶಕ ಮಂಡಳಿಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ, ಪ್ರತಿ ಪಂಪ್‌ಸೆಟ್‌ಗೆ `.4.99 ಲಕ್ಷದಂತೆ 901 ಸಂಖ್ಯೆಯ DC ಮಾದರಿಯ ಪಂಪ್‌ಸೆಟ್‌ಗಳನ್ನು ಅಳವಡಿಸಲು ದಿನಾಂಕ: 26.12.2016 ರಂದು LoI ನೀಡಲಾಗಿರುತ್ತದೆ ಎಂದು ತಿಳಿಸಿರುತ್ತಾರೆ.

ಮುಂದುವರೆದು, ಕೇಂದ್ರ ಸರ್ಕಾರದ ಎಂ.ಎನ್.ಆರ್.ಇ ವತಿಯಿಂದ ಪ್ರತಿ 5 ಹೆಚ್.ಪಿ DC ಮಾದರಿಯ ಪಂಪ್‌ಸೆಟ್‌ಗೆ `. 2.025 ಲಕ್ಷಗಳ ಅನುದಾನ ಲಭ್ಯವಾಗಲಿದ್ದು, ಪ್ರತಿ 5 ಹೆಚ್.ಪಿ AC ಮಾದರಿಯ ಪಂಪ್‌ಸೆಟ್‌ಗೆ ಹೋಲಿಸಿದಲ್ಲಿ `. 40,500/- ಗಳ ಹೆಚ್ಚುವರಿ ಅನುದಾನ ದೊರೆಯುತ್ತದೆ

Particulars Cost per 5 HP DC SWP in Lakhs Nos Amount in Crores
Cost of 5 HP SWP systems 4.99 901 44.96
MNRE Subsidy 2.025 901 18.24
Beneficiaries' contribution
General Category 1.00 745 7.45
SC/ST Category 0 156 0
GoK Contribution (44.97-(18.24+7.45)) 19.27

ಸದರಿ ಹಂತದ ಯೋಜನೆಯ ಅನುಷ್ಟಾನಕ್ಕಾಗಿ ಪ್ರತಿ ಸೌರ ಪಂಪ್‌ಸೆಟ್‌ನ ವೆಚ್ಚ ರೂ.4.00 ಲಕ್ಷಗಳೆಂದು ಅಂದಾಜಿಸಿ 1255 ಸಂಖ್ಯೆಯ ಸೌರ ಪಂಪ್‌ಸೆಟ್‌ಗಳ ಅಳವಡಿಕೆಗಾಗಿ ಟೆಂಡರ್ ಕರೆಯಲಾಗಿತ್ತು. ಆದರೆ ಎಲ್-1 ಬಿಡ್ಡುದಾರರು ಪ್ರತಿ ಸೌರ ಪಂಪ್‌ಸೆಟ್‌ಗೆ `. 4.99 ಲಕ್ಷ ಉಲ್ಲೇಖಿಸಿದ್ದರಿಂದ ಈ ಕೆಳಕಂಡ ಅಂಶಗಳಿಗೆ ಸೂಕ್ತ ಆದೇಶ ಹೊರಡಿಸಲು ವ್ಯವಸ್ಥಾಪಕ ನಿರ್ದೇಶಕರು, ಕೆಆರ್ಇಡಿಎಲ್‌ರವರು ಪ್ರಸ್ತಾವನೆಯಲ್ಲಿ ಕೋರಿರುತ್ತಾರೆ:

• 3ನೇ ಹಂತದ ಯೋಜನೆಯಡಿ 901 ಸಂಖ್ಯೆಯ 5 ಹೆಚ್.ಪಿ ಸಾಮರ್ಥ್ಯದ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಡಿಸಿ ಪಂಪ್‌ಸೆಟ್‌ಗಳನ್ನು ಒಟ್ಟು ವೆಚ್ಚ `. 44.96 ಕೋಟಿಗಳಲ್ಲಿ ಆಯ್ದ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಅಳವಡಿಸುವ ಯೋಜನೆಗೆ ಅನುಮೋದನೆ. (ರಾಜ್ಯ ಸರ್ಕಾರದ ಅನುದಾನ `. 19.278 ಕೋಟಿಗಳು, ಕೇಂದ್ರ ಸರ್ಕಾರದ ಅನುದಾನ `. 18.245 ಕೋಟಿಗಳು ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳ ವಂತಿಗೆ `. 7.45 ಕೋಟಿಗಳು).

• ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯ ಮಾನದಂಡಗಳನ್ನು ಹಾಗೂ ಘಟಕ ಅಳವಡಿಸಿದ ನಂತರದ ನಿರ್ವಹಣೆ ಕುರಿತು ವಿವರವಾದ ಕಾರ್ಯತಂತ್ರ ಯೋಜನೆಗೆ ಸೂಕ್ತ ಆದೇಶ.

• 3ನೇ ಹಂತದ ಯೋಜನೆಯಡಿ 901 ಸಂಖ್ಯೆಯ ಫಲಾನುಭವಿಗಳ ಆಯ್ಕೆಗಾಗಿ ತಾಲ್ಲೂಕುವಾರು ಹಂಚಿಕೆಯನ್ನು ನೀಡಲು ಸೂಕ್ತ ಆದೇಶ.

ಅದರಂತೆ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಮುಂದುವರೆದ ಯೋಜನೆಯಾದ ಸೌರ ಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ಒದಗಿಸುವ ಮೂರನೇ ಹಂತದ ಯೋಜನೆಗೆ ತಾಲ್ಲೂಕುವಾರು ಹಂಚಿಕೆ ನೀಡಿ ಹಾಗೂ ಯೋಜನೆಯ ಅನುಷ್ಠಾನ ಚಟುವಟಿಕೆ/ಮಾನದಂಡಗಳನ್ನು ರಚಿಸಲು ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಗಿನಂತೆ ಆದೇಶಿಸಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ೧೧

ಸರ್ಕಾರಿ ಆದೇಶ ಸಂಖ್ಯೆ: ಇಎನ್ 17 ವಿಎಸ್‌ಸಿ 2017, ಬೆಂಗಳೂರು, ದಿನಾಂಕ: 23.11.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಮುಂದುವರೆದ ಯೋಜನೆಯಾದ ಸೌರ ಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರದಿಂದ ವರ್ಷ 2016-17ರಲ್ಲಿ ಬಿಡುಗಡೆಯಾದ ರೂ.20 ಕೋಟಿಗಳಲ್ಲಿ ಉಳಿದ ಮೊತ್ತ `. 19.278 ಕೋಟಿ ಅನುದಾನದೊಂದಿಗೆ ಕೇಂದ್ರ ಸರ್ಕಾರದ ಅನುದಾನ `. 18.245 ಕೋಟಿ ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳ ವಂತಿಗೆ `. 7.45 ಕೋಟಿಗಳೊಂದಿಗೆ ಒಟ್ಟು ವೆಚ್ಚ `. 44.96 ಕೋಟಿ ವೆಚ್ಚದಲ್ಲಿ 901 ಸಂಖ್ಯೆಯ DC ಮಾದರಿಯ ಸೌರ ಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ಅಳವಡಿಸುವ ಯೋಜನೆಯನ್ನು, ಅನುಬಂಧದಲ್ಲಿರುವ ಅನುಷ್ಟಾನ ಕಾರ್ಯಚಟುವಟಿಕೆ/ಮಾನದಂಡಗಳನ್ವಯ ತಿಳಿಸಿರುವ ತಾಲ್ಲೂಕುಗಳಲ್ಲಿ ಅನುಷ್ಠಾನಗೊಳಿಸಲು ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ವಿ ಶ್ರೀನಿವಾಸಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ

ಇಂಧನ ಇಲಾಖೆ.

ಸರ್ಕಾರದ ಆದೇಶ ಸಂಖ್ಯೆ: ಇಎನ್ 17 ವಿಎಸ್‌ಸಿ 2017 ದಿನಾಂಕ: 23.11.2017 ಕ್ಕೆ ಅನುಬಂಧ

ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳ ಅನುಷ್ಠಾನಗೊಳಿಸುವ ಯೋಜನೆ:

1. ಅನುಷ್ಟಾನಗೊಳಿಸಲು ಉದ್ದೇಶಿಸಿರುವ ತಾಲ್ಲೂಕುಗಳು :

ಮೂರನೇ ಹಂತದ 901 ಸಂಖ್ಯೆಯ DC ಮಾದರಿಯ ಸೌರ ಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ಅಳವಡಿಸಲು ಉದ್ದೇಶಿಸಿರುವ ತಾಲ್ಲೂಕುಗಳು ಈ ಕೆಳಕಂಡಂತಿವೆ:

ಕ್ರ.ಸಂ ವಿ.ಸ.ಕಂ ಜಿಲ್ಲೆ ತಾಲ್ಲೂಕು ಹ ಂಚಿಕೆ ನೀಡಿರುವ ಸೌರ ಶಕ್ತಿ ಪ ಂಪ್‌ಗಳ ಸಂಖ್ಯೆ
1 ಬ ಸ್ಕಾಂ ೆ ತ ುಮಕೂರು ಕುಣಿಗಲ್ 55
2 ತ ುಮಕೂರು 10
3 ಪಾವಗಡ 25
4 ಗುಬ್ಬಿ 10
5 ವ ುಧುಗಿರಿ 75
ಒಟ್ಟು(ಬೆಸ್ಕಾಂ) 175
6 ಸ ಸ್ಕ್ ೆ ವ ುಂಡ್ಯ ನಾಗಮಂಗಲ 10
7 ಕೆ.ಆರ್.ಪೇಟೆ 10
8 ವ ುಳವಳ್ಳಿ 75
9 ಚಾಮರಾಜನಗರ ಗುಂಡ್ಲುಪೇಟೆ (ಬಂಡೀಪುರ ಅರಣ್ಯ) 20
10 ಕೊಳ್ಳೆಗಾಲ 10
11 ವ ುೖಸೂರು ೆ ನಂಜನಗೂಡು 10
12 ಹೆಚ್.ಡಿ. ಕೋಟೆ 2
ಒಟ್ಟು(ಸೆಸ್ಕ್) 137
13 ವ ುಸ್ಕಾಂ ೆ ಚಿಕ್ಕಮಗಳೂರು ಕಡೂರು 25
14 ತ ರೀಕೆರೆ 25
ಒಟ್ಟು(ಮೆಸ್ಕಾಂ) 50
15 ಹೆಸ್ಕಾಂ ಹಾವೇರಿ ಶಿಗ್ಗಾಂವ 25
16 ಸ ವ ಣೂರು 25
17 ಹಾನಗಲ್ಲ 25
18 ಬ್ಯಾಡಗಿ 10
19 ಬ ಳ ೆ ಗಾವಿ ಚಿಕ್ಕೋಡಿ 32
20 ನಿಪ್ಪಾಣಿ 25
21 ಅಥಣಿ 50
22 ಹೆಸ್ಕಾಂ ಉತ್ತರ ಕನ್ನಡ ಜಿಲ್ಲೆ ಉತ್ತರಕನ್ನಡ ಜಿಲ್ಲೆ 30
23 ದ ಾರವಾಡ ಕಲಘಟಗಿ 50
24 ದ ಾರವಾಡ 40
25 ಬಾಗಲಕೋಟೆ ತ ೕರದಾಳ್ ೆ 40
26 ಬಾದಾಮಿ ತಾಲ್ಲೂಕು 4
27 ಗದಗ ಶಿರಹಟ್ಟಿ 1
28 ವ ುುಂಡರಗಿ 1
29 ರೋಣ 100
30 ವಿಜಯಪುರ ವ ುುದ್ದೇಬಿಹಾಳ 1
31 ಬಸವನಬಾಗೇವಾಡಿ 75
ಒಟ್ಟು (ಹೆಸ್ಕಾಂ) 534
32 ಜ ಸ್ಕಾಂ ೆ ಬೀದರ್ ಬೀದರ್ 5
ಒಟ್ಟು (ಜೆಸ್ಕಾಂ) 5
ಒಟ್ಟು 901
೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ಭಾಗ ೧

2. ಕ್ರೆಡಲ್ ಪಾತ್ರ :

ಕೆ.ಆರ್.ಇ.ಡಿ.ಎಲ್. ಸಂಸ್ಥೆಯು ಈ ಕೆಳಕಂಡ ಚಟುವಟಿಕೆಗಳನ್ನು ಖಾತರಿ ಪಡಿಸಿಕೊಳ್ಳಬೇಕಾಗಿರುತ್ತದೆ:

1. ವರ್ಷ 2016-17ರಲ್ಲಿ ಬಿಡುಗಡೆಯಾದ `. 20 ಕೋಟಿಗಳಲ್ಲಿ ಎರಡನೇ ಹಂತದ ಯೋಜನೆಯ ನಂತರ ಉಳಿದ ಹಣ `. 19.278 ಕೋಟಿಗಳನ್ನು ಉಪಯೋಗಿಸಿಕೊಂಡು 901 ಸಂಖ್ಯೆಯ 5 ಹೆಚ್.ಪಿ ಸಾಮರ್ಥ್ಯದ DC ಮಾದರಿಯ ಪಂಪ್‌ಸೆಟ್‌ಗಳನ್ನು ಒದಗಿಸಲು ಕ್ರಮಕೈಗೊಳ್ಳುವುದು.

2. ಅನುಷ್ಠಾನಗೊಳಿಸುವ ಸಂಸ್ಥೆಯನ್ನು ಆಯ್ಕೆ ಮಾಡುವಾಗ ಪಾರದರ್ಶಕತೆಯನ್ನು ನಿರ್ವಹಿಸುವುದು.

3. ವಿತರಣಾ ಕಂಪನಿಗಳು(ESCOM) ಸಲ್ಲಿಸಿದ ಪಟ್ಟಿಯನ್ನು ಕೆಆರ್ಇಡಿಎಲ್ ಸಂಸ್ಥೆಯು ಪರಿಶೀಲಿಸಿ ಅನುಷ್ಟಾನಗೊಳಿಸುವ ಸಂಸ್ಥೆಗೆ ನೀಡುವುದು.

4. ಕ್ರೆಡಲ್ ಸಂಸ್ಥೆಯಿಂದ ಕೇಂದ್ರ ಸರ್ಕಾರದ ಎಂ.ಎನ್.ಆರ್.ಇ ಯಿಂದ ಸಹಾಯಧನ ಪಡೆಯಲು ಕ್ರಮ ಕೈಗೊಳ್ಳುವುದು.

5. ವಿತರಣಾ ಕಂಪನಿಗಳು (ESCOM) ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಸರ್ಟಿಫಿಕೇಟ್ ಹಾಗೂ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದ ನಂತರ ಅನುಷ್ಠಾನಗೊಳಿಸುವ ಸಂಸ್ಥೆಗೆ ಹಣ ಬಿಡುಗಡೆ ಮಾಡುವುದು.

3. ವಿತರಣಾ ಕಂಪನಿಗಳ(ESCOM) ಪಾತ್ರ :

ವಿತರಣಾ ಕಂಪನಿಗಳು(ESCOM)ಕಾರ್ಯಕ್ರಮದ ನಿರ್ವಾಹಕರಾಗಿದ್ದು, ಈ ಕೆಳಕಂಡ ಚಟುವಟಿಕೆಗಳನ್ನು ಖಾತರಿ ಪಡಿಸಿಕೊಳ್ಳಬೇಕಾಗಿರುತ್ತದೆ.

1. ವಿತರಣಾ ಕಂಪನಿಗಳ ವ್ಯಾಪ್ತಿಯಲ್ಲಿ ಇಚ್ಚೆಯುಳ್ಳ ಫಲಾನುಭವಿಗಳನ್ನು ಆಯ್ಕೆ ಮಾಡಿ ಸದರಿ ಫಲಾನುಭವಿಗಳ ವಂತಿಗೆಯೊಂದಿಗೆ ಸಿದ್ಧಪಡಿಸಿದ ಪಟ್ಟಿಯನ್ನು ಕೆಆರ್ಇಡಿಎಲ್ ಸಂಸ್ಥೆಗೆ ಕಳುಹಿಸಿಕೊಡುವುದು. ಮೊದಲು ಅರ್ಜಿಯನ್ನು ಸಲ್ಲಿಸಿದ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಿ ಆಯ್ಕೆ ಮಾಡುವುದು (First come first serve basis).

2. ಆಯ್ಕೆಯಾದ ಫಲಾನುಭವಿಗಳ ವಂತಿಗೆಯನ್ನು ಆಯಾ ಎಸ್ಕಾಂ ವಿಭಾಗಿಯ ಕಛೇರಿಗಳ ಲೆಕ್ಕಕ್ಕೆ ಪಡೆದು, ಕ್ರೂಡಿ ಕರಿಸಿದ ವಂತಿಗೆಯನ್ನು ಚೆಕ್/ಡಿಡಿ/ಆರ್‌ಟಿಜಿಎಸ್ ಮುಖಾಂತರ ಫಲಾನುಭವಿಗಳ ಪಟ್ಟಿಯನ್ನು ಕೆಆರ್ಇಡಿಎಲ್ ಸಂಸ್ಥೆಗೆ ರವಾನಿಸುವುದು.

3. ಫಲಾನುಭವಿಯು ಈ ಯೋಜನೆಯ ಲಾಭವನ್ನು ಪಡೆಯುವಂತೆ ಖಾತರಿ ಪಡಿಸಿಕೊಳ್ಳುವುದು.

4. ಅನುಷ್ಠಾನಗೊಳಿಸುವ ಸಂಸ್ಥೆಯ ಮೇಲ್ವಿಚಾರಣೆ, ಮೌಲ್ಯಮಾಪನ ಮತ್ತು ತಪಾಸಣೆ ಇದರ ಜವಾಬ್ದಾರಿಯಾಗಿರುತ್ತದೆ.

5. ಯೋಜನೆಯನ್ನು ಯುಶಸ್ವಿಯಾಗಿ ಅನುಷ್ಠಾನಗೊಳಿಸಿದ ಸರ್ಟಿಫಿಕೇಟ್ ಹಾಗೂ ಸಂಬಂಧಿಸಿದ ದಾಖಲೆಗಳನ್ನು ಕೆಆರ್ಇಡಿಎಲ್ ಸಂಸ್ಥೆಗೆ ಸಲ್ಲಿಸುವುದು.

6. ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಎಮ್.ಎನ್.ಆರ್.ಇ ಸಚಿವಾಲಯದಿಂದ ನಿಗಧಿಪಡಿಸಲಾದ ನಿಬಂಧನೆಗಳನ್ನು ಆಯ್ಕೆ ಮಾಡುವುದು ಮತ್ತು ಈಗಾಗಲೇ ವಿದ್ಯುತ್ ಸಂಪರ್ಕ ಪಡೆದ ಮತ್ತು ಆರ್ಆರ್ ಸಂಖ್ಯೆಯನ್ನು ಹೊಂದಿರುವ ಸ್ಥಾವರಗಳನ್ನು ಪರಿಗಣಿಸುವಂತಿಲ್ಲ.

7. ಆಯ್ಕೆ ಮಾಡಿದ ಫಲಾನುಭವಿಗಳ ಸ್ಥಾವರಕ್ಕೆ ಗ್ರಿಡ್ ಸಂಪರ್ಕವಿಲ್ಲವೆಂದು ದೃಡೀಕರಿಸುವುದು.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ೧೩

4. ಘಟಕದ ನಿರ್ವಹಣೆ :-

1. ಪ್ರತಿ ಘಟಕವು 5 ವರ್ಷಗಳ Comprehensive Maintenance ಮತ್ತು Warranty ಹೊಂದಿರಬೇಕಾಗಿರುತ್ತದೆ.

2. ಅನುಷ್ಠಾನಗೊಳಿಸಿದ ಸಂಸ್ಥೆಯು ಪ್ರತಿ 2 ತಿಂಗಳಿಗೊಮ್ಮೆ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಘಟಕವು ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಕುರಿತಂತೆ ಕ್ರಮ ಕೈಗೊಳ್ಳುವುದು.

3. ಘಟಕ ನಿರ್ವಹಣೆ ಕುರಿತಂತೆ 2 ತಿಂಗಳಿಗೊಮ್ಮೆ ನಿರ್ವಹಣಾ ವರದಿಯನ್ನು ಕ್ರೆಡಲ್ ಸಂಸ್ಥೆಗೆ ಸಲ್ಲಿಸಬೇಕಾಗಿರುತ್ತದೆ.

4. ದೋಷಪೂರಿತವಾದ ಘಟಕದ ಬಗ್ಗೆ ಫಲಾನುಭವಿಗಳಿಂದ ದೂರು ಬಂದಲ್ಲಿ, ಸರಬರಾಜುದಾರರು 48 ಘಂಟೆಗಳೊಳಗಾಗಿ ದುರಸ್ತಿ ಪಡಿಸಬೇಕಾಗಿರುತ್ತದೆ, ಇಲ್ಲವಾದಲ್ಲಿ ವಿಳಂಬವಾದ ಪ್ರತಿ ದಿನಕ್ಕೆ `. 2000/-ಗಳನ್ನು ಸರಬರಾಜುದಾರರು ದಂಡ ರೂಪದಲ್ಲಿ ಭರಿಸಬೇಕಾಗಿರುತ್ತದೆ.

5. ಫಲಾನುಭವಿಯು ತನ್ನ ಸ್ಥಾವರಕ್ಕೆ ಅಳವಡಿಸಲಾದ ಸೋಲಾರ್ ಪ್ಯಾನಲ್‌ಗಳನ್ನು ಶುಚಿಗೊಳಿಸುವುದನ್ನು ಹೊರತುಪಡಿಸಿ, ಘಟಕವನ್ನು ಸ್ಥಳಾಂತರಿಸುವುದು, ಸ್ವತಃ ನಿರ್ವಹಣೆ ಮಾಡುವುದು, ಅಳವಡಿಸಲಾದ ವಿವಿಧ ಬಿಡಿ ಭಾಗಗಳನ್ನು ಬದಲಾಯಿಸುವುದು ಮತ್ತು ಘಟಕದ ವ್ಯವಸ್ಥೆಯನ್ನು ಮಾರ್ಪಡು ಮಾಡುವುದನ್ನು ನಿರ್ಬಂಧಿಸುವುದು.

6. 5 ವರ್ಷಗಳ Comprehensive Maintenance ಮತ್ತು Warranty ಸಮಯದ ನಂತರದ ಅವಧಿಗೆ ಫಲಾನುಭವಿಗಳೇ ಘಟಕದ ಸಂಪೂರ್ಣ ಹೊಣೆಗಾರರಾಗಿರುತ್ತಾರೆ.

PR-406

ಬಿ.ವಿ ಶ್ರೀನಿವಾಸಯ್ಯ

SC-25

ಸರ್ಕಾರದ ಅಧೀನ ಕಾರ್ಯದರ್ಶಿ

ಇಂಧನ ಇಲಾಖೆ.

ಇಂಧನ ಸಚಿವಾಲಯ

ವಿಷಯ : ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಸೌರ ಪಾರ್ಕಿನಲ್ಲಿ ಮೆ|| ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ ನಿಯಮಿತ(ಎನ್.ಟಿ.ಪಿ.ಸಿ) ರವರಿಂದ ಸ್ಥಾಪಿಸುವ 1000 ಮೆ.ವ್ಯಾ. ಸಾಮರ್ಥ್ಯದ ಸೋಲಾರ್ ಘಟಕಗಳನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ಹಂಚಿಕೆ ನೀಡುವ ಕುರಿತು.

ಓದಲಾಗಿದೆ : 1. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೆ.ಎಸ್.ಪಿ.ಡಿ.ಸಿ.ಎಲ್ ರವರ ಪತ್ರ ಸಂಖ್ಯೆ: KSPDCL/F-20/2014-15/1281 ದಿನಾಂಕ: 18.11.2017.

ಮೇಲೆ ಓದಲಾದ ಉಲ್ಲೇಖ (8)ರಲ್ಲಿ ಮೆ|| ಎನ್.ಟಿ.ಪಿ.ಸಿ ರವರಿಂದ ಪಾವಗಡ ಸೌರ ಪಾರ್ಕಿನಲ್ಲಿ State specific Bundling Scheme in Batch-II, Phase-II of National Solar Mission ವರ್ಗದಡಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ 600 ಮೆ.ವ್ಯಾ. ಸಾಮರ್ಥ್ಯದ ಸೌರ ವಿದ್ಯುತ್‌ನ್ನು ಶಾಖೋತ್ಪನ್ನ೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ಭಾಗ ೧ 250ಮೆ.ವ್ಯಾ ಸಾಮರ್ಥ್ಯದ ಸೌರ ಯೋಜನೆಗಳನ್ನು DCR ವರ್ಗದಡಿ ಅನುಷ್ಟಾನಗೊಳಿಸುವುದಾಗಿ ಒಟ್ಟು 1000 ಮೆ.ವ್ಯಾ ಸಾಮರ್ಥ್ಯಕ್ಕೆ ಸರ್ಕಾರದ ಸಹಮತಿ ನೀಡಬೇಕಾಗಿ ಕೋರಿದ್ದರನ್ವಯ ಮೇಲೆ ಓದಲಾದ ಉಲ್ಲೇಖ (9)ರ ಪತ್ರದಲ್ಲಿ ಮೆ||ಎನ್.ಟಿ.ಪಿ.ಸಿ ರವರಿಗೆ ಸರ್ಕಾರದಿಂದ ಸಹಮತಿ ನೀಡಲಾಗಿರುತ್ತದೆ.

ಮುಂದುವರೆದು, ಮೇಲೆ ಓದಲಾದ ಉಲ್ಲೇಖ (7)ರ ಕ್ರೆಡಲ್‌ರವರ ಕಡತದಲ್ಲಿ ಮೆ|| ಎನ್.ಟಿ.ಪಿ.ಸಿ ರವರಿಗೆ 1000 ಮೆ.ವ್ಯಾ. ಸಾಮರ್ಥ್ಯದ ಸೌರ ವಿದ್ಯುತ್‌ನ್ನು ಅನುಷ್ಟಾನಗೊಳಿಸಲು ಅನುಮೋದನೆ ನೀಡುವ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು, ಕ್ರೆಡಲ್‌ರವರು ಪ್ರಸ್ತಾವನೆ ಸಲ್ಲಿಸಿದ್ದರನ್ವಯ, ಮೇಲೆ ಓದಲಾದ ಉಲ್ಲೇಖ (6)ರಂತೆ Viability Gap Funding (VGF) ಯೋಜನೆಯಡಿ 1000 ಮೆ.ವ್ಯಾ ಸಾಮರ್ಥ್ಯದ ಸೌರ ವಿದ್ಯುತ್ತನ್ನು ಅನುಷ್ಟಾನಗೊಳಿಸುವ ಬಗ್ಗೆ ಹಾಗೂ Ceiling Tariff ಬಗ್ಗೆ ಸ್ಪಷ್ಟನೆ ಕೋರಿ M/s NTPC ರವರಿಗೆ ಪತ್ರ ಬರೆಯಲಾಗಿತ್ತು. ಸದರಿ ಪತ್ರಕ್ಕೆ ಮೇಲೆ ಓದಲಾದ ಉಲ್ಲೇಖ (5)ರಲ್ಲಿ ಪ್ರಧಾನ ವ್ಯವಸ್ಥಾಪಕರು(RE), ಮೆ|| ಎನ್.ಟಿ.ಪಿ.ಸಿ ರವರು 250 ಮೆ.ವ್ಯಾ ಸಾಮರ್ಥ್ಯದ ಸೌರ ಯೋಜನೆಗಳನ್ನು DCR ವರ್ಗದಡಿ VGF ಯೋಜನೆಯಡಿ ಹಾಗೂ 750 ಮೆ.ವ್ಯಾ ಸಾಮರ್ಥ್ಯದ ಸೌರ ಯೋಜನೆಗಳನ್ನು Open ವರ್ಗದಡಿ ಅನುಷ್ಟಾನಗೊಳಿಸುವುದಾಗಿ ಹಾಗೂ ಪ್ರತಿ ಯೂನಿಟ್‌ಗೆ `. 3.50/- ರಂತೆ Ceiling ದರ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ Ceiling ದರಕ್ಕಿಂತ ಕಡಿಮೆ ದರ ಬಂದಲ್ಲಿ ಸದರಿ ದರಕ್ಕೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸೌರ ವಿದ್ಯುತ್ ನೀಡುವುದಾಗಿ ಒಪ್ಪಿಗೆ ತಿಳಿಸಿರುತ್ತಾರೆ.

ಆದರೆ, ಸರ್ಕಾರವು ಮೇಲೆ ಓದಲಾದ ಉಲ್ಲೇಖ (4)ರಲ್ಲಿ DCR ವರ್ಗದ VGF ಯೋಜನೆಯಡಿ ಅನುಷ್ಟಾನಗೊಳಿಸುವ 250 ಮೆ.ವ್ಯಾ ಸಾಮರ್ಥ್ಯದ ಸೌರ ಯೋಜನೆಗಳಿಗೆ ಪ್ರತಿ ಯೂನಿಟ್‌ಗೆ `. 3.00/- ರಂತೆ Ceiling ದರ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ Ceiling ದರಕ್ಕಿಂತ ಕಡಿಮೆ ದರ ಬಂದಲ್ಲಿ ಸದರಿ ದರಕ್ಕೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸೌರ ವಿದ್ಯುತ್ ನೀಡುವಂತೆ ಸಹಮತಿ ಪತ್ರವನ್ನು ಮೆ||ಎನ್.ಟಿ.ಪಿ.ಸಿ ರವರಿಗೆ ನೀಡಲಾಗಿತ್ತು.

ಅದರಂತೆ. ಪ್ರಧಾನ ವ್ಯವಸ್ಥಾಪಕರು (RE), ಮೆ||ಎನ್.ಟಿ.ಪಿ.ಸಿ ರವರು ಮೇಲೆ ಓದಲಾದ ಉಲ್ಲೇಖ (3)ರಲ್ಲಿ ಮೇಲೆ ಓದಲಾದ ಉಲ್ಲೇಖ (4)ರಲ್ಲಿನ ಅಂಶಗಳಿಗೆ ಒಪ್ಪಿಗೆ ಸೂಚಿಸಿ, ಉಳಿದ Open ವರ್ಗದ 750 ಮೆ.ವ್ಯಾ ಸಾಮರ್ಥ್ಯಕ್ಕೂ ಕೂಡ ಪ್ರತಿ ಯೂನಿಟ್‌ಗೆ `. 3.00/- ರಂತೆ Ceiling ದರ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ Ceiling ದರಕ್ಕಿಂತ ಕಡಿಮೆ ದರ ಬಂದಲ್ಲಿ ಸದರಿ ದರಕ್ಕೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸೌರ ವಿದ್ಯುತ್ ನೀಡುವುದಾಗಿ ತಿಳಿಸಿ, ಸರ್ಕಾರದ ಸಹಮತಿ ನೀಡುವಂತೆ ಕೋರಿದ್ದರನ್ವಯ, ಮೇಲೆ ಓದಲಾದ ಉಲ್ಲೇಖ (2)ರಲ್ಲಿ ಸರ್ಕಾರದಿಂದ ಸಹಮತಿ ನೀಡಿ ವಿದ್ಯುತ್ ಸರಬರಾಜು ಕಂಪನಿಗಳೊಂದಿಗೆ ವಿದ್ಯುತ್ ಖರೀದಿ ಒಪ್ಪಂದಕ್ಕೆ ಸಹಿ ಮಾಡಿಕೊಳ್ಳಲು ತಿಳಿಸಲಾಗಿದೆ.

ಮೇಲೆ ಓದಲಾದ ಉಲ್ಲೇಖ (1)ರಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೆ.ಎಸ್.ಪಿ.ಡಿ.ಸಿ.ಎಲ್ ರವರು ಈಗಾಗಲೇ ಸರ್ಕಾರದಿಂದ ಮೆ||ಎನ್.ಟಿ.ಪಿ.ಸಿ ರವರಿಗೆ ಸಹಮತಿ ನೀಡಿರುವ 1000 ಮೆ.ವ್ಯಾ ಸಾಮರ್ಥ್ಯಕ್ಕೆ ದಿನಾಂಕ: 16.11.2017ರಂದು ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ಮೆ|| ಎನ್.ಟಿ.ಪಿ.ಸಿ ರವರೊಂದಿಗೆ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಂಡಿದ್ದು, ಸದರಿ ಸಾಮರ್ಥ್ಯವನ್ನು ವಿದ್ಯುತ್ ಸರಬರಾಜು ಕಂಪನಿವಾರು ಹಂಚಿಕೆ ನೀಡುವಂತೆ ಕೋರಿರುತ್ತಾರೆ.

ಮೆ|| ಎನ್.ಟಿ.ಪಿ.ಸಿ ರವರು ಪಾವಗಡ ಸೌರ ಪಾರ್ಕಿನಲ್ಲಿ ಅನುಷ್ಟಾನಗೊಳಿಸುವ 1000 ಮೆ.ವ್ಯಾ ಸಾಮರ್ಥ್ಯದ ಸೌರ ವಿದ್ಯುತ್‌ಗೆ ವಿದ್ಯುತ್ ಸರಬರಾಜು ಕಂಪನಿವಾರು ವಿದ್ಯುತ್ ಹಂಚಿಕೆ ಮಾಡಬೇಕಾಗಿರುತ್ತದೆ. ಆದ್ದರಿಂದ, ಮೆ|| ಎನ್.ಟಿ.ಪಿ.ಸಿ ರವರಿಂದ ಪಾವಗಡ ಸೌರ ಪಾರ್ಕಿನಲ್ಲಿ ಅನುಷ್ಟಾನಗೊಳ್ಳುವ 1000 ಮೆ.ವ್ಯಾ ಸಾಮರ್ಥ್ಯದ ಸೌರ ಯೋಜನೆಗಳನ್ನು ಸರ್ಕಾರದ ಆದೇಶ ಸಂಖ್ಯೆ: ಇಎನ್ 57 ವಿಎಸ್‌ಸಿ 2015, ದಿನಾಂಕ: 31.03.2016ರಂತೆ ರಾಜ್ಯದ ವಿವಿಧ ಮೂಲಗಳಿಂದ ದೊರಕುವ ವಿದ್ಯುತ್ ಶೇಕಡವಾರು ಪ್ರಮಾಣದಲ್ಲಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಹಂಚಿಕೆಯಾಗಿರುವ ಅನುಪಾತದಲ್ಲಿ, ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಹಂಚಲು ಉದ್ದೇಶಿಸಿದೆ. ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಈ ಕೆಳಗಿನ ಆದೇಶ.

ಸರ್ಕಾರಿ ಆದೇಶ ಸಂಖ್ಯೆ: ಇಎನ್ 343 ಎನ್‌ಸಿಇ 2017, ಬೆಂಗಳೂರು, ದಿನಾಂಕ: 30.11.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ತುಮಕೂರು ಜಿಲ್ಲೆಯ ಪಾವಗಡ ಸೌರ ಪಾರ್ಕ್‌ನಲ್ಲಿ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ ನಿಯಮಿತ(ಎನ್.ಟಿ.ಪಿ.ಸಿ) ರವರಿಂದ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ 1000 ಮೆ.ವ್ಯಾ ಸಾಮರ್ಥ್ಯದ ಸೌರ ವಿದ್ಯುತ್ತನ್ನು ವಿದ್ಯುತ್ ಸರಬರಾಜು

ವಿತರಣಾ ಕಂಪನಿ ಶೇಕಡವಾರು ವಿದ್ಯುತ್ ಹ ಂಚಿಕೆ ಪ್ರಮಾಣ ಸೌರ ವಿದ್ಯುತ್ DCR ವರ್ಗದಡಿ ಸಾಮರ್ಥ್ಯ (ಮೆ.ವ್ಯಾನಲ್ಲಿ) ಸೌರ ವಿದ್ಯುತ್ Open ವರ್ಗದಡಿ ಸಾಮರ್ಥ್ಯ (ಮೆ.ವ್ಯಾನಲ್ಲಿ) ಒಟ್ಟು ಸಾಮರ್ಥ್ಯ (ಮೆ.ವ್ಯಾನಲ್ಲಿ)
ಬ ಂಗಳೂರು ವಿದ್ಯುತ್ ೆ ಸ ರಬರಾಜು ಕಂಪನಿ 47.78% 119.45 358.35 477.8
ವ ುಂಗಳೂರು ವಿದ್ಯುತ್ ಸ ರಬರಾಜು ಕಂಪನಿ 8.02% 20.05 60.15 80.2
ಹುಬ್ಬಳ್ಳಿ ವಿದ್ಯುತ್ ಸ ರಬರಾಜು ಕಂಪನಿ 19.46% 48.65 145.95 194.6
ಗುಲ್ಬರ್ಗಾ ವಿದ್ಯುತ್ ಸ ರಬರಾಜು ಕಂಪನಿ 13.68% 34.2 102.6 136.8
ಚಾಮುಂಡೇಶ್ವರಿ ವಿದ್ಯುತ್ ಸ ರಬರಾಜು ನಿಗಮ ನಿಯಮಿತ 11.06% 27.65 82.95 110.6
ಒಟ್ಟು 100% 250 750 1000
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ೧೫

ನಿಬಂಧನೆಗಳು :

1. ಈ ಶೇಕಡವಾರು ಹಂಚಿಕೆ ಪ್ರಮಾಣವನ್ನು ಅನುಸರಿಸಿ ಎನ್.ಟಿ.ಪಿ.ಸಿ ನಿಂದ ಬರುವ 1000 ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳಿಗೆ ಎನ್.ಟಿ.ಪಿ.ಸಿ ರವರೊಂದಿಗೆ ವಿದ್ಯುತ್ ಸರಬರಾಜು ಕಂಪನಿಗಳು ಖರೀದಿ ಒಡಂಬಡಿಕೆ ಮಾಡಿಕೊಳ್ಳುವುದು ಹಾಗೂ ಇದಕ್ಕೆ ಅನ್ವಯಿಸುವ ಎನ್.ಟಿ.ಪಿ.ಸಿ ರವರ ನಿಬಂಧನೆಗಳನ್ನು ಪಾಲಿಸುವುದು.

2. ಈ ಆದೇಶದಂತೆ ಸರಬರಾಜು ಕಂಪನಿವಾರು ಹಂಚಿಕೆ ಮಾಡಲಾದ ವಿದ್ಯುತ್ ಪ್ರಮಾಣವನ್ನು ತಪ್ಪದೇ ಪಾಲಿಸುವುದು ಮತ್ತು ಹಂಚಿಕೆಯು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.

PR-407

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-50

ಬಿ.ವಿ ಶ್ರೀನಿವಾಸಯ್ಯ ಸರ್ಕಾರದ ಅಧೀನ ಕಾರ್ಯದರ್ಶಿ

ಇಂಧನ ಇಲಾಖೆ.

ಇಂಧನ ಸಚಿವಾಲಯ

ವಿಷಯ: ರಕ್ಷಿತ ಅರಣ್ಯ ಪ್ರದೇಶಗಳಲ್ಲಿ ವನ್ಯ ಪ್ರಾಣಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಸೌರಶಕ್ತಿ ಆಧಾರಿತ ಜಾಲಮುಕ್ತ ಪಂಪ್‌ಸೆಟ್‌ಗಳನ್ನು ಅಳವಡಿಸುವ ಕುರಿತು.

ಓದಲಾಗಿದೆ: 1. ಸರ್ಕಾರದ ಆದೇಶ ಸಂಖ್ಯೆ: ಇಎನ್ 54 ವಿಎಸ್‌ಸಿ 2014, ದಿ: 28.02.2015.

2. ಸರ್ಕಾರದ ತಿದ್ದುಪಡಿ ಆದೇಶ ಸಂಖ್ಯೆ: ಇಎನ್ 54 ವಿಎಸ್‌ಸಿ 2014, ದಿ: 12.08.2015. 3. ಸರ್ಕಾರದ ಆದೇಶ ಸಂಖ್ಯೆ: ಇಎನ್ 17 ವಿಎಸ್‌ಸಿ 2016, ದಿ: 22.01.2016. 4. ಸರ್ಕಾರದ ಆದೇಶ ಸಂಖ್ಯೆ: ಇಎನ್ 17 ವಿಎಸ್‌ಸಿ 2016, ದಿ: 23.04.2016. 5. ಸರ್ಕಾರದ ಆದೇಶ ಸಂಖ್ಯೆ: ಇಎನ್ 75 ವಿಎಸ್‌ಸಿ 2017, ದಿ: 29.05.2017. 6. ಸರ್ಕಾರದ ಆದೇಶ ಸಂಖ್ಯೆ: ಇಎನ್ 68 ವಿಎಸ್‌ಸಿ 2017, ದಿ: 24.07.2017. 7. ವ್ಯವಸ್ಥಾಪಕ ನಿರ್ದೇಶಕರು, ಕ್ರೆಡಲ್‌ರವರ ಪತ್ರ ಸಂಖ್ಯೆ:ಕೆಆರ್ಇಡಿಎಲ್/07/

ಸೋಲಾರ್-2/40/2017/6481-83 ದಿ:06.10.2017.

ಪ್ರಸ್ತಾವನೆ:

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (ಕೆಆರ್ಇಡಿಎಲ್) ಮುಖಾಂತರ ಮೇಲೆ ಓದಲಾದ (1)ರಿಂದ (5) ರಂತೆ 5 ಹೆಚ್.ಪಿ ಸಾಮರ್ಥ್ಯದ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ಹೊಸದಾಗಿ ಸಂಪರ್ಕ ಪಡೆಯುವ ರೈತರಿಗೆ ವಿತರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಸದರಿ ಯೋಜನೆಯಡಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ `. 1 (ಒಂದು) ಲಕ್ಷ ವಂತಿಗೆಯೊಂದಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಯಾವುದೇ ವಂತಿಗೆ ಇಲ್ಲದೆ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ವಿತರಿಸಲಾಗುತ್ತಿದೆ.

ಮೊದಲನೇ ಹಂತದಲ್ಲಿ ಪ್ರಾಯೋಗಿಕವಾಗಿ 11 ತಾಲ್ಲೂಕುಗಳಲ್ಲಿ ಒಟ್ಟು 1009 ಸಂಖ್ಯೆಯ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸುವ ಯೋಜನೆಯಡಿ, ಅಕ್ಟೋಬರ್-2017ರ ಅಂತ್ಯಕ್ಕೆ ಒಟ್ಟು 916 ಸಂಖ್ಯೆಯ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸಿ ಚಾಲನೆಗೊಳಿಸಲಾಗಿದ್ದು, ಉಳಿದ ಕಾರ್ಯ ಪ್ರಗತಿಯಲ್ಲಿದೆ. ಎರಡನೇ ಹಂತದಲ್ಲಿ 1530 ಸಂಖ್ಯೆಯ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸುವ ಯೋಜನೆಯಡಿ, ಅಕ್ಟೋಬರ್-2017ರ ಅಂತ್ಯಕ್ಕೆ ಒಟ್ಟು 122 ಸಂಖ್ಯೆಯ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸಿ ಚಾಲನೆಗೊಳಿಸಲಾಗಿದ್ದು, ಉಳಿದ ಕಾರ್ಯ ಪ್ರಗತಿಯಲ್ಲಿದೆ. ಮೂರನೇ ಹಂತದಲ್ಲಿ 901 ಸಂಖ್ಯೆ ಹಾಗೂ ನಾಲ್ಕನೇ ಹಂತದಲ್ಲಿ 1013 ಸಂಖ್ಯೆಯ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ಒದಗಿಸುವ ಯೋಜನೆಯು ಜಾರಿಯಲ್ಲಿದೆ. ಮೂರನೇ ಹಂತದ ಯೋಜನೆಯ ಅನುಷ್ಠಾನಕ್ಕಾಗಿ ಈಗಾಗಲೇ, ಕೆಆರ್ಇಡಿಎಲ್ ಸಂಸ್ಥೆಯಿಂದ ಕಾರ್ಯಾದೇಶ ನೀಡಲಾಗಿರುತ್ತದೆ.

ಸೌರ ಶಕ್ತಿ ಆಧಾರಿತ ಜಾಲಮುಕ್ತ ಪಂಪ್‌ಸೆಟ್ ಒದಗಿಸುವ ಯೋಜನೆಯಡಿ, ಪ್ರತಿ ಪಂಪ್‌ಸೆಟ್‌ಗೆ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಅನ್ವಯವಾಗುವಂತೆ ವಂತಿಗೆ `. 1 ಲಕ್ಷದಂತೆ 20 ಸಂಖ್ಯೆಯ ನೀರಾವರಿ ಪಂಪ್‌ಸೆಟ್‌ಗಳಿಗೆ `. 20 ಲಕ್ಷಗಳನ್ನು ಪಾವತಿಸಲು ಅರಣ್ಯ ಇಲಾಖೆಯಿಂದ ಸಹಮತಿ ನೀಡಿದ್ದ ಹಿನ್ನಲೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕೆಆರ್ಇಡಿಎಲ್‌ರವರ ಪ್ರಸ್ತಾವನೆಯಂತೆ, ಕೆಆರ್ಇಡಿಎಲ್ ವತಿಯಿಂದ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ಒದಗಿಸುವ ಯೋಜನೆಯಡಿ, ರೈತರ ನೀರಾವರಿ ಪಂಪ್‌ಸೆಟ್‌ಗೆ ಬದಲಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಆಯ್ದ 20 ಸ್ಥಳಗಳಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ಸೌರ ಚಾಲಿತ ಪಂಪ್‌ಸೆಟ್‌ಗಳನ್ನು ಅಳವಡಿಸಲು ಮೇಲೆ ಓದಲಾದ (6)ರಂತೆ ಅನುಮೋದನೆ ನೀಡಲಾಗಿರುತ್ತದೆ.

ಮುಂದುವರೆದು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯ ಜೀವಿ) ಮತ್ತು ಮುಖ್ಯ ವನ್ಯ ಜೀವಿ ಪರಿಪಾಲಕರು ರವರು ರಾಜ್ಯದ ಇತರೆ ರಕ್ಷಿತ ಅರಣ್ಯ ಪ್ರದೇಶಗಳಲ್ಲಿಯೂ ಸಹ ವನ್ಯ ಪ್ರಾಣಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಇನ್ನೂ 20 ಸಂಖ್ಯೆಯ ಸೌರ ಚಾಲಿತ ಪಂಪ್‌ಸೆಟ್‌ಗಳನ್ನು ಅಳವಡಿಸಲು ಸಹಮತಿ ನೀಡುವಂತೆ ಕೋರಿದ್ದ ಹಿನ್ನಲೆಯಲ್ಲಿ, ವ್ಯವಸ್ಥಾಪಕ ನಿರ್ದೇಶಕರು, ಕೆಆರ್ಇಡಿಎಲ್‌ರವರು ಮೇಲೆ ಓದಲಾದ(7) ರಲ್ಲಿ ಮೂರನೇ ಹಂತದ ಕಾರ್ಯಕ್ರಮದಲ್ಲಿ ಘಟಕಗಳನ್ನು ಅಳವಡಿಸಲು ಪ್ರದೇಶವಾರು ಹಂಚಿಕೆಯನ್ನು ನಿರೀಕ್ಷಿಸಲಾಗಿರುವ ಪ್ರಯುಕ್ತ, ರಾಜ್ಯದ ಇತರೆ ರಕ್ಷಿತ ಅರಣ್ಯ ಪ್ರದೇಶಗಳಲ್ಲಿಯೂ ಸಹ ವನ್ಯ ಪ್ರಾಣಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ 20 ಸ್ಥಳಗಳಿಗೆ ರೈತರ ನೀರಾವರಿ ಪಂಪ್‌ಸೆಟ್ ಬದಲಿಗೆ, ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವ ಸಲುವಾಗಿ ಸೌರ ಚಾಲಿತ ಪಂಪ್‌ಸೆಟ್‌ಗಳನ್ನು ಅಳವಡಿಸಲು ಈಗಾಗಲೇ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ ಯೋಜನೆಯ ಮಾದರಿಯಲ್ಲಿಯೇ ಅನುಷ್ಟಾನಗೊಳಿಸಲು ಅನುಮೋದನೆ ಕೋರಿರುತ್ತಾರೆ.

೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ಭಾಗ ೧

ವ್ಯವಸ್ಥಾಪಕ ನಿರ್ದೇಶಕರು, ಕೆಆರ್ಇಡಿಎಲ್‌ರವರ ಪ್ರಸ್ತಾವನೆಯಂತೆ, ಕೆಆರ್ಇಡಿಎಲ್ ವತಿಯಿಂದ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ಒದಗಿಸುವ ಯೋಜನೆಯಡಿ, ರೈತರ ನೀರಾವರಿ ಪಂಪ್‌ಸೆಟ್‌ಗೆ ಬದಲಾಗಿ ರಾಜ್ಯದ ರಕ್ಷಿತ ಅರಣ್ಯ ಪ್ರದೇಶಗಳಲ್ಲಿ 20 ಸ್ಥಳಗಳಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ಸೌರ ಚಾಲಿತ ಪಂಪ್‌ಸೆಟ್‌ಗಳನ್ನು ಅಳವಡಿಸಲು ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಇಎನ್ 259 ವಿಎಸ್‌ಸಿ 2017, ಬೆಂಗಳೂರು, ದಿನಾಂಕ: 09.11.2017.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವತಿಯಿಂದ ಹಾಲಿ ಚಾಲ್ತಿಯಲ್ಲಿರುವ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ಒದಗಿಸುವ ಯೋಜನೆಯಡಿ, ರೈತರ ನೀರಾವರಿ ಪಂಪ್‌ಸೆಟ್‌ಗೆ ಬದಲಾಗಿ ರಾಜ್ಯದ ರಕ್ಷಿತ ಅರಣ್ಯ ಪ್ರದೇಶಗಳಲ್ಲಿ 20 ಸ್ಥಳಗಳಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ಗಳನ್ನು ಅಳವಡಿಸಲು ಅನುಮೋದನೆ ನೀಡಿ ಆದೇಶಿಸಿದೆ.

ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್ ಯೋಜನೆಯ ಮೇಲೆ ಓದಲಾದ (1) ಮತ್ತು (2) ರ ಆದೇಶಗಳಲ್ಲಿನ ಅನುಷ್ಠಾನ ಕಾರ್ಯ ಚಟುವಟಿಕೆಗಳು, ಕೆಆರ್ಇಡಿಎಲ್ ಪಾತ್ರ, ವಿದ್ಯುತ್ ವಿತರಣಾ ಕಂಪನಿಗಳ ಪಾತ್ರ ಹಾಗೂ ಘಟಕದ ನಿರ್ವಹಣೆ ಕುರಿತಂತೆ ಯಾವುದೇ ಬದಲಾವಣೆ ಇರುವುದಿಲ್ಲ.

PR-408

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-50

ಬಿ.ವಿ ಶ್ರೀನಿವಾಸಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ

ಇಂಧನ ಇಲಾಖೆ.

ಇಂಧನ ಸಚಿವಾಲಯ

ವಿಷಯ : ಪವನ ವಿದ್ಯುತ್ ಯೋಜನೆಗಳ ವಿದ್ಯುತ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತೀಯ ವಿದ್ಯುಚ್ಛಕ್ತಿ ಕಾಯ್ದೆ 2003ರ ಸೆಕ್ಷನ್ 108ರಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆ.ಇ.ಆರ್.ಸಿ.)ಗೆ ನಿರ್ದೇಶನ ನೀಡುವ ಬಗ್ಗೆ.

ಓದಲಾಗಿದೆ: 1. ಕಾರ್ಯದರ್ಶಿಗಳು, ಕೆ.ಇ.ಆರ್.ಸಿ ರವರ ಪತ್ರ ಸಂಖ್ಯೆ:KERC/S/F-51 TO 55/Vol-All/17-18/1109, ದಿನಾಂಕ: 10.10.2017.

2. ಸರ್ಕಾರದ ಪತ್ರ ಸಂಖ್ಯೆ: ಇಎನ್ 93 ವಿಎಸ್‌ಸಿ 2017, ದಿನಾಂಕ: 28.08.2017.

3. ನವ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯ ರವರ ಪತ್ರ ಸಂಖ್ಯೆ:F.No.336/19/2017-Wind ದಿನಾಂಕ: 23.08.2017.

ದಿನಾಂಕ: 21.08.2017.

5. ಸರ್ಕಾರದ ಪತ್ರ ಸಂಖ್ಯೆ: ಇಎನ್ 93 ವಿಎಸ್‌ಸಿ 2017, ದಿನಾಂಕ: 23.06.2017. 6. ಸರ್ಕಾರದ ಪತ್ರ ಸಂಖ್ಯೆ: ಇಎನ್ 93 ವಿಎಸ್‌ಸಿ 2017, ದಿನಾಂಕ: 28.04.2017.

ದಿನಾಂಕ: 25.04.2017.

ಪ್ರಸ್ತಾವನೆ:

ವಾಸ್ತವವಾಗಿ, ಪರಿಸರ ಹಾನಿ ಮತ್ತು ಮಾಲಿನ್ಯವನ್ನು ಕಡಿಮೆಗೊಳಿಸುವ, ಜಾಗತಿಕ ತಾಪಮಾನವನ್ನು ಇಳಿಸುವ ಉದ್ದೇಶದಿಂದ ಹಾಗೂ ಸಾಂಪ್ರದಾಯಿಕ ವಿದ್ಯುತ್ತಿನ ಮೇಲಿನ ಹೊರೆಯನ್ನು ಕಡಿಮೆಗೊಳಿಸುವ ಸಂಬಂಧ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದಿಸಲು ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು 2009ರಲ್ಲಿ ನವೀಕರಿಸಬಹುದಾದ ಇಂಧನ ನೀತಿ 2009-14ನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಅನುಷ್ಟಾನಗೊಳಿಸಲು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು (ಕ್ರೆಡಲ್) ನೇಮಿತ ಸಂಸ್ಥೆಯಾಗಿದೆ.

ಭಾರತ ಸರ್ಕಾರದ ಇಂಧನ ಮಂತ್ರಾಲಯವು ಇಸವಿ 2022ಕ್ಕೆ ದೇಶದಲ್ಲಿ ಸುಮಾರು 1,75,000 ಮೆ.ವ್ಯಾ ವಿದ್ಯುತ್ತನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸುವ ಗುರಿ ಹೊಂದಿರುತ್ತದೆ, ಇದರಲ್ಲಿ ಸೋಲಾರ್ ಹೊರತುಪಡಿಸಿ ಇತರೆ ಮೂಲಗಳಾದ ಪವನ, ಕಿರುಜಲ, ಜೈವಿಕ, ಸಹ ವಿದ್ಯುತ್ ಇತ್ಯಾದಿಗಳಿಂದ ಸುಮಾರು 75,000 ಮೆ.ವ್ಯಾ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಸೋಲಾರ್ ಹೊರತುಪಡಿಸಿ ಇತರೆ ಮೂಲಗಳಾದ ಪವನ, ಕಿರುಜಲ, ಜೈವಿಕ, ಸಹವಿದ್ಯುತ್ ನವೀಕರಿಸಬಹುದಾದ ಇಂಧನ ಮೂಲಗಳಿಂದ ಸರಿಸುಮಾರು 62,092 ಮೆ.ವ್ಯಾ ವಿದ್ಯುತ್ ಉತ್ಪಾದಿಸುವ ಸಂಭವನೀಯ ಸಾಮರ್ಥ್ಯವಿದ್ದು, ಇದರಲ್ಲಿ NIWE ಸಂಸ್ಥೆಯ ಇತ್ತೀಚಿನ ಸಮೀಕ್ಷೆಯ ಪ್ರಕಾರ ಪವನ ವಿದ್ಯುತ್ ಮೂಲದಿಂದಲೇ ಸುಮಾರು 55,857 ಮೆ.ವ್ಯಾ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸಲು ಅವಕಾಶವಿದೆ.

ಮೇಲೆ ಓದಲಾದ (7)ರಲ್ಲಿ ಕಾರ್ಯದರ್ಶಿಗಳು, ಕೆ.ಇ.ಆರ್.ಸಿ.ರವರು ಪವನ ವಿದ್ಯುತ್ ಯೋಜನೆಗಳ ವಿದ್ಯುತ್ ಖರೀದಿಗೆ ಸಂಬಂಧಿಸಿದಂತೆ ಕೆ.ಇ.ಆರ್.ಸಿ.ಯು ಪರಿಶೀಲಿಸುವವರೆಗೆ ವಿದ್ಯುತ್ ಸರಬರಾಜು ಕಂಪನಿಗಳು ಪವನ ವಿದ್ಯುತ್ ಸ್ಥಾವರಗಳೊಂದಿಗೆ ಮಾಡಿಕೊಳ್ಳುತ್ತಿರುವ ಹೊಸ ವಿದ್ಯುತ್ ಖರೀದಿ ಒಪ್ಪಂದವನ್ನು ಸ್ಥಗಿತಗೊಳಿಸುವಂತೆ ಹಾಗೂ ಭವಿಷ್ಯದಲ್ಲಿ ಪವನ ವಿದ್ಯುತ್ ಖರೀದಿಯನ್ನು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿಯೇ ಖರೀದಿಸಬೇಕೆಂದು ಸಲಹೆ ನೀಡಿದ್ದ ಹಿನ್ನಲೆಯಲ್ಲಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಮೇಲೆ ಓದಲಾದ (6)ರ ಪತ್ರದಲ್ಲಿ ತಾತ್ಕಾಲಿಕವಾಗಿ ನಿರ್ದೇಶನ ನೀಡಲಾಗಿರುತ್ತದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ೧೭

ಮುಂದುವರೆದು, ಮೇಲೆ ಓದಲಾದ (5) ರ ಸರ್ಕಾರದ ಪತ್ರದಲ್ಲಿ ಮೇಲೆ ಓದಲಾದ(7) ರಂತೆ ಸರ್ಕಾರಕ್ಕೆ ಬರೆದಿರುವ ಅರೆ ಸರ್ಕಾರಿ ಪತ್ರವನ್ನು ಮರುಪರಿಶೀಲಿಸಿ, ಪವನ ವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಈಗಾಗಲೇ ಹಂಚಿಕೆ ನೀಡಿ ಆದೇಶಿಸಿರುವ ಯೋಜನೆಗಳು ಹಾಗೂ ಈಗಾಗಲೇ ಹಂಚಿಕೆ ಸಮಿತಿಯಿಂದ ಅನುಮೋದನೆಗೊಂಡು ಸರ್ಕಾರದ ಹಂತದಲ್ಲಿ ಆದೇಶಕ್ಕಾಗಿ ಬಾಕಿ ಉಳಿದಿರುವ ಮತ್ತು ಹಂಚಿಕೆಗಾಗಿ ಅರ್ಜಿ ಸಲ್ಲಿಸಿ ಈಗಾಗಲೇ ನಿಯಮಾನುಸಾರ ನೊಂದಣಿ/ಇತರೇ ಶುಲ್ಕ ಪಾವತಿಸಿರುವ ಅರ್ಜಿಗಳನ್ನು ಮಾನ್ಯ ಆಯೋಗವು ಪರಿಗಣಿಸುವಂತೆ ಕಾರ್ಯದಶಿಗಳು, ಕೆ.ಇ.ಆರ್.ಸಿ.ರವರನ್ನು ಕೋರಲಾಗಿತ್ತು.

ಮೇಲೆ ಓದಲಾದ (4) ರಲ್ಲಿ ಎಂ.ಎನ್.ಆರ್.ಇ.ರವರ ಪತ್ರದಲ್ಲಿ ಈ ಕೆಳಗಿನಂತೆ ಸೂಚನೆ ನೀಡಿರುತ್ತಾರೆ:

3. "I, therefore, request you to kindly take up the matter with the SERC of your State for grant of consent, if it is pending for wind projects which were commissioned before 31st March, 2017 and for which PPAs have already been signed,

4. In case necessary, the State Government may consider issuing directions to SERC under Section 108 of the Electricity Act, 2003."

ಮುಂದುವರೆದು, ಮೇಲೆ ಓದಲಾದ (3)ರಲ್ಲಿ ಎಂ.ಎನ್.ಆರ್.ಇ. ರವರು ಪವನ ವಿದ್ಯುತ್ ಯೋಜನೆಗಳ ಬಿಡ್ಡಿಂಗ್ ಪ್ರಕ್ರಿಯೆ ಹಾಗೂ ಯೋಜನೆಗಳ ಅನುಷ್ಟಾನಕ್ಕೆ ಸುಮಾರು 21 ತಿಂಗಳುಗಳ ಕಾಲಾವಧಿ ಬೇಕಾಗಿರುವುದರಿಂದ ಪರಿವರ್ತನೆ ಅವಧಿಯಲ್ಲಿ ಅಗತ್ಯವಿದ್ದಲ್ಲಿ ರಾಜ್ಯವು ಆಯೋಗದವರು ನಿರ್ಧರಿಸುವ ದರದಂತೆ ಪವನ ವಿದ್ಯುತ್ತನ್ನು ಖರೀದಿಸಬಹುದೆಂದು ಸಲಹೆ ನೀಡಿರುತ್ತಾರೆ.

ಮುಂದುವರೆದು, ಮೇಲೆ ಓದಲಾದ(2)ರ ಸರ್ಕಾರದ ಪತ್ರದಲ್ಲಿ ದಿನಾಂಕ: 31.03.2017ರೊಳಗೆ ಅನುಷ್ಟಾನಗೊಂಡ ಪವನ ವಿದ್ಯುತ್ ಯೋಜನೆಗಳ ವಿದ್ಯುತ್ ಖರೀದಿ ಒಪ್ಪಂದಗಳನ್ನು ಪರಿಗಣಿಸುವಂತೆ ಮಾನ್ಯ ಆಯೋಗವನ್ನು ಕೋರಲಾಗಿತ್ತು.

ಮೇಲೆ ಓದಲಾದ (2) ಮತ್ತು (7)ರ ಸರ್ಕಾರದ ಪತ್ರಗಳಿಗೆ ಕೆ.ಇ.ಆರ್.ಸಿ ರವರು ಪ್ರತ್ಯುತ್ತರ ನೀಡಿದ್ದು, ಸದರಿ ಪತ್ರದಲ್ಲಿ, ದಿನಾಂಕ: 31.03.2017 ರೊಳಗೆ ಅನುಷ್ಟಾನಗೊಂಡ 242.50 ಮೆ.ವ್ಯಾ ಸಾಮರ್ಥ್ಯದ ಯೋಜನೆಗಳಿಗೆ ಕೆ.ಇ.ಆರ್.ಸಿ ರವರು ದಿನಾಂಕ: 04.09.2017ರಂದು ನಿಗಧಿಪಡಿಸಿರುವ ಪ್ರತಿ ಯೂನಿಟ್ ದರವಾದ `. 3.74/-ರಂತೆ ಅನುಮೋದನೆ ನೀಡಲು ಆಯೋಗವು ಒಪ್ಪಿರುವುದಾಗಿ ಹಾಗೂ ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುತ್ ಖರೀದಿ ಒಪ್ಪಂದಗಳನ್ನು ಸಲ್ಲಿಸುವಂತೆ ಸೂಚಿಸಿದೆ.

ರಾಜ್ಯದಲ್ಲಿ ಇದುವರೆಗೆ ಒಟ್ಟು 16,308 ಮೆ.ವ್ಯಾ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗಳಿಗೆ ಹಂಚಿಕೆ ನೀಡಿದ್ದು, ಅದರಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಗಳ ನಿರಾಕ್ಷೇಪಣೆಯ ವಿಳಂಬ ಹಾಗೂ ಇತರೆ ಅನಿವಾರ್ಯ ಕಾರಣಗಳಿಂದಾಗಿ ಈಗಾಗಲೇ ಸುಮಾರು 5,808 ಮೆ.ವ್ಯಾ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗಳು ರದ್ದುಗೊಂಡಿರುತ್ತವೆ. ಬಾಕಿ ಉಳಿದ 10,500 ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳಲ್ಲಿ 3913 ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳು ಅನುಷ್ಟಾನಗೊಂಡು ಚಾಲನೆಗೊಂಡಿರುತ್ತವೆ. ಉಳಿದ 6587 ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳು ಅನುಷ್ಟಾನದ ವಿವಿಧ ಹಂತದಲ್ಲಿರುತ್ತವೆ. ವಿದ್ಯುತ್ ವಿತರಣಾ ಕಂಪನಿವಾರು ವಿವರ ಕೆಳಕಂಡಂತಿದೆ:

ಕ . ್ರ ಸ ಂ ವಿ.ಸ.ಕಂ ಸ ರ್ಕಾರಿ ಆದೇಶಗಳನ್ವಯ ಹ ಂಚಿಕೆಯಾದ ಒಟ್ಟು ಯೋಜನೆಗಳು ರದ್ದುಪಡಿಸಿರುವ/ ರದ್ದುಪಡಿಸಲು ಸ ಲ್ಲಿಸಿರುವ ಯೋಜನೆಗಳು ಅನುಷ್ಟಾನಗೊಂಡ ಒಟ್ಟು ಯೋಜನೆಗಳು ವಿ.ಸ.ಕಂಗಳಲ್ಲಿರುವ ವಿದ್ಯುತ್ ಖರೀದಿ ಒಪ್ಪಂದಗಳು (ಅನುಷ್ಟಾನಗೊಂಡಿರುವ ಹಾಗೂ ಕೆ.ಇ.ಆರ್.ಸಿ. ಅನುಮೋದನೆಗಾಗಿ ಬಾಕಿ ಇರುವ) ವಿ.ಸ.ಕಂಗಳಲ್ಲಿರುವ ವಿದ್ಯುತ್ ಖರೀದಿ ಒಪ್ಪಂದಗಳು (ಅನುಷ್ಟಾನಗೊಳ್ಳಬೇಕಿರುವ ಹಾಗೂ ಕೆ.ಇ.ಆರ್.ಸಿ. ಅನುಮೋದನೆಗಾಗಿ ಬಾಕಿ ಇರುವ) ಕ .ಇ.ಆರ್.ಸಿ. ೆ ಅನುಮೋದನೆಗಾಗಿ ಬಾಕಿ ಇರುವ ಒಟ್ಟು ವಿದ್ಯುತ್ ಖರೀದಿ ಒಪ್ಪಂದಗಳು ಅನುಷ್ಟಾನಕ್ಕಾಗಿ ಬಾಕಿ ಉಳಿದಿರುವ ಒಟ್ಟು ಯೋಜನೆಗಳು
ಅ ಆ ಇ ಈ ಉ ಊ ಋು=ಉ+ಊ ಎ=ಆ-ಇ-ಈ
1 ಬ ಸ್ಕಾಂ ೆ 3913 2024 1408.36 100.5 82.4 182.9 481
2 ಮೆಸ್ಕಾಂ 1575 758 390.85 0 0 0 426
3 ಸ ಸ್ಕ್ ೆ 921 693 129.30 0 0 0 98
4 ಹ ಸ್ಕಾಂ ೆ 7219 1792 1664.98 170 379 549 3762
5 ಜ ಸ್ಕಾಂ ೆ 2680 541 319.02 0 270 270 1820
ಒಟ್ಟು 16308 5808 3912.51 270.5 731.4 1001.9 6587

ಸರ್ಕಾರವು ಕಾಲಕಾಲಕ್ಕೆ ಅಗತ್ಯ ನಿಯಮಾವಳಿ/ನೀತಿಗಳನ್ನು ರೂಪಿಸುವ ಮೂಲಕ ನವೀಕರಿಸಬಹುದಾದ ಇಂಧನ ಮೂಲಗಳ ಪೈಕಿ ಪವನ ವಿದ್ಯುತ್ ಯೋಜನೆಗಳನ್ನು ಖಾಸಗಿ ಅಭಿವೃದ್ಧಿದಾರರು/ಬಂಡವಾಳ ಹೂಡಿಕೆದಾರರ ಮುಖಾಂತರ ಅನುಷ್ಠಾನಗೊಳಿಸುತ್ತಿದೆ. ಪವನ ವಿದ್ಯುತ್ ಯೋಜನೆಗಳ ಹಂಚಿಕೆ ಆದೇಶಗಳ ಪ್ರಕಾರ ಅಭಿವೃದ್ಧಿದಾರರಿಗೆ ವಿದ್ಯುತ್ ವಿತರಣಾ ಕಂಪನಿಗಳೊಂದಿಗೆ ವಿದ್ಯುತ್ ಖರೀದಿ ಒಪ್ಪಂದ/ಸ್ವಂತ ಬಳಕೆ/ ಮೂರನೇ ವ್ಯಕ್ತಿಗೆ ಮಾರಾಟ ಮಾಡುವ ಆಯ್ಕೆ ನೀಡಿ ಯೋಜನೆಗಳನ್ನು ಅನುಷ್ಟಾನಗೊಳಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಅಲ್ಲದೇ, ಭವಿಷ್ಯದಲ್ಲಿ ಖರೀದಿಸಬಹುದಾದ ಪವನ ವಿದ್ಯುತ್ತನ್ನು ಮಾನ್ಯ ಆಯೋಗವು ಸಲಹೆ ನೀಡಿರುವಂತೆೆ ನೀತಿಯನ್ನು ರೂಪಿಸಿ ಟೆಂಡರ್ ಪ್ರಕ್ರಿಯೆ ಮುಂಖಾತರ ಖರೀದಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುತ್ತಿದೆ.

೧೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ಭಾಗ ೧

ಈಗಾಗಲೇ ಸರ್ಕಾರದ ಆದೇಶದಂತೆ ಅಭಿವೃದ್ಧಿದಾರು ಯೋಜನೆಗಳನ್ನು ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ಬಂಡವಾಳ ಹೂಡಿಕೆ ಮಾಡಿರುವ ಸಾಧ್ಯತೆಗಳಿರುವುದರಿಂದ ಹಾಗೂ ಈ ಹಂತದಲ್ಲಿ ಏಕಾಏಕಿ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಲ್ಲಿ ಈಗಾಗಲೇ ಹಂಚಿಕೆ ಮಾಡಿರುವ ಪವನ ವಿದ್ಯುತ್ ಯೋಜನೆಗಳನ್ನು ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಅಭಿವೃದ್ಧಿದಾರರಲ್ಲಿ ಅನಿಶ್ಚಿತತೆ ಮೂಡಿಸಿದಂತಾಗುತ್ತದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳನ್ನು ಪರಿಶೀಲಿಸಿ ಹಾಗೂ ಮೇಲೆ ಓದಲಾದ (4)ರ ಎಂ.ಎನ್.ಆರ್.ಇ ರವರ ಸಲಹೆಯಂತೆ ಪವನ ವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದಂತೆ, ಕೆ.ಇ.ಆರ್.ಸಿ ಗೆ ಭಾರತೀಯ ವಿದ್ಯುಚ್ಛಕ್ತಿ ಕಾಯ್ದೆ 2003ರ ಸೆಕ್ಷನ್ 108ರಡಿ ನಿರ್ದೇಶನ ನೀಡಲು ಈ ಕೆಳಗಿನ ಆದೇಶ:-

ಸರ್ಕಾರಿ ಆದೇಶ ಸಂಖ್ಯೆ: ಇಎನ್ 93 ವಿಎಸ್‌ಸಿ 2017, ಬೆಂಗಳೂರು, ದಿನಾಂಕ: 27.10.2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಭಾರತೀಯ ವಿದ್ಯುಚ್ಛಕ್ತಿ ಕಾಯ್ದೆ 2003ರ ಸೆಕ್ಷನ್ 108ರಡಿ ಸರ್ಕಾರಕ್ಕೆ ಇರುವ ಅಧಿಕಾರವನ್ನು ಚಲಾಯಿಸಿ, ರಾಜ್ಯದಲ್ಲಿ ಪವನ ವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದಂತೆ, ಈ ಕೆಳಕಂಡ ಅಂಶಗಳಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆ.ಇ.ಆರ್.ಸಿ.)ಗೆ ನಿರ್ದೇಶನ ನೀಡಿ ಆದೇಶಿಸಿದೆ.

1. ದಿನಾಂಕ: 31.03.2017ಕ್ಕೂ ಮೊದಲು ಅನುಷ್ಟಾನಗೊಂಡ ಅನುಬಂಧ-1ರಲ್ಲಿರುವಂತೆ 270.5 ಮೆ.ವ್ಯಾ (ಬೆಸ್ಕಾಂ-100.5 ಮೆ.ವ್ಯಾ ಮತ್ತು ಹೆಸ್ಕಾಂ-170 ಮೆ.ವ್ಯಾ) ಸಾಮರ್ಥ್ಯದ ಯೋಜನೆಗಳಿಗೆ ಪ್ರತಿ ಯೂನಿಟ್‌ಗೆ `. 4.50/- ರಂತೆ ವಿದ್ಯುತ್ ಖರೀದಿ ಒಪ್ಪಂದಗಳನ್ನು ಅನುಮೋದಿಸಲು.

2. ದಿನಾಂಕ:04.09.2017ರ ಕೆ.ಇ.ಆರ್.ಸಿ ಪರಿಷ್ಕøತ ಜಕಾತಿ ಆದೇಶದ ಕಾಲಾವಧಿಯಾದ ದಿನಾಂಕ:04.09.2017 ರಿಂದ ದಿನಾಂಕ: 31.03.2018ರೊಳಗೆ ಯೋಜನೆಯನ್ನು ಅನುಷ್ಟಾನಗೊಳಿಸುವುದಾಗಿ ಪ್ರತಿ ಮೆ.ವ್ಯಾಗೆ `. 20 ಲಕ್ಷದಂತೆ ಬ್ಯಾಂಕ್ ಗ್ಯಾರಂಟಿಯನ್ನು ಅಭಿವೃದ್ಧಿದಾರರು ಕ್ರೆಡಲ್‌ಗೆ ಸಲ್ಲಿಸುವ ನಿಬಂಧನೆಗೊಳಪಟ್ಟು, ದಿನಾಂಕ: 31.03.2018ರೊಳಗೆ ಅನುಷ್ಟಾನಗೊಳ್ಳುವ ಪವನ ವಿದ್ಯುತ್ ಯೋಜನೆಗಳ ವಿದ್ಯುತ್ ಖರೀದಿ ಒಪ್ಪಂದಗಳನ್ನು ದಿನಾಂಕ: 04.09.2017ರ ಕೆ.ಇ.ಆರ್.ಸಿ ಪರಿಷ್ಕøತ ಜಕಾತಿ ಆದೇಶದಂತೆ ಪ್ರತಿ ಯೂನಿಟ್‌ಗೆ `. 3.74/- ರಂತೆ ಅನುಮೋದಿಸಲು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ವಿ ಶ್ರೀನಿವಾಸಯ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಇಂಧನ ಇಲಾಖೆ.

ಸರ್ಕಾರದ ಆದೇಶ ಸಂಖ್ಯೆ: ಇಎನ್ 93 ವಿಎಸ್‌ಸಿ 2017 ದಿನಾಂಕ:27.10.2017ಕ್ಕೆ ಅನುಬಂಧ-1

Sl no. ESCOM Name of the developers Location Capacity in MW Date of PPA Remarks Commission ed Capacity before 31.03.2017 in MW
1 2 3 4 5 6 7 8
1 BESCOM M/s Aikyam Holdings Private Limited Chitradurga Taluk, Chitradurga District 8 1.3.2017 Commissioned on 28.3.2017 8
2 M/s Green infra private Limited Ananthanahalli village in harapanahalli, Davangere 48 13.3.2017 out of 48 MWs 34 MWs commissioned on 25.2.2017 and 10MWs commissioned on 20.3.2017 (totally 44 MWs ) 44
3 M/s Poonawalla Investments and Industries Private Limited Harapanahalli taluk , Davangere 8.4 30.3.2017 Commissioned on 30.3.2017 8.4
4 M/s Poonawalla Investments and Industries Private Limited Harapanahalli taluk , Davangere 8.4 30.3.2017 30.3.2017( out of 8.4 MW 6.3MW commissioned) 6.3
5 M/s Poonawalla Investments and Industries Private Limited Harapanahalli taluk, Davangere 2.1 30.3.2017 Commissioned on 30.3.2017 2.1
6 M/s Serum Institute of India Private Limited Harapanahalli taluk, Davangere District 8.4 30.3.2017 Commissioned on 30.3.2017 8.4
7 M/s Atria Wind Power (Bijapur 2) private Limited Chitradurga Taluk & District 24 22.3.2017 Out of 24 MWs 23.3 MWs commissioned on 28.3.2017 23.3
8 HESCOM M/s. PTC Energy Limited Babaleshwar, Mulvad & other Villages, in Vijayapur Taluk & District 26 18.02.2017 28.03.2017 26
9 M/s. PTC Energy Limited 24 28.03.2017 24
10 M/s. ReNew Wind Energy (Sipla) Pvt. Ltd. Babaleshwar, Mulvad & other Villages, in Vijayapur Taluk & District 26 18.02.2017 28.03.2017 26
11 M/s. ReNew Wind Energy (Sipla) Pvt. Ltd. 24 28.03.2017 24
12 M/s. Clean Wind Power (Piploda) Pvt. Ltd Kakhandaki, Karjol, Tonasyal Villages, in Vijayapur Taluk & District 26 25.02.2017 28.03.2017 26
13 HESCOM M/s. Clean Wind Power (Bableshwar) Pvt. Ltd Kakhandaki, Karjol, Villages, in Vijayapur Taluk & District 24 25.02.2017 28.03.2017 24
14 M/s. Sakthi Masala Private Limited Takkalaki, Muttagi, Basavanabagewadi Villages, in Basavanabagewadi Taluk, Vijayapur District 10 24.03.2017 31.03.2017 10
15 M/s. Eshwari Green Energy LLP. Basavanabagewadi Villages, in Basavanabagewadi Taluk, Vijayapur District 4 24.03.2017 31.03.2017 4
16 M/s. The Impetus Associates LLP Basavanabagewadi Villages, in Basavanabagewadi Taluk, Vijayapur District 2 24.03.2017 31.03.2017 2
17 M/s. Ahill Apparel Exports (P) Ltd Basavanabagewadi Villages, in Basavanabagewadi Taluk, Vijayapur District 2 24.03.2017 31.03.2017 2
18 M/s. Laurel Apparel. Basavanabagewadi Villages, in Basavanabagewadi Taluk, Vijayapur District 2 24.03.2017 31.03.2017 2
Total 270.5
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ೧೯

ಬಿ.ವಿ ಶ್ರೀನಿವಾಸಯ್ಯ

PR-409

ಸರ್ಕಾರದ ಅಧೀನ ಕಾರ್ಯದರ್ಶಿ

SC-50

ಇಂಧನ ಇಲಾಖೆ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೨೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೧, ೨೦೧೮ ಭಾಗ ೧

ಇಂಧನ ಸಚಿವಾಲಯ

ತಿದ್ದುಪಡಿ ಆದೇಶ

ಸಂಖ್ಯೆ: ಇಎನ್ 34 ವಿಎಸ್‌ಸಿ 2017, ಬೆಂಗಳೂರು, ದಿನಾಂಕ:27-10-2017.

ಸರ್ಕಾರದ ಆದೇಶ ಸಂಖ್ಯೆ: ಇಎನ್ 277 ಎನ್‌ಸಿಇ 2015 ದಿನಾಂಕ: 21/01/2017ರ ಆದೇಶದ ಭಾಗದ 8ನೇ ಸಾಲಿನಲ್ಲಿರುವ "ತಿರಸ್ಕøತಗೊಂಡ ಫಲಾನುಭವಿಗಳಿಗೂ ಅನ್ವಯವಾಗುವಂತೆ ಎಂಬುದರ ಬದಲಾಗಿ "ತಿರಸ್ಕøತಗೊಂಡ ಅರ್ಜಿದಾರರಿಗೂ ಅನ್ವಯವಾಗುವಂತೆ"ೆ ಎಂದು ತಿದ್ದಿ ಓದಿಕೊಳ್ಳುವುದು.

ಇನ್ನುಳಿದಂತೆ, ಸದರಿ ಆದೇಶದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.

ಮುಂದುವರೆದು, ಈ ಸಂಬಂಧ ದಿನಾಂಕ: 04/02/2017ರಂದು ಹೊರಡಿಸಿದ್ದ ತಿದ್ದುಪಡಿ ಆದೇಶವನ್ನು ಈ ಮೂಲಕ ಹಿಂಪಡೆಯಲಾಗಿದೆ.

PR-410

ಬಿ.ವಿ. ಶ್ರೀನಿವಾಸಯ್ಯ

SC-50

ಇಂಧನ ಇಲಾಖೆ. (ಮುಜರಾಯಿ)

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 11 January 2018. Indian Gazettes, https://egazette.servantsofknowledge.in/details/in.gazette.karnataka_new.2018-01-11.Part-1/. Archive identifier in.gazette.karnataka_new.2018-01-11.Part-1.